*ಅಹ್ಲು ಬೈತ್*
ಭಾಗ --1
📝 *_ಮುನೀರ್ ಸಖಾಫಿ,ಸಾಲೆತ್ತೂರು._*
ಅಹ್ಲು ಬೈತ್ ಎಂಬುವುದರ ಉದ್ದೇಶ ಎರಡು ರೂಪದಲ್ಲಿ ಇಮಾಮರು ವಿವರಿಸಿದ್ದಾರೆ.
1.ಎಲ್ಲಾ ಸತ್ಯ ವಿಶ್ವಾಸಿಗಳು.(ಅಂತ್ಯ ದಿನದ ವರೆಗೆ ಬರುವ ಎಲ್ಲಾ ವಿಶ್ವಾಸಿಗಳು ಒಳಪಡುವರು.)
2.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಪಿತಾಮಹರಾದ ಅಬ್ದು ಮನಾಫ್ ಎಂಬವರ ಮಕ್ಕಳ ಪೈಕಿ ಹಾಶಿಂ ಮತ್ತು ಮುತ್ತಲಿಬ್ ಎಂಬ ಇಬ್ಬರು ಮಕ್ಕಳ ಸಂತಾನ ಪರಂಪರೆಯಲ್ಲಿರುವ ಸತ್ಯ ವಿಶ್ವಾಸಿಗಳಿಗೆ ಅಹ್ಲು ಬೈತ್ ಎನ್ನುವರು.(ಫತ್'ಹುಲ್ ಮುಈನ್ ,3)
ಈ ಎರಡನೇ ಅರ್ಥದಲ್ಲಿ ಹೇಳಿದವರಿಗೆ ಝಕಾತ್ ನೀಡುವುದು ನಿಷಿದ್ಧವಾಗಿದೆ.
ಇಮಾಮ್ ಶಾಫಿಈ (ರ) ಇದಕ್ಕೆ ಹಲವು ಪುರಾವೆಗಳನ್ನು ನೀಡಿದ್ದಾರೆ.
ಇಮಾಮ್ ಬುಖಾರಿ (ರ)ವರದಿ ಮಾಡಿದ ಹದೀಸಿನಲ್ಲಿ ಈ ರೀತಿ ಕಾಣಬಹುದು.
عن جبير بن مطعم قال مشيت أنا وعثمان بن عفان إلى رسول الله صلى الله عليه وسلم فقلنا يا رسول الله أعطيت بني المطلب وتركتنا ونحن وهم منك بمنزلة واحدة فقال رسول الله صلى الله عليه وسلم إنما بنو المطلب وبنو هاشم شيء واحد قال الليث حدثني يونس وزاد قال جبير ولم يقسم النبي صلى الله عليه وسلم لبني عبد شمس ولا لبني نوفل
(صحيح البخاري)
ಜುಬೈರ್ ಬಿನ್ ಮುತ್'ಯಿಮ್ (ರ)ಹೇಳುತ್ತಾರೆ;ನಾನು ಮತ್ತು ಉಸ್ಮಾನ್ ಬಿನ್ ಅಫ್ಫಾನ್ (ರ) ರವರು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಕೇಳಿದೆವು.ತಾವು ಮುತ್ತಲಿಬ್'ನ ಮಕ್ಕಳಿಗೆ ಗನೀಮತ್ (ಯುದ್ಧದಲ್ಲಿ ಲಭಿಸಿದ ಸಂಪತ್ತಿನಿಂದ ನಿಗದಿತ ಸಂಖ್ಯೆ) ನೀಡಿದ್ದೀರಿ.ನಮಗೆ ನೀಡಿಲ್ಲ.ನಾವು ಕೂಡಾ ಅವರಂತೆಯೇ ಅಲ್ಲವೇ?
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು, ಹಾಶಿಂನ ಮಕ್ಕಳು ಮತ್ತು ಮುತ್ತಲಿಬ್ ನ ಮಕ್ಕಳು ಒಂದೇ ರೀತಿಯಾಗಿದ್ದಾರೆ.
(ಬುಖಾರಿ 3311).
(ಅಬ್ದು ಮನಾಫ್ ಗೆ 4 ಮಕ್ಕಳಿದ್ದರು.
1.ಹಾಶಿಂ.
2.ಅಬ್ದ್ ಶಂಸ್
3.ಮುತ್ತಲಿಬ್
4.ನೌಫಲ್.
ಉಸ್ಮಾನ್ (ರ)ರವರು
ಈ ಪೈಕಿ ಅಬ್ದ್ ಶಂಸ್ ಎಂಬವರ ಪರಂಪರೆಯಲ್ಲಿ ಜನಿಸಿದವರಾಗಿದ್ದಾರೆ.
ಅವರ ಪರಂಪರೆಯನ್ನು ಈ ರೀತಿ ಓದಬಹುದಾಗಿದೆ.
1.ಉಸ್ಮಾನ್ (ರ)
2.ಅಫ್ಫಾನ್(ರ)
3.ಅಬುಲ್ ಆಸ್
4.ಉಮಯ್ಯತ್
5.ಅಬ್ದ್ ಶಂಸ್.
ಝಕಾತ್ ನೀಡಲ್ಪಡದ ವ್ಯಕ್ತಿಗಳಿಗೆ ಗನೀಮತ್ ನೀಡಲಾಗುತ್ತಿತ್ತು.
ಅಬ್ದು ಮನಾಫ್ ನ ಮಕ್ಕಳ ಪರಂಪರೆಯಲ್ಲಿರುವ ಅಹ್ಲು ಬೈತ್ ಗಳಿಗೆ ಝಕಾತ್ ನೀಡಲಾಗುತ್ತಿರಲಿಲ್ಲ.ಉಸ್ಮಾನ್ (ರ)ಈ ಹೇಳಿದ ಅಹ್ಲ್ ಬೈತ್ ಗೆ ಸೇರಿದವರಾಗಿರಲಿಲ್ಲ.
ಮತ್ತೊಬ್ಬರಾದ ಜುಬೈರ್ ಬಿನ್ ಮುತ್'ಯಿಮ್ (ರ)ಎಂಬವರು ಅಬ್ದು ಮನಾಫ್ ನ ನೌಫಲ್ ಎಂಬವರ ಪರಂಪರೆಯಲ್ಲಿ ಜನಿಸಿದವರು.ಅವರೂ ಕೂಡಾ ಅಹ್ಲು ಬೈತ್ ಗೆ ಸೇರಿದವರಾಗಿರಲಿಲ್ಲ.ಆದುದರಿಂದಲೇ ಈ ಇಬ್ಬರಿಗೂ ಗನೀಮತ್ ನೀಡಿಲ್ಲ.)
ಇಮಾಮ್ ಮುಸ್ಲಿಂ (ರ)ವರದಿ ಮಾಡಿದ ಹದೀಸ್ ನೋಡಿ,
قال لنا إن هذه الصدقات إنما هي أوساخ الناس وإنها لا تحل لمحمد ولا لآل محمد (مسلم)
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು;ಖಂಡಿತವಾಗಿಯೂ ಇದು (ಝಕಾತ್)ಜನರ ಕೊಳೆಯಾಗಿದೆ.ಇದು ಮುಹಮ್ಮದ್ (ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ)ಮತ್ತು ಅವರ ಕುಟುಂಬಕ್ಕೂ ಅನುವದನೀಯವಲ್ಲ.
(ಮುಸ್ಲಿಂ 2531)
ಇಮಾಮ್ ತ್ವಬ್'ರಾನಿ ವರದಿ,
عن ابن عباس رضي الله عنهما
من أن رسول الله صلى الله عليه وسلم قال لابني عمه: (لا يحل لكما أهل البيت من الصدقات شيء، ولا غسالة أيدي الناس، إن لكم في خمس الخمس لما يكفيكم(طبراني في الكبير)
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು.
ಓ ಅಹ್ಲು ಬೈತ್! ಜನರ ಕೊಳೆಯಾದ ಝಕಾತ್ ನಾನು ನಿಮಗೆ ಹಲಾಲ್ ಗೊಳಿಸಲಾರೆ.ನಿಮಗೆ ಐದರಲ್ಲೊಂದರ ಐದು ಭಾಗ (ಗನೀಮತ್ ನ ನಿಗದಿತ ಸಂಖ್ಯೆ) ನೀಡಲಾಗುವುದು.
(ತ್ವಬ್ ರಾನಿ11543)
*ಮೇಲೆ ಹೇಳಿದ ಹದೀಸುಗಳಿಂದ ಈ ಕೆಳಗಿನ ಕಾರ್ಯಗಳು ಸ್ಪಷ್ಟವಾಯಿತು.*
*1.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಕುಟುಂಬಕ್ಕೆ ಝಕಾತ್ ನೀಡುವುದು ನಿಷಿದ್ಧವಾಗಿದೆ.*
*2.ಝಕಾತ್ ನೀಷೇಧ ಮಾಡಲ್ಪಟ್ಟದ್ದು ಹಾಶಿಂ ಮತ್ತು ಮುತ್ತಲಿಬ್ ನ ಸಂತಾನ ಪರಂಪರೆಯಲ್ಲಿರುವ ಮಕ್ಕಳಿಗಾಗಿದೆ.*
*3.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಕುಟುಂಬವೆಂಬುವುದರ ತಾತ್ಪರ್ಯ ಹಾಶಿಂ ಮತ್ತು ಮುತ್ತಲಿಬ್ ನ ಸಂತಾನ ಪರಂಪರೆಯಲ್ಲಿರುವ ಸತ್ಯ ವಿಶ್ವಾಸಿಗಳಾಗಿದ್ದಾರೆ.*
*ಮುಂದುವರಿಯುವುದು...*
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Saturday, February 24, 2018
Sunday, February 18, 2018
💥💥💥💥💥💥💥💥
*ಶಾಶ್ವತ ಪರಲೋಕದಲ್ಲಿ ವಿಜಯಿಗಳಾಗಲೂ ನಾವುಗಳೂ ಉಲಮಾಗಳನ್ನು ಅನುಸರಿಸುವಾ*........
💥💥💥💥💥💥💥💥
@@@@@@@@@@@@
✍🏻 *ಮುಹಮ್ಮದ್ ಮಸ್ಊದ್ ತಾಳಿತ್ತನೂಜಿ ವಿಟ್ಲ*
@@@@@@@@@@@@
ನಾಳೆ ಪರಲೋಕದಲ್ಲಿ (ಮಹ್ಶಾರದಲ್ಲಿ) ನಾಲ್ಕೂ ಗುಂಪುಗಳು ಸ್ವರ್ಗದ ಗೇಟಿನ ಬಳಿ ಯಾರಾಗಿದೆ ಪ್ರಥಮವಾಗಿ ಸ್ವರ್ಗ ಪ್ರವೇಶಿಸಬೇಕಾಗಿರೂದು ಎಂದು ತರ್ಕಿಸುತ್ತದೆ*......👇🏻
*1* ಅಲ್ಲಾಹನ ದೀನಿಗಾಗಿ ಧರ್ಮಯುದ್ದ ನಡೆಸಿದ, ಅಲ್ಲಾಹನ ದೀನಿಗಾಗಿ ಹೋರಾಡಿ ಶಹೀದ್ ಆದ *ಶುಹದಾಗಳು* ಆಗಿರುತ್ತಾರೆ.
*2* ತನ್ನ ಹಲಾಲಾದ ಸಂಪತ್ತಿನಿಂದ ಪರಿಶುದ್ದ ಹಜ್ಜ್ ನಿರ್ವಹಿಸಿದ *ಹಾಜಿಗಳು*
*3* ಅಲ್ಲಾಹನ ದೀನಿಗಾಗಿ ತನ್ನ ಹಲಾಲಾದ ಸಂಪತ್ತನ್ನು ಅತೀಹೆಚ್ಚಾಗಿ ಖರ್ಚು ಮಾಡುವ ಮಸೀದಿ ಮದರಸಗಳಿಗೆ ಬಡವರಿಗೆ ನೀಡುವ *ದಾನಿಗಳು*
*4* ಅಲ್ಲಾಹನ ತೃಪ್ತಿಯನ್ನು ಆಶಿಸಿ ಕಲಿತಂಥಹ ನೈಜ *ಉಲಮಾಗಳು*
👇🏻👇🏻👇🏻👇🏻👇🏻👇🏻👇🏻👇🏻
ಇವರ ಈ ತರ್ಕಗಳಿಗೆ ಪರಿಹಾರ ಕಲ್ಪಿಸಲೂ ಅಲ್ಲಾಹನು ಅವನ ಮಲಕನ್ನು ಕಳಿಹಿಸುತ್ತಾನೆ.
ಆಗ ಮಲಕ್ *ಒಂದನೇಯದ್ದಾಗಿ* ಬಂದು ಶುಹದಾಗಳಲ್ಲಿ ಕೇಳುತ್ತಾರೆ ನಿಮ್ಮ ನ್ಯಾಯವೇನು ....?
ಆಗ ಶುಹಾದಾಗಳು ಹೇಳುತ್ತಾರೆ ನಮ್ಮ ಸ್ವಂತ ಶರೀರವನ್ನು ಈ ಪರಿಶುದ್ದ ದೀನಿಗಾಗಿ ಸಮರ್ಪಿಸಿದ ಕಾರಣ ನಾವು ಪ್ರಥಮವಾಗಿ ಸ್ವರ್ಗ ಪ್ಲವೇಶಿಸಬೇಕೆಂದು......
ಆಗ ಮಲಕು ಹೇಳುತ್ತಾರೆ ನಿಮಗೆ ಅಲ್ಲಾಹನ ದೀನಿಗಾಗಿ ಶಹೀದ್ ಆದರೆ ಸ್ವರ್ಗ ಇದೆ ಎಂದು ತಿಳಿಸಿದವರು,ತಿಳುವಳಿಕೆ ನೀಡಿದವರೂ ಯಾರೂ.....?
ಆಗ ಶುಹದಾಗಳು ಅದು ಉಲಮಾಗಳು, ಆಲಿಂಗಳು ಎಂದು ಹೇಳುತ್ತಾರೆ ಆಗದರೇ ನಿಮಗಿಂಥ ಶ್ರೇಷ್ಠ ಆ *ಉಲಮಾಗಳೇ*. ಎಂದು ಮಲಕ್ ತೀರ್ಮಾನಿಸುತ್ತದೆ..........
ಎರಡನೇಯದಾಗಿ ಮಲಕ್ ಹಾಜಿಗಳ ಬಳಿ ಕೇಳಿದಾಗ....? ಹಾಜಿಗಳು ನಮ್ಮ ಸಾವಿರಗಟ್ಟಳೇ ಹಣವನ್ನು ಒಮ್ಮೆಲೇ ಯಾವುದೇ ಬೇಜಾರಿಲ್ಲದೇ ಅಲ್ಲಾಹನು ಗೌರವಿಸಿದ ಆ ಪುಣ್ಯ ಭೂಮಿಗೆ ಹೋಗಿ ಹಜ್ಜ್ ನಿರ್ವಹಿಸಿದ ನಾನಲ್ಲದೇ ಬೇರೆ
ಯಾರಾಗಿದೆ ಪ್ರಥಮ ಹೋಗಬೇಕಾದದ್ದು ಸ್ವರ್ಗಕ್ಕೆ......
ಆಗ ಮಲಕ್ ನಿಮಗೆ ಈಗೆಲ್ಲ ಮಾಡಿದರೆ ಪುಣ್ಯವಿದೆ , ಸ್ವರ್ಗವಿದೆ ತಳಿಸಿದವರು ಯಾರೂ.........,???
ಆಗ ಹಾಜಿಗಳು ಅದು ಉಲಮಾಗಳು,ಉಸ್ತಾದರುಗಳು...
ಆಗ ಮಲಕ್ ಆಗದರೇ *ಉಲಮಾಗಳು* ಹೋಗದೇ ನೀವು ಹೋಗಲು ಹೇಗೆ ಸಾಧ್ಯ....
ಮೂರನೇಯದ್ದಾಗಿ ಮಲಕ್ ದಾನಿಗಳೊಂದಿಗೆ ನಿಮ್ಮ ನ್ಯಾಯವೇನು......???
ಆಗ ದಾನಿಗಳು ಅನೇಕ ಶ್ರೀಮಂತರೂ ನಾನ ಹರಾಂ ಗಳಿಗೆ ತನ್ನ ಸಂಪತ್ತನ್ನು ವ್ಯವಹರಿಸುವ ಕಾಲದಲ್ಲಿ ನಾವು ಹಲಾಲಾದ ರೀತಿಯಲ್ಲಿ ಸಂಫತ್ತು ಪಡೆದು ಅದನ್ನು ಅಲ್ಲಾಹನ ಪರಿಶುದ್ದ ದೀನೀಗಾಗಿ ವ್ಯವಹರಿಸಿದ ನಾವಲ್ಲವೇ ಪ್ರಥಮವಾಗಿ ಸ್ವರ್ಗ ಪ್ರವೇಶಿಸಬೇಕಾದರೂ.......
ಆಗ ಮಲಕ್ ನೀವು ಹೇಳಿದ ಮೇಲಿನ ಕಾರ್ಯವನ್ನು ನಿಮಗೆ ಮನವರಿಕೆ ಮಾಡಿ ಪ್ರೋತ್ಸಾಹಿಸಿದವರೂ ಯಾರೂ......???
ಆಗ ದಾನಿಗಳು ನಮ್ಮ ಉಸ್ತಾರುಗಳು, *ಉಲಮಾಗಳು*......
ಆಗ ಅಂತಹ ಉಲಮಾಗಳು ಪ್ರಥಮವಾಗಿ ಸ್ವರ್ಗಕ್ಕೆ ಹೋಗದೇ ನೀವೂ ಹೋಗುವುದೂ ಸರಿಯಲ್ಲ ಎಂದಾಗಿತ್ತು ಆ ಮಲಕ್ ನ ಉತ್ತರ....
ಹೀಗೆ ಎಲ್ಲಾ ವಿಧದಲ್ಲಿ ನೋಡಿದರೂ ಉಲಮಾಗಳು ಪ್ರಥಮವಾಗಿ ಸ್ವರ್ಗ ಪ್ರವೇಶಿಸಬೇಕೆಂದಾಯಿತು ಹಾಗೂ ಉಳಿದವರೂ ಸ್ವರ್ಗ ಪ್ರವೇಶಿಸಲೂ ಉಲಮಾಗಳ ಸಹಾಯವಿಲ್ಲದೇ ಸಾಧ್ಯವಿಲ್ಲ ಎಂದಾಯಿತು.
ಅಲ್ಲಾಹನ ಆಜ್ಞೆ ಉಲಮಾಗಳು ಪ್ರಥಮವಾಗಿ ಸ್ವರ್ಗ ಎಂದಾದರೂ ಉಲಮಾಗಳೂ
ತನ್ನನ್ನೂ ಉಲಮಾಗಳಾಗಿ ಆಗಲೂ ಕಾರಣರಾದ ತನ್ನ *ತಂದೆ-ತಾಯಿ*, *ತಾವುಗಳೂ ಕಲಿಯುತ್ತಿರುವಾಗ ತಮಗೆ ಬೇಕಾದ ಸೌಕಾರ್ಯ ಮಾಡಿಕೊಟ್ಟವರನ್ನು* *ಅವರೂ ಮರೆತು ಸ್ವರ್ಗ ಪ್ರವೇಶಿಸಲೂ ಖಂಡಿತ ಸಾದ್ಯವಿಲ್ಲ*....
ಆದ್ದರಿಂದ ನಾವೂಗಳು ಉಲಮಾಗಳ ಆಜ್ಞೆಯಂತೆ ಜೀವಿಸಿ , ಅವರನ್ನು ಹೀಯಾಲಿಸದೆ, ಅವರ ಮಾರ್ಗದರ್ಶನದಲ್ಲಿ ಸಮುದಾಯದ ಧ್ವನಿಯಾಗಿ ಜೀವಿಸುವ...........ಇನ್ಷಾಅಲ್ಲಾಹ್
🤲🏻🤲🏻🤲🏻🤲🏻🤲🏻🤲🏻🤲🏻🤲🏻

ಝಿಯಾರತ್ತ್ ಕೇಂದ್ರ = 63. ಭಾಗ 02 ಈ.ಕೆ. ಉಸ್ತಾದ್ (ಖ:ಸಿ) ವರಕ್ಕಲ್) ಕಲ್ಲಿಕೋಟೆ
*ಝಿಯಾರತ್ತ್ ಕೇಂದ್ರ*
_ಸಮಸ್ತ ನಾಯಕರು = 11_
6⃣3⃣
👉 *ಭಾಗ=02*
➖➖➖➖➖➖➖➖➖
*"#ಶಂಸುಲ್_ಉಲಮ" ಈ.ಕೆ. ಅಬೂಬಕ್ಕರ್ ಉಸ್ತಾದ್(ಖ:ಸಿ). ವರಕ್ಕಲ್, ಪುತಿಯಂಗಾಡಿ. ಕಲ್ಲಿಕೋಟೆ.*
*********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
☪☪☪☪☪☪☪☪☪
✍ ಗಫೂರ್ ಬಾಯಾರ್
***********************
*_ಹಿಂದಿನ ಸಂಚಿಕೆಯಿಂದ_*
1957ರಿಂದ 1996ರ ತನಕ ಅಂದರೆ ವಫಾತ್ತ್ ಆಗುವವರೆಗೆ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಮಹಾನರು ಉತ್ತಮ ವಾಗ್ಮಿಯೂ, ಲೇಖಕರೂ ಆಗಿದ್ದರು. ಮಾತ್ರವಲ್ಲ ಸಂಘಟನಾತ್ಮಕವಾಗಿ ಚತುರ ಸಂಘಟಕರೂ ಆಗಿದ್ದು ಸುನ್ನತ್ ಜಮಾಅತಿನ ಅಭಿವೃದ್ಧಿ ಮತ್ತು ಏಳಿಗೆಯ ಹಿತದೃಷ್ಟಿಯಿಂದ ಸಮಸ್ತವನ್ನು ಬೆಳೆಸುತ್ತಾ ಸಮಸ್ತದ ಕೀರ್ತಿಯನ್ನು ಉತ್ತುಂಗ ಶಿಖರಕ್ಕೇರಿಸಿದ್ದರು.
ಧಾರ್ಮಿಕವಾಗಿ ಅಗಾಧ ಪಾಂಡಿತ್ಯ ಗಳಿಸಿ ವಿಧ್ವಾಂಸರಾಗಿದ್ದ ಈ.ಕೆ. ಉಸ್ತಾದರು (ಖ:ಸಿ) ಪೂನೂರ್, ಒತಾಯಿ, ಎಡವಣ್ಣ ಮುಂತಾದೆಡೆ ನೂತನವಾದಿಗಳೊಂದಿಗೆ ನಡೆದ ಸಂವಾದಲ್ಲಿ ನೂತನವಾಗಿ (ಬಿದಯೀ) ಗಳ ಆಧಾರ ರಹಿತವಾದ ಟೊಳ್ಳುವಾದ ಮತ್ತು ದುರ್ವ್ಯಾಖ್ಯಾನಗಳನ್ನು ಖಂಡಿಸಿ ಆಧಾರ ಸಮೇತ ಬಯಲಿಗೆಳೆದಿದ್ದರು.
ಮಂಜೇರಿ, ಎಡಕರ ಎಂಬಿ ಸ್ಥಳಗಳಲ್ಲಿ ತಮ್ಮದೇ ಸರಿಯೆಂದು ವಾದಿಸುತ್ತಿದ್ದ ಕ್ರೈಸ್ತ ಫಾದ್ರಿಗಳೊಂದಿಗೆ ನಡೆದ ಮುಖಾಮುಖಿಯಲ್ಲಿ ಆಧಾರ ಸಮೇತವಾದ ಶಂಶುಲ್ ಉಲಮಾ (ಖ.ಸಿ)ರವರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕ್ರೈಸ್ತ ಪಾದ್ರಿಗಳು ಕಕ್ಕಾಬಿಕ್ಕಿಯಾಗಿದ್ದರು.
ಖಾದಿಯಾನಿಗಳು ಖುರ್'ಆನ್-ಹದೀಸುಗಳನ್ನು ದುರ್ವ್ಯಾಖ್ಯಾನ ಮಾಡಿ ಮುಸ್ಲಿಮರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಖಾದಿಯಾನಿಸಂನ ಹುಟ್ಟಡಗಿಸುವಂಥ ಒಂದು ಅಮೂಲ್ಯ ಗ್ರಂಥವನ್ನೇ ಮಹಾನರು ರಚಿಸಿದ್ದರು.
ಮತ್ತು ಜುಮಾ ಖುತುಬಾಕ್ಕೆ ಸಂಬಂಧಿಸಿದಂತೆ ಕೆಲ ಗ್ರಂಥಗಳನ್ನೂ ಬರೆದಿದ್ದು, ಕಲ್ಲಿಕೋಟೆ ಶೈಖ್ ಅಬ್ದುಲ್ ವಫಾ ಮುಹಮ್ಮದುಲ್ ಅಲಾಉದ್ದೀನ್ ಹಿಮ್ಸಿ (ರ) ಇದ್ದಿಯಂಙರ ರವರ ಕೀರ್ತನೆಯ ಕುರಿತು ರಚಿಸಿದ ಮೌಲಿದ್, ಅಜ್ಮಿರ್ ಖಾಜಾ ಮುಈನುದ್ದೀನ್ ಚಿಸ್ತಿ(ರ)ರವರ ಕುರಿತಾದ ಮೌಲಿದ್ ಮುಂತಾದ ಅನೇಕ ಗ್ರಂಥಗಳನ್ನು ರಚಿಸಿ ಸಮುದಾಯಕ್ಕೆ ಸಮರ್ಪಿಸಿದ್ದಾರೆ.
ಉಸ್ತಾದರ ತರಗತಿಯಂತೂ ಬಹು ಆಕರ್ಷಕವಾಗಿರುತ್ತಿತ್ತು.
ಮಹಾನರ ಜ್ಞಾನ ಭಂಡಾರದಿಂದ ಮಾತಿನ ರೂಪದಲ್ಲಿ ಹೊರ ಬರುತ್ತಿದ್ದ ಇಲ್ಮನ್ನು ಉಸ್ತಾದರ ಶಿಷ್ಯರು ಜತನದಿಂದ ಮನನ ಮಾಡುತ್ತಿದ್ದರು.
ವೆಳ್ಳಿಮಾಡ್ ಕುನ್ನ್ ಎಂಬ ಊರಿನ ಫಾತಿಮಾ ಹಜ್ಜುಮ್ಮ ಎಂಬ ಮಹಾತ್ಮೆಯನ್ನು ವರಿಸಿದ ಮಹಾನರಿಗೆ
ಇಬ್ಬರು ಪುತ್ರರು ಮತ್ತು ಐವರು ಪುತ್ರಿಯರು ಜನಿಸಿದರು.
1961ರಲ್ಲಿ ಹಜ್ ನಿರ್ವಹಿಸಿದ ಉಸ್ತಾದರು. ತಮ್ಮ ಜೀವನದಲ್ಲಿ ಒಟ್ಟು ಎರಡು ಹಜ್ಜ್ ನಿರ್ವಹಿಸಿದ್ದರು.
ಯು.ಎ.ಇ. ಸೇರಿದಂತೆ ಕೆಲವು ವಿದೇಶ ರಾಷ್ಟ್ರಗಳಿಗೆ ಭೇಟಿ ನೀಡಿದ ಮಹಾನುಬಾವರು ಅರೇಬಿಕ್, ಉರ್ದು, ಫಾರ್ಸಿ, ಇಂಗ್ಲಿಷ್, ಸುರಿಯಾನಿ, ತಮಿಳು, ಮೊದಲಾದ ಭಾಷೆಗಳಲ್ಲಿ ಪ್ರಾವಿಣ್ಯತೆ ಗಳಿಸಿದ್ದರು.
70 ಮಹಲ್ಲುಗಳನ್ನೊಳಗೊಂಡ ಮಟ್ಟನ್ನೂರ್ ಸಂಯುಕ್ತ ಜಮಾಅತ್ತ್'ನ ಖಾಝಿಯಾಗಿದ್ದರು.
1996 ಆಗಸ್ಟ್ 19 (ಹಿಜರಿ1417 ರಬೀವುಲ್ ಆಖಿರ್ 4)ರಂದು ಬೆಳಗಿನ ಜಾವ ಅಲ್ಲಾಹನ ಭವನದ ಮಿನಾರಗಳಿಂದ ಮೊಳಗಿದ ಬಾಂಗಿನ ಕೊನೆಯ ವಚನವಾದ "ಲಾಇಲಾಹ ಇಲ್ಲಲ್ಲಲ್ಲಾಹ್" ಎಂಬ ಶಹಾದತುತ್ತೌಹೀದನ್ನು ಏರು ಧ್ವನಿಯಲ್ಲಿ ಉಚ್ಚರಿಸುತ್ತಲೇ ಇಹಲೇೂಕಕ್ಕೆ ವಿದಾಯ ಹೇಳಿದ ಮಹಾನರು ಸುನ್ನೀ ಜನ ಕೇೂಟಿಗಳನ್ನು ಕಣ್ಣೀರ ಕಡಲಲ್ಲಿ ಮುಳುಗಿಸಿ ಪರಲೇೂಕ ಪ್ರವೇಶಿಸಿದರು ಇನ್ನಲಿಲ್ಲಾಹ್....
ಸಮಸ್ತದ ಪ್ರಪ್ರಥಮ ಅಧ್ಯಕ್ಷ ಪದವಿ ಅಲಂಕರಿಸಿದ್ದ ಪುತಿಯಂಙಾಡಿ ವರಕ್ಕಲ್ ಮುಲ್ಲಕೋಯ ತಂಙಳ್ (ಖ:ಸಿ) ರವರ ಮಖಾಮಿನ ಹತ್ತಿರವೇ ಶಂಸುಲ್ ಉಲಮಾ (ಖ:ಸಿ)ರವರೂ ಸಹ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
ದಾರಿ: ವರಕ್ಕಲ್ ಪುತಿಯಂಗಾಡಿ, ಕಲ್ಲಿಕೋಟೆ.
☪ಮುಗಿಯಿತು.
⚠⚠⚠⚠⚠⚠⚠⚠⚠

ಝಿಯಾರತ್ತ್ ಕೇಂದ್ರ = 63. ಭಾಗ 01. ಈ.ಕೆ. ಉಸ್ತಾದ್ (ಖ:ಸಿ) ಕಲ್ಲಿಕೋಟೆ
*ಝಿಯಾರತ್ತ್ ಕೇಂದ್ರ*
_ಸಮಸ್ತ ನಾಯಕರು = 11_
👉6⃣3⃣ ಭಾಗ 01
➖➖➖➖➖➖➖➖➖
*"#ಶಂಸುಲ್_ಉಲಮ" ಈ.ಕೆ. ಅಬೂಬಕ್ಕರ್ ಉಸ್ತಾದ್(ಖ:ಸಿ). ವರಕ್ಕಲ್, ಪುತಿಯಂಗಾಡಿ. ಕಲ್ಲಿಕೋಟೆ.*
*********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
☪☪☪☪☪☪☪☪☪
✍ ಗಫೂರ್ ಬಾಯಾರ್
***********************
ಮುಸ್ಲಿಮ್ ಸಮುದಾಯದ ಸರ್ವತೇೂಮುಖ ಅಭಿವೃದ್ಧಿ ಮತ್ತು ಏಳಿಗೆಗಾಗಿ ಉದಯಿಸಿದ "ಸಮಸ್ತ ಕೇರಳ ಜಂಇಯತ್ತುಲ್ ಉಲಮಾ" ಎಂಬ ದೀನೀ ಸಂಘಟನೆಯ ಅಗ್ರಗಣ್ಯ ಸಾರಥಿಯಾಗಿ ಸುನ್ನತ್ ಜಮಾಅತಿನ ಏಳಿಗೆಗಾಗಿ ಬದುಕನ್ನೇ ಮಡಿಪಾಗಿರಿಸಿ ಮುಸ್ಲಿಂ ಜನಮಾನಸದಲ್ಲಿ ಚಿರಕಾಲಕ್ಕೂ ಚಿರಂತನವಾಗಿ ಚಿರನೂತನವಾಗಿ ಚಿರಸ್ಮರಣೀಯರಾದ ಪಂಡಿತ ಶಿರೇೂಮಣಿ ಅಹ್ಲ್ ಸುನ್ನತ್ ವಲ್ ಜಮಾಅತಿನ ವಿಶ್ವವಿಖ್ಯಾತ ವಿಧ್ವಾಂಸರೂ, *"ಶಂಸುಲ್ ಉಲಮಾ"* ಎಂಬ ಬಿರುದಾಂಕಿತರೂ ಆದ ಶೈಖುನಾ ಈ.ಕೆ. ಅಬೂಬಕ್ಕರ್ ಮುಸ್ಲಿಯಾರ್ (ಖ.ಸಿ)ರವರ ಹೆಸರು ಕೇಳದವರು ವಿರಳ.
ಈಮಾನಿನ ಪ್ರಕಾಶದಿಂದ ಪುಳಕಿತವಾದ ಯೆಮನಿನ ಹಲರ್ ಮೌತ್'ನಿಂದ ಕೇರಳಕ್ಕಾಗಮಿಸಿದ ವಿಧ್ವಾಂಸ ಕುಟುಂಬ ಪರಂಪರೆಯ ಎಝುತ್ತಚ್ಚನ್ ಕಂಡಿ (E.K.) ಮನೆತನದ ಪ್ರಮುಖ ಕೊಂಡಿಯೂ ಖಾದಿರಿಯ್ಯಾ ತ್ವರೀಕತ್ತಿನ ಶೈಖ್ ಆಗಿದ್ದ ಕೇೂಯ ಕುಟ್ಟಿ ಮುಸ್ಲಿಯಾರ್ (ಖ.ಸಿ) ರವರ ಪುತ್ರರಾದ ಶೈಖುನಾ ಈ.ಕೆ. ಉಸ್ತಾದ್ (ಖ.ಸಿ) ಹಿಜರಿ 1333 ರಲ್ಲಿ (ಕ್ರಿ.ಶ.1914) ರಲ್ಲಿ ಜನಿಸಿದರು.
ಈ.ಕೆ. ಎಂಬ ಅಕ್ಷರದಲ್ಲಿ ಚುಟುಕಾಗಿ ಪರಿಚಯಿಸಲ್ಪಡುವ ಜ್ಞಾನ ಸಾಗರವೇ ಆಗಿದ್ದ ಈ ವಿಶ್ವವಿಖ್ಯಾತ ಪಂಡಿತ ಶಿರೇೂಮಣಿ ಕಲ್ಲಿಕೇೂಟೆಯ ಪರಂಬಕಡವಿಲ್ ಎಂಬಲ್ಲಿ ದರ್ಸ್ ನಡೆಸುತ್ತಿದ್ದ ತಮ್ಮ ತಂದೆಯಿಂದಲೇ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಮಡವೂರು ಶೈಖ್ ಸಿ.ಎಂ. ವಲಿಯುಲ್ಲಾಹಿ (ಖ.ಸಿ) ರವರ ತಂದೆಯಾದ ಮಡವೂರ್ ಕುಂಞಾಯಿನ್ ಕೇೂಯ ಮುಸ್ಲಿಯಾರ್ (ಖ.ಸಿ)ರವರ ದರ್ಸ್ ಸೇರಿದರು. ಅನಂತರ ಪಳ್ಳಿಪ್ಪುರಂ ಅಬ್ದುಲ್ ಖಾದಿರ್ ಮುಸ್ಲಿಯಾರ್ (ಖ.ಸಿ) ದರ್ಸ್ ನಡೆಸುತ್ತಿದ್ದ ವಾಯಕಾಡ್'ನ ದಾರುಲ್ ಉಲೂಮ್'ನಲ್ಲಿ ವ್ಯಾಸಂಗ ಮುಂದುವರೆಸಿದರು. ತದನಂತರ ಕಣ್ಣೀಯತ್ ಅಹ್ಮದ್ ಉಸ್ತಾದ್ (ಖ.ಸಿ) (ಮಟ್ಟೂಲ್'ನಲ್ಲಿ), ಅಬ್ದುಲ್ ಅಲಿ ಕೇೂಯ ಮುಸ್ಲಿಯಾರ್ (ಖ.ಸಿ) ಮತ್ತು ಅಯತಿಕಾಡ್ ಇಬ್ರಾಹಿಂ ಮುಸ್ಲಿಯಾರ್ (ಖ.ಸಿ)ರವರ ದರ್ಸ್'ಗಳಲ್ಲೂ ಶಿಕ್ಷಣ ಪಡೆದರು.
ಬಳಿಕ ಉನ್ನತ ಶಿಕ್ಷಣಕ್ಕಾಗಿ ವೆಲ್ಲೂರ್ ಬಾಖಿಯಾತ್ತು ಸ್ವಾಲಿಹಾತ್ತುಲ್'ನಲ್ಲಿ ಸೇರಿ ಶಿಕ್ಷಣ ಮುಂದುವರೆಸಿದ ಮಹಾನರು ಶೈಖ್ ಅಬ್ದುರಹೀಮ್ ಹಝ್ರತ್ತ್ (ಖ:ಸಿ), ಶೈಖ್ ಅಬ್ದುಲ್ ಅಲಿ ಹಝ್ರತ್ತ್ (ಖ:ಸಿ), ಶೈಖ್ ಅಹ್ಮದ್ ಕೋಯ ಶಾಲಿಯಾತಿ (ಖ:ಸಿ) ಮೊದಲಾದ ವಿದ್ವಾಂಸರೊಂದಿಗೆ ಹತ್ತಿರದ ಬಾಂದವ್ಯ ಹೊಂದಿದ್ದು ಅವರಿಂದ ತ್ವರಿಖತ್ತ್ ಮತ್ತು ಇಜಾಝತ್ತನ್ನು ಪಡೆದಿದ್ದರು.
ವೆಲ್ಲೂರಿನಲ್ಲಿ ಮುತಅಲ್ಲಿಮಾಗಿದ್ದಾಗ ಮಹಾನುಭಾವರ ಅಪಾರವಾದ ಬುದ್ದಿಶಕ್ತಿ ಮತ್ತು ಅಗಾಧ ಜ್ಞಾನಕ್ಕೆ ಮನಸೇೂತ ಅಲ್ಲಿನ ಉಸ್ತಾದರುಗಳು ಕೆಲವು ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲು ಮಹಾನರನ್ನೇ ನಿಯೇೂಗಿಸಿದ್ದರು.
ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದು ತೇರ್ಗಡೆಯಾದ ಮಹಾನರಿಗೆ ಬಿರುದು ಪ್ರಧಾನ ಮಾಡುವಾಗ ಶೈಖ್ ಝಿಯಾಉದ್ದೀನ್ ಹಝ್ರತ್ತ್ (ಖ:ಸಿ)ರವರು. ಮಹಾನರೊಂದಿಗೆ
"ಈ ಕಾಲೇಜಿಗೆ ತಮ್ಮಂತಹ ವಿಧ್ವಾಂಸರ ಅಗತ್ಯತೆಯಿದೆ. ಹಾಗಾಗಿ ತಾವು ಆದ್ಯಾತ್ಮಿಕ ರಂಗದ ಸೇವೆಯನ್ನು ಇಲ್ಲಿಂದಲೇ ಆರಂಭಿಸಿರಿ." ಎಂದರು. ಹಾಗಾಗಿ ಬಿರುದು ಪಡೆದ ನಂತರ ಬಾಖಿಯಾತ್ತಿನಲ್ಲೇ ಮುದರ್ರಿಸ್ ಆಗಿ ಈ.ಕೆ. ಉಸ್ತಾದರು (ಖ:ಸಿ) ನಿಯೋಗಿಸಲ್ಪಟ್ಟರು. ಕೊಟ್ಟುಮಲ ಅಬೂಬಕ್ಕರ್ ಮುಸ್ಲಿಯಾರ್ (ಖ:ಸಿ), ನೆಲ್ಲಿಕುತ್ತ್ ಮುಹ್ಯಿದ್ದೀನ್ ಮುಸ್ಲಿಯಾರ್ (ಖ:ಸಿ), ಓ.ಕೆ. ಝೈನುದ್ದೀನ್ ಮುಸ್ಲಿಯಾರ್ (ಖ:ಸಿ), ಮೊದಲಾದವರು ಬಾಖಿಯಾತ್ತಿನಲ್ಲಿ ಮಹಾನರ ಶಿಷ್ಯರಾಗಿದ್ದರು.
ಬಾಖಿಯಾತ್ತಿನಲ್ಲಿ ಮುದರ್ರಿಸ್ ಆಗುವುದರ ಜತೆಗೆ ಇಸ್ಲಾಮಿನ ವಿಧಿಗಳಲ್ಲಿ ಫತ್ವಾ ನೀಡುವ ಉತ್ತರಾಧಿಕಾರಿಯನ್ನಾಗಿಯೂ ಮಹಾನರನ್ನು ನೇಮಿಸಲಾಗಿತ್ತು.
ನಂತರ ಅನಾರೋಗ್ಯ ಕಾರಣ ವೆಲ್ಲೂರ್ ಬಿಟ್ಟ ಮಹಾನರು ಕೇರಳಕ್ಕೆ ತೆರಳಿ ದೀನೀ ಪ್ರಬೋಧನೆಯಲ್ಲಿ ನಿರತರಾಗಿ ತಳಿಪ್ಪರಂಬ್ ಖುವ್ವತ್ತುಲ್ ಇಸ್ಲಾಂ, ಪಾರಕಾಡ್ ಜುಮಾ ಮಸೀದಿ ಮುಂತಾದೆಡೆ ಮುದರ್ರಿಸರಾಗಿ ಸೇವೆ ಸಲ್ಲಿಸಿದರು.
1963ರಿಂದ 1977ವರೆಗೆ ಪಟ್ಟಿಕಾಡ್ ಜಾಮಿಅ ನೂರಿಯ್ಯ ಅರಬಿಕ್ ಕಾಲೇಜಿನಲ್ಲಿ ಪ್ರಾಂಶುಪಾಲಗಿದ್ದರು.
ಅನಂತರ ರಾಜಕೀಯ ಕುತಂತ್ರದ ಭಾಗವಾಗಿ ಕೆಲವರ ಸಂಕುಚಿತ ಮನಸ್ಥಿತಿಯಿಂದಾಗಿ ನಡೆದ ಕೆಲ ವಿಲಕ್ಷಣ ವಿದ್ಯಮಾನಗಳಿಂದ ಮನನೊಂದು ಪಟ್ಟಿಕ್ಕಾಡ್ ಜಾಮಿಯ ನೂರಿಯ್ಯ ಅರೇಬಿಕ್ ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆಯಿಂದ ಪಾಂಡಿತ್ಯದ ಸಾಗರವಾಗಿದ್ದ ಮಹಾನರು ಕಾಸರಗೇೂಡಿನ ಪೂಚಕ್ಕಾಡ್'ನ ಚಿಕ್ಕ ಜುಮಾ ಮಸೀದಿಯಲ್ಲಿ ಮುದರ್ರಿಸರಾಗಿ ಸೇವೆ ಸಲ್ಲಿಸಲಾರಂಭಿಸಿದರು.
ಕೆಲವು ಸಮಯದ ನಂತರ ಸುನ್ನತ್ ಜಮಾಅತಿನ ಉಲಮಾ ಮತ್ತು ಉಮರಾಗಳು ಉಸ್ತಾದರ ಮನವೊಲಿಸಿ ನಂದಿ ದಾರುಸ್ಸಲಾಂ ಅರೇಬಿಕ್ ಕಾಲೇಜಿನ ಪ್ರಿನ್ಸಿಪಾಲರಾಗಿ ಮುಂದುವರಿಯಬೇಕೆಂದು ಮನವಿ ಸಲ್ಲಿಸಿದ್ದರಿಂದ ಸುನ್ನತ್ ಜಮಾಅತಿನ ಏಳಿಗೆಯ ಹಿತದೃಷ್ಟಿಯಿಂದ ನಂದಿ ದಾರುಸ್ಸಲಾಂ ಅರೇಬಿಕ್ ಕಾಲೇಜಿಗೆ ಮರಳಿ ವಫಾತಿನ ತನಕವೂ ಅಲ್ಲಿ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು.
ಈ.ಕೆ. ಹಸನ್ ಮುಸ್ಲಿಯಾರ್ (ಖ:ಸಿ), ಕೆ.ಕೆ. ಅಬೂಬಕ್ಕರ್ ಹಝ್ರತ್ತ್ (ಖ:ಸಿ), ಕೊಟ್ಟುಮಲ ಅಬೂಬಕ್ಕರ್ ಮುಸ್ಲಿಯಾರ್ (ಖ:ಸಿ), ಮಡವೂರ್ ಸಿ.ಎಂ. ವಲಿಯುಲ್ಲಾಹಿ (ಖ:ಸಿ), ಸಯ್ಯಿದ್ ಉಮರಲಿ ಶಿಹಾಬ್ ತಂಙಳ್ (ಖ:ಸಿ), ಉಳ್ಳಾಲ ತಂಙಳ್ (ಖ:ಸಿ) ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್, ಎ.ಕೆ. ಅಬ್ದುರಹ್ಮಾನ್ ಮುಸ್ಲಿಯಾರ್, ಕೆ. ಆಲಿ ಕುಟ್ಟಿ ಮುಸ್ಲಿಯಾರ್ ಮೊದಲಾದ ಅಸಂಖ್ಯ ಬಾಖವಿ, ಫೈಝಿ, ದಾರಿಮಿ ಬಿರುದುದಾರಿ ವಿಧ್ವಾಂಸರು ಮಹಾನವರ ಶಿಷ್ಯರಾಗಿದ್ದಾರೆ.
1957ರಿಂದ 1996ರ ತನಕ ಅಂದರೆ.. ⤵
☪ ಮುಂದುವರಿಯುವುದು.
💢💢💢💢💢💢💢💢💢

Subscribe to:
Comments (Atom)