Thursday, September 28, 2017

ರೌಳಾ ಹೊತ್ತೊಯ್ಯಲು ಬಂದ ಶತ್ರುಗಳು


ನಬಿ ಸಲ್ಲಲ್ಲಾಹು ಅಲೈವಸಲ್ಲಂ ರವರ ಪವಿತ್ರ ಶರೀರವನ್ನು ಖಬರ್ ಶರೀಫ್ ತೊರೆದು ಕೊಂಡು ಹೋಗಲು ಬಂದ ಸ್ಪೇನ್ ಗಾರರಾದ ನೀಚರನ್ನು ಸೆರೆ ಹಿಡಿದ ಚರಿತ್ರೆ😭😭.

   ✍ ಗಫೂರ್ ಬಾಯಾರ್.

ಓದಲೇ ಬೇಕಾದ ಚರಿತ್ರೆ....
💙💚💛❤💓💗💖💕
"ಯಾರಲ್ಲಿ❗

ಆದಷ್ಟು ಬೇಗ ಅವರಿಬ್ಬರನ್ನು ನನ್ನ ಮುಂದೆ ಹಾಜರು ಪಡಿಸಿ❗
ಅಷ್ಟು ದೊಡ್ಡ ಮಹಾತ್ಮರು ಆಗಿದ್ದರೆ ಅವರನ್ನು ನನಗೊಮ್ಮೆ ನೋಡಬೇಕಾಗಿದೆ.

ಹೂಂ❗
ಬೇಗವಾಗಲಿ!....

ಸುಲ್ತಾನರ ಆಜ್ಞೆಯನ್ನು ನಿಮಿಷದೊಳಗೆ ಜಾರಿ ಗೊಳಿಸಲಾಯಿತ್ತು. ಅವರಿಬ್ಬರನ್ನು ಸುಲ್ತಾನರ ಮುಂದೆ ಹಾಜರುಪಡಿಸಲಾಯಿತ್ತು.

ಒಂದು ನಿಮಿಷ!....
ಅವರಿಬ್ಬರನ್ನು ಕಂಡೊಡನೆ ಸುಲ್ತಾನರು ದಿಘ್ಬ್ರಮೆಗೊಂಡರು.

ಏನಧ್ಭುತ!!.... 😳😳
"ಇವರಿಂದ ನನ್ನನ್ನು ಸಂರಕ್ಷಿಸಿರಿ" ಎಂದು ಪವಿತ್ರ ನಬಿ ﷺ ತಂಙಳರು ಕನಸಿನಲ್ಲಿ ಬಂದು ಮುನ್ಸೂಚನೆ  ನೀಡಿದ ಅದೇ ವ್ಯಕ್ತಿಗಳು!!!!....

ಸುಲ್ತಾನರ ಹೃದಯ ಬಡಿತ ಇನ್ನಷ್ಟು ಜೋರಾಯಿತು.!!

ದೊಡ್ಡ ಭಕ್ತಿ, ಗೌರವಗಳು ನಟಿಸಿ ತನ್ನ ಮುಂದೆ ನಿಂತಿರುವ ಆ ಎರಡು ವ್ಯಕ್ತಿಗಳನ್ನು ಸುಲ್ತಾನರು ಸ್ವಲ್ಪ ಸಮಯ ದಿಟ್ಟಿಸಿ ನೋಡಿದರು.

ನಂತರ ವಿಚಾರಣೆ ಶುರುವಾಯಿತ್ತು.

"ನೀವು ಇಬ್ಬರು ಎಲ್ಲಿಂದ ಬಂದವರು❓"

" ನಾವು ಮೊರಾಕೊ (ಸ್ಪೇನ್) ರಾಜ್ಯದವರಾಗಿದ್ದೇವೆ"

"ಯಾತಕ್ಕಾಗಿ ನೀವು ಇಲ್ಲಿಗೆ ಬಂದಿರುವುದು❓"

"ಹಜ್ಜ್ ನಿರ್ವಹಿಸಲು ಬಂದಿರುವುದು.
ಅಲ್ಲಾಹುವಿನ ಅನುಗ್ರಹದಿಂದ ಹಜ್ಜ್ ಕರ್ಮ ಮುಗಿಯಿತು.
 ಇನ್ನು ಝಿಯಾರತ್'ಗಳು ಮಾಡಿ ಹಿಂದುರಗಬೇಕೆಂದು ಉದ್ದೇಶದಿಂದ ಇಲ್ಲಿಗೆ ತಲುಪಿರುವುದು.
ನಬಿ ﷺ ತಂಙಳವರ ಸಮೀಪದಲ್ಲಿಯೇ ತಂಗಬೇಕೆಂಬ ಆಗ್ರಹದ ಕಾರಣ ಸ್ವಲ್ಪ ಕಾಲ ಇಲ್ಲಿಯೇ ವಾಸ ಮಾಡಬೇಕೆಂಬ ಯೋಚನೆಯಲ್ಲಿ ಇರುವುದು"

"ಸತ್ಯ ಹೇಳು❗
ಅಸತ್ಯಕ್ಕೆ ನೆಲೆ ಇಲ್ಲವೆಂದು ಯೋಚಿಸಬೇಕು"❗

"ನಾವು ಸತ್ಯವಾಗಿದೆ ಹೇಲುತ್ತಿರುವುದು. ನಾವು ಒಮ್ಮೆಯೂ ಅಸತ್ಯ ಹೇಳಲ್ಲಿಲ್ಲ.
ಹೇಳಲಿಕ್ಕೂ ಇಲ್ಲ."

ಸುಲ್ತಾನರು ಹಲವು ಸಲ ಪ್ರಸ್ತುತ ಪ್ರಶ್ನೆಯನ್ನೇ ಹಲವು ಬಾರಿ ಕೇಳಿದಾಗಲೂ ಅವರು ಮೊದಲಿನ ಉತ್ತರವನ್ನೇ ನೀಡುತ್ತಿದ್ದರು.

ನಂತರ ಸುಲ್ತಾನರು ಜನರ ಕಡೆಗೆ ಮುಖ ಮಾಡಿ ಕೇಳಿದರು....

"ಹೇಳಿರಿ!! ಇವರೆಲ್ಲಿ ವಾಸವಿರುವುದು? "

ಮದೀನಾ ನಿವಾಸಿಗಳು ಹೇಳಿದರು,

"ಪವಿತ್ರ ನಬಿ ﷺ ತಂಙಳರವರ ರೌಳಾ ಶರೀಫಿನ ಪಕ್ಕದಲ್ಲೇ ಒಂದು ಗುಡಿಸಲಿನಲ್ಲಾಗಿದೆ. ಒಂದು ಧ್ಯಾನ ಕೇಂದ್ರ ಮಾಡಿ ಅಲ್ಲಿಯೇ ಅವರು ವಾಸವಾಗಿರುವುದು.

ಸುಲ್ತಾನರು ಆಜ್ಞೆ ಹೊರಡಿಸಿದರು!!

"ಯಾರಲ್ಲಿ?!....

ಇವರಿಬ್ಬರಿಗೂ ಕೈ ಕೋಳ ತೊಡಿಸಿ!!....

ಇವರ ವಾಸ ಸ್ಥಳ ನಮಗೊಮ್ಮೆ ನೋಡಬೇಕು"

ಸುಲ್ತಾನರು ಊರಿನವರ ಜೊತೆ ಅವರಿಬ್ಬರ ವಾಸ ಸ್ಥಳ ಸಂದರ್ಶಿಸಿದರು..
ವಾಸ ಸ್ಥಳವನ್ನು, ಪರಿಸರವೆನ್ನೆಲ್ಲ ಮೊತ್ತವಾಗಿ ಹುಡುಕಾಟ ನಡೆಸಿದರು. ಆದರೆ ಯಾವುದೇ ಫಲ ಕಾಣಲಿಲ್ಲ..

ಇಬ್ಬರಲ್ಲಿಯೂ ಕುರ್'ಆನ್ ಪ್ರತಿಗಳು, ಕೆಲವು ಕಿತಾಬುಗಳು, ಸ್ವಲ್ಪ ನಿತ್ಯೋಪಯೋಗಿ ವಸ್ತ್ರಗಳಲ್ಲದೆ ಬೇರೇನೂ ಅವರ ಗುಡಿಸಲಿನಲ್ಲಿ ಕಾಣಲು ಸಾಧ್ಯವಾಗಲಿಲ್ಲ.!!!!....

ಸುಲ್ತಾನರು
ದುಖಿಃತರಾದರು....

ಇಷ್ಟೆಲ್ಲಾ ನಡೆಯುತ್ತಿರುವಾಗಲೂ ಮದೀನ ನಿವಾಸಿಗಳು ಆ ಇಬ್ಬರನ್ನು ತುಂಬಾ ಪ್ರಕೀರ್ತಿಸುತ್ತಿದರು.

ಕೆಲವರು ಅವರಿಗಾಗಿ ಸುಲ್ತಾನರ ಹತ್ತಿರ ಶಿಫಾರಸ್ಸು ಕೂಡ ಮಾಡಲು  ತಯಾರಾಗಿದ್ದರು.

"ಸುಲ್ತಾನರೇ!!....

ಇವರು ತುಂಬಾ ಒಳ್ಳೆಯವರಾಗಿದ್ದಾರೆ. ಧಾನ ಧರ್ಮಗಳು ನೀಡುವವರಾಗಿದ್ದಾರೆ. ದಿನಾಲು ಇವರು ವೃತಾಚರಿಸುವವರಾಗಿದ್ದಾರೆ. ಎಡೆ ಬಿಟ್ಟು ರೌಳಾ ಶರೀಫ್ ಝಿಯಾರತ್ ಮಾಡುತ್ತಾರೆ. ಯಾವಾಗಲೂ ಸ್ವಲಾತ್ತ್ ಹೇಳಿ ಕೊಂಡಿರುವರು. ಪ್ರತಿ ದಿನ ರಾತ್ರಿ "ಜನ್ನಾತ್ತುಲ್ ಬಖಿಯಿಲ್"ಗೆ ಹೋಗಿ ದೀರ್ಘ ಸಮಯ ಪ್ರಾರ್ಥಿಸಿಯೇ ಹಿಂದಿರುಗುತ್ತಿದ್ದರು. ಅವರಲ್ಲಿ ಯಾರೂ ಸಹಾಯ ಯಾಚಿಸಿದರೂ ಅವರು ಕೊಡುತ್ತಿದ್ದರು. ಒಮ್ಮೆಯೂ ಇಲ್ಲವೆಂದು ಹೇಳುತ್ತಿರಲಿಲ್ಲ. ಕಳೆದ ಕ್ಷಾಮ ಕಾಲದಲ್ಲಿ ಇವರು ದಾನ ನೀಡಿದ ಕಾರಣ ಮದೀನಾ ವಾಸಿಗಳಾದ ನಮಗೆಲ್ಲರಿಗೂ ಇವರ ಕುರಿತು ಬಹಳ ಸಂಪ್ರಪ್ತಿಯಾಗಿದೆ.
ಇಂಥವರಿಂದ ಏನಾದರೂ ತಪ್ಪು ಸಂಭವಿಸಲು ಸಾಧ್ಯತೆ
ಇಲ್ಲ. ಆದರಿಂದ್ದ ಅವರನ್ನು ಹಾಗೆ ಸುಮ್ಮನೆ ಸಂಶಯಿಸುವುದು ಸರಿಯಲ್ಲ."

ಅಭಿಪ್ರಾಯಗಳು ತುಂಬಾನೆ ಬರುತ್ತಲಿತ್ತು.

ಇವನ್ನೆಲ್ಲಾ ಸುಲ್ತಾನರು ಕ್ಷೆಮೆಯಿಂದ ಕೇಳುತ್ತಾ ನಿಲ್ಲಬೇಕಾಯಿತು.

 ಅಲ್ಲಿ ಹಠಾತನೆ ಏನೋ ಸಂಭವಿಸುತ್ತದೆ.
ಏನೋ ಒಂದು ಪುರುಷ ಶಬ್ದ ಕಿವಿಗೆ ಅಪ್ಪಳಿಸುತ್ತದೆ. ಅದರ ಪ್ರೇರಣೆ ಎಂದೇ ಹೇಳಬೇಕು.

ತಟ್ಟನೆ ಸುಲ್ತಾನರು ಅವರಿಬ್ಬರ ವಾಸ ಸ್ಥಳಕ್ಕೆ ಧಾವಿಸಿದರು. ಕೂಡಲೇ ಅತ್ತಿತ್ತ ತಪಾಸಣೆ ನಡೆಸಲು ಶುರು ಮಾಡಿದರು.

 ಇದರೆಡೆಯಲ್ಲಿ ಹೇಗೂ ಅಲ್ಲಿ ಹಾಸಿ ಇಟ್ಟ "ಮುಸ್ವಲ್ಲ" ಒಂದನ್ನು ಎತ್ತಿ ನೋಡಿದರು.

ಒಂದು ನಿಮಿಷ❗❗

ಸುಲ್ತಾನರಿಗೆ ತನ್ನ ಕಣ್ಣುಗಳನ್ನೇ ನಂಬಲು ಸಾಧ್ಯವಾಗಲಿಲ್ಲ😳😠

ಹಾಸಿದಂತಹ ಮುಸಲ್ಲದ ತಳಭಾಗದಲ್ಲಿ ಏನೋ ಬಹಳ ರಹಸ್ಯವಾಗಿ ಒಂದು ಸುರಂಗ ನಿರ್ಮಿಸಲ್ಪಟ್ಟಿರುತ್ತದೆ.
ಆ ಸುರಂಗಕ್ಕೆ ವಾಯು ಭಾಗದಲ್ಲಿ ಬೇಗನೆ ತಿಳಿಯದಿರುವ ವಿಧದಲ್ಲಿ ಬಹು ದೊಡ್ಡ ಕಲ್ಲು ಮುಚ್ಚಿಡಲಾಗಿತ್ತು.
ಸುಲ್ತಾನರು ಮೆಲ್ಲನೆ ಕಲ್ಲು ಎತ್ತಿ ನೋಡಿದರು.

ಸುಬುಹಾನಲ್ಲಾಹ್❗❗

ಮಣ್ಣು ಕೊರೆದು ಅತೀ ಸಮರ್ಥವಾಗಿ ತಯಾರಿಸಿದ ಸುರಂಗ ಪೂರ್ಣವಾಗಿ ಸುಲ್ತಾನರ ದೃಷ್ಟಿಗೆ ಸಿಕ್ಕಿತ್ತು. ಅದು ತಲುಪಿ ಕೊನೆಗೊಳ್ಳುವುದು ಪವಿತ್ರ     ನಬಿ ﷺ ರವರ ರೌಳಾ ಶರೀಫಿನೊಳಗೆ ಆಗಿದೆ ☹
ಪವಿತ್ರವಾದ ಕಬರ್ ಶರೀಫ್ ಇರುವ ಹತ್ತಿರದವರೆಗೆ ತಳುಪಿರುತ್ತದೆ.
 ಆ ಸುರಂಗ....

ಸುಲ್ತಾನರಿಗೆ ವಿಷಯದ ಗೌರವ ತಿಳಿಯಿತು.

ಸುಲ್ತಾನರು ಮದೀನ ನಿವಾಸಿಗಳೆಲ್ಲರನ್ನೂ ಕರೆದು ಸಭೆ ನಡೆಸಿ, ನಡೆದ ಎಲ್ಲಾ ವಿಷಯಗಳನ್ನು ವಿವರಿಸಿ ಎಲ್ಲವನ್ನೂ ತೋರಿಸಿಕೊಟ್ಟರು.
ಜೊತೆಗೆ ಕನಸಿನ ದೃಷ್ಟಾಂತವನ್ನು ಹೇಳಿದರು.

ಜನರು ದೀಘ್ಭ್ರಮೆಗೊಂಡರು.

 ಹಲವರಿಗೆ ಕೋಪವನ್ನು ತಡೆಯಲಾಗಲಿಲ್ಲ .........

ಸುಲ್ತಾನರು,...

ನೀಚರಾದ ಆ ಇಬ್ಬರು ಸ್ಪೇನ್'ಗಾರರನ್ನು ಸೇರಿದ ಜನತೆಯ ಮುಂದೆ ಹಾಜರುಪಡಿಸಿದರು.

 ಜನರ ಗುಂಪು ತುಂಬಿ ತುಳುಕುತ್ತಿತ್ತು.
ಅವರನ್ನು ಶಾಂತರಾಗಿಸಲು ಸುಲ್ತಾನರು, ಮಂತ್ರಿಗಳು ಕಷ್ಟಪಡುತ್ತಿದ್ದರು..

ಸುಲ್ತಾನರು ಇಬ್ಬರು ಸ್ಪೇನ್ ಗಾರರನ್ನು ಬದಲಿ ಬದಲಿಯಾಗಿ ನೋಡಿದರು. ಅವರಿಬ್ಬರ ತಲೆ ಭೂಮಿಯ ಕಡೆ ವಾಗಿತ್ತು....

ಕಣ್ಣುಗಳಲ್ಲಿ ನಿಂದ್ಯತೆಗಳು ಇಲ್ಲವಾಗಿತ್ತು.

ಸುಲ್ತಾನರು ಅವರಲ್ಲಿ ಆಕ್ರೋಶ ಭರಿತ ದ್ವನಿಯಲ್ಲಿ ಹೇಳಿದರು.

"ಹೇ ವಂಚಕರೇ❓😭

ಇಂತಹಯೊಂದು ನೀಚ ವೃತ್ತಿಗೆ ನಿಮ್ಮನ್ನು ಪ್ರೇರಿಪಿಸಿದ್ದು ಏನು❓
ಎಲ್ಲವು ಮುಕ್ತವಾಗಿ ಹೇಳಿ...

ಹೂಂ....
ಬಾಯಿ ಬಿಡಿ ನೀಚರೇ....

ನಾವೆಲ್ಲರೂ ಕೇಳಲಿ....❗
ಬೇಗವಾಗಲಿ.

ಯಾವ ಪ್ರಶ್ನೆಗೂ ಉತ್ತರ ನೀಡದೆ ಮೌನವಾಗಿ ತಲೆ ತಗ್ಗಿಸಿಕೊಂಡು ನಿಂತರು.

ಕೋಪ ಸಹಿಸಲಾಗದ  ಸುಲ್ತಾನರು ಆಜ್ಞೆ ಹೊರಡಿಸಿದರು....

"ಯಾರಲ್ಲಿ❓

ದ್ರೋಹಿಗಳಾದ ಈ ವಂಚಕರರನ್ನು ಚಾಟಿಯಿಂದ ಹೊಡೆಯಿರಿ.
ಯಾವುದೇ ದಾಕ್ಷೀಣ್ಯೆಯೂ ಬೇಡ!
ಇವರಿಂದ ಸತ್ಯವು ಹೊರಬೀಳುತ್ತಾ? ಎಂದು ನಾವು ಪರೀಕ್ಷಿಸಿ   ನೋಡೋಣ!!....

ಸುಲ್ತಾನರ ಕಲ್ಪನೆ ಸಿಕ್ಕಿದ ಕೂಡಲೇ ಸೈನಿಕರು ಇಬ್ಬರನ್ನು ನಿರಂತರ ಜಾಟಿಯಿಂದ ಹೊಡೆಯಲು ಶುರುಮಾಡಿದರು. ರೋಷಗೊಂಡ ಊರಿನವರಲ್ಲಿ ಕೆಲವರು ಅದರಲ್ಲಿ ಭಾಗಿಯಾದರು.

ಕೊನೆಗೆ ಅವರು ಸತ್ಯ ಹೇಳಲು ಸಮ್ಮತಿ ಸೂಚಿಸಿದರು..

ಕಂಪಿಸುವ ಸ್ವರದಲ್ಲಿ ಮೆಲ್ಲನೆ ಸತ್ಯ ಹೇಳಲು ಶುರುಮಾಡಿದರು.

"ಸುಲ್ತಾನರೇ....
ನಾವಿಬ್ಬರು ಮುಸ್ಲಿಮರಲ್ಲ❗❗
ಕ್ರಿಶ್ಚ್ಯನ್ ಗಳಾಗಿದ್ದೇವೆ❗
ಪಾಶ್ಚಾತ್ಯ ದೇಶಗಳಲ್ಲಿನ ಕ್ರೈಸ್ತರಾದ ರಾಜರು
ನಮ್ಮನ್ನು ಮುಸ್ಲಿಮರ ವೇಷ ಕಟ್ಟಿಸಿ ಇಲ್ಲಿಗೆ ಕಳುಹಿಸಿರುವುದು....
ಧಾರಾಳ ಹಣ, ಸಂಪತ್ತುಗಳು ನಮಗೆ ಕೊಟ್ಟು ಹೇಳಿದರು....

'ಈ ಸಂಪತ್ತನ್ನು ನೀವು ಮುಸ್ಲಿಮರಿಗೆ ದಾನ ನೀಡಿ,  ಅವರ ತೃಪ್ತಿ ಸಂಪಾದಿಸಿ, ಹೇಗದಾರೂ ಒಳ್ಳೆಯ ಭಕ್ತಿವುಳ್ಳರಾಗಿ ನಟಿಸಿ ರೌಳಾ ಶರೀಫಿನ ಹತ್ತಿರ ವಾಸ ಸರಿಪಡಿಸಬೇಕು. ಜೊತಗೆ ಯಾರಿಗೂ ಸಂಶಯ ತೋರದ ರೀತಿಯಲ್ಲಿ ಯಾರೊಬ್ಬರೂ ತಿಳಿಯದೆ, ಪರಿಶುದ್ದ ಕಬರ್ ಕೊರೆದು ನಬಿ ﷺ ರವರ ಪವಿತ್ರ ಶರೀರವನ್ನು ಇಲ್ಲಿಗೆ ತೆಗೆದುಕೊಂಡು ಬರಬೇಕು.'
ಇದಾಗಿತ್ತು ಅವರು ನಮಗೆ ಕೊಟ್ಟಿರುವ ದೌತ್ಯ.

ಇದಕ್ಕೆ ಅವರು ಧಾರಾಳ ಸಂಪತ್ತುಗಳನ್ನು, ಸ್ಥಾನಮಾನಗಳನ್ನು ಕೊಡುತ್ತೇವೆ ಎಂದು ನಮಗೆ ಪ್ರಾಸ್ತಾವ ನೀಡಿದ್ದಾರೆ.

ಕ್ರಿಶ್ಚನ್ ರಾಜರುಗಳ ದೊಡ್ಡ ದೊಡ್ಡ ವಾಗ್ದಾನಗಳಲ್ಲಿ ಮನ ಸೋತು ನಾವು ಝಿಯಾರತ್ತ್'ಗೆ ಎಂಬ ನೆಪವೊಡ್ಡಿ ಮದೀನ ತಲುಪಿರುವುದು.
ರೌಳಾ ಶರೀಫಿಗೆ ತುಂಬಾ ಹತ್ತಿರ ಸ್ಥಿತಿ ಮಾಡಿರುವ ಈ ಛತ್ರದಲ್ಲಿ ವಾಸವಾದೆವು....
ಯಾವುದೇ ಸಂಶಯಗಳು ಮದೀನದವರಿಗೆ ಬಾರದಿರಲು ನಾವು ಮುಸ್ಲಿಂ ಸೂಫಿಗಳಾಗಿ ನಟಿಸಿ
ದಾನ, ಧರ್ಮ ಎಂಬ ನೆಲೆಯಲ್ಲಿ ತುಂಬಾ ಹಣ ವಿತರಿಸಿದೆವು. ಒಂದು ಚಿಕ್ಕ ಸಂಶಯಕೂ ಎಡೆ ಮಾಡಿ ಕೊಡದ ರೀತಿಯಲ್ಲಿ ಒಳ್ಳೆಯ ರೂಪದಲ್ಲಿ ಊರಿನ ಜನತೆಯ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾದೆವು.

ಸುಲ್ತಾನರಿಗೆ ಕೋಪ ನೆತ್ತಿಗೇರಿತ್ತು.

 ಸುಲ್ತಾನರು ತನ್ನ ಇನ್ನಷ್ಟು ರೋಷಭಾವದಿಂದ, ಎಲ್ಲಾ ಕುತಂತ್ರಗಳನ್ನು ತಿಳಿಯಲು ಪ್ರಶ್ನೆಗಳನ್ನು ಮುಂದುವರಿಸಿದರು...

ಹೋ ನೀಚರೇ....!!
ಯಾವ ರೀತಿಯಲ್ಲಾಗಿದೆ ನೀವು ಇಷ್ಟು ಸಮರ್ಥವಾಗಿ ಯಾರೂ ತಿಳಿಯದೆ ಸುರಂಗ ನಿರ್ಮಿಸಿದ್ದು❓
ಇಷ್ಟು ಮಣ್ಣು ಎಲ್ಲಿಯಾಗಿದೆ ಶೇಖರಿಸಿಟ್ಟದ್ದು ?  ಎಲ್ಲವೂ ಸಂಪೂರ್ಣವಾಗಿ ಹೇಳಿರಿ....?

ಎಲ್ಲರೂ ಕೇಳಲಿ"!!

ಇದು ಕೇಳುವಾಗ ಸುಲ್ತಾನರ ಮುಖ ಕೋಪದಿಂದ ಕೆಂಪಾಗಿತ್ತು.

ಅವರು ಎಲ್ಲವನ್ನೂ ಹೇಳಲು ತೊಡಗಿದರು....

"ರಾತ್ರಿ ಎಲ್ಲರೂ ನಿದ್ರೆ ಮಾಡಿದರೆಂದು ಖಚಿತಪಡಿಸಿಕೊಂಡ ನಂತರ  ನಾವು ವಾಸವಿರುವ ಈ ಗುಡಿಸಲಿನ ಒಳಗಿನಿಂದ ಸುರಂಗ ತೋಡಿ ನಂತರ ಯಾರು ಕಾಣದ ರಿತಿಯಲ್ಲಿ ಮಣ್ಣನ್ನು ಕೈಯಲ್ಲಿ ಇರುವ ಚರ್ಮ ಚೀಲದಲ್ಲಿ ತುಂಬಿಸಿ ಇಡುತ್ತಿದ್ದೆವು.
 ಆಮೇಲೆ ರಾತ್ರಿ, "ಜನ್ನತ್ತುಲ್ ಬಖೀಅ್"  ಕಬರ್ ಸ್ಥಾನದಲ್ಲಿ ಝಿಯಾರತ್ತಿಗೆ ಎಂಬ ನೆಪವೊಡ್ಡಿ ಅಲ್ಲಿಗೆ ಹೋಗಿ ಆ ಮಣ್ಣು ಅಲ್ಲಿರುವ ಹೊಸ ಕಬರಿನ ಮೇಲೆ ಹರಡಿ ಯಾರಿಗೂ ಯಾವುದೇ ರೀತಿಯ ಸಂಶಯ ತೋರದ ರೂಪದಲ್ಲಿ  ಅನೇಕ ದಿವಸಗಳಿoದ ಬಹಳ ತಂತ್ರಪೂರ್ವಕವಾಗಿ ನಾವು ಈ ನಿಗೂಢ ಪದ್ಧತಿ ಜಾರಿ ಮಾಡಿರುವುದು.
ಹಲವು ದಿವಸಗಳ ಈ ಶ್ರಮದ ಫಲವಾಗಿ ನಿನ್ನೆ ನಾವು ವಿಶುದ್ದ ಕಬರ್ ಶರೀಫಿನ ಬಹಳ ಸಮೀಪ ತಲುಪಿರುವುದು....

ಆಗ ಹಠಾತನೆ  ಆಕಾಶದಿಂದ  ಸಿಡಿಲು ಅಪ್ಪಳಿಸಿತು. ಜೊತೆಗೆ ಮಿಂಚುಗಳು ಕೂಡ. ಭೂಮಿ ಕಂಪನ ಉಂಟಾಗಿ ಆಕಾಶ ಕಳಚಿ ನಮ್ಮ ಮೇಲೆ ಬೀಳಬಹುದೆಂದು ಭಾಸವಾಯಿತು. ಹೆದರಿಕೆಯಾದ ನಾವು ತಾತ್ಕಾಲಿಕ ಕೆಲಸಕ್ಕೆ ವಿರಾಮ ನೀಡಿ ನಾಳೆ ಪುನ: ಶುರುಮಾಡಬೇಕೆಂಬ ದೃಢ ನಿಶ್ಚಯ ಮಾಡಿ ನಾವು ಹೋಗಿ ವಿಶ್ರಮಿಸಿದೆವು....

ನಮಿಬ್ಬರ ಲಕ್ಷ್ಯ ಹತ್ತಿರದಲ್ಲಿಯೇ ಸಫಲವಾಗುವುದೆಂದು ನಾವು ಕನಸು ಕಂಡೆವು. ನಮಗೆ ಸಿಗಲಿರುವಂತಹ ಸನ್ಮಾನಗಳನ್ನು ನೆನದು ನಮ್ಮ ಹೃದಯ ಮಿಡಿಯುತ್ತಿತು.
ಆದರೆ ಇಂದು ಬೆಳಗಾಗುತ್ತಲೇ ಸುಲ್ತಾನರಾದ ತಾವು ಊರಿಗೆ ತಲುಪಿದ ವಾರ್ತೆಯಾಗಿದೆ ನಮಗೆ ಕೇಳಲು ಸಾಧ್ಯವಾದದ್ದು. ಈವಾಗ ನೋಡಿ ನಾವು ಸೆರೆ ಹಿಡಿಯಲ್ಪಟ್ಟಿದ್ದೇವೆ." 😰😰

ನಿರ್ಭಂದಿತವಾಗಿಯಾದರೂ ಆ ಇಬ್ಬರು ಯುವಕರ ಸತ್ಯ ನಿಷ್ಟವಾದ ವಿವರಣೆ ಕೇಳಿ ಸುಲ್ತಾನರು ಒಂದು ನಿಮಿಷ ಅತ್ತರು....❗

"ಮಹತ್ವವಾದ ಈ ಒಂದು ಪುಣ್ಯ ಕಾರ್ಯಕ್ಕೆ ಸಾಧುವಾದ ನನ್ನನ್ನಲ್ಲವೇ ಅಲ್ಲಾಹ್,  ನಿನ್ನ ರಸೂಲರು ﷺ ನೇಮಿಸಿರುವುದು". ಎಂದು
ನೆನದು ಬಿಕ್ಕಿ ಬಿಕ್ಕಿ ಅತ್ತರು....

ತದನಂತರ
ಅಲ್ಲಾಹನಿಗೆ ಧನ್ಯವಾದ ಹೇಳಿ, 2 ರಕಹತ್ತ್ ಸುನ್ನತ್ತ್  ನಮಾಝ್ ನಿರ್ವಹಿಸಿದರು..

ವಂಚಕರಾದ ಇಬ್ಬರು ಸ್ಪೇನ್ ಗಾರರಿಗೆ ಸುಲ್ತಾನರು ಗಲ್ಲು ಶಿಕ್ಷೆ ವಿಧಿಸಿದರು....

 ತಡಮಾಡದೆ ಗಲ್ಲು ಶಿಕ್ಷೆಯನ್ನು ಬಹಿರಂಗವಾಗಿಯೇ ಜಾರಿಗೊಳಿಸಲಾಯಿತು. ಅವರಿಬ್ಬರ ಶವ ಶರೀರಗಳು ಮದೀನದ ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿತ್ತು.  ಅಕ್ರಮಿಗಳಿಗೂ, ದ್ರೋಹಿಗಳಿಗೂ, ವಂಚಕರಿಗೂ, ಈ ಶಿಕ್ಷೆ ಮರೆಯಲಾಗದ ಪಾಠ ಮುದ್ರೆಯಾಗಿತ್ತು.

ನಂತರ....
ಸುಲ್ತಾನರು ವಿಶುದ್ದ ರೌಳಾ ಶರೀಫಿನ ಸುತ್ತಲೂ, ನೀರು ಕಾಣುವವರೆಗೆ ನಾಲ್ಕು ಭಾಗದಲ್ಲೂ, ಕಣಿವೆ ಮಾಡಲು ಆಜ್ಞೆ  ಹೊರಡಿಸಿದರು.
ಆಮೇಲೆ ಅದರಲ್ಲಿ ಕಾದ ಸೀಸೆ ಸುರಿದು ಬೇಲಿ ಮಾಡಿಸಿ
 ಮುಚ್ಚಿಸಿದರು.

ಯಾರಿಂದಲೂ ಇನ್ನೊಮ್ಮೆಯೂ ಪರಿಶುದ್ಧ ಕಬರ್ ನ ಹತ್ತಿರ ತಲುಪಲು ಸಾಧ್ಯವಾಗದ ರೀತಿಯಲ್ಲಿ ಭೂಮಿಯ ಅಡಿಯಲ್ಲಿ ಬಹಳ ಆಳವಾಗಿ ಕಾದ ಸೀಸೆ ಸುರಿದು
ಕೊಂಡಿರುವ ಬೇಲಿ ನಿರ್ಮಿಸಿದರು.

ದೌತ್ಯ ಪುರ್ತಿಗೊಳಿಸಿದ ಸಂತೋಷದಿಂದ ಮುತ್ತು ನಬಿ (ಸಅ) ರವರ ಕನಸುಗಳು, ದಾರಿ ಮದ್ಯೆ ಸಿಕ್ಕಿದ ನಿರ್ದೇಷಗಳನ್ನು ಪೂರ್ತಿಗೊಳಿಸಲು ಸಾಧಿಸಿದ ಅನುಭೂತಿ, ನೆಮ್ಮದಿಯೊಂದಿಗೆ, ಸುಲ್ತಾನರಾದ (ರಾಜ) "ನೂರುದ್ದೀನ್ ಝ0ಗಿ (ರ) ಈಜಿಪ್ಟ್ ಗೆ ಮರಳಿದರು."

⚫ಹಿಜ್ರಾ, 555ರಲ್ಲಿ ನಡೆದ ಈ ಘಟನೆಗಳು,
ಜೀವನ ಕಾಲದ ಹಾಗೆ ವಫಾತ್ತಿನ ನಂತರವೂ,
"ಶತ್ರುಗಳಿಂದ ಅಲ್ಲಾಹು, ಮುತ್ತು ನಬಿ ﷺ ತಂಙಳರನ್ನು ಸಂರಕ್ಷಿಸುವೆನೆಂದು" ಖುರಾನ್ ವಚನದ ವಾಸ್ತವದ ಸಾಕ್ಷಿಯಾಗಿ ಇದನ್ನು ಚರಿತ್ರೆಗಾರರು ಉಲ್ಲೇಖಿಸಿದ್ದಾರೆ...
❤💛💚💙💜💖💓💕

ಸಲ್ಲಲ್ಲಾಹು ಅಲಾ ಮುಹಮ್ಮದ್
ಸಲ್ಲಲ್ಲಾಹು ಅಲೈಹಿವಸಲ್ಲಂ..
💚💜💙💗❤💖💓💕
✍ಗಫೂರ್ ಬಾಯಾರ್

ಪರಿಶುದ್ಧ ಕಅಬಾಲಯ

ಪರಿಶುದ್ಧ ಕಅಬಾಲಯ
🕋🕋🕋🕋🕋🕋🕋🕋

✍ ಗಫೂರ್ ಬಾಯಾರ್

 ಭೂಮಿಯಲ್ಲಿ ಮೊದಲನೇಯಾಗಿ ಅಲ್ಲಾಹು ಆರಾಧಿಸಲು ನಿರ್ಮಿಸಿದ ಭವನವಾಗಿದೆ ಕಅಬಾಲಯ.

ಮನುಷ್ಯರು ಭೂಮಿಗೆ  ಆಗಮಿಸುವ ಮೊದಲೇ ಕಅಬಾಲಯ ನಿರ್ಮಿಸಲ್ಪಡಲಾಗಿತ್ತು,
 ತ್ವವಾಫ್ ಮಾಡಿರುವುದು ಹಾಗೂ ಪರಿಪಾಲನೆ ಮಾಡಿರುವುದು ಅಲ್ಲಾಹುವಿನ ಮಲಕುಗಳಾಗಿತ್ತು.

🕋ಆದಂ ನಬಿ ಅಲೈಸ್ಸಲಾಂ ರವರ ಆಗಮನದೊಂದಿಗೆ ವಿಶುದ್ಧ  ಕಅಬದ  ಮೇಲ್ನೋಟವು, ಪರಿಪಾಲಾನೆಯೂ, ಮನುಷ್ಯರಿಗೂ ತಲುಪಿತು.


🕋 ತದನಂತರ ವ್ಯತ್ಯಸ್ತ ಕಾಲಘಟಗಳಲ್ಲಿ ಬಂದ ಅಲ್ಲಾಹುವಿನ ಪ್ರವಾದಿಯರು ವಿಶುದ್ಧ ಕಅಬವನ್ನು ಪರಿಪಾಲಿಸಿದರು. ಸಯ್ಯದುನ ನೂಹ್ ನಬಿ ಅಲೈಸ್ಸಲಾಂ ರವರ ಕಾಲಘಟದಲ್ಲಿ ಸಂಭವಿಸಿದ ಮಹಾ ಪ್ರಳಯದಲ್ಲಿ ವಿಶುದ್ಧ ಕಅಬದ ಅಡಿಪಾಯ ಹೊರತು ಉಳಿದ ಭಾಗಗಳೆಲ್ಲವು ಕೊಚ್ಚಿ ಹೋಗಲಾಯಿತ್ತು. ನಂತರ ಸಯ್ಯದುನಾ ಇಬ್ರಾಹಿಂ ನಬಿ ಅಲೈಸ್ಸಲಾಂ ಮತ್ತು ಮಗನಾದ ಇಸ್ಮಾಹಿಲ್ ನಬಿ ಅಲೈಸ್ಸಲಾಂ ರವರು ಅಲ್ಲಾಹುವಿನ ಆಜ್ಞೆಯ ಪ್ರಕಾರ ಕಅಬಾಲಯವನ್ನು ಪುನರ್ನಿರ್ಮಿಸಿದರು

🕋 ಸ್ವರ್ಗದಿಂದ  ತಂದ ಹಜರುಲ್ ಅಸ್ವದ್ ಎಂಬ ಕಲ್ಲನ್ನು  ಇಬ್ರಾಹಿಂ ಅಲೈಸಲಮ್ ಕಅಬಾಲಯದ ಒಂದು ಭಾಗದಲ್ಲಿ ಸ್ಥಾಪಿಸಿದರು. ಆ ವಿಶುದ್ಧ ಕಲ್ಲನ್ನು ಒಂದು ಸುತ್ತಿನ ಪ್ರದಕ್ಷಿಣೆ (ತವಾಫ್ ನ) ಆರಂಭವಾಗಿ ಗುರಿತಿಸಲ್ಪಡುತ್ತದೆ.
 ಕಅಬಾಲಯದ ಎತ್ತರವು 9 ಮೊಳವಾಗಿತ್ತು.

 🕋ಯೆಮೆನಿನ ರಾಜರುಗಳು ಕಅಬಾಲಯಕ್ಕೆ ಕವಾಡವನ್ನು ನಿರ್ಮಿಸುದರೊಂದಿಗೆ ಕಿಲ್ಲೆಯು ಹೊದಿಸಿದರು.

🕋ವರ್ಷಾನುವರ್ಷಗಳ  ನಂತರ ಕಅಬಾಲಯದಲ್ಲಿ ಕಾಣಿಸಿದ ಬಿರುಕುಗಳನ್ನು ಆಮಾಲಿಖ ಸಮೂಹದವರು ದುರಸ್ಥಿಪಡಿಸಿದರು.

🕋ಮತ್ತೆ ನೂರಾರು ವರ್ಷಗಳ ನಂತರ  ಜುರ್ಹೂಂ ಗೋತ್ರದವರು
 ಕಅಬಾಲಯವನ್ನು ದುರಸ್ಥಿಪಡಿಸಿದರು.

 🕋ವಿಶುದ್ಧ ಇಸ್ಲಾಮಿನ ಶತ್ರುವಾಗಿದ್ದ ಯೆಮೆನಿನ ಅಬ್ರಹತ್ ಎಂಬ ರಾಜನ ಸೈನ್ಯವು ವಿಶುದ್ಧ ಕಅಬವನ್ನು ಹೊಡೆದು ಉರಳಿಸಲು ಶ್ರಮಿಸಿದಾಗ ಅಲ್ಲಾಹು ಹಬಾಬಿಲ್ ಎಂಬ ಪಕ್ಷಿಯ ಮೂಲಕ ಪರಾಭವಗೊಳಿಸಿದನು. ಈ ಘಟನೆಯನ್ನು ವಿಶುದ್ಧ ಖುರ್ಆನಿನಲ್ಲಿ ವಿವರಿಸಲಾಗಿದೆ.

🕋ಇಬ್ರಾಹಿಂ ನಬಿ ಅಲೈಸಲಾಂ ರವರು ನಿರ್ಮಿಸಿದ ಮೇಲೆ ಸುಮಾರು 2775 ವರ್ಷಗಳ ನಂತರವಾಗಿತ್ತು ಇದರ ನಿರ್ಮಾಣ ಪೂರ್ಣಗೊಂಡಿರುವುದು.

🕋ವಿಶುದ್ಧ ಮಕ್ಕದಲ್ಲಿ ಸಂಭವಿಸಿದ  ಮಹಾ ಪ್ರಳಯದಿಂದ ಉಂಟಾದ ನಾಶನಷ್ಟಗಳ ನಂತರ
 ಖುರೈಷಿಗಳು ಕಅಬಾಲಯದ ಕಾಮಗಾರಿಯನ್ನು ಪೂರ್ಣಗೊಳಿಸಿದರು. ಆ   ಸಂದರ್ಭದಲ್ಲಿ ವಿಶುದ್ಧ ಹಜರುಲ್ ಅಸ್ವದನ್ನು ಯಾರು ಸ್ಥಾಪಿವುವವರು ಎಂಬುದರ ಬಗ್ಗೆ ಒಂದು ಚರ್ಚಾ ಕೂಟ ನಡೆಯಿತು. ಇದು ಅರಬ್ ಗೋತ್ರ ಪ್ರಮುಖರ ಎಡೆಯಲ್ಲಿ ಒಂದು ದೊಡ್ಡ ಪೈಪೂಟಿಯೇ ನಡೆಯಿತು. ಕೊನೆಯಲ್ಲಿ ಅವರು ಒಂದು ತೀರ್ಮಾನಕ್ಕೆ ಬಂದರು.  ಮೊದಲನೆಯದಾಗಿ ಯಾರು  ಆಗಮಿಸುತ್ತಾರೋ ಅವರಾಗಿರಲಿ ಇದನ್ನು ಸ್ಥಾಪಿಸುವವರು ಎಂದು ತೀರ್ಮಾನವಾಯಿತು. ನಬಿ ﷺ ರವರಾಗಿದ್ದರು ಮೊದಲನೆಯವರಾಗಿ ಬಂದವರು. ವಿಚಾರವೆನೆನ್ನೆಲ್ಲ ತಿಳಿದ ಪ್ರವಾದಿ ವರ್ಯರು( ﷺ) ಒಂದು ಸೌಹಾರ್ದಯುತವಾದ ಅಭಿಪ್ರಾಯವನ್ನು ಖುರೈಷಿ ಪ್ರಮುಖರ ಮುಂದೆ ಮಂಡಿಸಿದರು. ಹಜರುಲ್ ಆಸ್ವದನ್ನು ಒಂದು ವಿಶಾಲವಾದ ಶಾಲಿನ ಮದ್ಯೆ ಇಟ್ಟು, ಎಲ್ಲಾ ಗೋತ್ರ ಪ್ರಮುಖರು ಸೇರಿ ಶಾಲಿನ ಒಂದೊಂದು ಭಾಗವನ್ನು ಹಿಡಿದು ಎತ್ತುವುದರ ಮೂಲಕ ಕಲ್ಲನ್ನು ಸ್ಥಾಪಿಸಬೇಕೆಂದು ನಬಿ ﷺ ರವರು ನಿರ್ದೇಶಿಸಿದರು. ಪ್ರಸ್ತುತ ನಿರ್ದೇಶವನ್ನು ಒಮ್ಮತದಿಂದ ಸ್ವೀಕರಿಸಿ ಹಜರುಲ್ ಅಸ್ವದನ್ನು ಸ್ಥಾಪಿಸಲಾಯಿತು.

🕋ಚರಿತ್ರೆಯ ಅಂದಿನಿಂದ ತಲತಲಾಂತರ ಮಾನವ ಕುಲಕ್ಕೆ ಮೂಖಸಾಕ್ಷಿಯಾಗಿದೆ ಆ  ಪವಿತ್ರವಾದ ಹಜರುಲ್ ಅಸ್ವದೆಂಬ ಕಲ್ಲು. ಭೂಮಿಯ ಮದ್ಯ ಭಾಗದಲ್ಲಿ ನೆಲೆಗೊಳ್ಳುತಿರುವ ಕಅಬಾಲಯವು ವಿಶ್ವ ಮುಸಲ್ಮಾನರ ಕಿಬ್ಲಯಾಗಿದೆ.

🕋ಲೋಕದ ನಾನಾ ದಿಕ್ಕುಗಳಿಂದ ವಿಶ್ವಾಸಿಗಳು ಆ ಕಅಬಾಲಯವನ್ನು ಒಮ್ಮೆ ನೋಡಲು ಹಾಗು ವಿಶುದ್ಧವಾದ ಹಜ್ಜ್ ಮತ್ತು ಉಮ್ರವನ್ನು ನಿರ್ವಹಿಸಲು ಅತಿಯಾಗಿ ಆಗ್ರಹಿಸುತ್ತಾರೆ.ಅದರಂತೆ ಲಕ್ಷೋಪಲಕ್ಷ ವಿಶ್ವಾಸಿಗಳು ಅಲ್ಲಾಹುವಿನ  ಅನುಗ್ರಹದೊಂದಿಗೆ ವಿಶುದ್ಧ ಹಜ್ಜ್ , ಉಮ್ರ ನಿರ್ವಹಿಸುತ್ತಾರೆ. ಇದು ಲೋಕಾಂತ್ಯದ ವರೆಗೂ ಮುಂದುವರಿಯುತ್ತಾ ಇರುತ್ತದೆ.

 🕋ಪ್ರವಾದಿ ಮುತ್ತು ನಬಿ ﷺ ರವರ ಬಾಲ್ಯವು ಮತ್ತು ಯೌವ್ವನವು ಕಅಬಾಲಯದ ನೆರಳಿನಲ್ಲಾಗಿದೆ ಕಳೆದಿರುವುದು.

🕋ಜೀವನದಲ್ಲಿ ಒಮ್ಮೆಯಾದರೂ ಆ ಪುಣ್ಯ ಕಅಬಾಲಯವನ್ನು  ನೋಡಲು ಅಲ್ಲಾಹು ನಮ್ಮನ್ನು ಅನುಗ್ರಹಿಸಲಿ
ಆಮೀನ್..

✍ ಗಫೂರ್ ಬಾಯಾರ್
🌷🌷🌷🌷🌷🌷🌷

ಇಷ್ಟೊಂದು ಸುಂದರವಾದ ಸಾಮೂಹಿಕ ಸಂಬಂಧ ಸಂರಕ್ಷಿಸುವ ಒಂದು ತತ್ವ ಸಿದ್ದಾಂತ ಬೇರೆ ಇದೆಯೋ?

📡
♻♻♻♻♻♻♻

➡ ದಿವಸದಲ್ಲಿ 5 ಸಮಯ ನೆರೆಕರೆಯವರು ಒಂದುಗೂಡುವ,
♻ 5 ಹೊತ್ತಿನ ನಮಾಜು

➡ವಾರದಲ್ಲಿ ಒಂದು ದಿವಸ ಮಹಲ್ಲುಗಳಲ್ಲಿ ಇರುವವರು ಒಂದುಗೂಡುವ,
♻ ಜುಮಾ ನಮಾಝ್

➡ವರ್ಷದಲ್ಲಿ 2 ದಿವಸ ಪ್ರದೇಶ ವಾಸಿಗಳು ಒಟ್ಟುಗೂಡುವ,
♻ ಈದ್ ಗಾಹ್ ನಮಾಝ್

➡ವರ್ಷದಲ್ಲಿ ಒಂದು ದಿವಸ ಭೂಮಿಯಲ್ಲಿರುವವರು ಒಟ್ಟುಗೂಡುವ,
♻ ಅರಫಾ ಸಂಗಮ

➡ಅಲ್ಲಿಗೆ ತಲುಪಲು ಸಾಧ್ಯವಾಗದವರು ಉಪವಾಸ ಹಿಡಿದು ಅವರೊಂದಿಗೆ ಐಕ್ಯತೆಯನ್ನು ಪ್ರಕಟಿಸುತ್ತಾರೆ..

ಮಾಷಾ ಅಲ್ಲಾಹ್...
ಎಷ್ಟೊಂದು ಸೊಗಸಾದ ಸಾಮೂಹಿಕ ಸಂಬಂಧ...

♻ನಮ್ಮನ್ನು ಮರಣದವರೆಗೂ ಈ ದೀನಿನಲ್ಲಿ ಗಟ್ಟಿಯಾಗಿ ನೆಲೆಗೊಳ್ಳಲು ಅಲ್ಲಾಹು  ಅನುಗ್ರಹಿಸಲಿ.. ಆಮೀನ್

✍*ಗಫೂರ್ ಬಾಯಾರ್*

Tuesday, September 26, 2017

ಮನದಾಳದಿಂದ ಓದಿರಿ

🌹
➖➖➖➖➖➖➖➖
"ಕಾಂತಪುರಂ" ಎಂಬ ಪದ ಸಾಮಾಜಿಕ ತಾಣಗಳಲ್ಲಿ  ನೋಡಿದ ಕೂಡಲೇ ಓಡಿ ಹೋಗಿ ಸಿಸ್ಟಮಿನಿಂದಲೋ  ಮೊಬೈಲಿನಿಂದಲೋ, ಮೊದಲೇ ಸೇವ್ ಮಾಡಿ ಇಟ್ಟಿರುವ ಅಪಹಾಸ್ಯ ಸಂದೇಶಗಳು, ಅಲ್ಲದಿದ್ದರೆ ಕೇಶದ ಚಿತ್ರವಿರುವ ಹಳೆಯ ಫೋಟೋ ಕಮ್ಮೆಂಟ್, ಅದು ಅಲ್ಲದಿದ್ದರೆ ಸಮಾನವಾದ  ಬೇರೆ ಕೆಲವು ಅಶ್ಲೀಲ ಪದಗಳನ್ನು ಹೆಕ್ಕಿ ತೆಗೆದು ಬಂದು ಕಮ್ಮೆಂಟಿನಲ್ಲಿ ಒಂದು ಅಡಿ ಬರಹ ಬರೆದು ಅಬ್ಬ ನಾನೊಂದು ಅಲ್ಲಾಹನ ಬಳಿ ಉತ್ತಮನಾಗುವಂತಹ ಒಂದು ಮಹಾ ಕಾರ್ಯವನ್ನು ಮಾಡಿ ಬಿಟ್ಟೆ ಎಂದು ಮನದೊಳಗೆ ನೆನೆದುಕೊಳ್ಳುವವರು ಇದನ್ನೊಮ್ಮೆ ಸಂಪೂರ್ಣವಾಗಿ ಮನದಾಳದಿಂದ ಓದಿ..

ನಾವು ಎಂದಿಗಾದರೂ ಮನಸ್ಸಿನ ಅಂತರಾಳದಿಂದ ಅಲೋಚಿಸಿದ್ದೇವಾ?
ಯಾತಕ್ಕಾಗಿ ಕಾಂತಪುರಂ (ಉಸ್ತಾದ್) ರನ್ನು ಮಾತ್ರ ನಾವು ಸಂಘಟನೆ ಬೇಧವಿಲ್ಲದೆ ನಮ್ಮ ಶತ್ರು ಲೀಸ್ಟ್ ನಲ್ಲಿ ಮೊದಲನೆಯ ಸಾಲಿನಲ್ಲಿ ಇಟ್ಟಿರುವುದು???

ನಮ್ಮಲ್ಲಿ ಎಷ್ಟು ಜನರಿಗೆ ಅವರನ್ನು ವಿಮರ್ಶಿಸುವ ಧಾರ್ಮಿಕ ಅವಕಾಶವಿದೆ ಎಂದು!
ಕಾಂತಪುರಂ ಅಬೂಬಕ್ಕರ್ ಮುಸ್ಲಿಯಾರ್ (ಉಸ್ತಾದ್) ಎಂಬ ವ್ಯಕ್ತಿ ಒಂದು ಸಂಘಟನೆಯನ್ನು ಕಟ್ಟಿ ಬೆಳೆಸಿರುವುದು, ಸ್ವಂತವಾಗಿ ಮರ್ಕಝ್ ಹಾಗೂ ಅನೇಕ ಸ್ಥಾಪನೆಗಳನ್ನು ನಿರ್ಮಿಸಿರುವುದು, ಪತ್ರ ಆರಂಭಿಸಿರುವುದು, ಕೇರಳದಿಂದ ಹೊರಗೂ ಸಂಬಂಧ ವೃದ್ದಿಸಿರುವುದು, ದೇಶ ವಿದೇಶಗಳ ಜತೆ ಉತ್ತಮ ಸಂಬಂಧ ಸ್ಥಾಪಿಸಿದ್ದು,
ಇವೆಲ್ಲವೂ ಒಬ್ಬರಿಂದ ಅಸಾದ್ಯವಾದದ್ದು, ಉಸ್ತಾದರು ಒಬ್ಬಂಟಿಯಾಗಿ ಎಲ್ಲವನ್ನೂ ಮುನ್ನಡೆಸುತ್ತಾ ಬಂದಿದ್ದಾರೆ...

 ಯಾವ ಸ್ವಾರ್ಥತೆಯ ಅಳತೆ ಕೋಲು ಇಟ್ಟರೂ, ಅದೇ ಆಸಕ್ತಿ, ಆಗ್ರಹಗಳು ವಿಮರ್ಶಿಸುವವರ ಸಂಘಟನೆ ನಿಲವುಗಳಲ್ಲಿಯು, ಕಾರ್ಯ ಚಟುವಟಿಗೆಗಳಲ್ಲಿಯೂ  ಪ್ರಕಟವಾಗಿಯೇ ಇದೆ.

ಸ್ವಂತ ನಾಯಕ ಹೇಳುವುದು ಸರಿಯೋ ತಪ್ಪೋ ಎಂದು ನೋಡದೆ ಅಕ್ಷರ ಪ್ರತಿ ಅನುಸರಿಸುದಾಗಿದೆ ಹಲವರಿಗೆ ಕಾಂತಪುರಂ ಅನುಯಾಯಿಗಳಲ್ಲಿ ಕಾಣುವ ಒಂದು ದೊಡ್ಡ ಅಪರಾದ!

ನಾಯಕರು ಹೇಳುವುದು ವಿಶ್ವಾಸವಿಟ್ಟು ಅದೇ ಪ್ರಕಾರ ಅನುಸರಿಸುವಂತೆ ಹೇಳದ ಯಾವ ಸಂಘಟನೆಯಾಗಿದೆ ಮುಸ್ಲಿಂ ಸಂಘಟನೆಗಳಲ್ಲಿ ಬಾಕಿ ಉಳಿದಿರುವುದು? ಸಂವಿಧನಾತ್ಮಕವಾಗಿ ಅವಕಾಶ ಕೊಡುವ ವೋಟು ಕೂಡ ಸ್ವಂತ ಪ್ರಸ್ಥಾನದ ನಾಯಕ ಹೇಳುವವರಿಗೆ ಮಾತ್ರ ನಿರ್ಭಂದ ಪೂರ್ವ ವಿಂಗಡಿಸಿ ಕೊಡುವವರಿಗೆ ಯಾವ ಅರ್ಹತೆ ಇದೆಯೆಂಬ ಹೆಸರಿನಲ್ಲಾಗಿದೆ ಕಾಂತಪುರಂ ಉಸ್ತಾದರನ್ನು ವಿಮರ್ಶಿಸಲು ಅರ್ಹತೆ ಇರುವುದು?

ಕರ್ಮ ಶಾಸ್ತ್ರ ತರ್ಕಗಳನ್ನು ಬೀದಿಗಳಲ್ಲಿ ಶಬ್ದ ಮಾಲಿನ್ಯಕರಣಕ್ಕೆ ವೇದಿಕೆ ಮಾಡಿದವರು ಅದರ ಹೆಸರಿನಲ್ಲಿ ಹಲವು ಗ್ರೂಪುಗಳಾಗಿ ವಿಭಜಿತರಾದವರು ಏನು ಹೇಳಿಯಾಗಿದೆ ಕಾಂತಪುರಂ (ಉಸ್ತಾದ್)ರನ್ನು ಅಪಹಾಸ್ಯ ಮಾಡುವುದು?

ಧರ್ಮದಿಂದ ರಾಜಕೀಯಕ್ಕೆ ಬಣ್ಣಬದಲಾಯಿಸುವ ಸಂಘಟನೆಗಳು ಕಾಂತಪುರಂ (ಉಸ್ತಾದ್) ಮಾಡುತ್ತಿರುವ ಸಮರ್ಥ ರಾಜಕೀಯವನ್ನು ಯಾವ ಕಾರಣಕ್ಕಾಗಿ ವಿಮರ್ಶಿಸುವುದು?
ನಿಮ್ಮ ಸಂಘಟನೆಗಳು ಏನು ಬೇಕಾದರೂ ಮಾಡಬಹುದು..
ತಮ್ಮ ಕಾರ್ಯಕರ್ತರಿಗೆ  ಏನು ಬೇಕಾದರೂ ಫತ್ವ ನೀಡಬಹುದು..
ತಮ್ಮ ಸಂಘಟನೆ ಯಾವ ರೀತಿಯ ನಿಲುವನ್ನು ಕೂಡ ವ್ಯಕ್ತಪಡಿಸಬಹುದು...
ಆದರೆ ಕಾಂತಪುರಂ ಉಸ್ತಾದ್ ಮಾತ್ರ ತನ್ನ ಕಾರ್ಯಕರ್ತರಿಗೆ ಏನನ್ನೂ ಹೇಳಕೂಡದು... ಏನು ಮಾಡಬಾರದು, ಯಾರನ್ನು ಕಾಣಬಾರದು
ಇದು ಎಲ್ಲಿಯ ನ್ಯಾಯ...?

ಒಟ್ಟಿನಲ್ಲಿ ಕಾಂತಪುರಂ ಉಸ್ತಾದ್ ಮಾಡುವಂತಹ ಕಾರ್ಯಚಟುವಟಿಕೆಗಳು ಎಲ್ಲರೂ ಮಾಡುವುದೇ ಆಗಿದೆ. ಆದರೆ ತನ್ನ "ನಿಲುವಿನ" ರೀತಿಯಲ್ಲಿ ಮಾತ್ರವೇ ವ್ಯತ್ಯಾಸವಿರುವುದು!
ಅದರಲ್ಲಿಯ ತನ್ನ ವ್ಯಕ್ತಿ ಆಸಕ್ತಿ, ಅತ್ಯಂತಿಕ ಗುರಿಗಳ ಕುರಿತು ಇರುವ ಗುಣಕಾಂಶ ಪರವಾದ ಸಂಶೋಧನೆಗಳು ಒಳ್ಳೆಯದು ಕೂಡಾ ಆಗಿದೆ.
ಕಲಿಮ ಉಚ್ಚರಿಸಿದ ಸ್ವಂತ ಸಹೋದರರನ್ನು ದಾರಿಯಲ್ಲಿ ಕಾಣುವಾಗಲೇ ಮುಶ್ರಿಕುಗಳಾಗಿಯೂ, ಕಾಫಿರುಗಳಾಗಿಯೂ ಚಿತ್ರೀಕರಿಸಿ ಬಿಂಬಿಸುವ ರೀತಿಗೆ ಕೊನೆ ಆಗಬೇಕೆಂದಿದೆ. ( ತಿರುಗಿ ವಿಮರ್ಶಿಸುವವರನ್ನು ಸಂಪೂರ್ಣವಾಗಿ ನೂತನವಾದಿಗಳನ್ನಾಗಿ ಮಾಡುವ ರೀತಿಗಳು ಕೂಡ ಬದಲಾಗಬೇಕು.)

ದ್ವೇಷಗಳು, ಸುಳ್ಳಾರೋಪಗಳು ಎಷ್ಟು ಇದ್ದರೂ ಮುಸ್ಲಿಂ ಸಂಘಟನೆಗಳಲ್ಲಿ ಶಕ್ತರಾದ ಒಬ್ಬ ನೇತಾರರಾಗಿ ಕಾಂತಪುರಂ ಉಸ್ತಾದರು ಉನ್ನತಿಗೇರಿದ್ದರೆ ಅದನ್ನು  ಬೆಲೆಯಿಲ್ಲದ ಅಶ್ಲೀಲ ಪ್ರತಿಭಟನೆಗಳಿಂದಲ್ಲ ಅವರನ್ನು ಎದುರಿಸಬೇಕಾಗಿರುವುದು! ಬದಲಾಗಿ
ಅವರ "ಇವೆಂಟ್ ಮ್ಯಾನೆಜಿಮೆಂಟ್" ಮಾದರಿ ಮಾಡಬೇಕಾಗಿತ್ತು. ಭಾರತದ ಮುಸ್ಲಿಮರ ನಿರ್ನಾಮ ಮಾಡುವಂತಹ ಗುರಿಗಳನ್ನಿಟ್ಟು ಕಾರ್ಯಾಚರಿಸುವಂತಹ  ಫ್ಯಾಸಿಸ್ಟ್ ಗಳೊಂದಿಗೆ ಕೂಡ ಇಲ್ಲದ ಈ ಆಕ್ರೋಶ, ವಿದ್ವೇಶ, ಅಸೂಯೆ, ನಮ್ಮ ಮನಸ್ಸಿನಲ್ಲಿ ಈ ಒಬ್ಬ ವ್ಯಕ್ತಿಯ ಮೇಲೆ ಮಾತ್ರ ಆಗಿದ್ದಕ್ಕೆ ನಾವು ಸ್ವಂತ ಆತ್ಮ ಪರಿಶೋಧನೆ ನಡೆಸಿಬೇಕಾಗಿದೆ.

ಕಾಂತಪುರಂ ಉಸ್ತಾದಾಗಿದೆ ಮೊದಲು ನಾಶ ಹೊಂದಬೇಕಾದ ಕೆಡುಕು, ಎಂದು ನಾವು ಯೋಚಿಸುವುದಾದರೆ ಆ ಯೋಚನೆಯಿಂದಲೇ ಕಾಂತಪುರಂ ಉಸ್ತಾದ್ ಎತ್ತರಕ್ಕೆ ಬೆಳೆದಿದ್ದಾರೆ ಎಂದು ತಿಳಿಯುವುದು ಒಳ್ಳೆಯದು.

ಗುಣಕಾಂಶ ಇಲ್ಲದ ವಿಮರ್ಶನಕ್ಕೆ ಪ್ರವಾದಿಯವರಿಂದಲೇ ﷺ ಮಾದರಿ ಇಲ್ಲ ತಾನೇ!

ನೊಂದ ಒಬ್ಬ ಮುಸಲ್ಮಾನನ ಮನದಾಳದ ಮಾತು....(GB)

♻ ಕಾಂತಪುರಂ ಎ ಪಿ ಉಸ್ತಾದರನ್ನು ವಿಮರ್ಶಿಸುವವರ ಹತ್ತಿರ ಪ್ರೀತಿ ಪೂರ್ವಕ...



💠 ಕಾಂತಪುರಂ ಎಂಬ ಆ ಮಹಾ ಪ್ರಸ್ಥಾನವನ್ನು ಕುಗ್ಗಿಸಲೋ, ನಾಶ ಮಾಡಲೋ, ಯಾರಿಂದಲೂ ಸಾದ್ಯವಿಲ್ಲ. ಅದಕ್ಕೆ ಕಾಲವೇ ಸಾಕ್ಷಿಯಾಗಿದೆ.

ಒಂದು ಪಂಡಿತರನ್ನು ಅಪಹಾಸ್ಯ ಮಾಡಲು, ಹಿಯಾಲಿಸಲು ಮಾತ್ರ ನೀವು ಅಷ್ಟಕ್ಕೂ ನೀಚರಾದರಲ್ಲರೇ⁉....

ಒಂದು ಪಂಡಿತರ ಸುಳ್ಳು ಆರೋಪ ಹೊರಿಸಲು ನಿಮಗೆ ಕಿಚ್ಚಿಂತೂ ನಾಚಿಕೆ ಕೂಡ ಇಲ್ಲವಲ್ಲವೇ....

ನಿಮಗೆ ಕಾಂತಪುರಂ ಉಸ್ತಾದರ ಕುರಿತು ಏನು ಗೊತ್ತು?

ಕಾಂತಪುರಂ ಉಸ್ತಾದ್ ಯಾರೆಂದು ಇಡೀ ಜಗತ್ತಿಗೆ ಗೊತ್ತಿದೆ.
ಕಾರಣ ಕಾಲ ಕಂಡಿರುವ  ಪಂಡಿತ ಮಹಾನ್ ತೇಜಸ್ಸ್ ಆಗಿದ್ದಾರೆ ಕಾಂತಪುರಂ ಉಸ್ತಾದರು.

ಕಾಂತಪುರಂ ಉಸ್ತಾದ್ ಲೋಕದಲ್ಲಿ ಮಾಡಿದ ಉತ್ತಮ ಕಾರ್ಯದ ಒಂದಂಶ ನೀವು ನಿಮ್ಮ ಜೀವನದಲ್ಲಿ ಮಾಡಿರಲಿಕ್ಕಿಲ್ಲ.. ಮಾಡಲು ನಿಮ್ಮಿಂದ ಸಾಧ್ಯವು ಇಲ್ಲ..

 ಮಾತ್ರವಲ್ಲ ನೀವು ಅವರು ಮಾಡಿದಂತಹ ಉತ್ತಮ ಕೆಲಸವನ್ನು  ಚಿಂತಿಸಲು ಕೂಡ ನಿಮ್ಮಿಂದ ಸಾಧ್ಯವಿಲ್ಲ ....

ಕಾಂತಪುರಂ ಉಸ್ತಾದ್ ಓದಿ ಕಲಿತ ಸಾವಿರಾರು ಕಿತಾಬುಗಳನ್ನು ನೀವು ಕಂಡಿರಲಿಕ್ಕಿಲ್ಲ.
ಸರಿಸುಮಾರು ಐದು ದಶಕಗಳಿಂದ ವಿಶ್ವ ಮುಸ್ಲಿಮರ ಎರಡನೆಯ ಗ್ರಂಥವಾದ ಬುಖಾರಿ ಕಿತಾಬನ್ನು ಹಲವು ಪಂಡಿತರಿಗೆ ಬೋಧಿಸುತ್ತಿದ್ದಾರೆ..

ಇಂತಹ ಒಬ್ಬ ಪಂಡಿತರನ್ನು ಅಪಹಾಸ್ಯ ಮಾಡಿಯಾದರೂ ನಿಮಗೆ ಏನಾದರು ಲಾಭ ಸಿಕ್ಕಿತೇ⁉

ಕಾಂತಪುರಂ ಉಸ್ತಾದರನ್ನು ನಾಶ  ಮಾಡಲು ಇಂದಿನವರೆಗೆ ಯಾರಿಗಾದರೂ ಸಾದ್ಯವಾಗಿದೆಯೇ?
ಇಲ್ಲವೇ ಇಲ್ಲ..
ಉತ್ತರ ಬರೀ ಶೂನ್ಯ..

ಇನ್ನು ಯಾರಿಗಾದರು ಸಾದ್ಯವಿದೆಯಾ? ಇಲ್ಲ ಒಮ್ಮೆಯೂ ಸಾದ್ಯವಿಲ್ಲ....

ಕಾರಣ ಸಮುದ್ರದ ಅಲೆಗಳಂತೆ  ಬೀಸುವ ಅದೆಷ್ಟೋ ದೊಡ್ಡ ದೊಡ್ಡ ಆರೋಪಗಳನ್ನೂ, ಆಕ್ಷೇಪಗಳನ್ನೂ, ಅಪಹಾಸ್ಯಗಳನ್ನೂ, ಈಗ ತಾನೇ ಬಿರಿದಂತಹ ಪುಷ್ಪಗಳ ಹಾಗೆ, ಮಂದಸ್ಮಿತ ಭರಿತವಾದ ನಗುಮುಖದಿಂದ  ಸ್ವೀಕರಿಸುವ ಆ ಮಹಾ ಮನುಷ್ಯನನ್ನು ಹೇಗೆ ತಾನೇ ನಾಶ ಮಾಡಲು ಸಾದ್ಯ....❓

ಅಲ್ಲಾಹು ನಮ್ಮ ಶೈಖುನಾರಿಗೆ ನೀ ದೀಘಾಯುಷ್ಯ ನೀಡಿ ಅನುಗ್ರಹಿಸು.... ಆಮೀನ್.

ಅಕ್ರಮಿಗಳಿಂದ ಉಸ್ತಾದರನ್ನು ಸಂರಕ್ಷಿಸು ಅಲ್ಲಾಹ್.. ಆಮೀನ್.

ಬುದ್ದಿ ಇರುವವರನ್ನು ಅಪಹಾಸ್ಯ ಮಾಡುವವರು  ನಿಜವಾಗಿಯೂ ಬುದ್ದಿಹೀನರಲ್ಲವೇ..,❓

ನೀವು ನಿಮ್ಮ ಜೀವನದಲ್ಲಿ  ಮಾಡಿ, ಕೂಡಿಟ್ಟಂತಹ  ಅನಾವಶ್ಯಕ ಚಟುವಟಿಕೆಗಳ ಕುರಿತು ನೀವು ಎಂದಾದರೂ ಚಿಂತಿಸಿದ್ದೀರಾ❓

ಭೂಲೋಕದಲ್ಲಿ ಹುಟ್ಟಿದಂತಹ ಪ್ರತಿಯೊಬ್ಬರಿಗೂ ಗೊತ್ತಿರುವಂತಹ ವಿಷಯ' ಈ ಜೀವನ ಶಾಶ್ವತವಲ್ಲ, ಶಾಶ್ವತ ಜೀವನ ಪರಲೋಕದಲ್ಲಾಗಿದೆ' ಎಂಬುವುದು..
ಆ ಪರಲೋಕ ಜೀವನಕ್ಕೆ ನಾನು ಏನನ್ನು ಮಾಡಿಟ್ಟಿದ್ದೇನೆ ಎಂಬುವುದನ್ನು ನೀನು ಚಿಂತಿಸಿದ್ದೀಯಾ❓
ಖಂಡಿತ ಇಲ್ಲ..
ನೀನು ಮಾಡಿದ್ದು ಒಂದೇ,
ವಿದ್ವಾಂಸರ ಹಸಿ ಮಾಂಸ ಭಕ್ಷಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವುದು.

ಚಿಂತಿಸು ಮನುಜಾ,
ನಿನ್ನ ಒಂದು  ಬೆರಳು ಇನ್ನೊಬ್ಬರನ್ನು ತೋರಿಸಿ
 ಅವರು ಕೆಟ್ಟವರೆಂದು ಹೇಳುವಾಗ ಬಾಕಿ ಮೂರು ಬೆರಳುಗಳು ನಿನ್ನನ್ನೇ ಹಾಸ್ಯಭಾವದಿಂದ ನೋಡಿಕೊಂಡು ನೀನು ಬರೀ ಕೆಟ್ಟವ ಎಂದು ತನ್ನ ಸ್ವಂತ ಮೂರು ಬೆರಳುಗಳು ಹೇಳುತ್ತಿರುತ್ತದೆ..
ಅದನ್ನು ಗಮನಿಸುವವನು ಬುದ್ಧಿವಂತ.
ಬುದ್ಧಿವಂತನು ಆಲಿಂರನ್ನು, ಅಥವಾ ಯಾರನ್ನೂ ಹೀಯಾಲಿಸುವ ಗೋಜಿಗೆ ಹೋಗಲಾರ...

ಆದರೆ ಅದು ತಿಳಿಯುವಂತಹ ವಿವೇಕತೆ ನಿನಗೆ ಇಲ್ಲವಾಯಿತೇ❓

ಇನ್ನೊಬ್ಬರ ಮೇಲೆ ಎಗರುವ ಮೊದಲು ಅದರ ಕನಿಷ್ಟ ಯೋಗ್ಯತೆ ನನಗೆ ಇದೆಯಾ? ಎಂದು ಮೆದುಳಿನಲ್ಲಿ ಬೆರಳಿಟ್ಟು ಚಿಂತಿಸುವುದು ಒಳ್ಳೆಯದು❗

ಅಂಗಾತವಾಗಿ ಮಲಗಿ ಮೇಲೆಕ್ಕೆ ಉಗುಳುವುದು ಜಾಣ ಬುದ್ದಿಯಾ?
 ಅಥವಾ
 ಹೀನ ಬುದ್ದಿಯೋ?

ಒಂದು ನಿಮಿಷ ಎದೆಗೆ ಕೈ ಇಟ್ಟು
ನೀವೊಮ್ಮೆ ಚಿಂತಿಸಿ....
ನಾನು ಕಾಂತಪುರ (ಉಸ್ತಾದ್) ರನ್ನು ಕಂಡಿಲ್ಲವಲ್ಲ...?
ಅವರು ನನ್ನನ್ನು ಅಪಹಾಸ್ಯ ಮಾಡಿಲ್ಲವಲ್ಲ...?
ಮತ್ತ್ಯಾಕೆ ನಾನು ಅವರ ಹಸಿ ಮಾಂಸ ಭಕ್ಷಿಸುತ್ತಿರಬೇಕು?

ಹೌದು...
ಉಸ್ತಾದರು ತನ್ನ ಜೀವನದಲ್ಲಿ ಇನ್ನೊಬ್ಬರನ್ನು ಅಪಹಾಸ್ಯ ಮಾಡಿದವರಲ್ಲ.... ಯಾರನ್ನೂ ತೇಜೋವಧೆ ನಡೆಸಿಯೂ ಇಲ್ಲ

ಇಂತಹ ಪಂಡಿತರನ್ನು ನಾನು ಯಾಕೆ ತೇಜೋವಧೆ ನಡೆಸಬೇಕು?

ನಾನು ಕಾಣದವರನ್ನು  ಯಾಕೆ ಅಪಹಾಸ್ಯ ಮಾಡಬೇಕು?

ನಾನು ನನಗೆ ಅರಿಯದವರ ಮೇಲೆ  ಯಾಕೆ ಕಲ್ಲು ಬಿಸಾಡಬೇಕು..?

ಹೀಗೆ ಚಿಂತಿಸಿದರೆ ನಿಮಗೆ ಲಭಿಸುವ ಉತ್ತರ ಒಂದೇ ...

ನಾನು ದಿಕ್ಕಾರಿಯಾಗಿದ್ದೇನೆ.
ನಾನು ಮಹಾ ಬುದ್ದಿಹೀನಾಗಿದ್ದೇನೆ, ನಾನು ಪಾಪಿಯಾಗಿದ್ದೇನೆ.
ನನಗಿಂತ ದೊಡ್ಡ ದಿಕ್ಕಾರಿ ಬೇರೆ ಯಾರಿದ್ದಾರೆ?..
ಎಂಬಿತ್ಯಾದಿ ಉತ್ತರಗಳು ನಿಮಗೆ ಲಭಿಸಬಹುದು.

ನಾಳೆಗೆ ಮುಂದಿಡದೆ ಇಂದೇ
ಚಿಂತಿಸು...
ಚಿಂತಿಸು...
ಚಿಂತಿಸು...

ತೌಬಾ ಮಾಡಲು ಈಗಲೂ ಸಮಯವಿದೆ.

💠ಮರಣ ಕೈಗೆಟಕುವ ಹತ್ತಿರದಲ್ಲಿ ಇದೆ. ಯಾವುದೇ ಸಮಯದಲ್ಲೂ ಯಾವುದೇ ಮುಲಾಜಿಲ್ಲದೆ, ಕನಿಕರವಿಲ್ಲದೆ ಅಝ್ರಾಈಲ್ (ಅ) ನಮ್ಮ ರೂಹ್ ಕ್ರೂರವಾಗಿ ಹಿಡಿದುಕೊಂಡು ಹೋಗಬಹುದು.

ಚಿಂತಿಸುವವರಿಗೆ ದೃಷ್ಟಾಂತವಿದೆ.

✍🏾 ಗಫೂರ್ ಬಾಯಾರ್
🌾🌾🌾🌾🌾🌾🌾🌾🌾

ಸುಲ್ತಾನುಲ್ ಉಲಮಾ ಕಾಂತಪುರಂ AP ಉಸ್ತಾದರನ್ನು ವಿರೋಧಿಸುವವರು

🌹❗❗❗

👉🏾ಸ್ವಾರ್ಥ ರಾಜಕಾರಣಿಗಳು
👉🏾ಫ್ಯಾಸಿಸ್ಟರು
👉🏾ಉಗ್ರವಾದಿ ಸಂಘಟನೆಗಳು
👉🏾ಅಸೂಯೆಗಾರರು
👉🏾ಸಲಫಿಗಳು
👉🏾ಜಮಾಅತೆ ಇಸ್ಲಾಮಿಯವರು
👉🏾ತಬ್ಲೀಗ್ ಜಮಾಅತ್'ನವರು
👉🏾ಕಳ್ಳ ತ್ವರೀಖತ್'ನವರು
👉🏾ಯುಕ್ತಿವಾದಿಗಳು
👉🏾ಲಿಂಗ ಸಮಾನತಾವಾದಿಗಳು
 etc...

ಇವರೆಲ್ಲರೂ ಕಾಂತಪುರಂ ಉಸ್ತಾದರನ್ನು ವಿರೋಧಿಸುತ್ತಾರೆ.

🍀ಇಮಾಮ್ ಅಬುಲ್ ಹಸನಿ ಶ್ಶಾದುಲಿ(ರ) ರವರ ಮಾತುಗಳಿಂದ:
"ನಾಲ್ಕು ಕಾರ್ಯಗಳಿಂದ ಪರೀಕ್ಷೆಗೆ ಒಳಪಡುವವರೆಗೆ ವಿದ್ಯೆಯ (ಇಲ್ಮ್) ಪದವಿಯಲ್ಲಿ ಯಾವ ವಿದ್ವಾಂಸನೂ ಪರಿಪೂರ್ಣ ಆಗುವುದಿಲ್ಲ"

0⃣1⃣ ಅವರಿಗೆ ಏನಾದರೂ ವಿಪತ್ತು ಉಂಟಾದರೆ ಶತ್ರುಗಳು ಅತಿಯಾಗಿ ಸಂತೋಷಪಡುವರು

0⃣2⃣ಸ್ನೇಹಿತರಿಂದಲೂ ಆಕ್ಷೇಪ

0⃣3⃣ಹೇಡಿಗಳು ಪರದೂಷಣೆಯ ಮೂಲಕ ಆಕ್ಷೇಪಿಸುವುದು

0⃣4⃣ ಪ೦ಡಿತರಿಂದಲೂ ಅಸೂಯೆಗಾರರು ಉಂಟಾಗುವುದು

✍ ಗಫೂರ್ ಬಾಯಾರ್
➖➖➖➖➖➖➖➖➖

🍀ಇವುಗಳನ್ನೆಲ್ಲ ಕ್ಷಮಿಸಿ ಸಹನೆ ತಾಳಿದರೆ ಆ ವಿದ್ವಾ೦ಸರನ್ನು ಅಲ್ಲಾಹು ಜನರು  ಹಿಂಬಾಲಿಸುವಂತ ದೊಡ್ಡ ಮಾರ್ಗದರ್ಶಿಯನ್ನಾಗಿ ಮಾಡಿ ಮೇಲೆತ್ತುವನು.

🍀ಈ ಕಾಲದಲ್ಲಿ ಇ೦ತಹ ವಿದ್ವಾ೦ಸರಿಗೆ ಅತಿ ದೊಡ್ಡ ಉದಾಹರಣೆ ಅದು ಕಾಂತಪುರಂ
ಎ.ಪಿ. ಉಸ್ತಾದರಲ್ಲದೆ ಬೇರೆ ಯಾರು ಇದ್ದಾರೆ?
ಅಲ್ಲಾಹು ಉಸ್ತಾದರಿಗೆ ಆರೋಗ್ಯ, ದೀರ್ಘಾಯುಷ್ಯ ನೀಡಿ ಅನುಗ್ರಹಿಸಲಿ
ಆಮೀನ್

💪 ಸಮುದಾಯ ಪರ ಗುಡುಗು💪


      ✍ಗಫೂರ್ ಬಾಯಾರ್
〰〰〰〰〰〰〰〰〰

💪ಮುಸ್ಲಿಂ ಕಟ್ಟಾ ವಿರೋಧಿ ತೊಗಾಡಿಯಾ ವಿರುದ್ದವಾಗಿ ಜಾತ್ಯಾತೀತ ಶಬ್ದದಿಂದ ಗುಡುಗಿದ್ದು ಕಾಂತಪುರಂ ಉಸ್ತಾದ್  ಆಗಿದ್ದರು..

💪 ಏಕ ಸಿವಿಲ್ ಕೋಡ್ ವಿರೋಧವಾಗಿ ಮಾತೆತ್ತಿರುವುದು ಕಾಂತಪುರಂ ಉಸ್ತಾದರ ಶಬ್ದವಾಗಿತ್ತು.

💪ಶರಿಯತ್ತ್ ವಿವಾದದಲ್ಲಿ ಮಾತೆತ್ತಿರುವುದು ಕಾಂತಪುರಂ ಉಸ್ತಾದರ ಶಬ್ದವಾಗಿತ್ತು.

💪ಸ್ತ್ರೀ ಸಮಾನತೆ ವಿಷಯದಲ್ಲಿ ಮಾತೆತ್ತಿರುವುದು ಕಾಂತಪುರಂ ಉಸ್ತಾದರ ಶಬ್ದವಾಗಿತ್ತು.

💪ಫಿರಂಗಿಯ ಶಬ್ದವನ್ನು ಕೇಳಿ ನಡುಗಿದ ಕಾಶ್ಮೀರಿನ ಅನಾಥ ಮಕ್ಕಳಿಗೆ ಆಶ್ರಯ ನೀಡಿ ಮಾತಾಪಿತರ ಸ್ಥಾನದಲ್ಲಿ ನಿಂತು ಬೆಳೆಸಿದ್ದು
ಕಾಂತಪುರಂ ಉಸ್ತಾದ್ ಮಾತ್ರವಾಗಿತ್ತು.

💪ಗುಜರಾತ್ ನಲ್ಲಿ ಮೋದಿಯ ಮೂಗಿನ ಕೆಳಗೆ ಭಾರತ ರಾಷ್ಟ್ರ ಎಲ್ಲಾ ಭಾರತೀಯರದ್ದು ಎಂದು ಧೈರ್ಯದಿಂದ ಸಾರ್ವಜನಿಕವಾಗಿ ಹೇಳಿದ್ದು ಕಾಂತಪುರಂ ಉಸ್ತಾದರು ಆಗಿತ್ತು.

💪ಒರಿಸ್ಸಾದಲ್ಲೂ, ಗುಜರಾತಿನಲ್ಲೂ, ಅಸ್ಸಮಿನಲ್ಲೂ, ಮತೀಯ ಗಲಭೆಯಿಂದ ತತ್ತರಿಸಿದಂತಹ,  ಒಡೆದ ಮನಸ್ಸುಗಳಿಗೆ ಸಾಂತ್ವನ ಹೇಳಿ, ಕೈ ಹಿಡಿದು ಮೇಲೆತ್ತಲು
ಈ ಇಳಿ ವಯಸಿನಲ್ಲಿ ಓಡಿ ನಡೆದು, ಅಲ್ಲಿಯ ಜನತೆಯ ಮನಸ್ಸಲ್ಲಿ  "ಶೈಖ್ ಸಾಬ್" ಎಂಬ ಗೌರವ ನಾಮದಲ್ಲಿ  ಕರೆಯುತ್ತಿರುವುದು ಕಾಂತಪುರಂ ಉಸ್ತಾದರನ್ನು ಮಾತ್ರ..

💪ಜಾತ್ಯಾತೀತ ಸಮೂಹದಲ್ಲಿ ಅಸ್ಥಿರತೆ  ಉಂಟಾದ ಸಮಯದಲ್ಲಿ ಎಲ್ಲಾ ಧರ್ಮ ವಿಭಾಗದವರನ್ನು ಒಟ್ಟು ಗೂಡಿಸಿ "ಮನಕುಲವನ್ನು ಗೌರವಿಸಿ" ಎಂಬ ಧೈತ್ಯ ಸಂದೇಶದೊಂದಿಗೆ ಕೇರಳ, ಕರ್ನಾಟಕದಲ್ಲಿ ಜನ ಮನಸ್ಸುಗಳನ್ನು ರೋಮಾಂಚಕಗೊಳಿಸಿದ ಯಾತ್ರೆಗಳು ನಡೆಸಿದ್ದು ಕಾಂತಪುರಂ ಉಸ್ತಾದರಾಗಿದ್ದರು.

💪ಮೋದಿಯವರನ್ನು ಮುಖಃತ ಭೇಟಿ ಮಾಡಿ ಮುಸ್ಲಿಮರ ಅವಕಾಶಗಳಿಗಾಗಿ ಮಾತನಾಡಿದವರು ಕಾಂತಪುರಂ ಉಸ್ತಾದರಾಗಿದ್ದರು.

💪ಭಾರತದಲ್ಲಿ 3000 ಕ್ಕಿಂತಲೂ ಹೆಚ್ಚು ಮಸೀದಿಗಳನ್ನು ನಿರ್ಮಿಸಿ, ಸಾವಿರಕ್ಕೂ ಅಧಿಕ ಸ್ಥಾಪನೆಗಳಲ್ಲಿ 10,000 ಕ್ಕೂ ಮಿಕ್ಕ ಶಿಷ್ಯರನ್ನು ಸಮುದಾಯಕ್ಕೆ ಅರ್ಪಿಸಿ ಲಕ್ಷಾಂತರ ವಿಧ್ಯಾರ್ಥಿಗಳನ್ನು, ಕಾರ್ಯಕರ್ತರನ್ನೊಳಗೊಂಡ ಸಂಘಟನೆಯನ್ನು ನಿರ್ಮಿಸಿ ಮುಸ್ಲಿಂ ಸಮೂಹವನ್ನು, ಕೋಮುವಾದ, ಭಯೋತ್ಪಾದನೆಯ ಪಟ್ಟವನ್ನು ಮುಸ್ಲಿಮರ ಮೇಲಿನಿಂದ ಇಲ್ಲದಾಗಿಸಿ ನೈಜ ಮುಸ್ಲಿಮನಾಗಿ "ಅಹ್ಲುಸುನ್ನತ್ತಿನ ಹಾದಿಯಲ್ಲಿ" ಗಟ್ಟಿಯಾಗಿ ನಿಲ್ಲುವಂತೆ ಮಾಡಿದ ಕಾಂತಪುರಂ ಉಸ್ತಾದ್.

 ಈ ಇಳಿ ವಯಸ್ಸಿನಲ್ಲೂ ಸಮುದಾಯಕ್ಕೆ ಬೇಕಾಗಿ ಆಹೋರಾತ್ರಿ  ವಿಶ್ರಮವಿಲ್ಲದೆ ಪರಿಶ್ರಮಿಸುವಾಗಲೂ,     ಕಣ್ಣಿದ್ದೂ ಕುರುಡರಂತೆ ನಟಿಸುವ ಕೆಲವರು ಮನೆಯಲ್ಲಿ ಕುಳಿತು ಸಾಮಾಜಿಕ ತಾಣಗಳಲ್ಲಿ  ಮುಸ್ಲಿಮರನ್ನು ನೆನದು ರಕ್ತ ಕುದಿಸಿ ಮೊಸಲೆ ಕಣ್ಣೀರಿಟ್ಟು ಸಂದೇಶಗಳನ್ನು ಹರಿಯ ಬಿಡುತ್ತಾರೆ.
ಅದರ ಜೊತೆಗೆ ಕಾಂತಪುರಂ ಉಸ್ತಾದರ ಮೇಲೆ ಪರದೊಷಣೆಗಳು, ಕೆಟ್ಟ ಪದಗಳಿಂದ ಹಿಯಾಳಿಸುವುದು ಕಾಣಬಹುದು.
ಇವರ ಈ ಮೊಸಳೆ ಕಣ್ಣಿರು ಮುಸ್ಲಿಂ ಸಮೂಹಕ್ಕೆ ಅಲ್ಲ. ಬದಲಾಗಿ AP ಉಸ್ತಾದರ ಮೇಲಿರುವಂತಹ  ಅಸೂಯೆಗಳಾಗಿವೆ.

ಅಲ್ಲಾಹು ಇವರ ಈ ಶರ್ರ್ ನಿಂದ ಸಮುದಾಯವನ್ನು  ಕಾಪಾಡಿ ಉಸ್ತಾದರಿಗೆ ಆಯುರಾರೋಗ್ಯ, ಆಫಿಯತ್ತ್,
ಧೀರ್ಘಾಯುಷ್ಯ ಕರುಣಿಸಲಿ..
ಆಮೀನ್...

✍🏻 ಗಫೂರ್ ಬಾಯಾರ್
🌱🌱🌱🌱🌱🌱🌱🌱

ಹೆತ್ತ ತಾಯಿಯನ್ನು ಗೌರವಿಸುತ್ತೇವೆ ಆದರೆ, ಆರಾಧಿಸಲಿಕ್ಕಿಲ್ಲ..

💚ಹೆತ್ತ ತಾಯಿಯನ್ನು ಗೌರವಿಸುತ್ತೇವೆ
ಆದರೆ, ಆರಾಧಿಸಲಿಕ್ಕಿಲ್ಲ...

👤ಗುರುವನ್ನು ಗೌರವಿಸುತ್ತೇವೆ
ಆದರೆ, ಆರಾಧಿಸಲಿಕ್ಕಿಲ್ಲ...

⛰ಹೆತ್ತು ಬಿದ್ದ ಮಣ್ಣನ್ನು ಗೌರವಿಸುತ್ತೇವೆ
ಆದರೆ, ಆರಾಧಿಸಲಿಕ್ಕಿಲ್ಲ...

🏙ದೇಶವನ್ನು,
ದೇಶದ ಪತಾಕೆಯನ್ನು,
ದೇಶದ ಹಾಡನ್ನು,
ಗೌರವಿಸುತ್ತೇವೆ,
ಆದರೆ, ಆರಾಧಿಸಲಿಕ್ಕಿಲ್ಲ...

🇮🇳👰🏻ಭಾರತ ನಮಗೆ ಮನುಷ್ಯನಾಗಿ
ಜೀವಿಸಲು ಭಾಗ್ಯ ಲಭಿಸಿದ ಮಣ್ಣು...

🇮🇳ಭಾರತಕ್ಕೆ ಬೇಕಾಗಿ ಜೀವ ಕೊಡುವೆವು,
ಹೃದಯ ಕಿತ್ತು ಕೊಡುವೆವು,

🇮🇳ಭಾರತಕ್ಕೆ ಬೇಕಾಗಿ ಏನೆಲ್ಲ ಕಷ್ಟ ಅನುಭವಿಸಬೇಕಾಗಿ ಬಂದರೂ
ನಾವು ಅದು ಸಂತೋಷದಿಂದ ಸ್ವೀಕರಿಸುವೆವು.

ಆದರೆ,
🇮🇳👳ಭಾರತದ ಮುಸ್ಲಿಂ ಆದ ಕಾರಣಕ್ಕೆ
ರಕ್ತ ಚಿಮ್ಮಿ ಮರಣ ಹೊಂದಬೇಕಾಗಿ ಬಂದರೂ,
ಒಂದನ್ನು ನಾವು ಆರಾಧಿಸಲಿಕ್ಕಿಲ್ಲ.

☝🏾ಆರಾಧನೆಗೆ ಅರ್ಹತೆ ಉಳ್ಳವನು
ಅತೀ ದೊಡ್ಡವನಾದ ಎಲ್ಲವೂ ನಿಯಂತ್ರಿಸಿ ಪರಿಪಾಲಿಸುವ ಎಲ್ಲದಕ್ಕೂ ಕಾರಣನಾದ ಸರ್ವ ಶಕ್ತನಾದ ಅಲ್ಲಾಹನಿಗೆ ಮಾತ್ರ!!!!
ಇದಾಗಿದೆ ನಾವು ಮುಸ್ಲಿಮರ ವಿಶ್ವಾಸ.

✍ಗಫೂರ್ ಬಾಯಾರ್.
💜❤💛💙💖💝💗💟

ಭಾರತದ ಸ್ವಾತಂತ್ರ್ಯ ಮುಸ್ಲಿಂ ಹೋರಾಟಗಾರರಲ್ಲಿ ಪ್ರಮುಖರಾದ ಕೆಲವು ಪಂಡಿತರುಗಳು


🇮🇳🇮🇳🇮🇳🇮🇳🇮🇳🇮🇳🇮🇳🇮🇳
✍ ಗಫೂರ್ ಬಾಯಾರ್
➖➖➖➖➖➖➖➖
1. ನವಾಬ್ ಸಿರಾಜುದೌಲ.

2. ಶಹೀದ್ ಟಿಪ್ಪು ಸುಲ್ತಾನ್.

3. ಹಝ್ರತ್ತ್ ಷಾ ವಲಿಯುಲ್ಲಾಹಿ ಮುಹದ್ದೀಸ್ ದಹ್ಲವಿ.

4. ಹಝ್ರತ್ತ್  ಷಾ ಅಬ್ದುಲ್ ಅಝೀಝ್ ಮುಹದ್ದೀಸ್ ದಹ್ಲವಿ.

5. ಹಝ್ರತ್ತ್ ಸಯ್ಯದ್ ಅಹಮ್ಮದ್ ಶಹೀದ್.

6. ಹಝ್ರತ್ತ್ ಮೌಲಾನ ವಿಲಾಯತ್ತ್ ಅಲಿ ಸಾದಿಕ್ ಪುರಿ.

7. ಅಬೂ ಸಫರ್ ಸಿರಾಜುದ್ದೀನ್ ಮುಹಮ್ಮದ್ ಬಹ್ದೂರ್ ಷಾ ಸಫರ್.

8. ಅಲ್ಲಾಮ ಫಸಲ್ ಹಖ್ ಖೈರಾಬಾದಿ.

9. ಶೆಹ್ಸಾದ್ ಫಿರೋಝ್ ಷಾ.

10. ಮೌಲವಿ ಮುಹಮ್ಮದ್ ಬಖರ್ ಶಹೀದ್.

11. ಬೇಗಂ ಹಝ್ರತ್ತ್ ಮಹಲ್.

12. ಮೌಲಾನ ಅಹ್ಮದುಲ್ಲಾಹಿ ಷಾ.

13. ನವಾಬ್ ಬಹ್ದೂರ್ ಖಾನ್.

14. ಅಝೀಝಾನ್ ಭಾಹಿ.

15. ಷಾ ಅಬ್ದುಲ್ ಖಾದಿರ್ ಲುದಿಯಾನವಿ.

16. ಹಝ್ರತ್ತ್ ಹಾಜಿ ಇಂದಾದುಲ್ಲಾಹ್ ಮುಹಾಜಿರುಲ್ ಮಕ್ಕಿಯ್ಯಿ.

17. ಹಝ್ರತ್ತ್ ಮೌಲಾನ ಮುಹಮ್ಮದ್ ಖ್ವಾಸಿಂ ನದ್ವಿ.

18. ಹಝ್ರತ್ತ್ ಮೌಲಾನ ರಹ್ಮತ್ತುಲ್ಲಾಹ್ ಖೈರ್ ನವಿ.

19. ಶೈಖುಲ್ ಹಿಂದ್ ಹಝ್ರತ್ತ್ ಮೌಲಾನ ಮಹ್ಮೂದುಲ್ ಹಸ್ಸನ್.

20. ಹಝ್ರತ್ತ್ ಮೌಲಾನ ಉಬೈದುಲ್ಲಾಹ್ ಸಿಂದಿ.

21. ಹಝ್ರತ್ತ್ ಮೌಲಾನ ರಶೀದ್ ಅಹ್ಮದ್ ಗಂಗೋಯಿ.

22. ಹಝ್ರತ್ತ್ ಮೌಲಾನ ಅನ್ವರ್ ಷಾ ಕಾಶ್ಮೀರಿ.

23. ಮೌಲಾನ ಬರ್ಕತ್ತುಲ್ಲಾಹ್ ಧೋಪ್ಪಾಲಿ.

24. ಹಝ್ರತ್ತ್ ಮೌಲಾನ ಮುಫ್ತಿ ಖಿಫಾಯತ್ತುಲ್ಲಾಹ್.

25. ಶಾಹ್ಬಾನುಲ್ ಹಿಂದ್ ಮೌಲಾನ ಅಹ್ಮದ್ ಸಈದ್ ದಹ್ಲವಿ.

26. ಹಝ್ರತ್ತ್ ಮೌಲಾನ ಸಯ್ಯದ್ ಹುಸೈನ್ ಅಹ್ಮದ್ ಮದನಿ.

27. ಸಯ್ಯಿದುಲ್ ಅಹ್ರಾರ್ ಮೌಲಾನ ಮುಹಮ್ಮದ್ ಅಲಿ ಜಾಉಹರ್.

28. ಮೌಲಾನ ಹಝ್ರತ್ತ್ ಮೊಹಾನಿ.

29. ಮೌಲಾನ ಆರಿಫ್ ಹಿಸ್ವಿ.

30. ಮೌಲಾನ ಅಬ್ದುಲ್ ಕಲಾಂ ಅಝಾದ್.

31. ರಈಸುಲ್ ಅಹ್ರಾರ್ ಮೌಲಾನ ಹಬೀಬುಲ್ ರಹ್ಮಾನ್ ಲುದಿಯಾನವಿ.

32. Dr. ಸೈಫುದ್ದೀನ್ ಕ್ವಚ್ಚುಲು ಅಮೃತ್ಸರಿ.

33. ಮಾಸಿಹುಲ್ ಮುಲ್ಕ್ ಹಕೀಮ್ ಅಜ್ಮಲ್ ಖಾನ್.

34. ಮೌಲಾನ ಮಸ್ಹರುಲ್ ಹಖ್.

35. ಮೌಲಾನ ಸಫರ್ ಅಲಿ ಖಾನ್.

36. ಅಲ್ಲ ಇನಾಯತ್ತುಲ್ಲಾಹ್ ಖಾನ್ ಮಶ್ರಿಖ್.

37. Dr. ಮುಕ್ತಾರ್ ಅಹ್ಮದ್ ಅನ್ಸಾರಿ.

38. ಜನರಲ್ ಶಾನವಾಸ್ ಖಾನ್.

39. ಹಝ್ರತ್ತ್ ಮೌಲಾನ ಸಯ್ಯದ್ ಮುಹಮ್ಮದ್ ಮಿಯಾನ್.

40. ಮೌಲಾನ ಮುಹಮ್ಮದ್ ಹಿಫ್ ಸ್ಸೂರ್ ರಹ್ಮಾನ್ ಸೊಯ್ಯಹರ್ವಿ.

✍ ಗಫೂರ್ ಬಾಯಾರ್
🇮🇳🇮🇳🇮🇳🇮🇳🇮🇳🇮🇳🇮🇳🇮🇳
ಮುಂದುವರಿವುದು.

ಅಸೂಯೆಗಾರರೇ ಬರಲಿದೆ ಒಂದು ದಿನ



🎓ಕಾಂತಪುರಂ ಉಸ್ತಾದರು ಭಾರತದ ಪ್ರಧಾನ ಮಂತ್ರಿಯನ್ನು  ಭೇಟಿ ಮಾಡಿದರೆ BJP  ಜತೆ  ಒಪ್ಪಂದ...

🎓P T A ರಹೀಮರನ್ನು ಕಂಡರೆ ಎಡಪಕ್ಷದವರ ಜೊತೆ ಒಪ್ಪಂದ....

🎓  ಬಿಜೆಪಿ ಅಭ್ಯರ್ಥಿಯಾಗಿರುವಂತಹ ಬಾದುಷಾ ತಂಗಳ್ ತನ್ನ ರಾಜಕೀಯ ನಿಲುವನ್ನು ಗಟ್ಟಿಮಾಡಲೆಂದು ಎಪಿ ಉಸ್ತಾದರ ಹೆಸರು ಉಚ್ಚರಿಸಿದರೆ ಉಸ್ತಾದರು ಬಿಜೆಪಿ ಬೆಂಬಲಿಗ.

🎓ಉಮ್ಮನ್ ಚಾಂಡಿಯನ್ನು ಕಂಡರೂ, ಕುಂಞಾಲಿ  ಕುಟ್ಟಿಯನ್ನು ಕಂಡರೂ.... ಉಸ್ತಾದರ  ವಿರುದ್ದವಾಗಿ  ಬೊಗಳಿ ಸಂದೇಶಗಳನ್ನು ಹರಿಯಬಿಡುವ  ಹಲವರನ್ನು ನಮ್ಮ ಸಮುದಾಯದಲ್ಲಿ ಕಾಣಬಹುದು.

🌎ವಿಶ್ವದ ಹಲವು ರಾಷ್ಟ್ರಗಳ ನೇತಾರರು ಉಸ್ತಾದರನ್ನು ಕಾಣುವುದು, ಆಮಂತ್ರಿಸುವುದು,
ಇವೆಲ್ಲವೂ ಕಾಂತಪುರಂ ಉಸ್ತಾದರು ಇಂಡಿಯನ್ ಮುಸಲ್ಮಾನರ ನೇತಾರರು ಎಂಬ ನೆಲೆಯಲ್ಲಿ ಆಗಿದೆ.

ಅಲ್ಲದೆ ಕೇರಳ ಹಾಗೂ ಕರಾವಳಿ ಭಾಗದಲ್ಲಿ ಅತ್ತಿತ ಅಲೆದಾಡಿ, ಪಂಡಿತ ಸಮೂಹವನ್ನು  ನಿಂದಿಸುತ್ತಾ,
ಪರದೂಷನೆಯನ್ನೇ ನಿತ್ಯ ಕಾಯಕ ಮಾಡಿದ ಒಂದು ಸಮೂಹ  ಇದಕ್ಕೆಲ್ಲ ಅರ್ಹರಲ್ಲವೆಂದು ಸಾಮಾನ್ಯ ಬುದ್ದಿ   ಇರುವ ಜನರಿಗೂ, ಎಲ್ಲಾ ದೇಶಗಳ ಪಂಡಿತ ಸಮೂಹಕ್ಕೂ ಗೊತ್ತಿರುವಂತಹ ವಿಷಯವಾಗಿದೆ.
 ಅದಕ್ಕೆ ಉಸ್ತಾದರ ಮೇಲೆ ಅಸೂಯೆಪಟ್ಟು ಯಾವುದೇ ಪ್ರಯೋಜನವಿಲ್ಲ.
ಕಾರಣ ಈ  ವಯಸ್ಸಿನಲ್ಲೂ  ಕಾಂತಪುರಂ ಉಸ್ತಾದರು ಬಿಡುವು ಇಲ್ಲದೆ ಸಮುದಾಯಕ್ಕೆ ಬೇಕಾಗಿ ಹಲವಾರು ಜೀವ ಕಾರುಣ್ಯ ಕೆಲಸಗಳಲ್ಲಿ ನಿರತರಾಗಿದ್ದಾರೆ. ನಿರ್ಮಾಣದಲ್ಲಿ ಇರುವಂತಹ, ಹಾಗೂ ನಿರ್ಮಿಸಿದಂತಹ ಹಲಾವರು ಮಸೀದಿಗಳು, ಲೆಕ್ಕವಿಲ್ಲದಷ್ಟು ವಿದ್ಯಾನಿಲಯಗಳು, ದಅವಾ, ದೀನೀ ಬೋಧನಾ ಕಾರ್ಯಕ್ರಮಗಳು, ಇವನ್ನೆಲ್ಲಾ ನಡೆಸಿಕೊಂಡು ಬರಲು ಕಾಂತಪುರಂ ಉಸ್ತಾದ್ ಅಲ್ಲದೆ ಬೇರೆ ಯಾರಿದ್ದಾರೆ.?

ಅದರಿಂದ್ದ ನೀವು ನಿಮ್ಮ ಕಾಯಕವಾದ ಅಪವಾದಗಳು, ಪರದೊಷಣೆಗಳು ಮುಂದುವರೆಸುತ್ತಾ ಹೋಗಿ..
ನಿಮ್ಮ ಅಸೂಯೆಯಿಂದಾಗಿ ಉಸ್ತಾದರಿಗೆ ಯಾವುದೇ ನಷ್ಟ ಸಂಭವಿಸಲ್ಲ.  ಬದಲಾಗಿ
ಉಸ್ತಾದರ ಕೀರ್ತಿ ಬಾನೆತ್ತರಕ್ಕೆ ಹಾರುತ್ತಿದೆ..
ಅದೂ ನಿಮ್ಮ ಖರ್ಚಿನಲ್ಲಿ..

ಆದರೆ ಮರೆಯದಿರಿ...
 ಒಂದು ದಿನ ಬರಲಿದೆ
ಅಸೂಯೆಗಳನ್ನೂ, ಪರದೂಷಣೆಗಳನ್ನೂ ವಿಚಾರಣೆ ನಡೆಸುವಂತಹ ನ್ಯಾಯಾಲಯ,
ನಿಮ್ಮ ನಾಲಗೆ ಹಿಡಿದು ಕಟ್ಟುವಂತಹ ನ್ಯಾಯಾಲಯ,   ಅಂದು ನೀವು ಹಲ್ಲು ಕಚ್ಚಿ ಯಾವುದೇ ಪ್ರಯೋಜನವಿಲ್ಲ. ಅನುಭವಿಸಲೇಬೇಕಾಗುತ್ತದೆ.
ಪ್ರತಿಯೊಂದಕ್ಕೂ ಉತ್ತರಿಸಲೇಬೇಕಾಗುತ್ತದೆ.

✍🏻ಗಫೂರ್ ಬಾಯಾರ್.

ಹಿಂದಿನಿಂದ ಪ್ರಾರಂಭಗೊಂಡ ಸುಳ್ಳು ಆರೋಪಗಳು ಇಂದಿಗೂ ಚಾಳ್ತಿಯಲ್ಲಿದೆ.... ಸಮಸ್ತ ಮುಶಾವರದಿಂದ ಹೊರನಡೆದಿರುವುದು ಹನ್ನೊಂದು ಪಂಡಿತರು


1- ಉಳ್ಳಾಲ ತಂಗಳ್
2- ಎಂ.ಎ. ಉಸ್ತಾದ್
3- ಎ.ಪಿ. ಉಸ್ತಾದ್
4- ಮಾನುಪ್ಪ ಉಸ್ತಾದ್
5- ಪಿ.ಎ. ಉಸ್ತಾದ್
6- ಚಿತ್ತಾರಿ ಉಸ್ತಾದ್
7- ಸಿ. ಅಬ್ದುಲ್ ರಹ್ಮಾನ್ ಉಸ್ತಾದ್
8- ಅಂಡೋಣ ಮುಹಿಯ್ಯದ್ದಿನ್ ಉಸ್ತಾದ್
9- ಇಂಬಿಚ್ಚಿ ಉಸ್ತಾದ್
10- ಸಿ.ಎಂ. ಅಬ್ದುಲ್ಲ ಉಸ್ತಾದ್ ( ಚೆಂಬರಿಕ ಖಾಝಿ)
11- ಅಂಡೋಣ ಅಬ್ದುಲ್ಲ ಉಸ್ತಾದ್

➖ಶಿರಿಯ ಆಲಿಕುಂಞ ಉಸ್ತಾದ್ ಹಾಗು,
➖ವೈಲತ್ತೂರ್ ಬಾವ ಉಸ್ತಾದ್

ಇವರಲ್ಲಿ ಸಿ,ಎಂ ಅಬ್ದುಲ್ಲ ಉಸ್ತಾದ್ ಹಾಗೂ ಅಂಡೋಣ ಅಬ್ದುಲ್ಲ ಉಸ್ತಾದರು ನಂತರ ಮೊದಲಿನ ಪಕ್ಷಕ್ಕೆ ಸೇರಿದವರು.

ಪಿ.ಎ. ಉಸ್ತಾದ್ ಮತ್ತು ಇಂಬಿಚ್ಚಿ ಉಸ್ತಾದರು ಮೊದಲಿಗೆ ನಿಷ್ಪಕ್ಷತೆ ಪಾಲಿಸಿದರು.

ಇಂಬಿಚ್ಚಿ ಉಸ್ತಾದ್ ನಂತರ ಮೊದಲಿನ ಸಮಸ್ತದಲ್ಲಿ ನಿರತರಾದರು.

ಪಿ.ಎ. ಉಸ್ತಾದರು ಎಪಿ ಉಸ್ತಾದರ ನಾಯಕತ್ವದ ಸಮಸ್ತಕ್ಕೆ ಸೇರಿದರು.

ಉಳ್ಳಾಲ ತಂಗಳರವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸಿದ  ನಂತರವಾಗಿತ್ತು ಅಂದಿನ ವಿವಾದ ಮುಶಾವರ.

15 ವರ್ಷಗಳಲ್ಲಿ  ನಡೆದ ಮುಶಾವರ ಸಭೆಗಳಲ್ಲಿ ಎರಡು ಅಥವಾ ಮೂರು ಸಭೆಗಳಲ್ಲಿ ಮಾತ್ರವೇ ಕಣ್ಣಿಯತ್ತ್ ಉಸ್ತಾದರವರು ಅಧ್ಯಕ್ಷತೆ ವಹಿಸಿರುವುದು.
ಉಳಿದ ಎಲ್ಲಾ  ಸಭೆಗಳಲ್ಲಿಯೂ ಅಧ್ಯಕ್ಷರು ಉಳ್ಳಾಲ ತಂಗಳರಾಗಿದ್ದರು.!

ಹೀಗೆ ಒಬ್ಬರನ್ನು ಅದ್ಯಕ್ಷ ಸ್ಥಾನದಿಂದ  ಬದಲಾಯಿಸಿರುವುದು ಇಷ್ಟವಾಗದೆ, ಸಭೆ ಆರಂಭಿಸಿದ ಕೂಡಲೇ ಹೊರ ನಡೆದವರಾಗಿದ್ದಾರೆ ಶಿರಿಯ ಆಲಿಕುಂಞ ಉಸ್ತಾದರವರು.
ಇವರು ನಂತರ ರೂಪೀಕರಿಸಿದ ಎಪಿ ಉಸ್ತಾದರ ನಾಯಕತ್ವ ಸಮಸ್ತಕ್ಕೆ  ಸೇರಿದರು.

ವೈಲತ್ತೂರ್ ಬಾವ ಉಸ್ತಾದವರು ಅಂದು ಸಭೆಯಲ್ಲಿ ಹಾಜರಾಗಿರಲಿಲ್ಲ,
ಅವರು ಕೂಡ ನಮ್ಮ ಜೊತೆ ಸೇರಿದರು.

16-1-1989 ರಂದು ನಡೆದಂತಹ ಮುಶಾವರ ಸಭೆಯಲ್ಲಿ ನಡೆದ ಚರ್ಚೆಯ ವೈಮನಸ್ಸಿನಿಂದ  ಈ ಮೇಲೆ ತಿಳಸಿದಂತಹ 11 ಪಂಡಿತರು ಮುಶಾವರದಿಂದ ಹೊರ ನಡೆದಿರುವುದು.

👉ನಂತರ 18-02-1989 ರಂದು  (ಅಂದರೆ ಸರಿಯಾಗಿ 32 ದಿನದ ನಂತರ) ನಡೆದ  ಅವಿವಕ್ತ ಸಮಸ್ತ ಸಭೆ ಸೇರಿ ಹೊರ ನಡೆದವರಲ್ಲಿ  6 ಜನರನ್ನು ಸಮಸ್ತವು ವಜಾ ಮಾಡಿತು ಎಂದು ಘೋಷಿಸಿ ಸಮಸ್ತದ ಪತ್ರಿಕೆಯಲ್ಲಿ ವಾರ್ತೆ ನೀಡಿದರು.

➖ ಒಂದು ತಿಂಗಳ ಮೊದಲು ಸ್ವತಃ ಹೊರಹೋದವರನ್ನು ಒಂದು ತಿಂಗಳ ನಂತರ  ವಜಾ ಮಾಡಿದ ವಿಶ್ವದ ಪ್ರಥಮ ಸಂಘಟನೆ!!


ಈ ಆರು ಪಂಡಿತರು   ಎರುಣಾಕುಳಂ ಸಮ್ಮೇಳನದಲ್ಲಿ ಬಾಗವಹಿಸಿದಕ್ಕಾಗಿ  ಅವರನ್ನು ಮುಶಾವರದಿಂದ ವಜಾ ಮಾಡಿದ್ದಾಗಿ ಹೇಳಿಕೆ ನೀಡಿರುವುದು ಸತ್ಯಕ್ಕೆ ವಿರುದ್ದವಾಗಿದೆ,

ಕಾರಣ, ಆ ಸಮ್ಮೇಳನದ ಪ್ರಮುಖರಾಗಿ ಇದ್ದಂತಹ  ಸಿ. ಅಬ್ದುಲ್ ರಹ್ಮಾನ್ ಉಸ್ತಾದರನ್ನು ಅವರು  ವಜಾ ಮಾಡಲಿಲ್ಲ!.

ವಿವಾದ ಮುಶಾವರದಲ್ಲಿ ಎಷ್ಟು ಸದಸ್ಯರು ಬಾಗವಹಿಸಿದರು ಎಂದು ಸಂಕ್ಷಿಪ್ತವಾಗಿ ವ್ಯಕ್ತವಲ್ಲ.

ಆದರೆ,  ಮುಶಾವರ ಸದಸ್ಯರಲ್ಲದವರನ್ನು  ವಜಾ ಮಾಡಲು ಸೇರಿದ ಸಭೆಯಲ್ಲಿ 3 ಸದಸ್ಯರನ್ನು, ಹಾಗೂ
 23-07-1992 ರಂದು ಸೇರಿದ ಸಭೆಯಲ್ಲಿ 22 ಸದಸ್ಯರನ್ನು ಅವರ ಚೇಳಾರಿ ಮುಶಾವರಕ್ಕೆ ಸೇರಿಸಿದಾಗಿ ಅವರ ರೇಖೆಯಲ್ಲಿ ಕಾಣುತ್ತದೆ.
ಇದರ ಅರ್ಥ,  ವಿವಾದ ಮುಶಾವರ ನಡೆಯುವಾಗ ಗರಿಷ್ಟ 25 ಸದಸ್ಯರು ಮಾತ್ರವೇ ಮುಶಾವರದಲ್ಲಿ ಇದ್ದುದೆಂದು ವ್ಯಕ್ತವಾಗುತ್ತದೆ.

ಇವರಲ್ಲಿ ಎಷ್ಟು ಸದಸ್ಯರು ಸಭೆಯಲ್ಲಿ ಬಾಗವಹಿದ್ದಾರೆಂದು ವ್ಯಕ್ತವಲ್ಲ....
ಅಂದಿನಿಂದ ಆರಂಭಗೊಂಡ ಸುಳ್ಳು ಆರೋಪಗಳು ಇಂದಿಗೂ ಚೇಳಾರಿ ಸಮಸ್ತದಲ್ಲಿ ಚಾಳ್ತಿಯಲ್ಲಿದೆ...

✍ ಜಿಬಿ

ದೀನಿಯುಳ್ಳ ಪತ್ನಿ

🙎🏻
➖➖➖➖➖➖➖

☄ಅವಳನ್ನು ನಮಗೆ ಸಂಶಯ ಮಾಡಬೇಕೆಂದಿಲ್ಲ.

☄ನಾವು ಹತ್ತಿರ ಇಲ್ಲದಿದ್ದರೂ ಅವಳ ಶರೀರವನ್ನು ಸಂರಕ್ಷಿಸುವಳು.

☄ನಮಗೆ ಬೇಕಾಗಿ ಕಾರುಣ್ಯವನಾದ ಅಲ್ಲಾಹುವಿನ ಹತ್ತಿರ ದುವಾ ಮಾಡುವಳು.

☄ಮಕ್ಕಳಿದ್ದರೆ ಅವರನ್ನು ಒಳ್ಳೆಯ ರೀತಿಯಲ್ಲಿ ಪರಿಪಾಲನೆ ಮಾಡಲು ಶ್ರಮಿಸುವಳು.

☄ಒಳಿತು ಮಾಡುವ ಕಾರ್ಯದಲ್ಲಿ ಅವಳು ನಮಗೆ ಸಹಾಯ ಮಾಡುವಳು.

☄ಚಾಟಿಂಗ್ ವರ್ದಿಸಿದ ಈ ಕಾಲಘಟ್ಟದಲ್ಲಿ ಅನ್ಯರ ಹತ್ತಿರ ಅನವಶ್ಯಕ ಚಾಟ್ ಮಾಡುವಳು ಎಂದು ಭಯಪಡುವ ಅಗತ್ಯವಿಲ್ಲ.

☄ಗಂಡ ಇರುವಾಗ ಚಾಟಿಂಗ್ ಬ್ಲಾಕ್ ಲಿಸ್ಟ್ ನಲ್ಲಿ ಇಟ್ಟು ಗಂಡ ಹೊರಗಡೆ ಹೋಗುವಾಗ ಬ್ಲಾಕ್ ತೆಗೆಯುತ್ತಾಳೆ ಅನ್ನೋ ಭಯಬೇಡ.

☄ಗಂಡ ವಿದೇಶದಲ್ಲಿ ಇರುವಾಗ ಬೇರೆಯವರ ಹತ್ತಿರ ಕಾಲ್ ಮಾಡಿ ಮಾತಾನಾಡುತ್ತಾಳೆ ಅನ್ನುವ ಭಯ ಬೇಡ.

☄ಮತ್ತೊಬ್ಬರ ಪರದೂಷಣೆ ಹೇಳಿ ನಮ್ಮನ್ನು ಉಪದ್ರವಿಸಲಿಕ್ಕಿಲ್ಲ.

☄ನಮ್ಮ ಕುಟುಂಬವನ್ನು ಪ್ರೀತಿಸಿ, ಅವರಿಗೆ ಉಪಕಾರ ಮಾಡುವ ಕಾರ್ಯದಲ್ಲಿ ಜಿಪುಣತೆ ತೋರಿಸಲಿಕ್ಕೆ ಇಲ್ಲ.

☄ ಸೀರಿಯಲ್ ನೋಡಲು TV ತೆರೆವುದರ ಬದಲು ಅಲ್ಲಾಹುವಿನ ಖುರ್ಆನ್ ತೆರೆದು ಪಾರಾಯಣ ಮಾಡುವಳು.

☄ಒಳ್ಳೆಯ ಕಾರ್ಯಗಳು ಹೇಳಿದರೆ ಅದನ್ನು ತಿಳಿದು ಅದಕ್ಕೆ ಉತ್ಸಾಹ ತೋರುವಳು.

☄ಇರುವುದರಲ್ಲಿ ತೃಪ್ತಿಪಟ್ಟು ಜೀವಿಸಲು ಶ್ರಮಿಸುವಳು.

☄ನಾವು ಏನಾದರು ಹೇಳಿದರೆ ನಮ್ಮನ್ನು ಅನುಸರಿಸುವಳು, ದಿಕ್ಕರಿಸಲಿಕ್ಕಿಲ್ಲ.

☄ಕೋಪ ಬಂದರೂ ಮತ್ತೊಬ್ಬರ ಮುಂದೆ ನಮ್ಮನ್ನು ಅವಮಾನಿಸಲಿಕ್ಕಿಲ್ಲ .

☄ಅಲ್ಲಾಹುವನ್ನು ಅನುಸರಿಸಿ ಜೀವಿಸಿಕೊಂಡು ನಮಗೆ ಪ್ರಾರ್ಥಿಸುವಳು.

☄ಮನೆಯಲ್ಲಿ ಸಮಾದಾನ ನೆಲೆ ಕೊಳ್ಳಲು ಶ್ರಮಿಸುವಳು.

☄ನಮಗೆ ನೋಡಿ ಸಂತ್ರಪ್ತಿಗೊಳ್ಳವ ವಿಧದಲ್ಲಿ ಅವಳ ಶರೀರ ಸೌದರ್ಯವನ್ನು ಕಾಪಾಡುವಳು.

 ಅನ್ಯರು ನೋಡಿ ಆಸ್ವದಿಸುವ ವಿಧದಲ್ಲಿ ಅವಳು ವಸ್ತ್ರಧಾರಣೆ ಮಾಡಲಿಕ್ಕಿಲ್ಲ .

〰〰〰〰〰〰〰〰
ವಿವಾಹ ಆಗುವವರೇ.... 💟

☄ದೀನಿಯುಳ್ಳ ವದುವನ್ನು ಆಯ್ಕೆ ಮಾಡಿ, ಜೀವನ ಸಂತೋಷವುಲ್ಲದಾಗಲು ಇದು ನಿಮಗೆ ಸಹಾಯವಾಗುವುದು.
〰〰〰〰〰〰〰〰

ವಿವಾಹ ವಾದರೆ .... 💞
ಸಹಧರ್ಮಿಣಿಯಲ್ಲಿ ಕಾಣುವ ಏನಾದರೂ ಸಣ್ಣ ಪುಟ್ಟ ತಪ್ಪುಗಳನ್ನು ಹೆಕ್ಕಿ ತೋರಿಸಿ ನಾವು ಅವರನ್ನು ದೂಷಿಸಬಾರದು. ನಮಗೆ ಸಂತೋಷ ಕೊಡುವ ಹಲವು ಒಳ್ಳೆಯ ಗುಣಗಳು ಅವಳ ಹತ್ತಿರ ಇರಬಹುದು. ನಾವು ಅದನ್ನು ಯೋಚಿಸಬೇಕು. ನಾವು ಮನುಷ್ಯರಲ್ಲವೇ ತಪ್ಪು ಬರುವುದು ಸಹಜ. ಪರಸ್ಪರ ಹೇಳಿ ತಿದ್ದಲು ಶ್ರಮಿಸಬೇಕು. ನಮ್ಮ ಸ್ತ್ರೀಗಳಿಗೆ ನಾವು ಆಗಿದ್ದೇವೆ ಸಮಾದಾನ/ಸಂತೋಷ.

 ಎಷ್ಟು ಪ್ರಯಾಸಗಳು ಸಹಿಸಿ ಅವಳು ನಮಗೆ ಬೇಕಾಗಿ ಒಂದೊಂದು ಕಾರ್ಯಗಳನ್ನು  ಮಾಡುವುದು/ ತಯಾರಿಸುವುದು.
ಕೆಲವರು ಹೋಟೆಲು ಕೆಲಸದವರ ಹಾಗೆ ಬೆಳಿಗ್ಗೆ  ಕೆಲಸಕ್ಕೆ ಸೇರಿದರೆ ಸಾಯಂಕಾಲ ಮುಗಿಯುದು.

 ಸಾಧುಗಳಾದ ಅವರಿಗೆ ನಾವಲ್ಲವೇ ಅವರ ಎಲ್ಲಾ ನೋವುಗಳನ್ನು ತಿಳಿಯಬೇಕಾದದ್ದು. ಬೇರೆ ಯಾರಿದ್ದಾರೆ ನಮ್ಮ ಮಕ್ಕಳನ್ನು ಪಾಲನೆ ಮಾಡಿ ಬೆಳೆಸಲು? ಅವರೆಷ್ಟು ಕಷ್ಟಗಳು ಅನುಭವಿಸುತ್ತಾರೆ. ಅವರಿಗೆ ನಾವು
ಸಹಾಯಿ ಆಗುವಾ.... ಇನ್ ಷಾ ಅಲ್ಲಾಹ್..

ನಾವು ಅವರಿಗೆ ಮನ ತುಂಬಾ ಸ್ನೇಹ ಕೊಡುವವರಾಗುವರಾಗೋಣ....
ಆ ಸಾದುಗಳಿಗೆ ಪ್ರೀತಿ ಮಾತ್ರವೇ ಬೇಕಾಗಿರುವುದು.
❤❤❤❤❤❤❤

✍ ಗಫೂರು ಬಾಯರ್
🔹🔹🔹🔹🔹🔹🔹

🌹🌹🌹🌹🌹🌹🌹🌹


💚ಮದೀನ ಎಷ್ಟು ಸುಂದರವಾಗಿದೆ 💚ಮದೀನ,
💚ಅಲ್ಲಿಯ ಒಂದೊಂದು ಮಣ್ಣು 💚ಕಣಗಳು ಎಷ್ಟು ಪುಣ್ಯ 💚ಮಾಡಿರುದಾಗಿದೆ,
💚ಒಂದೊಂದು ಪರ್ವತಗಳಿಗೂ,
💚ಎಷ್ಟೆಷ್ಟು💚ಕಥೆಗಳು ಹೇಳಲಿಕ್ಕಿರಬಹುದು.
💚ವಿಶ್ವದ ನಾಯಕರಾದ ನಮ್ಮ 💚ಮುದ್ದಿನ ನಬಿಯರ ﷺ ರೌಳಾ ಶರೀಫ್ 💚ಎಷ್ಟು ಮನೋಹರವಾಗಿದೆ 💚ಕಾಣಲು.
💚ಎಷ್ಟು ಬರೆದರೂ, ಹೇಳಿದರೂ,
💚ಮುಗಿಯಲಿಕ್ಕಿಲ್ಲ ಮದೀನದ 💚ಸೌoದರ್ಯ....
💚ಜಗತ್ತಿನ ಮುಸ್ಲಿಮರಿಗೆ ಒಂದೇ 💚ಒಂದು ಆಗ್ರಹ ಮಾತ್ರ 💚ಇರುವುದು ಅಲ್ಲಾಹ್.... ಈ 💚ಮದೀನಾಕ್ಕೆ ಬoದು, ನಮ್ಮ 💚ಮಾಣಿಕ್ಯ ಮುತ್ತಾದ 💚ನಬಿಯವರನ್ನು (ಸಅ) ಕಾಣಲು, 💚ಸಲಾಂ ಹೇಳಲು,

💚ಮುತ್ತಿನಂತ ನಬಿಯವರ ﷺ 💚ಮಸ್ಜಿದ್'ನಲ್ಲಿ ನಮಾಝ್ 💚ಮಾಡಲೂ, ಖುರ್'ಆನ್ ಓದಲು, 💚ಇರುವ ಭಾಗ್ಯ ಕೊಟ್ಟು 💚ಅನುಗ್ರಹಿಸು ಅಲ್ಲಾಹ್....
💚ಆಮೀನ್.

🌹ಸ್ವಲ್ಲಲ್ಲಾಹು ಅಲಾ ಮುಹಮ್ಮದ್... ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ 🌹

✍ ಗಫೂರ್ ಬಾಯಾರ್
🌷🌷🌷🌷🌷🌷🌷🌷🌷

🌹🌹🌹ಇಷ್ಕೇ ಮದೀನ🌹🌹🌹



✍ಗಫೂರ್ ಬಾಯಾರ್.
🍄🍄🍄🍄🍄🍄🍄🍄

ಮದೀನ ಸುಂದರವಾಗಿದೆ
ಮದೀನ ನಿಶ್ಯಬ್ದವಾಗಿದೆ
ಮದೀನ ಆವೇಶಭರಿತವಾಗಿದೆ
💚💚💚💚💚💚💚💚
ಇಲ್ಲ ಮುಗಿದಿಲ್ಲ ಮದೀನವನ್ನು
ಎಷ್ಟು ವರ್ಣಿಸಿ ಬರೆದರೂ ಮುಗಿಯಲಸಾಧ್ಯ
💜💜💜💜💜💜💜💜
ಒಮ್ಮೆಯಾದರು ಮದೀನಕ್ಕೆ ಹೋಗಬೇಕು, ಅಲ್ಲ.
 ಹಲವಾರು ಬಾರಿ ಹೋಗಬೇಕು.
💛💛💛💛💛💛💛💛
ಯಾರು ತಾನೆ ಹೋಗಲು ಇಷ್ಟಪಡದೆ ಇರಬಹುದು?
ಹೋದವರು ಪುನಃ ಪುನಃ ಹೋಗಲಿಚ್ಚಿಸುತ್ತಾರೆ...
💙💙💙💙💙💙💙💙
ಯಾತಕ್ಕಾಗಿ ಹೀಗೆ?
ಈಮಾನ್ ಮನಸ್ಸಲ್ಲಿ ಆಳವಾಗಿ ಬೇರೂರಿದೆ
❤❤❤❤❤❤❤❤
ಅಯಸ್ಕಾಂತ ಮತ್ತು ಕಬ್ಬಿಣದ ಹಾಗೆ ಇಮಾನ್ ಇರುವವನಿಗೂ ಮದೀನಕ್ಕೂ ಪರಸ್ಪರ ಇರುವ ಸಂಬಂಧ,
💗💗💗💗💗💗💗💗
ಕೆಲವರಿಗೆ ಮದೀನಾವೆಂದರೆ ಅಲರ್ಜಿಯಾಗಿದೆ,
ಅವರು ಮದೀನಾವನ್ನು  ಪ್ರಶ್ನಿಸುವವರಾಗಿರುವರು, ಕೆಲವೊಮ್ಮೆ ಮದೀನ ಹೊಡೆದು ಉರಳಿಸುವೆವು ಎಂದು ಬೊಗಳುತ್ತಿರುವರು,
💟💟💟💟💟💟💟💟
ಅದು ಅಲರ್ಜಿಯಲ್ಲ.. ಮನದಲ್ಲಿ ಇಮಾನ್ ಇಲ್ಲದ ಹತಭಾಗ್ಯಹೀನರವರು.
❣❣❣❣❣❣❣❣
ಪ್ರತಿಯೊಬ್ಬನ ಮನದಾಳದ ಅತಿಯಾಸೆ...
💓💓💓💓💓💓💓💓
 ನಡೆದು ನಡೆದು ಕಾಲು ಮುರಿದು ಮದೀನದಲ್ಲಿ ಉಳಿಯಬೇಕು.
💖💖💖💖💖💖💖💖
 ಹಾರಿ ಹಾರಿ ರೆಕ್ಕೆ ಮುರಿದು ಮದೀನದಲ್ಲಿ ಬೀಳಬೇಕು.
💓💓💓💓💓💓💓💓
ಹಾಗೆ ಹಬೀಬರ ﷺ ಹತ್ತಿರ ತುಂಬಾ ಕಾಲ ಇರಬೇಕು.
💝💝💝💝💝💝💝💝
ಕೊನೆಗೆ ಬಖೀಅ್ ಎಂಬಲ್ಲಿ ಶಾಶ್ವತವಾಗಿ ವಿಶ್ರಾಂತಿಗೊಳ್ಳಲು ಅಲ್ಪ ಸ್ಥಳ ಸಿಗಬೇಕು.
💕💕💕💕💕💕💕💕

✍ಗಫೂರ್ ಬಾಯಾರ್.

🍀ಸುಲ್ತಾನುಲ್ ಉಲಮಾ🍀 💐💐💐💐💐💐💐💐💐



☘ನಮ್ಮ ಸುಲ್ತಾನುಲ್ ಉಲಮಾರಿಗೆ 7⃣8⃣⃣ವಯಸ್ಸಾಯಿತ್ತು.☄ ☄[22.03.2017ಕ್ಕೆ.]
☄ಜನನ: 22.03.1939.
☄ತನ್ನ ಜೀವನದ ಪ್ರತಿಯೊಂದು ದಿವಸವು
ದೀನಿಗೂ,☄ ಸಮುದಾಯಕ್ಕೂ ಬೇಕಾಗಿ ರಾತ್ರಿ ಹಗಲೆನ್ನದೆ ದೀನಿ ದಅ್'ವತ್ತ್ ಮಾಡುತ್ತಿರುವ  ಕ್ರಾಂತಿ ಪುರುಷ.☄ ಸಾವಿರಾರು ಯತೀಂ  ಮಕ್ಕಳ ಸಂರಕ್ಷಣೆ  ಮೂಲಕ ಅವರ ಮಾತಾ ಪಿತರ ಸ್ಥಾನದಲ್ಲಿ ನಿಂತು ಸಂರಕ್ಷಕರಾದರು.☄ ಆನಾಥ ನಿರ್ಗತಿಕರ ಸಂರಕ್ಷಿಸುವ,☄ ಅವರ ಆಶಾ  ಕೇಂದ್ರವಾಗಿ,☄ ತನ್ನ ಜೀವನ ತ್ಯಾಗ ಮಾಡಿದ ಆ ಮಹಾ ಮನುಷಿ.....☄ ಸುಲ್ತಾನುಲ್ ಉಲಮಾ.☄

☄ಅರಬಿಗಳ ಎಡೆಯಲ್ಲಿ  ಶೈಖ್ ಅಬೂಬಕ್ಕರ್ ಆಗಿಯೂ,☄
ಶಿಷ್ಯರುಗಳ ಎಡೆಯಲ್ಲಿ ಶೈಖುನಾ ಆಗಿಯೂ,☄ ಲಕ್ಷಾಂತರ ಅನುಯಾಯಿಗಳಿಗೆ ಕರುಳಿನ ಬಳ್ಳಿಯಾಗಿಯೂ,☄ ಜೀವನದ ಮಿಡಿತವಾದ ಉಸ್ತಾದರು.☄

☄ಸಯ್ಯದ್ ಅಬ್ಬಾಸ್ ಅಲವಿ ಮಾಲಿಕಿ ಮಕ್ಕ (ರ) ☄ಖಮರುಲ್ ಉಲಮಾ☄ ಎಂದೂ,☄

ಶೈಖ್ ಸ್ವಬಾಯಿ ರಿಫಾಯಿ ತಂಙಲ್ ಬಗ್ದಾದ್ ☄ಸುಲ್ತಾನುಲ್ ಉಲಮಾ☄ ಎಂದು ಹೆಸರಿಟ್ಟು,☄
ಉಸ್ತಾದರನ್ನು ಸುನ್ನಿ ಮಕ್ಕಳ ಮನದಲ್ಲಿ ಹಾಳವಾಗಿ ಬೇರೂರಿ ನಿಲ್ಲುವಂತೆ ಮಾಡಿದರು.☄

 ☄ಮುತ್ತು.... ☄ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್☄  ತಂಙಲವರ ಪವಿತ್ರವಾದ ಪುಣ್ಯ ತಿರುಕೇಶವನ್ನು ಸಂರಕ್ಷಿಸುವವರು.☄

☄ಅಲ್ಲಾಹನೇ.... ☄ನಮ್ಮ ಮಾಣಿಕ್ಯ ಮುತ್ತಾದ ☄ಎಪಿ  ಉಸ್ತಾದರಿಗೆ ನೀನು ಆಫಿಯತ್ತುಲ್ಲ ದೀರ್ಘಾಯುಸ್ಸು ನೀಡು....☄ ಅಮೀನ್☄

☄ಹಲವು ಕಾಲ ನಮಗೆ ಆ ಮುಗುಳ್ನಗೆಯ  ಸುಂದರ ವದನ ಕಾಣಲು ನೀನು ನಮಗೆ ತೌಫೀಕ್ ನೀಡು ಅಲ್ಲಾಹ್ ....☄
ಅಮೀನ್.☄

✍ಗಫೂರ್ ಬಾಯಾರ್
🌷🌷🌷🌷🌷🌷🌷🌷

☪ಸೌದಿಯಲ್ಲೊಂದು ಭಾರತೀಯರ ಮಸ್ಜಿದ್☪



ಸೌದಿ ಆರಬಿಯಾದ ತ್ವಾಯಿಫ್ ನಲ್ಲಿ ನೆಲೆಗೊಳ್ಳುವ "ಮಸ್ಜಿದುಲ್ ಹುನೂದ್" ಭಾರತೀಯರ ಮಸ್ಜಿದಾಗಿದೆ. ಈ ಮಸೀದಿಯ ಹತ್ತಿರದಲ್ಲಿ ಹೋದರೆ ಅಲ್ಲಿ ಕಾಣಸಿಗುವ ಸ್ವದೇಶಿಗಳು ಕೇಳುವರು ನೀವು ಭಾರತಿಯರಾ..?
ನಾವು ಹೌದು ಎಂದರೆ  ಅವರು ಮಸೀದಿಯನ್ನು ತೋರಿಸುತ್ತಾ ನಮ್ಮಲ್ಲಿ ಹೇಳುವರು ಅದು ನಿಮ್ಮ
ದೇಶದವರ ಮಸ್ಜಿದಾಗಿದೆ ಎಂದು..!!

ಅದೇ ಕೇರಳದ ಮಲಬಾರಿನ ಮಕ್ಕಾ ಎಂದೇ ಪ್ರಸಿದ್ಧಿ ಹೊಂದಿದ ಪೊನ್ನಾನಿಯ ಸಮೀಪದ ಪ್ರದೇಶವಾದ ವೇಳಿಯಂಕೋಡ್'ನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ  ವಲಿಯುಲ್ಲಾಹಿ ಉಮ್ಮರ್ ಖಾಝಿ (ರ.ಅ) ರವರಾಗಿದ್ದಾರೆ
ಈ ಮಸ್ಜಿದನ್ನು  ನಿರ್ಮಿಸಿದವರು.

ಇದರ ಕುರಿತು ಓದಿ ತಿಳಿದ ನನಗೆ ಇದರ ಕುರಿತು ಬರೆಯಬೇಕೆಂಬ ಆಗ್ರಹ ಮನದಲ್ಲಿ ಮೂಡಿತು.

 ಸೌದಿಯ ಜಿದ್ದಾದಿಂದ ಸುಮಾರು 180 ಕಿ.ಮೀ ದೂರವಿರುವ ಸ್ಥಳವಾಗಿದೆ ತ್ವಾಯಿಫ್.
ನಾನು ಓದಿ ತಿಳಿದ ಇದರ ನಿರ್ಮಾಣ ಚರಿತ್ರೆ ಕೆಲವರಿಗೆ ನಂಬಲಸಾಧ್ಯವಾಗಬಹುದು.!!!!
ಆದರೆ ನನಗೆ ದೃಢ ವಿಶ್ವಾಸ ಮನಸ್ಸಲ್ಲಿ ಅಚಲವಾಗಿರುವುದರಿಂದ ಈ ಚರಿತ್ರೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ..

🕌 ಖುತುಬುಝ್ಝಮಾನ್ ಮಂಬುರಮ್ ತಂಙಳ್  (ರ.ಅ)ರವರ ಶಿಷ್ಯರಾಗಿದ್ದಾರೆ ಉಮ್ಮರ್ ಖಾಝಿ (ರ.ಅ) ಮತ್ತು ಬೈತ್ತಾರ್ ಮುಸ್ಲಿಯಾರ್ (ರ.ಅ) ಒಂದು ಸಂದರ್ಭದಲ್ಲಿ ಉಮ್ಮರ್ ಖಾಝಿ (ರ.ಅ)ರವರು  ಒಂದು ಮಸ್ಜಿದ್ ನಿರ್ಮಿಸುವಂತಹ ಆಗ್ರಹ ವ್ಯಕ್ತಪಡಿಸಿ ಅದಕ್ಕೆ ಬೇಕಾಗಿ ಜನರಿಂದ ಹಣ ಸಂಗ್ರಹ ಮಾಡಿದರು. ಆದರೆ ತನ್ನ ಸಮೀಪದ ಯಾವುದೇ ಪ್ರದೇಶದಲ್ಲಿಯೂ ಒಂದು ಮಸೀದಿಯ ನಿರ್ಮಾಣವಾಗುತ್ತಿರುವುದನ್ನು ಕಾಣಲು ಸಾಧ್ಯವಾಗಲಿಲ್ಲ.. ಬೈತ್ತಾರ್ ಮುಸ್ಲಿಯಾರ್ (ರ.ಅ) ಈ ವಿಷಯವನ್ನು ಮಂಬುರಮ್ ತಂಙಳ್ ರವರ (ರ.ಅ) ಹತ್ತಿರ ಸೂಚನೆಯಾಗಿ ಹೇಳಿದ್ದರು. ಉತ್ತರವಾಗಿ ತಂಙಳ್ ರವರು (ರ.ಅ) ಮುಸ್ಲಿಯಾರ ಹತ್ತಿರ ಆ ವರ್ಷದ ಹಜ್ಜ್ ಕರ್ಮ  ನಿರ್ವಹಿಸಲು ಹೋಗಿ ಎಂದು ನಿರ್ದೇಶಿಸಿದರು. ಗುರು ಆಜ್ಞೆ ಅನುಸರಿಸಿ ಮರು ಮಾತನಾಡದೆ ಮುಸ್ಲಿಯಾರರು ಆ ವರ್ಷವೇ ಹಜ್ಜಿಗೆ ಹೊರಟರು. ಯಾತ್ರೆ ಮಧ್ಯೆ ಸಂಘದಿಂದ ಬೇರ್ಪಟ್ಟು ಒಂಟಿಯಾದ ಮುಸ್ಲಿಯಾರರು ಅಲೆದು ಕೊನೆಗೆ ತ್ವಾಯಿಫಿಗೆ ತಲುಪಿದರು. ಅಲ್ಲೊಂದು ಮಸೀದಿ ನಿರ್ಮಾಣವಾಗುವುದು ನೋಡಿದ ಬೈತ್ತಾರ್ ಮುಸ್ಲಿಯರರು (ರ.ಅ) ಅಲ್ಲಿಗೆ ಹೋಗಿ ವಿಚಾರಿಸಿದಾಗ ಮುಸ್ಲಿಯಾರರ ಹತ್ತಿರ ಅಲ್ಲಿರುವ ಕೆಲಸದವರು "ಇದು ಭಾರತಿಯರಾದ ಉಮ್ಮರ್ (ರ.ಅ) ಎಂಬ ಒರ್ವರಾಗಿದ್ದಾರೆ ಕೆಲಸ ಮಾಡಿಸುವುದೆಂದು..,
ಎಲ್ಲಾ ವಾರದಲ್ಲಿಯೂ, ಕೆಲಸದ ಕೂಲಿ ನೀಡಲು ಅವರು ಇಲ್ಲಿಗೆ ಬರುತ್ತಾರೆಂದು ಹೇಳಿದರು." ಆವಾಗ ಬೈತ್ತಾರ್ ಮುಸ್ಲಿಯಾರರಿಗೆ (ರ.ಅ) ಅರಿವಾಯಿತು ಇದು ಉಮ್ಮರ್ ಖಾಝಿಯವರು (ರ.ಅ) ಹಣ ಸಂಗ್ರಹಿಸಿರುವುದು ಹಾಗೂ ಮಂಬುರಮ್ ತಂಙಳ್ ರವರು (ರ.ಅ) ನನ್ನನ್ನು ಹಜ್ಜ್'ಗೆ ಹೋಗಲು ಹೇಳಿದ ರಹಸ್ಯ.

🔴NB..
ಈ ಚರಿತ್ರೆ ಬಾಯಿ ಮಾತಾಗಿ ಕಾಲ ಕ್ರೆಮೇಣ ಬಂದಿರುವುದಾಗಿದೆ!!
ಎಂದು ಲೇಖಕರು ಬರೆದಿಟ್ಟಿದರು. ಆದರಿಂದ್ದ ಇದರ ಸನದು ಕೇಳಿ ಯಾರು ಸಮೀಪಿಸಬಾರದು.
(ಈ ಚರಿತ್ರೆಯನ್ನು ನಮ್ಮ ಉಸ್ತಾದರು ಪ್ರಭಾಷಣಗಳಲ್ಲಿ ಕೂಡ ಹೇಳಿರುತ್ತಾರೆ), ವಿಶ್ವಾಸ ಇಲ್ಲದವರು ನಂಬುವುದು ಬೇಡ. ಅದು ನಿಮಗೆ ಬಿಟ್ಟ ವಿಷಯ!! ನಾನಂತೂ ಇದು ನಿಜ ಎಂದು ಸಂಪೂರ್ಣವಾಗಿ ನಂಬಿದ್ದೇನೆ..

 ವಿಶ್ವಾಸವು ಇದೆ.. ಕಾರಣ ಅಲ್ಲಾಹುವಿನ ಇಷ್ಟ ದಾಸರಾದ ಮಹಾನರ ಪಟ್ಟಿಯಲ್ಲಿದ್ದವರಾಗಿದ್ದರು ಉಮ್ಮರ್ ಖಾಝಿಯವರು (ರ.ಅ). ಮಾತ್ರವಲ್ಲ,
☄ಸ್ವಲ್ಲಲ್ ಇಲಾಹು☄ ಎಂಬ ಪ್ರಸಿದ್ದ ಪ್ರವಾದಿ ಪ್ರೇಮ ಕಾವ್ಯ ಆಲಾಪಿಸಿ ಪರಿಶುದ್ದ ರೌಳಾ ಶರೀಫಿನ ಪ್ರೆವೇಶ ದ್ವಾರವನ್ನು ತೆರೆಹಿಸಲು, ಅವರಿಗೆ ಅಷ್ಟು ಶ್ರೇಷ್ಠತೆ ಕೊಟ್ಟು ಅಲ್ಲಾಹು ಅನುಗ್ರಹಿಸಿದರಾಗಿದ್ದಾರೆ ಆಶಿಕ್ ರಸೂಲ್ (ﷺ) ಉಮ್ಮರ್ ಖಾಝಿಯವರು (ರ.ಅ). ಅಲ್ಲಾಹು ಉದ್ದೇಶಿಸಿದರೆ ಅವನ ಅಡಿಯಾಳನ್ನು ಅವನು ಉದ್ದೇಶಿಸುವ ಸ್ಥಳಕ್ಕೆ ತಲುಪಿಸಲು ಅವನಿಗೆ ಯಾವುದೇ ಪ್ರಯಾಸವಿಲ್ಲವೆಂದು ಬಲವಾಗಿ ವಿಶ್ವಾಸ ಹೊಂದಿರುವ ವಿಶ್ವಾಸಿಗೆ ಮೇಲಿನ ಚರಿತ್ರೆಯಲ್ಲಿ ಏನು ಅದ್ಬುತವಾಗಿ ಕಾಣಲ್ಲ...!!!

ಏನಾದರೂ ಒಂದೊಂದು ಭಾರತೀಯರಿಗೂ, ಆದರಿಂದ್ದ ಹೆಚ್ಚಾಗಿ ಒಂದೊಂದು ಉಮ್ಮರ್ ಖಾಝಿಯವರ (ರ.ಅ) ಅನುಯಾಯಿಗಳಿಗೂ ಅಭಿಮಾನವಾಗಿದೆ ತ್ವಾಹಿಫಿನ ಮಸ್ಜಿದುಲ್ ಹುನೂದ್.!!!

NB..
ಉಮ್ಮರ್ ಖಾಝಿಯವರ (ರ.ಅ) ಹೆಸರಿನಲ್ಲಿ ಮಕ್ಕಾದಲ್ಲಿ  ಈಗಲೂ ಕೂಡಾ ಒಂದು ರಸ್ತೆ ಇದೆ. ಮಕ್ಕಾದಿಂದ ತ್ವಾಯಿಫ್'ಗೆ ಹೋಗುವ ಮಾರ್ಗದಲ್ಲಿ ಸುಮಾರು 12 ಕಿ.ಮೀ ಕ್ರಮಿಸಿದಾಗ ಬಲಬದಿಯಲ್ಲಿ ದೊಡ್ಡದಾಗಿ ಬೋರ್ಡ್ ಕಾಣ ಸಿಗುತ್ತದೆ, "ಉಮರ್ ಗಾಝಿ
(ಉಮರ್ ಖಾಝಿ)  ಸ್ಟ್ರೀಟ್".
 ಮಕ್ಕಾಕ್ಕೆ ಹೋದರೆ ನಿಮಗೂ ನೋಡಬಹದು 😊

✍ಗಫೂರ್ ಬಾಯಾರ್

ಗರ್ಭಿಣಿಗಳು ಮತ್ತು ಖರ್ಜೂರ


🌴🌴🌴🌴🌴🌴🌴
➖➖➖➖➖➖➖
✍ ಗಫೂರ್ ಬಾಯಾರ್
➖➖➖➖➖➖➖
ಭ್ರೂಣ ಶಾಸ್ತ್ರದ ಕುರಿತು ಖುರ್'ಆನ್ ಮತ್ತು ಹದೀಸ್' ಗಳಲ್ಲಿ ವರದಿಯಾದ ಹಲವಾರು ಅದ್ಬುತಗಳನ್ನು ನಾವು ತಿಳಿದವರಾಗಿದ್ದೇವೆ.

ಅವುಗಳಲ್ಲಿ ಪ್ರಮುಖವಾಗಿ, ಗರ್ಭಿಣಿ ಸ್ತ್ರೀಯರು ತಿಳಿದಿರಬೇಕಾದ ಒಂದು ಪ್ರಮುಖ ವಿಷಯಕ್ಕೆ ಖುರ್'ಆನ್ ಸೂಚನೆ ನೀಡುತ್ತದೆ.
ಗರ್ಭಿಣಿಯರು ಖರ್ಜೂರ ತಿನ್ನುವ ಕುರಿತಾಗಿದೆ ಅದು.

 ಗರ್ಭಿಣಿಯರು ಖರ್ಜೂರ ತಿಂದರೆ ಲಭಿಸುವ ಪ್ರಯೋಜನಗಳಲ್ಲಿ  ಕೆಲವೂಂದನ್ನು  ನೋಡೋಣ.

1⃣ ಗರ್ಭಿಣಿಗಳಿಗೆ ವೈದ್ಯರು
ಫೊಳಿಕ್ ಆಸಿಡ್
( Folic Acid )
ಮಾತ್ರೆಗಳನ್ನು ನಿರ್ದೇಶಿಸುತ್ತಾರೆ.
ಖರ್ಜೂರದಲ್ಲಿ ಧಾರಾಳವಾಗಿ ಪೊಳಿಕ್ ಆಸಿಡ್ ಒಳಗೊಂಡಿದೆ.

2⃣ ಗರ್ಭಿಣಿಯ ಶರೀರದಲ್ಲಿ ಅಧಿಕ ರಕ್ತವನ್ನು ಉತ್ಪಾದಿಸಬೇಕಾಗುತ್ತದೆ. ಅಥವಾ ಅಧಿಕ ರಕ್ತ ಇರುವಿಕೆ ಅನಿವಾರ್ಯವಾಗಿದೆ.
( ಕಾರಣ ಗರ್ಭ ಕಾಲದಲ್ಲಿ ಮಗುವಿಗೂ ರಕ್ತ ಬೇಕಾಗುತ್ತದೆ ತಾನೇ..)
ಹೆಚ್ಚು ರಕ್ತವನ್ನು ಉತ್ಪಾದಿಸಲು ವೈದ್ಯರು ಕಬ್ಬಿನಾಂಶ ( Fe ) ಜಾಸ್ತಿ ಇರುವ ಟಾನಿಕ್ ( Tonic ) ನಿರ್ದೇಶಿಸುತ್ತಾರೆ.
ಕಬ್ಬಿನಾಂಶ  ಕೂಡ ಖರ್ಜೂರದಲ್ಲಿ ಅಧಿಕವಾಗಿದೆ.

3⃣ ನಮ್ಮ ಶರೀರದಲ್ಲಿ ಹಲವು ವಿಧದಲ್ಲಿ ಒಟ್ಟು ಸೇರುವ ವಿಷ ಪದಾರ್ಥಗಳಾಗಿದೆ ಫ್ರಿ ರಾಡಿಕಲ್'ಸ್. ಇದರಿಂದ ಶರೀರವನ್ನು ಶುದ್ದೀಕರಿಸುವ ವಸ್ತುಗಳಾಗಿದೆ ಆಂಟಿ ಓಕ್'ಸಿಡಂಟುಗಳು.
ಖರ್ಜೂರದಲ್ಲಿ ಆಂಟಿ ಓಕ್'ಸಿಡಂಟುಗಳು ಅತ್ಯಧಿಕವಿದೆ.

4⃣ ಹೆರಿಗೆ ಸಮಯದಲ್ಲಿ ಗರ್ಭಾಶಯ ಚಿಕ್ಕದಾಗಿ ಮಗುವನ್ನು ಹೊರಗೆ ತಳ್ಳಲು ಸಹಾಯವಾಗುವ ಒಂದು ಹಾರ್ ಮೋನ್ ಆಗಿದೆ "ಓಕ್ಸಿಟ್ಟೂಸಿನ್"
( Oxytosin )
ಈ ಹಾರ್ಮ್ಮೊನ್ ಪ್ರಸವ ಸಮಯದಲ್ಲಿ ಶರೀರದೊಳಗೆ ಕಡಿಮೆಯಾದರೆ ಮಗು ಹೊರ ಬರಲು  ತಾಯಿಯಂದಿರು ಕಷ್ಟಪಡಬೇಕಾಗಿ ಬರಬಹುದು.
ಮಾತ್ರವಲ್ಲ, ಇದೇ ಹಾರ್ ಮೋನ್  ಹೆರಿಗೆ ನಂತರ ಎದೆ ಹಾಲು ಉತ್ಪಾದಿಸಲು ಕೂಡಾ ಸಹಾಯ ಮಾಡುತ್ತದೆ.
ಖರ್ಜೂರದಲ್ಲಿ ಈ ಹಾರ್ಮೋನ್ ಬಹಳಷ್ಟು ಅಡಗಿದೆ


📗 ಖುರ್'ಆನ್ ಹೇಳುತ್ತದೆ📗

ಮರಿಯಂ ಬೀವಿ (ರ) ಪ್ರವಾದಿ ಈಸ ನಬಿ ಅಲೈಸಲಾಂ ರವರನ್ನು ಗರ್ಭ ಧರಿಸಿದ ಸಂದರ್ಭ ಮತ್ತು ಪ್ರಸವವನ್ನು ಖುರ್'ಆನ್ ಹೇಳುತ್ತದೆ. ಅದು ಈ ರೀತಿ;
فَحَمَلَتْهُ فَانتَبَذَتْ بِهِ مَكَانًا قَصِيًّا
ಮರ್ಯಂ ಬೀವಿ (ರ) ಯವರು ಆ ಮಗುವಿನ ಗರ್ಭಧರಿಸಿದರು ಹಾಗೂ ದೂರದ ಒಂದು ಸ್ಥಳಕ್ಕೆ ತೆರಳಿದರು.

فَأَجَاءَهَا الْمَخَاضُ إِلَى جِذْعِ النَّخْلَةِ قَالَتْ يَا لَيْتَنِي مِتُّ قَبْلَ هَذَا وَكُنتُ نَسْيًا مَّنسِيًّا
ಪ್ರಸವದ ವೇದನೆಯು ಅವರನ್ನು ಒಂದು ಖರ್ಜೂರದ ಮರದೆಡೆಗೆ ಕೊಂಡೊಯ್ಯಿತು. ಆವಾಗ ಅವರು ಹೇಳಿದರು; "ನಾನು ಇದಕ್ಕಿಂತ ಮುಂಚೆಯೇ ತೀರಿ ಹೋಗಿದ್ದರೆ ಮತ್ತು ಮರೆಯಲ್ಪಟ್ಟವಳಾಗಿದ್ದಲ್ಲಿ ಚೆನ್ನಾಗಿತ್ತು."

فَنَادَاهَا مِن تَحْتِهَا أَلاَّ تَحْزَنِي قَدْ جَعَلَ رَبُّكِ تَحْتَكِ سَرِيًّا
ಕೆಲಭಾಗದಿಂದ ಅಲ್ಲಾಹನು ಈ ರೀತಿ ಕರೆದು ಹೇಳಿದನು;" ನೀವು ದುಃಖಿಸಬೇಡಿ. ನಿಮ್ಮ ಪರಿಪಾಲಕನು ನಿಮ್ಮ ತಲ ಭಾಗದಲ್ಲೊಂದು ಚಿಲುಮೆಯನ್ನು ಹರಿಸಿದ್ದಾನೆ.

وَهُزِّي إِلَيْكِ بِجِذْعِ النَّخْلَةِ تُسَاقِطْ عَلَيْكِ رُطَبًا جَنِيًّا
ಹಾಗೂ ನೀವು ಆ ಖರ್ಜೂರ ಮರದ ಕಾಂಡವನ್ನು ಅಲುಗಾಡಿಸಿರಿ. ನಿಮಗೆ ಹಣ್ಣಾದ ಖರ್ಜೂರವು ಬೀಳುವುದು.

فَكُلِي وَاشْرَبِي وَقَرِّي عَيْنًا
ನೀವು ಅದರಿಂದ ತಿಂದು, ಕುಡಿದು ಕಣ್ಮನಗಳನ್ನು ತಣಿಸಿರಿ.
(ಸೂರಾ : ಮರ್ಯಂ 22--26)


ಈ ವಚನದ ತಫ್ಸಿರ್'ನಲ್ಲಿ ಇಮಾಂ ಇಬ್ನು ಕಸ್ಸೀರ್ (ರ) ಹೇಳುತ್ತಾರೆ.

ಅಂರು ಬಿನ್ ಮೈಮೂನ್ (ರ) ರವರು ಈ ವಚನವನ್ನು ಓದಿಕೊಂಡು ಈ ರೀತಿ ಹೇಳಿರುತ್ತಾರೆ.
 ಹೆರಿಗೆ ಸಮಯದಲ್ಲಿ ಒಂದು ಮಹಿಳೆಗೆ ಖರ್ಜೂರಕ್ಕಿಂತಲೂ, ಉತ್ತುತ್ತೆಕ್ಕಿಂತಲೂ ಒಳ್ಳೆಯ ಆಹಾರ ಬೇರೆ ಯಾವುದೂ ಇಲ್ಲ.
(ತಫ್ ಸೀರ್ ಇಬ್ನ್ ಕಸೀರ್)

ಹಳೇ ಕಾಲದಲ್ಲಿ ತಾಯಿಯರು ಗರ್ಭ ಕಾಲದಲ್ಲಿ ಮನೆ ಮದ್ದೇ ಔಷಧಿಯಾಗಿ ಸ್ವೀಕರಿಸುತ್ತಿದ್ದರು. ಮನೆಯಲ್ಲಿಯೇ ಸುಖ ಪ್ರಸವ ನಡೆಯುತ್ತಿದ್ದವು.
ಗರ್ಭಕಾಲದಲ್ಲಿ ಮನೆ ಕೆಲಸ ಇನ್ನಿತರ ಚಟುವಟಿಕೆಗಳಲ್ಲಿ ಅವರು ನಿರತರಾಗುತ್ತಿದ್ದರು. ಆದರೆ ಈ ಆಧುನಿಕ ಕಾಲದಲ್ಲಿ ಸೌಕರ್ಯಗಳು ಅಧಿಕಗೊಂಡಾಗ ಪ್ರಸವಕ್ಕೆ ಮನೆ ಸಾಲದಾಯಿತು. ತಿಂಗಳಿಗೊಮ್ಮೆ ವೈಧ್ಯರನ್ನು ಸಮೀಪಿಸಬೇಕಾಯಿತು. ಹಲವಾರು ಔಷಧಿಗಳನ್ನು ಸೇವಿಸಬೇಕಾಗಿ ಬರುತ್ತದೆ.
ಅದೆಲ್ಲವೂ ಬೇಕಾದ ರೀತಿಯಲ್ಲಿ ಇರಲಿ. ಅದನ್ನು ತಪ್ಪೆಂದು ಹೇಳುತ್ತಿಲ್ಲ. ಆದರೆ ಖುರ್ ಆನ್ ನಮಗೆ ಕಲಿಸಿ ಕೊಟ್ಟ ಈ ಖರ್ಜೂರದ ಉಪಯೋಗವನ್ನು ಗರ್ಭಿಣಿ ಸ್ತ್ರೀಯರು ಮರೆಯಬಾರದು.
ತಾಯಿ ಮತ್ತು ಮಗು ಆರೋಗ್ಯದಿಂದಿರಲು ಔಷಧಿ ಯುಕ್ತವಾದ ಖರ್ಜೂರ ಅಧಿಕವಾಗಿ ಗರ್ಭಿಣಿಯರು ಉಪಯೋಗಿಸಲಿ.

ಅಲ್ಲಾಹು ನಮ್ಮ ಸಹೋದರಿಯರಿಗೆ ಸುಖ ಪ್ರಸವ ನೀಡಲಿ ಆಮೀನ್

✍ಗಫೂರ್ ಬಾಯಾರ್

💠 ರಸೂಲ್ ﷺ ರವರು ನಿಕಾಹ್ ಸಮಯದಲ್ಲಿ ತನ್ನ ಕರಳ ಕುಡಿಯಾದ ಮಗಳು ಫಾತಿಮ ರ.ಅ. ರಿಗೆ ನೀಡಿದಂತಹ ಹದಿನಾಲ್ಕು ಉಪದೇಶಗಳು.💠


1 - ಗಂಡನ ಅನುಸರಣೆ ಪಾಲಿಸದೆ ಅಹಂಕಾರಿಯಾಗಿ ಜೀವಿಸಬೇಡ. ಹಾಗೆ ಜೀವಿಸಿದ್ದಲ್ಲಿ ನೀನು ದಾರಿದ್ರ್ಯಯುತೆ ಉಳ್ಳವಳಾಗುವಿ.

2 - ಗಂಡನ ಅನುಮತಿ ಇಲ್ಲದೆ ಹೊರಗೆ ಹೋಗ ಬಾರದು (ಹೋದಲ್ಲಿ ದಾರಿಯಲ್ಲಿರುವ ಜೀವಿಗಳೆಲ್ಲಾ ನಿನ್ನನ್ನು ಶಪಿಸುವುದು.

3 - ಗಂಡನು ಮನೆಗೆ ಬರುವಾಗ ಮತ್ತು ಹೊರಡುವಾಗ ಮುಖ ತಿರುಗಿಸಬಾರದು.

4 - ಗಂಡನ ಮುಖ ನೋಡಿ ನೀವು ನನಗೆ ಇಷ್ಟರ ತನಕ ಏನೂ ಮಾಡಿಲ್ಲ ಎಂದು ಹೇಳಬಾರದು (ಹಾಗೆ ಹೇಳಿದ್ದಲ್ಲಿ ಅವಳು ಅಷ್ಟರವರೆಗೆ ಮಾಡಿದ ಖಿದ್ಮತ್ತೆಲ್ಲಾ ಬಾತಿಲ್ ಆಗುವುದು.

5 - ಗಂಡನನ್ನು ಯಾವುದೇ ಸಮಯವು ಮನ ನೋಯಿಸಬಾರದು.

6 - ಗಂಡನು ಕರೆದರೆ ಎಲ್ಲಿದ್ದರು ಉತ್ತರ ಕೊಡ ಬೇಕು. ಇಲ್ಲವಾದಲ್ಲಿ ನಿನ್ನೆಲ್ಲಾ ಇಬಾದತ್ ಗಂಡನಿಗೆ ಸಿಗುವುದು.

7 - ಗಂಡನ ಅನುಮತಿ ಯೊಂದಿಗೆ ಪ್ರಸವಿಸಿದರೆ ನಿನ್ನ ಶರೀರದ ಒಂದೊಂದು ರೋಮಕ್ಕೂ "ಅಲ್ಲಾಹು" ಪ್ರತಿಫಲ ಕೊಡುವನು.

8 - ಗಂಡನ ಒಪ್ಪಿಗೆ ಪ್ರಕಾರ ಎರಡು ವರ್ಷ ಮಗುವಿಗೆ ಹಾಲುಣಿಸಿದರೆ ಸಾವಿರ ಶಹೀದಿನ ಕೂಲಿ "ಅಲ್ಲಾಹು" ನಿನಗೆ ಕೊಡುವನು.

9 - ಗಂಡನಿಗೆ ರುಕೂಹು ಸುಜೂದು ಬಿಟ್ಟು ಮತ್ತೆಲ್ಲಾ ಕಾರ್ಯಗಳನ್ನು ಮಾಡ ಬಹುದಾಗಿದೆ.

10 - ಗಂಡನನ್ನು ಅತಿಯಾಗಿ ಸ್ನೇಹಿಸಿದರೆ "ಅಲ್ಲಾಹ"ನ ಅನುಗ್ರಹ ಮತ್ತು ದ್ವೇಷಿಸಿದರೆ ಶಾಪವು ಸಿಗುವುದು.

11 - ಗಂಡನನ್ನು ತ್ರಪ್ತಿ ಪಡಿಸಿದರೆ ಹತ್ತು ಒಳಿತು ಲಭಿಸುವುದು ಮತ್ತು ಎಪ್ಪತ್ತು ದೋಷಗಳನ್ನು "ಅಲ್ಲಾಹು" ಮಾಯಿಸುವನು

12 - ಮರಣ ಸಮಯದಲ್ಲಿ ಗಂಡನ ತೃಪ್ತಿ ಲಭಿಸಿದಲ್ಲಿ ಖಂಡಿತವಾಗಿ ಸ್ವರ್ಗ ಲಭಿಸುವುದು.

13 - ಗಂಡನೊಂದಿಗೆ ಉತ್ತಮ ಮಾತುಗಳನ್ನೇ ಆಡಬೇಕು.

14 - ಸ್ನೇಹ ಸೌಹಾರ್ದತೆ ಸದಾ ಅಧಿಕಗೊಳಿಸುತ್ತಿರಬೇಕು.

ಎಲ್ಲಾ ತಂದೆ ತಾಯಿ ತನ್ನೆಲ್ಲ ಹೆಣ್ಣು ಮಕ್ಕಳಿಗೆ ಇದನ್ನು ತಿಳಿಯ ಪಡಿಸಿರಬೇಕು. ಇಲ್ಲವಾದರೆ ಮಗಳೇ ಪರಲೋಕದಲ್ಲಿ "ಅಲ್ಲಾಹ"ನ ಮುಂದೆ ತನ್ನ ತಂದೆ ತಾಯಿಯರ ವಿರುದ್ಧವೇ ನನಗೆ ಕಲಿಸಿ ಕೊಟ್ಡಿಲ್ಲವೆಂದು ಸಾಕ್ಷಿ ನಿಲ್ಲುವಳು. "ಅಲ್ಲಾಹು" ಕಾಪಾಡಲಿ. ಆಮೀನ್.

✍🏻ಗಫೂರ್ ಬಾಯಾರ್
💐💐💐💐💐💐💐💐💐

ಪ್ರತಿಯೊಬ್ಬ SSF ಸದಸ್ಯನಿಗೂ ಅಭಿಮಾನದಿಂದ ಹೇಳಬಹುದು ನಾನೋರ್ವ SSF ಕಾರ್ಯಕರ್ತನೆಂದು....

ಪ್ರತಿಯೊಬ್ಬ SSF ಸದಸ್ಯನಿಗೂ ಅಭಿಮಾನದಿಂದ ಹೇಳಬಹುದು ನಾನೋರ್ವ SSF ಕಾರ್ಯಕರ್ತನೆಂದು....

ಕಾರಣ....

✍ಗಫೂರ್ ಬಾಯಾರ್
➖➖➖➖➖➖➖➖

1⏯ ನಾವು ಯಾರನ್ನೂ ಕೊಲ್ಲಲಿಲ್ಲ..
ಆದರೆ ಹಲವರನ್ನು ರಕ್ಷಿಸಿದ್ದೇವೆ

2⏯ ನಾವು ಯಾವುದೇ ಮತೀಯ, ರಾಜಕೀಯ, ಕಲಹಗಳಲ್ಲಿ  ಭಾಗಿಯಾಗಲಿಲ್ಲ
ಆದರೆ ಜನರನ್ನು ಅಂತಹ ದುರಾಲೋಚನೆಗಳಿಂದ ಮುಕ್ತಿಗೊಳಿಸಿದ್ದೇವೆ.

3⏯ ನಾವು ಯಾರ ಮೇಲೆಯೂ ಬಾಂಬು ದಾಳಿ ನಡೆಸಲಿಲ್ಲ..
ಆದರೆ ಅಪಘಾತದಲ್ಲಿ ಸಿಲುಕಿದವರಿಗೆ ಚಿಕಿತ್ಸೆ ಧಾರಾಳವಾಗಿ ನೀಡಿದ್ದೇವೆ.

4⏯ ನಾವು ಯಾರೊಬ್ಬರ ಮೇಲೂ ಕತ್ತಿಯೋ, ತ್ರೀಶೂಲೋ ಎತ್ತಲಿಲ್ಲ.
ಆದರೆ ಇಂತಹ ಕ್ರೂರ  ಅನ್ಯಾಯ ಮಾಡಬಾರದೆಂದು ಉಪದೇಶಿಸುತ್ತೇವೆ.

5⏯ ನಾವು ಯಾರ ಸಂಪತ್ತನ್ನೂ ಅಪಹರಿಸಲಿಲ್ಲ.
ಆದರೆ ಜಾತಿ, ಧರ್ಮ, ನೋಡದೆ ಸಹಾಯ ಹಸ್ತ ಚಾಚುತ್ತೇವೆ.

6⏯ ನಾವು ಯಾರೊಬ್ಬರ ಮನೆಯನ್ನೂ ದ್ವಂಸ ಮಾಡಲಿಲ್ಲ.
ಆದರೆ ಬಡವರಿಗೆ ಸಾಧ್ಯವಾದಷ್ಟು ಮನೆ ನಿರ್ಮಿಸಿ ಕೊಡುತ್ತೇವೆ.

7⏯ ನಾವು ಸಾರ್ವಜಿನಿಕ ಸೊತ್ತುಗಳನ್ನು ನಾಶ ಮಾಡಲಿಲ್ಲ.
ಆದರೆ ನಮ್ಮ ಕೈಲಾಗುವಷ್ಟು  ಸಾರ್ವಜನಿಕರಿಗೆ ಸೇವೆ ಮಾಡುತ್ತೇವೆ.

8⏯ ನಾವು ಕೋಮು ವಿಷಬೀಜ ಬಿತ್ತುವಂತಹ ಮಾತುಗಳನ್ನು ಆಡುವುದಿಲ್ಲ.
ಆದರೆ ಮಾನವೀಯತೆ  ಧಾರಾಳ ಮಾತನಾಡುತ್ತೇವೆ.

9⏯ ನಾವು ಅಸೂಯೆಯ ಸಂದೇಶವನ್ನು ಪ್ರಚಾರ ಮಾಡುವುದಿಲ್ಲ.
ಆದರೆ, ಸ್ನೇಹದ ಸಂದೇಶವನ್ನು ಪ್ರಚಾರ ಮಾಡುತ್ತೇವೆ.

10⏯ ನಾವು ಕಾನೂನನ್ನು ಕೈಗೆತ್ತಿಕೊಳ್ಳುವುದಿಲ್ಲ.
ಆದರೆ ಸತ್ಯದಲ್ಲೂ, ನೀತಿಯಲ್ಲೂ, ಧರ್ಮದಲ್ಲಿಯೂ ವಿಶ್ವಾಸವಿಡುತ್ತೇವೆ.

💟ಅದ್ದರಿಂದ ನಾವು ಗಟ್ಟಿಯಾಗಿ ಹೇಳುವಾ ನಾನು ಒಬ್ಬ
ಎಸ್ ಎಸ್ ಎಫ್ ಕಾರ್ಯಕರ್ತನೆಂದು.
SSF SSF SSF ಝಿಂದಬಾದ್.

✍ಗಫೂರ್ ಬಾಯಾರ್
💠💠💠💠💠💠💠💠💠

Monday, September 25, 2017

ದುಲ್ಹಜ್ಜ್

ವಿಶ್ವದ ಮುಸ್ಲಿಮರು ದುಲ್ಹಜ್ಜ್ ತಿಂಗಳನ್ನು ಬಹಳ ಸ೦ಭ್ರಮದಿ೦ದ ಸ್ವಾಗತಿಸುತ್ತಾರೆ.

ದುಲ್ಹಜ್ಜ್ 1ರಿಂದ 9ರ ವರೆಗೆ ಬಹಳ ಮಹತ್ವವಿರುವ ದಿವಸಗಳಾಗಿವೆ. 
ಅದರ ಒಂದೊಂದು ದಿವಸದ ವೈಶಿಷ್ಟ್ಯತೆಗಳನ್ನು ಕೆಳಗೆ ವಿವರಿಸಲಾಗಿದೆ.

▶ ದುಲ್ಹಜ್ಜ್ 1: ಆದಮ್ ನಬಿ(ಅ) ರವರ ತೌಬವನ್ನು ಅಲ್ಲಾಹು ಸ್ವೀಕರಿಸಿದ ದಿನವಾಗಿದೆ. ಈ ದಿನ ಉಪವಾಸ ಅನುಷ್ಠಿಸಿದರೆ ಅವನ ಪಾಪಗಳನ್ನು ಅಲ್ಲಾಹು  ಮನ್ನಿಸಿ ಕೊಡುವನು. 

▶ ದುಲ್ಹಜ್ಜ್ 02: ಮತ್ಸ್ಯದ ಹೊಟ್ಟೆಯಲ್ಲಿದ್ದ ಯೂನುಸ್ ನಬಿ (ಸ)ರವರ ಪ್ರಾರ್ಥನೆಗೆ ಅಲ್ಲಾಹು ಉತ್ತರ ಕೊಟ್ಟಿರುವುದು ಈ ದಿವಸವಾಗಿದೆ. ಆದ್ದರಿಂದ ಈ ದಿವಸ ಪ್ರಾರ್ಥಿಸಿದರೆ ಅಲ್ಲಾಹು ಉತ್ತರ ಕೊಡುವನು. 

▶ ದುಲ್ಹಜ್ಜ್ 03: ಝಕರಿಯ ನಬಿ (ಅ) ರವರ ಪ್ರಾರ್ಥನೆಗೆ ಅಲ್ಲಾಹು ಉತ್ತರ ನೀಡಿರುವುದು ಈ ದಿನವಾಗಿದೆ. ಈ ದಿನ ಪ್ರಾರ್ಥಿಸಿದರೆ ಅಲ್ಲಾಹು ಉತ್ತರ ಕೊಡುವನು. 

▶ ದುಲ್ಹಜ್ಜ್ 04: ಈಸಾ ನಬಿ(ಅ) ರವರಿಗೆ ಅಲ್ಲಾಹು ಜೀವ ಕೊಟ್ಟನು. 
ಈ ದಿವಸ ಒಬ್ಬ ಉಪವಾಸ ಅನುಷ್ಠಿಸಿದರೆ ಅವನನ್ನು ಅಲ್ಲಾಹು ದಾರಿದ್ರ್ಯದಿಂದ ಸಂರಕ್ಷಿಸಿ ಖಿಯಾಮತ್ ದಿವಸದಲ್ಲಿ ಅವನು ಗುಣವಂತರೊಂದಿಗೆ ಇರುವನು. 

▶ ದುಲ್ಹಜ್ಜ್ 05: ಮೂಸ ನಬಿ (ಅ) ರವರು ಜನಿಸಿರುವ ದಿವಸವಾಗಿದೆ. 
ಈ ದಿವಸ ಯಾರಾದರೂ ಉಪವಾಸ ಅನುಷ್ಠಿಸಿದರೆ ಕಾಪಟ್ಯದಿಂದಲೂ, ಖಬರ್ ಶಿಕ್ಷೆಯಿಂದಲೂ ಅಲ್ಲಾಹು ಅವನನ್ನು ರಕ್ಷಿಸುವನು. 

▶ ದುಲ್ಹಜ್ಜ್ 06: ನಬಿ ﷺ ರವರಿಗೆ ಒಳಿತಿನ ಬಾಗಿಲುಗಳನ್ನು ತೆರೆದು ಕೊಟ್ಟ ದಿವಸವಾಗಿದೆ. ಈ ದಿವಸ ಯಾರಾದರು ಉಪವಾಸ ಅನುಷ್ಠಿಸಿದರೆ ಅಲ್ಲಾಹು ಅವನತ್ತ ಕಾರುಣ್ಯದ ನೋಟ ನೋಡುವನು. ಅಲ್ಲದೆ ಅವನಿಗೆ ಶಿಕ್ಷೆಯಿಂದ ರಿಯಾಯತಿ ಕೊಡುವನು. 

▶ ದುಲ್ಹಜ್ಜ್ 07: ಈ ದಿವಸ ನರಕದ ಬಾಗಿಲುಗಳು ಮುಚ್ಚುವ ದಿವಸವಾಗಿದೆ. ಈ ದಿವಸ ಯಾರಾದರು ಉಪವಾಸ ಅನುಷ್ಠಿಸಿದರೆ ಪ್ರಯಾಸದ 33 ದ್ವಾರಗಳು ಮುಚ್ಚಲ್ಪಡುವುದು. 

▶ ದುಲ್ಹಜ್ಜ್ 08: ಈ ದಿವಸ ಯಾರಾದರು ಉಪವಾಸ ಅನುಷ್ಠಿಸಿದರೆ ಅವರಿಗೆ ಅಲ್ಲಾಹು ಲೆಕ್ಕವಿಲ್ಲದಷ್ಟು ಪ್ರತಿಫಲವನ್ನು ನೀಡುವನು. 

▶ ದುಲ್ಹಜ್ಜ್ 09: ಅರಫಾ ದಿನ. 
ಈ ದಿವಸ ಯಾರಾದರು ಉಪವಾಸ ಅನುಷ್ಠಿಸಿದರೆ ಕಳೆದದ್ದು ಹಾಗು ಬರಲಿರುವ ಒಂದು ವರ್ಷದ ದೋಷಗಳನ್ನು ಅಲ್ಲಾಹು ಮನ್ನಿಸಿ ಕೊಡುವನು. 
(ನಬಿ ವಚನ) 

ಈ ಪುಣ್ಯ ಮಾಸವನ್ನು ಗೌರವದಿ೦ದ ಬರಮಾಡಿಕೊಳ್ಳಲು, ಉಪವಾಸ ಅನುಷ್ಠಿಸಲು, ಸತ್ಕರ್ಮಗಳನ್ನು ನಿರ್ವಹಿಸಲೂ,  ಅದು ಕಾರಣವಾಗಿ ನಮ್ಮ ಪಾಪಗಳು ಮನ್ನಿಸಲ್ಪಡಲು ಜಗದ್ರಕ್ಷಕನಾದ ಅಲ್ಲಾಹು ತೌಫೀಖ್ ನೀಡಲಿ, ಆಮೀನ್.

ಕನ್ನಡಕ್ಕೆ
✍ಗಫೂರ್ ಬಾಯಾರ್
🌴🌴🌴🌴🌴🌴🌴

NRE/NRO ಖಾತೆ, ಏನು? ಯಾಕೆ?



ವಿದೇಶದಿಂದ ಓರ್ವನು ಊರಿಗೆ ಹಣ ಕಳುಹಿಸುವಾಗ ತನ್ನ NRE (Non Residential External)
ಖಾತೆಗಾಗಿದೆ ಹಣ ಕಳುಹಿಸಬೇಕು. ಊರಿನ ತನ್ನ SB (Savings Bank) ಖಾತೆಗೆ ಕಳುಹಿಸಿದರೆ ಸಾಕಲ್ಲವೇ ಎಂದು ಕೇಳಿದರೆ, ಉತ್ತರ ಇದಾಗಿದೆ. 
SB ಖಾತೆಗೆ ಹಣ ಕಳುಹಿಸುವಾಗ ಅದಕ್ಕೊಂದು ಮಿತಿ ಇದೆ. 
50,000/-  ರೂಪಾಯಿಗಿಂತ ಹೆಚ್ಚು ಕಳುಹಿಸಿದರೆ ಅದಕ್ಕೆ ತೆರಿಗೆ ಕಟ್ಟಬೇಕು. ಬೇರೆ ತೊಂದರೆ ಏನು ಇಲ್ಲ. 
NRE ಖಾತೆಯಲ್ಲಾದರೆ ತೆರಿಗೆ ಕಟ್ಟಬೇಕೆಂದಿಲ್ಲ. 

 ವಿದೇಶದಲ್ಲಿ ಹಲವು ವರ್ಷಗಳು ಕಳೆದರೂ ಒಂದು NRE ಖಾತೆ ಕೂಡ ತೆರೆಯದ ಹಲವಾರು ಜನರು ಇದ್ದಾರೆ. 
ಪ್ರಧಾನವಾಗಿ 2 ಕಾರ್ಯಗಳಾಗಿದೆ NRE ತೆರೆಯದೆ ಇರಲು ಕಾರಣ, 
1- ಅಜ್ಞಾನ ಅಥವಾ ತಿಳುವಳಿಕೆ ಇಲ್ಲದಿರುವುದು, 
2- ಉದಾಸೀನತೆ ಅಥವಾ ಆಲಸ್ಯ, 
ತಿಳುವಳಿಕೆ ಇಲ್ಲದವರಾಗಿದ್ದಲ್ಲಿ ಯಾರಾದರು ಹೇಳಿ ಕೊಟ್ಟರೆ ಮನವರಿಕೆಯಾಗಬಹುದು.

ಆದರೆ ಉದಾಸೀನತೆಯವರನ್ನು ಸರಿ ಮಾಡಲು ತುಂಬಾನೇ ಕಷ್ಟ. ಅವರು ಏನಾದರು ಒಂದು ದೊಡ್ಡ ಗಂಡಾಂತರ ಬಂದಾಗಲೇ ಎಚ್ಚೆತ್ತುಗೊಳ್ಳುವುದು.

ಬ್ಯಾಂಕ್ ಖಾತೆಯಿಂದಲ್ಲದೆ ಊರಿಗೆ ಹಣ ಕಳುಹಿಸುವುದನ್ನಾಗಿದೆ ಕಪ್ಪುಹಣ ಎಂದು ಹೇಳುವುದು. ಹೀಗೆ ಹಣ ಕಳುಹಿಸಿದರೆ ಉಂಟಾಗಲಿರುವ ಗಂಡಾತರ ಏನೆಲ್ಲ ಎಂದು ತಿಳಿಯುವುದು ಒಳ್ಳೇದು. 

1- ಕಪ್ಪುಹಣ ನಿಯಮ ವಿರುದ್ಧವಾಗಿದೆ. 
2- ಹಿಡಿದರೆ ಹಣವು ನಷ್ಟಗೊಳ್ಳುವುದು ಅದಲ್ಲದೆ ಜೈಲಿಗೂ ಹೋಗಬೇಕು. 
3- ಕಪ್ಪು ಹಣ ಏಜಂಟರು, ಹೇಳಿದ ಹಾಗೆ ಹಣ ಮನೆಗೆ ತಲುಪಿಸದಿದ್ದರೆ ನಿಯಮಪರವಾಗಿ ಅವರ ಮೇಲೆ ಕೇಸು ಕೊಡಲು ಸಾಧ್ಯವಿಲ್ಲ. 
4- ಎಷ್ಟು ಕೊಟಿಗಳು ಕಳುಹಿಸಿದರೂ ನಿಯಮಪರವಾಗಿ ರೇಖೆಗಳು ಇರಲಿಕ್ಕಿಲ್ಲ. 
( ಹಲವು ವಿಷಯಗಳಿಗೆ ತಮ್ಮ ಸಂಪತ್ತಿನ ರೇಖೆಗಳನ್ನು  ತೋರಿಸಬೇಕು.) 

(ತಾವು ಇಷ್ಟು ವರ್ಷ ಕಾಲ ವಿದೇಶ ಉದ್ಯೋಗದಿಂದ ತಮ್ಮ ಹಣ ಹೇಗೆ ಭಾರತಕ್ಕೆ ಕಳುಹಿಸಿರುವುದು ಎಂಬ ಪ್ರಶ್ನೆ ಯಾವಾಗಲಾದರೂ ಕಾನೂನು ಬಂದಲ್ಲಿ A/C  ಇಲ್ಲದವರು ತೊಂದರೆಗೆ ಸಿಲುಕುವುದು ಖಂಡಿತಾ.) 

ಇನ್ನು, NRE ಖಾತೆ ತೆರೆದರೆ ಲಭಿಸುವ ಲಾಭ ನೋಡುವಾ; 

1-ನಮ್ಮ ಹಣ/ ಸಂಪತ್ತು  ನಿಯಮಪಾರವಾಗಿ, ಸುರಕ್ಷಿತವಾಗಿ ಬ್ಯಾಂಕಿನಲ್ಲಿ ಇರುತ್ತದೆ. 
2- ತೆರಿಗೆ ಇಲ್ಲದಾಗಿಸಬಹುದು. 
3-ನಾವು ಖರೀದಿಸುವ ಮನೆ, ವಾಹನ, ವಸ್ತುಗಳು.. ಎಂಬಿತ್ಯಾದಿಗಳ ಸಂಪತ್ತಿನ ರೇಖೆಗಳ ಕುರಿತು ಅನ್ವೇಷಣೆ ಬರುವಾಗ A/C ಸ್ಟೇಟ್ಮೆಂಟ್ ಅನುಗುನವಾಗಬಹುದು. 
4- ನಾವು ಕೊಡಲು ಇರುವ ನಗದಿಗೆ ಬದಲು ಚೆಕ್ ಕೊಡುವಾಗ ಎಲ್ಲಾ ಕಾಲಕ್ಕೂ ಆಗುವಂತ ನಿಯಮಪರವಾದ ರೇಖೆಯಾಗುವುದು. 

ನಗದು ಸಿಗಲಿಲ್ಲ ಎಂದು ಹೇಳಿ ನಮ್ಮನ್ನು ವಂಚಿಸಲು ಯಾರಿಗೂ ಸಾಧ್ಯವಾಗದು. 
5- ನಾವೂ ಕಳುಹಿಸುವುದು, ಖರ್ಚು ಮಾಡುವುದಾದ ನಗದು ಬೇಕಾದಾಗ ಓಡಿಟ್ ಮಾಡಲು ಸಾಧಿಸುತ್ತದೆ. 
6-ಯಾರನ್ನು ಹೆದರದೆ ಬ್ಯಾಂಕಿನಲ್ಲಿ ಸುಕ್ಷಿಸುವ ಹಣವನ್ನು, ಅಗತ್ಯಗಳಿಗೆ ಅನುಸರಿಸಿ ATM ಮುಖಾಂತರ ತೆಗೆಯಬಹುದು. ಯಾತ್ರೆಗೆ ಒಳಗೊಂಡ ಎಲ್ಲಾ ಕಾರ್ಯಗಳಿಗೆ ATM ಕಾರ್ಡ್ ಬೇಕಾದಾಗೆ ಎಲ್ಲಾ ಕಡೆಗಳಲ್ಲಿ ಉಪಯೋಗಿಲು ಉಪಕಾರಿಯಾಗಿದೆ. 
7-ಚೆಕ್ ಪುಸ್ತಕ ಲಭಿಸುತ್ತದೆ. 
ಬಾಡಿಗೆ, ಶುಲ್ಕ, ಬಿಲ್ ಗಳು.. 
ಮೊದಲಾದವೆಲ್ಲ ಚೆಕ್ ಮುಖಾಂತರ ಮಾಡಿದರೆ ಹೆಚ್ಚು ಸುರಕ್ಷಿತವಾಗುವುದು. 
8- ಅತ್ಯಗತ್ಯವಾದ ಸ್ಥಳಗಳಲ್ಲಿ ಗ್ಯಾರಂಟಿಯಾಗಿ ಚೆಕ್ ಕೊಡಬಹುದು. 

(NB; ಕರೆಂಟ್ ಖಾತೆಯಾದರೆ ಬಡ್ಡಿ ಬರಲಿಕ್ಕಿಲ್ಲ.
5000 ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ಬೇಕು ಕರೆಂಟ್ ಖಾತೆಯಾದರೆ)

NRE ಖಾತೆಯ ತರ ಪ್ರಧಾನವಾದ ಮತ್ತೊಂದಾಗಿದೆ NRO (Non Residential Ordinary) ಖಾತೆ. 
ವಿದೇಶದಿಂದ ಹಣ ಕಳುಹಿಸುವುದು NRE ಖಾತೆಗಾದರೆ ಊರಿನಿಂದ ಹಣ ಡಿಪೋಸಿಟ್ ಮಾಡಲು ಇರುವುದಾಗಿದೆ NRO ಖಾತೆ. 
(ಊರಿನಲ್ಲಿ SB ಖಾತೆಯ ತರಹ) 
ಉದಾರಣೆಗೆ; ಊರಿನ ಭೂಮಿಯೊ, ಬೇರೇನಾದರು ಮಾರಾಟ ಮಾಡಿ ಸಿಕ್ಕಿದ ಒಂದು ಸಂಖ್ಯೆಯನ್ನು ಒಮ್ಮೆಯೂ NRE ಖಾತೆಯಲ್ಲಿ ಡಿಪೋಸಿಟ್ ಮಾಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಕ್ಕೆ ಬೇಕಾಗಿಯಾಗಿದೆ NRO ಖಾತೆ. 

ಹೇಗೆ ಒಂದು NRE/NRO ಖಾತೆ ತೆರೆಯುವುದು!?.. 
:
ತಾವು ನೆಲೆಗೊಳ್ಳುವ ವಿದೇಶ ರಾಷ್ಟ್ರಗಳ ಯಾವುದಾದರೂ ಬ್ಯಾಂಕಿನಲ್ಲೋ, ಮನಿ ಎಕ್ಷಸ್ಚೇಂಜ್ನಲ್ಲೋ ಹೋದರೆ ಅವರು ಸಹಾಯ ಮಾಡುವರು. 

ಪಾಸ್ಪೋರ್ಟ್ ಕಾಪಿ ( ವಿಝ ಪುಟ ಒಳಗೊಂಡ) 2 ಫೋಟೋ, (with white back ground), ಕಡಿಮೆಯಾಗಿ 1000 ರೂಪಾಯಿಯ (inr) ಒಂದು ಡ್ರಾಫ್ಟ್ ಇಷ್ಟಾಗಿದೆ ಅಗತ್ಯವಿರುವುದು.... 
(ವಿಳಂಬವಾಗದೆ ಚೆಕ್, ಪಸುಬೋಕ್ ಹಾಗು ATMನ ಸಂದೇಶಗಳು ಲಭಿಸುವುದು.) 

NRE/NRO ಖಾತೆಗಳು ಇಲ್ಲದವರು ಖಾತೆ ತೆರೆಯಿರಿ. 
ನಮ್ಮಲ್ಲಿ ಇರುವ ಸಂಪತ್ತನ್ನು ಸುರಕ್ಷಿತ ಮಾಡಿರಿ. 

ದೀನಿ ಸೂಕ್ಷತೆಗೆ ಬೇಕಾಗಿ ಬ್ಯಾಂಕ್ A/C ವರ್ಜಿಸುವವರು ಇದ್ದಾರೆ. ಆದರೂ ಆಧುನಿಕ ಯುಗದಲ್ಲಿ ಸರಕಾರಕ್ಕೆ ಒಳಪಟ್ಟ ಕಾರ್ಯಗಳಿಗೂ, ಇನ್ನುಳಿದ ಹಲವು ಅತ್ಯಗತ್ಯವಾದ ಕಾರ್ಯಗಳಿಗೆ ಬ್ಯಾಂಕ್ ಮುಖಾಂತರ ಜೋಡಿಸಿಯಾಗಿರುತ್ತದೆ.

ಆದ್ದರಿಂದ 
ಖಾತೆ ಅತ್ಯಗತ್ಯವಾಗಿರುತ್ತದೆ. 
ನಮ್ಮ ದೇಶದ ನಿರ್ಬಂಧಿತವಾದ ನಿಯಮಗಳಿಗೆ ಬೇಕಾಗಿ A/C ಅನಿವಾರ್ಯವಾಗಿರುತ್ತದೆ. 

(ಬಡ್ಡಿ ದೊಡ್ಡ ಪಾಪವಾಗಿದೆ, ಲೋನ್, ಅಡವು ಇಟ್ಟುಕೊಳ್ಳುವುದು, ಕೊತಚೆಕ್, ಎಂಬಿತ್ಯಾದಿಗಳಿಗೆ ಬ್ಯಾಂಕನ್ನು ಉಪಯೋಗಿಸುವುದು ಅವಘಡವಾಗಿದೆ.)

✍ ಗಫೂರ್ ಬಾಯಾರ್
✈✈✈✈✈✈✈

ನನ್ನ ಪ್ರಸ್ಥಾನ

🌹ನನ್ನ ಪ್ರಸ್ಥಾನದೊಂದಿಗೆ ಇರುವ ನನ್ನ ಅವೇಶದ ಒಂದು ಸಾಸಿವೆ ಕಾಳಿನಷ್ಟು ಅಂಶವಾದರೂ ಬೇರೆ ಯಾವುದಾದರು ರಾಜಕೀಯ ಪಾರ್ಟಿಯೊಂದಿಗೋ ಅದರ ಪತಾಕೆಯಲ್ಲಿಯೋ ನನಗೆ ಆವೇಶ ತೋರುತ್ತಿದರೆ ನಾನು ಇಂದು ಯಾವುದಾದರೂ ರಾಜಕೀಯ ಪಕ್ಷದಲ್ಲಿ ಇರುತ್ತಿದ್ದೆ.

ಆದರೆ ಅಲ್ಲಾಹು ನನ್ನ ರಕ್ತದಲ್ಲಿ ರಾಜಕೀಯದ ಅಥವಾ ರಾಜಕೀಯ  ಪಕ್ಷದ ಅವೇಶದದ ಒಂದೇ ಒಂದು  ಬಿಂದು ರಕ್ತವೂ ಕೂಡ ಕೊಟ್ಟಿಲ್ಲ...

ಅದರೂ ನನಗೆ ಆವೇಶ ಕೊಟ್ಟ ಕೆಲವು ಪತಾಕೆಗಳಿವೆ....

🔰 ಹಸಿರು-ದವಳ-ನೀಲಿ ವರ್ಣಗಳ ಎಡೆಯಲಿ SSF ಎಂದು ಬರೆದ ಪತಾಕೆಯು,

🔰 ಹಬೀಬಿರ (ಸ್ವ )ರೌಲಾ ಶರೀಫಿನಿಂದ ಪ್ರಭೆ ಪಸರುವ ಅಹ್ಲುಸುನ್ನತ್ತಿನ ಪತಾಕೆಯು.

ನನ್ನ ಕೈಯಲ್ಲಿ ಎತ್ತಲು ಈ ಪತಾಕೆಗಳು ಮಾತ್ರ ಸಾಕು...

ಕಾರಣ ಇದಾಗಿದೆ ಸರಿ..
ಇಲ್ಲಿಯಾಗಿದೆ ಸರಿ..

ನನಗೆ ಇಹಪರ ಸಹಾಯಕ್ಕೆ ಈ ಪತಾಕೆಗೆ ಮಾತ್ರ ಸಾದ್ಯ.. ಖಂಡಿತ..!!!!

🔰ಅವೇಶದಿಂದ, ಆದರದಿಂದ... ಆದ್ದರಿಂದ್ದ,
ಹೆಚ್ಚಾಗಿ ಅಭಿಮಾನದಿಂದ....

🔰ನಾನು ಯಾವಾಗಲೂ ಎಲ್ಲಿಯೂ ಹೇಳುವೆನು ನಾನೊಬ್ಬ SSF ಗಾರನೆಂದು.
🔰ಅಲ್ ಹಮ್ದುಲಿಲ್ಲಾಹ್...

🔰ಅಷ್ಟ ದಿಕ್ಕು ನಡುಗಲಿ
ಜೋರಾಗಿ ನಾವು ಕರೆಯುವಾ....
🔰ಎಸ್ ಎಸ್ ಎಫ್
🔰ಎಸ್ ಎಸ್ ಎಫ್
🔰ಎಸ್ ಎಸ್ ಎಫ್ ಝಿಂದಾಬಾದ್.

✍ಗಫೂರ್ ಬಾಯಾರ್

*Dr ಮುಹಮ್ಮದ್ ಫಾರೂಖ್ ನಈಮಿ ಅಲ್ ಬುಖಾರಿ* 


ದಕ್ಷಿಣ ಕೇರಳದ ಪ್ರಗಲ್ಬ ವಿಧ್ವಾಂಸ ಕುಟುಂಬ ಪಾರಂಪರ್ಯೆಯಲ್ಲಿ ಬೆಳೆದ ಫಾರೂಖ್ ನಹೀಮಿ. ತಂದೆ ಕೊಲ್ಲೂರುವಿಲ ಪುಣ್ಯಂಪರಂಬಿಲ್ "ಮುಹಮ್ಮದ್ ಮುಸ್ಲಿಯಾರ"ರ ಮಗನಾದ  ಅಬ್ದುಲ್ ಜಲೀಲ್ ಮುಸ್ಲಿಯಾರ್, ತಾಯಿ ಕೊಲ್ಲಂ ಟ್ರಾಕುಳಂ ಕೋಯಾಕುಟ್ಟಿ ಫಯಲ್ಮಾನ್ ಎಂಬರ ಮಗಳು ಹಫ್ಸ ಬೀವಿ ದಂಪತಿಗಳ ಐವರು ಮಕ್ಕಳಲ್ಲಿ ಒಬ್ಬರಾಗಿದ್ದಾರೆ ಡಾ/ಫಾರೂಖ್ ನಈಮಿ.

ಪ್ರಮುಖ ಅಂತರಾಷ್ಟ್ರೀಯ ಪ್ರಭಾಷಣಗಾರಾದ ಮುಹಮ್ಮದ್ ಕುಂಙಿ ಸಖಾಫಿ, KMIC ಸ್ಥಾಪಕ ಹಾಫಿಳ್ ಮುಹಮ್ಮದ್ ಸ್ವಾಧಿಕ್ ಮಿಸ್ಬಾಹಿ, ಮುಹಮ್ಮದ್ ಸಫೀಕ್ ಲತ್ವೀಫಿ ಹಾಗೂ ಮೈಮೂನ ಎಂಬವರಾಗಿದ್ದಾರೆ ಸಹೋದರರು .

1978 ಮೇ 28 ರಂದು ಕೇರಳದ ಕೊಲ್ಲಂ ಚವರ ಎಂಬಲ್ಲಿ ಫಾರೂಖ್ ನಈಮಿ ಉಸ್ತಾದರ ಜನನ.

ಪ್ರಾಥಮಿಕ ಶಿಕ್ಷಣ ಸ್ವತಃ ತಂದೆಯವರಾಗಿದ್ದರು ಪ್ರಥಮ ಗುರು. ನಂತರದ ಓದು ಊರಿನ ಪಳ್ಳಿ ದರ್ಸ್ ನಲ್ಲಾಗಿತ್ತು.
ನಂತರ "ಪೋರುವಝಿ GSS"ನಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ಕೇರಳದ ಮಲಪ್ಪುರಂ ಜಿಲ್ಲೆಯ ಕೊಂಡೊಟ್ಟಿ ಬುಖಾರಿಯಲ್ಲಿ ಹತ್ತು ವರ್ಷ ಕಲಿತು *ಬುಖಾರಿ* ಸನದು ಪಡೆದು, ಜಾಮಿಅ ನಈಮಿಯ ಮುರಾದಾಬಾದ್ ನಿಂದ *ದೌರತ್ತುಲ್ ಹದೀಸಿನಲ್ಲಿ ನಈಮಿ* ಬಿರುದು, ಕೇರಳ ಅಣ್ಣಾಮಲೈ ವಿಶ್ವವಿಧ್ಯಾನಿಲಯದಿಂದ *ಸ್ನಾತಕೋತ್ತರ ಪದವಿ*, ಮೈಸೂರು ಯೂನಿವರ್ಸಿಟಿಯಿಂದ *ಜರ್ನಲೀಝಂ, ನಲ್ಲಿ ಡಿಪ್ಲೊಮಾ*, ಇಮಾಂ ನವವಿ ರ. ರವರ ಸಂಬಂಧಿಸಿ *Phd,* ಹಾಗು ಕೇರಳ ವಿಶ್ವವಿದ್ಯಾಲಯದಿಂದ *ಗೌರವ ಡಾಕ್ಟರೇಟ್ ಪದವಿ* ಗಳಿಸಿದ ಯುವ ವಿದ್ವಾಂಸರಾಗಿದ್ದರು.. 

ನಂತರ ತನ್ನ 25 ನೇ ವರ್ಷದಲ್ಲಿ  ವಿವಾಹಿತರಾದರು ಮಡದಿ ಜುವೈರಿಯಾ, ಮಕ್ಕಳಾದ ಮುಹಮ್ಮದ್ ಮಿಸ್ಬಾಹ್, ಮುಹಮ್ಮದ್ ಮಾಲಿಕ್, ಮುಹಮ್ಮದ್ ಮುಹಿಯದ್ದೀನ್, ಫಾತಿಮಾ ಬತೂಲ್, ಮುಹಮ್ಮದ್ ಫಾತಿಹ್, ಎಂಬವರಾಗಿದ್ದಾರೆ.

ತಿರುವಂತಪ್ಪುರಂ ಜಿಲ್ಲೆಯ ಆಟ್ಟಿಂಗಲ್ ಮಖ್ದೂಮಿಯ್ಯ, ಕೆಚ್ಚೇರಿ ಮಬಉಲ್ ಹುದಾ, ಕೊಂಡೊಟ್ಟಿ ಬುಖಾರಿ, ಕೊಲ್ಲಂ ಖಾದಿಸೀಯ್ಯ ಎಂಬಿ ಸ್ಥಾಪನೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಇಂಡಿಯನ್ ವೆಲ್ಫೇರ್ ಅಸ್ಸೊಸಿಯೆಷನ್ ಎಂಬ ಜೀವಕಾರುಣ್ಯ ಸಂಘಟನೆಯ ನಾಯಕರು, ಜಿ.ಸಿ.ಸಿ. ರಾಷ್ಟ್ರಗಳ ಹೊರತು, ಈಜಿಪ್ಟ್, ಮಲೇಷ್ಯಾ, ಸಿಂಗಾಪುರ್, ಯೆಮನ್, ಇರಾಖ್, ಜೋರ್ಡನ್, ಎಂಬಿ ದೇಶಗಳಲ್ಲಿ ಪ್ರಭೋದನೆ ನಡೆಸಿದ ಧರ್ಮ ಪಂಡಿತರು. 

20ರಷ್ಟು ಮಹತ್ತರವಾದ ಗ್ರಂಥಗಳನ್ನು ಬರೆದು ಸಮೂಹಕ್ಕೆ ಸಮರ್ಪಿಸಿದ ಗ್ರಂಥಕರ್ತರು. 

1000 ಗಂಟೆಗಳಿಂದ ಹೆಚ್ಚು ಆವರ್ತನೆವಿಲ್ಲದೆ ಮುತ್ತು ನಬಿ ﷺ ರವರ ಮದ್ಹ್ ಗಳನ್ನು ಭಾಷಣ ಮಾಡಿದ ಅನುಗ್ರಹಿತ ಪ್ರಭಾಷಗರು.. 

ಅದೇ ಅರ್ಹತೆಗಿರುವ ಅಂಗೀಕಾರವಾಗಿದೆ ಈಗ SSF ನ ಕೇರಳ ರಾಜ್ಯ ಅಧ್ಯಕ್ಷರಾಗಿ ನೇಮಕರಾದ *Dr. ಮುಹಮ್ಮದ್ ನಈಮಿ ಉಸ್ತಾದವರಿಗೆ ಕರ್ನಾಟಕ ಸುನ್ನೀ ರೈಟರ್ಸ್ ಕ್ಲಬ್ ವತಿಯಿಂದ ತುಂಬು ಹೃದಯದ   ಅಭಿನಂದನೆಗಳು....*
💐💐💐💐💐💐💐


*ಉಸ್ತಾದರು ಈಗ ವಹಿಸಿಕೊಂಡಿರುವ ಪದವಿಗಳು*
🕎🕎🕎🕎🕎🕎🕎

*ಅಧ್ಯಕ್ಷರು:* SSF ಕೇರಳ ರಾಜ್ಯ
*ಉಪಾಧ್ಯಕ್ಷರು:* SSF ಅಲ್ ಇಂಡಿಯಾ
*ಪ್ರಿನ್ಸಿಪಾಲ್:* ಮಖ್ದೂಮಿಯ್ಯ ದಅವಾ ಕಾಲೇಜ್. 
*ಡೈರೆಕ್ಟರ್:* ಖಾದಿಸೀಯ್ಯ ಇಸ್ಲಾಮಿಕ್ ಕಾಂಪ್ಲೆಕ್ಸ್. 
*ಪ್ರದಾನ ಕಾರ್ಯದರ್ಶಿ:* ಇಂಡಿಯನ್ ವೆಲ್ಫೇರ್ ಅಸೋಸಿಯೆನ್ (IWA) 
*ಚೀಫ್ ಎಡಿಟರ್:* ಇನ್ಫೋ ಇಸ್ಲಾಂ ಮಾಗಸೀನ್. 
*ಚೇರ್ಮ್ಯಾನ್:* ಓರ್ಬಿಟ್- ಕೊಂಡೋಟ್ಟಿ, ಮಲಪ್ಪುರಂ.
💢💢💢💢💢💢💢

*ಲಭಿಸಿದ ಅವಾರ್ಡುಗಳು*
🔅🔅🔅🔅🔅🔅🔅

ಹಝಾನ್ ಬಿನ್ ಸಾಬಿತ್ತ್ ಅವಾರ್ಡ್ (ರಿಯಾದ್ 2010)

ಖತ್ತಿಬುಶ್ಹಮಾಇಲ್ ಅವಾರ್ಡ್ (ಮಲಪ್ಪುರಂ, 2011) 

ಮಾನುಪ್ಪ ಮುಸ್ಲಿಯಾರ್ ಮೆಮೋರಿಯಲ್ ಅವಾರ್ಡ್ (ಪನ್ನಂಬ್ರ, ಆಲಪುಝ 2015) 

♒ಅಲ್ಲದೆ ಭಾರತದಲ್ಲೂ, ವಿದೇಶದಲ್ಲೂ ಇರುವ ನೂರಾರು ವೇದಿಕೆಗಳಲ್ಲಿ ಸ್ವೀಕರಣಗಳು, ಅನುಮೋದನೆಗಳು.. 

2 ಲಕ್ಷಕ್ಕಿಂತ ಅಧಿಕ Facebook ಫಾಲೋವರ್ಸ್ ಇರುವ ಕೇರಳದ ಏಕ ಯುವಪಂಡಿತರಾಗಿದ್ದಾರೆ ಫಾರೂಖ್ ನಈಮಿ ಉಸ್ತಾದ್.. 

ಉಸ್ತಾದವರಿಗೆ ಇನ್ನು ಹಲವಾರು ಸೇವನೆಪಾದೆಗಳನ್ನು ಮುನ್ನೇರಲು ಅಲ್ಲಾಹು ತೌಫೀಖ್ ನೀಡಲಿ ಆಮೀನ್
💐💐💐💐💐💐💐

✍ ಗಫೂರ್ ಬಾಯಾರು
💢💢💢💢💢💢💢😁 

*ಭಾರತದ ಸ್ವಾತಂತ್ರ್ಯ ಹೋರಾಟಗಾರರಾದ  ಮುಸ್ಲಿಂ ನೇತಾರರಾದ ಕೆಲವು ಪ್ರಮುಖ ಪಂಡಿತರುಗಳ ಹೆಸರು* 


➖➖➖➖➖➖➖➖
           ಭಾಗ 02
🔹🔹🔹🔹🔹🔹🔹🔹

41. ಹಝ್ರತ್ ಮೌಲಾನ ಅಬ್ದುಲ್ ಬಾರಿ.

42. ಖಾನ್ ಅಬ್ದುಲ್ ಗಫ್ಫಾರ್ ಖಾನ್.

43. ಮುಫ್ತಿ ಅತ್ವಿಖೂರ್ ರಹ್ಮಾನ್ ಉಸ್ಮಾನಿ. 

44. Dr. ಸಯ್ಯಿದ್ ಮಹ್ಮೂದ್.

45. ಅಬ್ದುಲ್ ಸಮದ್ ಖಾನ್.

46. ರಾಫಿ ಅಹ್ಮದ್ ಖ್ವಿದ್ವಿವಿ.

47. ಯೂಸುಫ್ ಮೆಹ್ರ್ ಅಲಿ.

48. ಆಶ್ಫಾಖುಲ್ಲಾಹ್ ಖಾನ್.

49. ಬಾರಿಸ್ಟರ್ ಆಸೀಫ್ ಅಲಿ.

50. ಹಝ್ರತ್ತ್ ಮೌಲಾನ ಅತಾಉಲ್ಲಾಹ್ ಷಾ ಬುಖಾರಿ.

51. ಮೌಲಾನ ಖಲೀಲುಲ್ ರಹ್ಮಾನ್ ಲುದಿಯಾನವಿ.

52. ಅಬ್ದುಲ್ ಖಯ್ಯುಮ್ ಅನ್ಸಾರಿ.

53. ಮೌಲಾನ ಮುಹಮ್ಮದಲಿ ಜೌಹರ್.

54. ಮೌಲಾನ ಶೌಕತ್ತಲಿ ಜೌಹರ್.

☪ಪ್ರಸ್ತುತ ಮುಸ್ಲಿಂಗಳೆಲ್ಲರೂ ಪಾಂಡಿತ್ಯವುಳ್ಳವರೂ, ಉತ್ತರ ಭಾರತದಲ್ಲಿ ಗಾಂಧೀಜಿಯ ಮೊದಲೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಂಗಳೊಂದಿಗೂ, 
ಅನ್ಯ ಧರ್ಮ ವಿಭಾಗದವರೊಂದಿಗೂ ಸಮರ ರಂಗಕ್ಕೆ ಧುಮುಕಲು ಆಹ್ವಾನ ಕೊಟ್ಟು, ಅವರೊಂದಿಗೆ ಸೇರಿ ಬ್ರಿಟಿಷ್ ಗಾರರೊಂದಿಗೆ ಹೋರಾಡಿ ವೀರ ಮರಣ ಹೊಂದಿದವರಾಗಿದ್ದಾರೆ. 

ಅದೇ ಸಂದರ್ಭದಲ್ಲಿ ಇತ್ತ ಕೇರಳದಲ್ಲಿಯೂ ಮಂಬುರಮ್ ಸಯ್ಯಿದ್ ಅಲವಿ ತಂಙಳರವರ (ರ) ನೇತೃತ್ವದಲ್ಲಿ ಕುಂಞಾಲಿ ಮರಕಾರ್ (ರ)
 (ಒಂದನೇಯವರು,
 ಎರಡನೆಯವರು,
 ಮೂರನೆಯವರು) 
ಅಲಿ ಮುಸ್ಲಿಯಾರ್ (ರ)
 ಅಬ್ದುಲ್ ಖಾದರ್ ಅತ್ತನ್ (ರ) 
ಗುರುಕಲ್ ಚೆಮ್ಬಾನ್ ಪೊಕರ್ (ರ)
ಮೊದಲಾದ ಹಲವಾರು  ಮುಸ್ಲಿಂಗಳು ಹಿಂದುಳಿದ ದಲಿತ ವಿಭಾಗದರೊಂದಿಗೆ ಸೇರಿ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಜೀವನವನ್ನೇ ಬಲಿ ಅರ್ಪಿಸಿದವರಾಗಿದ್ದಾರೆ. 
ಇಂದಿನ ಮುಸ್ಲಿಂಗಳ ಪೂರ್ವಿಕರು. 

ಆದರೆ ಆ ಸ್ವಾತಂತ್ರ್ಯ ಸಮರ ನಡೆಯುವ ವೇಳೆಯಲ್ಲಿ ವಂಚನೆ ಮಾಡಿದವರು, ಚೀನ ಗೂಡತಂತ್ರರು ಎಂದು ಅರಿಯಲ್ಪಟವರು,  ಹಾಗೂ ಆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರು,  ಇಂದು ಕಪಟ ದೇಶ ಪ್ರೇಮದ ನಾಟಕವಾಡುತ್ತಾ,  ನಿರಪರಾಧಿಗಳಾದ ಮುಸ್ಲಿಮರನ್ನು, ಮುಸ್ಲಿಂ ಪಂಡಿತರನ್ನು ಭಯೋತ್ಪಾದಕರು, ಉಗ್ರವಾದಿಗಳೆಂದು ಮುದ್ರೆ ಒತ್ತಿ ಜೈಲುಗಳೊಳಗೆ ಹಾಕಲು ಪ್ರಯತ್ನಿಸುತ್ತಾರೆ.

 ಪರಂಪರಾಗತ ಮುಸ್ಲಿಂ ವಿಶ್ವಾಸಗಳಿಂದ ಬೇರ್ಪಟ್ಟು ವರ್ತಮಾನ ಕಾಲದ ಮುಸ್ಲಿಂ ಸಮುದಾಯಗಳಲ್ಲಿ ಭಿನ್ನತೆ ಉಂಟಾಗಿ ಹಲವು ಪಂಗಡಗಳಾಗಿರುವುದು ಹಾಗೂ ಈ ಪರಸ್ಪರ ಭಿನ್ನತೆಗಳ ಕಾರಣ ನಮ್ಮ ಮಕ್ಕಳಿಗೆ ಸ್ವಾತಂತ್ರ್ಯ ಸಮರದಲ್ಲಿ ಮುಸ್ಲಿಮರ ಕೊಡುಗೆ ಏನೆಂದು ಕೂಡ ತಿಳಿಯದೆ, 
ಮೇಲೆ ಹೇಳಿದ ಮುಸ್ಲಿಂ ನೇತಾರರುಗಳ ಹೆಸರುಗಳು ಅನ್ಯವಾಗಿ ಹೋಗುತ್ತಿದೆ. ಅವರು ಕಲಿತುಕೊಂಡಿರುವ ಶಾಲೆ, ಪಾಠ ಪುಸ್ತಕಗಳಿಂದೆಲ್ಲಾ ಬಹುತ್ಯೇಕ ಹೆಸರುಗಳನ್ನು ಅಳಿಸಿ ಬಿಟ್ಟಿರುತ್ತಾರೆ. 70ನೇ ಸ್ವಾತಂತ್ರ್ಯ ಸಂಗ್ರಾಮ ಸಂಭ್ರಮದ  ಈ ವೇಳೆಯಲ್ಲಿ ನಾವು ನಮ್ಮ ಮಕ್ಕಳಿಗೆ, ಭಾರತ ಸ್ವಾತಂತ್ರ್ಯ ಸಮರದಲ್ಲಿ ಭಾಗವಹಿಸಿದ ನಮ್ಮ ಪೂರ್ವಿಕರ ಜೀವನ ಚರಿತ್ರೆಯ  ಕುರಿತುಳ್ಳ ಈ ಸಂದೇಶ ತಿಳಿಸಿಕೊಡಬೇಕಾಗಿದೆ.
 ಅದು ಈ ಕಾಲದ ಬೇಡಿಕೆಯಾಗಿದೆ.

ಇನ್ಶಾ ಅಲ್ಲಾಹ್. 

ಎಲ್ಲರಿಗೂ ಸ್ವಾತಂತ್ರ್ಯ ದಿನ ಶುಭಾಶಯಗಳು. 


✍ _ಗಫೂರ್ ಬಾಯಾರ್_ 
🇮🇳🇮🇳🇮🇳🇮🇳🇮🇳🇮🇳🇮🇳🇮🇳

Sunday, September 24, 2017

ಇತಿಹಾಸ ಪ್ರಸಿದ್ಧ ಯಮಾಮ ಯುದ್ಧ ಭಾಗ-19

🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
    *ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 1⃣9⃣
➖➖➖➖➖➖➖➖➖

ಖಾಲಿದ್ ಇಬ್ನು ವಾಲಿದ್(ರ) ಯಮಾಮ ರಣಾಂಗಣಕ್ಕೆ ಪಯಣ ಬೆಳೆಸಿದರು‌..⤵

 ತಂಡ *ಅಕ್ರುಬಾ* ಎಂಬ ಸ್ಥಳಕ್ಕೆ ತಲುಪಿ ಅಂದು ಅಲ್ಲಿಯೇ ತಂಗಿದರು.

ಆದರೆ *ಮುಸೈಲಿಮನ* ಗುಪ್ತಚರ ಇಲಾಖೆಯವರು *ಇಸ್ಲಾಮಿಕ ಸೈನ್ಯ* ಬರುವುದನ್ನು ತಿಳಿದುಕೊಡು ಈ ಮಾಹಿತಿಯನ್ನು *ಮುಸೈಲಿಮ*ನಿಗೆ ತಿಳಿಸಲು ಯಮಾಮಕ್ಕೆ ಹೋದರು.

ಅದೇ ವೇಳೆ ಅರಮನೆಯಲ್ಲಿ *ಆಬಿದ್'*ಗೆ ನಿದ್ರೆ ಬಾರದೇ ಇರುವುದರಿಂದ *ಫರ್ಹನಾಝ್* ಕೂಡ ನಿದ್ರಿಸದೆ ಅವನನ್ನು ಮಲಗಿಸಲು ಪ್ರಯತ್ನಿಸುತ್ತಿರುವಾಗ
ಯಾರೋ ಗೇಟು ತೆರೆಯುವಂತೆ  ಶಬ್ದ ಕೇಳಿಸಿತು. ಆಗ ಅವಳು ಕಿಟಿಕಿಯಿಂದ ಹೊರಗಡೆ ಇಣುಕಿ ನೋಡಿದ್ದಾಗ.. ಸೈನಿಕರು ಬಹಳ ಗೌರವದಿಂದ ಗೇಟನ್ನು ತೆರೆದು ಕೊಟ್ಟು ಬದಿಗೆ ನಿಲ್ಲುವುದು. ವಯಸ್ಸಾದ ವ್ಯಕ್ತಿಯೊಬ್ಬರು ಮುಂದೆಯೂ, ಇಬ್ಬರು ಯುವಕರು ಹಿಂದೆಯೂ ಒಳಗೆ ಪ್ರವೇಶಿಸುವುದು ಕಾಣಿಸಿತು.

 *ಮುಸೈಲಿಮನ* ಮಗನ ಪತ್ನಿ ಎಂದು ಹೇಳಿದರೂ ರಾತ್ರಿ ನನಗೆ ಗೇಟು ತೆರೆದು ಕೊಡದ ಸೈನಿಕರು ಇಂದು ಇವರಿಗೆ ಇಷ್ಟೊಂದು ಆತಿಥ್ಯ ನೀಡುವುದರಲ್ಲಿ ಏನೋ ರಹಸ್ಯ ಅಡಗಿದೆ.
ಅದು ನನಗೆ ತಿಳಿಯಬೇಕು ಎಂದು *ಫರ್ಹನಾಝ್* ಚಿಂತಿಸಿದಳು.

ಬಳಿಕ *ಫರ್ಹನಾಝ್* ಮೆಲ್ಲ ಮೆಲ್ಲನೆ ಕೊಠಡಿಯಿಂದ ಹೊರಗೆ ಬಂದು, *ಮುಸೈಲಿಮನು* ಮಲಗುವ ಕೋಣೆಯ ಹಿಂದೆಯಿರುವ ಪರದೆಯ ಹಿಂದೆ ಅಡಗಿ ನಿಂತಳು.

ಆಗ ಆ ಮೂವರು *ಮುಸೈಲಿಮನ* ಕೋಣೆಯ ಒಳಗೆ ಪ್ರವೇಶಿಸಿದರು. ಅವರಲ್ಲಿದ್ದ ವೃದ್ದನ ಹೆಸರು *ನಹಾರ್ ರಜ್ಜಾಲಿ ಇಬ್ನು ಉರ್'ತ್ತುಬ* ಎಂದಾಗಿತ್ತು.

( *ನಹಾರ್ ರಜ್ಜಾಲಿ ಇಬ್ನು ಉರ್'ತ್ತುಬ*ರನ್ನು ಚುಟುಕಾಗಿ ಪರಿಚಯಿಸಬೇಕಾಗುತ್ತದೆ)👇👇

*ನಹಾರ್ ರಜ್ಜಾಲಿ*
ನೆಬಿ (ﷺ) ರವರ ಮುಂದೆ ಕುಳಿತು ಪರಿಶುದ್ಧ ಖುರ್'ಆನ್ ಸಂಪೂರ್ಣವಾಗಿ ಕಂಠಪಾಠ ಮಾಡಿದ *ಹಾಫಿಲ್*ಗಳಲ್ಲಿ ಓರ್ವರಾಗಿದ್ದರು. ಅವರನ್ನು *ನೆಬಿ (ﷺ)ರು* ಇಸ್ಲಾಮಿಕ ಪ್ರಭೋದನೆಗಾಗಿ ಯಮಾಮಕ್ಕೆ ಕಳುಹಿಸಿದ್ದರು.
ನಹಾರ್ ಯಮಾಮಕ್ಕೆ ತಲುಪಿ *ನೆಬಿ (ﷺ) ರ* ಪರವಾಗಿ ಭಾಷಣ ಮಾಡುತ್ತಿದ್ದರು. *ಮುಸೈಲಿಮನು* ಕಳ್ಳ ಪ್ರವಾದಿ ಎಂದು ಧೈರ್ಯದಿಂದ ಭಾಷಣ ಮಾಡುತ್ತಿದ್ದರು.

ಅವನ ಪ್ರಭೋದನೆಯನ್ನು ಕಂಡು *ಮುಸೈಲಿಮನು,* ನಹಾರ್ ಈ ರೀತಿ ಹೇಳುತ್ತಾ ಬಂದರೆ ನನಗೆ ಉಳಿಗಾಲವಿಲ್ಲ, ಹಾಗಾಗಿ ಅವನನ್ನು ತನ್ನ ಪಕ್ಷಕ್ಕೆ ಸೇರಿಸಿದರೆ ಬೇರೆ ಯಾವುದೇ ಪ್ರಭೋದನೆಯನ್ನು ನಾನು ಮಾಡಬೇಕಾಗಿಲ್ಲ.! ಎಂದು ವಕ್ರದಾರಿ ಹಿಡಿದು *ನಹಾರ್'*ನನ್ನು ತನ್ನ ಬುಟ್ಟಿಗೆ ಹಾಕಲು ಶ್ರಮಪಟ್ಟನು..

ಹಾಗೆ ಒಂದು ದಿನ ರಾತ್ರಿ ನಹಾರ್'ನನ್ನು ಗುಟ್ಟಾಗಿ ಅರಮನೆಗೆ ಆಮಂತ್ರಿಸಿದ ಮುಸೈಲಿಮ ಹೇಳಿದನು *"ನಹಾರ್, ನಿನಗೆ ಜೀವನ ಪರ್ಯಂತ ಜೀವಿಸಲು ಬೇಕಾದಷ್ಟು ಚಿನ್ನಾಭರಣ ಮತ್ತು ಹಣವನ್ನು ನಾನು ಕೊಡುತ್ತೇನೆ. ಆದರೆ ನೀನು ನನ್ನ ಪಕ್ಷದವನಾಗಿ ನನಗೆ ಬೇಕಾಗಿ ವಾದಿಸಬೇಕು..!"*

ಹೀಗೆ ಹಣ, ಒಡವೆಗಳ ಮೋಹದಿಂದ *ಮುಸೈಲಿಮನ* ಆಮಿಷಕ್ಕೆ ಬಲಿಯಾಗಿ *ನಹಾರ್* ನೈಜ ದೀನಿನ ಆದರ್ಶವನ್ನು ಹಣದ ಮುಂದೆ ಅಡವಿಟ್ಟು ಲೋಕದ ಅತೀ ದೊಡ್ಡ ಮೋಸಗಾರನಾದನು..

*ಪ್ರವಾದಿ (ﷺ)* ರವರು ಸ್ವತಃ ಹೇಳಿ ರವಾನಿಸಿದ ಪ್ರಭೋದಕ *ನಹಾರ್* ಮುಸೈಲಿಮನ ಹಣದ ವ್ಯಾಮೋಹದ ಮುಂದೆ ತನ್ನ ಈಮಾನನ್ನು ಮಾರಿದನು. ನಂತರ *ನೆಬಿ (ﷺ)ರವರ* ವಿರುದ್ಧವಾಗಿ ಭಾಷಣ ಮಾಡಲು ಪ್ರಾರಂಭಿಸಿದನು.

ಮುಸೈಲಿಮನಿಗೆ ಬೇಕಾಗಿ *ಖುರ್'ಆನ್*ನ ಆಯತ್'ಗಳನ್ನು ಬದಲಿಸಿ ಹೊಸ ಕಿತಾಬ್ ಮಾಡಿ ಕೊಟ್ಟನು.

ಮುತ್ತು ಮುಹಮ್ಮದ್ ಮುಸ್ತಫಾ (ﷺ)ರ ವಫಾತಿನ ನಂತರವೂ *ನಹಾರ್* ಮುಸೈಲಿಮನ ಪರವಾಗಿ ಪ್ರಬೋಧಕನಾಗಿ ಜೀವಿಸುತ್ತಿದ್ದನು..

ಆ ಮೋಸಗಾರ *ನಹಾರ್* ಆಗಿದೆ ಮುಸೈಲಿಮನ ಮನೆಯ ಒಳಗೆ ಪ್ರವೇಶಿಸಿರುವುದು.

*ನಹಾರ್:* ಬಹಳ ಗೌಪ್ಯವಾಗಿ ಒಂದು ವಿಷಯ ಹೇಳಲು ಬಂದಿರುವೆನು..

*ಮುಸೈಲಿಮ:* ಏನದು??⤵

ಮುಂದುವರಿಯುವುದು..

✍ ಗಫೂರ್ ಬಾಯಾರ್
+974 6669 3010
ಸಹಾಯ: ಅಕ್ಬರ್ ಪಿ.ಎ.
🛡🛡🛡🛡🛡🛡🛡

ಇತಿಹಾಸ ಪ್ರಸಿದ್ಧ ಯಮಾಮ ಯುದ್ಧ ಭಾಗ-18

🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
    *ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 1⃣8⃣
➖➖➖➖➖➖➖➖➖

*ಅದೇ ಸಮಯ ಮದೀನದಲ್ಲಿ..*⤵

 ನೆಬಿ ﷺ ರವರ ನೆರಳಿನ ಹಾಗೆ ಜೊತೆಯಾಗಿ ನಡೆದ *ಖಲೀಫ ಅಬೂಬಕ್ಕರ್ ಸಿದ್ದೀಖ್ (ರ*)ರವರು ಸ್ವಹಾಬಿವರ್ಯರ ಹತ್ತಿರ ಕೇಳಿದರು "ಪ್ರಿಯರಾದ ಸ್ವಹಾಬಾಗಳೇ ಯಾರಾಗಿದ್ದಾರೆ ಅಂತಿಮ ಪ್ರವಾದಿವರ್ಯರು?" ﷺ.
ಸ್ವಹಾಬಿಗಳೆಲ್ಲರೂ ಅದ್ಭುತ ದಿಂದ *ಸಿದ್ದೀಖ್ (ರ)* ರವರ ಮುಖ ನೋಡಿ ಹೇಳಿದರು.
*ಅಂತಿಮ ಪ್ರವಾದಿ ಆ ರೌಳಾ ಶರೀಫ್'ನಲ್ಲಿ ಚಿರ ನಿದ್ರೆಯಲ್ಲಿ ಮಲಗಿರುವ ಅಲ್ಲಾಹನ ರಸೂಲ್ ಮುಹಮ್ಮದ್ ಮುಸ್ತಫಾ ﷺ ರವರಾಗಿದ್ದಾರೆ .*

ಆಗ *ಸಿದ್ದೀಖ್ (ರ)* ರವರು ಅದೇ
ಹೌದು ಅವರೇ ಅಲ್ಲವೇ!! ಎನ್ನುತ್ತಾ ಕೂಡಲೇ ತನ್ನ ಜುಬ್ಬದ ಕಿಸೆಯಿಂದ ಒಂದು ಕಾಗದ ತೆಗೆದು ಕೇಳಿದರು..
ಹಾಗಾದರೆ ಇವರು ಹೇಗೆ ಅಂತಿಮ ಪ್ರವಾದಿಯಾಗುವುದು.?

*ಸ್ವಹಾಬಿಗಳು:* ಅದೇನು? ಏನಿದೆ ಪತ್ರದಲ್ಲಿ?

*ಸಿದ್ದೀಖ್( ರ*) ಇದು ಕಳ್ಳ ಪ್ರವಾದಿಯಾದ ಮುಸೈಲಿಮನು ನನಗೊಂದು ಪತ್ರ ಬರೆದಿದ್ದಾನೆ.

*(ಮುಹಮ್ಮದ್ (ﷺ)ರವರು ವಫಾತಾಗಿದ್ದಾರಲ್ಲವೇ‌..ಈಗ ಜೇವಂತವಿರುವ ನಬಿ ನಾನಾಗಿದ್ದೇನೆ.!!ಅದರಿಂದ ನಾನಾಗಿದ್ದೇನೆ ಅಂತಿಮ ಪ್ರವಾದಿ!)*

ಈ ರೀತಿಯಾಗಿದೆ ಅವನು ಇದರಲ್ಲಿ ಬರೆದಿರುವುದು.
ಇದು ಸರಿಯಲ್ಲ.. ಅವನ ಕಳ್ಳತನದ ಅಸಲಿಯತ್ತು ಬಹಿರಂಗ ಪಡಿಸಬೇಕು. ಅವನ ಕಳ್ಳ ಪ್ರವಾದಿತ್ವವನ್ನು ಕೊನೆಗೊಳ್ಳಿಸಬೇಕು.
*ಖಾಲಿದ್ ಇಬ್ನು ವಾಲಿದ್ (ರ)* ಇಲ್ಲವೇ ಈ ಸಭೆಯಲ್ಲಿ?
ಮುಸೈಲಿಮನ ಕಳ್ಳ ಪ್ರವಾದಿತ್ವವನ್ನು ಇಲ್ಲವಾಗಿಸಲು *ಖಾಲಿದ್ ಇಬ್ನು ವಾಲಿದ್ (ರ) ರವರನ್ನು ಸೈನ್ಯ ಸಮೇತ ಯಮಾಮಕ್ಕೆ ಕಳುಹಿಸಲು ನಾನು ತೀರ್ಮಾನಿಸಿರುವೆನು.*

ಇಂತಹ ಸ್ಪೂರ್ತಿದಾಯಕ ಮಾತನ್ನು ಕೇಳಿದ ಕ್ಷಣವೇ *ಮಹಾನರಾದ ಸೈಫುಲ್ಲಾಹಿ ಖಾಲಿದ್ ಇಬ್ನು ವಾಲಿದ್ (ರ) ರವರು ಎದ್ದು ನಿಂತು ಹೇಳಿದರು* *"ಲಬೈಕ್ ಯಾ ಆಮಿರುಲ್ ಮು0ಮಿನೀನ್".*
ಎಂದು ಹೇಳುತ್ತಾ
ಧೀರ ಶೂರ ಪರಾಕ್ರಮಿಯಾದ ಆ ಸೈನ್ಯ ನಾಯಕರು *ಸಿದ್ದೀಖ್ (ರ)* ರವರ ಮುಂದೆ ಹಾಜರಾದರು.

*ಸಿದ್ದೀಖ್ ರ:* ಖಾಲಿದ್ (ರ) ಮೊದಲಿಗೆ ಮುಸೈಲಿಮ ನಮಗೆ ಶರಣಾಗಬೇಕು. ಅಲ್ಲದಿದ್ದರೆ ಅವನ ತಲೆ ಕಡಿಯಬೇಕು.
 ಅವನು ದುನಿಯಾದಲ್ಲಿ ಜೀವಿಸಿರಬಾರದು.

ಮಹಾನರಾದ *ಸೈಫುಲ್ಲಾಹಿ ಖಾಲಿದ್ ಇಬ್ನು ವಾಲಿದ್ (ರ) ರವರು, ಸಿದ್ದೀಖ್ (ರ) ರವರ ಸಮಕ್ಷಮದಲ್ಲೇ ಪರಿಶುದ್ಧ ರೌಳಾ ಶರೀಫಿಗೆ ಹೋಗಿ ಮುತ್ತು ರಸೂಲ್ ﷺ ರವರಿಗೆ ಸಲಾಂ ಹೇಳಿ ಮರಳಿ ಬಂದು .. ಅಮೀರುಲ್ ಮುಂಮಿನೀನ್ ನಾನು ತಯಾರಾದೆನು!!* ಎಂದರು

ಖಾಲಿದ್' ಇಬ್ನು ವಾಲಿದ್ (ರ) ಯುದ್ಧಕ್ಕೆ ಸಜ್ಜಾಗಿ ಯಮಾಮಕ್ಕೆ ಹೋಗಲು ತೀರ್ಮಾನಿಸಿದರು. 12 ಸಾವಿರದಷ್ಟು ಸೈನಿಕರೊಂದಿಗೆ *ಖಾಲಿದ್ ಇಬ್ನು ವಾಲಿದ್ (ರ.*) ಯಮಾಮ ರಣಾಂಗಣಕ್ಕೆ ಪಯಣ ಬೆಳೆಸಿದರು.....⤵

ಮುಂದುವರಿಯುವುದು..

✍ ಗಫೂರ್ ಬಾಯಾರ್
+974 6669 3010
ಸಹಾಯ: ಅಕ್ಬರ್ ಪಿ.ಎ.
🛡🛡🛡🛡🛡🛡🛡

ಇತಿಹಾಸ ಪ್ರಸಿದ್ಧ ಯಮಾಮ ಯುದ್ಧ ಭಾಗ-17

🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
    *ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 1⃣7⃣
➖➖➖➖➖➖➖➖➖

ಆ ನೋಟವನ್ನು ಕಂಡು ಅವರು ಒಮ್ಮೆಲೇ  ಗಾಬರಿಗೊಂಡರು. ⤵

*ಮುಸೈಲಿಮ* ಸೈನಿಕರೊಂದಿಗೆ ಕೇಳಿದನು ಯಾರಿದು? ಈ ಹೆಣ್ಣು ಯಾರು?

ಹಿಂದಿನ ದಿನ ತಿಂದ ಏಟಿನ ನೋವು ಮಾಸಿ ಹೋಗಿರದ ಸೈನಿಕನು ಹೆದರಿಕೆಯಿಂದ ಹತ್ತಿರದಲ್ಲಿರುವ ಸೈನಿಕನೊಂದಿಗೆ ನೀನು ಹೇಳು ಎಂದನು..

ಆಗ ಆ ಸೈನಿಕನು ಭಯದಿಂದಲೇ..
ಅ.. ದು.... ಅದು..
ನಿಮ್ಮ ಮಗನಾದ ಮಸೂದ್.. ಆ.. *ಮಸೂದ್'*ನ ಪತ್ನಿ ಮತ್ತು ಮಗನು.!

ಇದನ್ನು ಕೇಳಿದ *ಮುಸೈಲಿಮ* ಹೌಹಾರುತ್ತಾ ಎದ್ದು ಬಂದು..
ಅನಿರೀಕ್ಷಿತ ಘಟನೆಯಿಂದ ಆಶ್ಚರ್ಯವಾಗಿ *"ಹೆಣ್ಣೇ.. ನನ್ನ ಮಗನು ಎಲ್ಲಿಯೋ ಮದುವೆ ಆಗಿರುವ ವಿಷಯವನ್ನು ನಾನು ಕೇಳಿದ್ದೇನೆ. ಆದರೆ ಅದು ಎಲ್ಲಿ? ಯಾವಾಗ? ಯಾರನ್ನು? ಎಂದು ಸರಿಯಾಗಿ ತಿಳಿಯದೇ ಇದ್ದರಿಂದ ನನಗೆ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ.. ಇದು ನನ್ನ ಮಸೂದ್'ನ ಸುಪುತ್ರನೇ?"*
ಎಂದು ಹೇಳಿದನು..

*ಫರ್ಹನಾಝ್* ಹೌದು ಎಂದಿದ್ದೇ ತಡ.. ತಕ್ಷಣ *ಮುಸೈಲಿಮ* ಆಬಿದ್'ನನ್ನು ಎತ್ತಿ ಚುಂಬಿಸಿದನು. ನಂತರ ಮನೆಯ ಕೆಲಸದವಳಾದ *ರಮಿಹ'*ಳನ್ನು ಕರೆದು "ನೀನು ಬೇಗ ಹೋಗಿ ನನ್ನ ಹೆಂಡತಿ *ಫೆಮಿನ'*ಳನ್ನು ಕರೆಕೊಂಡು ಬಾ.." ಎಂದು ನುಡಿದನು..

*ರಮಿಹ* ಹೋಗಿ *ಮುಸೈಲಿಮ'*ನ ಪತ್ನಿಯನ್ನು ಕರೆಕೊಂಡು ಬಂದಳು. ದಢೂತಿ ದೇಹ ಹೊಂದಿರುವ *ಫೆಮಿನ* ಬರುವುದನ್ನು ಕಂಡು *ಫರ್ಹನಾಝ್* ಹೆದರಿದಳು.

*ಮುಸೈಲಿಮ:* ಫೆಮಿನ ಇದು ನಮ್ಮ ಮಗ *ಮಸೂದ್'*ನ ಪತ್ನಿ ಮತ್ತು ಅವನ ಮಗ..

ಇದು ಕೇಳಿದಾಗ *ಫೆಮಿನ* ಓಡಿ ಬಂದು ಪ್ರೀತಿಯಿಂದ *ಆಬಿದ್'*ನನ್ನು ಎತ್ತಿಕೊಂಡು ಲಾಲಿಸಲು ತೊಡಗಿದಾಗ., ಹೊಸ ಪರಿಚಯವಾದ್ದರಿಂದ *ಆಬಿದ್*  ಭಯಭೀತಿಯಿಂದ ಅಳಲು ಶುರು ಮಾಡಿದನು.. ಆಗ *ಫರ್ಹನಾಝ್* ಬಂದು, ಅಮ್ಮಾ ಮಗುವನ್ನು ನನಗೆ ಕೊಡಿ ಎಂದು ಹೇಳಿ *ಆಬಿದ್'*ನನ್ನು ಎತ್ತಿದಾಗ ಅಳುವುದನ್ನು ನಿಲ್ಲಿಸಿ ಶಾಂತವಾದನು.‌..

*ಮುಸೈಲಿಮ* ಕೆಲಸದವಳಾದ *ರಮಿಹ'*ಳೊಂದಿಗೆ ಅವರನ್ನು ಒಳಗೆ ಕರೆದುಕೊಂಡು ಹೋಗಲು ಹೇಳಿದಾಗ *ರಮಿಹ* ಅವರನ್ನು ಒಳಗಡೆ ಕರೆದುಕೊಂಡು ಹೋದಳು.

*ಅದೇ ಸಮಯ ಮದೀನದಲ್ಲಿ....*⤵

ಮುಂದುವರಿಯುವುದು..

✍ ಗಫೂರ್ ಬಾಯಾರ್
+974 6669 3010
ಸಹಾಯ: ಅಕ್ಬರ್ ಪಿ.ಎ.
🛡🛡🛡🛡🛡🛡🛡

ಇತಿಹಾಸ ಪ್ರಸಿದ್ಧ ಯಮಾಮ ಯುದ್ಧ ಭಾಗ-16

🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
    *ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 1⃣6⃣
➖➖➖➖➖➖➖➖➖

ಮುಸೈಲಿಮನಿಗೆ⤵

 ಕಾರ್ಯಗಳನ್ನು ತಿಳಿಸಿಕೊಡುವ ಸಲುವಾಗಿ ನಬಿ ﷺ ರವರು ಪತ್ರ ಕಳುಹಿಸಿ ಕೊಟ್ಟರು.

ಆ ಪತ್ರದ ಕೊನೆಯ ಭಾಗದಲ್ಲಿ ಹೀಗೆ ಬರೆದಿತ್ತು..👇👇

*ಯಾ.. ಮುಸೈಲಿಮ..*
ಅನ ಇಬ್ನು ಅಬ್ದುಲ್ ಮುತ್ತಲಿಬ್.
*ನಾನು ಅಬ್ದುಲ್ ಮುತ್ತಲಿಬ್'ನ ಮಗನಾಗಿದ್ದೇನೆ, ನಾನು ಸತ್ಯ ಪ್ರವಾದಿಯಾಗಿದ್ದೇನೆ.*
ಅಂತ ಕದ್ಧಾಬ್.
*ನೀನು ಕಳ್ಳ ಪ್ರವಾದಿಯಾಗಿದ್ದೀಯಾ"*

ಈ ಮಾತನ್ನು ಹೇಳಿದ ಮೇಲೆ ನಬಿ ﷺ ಯವರು ಪತ್ರವನ್ನು ಕೊನೆಗೊಳ್ಳಿಸಿರುವುದೆಂದು ಹೇಳಿದ *ಅಬೂ ಇಯಾಝ್* 👇👇
"ಮಗಳೇ.... ಅಲ್ಲಾಹನ ಪ್ರವಾದಿ(ﷺ) ಯವರನ್ನು ಹಿಯಾಳಿಸಿ ಪತ್ರ ಬರೆದ ಆ  ಕಳ್ಳ ಪ್ರವಾದಿಯಾದ  *ಮುಸೈಲಿಮ'*ನ ಅರಮನೆಗೆ ನೀನು ಹೋಗಲು ತಯಾರಾಗುತ್ತಿರುವೆಯಾ?
ನಿನಗೆ ಹೋಗಬೇಕು ಎಂದಿದ್ದರೆ ಹೋಗು.. ನಿನ್ನನ್ನು ನಾನು ಬಲಾತ್ಕಾರದಿಂದ ತಡೆಯುದಿಲ್ಲ..
ಕಾರಣ ಇಂದು ಅಲ್ಲದಿದ್ದರೆ ನಾಳೆ *ಖಾಲಿದ್ ಇಬ್ನು ವಾಲಿದ್ (ರ)* ರವರ ನೇತೃತ್ವದಲ್ಲಿರುವ ದೊಡ್ಡದೊಂದು ಸೈನಿಕಪಡೆ *ಯಮಾಮ*ಕ್ಕೆ ತಲುಪಲಿದೆ.
ಆಗ *ಮುಸೈಲಿಮ'*ನ ಸೈನಿಕರು ಕುತಂತ್ರ ಒಪ್ಪಿಸುವಾಗ ನೀನು ಆ ಮನೆಯಲ್ಲಿ ಇದ್ದರೆ, ಅವರ ರಹಸ್ಯವನೆಲ್ಲ ಮುಸ್ಲಿಂ ಸೈನ್ಯಕ್ಕೆ ವಿವರಿಸಿ ಕೊಡಬೇಕು." ಎಂದು ಹೇಳಿದ *ಅಬೂ ಇಯಾಝ್* ಸ್ವಂತ ಮಗಳನ್ನು ಇಸ್ಲಾಮಿಗೆ ಬೇಕಾಗಿ ಶತ್ರು ಪಕ್ಷದ ವಿವರವನ್ನು ಬಹಿರಂಗಪಡಿಸಲು ನಿಯೋಜಿಸಿದರು.!!

*ಫರ್ಹನಾಝ್* ಆಬಿದ್'ನನ್ನು ಕರೆದುಕೊಂಡು ಬಹಳಷ್ಟು ದೂರವಿರುವ *ಯಮಾಮ'*ವನ್ನು ಹಲವು ದಿನಗಳು ಸಂಚರಿಸಿ ತಲುಪಿದರು.!!

ಸುಮಾರು ಮಗ್ರಿಬ್'ನ ಸಮಯಕ್ಕೆ *ಹದಿಕತ್ತುರಹ್ಮಾನ್* ಎಂಬ ತೋಟದ ದೊಡ್ಡ ಗೇಟಿನ ಮುಂದೆ ಬಂದು *ಫರ್ಹನಾಝ್* ನಿಂತಳು.! ಅವಳು ಆ ಸೌಧವನ್ನು ವೀಕ್ಷಿಸುತ್ತಿರುವಾಗ ಎರಡು ಸೈನಿಕರು ಬಂದು,
ನೀನು ಯಾರು?
ಯಾಕೆ ಇಲ್ಲಿಗೆ ಬಂದಿರುವೆ?ಎಂದು ಪ್ರಶ್ನಿಸಿದರು..

*ಫರ್ಹನಾಝ್:* ನಾನು.. ಈ ಅರಮನೆಯ ರಾಜಕುಮಾರ  *ಮಸೂದ್'*ನ ಪತ್ನಿ ಹಾಗೂ ಇದು ನನ್ನ ಮಗ.!

ಇದನ್ನು ಕೇಳಿದಾಗ ಸೈನಿಕರು ಆಶ್ಚರ್ಯಚಕಿತರಾದರು.!!

*ಫರ್ಹನಾಝ್* ಈ ಗೇಟನ್ನು ತೆರೆದು ನನ್ನನ್ನು ಒಳಗೆ ಪ್ರವೇಶಿಸಲು ಅನುವು ಮಾಡಿಕೊಡು ಎಂದು ಬೇಡಿಕೊಂಡಾಗ ಕಾವಲುಗಾರ ಬಾಗಿಲನ್ನು ತೆರೆಯದೆ *"ಸಾಧ್ಯವಿಲ್ಲ.. ಮಗ್ರಿಬ್ ಸಮಯದ ನಂತರ ಯಾರನ್ನು ಒಳಗಡೆ ಕಳುಹಿಸಲು ಅನುಮತಿ ಇಲ್ಲ. ಇದು ಮುಸೈಲಿಮರ ಪ್ರತ್ಯೇಕ ಆಜ್ಞೆಯಾಗಿದೆ."*

*ಫರ್ಹನಾಝ್:* ಹಾಗಾದರೆ ಈ ರಾತ್ರಿಯಲ್ಲಿ ನಾನು ಎಲ್ಲಿಗೆ ಹೋಗಲಿ?

ಸೈನಿಕರು ಗೇಟಿನ ಹೊರಗಿದ್ದ ಕೋಣೆಯನ್ನು ತೋರಿಸುತ್ತಾ, ಇಂದು ಒಂದು ದಿನ ನೀವು ಇಲ್ಲಿ  ವಾಸ ಮಾಡಿರಿ ಎಂದು ಹೇಳಿದರು.

ಹಾಗೆ *ಫರ್ಹನಾಝ್* ಅಂದು ರಾತ್ರಿ ಆ ಕೋಣೆಯಲ್ಲಿ ತಂಗಿದಳು.

ಆದರೆ ಸೈನಿಕರಲ್ಲಿ ಒಬ್ಬನಿಗೆ ನಿದ್ರೆ ಬರುವುದಿಲ್ಲ. ಕಾರಣ ಮಗನು ಮರಣ ಹೊಂದಿದ ದುಃಖದಲ್ಲಿರುವ ಮುಸೈಲಿಮರೊಂದಿಗೆ, ಸೊಸೆ ಮತ್ತು ಮೊಮ್ಮಗ ಬಂದ ವಿವರವನ್ನು ಹೇಗೆ ತಾನೆ ಹೇಳಲಿ!!? ಹೋಗಿ ಹೇಳಿದರೆ ಏನಾದರು ಸನ್ಮಾನ ಸಿಗಬಹುದೇನೋ ಎಂಬ ಕನಸಿನೊಂದಿಗೆ ಅವನು ಮುಸೈಲಿಮನು ಮಲಗಿರುವ ಕೋಣೆಯ ಬಾಗಿಲಿನ ಹತ್ತಿರ ಹೋಗಿ ನಿಂತನು.

(ನಿದ್ರಿಸುವ ಮುಸೈಲಿಮನನ್ನು ಮುಟ್ಟಿ ಎಬ್ಬಿಸಿದರೆ ಹುಚ್ಚು ಹಿಡಿದಂತೆ ವರ್ತಿಸುವ ಸ್ವಭಾವವನ್ನು ಅರಿಯದ
ಸೈನಿಕನು) ಬಾಗಿಲು ಬಡಿದಾಗ *ಮುಸೈಲಿಮ* ನಿದ್ರೆಯಿಂದ ಎದ್ದು ಕೋಪದಿಂದ ಬಾಗಿಲು ತೆರೆದು ಏನ್ರೀ.. ಎಂದು ಗದರಿಸಿದನು..

ಆಗ ಸೈನಿಕನು, ನಿಮ್ಮನ್ನಗಲಿದ ಸುಪುತ್ರ *ಮಸೂದ್* ಎಂದು ಹೇಳುವಷ್ಟರಲ್ಲಿ *ಮುಸೈಲಿಮ* ಎರಡು ವರ್ಷದ ಹಿಂದೆ ಮೃತನಾದ *ಮಸೂದ್'*ನ ಹೆಸರು ಹೇಳಲಿರುವ ಸಮಯವೇ ಇದು! ಎಂದು ಹೇಳಿ ಕೆನ್ನೆಗೆ ಒಂದೇಟು ಬಿಗಿದು ಓಡಿಸಿದನು..

ಮರುದಿನ ಬೆಳಿಗ್ಗೆ ಆ ಎರಡು ಸೈನಿಕರು *ಫರ್ಹನಾಝ್'* ಮತ್ತು  ಮಗುವನ್ನು ಅರಮನೆಯ ಒಳಗೆ ಕೊಂಡು ಹೋದರು.
ಆ ಸಮಯದಲ್ಲಿ *ಮುಸೈಲಿಮ* ಕುರ್ಚಿನಲ್ಲಿ ಕುಳಿತು ಕೊಂಡಿದ್ದನು. ಇವರು ಬರುವುದನ್ನು ಕಂಡು ಒಂಟಿ ಕಣ್ಣಿನ *ಮುಸೈಲಿಮ* ಕೆಂಗಣ್ಣಿನಿಂದ ದಿಟ್ಟಿಸಿ ನೋಡಿದನು..

ಆ ನೋಟವನ್ನು ಕಂಡ ಅವರು ಒಮ್ಮಲೇ ಗಾಬರಿಗೊಂಡರು.!⤵

ಮುಂದುವರಿಯುವುದು..

✍ ಗಫೂರ್ ಬಾಯಾರ್
+974 6669 3010
ಸಹಾಯ: ಅಕ್ಬರ್ ಪಿ.ಎ.
🛡🛡🛡🛡🛡🛡🛡

ಇತಿಹಾಸ ಪ್ರಸಿದ್ಧ ಯಮಾಮ ಯುದ್ಧ ಭಾಗ-15

🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
    *ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 1⃣5⃣
➖➖➖➖➖➖➖➖➖
ಮರಣ ಹೊಂದಿ⤵

 ನಿಶ್ಚಲವಾಗಿ ಮಲಗಿರುವ *ಮಲಿಹ'*ಳ ಎದೆಯ ಮೇಲೆ ಯಾವುದರ ಪರಿವೆಯೇ ಇಲ್ಲದ *ಆಬಿದ್* ಹತ್ತಿ ಕುಳಿತು ಹಸಿವು ನೀಗಿಸಲು ಹಾಲು ಕುಡಿಯುವ ಹೃದಯ ವಿದ್ರಾವಕ ದೃಶ್ಯವನ್ನು ಕಂಡ *ಫರ್ಹನಾಝ್'*ನ ಮನಸ್ಸು ಮೇಣ ಕರಗಿದಂತಾಯಿತು..

*ಫರ್ಹನಾಝ್* ಓಡಿ ಹೋಗಿ *ಆಬಿದ್'*ನನ್ನು ಎತ್ತಿಕೊಂಡು ಬಿಕ್ಕಳಿಸಿ ಅಳುತ್ತಾ ಹೇಳಿದಳು *"ಕಂದಾ.. ನಿನ್ನ ತಾಯಿ ನಿನ್ನನ್ನು ಬಿಟ್ಟು ಹೋದರು.."*

ಅವಳು ಹೊರಗೆ ಓಡಿ ಹೋಗಿ ಮಲಿಹ ಮೃತ್ಯುವಾದ ವಿಷಯವನ್ನು ಎಲ್ಲರಿಗೂ ತಿಳಿಸಿದಳು. ನೆರೆಕರೆಯವರು ಓಡಿ ಬಂದು ಕೆಲವೇ ಸಮಯದೊಳಗೆ *ಮಲಿಹ'*ಳ ಮೃತ ದೇಹವನ್ನು ವಿಧಿ ವಿಧಾನದ ಅಡಿಸ್ತಾನದಡಿಯಲ್ಲಿ ದಫನ ಮಾಡಿದರು.

*ಮಲಿಹ'*ಳ ನಿಷ್ಚಲವಾದ ಶರೀರವನ್ನು  ದಫನ ಮಾಡುವಾಗ *ಆಬಿದ್* ಫರ್ಹನಾಸ್'ನ ತೋಳಲ್ಲಿ ಮಲಗಿ ನಿದ್ರಿಸುತ್ತಿದ್ದನು.

ತಬ್ಬಲಿಯಾದ ಈ ಮಗುವನ್ನು ನೀನು ಏನು ಮಾಡುತ್ತೀಯಾ?
ಎಂಬ ಊರವರ ಪ್ರಶ್ನೆಗಳ ಸುರಿಮಳೆಗೆ ಫರ್ಹನಾಝ್ *ಇಂದಿನಿಂದ ಈ ಮಗುವಿನ ತಾಯಿ ನಾನಾಗಿದ್ದೇನೆ.!!* ಎಂದು ಖಡಕ್ಕಾದ ಉತ್ತರವನ್ನು ಹೇಳಿದಾಗ ಊರವರು ಅಲ್ಲಿಂದ ಕಾಲ್ಕಿತ್ತರು..

ಅಬೂ ಇಯಾಝ್ ಮಗಳನ್ನು ಹತ್ತಿರಕ್ಕೆ ಕರೆದು *" ಮಗಳೇ ನೀನು ಒಬ್ಬಳು ಮದುವೆ ಪ್ರಾಯವಾದ ಹೆಣ್ಣಾಗಿದ್ದಿಯ..! ಇನ್ನೊಬ್ಬರ ಮನೆಗೆ ಮದುಮಗಳಾಗಿ ಹೋಗಬೇಕಾದ ಹೆಣ್ಣಾಗಿದ್ದೀಯ..! ಈ ಮಗು ನಿನಗೆ ಕಂಟಕವಾಗಬಹುದು.  ಹಾಗಾಗಿ ಮಗಳೇ ನಾವು  ಉಮಾರದವರೆಗೆ ಹೋಗಿ ಅಲ್ಲಿ ಮಲಿಹ'ಳ ತಂದೆಯ ಕೈಗೆ ಈ  ಮಗನನ್ನು ಮರಳಿಸೋಣ.."* ಎಂದರು..

*ಫರ್ಹಾನಾಝ್:* ಬೇಡ, *ಮಲಿಹ* ಕೊನೆಯುಸಿರೆಳೆಯುವ ಮೊದಲು ಹೇಳಿದ ಮಾತನ್ನು ನಾನು ಪಾಲಿಸದಿದ್ದರೆ ನಾನು ವಿಶ್ವಾಸಕ್ಕೆ ದ್ರೋಹ ಬಗೆದಂತೆ,
ಅದರಿಂದ್ದ ನನಗೆ ಕೊಟ್ಟ ಮಾತನ್ನು ಪಾಲಿಸಬೇಕು..

*ಅಬೂ ಇಯಾಝ್:*  ಏನು.. ಆ.. ಮಾತು? ಅದೇನು?

*ಫರ್ಹನಾಝ್:* ಯಮಾಮದಲ್ಲಿ *ಮಸೂದ್'*ನ ತಂದೆ ಮುಸೈಲಿಮನ ಮನೆಗೆ  ಹೋಗಬೇಕು.
ಅವರು ಯಾರೂ *ಮಲಿಹ'*ಳನ್ನು ನೋಡದವರಾದ್ದರಿಂದ ನನ್ನನ್ನು ಗುರುತಿಸಲಿಕ್ಕಿಲ್ಲ. *ಮಲಿಹ* ಎಂಬ ನಕಲಿ ಹೆಸರಿನೊಂದಿಗೆ ನನಗೆ ಅಲ್ಲಿಗೆ ಹೋಗಬೇಕು. *ಆಬೀದ್*ನಿಗೆ ಲಭಿಸಬೇಕಾದ  ಸವಲತ್ತುಗಳನ್ನು ಸಂಪೂರ್ಣವಾಗಿ ತೆಗೆದು ಕೊಡಬೇಕೆಂದು ನಿರ್ದೇಶಿಸಿ ಮಲಿಹ ಮರಣ ಹೊಂದಿರುವುದು..!!

ಆಗ ಅಬೂ ಇಯಾಝ್ ನಗು ಮುಖದಿಂದಲೇ *"ನನ್ನ ಪ್ರೀತಿಯ ಮಗಳೇ, ನೀನು ಹೋಗಲಿರುವ ಮನೆಯವರಾದ  ಮುಸೈಲಿಮತು ಸಮಾಮ ಯಾರೆಂದು ನಿನಗೆ ಗೊತ್ತಾ.?"*

*ಫರ್ಹನಾಝ್:* ಮಸೂದ್'ನ ಪಿತರಾಗಿದ್ದಾರೆ.

*ಅಬೂ ಇಯಾಝ್:* ಅದು ಹೌದು, ಇದಲ್ಲದೆ ಇನ್ನೊಂದು ವಿಷಯವಿದೆ. ಆ ಕಥೆಯನ್ನು ಹೇಳುತ್ತೇನೆ ಕೇಳು.." 👇

*ಮುಸೈಲಿಮ* ಅಲ್ಲಾಹನ ಪ್ರವಾದಿ ಮುತ್ತು ರಸೂಲ್ ﷺ ರವರು ಜೀವಿಸುತ್ತಿದ್ದ ಕಾಲದಲ್ಲಿ ನಬಿ ﷺ ಅವರಿಗೆ ಒಂದು ಪತ್ರ ಬರೆದಿದ್ದಾನೆ.

ಆ ಪತ್ರದಲ್ಲಿ  ಹೀಗಿತ್ತು
👇👇

{ *..ಮುಹಮ್ಮದ್  (ﷺ) ಈ ಲೋಕವನ್ನು ಎರಡು ಭಾಗಗಳಾಗಿ ವಿಭಜಿಸಲಾಗಿದೆ. ಈ ಲೋಕವನ್ನು ಸೃಷ್ಟಿಸಿದವನು ಎರಡಾಗಿದ್ದಾನೆ. ಒಂದು ಲೋಕದ ಪ್ರತಿನಿಧಿ ಮತ್ತು ಪ್ರವಾದಿ ತಾವಾಗಿದ್ದೀರಿ. ಇನ್ನೊಂದು ಭಾಗದ ಪ್ರತಿನಿಧಿ ಹಾಗು ಪ್ರವಾದಿ ನಾನಾಗಿರುತ್ತೇನೆ. ಮಕ್ಕದಲ್ಲಿ ಜನಿಸಿ, ಮದೀನದಲ್ಲಿ ಜೀವಿಸುತ್ತಿರುವ ಮುಹಮ್ಮದ್ (ﷺ) ನೀವು ಅಲ್ಲಿಯ ಪ್ರವಾದಿಯಾಗಿದ್ದೀರಿ. ಯಮಾಮದ ಪ್ರವಾದಿ ನಾನಾಗಿದ್ದೇನೆ.!ಯಮಾಮಕ್ಕೆ ಒಬ್ಬ ದೂತನನ್ನೂ ಕಳುಹಿಸಬೇಡ. ಓರ್ವ ಪ್ರಬೋದನೆಗಾರನ್ನು ಇಲ್ಲಿಗೆ ರವಾನಿಸಬೇಡ.!ಯಮಾಮದ ಪ್ರವಾದಿಯಾಗಿ ಸೃಷ್ಟಿಕರ್ತ ನಿಯೋಜಿಸಿರುವುದು ನನ್ನನ್ನಾಗಿದೆ..}*

ನಬಿ (ﷺ) ರವರ ಕಾಲದಲ್ಲಿಯೇ ಕಳ್ಳ ಪ್ರವಾದಿಯಾಗಿ ರಂಗ ಪ್ರವೇಶಗೈದವನಾಗಿದ್ದಾನೆ *ಮುಸೈಲಿಮ*

ಈ ಓಲೆಯನ್ನು ನೆಬಿ (ﷺ) ರವರು ಓದಿ ತನ್ನ ಸಭೆಯಲ್ಲಿರುವ ಪತ್ರ ಬರೆಯುವವರನ್ನು ಕರೆದು ಉತ್ತರ ಬರೆಯಲು ಹೇಳಿದ್ದರು.

ಬಿಸ್ಮಿಯಿಂದ ಆರಂಭಿಸುವ ಪತ್ರದ ವಿಷಯವನ್ನು ನೆಬಿ (ﷺ)ಅವರು ಹೇಳಿ ಕೊಟ್ಟರು.

ಮುಸೈಲಿಮಗೆ.. ⤵

ಮುಂದುವರಿಯುವುದು..

✍ ಗಫೂರ್ ಬಾಯಾರ್
+974 6669 3010
ಸಹಾಯ: ಅಕ್ಬರ್ ಪಿ.ಎ.
🛡🛡🛡🛡🛡🛡🛡

ಇತಿಹಾಸ ಪ್ರಸಿದ್ಧ ಯಮಾಮ ಯುದ್ಧ ಭಾಗ-14

🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
    *ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 1⃣4⃣
➖➖➖➖➖➖➖➖➖

ಆಮೇಲೆ ಅಬೂ ಇಯಾಝ್⤵

ಒಂಟೆಯ ಮೂಗಿನ ದಾರವನ್ನು ಹಿಡಿದು ಮೆಲ್ಲ ಮೆಲ್ಲನೆ ನಿಧಾನವಾಗಿ ಅಟ್ಟಿಕೊಂಡು ನಡೆದರು.

*ಫರ್ಹನಾಝ್* ಮುದ್ದು ಮಗನೆ ಬಾ.. ಎಂದು ಕರೆದು *ಆಬಿದ್'*ನನ್ನು ಎತ್ತಿಕೊಂಡು ಅವಳ ಮನೆಗೆ ನಡೆದರು.

*ಫರ್ಹನಾಝಿ'*ನ ಆ ಸಣ್ಣ ಮನೆಯ ಒಂಟಿ ಕೋಣೆಯಲ್ಲಿ *ಮಲಿಹ'*ಳನ್ನು ಕರೆದುಕೊಂಡು ಹೋಗಿ ಮಲಗಿಸಿದಳು. ತಬ್ಬಲಿಯಾದ
*ಫರ್ಹನಾಝ್'*ನಿಗೆ
ಒಬ್ಬ ಸಹೋದರ ಮಾತ್ರ ಇರುವುದು. ಅವರ ಹೆಸರು *ಹಾರಿಸ್* (ರ)ಎಂದಾಗಿದೆ. ಅವರು ಆಗ ಆ ಮನೆಯಲ್ಲಿರಲಿಲ್ಲ.

ಆರು ತಿಂಗಳುಗಳಿಂದ ಅವರು *ಸೈಫುಲ್ಲಾಹಿ ಕಾಲಿದ್ ಇಬ್ನು ವಾಲಿದ್ (ರ)*ರವರ ಜೊತೆಯಲ್ಲಿದ್ದರು, ಅವರು ಯುದ್ಧಕ್ಕಾಗಿ ತಯಾರಿ ನಡೆಸುತ್ತಿದ್ದರು.

ಅಬೂ ಇಯಾಝ್ ಹಲವು ವಿಧದ ಮದ್ದುಗಳನ್ನು *ಮಲಿಹ'*ಳಿಗೆ ಮಾಡಿದರೂ ಜ್ವರ ಕಡಿಮೆಯಾಗಲಿಲ್ಲ.
ದಿನಗಳು ಉರುಳಿತ್ತದ್ದಂತೆ *ಮಲಿಹ*'ಳ ಜ್ವರ ಕಡಿಮೆಯಾಗುವ ಯಾವ ಲಕ್ಷಣವು ಕಂಡು ಬರದೆ ಖಾಯಿಲೆ ಉದ್ಬವಿಸುತ್ತಾ ಹೋಯಿತು.

ಆಗ ಅಬೂ ಇಯಾಝ್ ಪಕ್ಕದ ಊರಿನಿಂದ ಒಬ್ಬ ನಾಟಿ ವೈದ್ಯರನ್ನು ಕರೆದುಕೊಂಡು ಬಂದರು.

ಮಲಿಹ'ಳನ್ನು ಪರೀಕ್ಷಿಸಿದ ಅವರು ನಂತರ ಹೊರಗೆ ಬಂದು ಅಬೂ ಇಯಾಝ್'ನೊಂದಿಗೆ *"ಒಂದು ಸತ್ಯವನ್ನು ನಾನು ಹೇಳುತ್ತೇನೆ, ಇವಳ ಜ್ವರ ಮೆದುಳಿಗೆ ಬಾಧಿಸಿರುತ್ತದೆ, ಆದ್ದರಿಂದ್ದಲೇ ಇವಳಿಗೆ ಆಗಾಗ ಪ್ರಜ್ಞೆ ತಪ್ಪುವುದು. ಈ ಜ್ವರ ವಾಸಿಯಾಗಿ ಮೊದಲಿನ ತರಹ ಜೀವನಕ್ಕೆ ಮರಳಿ ಬರುವಳೆಂಬ ವಿಶ್ವಾಸ ನನಗಿಲ್ಲ, ಒಂದು ಗಂಟೆಯೊಳಗೆ ಅಥವಾ ಒಂದು ದಿನದಳೊಳಗೆ ಇವಳು ರಕ್ತ ವಾಂತಿ ಮಾಡಿ ಮರಣ ಹೊಂದಲು ಸಾಧ್ಯತೆ ಇದೆ."!!* ಎಂದರು..

ವೈದ್ಯರು ಹೇಳುವುದನ್ನು ಆಚೆಯ ಕೋಣೆಯಿಂದ *ಮಲಿಹ* ಕೇಳಿಸಿಕೊಂಡಾಗ *ಆಬಿದ್* ಹತ್ತಿರದಲ್ಲಿ ಕುಳಿತು ಆಟ ಆಡುತ್ತಿದನು.
*ಮಲಿಹ* ಮಗನನ್ನು ಎತ್ತಿ ಎದೆಗೆ ಅಪ್ಪಿ ಹಿಡಿದು *"ಕಂದಾ, ನೀ ಜನಿಸುವುದಕ್ಕಿಂತ ಮೊದಲು ನಿನ್ನ ತಂದೆ ನಮ್ಮನ್ನು ಬಿಟ್ಟು ಹೋದರು. ಈಗ ನೀನು ಅಮ್ಮಾ ಎಂದು ಕರೆದು ಆಸೆ ಪೂರ್ತಿಯಾಗುವ ಮೊದಲೇ ತಾಯಿಯು ಹೋಗುವ ಹಂತಕ್ಕೆ ಬಂದು ನಿಂತಿದ್ದಾಳೆ"* ಎಂದು ಹೇಳಿ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು.

ಅದೇ ಸಮಯದಲ್ಲಿ *ಫರ್ಹನಾಝ್* ಮಲಿಹ'ಳಿಗೆ ಕುಡಿಯಲು ನೀರಿನೊಂದಿಗೆ ಬರುವುದನ್ನು
ಗಮನಿಸಿದ *ಆಬಿದ್* ಮಲಿಹ'ಳ ಹತ್ತಿರದಿಂದ ಫರ್ಹನಾಝ್'ನ ಹತ್ತಿರ ಓಡಿದನು..
ಮಲಿಹ ಜ್ವರದಿಂದ ಮಲಗಿದ ಮೇಲೆ ಫರ್ಹನಾಝ್ ಆಬಿದ್'ನನ್ನು ಪರಿಪಾಲಿಸುತ್ತಾ ಇದ್ದಳು.. ಆದ್ದರಿಂದಲೇ ಅವಳೊಂದಿಗೆ ಆಬಿದ್ ಹೊಂದಾಣಿಕೆಯಿಂದ ಇರುತ್ತಿರುವುದು..

ಫರ್ಹನಾಝ್ *ಮಲಿಹ'*ಳನ್ನು ಹಿಡಿದು ಎದ್ದೇಳಿಸಿ ಗೋಡೆಗೆ ಒರಗಿಸಿ ನೀರು ಕುಡಿಯಲು ಹೇಳಿದಾಗ *ಮಲಿಹ* ನಿರಾಕರಿಸಿದಳು..

ಫರ್ಹನಾಝ್ ಮೂರ್ನಾಲ್ಕು ಬಾರಿ ಒತ್ತಾಯಿಸಿದರೂ *ಮಲಿಹ* ನೀರು ಕುಡಿಯಲು ಸಮ್ಮತಿಸಲಿಲ್ಲ.

*ಫರ್ಹನಾಝ್:* ಮಲಿಹಾ ನಿನಗೆ ಏನಾಯಿತು? ಯಾಕೆ ನೀನು ನೀರು ಕುಡಿಯುವುದಿಲ್ಲ.?

*ಮಲಿಹ* ತನ್ನ ಮನಸ್ಸಿನ ಅಂತರಾಳದ ಇಂಗಿತವನ್ನು ಹೊರ ಸೂಸುತ್ತಾ.. *ಫರ್ಹನಾಝ್* ನೀನು ನನ್ನ ಮಗುವಿನ ತಾಯಿಯಾಗಬೇಕು..!!ಎಂದಳು..

*ಫರ್ಹನಾಝ್:*  ಏನಿದು, ಏನು ಹೇಳುತ್ತಿರುವೆ ..?
ನೀನಲ್ಲವೇ ಇವನ ತಾಯಿ.

*ಮಲಿಹ:* ಹೌದು.. ಆದರೆ ಇಂದಿನಿಂದ ನೀನು ಅವನ ತಾಯಿ ಆಗಬೇಕು..!

ಆಗ ಫರ್ಹನಾಝ್ *ಮಲಿಹ'*ಳಿಗೆ ಜ್ವರ ತಲೆಗೆ ಹತ್ತಿ ಏನೆಲ್ಲ ಹೇಳುತಿರಬಹುದೆಂದು ಭಾವಿಸದಳು..

*ಮಲಿಹ* ಪುನಃ ಕೇಳಿದಳು.. ನೀನು ನನ್ನ ಮಗುವಿನ ತಾಯಿ ಆಗುವೆಯಾ?

*ಮಲಿಹ'*ಳನ್ನು ನೀರು ಕುಡಿಸುವ ಒಂದೇ ಉದ್ದೇಶದಿಂದ ಫರ್ಹನಾಝ್ ಹೂಂ..!ನಾನು ನಿನ್ನ ಮಗುವಿನ ತಾಯಿಯಾಗುತ್ತೇನೆ.
ನೀನು ನೀರು ಕುಡಿ.. ಎಂದು ಹೇಳಿದಳು..

*ಮಲಿಹ:* ಅದು ಸಾಕಾಗಲ್ಲ!! ಅದರ ಜೊತೆಗೆ
ನೀನು *ಮಲಿಹ* ಕೂಡ ಆಗಬೇಕು.!!

*ಫರ್ಹನಾಝ್:* ಸರಿ ನಾನು ಮಲಿಹ ಅಗುತೇನೆ. ನೀನು ನೀರು ಕುಡಿಯಬೇಕು..

ಸಮ್ಮತದ ಮಾತು ಸಿಕ್ಕಿದಾಗ *ಮಲಿಹ* ನೀರು ಕುಡಿದಳು. ತಕ್ಷಣವೇ
ಕುಡಿದ ನೀರನ್ನು *ಮಲಿಹ* ವಾಂತಿ ಮಾಡಿದಳು.

ಬಾಯಿ ತುಂಬಾ ರಕ್ತ ಬರಲು ಆರಂಭವಾಯಿತು.
ರಕ್ತ ಬಂದಿದ್ದರಿಂದ *ಮಲಿಹ* ಆಯಾಸಗೊಂಡು ಒಂದು ಬದಿಗೆ ಸರಿದು ಬಿದ್ದಳು.

*ಮಲಿಹ* ಬಿದ್ದಾಗ *ಫರ್ಹನಾಝ್* ಅವಳನ್ನು ತನ್ನ ಎದೆ ಭಾಗಕ್ಕೆ ಅಪ್ಪಿ ಹಿಡಿದು ಅವಳ ಎದೆಯನ್ನು ತಿಕ್ಕಿದಳು.
ರಕ್ತ ಬರುವುದು ನಿಲ್ಲದೇ ಹೋದಾಗ.. ಆ ರಕ್ತವನ್ನು ತನ್ನ ಕೈಯಿಂದ ಅದುಮಿ ಹಿಡಿದಳು. ಆದರೂ ನೆತ್ತರು ನಿಲ್ಲುವುದಿಲ್ಲ ಎಂದು ಅರಿತಾಗ..
ಮಲಿಹ, ಫರ್ಹನಾಝ್'ನ ಹತ್ತಿರ *"ಫರ್ಹನಾಝ್ ನೀನು ನನ್ನ ಮಗುವಿನ ತಾಯಿಯಾಗಬೇಕು. ನೀನು "ಮಲಿಹ" ಆಗಬೇಕು. ನಂತರ ನೀನು ಯಮಾಮಕ್ಕೆ ಹೋಗಬೇಕು. ಮುಸೈಲಿಮತುಸಮಾಮ'ನ ಮಗನ ಪತ್ನಿಯಾಗಿ ನೀನು ಅಭಿನಯಿಸಬೇಕು. ಮತ್ತೆ ನನ್ನ ಮಗುವಿಗೆ ಲಭಿಸಬೇಕಾದ ಎಲ್ಲಾ ಸವಲತ್ತುಗಳನ್ನು ನೀನು ಪಡೆದು ಕೊಡಬೇಕು."* ಎಂದು ಹೇಳಿದ ನಂತರ *ಮಲಿಹ* *ಫರ್ಹನಾಝ್'*ಳ ಮಡಿಲಲ್ಲಿ ಮಲಗಿ ಎಂದೆಂದಿಗೂ ಬಾರದ ಲೋಕಕ್ಕೆ ಪಯಣಿಸಿದಳು..!!

*ಫರ್ಹನಾಝ್* ಆ ಮೃತ ಶರೀರವನ್ನು  ನೆಲದಲ್ಲಿ ಮಲಗಿಸಿ ಅಕ್ರಂದದಿಂದ ಕೂಗಿಕೊಂಡು ದೂರ ಸರಿದು ನಿಂತಳು. ಯಾವ ಕಲ್ಲು ಹೃದಯವು ಕರಗಿಸುವಂತಿತ್ತು *ಫರ್ಹನಾಝ್'*ಳ
ಆ ದೃಶ್ಯ.!!

ಮರಣ ಹೊಂದಿ ಮಲಗಿರುವ..⤵

ಮುಂದುವರಿಯುವುದು..

✍ ಗಫೂರ್ ಬಾಯಾರ್
+974 6669 3010
ಸಹಾಯ: ಅಕ್ಬರ್ ಪಿ.ಎ.
🛡🛡🛡🛡🛡🛡🛡

ಇತಿಹಾಸ ಪ್ರಸಿದ್ಧ ಯಮಾಮ ಯುದ್ಧ ಭಾಗ-13

🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
    *ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 1⃣3⃣
➖➖➖➖➖➖➖➖➖
ಆಬಿದ್ ಎಂಬ ಆ ಮುದ್ದು⤵

ಮಗು ಬಿಸಿಲಿನ ತಾಪದ ಕಠಿಣತೆಯಿಂದ ಒದ್ದಾಡುತ್ತಾ ಆ ಮರುಭೂಮಿಯಲ್ಲಿ ಏನು ಮಾಡಬೇಕೆಂದು ತಿಳಿಯದೆ ಇರುವ.. ಸಂದರ್ಭದಲ್ಲಿ ವಿರುದ್ಧ ದಿಕ್ಕಿನಿಂದ ಇಬ್ಬರಾದ ತಂದೆ ಮತ್ತು ಮಗಳು ನಡೆದುಕೊಂಡು ಬರುತ್ತಾರೆ.

*ಅಬೂ ಇಯಾಝ್* ಎಂದು ತಂದೆಯವರ ಹೆಸರಾದರೆ,
ಮಗಳ ಹೆಸರು *ಫರ್ಹನಾಝ್* ಎಂದಾಗಿತ್ತು. ಅವರು *ತ್ವಹೀಫ್'*ನಿಂದ ವಲಸೆ ಬಂದು ವಾಸಿಸುವರಾಗಿದ್ದರು.

ಇವರಿಬ್ಬರು ನಡೆದುಕೊಂಡು ಬರುತ್ತಿರುವಾಗ ಮರಳುಗಾಡಿನಲ್ಲಿ ಮಲಗಿ ಅಳುತ್ತಾ ಒದ್ದಾಡುತ್ತಿರುವ ಆ ಮಗುವನ್ನು ಕಂಡರು.!

*ಫರ್ಹನಾಝ್* ಅಪ್ಪನನ್ನು ಕರೆದು "ಅಪ್ಪಾ ಅಲ್ಲಿ ನೋಡಿ.. ಒಂದು ಮಗು ಅಳುತ್ತಿದೆ" ಎನ್ನುತ್ತಾ ಬೇಗನೆ ಓಡಿ ಬಂದು *ಆಬಿದ್'*ನನ್ನು ಎತ್ತಿಕೊಂಡಳು.. ಕುತೂಹಲದಿಂದ ಅವಳು ಕೇಳಿದಳು *ಮಗನೇ ನಿನ್ನ ತಂದೆ ತಾಯಿ ಯಾರು? ನೀನು ಹೇಗೆ ಇಲ್ಲಿಗೆ ತಲುಪಿರುವುದು?*

ಆದರೆ ಮೊದಲು ಎಲ್ಲಿಯೂ ನೋಡಿ ಪರಿಚಯವಿಲ್ಲದ ಆಬಿದಿನಿಗೆ *ಫರ್ಹನಾಝ್*  ಮೇಲೆತ್ತಿದಾಗ ಅವನು ಜೋರಾಗಿ ಅಳಲು ಶುರು ಮಾಡಿದನು.. ಅವಳು ಮಗುವಿನ ಹತ್ತಿರ "ನೀನು ಯಾರು? ನಿನಗೆ ನಿನ್ನವರೆನ್ನಲು ಯಾರು ಇಲ್ಲವೇ? ನೀನು ಮರುಭೂಮಿಗೆ ಒಬ್ಬನೇ ಬಂದಿರುವುದು ಹೇಗೆ?" ಎಂದು ಒಂದರ ಹಿಂದೆ ಒಂದೊಂದೇ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಳು..

ಆದರೂ *ಆಬೀದ್* ಒಂದೇ ಸಮನೆ ಅಳುತ್ತಾ ಕೊನೆಗೆ ಒಂದು ಭಾಗಕ್ಕೆ ಕೈಸನ್ನೆ ತೋರಿಸಿದಾಗ..
ಫರ್ಹನಾಝ್ ಮತ್ತು ಅವಳ ತಂದೆಯು ಆ ಕಡೆ ನೋಡಿದಾಗ ಬಹಳ ದೂರದಲ್ಲಿ ಒಂದು ಪಾಳುಬಿದ್ದ ಕಟ್ಟಡವನ್ನು ಕಂಡರು.

*ಫರ್ಹನಾಝ್* "ಅಪ್ಪ ಆ ಕಟ್ಟಡದಲ್ಲಿ ಯಾರೋ ಇದ್ದಾರೆ. ನಾವು ಅಲ್ಲಿಗೆ ಹೋಗಿ ನೋಡುವ". ಎಂದು ಹೇಳಿ ಇಬ್ಬರು ಅಲ್ಲಿಗೆ ಮುಖ ಮಾಡಿ ನಡೆದರು.

ಪಾಳು ಬಿದ್ದ ಕಟ್ಟಡದ ಹತ್ತಿರ ತಲುಪಿದಾಗ *ಮಲಿಹ* ಪ್ರಜ್ಞಾಹೀನಳಾಗಿ ಮಲಗಿದ್ದಳು.
*ಆಬಿದ್* ತಾಯಿಯನ್ನು ನೋಡಿದ ತಕ್ಷಣವೇ *ಫರ್ಹನಾಝ್'*ನ ಕೈಯಿಂದ ಸರ್ರನೆ ಕೆಳಗಿಳಿದು ಮಲಿಹ'ಳ ಹತ್ತಿರಕ್ಕೆ ಓಡಿದನು..

ಆಗ ಅವರಿಗೆ ಆಬಿದ್ ಅವಳ ಮಗನೆಂದು ಮನವರಿಕೆಯಾಯಿತು.. ಫರ್ಹನಾಝ್ ಮಲಿಹಳನ್ನು ಮುಟ್ಟಿ ಎಬ್ಬಿಸಿ ಕೇಳಿದಳು..
*ನೀನು ಒಂದು ಹೆಣ್ಣಲ್ಲವೇ! ಮಗುವನ್ನು ಹೀಗೆ ಒಂಟಿಯಾಗಿ ಸುಡು ಬಿಸಿಲಿನ  ಮರುಭೂಮಿಯಲ್ಲಿ ಆಡಲು ಬಿಟ್ಟು ನೀನಿಲ್ಲಿ ಮಲಗಿ ನಿದ್ರಿಸುತ್ತಿರುವೆಯಾ??*

ಆಯಾಸದಿಂದ ಕ್ಷೀಣಿಸಿದ  ಕಣ್ಣೆದುರಿಗೆ ಮತ್ತೊಂದು ಹೆಣ್ಣನ್ನು ನೋಡಿದಾಗ ಮಲಿಹ'ಳಿಗೆ ಸ್ವಲ್ಪ ಜೀವ ಮರಳಿ ಬಂದಂತಾಯಿತು.

*ಮಲಿಹ:* ನನ್ನ ಮಗನು ನಡೆದುಕೊಂಡು ಹೋಗುವುದನ್ನು ನಾನು ನೋಡಿದ್ದೇನೆ.. ಆದರೆ ನಾನು ಒಂಟೆಯ ಮೇಲಿನಿಂದ ಬಿದ್ದು ನನ್ನ ಕಾಲು ಮುರಿದಿದೆ.
ಅವನನ್ನು ಒಮ್ಮೆ ಹಿಡಿಯಲು, ಕರೆಯಲೂ ಸಾಧ್ಯವಾಗಿಲ್ಲ.
ಕಾಲಿನ ನೋವಿನಿಂದ ಜ್ವರ ಬಂದು ಆಯಾಸದಿಂದ ಎದ್ದೇಳಲು ಸಾಧ್ಯವಾಗದೆ ನಾನು ಮಲಗಿದ್ದೆ.

ಫರ್ಹನಾಝ್ ಮಲಿಹ'ಳನ್ನು ಮುಟ್ಟಿ ನೋಡಿದಾಗ.. ಮಲಿಹ'ಳ ದೇಹವೆಲ್ಲಾ ತಾಪದಿಂದ ಕೂಡಿದ ಜ್ವರವಾಗಿತ್ತು.. ಮಾತಿನ ಮಧ್ಯೆ ಮಲಿಹ ಪುನಃ ಮತಿ ತಪ್ಪಿದಳು.

ಆಗ ಫರ್ಹನಾಝ್ ಮಲಿಹ'ಳನ್ನು ಎಬ್ಬಿಸಿ ನಿನಗೆ ಎಲ್ಲಿಗೆ ಹೋಗಬೇಕಾಗಿದೆ?

*ಮಲಿಹ:* ನಾನು ಯಮಾಮಕ್ಕೆ ನನ್ನ ಗಂಡನನ್ನು ಹುಡುಕುತ್ತಾ ಹೋಗುತ್ತಿರುವುದು. ಆದರೆ ಅಲ್ಲಿಗೆ ಹೋಗಿ ಏನು ಪ್ರಯೋಜನವಿಲ್ಲ. ಕಾರಣ
ನನ್ನ ಪತಿ ಮರಣ ಹೊಂದಿದ ವಿವರ ನಾನು ಇಲ್ಲಿಯೇ ಕೇಳಿ ತಿಳಿದೆನು.!!

ಎಲ್ಲಾ ವಿಷಯಗಳನ್ನು ಮಲಿಹ ಫರ್ಹನಾಝ್'ನೊಂದಿಗೆ ಹಂಚಿದಾಗ..
*ಮುಸ್ಲಿಂ* ಹುಡುಗಿಯಾದ ಫರ್ಹನಾಝ್ ಅಪ್ಪನ ಹತ್ತಿರ ಹೇಳಿದಳು. *"ಅಪ್ಪ ಆರೋಗ್ಯ ಹದಗೆಟ್ಟ ಸ್ಥಿತಿಯಲ್ಲಿರುವ ಈ ಹೆಣ್ಣನ್ನು ಇಲ್ಲಿ ಬಿಟ್ಟು ನಾವು ಹೇಗೆ ಮರಳಿ ಹೋಗುವುದು?"*

*ಅಲ್ಲಾಹನ ಹಬೀಬರಾದ ಮುಹಮ್ಮದ್ ಮುಸ್ತಫಾ ﷺ ರವರು ರೋಗಿಗಳನ್ನು ಶುಸ್ರೋಷಿಸಬೇಕು ಎಂದು ಹೇಳಿದ್ದಾರಲ್ವವೇ? ನಾವು ಇವಳನ್ನು ಹೀಗೆ ಇಲ್ಲಿ ಬಿಟ್ಟು ಹೋದರೆ ಅದು ನಬಿ ﷺ ರವರ ಮಾತಿಗೆ ವಿರುದ್ಧವಲ್ಲವೇ..?*

( _ಈ ಘಟನೆಗಳೆಲ್ಲ ನಡೆಯುವುದು ಮುತ್ತು ನಬಿ ﷺ ರವರ ವಫಾತ್ತಿನ ನಂತರ ಅಬೂಬಕ್ಕರ್ ಸಿದ್ದೀಖ್ ರ. ರವರ ಆಡಳಿತ ಕಾಲದಲ್ಲಾಗಿತ್ತು_ )

*ಫರ್ಹನಾಝ್:* ಅಪ್ಪ ಇವಳನ್ನು ನಾವು ನಮ್ಮ ಮನೆಗೆ ಕರೆದುಕೊಂಡು ಹೋಗಬೇಕು..
ಅವಳ ರೋಗ ಶಮನವಾದ ನಂತರ ಯಮಾಮಕ್ಕೆ ಕಳಿಹಿಸುವ.

ಆಗ ತಂದೆ ಅಭಿಮಾನದಿಂದ *"ಮಗಳೇ ನಾನು ಕೂಡ ಇದನ್ನೇ ಚಿಂತಿಸುತ್ತಿದ್ದೆ, ಬಾ.. ನೀ ಅವಳನ್ನು ಹಿಡಿದುಕೋ"* ಎಂದು ಹೇಳುತ್ತಾ ಇಬ್ಬರು ಸೇರಿ ಮಲಿಹ'ಳನ್ನು ಎತ್ತಿಕೊಂಡು ಹೋಗಿ ಒಂಟೆಯ ಮೇಲಿದ್ದ ಮಂಚಕ್ಕೆ ಹತ್ತಿಸಿ ಒರಗಿಸಿ ಮಲಗಿಸಿದರು.

ಆಮೇಲೆ ಅಬೂ ಇಯಾಝ್⤵

ಮುಂದುವರಿಯುವುದು..

✍ ಗಫೂರ್ ಬಾಯಾರ್
+974 6669 3010
ಸಹಾಯ: ಅಕ್ಬರ್ ಪಿ.ಎ.
🛡🛡🛡🛡🛡🛡🛡

ಇತಿಹಾಸ ಪ್ರಸಿದ್ಧ ಯಮಾಮ ಯುದ್ಧ ಭಾಗ-12

🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
    *ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 1⃣2⃣
➖➖➖➖➖➖➖➖➖

ಪುನಃ ಮುಳುಗಿದ *ಮಸೂದ್*⤵

ಆದರೆ ಜೀವದ ಮೇಲೆ ಅಸೆಯಿರುವ ಅವನ ಸ್ನೇಹಿತರು ಅವನನ್ನು ಮೇಲೆತ್ತಲು ಸಹಾಯ ಮಾಡಲಿಲ್ಲ.

 ಹೀಗೆ ನೀರಿನಡಿಗೆ ಮುಳುಗಿ ಹೋದ ಮಸೂದ್ ಮತ್ತೆ ಮೇಲೆ ಬರಲೇ ಇಲ್ಲ.!!
ಕಾದು ಕುಳಿತಿದ್ದ ಸ್ನೇಹಿತರು ಕೊನೆಗೆ ನಡೆದ ಘಟನೆಗಳನ್ನೆಲ್ಲ ಯಮಾಮದಲ್ಲಿರುವ ಅವನ ಮನೆಗೆ ಮುಟ್ಟಿಸಿದರು.

ಕೆಲವೇ ದಿನಗಳೊಳಗೆ *ಮುಸೈಲಿಮತುಸಮಾಮ* ತನ್ನ ಕುಟುಂಬ ಸಮೇತ ಇರಾಖಿನ ಶಾತ್ತೆ ಅರಬ್'ಗೆ ತಲುಪಿದನು.

ಆ ಸಂಗಮ ನದಿಯ ತೀರದಲ್ಲಿ ಸ್ವಂತ ಮಗನ ಮೃತ ಶರೀರವನ್ನು ಹುಡುಕುತ್ತಾ ಅಲೆದಾಡಿದರು. ಯಾವುದೇ ಪ್ರಯೋಜನ ಆಗಲಿಲ್ಲ..
ನಿಶ್ಚಲ ಶರೀರ ಸಿಗಲೇ ಇಲ್ಲ.

ಕೆಲವು ದಿನಗಳು ಉರುಳಿದ ನಂತರ ದಿಜಿಲ ನದಿಯ ಮತ್ತೊಂದು ತೀರದಲ್ಲಿ ಒಂದು ಮೃತ ಶರೀರ ಮೇಲೆ ಬಂದಾಗ, ಅದು *ಮಸೂದ್*ನ ಜೀರ್ಣಿಸಿದ ಜಡವಾಗಿತ್ತು. ಆ ಮೃತ ಶರೀರದೊಂದಿಗೆ *ಮುಸೈಲಿಮ* ಯಮಾಮಕ್ಕೆ ಮರಳಿದನು.

ಇಂತಹ ದುರ್ಘಟನೆಯು ನಡೆಯುತ್ತಿರಬೇಕಾದರೆ ಅದೇ ಸಮಯದಲ್ಲಿ ಅತ್ತ ಇದ್ಯಾವುದನ್ನೂ ತಿಳಿಯದೆ ಆ ಮುಗ್ದ ಹೆಣ್ಣು *ಮಲಿಹ* ತನ್ನ ಪ್ರಿಯತಮನನ್ನು ಕಾಯುತ್ತಿದ್ದಳು.

*(ಆ ಸತ್ಯ ಘಟನೆ ಇದಾಗಿತ್ತು)*

ಹೌದು.. ಆ ಬದ್ದುಗಳು *ಮಲಿಹ'*ಳೊಂದಿಗೆ ಕೇಳಿದರು ನಿನ್ನ ಗಂಡನಿಗೆ ಸಂಭವಿಸಿ ದುರಂತ ಏನೆಂದು ನೀನು ಗೊತ್ತಿದಿದ್ದೀಯಾ??

*ಮಲಿಹ:* ಇಲ್ಲ!!

*ಅರಬಿಗಳು:* ಏನನ್ನು ತಿಳಿಯದೆ ನೀನು ಯಮಾಮಗೆ ಹೋಗುತ್ತಿದ್ದೀಯಾ..?
ಅಲ್ಲಿ ಹೋಗಿ ಏನೂ ಪ್ರಯೋಜನವಿಲ್ಲ.. ನಿನ್ನ ಪತಿ ಒಂದು ವರ್ಷದ ಮೊದಲೇ  *ಇರಾಖಿನ ಶಾತ್ತೆ ಅರಬ್* ಎಂಬ ಸಂಗಮ ನದಿಯಲ್ಲಿ ಮುಳುಗಿ ಮರಣ ಹೊಂದಿದ್ದಾನೆ..!! ಎಂದು ಹೇಳಿದಾಗ ದುಃಖವನ್ನು ತಡೆಯಲಾರದೆ  ಕಂಪಿಸುತ್ತಾ *ಮಲಿಹ* ಪುನಃ ಪ್ರಜ್ಞಾರಹಿತಳಾದಳು..

ಮನಸ್ಸಿನಲ್ಲಿ ಕರುಣೆಯ ಗಂಧಗಾಳಿಯಿಲ್ಲದ ದುಷ್ಟರು ಇದನೆಲ್ಲ ಹೇಳಿ ತನ್ನಷ್ಟಕ್ಕೆ ಅವರು ಹೊರಟು ಹೋದರು.

ಈ ಸಮಯದಲ್ಲಿ *ಆಬಿದ್* ಎಂಬ ಆ ಚಿಕ್ಕ ಮಗು ಮರುಭೂಮಿಯಲ್ಲಿ ಮೆಲ್ಲ ಮೆಲ್ಲನೆ ನಡೆಯುತ್ತಲೇ ಇದ್ದನು..
ಉದಯಿಸಿ ಬಂದ ಸೂರ್ಯನ ಬಿಸಿಲಿನ ತಾಪದ ಕಾರಣದಿಂದ ಮರಳು ಬಿಸಿಯಾಗಲು ಶುರುವಾಗಿತ್ತು..
*ಆಬೀದ್'*ನ ಕಾಲು ಸುಡುತ್ತಿದ್ದ ಪರಿಣಾಮ ಅವನು ಅಲ್ಲಿಯೇ ಕುಳಿತನು.. ಇದರಿಂದ ಅವನ ಹಿಂಬದಿಯು ಸುಟ್ಟಿತು.

ಆ ಬಿಸಿಲ ತಾಪದಿಂದ ಸುಡುವ ಮರಳುಗಳಲ್ಲಿ ಏನು ಮಾಡಬೇಕೆಂದು ತಿಳಿಯದೆ *ಆಬಿದ್* ಜೋರಾಗಿ ಅಳಲು ಶುರು ಮಾಡಿದನು.

ಆ ಸಮಯದಲ್ಲಿ ಮರುಭೂಮಿಯ ಮತ್ತೊಂದು ತುದಿಯಿಂದ ಇಬ್ಬರು ನಡೆದುಕೊಂಡು ಬರುತ್ತಾರೆ..!!

ಆಬಿದ್ ಎಂಬ ಆ ಮುದ್ದು ಮಗು..⤵

ಮುಂದುವರಿಯುವುದು..

✍ ಗಫೂರ್ ಬಾಯಾರ್
+974 6669 3010
ಸಹಾಯ: ಅಕ್ಬರ್ ಪಿ.ಎ.
🛡🛡🛡🛡🛡🛡🛡

ಇತಿಹಾಸ ಪ್ರಸಿದ್ಧ ಯಮಾಮ ಯುದ್ಧ ಭಾಗ-11

🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
    *ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 1⃣1⃣
➖➖➖➖➖➖➖➖➖

ಏನಾಗಿರಬಹುದು ಆ ಸತ್ಯ!⤵

👉( *ಮಲಿಹ'*ಳನ್ನು ಬೆಚ್ಚಿಬೀಳಿಸಿದ  ಆ ಸತ್ಯ ತಿಳಿಯಬೇಕಾದರೆ ಮಸೂದ್ ಅವಳನ್ನು ಬಿಟ್ಟು ಹೋದ ದಿಜಿಲಾ ತೀರಕ್ಕೆ ನಾವು ದೃಷ್ಟಿ ಹಾಯಿಸೋಣ..)

ಹೌದು.. ಅಂದು ಆ ವ್ಯಾಪಾರ ಸಂಘದೊಂದಿಗೆ  ಕುಣಿದು ಕುಪ್ಪಳಿಸಿ, ಮಸೂದ್ ಕೂಡ ಬಾಗ್ದಾದ್'ಗೆ ಅವರ ಒತ್ತಾಯಕ್ಕೆ ಮಣಿದು ಜೊತೆಗೆ ಹೋಗಿದ್ದನು.

ಬಾಗ್ದಾದಿನಲ್ಲಿ *ಶಾತ್ತೆ ಅರಬ್* ಎಂದು ಅರಬಿಗಳು ಕರೆಯುವ ಸ್ಥಳವಿದೆ.!
ಆ ಸ್ಥಳದ ವಿಶೇಷತೆ ಏನೆಂದರೆ ಎರಡು ನದಿಗಳು ಹರಿದು ಬಂದು ಸಂಗಮಿಸುವ ಪ್ರಸಿದ್ಧ ಸ್ಥಳವಾಗಿದೆ!

ಒಂದು ಬದಿಯಿಂದ *ದಿಜಿಲ* ಹಾಗು ವಿರುದ್ಧ ದಿಕ್ಕಿನಿಂದ  *ಫುರಾತ್ತ್* ಎಂಬ ಎರಡು ನದಿಗಳ ನೀರು ಹರಿದು ಬಂದು ಒಂದಾಗಿ ಸೇರುವ ಸ್ಥಳವಾಗಿದೆ
*ಶಾತ್ತೆ ಅರಬ್..*

ಆ ನದಿಗಳು ಸಂಗಮಿಸುವ ಸ್ಥಳಕ್ಕೆ ತಲುಪಿದಾಗ ಮಸೂದ್ ಆನಂದದಿಂದ ಹೇಳಿದನು *"ಎಷ್ಟು ಸುಂದರವಾಗಿದೆ ಈ ವಿಶೇಷ ದೃಶ್ಯವನ್ನು ಕಾಣಲು.! ನಮಗೊಮ್ಮೆ ಇದರಲ್ಲಿ ಇಳಿದು ಸ್ನಾನ ಮಾಡಿದರೆ ಹೇಗೆ?*

ಆಗ ಸ್ನೇಹಿತರು ಹೇಳಿದರು,
 ಹೇಯ್.. ಮಸೂದ್....
ಎರಡು ನದಿಗಳು ಒಟ್ಟಿಗೆ ಸೇರಿ ಹರಿಯುವ  ಸ್ಥಳವಾಗಿದೆ ಇದು
*ಶಾತ್ತೆ ಅರಬ್* ಎಂದಾಗಿದೆ ಹೆಸರು.
ಇಲ್ಲಿ ಇಳಿದರೆ ಸುಳಿವಿಗೆ ಸಿಲುಕಿ, ಮತ್ತೆ ಮೇಲೇರಲು ಸಾಧ್ಯವಿಲ್ಲ ಮಸೂದ್.. ಕೆಟ್ಟ ಸಾಹಸಕ್ಕೆ ಇಳಿಯಬೇಡ ಎಂದು ಉಪದೇಶಿಸಿದರು..

*ಮಸೂದ್* ನಿಮಗೆಲ್ಲಾ ಮರಣದ ಹೆದರಿಕೆಯೇ?
ನಿಲ್ಲಿರಿ, ನಾನು ಮೊದಲನೆಯಾಗಿ ನದಿಗೆ ಇಳಿಯುತ್ತೇನೆ..
ನನಗೆ ಏನು ಸಂಭವಿಸದಿದ್ದರೆ ನೀವು ಕೂಡ ಇಳಿಯುತ್ತೀರಾ?
ಎಂದು ಕೇಳುತ್ತಾ *ಮಸೂದ್* ಅವರ ಮಾತನ್ನು ಪೂರ್ಣವಾಗಿ ನಿರ್ಲಕ್ಷಿಸಿ *ಶಾತ್ತೆ ಅರಬ್* ನದಿಗೆ ದುಮಿಕಿದನು.

ಮಸೂದ್ ಈಜಿ ಸ್ನಾನ ಮಾಡುತ್ತಾ, *"ನೀವು ಹೇಳಿದ ಹಾಗೆ ಇಲ್ಲಿ ಯಾವ ಸಮಸ್ಯೆಯೂ ಇಲ್ಲ. ಎಲ್ಲರೂ ಇಳಿದು ಬನ್ನಿ.. ಆನಂದಿಸೋಣ..!"*

ಆದರೆ ಅವನ ತಂಡದಲ್ಲಿದ್ದ ಯಾರೂ ಸಹ ಅಂತಹ ಸಾಹಸಕ್ಕೆ ಇಳಿಯುವ ಧೈರ್ಯ ಹೊಂದಿರಲಿಲ್ಲ .. *ಮಸೂದ್* ತುಂಬಾ ಹೊತ್ತು ಈಜುತ್ತಿದ್ದನು.
ಅದರೊಂದಿಗೆ ಜೊತೆಗಿದವರನ್ನು ಕರೆಯುತ್ತಾ ಇದ್ದನು..

*ಮಸೂದ್* ಶಾಂತವಾದ ತಿಳಿನೀಲಿ ಜಲದಲ್ಲಿ ಈಜುತ್ತಾ ಆನಂದಿಸುತ್ತಾ ಇರುವುದನ್ನು ನೋಡಿದಾಗ ಕೆಲವರಿಗೆ ನೀರಿಗೆ ಇಳಿಯಲು ಆಸೆ ಹುಟ್ಟಿತು.

ಹಾಗೆ ಕೆಲವರು ನದಿಗೆ ಇಳಿಯಲು ತಯಾರಾಗುವಾಗ, ಅನಿರೀಕ್ಷಿತವಾದ ಒಂದು ದೊಡ್ಡ ಸುಳಿಯಲ್ಲಿ *ಮಸೂದ್* ಸಿಲುಕಿದನು.!!

ಆ ಸುಳಿಯು ಅವನನ್ನು ತನ್ನೊಳಗೆ ಸೆರೆಯಾಗಿಸಿ ಕೆಳಗೆ ಕೊಂಡೊಯ್ಯಿತು..
ನಂತರ ಇದ್ದಕ್ಕಿದ್ದಂತೆ *ಮಸೂದ್* ಮೇಲೆ ಬಂದಾಗ ಬೊಬ್ಬೆ ಹಾಕುತ್ತಾ.... ನನ್ನನ್ನು ಕಾಪಾಡಿ.. ನನ್ನನ್ನು ಹಿಡಿದಿಕೊಳ್ಳಿ.. ಎಂದು ಒಂದೆರಡು ಸಲ ಹೇಳುತ್ತಾ ತನ್ನ ಜೀವ ರಕ್ಷಿಸಲು ಬೇಡಿಕೊಂಡರೂ ಪುನಃ ನೀರಿನೊಳಗೆ ಸೇರಿದನು.!

ಸ್ವಲ್ಪ ಸಮಯದ ನಂತರ ಅಣತಿ ದೂರದಲ್ಲಿ ಮೇಲೆ ಬಂದ *ಮಸೂದ್* ಜೀವನದ ಕೊನೆಯ ಕ್ಷಣದಲ್ಲಿ ಇರುವವನಂತೆ ಭಾವಿಸಿಕೊಂಡು ಘನ ಶಬ್ದದಿಂದ ಸ್ನೇಹಿತರೇ.. ನನ್ನನ್ನು ರಕ್ಷಿಸಿರಿ.. ನನ್ನನ್ನು ರಕ್ಷಿಸಿರಿ.. ಎಂದು ಅರಚಿದನು..

ಪುನಃ ಮುಳುಗಿದ *ಮಸೂದ್*⤵

ಮುಂದುವರಿಯುವುದು..

✍ ಗಫೂರ್ ಬಾಯಾರ್
+974 6669 3010
ಸಹಾಯ: ಅಕ್ಬರ್ ಪಿ.ಎ.
🛡🛡🛡🛡🛡🛡🛡

ಇತಿಹಾಸ ಪ್ರಸಿದ್ಧ ಯಮಾಮ ಯುದ್ಧ ಭಾಗ-10

🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
    *ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 1⃣0⃣
➖➖➖➖➖➖➖➖➖
*ಅವಳು ಮೆಲ್ಲನೆ*⤵

 ಒಂದು ಕೈಯಲ್ಲಿ ಆಬಿದ್'ನನ್ನು ಎತ್ತಿಕೊಂಡು ಇನ್ನೊಂದು ಕೈಯಲ್ಲಿ ಆಹಾರ ಪೊಟ್ಟಣವನ್ನು ತೆಗೆದುಕೊಂಡು ಕೆಳಗಿಳಿಯಲು ಕಾಲು ಊರಿದಾಗ ಅವಳಿಗೆ ಸಹಿಸಲು ಅಸಾಧ್ಯವಾದ ನೋವಿನಿಂದ ಕಾಲು ನೇರ ಮಾಡಲು ಕೂಡ ಸಾಧ್ಯವಾಗದೆ ಒಂಟೆಯ ಮೇಲೆಯೇ ತುಂಬಾ ಹೊತ್ತು ಕುಳಿತಳು.
ನಂತರ ಮೆಲ್ಲನೆ ಒಂಟಿ ಕಾಲಿನಿಂದ ಕೆಳಗೆ ಜಿಗಿದಳು..
ಒಂಟಿ ಕಾಲಿನಿಂದ ಕುಂಟುತ್ತಾ ಆ ಪಾಳು ಬಿದ್ದ ಕಟ್ಟಡದ ಒಳಗೆ ನಡೆದಳು

ಮಗನನ್ನು ಅಲ್ಲಿ ಮಲಗಿಸಿ  ಕೈಯಲ್ಲಿರುವ ಇನ್ನೊಂದು ಶಾಲನ್ನು ನೆಲದಲ್ಲಿ ಹಾಸಿದ *ಮಲಿಹ* ಅದರ ಮೇಲೆ ಮಲಗಿದಳು.. ಅಷ್ಟರಲ್ಲಿ ಸಂಪೂರ್ಣ ಬಲಹೀನಳಾಗಿದ್ದ ಅವಳು ಪ್ರಜ್ಞಾರಹಿತಳಾದಳು.

   ಹಸಿವಿನಿಂದ ಎಚ್ಚರವಾದ ಆಬಿದ್ ತಾಯಿಯನ್ನು ತುಂಬಾ ತಟ್ಟಿದನು. ಮಲಿಹ'ಳಿಗೆ ಯಾವುದೇ ಚಲನವಿಲ್ಲ. ಕೊನೆಗೆ ಆಬಿದ್ ಮಲಿಹ'ಳ ಎದೆಯ ಮೇಲೇರಿ ನಿದ್ರಿಸಿದನು.

ಮರುದಿನ ಬೆಳಿಗ್ಗೆ ಆಬಿದ್ ಎದ್ದು ಮರುಭೂಮಿಯಲ್ಲಿ ಒಂಟಿಯಾಗಿ ನಡೆಯಲು ಆರಂಭಿಸಿದನು. ಜನ ನಿಬಿಡ ಮರುಭೂಮಿಯಲ್ಲಿ ನಡೆದರೆ ಎಲ್ಲಿಗೆ ತಲುಪುವುದೆಂದು ತಿಳಿಯದ ಆ ಸಣ್ಣ ಮಗು ನಡೆಯುತ್ತಾ ಮುಂದೆ ಸಾಗಿದನು..

*ಮಲಿಹ* ಪ್ರಜ್ಞೆ ಬಂದು ಕಣ್ಣು ತೆರೆದಾಗ ತನ್ನ ಮಗು ದೂರದಲ್ಲಿ ನಡೆದುಕೊಂಡು ಹೋಗುವುದನ್ನು ಕಂಡಳು.. ಮಗನನ್ನು ಕರೆಯಲು ಶ್ರಮಿಸಿದರೂ, ಕಠಿಣವಾದ ಬಾಯಾರಿಕೆಯಿಂದಾಗಿ ನಾಲಗೆಯಿಂದ ಶಬ್ದ ಹೊರಗೆ ಬರಲಿಲ್ಲ.. ಆಯಾಸದಿಂದ ಪುನಃ ಮಲಗಿದಳು.

ಆಬಿದ್ ನಡೆಯುತ್ತಾ ದೂರ ದೂರ ಹೋಗುತ್ತಲೇ ಇದ್ದನು..

ಸ್ವಲ್ಪ ಹೊತ್ತು ಮೀರಿದಾಗ
ಆ ದಾರಿಯಾಗಿ *ಬದ್ದುಗಳಾದ ಒಂದು ಕೆಟ್ಟ ಸ್ವಭಾವದ ಅರಬಿ ಸಂಘ* (ಆದಿವಾಸಿಗಳು) ಬಂತು.

ಅವರು ಪಾಳು ಬಿದ್ದ ಕಟ್ಟಡದೊಳಗೆ ಒಂದು ಹೆಣ್ಣು ಮಲಗುತ್ತಿರುವುದನ್ನು ಕಂಡು ಒಂಟೆಯ ಮೇಲಿನಿಂದ ಇಳಿದು ಬಂದು ಕೇಳಿದರು *"ಹೇ.. ಹೆಣ್ಣೇ.. ಯಾಕೆ ಇಲ್ಲಿ ಮಲಗಿರುವುದು?"* ಎದ್ದೇಳು.. ಇಲ್ಲಿಂದ ಹೋಗು ಎಂದರು...

ಗಾಬರಿಯಿಂದ ಎಚ್ಚರವಾದ *ಮಲಿಹ* ಹೇಳಿದಳು ನಾನು ಒಂಟೆಯ ಮೇಲಿನಿಂದ ಬಿದ್ದು ಗಾಯವಾಗಿ ಮಲಗಿರುವೆನು.

*ಅರಬಿಗಳು;* ನೀನು ಎಲ್ಲಿಗೆ ಹೋಗುತ್ತಿರುವೆ?

*ಮಲಿಹ;* ನಾನು *ಯಮಾಮ*'ಗೆ ಹೋಗುತ್ತಿರುವೆನು.

*ಅರಬಿಗಳು;* ಯಮಾಮಕ್ಕಾ? ನಿನ್ನ ಊರು ಯಾವುದು?

*ಮಲಿಹ;* ಇರಾಕಿನ ಉಮಾರ ಆಗಿದೆ ನನ್ನ ಊರು.

*ಅರಬಿಗಳು;* ಮತ್ಯಾಕೆ ನೀನು ಯಮಾಮಕ್ಕೆ ಹೋಗುತ್ತಿರುವುದು?

*ಮಲಿಹ;* ನನ್ನ ಪತಿಯಾದ ಮಸೂದ್ ಇಬ್ನು ಮುಸೈಲಿಮರವರ ಮನೆಗೆ..

ಇದು ಕೇಳಿದ ತಕ್ಷಣ
ಯಮಾಮದವರಾದ ಅ ಅರಬಿ ಸಂಘ ಆಶ್ಚರ್ಯದಿಂದ ಪರಸ್ಪರ ಮುಖ ನೋಡಿದರು.!!

ಆಮೇಲೆ ಅವರು ಕೇಳಿದರು *"ಮಗಳೇ.. ನಾವೆಲ್ಲರೂ ಯಮಾಮದವರಾಗಿದ್ದೇವೆ. ನಿನ್ನ ಗಂಡ ಮುಸೈಲಿಮರ ಮಗ ಮಸೂದ್ ಆಗಿರುವುದು ಸತ್ಯವೇ"*?

*ಮಲಿಹ* ಹೌದು, ಸತ್ಯವಾಗಿದೆ.

*ಅರಬಿಗಳು;* ನಿನ್ನ ಪತಿ ನಿನ್ನಿಂದ ಬೇರ್ಪಟು ಎಷ್ಟು ಕಾಲವಾಯಿತು.?

*ಮಲಿಹ;* ಸುಮಾರು 2 ವರ್ಷವಾಯಿತು.

*ಅರಬಿಗಳು;* ಮಸೂದ್'ನ ಕುರಿತು ನಂತರ ನಿನಗೆ ಯಾವುದೇ ವಿವರವು ಲಭಿಸಲಿಲ್ಲವೇ?

*ಮಲಿಹ;* ಇಲ್ಲ.

*ಅರಬಿಗಳು;*  ಅದಕ್ಕಾಗಿಯೇ ನೀನು ಯಮಾಮಕ್ಕೆ ಹೋಗುತ್ತಿರುವುದು?
ಅಲ್ಲಿಗೆ ಹೋಗಿ ನಿನಗೆ ಯಾವುದೇ ಫಲವಿಲ್ಲ.

ಹೃದಯದಲ್ಲಿ ಸ್ವಲ್ಪವು ಕರುಣೆಯಿಲ್ಲದ, ಕೃಪೆಯಿಲ್ಲದ ಮನುಷ್ಯವರ್ಗದವರಾದ ನೀಚ ಸ್ವಭಾವದ ಆ ದುಷ್ಟ ಅರಬಿಗಳು ಯಾವುದೇ ಸಂಕೋಚವಿಲ್ಲದೆ ಅವಳ ಹತ್ತಿರ ಒಂದು ಮಾತು ಹೇಳಿದರು!

ಮಲಿಹ ಅದು ಕೇಳಿ ನಡುಗುತ್ತಾ ಪ್ರಜ್ಞಾಹೀನಳಾಗಿ ಬಿದ್ದಳು.!

ಏನಾಗಿರಬಹುದು ಅರಬಿಗಳು ಮಲಿಹ'ಳ ಹತ್ತಿರ ಹೇಳಿದ ಆ ಸತ್ಯ??!⤵

ಮುಂದುವರಿಯುವುದು..


✍ ಗಫೂರ್ ಬಾಯಾರ್
+974 6669 3010
ಸಹಾಯ: ಅಕ್ಬರ್ ಪಿ.ಎ.
🛡🛡🛡🛡🛡🛡🛡