*ರಿಫಾಯೀ ಶೈಖ್ ರನ್ನು ಕಅಬಾ ತವಾಫ್ ಮಾಡಿತೇ?*
--------------------------------------------
📝 ಮುನೀರ್ ಸಖಾಫಿ,ಅಲ್ ಫುರ್ಖಾನೀ ಸಾಲೆತ್ತೂರು
____________________________
ರಿಫಾಈ ಶೈಖ್ ರವರು ದಫ್ ಬಾರಿಸುತ್ತಾ ಕಅಬಾ ತವಾಫ್ ಮಾಡುತ್ತಿರುವಾಗ ಮಕ್ಕಾದ ಜನರು ಅದನ್ನು ವಿರೋಧಿಸಿದರು.ಆಗ ರಿಫಾಈ ಶೈಖ್ ರವರು ತನ್ನ ಕೈಯಲ್ಲಿದ್ದ ದಫ್ಫನ್ನು ಕಅಬಾದ ಗೋಡೆಗೆ ಸಿಲುಕಿಸಿದರು.ಆಗ ಕಅಬಾ ಅವರನ್ನು ಸುತ್ತು ಬರಲಾರಂಭಿಸಿತು.ಆಗ ಅಲ್ಲಾಹನು ರಿಫಾಯೀ ಶೈಖ್ ರವರನ್ನು ಕರೆದು ಸಾಕು ಎಂದು ಹೇಳಿದನು.
(ಇದು ರಿಫಾಯೀ ಮಾಲೆಯ 3 ಗೆರೆಗಳ ಸಾರಾಂಶ)
ರಿಫಾಯೀ ಶೈಖ್ ರವರನ್ನು ಕಅಬಾ ತವಾಫ್ ಮಾಡಿದ್ದು ಸರಿಯೇ?
ಇದು ಅಂಗೀಕರಿಸಬಹುದೇ?
ಇದಕ್ಕೆ ಪುರಾವೆಯಿದೆಯೇ?
ಈ ಎಲ್ಲಾ ಸಂಶಯಗಳಿಗೆ ಉತ್ತರವನ್ನು ನೋಡೋಣ.
ಕಅಬಾ ಎಂದುವುದು ಅಲ್ಲಾಹನ ಸೃಷ್ಠಿಯಾಗಿದೆ.
ಅಲ್ಲಾಹನ ಸೃಷ್ಟಿಗಳನ್ನು ಒಂದು ಸ್ತಳದಿಂದ ಇನ್ನೊಂದು ಸ್ಥಳಕ್ಕೆ ಚಲಾಯಿಸಲು ಅಲ್ಲಾಹನಿಗೆ ಸಾಧ್ಯವಿದೆ ಎಂಬುವುದರಲ್ಲಿ ಯಾರಿಗೂ ಸಂಶಯವಿರಲಾರದು.
ಬೃಹತ್ ಗುಡ್ಡಗಳನ್ನು ಅಲ್ಲಾಹನು ಒಂದು ಕಡೆಯಿಂದ ಇನ್ನೊಂದು ಕಡೆಗೆ ನೀಗಿಸಿದ ಚರಿತ್ರೆಗಳು ಧಾರಾಳವಿದೆ.
ಅಲ್ಲಾಹನು ಹೇಳುತ್ತಾನೆ,
وَإِذْ أَخَذْنَا مِيثَٰقَكُم وَرَفَعْنَا فَوْقَكُمُ ٱلطُّورَ خُذُوا۟ مَآ ءَاتَيْنَٰكُم بِقُوَّةٍۢ وَٱذْكُرُوا۟ مَا فِيهِ لَعَلَّكُمْ تَتَّقُونَ(البقرة 63)
ನಿಮ್ಮ ಮೇಲೆ ‘ಥೂರ್’ ಬೆಟ್ಟವನ್ನು ಎತ್ತಿ ಹಿಡಿದು, ನಾವಿತ್ತ ಆದೇಶಗಳನ್ನು ಪರಿಶ್ರಮಪೂರ್ವಕ ಅನುಸರಿಸಿರಿ, ಅದರ ಸಾರವನ್ನು ಸ್ಮರಿಸಿಕೊಳ್ಳಿರಿ. ನೀವು ಧರ್ಮಾತ್ಮರಾಗುವಿರಿ’ ಎಂದು ನಿಮ್ಮಿಂದ ಧೃಢಪ್ರತಿಜ್ಞೆ ಪಡಕೊಂಡ ಸಂದರ್ಭ(ವನ್ನು ಸ್ಮರಿಸಿರಿ)
(ಅಲ್ ಬಖರ 63)
ಇದರ ವ್ಯಾಖ್ಯಾನದಲ್ಲಿ ಇಮಾಮ್ ಬೈಳಾವೀ ಬರೆಯುತ್ತಾರೆ,
ಪ್ರವಾದೀ ಮೂಸಾ ಅಲೈಹಿಸ್ಸಲಾಮ್ ರವರು ತೌರಾತ್ ನೊಂದಿಗೆ ಜನರೆಡೆಗೆ ಬಂದಾಗ ಅದರಲ್ಲಿರುವ ಕಠಿಣ ನಿಯಮಗಳನ್ನು ಪಾಲಿಸಲು ಜನರು ಹಿಂಜರಿದರು.ಆವಾಗ ಅಲ್ಲಾಹನು ಜಿಬ್ರೀಲರೊಂದಿಗೆ ಥೂರ್ ಪರ್ವತವನ್ನು ಅವರ ಮೇಲೆ ಎತ್ತಿ ಹಾಕುವಂತೆ ಆಜ್ಞಾಪಿಸಿದಾಗ ಅವರು ತೌರಾತ್ ಸ್ವೀಕರಿಸಿದರು.(1)
(ತಫ್ಸೀರ್ ಬೈಳಾವಿ1/85)
ಯಾರಿಗೂ ಅಲುಗಾಡಿಸಲು ಸಾಧ್ಯವಿಲ್ಲದ ಬೃಹತ್ ಬೆಟ್ಟವನ್ನು ಜನರ ಮೇಲೆ ಎತ್ತಿ ಹಿಡಿಯುವಂತೆ ಆಜ್ಞಾಪಿಸಿದ ಅಲ್ಲಾಹನಿಗೆ ಕ ಅಬಾ ವನ್ನು ರಿಫಾಯೀ ಶೈಖ್ ಗೆ ಸುತ್ತುವರಿಸಲು ಸಾಧ್ಯವಿಲ್ಲವೇ?
ಅದು ಅಸಾಧ್ಯವೆಂದು ನಂಬುವವನಾದರೆ ಆತನಗಿಗೆ ಅಲ್ಲಾಹನ ಮೇಲೆ ನಂಬಿಕೆಯಿಲ್ಲವೆಂದರ್ಥ.
----------------------------------------
*ಪ್ರವಾದೀ ಲೂತ್ ಅಲೈಹಿಸ್ಸಲಾಮ್ ರ ಜನತೆಗೆ ನೀಡಿದ ಶಿಕ್ಷೆಯ ಬಗ್ಗೆ ಅಲ್ಲಾಹನು ಈ ರೀತಿ ಹೇಳುತ್ತಾನೆ,*
فَلَمَّا جَآءَ أَمْرُنَا جَعَلْنَا عَٰلِيَهَا سَافِلَهَا وَأَمْطَرْنَا عَلَيْهَا حِجَارَةًۭ مِّن سِجِّيلٍۢ مَّنضُودٍۢ
ಹೀಗೆ ನಮ್ಮ ಆಜ್ಞೆ ಬಂದಾಗ ನಾವು ಆ ನಾಡನ್ನು ಬುಡಮೇಲು ಮಾಡಿಬಿಟ್ಟೆವು ಮತ್ತು ಅವರ ಮೇಲೆ ಬಿಸಿ ಕಲ್ಲುಗಳನ್ನು ಎಡೆಬಿಡದೆ ಮಳೆಗರೆದೆವು.
(ಸೂರ ಹೂದ್ 82)
ಇಮಾಮ್ ಬಗವೀ (ರ) ಬರೆಯುತ್ತಾರೆ,
5 ಪಟ್ಟಣಗಳನ್ನೊಳಗೊಂಡ ದೊಡ್ಡ ಊರಾಗಿತ್ತು ಅದು.4 ಲಕ್ಷ ಜನರು ವಾಸ ಮಾಡುತ್ತಿದ್ದ ಊರು.ಆ ಊರನ್ನು ಬುಡ ಮೇಲಾಗಿ ಅವರ ಮೇಲೆ ಹಾಕಿ ಅವರನ್ನು ನಾಶಪಡಿಸಲಾಯಿತು.(2)
(ಮಆಲಿಮುತ್ತಂಝೀಲ್ 4/193)
ಊರನ್ನೇ ಬುಡಮೇಲಾಗಿಸುವ ಅಲ್ಲಾಹನಿಗೆ ಕಅಬಾವನ್ನು ರಿಫಾಯೀ ಶೈಖ್ ಗೆ ಸುತ್ತಿಸಲು ಸಾಧ್ಯವಿಲ್ಲವೇ?
---------------------------------------------
ಚಂದ್ರನು ಹೋಳಾದ ಬಗ್ಗೆ ಖುರ್ ಆನ್ ಈ ರೀತಿ ಹೇಳುತ್ತದೆ.
وَٱنشَقَّ ٱلْقَمَرُ (سورةرالقمر 2)
ಚಂದ್ರನು ಹೋಳಾದನು.(ಅಲ್ ಖಮರ್ 2)
ಮಕ್ಕಾ ಖುರೈಶ್ ಗಳು ಪ್ರವಾದೀ ವರ್ಯರಲ್ಲಿ ಅಲ್ಲಾಹನು ಏಕನು ಎಂಬುವುದಕ್ಕೆ ಪುರಾವೆ ಕೇಳಿದಾಗ ಚಂದ್ರನನ್ನು ಎರಡು ಹೋಳು ಮಾಡುವ ಮೂಲಕ ಪುರಾವೆಯನ್ನು ತೋರಿಸಲಾಯಿತು.(3)
(ತಫ್ಸೀರು ತ್ವಬ್ರೀ 22/565)
ಚಂದ್ರನ ವ್ಯಾಸವು 3,474 ಕಿ.ಮೀ.ಗಳಿದೆ.
ಕಅಬಾದ ಉದ್ದ
12.86 ಮೀ (42 ಅಡಿ 2 ಇಂಚು)
ಅಗಲ
11.03 ಮೀ (36 ಅಡಿ 2 ಇಂಚು)
ಎತ್ತರ (ಗರಿಷ್ಠ)
13.1 ಮೀ (43 ಅಡಿ 0 ಇಂಚು)
ಕಅಬಾಗಿಂತ ಸಾವಿರಾರು ಪಟ್ಟು ಹೆಚ್ಚು ವಿಸ್ತೀರ್ಣವಿರುವ ಚಂದ್ರನನ್ನು ಹೋಳು ಮಾಡಿದ ಅಲ್ಲಾಹನಿಗೆ ಕಅಬಾವನ್ನು ಸುತ್ತಿಸಲು ಸಾಧ್ಯವಿಲ್ಲವೇ?
---------------------------------------
*ಹದೀಸುಗಳಲ್ಲಿ*
ಜಾಬಿರ್ (ರ)ವರದಿ,
ಒಮ್ಮೆ ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ವಿಸರ್ಜನೆ ಆವಶ್ಯಕ್ಕಾಗಿ ಒಂದು ಕಡೆ ತೆರಳಿದರು.ನಾನು ಅವರೊಂದಿಗೆ ನೀರಿನೊಂದಿಗೆ ತೆರಳಿದೆ.
ಆವಾಗ ಅಲ್ಲಿ ಮರೆಯಾಗಿ ಏನೂ ಇರಲಿಲ್ಲ.ಅಲ್ಲೇ ಎರಡು ಮರಗಳಿದ್ದವು.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಆ ಮರದ ಒಂದು ಗೆಲ್ಲನ್ನು ಹಿಡಿದು"ನನ್ನನ್ನು ನೀನು ಹಿಂಬಾಲಿಸು"ಎಂದು ಹೇಳಿದರು.ಆವಾಗ ಆ ಮರವು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಹಿಂಬಾಲಿಸುತ್ತಾ ಬರ ತೊಡಗಿತು.ನಂತರ ಇನ್ನೊಂದು ಮರದ ಬಳಿ ಹೋಗಿ ಅದೇ ರೀತಿ ಹೇಳಿದರು.ಆ ಮರ ಕೂಡಾ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಹಿಂಬಾಲಿಸುತ್ತಾ ಬಂತು.ಆ ಎರಡು ಮರದೊಂದಿಗೆ "ನೀವು ಅಂಟಿಕೊಳ್ಳಿರಿ"ಎಂದು ಹೇಳಿದಾಗ 2 ಮರವೂ ಪರಸ್ಪರ ಅಂಟಿಕೊಂಡಿತು.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ವಿಸರ್ಜೆನೆಯ ನಂತರ ಆ ಮರವು ಮೊದಲಿನಂತೆಯೇ ಬೇರ್ಪಟ್ಟು ನಿಂತಿತು.(4)
(ಸ್ವಹೀಹ್ ಮುಸ್ಲಿಮ್)
ದೂರಲ್ಲಿದ್ದ 2 ಮರಗಳನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಳಿ ಮರೆಯಾಗಿ ನಿಲ್ಲಿಸಿದ ಅಲ್ಲಾಹನಿಗೆ ರಿಫಾಯೀ ಶೈಖ್ ರಿಗೆ ಕ ಅಬಾ ತವಾಫ್ ಮಾಡಿಸಲು ಸಾಧ್ಯವಿಲ್ಲವೇ?
------------------------------------------
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಚಿಕ್ಕಪ್ಪ ಅಬೂ ತಾಲಿಬ್ ರೊಂದಿಗೆ ವ್ಯಾಪಾರಕ್ಕಾಗಿ ಶಾಮ್ ಗೆ ಹೋದಾಗ ದಾರಿ ಮಧ್ಯೆ ಪುರೋಹಿತರೊಬ್ಬರು ಅದ್ಭುತವನ್ನು ಹೇಳಿದ ಚರಿತ್ರೆ ಎಲ್ಲರಿಗೂ ತಿಳಿದಿದೆ.
ಇಮಾಮ್ ತಿರ್ಮುದಿ ಮತ್ತು ಹಾಕಿಮ್ (ರ) ವರದಿಯಲ್ಲಿ ಈ ರೀತಿ ಕಾಣಬಹುದು.
ಖುರೈಶ್'ಗಳು ಆ ಪುರೋಹಿತರೊಂದಿಗೆ ಈ ಮಗುವಿನ ಮಹತ್ವ ನಿಮಗೆ ಹೇಗೆ ತಿಳಿಯಿತು ಎಂದು ಕೇಳಿದಾಗ ಅವರು ಹೇಳಿದರು."ನೀವು ಈ ಮಗು(ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮ್)ವಿನೊಂದಿಗೆ ಬರುತ್ತಿದ್ದಾಗ ಎಲ್ಲಾ ಕಲ್ಲು ಮತ್ತು ಮರಗಳು ಸುಜೂದ್ ಮಾಡುವುದಾಗಿ ನಾನು ನೋಡಿದೆ.(5)
(ಹಾಕಿಮ್,ತುರ್ಮುದಿ)
ನಿರ್ಜೀವ ವಸ್ತುಗಳನ್ನು ಸುಜೂದ್ ಮಾಡಿಸಿದ ಅಲ್ಲಾಹನಿಗೆ ಕಅಬಾ ತವಾಫ್ ಮಾಡಿಸಲು ಸಾಧ್ಯವಿಲ್ಲವೇ?
------------------------------------------
ಇಬ್ನ್ ಉಮರ್ (ರ)ವರದಿ,
ನಾವು ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಒಂದು ಯಾತ್ರೆಯಲ್ಲಿದ್ದೆವು.
ಆವಾಗ ಅಹ್'ರಾಬಿಯೊಬ್ಬರು ಕಾಣ ಸಿಕ್ಕಿದರು.ನೀವು ಶಹಾದತ್ ಕಲಿಮ ಹೇಳುವಿರಾ ಎಂದು ಅವರೊಂದಿಗೆ ಪ್ರವಾದೀವರ್ಯರು ಕೇಳಿದಾಗ ನೀವು ಅಲ್ಲಾಹನ ಪ್ರವಾದೀ ಎಂಬುವುದಕ್ಕೆ ಪುರಾವೇ ಏನು? ಎಂದು ಒವರು ಕೇಳಿದಾಗ ಒಂದು ಮರವನ್ನು ತೋರಿಸಿ ಹೇಳಿದರು."ಈ ಮರವು ಸಾಕ್ಷಿಯಾಗಿದೆ."ಆ ಮರವನ್ನು ಪ್ರವಾದೀವರ್ಯರು ಸಮೀಪಕ್ಕೆ ಕರೆದಾಗ ಆ ಮರವು ಪ್ರವಾದೀ ವರ್ಯರ ಬಳಿ ನಿಂತು 3 ಸಲ ಶಹಾದತ್ ಕಲಿಮ ಹೇಳಿತು.ನಂತರ ಅದು ಬಂದಲ್ಲಿಗೆ ಹೋಗಿ ನಿಂತಿತು.(6)
(ವರದಿ ಇಮಾಮ್ ದಾರಿಮಿ 16)
ಮರವು ಒಂದು ಕಡೆಯಿಂದ ಬಂದು ಶಹಾದತ್ ಕಲಿಮ ಹೇಳಿ ಅದೇ ಸ್ಥಳಕ್ಕೆ ತೆರಳುವಂತೆ ಮಾಡಿದ ಅಲ್ಲಾಹನಿಗೆ ರಿಫಾಈ ಶೈಖ್ ರವರಿಗೆ ಕ ಅಬಾ ತವಾಫ್ ಮಾಡಿಸಲು ಸಾಧ್ಯವಿಲ್ಲವೇ?
-------------------------------------------
ಸ್ವಹಾಬೀ ಪ್ರಮುಖರಾದ ಸಹ್'ದ್ (ರ)ವಫಾತ್ ಆದಾಗ ಅಲ್ಲಾಹನ ಅರ್ಶ್ ನಡುಗಿತು(7)
(ಬುಖಾರಿ ,ಮುಸ್ಲಿಮ್ )
ಕಅಬಾ ಅಲ್ಲಾಹನ ಸೃಷ್ಠಿಯಾದಂತೆ ಅರ್ಶ್ ಅಲ್ಲಾಹನ ಅತೀ ದೊಡ್ಡ ಸೃಷ್ಠಿಯಾಗಿದೆ.ಅದು ವ್ಯಕ್ತಿಯೊಬ್ಬರ ಮರಣಕ್ಕಾಗಿ ನಡುಗಿದ್ದರೆ ಕಅಬಾ ರಿಫಾಯೀ ಶೈಖ್ ರಿಗೆ ತವಾಫ್ ಮಾಡಿದ್ದಕ್ಕೆ ಅದ್ಭುತವೇಕೆ?
ಅಲ್ಲಾಹನ ಅಂಬಿಯಾ ಮತ್ತು ಔಲಿಯಾಗಳಿಗೆ ಅಲ್ಲಾಹನು ಉನ್ನತ ಸ್ಥಾನಗಳನ್ನು ನೀಡಿ ಗೌರವಿಸಿದ್ದಾನೆ.
ಇಸ್ಲಾಮಿನ ಕುರಿತು ಕಲಿತವನಿಗೆ ಇದರಲ್ಲಿ ಅಚ್ಚರಿಯೇನೂ ಇಲ್ಲ.
ರಿಫಾಯೀ ಶೈಕ್ ರ ಪ್ರಸ್ತುತ ಘಟನೆ ಚರಿತ್ರೆಗಳಲ್ಲಿ ದಾಖಲಾದ ಸಂಗತಿಯಾಗಿದೆ.
ಇಮಾಮ್ ಸುಯೂತೀ ಬರೆಯುತ್ತಾರೆ,
ಅಲ್ಲಾಹನ ಔಲಿಯಾಗಳ ಪೈಕಿ ಹಲವರಿಗೆ ಕ ಅಬಾ ತವಾಫ್ ಮಾಡಿದ ಘಟನೆ ಪ್ರಸಿದ್ಧವಾಗಿದೆ.(8)
(ಅಲ್ ಹಾವೀ ಲಿಲ್ ಫತಾವಾ 1/257)
......................................
ಮೇಲಿನ ಬರಹದಲ್ಲಿ ಹೇಳಿದ ಹದೀಸ್ ಮತ್ತು ಉದ್ಧರಣಿಗಳನ್ನು ಈ ಕೆಳಗೆ ನೀಡುತ್ತಿದ್ದೇನೆ.
(1)
روي أن موسى عليه الصلاة والسلام لما جاءهم بالتوراة فرأوا ما فيها من التكاليف الشاقة كبرت عليهم وأبوا قبولها، فأمر جبريل عليه السلام فقلع الطور فظلله فوقهم حتى قبلوا.( تفسير بيضاوي1/85)
(2)وذلك أن جبريل عليه السلام أدخل جناحه تحت قرى قوم لوط المؤتفكات وهي خمس مدائن، وفيها أربعمائة ألف. وقيل: أربعة آلاف ألف، فرفع المدائن كلها حتى سمع أهل السماء صياح الديكة، ونباح الكلاب، فلم يُكفأ لهم إناءٌ ولم ينتبه نائمٌ، ثم قَلَبها فجعل عاليها سافلها.
(معالم التنزيل 4/193)
(3)وقوله ﴿وَانْشَقَّ الْقَمَرُ﴾ يقول جلّ ثناؤه: وانفلق القمر، وكان ذلك فيما ذُكر على عهد رسول الله ﷺ وهو بمكة، قبل هجرته إلى المدينة، وذلك أن كفار أهل مكة سألوه آية، فآراهم ﷺ انشقاق القمر، آية حجة على صدق قوله، وحقيقة نبوّته؛ فلما أراهم أعرضوا وكذبوا،
(تفسير الطبري 22/565)
(4)
عن جابر
سِرْنا مع رسولِ اللهِ صلَّى اللهُ عليه وسلَّم حتَّى نزَلْنا واديًا أَفْيَحَ فذهَب رسولُ اللهِ صلَّى اللهُ عليه وسلَّم يقضي حاجتَه واتَّبَعْتُه بإِداوةٍ مِن ماءٍ فنظَر رسولُ اللهِ صلَّى اللهُ عليه وسلَّم فلَمْ يَرَ شيئًا لِيستترَ به فإذا شجَرتانِ بشاطئِ الوادي فانطلَق رسولُ اللهِ صلَّى اللهُ عليه وسلَّم إلى إحداهما فأخَذ بغُصنٍ مِن أغصانِها فقال : ( انقادي علَيَّ بإذنِ اللهِ ) فانقادَتْ معه كالبعيرِ المَخشوشِ الَّذي يُصانِعُ قائدَه حتَّى أتى الشَّجرةَ الأخرى فأخَذ بغُصنٍ مِن أغصانِها فقال : ( انقادي علَيَّ بإذنِ اللهِ ) فانقادَتْ معه كذلك حتَّى إذا كان النِّصفُ جمَعهما فقال : ( التَئِما علَيَّ بإذنِ اللهِ ) فالتأَمَتا قال جابرٌ : فخرَجْتُ أُحضِرُ مخافةَ أنْ يُحِسَّ رسولُ اللهِ صلَّى اللهُ عليه وسلَّم بقُربي فيتباعَدَ فجلَسْتُ فحانَتْ منِّي لَفتةٌ فإذا أنا برسولِ اللهِ صلَّى اللهُ عليه وسلَّم مُقبِلٌ وإذا الشَّجَرتانِ قد افترَقتا فقامتْ كلُّ واحدةٍ منهما على ساقٍ(مسلم 3012)
(5)
خرجَ أبو طالبٍ إلى الشّامِ وخرج معَه النَّبيُّ ﷺ في أشياخٍ مِن قريشٍ فلمّا أشرَفوا على الرّاهبِ هبَطوا فحلُّوا رحالَهم فخرجَ إليْهمُ الرّاهبُ وَكانوا قبلَ ذلِكَ يمرُّونَ بِهِ فلا يخرجُ إليْهم قالَ فَهم يَحلُّونَ رحالَهم فجعلَ يتخلَّلُهمُ الرّاهبُ حتّى جاءَ فأخذَ بيدِ رسولِ اللَّهِ ﷺ قالَ هذا سيِّدُ العالمينَ هذا رسولُ ربِّ العالمينَ يبعثُهُ اللَّهُ رحمةً للعالمينَ فقالَ لَهُ أشياخٌ من قريشٍ ما عِلمُكَ فقالَ إنَّكم حينَ أشرفتُم منَ العَقبةِ لم يبقَ شجرٌ ولا حجرٌ إلّا خرَّ ساجِدًا ولا يَسجُدانِ إلّا لنبيٍّ وإنِّي أعرفُهُ بخاتمِ النُّبوَّةِ أسفلَ من غُضروفِ كتفِهِ مثلَ التُّفّاحةِ ثمَّ رجعَ فصنعَ لَهم طعامًا فلمّا أتاهم بِهِ وَكانَ هوَ في رِعيةِ الإبلِ قالَ أرسِلوا إليْهِ فأقبلَ وعليْهِ غمامةٌ تظلُّهُ فلمّا دنا منَ القَومِ وجدهم قد سبقوهُ إلى فَيءِ الشَّجرةِ فلمّا جلسَ مالَ فيءُ الشَّجرةِ عليْهِ فقالَ انظُروا إلى فَيءِ الشَّجرةِ مالَ عليْهِ فقالَ أنشُدُكُم اللَّهَ إيُّكم وليُّهُ قالوا أبو طالبٍ فلَم يزل يناشدُهُ حتّى ردَّهُ أبو طالبٍ وبعثَ معَهُ أبو بَكرٍ رضيَ اللهُ عَنهُ بلالًا وزوَّدَهُ الرّاهبُ منَ الْكعْكِ والزَّيتِ.
( الترمذي (٣٦٢٠)،
(6)عن ابن عمر قال كنا مع رسول الله صلى الله عليه وسلم في سفر فأقبل أعرابي فلما دنا منه قال له رسول الله صلى الله عليه وسلم أين تريد قال إلى أهلي قال هل لك في خير قال وما هو قال تشهد أن لا إله إلا الله وحده لا شريك له وأن محمدا عبده ورسوله قال ومن يشهد على ما تقول قال هذه السلمة فدعاها رسول الله صلى الله عليه وسلم وهي بشاطئ الوادي فأقبلت تخد الأرض خدا حتى قامت بين يديه فاستشهدها ثلاثا فشهدت ثلاثا أنه كما قال ثم رجعت إلى منبتها ورجع الأعرابي إلى قومه وقال إن اتبعوني أتيتك بهم وإلا رجعت فكنت معك
(سنن الدارمي 16)
(7)
عن جابر رضي الله عنه
قالَ رَسولُ اللهِ صلَّى اللَّهُ عليه وسلَّمَ وجِنازةُ سَعْدِ بنِ مُعاذٍ بيْنَ أيْدِيهِم: اهْتَزَّ لَها عَرْشُ الرَّحْمَنِ
(بخاري 3803 مسلم 2466)
(8)
اشتهر عن كثير من الفقهاء وغيرهم أن الكعبة المعظمة شوهدت تطوف بجماعة من الأولياء في أوقات في غير مكانها ومعلوم انها في مكانها لم تفارقه في تلك الاوقات
(الحاوي للفتاوي 1/257)
ಪುರಾವೆಗಳು ಇನ್ನೂ ಇವೆ.ಮುಂದಿನ ಭಾಗದಲ್ಲಿ ಬರೆಯೋಣ
23/05/2024