Sunday, October 21, 2018

*ಸ್ತ್ರೀ ಜುಮುಅ -ಜಮಾಅತ್ ಮಸೀದಿಯಲ್ಲಿ*

ಭಾಗ--4

📝ಮುನೀರ್ ಸಖಾಫಿ ಸಾಲೆತ್ತೂರು.
*_________________________________*

ಅಲ್ಲಾಹನು ಹೇಳುತ್ತಾನೆ,


يَا أَيُّهَا الَّذِينَ آَمَنُوا إِذَا نُودِيَ لِلصَّلَاةِ مِنْ يَوْمِ الْجُمُعَةِ فَاسْعَوْا إِلَى ذِكْرِ اللَّهِ وَذَرُوا الْبَيْعَ ذَلِكُمْ خَيْرٌ لَكُمْ إِنْ كُنْتُمْ تَعْلَمُونَ
(سورة الجمعة 9)
ಓ ಸತ್ಯ ವಿಶ್ವಾಸಿಗಳೇ!
ಶುಕ್ರವಾರ ದಿವಸ ನಮಾಝಿಗೆ ನಿಮ್ಮನ್ನು ಕರೆಯಲ್ಪಟ್ಟರೆ ನೀವು ಝಿಕ್ರ್ _(ಝಿಕ್ರ್ ಎಂಬುವುದರ ತಾತ್ಪರ್ಯ ಖುತುಬ ಎಂದು ಮುಫ್ಫಸ್ಸಿರ್ ಗಳು ವಿವರಿಸಿದ್ದಾರೆ)_ ಗೆ
ದಾವಿಸಿರಿ.ಹಾಗು ವ್ಯಾಪಾರ ವಹಿವಾಟುಗಳನ್ನು ತ್ಯಜಿಸಿರಿ.ನೀವು ಅರಿತವರಾಗಿದ್ದರೆ ಅದು ನಿಮಗೆ ಉತ್ತಮವಾಗಿದೆ.(ಜುಮುಅ 9)
____________________________________
ಇದರ ವ್ಯಾಖ್ಯಾನದಲ್ಲಿ ಇಮಾಮ್ ಇಸ್ಮಾಯಿಲ್ ಹಿಖ್ಖಿ (ರ)ಹೇಳುತ್ತಾರೆ;
وفيه اشارة الى ان ترك السعى من فعل الشيطان وهذا بالنسبة الى غير المريض والاعمى والعبد والمرأة والمقعد والمسافر فانهم ليسوا بمكلفين فهم غير منادين اى لاسعى من المرضى والزمنى والعميان وقد قال تعالى { فاسعوا } واما النسوان فهن امرن بالقرار فى البيوت بالنص
(روح البيان 9/524)
ಖುತುಬಾಗೆ ನೀವು ಅತೀ ವೇಗದಲ್ಲಿ ದಾವಿಸಬೇಕೆಂದು ಹೇಳಿರುವುದು ವೇಗತೆಯನ್ನು  ತ್ಯಜಿಸುವುಸುದು ಪಿಶಾಚಿಯ ಕ್ರಿಯೆಯೆಂಬುವುದಕ್ಕೆ ಸೂಚನೆಯಾಗಿದೆ.
ಇದರಿಂದ ರೋಗಿ,ಕುರುಡ,ಗುಲಾಮ,ಸ್ತ್ರೀಯರು,ಯಾತ್ರಿಕ,ನಡೆಯಲಾಗದವ ಮುಂತಾದವರನ್ನು ಹೊರತು ಪಡಿಸಲಾಗಿದೆ.ಕಾರಣ ಅವರೊಂದಿಗೆ ಈ ಅಜ್ಞೆ ಇಲ್ಲ.
ಅಲ್ಲಾಹನು ಇಲ್ಲಿ ಪುರುಷರನ್ನು ಸಂಭೋದಿಸುವ ಪದವಾದ فاسعوا ಎಂಬ ಪದವನ್ನು ಹೇಳಿದ್ದಾನೆ.
*ಸ್ತ್ರೀಯರು ಅವರ ಮನೆಯಲ್ಲಿಯೇ ಆರಾಧನಾ ಕರ್ಮ ನೆರವೇರಿಸಬೇಕೆಂದು ಇಸ್ಲಾಮ್ ಆಜ್ಞಾಪಿಸಿದೆ.*
(ರೂಹುಲ್ ಬಯಾನ್ 9/524)
____________________________________
آمنوا  ಇಲ್ಲಿ
ಎಂಬ ಪದವು ಪುರುಷರೊಂದಿಗೆ ಆಜ್ಞಾಪಿಸುವ ಪದವಾಗಿದೆ.ಅದೇ ರೀತಿ فاسعوا ಎಂಬ ಪದವು ಕೂಡಾ.
ಜುಮುಅ ನಮಾಝ್ ಪುರುಷರಿಗೆ ಮಾತ್ರವಿರುವ ಆರಾಧನೆಯಾಗಿರುವುದರಿಂದ ಅಲ್ಲಾಹನು ಆ ಪ್ರಯೋಗ ಪ್ರಯೋಗಿಸಿದ್ದಾನೆಂದು ಮೇಲಿನ ತಫ್ಸೀರ್ ನಿಂದ ಬಹಳ ಸ್ಪಷ್ಟ.
ಪುರುಷರೊಂದಿಗೆ ಆಜ್ಞಾಪಿಸುವ ಎಲ್ಲಾ ಸ್ಥಳಗಲ್ಲಿ ಪುರುಷರು  ಮಾತ್ರ ಉದ್ದೇಶವೆಂದು ನೀವು ವಾದಿಸುತ್ತೀರಾ ಎಂದು ಕೇಳಿದರೆ " ಹೌದು" ಎಂದಾಗಿದೆ ಉತ್ತರ.
ಪುರುಷರಲ್ಲದ ಇತರರು ಆ ಆಜ್ಞೆಯ ವ್ಯಾಪ್ತಿಯಲ್ಲಿ ಬರಬೇಕಾದರೆ ಬೇರೆ ಆದಾರಗಳ ಮೂಲಕ ಸಾಬೀತಾಗಬೇಕಾಗಿದೆ.ಇದು ಉಸೂಲ್ ನ ಗ್ರಂಥಗಳಲ್ಲಿ ವಿವರಿಸಿದ ವಿಷಯವಾಗಿದೆ.

ಇಮಾಮ್ ಗಝ್ಝಾಲಿ ತನ್ನ ಮುಸ್'ತಸ್'ಫಾ ಎಂಬ ಗ್ರಂಥದ 2/ 79 ನೇ ಪುಟದಲ್ಲಿ ಇದು ವಿವರಿಸಿದ್ದಾರೆ.
 ಅದರ ಉಧ್ಧರಣೆ ಇಲ್ಲಿ ನೀಡುತ್ತಿದ್ದೇನೆ.
👇👇
يدخل النساء تحت الحكم المضاف إلى الناس فأما المؤمنون والمسلمون وصيغ جمع الذكر اختلفوا فيه، فقال قوم: تدخل النساء تحته، لان الذكور والإناث إذا اجتمعوا غلبت العرب التذكير، واختار القاضي أنها لا تدخل، وهو الاظهر، لان الله تعالى ذكر المسلمين والمسلمات والمؤمنين والمؤمنات، فجمع الذكور متميز، نعم: إذا اجتمعوا في الحكم وأراد الاخبار تجوز العرب الاقتصار على لفظ التذكير، أما ما ينشأ على سبيل الابتداء ويخصه بلفظ المؤمنين فإلحاق المؤمنات إنما يكون بدليل آخر من قياس، أو كونه في معنى المنصوص أو ما جري مجراه(المستصفي 2/79)
____________________________________
ಇಮಾಮ್ ಖುರ್ತುಬೀ(ರ)ಹೇಳುತ್ತಾರೆ;
 قوله تعالى :( يا أيها الذين آمنوا )خطاب للمكلفين بإجماع. ويخرج منه المرضى والزمنى والمسافرون والعبيد والنساء بالدليل ، (قرطبي 18/103)
"ಓ ಸತ್ಯ ವಿಶ್ವಾಸಿಗಳೇ" ಎಂಬ ಆಜ್ಞೆಯು ಪುರುಷರೊಂದಿಗಿರುವ ಆಜ್ಞೆಯಾಗಿದೆ.ಆದಾರಗಳ ಬೆಳಕಿನಲ್ಲಿ ರೋಗಿ,ಮುದುಕರು,ಯಾತ್ರಿಕರು,ಸ್ತ್ರೀಯರು ಮುಂತಾದವರನ್ನು ಅದರಿಂದ ಹೊರತು ಪಡಿಸಲಾಗಿದೆ.
(ತಫ್ಸೀರು ಖುರ್ತುಬಿ18/103
____________________________________

ಒಟ್ಟಿನಲ್ಲಿ ಖುರ್'ಆನಿನಲ್ಲಿ ಮಸೀದಿ ಮತ್ತು ಜುಮುಅದ  ಬಗ್ಗೆ ಪ್ರಸ್ತಾಪ ಮಾಡಿದಾಗ ಪುರುಷರನ್ನಲ್ಲದೆ ಸ್ತ್ರೀಯರನ್ನು ಹೇಳಿಲ್ಲ.
ಅವರಿಗೆ ಮಸೀದಿಯಲ್ಲಿ ನಮಾಜು ಇಲ್ಲದಿರುವುದೇ ಅದಕ್ಕಿರುವ ಕಾರಣವೆಂದು ಇಮಾಮರು ಸ್ಪಷ್ಟಪಡಿಸಿದ್ದನ್ನಾಗಿದೆ ಮೇಲೆ ನಾವು ಓದಿದ್ದು.


*ಮುಂದುವರಿಯುವುದು........*
*ಸ್ತ್ರೀ ಜುಮುಅ -ಜಮಾಅತ್ ಮಸೀದಿಯಲ್ಲಿ*


ಭಾಗ--3
*___________________________________*

_*ಪವಿತ್ರ ಖುರ್'ಆನ್ ಏನು ಹೇಳುತ್ತದೆ?*_

_ಅಲ್ಲಾಹನು ಹೇಳುತ್ತಾನೆ;_
لَّمَسْجِدٌ أُسِّسَ عَلَى التَّقْوَىٰ مِنْ أَوَّلِ يَوْمٍ أَحَقُّ أَن تَقُومَ فِيهِ ۚ فِيهِ رِجَالٌ يُحِبُّونَ أَن يَتَطَهَّرُوا ۚ وَاللَّهُ يُحِبُّ الْمُطَّهِّرِينَ ( التوبة 108)
_ಪ್ರಾರಂಭದಲ್ಲೇ ಭಕ್ತಿಯ ಮೇಲೆ ನಿರ್ಮಿಸಿದ ಮಸೀದಿಯು ತಮಗೆ ನಮಾಜಿಗೆ ಅತ್ಯತ್ತಮವಾಗಿದೆ.ಆ ಮಸೀದಿಯಲ್ಲಿ ಶುದ್ಧಿಯನ್ನು ಇಷ್ಟಪಡುವ ಪುರುಷರಿದ್ದಾರೆ.ಶುದ್ಧಿಯಿರುವವರನ್ನು ಅಲ್ಲಾಹನು ಇಷ್ಟಪಡುವನು._
(ಸೂರಾ ತೌಬಾ 108)
____________________________________
ಪುರುಷರು ನಮಾಜು ಮಾಡುವ ಮಸೀದಿಯು ಭಕ್ತಿಯ ಮಸೀದಿಯೆಂದೂ ತಮ್ಮ ನಮಾಜು ಆ  ಮಸೀದಿಯಲ್ಲಾಗಿರಬೇಕೆಂದೂ ಅಲ್ಲಾಹನು ಪ್ರವಾದಿವರ್ಯರಲ್ಲಿ ಬಹಳ ಸ್ಪಷ್ಟವಾಗಿಯೇ ಹೇಳಿದ್ದಾನೆ.

ಅಲ್ಲಾಹನು ಹೇಳುತ್ತಾನೆ,
فِي بُيُوتٍ أَذِنَ اللَّهُ أَن تُرْفَعَ وَيُذْكَرَ فِيهَا اسْمُهُ يُسَبِّحُ لَهُ فِيهَا بِالْغُدُوِّ وَالْآصَالِ (36)
رِجَالٌ لَّا تُلْهِيهِمْ تِجَارَةٌ وَلَا بَيْعٌ عَن ذِكْرِ اللَّهِ وَإِقَامِ الصَّلَاةِ وَإِيتَاءِ الزَّكَاةِ ۙ يَخَافُونَ يَوْمًا تَتَقَلَّبُ فِيهِ الْقُلُوبُ وَالْأَبْصَارُ
 ( سورة النور 37)
_ಮಸೀದಿಗಳಲ್ಲಿ ದಿಕ್ರ್'ಗಳ ಮೂಲಕ ಶಬ್ಧವೆತ್ತುವುದಕ್ಕೆ ಅಲ್ಲಾಹನು ಸಮ್ಮತಿ ನೀಡಿದ್ದಾನೆ._
_ಆ ಮಸೀದಿಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಹೊತ್ತು ದ್ಸಿಕ್ರ್ ಹೇಳುವ ಪುರುಷರಿದ್ದಾರೆ._
_ಯಾವುದೇ ವ್ಯಾಪಾರ ವಹಿವಾಟುಗಳು ಅವರ ದ್ಸಿಕ್ರ್ ಗೆ ತಡೆಯಾಗಲಾರದು._
(ಸೂರಾ ಅತ್ತೌಬ 36,37)_
____________________________________
ಮೇಲಿನ ಎರಡು ಸೂಕ್ತಗಳಲ್ಲೂ ಅಲ್ಲಾಹನು ಮಸೀದಿಯ ಬಗ್ಗೆ ಪರಾಮರ್ಶಿಸುವಾಗ ಪುರುಷರನ್ನು ಮಾತ್ರ ಹೇಳಿದ್ದಾನೆ.ಇದಕ್ಕೆ ಕ್ಕಾರಣವೇನು?
ಖುರ್'ಆನ್ ವ್ಯಾಖ್ಯಾನಗಾರರು ವಿವರಣೆಯನ್ನು ನೋಡೋಣ.

ಇಮಾಮ್ ರಾಝೀ(ರ)ಬರೆಯುತ್ತಾರೆ;
خصَّ الرِّجَال  بِالذِّكْر لِأَنَّ النِّسَاءَ لَسْنَ مِنْ أَهْلِ التِّجَارَاتِ أَوِ الْجَمَاعَاتِ(رازي 6/24)
ಸ್ತ್ರೀಯರಿಗೆ ವ್ಯಾಪಾರ ಮತ್ತು ಜಮಾಅತ್  ಇಲ್ಲದಿರುವುದರಿಂದಲೇ ಅಲ್ಲಾಹನು ಪುರುಷರನ್ನು ಮಾತ್ರ ಹೇಳಿದ್ದಾನೆ.(ರಾಝಿ 6/24)
____________________________________
ಇಮಾಮ್ ಇಸ್ಮಾಯಿಲ್  ಹಿಖ್ಖಿ (ರ)ಹೇಳುತ್ತಾರೆ;
لانه لا جمعة علي النساء ولا جماعة في المساجد
(روح االبيان 6/161)

ಸ್ತ್ರೀಯರಿಗೆ ಜುಮಾ ಮತ್ತು ಜಮಾಅತ್ ನಮಾಜು ಮಸೀದಿಗಳಲ್ಲಿ ಇಲ್ಲದಿರುವುದರಿಂದ ಪುರುಷರನ್ನು ಮಾತ್ರ ಹೇಳಲಾಗಿದೆ.
(ರೂಹುಲ್ ಬಯಾನ್ 6/161)
____________________________________
ಇಮಾಮ್ ಮಲ್'ಹರೀ (ರ)ಹೇಳುತ್ತಾರೆ;
لانه ليس علي النساء جمعة ولا جماعة في المسجد
 (تفسير المظهري 6/541)
ಸ್ತ್ರೀಯರಿಗೆ ಜುಮಾ ಮತ್ತು ಜಮಾಅತ್ ನಮಾಜು ಮಸೀದಿಯಲ್ಲಿ ಇಲ್ಲದಿರುವುದರಿಂದ ಪುರುಷರನ್ನು ಮಾತ್ರ ಹೇಳಲಾಗಿದೆ
(ತಫ್ಸೀರುಲ್ ಮಲ್'ಹರಿ 6/541)
____________________________________
ಇಮಾಮ್ ಸ್ವಾವೀ(ರ)ಹೇಳುತ್ತಾರೆ;
خصوا بالذكر لان شأنهم حضور المساجد للجمعة والجماعات.
(حاشية الصاوي 3/141)
ಜುಮಾ ಮತ್ತು ಜಮಾಅತ್ ನಮಾಜ್ ಗೆ ಸೇರುವುದು ಪುರುಷರು ಮಾತ್ರವಾಗಿರುವುದರಿಂದ ಪುರುಷರನ್ನು ಮಾತ್ರ ಇಲ್ಲಿ ಹೇಳಲಾಗಿದೆ.
(ಸ್ವಾವೀ3/141)
____________________________________
ತಫ್ಸೀರು ಖಾಝಿನ್ ನಲ್ಲಿ ಈ ರೀತಿ ಇದೆ;
 خص الرجال بالذكر في هذه المساجد لأن النساء ليس عليهن حضور المساجد لجمعة ولا جماعة (تفسير الخازن 3/333)
ಮಸೀದಿಯ ಬಗ್ಗೆ ಪ್ರಸ್ತಾಪಿಸಿದಾಗ ಪುರುಷರ ಬಗ್ಗೆ ಮಾತ್ರ ಹೇಳಲು ಕಾರಣ,ಸ್ತ್ರೀಯರು ಜುಮುಅ ಮತ್ತು ಜಮಾಅತ್ ಗೆ ಹಾಜರಾಗದಿರುವುದರಿಂದಾಗಿದೆ.
(ತಫ್ಸೀರು ಖಾಝಿನ್3/333)
ಇದೇ ರೀತಿ (تفسير الجمل )
ತಫ್ಸೀರುಲ್ ಜಮಲ್ 3/227,
ತಫ್ಸೀರು ಮ ಆಲಿಮುತ್ತಂಝೀಲ್ ನ 3/295(تفسير معالم التنزيل)
 ರಲ್ಲೂ ಹೇಳಲಾಗಿದೆ.
____________________________________
ನೂತನವಾದಿಗಳ ನಾಯಕ ಮಿಸ್ಟರ್ ಆಲೂಸೀ ಹೇಳುತ್ತಾರೆ;
وتخصيص الرجال بالذكر لانهم الاحقاء بالمساجد.(تفسير روح المعاني 18/177)
ಮಸೀದಿಯೊಂದಿಗೆ ಅತೀ ಸಂಭಂಧಪಟ್ಟವರು ಪುರುಷರಾದುದರಿಂದ ಅಲ್ಲಾಹನನ್ನು ಪುರುಷರನ್ನು   ಮಾತ್ರ ಹೇಳಿದ್ದಾನೆ.
(ರೂಹುಲ್ ಮಆನಿ 18/177)
____________________________________
ಇಮಾಮ್ ಕುರ್ತುಬಿ ಹೇಳುತ್ತಾರೆ;
وخصهم بالذكر دل على أن النساء لا حظ لهن في المساجد ؛ إذ لا جمعة عليهن ، ولا جماعة ، وأن صلاتهن في بيوتهن أفضل
(قرطبي 12/184)
ಸ್ತ್ರೀಯರಿಗೆ ಮಸೀದಿಯಲ್ಲಿರುವ ಜುಮುಅ ಮತ್ತು ಜಮಾಅತ್ ನಲ್ಲಿ ಪಾಲ್ಗೊಲ್ಲುವ ಅವಕಾಶವಿಲ್ಲದಿರುವುದರಿಂದ  ಪುರುಷನನ್ನು ಮಾತ್ರ ಅಲ್ಲಾಹನು ಹೇಳಿದ್ದಾನೆ.ಸ್ತ್ರೀಯರಿಗೆ ಅವರ ಮನೆಯೇ ನಮಾಜಿಗೆ ಉತ್ತಮವಾಗಿದೆ.
(ತಫ್ಸೀರು ಖುರ್ತುಬೀ 12/184)
____________________________________
ಸಲಪಿಗಳ ಅಂಗೀಕೃತ ನಾಯಕ ಇಬ್ನ್ ಕಸೀರ್ ಹೇಳುವುದು ನೋಡಿ,
فأما النساء فصلاتهن في بيوتهن أفضل لهن; لما رواه أبو داود ، عن عبد الله بن مسعود ، رضي الله عنه ، عن النبي صلى الله عليه وسلم قال : " صلاة المرأة في بيتها أفضل من صلاتها في حجرتها ، وصلاتها في مخدعها أفضل من صلاتها في بيتها "
(ابن كثير 3/295)
ಸ್ತ್ರೀಯರಿಗೆ ನಮಾಜು ನಿರ್ವಹಿಸಲು ಅವರ ಮನೆಯೇ ಉತ್ತಮವಾಗಿದೆ.ಇಮಾಮ್ ಅಬೂದಾವೂದ್ (ರ)ವರದಿ ಮಾಡಿದ "ಸ್ತ್ರೀಯರಿಗೆ ಅವರ ಮನೆಯ ಒಳಗಿನ ಕೋಣೆಯು ನಮಾಜಿಗೆ ಉತ್ತಮವಾಗಿದೆ" ಎಂಬ ಹದೀಸ್ ಅದಕ್ಕೆ ಆಧಾರವಾಗಿದೆ.
(ಇಬ್ನ್ ಕಸೀರ್ 3/302).
____________________________________

ನೋಡಿರಿ!!
ಮಹಿಳೆಯರಿಗೆ ನಮಾಜು ನಿರ್ವಹಿಸಲು ಮಸೀದಿ ಉತ್ತಮವಲ್ಲವೆಂದು ಖುರ್'ಆನ್ ನ ಸೂಕ್ತವನ್ನು ವ್ಯಾಖ್ಯಾನಿಸಿ ಇಮಾಮರುಗಳು ಹೇಳಿದ್ದನ್ನಾಗಿದೆ ಮೇಲೆ ನೀವು ಓದಿದ್ದು,ಇದಕ್ಕೆ ವಿರುದ್ಧವಾಗಿ ಯಾವುದೇ ಗ್ರಂಥಗಳಿಂದ ಒಂದೇ ಒಂದು ವಾಖ್ಯಾವನ್ನು  ತೋರಿಸಲು ಯಾರಿಗೂ ಸಾಧ್ಯವಿಲ್ಲ.
ಆದುದರಿಂದ  ಸತ್ಯ ತಿಳಿಯಲು ಬಯಸುವ ವಿಶ್ವಾಸಿಗೆ ಇಷ್ಟು ಪುರಾವೆಗಳು ಧಾರಾಳ ಸಾಕು.


*ಮುಂದುವರಿಯುವುದು........*
*ಸ್ತ್ರೀ ಜುಮುಅ -ಜಮಾಅತ್ ಮಸೀದಿಯಲ್ಲಿ*

ಭಾಗ--2

📝ಮುನೀರ್ ಸಖಾಫಿ ಸಾಲೆತ್ತೂರು.
*_________________________________*

*ಸ್ತ್ರೀಯರ* ಮಸೀದಿ ಪ್ರವೇಶವು ಈ ಕೆಳಗಿನ 5 ಸಾಧ್ಯತೆಗಳಲ್ಲಿ ಯಾವುದಾದರೊಂದರಲ್ಲಿ ಅಡಗಿರುತ್ತದೆ.
_1.ಅನುಮತಿ ಕೇಳಬೇಕಾದವರೊಂದಿಗೆ ಅನುಮತಿ ಕೇಳದೆ ತೆರಳುವುದು._

_2.ಅನುಮತಿ ಕೇಳಿ ಹೊರಡುವುದು.ಆದರೆ  ಅವಳ ಮೇಲೆ ಅಥವಾ ಅವಳಿಂದ ಫಿತ್ನ ಉಂಟಾಗುವ ಹೆದರಿಕೆಯೊಂದಿಗೆ ಹೊರಡುವುದು._

_3.ಫಿತ್ನದ ಭಯ ಇಲ್ಲದಿದ್ದರೂ ಅವಳನ್ನು ಕಂಡರೆ ಅನ್ಯ ಪುರುಷನು ಮೋಹಿಸುವ ರೂಪದಲ್ಲಿ ಹೊರಡುವುದು._

_4.ಮೋಹಿಸುವ ಭಯವಿಲ್ಲದಿದ್ದರೂ ಅಂದದ ಉಡುಗೆ ತೊಟ್ಟು,ಸುಗಂಧ ಲೇಪಿಸಿ ಹೊರಡುವುದು._

_5.ಹೊರಗೆ ಹೊರಡುವಾಗ ಪಾಲಿಸಬೇಕಾದ ಎಲ್ಲಾ ಶರತ್ತುಗಳನ್ನು ಪಾಲಿಸಿ ಹೊರಡುವುದು._

ಇನ್ನು ಇವುಗಳ ವಿಧಿಯೇನೆಂದು ನೋಡೋಣ.

_ಇದರಲ್ಲಿ ಒಂದು ಮತ್ತು ಎರಡನೇಯ ರೂಪದಲ್ಲಿ ಸ್ತ್ರೀಯ ಮಸೀದಿ ಪ್ರವೇಶವು ಹರಾಂ ಆಗಿರುತ್ತದೆ._

ಇಮಾಮ್ ಇಬ್ನ್ ಹಜರ್ (ರ) ಬರೆಯುತ್ತಾರೆ;
 ويحرم عليهن بغير إذن ولي أو حليل أو سيد أو هما في أمة متزوجة ومع خشية فتنة منها أو عليها وللآذن لها في الخروج4 حكمه (تحفة المحتاج 2/301)
ರಕ್ಷಕನ ಅಥವಾ ಪತಿ,ಯಜಮಾನ ನ ಅನುಮತಿಯಿಲ್ಲದೆ ಸ್ತ್ರೀ ಜಮಾಅತ್ ಗೆ ಹೊರಡುವುದು ಹರಾಂ ಆಗಿದೆ.ಸ್ತ್ರೀಯ ಮೇಲೆ ಅಥವಾ ಅವಳಿಂದ ಫಿತ್ನ ಭಯಪಟ್ಟಲ್ಲಿ  ಅನುಮತಿಯಿದ್ದರೂ ಹರಾಮ್ ಆಗಿದೆ.
ಫಿತ್ನ ಭಯವಿರುವ ಸಂದರ್ಭದಲ್ಲಿ  ಅನುಮತಿ ನೀಡುವುದೂ ಹರಾಮ್ ಆಗಿದೆ.
(ತುಹ್ಫಾ 2/301)
________________________________
ಕೆಲವು ಗ್ರಂಥಗಳಲ್ಲಿ ಕರಾಹತ್ ಎಂದಿದೆಯಲ್ಲವೇ ಎಂಬ ಸಂಶಯಕ್ಕೆ ಇಬ್ನ್ ಹಜರ್(ರ)ತನ್ನ ಫತಾವದಲ್ಲಿ ಬರೆಯುತ್ತಾರೆ,
 فإن قيل فما الجواب عن إطلاق أهل المذهب غير من مر فالجواب أن محله حيث لم يريدوا كراهة التحريم ما إذا لم يترتب على خروجهن خشية فتنة، وأما إذا ترتب ذلك فهو حرام بلا شك، كما مر نقله عمن ذكر، والمراد بالفتنة الزنا ومقدماته من النظر والخلوة واللمس وغير ذلك. ولذلك أطلقوا الحكم في هذه المسألة بدون ذكر محرم يقترن بالخروج وأما عند اقتران محرم به أو لزومه له فالصواب القطع بالتحريم ولا يتوقف في ذلك فقيه (الفتاوي الكبري 1/328)
ಮದ್ಸ್ ಹಬಿನ ಇಮಾಮರುಗಳು  ಹೇಳಿರುವುದು ಕರಾಹತ್ ಎಂದಲ್ಲವೇ? ಎಂದು ಕೇಳಿದರೆ ಅದಕ್ಕೆ ಈ ರೀತಿ ಉತ್ತರಿಸಬಹುದಾಗಿದೆ.ಕರಾಹತ್ ಎಂಬುವುದರಿಂದ ಅವರು ತಹ್'ರೀಮಿನ ಕರಾಹತ್ ಉದ್ದೇಶಿಸಿದರೆ ಈ ಪ್ರಶ್ನೆ ಉಧ್ಬವಿಸಲಾರದು.(ಹರಾಂ ಎಂದೇ ಅರ್ಥ ಬರುತ್ತದೆ.)ಅಥವಾ ಸ್ತ್ರೀ ಹೊರಡುವುದರಿಂದ ಫಿತ್ನ ಭಯಪಡದ ವೇಳೆಯಲ್ಲಿ ಕರಾಹತ್  ಎಂದು ಅದನ್ನು ತಿಳಿಯಬೇಕಾಗಿದೆ.
ಅವರು ಹೊರಡುವುದರಿಂದ ಫಿತ್ನ ಭಯಪಟ್ಟಲ್ಲಿ ಹೊರಡುವುದು ಹರಾಂ ಎಂಬುವುದರಲ್ಲಿ ಸಂಶಯವೇ ಇಲ್ಲ.ಫಿತ್ನ ಎಂಬುವುದರ ಉದ್ದೇಶ ವ್ಯಭಿಚಾರ ಮತ್ತು
ಅದಕ್ಕೆ ತಲುಪಿಸುವ ನೋಟ,ಸ್ಪರ್ಶನೆ ಮತ್ತು ಬೆರೆಯುವಿಕೆ ಹಾಗೂ ಇನ್ನಿತರ ಸಂಗತಿಗಳಾಗಿವೆ.
ಈ ಸಂಗತಿಗಳಿರುವಾಗ ಹರಾಂ ಎಂದು ಹೇಳುವುದರಲ್ಲಿ ಯಾವುದೇ ಕರ್ಮಶಾಸ್ತ್ರ ವಿಧ್ವಾಂಸ ಮೌನವಹಿಸಲಾರ
(ಫತಾವಲ್ ಕುಬ್ರಾ 1/328)
________________________________
ಈ ಎರಡು ಉದ್ಧರಣಿಗಳಿಂದ ಮೇಲಿನ 5 ರೂಪಗಳಲ್ಲಿ 1 ಮತ್ತು 2 ನೇ ರೂಪದಲ್ಲಿ ಮಸೀದಿ ಪ್ರವೇಶ ಹರಾಮ್ ಎಂದು ಸ್ಪಷ್ಟವಾಯಿತು.

_ಇನ್ನು ಮೂರು ಮತ್ತು ನಾಲ್ಕನೇ ರೂಪದಲ್ಲಿ ಸ್ತ್ರೀ ಹೊರಡುವುದು ಕರಾಹತ್ ಆಗಿರುತ್ತದೆ._

ಇಬ್ನ್ ಹಜರ್ (ರ)ಹೇಳುತ್ತಾರೆ,
كره لها حضور جماعة المسجد ان كانت تشتهي ولو في ثياب رثة اولا تشتهي وبها شيء من الزينة او الطيب وللامام او نائبه منعهن حينئذ (تحفة المحتاج 2/301)
ಸ್ತ್ರೀಯು ಮೋಹಿಸಲ್ಪಡುವ ವೇಳೆ ಮಸೀದಿಯಲ್ಲಿನ ಜಮಾಅತ್ ಗೆ ಹಾಜರಾಗುವುದು ಕರಾಹತ್ ಆಗಿದೆ.ಒಂದು ವೇಳೆ ಮೋಹಿಸಲ್ಪಡದಿದ್ದರೂ ಅವಳು ಚಂದದ ವಸ್ತ್ರ ಧರಿಸಿ ಅಥವಾ ಸುಗಂಧ ಲೇಪಿಸಿ  ಹೊರಡುವುದಾದರೂ ಇದೇ ನಿಯಮವಾಗಿದೆ.ಇಂತಹಾ ಸಂದರ್ಭದಲ್ಲಿ  ಆಡಳಿತಾಧಿಕಾರಿಗಳು ಸ್ತ್ರೀಯರು ಜಮಾಅತ್ ಗೆ ಹಾಜರಾಗುವುದನ್ನು ತಡೆಯಬೇಕು.
(ತಹ್ಫಾ 2/301)
__________________________________
_ಇನ್ನು ಐದನೇ ರೂಪದಲ್ಲಿ خلاف الافضل ( ಉತ್ತಮವಾದುದಕ್ಕೆ ವಿರುದ್ಧ) ಆಗಿದೆ._
*ಈ ಹೇಳಿದ್ದು ಎಲ್ಲಾ ನಿಬಂಧನೆಗಳು ಪಾಲಿಸುವ ಸಂದರ್ಭದಲ್ಲಿ ಎಂದು ಪ್ರತ್ಯೇಕ ಗಮನವಿಟ್ಟು ತಿಳಿದುಕೊಳ್ಳಬೇಕಾಗಿದೆ.*

ಇಬ್ನ್ ಹಜರ್(ರ) ಹೇಳುತ್ತಾರೆ,
اما المرأة فجماعتها في بيتها افضل (تحفة 2/252)
ಸ್ತ್ರೀಯರಿಗೆ ಅವರ ಮನೆಯಲ್ಲಿಯೇ ಜಮಾಅತ್ ಉತ್ತಮವಾಗಿದೆ.
(ತುಹ್ಫಾ2/252)
_________________________________
ಸ್ತ್ರೀಯರಿಗೆ ನಮಾಜಿಗೆ ಉತ್ತಮ ಮನೆಯೆಂದು ಹೇಳುವಾಗ ಉತ್ತಮ ಸ್ಥಳವಾದ ಮನೆ ಬಿಟ್ಟು ಉತ್ತಮವಲ್ಲದ ಮಸೀದಿಗೆ ತೆರಳುವುದು ಅರ್ಥ ಶೂನ್ಯವಲ್ಲದೆ ಇನ್ನೇನು?

*ಮುಂದುವರಿಯುವುದು........*
*ಸ್ತ್ರೀ ಜುಮುಅ -ಜಮಾಅತ್ ಮಸೀದಿಯಲ್ಲಿ*

ಭಾಗ--1

📝ಮುನೀರ್ ಸಖಾಫಿ ಸಾಲೆತ್ತೂರು.
*_________________________________*

_ಇಂದು ಎಲ್ಲಾ ಕಡೆಗಳಲ್ಲೂ  ಸ್ತ್ರೀಯರ ಮಸೀದಿ ಪ್ರವೇಶದ ಬಗ್ಗೆ ಚರ್ಚೆ ಆಗುತ್ತಾ ಇದೆ._
_ಸ್ತ್ರೀ ಮಸೀದಿ ಪ್ರವೇಶದ ಬಗ್ಗೆ ಇಸ್ಲಾಮಿನ ನಿಲುವೇನೆಂದು ತಿಳಿಯುವುದು ಎಲ್ಲರ ಕರ್ತವ್ಯವಾಗಿದ್ದು,ಅದಕ್ಕಾಗಿ ಇಸ್ಲಾಮಿನ ಪ್ರಮಾಣಗಳ ಮೂಲಕ ಅದರ ಬಗ್ಗೆ ಬರೆಯಲು ಹೊರಟಿದ್ದೇನೆ._ _ಇದು ಸುದೀರ್ಘವಾದ ವಿಷಯವಾದುದರಿಂದ ಅದರ ಬಗ್ಗೆ ಇರುವ ಪರ-ವಿರೋಧಗಳ ಪುರಾವೆಗಳು ಮತ್ತು ಅದರ ಉತ್ತರಗಳನ್ನೂ ಸೇರಿಸಿ_ _ಬರೆಯುವೆನು. ಇಂಶಾ ಅಲ್ಲಾಹ್._
_ಅಕ್ಷರ ತಪ್ಪುಗಳಿದ್ದಲ್ಲಿ ಸರಿಪಡಿಸಿ ಶೇರ್ ಮಾಡುವುದರಲ್ಲಿ ನನ್ನ ಅಭ್ಯಂತರವಿಲ್ಲ._
_ಅಲ್ಲಾಹು ಖಬೂಲ್ ಮಾಡಲಿ._
--------------------------------------------------------
*ಸ್ತ್ರೀಯರ* ರಂಗ ಪ್ರವೇಶವು ಇಸ್ಲಾಂ ಅಂಗೀಕರಿಸುವುದಿಲ್ಲ. ಸ್ತ್ರೀಯರು ಆಡಳಿತ ಸಮಿತಿಯ ಸದಸ್ಯರಾಗುವುದು ಮತ್ತು ಸಾರ್ವಜನಿಕ  ವೇದಿಕೆಗಳಲ್ಲಿ ಪ್ರತ್ಯಕ್ಷವಾಗುವುದು  ಇಸ್ಲಾಂ ವಿರೋಧಿಸುತ್ತದೆ. ಹೊರಗಿಳಿದು ಪುರುಷರ ಜತೆ ಬೆರೆತಲ್ಲಿ ಹಲವಾರು ನಿಷಿದ್ಧ ಸಂಗತಿಗಳು ನಡೆಯುವುದರಲ್ಲಿ ಸಂಶಯವಿಲ್ಲ.

ಸ್ತ್ರೀಯರು ಶಾಪಿಂಗ್ ಗೆ ತೆರಳುವುದು, ಸಾರ್ವಜನಿಕ ಭಾಷಣ ಮಾಡುವುದು ಈ ಅಧುನಿಕ ಕಾಲದಲ್ಲಿ ನಿಸ್ಸಂಶಯ ನಿಷಿದ್ಧವಾಗಿದೆ.
ಆದರೆ ಚಿಕಿತ್ಸೆ, ಕಲಿಕೆ, ಸಾಕ್ಷಿ ನಿಲ್ಲಬೇಕಾದ ಅನಿವಾರ್ಯ ಸಂದರ್ಭದಲ್ಲಿ ಇಸ್ಲಾಮಿನ ನೀತಿ ನಿಯಮಗಳನ್ನು ಪಾಲಿಸಿ ಹೊರಗಿಳಿಯಬಹುದಾಗಿದೆ.
ಸಮರ್ಥರಾದ ಮಹಿಳಾ ವೈಧ್ಯರಿಲ್ಲದ ಸಂದರ್ಭದಲ್ಲಿ ವಿಶ್ವಾಸ ಯೋಗ್ಯರಾದ ಸ್ತ್ರೀಯರೊಂದಿಗೆ, ಪತಿ, ತಂದೆ, ಸಹೋದರ, ಮಗ ಮುಂತಾದ ವಿವಾಹ ನಿಷಿದ್ಧವಾದವರೊಂದಿಗೆ ಪುರುಷರಾದ ವೈಧ್ಯರನ್ನು ಸಂಪರ್ಕಿಸುವುದರಲ್ಲಿಯೂ ತಪ್ಪಿಲ್ಲ. ಕಲಿಸಲು ಯೋಗ್ಯನಾದ ಪತಿ ಅಥವಾ ಸ್ತ್ರೀಯರು ಇರುವಾಗ ಕಲಿಕೆಯ ಆವಶ್ಯಕ್ಕಾಗಿ ಅನ್ಯ ಪುರುಷರ ಬಳಿ ತೆರಳಬಾರದು.

ಮಸೀದಿಯಲ್ಲಿನ ಇಮಾಮತ್ ಮತ್ತು ಆಡಳಿತ ವ್ಯವಸ್ಥೆಯನ್ನು ಸ್ತ್ರೀಯರಿಗೆ ಇಸ್ಲಾಮ್ ಕೊಟ್ಟಿಲ್ಲ. ಆರಾಧನಾ ವಲಯಗಳಲ್ಲಿ ಸ್ತ್ರೀಯರಿಗೆ ಬಾಂಗ್ ಕರೆ, ಖುತುಬ, ಜುಮಾ ಮುಂತಾದವುಗಳನ್ನು ನಿರ್ವಹಿಸಲು ಅವಕಾಶವಿಲ್ಲ. ಅದೇ ರೀತಿ ಪುರುಷರಿಗೆ ಇಮಾಮತ್  ಆಗಿ ಸ್ತ್ರೀಯು ನಿಲ್ಲುವಂತಿಲ್ಲ.
ಕಿಸ್ರ ಚಕ್ರವರ್ತಿಯ ಮಗಳನ್ನು ಪೇರ್ಷಿಯನ್ನರು ರಾಣಿಯಾಗಿ ಆಯ್ಕೆ ಮಾಡಿದ ಬಗ್ಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿಳಿದಾಗ
*لن يفلح قوم ولو امرهم امرأة (بخاري)*
ಖಂಡಿತವಾಗಿಯೂ ತಮ್ಮ ಕಾರ್ಯಗಳಲ್ಲಿ ಸ್ತ್ರೀಯರಿಗೆ ಅಧಿಕಾರ ವಹಿಸಿಕೊಟ್ಟ ಒಂದು ವಿಭಾಗವು ಜಯಶಾಲಿಯಗಲಾರರು ಎಂದು ಹೇಳಿದ ಹದೀಸನ್ನು ಇಮಾಮ್ ಬುಖಾರಿ ವರದಿ ಮಾಡಿದ್ದಾರೆ. ಸ್ತ್ರೀಯು ಪುರುಷನಂತೆ ಹೊರಗಿಳಿಯುವುದನ್ನು ಇಸ್ಲಾಮ್ ವಿರೋಧಿಸಿದೆ. ಅನಿವಾರ್ಯ ವೇಳೆಯಲ್ಲಿ ಮಾತ್ರ ಇಸ್ಲಾಮ್ ನಿರ್ದೇಶಿಸುವ ರೀತಿಯಲ್ಲಿ ಪೂರ್ಣ ಪರ್ಧಾದೊಂದಿಗೆ ಹೊರಗಿಳಿಯಬಹುದು. ಅದೂ ಕೂಡಾ ಒಂಟಿಯಾಗಿ ಹೋಗುವಂತಿಲ್ಲ. ರಕ್ಷಕರು, ಅಥವಾ ವಿವಾಹ ನಿಷಿದ್ಧವಾದ ಪುರುಷರು ಅವಳ ಜತೆಯಲ್ಲಿರಬೇಕು ಎಂಬ ಕಾನೂನು ಇಸ್ಲಾಂ ಹೆಣ್ಣಿಗೆ ಎಷ್ಟು ಸುರಕ್ಷತೆಯನ್ನು ನೀಡುತ್ತದೆ ಎಂಬುವುದನ್ನು ಮನದಟ್ಟು ಮಾಡಿಕೊಡುತ್ತದೆ.
ಮನೆಯಲ್ಲಿದ್ದು ಕೊಂಡು ಮನೆ, ಪತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ಹೆಣ್ಣಿನೊಂದಿಗೆ ಊರಿನ ಅಧಿಕಾರ, ರಾಜ್ಯದ ಅಭಿವೃದ್ದಿಗೆ ಬೇಕಾಗಿ ಹೋರಾಡಬೇಕೆಂದು  ಹೇಳುವುದು ಸ್ತೀ ಸಮೂಹಕ್ಕೆ ಮಾಡುವ ಅಕ್ರಮವಾಗಿದೆ.
ಸ್ತ್ರೀಯರು ಪುರುಷರಂತೆ ಅಲ್ಲ. ಅವರಿಗೆ ಅವರದೇ ಆದ ಶಕ್ತಿ,ಸಹನೆ ಇದೆ. ಶಕ್ತಿಗಿಂತ ಮಿಗಿಲಾದ ಕೆಲಸವನ್ನು ಅವರಿಂದ ಮಾಡಿಸುವುದು ಘೋರ ಅಪರಾಧವಾಗಿದೆ.
 ಎಲ್ಲದ್ದಕ್ಕೂ ಪುರಾವೆಗಳನ್ನು ಮುಂದಿನ ಭಾಗದಲ್ಲಿ ಓದಿರಿ.


*ಮುಂದುವರಿಯುವುದು........*
*ನಮಾಝಿನ ಬಳಿಕ ಕೂಟುದುಆ*

*﷽*

*ಭಾಗ---1⃣0⃣*

_📝 *ಮುನೀರ್ ಸಖಾಫಿ ಸಾಲೆತ್ತೂರು.*_

ವಹ್ಹಾಬಿಗಳ ಅಂಗೀಕೃತ ನೇತಾರ ಮುಹಮ್ಮದ್ ಬಿನ್ ಇಸ್ಮಾಈಲ್ ಎಂಬವರು ಹೇಳುವುದನ್ನು ನೋಡಿ,

_دعاء الإمام مستقبل القبلة , مستدير المأمومين فلم يأت به سنة بل الذي ورد أنه صلى الله عليه وسلم كان يستقبل المأمومين إذا سلم . قال البخاري : باب يستقبل الإمام الناس إذا سلم . وورد حديث سمرة  جندب وحديث زيد بن خالد كان اذا صلي اقبل علينا بوجهه, وظاهره : المداومة علي ذلك (سبل السلام 1/236)_

_ನಮಾಝಿನ ನಂತರ_
_ಮಅ್'ಮೂಮುಗಳಿಗೆ ಬೆನ್ನು ತಿರುಗಿಸಿ ಕಿಬ್ ಲಾಗೆ_ _ಅಭಿಮುಖವಾಗಿ ಕುಳಿತು ಪ್ರಾರ್ಥಿಸುವುದು ಹದೀಸುಗಳಲ್ಲಿ  ವರದಿಯಾಗಿಲ್ಲ.ಬದಲು_ _ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಂದ ವರದಿಯಾದದ್ದು ಮಅ್'ಮೂಮುಗಳ ಭಾಗಕ್ಕೆ ಮುಖಮಾಡಿ ಕುಳಿತುಕೊಳ್ಳುತ್ತಿದ್ದರು_ _ಎಂಬುವುದಾಗಿದೆ.ಇಮಾಮ್ ಬುಖಾರಿಯವರು ಇದನ್ನು ತಿಳಿಸಿದ್ದಾರೆ.ಸಮುರತ್ ಬಿನ್ ಜುಂದುಬ್ (ರ)ಹಾಗೂ ಝೈದ್ ಬಿನ್ ಖಾಲಿದ್(ರ)ರವರಿಂದ ಹೀಗೆ ವರದಿಯಾಗಿದೆ.ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು  ನಮಾಝ್ ಮುಗಿದೊಡನೆ ನಮ್ಮ ದಿಕ್ಕಿಗೆ ಮುಖ ಮಾಡುತ್ತಿದ್ದರು.ಇದರ ಬಾಹ್ಯವೇನೆಂದರೆ ಪ್ರಸ್ತುತ ರೀತಿಯಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಕುಳಿತುಕೊಳ್ಳುವುದು ಅವರ ನಿತ್ಯ ರೂಢಿಯಾಗಿತ್ತು ಎಂಬುವುದಾಗಿದೆ._
_(ಸುಬುಲುಸ್ಸಲಾಂ 336/1)_
*------------------------------------------*
ನೋಡಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝಿನಿಂದ ವಿರಮಿಸಿದರೆ ಎದ್ದು ಹೋಗದೆ ಸುನ್ನಿಗಳು ಇಂದು ನಿರ್ವಹಿಸುವಂತೆ ಜನರ ಭಾಗಕ್ಕೆ ತಿರುಗಿ ಕುಳಿತುಕೊಳ್ಳುತ್ತಿದ್ದರು ಎಂದು ನೂತನವಾದಿಗಳ ನೇತಾರರೂ ಕೂಡಾ ಅಂಗೀಕರಿಸಿದ್ದಾರೆ.

ಈ ತಿರುಗುವಿಕೆ ಹೇಗೆಯಾಗಿತ್ತು ಎಂಬುವುದು ಇನ್ನೊಂದು ಪ್ರಶ್ನೆಯಾಗಿದೆ.
ಇದು ಸಾಮಾನ್ಯವಾಗಿ ಇಂದು ಮಸೀದಿಗಳಲ್ಲಿ ಕಂಡು ಬರುವಂತೆ ಬಲಭಾಗ ಮಅ್'ಮೂಮೂಮುಗಳಿಗೂ ಎಡಭಾಗ ಮಿಹ್'ರಾಬಿಗೂ ಬರುವ ರೀತಿಯಲ್ಲಾಗಿತ್ತು .ಇದನ್ನು ಇಮಾಮ್ ಮುಸ್ಲಿಂ (ರ)ವರದಿ ಮಾಡಿದ ಹದೀಸ್ ಸ್ಪಷ್ಟಗೊಳಿಸುತ್ತದೆ.

_عن البراء  قال: كنا إذا صلَّينا خلف رسول الله صلي الله عليه وسلم أحببنا أن نكون عن يمينه، يُقبل علينا بوجهه، (مسلم_ _1/247)_
_ಬರಾಅ್ ಬಿನ್ ಆಝಿಬ್(ರ)ವರದಿ;ಅವರು_ _ಹೇಳುತ್ತಾರೆ,ನಾವು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಹಿಂದೆ ನಮಾಝ್ ಮಾಡಿದರೆ ಅವರು ನಮ್ಮ ಕಡೆಗೆ ಮುಖ ಮಾಡುವುದನ್ನು ಕಾಣಲು_ _ಅವರ ಬಲಭಾಗದಲ್ಲಿ ನಿಂತುಕೂಳ್ಳುವುದನ್ನು ನಾವು ಇಷ್ಟಪಡುತ್ತಿದ್ದೆವು._
(ಮುಸ್ಲಿಂ 1/247)
*-----------------------------------------*
ಈ ಹದೀಸಿನಿಂದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸಲಾಂ ಹೇಳಿದ ಬಳಿಕ ಮಅ್'ಮೂಮುಗಳ ಧಿಕ್ಕಿಗೆ ತನ್ನ ಬಲ ಭಾಗ ಬರುವ ರೀತಿಯಲ್ಲಿ ಕುಳಿತುಕೊಳ್ಳುತ್ತಿದ್ದರು ಎಂಬುವುದನ್ನು ಅತ್ಯಂತ ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.ಏಕೆಂದರೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಗೆ ಮುಖ ಮಾಡುವುದನ್ನು ಕಾಣಲು ನಾವು ಅವರ ಬಲಭಾಗದಲ್ಲಿ ನಿಲ್ಲುತ್ತಿದ್ದೆವು ಎಂದು ಹೇಳಬೇಕಾದರೆ ಪ್ರವಾದಿಯವರು ಸಲಾಮಿನ ಬಳಿಕ ಪ್ರಸ್ತುತ ರೀತಿಯಲ್ಲಿ ಕುಳಿತುಕೊಳ್ಳಬೇಕು.ಇಲ್ಲದಿದ್ದರೆ ನಾವು ಅವರ ಬಲಭಾಗದಲ್ಲಿ ನಿಲ್ಲುವುದನ್ನು ಇಷ್ಟಪಡುತ್ತಿದ್ದೆವು ಎಂದು ಬರಾಅ್(ರ)ಹೇಳುವುದರಲ್ಲಿ ಅರ್ಥವಿಲ್ಲ.

*ಮುಂದುವರಿಯುವುದು*

📝 *ಮುನೀರ್ ಸಖಾಫಿ, ಸಾಲೆತ್ತೂರು.*_
🍀🍀🍀🍀🍀🍀🍀🍀🍀
➖➖➖➖➖➖➖➖➖
💫💫💫💫💫💫💫💫💫💫💫💫 *ನಮಾಝಿನ* *ಬಳಿಕ* *ಕೂಟು* *ದುಆ* 🍀🍀🍀🍀🍀🍀🍀🍀🍀🍀🍀🍀

*﷽*

*ಭಾಗ-0⃣9⃣*

_📝 *ಮುನೀರ್ ಸಖಾಫಿ ಸಾಲೆತ್ತೂರು.*_

*ಸಲಾಮಿನ ನಂತರ ಹೇಗೆ ಕುಳಿತುಕೊಳ್ಳಬೇಕು?*

ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು  ನಮಾಝಿನ ಬಳಿಕ ಝಿಕ್ರ್ ದುಆಗಳನ್ನು  ನಡೆಸುತ್ತಿದ್ದರೆಂದು ಮುಂದಿನ ಭಾಗದಲ್ಲಿ ವಿವರಿಸಲಾಯಿತು.
ಈ ಝಿಕ್ರ್ ನ ವೇಳೆ ಯಾವ ರೀತಿ ಕುಳಿತುಕೊಳ್ಳಬೇಕೆಂದು ಪರಿಶೀಲಿಸೋಣ.
_ಒಂಟಿಯಾಗಿ ನಮಾಝ್ ಮಾಡುವವನು ಕಿಬ್ಲಾಗೆ ಅಭಿಮುಖವಾಗಿ ನಮಾಝ್ ನಲ್ಲಿ ಕುಳಿತಂತೆ ನಮಾಝಿನ ನಂತರವೂ ಕುಳಿತು ಕೊಳ್ಳಬೇಕು._
ಇನ್ನು ಇಮಾಮ್ ಆಗಿ ನಮಾಝ್ ನಿರ್ವಹಿಸಿದವನು ಕುಳಿತು ಕೊಳ್ಳಬೇಕಾದ  ರೂಪವನ್ನು ತಿಳಿಯೋಣ.

_ಇಮಾಮ್ ನಮಾಝಿನ ಬಳಿಕ  ಮಅ್'ಮೂಮ್ ಗಳ ಅಭಿಮುಖವಾಗಿ ಕುಳಿತು ಕೊಳ್ಳಬೇಕು._

(ಗುರುವರ್ಯರಾದ ತೋಕೆ ಉಸ್ತಾದರ ಪುಸ್ತಕದ ಕೆಲವೊಂದು ಭಾಗಗಳನ್ನು ಇಲ್ಲಿ ನೀಡುತ್ತಿದ್ದೇನೆ.)

ಇಮಾಮ್ ಬುಖಾರಿ(ರ)ವರದಿ;
عن سمرة بن جندب قال كان النبي صلى الله عليه وسلم إذا صلى صلاة أقبل علينا بوجهه (بخاري )

ಸಮುರತ್ ಬಿನ್ ಜುಂದುಬ್ (ರ)ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು  ನಮಾಝ್ ನಿಂದ  ವಿರಮಿಸಿದರೆ ನಮ್ಮ ಕಡೆಗೆ  ಮುಖ ಮಾಡಿ ಕುಳಿತು ಕೊಳ್ಳುತ್ತಿದ್ದರು.
(ಬುಖಾರಿ1/119 )

ಹದೀಸಿನಲ್ಲಿ *ಅಖ್'ಬಲ ಅಲೈನಾ  ಬಿವಜ್'ಹಿಹಿ* ಎಂಬುವುದರ ಅರ್ಥ "ನಮಗೆ ಮುಖ ಮಾಡಿ ಎದ್ದು ಬರುತ್ತಿದ್ದರು" ಎಂದಲ್ಲ.
ಬದಲು "ತಮ್ಮ ಶರೀರವನ್ನು ಕ್ವಿಬ್'ಲಾದ ಭಾಗದಿಂದ ತಿರುಗಿಸಿ  ಕುಳಿತುಕೊಳ್ಳುತ್ತಿದ್ದರು" ಎಂದಾಗಿದೆ.ಇದನ್ನು ಹದೀಸ್ ಗಳಿಂದಲೇ ತಿಳಿದು ಕೊಳ್ಳಬಹುದು.
ಇಮಾಮ್ ಅಬೂದಾವೂದ್ (ರ)ಮತ್ತು ಇಮಾಮ್ ಬಗವೀ(ರ)ರವರು ಉಲ್ಲೇಖಿಸಿದ ಹದೀಸ್ ನಲ್ಲಿ ಹೀಗೆ ಕಾಣಬಹುದು.
عن جابر بن يزيد عن أبيه قال: صَلّيتُ خلف النبي- عليه السلام- فكان إذا انصَرف انْحرف (شرح السنة 3/214، اوداوود )
ಜಾಬಿರ್(ರ)ತನ್ನ ಪಿತೃವರ್ಯರಾದ ಯಝೀದ್(ರ)ರವರಿಂದ ವರದಿ:ನಾನು ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಹಿಂದೆ ನಮಾಝ್ ಮಾಡಿದೆ.ನಮಾಝ್ ನಿಂದ ವಿರಮಿಸಿದ ಬಳಿಕ ಅವರು ತಿರುಗಿ ಕುಳಿತರು(ಅಬೂದಾವೂದ್,
ಶರಉಸ್ಸುನ್ನ 3/214)
*------------------------------------------*
ಇಮಾಮ್ ನಸಾಈ (ರ)ವರದಿ,
عن يزيد بن الاسود انه صلي مع رسول الله صلي الله عليه وسلم صلاة الصبح فلما صلي انحرف
ಯಝೀದ್ ಬಿನಿಲ್ ಅಸ್ವದ್ (ರ)ಹೇಳುತ್ತಾರೆ; "ನಾನು ಒಮ್ಮೆ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ನಮಾಝ್ ಮಾಡಿದೆ.ಸಲಾಮಿನ ನಂತರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿರುಗಿ ಕುಳಿತರು.(ಸುನನ್ ನಸಾಈ 1/196)
*------------------------------------------*
ಇದರ ವ್ಯಾಖ್ಯಾನದಲ್ಲಿ ಇಮಾಮ್ ಸಿಂದೀ(ರ)ಹೇಳುತ್ತಾರೆ;

(قوله انحرف)اي عن جهة القبلة ومال بوجهه الي القوم .(شرح سندي 1/196)

"ಇನ್'ಹರಫ ಎಂದರೆ ಕಿಬ್ ಲಾದ  ಭಾಗದಿಂದ ಜನರ ಭಾಗಕ್ಕೆ ತಮ್ಮ ಮುಖದೊಂದಿಗೆ ತಿರುಗಿದರು"ಎಂದಾಗಿದೆ.(ಶರಹುಸ್ಸಿಂದಿ 1/196)
*------------------------------------------*

*ಮುಂದುವರಿಯುವುದು*

📝 *ಮುನೀರ್ ಸಖಾಫಿ, ಸಾಲೆತ್ತೂರು.*_
🍀🍀🍀🍀🍀🍀🍀🍀🍀
➖➖➖➖➖➖➖➖➖
💫💫💫💫💫💫💫💫💫💫💫💫 *ನಮಾಝಿನ* *ಬಳಿಕ* *ಕೂಟು* *ದುಆ* 🍀🍀🍀🍀🍀🍀🍀🍀🍀🍀🍀🍀

*﷽*

*ಭಾಗ---0⃣8⃣*

_📝 *ಮುನೀರ್ ಸಖಾಫಿ ಸಾಲೆತ್ತೂರು.*_

ಇಮಾಮ್ ಬುಖಾರೀ (ರ)ವರದಿ;

 عمرو بن ميمون الأودي قال: كان سعد يعلم بنيه هؤلاء الكلمات كما يعلم المعلم الغلمان الكتابة ويقول إن رسول الله صلى الله عليه وسلم كان يتعوذ منهن دبر الصلاة اللهم إني أعوذ بك من الجبن وأعوذ بك أن أرد إلى أرذل العمر وأعوذ بك من فتنة الدنيا وأعوذ بك من عذاب القبر(بخاري 3/418)

ಅಂಮ್ರ್ ಬಿನ್ ಮೈಮೂನುಲ್ ಅವ್'ದೀ (ರ)ಹೇಳುತ್ತಾರೆ,
ಸಅ್'ದ್ ಬಿನ್ ಅಬೀ ವಖ್ಖಾಸ್ (ರ) ತನ್ನ ಮಕ್ಕಳಿಗೆ ಈ ಪ್ರಾರ್ಥನೆಯನ್ನು ಕಲಿಸಿ ಕೊಟ್ಟಿದ್ದರು. _"ಅಲ್ಲಾಹುಮ್ಮ ಇನ್ನೀ ಅಊದ್ಸು ಬಿಕ ಮಿನಲ್_ _ಜುಬುನಿ ವಅಊದ್ಸು ಬಿಕ ಅನ್ ಉರದ್ದ ಇಲಾ ಅರ್'ದ್ಸಲಿ_ _ಉಮುರಿ ವಊದ್ಸು ಬಿಕ ಮಿನ್ ಫಿತ್'ನತಿ ದ್ದುನ್ಯಾ_
_ವಅಊದ್ಸು  ಬಿಕ ಮಿನ್ ಅದ್ಸಾಬಿಲ್ ಖಬ್'ರಿ"._
ಇದನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝಿನ ನಂತರ ಪ್ರಾರ್ಥಿಸುತ್ತಿದ್ದರು ಎಂದು ಅವರು ಹೇಳಿದರು._
(ಬುಖಾರಿ 3/418)
*------------------------------------------*
ಇಮಾಂ ನವವೀ (ರ) ಹೇಳುತ್ತಾರೆ,
عنْ أَنَسِ بْنِ مَالِكٍ، رَضِيَ اللَّهُ عَنْهُ قَالَ: كَان النَّبِيِّ صلى الله عليه وسلم  يَقُولُ إِذَا انْصَرَفَ مِنَ الصَّلَاةِ:اللَّهُمَّ اجْعَلْ خَيْرَ عُمْرِي آخِرَهُ، وَخَيْرَ عَمَلِي خَوَاتِمَهُ، وَاجْعَلْ خَيْرَ أَيَّامِي يَوْمَ أَلْقَاكَ
(اذكار : 69)

ಅನಸ್(ರ)ವರದಿ;ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝಿನ ಬಳಿಕ ಈ ರೀತಿ ಪ್ರಾರ್ಥಿಸುತ್ತಿದ್ದರು, _"ಅಲ್ಲಾಹುಮ್ಮ ಇಜ್ಅಲ್_ _ಖೈರ ಉಮುರೀ ಆಖಿರಹೂ_
_ವಖೈರ ಅಮಲೀ_ _ಕವಾತಿಮಹೂ ವಜ್ಅಲ್ ಕೈರ ಅಯ್ಯಾಮೀ ಯವ್'ಮ ಅಲ್ ಖಾಕ._
(ಅಝ್'ಕಾರ್ :69)
*------------------------------------------*
ಇಮಾಂ ನವವೀ (ರ) ಇನ್ನೂ ಹೇಳುತ್ತಾರೆ,

عن ابي بكرة ان رسول الله صلي الله  عليه وسلم كان يقول في دبر الصلاة "اللهم اني اعوذ بك من الكفر والفقر وعذاب النار
(اذكار :68)
ಅಬೂ ಬಕ್ರತ್ (ರ)ಹೇಳುತ್ತಾರೆ;
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝಿನ ನಂತರ ಈ ರೀತಿ ಪ್ರಾರ್ಥಿಸುತ್ತಿದ್ದರು;
_"ಅಲ್ಲಾಹುಮ್ಮ ಇನ್ನೀ ಅಊದ್ಸು ಬಿಕ ಮಿನಲ್ ಕುಫ್ರಿ ವಲ್ ಫಖ್ರಿ ವಅದ್ಸಾಬಿನ್ನಾರ್."_
(ಅದ್ಸ್ ಕಾರ್ :68)
*------------------------------------------*
ಇಮಾಮ್ ನವವೀ (ರ) ವರದಿ ಮಾಡಿದ ಇನ್ನೊಂದು ಹದೀಸ್ ನೋಡಿ,
عن انس :قال كان رسول الله صلي الله عليه وسلم اذا قضي صلاته مسح جبهته بيده اليمني  ثم قال:"اشهد ان لااله الا الله الرحمن الرحيم ،الله اذهب عني الهم والحزن"
(اذكار 69)
ಅನಸ್ (ರ)ಹೇಳುತ್ತಾರೆ;ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು  ನಮಾಝಿನಿಂದ ವಿರಮಿಸಿದ ಬಳಿಕ ಬಲ ಕೈಯಿಂದ ಹಣೆ ಸವರಿ _"ಅಶ್'ಹದು_ _ಅನ್'ಲಾಇಲಾಹ_
_ಇಲ್ಲಲ್ಲಾಹು_
_ಅರ್ರಹ್'ಮಾನಿರ್ರಹೀಮ್,_
_ಅಲ್ಲಾಹುಮ್ಮ ಅದ್ಸ್ ಹಬ ಅನ್ನೀ ಅಲ್ ಹಮ್ಮ ವಲ್ ಹುಝ್ ನ_" ಎಂದು ಹೇಳುತ್ತಿದ್ದರು.
(ಅದ್ಸ್ ಕಾರ್ 69)
*------------------------------------------*

*ಮುಂದುವರಿಯುವುದು*

📝 *ಮುನೀರ್ ಸಖಾಫಿ, ಸಾಲೆತ್ತೂರು.*_
🍀🍀🍀🍀🍀🍀🍀🍀🍀
➖➖➖➖➖➖➖➖➖
💫💫💫💫💫💫💫💫💫💫💫💫 *ನಮಾಝಿನ* *ಬಳಿಕ* *ಕೂಟು* *ದುಆ* 🍀🍀🍀🍀🍀🍀🍀🍀🍀🍀🍀🍀

*﷽*

*ಭಾಗ---0⃣7⃣*

_📝 *ಮುನೀರ್ ಸಖಾಫಿ ಸಾಲೆತ್ತೂರು.*_

ಇಮಾಂ ನಸಾಈ ವರದಿ ಮಾಡಿದ ಹದೀಸ್ ನೋಡಿ;
 عن عطاء بن مروان عن أبيه أن كعبا حلف له بالله الذي فلق البحر لموسى إنا لنجد في التوراة أن داود نبي الله كان إذا انصرف من صلاته قال اللهم أصلح لي ديني الذي جعلته لي عصمة وأصلح لي دنياي التي جعلت فيها معاشي الحديث وفي آخره قال عطاء: وحدثني كعب أن صهيبا حدثه أن محمدا صلى الله عليه وسلم كان يقولهن عند إنصرافه من صلاته"،
ಕಅಬ್ (ರ)ಅಲ್ಲಾಹನ ಹೆಸರಲ್ಲಿ ಆಣೆ ಹಾಕಿ ಹೇಳುತ್ತಾರೆ, ಪ್ರವಾದಿ ಮೂಸಾ ಅಲೈಹಿಸ್ಸಲಾಮರ ತೌರಾತ್ ನಲ್ಲಿ  ದಾವೂದ್ ಅಲೈಹಿಸ್ಸಲಾಂ ರವರ ಬಗ್ಗೆ  "ಅವರು ನಮಾಝಿನಿಂದ ವಿರಮಿಸಿದರೆ ಅಲ್ಲಾಹುಮ್ಮ ಅಸ್ಲಿಹ್ ಲೀ ದೀನೀ ಅಲ್ಲಝೀ ಜಅಲ್ತಹೂ ಲೀ ಇಸ್'ಮತನ್,
 ವಅಸ್ಲಿ'ಹ್ ಲೀ ದುನ್ಯಾಯ  ಅಲ್ಲತೀ ಜಅಲ್ತ ಫೀಹಾ  ಮಾಹಾಶೀ ,
ಅಲ್ಲಾಹುಮ್ಮ ಇನ್ನೀ ಅಊದ್ಸು ಬಿರಿಳಾಕ ಮಿನ್ ಸುಖ್'ತಿಕ  ವ ಅಊದ್ಸು ಬಿಅಫ್'ವಿಕ ಮಿನ್ ನಿಖ್'ಮತಿಕ ವಅಊದ್ಸು  ಬಿಕ ಮಿಂಕ ಲಾ ಮಾನಿಅ ಲಿಮಾ ಅಯ್'ತೈತ  ವಲಾ ಮಾನಿಅ ಲಿಮಾ ಮನಅ್'ತ
ವಲಾ ಯಂಫಹು ದ್ಸಲ್ ಜದ್ದಿ ಮಿಂಕಲ್ ಜದ್ದು ಎಂದು ಹೇಳುತ್ತಿದ್ದರು.
ಕಅಬ್ (ರ) ಹೇಳುತ್ತಾರೆ ;ಅವಾಗ ಸುಹೈಬ್ (ರ) ಹೇಳಿದರು,ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೂ ಕೂಡಾ ನಮಾಜಿನಿಂದ ವಿರಮಿಸಿದರೆ ಇದೇ ರೀತಿ ಹೇಳುತ್ತಿದ್ದರು.
(ಸುನನುನ್ನಸಾಈ 3/73)
*--------------------------------------------*
عَن كعب بن عجرة قال:
قال رَسُولِ اللَّهِ صلى اللَّهُ عَلَيْه
ِ وَسَلَّمَ قَالَ :مُعَقِّبَاتٌ لا يَخِيب ُقَائِلُهُنََّّ  سبح الله في دبر كل صلاة: َثلاثاً وَثَلاثُين، ويحمده َثَلاثٌاً وَثَلاثُينَ ، ً ويكبره َأَرْبَعٌاًً وَثَلاثُين (نسائي 3/75)
ಕಅ್'ಬ್ ಬಿನ್ ಉಜ್ರತ್ (ರ)ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು,
ನಮಾಝಿನ ನಂತರ ಹೇಳಬೇಕಾದ ಕೆಲವು ಝಿಕ್ರ್ ಗಳಿವೆ.ಅವುಗಳನ್ನು ಪಠಿಸುವವರನ್ನು ಅಲ್ಲಾಹನು ನಿರಾಶೆಗೊಳಿಸಲಾರ.
33 ಸಲ ಸುಬ್ ಹಾನಲ್ಲ ,
33 ಸಲ ಅಲ್ ಹಂದುಲಿಲ್ಲಾಹ್,
33 ಸಲ ಅಲ್ಲಾಹು ಅಕ್ಬರ್ ಎಂದಾಗಿದೆ ಅದು.
(ನಸಾಈ 3/75)
*-------------------------------------------*

*ಮುಂದುವರಿಯುವುದು*

📝 *ಮುನೀರ್ ಸಖಾಫಿ, ಸಾಲೆತ್ತೂರು.*
🍀🍀🍀🍀🍀🍀🍀🍀🍀
➖➖➖➖➖➖➖➖➖
♻ *ನಮಾಝಿನ* *ಬಳಿಕ* *ಕೂಟು* *ದುಆ*♻

*ಭಾಗ---6*

_📝 *ಮುನೀರ್*_ _*ಸಖಾಫಿ,*_
_*ಸಾಲೆತ್ತೂರು.*_

ಇಮಾಮ್ ನಸಾಈ ವರದಿ,
*عن عقبة بن عامر قال امرني رسول الله صلي الله عليه وسلم ان اقرأ المعوذات دبر كل صلاة.*
*(نسائي 3/68)*

ಉಖ್ ಬತ್ ಬಿನ್ ಆಮಿರ್ (ರ) ಹೇಳುತ್ತಾರೆ;ಎಲ್ಲಾ ನಮಾಝಿನ ನಂತರ ಸೂರತುಲ್ ಮುಅವ್ವಿಝಾತ್ ಓದುವಂತೆ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನನ್ನಲ್ಲಿ ಆಜ್ಞಾಪಿಸಿದರು".
(ಸುನನು ನ್ನಸಾಈ 3/68)
_*-----------------------------------*_

ಇನ್ನೊಂದು ಹದೀಸ್ ನೋಡಿ;
عن ابي الزبير قال سمعت عبد الله بن الزبير يحدث علي هذا المنبر وهو يقول كان رسول الله صلي الله عليه وسلم اذا سلم يقول *لا اله الا الله وحده لا شريك له له الملك وله الحمد وهو علي كل شيئ قدير لا حول ولا قوة الا بالله لا اله الا الله لا نعبد الا اياه اهل النعمة والفضل والثناء الحسن لا اله الا الله مخلصين له الدين ولو كره الكافرون'.*
ಅಬ್ದುಲ್ಲಾಹಿ ಬಿನ್ ಝುಬೈರ್ (ರ) ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ಬಳಿಕ ಈ ರೀತಿ ಹೇಳುತ್ತಿದ್ದರು,
*"ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹು, ಲಹುಲ್ ಮುಲ್ಕ್ ವಲಹುಲ್ ಹಂದು ವಹುವ ಅಲಾ ಕುಲ್ಲಿನ್ ಶೈಯಿನ್ ಖದೀರ್.ಲಾ ಹೌಲ ವಲಾ ಖುವ್ವತ ಇಲ್ಲಾ ಬಿಲ್ಲಾಹಿ ಲಾಇಲಾಹ ಇಲ್ಲಲ್ಲಾಹು ಲಾ ನಹ್ ಬುದು ಇಲ್ಲಾ ಇಯ್ಯಾಹು ಅಹ್ ಲನ್ನಿಅಮತಿ ವಲ್ ಫಲ್ ಲಿ ವಸ್ಸನಾಇಲ್ ಹಸನಿ ಲಾ ಇಲಾಹ ಇಲ್ಲಲ್ಲಾಹು ಮುಖ್ ಲಿಸೀನ ಲಹುದ್ದೀನ್.ವಲವ್ ಕರಿಹಲ್ ಕಾಫಿರೂನ್."*
(ನಸಾಈ 3/69)
_*-----------------------------------*_

ಇನ್ನೊಂದು ಹದೀಸಿನಲ್ಲಿ ಈ ರೀತಿ ಇದೆ.,
 عن وراد كاتب المغيرة بن شعبة قال كتب معاوية الي المغيرة بن شعبة اخبرني بشئ سمعته من رسول الله صلي الله عليه وسلم فقال *كان رسول الله صلي الله اذا قضي الصلاة قال لا اله الله وحده لا شريك له له الملك وله الحمد وهو علي كل شيئ قدير.اللهم لا مانع لما اعطيت ولا معطي لما منعت ولا ينفع ذا الجد منك الجد*
(نسائي3/70)

ಮುಆವಿಯ(ರ) , ಮುಗೀರತ್ ಬಿನ್ ಶುಅಬ (ರ)ರಿಗೆ ಬರೆದ ಪತ್ರದಲ್ಲಿ ಈ ರೀತಿ ಹೇಳಿದರು;
" ನೀವು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಂದ ಕೇಳಿದ ಯಾವುದಾದರೊಂದು ಕಾರ್ಯವನ್ನು ನನಗೆ ತಿಳಿಸಿ ಕೊಡುವಿರಾ?"
ಆಗ ಮುಗೀರ (ರ) ಈ ರೀತಿ ಹೇಳಿದರು,
*" ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ಬಳಿಕ ಲಾಇಲಾಹ ಇಲ್ಲಲ್ಲಾಹು ವಹ್ ದಹು ಲಾ ಶರೀಕ ಲಹೂ ಲಹುಲ್ ಮುಲ್ಕು ವಲಹುಲ್ ಹಂದು ವಹುವ ಅಲಾ ಕುಲ್ಲಿ ಶೈಯಿನ್ ಖದೀರ್.ಅಲ್ಲಾಹುಮ್ಮ ಲಾ ಮಾನಿಅ ಲಿಮಾ ಅಹ್ ತೈತ ವಲಾ ಮುಅತಿಯ ಲಿಮಾ ಮನ ಅತ ವಲಾ ಯಂಫಉ ದ್ಸಲ್ ಜದ್ದಿ ಮಿಂಕಲ್ ಜದ್ದ್."*
ಎಂದು ಹೇಳುತ್ತಿದ್ದರು.
(ನಸಾಈ 3/70)
_*-----------------------------------*_

ಇಮಾಮ್ ಬುಖಾರಿ ಮತ್ತು ಮುಸ್ಲಿಂ ವರದಿ ;
عن عاشة رضي الله عنها ان يهودية دخلت عليها فذكرت عذاب القبر فقالت لها اعاذك الله  من عذاب القبر فسالت عائشة رسول الله صلي الله عليه وسلم عن عذاب القبر فقال نعم، عذاب القبر.
*قالت عائشة فما رأيت رسول الله صلي الله صلي الله عليه وسلم بعد صلي صلاة الا تعوذ من عذاب القبر.*
(متفق عليه)
ಆಯಿಶಾ (ರ) ಹೇಳುತ್ತಾರೆ,ಒಬ್ಬಳು  ಯಹೂದಿ ಸ್ತ್ರೀ ಆಯಿಶಾ (ರ) ಬಳಿ ಬಂದು ನಿಮ್ಮನ್ನು ಅಲ್ಲಾಹನು ಖಬ್ ರಿನ ಅಝಾಬ್ ನಿಂದ ಪಾರುಗೊಳಿಸಲಿ ಎಂದು ಹೇಳಿದಾಗ ಆಯಿಶಾ (ರ) ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಲ್ಲಿ ಖಬರಿನ ಶಿಕ್ಷೆಯ ಬಗ್ಗೆ ಕೇಳಿದರು.ಖಬರಿನ ಶಿಕ್ಷೆ ಸತ್ಯವೆಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಉತ್ತರಿಸಿದರು.
*ಆಯಿಶಾ ಬೀವಿ(ರ) ಹೇಳುತ್ತಾರೆ,ಅದರ ನಂತರ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು  ಖಬರಿನ ಶಿಕ್ಷೆಯ ಮೋಚನೆಗಾಗಿ ಪ್ರಾರ್ಥಿಸದೆ ನಮಾಝ್ ಮಾಡುವುದನ್ನು ನಾನು ನೋಡಿಲ್ಲ.*
(ಬುಖಾರಿ 2/274 , ಮುಸ್ಲಿಮ್ 3/92)h
_*-----------------------------------*_
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ಬಳಿಕ ಎದ್ದು ಹೋಗದೆ , ಅಲ್ಲೇ ಕುಳಿತು  ದ್ಸಿಕ್ರ್ ಮತ್ತು ದುಆಗಳನ್ನು ನಡೆಸುತ್ತಿದ್ದರೆಂದು  ಈ ಮೇಲಿನ ಹದೀಸಿನಿಂದ ಬಹಳ ಸ್ಪಷ್ಟವಾಯಿತು.

ಮುಂದುವರಿಯುದು..........
💫💫💫💫💫💫💫💫💫💫💫💫 *ನಮಾಝಿನ* *ಬಳಿಕ* *ಕೂಟು* *ದುಆ* 🍀🍀🍀🍀🍀🍀🍀🍀🍀🍀🍀🍀

*﷽*

*ಭಾಗ---0⃣5⃣*

_📝 *ಮುನೀರ್ ಸಖಾಫಿ ಸಾಲೆತ್ತೂರು.*
➖➖➖➖➖➖➖➖➖➖➖
ಇಮಾಮ್ ಬುಖಾರಿ(ರ)ಯ  ಸ್ವಹೀಹ್ ನಲ್ಲಿರುವ   
"باب الدعاء بعد الصلاة"
(ಕಡ್ದಾಯ  ನಮಾಝಿನ ನಂತರದ ದುಆ) ಎಂಬ ಅಧ್ಯಾಯವನ್ನು ವಿವರಿಸಿ ಇಮಾಮ್ ಹಾಫಿಳ್ ಇಬ್ನ್ ಹಜರ್ (ರ) ಹೇಳುತ್ತಾರೆ;

{ قوله باب الدعاء بعد الصلاة} أي المكتوبة وفي هذه الترجمة رد على من زعم أن الدعاء بعد الصلاة لا يشرع متمسكا بالحديث الذي أخرجه مسلم من رواية عبد الله بن الحارث عن عائشة كان النبي - صلى الله عليه وسلم - " { إذا سلم لا يثبت إلا قدر ما يقول اللهم أنت السلام ومنك السلام تباركت يا ذا الجلال والإكرام .} والجواب أن المراد بالنفي المذكور نفي استمراره جالسا على هيئته قبل السلام إلا بقدر أن يقول ما ذكر. فقد ثبت أنه " {كان إذا صلى أقبل على أصحابه} " فيحمل ما ورد من الدعاء بعد الصلاة على أنه كان يقوله بعد أن يقبل بوجهه على أصحابه .[فتح الباري 11/137]

ಇಮಾಮ್ ಮುಸ್ಲಿಂ (ರ), ಆಯಿಶ (ರ)  ರಿಂದ  ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝ್ ನ ಬಳಿಕ 'ಅಲ್ಲಾಹುಮ್ಮ ಅಂತಸ್ಸಲಾಮು ವಮಿಂಕಸ್ಸಲಾಮು ತಬಾರಕ್ತ ಯಾ ದಲ್ ಜಲಾಲಿ ವಲ್ ಇಕ್ರಾಂ' ಎಂದು  ಹೇಳುವಷ್ಟು ಮಾತ್ರ ಕುಳಿತುಕೊಳ್ಳುತ್ತಿದ್ದರು ಎಂಬ ಹದೀಸಿನ ಆಧಾರದಲ್ಲಿ ನಮಾಝಿನ ನಂತರ ಪ್ರಾರ್ಥನೆ ಅನುವದನೀಯವಲ್ಲ ಎಂದು ವಾದಿಸುವವರಿಗೆ ಈ ಅಧ್ಯಾಯದಲ್ಲಿ ಸೂಕ್ತ ಉತ್ತರವಿದೆ.ಪ್ರಸ್ತುತ ದ್ಸಿಕ್ರ್ ಹೇಳುವ ಸಮಯ ಮಾತ್ರವೇ ಕುಳಿತು ಕೊಳ್ಳುತ್ತಿದ್ದರು ಎಂಬುವುದರ ಅರ್ಥ ,ಸಲಾಂ ಹೇಳಿದ ಬಳಿಕ ಅತ್ತಹಿಯ್ಯಾತ್ ಗೆ ಕುಳಿತುಕೊಳ್ಳುವ ರೀತಿಯಲ್ಲಿ ಕಿಬ್ಲಗೆ ತಿರುಗಿ ಕುಳಿತು ಕೊಳ್ಳುವುದರ ಕುರಿತಾಗಿದೆ.(ಮ ಅಮೂರಿಗೆ ಅಭಿಮುಖವಾಗಿ ಕುಳಿತುಕೊಳ್ಳುವುದಕ್ಕಿಂತ ಮುಂಚೆ ಆ ದ್ಸಿಕ್ರ್ ಹೇಳುವ ಸಮಯ ಕಿಬ್ಲಗೆ ಮುಖ ಮಾಡಿಯೇ ಆ ದ್ಸಿಕ್ರ್ ಹೇಳುತ್ತಿದ್ದರು ಎಂದರ್ಥ.)
ಕಾರಣ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝ್ ನಿರ್ವಹಿಸಿದರೆ ಸ್ವಹಾಬಿಗಳಿಗೆ ಅಭಿಮುಖವಾಗಿ ಕುಳಿತು ಕೊಳ್ಳುತ್ತಿದ್ದರೆಂದು ಹದೀಸುಗಳಲ್ಲಿ ಸಾಬೀತಾಗಿದೆ.ಆದುದರಿಂದಲೇ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಪ್ರಾರ್ಥಿಸುತ್ತಿದ್ದರು ಎಂದು ವರದಿಯಾದ ಹದೀಸುಗಳನ್ನು ಸ್ವಹಾಬಿಗಳಿಗೆ ಅಭಿಮುಖವಾಗಿ  ಕುಳಿತು ಪ್ರಾರ್ಥಿಸಿದ ಪ್ರಾರ್ಥನೆ ಎಂದು ತಿಳಿಯಬಹುದಾಗಿದೆ.
(ಫತ್ ಹುಲ್ ಬಾರೀ 11/137)

ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ನಂತರ ಸ್ವಹಾಬಿಗಳಿಗೆ ಅಭಿಮುಖವಾಗಿ ದುಆ ನಡೆಸುತ್ತಿದ್ದರೆಂದು ಇದರಿಂದ ತಿಳಿದು ಬಂತು.
--------------------------------
ಇಮಾಮ್ ಅಹ್ಮದ್ (ರ)ವರದಿ ಮಾಡುತ್ತಾರೆ;
حدثنا عبد الله حدثني ابي ثنا وكيع ثنا عثمان الشحام عن مسلم بن ابي بكرة عن ابيه ان تلنبي صلي البه عليه وسلم كان يقول ففي دبر كل صلاة اللهم اني اعوذ بك من الكفر والفقر وعذاب القبر.
(احمد)

ಪ್ರವಾದಿ ಸಲ್ಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ನಂತರ 'ಅಲ್ಲಾಹುಮ್ಮ ಇನ್ನೀ ಅಊದ್ಸು ಬಿಕ ಮಿನಲ್ ಕುಫ್ ರಿ ವಲ್ ಫಕ್ ರಿ ವ ಅದ್ಸಾಬಿಲ್ ಖಬ್ ರಿ ' ಎಂದು ಪ್ರಾರ್ಥಿಸುತ್ತಿದ್ದರು.
(ಅಹ್ಮದ್ 5/39)
---------------------------------
ಇಮಾಮ್ ನಸಾಈ (ರ) ವರದಿ;
عن مسلم بن ابي بكرة قال كان ابي يقول دبر الصلاة اللهم اني اعوذ بك من الكفر والفقر وعذاب القبر فكنت اقولهن فقال ابي اي بني عمن اخذت هذا ؟
قلت: عنك قال ان رسول الله صلي الله عليه وسلم كان يقولهن في دبر الصلاة.
(سنن النسائي 3/74)

ಮುಸ್ಲಿಮ್ ಬಿನ್ ಅಬೀ ಬಕ್ರತ್ ( ರ) ಹೇಳುತ್ತಾರೆ;
ನನ್ನ ತಂದೆ ನಮಾಝಿನ ನಂತರ
' ಅಲ್ಲಾಹುಮ್ಮ ಇನ್ನೀ ಅಊದ್ಸು ಬಿಕ ಮಿನಲ್ ಕುಫ್ರಿ ವಲ್ ಫಕ್ರಿ ವ ಅದ್ಸಾಬಿಲ್ ಖಬ್ರಿ' ಎಂದು ಹೇಳುತ್ತಿದ್ದರು.ಇದು ಕೇಳಿದ ನಂತರ ನಾನೂ  ಕೂಡಾ ಇದೇ ರೀತಿ ಹೇಳತೊಡಗಿದೆ.ಆಗ ತಂದೆ ನನ್ನಲ್ಲಿ ಕೇಳಿದರು,
ಓ ಪ್ರೀತಿಯ ಮಗನೇ! ಯಾರಿಂದ ಕೇಳಿ ಈ ರೀತಿ ನೀನು ಪ್ರಾರ್ಥಿಸುತ್ತೀಯಾ?
ನಿಮ್ಮಿಂದ ಕೇಳಿ ನಾನು ತಿಳಿದಿದ್ದೇನೆಂದು ನಾನು ಉತ್ತರಿಸಿದೆ.
ಆಗ ತಂದೆ ನನ್ನಲ್ಲಿ ಹೇಳಿದರು;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ಬಳಿಕ ಈ ರೀತಿ ಪ್ರಾರ್ಥಿಸುತ್ತಿದ್ದರು.
(ಸುನನ್ನು ನಸಾಈ 3/74)

ಈ ಹದೀಸ್ ಸ್ವಹೀಹ್ ಆಗಿದೆಯೆಂದು ಅಲ್ಬಾನಿಯೇ ಸ್ವತಃ ಅಂಗೀಕರಿಸಿದ್ದಾರೆ.
ಅವರು ಹೇಳುವುದು ನೋಡಿ;
*صحيح الاسناد*
ಇದರ ಪರಂಪರೆ ಸ್ವಹೀಹ್ ಆಗಿದೆ.
(ತಹ್ ಲೀಖುಲ್ ಅಲ್ಬಾನಿ)
_*-----------------------------------*_
    *ಮುಂದುವರಿಯುದು .........*

📝 *ಮುನೀರ್ ಸಖಾಫಿ, ಸಾಲೆತ್ತೂರು.*_
🍀🍀🍀🍀🍀🍀🍀🍀🍀🍀🍀
➖➖➖➖➖➖➖➖➖➖➖
 ಇಸ್ಲಾಮಿಕ್ ಚರಿತ್ರೆ ಸಮೂಹ ನಿರ್ವಾಹಕರು
*ಜೆ .ಮುಹಮ್ಮದ್ ಫಾರೂಕ್ ಪಾಣೆಮಂಗಳೂರು*
   &
*ಹಂಝ ಬಜ್ಪೆ (ಹಂಷಮಿ ಬಜ್ಪೆ )*
💫💫💫💫💫💫💫💫💫💫💫💫 *ನಮಾಝಿನ* *ಬಳಿಕ* *ಕೂಟು* *ದುಆ* 🍀🍀🍀🍀🍀🍀🍀🍀🍀🍀🍀🍀

*﷽*

*ಭಾಗ---0⃣4⃣*

_📝 *ಮುನೀರ್ ಸಖಾಫಿ ಸಾಲೆತ್ತೂರು.*
➖➖➖➖➖➖➖➖➖➖➖
*ನಮಾಝಿನ* *ನಂತರ* *ದುಆಃ  ಹದೀಸುಗಳಲ್ಲಿ...*
*------------------------------*

ಇಮಾಮ್ ತುರ್ಮುದ್ಸೀ ವರದಿ ಮಾಡಿದ ಹದೀಸ್ ನೋಡಿ,
*"عن* *ابي* *امامة* *قال* *:قيل* *لرسول* *الله* *صلي* *الله* *عليه* *وسلم* *اي* *الدعاء* *اسمع* ؟ *قال* *جوف* *الليل* *الاخر* *ودبر* *الصلوات* *المكتوبات* *قال* *هذا* *حديث* *حسن*
*(ترمذي)*

ಅಬೂ ಉಮಾಮ (ರ) ವರದಿ;
ಪ್ರವಾದಿಸಲ್ಲಲ್ಲಾಹು ಅಲೈಹಿವಸಲ್ಲರೊಂದಿಗೆ  'ಪ್ರಾರ್ಥನೆ ಸ್ವೀಕರಿಸಲ್ಪಡುವ ಸಮಯ ಯಾವುದೆಂದು 'ಒಬ್ಬರು ಕೇಳಿದರು.ಆಗ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು, ರಾತ್ರಿಯ ಕೊನೆಯ ಸಮಯದಲ್ಲಿ ಮತ್ತು ಎಲ್ಲಾ ಫರ್ಲ್ ನಮಾಝಿನ ಬಳಿಕವೂ ಆಗಿದೆ. ಇಮಾಂ ತುರ್ಮದ್ಸೀ ಹೇಳುತ್ತಾರೆ. ಈ ಹದೀಸ್ ಹಸನ್ ಆಗಿದೆ.
(ತುರ್ಮುದ್ಸೀ 2/198)
*----------------------------------*
ಇಮಾಮ್ ತ್ವಬ್ ರಾನಿ ವರದಿ ಮಾಡಿದ ಹದೀಸ್ ನಲ್ಲಿ ಈ ರೀತಿ ಇದೆ;
" *عن العرباض بن سارية قال قال رسول الله صلي عليه وسلم من صلي الصبح  فريضة فله دعوة مستجابة ومن ختم القران فله دعوة مستجابة*
*(معجم الكبير 18/259 ، مجمع الزوائد 7/175، كنز العمال 2/100 )*

ಇರ್ಬಾಲ್  ಬಿನ್ ಸಾರಿಯ (ರ) ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ" ಫರ್ಳ್ ನಮಾಝಿನ ಬಳಿಕ ಮಾಡುವ ಪ್ರಾರ್ಥನೆಗೆ ಉತ್ತರವಿದೆ.ಖುರ್ ಆನ್ ಖತಮ್ ಮುಗಿಸಿ ಪ್ರಾರ್ಥಿಸುವ ಪ್ರಾರ್ಥನೆಗೂ ಉತ್ತರವಿದೆ.
(ಮುಅಜಮುಲ್ ಕಬೀರ್ 18/259,
ಮಜ್ಮ್ ಮಉಝ್ಝವಾಯಿದ್ 7/175,
, ಕಂಝುಲ್ ಉಮ್ಮಾಲ್ 2/100)
*-----------------------------------*

ಬೇರೊಂದು ಹದೀಸ್ ನೋಡಿ;
*اذا صليتم الصبح فافزعوا الي الدعاء وباكروا في طلب الحوائج اللهم بارك لامتي في بكورها.*
(كنز العمال 2/100)
ನೀವು ಸುಬಹಿ ನಮಾಝ್ ಮಾಡಿದರೆ ದುಆದಲ್ಲಿ ತಲ್ಲೀನರಾಗಿರಿ.ಪ್ರಭಾತದಲ್ಲಿ ನಿಮ್ಮ ಆವಶ್ಯತೆಗಳನ್ನು ಕೇಳಿರಿ.ಅಲ್ಲಾಹನೇ ! ಪ್ರಭಾತ ಸಮಯದಲ್ಲಿ ನನ್ನ ಉಮ್ಮತ್ ಗೆ ನೀನು ಸಮೃದ್ಧಿ ನೀಡು.
(ಕಂಝುಲ್ ಉಮ್ಮಾಲ್ 2/100)
*-----------------------------------*
ಇಮಾಮ್ ತ್ವಬ್ ರಾನಿ ವರದಿ;
عن جعفر بن محمد الصادق قال : الدعاء بعد المكتوبة افضل من الدعاء بعد النافلة كفضل المكتوبة علي النافلة.
(تحفة الاحوذي 2/197)

ಫರ್ಲ್ ನಮಾಝಿನ ಬಳಿಕ ಪ್ರಾರ್ಥನೆ ಮಾಡುವುದು ಸುನ್ನತ್ ನಮಾಝಿನ ಬಳಿಕ ಪ್ರಾರ್ಥನೆ ಮಾಡುವುದಕ್ಕಿಂತಲೂ ಶ್ರೇಷ್ಠವಾಗಿದೆ.ಸುನ್ನತ್  ನಮಾಝಿಗಿಂತ ಫರ್ಳ್ ನಮಾಝ್ ಶ್ರೇಷ್ಠವಾದಂತೆ.
(ತುಹ್ ಫತುಲ್ ಅಹ್ ವದ್ಸೀ 2/197)
*-----------------------------------*
ಇಮಾಮ್ ಇಬ್ನ್ ಅಬೀ ಶೈಬ (ರ) ವರದಿ ;
عن اسود العامري عن ابيه قال صليت مع رسول الله صلي الله عليه وسلم  الفجر فلما سلم انحرف ورفع يديه ودعا رواه ابن ابي شيبة في مصنفه.
(تحفة الاحوذي 2/199)

ಅಸ್ವದುಲ್ ಆಮಿರ್ (ರ) ತನ್ನ ತಂದೆಯಿಂದ ವರದಿ ಮಾಡುತ್ತಾರೆ.ನಾನು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಸುಬಹಿ ನಮಾಝ್ ಮಾಡಿದೆ.ನಮಾಝ್ ನ
ಸಲಾಂ ಹೇಳಿದ ನಂತರ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿರುಗಿ
ಕುಳಿತು ಕೈ ಎತ್ತಿ ಪ್ರಾರ್ಥಿಸಿದರು.
(ತುಹ್ ಫತುಲ್ ಅಹ್ವದ್ಸೀ 2/199)

*-----------------------------------*
ನಮಾಝ್ ಮುಗಿದ ನಂತರ ಪ್ರಾರ್ಥಿಸಬೇಕೆಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಮತ್ತು ಸ್ವಹಾಬಿಗಳ ಚರ್ಯೆಯಿಂದ ಸಾಬೀತಾಗಿದೆ.ನಮಾಝ್ ಮುಗಿದ ಕೂಡಲೇ ಅವರು ಯಾರೂ ಕೂಡಾ ಎದ್ದು ಓಡುತ್ತಿರಲಿಲ್ಲ.ಬದಲು ಅಲ್ಲಿ ಕುಳಿತು ಪ್ರಾರ್ಥಿಸುತ್ತಿದ್ದರು.ಅದರ ಕುರಿತಿರುವ ಹದೀಸಾಗಿದೆ ಮೇಲೆ ನೀವು ಓದಿದ್ದು.ಈ ವಿಷಯದಲ್ಲಿ ಇನ್ನೂ ಕೂಡಾ ಹಲವಾರು ಹದೀಸು ಗಳು ಇವೆ.
ಅವುಗಳನ್ನು ಮುಂದಿನ ಭಾಗದಲ್ಲಿ ನೋಡೋಣ.
ಇಂಶಾ ಅಲ್ಲಾಹ್.
_*-----------------------------------*_
*(ಮುಂದುವರಿಯುದು...*.)

_📝 *ಮುನೀರ್ ಸಖಾಫಿ, ಸಾಲೆತ್ತೂರು.*_
🍀🍀🍀🍀🍀🍀🍀🍀🍀🍀🍀
➖➖➖➖➖➖➖➖➖➖➖
 ಇಸ್ಲಾಮಿಕ್ ಚರಿತ್ರೆ ಸಮೂಹ ನಿರ್ವಾಹಕರು
*ಜೆ .ಮುಹಮ್ಮದ್ ಫಾರೂಕ್ ಪಾಣೆಮಂಗಳೂರು*
   &
*ಹಂಝ ಬಜ್ಪೆ (ಹಂಷಮಿ ಬಜ್ಪೆ )*
♻ *ನಮಾಝಿನ* *ಬಳಿಕ* *ಕೂಟು* *ದುಆ*♻

*ಭಾಗ---3*

_📝 *ಮುನೀರ್*_ _*ಸಖಾಫಿ,*_
_*ಸಾಲೆತ್ತೂರು.*_

ಹಿಜರಿ 450 ರಲ್ಲಿ ವಫಾತ್ ಆದ  ಇಮಾಮ್ ಮಾವರ್ದಿಯವರ ಮಾತು ನೋಡಿ;
{فإذا فرغت فانصب } فيه اربع تأويلات :
الثاني فإذا فرغت من صلاتك فانصب في دعائك قاله الضحاك
(النكت والعيون 2/298)

ಪ್ರಸ್ತುತ ಸೂಕ್ತಕ್ಕೆ ನಾಲ್ಕು ಅರ್ಥಗಳಿವೆ.
ಅದರಲ್ಲಿ ಎರಡನೇಯ ಅರ್ಥ  ಲಹ್ಹಾಕ್ (ರ) ಹೇಳಿದಂತೆ, ನೀವು ನಮಾಝಿನಿಂದ ವಿರಮಿಸಿದರೆ ದುಆದಲ್ಲಿ ನಿರತರಾಗಿರಿ.
(ಅನ್ನುಕತು ವಲ್ ಉಯೂನ್  6/298)
   *---------------------*

ಇಮಾಮ್ ಅಬ್ದುರ್ರಹ್ಮಾನ್ ಅಸ್ಸ ಅದೀ (ರ) ಹೇಳುತ್ತಾರೆ;
"وقد قيل ان معني قوله فإذا فرغت من الصلاة واكملتها فانصب في الدعاء والي ربك فارغب في سؤال مطالبتك.
واستدل من قال بهذا القول علي مشروعية الدعاء والذكر عقب الصلوات المكتوبات .
(تفسير الكريم 5/416)

ನೀವು ನಮಾಝಿನಿಂದ ವಿರಮಿಸಿದರೆ ದುಆದಲ್ಲಿ ನಿರತರಾಗಿರಿ ಎಂದು ಪ್ರಸ್ತುತ ಸೂಕ್ತಕ್ಕೆ ಅರ್ಥ ಹೇಳಲ್ಪಡಲಾಗಿದೆ.
ಖಡ್ಡಾಯ ನಮಾಝಿನ ಬಳಿಕ ಝಿಕ್ರ್ ಮತ್ತು  ಪ್ರಾರ್ಥನೆ ನಿರ್ವಹಿಸುವುದು  ಪುಣ್ಯಕರ್ಮವೆಂದು ಅವರು (ಪ್ರಸ್ತುತ ಅರ್ಥ ನೀಡಿದ ಸ್ವಹಾಬಿಗಳು) ಪುರಾವೆ ಮಾಡಿದರು.
(ತಫ್ಸೀರುಲ್ ಕರೀಮ್ 5/416).

*---------------------*

ನೂತನ ವಾದಿಗಳ ನೇತಾರ ಶೌಕಾನಿ ಹೇಳುತ್ತಾರೆ;
قال قتادة والضحاك ومقاتل والكلبي اذا فرغت من الصلاة المكتوبة فانصب الي ربك في الدعاء وارغب اليه في المسئلة يعطك.
(فتح القدير 5/460)

ನಮಾಝ್ ನಿಂದ ವಿರಮಿಸಿದರೆ ದುಆದಲ್ಲಿ ತಲ್ಲೀನರಾಗಿರಿ, ಅಲ್ಲಾಹನಲ್ಲಿ ನಿಮ್ಮ ಆವಶ್ಯಗಳನ್ನು ಕೇಳಿರಿ.ನಿಮಗೆ ಅವನು ನೀಡುವನು.
(ಫತ್ ಹುಲ್ ಖದೀರ್ 5/460)

*---------------------*
ಇದೇ ಅರ್ಥವನ್ನು ಎಲ್ಲಾ ಇಮಾಮರುಗಳು ನೀಡಿದ್ದಾರೆ.
ಅದರಲ್ಲಿ ಕೆಲವು ಇಮಾಮರುಗಳ ಹೆಸರು ಮತ್ತು ಅವರ ಗ್ರಂಥ ಈ ರೀತಿಯಾಗಿದೆ.

1).ಇಮಾಮ್ ಅಬುಸ್ಸು ಊದ್ ತನ್ನ ತಫ್ಸೀರ್ " ಇರ್ಶಾದುಲ್ ಅಖ್ ಲಿ ಸ್ಸಲೀಮ್" 6/444 ಪುಟ.

2).ಝಮಖ್ ಶರೀ ತನ್ನ ಕಶ್ಶಾಫ್ ನ 4/267.

3).ಇಮಾಮ್ ಇಸ್ಮಾಯೀಲ್ ಅಲ್ ಹಿಖ್ಖಿ ತನ್ನ ರೂಹುಲ್ ಬಯಾನ್ 10/474 .

4).ಇಮಾಮ್ ಅಬೂ ಹಯ್ಯಾನ್ ತನ್ನ ತಫ್ಸೀರ್ ಅಲ್ ಬಹ್ರುಲ್ ಮುಹೀತ್ 8/488.

5).ಮುಹಮ್ಮದ್ ಸನಾವುಲ್ಲಾ ಅಲ್ ಮಲ್ ಹರೀ ತನ್ನ ತಫ್ಸೀರುಲ್ ಮಲ್ ಹರೀ 10/294.

6).ಇಮಾಮ್ ಅಲಾಉದ್ದೀನ್ ಅಲ್ ಖಾಝಿನ್ ತನ್ನ ಲುಬಾಬುತ್ತ ಅವೀಲ್ ನ 4/390.

7).ಇಮಾಮ್ ಇಬ್ನ್ ಅತಿಯ್ಯ ತನ್ನ ಅಲ್ ಮುಹರ್ರರುಲ್ ವಜೀಝ್ ನ 16/328.

8).ಆಲೂಸೀ ತನ್ನ ರೂಹುಲ್ ಮ ಆನಿಯ 30/172.

9).ಇಮಾಮ್ ತ್ವಬ್ ರೀ ತನ್ನ ಜಾಮಿಉಲ್ ಬಯಾನ್ ನ 12/628 .

10).ಇಬ್ನ್ ಕಸೀರ್ ತನ್ನ ತಫ್ಸೀರುಲ್ ಖುರ್ ಆನಿಲ್ ಅಳೀಮ್ ನ 4/322 ರಲ್ಲೂ ವಿವರಿಸಿದ್ದಾರೆ.

ಒಟ್ಟಿನಲ್ಲಿ ಸೂರ ಅಶ್ಶರಹ್ ನ 7 ಮತ್ತು 8 ಸೂಕ್ತವನ್ನು ವ್ಯಾಖ್ಯಾನಿಸಿ ಎಲ್ಲಾ ಇಮಾಮರುಗಳು  ನಮಾಝ್ ನ ನಂತರ ದುಆ ಮಾಡಬೇಕೆಂದು ವಿವರಿಸಿ ಕೊಟ್ಟಿದ್ದಾರೆ.
ನಮಾಝ್ ಮಾಡಿ ಎದ್ದೋಡಬೇಕೆಂದು (ವಹ್ಹಾಬಿಗಳು👹👹 ಓಡುವ ರೀತಿ 🏃�🏃�🏃�)
 ಯಾವ ಇಮಾಮರುಗಳು ಕೂಡಾ ಕಲಿಸಿಲ್ಲ.
ಆ ದುಆ ಒಂಟಿಯಾಗಿ ನಿರ್ವಹಿಸಬೇಕೇ ಅಥವಾ ಸಾಮೂಹಿಕವಾಗಿ ಆಗಬೇಕೇ ಎಂಬುವುದನ್ನು ಮುಂದಿನ ಭಾಗಗಳಲ್ಲಿ ನೋಡೋಣ.
_*-----------------------------------*_

ಮುಂದುವರಿಯುದು....
♻ *ನಮಾಝಿನ* *ಬಳಿಕ* *ಕೂಟು* *ದುಆ*♻

*ಭಾಗ---2*

_📝 *ಮುನೀರ್*_ _*ಸಖಾಫಿ,*_
_*ಸಾಲೆತ್ತೂರು.*_

ಇಮಾಮ್ ಇಬ್ನುಲ್ ಜೌಝೀ (ರ) ಹೇಳುತ್ತಾರೆ;
"وفي معني الكلام خمسة قوال
احدها فإذا فرغت من الفرائض فانصب في قيام الليل قاله ابن مسعود
والثاني فإذا فرغت من الصلاة فانصب  في الدعاء قاله ابن عباس والضحاك وقاتل.
(تفسير زاد المسير 9/166)

ಪ್ರಸ್ತುತ ಸೂಕ್ತಕ್ಕೆ ಐದು ಅರ್ಥಗಳಿವೆ.
ಒಂದನೆಯದು , ನೀವು ಫರ್ಲ್ ನಮಾಝಿನಿಂದ ವಿರಮಿಸಿದರೆ ಖಿಯಾಮುಲ್ಲೈಲ್ ನಲ್ಲಿ ನಿರತರಾಗಿರಿ. ಈ ವ್ಯಾಖ್ಯನವನ್ನು ಇಬ್ನ್ ಮಸ್ ಊದ್ (ರ) ಹೇಳಿದ್ದಾರೆ.
ಎರಡನೇಯ ಅರ್ಥ, ನೀವು ನಮಾಝಿನಿಂದ ವಿರಮಿಸಿದರೆ ದುಆದಲ್ಲಿ ನಿರತರಾಗಿರಿ.ಈ ವ್ಯಾಖ್ಯಾನವನ್ನು ಇಬ್ನ್ ಅಬ್ಬಾಸ್ , ಲಹ್ಹಾಕ್ , ಮುಖಾತಿಲ್ (ರ) ಹೇಳಿದ್ದಾರೆ.
(ಝಾದುಲ್ ಮಸೀರ್ 9/166)
_*-----------------------------------*_
ಇಮಾಮ್ ಖುರ್ತುಬೀ (ರ) ಹೇಳುತ್ತಾರೆ;
"قوله  تعالي (فإذا فرغت )قال ابن عباس وقتادة : فإذا فرغت من صلاتك (فانصب )اي بالغ في الدعاء،وسله حاجتك.(قرطبي20/108)

ಇಬ್ನ್ ಅಬ್ಬಾಸ್ (ರ) ಮತ್ತು ಖತಾದ (ರ) ಹೇಳಿದರು;ನೀವು ನಮಾಝ್ ನಿಂದ ವಿರಮಿಸಿದರೆ ಗಾಡವಾದ ಪ್ರಾರ್ಥನೆಯಲ್ಲಿ ನಿರತರಾಗಿರಿ, ನಿಮ್ಮ ಆವಶ್ಯಗಳನ್ನು ಅಲ್ಲಾಹನಲ್ಲಿ ಕೇಳಿರಿ.
(ತಫ್ಸೀರುಲ್ ಖುರ್ಥುಬೀ 20/108)
_*-----------------------------------*_
ಇಮಾಮ್ ಸುಯೂತೀ (ರ) ಬರೆಯುತ್ತಾರೆ;
" أخرج عبد بن حميد وابن جرير وابن المنذر وابن أبي حاتم وابن مردويه من طرق عن ابن عباس في قوله : { فإذا فرغت فانصب } الآية قال : إذا فرغت من الصلاة فانصب في الدعاء ، واسأل الله وارغب إليه .
واخرج ابن مردويه عن ابن عباس في قوله {فإذا فرغت فانصب } الاية قال الله لرسوله: اذا فرغت من صلاتك وتشهدت فانصب  الي  ربك واسأله حاجتك.
- وأخرج ابن أبي الدنيا في الذكر عن ابن مسعود { فإذا فرغت فانصب } إلى الدعاء {وإلى ربك فارغب } في المسألة.
(الدر المنثور 8/522)

ಅಬ್ದ್ ಬಿನ್ ಹುಮೈದ್ (ರ),ಇಬ್ನ್ ಜರೀರ್ ,ಇಬ್ನುಲ್ ಮುಂದಿರ್ ,ಇಬ್ನ್ ಅಬೀ ಹಾತಮ್ ,ಇಬ್ನ್ ಮರ್ದವೈಹಿ (ರ) ಮುಂತಾದವರು ಇಬ್ನ್ ಅಬ್ಬಾಸ್ (ರ) ರಿಂದ ಹಲವಾರು ಪರಂಪರೆಗಳ ಮೂಲಕ ಮಾಡಲಾದ ವರದಿಯಲ್ಲಿ 'ನೀವು ನಮಾಝಿನಿಂದ ವಿರಮಿಸಿದರೆ ದುಆದಲ್ಲಿ ತಲ್ಲೀನರಾಗಿರಿ.ಅಲ್ಲಾಹನೊಂದಿಗೆ ನಿಮ್ನ ಆವಶ್ಯಗಳನ್ನು ಕೇಳಿ ಪಡೆಯಿರಿ'ಎಂದಿದೆ.
ಅದೇ ರೀತಿ ಇಬ್ನ್ ಮರ್ದವೈಹಿಯವರ ಬೇರೊಂದು ರಿಪೋರ್ಟ್ ನಲ್ಲೂ ಕೂಡಾ ನಮಾಝಿನ ಬಳಿಕ ಅಲ್ಲಾಹನಲ್ಲಿ ಕೇಳಿರಿ ಎಂದೂ ಇದೆ.
ಇಬ್ನ್ ಅಬಿದ್ದುನ್ಯಾ (ರ) ಇಬ್ನ್ ಮಸ್ ಊದ್ (ರ) ರಿಂದ ' ನೀವು ನಮಾಝಿನಿಂದ ವಿರಮಿಸಿದರೆ ಅಲ್ಲಾಹನಲ್ಲಿ ಬೇಡುವುದರಲ್ಲಿ ತಲ್ಲೀನರಾಗಿರಿ' ಎಂದು ವರದಿ ಮಾಡಿದ್ದಾರೆ.
ಅದ್ದುರ್ರುಲ್ ಮಂಸೂರ್ 8/566)

*-----------------------------------*

ಮುಂದುವರಿಯುದು....
♻ *ನಮಾಝಿನ* *ಬಳಿಕ* *ಕೂಟು* *ದುಆ*♻

*ಭಾಗ---1*

_📝 *ಮುನೀರ್*_ _*ಸಖಾಫಿ,*_
_*ಸಾಲೆತ್ತೂರು.*_

*ನ*ಮಾಝ್ ನ ಬಳಿಕ ಸಾಮೂಹಿಕ ದುಆ ಎಂಬುವುದು ಸುನ್ನಿಗಳೆಲ್ಲರೂ ನಡೆಸಿ ಕೊಂಡು ಬರುವ ಒಂದು ಆಚಾರವಾಗಿದೆ.
ನಮಾಝಿನ ನಂತರ ಇಮಾಮ್  ಪ್ರಾರ್ಥಿಸುವಾಗ ಮಅಮೂಮ್ ಆಗಿ ನಮಾಝ್ ನಿರ್ವಹಿಸಿದವರು ಆಮೀನ್ ಹೇಳುವ ಸಂಪ್ರದಾಯ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಮತ್ತು ಸ್ವಹಾಬಿಗಳು, ತಾಬಿವುಗಳು , ಇಮಾಮರುಗಳು ನಮಗೆ ಕಲಿಸಿಕೊಟ್ಟ ಆಚಾರವಾಗಿದೆ.ಇದಕ್ಕೆ ಖುರ್ಆನ್ ಮತ್ತು ಹದೀಸ್ ಗಳಲ್ಲಿ ಧಾರಾಳ ಪುರಾವೆಗಳನ್ನು ಕಾಣಬಹುದು.ಅದರ ಕುರಿತು ಹಲವು ಭಾಗಗಳಾಗಿ ಒಂದು ಲೇಖನವನ್ನು ಬರೆಯಲು ತೀರ್ಮಾನಿಸಿದ್ದೇನೆ.
(ಇಂಶಾ ಅಲ್ಲಾಹ್.)
ಇದರ ಎಲ್ಲಾ ಭಾಗಗಳನ್ನು ತಪ್ಪದೇ ಓದುಗರು ಓದಿ ಸತ್ಯವನ್ನು ತಿಳಿದುಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ.

( ಇದರ ಕುರಿತು ಸಮಗ್ರವಾಗಿ ತಿಳಿದುಕೊಳ್ಳಬೇಕಾದಲ್ಲಿ ನನ್ನ ಗುರುವರ್ಯರಾದ ಬಹುಮಾನ್ಯರಾದ *ತೋಕೆ ಉಸ್ತಾದರ " ನಮಾಝಿನ* *ನಂತರ* *ಸಾಮೂಹಿಕ* *ಪ್ರಾರ್ಥನೆ* " ಎಂಬ ಪುಸ್ತಕವನ್ನು ಓದಿರಿ.)
_*-------------------------------------*_

*ನಮಾಝಿನ* *ನಂತರ* *ಪ್ರಾರ್ಥನೆ*

ಅಲ್ಲಾಹನು ಹೇಳುತ್ತಾನೆ;
 فاذا فرغت فانصب. والي ربك فارغب. (سورة الشرح )
ಈ ಸೂಕ್ತವನ್ನು ವ್ಯಾಖ್ಯಾನಿಸಿ ಇಮಾಮ್ ರಾಝೀ (ರ) ಹೇಳುತ್ತಾರೆ;
"قال قتادة والضحاك ومقاتل اذا فرغت من الصلاة المكتوبة فانصب الي ربك في الدعاء وارغب اليه في المسألة يعطك
 (تفسير الكبير 32/8)

ಇಮಾಮ್ ಖತಾದ (ರ),ಲಹ್ಹಾಕ್ (ರ)ಮುಕಾತಿಲ್ (ರ) ಹೇಳುತ್ತಾರೆ;
"ಖಡ್ಡಾಯ ನಮಾಝಿನಿಂದ  ವಿರಮಿಸಿದರೆ ಪ್ರಾರ್ಥನೆಯಲ್ಲಿ ತಲ್ಲೀನರಾಗಿರಿ.ಅಲ್ಲಾಹನಲ್ಲಿ ಯಾಚಿಸಿರಿ.ತರುವಾಯ ಅಲ್ಲಾಹನು ಅದನ್ನು ನೀಡುವನು.
(ತಫ್ಸೀರುರ್ರಾಝೀ 32/8)
_*-----------------------------------*_

ಮುಂದುವರಿಯುದು....
*ಬೆಂಗಳೂರು ಹೋಗಿ ಹೇಳಿದವರಿಗೆ ಆಯಿಶ ಬೀವಿ ಮಾದರಿಯಂತೆ!!!!*

📝 *ಮುನೀರ್ ಸಖಾಫಿ, ಸಾಲೆತ್ತೂರು.*

ರಾಜಕೀಯ ಲಾಭಕ್ಕಾಗಿ ಸ್ತ್ರೀಯರನ್ನು ದುರುಪಯೋಗಪಡಿಸಿ ಬೀದಿಗಿಳಿಸಿದವರಿಗೆ ಆಯಿಶ ಬೀವಿ ಮಾದರಿಯಂತೆ. ಹೀಗೆಂದು ಒಬ್ಬ ಅಜ್ಞಾನಿ ಬರೆದುದನ್ನು ನೋಡಿ ನಗು ಬಂತು. ಇದರ ಬಗ್ಗೆ ಒಂದು ಕಿರು ಲೇಖನ.

ಸ್ತ್ರೀಯರ ರಂಗ ಪ್ರವೇಶವು ಇಸ್ಲಾಂ ಅಂಗೀಕರಿಸುವುದಿಲ್ಲ. ಸ್ತ್ರೀಯರು ಆಡಳಿತ ಸಮಿತಿಯ ಸದಸ್ಯರಾಗುವುದು ಮತ್ತು ಸಾರ್ವಜನಿಕ  ವೇದಿಕೆಗಳಲ್ಲಿ ಪ್ರತ್ಯಕ್ಷವಾಗುವುದು  ಇಸ್ಲಾಂ ವಿರೋಧಿಸುತ್ತದೆ. ಹೊರಗಿಳಿದು ಪುರುಷರ ಜತೆ ಬೆರೆತಲ್ಲಿ ಹಲವಾರು ನಿಷಿದ್ಧ ಸಂಗತಿಗಳು ನಡೆಯುವುದರಲ್ಲಿ ಸಂಶಯವಿಲ್ಲ.

ಸ್ತ್ರೀಯರು ಶಾಪಿಂಗ್ ಗೆ ತೆರಳುವುದು, ಸಾರ್ವಜನಿಕ ಭಾಷಣ ಮಾಡುವುದು ಈ ಅಧುನಿಕ ಕಾಲದಲ್ಲಿ ನಿಸ್ಸಂಶಯ ನಿಷಿದ್ಧವಾಗಿದೆ.
ಆದರೆ ಚಿಕಿತ್ಸೆ, ಕಲಿಕೆ, ಸಾಕ್ಷಿ ನಿಲ್ಲಬೇಕಾದ ಅನಿವಾರ್ಯ ಸಂದರ್ಭದಲ್ಲಿ ಇಸ್ಲಾಮಿನ ನೀತಿ ನಿಯಮಗಳನ್ನು ಪಾಲಿಸಿ ಹೊರಗಿಳಿಯಬಹುದಾಗಿದೆ.
ಸಮರ್ಥರಾದ ಮಹಿಳಾ ವೈಧ್ಯರಿಲ್ಲದ ಸಂದರ್ಭದಲ್ಲಿ ವಿಶ್ವಾಸ ಯೋಗ್ಯರಾದ ಸ್ತ್ರೀಯರೊಂದಿಗೆ, ಪತಿ, ತಂದೆ, ಸಹೋದರ, ಮಗ ಮುಂತಾದ ವಿವಾಹ ನಿಷಿದ್ಧವಾದವರೊಂದಿಗೆ ಪುರುಷರಾದ ವೈಧ್ಯರನ್ನು ಸಂಪರ್ಕಿಸುವುದರಲ್ಲಿಯೂ ತಪ್ಪಿಲ್ಲ. ಕಲಿಸಲು ಪತಿ ಅಥವಾ ಸ್ತ್ರೀಯರು  ಯೋಗ್ಯರಾಗಿದ್ದಲ್ಲಿ ಕಲಿಕೆಯ ಆವಶ್ಯಕ್ಕಾಗಿ  ಅನ್ಯ ಪುರುಷರ ಬಳಿ ತೆರಳಬಾರದು.

ಮಸೀದಿಯಲ್ಲಿನ ಇಮಾಮತ್ ಮತ್ತು ಆಡಳಿತ ವ್ಯವಸ್ಥೆಯನ್ನು ಸ್ತ್ರೀಯರಿಗೆ ಇಸ್ಲಾಮ್ ಕೊಟ್ಟಿಲ್ಲ. ಆರಾಧನಾ ವಲಯಗಳಲ್ಲಿ ಸ್ತ್ರೀಯರಿಗೆ ಬಾಂಗ್ ಕರೆ, ಕುತುಬ, ಜುಮಾ ಮುಂತಾದವುಗಳನ್ನು ನಿರ್ವಹಿಸಲು ಅವಕಾಶವಿಲ್ಲ. ಅದೇ ರೀತಿ ಪುರುಷರಿಗೆ ಇಮಾಮತ್  ಆಗಿ ಸ್ತ್ರೀಯು ನಿಲ್ಲುವಂತಿಲ್ಲ.
ಕಿಸ್ರ ಚಕ್ರವರ್ತಿಯ ಮಗಳನ್ನು ಪೇರ್ಷಿಯನ್ನರು ರಾಣಿಯಾಗಿ ಆಯ್ಕೆ ಮಾಡಿದ ಬಗ್ಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿಳಿದಾಗ
لن يفلح قوم ولو امرهم امرأة (بخاري)
ಖಂಡಿತವಾಗಿಯೂ ತಮ್ಮ ಕಾರ್ಯಗಳಲ್ಲಿ ಸ್ತ್ರೀಯರಿಗೆ ಅಧಿಕಾರ ವಹಿಸಿಕೊಟ್ಟ ಒಂದು ವಿಭಾಗವು ಜಯಶಾಲಿಯಗಲಾರರು ಎಂದು ಹೇಳಿದ್ದನ್ನು ಇಮಾಮ್ ಬುಖಾರಿ ವರದಿ ಮಾಡಿದ್ದಾರೆ. ಸ್ತ್ರೀಯು ಪುರುಷನಂತೆ ಹೊರಗಿಳಿಯುವುದನ್ನು ಇಸ್ಲಾಮ್ ವಿರೋಧಿಸಿದೆ. ಅನಿವಾರ್ಯ ವೇಳೆಯಲ್ಲಿ ಮಾತ್ರ ಇಸ್ಲಾಮ್ ನಿರ್ದೇಶಿಸುವ ರೀತಿಯಲ್ಲಿ ಪೂರ್ಣ ಪರ್ಧಾದೊಂದಿಗೆ ಗೊರಗಿಳಿಯಬಹುದು. ಅದೂ ಕೂಡಾ ಒಬ್ಬಂಟಿಯಾಗಿ ಹೋಗುವಂತಿಲ್ಲ. ರಕ್ಷಕರು, ಅಥವಾ ವಿವಾಹ ನಿಷಿದ್ಧವಾದ ಪುರುಷರು ಅವಳ ಜತೆಯಲ್ಲಿರಬೇಕು ಎಂಬ ಕಾನೂನು ಇಸ್ಲಾಂ ಹೆಣ್ಣಿಗೆ ಎಷ್ಟು ಸುರಕ್ಷತೆಯನ್ನು ನೀಡುತ್ತದೆ ಎಂಬುವುದನ್ನು ಮನದಟ್ಟು ಮಾಡಿಕೊಡುತ್ತದೆ.
ಮನೆಯಲ್ಲಿದ್ದು ಕೊಂಡು ಮನೆ, ಪತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ಹೆಣ್ಣಿನೊಂದಿಗೆ ಊರಿನ ಅಧಿಕಾರ, ರಾಜ್ಯದ ಅಭಿವೃದ್ದಿಗೆ ಬೇಕಾಗಿ ಹೋರಾಡಬೇಕೆಂದು  ಹೇಳುವುದು ಸ್ತೀ ಸಮೂಹಕ್ಕೆ ಮಾಡುವ ಅಕ್ರಮವಾಗಿದೆ.
ಸ್ತ್ರೀಯರು ಪುರುಷರಂತೆ ಅಲ್ಲ. ಅವರಿಗೆ ಅವರದೇ ಆದ ಶಕ್ತಿ,ಸಹನೆ ಇದೆ. ಶಕ್ತಿಗಿಂತ ಮಿಗಿಲಾದ ಕೆಲಸವನ್ನು ಅವರಿಂದ ಮಾಡಿಸುವುದು ಘೋರ ಅಪರಾಧವಾಗಿದೆ.

ಆಯಿಶಾ ಬೀವಿ ಹೋರಾಡಿದ್ದರೇ?

ಇಲ್ಲೊಬ್ಬ ಉಹ್ದ್ ಯುದ್ದದಲ್ಲಿ ಆಯಿಶ ಬೀವಿ (ರ) ಭಾಗವಹಿಸಿ ಯುದ್ಧ ಮಾಡಿದ್ದರು ಅಂತ ಬರೆದಿದ್ದಾನೆ.
ಉಹ್ದ್ ಯುದ್ಧದ ವೇಳೆ ಆಯಿಶಾ ಬೀವಿಗೆ ಕೇವಲ 10 ವಯಸ್ಸು ಮಾತ್ರ ಪಾಯವಾಗಿತ್ತು.10 ವರ್ಷದ ಪುಟ್ಟ ಹುಡುಗಿ ಯುದ್ದದಲ್ಲಿ ಭಾಗವಹಿಸಿದ್ದರು ಎಂಬುವುದನ್ನು ಊಹಿಸಲಸಾಧ್ಯದ ಮಾತು.

ಜಮಲ್ ಎಂಬ ಪ್ರಖ್ಯಾತ ಯುದ್ಧದ ವೇಳೆ ಆಯಿಶ ಬೀವಿ (ರ) ಹಾಜರಾದ ಬಗ್ಗೆ ಕೆಲವರು ಪ್ರಸ್ತಾಪಿಸುವುದುಂಟು.

ಆಯಿಶ ಬೀವಿ (ರ) ಜಮಲ್ ಯುದ್ದಕ್ಕೆ ಹೋಗಿಲ್ಲ. ಹೊರತು ಮುಸ್ಲಿಂ ಸಮುದಾಯದಲ್ಲಿ ಉಂಟಾದ ಬಿಕ್ಕಟ್ಟನ್ನು ಬಗೆಹರಿಸಲು ಹೊರಟಿದ್ದರು.
ಅಲಿಯ್ಯ್ (ರ)ಗೆ ವಿರುದ್ಧವಾಗಿ ಒಂದು ವಿಭಾಗವು ಪ್ರತ್ಯಕ್ಷವಾದಾಗ  ಹಲವು ಪ್ರಮುಖ ಸ್ವಹಾಬಿಗಳ ಆದೇಶದಂತೆ ಅವರೊಂದಿಗೆ ಸಮಾಲೋಚನೆ ನಡೆಸಲು ಅವರು ಹೊರಟಿದ್ದರು.

ಇಮಾಮ್ ಅಹ್'ಮದ್ (ರ) ವರದಿ ಮಾಡಿದ ಹದೀಸಿನಿಂದ ಇದನ್ನು ತಿಳಿದುಕೊಳ್ಳಬಹುದು.
فقال لها الزبير ترجعين عسى الله عز وجل أن يصلح بك بين الناس .(مسند احمد)

ಝುಬೈರ್(ರ) ಆಯಿಶ ಬೀವಿಯೊಂದಿಗೆ ಹೇಳಿದರು. ನೀವು ಅಲ್ಲಿಗೆ ತೆರಳಿದರೆ ಅವರ ಮಧ್ಯೆ ತಲೆ ದೋರಿದ ಬಿನ್ನಭಿಪ್ರಾಯವು ನೀಗುವುದು.
(ಮುಸ್ನದ್ ಅಹ್ಮದ್ )

ಆಯಿಶ ಬೀವಿ (ರ) ಪ್ರವಾದಿ ﷺ ಪತ್ನಿಯಾಗಿರುವುದರಿಂದ 2 ವಿಭಾಗವು ಅವರ ಮಾತಿಗೆ ಬೆಲೆ ಕೊಡುವರು ಮಾತ್ರವಲ್ಲ ಆಯಿಶ ಬೀವಿಯ (ರ) ಬರ್ಕತ್ ನಿಂದ ಸರಿಯಾಗುವ ನಿರೀಕ್ಷೆಯೆಯೂ ಇತ್ತು.

ಆದರೆ ಅಲ್ಲಿ ನಿರೀಕ್ಷೆಗೆ ವಿರುದ್ಧ ಯುದ್ಧ ನಡೆಯಿತು.
ನಂತರದ ದಿವಸಗಳಲ್ಲಿ ಇದೇ ಬೇಸರದಿಂದ ಆಯಿಶ ಬೀವಿ (ರ) ಕೊರಗುತ್ತಿದ್ದರು.
ಪವಿತ್ರ ಖುರ್ ಆನಿನ ಅಹ್ ಝಾಬ್ ಸೂಕ್ತದ 33 ನೇ ಸೂಕ್ತ
وَقَرْنَ فِي بُيُوتِكُنَّ وَلَا تَبَرَّجْنَ تَبَرُّجَ الْجَاهِلِيَّةِ الْأُولَىٰ ۖ(الاحزاب33)
(ಜಾಹಿಲಿಯ್ಯ ಕಾಲದ ಸ್ತ್ರೀಯರು ಮನೆಯಿಂದ ಹೊರ ಹೋದಂತೆ ನೀವು ಹೋಗದಿರಿ) ಪಾರಾಯಣ ಮಾಡುವಾಗ ಜಮಲ್ ಯುದ್ದಕ್ಕೆ ಹೋದ ಬಗ್ಗೆ ನೆನೆಸಿ ಆಯಿಶ ಬೀವಿಯು (ರ) ಹಿಜಾಬ್ ಒದ್ದೆಯಾಗುವ ತನಕ ಅಳುತ್ತಿದ್ದರು.
ಎಂದು ಇಮಾಮ್ ಖುರ್ಥುಬಿ (ರ) ಹೇಳುತ್ತಾರೆ.
ان عائشة رضي الله عنها كانت اذا قرأت هذه الاية تبكي حتي تبل خمارها (قرطبي)

ಇದೇ ರೀತಿ ತಫ್ಸೀರು ಅಲ್'ಬಹ್ರುಲ್ ಮುಹೀತ್ 7/223  ರಲ್ಲೂ ಕಾಣ ಬಹುದಾಗಿದೆ.

ಇಮಾಮ್ ಅಬುಲ್ಲೈಸ್ (ರ) ಬರೆಯುತ್ತಾರೆ,
ಆಯಿಶಾ ಬೀವಿಯ (ರ) ವಫಾತ್'ನ ವೇಳೆ ಇಬ್ನ್ ಅಬ್ಬಾಸ್ (ರ) ಅವರ ಬಳಿ ತೆರಳಿದರು. ಆಗ ಆಯಿಶ ಬೀವಿ (ರ) ಜಮಲ್ ಯುದ್ದಕ್ಕೆ ಹೋದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಆಗ ಇಬ್ನ್ ಅಬ್ಬಾಸ್ (ರ) ಅವರನ್ನು ಸಮಾದಾನ ಪಡಿಸುತ್ತಾ ಹೇಳಿದರು.

وذكر ابن عباس انه دخل علي عائشة رضي الله عنها في مرضها الذي ماتت فيه فذكرت ما كان منها من الخروج في يوم الجمل وغيره فقال لها ابن عباس: ابشري فان الله تعالي يقول "لهم مغفرة ورزق كريم"(بحر العلوم 2/506)
"ನಿಮಗೆ ಅಲ್ಲಾಹನು ಎಲ್ಲವನ್ನೂ ಮನ್ನಿಸಿದ್ದಾನೆ" ಎಂದು ಖುರ್'ಆನಿನ ಸೂರತು ನ್ನೂರ್ ನ 26 ನೇ ಸೂಕ್ತವನ್ನು ಓದಿ ಹೇಳಿದರು.
(ತಫ್ಸೀರು ಬಹುಲ್ ಉಲೂಮ್ 2/506)

ಆಯಿಶ ಬೀವಿ (ರ) ಜಮಲ್ ಯುದ್ಧಕ್ಕೆ ಹೋದ ಬಗ್ಗೆ ತುಂಬಾ ದುಖಿಃತರಾಗಿದ್ದರೆಂದು ಈ ಇಮಾಮರುಗಳ ಗ್ರಂಥಗಳಲ್ಲಿ ವಿವರಿಸುವಾಗ ಆಯಿಶ ಬೀವಿ (ರ) ಹೋದದನ್ನು ಪುರಾವೆ ಮಾಡುವುದು ಆಯಿಶ ಬೀವಿಯ (ರ) ಬಗ್ಗೆ ಮಾಡುವ ಆರೋಪವಾಗಿದೆ.
ಇದನ್ನು ಒಮ್ಮೆಯೂ ಆಯಿಶ ಬೀವಿ (ರ) ಇಷ್ಟಪಡಲಾರರು.
ಅಲ್ಲಾಹನು ಅವರಿಗೆ ಅದನ್ನು ಮನ್ನಿಸಿರುವಾಗ ಮತ್ತೆ ಅದನ್ನು ಪುರಾವೆಯಾಗಿಸುವುದು ಶುದ್ಧ ಮೂರ್ಖತನವಾಗಿದೆ.

📝ಮುನೀರ್ ಸಖಾಫಿ, ಸಾಲೆತ್ತೂರು.