*ದುಗ್ಗಲಡ್ಕ ತಂಙಳ್ ಪ್ರಭಾಷಣ ಮಾಫಿಯಾ ವಿರುಧ್ಧ ಗುಡುಗಿದ್ದಾರೆ! ಆದರೆ ನಾವೆಲ್ಲಾ ಮೂರ್ಖರೆಂದ ಮೇಲೆ ಮೂರ್ಖರಾಗಲೇ ಬೇಕು ತಾನೇ....?*
ಅದೆಷ್ಟೋ ವರ್ಷಗಳಿಂದ ಅವ್ರು ನಮ್ಮನ್ನು ಮೂರ್ಖರಾಗಿಸುತ್ತಾ ಇದ್ದಾರೆ.
ಮೂರ್ಖರಾಗಲು ನಾವು ಸದಾ ಸಿದ್ದವೆಂದು ಘೋಷಿಸಿದ ಮೇಲೆ ಅವ್ರಿಗೇನು ನಮ್ಮನ್ನು ವಂಚಿಸಲು ಮಹಾ ಕಷ್ಟ?
ಅವ್ರನ್ನೂ ದೂರಿ ಫಲವಿಲ್ಲ
ಅವ್ರ ಪಾದರಂವಿದಾಕ್ಕೆ ಬೀಳಲು ಶಪಥ ಬಿದ್ದ ನಮ್ಮನ್ನೇ ದೂರ ಬೇಕು ಹೊರತು;
ನಮ್ ಬಾಷೆ ಬ್ಯಾರಿ.
ಆದ್ರೆ;
ಬ್ಯಾರಿ ಉರ್ದಿ ನಮ್ಗೆ ಪಥ್ಯ ಆಗಲ್ಲ.!
ನಾವು ಕನ್ನಡದವ್ರು
ಕನ್ನಡ ಚೆನ್ನಾಗಿ ಅರ್ಥ ಆಗುತ್ತೆ
ಆದ್ರೆ ಕನ್ನಡ ಉರ್ದಿ ಬೇಡವೇ ಬೇಡ!!
ಡಿಮ್ಯಾಂಡ್ ಹೇಳದೆ ದಅವತ್ ನ ಉರ್ದಿ ಹೇಳಲು ಕೇರಳದಿಂದ ಬರುವ ನಮ್ಮ ಆದ್ಯಾತ್ಮಿಕ ಉಲಮಾಗಳಿದ್ದಾರೆ.
ಅವರನ್ನೂ ಕೂಡಾ ನಾವು ದೂರ ಮಾಡುತ್ತಿದ್ದೇವೆ.
ಕಾರಣ ಅವರದ್ದು ಬ್ಯುಸಿನೆಸ್ ಅಲ್ಲ,ಅವರಲ್ಲಿ ಬ್ರೋಕರ್ ರಗಳೆ ಇಲ್ಲ.
ಕಟ್ಟು ಕಥೆಗಳ ಭಾವುಕತೆ ಕೇಳಲ್ಲ.
ಅಲ್ಲಿ ಸಖತ್ ಕ್ವಿಕ್ಕ್ ಇಲ್ಲ!
ಹಾಗಾಗಿ ಅವರು ನಮಗೆ ಬೇಡ!
ಅದೇನಿದ್ದರೂ ಕೇರಳದ ಕಟ್ಟಕಡೆಯ ಊರಿನವ್ರು ಬಂದು 'ತಟ್ಟ' ಹಾಕಿ ಮೈಕ್ ಮುಂದೆ ಬೊಬ್ಬಿರಿದು ನಾಲ್ಕು ಮಲಯಾಳ ಸಾಹಿತ್ಯ ಸ್ಪೋಟಿಸಿದರೆ ಮಾತ್ರ ವಯಲ್!
ಅರ್ಥ ಆಗದಿದ್ದರೂ ಪರವಾಗಿಲ್ಲ.
ಆದ್ಯಾತ್ಮಿಕತೆಯ ಕಂಪಿನ ಸಿಂಚನ ಬೇಕಿಲ್ಲ.
ಮನಪರಿವರ್ತನೆಯ ಆವಶ್ಯಕತೆ ಇಲ್ಲ.
ಪರಲೋಕ ಚಿಂತೆ ಬರಲ್ಲ.
ಪವರ್ ಫುಲ್ ರಸಮಂಜರಿ ಸ್ಟೈಲ್ ಆದ್ರೆ ಸಾಕು.
ಸಖತ್ ಮಜಾ ಸಿಗಬೇಕು.
ಜನಸೇರ ಬೇಕು.
ಭರ್ಜರಿ ಕಲೆಕ್ಷನ್ ವಾಗ್ದಾನವಾಗಬೇಕು!
ದೀನು,ಆತ್ಮಿಯತೆ,ಬದಲಾವಣೆ, ಪರಲೋಕ ಚಿಂತೆ ಎಳ್ಳಷ್ಟು ಸೋಂಕದ ಆದುನಿಕತೆಯ ಮತಪ್ರಭಾಷಣ ಸ್ಟೈಲಿದು.
ಭರ್ಜರಿ ಲಾಭದ ಈ ಬ್ಯುಸಿನೆಸ್ಗೆ
ಹೆಸರು ಮಾತ್ರ
*ಧಾರ್ಮಿಕ ಮತಪ್ರಭಾಷಣ!*
ಇದರ ವಿರುದ್ಧ ಮೊನ್ನೆ ಮೊನ್ನೆ ಕೂರ್ನಡ್ಕ ಖತೀಬ್ ಜಲಾಲಿ ಉಸ್ತಾದ್ ಎಚ್ಚರಿಸಿದ್ದರು.
ಇದೀಗ ಸೆಯ್ಯದ್ ದುಗ್ಗಲಡ್ಕ ತಂಙಳ್ ಗುಡುಗಿದ್ದಾರೆ.
ಸಮುದಾಯ ಸಾಕಿಸಲಹಿದ ಉಸ್ತಾದರುಗಳು ಸಮುದಾಯಕ್ಕಾಗಿ ಉರ್ದಿ ಹೇಳುವುದು ಅವರ ಭಾದ್ಯತೆಯಾಗಿರುತ್ತದೆ.
ಅದಕ್ಕಾಗಿ ಲಕ್ಷಾಂತರ ರೂಪಾಯಿ ಡಿಮ್ಯಾಂಡ್ ಮಾಡುವುದು ಅಕ್ಷಮ್ಯ ಅಪರಾಧವೆಂದು ತಂಙಳ್ ಎಚ್ಚರಿಸಿದ್ದು ಸಕಾಲಿಕವಾಗಿತ್ತು.
ಸಮುದಾಯ ಬದಲಾವಣೆ ಬಯಸದ ಕಾಲವಷ್ಟೂ ಇದು ಕೂಡಾ ವರದಕ್ಷಿಣೆ ಪಿಡುಗಿನಂತೆ ತನ್ನ ಕರಾಳ ಕದಂಬವನ್ನು ಇನ್ನಷ್ಟು ವ್ಯಾಪಿಸುತ್ತಾ ಇರುತ್ತೆ.
ಸುಲಭದಲ್ಲಿ ಹಣ ಅಂತಸ್ತು ಸ್ಥಾನಮಾನ ಸಿಗುವ ದಂಧೆಯಾದುದರಿಂದಲೇ ಅದರ ಹಿಂದೆ ರಾಜಕೀಯದ ಕರಾಳಹಸ್ತ ತನ್ನ ಹಿಡಿತವನ್ನು ಸಹಜವಾಗಿಯೇ ಬಿಗಿಗೊಳಿಸಿದೆ.
ಇದೀಗ ಇವರನ್ನು ಕರೆಸಿದ ಕೆಲವೊಂದು ಊರಿನವರಿಗೆ ಕಹಿಯಾಗಿದೆ ಉಗುಳಲು ಅಸಾದ್ಯವಾಗುವಷ್ಟು!
ದೂರದ ಕೊಲ್ಲಂ ನಿಂದ ಕೊಲ್ಲಲಿಕ್ಕಾಗಿಯೇ ಬರುವವರನ್ನು ಆದರದಿಂದ ಸ್ವಾಗತಿಸುವ ನಮಗೆ ನಮ್ಮವರೆಂದರೆ ಅಸಹ್ಯ!
ಹಾಗಾಗಿಯೇ ಕೇರಳದ ಕೆಲವೊಂದು ಇನ್ಸ್ಟಿಟ್ಯೂಟ್ ಕೇಂದ್ರಗಳಲ್ಲಿ ಕನ್ನಡಿಗರ ರೂಮಿಗೆ
*'ಮಂಡನ್ ಮಾರುಡೆ ಮುರಿ"*
(ಮೂರ್ಖರ ರೂಮ್)
ಎಂದು ಕರೆಯಲಾಗುತ್ತದೆ.
ಇದರಿಂದ ನಮ್ ಸಮುದಾಯ ಪಾಠ ಕಲಿಯುತ್ತೆ ಎಂದು ನೀವು ಗ್ರಹಿಸಿದರೆ ನೀವು ಶತಮೂರ್ಖರು.
ಸದಾ ಮೂರ್ಖರಾಗಲಿಕ್ಕೆ ಪ್ರತಿಜ್ಞೆ ಕೈಗೊಂಡ ನಾವು ಮೂರ್ಖರಾಗದೆ ಬದುಕುವುದೆಂದರೆ ಅದು ಒಂಥರಾ ಸೇಮ್ ತಾನೇ?
ಅಬೂಶಝ
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Friday, March 16, 2018
ಜನಾಬತ್ತ್ ಸ್ನಾನ ಮಾಡುವಾಗ ಶ್ರದ್ದೆ ವಹಿಸಿರಿ
✍ ಮೊದಲನೆಯದಾಗಿ ಸುನ್ನತ್ ಸ್ನಾನದ ನಿಯ್ಯತ್ ಮಾಡಿ ಶರೀರದಲ್ಲಿರುವ ಕಲ್ಮಶವೆಲ್ಲಾ ಕ್ಲೀನ್ ಮಾಡಿರಿ 💎 ವೀರ್ಯ ಹೊರಟ ನಂತರ ಮೂತ್ರ ಮಾಡಿ ಇಲ್ಲದಿದ್ದರೆ ಮೂತ್ರ ಕಲ್ಲು ಸಂಭವಿಸಬಹುದು.
ಕಡ್ಡಾಯ ಸ್ನಾನದ ನಂತರ ಶಿಶ್ನದಲ್ಲಿ ಬಾಕಿಯಾದ ಮೂತ್ರ ಹೂರ ಬಂದರೆ ಎರಡನೆ ಸಲ ಸ್ನಾನ ಕಡ್ಡಾಯ ಈ ರೀತೀ ಆಗದಿರಲಿಕ್ಕಾಗಿ
⭐ ಸುನ್ನತ್ ಸ್ನಾನದಲ್ಲಿ ಶರೀರವೆಲ್ಲಾ ಕ್ಲೀನ್ ಮಾಡಿದ ನಂತರ ಕಡ್ಡಾಯ ಸ್ನಾನದ ನಿಯ್ಯತ್ ಮಾಡಿ
🌼195 ಲೀಟರ್ ಗಿಂತ ಜಾಸ್ತಿ ಇರುವುದರಲ್ಲಿ ಮುಳುಗಿಯೊ ಕೈ ಹಾಕಿ ಸ್ನಾನ ಮಾಡಬಹುದು
🌼195 ಲೀಟರ್ ಗಿಂತಲೂ ಕಡಿಮೆ ಇರುವ ಉದಾ:ಬಕೆಟ್ ತಂಬಿಗೆ ಇದರಲ್ಲಿ ಕೈ ಮುಳುಗಿಸಬಾರದು. ನಿಯ್ಯತ್ ಮಾಡುವ ಮೊದಲು ಮುಳುಗಿಸಬಹುದು.
ನಿಯ್ಯತ್ ಮಾಡಿದ ನಂತರ ಮುಳುಗಿಸಿದರೆ ನೀರು ಹಾಳಾಯಿತು ನಂತರ ಉಪಯೋಗ ಶೂನ್ಯ
☘ಮೊದಲನೆಯದಾಗಿ ಒಂದು ಕಪ್ ನೀರು ಕೈಯ್ಯಲ್ಲಿ ಹಿಡಿದು(ಶವರ್ ಆದ್ರೆ ಒಳ್ಲೆಯದು, ಈ ತಲೆ ಬಿಸಿ ಇಲ್ಲ) ನಿಯ್ಯತ್ ಮಾಡಿ ಬಲ ಕೈ ಮೇಲೆ ಸುರಿಯಿರಿ.
3 ಸಲ ಸುರಿಯಿರಿ. 1ಸಲ ಪರ್ಲ್, ಬಾಕಿ ಎರಡು ಸುನ್ನತ್
ಮೂದಲನೆಯ ನೀರು ಪರ್ಲಿನದ್ದು ಬಕೆಟಿಗೆ ಬೀಳದ ಹಾಗೆ ನೋಡಿಕೊಳ್ಳಬೇಕು
ಎರಡು ಮತ್ತು ಮೂರನೆಯ ಸಲದ ನೀರು ಬಿದ್ದರೆ ತೊಂದರೆ ಇಲ್ಲ
☘ ಸುನ್ನತ್ ಬಲಬಾಗದಿಂದ ಶುರು ಮಾಡುವುದಾಗಿದೆ
🌵ಸ್ನಾನದ ಮೊದಲು ಮತ್ತು ನಂತರ ಉಲೂ ಸುನ್ನತ್ತಾಗಿದೆ
🌻ಸ್ನಾನ ಕಡ್ಡಾಯವಾಗಲು ಸಂಬೋಗದ ಸಮಯದಲ್ಲಿ ವೀರ್ಯ ಬರಬೇಕೆಂದು ಇಲ್ಲ. ಗಂಡಿನ ಶಿಶ್ನದ ತುದಿ (ಉಂಗುರದಾಕಾರದ್ದು )ಹೆಣ್ಣಿನ ಯೋನಿಯ ಪ್ರವೇಶ ಮಾಡಿದರೆ ಸ್ನಾನ ಕಡ್ಡಾಯ
🔥ರಾತ್ರಿ ಸ್ವಪ್ನದಲ್ಲಿ ವೀರ್ಯ ಬಂದಿದ್ದು ವಸ್ತ್ರದಲ್ಲಿ ವೀರ್ಯದ ಅವಶೇಷ ಕಾಣದಿದ್ದರೆ ಸ್ನಾನ ಕಡ್ಡಾಯವಿಲ್ಲ.
ರಾತ್ರಿ ಸ್ವಪ್ನ ಕಾಣದೆಯೇ ವೀರ್ಯದ ಅವಶೇಷ ಕಂಡರೆ ಸ್ನಾನ ಕಡ್ಡಾಯ
☘ವೀರ್ಯ ಬಂದ ನಂತರ ಶರೀರದ ಕೂದಲು ಉಗುರು ಸ್ನಾನದ ಮುಂಚೆ ತೆಗೆಯಲು ಹರಾಂ. ನಾಳೆ ಮಹ್ಶರಾದಲ್ಲಿ ನಮಗೆದುರಾಗಿ ನನ್ನನ್ನು ಇವನು(ಇವಳು) ಸ್ನಾನ ಮಾಡಿಸಿಲ್ಲ ಎಂದು ಸಾಕ್ಷಿ ನುಡಿಯುವುದು
🌿ಸ್ನಾನದ ಮುಂಚೆ ಅಕಸ್ಮಾತ್ ಕೂದಲು ಉಗುರು ಹೋದರೆ ದೋಷವಿಲ್ಲ
☘ಕೊಯ್ದುಹೋದ ಕೂದಲು ಉಗುರು ಸ್ನಾನ ಮಾಡಿಸಿದರೆ ಸರಿಯಾಗುವುದಿಲ್ಲ .ಅದನ್ನು ಹೂತುಬಿಡಿ
🔥🔥🔥
ಶ್ರದ್ದೆ ತಪ್ಪಿದರೆ ನರಕ ಗ್ಯಾರಂಟಿ, ಅಲ್ಲಾಹು ಕಾಪಾಡಲಿ

ಇಮಾಮ್ ಹಂಬಲೀ (ರ.ಅ)ರವರು ಇಷಾ ನಮಾಝಿನ ನಂತರ ನನಗೆ ಹಸಿವಾಗುತ್ತಿದೆ ಏನಾದರೂ ತಿನ್ನಲು ಆಹಾರವಿದೆಯೇ.?ಮನೆಯವರಲ್ಲಿ ಕೇಳಿದರು.ತಿನ್ನಲು ರೊಟ್ಟಿ ತಂದು ಇಟ್ಟಾಗ ಹಂಬಲೀ ರ.ಅ ರವರು ಕೇಳಿದರು ಈ ರೊಟ್ಟಿಯನ್ನು ಯಾರು ತಂದು ಕೊಟ್ಟ ಗೋದಿಯಿಂದ ತಯಾರಿಸಿದ್ದೀರಿ.? ಮನೆಯವರ ಉತ್ತರ ಅದು ನೀವೇ ತಂದು ಕೊಟ್ಟಿದ್ದೀರಿ ಅದರಿಂದಲೇ ತಯಾರಿಸಿದೆವು.ಹಾಗಾದರೆ ಇದಕ್ಕೆ ಸೇರಿಸಿದ ನೀರು...? ಅದು ಸಾರ್ವಜನಿಕರು ಉಪಯೋಗಿಸುತ್ತಿದ್ದ ಬಾವಿಯಿಂದಾಗಿತ್ತು.ಆಗ ಇಮಾಮ್ ಹಂಬಲೀ ರ.ಅ ರವರು ಕೇಳಿದರು ಯಾಕೆ ನಮ್ಮ ಬಾವಿಯಲ್ಲಿ ನೀರು ಇರಲಿಲ್ಲವೇ.? ಇತ್ತು ಆದರೂ ಎಲ್ಲರೂ ತೆಗೆಯುವಾಗ ನಾವು ಕೂಡ ತೆಗೆದು ಬಿಟ್ಟೆವು.ಆಗ ಇಮಾಮ್ ಹಂಬಲೀ ರ.ಅ ರವರು ನನಗೆ ಈ ಆಹಾರ (ರೊಟ್ಟಿ) ಬೇಡವೆಂದು ಹೋಗಿ ಮಳಗಿ ಕೊಂಡರು.ತಂದೆಯವರಿಗೆ ಬೇಡವಾದದ್ದು ನಮಗೂ ಬೇಡವೆಂದು ಮನೆಯವರೆಲ್ಲರೂ ಅಂದು ಉಪವಾಸವಾಗಿ ಮಳಗಿದರು.
ಮರುದಿವಸ ಬೆಳಗ್ಗೆ ಕೆಲವು ಫಕೀರರು ಬಿಕ್ಷೆ ಬೇಡುತ್ತಾ ಮನೆಯ ಪಕ್ಕ ಬಂದಾಗ ರಾತ್ರಿ ತಿನ್ನದೇ ಇಟ್ಟಿದ್ದ ರೊಟ್ಟಿಯನ್ನು ಮನೆಯವರು ಫಕೀರರಿಗೆ ಕೊಟ್ಟರು.ಫಕೀರರಲ್ಲಿ ಒಬ್ಬ ಕೇಳಿದ ನಮಗೆ ಯಾರಾದರೂ ರೊಟ್ಟಿ ಕೊಟ್ಟರೂ ಒಂದೆರಡು ಕೊಡ ಬಹುದು ಇದೇನು ಇದರಲ್ಲಿ ತುಂಬಾ ರೊಟ್ಟಿ ಇದೆ. ಏನಾದರೂ ಇದರಲ್ಲಿ ಮೋಸವಿರ ಬೇಕು. ನಾವಿದನ್ನು ಉಪಯೋಗಿಸುವುದು ಬೇಡ ಸಮುದ್ರಕ್ಕೆ ಎಸೆದು ಬಿಡೋನವೆಂದು ಸಮುದ್ರಕ್ಕೆ ಎಸೆದರು.
ಹೀಗೆ ಇಮಾಮ್ ಹಂಬಲೀ ರ.ಅ ರವರು ಮನೆಗೆ ಬಂದು ನಿನ್ನೆ ರಾತ್ರಿಯ ರೊಟ್ಟಿ ಏನು ಮಾಡಿದ್ದೀರಿ ಎಂದು ವಿಚಾರಿಸಿದಾಗ ನಾವು ಅದನ್ನು ಫಕೀರರಿಗೆ ಧಾನ ಮಾಡಿದೆವು ಎಂದು ಹೇಳಿದರು.ಇಮಾಮ್ ಹಂಬಲೀ ರ.ಅ ರವರು ಫಕೀರರನ್ನು ಹುಡುಕುತ್ತಾ ಹೋದರು. ಫಕೀರರನ್ನು ಕಂಡಾಗ ರೊಟ್ಟಿಯ ವಿಷಯ ಕೇಳಿದರು.ಆಗ ಫಕೀರರು ನಾವು ಅದನ್ನು ಪಕ್ಕದ ಸಮುದ್ರಕ್ಕೆ ಎಸೆದೆವು ಎಂದು ಹೇಳಿದರು.ಅಂದಿನಿಂದ ಮರಣದ ವರೆಗೂ ಇಮಾಮ್ ಹಂಬಲೀ ರ.ಅ ರವರು ಮೀನು ತಿನ್ನುವುದನ್ನೇ ಬಿಟ್ಟು ಬಿಟ್ಟರು ಎಂದು ಇತಿಹಾಸ....
ಸ್ನೇಹಿತರೇ...
ಇಮಾಮ್ ಹಂಬಲೀ ರ.ಅ ರವರು ಸಾರ್ವಜನಿಕವಾಗಿ ಉಪಯೋಗಿಸಿದ ನೀರು ಹರಾಮ್ ಎಂದು ಭಾವಿಸಿ ಆಹಾರವನ್ನು ತಿರಸ್ಕರಿಸಿದ್ದೂ ಅಲ್ಲ.ಫಕೀರರ ಹಿಂದೆ ಹೋಗಿ ನೀವು ಅದನ್ನೇನು ಮಾಡಿದ್ದೀರಿ..? ಸಮುದ್ರಕ್ಕೆ ಎಸೆದುದರಿಂದ ಆ ಆಹಾರವನ್ನು ಮೀನು ತಿಂದಿದ್ದರಿಂದ ನಂತರ ಮರಣದ ಸಮಯವರೆಗೂ ಮೀನು ತಿನ್ನಲಿಲ್ಲ ವೆಂದರೆ ..?
ಕೇವಲ ಮನೆಯಲ್ಲಿ ಇದ್ದ ನೀರನ್ನು ಉಪಯೋಗಿಸದೆ ಸಾರ್ವಜನಿಕರು ಪಡೆಯುವ ನೀರು ಯಾಕೆ ಉಪಯೋಗಿಸಿದಕ್ಕೆ ಇಷ್ಟೆಲ್ಲಾ ಜಾಗೃತ ವಹಿಸಿದ ಇಮಾಮರ ಜೀವನ ಶೈಲಿಗೂ ನಮ್ಮ ಜೀವನ ಶೈಲಿಗೂ ಅಜಗಜಾಂತರ ವ್ಯತ್ಯಾಸವಿದೆ ನೋಡಿ...
ಧರ್ಮಕ್ಕೆ ಸಿಕ್ಕಿದರೆ ಏನೇ ಇರಲಿ, ಏನೇ ಬರಲಿ ಟೋಟಲ್ #ಬಂಜಿದುಲಯಿ_ಪೋಂಡಯಾವು.
ಹಾಗೆ ನಮ್ಮ ಬದುಕು ಅಲ್ಲವೇ.? ಸರಕಾರ ಬಡವರಿಗೆ ಕೊಡುವ ಸವಲತ್ತನ್ನು ಕಾಲು ಭಾಗ ಬಡವರಿಗೆ ಮುಕ್ಕಾಲು ಭಾಗ ಯಾರಿಗೆ..? ನೀರಿಲ್ಲದ ಕಡೆ ಹೋಗುವ ನೀರನ್ನು ತಡೆದು ನಮ್ಮ ಮನೆಗೆ ಹಾಕುವ ಅದೆಷ್ಟು ಪಂಚಾಯತಿನ ಮೆಂಬರುಗಳಿರಬಹುದು,ಕಾರ್ಪೋರೇಟರ್ ಗಳಿರ ಬಹುದು.? ನಮ್ಮ ಮನೆಯಲ್ಲಿ ಬೇಕಾದ ಸವಲತ್ತುಗಳಿದ್ದರೂ ಇನ್ನೊಬ್ಬನಿಗೆ ಸರಕಾರ ನಿಯೋಜಿಸಿದ್ದನ್ನು ತನಗೂ ಬೇಕೆಂದು ಜೊಲ್ಲು ಸುರಿಸುವ ರಾಜಕೀಯದ ಪುಡಾರಿಗಳಿರಬಹುದಲ್ಲವೇ...?
ಒಮ್ಮೆ ಅವಲೋಕಿಸಿ ನೋಡಿ ನಾಳೆ ಕಬರಲ್ಲಿ ಯಾವುದೂ ನೀವು ಕೂಡಿಸಿಟ್ಟ ಆಸ್ತಿ ಪಾಸ್ತಿ ಪಡ ಕೊಂಡು ಹೋಗೋಕ್ಕಾಗಲ್ಲ. ನೀವು ಮಾಡಿದ ಪುಣ್ಯ ಮಾತ್ರ ನಿಮಗೆ ಉಪಕಾರ ಕೊಡುವುದು.ನಿಮ್ಮ ಕಬರಲ್ಲಿ ಶಿಕ್ಷೆಗೆ ಬಡವರ ಕಣ್ಣೀರಿನ ಒಂದು ಹನಿ ಸಾಕು.....
ಅಲ್ಲಾಹು ನಮ್ಮೆಲ್ಲರನ್ನೂ ಕಾಪಾಡಲಿ. ಆಮಿನ್..
#ಇಸ್ಮಾಯಿಲ್_ಉಳ್ಳಾಲ್

ಮಾರ್ಚ್ 29ಕ್ಕೆ🌙 ರಜಬ್ ತಿಂಗಳು ಶುರುವಾಗಲಿದೆ. ಈ ವಿಷಯವನ್ನು ಯಾರು ಮೊದಲು ತಿಳಿಸುತ್ತಾರೆ
ಅವರಿಗೆ ನರಕವು ಹರಾಂ ಆಗಿದೆ. (ಹದೀಸ್)💐
*ಈ ಒಂದು ಮೆಸೇಜ್ ಕಳುಹಿಸಿದ ಎಲ್ಲರೂ ಇದನ್ನೊಮ್ಮೆ ಓದಿ.*
_ಯಾವುದಾದರೂ ಒಳ್ಳೆಯ ತಿಂಗಳು ಒಳ್ಳೆಯ ದಿನ ಆಗಮಿಸಿದರೆ ಸಾಕು ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಇಸ್ಲಾಂ ಇದುವರೆಗೂ ಕಳಿಸಿಕೊಡದ ಕೆಲವೊಂದು ಸುಳ್ಳು ವಾರ್ತೆ ಹದೀಸ್ಗಳನ್ನು ಕಳುಹಿಸುವಲ್ಲಿ ನಿರತರಾಗಿ ಬಿಡುತ್ತಾರೆ. ಈ ಸಂದೇಶ ಕಳುಹಿಸಿದ ಮೇಲೆ ನರಕ ಹರಾಂ ಆಗುವುದಾದರೆ ನಮಾಝ್, ಉಪವಾಸ, ಹಜ್ ಮುಂತಾದ ಸತ್ಕರ್ಮದ ಅಗತ್ಯವೇ ಇರ್ತಾರಲಿಲ್ಲ._
*ಸುಳ್ಳು ಹದೀಸ್ ಮತ್ತು ನೆಬಿಯವರ ಹೆಸರು ಹೇಳಿ ಸುಳ್ಳು ವಾರ್ತೆ ಕಳುಹಿಸುವವರು ಈ ಹದೀಸ್ನೊಮ್ಮೆ ನೋಡಿ.*
”، فهذا كذب محض؛ فلا يجوز نشر هذه الرسالة، ومن نشرها فهو آثم لمشاركته في ترويج الباطل ومساهمته في نشر الكذب على رسولنا الكريم صلى الله عليه وآله وسلم، وفي الحديث: “من كذب علي متعمدا فليتبوأ مقعده من النار” رواه البخاري ومسلم. فليحذر المسلم من ترويج الباطل والمساهمة في نشر الكذب.
*ಯಾರಾದರು ನಬಿ ﷺِ ರವರ ಹೆಸರು ಹೇಳಿ ಸುಳ್ಳು ವಾರ್ತೆ ಹದೀಸ್ಗಳನ್ನು ಕಳುಹಿಸುತ್ತಾರೋ ಅವರು ನರಕದಲ್ಲಿ ಒಂದು ಆಸನವನ್ನು ಕಾದಿರಿಸಿಕೊಳ್ಳಲಿದ್ದಾರೆ.*
*ನಿಮ್ಮ ಕೈಯಿಂದಲೇ ನರಕದ ಹಾದಿಯನ್ನು ಖರೀದಿಸಿ ಕೊಳ್ಳದಿರಿ.*
ಸತ್ಯಾಸತ್ಯತೆಯನ್ನು ಅರಿತು ಸರಿಯಾದ ದೀನಿನ ಮಾರ್ಗದಲ್ಲಿ ನೆಡೆಯಲೂ ಅಲ್ಲಾಹು ತೌಫಿಕ್ ನೀಡಲಿ.
*۞ْآمِيـــــنْ يَا رَبَّ الْعَالَمِين۞*
✍🏽 *ರಜಬ್ ನಾವುಂದ(ಜ್ಞಾನದಾಹಿ)*
_ಹೇಳಿರಿ ನಬಿ (ﷺ)ರವರ ಮೇಲೆ ಒಂದು ಸ್ವಲಾತ್ ........_
📿☪📿 *صَـلــُّوا عَـلَـى النَّبِيِّ ﷺ وَآلـِهِ * اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله* 📿☪📿

Wednesday, March 14, 2018
*ಜಪಮಾಲೆ ಹಿಡಿಯುವುದು ಅನಿಸ್ಲಾಮಿಕವೇ?*
ಭಾಗ --3
✍ *ಮುನೀರ್ ಸಖಾಫಿ, ಸಾಲೆತ್ತೂರು*
-----------------------------------------------------------
ಇಬ್ನ್ ಸಅದ್ (ರ) ತನ್ನ ತ್ವಬಖಾತ್'ನಲ್ಲಿ ಈ ರೀತಿ ವಿವರಿಸುತ್ತಾರೆ,
عن فَاطِمَةَ بِنْتِ حُسَيْنٍ" أَنَّهَا كَانَتْ تُسَبِّحُ بِخُيُوطٍ مَعْقُودٍ فِيهَا" (طبقات ابن سعد 8/474)
ಅಲಿಯ್ಯ್(ರ)ರವರ ಮೊಮ್ಮಗಳಾದ ಫಾತಿಮಾ (ರ) ಒಂದು ನೂಲಿನ ಕಟ್ಟುಗಳಿಂದ ತಸ್ಬೀಹ್'ನ ಲೆಕ್ಕ ಹಿಡಿಯುತ್ತಿದ್ದರು.
(ತ್ವಬಖಾತ್ ಇಬ್ನ್ ಸಅದ್8/474)

ಇಮಾಮ್ ಸುಯೂಥೀ (ರ) ಬರೆಯುತ್ತಾರೆ,
وأخرج عبد الله بن الإمام أحمد فى زوائد الزهد من طريق نعيم بن محرز ابن أبى هريرة عن جده أبى هريرة إنه كان له خيط فيه ألفا عقدة فلا ينام حتى يسبح به (الحاوي للفتاوي 2/140)
ಇಮಾಮ್ ಅಹ್'ಮದ್ (ರ)ರವರ ಪುತ್ರ ಅಬ್ದುಲ್ಲ (ರ)ರವರು ಝವಾಇದು ಝ್ಝುಹ್ದ್'ನಲ್ಲಿ ಅಬೂಹುರೈರ(ರ)ರಿಂದ ಈ ರೀತಿ ವರದಿ ಮಾಡುತ್ತಾರೆ,
2000 ಕಟ್ಟುಗಳಿದ್ದ ಒಂದು ನೂಲು ಅವರ ಬಳಿಯಿತ್ತು. ಅದರ ಲೆಕ್ಕದಲ್ಲಿ ತಸ್ಬೀಹ್ ಹೇಳದೆ ಅವರು ನಿದ್ರಿಸುತ್ತಿರಲಿಲ್ಲ.
(ಅಲ್ ಹಾವೀಲಿಲ್ ಫತಾವಾ 2/140)

كان لأبي الدرداء نوى من نوى العجوة في كيس فكان إذا صلى الغداة أخرجهن واحدة واحدة يسبح بهن حتى ينفدن
(الحاوي للفتاوي 2/140)
ಅಬುದ್ದರ್'ದಾ (ರ) ರವರ ಚೀಲದಲ್ಲಿ ಅಜ್'ವ ಖರ್ಜೂರದ ಬೀಜಗಳಿತ್ತು. ಸುಬಹಿ ನಮಾಝಿನ ಬಳಿಕ ಅದರಿಂದ ಒಂದೊಂದು ತೆಗೆದು ಅದು ಮುಗಿಯುವ ತನಕ ಅವರು ತಸ್ಬೀಹ್ ಹೇಳುತ್ತಿದ್ದರು.
(ಅಲ್ ಹಾವೀ ಲಿಲ್ ಫತಾವಾ 2/140)

_*ಜಪ ಮಾಲೆ ಉಪಯೋಗಿಸಿದ ಮಹಾತ್ಮರು*_
ಜಪ ಮಾಲೆ ಉಪಯೋಗಿಸಿ ಅದನ್ನು ಶಿಷ್ಯಂದಿರಿಗೆ ಧೀಕ್ಷೆ (ಇಜಾಝತ್) ನೀಡಿದ ಮಹಾತ್ಮರ ಹೆಸರನ್ನು ಕೆಳಗೆ ನೋಡಿ.
ಜಪಮಾಲೆ ಯಹೂದಿ, ನಸ್ರಾನಿಗಳ ಸಂಪ್ರಾಯವೆಂದು ಹೇಳಿದ ಅಜ್ಞಾನಿಯು ಈ ಮಹಾತ್ಮರನ್ನೆಲ್ಲಾ ಯಹೂದಿಗಳ ಅನುಯಾಯಿಗಳೆಂದು ಹೇಳುವರೇ?
ಅವರ ಹೆಸರು ಈ ರೀತಿಯಿದೆ.
_(ಇದು ಇಮಾಮ್ ಸುಯೂಥೀ (ರ)ರವರಿಗೆ ಪ್ರಸಿದ್ದ ತಾಬಿಗಳಲೊಬ್ಬರಾದ ಹಸನುಲ್ ಬಸರೀ(ರ) ರಿಂದ ಜಪ ಮಾಲೆಯ ಇಜಾಝತ್ (ಧೀಕ್ಷೆ) ಲಭಿಸಿದ ಗುರುಪರಂಪರೆ ಕೂಡಾ ಅಗಿರುತ್ತದೆ.)_
1. ಇಮಾಮ್ ಅಬೂ ಅಬ್ದಿಲ್ಲಾಹಿ ಮುಹಮ್ಮದ್ ಬಿನ್ ಅಬೀ ಬಕರ್ (ರ)
2. ಇಮಾಮ್ ಅಬುಲ್ ಅಬ್ಬಾಸ್ ಅಹ್'ಮದ್ ಬಿನ್ ಅಬುಲ್ ಮಹಾಸಿನ್ (ರ)
3. ಇಮಾಮ್ ಅಬುಲ್ ಮುಳಫ್ಫರ್ ಯೂಸುಫ್ ಅತ್ತುರ್'ಮುದ್ಸಿ (ರ)
4. ಇಮಾಮ್ ಅಬು ಸ್ಸನಾ (ರ)
5. ಇಮಾಮ್ ಅಬ್ದುಸ್ಸಮದ್ ಬಿನ್ ಅಹ್'ಮದ್ ಅಬ್ದುಲ್ ಖಾದಿರ್ (ರ)
6. ಇಮಾಮ್ ಅಬು ಮುಹಮ್ಮದ್ ಯೂಸುಫ್ ಬಿನ್ ಅಬುಲ್ ಫರಜ್ (ರ)
7. ಅವರ ತಂದೆ.
8. ಇಮಾಮ್ ಅಬುಲ್ ಫಲ್ ಲ್ ಬಿನ್ ನಾಸಿರ್ (ರ)
9. ಇಮಾಮ್ ಅಬೂ ಮುಹಮ್ಮದ್ ಅಬ್ದುಲ್ಲಾಹಿ ಬಿನ್ ಅಹ್'ಮದ್ ಅಸ್ಸಮರ್'ಖಂದೀ (ರ)
10. ಇಮಾಮ್ ಅಬೂ ಬಕರ್ ಮುಹಮ್ಮದ್ ಬಿನ್ ಅಲಿಯ್ಯಸ್ಸಲಮೀ (ರ)
11. ಇಮಾಮ್ ಅಬು ನಸ್'ರ್ ಅಬ್ದುಲ್ ವಹ್ಹಾಬ್ ಬಿನ್ ಅಬ್ದುಲ್ಲಾಹಿ ಅಲ್ ಮುಖ್'ರೀ (ರ)
12. ಇಮಾಮ್ ಅಬುಲ್ ಹಸನ್ ಅಲಿಯ್ಯ್ ಬಿನ್ ಅಲ್ ಹಸನ್ ಬಿನ್ ಅಲ್ ಮುತರಫ್ಫಿಖ್ ಅಸ್ಸೂಫಿ (ರ)
13. ಇಮಾಮ್ ಅಬುಲ್ ಹಸನ್ ಅಲ್ ಮಾಲಿಕೀ (ರ).
14. ಇಮಾಮ್ ಜುನೈದುಲ್ ಬಗ್ದಾದೀ (ರ)
15. ಇಮಾಮ್ ಸಿರ್ರಿ ಸ್ಸಿಖ್'ತೀ (ರ)
16. ಇಮಾಮ್ ಮ ಅರೂಫುಲ್ ಕರಖೀ (ರ)
17. ಇಮಾಮ್ ಬಿಶ್ರುಲ್ ಹಾಫೀ (ರ)
18. ಇಮಾಮ್ ಉಮರುಲ್ ಮಾಲಿಕೀ (ರ)
19. ಇಮಾಮ್ ಹಸನುಲ್ ಬಸರೀ (ರ).
ಈ ಮಹಾತ್ಮರೆಲ್ಲರೂ ಇಮಾಮ್ ಸುಯೂಥಿ (ರ) ಯ ಗುರು ಪರಂಪರೆಯಲ್ಲಿನ ಜಪ ಮಾಲೆ ಹಿಡಿದವರಾಗಿದ್ದಾರೆ.
ಇವರೆಲ್ಲಾ ಲಕ್ಷಾಂತರ ಹದೀಸ್'ಗಳು ಕಲಿತ ವಿಧ್ವಾಂಸರಾಗಿದ್ದರು.
ಅವರ್ಯಾರೂ ಕೂಡಾ ಜಪ ಮಾಲೆ ಹಿಡಿಯುವುದರಲ್ಲಿ ತಪ್ಪುಕಂಡಿಲ್ಲ. ಅದು ಯಹೂದೀ ಚರ್ಯೆಯಾಗಿ ಅವರು ತಿಳಿದಿಲ್ಲ.
ಜಪ ಮಾಲೆ ಹಿಡಿದು ತಸ್ಬೀಹ್ ಹೇಳಿದ ಸಾವಿರಾರು ಇಮಾಮರುಗಳ ಚರಿತ್ರೆ ಗ್ರಂಥಗಳಲ್ಲಿ ಇದೆ. ವಿವೇಕಮತಿಗಳಿಗೆ ಇದು ಧಾರಾಳ ಸಾಕಾಗಬಹುದೆಂಬ ಭಾವನೆಯೊಂದಿಗೆ ಕೊನೆಗೊಳಿಸುತ್ತೇನೆ.

*ಮುಕ್ತಾಯ*

ಭಾಗ --2
✍ *ಮುನೀರ್ ಸಖಾಫಿ, ಸಾಲೆತ್ತೂರು*
ಮೇಲಿನ ಸ್ವಫಿಯ್ಯ ಬೀವಿಯ (ರ) ಘಟನೆಗೆ ಸಮಾನವಾದ ಘಟನೆ.
ಅಬೂದಾವೂದ್ ವರದಿ,
صلى الله عليه وسلم على امرأة وبين يديها نوى أو حصى تسبح به فقال أخبرك بما هو أيسر عليك من هذا أو أفضل فقال سبحان الله عدد ما خلق في السماء وسبحان الله عدد ما خلق في الأرض وسبحان الله عدد ما خلق بين ذلك وسبحان الله عدد ما هو خالق والله أكبر مثل ذلك والحمد لله (ابو داود 1282)
ಸಅದ್ ಬಿನ್ ಅಬೀ ವಖ್ಖಾಸ್ (ರ) ಹೇಳುತ್ತಾರೆ.ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಜೊತೆ ಅವರು ಒಬ್ಬರು ಸ್ತ್ರೀಯ ಬಳಿ ತೆರಳಿದರಂತೆ. ಆವಾಗ ಆ ಸ್ತ್ರೀಯ ಎದುರಲ್ಲಿ ತಸ್ಬೀಹ್ ಹೇಳಲು ಉಪಯೋಗಿಸುವ ಖರ್ಜೂರದ ಬೀಜ ಅಥವಾ ಪುಟ್ಟ ಪುಟ್ಟ ಕಲ್ಲುಗಳು ಇದ್ದವು.ಆಗ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು,
ಇದಕ್ಕಿಂತ ಸುಲಭವಾದ ಒಂದು ಕಾರ್ಯವನ್ನು ನಿನಗೆ ನಾನು ತಿಳಿಸಿ ಕೊಡಲೇ?
ಅಥವಾ ಇದಕ್ಕಿಂತ ಮಹತ್ವವಿರುವ ಒಂದು ಕಾರ್ಯ ಎಂದಾಗಿದೆ ಅವರು ಹೇಳಿದ್ದು.
ನಂತರ ಹೇಳಿದರು,
"ಸುಬ್'ಹಾನಲ್ಲಾಹಿ ಅದದ ಮಾ ಖಲಖ ಫಿಸ್ಸಮಾಇ,
ವಸುಬ್'ಹಾನಲ್ಲಾಹಿ ಅದದ ಮಾ ಖಲಕ ಫಿಲ್ ಅರ್'ಳಿ
ವಸುಬ್'ಹಾನಲ್ಲಾಹಿ ಅದದ ಮಾ ಖಲಕ ಬೈನ ದ್ಸಾಲಿಕ, ವಸುಬ್'ಹಾನಲ್ಲಾಹಿ ಅದದ ಮಾ ಹುವ ಖಾಲಿಕ್ ಎಂದು ಹೇಳು.
ಅಲ್ಲಾಹು ಅಕ್ಬರ್, ಅಲ್ ಹಮ್ದುಲಿಲ್ಲಾಹ್, ಲಾಇಲಾಹ ಇಲ್ಲಲ್ಲಾಹ್, ಲಾ ಹೌಲ ವಲಾ ಖುವ್ವತ ಇಲ್ಲಾ ಬಿಲ್ಲಾಹ್ ಎಂದು ಅದೇ ರೀತಿ ಹೇಳು"
(ಅಬೂದಾವೂದ್ 1282)

ಈ ಹದೀಸ್ ವ್ಯಾಖ್ಯಾನದಲ್ಲಿ ವ್ಯಖ್ಯಾನಗಾರರಾದ ಮುಹಮ್ಮದ್ ಶಂಸುಲ್ ಹಖ್ಖ್ ಅಲ್ ಅಬಾದೀ (ರ) ಬರೆಯುವುದು ನೋಡಿ,
وهذا أصل صحيح لتجويزالسبحة بتقريره ـ صلى الله عليه وسلم ـ فإنه في معناها إذ لا فرق بين المنظومة والمنثورة فيما يعد به ، ولا يعتد بقول من عدها بدعة
(عون المعبود 4/257)
ಜಪ ಮಾಲೆ ಉಪಯೋಗಿಸಬಹುದು ಎಂಬುವುದಕ್ಕೆ ಸ್ಪಷ್ಟವಾದ ಆಧಾರವಾಗಿದೆ ಈ ಹದೀಸ್. ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಆ ಸ್ತ್ರೀಯ ಪ್ರವರ್ತಿಯನ್ನು ಅಂಗೀಕರಿಸಿದರು. ಕಾರಣ, ಲೆಕ್ಕ ಹಿಡಿಯುವ ವಿಷಯದಲ್ಲಿ ನೂಲಿನಿಂದ ಕಟ್ಟಿದ ಬೀಜಗಳು ಮತ್ತು ಕಟ್ಟದ ಬೀಜಗಳ ನಡುವೆ ವ್ಯತ್ಯಾಸವಿಲ್ಲ ತಾನೇ!
ತಸ್ಬೀಹ್ ಮಾಲೆ ಉಪಯೋಗಿಸುವುದು ಬಿದ್ ಅತೆಂದು ಹೇಳುವವರ ಮಾತನ್ನು ಪರಿಗಣಿಸಬೇಕಾದ ಅಗತ್ಯವಿಲ್ಲ.
(ಔನುಲ್ ಮ ಅಬೂದ್ 4/257)

ನಂತರ ಅವರು ಹೇಳುತ್ತಾರೆ,
والحديث دليل على جواز عد التسبيح بالنوى والحصى وكذا بالسبحة لعدم الفارق لتقريره ـ صلى الله عليه وسلم ـ للمرأة على ذلك وعدم إنكاره ، والإرشاد إلى ما هو أفضل لا ينافي الجواز وقد وردت بذلك آثار .
(عون المعبود 4/257)
ತಸ್ಬೀಹ್'ಗಳನ್ನು ಬೀಜ, ಕಲ್ಲು ಗಳಿಂದ ಲೆಕ್ಕ ಹಿಡಿಯಬಹುದು ಎಂಬುವುದಕ್ಕೆ ಈ ಹದೀಸ್ ಆಧಾರವಾಗಿದೆ. ಅದೇ ರೀತಿ ತಸ್ಬೀಹ್ ಮಾಲೆ ಉಪಯೋಗಿಸಬಹುದಕ್ಕೂ ಇದು ಪ್ರಮಾಣವಾಗಿದೆ. ಕಾರಣ ಅವುಗಳ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ.
ಪ್ರಸ್ತುತ ಸ್ತ್ರೀಯನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ವಿರೋಧಿಸಿಲ್ಲ ಎಂಬುವುದೇ ಅದಕ್ಕಿರುವ ಕಾರಣ.
ಅದಕ್ಕಿಂತ ಉತ್ತಮವಾದದ್ದು ಹೇಳು ಎಂದದ್ದು ಅದು ಉಪಯೋಗಿಸುವುದಕ್ಕೆ ವೀರೋಧವಾಗಲಾರದು.
ತಸ್ಬೀಹ್ ಮಾಲೆಯ ವಿಷಯದಲ್ಲೂ ಹಲವಾರು ಅಸರ್ ಗಳು ಬಂದಿವೆ.
(ಔನುಲ್ ಮಅಬೂದ್ 4/258)
ಇದೇ ರೀತಿ ಶೌಕಾನಿ ತನ್ನ ನೈಲುಲ್ ಅವ್'ತಾರ್ ನ 2/358 ರಲ್ಲೂ ವಿವರಿಸಿದ್ದಾರೆ.

ತಸ್ಬೀಹ್ ಮಾಲೆ ಉಪಯೋಗಿಸಬಹುದೇ? ಎಂದು ಹಲವರು ಪ್ರಶ್ನೆ ಕೇಳಿದಾಗ ಲಕ್ಷಾಂತರ ಹದೀಸ್ ಕಂಠಪಾಟ ಮಾಡಿದ ಪ್ರಖ್ಯಾತ ಹಾಫಿಲ್ ಇಮಾಮ್ ಸುಯೂಥೀ (ರ) ತಸ್ಬೀಹ್ ಮಾಲೆ ಹಿಡಿಯುವುದರ ಕುರಿತು ಒಂದು ಕೃತಿಯನ್ನೇ ರಚಿಸಿದರು.
"ಅಲ್'ಮಿನ್ಹ ಫಿಸ್ಸುಬ್'ಹ ಎಂದಾಗಿದೆ ಅದರ ಹೆಸರು.
ಅದರಲ್ಲಿ ಅವರು ಹೇಳುವುದು ನೋಡಿ,
وفي جزء هلال الحفار ومعجم الصحابة للبغوي وتاريخ ابن عساكر من طريق معتمر بن سليمان عن ابي بن كعب عن
جده بقية عن أبي صفية مولى النبي صلى الله عليه وسلم أنه كان يوضع له نطع ويجاء بزنبيل فيه حصى فيسبح به إلى نصف النهار ثم يرفع فإذا صلى الأولى أتى به فيسبح به حتى يمسي.واخرجه احمد في الزهد.
(الحاوي للفتاوي 2/140)
ಹಿಲಾಲುಲ್ ಹಫ್ಫಾರ್ (ರ) ಎಂಬವರ ಗ್ರಂಥದಲ್ಲೂ ಇಮಾಮ್ ಬಗವಿ (ರ) ಯವರ ಮುಅಜಮುಸ್ಸಹಾಬ ಎಂಬ ಗ್ರಂಥದಲ್ಲೂ ಇಬ್ನ್ ಅಸಾಕಿರ್ (ರ) ತನ್ನ ತಾರೀಖ್ ನಲ್ಲೂ ಮುಅತಮಿರ್ ಬಿನ್ ಸುಲೈಮಾನ್ (ರ) ಮೂಲಕ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಮೌಲ ಅಬೂ ಸಫಿಯ್ಯ ರಿಂದ ವರದಿ,
ಅವರಿಗೆ ಒಂದು ವಸ್ತ್ರ ಹಾಸಲಾಯಿತು. ನಂತರ ಪುಟ್ಟ ಕಲ್ಲುಗಳಿಂದ ತುಂಬಿದ ಒಂದು ಬುಟ್ಟಿಯನ್ನು ಇಡಲಾಯಿತು. ನಂತರ ಅವರು ಹಗಲಿನ ಅರ್ಧ ಸಮಯದೊಳಗೆ ಅವುಗಳಿಂದ ತಸ್ಬೀಹ್ ಹೇಳುವರು. ಬಳಿಕ ಅವುಗಳನ್ನು ತೆಗೆಯಲ್ಪಡಲಾಯಿತು. ನಮಾಝಿನ ಬಳಿಕ ಪುನಃ ಕಲ್ಲುಗಳನ್ನು ಇಡಲಾಯಿತು. ಸಂಜೆಯ ತನಕ ಅವರು ತಸ್ಬೀಹ್ ಹೇಳುತ್ತಿದ್ದರು.
ಇದನ್ನು ಇಮಾಮ್ ಅಹ್'ಮದ್ ತನ್ನ ಝುಹ್'ದ್ ನಲ್ಲೂ ವರದಿ ಮಾಡಿದ್ದಾರೆ.

_*ಇನ್ನಷ್ಟು ಮುಂದಿನ ಭಾಗದಲ್ಲಿ , ಇಂಶಾ ಅಲ್ಲಾಹ್.*_

ಭಾಗ --1
✍ *ಮುನೀರ್ ಸಖಾಫಿ, ಸಾಲೆತ್ತೂರು*
ಪ್ರಪಂಚದಾದ್ಯಂತ ಮುಸ್ಲಿಮರು ದ್ಸಿಕ್ರ್'ನ ಸಂಖ್ಯೆಯನ್ನು ತಿಳಿಯಲು ತಸ್ಬೀಹ್ ಮಾಲೆ(ಜಪ ಮಾಲೆ )ಕೈಯಲ್ಲಿ ಹಿಡಿಯುತ್ತಾರೆ. ಅದನ್ನು ಅನಿಸ್ಲಾಮಿಕವಾಗಿ ಚಿತ್ರೀಕರಿಸುವ ಒಂದು ಲೇಖನವು ಓದಲು ಸಾಧ್ಯವಾಯಿತು.
ಯಾವುದೋ ಅಜ್ಞಾನಿ ವಹ್ಹಾಬಿಯ ಲೇಖನವೆಂದು ಮೇಲ್ನೋಟಕ್ಕೆ ಕಂಡು ಬಂತು.
ಜಾಗತಿಕ ಮುಸ್ಲಿಮರೆಲ್ಲರೂ ಜಪ ಮಾಲೆ ಹಿಡಿಯುವ ಮೂಲಕ ಯಹೂದಿಗಳನ್ನು ಅನುಕರಿಸುವವರೆಂದಾಗಿದೆ ಲೇಖನದ ಸಾರಾಂಶ.
ಇದು ಆ ಲೇಖನ ಬರೆದ ವಹ್ಹಾಬಿಯ ಅಜ್ಞಾನದ ಸಂಕೇತವಾಗಿದೆ.
ಜಪ ಮಾಲೆ ಉಪಯೋಗಿಸುವುದರ ಕುರಿತು ಇಸ್ಲಾಮಿನ ನಿಲುವೇನೆಂದು ತಿಳಿಯೋಣ.
ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಕೈಗಳಿಂದ ತಸ್ಬೀಹ್ ಗಳ ಸಂಖ್ಯೆಯನ್ನು ಲೆಕ್ಕವಿಡುತ್ತಿದ್ದರು. ಸ್ವಹಾಬಿಗಳು
ಖರ್ಜೂರದ ಬೀಜದಿಂದಲೂ ಲೆಕ್ಕವಿಡುತ್ತಿದ್ದರು.
________________________________
ಇಮಾಮ್ ತುರ್ಮುದ್ಸೀ (ರ)ರವರ ವರದಿ ನೋಡಿ,
عن عطاء بن السائب عن أبيه عن عبد الله بن عمرو قال رأيت النبي صلى الله عليه وسلم يعقد التسبيح بيده قال أبو عيسى هذا حديث حسن غريب (ترمذي)
ಅಬ್ದುಲ್ಲಾಹಿ ಬಿನ್ ಅಮ್ರ್ (ರ) ಹೇಳುತ್ತಾರೆ,
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಕೈಗಳಿಂದ ತಸ್ಬೀಹ್ ಗಳ ಸಂಖ್ಯೆ ಹಿಡಿಯುವುದು ನಾನು ನೋಡಿದ್ದೇನೆ.
ತುರ್ಮುದ್ಸಿ 3486)
________________________________
ಇನ್ನೊಂದು ಹದೀಸ್ ನೋಡಿ,
حدثنا موسى بن حزام وعبد بن حميد وغير واحد قالوا حدثنامحمد بن بشر فقال سمعت هانئ بن عثمان عن أمه حميضة بنت ياسر عن جدتها يسيرة وكانت من المهاجرات قالت: قال لنا رسول الله صلى الله عليه وسلم عليكن بالتسبيح والتهليل والتقديس واعقدن بالأنامل فإنهن مسئولات مستنطقات ولا تغفلن فتنسين الرحمة (ترمذي 3583)
ಮುಹಾಜಿರ್ ಸ್ವಹಾಬೀ ವನಿತೆ ಯಸೀರತ್ (ರ) ಹೇಳುತ್ತಾರೆ,
ನಮ್ಮೊಂದಿಗೆ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಈ ರೀತಿ ಹೇಳಿದರು;
"ನೀವು ತಸ್ಬೀಹ್, ತಹ್'ಲೀಲ್, ತಖ್'ದೀಸ್, ನಿರ್ವಹಿಸಿರಿ. ಅದರ ಸಂಖ್ಯೆಯನ್ನು ಕೈಯಿಂದಲೂ ಹಿಡಿಯಿರಿ. ಖಂಡಿತವಾಗಿಯೂ ಕೈ ಬೆರಳುಗಳು ನಿಮಗೆ ಸಾಕ್ಷಿ ನಿಲ್ಲುವವು. ನೀವು
ನಿರ್ಲಕ್ಷ್ಯರಾಗದಿರಿ. ಆ ರೀತಿಯಾದಲ್ಲಿ ಅಲ್ಲಾಹನ ರಹ್ಮತನ್ನು ನೀವು ಮರೆತು ಹೋಗುವಿರಿ".
(ತುರ್ಮುದ್ಸೀ 3583)
________________________________
ತಸ್ಬೀಹ್ ಮತ್ತು ತಹ್'ಲೀಲ್ ಗೆ ಕೈಬೆರಳುಗಳ ಮೂಲಕ ಸಂಖ್ಯೆ ಹಿಡಿಯಬಹುದೆಂದೂ ಅದು ಅಲ್ಲಾಹನ ಬಳಿ ಸಾಕ್ಷಿ ನಿಲ್ಲುವವು ಎಂದೂ ಮೇಲಿನ ಎರಡು ಹದೀಸಿನಿಂದ ಮನದಟ್ಟಾಯಿತು.
ಕೈ ಬೆರಳ ಮೂಲಕ ಸಂಖ್ಯೆ ಹಿಡಿದು ತಸ್ಬೀಹ್ ಹೇಳ ಕೂಡದೆಂದು ಇಲ್ಲಿ ಯಾರೂ ಹೇಳಿಲ್ಲ.
ಅದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಕಲಿಸಿ ಕೊಟ್ಟಿದ್ದಾರೆ. ಜತೆಗೆ
ಜಪ ಮಾಲೆ ಹಿಡಿಯುವುದನ್ನೂ ಕಲಿಸಿ ಕೊಟ್ಟಿದ್ದಾರೆ.
ಇಮಾಮ್ ತುರ್ಮುದ್ಸೀ (ರ)ರವರ ಹದೀಸಿನಲ್ಲಿ ಈ ರೀತಿ ಕಾಣಬಹುದು.
عن صفية، تقول: دخل علي رسول الله صلى الله عليه وسلم وبين يدي اربعة آلاف نواة اسبح بها، فقلت: لقد سبحت بهذه، فقال: " الا اعلمك باكثر مما سبحت به؟ " فقلت: بلى علمني، فقال: قولي سبحان الله عدد خلقه (ترمذي )
ಸ್ವಫಿಯ್ಯ ಬೀವಿ (ರ) ಹೇಳುತ್ತಾರೆ,
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ನನ್ನ ಬಳಿ ಬಂದಾಗ ನನ್ನ ಬಳಿ ತಸ್ಬೀಹ್ ಹೇಳಲಿಕ್ಕಾಗಿ 4000 ಖರ್ಜೂರದ ಬೀಜವನ್ನು ಇಟ್ಟಿದ್ದೆ.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಕೇಳಿದರು;
"ಇದರಿಂದೆಲ್ಲಾ ನೀನು ತಸ್ಬೀಹ್ ಹೇಳಿದೆಯಾ?,
ಅದಕ್ಕಿಂತಲೂ ಮಹತ್ವವಾದ ಒಂದನ್ನು ನಿನಗೆ ನಾನು ಹೇಳಿ ಕೊಡಲೇ?"
ಆಗ ನಾನು ಹೇಳಿದೆ;
ಸರಿ ಹೇಳಿ ಕೊಡಿ,
ಆಗ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು;
"ನೀನು ಈ ರೀತಿ ಹೇಳು,
(ಸುಬ್'ಹಾನಲ್ಲಾಹಿ ಅದದ ಖಲ್'ಖಿಹೀ)
(ತುರ್ಮುದ್ಸೀ 3554)
________________________________
ತಸ್ಬೀಹ್ ಹೇಳಲಿಕ್ಕಾಗಿ 4000 ಖರ್ಜೂರ ಬೀಜವನ್ನು ತೆಗೆದಿಟ್ಟಿದ್ದ ಸ್ವಫಿಯ್ಯ ಬೀವಿ (ರ)ರವರ ಕ್ರಮವನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ವಿರೋಧಿಸಿಲ್ಲ.
ಅದು ಯಹೂದಿ /ನಸ್ರಾನಿಗಳ ಚರ್ಯೆಯಾಗಿದ್ದರೆ ಸ್ವಫಿಯ್ಯ ಬೀವಿ ಒಮ್ಮೆಯೂ ಆ ರೀತಿ ಮಾಡುತ್ತಿರಲಿಲ್ಲ.ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಅದನ್ನು ಅಂಗೀಕರಿಸುತ್ತಿರಲಿಲ್ಲ.
ಕೈ ಬೆರಳುಗಳ ಮೂಲಕ ಮತ್ತು ಖರ್ಜೂರಗಳ ಬೀಜಗಳ ಮೂಲಕ ತಸ್ಬೀಹ್ ನ ಸಂಖ್ಯೆ ಹಿಡಿಯಬಹುದೆಂದು ಈ ಹೇಳಿದರಿಂದ ಸ್ಪಷ್ಟವಾಯಿತು.
_*ಇನ್ನಷ್ಟು ಮುಂದಿನ ಭಾಗದಲ್ಲಿ ಇಂಶಾ ಅಲ್ಲಾಹ್.*_

Subscribe to:
Comments (Atom)