Monday, November 5, 2018

*ಇಹಪರ ವಿಜಯಕ್ಕಾಗಿ SSF ಸದಸ್ಯರಾಗೋಣ..!*

ಪ್ರಿಯ ಸಹೋದರರೆ,  ಇದೀಗ ನಮ್ಮ ಮುಂದೆ ಮತ್ತೊಮ್ಮೆ ಬರುತ್ತಿದೆ SSF ಸದಸ್ಯತ್ವ ಅಭಿಯಾನ. ಇದುವರೆಗೆ SSF ಸದಸ್ಯರಾಗಿದ್ದವರು ತಮ್ಮ ಸದಸ್ಯತ್ವವನ್ನು ನವೀಕರಿಸುವುದರೊಂದಿಗೆ ಹೊಸಬರು SSF ಸೇರಲು ಒಂದು ಉತ್ತಮ ಅವಕಾಶ.....

🌴 *SSF ನಮಗೆ ಯಾಕೆ ಬೇಕು?*

👉 ತಾತ್ಕಾಲಿಕವಾದ ಈ ಭೂಲೋಕದ ಜೀವನಕ್ಕೆ ಕೊನೆ ಎಂಬುದಿದೆ. ಇಂದಲ್ಲಾ ನಾಳೆ ನಾವು ಮರಣಹೊಂದಲೇಬೇಕು. ಆ   ಮರಣಾನಂತರ ಜೀವನವೊಂದಿದೆ, ಅದುವೇ ಪರಲೋಕ ಜೀವನ. ಅದು ನಮಗೆ ಶಾಶ್ವತ.  ಅದಕ್ಕೆ ಕೊನೆ ಎಂಬುದಿಲ್ಲ...
ತಾತ್ಕಾಲಿಕವಾದ ಈ ಭೂಲೋಕದ  ಜೀವನದಲ್ಲಿ ನಮಗೆ ಎಷ್ಟೇ ಕಷ್ಟಗಳು ,ನಷ್ಟಗಳು ಬಂದರೂ, ಶಾಶ್ವತವಾದ ನಮ್ಮ ಪರಲೋಕದ ಜೀವನ ಪರಾಜಿತವಾಗಬಾರದು. ಅಲ್ಲಿನ ನಮ್ಮ ಜೀವನ ಸುಖಕರವಾಗಬೇಕು.
ನಮ್ಮ ಪರಲೋಕ ಜೀವನ ಸುಖಕರವಾಗಬೇಕು,  ಸ್ವರ್ಗ ಪ್ರವೇಶಿಸಬೇಕೆಂದಾದರೆ ನಾವು ನಮಗಿಷ್ಡ ಬಂದಂತೆ ಜೀವಿಸಿದರೆ ಸಾಲದು...
ಇಸ್ಲಾಮಿನ ಹೆಸರಲ್ಲಿ ಹೊಸ-ಹೊಸ ವಾದಗಳೊಂದಿಗೆ ಪ್ರತ್ಯಕ್ಷವಾದ ಪ್ರಸ್ತಾನಗಳಿಗೆ, ಸಂಘಟನೆಗಳಿಗೆ ಮಾರುಹೋಗದೆ
  ನಾವು ಅಹ್ಲುಸ್ಸುನ್ನತಿ ವಲ್ ಜಮಾಹತಿನ ವಕ್ತಾರರಾಗಿ ಬದುಕಬೇಕು.
ಸುನ್ನತ್ ಜಮಾಹತ್ ಅಲ್ಲದ ಮುಸ್ಲಿಮರು ಸ್ವರ್ಗಪ್ರವೇಶಿಸಲಾರರು ಎಂದು ಪ್ರವಾದಿ (ಸ-ಅ) ರು ಹೇಳಿದ್ದಾರೆ.
'ನನ್ನ ಸಮುದಾಯವು 73 ವಿಭಾಗಗಳಾಗಿ ವಿಂಗಡಣೆಯಾಗಲಿದ್ದು ಅದರಲ್ಲಿ 72 ವಿಭಾಗಗಳು ನರಕಕ್ಕೆ, 1 ವಿಭಾಗಮಾತ್ರ ಸ್ವರ್ಗ ಪ್ರವೇಶಿಸಲಿದೆ' ಅದುವೇ ಅಹ್ಲುಸ್ಸುನ್ನತೀ ಅಲ್-ಜಮಾಹತ್ (ಸುನ್ನಿಗಲು) ಹದೀಸ್.
ನಮ್ಮ ಪರಲೋಕ ವಿಜಯಕ್ಕೆ ನಾವು ಸುನ್ನತ್ ಜಮಾಹತ್ ಪ್ರಸ್ತಾನದಲ್ಲಿ ನೆಲೆಯೂರಿನಿಂತು, ಸುನ್ನತ್ ಜಮಾಹತಿಗೆ ಬೇಕಾಗಿ  ಕಾರ್ಯಾಚರಿಸುವುದು ಅವಶ್ಯಕ. ಇದಕ್ಕೆಲ್ಲಾ ಒಂದು ಉತ್ತಮ ಅವಕಾಶವೆಂಬಂತೆ ನಾವು ಎಸ್ ಎಸ್ ಎಫ್ ಎಂಬ ಸುನ್ನತ್ ಜಮಾಹತ್ ಸಂಘಟನೆಯಲ್ಲಿ ಸದಸ್ಯರಾಗಬೇಕು.

🌴 *SSF ನ ನಾಯಕತ್ವ..!*

👉 SSF ಗೆ ನಾಯಕತ್ವ ಕೊಡುವವರು, ಅವುಲಿಯಾಗಲು, ತಂಙಳ್ ಗಳು, ಸಾದಾತುಗಲು, ಪ್ರಗಲ್ಭ ಆಲಿಂಗಳು..ಮುಂತಾದ ಸಜ್ಜನರು ನೇತ್ರತ್ವಕೊಡುವ ಅದ್ವಿತೀಯ ಸಂಘಟನೆಯಾಗಿದೆ SSF. ಸಜ್ಜನರು ನೇತ್ರತ್ವ ಕೊಡುವ SSF ನಂತಹಃ ಸಂಘಟನೆಯಲ್ಲಿ ಮೆಂಬರ್ ಆಗಲು ಸಿಗುವುದೇ ನಮ್ಮ ಸೌಭಾಗ್ಯ.
'ಯಾರು ಯಾರನ್ನು ಪ್ರೀತಿಸುತ್ತಾರೋ, ಅವರು ಅವರೊಂದಿಗೆ ಸ್ವರ್ಗದಲ್ಲಿರುತ್ತಾರೆ' ಎಂದಾಗಿದೆ ಪ್ರವಾದಿ (ಸ-ಅ) ರು ಹೇಳಿರುವುದು....ಮಹಷರಾದಲ್ಲಿ ಪ್ರವಾದಿಗಳ ನಂತರ ಶಫಾಹತ್ ನ ಅಧಿಕಾರವಿರುವುದು ಆಲಿಂಗಳಿಗಾಗಿದೆ...ನಾಳೆ ಮಹ್'ಶರಾದಲ್ಲಿ ಆಲಿಂಗಳಿಗೆ ತಮಗಿಷ್ಟಬಂದವರನ್ನು ಶಫಾಹತ್ ಮಾಡುವ ಅಧಿಕಾರವನ್ನು ಅಲ್ಲಾಹು ಕೊಟ್ಟಿರುತ್ತಾನೆ. ಅಂದು ಆಲಿಂಗಳು ನಮ್ಮ ಕೈ ಹಿಡಿಯಬೇಕಾದರೆ ನಾವು ಅವರನ್ನು ಪ್ರೀತಿಸಬೇಕು.ಅವರು ನಮ್ಮನ್ನೂ ಪ್ರೀತಿಸುವಂತಾಗಬೇಕು.ಅದಕ್ಕೆಲ್ಲಾ ಒಂದು ಉತ್ತಮ ಅವಕಾಶವೆಂದರೆ, ಅವರು ಕಟ್ಟಿ ಬೆಳೆಸಿದ ಸಂಘ-ಸಂಸ್ಥೆಗಳಲ್ಲಿ ಮೆಂಬರ್ ಆಗಿ ಕಾರ್ಯಾಚರಿಸಬೇಕು.

🌴 *SSF ನಿಂದ ನಮಗಾಗುವ ಬಹುದೊಡ್ಡ ಲಾಭ..!*

👉 ಎಲ್ಲರಿಗೂ ಮರಣವೆಂಬುವುದು ಇದೆತಾನೆ.. ಆ ಮರಣಾ ನಂತರದ ನಮ್ಮ ಖಬರ್ ಜೀವನ ಹೇಗಿದೆಯೆಂದು ಅರಿತವರು ಯಾರಾದರೂ ಇದ್ದಾರೆಯೇ? ಖಂಡಿತವಾಗಿಯೂ ಇಲ್ಲ. ನಾವು ಒಂಟಿಯಾಗಿ ಮಲಗಲಿರುವ ಆ ಭಯಾನಕ ಖಬರ್ ನಲ್ಲಿ ನಮ್ಮ ರಕ್ಷಣೆಗೆ ಬರುವ ಒಂದು ಉತ್ತಮ ಸಮೂಹವು ನಮಗೆ ಬೇಡವೇ?

ನಾವೊಂದು ಸಾಧಾರಣ ಒಬ್ಬ ವ್ಯಕ್ತಿಯಾಗಿ ಮರಣ ಹೊಂದಿದರೆ, ನಮಗಾಗಿ ಕುರ್ಆನ್ ಓದಲು, ಝಿಕ್ರ್ ಹೇಳಲು, ದುಆಃ ಮಾಡಲು ಕೇವಲ ನಮ್ಮ ತಂದೆ,ತಾಯಿ,ಮಕ್ಕಳು,ಸಹೋದರರು ಮಾತ್ರ ಇರಬಹುದು ಅಷ್ಟೆ. ಆದರೆ, ಅದೇ ನಾವು SSF ಸಂಘಟನೆಯ ಕಾರ್ಯಕರ್ತರಾಗಿದ್ದರೆ, ಅಥವಾ SSF ಕಾರ್ಯಕರ್ತನ ತಂದೆಯೊ ತಾಯಿಯೊ ಕುಟುಂಬಸ್ಥರೋ ಆಗಿದ್ದರೆ ನಮಗಾಗಿ ಕುರ್ಆನ್ ಓದಲು,ಝಿಕ್ರ್ ಹೇಳಲು, ದುಆಃ ಮಾಡಲು ಲಕ್ಷಾಂತರ ಕಾರ್ಯಕರ್ತರಿರುತ್ತಾರೆ. ಅವರಲ್ಲಿ ಅವುಲಿಯಾಗಲು, ತಂಙಳ್ ಗಳು, ಆಲಿಂ ಗಲು, ಸಜ್ಜನರೂ ಇದ್ದಾರೆಂದರೆ ಅಂತಹ ಭಾಗ್ಯ ನಮಗೆ SSF ನಲ್ಲಲ್ಲದೆ ಇನ್ನೆಲ್ಲಿ ಸಿಗಲು ಸಾಧ್ಯ..ಅಲ್ಲಾಹನ ಇಷ್ಟದಾಸರ ದುಆಃವನ್ನು ಅಲ್ಲಾಹು ಸ್ವೀಕರಿಸದಿರುತ್ತಾನೆಯೇ..
ಖಬರ್ ನಲ್ಲಿ ರಕ್ಷೆಹೊಂದಲು ನಮಗೆ ಸಿಗುವ ಇಂತಹ ಒಂದು ಉತ್ತಮ ಅವಕಾಶ SSF ಸಂಘಟನೆಯ ಸದಸ್ಯನಾಗುವುದರಿಂದಲ್ಲದೆ ಬೇರೆಲ್ಲಿಯೂ ಸಿಗಲು ಸಾಧ್ಯವಿಲ್ಲ.
ಆದುದರಿಂದ ಪ್ರಿಯ ಸಹೋದರರೇ, ನಮ್ಮ ಪರಲೋಕ ವಿಜಯಕ್ಕಾಗಿ ಉಲಮಾಗಳು ನೇತೃತ್ವಕೊಡುವ SSF ಸಂಘಟನೆಯ ಸದಸ್ಯರಾಗೋಣ.
ಪ್ರಿಯ ತಂದೆ-ತಾಯಂದಿರೇ, ತಮಗೆ ಸಜ್ಜನರು ನೇತೃತ್ವಕೊಡುವ SSF ಎಂಬ ಆ ಮಹಾ ಪ್ರಸ್ತಾನದ ಅಂಗವಾಗಲು ಸಾಧ್ಯವಾಗದಿದ್ದರೂ ನಿಮ್ಮ ಮಕ್ಕಳನ್ನಾದರೂ SSF ಸೇರಲು ಪ್ರೋತ್ಸಾಹಿಸಿ. ಆ ಮೂಲಕವಾದರೂ ಅದರ ಲಾಭವನ್ನು ಪಡೆಯಲು ಪ್ರಯತ್ನಿಸಿ.

👉 ಅಹ್ಲುಸ್ಸುನ್ನತಿ ವಲ್-ಜಮಾಹತಿನ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ,  SSF ಮೆಂಬರ್ ಆಗಲು ಬಯಸುವವರಿಗೆ ಸಂಘಟನೆಗೆ ಸ್ವಾಗತ.

🌴 ಸಹೋದರರೇ ಇನ್ನೇಕೆ ತಡ...

ಬನ್ನಿ...
ಅವುಲಿಯಾಗಳು, ತಂಙಳ್ಗಲು, ಆಲಿಂಗಳು, ಸಾಧಾತುಗಳು, ಸಜ್ಜನರು ನೇತ್ರತ್ವ ಕೊಡುವ ಎಸ್ ಎಸ್ ಎಫ್ ಸಂಘಟನೆಯ ಸದಸ್ಯತ್ವವನ್ನು ಪಡೆದು ಇಹ-ಪರ ವಿಜಯಿಗಳಾಗೋಣ,
ಅಲ್ಲಾಹು ಅನುಗ್ರಹಿಸಲಿ, ಆಮೀನ್.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
*ಸೈದ್ಧಾಂತಿಕವಾಗಿ ರಾಜಿ ಇಲ್ಲವೇ ಇಲ್ಲ!*

ಹೌದು...
ಸೈದ್ಧಾಂತಿಕ ವಾಗಿ ರಾಜಿ ಇಲ್ಲದೆ ...
ಆ ಒಂದು ವಿಷಯದಲ್ಲಿ ಕಟ್ಟುನಿಟ್ಟಾದ ನಿಲುವು ಸ್ವೀಕರಿಸುವ ಎಸ್ಸೆಸ್ಸೆಫ್ ಎಂಬ ಸಂಘಟನೆ ಯ
ನಿಲುವು ನನ್ನನ್ನು ತುಂಬಾ ಆಕರ್ಷಿಸಿದೆ...
 ಡಾ: ಎ ಪಿ ಜೆ  ಕಲಾಂ ರವರು ಯಾವಾಗಲೂ ಹೇಳುವ ಒಂದು  ವಿಷಯ
"ನೀವು ಕನಸು ಕಾಣಿರಿ"
ಮುಸಲ್ಮಾನನ ಕನಸು ಏನಿದ್ದರೂ ಅದು ಸ್ವರ್ಗ ಪ್ರವೇಶ ಮಾತ್ರ ತಾನೆ...
ಆ ಕನಸು ನನಸಾಗ ಬೇಕಾದರೆ ಸೈದ್ಧಾಂತಿಕವಾಗಿ ನಾವು ಅಚಲರಾಗಿರಬೇಕು.
ಸುನ್ನಿ ಸಲಪಿ ಬೇಡ ನಾವು ಮುಸ್ಲಿಮರಾಗೋಣ ಎಂದು ಹೇಳುವ ಮಂದಿ
ನಿಜವಾಗಿಯೂ ಅವರು ಸೈದ್ಧಾಂತಿಕವಾಗಿ ಚಂಚಲರು.
ಇಂತಹ ಚಂಚಲ ವಿಶ್ವಾಸ ವಿಟ್ಟು ಸ್ವರ್ಗದ
ಕನಸು ಕಾಣುವುದು ಮೂರ್ಖತನ.
ಸೈಧ್ದಾಂತಿಕ ಬದ್ಧತೆ ಇಲ್ಲದೆ ಖಾಲಿ ಮಸೀದಿ ಕಟ್ಟಿಸಿದರೆ ಸ್ವರ್ಗ ಸಿಗುತ್ತದೆ ಎಂಬ ಕನಸು ಯಾರಾದರು ಕಂಡರೆ ಅದು ಅವನ ಹೆಡ್ಡತನದ ಪರಮಾವಧಿ ಮಾತ್ರ ...!

ಸೈಧ್ದಾಂತವಾಗಿ ರಾಜಿ ಮಾಡಿ ಕೊಂಡು
ಮುಸ್ಲಿಮ್ ಸಬಲೀಕರಣ ಮಾಡಿದರೆ ಸ್ವರ್ಗ ಖಂಡಿತ ಎಂದು ಕನಸು ಕಂಡರೆ ಆ ಕನಸು
ಸೂಜಿಯ ರಂಧ್ರ ದೊಳಗೆ ಆನೆ ಪ್ರವೇಶಿಸುವ ತನಕ ನನಸಾಗದು ಅದು ಖಂಡಿತ.

ಅಂದರೆ ಯಾವನೇ ಒಬ್ಬ ಮುಸ್ಲಿಮ್
ಅವನು ತನ್ನ ಆದರ್ಶ ಸಿದ್ಧಾಂತಗಳನ್ನು ಮೊದಲು ಭದ್ರ ಪಡಿಸಿಕೊಳ್ಳಬೇಕು
ಅದು ಪೌಂಡೇಶನ್ ...
ನಂತರದ್ದು ಬಿಲ್ಡಿಂಗ್....
ಇಲ್ಲಿ ಪೌಂಡೇಶನ್ ಅದು ಸುನ್ನಿಸಂ.
ಮುಸ್ಲಿಮ್ ಸಬಲೀಕರಣ ದಂತಹ ಒಳ್ಳೆಳ್ಳೆಯ ಕಾರ್ಯಗಳು ಬಿಲ್ಡಿಂಗ್ ಅಥವಾ ಕಟ್ಟಡಗಳು.
ಆದರೆ ಇಲ್ಲಿ ಸುನ್ನಿಸಂ ಎಂಬ ಪೌಂಡೇಶನ್ ಸರಿ ಇಲ್ಲದಿದ್ದರೆ ..
ಆ ದುರ್ಬಲ ಪೌಂಡೇಶನ್ ಮೇಲೆ ಕಟ್ಟುವ
ಕಟ್ಟಡಗಳು ಕೂಡಾ ದುರ್ಬಲ ತಾನೇ?
ನಾವು ಯಾವುದೇ ಗುರಿ ಇಟ್ಟುಕೊಂಡು
ಕೆಲಸ ಮಾಡುವಾಗ ಅದರ ಹಿಂದೆ ಪರಲೋಕ ಮೋಕ್ಷ ಇರಬೇಕು
ಕಾರಣ ನಾವು ಮುಸ್ಲಿಮರು ತಾನೇ?
ಪರಲೋಕ ಮೋಕ್ಷ ಸಿಗಬೇಕಾದರೆ
ನಮ್ಮ ಆದರ್ಶ ಸಿದ್ಧಾಂತಗಳಲ್ಲಿ ಬಧ್ದತೆ ನಮಗೆ ಬೇಕೇ ಬೇಕು.

ಇಲ್ಲಿಯೇ ಎಸ್ಸೆಸ್ಸೆಫ್ ನ ಪಾತ್ರ ತುಂಬಾ ಗಮನಾರ್ಹ ವಾಗಿ ಕಾಣುವುದು..
ನಾನು ಗಮನಿಸಿದ್ದೇನೆ ..
ಎಸ್ಸೆಸ್ಸೆಫ್ ಒಂದು ಧಾರ್ಮಿಕ ಸಂಘಟನೆ ಯಾದರೂ ..
ಇತರ ಸಾಮಾಜಿಕ ಸಂಘಟನೆಗಳು ಕೂಡಾ
ಮೂಗಿಗೆ ಬೆರಳಿಟ್ಟು ಆಶ್ಚರ್ಯ ಪಡುವಂತಹ ಸಾಮಾಜಿಕ ಶೈಕ್ಷಣಿಕ ಕ್ರಾಂತಿಗಳಿಂದ ಜನಮನಸ್ಸುಗಳಲ್ಲಿ ಅಚ್ಚೊತ್ತಿ ನಿಂತಿದೆ.
ಇಸ್ಲಾಮಿನ ನೈಜ ಆಶಯಗಳನ್ನು ಕಲಿಸಿ ಕೊಡುವ ಸಂದರ್ಭಗಳಲ್ಲಿಯೂ ಕೂಡಾ
ಎಲ್ಲಿಯೂ ಸೈದ್ಧಾಂತಿಕವಾಗಿ ರಾಜಿ ಮಾಡಲು
ಎಸ್ಸೆಸ್ಸೆಫ್ ತಯಾರಿರಲಿಲ್ಲ.

ಅದುವೇ ಎಸ್ಸೆಸ್ಸೆಫ್ ನ್ನು ಇತರ ಸಂಘಟನೆಗಳಿಗಿಂತ ಭಿನ್ನವಾಗಿ ಮಾಡುವುದು.
ಕಾರಣ ಎಸ್ಸೆಸ್ಸೆಫ್ ನವರು ಯಾವುದೇ
ಕಾರ್ಯಗಳನ್ನು ಕೈ ಗೊಂಡರು ಅದರ ಹಿಂದೆ
ಅವರು ಕನಸು ಕಾಣುವುದು ಅಲ್ಲಾಹನ ಸ್ವರ್ಗ ಮತ್ತು ತ್ರಪ್ತಿ ಮಾತ್ರ.
ಬದಲಾಗಿ ಈ ದುನಿಯಾದ ರಟ್ಟೆ ಬಲ, ತಾತ್ಕಾಲಿಕ ಆವೇಶ,ಕೋಮುವಾದ ಅಲ್ಲ.

ನಾನೊಬ್ಬ ಸುನ್ನಿ..
ಅದೇ ರೀತಿ ಸುನ್ನಿಗಳಾದ ಅನೇಕ ಯುವಕರಲ್ಲಿ ನನಗೆ ಹೇಳಲಿಕ್ಕೆ ಇರುವುದು
ತಾತ್ಕಾಲಿಕ ಆವೇಶದ ಹಿಂದೆ ಹೋಗಿ ನಮ್ಮ ಸಿದ್ದಾಂತ ವನ್ನು ಬಲಿ ಕೊಟ್ಟರೆ
ನಮ್ಮ ಯಾವುದೇ ಕಾರ್ಯಗಳಲ್ಲಿ ಅಲ್ಲಾಹನ ಸಹಾಯ ಇರಲ್ಲ ಅದು ಗ್ಯಾರಂಟಿ.
ಸೈಧ್ದಾಂತಿಕವಾಗಿ ಅಚಲರಾಗಿರಿ.
ಯಾವುದೇ ಕಾರ್ಯ ಮಾಡುವಾಗಲೂ ಅದರ ಹಿಂದೆ ಸ್ವರ್ಗ ಮತ್ತು ಅಲ್ಲಾಹನ ತ್ರಪ್ತಿ ಕನಸು ಕಾಣಿರಿ.
ಬೇರೆ ದುನಿಯಾದ ಕ್ಷಣಿಕ ರಟ್ಟೆಬಲ, ಹಣಬಲ,
ವ್ಯರ್ಥ ಆವೇಶದಿಂದ ದೂರವಿರಿ...
ಅಚಲವಾದ ಸುನ್ನಿ ವಿಶ್ವಾಸದೊಂದಿಗೆ ಅಲ್ಲಾಹನ ತ್ರಪ್ತಿಗಾಗಿ ಕೆಲಸ ಮಾಡಿ..
ಆವಾಗ ನೀವು ಅಲ್ಪ ಸಂಖ್ಯಾತರಾದರೂ ಕೂಡಾ ಅಲ್ಲಾಹು ಅವನ ಮಲಕ್ ಗಳ ಮೂಲಕ ನಿಮಗೆ ಸಹಾಯ ದೊರಕಿಸುವನು.
ಎಸ್ಸೆಸ್ಸೆಫ್ ನ ವಿಜಯದ ರಹಸ್ಯ ಕೂಡಾ ಅದುವೆ ಎಂಬುವುದು ನನ್ನ ಅಚಲ ವಿಶ್ವಾಸ .

ಹೌದು....
ಇಡೀ ಲೋಕವೇ ಎದುರು ನಿಂತರು ತಾನು ನಂಬಿದ ಆಶಯ ಆದರ್ಶ ವನ್ನು ತಬ್ಬಿಹಿಡಿದು
ಸಧೈರ್ಯದಿಂದ ಸೆಟೆದೆದ್ದು ನಿಂತು ಕಾರ್ಯಚರಣೆ ನಡೆಸಲು ಅದು ಎಸ್ಸೆಸ್ಸೆಫ್ ಗೆ ಮಾತ್ರ ಸಾಧ್ಯ .

ನಮಗೆ ಯಾವುದು ಬೇಡ ಅಂತ ಯಾರೂ ಒಬ್ಬಂಟಿಗರಾಗಬೇಡಿ .
"ಅಲೈಕುಮ್ ಬಿಲ್ ಜಮಾಅ:"
ನೀವು ಸಂಘಟಿತರಾಗಿ
"ಮನ್ ಶಝ್ಝ ಶುಝ್ಝ ಫಿ ನ್ನಾರ್"
ಯಾರಾದರೂ ಒಂಟಿಯಾದರೆ ಅವನು ನರಕದಲ್ಲಿಯೂ ಒಂಟಿ,
ಎಂಬ ನೆಬಿ ವಚನ ನೆನಪಿಸುತ್ತಾ.

ನೀವು ಸೈದ್ಧಾಂತಿಕ ಭದ್ರತೆ ಇರುವ ಎಸ್ಸೆಸ್ಸೆಫ್ ನೊಂದಿಗೆ ಸಂಘ ಸೇರಿರಿ.

ಇನ್ಶಾಅಲ್ಲಾ ಇದೇ ನವೆಂಬರ್ 1ರಿಂದ15ರ ತನಕ ಹದಿನೈದು ದಿವಸ ಎಸ್ಸೆಸ್ಸೆಫ್ ನ ಮೆಂಬರ್ ಶಿಫ್ ಅಭಿಯಾನ ನಡೆಯುತ್ತದೆ.
ಅದೇ ಕ್ಯಾಂಪಯ್ನಲ್ಲಿ 34 ವರ್ಷದಿಂದ ಮೇಲ್ಪಟ್ಟವರಿಗೆ SYS ನ ಮದ್ಯಾಂತರ ಸದಸ್ಯತನವಾಗುವ ಸುವರ್ಣಾವಕಾಶ ಇದೆ.

ತಡಮಾಡಬೇಡಿ,
ಅಲ್ಲಾಹನ ತ್ರಪ್ತಿ ಮತ್ತು
ಪರಲೋಕ ಮೋಕ್ಷ ಹಾಗೂ ಸ್ವರ್ಗದ ಕನಸಿನೊಂದಿಗೆ ಸದಸ್ಯರಾಗಿ.

ಇನ್ಶಾಅಲ್ಲಾ,
ನಾನು ಈ ಸಂಘ ಶಕ್ತಿಯೊಂದಿಗೆ
ಸೇರಲು ತೀರ್ಮಾನ ಮಾಡಿದ್ದೇನೆಂಬ ಶಪಥ ನಿಮ್ಮದಾಗಿರಲಿ.

ನೀವೂ ರೆಡಿ ತಾನೇ..
ನೀವು ನನಗಾಗಿ ದುಆ ಮಾಡಿ...
ನಿಮಗಾಗಿ ನಾನು ಸದಾ ದುಆ ಮಾಡುತ್ತಲಿರುವೆ.

 ಅಬೂಶಝ