Friday, July 12, 2019

ಖುರ್'ಆನ್ ಪ್ರಯೋಗಿಕ ಜೀವನದಲ್ಲಿ ಭಾಗ = 06

*ಖುರ್' ಆನ್ ಪ್ರಾಯೋಗಿಕ ಜೀವನದಲ್ಲಿ*

ಭಾಗ --6


*3.ಸೂರಾ ಆಲು ಇಂಮ್ರಾನ್*

_ಒಟ್ಟು ಆಯತ್'ಗಳು : 200_

_*ಮಹತ್ವ*_

ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ,
ಅಲ್ ಬಖರ ಮತ್ತು ಆಲು ಇಮ್ರಾನ್ ಪಾರಾಯಣ ಮಾಡುವವರಿಗೆ ಅದು ಶಫಾಅತ್ ಮಾಡಬಲ್ಲದು ಮತ್ತು ಅವರಿಗೆ ಅದು ಸಾಕ್ಷಿ ನಿಲ್ಲುವವು.
(ಮುಸ್ಲಿಂ 805)

ಆಲು ಇಮ್ರಾನ್ ಪಾರಾಯಣ ಮಾಡುವವರ ಆರ್ಥಿಕತೆ ಬಹಳ ಸುಧೃಢವಾಗಿರುತ್ತದೆ.(ಸುನನುದ್ದಾರಿಮಿ 2/544)

ಸೂರತುಲ್ ಕಂಝ್ ಎಂಬ ಹೆಸರಿನಲ್ಲೂ
(ಅಲ್ ಬಹ್ರುಲ್ ಮುಹೀತ್ 3/9) ತೈಬ,
ಅಲ್ ಅಮಾನ್,
ಅಲ್ ಮುಜಾದಲ,
ಅಲ್ ಇಸ್ತಿಗ್'ಫಾರ್,
ಅಲ್ ಮುಗ್ನಿಯ್ಯಿ ಮುಂತಾದ ಹೆಸರುಗಳಿಂದ ಈ ಸೂರತ್ ತಿಳಿಯಲ್ಪಡುತ್ತದೆ.

*ಉಪಯೋಗ ಮತ್ತು ಮಹತ್ವ*

1. ವಿಷಭಾಧೆ ತಗಲಿದ ವ್ಯಕ್ತಿಗೆ ಆಲು ಇಮ್ರಾನ್ ಪಾರಾಯಣ ಮಾಡಿದರೆ ಬಹಳ ಪ್ರಯೋಜನಕಾರಿಯಾಗಿದೆ.

2.ರಾತ್ರಿ ಆಲು ಇಮ್ರಾನ್ ನ ಕೊನೆಯ ಭಾಗ   ಪಾರಾಯಣ ಮಾಡುವುದರಿಂದ ರಾತ್ರಿ ಸಂಪೂರ್ಣ ನಮಾಝು ಮಾಡಿದ ಪ್ರತಿಫಲ ಲಭಿಸುವವು.(ಖುರ್ತುಬಿ4/4).

3.ಅಲ್ ಬಕರ ಸೂರತ್ತಿನ 163 ,ಆಲು ಇಮ್ರಾನ್ ನ 2 ನೇ ಆಯತ್ ನಲ್ಲಿ ಇಸ್ಮುಲ್ ಅಹ್'ಳಮ್ ಇದೆ.(ಇಬ್ನ್ ಮಾಜ)

4.ಆಲು ಇಮ್ರಾನ್ ನ 18 ನೇ ಆಯತ್  ( شهد الله)ರಾತ್ರಿ ಪಾರಾಯಣ ಮಾಡುವವರಿಗೆ 70 ಮಲಕುಗಳ ಪ್ರಾರ್ಥನೆಯಿದೆ.(ಖುರ್ತುಬಿ4/5).ಅದು ಸ್ವರ್ಗ ಪ್ರವೇಶಕ್ಕೆ ಕಾರಣವಾಗಿದೆ.(ಜಾಮಿಉಲ್ ಕಬೀರ್ 7/338)

5.ಆಹಾರ ಸೇವನೆಯ ನಂತರ ಪ್ರಸ್ತುತ ಆಯತ್ ಓದಿದರೆ ಅಜೀರ್ಣದ ತೊಂದರೆ ಇರಲಾರದು.(ಅತ್ತಿದ್ಸ್'ಕಾರ್246)

6.ಆಲು ಇಮ್ರಾನ್ ನ 18 ನೇ ಆಯತ್(شهد الله)
  ಮತ್ತು 26 ನೇ ಆಯತ್( قل اللهم )
,ಆಯತುಲ್ ಕುರ್ಸಿ,
ಫಾತಿಹ ಸೂರತ್ ನಮಾಝಿನ ನಂತರ ಓದಿದರೆ ಶತ್ರುಗಳ  ಉಪಟಳವಿರಲಾರದು ಹಾಗೂ ದೈನಂದಿನ 70 ಉದ್ದೇಶಗಳು ಈಡೇರಿಸಲ್ಪಡಲಾಗುತ್ತದೆ.
(ಅಮಲುಲ್ ಯೌಮಿ ವಲ್ಲೈಲ)

7.ಆಲು ಇಮ್ರಾನ್ ನ 26 ನೇ ಆಯತ್ ಎಲ್ಲಾ ದಿನ ಪಾರಾಯಣ ಮಾಡಿದರೆ ಬಹಳ ಬೇಗನೆ  ಸಾಲ ಸಂದಾಯವಾಗುತ್ತದೆ.(ಮಜ್'ಮಉಝ್ಝವಾಯಿದ್10/186)

8.ಆಲು ಇಮ್ರಾನ್ 83 ನೇ ಆಯತ್
ನಡವಳಿಕೆ ಸರಿಯಿಲ್ಲದ ಮೃಗದ ಕಿವಿಗೆ ಪಾರಾಯಣ ಮಾಡಿದರೆ ಉಪಕರಿಸುತ್ತದೆ.(ಅಮಲುಲ್ ಯೌಮಿ ವಲ್ಲೈಲ 510)

9.ಗರ್ಬಿಣಿಯರು ಆಲು ಇಮ್ರಾನ್ ನ 35 ರಿಂದ 37 ನೇ ಆಯತ್ ತನಕ ಬರೆದು ನೀರನ್ನು ಕುಡಿದರೆ  ಬಹಳ ಪ್ರಯೋಜನಕಾರಿ.(ಖವಾಸುಲ್ ಖುರ್'ಆನ್ 46)

10.ವಿಪತ್ತಿನ ವೇಳೆ ಆಲು ಇಮ್ರಾನ್ 173 ನೇ ಆಯತ್  ನ ಕೊನೆಯ ಭಾಗದ ( حسبنا ) ಪಾರಾಯಣ ಮಾಡುವುದು  ಬಹಳ ಪ್ರಯೋಜನಕಾರಿ.(ಅತ್ತಿದ್ಸ್'ಕಾರ್250)

11.ಮಲಗುವ ಮುಂಚೆ ಆಲು ಇಮ್ರಾನ್ ನ ಕೊನೆಯ 10 ಆಯತ್ ಪಾರಾಯಣ ಮಾಡುವುದರಿಂದ ರಾತ್ರಿ ಸಂಪೂರ್ಣ ನಮಾಝು ಮಾಡಿದ ಪ್ರತಿಫಲ ಲಭಿಸುತ್ತದೆ.
(ಸುನನ್ನುದ್ದಾರಿಮಿ)

12.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ನಿದ್ರೆ ಯಿಂದ ಎಚ್ಚರಗೊಂಡರೆ ಆಲು ಇಮ್ರಾನ್ ನ 19 ನೇ ಆಯತ್ ನಿಂದ 194 ತನಕದ ಅಯತ್ ಗಳು ಆಕಾಶಕ್ಕೆ ನೋಡಿ ಪಾರಾಯಣ ಮಾಡುತ್ತಿದ್ದರು.

13.ಯಾವುದಾದರೊಂದು ಉದ್ದೇಶ ಈಡೇರಬೇಕಾದಲ್ಲಿ ಗುರುವಾರ ಬೆಳಿಗ್ಗೆ  ಯಾತ್ರೆ ಹೊರಡಬೇಕು.ಹೊರಡುವ ಮುಂಚೆ  ಫಾತಿಹ,
ಆಯತುಲ್ ಕುರ್ಸಿ,
ಸೂರತುಲ್ ಖದ್ರ್,
ಆಲು ಇಮ್ರಾನ್ ನ ಕೊನೆಯ 5 ಆಯತ್ ಗಳು ಪಾರಾಯಣ ಮಾಡಿ ಹೊರಟರೆ ಉದ್ದೇಶಗಳೆಲ್ಲವೂ ಪೂರ್ತೀಕರಿಸಲಾಗುತ್ತದೆ.

_____________________

_ಬಾಕಿ ಮುಂದಿನ ಭಾಗದಲ್ಲಿ...._

ಖುರ್'ಆನ್ ಪ್ರಯೋಗಿಕ ಜೀವನದಲ್ಲಿ ಭಾಗ = 05

*ಖುರ್' ಆನ್ ಪ್ರಾಯೋಗಿಕ ಜೀವನದಲ್ಲಿ*

ಭಾಗ --5
_______________________________
📝 ಮುನೀರ್ ಸಖಾಫಿ , ಸಾಲೆತ್ತೂರು.

*ಉಪಯೋಗಗಳು*

1.ನಮಾಝಿನ ನಂತರ ಆಯತುಲ್ ಕುರ್ಸಿ ಪಾರಾಯಣ ಮಾಡುವುದರಿಂದ ಅಲ್ಲಾಹನೊಂದಿಗೆ ಕೃತಜ್ಞತೆಯಿರುವವನಾಗುತ್ತಾನೆ ಮತ್ತು ಅಂಬಿಯಾಗಳ ಸಹವರ್ತಿಯಾಗುತ್ತಾನೆ.(ಅತ್ತಿದ್ಸ್'ಕಾರ್)

2.ದುಖಃ ದ ವೇಳೆ ಪಾರಾಯಣ ನಡೆಸುವುದರಿಂದ ದುಖಃ ನೀಗುವವು.

3.ಪಿಶಾಚಿಯನ್ನು  ದೂರವಿರಿಸಲು ಆಯತುಲ್ ಕುರ್ಸಿ ಬಹಳ ಪ್ರಯೋಜನಕಾರಿಯಾಗಿರುತ್ತದೆ.

4.ಹೆರಿಗೆ ನೋವು ಕಾಣಿಸಿಕೊಂಡಲ್ಲಿ ಆಯತುಲ್ ಕುರ್ಸಿ ಮತ್ತು ಅಹ್'ರಾಫ್ ಸೂರತ್ತಿನ 54 ನೇ ಆಯತ್, ಮುಅವ್ವಿಝತೈನಿ ಸೂರತ್ ಪಾರಾಯಣ ಮಾಡಲು ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಿರ್ದೇಶಿಸಿದ್ದಾರೆ.(ಅಮಲುಲ್ ಯೌಮಿ ವಲ್ಲೈಲ 179)

5.ಮಲಗುವ ವೇಳೆ ಆಯತುಲ್ ಕುರ್ಸಿ ಓದಿದ್ದಲ್ಲಿ ಪಿಶಾಚಿ ಸಮೀಪಿಸಲಾರದು ಎಂದು ಹದೀಸಿನಲ್ಲಿದೆ.(ಬುಖಾರಿ)

6.ಆಯತುಲ್ ಕುರ್ಸಿ ,ಸೂರತುಲ್ ಗಾಫಿರ್ ನ  مصير  ತನಕ
 (3 ಆಯತ್ ) ಬೆಳಿಗ್ಗೆ ಮತ್ತು ರಾತ್ರಿ ಪಾರಾಯಣ ಮಾಡಿದ್ದಲ್ಲಿ ಎಲ್ಲಾ ವಿಪತ್ತುಗಳಿಂದ ರಕ್ಷಿಸಲ್ಪಡಲಾಗುತ್ತದೆ.(ತುರ್ಮುದ್ಸೀ 2879)

7.ನಮಾಝಿನ ನಂತರ ಆಯತುಲ್ ಕುರ್ಸಿ ಓದಿದ ಬಳಿಕ ಅಲ್ ಬಕರದ 257 ನೇ ಆಯತ್ ಓದಿದ್ದಲ್ಲಿ ವಸ್'ವಾಸ್ ನೀಗುತ್ತದೆ.

8.ಮನೆಗೆ ಪ್ರವೇಶಿಸುವಾಗ ಬೆಳಿಗ್ಗೆ ಮತ್ತು ಸಂಜೆ ಹೊತ್ತು ಆಯತುಲ್ ಕುರ್ಸಿ ಪಾರಾಯಣ ಮಾಡುವುದರಿಂದ ಆರ್ಥಿಕ ಅಡಚೆಣೆಯಿಂದ ಪಾರಾಗುವನು ಹಾಗೂ ದರೋಡೆಕೋರರಿಂದ  ರಕ್ಷೆ ಹೊಂದುವನು.

10.ಯಾತ್ರೆಯಲ್ಲಿ ಅಥವಾ  ಭಯಾನಕ ಸ್ಥಳಕ್ಕೆ ತಲುಪಿ ಹೆದರಿದಲ್ಲಿ  ಒಂದು ವೃತ್ತಾಕಾರದಲ್ಲಿ ಗೆರೆ ಹಾಕಿ ಅದರೊಳಗೆ  ಫಾತಿಹ,ಆಯತುಲ್ ಕುರ್ಸಿ,ಇಕ್ಲಾಸ್,ಮುಅವ್ವಿಝತೈನಿ ,ತೌಬ ಸೂರತಿನ 51 ನೇ ಆಯತ್  ಪಾರಾಯಣ ಮಾಡಿದಲ್ಲಿ  ಎಲ್ಲಾ ವಿಪತ್ತುಗಳಿಂದ ರಕ್ಷೆ ಹೊಂದುವನು.(ಅದ್ದುರರುನ್ನಳೀಮ್)

10.ಲೈಲತುಲ್ ಖದರಿನ ರಾತ್ರಿ ಆಯತುಲ್ ಕುರ್ಸಿ ಪಾರಾಯಣ ಮಾಡುವುದು ಪುಣ್ಯದಾಯಕಾವಾಗಿದೆ.

11.ಒಂದು ಕಾರ್ಯಕ್ಕೆ ಹೊರಡುವಾಗ ಆಯತುಲ್ ಕುರ್ಸಿ ಓದಿ ಬಲ ಕಾಲು ಇಟ್ಟು ಹೊರಟಲ್ಲಿ ಅದರಲ್ಲಿ ವಿಜಯ  ಹೊಂದುವನು.

12.ಯಾತ್ರೆ ಹೊರಡಲು ಉದ್ದೇಶಿಸಿದವನು ಆಯತುಲ್ ಕುರ್ಸಿ ಓದುವುದು ಉದ್ದೇಶ ಈಡೇರಿಕೆಗೂ ಮಲಕುಗಳ ಪ್ರಾರ್ಥನೆಗೂ  ಕಾರಣವಾಗಿದೆ.

13.ಆಹಾರದಲ್ಲಿ ಆಯತುಲ್ ಕುರ್ಸಿ ಓದಿ ಮಂತ್ರಿಸುವುದು ಬರಕತ್ ಲಭಿಸಲು ಕಾರಣವಾಗಿದೆ.

14.ಅಝಾನ್ ನ ನಂತರ ಆಯತುಲ್ ಕುರ್ಸಿ ಓದುವುದು ಪುಣ್ಯದಾಯಕವಾಗಿದೆ.

15.ಆಯತುಲ್ ಕುರ್ಸಿ ಮತ್ತು ಇಕ್ಲಾಸ್ ಸೂರತ್ ನಮಾಝಿನ ನಂತರ ಪಾರಾಯಣ ಮಾಡುವುದರಿಂದ ಸ್ವರ್ಗ ಪ್ರವೇಶವು ಸುಲಭವಾಗಿದೆ.

16.ಅಲ್ ಬಕರ ಸೂರತಿನ ಕೊನೆಯ 3 ಆಯತ್ ಗಳು  ಪಾರಾಯಣ ಮಾಡುವುದರಿಂದ ಮನೆಗೆ ಪಿಶಾಚಿಯ ಉಪಟಳವನ್ನು ತಡೆಯಲು  ಸಾಧ್ಯವಾಗುತ್ತದೆ.(ಮುಸ್ನದ್ ಅಹ್ಮದ್ 2/274)

ನಂ:17.
آمن الرسول 
ಕೊನೆಯ ತನಕ ಪಾರಾಯಣ ಮಾಡುವುದರಿಂದ  ರಾತ್ರಿ ಸಂಪೂರ್ಣ ನಮಾಝ್ ಮಾಡಿದ ಪುಣ್ಯ ಲಭಿಸುವುದು.(ಸುನನುದ್ದಾರಿಮಿ 2/450)

18.ಚಿಕಿತ್ಸೆಯ ವೇಳೆ ಆಯತುಲ್ ಕುರ್ಸಿ  ಪಾರಾಯಣ ಮಾಡುವುದರಿಂದ ಬಹಳ ಬೇಗನೆ ರೋಗ ವಾಸಿಯಾಗಲು ಸಹಕಾರಿಯಾಗುತ್ತದೆ.(ಜಾಮಿಉಲ್ ಕಬೀರ್ 7/337)
ಇವಿಷ್ಟು ಅಲ್ ಬಕರ ಸೂರತ್ ಮತ್ತು ಅದರ ಕೆಲವು ಆಯತ್ ಗಳ ಮಹತ್ವವಾಗಿದೆ.
_________
_____________________

_ಬಾಕಿ ಮುಂದಿನ ಭಾಗದಲ್ಲಿ...._

*ಖುರ್'ಆನ್ ಪ್ರಯೋಗಿಕ ಜೀವನದಲ್ಲಿ* ಭಾಗ= 04

*ಖುರ್' ಆನ್ ಪ್ರಾಯೋಗಿಕ ಜೀವನದಲ್ಲಿ*

ಭಾಗ --4
_______________________________
📝 ಮುನೀರ್ ಸಖಾಫಿ , ಸಾಲೆತ್ತೂರು.


*ಪಾರಾಯಣ ರೀತಿ*

ನಂ 1: ಅಲ್ ಬಖರ ಸಂಪೂರ್ಣ ಪಾರಾಯಣ ಮಾಡುವುದರ ಕುರಿತು ಮುಂಚೆ ವಿವರಿಸಲಾಗಿದೆ.

ನಂ 2: الم
ನಿಂದ مفلحون
  ತನಕ ಪಾರಾಯಣ ಮಾಡುವುದು ಮತ್ತು ಬರೆದು ನೀರು ಕುಡಿಯುವುದು ಹಾಗೂ ರೂಡಿ ಮಾಡುವುದು ಹಿಫ್'ಳ್(ಸಂರಕ್ಷಣೆ),
ತಖ್ವನ್ನಫ್ಸ್(ಆತ್ಮೀಯ ಕವಚ),ಇಲ್ಮ್(ಜ್ಞಾನ ),
ಮಹ್'ರಿಫತ್(ಆಂತರಿಕ ಜ್ಞಾನ)ಮುಂತಾದವುಗಳ ವರ್ಧನೆಯುಂಟಾಗುತ್ತದೆ.

ನಂ 3:
ಅಲ್ ಬಖರದ 16 ರಿಂದ 19 ರ ತನಕವಿರುವ ಆಯತ್ ಗಳನ್ನು ರೂಡಿ ಮಾಡುವವರಿಗೆ  ಶತ್ರುಗಳ ಕಾಟ ಇರಲಾರದು.

ನಂ 4: ಅಲ್ ಬಖರದ ಮೊದಲನೇ 4 ಆಯತ್ ಮತ್ತು ಆಯತುಲ್ ಕುರ್ಸಿ  ಹಾಗೂ ಅದರ ನಂತರ ದ 2 ಆಯತ್ ಗಳು  ಮತ್ತು ಅಲ್ ಬಕರದ ಕೊನೆಯ ಆಯತ್ (  لله ما في السماوات ) ಪಾರಾಯಣ ಮಾಡುವುದರಿಂದ ಪಿಶಾಚಿಯ ಉಪದ್ರವ ಇರಲಾರದು ಮತ್ತು ಆಪತ್ತುಗಳು ಬರಲಾರದು.(ಸುನನ್ನುದ್ದಾರಿಮಿ 2/448)

ನಂ 5:ಅಲ್ ಬಕರದ 25 ನೇ ಆಯತ್ ( وبشر  )ದಿನ ನಿತ್ಯ ಓದುವವರಿಗೆ  ಮತ್ತು ಬರೆದು ಕಟ್ಟುವರಿಗೆ ಕೃಷಿಯಲ್ಲಿ ಬರಕತ್ ಲಭಿಸುತ್ತದೆ.

ನಂ 6: ಅಲ್ ಬಕರದ 30 ನೇ ಆಯತ್ ನಿಂದ 32 ರ ತನಕದ 3 ಆಯತ್ ಗಳು ಪಾರಾಯಣ ಮಾಡುವುದು ಇಲ್ಮ್ ಲಭಿಸಲು ಕಾರಣವಾಗಿರುತ್ತದೆ.

ನಂ 7: ಅಲ್ ಬಕರದ 125 ನೇ ಆಯತ್ ಮಲಗುವ ವೇಳೆ ಓದಿದ್ದಲ್ಲಿ ಉದ್ದೇಶಿಸುವ ಸಮಯದಲ್ಲಿ ನಿದ್ರೆಯಿಂದ ಎಚ್ಚರವಾಗುತ್ತದೆ.

ನಂ 8: ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲಮರಿಂದ ಅಬೂಹುರೈರ (ರ) ರಿಪೋರ್ಟ್ ಮಾಡಿದ ಹದೀಸಿನಲ್ಲಿ  ಅಲ್ ಬಕರ ಸೂರತ್ ಮಲಗುವ ವೇಳೆ ಓದುವವರಿಗೆ ಸ್ವರ್ಗದಲ್ಲಿ ಕಿರೀಟ ತೊಡಿಸಲ್ಪಡಲಾಗುವುದು ಎಂದಿದೆ.
(ಜಾಮಿಉಲ್ ಕಬೀರ್7/336)

*ಆಯತುಲ್ ಕುರ್ಸಿ*

ಅಲ್ ಬಕರ ಸೂರತ್ ನ ಪ್ರಧಾನ ಭಾಗವಾಗಿದೆ ಆಯತುಲ್ ಕುರ್ಸಿ.ಹಲವು ಹೆಸರುಗಳಿಂದ ತಿಳಿಯಲ್ಪಡುವ ಪ್ರಸ್ತುತ ಆಯತ್  ಅದರ ಹೆಸರುಗಳಿಂದಲೇ ಅದರ ಮಹತ್ವ ವನ್ನು ತಿಳಿಯ ಬಹುದಾಗಿದೆ.

*ಆಯತುಲ್ ಕುರ್ಸಿಯ ಹೆಸರುಗಳು*

1.ಆಯತುಲ್ ಕುರ್ಸಿ(ಬುಖಾರಿ)
2.ಅಹ್'ಳಮುಲ್ ಆಯತ್.(ಮುಸ್ಲಿಂ)
3.ಸಯ್ಯಿದು ಆಯಿಲ್ ಖುರ್'ಆನ್
(ಜಾಮಿಉಲ್ ಕಬೀರ್)
4.ಅಹ್'ಳಮು ಆಯಿಲ್ ಖುರ್'ಆನ್
(ದುರರುಲ್ ಮನ್ಸೂರ್)
5.ಅಶ್'ರಫು ಆಯಿಲ್ ಖುರ್'ಆನ್(ಖುರ್ತುಬಿ)
6.ದಿರ್'ವತು ಆಯಿಲ್ ಖುರ್'ಆನ್(ಕಿತಾಬುತ್ತಯ್ಸೀರ್)
7.ಆಯತುಲ್ ಫತ್'ಹ್(ಖಝೀನತುಲ್ ಅಸ್ರಾರ್)
8.ಆಯತುಲ್ ಬರಕ(ದುರರುಲ್ ಮನ್ಸೂರ್)
 ಈ ರೀತಿ 40 ಕ್ಕೂ ಹೆಸರುಗಳು ಆಯತುಲ್ ಕುರ್ಸಿಗೆ ಕಾರಣಗಳು ಸಹಿತ ಇಮಾಮರು ಸ್ಪಷ್ಟಪಡಿಸಿದ್ದಾರೆ.(ಖಝೀನತುಲ್ ಅಸ್ರಾರ್ ನೋಡಿರಿ)



_________
_____________________

_ಬಾಕಿ ಮುಂದಿನ ಭಾಗದಲ್ಲಿ...._

*ಖುರ್'ಆನ್ ಪ್ರಯೋಗಿಕ ಜೀವನದಲ್ಲಿ* ಭಾಗ= 03

*ಖುರ್' ಆನ್ ಪ್ರಾಯೋಗಿಕ ಜೀವನದಲ್ಲಿ*

ಭಾಗ --3
_______________________________
📝 ಮುನೀರ್ ಸಖಾಫಿ , ಸಾಲೆತ್ತೂರು.

*2.ಅಲ್ ಬಖರ*

*ಸೂಕ್ತಗಳು* 286.

ಪವಿತ್ರ ಖುರ್'ಆನಿನಲ್ಲಿ ಅತೀ ದೊಡ್ಡ ಅಧ್ಯಾಯವಾಗಿದೆ ಅಲ್ ಬಖರ.

*ಹೆಸರುಗಳು:* ಅಲ್ ಫುಸ್ತಾತ್ವ್,
ಫುಸ್ತಾತ್ವುಲ್ ಖುರ್'ಆನ್,
ಝಹ್ರಾಹ್,
ಸಿನಾಮುಲ್ ಖುರ್'ಆನ್ ಎಂಬೀ ಹೆಸರುಗಳು ಪ್ರಸ್ತುತ ಸೂರತ್ ಗೆ ಇದೆ.ಪ್ರವಾದೀ ಮೂಸಾ ಅಲೈಹಿಸ್ಸಲಾಮ್ ರವರ ಅನುಯಾಯಿಗಳ ಒಂದು ಘಟನೆಯೆಯಲ್ಲಿ ಹಸುವನ್ನು ದ್ಸಬಹ್ ಮಾಡಲ್ಪಟ್ಟ ಚರಿತ್ರೆ ಈ ಸೂರತ್ ನಲ್ಲಿರುವುದರಿಂದ  ಅಲ್ ಬಖರ ಎಂಬ ಹೆಸರು ಈ ಸೂರತ್ ಗೆ ಬಂದಿದೆ.

*ಮಹತ್ವ:*

ಅಲ್ ಬಖರ ಸೂರತ್ ನ ಮಹತ್ವವ್ವನ್ನು ವಿವರಿಸುವ ಹಲವಾರು ಹದೀಸುಗಳು ಇವೆ.
ಪ್ರವಾದೀ ಸಲ್ಲಲ್ಲಾಹು ಹೇಳುತ್ತಾರೆ,ನೀವು ಅಲ್ ಬಖರ ಸೂರತ್ ಪಾರಾಯಣ ಮಾಡಿರಿ.ಕಾರಣ ಅದನ್ನು ಬಿಗಿಹಿಡಿದವನಿಗೆ ಬರ್ಕತ್ ಲಭಿಸುವುದು ಮತ್ತು ಅದನ್ನು ತ್ಯಜಿಸುವುದು ನಷ್ಟವನ್ನು ಸೃಷ್ಠಿಸುವಂತದ್ದೂ ಆಗಿದೆ.  ಸಿಹ್ರ್ ಮಾಡುವವರ  ಶಕ್ತಿಯನ್ನು ದುರ್ಬಲಗೊಳಿಸಲು ಅಲ್ ಬಖರ ಸೂರತ್ ಗೆ ಶಕ್ತಿ ಇದೆ.(ಮುಸ್ಲಿಂ)

ಅಲ್ ಬಖರ ಪಾರಾಯಣ ಮಾಡುವ ಮನೆಯಿಂದ ಶೈತಾನ್ (ಪಿಶಾಚಿ)ಓಡುತ್ತದೆ.(ಮುಸ್ಲಿಂ,ತುರ್ಮುದ್ಸಿ)

ಅಲ್ ಬಖರ ಖುರ್'ಆನಿನ ಪ್ರಮುಖ ಸೂರತ್ ಆಗಿದೆ.ರಾತ್ರಿ,ಹಗಲು ಅದನ್ನು ಪಾರಯಣ ನಡೆಸುವವರಿಗೆ 3 ದಿವಸ ಶೈತಾನ್ ನ್ನು ಅವನಿಂದ ದೂರವಿರಿಸಲಾಗುವುದು.(ಇಬ್ನ್ ಹಿಬ್ಬಾನ್)

ಅಲ್ ಬಖರ ಪಾರಾಯಣ ತಿಳಿದವರಿಗೆ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಪ್ರತ್ಯೇಕ  ಗೌರವ ನೀಡುತ್ತಿದ್ದದ್ದಾಗಿ ಇಮಾಮ್ ತುರ್ಮುದ್ಸಿ ರಿಪೋರ್ಟ್ ಮಾಡಿದ ಹದೀಸಿನಲ್ಲಿದೆ.
_________
_____________________

_ಬಾಕಿ ಮುಂದಿನ ಭಾಗದಲ್ಲಿ...._

*ಖುರ್'ಆನ್ ಪ್ರಯೋಗಿಕ ಜೀವನದಲ್ಲಿ* ಭಾಗ 02

*ಖುರ್' ಆನ್ ಪ್ರಾಯೋಗಿಕ ಜೀವನದಲ್ಲಿ*

ಭಾಗ --2
_______________________________
📝 ಮುನೀರ್ ಸಖಾಫಿ , ಸಾಲೆತ್ತೂರು.

*ಫಾತಿಹ ಅವತೀರ್ಣ*

ಪ್ರಬಲ ಅಭಿಪ್ರಾಯ ಪ್ರಕಾರ  ಮಕ್ಕಾದಲ್ಲಿ ಅವತೀರ್ಣ ಗೊಂಡ  ಅಧ್ಯಾಯವಾಗಿದೆ ಸೂರತುಲ್ ಫಾತಿಹ.ಮದೀನಾದಲ್ಲಿ ಅವತರಿಸಲ್ಪಟ್ಟ ಸೂರತ್ತಾಗಿದೆ ಎಂದು ಹೇಳಿದವರಲ್ಲಿ ಪ್ರಬಲರಾದವರೂ ಇದ್ದಾರೆ.ಇದು ಎರಡನ್ನೂ ಪರಿಗಣಿಸಿ ಮಕ್ಕಾ ಮತ್ತು ಮದೀನದಲ್ಲಿ ಅವತರಿಸಲ್ಪಟ್ಟ ಅದ್ಯಾಯವೆಂದು ಮುಫಸ್ಸಿರ್ ಗಳು ವಿವರಿಸಿದ್ದಾರೆ.
(ತಫ್ಸೀರು ರಾಝಿ 1/147)

*ಪ್ರಯೋಜನಗಳು*

ಫಾತಿಹ ಸೂರತ್ ಪಾರಾಯಣ ಮಾಡುವವರಿಗೆ ಹಲವು ಪ್ರಯೋಜನಗಳು ಮತ್ತು ಉದ್ದೇಶ ಈಡೇರಿಕೆಗಳು ಸಾಧ್ಯವೆಂದು ಆದಾರಗಳ ಮೂಲಕ ಸಾಬೀತಾಗಿದೆ.

1.ನಮಾಝ್ ಸ್ವೀಕರಿಸಲಾಗುತ್ತದೆ.

2.ಫಾತಿಹಾ ಸೂರತ್ ಪಾರಾಯಣ ಮಾಡುವವನಿಗೆ ಇತರ ಗ್ರಂಥ(ತೌರಾತ್,ಇಂಜೀಲ್,ಝಬೂರ್) ಪಾರಾಯಣ ಮಾಡಿದ ಪ್ರತಿಫಲ ಲಭಿಸುವುದು.

3.ಮಕ್ಕಳ ಫಾತಿಹ ಸೂರತ್ ಪಾರಾಯಣ ಮಾತಾ ಪಿತರ ಶಿಕ್ಷೆಯನ್ನು ಕುಂಠಿತಗೊಳಿಸುತ್ತದೆ.

4.ಸೂರತ್ ಇಖ್ಲಾಸಿನೊಂದಿಗೆ ಫಾತಿಹ ಸೂರತ್ ಪಾರಾಯಣ ಮಾಡಿದಲ್ಲಿ ಆರ್ಥಿಕ ತೊಂದರೆಗಳನ್ನು ನೀಗಿಸುತ್ತದೆ.

5.ಫಾತಿಹ ಓದಿ ಮಂತ್ರಿಸಿದಲ್ಲಿ ಹಲವು ಪ್ರಯೋಜನಗಳು ಲಭಿಸುವವು.

6.ನಮಾಜಿನ ಬಳಿಕ ಪಾರಾಯಣ ಮಾಡಿದಲ್ಲಿ ಹಲವು ಪ್ರಯೋಜನಗಳಿಗೆ ಕಾರಣವಾಗಿದೆ.

7.ಮಲಗುವ ವೇಳೆ ಓದಿ ಮಲಗಿದ್ದಲ್ಲಿ ಹಲವು ವಿಪತ್ತುಗಳಿಂದ ರಕ್ಷೆ ಹೊಂದಲು ಕಾರಣವಾಗುವುದು.

8.ಆಯತುಲ್ ಕುರ್ಸಿ,ಸೂರತುಲ್ ಅಹ್'ರಾಫ್ 54 ರಿಂದ ( إِنَّ رَبَّكُمُ ٱللَّهُ ٱلَّذِى خَلَقَ ٱلسَّمَٰوَٰتِ وَٱلْأَرْضَ فِى سِتَّةِ أَيَّامٍ ثُمَّ ٱسْتَوَىٰ عَلَى ٱلْعَرْشِ يُغْشِى ٱلَّيْلَ ٱلنَّهَارَ يَطْلُبُهُۥ حَثِيثًا وَٱلشَّمْسَ وَٱلْقَمَرَ وَٱلنُّجُومَ مُسَخَّرَٰتٍۭ بِأَمْرِهِۦٓ ۗ أَلَا لَهُ ٱلْخَلْقُ وَٱلْأَمْرُ ۗ تَبَارَكَ ٱللَّهُ رَبُّ ٱلْعَٰلَمِينَ
(٥٤)
ٱدْعُوا۟ رَبَّكُمْ تَضَرُّعًا وَخُفْيَةً ۚ إِنَّهُۥ لَا يُحِبُّ ٱلْمُعْتَدِينَ (٥٥)
وَلَا تُفْسِدُوا۟ فِى ٱلْأَرْضِ بَعْدَ إِصْلَٰحِهَا وَٱدْعُوهُ خَوْفًا وَطَمَعًا ۚ إِنَّ رَحْمَتَ ٱللَّهِ قَرِيبٌ مِّنَ ٱلْمُحْسِنِينَ (٥٦)
 56 ರ ತನಕ ಆಯತ್ ಗಳು,ಸೂರ ಅಲ್ ಹಶ್ರ್ ನ 21،22،23،24 ಆಯತ್
( لَوْ أَنزَلْنَا هَذَا الْقُرْآنَ عَلَى جَبَلٍ لَّرَأَيْتَهُ خَاشِعًا مُّتَصَدِّعًا مِّنْ خَشْيَةِ اللَّهِ وَتِلْكَ الأَمْثَالُ نَضْرِبُهَا لِلنَّاسِ لَعَلَّهُمْ يَتَفَكَّرُونَ

هُوَ اللَّهُ الَّذِي لا إِلَهَ إِلاَّ هُوَ عَالِمُ الْغَيْبِ وَالشَّهَادَةِ هُوَ الرَّحْمَنُ الرَّحِيمُ

هُوَ اللَّهُ الَّذِي لا إِلَهَ إِلاَّ هُوَ الْمَلِكُ الْقُدُّوسُ السَّلامُ الْمُؤْمِنُ الْمُهَيْمِنُ الْعَزِيزُ الْجَبَّارُ الْمُتَكَبِّرُ سُبْحَانَ اللَّهِ عَمَّا يُشْرِكُونَ

هُوَ اللَّهُ الْخَالِقُ الْبَارِئُ الْمُصَوِّرُ لَهُ الأَسْمَاء الْحُسْنَى يُسَبِّحُ لَهُ مَا فِي السَّمَاوَاتِ وَالأَرْضِ وَهُوَ الْعَزِيزُ الْحَكِيمُ)
,ಸೂರತುಲ್ ಇಖ್ಲಾಸ್ ಮುಂತಾದವುಗಳು ಓದಿ ಮಲಗಿದ್ದಲ್ಲಿ ಅವನ ಸಹಾಯಕ್ಕೆ  ಬೆಳಗಿನ ತನಕ 2 ಮಲಕುಗಳನ್ನು  ನೇಮಕ ಮಾಡಲಾಗುವುದು.

9.ಮಳೆಯ ನೀರಿನಲ್ಲಿ  ಫಾತಿಹ ,ಆಯತುಲ್ ಕುರ್ಸಿ,ಇಖ್ಲಾಸ್ ,ಮುಅವ್ವಿಝತೈನಿ  70 ಸಲ ಓದಿ  ಊದಿ  7 ದಿನ ಆ ನೀರು ಉಪಯೋಗಿಸಿದಲ್ಲಿ ಮಾರಕ ರೋಗಗಳು ಕೂಡಾ ವಾಸಿಯಾಗುತ್ತದೆ.

10.ಜ್ವರ ಬಂದವರಿಗೆ 40 ಫಾತಿಹ ಓದಿ ಮಂತ್ರಿಸಿ ಓದಿದ ನೀರು ಶರೀರಕ್ಕೆ ಸವರಿದರೆ  ಉಪಕರಿಸುವುದು.

11.ಜುಮುಅ ನಮಾಝಿನಿಂದ ವಿರಮಿಸಿ  ಫಾತಿಹ,ಇಖ್ಲಾಸ್,ಮುಅವ್ವಿಝತೈನಿ 7 ಸಲ ಓದಿದಲ್ಲಿ  ಅವನ ಮತ್ತು ಕುಂಟುಂಬಿಕರು ಇಹ ಮತ್ತು ಪರದಲ್ಲಿ ರಕ್ಷೆ ಹೊಂದಲು ಸಹಕಾರಿಯಾಗುವುದು.

12.ರೋಗಿಯ ಬಳಿ 41 ಸಲ ಫಾತಿಹ ಓದಿದಲ್ಲಿ ಬಹಳ ಪ್ರಯೋಜನಕಾರಿಗುವುದು.

13.ಸುಬಹಿಯ ಸುನ್ನತ್ ನಮಾಝ್ ಮತ್ತು ಫರ್ಳ್ ನಮಾಝಿನ ನಡುವೆ 41 ಸಲ ಓದಿದ್ದಲ್ಲಿ ಉದ್ದೇಶ ಈಡೇರಿಕೆಗೆ ಬಹಳ ಸಹಕಾರಿಯಾಗುತ್ತದೆ.

14.ಗಾಯದಲ್ಲಿ ಇಡುವ ಬ್ಯಾಂಡೇಜ್/ಹತ್ತಿ ಗೆ 7 ಸಲ ಫಾತಿಹ ಓದಿದಲ್ಲಿ ಗಾಯ ಒಣಗಲು ಬಹಳ ಸಹಕಾರಿ.

ಇಂತಹ ಹಲವಾರು ಉಪಯುಕ್ತ ವಿಷಯಗಳಿಗೆ ಫಾತಿಹಾ ಸೂರತನ್ನು ಪಾರಾಯಣ ಮಾಡಬಹುದಾಗಿದೆ.
 ಈ ಮೇಲಿನ ವಿಷಯಗಳನ್ನು ಖಝೀನತುಲ್ ಅಸ್ರಾರ್,
ಫತ್'ಹುಲ್ ಮುಈನ್,
ಫತ್'ಹುಲ್ ಮುಹ್ತಾಜ್,
ಖವಾಸುಲ್ ಖುರ್'ಆನ್,
ಅತ್ತಿದ್ಸ್'ಕಾರ್ ಮುಂತಾದ ಗ್ರಂಥಗಳಿಂದ ತಿಳಿದುಕೊಳ್ಳಬಹುದಾಗಿದೆ.
_______________________________

_ಬಾಕಿ ಮುಂದಿನ ಭಾಗದಲ್ಲಿ...._

*ಖುರ್'ಆನ್ ಪ್ರಯೋಗಿಕ ಜೀವನದಲ್ಲಿ* ಭಾಗ 0⃣1⃣

*ಖುರ್' ಆನ್ ಪ್ರಾಯೋಗಿಕ ಜೀವನದಲ್ಲಿ*

ಭಾಗ --1
_______________________________
📝 ಮುನೀರ್ ಸಖಾಫಿ , ಸಾಲೆತ್ತೂರು.

*1. ಅಲ್ ಫಾತಿಹ*

*ಸೂಕ್ತಗಳು 7.*

ಹೆಸರು ಸೂಚಿಸುವಂತೆ ವಿಶ್ವಾಸಿಗಳು ದೈನಂದಿನ ವಿವಿಧ ವಿಷಯಗಳಿಗೆ ಮತ್ತು ಉದ್ದೇಶ ಈಡೇರಿಕೆಗಾಗಿ ಪ್ರಾರ್ಥಿಸುವ  ಮುಂಚೆ ಓದುವ ಸೂರತಾಗಿದೆ ಸೂರತುಲ್ ಫಾತಿಹ.
ಫಾತಿಹಾ ಸೂರತ್'ನ ಅವತೀರ್ಣದ ಬಗ್ಗೆ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ ;
"ಆಕಾಶದಿಂದ ಒಂದು ಮಲಕ್ ಇಳಿದು ಬಂದು ನನ್ನಲ್ಲಿ ಹೇಳಿತು,"ಓ ಪ್ರವಾದಿ ವರ್ಯರೇ!ಪೂರ್ವೀಕ ಪ್ರವಾದಿಗಳಿಗೆ ಯಾರಿಗೂ ನೀಡದ ಎರಡು  ಪ್ರಕಾಶಗಳ ಬಗ್ಗೆ ತಾವು ಸಂತೋಷಪಡಿರಿ.
ಒಂದು : ಸೂರತುಲ್ ಫಾತಿಹ
ಎರಡು:ಅಲ್ ಬಖರ ಸೂರತ್ ನ ಕೊನೆಯ ಸೂಕ್ತ.ಅವೆರಡರ ಒಂದೊಂದು ಅಕ್ಷರಗಳಿಗೂ ಅತಿಯಾದ ಪ್ರತಿಫಲವಿದೆ".
(ಮುಸ್ಲಿಂ ಹದೀಸ್ ನಂಬ್ರ806)

ಸೃಷ್ಠಿಗಳಿಗೆ ಅಲ್ಲಾಹನಿಂದ ಅನುಗ್ರಹ ಲಭಿಸಲು ಅತೀ ಹೆಚ್ಚು ಕಾರಣವಾದ  ಹಾಗೂ ಹಲವಾರು ಪ್ರಯೋಜನಗಳು ದಾಸನಿಗೆ ನೀಡಲ್ಪಟ್ಟ ಈ ಸೂಕ್ತವು ಪಿಶಾಚಿಗೆ ಮತ್ತು ಆತನ ಅನುಯಾಯಿಗಳಿಗೆ ಅಸಹ್ಯವಾಗಿದೆ.(ಅತ್ತಿದ್ಸ್'ಕಾರ್ 228)

ಇಬ್ಲೀಸನು ಅತೀ ಹೆಚ್ಚು ದುಖಪಟ್ಟ 5 ಸಂದರ್ಭಗಳಲ್ಲಿ ಒಂದಾಗಿದೆ  ಫಾತಿಹ ಸೂರತ್ ನ ಅವತೀರ್ಣ.
(ಅಲ್ ಬಿದಾಯ 2/133)

ಖುರ್'ಆನಿನ ಸೂಕ್ತಗಳ ಪೈಕಿ ಅತೀ ಹೆಚ್ಚು ಹೆಸರು ಇರುವ  ಸೂರತ್ ಫಾತಿಹ ಎನ್ನುವಾಗ  ಫಾತಿಹ ಸೂರತ್ ನ ಮಹತ್ವ ಹೆಚ್ಚಾಗಿ ವಿವರಿಸದೆಯೇ ತಿಳಿದುಕೊಳ್ಳಬಹುದಾಗಿದೆ.

*ಫಾತಿಹ ಸೂರತ್ ನ ಕೆಲವು ಹೆಸರುಗಳು.*

1.ಸೂರತುಲ್ ಫಾತಿಹ
2.ಉಮ್ಮುಲ್ ಖುರ್'ಆನ್
3.ಸೂರತುಲ್ ಹಂದ್
4.ಸಬ್'ಉಲ್ ಮಸಾನಿ
5.ಅಲ್ ವಾಫಿಯ
6.ಅಲ್ ಕಾಫಿಯ
7.ಅಸಾಸ್
8.ಶಿಫಾಹ್
9.ಸ್ವಲಾತ್
10.ಸುಆಲ್
11.ತಹ್'ಲೀಮುಲ್ ಮಸ್'ಅಲ.
12.ಸೂರತುಶ್ಶುಕ್'ರ್
13.ಸೂರತುದ್ದುಆಹ್
14.ಸೂರತು ರ್ರುಖ್'ಯ
15.ಉಮ್ಮುಲ್ ಕಿತಾಬ್
16.ಅಲ್ ವಾಖಿಯ
17.ಅಲ್ ಕಂಝ್
18.ಅನ್ನೂರ್
19.ಶಾಫಿಯ
20.ತ್ವಲಬ್
21.ಮುನಾಜಾತ್
22.ತಫ್'ವೀಳ್
23.ಮುಕಾಫಅ
24.ಅಹ್'ಳಮುಸ್ಸುವರ್
25.ಅಲ್ ಮಿನ್ನತ್
26.ಮುಜ್'ಝಿಯ
27.ಮುಂಜಿಯ
28.ಸಕಲೈನ್
29.ಮಜ್'ಮವುಲ್ ಅಸ್ಮಾಹ್
30.ಅದ್ದಾಲ್ಲತ್
_______________________________

_ಬಾಕಿ ಮುಂದಿನ ಭಾಗದಲ್ಲಿ...._