Tuesday, March 27, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 3⃣3⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

ಮತ್ತೊಂದು ಮೂಲದ ಪ್ರಕಾರ... ⬇

ಇಬ್ನು ಅಬ್ಬಾಸ್ (ರ) ನೇತೃತ್ವದ ಮುಸ್ಲಿಂ ಸೈನಿಕರು ಆ ಬಿಲ್ಲು ಬಾಣ ಮತ್ತು ಈಟಿಯ ದಾಳಿಗೀಡಾಗಿ ಒಬ್ಬೊಬ್ಬರೇ ನೆಲಕ್ಕುರುಳಲಾರಂಭಿಸಿದರು. ಒಬ್ಬ ಶತ್ರು ಸೈನಿಕ ಬಿಟ್ಟ ಬಾಣವು ಸಯ್ಯದುನಾ ಇಬ್ನು ಅಬ್ಬಾಸ್ (ರ)ರವರ ಕಣ್ಣಿನೊಳಹೊಕ್ಕಿತು. ಅನ್ನಾಹಾರಗಳಿಲ್ಲದೆ ಮೊದಲೇ ನಿಶ್ಶಕ್ತರಾಗಿದ್ದ ಇಬ್ನು ಅಬ್ಬಾಸ್ (ರ)ರವೊಂದಿಗೆ ಆ ಐವತ್ತೆರಡು ಧೀರ ಯೇೂಧರೂ ಶಹೀದಾಗಿದ್ದಾರೆ. ಇನ್ನಲಿಲ್ಲಾಹ್....

ಅಲ್ಪ ಸಮಯದ ಬಳಿಕ ಅಲ್ಲಿಗಾಗಮಿಸಿದ ಅಹ್ಲ್'ಬೈತಿನ ಕಣ್ಮಣಿಯಾದ ಸಯ್ಯದುನಾ ಹುಸೈನ್ (ರ)ರವರು ಸಾವಿರಾರು ಸೈನಿಕರನ್ನೆದುರಿಸಿ ನೀರು ತರಲಾಗದೆಂಬ ಅರಿವಿದ್ದರೂ ಅಲ್ಲಾಹನಿಗಾಗಿ, ಅವನ ದೀನಿಗಾಗಿ, ಅವನ ಹಬೀಬರ ﷺ ಹೃದಯದ ಕುಸುಮವಾದ ಅಹ್ಲ್'ಬೈತಿನ ಕಣ್ಮಣಿಗಾಗಿ ತಮ್ಮ ಬದುಕಿನ ಕೊನೆಯುಸಿರಿನ ತನಕವೂ ಜೊತೆ ನಿಂತು ನೀರು ತರಲು ಅನುಮತಿ ಕೊಟ್ಟಾಗಲೂ ಮರು ಮಾತನಾಡದೆ ಇಬ್ನು ಅಬ್ಬಾಸ್ (ರ)ರೊಂದಿಗೆ ಹೇೂಗಿ ಶತ್ರು ಸೈನಿಕರ ಆಕ್ರಮಣಕ್ಕೀಡಾಗಿ ಶಹೀದಾದ ಆ ಶುಹದಾಗಳ ಪವಿತ್ರ ಜನಾಝವನ್ನು ಕಂಡು ಕಂಬನಿ ಮಿಡಿಯುತ್ತಾ ಪ್ರಾರ್ಥಿಸುವುದಲ್ಲದೆ ಸಾವಿರಾರು ಶತ್ರು ಸೈನಿಕರ ಮುಂದೆ ಅಹ್ಲ್'ಬೈತಿನ ಆ ಕಣ್ಮಣಿ ಇನ್ನೇನು ತಾನೆ ಮಾಡಲು ಸಾಧ್ಯ? ಬಹಳ ಹೊತ್ತು ಅಲ್ಲೇ ನಿಂತು ಕಂಬನಿ ಮಿಡಿದ ಸಯ್ಯದುನಾ ಹುಸೈನ್ (ರ) ರವರು ನಂತರ ಡೇರೆಯತ್ತ ನಡೆದರು.

ಆಗ ಡೇರೆಯಲ್ಲಿ ಕಂಡ ದೃಶ್ಯ ಅವರ ಅಂತಃಕರಣವನ್ನೇ ಕಲಕಿತು.

ಅಲ್ಲಿ ಹುಸೈನ್ (ರ)ರವರ ದ್ವಿತೀಯ ಪುತ್ರರಾದ ಹದಿನೆಂಟು ವರ್ಷ ವಯಸ್ಸಿನ *ಅಲಿ ಅಕ್ಬರ್ (ರ)* ತಮ್ಮ ತಾಯಿಯಾದ ಶಹ್ರುಬಾನು (ರ) ರೊಂದಿಗೆ...

*ಅಮ್ಮಾ ನೀರು ತರಲೆಂದು ಹೇೂದ ನಮ್ಮ ತಂಡದ ಸದಸ್ಯರೆಲ್ಲರೂ ಶತ್ರುಗಳ ದಾಳಿಗೀಡಾಗಿ ಶಹೀದಾಗಿರುವುದರಿಂದ ತಾವು ಅಪ್ಪಣೆ ಕೊಟ್ಟರೆ ನಾನು ಹೇೂಗಿ ಆ ಶತ್ರುಗಳೊಂದಿಗೆ ಹೇೂರಾಡಿ ನೀರು ತರುತ್ತೇನೆ. ಅದು ಸಾಧ್ಯವಾಗದಿದ್ದರೆ ಅಲ್ಲಾಹನ ಮಾರ್ಗದಲ್ಲಿ ದೀನಿಗಾಗಿ ಶಹೀದಾಗುತ್ತೇನೆ. ಹಾಗಾಗಿ ಯುದ್ಧಕ್ಕೆ ತೆರಳಲು ನನಗೆ ಅನುಮತಿ ಕೊಡಿ ಅಮ್ಮಾ...* ಎನ್ನುತ್ತಿದ್ದಾರೆ.

ಇದನ್ನು ಕೇಳಿದ ಮಹದಿ ಸಯ್ಯಿದತುನಾ ಬೀವಿ ಶಹ್ರುಬಾನು (ರ) ಅಪ್ಪಣೆ ಕೊಟ್ಟರೆ ಸಾವಿರಾರು ಸೈನಿಕರೊಂದಿಗೆ ಹದಿನೆಂಟರ ಹರೆಯದ ತಮ್ಮ ಪ್ರಿಯ ಪುತ್ರ ಹಿಂದಿರುಗಿ ಬರಬಹುದೆಂಬ ಯಾವ ಭರವಸೆಯೂ ಇಲ್ಲದ ಕಾರಣ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.

ಹುಸೈನ್ (ರ) ರನ್ನು ಕಂಡೊಡನೆ ಮಹದಿ ಕಂಗಳಿಂದ ವರ್ಷಧಾರೆಯಂತೆ ಹರಿಯುತ್ತಿರುವ ಕಂಬನಿಗಳನ್ನೊರೆಸುತ್ತಾ....

*ಪ್ರಿಯರೇ... ನಮ್ಮ ಹೃದಯದ ಕುಸುಮವಾದ ಅಲಿ ಅಕ್ಬರ್ (ರ) ಯುದ್ಧಕ್ಕೆ ತೆರಳಲು ನನ್ನೊಂದಿಗೆ ಅನುಮತಿ ಕೇಳುತ್ತಿದ್ದಾನೆ. ಅವನಿಗೆ ನಾನು ಏನೆನ್ನಲಿ? ಎನ್ನುತ್ತಾ ಅಳಲಾರಂಭಿಸಿದರು.*

ಪ್ರಿಯ ಓದುಗರೇ... ತನ್ನಂತರಂಗದ ಕುಸುಮದಂತಹ ಪುತ್ರ ಅನುಮತಿ ಕೇಳುತ್ತಿರುವುದು ಮೃತ್ಯುಕೂಪಕ್ಕೆ ತೆರಳಲೆಂದು ಮನವರಿಕೆಯಾದರೆ ಯಾವ ಮಾತೃ ಹೃದಯ ತಾನೆ ಸಹಿಸೀತು?

ಮೊದಲೇ ಅನ್ನಾಹಾರವಿಲ್ಲದೆ ಕನಿಷ್ಟ ದಾಹವಡಗಿಸಲೂ ಸಹ ಗುಟುಕು ನೀರೂ ಲಭಿಸದೆ ಕಂಗಾಲಾಗಿ ನಿತ್ರಾಣರಾಗಿರುವವರು ಒಂದೆಡೆಯಾದರೆ ನೀರು ತರಲೆಂದು ಹೇೂದವರೆಲ್ಲರೂ ಶತ್ರುಗಳ ಆಕ್ರಮಣಕ್ಕೀಡಾಗಿ ಶಹೀದಾದುದನ್ನು ಕಂಡು ಕಂಬನಿ ಮಿಡಿಯುತ್ತಾ ಭಾರವಾದ ಮನಸ್ಸಿನೊಂದಿಗೆ ಡೇರೆಯೊಳಗೆ ಪ್ರವೇಶಿಸಿದ ಸಯ್ಯದುನಾ ಹುಸೈನ್ (ರ)ರವರು ಉಮ್ಮಳಿಸಿ ಬರುವ ದುಖವನ್ನು ತಡೆಯುವ ವಿಫಲ ಪ್ರಯತ್ನ ಮಾಡುತ್ತಾ ಪತ್ನಿ ಶಹ್ರುಬಾನ್ (ರ) ನಾನೇನು ಹೇಳಲಿ ಅವನಿಗೆ ಅಪ್ಪಣೆ ಕೊಡು ಎಂದರು.

ಹುಸೈನ್ (ರ) ಅಪ್ಪಣೆ ಕೊಡು ಎಂದಾಗ ಮಹದಿ ಸಯ್ಯಿದತುನಾ ಬೀವಿ ಶಹ್ರುಬಾನು (ರ) ಹೇಳಿದರು... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 3⃣2⃣
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
🌌🌌🌌🌌🌌🌌🌌🌌🌌
✍ _ಗಫೂರ್ ಬಾಯಾರ್_
☔☔☔☔☔☔☔☔☔

ಇದನ್ನು ಕೇಳಿದ *ಹುಸೈನ್ (ರ)* ನಿಸ್ತೇಜ ಭಾವದಿಂದ ಅವನ ಮುಖ ನೋಡುತ್ತಾ ಹೇಳಿದರು... ⬇

*ಯಾ ಅಂರ್...*
ಈ ಊರಿನವರ ಆಹ್ವಾನದ ಮೇರೆಗೆ  ಬಂದವರು ನಾವು.. ಮಾತ್ರವಲ್ಲ, ಅವರ ಕಷ್ಟಗಳನ್ನು ಅಧ್ಯಯನ ನಡೆಸಿದ ನಂತರವಷ್ಟೇ ಈ ತೀರ್ಮಾನಕ್ಕೆ ಬಂದಿದ್ದೇವೆ. ಆದ್ದರಿಂದ ಸದ್ಯಕ್ಕೆ ಅವರನ್ನು ಯಝೀದನ ದುರಾಡಳಿತದಿಂದ ಪಾರು ಮಾಡದೆ ಹಿಂದಿರುಗುವ ಪ್ರಶ್ನೆಯೇ ಇಲ್ಲ.

ನಮಗೆ ಅಧಿಕಾರದ ಮೇೂಹವಿಲ್ಲ. ಅದರ ಅಗತ್ಯವೂ ನಮಗಿಲ್ಲ. ಆದರೆ ಅಲ್ಲಾಹನ ಪ್ರತಿನಿಧಿಗಳಾದ ನಾವು ಮರಣವನ್ನು ಭಯಪಡಲಾರೆವು. ಆದ್ದರಿಂದ ನೀನು ನಿನ್ನ ಧೌತ್ಯವನ್ನು ನಿರ್ವಹಿಸು..!

ಆದರೆ ನಮಗೊಮ್ಮೆ ಆ ಯಝಿದ್'ನನ್ನು ಭೇಟಿಯಾಗಿ ನೇರವಾಗಿ ಅವನೊಂದಿಗೆ ಸತ್ಯಾಸತ್ಯತೆಯನ್ನು ಮನವರಿಕೆ ಮಾಡಬೇಕಿದೆ.

ಒಂದು ವೇಳೆ ಅದು ಸಾಧ್ಯವಾಗದಿದ್ದರೆ ನಮ್ಮ ನಾಯಕರಾದ ಮುತ್ತು ರಸೂಲ್ ﷺ ರವರ ಬಳಿ ಹೇೂಗುತ್ತೇವೆಯೇ ವಿನಃ ಮಕ್ಕಾಕ್ಕೆ ಮರಳಲಾರೆವು. ಆದ್ದರಿಂದ ನೀನಿನ್ನು ಹೋಗಬಹುದು ಎಂದರು.

ಸದ್ಯದ ಮಟ್ಟಿಗೆ ಸಂಗಡಿಗರೊಂದಿಗೆ ಅಲ್ಲಿಂದ ಹಿಂದಿರುಗಿದ ಅಂರ್'ವಸಅದ್'ನು, ಉಬೈದ್'ನ ಬಳಿ ತೆರಳಿ ಈ ವಿಷಯ ತಿಳಿಸಿದಾಗ ಉಬೈದ್ ಹೇಳಿದನು...

*"ಈ ತನಕ ಹುಸೈನ್ (ರ)ರಿಗೆ ತಮ್ಮ ತಂಡದೊಂದಿಗೆ ಅಲ್ಲಿಂದ ಹಿಂದಿರುಗಲು ಅವಕಾಶವಿತ್ತು. ಆದರೆ ಇನ್ನು ಹಿಂದಿರುಗಲು ಅವಕಾಶ ನೀಡಬಾರದು. ಒಂದು ವೇಳೆ ಹಿಂದಿರುಗುವುದಾದರೆ ಯಝೀದನನ್ನು ಖಲೀಫನೆಂದು ಅಂಗೀಕರಿಸಲೇಬೇಕು. ಇಲ್ಲದಿದ್ದರೆ ಯೂಪ್ರಟಿಸ್ ನದಿ ತೀರದಲ್ಲಿರುವುದರಿಂದ ಅವರು ಆ ನದಿಯ  ನೀರನ್ನಾಶ್ರಯಿಸಿರುತ್ತಾರೆ. ಅವರಿಗೆ ನದಿಯಿಂದ ಒಂದು ಹನಿ ನೀರು ಮುಟ್ಟಲೂ ಸಹ ಅವಕಾಶ ಕೊಡಬಾರದು" ಎಂದು ಆಜ್ಞಾಪಿಸಿ, ಸಾವಿರ ಸೈನಿಕರ ಹೆಚ್ಚುವರಿ ಪಡೆಯೊಂದಿಗೆ ಉಬೈದನೇ ಬಂದು ಯೂಪ್ರಟಿಸ್ ನದಿಯ ಸುತ್ತಮುತ್ತ ಪಹರೆಗೆ ಹಲವಾರು ಸೈನಿಕರನ್ನು ನಿಯಮಿಸಿದನು.*

ಇತ್ತ ಹುಸೈನ್ (ರ) ಮತ್ತು ಸಹಯಾತ್ರಿಕರ ತಂಡ ತಂದಿದ್ದ ಆಹಾರವೂ ಮುಗಿದಿದ್ದರಿಂದ ಮತ್ತು ಕೂಫಾ ನಿವಾಸಿಗಳ ನೆರವೂ ಲಭಿಸದ ಕಾರಣ ಯೂಪ್ರಟಿಸ್ ನದಿಯ ನೀರನ್ನಷ್ಟೇ ಅವಲಂಭಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಆದರೆ ಇದೀಗ ಯಝೀದ್'ನನ್ನು ಖಲೀಫನೆಂದು ಅಂಗೀಕರಿಸದಿದ್ದಲ್ಲಿ ಯೂಪ್ರಟಿಸ್ ನದಿಯ ನೀರನ್ನೂ ಮುಟ್ಟದಂತೆ ಉಬೈದ್'ನ ಪಡೆ ನಿರ್ಬಂಧ ಹೇರಿದ ಕಾರಣ ಸಂದಿಗ್ಧ ಪರಿಸ್ಥಿತಿ ಎದುರಾಗಿತ್ತು.

*ಯಾತ್ರಾ ತಂಡದಲ್ಲಿ ಚಿಕ್ಕ ಮಕ್ಕಳೂ ಇದ್ದಿದ್ದರಿಂದ ದಾಹ ಸಹಿಸಲಾರದ ಪುಟ್ಟ ಮಕ್ಕಳ ಅಳು ಮುಗಿಲು ಮುಟ್ಟಿತ್ತು.*

ಮಕ್ಕಳ ಅಳು ಮುಗಿಲು ಮುಟ್ಟಿದಾಗ ಅದನ್ನು ಕಾಣಲಾರದೆ ಇಬ್ನು ಅಬ್ಬಾಸ್ (ರ)ರವರು ಹುಸೈನ್ (ರ)ರವರೊಂದಿಗೆ ಹೇಳಿದರು.

ದಾಹದಿಂದ ಬಳಲುತ್ತಿರುವ  ಪುಟ್ಟ ಕಂದಮ್ಮಗಳ ರೇೂದನವನ್ನು ನನ್ನಿಂದ ಕಾಣಲಾಗುತ್ತಿಲ್ಲ. ಹಾಗಾಗಿ ಉಬೈದ್'ನ ಶಸ್ತ್ರಸಜ್ಜಿತ ಪಡೆಯೊಂದಿಗೆ ಹೇೂರಾಡಿಯಾದರೂ ಸರಿ ನದಿಯಿಂದ ನೀರು ತರಲು ನಾವು ಹೇೂಗುತ್ತೇವೆ. ಹಾಗಾಗಿ ದಯವಿಟ್ಟು ತಾವು ಅನುಮತಿ ನೀಡಬೇಕು ಎಂದರು.

*ಮಕ್ಕಳ ಅಳುವನ್ನು ಕಂಡು ಅಸಹಾಯಕತೆಯಿಂದ ಪರಿತಪಿಸುತ್ತಿದ್ದ ಹುಸೈನ್(ರ) ತಕ್ಷಣ ಸಮ್ಮತಿಸಿದರು.*

ಆಗ ಇಬ್ನು ಅಬ್ಬಾಸ್ (ರ)ರವರು ತಮ್ಮೊಂದಿಗಿದ್ದ ಎಪ್ಪತ್ತೆರಡು ಜನರ ತಂಡದಿಂದ ಮೂವತ್ತು ಅಶ್ವಪಡೆ ಯೇೂಧರನ್ನೂ ಮತ್ತು ಇಪ್ಪತ್ತು ಕಾಲಾಳು ಪಡೆ ಯೇೂಧರನ್ನೂ ಕರೆದೊಯ್ದರು.

ಇಬ್ನು ಅಬ್ಬಾಸ್ (ರ)ರವರ ನೇತೃತ್ವದ ತಂಡ ನೀರಿಗಾಗಿ ಯೂಪ್ರಟಿಸ್ ನದಿಯ ಕಡೆ ಬರುತ್ತಿರುವುದನ್ನು ಕಂಡ ಉಬೈದ್ ಹೇಳಿದ...

ನೇೂಡಲ್ಲಿ ಅವರು ನೀರಿಗಾಗಿ ಬರುತ್ತಿದ್ದಾರೆ. ಅವರನ್ನು ನೀರಿನ ಹತ್ತಿರ ಬರದಂತೆ ತಡೆಯಬೇಕು ಎನ್ನುತ್ತಿದ್ದಂತೆ, ನದಿ ತಟದಲ್ಲಿ ಕಾವಲು ಕಾಯುತ್ತಿದ್ದ ಯೇೂಧರು ಮತ್ತು ಉಬೈದ್'ನೊಂದಿಗೆ ಅಲ್ಪ ದೂರದಲ್ಲಿದ್ದ ಸೈನಿಕರು ಸೇರಿಕೊಂಡು  ಇಬ್ನು ಅಬ್ಬಾಸ್ (ರ) ರವರ ತಂಡದ ಮೇಲೆ ಬಾಣ ಮತ್ತು ಈಟಿಯ ಸುರಿಮಳೆಗೈಯ್ಯಲಾರಂಬಿಸಿದರು.

*ಹಲವು ದಿನಗಳಿಂದ ಅನ್ನ ನೀರಿಲ್ಲದೆ ಬಳಲಿ ಬೆಂಡಾದ ಐವತ್ತೆರಡು ಜನರ ಮೇಲೆ ಒಮ್ಮೆಲೆ ಸಾವಿರಾರು ಸೈನಿಕರು ಬಿಲ್ಲು ಬಾಣಗಳ ಸುರಿಮಳೆಗೆರೆದರೆ ಹೇಗಿರಬಹುದು ಸ್ಥಿತಿ?*

{ಒಂದು ಮೂಲದ ಪ್ರಕಾರ ಇಬ್ನು ಅಬ್ಬಾಸ್ (ರ)ರವರ ನೇತೃತ್ವದ ಮುಸ್ಲಿಂ ಪಡೆ ಶತ್ರು ಸೈನಿಕರೊಂದಿಗೆ ಹೇೂರಾಡಿ ನಲವತ್ತು ಚರ್ಮದ ಪಾತ್ರೆಯಲ್ಲಿ ನೀರು ತಂದಿದ್ದಾರೆಂಬ ಬಗ್ಗೆ ಉಲ್ಲೇಖವಿದೆ}

ಮತ್ತೊಂದು ಮೂಲದ ಪ್ರಕಾರ... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 3⃣1⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

ಹುಸೈನ್ (ರ)ರವರು ತಕ್ಷಣ ತಮ್ಮ ತಂಡದಲ್ಲಿದ್ದ ಇಬ್ನು ಅಬ್ಬಾಸ್ (ರ)ರನ್ನು ಕರೆದು ತಮ್ಮ ಕೈಲಿದ್ದ ಮಣ್ಣನ್ನು ಅವರ ಕೈಗೆ ಕೊಡುತ್ತಾ ಕೇಳಿದರು.... ⬇

*ಈ ಎರಡು ಮಣ್ಣಿನಲ್ಲಿ ಏನಾದರೂ ವ್ಯತ್ಯಾಸವಿದೆಯೇ?*

ಇಬ್ನು ಅಬ್ಬಾಸ್ (ರ)ರವರು ಸೂಕ್ಷ್ಮವಾಗಿ ಆ ಮಣ್ಣನ್ನು ಮತ್ತು ಆ ಸ್ಥಳದ ಮಣ್ಣನ್ನು ಪರಿಶೀಲಿಸಿದ ನಂತರ ಹೇಳಿದರು..

ಇಲ್ಲ..! ಎರಡೂ ಒಂದೇ ರೀತಿಯಿದೆ. ವ್ಯತ್ಯಾಸವೇ ಇಲ್ಲ. ಅಷ್ಟಕ್ಕೂ ಈ ಮಣ್ಣು ನಿಮಗೆಲ್ಲಿ ಸಿಕ್ಕಿತು? ಎಂದು ಕೇಳಿದರು ಇಬ್ನು ಅಬ್ಬಾಸ್ (ರ)

ಆಗ ಇಬ್ನು ಅಬ್ಬಾಸ್ (ರ)ರವರಿಗೆ ಆ ಮಣ್ಣಿನ ಹಿಂದಿರುವ ರಹಸ್ಯವನ್ನು ವಿವರಿಸಿದ ಹುಸೈನ್ (ರ) ಹೇಳಿದರು...

*ಅಲ್ಲಾಹನು ಇಚ್ಚಿಸಿರುವ ಆ ಸ್ಥಳ ಇದೇ ಆಗಿರಬಹುದೆಂದು ನನಗೆ ಅನ್ನಿಸುತ್ತಿದೆ. ಆದರಿಂದ ಇಲ್ಲಿಂದ ಮುಂದೆ ಸಾಗಲು ನಮ್ಮಿಂದ ಸಾದ್ಯವಿಲ್ಲ ಎಂದು ನನಗನಿಸುತ್ತದೆ. ಹಾಗಾಗಿ ಇಲ್ಲೇ ಡೇರೆ (ಟೆಂಟ್) ಹಾಕೇೂಣ ಎಂದರು.*

ಹಾಗೆ ಆ ಯೂಪ್ರಟಿಸ್ ನದಿ ತೀರದಲ್ಲಿ *ಹುಸೈನ್ (ರ) ರವರ* ಕುಟುಂಬ ಮತ್ತು ಅವರ ನೆರವಿಗಾಗಿ ಮಕ್ಕಾದಿಂದ ಅವರೊಂದಿಗೆ ಬಂದಿದ್ದ ಯಾತ್ರಾ ತಂಡದೊಂದಿಗೆ ಅಲ್ಲೇ ಟೆಂಟ್ ಹಾಕಿದರು.

*ಅಂದು ಹುಸೈನ್ (ರ)ರವರು ಟೆಂಟ್ ಹಾಕಿದ್ದ ಆ ಸ್ಥಳವೇ ಇಂದಿನ ಕರ್ಬಲ. ಕರ್ಬ್+ಬಲಾಅ "كرب بلاء" ಕರ್ಬ್ ಎಂದರೆ ವೇದನೆ, ಬಲಾಅ ಎಂದರೆ  ಪ್ರಯಾಸ. ವೇದನೆ ಮತ್ತು ಪ್ರಯಾಸಗಳ ಸಂಗಮವೇ ಕರ್ಬಲ.*

ಕೂಫ ನಿವಾಸಿಗಳ ಆಹ್ವಾನದ ಮೇರೆಗೆ ಹಾಲುಗಲ್ಲದ ಹಸುಗೂಸುಗಳೊಂದಿಗೆ ದೂರದ ಮಕ್ಕಾದಿಂದ ದಿನಗಟ್ಟಲೆ ಅಲೆಯುತ್ತಾ ಬಳಲಿ ಕೂಫಕ್ಕೆ ಬಂದಿದ್ದ ಈ ಅತಿಥಿಗಳು ಕೂಫ ಗಡಿಯಲ್ಲೇ ಎರಡು ದಿನಗಳಿಂದ ಬೀಡು ಬಿಟ್ಟಿದ್ದರೂ ಬರ ಮಾಡಿಕೊಳ್ಳಲು ಕೂಫದಿಂದ ಒಂದು ನರಪಿಳ್ಳೆಯೂ ಬರಲಿಲ್ಲ.

ಮಕ್ಕಾದಿಂದ ಹೊರಡುವಾಗಲೇ ಮಕ್ಕಾ ನಿವಾಸಿಗಳನೇಕರು ಕೂಫದವರ ವಂಚಕತನದ ಬಗ್ಗೆ ಎಚ್ಚರಿಸಿದ್ದರೂ ಹುಸೈನ್ (ರ)ರವರು ಅದನ್ನಷ್ಟು ಗಂಭೀರವಾಗಿ ಪರಿಗಣಿಸದೆ "ತಮ್ಮ ನೆರವಿಗೆ ಬಾರದಿದ್ದರೆ ನಾಳೆ ಅಲ್ಲಾಹನ ಬಳಿ ದೂರು ಸಲ್ಲಿಸುವೆವು ಎಂದು ಎಚ್ಚರಿಸಿದ್ದ ಆ ಎಚ್ಚರಿಕೆ"ಗೆ ಹೆಚ್ಚಿನ ಮಹತ್ವ ನೀಡಿದ್ದರು.

ಮಾತ್ರವಲ್ಲ, ಹುಸೈನ್ (ರ)ರವರ ಪ್ರತಿನಿಧಿಯಾಗಿ ಕೂಫಕ್ಕೆ ತೆರಳಿದ್ದ ಮುಸ್ಲಿಂ (ರ)ರವರು ಪತ್ರವನ್ನೂ ಬರೆದಿದ್ದರಿಂದ ಈ ಬಾರಿ ಕೂಫಾ ನಿವಾಸಿಗಳು ಖಂಡಿತಾ ವಂಚಿಸಲಾರರೆಂಬ ವಿಶ್ವಾಸದಿಂದ ಹೊರಟಿದ್ದರಿಂದ ಯಾತ್ರೆಯ ನಡುವೆ ಸೇವಿಸಲೆಂದು ಸ್ವಲ್ಪ ಆಹಾರವನ್ನಷ್ಟೇ ತಂದಿದ್ದರು. ಇತ್ತ ಕೂಫ ನಿವಾಸಿಗಳ ಸುಳಿವೇ ಇಲ್ಲದಿದ್ದರಿಂದ ತಂದಿದ್ದ ಆಹಾರವೂ ಮುಗಿಯುವ ಹಂತದಲ್ಲಿತ್ತು. ಹಾಗಾಗಿ ಮುಂದೆ ಯೂಪ್ರಟಿಸ್ ನದಿಯ ನೀರನ್ನಷ್ಟೇ ಕುಡಿದು ಜೀವವುಳಿಸಬೇಕಾದ ಪರಿಸ್ಥಿತಿ ಎದುರಾಗಿತ್ತು.

*ಅಂದು ಮಹರ್ರಮ್ ಮೂರು...*

ಹುಸೈನ್ (ರ) ಡೇರೆಯೊಳಗೆ ಕುಳಿತು ಕೂಫದ ಕಡೆ ನೇೂಡುತ್ತಿದ್ದರು. ಆಗ ದೂರದಲ್ಲಿ ಒಂದು ಯಾತ್ರಾ ತಂಡ ಕೂಫದ ಕಡೆಯಿಂದ ಬರುತ್ತಿರುವುದು ಕಾಣಿಸಿತು. ಬಹುಶಃ ತಮ್ಮನ್ನು ಬರ ಮಾಡಿಕೊಳ್ಳಲು ಬರುತ್ತಿರುವ ಕೂಫ ನಿವಾಸಿಗಳಾಗಿರಬಹುದೆಂದು ಭಾವಿಸಿ ಅವರತ್ತ ಹೇೂದರು.

ಆದರೆ ಹುಸೈನ್ (ರ)ರವರಿಂದ ಅಲ್ಪ ದೂರದಲ್ಲೇ ನಿಂತ ಆ ತಂಡದಿಂದ ಒಬ್ಬ ವ್ಯಕ್ತಿ *ಹುಸೈನ್ (ರ) ರವರ* ಹತ್ತಿರ ಬಂದನು.

ಅಸ್ಸಲಾಮು ಅಲೈಕುಮ್ ಯಾ ಹುಸೈನ್.. (ರ) ಎನ್ನುತ್ತಾ ಸಲಾಮಿನೊಂದಿಗೆ ಮಾತು ಆರಂಭಿಸಿದ ಆ ವ್ಯಕ್ತಿ ನನ್ನ ಹೆಸರು
*ಅಂರು ವಸಅದ್.* ತಾವು ಯಝಿದ್'ನ ದುರಾಡಳಿತವನ್ನು ಕೊನೆಗಾಣಿಸಿ ಕೂಫ ಜನತೆಯ ಹಿತ ಕಾಯಲು ಬಂದಿರುವಿರೆಂಬುದನ್ನು ನಾವೆಲ್ಲರೂ ಬಲ್ಲೆವು. ಯಝೀದ್'ನ ದುರಾಡಳಿತ ಕೊನೆಯಾಗಬೇಕೆನ್ನುವುದು ನಮ್ಮೆಲ್ಲರ ಹೆಬ್ಬಯಕೆಯೂ ಆಗಿದೆ.

ಆದರೆ..
ಸದ್ಯದ ಪರಿಸ್ಥಿತಿಯು ಮೊದಲಿನಂತಿರದೆ ತೀರಾ ವ್ಯತಿರಿಕ್ತವಾಗಿದೆ. ಅಲ್ಲಾಹನನ್ನು ಆರಾಧಿಸುತ್ತಾ ಅವನ ಹಬೀಬರನ್ನು ﷺ  ಪ್ರೀತಿಸುವ ನಾವೂ ಸಹ ಅನಿವಾರ್ಯ ಕಾರಣದಿಂದ ನಿಮ್ಮ ವಿರುದ್ಧ ಯುದ್ಧ ಮಾಡಲು ಬಂದವರಾಗಿದ್ದೇವೆ. ಆದರೆ ಪ್ರವಾದಿ ﷺ ರ ಕುಟುಂಬದೊಂದಿಗೆ ಯುದ್ಧ ಮಾಡಲು ನಮಗೆ ಆಸಕ್ತಿಯಿಲ್ಲ. ಆದರೆ ಯಝಿದ್'ನ ಸೇನಾ ಉಪನಾಯಕನಾಗಿರುವ ನಾನು ಖಲೀಫನ ಆಜ್ಞೆ, ಆದೇಶಗಳನ್ನು ಪಾಲಿಸಬೇಕಾದುದು ನನ್ನ ಕರ್ತವ್ಯವಲ್ಲವೇ?

ಆದ್ದರಿಂದ ತಮ್ಮಲ್ಲಿ ನಾನು ವಿನಂತಿಸಿಕೊಳ್ಳುವುದೇನೆಂದರೆ ಯಝೀದ್'ನ ವಿರುದ್ಧದ ಯುದ್ಧವನ್ನು ಕೈಬಿಟ್ಟು ತಾವು ತಮ್ಮ ತಂಡದೊಂದಿಗೆ ಮಕ್ಕಾಕ್ಕೆ ಹಿಂದಿರುಗಬೇಕು. ಇಲ್ಲದಿದ್ದಲ್ಲಿ ತಮ್ಮ ಕುಟುಂಬ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಬೇಕಾದೀತು.
ಮರಣವೂ ಕೂಡ ಸಂಭವಿಸುವ ಸಾಧ್ಯತೆಯಿದೆ. ಹಾಗಾಗಿ ತಾವು ದಯವಿಟ್ಟು ಹಿಂದಿರುಗಿರಿ..!! ಎಂದನು.

ಇದನ್ನು ಕೇಳಿದ *ಹುಸೈನ್ (ರ)* ನಿಸ್ತೇಜ ಭಾವದಿಂದ ಅವನ ಮುಖ ನೋಡುತ್ತಾ ಹೇಳಿದರು... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 3⃣0⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

ಆ ಮಕ್ಕಳೂ ಸಹ ನಿರ್ದಯೆಯಿಂದ ಕ್ರೂರವಾಗಿ ಕೊಲ್ಲಲ್ಪಟ್ಟಿದ್ದಾರೆಂದು ಆ ಯಾತ್ರಾ ತಂಡದ ನಾಯಕ ಹೇಳುತ್ತಿದ್ದಂತೆ..

ಡೇರೆಯೊಳಗೆ ಹೇೂದ ಸಯ್ಯದುನಾ ಹುಸೈನ್ (ರ)ರವರು... ⬇

ತಮ್ಮ ಸಹಧರ್ಮಿಣಿ *ಶಹ್ರುಬಾನು (ರ)* ರವರ ಮಡಿಲಲ್ಲಿ ಮಲಗಿದ್ದ ಒಂದೂವರೆ ವರ್ಷ ಪ್ರಾಯದ *ಅಲಿ ಅಸ್ಗರ್ (ರ)* ಎಂಬ ಹೆಸರಿನ ತಮ್ಮ ಮಗುವನ್ನು ಎತ್ತಿಕೊಂಡು ಬಂದು ಆ ವ್ಯಾಪಾರಿ ತಂಡದ ನಾಯಕನಿಗೆ ತೇೂರಿಸುತ್ತಾ ಹೇಳಿದರು...

ಸಹೋದರಾ..
ಈ ಮಗುವನ್ನು ನೋಡಿದೀರಾ..? ಇದು ನನ್ನ ಮಗು ಕೂಫಗಾರರು ತಲೆ ಕಡಿದ ಆ ಮುಗ್ಧ ಮಕ್ಕಳಿಲ್ಲವೇ ಮುಹಮ್ಮದ್ ಹಾಗು ಇಬ್ರಾಹಿಂ (ರಲಿಯಲ್ಲಾಹು ಅನ್ಹುಮಾ) ಅವರು ಕೂಡ ನನ್ನ ಮಕ್ಕಳಂತೆಯೇ ತಾನೇ? ಆ ಮಕ್ಕಳನ್ನು ಅಷ್ಟು ಕ್ರೂರವಾಗಿ ಕೊಂದವರನ್ನು ಬಿಟ್ಟು ನಾನು ಮಕ್ಕಾಕ್ಕೆ ಹಿಂದಿರುಗಿ ಹೇಡಿಯಂತೆ ಅಡಗಿ ಬದುಕಲೇ...!?

ಇಲ್ಲ ಸಹೋದರಾ..
ಇಲ್ಲ. ಸೇೂಲೇೂ ಗೆಲುವೇೂ..!
ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಲಾರೆ. ವಿಷಯವನ್ನೆಲ್ಲ ತಿಳಿಸಿದ್ದಕ್ಕೆ ಧನ್ಯವಾದಗಳು ಎಂದರು.

ನಂತರ ಡೇರೆಯೊಳ ಹೊಕ್ಕು ಗದ್ಗದಿತರಾದ *ಹುಸೈನ್ (ರ)ರವರು* ಹೇಳಿದರು. ಎಲ್ಲರೂ ಹೊರಡಿ ಇನ್ನು ವಿಶ್ರಮಿಸಲು ಸಮಯವಿಲ್ಲ..! ಯಝೀದನ ದುರಹಂಕಾರಕ್ಕೆ ಪ್ರತಿಕಾರ ತೀರಿಸುವ ಸಮಯ ಸನ್ನಿಹಿತವಾಗಿದೆ. ಎಲ್ಲರೂ ಬೇಗ ಹೊರಡಿ ಎಂದರು.

ಹಾಗೆ ಅಲ್ಲಿಂದ ಹೊರಟ ಆ ಯಾತ್ರಾ ಸಂಘವು.. ಮುಂದೆ ಸಾಗುತ್ತಿತ್ತು.

*ಅಂದು ಮುಹರ್ರಂ ಎರಡು. (ಹಿಜರಿ 61) ಸಂಜೆಯಾಗುತ್ತಿದ್ದಂತೆ ಇರಾಕಿನ ಯೂಪ್ರಟಿಸ್ ನದಿ ತೀರಕ್ಕೆ ತಲುಪಿದರು.*

ಹಾಗೆ ಯೂಪ್ರಟಿಸ್ ನದಿ ದಂಡೆಗೆ ತಲುಪುತ್ತಿದ್ದಂತೆ *ಹುಸೈನ್(ರ) ರವರ* ಒಂಟೆ ಮಂಡಿಯೂರಿ ಕುಳಿತು ಕೊಂಡಿತು.

(ಸಾಧಾರಣವಾಗಿ ಯಜಮಾನರಿಂದ ಸೂಚನೆ ಬರದಿದ್ದರೆ ಒಂಟೆಗಳು ಹಾಗೆ ಮಂಡಿಯೂರಿ ಕುಳಿತುಕೊಳ್ಳುವುದಿಲ್ಲ. ಬದಲಾಗಿ ಯಜಮಾನರಿಂದ ಸೂಚನೆ ಬರುವ ತನಕ ಎಷ್ಟು ರಾತ್ರಿಯಾದರೂ ನಡೆಯುತ್ತಲೇ ಇರುವುದು ಒಂಟೆಗಳ ಸ್ವಭಾವ. ಅಷ್ಟೇ ಅಲ್ಲ, ಒಂಟೆಯಲ್ಲಿ ಇನ್ನೂ ಹಲವಾರು ವೈಶಿಷ್ಟ್ಯತೆಗಳಿದ್ದು ಸೃಷ್ಟಿಕರ್ತನಾದ ಅಲ್ಲಾಹನು ಒಂಟೆಗೆ ನೀಡಿರುವ ವಿಶೇಷತೆಗಳ ಬಗ್ಗೆ ಕುರ್'ಆನಿನಲ್ಲೇ ಸೂಚಿಸಿದ್ದಾನೆ.)

ವಿಶ್ರಮಿಸಲು ತಕ್ಕನಾದ ಸ್ಥಳವೂ ಅದಾಗಿರಲಿಲ್ಲವಾದ್ದರಿಂದ
*ಹುಸೈನ್ (ರ)ರವರ* ತಮ್ಮ ಒಂಟೆಯನ್ನು ಎಬ್ಬಿಸಲು ಪ್ರಯತ್ನಿಸಿದರು. ಕಾರಣ ಮೊದಲ ನೇೂಟಕ್ಕೇ ಭಯ ಮೂಡಿಸುವಂತಹ ಸ್ಥಳವಾಗಿತ್ತು ಅದು.

ಆದರೆ *ಹುಸೈನ್ (ರ)* ಎಬ್ಬಿಸಲು ಎಷ್ಟು ಪ್ರಯತ್ನಿಸಿದರೂ ಒಂಟೆ ಮಾತ್ರ ಅಲ್ಲಾಡಲಿಲ್ಲ. ಕೊನೆಗೆ ಚಾಟಿಯಿಂದ ಮೆತ್ತಗೆ ಒಂದೇಟು ಬಾರಿಸಿದರು. ಹೊಡೆತ ಬಿದ್ದಾಗ ಒಂಟೆ ಎದ್ದು ನಿಂತಿತಾದರೂ ಅಲ್ಲಿಂದ  ಮುಂದೆ ಕದಲದೆ ಮತ್ತೆ ಅಲ್ಲೇ ಕುಳಿತು ಕೊಂಡಿತು.

ಸೂಚನೆ ಸಿಗದೆ ಎಂದೂ ಎಲ್ಲೂ ಹೀಗೆ ಮಂಡಿಯೂರದ ಒಂಟೆ ಇಂದು ಇಲ್ಲೇಕೆ ಹೀಗೆ ವರ್ತಸುತ್ತಿದೆ? ಇದರಲ್ಲಿ ತಮಗೇನಾದರೂ ಸೂಚನೆಯಿರಬಹುದೇ ಎಂದು ತುಸು ಹೊತ್ತು ಆಲೇೂಚಿಸಿದ *ಹುಸೈನ್ (ರ)* ಏನೇೂ ನೆನಪಾದರಂತೆ....

ತಕ್ಷಣ ಒಂಟೆಯ ಮೇಲಿದ್ದ ಬಟ್ಟೆಯ ಗಂಟೊಂದನ್ನು ಬಿಚ್ಚಿ ಅದರಲ್ಲಿದ್ದ ಚಿಕ್ಕ ಥೈಲಿಯೊಂದನ್ನು ಹೊರ ತೆಗೆದು ಕೆಳಗಿಳಿದು ಆ ಥೈಲಿಯನ್ನು ಬಿಚ್ಚಿ ನೇೂಡಿದರು. ಅದರಲ್ಲಿ ಅಲ್ಪ ಮಣ್ಣಿತ್ತು.

*{ಆ ಮಣ್ಣನ್ನು ಮುಕರ್ರಬುಲ್ ಅಮ್ಲಾಕ್ ಮಲಕ್ ಜಿಬ್'ರೀಲ್ (ಅ)ರು ಮುಹಮ್ಮದ್ ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರಿಗೂ, ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರು ಅದನ್ನು ಅಲಿ ಬಿನ್ ಅಬೀತ್ವಾಲಿಬ್ (ರ)ರಿಗೂ, ಅಲಿ (ರ)ರವರು ಅದನ್ನು ಹಸನ್ (ರ)ರಿಗೂ, ಹಸನ್ (ರ) ಅದನ್ನು ಹುಸೈನ್(ರ)ರಿಗೂ ಕೊಟ್ಟು ಎಚ್ಚರಿಕೆಯಿಂದ ಭದ್ರವಾಗಿಟ್ಟುಕೊಳ್ಳಲು ಸೂಚಿಸುವುದರೊಂದಿಗೆ ಈ ಮಣ್ಣು ಈ ಲೇೂಕದ ಯಾವ ಸ್ಥಳದ ಮಣ್ಣಿಗೆ ಸರಿ ಹೊಂದುವುದೇೂ ಅಲ್ಲಿ ರಸೂಲ್ ಕರೀಮ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಕುಟುಂಬದ ಸದಸ್ಯರು ಹತರಾಗಲಿರುವರು. ಎಂದು ಸೃಷ್ಟಿಕರ್ತನಾದ ಅಲ್ಲಾಹನಿಂದ ಬಂದ ವಹ್ಯ್ (ರಹಸ್ಯ ಸಂದೇಶ) ಮೂಲಕ ತಿಳಿಸಿದ್ದರು}*

ಹುಸೈನ್ (ರ)ರವರು ತಮ್ಮ ಥೈಲಿಯಲ್ಲಿದ್ದ ಮಣ್ಣನ್ನು ಮತ್ತು ಆ ಸ್ಥಳದ ಮಣ್ಣನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದರು....

*ಸುಬುಹಾನಲ್ಲಾಹ್....*
 *ಹುಸೈನ್ (ರ)ರವರ ಕೈಲಿದ್ದ ಆ ಮಣ್ಣಿಗೂ ಮತ್ತು ಆ ಸ್ಥಳದ ಮಣ್ಣಿಗೂ ವ್ಯತ್ಯಾಸವೇ ಇರಲಿಲ್ಲ. ಅಲ್ಲಿಂದಲೇ ಸ್ವಲ್ಪ ಮಣ್ಣನ್ನು ತೆಗೆದು ಆ ಥೈಲಿಯಲ್ಲಿಟ್ಟಂತಿತ್ತು.*

ಹುಸೈನ್ (ರ)ರವರು ತಕ್ಷಣ ತಮ್ಮ ಯಾತ್ರಾ ತಂಡದಲ್ಲಿದ್ದ ಇಬ್ನು ಅಬ್ಬಾಸ್ (ರ)ರವರನ್ನು ಕರೆದು ಅವರ ಕೈಗೆ ಆ ಮಣ್ಣನ್ನು ಕೊಡುತ್ತಾ ಕೇಳಿದರು.... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 2⃣9⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

ಆದರೆ.... ⬇

*ಫಾತಿಮತ್ ಝಹ್ರಾ (ರ) ಎಂಬ ಆ ಮಗು, ಇಲ್ಲ ಅಪ್ಪ, ಅಮ್ಮನನ್ನು ಬಿಟ್ಟು ನಾನಿಲ್ಲಿ ಇರಲಾರೆ. ನಾನು ಕೂಡ ನಿಮ್ಮೊಂದಿಗೆ ಬರುತ್ತೇನೆ ಎಂದು ಹಠ ಹಿಡಿಯಿತು.* 

ಎಷ್ಟು ತಿಳಿ ಹೇಳಿದರೂ ಮಗು ಹಟ ಬಿಡಲಿಲ್ಲವಾದಾಗ ಸಯ್ಯಿದತುನಾ ಫಾತಿಮತ್ ಝಹ್ರಾ (ರ)ರವರಿಗಷ್ಟೇ ಅಲ್ಲ ಹುಸೈನ್ (ರ)ರವರ ಇಪ್ಪತ್ತೆರಡು ವರ್ಷದ ಪುತ್ರ *ಸಯ್ಯದುನಾ ಝೈನುಲ್ ಆಬಿದೀನ್ (ರ) ರಿಗೂ* ಜ್ವರ ಬಾಧಿಸಿತ್ತು. ಅಸೌಖ್ಯದಿಂದಿರುವ ಮಕ್ಕಳನ್ನೂ ಕರೆದೊಯ್ಯಬೇಕೆಂಬುದು ಅಲ್ಲಾಹನ ವಿಧಿಯಾಗಿರಬಹುದೆಂದು ಭಾವಿಸಿ ಅನಾರೇೂಗ್ಯ ಪೀಡಿತರಾದ ಮಕ್ಕಳನ್ನೂ ತಮ್ಮೊಂದಿಗೆ ಕರೆದೊಯ್ಯಲು ತೀರ್ಮಾನಿಸಿದರು.

ಜೊತೆಗೆ ಅಹ್ಲ್'ಬೈತಿನ ಕರುಳ ಕುಡಿಯಾದ ಸಯ್ಯದುನಾ ಹುಸೈನ್ (ರ)ರವರ ಕಷ್ಟ ಸುಖ ನೇೂವು ನಲಿವುಗಳನ್ನೂ ಸಮವಾಗಿ ಹಂಚಿಕೊಂಡು ಹೆಗಲಿಗೆ ಹೆಗಲು ಕೊಟ್ಟು ಸಹಕರಿಸುವ ಸಹಧರ್ಮಿಣಿಯಾದ ಮಹದಿ *ಸಯ್ಯಿದತುನಾ ಬೀವಿ ಶಹ್ರು ಬಾನು (ರ)* ಮತ್ತು ಹುಸೈನ್ (ರ)ರವರ ಸಹೋದರಿಯಾದ ಮಹದಿ *ಸಯ್ಯಿದತುನಾ ಝೈನಬಾ ಬೀವಿ (ರ)* ಹಾಗೂ ಸಯ್ಯದುನಾ ಇಬ್ನು ಅಬ್ಬಾಸ್ (ರ) ಸೇರಿದಂತೆ ಒಟ್ಟು ಎಪ್ಪತ್ತೆರಡು ಜನರನ್ನೊಳಗೊಂಡ ಆ ಸಂಘವು ಯಾತ್ರೆ ಹೊರಟಿತು.

ಹಾಗೆ ಸಯ್ಯದುನಾ ಹುಸೈನ್ (ರ)ರವರ ನೇತೃತ್ವದ ಆ ಯಾತ್ರಾ ಸಂಘವು ಮೊದಲಿಗೆ ನೇರವಾಗಿ ಕಅಬಾಲಯಕ್ಕೆ ಹೇೂಗಿ..

*ಯಾ ಅಲ್ಲಾಹನೇ...* *ಪರಿಶುದ್ಧ ಇಸ್ಲಾಮಿನ ಪ್ರತಿನಿಧಿಯಾಗಿ ನೀತಿಯಿಂದ ಆಡಳಿತ ನಡೆಸಬೇಕಾಗಿದ್ದ ಖಲೀಫನಿಂದು ಈ ಸಮುದಾಯವನ್ನು ಅವಸಾನದಂಚಿಗೆ ಕೊಂಡೊಯ್ಯುತ್ತಿರುವುದರಿಂದ ಜನತೆ ನನ್ನ ನೆರವು ಕೇಳುತ್ತಿದ್ದಾರೆ.*

ನನಗಾದರೇೂ ಸಂಕಟವನ್ನು ಹೇಳಿಕೊಳ್ಳಲು ನೀನಲ್ಲದೆ ಮತ್ತೊಂದು ಅಭಯ ಕೇಂದ್ರವಿಲ್ಲವಲ್ಲ ನಾಥಾ... ನಿನ್ನ ಕಲ್ಪನೆಯೇನಿದೆಯೇೂ ಅದು ನಡೆಯದೆ ಇರಲಾರದೆಂದು ನಾನು ಬಲ್ಲೆ. ಹಾಗಾಗಿ ನಾನು ಕುಟುಂಬದೊಂದಿಗೆ ಕೂಫದ ಜನತೆಯ ನೆರವಿಗಾಗಿ ಹೇೂಗುತ್ತಿದ್ದೇನೆ. ಅನುಗ್ರಹಿಸು ನಾಥಾ ಎನ್ನುತ್ತಾ....

ಸರ್ವ ಚರಾಚರಗಳ ಸೃಷ್ಟಿಕರ್ತನಾದ ಅಲ್ಲಾಹನ ಸಂದೇಶವಾಹಕರೂ, ಅವನ ಹಬೀಬರೂ, ಅಂಬಿಯಾಗಳ ನೇತಾರರೂ, ಸಯ್ಯದುನಾ ಹುಸೈನ್ (ರ)ರವರ ಪಿತಾಮಹರೂ, ವಿಶ್ವಾಸಿ ಹೃದಯಗಳ ಉಜ್ವಲ ತಾರೆಯೂ ಆದ *ಸಯ್ಯದುನಾ ಮುಹಮ್ಮದ್ ಮುಸ್ತಫಾ ﷺ* ರು ಚಿರವಿಶ್ರಾಂತಿ ಪಡೆಯುತ್ತಿರುವ ಮದೀನಾದತ್ತ ಮುಖ ಮಾಡಿ...

ಪ್ರಿಯ ಪಿತಾಮಹಾನರೇ...
 *ಕೂಫದ ಜನತೆಯು ಯಝೀದನ ದುರಾಡಳಿತದಿಂದ ಬೇಸತ್ತು ನನ್ನ ನೆರವು ಅಪೇಕ್ಷಿಸಿದ್ದಾರೆ. ಹಾಗಾಗಿ ಅವರ ಅಪೇಕ್ಷೆಯ ಮೇರೆಗೆ ಕುಟುಂಬದೊಂದಿಗೆ ನಾನು ಕೂಫದತ್ತ ತೆರಳುತ್ತಿದ್ದೇನೆ. ಅಲ್ಲಾಹನ ರಸೂಲರೂ ನಮ್ಮೆಲ್ಲರ ಮುದ್ದಿನ ಕಣ್ಮಣಿಯೂ ಆದ ತಾವು ಅಲ್ಲಿಗೆ ತೆರಳಲು ನನಗೆ ಅನುಮತಿ ನೀಡಬೇಕು. ಎನ್ನುತ್ತಾ ಬಿಕ್ಕಿ ಬಿಕ್ಕಿ ಅತ್ತರು.*

ನಂತರ ಆ ಸಂಘವು ಕಅಬಾಲಯದಿಂದ ಹೊರಟು ಮರುಭೂಮಿಯಲ್ಲಿ ಸಂಚರಿಸುತ್ತಾ ಕೂಫದತ್ತ ಪ್ರಯಾಣ ಬೆಳೆಸಿತು.

ಮಕ್ಕಾದಿಂದ ಬಹು ದೂರ ಸಾಗಿದಾಗ ದಾರಿ ಮದ್ಯೆ ವಿಶ್ರಮಿಸಲೆಂದು ಡೇರೆ (ಟೆಂಟ್) ಹಾಕಿ ವಿಶ್ರಮಿಸುತ್ತಿರುವಾಗ ಕೂಫದ ಕಡೆಯಿಂದ ಒಂದು ವ್ಯಾಪಾರಿ ತಂಡವು ಮಕ್ಕಾದತ್ತ ಬರುತ್ತಿತ್ತು. ಹುಸೈನ್ (ರ)ರವರ ತಂಡವನ್ನು ಸಮೀಪಿಸಿದಾಗ ಆ ತಂಡದ ನಾಯಕ *ಹುಸೈನ್ (ರ) ರವರನ್ನು* ಕಂಡು ಅವರ ಹತ್ತಿರ ಹೇೂಗಿ ಕೇಳಿದ.. 

*ಯಾ.. ಹುಸೈನ್ (ರ)ರವರೇ... ತಾವೆತ್ತ ಯಾತ್ರೆ ಹೊರಟಿದ್ದೀರಿ.?*

ನಾವು ಕೂಫಕ್ಕೆ ಎನ್ನುತ್ತಾ, ಕೂಫಾದ ಜನತೆ ಮತ್ತು ಮುಸ್ಲಿಂ (ರ) ರವರು ಪತ್ರ ಬರೆದಿದ್ದ ವಿಷಯ ತಿಳಿಸಿದರು.

ಕೂಫದಲ್ಲಿ ನಡೆದ ಘಟನೆಗಳೆಲ್ಲವನ್ನೂ ಹುಸೈನ್ (ರ)ರವರಿಗೆ ವಿವರಿಸಿದ ಆ ತಂಡದ ನಾಯಕ ಹೇಳಿದರು...

*ಪ್ರಿಯ ಹುಸೈನ್ (ರ)ರವರೇ... ತಮಗೆ ಪತ್ರ ಬರೆದ ಮುಸ್ಲಿಂ ಇಬ್ನು ಉಹೈದ್ (ರ)ರಾಗಲೀ ಮತ್ತು ಅವರಿಗೆ ವಾಸ್ತವ್ಯ ಕಲ್ಪಿಸಿದ ಹಾನಿಯಾ (ರ)ರವರಾಗಲೀ ಇಂದು ಜೀವಂತವಿಲ್ಲ. ಸಕಾಲದಲ್ಲಿ ಕೂಫದ ಜನತೆಯಿಂದ ಅಗತ್ಯ ನೆರವು ದೊರೆಯದ ಕಾರಣ ಯಝೀದ್'ನ ಕಿಂಕರನಾದ ಉಬೈದ್ ಅವರನ್ನು ಕೊಂದಿದ್ದಾನೆ. ಮಾತ್ರವಲ್ಲ ಮುಸ್ಲಿಂ (ರ) ಎರಡು ಮಕ್ಕಳನ್ನೂ ಸಹ ನಿರ್ದಯೆಯಿಂದ ವಧಿಸಿದ್ದಾರೆ..*

ಅದರಿಂದ್ದ ನೀವು ಕೂಫದತ್ತ ಹೇೂಗದೆ ಮಕ್ಕಾಕ್ಕೆ  ಹಿಂದಿರುಗುವುದು ಉತ್ತಮ ಎಂದು ಸಲಹೆ ನೀಡಿದರು.

ಆಗ *ಹುಸೈನ್ (ರ)* ಕೇಳಿದರು.. ಆ ಮಕ್ಕಳನ್ನು ಸಹ ಅವರು ಬಿಡಲಿಲ್ಲವೇ...?

ಇಲ್ಲ ನಿರ್ದಯಿಯಾದ ಹಂತಕನೊಬ್ಬ ಆ ಮಕ್ಕಳನ್ನು ಬಹು ಕ್ರೂರವಾಗಿ ತಲೆ ಕಡಿದು ಕೊಂದಿದ್ದಾನೆ.

ಆಗ ಡೇರೆಯೊಳಗೆ ಹೇೂದ
ಹುಸೈನ್ (ರ)ರವರು... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡  ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 2⃣8⃣
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
☔☔☔☔☔☔☔☔☔

ನಂತರ ಮುಹಮ್ಮದ್ (ರ) ರವರ ತಲೆಯನ್ನೂ ಕತ್ತರಿಸಿ ಆ ಪಾತ್ರೆಯಲ್ಲಿ ಹಾಕಿಕೊಂಡು ದಾರುಲ್ ಇಮಾರ್'ಗೆ ಹೋದ ಅಬ್ದುಲ್ಲ ನುಅಮಾನ್ ಇಬ್ನು ಬಶೀರ್ (ರ) ರನ್ನು ಕರೆದು ಮಕ್ಕಳ ತಲೆಗಳನ್ನು ತೋರಿಸುತ್ತಾ ಹೇಳಿದ.... ⬇

 *"ಆ ಮಕ್ಕಳ ಕತೆಯನ್ನು ನಾನು ಮಗಿಸಿದೆ"*

ಅಲ್ಲಾಹನನ್ನು ಆರಾಧಿಸುತ್ತಾ ಅವನ ರಸೂಲ್ ಕರೀಂ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರನ್ನು ಅನುಸರಿಸುತ್ತಾ ಅಹ್ಲ್'ಬೈತನ್ನು ಪ್ರಾಣಸಮವಾಗಿ ಪ್ರೀತಿಸುತ್ತಿದ್ದ *ನುಅ್'ಮಾನ್ ಇಬ್ನು ಬಶೀರ್ (ರ)* ಅಹ್ಲ್'ಬೈತಿನ ಕರುಳ ಕುಡಿಗಳಾದ ಆ ಎರಡು ಮುದ್ದು ಕಂದಮ್ಮಗಳ ತಲೆ ಕಂಡೊಡನೆ ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತರು.

ಅಷ್ಟರಲ್ಲಿ ಹೊರ ಬಂದ ಉಬೈದ್ ಮಕ್ಕಳ ತಲೆ ಕಂಡು ದಂಗಾಗಿ ಹೇೂದವನು, ತಲೆ ಮೇಲೆ ಕೈಯಿಟ್ಟು ಲೇ.. ದುಷ್ಟಾ... ಆ ಮಕ್ಕಳ ತಲೆ ಕಡಿಯಲು ನಿನಗೆ ಮನಸ್ಸಾದರೂ ಹೇಗೆ ಬಂತು? ಎಂದು ಕೇಳಿದ.

ಆಗ ಅಬ್ದುಲ್ಲ ಆ ವಿಷಯ ಹಾಗಿರಲಿ ಈ ಮಕ್ಕಳ ತಲೆಗೆ ಘೇೂಷಿಸಿದ್ದ ಸಾವಿರ ದೀನಾರ್ ಕೊಡಿ ಎಂದ.

ಆಗ ಉಬೈದ್ ಹೇಳಿದ..

*ಹೇ ದುಷ್ಟಾ ಮಕ್ಕಳನ್ನು ತಂದೊಪ್ಪಿಸಿದವರಿಗೆ ಸಾವಿರ ದೀನಾರ್ ಕೊಡುತ್ತೇನೆ ಎಂದು ನಾನು ಹೇಳಿದ್ದೆನೇ ಹೊರತು ಕೊಲ್ಲಲಿಕ್ಕಲ್ಲ.*

ಎನ್ನುತ್ತಾ ಮಾತು ಮುಂದುವರೆಸಿದ ಉಬೈದ್...

*ಈ ಮಕ್ಕಳನ್ನು ಮುಂದಿಟ್ಟು ಹುಸೈನ್ (ರ)ರವರು "ಯುದ್ಧದಿಂದ ಹಿಂದೆ ಸರಿಯದಿದ್ದರೆ ಈ ಮಕ್ಕಳನ್ನು ಕೊಲ್ಲುತ್ತೇನೆಂದು ಬೆದರಿಸಿ ಅವರನ್ನು ಹಿಮ್ಮೆಟ್ಟಿಸುವುದಾಗಿತ್ತು ನನ್ನ ಉದ್ದೇಶ. ಆಗ ಖಂಡಿತಾ ಅವರು ಯುದ್ಧದಿಂದ ಹಿಂದೆ ಸರಿಯುತ್ತಿದ್ದರು. ಈ ಮಕ್ಕಳನ್ನು ಕೊಂದು ಆ ಅವಕಾಶವನ್ನೂ ನೀನು ಮಣ್ಣುಪಾಲು ಮಾಡಿದೆ ಎಂದ ರೇೂಷದಿಂದ.*

ಆದರೆ ಮದ್ಯದ ಅಮಲಿನಲ್ಲಿದ್ದ ಅಬ್ದುಲ್ಲ ಇದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ ಮತ್ತೊಮ್ಮೆ ಹೇಳಿದ...

*"ಏನಾದರಾಗಲಿ ನನಗೆ ಆ ಸಾವಿರ ದೀನಾರನ್ನು ಕೊಟ್ಟು ಬಿಡಿ.*

ಮದ್ಯದ ಅಮಲು ತಲೆಗೇರಿರುವ ಈ ದುಷ್ಟನೊಂದಿಗೆ ಮಾತನಾಡಿ ಪ್ರಯೋಜನವಿಲ್ಲವೆಂದು ಭಾವಿಸಿದ ಉಬೈದ್ ಹೇಳಿದನು "ಸರಿ ಸ್ವಲ್ಪ ತಾಳು ಕೊಡುತ್ತೇನೆ" ಎನ್ನುತ್ತಾ ಒಳ ಹೇೂದ ಉಬೈದ್, ಸಾವಿರ ದೀನಾರ್'ಗಳ ಥೈಲಿಯನ್ನು ಎಡಗೈಯಲ್ಲೂ ಬಲಗೈಯ್ಯಲ್ಲೊಂದು ಖಡ್ಗವನ್ನೂ ಹಿಡಿದುಕೊಂಡು ಬಂದು ಹಣವನ್ನು ಅವನ ಮುಂದೆ ಚಾಚಿದನು.

ಹಣ ಪಡೆಯಲಿಕ್ಕಾಗಿ ಅಬ್ದುಲ್ಲ ಎರಡು ಕೈಯನ್ನು ಮುಂದೆ ಚಾಚುತ್ತಾ ಮುಂದಡಿ ಇಡುತ್ತಿದ್ದಂತೆ...

*ತಗೇೂ...* ಎನ್ನುತ್ತಾ ಖಡ್ಗವನ್ನು 🗡 ಬೀಸಿ ಅವನ ತಲೆ ಹಾರಿಸಿದ. ಹಾಗೆ ಸಾವಿರ ದೀನಾರಿಗಾಗಿ ಮೂರು ಜೀವಗಳನ್ನು ಬಲಿ ಪಡೆದಿದ್ದ ದುಷ್ಟ ಅಬ್ದುಲ್ಲ ಹೆಣವಾಗಿ ನೆಲಕ್ಕೊರಗಿದನು.

ನಂತರ ಉಬೈದ್...

*ಸೈನಿಕರನ್ನು ಕಳುಹಿಸಿ ಆ ಮಕ್ಕಳ ಮೃತ ಶರೀರವನ್ನು ಹುಡುಕಿಸಿ ಗೌರವಪೂರ್ವಕವಾಗಿ ದಫನ್ ಕಾರ್ಯ ನೆರೆವೇರಿಸಿದನು.*

(ಆದರೆ ಆ ಮಕ್ಕಳೊಂದಿಗೆ ಉಬೈದ್ ತೋರಿದ ಕರುಣೆ ನಂತರ ಅವನ ಗುಣ ನಡತೆಗಳಲ್ಲಿ ಕಂಡು ಬರಲಿಲ್ಲ.)

ಮುಸ್ಲಿಂ (ರ) ಮತ್ತು ಅವರ ಇಬ್ಬರು ಮಕ್ಕಳನ್ನು  ಮತ್ತು ಅವರಿಗೆ ಅಭಯ ನೀಡಿದ ಹಾನಿಯಾ (ರ) ರವರನ್ನು ಉಬೈದುಲ್ಲಾಹಿ ಇಬ್ನು ಝಿಯಾದ್ ವಧಿಸಿರುವ ಸಂಗತಿಯ ಕುರಿತು *ಹುಸೈನ್ (ರ) ರವರಿಗೆ* ಯಾವುದೇ ಮಾಹಿತಿಯೂ ತಲುಪಿರಲಿಲ್ಲ.

ಹುಸೈನ್ (ರ)ರವರ ಪ್ರತಿನಿಧಿಯಾಗಿ ಮಕ್ಕಳೊಂದಿಗೆ ಕೂಫಕ್ಕೆ ತೆರಳಿದ್ದ ಮುಸ್ಲಿಂ ಇಬ್ನು ಉಹೈಲ್ (ರ) ರವರು
ಬರೆದಿದ್ದ ಪತ್ರವನ್ನು ನೇೂಡಿದ *ಹುಸೈನ್ (ರ) ರವರು* ತಮ್ಮ ಪರಿವಾರದೊಂದಿಗೆ ಮುಹರ್ರಂ ತಿಂಗಳಿನಲ್ಲಿ ಕೂಫಕ್ಕೆ ಯಾತ್ರೆ ಹೊರಡಲು ತೀರ್ಮಾನಿಸಿದರು.

ಹಾಗೆ ಹುಸೈನ್ (ರ)ರವರ ಕುಟುಂಬದ ಸದಸ್ಯರು, ಮತ್ತಿತರರನ್ನೊಳಗೊಂಡ ಯಾತ್ರಾ ಸಂಘವು ಯಾತ್ರೆಯ ಸಿದ್ಧತೆಯಲ್ಲಿರುವಾಗ
ಹುಸೈನ್ (ರ)ರವರ (ತಾಯಿಯ ಹೆಸರಿನ) ಮಗಳಾದ ಫಾತಿಮತ್ ಝಹ್ರ (ರ)ರಿಗೆ ಜ್ವರ ಬಾಧಿಸಿತ್ತು.

ಕೂಫ ಎಂಬ ವಂಚಕರ ನಾಡಿಗೆ ತೆರಳುತ್ತಿರುವುದರಿಂದ ತಮ್ಮ ಈ ಯಾತ್ರೆ ಎಲ್ಲಿಗೆ ತಲುಪೀತು ಮತ್ತು ಯಾವ ಕ್ಷಣದಲ್ಲಿ ಏನಾದೀತು ಎಂದೊಂದೂ ತಿಳಿಯದ ಗೊತ್ತು ಗುರಿಯಿಲ್ಲದಂತಹ
ಈ ಯಾತ್ರೆಗೆ ಅನಾರೇೂಗ್ಯ ಪೀಡಿತಳಾದ ಮಗಳನ್ನು ಕರೆದೊಯ್ಯಲು *ಹುಸೈನ್ (ರ)ರವರ* ಮನಸ್ಸು ಒಪ್ಪಲಿಲ್ಲ.

ಹಾಗಾಗಿ *ಹುಸೈನ್(ರ)* ಮಗಳ ಬಳಿ ಹೇಳಿದರು...

*ಮಗಳೇ....*
 *ನಾವು ಕೂಫಕ್ಕೆ ಹೋಗುತ್ತಿದ್ದೇವೆ. ನಿನ್ನ ಆರೇೂಗ್ಯ ಸರಿಯಿಲ್ಲದಿರುವುದರಿಂದ ನೀನು ಸಯ್ಯಿದತುನಾ ಬೀವಿ ಉಮ್ಮು ಸಲಮ (ರ) ರವರ ಜೊತೆ ಇರು..!*

ನಿನ್ನ ಜ್ವರ ವಾಸಿಯಾಗುತ್ತಿದ್ದಂತೆಯೇ ಬಂದು ನಿನ್ನನ್ನೂ ನಾವು ಕರೆದೊಯ್ಯುತ್ತೇವೆ ಎಂದರು.

ಆದರೆ.. ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 2⃣7⃣
**********************
*صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *وَعَلَى آلِ سَيِّدِنَا مُحَمَّدٍ*
 *وَبَارِكْ وَسَلِّمْ عَلَيْه*
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

ಪತಿ ಅಬ್ದುಲ್ಲನ ಮಾತು ಕೇಳಿ ಅಧೀರರಾದ ತುವಾಅ(ರ) ಕಂಬನಿ ಮಿಡಿಯುತ್ತಾ ಹೇಳಿದರು.. ⬇

 ಮುದ್ದು ಮಕ್ಕಳೇ... ಹೀಗಾದೀತೆಂದು ನಾನು ನಿರೀಕ್ಷಿಸಲಿಲ್ಲ. ಆದ್ದರಿಂದ ನನ್ನನ್ನು ಕೊಂದ ಬಳಿಕವೂ ಈ ದುಷ್ಟ ನಿಮ್ಮನ್ನು ಆ ಉಬೈದ್'ನಿಗೆ ಒಪ್ಪಿಸಿದರೆ ಅಹ್ಲ್'ಬೈತಿನ ಕುಡಿಗಳಾದ ನೀವು ನಾಳೆ ಅಲ್ಲಾಹನ ನ್ಯಾಯಾಲಯದಲ್ಲಿ ನಿಮ್ಮ ಈ ತಾಯಿಯ ವಿರುದ್ಧ ಸಾಕ್ಷ್ಯ ಹೇಳದಿರಿ ಮಕ್ಕಳೇ..! ಎನ್ನುತ್ತಾ.. ಮಕ್ಕಳನ್ನು ಬಿಗಿದಪ್ಪಿ ಬಿಕ್ಕಿ ಬಿಕ್ಕಿ ಅಳುತ್ತಾ ಅಬ್ದುಲ್ಲನ ಕಡೆ ತಿರುಗಿ ಕೊನೆಯದಾಗಿಯೆಂಬಂತೆ ತುವಾಅ(ರ) ಹೇಳಿದರು,

*ಪ್ರಿಯರೇ... ಮಕ್ಕಳಿಲ್ಲದ ನಮಗೆ ಅಲ್ಲಾಹನೇ ಕರುಣಿಸಿದ ಸೌಭಾಗ್ಯವಿದೆಂದು ಭಾವಿಸಿ ಈ ಮಕ್ಕಳನ್ನು ನಾವು ಸಂರಕ್ಷಿಸಿ ಪೇೂಷಿಸಿ ಬೆಳೆಸೇೂಣ. ಹಾಗಾಗಿ ದಯವಿಟ್ಟು ಬಿಟ್ಟು ಬಿಡಿ ಎನ್ನುತ್ತಾ ಈಗಲಾದರೂ ಆತನ ಮನ ಕರಗೀತೆಂಬ ಆಶಾಭಾವನೆಯಿಂದ ಆಸೆಗಣ್ಣಿನಿಂದ ಅಂಗಾಲಾಚುತ್ತಾ ಬೇಡಿದರು*

ಆಗ ಮಕ್ಕಳಂತೂ ಭಯದಿಂದ ಬೆದರಿ ಕಂಪಿಸುತ್ತಾ ​ತುವಾಅ(ರ)ರವರ ಹಿಂದೆ ನಿಂತಿದ್ದವು.

ಇಲ್ಲ... ತುವಾಅ(ರ) ಎಷ್ಟು ಪರಿಪರಿಯಾಗಿ ಬೇಡಿದರೂ ಮದ್ಯದ ಅಮಲಿನಲ್ಲಿದ್ದ ಕಟು ಹೃದಯಿಯಾದ ಅಬ್ದುಲ್ಲನ ಮನಸ್ಸು ಕರಗಲೇ ಇಲ್ಲ.

ತುವಾಅ(ರ)ರನ್ನು ತಳ್ಳಿ ಮತ್ತೊಮ್ಮೆ ಮಕ್ಕಳನ್ನು ಎಳೆದೊಯ್ಯಲು ಅಬ್ದುಲ್ಲ ಶ್ರಮಿಸಿದಾಗ ಅಡ್ಡ ನಿಂತ ತುವಾಅ(ರ)ರವರ
ಕೊರಳಿನತ್ತ ಖಡ್ಗವನ್ನು ಬೀಸಿಯೇ ಬಿಟ್ಚ... 🗡

*ಮಕ್ಕಳನ್ನು ಪ್ರೀತಿಯಿಂದ ಸ್ನಾನ ಮಾಡಿಸಿ ಕೈತುತ್ತು ತಿನ್ನಿಸಿ, ಲಾಲಿಸಿ ಮುದ್ದಿಸುತ್ತಾ ತನ್ನ ಕೊನೆಯುಸಿರಿನ ತನಕವೂ ಆ ಮಕ್ಕಳ ಸಂರಕ್ಷಣೆಗಾಗಿ ಅಂಗಾಲಾಚುತ್ತಿದ್ದ ಆ ಮಹಾ ತಾಯಿ ಕೊನೆಗೂ ತನ್ನಿಂದ ಆ ಮಕ್ಕಳನ್ನು ರಕ್ಷಿಸಲಾಗಲಿಲ್ಲವಲ್ಲ ಎಂಬ ಅಸಹಾಯಕತೆಯಿಂದ ಕುಸಿದು ಬಿದ್ದು ಇಹಲೇೂಕದಿಂದ ನಿರ್ಗಮಿಸಿದರು.*
*ಇನ್ನಲಿಲ್ಲಾಹ್.....* 😰

ತಂದೆಯನ್ನು ಕಳೆದುಕೊಂಡು ತಾಯಿಯಿಂದಲೂ ದೂರಾಗಿ ಜೀವ ಭಯದಿಂದ ಕಂಪಿಸುತ್ತಾ ಅಪರಿಚಿತವಾದ ನಾಡಿನಲ್ಲಿ ಪ್ರೀತಿಯಿಂದ ಕಣ್ಣರೆಪ್ಪೆಯಂತೆ ಸಂರಕ್ಷಣೆ ನೀಡಿದ್ದ ಏಕೈಕ ಆಶಾಕಿರಣವಾಗಿದ್ದ ತುವಾಅ(ರ) ಕುಸಿದು ಬೀಳುತ್ತಿದ್ದಂತೆ ಜಂಘಾಬಲವೇ ಉಡುಗಿ ಹೇೂದಂತಾದ ಆ ಮಕ್ಕಳು ಅಸಹಾಯಕತೆಯಿಂದ ಅಳಲಾರಂಭಿಸಿದವು.

ಜೀವನ ಪರ್ಯಂತ ತನ್ನ ಸುಖ, ದುಃಖಗಳಲ್ಲಿ ಒಂದಾಗಿ ದೇಹವೆರಡಾದರೂ ಮನಸೊಂದೇ ಎಂಬಂತೆ ತನ್ನೊಂದಿಗೆ ಬದುಕಿ ಬಾಳ ಬೇಕಾಗಿದ್ದ ಬಾಳ ಸಂಗಾತಿಯನ್ನೇ ತನ್ನ ಹಠ ಸಾಧನೆಗಾಗಿ ಕೊಚ್ಚಿ ಕೊಂದ ಕಟು ಹೃದಯಿಯ ಮುಂದೆ ಆ ಅಮಾಯಕ ಕಂದಮ್ಮಗಳ ಅಸಹಾಯಕತೆ ಮತ್ತು ಮಾನಸಿಕ ತೊಳಲಾಟಕ್ಕೆಲ್ಲಿದೆ ಬೆಲೆ?

ರಕ್ಷಣೆಯ ಕೊನೆಯ ಆಶಾಕಿರಣವೂ ಕೈಬಿಟ್ಟು ಹೇೂದಾಗ ಅಸಹಾಯಕತೆಯಿಂದ ಕಂಗಾಲಾಗಿದ್ದ ಆ ಎರಡು ಮುದ್ದು ಕಂದಮ್ಮಗಳನ್ನು ಎಳೆದೊಯ್ದು ಕಾಡಿನ ನಡುವೆಯಿರುವ ಮರವೊಂದಕ್ಕೆ ಕಟ್ಟಿ ಹಾಕಿ ಹೇೂದ ಅಬ್ದುಲ್ಲ, ಒಂದು ದೊಡ್ಡ ಪಾತ್ರೆಯೊಂದಿಗೆ ಬಂದು
ಆ ಪಾತ್ರೆಯನ್ನು ಅಸಹಾಯಕರಾಗಿದ್ದ ಆ ಮಕ್ಕಳ ಎದುರಿಗಿಟ್ಟು ಹೇಳಿದ...

ಇದನ್ನು ನೋಡಿದಿರಾ...? ಇದು ನಾಳೆಯಿಂದ ನಾನು ಮನಸೇೂ ಇಚ್ಚೆ ಮದ್ಯಪಾನ ಮಾಡಲಿರುವ ಪಾತ್ರೆ. ಅದಕ್ಕಿರುವ ದಾರಿ ನಿಮ್ಮ ಎರಡು ತಲೆಗಳು ಎನ್ನುತ್ತಾ...

ಹನ್ನೊಂದು ವರ್ಷ ಪ್ರಾಯದ ಅಹ್ಲ್'ಬೈತಿನ ಕಂದಮ್ಮವಾದ ಇಬ್ರಾಹಿಂ (ರ)ರನ್ನು ಎಳೆದೊಯ್ದು ಆಗ ಆ ಮಗು ಬೇಡ ಬೇಡ ನನ್ನನ್ನು ಕೊಲ್ಲಬೇಡಿ. ನಮ್ಮನ್ನು ಬಿಟ್ಟು ಬಿಡಿ ಎಂದು ಅಂಗಾಲಾಚಿತು. ಆ ಮಕ್ಕಳ ದೀನ ರೇೂದನಕ್ಕೆ ಕಿವಿಗೊಡದ ಅಬ್ದುಲ್ಲ ಮದ್ಯದ ಆ ಪಾತ್ರೆಗೆ ಆ ಮಗುವಿನ ತಲೆಯನ್ನಿಟ್ಟು...

ಒಂಬತ್ತು ವರ್ಷ ಪ್ರಾಯದ ಮುಹಮ್ಮದ್ (ರ) ಭಯಾತಂಕದಿಂದ ಅಣ್ಣಾ... ಅಣ್ಣಾ.. ಎನ್ನುತ್ತಾ ಅಸಹಾಯಕತೆಯಿಂದ ಅರಚುತ್ತಿರುವಾಗಲೇ ಆ ಮಗುವಿನ ಕಣ್ಮುಂದೆಯೇ ಪ್ರಾಣಿಯನ್ನು ದ್ಸಬಹ್ ಮಾಡುವಂತೆ ಇಬ್ರಾಹಿಂ (ರ)ರವರ ತಲೆ ಕತ್ತರಿಸಿದ.

(ದುನಿಯಾ ಎಂದರೇನೆಂದೇ ಅರಿಯದ ಆ ಮಗುವಿನ ಒಡ ಹುಟ್ಟಿದ ಒಡನಾಡಿಯ ತಲೆಯನ್ನು ಕಣ್ಮುಂದೆಯೇ ಕತ್ತರಿಸುವಾಗ ಆ ಎಳೆ ಹೃದಯ ಅದೆಷ್ಟು ನೊಂದಿರಬಹುದು?)

ನಂತರ ಮುಹಮ್ಮದ್ (ರ)ರವರ ತಲೆಯನ್ನೂ ಕತ್ತರಿಸಿ ಆ ಪಾತ್ರೆಯಲ್ಲಿ ಹಾಕಿಕೊಂಡು  *ದಾರುಲ್ ಇಮಾರ್'* ಗೆ ಹೇೂದ ಅಬ್ದುಲ್ಲ *ನುಅ್'ಮಾನ್ ಇಬ್ನು ಬಶೀರ್ (ರ)* ರನ್ನು ಕರೆದು ಮಕ್ಕಳ ತಲೆಗಳನ್ನು ತೇೂರಿಸುತ್ತಾ ಹೇಳಿದ....

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
✳ *ವಹ್ಹಾಬಿಝಮನ್ನು ಅದರ ಆಶಯ ಸಮೇತ ವಿರೇೂದಿಸಿ ಹಿಮ್ಮೆಟ್ಟಿಸಿದ, ಇಂದು ಜೀವಿಸಿರುವ ಹಾಗೂ ಇತ್ತೀಚೆಗೆ ವಫಾತ್ತ್ ಆಗಿರುವ ವಿಶ್ವ ವಿಖ್ಯಾತರಾದ ಕೆಲ ಇಸ್ಲಾಮಿಕ್ ವಿದ್ವಾಂಸರು* ✳
**********************
✍ ಗಫೂರ್ ಬಾಯಾರ್
🔖🔖🔖🔖🔖🔖🔖🔖🔖

0⃣1⃣ *ಅಲಿ ಜುಮುಅ ಮುಹಮ್ಮದ್ ಅಬ್ದುಲ್ ವಹಾಬ್:*

1952ರ ಮಾರ್ಚ್ 03ಕ್ಕೆ ಜನನ:
2003 ಸೆಪ್ಟಂಬರ್ 28 ರಿಂದ ಈಜಿಪ್ಟಿನ ಗ್ರ್ಯಾಂಡ್ ಮುಫ್ತಿಯಾಗಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ 50 ಮುಸ್ಲಿಮರಲ್ಲಿ ಒಬ್ಬರಾಗಿ 2010ರಲ್ಲಿ  ಆಯ್ಕೆಯಾದರು.

50ಕ್ಕಿಂತ ಹೆಚ್ಚು ಗ್ರಂಥಗಳನ್ನು ರಚಿಸಿದ ಇವರು
ಭಯೋತ್ಪಾದನೆಗೂ, ತೀವ್ರವಾದಕ್ಕೂ ವಿರುದ್ದವಾಗಿ ಕಠಿಣ ನಿಲುವು ತಾಳಿದವರಾಗಿದ್ದಾರೆ.

 "ಇಖ್'ವಾನುಲ್ ಮುಸ್ಲಿಮೂನ್" (ಭಾರತದಲ್ಲಿ ಜಮಾತೆ ಇಸ್ಲಾಮೀ ಎಂದು ಅರಿಯಲ್ಪಡುವ) ಎಂಬ ಅಲ್ಲಿಯ ಉಗ್ರಗಾಮೀ ಸಂಘಟನೆಯು  ಈಜಿಪ್ಟಿನಲ್ಲಿ ಅಧಿಕಾರಕ್ಕೇರುವ ಸಲುವಾಗಿ ಮಾತ್ರ ಉಪಯೋಗಿಸುವ ಒಂದು ನಾಮವಾಗಿದೆ.
ಅದು ಧರ್ಮ ಅಲ್ಲವೆಂದೂ ಇಸ್ಲಾಮಿನ ರಾಜಕೀಯ ನೀತಿ ಮಾತ್ರ ಎತ್ತಿ ತೋರಿಸುವ ಇಖ್'ವಾನ್'ನ ನಿಲುವು ಅಪಾಯಕಾರಿ ಎಂದೂ ಸಾರಿ ಹೇಳುತ್ತಿದ್ದರು.

ಫಿಖ್ಹ್'ನಲ್ಲಿ ಶಾಫಿಈ  ಹಾಗೂ ಅಖೀದ'ದಲ್ಲಿ ಅಶ್ಅರಿಯ್ಯ ಮದ್'ಹಬ್ ಆಗಿದ್ದರು.

0⃣2⃣ *Dr: ಮುಹಮ್ಮದ್ ಸಈದ್ ಬೂತ್ವಿ (ನ:ಮ)*

1927ರಲ್ಲಿ ಕುರ್ದಿ ವಂಶಜರಾಗಿ ತುರ್ಕಿಯ ಬೌತ್ವಾನ್ ದ್ವೀಪನಲ್ಲಿ ಜನಿಸಿದರು. 2004ರಲ್ಲಿ ಅಂತಾರಾಷ್ಟ್ರೀಯ ಇಸ್ಲಾಮಿಕ್ ವ್ಯಕ್ತಿತ್ವಕ್ಕೆ ಇರುವ ದುಬೈ ಇಂಟೆರ್ನ್ಯಾಷನಲ್ ಖುರ್ಆನ್ ಅವಾರ್ಡ್ ವಿಜೇತರಾಗಿದ್ದಾರೆ.

ಕರ್ಮಧಾರೆ ಶಾಫಿಈ' ಮದ್'ಹಬ್ ಹಾಗೂ ವಿಶ್ವಾಸಧಾರೆ ಅಶ್ಅರಿಯ್ಯ ಮದ್'ಹಬ್ ಆಗಿದ್ದರು.

"ಅಲ್ಲಾ ಮದ್ಹಬಿಯ್ಯ ಅಕ್ಬರು ಬಿದಅತ್ತಿಲ್ ತುಹದ್ದಿದು ಶರೀಅತ್ತಲ್ ಇಸ್ಲಾಮಿಯ್ಯಾ" ( ಮದ್ಹಬ್ ನಿರಾಕರಣೆ ಇಸ್ಲಾಮಿಕ್ ಶರೀಅತ್ತನ್ನು ಹಣಿಯುವ ಅತೀ ದೊಡ್ಡ ನೂತನವಾದ) ಅಸ್ಸಲಫಿಯ್ಯ ಮರ್ಹಲತ್ತುಲ್ ಸಮನಿಯ್ಯ ವ ಲೈಸತ್ತ್ ಮದ್ಹಬಲ್ ಇಸ್ಲಾಮಿ ಮುಂತಾದ 60ರಷ್ಟು ಗ್ರಂಥಗಳನ್ನು ಬರೆದಿದ್ದಾರೆ.

ಸಿರಿಯಾದ ರಾಜಧಾನಿಯಾದ ಡಮಸ್ಕಸ್'ನ ವಿಶ್ವ ವಿದ್ಯಾಲಯದ ಕುಲ್ಲಿಯತ್ತು ಶರೀಅತ್ತ್'ನಲ್ಲಿ ಅಖೀದ ಮೇಧಾವಿಯಾದ ಬೂತ್ವಿ (ನ:ಮ)ಯವರು, ಅಲ್ಲಿರುವ ಇಖ್'ವಾನಿಗಳ ಮತ್ತು ಕ್ರಾಂತಿಕಾರಿಗಳ ಶತ್ರುವಾದರು.

ಇವರನ್ನು ಇತ್ತೀಚಿಗೆ ಅಂದರೆ 2017ರಲ್ಲಿ  ಮಸೀದಿಯಲ್ಲಿ ಖುರ್ಆನ್ ಉಪನ್ಯಾಸ ನೀಡುತ್ತಿದ್ದಾಗ ವಹ್ಹಾಬಿ ಆಶಯದ IS  ಭಯೋತ್ಪಾದಕರು ಕೊಂದರು.  ಇನ್ನಾಲಿಲ್ಲಾಹ್..

0⃣3⃣ *ಶೈಖ್ ಯೂಸುಫ್ ಹಾಶಿಂ ರಿಫಾಈ ಕುವೈಟ್.*

ಕುವೈಟ್'ನ ಪ್ರಮುಖ ವಿದ್ವಾಂಸರ ಕುಟುಂಬದಲ್ಲಿ 1932ರಲ್ಲಿ ಜನ್ಮ ತಾಳಿದರು.

ಕುವೈಟ್‌ ಮಂತ್ರಿಮಂಡಲದಲ್ಲಿ ವಿವಿಧ ಖಾತೆಗಳನ್ನು ವಹಿಸಿದ್ದರು.
"ತಸವ್ವುಫು ಮತ್ತು ಸೂಫಿಸಂ ಅನ್ನು ಖುರ್ಆನ್ ಹಾಗೂ ಸುನ್ನತ್ತಿನ ಆಧಾರದಲ್ಲಿ, ಶೈಖ್ ಅಹ್ಮದ್ ರಿಫಾಈ (ರ) ರವರ ಚರಿತ್ರೆ, ಅಹ್ಲುಸುನ್ನದ ಸ್ಥಂಭ. ಮೊದಲಾದ ಗ್ರಂಥಗಳನ್ನು ರಚನೆ ಮಾಡಿದರು.

0⃣4⃣ *ಉಮರ್ ಹಫಿದ್, ಯಮನ್*

1967ರ ಮೇ 27ಕ್ಕೆ ಯಮನಿನ ಹಳರ್ ಮೌತ್ತ್'ನ ಹತ್ತಿರವಿರುವ ತರಿಮಿಲ್ ಜನ್ಮಗೊಂಡರು.

ಇವರು ಧಾರ್ಮಿಕ ರಂಗದಲ್ಲಿ ಕಾರ್ಯಾಚಿಸುತ್ತಿರುವ ಸಯ್ಯಿದ್ ಮನೆತನದವರಾಗಿದ್ದಾರೆ.
ಇವರನ್ನು "ಅಲ್ ಹಬೀಬ್" ಎಂದಾಗಿದೆ ಕರೆಯಲ್ಪಡುವುದು.

ತರಿಮಿನ "ದಾರುಲ್ ಮುಸ್ತ್ವಫಾ" ಎಂಬ ಸಂಸ್ಥೆಯ ಸ್ಥಾಪಕರು.
ಕರ್ಮಧಾರೆಯಲ್ಲಿ ಶಾಫಿಈ, ವಿಶ್ವಾಸಧಾರೆಯಲ್ಲಿ ಅಶ್ಅರಿಯ್ಯ ಮಧ್ಹಬ್ ಅನುಸರಿಸುವವರಾಗಿದ್ದಾರೆ.
ಹಲವಾರು ಗ್ರಂಥಗಳನ್ನು ರಚಿಸಿದ ಅವರು ಕೇರಳ, ಮರ್ಕಝ್'ಗೂ ಭೇಟಿ ನೀಡಿದ್ದಾರೆ.

0⃣5⃣ *ಹಬೀಬ್ ಅಲಿ ಜಿಫ್ರಿ, ಯಮನ್*

ವಿಧ್ವಾಂಸರಾದ ಹಬೀಬ್ ಅಲಿ ಜಿಫ್ರಿ ತಂಙಳರು ನಬಿ ﷺ ರವರ ಕುಟುಂಬ ಪರಂಪರೆಯಲ್ಲಿ 1972 ಎಪ್ರಿಲ್'ನಲ್ಲಿ ಸೌದಿಯ ಜಿದ್ದದಲ್ಲಿ ಜನಿಸಿದರು.

ಬಾ ಅಲವಿ ಸೂಫಿ ಸರಣಿಯ ಪ್ರಚಾರಕರಾದ ಇವರು ಹಿಜಾಸ್, ಯಮನ್, ಈಜಿಪ್ಟ್, ಸಿರಿಯ, ಮೊರೊಕ್ಕೊ, ಭಾರತ, ಮೊದಲಾದ ರಾಷ್ಟ್ರಗಳ 300ರಷ್ಟು ವಿದ್ವಾಂಸರುಗಳ ಶಿಷ್ಯತ್ವ ಮತ್ತು ಇಜಾಸಿಯ್ಯತ್ತುಗಳನ್ನು ಸ್ವೀಕರಿಸಿದ್ದಾರೆ.

 ಇವರು ಅಬುಧಾಬಿಯ ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಿಗೆ ನೇತೃತ್ವ ನೀಡುತ್ತಿರುವ "ತ್ವಾಬ ಫೌಂಡೇಶನ್"ನ ಸಂಸ್ಥಾಪಕರು.  ಯಮನ್ ತರಿಮಿನಲ್ಲಿರುವ "ದಾರುಲ್ ಮುಸ್ತ್ವಫ" ಬೋರ್ಡ್ ಸದಸ್ಯರೂ ಆಗಿದ್ದಾರೆ.

2009ರಲ್ಲಿ ಜಾರ್ಜ್'ಟೌನ್ ಯೂನಿವರ್ಸಿಟಿ ನಡೆಸಿದ ವಿಶ್ವದ 500 ಮುಸ್ಲಿಂ ಪ್ರಮುಖರ ಸರ್ವೆಯಲ್ಲಿ 37ನೇ ಸ್ಥಾನದಲ್ಲಿದ್ದರು.

ಅಹ್ಲುಸುನ್ನದ ಪ್ರಚಾರಕ್ಕಾಗಿ ಆಧುನಿಕ ವ್ಯವಸ್ಥೆಗಳನ್ನು, ಟೆಲಿವಿಷನ್ ಕಾರ್ಯಕ್ರಮಗಳು ಅಲಿ ಜಿಫ್ರಿಯವರ ನಾಯಕತ್ವದಲ್ಲಿ ನಡೆಯುತ್ತದೆ.

ಫಿಖ್ಹ್'ನಲ್ಲಿ ಶಾಫಿಈ ಮಧ್ಹಬ್, ವಿಶ್ವಾಸದಲ್ಲಿ ಅಝ್ಹರಿ ಮಧ್ಹಬ್ ಅನುಸರಿಸುವವರಾಗಿದ್ದಾರೆ.

0⃣6⃣ *ಶೈಖ್ ಅಬ್ದುಲ್ಲಾ ಬಿನ್ ಬಯ್ಯಾ.*

1935ರಲ್ಲಿ ಮೌರಿತಾನಿಯ ಎಂಬ ದೇಶದ ಪ್ರಮುಖ ವಿದ್ವಾಂಸ ಕುಟುಂಬವೊಂದರಲ್ಲಿ ಜನಿಸಿದರು.

ಸೌದಿಯ ಕಿಂಗ್ ಅಬ್ದುಲ್ ಅಝೀಝ್ ಯೂನಿವರ್ಸಿಟಿ ಅಧ್ಯಾಪಕರಾಗಿದ್ದ ಬಿನ್ ಬಯ್ಯಾ, ಜಿದ್ದಾದಲ್ಲಿ ವಾಸವಾಗಿದ್ದರು.

ಫಿಖ್ಹ್'ನಲ್ಲಿ ಮಾಲಿಕಿ ಮದ್ಸ್'ಹಬ್'ಅನ್ನೂ ಅಖೀದಾದಲ್ಲಿ ಅಶ್ಹರಿಯ್ಯಯ ಮದ್ಸ್'ಹಬ್'ಅನ್ನೂ ಸ್ವೀಕರಿಸಿದವರಾಗಿದ್ದಾರೆ.

ಮೌರಿತ್ತಾನಿಯನ್ ಸಂಸತ್ತಿನಲ್ಲಿ ಇವರು ವಿದ್ಯಾಭ್ಯಾಸ ಮತ್ತು ಕಾನೂನು ಮಂತ್ರಿಯಾಗಿದ್ದರು.

0⃣7⃣ *ಅಹ್ಮದ್ ಮುಹಮ್ಮದ್ ಅಹ್ಮದ್ ತ್ವಯ್ಯಿಬ್*

1946 ಜನವರಿ 6ಕ್ಕೆ ಇವರ ಜನನ.
2010 ಮಾರ್ಚ್ 19ಕ್ಕೆ 43ನೇ ಶೈಖುಲ್ ಅಝ್ಹರಾಗಿ ನೇಮಕಗೊಂಡರು.

ಹುಸ್ನಿ ಮುಬಾರಕ್'ನ ವಿರುದ್ಧ ಈಜಿಪ್ಟ್'ನಲ್ಲಿ ನಡೆದ ಕ್ರಾಂತಿಯಲ್ಲೂ ನಂತರ ನಡೆದ ರಾಜಕೀಯ ಬದಲಾವಣೆಯಲ್ಲೂ ಇವರ ನಿಲುವುಗಳು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿತು.

ಇವರೂ ಸಹ ಫಿಖ್ಹ್'ನಲ್ಲಿ ಮಾಲಿಕಿಯೂ, ಅಖಿದದಲ್ಲಿ ಅಶ್ಅರಿಯಾ ಮದ್ಹಬ್ ಅನುಸರಿಸಿದವರಾಗಿದ್ದಾರೆ.

0⃣8⃣ *ಅಬ್ದುಲ್ಲಾ ಫದ್'ಅಬ್:*

ಮಕ್ಕಾದ ಅಶ್ಅರಿಯ್ಯ ಹಾಗೂ ಶಾಫಿಈ ವಿದ್ವಾಂಸರೂ, ಪಿತಾಮಹಾನರೂ, ಹಸನ್ ಫದ್'ಅಬ್ (ಖ:ಸಿ) ಎಂಬವರು 1892ರಲ್ಲಿ ಹರಮಿನಲ್ಲಿ ಶಾಫಿಈ ಮದ್ಹಬ್'ನ ಇಮಾಮರಾಗಿದ್ದರು.


1921ರಲ್ಲಿ ಮಹಾನರು ತಮ್ಮ ಮನೆಯಲ್ಲಿ ದರ್ಸ್ ಪ್ರಾರಂಭಿಸಿ, 1979ರ ತನಕ ಅಂದರೆ ತಮ್ಮ ಮರಣದವರೆಗೂ ಆ ದರ್ಸ್ ಅನ್ನು ಮುನ್ನಡೆಸುತ್ತಿದ್ದರು.

 ಹಸನ್ ಫದ್'ಅಖ್ (ಖ:ಸಿ) ರವರ ಮರಣಾನಂತರ ಆ ದರ್ಸಿನ ಉಸ್ತುವಾರಿ ವಹಿಸಿಕೊಂಡ
ಪುತ್ರ ಮುಹಮ್ಮದ್ ಫದ್'ಅಖ್'ವರು, 2001ರ ತನಕ ನಡೆಸಿದರು. ಈಗ ಮುಹಮ್ಮದ್ ಫದ್'ಅಖ್'ರವರ ಮಗನಾದ ಅಬ್ದುಲ್ಲಾ ಫರ್'ಆಖ್'ನವರು ಆ ಜ್ಞಾನ ವೇದಿಕೆಗೆ ನೇತೃತ್ವ ನೀಡುತ್ತಿದ್ದಾರೆ.

0⃣9⃣ *ಅಖ್ತರ್ ರಝಾ ಖಾನ್ ಬರೇಲ್ವಿ:*

ಅಹ್ಮದ್ ರಝಾ ಖಾನ್ (ರ)ರವರ ಪುತ್ರರಾದ ಹಾಮಿದ್ ರಝಾ ಖಾನ್ (ರ) ಅವರ ಪೌತ್ರರಾಗಿ 1943 ನವೆಂಬರ್ 23ಕ್ಕೆ ಉತ್ತರ ಪ್ರದೇಶದ ಬರೇಲ್ವಿಯಲ್ಲಿ ಜನಿಸಿದರು.

ಜೋರ್ಡನ್'ನ ರಾಯಲ್ ಇಸ್ಲಾಮಿಕ್ ಸೊಸೈಟಿ ನಡೆಸಿದ ಸರ್ವೆಯ ಪ್ರಕಾರ ವಿಶ್ವಾದ್ಯಂತ ಪರ್ಯಟನೆ ನಡೆಸಿ ಇಸ್ಲಾಮಿನ ಬೆಳವಣಿಕೆಗೆ ಪಾತ್ರವಹಿಸಿದ ಮುಸ್ಲಿಂ ನಾಯಕರಲ್ಲಿ ಅಖ್ತರ್ ರಝಾ ಖಾನ್'ರವರು 26ನೇ ಸ್ಥಾನದಲ್ಲಿದ್ದರು.

1963-1966 ರ ಕಾಲದಲ್ಲಿ ಜಾಮಿಉಲ್ ಅಝ್ಹರ್'ನಿಂದ ಕಲಿತು ಹೊರಬಂದ ಮಹಾನವರಿಗೆ ಜಗತ್ತಿನ ನಾನಾ ಭಾಗಗಳಲ್ಲಿ ಶಿಷ್ಯ ವೃಂದಗಳು ಇದ್ದಾರೆ...

1⃣0⃣ *ಶೈಖ್ ಅಬೂಬಕ್ಕರ್ ಅಹ್ಮದ್*

1939 ಮಾರ್ಚ್ 22ಕ್ಕೆ ಕಲ್ಲಿಕೋಟೆ ಜಿಲ್ಲೆಯ ಕಾಂತಪುರಂದಲ್ಲಿ ಜನಿಸಿದರು.

ಇವರು ಭಾರತದ ಸುನ್ನೀ ಮುಸ್ಲಿಂ ಸಮುದಾಯದ ಓರ್ವ ಪ್ರಮುಖ ನಾಯಕರಾಗಿದ್ದಾರೆ.
ಕಲ್ಲಿಕೋಟೆ ಜಿಲ್ಲೆಯ ಕಾರಂದೂರ್'ನಲ್ಲಿ ನೆಲೆಗೊಳ್ಳುವ ಮರ್ಕಝ್ ಎಂಬ ವಿದ್ಯಾಭ್ಯಾಸ ಸಂಸ್ಥೆಯ ಸ್ಥಾಪಕರೂ, ಚಾನ್ಸಲರ್ ಕೂಡಾ ಆಗಿದ್ದಾರೆ.

ಸುನ್ನೀ ಜಮ್'ಇಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿಯೂ,
ಆಲ್ ಇಂಡಿಯಾ ಸುನ್ನೀ ಸಂಘಟನೆಯ ಪ್ರಧಾನ ಕಾರ್ಯದರ್ಶಿಯೂ,  ಇಸ್ಲಾಮಿಕ್ ವಿದ್ಯಾಭ್ಯಾಸ ಬೋರ್ಡ್ ಆಫ್ ಇಂಡಿಯಾದ ಅಧ್ಯಕ್ಷರೂ,  ಮುಸ್ಲಿಂ ಜಮಾಅತ್ತ್' ಸಂಘಟನೆಯ ಅಧ್ಯಕ್ಷರೂ ಆಗಿ‌ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕರ್ಮಧಾರೆದಲ್ಲಿ ಶಾಫಿಈ ಮದ್ಹಬ್, ವಿಶ್ವಾಸಧಾರೆಯಲ್ಲಿ ಅಶ್'ಅರಿ ಮದ್ಹಬ್ ಪಾಲಿಸುವವರಾಗಿದ್ದಾರೆ.

ಉಸ್ತಾದರಿಗೆ ಬಿರುದಾರಿಗಳಾದ ಹನ್ನೆರಡು ಸಾವಿರ ಶಿಷ್ಯಂದಿರುಗಳ ವೃಂದವಿದೆ.
ದೇಶ ವಿದೇಶಗಳಲ್ಲಿರುವ ಅವರ ಸ್ಥಾಪನೆಗಳಲ್ಲಿ ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ...

*ಸರ್ವಶಕ್ತನಾದ ಅಲ್ಲಾಹನು ಇಂದು ಜೀವಿಸಿರುವ ಎಲ್ಲಾ ಸುನ್ನೀ ಪಂಡಿತರಿಗೂ ಆಫಿಯತಿನೊಂದಿಗೆ ದೀರ್ಘಾಯುಷ್ಯ ಕರುಣಿಸಲಿ ಹಾಗು ವಫಾತ್ತ್ ಆದವರ ಬರ್ಝಕಿ ಜೀವನ  ಸುಖಕರವಾಗಲಿ ಆಮೀನ್...*

https://www.facebook.com/IslamicwayKannadapage/

Monday, March 26, 2018

*ರಜಬ್ ನಲ್ಲೊಂದು ಅದ್ಭುತ ಯಾತ್ರೆ*

   *🍀ರಜಬ್ ಯಾತ್ರೆ🍀*
       *🌺ಭಾಗ 03🌺*

*ಯಾತ್ರೆಯ ಸಿದ್ದತೆ...*
ತನ್ನ ಸೃಷ್ಠಿಗಳ ಪೈಕಿ ಅತ್ಯುನ್ನತರಾದ ಪ್ರವಾದಿ (ಸ.ಅ)ರನ್ನು ತನ್ನ ಬಳಿ ಕರೆ ತರಲು ತೀರ್ಮಾನಿಸಿದ ಅಲ್ಲಾಹನು ಅದಕ್ಕಾಗಿ ವಿಶಿಷ್ಠ ಸೌಕರ್ಯಗಳನ್ನೂ ತಾಯಾರು ಮಾಡಿದನು.
*ಬುರಾಕ್* ಎಂಬ ಸ್ಪಷೆಲ್ ವಾಹನವನ್ನು ಮಲಕುಗಳ ನೇತಾರ *ಜಿಬ್ರೀಲ್ (ಅ) ರಲ್ಲಿ* ಕೊಟ್ಟು ತನ್ನ ಹಬೀಬರನ್ನು  ಕರೆತರಲು ಹೇಳಿದ.

*ಏನಿದು ಸ್ಪಷೆಲ್ ವಾಹನ..*
ಹೌದು ನೆಬಿ(ಸ.ಅ) ಇಸ್ರಾಹ್ ನ
ರಾತ್ರಿಯಂದು ಸಂಚರಿಸಲು ಅಲ್ಲಾಹು ಕಳುಹಿಸಿದ ವಿಶಿಷ್ಟ
ವಾಹನವಿದು.ಈ ವಾಹನದ
ಬಗ್ಗೆ ಹದೀಸ್ ನಲ್ಲಿ ಈ ರೀತಿ
ಪರಿಚಯಿಸಲಾಗಿದೆ.

*"ಸಾಮಾನ್ಯ ಕತ್ತೆಗಿಂತ ಸ್ವಲ್ಪ*
*ದೊಡ್ಡದಾಗಿರುವ, ಬಿಳಿ ಬಣ್ಣದ ಮೃಗವಿದು ದೃಷ್ಟಿ ತಲುಪುವ* *ಸ್ಥಳದಷ್ಟು ದೂರಕ್ಕೆ ಅದು ಕಾಲಿಡುತ್ತದೆ."(ಬುಖಾರಿ-ಬಾಬುಲ್ ಮಿಹ್ ರಾಜ್)*

ಈ ಹದೀಸ್ ನ್ನು ವ್ಯಾಖ್ಯಾನಿಸುತ್ತಾ ಇಮಾಂ ಇಬ್ನು ಹಜರ್ (ರ)ಹೇಳುತ್ತಾರೆ.

*"ದೃಷ್ಟಿ ತಲುಪುವ ಸ್ಥಳದಲ್ಲಿ ಅದು ಕಾಲಿಡುತ್ತದೆ ಎಂಬ ಪರಾಮರ್ಶೆಯು ಅದರ ವೇಗವನ್ನು ಸೂಚಿಸುತ್ತದೆ"*
(ಫತುಹುಲ್ ಬಾರಿ 9-73)

ಸಿಡಿಲು ಮಿಂಚಿನ ವೇಗದಲ್ಲಿ
ಸಂಚರಿಸಲು ಅದಕ್ಕೆ ಸಾಧ್ಯವಿರುವುದರಿಂದ *'ಮಿಂಚು'* ಎಂದು ಅರ್ಥ ಬರುವ *'ಬರ್ ಕ್'* ಎಂಬ ಧಾತುವಿನಿಂದ ಉದ್ಭವಗೊಂಡದ್ದಾಗಿದೆ
*"ಬುರಾಕ್"* ಎಂಬ ಹೆಸರು.
ಗತ ಕಾಲದ ಪ್ರವಾದಿಗಳೆಲ್ಲರೂ
ಬುರಾಕನ್ನು ವಾಹನವಾಗಿ ಬಳಸಿದ್ದಾಗಿ ಹದೀಸ್ ಗ್ರಂಥಗಳಲ್ಲಿದೆ.
*(ದಲಾಯಿಲುನ್ನುಬುವ-2-135,ತಿರ್ಮುದ್ಸಿ5-30,ಫತ್ ಹುಲ್ ಬಾರಿ)*

*ಮುಂದುವರಿಯುವುದು...*
🍀🍀🍀🍀🍀🍀🍀🍀🍀
*🍀✍🏼ತಂಜೀದ್ ಅಮ್ಮೆಂಬಳ🍀*                                🍀🍀🍀🍀🍀🍀🍀🍀🍀

*ಈ ಯಾತ್ರೆ ನಡೆದದ್ದು ಯಾವಾಗ?ಎಲ್ಲಿಂದ?*
*ಆತೀ ಶೀಘ್ರದಲ್ಲಿ ನಿಮ್ಮೆಡೆಗೆ ಭಾಗ ನಾಲ್ಕು ಇನ್ಶಾಅಲ್ಲಾ.*

📚📚📚📚📚📚📚📚📚
*ವ್ಯಾಪಾರ ಮಾಡುವಾಗ ಆಣೆ ಹಾಕುವ ಅಭ್ಯಾಸವನ್ನು ತ್ಯಜಿಸಿರಿ.ಇದರಲ್ಲಿ ತಾತ್ಕಾಲಿಕ ಪ್ರಯೋಜನ ಕಂಡರೂ ಅಂತಿಮ ಫಲ ನಾಶವಾಗಿರುತ್ತದೆ.*
      *(ಹದೀಸ್*)
📚📚📚📚📚📚📚📚📚
*ಮುಹಮ್ಮದ್ ಮುಸ್ತಫಾ* *ಸಲ್ಲಲ್ಲಾಹು ಅಲೈಹಿ ವಸಲ್ಲಮ*ರ ಬಗ್ಗೆ ಕಿರು ಪರಿಚಯ

ಹೆಸರು:—ಮುಹಮ್ಮದ್ (ಸ.ಅ)
ತಂದೆ:—ಅಬ್ದುಲ್ ಮುತ್ತಲಿಬರ ಮಗ ಅಬ್ದುಲ್ಲ (ರ.ಅ)
ಗೋತ್ರ:—ಕುರೈಶಿ
ವಂಶ:—ಹಾಶಿಂ
ತಾಯಿ:-ವಹಬ್ ನ ಮಗಳು ಆಮಿನಾ ಬೀವಿ(ರ.ಅ)
ಜನ್ಮ ಸ್ಥಳ:—ಮಕ್ಕತುಲ್ ಮುಕರ್ರಮ

 *ಜನನ ಸಮಯ* :—ರಬೀವುಲ್ ಅವ್ವಲ್ 12 ಸುಬ್ಹಿಗಂತ ಸ್ವಲ್ಪ ಮುಂಚೆ(ಕ್ರಿ.ಶ 567 ಎಪ್ರಿಲ್)

 *ಶುಶ್ರೂಶೆ:* —ಔಫಿನ ಮಗಳು ಶಿಫಾಅ್

 *ಪರಿಚರಣೆ:* —ಬರಕ ರ.ಅ(ಉಮ್ಮು ಐಮನ್)

 *ಮೊಲೆಯುಣಿಸಿದವರು:* —ಸುವೈಬತ್ತುಲ್ ಅಸ್ಲಮಿಯ್ಯ
ಹಲೀಮತ್ತು ಸಅದಿಯ್ಯ(ರ.ಅ)

 *ಶರೀರ ಪ್ರಕೃತಿ*
ಮುಖ:—ಬಿಳಿ ಮಿಶ್ರಿತ ಕೆಂಪು ಬಣ್ಣ
ಕಣ್ಣು:—ಕಪ್ಪು
ಕೂದಲು :—ಕಪ್ಪು
ಉದ್ದ:—ಹೆಚ್ಚಿಗೆ ಉದ್ದನೂ ಅಲ್ಲ ಗಿಡ್ಡನೂ ಅಲ್ಲ
ಪೌರತ್ವ:—ಅರಬಿ ಮಕ್ಕಿ
ಪ್ರವಾದಿತ್ವ ಲಭಿಸಿದ ಸಮಯ:—ರಮಳಾನ್ 27 ಹಿಜ್ರಾಕೆ 13 ವಷ೯ ಮುಂಚೆ

         *ಪ್ರವಾದಿತ್ವ ಗುರುತು:* —1.ಎರಡು ಬುಜಗಳಲ್ಲಿ ಮುದ್ರಣ
2.ಬಿಸಿಲಿಗೆ ಮೋಡ ನೆರಳು ನೀಡುವುದು.
ವಫಾತ್ ಸಮಯ& ಸ್ಥಳ:—ರಬೀವುಲ್ ಅವ್ವಲ್12 ಹಿಜ್ರಾ 10ನೇ ವಷ೯

      *ತಂದೆಯ ಪರಂಪರೆ* :—1.ಅಬ್ದುಲ್ಲ, 2.ಅಬ್ದುಲ್ ಮುತ್ತಲಿಬ್,3.ಹಾಶಿಂ,4.ಅಬ್ದು ಮನಾಫ್,5.ಕುಸಯ್ಯ್,6.ಕಿಲಾಬ್,7.ಮುರ್ರತ್,8.ಕಅಬ್,9.ಲುಅಯ್ಯ್,10.ಗಾಲಿಬ್,11.ಫಿಹ್ರ್,12.ಮಾಲಿಕ್,13.ನಳ್ರ್,14.ಕಿನಾನ,15.ಕುಸೈಮ,16.ಮುದ್ರಿಕ,17.ಇಲ್ಯಾಸ್,18.ಮುಲರ್,19.ನಿಸಾರ್,20.ಮಅದ್ದ್,21.ಅದ್ನಾನ್

     *ತಾಯಿಯ ಪರಂಪರೆ:* —1.ಆಮಿನಾ 2.ವಹಬ್ 3. ಅಬ್ದು ಮನಾಫ್ 4.ಸಹ್ರ, 5.ಕಿಲಾಬ್,6.ಮುರ್ರತ್,7.ಕಅಬ್,8.ಲುಅಯ್ಯ್,9.ಗಾಲಿಬ್,10.ಫಿಹ್ರ್,11.ಮಾಲಿಕ್,12.ನಳ್ರ್,13.ಕಿನಾನ,14.ಕುಸೈಮ,15.ಮುದ್ರಿಕ,16.ಇಲ್ಯಾಸ್,17.ಮುಲರ್,18.ನಿಸಾರ್,19.ಮಅದ್ದ್,20.ಅದ್ನಾನ್

     *ತಂದೆಯ ಸಹೋದರರು:* —1.ಹಾರಿಸ್ 2.ಖುಸಂ 3.ಅಬೂ ತ್ವಾಲಿಬ್ 4.ಝುಬೈರ್ 5.ಅಬ್ದುಲ್ ಕಅಬ 6.ಹಜ್ಲ್ 7.ಲ್ವಿರಾರ್ 8.ಮುಖವ್ವಿಂ 9.ಅಬೂ ಲಹಬ್ 10.ಗೈದಾಕ್ 11.ಅಬ್ಬಾಸ್(ರ.ಅ) 12.ಹಂಝ( ರ.ಅ )

   *ತಂದೆಯ ಸಹೋದರಿಯರು*
1.ಸ್ವಫಿಯ(ರ) 2.ಉಮೈಮ 3.ಆತಿಕ(ರ) 4.ಉಮ್ಮು ಹಕೀಂ 5.ಅರ್ವಾ 6.ಬರ್ರ

      *ತಾಯಿಯ ಸಹೋದರರು:* —
1.ಅಸ್ವದ್ 2.ಅಬ್ದುಲ್ಲ

        *ಮೊಲೆ ಕುಡಿ ಬಂದದ ಸಹೋದರರು:—*
     *ಸುವೈಬತುಲ್ ಅಸ್ಲಮೀ ಬಾಗದಂದ*
1.ಜಹ್ಶಿನ ಮಗ ಅಬ್ದುಲ್ಲಾ(ರ),  2.ಅಬ್ದುಲ್ ಮುತ್ತಲಿಬರ ಮಗ ಹಂಝ( ರ) 3.ಅಬುಲ್ ಅಸದ್ ರ ಮಗ ಅಬೂ ಸಲಮ 4. ಸುವೈಬರ ಮಗ ಮಸ್ ರೂರ್

    *ಹಲೀಮ ಬೀವಿಯ ಭಾಗದಿಂದ*
1.ಲಂರತ್, 2.ಅನೀಸತ್  3.ಹುದಫತ್

   *ಮೊಲೆ ಕುಡಿ ಬಂದದ ತಂದೆ* :—ಹಾರಿಸ್

        *ಪತ್ನಿಯಂದಿರು*
1.ಖುವೈಲಿದ್ ನ ಮಗಳು ಖದೀಜ(ರ)
2.ಝಂಅ ರ ಮಗಳು ಸೌದ(ರ)
3.ಸಿದ್ದೀಕ್(ರ) ರ ಮಗಳು ಆಯಿಶ(ರ)
4.ಉಮರ್(ರ) ರ ಮಗಳು ಹಫ್ಸಾ(ರ)
5.ಖುಝೈಮರ ಮಗಳು ಝೈನಬಾ(ರ)
6.ಅಬೂ ಉಮಯ್ಯರ ಮಗಳು ಹಿಂದ್(ರ)(ಉಮ್ಮು ಸಲಮ)
7.ಜಹ್ ಶ್ ರ ಮಗಳು ಝೈನಬಾ(ರ)
8.ಹಾರಿಸ್ ರ ಮಗಳು ಜುವೈರಿಯಾ(ರ)
9.ಅಬೂ ಸುಫ್ಯಾನ್(ರ) ರ ಮಗಳು ರಂಲ(ರ)
10.ಹಯ್ಯ್ ರ ಮಗಳು ಸ್ವಫಿಯ(ರ)
11.ಹಾರಿಸ್ ರ ಮಗಳು ಮೈಮೂನ(ರ)

      *ದಾಸಿಯರ ಪೈಕಿ ಪತ್ನಿ* :—
ಶಂಳೌರ ಮಗಳು ಮಾರಿಯತ್ತುಲ್ ಖಿಬ್ತಿಯ್ಯಾ(ರ)

         *ಮಕ್ಕಳು:—*
     *ಗಂಡು*
1.ಖಾಸಿಂ(ರ)
2.ಅಬ್ದುಲ್ಲಾ(ರ)
3.ಇಬ್ರಾಹೀಂ(ರ)

   *ಹೆಣ್ಣು*
1.ಝೈನಬಾ(ರ)
2.ರುಖಿಯ್ಯಾ(ರ)
3.ಉಮ್ಮು ಕಲ್ಸೂಂ(ರ)
4.ಫಾತಿಮಾ(ರ)

       *ಅಳಿಯಂದಿರು*
1.ಅಬುಲ್ ಆಸ್ ಬಿನ್ ರಬೀಅ(ರ)
2.ಉಸ್ಮಾನ್ ಬಿನ್ ಅಫ್ಫಾನ್(ರ)
3.ಅಲೀ ಬಿನ್ ಅಬೀ ತ್ವಾಲಿಬ್(ರ)

     *ಮೊಮ್ಮಕ್ಕಳು*

      ★ಗಂಡು
1.ಅಲೀ(ರ)
2.ಅಬ್ದುಲ್ಲಾ(ರ)
3.ಹಸನ್(ರ)
4.ಹಸೈನ್(ರ)
5.ಮಹ್ಸಿನ್(ರ)
     *ಹೆಣ್ಣು
6.ಉಮಾಮ(ರ)
7.ಉಮ್ಮು ಕುಲ್ಸೂಂ(ರ)
8.ಝೈನಬಾ(ರ)


       *ಗುಪ್ತ ಸಂರಕ್ಷಕರು:—*
 1.ಅಸದ್ ಬಿನ್ ಮಾಲಿಕ್(ರ) 2.ಹುದೈಫತ್ ಬಿನ್ ಯಮನ್(ರ) 3.ಫಾತಿಮಾ(ರ)

      *ಬರಹಗಾರರು:—*
 1.ಅಬೂಬಕ್ಕರ್ ಸಿದ್ದೀಕ್ 2.ಉಮರ್ ಬಿನ್ ಖತ್ತಾಬ್ 3.ಉಸ್ಮಾನ್ ಬಿನ್ ಅಫ್ಫಾನ್ 4. ಅಲೀ ಬಿನ್ ಅಬೀ ತ್ವಾಲಿಬ್ 5.ಉಸಾಮತ್ ಬಿನ್ ಝೈದ್ 6.ಖಾಲಿದ್ ಬಿನ್ ವಲೀದ್ 7.ಮುಆವಿಯತ್ ಬಿನ್ ಅಬೀ ಸುಫ್ಯಾನ್ 8.ಸಾಬಿತ್ ಬಿನ್ ಖೈಸ್ 9. ಖಾಲಿದ್ ಬಿನ್ ಸಈದ್ 10.ಮುಗೀರತ್ ಬಿನ್ ಶುಉಬ 11.ಝುಬೈರ್ ಬಿನ್ ಅವ್ವಾಂ 12.ಹಲ್ಲಲತ್ ಬಿನ್ ರಬೀಲ್ 13.ಅಲಾಅ್ ಬಿನ್ ಉಕುಬ 14.ಉಬಯ್ಯ್ ಬಿನ್ ಕಅಬ 15.ಅಬ್ದುಲ್ಲಾಹಿ ಬಿನ್ ಅರ್ಖಂ 16.ಅಮೀರ್ 17.ಅಬ್ದುಲ್ಲಾಹಿ ಬಿನ್ ಮಸ್ಊದ್ 18.ಝೈದ್ ಬಿನ್ ಸಾಬಿತ್ (ರ.ಅನ್ಹುಂ)

         *ಕವಿಗಳು*
1.ಹಸ್ಸಾನ್ ಬಿನ್ ಸಾಬಿತ್(ರ) 2.ಕಅಬ್ ಬಿನ್ ಝುಹೈರ್(ರ) 3. ಅಬ್ದುಲ್ಲಾಹಿ ಬಿನ್ ರವಾಹ(ರ)

      *ಯಾತ್ರೆ ಕವಿಗಳು*
1.ಅಬ್ದುಲ್ಲಾಹಿ ಬಿನ್ ರವಾಹ(ರ) 2.ಅಂಜಶ(ರ)

      *ವಿಧಿ ಕತ೯ರು*
 1. ಅಲೀ ಬಿನ್ ಅಬೀ ತ್ವಾಲಿಬ್(ರ) 2.ಮುಆದ್ ಬಿನ್ ಜಬಲ್(ರ)

    *ಇಮಾಮರು*
1.ಅಬೂಬಕ್ಕರ್ ಸಿದ್ದೀಕ್(ರ) 2.ಅಬ್ದುರ್ರಹ್ಮಾನ್ ಬಿನ್ ಔಫ್(ರ)

        *ಮುಅದ್ದಿನ್ ಗಳು*
 1.ಬಿಲಾಲ್ ಬಿನ್ ರಬಾಹ್(ರ)
2.ಅಬ್ಜುಲ್ಲಾಹಿ ಬಿನ್ ಉಮ್ಮಿ ಮಕ್ತೂಂ(ರ)
3.ಸಅದುಲ್ ಖುರಳ್(ರ)
4.ಅಬೂ ಮಹ್ದುರ(ರ)

       *ಅಂಗ ಸಂರಕ್ಷಕರು*
1.ಝುಬೈರ್ ಬಿನ್ ಅವ್ವಾಂ 2.ಅಬ್ಬಾದ್ ಬಿನ್ ಬಶ್ರ್ 3.ಅಬೂ ಅಯ್ಯೂ ಬುಲ್ ಅನ್ಸಾರಿ 4.ಸಅದ್ ಬಿನ್ ಮುಆದ್ 5.ಸಅದ್ ಬಿನ್ ಅಬೀ ವಕ್ಕಾಸ್ 6.
ಮುಹಮ್ಮದ್ ಬಿನ್ ಮಸ್ಲಮ 7.ಬಿಲಾಲ್ ಬಿನ್ ರಬಾಹ್ 8.ದಕ್ವಾನ್ ಬಿನ್ ಖೈಸ್ ( ರ.ಅನ್ಹುಂ)

       *ಖಜಾನೆ ಸಂರಕ್ಷಕರು*
1.ಅಬೂ ಉಬೈದತ್ ಬಿನ್ ಜರ್ರಾಹ್(ರ) 2.ಬಿಲಾಲ್ ಬಿನ್ ರಬಾಹ್(ರ) 3.ಮುಐಖೀಬ್(ರ)

       *ಆಯುಧ ಸಂರಕ್ಷಕರು*
1. ಮುಗೀರತ್ ಬಿನ್ ಶುಉಬ(ರ)
2.ಅಬೂ ತಲ್ಹ(ರ)
  ಸಂದೀಶ ವಾಹಕರು:— ಮುಗೀರತ್ ಬಿನ್ ಶುಉಬ(ರ)
  ಪಾದ ರಕ್ಷ ವಾಹಕರು:— ಅಬ್ದುಲ್ಲಾಹಿ ಬಿನ್ ಮಸ್ಹೂದ್(ರ)

      *ಪತಾಕೆ ವಾಹಕರು:—*
1.ಅಲೀ ಬಿನ್ ಅಬೀ ತ್ವಾಲಿಬ್(ರ) 2.ಝುಬೈರ್ ಬಿನ್ ಅವ್ವಾಂ(ರ) 3. ಸಅದ್ ಬಿನ್ ಉಬಾದ(ರ) 4.ಜಹ್ಫರ್ ಅಬೀ ತ್ವಾಲಿಬ್(ರ) 5. ಅಬ್ದುಲ್ಲಾಹಿ ಬಿನ್ ರವಾಹ(ರ)  6. .ಖಾಲಿದ್ ಬಿನ್ ವಲೀದ್(ರ)

       *ಬೆರಳಚ್ಚುಗಾರರು*
1. ಮುಐಖೀಬ್(ರ)

        *ವಾಹನಗಳು**
 ಕತ್ತೆ :1
ಕುದುರೆ:6
ಒಂಟೆ:8
ಆಯುಧಗಳು:6
ಪಲಿಜ:2
ಕುಂದ:3
ಸಣ್ಣ ಕುಂದ:6
ಬಿಲ್ಲು:5
 
 *ಪ್ರವಾದಿ ಗಳಲ್ಲಿ ನಬಿ ಸ.ಅ ಸ್ಥಾನ*
1.ಅಂತ್ಯ ಪ್ರವಾದಿ ಹಾಗೂ ಲೋಕದ ನೀತಾರ.
2.  5 ಉಲುಲ್ ಅಝ್ಮ್ಗಳಲ್ಲಿ ಪ್ರಥಮ ಸ್ಥಾನ.
3.ಖುರಾನಲ್ಲು ಹೆಸರು ಹೇಳಿದ 25 ಪ್ರವಾಜರಲ್ಲಿ ಒಬ್ಬರು.
4.ಅಲ್ಲಾಹನ 313 ಮುರ್ಸಲ್ ಗಳಲ್ಲಿ ಪ್ರಥಮ ಸ್ಥಾನ.
5.ಅಂತ್ಯ ಪ್ರವಾದಿ& ಲೋಕದ ನೇತಾರ.
  ................................