Thursday, March 22, 2018

*ಇಸ್ರಾಅ್ ಮಿಹ್ರಾಜ್*

🍀🍀🍀🍀🍀🍀🍀🍀🍀🍀
*ಇಸ್ರಾಅ ಮಿಹ್ ರಾಜ್*
*--------------------------------------*
*ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಜೀವನದಲ್ಲಿ ಉಂಟಾದ ಅತೀ ಮಹತ್ತರವಾದ ಒಂದು ಅದ್ಭುತವಾಗಿದೆ ಇಸ್ರಾಅ ಮಿಅರಾಜ್.*
ಇದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಹಿಜ್ರಾದ 1 ವರ್ಷ ಮುಂಚೆ ನಡೆದ ಘಟನೆಯಾಗಿದೆ.

*ಖ್ಯಾತ ಫಿಖ್ಹ್ ಪಂಡಿತರೂ ಚರಿತ್ರೆಗಾರರೂ ಆದ ಇಮಾಮ್ ನವವೀ (ರ) ಹೇಳುತ್ತಾರೆ,*
ليلة الاسراء بمكة بعد النبوة بعشر سنين وثلاثة اشهر ليلة سبع وعشرين  من رجب (روضة الطالبين 10/206)

ನುಬುವ್ವತ್ ನ 10 ವರ್ಷ ಮತ್ತು 3 ತಿಂಗಳ ನಂತರ  ರಜಬ್ ತಿಂಗಳ 27 ನೇ ದಿನದಂದು
ಮಕ್ಕಾದಲ್ಲಿ ಇಸ್ರಾ ಘಟನೆ ನಡೆಯಿತು .
(ರೌಳತುತ್ತಾಲಿಬೀನ್ 10/206).

ಇಮಾಮ್ ಇಸ್ಮಾಯಿಲ್ ಅಲ್ ಹಿಖ್ಖಿ (ರ) ಹೇಳುತ್ತಾರೆ;
وهي ليلة سبع وعشرين من رجب  ليلة الاثنين وعليه عمل الناس
(تفسير روح البيان 5/78)

ಇಸ್ರಾಅ, ಮಿಅರಾಜ್ ರಜಬ್ 27 ನೇ ದಿನದಂದು ಸೋಮವಾರ ನಡೆದ ಘಟನೆಯಾಗಿದೆ.
(ರೂಹುಲ್ ಬಯಾನ್ 5/78)

ಇಸ್ರಾಅ ಮಿಅರಾಜ್ ಎಂಬ ಪವಿತ್ರವಾದ ಘಟನೆ ನಡೆದದ್ದು ರಜಬ್ 27 ಸೋಮವಾರ ರಾತಿಯೆಂದು ಇಮಾಮರುಗಳ ಈ ಮಾತಿನಿಂದ ತಿಳಿದು ಬಂತು.

*ರಜಬ್ 27 ರ ಮಹತ್ವ*

ಈ ರಾತ್ರಿಯಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸಕಲ ಅನುಗ್ರಹಗಳನ್ನು ಕಂಡು ಪುಣ್ಯ ಮಕ್ಕಾ ಗೆ ಹಿಂದಿರುಗಿದ ದಿವಸವಾಗಿದೆ.

ಈ ದಿವಸದ ಮಹತ್ವವನ್ನು ತಿಳಿಸುವ ದಾರಾಳ ಹದೀಸುಗಳು ಇವೆ.

ಇಬ್ನ್ ತೀಮಿಯಾರೊಂದಿಗೆ ಹೀಗೆ ಕೇಳಲ್ಪಡಲಾಯಿತು
وسئل عن ليلة القدر وليلة الاسراء بالنبي صلي الله عليه وسلم ايهما افضل ؟
فاجاب  بان ليلة الاسراء افضل في حق النبي صلي الله عليه وسلم وليلة القدر افضل بالنسبة الي الامة فحظ النبي صلي الله عليه وسلم الذي اختص به ليلة المعراج منها اكمل من حظه من ليالي القدر
(فتاوي ابن تيمية 25 / 157)

ಲೈಲತುಲ್ ಖದ್ರಿಗಾ ಹೆಚ್ಚು ಮಹತ್ವ ? ಅಥವಾ ಇಸ್ರಾಅ ರಾತ್ರಿಗಾ ಹೆಚ್ವು ಮಹತ್ವ?.

ಆವಾಗ ಇಬ್ನ್ ತೀಮಿಯಾ ಈ ರೀತು ಉತ್ತರಿಸಿದರು.
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ದೃಷ್ಟಿಯಲ್ಲಿ ಇಸ್ರಾ ರಾತ್ರಿಗಾಗಿದೆ ಅತೀ ಮಹತ್ವ.
ಅವರ ಉಮ್ಮತ್ ನ ಪಾಲಿಗೆ ಲೈಲತುಲ್ ಖದ್ರಿಗಾಗಿದೆ ಹೆಚ್ಚು ಮಹತ್ವ.
(ಮಜ್ಮೂಉಲ್ ಫತಾವಾ 25/157)
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಪಾಲಿಗೆ ಅಲ್ಲಾಹನ ಅತ್ಯಂತ ದೊಡ್ಡ ಕೊಡುಗೆಯಾಗಿದೆ ಇಸ್ರಾಅ ಮಿಅ ರಾಜ್.
ಖಂಡಿತವಾಗಿಯೂ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು  ಅತ್ಯಂತ ಸಂತೋಷಪಟ್ಟ ದಿವಸವಾಗಿತ್ತು ಅಂದಿನ ರಾತ್ರಿ.
ಇದನ್ನು ಇಬ್ನಿ ತೀಮಿಯ್ಯಾರೇ ಅಂಗೀಕರಿಸುತ್ತಾರೆ.
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಸಂತಸವುಂಟಾದ ಸಂಗತಿಯಲ್ಲಿ ಅವರ ಉಮ್ಮತ್ ಕೂಡಾ ಸಂತಷಪಡುತ್ತಾರೆ.
ವಿವೇಕವಿರುವ ಎಲ್ಲರೂ ಇದನ್ನು ಒಪ್ಪಿಕೊಳ್ಳುತ್ತಾರೆ.

*ಮಿಅರಾಜ್ ದಿನ ಉಪವಾಸ*

ಇಮಾಮರುಗಳು ಇದನ್ನು ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ

ಇಮಾಮ್ ಗಝ್ಝಾಲಿ (ರ) ಬರೆಯುತ್ತಾರೆ.
"روي ابو هريرة ان رسول الله صلي الله عليه وسلم قال : من صام يوم سبع وعشرين من رجب كتب الله له صيام ستين شهرا"
(احياء علوم الدين 1/361)
ಅಬೂ ಹುರೈರ (ರ) ವರದಿ,
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ;ಯಾರಾದರು ರಜಬ್ 27 ನೇ ದಿನದಂದು ಉಪವಾಸ ಆಚರಿಸಿದಲ್ಲಿ  2 ತಿಂಗಳುಗಳ ಕಾಲ  ಉಪವಾಸ ಆಚರಿಸಿದ ಪ್ರತಿಫಲವು ಆತನಿಗೆ ಬರೆಯಲ್ಪಡುವುದು.
_(ಇಹ್ಯಾಉಲೂಮಿದ್ದೀನ್ 1/361)_

_ಮುಹ್ಯಿಯುದ್ದೀನ್ ಶೈಖ್ (ರ) - ಗುನ್ಯತ್ 182/1_

*ರಜಬ್ 27 ನೇ ದಿನದಂದು ಉಪವಾಸ ಆಚರಿಸುವುದಕ್ಕೆ ಹದೀಸ್ ಇದೆಯಾ ಎಂದು ಕೇಳುವುದೇ ಮೌಡ್ಯತನವಾಗಿದೆ.*
ಕಾರಣ ನಾವು ನಾಲ್ಕು ಮದ್ಸ್ ಹಬ್ ಗಳಲ್ಲಿ ಯಾವುದಾದರೊಂದು ಮದ್ಸ್ ಹಬನ್ನು ತಖ್ಲೀದ್ ಮಾಡುವ ಮುಖಲ್ಲಿದ್ ಗಳಾಗಿದ್ದೇವೆ.
ಮದ್ಸ್ ಹಬಿನ ಇಮಾಮರುಗಳು ಖುರ್ ಆನ್ ಮತ್ತು ಹದೀಸ್ನಿಂದ ನೀತಿ ನಿಯಮಗಳನ್ನು ಸಂಶೋಧನೆ ನಡೆಸಿ ಅವರ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ.
ಶಾಫಿಈ ಮದ್ಸ್ ಹಬಿನ ಎಷ್ಟೋ ಇಮಾಮರು ರಜಬ್27 ನೇ ದಿನದಂದು ಉಪವಾಸ ಸುನ್ನತ್ತಿದೆಯೆಂದು ಸ್ಪಷ್ಟಪಡಿಸಿದ್ದಾರೆ.
ويستحب صوم يوم المعراج
(اعانة 2/270)
_ಮಿಅರಾಜ್ ದಿನದಂದು ಉಪವಾಸ ಸುನ್ನತ್ತಿದೆ._
_(ಇಆನತ್ 2/270)_

ಇದೊಂದು ಉದಾಹರಣೆ ಮಾತ್ರವಾಗಿದೆ.
ಇಮಾಮ್ ಗಝ್ಝಾಲಿ (ರ) ಸಹಿತ ಇಮಾಮರುಗಳು ಅದು ಪುಣ್ಯಕರ್ಮವೆಂದು ಹೇಳುವಾಗ (ವಹ್ಹಾಬಿಗಳ ವಾದ ಪ್ರಕಾರ ಇಮಾಮ್ ಗಝ್ಝಾಲಿ ವರದಿ ಮಾಡಿದ ಹದೀಸ್ ಲಹೀಫ್ ಆಗಿದ್ದು ,  ಇಮಾಮ್ ಗಝ್ಝಾಲೀ (ರ) ಲಹೀಫ್ ಆದ ಹದೀಸ್ ವರದಿ ಮಾಡಿ ನೂತನವಾದವನ್ನು ಪ್ರಚಾರ ಮಾಡಿದರೇ?
ಬುಧ್ಧಿಯಿರುವವನು ಹೀಗೆ ಹೇಳಲಾರ.)
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಅನುಗ್ರಹವನ್ನು ನೀಡಲ್ಪಟ್ಟ ದಿವಸ ಎಂಬ ನೆಲೆಯಲ್ಲಿ ಕೃತಞ್ಞತೆಗಾಗಿ ಆ ದಿವಸದಂದು ಉಪವಾಸ ಆಚರಿಸಬಹುದಾಗಿದೆ.
ಕೃತಞ್ಞತೆ ಸಲ್ಲಿಸಲು ಇಂತಿತಹಾ ಸತ್ಕರ್ಮ ಮಾತ್ರ ನಿರ್ವಹಿಸಬೇಕೆಂದು ಇಸ್ಲಾಮ್ ಕಲಿಸಿಕೊಟ್ಟಿಲ್ಲ.
ಯಾವುದೇ ಇಬಾದತ್ ಮೂಲಕ ಅಲ್ಲಾಹನಿಗೆ ಕೃತಞ್ಞತೆ ಸಲ್ಲಿಸಬಹುದಾಗಿದೆ.

📝 *ಇಬ್ನ್ ಮುಹಮ್ಮದ್*
*ಸಾಲೆತ್ತೂರು.*

Wednesday, March 21, 2018

🌳🌳🌳🌳🌳🌳🌳
*ಮುನ್ನಂ ದುಡಿ ಮುಟ್ಟಿ ಕ'ಅಬಾನೆ ಚುಟ್ಟುಂಬೋಲ್*
*ಮಕ್ಕಿಗಲ್ ಇಂಬೀದೀ ವೇಂಡೆನ್ನ್ ಚೊನ್ನೋವರ್...*

*ಉಡನೇ ರಿಫಾಯೀ ಮದಿಲಿಲ್ ಕುಳತ್ತಿಯಾರ್*
*ಅಪ್ಪೋಲ್ ಕ'ಅಬಂ ತವಾಫೆನ್ನ್ ಚೊನ್ನೋವರ್...*
*ಇಳಗೀ ಕ'ಅಬಂ ತುಳಂಗುನ್ನ ನೇರತ್ತ್*
*ಒಳಿವರ್ ರಿಫಾಯೀ ಎನ್ನ್ ಅಲ್ಲಾಹ್ ವಿಳಿಚ್ಚೋವರ್...*
*ಏಳಾಗಾಶಂ ಬಾದಿಲ್ ಒಕ್ಕೇ ತುರನ್ನೋರೇ*
*ಇಳಗೀ ಮಲಕುಗಳ್ ಒಕ್ಕೇ ವಿಳಿಚ್ಚೋವರ್...*
 ----------------------------------
*ದಫ್ ಬಡಿಯತ್ತಾ ಪವಿತ್ರ ಕ'ಅಬಾ ಶರೀಫನ್ನು ತವಾಫ್ ಮಾಡುತ್ತಿದ್ದ ರಿಫಾಯೀ ಶೈಖರನ್ನು ಮಕ್ಕಾದವರು ತಡೆದರು*
*ಕೂಡಲೇ ಅವರು ಆ ದಫ್ಫನ್ನು ಕ‌ಅಬಾ ದ ಗೋಡೆಗೆ ತೂಗು ಹಾಕಿದರು*

*ಆಗ  ಕ‌ಅಬಾ ತನ್ನ ಜಾಗದಿಂದ ಕದಲತೊಡಗಿತು. ತನ್ನ ಸ್ವ ಸ್ಥಾನದಿಂದ ಚಲಿಸುತ್ತಾ ಬಂದು ರಿಫಾಯಿ ಶೈಖರ ಸುತ್ತ ಸುತ್ತುತ್ತಾ ತವಾಫ್ ಮಾಡತೊಡಗಿತು.*
*ಆಗ ಅಲ್ಲಾಹು ಶೈಖ್ ರವರನ್ನು ,ಯಾ ರಿಫಾಈ ಎಂದು ಕರೆದನು. ಶೈಖ್ ರವರು ದಫ್ಫನ್ನು ಕಅಬಾದಿಂದ ತೆಗೆದರು.ಕಅಬಾವು ಮೊದಲಿನಂತಾಯಿತು. ಏಳು ಆಕಾಶದಲ್ಲಿ ರುವ ಮಲಕುಗಳೂ ಈ ರೀತಿ ಕರೆದರು.*
 -----------------------------
*ಶೈಖ್ ಅಹ್ಮದುಲ್ ಕಬೀರುರ್ರಿಫಾಈ ರ.ಅ ರವರ ಕರಾಮತ್ ವಿವರಿಸುವ ರಿಫಾಈ ಮಾಲೆಯ ಕೆಲವು ಸಾಲುಗಳು ಮತ್ತು ಅದರ ಸರಿಯಾದ ಅನುವಾದ ಇದು. ಆದರೆ, ಅಲ್ಲಾಹು ಗೌರವಿಸಿದ ಮಹಾತ್ಮರ ಹಿರಿಮೆ ಮತ್ತು ವಿಶೇಷತೆ ಯನ್ನು ಒಪ್ಪಲು ಮನಸಿಲ್ಲದ ವಹ್ಹಾಬಿಗಳು, ಮಾಲೆಯ ಅರ್ಥ ವನ್ನು ವಕ್ರವಾಗಿ ಚಿತ್ರೀಕರಿಸಿ ಅಲ್ಲಾಹನನ್ನು ನಿಂದಿಸಿದ್ದಾರೆ.* *ಇಳಿಯುವ, ಹತ್ತುವ,   ಕುಳಿತುಕೊಳ್ಳುವ, ಕೈ ಕಾಲುಗಳಿರುವ, ಮುಖ ಹೊಂದಿರುವ ದೇವರಲ್ಲಿ ನಂಬಿಕೆ ಇಟ್ಟಿರುವ ವಹ್ಹಾಬಿಗಳು, ಖಿಯಾಮತ್ ದಿನದಂದು ಸಕಲ ವಸ್ತುಗಳೂ ನಾಶ ಹೊಂದಿ ಅಲ್ಲಾಹನ* *"ಮುಖ*" *ಮಾತ್ರ ಬಾಕಿಯಾಗಿ ಇತರೆಲ್ಲವೂ ನಶಿಸಿ ಹೋಗುವುದೆಂದು ಹೇಳುವಲ್ಲಿಗೆ ತಲುಪಿದವರಾಗಿದ್ದಾರೆ.*
*ಅಲ್ಲಾಹನ ಬಗ್ಗೆ ವಿಕಲ ನಂಬಿಕೆಯನ್ನು ಹೊತ್ತು ಕೊಂಡಿರುವ ವಹ್ಹಾಬಿಗಳು ಅದನ್ನು ಮರೆ ಮಾಚಲು ಸುನ್ನಿ ಗಳ ಮಾಲೆಯನ್ನು ದುರ್ವ್ಯಾಖ್ಯಾನ ಮಾಡುತ್ತಾರೆ*
*ಅಲ್ಲಾಹನ ಇಷ್ಟ ದಾಸರಾದ ರಿಫಾಈ ಶೈಖ್ ರವರಿಗಾಗಿ ಕಅಬಾವು ತಿರುಗಾಡಿತು ಎಂಬುವುದರಲ್ಲಿ  ಪವಿತ್ರ ಖುರ್ಆನ್ ಮತ್ತು ಹದೀಸ್ ಗೆ ವಿರುದ್ಧವಾದ ಯಾವುದೇ ಅಂಶವಿಲ್ಲ*
*ಸಅದ್ ಬಿನ್ ಮುಆದ್ಸ್ ರ.ಅ ರವರ ವಫಾತ್ ಕಾರಣದಿಂದ,ಅರ್ಶ್ ಕಂಪನ ಗೊಂಡಿತು ಎಂದು ಪ್ರವಾದಿ ವಚನವಿದೆ*
*ವಹ್ಹಾಬಿಗಳ ಮೊಂಡು ನಂಬಿಕೆಯಂತೆ ಅಲ್ಲಾಹು ಅರ್ ಶಿನ ಮೇಲೆ ಕುಳಿತು ಕೊಂಡಿದ್ದಾನೆ*
*ಅರ್ಶ್ ಅಲುಗಾಡಿದಾಗ ಇವರ ನಂಬಿಕೆಯಂತೆ ಅದರ ಮೇಲಿಲುವ ಅಲ್ಲಾಹನೂ ಅಲುಗಾಡಿರಬೇಕಲ್ಲವೇ?*
*ಪ್ರವಾದಿ ಶ್ರೇಷ್ಟ ರಾದ ಮುಹಮ್ಮದ್ ಸ ಅ ಮತ್ತು ಇತರ ಪ್ರವಾದಿ ಗಳು ವಫಾತ್ ಆದಾಗ ಅಲುಗಾಡದ ಅರ್ಶ್  ಸಅದ್ ರ ಅ ವಫಾತ್ ಆದಾಗ ಕಂಪಿಸಿತು ಎಂದು ಹೇಳುವುದನ್ನು ನಂಬ ಬಹುದೇ?* *ಎಂಬ ಪ್ರಶ್ನೆಯನ್ನು ಕೂಡ ವಹ್ಹಾಬಿಗಳಂತಹ  ವಿಚಾರವಾದಿಗಳು ಕೇಳ ಬಹುದು* 
*ಆದರೆ ಸಹೀಹುಲ್ ಬುಖಾರಿ ಸಹಿತ ಹಲವು ಹದೀಸ್ ಗ್ರಂಥಗಳಲ್ಲಿ ಉಲ್ಲೇಖ ಗೊಂಡ ಮೇಲಿನ ಹದೀಸ ನ್ನು ಅಲ್ಲ ಗಳೆಯಲು ಯಾರಿಗೂ ಸಾಧ್ಯವಿಲ್ಲ.*
         *ಅಲ್ಲಾಹನ ಸೃಷ್ಟಿಗಳಲ್ಲಿ ಉನ್ನತ ಸ್ಥಾನದಲ್ಲಿರುವ ಅರ್ಶ್ ಅಲ್ಲಾಹನ ಇಷ್ಟ ದಾಸರಾದ ಸಅದ್ ರ ಅ ರಿಗಾಗಿ ಕಂಪಿಸಿದ್ದರೆ,  ಕಅಬಾವು, ಅಲ್ಲಾಹನ ವಲಿಯ್ಯ್ ಆದ ರಿಫಾಈ ಶೈಖ್ ರಿಗಾಗಿ ತಿರುಗಾಡುವುದಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ* *ಮಾಲೆ ಯಲ್ಲಿರುವ ಮೇಲಿನ ಘಟನೆ ಒಂದು ಚರಿತ್ರೆ ಯಾಗಿದೆ. ಅದನ್ನು ನಂಬಿದರೆ ಖುರ್ಆನ್ ಮತ್ತು ಹದೀಸ್ ಗೆ ಕಿಂಚಿತ್ತೂ ಧಕ್ಕೆ ಬರುವುದಿಲ್ಲ*
*ಹಾಗಾಗಿ  ಚರಿತ್ರೆ ಘಟನೆಗಳ ದಾಖಲೆ ಯಾಗಿರುವ ಮಾಲೆಯನ್ನು ಮತ್ತು ಅದರಲ್ಲಿ ಅಡಕವಾಗಿರುವ ವಿಷಯಗಳನ್ನು ನಾವು ಕೊಂಡಾಡುತ್ತ್ತೇವೆ*
       *ಇನ್ನು, ಮೇಲಿನ ಘಟನೆಯು ಅಸತ್ಯ ಎಂದು ಸಾಬೀತು ಪಡಿಸಲು ವಹ್ಹಾಬಿಗಳು ಯಾವುದೇ ಚರಿತ್ರೆ ಪುಸ್ತಕದ ಉಲ್ಲೇಖ ವನ್ನು ತರುವುದಾದರೆ ನಿಮಗಿದೋ ಸ್ವಾಗತ!* *ಆದರೆ ನಿಮ್ಮ ಜನ್ಮದಲ್ಲಿ ಅದು ಸಾಧ್ಯವಿಲ್ಲ.*
   *ಅಲ್ಲಾಹನ ಇಷ್ಟ ದಾಸರಾದ ಔಲಿಯಾಗಳನ್ನು ಪವಿತ್ರ ಕಅಬಾಲಯವು ತ್ವವಾಫ್ ಮಾಡಿದ ಘಟನೆಯು ,ಇತರ ಔಲಿಯಾಗಳ ಬಗ್ಗೆಯೂ ವರದಿಯಾಗಿದೆ. ಶೈಖ್ ಅಬೂ ಯಝೀದಲ್ ಬಿಸ್ತ್ವಾಮೀ,ಶೈಖ್ ಇಬ್ನು ಅರಬೀ, ಶೈಖ್ ಮುಹ್ಯಿದ್ದೀನ್,ಶೈಖ್ ಇಬ್ರಾಹೀಮುಲ್ ಮತ್ಬೂಲೀ ಮುಂತಾದ ಮಹಾತ್ಮರನ್ನು ಕಅಬಾಲಯವು ತ್ವವಾಫ್ ಮಾಡಿದ್ದಾಗಿ , ಸೀರತುಲ್ ಹಲಬಿಯ್ಯ ,ಜಾಮಿಉ ಕರಾಮಾತಿಲ್ ಔಲಿಯಾ ಮುಂತಾದ ಗ್ರಂಥಗಳಲ್ಲಿ ನೋಡ ಬಹುದಾಗಿದೆ.ಔಲಿಯಾಗಳಲ್ಲಿ ಇಂಥಹ ಕರಾಮತ್ ಲಭಿಸಿದ ಹಲವು ಮಹಾತ್ಮರಿದ್ದಾರೆ ಎಂದು,ಇಮಾಮ್ ಗಝಾಲಿ ಇಹ್ಯಾ ದಲ್ಲಿ, ಇಮಾಮ್ ಯಾಫಿಈ ರೌಲು ರ್ರಯಾಹೀನ್ ಮತ್ತು ಮಿರ್ಆತುಲ್ ಜಿನಾನ್ ನಲ್ಲಿ ಮತ್ತು ಇಮಾಮ್ ಕಿರ್ಮಾನೀ ಅಲ್ ಮಸಾಲಿಕ್ ಮುಂತಾದ ಕಿತಾಬ್ ಗಳಲ್ಲಿ ವಿವರಿಸಿದುದನ್ನು ನೋಡ ಬಹುದಾಗಿದೆ. ಪವಿತ್ರ ಇಸ್ಲಾಮ್ ಧರ್ಮದ ಅಗ್ರೇಸರ ಪ್ರಬೋಧಕರು ಮತ್ತು ಪ್ರಚಾರಕರಾಗಿರುವ  ಇಂಥಹ ವಿದ್ವಾಂಸರಿಗೆ ದೀನ್ ನ ಬಗ್ಗೆ ತಿಳಿದಿಲ್ಲ ಎಂದು ಹೇಳಲು, ಧರ್ಮದೊಳಗೆ ನುಸುಳಿ ನೂತನ ವಾದದ  ಷಡ್ಯಂತರ ನಡೆಸಿ,ಮುಸ್ಲಿಮರನ್ನು ಪೂರ್ವಿಕರಾದ ಸಜ್ಜನರ ದಾರಿಯಿಂದ ಬೇರ್ಪಡಿಸಲು ಹವಣಿಸುತ್ತಿರುವ ವಹ್ಹಾಬೀ ಸಲಫಿಗಳಿಗೆ ಅಲ್ಲದೆ ಸಾಧ್ಯವಿಲ್ಲ. ಇವರ ಕುತಂತ್ರಗಳಿಂದ ಮುಸ್ಲಿಮ್ ಉಮ್ಮತನ್ನು ಅಲ್ಲಾಹು ರಕ್ಷಿಸಲಿ.ಆಮೀನ್*

       *ಪಿ ಎಸ್ ಮುಹಮ್ಮದ್ ಶಿಹಾಬುದ್ದೀನ್ ಅಶ್ರಫಿ ಕಾಮಿಲ್ ಸಖಾಫಿ ಉಳ್ಳಾಲ*🌱🌱🌱🌱for Ahlul haq

Tuesday, March 20, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 2⃣6⃣
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
☔☔☔☔☔☔☔☔☔

"ಮಕ್ಕಳನ್ನು ಯಾರ ಬಳಿ ಬಿಟ್ಟು ಬಂದೆ..? ⬇

*ಅಲ್ಲಾಹನ ರಸೂಲರೊಂದಿಗೆ ತಂದೆಯನ್ನು ಕಂಡಿದ್ದೇ ತಡ, ಮಕ್ಕಳಿಬ್ಬರೂ ಉಪ್ಪಾ... ಉಪ್ಪಾ... ಎಂದು ಅರಚುತ್ತಾ ಎಚ್ಚೆತ್ತವಾದರೂ ತಂದೆಯನ್ನು ಕಾಣದೆ ಅಳಲಾರಂಭಿಸಿದವು.*

ಮತ್ತೊಂದು ಕೇೂಣೆಯಲ್ಲಿ ಮಲಗಿದ್ದ ಅಬ್ದುಲ್ಲನಿಗೆ ಮಕ್ಕಳ ಅಳು ಕೇಳಿ ದಡಕ್ಕನೆ ಎದ್ದು ಕುಳಿತ...

ಕೂಡಲೇ ಪತ್ನಿಯನ್ನು ತಟ್ಟಿ ಎಬ್ಬಿಸಲೆತ್ನಿಸಿದ. ಆದರೆ ಮಕ್ಕಳಿಗೆ ಅಭಯ ನೀಡಿದ್ದ ತುವಾಅ(ರ) ಮಕ್ಕಳ ಅಳು ಕೇಳಿ "ಯಾ ಅಲ್ಲಾಹ್ ಆ ಮಕ್ಕಳಿಗೆ ಸಂರಕ್ಷಣೆ ನೀಡು ನಾಥಾ" ಎಂದು ಮನದಲ್ಲೇ  ಅಲ್ಲಾಹನಲ್ಲಿ ಮೊರೆಯಿಡುತ್ತಾ... ನಿದ್ರಿಸುತ್ತಿರುವವಳಂತೆ ಮಲಗಿದ್ದಳು.

ಅಬ್ದುಲ್ಲ ಪುನಃ ತುವಾಅ(ರ)ರನ್ನು ತಟ್ಟಿ ಎಬ್ಬಿಸಿ ಕೇಳಿದನು. ನಿನಗೆ ಮಕ್ಕಳ ಅಳು ಕೇಳಿಸುತ್ತಿಲ್ಲವೇ...?

ಆಗ ತುವಾಅ (ರ) ನನಗೆ ಕೇಳಿಸಲಿಲ್ಲವಲ್ಲ? ಕುಡಿತದ ಅಮಲಿನಲ್ಲಿ ನಿಮಗೆ ತೋಚಿದ್ದಾಗಿರಬಹುದು ಸುಮ್ಮನೆ ಮಲಗಿ ಎಂದಳು.

ಆದರೆ ತುವಾಅ(ರ)ರವರ ಮಾತಿನಿಂದ ಸಮಾಧಾನವಾಗದ ಅಬ್ದುಲ್ಲ ಪಟ್ಟು ಬಿಡದೆ, ಮಕ್ಕಳ ಅಳು ಕೇಳಿಸಿದ್ದು ನಮ್ಮ ಮನೆಯ ಒಳ ಕೇೂಣೆಯಿಂದಲೇ ಸತ್ಯ ಹೇಳು ಯಾರವರು? ಎಂದು ಕೇಳಿದನು.

ಗತ್ಯಂತರವಿಲ್ಲದೆ ಕೊನೆಗೆ  ತುವಾಅ(ರ) ಅಬ್ದುಲ್ಲನಿಗೆ ವಿಷಯವನ್ನೆಲ್ಲ ವಿವರಿಸಿದರು.

ತುವಾಅಳ(ರ) ಮಾತು ಕೇಳಿದ ಅಬ್ದುಲ್ಲನ ಮುಖವರಳಿತು.  ಆ ಮಕ್ಕಳನ್ನು ಹಿಡಿದು ಕೊಟ್ಟವರಿಗೆ ಉಬೈದ್'ನಿಂದ ಸಾವಿರ ದಿನಾರ್ ಬಹುಮಾನವಿದೆ. ಆದರಿಂದ ಬೇಗನೆ ಆ ಮಕ್ಕಳನ್ನು ಉಬೈದ್'ನಿಗೆ ಹಸ್ತಾಂತರಿಸಿ ಮೆಚ್ಚುಗೆಯೊಂದಿಗೆ ಸಾವಿರ ದೀನಾರ್ ಬಹುಮಾನವನ್ನೂ ಪಡೆಯಬೇಕು. ಎನ್ನುತ್ತಾ  ಮೊದಲೇ ಮದ್ಯದ ಅಮಲಿನಲ್ಲಿದ್ದ ಆತ ಎದ್ದು ಮಕ್ಕಳು ಮಲಗಿರುವ ಕೇೂಣೆಗೆ ಹೇೂದವನು,

*ಶಾರೀರಿಕವಾಗಿಯೂ, ಮಾನಸಿಕವಾಗಿಯೂ ಕುಗ್ಗಿ ಹೇೂಗಿದ್ದ ಆ ಎರಡು ಮುದ್ದು ಕಂದಮ್ಮಗಳ ತಲೆಗೂದಲನ್ನು ಹಿಡಿದು ಎಳೆದೊಯ್ಯಲಾರಂಭಿಸಿದ.*

ಇದನ್ನು ಕಂಡ ತುವಾಅ(ರ) ತಕ್ಷಣ ಮಕ್ಕಳ ರಕ್ಷಣೆಗೆ ಧಾವಿಸಿ,

*"ಮಕ್ಕಳಿಲ್ಲದೆ ಕೊರಗುತ್ತಿದ್ದ ನನಗೆ ಅಲ್ಲಾಹನು ಕರುಣಿಸಿದ ಸೌಭಾಗ್ಯವಿದು. ಹಾಗಾಗಿ ಈ ಮಕ್ಕಳನ್ನು ಕ್ರೂರಿಯಾದ ಆ ಉಬೈದ್'ನ ಕೈಗೊಪ್ಪಿಸಲು  ನನ್ನ ಜೀವವಿರುವ ತನಕ ಬಿಡಲಾರೆ ಎನ್ನುತ್ತಾ ಅವನ ದಾರಿಗೆ ಅಡ್ಡ ನಿಂತರು.*

ಮದ್ಯದ ಅಮಲಿನಲ್ಲಿದ್ದ ಅಬ್ದುಲ್ಲ ತುವಾಅ(ರ)ರನ್ನು ದೂರ ತಳ್ಳಿ ಮತ್ತೆ ಮಕ್ಕಳನ್ನು ಎಳೆಯಲಾರಂಭಿಸಿದಾಗ, ಬಿದ್ದಲ್ಲಿಂದ ಎದ್ದು ಬಂದು ಆ ಮಕ್ಕಳಿಬ್ಬರನ್ನೂ ತಬ್ಬಿಕೊಂಡು ಮಕ್ಕಳೇ... ಹೀಗಾಬಹುದೆಂದು ನಾನು ಊಹಿಸಲಿಲ್ಲ. ಇಲ್ಲದಿದ್ದರೆ ಆಗಲೇ ನಿಮ್ಮನ್ನು ಇಲ್ಲಿಂದ ಕಳುಹಿಸಿರುತ್ತಿದ್ದೆ ಎನ್ನುತ್ತಾ ರೇೂಧಿಸಲಾರಂಭಿಸಿದರು

*ಈ ಹಠಾತ್ ದಾಳಿಯಿಂದ ಕಂಗಾಲಾದ ಮಕ್ಕಳು ಗಾಬರಿಯಿಂದ ತುವಾಅ(ರ)ರನ್ನು ಅಪ್ಪಿಕೊಂಡು ಆ ದುಷ್ಟ ಬಿಟ್ಟು ಬಿಡಲಿ ಎಂಬ ಆಸೆಗಣ್ಣಿನಿಂದ ಅವನನ್ನೇ ನೇೂಡುತ್ತಿದ್ದವು.*

ಆದರೆ ಪಟ್ಟು ಬಿಡದ ಅಬ್ದುಲ್ಲ, ಪ್ರತಿರೇೂಧಿಸುತ್ತಿದ್ದ ತುವಾಅ(ರ)ರವರನ್ನು ಮನ ಬಂದಂತೆ ಚಚ್ಚುತ್ತಾ ಆಕೆಯ ತಲೆಯನ್ನು ಹಿಡಿದು ಗೇೂಡೆಗೆ ಬಡಿದಾಗ ತುವಾಅ(ರ)ರವರ ತಲೆಗೆ ಗಾಯವಾಗಿ ರಕ್ತ ಚಿಮ್ಮಲಾರಂಭಿಸಿತು.

ತುವಾಅ(ರ)ರಂತೂ ಮಕ್ಕಳನ್ನು ಬಿಟ್ಟು ಬಿಡುವಂತೆ ಅಬ್ದುಲ್ಲನನ್ನು ಪರಿಪರಿಯಾಗಿ ಅಂಗಲಾಚಿ ಬೇಡುತ್ತಲೇ ಇದ್ದರು.

*ಎಷ್ಟು ಗೇೂಗರೆದರೂ ಆ ದುಷ್ಟ ಪಟ್ಟು ಬಿಡಲಿಲ್ಲವಾದಾಗ ಕೊನೆಗೆ ತುವಾಅ(ರ) ಹೇಳಿದರು, "ನನ್ನ ಜೀವವಿರುವ ತನಕ ಈ ಮಕ್ಕಳನ್ನು  ನಾನು ಬಿಟ್ಟು ಕೊಡಲಾರೆ. ಅಷ್ಟಕ್ಕೂ ಈ ಮಕ್ಕಳನ್ನು ಆ ದುಷ್ಟನ ಕೈಗೊಪ್ಪಿಸದೆ ಬಿಡಲಾರೆನೆನ್ನುವುದೇ ನಿಮ್ಮ ಕೊನೆಯ ಮಾತಾದರೆ ಮೊದಲು ನನ್ನನ್ನು ಕೊಲ್ಲಿ" ಎಂದರು*

ಆಗ ಅಬ್ದುಲ್ಲ ಓಹೇೂ ಹಾಗೇೂ ವಿಷಯ ಎನ್ನುತ್ತಾ ಮನೆಯೊಳಗೆ ಹೋದನು.

ಆಗ *ತುವಾಅ(ರ)ರಿಗೆ* ಬಚಾವಾದೆವೆನಿಸಿ ಸಮಾಧಾನದ ನಿಟ್ಟುಸಿರು ಬಿಡುತ್ತಾ..

ಮಕ್ಕಳೊಂದಿಗೆ ಹೇಳಿದರು...
ಮಕ್ಕಳೇ..! ಈಗ ಮಲಗಿರಿ..! ನಾಳೆ ಬೆಳಿಗ್ಗೆ ಇಲ್ಲಿಂದ ಪಾರಾಗಲು ಏನಾದರೂ ಉಪಾಯ ಕಂಡು ಕೊಳ್ಳೇೂಣ. ಎನ್ನುತ್ತಾ ಅಲ್ಲೇ ಕುಳಿತರು.

ಮಕ್ಕಳನ್ನು ಕರೆದೊಯ್ಯಲು ಪತ್ನಿ ಒಪ್ಪದ ಕಾರಣ ಆಚೆ ಹೇೂಗಿದ್ದ ಅಬ್ದುಲ್ಲ ಮತ್ತಷ್ಟು ಮದ್ಯ ಕುಡಿದು ಖಡ್ಗದೊಂದಿಗೆ ಹಿಂದಿರುಗಿ ಬಂದು ಖಡ್ಗವನ್ನು ಝಳಪಿಸುತ್ತಾ ಹೇಳಿದನು...

*"ಈ ಮಕ್ಕಳನ್ನು ನಾನು ಉಬೈದ್'ನಿಗೆ ಒಪ್ಪಿಸದೆ ಬಿಡಲಾರೆ. ಅದು ನಿನ್ನನ್ನು ಕೊಂದಾದರೂ ಸರಿ ಎನ್ನುತ್ತಿದ್ದಂತೆ."*

ಅಧೀರರಾದ ತುವಾಅ(ರ) ಕಂಬನಿ ಮಿಡಿಯುತ್ತಾ ಹೇಳಿದರು... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰  🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 2⃣5⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔
ಮಕ್ಕಳೇ ಯಾರು ನೀವು?
ಮರದಲ್ಲೇಕೆ ಕುಳಿತಿರುವಿರಿ ?
ಕೆಳಗಿಳಿಯಿರಿ ಎಂದಳು.. ⬇

ಮೊದಲೇ ಭಯವಿಹ್ವಲರಾಗಿದ್ದ
ಬೌದ್ಧಿಕ ಪರಿಪಕ್ವತೆಯೂ ಇಲ್ಲದ ಆ ಕಂದಮ್ಮಗಳು ಏನೂ ಹೇಳದೆ ಸುಮ್ಮನೆ ಕುಳಿತಿರುವುದನ್ನು ಕಂಡು ಮತ್ತೊಮ್ಮೆ ಹೇಳಿದಳು...

*ಭಯಪಡಬೇಡಿ ಮಕ್ಕಳೇ... ಧೈರ್ಯದಿಂದ ಕೆಳಗಿಳಿದು ಬನ್ನಿ.*

ವಾತ್ಸಲ್ಯಪೂರಿತವಾದ ಆ ಕರೆಯಿಂದ ತುಸು ಧೈರ್ಯ ತಂದುಕೊಂಡ ಆ ಮಕ್ಕಳು ಕೆಳಗಿಳಿದು ಬಂದು...

*"ನಾವು ಮಕ್ಕಾದವರಾಗಿದ್ದೇವೆ. ನಮ್ಮ ತಂದೆಯಾದ ಮುಸ್ಲಿಂ (ರ)ರನ್ನು ಕೂಫದ ಸೈನಿಕರು ವಧಿಸಿದ್ದಾರೆ. ನಮ್ಮ ಜೀವಕ್ಕೂ ಅಪಾಯವಿದೆಯಂತೆ ಹಾಗಾಗಿ ನಾವು ಮಕ್ಕಕ್ಕೆ ಹಿಂದಿರುಗುತ್ತಿದ್ದೇವೆ" ಎಂದರು.*

ಇದಿಷ್ಟನ್ನು ಕೇಳುತ್ತಿದ್ದಂತೆ ವಿಷಯದ ಗಂಭೀರತೆಯನ್ನು ಗ್ರಹಿಸಿದ ಆ ಮಹಿಳೆ, ಮಕ್ಕಳನ್ನು ತಬ್ಬಿಕೊಂಡು ಸಂತೈಸುತ್ತಾ ತನ್ನೊಂದಿಗೆ ಕರೆದೊಯ್ದು ತನ್ನ ಯಜಮಾನಿಯಾದ *ತುವಾಅ(ರ)* ಎಂಬ ಎಂಬಾಕೆಯೊಂದಿಗೆ ಎಲ್ಲ ವಿಷಯವನ್ನೂ ವಿವರಿಸಿದಳು.

ಮಕ್ಕಳಿಲ್ಲದ *ತುವಾಅ(ರ)* ಆ ಕಂದಮ್ಮಗಳನ್ನು ಬಿಗಿದಪ್ಪಿ ಸಂತೈಸುತ್ತಾ ಹೇಳಿದರು...

ಮಕ್ಕಳಿಲ್ಲದೆ ಕೊರಗುತ್ತಿದ್ದ ನನ್ನ ಕೊರಗನ್ನು ನೀಗಿಸಲು ಅಲ್ಲಾಹನು ಕರುಣಿಸಿದ ಸೌಭಾಗ್ಯವಿದೆಂದು ನಾನು ಭಾವಿಸುವೆ. ಆದ್ದರಿಂದ ಮಕ್ಕಳೇ ನನ್ನ ಮುಖ ನೇೂಡುತ್ತಾ ಒಮ್ಮೆ *ಉಮ್ಮಾ* ಎಂದು ನನ್ನನ್ನು ಕರೆಯುವಿರಾ ಎಂದರು ಕಂಬನಿಗರೆಯುತ್ತಾ...

( *_ಮಕ್ಕಳಿಲ್ಲದೆ ಕೊರಗುತ್ತಾ ಬೆಲೆಕಟ್ಟಲಾಗದ "ಉಮ್ಮಾ" ಎಂಬ ಎರಡಕ್ಷರದ ಕರೆಯನ್ನು ತಮ್ಮ ಹೆತ್ತ ಮಕ್ಕಳ ಬಾಯಿಂದ ಕೇಳಬೇಕೆಂಬ ಕಾತರದಿಂದ  ಕನವರಿಸುತ್ತಾ ಹಂಬಲಿಸುವ ಮನದೊಂದಿಗೆ ಕಂಬನಿ ಮಿಡಿಯುತ್ತಿರುವ ಅದೆಷ್ಟೇೂ ಸಹೇೂದರಿಯರು ನಮ್ಮ ನಡುವೆಯಿರಬಹುದು. ಕರುಣಾನಿಧಿಯಾದ ಅಲ್ಲಾಹನು ಕರ್ಬಲಾ ಶುಹದಾಗಳ ಹಕ್ಕ್'ಜಾಹ್ ಬರ್ಕತ್'ನಿಂದ ಅಂತಹ ಮಾತೃ ಹೃದಯಿಗಳಿಗೆ ಸ್ವಾಲಿಹಾದ ಮಕ್ಕಳನ್ನು ದಯಪಾಲಿಸಿ ಅನುಗ್ರಹಿಸಲಿ ಆಮೀನ್_* )

ಹಲವು ದಿನಗಳಿಂದ ತಾಯಿಯಿಂದಲೂ ದೂರಾಗಿ ಇದೀಗ ತಂದೆಯನ್ನೂ ಕಳೆದುಕೊಂಡು ತಬ್ಬಲಿಯಾಗಿ ದಿಕ್ಕುದೆಸೆಯಿಲ್ಲದೆ ಕಂಗಾಲಾಗಿದ್ದ ಆ ಮುದ್ದು ಮಕ್ಕಳು ಈ ವಾತ್ಸಲ್ಯದಿಂದೊಡಗೂಡಿದ ಕೇೂರಿಕೆಯಿಂದ ಉಲ್ಲಸಿತರಾಗಿ "ತುವಾಅ" ಎಂಬ ಮಹಿಳೆಯ ಮುಖ ನೋಡುತ್ತಾ ಬಾಯಿ ತುಂಬಾ *ಉಮ್ಮಾ* ಎನ್ನುತ್ತಾ ಬಿಗಿದಪ್ಪಿದಾಗ...

ಸಂತಾನವಿಲ್ಲದ ಕೊರಗಿನಿಂದ ಬರಡಾದ ಕೊರಡಿನಂತೆ ಜೀವನ ನಡೆಸುತ್ತಿದ್ದ ಆ ಮಹಿಳೆಗೆ ಈ ಎಳೆ ಕಂದಮ್ಮಗಳ ಆಂತರ್ಯದಿಂದ ಹೊರಹೊಮ್ಮಿದ ಅಪ್ಯಾಯಮಾನತೆಯಿಂದೊಡಗೂಡಿದ ಆರ್ತನಾದದ ಕರೆಗೆ ಆಕೆಯ ಹೃನ್ಮನಗಳು ತುಂಬಿ ಕಣ್ಣಂಚಿನಲಿ ಆನಂದಾಶ್ರುಗಳು ತೊಟ್ಟಿಕ್ಕಿದಾಗ ತುಂಬಿದ ಹೃದಯದೊಂದಿಗೆ ಆ ಮುದ್ದು ಕಂದಮ್ಮಗಳನ್ನು ತನ್ನೆದೆಗಪ್ಪಿ ಚುಂಬಿಸುತ್ತಾ ಮಕ್ಕಳೇ ಭಯಪಡಬೇಡಿ ನನ್ನ ಜೀವವಿರುವ ತನಕ ನಾನು ನಿಮಗೆ ಅಭಯ ನೀಡಿ ಸಂರಕ್ಷಿಸುತ್ತೇನೆ ಎನ್ನುತ್ತಾ ಮುಂದುವರಿದು...

"ಈ ಕಾಡನ್ನು ದಾಟಿ ಉಬೈದಾಗಲೀ ಅಥವಾ ಅವನ ಸೈನಿಕರಾಗಲೀ ಇಲ್ಲಿಗೆ  ಬರಲಾರರು. ಆದರಿಂದ ನೀವಿಬ್ಬರೂ ಯಾವುದೇ ಅಳುಕು, ಅಂಜಿಕೆಗಳಿಲ್ಲದೆ  ಸುರಕ್ಷಿತವಾಗಿ ನನ್ನ ಮಕ್ಕಳಂತೆ ಇಲ್ಲಿರಬಹುದು." ಎನ್ನುತ್ತಾ ಮಕ್ಕಳನ್ನು ಸ್ನಾನ ಮಾಡಿಸಿ ಊಟ ಬಡಿಸಿದಳು.

ಹೊಟ್ಟೆಗೆ ಆಹಾರವೂ ಇಲ್ಲದೆ ಜೀವ ಭಯದಿಂದ ದಿನವಿಡೀ ಓಡಿ ನಿದ್ರೆಯೂ ಇಲ್ಲದೆ ಬಳಲಿದ್ದ ಆ ಮಕ್ಕಳು ಸ್ವಲ್ಪ ಹೊತ್ತು ಮಲಗಿ ನಿದ್ರಿಸಿದವು.

ಆದರೆ ತುವಾಅ (ರ)ರಿಗೆ ಅಬ್ದುಲ್ಲ ಎಂಬ ಪತಿಯಿದ್ದು, ಆತ ಮದ್ಯಪಾನಿಯೂ ಮಹಾ ವಂಚಕನೂ, ಮದ್ಯದ ಅಮಲು ತಲೆಗೇರಿದಾಗ ಏನು ಮಾಡಲೂ ಹೇಸದ ಕ್ರೂರಿಯೂ ಆಗಿದ್ದ.

ಹಾಗಾಗಿ ತುವಾಅ (ರ) ಮುಸ್ಸಂಜೆಯಾಗುತ್ತಿದ್ದಂತೆ ಬೇಗನೆ ಮಕ್ಕಳಿಗೆ ಉಣ ಬಡಿಸಿ ಒಳ ಕೇೂಣೆಯೊಂದರಲ್ಲಿ ಮಲಗಿಸಿದಳು. ನಂತರ ಪತಿ ಬಂದಾಗ ಆತನಿಗೂ ಆಹಾರ ಕೊಟ್ಟು ಮತ್ತೊಂದು ಕೇೂಣೆಯಲ್ಲಿ ಆತನನ್ನು ಮಲಗಿಸಿದಳು.

*"ಮುಸ್ಲಿಂ (ರ)ರವರ ಮಕ್ಕಳನ್ನು ತಂದೊಪ್ಪಿಸಿದವರಿಗೆ ಸಾವಿರ ದೀನಾರ್ ಬಹುಮಾನ ಕೊಡುವುದಾಗಿ ಉಬೈದ್ ಘೇೂಷಿಸಿರುವ ಘೇೂಷಣೆಯ ಬಗ್ಗೆ ಅಬ್ದುಲ್ಲನಿಗೆ ತಿಳಿದಿತ್ತು. ಆದರೆ ಆ ಮಕ್ಕಳು ತನ್ನ ಮನೆಯಲ್ಲೇ ಇದ್ದಾರೆನ್ನುವ ವಿಷಯ ಮಾತ್ರ ಆತನಿಗೆ ತಿಳಿದಿರಲಿಲ್ಲ."*

ಆದರೆ ಸೃಷ್ಟಿಕರ್ತನ ವಿಧಿಯನ್ನು ಸೃಷ್ಟಿಗಳಿಂದ ತಡೆಯಲು ಸಾಧ್ಯವೇ...?

ಒಳಕೇೂಣೆಯಲ್ಲಿ ಮಲಗಿರುವ ಮಕ್ಕಳಿಗೊಂದು ಕನಸು...

*ಅಲ್ಲಾಹನ ರಸೂಲರೂ ಈ ಮಕ್ಕಳ ಪಿತಾಮಹರೂ ಆದ ಸಯ್ಯದುನಾ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರು ಈ ಮಕ್ಕಳ ತಂದೆಯಾದ ಮುಸ್ಲಿಂ (ರ) ರೊಂದಿಗೆ ಕೇಳುತ್ತಿದ್ದಾರೆ...*

"ಮಕ್ಕಳನ್ನು ಯಾರ ಬಳಿ ಬಿಟ್ಟು ಬಂದೆ?" ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 2⃣4⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

*"ಅವರಿಬ್ಬರನ್ನೂ ರಕ್ಷಿಸಲು ನಮ್ಮಿಂದ ಸಾಧ್ಯವಾಗಲಿಲ್ಲ. ಹಾಗಾಗಿ ನಾವು ಹಿಂದಿರುಗೇೂಣ"* ಎಂದು ಆ ಗುಂಪಿನ ನಾಯಕ ಹೇಳಿದಾಗ ⬇

ಜನರೆಲ್ಲರೂ ಅಲ್ಲಿಂದ ನಿರ್ಗಮಿಸಿದರು.

ನಂತರ ದಾರುಲ್ ಇಮಾರಿನ ಮೇಲ್ಛಾವಣಿಯಿಂದ ಕೆಳಗಿಳಿದು ಬಂದ ಉಬೈದ್, ಅಲ್ಲಿ ಅನಾಥವಾಗಿ ಬಿದ್ದಿದ್ದ ತಲೆಗಳನ್ನು ನೇೂಡಿ ಗಹಗಹಿಸಿ ನಗುತ್ತಾ...

*"ಯಝಿದ್"ನ ಆಡಳಿತದ ವಿರುದ್ಧ ಧ್ವನಿಯೆತ್ತುವವರೆಲ್ಲರ ಕತೆಯೂ ಇಷ್ಟೇ ಎಂದನು.*

 ನಂತರ ಉಬೈದ್'ನಿಂದ ಮತ್ತೊಂದು ಘೋಷಣೆ ಹೊರಬಿತ್ತು.

*"ಮುಸ್ಲಿಂ (ರ) ರವರ ಎರಡು ಮಕ್ಕಳನ್ನು ತಂದೊಪ್ಪಿಸಿದವರಿಗೆ ಸಾವಿರ ದಿನಾರ್ ಬಹುಮಾನ ನೀಡಲಾಗುವುದು."*

ಆದರೆ ಇದ್ಯಾವುದನ್ನೂ ಅರಿಯದ ಮುಸ್ಲಿಂ(ರ)ರವರ ಮಕ್ಕಳಾದ 9 ಮತ್ತು 11 ವರ್ಷ ಪ್ರಾಯದ ಮುಹಮ್ಮದ್ (ರ) ಮತ್ತು ಇಬ್ರಾಹೀಂ (ರ) ಎಂಬ ಇಬ್ಬರು ಮಕ್ಕಳು ಹಾನಿಯಾ (ರ) ರವರ ಮನೆಯಲ್ಲಿ ಶರಕ್ (ರ) ರವರ ಜೊತೆಯಲ್ಲಿದ್ದರು.

ಉಬೈದ್'ನಿಂದ ತಮ್ಮ ಸಹೇೂದರರಾದ ಹಾನಿಯಾ (ರ) ಮತ್ತು ಮುಸ್ಲಿಂ (ರ) ವಧಿಸಲ್ಪಟ್ಟಿದ್ದರಿಂದ ಮಕ್ಕಳಿಗೂ ಅಪಾಯ ತಪ್ಪಿದ್ದಲ್ಲ ಎಂದು ಭಾವಿಸಿದ ಶರಕ್ (ರ) ರವರು ಆ ಎರಡು ಮಕ್ಕಳನ್ನು ಕರೆದು ಹೇಳಿದರು.

*ಮಕ್ಕಳೇ..!*
*ನಿಮ್ಮ ತಂದೆ ಮತ್ತು ನನ್ನ ಸಹೇೂದರ ಹಾನಿಯಾ (ರ) ಇಬ್ಬರೂ ವಧಿಸಲ್ಪಟ್ಟಿದ್ದಾರೆ. ಆದ್ದರಿಂದ ನೀವು ಆದಷ್ಟು ಬೇಗ ಇಲ್ಲಿಂದ ಸುರಕ್ಷಿತವಾದ ಸ್ಥಳಕ್ಕೆ ಪಲಾಯನ ಮಾಡಬೇಕು. ಅಂದರೆ, ಮಕ್ಕಾಕ್ಕೆ ಹೋಗುವ ಯಾವುದಾದರೂ ವ್ಯಾಪಾರಿ ಸಂಘದೊಂದಿಗೆ ಹೇೂಗಿ ಮಕ್ಕ ತಲುಪಿದರೆ ಮತ್ತೆ ನಿಮ್ಮನ್ನು ಯಾರಿಂದಲೂ ಏನೂ ಮಾಡಲಾಗದು ಎನ್ನುತ್ತಾ...*

ತಮ್ಮ ಕೆಲಸಗಾರನೊಬ್ಬನನ್ನು ಕರೆದು ಹೇಳಿದರು, ಮಕ್ಕಾಕ್ಕೆ ಹೋಗುವ ಯಾವುದಾದರೂ ಖಾಫಿಲ (ಸಂಘ)ವನ್ನು ಕಂಡು ಹಿಡಿದು ವಿಷಯವನ್ನೆಲ್ಲ ಅವರಿಗೆ ವಿವರಿಸಿ ಮಕ್ಕಳನ್ನು ಅವರೊಂದಿಗೆ ಕಳುಹಿಸು ಎನ್ನುತ್ತಾ ಆ ಕೆಲಸಗಾರನೊಂದಿಗೆ  ಮಕ್ಕಳನ್ನು ಕಳುಹಿಸಿದರು.

ಹಾಗೆ ಆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕೆಲಸಗಾರ ಸ್ವಲ ದೂರ ಹೇೂಗುತ್ತಿದ್ದಂತೆ ಮಕ್ಕಳಿಗೆ ಒಂದು ದಾರಿ ತೇೂರಿಸಿ ಹೀಗೆಂದನು,

*ಮಕ್ಕಳೇ...*
*ಈ ದಾರಿಯಲ್ಲಿ ಒಂದು ವ್ಯಾಪಾರೀ ಸಂಘ ಮಕ್ಕಾದತ್ತ ಹೇೂಗುತ್ತಿದೆ. ಅದರಿಂದ ನೀವು ಬೇಗನೆ ಓಡಿ ಹೇೂದರೆ ಆ ಯಾತ್ರಾ ಸಂಘವನ್ನು ಸೇರಿಕೊಳ್ಳಬಹುದು. ಎನ್ನುತ್ತಾ ಮಕ್ಕಳನ್ನು ಆ ದಾರಿಯಲ್ಲಿ ಕಳುಹಿಸಿದನು.* 

(ಆದರೆ ವಾಸ್ತವವಾಗಿ ಆ ದಾರಿಯಲ್ಲಿ ಯಾವ ಸಂಘವೂ ಇರಲಿಲ್ಲ. ಒಂದು ವೇಳೆ ಉಬೈದ್'ನ ಸೈನಿಕರು ಮಕ್ಕಳೊಂದಿಗೆ ಕಂಡರೆ ತನ್ನ ಜೀವಕ್ಕೂ ಸಂಚಕಾರ ಬಂದೀತೆಂಬ ಭಯದಿಂದ ಹಾಗೆಂದಿದ್ದ)

ತಂದೆ ವಧಿಸಲ್ಪಟ್ಟಿದ್ದಾರೆಂದೂ ಹಾಗಾಗಿ ನಿಮ್ಮ ಜೀವಕ್ಕೂ ಅಪಾಯವಿದೆಯೆಂದು ಶರಕ್ (ರ) ಹೇಳಿದ್ದರಿಂದ ಮೊದಲೇ ಕಂಗಲಾಗಿದ್ದ ಆ ಮಕ್ಕಳು ಭಯದಿಂದ ಸೇವಕ ಹೇಳಿದಂತೆ ವ್ಯಾಪಾರಿ ಸಂಘವನ್ನು ಸೇರಿಕೊಳ್ಳಬೇಕೆಂಬ ಉದ್ದೇಶದಿಂದ ಓಡಲಾರಂಭಿಸಿದವು.

ಎಷ್ಟು ಓಡಿದರೂ ಯಾವ ಸಂಘವೂ ಆ ಮಕ್ಕಳಿಗೆ ಕಾಣ ಸಿಗಲಿಲ್ಲ. ತಾಯಿ ತಂದೆಯರನ್ನು ಒಂದು ದಿನವೂ ಅಗಲಿರದ ಆ ಪುಟ್ಟ ಕಂದಮ್ಮಗಳು ಜೀವ ಭಯದಿಂದ ಕಂಡ ದಾರಿಯಲ್ಲೆಲ್ಲ ಓಡುತ್ತಾ ಕೊನೆಗೆ, ಗಿಡ ಮರಗಳಿಂದಾವೃತವಾದ ವನವೊಂದಕ್ಕೆ ತಲುಪಿದವು. ಅಲ್ಲೊಂದು ಹೊಳೆ ಇತ್ತು.
ಅಷ್ಟರಲ್ಲಾಗಲೇ ಕತ್ತಲಾವರಿಸಿದ್ದರಿಂದ ಹೊಳೆ ದಾಟಲು ಸಾಧ್ಯವಾಗದೆ ಆಯಾಸದಿಂದ ಬಳಲಿದ್ದ ಆ ಮುಗ್ಧ ಮಕ್ಕಳು ಹೊಳೆಯ ಸಮೀಪದ ಮರವೊಂದನ್ನು ಹತ್ತಿ ಕುಳಿತವು.

ತಾಯಿ ತಂದೆಯರನ್ನೇ ಅವಲಂಭಿಸಿದ್ದ ಆ ಕಂದಮ್ಮಗಳು ಒಂದು ದಿನವೂ ಅವರನ್ನು ಬಿಟ್ಟು ದೂರ ಇದ್ದವರಲ್ಲ. ಹಾಗಾಗಿ ಅಸಹಾಯಕತೆಯಿಂದ ಕಂಗಾಲಾಗಿದ್ಗ ಆ ಕಂದಮ್ಮಗಳು ಭಯ ಮತ್ತು ಆತಂಕದಿಂದ ಒಬ್ಬರನ್ನೊಬ್ಬರು ಅಪ್ಪಿ ಹಿಡಿದು ಒಂದಿನಿತೂ ಕಣ್ಣೆವೆ ಮುಚ್ಚದೆ ಆ ಮರದ ಕೊಂಬೆಯ ಮೇಲೆ ರಾತ್ರಿ ಕಳೆದರು.

ಮರುದಿನ ಬೆಳಕು ಹರಿದು ಬಾನಿನ ಅಂಗಳದಲ್ಲಿ ಸೂರ್ಯ ಉದಯಿಸುತ್ತಿದ್ದಂತೆ ನೀರಿಗಾಗಿ ಮಹಿಳೆಯೊಬ್ಬಳು ಆ ಹೊಳೆಗೆ ಬಂದಳು.

ಚರ್ಮದ ಪಾತ್ರೆಯಲ್ಲಿ ಹೊಳೆಯಿಂದ ನೀರು ಮೊಗೆಯುತ್ತಿರುವಾಗ ಮರದ ಮೇಲೆ ಕುಳಿತಿರುವ ಮಕ್ಕಳ ಪ್ರತಿಬಿಂಬವನ್ನು ಕಂಡು ಮರದತ್ತ ದಿಟ್ಟಿಸಿದಳು.

ಮುಂದೇನು ಮಾಡಬೇಕೆಂದರಿಯದೆ ಭಯದಿಂದ ಕಂಪಿಸುತ್ತಾ ಮರದ ಮೇಲೆ ಅಡಗಿ ಒಬ್ಬರನ್ನೊಬ್ಬರು ಅಪ್ಪಿ ಹಿಡಿದು ಕುಳಿತಿರುವ ಅಪರಿಚಿತರಾದ ಆ ಮುದ್ದು ಮಕ್ಕಳನ್ನು ಕಂಡ ಆ ಸ್ತ್ರೀ ಪಾತ್ರೆಯನ್ನಲ್ಲೇ ಇಟ್ಟು ಮರದ ಹತ್ತಿರ ಹೇೂಗಿ,

*ಮಕ್ಕಳೇ ಯಾರು ನೀವು? ಮರದಲ್ಲೇಕೆ ಕುಳಿತಿರುವಿರಿ? ಕೆಳಗಿಳಿಯಿರಿ ಎಂದಳು.* ⤵



*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰  🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 2⃣3⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

ಅಪಾಯದ ಅರಿವಾದ ಮುಸ್ಲಿಂ(ರ) ತಕ್ಷಣ ತಮ್ಮ ಒರೆಯಲ್ಲಿದ್ದ ಖಡ್ಗವನ್ನು ಎಳೆದು ಸೈನಿಕರತ್ತ ನುಗ್ಗಿದರು... ⬇

ಇದನ್ನು ಊಹಿಸಿರದ ಸೈನಿಕರು ವಿಚಲಿತರಾಗಿ ಮುಸ್ಲಿಂ (ರ) ಖಡ್ಗವನ್ನು ಹಿಡಿದು ಮುನ್ನುಗ್ಗುತ್ತಿದ್ದಂತೆ
ಹಿಂದೆ ಸರಿಯಲು ಆರಂಭಿಸಿದರು.

ವಂಚನೆಯನ್ನು ಪಾರಂಪರ್ಯವಾಗಿ ಮುಂದುವರೆಸಿಕೊಂಡು ಬಂದಿರುವ ಕೂಫ ಎಂಬ ನಾಡಿನವರೇ ಆದ ಸೈನಿಕರೂ ವಂಚಿಸುವುದರಲ್ಲಿ ಕಡಿಮೆಯೇನಲ್ಲ.

ಯುದ್ಧದಲ್ಲಿ ನಿಪುಣರಾಗಿರುವ ಮುಸ್ಲಿಂ (ರ)ರನ್ನು ಹಿಮ್ಮೆಟ್ಟಿಸುವುದು ಅಷ್ಟು ಸುಲಭದ ಮಾತಲ್ಲವೆಂಬುದನ್ನು ಅರಿತಿದ್ದ ಸೈನಿಕನೊಬ್ಬ ಹೇಳಿದ

*ಮುಸ್ಲಿಂ (ರ)ರವರೇ...*
*ನಾವು ತಮ್ಮನ್ನು ಬಂಧಿಸಲೆಂದು ಬಂದವರಲ್ಲ. ಬದಲಾಗಿ ಕೂಫಾದ ನಿವಾಸಿಗಳಾದ ನಾವು, ಬಂದಿಯಾಗಿರುವ ಹಾನಿಯ (ರ) ರವರನ್ನು ಉಬೈದ್'ನಿಂದ ರಕ್ಷಿಸುವ ಸಲುವಾಗಿ ಉಬೈದ್'ನ ವಿರುದ್ಧದ ಸಮರಕ್ಕೆ ತಮ್ಮೊಂದಿಗೆ ಕೈಜೇೂಡಿಸಲು ಬಂದಿದ್ದೇವೆ. ಸತ್ಯ ಸಂಗತಿಯನ್ನರಿಯದ ಕೆಲ ಸೈನಿಕರು ನಿನ್ನೆ ತಮ್ಮನ್ನು ಬೆನ್ನಟ್ಟಿದ ವಿಷಯ ತಿಳಿದು ತಮಗೆ ಮನವರಿಕೆ ಮಾಡಲು ಬಂದವರಾಗಿದ್ದೇವೆ ನಾವು.*

ಇದನ್ನು ಕೇಳಿದಾಗ ಮುಸ್ಲಿಂ (ರ) ಶಾಂತರಾಗಿ *"ಹಾಗಾದರೆ ಸರಿ"* ಎನ್ನುತ್ತಾ ಖಡ್ಗವನ್ನು ಒರೆಗೆ ಹಾಕಿದರು.

ಖಡ್ಗವನ್ನು ಒರೆಗೆ ಹಾಕಿದ್ದೇ ತಡ ಆ ಸೈನಿಕರು ಮುಸ್ಲಿಂ (ರ)ರವರ ಮೇಲೆ ಎರಗಿ ಹಿಡಿದು ಕಟ್ಟಿ ಕೊಂಡೊಯ್ದು ಉಬೈದ್'ನ ಮುಂದೆ ಹಾಜರು ಪಡಿಸಿದರು.

ಮುಸ್ಲಿಂ (ರ)ರನ್ನು ಕಂಡ ಉಬೈದ್ ಆಕ್ರೋಶದಿಂದ...

*ಹೇ ಮಕ್ಕಾದವನೇ...*
*ಯಝಿದ್'ನ ಆಡಳಿತದ ವಿರುದ್ಧ ಕೂಫದ ಜನತೆಯನ್ನು ಎತ್ತಿ ಕಟ್ಟಲು ಪ್ರಯತ್ನಿಸಿದ ನಿನ್ನ ಶ್ರಮವನ್ನು ಸಫಲವಾಗಲು ನಾನು ಬಿಡಲಾರೆ ಎನ್ನುತ್ತಾ..*

*ಈತನನ್ನೂ ಜೈಲಿಗೆ ತಳ್ಳಿರಿ ಎಂದು ಸೈನಿಕರಿಗೆ ಅಜ್ಞಾಪಿಸಿದನು.*

ಸೈನಿಕರು ಹಾನಿಯಾ (ರ)ರವರನ್ನು ಬಂಧಿಸಿದ್ದ ಕೋಣೆಯ ಪಕ್ಕದ ಸೆಲ್'ನಲ್ಲಿ ಮುಸ್ಲಿಂ (ರ) ರನ್ನೂ ಕೂಡಿ ಹಾಕಿದರು.

*( ಆದರೆ ಈ ಯಾವ ವಿಷಯಗಳೂ ಮಕ್ಕಾದಲ್ಲಿರುವ ಹುಸೈನ್ (ರ)ರಿಗೆ ತಿಳಿದಿರಲಿಲ್ಲ )*

ಮರುದಿನ ಕೂಫದ ಜನರೆಲ್ಲ ಸಂಘಟಿತರಾಗಿ ಸುಮಾರು ಐದು ಸಾವಿರ ಜನರು ಒಟ್ಟು ಗೂಡಿ "ದಾರುಲ್ ಇಮಾರ"ದ ಮುಂದೆ ಜಮಾಯಿಸಿ, ನುಅಮಾನು ಇಬ್ನು ಬಶೀರ್ (ರ)ರೊಂದಿಗೆ ಮುಸ್ಲಿಂ (ರ) ಮತ್ತು ಹಾನಿಯಾ (ರ) ರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದಾಗ ನುಅ್'ಮಾನ್ ಇಬ್ನು ಬಶೀರ್ (ರ)ರವರು ಒಳ ಕೇೂಣೆಯೊಂದರಲ್ಲಿ ಕುಳಿತಿದ್ದ ಉಬೈದ್'ನ ಬಳಿ ಹೇೂಗಿ ಹೇಳಿದರು...

 ಹೊರಗಡೆ ಕೂಫದ ಜನತೆಯೆಲ್ಲರೂ ಜಮಾಯಿಸಿ ಮುಸ್ಲಿ (ರ) ಮತ್ತು ಹಾನಿಯಾ (ರ)ರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದರು.

ಓಹೋ..
ಹಾಗೇೂ. ವಿಷಯ..?
ಎನ್ನುತ್ತಾ..

 ಉಬೈದ್, ಕೂಡಲೇ ಸೈನಿಕರನ್ನು ಕರೆದು
ಜೈಲಿನಲ್ಲಿರುವ ಇಬ್ಬರನ್ನೂ ಇತ್ತ ಕರೆ ತನ್ನಿ ಎಂದನು.

ಹಾಗೆ ಸೈನಿಕರು ಮುಸ್ಲಿಂ (ರ) ಮತ್ತು ಹಾನಿಯಾ (ರ)ರನ್ನು ಕರೆತಂದು ಉಬೈದ್'ನ ಮುಂದೆ ನಿಲ್ಲಿಸಿದರು.

ಆಗ ಅವರಿಬ್ಬರನ್ನೂ ದಾರುಲ್ ಇಮಾರ್'ನ ಮೇಲ್ಭಾಗಕ್ಕೆ ಕರೆದೊಯ್ದ ಉಬೈದ್, ಕೆಳಗೆ ನೆರೆದಿದ್ದ ಜನರನ್ನು ತೇೂರಿಸುತ್ತಾ ಹೇಳಿದ, ನಿಮ್ಮಿಬ್ಬರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸುವ ಸಲುವಾಗಿ ಇವರೆಲ್ಲರೂ  ಸಂಘಟಿತರಾಗಿ ಬಂದು ಇಲ್ಲಿ ನೆರೆದಿದ್ದಾರೆ ಎಂದನು.

ನಂತರ ದಾರುಲ್ ಇಮಾರಿನ ಮೇಲಿನಿಂದಲೇ ಅವರಿಬ್ಬರನ್ನು ಎಲ್ಲರಿಗೂ ಕಾಣುವಂತೆ ಕಟ್ಟಡದ ಅಂಚಿಗೆ ಕರೆ ತಂದು ನಿಲ್ಲಿಸಿ ಅವರ ಹಿಂದೆ ನಿಂತ ಉಬೈದ್, ನುಅ್'ಮಾನು ಇಬ್ನು ಬಶೀರ್ (ರ) ರೊಂದಿಗೆ ಹೇಳಿದನು,

ಇವರನ್ನು ಬಿಟ್ಟು ಕೊಡುತ್ತೇವೆ ಹಾಗಾಗಿ ಪ್ರತಿಭಟನೆ ಕೈಬಿಡಬಿಡಬೇಕೆಂದು ಹೇಳು..! ಎಂದನು.

ನುಅಮಾನು ಇಬ್ನು ಬಶೀರ್ (ರ) ಹಾಗೆಯೇ ಹೇಳಿದರು.

 *ಆದರೆ ಅವರು ಹೇಳಿ ಮುಗಿಸುವಷ್ಟರಲ್ಲಿ ಉಬೈದ್ ತನ್ನ 🗡 ಖಡ್ಗದಿಂದ ಒಂದೇ ಏಟಿಗೆ ಮುಸ್ಲಿಂ (ರ) ಮತ್ತು ಹಾನಿಯಾ (ರ)ರವರ ತಲೆ ಕಡಿದು, ಆ ಇಬ್ಬರು ಮಹಾನರ ತಲೆಯನ್ನೂ ಕೆಳಗಿರುವ ಜನರ ಮುಂದೆ ಎಸೆದನು.* 😰😰

ಇದನ್ನು ಕಂಡ ಜನತೆ ಬೆಚ್ಚಿ ಬಿದ್ದರು. ಆಗ ಆ ಜನತೆಯ ಗುಂಪಿನಲ್ಲಿದ್ದವರೊಬ್ಬರು ಆ ಜನತೆಯನ್ನುದ್ದೇಶಿಸಿ ಹೇಳಿದರು,

*ನಾವು ಯಾರನ್ನು ರಕ್ಷಿಸಲಿಕ್ಕಾಗಿ   ಬಂದೆವೇೂ ಅವರನ್ನು ಕೊನೆಗೂ ರಕ್ಷಿಸಲು ನಮ್ಮಿಂದ ಸಾಧ್ಯವಾಗಲಿಲ್ಲ. ನಮ್ಮಿಂದ ಇನ್ನೇನು ತಾನೆ ಮಾಡಲು ಸಾಧ್ಯ? ಹಾಗಾಗಿ ನಾವು ಹಿಂದಿರುಗೇೂಣ ಎಂದರು..!*

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰  🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 2⃣2⃣
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الل
☔☔☔☔☔☔☔☔☔

ಉಬೈದ್'ನ ಸೈನಿಕರಿಂದ ತಪ್ಪಿಸಿಕೊಂಡು ಬಂದ ಮುಸ್ಲಿಂ(ರ)ರವರು ಕಾಡಿನ ನಡುವೆಯಿದ್ದ ಮನೆಯೊಂದರ ಬಾಗಿಲು ಬಡಿದು ಕುಡಿಯಲು ನನಗೆ ಸ್ವಲ್ಪ ನೀರು ಕೊಡುವಿರಾ? ಎಂದು ಕೇಳಿದಾಗ..

 ಆ ಮನೆಯಲ್ಲಿದ್ದ ಅಜ್ಜಿ ನೀರು ತಂದು ಕೊಟ್ಟು ತಾವು ಯಾರು? ಯಾಕೆ ಹೀಗೆ ಎದುಸಿರು ಬಿಡುತ್ತಿರುವಿರಿ? ಏನಾಯಿತು?
ಎಂದೆಲ್ಲ ಪ್ರಶ್ನಿಸಿದರು....

ಮುಸ್ಲಿಂ (ರ) ಹೇಳಲಾರಂಭಿಸಿದರು...

*ನಾನು ಹಝ್ರತ್ತ್ ಹುಸೈನ್ (ರ) ರವರ ಪ್ರತಿನಿಧಿಯಾಗಿ  ಮಕ್ಕಾದಿಂದ ಕೂಫದ ಜನತೆಗೆ ನೆರವಾಗಲು ಬಂದವನು. ಎನ್ನುತ್ತಾ ಎಲ್ಲವನ್ನೂ ವಿವರಿಸಿ ಕೊನೆಗೆ..*

*ಈಗ ಉಬೈದ್'ನ ಕಿಂಕರರಿಂದ ತಪ್ಪಿಸಿಕೊಂಡು ಬಂದೆ ಎಂದರು.*

ವಿಷಯವನ್ನೆಲ್ಲ ಕೇಳಿ ತಿಳಿದ ಆ ಅಜ್ಜಿ "ಅಲ್ ಹಮ್ದುಲ್ಲಿಲ್ಲಾಹ" الحمد لله ಎನ್ನುತ್ತಾ....

ಹಾಗಾದರೆ ತಾವಿಂದು ಇಲ್ಲಿಯೇ ಇರಿ..! ಉಬೈದ್'ನ ಸೈನಿಕರು ಕಾಡಿನೊಳಗಿರುವ ಈ ಮನೆಗೆ ಬರಲಾರರು.  ಆದ್ದರಿಂದ ತಾವು ಇಲ್ಲಿ ಆರಾಮವಾಗಿರಬಹುದು ಎಂದರು. ಅಜ್ಜಿಯ ಮಾತಿಗೆ ಸರಿ ಎಂದು ಸಮ್ಮತಿಸಿದ ಮುಸ್ಲಿಂ (ರ) ಅಂದು ಅಲ್ಲೇ ತಂಗಿದರು.

ಆಗ ಮತ್ತೊಂದೆಡೆ, ಮುಸ್ಲಿಂ (ರ) ಸೈನಿಕರಿಂದ ತಪ್ಪಿಸಿಕೊಂಡ ವಿಷಯ ತಿಳಿದ ಉಬೈದ್....

ಮುಸ್ಲಿಂ (ರ) ರನ್ನು ತೋರಿಸಿ ಕೊಟ್ಟವರಿಗೆ "ಸಾವಿರ ದೀನಾರ್" ಬಹುಮಾನ ನೀಡಲಾಗುವುದು ಎಂದು ಪ್ರಖ್ಯಾಪಿಸಿದನು.

ಆ ಅಜ್ಜಿಗೊಬ್ಬ ಮಗನಿದ್ದು ಆತ ಉಬೈದ್'ನ ಪ್ರಖ್ಯಾಪನೆಯ ಬಗ್ಗೆ ತಿಳಿದಾಗ ಆ ಮುಸ್ಲಿಂ (ರ) ಎಲ್ಲಿರುವರೆಂದು ತಿಳಿದಿದ್ದರೆ ತೋರಿಸಿ ಕೊಟ್ಟು ಆ ಬಹುಮಾನವನ್ನು ತನ್ನದಾಗಿಕೊಳ್ಳಬಹುದಾಗಿತ್ತು ಎಂದೆಲ್ಲಾ ಯೇೂಚಿಸುತ್ತಾ...
ಮನೆಗೆ ಬಂದನು.

ತನ್ನ ಮಗನನ್ನು ಕಂಡೊಡನೆ ಆ ತಾಯಿ ಹೇಳಿದರು; ಮಗನೇ..

*ಇಂದು ಈ ಮನೆ ಪ್ರವಾದಿ ﷺ ರ ಕುಟುಂಬದ ಸಾನಿಧ್ಯದಿಂದ ಅನುಗ್ರಹೀತವಾಗಿದೆ. ಅಂದರೆ ಹುಸೈನ್(ರ) ರವರ ಪ್ರತಿನಿಧಿಯಾಗಿ ಮಕ್ಕಾದಿಂದ ಆಗಮಿಸಿರುವ ಮುಸ್ಲಿಂ (ರ) ರಿಗೆ ಇಂದು ನಮ್ಮ ಮನೆಯಲ್ಲಿ ಅಭಯ ನೀಡುವ ಸೌಭಾಗ್ಯ ನಮಗೆ ಲಭಿಸಿದೆ ಎಂದರು.*

"ಹುಡುಕುವ ಬಳ್ಳಿ ಕಾಲಿಗೆ ಸುತ್ತಿಕೊಂಡಿತು" ಎಂಬಂತೆ
ಈ ವಿಷಯ ತಿಳಿದ ಆತ ಸಂತಸದಿಂದ ಕುಣಿದಾಡಿದ. ಇದನ್ನು ಕಂಡ ತಾಯಿ ಕೇಳಿದರು,

ನಿನಗೇನಾಯಿತು? ಯಾಕೆ ಹೀಗೆ ಕುಣಿದಾಡುತ್ತಿರುವೆ?

ಅಮ್ಮಾ ನಿಮ್ಮ ಮುಖದ ಸಂತೋಷ ಕಂಡಾಗ ನನಗೂ ಸಂತೋಷ ತಾಳಲಾಗಲಿಲ್ಲ ಎಂದ.

ಅಂದು ರಾತ್ರಿ ಎಲ್ಲರೂ ನಿದ್ರೆಗೆ ಜಾರಿದ್ದರೆ, ಆ ಮನೆಯ ಪ್ರತ್ಯೇಕ ಕೋಣೆಗಳಲ್ಲಿ ಮಲಗಿದ್ದ ಇಬ್ಬರಿಗೆ ಮಾತ್ರ ಅರ್ಧ ರಾತ್ರಿಯಾದರೂ ನಿದ್ರೆ ಬರಲಿಲ್ಲ.

ಒಂದೆಡೆ ಮುಸ್ಲಿಂ (ರ) ತಮ್ಮ ಮಕ್ಕಳಿಬ್ಬರು ಶರಕ್ ಇಬ್ನು ಅವಾಂ (ರ) ರವರ ಮನೆಯಲ್ಲಿದ್ದಾರೆ. ಅವರ ಸ್ಥಿತಿ ಏನಾಗಿರಬಹುದೆಂದು ಯೇೂಚಿಸುತ್ತಾ ತಳಮಳದಿಂದ ಮರುಗುತ್ತಿದ್ದರು.

ಮತ್ತೊಂದೆಡೆ ಆ ಅಜ್ಜಿಯ ಮಗನಾದ ಆ ಮನುಷ್ಯ, ಮುಸ್ಲಿಂ (ರ)ರವರು ತನ್ನ ಮನೆಯಲ್ಲಿರುವ ಸಂಗತಿಯನ್ನು ಉಬೈದ್'ನಿಗೆ ಯಾವ ರೀತಿ ತಲುಪಿಸಲಿ ಎಂದು ಚಿಂತಿಸುತ್ತಾ ತೊಳಲಾಡುತ್ತಿದ್ದ.

ಮಧ್ಯರಾತ್ರಿಯಾಗುತ್ತಿದ್ದಂತೆ ಸದ್ದಾಗದಂತೆ ಮೆಲ್ಲನೆ ಮನೆಯಿಂದ ಹೊರ ಬಂದ ಆ ದುಷ್ಟ ಮನುಷ್ಯ ಬೀದಿಗಿಳಿದು ನೇರವಾಗಿ ಉಬೈದ್'ನ ಅರಮನೆಯತ್ತ ಹೆಜ್ಜೆ ಹಾಕಲಾರಂಭಿಸಿದ...!

ಉಬೈದ್ ತಂಗಿರುವ "ದಾರುಲ್ ಇಮಾರ" ಸೌಧಕ್ಕೆ ತಲುಪುತ್ತಿದ್ದಂತೆ ಮೊದಲಿಗೆ ಆತನಿಗೆ ನುಅಮಾನ್ ಇಬ್ನು ಬಶೀರ್(ರ) ಎದುರಾದರು. ಆಗ ಅವರೊಂದಿಗೆ ಮುಸ್ಲಿಂ (ರ) ತನ್ನ ಮನೆಯಲ್ಲಿ ಆಶ್ರಯ ಪಡೆದಿರುವ ವಿಷಯ ತಿಳಿಸಿದಾಗ ಸರಿ ನೀನೀಗ ಹೇೂಗು. ಆಮೇಲೆ ಬೇಕಾದ ವ್ಯವಸ್ಥೆ ಮಾಡೇೂಣ ಎಂದರು.

ಆದರೆ ಇದರಿಂದ ತೃಪ್ತನಾಗದ ಆ ವ್ಯಕ್ತಿ ಸ್ವಲ್ಪ ದೂರ ಹೇೂಗಿ ಮತ್ತೆ ಹಿಂದಿರುಗಿ ಬಂದ. ಆಗ ಉಬೈದ್ ಒಬ್ಬನೇ "ದಾರುಲ್ ಇಮಾರ್" ಅರಮನೆಯ ಮುಂದೆ ಕುಳಿತಿದ್ದ. ಕೂಡಲೆ ಉಬೈದ್'ನನ್ನು ಭೇಟಿಯಾಗಿ ಸಂಗತಿ ತಿಳಿಸುತ್ತಿದ್ದಂತೆ ಮುಸ್ಲಿಂ (ರ)ರನ್ನು ಸೆರೆ ಹಿಡಿಯುವ ಸಲುವಾಗಿ ಉಬೈದ್ ತಕ್ಷಣ ನೂರಾ ಇಪ್ಪತ್ತು ಸೈನಿಕರನ್ನು ಆ ವ್ಯಕ್ತಿಯೊಂದಿಗೆ ಕಳುಹಿಸಿದ..!

ಮರುದಿನ ಬೆಳಿಗ್ಗೆ ಸುಬಹಿ ನಮಾಝ್'ಗಾಗಿ ವುಲೂಅ್ ಮಾಡಲೆಂದು ಹೊರಗಿಳಿದ ಮುಸ್ಲಿಂ (ರ) ರನ್ನು ಹೊರಗೆ ಜಮಾಯಿಸಿದ್ದ ಸೈನಿಕರು ಸುತ್ತುವರಿದರು.

ಅಪಾಯದ ಅರಿವಾದ ಮುಸ್ಲಿಂ (ರ) ತಕ್ಷಣ ಒರೆಯಿಂದ ತನ್ನ ಖಡ್ಗವನ್ನು ಎಳೆದರು.... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 2⃣1⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠

 ಶರಕ್(ರ)ರವರನ್ನು ಕಂಡ ಉಬೈದ್ ಕೇಳಿದ.. ⬇

ನಿನ್ನೆ ಸಭೆಯಲ್ಲಿ ನಾನಾಡಿದ ಮಾತುಗಳನ್ನು ನೀನು ಕೇಳಲಿಲ್ಲವೇ.? ಅಷ್ಟಕ್ಕೂ ನಿನಗೆ ಮರಣದ ಭಯವಿಲ್ಲವೇ.?

ಆಗ ಹಝ್ರತ್ ಶರಕ್(ರ)  ರವರು ಹೇಳಿದರು..

*ಪ್ರವಾದಿ ﷺ ರವರ ಕುಟುಂಬಕ್ಕೆ ವಾಸ್ತವ್ಯ ಕಲ್ಪಿಸಿ ಸಂರಕ್ಷಣೆ ನೀಡಿದ ಕಾರಣಕ್ಕೆ ಜೀವವನ್ನೇ ಬಲಿದಾನಗೈಯ್ಯಬೇಕಾದ ಅನಿವಾರ್ಯತೆ ಎದುರಾದರೆ ಸಂತೇೂಷದಿಂದ ಅದನ್ನು ನಾನು ಸ್ವೀಕರಿಸುತ್ತೇನೆಯೇ ಹೊರತು ನಿನ್ನಂಥವನ ಜೊತೆ ಕೈ ಜೇೂಡಿಸಿ ಅಹ್ಲ್'ಬೈತಿಗೆ ವಂಚನೆಯೆಸಗಲಾರೆ. ಹೆಚ್ಚೆಂದರೆ ನನ್ನನ್ನು ನೀನು ಕೊಲ್ಲಬಹುದು ಅದಕ್ಕಿಂತ ಹೆಚ್ಚಾಗಿ ನಿನ್ನಿಂದ ಏನು ತಾನೆ ಮಾಡಲು ಸಾಧ್ಯವಿದೆ..? ಆದರೆ ಮರಣಾನಂತರ  ಕೊನೆಯೆಂಬುದೇ ಇಲ್ಲದ ಸುವಿಶಾಲವಾದ ಮತ್ತೊಂದು ಬದುಕಿದೆ ಎಂಬುದು ನಿನಗೂ ನೆನಪಿರಲಿ ಎಂದರು.*

ಆಗ ಉಬೈದ್ ಹೇಳಿದ..
ನನಗೆ ನಿನ್ನ ಉಪದೇಶದ ಅವಶ್ಯಕತೆಯಿಲ್ಲ. ನೀನು ಹೇಳಿದಂತೆ ಅಷ್ಟು ಬೇಗನೆ ನಿನ್ನನ್ನು ನಾನು ಕೊಲ್ಲಲಾರೆ. ನಿನ್ನ ಮರಣವನ್ನು ಕಂಡು ಇಡೀ ಕೂಫವೇ ಕಂಪಿಸಬೇಕು. ಮತ್ತು ನಿನ್ನ ಮರಣದಿಂದ ಅವರೆಲ್ಲರೂ ಪಾಠ ಕಲಿಯಬೇಕು. ಅಷ್ಟು ಕ್ರೂರವಾಗಿ ನಿನ್ನನ್ನು  ಕೊಲ್ಲುತ್ತೇನೆ. ಅಷ್ಟರ ತನಕ ನೀನು ಜೈಲಿನಲ್ಲಿರು ಎನ್ನುತ್ತಾ ಶರಕ್(ರ)ರನ್ನು ಜೈಲಿಗೆ ತಳ್ಳಿದನು.

ಉಬೈದ್'ನ ಸೈನಿಕರು ಶರಕ್(ರ)ರನ್ನು ಸೆರೆ ಹಿಡಿದ ಬಗ್ಗೆ ಮುಸ್ಲಿಂ (ರ)ರವರು ಕೂಫದ ಜನತೆಯನ್ನು ಸಮೀಪಿಸಿ ನಡೆದ ವಿಷಯಗಳನ್ನು ವಿವರಿಸಿ ಸುಮಾರು ಐನೂರು ಜನರನ್ನು ಸಂಘಟಿಸಿ ಶರಕ್(ರ) ರವರ ಬಿಡುಗಡೆಗೆ ಒತ್ತಾಯಿಸುವ ಸಲುವಾಗಿ ಉಬೈದ್ ತಂಗಿರುವ "ದಾರುಲ್ ಇಮಾರ" ಅರಮನೆಯತ್ತ ಹೊರಟರು.

ಜನರನ್ನು ಯಾವ ರೀತಿ ಬೆದರಿಸಿದರೆ ಚದುರುತ್ತಾರೆಂಬ ಬಗ್ಗೆ ಚೆನ್ನಾಗಿ ಅರಿವಿದ್ದ ಉಬೈದ್'ನು ಕೂಫದ ಜನತೆ ಸಂಘಟಿತರಾಗಿ ಬರುತ್ತಿರುವ ವಿಷಯ ತಿಳಿದೊಡನೆ ಸೈನಿಕರೊಂದಿಗೆ ಹೇಳಿದನು..

ನೀವು ಬಿಲ್ಲು, ಬಾಣ ಮತ್ತು ಈಟಿಗಳೊಂದಿಗೆ 'ದಾರುಲ್ ಇಮಾರ್'ನ ಮೇಲೆ ನಿಂತು ದಾಳಿ ನಡೆಸಲು ಸನ್ನದ್ಧರಾಗಿರುವವರಂತೆ ಸಂಘಟಿತರಾಗಿ ಬರುತ್ತಿರುವ ಜನರಲ್ಲಿ ಭೀತಿ ಮೂಡಿಸಬೇಕು.
ಆದರೆ ಯಾರನ್ನೂ ವಧಿಸಬಾರದು. ಅವರಲ್ಲಿ ಭೀತಿ ಮೂಡಿಸಿದರೆ ಸಾಕು. ಎಂದನು.

ಮುಸ್ಲಿಂ (ರ) ರವರ ನೇತೃತ್ವದಲ್ಲಿ ಹೊರಟ ಐನೂರು ಜನರ ಗುಂಪು ದಾರುಲ್ ಇಮಾರ್'ನ ಅಂಗಳಕ್ಕೆ ತಲುಪುತ್ತಿದ್ದಂತೆ ಉಬೈದ್'ನ ಸೈನಿಕರು ಗೌಜು, ಗದ್ದಲವೆಬ್ಬಿಸುತ್ತಾ ಬಿಲ್ಲು ಬಾಣಗಳಿಂದ ದಾಳಿ ನಡೆಸಲು ಸಿದ್ಧರಾಗಿರುವವರಂತೆ ನಟಿಸಲಾರಂಭಿಸಿದರು.

ಇದನ್ನು ಕಂಡು ಭಯ ಭೀತರಾದ ಜನತೆ ಮುಸ್ಲಿಂ (ರ) ರವರನ್ನು ಅಲ್ಲೇ ಬಿಟ್ಟು ಹಿಂದಿರುಗಿ ಓಡಲಾರಂಭಿಸಿದರು.

ಸೈನಿಕರ ಹಾಹಾಕಾರ, ಗೌಜು ಮತ್ತು ಗದ್ದಲದಿಂದಾಗಿ ತಮ್ಮ ಹಿಂದೆ ಬರುತ್ತಿರುವ ಗುಂಪು ಹಿಂದಿರುಗಿ ಓಡಿದ ವಿಷಯ ಮುಸ್ಲಿಂ (ರ) ರವರ ಗಮನಕ್ಕೆ ಬರಲಿಲ್ಲ. ಹಾಗಾಗಿ ಮತ್ತಷ್ಟು ಮುಂದೆ ನಡೆದರು.

ಒಂಟಿಯಾಗಿ ಬರುತ್ತಿರುವ ಮುಸ್ಲಿಂ(ರ) ರವರನ್ನು ಕಂಡ ಉಬೈದ್, ಅಟ್ಟಹಾಸಗೈಯ್ಯುತ್ತಾ....

*"ಆ ಮಕ್ಕ ನಿವಾಸಿಯನ್ನು ಹಿಡಿಯಿರಿ" ಎಂದು ಆಜ್ಞಾಪಿಸಿದನು.*

ಮಹಾನರಾದ ಮುಸ್ಲಿಂ (ರ)ರವರನ್ನು ಸೆರೆ ಹಿಡಿಯಲೆಂದು ಉಬೈದ್'ನ ಸೈನಿಕ ಪಡೆ ಅತ್ತ ಧಾವಿಸಿದಾಗ
ಮುಸ್ಲಿಂ (ರ) ರವರು ನಿಂತಲ್ಲಿಂದಲೇ ಹಿಂದಿರುಗಿ ನೋಡಿದರು. ಆಗ ತಮ್ಮ ಹಿಂದಿದ್ದ ಜನತೆ ಹಿಂದಿರುಗಿ ಓಡುತ್ತಿರುವುದು ಕಾಣಿಸಿತು....

ಇದರಿಂದ ಕಂಗಾಲಾದ ಮುಸ್ಲಿಂ(ರ)ರವರಿಗೆ ತಾವೊಬ್ಬರೇ ಆ ಸೈನಿಕ ಪಡೆಯನ್ನು ಎದುರಿಸಲು ಸಾಧ್ಯವೂ ಇಲ್ಲ. ಮತ್ತು ತಾವು ಸೈನಿಕರ ಕೈಗೆ ಸಿಕ್ಕಿದರೆ ಶರಕ್(ರ)ರನ್ನು ಬಿಡಿಸಲು ಮತ್ತೆಂದೂ ಸಾಧ್ಯವಾಗದು ಹಾಗಾಗಿ ಸದ್ಯದ ಮಟ್ಟಿಗೆ ಸೈನಿಕರಿಂದ ತಪ್ಪಿಸಿಕೊಳ್ಳಲೇಬೇಕೆಂಬ ಉದ್ದೇಶದಿಂದ ಮುಸ್ಲಿಂ (ರ) ರವರೂ ಹಿಂದಿರುಗಿ ಓಡಲಾರಂಭಿಸಿದರು.

ಉಬೈದ್'ನ ಸೈನಿಕ ಪಡೆಯು ಅಷ್ಟಕ್ಕೆ ಸುಮ್ಮನಾಗದೆ ಮುಸ್ಲಿಂ(ರ)ರವರನ್ನು
ಬೆನ್ನಟ್ಟಲಾರಂಭಿಸಿತು.

ಬಹಳಷ್ಟು ದೂರ ಓಡಿದ ಮುಸ್ಲಿಂ(ರ)ರವರು, ದಾರಿ ಬದಲಿಸಿ ಗಿಡ ಮರಗಳಿಂದಾವೃತವಾದ ಓಣಿಯೊಂದರಲ್ಲಿ ನುಗ್ಗಿ ತಪ್ಪಿಸಿಕೊಂಡು ಮತ್ತಷ್ಟು ದೂರ ಓಡಿದಾಗ ದೂರದಲ್ಲಿ ಮನೆಯೊಂದು ಕಾಣಿಸಿತು.

ಸೈನಿಕರು ಬರುತ್ತಿಲ್ಲವೆಂಬುದನ್ನು ಮನವರಿಕೆ ಮಾಡಿಕೊಂಡು ಆ ಮನೆಯತ್ತ ಹೆಜ್ಜೆ ಹಾಕಿದ ಮುಸ್ಲಿಂ(ರ)ರವರು ಬಾಗಿಲು ತಟ್ಟಿದರು.

ಆಗ ಆ ಮನೆಯಲ್ಲಿದ್ದ ವೃದ್ಧೆಯಾದ ಮಹಿಳೆಯೊಬ್ಬರು ಕದ ತೆರೆದರು...

ಅಜ್ಜೀ.....

ನನಗೆ ಕುಡಿಯಲು ಸ್ವಲ್ಪ ನೀರು ಕೊಡುವಿರಾ...? ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 2⃣0⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠

 ಉಬೈದನು, ಶರಕ್ ಇಬ್ನು ಅವಾಅ(ರ)ರವರೊಂದಿಗೆ ಅನಾರೇೂಗ್ಯದ ಕುರಿತು ಮಾತನಾಡುತ್ತಿರುವಾಗ ತಕ್ಕ ಸಮಯ ನೇೂಡಿ ಶರಕ್(ರ)ರವರು
 *"ಸ್ವಲ್ಪ ನೀರು ತನ್ನಿ"* ಎಂದರು. ⬇

ಆದರೆ ಒಳಗಿನಿಂದ ಯಾವ ಸ್ಪಂದನೆಯೂ ಬರಲಿಲ್ಲ. ಸ್ವಲ್ಪ ಹೊತ್ತಿನ ನಂತರ ಮತ್ತೊಮ್ಮೆ

"ಹಾನಿಯಾ (ರ) ಸ್ವಲ್ಪ ನೀರು ತನ್ನಿ....!

ಇಲ್ಲ ಈಗಲೂ ಒಳಗಿನಿಂದ ಯಾವುದೇ ಉತ್ತರವಿಲ್ಲ..

ಸ್ವಲ್ಪ ಸಮಯದವರೆಗೆ ಉಬೈದ್ ಅಲ್ಲೇ ಕುಳಿತನು.
"ಒಳಗಡೆ ಯಾರು ಇಲ್ಲ ಎನಿಸುತ್ತದೆ. ಸರಿ ನಾನು ಹೊರಡುತ್ತೇನೆ" ಎನ್ನುತ್ತಾ ಹೊರಟು ಬಾಗಿಲ ತನಕ ಹೇೂದವನು, ಸಂಶಯದಿಂದ ಮತ್ತೆ ಹಿಂದಿರುಗಿ ಬಂದು ಶರಕ್(ರ)ರವರ ಮನೆಯೊಳಗೆ ಹೇೂಗಿ ಸುತ್ತಲೂ ಕಣ್ಣಾಡಿಸಿದ.

ಆಗ ಒಳ ಕೇೂಣೆಯಲ್ಲಿ ಕೂಫದ ಭಾಷೆಗಿಂತ ತುಸು ವ್ಯತ್ಯಾಸವಿರುವ ಭಾಷೆಯಲ್ಲಿ ಮಾತನಾಡುತ್ತಿರುವ ಎರಡು ಮಕ್ಕಳು ಮತ್ತು ಮುಸ್ಲಿಂ(ರ)ರವರನ್ನು ಕಂಡು ದುರುಗುಟ್ಟಿ ನೇೂಡುತ್ತಾ ಮುಸ್ಲಿಂ (ರ)ರವರ ಇರುವಿಕೆಯನ್ನು ಖಚಿತ ಪಡಿಸಿಕೊಂಡು ಅಲ್ಲಿಂದ ಹೊರಟು ಹೇೂದನು.

 (ಹಾನಿಯಾ(ರ) ಮತ್ತು ಶರಕ್(ರ)ರವರು ಕೂಫದ ಪ್ರಮುಖರಾಗಿದ್ದುದರಿಂದ ಶರಕ್(ರ)ರವರು ಅನಾರೇೂಗ್ಯಕ್ಕೀಡಾಗಿದ್ದಾರೆಂದು ತಿಳಿದ ಕೂಡಲೆ ಅವರನ್ನು ಕಾಣಲು ಉಬೈದ್ ಆಗಮಿಸಿದ್ದ. ಮಾತ್ರವಲ್ಲ ಶರಕ್(ರ) ರವರ ಮನೆಯಲ್ಲಿ ಮುಸ್ಲಿಂ(ರ) ವಾಸ್ತವ್ಯ ಹೂಡಿದ್ದಾರೆಂಬ ಮಾಹಿತಿಯೂ ಅವನಿಗೆ ತಲುಪಿತ್ತು. ಹಾಗಾಗಿಯೇ ಬಾಗಿಲ ತನಕ ಹೇೂಗಿದ್ದ ಉಬೈದ್ ಹಿಂದಿರುಗಿ ಬಂದು ಮನೆಯೊಳಗೆ ಹೇೂಗಿ ಪರಿಶೀಲಿಸಿದ್ದ)

ಉಬೈದ್ ಹೋದ ಕೂಡಲೇ ಶರಕ್(ರ)ರವರು ಹಾನಿಯಾ(ರ)ರವರೊಂದಿಗೆ "ಛೇ... ತಕ್ಕ ಸಮಯ ನೇೂಡಿ ನಾನು ಸೂಚನೆ ಕೊಟ್ಟರೂ ತಾವೇಕೆ ಬರಲಿಲ್ಲ? ಇಷ್ಟು ಒಳ್ಳೆಯ ಅವಕಾಶ ಮತ್ತೆ  ಲಭಿಸೀತೇ..?"

ಆಗ ಹಾನಿಯಾ (ರ) ರವರು ಉತ್ತರಿಸುವುದಕ್ಕಿಂತ ಮೊದಲೇ ಮುಸ್ಲಿಂ (ರ) ರವರು ಹೇಳಿದರು.

*ಶರಕ್ (ರ)ರವರೇ...!*
 *ನಾವು ಪ್ರವಾದಿ ﷺ ರವರ ವಂಶಸ್ಥರು ಎನ್ನುವುದಕ್ಕಿಂತಲೂ ಮಿಗಿಲಾಗಿ ಅಲ್ಲಾಹನ ಪ್ರತಿನಿಧಿಗಳು ಮತ್ತು ಅಲ್ಲಾಹನ ರಸೂಲ್ ﷺರ ಅನುಯಾಯಿಗಳಾಗಿದ್ದೇವೆ. ವಂಚನೆಯೆನ್ನುವುದು ಮಹಾ ಪಾಪ. ಅಲ್ಲದೆ ಎಂತಹ ಸಂದಿಗ್ಧ ಸನ್ನಿವೇಶದಲ್ಲೂ ಕೂಡ ವಂಚಿಸುವುದನ್ನು ಅಲ್ಲಾಹನ ಸಂದೇಶವಾಹಕರಾದ ನೆಬಿ ﷺ ರವರು ನಮಗೆ ಕಲಿಸಲಿಲ್ಲ. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ, ನಾನು ನಿಮ್ಮ ಅತಿಥಿ. ಅತಿಥಿಯಾಗಿರುವ ನಾನು ನಿಮ್ಮ ಮನೆಗೆ ಆಗಮಿಸಿದ ಮತ್ತೊಬ್ಬ ಅತಿಥಿಯನ್ನು ವಧಿಸುವುದು ದ್ರೇೂಹವಲ್ಲವೇ? ಮಾತ್ರವಲ್ಲ ಇಸ್ಲಾಮಿನ ಆಶಯಕ್ಕೂ ಇದು ವಿರುದ್ಧ. ಯುದ್ಧ ರಂಗದಲ್ಲಿ ಮಾತ್ರ ಶತ್ರುವಿನ ವಿರುದ್ಧ ಹೋರಾಡಬಹುದೆಂದು ಕಲಿಸಿದ ಇಸ್ಲಾಮಿನ ವಕ್ತಾರರಲ್ಲವೇ ನಾವು..?*

ಮುಸ್ಲಿಂ(ರ)ರವರ ಮಾತು ಕೇಳಿದ ಶರಕ್ (ರ) ರವರಿಗೆ ಆಗ ಅಥಿತಿಗಳೊಂದಿಗೆ ಹೇಗಿರಬೇಕೆಂಬುದರ ಬಗ್ಗೆ ಇಸ್ಲಾಮಿನ ಸಂದೇಶದ ಆಳ ಮನವರಿಕೆಯಾಯಿತು.

_ಒಂದು ವಿಷಯವನ್ನಿಲ್ಲಿ ಸಾಂದರ್ಭಿಕವಾಗಿ ಮಾನ್ಯ ಓದುಗರ ಗಮನಕ್ಕೆ ತರಲಿಚ್ಚಿಸುತ್ತೇನೆ..!_

*("ಇಸ್ಲಾಮಿಕ ಯುದ್ಧಗಳಲ್ಲಿ ದೀನಿನ ಸಂರಕ್ಷಣೆಯ ಏಕ ಉದ್ದೇಶದಿಂದಲ್ಲದೆ, ವಯಕ್ತಿಕ ಧ್ವೇಷದಿಂದ ಯಾರೊಂದಿಗೂ ಸೇಡು ತೀರಿಸಲು ಅವಕಾಶವಿಲ್ಲ. ಆ ಕಾರಣದಿಂದಲೇ ತಮಗೆ ವಿಷ ಉಣಿಸಿದ ಜಅದ(ರ)ರೊಂದಿಗಾಗಲಿ ಅಥವಾ  ಮತ್ಯಾರೊಂದಿಗೇ ಆಗಲಿ ಸೇಡು ತೀರಿಸಬಾರದೆಂದು ಹಸನ್ (ರ) ರವರು ಮರಣಾಸನ್ನ ವೇಳೆಯಲ್ಲಿ ಹುಸೈನ್(ರ)ರೊಂದಿಗೆ ವಸೀಯ್ಯತ್ ಮಾಡಿದರೆನ್ನುವುದು ಗಮನಾರ್ಹ.")*

ಮರುದಿನ ಫಜರ್'ಗೆ ಮುಂಚಿತವಾಗಿಯೇ ಉಬೈದ್'ನ ಆದೇಶದಂತೆ ಎಂಬತ್ತು ಸೈನಿಕರು ಹಝ್ರತ್ ಶರಕ್ (ರ) ರವರ ಮನೆಯನ್ನು ಸುತ್ತುವರಿದಿದ್ದರು.

ಫಜರ್ ನಮಾಝ್'ಗೆ ಮಸೀದಿಗೆ ಹೇೂಗಲೆಂದು ಹೊರಗಿಳಿದ ಶರಕ್(ರ) ರತ್ತ ಸೈನಿಕರು ಧಾವಿಸಿದಾಗ ಪರಿಸ್ಥಿತಿಯ ಗಂಭೀರತೆಯನ್ನರಿತು ಖಡ್ಗಕ್ಕಾಗಿ ಮನೆಯೊಳಗೆ ಓಡಲೆತ್ನಿಸಿದ ಶರಕ್(ರ)ರವರು ಎಡವಿ ಬಿದ್ದರು. ತಕ್ಷಣ ಅವರನ್ನು ಸೆರೆ ಹಿಡಿದ ಸೈನಿಕರು ಕರೆದೊಯ್ದು ಉಬೈದ್'ನ ಮುಂದೆ ಹಾಜರು ಪಡಿಸಿದರು.

ಶರಕ್(ರ)ರವರನ್ನು ಕಂಡ ಉಬೈದ್ ಕೇಳಿದ.. ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 1⃣9⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠

ಸಭೆ ಮುಗಿಯಿತು. ⬇

ಜನರೆಲ್ಲರೂ ಅಲ್ಲಿಂದ ನಿರ್ಗಮಿಸಿದರು. 

*ಮುಸ್ಲಿಂ (ರ) ಮಕ್ಕಳೊಂದಿಗೆ ಹಾನಿಯಾ(ರ) ಮತ್ತು ಶರಕ್ ಇಬ್ನು ಅವಾಅ (ರ) ರೊಂದಿಗೆ ಕುಳಿತು ಊಟ ಮಾಡುತ್ತಿರುವಾಗ ಹಾನಿಯಾ (ರ) ರವರು ಮುಸ್ಲಿಂ (ರ) ರವರೊಂದಿಗೆ ಹೇಳಿದರು. ಸದ್ಯದ ಪರಿಸ್ಥಿತಿ ತಲೆ ಕೆಳಗಾಗಿದೆ. ಈಗ ಇಲ್ಲಿನ ಆಡಳಿತದ ಚುಕ್ಕಾಣಿ ನುಅಮಾನ್ ಇಬ್ನು ಬಶೀರ್ (ರ) ರವರ ಕೈಯಲಿಲ್ಲ. ಬದಲಾಗಿ ಯಝೀದ್'ನ ಬಂಟನಾದ ಉಬೈದ್ ಬಸರದಿಂದ ಆಗಮಿಸಿ ಯಝೀದ್'ನ ಅಣತಿಯಂತೆ ಕೂಫದ ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾನೆ. ಅವನು ಇಂದಿನ ಸಭೆಯಲ್ಲಿ ಮುಸ್ಲಿಂ (ರ) ರವರಿಗೆ ವಾಸಿಸಲು ಸೌಕರ್ಯ ಕಲ್ಪಿಸುವವರ ತಲೆ ಹಾರಿಸುತ್ತೇನೆಂದು ಹೇಳುತ್ತಾ ಒಬ್ಬ ಬಡ ಯುವಕನ ತಲೆ ಕಡಿದು ಆ ತಲೆಯನ್ನು ತನ್ನ ಖಡ್ಗದಿಂದ ಚುಚ್ಚಿ ಎತ್ತಿ ಹಿಡಿದು ಜನರಿಗೆ ತೋರಿಸುತ್ತಾ ಎಚ್ಚರಿಕೆ ಕೊಟ್ಟಿದ್ದಾನೆ ಎಂದರು.*

ಆಗ ಮುಸ್ಲಿಂ (ರ) ಹೇಳಿದರು..

ಹೌದೇ...?

ತಮಗೆ ಈ ಬಗ್ಗೆ ಭಯವಿದ್ದರೆ ಹೇಳಿ ಮಕ್ಕಳೊಂದಿಗೆ ನಾನು ಇಲ್ಲಿಂದ ಬೇರೆ ಕಡೆ ಹೇೂಗುತ್ತೆನೆ..

ಇಲ್ಲ. ಖಂಡಿತಾ ನನಗೇನೂ ಭಯವಿಲ್ಲ. ಇಲ್ಲಿನ ಪರಿಸ್ಥಿತಿಯನ್ನು ತಮ್ಮ ಗಮನಕ್ಕೆ ತಂದೆ ಅಷ್ಟೇ....

*ಅಲ್ಲಾಹನ ರಸೂಲ್ ﷺ ರವರ ಕುಟುಂಬಕ್ಕೆ ಆಶ್ರಯ ನೀಡಿದ ಕಾರಣಕ್ಕೆ ಪ್ರಾಣವನ್ನೇ ತ್ಯಾಗ ಮಾಡಬೇಕಾಗಿ ಬಂದರೂ ನಾನದನ್ನು ಸಂತೇೂಷದಿಂದಲೇ ಸ್ವೀಕರಿಸುತ್ತೇನೆ. ಏಕೆಂದರೆ ಬಹು ಬೇಗನೆ ರಸೂಲ್ ﷺ ರವರ ಬಳಿ ತೆರಳಬಹುದಲ್ಲವೇ..? ಎಂದರು ಮುಗುಳ್ನಗುತ್ತಾ....*

_ಪ್ರಿಯ ಓದುಗರೇ..,_
 ಇಲ್ಲಿ ನಾವು ಪ್ರತ್ಯೇಕವಾಗಿ ಗಮನಿಸಬೇಕಾದ ಒಂದು ಹದೀಸ್ ನೋಡಿ..

عن أبي موسى قال قال رسول الله صلى الله عليه وسلم أمتي هذه أمة مرحومة ليس عليها عذاب في الآخرة عذابها في الدنيا الفتن والزلازل والقتل

ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು,

*("ನನ್ನ ಸಮುದಾಯವು ಕಾರುಣ್ಯತೆಯಿಂದ ಕೂಡಿದ ಸಮೂಹವಾಗಿದೆ. ಈ ಲೇೂಕದಿಂದ ಅವರು ದುರ್ಜನರ ದೌರ್ಜನ್ಯಕ್ಕೀಡಾಗಿಯೇೂ ಅಥವಾ ಪ್ರಕೃತಿ ವಿಕೇೂಪದಿಂದಲೇೂ ದುರ್ಮರಣ ಹೊಂದಿದರೆ ಅಂಥವರನ್ನು ನಾಳೆ ಪರಲೇೂಕದಲ್ಲಿ ಅಲ್ಲಾಹನು ಶಿಕ್ಷಿಸಲಾರ")*
(ವರದಿ: ಅಬೂದಾವೂದ್)

_ಇಂದು ಎಲ್ಲೆಲ್ಲೂ ಅತ್ಯಾಚಾರ, ಪೀಡನೆ, ಪ್ರಾಣಿಗಳ ಹೆಸರಿನಲ್ಲಿ ಕೊಲೆ ಮತ್ತು ಮುಸ್ಲಿಮರಾದ ಕಾರಣದಿಂದ ದೌರ್ಜನ್ಯ, ಹತ್ಯೆ ಮತ್ತು ಸುಲಿಗೆಗಳು ಎಗ್ಗಿಲ್ಲದೆ ತಾಂಡವಾಡುತ್ತಿರುವ ಈ ಕಾಲಘಟ್ಟದಲ್ಲಿ ವರದಿಯಾದ ಮೇಲಿನ ಹದೀಸ್ ಗಮನಾರ್ಹ._

*(ಅಂದರೆ ಯಾವುದೇ ಸಮಯ ಅಥವಾ ಸಂದರ್ಭದಲ್ಲಿ ನಮಗೇನಾದರೂ ಅವಘಡ ಸಂಭವಿಸಿದರೆ ಅಸಹನೆಯಿಂದ ಧೃತಿಗೆಟ್ಟು ವಿಚಲಿತರಾಗಿ ಅಲ್ಲಾಹನ ವಿಧಿಯನ್ನು ದೂಷಿಸದೆ ಕರುಣಾಳುವಾದ ಅಲ್ಲಾಹನಿಂದ ದೊರೆಯಲಿರುವ ಅಪಾರವಾದ ಪ್ರತಿಫಲದ ನಿರೀಕ್ಷೆಯಲ್ಲಿ ಸಹನೆ ಮತ್ತು ತಾಳ್ಮೆಯಿಂದ ಸಹಿಸಿದರೆ ಇಹವಷ್ಟೇ ಅಲ್ಲ ಪರಲೇೂಕ ವಿಜಯವೂ ನಿಶ್ಚಿತ.)*

ಹಾಗಾಗಿ  ಅವಘಡ ಸಂಭವಿಸಿದಾಗ..

 *إنا لله وإنا إليه راجعون*

*ಎನ್ನುತ್ತಾ..*
*(ಅಲ್ಲಾಹನ ವಿಧಿಯಲ್ಲಿ  ವಿಶ್ವಾಸವನ್ನರ್ಪಿಸಿ "ನಾವೆಲ್ಲರೂ ಅಲ್ಲಾಹನಿಂದ ಮತ್ತು ಅಲ್ಲಾಹನಿಗಾಗಿ ಇರುವವರು. ಮತ್ತು ಒಂದಲ್ಲ ಒಂದು ದಿನ ಅವನ ಬಳಿಗೆ ಮರಳಬೇಕಾದವರು"*
*ಎಂಬ ಪರಿಜ್ಞಾನದಿಂದ ಮೇಲಿನ ವಚನವನ್ನು ಮರೆಯದೆ ಜೀವನ ಪರ್ಯಂತ ನೆನಪಿನಲ್ಲಿಟ್ಟುಕೊಳ್ಳಬೇಕು)*
*********************

ಹಾನಿಯಾ (ರ) ರವರ ಮಾತನ್ನು ಕೇಳಿದ ಶರಕ್ ಇಬ್ನು ಅವಾಅ (ರ)
ತುಸು ಹೊತ್ತು ಯೇೂಚಿಸಿ ನಂತರ ಹೇಳಿದರು...

"ಉಬೈದ್'ನನ್ನೇ ಕೊಂದರೆ ಎಲ್ಲ ಸಮಸ್ಯೆಗಳೂ ಪರಿಹಾರವಾದೀತು ಅಲ್ಲವೇ..!"

ಅದು ಹೇಗೆ..?
ಅವನನ್ನು ಕೊಲ್ಲಲು ನಮ್ಮಿಂದ ಸಾಧ್ಯವೇ?  ಎಂದು ಕೇಳಿದರು ಹಾನಿಯಾ(ರ)..

ಆಗ ಶರಕ್ ಇಬ್ನು ಅವಾಅ(ರ). ಹೇಳಿದರು, ನಾವು ಒಂದು ಕೆಲಸ ಮಾಡೇೂಣ.

ನಾಳೆ ನಾನು ಜ್ವರದಿಂದ ಬಳಲುತ್ತಿದ್ದೇನೆಂದು ಉಬೈದ್'ನಿಗೆ ತಿಳಿಸಿದರೆ ಖಂಡಿತವಾಗಿಯೂ ಅವನು ನನ್ನನ್ನು ಭೇಟಿಯಾಗಲೆಂದು ಇಲ್ಲಿಗೆ ಬರುವನು.

ಆಗ ನೀವಿಬ್ಬರೂ ಖಡ್ಗದೊಂದಿಗೆ ಮರೆಯಲ್ಲಿ ಅಡಗಿ ಕುಳಿತುಕೊಳ್ಳಿ. ಹಾಗೆ ಅವನು ನನ್ನೊಂದಿಗೆ ಮಾತನಾಡುತ್ತಿರುವಾಗ ತಕ್ಕ ಸಮಯ ನೇೂಡಿ ನಾನು *ಸ್ವಲ್ಪ ನೀರು ತನ್ನಿ..* ಎನ್ನುತ್ತೇನೆ.

ಆಗ ನೀವಿಬ್ಬರೂ ಧಾವಿಸಿ ಅವನ ಮೇಲೆರಗಿ ಅವನ ಕತೆ ಮುಗಿಸಬೇಕು. ಅವನನ್ನು ಕೊಂದರೆ ಮತ್ತೆ ಸದ್ಯದ ಮಟ್ಟಿಗೆ ಯಾರಿಗೂ ಭಯ ಪಡಬೇಕಿಲ್ಲ.
ಶರಕ್ ಇಬ್ನು ಅವಾಅ (ರ) ರವರ ಮಾತಿಗೆ ಹಾನಿಯಾ (ರ) ಸಮ್ಮತಿಸಿದರು.

ಹೀಗೆ ಮರುದಿನ ಶರಕ್ ಇಬ್ನು ಅವಾಅ (ರ) ರವರು ಜ್ವರದಿಂದ ಬಳಲುತ್ತಿದ್ದಾರೆಂದು
ಉಬೈದ್'ನಿಗೆ ಸುದ್ದಿ ತಲುಪಿಸಲಾಯಿತು. ಆಗ
ಉಬೈದ್ ಒಬ್ಬನೇ ಬಂದನು..

ಶರಕ್ (ರ)ರೊಂದಿಗೆ ಉಬೈದ್ ಅನಾರೇೂಗ್ಯದ ಕುರಿತು ಮಾತನಾಡುತ್ತಿರುವಾಗ, ಶರಕ್ (ರ) ತಕ್ಕ ಸಮಯ ನೇೂಡಿ ಸ್ವಲ್ಪ *ನೀರು ತನ್ನಿ* ಎಂದರು ಜೇೂರಾಗಿ.. ⤵

*ಮುಂದುವರಿಯುವುದು..*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 1⃣8⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠

 ಕೂಫದ ಜನತೆ *ಹುಸೈನ್(ರ)ರವರ* ಆಗಮನವನ್ನು ಕಾತರದಿಂದ ಕಾಯುತ್ತಿದ್ದಾಗ ಗುಂಪಿನಲ್ಲಿದ್ದವನೊಬ್ಬ

 ಅದೇೂ...
ಅಲ್ಲಿ ನೇೂಡಿ..
ಆ ಕಪ್ಪು ಕುದುರೆಯ ಮೇಲೇರಿ *ಹುಸೈನ್(ರ)* ಬರುತ್ತಿದ್ದಾರೆ ಎಂದಾಗ....

ಅಲ್ಲಿ ನೆರೆದಿದ್ದ ಜನರೆಲ್ಲರೂ ಒಮ್ಮೆಲೆ ಅತ್ತ ದಿಟ್ಟಿಸಿದರು.

ಆತ ಹೇಳಿದಂತೆ ದೂರದಿಂದ ಒಂದು ಕಪ್ಪು ಕುದುರೆ ಇವರತ್ತಲೇ ಬರುತ್ತಿತ್ತು. ಆ ಕುದುರೆಯ ಮೇಲೊಬ್ಬ ಸವಾರನೂ ಇದ್ದ.

ಇದನ್ನು ಕಂಡು ಹರ್ಷಿತರಾದ ಜನತೆ
ಆ ಕಪ್ಪು ಕುದುರೆಯ ಮೇಲೆ ಬರುತ್ತಿರುವುದು ಹುಸೈನ್ (ರ) ಎಂದು ಭಾವಿಸಿ ಪದ್ಯ ಹಾಡುತ್ತಾ ಸಂತೇೂಷದಿಂದ ಕುಣಿದು ಕುಪ್ಪಳಿಸುತ್ತಾ ಅತ್ತ ಕಡೆ  ಧಾವಿಸಿದರು.

ಆದರೆ ಆ ಕಪ್ಪು ಕುದುರೆ ಅವರ ಸಮೀಪಕ್ಕೆ ತಲುಪಿದಾಗ ಅವರಿಗೆ ನಿರಾಸೆ ಕಾದಿತ್ತು. ಕಾರಣ ಆ ಕಪ್ಪು ಕುದುರೆಯ ಮೇಲೆ ಬಂದ ವ್ಯಕ್ತಿ *ಹುಸೈನ್(ರ) ಆಗಿರದೆ ಯಝೀದ್'ನ ಅಣತಿಯಂತೆ ಬಂದ ಉಬೈದ್ ಇಬ್ನು ಝಿಯಾದ್* ಆಗಿದ್ದನು.

ಜನತೆಯ ಹಾಡು ಕುಣಿತ ಮತ್ತು ಘೇೂಷವಾಕ್ಯಗಳನ್ನು ಗಮನಿಸಿದ ಉಬೈದ್ ಆ ಜನತೆಯನ್ನೊಮ್ಮೆ ದಿಟ್ಟಿಸಿ ನೇೂಡಿ ಏನೇೂ ಮನವರಿಕೆಯಾದವನಂತೆ ಮರು ಮಾತನಾಡದೆ ನೇರವಾಗಿ *ನುಅಮಾನ್ ಬಿನ್ ಬಶೀರ್ (ರ)* ಅರಮನೆಗೆ ಹೇೂದ.

*ಇತ್ತ ನುಅಮಾನ್ ಬಿನ್ ಬಶೀರ್(ರ) ರವರಿಗಂತೂ ಇದು ನುಂಗಲಾರದ ತುತ್ತಾಗಿತ್ತು. ಕಾರಣ ಒಂದೆಡೆ ಮುತ್ತು ರಸೂಲ್ ﷺ ರವರ ಕುಟುಂಬವಾದರೆ ಮತ್ತೊಂದೆಡೆ ದುಷ್ಟನಾದ ಯಝೀದ್, ಹಾಗಾಗಿ ಈ ಸಂದಿಗ್ಧ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದೆಂದು ತಿಳಿಯದೆ ಅರಮನೆಯ ಕೇೂಣೆಯೊಂದರೊಳಗೆ ಬಾಗಿಲು ಮುಚ್ಚಿ ಕುಳಿತು ಚಿಂತಿಸುತ್ತಿರುವಾಗ..*

ಅಲ್ಲಿಗೆ ತಲುಪಿದ ಉಬೈದ್ ಕದ ಬಡಿಯುತ್ತಾ..

ಬಶೀರ್.... ಬಶೀರ್..

 ನಾನು ಉಬೈದ್ ಇಬ್ನು ಝಿಯಾದ್ ಬಾಗಿಲು ತೆರೆ ಎಂದನು....!

ಕದ ತೆರೆದ *ನುಅಮಾನ್ ಬಿನ್ ಬಷಿರ್ (ರ)* ಒಲ್ಲದ ಮನಸ್ಸಿನಿಂದಲೇ ಉಬೈದ್'ನನ್ನು ಸ್ವಾಗತಿಸಿ ಒಳಗೆ ಕರೆದೊಯ್ದರು.

ಕ್ಷೇಮ ಸಮಾಚಾರ ವಿಚಾರಿಸಿದ ನಂತರ ಉಬೈದ್ ಹೇಳಿದ..

 ಯಝೀದ್'ನ ವಿರುದ್ಧ ಕ್ರಾಂತಿಗೆ ಸಂಘಟಿತರಾಗುತ್ತಿರುವ ಕೂಫದ ಜನತೆಯನ್ನು ಹತ್ತಿಕ್ಕಲು ನಿನ್ನಿಂದ ಸಾಧ್ಯವಿಲ್ಲ. ಆದ್ದರಿಂದ ಪರಿಸ್ಥಿತಿಯನ್ನು ಹತೇೂಟಿಗೆ ತರುವ ಸಲುವಾಗಿ ಇಲ್ಲಿಯ ಉಸ್ತುವಾರಿಯನ್ನು ಯಝೀದ್ ನನಗೆ  ವಹಿಸಿದ್ದಾನೆ. ನೀನೇನೂ ಮಾಡಬೇಕಿಲ್ಲ ನನಗೆ ಬೆಂಬಲ ನೀಡಿ ಸಹಕರಿಸಿದರಷ್ಟೇ ಸಾಕು. ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರಲಾರದೆಂದು ಎಚ್ಚರಿಸುತ್ತಾ...

ಖಲೀಫನಾದ ಯಝೀದ್ ಉಬೈದ್'ನಿಗೆ ಬರೆದಿದ್ದ ಪತ್ರವನ್ನು ನುಅ್'ಮಾನ್ ಇಬ್ನು ಬಶೀರ್ (ರ)ರಿಗೆ ಕೊಟ್ಟು...

ನಾನು ಕೂಫಕ್ಕೆ ಕಾಲಿಡುತ್ತಿದ್ದಂತೆ ನನ್ನನ್ನು ಕಂಡ ಜನತೆ ಹುಸೈನ್ (ರ) ಎಂದು ಭಾವಿಸಿ ಹಾಡುತ್ತಾ ಕುಣಿದು ಕುಪ್ಪಳಿಸುತ್ತಿದುದನ್ನು ಗಮನಿಸಿದೆ. ಹಾಗೆ ನೇೂಡಿದರೆ ಹುಸೈನ್ (ರ)ರಿಗೆ ಇಲ್ಲಿನ ಜನತೆಯ ಸಂಪೂರ್ಣ ಬೆಂಬಲವಿದೆ. ಹಾಗಾಗಿ ಜನರಿಗೆ ಎಚ್ಚರಿಕೆ ಕೊಟ್ಟು ಅವರ ಬೆಂಬಲಕ್ಕೆ ನಿಲ್ಲದಂತೆ ಮಾಡಬೇಕಿದೆ. ಆದ್ದರಿಂದ "ನಾಳೆ ನೀನೊಂದು ಸಾರ್ವಜನಿಕ ಸಭೆ ಕರೆದು ಕೂಫದ ಜನತೆಯನ್ನು ಆ ಸಭೆಗೆ ಆಹ್ವಾನಿಸಬೇಕು" ಎಂದನು.

ಉಬೈದ್ ಕೊಟ್ಟ ಪತ್ರವನ್ನು ಓದಿದ ನುಅಮಾನ್ ಬಿನ್ ಬಶೀರ್ (ರ)ರವರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಉಬೈದ್'ನ ಅಣತಿಯಂತೆ ವಿಧಿಯಿಲ್ಲದೆ ಮರುದಿನ ಒಂದು ಸಾರ್ವಜನಿಕ ಸಭೆ ಕರೆದರು.

ಕೂಫದ ಜನತೆಯೆಲ್ಲರೂ ಆ ಸಭೆಯಲ್ಲಿ ಭಾಗವಹಿಸಬೇಕೆಂಬ ಕಟ್ಟಾಜ್ಞೆಯಿದ್ದುದರಿಂದ ಜನರೆಲ್ಲರೂ ಆ ಸಭೆಗೆ ಹಾಜರಾದರು.

ಕಿಕ್ಕಿರಿದ ಸಭೆಯ ಆರಂಭದಲ್ಲೇ ಎದ್ದು ನಿಂತ ಉಬೈದುಲ್ಲ ಮಾತು ಆರಂಭಿಸಿದ..

*ಆಗ ಸಭೆಯಲ್ಲಿದ್ದ ಯುವಕನೊಬ್ಬ ಎದ್ದು ನಿಂತು.. ಮೊದಲಿಗೆ ಸಭೆಯನ್ನುದ್ದೇಶಿಸಿ ಮಾತನಾಡಬೇಕಾದವರು ನಮ್ಮ ಗವರ್ನರ್ ಆಗಿರುವ ನುಅಮಾನ್ ಬಿನ್ ಬಶೀರ್ (ರ)ರವರೇ ಹೊರತು ತಾವಲ್ಲ ಎಂದನು.*

ಯುವಕನ ಮಾತು ಕೇಳಿ ಕೇೂಪಗೊಂಡ ಉಬೈದ್ ಕೇೂಪವನ್ನು ತೇೂರ್ಪಡಿಸದೆ ಆ ಯುವಕನನ್ನು ವೇದಿಕೆಗೆ ಬರುವಂತೆ ಸೂಚಿಸಿದನು..

ಆಗ ಉಬೈದ್'ನ ಸ್ವಭಾವವನ್ನು ಬಲ್ಲ ವೃದ್ಧರೊಬ್ಬರು ತಕ್ಷಣ ಹೇಳಿದರು.

ಬೇಡ.. ಉಬೈದ್.. ಬೇಡಾ..!

ಅಷ್ಟರಲ್ಲಿ ಆ ಯುವಕ ವೇದಿಕೆಯೇರಿ ಉಬೈದ್'ನ ಮುಂದೆ ನಿಂತಿದ್ದನು. ತನ್ನ ಮಾತನ್ನು ಆಕ್ಷೇಪಿಸಿದ ಆ ಯುವಕನೊಂದಿಗೆ ಉಬೈದ್ ಹೇಳಿದನು.

 "ನಿನ್ನನ್ನು ನಾನು ನೋಡಿದೆ. ಆದರೆ ಈ ಸಭೆಯಲ್ಲಿ ನೆರೆದಿರುವ ಜನರಿಗೆ ನಿನ್ನನ್ನು ಸರಿಯಾಗಿ ಕಾಣಿಸುತ್ತಿಲ್ಲ. ಅದರಿಂದ ನೀನು ಸಭಿಕರ ಕಡೆ ಮುಖ ಮಾಡಿ ನಿಲ್ಲು"
ಯುವಕ ಸಭಿಕರತ್ತ ತಿರುಗಿ ನಿಲ್ಲತ್ತಿದ್ದಂತೆ ಉಬೈದ್ ಜನರೊಂದಿಗೆ ಕೇಳಿದನು..

 ಈ ಸಭೆಯಲ್ಲಿ ನೆರೆದಿರುವ ಜನತೆಗೆ ಮತ್ತು ಈ ಯುವಕನಿಗೆ ನಾನು ಯಾರೆಂದು ತಿಳಿದಿಲ್ಲ. ಹಾಗಾಗಿ ನನ್ನ ಕುರಿತು ನಿಮಗೆ ತಿಳಿಯಬೇಡವೇ..?
ಎನ್ನುತ್ತಾ..

*ತನ್ನ ಖಡ್ಗವನ್ನು ಒರೆಯಿಂದ ಎಳೆದು ಯುವಕನ ಕುತ್ತಿಗೆಗೆ ಒಂದೇ ಇರಿತ..!!*

*ಇದನ್ನು ಊಹಿಸಿರದ ಆ ಯುವಕ ಈ ಅನಿರೀಕ್ಷಿತ ಆಕ್ರಮಣದಿಂದ ಕುಸಿದು ಬಿದ್ದು ವಿಲವಿಲನೆ ಒದ್ದಾಡಿ ನಿಶ್ಚಲನಾದ.*

ಈ ಘಟನೆಯನ್ನು ಕಂಡು ಇಡೀ ಸಭೆಯೇ ಬೆಚ್ಚಿ ಬಿತ್ತು. ನಂತರ ಉಬೈದ್ ಯುವಕನ ರುಂಡವನ್ನು ಖಡ್ಗದಲ್ಲಿ ಚುಚ್ಚಿ ಎತ್ತಿ ಹಿಡಿದು ಸಭಿಕರನ್ನುದ್ದೇಶಿಸಿ ಹೇಳಿದ...

ಓ.. ಜನರೇ..!

*ಹುಸೈನ್ ಇಬ್ನು ಅಲಿ (ರ) ರವರ ಪ್ರತಿನಿಧಿಯಾದ ಮುಸ್ಲಿಂ (ರ) ಇಲ್ಲಿಗೆ ತಲುಪಿದ್ದಾರೆ ಎನ್ನುವುದು ನನಗೆ ತಿಳಿದಿದೆ.*
*ನಿಮ್ಮಲ್ಲಿ ಯಾರಾದರೂ ಅವರಿಗೆ ಅಭಯ ಕೊಟ್ಟು ವಾಸ್ತವ್ಯ ಕಲ್ಪಿಸಿದರೆ ನಿಮಗೂ ಇದೇ ಗತಿ ಬರಲಿದೆ.*
*ಅದರಿಂದ ಜಾಗರೂಕರಾಗಿರಿ..  ಎಂದನು*

ಮುಸ್ಲಿಂ (ರ) ಮತ್ತು ಅವರ ಮಕ್ಕಳಿಗೆ ವಾಸ್ತವ್ಯ ಕಲ್ಪಿಸಿದ್ದ *ಹಾನಿಅ (ರ)* ರವರೂ ಆ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆ ಮುಕ್ತಾಯವಾಗಿತ್ತು. ⤵

*ಮುಂದುವರಿಯುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 1⃣7⃣

**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠

 *ಮುಸ್ಲಿಂ(ರ)ರವರ ವಿರುದ್ಧ ಕ್ರಮ ಜರುಗಿಸಲು ನುಅಮಾನ್ ಇಬ್ನು ಬಶೀರ್(ರ)* ಒಪ್ಪದಿದ್ದಾಗ ಅಲ್ಲಿಂದ ಹಿಂದಿರುಗಿದ *ಯಝೀದನ* ಬೆಂಬಲಿಗರು ಮತ್ತೊಂದು ಮಸಲತ್ತು ರೂಪಿಸಿದರು. ⬇

*ಯಝೀದ್'ನನ್ನು* ಬೆಂಬಲಿಸುವವರೆಲ್ಲರೂ ಒಂದುಗೂಡಿ ಅರೇಬಿಯದ ಅಂದಿನ ರಾಜಧಾನಿಯಾಗಿದ್ದ *ಶಾಮ್* (ಈಗಿನ ಡಮಾಸ್ಕಸ್)ಗೆ ತೆರಳಿ
*ಯಝೀದ್'ನನ್ನು* ಭೇಟಿಯಾಗಿ ಹೇಳಿದರು, ನಾವು ಕೂಫದ ನಿವಾಸಿಗಳಾಗಿದ್ದೇವೆ..

 ತಮ್ಮ ಆಡಳಿತವನ್ನು ಕೊನೆಗಾಣಿಸಲು ಸಂಚು ನಡೆಯುತ್ತಿರುವುದು ತಮ್ಮ ಗಮನಕ್ಕೆ ಬಂದಿರಬಹುದೆಂದು ಭಾವಿಸುತ್ತೇವೆ.
ಹಾಗಾಗಿ ತಕ್ಷಣವೇ ಏನಾದರೂ ಕ್ರಮ ಕೈಗೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು *ಯಝೀದ್'ನ* ಕಿವಿಯೂದಿದರು.

 ಇದನ್ನು ಕೇಳಿ ದಿಗ್ಭ್ರಾಂತನಾದ ಯಝೀದ್ ಕೇಳಿದನು

 *ಅಂಥದ್ದೇನಾಗಿದೆ ಈಗ?*

 *ಯಝೀದನ* ಮುಖದಲ್ಲಾದ ಬದಲಾವಣೆಯನ್ನು ಗಮನಿಸಿದ ಗುಂಪಿನ ನಾಯಕ ಹೇಳಿದ...

*ಮಕ್ಕದಿಂದ ಹುಸೈನ್ (ರ) ರವರು ಮುಸ್ಲಿಂ (ರ)* ಎಂಬ ವ್ಯಕ್ತಿಯೊಬ್ಬರನ್ನು ಈಗಾಗಲೇ ಕಳುಹಿಸಿದ್ದು, ಅವರು ಕೂಫದಲ್ಲಿ ತಮ್ಮ ಆಡಳಿತದ ವಿರುದ್ಧ ಜನರನ್ನು ಸಂಘಟಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕೂಫದ ಕೆಲ ಪ್ರಜೆಗಳೂ ಅವರೊಂದಿಗೆ ಸೇರಿಕೊಂಡಿದ್ದಾರೆ. ಒಂದು ವೇಳೆ ಕೂಫದಲ್ಲೇನಾದರೂ ಯುದ್ಧ ಸಂಭವಿಸಿದರೆ ಅವರಿಗೆ ಬೆಂಬಲ ನೀಡುವವರ ಸಂಖ್ಯೆ ಹೆಚ್ಚಾಗಿ ಅದು ಎಲ್ಲೆಡೆ ವ್ಯಾಪಿಸಬಹುದು ಅದರ ಪರಿಣಾಮವಾಗಿ ನಂತರ ಆಡಳಿತ ತಮ್ಮ ಕೈಬಿಟ್ಟು ಹೇೂಗಬಹುದು. ಹಾಗಾಗಿ ಕೂಡಲೆ ಇದನ್ನು ನಿಯಂತ್ರಿಸಬೇಕಾದ್ದು ತಕ್ಷಣದ ಅವಶ್ಯಕತೆಯಾಗಿದೆ ಎಂದನು.

ವಿಷಯವನ್ನೆಲ್ಲ ಅರಿತ
*ಯಝೀದ್* ಕೂಡಲೆ ತನ್ನ ಸೈನ್ಯದ ಮುಖ್ಯಸ್ಥರು ಮತ್ತು ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು
ಅವರಿಗೆ ಕೆಲ ಸೂಚನೆಗಳನ್ನು ನೀಡಿದ ನಂತರ ಅವರನ್ನು ಉದ್ದೇಶಿಸಿ...

*ಪ್ರಿಯರೆ...*

*ಮಕ್ಕದಿಂದ ಹುಸೈನ್ (ರ) ರವರು, ತಮ್ಮ ಪ್ರತಿನಿಧಿಯಾಗಿ ಮುಸ್ಲಿಂ (ರ) ಎಂಬ ವ್ಯಕ್ತಿಯನ್ನು ಕೂಫಕ್ಕೆ ಕಳುಹಿಸಿದ್ದು ಆ ವ್ಯಕ್ತಿಯು ನನ್ನ ಆಡಳಿತದ ವಿರುದ್ಧ ಜನರನ್ನು ಸಂಘಟಿಸುತ್ತಿದ್ದಾರೆ. ಅದರಿಂದ ಈ ಕೂಡಲೆ ಮುಸ್ಲಿಂ (ರ) ಎಂಬ ಆ ಮನುಷ್ಯನನ್ನು ಬಂಧಿಸಿ ಜೈಲಿಗೆ ಅಟ್ಟಬೇಕು. ಅಥವಾ ವಧಿಸಬೇಕು ತಕ್ಷಣಕ್ಕೆ ಇದು ಅನಿವಾರ್ಯ. ಆದರೆ ಅಲ್ಲಿನ ಗವರ್ನರ್ ಆಗಿರುವ ನುಅಮಾನು ಇಬ್ನು ಬಷಿರ್ (ರ) ಇದಕ್ಕೆ ಸಮ್ಮತಿಸಲಾರರು. ಅದರಿಂದ ನಾನು ಕೇಳುತ್ತಿದ್ದೇನೆ ಮುಸ್ಲಿಂ (ರ) ರನ್ನು ಬಂಧಿಸಲು ಅಥವಾ  ವಧಿಸಲು ದೈರ್ಯವಿರುವವರು ಈ ಸಭೆಯಲ್ಲಿ ಯಾರಿದ್ದೀರಿ.!??*

*ಯಝೀದನ* ಈ ಮಾತಿಗೆ ಯಾರೂ ಉತ್ತರಿಸದೆ ಎಲ್ಲರೂ ಮೌನವಾಗಿದ್ದರು. ಕಾರಣ ಅವರೆಲ್ಲರಿಗೂ ಕೂಫದ ಜನತೆಯ ವಂಚಕತನದ ಅರಿವಿತ್ತು. ಹಾಗಾಗಿ ಯಾರೂ ಮರು ಮಾತನಾಡದೆ ಮೌನಕ್ಕೆ ಶರಣಾಗಿದ್ದರು.

_ಆದರೆ ಅಲ್ಲಾಹನ ಕಲ್ಪನೆ ಏನಿದೆಯೇೂ ಅದು ನಡೆಯಲೇ ಬೇಕಲ್ಲವೇ..?_

ಯಾರೂ ಪ್ರತಿಕ್ರಿಯಿಸದಿದ್ದಾಗ *ಯಝೀದ್* ಸಭೆಯನ್ನೊಮ್ಮೆ ದಿಟ್ಟಿಸಿ ನೇೂಡಿದ. ಆಗ ಹಿರಿಯ ವ್ಯಕ್ತಿಯೊಬ್ಬರು ಎದ್ದು ನಿಂತು.....

ಮಹಾ ಪ್ರಭುಗಳೇ..

 ಕೂಫಕ್ಕೆ ಹೋಗಲು ಧೈರ್ಯವಿರುವವರು ಈ ಸಭೆಯಲ್ಲಿ ಯಾರೂ ಇರಲಾರರು. ಎಂದು ನನ್ನ ಅನಿಸಿಕೆ. ಆದರೆ ತಮ್ಮ ತಂದೆಯವರ ಕಾಲದಿಂದಲೂ ಆಡಳಿತ ವಿರೇೂಧಿಗಳ ಸದ್ದಡಗಿಸಿದ ಬಸರದ ಗವರ್ನರ್ ಆಗಿರುವ *ಉಬೈದುಲ್ಲಾಹಿ ಇಬ್ನು ಝಿಯಾದ್* ಎಂಬಾತನಿಗೆ  ಈ ಜವಾಬ್ದಾರಿಯನ್ನು ವಹಿಸಿರಿ. ಈ ಕೆಲಸಕ್ಕೆ ಅವನೇ ಸರಿ ಎಂದರು.

 ಈ ಸಲಹೆಯನ್ನು ಅಂಗೀಕರಿಸಿದ *ಯಝೀದ್, ಕೂಡಲೇ ಉಬೈದ್'ನಿಗೆ ಪತ್ರವೊಂದನ್ನು ಬರೆದು ಬಸರದ 'ದಾರುಲ್ ಇಮಾರ' ಎಂಬ ಅರಮನೆಗೆ ತನ್ನ ದೂತನ ಮುಖಾಂತರ ಕಳುಹಿಸಿದನು.*

(ಉಬೈದ್ ಇಬ್ನು ಝಿಯಾದ್ ಎಂದರೆ ಕನಿಕರವೆಂದರೇನೆಂದೇ ಅರಿಯದ ಕಟುಕ. ಅವನ ಮಾತಿಗೆ ಎದುರಾಡಿದರೆ ಮರುಕ್ಷಣದಲ್ಲಿ ಎದುರಾಡಿದವನ ತಲೆಯನ್ನೇ ಹಾರಿಸುತ್ತಿದ್ದ ಕ್ರೂರನು.)

*ಪತ್ರ ತಲುಪಿದ ಕೂಡಲೇ ಉಬೈದ್ ಅಲ್ಲಿಯ ಜನತೆಯನ್ನುದ್ದೇಶಿಸಿ, "ನಾನು ಕೆಲವು ದಿನಗಳ ಮಟ್ಟಿಗೆ ಕೂಫಕ್ಕೆ ಹೋಗುತ್ತಿದ್ದೇನೆ. ನಾನು ಮರಳಿ ಬರುವವರೆಗೆ ನನ್ನ ತಮ್ಮನಾಗಿರುವನು ಇಲ್ಲಿಯ ಗವರ್ನರ್. ಅದರಿಂದ ಅವನ ಮಾತುಗಳನ್ನು ನೀವು ಅನುಸರಿಸಬೇಕು ಎಂದನು.*

ಬಳಿಕ ಉಬೈದುಲ್ಲಾಹಿ ಇಬ್ನು ಝಿಯಾದ್ ಕುದುರೆಯೇರಿ ಕೂಫಕ್ಕೆ ಯಾತ್ರೆ ಹೊರಟನು.

ಅತ್ತ ಕೂಫದ ಜನತೆ..
*ಮುಸ್ಲಿಂ (ರ) ರವರು ಪತ್ರ ಬರೆದಿರುವುದರಿಂದ ಹುಸೈನ್(ರ) ರವರ ಆಗಮನವನ್ನು ಕಾತರದಿಂದ ಕಾಯುತ್ತಿದ್ದರು.*

ಆಗ ಒಬ್ಬ ವ್ಯಕ್ತಿ ಹೇಳಿದನು...

ಅದೇೂ ಅತ್ತ ನೇೂಡಿ, ಆ ಕಪ್ಪು ಕುದುರೆಯಲ್ಲಿ.. ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 1⃣6⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠

 ಆದರೆ ಮಕ್ಕಳು ⬇

 ಹಠ ಬಿಡದೆ ಏನಾದರೂ ತೊಂದರೆ ಇಲ್ಲ. ನಾವು ಕೂಡ ಬರುತ್ತೇವೆ ದಯವಿಟ್ಟು ನಮ್ಮನ್ನೂ ಕರೆದೊಯ್ಯಿರಿ ಎಂದು ಅಂಗಾಲಾಚಲಾರಂಭಿಸಿದಾಗ ತಮ್ಮ ಸಹಧರ್ಮಿಣಿಯನ್ನು ಕರೆದು *ಮುಸ್ಲಿಂ (ರ)* ಹೇಳಿದರು.

ಪ್ರಿಯೇ...
 ಜಗದೊಡೆಯನಾದ ಅಲ್ಲಾಹನ *ಖಳಾಹ್* ಏನಿದೆಯೇೂ ಅದು ನಡೆಯಲೇಬೇಕು. ಅವನ ವಿಧಿಯನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಹೀಗೆ ಅಂಗಾಲಾಚುತ್ತಿರುವ ಮಕ್ಕಳನ್ನು ಹೇಗೆ ಬಿಟ್ಟು ಹೇೂಗಲಿ?  ಹಾಗಾಗಿ ನೀನು ಮಕ್ಕಳಿಗೆ ಒಳ್ಳೆಯ ಉಡುಪು ತೊಡಿಸು ಅವರನ್ನೂ ನನ್ನೊಂದಿಗೆ ಕರೆದೊಯ್ಯುತ್ತೇನೆ ಎಂದರು...!

ಹಾಗೆ ಮಕ್ಕಳಿಬ್ಬರನ್ನೂ ಸ್ನಾನ ಮಾಡಿಸಿ ಒಳ್ಳೆಯ ಬಟ್ಟೆಗಳನ್ನು ತೊಡಿಸಿದ *ಫಾತಿಮಾ(ರ)* ಎಂಬ ಆ ಮಹದಿ, ಪತಿ ಮತ್ತು ಮಕ್ಕಳಿಗೆ ಸಲಾಂ ಹೇಳಿ ಬೀಳ್ಕೊಟ್ಟರು.

ಆದರೆ ನಾಡಿಮಿಡಿತದ ಒಡನಾಡಿಯಂತೆ ಬದುಕಿನ ಕೊನೆಯುಸಿರಿನ ತನಕವೂ ತನಗೆ ಆಸರೆಯಾಗಬೇಕಿದ್ದ ತನ್ನ ಪ್ರಿಯತಮ ಮತ್ತು ತನ್ನ ಮುದ್ದು ಮಕ್ಕಳಿಗೆ ತಾನು ಹೇಳಿದ ಈ ಸಲಾಮ್ ಕೊನೆಯದೆಂಬುದನ್ನರಿಯದ ಆ ಮಹದಿ ಮನೆಯ ಬಾಗಿಲ ತನಕ ಬಂದು ಸಂತೇೂಷದಿಂದ ಬೀಳ್ಕೊಟ್ಟರು.

ಅಂತೆಯೇ....
*ತಮ್ಮ ಬಾಳ ಸಂಗಾತಿಯನ್ನು ಕಾಣಲು ಇನ್ನೆಂದೂ ಹಿಂದಿರುಗಿ ಬರಲಾರೆನೆಂಬ ಸತ್ಯವರಿಯದ ಮುಸ್ಲಿಂ (ರ)ರವರು ಪತ್ನಿಯ ಸಲಾಮಿಗೆ ಉತ್ತರಿಸಿ ಮಕ್ಕಳೊಂದಿಗೆ ಕುದುರೆಯೇರಿ ಯಾತ್ರೆ ಹೊರಟರು.*

 ಸುದೀರ್ಘವಾದ ಯಾತ್ರೆಯ ಮೂಲಕ ಮಕ್ಕಳೊಂದಿಗೆ ಕೂಫ ಪಟ್ಟಣ ತಲುಪಿದ *ಮುಸ್ಲಿಂ (ರ)ರವರು ಕೂಫದಲ್ಲಿ ಹಝ್ರತ್ ಹಾನಿಅ (ರ) ರವರ ಮನೆಯಲ್ಲಿ ತಂಗಿದರು. ಆ ಮನೆಯಲ್ಲಿ ಹಾನಿಯ(ರ)ರವರ ಹಿರಿಯ ಸಹೋದರರಾದ ಶಾರಿಕು ಇಬ್ನು ಅವ್ವಾಮ್ (ರ) ಕೂಡ ವಾಸವಾಗಿದ್ದರು.*

*ಹುಸೈನ್ (ರ) ರವರ* ಪ್ರತಿನಿಧಿಯಾಗಿ *ಮುಸ್ಲಿಂ (ರ) ರವರು* ಕೂಫಕ್ಕೆ ಆಗಮಿಸಿದ ವಿಷಯ ತಿಳಿದಾಗ, ಕೂಫದ ಜನತೆ ಗುಂಪು ಗುಂಪಾಗಿ ಹಾನಿಯಾ(ರ)ರವರ ನಿವಾಸಕ್ಕಾಗಮಿಸಿ *ಮುಸ್ಲಿಂ(ರ) ರವರನ್ನು* ಭೇಟಿಯಾಗಿ ತಮ್ಮ ಅಹವಾಲನ್ನು ಹೇಳಿ ಕೊಳ್ಳುತ್ತಾ ಹೇಗಾದರೂ ಮಾಡಿ  *ಯಝೀದ್'ನ* ದುರಾಡಳಿತದಿಂದ ನಮ್ಮನ್ನು ರಕ್ಷಿಸಲಿಕ್ಕಾಗಿ ದಯವಿಟ್ಟು *ಹುಸೈನ್ (ರ) ರವರನ್ನು* ಬೇಗನೆ ಬರ ಹೇಳಿರಿ..! ನಿಮ್ಮೊಂದಿಗೆ ನಾವಿದ್ದೇವೆ. ಎಂತಹ ಪರಿಸ್ಥಿತಿಯಲ್ಲೂ ನಾವು ನಿಮ್ಮ ಕೈ ಬಿಡಲಾರೆವು ಹಾಗಾಗಿ ನಾವೆಲ್ಲರೂ ಸೇರಿ ಒಗ್ಗಟ್ಟಿನಿಂದ *ಯಝೀದ್'ನನ್ನು* ಎದುರಿಸೇೂಣ ಎಂದರು.

 ಆದರೆ ಕೂಫ ನಿವಾಸಿಗಳ ವಂಚನೆಯ ಅರಿವಿದ್ದ *ಮುಸ್ಲಿಂ(ರ) ರವರಿಗೆ* ಮೊದ ಮೊದಲು ಅವರ ಮಾತಿನಲ್ಲಿ ನಂಬಿಕೆ ಬರಲಿಲ್ಲ.

 ಆದರೆ ಕೂಫದ ಜನತೆ ನಿರಂತರವಾಗಿ ಪ್ರತಿದಿನ ಅಲ್ಲಿಗಾಗಮಿಸಿ ದಯಮಾಡಿ ತಾವು *ಹುಸೈನ್ (ರ) ರವರನ್ನು* ಬರಲು ಹೇಳಿರಿ ಎಂದು ಪರಿಪರಿಯಾಗಿ ವಿನಂತಿಸಿ ಕೊಳ್ಳುತ್ತಿದ್ದ ಕಾರಣ, ಕೂಫ ನಿವಾಸಿಗಳ ಮಾತಿನಲ್ಲಿ ಸತ್ಯವಿರಬಹುದೆಂದು ಭಾವಿಸಿ ಹಾನಿಯ (ರ) ರೊಂದಿಗೆ ಚರ್ಚಿಸಿದ ನಂತರ *ಹುಸೈನ್(ರ)ರವರಿಗೆ* ಪತ್ರವೊಂದನ್ನು ಬರೆದರು...

ಪ್ರಿಯ ಹುಸೈನ್ (ರ)ರವರೇ....

 *"ಕೂಫದ ಜನತೆಯ ಮಾತಿನಲ್ಲಿ ಸತ್ಯಾಂಶವಿರಬಹುದೆಂದು ನನಗನಿಸುತ್ತಿದೆ. ಅವರೆಲ್ಲರೂ ಒಮ್ಮತದಿಂದ ನಿಮ್ಮೊಂದಿಗೆ ನಿಲ್ಲುವುದಾಗಿ ಹೇಳುತ್ತಿದ್ದಾರೆ. ಆದ್ದರಿಂದ ತಾವು ಹೊರಟು ಕೂಫಕ್ಕೆ ಬರಬಹುದು" ಎಂದು ಬರೆದು ಪತ್ರವನ್ನು ಮಕ್ಕಕ್ಕೆ ಕಳುಹಿಸಿದರು.*

ಆದರೆ ಇತ್ತ *ಯಝೀದ್'ನ* ದುರಾಡಳಿತವನ್ನು ಬೆಂಬಲಿಸುತ್ತಿದ್ದ ಕೆಲವರೂ ಈ ಗುಂಪಿನಲ್ಲಿದ್ದು ಅವರು ಅಲ್ಲಿನ ಗವರ್ನರ್ ಆಗಿದ್ದ *ನುಅಮಾನ್ ಇಬ್ನು ಬಶೀರ್(ರ)ರವರ* ಬಳಿ ಹೇೂಗಿ "ಮಕ್ಕದಿಂದ ಮುಸ್ಲಿಂ (ರ) ಎಂಬ ಹೆಸರಿನ ವ್ಯಕ್ತಿಯೊಬ್ಬರು ಇತ್ತೀಚೆಗೆ ಕೂಫಕ್ಕಾಗಮಿಸಿದ್ದು *ಯಝೀದ್'ನ* ಆಡಳಿತದ ವಿರುದ್ಧ ಜನರನ್ನು ಸಂಘಟಿಸುತ್ತಿದ್ದಾರೆ. ಹಾಗಾಗಿ ಅವರನ್ನು ಕೊಲ್ಲಬೇಕು ಅಥವಾ ಜೈಲಿಗಟ್ಟಬೇಕು ಎಂದು ಒತ್ತಡ ಹೇರಲಾರಂಭಿಸಿದರು.

ಆದರೆ ಪ್ರವಾದಿ ﷺ ರವರನ್ನು ಪ್ರೀತಿಸುತ್ತಾ ಅಹ್ಲ್'ಬೈತನ್ನು ಗೌರವದಿಂದ ಕಾಣುತ್ತಿದ್ದ ನುಅಮಾನು ಇಬ್ನು ಬಶೀರ್(ರ) ರವರು *"ಮುಸ್ಲಿಂ(ರ) ರವರು ಇಲ್ಲಿ ದೀನಿಗೆ ವಿರುದ್ಧವಾಗಿ ವರ್ತಿಸಿದರೆ ಮಾತ್ರ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯ. ಇಲ್ಲದಿದ್ದಲಿ ಅವರ ಮೇಲೆ ಅನಾವಶ್ಯಕ ಕ್ರಮ ಜರುಗಿಸಲು ಸಾಧ್ಯವಿಲ್ಲ"* ಎಂದು ಖಡಕ್ಕಾಗಿ ಹೇಳಿದಾಗ ಆ ಗುಂಪು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂದಿರುಗಿದರಾದರೂ ಮತ್ತೊಂದು ಮಸಲತ್ತು ಹೆಣೆಯಲು ತಂತ್ರ ರೂಪಿಸಿದರು. ⤵

*ಮುಂದುವರಿಯುವುದು.*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 1⃣5⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠

 ಈ ಪತ್ರವನ್ನು ಓದಿದ ⬇

*ಹುಸೈನ್ (ರ)* ನೇರವಾಗಿ *ಕಅಬಾಲಯ'ಕ್ಕೆ* ಹೇೂಗಿ ಕೂಫದ ಜನತೆಯ ಸಂಕಟವನ್ನು ನೆನೆದು ಪವಿತ್ರವಾದ ಆ ಗೇಹದ *ಕಿಲ್ಲೆಯನ್ನು* ಹಿಡಿದು ಬಿಕ್ಕಿ ಬಿಕ್ಕಿ ಅತ್ತರು....

*ಆ ಸಂದರ್ಭದಲ್ಲಿ ಮಖಾಮು ಇಬ್ರಾಹಿಂ'ನ ಹಿಂಭಾಗದಲ್ಲಿ ಮುಸ್ಲಿಂ ಇಬ್ನು ಉಹೈಲ್ (ರ) ಎಂಬ ಸ್ವಹಾಬಿ ನಮಾಝ್ ನಿರ್ವಹಿಸುತ್ತಿದ್ದರು.*

*ರಸೂಲ್ ﷺ ರವರ* ವಂಶಸ್ಥರಾದ ಆ *ಸ್ವಹಾಬಿವರ್ಯರು ಹುಸೈನ್(ರ)ರವರ* ಸಂಕಟವನ್ನು ಕಂಡು ಅವರ ಸಮೀಪ ಹೇೂಗಿ ಕೇಳಿದರು.

*ಹುಸೈನ್ (ರ)ರವರೇ* ಯಾಕಿಷ್ಟು ಸಂಕಟಪಡುತ್ತಿದ್ದೀರಿ? ಅಂಥಾದ್ದೇನಾಗಿದೆ?

*ಆಗ ತಮ್ಮ ಕೈಲ್ಲಿದ್ದ ಪತ್ರವನ್ನು ಹುಸೈನ್ (ರ) ರವರು ಮುಸ್ಲಿಂ (ರ) ರವರಿಗೆ ಕೊಟ್ಟರು.*

ಪತ್ರವನ್ನು ಓದಿದ *ಮುಸ್ಲಿಂ (ರ) ಹುಸೈನ್ (ರ) ರವರನ್ನು* ಸಂತೈಸುತ್ತಾ ಹೇಳಿದರು.
ಈ ಪತ್ರವನ್ನು ಬರೆದವರು ಯಾರು?

*" _ಕೂಫದವರು_ "*

*ತಕ್ಷಣ ಮುಸ್ಲಿಂ (ರ) ಹೇಳಿದರು...*
*ಕೂಫದವರು ನಂಬಿಕೆಗೆ ಅರ್ಹರಲ್ಲ ಅವರು ವಂಚಕರು. ತಮ್ಮ ತಂದೆಯವರನ್ನು ವಂಚಿಸಿ ಕೊಂದವರೂ ಈ ಕೂಫದವರೇ ಆಗಿದ್ದಾರೆ.*

ಮಾತ್ರವಲ್ಲ ಇದರಲ್ಲೇನೇೂ ಮಸಲತ್ತಿರುವಂತೆ ನನಗೆ ಭಾಸವಾಗುತ್ತಿದೆ. ಆದ್ದರಿಂದ ತಾವು ಆ ಬಗ್ಗೆ ಏನೂ ಚಿಂತಿಸದೆ ಧೈರ್ಯವಾಗಿರಿ ಎಂದರು.

ಆಗ *ಹುಸೈನ್ (ರ)ರವರು,*
ಈ ಪತ್ರದ ಪದ ಪ್ರಯೋಗಗಳನ್ನೊಮ್ಮೆ ನೋಡು..!

*ನಾನು ಅಲ್ಲಿಗೆ ಹೋಗದಿದ್ದರೆ, ಅವರ ಸಂರಕ್ಷಣೆಯ ಜವಾಬ್ದಾರಿ ವಹಿಸಿಕೊಳ್ಳದಿದ್ದರೆ ನಾಳೆ ಅಲ್ಲಾಹನ ಸಮಕ್ಷಮದಲ್ಲಿ ನನಗೆದುರಾಗಿ ಸಾಕ್ಷಿ ಹೇಳುವೆವು ಎಂದಿದ್ದಾರೆ. ಹಾಗಿರುವಾಗ ನಾನು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಹೇಗೆ..!?*

*ಮುಸ್ಲಿಂ (ರ)* ಪುನಃ ಹೇಳಿದರು. ಸರಿಯಾಗಿ ಆಲೋಚನೆ ಮಾಡಿ ತೀರ್ಮಾನ ಕೈಗೊಳ್ಳುವುದು ಉತ್ತಮ. ಅಷ್ಟಕ್ಕೂ ಅಲ್ಲಿಗೆ ಹೇೂಗುವುದೇ ಬೇಡ. ಕಾರಣ ಈ ಪತ್ರವನ್ನು ಬರೆದವರು ಕೂಫದವರು ಎನ್ನುವುದು ನೆನಪಿರಲಿ..!

ಆದರೆ *ಮುಸ್ಲಿಂ (ರ) ಎಷ್ಟು ತಿಳಿ ಹೇಳಿದರೂ ಹುಸೈನ್ (ರ) ರವರು* ಕೂಫಕ್ಕೆ ತೆರಳುವ ತಮ್ಮ  ನಿರ್ದಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದಾಗ ಕೊನೆಗೆ *ಮುಸ್ಲಿಂ (ರ)* ಹೇಳಿದರು.

 ಹಾಗಾದರೆ ನಾವೊಂದು ಕೆಲಸ ಮಾಡೇೂಣ. ಮೊದಲು
ನಾನು ನಿಮ್ಮ ಪ್ರತಿನಿಧಿಯಾಗಿ ಕೂಫಕ್ಕೆ ಹೋಗಿ ಅಲ್ಲಿಯ ಪರಿಸ್ಥಿತಿಯನ್ನು ಅವಲೇೂಕಿಸಿ ಸತ್ಯ ಸಂಗತಿಯೇನೆಂದು ತಿಳಿದು ತಮ್ಮ ಗಮನಕ್ಕೆ ತರುತ್ತೇನೆ.
ನನ್ನಿಂದ ಉತ್ತರ ಲಭಿಸಿದ ನಂತರವಷ್ಟೇ, ಅಂದರೆ ತಾವು ಬರಬಹುದು ಎಂದು ನಾನು ತಿಳಿಸಿದರೆ ಮಾತ್ರ ತಾವು ಮಕ್ಕದಿಂದ ಹೊರಡಬೇಕು..! ಏನೆನ್ನುವಿರಿ ಎಂದಾಗ..

ಇದೊಂದು ಉತ್ತಮ ಸಲಹೆಯೆನ್ನಿಸಿದ್ದರಿಂದ *ಹುಸೈನ್ (ರ)ರವರು ಮುಸ್ಲಿಂ(ರ)ರವರ* ಮಾತಿಗೆ ಸಹಮತಿ ಸೂಚಿಸಿದರು.

ನಂತರ ಕಅಬಾಲಯದಿಂದ ತಮ್ಮ ನಿವಾಸಕ್ಕೆ ಮರಳಿದ *ಮುಸ್ಲಿಂ (ರ)ರವರು* ತಮ್ಮ ಪತ್ನಿಯೊಂದಿಗೆ ವಿಷಯ ತಿಳಿಸಿದಾಗ, ಕೂಫದ ಜನತೆಯ ಕಪಟತನದ ಅರಿವಿದ್ದ ಆ ಮಹದಿಯು ವಂಚಕರ ಆ ನಾಡಿಗೆ ಹೇೂಗುವುದೇ ಬೇಡ ಎಂದರು.

ಆಗ *ಮುಸ್ಲಿಂ (ರ)* ನಡೆದ ವಿಷಯವನ್ನೆಲ್ಲ ವಿವರಿಸಿ ತಾನು ಹೇೂಗದಿದ್ದರೆ *ಹುಸೈನ್(ರ)* ಹೇೂಗುವರು. ಹಾಗಾಗಿ ಮೊದಲು ತಾನಲ್ಲಿಗೆ ಹೇೂಗಿ ಪರಿಸ್ಥಿತಿಯ ಅವಲೇೂಕನ ನಡೆಸಿ ತಿಳಿಸುವುದಾಗಿ *ಹುಸೈನ್(ರ)ರಲ್ಲಿ* ಹೇಳಿದ್ದೇನೆ. ಹಾಗಾಗಿ ತಾನು ಕೂಫಕ್ಕೆ ಹೇೂಗಲೇ ಬೇಕಾಗಿದೆಯೆಂದಾಗ ಪತ್ನಿಯು ಒಲ್ಲದ ಮನಸ್ಸಿನಿಂದಲೇ ಸಮ್ಮತಿಸಿದರು.

*ಬಳಿಕ ಮುಸ್ಲಿಂ (ರ)ರವರು ಕೂಫಕ್ಕೆ ಹೊರಟು ನಿಂತಾಗ ಅವರ 9 ಮತ್ತು 11 ವರ್ಷ ಪ್ರಾಯದ ಮುಹಮ್ಮದ್ ಹಾಗು ಇಬ್ರಾಹಿಂ ಎಂಬ ಮಕ್ಕಳು "ಅಪ್ಪನೊಂದಿಗೆ ನಾವೂ ಬರುತ್ತೇವೆಂದು ಹಠ ಹಿಡಿಯಲಾರಂಭಿಸಿದರು."*

ಕೂಫ ಎಂದರೇನೆಂದೇ ಅರಿಯದ ಮುಗ್ಧ ಮನಸ್ಸಿನ ಮಕ್ಕಳ ಬಳಿ *ಮುಸ್ಲಿಂ (ರ)* ಹೇಳಿದರು ಮಕ್ಕಳೇ, ಅಪ್ಪ  ಹೋಗುತ್ತಿರುವುದು ಕೂಫ ಎಂಬ ಸ್ಥಳಕ್ಕಾಗಿದ್ದು ಅದು ಮಹಾ ವಂಚಕರ ನಾಡಾಗಿದೆ. ಅಲ್ಲಿಂದ ಮರಳಲು ಸಾದ್ಯವಾದೀತೆಂಬ ಭರವಸೆಯೂ ಇಲ್ಲ.
ಆದರಿಂದ ಮಕ್ಕಳೇ ನೀವು ಬರುವುದು ಬೇಡ..!

ಆದರೆ ಮಕ್ಕಳು ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 1⃣4⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠


ಇಡೀ ಮುಸ್ಲಿಮ್ ಸಮುದಾಯವನ್ನೇ "ಕಣ್ಣೀರ ಕಡಲಲ್ಲಿ ಮುಳುಗಿಸಿದ  *ಕರ್ಬಲಾ* ಎಂಬ ಯುದ್ಧ ಚರಿತ್ರೆಯ" ಆರಂಭವೇ ಕರುಣಾಜನಕವಾಗಿದೆ.
ಮುಂದೆ ಓದಿ..... ⬇

ಪ್ರವಾದಿ ﷺ ರವರ ಅಹ್ಲ್'ಬೈತ್ ಎಂಬ ಅತ್ಯುನ್ನತ ಕುಟುಂಬ ಕಷ್ಟ ಕಾರ್ಪಣ್ಯಗಳನ್ನು ಸಹಿಸುತ್ತಾ ಮದೀನದಲ್ಲಿ ಬದುಕುತ್ತಿದ್ದರೂ ಸಮಾಧಾನದಿಂದ ನೆಮ್ಮದಿಯುತವಾಗಿ ಬದುಕಲು ಕೂಫ ನಿವಾಸಿಗಳು ಬಿಟ್ಟವರಲ್ಲ. ಇಂದು ಇಪ್ಪತ್ತೊಂದನೇ ಶತಮಾನಕ್ಕೆ ಕಾಲಿಟ್ಟಿದ್ದಲೂ ಚರಿತ್ರೆಯಲ್ಲಿ ವಂಚಕರ ನಾಡೆಂದೇ ಕುಖ್ಯಾತಿ ಪಡೆದ ಆ ಜನತೆ ಇಂದಿಗೂ ತಮ್ಮನ್ನು ತಿದ್ದಿ ಕೊಂಡವರಲ್ಲ.

( *ಇರಾಖಿನ ಧೀರ ಆಡಳಿತಾಧಿಕಾರಿಯಾಗಿದ್ದ ಸದ್ದಾಂ ಹುಸೈನ್'ನರ ಅಡಗುದಾಣವನ್ನು ಶತ್ರು ಸೈನಿಕರಿಗೆ ತೇೂರಿಸಿ ಕೊಟ್ಟು ಸದ್ದಾಂ ಹುಸೈನರನ್ನು ಗಲ್ಲಿಗೇರಿಸಲು ನೆರವಾದವರೂ ಇದೇ "ಕೂಫ" ನಿವಾಸಿಗಳಾಗಿದ್ದರೆನ್ನುವುದು ಗಮನಾರ್ಹ* )

ವಂಚನೆಯಲ್ಲಿ ಎತ್ತಿದ ಕೈಯಾದ "ಕೂಫದ ನಿವಾಸಿಗಳು" *ಹುಸೈನ್ (ರ)ರವರಿಗೆ* ಆಗಾಗ ಪತ್ರ ಬರೆದು ದೂತರ ಮೂಲಕ ಕಳುಹಿಸುತ್ತಿದ್ದರು.

ಹಾಗಿರುವಾಗ ಒಮ್ಮೆ *ಹುಸೈನ್(ರ)ರವರಿಗೆ* ಕೂಫದಿಂದ ದೂತನೊಬ್ಬನ ಮೂಲಕ ಪತ್ರವೊಂದು ಬಂತು. ಆ ಪತ್ರದ ಒಕ್ಕಣೆ ಹೀಗಿತ್ತು.

*"ಪ್ರೀತಿಯ ಹುಸೈನ್ (ರ) ತಂಙಳ್'ರವರೇ...*

_ಯಝೀದ್'ನ ದುರಾಡಳಿತದಿಂದ ನಮಗೆ ನೆಮ್ಮದಿಯಿಲ್ಲವಾಗಿದೆ._
_ಪ್ರವಾದಿ ﷺ ಕುಟುಂಬದ ಪ್ರಮುಖರಾಗಿರುವ ತಾವು ಕೂಫ ಜನತೆಯ ಹಿತದೃಷ್ಟಿಯಿಂದ ಇದಕ್ಕೊಂದು ಪರಿಹಾರ ಕಾಣ ಬೇಕಾಗಿದೆ._
_ಆದಷ್ಟು ಬೇಗ ಯಝೀದ್ ಎಂಬ ದುಷ್ಟನ ದುರಾಡಳಿತವನ್ನು ಕೊನೆಗೊಳಿಸ ಬೇಕಾಗಿದೆ. ಅಥವಾ ಉತ್ತಮವಾಗಿ ಆಡಳಿತ ನಡೆಸಲು ಅವನಿಗೆ ತಿಳಿ ಹೇಳಬೇಕೆಂದು ತಮ್ಮಲ್ಲಿ ಮನವಿ ಮಾಡಿ ಕೊಳ್ಳುತ್ತಿದ್ದೇವೆ. ನಾವೆಲ್ಲರೂ ತಮ್ಮೊಂದಿಗಿದ್ದೇವೆ"_

ಇದಾಗಿತ್ತು ಆ ಪತ್ರದಲ್ಲಿದ್ದ ವಿಷಯ.

ಪತ್ರದ ಸಾರಾಂಶ ನೇೂಡಿ ನೆಮ್ಮದಿಗೆಟ್ಟ *ಹುಸೈನ್ (ರ)* ತಮ್ಮ ಕುಟುಂಬದೊಂದಿಗೆ ಮದೀನದಿಂದ *'ಸಿರಿಯ'ಕ್ಕೆ* ವಾಸ್ತವ್ಯ ಬದಲಿಸಿದರು.

ಅಲ್ಲಿಯ ಸ್ಥಿತಿಯೂ ಇದೇ ಆಗಿತ್ತು.
ಹಾಗಾಗಿ ಅಲ್ಲಿಂದ ಪುನಃ *'ಮಕ್ಕ'ಕ್ಕೆ* ಹೋದರು.

*ಮಕ್ಕಕ್ಕೆ ತಲುಪಿದಾಗ ಅಂದಿನ ಮಕ್ಕಾ ಗವರ್ನರ್ ಆಗಿದ್ದ ಅಬ್ದುಲ್ಲಾಹಿಬ್ನು ಝುಬೈರ್ (ರ) ರವರು ಹುಸೈನ್ (ರ) ರವರೊಂದಿಗೆ ಹೇಳಿದರು. ತಾವು ಮಕ್ಕಾಗೆ ಬಂದಿರುವುದರಿಂದ ಹಾಗೂ ಅಹ್ಲ್'ಬೈತಿನ ಪ್ರಮುಖರೂ ಆಗಿರುವುದರಿಂದ "ನನ್ನ ಗವರ್ನರ್ ಸ್ಥಾನವನ್ನು ನಾನು ನಿಮಗೆ ಬಿಟ್ಟು ಕೊಡುತ್ತೇನೆ"*

ಆದರೆ ಯಾವುದೇ ಅಧಿಕಾರವನ್ನು ಬಯಸದ ಹುಸೈನ್ (ರ) ರವರು ಅಬ್ದುಲ್ಲಾಹ್ ಇಬ್ನು ಝುಬೈರ್ ರವರಲ್ಲಿ ಹೀಗೆಂದರು...

*"ನಾನೆಂದೂ ಅಧಿಕಾರವನ್ನು ಬಯಸಿದವನಲ್ಲ, ಬದಲಾಗಿ ನೆಮ್ಮದಿಯ ಒಂದು ಜೀವನವನ್ನಷ್ಟೇ ನಾನು ಬಯಸುತ್ತೇನೆ."*

 *ಹಾಗಾಗಿ ತಾವೇ ಮಕ್ಕದ ಗವರ್ನರ್ ಆಗಿ ಮುಂದುವರೆಯಬೇಕು.*

*ಹುಸೈನ್(ರ)ರವರು* ಮಕ್ಕಕ್ಕೆ ವಾಸ್ತವ್ಯ ಬದಲಿಸಿದ ಸುದ್ದಿ ತಿಳಿಯುತ್ತಿದ್ದಂತೆ "ಕೂಫ ನಿವಾಸಿಗಳ" ಪತ್ರಗಳು ಮಕ್ಕಕ್ಕೂ ಬರಲಾರಂಭಿಸಿತು. ಹಾಗೆ ಬಂದ ಪತ್ರಗಳ ಸಂಖ್ಯೆ ಒಂದೆರಡಲ್ಲ ನೂರಾರು ಪತ್ರಗಳು. ಒಂದರ ಹಿಂದೆ ಒಂದರಂತೆ ಬಂದು ಕೆಲವೇ ದಿನಗಳಲ್ಲಿ ಸಾವಿರಾರು ಪತ್ರಗಳು *ಹುಸೈನ್(ರ)ರವರ* ಕೈ ಸೇರಿತ್ತು.

*ಅವುಗಳ ಪೈಕಿ ಒಂದು ಪತ್ರ ಹಝ್ರತ್ತ್ ಹುರ್'ರ್ (ರ) ರವರದಾಗಿತ್ತು.*

ಆ ಪತ್ರದ ಒಕ್ಕಣೆಯೂ ಬಹಳ ಗಂಭೀರವಾಗಿತ್ತು.

*"ಬಹುಮಾನ್ಯರಾದ ಹುಸೈನ್ (ರ) ರವರಿಗೆ ಕೂಫ'ದ ಜನತೆ ತಿಳಿಸುವುದು..*
*ಏನೆಂದರೆ....*

*ಈ ಹಿಂದೆ ದೂತರ ಮುಖೇನ ಹಲವಾರು ಪತ್ರಗಳನ್ನು ನಾವು ತಮಗೆ ಬರೆದಿದ್ದೇವೆ. ತಾವು ಈ ತನಕ ನಮ್ಮ ಯಾವ ಪತ್ರಕ್ಕೂ ಕೂಡ ಉತ್ತರಿಸಿಲ್ಲ.*
*ಹಾಗಾಗಿ ಇದು ನಮ್ಮ ಕೊನೆಯ ಪತ್ರವಾಗಿದೆ. ಇನ್ನು ನಾವು ತಮಗೆ ಪತ್ರ ಬರೆಯಲಾರೆವು. ಆದರೆ ಈ ಪತ್ರವನ್ನೂ ತಾವು ಗಂಭೀರವಾಗಿ ಪರಿಗಣಿಸದಿದ್ದರೆ ಖಂಡಿತವಾಗಿಯೂ "ನಾಳೆ ನಾವು ಅಲ್ಲಾಹನ ಮುಂದೆ ಮತ್ತು ರಸೂಲ್ ಕರೀಂ ﷺ ರವರ ಮುಂದೆ ತಮಗೆ ವಿರುದ್ಧವಾಗಿ ನಾವು ಸಾಕ್ಷಿ ನಿಲ್ಲಲಿದ್ದೇವೆ".*

ಈ ಪತ್ರವನ್ನು ಓದಿದ.. ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 1⃣3⃣
**********************
*صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠

*ಹುಸೈನ್(ರ)ರವರ ಆ ಸಿಂಹ ಘರ್ಜನೆಗೆ ಬೆಚ್ಚಿಬಿದ್ದ ಜಅದ (ರ)...* ⬇

ಎಲ್ಲವನ್ನೂ ಬಿಡಿಸಿ ಹೇಳಿದರು.

ಈಗ ಎಲ್ಲಿದ್ದಾನೆ ಆ *ಜಅಫರ್?* ಎಂದು ಕೇಳುತ್ತಾ ಗುಡುಗಿದರು ಹುಸೈನ್(ರ).

ಜಅದ(ರ) ಏನೂ ಉತ್ತರಿಸಲಿಲ್ಲ. ಕಾರಣ ಆತ ಎಲ್ಲಿದ್ದಾನೆಂಬುದು ಅವರಿಗೂ ಗೊತ್ತಿರಲಿಲ್ಲ.

ಆ ದುಷ್ಟ ಎಲ್ಲಿದ್ದರೂ ಹುಡುಕಿ ನಾಳೆ ಸೂರ್ಯೋದಯಕ್ಕೆ ಮುಂಚೆ ಅವನ ತಲೆ ಹಾರಿಸುತ್ತೇನೆನ್ನುತ್ತಾ..

*ದುಲ್'ಫುಖಾರ್ ಖಡ್ಗದೊಂದಿಗೆ*
 ಸಹೇೂದರನ ಮನೆಯಿಂದ ಹೊರ ಬಂದು ಬೆಳದಿಂಗಳ ಬೆಳಕಿನಲ್ಲಿ ಎರಡೆಜ್ಜೆ ಮುಂದಿಡುತ್ತಿದ್ದಂತೆ ಒಂದು ಕರೆ ಕೇಳಿಸಿತು,

ಯಾ *ಹುಸೈನ್.... (ರ)*

*ಹುಸೈನ್(ರ)* ಹಿಂದಿರುಗಿ ನೇೂಡಿದರು.

 ಅಲ್ಲಿ ತಮ್ಮ ಸಹೋದರಿಯಾದ *ಝೈನಬಾ ಬೀವಿ(ರ)* ನಿಂತಿದ್ದರು.

ಯಾ *ಹುಸೈನ್(ರ)* ಅಣ್ಣ *ಹಸನ್ (ರ)* ಮರಣಾಸನ್ನ ವೇಳೆಯಲ್ಲಿ ನಿನ್ನೊಂದಿಗೆ ವಸಿಯ್ಯತ್ ಮಾಡಿದ್ದನ್ನು ನೀನು ಮರೆತೆಯಾ....?  ಎನ್ನುತ್ತಾ ತಮ್ಮ ಮಾತನ್ನು ಮುಂದುವರೆಸಿದ
 *ಝೈನಬಾ ಬೀವಿ(ರ)*

*ಹಸನ್(ರ) ಹೇಳಿದಂತೆ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಸಾಮರ್ಥ್ಯವಿರುವವನು ಅಲ್ಲಾಹು ಮಾತ್ರ. ಆದ್ದರಿಂದ ಸೇಡು ತೀರಿಸಿಕೊಳ್ಳುವ ಈ ಪ್ರಯತ್ನದಿಂದ ನೀನು ಹಿಂದೆ ಸರಿಯಲೇಬೇಕು. ಅಲ್ಲದೆ ನಮ್ಮ ಸಹೋದರನ ಅಂತ್ಯ ಕರ್ಮಗಳನ್ನು ನೆರವೇರಿಸಬೇಡವೇ? ನೀನು ಜಅಫರ್'ನನ್ನು ಬೇಟೆಯಾಡಲು ಹೇೂದರೆ ಹಸನ್ (ರ) ರವರ ಅಂತ್ಯ ಕರ್ಮ ನಿರ್ವಹಿಸುವವರಾರು..? ಎಂದು ಕೇಳಿದರು. ಝೈನಬ್ (ರ) ರವರು.*

*ತಮ್ಮ ಸಹೇೂದರಿಯ ಮಾತು ಸರಿಯೆನಿಸಿದ್ದರಿಂದ ಹಿಂದಿರುಗಿದ ಹುಸೈನ್ (ರ)ರವರು ತಮ್ಮ ಸಹೇೂದರನ ಅಂತಿಮ ಕರ್ಮಗಳ ಸಿದ್ಧತೆಯಲ್ಲಿ ತೊಡಗಿ ಮರುದಿನ ಅಂತಿಮ ವಿಧಿ ವಿಧಾನಗಳೊಂದಿಗೆ ತಮ್ಮ ತಾಯಿಯೂ ಮುಅ್'ಮಿನಾತ್'ಗಳ ನಾಯಕಿಯೂ ಸ್ವರ್ಗದ ರಾಣಿಯೂ ಆದ ಬೀವಿ ಸಯ್ಯಿದತುನಾ ಫಾತಿಮತ್ ಝಹ್ರಾ ರಲಿಯಲ್ಲಾಹು ಅನ್ಹರವರ ಖಬರ್ ಶರೀಫಿನ ಸನಿಹದಲ್ಲೇ (ಜನ್ನತುಲ್ ಬಖೀಹ್ ಮದೀನದಲ್ಲಿ) ದಫನ್ ಮಾಡಿದರು. ವಫಾತಾಗುವಾಗ ಹಸನ್ (ರ)ರಿಗೆ ನಲವತ್ತೈದು ವರ್ಷ ವಯಸ್ಸಾಗಿತ್ತು.*

(ಅಲ್ಲಾಹನ ಹಬೀಬಾದ ಸಯ್ಯದುನಾ ಮುಹಮ್ಮದ್ ಮುಸ್ತಫಾ ﷺ ರಿಂದ "ಅಹ್ಲುಲ್ ಅಬಾಅ್" ಎಂದು ವರ್ಣಿಸಲ್ಪಟ್ಟ {ರಸೂಲ್ ಕರೀಂ ﷺ , ಫಾತಿಮಾ ಬೀವಿ (ರ), ಅಲಿ (ರ), ಹಸನ್ (ರ) ಮತ್ತು ಹುಸೈನ್ (ರ)}
ಈ ಐದು ಮಹಾನ್ ಚೇತನಗಳ ಪೈಕಿ ನಾಲ್ಕು ಧ್ರುವತಾರೆಗಳು ಅಲ್ಪ ಕಾಲದ ಯಾತ್ರೆ ಮುಗಿಸಿ ಈ ಲೇೂಕದಿಂದ ಇನ್ನೆಂದೂ ಹಿಂದಿರುಗಿ ಬಾರದ ಲೇೂಕಕ್ಕೆ ಯಾತ್ರೆಯಾಗಿದ್ದರಿಂದ ಪ್ರವಾದಿ ಕುಟುಂಬವೇ ಅನಾಥವಾದಂತಾಗಿತ್ತು.

ಮಾತ್ರವಲ್ಲ, ಅಹ್ಲ್'ಬೈತಿನ ಮುದ್ದಿನ ಕಣ್ಮಣಿಯೂ ಹುಸೈನ್(ರ) ಒಡ ಹುಟ್ಟಿದ ಒಡನಾಡಿಯೂ ಆದ ಹಸನ್(ರ)ರವರ ವಿಯೇೂಗವಂತೂ ಅಹ್ಲ್'ಬೈತನ್ನಷ್ಟೇ ಅಲ್ಲ, ಅಲ್ಲಾಹನ ಹಬೀಬರೂ ಮತ್ತು ಅವನ ಸಂದೇಶವಾಹಕರೂ ಆದ ಅಶ್ರಫುಲ್ ಖಲ್ಕ್ ಸಯ್ಯದುನಾ ಮುಹಮ್ಮದ್ ಮುಸ್ತಫಾ ﷺ ರನ್ನು ಮತ್ತು ಅವರ ಕುಟುಂಬವನ್ನು ಪ್ರಾಣಸಮವಾಗಿ ಪ್ರೀತಿಸುತ್ತಿದ್ದ ಇಡೀ ಮುಸ್ಲಿಂ ಸಮುದಾಯವನ್ನೇ ದಿಗ್ಭ್ರಮೆಗೀಡು ಮಾಡಿ ಕಣ್ಣೀರಿನಲ್ಲಿ ಮುಳುಗಿಸಿತ್ತು.)

ನಂತರ ಅಹ್ಲ್'ಬೈತಿನ ಜವಾಬ್ದಾರಿಯನ್ನು ಸಯ್ಯದುನಾ *ಹುಸೈನ್ (ರ)* ವಹಿಸಿಕೊಂಡರು.

ಅನಂತರ *ಪ್ರವಾದಿ ﷺ ರ ಕುಟುಂಬವಾದ ಅಹ್ಲ್'ಬೈತ್* ಎಂಬ ಆ ಅತ್ಯುನ್ನತ ಮನೆತನ ಕಷ್ಟ ಕಾರ್ಪಣ್ಯಗಳನ್ನು ಸಹಿಸುತ್ತಾ.. *ಮದೀನದಲ್ಲಿ* ಜೀವನ ನಡೆಸುತ್ತಿತ್ತು...

ಗಮನಿಸಿ:
*ಈ ತನಕ ಸಯ್ಯದುನಾ ಅಲಿ (ರ) ಮತ್ತು ಸಯ್ಯದುನಾ ಹಸನ್ (ರ)ರವರ ಕುರಿತು ಮಾತ್ರ ವಿವರಿಸಲಾಯಿತು.*
⚔🛡🛡🛡 🛡🛡🛡⚔

     *ಇನ್ ಷಾ ಅಲ್ಲಾಹ್*
〰〰〰〰〰〰〰〰〰

*ವಿಶ್ವಾಸಿ ಹೃದಯದ ಉಜ್ವಲ ತಾರೆಯಾದ ಸಯ್ಯದುನಾ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರವರ ಕುಟುಂಬವೂ, ಇಹಲೇೂಕದಲ್ಲೇ ಸರಿಸಾಟಿಯಿಲ್ಲದ ಅತ್ಯುನ್ನತ ಮನೆತನವೂ ಆದ ಅಹ್ಲ್'ಬೈತ್ ಅನುಭವಿಸಿದ ವೇದನೆ ಯಾತನೆ ನೇೂವು ಸಂಕಟಗಳನ್ನೊಳಗೊಂಡ ಕರುಣಾಜನಕವಾದ "ಕರ್ಬಲಾ" ಎಂಬ ಯುದ್ಧ ಚರಿತ್ರೆಯ ದಯನೀಯ ಸನ್ನಿವೇಶಗಳು ಮುಂದಿನ ಸಂಚಿಕೆಯಿಂದ ಅನಾವರಣಗೊಳ್ಳಲಿದೆ.* ⤵

ಮುಂದುವರಿಯುವುದು..
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 1⃣2⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠

ತಮ್ಮ ಸಹೇೂದರನನ್ನು⬇

 ಎದೆಗಪ್ಪಿಕೊಂಡು ಕಂಗಳಿಂದ ಕಪೇೂಲಗಳ ಮೇಲೆ ಹರಿಯುತ್ತಿರುವ ಕಂಬನಿ ಒರೆಸುತ್ತಾ, ಸಹೇೂದರಾ ನಿನಗೀ ವಂಚನೆ ಎಸಗಿದವರು ಯಾರು..??

*ತಕ್ಷಣ ಏನೇೂ ನೆನಪಾದವರಂತೆ ಹಸನ್(ರ)ರವರು ಸಹೇೂದರಾ, ನೀನು  ಸ್ವಲ್ಪ ಆಚೆ ಇರು. ನನಗೆ ನನ್ನ ಪತ್ನಿಯೊಂದಿಗೆ ಸ್ವಲ್ಪ ಮಾತನಾಡಲಿಕ್ಕಿದೆ ಎಂದಾಗ ಹುಸೈನ್(ರ) ಆಚೆ ಹೇೂದರು.*

*ಹಸನ್(ರ)ರವರು* ತಮ್ಮ ಪತ್ನಿ ​ *ಜಅದ(ರ)ರನ್ನು* ಕರೆದು ಕೇಳಿದರು...

ಪ್ರಿಯೇ,
ನಿನ್ನನ್ನು ​ಮತ್ತು *ಉಮ್ಮುಲ್ ಹಕೀಮ್(ರ)ಳನ್ನು​* ನಾನು ಸಮವಾಗಿ ಪ್ರೀತಿಸುತ್ತಿದ್ದೆನಲ್ಲ? ಮತ್ತೇಕೆ ನೀನು ಈ ರೀತಿ ನನಗೆ ವಂಚನೆಯೆಸಗಿದೆ? ನನಗೆ ನಿನ್ನ ಮೇಲೆ ಯಾವುದೇ ಕೇೂಪವಾಗಲೀ ದ್ವೇಷವಾಗಲೀ ಇಲ್ಲ. ​ಮತ್ತು ನಿನ್ನ ವಿರುದ್ಧ ನಾನು ಅಲ್ಲಾಹನಲ್ಲಿ ಆರೇೂಪಿಸುವುದಿಲ್ಲ. ಮತ್ತು ನಿನ್ನ ಪರಲೋಕ ನಿನಗೆ ನಷ್ಟ ಹೊಂದದಿರಲಿ ಎಂಬ ಸದುದ್ದೇಶದಿಂದ ನಿನ್ನನ್ನು ನಾನು ಕ್ಷಮಿಸಿದ್ದೇನೆ.
ಹಾಗಾಗಿ ನೀನು ಆಚೆ ಹೇೂಗು ಹುಸೈನ್(ರ) ಬರಲಿ ಎಂದರು.

إِنَّاللّٰه مَعَ الصَّابِرِينْ
 ಇನ್ನಲ್ಲಾಹ ಮಅ ಸ್ಸಾಬಿರೀನ್

( _ನಿಶ್ಚಯವಾಗಿಯೂ, ಅಲ್ಲಾಹನು ಕ್ಷಮಾಶೀಲರೊಂದಿಗಿರುವನು._ )

ಬಿಕ್ಕಿ ಬಿಕ್ಕಿ ಅಳುತ್ತಾ *ಜಅದ(ರ)*​
ಹೊರಗೆ ಓಡಿದರು.

*​ಹುಸೈನ್ (ರ)​* ಪುನಃ ಒಳ ಬಂದು ತಮ್ಮ ಸಹೇೂದರನ ಎದೆ ಉಜ್ಜುತ್ತಾ ಕೇಳಿದರು..,
 ಯಾರು ಯಾತಕ್ಕಾಗಿ ಈ ವಂಚನೆಯೆಸಗಿದರು?
ಹೇಳು.. ಅಣ್ಣಾ..?

ಹಸನ್ (ರ) ರವರು ಹೇಳಿದರು..

*ದುಷ್ಟರನ್ನು ಶಿಕ್ಷಿಸುವವನು ಮತ್ತು ಶಿಷ್ಟರನ್ನು ರಕ್ಷಿಸುವವನು ಅಲ್ಲಾಹು ಮಾತ್ರವಾಗಿದ್ದಾನೆ. ಆದ್ದರಿಂದ ಆ ವಿಷಯದ  ಬಗ್ಗೆ ಚರ್ಚೆ ಕೇಳಬೇಡ. ಮತ್ತು ನೀನು ಯಾರನ್ನೂ ಶಿಕ್ಷಿಸುವು ಬೇಡ. ಅಲ್ಲಾಹನಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಅಲ್ಲವೇ ಹುಸೈನ್ (ರ) ಎಂದರು.*

 ನೀನು ಆ ಬಟ್ಟೆಯ ಕಟ್ಟನ್ನಿತ್ತ ತೆಗೆದುಕೊಂಡು ಬಾ.. ಎನ್ನುತ್ತಾ ಒಂದು ಬ್ಯಾಗಿನತ್ತ ಕೈ ತೇೂರಿಸಿದರು.

ಹುಸೈನ್(ರ)ರವರು ತಕ್ಷಣ ಆ ಬ್ಯಾಗನ್ನು
ಹಸನ್ (ರ) ರವರ ಹತ್ತಿರಕ್ಕೆ ತಂದಿಟ್ಟರು.

*ಮಲಗಿದ್ದಲಿಂದಲೇ ಬ್ಯಾಗ್'ನಿಂದ ಒಂದು ಸಣ್ಣ ಪೊಟ್ಟಣವನ್ನು ತೆಗೆದು ಹುಸೈನ್ (ರ) ರವರ ಕೈಗೆ ಕೊಟ್ಟು ಹೇಳಿದರು.*
*ಇದರಲ್ಲಿ ಅಲ್ಪ "ಮಣ್ಣು" ಮಾತ್ರವಿದೆ. ಈ ತನಕ ಇದನ್ನು ನಾನು ಸಂರಕ್ಷಿಸಿದ್ದೆ. ಇನ್ನು ಮುಂದೆ ಇದನ್ನು ನೀನು ಎಚ್ಚರಿಕೆಯಿಂದ ಸಂರಕ್ಷಿಸಬೇಕು.*
*ಇದು ಸಾಮಾನ್ಯ ಮಣ್ಣಲ್ಲ. ಈ ಮಣ್ಣನ್ನು ತಂದವರು ಮುಕರ್ರಬುಲ್ ಅಮ್ಲಾಕ್ ಮಲಕ್ ಜಿಬ್ರಿಲ್(ಅ) ರಾಗಿದ್ದಾರೆ.*
*ನನಗಿದನ್ನು ಹಸ್ತಾಂತರಿಸಿದ್ದು ನಮ್ಮ ತಂದೆಯವರಾದ ಅಲಿ(ರ)ರವರು. ಅವರಿಗೆ ನಮ್ಮ ಪಿತಾಮಹರಾದ ರಸೂಲ್ ಕರೀಂ ﷺ ರು ಹಸ್ತಾಂತರಿಸಿದ್ದರು.*
*ಇದನ್ನು ರಸೂಲ್ ಕರೀಂ ﷺ ರಿಗೆ ಜಿಬ್ರಿಲ್ (ಅ) ಹಸ್ತಾಂತರಿಸುವಾಗ ಒಂದು ವಿಷಯವನ್ನೂ ಹೇಳಿದ್ದಾರೆ.*
*ಅದೇನೆಂದರೆ, ಈ ಮಣ್ಣಿಗೆ ಸರಿ ಹೊಂದುವ ಮಣ್ಣು ಈ ಭೂಲೋಕದಲ್ಲಿ ಎಲ್ಲಿದೆಯೇೂ ಅಲ್ಲಿ ತಮ್ಮ ಕುಟುಂಬದ ಸದಸ್ಯರು ಹತರಾಗುವರು.*
*ಅಲ್ಲಿ ಅಸಹಾಯಕರಾದ ಸ್ತ್ರೀಯರು ಮತ್ತು ಮಕ್ಕಳೂ ಸಹ ನಿಷ್ಕರುಣೆಯಿಂದ ನಿರ್ದಯವಾಗಿ ಹತರಾಗುವರು. ಆದ್ದರಿಂದ ಈ ಮಣ್ಣನ್ನು ಇನ್ನು ಮುಂದೆ ನೀನು ಜತನದಿಂದ ಸಂರಕ್ಷಿಸ ಬೇಕು ಎಂದರು.*

*ಅದೇ ರೀತಿ ನಮ್ಮ ತಂದೆಯವರಾದ ಅಲಿಯ್ಯ್ ಬಿನ್ ಅಬಿ ತ್ವಾಲಿಬ್ (ರ) ರವರು ನನ್ನ ಬಳಿ ಒಂದು "ವಸಿಯ್ಯತ್" ಮಾಡಿದ್ದರು. ಅದೇನೆಂದರೆ,*
*ನನ್ನ ಸಹೇೂದರನಾದ ನಿನಗೆ ಯಾವ ಕೊರತೆಯೂ ಬಾರದಂತೆ ಚೆನ್ನಾಗಿ ನೋಡಿ ಕೊಳ್ಳಬೇಕು ಎಂದು.*

*ಅಲ್ಲಾಹನ ತೌಫೀಖ್'ನಿಂದ ನನ್ನ ಸಾಮರ್ಥ್ಯಕ್ಕನುಗುಣವಾಗಿ ನಿನಗೆ ಮತ್ತು ನಮ್ಮ ಕುಟುಂಬವಾದ "ಅಹ್ಲ್'ಬೈತ್"ಗೆ ಯಾವ ಕೊರತೆಯೂ ಬಾರದಂತೆ ಈ ತನಕ ನೋಡಿ ಕೊಂಡಿದ್ದೇನೆ.*
*ಇನ್ನು ನನ್ನಿಂದ ಸಾಧ್ಯವಿಲ್ಲ ಎಂದು ಅನಿಸುತ್ತದೆ. ಅದರಿಂದ ನಾಳೆ ಪರಲೋಕದಲ್ಲಿ ನನಗೆ ಎದುರಾಗಿ ಅಲ್ಲಾಹನಲ್ಲಿ ನೀನು ಆರೇೂಪಿಸಬಾರದು. ಎಂದು 'ವಸಿಯ್ಯತ್' ಮಾಡುವುದರೊಂದಿಗೆ "ಲಾ ಇಲಾಹ ಇಲ್ಲಲ್ಲಾಹ್" ಎಂಬ ಶಹಾದತು ತ್ತೌಹೀದ್ ಉಚ್ಚರಿಸುತ್ತಾ....*
       
*ಅಲ್ಲಾಹನ ಸೃಷ್ಟಿಗಳಲ್ಲೇ ಅತ್ಯುತ್ತಮರಾದ ಸಯ್ಯದುನಾ ಮುಹಮ್ಮದ್ ಮುಸ್ತಫಾ ﷺ ರಿಂದ ತಮ್ಮ ಹೃದಯದ ಎರಡು ಕುಸುಮಗಳೆಂದು ವರ್ಣಿಸಲ್ಪಟ್ಟ ಹಸನ್, ಹುಸೈನ್ (ರಲಿಯಲ್ಲಾಹು ಅನ್ಹುಮಾ) ಎಂಬ ಎರಡು ಅಮೂಲ್ಯ ಕುಸುಮಗಳ ಪೈಕಿ ಒಂದು ಪುಷ್ಪವು ಪರಲೇೂಕ ಪ್ರವೇಶಿಸುವುದರೊಂದಿಗೆ ಇಹಲೇೂಕದಿಂದ ಶಾಶ್ವತವಾಗಿ ಮರೆಯಾಯಿತು.*

ಇನ್ನಲಿಲ್ಲಾಹ್..... 😰😰

( _ಸೃಷ್ಟಿಕರ್ತನಾದ ಅಲ್ಲಾಹನ ರಸೂಲ್  ﷺ ರ ಮಡಿಲಲ್ಲಿ ಆಟವಾಡುತ್ತಾ ತುಂಟತನದಿಂದ ಆ ಉಜ್ವಲ ತಾರೆಯ ಮನಸ್ಸಿಗೆ ಮುದ ನೀಡಿ ಆಹ್ಲಾದಮಯಗೊಳಿಸಿದ ಆ ಮಹಾನುಭಾವರನ್ನು ಕಣ್ತುಂಬಾ ಕಾಣುವ ಸೌಭಾಗ್ಯಶಾಲಿಗಳ ಸಾಲಿನಲ್ಲಿ ನಮ್ಮೆಲ್ಲರನ್ನೂ ಅಲ್ಲಾಹನು ಸೇರಿಸಿ ಅನುಗ್ರಹಿಸಲಿ ಆಮೀನ್._ )

ತಮ್ಮ ಸಹೋದರನ ಜನಾಝವನ್ನು ಮನೆಯೊಳಗೆ ಮಲಗಿಸಿ ಆ ಕ್ರೂರ ವಂಚನೆಗೈದ ವಂಚಕನನ್ನು ಕಂಡು ಹಿಡಿಯುವ ಸಲುವಾಗಿ *ಹುಸೈನ್ (ರ)ರವರು ತಮ್ಮ ತಂದೆಯಾದ ಸಯ್ಯದುನಾ ಅಲಿ(ರ)ರಿಂದ ಬಳುವಳಿಯಾಗಿ ಲಭಿಸಿದ್ದ "ದುಲ್'ಫುಖಾರ್"* ಎಂಬ ಖಡ್ಗವನ್ನು ಎತ್ತಿ ಹಿಡಿದು *ಜಅದ(ರ)ರೊಂದಿಗೆ* ಕೇಳಿದರು..

ಹೇಳು ಈ ವಂಚನೆ ಎಸಗಿದವರಾರು..?

*ಹುಸೈನ್(ರ)ರವರ* ಆ ಸಿಂಹ ಘರ್ಜನೆಗೆ ಬೆಚ್ಚಿ ಬಿದ್ದ *ಜಅದ(ರ)....*

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 1⃣1⃣
**********************

*صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠

ತನ್ನ ಉಪಾಯ ಫಲಿಸುತ್ತಿದೆಯೆಂಬುದು ಮನವರಿಕೆಯಾದಾಗ *ಜಅಫರ್* ಒಳಗೊಳಗೆ ನಗುತ್ತಾ ಹೇಳಿದ.

ನಾನು ನಿನಗೆ ⬇

ಒಂದು ಮದ್ದು ಕೊಡುತ್ತೇನೆ.
ಅದನ್ನು ಅವರ ಅರಿವಿಗೆ ಬಾರದಂತೆ ಆಹಾರದಲ್ಲಿ ಬೆರೆಸಿ ಕೊಡಬೇಕು. ಆ ಮದ್ದು ಅವರ ಹೊಟ್ಟೆ  ಸೇರಿದರೆ ಮತ್ತೆ ಅವರಿಂದ ನಿನ್ನನ್ನು ದೂರ ಮಾಡಲು ಯಾರಿಂದಲೂ ಸಾದ್ಯವಿಲ್ಲ ಎಂದನು.

ಸಹೇೂದರನ ಕುತಂತ್ರದ ಅರಿವಿರದ ಆ ಸ್ತ್ರೀ ಹಿಂದೆ ಮುಂದೆ ಯೇೂಚಿಸದೆ ಸರಿ ಎಂದು ಒಪ್ಪಿದರು.

ಅದರಂತೆ ಮರುದಿನ *ಜಅಫರ್* ಒಂದು ಚಿಕ್ಕ ಪೊಟ್ಟಣವನ್ನು ತಂದು *ಜಅದ(ರ)* ರವರ ಕೈಗೊಪ್ಪಿಸಿದನು.

*ಜಅದ(ರ)* ಪೊಟ್ಟಣವನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಒಂದು ರೀತಿಯ ಪುಡಿ ಇತ್ತು.

*ಹಸನ್ (ರ) ರವರ ದಿನ ಚರ್ಯೆಗಳನ್ನು ಚೆನ್ನಾಗಿ ಬಲ್ಲ ಆ ಮಹಿಳೆ ಆ ಪುಡಿಯನ್ನು ಹಸನ್ (ರ)ರವರ ಹೊಟ್ಟೆ ಸೇರಿಸಲು ಒಂದು ಉಪಾಯ ಕಂಡು ಕೊಂಡರು.*

ದಿನನಿತ್ಯ *ತಹಜ್ಜುದ್* ನಮಾಜಿಗೆಂದು ರಾತ್ರಿ ಏಳುವ *ಹಸನ್ (ರ)ರವರಿಗೆ* ತಮ್ಮ ಕೊಠಡಿಯಲ್ಲಿದ್ದ ಹೂಜಿಯಿಂದ ನೀರು ಕುಡಿಯುವ ಅಭ್ಯಾಸವಿತ್ತು.
ಆ ನೀರಿನಲ್ಲಿ ತನ್ನ ಸಹೇೂದರ ಔಷಧವೆಂದು ಹೇಳಿ ಕೊಟ್ಟಿದ್ದ ಮಾರಕವಾದ ಆ ವಿಷವನ್ನು ಬೆರೆಸಿದರು..!

ಆ ವಿಷದ ಒಂದಂಶದಿಂದ ಎಂತಹ ಬಲಶಾಲಿಯಾದ ಆನೆಯನ್ನಾದರೂ ಕೂಡ ಕೆಲವೇ ನಿಮಿಷಗಳ ಅಂತರದಲ್ಲಿ ಕೊಲ್ಲಬಹುದಿತ್ತು.
ಅಷ್ಟರಮಟ್ಟಿಗೆ ಮಾರಕವಾದ ವಿಷವಾಗಿತ್ತು ಆ ಪುಡಿ.

ಆ ರಾತ್ರಿಯೂ ಎಂದಿನಂತೆ *ಬಹುಮಾನ್ಯರಾದ ಹಸನ್(ರ)* ತಡರಾತ್ರಿ ಎದ್ದು ಸ್ನಾನ ಮಾಡಿ ವುಲೂಅ್ ಮಾಡಿ ಬಂದವರು, ವಿಷ  ಬೆರೆಸಲ್ಪಟ್ಟ ನೀರಿನ ಹೂಜಿಯನ್ನು ಕೊಂಡೊಯ್ದು ಮುಸಲ್ಲೆಯಲ್ಲಿ ಕುಳಿತರು. ಆ ಹೂಜಿಯ ಮುಚ್ಚಳ ತೆರೆದರು.

*ಜಅದ(ರ)* ನಿದ್ರಿಸದೆ ಇದನ್ನೆಲ್ಲ ಗಮನಿಸುತ್ತಾ ತನ್ನ ಸಹೇೂದರ ಕೊಟ್ಟ ಮದ್ದನ್ನು ಬೆರೆಸಿದ ಆ ನೀರನ್ನು ಕುಡಿದರೆ ಖಂಡಿತವಾಗಿಯೂ ತನ್ನ ಪ್ರಿಯತಮನಿಗೆ ತನ್ನ ಮೇಲೆ ಪ್ರೇಮ ಹೆಚ್ಚಾದೀತೇ? ಇಲ್ಲವೇ?

ಒಂದು ವೇಳೆ ಪುಡಿ ಬೆರೆಸಿರುವುದರಿಂದ ನೀರಿನಲ್ಲೇನಾದರೂ ವಾಸನೆಯೇೂ ಅಥವಾ ರುಚಿಯಲ್ಲಿ ವ್ಯತ್ಯಾಸವೇೂ ಕಂಡು ಬಂದು ಕುಡಿಯದಿದ್ದರೇನು ಗತಿ? ಎಂದೆಲ್ಲ ಯೇೂಚಿಸುತ್ತಾ ತೊಳಲಾಡುತ್ತಿದ್ದರು.

(ಆದರೆ ಯಾವುದು ಯಾವಾಗ ಯಾರಿಂದ ಎಲ್ಲಿ ಹೇಗೆ ನಡೆಯಬೇಕೆಂದು ಜಗದೊಡೆಯನಾದ ಅಲ್ಲಾಹನ ವಿಧಿಯಿದೆಯೇೂ ಅದು ಘಟಿಸಬೇಕಾದ ಸಮಯ ಸನ್ನಿಹಿತವಾದಾಗ ಅದು ಸಂಭವಿಸದಿರಲಾರದು.)

*ಬಹುಮಾನ್ಯರಾದ ಸಯ್ಯಿದ್ ಹಸನ್ (ರ) ರವರು ಆ ಹೂಜಿಯ ಮುಚ್ಚಳ ತೆರೆದು ಬಾಯಿಗಿಟ್ಟು ಒಂದೆರಡು ಗುಟುಕು ನೀರು ಕುಡಿಯುತ್ತಿದ್ದಂತೆ ಗಂಟಲಿನಿಂದ ಹೊಟ್ಟೆಯ ತನಕ ಅಂದರೆ ಆ ನೀರು ಹೇೂದ ಭಾಗವೆಲ್ಲ ತಟಸ್ಥವಾದಂತಾಗಿ ಉರಿಯಲಾರಂಭಿಸಿತು.  ಸಹಿಸಲಾಗದೆ ಕೈಲಿದ್ದ ಹೂಜಿಯನ್ನು ನೆಲದಲ್ಲಿಟ್ಟು ಎದೆಯನ್ನು ಉಜ್ಜುತ್ತಾ ಎದ್ದು ನಿಂತರು.*
*ಎದೆ ನೋವಿನೊಂದಿಗೆ ಉರಿ ಸಹಿಸಲಾಗದಿದ್ದರೂ ಅಹ್ಲ್'ಬೈತಿನ ಕಣ್ಮಣಿಯಾದ ಆ ಮಹಾನ್ ಚೇತನ ತಹಜ್ಜುದ್ ನಮಾಝ್'ಗೆ ಅಲ್ಲಾಹು ಅಕ್ಬರ್ الله اكبر ಎಂದು ಕೈ ಕಟ್ಟಿದರು.*

ಆದರೆ ಅಸಹನೀಯವಾದ ವೇದನೆಯ ಕಾರಣ ನಮಾಝ್ ಮುಂದುವರೆಸುವುದಿರಲಿ ನಿಲ್ಲಲಿಕ್ಕೂ ತ್ರಾಣವಿಲ್ಲದೆ  ಯಾ ಅಲ್ಲಾಹ್... ಎಂದು ನರಳುತ್ತಾ ಕುಸಿದು ಬಿದ್ದರು.

ಅದೇ ಸಮಯಕ್ಕೆ ಪಕ್ಕದ ಕೊಠಡಿಯಲ್ಲಿ ತಹಜ್ಜುದ್ ನಮಾಝ್'ಗೆ ಅಣಿಯಾಗುತ್ತಿದ್ದ *ಹುಸೈನ್ (ರ) ರವರು* ಈ ನರಳಾಟವನ್ನು ಕೇಳಿ ಧಾವಿಸಿ ಬಂದು ಬಾಗಿಲ ಹತ್ತಿರ ನಿಂತು ಸಲಾಂ ಹೇಳಿದರು.

ನೋವಿನಿಂದ ಮಲಗಿ ಒದ್ದಾಡುತ್ತಿದ್ದ *ಹಸನ್ (ರ) ರವರು* ತಮ್ಮ ಪತ್ನಿ *ಜಅದ(ರ)ರೊಂದಿಗೆ* ಹೇಳಿದರು ಪ್ರಿಯೇ, ನೀನು ತುಸು ಆಚೆ ಹೋಗು.
ನನ್ನ ಸಹೇೂದರನಲ್ಲಿ ನನಗೆ ಸ್ವಲ್ಪ ಮಾತನಾಡಲಿಕ್ಕಿದೆ ಎಂದಾಗ *ಜಅದ(ರ)* ಅಲ್ಲಿಂದ ಹೊರ ಹೇೂದರು.

ಸಲಾಂಗೆ ಉತ್ತರಿಸಿದ *ಹಸನ್(ರ)ರವರು, ಹುಸೈನ್ (ರ) ರನ್ನು* ಒಳಗೆ ಕರೆದರು.
ಒಳಗೆ ಆಗಮಿಸಿದ *ಹುಸೈನ್ (ರ)* ನೋವಿನಿಂದ ಒದ್ದಾಡುತ್ತಿದ್ದ ತಮ್ಮ ಸಹೋದರನ ಹತ್ತಿರ ಕೇಳಿದರು.
ಏನಾಯಿತು ನಿಮಗೆ? ಏನು ಸಂಭವಿಸಿತು?

*ಹಸನ್ (ರ)ರವರು ಆ ಹೂಜಿಯತ್ತ ಬೆರಳು ತೋರಿಸಿದರು. ತಕ್ಷಣ ಹುಸೈನ್ (ರ)ರವರು ಆ ಹೂಜಿಯನ್ನು ಬೆಳದಿಂಗಳ ಬೆಳಕಿನಲ್ಲಿ ಪರಿಶೀಲಿಸುವ ಸಲುವಾಗಿ ಹೂಜಿಯನ್ನು ಹೊರಗೆ ಕೊಂಡೊಯ್ಯುವಾಗ ಕೈತಪ್ಪಿ ಹೂಜಿ ನೆಲಕ್ಕೆ ಬಿದ್ದ ಕಾರಣ ಹೂಜಿಯ ನೀರು ಹುಸೈನ್ (ರ)ರವರ ಕಾಲಿಗೆ ಚಿಮ್ಮಿ ಅವರ ಕಾಲು ಸುಟ್ಟಿತು. ಆಗ ಹುಸೈನ್(ರ)ರಿಗೆ ಈ ನೀರಿನಲ್ಲಿ ಮಾರಕವಾದ ವಿಷ ಬೆರೆಸಲಾಗಿದೆಯೆಂದು  ಮನವರಿಕೆಯಾಯಿತು.*

ತಮ್ಮ ಸಹೋದರನನ್ನು ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 1⃣0⃣
**********************
*صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *وَعَلَى آلِ سَيِّدِنَا مُحَمَّدٍ*
 *وَبَارِكْ وَسَلِّمْ عَلَيْه*
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠

ಏ... ಜಅಫರ್.... ⬇

*ಜಅಫರ್* ಎಲ್ಲಿ..?

ತಕ್ಷಣ ಜಅಫರ್ ಯಝೀದ್'ನ ಮುಂದೆ ಹಾಜರಾದನು.

( ಜಅಫರ್ ಎಂದರೆ ಹಸನ್ (ರ)ರವರ ಮೊದಲ ಪತ್ನಿಯಾದ ಜಅದ(ರ)ರ ಸಹೋದರ)

ತನ್ನ ಸೇನೆಯಲ್ಲಿ ಸೈನಿಕನಾಗಿದ್ದ *ಜಅಫರ್'ನೊಂದಿಗೆ ಯಝೀದ್* ಹೇಳಿದ,

 ಯಾ *ಜಅಫರ್...!* ಮದೀನದ ಆ ಯುವತಿ *ಉಮ್ಮುಲ್ ಹಕೀಮ್(ರ)* ಎಂಬುವಳನ್ನು ಖಲೀಫನಾದ ನಾನು ವರಿಸಲು ಶ್ರಮಿಸುತ್ತಿದ್ದರೆ ಅವಳು ನಿನ್ನ ಸಹೇೂದರಿಯ ಪತಿ *ಹಸನ್ (ರ) ರನ್ನು*  ಈಗಾಗಲೇ ಮರು ವಿವಾಹವಾಗಿದ್ದಾಳೆ.

 *ಅದರಿಂದ ಮದೀನ ನಿವಾಸಿಯಾದ ನೀನು ಹಸನ್(ರ)ರನ್ನು ವಧಿಸಿದರೆ ನಿನ್ನನ್ನು ಬಸರ'ದ ಗವರ್ನರ್ ಆಗಿ ನೇಮಕ ಮಾಡುತ್ತೇನೆ ಎಂದನು.*

ಯಝೀದ್'ನ ಗವರ್ನರ್ ಹುದ್ದೆಯ ಆಮಿಷಕ್ಕೊಳಗಾದ ಜಅಫರ್, ಹಸನ್(ರ) ರನ್ನು ಕೊಂದರೆ ತನ್ನ ಸಹೇೂದರಿ ವಿಧವೆಯಾಗಿ ಜೀವನ ಪರ್ಯಂತ ಕಣ್ಣೀರಿನಲ್ಲಿ ಬದುಕು ಕಳೆಯಬೇಕಾದೀತೆಂಬುದನ್ನೂ ಚಿಂತಿಸದೆ ಯಝೀದನ ಪೈಶಾಚಿಕ ವಂಚನೆಯ ಆಮಿಷಕ್ಕೆ ತಲೆದೂಗಿ ಸಮ್ಮತಿಸುವುದರೊಂದಿಗೆ ಮದೀನದತ್ತ ಹೊರಟೇ ಬಿಟ್ಟ.

ಮದೀನ ತಲುಪಿದ *ಜಅಫರ್* ನೇರವಾಗಿ ತನ್ನ ಸಹೇೂದರಿ *ಜಅದ (ರ)ಳ* ಮನೆಗೆ ತೆರಳಿ
ಸಹೇೂದರಿಯ ಯೇೂಗಕ್ಷೇಮ ವಿಚಾರಿಸಿದ ನಂತರ ಕೇಳಿದ..,

ಜಅದಾ(ರ)... ನಿನ್ನ ಪತಿ *ಹಸನ್ (ರ)*, ಉಮ್ಮುಲ್ ಹಕೀಮ್(ರ)ಳನ್ನು ಮದುವೆಯಾಗಿದ್ದಾರೆ ಅಲ್ಲವೇ?

ಹೌದು, *ಜಅಫರ್..* ಪಾಪ, ತಾಯಿ-ತಂದೆ ಬಂಧು ಬಳಗ ಯಾರೂ ಇಲ್ಲದ ಅವಳನ್ನು ಈ ಹಿಂದೆ *ನುಅ್'ಮಾನ್ (ರ)* ಎಂಬ ವ್ಯಕ್ತಿ ವಿವಾಹವಾಗಿದ್ದ.
 ಆದರೆ ಒಂದು ಸುಪ್ರಭಾತದಲ್ಲಿ ಅದೆಲ್ಲಿಗೇೂ ಹೋದವನು ಅದೇನಾಯಿತೇೂ ಏನೇೂ... ನಂತರ ವಿವಾಹ ವಿಚ್ಚೇದನಾ ಪತ್ರ ಕಳುಹಿಸಿದ್ದಾನೆ.
ಈಗ ಆತ ಎಲ್ಲಿದ್ದಾನೆ? ಏನು ಕತೆ? ಎಂದು ಇಲ್ಲಿ ಯಾರಿಗೂ ಗೊತ್ತಿಲ್ಲ. ನಂತರ ಒಬ್ಬಂಟಿಯಾಗಿ ಅಸಹಾಯಕಳಾಗಿದ್ದ ಅವಳ ಸಂರಕ್ಷಣೆ ಮತ್ತು ಭಾವೀ ಜೀವನದ ಹಿತದೃಷ್ಟಿಯಿಂದ *ಹಸನ್ (ರ)* ವಿವಾಹವಾಗಿದ್ದಾರೆ.

ಆಗ *ಜಅಫರ್* ಕೇಳಿದ..

*ಹಸನ್ (ರ)* ಮತ್ತು ನಿನ್ನ ನಡುವಿನ ಬಾಂಧವ್ಯ ಈಗ ಹೇಗಿದೆ?

ಅಲ್ ಹಮ್ದುಲಿಲ್ಲಾಹ್.... ಹಿಂದಿನಂತೆಯೇ ನಾವೀಗಲೂ ಬಹಳ ಸಂತೋಷದಿಂದ ಇದ್ದೇವೆ.

ಇದನ್ನು ಕೇಳಿದ *ಜಅಫರ್* ಹೇಳಿದ
ಸಹೇೂದರೀ.., 
ಒಂದು ವಿಷಯ ನಿನಗೆ ತಿಳಿದಿರಲಿ..  *ಉಮ್ಮುಲ್ ಹಕೀಮ್(ರ)* ಹಾಗೂ ನಿನ್ನ ನಡುವೆ ವಯಸ್ಸಿನ ಅಂತರ ಬಹಳವಿದೆ. ನಿನಗಿಂತಲೂ
ಅವಳು ಬಹಳ ಚಿಕ್ಕವಳು ಅಲ್ಲವೇ?

ಅಂದರೆ, ದಿನಗಳೆದಂತೆ *ಹಸನ್(ರ)ರಿಗೆ* ಹಿರಿ ವಯಸ್ಸಿನ ನಿನಗಿಂತಲೂ ಕಿರಿ ವಯಸ್ಸಿನ ಯುವತಿಯಾದ *ಉಮ್ಮುಲ್ ಹಕೀಮಳ (ರ)* ಮೇಲೆ ಪ್ರೇಮ ಹೆಚ್ಚಾಗಲಾರಂಭಿಸಿದರೆ ನಿನ್ನ ಮೇಲಿನ ಪ್ರೇಮ ಕಡಿಮೆಯಾಗುವುದಲ್ಲದೆ ಕೊನೆಗೊಂದು ದಿನ ನಿನ್ನನ್ನು ತ್ಯಜಿಸಿ ಆ ಯುವತಿಯ ಜೊತೆಗೆ ಹೋಗುವನು.
ಆಗ ನಿನ್ನ ಗತಿಯೇನಾಗಬಹುದೆಂದು ಯೇೂಚಿಸಿದೆಯಾ?

*ಆದ್ದರಿಂದ ಹಸನ್(ರ) ರನ್ನು ನಿನ್ನ ಕೈಬಿಟ್ಟು ಹೇೂಗದಂತೆ ಮತ್ತು ನಿನ್ನ ಮೇಲಿನ ಪ್ರೀತಿ ಕಡಿಮೆಯಾಗದಂತೆ ನೇೂಡಿಕೊಳ್ಳಬೇಕು. ಅದಕ್ಕಾಗಿ ನೀನೊಂದು ಕೆಲಸ ಮಾಡಬೇಕು.*

*ಜಅಫರ್'ನ ಈ ಬಣ್ಣದ ಮಾತುಗಳನ್ನು ನಿಜವೆಂದು ನಂಬಿದ ಜಅದ (ರ) ಕೇಳಿದಳು..,*
 ಅದಕ್ಕಾಗಿ ನಾನು ಏನು ಮಾಡಬೇಕು.? ಹೇಳು..

ತನ್ನ ಉಪಾಯ ಫಲಿಸುತ್ತಿದೆಯೆಂಬುದು ಮನವರಿಕೆಯಾದಾಗ *ಜಅಫರ್* ಒಳಗೊಳಗೆ ನಗುತ್ತಾ ಹೇಳಿದ.

ನಾನು ನಿನಗೆ.. ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 0⃣9⃣
**********************
*صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *وَعَلَى آلِ سَيِّدِنَا مُحَمَّدٍ*
 *وَبَارِكْ وَسَلِّمْ عَلَيْه*
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠

 ಹಾಗೆ ಉಮ್ಮುಲ್ ಹಕೀಮ್(ರ)ರವರ ⬇

*"ಇದ್ದ"ದ ಅವಧಿಯೂ ಮುಗಿಯಿತು.*

"ಇದ್ದ"ಕ್ಕೆ ಸಂಬಂಧಿಸಿದಂತೆ ದಿನಗಳನ್ನು ಎಣಿಸುತ್ತಿದ್ದ *ಯಝೀದ್* ಇದ್ದದ ಅವಧಿ ಮುಗಿಯುತ್ತಿದ್ದಂತೆ ಮತ್ತೊಂದು ಪತ್ರವನ್ನು ಸಿದ್ಧಪಡಿಸಿದನು.

ಅದು ಮತ್ತಾರಿಗೂ ಅಲ್ಲ, ತನ್ನ ಪ್ರಿಯತಮನಿಗೇನು ಸಂಭವಿಸಿರಬಹುದು? ಮತ್ತು ತನ್ನನ್ನೇಕೆ ತ್ಯಜಿಸಿದರು ಎಂದೊಂದೂ ತಿಳಿಯದೆ ಅಸಹಾಯಕತೆಯಿಂದ ಕೊರಗುತ್ತಾ ದಿನಗಳೆಯುತ್ತಿದ್ದ ಮಹದಿ *ಉಮ್ಮುಲ್ ಹಕೀಮ್ (ರ)ರವರಿಗಾಗಿತ್ತು.*

ತನ್ನ ನಂಬಿಕಸ್ಥನಾದ ದೂತನೊಬ್ಬನನ್ನು ಕರೆದು *ಯಝೀದ್* ಹೇಳಿದ,

ಇನ್ನೊಬ್ಬರ ಕಣ್ಣಿಗೆ ಬೀಳದಂತೆ ಬಹಳ ರಹಸ್ಯವಾಗಿ ನೀನು ಈ ಪತ್ರವನ್ನು ನೇರವಾಗಿ *ಉಮ್ಮುಲ್ ಹಕೀಮ್(ರ)ರ* ಕೈಗೆ ಕೊಡಬೇಕು.

ಆ ಪ್ರಕಾರ ದೂತನು ಪತ್ರದೊಂದಿಗೆ ಹೊರಟು,
*ಉಮ್ಮುಲ್ ಹಕೀಮ್(ರ)* ರವರ ಮನೆಯ ಸಮೀಪಕ್ಕೆ ತಲುಪಿದಾಗ..

 ಅದೇ ಸಮಯದಲ್ಲಿ ನಮಾಝ್ ಮುಗಿಸಿ ಮಸ್ಜಿದ್'ನಿಂದ ಉಮ್ಮುಲ್ ಹಕೀಂ(ರ)ರವರ ಮನೆಯ ಮುಂದೆ ಹಾದು ಹೋಗುತ್ತಿದ್ದ
*ಹಸನ್ (ರ) ರವರು ಆ ದೂತನನ್ನು ಕಂಡರು.*

ಉಮ್ಮುಲ್ ಹಕೀಮ್(ರ)ರವರ ಮನೆ ಸಮೀಪವೇ ದೂತನಿದ್ದುದರಿಂದ ಸಂಶಯದಿಂದ ಅವನನ್ನು ಕರೆದು ಯಾರು ನೀನು? ಇಲ್ಲೇನು ಕೆಲಸ ನಿನಗೆ ಎಂದು ಗದರಿಸಿದರು.

ಹಸನ್(ರ)ರನ್ನು ಕಂಡು ಭಯಭೀತನಾದ ಆ ದೂತ ಬಹುಮಾನ್ಯರಲ್ಲಿ ಉಮ್ಮಲ್ ಹಕೀಂ(ರ)ರವರಿಗೆ ಯಝೀದ್'ನ ಪತ್ರ ತಲುಪಿಸಲು ಬಂದಿರುವುದಾಗಿ ತಿಳಿಸಿದಾಗ..

*ಹಸನ್(ರ)* ಹೇಳಿದರು, ಸರಿ, ನೀನು ಹೋಗಿ
*ಉಮ್ಮುಲ್ ಹಕೀಮ್(ರ)* ರೊಂದಿಗೆ ಯಝೀದ್'ನನ್ನು ವಿವಾಹವಾಗಲು ಸಮ್ಮತವೇ ಎಂದು ಕೇಳು...

*ಆಗ ಅವಳು ಇಲ್ಲ ಎಂದರೆ..*
*ಹಸನ್ (ರ)ರವರನ್ನು ಸ್ವೀಕರಿಸುವೆಯಾ..?*
*ಎಂದು ಕೂಡ ನೀನು ಕೇಳಬೇಕು.*

ಸರಿ ಎಂದು ತಲೆಯಾಡಿಸಿದ ಆ ದೂತ *ಯಝೀದ್'ನ* ಪತ್ರವನ್ನು  ಕೊಂಡೊಯ್ದು *ಉಮ್ಮುಲ್ ಹಕೀಮ್(ರ)ರಿಗೆ* ಕೊಟ್ಟನು.

ಉಮ್ಮಲ್ ಹಕೀಮ್ (ರ) ಪತ್ರವನ್ನು ಬಿಡಿಸಿ ಓದಿದರು.

ಅದರಲ್ಲಿ ಹೀಗೆ ಬರೆಯಲಾಗಿತ್ತು..

  *🌹ಪ್ರೀತಿಯ ಉಮ್ಮುಲ್ ಹಕೀಮ್ (ರ) ತಿಳಿಯಲು ಖಲೀಫನಾದ ಯಝೀದ್ ಬರೆಯುತ್ತಿರುವ ಪತ್ರ..,*

*ವಿಷಯವೇನೆಂದರೆ....*
*ಸೈನಿಕನಾಗಿದ್ದ ನಿನ್ನ ಪತಿ ನಿನ್ನನ್ನು ತ್ವಲಾಖ್  ಹೇಳಿದ ವಿಷಯ ನನ್ನ ಗಮನಕ್ಕೆ ಬಂದಿದೆ....*

    *ಅದರಿಂದ ನೀನಿನ್ನು ಅದಕ್ಕಾಗಿ ದುಃಖಿಸುವ ಅಗತ್ಯವಿಲ್ಲ.*
*ಖಲೀಫನಾಗಿರುವ ನಾನು ನಿನ್ನನ್ನು ವಿವಾಹವಾಗಲು ಸಿದ್ಧನಿದ್ದೇನೆ..*

ಪತ್ರದ ಒಕ್ಕಣೆಯನ್ನು ಓದಿದ *ಉಮ್ಮುಲ್ ಹಕೀಮ್(ರ)* ಮನೆಯಿಂದ ಹೊರ ಬಂದು ಪತ್ರವನ್ನು ಆ ದೂತನ ಮುಖಕ್ಕೆಸೆದು ರೇೂಷಾವೇಶದಿಂದ ಹೇಳಿದರು,

*ಆ ವಂಚಕನಿಗೇನು ಮಾಡಲು ಬೇರೆ ಕೆಲಸವಿಲ್ಲವೇ...?*
*ಜೀವನ ಪರ್ಯಂತ ಹಸಿವೆಯಿಂದ ಉಪವಾಸ ಬಿದ್ದರೂ ಆ ನೀಚನನ್ನು ನಾನು ವರಿಸಲಾರೆ. ತೊಲಗಾಚೆ ಎಂದರು.*

ಉಮ್ಮುಲ್ ಹಕೀಮ್(ರ)ರವರ ರೇೂಷ ಕಂಡು ಕಕ್ಕಾಬಿಕ್ಕಿಯಾದ ಆ ದೂತ ಸ್ವಲ್ಪ ದೂರ ಹೇೂದವನು ತುಸು ಧೈರ್ಯ ತಂದು ಕೊಂಡು ಮತ್ತೆ ಉಮ್ಮುಲ್ ಹಕೀಮ್(ರ)ರತ್ತ ತಿರುಗಿ ಹೇಳಿದನು..

*ಯಝೀದ್'ನನ್ನು* ಪತಿಯಾಗಿ ಸ್ವೀಕರಿಸಲು ತಮಗೆ ಇಷ್ಟವಿಲ್ಲದಿದ್ದರೆ ಹೇೂಗಲಿ ಬಿಡಿ.

*ನಾನು ಬರುವ ದಾರಿಯಲ್ಲಿ ಹಸನ್ (ರ)ರವರನ್ನು ಭೇಟಿಯಾಗಿದ್ದೆ. ಅವರನ್ನು ಸ್ವೀಕರಿಸಲು ತಮಗೆ ಸಮ್ಮತವಿದೆಯೇ ಎಂದು ಕೇಳಲು ಹೇಳಿದ್ದಾರೆ ಎಂದಾಗ..*

ಈ ಮಾತು ಕೇಳಿ ರೇೂಮಾಂಚಿತರಾದ ಮಹದಿ *ಉಮ್ಮುಲ್ ಹಕೀಮ್ (ರ)*

ಮಾ ಷಾ ಅಲ್ಲಾಹ್.... ಎಂದು
ಅಲ್ಲಾಹನನ್ನು ಸ್ತುತಿಸುತ್ತಾ ಹೇಳಿದರು...
ಅಲ್ಲಾಹನ ರಸೂಲ್ ﷺ ರ ಮುದ್ದು ಮಗಳು ಸಯ್ಯಿದತುನಾ ಬೀವಿ ಫಾತಿಮತ್ ಝಹ್ರಾ (ರ) ರವರ ಕಣ್ಮಣಿಯಾದ ಹಸನ್ (ರ) ರವರು ನನ್ನನ್ನು ಪತ್ನಿಯಾಗಿ ಸ್ವೀಕರಿಸುವರಾದರೆ ಅದಕ್ಕಿಂತ ದೊಡ್ಡ ಸೌಭಾಗ್ಯ ನನಗೆ ಮತ್ತಿನ್ನೇನಿದೆ? ನನ್ನ ಸಂಪೂರ್ಣ ಸಮ್ಮತವಿದೆಯೆಂದು ತಿಳಿಸು ಎಂದರು.

*ವಿಷಯ ತಿಳಿದ ಹಸನ್ (ರ) ರವರು ಉಮ್ಮುಲ್ ಹಕೀಮ್(ರ)ರವರ ಸಂರಕ್ಷಣೆಯ ಸಲುವಾಗಿ ಅವರನ್ನು ಎರಡನೇ ಪತ್ನಿಯಾಗಿ ಸ್ವೀಕರಿಸಿದರು.*

ಈ ವಾರ್ತೆ ದೂತನ ಮೂಲಕ *ಯಝೀದ್' ನಿಗೆ* ತಲುಪಿದ್ದೇ ತಡ ರೇೂಷದಿಂದ ಕುದಿಯಲಾರಂಭಿಸಿದ.

ಕಾರಣ ಹಲವಾರು ವರ್ಷಗಳಿಂದ *ಉಮ್ಮುಲ್ ಹಕೀಮ್ (ರ)* ಎಂಬ ಸುಂದರ ಚೆಲುವೆಯ ಬಗ್ಗೆ ಅವನ ಅಂತರಂಗದಲಿ ಕಂಡಿದ್ದ ರಂಗು ರಂಗಿನ ಕನಸುಗಳೆಲ್ಲವೂ ಒಮ್ಮೆಲೆ ನುಚ್ಚು ನೂರಾಗಿದ್ದಷ್ಟೇ ಅಲ್ಲದೆ ಉಮ್ಮುಲ್ ಹಕೀಮ್(ರ)ರನ್ನು ಪಡೆಯುವ ಸಲುವಾಗಿ ಪಟ್ಟ ಪಾಡೆಲ್ಲವೂ ನಿರರ್ಥಕವಾಗಿದ್ದರಿಂದ ಕಂಗೆಟ್ಟ ಯಝೀದ್ *ಹಸನ್ (ರ)ರವರನ್ನೇ* ವಧಿಸಲು ತೀರ್ಮಾನಿಸಿ, ಕುಟಿಲ ತಂತ್ರ ಹೆಣೆದು ತನ್ನ ದೂತನೊಬ್ಬನನ್ನು ಕರೆದನು.

ಏ.. ಜಅಫರ್.... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 0⃣8⃣
**********************
*صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *وَعَلَى آلِ سَيِّدِنَا مُحَمَّدٍ*
 *وَبَارِكْ وَسَلِّمْ عَلَيْه*
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠

ತನ್ನ ಸಂತಸಕ್ಕೆ ಕಾರಣವಾದ ಆ ಸಂಗತಿಯನ್ನು ನುಅ್'ಮಾನ್ (ರ) ತನ್ನ ಪತ್ನಿಗೆ ಹೇಳಲಾರಂಭಿಸಿದರು ⬇

ಪ್ರಿಯೇ..
*ಇದು ಯಝೀದ್'ನ ಪತ್ರವಾಗಿದೆ. ಅವನೀಗ ಖಲೀಫನಾಗಿದ್ದು ನನ್ನನ್ನು ಗವರ್ನರ್ ಆಗಿ ನೇಮಿಸಿರುವುದಾಗಿಯೂ ಮತ್ತು ಕೂಡಲೇ ಹೇೂಗಿ ಮುಖತಃ ಭೇಟಿಯಾಗಬೇಕೆಂದೂ ಈ ಪತ್ರದಲ್ಲಿ ಸೂಚಿಸಿದ್ದಾನೆ.*

ಇದನ್ನು ಕೇಳಿದ *ಉಮ್ಮುಲ್ ಹಕೀಮ್ (ರ)* ಹೇಳಿದರು..

*ಯಝೀದ್'ನ* ಬಗ್ಗೆ ನಾನು ಚೆನ್ನಾಗಿ ಬಲ್ಲೆ ಆತನೊಬ್ಬ ಕ್ರೂರಿಯೂ, ವಂಚಕನೂ, ವಿಶ್ವಾಸದ್ರೇೂಹಿಯೂ ಆಗಿದ್ದಾನೆ, ಅವನ ಮಾತು ನಂಬಿಕೆಗೆ ಅರ್ಹವಲ್ಲ. ಹಾಗಾಗಿ ತಾವು ಅಲ್ಲಿಗೆ ಹೋಗುವುದೇ ಬೇಡ ಎಂದರು....

ಇಲ್ಲ ಪ್ರಿಯೇ..!

ಗವರ್ನರ್ ಹುದ್ದೆಗೆ ನಾನು ಮನವಿ ಸಲ್ಲಿಸಲಿಲ್ಲವಲ್ಲ? ಅವನೇ ನನ್ನನ್ನು ಆಮಂತ್ರಿಸಿರುವುದಲ್ಲವೇ? ಅಷ್ಟಕ್ಕೂ ಅವನಿಗೆ ನನ್ನ ಮೇಲೇನೂ ದ್ವೇಷವೂ ಇಲ್ಲ. ಯಾವುದಕ್ಕೂ ನಾನೊಮ್ಮೆ ಅಲ್ಲಿಗೆ ಹೋಗಿ ಬರುತ್ತೇನೆಂದು ಹೇಳಿ  *ನುಅಮಾನ್ (ರ)* ಡಮಾಸ್ಕಸ್'ಗೆ ಹೊರಟರು.

ಡಮಾಸ್ಕಸ್ ತಲುಪುತ್ತಿದ್ದಂತೆ ನೇರವಾಗಿ ಯಝೀದ್'ನ ಅರಮನೆಯತ್ತ ಹೆಜ್ಜೆ ಹಾಕಿದರು.

*ನುಅಮಾನ್ (ರ)ರನ್ನು ಕಂಡ ಯಝೀದ್ ಗೌರವಯುತವಾಗಿ ಬರ ಮಾಡಿಕೊಂಡು ಹೇಳಿದನು,*

*ನುಅಮಾನ್ (ರ)...*
ಗವರ್ನರ್ ಸ್ಥಾನಕ್ಕೆ ಆಮಂತ್ರಿಸಿದವರಲ್ಲಿ ಮೊದಲನೆಯದಾಗಿ ನನ್ನನ್ನು ಮುಖತಃ ಭೇಟಿ ಮಾಡಿದ ವ್ಯಕ್ತಿ ತಾವಾಗಿದ್ದೀರಿ.

ಬನ್ನಿ ಎನ್ನುತ್ತಾ ಬಾಗಿಲೊಂದನ್ನು ಬಿಟ್ಟರೆ ಕಿಟಿಕಿಗಳೂ ಇಲ್ಲದ ಕೋಣೆಯೊಂದಕ್ಕೆ ಕರೆದೊಯ್ದು ಕುಳ್ಳಿರಿಸಿದನು..!

ಬಳಿಕ *ನುಅಮಾನ್ (ರ)ರೊಂದಿಗೆ* ಹೇಳಿದನು,

*ನುಅಮಾನರೇ (ರ)*..! ನಾನು ತಮ್ಮನ್ನು ಗವರ್ನರ್ ಮಾಡಲು ತೀರ್ಮಾನಿಸಿರುವೆನು. ಆದರೆ ಅಧಿಕಾರ ವಹಿಸಿಕೊಳ್ಳುವ ಮುನ್ನ ನನ್ನ ನೀತಿ ನಿಯಮಗಳಿಗೆ ಬದ್ಧನಾಗಿ ಅದನ್ನು ಅನುಸರಿಸುವುದಾಗಿ ಕೆಲವು ಕಾಗದ ಪತ್ರಗಳಿಗೆ ತಾವು ಸಹಿ ಹಾಕಬೇಕು.
ಅದಕ್ಕೆ ತಾವು ಸಿದ್ಧರಿದ್ದೀರಾ..?

ಸರಿ ಎಂದು *ಯಝೀದ್'ನ* ಮಾತಿಗೆ ಸಮ್ಮತಿಸಿದರು.

ಒಂದನೇ ನಿಬಂಧನೆಯನ್ನು ಬಿಳಿ ಕಾಗದದಲ್ಲಿ *ಯಝೀದ್* ಬರೆದನು....

*"ಆಡಳಿತಾಧಿಕಾರಿಯಾದ ಯಝೀದ್ ಆಜ್ಞಾಪಿಸುವ ಎಲ್ಲಾ ಆಜ್ಞೆ ಆದೇಶಗಳನ್ನೂ ನಾನು ಅಂಗೀಕರಿಸಿ ಚಾಚೂ ತಪ್ಪದೆ ಪಾಲಿಸುತ್ತೇನೆ.*
*ಅಲ್ಲಾಹು ಸಾಕ್ಷಿ.."*

*ಯಝೀದೆಂಬ ವಂಚಕನ ವಂಚನೆಯ ಅರಿವಿರದ ನುಅ್'ಮಾನ್ (ರ) ಹಿಂದು ಮುಂದು ನೇೂಡದೆ ಸಹಿ ಹಾಕಿದರು.*

ಇದನ್ನು ಕಂಡು *ಯಝೀದ್* ವಿಕಟಾಟ್ಟಹಾಸಗೈಯ್ಯುತ್ತ ಹೇಳಿದನು.

*"ಅಲ್ಲಾಹನನ್ನು ಸಾಕ್ಷಿ ನಿಲ್ಲಿಸಿ ನೀನು ಸಹಿ ಹಾಕಿರುವೆ ನೆನಪಿರಲಿ" ಎಂದಾಗ.."*

*ನುಅ್'ಮಾನ್ (ರ) ಹೇಳಿದರು ಹೌದು ನಾನದನ್ನು ಬಲ್ಲೆ.*

ಸರಿ ಹಾಗಾದರೆ  ನನ್ನ ಮೊದಲ ಆದೇಶವೇನೆಂದರೆ..,

*"ನೀನು ನಿನ್ನ ಹೆಂಡತಿಯನ್ನು ತ್ವಲಾಖ್  ಹೇಳಬೇಕು..!!"*

*ಈ ಮಾತನ್ನು ಕೇಳಿದ ನುಅಮಾನ್ (ರ) ದಿಗ್ಭ್ರಾಂತರಾಗಿ ಇದೆಂತಾ ಮೇೂಸ? ಉಮ್ಮುಲ್ ಹಕೀಂ (ರ) ಳೊಂದಿಗೆ ನಾನು ನನ್ನ ಕೊನೆಯುಸಿರಿನ ತನಕವೂ ಸಂಸಾರ ಮಾಡುವೆನೆಂದು ಹಝ್ರತ್ತ್ ಅಲಿ (ರ) ರವರಿಗೆ ಮಾತು ಕೊಟ್ಟಿದ್ದೇನೆ.*

ಆಗ ಯಝೀದ್ ಕೇಳಿದ,

*"ನೀನು ಅಲ್ಲಾಹನಿಗೆ ಕೊಟ್ಟ ಮಾತು ಮುಖ್ಯವೇ...?*

*ಅಥವಾ ಅಲಿ(ರ)ರಿಗೆ ಕೊಟ್ಟ ಮಾತು ಮುಖ್ಯವೇ...?*

ಇದರಿಂದ ಸಂಧಿಗ್ದಕ್ಕೀಡಾದ ನುಅ್'ಮಾನ್ (ರ) ಗತ್ಯಂತರವಿಲ್ಲದೆ ವಿವಾಹ ಸಂಬಂಧ ಮುರಿಯುವ ತಲಾಖ್ ಪತ್ರಕ್ಕೆ ಸಹಿ ಹಾಕಿ ಅದನ್ನು ಮದೀನಕ್ಕೆ ಕಳುಹಿಸಿ ಕೊಟ್ಟರು.

ಈ ಪತ್ರವನ್ನು ಕಂಡ *ಉಮ್ಮುಲ್ ಹಕೀಮ್ (ರ)* ಬೆಚ್ಚಿ ಬಿದ್ದು ಬಿಕ್ಕಿ ಬಿಕ್ಕಿ ಆಳಲಾರಂಭಿಸಿದಳು.

ನಡೆದ ಘಟನೆಯ ನಿಜ ಸ್ಥಿತಿ ಅರಿಯದೆ ಭಾರವಾದ ಹೃದಯದೊಂದಿಗೆ ಆ ಮಹದಿ ತನ್ನ ಗುಡಿಸಿಲಿನಲ್ಲಿ ಏಕಾಂತವಾಗಿ ದಿನ ಕಳೆಯಲಾಂಭಿಸಿದರು.

ಇತ್ತ *ನುಅಮಾನ್(ರ)ರನ್ನು ಯಝೀದ್ ಕತ್ತಲೆ ಕೋಣೆಯೊಳಗೆ ಬಂಧನದಲ್ಲಿರಿಸಿದನು.*

ನಂತರದ ದಿನಗಳಲ್ಲಿ *ಉಮ್ಮುಲ್ ಹಕೀಮ್ (ರ)ರವರ* ಪೇೂಷಣೆಯ ಜವಾಬ್ದಾರಿಯನ್ನು *ಹಸನ್ (ರ)* ವಹಿಸಿಕೊಂಡರು.

ತಂದೆ-ತಾಯಿ, ಬಂಧು-ಬಳಗ ಯಾರೂ ಇಲ್ಲದ ಆ ಮಹದಿ ತನ್ನ ಮನೆಯಲ್ಲಿ ಒಬ್ಬಂಟಿಯಾಗಿ ದಿನ ಕಳೆಯುತ್ತಿದ್ದಳು.

ಉಮ್ಮುಲ್ ಹಕೀಮ್(ರ)ರವರ... ⬇

*ಮುಂದುವರಿಯುವುದು.*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 0⃣7⃣
**********************
*صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *وَعَلَى آلِ سَيِّدِنَا مُحَمَّدٍ*
 *وَبَارِكْ وَسَلِّمْ عَلَيْه*
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠

ಹಿಜರಿ ನಲವತ್ತರಲ್ಲಿ ಅಧಿಕಾರ ವಹಿಸಿಕೊಂಡ ಮುಆವಿಯಾ(ರ)ರವರು ಹಿಜರಿ ಅರುವತ್ತರ ತನಕ ಅಂದರೆ ಸುದೀರ್ಘ ಇಪ್ಪತ್ತು ವರ್ಷಗಳ ಕಾಲ ಸಮರ್ಥವಾಗಿ ಆಳ್ವಿಕೆ ನಡೆಸಿದರು. ⬇

ತಮ್ಮ ಆಡಳಿತದ ಕೊನೆಯ ಹಂತದಲ್ಲಿ ರೇೂಗ ಪೀಡಿತರಾದ ಮುಆವಿಯಾ(ರ)ರ ರೇೂಗವು ದಿನೇ ದಿನೇ ಉಲ್ಭಣಿಸುತ್ತಿದ್ದ ಕಾರಣ ಇನ್ನು ಆಡಳಿತ ನಡೆಸಲು ತಮ್ಮಿಂದಾಗದೆಂದು ಭಾವಿಸಿ ತಮ್ಮ ಪುತ್ರನಾದ *ಯಝೀದ್*'ನೊಂದಿಗೆ ಹೇಳಿದರು.

ಮಗನೇ..
ನಾನಿನ್ನು ಬಹುಕಾಲವೇನೂ ಬದುಕಿರಲಾರೆ. ಹಾಗಾಗಿ ನನ್ನ ಮರಣಾ ನಂತರ ಇಸ್ಲಾಮಿಕ್ ಆಡಳಿತವನ್ನು ನಿನ್ನ ಕೈಗೊಪ್ಪಿಸುತ್ತಿದ್ದೇನೆ. ನೀನು ಖುಲಫಾಉಲ್ ರಾಷಿದೀನ್'ಗಳ ಆಳ್ವಿಕೆಯನ್ನು ಅನುಸರಿಸಿ ಜನತೆಯ ಕುಂದು ಕೊರತೆಗಳನ್ನು ಪರಿಹರಿಸುತ್ತಾ ಮಾದರಿ ಯೇೂಗ್ಯವಾದ ಆಡಳಿತ ನಡೆಸಬೇಕು. ಮತ್ತು
ಅಹ್ಲ್'ಬೈತನ್ನು ತುಂಬು ಗೌರವದಿಂದಲೂ, ಪ್ರೀತಿಯಿಂದಲೂ ಕಾಣಬೇಕು.

ತಂದೆಯ ಉಪದೇಶವನ್ನು ಕೇಳಿದ *ಯಝೀದ್* ಅಪ್ಪಾ... ನಿಮ್ಮ ಮರಣಾ ನಂತರ ಅಧಿಕಾರ ಖಂಡಿತಾ ನನ್ನ ಕೈವಶವಾಗಲಿದೆಯೆಂಬುದನ್ನು ನಾನು ಬಲ್ಲೆ.

*ಖುಲಫಾಉಲ್ ರಾಷಿದೀನ್'ಗಳು* ಆಡಳಿತವನ್ನು ಹೇಗಾದರೂ ನಡೆಸಿರಲಿ. ಆದರೆ ನನ್ನ ಆಳ್ವಿಕೆ ಮಾತ್ರ ನನ್ನ ಮನೇೂಗತಿಯನ್ನು ಅವಲಂಬಿಸಿದ್ದಾಗಿರುತ್ತದೆ. ಅದರಿಂದ ಹೆಚ್ಚು ಉಪದೇಶವೇನೂ ಬೇಡ. ಹೇಗೆ ಆಳ್ವಿಕೆ ಮಾಡಬೇಕೆಂಬುದು ನನಗೆ ಗೊತ್ತು ಎಂದು ಮುಖಕ್ಕೆ ಹೊಡೆದಂತೆ ಹೇಳಿದನು.

ಕೆಲ ದಿನಗಳಲ್ಲೇ...

*"ಅಲ್ಲಾಹನ ವಿಧಿಯ ಕರೆ ಬಂದಾಗ ಪ್ರತಿಯೊಬ್ಬರೂ ಅವನ ವಿಧಿಗೆ ವಿಧೇಯರಾಗಲೇಕೆಂಬ"*
*ಖುರ್'ಆನಿನ ಈ ವಚನದಂತೆ ಮುಆವಿಯ (ರ) ರವರು ಈ ಲೋಕಕ್ಕೆ ವಿದಾಯ ಹೇಳಿದರು.* 😰
" إنا لله وإنا إليه راجعون "


ತಂದೆ ಮರಣಾಸನ್ನರಾಗಿದ್ದಾಗ ಬೇಟೆಗೆ ಹೋಗಿದ್ದ *ಯಝೀದ್* ಹಿಂದಿರುಗಿದಾಗ ತಂದೆಯವರ ಅಂತಿಮ ಕರ್ಮಗಳು ಮುಗಿದಿತ್ತು.

ದಫನ್ ಮುಗಿದ ನಂತರ  *ಯಝೀದ್* ಎಂಬ ಆ ಅಧಿಕಾರಮೇೂಹಿ ಅಧಿಕಾರ ವಹಿಸಿಕೊಂಡು ಸಿಂಹಾಸನವೇರಿದ್ದೇ ತಡ *ಬೈತುಲ್ ಮಾಲ್'ನಿಂದ ಅಹ್ಲುಬೈತ್'ಗೆ ಸಂಧಾಯವಾಗುತ್ತಿದ್ದ ಪೆನ್ಷನ್ ನಿಲ್ಲಿಸುವಂತೆ ಆಜ್ಞಾಪಿಸಿದನು.!!*

ಬಳಿಕ ಅವನ ಮನಸ್ಸು *ಉಮ್ಮುಲ್ ಹಕೀಮ್(ರ)ರತ್ತ* ಹೊರಳಿ, ಆ ಸುಂದರ ಚೆಲುವೆಯನ್ನು ತನ್ನವಳನ್ನಾಗಿಸಬೇಕೆಂದು ನಿರ್ಧರಿಸಿ *ಉಮ್ಮುಲ್ ಹಕೀಂ(ರ)* ಕುರಿತು ಮಾಹಿತಿ ನೀಡುವಂತೆ ತನ್ನ ದೂತರಿಗೆ ಆಜ್ಞಾಪಿಸಿದನು.

*ಈ ಬಗ್ಗೆ ಮಾಹಿತಿ ಕಲೆ ಹಾಕಲು ತೆರಳಿದ ದೂತ ಬಂದು ಅಲಿ (ರ) ರವರು ನುಅಮಾನ್ (ರ)ರಿಗೆ ಉಮ್ಮುಲ್ ಹಕೀಮ್(ರ)ರನ್ನು ವಿವಾಹ ಮಾಡಿ ಕೊಟ್ಟಿರುದಾಗಿ ತಿಳಿಸಿದನು.*

ನಂತರ *ಯಝೀದ್* ಇನ್ನೊಬ್ಬ ದೂತನೊಂದಿಗೆ ಪತ್ರವೊಂದನ್ನು ಕೊಟ್ಟು  ಮದೀನದಲ್ಲಿರುವ *ಉಮ್ಮುಲ್ ಹಕೀಮ್ (ರ)ರ ಪತಿ ನುಅ್'ಮಾನ್ (ರ)ಗೆ* ಈ ಪತ್ರವನ್ನು ತಲುಪಿಸುವಂತೆ ಹೇಳಿದನು.

ರಾಜಾಜ್ಞೆಯಂತೆ ದೂತನು ಮದೀನಕ್ಕೆ ತೆರಳಿ *ನುಅಮಾನ್ (ರ)ಗೆ ಆ ಪತ್ರವನ್ನು ಕೊಟ್ಟನು. ಪತ್ರ ಓದಿದ ನುಅಮಾನ್ (ರ)ರ ಸಂತಸ ಹೇಳ ತೀರದು.*

ಆಗ ಪತ್ನಿ *ಉಮ್ಮುಲ್ ಹಕೀಂ (ರ)* ಕೇಳಿದರು, ಏನಾಯಿತು? ಯಾಕಿಷ್ಟು ಸಂತೇೂಷದಿಂದ ಕುಣಿದಾಡುತ್ತಿದ್ದೀರಿ?

ಆಗ ತನ್ನ ಸಂತಸಕ್ಕೆ ಕಾರಣವಾದ ಆ ಸುವಾರ್ತೆಯನ್ನು ನುಅ್'ಮಾನ್ (ರ) ತನ್ನ ಪತ್ನಿಗೆ ಹೇಳಲಾರಂಭಿಸಿದರು.. ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 0⃣6⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠


ಮರುದಿನ ಪ್ರಭಾತಕ್ಕೆ ಮುನ್ನವೇ ಇಬ್ಬರೂ ಎಚ್ಚೆತ್ತರು. ಖತ್ವಾಮಿ ಮನೆಯ ಮತ್ತೊಂದು ಕೇೂಣೆಗೆ ತೆರಳಿದಳು ಅಲ್ಲಿಂದ ⬇

*ವಿಷ ಲೇಪಿತವಾದ ಖಡ್ಗವೊಂದನ್ನು ತಂದು ಇಬ್ನು ಮುಲ್'ಜಂ'ನ ಕೈಯಲ್ಲಿಟ್ಟು ಆಕ್ರೋಶದಿಂದ ಹೇಳಿದಳು...*

*"ಹೇೂಗು ನನ್ನ ತಂದೆ ಮತ್ತು ಪತಿಯನ್ನು ವಧಿಸಿದ ಆ ಘಾತಕನನ್ನು ವಿಷ ಪೂರಿತವಾದ ಈ ಖಡ್ಗದಿಂದ ವಧಿಸಿ ಬಾ..  ಮುಲ್'ಜಂ.."*

 ಖತ್ವಾಮಿಯಿಂದ ಖಡ್ಗವನ್ನು ಪಡೆದ ಇಬ್ನು ಮುಲ್'ಜಂ
ಬಹುಮಾನ್ಯರಾದ *ಅಲಿ (ರ) ರವರನ್ನು* ಹತ್ಯೆಗೈಯ್ಯುವ ದುರುದ್ದೇಶದೊಂದಿಗೆ ಅಲ್ಲಿಂದ ಹೊರ ಬಿದ್ದನು.

 *"ಖೈಬರ್ ಚಕ್ರವರ್ತಿಯೊಂದಿಗಿನ ಸೆಣೆಸಾಟದಲ್ಲಿ ತನ್ನ ಕೈಲ್ಲಿದ್ದ ಭರ್ಜಿ ಕೈತಪ್ಪಿದಾಗ ಖೈಬರ್ ಅರಮನೆಯ ಬೃಹತ್ತಾದ ಬಾಗಿಲನ್ನೇ ಎಡಗೈಯಿಂದ ಕಿತ್ತೆಗೆದು ಭರ್ಜಿಯಂತೆ ಹಿಡಿದು ಯುದ್ಧ ಮಾಡಿ ಖೈಬರ್ ಚಕ್ರವರ್ತಿಯನ್ನು ಸದೆ ಬಡಿದ ಇಸ್ಲಾಮಿನ ಕೆಚ್ಚೆದೆಯ ವೀರ, ಹುಲಿ ಮರಿಯೆಂದೇ ಪ್ರಸಿದ್ಧರಾದ ಅಲಿ ಹೈದರ್(ರ) ರವರ ಎದುರಿನಿಂದ ಹೇೂದರೆ ತನ್ನ ತಲೆ ಉಳಿಯದೆಂದು ಚೆನ್ನಾಗಿ ಬಲ್ಲವನಾಗಿದ್ದ ಇಬ್ನು ಮುಲ್'ಜಂ ಮತ್ತೊಂದು ತಂತ್ರ ಪ್ರಯೇೂಗಿಸಿದ."*

ಅದೇನೆಂದರೆ...

*ಹಝ್ರತ್ತ್ ಅಲಿ (ರ) ರವರು ಫಜರ್ ನಮಾಜಿಗಾಗಿ ತನ್ನ ಮನೆಯಿಂದ ಮದೀನ ಮಸೀದಿಗೆ ಹೋಗುವ ದಾರಿಯಲ್ಲಿ ಅಡಗಿ ಕುಳಿತನು.*

الصلوة خير من النوم
 الصلوة خير من النوم

الله أكبر الله أكبر  لااله إلا الله

ಮದೀನ ಮಸೀದಿಯಿಂದ ಫಜರಿನ ಅಝಾನ್ ಮೊಳಗಿತು....

ಅದೋ ಬರುತ್ತಿದ್ದಾರೆ..
*ಅಲಿ (ರ)*....

*ಕತ್ತಲಿನಲ್ಲಿ ಅಡಗಿ ಕುಳಿತಿದ್ದ ಆ ವಿಶ್ವಾಸ ದ್ರೇೂಹಿಯು ಚೂಪಾಗಿ ವಿಷ ಲೇಪಿತವಾದ ಆ ಖಡ್ಗದಿಂದ ಬಹುಮಾನ್ಯರ ಬೆನ್ನ ಹಿಂದಿನಿಂದ 🗡 ಇರಿದೇ ಬಿಟ್ಟ..!!*

" إنا لله وإنا إليه راجعون "

*ಸೈನ್ಯಕ್ಕೆ ಸೇರಲೆಂದು ಬಂದ ಇಬ್ನು ಮುಲ್'ಜಂ'ನನ್ನು ಮೊದಲ ಬಾರಿಗೆ ಕಂಡಾಗಲೇ ಅಲಿ (ರ) ರವರು "ನೀನು ನನ್ನ ಹಂತಕನಾಗುವುದನ್ನು ನಾನು ಕಾಣುತ್ತಿದ್ದೇನೆ" ಎಂದು ಹೇಳಿದ್ದ ಆ ಮಾತು ಬರೀ ಮಾತಾಗಿರಲಿಲ್ಲ. ಮುಂದೆ ನಡೆಯಲಿರುವ ಈ ಘಟನೆಯನ್ನು ಅಲ್ಲಾಹನು ಅಂದೇ ಅಲಿ(ರ)ರಿಗೆ (ಅವನು ಇಷ್ಟಪಡುವ ಮಹಾತ್ಮರಿಗಷ್ಟೇ ಕಾಣಲು ಮತ್ತು ಕೇಳಲು ಸಾದ್ಯವಾಗುವ ವಿಸ್ಮಯಕರವಾದ) ಇಲ್'ಹಾಮ್ ಮೂಲಕ ತೇೂರಿಸಿ ಕೊಟ್ಟಿದ್ದ*

ಹಾಗೆ *"ಖುಲಫಾಉಲ್ ರಾಷಿದ್" ಗಳೆಂಬ ಹೆಗ್ಗಳಿಕೆಗೆ ಪಾತ್ರರಾದ ಇಸ್ಲಾಮಿನ ನಾಲ್ಕು ಖಲೀಫರಲ್ಲೊಬ್ಬರಾದ ಸಯ್ಯದುನಾ ಅಲಿ ಬಿನ್ ಅಬೀ ತ್ವಾಲಿಬ್(ರ) ಇಹ ಲೋಕದಿಂದ ಶಾಶ್ವತವಾಗಿ ಮರೆಯಾದರು."* 😰

( _ಇಸ್ಲಾಮಿನ ಏಳಿಗೆಗಾಗಿ ಜೀವನ ಪರ್ಯಂತ ಅಸಂಖ್ಯ ಸವಾಲುಗಳನ್ನೆದುರಿಸುತ್ತಾ ಅಲ್ಲಾಹನ ಸಂತೃಪ್ತಿಗಾಗಿ ಆ ದಿಟ್ಟ ಧೀಮಂತ ನಾಯಕರು ಅನುಭವಿಸಿದ ತ್ಯಾಗ ಮತ್ತು ಬಲಿದಾನಗಳು ವರ್ಣನೆಗೆ ನಿಲುಕುವಂಥದ್ದಲ್ಲ. ಆ ಮಹಾತ್ಮರ ಹಕ್ಕ್'ಜಾಹ್ ಬರ್ಕತ್'ನಿಂದ ಸರ್ವಶಕ್ತನಾದ ಅಲ್ಲಾಹನು ನಮ್ಮೆಲ್ಲರ ಈಮಾನನ್ನೂ ಸಲಾಮತ್ ಮಾಡಲಿ ಆಮೀನ್._ )

*ಸಯ್ಯದುನಾ ಅಲಿ (ರ) ರವರ ಕಾಲಾನಂತರ ಇಸ್ಲಾಮಿಕ್ ಆಡಳಿತದ ನೇತೃತ್ವವನ್ನು ಮುತ್ತು ರಸೂಲ್ ﷺ ರವರ ಮೊಮ್ಮೊಗನೂ, ಅಲಿ (ರ) ಮತ್ತು ಫಾತಿಮಾ (ರ) ದಂಪತಿಗಳ ಪುತ್ರರತ್ನರೂ ಆದ ಸಯ್ಯದುನಾ ಹಸನ್ (ರ) ವಹಿಸಿಕೊಂಡರಾದರೂ ಅದಕ್ಕೂ ಮೊದಲೇ ಮುಸ್ಲಿಂ ಸಮುದಾಯದ ನಡುವೆಯೇ ಬೂದಿ ಮುಚ್ಚಿದ ಕೆಂಡದಂತೆ ಹಲವಾರು ಭಿನ್ನಾಭಿಪ್ರಾಯಗಳು ಹೊಗೆಯಾಡುತ್ತಿತ್ತು. ಸಾಲದ್ದಕ್ಕೆ ಮುಸ್ಲಿಂ ಸಮುದಾಯವು "ಶಿಯಾ ಮತ್ತು ಸುನ್ನೀ" ಎಂದು ಎರಡು ಹೇೂಳಾಗಿ ಪರಸ್ಪರರಲ್ಲಿ ಭಿನ್ನಮತ ತಾರಕಕ್ಕೇರಿದ್ದರಿಂದ ಸಯ್ಯದುನಾ ಹಸನ್(ರ) ರವರಿಗೆ ಖುಲಫಾಉಲ್ ರಾಶಿದುಗಳಂತೆ ಪಾರದರ್ಶಕವಾಗಿ ಆಡಳಿತ ನಡೆಸಲು ತಮ್ಮಿಂದ ಸಾಧ್ಯವಾಗದೆನಿಸಿದ್ದರಿಂದ ಕೂಫದ ಗವರ್ನರ್ ಆಗಿದ್ದ ಮುಆವಿಯ (ರ) ರವರನ್ನು ಮದೀನಕ್ಕೆ ಕರೆಸಿ ಅವರೊಂದಿಗೆ ಹಸನ್ (ರ) ರವರು ಹೇಳಿದರು, ಭಿನ್ನಮತದಿಂದ ಒಡೆದು ಹೇೂಳಾಗುತ್ತಿರುವ ಮುಸ್ಲಿಂ ಸಮುದಾಯವನ್ನು ಒಂದು ಕೊಂಡಿಯಲ್ಲಿ ಜೋಡಿಸಿ ಐಕ್ಯದೊಂದಿಗೆ ಕೊಂಡೊಯ್ಯುತ್ತಾ ಆಳ್ವಿಕೆ ನಡೆಸಲು ನನ್ನಿಂದ ಸಾಧ್ಯವಾಗಬಹುದೆಂದು ನನಗನಿಸುತ್ತಿಲ್ಲ. ಅದರಿಂದ ಅರೇಬಿಯಾದ ಇಸ್ಲಾಮಿಕ್ ಆಡಳಿತವನ್ನು ತಾವು ವಹಿಸಿಕೊಂಡು ಸಮುದಾಯದ ನಡುವೆ ತಲೆದೋರಿರುವ ಭಿನ್ನಮತವನ್ನು ಶಮನ  ಮಾಡಿ ಸಮರ್ಥವಾಗಿ ಆಳ್ವಿಕೆ ನಡೆಸುವುದರೊಂದಿಗೆ "ಬೈತುಲ್ ಮಾಲ್" ಎಂಬ ಖಜಾನೆಯಿಂದ 'ಅಹ್ಲ್'ಬೈತಿಗೆ' ಇಂತಿಷ್ಟು ಅಂತ ಪೆನ್ಷನ್ ಕೊಡಬೇಕು.* ಎಂದಾಗ
ಮುಆವಿಯಾ(ರ)ರವರು ಹಝ್ರತ್ ಹಸನ್ (ರ)ರವರ ಬೇಡಿಕೆಗಳನ್ನು ತುಂಬು ಗೌರವದಿಂದ ಅಂಗೀಕರಿಸಿ ಈಡೇರಿಸುತ್ತಾ ಸಮರ್ಥವಾಗಿ ಆಡಳಿತ ನಡೆಸುವ ಭರವಸೆಯೊಂದಿಗೆ ಅಧಿಕಾರ ವಹಿಸಿಕೊಂಡರು.

*_ಹಾಗೆ ಮುಆವಿಯಾ (ರ) ಖಲೀಫರಾಗಿ ಆಡಳಿತದ ಚುಕ್ಕಾಣಿ ಹಿಡಿಯುತ್ತಿದ್ದಂತೆ 'ಉಮವಿಯ್ಯ ಆಡಳಿತ' ಆರಂಭವಾಯಿತು._*

ಆ ತನಕ ಮದೀನಾ ಇಸ್ಲಾಮಿಕ ರಾಷ್ಟ್ರದ ರಾಜಧಾನಿಯಾಗಿತ್ತು. ಮುಆವಿಯಾ(ರ) ಅಧಿಕಾರ ವಹಿಸಿಕೊಂಡ ನಂತರ ರಾಜದಾನಿಯು ಮದೀನಾದಿಂದ ಸಿರಿಯಾದ ಡಮಸ್ಕಸ್'ಗೆ ಸ್ಥಳಾಂತರವಾಯಿತು.

ಸುಂದರವಾದ ಆಡಳಿತ ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰

Sunday, March 18, 2018

*ಎಪಿ ಉಸ್ತಾದರಿಗೆ ಐಶರಾಮಿ ಕಾರು ಸಿಗಲು ಕಾರಣಕರ್ತನಾದ ಸಳಪಿ ಇದೀಗ ಮೀನು ಮಾರುತ್ತಿದ್ದಾನೆ..!*

-----------ಅಬೂಶಝ---------

ಪ್ರಸ್ತುತ ಘಟನೆಯನ್ನು
TC ಉಸ್ತಾದ್ ಎಂದೇ ಕರೆಯಲ್ಪಡುವ
 ಟಿ ಸಿ ಮುಹಮ್ಮದ್ ಮುಸ್ಲಿಯಾರರ ಭಾಷೆಯಲ್ಲೇ ಕೇಳೋಣ.

ಟೊಯೋಟ ಕಂಪನಿಯ ಏಜೆನ್ಸಿಯೂ, ಧನಿಕನೂ ಆದ *ಸ‌ಈದ್ ಅಲ್'ಉತೈಬ* ಎಂಬ ಅರಬಿ ,ಮಸೀದಿಯಿಂದ ನಮಾಜು ಮುಗಿಸಿ ಹೊರಬರುವುದು ನಾನು ಒಳಗೆ ಪ್ರವೇಶಿಸುವುದು ಒಮ್ಮಲೆ ಆದಾಗ ಆಕಸ್ಮಾತ್ ಪರಸ್ಪರ ಡಿಕ್ಕಿ ಹೊಡೆದವು.
ಡಿಕ್ಕಿಯ ರಭಸಕ್ಕೆ ನನಗೆ ತುಂಬಾ ನೋವಾಯಿತು.ಅವರಿಗೂ ನೋವಾಗಿರಬಹುದು!
ಸಿಡಿಮಿಡಿಗೊಂಡ ಅವರು ಕೋಪದಿಂದ ನನ್ನನ್ನೇ ದುರುಗುಟ್ಟಿ ನೋಡಿದಾಗ ನಾನು ಬೇಗ ಹೋಗಿ ಅವರನ್ನು ಅಪ್ಪಿ ಹಿಡಿದು ಸಮಾಧಾನ ಹೇಳಿದೆ. ಅವರಿಗೆ ತುಂಬಾ ಖುಷಿಯಾಯಿತು.
ಪರಸ್ಪರ ಪರಿಚಯವಾಯಿತು.

ನಂತರ ಅರಬಿಯ ವಾಸಸ್ಥಳ ಕೇಳಿ ತಿಳಿದು ನೋಟ್ ಮಾಡಿಟ್ಟೆ.
ಆನಂತರ ಎಪಿ ಉಸ್ತಾದರನ್ನು ಮತ್ತು ಮರ್ಕಝ್'ನ್ನು ಅವರಿಗೆ ಪರಿಚಯ ಮಾಡಿಸಿದೆ.
ಒಂದು ರಮಳಾನ್'ನಲ್ಲಿ ಎಪಿ ಉಸ್ತಾದ್ ಬಂದಾಗ ಎಲ್ಲೆಡಗೆ ಸಂಚರಿಸಲು ಅವರು ವಾಹನ ಕೊಟ್ಟಿದ್ದರು.
*ಸಹೀದ್ ಅಲ್'ಉತೈಬ* ರವರ ಪುತ್ರ *ಅಬೂಮುಹಾನ* ಅಲ್ಲಿನ ಸರಕಾರದ ಮಂತ್ರಿಯಾಗಿದ್ದರು.
ಈ ಮಂತ್ರಿಯ ಮನೆಯಲ್ಲಿ ಒಬ್ಬ ಡ್ರೈವರಿದ್ದ.
ಅವನೊಬ್ಬ ಸಳಪಿ!
ಜೊತೆಗೆ ಮುಸ್ಲಿಂ ಲೀಗ್ ರಾಜಕೀಯ ತಲೆಗೆ ಅಡರಿತ್ತು.
ಎಪಿ ಉಸ್ತಾದರಿಗೆ ಸಂಚರಿಸಲು ಕಾರು ಮತ್ತು ಎಲ್ಲಾ ಸೌಕರ್ಯಗಳನ್ನು ಮಂತ್ರಿಯ ತಂದೆ ಕೊಟ್ಟಾಗ ಇದನ್ನು ನೋಡಿದ  ಡ್ರೈವರ್ ಸಳಪಿಯ ಪಿತ್ತ ನೆತ್ತಿಗೇರಿತ್ತು! ಅಸೂಯೆಯಿಂದ ಕಂಗಲಾದ ಸಳಪಿ,ಅಲ್ ಉತೈಬಿಯ ಪುತ ರನಾದ ಮಂತ್ರಿಯಲ್ಲಿ  ಎಪಿ ಉಸ್ತಾದರ ವಿರುದ್ಧ ಇಲ್ಲಸಲ್ಲದ ಗಂಭೀರ ಆರೋಪ ಹೊರೆಸಿ ಫಿತ್ನ ಮಾಡಿದ!

ಅವನ ಆರೋಪ ಹೀಗಿತ್ತು....
*"ಎಪಿ ಮುಸ್ಲಿಯಾರ್ ಇಲ್ಲಿಂದ ಹಣ ಕಲೆಕ್ಷನ್ ಮಾಡಿ ಕೇರಳದ ಪೂನೂರು ಎಂಬಲ್ಲಿ ಸ್ವಂತವಾಗಿ ದೊಡ್ಡ ರಿಯಲ್ ಎಸ್ಟೇಟ್ ಮಾಡಿದ್ದಾರೆ,ಬಡಗರ ಎಂಬಲ್ಲಿ ಚಿನ್ನದ ಅಂಗಡಿಯಲ್ಲಿ ಪಾಲುದಾರಿಕೆ ಇದೆ,ಮರ್ಕಝ್ 'ನ ಆಧಾರ ಎಪಿ ಯ ಸ್ವಂತ ಹೆಸರಿನಲ್ಲಿದೆ "ಎಂದೆಲ್ಲಾ ಸುಳ್ಳು ಹೇಳಿದ."*
ಮಂತ್ರಿಯಾದ ಪುತ್ರ ಇದೆಲ್ಲವನ್ನು ತಂದೆ ಅಲ್'ಉತೈಬರಲ್ಲಿ ಹೇಳಿದಾಗ ಅವರು ತುಂಬಾ ಕೋಪಗೊಂಡರು.
ರಮಳಾನ್ ಕಳೆದು ಒಂದು ತಿಂಗಳ ನಂತರ ಎಪಿ ಉಸ್ತಾದರು ಪುನಃ ಇದೇ ಅರಬಿಯ ಮನೆಗೆ ಬೇಟಿಕೊಟ್ಟಾಗ ಅವರು ಮಾತನಾಡದೆ ಹಿಂಜರಿದರು.
ಮಜ್ಲಿಸ್ ನಲ್ಲಿ ಸೇರಿದ ಜನರೆಲ್ಲಾ ಹೋದ ನಂತರ ಅರಬಿ ಅಲ್'ಉತೈಬ ಎಪಿ ಉಸ್ತಾದರತ್ತ ತಿರುಗಿ ತುಂಬಾ ಕಠಿಣ ಶಬ್ದ ಬಳಸಿ  ಉಸ್ತಾದರನ್ನು ತರಾಟೆಗೆ ತೆಗೆದುಕೊಂಡರು.
ಆಗ ಚಂಗರೋತ್ತ್ ಇಬ್ರಾಹಿಮ್ ಹಾಜಿ, ನಾನು ಮತ್ತು ಎಪಿ ಉಸ್ತಾದ್ ಮೂವರು ಮಾತ್ರ ಇದ್ದೆವು.
ಅರಬಿ ಮಾತನಾಡುತ್ತಾ ನೀವು ವಿಶ್ವಾಸ ವಂಚಕರು,ಸುಳ್ಳು ಹೇಳುವವರು ಎಂದೆಲ್ಲಾ ಅರೋಪಿಸಲು ಶುರುಮಾಡಿದಾಗ ತಟ್ಟನೆ ಎದ್ದು ನಿಂತು ಎಪಿ ಉಸ್ತಾದರು ಹೇಳಿದರು.

*"ನೀವು ಅಲ್ಲಾಹನನ್ನು ಮೆರೆತು ಮಾತನಾಡಬಾರದು ನಾಳೆ ಮಹ್'ಷರದಲ್ಲಿ ನಿಮ್ಮನ್ನು ನಾನು ಎದುರಿಸಬೇಕಾಗಿ ಬರಬಹುದು!"*
ಎಪಿ ಉಸ್ತಾದರ ಈ ಮಾತು ಕೇಳಿದಾಗ ಅರಬಿ ತಟಸ್ಥರಾದರು!

ನಂತರ ಅವರು ಹೇಳಿದರು
*"ಸರಿ,ಶೈಖ್ ಅಬೂಬಕರ್ ತಾವು ನಿಜಸ್ಥಿತಿ ವಿವರಿಸಿ"*
ಆಗ ಎಪಿ ಉಸ್ತಾದ್ ಹೇಳಿದರು

*"ತಾವು ಇದು ಮನಪೂರ್ವಕ ಹೇಳುವುದಲ್ಲವೆಂದು ನನಗೊತ್ತು.ಯಾರೋ ನಿಮ್ಮಲ್ಲಿ ನನ್ನ ಕುರಿತು ತಪ್ಪುಗ್ರಹಿಕೆ ಮೂಡಿಸಿದ್ದಾರೆ"*

ಆವಾಗ ಅರಬಿ ಕೂಲಾಗಿ ಹೇಳಿದರು
*"ನೀವು ನಿಮ್ಮ ಪುರಾವೆ ಹಾಜರುಪಡಿಸಬೇಕು"*

ಆಯಿತು, ಹಾಜರುಪಡಿಸುತ್ತೇನೆಂದು ಹೇಳಿ ಎಪಿ ಉಸ್ತಾದ್ ಹೊರಡಲನುವಾದಾಗ ಅರಬಿ ತಮ್ಮ ಎಂದಿನ ಶೈಲಿಯಲ್ಲಿ ಚಹಾ ಕೂಟಕ್ಕೆ ಅಹ್ವಾನಿಸಿದಾಗ ಎಪಿ ಉಸ್ತಾದರ ಪ್ರತಿಕ್ರಿಯೆ ಈ ರೀತಿಯಾಗಿತ್ತು.

*"ಈ ವಿಷಯ ಇತ್ಯರ್ಥವಾದ ಮೇಲೆ ಇನ್ಶಾಅಲ್ಲಾ ಚಹಾ ಕುಡಿಯುವ"*
ಅರಬಿ ಸಮ್ಮತಿಸಿದರು.
ಅಲ್ಲಿಂದ ಹೊರನಡೆದ ಉಸ್ತಾದ್ ಕೂಡಲೇ ಮರ್ಕಝ್'ಗೆ ಫೋನ್ ಮಾಡಿ ಮರ್ಕಝ್'ನ ಆಧಾರ/ಮರ್ಕಝ್ ಕಾಂಪ್ಲಕ್ಷ್'ನ ಮಲಯಾಳದಲ್ಲಿರುವ  ಆಧಾರವನ್ನು ಇಂಗ್ಲೀಷ್ ಗೆ ಭಾಷಾಂತರಿಸಿ ರಿಜಿಸ್ಟ್ರಾರ್ ಅಧಿಕಾರಿಯಿಂದ ಎಟಸ್ಟ್ ಮಾಡಿ ಇಡಿ ನಾಲ್ಕು ದಿವಸ ಕಳೆದು ನಾನು ಊರಿಗೆ ಬರುತ್ತೇನೆಂದು ಹೇಳಿ ಫೋನ್ ಡಿಶ್'ಕನಕ್ಟ್ ಮಾಡಿದರು.

*(ಮರ್ಕಝ್'ಗೆ ಜಾಗ ಖರೀದಿ ಮಾಡುವಾಗ ಮರ್ಕಝ್ ನ ರೆಖಾರ್ಡ್ ಅಂದಿನ ಮರ್ಕಝ್ ಪ್ರಸಿಡೆಂಟ್ ಆಗಿದ್ದ ಶಂಸುಲ್ ಉಲಮಾ ಈಕೆ ಉಸ್ತಾದರ ಹೆಸರಲ್ಲಾಗಿತ್ತು ಇದ್ದದ್ದು.*
*ಕಾಂಪ್ಲೆಕ್ಸ್'ನ ಪ್ರಧಾನ ಬಿಲ್ಡಿಂಗ್ ನಿರ್ಮಾಣವಾಗುವಾಗಲೂ ಶಂಸುಲ್ ಉಲಮಾ ಅದ್ಯಕ್ಷರಾಗಿದ್ದರಿಂದ ಅದರ ಆಧಾರವೂ ಈಕೆ ಉಸ್ತಾದರ ಹೆಸರಿನಲ್ಲಾಗಿತ್ತು*

*ಏಯ್'ತ್ತಚ್ಚನ್'ಕಂಡಿ ಕೋಯಕುಟ್ಟಿ ಮುಸ್ಲಿಯಾರ್'ರವರ ಪುತ್ರ ಅಬೂಬಕರ್ ಮುಸ್ಲಿಯಾರ್ ಎಂದು ಆಧಾರದಲ್ಲಿ ನಮೂದಿಸಲಾಗಿತ್ತು.*

*ಆದರೆ ಕಾಂಪ್ಲೆಕ್ಸ್ ನ ಸಮೀಪವಿರುವ ಮಸೀದಿ ಮತ್ತು ಕಟ್ಟಡಗಳು ನಿರ್ಮಾಣವಾಗುವಾಗ ಸೆಯ್ಯದ್ ಅವೇಲತ್ ತಂಙಳ್ ಅಧ್ಯಕ್ಷರಾಗಿದ್ದರು.
ಹಾಗಾಗಿ ಅದರ ಆಧಾರ ಅವರ ಹೆಸರಿನಲ್ಲಾಗಿತ್ತು)

ನೂರು ರೂಪಾಯಿಯ ಮುದ್ರೆ(ಚಾಪೆ)ಪೇಪರ್ 'ನಲ್ಲಿ K ಅಬ್ದುಲ್ ಹಮೀದ್ ಸಾಹಿಬ್ ರವರು ಇಂಗ್ಲೀಷ್'ಗೆ ಭಾಷಾಂತರಿಸಿ DTP ಟೈಪ್ ಮಾಡಿ ಎಟಸ್ಟ್ ಮಾಡಿಸಿ ಊರಿನಿಂದ ಬರುವ ಒಬ್ಬರಲ್ಲಿ ಕಳುಹಿಸಿ ಕೊಟ್ಟು ನನ್ನ ಕೈ ಸೇರಿತು!

ಸಹೀದ್ ಉತೈಬ ಹಿರಿಯ ತಲೆಮಾರಿನ ವ್ಯಕ್ತಿಯಾದುದರಿಂದಲೇ ಇಂಗ್ಲೀಷ್ ಭಾಷೆಯಲ್ಲಿ ಅಷ್ಟೊಂದು ಹಿಡಿತವಿರಲಿಲ್ಲ
ಆದ್ದರಿಂದಲೇ ಕಣ್ಣೂರು ಯೂಸುಫ್ ಹಾಜಿಯವರ ಟೈಪಿಂಗ್ ಸೆಂಟರ್'ನಲ್ಲಿ ಅದನ್ನು ಅರಬಿ ಭಾಷೆಗೆ ಭಾಷಾಂತರಿಸಿ
ಈ ಮೂರು ಕೋಪಿಯನ್ನು ಹಿಡಿದುಕೊಂಡು
ಹೋಗಿ ಸಹೀದ್ ಅಲ್'ಉತೈಬರ ಕೈಗೆ ಕೊಟ್ಟೆ.
ಅದರಲ್ಲಿರುವ *ಎಯ್'ತ್ತಚ್ಚನ್ ಕಂಡಿ ಅಬೂಬಕರ್ ಎಂದು ಕಂಡಾಗ ಅದು ಎಪಿ ಅಬೂಬಕರ್ ಹೌದಾ*
ಎಂದು ಸಂಶಯವಾಗಿ
ಈ ಅರಬಿಯ ಟೋಯೋಟಾ ಶೋ ರೂಮ್' ಮೇನೇಜರ್ ಎರ್ನಾಂಕುಳಂನ ಒಬ್ಬ ಕ್ರಿಶ್ಚಿಯನ್ ಮತಾನುಯಾಯಿಯ ಕೈಯಲ್ಲಿ ಕೊಟ್ಟು ಪರಿಶೀಲಿಸಿ ಅದೆಲ್ಲವೂ ಸತ್ಯವೆಂದು ಅರಿತು ತನ್ನ ಪುತ್ರನ ಡ್ರೈವರ್ ಹೇಳಿದ್ದು ಸುಳ್ಳು ಎಂದು ಮನದಟ್ಟಾದಾಗ,
*ಅದೇ ಶೋ ರೂಮ್'ನಿಂದ ಎಪಿ ಉಸ್ತಾದರಿಗೆ ಫೋನ್ ಮಾಡಿದ ಅರಬಿ ತುಂಬಾ ಹೊತ್ತು ಅತ್ತು ಉಸ್ತಾದರಲ್ಲಿ ಕ್ಷಮೆ ಕೋರಿದರು.*
(ಅದು ಅರಬಿಗಳ ವಿನಯದ ಒಳ್ಳೆಯ ಗುಣ)

*ಈ ಸಂತೋಷದಿಂದ ಅಂದು ಕೇರಳಕ್ಕೆ ಒಂದು ಐಷರಾಮಿ ಕಾರು ಬಂತು.*
*ಅದು ಟೋಯೋಟಾ ಕಂಪೆನಿಯ ಏಜೆನ್ಸಿ ಕೂಡಾ ಆಗಿದ್ದ ಸಹೀದ್ ಉತೈಬ ಎಪಿ ಉಸ್ತಾದರಿಗೆ ಕೊಟ್ಟ ಗಿಫ್ಟ್ ಆಗಿತ್ತು!*

*ಸಳಪಿ ಫಿತ್ನ ಮಾಡಿದ್ದರಿಂದ ಉಸ್ತಾದರಿಗೆ ಟೋಯೋಟಾ ಕಾರೊಂದು ಗಿಫ್ಟ್'ಆಗಿ ಸಿಕ್ಕಿತ್ತು.!*

ಮಂತ್ರಿಯಾದ ಪುತ್ರನಿಗೂ ವಿಷಯ ಮನದಟ್ಟಾದಾಗ ತಂದೆಯಲ್ಲಿ ಸಮಾಲೋಚಿಸಿ ಸಳಪಿ ಡ್ರೈವರ್'ನನ್ನು ಅವನು ಧರಿಸಿದ ಅದೇ ಡ್ರೆಸ್ಸ್ ಹಾಕಿಸಿ ಏರ್ಪೋರ್ಟ್ ಗೆ ಕರಕೊಂಡು ಬಂದು ಅಲ್ಲಿ ಅವನ ಕೈಯಲ್ಲಿ ಪಾಸ್'ಪೋರ್ಟ್ ಕೊಟ್ಟು UAE ಗೆ ನೋ ಎಂಟ್ರಿ ಮಾಡಿಸಿ ಕಳುಹಿಸಿಕೊಡಲಾಯಿತು!

ನಂತರ ಅವನು ಕುವೈಟ್' ಗೆ ಹೋದ
ಅಲ್ಲಿ ಸರಿಯಾಗದೆ ದಮಾಮ್ ನಲ್ಲಿ ಒಬ್ಬ ಅರಬಿಯ ವ್ಯಾಪಾರ ನೋಡಿಕೊಳ್ಳುತ್ತಿದ್ದ
ಜೊತೆಗೆ ಊರಿಗೆ ಹಣ ಕಳುಹಿಸುವ ಉಂಡಿ(ಹವಾಲಹಣದ) ಬಿಸಿನೆಸ್ ಕೂಡಾ ಮಾಡುತ್ತಿದ್ದ.

ಒಮ್ಮೆ ಹಟತ್ತನೆ ಅರಬಿ ಅಂಗಡಿಗೆ ಬಂದು ಕ್ಯಾಶ್ ನೋಡಿದಾಗ ಲಕ್ಷಾಂತರ ರೂಪಾಯಿ ಇರುವುದನ್ನು ಕಂಡು ಇವನು ನನ್ನ ವ್ಯಾಪಾರದ ಹಣವನ್ನೆಲ್ಲಾ ಕೂಡಿಟ್ಟು ವಂಚಿಸುತ್ತಿದ್ದಾನೆಂದು ಭಾವಿಸಿ ಆ ಎಲ್ಲಾ ಹಣವನ್ನು ತೆಗೆದು ಕೊಂಡು ಹೋದ!
ಈ ಸಳಪಿ ಯನ್ನು ಕೆಲಸದಿಂದ ವಜಾ ಕೂಡಾ ಮಾಡಿದ.!!

ನಿಜವಾಗಿಯೂ ಅಲ್ಲಿದ್ದ ಲಕ್ಷ ಲಕ್ಷ ರಿಯಾಲ್ ಹಣ ಊರಿಗೆ ಕಳುಹಿಸಿ ಕೊಡಲು ಹಲವರು ಇವನಲ್ಲಿ ಕೊಟ್ಟ ಉಂಡಿ ಹಣವಾಗಿತ್ತು!

ನಂತರ ಅವನು ಮೀನು ಮಾರ್ಕೆಟ್'ನಲ್ಲಿ
ಮೀನು ಕ್ಲೀನ್ ಮಾಡುವ ಕೆಲಸ ಮಾಡುತ್ತಿದ್ದ.!

ಈ ಕಡೆ ಎಪಿ ಉಸ್ತಾದರ ಪುತ್ರ ಅಬ್ದುಲ್ ಹಕೀಮ್ ಅಝ್'ಹರಿ ಈ ಅರಬಿಯನ್ನು ಸಂಪರ್ಕಿಸಿ ಗಾಢವಾದ ಸಂಬಂಧ ಬೆಳೆಸಿ
ಪೂನೂರಿನಲ್ಲಿ ಅತೀ ಬೃಹತ್ತಾದ ಒಂದು ಸಂಸ್ಥೆಯನ್ನು ಕಟ್ಟಿಬೆಳೆಸಿದರು.!

ಇದೀಗ ಪೂನೂರಿನಲ್ಲಿ ರಾರಾಜಿಸುತ್ತಿರುವ
ಅತಿ ಬೃಹತ್ತಾದ ಸ್ಥಾಪನೆ
 *'ಮರ್ಕಝ್ ಗಾರ್ಡನ್'* ಸಹೀದ್ ಉತೈಬರ ಕೊಡುಗೆಯಾಗಿದೆ.!

ಎಪಿ ಉಸ್ತಾದರ ವಿರುದ್ಧ ಫಿತ್ನ ಮಾಡಿದ ಸಳಪಿ ಹೇಳಹೆಸರಿಲ್ಲದೆ ನಾಶವಾಗಿ ಹೋದ
ಅವನ ಫಿತ್ನ ನಿಮಿತ್ತ ಸುನ್ನತ್ ಜಮಾತ್'ಗೆ ಒಳ್ಳೆಯ ಒಂದು ಸಂಸ್ಥೆ ಸಿಗುವಂತಾಯಿತು.
ಎಲ್ಲವೂ ಅಲ್ಲಾಹನ ತೀರ್ಮಾನ ತಾನೇ?
ಎಪಿ ಉಸ್ತಾದ್ ಮತ್ತು ಮರ್ಕಝ್ 'ನ ಬೆಳವಣಿಗೆಯಲ್ಲಿ ವಿರೋಧಿಗಳ  ಪಾಲು ಬಹಳಷ್ಟಿದೆ.
ಸಮಯ ಸಿಕ್ಕರೆ ಮುಂದೆ ಬರೆಯುವೆ ಇನ್ಶಾಅಲ್ಲಾ..

 ಅಬೂಶಝ