Monday, March 16, 2020

ಝಿಯಾರತ್ತ್ ಕೇಂದ್ರ 82. ಖಾಝಿ ಶೈಖ್ ಸಈದ್ ಮುಸ್ಲಿಯಾರ್ (ರ) ಪಯೊಟ್ಟ ಕಾಲ್ನಾಡ್ ಕಾಸರಗೋಡು ಜಿಲ್ಲೆ

*ಝಿಯಾರತ್ತ್ ಕೇಂದ್ರ​​​*
    ಭಾಗ 👉 8⃣2⃣
➖➖➖➖➖➖➖ #ಖಾಝಿ_ಶೈಖ್_ಸಈದ್_ಮುಸ್ಲಿಯಾರ್  (ಖ:ಸಿ) ಕಿಝೂರ್, ಪಯೊಟ್ಟ, ಕಳನಾಡ್, ಕಾಸರಗೋಡು.
➖➖➖➖➖➖➖
🕌🕌🕌🕌🕌🕌🕌
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
**********************

ಸುಮಾರು ಒಂದೂವರೆ ಶತಮಾನಗಳ ಹಿಂದೆ ಕೇರಳ ಸಮೂಹವನ್ನು ಆಧ್ಯಾತ್ಮಿಕ ಪ್ರಭೆಯಿಂದ ಬೆಳಗಿಸಿದ ಮಹಾ ವಿದ್ವಾಂಸರಾಗಿದ್ದಾರೆ. ಖಾಝಿ ಸ‌ಈದ್ ಮುಸ್ಲಿಯಾರ್ (ಖ.ಸಿ)ರವರು.

ಕಾಸರಗೋಡು ಜಿಲ್ಲೆಯ ಕುಂಞಾರ್‌ನ ಖಾಝಿ ಅಹ್ಮದ್ ಮುಸ್ಲಿಯಾರ್ (ಖ.ಸಿ) ಪುತ್ರರಾದ 
ಖಾಝಿ ಸ‌ಈದ್ ಮುಸ್ಲಿಯಾರ್ (ಖ.ಸಿ)ರವರು ಚಿಕ್ಕ ವಯಸ್ಸಿನಲ್ಲೇ ಉತ್ಸಾಹದಿಂದ ಬಹಳಷ್ಟು ಧಾರ್ಮಿಕ ವಿದ್ಯೆ ಕರಗತ ಮಾಡಿಕೊಂಡ ನಂತರ ಅಲ್ ಅಝ್ಹರ್ ಎಂದು ಅರಿಯಲ್ಪಡುವ ಪೊನ್ನಾನಿಗೆ ತೆರಳಿ ಉನ್ನತ ವ್ಯಾಸಂಗ ಪಡೆದರು.

ಖಾಝಿ ಸ‌ಈದ್ ಮುಸ್ಲಿಯಾರ್ (ಖ.ಸಿ)ರವರು, ಪ್ರವಾದಿ ﷺِ ಪ್ರೇಮದ ಮೂಲಕ ಜಗತ್ತೇ ತಿರುಗಿ ನೋಡುವಂತಹ ಅಸಾಮಾನ್ಯ ಸಾಧನೆ ಮಾಡಿದ ಮಹಾ ವಿದ್ವಾಂಸರೂ, ಸ್ವಾತಂತ್ರ್ಯ ಹೋರಾಟಗಾರರೂ ಆದ ವೆಳಿಯಂಗೋಡು ಉಮರ್ ಖಾಝಿ (ರ) ರವರ ಸಹಪಾಠಿಯೂ, ಆತ್ಮೀಯ ಮಿತ್ರರೂ ಆಗಿದ್ದರು.

ಇಸ್ಲಾಮಿಕ್ ಧಾರ್ಮಿಕ ಸಂಹಿತೆಗಳ (ಶರಿಆತ್) ಬಗ್ಗೆ ಅಗಾಧ ಪಾಂಡಿತ್ಯ ಹೊಂದಿದ್ದ ಮಹಾನರು, ಫತ್ವಾ ನೀಡುವ ಅರ್ಹತೆ ಹೊಂದಿರುವ ಬಗ್ಗೆ ಮಹಾನರಾದ ವೆಳಿಯಂಗೋಡು ಉಮರ್ ಖಾಝಿ (ರ) ರವರಿಂದ ಅಂಗೀಕಾರ ಪಡೆದ ಫಖೀಹ್ ಕೂಡ ಆಗಿದ್ದರು.

ಉತ್ತರ ಕೇರಳದಿಂದ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ತಿಳಿಯಲು ವೆಳಿಯಂಗೋಡು ಉಮರ್ ಖಾಝಿ (ರ) ರವರ ಬಳಿ ಬರುತ್ತಿದ್ದ ಜನರನ್ನು ಮಹಾನರು ಸ‌ಈದ್ ಮುಸ್ಲಿಯಾರ್ (ಖ.ಸಿ) ರವರ ಬಳಿಗೆ ಕಳುಹಿಸುತ್ತಿದ್ದರು.

ಆ ಕಾಲದ ಜಮೀನ್ದಾರರೂ, ಆಗರ್ಭ ಶ್ರೀಮಂತರೂ, ಪರೋಪಕಾರಿಯೂ ಆಗಿದ್ದ ಜನಾಬ್ ಹಸನ್ ಕುಟ್ಟಿ ಹಾಜಿಯವರು ಧಾರ್ಮಿಕ ರಂಗದಲ್ಲಿ ಬಹಳ ಆಸಕ್ತಿ ಹೊಂದಿದ್ದರು.

ಹಾಗಾಗಿ ಉನ್ನತ ಶಿಕ್ಷಣ ಗಳಿಸುವ ವಿದ್ಯಾರ್ಥಿಗಳಿಗಾಗಿ ವಿದ್ವತ್ಪೂರ್ಣ ಧಾರ್ಮಿಕ ವಿದ್ವಾಂಸರ ಸಹಯೋಗದೊಂದಿಗೆ ಒಂದು ಪಳ್ಳಿ ದರ್ಸ್ ಸ್ಥಾಪಿಸುವ ಅಭಿಲಾಷೆ ಹೊಂದಿದ್ದರು.

ಅಷ್ಟರಲ್ಲಾಗಲೇ ಕುಂಞಾರುಣ್ಣಿ ಎಂದು ಕರೆಯಲ್ಪಡುತ್ತಿದ್ದ ಖಾಝಿ ಸಈದ್ ಮುಸ್ಲಿಯಾರ್ (ಖ.ಸಿ)ರೊಂದಿಗೆ ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರಲ್ಲದೆ ಕಾಸರಗೋಡು ಜಿಲ್ಲೆಯ  ಕಿಝೂರಿನ ಪಯೊಟ್ಟ ಎಂಬ ಸ್ಥಳದಲ್ಲಿ ಖಾಝಿ ಸ‌ಈದ್ ಮುಸ್ಲಿಯಾರ್ (ಖ.ಸಿ) ನೇತೃತ್ವದಲ್ಲಿ ಒಂದು ಪಳ್ಳಿ ದರ್ಸ್ ಪ್ರಾರಂಭಿಸಿದರು.

ಕಿಝೂರ್'ನ ಇತಿಹಾಸದಲ್ಲಿ ಇದು ಮೊಟ್ಟಮೊದಲಿಗೆ ನಿರ್ಮಿಸಿದ ಪಳ್ಳಿ ದರ್ಸ್ ಆಗಿತ್ತು. ಪಳ್ಳಿ ದರ್ಸ್ ಪ್ರಾರಂಭವಾದ ನಂತರ ಮಹಾನರು 
ಕಿಝೂರಿನಲ್ಲಿ ಖಾಯಂ ಆಗಿ ವಾಸ್ತವ್ಯ ಹೂಡಿದರು.

ಉತ್ತರ ಕೇರಳದ ವಿದ್ವಾಂಸರಾದ ಅಲ್ಲಮಾ ಕಿಝೂರ್ ಇಬ್ರಾಹಿಂ ಮುಸ್ಲಿಯಾರ್ (ಖ.ಸಿ) ಕಾಸರಗೋಡು ಖಾಝಿಯಾಗಿದ್ದ ಹೆಸರಾಂತ ವಿದ್ವಾಂಸರಾದ ಖಾಝಿ ಅಬ್ದುಲ್ಲಾ ಹಾಜಿ (ಖ.ಸಿ) ಅವುಳಾಜಿ ತಂಙಳ್ (ಖ.ಸಿ) ಮೊದಲಾದ ವಿದ್ವಾಂಸರು ಈ ಪಳ್ಳಿ ದರ್ಸ್‌ನಲ್ಲಿ ವಿದ್ಯಾರ್ಥಿಗಳಾಗಿ ವ್ಯಾಸಂಗ ಮಾಡಿದ್ದಾರೆ.

ಕಳನಾಡ್ ರೈಲ್ವೆ ಸ್ಟೇಷನ್ನಿನ ಸಮೀಪದಲ್ಲಿರುವ ಅಂದಿನ ಚಿಕ್ಕ ಪಳ್ಳಿ ದರ್ಸ್'ಗೆ ದಶಕಗಳು ಕಳೆದರೂ ಜೀರ್ಣೋದ್ದಾರವಾಗದೆ ಇಂದೂ ಸಹ ಅಂದಿನಂತೆಯೇ ಇದೆ. ಅದರ ಮುಂಭಾಗದ ಪ್ರಾಂಗಣದಲ್ಲಿ ಪಳ್ಳಿ ದರ್ಸ್ ನಿರ್ಮಿಸಲು ನೆರವಾದ ಜನಾಬ್ ಹಸ್ಸನ್ ಕುಟ್ಟಿ ಹಾಜಿಯವರೊಂದಿಗೆ ಮಹಾನರಾದ ಸ‌ಈದ್ ಮುಸ್ಲಿಯಾರ್ (ಖ.ಸಿ)ರವರೂ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.

ಉತ್ತರ ಮಲಬಾರಿನ ಧಾರ್ಮಿಕ ರಂಗಕ್ಕೆ ಅತಿ ದೊಡ್ಡ ಕೊಡುಗೆ ನೀಡಿದ ಸ‌ಈದ್ ಮುಸ್ಲಿಯಾರ್ (ಖ.ಸಿ) ರವರ ಸ್ಮರಣಾರ್ಥ 1971ರಲ್ಲಿ ಮರ್ಹೂಮ್ ಕಲ್ಲಟ್ರ ಅಬ್ದುಲ್ ಖಾದರ್ ಹಾಜಿಯವರು ತಮ್ಮ ಸ್ವಗೃಹದಲ್ಲಿ ಒಂದು ದೀನಿ ಸಂಸ್ಥೆ ಆರಂಭಿಸಿ ಅದಕ್ಕೆ *"ಸ‌ಅದಿಯ್ಯ"* ಎಂದು ನಾಮಕರಣ ಮಾಡಿದ್ದರು.

ಹಾಗೆ ಸ‌ಈದ್ ಮುಸ್ಲಿಯಾರ್ (ಖ.ಸಿ) ಹೆಸರಿನೊಂದಿಗೆ ಕಲಟ್ರ ಅಬ್ದುಲ್ ಖಾದರ್ ಹಾಜಿಯವರು ಸಂಸ್ಥಾಪಿಸಿದ ಸ‌ಅದಿಯ್ಯಾ ಸಂಸ್ಥೆಯೇ ದಶಕಗಳ ನಂತರ ನೂರುಲ್ ಉಲಮಾ ಎಂ. ಎ. ಉಸ್ತಾದರ (ಖ:ಸಿ) ನೇತೃತ್ವದಲ್ಲಿ ಅಸಂಖ್ಯ ಧಾರ್ಮಿಕ ವಿದ್ವಾಂಸರನ್ನು ರೂಪಿಸಿ ಸಮಾಜಕ್ಕೆ ಸಮರ್ಥಿಸುತ್ತಿರುವ ಜಾಮಿಯಾ ಸ‌ಅದಿಯ್ಯ ಅರೇಬಿಯಾ ಎಂಬ ಹೆಸರಾಂತ ಅರೇಬಿಕ್ ಕಾಲೇಜ್ ಆಗಿದ್ದು ಪ್ರಖ್ಯಾತಿ ಗಳಿಸಿದ್ದು ಇದು ವಿಶ್ವ ದರ್ಜೆಯ ಅರೇಬಿಕ್ ಕಾಲೇಜ್‌ಗಳಲ್ಲೊಂದಾಗಿದೆ.

ಈ ಜಾಮಿಯಾ ಸ‌ಅದಿಯ್ಯಾ ಅರೇಬಿಕ್ ಕಾಲೇಜು ದೀನೀ ಸೇವೆಯಲ್ಲಿ ಐವತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಅಂದರೆ 2019ರ ಡಿಸೆಂಬರ್'ನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸುವರ್ಣ ಮಹೋತ್ಸವವನ್ನು ಹಮ್ಮಿಕೊಂಡಿದ್ದು ಆ ಸಮಾರಂಭದಲ್ಲೇ ಈ ವರ್ಷದ ಸನದು ದಾನವೂ ನಡೆಯಲಿದೆ.

*ಸಅದಿಯ್ಯಾ ಗೋಲ್ಡನ್ ಜ್ಯೂಬಿಲಿ ಸನದುದಾನ ಮಹಾ ಸಮ್ಮೇಳನ: ಡಿಸೆಂಬರ್ 27, 28, 29. 2019*
*ಸಅದಬಾದ್ ದೆಳಿ, ಕಾಸರಗೋಡು.*
🔰🔰🔰🔰🔰🔰🔰

▪▪▪▪▪▪▪▪▪▪
*Sa-adiya Golden Jubilee*
2019 December 27, 28, 29
Saadabad, Deli, Kasaragod

*Whatsapp Group Link 7👇🏽*
https://chat.whatsapp.com/BtFHZFwOB8pHPbinQwWVxi

▪▪▪▪▪▪▪▪▪▪

ಆಧುನಿಕ ಕಾಲಘಟ್ಟದ ಆಧ್ಯಾತ್ಮಿಕ ಪ್ರತಿಭೆ ತಾಜುಲ್ ಉಲಮಾ (ಖ:ಸಿ) ಉಳ್ಳಾಲ್ಲ

_*ಆಧುನಿಕ ಕಾಲಘಟ್ಟದ ಆಧ್ಯಾತ್ಮಿಕ ಪ್ರತಿಭೆ ತಾಜುಲ್ ಉಲಮಾ ಉಳ್ಳಾಲ ತಂಙಳ್ (ಖ:ಸಿ)*_
🔰🔰🔰🔰🔰🔰🔰

✍  ಗಫೂರ್ ಬಾಯಾರ್.
***********************

ಸೃಷ್ಟಿಕರ್ತನಾದ ಅಲ್ಲಾಹನನ್ನು ಆರಾಧಿಸುತ್ತಾ ಅವನ ಹಬೀಬ್ ﷺِ ರನ್ನು ಪ್ರೀತಿಸುವ ಸಲುವಾಗಿ ಅಲ್ಲಾಹನು ಮಾನವ ಕುಲವನ್ನು ಸೃಷ್ಟಿಸಿದನೆಂಬುದು ನಮ್ಮೆಲ್ಲರಿಗೂ ತಿಳಿದ ಸಂಗತಿ.

ಆದರೆ ದುನಿಯಾದ ಮೋಹಕ್ಕೆ ಬಿದ್ದು ಸೃಷ್ಟಿಕರ್ತನಾದ ಅಲ್ಲಾಹನು ನೀಡಿರುವ ದೌತ್ಯವನ್ನು ಮರೆತು ಮನಬಂದಂತೆ ಬದುಕುತ್ತಾ ದುರ್ಮಾರ್ಗದ ಹಾದಿ ಹಿಡಿದಾಗ ಆ ಜನತೆಗೆ ತಿಳಿಹೇಳಿ ತಿದ್ದಿ ಸನ್ಮಾರ್ಗದ ಹಾದಿಗೆ ತರುವ ಸಲುವಾಗಿ ಸೃಷ್ಟಿಕರ್ತನಾದ ಅಲ್ಲಾಹನು ಆಯಾ ಕಾಲಘಟ್ಟದಲ್ಲಿ ಆಯಾ ಪ್ರದೇಶಗಳಿಗೆ ತನ್ನ ಸಂದೇಶವಾಹಕರಾದ ಅಂಬಿಯಾಗಳೆಂಬ ಪ್ರವಾದಿಗಳನ್ನು ಕಳುಹಿಸಿ ಜನತೆಯನ್ನು ಸನ್ಮಾರ್ಗದ ಹಾದಿಗೆ ತರುವ ದೌತ್ಯವನ್ನು ನೀಡಿದ್ದನು.

ಪ್ರವಾದಿ ಮುಹಮ್ಮದ್ ನಬಿ ﷺِರವರ ಆಗಮನದೊಂದಿಗೆ ಅಂಬಿಯಾ ಶೃಂಖಲೆಯು ಕೊನೆಗೊಂಡಿತಾದ್ದರಿಂದ ಅನಂತರ ಜನತೆಗೆ ತಿಳಿಹೇಳಿ ತಿದ್ದಿ ಸನ್ಮಾರ್ಗದ ಹಾದಿ ತೋರುವ ದೌತ್ಯವನ್ನು ಉಲಮಾಗಳೆಂಬ ಧಾರ್ಮಿಕ ವಿದ್ವಾಂಸರಿಗೆ ಸೃಷ್ಟಿಕರ್ತನಾದ ಅಲ್ಲಾಹನು ವಹಿಸಿದ್ದಾನೆ.

ಅಂತೆಯೇ ವರ್ತಮಾನ ಕಾಲದಲ್ಲಿ ದೀನೀ ದ‌ಅ್‌ವಾದ ಮೂಲಕ ಧಾರ್ಮಿಕ ತಿಳುವಳಿಕೆಯಿಲ್ಲದ ಸಾಮಾನ್ಯ ಜನತೆಗೆ ಇಸ್ಲಾಮಿನ ಆಧ್ಯಾತ್ಮಿಕ ಸ್ವರೂಪದ ಕುರಿತು ವಿವರಿಸುತ್ತಾ ಮುಸ್ಲಿಂ ಸಮುದಾಯಕ್ಕೆ ದಿಟ್ಟ ನಾಯಕತ್ವ ನೀಡಿದ ಅನೇಕ ಮಹಾತ್ಮರು ಈ ಮಣ್ಣಿನಲ್ಲಿ ಹಾದು ಹೋಗಿದ್ದಾರೆ.

ಅಂತಹ ಮಹಾತ್ಮರುಗಳ ಪೈಕಿ ಕೇರಳದಲ್ಲಿ ಜನಿಸಿ ದಕ್ಷಿಣ ಭಾರತದ ಅಜ್ಮೀರ್ ಎಂದೇ ಅರಿಯಲ್ಪಡುವ ಉಳ್ಳಾಲದಲ್ಲಿ ನೆಲೆಸಿ ಅಲ್ಲಾಹನ ದೀನಿನ ಸೇವೆಗೆ ಅಸಂಖ್ಯ ಧಾರ್ಮಿಕ ವಿದ್ವಾಂಸರನ್ನು ರೂಪಿಸಿ ಸಮರ್ಪಿಸಿದ ಮಹಾತ್ಮರಲ್ಲೊಬ್ಬರಾಗಿದ್ದಾರೆ ಶೈಖುನಾ ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಕುಂಞಿಕೋಯ ತಂಞಳ್ (ಖ.ಸಿ) ಉಳ್ಳಾಲ.

ಆಹ್ಲ್‌ಬೈತ್ ಕುಟುಂಬದ ಕಣ್ಮಣಿಯಾದ ತಾಜುಲ್ ಉಲಮಾ (ಖ:ಸಿ), ಸಯ್ಯಿದ್ ಅಬೂಬಕರ್ ಚೆರುಕುಂಞಿಕೋಯ ತಂಙಳ್ ಅಲ್ ಬುಖಾರಿ (ರ) ಮತ್ತು ವಾಯಕಾಡ್ ಹಲೀಮಾ ಕುಂಞಿ ಬೀವಿ (ರ) ದಂಪತಿಯ ಪುತ್ರನಾಗಿ ಹಿಜರಿ 1341 ರಬಿವುಲ್ ಅವ್ವಲ್ 25ರ ಶುಕ್ರವಾರದಂದು ಕಲ್ಲಿಕೋಟೆಯ ಕರುವಂತಿರುತ್ತಿ ಎಂಬಲ್ಲಿ ಜನಿಸಿದ ಮಹಾನರು ಕೇರಳದ ಹಲವೆಡೆ ಹೆಸರಾಂತ ವಿದ್ವಾಂಸರ ಶಿಷ್ಯರಾಗಿ ಜ್ಞಾನಾರ್ಜನೆ ಮಾಡಿದರು.

ಹಿಜರಿ 1371 ರಲ್ಲಿ ತಮ್ಮ ಗುರುವರ್ಯರೂ ಅಂದಿನ ಕಾಸರಗೋಡು ಖಾಝಿಯೂ ಆಗಿದ್ದ  ಅವರಾನ್ ಉಸ್ತಾದ್ (ಖ.ಸಿ)ರವರ ನಿರ್ದೇಶನದ ಮೇರೆಗೆ ಉಳ್ಳಾಲಕ್ಕೆ ತೆರಳಿ ದರ್ಸ್ ನಡೆಸಲು ಆರಂಭಿಸಿದರು.

ವಿದ್ವತ್ಪೂರ್ಣ ವಿದ್ವಾಂಸರಾಗಿದ್ದ ತಾಜುಲ್ ಉಲಮಾ (ಖ.ಸಿ) ರವರು ಆಗಮನದೊಂದಿಗೆ ಕರ್ನಾಟಕದ ಮುಸ್ಲಿಂ ಸಮುದಾಯ ಎದುರಿಸುತ್ತಿದ್ದ ಧಾರ್ಮಿಕ ನಾಯಕತ್ವದ ಕೊರತೆಯೂ ನೀಗಿತು. 

ಹಾಗೆ ಉಳ್ಳಾಲದಲ್ಲಿ ದರ್ಸ್ ಆರಂಭಿಸಿದ ಮಹಾನರ ನಿಸ್ವಾರ್ಥ ಸೇವೆ ಮತ್ತು ಕಠಿಣ ಪರಿಶ್ರಮದಿಂದಾಗಿ ಅಂದಿನ ದರ್ಸ್ ಇಂದು ಉಳ್ಳಾಲ ಸಯ್ಯದ್ ಮದನಿ ಅರಬಿಕ್ ಕಾಲೇಜಾಗಿ ವಿಶ್ವವಿಖ್ಯಾತವಾಗಿದೆ.

ಸುನ್ನತ್ ಜಮಾಅತಿನ ನೇತಾರರಾಗಿ ವಿವಿಧ ಸ್ಥಾನಗಳನ್ನು ಅಲಂಕರಿಸಿ ಸಮರ್ಥವಾಗಿ ನಿರ್ವಹಿಸುವುದರ ಮೂಲಕ ಸುನ್ನತ್ ಜಮಾಅತಿಗೆ ದಿಟ್ಟ ನಾಯಕತ್ವ ನೀಡಿದ್ದರು.

ಸುಮಾರು 95 ವರ್ಷಗಳ ಕಾಲ ಜೀವಿಸಿದ ಸಯ್ಯಿದರು, ಅತೀವ ಉತ್ಸಾಹ ಮತ್ತು ಹುರುಪಿನಿಂದ ಇಬಾದತ್ ನಡೆಸುತ್ತಿದ್ದರಲ್ಲದೆ, ಇಳಿವಯಸ್ಸಿನಲ್ಲೂ ಸಹ ವಿತ್ರ್ ನಮಾಜನ್ನು ನಿಂತುಕೊಂಡೇ ಅದೂ ಹನ್ನೊಂದು ರಖಾಅತ್ ನಿರ್ವಹಿಸುತ್ತಿದ್ದರು.

ಕೇರಳದಲ್ಲಿ ಜನಿಸಿ ಕರ್ನಾಟಕದ ಮುಸ್ಲಿಂ ಉಮ್ಮತ್ತಿನ‌ ಹೃದಯವನ್ನು ಆಧ್ಯಾತ್ಮಿಕ ಪ್ರಭೆಯಿಂದ ಬೆಳಗಿಸುವುದರ ಮೂಲಕ ಸಮುದಾಯವನ್ನು ಸನ್ಮಾರ್ಗದ ಹಾದಿಯಲ್ಲಿ ಮುನ್ನಡೆಸುವಲ್ಲಿ ಮಹತ್ವದ ಪಾತ್ರವಹಿಸಿದ ಸಯ್ಯಿದರು, 2014 ಫೆಬ್ರವರಿ ಒಂದು ಶನಿವಾರ (ಹಿಜರಿ 1435 ರಬೀವುಲ್ ಆಖಿರ್ 1)ರಂದು ಕೇರಳದ ಪಯ್ಯನ್ನೂರಿನ ಎಟ್ಟಿಕುಳಂನ ತಮ್ಮ ಸ್ವಗೃಹದಿಂದ ಪಾರತ್ರಿಕ ಲೋಕಕ್ಕೆ ಯಾತ್ರೆ ತೆರಳಿದ ಸಯ್ಯಿದರನ್ನು ಎಟ್ಟಿಕುಳಂನ ತಖ್ವಾ ಮಸೀದಿಯಲ್ಲಿ ದಫನ ಮಾಡಲಾಯಿತು.

*ಆಧುನಿಕ ಕಾಲಘಟ್ಟದಲ್ಲಿ ದೀನೀ ದ‌ಅ್‌ವಾ ನಡೆಸುತ್ತಾ ಜನಸಾಮಾನ್ಯರಲ್ಲಿ ಆಧ್ಯಾತ್ಮಿಕವಾದ ಅರಿವು ಮೂಡಿಸುವುದರ ಮೂಲಕ ಅಹ್ಲ್  ಸುನ್ನತ್ ವಲ್ ಜಮಾಅತಿಗೆ ಅಸಾಮಾನ್ಯ ಕೊಡುಗೆ ನೀಡಿದ ಮಹಾನರ ಮಖ್ಬರದಲ್ಲಿ ಆರನೇ ಉರೂಸ್ ಸಮಾರಂಭವು ನವೆಂಬರ್ 29 ರಿಂದ ಡಿಸೆಂಬರ್ 1ರ ತನಕ ನಡೆಯಲಿದೆ.*

ಸೃಷ್ಟಿಕರ್ತನಾದ ಅಲ್ಲಾಹನ ದೀನಿನ ಸೇವೆ ಮಾಡುತ್ತಲೇ ಇಹಲೋಕಕ್ಕೆ ವಿದಾಯ ಹೇಳಿದ ಆ ಸಯ್ಯಿದರ ಬರ್ಕತ್‌ನಿಂದ ಕರುಣಾನಿಧಿಯಾದ ಅಲ್ಲಾಹನು ನಮ್ಮೆಲ್ಲರನ್ನು ಇಹಪರ ವಿಜಯಿಗಳ ಸಾಲಿನಲ್ಲಿ ಸೇರಿಸಲು ಆಮೀನ್.
🍃🍃🍃🍃🍃🍃🍃🍃

ಗೆಳೆತನ ಉತ್ತಮರೊಂದಿಗಾಗಿರಲಿ..01

#ಗೆಳೆತನ_ಉತ್ತಮರೊಂದಿಗಾಗಿರಲಿ..! 👬
🤝🤝🤝🤝🤝🤝🤝

✍ ಅನುವಾದ: 1⃣
**********************

ಇಮಾಂ ಇಬ್ನು ನಜ್ಜಾರ್ (ರ) ಹೇಳುತ್ತಾರೆ.; 

*"ನೀವು ಉತ್ತಮ ಮಿತ್ರರ ಗೆಳೆತನ ಬೆಳೆಸಿರಿ... ನಿಶ್ಚಯವಾಗಿಯೂ ಅಂತ್ಯದಿನದಲ್ಲಿ ಸಕಲ ಸತ್ಯವಿಶ್ವಾಸಿಗಳಿಗೂ ತಮ್ಮ ಸ್ನೇಹಿತರಿಗಾಗಿ ಮದ್ಯಸ್ಥಿಕೆ ವಹಿಸುವ ಅವಕಾಶವನ್ನು ನೀಡಲಾಗುತ್ತದೆ."*

( ಜಾಮಿಉಸ್ಸ್ವಗಿರ್ )
🍂🍂🍂🍂🍂🍂🍂

ಯಾರ ಗೆಳೆತನ ಉತ್ತಮ 02

#ಯಾರ_ಗೆಳತನ_ಉತ್ತಮ. 2⃣
🤝🤝🤝🤝🤝🤝🤝

✍ ಅನುವಾದ: GB
*******************

"ನಿನ್ನ ಗೆಳತನವು, ನೀನು ರೋಗ ಬಾಧಿತನಾದರೆ ನಿನ್ನನ್ನು ಸಂದರ್ಶಿಸಿ, ನಿನ್ನ ಪಾಪ ವಿಮೋಚನೆಗಾಗಿ ಅಲ್ಲಾಹನೊಂದಿಗೆ ಪ್ರಾರ್ಥಿಸುವವನೊಂದಿಗಾಗಿರಲಿ.."

ಇಮಾಂ ದುನ್ನೂನುಲ್ ಮಿಸ್ರಿ (ರ)
🍂🍂🍂🍂🍂🍂🍂

ಗೆಳೆತನ ಅಲ್ಲಾಹನು ಮೆಚ್ಚುವಂತಿರಲಿ

#ಗೆಳತನ_ಅಲ್ಲಾಹನು_ಮೆಚ್ಚುವಂತಿರಲಿ. 3⃣
🤝🤝🤝🤝🤝🤝

✍ ಅನುವಾದ: GB
********************

ಜೀವಮಾನದಲ್ಲೊಮ್ಮೆಯೂ ಪರಸ್ಪರ ಕಾಣದೆ ಭೂಮಿಯ ಎರಡು ದಿಕ್ಕುಗಳಲ್ಲಿ ಬದುಕಿದ ಆತ್ಮೀಯ ಗೆಳೆಯರನ್ನು ಅಂತ್ಯ ದಿನದಲ್ಲಿ ಅಲ್ಲಾಹನು ಒಂದುಗೂಡಿಸಿ,
*ನನ್ನ ಸಂತೃಪ್ತಿಯೊಂದಿಗೆ ನಿನ್ನನ್ನು ಪ್ರೀತಿಸಿದ ನಿನ್ನ ಗೆಳೆಯನನ್ನು ನಾನಿಂದು ನಿನಗೊಪ್ಪಿಸುತ್ತಿದ್ದೇನೆ"* ಎನ್ನುವನು.
                        (ಜಾಮಿಉಸ್ಸ್ವಗಿರ್)
==================

ಸಾಮಾಜಿಕ ಜಾಲತಾಣಗಳ ಮೂಲಕ ಗೆಳೆಯರಾಗಿ ಅನಂತರ ಹಣಕ್ಕಾಗಿಯೋ ಅಥವಾ ಮತ್ತೇನಾದರೂ ಸ್ವಾರ್ಥಕ್ಕೆ ಗೆಳೆತನವನ್ನು ಬಲಿಕೊಟ್ಟು ಗೆಳೆತನದ ಹೆಸರಿನಲ್ಲಿ ವಂಚಿಸುವವರನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಗೆಳೆತನವು ಅಲ್ಲಾಹನು ಮೆಚ್ಚುವಂತಿದ್ದಾಗಿದ್ದರೆ ಆ ಗೆಳೆತನವು ನಾಳೆ ಪರಲೋಕದಲ್ಲಿ ನಮ್ಮ ನೆರವಿಗೆ ಬರುವುದರಲ್ಲಿ ಸಂಶಯವಿಲ್ಲ.
🍂🍂🍂🍂🍂🍂🍂

ಜಾಮಿಯಾ ಸಅದಿಯ್ಯಾ 50

*#ಸುವರ್ಣ_ಮಹೋತ್ಸವದ ಸಂಭ್ರಮದಲ್ಲಿ ಕಾಸರಗೋಡಿನ ಜಾಮಿಯಾ ಸ‌ಅದಿಯ್ಯಾ ಅರೇಬಿಯಾ ಕಾಲೇಜು.*

✍ ಗಫೂರ್ ಬಾಯಾರ್
🍂🍂🍂🍂🍂🍂🍂

ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾದ ವಾತಾವರಣ ನಿರ್ಮಿಸುವುದರ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆ ನೀಡುತ್ತಾ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಶಿಕ್ಷಣ ಸಂಸ್ಥೆಯಾಗಿದೆ ಕಾಸರಗೋಡಿನ ಜಾಮಿಅ ಸ‌ಅದಿಯ್ಯ ಅರೇಬಿಯಾ ಕಾಲೇಜು.

ಧಾರ್ಮಿಕ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣವನ್ನೂ ನೀಡುವ ಮೂಲಕ ಸಮಾಜಕ್ಕೆ ಅತ್ಯಮೂಲ್ಯವಾದ ಕೊಡುಗೆಯನ್ನು ಜಾಮಿಅ ಸ‌ಅದಿಯ್ಯ ಅರೇಬಿಯಾ ಕಾಲೇಜು ನೀಡುತ್ತಿದೆ.

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದೆಂಬ ಸದುದ್ದೇಶದಿಂದ ಆಗರ್ಭ ಶ್ರೀಮಂತರೂ, ಪರೋಪಕಾರಿಯೂ ಆಗಿದ್ದ ಕಲ್ಲಟ್ರ ಅಬ್ದುಲ್ ಖಾದಿರ್ ಹಾಜಿಯವರು ದಾನ ಮಾಡಿದ 5 ಎಕರೆ ಜಮೀನಿನಲ್ಲಿ ಸಣ್ಣ ಮದರಸವಾಗಿ ತಲೆಯೆತ್ತಿದ ಮದರಸವು ಇಂದು ಸುಮಾರು ಜಾಮಿಆ ಸ‌ಅದಿಯ್ಯಾ ಅರೇಬಿಯಾ ಕಾಲೇಜಾಗಿ 70 ಎಕರೆ ಪ್ರದೇಶದಲ್ಲಿ ಹೆಮ್ಮರದಂತೆ ಬೆಳೆದು ಸಮಾಜಕ್ಕೆ ಅತ್ಯಮೂಲ್ಯವಾದ ಕೊಡುಗೆ ನೀಡುತ್ತಿದೆ.

ಶಿಕ್ಷಣ ತಜ್ಞರೂ ಚಿಂತಕರೂ ವಿದ್ವಾಂಸರೂ ಆಗಿದ್ದ ಮರ್ಹೂಂ ಎಂ. ಎ ಉಸ್ತಾದ್(ನ.ಮ) ರವರು ಪ್ರಾಂಶುಪಾಲರಾಗಿ ಈ ಕಾಲೇಜಿನ ಚುಕ್ಕಾಣಿ ಹಿಡಿದ ನಂತರ ಮಹಾನರ ದೂರದೃಷ್ಟಿ ಮತ್ತು ಅಪಾರವಾದ ಕಾಳಜಿಯಿಂದಾಗಿ ಈ ಕಾಲೇಜು ದೇಶದ ಉನ್ನತ ಮಟ್ಟದ ಕಾಲೇಜುಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿತು.

ತಾಜುಲ್ ಉಲಮಾ ಉಳ್ಳಾಲ ತಂಙಳ್ (ನ.ಮ) ನೂರುಲ್ ಉಲಮಾ ಎಂ. ಎ. ಉಸ್ತಾದ್  (ನ.ಮ) ಮತ್ತು ಕನ್ಸುಲ್ ಉಲಮಾ ಚಿತ್ತಾರಿ ಉಸ್ತಾದ್ (ನ.ಮ)ರ ನೇತೃತ್ವದಲ್ಲಿ ನಡೆದ ಇಸ್ಲಾಮಿಕ್ ವಿದ್ವಾಂಸರ ಸಭೆಯಲ್ಲಿ ಚರ್ಚಿಸಿ ಕೈಗೊಂಡ ತೀರ್ಮಾನದಿಂದಾಗಿ ಸ‌ಅದಿಯ್ಯ ಕಾಲೇಜು ಶೈಕ್ಷಣಿಕ ರಂಗದಲ್ಲಿ ಕ್ರಾಂತಿಕಾರಿಯಾದ ಬದಲಾವಣೆಯನ್ನು ತರಲು ಸಾಧ್ಯವಾಯಿತು.

ಅಸಂಖ್ಯ ವಿದ್ವಾಂಸರನ್ನು ರೂಪಿಸಿ ಸಮಾಜಕ್ಕೆ ಸಮರ್ಥಿಸುತ್ತಿರುವ ಸ‌ಅದಿಯ್ಯಾ ಕಾಲೇಜು ಇದೀಗ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ. ಮುಸ್ಲಿಂ ಸಮುದಾಯದ ಸಹಭಾಗಿತ್ವದೊಂದಿಗೆ ನಡೆಯುತ್ತಿರುವ ಈ ಸಮ್ಮೇಳನವು 2019ರ ಡಿಸೆಂಬರ್ 27 ರಂದು ಆರಂಭವಾಗಿದ್ದು 29 ರಂದು ಸಮಾಪನೆಗೊಳ್ಳಲಿದೆ.

ಈ ಸುವರ್ಣ ಮಹೋತ್ಸವದಲ್ಲಿ ಸನದುದಾನವೂ ನಡೆಯಲಿದ್ದು 602 ಸ‌ಅದಿಗಳು, 95 ಅಫ್‌ಳಲಿಗಳು ಮತ್ತು 57 ಆಫಿಲ್‌ಗಳು ಸೇರಿದಂತೆ ಒಟ್ಟು 754 ದೀನೀ ಸೇವಕರನ್ನು ಸ‌ಅದಿಯ್ಯಾ ಸಮಾಜಕ್ಕೆ ಸಮರ್ಪಿಸಲಿದೆ.

ದೇಶದ ಅಭಿವೃದಿಯ ಪಂಥದಲ್ಲಿ ಮುಸ್ಲಿಮರ ಪಾತ್ರ..

#ದೇಶದ_ಅಭಿವೃದ್ಧಿಯ_ಪಥದಲ್ಲಿ #ಮುಸ್ಲಿಮರ_ಪಾತ್ರ
🇮🇳🇮🇳🇮🇳🇮🇳🇮🇳🇮🇳🇮🇳

✍ ಗಫೂರ್ ಬಾಯಾರ್
**********************

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಬ್ರಿಟಿಷರ ಬಂದೂಕಿಗೆ ಎದೆಯೊಡ್ಡಿ ವೀರ ಮರಣವನ್ನಪ್ಪಿ ಹುತಾತ್ಮರಾದುದಲ್ಲದೆ ಸ್ವಾತಂತ್ರ್ಯಾನಂತರವೂ ದೇಶದ ಏಕತೆ, ಸಮಗ್ರತೆ, ಅಖಂಡತೆ, ಮತ್ತು ಸಾರ್ವಭೌಮತ್ವಕ್ಕಾಗಿ ಭದ್ರ ಬುನಾದಿ ಹಾಕುವಲ್ಲಿ ಮುಂಚೂಣಿಯಲ್ಲಿದ್ದ ಸಮುದಾಯವಾಗಿದೆ ಮುಸ್ಲಿಂ ಸಮುದಾಯವೆನ್ನುವುದು ಹೆಮ್ಮೆಯ ಸಂಗತಿ.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಪಾತ್ರವೇನೆನ್ನುವುದನ್ನು ಇತಿಹಾಸದ ಪುಟಗಳು ಸಾರಿ ಸಾರಿ ಹೇಳುತ್ತಿವೆ.

ಮಾತ್ರವಲ್ಲ, ದೇಶ ಪ್ರೇಮವನ್ನು ಗುತ್ತಿಗೆಗೆ ಪಡೆದುಕೊಂಡಂತೆ ವರ್ತಿಸುವ ನಕಲಿ ದೇಶ ಪ್ರೇಮಿಗಳಿಗೆ, ದೆಹಲಿಯ ಕೆಂಪು ಕೋಟೆಯೊಂದರಲ್ಲೇ  ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಬ್ರಿಟಿಷರ ಬಂದೂಕಿಗೆ ಎದೆಯೊಡ್ಡಿ ವೀರ ಮರಣವನ್ನಪ್ಪಿದ 65,000 ಕ್ಕಿಂತ ಹೆಚ್ಚು ಮುಸ್ಲಿಂ ಧೀರ ಯೋಧರ ಹೆಸರುಗಳು ಉಲ್ಲೇಖಿಸಲ್ಪಟ್ಟಿದೆ.

ಇನ್ನು ದೇಶದ ಉದ್ದಗಲಕ್ಕೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಮುಸ್ಲಿಂ ಯೋಧರ ಸಂಖ್ಯೆ ಅದೆಷ್ಟಿರಬಹುದೆಂದು ಒಮ್ಮೆ ಊಹಿಸಿ ನೋಡಿ..!

ಮತಾಂಧತೆಯ ಅಮಲು ತಲೆಗೇರಿದ ನಕಲಿ ದೇಶ ಪ್ರೇಮಿಗಳು ತಮ್ಮ ಮತಾಂಧತೆಯ ಕನ್ನಡಕವನ್ನು ತೆಗೆದು ನೋಡಿದರೆ ದೇಶಕ್ಕಾಗಿ ಮುಸ್ಲಿಮರ ಕೊಡುಗೆಯೇನು ಎನ್ನುವುದಕ್ಕೆ ದೇಶದ ಉದ್ದಗಲಕ್ಕೂ ಪೂರಕ ಸಾಕ್ಷ್ಯ ದೊರೆಯುತ್ತದೆ.

ಭಾರತದ ಸ್ವಾತಂತ್ರ್ಯಕ್ಕಾಗಿ ಮಾತ್ರವಲ್ಲದೆ ದೇಶದ ಏಕತೆ, ಅಖಂಡತೆ, ಸಾರ್ವಭೌಮತ್ವ ಹಾಗೂ ದೇಶದ ಅಭಿವೃದ್ಧಿಯ ಹಾದಿಯಲ್ಲೂ ಮುಸ್ಲಿಮರ ಪಾತ್ರ ಚಿಕ್ಕದೇನೂ ಅಲ್ಲ.

ದೇಶದ ಅಭಿವೃದ್ಧಿಗಾಗಿ ತಮ್ಮ ಖಜಾನೆಯಿಂದ 500 ಕಿಲೋ ಚಿನ್ನವನ್ನು ದೇಣಿಗೆಯಾಗಿ ನೀಡಿ ಇತಿಹಾಸವನ್ನೇ ನಿರ್ಮಿಸಿದವರೂ ಸಹ ಮುಸ್ಲಿಮರೇ ಎನ್ನುವುದು ನಿರಾಕರಿಸಲಾಗದ ಸತ್ಯ.

ಇನ್ನೂರು ವರ್ಷಗಳ ಕಾಲ ದಕ್ಷಿಣ ಭಾರತವನ್ನಾಳಿದ ಹೈದರಾಬಾದ್ ನಿಜಾಮ್ ಸಂತತಿಯ ಕೊನೆಯ ದೊರೆಯಾಗಿದ್ದ "ಉಸ್ಮಾನ್ ಅಲಿ ಖಾನ್ ಆಸಿಫ್‌" ಎಂಬ ವ್ಯಕ್ತಿಯೇ ದೇಶಕ್ಕಾಗಿ ತಮ್ಮ ಖಜಾನೆಯಲ್ಲಿದ್ದ 500 ಕಿಲೋ ಚಿನ್ನವನ್ನು ದೇಣಿಗೆ ನೀಡಿ ದೇಶ ಪ್ರೇಮ ಮೆರೆದ ಮಹಾನರಾಗಿದ್ದಾರೆ.

1886ರ ಏಪ್ರಿಲ್ 24ರಂದು ಜನಿಸಿ ಫೆಬ್ರವರಿ 24 1967ಕ್ಕೆ ನಿಧನರಾದ ಉಸ್ಮಾನ್ ಅಲಿಖಾನ್ ಆಸಿಫ್‌ರವರು ವಿಶ್ವದಲ್ಲೇ ಅತಿ ಶ್ರೀಮಂತ ರಾಜರಾಗಿದ್ದರು.

ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಸ್ಥಾಪಕರೂ ಆದ ಉಸ್ಮಾನ್ ಅಲಿಖಾನ್ ಆಸಿಫ್‌ರ ಬಗ್ಗೆ 1937ರ ಫೆಬ್ರವರಿಯಲ್ಲಿ ಟೈಮ್ಸ್ ಮ್ಯಾಗಝಿನ್ ತನ್ನ ಮುಖಪುಟದಲ್ಲಿ ಅವರ ಶ್ರೀಮಂತಿಕೆ ಮತ್ತು ಸೇವಾ ಮನೋಭಾವನೆಯ ಬಗೆಗಿನ ವಿಸ್ತೃತ ವರದಿಯನ್ನೇ ಪ್ರಕಟಿಸಿತ್ತು.

50 ಮಿಲಿಯನ್ ಡಾಲರ್ ಬೆಲೆ ಬಾಳುವ ಜೇಕಬ್ ಪೆಪ್ಪರ್ ಡೈಮಂಡನ್ನು ಹೊಂದಿದ್ದ ಉಸ್ಮಾನ್ ಅಲಿಖಾನ್ ಆಸಿಫ್‌ರವರು 1948 ರಲ್ಲಿ ಹೈದರಾಬಾದ್ ಭಾರತದೊಂದಿಗೆ ವಿಲೀನವಾದ ನಂತರ ಭಾರತದಲ್ಲೇ ನೆಲೆಸಿದ್ದರು.

1956ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯ ಸಮಯದಲ್ಲಿ ಆಂಧ್ರ ಪ್ರದೇಶ ರಾಜ್ಯವೂ ರಚನೆಯಾಗಿ ಹೈದರಾಬಾದ್ ಅದರ ಭಾಗವಾದ ನಂತರ ಭಾರತ ಸರ್ಕಾರವು ಉಸ್ಮಾನ್ ಅಲಿ ಖಾನ್ ಅವರನ್ನು ಆಂಧ್ರ ಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಿತು.

1965 ರಲ್ಲಿ ಭಾರತ-ಪಾಕಿಸ್ತಾನ ಯುದ್ಧ ನಡೆದಾಗ ಅಂದಿನ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಜೆಗಳೊಂದಿಗೆ ದೇಶದ ಖಜಾನೆಗೆ ದೇಣಿಗೆ ನೀಡಲು ಕರೆ ಕೊಟ್ಟಾಗ ವಿಶ್ವದಲ್ಲಿ ಅತಿ ಶ್ರೀಮಂತ ರಾಜರೆಂಬ ಹೆಗ್ಗಳಿಕೆ ಹೊಂದಿದ್ದ ಉಸ್ಮಾನ್ ಅಲಿ ಖಾನ್‌ರವರು ಭಾರತದ ರಕ್ಷಣಾ ನಿಧಿಗೆ 500 ಕಿಲೋ ಚಿನ್ನವನ್ನು ಉದಾರವಾಗಿ ದೇಣಿಗೆ ನೀಡಿದ್ದರು. 

ಉಸ್ಮಾನ್ ಅಲಿ ಖಾನ್ ಆಸಿಫ್‌ರವರ ಈ ದಾಖಲೆಯನ್ನು ಮುರಿಯಲು ಈ ತನಕ ಯಾರಿಂದಲೂ ಸಾಧ್ಯವಾಗಿಲ್ಲ ಎನ್ನುವುದು ವಿಶೇಷ.

ತಮ್ಮ ಬದುಕಿನ ಕೊನೆಯುಸಿರಿನ ತನಕವೂ ಭಾರತದಲ್ಲೇ ಜೀವಿಸಿದ್ದ ಅವರನ್ನು ಚರಿತ್ರೆಯ ಗಂಧಗಾಳಿ ಗೊತ್ತಿಲ್ಲದ ಬಲಪಂಥೀಯ ನಾಯಕರೊಬ್ಬರು, ಉಸ್ಮಾನ್ ಅಲಿ ಖಾನ್ ಆಸಿಫ್‌ರವರು ಭಾರತ ಬಿಟ್ಟು ಪಲಾಯನ ಮಾಡಿದ್ದರು ಎಂದು ಒಂದೆಡೆ ಹೇಳಿರುವುದು ವಿಪರ್ಯಾಸ.

ಒಂದು ವೇಳೆ ಉಸ್ಮಾನ್ ಅಲಿ ಖಾನ್ ಆಸಿಫ್‌ರವರು ಅಂದು ಮನಸ್ಸು ಮಾಡಿದ್ದರೆ ತಮ್ಮ ಹಣದ ಸಮೇತ ವಿದೇಶಕ್ಕೆ ತೆರಳಿ ಹಾಯಾಗಿರಬಹುದಿತ್ತು. ಆದರೆ ಹಾಗೆ ಮಾಡದೆ ತಮ್ಮ ಸಂಪತ್ತನ್ನು ದೇಶದ ಖಜಾನೆಗೆ ಧಾರೆಯೆರೆದು ಇತಿಹಾಸದ ಪುಟಗಳಲ್ಲಿ ಲೀನವಾದ ಮಹಾನ್ ವ್ಯಕ್ತಿಯಾಗಿದ್ದಾರೆ ಉಸ್ಮಾನ್ ಅಲಿಖಾನ್ ಆಸಿಫ್.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ಕ್ಷಮೆ ಕೋರಿ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಂದೆ ಸರಿದು ಬ್ರಿಟಿಷರಿಂದಲೇ ಮಾಸಿಕ ಪೆನ್ಷನ್ ಪಡೆದ ಇತಿಹಾಸವನ್ನು ಹೊಂದಿರುವ ನಕಲಿ ದೇಶ ಭಕ್ತರಿಗೆ ಈ ಸತ್ಯದ ಬಗ್ಗೆ ತಿಳುವಳಿಕೆ ಇಲ್ಲವೆಂದಲ್ಲ. ಇಂತಹ ಸತ್ಯವನ್ನು ಒಪ್ಪಿಕೊಂಡರೆ ತಾವು ನಿರುದ್ಯೋಗಿಗಳಾಗಬೇಕಾದೀತು ಎನ್ನುವುದರ ಅರಿವು ಅವರಿಗೆ ಸ್ಪಷ್ಟವಾಗಿರುವುದರಿಂದ ಸತ್ಯವನ್ನು ಮರೆಮಾಚಲು ಸದಾ ಪ್ರಯತ್ನಿಸುತ್ತಲೇ ಇರುತ್ತಾರಲ್ಲದೆ ಅಂಥವರಿಂದ ಮತ್ತೇನನ್ನು ತಾನೇ ನಿರೀಕ್ಷಿಸಲು ಸಾಧ್ಯ?
🍂🍂🍂🍂🍂🍂🍂

ಜಾತ್ಯತೀತ ರಾಷ್ಟ್ರದ ಏಕತೆ ಮತ್ತು ಸೌಹಾಧರ್ತೆಗೊಂದು ಉದಾರಣೆ..

_*ಜಾತ್ಯತೀತ ರಾಷ್ಟ್ರದ ಏಕತೆ ಮತ್ತು ಸೌಹಾರ್ಧತೆಗೊಂದು ಉದಾಹರಣೆ*_

✍ ಗಫೂರ್ ಬಾಯಾರ್
**********************
2002ರಲ್ಲಿ ನಡೆದ ಗುಜರಾತ್ ಗಲಭೆಯು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದಷ್ಟೇ ಅಲ್ಲದೆ ಆ ಗಲಭೆಯು ದೇಶದ ಸಾಮರಸ್ಯತೆ ಮತ್ತು ಸೌಹಾರ್ದತೆಯ ಬುಡವನ್ನೇ ಅಲುಗಾಡಿಸಿತ್ತು.

ಈ ಗಲಭೆಯು ಜಾಗತಿಕ ಮಟ್ಟದಲ್ಲಿ ಭಾರತದ ಸಾಮರಸ್ಯತೆ, ಸಹಬಾಳ್ವೆ ಮತ್ತು ಸೌಹಾರ್ದತೆಯ ಪರಂಪರೆಗೆ ಕಳಂಕವನ್ನೂ ತಂದಿತು.

ರಾಜಕೀಯ ಲಾಭಕ್ಕಾಗಿ ಫ್ಯಾಸಿಸ್ಟ್ ಶಕ್ತಿಗಳು ನಡೆಸಿದ ಈ ವ್ಯವಸ್ಥಿತ ಷಡ್ಯಂತ್ರದಿಂದಾಗಿ ಅಂದಿನ ತನಕ ಜಾತಿ-ಮತಭೇದವಿಲ್ಲದೆ ಅನ್ಯೋನ್ಯವಾಗಿ ಬದುಕುತ್ತಿದ್ದವರಲ್ಲೇ ಹಗೆ ಮತ್ತು ವೈರತ್ವ ಮೂಡಿಸಿ ತಮ್ಮ ಓಟ್ ಬ್ಯಾಂಕನ್ನು ಗಟ್ಟಿಗೊಳಿಸಿಕೊಳ್ಳುವಲ್ಲಿಫ್ಯಾಸಿಸ್ಟ್ ಶಕ್ತಿಗಳು ಸ್ವಲ್ಪಮಟ್ಟಿಗೆ ಯಶಸ್ವಿಯೂ ಆದವು.

ಪರಿಣಾಮವಾಗಿ ತಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಿದ್ದ ನೆರೆಮನೆ, ಅಂಗಡಿ ಮುಂಗಟ್ಟುಗಳು ಹೀಗೆ ಎಲ್ಲವನ್ನೂ ಪುರುಷರು ಮಾತ್ರವಲ್ಲದೆ ಸ್ತ್ರೀಯರೂ ಸಹ ಕೊಳ್ಳೆಹೊಡೆದು ಪುರುಷರು, ಗರ್ಭಿಣಿಯರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರೆಂದು ನೋಡದೆ  ಸಾವಿರಾರು ಮುಸ್ಲಿಮರ ಮಾರಣ ಹೋಮ ನಡೆಸಿದ ಕುಖ್ಯಾತಿಗೂ ಗುಜರಾತ್ ಗಲಭೆ ಕಾರಣವಾಯಿತು.

ತಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಿದ್ದ ನೆರೆಮನೆಯವರೇ ದುಷ್ಕರ್ಮಿಗಳ ಗುಂಪಿನಲ್ಲಿ ಸೇರಿಕೊಂಡು ಕೊಳ್ಳೆ ಮತ್ತು ಕೊಲೆ ನಡೆಸುತ್ತಿದ್ದರಿಂದ ಅಂದು ದೌರ್ಜನ್ಯಕ್ಕೀಡಾಗುತ್ತಿದ್ದ ದಮನಿತರಿಗೆ ಯಾರ ನೆರವೂ ಸಿಗದಂತಾಗಿತ್ತು.

ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸಹ ಗೆಳೆಯರು ಮತ್ತು ನೆರೆಹೊರೆಯವರನ್ನು ದುಷ್ಕರ್ಮಿಗಳಿಂದ ರಕ್ಷಿಸಿ ಮಾನವೀಯತೆ ಮೆರೆದ ಅಪರೂಪದ ಘಟನೆಗಳೂ ಅಂದು ನಡೆದಿತ್ತು.

ಗುಲಾಮ್ ರಸೂಲ್ ಎಂಬುವವರ ಕುಟುಂಬದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಸಂಗತಿ ತಿಳಿದಾಗ ಗುಲಾಮ್ ರಸೂಲ್‌ರವರ ಗೆಳೆಯನಾದ ಮಹೇಂದ್ರ ಎಂಬಾತ ಗುಲಾಮ್ ರಸೂಲ್‌ರನ್ನು ತಮ್ಮ ಮನೆಯ ಎರಡನೆಯ ಮಹಡಿಯಲ್ಲಿರಿಸಿ ರಕ್ಷಣೆ ಕೊಟ್ಟಿದ್ದನು.

ಮಹೇಂದ್ರ ಅಂದುಕೊಂಡಂತೆ ಗೆಳೆಯ ಗುಲಾಮ್ ರಸೂಲ್‌ನ ಮನೆಯ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿಯೇ ಬಿಟ್ಟರು.

ಆಗ ಮಹೇಂದ್ರನ ಮನೆಯ ಎರಡನೇ ಮಹಡಿಯ ಮೇಲಿನ ಕೊಠಡಿಯಿಂದ ಗುಲಾಮ್ ರಸೂಲ್ ಕಿಟಕಿಯ ಮೂಲಕ ತನ್ನ ಮನೆಯತ್ತ ಕಣ್ಣು ಹಾಯಿಸಿ ತನ್ನ ಮನೆಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸುತ್ತಿರುವುದನ್ನು ಗುಲಾಮ್ ರಸೂಲ್‌ನ ಅಸಹಾಯಕನಾಗಿ ನೋಡುತ್ತಿದ್ದ. 

ಗುಲಾಮ್ ರಸೂಲ್‌ನ ಮನೆಯ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಕೈಗೆ ಸಿಕ್ಕಿದ್ದನ್ನೆಲ್ಲ ಕೊಳ್ಳೆ ಹೊಡೆಯುತ್ತಿದ್ದರು.

ಆಶ್ಚರ್ಯದ ಸಂಗತಿಯೆಂದರೆ ಗುಲಾಮ್ ರಸೂಲ್‌ನ ಆತ್ಮೀಯ ಸ್ನೇಹಿತನಾದ ಓಂಪ್ರಕಾಶ್ ಎಂಬಾತನೂ ತನ್ನ ಎರಡು ಮಕ್ಕಳ ಜೊತೆಗೆ ದುಷ್ಕರ್ಮಿಗಳ ಜೊತೆ ಸೇರಿಕೊಂಡು ಗುಲಾಮ್ ರಸೂಲ್‌ನ ಮನೆಯಲ್ಲಿದ್ದ ಬೆಲೆಬಾಳುವ ಪೀಠೋಪಕರಣಗಳನ್ನು ಹೊತ್ತೊಯ್ಯುತ್ತಿರುವುದನ್ನು ಕಂಡು ದಂಗಾಗಿಹೋದನು.

ನಿನ್ನೆಯ ತನಕ ತನ್ನ ಮನೆಯ ಕಷ್ಟ-ಸುಖಗಳಿಗೆ ತನ್ನ ಬಳಿ ಬಂದು ನೆರವು ಪಡೆಯುತ್ತಿದ್ದ ಓಂ ಪ್ರಕಾಶ್ ಸಹ ದುಷ್ಕರ್ಮಿಗಳ ಜೊತೆ ಸೇರಿ ತನ್ನ ಮನೆಯನ್ನು ಕೊಳ್ಳೆ ಹೊಡೆಯುತ್ತಿರುವುದನ್ನು ಕಂಡಾಗ ಗುಲಾಮ್ ರಸೂಲ್ ಹೃದಯವೇ ಒಡೆದಂತಾಯಿತು. ಹಲವಾರು ದಿನಗಳ ಕಾಲ ಈ ಗಲಭೆ ಗುಜರಾತಿನಾದ್ಯಂತ ಎಗ್ಗಿಲ್ಲದೆ ಮುಂದುವರಿದಿತ್ತು.

ದಿನಗಳು ಉರುಳಿ ಗಲಭೆ ಹತೋಟಿಗೆ ಬಂದು ಪರಿಸ್ಥಿತಿ ಶಾಂತವಾಯಿತು. ಅಲ್ಲಿಯವರೆಗೂ ಗುಲಾಮ್ ರಸೂಲ್ ತನ್ನ ಸ್ನೇಹಿತನಾದ ಮಹೇಂದ್ರನ ಮನೆಯಲ್ಲೇ ಆಶ್ರಯ ಪಡೆದಿದ್ದ.

ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ನಂತರ ಗುಲಾಮ್ ರಸೂಲ್ ತನ್ನ ಮನೆಗೆ ಹೋಗಿ ನೋಡಿದಾಗ ತನ್ನ ಮನೆಯಲ್ಲಿ ಯಾವೊಂದು ವಸ್ತುಗಳೂ ಇರಲಿಲ್ಲ ಎಲ್ಲವನ್ನೂ ದುಷ್ಕರ್ಮಿಗಳು ಲೂಟಿ ಮಾಡಿದ್ದರು.

ಗಲಭೆಕೋರರು ತನ್ನ ಮನೆಯನ್ನು ಲೂಟಿ ಮಾಡಿದರು ಎನ್ನುವುದಕ್ಕಿಂತಲೂ ಮಿಗಿಲಾಗಿ ತನ್ನ ಆತ್ಮೀಯ ಸ್ನೇಹಿತನಾಗಿದ್ದ ಓಂ ಪ್ರಕಾಶ್ ಮಕ್ಕಳೊಂದಿಗೆ ಲೂಟಿ ಮಾಡಿದ್ದು ಗುಲಾಮ್ ರಸೂಲ್‌ನಿಗೆ ಸಹಿಸಲಾರದಷ್ಟು ನೋವನ್ನುಂಟು ಮಾಡಿತ್ತು.

ಅದೊಂದು ದಿನ ಗುಲಾಮ್ ರಸೂಲ್‌ನನ್ನು ಭೇಟಿಯಾಗಲೆಂದು ಆತನ ಮನೆಗೆ ಬಂದ ಓಂ ಪ್ರಕಾಶ್ ಗುಲಾಮ್ ರಸೂಲ್‌ನನ್ನು ತನ್ನ ಮನೆಗೆ ಬರುವಂತೆ ಆಹ್ವಾನಿಸಿದ.

ತನ್ನ ಮನೆಯ ಸಂಪತ್ತನ್ನು ಕೊಳ್ಳೆ ಹೊಡೆದಿದ್ದಲ್ಲದೆ ತನ್ನನ್ನು ವಧಿಸುವ ಸಲುವಾಗಿ ಏನಾದರೂ ನೆಪವೊಡ್ಡಿ ಈತ ಬಂದಿರಬಹುದೆಂದು ಭಾವಿಸಿದ ಗುಲಾಮ್ ರಸೂಲ್ ಹೆಚ್ಚೇನೂ ಮಾತನಾಡಲಿಲ್ಲ.

ಆದರೆ ಆತ್ಮೀಯ ಸ್ನೇಹಿತನಾಗಿದ್ದ ಓಂ ಪ್ರಕಾಶನ ಆಹ್ವಾನವನ್ನು ತಿರಸ್ಕರಿಸದೆ ಆದದ್ದಾಗಲಿ ಎಂಬ ಭಾವನೆಯಿಂದ ಗುಲಾಮ್ ರಸೂಲ್ ಓಂಪ್ರಕಾಶನೊಂದಿಗೆ ಆತನ ಮನೆಗೆ ಹೋದ.

ಓಂ ಪ್ರಕಾಶನ ಮನೆಯಲ್ಲಿ ನೋಡಿದರೆ ಗುಲಾಮ್ ರಸೂಲ್‌ನ ಮನೆಯ ಪೀಠೋಪಕರಣಗಳು ಮತ್ತು ಇತರ ಸಾಮಗ್ರಿಗಳನ್ನು ಸಾಲಾಗಿ ಜೋಡಿಸಿ ಇಡಲಾಗಿತ್ತು. ಇದನ್ನು ಕಾಣುತ್ತಿದ್ದಂತೆ ಗುಲಾಮ್ ರಸೂಲ್ ಏನೊಂದೂ ಮಾತೂ ಆಡದೆ ಮೌನವಾಗಿ ನಿಂತ.

ಆಗ ಗುಲಾಮ್ ರಸೂಲ್‌ನನ್ನು ಅಪ್ಪಿಕೊಂಡ ಓಂ ಪ್ರಕಾಶ್, ಗುಲಮ್ ಭಾಯ್... ಶಸ್ತ್ರಸಜ್ಜಿತರಾಗಿದ್ದ ಗಲಭೆಕೋರರು ತಮ್ಮ ಮನೆಯ ಮೇಲೆ ದಾಳಿ ಮಾಡುವುದನ್ನು ತಡೆಯಲು ನನ್ನಿಂದಾಗಲಿಲ್ಲ. ಹಾಗಾಗಿ ನಿಮ್ಮ ಮನೆಯ ಸಾಮಗ್ರಿಗಳ ಪೈಕಿ ಸಾಧ್ಯವಾದಷ್ಟನ್ನು ಲೂಟಿಕೋರಿಂದ ರಕ್ಷಿಸಬೇಕೆಂಬ ಉದ್ದೇಶದಿಂದ ನನ್ನ ಮಕ್ಕಳನ್ನು ಕರೆದೊಯ್ದು ಸಾಧ್ಯವಾದಷ್ಟು ಸಾಮಾನುಗಳನ್ನು ತಂದು ನಾವಿಲ್ಲಿ ಇಟ್ಟಿದ್ದೇವೆ. ನಿಮ್ಮ ಮನೆಯ ಸಾಮಗ್ರಿಗಳನ್ನು ನೀವು ಯಾವಾಗ ಬೇಕಿದ್ದರೂ ನಿಮ್ಮ ಮನೆಗೆ ತೆಗೆದುಕೊಂಡು ಹೋಗಬಹುದು ಎಂದ.

ಓಂ ಪ್ರಕಾಶನ ಮಾತು ಕೇಳಿದ ಗುಲಾಮ್ ರಸೂಲ್ ಗದ್ಗದಿತ ಕಂಠದಿಂದ ಭಾವುಕನಾಗಿ ಗೆಳೆಯಾ, ಮಕ್ಕಳೊಂದಿಗೆ ನೀನು ಈ ಸಾಮಗ್ರಿಗಳನ್ನು ತರುವುದನ್ನು ನಾನು ಮಹೇಂದ್ರನ ಮನೆಯ ಮಹಡಿಯ ಮೇಲಿನಿಂದ ನೋಡುತ್ತಿದ್ದೆ. ಈ ಹೊತ್ತಿನ ತನಕವೂ ನಾನದನ್ನು ತಪ್ಪಾಗಿ ಗ್ರಹಿಸಿದ್ದೆ ದಯವಿಟ್ಟು ನನ್ನನ್ನು ಕ್ಷಮಿಸು ಗೆಳೆಯ ಎನ್ನುತ್ತಾ ಗುಲಾಮ್ ರಸೂಲ್ ಬಿಕ್ಕಿ ಬಿಕ್ಕಿ ಅತ್ತ.

ವಿವಿಧತೆಯಲ್ಲಿ ಏಕತೆ ಎಂಬ ಸಂದೇಶವನ್ನು ಸಾರಿದ ಭಾರತದ ಜಾತ್ಯತೀತ ತತ್ವದ ಮೂಲ ತಳಹದಿ ಇದೇ ಅಲ್ಲವೇ?

ಅಧಿಕಾರಕ್ಕಾಗಿ ಫ್ಯಾಸಿಸ್ಟ್ ಶಕ್ತಿಗಳು ಏನೆಲ್ಲಾ ಕುತಂತ್ರ ಮಾಡಿದರೂ ಸಹ ಮಹೇಂದ್ರ ಮತ್ತು ಓಂಪ್ರಕಾಶ್‌ನಂತಹ ಮಾನವೀಯತೆಯ ಪ್ರತೀಕಗಳಿರುವ ತನಕವೂ ಈ ದೇಶದಲ್ಲಿ ಅಂತರ್ಗತವಾಗಿರುವ ಸಾಮರಸ್ಯತೆ ಸೌಹಾರ್ದತೆ ಮತ್ತು ಏಕತೆಯನ್ನು ಇಲ್ಲವಾಗಿಸಲು ಅದ್ಯಾವ ವಿಚ್ಛಿದ್ರಕಾರಿ ಶಕ್ತಿಗಳಿಂದಲೂ ಸಾಧ್ಯವಿಲ್ಲ.

*ಇತ್ತೀಚೆಗೆ ದೆಹಲಿಯಲ್ಲಿ ನಡೆದ ಗಲಭೆಯಲ್ಲಿಯೂ ಹೊರಗಿನಿಂದ ಬಂದು ಗಲಭೆ ನಡೆಸುತ್ತಿದ್ದ ಗಲಭೆಕೇೂರರಿಂದ ಎಲ್ಲಾ ಕಡೆಯೂ ಎಲ್ಲರನ್ನೂ ರಕ್ಷಿಸಲು ಸಾಧ್ಯವಾಗದಿದ್ದರೂ ಸಾಧ್ಯವಾದ ಕಡೆಯೆಲ್ಲ ಹಿಂದೂ, ಕ್ರೈಸ್ತ, ಮುಸ್ಲಿಂ ಮತ್ತು ಸಿಖ್ಖರು ಪರಸ್ಪರ ನೆರವಾಗಿ ಸೌಹಾರ್ಧತೆ ಮೆರೆದಿರಿರುವ ಬಗ್ಗೆ  ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.*

ಒಟ್ಟಿನಲ್ಲಿ ಹೇಳಬೇಕೆಂದರೆ ರಾಜಕೀಯ ಲಾಭಕ್ಕಾಗಿ ಫ್ಯಾಸಿಸ್ಟ್ ಶಕ್ತಿಗಳು ಈ ದೇಶದ ಭಾವೈಕ್ಯತೆಯನ್ನು ಒಡೆಯಲು ಅದ್ಯಾವ ಕುಟಿಲ ತಂತ್ರಗಳನ್ನು ಅನುಸರಿಸಿದರೂ ಸಹ ದೇಶದ ಜಾತ್ಯತೀತ ಪರಂಪರೆಯಲ್ಲಿ ನಂಬಿಕೆಯಿರುವ ಈ ದೇಶದ ಮೂಲ ನಿವಾಸಿಗಳು ಜಾತಿ ಭೇದ ಮರೆತು ಫ್ಯಾಸಿಸ್ಟ್ ಶಕ್ತಿಗಳ ಕುಟಿಲ ಕುತಂತ್ರಗಳಿಗೆ ಪ್ರತಿ ತಂತ್ರ ಹೂಡಿ ವಿಫಲಗೊಳಿಸುವುದರಲ್ಲಿ ಸಂಶಯವಿಲ್ಲ.
🇮🇳🇮🇳 ಜೈ ಹಿಂದ್, ಜೈ ಭಾರತ್ 🇮🇳🇮🇳
✊✊✊✊✊✊✊