Tuesday, October 1, 2019

ಪುತ್ತೂರಿನ ಕರ್ನಾಟಕ ಮುಸ್ಲಿಂ ಜಮಾಆತ್ತ್ ಸಭೆಯಲ್ಲಿ ಶಾಫಿ ಸಅದಿ ಮಂಡಿಸಿದ ಅನಸಿಕೆಗಳು

*#ಪುತ್ತೂರಿನ ಕರ್ನಾಟಕ ಮುಸ್ಲಿಂ ಜಮಾ‌ಅತ್ ಸಭೆಯಲ್ಲಿ ಶಾಫಿ ಸ‌ಅದಿ ಮಂಡಿಸಿದ  ಅಧ್ಬುತ ಅನಿಸಿಕೆಗಳು....!*

ಎಲ್ಲರೂ ಒಂದಾವರ್ತಿ ಓದಿರಿ...

✍ ಅಬೂಶಝ

ಕರ್ನಾಟಕ ಮುಸ್ಲಿಂ ಜಮಾ‌ಅತ್ ಎಂಬುದು ರಾಜಕೀಯ ಲಾಭಕ್ಕಾಗಿ ಅಥವಾ ರಾಜಕೀಯ ಪಕ್ಷವಾಗಿ ಮೂಡಿಬರಲಿರುವ ಸಂಘಟನೆ ಅಲ್ಲ.
ಇಲ್ಲಿ ಸೇರಿದ ನೀವೆಲ್ಲರೂ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಚರಿಸಿ ಅನುಭವವಿರುವ ಪ್ರಮುಖರು. ಪುತ್ತೂರಿನ ಮುಸ್ಲಿಂ ಸಮುದಾಯ ಆರ್ಥಿಕ ಶೈಕ್ಷಣಿಕ ಧಾರ್ಮಿಕ ರಂಗಗಳಲ್ಲಿ ಸಬಲೀಕರಣವಾಗುವಂತೆ ಒಟ್ಟಾಗಿ ಕಾರ್ಯಚರಿಸಲು ಮುಸ್ಲಿಂ ಜಮಾ‌ಅತ್ ವೇದಿಕೆಯೊಂದನ್ನು ನಿಮಗೆ ಒದಗಿಸಿದೆ.
ಈ ಕಾರ್ಯಚರಣೆಯಲ್ಲಿ ಯಾವುದೇ ಐಹಿಕ ಉದ್ದೇಶ ಇರಬಾರದು. ಅದೇ ರೀತಿ ಸಮರ್ಪಣಾ ಮನೋಭಾವ ಇರಬೇಕು. ಪರಲೋಕದಲ್ಲಿ ತನ್ನ ಜವಾಬ್ದಾರಿ ಪೂರ್ತಿಗೊಳಿಸಿದ ಧನ್ಯತೆಯಿಂದ ಹೋಗುವ ಇರಾದೆ ಇರಬೇಕು.
ಸಮುದಾಯದ ಕಷ್ಟ ಕಾರ್ಪಣ್ಯ ನಮ್ಮ ಕಷ್ಟವಾಗಿ ಕಾಣಬೇಕು.
ಸಮುದಾಯದ ನೋವು ನಮ್ಮ ನೋವಾಗಿರಬೇಕು.
ಸಮುದಾಯದ ಸಮಸ್ಯೆ ನಮ್ಮ ಸಮಸ್ಯೆಯಾಗಿರಬೇಕು.
ಗ್ರೂಪಿಸಂ ನಿಮಿತ್ತ ಬೇಸತ್ತ ನಾವು ಕನಿಷ್ಠ ಕರ್ನಾಟಕದಲ್ಲಾದರೂ ಸಮುದಾಯ ವಿಷಯದಲ್ಲಿ ಒಟ್ಟಾಗೋಣ.ಸಮುದಾಯಕ್ಕೆ ಶಕ್ತಿ ತುಂಬೋಣ.
ನೀವು ಮುಸ್ಲಿಂ ಸಮುದಾಯದ ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ಜನಸಂಖ್ಯೆ ಸರ್ವೆಯನ್ನು ನೆಟ್ ಮೂಲಕ ಪರಿಶೀಲಿಸಿ ನೋಡಿ. ಆವಾಗ ನಿಮಗೆ ಮುಸ್ಲಿಮರ ದಯನೀಯ ಸರ್ವೆ ಸಿಗುತ್ತದೆ.
ಸರಕಾರಿ ಇಲಾಖೆಯಲ್ಲಿ ಬರೇ 4 ಶೇಖಡಾ ಮಾತ್ರ ಸಾನಿಧ್ಯವಿದೆ!
ಆದರೆ ಇನ್ನಿತರ ಹಿಂದುಳಿದ ಕುರುಬ ಸಮುದಾಯ, ಪೂಜಾರಿ ಸಮುದಾಯದವರು 22 ಶೇಖಡಾ ಕರ್ನಾಟಕ ರಾಜ್ಯ ಸರಕಾರಿ ಇಲಾಖೆಯಲ್ಲಿ ನೌಕರಿಗಿಟ್ಟಿಸಿಕೊಂಡಿದ್ದಾರೆ!
(ಅವರು ಅವರ ಸಾಮರ್ಥ್ಯವನ್ನು ತೋರಿಸಿದ್ದಾರೆ ಸಂತೋಷವಿದೆ)
ಆದರೆ ನಮ್ಮ ಅವಸ್ಥೆಯೇನು?
IAS IPS ಬೆರಳೆಣಿಕೆಯಷ್ಟು ಮಾತ್ರ, ಪೋಲಿಸ್ ಇಲಾಖೆಯಲ್ಲೂ ನಮ್ಮ ಸಾನಿಧ್ಯ ಅತೀ ವಿರಳ!
ಕಳೆದ ಎರಡು ವರ್ಷಗಳಿಂದ ಕರ್ನಾಟಕದ ಯಾವುದೇ ಜಿಲ್ಲೆಗಳಲ್ಲೂ ಜಿಲ್ಲಾ ಕಮೀಷನರ್ (ಡಿಸಿ) ಮುಸಲ್ಮಾನರನ್ನು ನೇಮಕ ಮಾಡಿಲ್ಲ. ನಾವು ಕುಮಾರ ಸ್ವಾಮಿಯವರಿಗೆ ಒತ್ತಡ ತಂದುದರ ನಿಮಿತ್ತ ಹಾಸನ ಜಿಲ್ಲೆಗೆ ಅಕ್ರಂ ಪಾಷಾರನ್ನು ನೇಮಕ ಮಾಡಲಾಯಿತು. ಖೇದದೊಂದಿಗೆ ಹೇಳುತ್ತಿದ್ದೇನೆ ನೇಮಕ ಮಾಡಿದ ಅದೇ ಸ್ಪೀಡಲ್ಲಿ ಈಗ ವಜಾಗೊಳಿಸಿ ಬೇರೆ ತಸ್ತಿಗೆಗೆ ವರ್ಗಾವಣೆ ಮಾಡಲಾಗಿದೆ.
ಜಿಲ್ಲಾಡಳಿತ ಎಂಬುದು ಒಬ್ಬ 'ಡಿಸಿ' ಯ ಕೈಯಲ್ಲಿರುತ್ತದೆ.MP, MLA ಗೆ ಆ ಅಧಿಕಾರ ಇಲ್ಲ. ಅಷ್ಟೊಂದು ಮಹತ್ವದ ಹುದ್ದೆಯಲ್ಲಿ 80 ಲಕ್ಷ ಮುಸ್ಲಿಮರಲ್ಲಿ ಯಾರೂ ಇಲ್ಲ ಎಂಬುದನ್ನು ನಾವು ಮನಗಾಣಬೇಕು.
ರಾಜಕೀಯ ಸ್ವಾವಲಂಬನೆ ನಮಗಿಲ್ಲ. ಮುಸ್ಲಿಮರ ಜನಸಂಖ್ಯೆ ಅನುಸಾರ ನಮಗೆ 34 MLA ಬೇಕು ಆದರೆ  ನಮಗಿರುವುದು ಕೇವಲ 7 MLA!
ಅದೇ ಸಮಯ ಲಿಂಗಾಯುತರ ಜನಸಂಖ್ಯೆ ಹತ್ತು ಶೇಖಡಾ ಮಾತ್ರ ಅಂದರೆ ಕೇವಲ 60 ಲಕ್ಷ  ಪೋಪಿಲೇಷನ್ ಇರುವ ಲಿಂಗಾಯುತ ಸಮುದಾಯಕ್ಕೆ 58 MLA ಗಳಿದ್ದಾರೆ! (38 ಬಿಜೆಪಿ,16 ಕಾಂಗ್ರೆಸ್ ಬಾಕಿ ಇತರ ಪಕ್ಷ)
48 ಲಕ್ಷವಿರುವ ಒಕ್ಕಲಿಗ ಸಮುದಾಯಕ್ಕೆ 42 MLA ಗಳಿದ್ದಾರೆ! ಒಂದೊಂದು ಲಕ್ಷಕ್ಕೆ ಒಂದೊಂದು ಪ್ರತಿನಿಧಿಗಳಂತೆ.
(JDS 23 BJP 8 ಕಾಂಗ್ರೆಸ್ 11)
ಶೇಖಡಾ 14 ಇರುವ ಬ್ರಾಹ್ಮಣ ಸಮುದಾಯದಲ್ಲಿ 14 MLA ಗಳಿದ್ದಾರೆ.ಅವರಲ್ಲಿ ಮುಖ್ಯಮಂತ್ರಿಗಳ ಪಟ್ಟಿ ಕೂಡಾ ಇದೆ.
ಆದರೆ 80 ಲಕ್ಷವಿರುವ ಮುಸ್ಲಿಂ ಸಮುದಾಯದಲ್ಲಿ ಕೇವಲ 7 mla ಗಳು ಮಾತ್ರ!
ಒಬ್ಬನೇ ಒಬ್ಬ ಮುಖ್ಯಮಂತ್ರಿ ಈವರೆಗೆ ನೇಮಕ ಮಾಡಲು ಸಾದ್ಯವಾಗಲಿಲ್ಲ.
ನಮ್ಮ ಉಚ್ಚ ನ್ಯಾಯಾಲಯದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಮುಖ್ಯ ನ್ಯಾಯಾಧೀಶನು ಇಲ್ಲ.
ಹದಿನೇಳು ವರ್ಷಗಳ ಮುಂಚೆ ಒಬ್ಬ ಮುಖ್ಯ ನ್ಯಾಯಮೂರ್ತಿ ಮುಸ್ಲಿಂ ಇದ್ದುದನ್ನು ಬಿಟ್ಟರೆ ಈ ತನಕ ಒಬ್ಬನೇ ಒಬ್ಭನನ್ನು ನೇಮಕ ಮಾಡಲಿಲ್ಲ.
ನಮ್ಮ ಪುತ್ತೂರಿನ ನವಾಝ್'ರವರು ಹುಬ್ಬಳ್ಳಿ ನ್ಯಾಪೀ‌ಠದಲ್ಲಿ ನ್ಯಾಯಾಧೀಶರಾಗಿದ್ದಾರೆಯೇ ಹೊರತು ಮುಖ್ಯ ನ್ಯಾಯಾಧೀಶರಲ್ಲ.
ಕರ್ನಾಟಕದಲ್ಲಿ ಎರಡು ಲಕ್ಷಕ್ಕಿಂತಲೂ ಮಿಕ್ಕ ವಕೀಲರಿದ್ದು ಅದರಲ್ಲಿ ಮುಸ್ಲಿಂ ವಕೀಲರ ಸಂಖ್ಯೆ ಬರೇ ಏಳು ಸಾವಿರ ಮಾತ್ರ!
ಪುತ್ತೂರಿನಲ್ಲಿರುವ ವಕೀಲರಲ್ಲಿ ನೀವು ಕೇಳಿ ನೋಡಿ ಅಕ್ರಮ್ ಪಾಷರನ್ನು ಹೊರತು ಪಡಿಸಿ ಹೈಕೋರ್ಟ್'ನ ಸೀನಿಯರ್ ಕೌನ್ಸಿಲ್'ನಲ್ಲಿ ವಾದಿಸಲು ನೇಮಕ ಗೊಂಡಿರುವ ಒಬ್ಬನೇ ಒಬ್ಬ ವಕೀಲ ನಮ್ಮ ಮುಸ್ಲಿಮರಿಲ್ಲ.
ಇನ್ಸ್ಪೆಕ್ಟರ್, ಹೆಡ್ 'ಕಾನ್'ಸ್ಟೇಬಲ್ ಸಹಿತ ಪೋಲಿಸ್ ಇಲಾಖೆಯಲ್ಲೂ ಮುಸ್ಲಿಮರ ಪ್ರಾತಿನಿಧ್ಯ ವಿರಳವಾಗಿದೆ.
ಅವಕಾಶಗಳಿದ್ದು ನಮ್ಮ ಜನಪ್ರತಿನಿಧಿಗಳು ಅದಕ್ಕಾಗಿ ಶ್ರಮಿಸಲಿಲ್ಲವೆಂಬುದು ಸಮುದಾಯದ ದುರಂತವೇ ಸರಿ.

ಕರ್ನಾಟಕ ಮುಸ್ಲಿಂ ಜಮಾ‌ಅತ್ 10 ಲಕ್ಷ ಸದಸ್ಯರನ್ನು ಒಳಗೊಂಡು ಬಲಿಷ್ಠವಾಗಿಸಿ, ಯಾವುದೇ ಸರ್ಕಾರ ಬಂದರೂ ಅದರ ಗಟ್ಟಿ ಧ್ವನಿ ತಲುಪಿಸಿ ಸಮುದಾಯ ಸಬಲೀಕರಣ ಮಾಡುವ ಉದ್ದೇಶವಿದೆ.

ವಾಲ್ಮೀಕಿ ಸ್ವಾಮಿ ನೇತೃತ್ವದಲ್ಲಿ ಏಳುವರೆ ಶೇಖಡ ಅನುದಾನವನ್ನು ಹದಿನಾಲ್ಕು ಶೇಖಡಾ ಮಾಡಬೇಕೆಂಬ ಕೂಗಿನೊಂದಿಗೆ ಪ್ರತಿಭಟನೆ ಮಾಡಲು ಹೊರಟಾಗ ರಾಜ್ಯದ ಮುಖ್ಯಮಂತ್ರಿಯೇ ಸ್ವಾಮೀಜಿಯ ಆಶ್ರಮಕ್ಕೆ ತೆರಳಿ ಅನುದಾನ ನೀಡುವ ಭರವಸೆ ನೀಡಿ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಬೇಡಿಕೊಂಡದ್ದು ನಾವು ಕಂಡಿದ್ದೇವೆ.
ನಮಗೆ ಯಾಕೆ ಅದು ಸಾದ್ಯವಾಗುವುದಿಲ್ಲ.
ನಮ್ಮಲ್ಲಿ ಗ್ರೂಪಿಸಂ ಅಧಿಕವಾದುದರಿಂದ ಪರಸ್ಪರ ನಾಯಕತ್ವವನ್ನು ಅಂಗೀಕರಿಸಲು ಯಾರೂ ಒಪ್ಪುವುದಿಲ್ಲ. ಜತೆಯಾಗಿ ವೇದಿಕೆ ಹಂಚಲು ಹಿಂಜರಿಯುವುದನ್ನು ನಾವು ಕಾಣುತ್ತೇವೆ.
ಇನ್ಶಾಅಲ್ಲಾ ಮುಂದಿನ ದಿನಗಳಲ್ಲಿ ಅದೆಲ್ಲಾ ಸರಿಯಾಗಬಹುದೆಂದು ಆಶಿಸೋಣ. ಅಹ್ಲುಸ್ಸುನ್ನದ ತತ್ವಾದರ್ಶದಲ್ಲಿ ಕಾರ್ಯಚರಿಸುವ ಉಭಯ ಬಣಗಳು ಒಟ್ಟಾಗುವ. ಒಂದು ಬಣ ಮಾತ್ರ ಮನಸ್ಸು ಮಾಡಿದರೆ ಇದೆಲ್ಲಾ ಸಾದ್ಯವಾಗುವುದಿಲ್ಲ. ಸಮುದಾಯ ಸಬಲೀಕರಣದ ಈ ವಿಷಯದಲ್ಲಿ ಗ್ರೂಪಿಸಂಗೆ ಅತೀತವಾಗಿ  ನಾವು ಒಗ್ಗಟ್ಟಾಗುವ.
ಸರಕಾರ ಮಂಡಿಸಿದ 2 ಲಕ್ಷ ಕೋಟಿ ಬಜೆಟ್'ನಲ್ಲಿ ಮುಸ್ಲಿಮರ ಜನಸಂಖ್ಯೆ ಅನುಪಾತದಲ್ಲಿ ಸರಾಸರಿ 28 ಸಾವಿರ ಕೋಟಿ ಸಿಗಬೇಕು. ಆದರೆ ಸಿದ್ದರಾಮಯ್ಯ ಸರಕಾರ ಕಾಲದಲ್ಲಿ ನೀಡಿದ ಅತೀ ಹೆಚ್ಚು ಅನುದಾನವೆಂದರೆ 2000 ಸಾವಿರ ಕೋಟಿ! ಅದಕ್ಕಿಂತ ಮುಂಚೆ ಅದು ಕೂಡಾ ಮುಸ್ಲಿಂ ಸಮುದಾಯದ ಪಾಲಿಗೆ ದಕ್ಕಿರಲಿಲ್ಲ.
ಅರ್ಹವಾಗಿ 28 ಸಾವಿರ ಕೋಟಿ ಅನುದಾನ ಸಿಗಬೇಕಾದ ಮುಸ್ಲಿಂ ಸಮುದಾಯಕ್ಕೆ ಸಿಕ್ಕಿದ್ದು ಅತೀ ಹೆಚ್ಚೆಂದರೆ 2 ಸಾವಿರ ಕೋಟಿ ಮಾತ್ರ!
4 ಲಕ್ಷ ಮತದಾರರು ದ.ಕ. ಜಿಲ್ಲೆಯಲ್ಲಿ ಇದ್ದಾರೆ ಆದರೆ ಅದರಲ್ಲಿ ಒಂದು ಲಕ್ಷ ವಿದೇಶಗಳಲ್ಲಿದ್ದಾರೆ. 50 ಸಾವಿರ ಮಂದಿ ವ್ಯಾಪಾರ ನಿಮಿತ್ತ ವಿವಿಧ ರಾಜ್ಯಗಳಲ್ಲಿರುತ್ತಾರೆ. ಕೆಲವರ ಹೆಸರು ಮತದಾನ ಪಟ್ಟಿಗೆಯಲ್ಲಿ ಇರುವುದಿಲ್ಲ ಅಂತೂ ಇಂತೂ ಕೇವಲ ಮಂದಿಯಿಂದ ಮಾತ್ರ ಮತದಾನ ನಡೆಯುತ್ತದೆ ಇದಕ್ಕೆಲ್ಲ ಪರಿಹಾರ ಕಾಣುವ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಂ ಜಮಾತ್ ಈಗಾಗಲೇ ಟೀಂ ವರ್ಕ್ ಆರಂಭಿಸಿಯಾಗಿದೆ.
ಉತ್ತರ ಕರ್ನಾಟಕದ ದಾವಣಗೆರೆಯ ಮುಸ್ಲಿಂ ಜಮಾ‌ಅತ್ ಸಮಿತಿ ಲಾ ಕಾಲೇಜೊಂದನ್ನು ತೆರೆಯುವ ಯೋಜನೆ ಹಾಕಿಕೊಂಡಿದೆ.
ಇನ್ನೊಂದು ಹತ್ತು ವರ್ಷದಲ್ಲಿ ಸಮುದಾಯದಲ್ಲಿ IPS IAS ಸಹಿತ ಉನ್ನತ ಶ್ರೇಷ್ಠ ದರ್ಜೆಯ ಹುದ್ದೆಗಾರರನ್ನು ಸ್ರಷ್ಟಿಸುವ ದೊಡ್ಡ ಗುರಿಯೊಂದಿಗೆ ಮತ್ತು ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ಸಿಕ್ಕಿ ಸಬಲೀಕರಣವಾಗುವಂತೆ ಮಾಡಲು *#ಕರ್ನಾಟಕ_ಮುಸ್ಲಿಂ_ಜಮಾತ್* ಕಟ್ಟಿಬದ್ದವಾಗಿದೆ.
ಇದಕ್ಕಾಗಿ ಎಲ್ಲರೂ ನಮ್ಮೊಂದಿಗೆ ಸಹಕರಿಸಬೇಕಾಗಿದೆ.
ನಾವು ಒಗ್ಗಟ್ಟಾಗೋಣ. ಗ್ರೂಪಿಸಂಗೆ ಅಂಕಿತ ಹಾಕೋಣ ಆ ಮುಲಕ ಸಮುದಾಯ ಸಬಲೀಕರಣಕ್ಕೆ ಪ್ರಯತ್ನಿಸೋಣ.

ಅಲ್ಲಾಹು ತೌಫೀಕ್ ನೀಡಲಿ ಆಮೀನ್.
1/10/2019

Sunday, September 29, 2019

*ವಹಾಬಿ ಉಗ್ರವಾದ ಎಂದು ಕೇಳುವಾಗ ಸಲಫಿಗಳು ಬೆಚ್ಚಿ ಬೀಳುವುದೇಕೇ ?*

              *ಎಂ.ಎಂ.ಸಖಾಫಿ*

ಇತ್ತೀಚೆಗೆ ಹಿಂದುತ್ವವಾದಿ ಮುಖಂಡ ಸೂಲಿಬೆಲೆಯ ವೀಡಿಯೋ ತುಣುಕ್ಕೊಂದು ವೈರಲಾಯಿತು.ಸೂಲಿಬೆಲೆ ಏನೇ ಹೇಳಲಿ ಆತನನ್ನು ಎಲ್ಲಿ ಇಡಬೇಕೋ ಅಲ್ಲಿಯೇ  ಈ ಸಮುದಾಯ ಇಟ್ಟಿದೆ. ಆತನಿಗೆ ವಿಷೇಷ ಮಹತ್ವ ನೀಡಬೇಕಾದ ಅಗತ್ಯವಿಲ್ಲ.
ಆದರೆ ಸೂಲಿಬೆಲೆ ಮಾತಿನಿಂದ ತನ್ನ ಬುಡಕ್ಕೆ ಪೆಟ್ಟು ಬೀಳುತ್ತದೆಯೆಂದು ಅರಿತ ಕೆಲವು ಮರಿ ಸಲಫಿಗಳು ,ಆತನ ಮಾತಿನ ವರಸೆ ಬದಲಾಯಿಸಿ ಸುನ್ನೀಗಳ ತಲೆಗೆ ಕಟ್ಟಿದ್ದಾರೆ.ಸುನ್ನೀಗಳನ್ನು ಅಪಮಾನಿಸಲು ಸೂಲಿಬೆಲೆಯ ವೀಡಿಯೋ ಪ್ರಚಾರ ಮಾಡುವ ಗತಿಕೇಡು ಸಲಫಿಗಳಿಗೆ ಬಂದಿದೆ.

ಅಷ್ಟಕ್ಕೂ ವಿಷಯವೇನು ? ವಹಾಬಿ ಭಯೋತ್ಪಾದನೆಯ ಬಗ್ಗೆ ಸೂಲಿಬೆಲೆ ಮಾತ್ರ ಹೇಳಿದ್ದಾ ?

*ವಹಾಬಿ ಭಯೋತ್ಪಾದನೆ ಎಂಬುದು ಐತಿಹಾಸಿಕ ಸತ್ಯ.ಚಾರಿತ್ರಿಕ ದಾಖಲೆಗಳು ಅದನ್ನು ಸ್ಪಷ್ಟಪಡಿಸುತ್ತವೆ.ವಹಾಬಿಸಂನ ಹುಟ್ಟು,ಬೆಳವಣಿಗೆ ರಕ್ತಸಿಕ್ತವಾಗಿತ್ತೆಂದು ಸರ್ವ ಇತಿಹಾಸಕಾರರು ಸಮ್ಮತಿಸಿದ್ದಾರೆ.ಇಸ್ಲಾಮೀ ಉಗ್ರವಾದಕ್ಕೆ ಚಾಲನೆ ನೀಡಿದ್ದೇ ಸಲಫಿಸಂ ನ ಆಶಯಗಳು*.

*2009 ,ನವೆಂಬರ್* .
*ನ್ಯೂಡೆಲ್ಲಿಯಲ್ಲಿ ನಡೆದ ಅಂತರಾಷ್ಟ್ರೀಯ ಭಯೋತ್ಪಾದನ ವಿರುದ್ಧ ಸಮಾವೇಶದಲ್ಲಿ ಮಾಜಿ ಕೇಂದ್ರ ಸಚಿವ, ಪ್ರಖ್ಯಾತ ವಕೀಲ ರಾಮ್ ಜೆಠ್ಮಲಾನಿ ವಹಾಬಿ ಭಯೋತ್ಪದಾನೆಯ ಬಗ್ಗೆ ಮಾತನಾಡಿದರು.ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮಾರ್ಕೆಂಡ್ ಕಾಡ್ಜು ಕೂಡ ವಹಾಬಿ ಭಯೋತ್ಪಾದನೆಯ ಬಗ್ಗೆ ಜನರನ್ನು ಎಚ್ಚರಿಸಿದ್ದರು*.

ಕಳೆದ ದಶಕ ಕಂಡ ಭೀಕರ ಭಯೋತ್ಪಾದನೆ ಯ ರೂವಾರಿಗಳಾದ ಐಸಿಸ್ ಕೂಡಾ ವಹಾಬಿಸಂನ ಕೂಸೆಂದು ಸೌದಿಯ ವಹಾಬಿ ಮುಫ್ತಿಗಳೇ ಸಮ್ಮತಿಸಿದ್ದಾರೆ

https://youtu.be/0z3XwAABBq8

*ಇನ್ನೂ ಐಸಿಸ್‌ನ ಚರಿತ್ರೆ ನೋಡಿ.*
*ಐ‌ಸಿಸ್ ಹೆಚ್ಚಾಗಿ ಹಿಂಸೆ ತಾಂಡವಾಡಿದ್ದು ಸುನ್ನೀ ಮುಸ್ಲಿಮರ ವಿರುದ್ಧ. ನೂರಾರು ಸುನ್ನಿಗಳ ಕೊಲೆ, ಸೂಫಿ ಸಂತರ ಹತ್ಯೆ, ಹೆಣ್ಮಕ್ಕಳ ಮಾನಭಂಗದಂತಹ  ಕ್ರೂರ ಕೃತ್ಯ ನಡೆಸಿತು. ಸುನ್ನೀ ಸ್ಮಾರಕಗಳನ್ನು, ಮಹಾತ್ಮರ ಸನ್ನಿಧಿಗಳನ್ನು, ಸುನ್ನಿ ಮಸ್ಜಿದ್‌ಗಳನ್ನು ಧ್ವಂಸ ಮಾಡಿತು. ಸಮುದಾಯದ ಹೆಸರಲ್ಲಿ ಐಸಿಸ್ ಮಾಡಿದ ರಕ್ತ ಸಿಕ್ತ ದಾಂಧಲೆಯನ್ನು ನೋಡಿ ವಹ್ಹಾಬಿಯ ಹುಟ್ಟುರಾದ ಸೌದಿ ಅರೇಬಿಯ ಕೂಡ ವಹ್ಹಾಬಿಸಂ ನಿಂದ ದೂರ ನಿಂತಿತು. ಕೆಲವೆಡೆ ಅವರ ಪುಸ್ತಕಗಳು ಬ್ಯಾನ್ ಆದವು*. 

*ಕೇರಳದಿಂದ ಕೆಲವರು ಕಣ್ಮರೆಯಾಗಿ ಸಿರಿಯಕ್ಕೆ ಹೋಗಿ ಐಸಿಸ್ ಸೇರಿದ್ದು ಇದೇ ಸಲಫಿ ಕಾರ್ಯಕರ್ತರು. ಇದನ್ನು ತಿರಸ್ಕರಿಸಲು ಸಾಧ್ಯನಾ ? ದಾಯಿಷ್ ಎಂಬ ಉಗ್ರ ಗುಂಪಿಗೆ ಕೇರಳದಿಂದ ಸಲಫಿ ಯುವಕರು ಹೋಗಿ ಸೇರಿದ್ದನ್ನು ನಿಷೇಧಿಸಲು ಸಾಧ್ಯನಾ ? ಇಂತಹ ಉಗ್ರ ಚಿಂತನೆ ಮಂಗಳೂರಲ್ಲೂ ನಡೆಯುತ್ತದೆಯೆಂಬುದನ್ನು ಕರ್ನಾಟಕದ ಸಲಫಿ ಮುಖಂಡ ಇಸ್ಮಾಯಿಲ್ ಶಾಫಿಯೇ ಬಹಿರಂಗಪಡಿಸಿದ್ದಾರೆ*.

https://youtu.be/kvdEh7rHX-o

*ಇನ್ನು ಇವರಿಗೂ ನಮಗೂ ಸಂಬಂಧವಿಲ್ಲವೆಂದು ಸಲಫಿಗಳು ಹೇಳಬಹುದು. ಸಂಬಂಧ ರಕ್ತದಲ್ಲಿ ಇದೆ. ಜಾಗತಿಕ ಮುಸಲ್ಮಾನರು ಗೌರವಿಸುವ ಪವಿತ್ರ ರೌಳಾ ಶರೀಫ ನ್ನು ಧ್ವಂಸ ಮಾಡುವುದಾಗಿ ಹೇಳಿದ್ದು ಝಕರಿಯಾ   ಎಂಬ ಉಗ್ರ ಸಲಫಿ*
https://youtu.be/52oWKR7SMU0

*ಸುನ್ನೀ ಮದರಸಗಳಲ್ಲಿ ಕಲಿಯುವ ಮಕ್ಕಳನ್ನು ಕತ್ತು ಹಿಸುಕಿ ಕೊಳ್ಳಬೇಕೆಂದು ಹೇಳಿದು ಬಾಳುಶ್ಶೇರಿ ಎಂಬ ಮತ್ತೊಬ್ಬ ಉಗ್ರವಾದಿ*
https://youtu.be/4xh0o3XLFzA

*ದೇಶಾದ್ಯಂತ ವಿರುವ ಮಹಾತ್ಮರ ದರ್ಗಾಗಳನ್ನು ನಾಶ ಮಾಡಬೇಕೆಂದು ಕರೆ ನೀಡಿದ್ದು ಉಮರ್ ಮೌಲವಿ ಎಂಬ ಮತ್ತೊಬ್ಬ ಸಲಫಿ ನೇತಾರ*.

 ಹೀಗೆ ಸಲಫಿ ಪುಸ್ತಕಗಳು, ಭಾಷಣಗಳು, ಬರಹಗಳು ಉಗ್ರವಾದಕ್ಕೆ ಪ್ರೇರಣೆ ನೀಡಿವೆ. ಸುನ್ನಿಗಳು ಮುಶ್ರಿಕರು, ಮಕ್ಕಾ ಮುಶ್ರಿಕರಿಗಿಂತ ಕಡೆ, ಎಂಬ ವಾದ ಸರಣಿಗಳೇ ಅವರನ್ನು ಭೀಕರತೆಗೆ ಕೊಂಡೊಯ್ಯುತ್ತವೆ.
ಬಾಬಾ ಬುಡನ್‌ಗಿರಿ ವಿಷಯದಲ್ಲೂ ಆರ್‌ಎಸ್‌ಎಸ್ ಪರ ನಿಲುವು ತಾಳಿದ್ದು ಇದೇ ಸಲಫಿಗಳು. ಕೇರಳದಾದ್ಯಂತ ಅನೇಕ ಭಾಗಗಳಲ್ಲಿ ಮಖ್‌ಬರ ಧ್ವಂಸ ಮಾಡಿದ ಕುಖ್ಯಾತಿ ಇದೇ ಸಲಫಿಗಳಿಗಿದೆ

*ಒಟ್ಟಿನಲ್ಲಿ ಸಲಫಿ ಚಿಂತನೆಗಳು, ಆಶಯಗಳು ಜನರನ್ನು ಉಗ್ರವಾದಕ್ಕೆ ಪ್ರೇರೇಪಿಸಿವೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಈ ಆರೋಪ ಕೇಳುವಾಗ ಸಲಫಿಗಳಿಗೆ ಮುಜುಗರವಾಗುವುದಾದರೆ ಅವರು ಸಲಫಿಸಂ ನಿಂದ ಹೊರ ಬರುವುದಲ್ಲದೇ ಬೇರೆ ಮಾರ್ಗವಿಲ್ಲ*  .
ಇಲ್ಲೊಬ್ಬನ ಪ್ರಶ್ನೆ...
*ಸುಲ್ತಾನುಲ್ ಉಲಮಾ ಎಪಿ ಉಸ್ತಾದರನ್ನು ಗ್ರಾಂಡ್ ಮುಫ್ತಿ ಎಂದು ಘೋಷಿಸಬೇಕಾದರೆ, ಎಲ್ಲಾ ಉಲಮಾಗಳ ಅನುಮತಿ ಪಡೆಯಬೇಕಾಗಿಲ್ಲವೇ?*

ಉತ್ತರ..👇🏽

ಮಂಗಳೂರಿನ ಕೆಲವೊಂದು ಮೊಹಲ್ಲಾಗಳಿಗೆ *ತ್ವಾಖಾ ಅಹ್ಮದ್ ಮುಸ್ಲಿಯಾರ್* ರವರನ್ನು ಖಾಝಿಯಾಗಿ ನೇಮಿಸಲಾಗಿದೆ.
*ತ್ವಾಖಾ ಉಸ್ತಾದ್*  ರವರನ್ನು ಖಾಝಿಯಾಗಿ ನೇಮಿಸುವಾಗ ಆ ಮೊಹಲ್ಲಾದ ಎಲ್ಲಾ ಜನರ ಅನುಮತಿ ಪಡೆಯಲಾಗಿದೆಯಾ?
ಅಲ್ಲಿ *ತ್ವಾಖಾ ಉಸ್ತಾದ್* ರವರನ್ನು ವಿರೋಧಿಸುವ ಎಪಿ ವಿಭಾಗದವರು ಮತ್ತು ಇನ್ನಿತರ ಪಂಗಡದವರೂ ಇದ್ದಾರೆ ತಾನೇ. 
ಅಂದರೆ, ಇವರ್ಯಾರ ವಿರೋಧವನ್ನೂ ಪರಿಗಣಿಸದೆ, ಬಹುಸಂಖ್ಯಾತರ ಅಂಗೀಕಾರದೊಂದಿಗೆ *ತ್ವಾಖಾ ಉಸ್ತಾದ್* ರವರನ್ನು ಖಾಝಿಯಾಗಿ ನೇಮಿಸಲಾಗಿದೆ ಎಂಬುದಂತೂ ಸತ್ಯ.
ಅಂದರೆ, ಸಣ್ಣ ಸಂಖ್ಯೆಯ ಜನರ ವಿರೋಧವನ್ನು ಪರಿಗಣಿಸಬೇಕಾಗಿಲ್ಲ ಎಂಬುದು *ತ್ವಾಖಾ ಉಸ್ತಾದ್* ರವರನ್ನು ಖಾಝಿಯಾಗಿ ನೇಮಿಸಿದ ಕಾರಣದಿಂದ ನಮಗೆ ತಿಳಿದುಕೊಳ್ಳಬಹುದು.

ಸುಲ್ತಾನುಲ್ ಉಲಮಾ ಎಪಿ ಉಸ್ತಾದರನ್ನು "ನಾವು ಭಾರತದ ಗ್ರಾಂಡ್ ಮುಫ್ತಿಯಾಗಿ ಅಂಗೀಕರಿಸುವುದಿಲ್ಲ" ಎಂದು ವಿರೋಧಿಗಳು ಹೇಳುತ್ತಾರೆ.
*ಹಾಗಾದರೆ,  ಇದುವರೆಗೂ ಭಾರತದ ಗ್ರಾಂಡ್ ಮುಫ್ತಿ ಯಾಗಿದ್ದ ಬಹುಮಾನ್ಯ ತಾಜುಶ್ಯರೀಅ ಮುಫ್ತಿ ಮುಹಮ್ಮದ್ ಅಖ್ತರ್ ರಝಾ ಖಾನ್ ಖಾದಿರಿ, ಅಲ್ ಅಝ್'ಹರಿ ಎಂಬ ವಿದ್ವಾಂಸರನ್ನು ಈ ವಿರೋಧಿಗಳು ಗ್ರಾಂಡ್ ಮುಫ್ತಿ ಯಾಗಿ ಅಂಗೀಕರಿಸಿದ್ದರಾ?*
 ಅಥವಾ, ಇವರ ಅಂಗೀಕಾರ ಅಥವಾ ತಿರಸ್ಕಾರವನ್ನು ಹನಫಿಗಳು ಪರಿಗಣಿಸಿದ್ದರಾ? ಇಲ್ಲವಲ್ಲ.
ಅಂದಮೇಲೆ, ಎಪಿ ಉಸ್ತಾದರನ್ನು "ನಾವು ಗ್ರಾಂಡ್ ಮುಫ್ತಿಯಾಗಿ ಅಂಗೀಕರಿಸುವುದಿಲ್ಲ" ಎಂಬ ತಿರಸ್ಕಾರಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ..

ಭಾರತ ದೇಶದ ಮುಸ್ಲಿಮರ ಜನಸಂಖ್ಯೆಯ 90% ಜನರೂ ಸುನ್ನಿಗಳು. ಅದರಲ್ಲಿ 99% ಜನರು ಹನಫಿಗಳು. ಅಂದರೆ, ಇಲ್ಲಿ ಯಾವುದೇ ನಿರ್ಣಯಕ್ಕೆ ಹನಫಿಗಳ ಅಂಗೀಕಾರವೇ ಪ್ರಧಾನ.
ಭಾರತ ದೇಶದ ಪ್ರಗಲ್ಘರಾದ ಸುನ್ನೀ ಉಲಮಾಗಳು ಒಟ್ಟು ಸೇರಿ,  *ತಾಜುಶ್ಯರೀಅ* ರವರ ಉತ್ತರಾಧಿಕಾರಿಯಾಗಿ  ಶಾಫಿ ಹನಫೀ ವಲಯದಲ್ಲಿ ಮಾತ್ರವಲ್ಲದೆ, ವಿಶ್ವ ಉಲಮಾ ಒಕ್ಕೂಟದಲ್ಲೇ ಹೆಚ್ಚು ಅಂಗೀಕಾರವಿರುವ ಪ್ರಗಲ್ಭ ವಿದ್ವಾಂಸ ಬಹುಮಾನ್ಯ ಸುಲ್ತಾನುಲ್ ಉಲಮಾ ಎಪಿ ಉಸ್ತಾದರನ್ನು, ಭಾರತದ ಉಲಮಾ ಒಕ್ಕೂಟ ಗ್ರಾಂಡ್ ಮುಫ್ತಿ ಯಾಗಿ ಅವಿರೋಧವಾಗಿ ಆಯ್ಕೆಮಾಡಿದ್ದಾರೆ.

*ಗ್ರಾಂಡ್ ಮುಫ್ತಿ ವಿರೋಧಿಗಳು ಯಾರ್ಯಾರು?*
ಭಾರತದ ಮುಸ್ಲಿಮರ ಜನಸಂಖ್ಯೆಯ 5-10 ಶೇಕಡಾ ಮಾತ್ರ ನೂತನವಾದಿಗಳಿರುವುದು. ಅವರ ಮತ್ತು SK ಸಮಸ್ತದ ವಿರೋಧವನ್ನು ಬಿಟ್ಟರೆ, ಭಾರತ ದೇಶದ 90 ಶೇಕಡದಷ್ಟು ಬರುವ ಶಾಫೀ ಹನಫೀ ಸುನ್ನೀ ಪಂಗಡದವರು ಎಪಿ ಉಸ್ತಾದರನ್ನು ಅಂಗೀಕರಿಸುತ್ತಾರೆ. ಅಂದಮೇಲೆ, ಒಂದತ್ತು ಶೇಕಡಾ ಜನರ ವಿರೋಧವನ್ನು ಪರಿಗಣಿಸಬೇಕಾಗಿಲ್ಲ ತಾನೇ.
90% ಜನರ ಅಂಗೀಕಾರವನ್ನು ಪರಿಗಣಿಸಿ, ಕೇವಲ 10%  ಜನರ ಅನುಮತಿಯ ಅವಶ್ಯಕತೆ ಇಲ್ಲದೆ ಭಾರತದ ಗ್ರಾಂಡ್ ಮುಫ್ತಿ ಯಾಗಿ ಸುಲ್ತಾನುಲ್ ಉಲಮಾ ರನ್ನು  ಆಯ್ಕೆ ಮಾಡಲು ಸಾದ್ಯವಿದೆ ಎಂಬುದನ್ನು, ಮೊಹಲ್ಲಾದ ಬಹುಸಂಖ್ಯಾತರ ಅಭಿಪ್ರಾಯವನ್ನು ಪರಿಗಣಿಸಿ *ತ್ವಾಖಾ ಉಸ್ತಾದ್* ರವರನ್ನು ಖಾಝಿಯಾಗಿ ಆಯ್ಕೆಮಾಡಿದ ಮಾನ್ಯ SK ಯ ಕಾರ್ಯಕರ್ತರು ತಿಳಿದುಕೊಂಡರೆ ಒಳ್ಳೆಯದು.

*ಘೋಷಣೆ ನಡೆದದ್ದು ಗ್ರೌಂಡ್ ನಲ್ಲಿಯೇ?*
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ *SSF ನ ನವ ರಾಷ್ಟ್ರೀಯ ಸಮಿತಿ* ಯನ್ನು ಕೂಡಾ ಘೋಷಿಸಲಾಯಿತು. ಇದೇನು ಗ್ರೌಂಡ್ ನಲ್ಲಿ ಮಾಡಿದ ಆಯ್ಕೆಯೇ?. ಅಲ್ಲ. ಆಯ್ಕೆ ನಡೆಸಲು ಬೇರಯದೇ ಪ್ರಕ್ರಿಯೆ ಇದೆ. ಅಲ್ಲಿ ನಡೆದ ಆಯ್ಕೆಯನ್ನು ಸಾರ್ವಜನಿಕ ಸಭೆಯಲ್ಲಿ ಘೋಷಣೆ ಮಾಡಿದುದೆಂದು ಮಾತ್ರ.
ಅದೇರೀತಿ, ಸುಲ್ತಾನುಲ್ ಉಲಮಾ ಎಪಿ ಉಸ್ತಾದರನ್ನು ಗ್ರಾಂಡ್ ಮುಫ್ತಿ ಯಾಗಿ ಆಯ್ಕೆ ಮಾಡಿದ ಪ್ರಕ್ರಿಯೆ ಬೇರೆಯದೇ ಇದೆ. ಅದನ್ನು ಭಾರತದ ಪ್ರಮುಖ ಉಲಮಾಗಳು ಸೇರಿ ನಡೆಸಿರುವುದಾಗಿದೆ. ಅದನ್ನು ಘೋಷಿಸಿದ್ದು ಮಾತ್ರ ಒಂದು ಕಾರ್ಯಕ್ರಮದಲ್ಲಿ..

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
*ಮಕ್ಕಾ ಖುರೈಶಿ ಸುಹೈಲ್ ಹಾಗೂ ಪುತ್ರ ಅಬೂಜಂದಲ್ (ರ) ಸಂತತಿಗಳಲ್ಲಿ ನಾವು ಯಾವ ಸಂತತಿಯಲ್ಲಿ ಸೇರಬೇಕು?*
*ಡಿಸೈಡ್ ಮಾಡಿ...‌*

ಅಂದು ಅಖಿಲಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಜನರಲ್ ಸಕ್ರೇಟರಿಯಾಗಿ ಕಾಂತಪುರಂ ಎಪಿ ಉಸ್ತಾದರನ್ನು ಆಯ್ಕೆ ಮಾಡಿದಾಗ ವಿರೋಧಿಗಳು ಶೈಖುನಾರವರನ್ನು *'ಆಳಿಲ್ಲ(ಅಖಿಲ) ಜಂಇಯ್ಯತುಲ್ ಉಲಮಾ ಸಕ್ರೇಟರಿ'* ಎಂದು ವ್ಯಂಗವಾಡಿದ್ದರು!
ಆದರೆ ವ್ಯಂಗವಾಡಿದವರು ಕೇರಳ ಹಾಗೂ ಕರಾವಳಿಯಲ್ಲೇ ವ್ಯಂಗಿಗಳಾಗಿ ಬಾಕಿಯಾದರು!
ಉಸ್ತಾದ್ ಭಾರತಾದ್ಯಂತ ಸಂಚರಿಸಿ ಇಂಡಿಯಾದ ಬಾಷೆಯಲ್ಲೇ ಸಂವಹನ ನಡೆಸಿ ಭಾರತದ ಮುಸ್ಲಿಮರಿಗೆ ಧೀರ ನಾಯಕತ್ವ ಕೊಟ್ಟರು.
ಪರಿಣಾಮ,
ದೇಶದ
ಗ್ರಾಂಡ್ ಮುಫ್ತಿ ಯಾಗಿ ದೆಹಲಿಯಲ್ಲಿ ಪ್ರಖ್ಯಾತ ಉಲಮಾಗಳು ಸಯ್ಯದರುಗಳ ಘನಸಾನಿಧ್ಯದಲ್ಲಿ  ಘೋಷಿಸಲ್ಪಟ್ಟರು!
ಆವಾಗಲೇ ವ್ಯಂಗವಾಡುವವರಿಗೆ ತಿಳಿದದ್ದು, ಎಪಿ,ಭಾರತಾದ್ಯಂತ ಸಂಚರಿಸಿ ತನ್ನ ಅಖಿಲ ಭಾರತ ಸಕ್ರೇಟರಿ ಸ್ಥಾನಕ್ಕೆ ತಕ್ಕ ಕಾರ್ಯಚರಿಸಿ ಸದ್ದಿಲ್ಲದೆ ಸುದ್ದಿ ಮಾಡಿದ್ದಾರೆ!
ಹೌದು ಉಸ್ತಾದ್ ಇದೀಗ
ಭಾರತ ಮುಸಲ್ಮಾನರ ಅಭಿಮಾನವಾಗಿ ಶೈಖುನಾ ಮಾರ್ಪಟ್ಟಿದ್ದಾರೆ!

ಪುನಃ ಅವರು
ಎಪಿ ಉಸ್ತಾದರಿಗೆ ಗ್ರಾಂಡ್ ಮುಫ್ತಿಯಾಗಲು ಇರುವ ಅರ್ಹತೆ ಯಾವುದೆಂಬ ಹುಡುಕಾಟದಲ್ಲಿ  ತೊಡಗಿಕೊಂಡಿದ್ದಾರೆ.
ಅವರ ಹುಡುಕಾಟ ವಿಧ್ವೇಷ,ಅಸೂಯೆಯ ಬಾಷೆಯಿಂದ ಮಾತ್ರವಾಗುವಾಗ ಸಹಜವಾಗಿಯೇ ವಿದೇಶಕ್ಕೆ ಹೋಗಿ ಗ್ರಾಂಡ್ ಮುಫ್ತಿ ಅಂತ ಹೇಳಿ ಹಣಮಾಡುವ ಧಂಧೆಯೆಂಬ ನಿರೂಪಣೆ ಬಂದಿದೆ!
ಪಾಪ,ಜಗತ್ತಿನಲ್ಲೇ ಟೋಪ್ & ಟೋಪ್ ನಾಯಕರ ಪಟ್ಟಿಯಲ್ಲಿ ಗುರುತಿಸಲ್ಪಟ್ಟ ಎಪಿ ಉಸ್ತಾದರಿಗೆ ಗ್ರಾಂಡ್ ಮುಫ್ತಿ ಪಟ್ಟ ಸಿಕ್ಕಿದರೆ ಮಾತ್ರ ಬದುಕಲು ಸಾದ್ಯ ಅಂಥ ತಿಳಿದುಕೊಂಡ ಅವಿವೇಕಿಗಳಿಗೆ ಕೊರತೆ ಇಲ್ಲ ಎಂದು ಸಮಾಜ ತಿಳಿಯುವಂತಾಯಿತು ಅಷ್ಟೆ.

ನಿಮಗೆ ತಿಳಿದಿರಬಹುದು ಹುದೈಬಿಯಾ ಕರಾರು ಬರೆಯುವಾಗ ಸುಹೈಲ್ ಬಿನ್ ಅಮ್ರ್ ಎಂಬಾತ ಕರಾರಿನಲ್ಲಿ *ಮುಹಮ್ಮದ್ ರ್ರಸೂಲುಲ್ಲಾಹ್* ಎಂದು ಬರೆಯಲು ಸುತರಾಂ ಒಪ್ಪಲಿಲ್ಲ.ಕಾರಣ *ರಸೂಲುಲ್ಲಾಹ್* ಎಂಬ ಟೈಟಲ್ ಗೌರವದ ಸಂಕೇತ!
ಅಂತಹ ಗೌರವಕ್ಕೆ ಪ್ರವಾದಿ ಮುಹಮ್ಮದ್ (ಸ್ವಲ್ಲಲ್ಲಾಹು ಅಲೈಹಿವಸಲ್ಲಮ್) ಅರ್ಹರು ಎಂದು ಮಕ್ಕಾ ಖುರೈಶಿಗಳ ನೇತಾರನಾದ ಸುಹೈಲ್ ನಿಗೆ ಗೊತ್ತು.ಆದರೂ ಅವನ ಅಹಂಕಾರ ಅಸೂಯೆ ಆ ನಾಮದಿಂದ ರಸೂಲರನ್ನು ಕರೆಯಲು ಇಷ್ಟಪಡಲಿಲ್ಲ.
ಅವನು ಹೇಳಿದ ಬೇಕಾದರೆ *ಅಬ್ದುಲ್ಲಾನ ಪುತ್ರ ಮುಹಮ್ಮದ್* ಅಂತ ಬರೆ *ರಸೂಲುಲ್ಲಾಹ್* ಎಂಬ ಗೌರವ ನಾಮದಿಂದ ಬರೆಯಬಾರದು!

ಆವಾಗ ಸಹಾಬಿಗಳ ರಕ್ತ ಕುದಿಯಲಾರಂಭಿಸಿತು. ನೆಬಿಯವರ ಆಜ್ಞೆಯೊಂದೇ ಬಾಕಿ ಅವರು ಎಲ್ಲದಕ್ಕೂ ತಯ್ಯಾರಾಗಿದ್ದರು.
ಆದರೆ ರಟ್ಟೆಬಲದ ಆವೇಶಕ್ಕೆ ಆಸ್ಪದಕೊಡದ ಮುಹಮ್ಮದ್ ನೆಬಿಯವರು *ಮುಹಮ್ಮದ್ ಬಿನ್ ಅಬ್ದಿಲ್ಲಾ* ಎಂದು ಬರೆಯಲು ಆಜ್ಞಾಪಿಸಿದರು.

ಗೌರವದ ಸಂಕೇತವಾದ *ರಸೂಲುಲ್ಲಾಹ್* ಎಂಬ ನಾಮವನ್ನು ಅಂಗೀಕರಿಸಲು ಸುಹೈಲ್ ಸಹಿತ ಮಕ್ಕಾ ಮುಶ್ರಿಕರು ತಯ್ಯಾರಾಗಿರಲಿಲ್ಲ. ಕಾರಣ ಅಸೂಯೆ ಅವರ ತಲೆಗೆ ಅಷ್ಟೊಂದು ಅಡರಿತ್ತು!

ಅದೇ ರೀತಿ ಪ್ರವಾದಿಗಳ ಉತ್ತರಾಧಿಕಾರಿಗಳಾದ ಉಲಮಾಗಳಿಗೆ *ಗ್ರಾಂಡ್ ಮುಫ್ತಿ* ಮುಂತಾದ ಗೌರವ ನಾಮಗಳಿಗೆ ಬೆಲೆಕೊಡದ ಸುಹೈಲ್ ನ ಸಂತತಿಗಳು ಈಗಲೂ ಇದ್ದಾರೆ.ಅಂತ್ಯದಿನದವರೆಗೂ ಅವರಿರುವರು.ಅದು ಚರಿತ್ರೆಯ ಪುನರ್ಜನ್ಮ!

ನಿಜವಾಗಿಯೂ ಎಪಿ ಉಸ್ತಾದರಿಗೆ ಜಾಗತಿಕ ಮಟ್ಟದಲ್ಲಿ ಸಿಗುವ ಮನ್ನಣೆ'ಅದರಲ್ಲೂ ವಿಶೇಷವಾಗಿ ಭಾರತಾದ್ಯಂತ ಲಭಿಸುವ ಅಂಗೀಕಾರ ತಮ್ಮ ನಾಯಕರಿಗೆ ದಕ್ಕುವುದಿಲ್ಲ ಎಂಬ ಕೊರಗು ಸಹಜವಾಗಿಯೇ ಎಪಿ ಉಸ್ತಾದರ ವಿರೋಧಿಗಳನ್ನು ಕಾಡುತ್ತಿದೆ.
ಅದಕ್ಕೆ ನಮಗೇನು ಮಾಡಲಿಕ್ಕೆ ಸಾದ್ಯ?
ಉಸ್ತಾದರೊಬ್ಬರು ಹೇಳಿದಂತೆ ನಿಮ್ಮ ಉಲಮಾಗಳು ಅಥವಾ ನಾಯಕರು ಎಪಿ ಉಸ್ತಾದರಿಗಿಂತ ದೊಡ್ಡದಾದ ಸಾಧನೆ ಮಾಡಲಿ ಆಗ ಅವರನ್ನೂ ಗ್ರಾಂಡ್ ಮುಫ್ತಿ ಪಟ್ಟ ಹುಡುಕಿ ಬರುತ್ತದೆ.ನಿಮ್ಮ ಆಗ್ರಹದಂತೆ ಎಪಿ ಉಸ್ತಾದ್ ಸಣ್ಣವರಾಗುತ್ತಾರೆ.

ದಿನಬೆಳಗಾಗುವುದರಲ್ಲಿ ಎಪಿ ಉಸ್ತಾದರಿಗೆ ಈ ಗೌರವ ಸಿಕ್ಕಿದ್ದಲ್ಲ ಎಂಬುವುದು ವಿರೋಧಿಗಳಿಗೂ ಗೊತ್ತಿರುವ ಸಂಗತಿ.
ಕಠಿಣ ಅಧ್ವಾನ,ಸಾಧನೆ, ಸಮುದಾಯ ಕಟ್ಟಕಡೆಯವನನ್ನು ಮೇಲೆತ್ತಲು ಬೇಕಾಗಿ ನಿರಂತರ ಪರಿಶ್ರಮ,ಅದಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಕ್ರಾಂತಿಕಾರಿ ಹೆಜ್ಜೆ ಹಾಕಿದ್ದು,ಅಂತರಾಷ್ಟ್ರೀಯ ನಾಯಕರೊಂದಿಗೆ ಸಂಬಂಧ, ಭಾರತಾದ್ಯಂತ ಪ್ರವಾಸಮಾಡಿ ಅಲ್ಲೆಲ್ಲಾ ಶಿಕ್ಷಣ ಸಮುಚ್ಚಯ ಕಟ್ಟಿ ಅಲ್ಲಿಯ ಶಿಕ್ಷಣ ವಂಚಿತರನ್ನು ಮುಖ್ಯವಾಹಿನಿಗೆ ತಂದು ನಿಲ್ಲಿಸಿದ್ದು,ಕಾಶ್ಮೀರದ ಗುಂಡಿನ ಶಬ್ದದೊಂದಿಗೆ ಎದ್ದೇಳುವ ಮಕ್ಕಳನ್ನು ತನ್ನ ಮರ್ಕಝ್ ಗೆ ತಂದು ಅವರಿಗೆ ಬಾಳುಕೊಟ್ಟದ್ದು.ತನ್ನ ಅಗಾದವಾದ ವಿಜ್ಞಾನವನ್ನು ಯಥೇಚ್ಛವಾಗಿ ಧಾರೆಯೆರದು ಲಕ್ಷಾಂತರ ಉಲಮಾಗಳನ್ನು ಸ್ರಷ್ಟಿಸಿ ಉಲಮಾಗಳ ಸುಲ್ತಾನರಾಗಿ ಪ್ರಸಿಧ್ಧಿಪಡೆದದ್ದು.ಉತ್ತರ ಭಾರತದ ಮುಸಲ್ಮಾನರು ನಾಯಕತ್ವದ ಕೊರತೆ ಅನುಭವಿಸಿದಾಗ ಅಲ್ಲಿನ ಉಲಮಾಗಳನ್ನು ತನ್ನ ಮರ್ಕಝ್ ಗೆ ಕರೆಸಿ ನಾಯಕತ್ವದ ಪಾಠ ಕಲಿಸಿಕೊಟ್ಟು ಅವರಿಗೂ ಶೈಖ್ ಆದಾಗ,
ಅವರೆಲ್ಲರೂ ಒಕ್ಕೂರಲಿನಿಂದ ಘೋಷಿಸಿದರು ನಮ್ಮ ಶೈಖ್ ಖಬೀರ್ *ಗ್ರಾಂಡ್ ಮುಫ್ತಿ* ಶೈಖ್ ಅಬೂಬಕರ್ ಕಿಬ್ಲ ಆಗಿದ್ದಾರೆ!
ಅವರು ಅಭಿಮಾನದಿಂದ ಘೋಷಿಸಿದರು!

ಪದವಿಗಳು ಬಿರುದುಗಳು,ಸನ್ಮಾನ, ಅಭಿನಂದನೆಗಳು ಆಲಿಂ ಆಗಿರುವುದರ ಮಾನದಂಡನೆಯಲ್ಲ.ಎಂದು ಜಕ್ರಿಬೆಟ್ಟು ಹೇಳುವಾಗಲೂ ಇದೆಲ್ಲವೂ ಒಬ್ಬ ಆಲಿಂ ಸಮಾಜದಲ್ಲಿ ಸುಧಾರಣೆ ಮಾಡಿದಾಗ ಅವರನ್ನು ಹುಡುಕಿ ಬಂದಿದೆ ಎಂಬ ಅಲ್ಪ ಜ್ಞಾನ ಕೂಡ ಜಕ್ರಿಗೆ ಇಲ್ಲದೆ ಹೋದದ್ದು  ದುರಂತ.

ಅಸೂಯೆ ಮನುಷ್ಯನನ್ನು ಯಾವ ರೀತಿ ಕ್ರೂರಿಯನ್ನಾಗಿ ಮಾರ್ಪಡಿಸುತ್ತದೆಯೆಂಬುದು ಇಂದಿನ ಕೆಲವರ ಹತಾಶೆ ಬರಹಗಳ ಮೂಲಕ ತಿಳಿಯಲು ಸಾದ್ಯವಾಯಿತು.

ಚರಿತ್ರೆಯಿಂದ ನಾವು ಪಾಠ ಕಲಿಯಬೇಕು.ಪುಣ್ಯ ಹಬೀಬರಿಗೆ ಇರುವ *ರಸೂಲುಲ್ಲಾಹ್* ಎಂಬ ಗೌರವಕ್ಕೆ ಅಸೂಯೆ ನಿಮಿತ್ತ ಸುಹೈಲ್ ಬೆಲೆ ಕೊಡಲಿಲ್ಲ ಅವನ ಸಂತತಿಗಳು ಅಂತ್ಯದಿನದ ತನಕ ಬಾಕಿಯಾಗಲಿದೆ.
ಅದೇ ಸಮಯ ಸುಹೈಲ್ ನ ಪುತ್ರ ಅಬೂ ಜಂದಲ್ ಇಸ್ಲಾಂ ಸ್ವೀಕರಿಸಿ ನೆಬಿಯವರನ್ನು *ರಸೂಲುಲ್ಲಾಹ್* ಎಂದು ಎದೆಗಪ್ಪಿ ಘೋಷಿಸಿಯೇ ಬಿಟ್ಟರು!
ಉತ್ತರಾಧಿಕಾರಿಗಳಾದ ಉಲಮಾಗಳನ್ನು ಗೌರವದಿಂದ ಕರೆಯುವ ಅಬೂಜಂದಲ್ (ರ) ರವರ ಸಂತತಿಯೂ ಅಂತ್ಯದಿನದವರೆಗೆ ಬಾಕಿಯಾಗಲಿದೆ.ಅವರು ಸತ್ಯದ ಹಾದಿಯಲ್ಲಿ ಅಜಮರಾಗಿರುವರು.

ಕೊನೆಯದಾಗಿ...;

*ಸಕರಾತ್ಮವಾಗಿ ಚಿಂತಿಸಿ ಕಾರ್ಯಚರಿಸುವವನನ್ನು ಯಾವ ವಿಷದಿಂದಲೂ ಕೊಲ್ಲಲು ಸಾದ್ಯವಿಲ್ಲ.*
*ಅದೇ ರೀತಿ ನಕರಾತ್ಮವಾಗಿ ಚಿಂತಿಸುವವನನ್ನು ಯಾವ ಔಷದಿಯಿಂದಲೂ ಗುಣಪಡಿಸಲು ಸಾದ್ಯವಿಲ್ಲ....*

ಅಬೂಶಝ
ಭಾರತದಲ್ಲಿ ಗ್ರ್ಯಾಂಡ್ ಮುಫ್ತಿ ಯಾಕಿರಬಾರದು

ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ. ಉಸ್ತಾದ್ ರವರನ್ನು ದೆಹಲಿಯಲ್ಲಿ ನಡೆದ ಗರೀಬ್ ನವಾಜ್ ಶಾಂತಿ ಸಮ್ಮೇಳನದಲ್ಲಿ ಗ್ರ್ಯಾಂಡ್ ಮುಫ್ತಿ ಪದ ಅಲಂಕರಿಸಿದ ನಂತರ ,ಗ್ರ್ಯಾಂಡ್ ಮುಫ್ತಿಯ ಬಗ್ಗೆ ಚರ್ಚೆಗಳು ಶುರುವಾಗಿವೆ. ದಕ್ಷಿಣ ಭಾರತದಲ್ಲಿ ಈ ಪದ ಬಳಕೆ ಕಡಿಮೆಯಾಗಿರುವುದರಿಂದ,ಹಾಗೂ ಈ ಬಗ್ಗೆ ಮಾಹಿತಿಯ ಕೊರತೆಯಿಂದ ಇಂತಹ ಚರ್ಚೆಗಳಿಗೆ ರೆಕ್ಕೆ ಪುಕ್ಕ ಸಿಕ್ಕಿವೆ.

ಗ್ರ್ಯಾಂಡ್ ಮುಫ್ತಿ ಅಂದರೆ..
ತುರ್ಕಿ ಕೇಂದ್ರವಾಗಿಟ್ಟು ಉಸ್ಮಾನಿಯ ಖಿಲಾಫತ್ ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಗ್ರ್ಯಾಂಡ್ ಮುಫ್ತಿ ಎಂಬ ಪದ ಚಾಲ್ತಿಗೆ ಬಂತು.
ಇಸ್ಲಾಮಿನ ಬಗ್ಗೆ ಆಳವಾದ ಜ್ಞಾನ ಹೊಂದಿ,ಸಮಕಾಲೀನ ಸಮಸ್ಯೆಗಳ ಬಗ್ಗೆ ಸ್ಪಷ್ಟವಾದ ಅರಿವಿದ್ದು ,ಅದರ ಪರಿಹಾರಕ್ಕೆ ಪ್ರಾಯೋಗಿಕವಾದ ವಿಧಿ ನೀಡಲು ಅರ್ಹತೆಯಿರುವವರನ್ನು ಮುಫ್ತಿ ಎನ್ನಲಾಗುತ್ತದೆ. ಈ ಮುಫ್ತಿಗಳ ಮುಖಂಡರಿಗೆ ಗ್ರ್ಯಾಂಡ್ ಮುಫ್ತಿ ಎಂದು ಕರೆಯಲಾಗುತ್ತದೆ ಭಿನ್ನಾಭಿಪ್ರಾಯಗಳಿರುವ ವಿಷಯದಲ್ಲಿ ಅಂತಿಮ ತೀರ್ಮಾನ ನೀಡುವುದು, ಶರೀಹತ್‌ನ ಸಂರಕ್ಷಣೆಗೆ ಯುಕ್ತಿ ಪೂರ್ಣವಾದ ಮಾರ್ಗ ಅನುಸರಿಸುವುದು ಈ ಗ್ರಾಂಡ್ ಮುಫ್ತಿಯ ಮುಖ್ಯ ಜವಾಬ್ದಾರಿ

ಇಸ್ಲಾಮೀ ಇತಿಹಾಸದಲ್ಲಿ ಇದನ್ನು ವಿವಿಧ ರೂಪದಲ್ಲಿ ಉಪಯೋಗಿಸಲಾಗಿತ್ತು.
ಮುಸ್ಲಿಂ ರಾಷ್ಟ್ರಗಳಲ್ಲಿ ಸರಕಾರವೇ ಇಂತಹ ಪದವಿ ಸೃಷ್ಟಿಸಿ, ತಾನೇ ಆ ಪದವಿಗೆ ಯೋಗ್ಯ ವಿದ್ವಾಂಸರನ್ನು ನಿಯಮಿಸುತ್ತದೆ. ಉದಾಹರಣೆಗೆ ಸೌದಿ.
ಇನ್ನು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಲ್ಲಿ ಅಥವಾ ಮುಸ್ಲಿಂ ಅಲ್ಪ ಸಂಖ್ಯಾತ ದೇಶಗಳಲ್ಲಿ ಅಲ್ಲಿನ ಅಧಿಕೃತ ಇಸ್ಲಾಮಿಕ್ ಒಕ್ಕೂಟಗಳು, ಸಮಿತಿಗಳು, ಉಲಮಾಗಳು ಈ ಪದವಿಗೆ ಅರ್ಹ ವಿದ್ವಾಂಸನನ್ನು ನೇಮಕ ಮಾಡುತ್ತದೆ. ಉಸ್ಮಾನಿಯಾ ಖಿಲಾಫತ್‌ನ ಅದೇ ಅನುಕರಣೆಯನ್ನು ಈಜಿಪ್ತ್ ಮಾಡಿದೆ. ಆಸ್ರೇಲಿಯಾ, ಬಾಂಗ್ಲಾದೇಶ, ಬೋಸ್ನಿಯಾ, ಹಂಗೇರಿ,ಅಲ್ಬೇನಿಯ ದಂತಹ ರಾಷ್ಟ್ರಗಳಲ್ಲಿರುವ ಗ್ರ್ಯಾಂಡ್ ಮುಫ್ತಿಗಳು ಇದಕ್ಕೆ ಉದಾಹರಣೆ.
ಇನ್ನು ಇವರನ್ನು ಅಂಗೀಕರಿಸದ ಮುಸ್ಲಿಂ ಗುಂಪುಗಳು ಆ ರಾಷ್ಟ್ರದಲ್ಲಿ ಇರಬಹುದು. ಹಾಗೆಂದು ಗ್ರ್ಯಾಂಡ್ ಮುಫ್ತಿ ಪದ ಅಪ್ರಸ್ತುತವಾಗುವುದಿಲ್ಲ.

ಇನ್ನು ಭಾರತದಲ್ಲಿ ಈ ಪದವಿ ಹಿಂದೆಯೂ ಚಾಲ್ತಿಯಲ್ಲಿತ್ತು.* *2018 ಜುಲಾ 20ರಂದು ವಫಾತಾದ ಶೈಖ್ ಮುಹಮ್ಮದ್ ಅಖ್ತಾರ್ ರಝಾ ಖಾನ್ ಅಲ್ ಅಝ್ಹರಿಯವರು ಹಿಂದಿನ ಗ್ರ್ಯಾಂಡ್ ಮುಫ್ತಿಯಾಗಿದ್ದರು.
ಇಮಾಂ ಅಹ್ಮದ್ ರಝಾಖಾನ್‌ರವರ ಪೌತ್ರರಾಗಿರುವ ಅಖ್ತಾರ್ ರಝಾಖಾನ್‌ರವರನ್ನು ಕೂಡಾ ಇದೇ ರೀತಿ ನೇಮಿಸಲಾಗಿತ್ತು.
ನಿನ್ನೆ ದೆಹಲಿಯ ರಾಮಲೀಲ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಉತ್ತರ ಭಾರತದ ಸುನ್ನೀ ಉಲಮಾ ಒಕ್ಕೂಟದ ಪ್ರತಿನಿಧಿಗಳು, ಇಸ್ಲಾಮಿಕ್ ಸಂಘ ಸಂಸ್ಥೆಗಳ ಮುಖಂಡರು, ಸೂಫಿ ಸಂತರ ಪ್ರತಿನಿಧಿಗಳು ಒಟ್ಟು ಸೇರಿ ಶೈಖುನಾ ಎ.ಪಿ. ಉಸ್ತಾದರನ್ನು ಈ ಪದವಿಗೆ ಆರಿಸಿದ್ದಾರೆ.
ಇನ್ನು ಇವರನ್ನು ಅಂಗೀಕರಿಸದವರು ಈ ದೇಶದಲ್ಲಿರಬಹುದು. ಹಾಗೆಂದು ಈ ಪದವಿ ನೀಡುವುದು ಸರಿಯಲ್ಲವೆಂದು ಹೇಳುವುದು ಬಾಲಿಶತನ.

ಕಾರಣ ದೇಶದ ಮುಸಲ್ಮಾನರಲ್ಲಿ ಬಹು ಸಂಖ್ಯಾತರಾಗಿರುವ ಸುನ್ನಿಗಳಿಗೆ ಎ.ಪಿ. ಉಸ್ತಾದ್ ಅಂಗೀಕೃತ, ಪ್ರಬಲ ನಾಯಕ.

ಇನ್ನು ಎ.ಪಿ. ಉಸ್ತಾದ್‌ರೊಂದಿಗೆ ಸಂಘಟನಾ, ಸಿದ್ಧಾಂತಗಳ ಭಿನ್ನತೆಯನ್ನು ಬದಿಗಿಟ್ಟು ಎಲ್ಲರೂ ಚಿಂತಿಸಿದರೆ ಇಂತಹ ನೇಮಕದ ಅನಿವಾರ್ಯತೆ ಇದೆಯೆನ್ನಬಹುದು. ವಿಶೇಷವಾಗಿ ಮುಸ್ಲಿಂ ಸಮುದಾಯ ಶಿಕ್ಷಣ ಆರೋಗ್ಯ, ಉದ್ಯೋಗ, ಆರ್ಥಿಕ ರಂಗದಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು ಇವರ ಉನ್ನತಿಗೆ ಶ್ರಮಿಸುವ ವಿದ್ವಾಂಸರ ಅನಿವಾರ್ಯತೆ ಖಂಡಿತ ಇದೆ. ನೇತೃತ್ವ ಕೊರತೆ ಅನುಭವಿಸುತ್ತಿರುವ ಈ ಸಮುದಾಯಕ್ಕೆ ಸರಿಯಾದ ದಿಕ್ಕು, ಸ್ಪಷ್ಟವಾದ ದಾರಿ ತೋರಿಸುವ ನಾಯಕನ ಅಗತ್ಯವಿದೆ.

ಎ.ಪಿ. ಉಸ್ತಾದ್ ಯೋಗ್ಯ ವ್ಯಕ್ತಿಯಾ?
ಎ.ಪಿ. ಉಸ್ತಾದರ ಆಯ್ಕೆಯನ್ನು ವಿಮರ್ಶಿಸುವವರು, ಟೀಕಿಸುವವರು ಇರಬಹುದು. ಅದು ಅವರ ಸ್ವಾತಂತ್ರ್ಯ. ಆದರೆ ಪೂರ್ವಗ್ರಹ ಮೆರೆತು ಚಿಂತಿಸಿದರೆ ಸತ್ಯ ಮನದಟ್ಟಾಗಬಹುದು. ದೇಶದ 22ಕ್ಕೂ ಮಿಕ್ಕ ರಾಜ್ಯಗಳಲ್ಲಿ ಶಿಕ್ಷಣ, ಆರೋಗ್ಯ, ಕೇಂದ್ರಗಳನ್ನು ಸ್ಥಾಪಿಸಿ, ಮಸ್ಜಿದ್ ,ಮದರಸಗಳನ್ನು ನಿರ್ಮಿಸಿ, ಅಲ್ಲೆಲ್ಲಾ ಮುಸ್ಲಿಮರನ್ನು ಒಗ್ಗೂಡಿಸಿ, ದೇಶದ ಪ್ರಜ್ಞಾವಂತ ಪ್ರಜೆಗಳನ್ನಾಗಿ ರೂಪಿಸುವಲ್ಲಿ , ಅವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಲ್ಲಿ  ಎ.ಪಿ ಉಸ್ತಾದರ ಪಾತ್ರ ಅವಿಸ್ಮರಣೀಯ.

ತಾನು ಮಾಡಬೇಕಾದ್ದನೆಲ್ಲಾ ಮಾಡಲು ತಾಖತ್ತಿರುವ, ಹೇಳಬೇಕಾದ್ದನ್ನು ಯಾರ ಮುಲಾಜಿಲ್ಲದೆ ಹೇಳುವ, ಯಾರೇ ಅಧಿಕಾರಕ್ಕೆ ಬಂದರೂ ಅವರೊಂದಿಗೆ ಸಮುದಾಯದ ಸ್ಥಿತಿಗತಿಗಳ ಬಗ್ಗೆ ಚರ್ಚಿಸುವ, ಸವಾಲುಗಳನ್ನು, ಸಮಸ್ಯೆಗಳನ್ನು ದೃಢವಾಗಿ ನಿಂತು ಎದುರಿಸಿ ಪರಿಹಾರ ಕೈಗೊಳ್ಳಲು ಸಮರ್ಥರಾಗಿರುವ ಎ.ಪಿ. ಉಸ್ತಾದ್ ಈ ಹುದ್ದೆಗೆ ಅರ್ಹವ್ಯಕ್ತಿಯೆಂದರೆ ತಪ್ಪಗಲಾರದು. ಇನ್ನು ಅವರು ಅರ್ಹರಲ್ಲದಿದ್ದರೆ ಅದಕ್ಕಿಂತಲೂ ಮಿಗಿಲಾದ ಬೇರಾರು ಇದ್ದಾರಾ?

ಎ.ಪಿ. ಉಸ್ತಾದರೊಂದಿಗೆ ವಿರೋಧ ಬದಿಗಿಟ್ಟು ಅವರ ಚಟುವಟಿಕೆ, ಸಾಮಾಜಿಕ ಕಳಕಳಿಯನ್ನು ಗಮನಿಸುವವರಿಗೆ ಈ ಸತ್ಯ ಮನದಟ್ಟಾದೀತು.
ಏನಂತೀರಾ?
*ಗ್ರಾಂಡ್ ಮುಫ್ತಿ ಮತ್ತು ವಿವಾದಗಳು*

ಎಪಿ ಉಸ್ತಾದ್ ರನ್ನು ಗ್ರಾಂಡ್ ಮುಫ್ತಿ ಯಾಗಿ ನೇಮಿಸಿದ್ದನ್ನು ವಿರೋಧಿ ಸುವವರು ಯಾರು ?

ಕೆಳಗೆ ನೋಡಿ.
👇👇👇👇

👉 *ಖಾದಿಯಾನಿ ಯಾನೆ ಸಲಪಿ*
👉 *ಶಿಯಾ ಯಾನೆ ವಹ್ಹಾಬಿ*
👉 *ಅಸೂಯೆ ಕೋರರು*
👉 *ಕಳ್ಳ ತ್ವರೀಖ ತ್ ನವರು*


ಇವರು ಎಪಿ ಉಸ್ತಾದ್ ರನ್ನು ಬದ್ದ ಶತ್ರುವಾಗಿ ಕಾಣುವವರು.

ಏಕೆಂದರೆ, ಈ ಬಿದ'ಈ ಗಳನ್ನು ಎಡ್ರಸ್ ಇಲ್ಲದಂತೆ ಮಾಡಿದವರೇ ಎಪಿ ಉಸ್ತಾದರವರು ಮತ್ತು ಅವರ  ಅನುಯಾಯಿಗಳು.

ಗ್ರಾಂಡ್ ಮುಪ್ತಿಯಾದ ಬಳಿಕ ಇವರ ವಿರೋಧ ಜಾಸ್ತಿಯಾಗಿದೆ.

ಅಳಿದುಳಿದ  ತಮ್ಮ ಅಡಿಪಾಯ ಎಲ್ಲಿ ಸರ್ವ ನಾಶ ವಾಗುತ್ತದೆ ಎಂಬ ಹೆದರಿಕೆ  ಗ್ರಾಂಡ್ ಮುಫ್ತಿ ಯ ಬಗ್ಗೆ ಅಪಸ್ವರ ಎತ್ತುವಂತೆ ಮಾಡಿದೆಯಷ್ಟೇ.

ಭಾರತದ ಅತೀ ಹೆಚ್ಚು ಮುಸ್ಲಿಮರು ಹನಫಿ ಬಾಂದವರು. ಅವರ ಅಂತಿಮ ತೀರ್ಪು ಗ್ರಾಂಡ್ ಮುಫ್ತಿ ಯದ್ದೇ. ಗ್ರಾಂಡ್ ಮುಫ್ತಿ ಯಾಗಿದ್ದ ತಾಜುಶ್ಶರೀಅ ವಫಾತಾದಾಗ ಅದೇ ಹನಫಿ ವಿದ್ವಾಂಸರ ಒಕ್ಕೂಟ ಚರ್ಚೆ ನಡೆಸಿ ಎಪಿ ಉಸ್ತಾದ್ ರನ್ನು ಆ ಜಾಗಕ್ಕೆ ನೇಮಿಸಿದೆ.

*ಇಪ್ಪತ್ತು ಕೋಟಿ ಮುಸ್ಲಿಮರಲ್ಲಿ ಹತ್ತೊಂಬತ್ತು ಕೋಟಿ ಮುಸ್ಲಿಮರು ಹನಫಿ ಬಾಂಧವರೂ ಮತ್ತು ಅವರು ಗ್ರಾಂಡ್ ಮುಫ್ತಿಯನ್ನು  ಅಂಗೀಕರಿಸುವವರಾಗಿದ್ದಾರೆ.*
ಇನ್ನು ಈ ಅಲವಲಾದಿ ಗಳನ್ನು ಒಟ್ಟು ಸೇರಿಸಿದರೆ ಒಂದು ಲಕ್ಷವೂ ಮೀರಲ್ಲ. ಇವರು ಇರುವುದು ಮಂಗಳೂರಿನ ಕೆಲವು ಕಡೆ ಮತ್ತು ಕೇರಳದ ಕೆಲವು ಕಡೆ . ಇವರ ಅಂಗೀಕಾರ ಯಾರಿಗೆ ಬೇಕು.?

ಇನ್ನು ವಫಾತಾದ ಗ್ರಾಂಡ್ ಮುಫ್ತಿ ತಾಜುಶ್ಶರೀಯ್ಯ ರನ್ನು ಈ ಅಲವಲಾದಿ ವಿಭಾಗ ಅಂಗೀಕರಿಸಿವೆಯೇ ?

ಇಲ್ಲ ಎಂದಾದರೆ ಅವರು ಎಪಿ ಉಸ್ತಾದ್ ರನ್ನು ಅಂಗೀಕರಿಸುವುದಿಲ್ಲ ಎಂಬುದಕ್ಕೆ ಅರ್ಥವೆ ಇಲ್ಲ.

*ವಾಟ್ಸಫ್ ನಲ್ಲಿ ಗ್ರಾಂಡ್ ಮುಫ್ತಿ ಗೆ ಪ್ರಶ್ನೆಗಳೆಂದು ಮೆಸೇಜ್ ಬಿಡುವವರು ಖಾದಿಯಾನಿ ಯಾನೆ ವಹ್ಹಾಬಿ ಯ ಚಾರರು.* ರಸ್ತೆ ಬದಿಯಲ್ಲಿ ಹೋಗುವ ಹುಚ್ಚನ ಮಾತಿಗೆ ಬೆಲೆ ಕಲ್ಪಿಸದಂತೆ ಈ ವಹ್ಹಾಬಿ ಗಳ, ಕಳ್ಳತ್ವರೀಖತ್ ನವರ ಮೆಸೇಜ್ ಅನ್ನೂ ಪರಿಗಣಿಸಬೇಕಾಗಿಲ್ಲ.

ಖಾದರ್ ಉಳ್ಳಾಲ           ಫಾರ್ಮ್ ಅಲ್ ಜುಬೈಲ್ ಸೌದಿ ಅರೇಬಿಯಾ
ಎಸ್ಕೆಎಸ್ಸೆಸ್ಸೆಫ್ ನಾಯಕ ಲತೀಫ್ ನೆಲ್ಲಿಚ್ಚೋಡ್ ಬರೆಯುತ್ತಾರೆ..

*ಮೋದಿ ಹಾಗೂ ಕಾಂತಪುರಂ ವೇದಿಕೆ ಹಂಚುವಾಗ!*

ಜೋರ್ಡಾನ್ ರಾಜ ಎರಡನೆಯ ಕಿಂಗ್ ಅಬ್ದುಲ್ಲಾರ ಭಾರತ ಸಂದರ್ಶನದ ಭಾಗವಾಗಿ ಆಥಿತ್ಯ ಸಮಾರಂಭದಲ್ಲಿ ಸರಕಾರದ ಆಹ್ವಾನಿತರಾಗಿಯಾಗಿದೆ ಕಾಂತಪುರಂ ಉಸ್ತಾದ್ ದೆಹಲಿಗೆ ತಲುಪಿದ್ದು.

ಭಯಾನಕವಾದ ಸನ್ನಿವೇಶವೊಂದು ಅಲ್ಲಿ ಸಂಭವಿಸಿದೆ ಎಂಬ ರೀತಿಯಲ್ಲಾಗಿತ್ತು ಈ ಒಂದು ಸಮ್ಮಿಲವನ್ನು ಹಲವಾರು ಜನರು ಸಾಮಾಜಿಕ ತಾಣಗಳಲ್ಲಿ ಇಲ್ಲ ಸಲ್ಲದ ಅಪವಾದದೊಂದಿಗೆ ಪ್ರಚಾರಪಡಿಸುತ್ತಿದ್ದರು.
ಅಲ್ಲದಿದ್ದರೂ ಯಾವುದೇ ಒಂದು ವಿಷಯವನ್ನು ಸ್ಪಷ್ಟವಾಗಿ ಕಲಿಯದೆ, ತಿಳಿದುಕೊಳ್ಳದೆ ಬಾಯಿಗೆ ಬಂದಂತೆ ಬರೆಯುವ ಅಥವಾ ಹೇಳುವ ಒಂದು ಪ್ರಹಸನವಾಗಿದೆ ಸಾಮಾಜಿಕ ಜಾಲತಾಣಗಳಲ್ಲಿ ಈಗ ಹೆಚ್ಚಾಗಿ ಕಂಡುಬರುವಂತದ್ದು‌..

ಇಲ್ಲಿನ ವಿಷಯಕ್ಕೆ ಬರುವ ಮೊದಲಾಗಿ ಚರಿತ್ರೆಯ ಕಡೆ ಒಮ್ಮೆ ಹಿಂತಿರುಗಿ ಹೋಗಿ ಅವಲೋಕನ ನಡೆಸೋಣ.
ಪ್ರವಾದಿ ಮುಹಮ್ಮದ್ ಮುಸ್ತಫಾ ಸ.ಅ ಪವಿತ್ರ ಹಜ್ ಕರ್ಮ ನಿರ್ವಹಿಸುವ ಸಂಧರ್ಭ  ಜಂರದಲ್ಲಿ ಕಲ್ಲೆಸೆಯುವ ವೇಳೆಯಲ್ಲಿ ಪ್ರವಾದಿಯ ಬಳಿ ಒಬ್ಬರು ಬಂದು ಕೇಳುತ್ತಾರೆ.
ಓ ಹಬೀಬರೇ, ಅತ್ಯಂತ ಶ್ರೇಷ್ಠವಾದ ಜಿಹಾದ್ ಯಾವುದು? ಅದಕ್ಕೆ ಹಬೀಬರು ಯಾವುದೇ ಉತ್ತರ ನೀಡಲಿಲ್ಲ.
ಆ ವ್ಯಕ್ತಿಯು ಅದೇ ಪ್ರಶ್ನೆಯನ್ನು ನಾಲ್ಕು ಬಾರಿ ಆವರ್ತಿಸಿ ಕೇಳಿದರೂ  ಮೌನವಾಗಿತ್ತು ಹಬೀಬರ ಉತ್ತರ.
ಹಜ್ಜ್ ಕರ್ಮವು ಪೂರ್ತಿಗೊಳಿಸಿ ಒಂಟೆಯ ಮೇಲೇರಿ ಮರಳುವ ಸಂಧರ್ಭದಲ್ಲಿ ಹಬೀಬರು ಸ್ವಹಾಬಿವರ್ಯರಲ್ಲಿ ಅನ್ವೇಷಿಸುತ್ತಾರೆ. " ಎಲ್ಲಿ, ನನ್ನಲ್ಲಿ ಪ್ರಶ್ನಿಸಿದ ವ್ಯಕ್ತಿ ಎಲ್ಲಿ?
ಅತ್ಯಂತ ಶ್ರೇಷ್ಠವಾದ ಜಿಹಾದ್ ಯಾವುದು ಎಂಬುವುದು ತಾನೇ ತಮ್ಮ ಸಂಶಯ. *ಕ್ರೂರನಾದ ಆಡಳಿತಗಾರನ ಮುಂದೆ ಧೈರ್ಯದಿಂದ ಸತ್ಯವನ್ನು ತೆರೆದು ಹೇಳುವುದಾಗಿದೆ ಅತ್ಯಂತ ಶ್ರೇಷ್ಟವಾದ ಧರ್ಮ ಸಮರ.* ಎಂದಾಗಿತ್ತು ಹಬೀಬರ ಉತ್ತರ.

ಈ ಒಂದು ಕಾರ್ಯವೇ ಮೋದಿ ಜೊತೆ ವೇದಿಕೆ ಹಂಚಿದಾಗ ಕಾಂತಪುರಂ ಉಸ್ತಾದ್ ನಿರ್ವಹಿಸಿದ್ದು!? ಅಥವಾ ಇಲ್ಲಿನ ಮುಸ್ಲಿಮರನ್ನು ವಂಚಿಸುವ ಕಾರ್ಯವಾಗಿತ್ತೇ ಅಲ್ಲಿ ನಡೆದದ್ದು?

ಚರಿತ್ರೆಪರವಾದ ಕಾರ್ಯವಾಗಿತ್ತು ಅಲ್ಲಿ ಎಪಿ ಅಬೂಬಕ್ಕರ್ ಮುಸ್ಲಿಯಾರ್ ನಿರ್ವಹಿಸಿದ್ದು ಎಂದು ಅನ್ವೇಷಿಸುವಾಗ ಅರ್ಥವ್ಯತ್ಯಾಸವಿಲ್ಲದೆ ಯಾರಿಗೂ ಕೂಡಾ ಮನವರಿಕೆಯಾಗಬಹುದು.

*ಸಿರಿಯಾ ವಿಷಯದಲ್ಲಿ ವಿಶ್ವಸಂಸ್ಥೆಯ ಮೌನ, ಹಸುವಿನ ಹೆಸರಿನಲ್ಲಿ ಉತ್ತರ ಭಾರತದಲ್ಲಿ ತಾಂಡವವಾಡುತ್ತಿರುವ ಹಲ್ಲೆ-ಕೊಲೆಗಳು,  ಒಂದು ಹೊತ್ತಿನ ಊಟಕ್ಕಾಗಿ ಒಂದಷ್ಟು ಧಾನ್ಯಗಳು ಕದ್ದಿದ್ದಕ್ಕಾಗಿ ಕೊಲ್ಲಲ್ಪಟ್ಟ ಅಟ್ಟಪಾಡಿಯ ಮಧು, ಬಾಬರೀ ಮಸೀದಿಯ ಜಾಗ ವಿಂಗಡಿಸುವ ತರ್ಕಗಳು, ನ್ಯಾಯಾಲಯದ ಹೊರಗಿನ ಚರ್ಚೆಗಳು, ಯುವ ತಲೆಮಾರಿಗೆ ಉನ್ನತ ವಿದ್ಯಾಭ್ಯಾಸ ನೀಡುವ ಸಲುವಾಗಿ ಕೇಂದ್ರ ಸರಕಾರವು ನೀಡಬೇಕಾದ ಅನಿವಾರ್ಯ ಸವಲತ್ತುಗಳ ಪದ್ದತಿ, ಇನ್ನಿತರ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ  ವಿಷಯಗಳ ಕುರಿತಾಗಿಯೂ, ಶರೀಅತ್ ಸಂರಕ್ಷಣೆಯ ಪರವಾಗಿಯೂ ಅಧಿಕಾರಿಗಳ ಅರಮನೆಯಲ್ಲಿ ಹೋಗಿ ಧೈರ್ಯದಿಂದ ಹೇಳಿ ಬರುವವರಾಗಿದ್ದಾರೆ ಎಪಿ ಅಬೂಬಕ್ಕರ್ ಮುಸ್ಲಿಯಾರ್.*

ಕಾಂತಪುರಂ ಉಸ್ತಾದ್ ನೇತೃತ್ವ ನೀಡುವ ಸಂಘಟನೆಯ ಜೊತೆ ಸಂಘಟನಾತ್ಮಕ ಭಿನ್ನಾಭಿಪ್ರಾಯವನ್ನು ಪ್ರಕಟಿಸುತ್ತಲೇ ನನ್ನ ಮನದಾಳದಿಂದ ನಾನು ಹೇಳಲು ಬಯಸುವುದೇನೆಂದರೆ,
ಸತ್ಯದ ಹಾಗೂ ಒಳಿತಿನ ಪ್ರಕಾಶವನ್ನು ಬಿತ್ತರಿಸುವವರು ನಮ್ಮ ವಿರುದ್ದ ಪಕ್ಷದಲ್ಲಿದ್ದರೂ ಕೂಡಾ ಅದನ್ನು ಅಂಗೀಕರಿಸಸುವುದರ ಜೊತೆಗೆ ಪ್ರಶಂಸಿಸಲು ನನಗಿಷ್ಟ.

ಮೂಲ: ಮಲಯಾಳಂ.
ಕನ್ನಡಕ್ಕೆ: ಇಮ್ತಿ ಬೈರಿಕಟ್ಟೆ.
*ಉಲಮಾಗಳು ಲಾಭಕ್ಕಾಗಿ ಮಾತನಾಡಿದ್ದಾರಾ ? ಉಲಮಾಗಳು ಮುಸ್ಲಿಂ ಸಮುದಾಯವನ್ನು ಗುಲಾಮರನ್ನಾಗಿಸಿದ್ದಾರಾ ?*

*ಉಲಮಾಗಳು.., العلماء ورثة الانبياء, ಪ್ರವಾದಿಗಳ ವಾರಿಸುದಾರರಾಗಿದ್ದಾರೆ*. ಉಲಮಾಗಳು. ಅಲ್ಲಾಹನ ಪವಿತ್ರವಾದ ದೀನುಲ್ ಇಸ್ಲಾಂ ನ ಪ್ರಚಾರ ಕಾರ್ಯಚಟುವಟಿಕೆಗಳೊಂದಿಗೆ ಮನುಷ್ಯರ ಹಿದಾಯತ್ ಗೆ ಬೇಕಾಗಿ, ಅವರನ್ನು ಒಳಿತಿನ ಪಥದತ್ತ ಕೊಂಡೊಯ್ಯಲು ಅಲ್ಲಾಹನು ನಿಯೋಗಿಸಿದವರಾಗಿದ್ದಾರೆ ಪ್ರವಾದಿಗಳು. ಒಂದು ಲಕ್ಷಕ್ಕೂ ಮಿಕ್ಕ ಪ್ರವಾದಿಗಳನ್ನು ಜಗತ್ತಿನ ನಾನಾ ಕಡೆಗಳಲ್ಲಿ ಅವನ ಇಸ್ಲಾಮಿನ ಪ್ರಚಾರಕ್ಕೆ ಅಲ್ಲಾಹನು ನಿಯೋಗಿಸಿದ್ದು, ಸಾಧ್ಯವಾದಷ್ಟು ಜನರಿಗೆ ಹಿದಾಯತ್ ನ ದಾರಿಯನ್ನು ಪ್ರವಾದಿಗಳು ತೋರಿಸಿಕೊಟ್ಟಿದ್ದಾರೆ.

ಪ್ರವಾದಿಗಳ ಪೈಕಿ ಅಂತ್ಯ ಪ್ರವಾದಿ ಮುಹಮ್ಮದುರ್ರಸೂಲುಲ್ಲಾಹಿ ಸ್ವಲ್ಲಲ್ಲಾಹು ಅಲೈಹಿ ವ ಸಲ್ಲಂ. ಅವರ ನಂತರ ಮತ್ತೊಬ್ಬರು ಪ್ರವಾದಿ ಇಲ್ಲ. ಅವರ ಕಾಲದ ನಂತರ ಸ್ವಹಾಬಿಗಳು, ತಾಬಿಉಗಳು ಹೀಗೆ ದೀನಿನ ವಿಷಯ, ವಿಚಾರಗಳಲ್ಲಿ ನೇತೃತ್ವ ನೀಡುತ್ತಾ ಬಂದರು. ಸಮಕಾಲೀನ ಜಗತ್ತಿನಲ್ಲಿ ಪ್ರವಾದಿಗಳ ಸೇವೆಗಳನ್ನು ಇಲ್ಲಿ ಚಾಚು ತಪ್ಪದೇ ನಿರ್ವಹಿಸುತ್ತುತ್ತಿರುವವರು ಉಲಮಾಗಳು. ಅದಾಗಿದೆ العلماء ورثة الانبياء, ಪ್ರವಾದಿಗಳ ವಾರಿಸುದಾರರಾಗಿದ್ದಾರೆ ಉಲಮಾಗಳು ಎಂಬುದರ ತಾತ್ಪರ್ಯ.

ಮುಸ್ಲಿಂ ಸಮುದಾಯದ ಸಬಲೀಕರಣಕ್ಕಾಗಿ ಏನೆಲ್ಲಾ ಮಾಡಲು ಸಾಧ್ಯವೋ, ಪ್ರವಾದಿಗಳು ನಿರ್ವಹಿಸಿದಂತೆ ಅವೆಲ್ಲವನ್ನೂ ಉಲಮಾಗಳು ನಿರ್ವಹಿಸುತ್ತಾ ಬಂದಿದ್ದಾರೆ. ಸ್ವಂತ ಲಾಭಕ್ಕಾಗಿ ಯಾವ ಉಲಮಾಗಳು ಕೂಡಾ ಯಾವ ವಿಷಯವನ್ನೂ ಪ್ರಸ್ತಾಪಿಸಿಲ್ಲ. ಯಾವ ಮಾತುಗಳನ್ನೂ ಆಡಿಲ್ಲ. ಸ್ವಂತ ಲಾಭಕ್ಕಾಗಿ ಈ ಸಮೂಹ, ಸಮುದಾಯವನ್ನು ಗುಲಾಮರನ್ನಾಗಿಸಿಯೂ ಇಲ್ಲ. ಅದು ಎಲ್ಲರಿಗೂ ತಿಳಿದ ವಿಚಾರ. ಉಲಮಾಗಳ ಉದ್ದೇಶ ಏನಿದ್ದರೂ ಅಲ್ಲಾಹನ ಬಳಿ ಖಬೂಲಿಯತ್ ಮಾತ್ರ. ಸಮುದಾಯ ಎಂದು ಬಾಯಿ ಮಾತುಗಳಲ್ಲಿ ಹೇಳಿದ ಮಾತ್ರಕ್ಕೆ ಯಾರೂ ಸಮುದಾಯ ಪ್ರೇಮಿಗಳು ಆಗುವುದಿಲ್ಲ. ಅದನ್ನು ಮಾಡಿ ತೋರಿಸಬೇಕು. ಆ ಕಾರ್ಯಚಟುವಟಿಕೆಗಳನ್ನು ಇಲ್ಲಿ ನಿರ್ವಹಿಸುತ್ತಿರುವವರು ಉಲಮಾಗಳಾಗಿದ್ದಾರೆ. ಉಲಮಾಗಳು ಮಾತ್ರವಾಗಿದ್ದಾರೆ.

ರಾಷ್ಟ್ರದ ಉದ್ದಗಲಕ್ಕೂ ಸಾಂತ್ವನ ಕೇಂದ್ರಗಳನ್ನು ನಿರ್ಮಿಸಿ, ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿರುವವರು ಉಲಮಾಗಳು. ಅಲ್ಲಾಹನಿಗೆ ಸುಜೂದ್ ನಿರ್ವಹಿಸಲು ಸ್ಥಳಗಳು ಇಲ್ಲದವರಿಗೆ ಬೇಕಾದ ಮಸೀದಿಗಳನ್ನು ನಿರ್ಮಿಸಿ, ಧಾರ್ಮಿಕ, ಲೌಕಿಕ ವಿದ್ಯಾಭ್ಯಾಸ ಕರಗತ ಮಾಡಲು ವ್ಯವಸ್ಥೆಗಳು ಇಲ್ಲದವರಿಗೆ ಬೇಕಾದ ಮದರಸಾ, ಶಾಲೆಗಳನ್ನು ನಿರ್ಮಿಸಿ, ವಾಸಿಸಲು ಜಾಗ ಇಲ್ಲದವರಿಗೆ ಮನೆಗಳನ್ನು ನಿರ್ಮಿಸಿ, ಕುಡಿಯಲು ನೀರಿಲ್ಲದವರಿಗೆ ಬೋರ್ ವೆಲ್, ಬಾವಿಗಳನ್ನು ನಿರ್ಮಿಸಿ ಕೊಟ್ಟವರು, ಕೊಡುತ್ತಿರುವವರು ಯಾರು ? ಸಾಂತ್ವನ ಸೇವೆಗಳು ಇಲ್ಲಿಗೆ ಮುಗಿಯುತ್ತಿಲ್ಲ. ಉಲಮಾಗಳು ನೇತೃತ್ವ ನೀಡುತ್ತಿರುವ ಒಂದೊಂದು ಸಂಸ್ಥೆಗಳಲ್ಲೂ ಹತ್ತು ಸಾವಿರ, ಇಪ್ಪತ್ತು ಸಾವಿರಕ್ಕೂ ಮಿಕ್ಕ ಅನಾಥ ಬಡ ನಿರ್ಗತಿಕ ಮಕ್ಕಳ, ವಿದ್ಯಾರ್ಥಿಗಳ ಏಳಿಗೆಗೆ ಬೇಕಾಗಿ ಆಹೋ ರಾತ್ರಿ ದುಡಿಯುತ್ತಿರುವವರು, ಶ್ರಮ ಪಡುತ್ತಿರುವವರು ಯಾರು ? ಉಲಮಾಗಳು ಮಾತ್ರ. ಅದು ಉಲಮಾಗಳಿಂದ ಮಾತ್ರ ಸಾಧ್ಯ. ಕಳೆದ ದಿನ ಕೇರಳದ ಹೈ ಕೋರ್ಟ್ ನಿಂದ ಅಡ್ವಕೇಟ್ ಗಳಾಗಿ ಎನ್ ರೋಲ್ ಆದ ವಿದ್ವಾಂಸರು. ಅದು ಉಲಮಾಗಳು ಈ ಸಮುದಾಯಕ್ಕೆ ನೀಡಿದ ಕೊಡುಗೆಗಳು. ಹೀಗೆ ಹತ್ತಾರು, ನೂರಾರು, ಸಾವಿರಾರು ಕೊಡುಗೆಗಳು ಇದೆ.

ರಾಜಕೀಯ ಲಾಭಕ್ಕಾಗಿ ಉಲಮಾಗಳನ್ನು ಕೀಳು ಮಟ್ಟದ ಮಾತುಗಳಿಂದ ನಿಂದನೆ ಮಾಡುವ ರಾಜಕಾರಣಿಗಳು, ನಾಚಿಕೆಯಾಗಬೇಕು ನಿಮಗೆ. ಇವರ ಗತಿಕೇಡು ಎಂದರೆ ಬೆಂಬಲ ಯಾಚಿಸಲು ಬೇಕಾಗಿ ಮೊದಲು ಬರುವುದು ಉಲಮಾಗಳ ಬಳಿ. ರಾಜಕೀಯದವರು ರಾಜಕೀಯ ಮಾಡಿ. ಉಲಮಾಗಳ, ಧಾರ್ಮಿಕ ವಿಷಯಗಳಲ್ಲಿ ನೀವು ಕೈ ಹಾಕಬೇಡಿ. ಇಲ್ಲಿ ಈ ಸಮುದಾಯಕ್ಕೆ ನೇತೃತ್ವ ನೀಡಲು ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ರಂತಹ ಉಲಮಾ ದಿಗ್ಗಜ ಶಿರೋಮಣಿಗಳು ಇದ್ದಾರೆ. ಈ ಸಮುದಾಯಕ್ಕೆ ಬೇಕಾದ ಎಲ್ಲ ನೇತೃತ್ವ ಅವರು ನೀಡುತ್ತಾರೆ, ನೀಡುತ್ತಿದ್ದಾರೆ. ನಿಮ್ಮದು ರಾಜಕೀಯ, ನೀವು ಅತ್ತ ಗಮನಹರಿಸಿದರೆ ಸಾಕು. ಅಲ್ಲಾಹು ನಮ್ಮೆಲ್ಲಾ ಉಲಮಾಗಳಿಗೆ ಆಫಿಯತ್ ನೊಂದಿಗೆ ಧೀರ್ಘಾಯುಸ್ಸು ಕರುಣಿಸಲಿ, ಆಮೀನ್.

*-ವೀಕ್ಷಕ
*ಸಲಫಿ ಮಸ್ಜಿದುಗಳನ್ನು ಮುಚ್ಚಬೇಕು.*
👉 ಜರ್ಮನ್ ವೈಸ್ ಚಾನ್ಸಲರ್ ಸಿಗ್ಮಾರ್ ಗೆಬ್ರಿಯೆನ್.

*ಮುಜಾಹಿದುಗಳಿಗೆ ಸಲಾಂ ಹೇಳಬಾರದು*
👉ಸಮಸ್ತ ಪಾಠ ಪುಸ್ತಕ

*ಮಸೀದಿಗಳಲ್ಲಿ ಸಲಫಿಗಳನ್ನು ಇಮಾಂ ಮಾಡಬಾರದು.*
👉ತೂನೇಷ್ಯಾ ಸರಕಾರ

*ವಹ್ಹಾಬಿಸಂ ಡೇಂಜರ್ಸ್.*
*ಅವರ ವಿರುದ್ಧ ಆದರ್ಶ ಹೋರಾಟಕ್ಕೆ ಮುಸ್ಲಿಂಗಳೇ ನೇತೃತ್ವ ಕೊಡಬೇಕು.*
👉ಮಾನ್ವಲ್ ವಾಲ್'ಸ್
 (ಮಾಜಿ ಫ್ರಾನ್ಸ್ ಪ್ರಾಧಾನ ಮಂತ್ರಿ)

*ವಹ್ಹಾಬಿ ಪುಸ್ತಕಗಳು ಹುಡುಕಿ ನಾಶ ಮಾಡಬೇಕು.*
👉ಈಜಿಪ್ಟ್ ಸರಕಾರ

Note: ಚರಿತ್ರೆಯಲ್ಲಿ ವಹಾಬಿಸಂ, ವಿಶ್ವದಲ್ಲೆಡೆ ಕೊಂದು ಹಾಕಿದವರ ಲೆಕ್ಕವನ್ನು ಯಾರಾದರೂ ಶೇಖರಿಸಿದ್ದಾರಾ?
ಅವರು ಹೊಡೆದು *ಉರುಳಿಸಿದ* ಮಕ್ಬರಗಳ ಚರಿತ್ರೆಯನ್ನು ನಾವು ಓದಿರಬಹುದಾ?
ಇತ್ತೀಚಿಗೆ ತೊಂಬತ್ತು ಪ್ರಾಯ ಕಳೆದ ಈಜಿಪ್ಟ್'ನ ಸುನ್ನಿ ಪಂಡಿತರಾದ *ಶೈಖ್ ಸುಲೈಮಾನ್ ಅಬು ಹಾರಿಸ್ (ನ:ಮ)* ರವರ ತಲೆಯನ್ನು ಕೊಯ್ದದ್ದು ನೀವು ಕೇಳಿದ್ದೀರಾ?
ಇದೆಲ್ಲ ಕೇಳಿದರೆ ನೀವು ಕೂಡ ಹೇಳುವಿರಿ, ಚರಿತ್ರೆಯಲ್ಲಿ ವಹ್ಹಾಬಿಗಳು ಮಾಡದ ಯಾವುದೇ ಭೀಕರವಾದವಿಲ್ಲ ಎಂದು!!

ವಿಶ್ವದೆಲ್ಲೆಡೆ ಇಸ್ಲಾಮಿಗೆ ಭಯೋತ್ಪಾದನೆ, ಹಾಗೂ ಎಲ್ಲಾ ರೀತಿಯ ಕೆಟ್ಟ ಹೆಸರುಗಳನ್ನು ತಂದು ಕೊಟ್ಟವರಾಗಿದ್ದಾರೆ ಈ ವಹ್ಹಾಬಿಗಳು.
ಸಲಫಿಗಳ ಕೇರಳದ Copyಯಾಗಿದ್ದಾರೆ ಮುಜಾಹಿದುಗಳು.?

*ವಹ್ಹಾಬಿ, ತಕ್'ಫಿರಿ, ಇಸ್ಲಾಹಿ, ಮುಜಾಹಿದ್, ಜಿನ್ನ್, ವಿಸ್ಡಂ, ಆಡು, ಅಹ್ಲ್ ಹದೀಸ್ ಎಂಬಿ ಹೆಸರುಗಳಿಂದೆಲ್ಲಾ ತಿಳಿಯಲ್ಪಡುವರು ಇವರಾಗಿದ್ದಾರೆ.*

 ನಮ್ಮ ಸಮೂಹದ ಜನರು ಒಂದು ತಿಳಿಯಬೇಕು,
*ಪಾರಂಪರ್ಯ ಇಸ್ಲಾಂನೊಂದಿಗೆ ಈ ವಹ್ಹಾಬಿಗಳಿಗೆ ಯಾವುದೇ ಸಂಬಂಧವಿಲ್ಲ. ಅವರ ಪ್ರವರ್ತನೆಗಳನ್ನು ನೀವು ಇಸ್ಲಾಮಿನ ಹೆಸರಿನಲ್ಲಿ ಕಟ್ಟಿ ಹಾಕಬಾರದು.*
*ಕೆಲವು ಕಾಲೇಜುಗಳು ನಡೆಸುತ್ತಾರೆ. ಸ್ತ್ರಿಗಳನ್ನು ಮಸೀದಿಗೆ ಹಿಡಿದು ಎಳೆಯುತ್ತಾರೆ. ಒಂದು ಪಾರ್ಟಿಗೆ ಓಟು ಹಾಕುತ್ತಾರೆ ಎಂದು ಹೇಳಿ ಇವರನ್ನು ಮುಸ್ಲಿಂಗಳ ಹಿತೈಷಿಗಳು ಎಂದು ಹೇಳಲಾಗದು.*

✍GB
*ಸೈದ್ಧಾಂತಿಕವಾಗಿ ರಾಜಿ ಇಲ್ಲವೇ ಇಲ್ಲ!*

ಹೌದು...
ಸೈದ್ಧಾಂತಿಕ ವಾಗಿ ರಾಜಿ ಇಲ್ಲದೆ ...
ಆ ಒಂದು ವಿಷಯದಲ್ಲಿ ಕಟ್ಟುನಿಟ್ಟಾದ ನಿಲುವು ಸ್ವೀಕರಿಸುವ ಎಸ್ಸೆಸ್ಸೆಫ್ ಎಂಬ ಸಂಘಟನೆ ಯ
ನಿಲುವು ನನ್ನನ್ನು ತುಂಬಾ ಆಕರ್ಷಿಸಿದೆ...
 ಡಾ: ಎ ಪಿ ಜೆ  ಕಲಾಂ ರವರು ಯಾವಾಗಲೂ ಹೇಳುವ ಒಂದು  ವಿಷಯ
"ನೀವು ಕನಸು ಕಾಣಿರಿ"
ಮುಸಲ್ಮಾನನ ಕನಸು ಏನಿದ್ದರೂ ಅದು ಸ್ವರ್ಗ ಪ್ರವೇಶ ಮಾತ್ರ ತಾನೆ...
ಆ ಕನಸು ನನಸಾಗ ಬೇಕಾದರೆ ಸೈದ್ಧಾಂತಿಕವಾಗಿ ನಾವು ಅಚಲರಾಗಿರಬೇಕು.
ಸುನ್ನಿ ಸಲಪಿ ಬೇಡ ನಾವು ಮುಸ್ಲಿಮರಾಗೋಣ ಎಂದು ಹೇಳುವ ಮಂದಿ
ನಿಜವಾಗಿಯೂ ಅವರು ಸೈದ್ಧಾಂತಿಕವಾಗಿ ಚಂಚಲರು.
ಇಂತಹ ಚಂಚಲ ವಿಶ್ವಾಸ ವಿಟ್ಟು ಸ್ವರ್ಗದ
ಕನಸು ಕಾಣುವುದು ಮೂರ್ಖತನ.
ಸೈಧ್ದಾಂತಿಕ ಬದ್ಧತೆ ಇಲ್ಲದೆ ಖಾಲಿ ಮಸೀದಿ ಕಟ್ಟಿಸಿದರೆ ಸ್ವರ್ಗ ಸಿಗುತ್ತದೆ ಎಂಬ ಕನಸು ಯಾರಾದರು ಕಂಡರೆ ಅದು ಅವನ ಹೆಡ್ಡತನದ ಪರಮಾವಧಿ ಮಾತ್ರ ...!

ಸೈಧ್ದಾಂತವಾಗಿ ರಾಜಿ ಮಾಡಿ ಕೊಂಡು
ಮುಸ್ಲಿಮ್ ಸಬಲೀಕರಣ ಮಾಡಿದರೆ ಸ್ವರ್ಗ ಖಂಡಿತ ಎಂದು ಕನಸು ಕಂಡರೆ ಆ ಕನಸು
ಸೂಜಿಯ ರಂಧ್ರ ದೊಳಗೆ ಆನೆ ಪ್ರವೇಶಿಸುವ ತನಕ ನನಸಾಗದು ಅದು ಖಂಡಿತ.

ಅಂದರೆ ಯಾವನೇ ಒಬ್ಬ ಮುಸ್ಲಿಮ್
ಅವನು ತನ್ನ ಆದರ್ಶ ಸಿದ್ಧಾಂತಗಳನ್ನು ಮೊದಲು ಭದ್ರ ಪಡಿಸಿಕೊಳ್ಳಬೇಕು
ಅದು ಪೌಂಡೇಶನ್ ...
ನಂತರದ್ದು ಬಿಲ್ಡಿಂಗ್....
ಇಲ್ಲಿ ಪೌಂಡೇಶನ್ ಅದು ಸುನ್ನಿಸಂ.
ಮುಸ್ಲಿಮ್ ಸಬಲೀಕರಣ ದಂತಹ ಒಳ್ಳೆಳ್ಳೆಯ ಕಾರ್ಯಗಳು ಬಿಲ್ಡಿಂಗ್ ಅಥವಾ ಕಟ್ಟಡಗಳು.
ಆದರೆ ಇಲ್ಲಿ ಸುನ್ನಿಸಂ ಎಂಬ ಪೌಂಡೇಶನ್ ಸರಿ ಇಲ್ಲದಿದ್ದರೆ ..
ಆ ದುರ್ಬಲ ಪೌಂಡೇಶನ್ ಮೇಲೆ ಕಟ್ಟುವ
ಕಟ್ಟಡಗಳು ಕೂಡಾ ದುರ್ಬಲ ತಾನೇ?
ನಾವು ಯಾವುದೇ ಗುರಿ ಇಟ್ಟುಕೊಂಡು
ಕೆಲಸ ಮಾಡುವಾಗ ಅದರ ಹಿಂದೆ ಪರಲೋಕ ಮೋಕ್ಷ ಇರಬೇಕು
ಕಾರಣ ನಾವು ಮುಸ್ಲಿಮರು ತಾನೇ?
ಪರಲೋಕ ಮೋಕ್ಷ ಸಿಗಬೇಕಾದರೆ
ನಮ್ಮ ಆದರ್ಶ ಸಿದ್ಧಾಂತಗಳಲ್ಲಿ ಬಧ್ದತೆ ನಮಗೆ ಬೇಕೇ ಬೇಕು.

ಇಲ್ಲಿಯೇ ಎಸ್ಸೆಸ್ಸೆಫ್ ನ ಪಾತ್ರ ತುಂಬಾ ಗಮನಾರ್ಹ ವಾಗಿ ಕಾಣುವುದು..
ನಾನು ಗಮನಿಸಿದ್ದೇನೆ ..
ಎಸ್ಸೆಸ್ಸೆಫ್ ಒಂದು ಧಾರ್ಮಿಕ ಸಂಘಟನೆ ಯಾದರೂ ..
ಇತರ ಸಾಮಾಜಿಕ ಸಂಘಟನೆಗಳು ಕೂಡಾ
ಮೂಗಿಗೆ ಬೆರಳಿಟ್ಟು ಆಶ್ಚರ್ಯ ಪಡುವಂತಹ ಸಾಮಾಜಿಕ ಶೈಕ್ಷಣಿಕ ಕ್ರಾಂತಿಗಳಿಂದ ಜನಮನಸ್ಸುಗಳಲ್ಲಿ ಅಚ್ಚೊತ್ತಿ ನಿಂತಿದೆ.
ಇಸ್ಲಾಮಿನ ನೈಜ ಆಶಯಗಳನ್ನು ಕಲಿಸಿ ಕೊಡುವ ಸಂದರ್ಭಗಳಲ್ಲಿಯೂ ಕೂಡಾ
ಎಲ್ಲಿಯೂ ಸೈದ್ಧಾಂತಿಕವಾಗಿ ರಾಜಿ ಮಾಡಲು
ಎಸ್ಸೆಸ್ಸೆಫ್ ತಯಾರಿರಲಿಲ್ಲ.

ಅದುವೇ ಎಸ್ಸೆಸ್ಸೆಫ್ ನ್ನು ಇತರ ಸಂಘಟನೆಗಳಿಗಿಂತ ಭಿನ್ನವಾಗಿ ಮಾಡುವುದು.
ಕಾರಣ ಎಸ್ಸೆಸ್ಸೆಫ್ ನವರು ಯಾವುದೇ
ಕಾರ್ಯಗಳನ್ನು ಕೈ ಗೊಂಡರು ಅದರ ಹಿಂದೆ
ಅವರು ಕನಸು ಕಾಣುವುದು ಅಲ್ಲಾಹನ ಸ್ವರ್ಗ ಮತ್ತು ತ್ರಪ್ತಿ ಮಾತ್ರ.
ಬದಲಾಗಿ ಈ ದುನಿಯಾದ ರಟ್ಟೆ ಬಲ, ತಾತ್ಕಾಲಿಕ ಆವೇಶ,ಕೋಮುವಾದ ಅಲ್ಲ.

ನಾನೊಬ್ಬ ಸುನ್ನಿ..
ಅದೇ ರೀತಿ ಸುನ್ನಿಗಳಾದ ಅನೇಕ ಯುವಕರಲ್ಲಿ ನನಗೆ ಹೇಳಲಿಕ್ಕೆ ಇರುವುದು
ತಾತ್ಕಾಲಿಕ ಆವೇಶದ ಹಿಂದೆ ಹೋಗಿ ನಮ್ಮ ಸಿದ್ದಾಂತ ವನ್ನು ಬಲಿ ಕೊಟ್ಟರೆ
ನಮ್ಮ ಯಾವುದೇ ಕಾರ್ಯಗಳಲ್ಲಿ ಅಲ್ಲಾಹನ ಸಹಾಯ ಇರಲ್ಲ ಅದು ಗ್ಯಾರಂಟಿ.
ಸೈಧ್ದಾಂತಿಕವಾಗಿ ಅಚಲರಾಗಿರಿ.
ಯಾವುದೇ ಕಾರ್ಯ ಮಾಡುವಾಗಲೂ ಅದರ ಹಿಂದೆ ಸ್ವರ್ಗ ಮತ್ತು ಅಲ್ಲಾಹನ ತ್ರಪ್ತಿ ಕನಸು ಕಾಣಿರಿ.
ಬೇರೆ ದುನಿಯಾದ ಕ್ಷಣಿಕ ರಟ್ಟೆಬಲ, ಹಣಬಲ,
ವ್ಯರ್ಥ ಆವೇಶದಿಂದ ದೂರವಿರಿ...
ಅಚಲವಾದ ಸುನ್ನಿ ವಿಶ್ವಾಸದೊಂದಿಗೆ ಅಲ್ಲಾಹನ ತ್ರಪ್ತಿಗಾಗಿ ಕೆಲಸ ಮಾಡಿ..
ಆವಾಗ ನೀವು ಅಲ್ಪ ಸಂಖ್ಯಾತರಾದರೂ ಕೂಡಾ ಅಲ್ಲಾಹು ಅವನ ಮಲಕ್ ಗಳ ಮೂಲಕ ನಿಮಗೆ ಸಹಾಯ ದೊರಕಿಸುವನು.
ಎಸ್ಸೆಸ್ಸೆಫ್ ನ ವಿಜಯದ ರಹಸ್ಯ ಕೂಡಾ ಅದುವೆ ಎಂಬುವುದು ನನ್ನ ಅಚಲ ವಿಶ್ವಾಸ .

ಹೌದು....
ಇಡೀ ಲೋಕವೇ ಎದುರು ನಿಂತರು ತಾನು ನಂಬಿದ ಆಶಯ ಆದರ್ಶ ವನ್ನು ತಬ್ಬಿಹಿಡಿದು
ಸಧೈರ್ಯದಿಂದ ಸೆಟೆದೆದ್ದು ನಿಂತು ಕಾರ್ಯಚರಣೆ ನಡೆಸಲು ಅದು ಎಸ್ಸೆಸ್ಸೆಫ್ ಗೆ ಮಾತ್ರ ಸಾಧ್ಯ .

ನಮಗೆ ಯಾವುದು ಬೇಡ ಅಂತ ಯಾರೂ ಒಬ್ಬಂಟಿಗರಾಗಬೇಡಿ .
"ಅಲೈಕುಮ್ ಬಿಲ್ ಜಮಾಅ:"
ನೀವು ಸಂಘಟಿತರಾಗಿ
"ಮನ್ ಶಝ್ಝ ಶುಝ್ಝ ಫಿ ನ್ನಾರ್"
ಯಾರಾದರೂ ಒಂಟಿಯಾದರೆ ಅವನು ನರಕದಲ್ಲಿಯೂ ಒಂಟಿ,
ಎಂಬ ನೆಬಿ ವಚನ ನೆನಪಿಸುತ್ತಾ.

ನೀವು ಸೈದ್ಧಾಂತಿಕ ಭದ್ರತೆ ಇರುವ ಎಸ್ಸೆಸ್ಸೆಫ್ ನೊಂದಿಗೆ ಸಂಘ ಸೇರಿರಿ.

ಇನ್ಶಾಅಲ್ಲಾ ಇದೇ ನವೆಂಬರ್ 1ರಿಂದ15ರ ತನಕ ಹದಿನೈದು ದಿವಸ ಎಸ್ಸೆಸ್ಸೆಫ್ ನ ಮೆಂಬರ್ ಶಿಫ್ ಅಭಿಯಾನ ನಡೆಯುತ್ತದೆ.
ಅದೇ ಕ್ಯಾಂಪಯ್ನಲ್ಲಿ 34 ವರ್ಷದಿಂದ ಮೇಲ್ಪಟ್ಟವರಿಗೆ SYS ನ ಮದ್ಯಾಂತರ ಸದಸ್ಯತನವಾಗುವ ಸುವರ್ಣಾವಕಾಶ ಇದೆ.

ತಡಮಾಡಬೇಡಿ,
ಅಲ್ಲಾಹನ ತ್ರಪ್ತಿ ಮತ್ತು
ಪರಲೋಕ ಮೋಕ್ಷ ಹಾಗೂ ಸ್ವರ್ಗದ ಕನಸಿನೊಂದಿಗೆ ಸದಸ್ಯರಾಗಿ.

ಇನ್ಶಾಅಲ್ಲಾ,
ನಾನು ಈ ಸಂಘ ಶಕ್ತಿಯೊಂದಿಗೆ
ಸೇರಲು ತೀರ್ಮಾನ ಮಾಡಿದ್ದೇನೆಂಬ ಶಪಥ ನಿಮ್ಮದಾಗಿರಲಿ.

ನೀವೂ ರೆಡಿ ತಾನೇ..
ನೀವು ನನಗಾಗಿ ದುಆ ಮಾಡಿ...
ನಿಮಗಾಗಿ ನಾನು ಸದಾ ದುಆ ಮಾಡುತ್ತಲಿರುವೆ.

 ಅಬೂಶಝ