Saturday, September 21, 2019

*ಆತ್ಮಹತ್ಯಾ ದಾಳಿಕೋರರಿಗೆ "ಖುರ್ಆನ್ ಪ್ರಚೋದನೆ" ಎಂದ ಚಕ್ರವರ್ತಿ ಸೂಲಿಬೆಲೆ ಯವರಿಗೊಂದು ಬಹಿರಂಗ ಪತ್ರ..*

✍🏽 *ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

ಪುಲ್ವಾಮ ದಲ್ಲಿ ಸೈನಿಕರ ಮೇಲೆ ನಡೆದ ಆತ್ಮಹತ್ಯಾ ದಾಳಿಯನ್ನು ಪ್ರತಿಯೊಬ್ಬ ಮನುಷ್ಯ ಕೂಡಾ  ಕಂಡಿಸಬೇಕಾದದ್ದೇ.  ಅದರೊಂದಿಗೆ, ಆ ದಾಳಿಗೆ ಕಾರಣವಾಗಿ *ಖುರ್ಆನ್* ನನ್ನು ಎಳೆದುತಂದ ಚಕ್ರವರ್ತಿ ಸೂಲಿಬೆಲೆ ಯವರ ಆರೋಪವನ್ನು ಕೂಡಾ ನಾವು ಕಠಿಣವಾದ ಭಾಷೆಯಲ್ಲಿ ಕಂಡಿಸುತ್ತೇವೆ.
(ಚಕ್ರವರ್ತಿ ಯವರ ಭಾಷಣದ ಲಿಂಕ್, 1:40 ರಿಂದ, 2:20 ರೊಳಗೆ ಈ ವಿಷಯ ಇದೆ.
https://youtu.be/PfmSciFnwDo)

*ಚಕ್ರವರ್ತಿ ಸೂಲಿಬೆಲೆ ಯವರೇ,*
ಭಯೋತ್ಪಾದಕರಿಗೆ ಖುರ್ಆನ್ ನನ್ನು ಮೇಲಿಂದ ಮೇಲೆ ಓದಿ ಕೇಳಿಸಿ ಆತ್ಮಹತ್ಯಾ ದಾಳಿಯನ್ನು ಮಾಡಲು ಪ್ರೇರೇಪಿಸಲಾಯಿತು ಅಂತ ತಾವು ಆರೋಪಿಸಿದ್ದೀರಿ.‌ ಇದು ಶುದ್ಧ ಸುಳ್ಳು ಮಾಹಿತಿಯಾಗಿದೆ.‌ ಖುರ್ಆನ್ ಓದಿ ಒಬ್ಬನನ್ನು ಭಯೋತ್ಪಾದಕನನ್ನಾಗಿಯೋ, ಆತ್ಮಹತ್ಯಾ ದಾಳಿ ಕೋರನನ್ನಾಗಿಯೋ ಮಾಡಲು ಸಾದ್ಯವಿಲ್ಲ.
ಭಯೋತ್ಪಾದಕರಿಗೆ ಆತ್ಮಹತ್ಯಾ ಧಾಳಿ ಮಾಡಲು ಖುರ್ಆನ್ ಓದಿಸಲಾಗಿತ್ತು ಎಂದು ನೀವು ಸ್ಪಷ್ಟವಾಗಿ ಹೇಳಲು, ನಿಮಗೆ ಆ ಮಾಹಿತಿಯನ್ನು ಕೊಟ್ಟವರಾರು? ಭಯೋತ್ಪಾದಕರೇ ಖುದ್ದು ನಿಮ್ಮಲ್ಲಿ ಬಂದು ಹೇಳಿದ್ದಾ, ಅಥವಾ ನೀವಾಗಿ ಹೋಗಿ ಕೇಳಿ ತಿಳಿದುಕೊಂಡಿದ್ದಾ?
ಯಾವ ಭಯೋತ್ಪಾದಕ ಕೂಡಾ ತಮ್ಮ ಕೃತ್ಯಕ್ಕೆ ಖುರ್ಆನ್ ಪ್ರೇರಣೆ ಎಂದು ಹೇಳಲು ಖಂಡಿತಾ ಸಾದ್ಯವಿಲ್ಲ. ಇದೆಲ್ಲವೂ ಮುಸ್ಲಿಂ ವಿರೋಧಿಗಳ ಸೃಷ್ಟಿ ಅಷ್ಟೇ.

*ಖುರ್ಆನ್ ಅಂದರೆ ಏನೆಂದು ಮೊದಲು ಅರಿಯುವ ಪ್ರಯತ್ನ ಮಾಡಿ ಚಕ್ರವರ್ತಿ ಯವರೇ..*
ಖುರ್ಆನ್ ಸೃಷ್ಟಿಕರ್ತನಾದ ಅಲ್ಲಾಹನ ಕಲಾಂ (ಮಾತು) ಆಗಿದೆ. ಅದನ್ನು ಮಲಾಯಿಕ್ (ದೇವಚರರ) ಮೂಲಕ ಅಲ್ಲಾಹನು ಪ್ರವಾದಿ ﷺ ರವರಿಗೆ ನೇರ ತಲುಪಿಸಿದ್ದಾನೆ. ಖುರ್ಆನ್ ನಲ್ಲಿ ಒಟ್ಟು 30 ಕಾಂಡಗಳು, 114 ಅಧ್ಯಾಯಗಳು,  ಮತ್ತು 6666 ಶ್ಲೋಕಗಳಿವೆ. ಆ ಪವಿತ್ರ ಖುರ್ಆನಿಗೆ ಸಾವಿರಕ್ಕೂ ಮಿಕ್ಕ ವಿವರಣೆಗಳುಲ್ಲ ಗ್ರಂಥಗಳಿವೆ.

ಖುರ್ಆನ್ ಓದಿಸಿ ಓರ್ವನನ್ನು ಭಯೋತ್ಪಾದಕನನ್ನಾಗಿ ಮಾಡಲು ಸಾಧ್ಯವಾಗುವುದಾದರೆ, ಪ್ರಪ್ರಥಮವಾಗಿ ಭಯೋತ್ಪಾದನೆಯಂತಹ ಕೃತ್ಯ ಉದಯಿಸಬೇಕಾದದ್ದು ಪ್ರವಾದಿ ಮುಹಮ್ಮದ್ (ﷺ) ರಿಂದ ಆಗಿರಬೇಕಿತ್ತು.
ಯಾಕೆಂದರೆ,  ಖುರ್ಆನ್ ನೇರ ತಲುಪಿದ್ದು ಪ್ರವಾದಿ  (ﷺ) ರಿಗಾಗಿದೆ. ಪ್ರವಾದಿ ಮುಹಮ್ಮದ್ (ﷺ) ರಿಂದವಾಗಿದೆ ನಂತರದವರಿಗೆ ಖುರ್ಆನ್ ತಲುಪಿದ್ದು. ಆ ಪ್ರವಾದಿ ﷺ ರಿಗಿಂತ ಹೆಚ್ಚು ಖುರ್ಆನ್ ಬಗ್ಗೆ ತಿಳಿಯಲು ಬೇರಾರಿಗೂ ಸಾದ್ಯವಿಲ್ಲ.

*ಚಕ್ರವರ್ತಿ ಯವರೇ, ತಮಗೆ ಖುರ್ಆನ್ ಬಗ್ಗೆ ತಿಳಿಯಬೇಕಿದ್ದರೆ ಈ ರೀತಿ ಮಾಡಿ..*
ಖುರ್ಆನ್ ಬಗ್ಗೆ ನೇರ ತಿಳಿದುಕೊಳ್ಳಲು ಪ್ರತಿಯೊಬ್ಬರಿಗೂ ಕಷ್ಟವಾಗಬಹುದು.  ಅದಕ್ಕೆ  ಮಾಡಬೇಕಾದದ್ದು ಇಷ್ಟೇ, ಪ್ರವಾದಿ ಮುಹಮ್ಮದ್ ﷺ ರ ಸಂಪೂರ್ಣ ಜೀವನ ಚರಿತ್ರೆಯನ್ನು ಒಮ್ಮೆ ಅವಲೋಕನ ಮಾಡಿದರೆ ಸಾಕು.
ಕಾರಣ, ಪ್ರವಾದಿ ಮುಹಮ್ಮದ್ ﷺ ರ ಜೀವನ ಸಂಪೂರ್ಣ ಖುರ್ಆನ್ ಆಗಿದೆ. ಖುರ್ಆನ್ ಅಲ್ಲದ ಒಂದೂ ಪ್ರವಾದಿ ಮುಹಮ್ಮದ್ ﷺ ರು ನುಡಿಯಲಾರರು ಎಂದು ಖುರ್ಆನ್ ನಲ್ಲಿ ಅಲ್ಲಾಹನು ಸ್ಪಷ್ಟ ಪಡಿಸಿದ್ದಾನೆ.
*ಅವರ (ಪ್ರವಾದಿ ﷺ ರವರ)  ನುಡಿ ಅವರಿಗೆ ಅವತೀರ್ಣಗೊಳ್ಳುವ ಸಂದೇಶ ಮಾತ್ರವಾಗಿರುವುದು* (ಅನ್ನಜ್ಮ್ 53-4)

ಪ್ರವಾದಿ ಮುಹಮ್ಮದ್ ﷺ ರು ತನ್ನ ಜೀವನದಲ್ಲಿ, ಒಂದು ಸಣ್ಣ ಜೀವಿಯನ್ನು ಕೂಡಾ ನೋಯಿಸಿದ್ದಾಗಿ,  ಅನ್ಯಾಯ ಆಕ್ರಮನ ವೆಸಗಿದ್ದಾಗಿ ತೋರಿಸಲು ಯಾರಿಂದಲೂ ಸಾಧ್ಯವಿಲ್ಲ.ಅಷ್ಟೊಂದು ನಿಷ್ಕಳಂಕರಾಗಿದ್ದರಿಂದಲೇ ಪ್ರವಾದಿ ﷺ ರ ಕಾಲದ ಶತ್ರುಗಳೇ ಪ್ರವಾದಿ ಮುಹಮ್ಮದ್ ﷺ ರನ್ನು *ಅಲ್ ಅಮೀನ್* (ವಿಶ್ವಾಸ ಯೋಗ್ಯನು) ಅಂತ ವಿಷೇಶ ನಾಮದಿಂದ ಗೌರವಿಸಿದ್ದು. 
ಪ್ರವಾದಿ ಮುಹಮ್ಮದ್ ﷺ ರು ಶಾಂತಿಯ ಪ್ರತಿರೂಪವಾಗಿದ್ದಾರೆ ಎಂಬ ವಿಷಯದಲ್ಲಿ ಅಂದಿನಿಂದ ಇಂದಿನವರೆಗೂ ಇರುವ ಶತ್ರು-ಮಿತ್ರ ರೆಂದಿಲ್ಲದೆ ಯಾರಿಗೂ ಅಭಿಪ್ರಾಯ ವ್ಯತ್ಯಾಸವಿಲ್ಲ.

ಯಾವ ಸಮಯದಲ್ಲೂ ತಮ್ಮ ಶತ್ರುಗಳಿಗೂ ಅನ್ಯಾಯ ವೆಸಗಿದವರಲ್ಲ ಪ್ರವಾದಿ ಮುಹಮ್ಮದ್ ﷺ.
ತನ್ನ ಮೇಲೆ ನಿರಂತರ ಕಸಕಡ್ಡಿಗಳನ್ನು ಎಸೆಯುತ್ತಿದ್ದ ಮಹಿಳೆಯೊಬ್ಬಳು ಅನಾರೋಗ್ಯ ಪೀಡಿತಳಾಗಿ ಹಾಸಿಗೆ ಹಿಡಿದಾಗ, ಅವಳ ಮನೆಗೆ ಭೇಟಿಕೊಟ್ಟು ಅರೋಗ್ಯ ವಿಚಾರಿಸಿ, ಗುಣಮುಖವಾಗಲು ಪ್ರಾರ್ಥಿಸಿ ಶತ್ರುಗಳನ್ನೂ ಅಚ್ಚರಿಗೊಳಿಸಿದವರಾಗಿದ್ದಾರೆ ಪ್ರವಾದಿ ಮುಹಮ್ಮದ್  ﷺ.
ಪ್ರವಾದಿ ﷺ ರವರ  ಕಾಲದಲ್ಲಿ ಕೆಲವೊಂದು  ಯುದ್ಧಗಳು ನಡೆದಿವೆ ನಿಜ.‌ ಆದರೆ ಅವುಗಳೆಲ್ಲವೂ ಅನಿವಾರ್ಯ ಘಟ್ಟದಲ್ಲಿ ನಡೆದವುಗಳಾಗಿವೆ. ಯುದ್ಧಕ್ಕಾಗಿ ಪ್ರವಾದಿ ಮುಹಮ್ಮದ್ ﷺ ರು ಎಂದೂ ಹೊರಟು ಹೋಗಿದ್ದಿಲ್ಲ. ಸಾಧ್ಯವಾದಷ್ಟು ಯುದ್ಧವನ್ನು ತಪ್ಪಿಸಿ, ಐಕ್ಯತೆಗಾಗಿ ಶ್ರಮಿಸಿದವರಾಗಿದ್ದರು ಪ್ರವಾದಿ ﷺ ರು.  ಇನ್ನು ಯುದ್ಧ ನಡೆದರೂ, ಆ ಸಂದರ್ಭದಲ್ಲಿ ತನ್ನ ಸಹಚರರಿಗೆ (ಸ್ವಹಾಬಿಗಳಿಗೆ) ಕಂಡೀಶನ್ ಇಡುತ್ತಿದ್ದರು.  ಅದೇನೆಂದರೆ, ಮಹಿಳೆಯರ, ಮಕ್ಕಳ, ವೃದ್ಧರ, ರೋಗಿಗಳ ಮೇಲೆ ಹಾಗೂ, ಶತ್ರುಗಳ ಹಿಂಬದಿಯಿಂದ  ದಾಳಿ ಮಾಡಬಾರದು ಎಂಬಿತ್ಯಾದಿ. ಸೆರೆ ಹಿಡಿಯಲಾಗುತ್ತಿದ್ದ ಶತ್ರುಗಳನ್ನು ಹಿಂಸಿಸದೆ, ಕ್ಷಮಿಸಿ ಬಿಟ್ಟು ಬಿಡುತ್ತಿದ್ದರು. ಪ್ರವಾದಿ   ﷺ ರ ಆ ಸೌಮ್ಯವಾದ ಗುಣನಡತೆಯಿಂದಲೇ ಅಂದು ಲಕ್ಷಾಂತರ ಮಂದಿ ಇಸ್ಲಾಂ ಧರ್ಮ ಸ್ವೀಕರಿಸಿದ್ದರು.  ಅಷ್ಟೊಂದು ತಮ್ಮ ಶತ್ರುಗಳ ಮೇಲೂ ಕರುಣೆ ತೋರಿಸುತ್ತಿದ್ದ ಪ್ರವಾದಿ ಮುಹಮ್ಮದ್  ﷺ ರು, ತನ್ನ ಅನುಯಾಯಿಗಳಿಗೆ ಭಯೋತ್ಪಾದನೆಯಂತಹ ಮನುಷ್ಯ ವಿರೋಧಿ ಚಟುವಟಿಕೆ ಗಳನ್ನು ಬೋಧಿಸಲು ಹೇಗೆ ತಾನೇ ಸಾದ್ಯ.
ಪ್ರವಾದಿ ﷺ ರ ನಡತೆಯಲ್ಲಿ, ಬೋಧನೆಯಲ್ಲಿ ಭಯೋತ್ಪಾದನೆ ಇರಲಿಲ್ಲ ಅಂದಮೇಲೆ, ಅದು ಖುರ್ಆನ್ ನಲ್ಲಿ ಇರಲು ಸಾಧ್ಯವೇ ಇಲ್ಲ.

ಇಸ್ಲಾಮಿನಲ್ಲಿ,  ಪ್ರವಾದಿ ಗಳು, ಅವುಲಿಯಾಗಳು, ಪುಣ್ಯ ಪುರುಷರು, ಇಮಾಮರುಗಳು, ಸೂಫಿಗಳು, ಉಲಮಾಗಳು ಮುಂತಾದವರನ್ನು ನಾವು ಅಲ್ಲಾಹನ ಇಷ್ಟ ದಾಸರು ಅಂತ  ಕರೆಯುತ್ತೇವೆ. ಅಲ್ಲಾಹನ ಇಷ್ಟ ದಾಸರಾಗಬೇಕಾದರೆ, ಖುರ್ಆನ್ ನಲ್ಲಿರುವುದನ್ನು  ಸಂಪೂರ್ಣವಾಗಿ ಅವರು ಅನುಸರಿಸಿ ನಡೆಯಬೇಕು. ಕೆಟ್ಟ ಕಾರ್ಯಗಳನ್ನೆಲ್ಲಾ ತ್ಯಜಿಸಬೇಕು. ಇಸ್ಲಾಂ ಆಜ್ಙಾಪಿಸಿದ ಒಲಿತುಗಳನ್ನೆಲ್ಲಾ ಕಡ್ಡಾಯವಾಗಿ ಮಾಡುವವರಾಗಬೇಕು.
ಪವಿತ್ರ ಖುರ್ಆನ್ ಪ್ರವಾದಿ ﷺ ರಿಗೆ ಅವತೀರ್ಣಗೊಂಡು 1400 ವರ್ಷ ಕಳೆದರೂ, ಇದುವರೆಗೂ ಇಸ್ಲಾಮಿನ ಈ ಇಷ್ಟ ದಾಸರಿಂದ ಒಂದೇ ಒಂದು ಭಯೋತ್ಪಾದನೆ ಯಂತಹ ಕೃತ್ಯ, ಅಥವಾ ಅದಕ್ಕೆ ಬೆಂಬಲ ಕೊಟ್ಟಂತಹ ಒಂದೇ ಒಂದು ಸಣ್ಣ ಉದಾಹರಣೆಯನ್ನು ಕೂಡಾ  ತೋರಿಸಲು ಯಾರಿಂದಲೂ ಸಾದ್ಯವಿಲ್ಲ. ಒಂದು ವೇಳೆ ಖುರ್ಆನ್ ನಲ್ಲಿ ಭಯೋತ್ಪಾದನೆ, ಆತ್ಮಹತ್ಯಾ ಧಾಳಿ ಬಗ್ಗೆ ಪ್ರೋತ್ಸಾಹ ಇದ್ದಿದ್ದರೆ, ಅದನ್ನು ಪ್ರಪ್ರಥಮವಾಗಿ ಮಾಡಬೇಕಾದವರು ಇವರಾಗಿದ್ದರು. ಖುರ್ಆನ್ ನಲ್ಲಿ ಇರುವುದನ್ನು ಮಾಡದ ಹೊರತು ಯಾವ ಪ್ರವಾದಿ ಗಳೂ, ವಲಿಯ್ಯ್ ಗಳೂ, ಇಮಾಮರುಗಳೂ, ಉಲಮಾಗಳೂ, ಸೂಫಿಗಳೂ ಪರಿಪೂರ್ಣರಾಗುತ್ತಿರಲಿಲ್ಲ. ಖುರ್ಆನ್ ನನ್ನು ನೂರು ಶೇಕಡಾ ಅನುಸರಿಸುವ ಇವರ ಜೀವನದಲ್ಲಿ ಭಯೋತ್ಪಾದನೆಯ ಒಂದಂಶ ಕೂಡಾ ಇಲ್ಲ ಅಂದರೆ, ಇಸ್ಲಾಮಿನಲ್ಲಿ, ಖುರ್ಆನ್ ನಲ್ಲಿ ಭಯೋತ್ಪಾದನೆ ಇಲ್ಲ ಎಂದೇ ಅರ್ಥ.‌

ವಿಶ್ವದಲ್ಲಿ  ಮುಸ್ಲಿಮರ ಜನಸಂಖ್ಯೆ 150-60 ಕೋಟಿಯಷ್ಟು ಇದೆ.  ಅದರಲ್ಲಿರುವ ಭಯೋತ್ಪಾದಕರ ಸಂಖ್ಯೆ ಹೆಚ್ಚೆಂದರೆ ಕೇವಲ ಹತ್ತಿಪ್ಪತ್ತು ಸಾವಿರದಷ್ಟು ಮಾತ್ರ  ಇರಬಹುದು.   ಉಳಿದ 149. 99.9 ಕೋಟಿ ಮುಸಲ್ಮಾನರು ಭಯೋತ್ಪಾದಕರಲ್ಲ. ಮಾತ್ರವಲ್ಲ,  ಭಯೋತ್ಪಾದನೆಗೆ ವಿರುದ್ಧ ಕೂಡಾ ಆಗಿದ್ದಾರೆ.‌ 
ಒಂದು ವೇಳೆ ಇಸ್ಲಾಮಿನಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ಇದ್ದಿದ್ದರೆ,  ಬಹುಸಂಖ್ಯೆಯ ಮುಸ್ಲಿಮರೆಲ್ಲರೂ ಭಯೋತ್ಪಾದನೆಯಲ್ಲಿ ತೊಡಗಿರಬೇಕಾಗಿತ್ತು. ಆದರೆ, ಬಹುಸಂಖ್ಯೆಯ ಮುಸ್ಲಿಮರು ಭಯೋತ್ಪಾದನೆಗೆ ವಿರುದ್ಧವಾಗಿ, ಒಂದು ಸಣ್ಣ ಸಂಖ್ಯೆ ಮಾತ್ರ ಭಯೋತ್ಪಾದನೆಯಲ್ಲಿ ತೊಡಗಿಕೊಂಡಿದ್ದರೆ, ಅದಕ್ಕೆ ಧರ್ಮವಾಗಲಿ, ಧರ್ಮ ಗ್ರಂಥವಾಗಲೀ ಕಾರಣವಾಗುವುದಿಲ್ಲ ಎಂದು ಬುದ್ಧಿ ಇರುವವರಿಗೆ ಅರ್ಥವಾಗಬಹುದು.
*ಸಣ್ಣ ಸಂಖ್ಯೆಯ ಭಯೋತ್ಪಾದಕರು ಇಸ್ಲಾಮಿನಲ್ಲಿ ಮಾತ್ರವಲ್ಲ, ಎಲ್ಲಾ ಧರ್ಮದಲ್ಲೂ ಇದ್ದಾರೆ. ಅದರಲ್ಲಿ ಇಸ್ಲಾಮೇತರರ ಕಾರ್ಯಗಳು ಹೈಲರ್ಟ್ ಆಗುವುದಿಲ್ಲ.  ಅದೂ ಅಲ್ಲದೆ,  ಅವರ ಕಾರ್ಯಗಳನ್ನು ಭಯೋತ್ಪಾದನೆ ಎಂಬ ಹೆಸರಲ್ಲಿ ಗುರುತಿಸಲಾಗುತ್ತಿಲ್ಲ ಎಂದು ಮಾತ್ರ.*

*ಖುರ್ಆನ್ ನಲ್ಲಿರುವ ಪ್ರತಿಯೊಂದು ಸಾಲುಗಳನ್ನು ಅವನಿಗೆ ಮತ್ತೆ ಮತ್ತೆ ಓದಿಸಿ ಅವನು ಫಿದಾಯಿನ್ ಆಗಬೇಕು,  ಆತ್ಮಹತ್ಯಾ ಧಾಳಿ ಮಾಡಬೇಕು ಅನ್ನುವ ತರದಲ್ಲಿ ಅವನನ್ನು ಪ್ರಿಫೇರ್ ಮಾಡಲಾಯಿತು.* ಎಂದು ಚಕ್ರವರ್ತಿ ಯವರು ಆರೋಪಿಸಿದರು.
ನೋಡಿ ಚಕ್ರವರ್ತಿ ಯವರೇ..
ವಿಶ್ವದಲ್ಲಿ ಅತ್ಯಂತ ಹೆಚ್ಚು ಓದಲ್ಪಡುವ ಒಂದು ಧರ್ಮ ಗ್ರಂಥ ಈ ಭೂಮಿ ಮೇಲೆ ಇದ್ದಿದ್ದರೆ, ಅದು ಪವಿತ್ರ ಖುರ್ಆನ್ ಮಾತ್ರ. ‌ ವಿಶ್ವದ ನೂರ ಐವತ್ತು ಕೋಟಿ ಮುಸಲ್ಮಾನರೂ ನಿತ್ಯ ಖುರ್ಆನ್ ಓದುತ್ತಾರೆ.  ಹೆಚ್ಚಿನವರು ವರ್ಷದಲ್ಲಿ ಒಂದು, ಎರಡು, ಮೂರು, ಹತ್ತು ಭಾರಿ ಈ ರೀತಿ ಖುರ್ಆನ್ ಸಂಪೂರ್ಣ ಓದಿ ಮುಗಿಸುತ್ತಾರೆ.
ಇನ್ನು ನಮ್ಮ ಪೂರ್ವ ಇಮಾಮರುಗಳು ದಿನಕ್ಕೊಮ್ಮೆಯಂತೆ ಖುರ್ಆನ್ ಸಂಪೂರ್ಣವಾಗಿ ಓದಿ ಮುಗಿಸುತ್ತಿದ್ದರು.
ಈಗಿನ ನಮ್ಮ ಉಲಮಾಗಳಲ್ಲಿ ಕೆಲವರು ಎರಡು ಮೂರು ದಿನಕ್ಕೊಮ್ಮೆ ಸಂಪೂರ್ಣ ಖುರ್ಆನ್ ಓದಿ ಮುಗಿಸುವವರೂ ಇದ್ದಾರೆ. ಅಂದರೆ, ವರ್ಷದಲ್ಲಿ ನೂರಕ್ಕಿಂತಲೂ ಮಿಕ್ಕಿ ಸಂಪೂರ್ಣವಾಗಿ ಖುರ್ಆನ್ ಓದಿ ಮುಗಿಸುತ್ತಾರೆ. ಇಷ್ಟು ಓದಲು ಉಲಮಾಗಳೇತರರಿಗೆ ಖಂಡಿತಾ ಸಾದ್ಯವಿಲ್ಲ. ಅಷ್ಟೊಂದು ಬಾರಿ ಖುರ್ಆನ್ ಓದುವ ನಮ್ಮ ಉಲಮಾಗಳ್ಯಾರೂ ಭಯೋತ್ಪಾದಕರಾಗಿಲ್ಲ. ಪೂರ್ವಿಕರಾದ ಇಮಾಮರುಗಳ ಹಾಗೂ ಇಂದಿನ ನಮ್ಮ ಉಲಮಾಗಳ ಚರಿತ್ರೆಗಳನ್ನು ಒಮ್ಮೆ ಪರಿಶೀಲಿಸಿದರೆ, ಅವರು ಅನ್ಯಾಯ ಅಕ್ರಮ ಭಯೋತ್ಪಾದನೆ ಗಳನ್ನು ಪ್ರೋತ್ಸಾಹಿಸಿದ ಒಂದೇ ಒಂದು ಉಲ್ಲೇಖಗಳನ್ನು ತೋರಿಸಲು ಸಾದ್ಯವಿಲ್ಲ. ಮತ್ತೆ ಹೇಗೆ ಸಾದ್ಯ,  ಮತ್ತೆ ಮತ್ತೆ ಖುರ್ಆನ್ ಓದಿಸಿ ಓರ್ವನನ್ನು ಭಯೋತ್ಪಾದಕನನ್ನಾಗಿ ಮಾಡಲು?. 

ಭಯೋತ್ಪಾದಕರು ಹತ್ಯೆ ಮಾಡುತ್ತಿರುವುದು ಮುಸ್ಲಿಮೇತರರನ್ನು ಮಾತ್ರವಲ್ಲ .  ಮುಸ್ಲಿಮೇತರರಿಗಿಂತ ಹೆಚ್ಚಾಗಿ ಅವರು ದಾಳಿ ಮಾಡಿದ್ದೇ ಮುಸ್ಲಿಮರ ಮೇಲೆ. ಅನ್ಯ ಧರ್ಮದವರನ್ನೇ ಹಿಂಸಿಸಲು ಪ್ರೋತ್ಸಾಹಿಸದ ಧರ್ಮ ಗ್ರಂಥವೊಂದರಲ್ಲಿ ಸ್ವ ಧರ್ಮದವರನ್ನೇ ಕೊಲ್ಲುವಂತೆ ಇರಲು ಸಾಧ್ಯವೇ?. ಮತ್ತೆ ಹೇಗೆ ಭಯೋತ್ಪಾದನೆ ಖುರ್ಆನ್ ನಿಂದ ಪ್ರೇರೇಪಿತ ಎಂದು ಹೇಳಲು ಸಾಧ್ಯವಾಗುತ್ತದೆ.?

ಈ ಭಯೋತ್ಪಾದನೆ ಎಂಬ ಮಹಾ ಮಾರಿ ವಿಶ್ವವನ್ನು ಆವರಿಸಿದ್ದೇ ಇತ್ತೀಚೆಗೆ. ಅಂದರೆ, ಹತ್ತಿಪ್ಪತ್ತು ವರ್ಷಗಳಿಂದ. ಖುರ್ಆನ್ ಪ್ರವಾದಿ  ﷺ ರಿಗೆ ಅವತೀರ್ಣಗೊಂಡು ಇಂದಿಗೆ 1430 ಕ್ಕೂ ಮಿಕ್ಕ ವರ್ಷಗಳಾಯಿತು. ಖುರ್ಆನ್ ಅವತೀರ್ಣಗೊಂಡು 1430 ವರ್ಷಗಳ ವರೆಗೂ ಇರದ ಈ ಭಯೋತ್ಪಾದನೆ, ಇತ್ತೀಚೆಗೆ ಹತ್ತಿಪ್ಪತ್ತು ವರ್ಷಗಳಿಂದ ಹುಟ್ಟಿಕೊಂಡಿದ್ದರೆ ಅದಕ್ಕೆ ಖುರ್ಆನ್ ಹೇಗೆ ತಾನೇ ಹೊಣೆಯಾಗಲು ಸಾದ್ಯ.?
ಖುರ್ಆನ್ ನಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ಇದ್ದಿದ್ದರೆ, ಭಯೋತ್ಪಾದನೆ ಈ ಭೂಮಿ ಮೇಲೆ 1400 ವರ್ಷಗಳಿಂದಲೂ, ಅಂದರೆ, ಪ್ರವಾದಿ ﷺ ರ ಕಾಲದಿಂದಲೂ ಇದ್ದಿರಬೇಕಿತ್ತು ಅಲ್ವ.

ಅದೂ ಅಲ್ಲದೇ, ವಿಶ್ವದಲ್ಲಿ ಅರವತ್ತಕ್ಕೂ ಮಿಕ್ಕ ಮುಸ್ಲಿಂ ರಾಷ್ಟ್ರಗಳಿವೆ. ಅದರಲ್ಲಿ ಬಹುತೇಕ ರಾಷ್ಟ್ರದಲ್ಲಿ ಶರಿಅತ್ ಕಾನೂನು ಜಾರಿಯಲ್ಲಿದೆ. ಅಂತಹ ರಾಷ್ಟ್ರದಲ್ಲೆಲ್ಲೂ ಕೂಡಾ ಭಯೋತ್ಪಾದನೆಯನ್ನು ಪ್ರೋತ್ಸಾಹಿಸಲಾಗುತ್ತಿಲ್ಲ. 
ವಿಶ್ವದಲ್ಲಿ ಇಂದು ಅತ್ಯಂತ ಹೆಚ್ಚು ಮಂದಿ ಮತಾಂತರ ವಾಗುತ್ತಿರುವುದು ಕೂಡಾ ಇಸ್ಲಾಂ ಧರ್ಮಕ್ಕಾಗಿದೆ.  ವಿಶ್ವದಲ್ಲಿ ಇಸ್ಲಾಂ ಅದೆಷ್ಟು ಬೇಗ ಬೆಳೆಯುತ್ತಿದೆಯೆಂದರೆ, ಲಂಡನ್‌ ಅಮೇರಿಕಾ ದಂತಹ ಪಾಶ್ಚಾತ್ಯ ರಾಷ್ಟ್ರದ ಜನಸಂಖ್ಯೆಯ ಎರಡನೇ ಅತ್ಯಂತ ದೊಡ್ಡ ಸಮೂಹ ಇಂದು ಮುಸ್ಲಿಮರಾಗಿದ್ದಾರೆ. ಇವರ ಈ ಬದಲಾವಣೆಗೆ ಪ್ರಮುಖ ಕಾರಣ ಖುರ್ಆನ್ ಎಂಬ ಅದ್ಭುತ ಗ್ರಂಥವಾಗಿದೆ. ಆ ಖುರ್ಆನ್ ನಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ಇದ್ದಿದ್ದರೆ, ಇವರ್ಯಾರು ಇಸ್ಲಾಂ ಧರ್ಮಕ್ಕೆ ಮತಾಂತರ ವಾಗುತ್ತಿರಲಿಲ್ಲ ತಾನೇ.
ಅಂದರೆ, ಖುರ್ಆನ್ ನಿಂದ ಭಯೋತ್ಪಾದನೆಗೆ ಪ್ರೋತ್ಸಾಹಿಸಲಾಗುತ್ತಿದೆ ಎಂಬ ಆರೋಪವು ಸತ್ಯಕ್ಕೆ ದೂರವಾದವುಗಳಾಗಿದೆ.

ಹಾಗೆ ಒಂದು ಸಮುದಾಯದ ಜನ ಮಾಡುವ ಅನ್ಯಾಯಗಳಿಗೆ ಅವರಿಗೆ ಸಂಬಂಧಪಟ್ಟ ಧರ್ಮ ಗ್ರಂಥವನ್ನು ದೂರುವುದಾದರೆ,
ಸಾವಿರಾರು ಜನರ ಸಾವಿಗೆ ಕಾರಣರಾಗುವ ನಕ್ಸಲರು, ಮಾವೋ ವಾದಿಗಳು, ಉಲ್ಫಾ ಉಗ್ರರು, ವೀರಪ್ಪನ್ ಸಹಚರರು, ಎಲ್.ಟಿ.ಟಿ. ಇ ಉಗ್ರರು ಕೂಡಾ ನಮ್ಮ ನಡುವೆ ಬಹಳಷ್ಟು ಮಂದಿ ಇದ್ದಾರೆ. ಇವರಿಗೂ ಒಂದು ಧರ್ಮ ವಿದೆ.ಆ ಧರ್ಮಕ್ಕೂ ಒಂದು ಧರ್ಮ ಗ್ರಂಥವಿದೆ ತಾನೇ.
*ಚಕ್ರವರ್ತಿ ಯವರೇ,* ಯಾರೋ ಮಾಡುವ ಅಕ್ರಮಗಳನ್ನು ಒಂದು ಧರ್ಮ ಗ್ರಂಥದ ಮೇಲೆ ಎತ್ತಿಕಟ್ಟಲು ನಿಮ್ಮ ಹಾಗೆ ನಾವು ಕೂಡಾ ಬಯಸುವುದಾದರೆ,  ಈ ಮೇಲೆ ಹೆಸರಿಸಿದ ಆಕ್ರಮಣಕಾರರಿಗೆ ಪ್ರೋತ್ಸಾಹ ಅವರಿಗೆ  ಸಂಬಂಧಪಟ್ಟ ಧರ್ಮ ಗ್ರಂಥವಾಗಿದೆ ಎಂದು ನಮಗೂ ಆರೋಪಿಸಬಹುದಿತ್ತು.
 ಆದರೆ, ಅಂತಹ ಕೀಲು ಮಟ್ಟಕ್ಕೆ ನಾವು ಇಳಿಯಲಾರೆವು. ಯಾಕೆಂದರೆ,  ಆ ರೀತಿ ಒಂದು ಧರ್ಮವನ್ನು, ಧರ್ಮ ಗ್ರಂಥದ ಮೇಲೆ ಆರೋಪಿಸಲು ಇಸ್ಲಾಂ ನಮಗೆ ಕಳಿಸಿಕೊಟ್ಟಿಲ್ಲ.  ಇಸ್ಲಾಮಿನಲ್ಲಿ ಅದು ಮಹಾ ಪಾಪವಾಗಿದೆ.

*ಭಯೋತ್ಪಾದಕರಿಗೆ ಖುರ್ಆನ್ ಬರುತ್ತದೆಯೇ?*
ಖಂಡಿತಾ ಸಾದ್ಯವಿಲ್ಲ. ಯಾಕೆಂದರೆ, ಪ್ರವಾದಿ ﷺ ರು ತನ್ನ ಸಹಚರರಿಗೆ ಖುರ್ಆನ್ ಸಂಪೂರ್ಣ ಕಲಿಸಲು ತೆಗೆದುಕೊಂಡ ಕಾಲ ಬರೋಬ್ಬರಿ 23 ವರ್ಷ.! ಅಷ್ಟೊಂದು ಸವಿಸ್ತಾರವಾಗಿದೆ ಖುರ್ಆನ್ ನ ವ್ಯಾಖ್ಯೆ.  ಇಂದು ನಮ್ಮಲ್ಲಿರುವ ಉಲಮಾಗಳೂ 10-15 ವರ್ಷಗಳ ಕಾಲ ಬೆಳಿಗ್ಗೆ ಯಿಂದ ರಾತ್ರಿವರೆಗೆ,  ಧರ್ಮ ಗ್ರಂಥವನ್ನು ಅಭ್ಯಾಸ ಮಾಡಿಯೇ ಕಾಲೇಜು ಗಳಿಂದ ಬಿರುದು ಪಡೆದು ಹೊರಬರುತ್ತಿರುವುದು.  ಅಂತಹುದರಲ್ಲಿ, 15-20 ವರ್ಷ ವಯಸ್ಸಾದಾಗಲೇ ಮನೆಬಿಟ್ಟು ತೆರಳಿ,  ಭಯೋತ್ಪಾದಕರೊಂದಿಗೆ ಸೇರಿ ಒಂದೆರಡು ವರ್ಷದಲ್ಲೇ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿಕೊಳ್ಳುವ ಉಗ್ರರು ಖುರ್ಆನ್ ಕಲಿತದ್ದಾದರೂ ಯಾವಾಗ? ಕೇವಲ ಯಾರೋ ಓದಿ ಕೊಟ್ಟು ಒಬ್ಬ ವ್ಯಕ್ತಿಗೆ ಖುರ್ಆನ್ ಅನ್ನು ಮನವರಿಕೆ ಮಾಡಿಕೊಡಲು ಸಾದ್ಯವಿದೆಯಾ?  ಖಂಡಿತಾ ಸಾದ್ಯವಿಲ್ಲ.  ಯಾವುದೋ ಕಾರಣಕ್ಕೆ ಕೆಲವೊಂದು ಯುವಕರು ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿಕೊಂಡಿದ್ದರೆ, ಅದಕ್ಕೆ ಖುರ್ಆನ್ ಎಂದೂ ಕಾರಣವಲ್ಲ.

*ಇನ್ನೊಬ್ಬನನ್ನು ಕೊಲೆ ಮಾಡದ ಅಥವಾ ಭೂಮಿಯಲ್ಲಿ ಕ್ಷೋಭೆ ಯನ್ನುಂಟು ಮಾಡದ ಒಬ್ಬನನ್ನು ಯಾರಾದರೂ ಕೊಂದರೆ,  ಅವನು ಇಡೀ ಮಾನವ ಜನಾಂಗವನ್ನೇ ಕೊಂದವನಂತೆ. ಒಬ್ಬನ ಜೀವ ಉಳಿಸಿದರೆ ಇಡೀ ಮಾನವ ಕೋಟಿಗೆ ಜೀವದಾನ ಮಾಡಿದಂತೆ*  (ಖುರ್ಆನ್ 5:32)
*"ಕೋಮುವಾದಕ್ಕಾಗಿ ಆಹ್ವಾನಿಸುವವನು, ಕೋಮುವಾದಕ್ಕಾಗಿ ಹೋರಾಡುವವನು,ಕೋಮುವಾದದ ಹೆಸರಲ್ಲಿ ಮಡಿಯುವವನೂ ನಮ್ಮವನಲ್ಲ"* (ಪ್ರವಾದಿ ﷺ ವಚನ).
ಅನ್ಯಾಯವಾಗಿ ಯಾರನ್ನೂ ಕೊಲ್ಲಬಾರದೆಂದೂ, ಅಂತಹವರು ನಮ್ಮವರಲ್ಲ ಎಂದು ಖುರ್ಆನ್ ಮತ್ತು ಪ್ರವಾದಿ ﷺ  ರ ವಚನ ನಮಗೆ ಸ್ಪಷ್ಟ ತಾಕೀತು ಮಾಡುತ್ತದೆ.  ಅದೂಅಲ್ಲದೆ, ಇಸ್ಲಾಮಿನಲ್ಲಿ ಆತ್ಮಹತ್ಯೆ ಮಾಡುವುದು ಮಹಾ ಅಪರಾಧ. ಅಂತಹುದರಲ್ಲಿ ಆತ್ಮಹತ್ಯಾ ದಾಳಿಗೆ ಖುರ್ಆನ್ ಪ್ರೋತ್ಸಾಹಕವಾಗಲು ಹೇಗೆ ತಾನೇ ಸಾದ್ಯ.
ಸತ್ಯವು ಇಷ್ಟೊಂದು ಬಹಿರಂಗವಾಗಿ ವ್ಯಕ್ತವಾಗಿದ್ದೂ ಸಹ ಕೆಲವರು ಇಸ್ಲಾಂ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆಂದರೆ, ಅದೆಲ್ಲವೂ ಇಸ್ಲಾಂ ವಿರೋಧಿಗಳ, ಇಸ್ಲಾಂ ವಿರುದ್ಧದ ವ್ಯವಸ್ಥಿತವಾದ ಷಡ್ಯಂತರವಲ್ಲದೆ ಇನ್ನೇನೂ ಅಲ್ಲ ಎಂದಷ್ಟೇ ನಮಗೆ ಹೇಳಲು ಸಾಧ್ಯ.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
*ಸುಲ್ತಾನುಲ್ ಉಲಮಾ ಎಪಿ ಉಸ್ತಾದರಿಗೆ ಗ್ರ್ಯಾಂಡ್ ಮುಫ್ತಿ ಎಂಬ ಬಿರುದು ಸಿಗಲು ಕಾರಣ ಎಂದು ಹೇಳಿ ಖಾದಿಯಾನಿ ಚಲಫಿಯೋರ್ವ ಹಾಕಿದ ಪೋಷ್ಟ್ ಗೆ ಪ್ರತ್ಯುತ್ತರ..*

 *,ಸಲಪಿ.*
*1)* _ಲೋಕನಾಯಕ ಅಲ್ಲಾಹನ ಪ್ರವಾದಿ(ಸ)ರವರ ಹೆಸರಲ್ಲಿ ತಂದ ವ್ಯಾಜ್ಯ ಕೂದಲಿಗೆ ಪ್ರವಾದಿಯಿಂದ  ಕಾಂತಪುರರ ವರೆಗೆ ಮುಟ್ಟುವಂತಹ ಕಳ್ಳ ಸನದ್ ಮಾಡಿದ ಕಾರಣಕ್ಕೆ ಗ್ರಾಂಡ್ ಮುಫ್ತಿಯಾಗಿ ಪರಿಗಣಿಸಲಾಯಿತು ಈ ಸಾಧನೆಯನ್ನು ನೋಡಲು ಈ ಲಿಂಕ್ ಉಪಯೋಗಿಸಿ..._👇
https://youtu.be/7wmAKrhziLg

  *ಉತ್ತರ..👇🏽*
*ವಿಶ್ವದಲ್ಲೇ ಸಾಟಿಯಿಲ್ಲದ ಓರ್ವ ಪ್ರಗಲ್ಭ ಆಲಿಂ ಆಗಿದ್ದಾರೆ ಎಪಿ ಉಸ್ತಾದ್. ಅಂತಹಾ ಪಾಂಡಿತ್ಯವಿರುವ ಎಪಿ ಉಸ್ತಾದ್ ಗೆ ಒಂದು ಸನದ್ ರಚಿಸಲು,  ಯಾರಿಗೂ ಪರಿಚಯವಿಲ್ಲದ, ಅದುವರೆಗೂ ಯಾರೂ ಕೇಳಿರದ/ನೋಡಿರದ ಮಲಯಮ್ಮ ಎಂಬ ಸಖಾಫಿಯ ಅಗತ್ಯವಿದೆಯೇ.*
*ಹಾಗೆ ಕಳ್ಳ ಸನದ್ ರಚಿಸುವುದಾದರೆ, ಅದನ್ನು ಎಪಿ ಉಸ್ತಾದ್ ರವರಿಗೆ ಸ್ವತಃ ರಚಿಸಬಹುದಿತ್ತಲ್ವ. ಎಪಿ ಉಸ್ತಾದ್ ಗಿಂತ ಪ್ರಗಲ್ಭ ಆಲಿಂ ಇನ್ಯಾರೂ ಇಲ್ಲ ಎಂಬುದು ನಿಷೇಧಿಸಲಾಗದ ಸತ್ಯತಾನೇ. ಇನ್ನು ಬೇರೆಯವರ ಸಹಾಯ ಪಡೆಯುವುದಾದರೂ, ಎಪಿ ಉಸ್ತಾದರೊಂದಿಗೆ ನಿಕಟ ಸಂಪರ್ಕವಿರುವ ಪೇರೋಡ್ ಉಸ್ತಾದ್, ಚುಲ್ಲಿಕ್ಕೋಡ್ ಉಸ್ತಾದ್ ರಂತಹ ಪ್ರಗಲ್ಭರಿದ್ದಿಲ್ಲವೇ. ಇದೆಲ್ಲಾ ನೋಡುವಾಗ, ಎಪಿ ಉಸ್ತಾದರ ವಿರೋಧಿಗಳ ಮಧ್ಯೆ ಅಂಗೀಕಾರ ಪಡೆಯಲು ಮಲಯಮ್ಮ ಎಂಬ ಸಖಾಫಿ ಸೃಷ್ಟಿಸಿದ ಮಹಾ ಡ್ರಾಮಾ ಎಂಬುದು ಅರ್ಥವಾಗುತ್ತದೆ.*
*ಇನ್ನು ಈ ಸನದ್ ವಿಷಯದಲ್ಲಿ ಚರ್ಚಿಸಲು ಯಾರಿಗಾದರೂ ಗಂಡೆದೆ  ಇದ್ದರೆ, ಅಂತಹವರು, ಕಝ್ರಜಿ ಯವರ ಈ ಪಂತಾಹ್ವಾನವನ್ನು ಸ್ವೀಕರಿಸಲಿ.*
https://youtu.be/qJPS5WjZ3aQ

 *ಚಲಪಿ...*
*2)*_ಪ್ರವಾದಿ(ಸ)ರವರ ಹೆಸರಲ್ಲಿ ಕಳ್ಳ ಸನದು ಮಾಡಲು ಒಪ್ಪದ ಶಿಷ್ಯ ಮಲಯಮ್ಮ ಸಖಾಫಿ ಎಂಬ ಮರ್ಕಝಿನ ಮುದರ್ರಿಸ್ ರವರನ್ನು ಕೊಲೆಮಾಡಲು ಪ್ರಯತ್ನ ಪ್ರಯತ್ನ ಪಟ್ಟ ಕಾರಣಕ್ಕಾಗಿ ಗ್ರಾಂಡ್ ಮುಫ್ತಿ ಪಟ್ಟಾ,_
👉 https://youtu.be/5yvHYyfeUh4

*ಉತ್ತರ....*👇🏽

*ಈ ವಿಷಯದಲ್ಲಿ ವ್ಯವಹರಿಸಲು ಇಲ್ಲಿ ಕಾನೂನು ಇದೆಯಲ್ವ. ಒಂದು ಕೆಲಸಮಾಡಿ, ಇಲ್ಲಿರುವ ಎಪಿ ಉಸ್ತಾದರ ವಿರೋಧಿಗಳನ್ನೆಲ್ಲಾ ಸೇರಿಸಿ ಎಪಿ ವಿಭಾಗದ ವಿರುದ್ಧ ಕೊಲೆ ಯತ್ನದ ಬಗ್ಗೆ ಒಂದು ಕೇಸು ಕೊಟ್ಟು ಬಿಡಿ. ಅವಾಗ, ಇಂತಹ ಆರೋಪದ ಒಳಮರ್ಮ ಹೊರಬರುತ್ತದೆ. ಎಪಿ ಉಸ್ತಾದ್ ನಿಂತರೂ ಕೂತರೂ ಪತ್ರಿಕಾ ಗೋಷ್ಟಿ ಮಾಡಿ ಉಸ್ತಾದರನ್ನು ಬಂದಿಸಲು ಆಗ್ರಹಿಸುವವರಿಗೆ, ಈ ಕೊಲೆ ಯತ್ನದ ಸ್ಪಷ್ಟ ಕಾರಣ ತಮ್ಮಲ್ಲಿರುವಾಗ, ಆ ಬಗ್ಗೆ ಕೇಸು ಕೊಟ್ಟು ಉಸ್ತಾದರನ್ನು ಬಂದಿಸಲು ಯಾಕೆ ಪ್ರಯತ್ನಿಸಬಾರದಿತ್ತು.?*

*ಚಲಪಿ..*
*3)* _ಕಾಫಿರಾದ ಸುನ್ನತ್ ಮಾಡದ ದಾಮೋದರ ಪಿಳ್ಳೇ ಅಯ್ಯಪ್ಪಾ ಎಂಬ ಕುಪ್ಪ ಸ್ವಾಮಿಯನ್ನು  ಔಲಿಯಾ ಎಂದು ಕಾಂತಪುರ ಘೋಷಿಸಿ ಎಪಿ ಸುನ್ನಿಗಳಿಗೆ ಇಸ್ತಿಗಾಸ ಮಾಡಲು ಹೊಸ ದರ್ಗಾ ನಿರ್ಮಿಸಿ ಉರೂಸ್ ಮಾಡಿದ ಸಾಧನೆಗಾಗಿ ಗ್ರಾಂಡ್ ಮುಫ್ತಿ ಪಟ್ಟ ನೀಡಲಾಯಿತು ..ಈ ಸಾಧನೆಯನ್ನು ಕಣ್ಣಾರೆ ನೋಡಲು ಈ ಲಿಂಕ್ ತೆರೆಯಿರಿ_ 👇
https://youtu.be/OweOctOVguI

*ಉತ್ತರ..* 👇🏽

*ಕಾಫಿರಾದ ಅನ್ಯ ಧರ್ಮದ ಓರ್ವ ವ್ಯಕ್ತಿಯನ್ನು ಯಾರಾದರೂ ಮುಸ್ಲಿಮರ ದಫನ ಭೂಮಿಯಲ್ಲಿ ಧಫನ ಮಾಡಿ ದರ್ಗಾ ಕಟ್ಟುತ್ತಾರೆಯೇ? ಹಾಗೆ ಮಾಡಲು ಮೊಹಲ್ಲಾದವರ ತಲೆಯಲ್ಲಿ ಹುಳ ಬಿದ್ದಿದೆಯಾ?  ಒಂದುವೇಳೆ,  ದರ್ಗಾ ಮಾಡಬೇಕಿದ್ದರೆ ಆ ಮೊಹಲ್ಲಾದವರಿಗೆ ಮುಸ್ಲಿಂ ವ್ಯಕ್ತಿಗಳು ಸಿಗುವುದಿಲ್ಲವೇ. ಇದೆಲ್ಲಾ ನಂಬುವಂತ ವಿಷಯವೇ. ಆ ಊರಿನ ಮೊಹಲ್ಲಾದ ಎಲ್ಲಾ ಜನರ ಸರ್ವ ಸಮ್ಮತದೊಂದಿಗೆ ದಫನಮಾಡಿ ದರ್ಗಾ ಕಟ್ಟಿದ್ದಾರೆಂದರೆ, ಅವರು ಓರ್ವ ಮಹಾನ್ ವ್ಯಕ್ತಿ ಆಗಿರಲೇಬೇಕು ಅಲ್ವ.*
*ಓಚರ ಉಪ್ಪಾಪರ ವಿಷಯ ಬಿಟ್ಟು ಬಿಡಿ,  ಇನ್ನು ಈ ಖಾದಿಯಾನಿ ಚಲಪಿಗಳಿಗೆ ಬೇರೆ ಯಾವುದಾದರೂ ಅಲ್ಲಾಹನ ಅವುಲಿಯಾಗಳ ಮೇಲೆ ವಿಶ್ವಾಸವಿದೆಯಾ.? ಇಲ್ಲಿ ಯಾರಿಗೂ ತರ್ಕವಿಲ್ಲದ ಓರ್ವ ಮಹಾನ್ ವಲಿಯ್ಯ್ ಸಿಎಂ (ರ) ರವರ ಬಗ್ಗೆ ಈ ಖಾದಿಯಾನಿ ಚಲ್ಪಿಗಳೊಂದಿಗೆ ಕೇಳಿನೋಡಿ. ಆ ಸಿಎಂ ವಲಿಯುಲ್ಲಾಹಿಯವರನ್ನು ಕೂಡಾ ಈ ಚಲ್ಪಿಗಳು ಅದೇ ರೀತಿ ನಿಂದಿಸುವವರಾಗಿದ್ದಾರೆ.*
*ಓಚರ ಉಪ್ಪಾಪ ಎಂಬ ಆ ಮಹಾನ್ ವ್ಯಕ್ತಿಯ ಬಗ್ಗೆ ಸವಿಸ್ತಾರವಾಗಿ ತಿಳಿಯಲು ಈ ಲಿಂಕ್ ತೆರೆದು ನೋಡಿ.*
https://youtu.be/AMZguRQ6j_Y

*ಚಲಪಿ..*
*4)* _ನಬಿ(ಸ.ಅ)ರ ಅಸಾರ್ ಎಂದು ಹೇಳಿ ಮುಂಬೈ ಜಾಲಿಯಾವಾಲನಿಂದ ಯಾವುದೋ ಕೂದಲು ತಂದು ಅದನ್ನು ನೀರಿಗೆ ಮುಳುಗಿಸಿ ಬರೀ ಒಂದು ಕೂದಲಿನಲ್ಲಿ ಕೋಟಿ ಕೋಟಿ ಸಂಪಾದಿಸಿ ದಾಖಲೆ ನಿರ್ಮಿಸಿದ ಈ ಸಾಧನೆ ಮಾಡಿದ ಏಕೈಕ ವ್ಯಕ್ತಿ ಎಂಬ ಕಾರಣಕ್ಕಾಗಿ ಗ್ರಾಂಡ್ ಮುಫ್ತಿ ಎಂಬ ಬಿರುದು ನೀಡಲಾಯಿತು...ಈ ಸಾಧನೆಯನ್ನು ನೋಡಲು ಈ ಲಿಂಕ್ ಉಪಯೋಗಿಸಿ..._👇
https://youtu.be/f2ZMmmIxQzM

*ಉತ್ತರ..👇🏽*

*ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ರವರು ಮುನ್ನಡೆಸುವ ಮರ್ಕಝ್ ನಲ್ಲಿ ಪ್ರತೀ ವರ್ಷ ರಬಿವುಲ್ ಅವ್ವಲ್ ತಿಂಗಳಲ್ಲಿ ಪ್ರವಾದಿ ರವರ ﷺ ಪುಣ್ಯ ಕೇಶ ಮುಳುಗಿಸಿದ ನೀರನ್ನು ವಿತರಣೆ ಮಾಡಲಾಗುತ್ತದೆ. ‌ಇದು ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ‌ಇದುವರೆಗೂ ಯಾವೊಬ್ಬನಿಂದಲೂ ಒಂದು ನಯಾಪೈಸೆ ಪಡೆದ ಚರಿತ್ರೆ ಇಲ್ಲ.   ಇನ್ನು ಯಾರಾದರೂ ಇದರಿಂದ ಕೋಟಿ ಕೋಟಿ ಸಂಪಾದಿಸಲಾಗಿದೆ ಎಂದು ಆರೋಪಿಸುವುದಾದರೆ, ಅಂತಹವರು ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಿದರೆ, ಮತ್ತು ಅದೇರೀತಿ, ಮುಂಬೈಯ ಇಕ್ಬಾಲ್ ಜಾಲಿಯಾವಾಲ ರವರಿಂದ ತಂದ ಶಹ್ರೇ ಮುಬಾರಕ್ ಪ್ರವಾದಿ ﷺ ರದಲ್ಲವೆಂದೂ ಸಾಬೀತು ಪಡಿಸಿದರೆ,   ಅಂತಹವರಿಗೆ ಕೋಟಿ ರೂಪಾಯಿ ಬಹುಮಾನ ಕೊಡಲು ಸುನ್ನೀ ಮಕ್ಕಳು ಸಿದ್ದರಿದ್ದಾರೆ. ಗಂಡೆದೆ ಇರುವವರಿಗೆ ಮುಂದೆ ಬರಬಹುದು.*

*ಚಲಪಿ..*
*5)* _ಕೇಶಕ್ಕಾಗಿ ರೋಮಮಂದಿರ ಸ್ಥಾಪಿಸುತ್ತೇವೆ ಎಂದು ವಿಶ್ವದಾಧ್ಯಂತ ಕೋಟಿ ಕೋಟಿ ಹಣಸಂಗ್ರಹ ಮಾಡಿ ಹಣ ಗುಲುಂ ಮಾಡಿದ ಕಾಂತಪುರರ ಈ ಸಾಧನೆಯನ್ನು ಕೂಡ ಪರಿಗಣಿಸಲಾಯಿತು,_👉  https://youtu.be/gxM1fLCeRno
👉 https://youtu.be/ZDzV4QEK0ZU

*ಉತ್ತರ..* 👇🏽

*ಮಸ್ಜಿದುಲ್ ಆಸರ್ ನಿರ್ಮಾಣ ಖಂಡಿತಾ ನಡೆಯುತ್ತದೆ. ಆ ವಿಷಯದಲ್ಲಿ ಯಾರಿಗೂ ಸಂಶಯಬೇಡ. ಯಾರಿಗಾದರೂ ಈ ಬಗ್ಗೆ ಸಂಶಯ ಇದ್ದರೆ, ಅಂತಹವರು ಒಂದು ಸಲ ನಾಲೇಜ್ ಸಿಟಿ ಸಂದರ್ಶಿಸಿ ಬಂದರೆ ಸಾಕು. ತದನಂತರ ನೀವೇ ಹೇಳುವಿರಿ,  ಮಸ್ಜಿದುಲ್ ಆಸಾರ್ ನಿರ್ಮಾಣವಾಗುತ್ತದೋ ಇಲ್ಲವೋ,  ನಿರ್ಮಾಣ ವಾದರೆ ಅದರ ಕರ್ಚು 40 ಕೋಟಿಯದ್ದೋ, 80 ಕೋಟಿಯದ್ದೋ ಎಂದು. ಇರಲಿ, ಈ ಕುತೂಹಲ ಇನ್ನೊಂದೆರಡು ವರ್ಷದಲ್ಲಿ ತಣಿಯಬಹುದು in sha Allah.*

*ಚಲಪಿ...*
*6)* _ಪವಿತ್ರವಾದ ಮದೀನಾ ಮುನವ್ವರದ ನಬಿ (ಸ.ಅ)ರವರ ರೌಳಾಶರೀಪ್ ನಿಂದ ಹುಡಿ (ಮಣ್ಣು) ಮತ್ತು ಶ್ರೀಗಂಧದ ಬೂದಿ ತಂದಿದ್ದೇವೆ( ಕಳೆದ 900 ವರ್ಷ ಗಳಿಂದ ಸಂಪೂರ್ಣಯಾರಿಗೂ ಪ್ರವೇಶ ಇಲ್ಲದ ಪ್ರದೇಶ)ದಿಂದ ತಂದಿದ್ದೇನೆಂದು ಪೊಳ್ಳು ಪ್ರಚಾರ ನಡೆಸಿದ ಮುಗ್ದ ಜನರನ್ನು ವಂಚಿಸಿ ಮತ್ತೇ ಕೋಟಿ ಕೋಟಿ ಬಾಚಿದ ಈ ಸಾಧನೆಗಾಗಿ ಗ್ರಾಂಡ್ ಮುಫ್ತಿ ಬಿರುದು ನೋಡಲಾಯಿತು,_

*ಉತ್ತರ...👇🏽*

*ಹೌದು, ಯಾರಿಗೂ ಪ್ರವೇಶವಿಲ್ಲದಂತಹ ಪವಿತ್ರ ರೌಲಾ ಶರೀಫಿನ ಒಳಗೆ ಪ್ರವೇಶಿಸಲು ಪ್ರತ್ಯೇಕ ಅಕಾಶವನ್ನು ಪಡೆದ ಮಹಾ ಭಾಗ್ಯವಂತರಾಗಿದ್ದಾರೆ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್.  ಉಸ್ತಾದ್ ರವರ ಈ ಪ್ರವೇಶವನ್ನು ಸುಳ್ಳು ಎಂದು ವಾದಿಸುವವರು, ಅಧಿಕೃತ ಮೂಲಗಳಿಂದ ಅದನ್ನು ಸಾಬೀತು ಪಡಿಸಲಿ. ಅದೇರೀತಿ ಅಲ್ಲಿಂದ ತಂದ ಸುಗಂಧ ವನ್ನು ಪವಿತ್ರ ಕೇಶ ಮುಳುಗಿಸಿದ ನೀರಿನಲ್ಲಿ ಹಾಕಿ  ರಬಿವುಲ್ ಅವ್ವಲ್ ನಲ್ಲಿ   ಉಚಿತವಾಗಿ ವಿತರಿಸಲಾಗುತ್ತದೆ. ಯಾರೊಂದಿಗಾದರೂ ಒಂದು ನಯಾ ಪೈಸೆ ಪಡೆದುದಾಗಿ ಸಾಬೀತು ಪಡಿಸಿದರೆ, ಕೋಟಿ ರೂಪಾಯಿ ಬಹುಮಾನ ಕೊಡಲು ಸುನ್ನೀ ಮಕ್ಕಳು ತಯಾರಿದ್ದಾರೆ. ಚಾಲೆಂಜ್ ಸ್ವೀಕರಿಸುವವರು ಮುಂದೆ ಬರಬಹುದು.*
(ಮುಂದುವರೆಯುವುದು...)

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
*ಟೀಕೆ ವಿಮರ್ಶೆಗಳಿಂದ ಸುಲ್ತಾನುಲ್ ಉಲಮಾ ಎಪಿ ಉಸ್ತಾದರನ್ನು ಸೋಲಿಸಬಹುದೆಂದು ಯಾರೂ ಕನಸು ಕಾಣಬೇಡಿ...!*

ಉದಾ: ಇಸ್ಲಾಂ ವಿಶ್ವದಲ್ಲೇ ಅತ್ಯಂತ ವೇಗವಾಗಿ ಅಷ್ಟೇ ವ್ಯಾಪಕವಾಗಿ ಬೆಳೆಯುತ್ತಿರುವ ಒಂದು ಧರ್ಮವಾಗಿದೆ. ಇಸ್ಲಾಮಿನ ಈ ಬೆಳವಣಿಗೆಯು ವಿರೋಧಿಗಳ ಎಷ್ಟು ನಿದ್ದೆಗೆಡಿಸಿದೆ ಎಂದರೆ, ವಿಚಲಿತರಾದ ವಿರೋಧಿಗಳು ಇಸ್ಲಾಮಿನ ಬೆಳವಣಿಗೆಗೆ ತಡೆಯಿಡಲು ಇಸ್ಲಾಂ ವಿರುದ್ಧ ಭಯೋತ್ಪಾದನೆ ಸೇರಿದಂತೆ ನೂರಾರು ಆರೋಪ/ಅಪವಾದಗಳನ್ನು ಹೊರಿಸಿ,  ಇಸ್ಲಾಮಿನ ವರ್ಚಸ್ಸನ್ನು ಜಾಗತಿಕ ಮಟ್ಟದಲ್ಲಿ ಕುಗ್ಗಿಸಲು ಪಡುತ್ತಿರುವ ಶ್ರಮ ಎಲ್ಲರಿಗೂ ಗೊತ್ತಿರುವಂತಹದ್ದೇ. 
ವಿರೋಧಿಗಳ ಈ ಪ್ರಯತ್ನದಿಂದ ಇಸ್ಲಾಮಿಗೆ ಏನಾದರೂ ನಷ್ಟವಾಯಿತೇ?.  ಇಸ್ಲಾಮಿನ ವರ್ಚಸ್ಸಿಗೇನಾದರೂ ಘಾಸಿಯಾಯಿತೇ?  No, ಏನೂ ಆಗಿಲ್ಲ.
ಯಾಕೆಂದರೆ,  ಯಾವುದೇ ಒಂದು ಕಾರ್ಯವನ್ನು ವಿಮರ್ಶೆ  ಟೀಕೆಗಳ ಮೂಲಕ ಸೋಲಿಸಬಹುದೆಂದು ಭಾವಿಸುವುದು  ಮೂರ್ಖತನವಾಗಿದೆ.  ಟೀಕೆ ವಿಮರ್ಶೆಗಳು ಹೆಚ್ಚಾದಷ್ಟು ಅದರ ಬಗ್ಗೆ ಅನ್ವೇಷಣೆಗಿಳಿಯುವವರ  ಸಂಖ್ಯೆಯೂ ಹೆಚ್ಚಾಗುತ್ತದೆ. ಇದರಿಂದ ಜನರಿಗೆ ಸತ್ಯವನ್ನು ಮನವರಿಕೆ ಮಾಡಿಕೊಳ್ಳಲು ಸಾದ್ಯವಾಗುತ್ತದೆ.  ಪರಿಣಾಮ,  ಜನ ಸತ್ಯದ ಕಡೆ ಆಕರ್ಷಿತರಾಗಿ,  ಸತ್ಯವು ಇನ್ನಷ್ಟು ಎತ್ತರಕ್ಕೆ ಬೆಳೆಯಲು ಕಾರಣವಾಗುತ್ತದೆ.    ಇಂದು ವಿಶ್ವದಲ್ಲಿ ಆಗುತ್ತಿರುವುದು ಅದೇ. ಇಸ್ಲಾಂ ವಿರುದ್ಧದ ವಿರೋಧಿಗಳ  ಅಪಪ್ರಚಾರ ವ್ಯಾಪಕವಾದಂತೆ,  ಇಸ್ಲಾಂ ಬಗ್ಗೆ ಅನ್ವೇಷಣೆಗೆ ಇಳಿಯುವವರ ಸಂಖ್ಯೆಯೂ ದಿನದಿಂದ ದಿನಾ ಹೆಚ್ಚಾಯಿತು. ಆ ಕಾರಣದಿಂದ ಜನರು ಸತ್ಯವನ್ನು ಅರಿತು ಇಸ್ಲಾಮಿನೆಡೆಗೆ ಮುನ್ನುಗ್ಗಿ ಬರತೊಡಗಿದರು. ಇದರಿಂದ ಇಸ್ಲಾಂ ಇನ್ನಷ್ಟು ಬೆಳೆಯುತ್ತಾ ಹೋಯಿತು. 

*ಇಂತಹದ್ದೇ ಪರಿಸ್ಥಿತಿ ಎಪಿ ಉಸ್ತಾದರ ಉನ್ನತಿಯಲ್ಲೂ ನಮಗೆ ಕಾಣಬಹುದು..!*
ಒಂದು ವಿಭಾಗವು,  ಎಪಿ ಉಸ್ತಾದ್ ಅದೇನು ಮಾಡಿದರೂ, ಉಸ್ತಾದರ ವಿರುದ್ಧ ಅಪವಾದ ವಿಮರ್ಶೆಗಳನ್ನು ಮಾಡಿ ಉಸ್ತಾದರ ವರ್ಚಸ್ಸನ್ನು ಕುಗ್ಗಿಸಲು ಪ್ರಯತ್ನಿಸಿದರು. ಆ ಕಾರಣಕ್ಕೆ ಉಸ್ತಾದ್ ಸಮಾಜದ ಕೇಂದ್ರಬಿಂದುವಾದರು. ಉಸ್ತಾದರ ಬಗ್ಗೆ ಅನ್ವೇಷಣೆಗೆ ಇಳಿದವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು. ಪರಿಣಾಮ ಸತ್ಯಾನ್ವೇಷಿಗಳು ಎಪಿ ಉಸ್ತಾದ್ ರವರಲ್ಲಿ ಅತ್ಯಾದ್ಭುತವನ್ನೇ ಕಂಡರು. ಆ ಮಹಾ ನಾಯಕನ ಜೀವನದಲ್ಲಿ ಸಂಶಯಕ್ಕೆ ವಿಮರ್ಶೆಗೆ ಎಡೆಯೇ ಇಲ್ಲ ಎಂದು ಜನರು ಅರ್ಥಮಾಡಿಕೊಂಡರು. ಅದರ ಫಲವೇ,  ಇಂದು ಕಾಣುತ್ತಿರುವ  ಉಸ್ತಾದರ ವರ್ಣಿಸಲಸಾಧ್ಯವಾದ  ಉನ್ನತಿ.

ಒಂದು ವೇಳೆ ಟೀಕೆ ವಿಮರ್ಶೆಗಳಿಂದ ಉಸ್ತಾದರನ್ನು ಸೋಲಿಸಲು ಸಾದ್ಯವಾಗುವಂತಿದ್ದರೆ, ಎಪಿ ಉಸ್ತಾದ್ ಎಂಬ ಆ ಮಹಾ ನಾಯಕನ ಹೆಸರು ಐವತ್ತರವತ್ತು ವರ್ಷಗಳ ಮುಂಚೆಯೇ ಈ ಭೂಮಿ ಮೇಲಿಂದ ಕಾಣೆಯಾಗಬೇಕಿತ್ತು. ಕಾರಣ,   ಉಸ್ತಾದ್ ಸಂಘಟನೆಗೆ  ಬಂದ (ಅಂದು ಉಸ್ತಾದ್ ಗೆ 30 ವರ್ಷ ವಯಸ್ಸು) ಕಾಲದಿಂದಲೂ ನಿರಂತರ ಟೀಕೆ ವಿಮರ್ಶೆಗಳನ್ನು ಎದುರಿಸುತ್ತಲೇ ಬಂದವರು. 
ಐವತ್ತರವತ್ತು ವರ್ಷಗಳ ಕಾಲ ಉಸ್ತಾದರನ್ನು ಟೀಕಿಸಿದ ವಿಮರ್ಶಿಸಿದ ವಿರೋಧಿಗಳಿಗೆ ಇದುವರೆಗೂ ಉಸ್ತಾದರನ್ನು ಏನಾದರು ಮಾಡಲು ಸಾದ್ಯವಾಗಿದೆಯಾ?.  ಉಸ್ತಾದರ ವರ್ಚಸ್ಸಿಗೆ ಒಂದು ಕಡುವಿನಷ್ಟಾದರೂ   ಘಾಸಿಮಾಡಲು ಸಾದ್ಯವಾಗಿದೆಯಾ? ಇಲ್ಲ.
ಉಸ್ತಾದ್ ದಿನಬೆಳಗಾದಂತೆ ಎತ್ತರಕ್ಕೇರುತ್ತಲೇ ಹೋದರು.
 ಎಷ್ಟೆಂದರೆ,  ಟೀಕೆ ವಿಮರ್ಶೆಗಳ ಆದ್ಯ ಕಾಲಘಟ್ಟದಲ್ಲಿ ಎಪಿ ಉಸ್ತಾದ್ ಕೇವಲ ಕೇರಳಕ್ಕೆ ಮಾತ್ರ ಸೀಮಿತವಾಗಿದ್ದರೆ, ಟೀಕೆ ವಿಮರ್ಶೆಗಳನ್ನು ಎದುರಿಸಿದ  ಫಲವಾಗಿ ಇಂದು ಉಸ್ತಾದ್ ದೇಶ ವಿದೇಶಗಳಲ್ಲಿ ಪ್ರಮುಖ ವ್ಯಕ್ತಿಯಾಗಿ, ಅಂತಾರಾಷ್ಟ್ರೀಯ ವ್ಯಕ್ತಿಯಾಗಿ ಮಿಂಚುತ್ತಿದ್ದಾರೆ.  ಟೀಕೆ ವಿಮರ್ಶೆಗಳು ಎದುರಿಸಿದ ಕಳೆದ ಐವತ್ತರವತ್ತು ವರ್ಷಗಳ ಚರಿತ್ರೆಯಲ್ಲಿ ಎಪಿ ಉಸ್ತಾದ್ ಒಂದು ಇಂಚು ಕುಗ್ಗಿಹೋದ ಚರಿತ್ರೆಯನ್ನು ತೋರಿಸಲು ಯಾರಿಂದಲೂ ಸಾಧ್ಯವಿಲ್ಲ. ಅಂತ್ಯದಿನದವರೆಗೆ ಸಾದ್ಯವಾಗುವುದೂ ಇಲ್ಲ.
*ಅಲ್ಲಾಹು ಉಸ್ತಾದರಿಗೆ ಆಫಿಯತೊಂದಿಗಿನ ದೀರ್ಘಾಯುಷ್ಯವನ್ನು ಕರುಣಿಸಲಿ, ಆಮೀನ್.*

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
*ಬಹುಸಂಖ್ಯಾತ ಹನಫಿಗಳಿಗೂ,  ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ನಾಯಕ..!*

*ಭಾರತದ ಸುಲ್ತಾನ್* ಖ್ಯಾತಿಯ *ಅಜ್ಮೀರ್ ಖ್ವಾಜಾ (ರ)* ರವರ *807 ನೇ ಉರೂಸ್ ಸಮಾರಂಭ* ದ ಮುಖ್ಯ ಅತಿಥಿಯಾಗಿ *ಇಂಡಿಯನ್ ಗ್ರ್ಯಾಂಡ್ ಮುಫ್ತಿ* ಶೈಖುನಾ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಭಾಗವಹಿಸಲಿದ್ದಾರೆ ಎಂದು ಕೇಳುವಾಗ ಮನದಲ್ಲೇನೋ ಒಂತರ ಸಂತೋಷ, ಅಭಿಮಾನ. 

ಭಾರತೀಯ ಮುಸ್ಲಿಮರ ಜನಸಂಖ್ಯೆಯ 99% ದಷ್ಟು ಬರುವವರು ಹನಫಿಗಳು. ಶಾಫಿಗಳ ಜನಸಂಖ್ಯೆ ಏನಿದ್ದರೂ 1% ಕ್ಕೆ ಮೀಸಲು, ಅಥವಾ ಅದಕ್ಕಿಂತಲೂ ಕಡಿಮೆ.  ಆ ಒಂದು ಶೇಕಡದಷ್ಟಿರುವ ಶಾಫಿ ವಿಭಾಗದ ಓರ್ವ ಆಲಿಂ, ಬಹುಸಂಖ್ಯಾತ ಹನಫಿಗಳಿಗೆ ನೇತೃತ್ವಕೊಡುವುದೆಂದರೆ,
 ಮತ್ತು, ಭಾರತದ ಅತ್ಯಂತ ಪ್ರಮುಖ ಮತ್ತು ಅತೀ ದೊಡ್ಡ ಜನಸಂದಣಿ ಇರುವಂತಹ  *ಅಜ್ಮೀರ್ ಉರೂಸ್*  ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸುವುದೆಂದರೆ, ಅದೊಂದು ಸಣ್ಣ ಗೌರವವೇನಲ್ಲ. 

*ಎಪಿ ಉಸ್ತಾದರ ಉನ್ನತಿ ಒಂದು ಆಶ್ಚರ್ಯವೇ..!*
ಈ ಭೂಮಿ ಮೇಲೆ ಇನ್ನೇನು ಆರೋಪಗಳನ್ನು ಕೇಳಲೂ ಬಾಕಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಟೀಕೆ ವಿಮರ್ಶನೆ ಅಪವಾದಗಳನ್ನು ಎದುರಿಸಿದವರಾಗಿದ್ದಾರೆ ಬಹುಮಾನ್ಯರಾದ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್.
ಹತ್ತೈವತ್ತು ವರ್ಷಗಳಿಂದ ಸಾವಿರಾರು ಆರೋಪ, ಅಪವಾದಗಳನ್ನು ಹೊರಿಸಲ್ಪಟ್ಟರೂ, ಇದುವರೆಗೂ ಅದ್ಯಾವುದೂ ಉಸ್ತಾದರ ಉನ್ನತಿಗೆ ತಡೆಯಾಗಿಲ್ಲ ಎಂಬುದು ಒಂದಾಶ್ಚರ್ಯವೇ.

*ಎಪಿ ಉಸ್ತಾದರ ಈ ಉನ್ನತಿಗೆ ಪ್ರಮುಖ ಕಾರಣ ಉಸ್ತಾದರ ಕ್ಷಮೆ ಎಂದರೆ ತಪ್ಪಾಗಲಾರದು.*
ಯಾರೇನೇ ಟೀಕಿಸಿದರೂ, ನಿಂದಿಸಿದರೂ, ವಿಮರ್ಶಿಸಿದರೂ,  ಅದೆಲ್ಲವನ್ನೂ, ಅವರೆಲ್ಲರನ್ನೂ ಕ್ಷಮಿಸಿ ಮುಗುಲ್ನಗೆಯೊಂದಿಗೆ ಮುನ್ನುಗ್ಗುವ ಉಸ್ತಾದರ ಗುಣವಂತೂ ಅದ್ಭುತ. 
ಎಪಿ ಉಸ್ತಾದ್,  ಇದುವರೆಗೂ ತನ್ನ ಟೀಕಾಕಾರರಿಗೆ ಒಂದಕ್ಷರ ತಿರುಗಿ ಟೀಕಿಸಿದ್ದನ್ನು ತೋರಿಸಲು ಖಂಡಿತಾ ಯಾರಿಂದಲೂ ಸಾದ್ಯವಿಲ್ಲ.  ಯಾರನ್ನು ಕೂಡಾ ಎಪಿ ಉಸ್ತಾದ್ ವೈಯುಕ್ತಿಕವಾಗಿ ಟೀಕಿಸಿದವರಲ್ಲ, ವಿಮರ್ಶಿಸಿದವರೂ ಅಲ್ಲ.
 ಇದಾಗಿದೆ,  ಅಲ್ಲಾಹು ಎಪಿ ಉಸ್ತಾದರ ಪದವಿಯನ್ನು ಎತ್ತರಕ್ಕೇರಿಸುತ್ತಾ ಹೋಗಲು ಪ್ರಮುಖ ಕಾರಣ.

ಒಂದು ವೇಳೆ, ಎಪಿ ಉಸ್ತಾದೇನಾದರೂ ತನ್ನನ್ನು ಟೀಕಿಸಿದವರಿಗೆ  ಒಂದಕ್ಷರ ತಿರುಗಿ ಟೀಕಿಸಿದ್ದರೆ, ಅಥವಾ ವಿಮರ್ಶಿಸಲು ಸಮಯ ಕಂಡುಕೊಂಡಿದ್ದರೆ,  ಎಪಿ ಉಸ್ತಾದ್ ಎಂಬ ಆ ಮಹಾ ನಾಯಕನ ಹೆಸರೇ ಈ ಭೂಮಿ ಮೇಲೆ ಕೇಳಲು ಸಾಧ್ಯವಾಗುತ್ತಿರಲಿಲ್ಲವೇನೋ.
ಆದರೆ, ಎಪಿ ಉಸ್ತಾದರ ಬಂಡೆಕಲ್ಲಿನಂತಹ ಕ್ಷಮೆಯ ಮುಂದೆ ಎಲ್ಲವೂ ಸೋತು ಸುಣ್ಣವಾಗಿ ಹೋದವು. ಉಸ್ತಾದ್ ಮಾತ್ರ ದಿನದಿಂದ ದಿನಕ್ಕೆ ಎತ್ತರಕ್ಕೇರುತ್ತಲೇ ಸಾಗಿದರು.
*ಅಲ್ಲಾಹು ಉಸ್ತಾದರ ಪದವಿಯನ್ನು ಇನ್ನಷ್ಟು ಉನ್ನತಿಗೇರಿಸಲಿ, ಆಮೀನ್.*

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
*ಶಿಲಾನ್ಯಾಸ ಫಲಕದಲ್ಲಿ ಎಪಿ ಉಸ್ತಾದ್ ರವರನ್ನು ಗ್ರ್ಯಾಂಡ್ ಮುಫ್ತಿ ಎಂದು ಉಲ್ಲೇಖಿಸಲಾಗಿಲ್ಲವಂತೆ..!*

*ಸುಲ್ತಾನುಲ್ ಉಲಮಾ ಎಪಿ ಉಸ್ತಾದ್* ರವರ *ಗ್ರ್ಯಾಂಡ್ ಮುಫ್ತಿ* ಪದವಿಯನ್ನು ಅಲ್ಲಗಳೆಯಲು ವಿರೋಧಿಗಳು ಕಂಡುಕೊಂಡ ಒಂದು ಕುಂಟುನೆಪವಾಗಿದೆ, ಶಿಲಾನ್ಯಾಸ ಫಲಕದಲ್ಲಿ *ಗ್ರ್ಯಾಂಡ್ ಮುಫ್ತಿ* ಎಂದು ಉಲ್ಲೇಖಿಸಿಲ್ಲ ಎಂಬುದು.

*ಸುಲ್ತಾನುಲ್ ಉಲಮಾ ಎಪಿ ಉಸ್ತಾದ್* ರವರನ್ನು ಹಲವಾರು ವಿಶೇಷ ಗೌರವ ನಾಮ ಗಳಿಂದ ಗುರುತಿಸುತ್ತಾರೆ.   ವಿಶ್ವದಲ್ಲೇ ಇಷ್ಟೊಂದು ವಿಷೇಶ ನಾಮಗಳಿಂದ ಗುರುತಿಸಲ್ಪಡುವ ಓರ್ವ ಆಲಿಂ ಇದ್ದರೆ, ಅದು *ಎಪಿ ಉಸ್ತಾದ್* ಮಾತ್ರವಾಗಿರಬಹುದು.
*ಶೈಖ್ ಅಬೂಬಕರ್ ಅಹ್ಮದ್*
*ಸುಲ್ತಾನುಲ್ ಮಶಾಇಖ್*
*ಸುಲ್ತಾನುಲ್ ಉಲಮಾ*
*ಖಮರುಲ್ ಉಲಮಾ*
*ತಾಜುಲ್ ಮಶಾಇಖ್*
*ಅಬುಲ್ ಐತಾಂ*
*ಖಾಯಿದುಝ್ಝಮಾನ್*
*ಶೈಖೇ ಖಬೀರ್ ಗ್ರ್ಯಾಂಡ್ ಮುಫ್ತಿ*
ಹಾಗೂ..
*ಜನರಲ್ ಸೆಕ್ರೆಟರಿ, ಅಖಿಲ ಭಾರತ ಜಂಹಿಯ್ಯತುಲ್ ಉಲಮಾ.*
*ಜನರಲ್ ಸೆಕ್ರೆಟರಿ, ಸಮಸ್ತ ಕೇರಳ ಜಂಹಿಯ್ಯತುಲ್ ಉಲಮಾ.*
*Chancellor markazussaqafathi ssunniya*
Etc.

ಪ್ರತಿಯೊಂದು ನಾಮ ಗಳೂ ಉಸ್ತಾದರ ಮಹತ್ವವನ್ನು ಎತ್ತಿತೋರಿಸುತ್ತದೆ. ಒಬ್ಬೊಬ್ಬರು ಒಂದೊಂದು ಗೌರವ ನಾಮದಿಂದ ಉಸ್ತಾದರನ್ನು ಗುರುತಿಸುತ್ತಾರೆ. ಅದರಂತೆ, ಅವರಿಗೆ ಸಂಬಂಧಪಟ್ಟ ದಾಖಲೆಯಲ್ಲಿ ಉಸ್ತಾದರ ಯಾವುದಾದರೊಂದು ಗೌರವ  ನಾಮವನ್ನು ಮುದ್ರಿಸುತ್ತಾರೆ. ಪ್ರತಿಯೊಂದು ಗೌರವ ನಾಮವನ್ನು ಪ್ರತಿಯೊಂದಕ್ಕೂ ಯಾರೂ ಹಾಕುವುದಿಲ್ಲ ಎಂದೂ, ಹಾಗೆ ಹಾಕಲು ಸಾದ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವಂತಹದ್ದೇ.

ಯಾವುದಾದರೊಂದು ಗೌರವ ನಾಮವನ್ನು ಸೇರಿಸಿದಾಕ್ಷಣ, ಮತ್ತೊಂದಕ್ಕೆ ಮಹತ್ವ ಇಲ್ಲವೆಂದೋ, ಅಥವಾ ಅವರು ಇನ್ನುಳಿದ ಗೌರವ ನಾಮಗಳನ್ನು ಸ್ವೀಕರಿಸಿಲ್ಲವೆಂದೋ ಅರ್ಥವಲ್ಲ.
ಅಥವಾ ಒಂದು ದೊಡ್ಡದು, ಮತ್ತೊಂದು ಚಿಕ್ಕದು ಎಂದೂ ಅಲ್ಲ. ಎಲ್ಲವೂ ಪ್ರಮುಖ ಉಲಮಾಗಳು, ಅವುಲಿಯಾ ಶ್ರೇಷ್ಠರೇ ಹೆಸರಿಟ್ಟಂತಹದ್ದು. ಹಾಗಾಗಿ ಪ್ರತಿಯೊಂದು ಗೌರವ ನಾಮಗಲೂ ಉಸ್ತಾದರ ಪಾಲಿಗೆ ಅತೀ ಮಹತ್ವವುಳ್ಳವುಗಳೇ ಆಗಿವೆ. 

*ಚೇಲಾರಿ ಸಮಸ್ತ ಅದ್ಯಕ್ಷರಾದ ಜಿಫ್ರಿ ತಂಙಳ್ ಹಾಗೂ ಪ್ರಧಾನ ಕಾರ್ಯದರ್ಶಿ ಆಲಿಕುಟ್ಟಿ ಮುಸ್ಲಿಯಾರ್ ರನ್ನು ಮುಸ್ಲಿಮರು ಗುರುತಿಸುವುದೇ ಸಮಸ್ತದ ಅದ್ಯಕ್ಷರು ಮತ್ತು ಪ್ರ:ಕಾರ್ಯದರ್ಶಿ ಗಳಾಗಿ.  ಖಾಝಿ ಗಳಾಗಿ ಎಲ್ಲಿಯೂ ಗುರುತಿಸಿಕೊಳ್ಳದ ಕಾರಣ ಅವರ ಖಾಝಿ ಸ್ಥಾನವು ಮಹತ್ವ ಕಳೆದುಕೊಳ್ಳುತ್ತದೆಯಾ. ಇಲ್ಲವಲ್ಲ*

*ಸುಲ್ತಾನುಲ್ ಉಲಮಾ ಎಪಿ ಉಸ್ತಾದ್* ಭಾರತದ ಗ್ರ್ಯಾಂಡ್ ಮುಫ್ತಿಯಾಗಿ ನೇಮಕಗೊಳ್ಳುವ ವರೆಗೆ, ಅದುವರೆಗೂ ಭಾರತದಲ್ಲಿ *ಗ್ರ್ಯಾಂಡ್ ಮುಫ್ತಿ*  ಎಂಬ ಪದವಿಯೊಂದಿದೆ ಎಂದೂ,  ಅದುವರೆಗೂ ಆ ಸ್ಥಾನವನ್ನು ತುಂಬಿದವರು *ತಾಜುಶ್ಯರೀಅ ಮುಫ್ತಿ ಅಕ್ತರ್ ರಝಾಖಾನ್, ಬರೇಲ್ವಿ*  ಯವರು ಎಂದು ಯಾರಿಗಾದರೂ ಗೊತ್ತಿತ್ತಾ.
*ತಾಜುಶ್ಯರೀಅ* ರವರು ಮರಣ ಹೊಂದಿದಾಗಲೂ *ಮುಫ್ತಿ ಅಕ್ತರ್ ರಝಾಖಾನ್* ಮರಣ ಹೊಂದಿದರು ಎಂದು ವಾರ್ತೆ ಬಿತ್ತರಿಸಲಾಗಿತ್ತೇ ಹೊರತು, *ಭಾರತದ ಗ್ರ್ಯಾಂಡ್ ಮುಫ್ತಿ* ಯವರು  ಮರಣ ಹೊಂದಿದರು ಎಂದು ಎಲ್ಲೂ ಉಲ್ಲೇಖಿಸಲಾಗಿರಲಿಲ್ಲ.
ಅದೇರೀತಿ ಅವರನ್ನು ಹೆಚ್ಚಾಗಿ ಗುರುತಿಸಲಾಗುತ್ತಿದ್ದದ್ದೇ *ತಾಜುಶ್ಯರೀಅ* ಎಂಬ ಗೌರವ ನಾಮದಿಂದ.  *ಭಾರತದ ಗ್ರ್ಯಾಂಡ್ ಮುಫ್ತಿ* ಎಂಬ ಪದವಿಯಿಂದ ಗುರುತಿಸಿಕೊಳ್ಳದ ಕಾರಣ, ಅವರ *ಗ್ರ್ಯಾಂಡ್ ಮುಫ್ತಿ* ಸ್ಥಾನ ಮಹತ್ವ ಕಳೆದುಕೊಂಡಿತ್ತಾ.?

ಇಲ್ಲೊಂದು ಲಿಂಕ್ ಕೊಟ್ಟಿದ್ದೇನೆ.
ಅದು *ahlussunnah world* ಎಂಬ ವಿಶ್ವದ ಸುನ್ನತ್ ಜಮಾಹತ್ ಗೆ ಸಂಬಂಧಪಟ್ಟ ವಾರ್ತೆಗಳನ್ನು ಬಿತ್ತರಿಸುವ *Facebook page*  ನಲ್ಲಿ  ಬಂದ *ತಾಜುಶ್ಯರೀಅ* ರವರ ಮರಣ ವಾರ್ತೆಯ ರಿಪೋರ್ಟಾಗಿದೆ. ಅದರಲ್ಲಿ *ಮುಫ್ತಿ ಅಖ್ತರ್ ರಝಾಖಾನ್ ರವರು ಮರಣ ಹೊಂದಿದರು* ಎಂದು ಉಲ್ಲೇಖಿಸಲಾಗಿತ್ತೇ ಹೊರತು, *ಭಾರತದ ಗ್ರ್ಯಾಂಡ್ ಮುಫ್ತಿ ಯವರು ಮರಣ ಹೊಂದಿದರು* ಎಂದು ಉಲ್ಲೇಖಿಸಲಾಗಿರಲಿಲ್ಲ.
ಅದರರ್ಥ ಅವರು *ಗ್ರ್ಯಾಂಡ್ ಮುಫ್ತಿ* ಆಗಿಲ್ಲ ಎಂದೋ, ಅಥವಾ ಅವರ *ಗ್ರ್ಯಾಂಡ್ ಮುಫ್ತಿ* ಪದವಿಗೆ ಮಹತ್ವ  ಇಲ್ಲವೆಂದೊ ಅರ್ಥವಲ್ಲ ಎಂಬುದು ತಲೆಯಲ್ಲಿ ಬುದ್ದಿಯಿರುವವರಿಗೆ ತಿಳಿಯಬಹುದು.

https://www.facebook.com/394382137353099/posts/943789745745666/

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
*SSF ನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಸ್ಗರ್ ಎನ್ನುವ ಓರ್ವ ಬಿಜೆಪಿ ಯ ಕಾರ್ಯಕರ್ತ,  ಕೇಂದ್ರದಲ್ಲಿ ಬಿಜೆಪಿ ಜಯಗಳಿಸಬೇಕು ಎಂಬ  ವಾಯ್ಸೊಂದು ಬಿಟ್ಟಿದ್ದನಂತೆ. ಸಮಯ ಸಾಧಕರಿಗೆ ಇವಿಷ್ಟೇ ಬೇಕಾದದ್ದು. ಆತ SSF ನ ವೇದಿಕೆಯಲ್ಲಿರುವ ಫೋಟೋ ವನ್ನು ಶೇರ್ ಮಾಡುತ್ತಾ, SSF ನವರು ಅದೇನೋ ಮಹಾ ಪಾಪ ಮಾಡಿದವರಂತೆ ಅರಚಾಡುತ್ತಿದ್ದಾರೆ.* 
*ಇರಲಿ, ಅವರ ಕೆಲಸವಂತೂ ಅದೇ. ಅದನ್ನು ತಡೆಯಲು ಯಾರಿಂದಲೂ ಸಾದ್ಯವಿಲ್ಲ.* ‌

ಇಲ್ಲಿ ನನ್ನ ಪ್ರಶ್ನೆ ಏನೆಂದರೆ, ಓರ್ವ ಮುಸ್ಲಿಂ ವ್ಯಕ್ತಿ BJP ಜಯಗಳಿಸಬೇಕು ಎಂದು ಹೇಳಿದ ತಕ್ಷಣ ಆತ ಅಲ್ಲಾಹನ ಮುಂದೆ ಮಹಾ ಅಪರಾಧಿ ಆಗಿಬಿಡುತ್ತಾನಾ? ಹೌದಾಗಿದ್ದರೆ, ಅದಕ್ಕೆ ಇಸ್ಲಾಮಿನಲ್ಲಿ ಆಧಾರ ಇರಲೇಬೇಕು ಅಲ್ವ. ಆಧಾರ ಇಲ್ಲದಿದ್ದರೆ, ಅವರವರಿಗೆ ಇಷ್ಟ ಬಂದಂತೆ ಹೇಳುವುದಾದರೆ, ಅದಕ್ಕೂ ಇಸ್ಲಾಂ ಧರ್ಮಕ್ಕೂ ಯಾವುದೇ ಬಂಧ ಇರುವುದಿಲ್ಲ.
ಅವರವರಿಗೆ ಇಷ್ಟ ಬಂದಂತೆ ದೀನ್ ಹೇಳಲು ಇದು ಫಾದ್ರಿ ಧರ್ಮವಲ್ಲ ಎಂದು ಅಂತಹವರು ಅರ್ಥಮಾಡಿಕೊಳ್ಳುವುದು ಒಳಿತು.

ಆತ ಹೇಳಿದ್ದನ್ನು ನಾನು ಬೆಂಬಲಿಸುತ್ತಿಲ್ಲ. ಯಾಕೆಂದರೆ, ಮುಸ್ಲಿಮರಿಗೆ ಸಾಕಷ್ಟು ಅನ್ಯಾಯ ಮಾಡಿರುವ ಬಿಜೆಪಿ,  ಇಲ್ಲಿ ಅಧಿಕಾರಕ್ಕೆ ಬರಬಾರದೆಂಬುದೇ ಇಲ್ಲಿನ ಸಮಸ್ತ ಮುಸ್ಲಿಮರ ಮತ್ತು ಜಾತ್ಯಾತೀತ ಮನೋಭಾವದವರ ಅಭಿಲಾಷೆ. ಆದರೆ, ಆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿದ ತಕ್ಷಣ, ಮತ್ತು ಹಾಗೆ ಹೇಳಿದ ವ್ಯಕ್ತಿ SSF ನ ವೇದಿಕೆಯಲ್ಲಿ ಇದ್ದ ಮಾತ್ರಕ್ಕೆ ಅದು ಮಹಾ ಪಾಪ ಆಗುವುದು ಹೇಗೆ ಎಂಬುದು ಮಾತ್ರ ಅರ್ಥವಾಗದ ಪ್ರಶ್ನೆ.

ಬಿಜೆಪಿಯನ್ನು ಬೆಂಬಲಿಸಿದ ವ್ಯಕ್ತಿ SSF ನ ವೇದಿಕೆಯಲ್ಲಿ ಇದ್ದ ಮಾತ್ರಕ್ಕೆ, SSF ನವರು ಮಾಡಿದ್ದು ಮಹಾ ಅಪರಾಧ ಎಂದು ಹೇಳುವವರು, ಇಲ್ಲಿ ಅದೇ ಬಿಜೆಪಿ ಯೊಂದಿಗೆ ಸಂಪರ್ಕ ಇರುವವರೊಂದಿಗೆ, ಇಸ್ಲಾಂ ವಿರುದ್ಧ ನಿಲುವು ವ್ಯಕ್ತಪಡಿಸುವವರೊಂದಿಗೆ ಸ್ನೇಹದಿಂದ, ಪರಸ್ಪರ ಸಹಕಾರ ಮಾಡುತ್ತಾ ಇಲ್ವ.
SSF ನ್ನು ವಿರೋಧಿಸುವ ಸಂಘಟನೆಗಳ ಅದೆಷ್ಟೋ ಕಾರ್ಯಕರ್ತರು ಇಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಾರೆ. ಅವರೇನು ಕೇವಲ ಮುಸ್ಲಿಮರೊಂದಿಗೆ ಮಾತ್ರ ವ್ಯವಹಾರ ನಡೆಸುವುದಾ.
ಅವರಿಗೆ ಪರಸ್ಪರ ವ್ಯಾಪಾರ ವಹಿವಾಟು ನಡೆಸುವವರಲ್ಲಿ  ಅದೆಷ್ಟೋ ಮುಸ್ಲಿಂ ವಿರೋಧಿಗಳಾದ ಬಿಜೆಪಿ ಆರೆಸ್ಸೆಸ್ ನವರು ಕೂಡಾ ಇದ್ದಾರೆ. ಅಂದರೆ, ಬಿಜೆಪಿ ಆರೆಸ್ಸೆಸ್ ನವರೊಂದಿಗೆ ಪರಸ್ಪರ ವ್ಯಾಪಾರ ವ್ಯವಹಾರ ನಡೆಸಬಹುದು. ಅವಾಗ ಅದು ಇವರಿಗೆ ಹರಾಂ ಆಗುವುದಿಲ್ಲ. 
ಅದೂ ಅಲ್ಲದೇ, ಮುಸ್ಲಿಮರನ್ನು ಕಠಿಣವಾಗಿ ವಿರೋಧಿಸುವ ವಜ್ರದೇಹಿ ಸ್ವಾಮೀಜಿಯ ಕೈಕೈ ಹಿಡಿದು ನಡೆದಿಲ್ಲವೇ. ಅದು ಇವರ ಕಾನೂನು ಪ್ರಕಾರ ತಪ್ಪಾಗುವುದಿಲ್ಲವೇ.
SSF ನವರ ವೇದಿಕೆಯಲ್ಲಿ ಇದ್ದರೆ ಮಾತ್ರ, ಅದು ಮಹಾ ಹತ್ತು ಅಪರಾಧಗಳಲ್ಲಿ ಒಂದರಂತೆ ವರ್ತಿಸುತ್ತಾರೆ.

ಅಸ್ಗರ್ ರವರು ಬಿಜೆಪಿ ಪರ ವಾಯ್ಸ್ ಬಿಟ್ಟರೆ ಮಾತ್ರ ಅವರು ಧರ್ಮ ದ್ರೋಹಿ, ಸಮುದಾಯ ದ್ರೋಹಿಯಾ?
ಕೋಮುವಾದಿ ಪಕ್ಷ ಬಿಜೆಪಿ ಯ ಮುಂದೆ ಒಂದು ದೊಡ್ಡ ಜಾತ್ಯಾತೀತ ಪಕ್ಷ ಓಟಿಗೆ ನಿಂತಿರುವಾಗ, ಅದರ ಮಧ್ಯೆ ಜಾತ್ಯಾತೀತ ಪಕ್ಷದ ಓಟನ್ನು ವಿಭಜಿಸಿ ಪರೋಕ್ಷವಾಗಿ ಬಿಜೆಪಿ ಗೆ ಸಹಕಾರಿಯಾಗುವಂತೆ ಮತ್ತೊಂದು ಜಾತ್ಯಾತೀತ ಪಕ್ಷ ಓಟಿಗೆ ನಿಲ್ಲುವುದು ಕೂಡಾ ಕೋಮುವಾದಿ,  ಮುಸ್ಲಿಂ ವಿರೋಧಿ ಬಿಜೆಪಿ ಗೆ ಸಹಕರಿಸಿದಂತೆ ಆಗುವುದಿಲ್ವ.  ಇಲ್ಲ ಅಂತ ಓಟಿಗೆ ನಿಲ್ಲುವವರು ಒಂದು ವೇಳೆ ಹೇಳಬಹುದು. ಆ ಬಗ್ಗೆ ಇಲ್ಲಿನ ಸಮಸ್ತ ಮುಸ್ಲಿಮರ ಅಭಿಪ್ರಾಯ ಸಂಗ್ರಹಿಸಲಿ, ಅವಾಗ ಗೊತ್ತಾಗುತ್ತದೆ ಎಷ್ಟು ಮುಸ್ಲಿಮರು ಇದನ್ನು ಬೆಂಬಲಿಸುತ್ತಾರೆ, ವಿರೋಧಿಸುತ್ತಾರೆಂದು.
 ಈ ರೀತಿ ಪರೋಕ್ಷವಾಗಿ ಬಿಜೆಪಿ ಗೆ ಸಹಕಾರ ಮಾಡುವವರಿಗೆ ಅಸ್ಗರ್ ರವರನ್ನು ವಿರೋಧಿಸುವ ನೈತಿಕ ಹಕ್ಕು ಇದೆಯಾ. ಖಂಡಿತಾ ಇಲ್ಲ.

ಇಲ್ಲಿ ಯಾರಿಗೂ ಎಷ್ಟು ಸಂಘಟನೆ ಬೇಕಾದರೂ ಕಟ್ಟಬಹುದು. ಅವರಿಗೆ ಬೇಕಾದಂತಹ ನಿಯಮಗಳನ್ನು ಕೂಡಾ ಸೃಷ್ಟಿಸಬಹುದು. ಅದನ್ನು ಇಲ್ಲಿ ಯಾರಿಗೂ ವಿರೋಧಿಸಲು ಸಾದ್ಯವಿಲ್ಲ.
ಆದರೆ, ಜಾಹಿಲ್ ಗಳೆಲ್ಲಾ ಕಟ್ಟುವ ಸಂಘಟನೆಗೆ ಮತ್ತು ಅವರ ಭೂಲೋಕದ ಲಾಭಕ್ಕೋಸ್ಕರ ಅವರು ಸೃಷ್ಟಿಸುವ ಕಾನೂನುಗಳಿಗೆ  ಉಲಮಾಗಳು ಕೂಡಾ ಸಹಕರಿಸಬೇಕು ಎಂದು ಬಯಸುವುದು ಮೂರ್ಖತನವಾಗಿದೆ.
ಉಲಮಾಗಳು ಹತ್ತು ಹದಿನೈದು ವರ್ಷಗಳ ಕಾಲ ಧಾರ್ಮಿಕ ವಿದ್ಯೆ ಕಲಿತು ಬರುವುದು, ಯಾವುದೋ ಜಾಹಿಲ್ ಗಳು (ಅವಿದ್ಯಾವಂತರು) ಸೇರಿ ತಯಾರಿಸುವ ಸಂಘಟನೆ ಮತ್ತು ಅವರಿಗೆ ಬೇಕಾದಂತಹ ಕಾನೂನನ್ನು ಬೆಂಬಲಿಸಲು ಅಲ್ಲ. ವಿಪರ್ಯಾಸವೆಂದರೆ, ಜಾಹಿಲ್ ಗಳು ತಯಾರಿಸಿದ ಕಾನೂನನ್ನು ಬೆಂಬಲಿಸಲು ಕೂಡಾ ಉಲಮಾಗಳೆನಿಸಿದವರು ಸಿಗುತ್ತಿದ್ದಾರಲ್ವ.

ಕೆಲವೊಂದು ಉಲಮಾಗಳೆನಿಸಿದವರು ಜಾಹಿಲ್ ಗಳ ಹಿಂದೆ ಬಿದ್ದಿದ್ದಾರೆಂದು ನೈಜ ಉಲಮಾಗಳು ಕೂಡಾ ಜಾಹಿಲ್ ಗಳ ಹಿಂದೆ ಬೀಳುತ್ತಾರೆಂದು ಯಾರೂ ಹಗಲು ಕನಸು ಕಾಣಬೇಡಿ.  ಅದೇನು ಟೀಕೆ ವಿಮರ್ಶೆ, ಹಿಂಸೆ, ಅಕ್ರಮ, ಅಪವಾದ ಗಳನ್ನು ಹೊರಿಸಿದರೂ, ಅಲ್ಲಾಹನನ್ನು ಭಯ ಪಡುವ ಉಲಮಾಗಳು ಜಾಹಿಲ್ ಗಳಿಗೆ ಭಯಪಟ್ಟು ಅವರಿಗೆ ಬೇಕಾದಂತೆ ದೀನ್ ಹೇಳಲಾರರು, ಮತ್ತು ಅವರಿಗೆ ಸಹಕರಿಸಲಾರರು.
ನಮ್ಮಲ್ಲಿ ಉಲಮಾಗಳು ದೀನ್ ಹೇಳುತ್ತಾರೆ. ಜಾಹಿಲ್ ಗಳು ಅದನ್ನು ಅನುಸರಿಸುತ್ತಾರೆ.
ಜಾಹಿಲ್ ಗಳು ದೀನ್ ಹೇಳುವುದು, ಅದನ್ನು ಉಲಮಾಗಳೆನಿಸಿದವರು ಅನುಸರಿಸುವಂತಹ ಗತಿಕೇಡು ನಮ್ಮ ಉಲಮಾಗಳಿಗೆ ಬಂದಿಲ್ಲ.
ಶರೀರ ಬಾಲವನ್ನು ಅಲುಗಾಡಿಸಬೇಕೇ ಹೊರತು,
ಬಾಲ ಶರೀರವನ್ನು ಅಲುಗಾಡಿಸಬಾರದು.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
ಟೋಪಿ ಧರಿಸುವುದು/ತಲೆ ಕಟ್ಟು ಕಟ್ಟುವುದು, ಗಡ್ಡ ಬಿಡುವುದು ಪ್ರವಾದಿ ﷺ ರವರ (ಸುನ್ನತ್) ಚರ್ಯೆಯಾಗಿದೆ.
ಪ್ರವಾದಿ ﷺ ರವರನ್ನು ಅನುಸರಿಸುವ  ಸತ್ಯ ವಿಶ್ವಾಸಿಗಳು, ಅಂದಿನಿಂದ ಇಂದಿನವರೆಗೂ ಆ ಪ್ರವಾದಿ ﷺ ರ ಚರ್ಯೆಯಾದ ತಲೆ ಕಟ್ಟು ಕಟ್ಟುವುದನ್ನು, ಗಡ್ಡ ಬಿಡುವಂತಹ ಸುನ್ನತ್ ಆದ ಕಾರ್ಯವನ್ನು ಅನುಸರಿಸುತ್ತಾ ಬಂದವರಾಗಿದ್ದಾರೆ.
ಅದು ಇಂದು ನಿನ್ನೆ ಪ್ರಾರಂಭವಾದುದಲ್ಲ. 

ನಾವು ಅರಿತಂತೆ,  ನಮ್ಮ ಪೂರ್ವಿಕ ಉಲಮಾಗಳು ನೂರಾರು ವರ್ಷಗಳಿಂದ ಎಲ್ಲಾ ಸಂದರ್ಭದಲ್ಲೂ ತಲೆ ಕಟ್ಟು ಕಟ್ಟುವುದನ್ನು,  ಗಡ್ಡ ಬಿಡುವುದನ್ನು ನಾವು ಕಂಡವರಾಗಿದ್ದೇವೆ. ಅವರಿಗೆ ಯಾವ ಸಂದರ್ಭದಲ್ಲೂ ತಮ್ಮ ತಲೆ ಕಟ್ಟು ಕಟ್ಟುವಿಕೆಗೆ, ಗಡ್ಡ ಬಿಡುವಿಕೆಗೆ ತೊಡಕಾಗಿ ಪರಿಣಮಿಸಿದ ಸಂದರ್ಭಗಳಿಲ್ಲ. ಅದಕ್ಕೆ ಬಹುಮುಖ್ಯ ಕಾರಣ, ಇಲ್ಲಿನ ಸೌಹಾರ್ದ ಬಯಸುವ ಬಹುಸಂಖ್ಯಾತ ಹಿಂದೂ ಸಹೋದರರು ಅಂದರೆ ತಪ್ಪಾಗಲಾರದು.

ನಾವಂತೂ, ಟೋಪಿ ಧರಿಸುವುದು,  ಗಡ್ಡ ಬಿಡುವುದು ಸುನ್ನತ್ ಎಂದು ಮದರಸದಲ್ಲಿ ಕಲಿತಂದಿನಿಂದ  ಇಂದಿನವರೆಗೂ ಟೋಪಿ ಧರಿಸುತ್ತಾ ಬರುತ್ತಿದ್ದೇವೆ. ಅದೇ ರೀತಿ ಗಡ್ಡವನ್ನು ಕೂಡಾ.
ಅದಲ್ಲದೆ, ಹತ್ತದಿನೈದು ವರ್ಷಗಳ ಮುಂಚೆ ಇಲ್ಲಿ ಹುಟ್ಟಿದ ಯಾವುದೋ ಒಂದು ಸಂಘಟನೆಯ ಕಾರಣದಿಂದಲ್ಲ ನಾವು ಮತ್ತು ನಮ್ಮ ಉಲಮಾಗಳು ಟೋಪಿ ಹಾಕಲು ಮತ್ತು ಗಡ್ಡ ಬಿಡಲು ಪ್ರಾರಂಭಿಸಿದ್ದು.
*ತಲೆಗೆ ಸರಿಯಾಗಿ ಟೋಪಿ ಧರಿಸದವರು, ಗಡ್ಡ ಬಿಡದವರು ಕೂಡಾ,  ನೂರಾರು ವರ್ಷಗಳಿಂದ ಗಡ್ಡ, ತಲೆ ಕಟ್ಟು ಕಟ್ಟುತ್ತಾ ಬಂದವರ, ಕಾರ್ಯವನ್ನು ತಮ್ಮ ಸಾಧನೆ ಎಂದು ಬೀಗುವುದು, ಶತಮಾನ ಕಂಡ ಮಹಾ ಜೋಕ್ ಅಲ್ಲದೆ ಇನ್ನೇನೂ ಅಲ್ಲ.*

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
*ನನ್ನ ಮತ ನನ್ನ ಸಮುದಾಯಕ್ಕಾಗಿ...*

ನಮಗೆ ಯಾವುದೇ ಪಕ್ಷದೊಂದಿಗೆ ಪ್ರತ್ಯೇಕ ಒಲವೋ, ವಿರೋಧವೋ ಇಲ್ಲ.
ಆದರೂ ಯಾವುದಾದರೊಂದು ಪಕ್ಷಕ್ಕೆ ಓಟು ಹಾಕುವುದು ನಮ್ಮ ಮೇಲೆ ಕರ್ತವ್ಯವಾಗಿದೆ.
ಸದ್ಯಕ್ಕೆ ಮುಸ್ಲಿಮರ ಬಗ್ಗೆ ವಿಶೇಷ ಕಾಳಜಿ ವಹಿಸುವಂತಹ ಪಕ್ಷ ಯಾವುದೂ ಇಲ್ಲವಾದರೂ, ಇರುವುದರಲ್ಲಿ ಸ್ವಲ್ಪ ಸೂಕ್ತವಾದ ಪಕ್ಷಕ್ಕೆ ನಾವು ಓಟು ಹಾಕಬೇಕಾಗಿದೆ.

*ಹಾಗಾದರೆ ನಾವು ಯಾರಿಗೆ ಓಟು ಹಾಕಬೇಕು?*
ಸದ್ಯ ದ.ಕ ದವರಾದ ನಮ್ಮ ಮುಂದೆ ಇರುವ ಪಕ್ಷ ಮೂರು ಮಾತ್ರ. *1. ಬಿಜೆಪಿ, 2. SDPI, 3. ಕಾಂಗ್ರೆಸ್.*

*1. ಬಿಜೆಪಿ*
ಬಿಜೆಪಿ ಗೆ 99% ದಷ್ಟು ಮುಸ್ಲಿಮರು ಓಟು ಹಾಕಲ್ಲ. 
ಕಾರಣ, ಅವರು ಮುಸ್ಲಿಮರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಮುಸ್ಲಿಮರ‌್ಯಾರೂ ಮರೆಯಲು ಸಾದ್ಯವಿಲ್ಲ. ಬಿಜೆಪಿ ಪ್ರಬಲವಾಗುವುದಕ್ಕಿಂತ ಮುಂಚೆ ಇಲ್ಲಿ ಮುಸ್ಲಿಮರು ಅದೆಷ್ಟೋ ನೆಮ್ಮದಿಯಿಂದ ಬದುಕುತ್ತಿದ್ದರು.
ಬಿಜೆಪಿ ಯಾವಾಗ ಪ್ರಬಲವಾಗುತ್ತಾ ಬಂತೋ, ಅಲ್ಲೆಲ್ಲಾ ಮುಸ್ಲಿಮರ ಬದುಕು ಶೋಚನೀಯಾವಸ್ಥೆಗೆ ತಲುಪಿದೆ.
ಮುಸ್ಲಿಮರನ್ನು ಸಜೀವ ದಹನ ಮಾಡಲಾಗುತ್ತಿದೆ. ದನದ ಹೆಸರಲ್ಲಿ ಕಂಡಕಂಡಲ್ಲಿ ಹಲ್ಲೆ ಕೊಲೆ ಮಾಡಲಾಗುತ್ತಿದೆ. ಜೀವಂತ ಅಂಗಾಂಗಗಳನ್ನು ಕತ್ತರಿಸಿ ಹಿಂಸೆ ಕೊಡಲಾಗುತ್ತಿದೆ.
ಅದೂ ಅಲ್ಲದೆ, ಮುಸ್ಲಿಮರ ಶರಿಹತ್ ವಿಷಯದಲ್ಲೂ ಬಹಳಷ್ಟು ಹಸ್ತಕ್ಷೇಪ ನಡೆಲಾಗುತ್ತಿದೆ. ಈ ಎಲ್ಲಾ ಕಾರಣಕ್ಕೆ ಮುಸ್ಲಿಮರು ಬಿಜೆಪಿ ಯನ್ನು ದೂರ ಇಡಬೇಕೆಂದೇ ಬಯಸುತ್ತಾರೆ.

*2. SDPI..*
ನಮ್ಮ ಮುಂದೆ ಇರುವ ಮತ್ತೊಂದು ಆಯ್ಕೆ SDPI.
SDPI ಕಳೆದ ಸಾಲಿನಲ್ಲಿ ಪಡೆದ ಮತ 26 ಸಾವಿರ. ಅಂದರೆ, ಜಯದ ಐದು ಶೇಕಡದ ಹತ್ತಿರ ಕೂಡಾ ತಲುಪಿಲ್ಲ. ಈ ಬಾರಿ ಅದರ ದುಪ್ಪಟ್ಟು ಮತ ಪಡೆದರೂ ಆಗುವುದು 50 ಸಾವಿರದಷ್ಟು ಮಾತ್ರ. ಅಂದರೆ, ಇದರಿಂದ ಬಿಜೆಪಿ ಯನ್ನು ಸೋಲಿಸಲು ಸಾದ್ಯವಿಲ್ಲ.
ಅದೂ ಅಲ್ಲದೇ, SDPI  ಬಗ್ಗೆ 95% ಮುಸ್ಲಿಮರಿಗೆ ಯಾವುದೇ ಒಲವು ಇಲ್ಲ.  ಯಾವಾಗಲೂ ಉಲಮಾಗಳ ತಂಙಳ್ ಗಳ ಮೇಲೆ ಸವಾರಿ ಮಾಡುವ ಈ ಪಕ್ಷವನ್ನು ಜನರು ವಿರೋಧಿಸುತ್ತಿರುವುದೇ ಹೆಚ್ಚು. 
ಜಯ ಗಳಿಸಲು ಸಾಧ್ಯವಿಲ್ಲದ SDPI ಗೆ ಓಟು ಹಾಕಿದರೆ, ಅದು ಪರೋಕ್ಷವಾಗಿ ಬಿಜೆಪಿ ಗೆ ಸಹಕಾರ ಮಾಡಿದಂತಾಗುತ್ತದೆ. 
ಯಾಕೆಂದರೆ, SDPI ಗೆ ಬಿಜೆಪಿ ಗೆ ಸಿಗುವ ಒಂದು  ಮತವೂ ಬೀಳುವುದಿಲ್ಲ ಎಂಬುದು ಕಚಿತ.  ಇನ್ನು ಬಿದ್ದರೆ, ಅದು ಕಾಂಗ್ರೆಸ್ ಗೆ ಸಿಗಬೇಕಾದ ಮತವಾಗಿರುತ್ತದೆ. ಕಾಂಗ್ರೆಸ್ ಗೆ ಎಷ್ಟು ಮತ ನಷ್ಟವಾಗುತ್ತದೋ ಅಷ್ಟೂ ಅದು ಬಿಜೆಪಿ ಗೆ ಪ್ಲಸ್ ಪಾಯಿಂಟ್.

*3. ಕಾಂಗ್ರೆಸ್*
ಸದ್ಯ ಬಿಜೆಪಿ ಯನ್ನು ಸೋಲಿಸಬೇಕಾದರೆ, ಅದಕ್ಕೆ ಪರ್ಯಾಯವಾಗಿ ನಮ್ಮ ಮುಂದೆ ಇರುವ ಆಯ್ಕೆ ಕಾಂಗ್ರೆಸ್ ಪಕ್ಷ ಮಾತ್ರ.
*ಹಾಗಾಗಿ ಈ ಸಂದರ್ಭದಲ್ಲಿ ನಾವು ಓಟು ಹಾಕಬೇಕಾದ ಪಕ್ಷ ಕಾಂಗ್ರೆಸ್ ಅಲ್ಲದೆ ಬೇರೆ ಯಾವುದೂ ಇಲ್ಲ.*  ಅದು ಕಾಂಗ್ರೆಸ್ ನ ಮೇಲೆ ಪ್ರೀತಿಯಿಂದಲ್ಲ. ಬದಲಾಗಿ, ನಮ್ಮ ಸಮುದಾಯಕ್ಕಾಗಿ.
ನಮ್ಮ ಭಾರತ ದೇಶದಲ್ಲಿ ಅದೆಷ್ಟೋ ನಮ್ಮ ಸಹೋದರರು ಬಿಜೆಪಿ ಆರೆಸ್ಸೆಸ್ ನವರಿಂದ ನಿತ್ಯ ಹಿಂಸೆ ಗಳನ್ನು ಅನುಭವಿಸುತ್ತಿರುವ ವಿಚಾರ ನಮಗೆಲ್ಲಾ ಗೊತ್ತಿರುವಂತದ್ದೇ.   ಬಿಜೆಪಿ ಯನ್ನು ಸೋಲಿಸುವುದಲ್ಲದೆ ಇದಕ್ಕೆ ಬೇರೆ ಪರ್ಯಾಯ ಮಾರ್ಗವಿಲ್ಲ. ಬಿಜೆಪಿ ಯನ್ನು ಸೋಲಿಸಬೇಕಾದರೆ, ಸದ್ಯಕ್ಕೆ ನಾವು ಓಟು ಹಾಕಿ ಜಯಗಳಿಸುವಂತೆ ಮಾಡಬೇಕಾದ ಪಕ್ಷ ಕಾಂಗ್ರೆಸ್ ಮಾತ್ರ ವಾಗಿದೆ.
ಹೌದು, ಅದು ನಮಗಾಗಿ ಅಲ್ಲ.
*ಭಾರತ ದೇಶದ ಮುಕ್ಕು ಮೂಲೆಯಲ್ಲಿ ಜೀವಿಸುತ್ತಿರುವ, ಆರೆಸ್ಸೆಸ್ ನವರ ಹಿಂಸೆಯಿಂದ ನಲುಗಿ ಹೋದ ನನ್ನ ಸಮುದಾಯದ ನಾಳೆಯ ನೆಮ್ಮದಿಗಾಗಿ, ನನ್ನ ಧರ್ಮದ ಸಂರಕ್ಷಣೆಗಾಗಿ...*

ಸಹೋದರರೇ, ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವಾಗ, ಒಂದು ಕ್ಷಣ ಉತ್ತರ ಭಾರತದ ನಮ್ಮ ಸಹೋದರರ ಜೀವನಕ್ಕೊಮ್ಮೆ ಕಣ್ಣಾಯಿಸಿ.   ಅವರು ಅನುಭವಿಸುತ್ತಿರುವ ಕಷ್ಟ ಹಿಂಸೆಗಳನ್ನು ಒಮ್ಮೆ ನೆನೆಸಿಕೊಳ್ಳಿ. ಅವರ ನೆಮ್ಮದಿಗಾಗಿ ನಾವು ಯಾವ ಪಕ್ಷಕ್ಕೆ ಓಟು ಹಾಕುವುದು ಸೂಕ್ತ ಎಂದು ನೀವೇ ತೀರ್ಮಾನಿಸಿ,  ಮತ ಚಲಾಯಿಸಿ. ನಮ್ಮ ಪ್ರತಿಷ್ಠೆ ತೋರಿಸಬೇಕಾದ ಸಮಯವೂ ಇದಲ್ಲ ಎಂಬುದು ನೆನಪಿರಲಿ.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
ಆತ ಹೇಳಿದ *ಪ್ರತಿರೋಧ ಅಪರಾಧ ಅಲ್ಲವೆಂದು*.

ನಾನು ಕೇಳಿದೆ *ಪ್ರತಿರೋಧ ಎಂದರೆ ಏನು?.*
ಆತ: *ನಮ್ಮ ಮೇಲೆ ಶತ್ರುಗಳು ದಾಳಿ ಮಾಡಲು ಬಂದರೆ ರಕ್ಷಣೆಗಾಗಿ ತಿರುಗಿ ದಾಳಿ ಮಾಡುವುದು. ಇದಕ್ಕೆ ಸಂವಿಧಾನವೇ ಅನುಮತಿಸುತ್ತದೆ. ಈ ವಿಷಯವನ್ನು ಪ್ರಪ್ರಥಮವಾಗಿ ಸಮುದಾಯಕ್ಕೆ ಹೇಳಿ ಕೊಟ್ಟವರೇ ನಾವು ಎಂದು ಹೇಳುತ್ತಾ ಬೀಗಿದ.*

ನಾನು ಕೇಳಿದೆ: *ಹೌದಾ, ನೀವು ಪ್ರತಿರೋಧ ಮಾಡಿದ ಒಂದು ಉದಾಹರಣೆಯನ್ನು ತೋರಿಸಬಹುದಾ.*
ಆತ: *ಇಲ್ಲಿ ಪ್ರತಿಯೊಂದಕ್ಕೂ ಪ್ರತಿಭಟನೆ ಮಾಡುವುದು, ಚಡ್ಡಿಗಳಿಗೆ ಬಹಿರಂಗ ಸವಾಲು ಹಾಕುವವರು ನಾವು ಮಾತ್ರ ಎಂದು ಜಂಭಕೊಚ್ಚಿಕೊಂಡ*
ಅದಕ್ಕೆ ನಾನಂದೆ, *ಪ್ರತಿಭಟನೆ ಇಲ್ಲಿ ಪ್ರತಿಯೊಂದು ರಾಜಕೀಯ ಸಂಘಟನೆಗಳೂ ಮಾಡುತ್ತವೆ. ಬೆರಳೆನಿಕೆಯ ಸದಸ್ಯರಿರುವ DYFI ಕೂಡಾ ಇಲ್ಲಿ ಪ್ರತಿಭಟನೆ ಮಾಡುತ್ತದೆ. ಮತ್ತೆ ಬಹಿರಂಗ ಸವಾಲು ಬಟ್ಟ ಕೂಡಾ ವರ್ಷಕ್ಕೆ ನೂರು ಸಲ ಹಾಕುತ್ತಾನೆ. ಅದನ್ನೆಲ್ಲಾ ಪ್ರತಿರೋಧ ಎನ್ನುವುದಿಲ್ಲ ಎಂದೆ.*

ನೋಡು ನಿಮ್ಮ ಸಂಘದ *ಮುಸ್ತಫಾ ಕಾವೂರ್, ಇಕ್ಬಾಲ್ ಬಂಟ್ವಾಳ, ಅಶ್ರಫ್ ಕಲಾಯಿ, ನೌಷಾದ್ ಖಾಸಿಂಜಿ, ಝುಬೈರ್ ಕೊಡಗು ಸೇರಿದಂತೆ ನೂರಾರು  ಕಾರ್ಯಕರ್ತರು ಶತ್ರುಗಳಿಂದ ಕೊಲೆಯಾಗಿ ಹೋಗಿದ್ದಾರೆ ಅಲ್ಲವೇ ಎಂದು ಕೇಳಿದೆ.*
ಆತ: *ಹೌದು ಹೌದು, ಅವರು ದೀನ್ ಗಾಗಿ ಶಹೀದ್ ಆಗಿದ್ದಾರೆ ಎಂದು  ಅಭಿಮಾನದಿಂದ ಹೇಳಿಕೊಂಡ.*

ಅದಕ್ಕೆ ನಾನೆಂದೆ: *ನೀವು ಪ್ರತಿರೋಧ ಅಪರಾಧ ಅಲ್ಲ ಎಂದು ಹೇಳಿ ಸಮುದಾಯವನ್ನು ಪ್ರಚೋದಿಸಿ ಮುಗ್ಧರ ಬಾಳನ್ನು ಹಾಲು ಮಾಡುವುದಕ್ಕಿಂತ ಮುಂಚೆ, ಸ್ವತಃ ನೀವು ಮೊದಲು ಪ್ರತಿರೋಧ ಮಾಡಲು ಕಳಿತು ಬನ್ನಿ. ನೋಡು ಇವಿಷ್ಟು ನಿಮ್ಮ ಕಾರ್ಯಕರ್ತರು ಶತ್ರುಗಳಿಂದ ಕೊಲೆಯಾಗಿ ಹೋದವರಾಗಿದ್ದಾರೆ. ಪ್ರತಿರೋಧ ಅಪರಾಧ ಅಲ್ಲವೆಂದು ಇವರಿಗೂ ಗೊತ್ತಿತ್ತು ತಾನೇ. ಮತ್ಯಾಕೆ ಇವರ ಮೇಲೆ ದಾಳಿ ಆಗುವಾಗ ಇವರು ಪ್ರತಿರೋಧಿಸದ್ದು.‌  ಪ್ರತಿರೋಧಿಸುವ ತಾಕತ್ತು ನಿಮ್ಮಲ್ಲಿದ್ದಿದ್ದರೆ, ಇಂದು ಇವರು ಕೂಡಾ ಬದುಕಿರುತ್ತಿದ್ದರು ಅಲ್ವ.  ನಿಮಗೇ ಸ್ವತಃ ಪ್ರತಿರೋಧಿಸುವ ತಾಕತ್ತು ಇಲ್ಲ, ಮತ್ತೆ ನಿಮ್ಮ ಸಲಹೆ ಸಮುದಾಯಕ್ಕೆ ಅಗತ್ಯವಿದೆಯಾ ಹೇಳು.* 

*ಹೋಗು ಮನೆಗೆ, ಸುಮ್ಮನೆ ಏನೆಲ್ಲಾ ಹೇಳಿ ಮುಗ್ಧ ಸಮುದಾಯವನ್ನು ದಾರಿ ತಪ್ಪಿಸಬೇಡ. ಪ್ರತಿರೋಧ ಅಪರಾಧವಲ್ಲ ಎಂದು ಇಲ್ಲಿ ಎಲ್ಲರಿಗೂ ಗೊತ್ತಿದೆ.  ಹಾಗಂತ ಕಾಲ್ಕೆರೆದು ಗಲಾಟೆ ಮಾಡಲು ಸಂವಿಧಾನವಾಗಲಿ ಧರ್ಮವಾಗಲಿ ಹೇಳಿಕೊಟ್ಟಿಲ್ಲ. ಎಂದು ಸ್ವಲ್ಪ ಖಾರವಾಗಿ ಹೇಳಿದೆ.*
ಏನೂ ಉತ್ತರ ಇಲ್ಲದ ಆತ, ತಲೆ ಕೆಳಗಾಕಿಕೊಂಡು  ಸೀದಾ ಮನೆಕಡೆಗೆ ನಡೆದ.‌

*ಪೀಪಿಗಳ ಭೃಮೆಯಿಂದ ಹೊರ ಬಂದವ.*
*ಬ್ಲಡ್ ಸೈಬೋ: ಬನ್ನಿ ಭಾಗವಹಿಸಿ, ಯಶಸ್ವಿಗೊಳಿಸಿ.*
💧💧💧💧💧💧💧

✍ _ಗಫೂರ್ ಬಾಯಾರ್_
**********************
ಹದಿಹರೆಯದಲ್ಲಿ  ಮುಸ್ಲಿಂ ಯುವ ಸಮೂಹ ದಾರಿ ತಪ್ಪದೆ ಸುನ್ನತ್ ಜಮಾಅತಿನ ತತ್ವ ಮತ್ತು ಆದರ್ಶಗಳನ್ನು ಪಾಲಿಸುತ್ತಾ ದೀನೀ ಚೌಕಟ್ಟಿನಲ್ಲಿ ಬದುಕು ಸಾಗಿಸಲು ಪ್ರೇೂತ್ಸಾಹ ನೀಡುವ ಹೆಮ್ಮೆಯ ಸಂಘಟನೆಯಾಗಿದೆ ಎಸ್ಸೆಸ್ಸೆಫ್.

ಸುಲ್ತಾನುಲ್ ಉಲಮಾ ಕಾಂತಾಪುರಂ  ಎ.ಪಿ. ಉಸ್ತಾದ್ ಎಂಬ ಮಹಾನ್ ಸೂಫಿವರ್ಯರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ  ಎಸ್ಸೆಸ್ಸೆಫ್ ಭಾರತದಾದ್ಯಂತ ಮನೆಮಾತಾಗಿರುವುದಷ್ಟೇ ಅಲ್ಲದೆ ವಿಶ್ವದ ಹಲವು ದೇಶಗಳಲ್ಲೂ ದೀನೀ ಸೇವೆಯಲ್ಲಿ ತೊಡಗಿರುವುದು ಹೆಮ್ಮೆಯ ಸಂಗತಿ.

ತನ್ನ ಸೇವೆಯನ್ನು ಧಾರ್ಮಿಕ ರಂಗಕ್ಕಷ್ಟೇ ಸೀಮಿತವಾಗಿಸದ ಎಸ್ಸೆಸ್ಸೆಫ್,  ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲೂ ತನ್ನ ಛಾಪು ಮೂಡಿಸಿರುವುದಷ್ಟೇ ಅಲ್ಲದೆ ಭಾರತದ ಬಹುತೇಕ ಕಡೆ ಮಸೀದಿ, ಆಸ್ಪತ್ರೆ, ಶಾಲೆ, ಕಾಲೇಜು, ಯತೀಂಖಾನ ಮುಂತಾದ ಸ್ಥಳಗಳಲ್ಲಿ ಸಮಾಜ ಸೇವೆ ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದು ನಿಜಕ್ಕೂ ಶ್ಲಾಘನೀಯ.

ಜೀವಕಾರುಣ್ಯ ಸೇವೆಯಲ್ಲಿ ಯಾವತ್ತೂ ಮುಂಚೂಣಿಯಲ್ಲಿರುವ ಎಸ್.ಎಸ್.ಎಫ್ ಸಂಘಟನೆ,  ಅಪಘಾತ, ಶಸ್ತ್ರಚಿಕಿತ್ಸೆ ಮುಂತಾದ ಸಂದರ್ಭಗಳಲ್ಲಿ ಮನುಷ್ಯನ ಜೀವ ಉಳಿಸಲು ರಕ್ತದ ಅಗತ್ಯತೆಯನ್ನು ಮನಗಂಡು 2017 ರಲ್ಲಿ ರಕ್ತದಾನ ಶಿಬಿರವನ್ನು ಆರಂಭಿಸಿ ರಕ್ತದಾನಿಗಳಿಂದ ರಕ್ತ ಸಂಗ್ರಹಿಸುವ ಯೇೂಜನೆಯ್ನೂ ಆರಂಭಿಸಿತು.

2017 ರ ಜುಲೈ 14 ರಂದು ಅಧಿಕೃತವಾದ ಆರಂಭವಾದ ಎಸ್ಸೆಸ್ಸೆಫ್  ರಕ್ತದಾನ ಶಿಬಿರವು ಕೇವಲ ಎರಡು ವರ್ಷಗಳಲ್ಲಿ 7013 ಯುನಿಟ್ ರಕ್ತ ಸಂಗ್ರಹಿಸಿ ತುರ್ತು ಸಮಯದಲ್ಲಿ ರಕ್ತದ ಅಗತ್ಯತೆಯಿದ್ದ ರೇೂಗಿಗಳಿಗೆ ನೀಡಿ ಜೀವ ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ.

ಒಂದೇ ದಿನದಲ್ಲಿ ಆರು ಕಡೆ ರಕ್ತದಾನ ಶಿಬಿರ ಆಯೇೂಜಿಸಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಎಸ್ಸೆಸ್ಸೆಫ್,  ಕೇವಲ ಒಂದೇ ಶಿಬಿರದಲ್ಲಿ 150ಕ್ಕೂ ಹೆಚ್ಚು ಯೂನಿಟ್ ರಕ್ತವನ್ನು ಸಂಗ್ರಹಿಸಿದೆ. ಮಾತ್ರವಲ್ಲ ಒಂದೇ ತಿಂಗಳಿನಲ್ಲಿ 18 ರಕ್ತದಾನ ಶಿಬಿರಗಳನ್ನು ಆಯೋಜಿಸಿ 1078 ದಾನಿಗಳಿಂದ ರಕ್ತ ಸಂಗ್ರಹಿಸಿ ಅಪರೂಪದ ದಾಖಲೆ ನಿರ್ಮಿಸಿದೆ.

*ಈ ತನಕ ಅಂದರೆ ಎರಡು ವರ್ಷಗಳಲ್ಲಿ 99 ರಕ್ತದಾನ ಶಿಬಿರಗಳನ್ನು ಆಯೋಜಿಸಿರುವ ದ.ಕ ಜಿಲ್ಲಾ ಎಸ್ಎಸ್ಎಫ್,  ತನ್ನ ನೂರನೇ ರಕ್ತದಾನ ಶಿಬಿರವನ್ನು (ಮಂಗಳೂರಿನ 5 ಪ್ರತಿಷ್ಠಿತ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ "ಬ್ಲಡ್ ಸೈಬೋ" ಎಂಬ ಹೆಸರಿನಲ್ಲಿ) ಮಂಗಳೂರಿನಲ್ಲಿ ನಾಳೆ (ಆಗಸ್ಟ್ 18) ಹಮ್ಮಿಕೊಂಡಿದೆ.*

ಜಾತಿಮತ ಭೇದವಿಲ್ಲದೆ ಮನುಷ್ಯನ ಅತ್ಯಮೂಲ್ಯವಾದ ಜೀವ ಉಳಿಸಲು ಎಸ್.ಎಸ್.ಎಫ್ ಆಯೋಜಿಸಿರುವ ಈ ರಕ್ತದಾನ ಶಿಬಿರದಲ್ಲಿ ನಾವೆಲ್ಲರೂ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಎಸ್ಸೆಸ್ಸೆಫ್‌ನ ನೂರನೇ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸೋಣ.
ಇನ್ ಷಾ ಅಲ್ಲಾಹ್                   
💐💐💐💐💐💐💐
*ರೋಗಿಗಳ ಪಾಲಿನ ಆಶಾ ಕಿರಣ: SSF ದ.ಕ ಜಿಲ್ಲಾ ಬ್ಲಡ್ ಸೈಬೊ..!*

ದಿನದಿಂದ ದಿನಕ್ಕೆ ರಕ್ತದ ಅವಶ್ಯಕತೆ ಹೆಚ್ಚುತ್ತಿದ್ದು, ಇಂತಹ  ಪರಿಸ್ಥಿತಿಯನ್ನು ಮನಗಂಡು,  ಸಕಾಲದಲ್ಲಿ ರಕ್ತದ ಅವಶ್ಯಕತೆಯನ್ನು ಪೂರೈಸುವ ಸಲುವಾಗಿ *ದ.ಕ ಜಿಲ್ಲಾ SSF* ಹುಟ್ಟು ಹಾಕಿದ ವಿಂಗ್ ಆಗಿದೆ *ಬ್ಲಡ್ ಸೈಬೋ*.  ಇಂದು ಅದು ಮಹತ್ತರವಾದ ಮೈಲುಗಳ್ಳೊಂದನ್ನು ದಾಟುತ್ತಿದೆ.  ನಾಳೆ (18/8/19) ಮಂಗಳೂರಿನ ಪುರಭವನದಲ್ಲಿ ಜಿಲ್ಲೆಯ ಪ್ರತಿಷ್ಟಿತ 5 ಆಸ್ಪತ್ರೆಗಳ ಸಹಭಾಗಿತ್ವದಲ್ಲಿ *ದ.ಕ ಬ್ಲಡ್ ಸೈಬೋ* ದ ನೂರನೇ ಕ್ಯಾಂಪ್  *ಬೃಹತ್‌ ರಕ್ತದಾನ ಶಿಬಿರ* ನಡೆಯಲಿದ್ದು, ಇದು ದ.ಕ ಜಿಲ್ಲೆಯ ಮಟ್ಟಿಗೆ ಒಂದು ಮಹತ್ಸಾಧನೆಯೂ ಹೌದು.

 *ಬ್ಲಡ್ ಸೈಬೋ* ವನ್ನು ಅಧಿಕೃತವಾಗಿ ಹುಟ್ಟುಹಾಕಿದ ನಂತರ ಈ ಎರಡು ವರ್ಷಗಳ ಅವಧಿಯಲ್ಲಿ,  ಜಿಲ್ಲಾ ಮಟ್ಟದಲ್ಲಿ 100 ರಷ್ಟು ಬ್ಲಡ್ ಕ್ಯಾಂಪ್ ನಡೆಸಲಾಗಿದ್ದು, ಆ ಮೂಲಕ ಇದುವರೆಗೂ *7 ಸಾವಿರ* ಕ್ಕೂ ಮಿಕ್ಕ ರಕ್ತದಾನ ಮಾಡಲಾಗಿದೆ.
ಮೊದಮೊದಲು ಡಿವಿಶನ್ ಮಟ್ಟದಲ್ಲಿ ಪ್ರಾರಂಭವಾದ *ಬ್ಲಡ್ ಕ್ಯಾಂಪ್*,  ನಂತರ ಸೆಕ್ಟರ್ ಶಾಖಾ ಮಟ್ಟದಲ್ಲೂ ಪ್ರತೀ ಮೂರ್ನಾಲ್ಕು ತಿಂಗಳಿಗೊಮ್ಮೆ ನಡೆಸುತ್ತಾ ಬರುತ್ತಿದೆ.

ರಕ್ತದ ಅವಶ್ಯಕತೆಯ ವಿಷಯಕ್ಕೆ ಬಂದಾಗ, ಎಲ್ಲರ ಬಾಯಲ್ಲೂ ಮನೆಮಾತಾಗಿರುವ ಹೆಸರೇ *SSF ದ.ಕ ಬ್ಲಡ್ ಸೈಬೋ*. ಇಂತಹ ಒಂದು ಸಾಧನೆಯ *ಮಾಷ್ಟರ್ ಮೈಂಡ್*  ಆಗಿ ಕಾರ್ಯ ನಿರ್ವಹಿಸಿದವರು, ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕರಾಗಿದ್ದ,  ಕಳೆದ ವರ್ಷ *SSF ದ.ಕ ಜಿಲ್ಲಾದ್ಯಕ್ಷರಾಗಿದ್ದ ಸಿರಾಜುದ್ದೀನ್ ಸಖಾಫಿ, ಕನ್ಯಾನ* ರವರು.   ಅಂದಿನಿಂದ ಇಂದಿನವರೆಗೂ *ಬ್ಲಡ್ ಸೈಬೋ* ದ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಿದವರು *ಕರೀಂ ಕದ್ಕಾರ್* ರವರಾಗಿದ್ದಾರೆ. ಇವರಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಾ ಬರುತ್ತಿರುವ ಹಾಲಿ *ದ.ಕ ಜಿಲ್ಲಾ ಸಮಿತಿ*  ಎಲ್ಲಾ ರೀತಿಯಲ್ಲೂ ಅಭಿನಂದನೆಗೆ ಅರ್ಹವಾಗಿದೆ.  ದ.ಕ ಜಿಲ್ಲಾ ಸಮಿತಿಗೆ,  ಡಿವಿಶನ್ ಸೆಕ್ಟರ್ ಮತ್ತು ಶಾಖೆಗಳೂ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಿದುದರ ಫಲವೇ,  ಇಂದು ಬೃಹತ್ ಹೆಮ್ಮರವಾಗಿ ಬೆಳೆದು ನಿಂತಿರುವ ನಮ್ಮ ನಿಮ್ಮೆಲ್ಲರ ಹೆಮ್ಮೆಯ *ದ.ಕ ಬ್ಲಡ್ ಸೈಬೋ*.

ಇದರ ಯಶಸ್ವಿ ಕಂಡು ನಾವು ಕೇವಲ ಕಣ್ತುಂಬಿಕೊಂಡರಷ್ಟೇ ಸಾಲದು. ಇದು ಇನ್ನಷ್ಟು ಬೆಳೆಯಲು, ಈ ಸಾಧನೆ ಮುಂದುವರೆಸಿಕೊಂಡು ಹೋಗಲು ನಮ್ಮಿಂದಾಗುವ ಗರಿಷ್ಠ ಮಟ್ಟದ ಸಹಕಾರವನ್ನು ಕೂಡಾ ನೀಡಬೇಕು.‌ ರಕ್ತದಾನ ಶಿಬಿರದಲ್ಲಿ ಎಷ್ಟು ಬಾಟಲ್ ರಕ್ತ ಶೇಕರಣೆಯಾಗುತ್ತಿದೆಯೋ, ಅದರ ದುಪ್ಪಟ್ಟು ರಕ್ತದ ಬೇಡಿಕೆಯಿದೆ. ಇದನ್ನೆಲ್ಲಾ ಪೂರೈಸಬೇಕಾದರೆ, ನಮ್ಮೆಲ್ಲರ ತುಂಬು ಸಹಕಾರ ಅತ್ಯಗತ್ಯ.
ಪ್ರತೀ ಮೂರ್ನಾಲ್ಕು ತಿಂಗಳಿಗೊಮ್ಮೆ ನಾವು ರಕ್ತದಾನ ಮಾಡುವುದರೊಂದಿಗೆ, ಇತರರಿಗೂ ರಕ್ತದಾನ ಮಾಡಲು ಪ್ರೇರೇಪಿಸಬೇಕು.  ಮತ್ತು ನಮ್ಮ ನಮ್ಮ ಸೆಕ್ಟರ್, ಶಾಖಾ ಮಟ್ಟದಲ್ಲೂ ಬ್ಲಡ್ ಕ್ಯಾಂಪ್ ಆಯೋಜಿಸಲು ಎಲ್ಲಾ ರೀತಿಯ  ಸಹಾಯ-ಸಹಕಾರವನ್ನಿತ್ತು ಸಹಕರಿಸಬೇಕು.‌ 
*ಪ್ರತೀ ಸಮಯದಲ್ಲೂ ರೋಗಿಗಳಿಗೆ ಅವಶ್ಯಕವಾದ ರಕ್ತದಾನ ಮಾಡಲು ನಮ್ಮಿಂದ ಸಾದ್ಯವಿಲ್ಲ. ಆದರೆ, ಅಂತಹ ಒಂದು ಮಹತ್ಸಾಧನೆಯನ್ನು ಎರಡು ವರ್ಷದಿಂದ ನಿರಂತರವಾಗಿ ಮಾಡುತ್ತಾ ಬರುತ್ತಿರುವ ನಮ್ಮ ನಾಯಕತ್ವದ ಕೈ ಬಲಪಡಿಸುವ ಕೆಲಸವಂತೂ ಖಂಡಿತಾ ನಾವು ಮಾಡಲೇಬೇಕು. ಇಂದಿನಿಂದಲೇ ಆ ಬಗ್ಗೆ ಪ್ರತಿಜ್ಞಾಬದ್ದರಾಗೋಣ.‌*
ಅಲ್ಲಾಹು ಅನುಗ್ರಹಿಸಲಿ, ಆಮೀನ್.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
*ಐಕ್ಯತೆಯನ್ನು 2 ವಿಭಾಗಗಳಾಗಿ  ವಿಂಗಡಿಸಬಹುದಾಗಿದೆ.*

*1) ಧಾರ್ಮಿಕ ಐಕ್ಯತೆ*,
*2) ಸಾಮಾಜಿಕ ಐಕ್ಯತೆ.*

*ಧಾರ್ಮಿಕ ಐಕ್ಯತೆ =* ಧರ್ಮದ ಎಲ್ಲಾ ವಿಷಯದಲ್ಲೂ ಐಕ್ಯರಾಗುವುದು.
*ಸಾಮಾಜಿಕ ಐಕ್ಯತೆ =* ಸಾಮಾಜಿಕವಾದ ಎಲ್ಲಾ ವಿಷಯದಲ್ಲೂ ಐಕ್ಯರಾಗುವುದು.

*ಮುಸ್ಲಿಂ ಸಮುದಾಯದ ಐಕ್ಯತೆ ಅನಿವಾರ್ಯವೇ ಆಗಿದ್ದರೆ,  ಈ ಎರಡು ವಿಭಾಗದಲ್ಲೂ  ಐಕ್ಯತೆ ಮಾಡಬೇಕಾಗುತ್ತದೆ.*
  ಒಂದು ವಿಷಯದಲ್ಲಿ ಮಾತ್ರ ಐಕ್ಯತೆ ಮಾಡಿ,  ಮತ್ತೊಂದರಲ್ಲಿ ಐಕ್ಯತೆ ಮಾಡದೆ ಬಿಟ್ಟು ಬಿಡುವುದರಿಂದ ಐಕ್ಯತೆ ಎಂಬ ಪದಕ್ಕೆ ಅರ್ಥವಿರುವುದಿಲ್ಲ. ಅಂತಹ ಐಕ್ಯತೆ ಯೂ ಅರ್ಥ ಶೂನ್ಯ.
ಒಂದುವೇಳೆ,  ಒಂದನ್ನು ಬಿಟ್ಟು ಒಂದರಲ್ಲಿ ಮಾತ್ರ ಐಕ್ಯತೆ ಮಾಡುವುದಾದರೆ,  ಅದು ಸಾಮಾಜಿಕ ರಂಗವನ್ನು ಬಿಟ್ಟು,  ಧಾರ್ಮಿಕ ರಂಗದಲ್ಲಿ ಮಾತ್ರ ಮಾಡಬೇಕು. 
ಧಾರ್ಮಿಕ ರಂಗವನ್ನು ಬಿಟ್ಟು ಸಾಮಾಜಿಕ ರಂಗದಲ್ಲಿ ಮಾತ್ರ ಮಾಡುವ ಐಕ್ಯತೆಗೆ ಅಲ್ಲಾಹನ ಬಳಿ ಯಾವುದೇ ಮಾನ್ಯತೆ ಇರುವುದಿಲ್ಲ. 

*ಉದಾಹರಣೆಗೆ: ವಿಶ್ವಾಸ ಮತ್ತು ಆರಾಧನೆ.*
ಈ ಎರಡೂ ಇದ್ದಾಗ ಮಾತ್ರ ಮನುಷ್ಯನ ಆರಾಧನೆಯನ್ನು ಅಲ್ಲಾಹು ಸ್ವೀಕರಿಸುವುದು. 
ವಿಶ್ವಾಸ ಹೇಗಿದ್ದರೂ  ಆರಾಧನೆಯನ್ನು  ಮಾತ್ರ ಕೈಬಿಡಬಾರದು ಎನ್ನುವವರ ಆರಾಧನೆಗೆ ಅಲ್ಲಾಹನ ಬಳಿ ಯಾವುದೇ ಮಾನ್ಯತೆ ಇರುವುದಿಲ್ಲ.
ಒಂದುವೇಳೆ,  ಒಂದನ್ನು ಮಾತ್ರ ಅನುಸರಿಸುವುದಾದರೆ, (ಕಡ್ಡಾಯವಲ್ಲದ ಆರಾಧನೆಯನ್ನು ತ್ಯಜಿಸಿದರೂ),  ವಿಶ್ವಾಸಕ್ಕೆ ನಾವು ಹೆಚ್ಚು ಪ್ರಾಮುಖ್ಯತೆ ಕೊಡಬೇಕು.

*ವಿಶ್ವಾಸ ದೃಢವಾಗಿದ್ದಾಗ ಮಾತ್ರ ಆರಾಧನೆಗೆ ಮಾನ್ಯತೆ ಇರುವಂತೆ,*
*ಧಾರ್ಮಿಕ ರಂಗದಲ್ಲಿ ಐಕ್ಯತೆ ಇದ್ದಾಗ ಮಾತ್ರ, ಸಾಮಾಜಿಕ ರಂಗದ ಐಕ್ಯತೆಗೆ ಮಹತ್ವವಿರುವುದು.*

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
*ನೂತನವಾದಿಗಳೊಂದಿಗಿನ ಐಕ್ಯತೆ ವಿಷಯದಲ್ಲಿ ಎಪಿ ಉಸ್ತಾದರ ನಿಲುವು,  ಅಂದೂ ಇಂದೂ ಎಂದೂ ಒಂದೇ ಆಗಿದೆ.!*

ಕಾಶ್ಮೀರದ ಬಗ್ಗೆಗಿನ ಎಪಿ ಉಸ್ತಾದರ ಹೇಳಿಕೆಯನ್ನು  ಅಪಾರ್ಥ ಕಲ್ಪಿಸಿ,  ಕಾಶ್ಮೀರ ವಿಷಯದಲ್ಲಿ ಸುನ್ನೀ ಸಲಪಿ ಜಮಾಹತ್ ಎಲ್ಲಾ ಒಂದಾಗಿ ಹೋರಾಡಬೇಕು ಎಂದು ಎಪಿ ಉಸ್ತಾದ್ ಕರೆಕೊಟ್ಟರೆಂಬಂತೆ ಕೆಲವರು ಪ್ರಚಾರ ಮಾಡುತ್ತಿದ್ದಾರೆ.‌

ಎಪಿ ಉಸ್ತಾದ್ ಹೇಳಿದ್ದೇನೆಂದರೆ: ಕಾಶ್ಮೀರದಲ್ಲಿ  ನಡೆಯುತ್ತಿರುವ ಹಿಂಸೆಯನ್ನು ಕೊನೆಗಾಣಿಸಬೇಕು ಎಂಬ ವಿಷಯದಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಂಬ ಧರ್ಮದ ವ್ಯತ್ಯಾಸವಿಲ್ಲದೆ,  ಸುನ್ನೀ, ಮುಜಾಹಿದ್, ತಬ್ಲೀಗ್ ಎಂಬ ಪಂಗಡಗಳ ವ್ಯತ್ಯಾಸವಿಲ್ಲದೆ, ಬಿಜೆಪಿ,  ಕಾಂಗ್ರೆಸ್, ಜೆಡಿಎಸ್  ಎಂಬ ರಾಜಕೀಯ ವ್ಯತ್ಯಾಸವಿಲ್ಲದೆ ಎಲ್ಲರೂ ಒಂದೇ ಶಬ್ದದಲ್ಲಿ ಮನವಿಮಾಡುತ್ತಿದ್ದಾರೆ ಎಂದಾಗಿದೆ ಎಪಿ ಉಸ್ತಾದ್ ಹೇಳಿದ್ದು.
ಕಾಶ್ಮೀರದ ವಿಷಯದಲ್ಲಿ ಎಲ್ಲರ ಅಭಿಪ್ರಾಯವೂ ಒಂದೇ ಆಗಿದೆ. ಅದಲ್ಲದೇ, ಸಲಪಿ ಜಮಾಹತ್ ನವರ ಅಭಿಪ್ರಾಯ ವ್ಯತಿರಿಕ್ತವಾಗಿದೆ ಎಂಬ ವಾದ ಸುನ್ನಿಗಳ್ಯಾರಿಗೂ ಇಲ್ಲ. ಎಪಿ ಉಸ್ತಾದರ ಭಾಷಣದ ತಾತ್ಪರ್ಯ ಕೂಡಾ ಅದೇ ಆಗಿದೆ. 

ಕೆಲವರ ವಾದದಂತೆ,  ಎಪಿ ಉಸ್ತಾದರ ಭಾಷಣವನ್ನು ಸುನ್ನೀ ಸಲಪಿ ಜಮಾಹತ್ ಐಕ್ಯತೆಗೆ ಕರೆಕೊಟ್ಟರೆಂಬಂತೆ ವ್ಯಾಖ್ಯಾನಿಸುವುದಾದರೆ, ಎಪಿ ಉಸ್ತಾದ್ ತನ್ನ ಭಾಷಣದಲ್ಲಿ  ಸಲಪಿ ತಬ್ಲೀಗ್ ನವರನ್ನು ಹೆಸರಿಸಿದಂತೆ, ಹಿಂದೂ ಕ್ರಿಶ್ಚಿಯನ್ ನವರನ್ನೂ, ಅದೇ ರೀತಿ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ನವರನ್ನೂ ಹೆಸರಿಸಿದ್ದಾರೆ. ಎಪಿ ಉಸ್ತಾದರ ಭಾಷಣವನ್ನು ಅಪಾರ್ಥ ಕಲ್ಪಿಸಿ ಪ್ರಚಾರ ಮಾಡುತ್ತಿರುವವರು,  ಈ ಅಂಶವನ್ನು  ತಮ್ಮ ಪ್ರಚಾರದಿಂದ ಕೈ  ಬಿಟ್ಟಿದ್ದಾರೆಂದರೆ, ಎಪಿ ಉಸ್ತಾದರ ಭಾಷಣಕ್ಕೂ, ಕೆಲವರು ಮಾಡುತ್ತಿರುವ  ಅಪಪ್ರಚಾರಕ್ಕೂ ಯಾವುದೇ ಬಂಧ ಇಲ್ಲವೆಂದು ಅರ್ಥೈಸಬಹುದು. 

ಸುನ್ನೀ ಸಲಪಿ ಜಮಾಹತ್ ಎಲ್ಲಾ ಒಂದಾಗಿ ಆಯೋಜಿಸುವ ಕಾರ್ಯಕ್ರಮ, ಪ್ರತಿಭಟನೆಯನ್ನು ಎಪಿ ಉಸ್ತಾದ್ ಅಂದೂ ವಿರೋಧಿಸಿದ್ದಾರೆ, ಇಂದೂ ಎಂದೂ ಅದನ್ನು ವಿರೋಧಿಸುತ್ತಾರೆ. ಕಾರಣ, ಅಂತಹ ಒಂದು ಐಕ್ಯತೆ ಅದು ಇಸ್ಲಾಮಿಕವಲ್ಲ. ಇಸ್ಲಾಮಿಕವಲ್ಲದ ಒಂದು ಕಾರ್ಯವನ್ನು ಎಪಿ ಉಸ್ತಾದ್ ಪ್ರೋತ್ಸಾಹಿಸುತ್ತಾರೆಂದು ಯಾರೂ ಹಗಲು ಕನಸು ಕಾಣಬೇಡಿ ಎಂದಷ್ಟೇ ನಮಗೆ ಹೇಳಲಿಕ್ಕಿರುವುದು.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
*SSF ಎಂಬ ಸಂಘಟನೆಯಿಂದ ಯಾರೆಲ್ಲಾ ಯಾಕ್ಯಾಕೆ ಹೊರ ಹೋಗಿದ್ದಾರೆ ಎಂಬುದಕ್ಕಿಂತಲೂ,  SSF ನಲ್ಲಿ ಯಾರೆಲ್ಲಾ ಇದ್ದಾರೆ, ಯಾಕಿದ್ದಾರೆ, SSF ಅನ್ನು ಯಾರೆಲ್ಲಾ ಅಂಗೀಕರಿಸುತ್ತಾರೆಂಬುದು ಮುಖ್ಯವಾಗಿದೆ.*

ಸೈಯ್ಯಿದ್ ಕುಟುಂಬಸ್ತರೂ, ಉನ್ನತ ವಿದ್ವಾಂಸರೂ ತನ್ನ ಹಯಾತ್ ಕಾಲದಲ್ಲೂ ಮರಣಾ ನಂತರವೂ ಹಲವಾರು ಕರಾಮತ್'ಗಳ ಒಡೆಯ ತಾಜುಲ್ ಉಲಮಾ (ಖ:ಸಿ),  ವಿನಯದ ಪ್ರತೀಕವಾಗಿದ್ದ, ತನ್ನ ಜೀವಿತ ಕಾಲದಲ್ಲಿ ಯಾರ ಬಗ್ಗೆಯೂ  ವಿಮರ್ಶಿಸದ ಉಲಮಾ ಪ್ರಕಾಶ ಎಂ.ಎ ಉಸ್ತಾದ್ (ಖ:ಸಿ), ಎಸ್ಸೆಸ್ಸೆಫ್ ಕಾರ್ಯಕರ್ತರಿಗೆ ಆಶಿರ್ವದಿಸುತ್ತಾ ಹುರಿದುಂಬಿಸುತ್ತಿದ್ದ ವಲಿಯ್ಯುಲ್ಲಾಹಿ ಸಿ.ಎಂ. ಮಡವೂರ್ (ಖ:ಸಿ). ಅವೇಲತ್ತ್ ಸಾದತ್ತುಗಳು (ಖ:ಸಿ) ವಲಿಯ್ಯುಲ್ಲಾಹಿ  ವಡಗರ ಮುಹಮ್ಮದ್ ಹಾಜಿ ತಂಙಳ್ (ಖ:ಸಿ) , ವಲಿಯುಲ್ಲಾಹಿ ಕುಂಡೂರ್ ಉಸ್ತಾದ್ (ಖ:ಸಿ), ಪೊಸೋಟ್ ತಂಙಳ್ (ಖ:ಸಿ), ಈ.ಕೆ. ಹಸ್ಸನ್ ಮುಸ್ಲಿಯಾರ್ (ಖ:ಸಿ) ಕೂರಾ ತಂಙಳ್, ಬಾಯಾರ್ ತಂಗಳ್  ಜಗತ್ತಲ್ಲೇ ಸರಿಸಾಟಿ ಇಲ್ಲದ ಉಲಮಾ ನಾಯಕ, ಅನಾಥ ನಿರ್ಗತಿಕರ ಪಾಲಕ,  ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ಅದೇ ರೀತಿ ಅನೇಕ ಉಲಮಾಗಳು, ಸಾವಿರಾರು  ಸೈಯ್ಯಿದ್-ಸಾದಾತುಗಳು, ವಲಿಯ್ಯ್'ಗಳು ನೇತೃತ್ವಕೊಡುವ ಪ್ರಮುಖ ಸಂಘಟನೆಯಾಗಿದೆ *SSF.*

ವಿಶ್ವ ಶ್ರೇಷ್ಠ ಉಲಮಾ ನಾಯಕರುಗಳಾದ ಅಬ್ಬಾಸ್ ಅಲವೀ ಮಾಲಿಕಿ ಮಕ್ಕ (ಖ:ಸಿ), ಉಮರ್ ಅಲ್ ಕಾಮಿಲ್ (ಖ:ಸಿ), ಶೈಕ್ ಶದ್ದಾದ್ (ರ), ಶೈಕ್ ಸ್ವಬಾಹುರ್ರಿಫಾಹಿ,  ಸೈಯ್ಯದ್ ಜಿಫ್ರೀ ತಂಙಳ್ (ಖ:ಸಿ), ಸೇರಿದಂತೆ ವಿಶ್ವದ ಎಲ್ಲಾ ಪ್ರಮುಖ ಉಲಮಾ ಸಾದಾತುಗಳು ಎಪಿ ಉಸ್ತಾದ್ ಮತ್ತು ಎಪಿ ಉಸ್ತಾದ್ ನೇತೃತ್ವ ಕೊಡುವ *SSF* ನಂತಹ ಸಂಘಟನೆಯನ್ನೂ ಬೆಂಬಲಿಸುತ್ತಾರೆ.

ವರಕ್ಕಲ್ ಮುಲ್ಲಕೋಯ ತಂಙಳ್ (ರ) ಸ್ತಾಪಿತ ಸಮಸ್ತದ ಲಕ್ಷ್ಯದೊಂದಿಗೆ ಮುನ್ನಡೆಯುತ್ತಿರುವ, ಕನ್ನಿಯತ್ ಉಸ್ತಾದ್ (ಖ:ಸಿ), ಶಂಸುಲ್ ಉಲಮಾ (ಖ:ಸಿ), ತಾಜುಲ್ ಉಲಮಾ (ಖ:ಸಿ), ನೂರುಲ್ ಉಲಮಾ (ಖ:ಸಿ) ನೇತೃತ್ವ ಕೊಟ್ಟಂತಹ, ಈಗ ಸುಲೈಮಾನ್ ಉಸ್ತಾದ್ ಹಾಗೂ ಎಪಿ ಉಸ್ತಾದ್ ನೇತೃತ್ವ ಕೊಡುತ್ತಿರುವ ಸಮಸ್ತ ಕೇರಳ ಸುನ್ನಿ ಜಮ್ಹಿಯ್ಯತುಲ್ ಉಲಮಾ, ಭಾರತ ದೇಶದ ವಿವಿಧ ರಾಜ್ಯಗಳ ಸುನ್ನೀ ಉಲಮಾಗಳನ್ನೊಳಗೊಂಡ ಒಕ್ಕೂಟವಾದ ಅಖಿಲ ಭಾರತ ಸುನ್ನೀ ಜಮ್ಹಿಯ್ಯತುಲ್ ಉಲಮಾ ಹಾಗೂ ವಿಶ್ವ ಸುನ್ನಿ ಉಲಮಾ ಒಕ್ಕೂಟ ಕೂಡಾ *SSF*  ಅನ್ನು ಅಂಗೀಕರಿಸುತ್ತದೆ.

"ಎಸ್ಸೆಸ್ಸೆಫ್  ಕಾರ್ಯಕರ್ತರಿಗೆ ನಾಳೆ ಮಹ್ಷರಾದಲ್ಲಿ ಹರ್ಷ್ ನ ನೆರಳು ಇದೆ" ಎಂದು ವಲಿಯುಲ್ಲಾಹಿ ವಡಗರ ಮುಹಮ್ಮದ್ ಹಾಜಿ (ಖ:ಸಿ) ಯವರಿಂದ ಆಶೀರ್ವದಿಸಲ್ಪಟ್ಟ ಏಕೈಕ ಸಂಘಟನೆ ಅದು *SSF* ಮಾತ್ರ್ರವಾಗಿದೆ.

ಸುನ್ನೀ ಸಂಘಟನೆಯ ನಾಯಕರಾಗಿದ್ದ ಪಾನಕ್ಕಾಡ್ ಪೂಕೋಯ ತಂಙಳ್ (ಖ:ಸಿ) ವಫಾತ್ ಆದಾಗ ಸಂಘಟನೆಗೆ ಯೋಗ್ಯ ಅರ್ಹ ನಾಯಕನನ್ನು ಆಯ್ಕೆ ಮಾಡುವ ಸಲುವಾಗಿ ಅಂದಿನ ಉಲಮಾ ದಿಗ್ಗಜರುಗಳಾದ ವಲಿಯುಲ್ಲಾಹಿ ಚಾಪರಂಗಾಡಿ ಭಾಪು ಮುಸ್ಲಿಯಾರ್ (ಖ:ಸಿ), ಕನ್ನಿಯತ್ ಉಸ್ತಾದ್ (ಖ:ಸಿ), ಶಂಸುಲ್ ಉಲಮಾ ಇ ಕೆ ಉಸ್ತಾದ್ (ಖ:ಸಿ) ಮುಂತಾದ ಉಲಮಾ ನಾಯಕರುಗಳು ಸಭೆ ಸೇರಿದರು. ಓರ್ವ ಯೋಗ್ಯ ಅರ್ಹ ನಾಯಕನ ಆಯ್ಕೆಯ ಅಧಿಕಾರವನ್ನು , ಶಂಸುಲ್ ಉಲಮಾ (ಖ:ಸಿ), ಕನ್ನಿಯತ್ ಉಸ್ತಾದ್ (ಖ:ಸಿ) ಸಹಿತವಿರುವ ಎಲ್ಲಾ ಉಲಮಾಗಳು ಬಹುಮಾನ್ಯರಾದ ವಲಿಯುಲ್ಲಾಹಿ ಚಾಪರಂಗಾಡಿ ಭಾಪು ಮುಸ್ಲಿಯಾರ್ (ಖ:ಸಿ) ಗೆ ಕೊಟ್ಟಾಗ,  ಬಹುಮಾನ್ಯರಾದ ವಲಿಯ್ಯ್ ರವರು ಸೂಚಿಸಿದ ಆ ಮಹಾ ನಾಯಕನಾರು ಗೊತ್ತೇ? ಅಂದು ಕೇವಲ ಮೂವತ್ತರ ಹರೆಯದ ಶೈಖುನಾ ಶೈಖುಝ್ಝಮಾನ್ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್  ಆಗಿದ್ದರು. ಸುನ್ನೀ *ಸಂಘ ಶಕ್ತಿಗಳಿಗೆ ನಾಯಕನಾಗಲು ಅರ್ಹ ವ್ಯಕ್ಕಿ* ಎಂದು ವಲಿಯ್ಯವರ ಪವಿತ್ರ ನಾಲಗೆಯಿಂದ ಸೂಚಿಸಲ್ಪಟ್ಟ ಬಹುಮಾನ್ಯರಾದ ಎಪಿ ಉಸ್ತಾದ್ ಅಂದಿನಿಂದ ಇಂದಿನವರೆಗೂ ನೇತೃತ್ವ ಕೊಡುತ್ತಿರುವ ಯುವ ಸಂಘಟನೆಯಾಗಿದೆ *SSF*.

ಈಜಿಫ್ಟ್ ನ ಅಝ್ಹರಿಯಾ ಕಾಲೇಜು, ಮಲೇಶ್ಯದ ಶರಿಯತ್ ಕಾಲೇಜು,   ಯುಪಿಯ ಅಮ್ಜದಿ ಕಾಲೇಜು,  ಉತ್ತರ ಭಾರತದ ನಯೀಮಿ ಕಾಲೇಜು,  ರಝಾ ಕಾಲೇಜು, ವೆಲ್ಲೂರು ಬಾಖಿಯಾತ್ ಕಾಲೇಜು,  ಮರ್ಕಝ್, ಸಹದಿಯಾ, ಮದನಿ, ಝುಹ್ರಿ, ಅಹ್ಸನಿ ಸೇರಿದಂತೆ ದೇಶದ ಬಹುತೇಕ ಎಲ್ಲಾ ರಾಜ್ಯಗಳ ಹಾಗೂ ವಿದೇಶಗಳ ಎಲ್ಲಾ ಶರಿಯತ್ ಕಾಲೇಜುಗಳಲ್ಲಿ *SSF* ಗೆ  ಪ್ರವೇಶಾವಕಾಶವಿದೆ.

ದೇಶ-ವಿದೇಶಗಳ ಪ್ರಗಲ್ಭ ಉಲಮಾಗಳು, ಸೈಯ್ಯಿದ್-ಸಾದಾತುಗಳು, ವಲಿಯ್ಯ್ ಗಳ ನೇತೃತ್ವದಡಿ ಮುನ್ನಡೆಯುತ್ತಿರುವ *SSF* ಎಂಬ ಅತ್ಯದ್ಭುತ ಸಂಘಟನೆಯಲ್ಲಿ ಕಾರ್ಯಕರ್ತರಾಗುವ ಅವಕಾಶ ಸಿಕ್ಕಿರುವುದೇ ನಮ್ಮ ಸೌಭಾಗ್ಯ.. ಅಲ್ಲಾಹು ಅಂತ್ಯ ದಿನದವರೆಗೂ ನೆಲೆಗೊಳಿಸಲಿ.. ಆಮೀನ್.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

ಹೊಸ ಚಿಗುರು ಹಳೆ ಬೇರು

*ಹೊಸ ಚಿಗುರು ಹಳೆ ಬೇರು*

ಅಬೂಶಝ (ಅನುಭವ)

ಸುಮಾರು ಇಪ್ಪತ್ತು ಇಪ್ಪತ್ತೈದು ವರ್ಷದ ಮೊದಲು ಅದೊಂದು ದಿನ ಪಾಣೆಮಂಗಳೂರಿನ ಲಯನ್ಸ್ ಕ್ಲಬ್ ಹಾಲ್'ಗೆ ಸಂಪ್ಯ ಬಿ.ಕೆ ರಶೀದ್ ನನ್ನನ್ನು ಕರಕೊಂಡು ಹೋದ.ನೋಡುವಾಗ ಶ್ವೇತ ವಸ್ತ್ರದಾರಿಗಳಾದ ಜನರಿಂದ ಆ ಸಣ್ಣ ಹಾಲ್ ತುಂಬಿತ್ತು.ಅದರಲ್ಲಿ ಅಧಿಕವೂ ಮುತ‌ಅಲ್ಲಿಂಗಳಾಗಿದ್ದರು.10 ರೂಪಾಯಿ ಫೀಸ್ ಕೊಟ್ಟು ಹಾಲ್'ನ ಒಳಗೆ ಪ್ರವೇಶಿಸಿದೆ.ನೋಡಿದಾಗ ಅದು ಎಸ್ಸೆಸ್ಸೆಫ್ ನ ಪ್ರೋಗ್ರಾಂ ಎಂದು ತಿಳಿಯಿತು.ಅದು ನನ್ನ ಪ್ರಪ್ರಥಮ ಎಂಟ್ರಿಯಾಗಿತ್ತು.
ವೇದಿಕೆಯಲ್ಲಿ ಜಿಂ ಉಸ್ತಾದ್,ಎಸ್ಪಿ ಉಸ್ತಾದೆಲ್ಲರೂ ಇದ್ದರೆಂಬುದು ನನ್ನ ನೆನಪು.ಝೈನಿ ಉಸ್ತಾದರಂತು ಇದ್ದರು. ಕಾರಣ ಮಂಗಳೂರು ಭಾಗದ ಊರೊಂದರಲ್ಲಿ (ಹೆಸರು ಗೌಪ್ಯವಾಗಿಡುತ್ತೇನೆ) ಎಸ್ಸೆಸ್ಸೆಫ್ ನ ಕಾರ್ಯಕ್ರಮ ಇಟ್ಟುಕೊಂಡಾಗ ಅಲ್ಲಿ ಸೇರಿದ ಜನರಿಗೆ ವಿತರಿಸಲು ಫುಡ್ ತಯಾರಿ ಮಾಡುವಾಗ ಆ ಊರಿನ ಗಣ್ಯವ್ಯಕ್ತಿಗಳು ಬಂದು ಆಹಾರ ಬೇಯುತ್ತಿರುವ ಹಂಡೆಯನ್ನೆ ಎತ್ತಿ ಬಿಸಾಕಿ ಕೊನೆಗೆ ಹಂಡೆ ಸಹಿತ ಅಲ್ಲಿಂದ ಕಾಲ್ಕಿತ್ತು ಬಚಾವಾದ ಅನುಭವ ಝೈನಿ ಉಸ್ತಾದ್ ವಿವರಿಸಿ ಅಂತಹ ಸ್ಥಳಗಳಲ್ಲಿ ಯಾವ ರೀತಿ ಸಂಘಟನೆ ಬೆಳೆಸಬಹುದೆಂಬ ಚರ್ಚೆಗೆ ಕಿಡಿ ಹೊತ್ತಿಸಿದ್ದು ನೆನಪುಂಟು.
ನಂತರ ಪುತ್ತೂರಿನಲ್ಲಿ ಎಸ್ಸೆಸ್ಸೆಫ್ ಗಾಗಿ ದುಡಿಯುವವರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೆ.ಆ ಮದ್ಯೆ ಉಪ್ಪಿನಂಗಡಿ ಭಾಗದ ಒಳ ಊರೊಂದರಲ್ಲಿ ಎಸ್ಸೆಸ್ಸೆಫ್ ನ ತರಗತಿ ನಡೆಸಲು ಹೋದ ಕಾರ್ಯಕರ್ತರಿಗೆ ಹಲ್ಲೆ ನಡೆಸಲು ಕೆಲವರು ಕಾದುಕುಳಿತಿದ್ದಾರೆಂಬ ಮಾಹಿತಿ ಸಿಕ್ಕಿದಾಗ ತರಗತಿ ಮುಗಿದ ನಂತರವೂ ಅಲ್ಲೆ ತಂಗಿ, ಹಲ್ಲೆ ಮಾಡಲು ಕಾದುನಿಂತವರು ಇದೀಗ ಮಲಗಿರಬಹುದೆಂದು ಭಾವಿಸಿ ಬೆಳಗಿನ ಜಾವ 3 ಗಂಟೆಗೆ ಹೊರಟಾಗ ಹಲ್ಲೆಕೋರರು ಆ ನಡುರಾತ್ರಿ ಯಲ್ಲೂ ಕಾದುನಿಂತಿದ್ದರು!
ಅದರಲ್ಲಿದ್ದ ಒಬ್ಬ ಉಸ್ತಾದರ ಸಹಿತ ಎಲ್ಲರಿಗೂ ಅವರು ಹಲ್ಲೆ ಮಾಡಿ ತಮ್ಮ ಕ್ರೂರತೆ ಮೆರೆದಿದ್ದರು.
ಸಣ್ಣದ್ದಾಗಿ SSF ಸ್ಟಿಕ್ಕರ್ ಅಂಟಿಸಿದ್ದ ಕಾರ್ಯಕರ್ತರ ಒಮ್ನಿ ಕಾರನ್ನು ತಡೆದು ಅದೇ ಸ್ಟಿಕ್ಕರನ್ನು ಎಳೆದು ಕಾರಿನೊಳಗಿದ್ದ ಮುಸ್ಲಿಯಾರರೊಬ್ಬರ ಕಪಾಳಕ್ಕೆ ಅಂಟಿಸಿ ಜೊತೆಗೆ ನಾಲ್ಕು ಬಾರಿಸಿ ಒಮ್ನಿಯನ್ನು ವಾಪಸ್ ಪುತ್ತೂರು ಕಡೆ ಮರಳಿಸಿ ದಾದಗಿರಿ ತೋರಿಸಿದ್ದರು.
ಇಂತಹ ಹಲ್ಲೆಗಳು ನಿರಂತರವಾಗಿ ನಡೆಯುತ್ತಿದ್ದರೂ ಕಾರ್ಯಕರ್ತರು ತಮ್ಮ ಚಟುವಟಿಕೆಯನ್ನು ನಿಲ್ಲಿಸದೆ ಮತ್ತಷ್ಟು ಎನರ್ಜಿಯೊಂದಿಗೆ ಕಾರ್ಯಚರಣೆಗೆ ದುಮುಕುತ್ತಿದ್ದರು.ಪೆಟ್ಟುಬಿದ್ದು ಬಚಾವಾಗಿ ಬಂದು ಒಂದಡೆ ಸೇರಿ ಪರಸ್ಪರ ಮುಖನೋಡಿ ಬಿದ್ದು ಬಿದ್ದು ನಕ್ಕಿದ್ದು ಉಂಟು.
ಅಂದರೆ ವಿರೋದಿಗಳ ಬೈಗುಳ,ಪೆಟ್ಟು,ಹಲ್ಲೆ ಯಾವುದೂ ಕಾರ್ಯಕರ್ತರ ಹುಮ್ಮಸ್ಸನ್ನು ಕಡಿಮೆ ಮಾಡಿರಲಿಲ್ಲ.ಅದೆಲ್ಲವನ್ನು ಅವರು ತ್ಯಾಗವೆಂದೇ ಗಣಿಸಿ ಮತ್ತಷ್ಟು ಆವೇಶದಿಂದ ಕಾರ್ಯಚರಿಸುತ್ತಿದ್ದರು.
ಪೆಟ್ಟು ಬೀಳುತ್ತದೆಯೆಂದು ಖಾತರಿಯಾದ ಕಡೆ ತರಗತಿ ನಡೆಸಲು ಹೋಗುವಾಗ ಹಲ್ಲೆಯ ನೋವು ಹಗುರವಾಗಿಸಲು ದಪ್ಪದ ಎರಡೆರಡು ಶರ್ಟ್ ಪ್ಯಾಂಟ್ ಹಾಕಿ ಹೋದ ಕಾರ್ಯಕರ್ತರಿದ್ದರು.! ಆವಾಗ ಒಬ್ಬ ಕಾರ್ಯಕರ್ತ ನಗುತ್ತಾ ಎಲ್ಲಿ ಬೇಕಾದರೂ ಹೊಡದರೆ ಸಹಿಸಬಹುದು ಕಪಾಳಕ್ಕೆ ಬೀಳುವ ಹೊಡೆತ ತುಂಬಾ ನೋವು ತರುತ್ತದೆಯೆಂದು ಹೇಳಿದ ನೆನಪುಂಟು.
ವಿರೋದಿಗಳ ಪ್ರತಿಯೊಂದು ಹೊಡೆತ ಹಲ್ಲೆಗಳು ಕಾರ್ಯಕರ್ತರಲ್ಲಿ ಅಚಲವಾದ ಶಕ್ತಿಯನ್ನುಂಟು ಮಾಡುತ್ತಿದ್ದದ್ದು ಸಂಘಟನೆಯ ಬರಕತ್ ಆಗಿದೆಯೆಂಬ ವಿಶ್ವಾಸ ನನಗಿದೆ.
ಪುತ್ತೂರಿನ ರಾಜಬೀದಿಗಳಲ್ಲಿ ಎಸ್ಸೆಸ್ಸೆಫ್ ಪೋಸ್ಟರ್ ಅಂಟಿಸಲು ರಾತ್ರಿ ಮೂರುಗಂಟೆಯವರೆಗೆ ಕಾಯುತ್ತಿದ್ದರು.ಅಂಟಿಸುವಾಗ ಯಾವುದಾದರು ವಾಹನದ ಲೈಟ್ ಗೋಚರಿಸಿದರೆ ಕೂಡಲೇ  ಗೋಡೆ ಅಥವಾ ಎಲೆಕ್ಟ್ರಿಕ್ ಪೊಸ್ಟ್'ಗಳ ಹಿಂದೆ ಅಡಗಿ ವಾಹನ ಹೋದ ನಂತರ ಲಗುಬಗೆಯಿಂದ ಪೋಸ್ಟರ್ ಅಂಟಿಸುತ್ತಿದ್ದ ಕಾಲವೊಂದಿತ್ತು.
ಎಸ್ಸೆಸ್ಸೆಫ್ ಕರ್ನಾಟಕದ ಮಣ್ಣಲ್ಲಿ ಕಾಲೂರಿ ಹತ್ತು ವರ್ಷವಾದಾಗ ಅದರ ಭಾಗವಾಗಿ 1999 ಡಿಸೆಂಬರ್ 5 ರಂದು ಕುಂದಾಪುರದಲ್ಲಿ ದಶಮಾನೋತ್ಸವ ಸಮ್ಮೇಳನ ಚರಿತ್ರೆಯಲ್ಲಿ ಮರೆಯಲಸಾಧ್ಯ.
1999 ಜನುವರಿಯಿಂದ ಡಿಸೆಂಬರ್ ತನಕ ಒಂದು ವರ್ಷದ ಪ್ರಚಾರ ಸಂಧರ್ಭದಲ್ಲಿ ಕಾರ್ಯಕರ್ತರು ಅನುಭವಿಸಿದ ನೋವಿಗೆ ಲೆಕ್ಕವಿಲ್ಲ.
ಕಟ್ಟಿದ ಬ್ಯಾನರ್ ಮಾರನೆ ದಿನ ಮಂಗಮಾಯ!
Wallposter ಹರಿದು ಚಿಂದಿಮಾಡುತ್ತಿದ್ದರು!
ಗೋಡೆ ಬರಹಕ್ಕೆ ಕಪ್ಪು ವಾಯಿಲ್ ಹಾಕಿ ದಾದಗಿರಿ ಮೆರೆಯುತ್ತಿದ್ದರು!
ಸಮ್ಮೇಳನಕ್ಕೆ ಬುಕ್ ಮಾಡಿದ ಹಲವು ಬಸ್ಸುಗಳ ಮಾಲಕರಿಗೆ ಕರೆಮಾಡಿ ಧಮ್ಕಿ ಹಾಕುತ್ತಿದ್ದರು!
ಎಸ್ಸೆಸ್ಸೆಫ್ ನ ವತಿಯಿಂದ ನಡೆಸಿದ ರಬೀವುಲ್ ಅವ್ವಲ್ ಜಾಥಕ್ಕೂ ಕೂಡಾ ಅಡ್ಡಿ ತಂದಿದ್ದರು! ಕೊನೆಗೆ ಮೌನ ಜಾಥ ಹೋಗಬೇಕಾಗಿ ಬಂತು!
ಇಷ್ಟೆಲ್ಲಾ ಸಮಸ್ಯೆಗಳ ನಡುವೆ ದಶಮಾನೋತ್ಸವದ ದಿನ ಬಂದೇ ಬಿಟ್ಟಿತು.
ಅದೇ ನಾನು ಆಗ ಹೇಳಿದಂತೆ ಸಂಘಟನೆಯ ಬರಕತ್ ಎಂದೇ ಹೇಳಬೇಕು,ವಿರೋದಿಗಳು ಅವರಿಂದ ಸಾದ್ಯವಾಗುವಷ್ಟು ಬ್ರಹತ್ತಾದ ತಡೆ ತಂದು ಸಮ್ಮೇಳನದ ಪರಾಜಯಕ್ಕಾಗಿ ಪಣತೊಟ್ಟು ಕಾರ್ಯಚರಿಸಿದ ಹೊರತಾಗಿಯೂ,ಕುಂದಾಪುರದ ಸಮ್ಮೇಳನ ನಗರಿಗೆ ತಡೆರಹಿತವಾಗಿ ಜನಸಾಗರ  ಹರಿದು ಬಂತು!
ಆವಾಗ ಝೈನಿ ಉಸ್ತಾದ್ ಆವೇಶಭರಿತರಾಗಿ ಅಷ್ಟೇ ಗದ್ಗಗತರಾಗಿ ತನ್ನ ಸ್ವತಸಿಧ್ಧ ಶೈಲಿಯ ಕನ್ನಡ ಭಾಷೆಯಲ್ಲಿ ಮಾಡಿದ ಸ್ವಾಗತ ಭಾಷಣ ನೆರೆದಿರುವ ಕಾರ್ಯಕರ್ತರಲ್ಲಿ ಎಷ್ಟೊಂದು ಆವೇಶ ತಂದಿತ್ತೆಂದರೆ ಎಡೆಬಿಡದೆ ಗಂಟಾಘೋಷವಾಗಿ ತಕ್ಬೀರ್ ಮೊಳಗುವುದರೊಂದಿಗೆ ಕೆಲವೊಂದು ಕಾರ್ಯಕರ್ತರು ಕೂತಲ್ಲಿ ಕೂರಲಾಗದೆ ಅಷ್ಟೂ ಎತ್ತರಕ್ಕೆ ಜಿಗಿಯುತ್ತಿದ್ದರು!
ಸಮ್ಮೇಳನ ಮುಗಿದು ನನಗೆ ಕಾಂಞಂಗಾಡ್ ಪಳ್ಳಿಪ್ಪುಝ ದರ್ಸಿಗೆ ಹೋಗಬೇಕಿತ್ತು.ದರ್ಸ್ ಬದುಕಿಗೆ ವಿದಾಯ ಹೇಳಿ ಉತ್ತರ ಪ್ರದೇಶದ ದಯೂಬಂದ್
ಕಾಲೇಜಿಗೆ ಹೋಗಿ ಅಲ್ಲಿನ ಸೆಲೆಕ್ಷನ್ ಪಾಸಾಗಲು ಬೇಕಾಗಿ ಹಲವಾರು ಕಿತಾಬ್ ರೆಫರ್ ಮಾಡಬೇಕಾಗಿತ್ತು.ಆದರೆ ಡಿಸೆಂಬರ್ 6 ಆದುದರಿಂದ ತಲಪಾಡಿಯವರೆಗೆ ಬಸ್ಸು ಸಿಕ್ಕಿತು. ನಂತರ ಕಾಂಞಂಗಾಡ್ ತಲುಪಲು ಸಾದ್ಯವೇ ಇಲ್ಲವೆಂದು ಮನಗಂಡಾಗ ಕೊನೆಗೆ ಪೊಯ್ಯತಬೈಲ್ ಮಣವಾಟಿ ಬೀವಿ ದರ್ಗಾ ಇರುವ ಮಸೀದಿಗೆ ನಡೆದುಕೊಂಡೇ ಹೋಗಿ ಅಲ್ಲಿ ತಂಗಿದೆವು!
ಅದಾದ ನಂತರ ಸಂಘಟನೆ ಎಲ್ಲಾ ಕಡೆ ಸಕ್ರಿಯವಾಯಿತು.ತದನಂತರ ನಾಯಕರು,ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಸೀಮಿತವಾಗಿದ್ದ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಉತ್ತರಕರ್ನಾಟಕಕ್ಕೆ ವ್ಯಾಪಿಸಿದರು‌.ಇದೀಗ ಅಲ್ಲಿ ಸಂಘಟನೆ ಬಲಿಷ್ಠವಾಗಿದೆ. ಅದರ ಕಾರ್ಯಚರಣೆ,ಬದಲಾವಣೆ ಇತಿಹಾಸವಾಗಿದೆ ಇನ್ಶಾಅಲ್ಲಾ ಅದರ ಬಗ್ಗೆ ಸ್ವಲ್ಪ ಮಾಹಿತಿ ನಾಳೆ ಬರೆಯುತ್ತೇನೆ.

ಸೆಪ್ಟೆಂಬರ್19 ಎಸ್ಸೆಸ್ಸೆಫ್ ಧ್ವಜದಿನದ ಶುಭಾಶಯಗಳು
ಅಬೂಶಝ.