Saturday, September 28, 2019

ಇಸ್ತಿಗಾಸ, ಅಂತ್ಯದಿನದಾವಧಿಯಲ್ಲಿ ಹದೀಸ್

*🤲🏻ಇಸ್ತಿಗಾಸ...🤲🏻*

*_ಅಂತ್ಯದಿನದಾವಧಿಯಲ್ಲಿ......_*
*ಹದೀಸ್👇🏻*

*عَبْدَ اللَّهِ بْنَ عُمَرَ ـ رضى الله عنه ـ قَالَ النَّبِيُّ صلى الله عليه وسلم"‏ 👈وَقَالَ إِنَّ الشَّمْسَ تَدْنُو يَوْمَ الْقِيَامَةِ حَتَّى يَبْلُغَ الْعَرَقُ نِصْفَ الأُذُنِ، فَبَيْنَا هُمْ كَذَلِكَ 👈اسْتَغَاثُوا بِآدَمَ، ثُمَّ بِمُوسَى، ثُمَّ بِمُحَمَّدٍ صلى الله عليه وسلم ‏"‏‏.‏👉*

_🌹ಅಬ್ದುಲ್ಲಾಹಿ ಇಬ್ನ್ ಉಮರ್(ರಳಿಯಲ್ಲಾಹು ಅನ್ಹು) ರವರಿಂದ ನಿವೇದನೆ: ಪ್ರವಾದಿ(ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ)ರು ಹೇಳುತ್ತಾರೆ.ಅಂತ್ಯದಿನದಲ್ಲಿ ಸೂರ್ಯ ನಿಕಟವಾಗುತ್ತದೆ. ಕಠಿಣ ಸೆಖೆಯಿಂದಾಗಿ ಬೆವರು ಕಿವಿಯ ಅರ್ಧಭಾಗದ ತನಕ ತಲುಪುವಂತಿರುತ್ತದೆ.ಆ ಸಂದರ್ಭದಲ್ಲಿ ಜನರು ಪ್ರವಾದಿ ಆದಮ್(ಅಲೈಹಿಸ್ಸಲಾಂ)ರೊಂದಿಗೆ *ಇಸ್ತಿಗಾಸ(ಸಹಾಯಾಚನೆ)* ಮಾಡುವರು.ಅನಂತರ ಅವರು *ಇಸ್ತಿಗಾಸಕ್ಕಾಗಿ(ಸಹಾಯಭ್ಯರ್ಥನೆಗಾಗಿ)* ಪ್ರವಾದಿ ಮೂಸ(ಅಲೈಹಿಸ್ಸಲಾಂ) ಬಳಿಕ ಮುಹಮ್ಮದ್ (ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ)ರ ಬಳಿಗೆ ತೆರಳುವರು._
*_📚Scan page👇🏻_*
*(ಸಹಿಹ್ ಬುಖಾರಿ)*

*‼Note‼*
*_ಈ ಹದೀಸನ್ನು ಇಸ್ತಿಗಾಸದ ವಿರೋಧಿಗಳು ಅಂತ್ಯದಿನವಾದ ನಂತರ ಶಿರ್ಕ್ ಮಾಡುವುದರಲ್ಲಿ ವಿರೋಧವಿಲ್ಲವೆಂದು ವ್ಯಾಖ್ಯಾನಿಸುತ್ತಾರೆಯೇ?ಆಶ್ಚರ್ಯವೇ ಸರಿ.❗_*
_ಅಂತ್ಯದಿನವಾದರೂ ಇಲ್ಲದಿದ್ದರೂ ಬಹುದೇವಾರಾಧನೆ.ವರ್ಜಿಸಲ್ಪಡಬೇಕೆನ್ನುವುದು ಮುಸ್ಲಿಮರ ವಿಶ್ವಾಸವಾಗಿದೆ._

*✍🏻Straight Path Ahlu Sunnah*

🌺🌹🌺🌹🌺🌹🌺🌹🌺🌹
*🤲🏻ಇಸ್ತಿಗಾಸ.....🤲🏻*

*_🌱ಪ್ರವಾದಿವರ್ಯರ ಜೀವಿತಾವಧಿಯಲ್ಲಿ ನಡೆದ ಸಹಾಯಾಚನೆ_🌱*

*ಹದೀಸ್ 👇🏻*
_ಜಾಬಿ‌ರ್(ರ) ರವರಿಂದ ನಿವೇದನೆ: ಅವರು ಹೇಳುತ್ತಾರೆ; ಹುದೈಬಿಯಾದ ಜನರು ಬಾಯಾರಿಕೆಯಿಂದ ಬಳಲಿ ಬೆಂಡಾದರು. ಪ್ರವಾದಿ(ಸ)ಯವರ ಸನಿಹ ಒಂದು ಪಾತ್ರೆ ನೀರಿತ್ತು. ಅವರು ಅದರಿಂದ ವುಳೂ ನಿರ್ವಹಿಸಿದರು. ಜನರೆಲ್ಲರೂ ನೋವಿನೊಂದಿಗೆ ಪ್ರವಾದಿ(ಸ)ಯವರು ಕೂತಿದ್ದ ಜಾಗದೆಡೆಗೆ ಬಂದರು._
_ಪ್ರವಾದಿ(ಸ)ಯವರು ಅವರೊಂದಿಗೆ ನಿಮ್ಮ ಸಮಸ್ಯೆಯೇನು?' ಎಂದು ಕೇಳಿದರು.ಅವರು ಹೇಳುತ್ತಾರೆ. “ನಮಗೆ ವುಳೂ ಮಾಡಲು ಮತ್ತು ಕುಡಿಯಲು ನಿಮ್ಮ ಮುಂದಿರುವ ನೀರು ಮಾತ್ರವಿದೆ” ಆಗ ಪ್ರವಾದಿ(ಸ)ಯವರು ಪಾತ್ರೆಗೆ ಕೈ ಹಾಕಿದರು.ಅವರ ಬೆರಳುಗಳಿಂದ ಒರತೆಯಲ್ಲಿ ನೀರು ಪುಟಿಯಲಾರಂಭಿಸಿತು. ನಾವು ಅದರಿಂದ ಕುಡಿದು ವುಳೂ ನಿರ್ವಹಿಸಿದೆವು. “ನೀವೆಷ್ಟು ಮಂದಿ ಇದ್ದೀರಿ? ಎಂಬ ಪ್ರಶ್ನೆಗೆ ಜಾಬಿ‌ರ್(ರ) ಉತ್ತರಿಸುತ್ತಾರೆ. ಒಂದು ಲಕ್ಷ ಜನರಿರುತ್ತಿದ್ದರೂ ನಮಗೆ ಆ ನೀರು_
_ಸಾಕಾಗುತ್ತಿತ್ತು. ನಾವು *"ಸಾವಿರದ ಐನೂರು"* ಜನರಿದ್ದೆವು._
Scan page..👇🏻
*📚(ಬುಖಾರಿ 8/471)*

*‼Note‼*
_ನೀರಿಲ್ಲದೆ ಬಾಯಾರಿಕೆಯಿಂದ ತತ್ತರಿಸಿದ ಸಹಾಬಿಗಳು ಪ್ರವಾದಿ(ಸ)ಯವರ ಸನಿಹ ಸಾಕಷ್ಟು ನೀರಿಲ್ಲವೆಂದು ಅರಿತಿದ್ದರೂ ಅವರನ್ನು ಸಮೀಪಿಸುತ್ತಾರೆ.ಮಾನವ_
_ಸಾಮರ್ಥ್ಯದ ಆಚೆಗಿರುವ ಮಾರ್ಗದ ಮೂಲಕ ನೀರು ಲಭಿಸಬೇಕೆಂಬ ಆಗ್ರಹದಿಂದಲೇ ಅವರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಭೇಟಿಯಾಗಿದ್ದರೆನ್ನುವುದು ಶತಃಸಿದ್ದ.ಅಲ್ಲಾಹನು ದಯಪಾಲಿಸಿದ ಮುಅ್'ಜಿಝತ್ ಮೂಲಕ ಪ್ರವಾದಿ‌ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಸ್ವಹಾಬಿಗಳ ಬೇಡಿಕೆಯನ್ನು ಈಡೇರಿಸಿಕೊಡುತ್ತಾರೆ.ಬೆರಳುಗಲ್ಲಿ_
_ನೀರಿನ ಬುಗ್ಗೆ ಪುಟಿದು *ಮಾನವ ಸಾಮರ್ಥ್ಯದ ಆಚೆಗಿರುವ ಮಾರ್ಗದ ಮೂಲ‌ಕ ಸಮಸ್ಯೆ* ಬಗೆಹರಿಸಲ್ಪಡುತ್ತದೆ.ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಬೇಡಿಕೆಗಳನ್ನು ಈಡೇರಿಸಿಕೊಡುವ_
_ಸ್ವಯಂಶಕ್ತಿಯಾಗಲೀ,ಸ್ವಮದಿತ್ತಾಗಲೀ ಇತ್ತೆಂಬ ವಿಶ್ವಾಸ ಸಹಾಬಿಗಳಿಗಿರಲಿಲ್ಲ.ಮೇಲಿನ ಹದೀಸ್‌ಗಳಿಂದ ಅಲ್ಲಾಹನು ದಯಪಾಲಿಸಿದ ಸಾಮರ್ಥ್ಯದಿಂದ ಸಹಾಯ‌ಯಾಚಿಸಬಹುದು,ಕೊಡಬಹುದೆಂದು ಸಷ್ಟವಾಗುತ್ತದೆ..!_

*_🖋Straight Path Ahlu Sunnah_*

🌹🌷🌹🌷🌹🌷🌹🌷🌹
*ತವಸ್ಸುಲ್ - ಇಸ್ತಿಗಾಸ* (ಸಹಾಯಭ್ಯರ್ಥನೆ)
ಭಾಗ-13
➖➖➖➖➖

*ಅಭೌತಿಕವಾದ ಮಾರ್ಗದ ಮೂಲಕ ಮಹಾನುಭಾವ ರುಗಳೊಂದಿಗೆ ಸಹಾಯಭ್ಯರ್ಥನೆ ಗೈಯ್ಯಲು ಹದೀಸ್ ನಿಂದ ಪುರಾವೆ ಇದೆಯೇ...❓*

*ಉತ್ತರ* : ಇದೆ. ಇಮಾಮ್ ತ್ವಬ್ರಾನಿ ರಳಿಯಲ್ಲಾಹು ಅನ್ಹು ತನ್ನ ಅಲ್ ಮುಅಜಮುಲ್ ಕಬೀರ್ (13737) ನಿವೇದನೆ ಮಾಡುತ್ತಾರೆ. ನೆಬಿ ಸ್ವಲ್ಲಲಾಹು ಅಲೈಹಿ ವಸಲ್ಲಮರು ಹೇಳಿದರು:

( "إذَا أَضَلَّ أَحَدُكُمْ شَيْئًا ، أَوْ أَرَادَ أَحَدُكُمْ عَوْنًا ، وَهُوَ بِأَرْضٍ لَيْسَ بِهَا أَنِيسٌ ،

*ನೀವು ಮನುಷ್ಯರಿಲ್ಲದ ನಿರ್ಜನ ಸ್ಥಳದಲ್ಲಿದ್ದಾಗ ಏನಾದರೂ ಕಳೆದುಹೋದರೆ ಅಥವಾ ನಿಮ್ಮಲ್ಲಿ ಯಾರಾದರೂ ಸಹಾಯವನ್ನು ಉದ್ದೇಶಿಸಿದ್ದೇ ಆದರೆ*

فَلْيَقُلْ : يَا عِبَادَ اللَّهِ أَغِيثُونِي ،

*"ಅಲ್ಲಾಹನ ದಾಸರೇ, ನನಗೆ ಸಹಾಯ ಮಾಡಿ"*

 يَا عِبَادَ اللَّهِ أَغِيثُونِي

 *"ಅಲ್ಲಾಹನ ದಾಸರೇ, ನನಗೆ ಸಹಾಯ ಮಾಡಿ" ಎಂದು ಅವರು ಹೇಳಲಿ.*

فَإِنَّ لِلَّهِ عِبَادًا لا نَرَاهُمْ"

*ಖಂಡಿತವಾಗಿಯೂ ಅಲ್ಲಾಹನಿಗೆ  ನಾವು ಕಾಣದ ದಾಸರಿದ್ದಾರೆ.*

وقد جرب ذلك‏ ).

*ಇದು ಪರೀಕ್ಷಿಸಿ ನೋಡಲ್ಪಟ್ಟಿದೆ.*

 (ತ್ವಬ್ರಾನಿ : 13737)
➖➖➖➖➖

🔭 *ನಿಸಾರ್ ಸಖಾಫಿ ಉಳ್ಳಾಲ*

Friday, September 27, 2019

ಏನಿದು ಮುಸ್ಲಿಂ ಜಮಾಅತ್ತ್..!!??

*ಅವರು ಬುಧ್ಧಿವಂತರು ಪ್ರಗತಿಪರರು ಅದರಲ್ಲಿ ಸಂಶಯವಿಲ್ಲ.....*

*ಏನಿದು ಮುಸ್ಲಿಂ ಜಮಾ‌ಅತ್!!?*

ಸಮಸ್ತ ವಿಭಜನೆಯಾದ ನಂತರ  ಸುನ್ನಿಗಳು ಎರಡು ತಕ್ಕಡಿಯಲ್ಲಾಗುತ್ತಾರೆ. ಒಗ್ಗಟ್ಟಿನಲ್ಲಿ ಕಾರ್ಯಚರಿಸುತ್ತಿದ್ದ ಸುನ್ನಿಗಳ ಅಭಿವೃದ್ಧಿಗೆ ಈ ವಿಭಜನೆ ಕಂಟಕವಾಗಿದೆಯಾ?
ಎಂಬ ಪ್ರಶ್ನೆಯನ್ನು ಸಮಾನಮನಸ್ಕರಾದ ಹಲವರಲ್ಲಿ ನಾನು ಕೇಳಿದಾಗ ಬಂದ ಉತ್ತರ 'ಇಲ್ಲ' ಎಂದಾಗಿತ್ತು.ಮಾತ್ರವಲ್ಲ ವಿಭಜನೆಯೊಂದು ಸಮುದಾಯವನ್ನು ಕ್ಷೀಣಿಸುತ್ತಿದೆಯೆಂಬ ಕೂಗಿಗೆ ವಿರುಧ್ಧವಾಗಿ ಸುನ್ನಿಗಳ ಈ ವಿಭಜನೆ ಸಮುದಾಯವನ್ನು ಅದರಲ್ಲಿ ವಿಶೇಷವಾಗಿ ಸುನ್ನಿಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಿತು!
ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಸಮುದಾಯ ಮುಂದೆನಿಂತಿತು.
ಸಮಸ್ತ ವಿಭಜನೆಯಾದ ನಂತರ  ಎಪಿ ವಿಭಾಗ ದೊಡ್ಡ ಮಟ್ಟಿನ ಕ್ರಾಂತಿ ಮಾಡಿತೆಂದು ಹೇಳದೆ ನಿರ್ವಾಹವಿಲ್ಲ. ಅದರ ಅರ್ಥ ಇ.ಕೆ ವಿಭಾಗ ಸುಮ್ಮನೆ ಕೂರಿತೆಂದು ಅಲ್ಲ.ಅವರು ಕಾರ್ಯಚರಿಸಿದ್ದಾರೆ.ಆದರೆ ಸಾಕಷ್ಟು ಮಹಲ್ಲ್'ಗಳ ಸ್ವಾಧೀನ ವಿಲ್ಲದೆಯೂ,ಶ್ರೀಮಂತ ಉಮರಾ ದಿಗ್ಗಜರ ಬೆಂಬಲದ ಕೊರತೆಯ ನಡುವಯೂ,ರಾಜಕೀಯ ಪಕ್ಷಗಳ ಸ್ಪಷ್ಟ ಸಹಾಯದಿಂದ ವಂಚಿತರಾಗಿಯೂ ಎಪಿ ವಿಭಾಗ ಕೇರಳ ಕರ್ನಾಟಕ ಸಹಿತ ಭಾರತದ 27 ರಾಜ್ಯಗಳಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ವ್ಯಾಪಿಸಿ ಇತಿಹಾಸ ಸ್ರಷ್ಟಿಸಿದೆ.
ಭಾರತದ ಕಾಶ್ಮೀರದಲ್ಲಿ ಕೂಡಾ ಶೈಕ್ಷಣಿಕವಾಗಿ ಮತ್ತು ಧಾರ್ಮಿಕ ವಾಗಿ ಎಪಿ ವಿಭಾಗ ಸಂಚಲನ ಸ್ರಷ್ಟಿಸಿದೆ. ಅದೊಂದು ಉದಾಹರಣೆ ಮಾತ್ರ.
ಬೇರೆ ಯಾವುದೇ ಧಾರ್ಮಿಕ ಸಂಘಟನೆಗಳಿಗೆ ಅಲ್ಲಿಗೆ ತಲುಪಲು ಸಾದ್ಯವಾಗಿಲ್ಲ.
ನಮ್ಮ ಉತ್ತರ ಕರ್ನಾಟಕದಲ್ಲಿ ಎಪಿ ವಿಭಾಗ ಮಾಡುತ್ತಿರುವ ಕ್ರಾಂತಿ ನೋಡಿ ಅಲ್ಲಿನ ನ್ಯಾಯವಾದಿಯೊಬ್ಬರು ಕಮಂಟ್ ಮಾಡಿದ್ದರು "ನಿಮ್ಮ ಎಸ್ಸೆಸ್ಸೆಫ್ ನವರು ಬಂದ ನಂತರ ನಮ್ಮ ನಾಡು ಬದಲಾಗಿದೆ"
ಇತ್ತೀಚೆಗಿನ ಪ್ರಳಯ ಬಂದಾಗಲೂ ಅತ್ತ ಕೊಡಗು ಮತ್ತು ಉತ್ತರಕರ್ನಾಟಕದ ಪ್ರಳಯಭಾದಿತ ಪ್ರದೇಶಗಳಿಗಳಿಗೆ ನಿರಂತರ ಸಂಪರ್ಕವಿಟ್ಟು ಸೇವೆ ಮಾಡಿದ್ದು ಕೂಡಾ ಎಪಿ ವಿಭಾಗದವರಾಗಿದ್ದಾರೆ.ಬೇರೆ ಯಾವ ಧಾರ್ಮಿಕ ಸಂಘಟನೆಗಳಿಗೆ ಅತ್ತಕಡೆ ದೊಡ್ಡ ಮಟ್ಟದ ಸೇವೆಗೆಯ್ಯಲು ಸಾದ್ಯವಾಗಲಿಲ್ಲ.
ಎರಡನೇಯದಾಗಿ ಸಮುದಾಯ ಸಬಲೀಕರಣದ ಹೊಸ ಹೊಸ ಮಜಲುಗಳನ್ನು ಮೊತ್ತಮೊದಲು ತೋರಿಸಿಕೊಡುವುದು ಎಪಿ ವಿಭಾಗವಾಗಿದೆ.
ನಂತರ ಹಲವರು ಅದನ್ನು ಅನುಕರಣೆ ಮಾಡುತ್ತಾರೆ ಆವಾಗ ಸಮುದಾಯ ಇನ್ನಷ್ಟು ಗಟ್ಟಿಯಾಗುತ್ತದೆ.
ಉದಾಹರಣೆಗೆ ನಮ್ಮ ಹೆಣ್ಮಕ್ಕಳು ಸಾಮಾನ್ಯವಾಗಿ ಆರು,ಏಳು ತರಗತಿ ಕಲಿತು ಮನೆಯಲ್ಲಿರುವುದು ರೂಡಿಯಾಗಿತ್ತು.ನಂತರ ಉನ್ನತಮಟ್ಟದ ವಿದ್ಯಾಭ್ಯಾಸ ಹೆಣ್ಣು ಮಕ್ಕಳಿಗೂ ಬೇಕೆಂಬ ಬೇಡಿಕೆ ವ್ಯಾಪಕವಾಗಿ ಕಾಲೇಜು ಮೆಟ್ಟಿಲುಗಳನ್ನು ಏರಲು ಆರಂಭಿಸಿದಾಗ ಧಾರ್ಮಿಕತೆ ಅವರಿಂದ ಮಾಯವಾಗ ತೊಡಗಿತು.ಇದಕ್ಕೆ ಪರಿಹಾರವಾಗಿ ನಮ್ಮ ದ.ಕ ದಲ್ಲಿ ಮೊತ್ತಮೊದಲ ಮಹಿಳಾ ಕಾಲೇಜು ಪುತ್ತೂರು ಕುಂಬ್ರದಲ್ಲಿ ಆರಂಭಿಸಿ ಎಪಿ ವಿಭಾಗ ಕ್ರಾಂತಿಮಾಡಿತು. ಅಂತಹ ಧಾರ್ಮಿಕ ಮತ್ತು ಲೌಕಿಕ ಮಹಿಳಾ ಕಾಲೇಜು ನಮಗೂ ಬೇಕೆಂದು ತಿಳಿಯಲು ಇತರರಿಗೆ ಬರೋಬ್ಬರಿ 20 ವರ್ಷ ಬೇಕಾಯಿತು!
ಅದೇ ನಾನು ಹೇಳಿದ್ದು ಎಪಿ ವಿಭಾಗದಲ್ಲಿರುವವರು ಬುಧ್ಧಿವಂತರು.ಅವರ ಚಿಂತನೆ ಏನೇ ಇದ್ದರೂ 100 ವರ್ಷದ ಆಚೆಗಿನ ಜನರೇಶನ್ ಕುರಿತಾಗಿರುತ್ತದೆ.
ನೀವೆ ನೋಡಿ ಮಹಲ್ಲ್ ಸ್ವಾಧೀನ, ರಾಜಕೀಯ ಪಕ್ಷದ ಬೆಂಬಲ, ಶ್ರೀಮಂತ ಉಮರಾಗಳ ಸಾಥ್ ಇದ್ಯಾವುದೂ ನಿರೀಕ್ಷಿಸಿದಷ್ಟು ಸಿಗದ ಎಪಿ ವಿಭಾಗ 'ಮರ್ಕಝ್ ನಾಲೆಡ್ಜ್ ಸಿಟಿ' ನಿರ್ಮಿಸಿ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದರು.
ಎಲ್ಲಾ ಸ್ವಾಧೀನವಿರುವ ಬೇರೆ ಯಾವುದೇ ಸಂಘಟನೆಗಳಿಗೆ ಇದು ಸಾದ್ಯವಾಗಿಲ್ಲ.
ಇನ್ನು ಇಪ್ಪತ್ತು ವರ್ಷದ ನಂತರ ಅವರು ಕೂಡಾ ಪ್ರಯತ್ನಿಸಬಹುದು.ಆವಾಗ ಎಪಿ ವಿಭಾಗ ಇನ್ನೊಂದು ಮಹಾ ಅಧ್ಬುತಕ್ಕೆ ಕೈ ಹಾಕಿರುತ್ತದೆ!
ಎಪಿ ವಿಭಾಗದ ಸಂಘಟನೆ ಸಟ್ಟಪ್ ಕೂಡಾ ಅಧ್ಬುತ!
ಕೇವಲ ಕೇರಳ ಕರ್ನಾಟಕ ಮಾತ್ರವಲ್ಲ ದೇಶದ 27 ರಾಜ್ಯಗಳಲ್ಲಿಯೂ ಅವರಿಗೆ ಸಂಘಟನೆ ಸಟ್ಟಪ್ ಇದೆ.ಅದರ ಕೊನೆಯ ಉದಾಹರಣೆಯಾಗಿದೆ ಇತ್ತೀಚೆಗೆ ನಡೆದ ಎಸ್ಸೆಸ್ಸೆಫ್ ನ ಭಾರತ ಯಾತ್ರೆ!
ಆ ಯಾತ್ರೆ ಹೋದ ಎಲ್ಲಾ ಕಡೆಗಳಲ್ಲಿ ವಿಜ್ರಂಭಣೆಯ ಸ್ವಾಗತ ಲಭಿಸಿತು.ಅಷ್ಟೇ ಜನಸಂದಣಿ ನೆರೆದಿತ್ತು.
ಇಂತಹ ಒಂದು ಶೈಕ್ಷಣಿಕ ಪ್ರಗತಿ ಭಾರತಯಾತ್ರೆಯನ್ನು ಎಪಿ ವಿಭಾಗದವರಿಗಲ್ಲದೆ ಬೇರೆ ಯಾವುದೇ ಧಾರ್ಮಿಕ ಸಂಘಟನೆಗಳಿಗೆ ಮಾಡಲು ಸಾದ್ಯವಾಗಿಲ್ಲ.
ಎಲ್ಲಾ ಹೋಗಿ ಕೇರಳದಲ್ಲಿ ಎರಡು ಮತ್ತು ಕರ್ನಾಟಕದಲ್ಲಿ ಮಾಡಿದ ಒಂದು ಯಾತ್ರೆ ಇತಿಹಾಸ ವಾಗಿತ್ತು.
ಅದು ಕೂಡಾ ಮಾಡಲು ಇತರರಿಗೆ ಸಾದ್ಯವಾಗಿಲ್ಲ ಕಾರಣ ಎಪಿ ವಿಭಾಗದ ಸಂಘಟನೆ ಸಟ್ಟಪ್ ಆ ರೀತಿ ಇದೆ.ಇನ್ನು ಇದನ್ನು ಅನುಕರಿಸಲು ಇತರರಿಗೆ ಹಲವಾರು ವರ್ಷಗಳೇ ಬೇಕಾಗ ಬಹುದು.ಆವಾಗ ಎಪಿ ವಿಭಾಗ ವಿಶ್ವ ಪರ್ಯಟನೆ ಮಾಡುತ್ತಿರಬಹುದು.
ಅದೇ ನಾನು ಹೇಳಿದ್ದು ಎಪಿ ವಿಭಾಗ ತುಂಬಾ ಫಾಸ್ಟ್' ಉಲಮಾಗಳ ಅವುಲಿಯಾಗಳ ಆಶೀರ್ವಾದದ ಬರಕತ್.
ಆಧುನಿಕತೆಯ ತುತ್ತತುದಿಗೇರಿ ಕಾರ್ಯಚರಿಸುತ್ತಿದ್ದರೂ ಆಧ್ಯಾತ್ಮಿಕತೆ ಅವರು ಕೈ ಬಿಟ್ಟಿಲ್ಲ!
ಇಷ್ಟೆಲ್ಲಾ ಅಧ್ಬುತ ಸ್ರಷ್ಟಿಸುವಾಗಲೂ ಧಾರ್ಮಿಕತೆ ಯ ಕಟ್ಟುಪಾಡು ಬಿಟ್ಟುಕೊಟ್ಟಿಲ್ಲ!
ಹಾಗಾಗಿ ಅವರನ್ನು 'ಆಧುನಿಕ ಪ‌ಝಂಜನ್ ಮೈಲಾರ್' ಎಂಬ ಹೆಸರಿನಲ್ಲಿ ಮೀಡಿಯಾಗಳು ಮೆನ್ಶನ್ ಮಾಡುತ್ತಿದೆ.
ಪಕ್ಷ ನೋಡದೆ ರಾಜಕೀಯ ನೇತಾರರನ್ನು ಯಾವ ರೀತಿ ಸಮುದಾಯ ಸಬಲೀಕರಣಕ್ಕೆ ಬಳಸಬೇಕೆಂದು ಕಲಿಸಿಕೊಟ್ಟದ್ದು ಎಪಿ ವಿಭಾಗವಾಗಿದೆ.ಅಂದು ಅದನ್ನು ವಿರೋಧಿಸಿದವರು ಇಂದು ಸಾಲು ಸಾಲಾಗಿ ಶಾಲು ಹಾಕಲು ಕ್ಯೂ ನಿಲ್ಲಬೇಕಾಯಿತು!
ಸೋಜಿಗವೇನಂದರೆ ನಕ್ವಿ,ನಳಿನ್ ಸಹಿತ ನಮಗಾಗದವರು ಅಧಿಕಾರಕ್ಕೆ ಬಂದರೆ ಅವರನ್ನು ಯಾವ ರೀತಿ ನೋಡಿಕೊಳ್ಳಬೇಕೆಂಬ ಬುಧ್ಧಿ ಹೊಳೆಯಲು ಇತರರಿಗೆ 30 ವರ್ಷ ಬೇಕಾಯಿತು!
ನಾಲೆಡ್ಜ್ ಸಿಟಿಗೆ ಐದು ಸೆಂಟ್ ಜಾಗ ಕೂಡಾ ಇಲ್ಲವೆಂದು ಪರಿಹಾಸ್ಯ ಮಾಡಿದವರು ಅದನ್ನೊಮ್ಮೆ ನೋಡಲು ಕಾತರದಿಂದ ಕಾಯುವಂತಾಯಿತು!
ಶಹರೇ ಮುಬಾರಕ್ ಮಸೀದಿ ಯ ಹೆಸರಲ್ಲಿ ಎಪಿ ವಿಭಾಗ 40 ಕೋಟಿ ಗುಳುಂ ಮಾಡಿತೆಂದು ಸಾರಿ ಪಾಣಕ್ಕಾಡ್ ಸಯ್ಯದ್ ನೀಡಿದ ಸಾವಿರ ರೂಪಾಯಿ ಮರಳಿಸಬೇಕೆಂದು ಪಟ್ಟು ಹಿಡಿದವರು ಆ ಮಸೀದಿ ಕಾಮಗಾರಿಗೆ ನೋಡಿ ಮೂಗಿಗೆ ಬೆರಳಿಟ್ಟರು!
ಹೌದು ಎಪಿ ವಿಭಾಗದಲ್ಲಿರುವವರು ಬುಧ್ಧವಂತರು ಪ್ರಗತಪರರು,ಉಲಮಾಗಳ ಅವುಲಿಯಾಗಳ ‌ಆಶೀರ್ವಾದ ದೊಂದಿಗೆ ಮುನ್ನಡೆಯುವವರು.ಅವರು ನಿಮಗೆ ಬಾಯಲ್ಲಿ ಉತ್ತರಿಸಲ್ಲ. ಮಾಡಿತೋರಿಸುವರು.ಅವರು ನಿಂತ ನೀರಲ್ಲ ಮತ್ತೂ ಮುಂದುವರೆಯುವರು.
ಅಪಹಾಸ್ಯ,ನಿಂದನೆಗಳಿಗೆ ಉತ್ತರಿಸಲು ಅವರಿಗೆ ಸಮಯವಾದರೂ ಎಲ್ಲಿ?

ಇದೀಗ ಕರ್ನಾಟಕ ಮುಸ್ಲಿಂ ಜಮಾತ್ ರಚನೆಯಾಗಿದೆ. ಉತ್ತರ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಅದು ಬೇರೂರಿಯಾಗಿದೆ.
ದ.ಕ ಸಮಿತಿ ಕೂಡಾ ಯಾನೆಪೋಯ ಸರ್,ರಶೀದ್ ಹಾಜಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇನ್ನು ಬಂಟ್ವಾಳ, ಪುತ್ತೂರು ಸಹಿತ ಅಲ್ಲಲ್ಲಿ ತಾಲೂಕ್ ಸಮಿತಿ ರಚನೆಯಾಗಲಿದೆ.
ಮುಸ್ಲಿಂ ಜಮಾ‌ಅತ್ ಪುತ್ತೂರು ತಾಲೂಕು ಸಮಿತಿ ಇನ್ಶಾಅಲ್ಲಾ ನಾಳೆ (ಶನಿವಾರ) ಬೆಳಿಗ್ಗೆ 10 ಗಂಟೆಗೆ ರಚನೆಯಾಗಲಿದೆ ವಿಶೇಷ ಆಹ್ವಾನಿತರಿಗೆ ಮಾತ್ರ ಅವಕಾಶ.
ಸಮುದಾಯ ಸಬಲೀಕರಣಕ್ಕಾಗಿ ದೊಡ್ಠಮಟ್ಟದ ಕ್ರಾಂತಿ ಈ ಮೂಲಕ ನಡೆಯಲಿದೆ.
ನಡೆಯಬಹುದಾ? ಎಂದು ಸಂಶಯ ಯಾರಿಗೂ ಬೇಡ.
ಎಪಿ ವಿಭಾಗ ಮುಟ್ಟಿದೆಲ್ಲವೂ ಚಿನ್ನವಾಗಿದೆ.ಕಾರಣ ಅವರು ಈಗಿನ ಜನರೇಶನ್ ಸಹಿತ ಮುಂದಿನ ಹಲವಾರು ವರ್ಷಗಳ ಜನರೇಶನ್ ಮನದಲ್ಲಿಟ್ಟು ಕಾರ್ಯಚರಿಸುತ್ತಾರೆ.
ಇದರಲ್ಲಿ ಯಾರೂ ಗ್ರೂಪಿಸಂ ತರಬೇಡಿ.ಸಮುದಾಯಕ್ಕಾಗಿ ಪಕ್ವತೆಯೊಂದಿಗೆ ಕಾರ್ಯಚರಿಸುವ ಇರಾದೆ ಇರುವವರು ಸಾಥ್ ಕೊಡಬಹುದು.ಅದಲ್ಲ ಇನ್ನೂ ಕೂಡಾ ಗ್ರೂಪಿಸಂ ಅಮಲಿನಲ್ಲೇ ಇದ್ದೂ ಪರಿಹಾಸ್ಯ, ಸುಳ್ಳು ಹೇಳುತ್ತಾ ಇದ್ದರೆ ನಿಮಗೆ ಉತ್ತರಿಸಲು ಎಪಿ ವಿಭಾಗಕ್ಕೆ ಸಮಯ ಇಲ್ಲ.
ನಿಮಗೆ ನಿಮ್ಮ ಪಾಡು,ನಮಗೆ ನಮ್ಮದು,
ನಾಲೆಡ್ಜ್ ಸಿಟಿ, ಶ‌ಅರೇ ಮುಬಾರಕ್ ಮಸೀದಿ ತಲೆ ಎತ್ತುವಾಗ ಯಾರದೋ ಚಾಡಿ ಕೇಳಿ ಅದರ ವಿರುಧ್ಧ ಮಾತನಾಡಿದವರು ಇಂದು ಖೇದಿಸುವ ಹಾಗೆ ಮುಂದೊಂದು ದಿನ 'ಕರ್ನಾಟಕ ಮುಸ್ಲಿಂ ಜಮಾ‌ಅತ್' ಸ್ಪಷ್ಟ ಗುರಿಯೊಂದಿಗೆ ಬೆಳಕು ಚೆಲ್ಲಿ ನಿಲ್ಲುವಾಗ 'ನಾನು ಅವಕಾಶ ವಂಚಿತನಾದೆ' ಎಂದು ಗೋಗೆರದು ಫಲವಿಲ್ಲ.
ಚಿಂತಿಸಿ ಕಾರ್ಯಚರಿಸಿರಿ......
ಅಬೂಶಝ
27/9/2019

Thursday, September 26, 2019

ಝಿಯಾರತ್ತ್ ಕೇಂದ್ರ 6⃣1⃣ ಭಾಗ 01. ಶಿಯಾಬುದ್ದೀನ್ ಅಹ್ಮದ್ ಕೋಯ ಶಾಲಿಯಾತ್ತಿ (ಖ:ಸಿ ಚಾಲಿಯಂ)

*​ಝಿಯಾರತ್ತ್ ಕೇಂದ್ರ​​*
ಸಮಸ್ತ ನಾಯಕರು = 09
      ​👉6⃣1⃣
➖➖➖➖➖➖➖➖➖
*"#ಶಿಯಾಬುದ್ದೀನ್" #ಅಹ್ಮದ್_ಕೋಯ_ಶಾಲಿಯಾತ್ತಿ (ಖ:ಸಿ) ಚಾಲಿಯಂ, ಕಲ್ಲಿಕೋಟೆ.*
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
🕌🕌🕌🕌🕌🕌🕌🕌🕌
✍ ಗಫೂರ್ ಬಾಯಾರ್
*********************
ಸಮಸ್ತ ಕೇರಳ ಜಂಇಯತ್ತುಲ್ ಉಲಮಾ ರೂಪೀಕರಣದಿಂದ ಆರಂಭಿಸಿ ಅದರ ಬೆಳವಣಿಗೆಗೆ ಮಹತ್ವದ ಪಾತ್ರ ವಹಿಸಿ ಸುನ್ನೀ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಅಸಂಖ್ಯ ಇಸ್ಲಾಮಿಕ್ ಪಂಡಿತರಲ್ಲೊಬ್ಬರಾದ ಮರ್ಹೂಮ್ ಅಬೂ ಸಾದಾತ್ತ್ ಶಿಹಾಬುದ್ದೀನ್ ಅಹ್ಮದ್ ಕೇೂಯ ಶಾಲಿಯಾತ್ತಿ (ಖ.ಸಿ) ಕೂಡ ಒಬ್ಬರು.

ಹಿಜರಿ 1302 ಜಮಾದಿಲ್ ಆಖಿರ್ 22 ರಂದು ಜನಿಸಿದ ಮಹಾನರು ದೀನೀ ವಿಧ್ವಾಂಸರಾಗಿದ್ದ ತಮ್ಮ ತಂದೆ ಮತ್ತು ಇತರ ಹಲವಾರು ವಿಧ್ವಾಂಸರಿಂದ ಪ್ರಾಥಮಿಕ ಹಾಗೂ ಪ್ರೌಢ  ಶಿಕ್ಷಣ ಪಡೆದು ನಂತರ ಉನ್ನತ ಶಿಕ್ಷಣಕ್ಕಾಗಿ ಮೌಲಾನಾ ಮುಫ್ತಿ ಮಹ್ಮೂದ್ (ರ), ಮತ್ತು ಅಹ್ಮದ್ ರಿಳಾ ಖಾನ್ ಬರೇಲ್ವಿ (ರ) ರಂತಹ ವಿಶ್ವ ಪ್ರಸಿದ್ಧ ವಿಧ್ವಾಂಸರ ಶಿಷ್ಯತ್ವ ಸ್ವೀಕರಿಸಿ ವಿವಿಧ ಶಾಖೆಗಳಲ್ಲಿ ಹಲವಾರು ವರ್ಷಗಳ ಕಾಲ ಶಿಕ್ಷಣ ಪಡೆದು ಅತ್ಯುನ್ನತ ಪದವಿ ಗಳಿಸಿದರು. ನಂತರ ಕೆಲಕಾಲ ಹೈದರಾಬಾದ್ ನಿಜಾಮರ ಅಧೀನದಲ್ಲಿ ಮುಫ್ತಿಯಾಗಿ ಸೇವೆ ಸಲ್ಲಿಸಿದರು.

ನಾಗೂರ್, ಭಟ್ಕಳ್, ತಿರೂರಂಗಾಡಿ ಮೊದಲಾದೆಡೆ ಮುದರ್ರಿಸರಾಗಿ ಸೇವೆ ಸಲ್ಲಿಸಿದ ಮಹಾನರು 1329ರಲ್ಲಿ ವೆಲ್ಲೂರ್ ಲತ್ವಿಫಿಯ್ಯ ಕಾಲೇಜಿನಲ್ಲಿ ಮುದರಿಸ್ಸರಾಗಿ ನಂತರ ಫತ್ವ ಬೋರ್ಡ್ ಸದಸ್ಯರಾಗಿಯೂ ಆಯ್ಕೆಯಾದರು. ತಮಿಳುನಾಡಿನ ತಿರುನಲ್ವೇಲಿಯಲ್ಲಿ ರಿಯಾಳುಲ್ ಜಿನಾಲ್ ಕಾಲೇಜಿನಲ್ಲಿ ಸುದೀರ್ಘ ಕಾಲ ದರ್ಸ್ ನಡೆಸಿದ ನಂತರ ವೆಲ್ಲೂರ್ ಲತ್ವೀಫಿಯ್ಯಾದಲ್ಲಿ ಪ್ರಾಂಶುಪಾಲರಾದರು.

1933ರಲ್ಲಿ ಖಿಲಾಫತ್ತ್ ನಾಯಕರಾಗಿದ್ದ ಆಲಿ ಮುಸ್ಲಿಯಾರ್ (ಖ:ಸಿ) ಹಜ್ಜ್'ಗೆ ತೆರಳಿದಾಗ ಆಲಿ ಮುಸ್ಲಿಯಾರ್ (ಖ.ಸಿ) ರವರ ನೇತೃತ್ವದ ತಿರೂರಂಗಾಡಿ ದರ್ಸ್'ನ ಉಸ್ತುವಾರಿ ವಹಿಸಿಕೊಂಡಿದ್ದರು. ಹೀಗೆ ದೇಶದ ವಿವಿದೆಡೆ ದೀನೀ ಸೇವೆ ಸಲ್ಲಿಸುತ್ತಾ ಪಂಡಿತ ವಲಯದಲ್ಲಿ ಆಧುನಿಕ ಇಮಾಂ ನವವಿ (ರ) ಯೆಂದೂ, ಮತ್ತು ಆಧುನಿಕ ಇಮಾಂ ಗಝ್ಝಾಲಿ (ರ)ಯೆಂದೂ ಗುರುತಿಸಿಕೊಂಡಿದ್ದರು.

ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದಲ್ಲಿ ಸಂಘಟನಾತ್ಮಕವಾಗಿ ಪ್ರಮುಖ ಪಾತ್ರವಹಿಸಿದ ಮಹಾನರು 1933 ಮಾರ್ಚ್ ಐದಕ್ಕೆ ಕಲ್ಲಿಕೋಟೆ ಜಿಲ್ಲೆಯ ಫರೋಕ್'ನಲ್ಲಿ ನಡೆದ ಸಮಸ್ತದ 6ನೇ ವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈ ಸಮ್ಮೇಳನಕ್ಕೆ ಸಮಸ್ತ ನೇೂಂದಾಯಿಸಿದ ನೋಂದಣಿಯಲ್ಲಿ ಮಹಾನರು 10ನೇ ಸದಸ್ಯರಾಗಿದ್ದರು.

ಸುನ್ನತ್ ಜಮಾಅತಿನ ಏಳಿಗೆಯನ್ನು ಸಹಿಸದೆ ಸದಾ ಉಲಮಾಗಳನ್ನು ನಿಂದಿಸುತ್ತಾ ಮುಸ್ಲಿಮ್ ಸಮುದಾಯದ ಅಭಿವೃದ್ಧಿಯ ಹರಿಕಾರರಂತೆ ಸೇೂಗು ಹಾಕಿ ಸಮಾಜಘಾತುಕ ಶಕ್ತಿಗಳೊಂದಿಗೆ ಮೃದು ಧೇೂರಣೆ ತಳೆಯುವ ನೂತನವಾದಿಗಳ ಕುಟಿಲ ತಂತ್ರಗಳನ್ನು ಮನಗಂಡ ಮಹಾನರು ಅಂತಹ ಸೇೂಗಲಾಡಿಗಳೊಂದಿಗೆ ಸುನ್ನೀ ಸಮೂಹ ಯಾವ ರೀತಿಯ ಸಂಬಂಧವನ್ನೂ ಹೊಂದಬಾರದೆಂಬ ದಿಟ್ಟತನದ ಫತ್ವಾ ಮಂಡಿಸಿದ್ದರು.
ಅಂದು ಆ ಮಹಾನರು ದೂರಾಲೇೂಚನೆಯಿಂದ ಹೊರಡಿಸಿದ ಫತ್ವಾದ ಮಹತ್ವವು ಇಂದು ಜಾಗತಿಕ ಮುಸ್ಲಿಂ ಸಮೂಹಕ್ಕೆ ಮನವರಿಕೆಯಾಗುತ್ತಿದೆ.

ಸುನ್ನೀ ಉಲಮಾಗಳನ್ನು ಕಂಡರಾಗದ ನೂತನವಾದಿಗಳು ಫರೇೂಕ್'ನಲ್ಲಿ ನಡೆಯಬೇಕಿದ್ದ ಸಮಸ್ತದ ಸಮ್ಮೇಳನವನ್ನು ಮೊಟಕುಗೊಳಿಸಲಿಕ್ಕಾಗಿ ಕೆ.ಎಂ. ಸೀತಿ ಹಾಜಿಯವರ ನೇತೃತ್ವದಲ್ಲಿ ಅಡ್ವೋಕೇಟ್ ಕೆ.ಕೆ. ಪೊಕರ್ ಮುಖಾಂತರ ಕೇರಳ ಜಂಇಯತ್ತುಲ್ ಉಲಮಾದ ಸಮ್ಮೇಳನ ನಡೆಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಪ್ರಯತ್ನಿಸಿದರು.
ನೂತನವಾದಿಗಳ ಕುತಂತ್ರಕ್ಕೆ ದಿಟ್ಟ ಉತ್ತರ ನೀಡಿದ ಮರ್ಹೂಂ ಶಾಲಿಯಾತ್ತಿ (ರ) ರವರು ಸಮರ್ಥವಾಗಿ ಆಧಾರ ಸಮೇತ ಉತ್ತರಿಸಿದ್ದರಿಂದ ನೂತನವಾದಿಗಳ ಕುತಂತ್ರ ಫಲಿಸದೆ ಫರೇೂಕ್ ಸಮ್ಮೇಳನ ಬಹು ವಿಜೃಂಭಣೆಯಿಂದ ನಡೆಯಿತು.

☪ಮುಂದುವರಿಯುವುದು
💢💢💢💢💢💢💢💢💢

Wednesday, September 25, 2019

ಕುತ್ತ್ ರಾತ್ತಿಬ್ ಇಸ್ಲಾಮಿಕವೇ..? ಭಾಗ 03

*ಕುತ್ತ್ ರಾತೀಬ್ ಇಸ್ಲಾಮಿಕವೇ?*

ಭಾಗ--3


📝 _ಮುನೀರ್ ಸಖಾಫಿ ಸಾಲೆತ್ತೂರು_

----------------------------------------------------
ಪವಾಡಗಳು ಅವರವರ ಕರಾಮತ್ತಾಗಿ ಸಂಭವಿಸಬೇಕಾದರೆ  ಪ್ರಸ್ತುತ ನಿಯಮಗಳು ಅಡಗಿರಬೇಕು ಎಂದಾಗಿದೆ ಮೇಲಿನ ಇಬಾರತ್ತಿನಲ್ಲಿ ಹೇಳಿದ್ದು.ಅದೇ ವೇಳೆ ಒಂದು ಪ್ರವಾದಿಯ ಅಥವಾ ವಲಿಯ್ಯ್ ನ ಕರಾಮತ್ ಇನ್ನೊಬ್ಬರಲ್ಲಿ ಪ್ರಕಟವಾಗಲು ಪ್ರಸ್ತುತ ನಿಬಂಧನೆ ಬಾಧಕವಲ್ಲ.ಅದು ದುಷ್ಕರ್ಮಿಯಲ್ಲೂ ,ಕಾಫಿರಾದ ವ್ಯಕ್ತಿಯಲ್ಲೂ ಪ್ರಕಟವಾಗಬಹುದಾಗಿದೆ.
ಔಲಿಯಾಗಳನ್ನು ನಿಂದಿಸಿದ ಎಷ್ಟೋ ದುಷ್ಕರ್ಮಿಗಳಿಗೆ ಔಲಿಯಾಗಳ ಕರಾಮತ್'ನ ಮೂಲಕ ನಾಶ ನಷ್ಟ ಸಂಭವಿಸಿದ್ದು ಚರಿತ್ರೆಗಳಲ್ಲಿದೆ.

ಇಮಾಮ್ ಇಬ್ನ್ ಹಜರ್ (ರ) ಹೇಳುತ್ತಾರೆ,

وقد تظهر الكرامة علي يد فاسق بل كافر كالسامري فانه رأى فرس جبريل حتي اخذ من تراب حافرها وجعله في
 العجل فخار.(فتاوي الكبري للهيتمي 4/352)
ಕೆಲವೊಮ್ಮೆ ಔಲಿಯಾಗಳ ಕರಾಮತ್ ಸತ್ಯ ನಿಷೇಧಿ ಅಥವಾ ದುಷ್ಕರ್ಮಿಯ ಮೂಲಕ ಪ್ರಕಟವಾಗಬಹುದು.ಜಿಬ್ರೀಲ್ ಅಲೈಹಿಸ್ಸಲಾಮ್ ರ ಕುದುರೆಯ ಕಾಲು ತಾಗಿದ ಮಣ್ಣು ತೆಗೆದು"ಸಾಮಿರಿ" ಎಂಬಾತನು ಆತ ನಿರ್ಮಿಸಿದ ಹಸುವಿನ ಕರು ವಿಗೆ ಹಾಕಿದಾಗ  ಅದು ಶಬ್ಧವುಂಟು ಮಾಡಿತು.
(ಫತಾವಲ್ ಕುಬ್ರಾ 4/352)
----------------------------------------------------
ಇಲ್ಲಿ ಜಿಬ್ರೀಲ್ (ಅ) ರ ಕರಾಮತ್ ಸಾಮಿರಿಯಲ್ಲಿ ಪ್ರಕಟವಾಯಿತು.ಆತ ಕಾಫಿರನಾಗಿದ್ದ.

ಇಮಾ ಗಝ್ಝಾಲೀ(ರ)ಹೇಳುತ್ತಾರೆ,

يجوز ظهور ذلك علي يد فاسق لانه مقدور في نفسه
(الاقتصاد في الاعتقاد 1/63)
ದುಷ್ಕರ್ಮಿಯಲ್ಲೂ ಔಲಿಯಾಗಳ ಕರಾಮತ್ ಪ್ರಕಟವಾಗಬಹುದು.ಕಾರಣ ಅದು ಅಸಂಭವ್ಯವಾದ ಸಂಗತಿಯಲ್ಲ.
(ಅಲ್ ಇಖ್ತಿಸ್ವಾದ್ ಫಿಲ್ ಇಹ್'ತಿಖಾದ್ 1/63)

----------------------------------------------------

ಒಟ್ಟಿನಲ್ಲಿಒಬ್ಬ ವ್ಯಕ್ತಿ ಶರೀಅತ್ ನ ನಿಯಮಗಳನ್ನು ಪಾಲಿಸಿ ಅವನಿಂದ ಪವಾಡಗಳು ಪ್ರಕಟವಾದಲ್ಲಿ ಅದು ಆತನ ಕರಾಮತ್ ಎಂದೂ  ಶರೀಅತ್ ನಿಯಮ ಪಾಲಿಸದವನಾಗಿದ್ದರೆ, ಪವಾಡ ಶಕ್ತಿ ಕಲಿತು ಪ್ರಕಟ ಮಾಡಿದ್ದಲ್ಲಿ ಅದು ಸಿಹ್ರ್ ಎಂದೂ ಹೇಳಬಹುದಾಗಿದೆ.ಇದ್ಯಾವುದೂ ಇಲ್ಲದ ಕೇವಲ ಒಬ್ಬ ಸಾಧಾರಣ ವ್ಯಕ್ತಿಯಿಂದ ಅಧ್ಬುತ ಪವಾಡಗಳು ಪ್ರಕಟವಾದಲ್ಲಿ ಆತ ಯಾವ ಪ್ರವಾದಿಗೆ ಅಥವಾ ವಲಿಯ್ಯ್ ಗೆ ಸೇರಿಸಿ ಅದನ್ನು ಹೇಳುತ್ತಾನೋ ಅದು ಅವರ ಮುಹ್'ಜಿಝತ್ ಅಥವಾ ಕರಾಮತ್ ಆಗಿ ಪರಿಗಣಿಸಲ್ಪಡಲಾಗುತ್ತದೆ.

ಕುತ್ತ್ ರಾತೀಬ್ ಎಂಬುವುದು ರಿಫಾಈ ರಾತೀಬ್ ನಲ್ಲಿ ನಡೆಸುವ ಒಂದು ಕ್ರಿಯೆ ಆಗಿರುವುದರಿಂದ ಅದು ರಿಫಾಯೀ ಶೈಖ್ (ರ)ರಿಗೆ ಸೇರಿದ ಕರಾಮತ್ ಎಂದು ಹೇಳಬಹುದು.

ಕುತ್ತು ರಾತೀಬ್ ನಡೆಸುವವರು ಸುನ್ನತ್ ಗಳನ್ನು ಪಾಲಿಸದವರು.ಅವರಲ್ಲಿ ಹೇಗೆ ಪವಾಡ  ನಡೆಯಬಹುದು ಎಂಬ ಸಂಶಯ ಕೆಲವರಿಗಾದರೂ ಇದೆ.
ಅದರ ಉತ್ತರವನ್ನಾಗಿದೆ ಮೇಲೆ ಓದಿದ್ದು.

ಯಾವುದೇ ಕಾರಣವಿಲ್ಲದೆ ಶರೀರಕ್ಕೆ ಗಾಯ ಮಾಡಬಾರದು.ಚಿಕಿತ್ಸೆಯ ಭಾಗವಾಗಿ ಶರೀರಗಳನ್ನು ಗಾಯ ಮಾಡುವುದು/ಭಾಗಗಳನ್ನು ಕೊಯ್ಯುವುದು ಸ್ವಾಭಾವಿಕವಾಗಿದೆ.
ಕರಾಮತ್ ಎಂಬ ಪವಾಡವನ್ನು ನಿಷೇಧಿಸುವವರ ಮುಂದೆ  ಔಲಿಯಾಗಳಿಗೆ ಕರಾಮತ್ ಇದೆ ಎಂದು ತೋರಿಸಲು ಆತ್ಮೀಯ ಚಿಕಿತ್ಸೆಯ ಭಾಗವಾಗಿ ರಾತೀಬ್ ನಲ್ಲಿ ಆಯುಧಗಳಿಂದ ಚುಚ್ಚಿದರೆ ಅದನ್ನು ತಪ್ಪು ಎಂದು ಹೇಗೆ ತಾನೇ ಹೇಳುವುದು?

ಪುರಾವೆಗಳು ಇನ್ನೂ ಇವೆ.
ಬೇಕಾದಲ್ಲಿ ಇನ್ನೊಮ್ಮೆ ಬರೆಯುವೆ.ಇಂಶಾ ಅಲ್ಲಾಹ್.


*ಮುಗಿಯಿತು.....*
----------------------------------------------------

ಕುತ್ತ್ ರಾತ್ತಿಬ್ ಇಸ್ಲಾಮಿಕವೇ.. ಭಾಗ 02

*ಕುತ್ತ್ ರಾತೀಬ್ ಇಸ್ಲಾಮಿಕವೇ?*

📝 _ಮುನೀರ್ ಸಖಾಫಿ ಸಾಲೆತ್ತೂರು_

ಭಾಗ--2
----------------------------------------------------

*ರಿಫಾಯಿ ರಾತೀಬ್'ನಲ್ಲಿ ಆಯುಧಗಳಿಂದ ಚುಚ್ಚಿ ನಡೆಸುವ ರಾತೀಬ್ ಗೆ ಕುತ್ತು ರಾತೀಬ್ ಎಂದು ಅದು ಅಪಾಯವಿಲ್ಲವೆಂದು ದೃಢವಿರುವವರು ನಡೆಸಬಹುದೆಂಬುವುದಕ್ಕೆ ಕೆಲವು ಪ್ರಮಾಣಗಳನ್ನು ಒಂದನೇ ಭಾಗದಲ್ಲಿ ವಿವರಿಸಿದ್ದೇನೆ.*

ಶೈಖ್ ರಿಫಾಈ (ರ) ರವರ ಶಿಷ್ಯಂದಿರು ಹಲವಾರು ಅಧ್ಬುತಗಳನ್ನು ತೋರಿಸುತ್ತಿದ್ದರು.ಅಗ್ನಿಯಲ್ಲಿ ನಡೆಯುವುದು,ಹಾವುಗಳನ್ನು ನುಂಗುವುದು,ಸಿಂಹಗಳನ್ನು ವಾಹನವಾಗಿಸಿ ಯಾತ್ರೆ ಹೋಗುವುದು ಅದಲ್ಲಿ ಕೆಲವೊಂದು.

ಇಮಾಮ್ ಇಬ್ನ್ ಖಲ್ಲಿಕಾನ್ ಹೇಳುವುದು ನೋಡಿ,

 ولأتباعه أحوال عجيبة من أكل الحيات وهي حية ، والنزول في التنانير وهي تضطرم ، فيطفئونها ،ويلعبون بها وهي تشتغل، ويقال : إنهم في بلادهم يركبون الأسود.
(وفيات الاعيان 1/190)

ಹೊತ್ತಿ ಉರಿಯುತ್ತಿರುವ ಬೆಂಕಿಯ ಒಳ ಪ್ರವೇಶಿಸಿ ಬೆಂಕಿ ಆರಿಸುವುದು,ಉರಿಯುತ್ತಿರುವ ಬೆಂಕಿಯೊಂದಿಗೆ ಆಟವಾಡುವುದು,ಜೀವಂತ ಹಾವುಗಳನ್ನು ನುಂಗುವುದು ಮುಂತಾದ ಅಧ್ಭುತಗಳನ್ನು ಶೈಖ್ ರಿಫಾಯಿವರ ಅನುಯಾಯಿಗಳು ಪ್ರಕಟಿಸುತ್ತಿದ್ದರು.
ಅವರು ಸಿಂಹಗಳ ಮೇಲೇರಿ ಯಾತ್ರೆ ಹೋಗುತ್ತಿದ್ದರು.
(ವಫಯಾತುಲ್ ಅಹ್'ಯಾನ್ 1/190)

ಇದನ್ನು ಇಮಾಮ್ ಇಬ್ನುಲ್ ಇಮಾದ್ (ರ) ತನ್ನ ಶದ್ಸರಾತುಝ್ಝಹಬ್ ನ 4/258 ರಲ್ಲೂ ಉಲ್ಲೇಖಿಸಿದ್ದಾರೆ.
-----------------------------------------------------

*ಇದು ಮಾಯಾಜಾಲವೇ?*

ಕುತ್ತು ರಾತೀಬ್ ನ ಕೆಲವೊಂದು ವೀಡಿಯೋಗಳು ಅಂತರ್ಜಾಲದಲ್ಲಿ ಶೇರ್ ಆಗುವಾಗ ತಿಳುವಳಿಕೆಯಿಲ್ಲದ ಕೆಲವು ಜನರು ಸುನ್ನಿಗಳನ್ನು ಮತ್ತು ರಾತೀಬನ್ನು ಹಿಯಾಳಿಸುವವರಿದ್ದಾರೆ.
ಕೆಲವರು ಇದನ್ನು ಕ್ರಿಮಿನಲ್ ರಾತೀಬ್ ಎಂದು ಹೇಳಿದರೆ ಇನ್ನು ಕೆಲವರು ಮಾಯಾಜಾಲ ಎಂದು ಹೇಳುವವರಿದ್ದಾರೆ.
ವಾಸ್ತವಿಕತೆ ಕಲಿಯದೆ ನಾವು ಯಾವ ಮಾತನ್ನು ಕೂಡಾ ಹೇಳಲೇಬಾರದು.

ಔಲಿಯಾಗಳ ಇಂತಹಾ ಪವಾಡಗಳು ಚರಿತ್ರೆಯ ಗ್ರಂಥಗಳಲ್ಲಿ ದಾಖಲಿಸಲಾಗಿದೆ.

ಪವಾಡಗಳು ಹಲವು ರೀತಿಯಲ್ಲಿದೆ.ಕೆಲವು ನಿಷಿದ್ಧವಾದವು ಇದೆ.ಇನ್ನು ಕೆಲವು ಅಂಗೀಕರಿಸಲ್ಪಡುವಂತದ್ದೂ ಇದೆ.
ಅದನ್ನು ಬೇರ್ಪಡಿಸಿ ಇಮಾಮರು ವಿವರಿಸಿದ್ದಾರೆ.

ಇಮಾಮ್ ಅಬ್ದುರ್ರಹ್'ಮಾನ್  ಬಾಅಲವೀ ಅಲ್ ಹಲ್ರಮೀ(ರ)ಹೇಳುವುದು ನೋಡಿ,

(مسألة:): خوارق العادة على أربعة أقسام:
ಪವಾಡಗಳು 4 ವಿಧವಿದೆ.

 المعجزة المقرونة بدعوى النبوة المعجوز عن معارضتها، الحاصلة بغير اكتساب وتعلم،
1.ಪ್ರವಾದಿಗಳ  ನುಬುವ್ವತ್ ಗೆ ಸಂಬಂಧಪಟ್ಟ ಮುಹ್'ಜಿಝತ್.
ಅದನ್ನು ನಿಷೇಧಿಸಲು ಯಾರಿಗೂ ಸಾಧ್ಯವಿಲ್ಲ.
ಕಲಿಕೆಯಿಂದ ಅಥವಾ ಸಂಪಾದನೆಯ  ಮೂಲಕ ಅದನ್ನು ಗಳಿಸಲು ಸಾಧ್ಯವಿಲ್ಲ.

والكرامة وهي ما تظهر على يد كامل المتابعة لنبيه من غير تعلم ومباشرة أعمال مخصوصة، وتنقسم إلى ما هو إرهاص وهو ما يظهر على يد النبي قبل دعوى النبوّة، وما هو معونة وهو ما يظهر على يد المؤمن الذي لم يفسق ولم يغتر به،

ಕಲಿಕೆಯಿಂದ ಅಥವಾ ಇನ್ನಿತರ ಯಾವುದೇ ಚಟುವಟಿಕೆಗಳ ಮೂಲಕವಲ್ಲದೆ ಪೂರ್ಣವಾಗಿ ಪ್ರವಾದಿಗಳನ್ನು ಅನುಸರಿಸಿ  ಜೀವಿಸುವರಿಂದ ಪ್ರಕಟವಾಗುವ ಪವಾಡವಾಗಿದೆ ಕರಾಮತ್.
ಇದು 2 ವಿಧವಿದೆ.
1.ಪ್ರವಾದಿತ್ವದ ಮುಂಚಿತವಾಗಿ ಪ್ರವಾದಿಗಳಿಂದ ಪ್ರಕಟವಾದ ಪವಾಡ.ಇದಕ್ಕೆ "ಇರ್'ಹಾಸ್ವ್" ಎಂಬ ಹೆಸರಿದೆ.
2.ದುಷ್ಕರ್ಮಿಯಲ್ಲದ ಒಬ್ಬ ಸತ್ಯವಿಶ್ವಾಸಿಯಿಂದ ಪ್ರಕಟವಾಗುವ ಪವಾಡ.ಅಧ್ಭುತ ಪವಾಡ ಪ್ರಕಟವಾದುದರಿಂದ ಆತ ವಂಚಿಸಲ್ಪಡುವವನಲ್ಲ.ಇದಕ್ಕೆ "ಮಊನತ್" ಎಂಬ ಹೆಸರಿದೆ.

والاستدراج وهو ما يظهر على يد الفاسق المغترّ،
3.ಇಸ್ತಿದ್'ರಾಜ್.
ಅಧ್ಬುತ ಪವಾಡ ಪ್ರಕಟಗೊಂಡ ಕಾರಣಕ್ಕೆ ವಂಚಿಸಲ್ಪಟ್ಟ ದುಷ್ಕರ್ಮಿಯಾದ ಮನುಷ್ಯನಲ್ಲಿ ಪ್ರಕಟವಾದ ಪವಾಡ.

والسحر وهو ما يحصل بتعلم ومباشرة سبب على يد فاسق أو كافر كالشعوذة،وهي خفة اليد بالأعمال، وحمل الحيات ولدغها له، واللعب بالنار من غير تأثير، والطلاسم والتعزيمات المحرمة واستخدام الجان وغير ذلك،

4.ಸಿಹ್ರ್.
ಕೆಲವು ಕೆಲಸಗಳ ಮೂಲಕ ದುಷ್ಕರ್ಮಿ ಮತ್ತು ಸತ್ಯ ನಿಷೇಧಿಗಳಲ್ಲಿ ಕಾಣುವ ಪವಾಡ.ಇದು ಕಲಿಕೆಯಿಂದ ಗಳಿಸುವ ಪವಾಡವಾಗಿದೆ.
ವಾಮಾಚಾರ ಇದಕ್ಕೆ ಉದಾಹರಿಸಬಹುದಾಗಿದೆ.ಒಂದು ಚಟುವಟಿಕೆಯೊಂದಿಗಿರುವ ಕೈಚಳಕವಾಗಿದೆ ಅದು.ಸರ್ಪಗಳನ್ನು ಹೊತ್ತೊಯ್ಯುವುದು,ಅದನ್ನು ಕಚ್ಚಿಸುವುದು,ತೊಂದರೆಯಾಗದ ರೂಪದಲ್ಲಿ ಬೆಂಕಿಯಲ್ಲಿ ಆಟವಾಡುವುದು ನಿಷಿಧ್ದವಾದ ಮಂತ್ರಗಳಿಗೆ  ಬೇಕಾಗಿ ಬರೆಯುವುದು ಮತ್ತು ಅದಕ್ಕಾಗಿ ಗೆರೆ ಹಾಕುವುದು ಮುಂತಾದವು ಇದರಲ್ಲಿ ಒಳಪಡುತ್ತದೆ.

 إذا عرفت ذلك علمت أن ما يتعاطاه الذين يضربون صدورهم بدبوس أو سكين، أو يطعنون أعينهم، أو يحملون النار أو يأكلونها، وينتمون إلى سيدي أحمد الرفاعي، أو سيدي أحمد بن علوان أو غيرهما من الأولياء، أنهم إن كانوا مستقيمين على الشريعة، فائمين بالأوامر، تاركين للمناهي، عالمين بالفرض العيني من العلم عاملين به، لم يتعلموا السبب المحصل لهذا العمل، فهو من حيز الكرامة وإلا فهو من حيز السحر، إذ الإجماع منعقد على أن الكرامة لا تظهر على يد فاسق، وأنها لا تحصل بتعلم أقوال وأعمال،
ಹೀಗಿರುವಾಗ ಶೈಖ್ ರಿಫಾಯೀ(ರ) ರವರ ಮತ್ತು ಶೈಖ್ ಅಹ್ಮದು ಬಿನ್ ಅಲ್'ವಾನೀ(ರ) ರಂತಹಾ ಔಲಿಯಾಗಳ  ಜನರೆಂದು ಹೇಳುವ ಕೆಲವು ಜನರು ಆಯುಧಗಳಿಂದ ಹೃದಯಕ್ಕೆ ಮತ್ತು ಕಣ್ಣಿಗೆ ಚುಚ್ಚುವುದು ಹಾಗೂ ಬೆಂಕಿಯನ್ನು ಹೊತ್ತುಯ್ಯುವುದು,ಬೆಂಕಿಯನ್ನು ನುಂಗುವುದು ಮುಂತಾದ ಕೆಲಸಗಳನ್ನು ಮಾಡುತ್ತಾರೆ.ಅವರು ಶರೀಅತ್ ನ ನಿಯಮಗಳನ್ನು ಅಕ್ಷರಸ ಪಾಲಿಸಿ ಜೀವಿಸಿ,ವೈಯುಕ್ತಿಕ ಭಾಧ್ಯತೆಗಳನ್ನು ತಿಳಿದು  ಅವರ ಜೀವನದಲ್ಲಿ ಅಳವಡಿಸಿ ,ಈ ಪವಾಡಗಳನ್ನು ಪ್ರಕಟಿಸಲು ಕಲಿಯದೆ ಪವಾಡಗಳು ದರ್ಶಿಸಲು ಸಾಧ್ಯವಾದರೆ ಅದನ್ನು ಕರಾಮತ್ ನ ಲಿಸ್ಟ್'ನಲ್ಲಿ ಒಳಪಡಿಸಬಹುದಾಗಿದೆ.
ಪವಾಡಗಳು ಕಲಿತು ಪ್ರಕಟಿಸಿದಲ್ಲಿ ಸಿಹ್ರ್ ನ ಲಿಸ್ಟ್ ನಲ್ಲೂ ಒಳಪಡಿಸಬಹುದಾಗಿದೆ.
ಕಾರಣ ಕರಾಮತ್ ದುರ್ಷರ್ಮಿಯಲ್ಲಿ ಪ್ರಕಟವಾಗಲಾರದು.ಕಲಿಕೆಯಿಂದ ಕರಾಮತ್ ದರ್ಶಿಸಲಸಾಧ್ಯವೆಂದು ವಿಧ್ವಾಂಸರು ಒಮ್ಮತಾಭಿಪ್ರಾಯ ತಾಳಿದ್ದಾರೆ.
(ಬಿಗ್'ಯ 299)


ಬಾಕಿ ಮುಂದಿನ ಭಾಗದಲ್ಲಿ....

ಕುತ್ತ್ ರಾತ್ತಿಬ್ ಇಸ್ಲಾಮಿಕವೇ.. ಭಾಗ 01

*ಕುತ್ತ್ ರಾತೀಬ್ ಇಸ್ಲಾಮಿಕವೇ?*

📝 _ಮುನೀರ್ ಸಖಾಫಿ ಸಾಲೆತ್ತೂರು_

ಭಾಗ--1
----------------------------------------------------
ಹಲವು ರಾತೀಬುಗಳು ನಮಗೆ ಪರಿಚಯವಿದೆ.ಮುಹ್ಯುದ್ದೀನ್ ರಾತೀಬ್,ರಿಫಾಯೀ ರಾತೀಬ್,ಹದ್ದಾದ್ ರಾತೀಬ್,ಶಾದುಲಿ ರಾತೀಬ್ ಹೀಗೆ ಹಲವಾರು ರಾತೀಬ್ ಗಳು.

ಮಹಾತ್ಮರಾದ ಔಲಿಯಾಗಲು ಅವರ ಶಿಷ್ಯಂದಿರ ಪಾರತ್ರಿಕ ಲೋಕದ ವಿಜಯಕ್ಕಾಗಿ ಖುರ್'ಆನ್ ಮತ್ತು ಹದೀಸಿನಲ್ಲಿ ವರದಿಯಾದ ಕೆಲವು ದ್ಸಿಕ್ರ್ ಗಳನ್ನು ದೈನಂದಿನ  ಜಪಿಸಲು ನೀಡಿದ ದ್ಸಿಕ್ರ್ ಗಳಾಗಿದೆ ರಾತೀಬ್.

 ಔಲಿಯಾಗಳ ನಾಯಕ ಶೈಖ್ ರಿಪಾಯೀ (ರ) ರವರ ಹೆಸರಲ್ಲಿ ನಡೆಸಿಕೊಂಡು ಬರುವ ಪ್ರತ್ಯೇಕ ರಾತೀಬಾಗಿದೆ ಕುತ್ತ್ ರಾತೀಬ್ ಎಂಬುವುದು.
ರಾತೀಬ್ ನ ನಡುವೆ ಅಥವಾ ರಾತೀಬ್ ನ ನಂತರ  ಆಯುಧಗಳಿಂದ ಶರೀರಕ್ಕೆ ಚುಚ್ಚುವುದಕ್ಕೆ "ಕುತ್ತ್ ರಾತೀಬ್" ಎನ್ನುತ್ತಾರೆ.

ವಹ್ಹಾಬಿ ಯಾನೆ ಮೌದೂದಿಗಳು ಇದನ್ನು ಕ್ರಿಮಿನಲ್ ರಾತೀಬ್ ಎಂದು ಹೇಳಿ ಪರಿಹಾಸ್ಯ ಮಾಡುವುದುಂಟು.
ಇದರ ನೈಜತೆಯ ಬಗ್ಗೆ ಅಲ್ಪ ವಿವರಿಸುತ್ತೇನೆ.

ಮಾರಕಾಯುಧಗಳಿಂದ ಶರೀರಕ್ಕೆ ಅಪಾಯವುಂಟಾಗುವ ರೀತಿಯಲ್ಲಿ ಚುಚ್ಚುವುದು ನಿಷಿದ್ಧವಾಗಿದೆ.ಇದು ಖುರ್'ಆನಿನಲ್ಲೇ ಹೇಳಲಾಗಿದೆ.

ಅಭ್ಯಾಸ ಅಥವಾ ವಾಡಿಕೆಯಿಂದ ಹಾಗೂ ಕರಾಮತ್ ನಿಂದ ಅಪಾಯ ಸಂಭವಿಸದು ಎಂದು ದೃಡವಿದ್ದಲ್ಲಿ ಚುಚ್ಚುದಕ್ಕೆ ಯಾವುದೇ ಅಡ್ಡಿಯಿಲ್ಲ.

ಇಮಾಮ್ ಇಬ್ನ್ ಹಜರುಲ್ ಹೈತಮೀ (ರ)ಬರೆಯುತ್ತಾರೆ,
 ولا يحرم من الطاهر إلا نحو حجر وتراب ومنه مدر وطفل لمن يضره وعليه يحمل إطلاق جمع متقدمين حرمته بخلاف من لا يضره كما قاله جمع متقدمون واعتمده السبكي وغيره وسم وإن قل إلا لمن لا يضره
(تحفة 9/ 479)

ಕಲ್ಲು ,ಮಣ್ಣು ಮುಂತಾದ ಶುದ್ಧಿಯಿರುವ ವಸ್ತುಗಳನ್ನು ತಿನ್ನುವುದರಿಂದ ತೊಂದರೆಯಿದೆ ಎಂದಾದಲ್ಲಿ ಅದನ್ನು ತಿನ್ನುವುದು ಹರಾಮ್ ಆಗಿದೆ.ನಿಶ್ಶರತ್ತ್ ಅದು ತಿನ್ನುವುದು ಹರಾಮ್ ಎಂದು ಹೇಳಿದ ಇಮಾಮರುಗಳ  ಮಾತನ್ನು ಈ ರೀತಿ ವ್ಯಾಖ್ಯಾನಿಸಬೇಕಾಗಿದೆ.
ತಿನ್ನುವುದರಿಂದ ಯಾವುದೇ ತೊಂದರೆಯಿಲ್ಲದ  ಜನರಿಗೆ ತಿನ್ನುವುದಕ್ಕೆ ಯಾವುದೇ ನಿಷೇಧವಿಲ್ಲ.
ಪೂರ್ವೀಕರಾದ ಹಲವಾರು ಇಮಾಮರುಗಳು ಇದನ್ನು ಸ್ಪಷ್ಟಪಡಿಸಿದ್ದು, ಇಮಾಮ್ ಸುಬುಕಿ (ರ)ಇದನ್ನು ಪ್ರಬಲ ಮಾಡಿದ್ದಾರೆ.ವಿಷ ಅಲ್ಪವಾದರೂ ತಿನ್ನುವುದು ಹರಾಮ್ ಆಗಿದೆ.ಆದರೆ ತಿನ್ನುವುದರಿಂದ ತೊಂದರೆಯಿಲ್ಲದ ಜನರಿಗೆ ಅದು ತಿನ್ನುವುದು ಹರಾಮ್ ಅಲ್ಲ.
(ತುಹ್'ಫ 9/479)

ಇದೇ ರೀತಿ ಇಮಾಮ್ ರಂಲೀ ನಿಹಾಯದಲ್ಲಿ ಮತ್ತು ಖತೀಬುಶ್ಶಿರ್'ಬೀನಿ ಮುಗ್ನಿಯಲ್ಲೂ ವಿವರಿಸಿದ್ದಾರೆ.
_______________________________
ಸ್ವಹಾಬೀ ಪ್ರಮುಖರಾದ ಕಾಲಿದ್ ಬಿನ್ ವಲೀದ್ (ರ) ರವರು ವಿಷ ಕುಡಿದು ಒಂದು ಘಟನೆ ಪ್ರಸಿದ್ಧವಾಗಿದೆ.

ಅಬುಸ್ಸಫರ್ (ರ) ವರದಿ ಮಾಡುವ ಆ ಘಟನೆ ಹೀಗಿದೆ.
ಕಾಲಿದ್(ರ) ಹೀರತ್ ಎಂಬ ಸ್ಥಳಕ್ಕೆ ಹೋದಾಗ ಶತ್ರು ಸೈನ್ಯದ ಬಳಿ ತಲುಪಿದರು.ಆವಾಗ ಅವರಲ್ಲಿ ಇಸ್ಲಾಮ್ ಸತ್ಯ ದೀನ್ ಆಗಿದ್ದರೆ ,ನಿನ್ನ ಅಲ್ಲಾಹು ಏಕನಾಗಿದ್ದರೆ  ಈ ವಿಷವನ್ನು ಕುಡಿದು ತೋರಿಸಬೇಕೆಂದು ಅವರು ಸವಾಲು ಹಾಕಿದಾಗ ಕಾಲಿದ್ (ರ) ವಿಷ ವನ್ನು" ಬಿಸ್ಮಿ" ಹೇಳಿ  ಕುಡಿದರು.ಅಲ್ಲಾಹನ ಅನುಮತಿ ಪ್ರಕಾರ ಅವರಿಗೆ ಯಾವುದೇ ತೊಂದರೆಯಾಗಿಲ್ಲ.
(ಮುಸನ್ನಫ್ ಇಬ್ನ್ ಅಬೀ ಶೈಬ 8/56)

ಈ ಘಟನೆಯನ್ನು ಹಲವಾರು ಮುಹದ್ದಿಸ್ ಗಳು ವರದಿ ಮಾಡಿದ್ದಾರೆ.
ಇಮಾಮ್ ಬೈಹಖೀ ತನ್ನ ದಲಾಇಲುನ್ನುಬುವ್ವ 3324 ,
ಇಮಾಮ್ ತ್ವಬ್'ರಾನಿ ಅಲ್ ಮುಹ್'ಜಮುಲ್ ಕಬೀರ್ ನ 3718 ,
ಇಮಾಮ್ ಅಬೂ ಯಹ್'ಲ ತನ್ನ ಮುಸ್ನದ್ ನ 7029 ರಲ್ಲೂ ಉಲ್ಲೇಖಿಸಿದ್ದಾರೆ.

ವಹ್ಹಾಬಿಗಳು ಈ ಘಟನೆಯನ್ನು ತಳ್ಳಿಹಾಕುವಂತಿಲ್ಲ.
ಕಾರಣ , ವಹ್ಹಾಬಿಗಳ ಶೈಖುಲ್ ಇಸ್ಲಾಮ್ ಇಬ್ನ್ ತೀಮಿಯ್ಯ ತನ್ನ ಗ್ರಂಥದಲ್ಲೇ ಇದನ್ನು ವರದಿ ಮಾಡಿದ್ದಾರೆ.

ಅವರು ಹೇಳುವುದು ನೋಡಿ,
وكرامات الصحابة والتابعين بعدهم وسائر الصالحين كثيرة جدا..........
وخالد بن الوليد حاصر حصنا منيعا، فقالوا: لا نسلم حتى تشرب السم، فشربه فلم يضره.(الفرقان ،66،67)
ಸ್ವಹಾಬಿಗಳ ಮತ್ತು ತಾಬಿವುಗಳ ಕರಾಮತ್ ಹಲವಾರು ಇದೆ..........

ಖಾಲಿದ್ ಬಿನ್ ವಲೀದ್ (ರ)ರೊಂದಿಗೆ ಶತ್ರುಗಳು ವಿಷವನ್ನು ಕುಡಿಯಬೇಕೆಂದು ಸವಾಲು ಹಾಕಿದಾಗ ಕುಡಿದು ಬಿಟ್ಟರು.ಯಾವ ತೊಂದರೆಯೂ ಅವರಿಗಾಗಿಲ್ಲ.
(ಇಬ್ನ್ ತೀಮಿಯ್ಯ ರ ಅಲ್ ಫುರ್'ಖಾನ್ ,ಪುಟ 66,67).
_______________________________
ಖಾಲಿದ್ (ರ )ರವರ ಪ್ರಸ್ತುತ ಘಟನೆಯನ್ನು ಇಮಾಮ್ ದಮೀರಿ ತನ್ನ ಹಯಾತುಲ್ ಹಯವಾನುಲ್ ಕುಬ್ರಾದಲ್ಲಿ ಸವಿಸ್ತಾರವಾಗಿ ವಿವರಿಸಿದ್ದಾರೆ.ಕಾಲಿದ್(ರ)ರವರು ವಿಷವನ್ನು ಕುಡಿದ ಕರಾಮತ್ತನ್ನು ನೋಡಿದ ಶತ್ತು ಸೈನ್ಯ ಅವರೊಂದಿಗೆ ಯುದ್ಧ ಮಾಡದೆ 80,000 ದಿರ್ಹಮ್ ನೀಡಿ ಅವರೊಂದಿಗೆ ಸ್ನೇಹ ಒಪ್ಪಂದ ಮಾಡಿ ಹೊರಟು ಹೋದರು.
(ಹಯಾತುಲ್ ಹಯವಾನ್ 1/391).

ಈ ಘಟನೆಯಿಂದ ಶರೀರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ದೃಢವಿದ್ದಲ್ಲಿ ಅಪಾಯದ ವಸ್ತು ತಿನ್ನುವುದು /ಇನ್ನಿತರ ಅದ್ಭುತಗಳನ್ನು ನಡೆಸುವುದು ಅನಿಸ್ಲಾಮಿಕವಲ್ಲ ಎಂದು ಮನವರಿಕೆಯಾಯಿತು.

ಒಂದು ವೇಳೆ ಅನಿಸ್ಲಾಮಿಕವಾಗಿರುತ್ತಿದ್ದಲ್ಲಿ ಕಾಲಿದ್(ರ) ಇದಕ್ಕೆ ತಯಾರಾಗುತ್ತಿರಲಿಲ್ಲ.


ಇನ್ನಷ್ಟು ಪುರಾವೆಗಳು ಮುಂದಿನ ಭಾಗದಲ್ಲಿ ನಿರೀಕ್ಷಿಸಿ.
ان شاء الله

ಇಹ್ಯಾ ಗ್ರಂಥದ ಬಗ್ಗೆ ನಮಗೆಷ್ಟು ಗೊತ್ತು..?

*ಇಮಾಮ್ ಗಝ್ಝಾಲಿ (ರ) ರ ಇಹ್ಯಾ ದ ಬಗ್ಗೆ ನಮಗೆಷ್ಟು ಗೊತ್ತು?*

🌷🌷🌷🌷🌷🌷🌷🌷
ಶೈಖ್ ಅಬುಲ್ ಹಸನ್ ಎಂಬ ಒಬ್ಬರಿದ್ದರು.ಅವರು ಒಮ್ಮೆ ಇಹ್ಯಾ ಉಲೂಮಿದ್ದೀನ್ ಪಾರಾಯಣ ಮಾಡಿದರು.ಅದರ ಕೆಲವೊಂದು ವಿಷಯಗಳು ನೂತನವಾದದಂತೆ ಅವರಿಗೆ ತೋಚಿತು.ಇದು ಪ್ರವಾದೀ ಚರ್ಯಗೆ ವಿರುದ್ಧವಾದ ಗ್ರಂಥವೆಂದು ಅವರು ತೀರ್ಮಾನಿಸಿದರು.ಅವರಿಗೆ ಊರಿನಲ್ಲಿ ಒಳ್ಳೆಯ ಸ್ಥಾನವಿತ್ತು.ಊರಿನಲ್ಲಿ ಎಲ್ಲರೂ ಶೇಕರಿಸಿಟ್ಟಿದ್ದ ಇಹ್ಯಾ ಗ್ರಂಥಗಳನ್ನು ಒಟ್ಟುಗೂಡಿಸುವಂತೆ ಅವರು ಊರ ಜನರಿಗೆ ಆದೇಶಿಸುವಂತೆ ಚಕ್ರವರ್ತಿಯಲ್ಲಿ  ಹೇಳಿದರು.ಗುರುವಾರ ದಂದು ಊರಿನ ಕರ್ಮಶಾಸ್ತ್ರ ಆಲಿಂಗಳೊಂದಿಗೆ ಸಮಾಲೋಚನೆ ನಡೆಸಿ ಇಹ್ಯಾ ಗ್ರಂಥದ ಎಲ್ಲಾ ಕಾಂಡಗಳನ್ನು ಬೆಂಕಿ ಹಾಕಿ ಶುಕ್ರವಾರ ದಿನ ಹೊತ್ತಿಸುವಂತೆ ತೀರ್ಮಾನಿಸಲಾಯಿತು.

ಗುರುವಾರ ಅಸ್ತ ಶುಕ್ರವಾರ ರಾತ್ರಿ  ಶೈಖ್ ಅಬುಲ್ ಹಸನ್ ಎಂಬ ಆ  ವ್ಯಕ್ತಿಗೆ ಒಂದು ಕನಸು.
ಊರಿನ ಮಸೀದಿಯ ಕಂಬದಲ್ಲಿ ಪ್ರಕಾಶ ಗೋಚರವಾಯಿತು.
ಗಮನವಿಟ್ಟು ನೋಡಿದಾಗ  ಅಲ್ಲಿ ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು  ಮತ್ತು ಅಬೂಬಕರ್(ರ) ,
ಉಮರ್ (ರ) ಹಾಗೂ ಇಮಾಮ್ ಗಝ್ಝಾಲಿ ಹಾಜರಿದ್ದರು.
ಇಮಾಮ್ ಗಝ್ಝಾಲಿಯ ಕೈಯಲ್ಲಿ ಇಹ್ಯಾ ಉಲೂಮಿದ್ದೀನ್ ಗ್ರಂಥವಿತ್ತು.ಇಮಾಮ್ ಗಝ್ಝಾಲೀ(ರ) ರವರು ಆ ಗ್ರಂಥವನ್ನು ಪ್ರವಾದೀ ವರ್ಯರ ಕೈಯಲ್ಲಿ ನೀಡಿ ಹೇಳಿದರು;
ಓ ಪುಣ್ಯ ಪ್ರವಾದೀ ವರ್ಯರೇ! ಈ ವ್ಯಕ್ತಿ (ಅಬುಲ್ ಹಸನ್ ಎಂಬವರು) ನನ್ನ ಗ್ರಂಥದ ಬಗ್ಗೆ ಅರೋಪ ಮಾಡಿದ್ದಾರೆ.ನಂತರ ಇಮಾಮ್ ಗಝ್ಝಾಲೀ(ರ) ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಳಿ ಹೋಗಿ ಇಹ್ಯಾ ವನ್ನು ಕೈಗೆ ನೀಡಿ ಹೇಳಿದರು; "ಇದರಲ್ಲಿ ತಮ್ಮ ಸುನ್ನತ್ ಗೆ ವಿರುಧ್ಧವಾಗಿ ಏನಾದರು ಕಂಡು ಬಂದಲ್ಲಿ ನಾನು ಸಂಪೂರ್ಣ ಪಶ್ಚಾತಾಪಮಾಡಲು ತಯಾರಾಗಿದ್ದೇನೆ.
ಇದರಲ್ಲಿರುವುದು ಸರಿಯಾಗಿದ್ದರೆ ನನ್ನ ವಿರುದ್ಧ ಆರೋಪ ಮಾಡಿದವನಿಗೆ ತಮ್ಮ ಬರ್ಕತ್ ನಿಂದ ನ್ಯಾಯ ಕೊಡಿಸಿ ಕೊಡಿ."
ಆವಾಗ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಇಹ್ಯಾ ದ
ಒಂದೊಂದೇ ಪುಟವನ್ನು ಓದುತ್ತಾ ಪರಿಶೀಲನೆ ನಡೆಸಿದರು.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು;ಇದು ಬಹಳ ಉತ್ತಮವಾದ ಗ್ರಂಥವಾಗಿದೆ.ನಂತರ ಅದನ್ನು ಸಿದ್ದೀಖ್ (ರ) ಮತ್ತು ನಂತರ ಉಮರ್(ರ) ಕೂಡಾ ಪರಿಶೀಲಿಸಿ ಉತ್ತಮವೆಂದು ಹೇಳಿದರು.
ಅರೋಪ ಹೊರಿಸಿದ ಅಬುಲ್ ಹಸನ್ ಎಂಬ ಆ ವ್ಯಕ್ತಿಗೆ ಛಾಟಿಯೇಟು ನೀಡುವಂತೆ ಆಜ್ಞೆಯಿತ್ತರು.5 ನೇ ಏಟು ಕೊಟ್ಟಾಗ ಸಿದ್ದೀಖ್ (ರ) ಶಿಫಾರಸ್ಸು ಮಾಡಿ ಹೇಳಿದರು.ಓ ಪ್ರವಾದೀ ವರ್ಯರೇ! ತಮ್ಮ ಸುನ್ನತ್ ಗಳ ಮೂಲಕ ಸಂಶೋಧನೆ ನಡೆಸಿದಾಗ ಈ ಅಬುಲ್ ಹಸನ್ ಗೆ ತಿಳಿದ ಸಂಗತಿಯನ್ನು ಅವರು ಹೇಳಿದ್ದಾರೆ.ಅವರಿಗೆ ಕ್ಷಮಿಸಿರಿ.
ಆವಾಗ ಇಮಾಮ್ ಗಝ್ಝಾಲಿಯೂ ಕೂಡಾ ಅವರಿಗೆ ಕ್ಷಮಿಸಿದರು.
ಶೈಕ್ ಅಬುಲ್ ಹಸನ್ ರವರು ನಿದ್ರೆಯಿಂದ ಎಚ್ಚೆತ್ತು ಅವರ ಗೆಳೆಯರೊಂದಿಗೆ ಈ ವಿಷಯವನ್ನು ಹಂಚಿಕೊಂಡರು.ನಿದ್ರೆಯಲ್ಲಿ ಬಿದ್ದ ಚಾಟಿಯೇಟಿನ ನೋವು ಎಚ್ಚೆತ್ತ ನಂತರ 1 ತಿಂಗಳುಗಳ ಕಾಲ ಕಾಡುತ್ತಿತ್ತು.ಚಾಟಿಯೇಟಿನ ಕುರುಹು ಮರಣದ ತನಕ ಅವರ ಶರೀರದಲ್ಲಿದ್ದವು.ಅದರ ನಂತರ ಇಹ್ಯಾ ಗ್ರಂಥ ಕಂಡರೆ ಅದನ್ನು ಚುಂಬಿಸಿ ಗೌರವಿಸುತ್ತಿದ್ದರು.ಈ ಘಟನೆ ಸತ್ಯವಾಗಿದ್ದು,  ಯಾಖೂತುಶ್ಶಾದ್ಸುಲಿ, ಅಬುಲ್ ಅಬ್ಬಾಸುಲ್ ಮುರಸೀ(ರ),ಅಬುಲ್ ಹಸನುಶ್ಶಾದ್ಸುಲೀ( ರ)ಮುಂತಾದವರಿಂದ ವರದಿ ಮಾಡಲ್ಪಟ್ಟಿದೆ.

(ತ್ವಬಖಾತುಶ್ಶಾಫಿಯ್ಯತುಲ್ ಕುಬ್ರಾ6/258,259,260)

✒ ಇಬ್ನು ಮುಹಮ್ಮದ್ ಸಖಾಫಿ,ಸಾಲೆತ್ತೂರು

Tuesday, September 24, 2019

ಝಿಯಾರತ್ತ್ ಕೇಂದ್ರ 81 ವಲಿಯುಲ್ಲಾಹಿ ಅಂದ್ರುಪ್ಪಾಪ್ಪ (ಖ:ಸಿ)

* #ಝಿಯಾರತ್ತ್_ಕೇಂದ್ರ​​​*
👉👉 8⃣1⃣
➖➖➖➖➖➖➖
*ವಲಿಯುಲ್ಲಾಹಿ ಜಮಾಲುಲ್ ಔಲಿಯ ಅಂದ್ರಪ್ಪಾಪ್ಪ (ಖ:ಸಿ)*
*ವಲಿಯಾಕಂಡಿಪ್ಪಿಡಿಕ, ಪಾನೂರ್, ಕಣ್ಣೂರ್ ಜಿಲ್ಲೆ*
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
**********************
1984ನೇ ಇಸ್ವಿ ಅಕ್ಟೋಬರ್ 31ನೇ ತಾರೀಕು ಬೆಳಿಗ್ಗೆ ಹತ್ತು ಗಂಟೆಯ ಸಮಯ. ಪೊನ್ನಾನಿಯ ಎಂ. ಈ. ಎಸ್. ಕಾಲೇಜಿನ ಮುಖ್ಯದ್ವಾರ. ಆ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಎಂದಿನಂತೆ ಓಡಾಡುತ್ತಿದ್ದರು....

ಆಗ ಆ ಕಾಲೇಜಿನ ಮುಂಭಾಗದ ಕಾಂಪೌಂಡಿನಲ್ಲಿ ವಯೋವೃದ್ಧರೊಬ್ಬರು ವಯೋಸಹಜವಾಗಿ ನಡುಗುವ ಕೈಗಳಿಂದ ಇದ್ದಲಿನಲ್ಲಿ ಅದೇನನ್ನೋ ಬರೆಯುತ್ತಿದ್ದರು.  ಮೊದಮೊದಲು ಯಾರೂ ಅಷ್ಟಾಗಿ ಅದನ್ನು ಗಮನಿಸಲಿಲ್ಲವಾದರೂ ನಂತರ ಆ ಬರವಣಿಗೆಯನ್ನು ಓದಿದವರ ಪೈಕಿ ಕೆಲವರು ಆ ವೃದ್ಧರನ್ನು ಮಾನಸಿಕ ಅಸ್ವಸ್ಥರೆಂದು ಭಾವಿಸಿ ಅನುಕಂಪ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಅಪಹಾಸ್ಯ ಮಾಡಿ  ನಗಲಾರಂಭಿಸಿದರು.

ಅಷ್ಟಕ್ಕೂ ಆ ವೃದ್ಧರು ಮಲಯಾಳಂನಲ್ಲಿ ಬರೆದಿದ್ದ ಆ ಬರಹ ಹೀಗಿತ್ತು. ಇಂದಿರಾಗಾಂಧಿ *"ವೆಡಿಯೇಟ್ಟು ಮೆರಿಚ್ಚು."* ಅಂದರೆ ಇಂದಿರಾಗಾಂಧಿಯವರು ಗುಂಡಿಗೆ ಬಲಿಯಾದರು.

ಉಕ್ಕಿನ ಮಹಿಳೆ ಎಂದೇ ಪ್ರಸಿದ್ಧಿ ಪಡೆದಿದ್ದ ಝೆಡ್ ಪ್ಲಸ್ ಭದ್ರತೆಯಿರುವ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಯವರು ಹಂತಕನ ಗುಂಡಿಗೆ ಬಲಿಯಾದರೆಂದರೆ ಅಂದು ಯಾರೂ ನಂಬುವ ಸ್ಥಿತಿಯಲ್ಲಿರಲಿಲ್ಲ.

ಕಾರಣ ಆ ಕಾಲದಲ್ಲಿ ಸಾಮಾಜಿಕ ಜಾಲತಾಣಗಳಾಗಲೀ  ದೃಶ್ಯಮಾಧ್ಯಮಗಳಾಗಲಿ ಅಥವಾ ಮುದ್ರಣ ಮಾಧ್ಯಮವಾಗಲಿ ಇಂದಿನಷ್ಟು ಇರಲಿಲ್ಲ. ಇದ್ದದ್ದು ದೂರದರ್ಶನ ಆಕಾಶವಾಣಿ ಮತ್ತು ಕೆಲವು ಮುದ್ರಣ ಮಾಧ್ಯಮಗಳು ಮಾತ್ರ. ಹಾಗಾಗಿ ರಾಷ್ಟ್ರೀಯ ವಾರ್ತೆಗಳು ಅಂದು ಬಿತ್ತರವಾಗುತ್ತಿದ್ದದ್ದು ದಿನಕ್ಕೆ ಮೂರು ಬಾರಿ ಮಾತ್ರ.

ಲಭ್ಯವಿದ್ದ ಮಾಧ್ಯಮಗಳು ದಿನಕ್ಕೆ ಮೂರು ಬಾರಿ ವಾರ್ತೆಯನ್ನು ಬಿತ್ತರಿಸುತ್ತಿತ್ತು ಹಾಗಾಗಿ ಯಾವುದೇ ರಾಷ್ಟ್ರೀಯ ಸುದ್ದಿಗಳು ತಕ್ಷಣಕ್ಕೆ ತಿಳಿಯಲು ಸಾಧ್ಯವೇ ಇರಲಿಲ್ಲ.

"ಅಂದು ಮದ್ಯಾಹ್ನ ಹನ್ನೆರಡರ ವಾರ್ತೆಗಳನ್ನು ಕೇಳಿ ಇಡೀ ದೇಶವೇ ದಂಗಾಯಿತು. ಕಾರಣ ದೇಶದ ಪ್ರದಾನಿ ಶ್ರೀಮತಿ ಇಂದಿರಾಗಾಂಧಿಯವರು ತಮ್ಮ ಅಂಗರಕ್ಷಕರಿಂದಲೇ ಗುಂಡಿನ ದಾಳಿಗೀಡಾಗಿ ಹತರಾಗಿದ್ದರು."

ಕೇರಳದ ಎಂ.ಈ.ಎಸ್ ಕಾಲೇಜಿನ ಕಾಂಪೌಂಡಿನ ಮೇಲೆ ಆ ವೃದ್ಧರು ಬರೆದಿದ್ದ ವಾಕ್ಯಗಳನ್ನು ಓದಿದವರಿಗೆ ಆಗ ಮನವರಿಕೆಯಾಯಿತು ಆ ವಾಕ್ಯಗಳನ್ನು ಬರೆದ ವ್ಯಕ್ತಿ ಸಾಮಾನ್ಯರಲ್ಲ. ಅಲ್ಲಿ ದೂರದ ದೆಹಲಿಯಲ್ಲಿ ಗುಂಡಿನ ದಾಳಿ ನಡೆಯುತ್ತಿದ್ದರೆ ಅದು ಕೇರಳದಲ್ಲಿರುವ ವೃದ್ದರೊಬ್ಬರಿಗೆ ತಿಳಿಯಲು ಸಾಧ್ಯವಾಗಿದೆಯೆಂದರೆ ಕರಾಮತ್ತಿನ ಪದವಿಗೇರಿದವರಿಗಲ್ಲದೆ ಮತ್ಯಾರಿಗೂ ಇಂತಹ ವಿಷಯಗಳು ತಿಳಿಯಲು ಸಾಧ್ಯವೇ ಇಲ್ಲ ಎಂಬ ಸತ್ಯ ಅವರೆಲ್ಲರಿಗೂ ಮನವರಿಕೆಯಾಯಿತು.

ಕೇರಳದಲ್ಲಿದ್ದರೂ ದೂರದ ದೆಹಲಿಯಲ್ಲಿ ಗುಂಡಿನ ದಾಳಿ ನಡೆದಿದ್ದನ್ನು ಕಣ್ಣಾರೆ ಕಂಡವರಂತೆ ಗೇೂಡೆ ಬರಹದ ಮೂಲಕ ತಿಳಿಸಿ ಜನಸಾಮಾನ್ಯರನ್ನು ಆಶ್ಚರ್ಯಚಕಿತರನ್ನಾಗಿಸಿದ ಆ ವಯೇೂವೃದ್ಧರೇ *ವಲಿಯುಲ್ಲಾಹಿ ಜಮಾಲುಲ್ ಔಲಿಯಾ ಆರಿಫ್ ಬಿಲ್ಲಾಹಿ ಅಂದ್ರಪ್ಪಾಪ (ಖ.ಸಿ)ರವರು.*

ಎತ್ತ ಹೇೂಗುವಾಗಲೂ ಇದ್ದಿಲಿನ ತುಂಡೊಂದನ್ನು ಸದಾ ಕೈಯಲ್ಲಿಟ್ಚುಕೊಳ್ಳುತ್ತಿದ್ದ ಆ ಮಹಾನರು ಹಲವಾರು ಸಂಗತಿಗಳನ್ನು ಗೇೂಡೆ ಬರಹದ ಮೂಲಕ ಬರೆದು ಜನಸಾಮಾನ್ಯರಿಗೆ ತರುವ ಪ್ರಯತ್ನ ಮಾಡುತ್ತಿದ್ದರು.

ಅವಿಶ್ರಾಂತವಾದ ಇಲಾಹಿ ಸ್ಮರಣೆಯ ಮೂಲಕ ಅಲ್ಲಾಹನಿಂದ ವಿಲಾಯತಿನ ಪದವಿ ಪಡೆದಿದ್ದರೂ ಯಾರೊಬ್ಬರ ಅರಿವಿಗೂ ಬಾರದೆ ಎಲೆಮರೆಯ ಕಾಯಿಯಂತೆ ಜೀವಿಸುತ್ತಿದ್ದ ವಲಿಯುಲ್ಲಾಹಿ ಅಂದ್ರುಪ್ಪಾಪ (ರ)ರವರ ಕರಾಮತ್ತಿನ ಅರಿವಾದ ನಂತರ ಜಾತಿ ಮತ ಬೇಧವಿಲ್ಲದೆ ಜನಸಾಮಾನ್ಯರೆಲ್ಲರೂ  ಅವರನ್ನು ಸಮೀಪಿಸಿ  ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳಲಾರಂಭಿಸಿದರು.

ಅಂದ್ರುಪ್ಪಾಪ (ರ) ಎಂದೇ ಗುರುತಿಸಲ್ಪಡುವ ಆ ಮಹಾನರು ತಲಶ್ಶೇರಿ ಸಮೀಪದ ಚೊಕ್ಲಿ ಎಂಬಲ್ಲಿ ಖಲಂದರ್ ಮುಸ್ಲಿಯಾರ್ (ಖ:ಸಿ) ರವರ ಪುತ್ರರಾಗಿ ಜನಿಸಿದರು.
 ತಮ್ಮ ಮಹಲ್ಲಿನ ಮದರಸದಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ ಗಳಿಸಿದ ನಂತರ ಪೆರುಂಗತ್ತೂರ್ ಪಳ್ಳಿ ದರ್ಸಿನಲ್ಲಿ ವ್ಯಾಸಂಗವನ್ನು ಮುಂದುವರಿಸಿದರು.

ತಮ್ಮ ಹದಿನೈದನೇ ವಯಸ್ಸಿನಲ್ಲಿ ಮಲಬಾರಿನ ಮಕ್ಕಾ ಎಂದೇ ಪ್ರಸಿದ್ಧಿ ಪಡೆದಿರುವ ಪೊನ್ನಾನಿಯಲ್ಲಿ ಪಯ್ಯನಾಡ್ ಮಮ್ಮದ್ ಮುಸ್ಲಿಯಾರ್ (ನ:ಮ), ಆಲುವಾಯಿ ಅಬೂಬಕರ್ ಮುಸ್ಲಿಯಾರ್ (ನ:ಮ), ವಾಯಕಾಡ್ ಮುಹಮ್ಮದ್ ಮುಸ್ಲಿಯಾರ್ (ನ:ಮ) ರಂತಹ ಮಹಾತ್ಮರ ಶಿಷ್ಯರಾಗಿ ಉನ್ನತ ವಿದ್ಯಾಭ್ಯಾಸ ಗಳಿಸಿದರು.

ಸದ್ಗುಣ ಸಂಪನ್ನತೆಯ ಪ್ರತೀಕದಂತಿದ್ದ ಅಂದ್ರುಪ್ವಾಪ (ರ)ರವರು ಸೂಕ್ಷ್ಮತೆಯಿಂದ ಕಳಂಕರಹಿತವಾದ ಜೀವನ ಸಾಗಿಸುತ್ತಾ ಅಲ್ಲಾಹನ ಸಂಪ್ರೀತಿ ಗಳಿಸುವಲ್ಲಿ ಯಶಸ್ವಿಯಾದರು.

ಆದ್ಯಾತ್ಮಿಕ ಲೇೂಕದ ಮಹಾತ್ಮರನ್ನು ಹಾಗೂ ಅವರ ನೇತೃತ್ವದ ಸಂಸ್ಥೆಗಳನ್ನು ಬಹಳ ಗೌರವಾದರಗಳಿಂದ ಕಾಣುತ್ತಿದ್ದ ಅಂದ್ರುಪ್ಪಾಪ (ರ) ರವರು ತಿರುವೆಗಪ್ಪುರಂ ಮಮ್ಮದ್ ಮುಸ್ಲಿಯಾರ್ ಶಾದುಲಿ (ರ), ವಡಕರ ಮಮ್ಮದಾಜಿ ತಂಙಳ್ (ರ), ಸಯ್ಯಿದ್ ಹಿಬತ್ತುಲ್ಲಾಹಿ ಬುಖಾರಿ ಚಾವಕ್ಕಾಡ್ (ರ), ಕಕ್ಕಿಡಿಪುರಂ ಅಬೂಬಕರ್ ಮುಸ್ಲಿಯಾರ್ (ರ), ಅಂಬಿಕುನ್ನು ಬೀರಾನ್ ಔಲಿಯಾ (ರ), ಕಾಳತ್ತೇೂಡ್ ಕಮ್ಮು ಕುಟ್ಟಿ ಮುಸ್ಲಿಯಾರ್ (ರ),  ಪೊನ್ಮಾನಿಕುಡಂ ಉಣ್ಣಿನ್ ಮುಸ್ಲಿಯಾರ್ (ರ),  ಪಕೀರ್ ಹಾಜಿ ಕರೂಪಡಣ (ರ) ಕಾರಕ್ಕಾಡ್ ಮಾನು ಮುಸ್ಲಿಯಾರ್ (ರ), ಸಿ. ಎಂ. ವಲಿಯುಲ್ಲಾಹಿ (ರ) ಮುಂತಾದ ಮಹಾತ್ಮರೊಂದಿಗೆ ಆದ್ಯಾತ್ಮಿಕ ಗೆಳೆತನ ಬೆಳೆಸಿದರು.

ಸದಾ ಇಲಾಹಿ ಸ್ಮರಣೆಯಲ್ಲಿ ತಲ್ಲೀನರಾಗಿರುತ್ತಿದ್ದ ಅಂದ್ರುಪ್ಪಾಪ (ರ)ರವರು ಅಲ್ಲಾಹನ ಸಂಪ್ರೀತಿಗೆ ಪಾತ್ರರಾದ ಮಹಾತ್ಮರುಗಳ ಮಕ್ಬರ ಝಿಯಾರತ್ ಮಾಡುವುದರಲ್ಲಿ ಬಹಳ ಆಸಕ್ತಿ ವಹಿಸುತ್ತಿದ್ದರು.

ಚಿಕ್ಕಂದಿನಿಂದ ಧಾರ್ಮಿಕ ವಿಷಯಗಳಲ್ಲಿ ಅತೀವ ಆಸಕ್ತಿ ಹೊಂದಿದ್ದ ಅಂದ್ರುಪ್ಪಾಪ (ರ)ರವರು ಧಾರ್ಮಿಕ ಪಠಣಕ್ಕಾಗಿ ತಮ್ಮ ಎಂಟನೇ ವಯಸ್ಸಿನಲ್ಲಿ ಮನೆ ಬಿಟ್ಟು ತೆರಳಿದವರು ಮನೆಗೆ ಹಿಂದಿರುಗಿರುವುದು ತಮ್ಮ ಸಹೇೂದರಿಯ ನಿಖಾಹಿನ ಸಮಯದಲ್ಲಾಗಿತ್ತು. ಕೆಲ ಸಯಯದ ಬಳಿಕ ಪುನಃ ಮನೆ ಬಿಟ್ಚು ತೆರಳಿದ ಅವರನ್ನು ಅವರ ಬಂಧು ಬಾಂಧವರ ಒತ್ತಾಯದ ಮೇರೆಗೆ 1996ಕ್ಕೆ ಮನೆಗೆ ಹಿಂದಿರುಗಿದರು. ಆಗ ಅವರು ವೃದ್ಧಾಪ್ಯ ತಲುಪಿದ್ದರು.

ಅಷ್ಟರಲ್ಲಾಗಲೇ ಅಂದ್ರುಪ್ಪಾಪ (ರ)ರವರು ಆಧ್ಯಾತ್ಮಿಕ ಲೇೂಕದಲ್ಲಿ ಗುರುತಿಸಿಕೊಂಡು ನೊಂದ ಜನಸಾಮಾನ್ಯರಿಗೆ ಸಾಂತ್ವಾನ ಅಭಯ ಕೇಂದ್ರವಾಗಿ ಕೇರಳದ ಮುಸ್ಲಿಂ ಜನಮಾನಸದಲ್ಲಿ ಮನೆ ಮಾತಾಗಿದ್ದರು.

ದೀನಿ ವಿದ್ಯೆ ಕಲಿಯುವ ಮುತಅಲ್ಲಿಮರುಗಳನ್ನು ಬಹುವಾಗಿ ಪ್ರೀತಿಸುತ್ತಿದ್ದ ಮಹಾನರು ಮುತಅಲ್ಲಿಮರನ್ನು ಎಲ್ಲೇ ಕಂಡರೂ ಆತ್ಮೀಯತೆಯಿಂದ ಮಾತನಾಡಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು.

ಅಂದ್ರುಪ್ಪಾಪ (ರ)ರವರು ಕೇರಳದಾದ್ಯಂತ ಮನೆಮಾತಾದ ನಂತರ ಅವರ ಭೇಟಿಗಾಗಿ ಜನ ಜಾತ್ರೆಯಂತೆ ನೆರೆಯುತ್ತಿದ್ದರು. ಜನರ ಸಂದರ್ಶನದ ಕಾರಣದಿಂದ ಇಲಾಹಿ ಸ್ಮರಣೆಗೆ ತೊಡಕುಂಟಾದಾಗ ಮಾನಸಿಕವಾಗಿ ಬಹಳ ನೊಂದು ಕೊಳ್ಳುತ್ತಿದ್ದರು.

ಆಧ್ಯಾತ್ಮಿಕ ಲೇೂಕದ ಅಪೂರ್ವ ತೇಜಸ್ಸಿನಂತೆ ಕಂಗೊಳಿಸುತ್ತಿದ್ದ ಅಂದ್ರುಪ್ಪಾಪ (ರ)ರವರು 2000ನೇ ಇಸ್ವಿ ನನ್ನ ಪಾಲಿಗೆ ಒಳ್ಳೆಯ ಸಮಯವಾಗಿದೆ. ನನ್ನೆಲ್ಲಾ ಸಮಸ್ಯೆಗಳಿಗೂ ಆ ವರ್ಷ ಪರಿಹಾರ ಲಭಿಸಲಿದೆ ಎನ್ನುತ್ತಿದ್ದರು.

ಅಂದ್ರುಪ್ಪಾಪ (ರ)ರವರ ಈ ಮಾತುಗಳು ಅವರ ವಫಾತಿನ ಸೂಚನೆಯಾಗಿತ್ತು. ಅಂತೆಯೇ 2000 ನೇ ಇಸ್ವಿ ಫೆಬ್ರವರಿ 27 ರಂದು ಆ ಮಹಾತ್ಮರು ಇಹಲೇೂಕಕ್ಕೆ ವಿದಾಯ ಹೇಳಿದರು.

 ಕಣ್ಣೂರು ಜಿಲ್ಲೆಯ ಪಾನೂರು ಸಮೀಪದ ಚೊಕ್ಲಿ ಪೂಕೊಂ ವಲಿಯಾಂಡಿಪ್ಪಿಡಿಕ ಎಂಬ ಸ್ಥಳದಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಅಂದ್ರುಪ್ಪಾಪ (ರ)ರವರ ಮಕ್ಬರ ಪ್ರಮುಖ ಝಿಯಾರತ್ ಕೇಂದ್ರಗಳಲ್ಲೊಂದಾಗಿದೆ.
⚠⚠⚠⚠⚠⚠⚠⚠⚠

ಝಿಯಾರತ್ತ್ ಕೇಂದ್ರ 80 ಕೈಪ್ಪಮಂಗಲಂ ಕರೀಂ ಹಾಜಿ (ಖ:ಸಿ)

*ಝಿಯಾರತ್ತ್ ಕೇಂದ್ರ​​​*
👉🏻👉🏻 8⃣0⃣
🕌🕌🕌🕌🕌🕌🕌
* #ವಲಿಯುಲ್ಲಾಹಿ_ಅಬ್ದುಲ್ #ಕರೀಂ_ಹಾಜಿ (ಖ:ಸಿ), #ಕೈಪ್ಪಮಂಗಲಂ, #ಕೊಡುಂಗಲ್ಲೂರ್, #ತ್ರಿಶೂರ್.*
〰〰〰〰〰〰〰
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪

✍ ಗಫೂರ್ ಬಾಯಾರ್
**********************
ಸ್ವಹಾಬಾಗಳ ಮೂಲಕ ಭಾರತದಲ್ಲಿ ನೆಲೆಯೂರಿದ ಇಸ್ಲಾಮಿನ ಆಧ್ಯಾತ್ಮಿಕ ಪರಂಪರೆಯನ್ನು ಯಥಾಪ್ರಕಾರ ಉಳಿಸಿ ಬೆಳೆಸುವ ಸಲುವಾಗಿ ತಮ್ಮದೇ ಆದ ಕೊಡುಗೆಗಳನ್ನು ನೀಡಿ ಚಿರಸ್ಮರಣೀಯರಾದ ಮಹಾತ್ಮರು ಅನೇಕ.

ಅಂತಹ ಅಸಂಖ್ಯ ಮಹಾತ್ಮರ ಪೈಕಿ ಕೇರಳದ ಇಲ್ಲತ್‌ ಮನೆತನದ ಕೈಪಮಂಗಲಂ ಕರೀಂ ಹಾಜಿ (ಖ.ಸಿ) ಸಹ ಒಬ್ಬರು.

ಅಬ್ದುಲ್ ರಹ್ಮಾನ್ ಮುಸ್ಲಿಯಾರ್ (ಖ.ಸಿ) ಎಂಬ ವಿದ್ವಾಂಸರ ಪುತ್ರರಾದ ಕೈಪಮಂಗಲಂ ಕರೀಂ ಹಾಜಿ (ಖ.ಸಿ) ರವರು 1933ರಲ್ಲಿ ಕೊಡುಂಗಲೂರ್‌ ಸಮೀಪದ ಕೈಪಮಂಗಲಂನಲ್ಲಿ ಜನಿಸಿದರು.

ತಂದೆ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ (ಖ.ಸಿ)ರಿಂದ ಪ್ರಾಥಮಿಕ ಶಿಕ್ಷಣ ಪಡೆದು ತಮ್ಮ ಒಂಬತ್ತನೇ ವಯಸ್ಸಿನಲ್ಲಿ ಉಪರಿ ಪತನತ್ತಿನಾಯಿಯ ಪಳ್ಳಿ ದರ್ಸಿಗೆ ಸೇರಿದರು. ಅಲ್ಲಿನ ವ್ಯಾಸಂಗ ಮುಗಿದ ನಂತರ ಮುಹಮ್ಮದಲಿ ಮುಸ್ಲಿಯಾರ್ (ಖ:ಸಿ), ಏರಮಗಲಂ ಇಬ್ರಾಹಿಂ ಮುಸ್ಲಿಯಾರ್ (ಖ:ಸಿ), ಕಡಪ್ಪುರಂ ಮುಹಮ್ಮದಾಲಿ ಮುಸ್ಲಿಯಾರ್ (ಖ:ಸಿ) ಮುಂತಾದ
ಹಲವಾರು ಸೂಫಿವರ್ಯರಿಂದ ಜ್ಞಾನಾರ್ಜನೆ ಮಾಡಿದರಲ್ಲದೆ ಪೊನ್ನಾನಿಯ‌ ಹಿರಿಯ ಜಮಾಅತ್‌ ಮಸೀದಿಯಲ್ಲಿ ವಾಸ್ತವ್ಯ ಹೂಡಿ ಶೈಖ್ ವಲ್ಲಪ್ಪುಯ ಖಾಲಿದ್ ಮುಸ್ಲಿಯಾರ್ (ಖ.ಸಿ)ರಿಂದ ಉನ್ನತ ಗ್ರಂಥಗಳನ್ನು ಅಭ್ಯಸಿಸಿದರು.

ತಮ್ಮ 17ನೇ ವಯಸ್ಸಿನಲ್ಲಿ ತಿರುನಲ್ಲೂರಿನ ಶೈಖ್ ಸ‌ಈದ್‌ ಸಿರಾಜುದ್ದೀನ್ ರವರೊಂದಿಗೆ ಆತ್ಮೀಯತೆ ಬೆಳೆಸಿಕೊಂಡ ನಂತರ ಮಹಾನರ ಬದುಕು ಆಧ್ಯಾತ್ಮಿಕ ರಂಗದತ್ತ‌ ತಿರುಗಿ ಆಧ್ಯಾತ್ಮಿಕ ರಂಗದಲ್ಲಿ ಉನ್ನತ‌ ದರ್ಜೆಗೇರಿದ ಹಲವು ವಿದ್ವಾಂಸರಿಂದ ಅನುಗ್ರಹಗಳೊಂದಿಗೆ ತ್ವರಿಖತ್ತಿನ ಅನುಮತಿಯನ್ನೂ ಪಡೆದರು.

ಈ ನಡುವೆ ಪ್ರಮುಖ ಸೂಫಿವರ್ಯರಾದ ಕಣಿಯಾಪುರಂ ಅಬ್ದುರ್ರಝಾಕ್ ಮಸ್ತಾನ್ (ಖ.ಸಿ) ರನ್ನು ಭೇಟಿಯಾಗಿ ಅವರ ಉಪದೇಶ ಪಡೆದರು.

 ಅಬ್ದುರ್ರಝಾಕ್ ಮಸ್ತಾನ್ (ಖ.ಸಿ)ರವರಿಂದ ಉಪದೇಶ ಪಡೆದ ನಂತರ ಮಹಾನರ ಊರಿನ ಬದರ್ ಮಸೀದಿಯಲ್ಲಿ ಮೂವತ್ತಾರು ವರ್ಷಗಳ ಕಾಲ ನಯಾ ಪೈಸೆ ಸಂಬಳ ಪಡೆಯದೆ ಸೇವೆ ಸಲ್ಲಿಸಿದರು.

ತಮ್ಮ ತಾಯಿಯವರ ಸಲಹೆಯಂತೆ ಖುರ್ಆನ್ ಓದಲು ಕಲಿತಂದಿನಿಂದಲೂ  ಮುತ್ತು ನಬಿ ಸ್ವಲಾತ್ ರವರ ಹೆಸರಿನಲ್ಲೇ ಖುರ್ಆನ್ ಪಾರಾಯಣ ಮಾಡುತ್ತಿದ್ದರು.

ವಾಡಾನಪಳ್ಳಿಯ ಪಣಕವೀಟ್ಟಿಲ್ ಅಬ್ದುಲ್ಲತೀಫ್ ಮೊಲ್ಲ ಎಂಬುವವರ ಪುತ್ರಿಯಾದ ಖದೀಜರನ್ನು ವಿವಾಹವಾದರು.

ಮಹಾನರು ಅಲ್ಲಾಹನು ದಯಪಾಲಿಸಿದ ಅನುಗ್ರಹಗಳನ್ನು ನೆನೆದು ಸದಾ ಕಂಬನಿ ಮಿಡಿಯುತ್ತಿದ್ದರು.

ಖುರ್ಆನ್ ಪಾರಾಯಣ ಮಾಡುವಾಗ ಅತೀವ ಸಂತಸಭರಿತರಾಗುತ್ತಿದ್ದ ಮಹಾನರು ರಮಳಾನ್‌ನಲ್ಲಿ ಪ್ರತಿ ಮೂರು ದಿನಕ್ಕೊಮ್ಮೆ ಒಂದೊಂದು ಖತಂ ಓದಿ ಮುಗಿಸುತ್ತಿದ್ದರು.

ಇಲಾಹಿ ಸ್ಮರಣೆಯಲ್ಲಿ ತಲ್ಲೀನರಾಗಿರುತ್ತಿದ್ದ ಕರೀಂ ಹಾಜಿ (ಖ.ಸಿ)ರವರು ವಿಲಾಯತಿನ ಪದವಿಯಲ್ಲಿ ಜದ್‌ಬ್‌ನ ದರ್ಜೆಗೆ ತಲುಪಿದ್ದರು.

ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಕಾಣಬಹುದಾದ ಸ್ಥಿತಿಗೆ ಜದ್‌ಬ್‌ನ ದರ್ಜೆಗೆ ಎಂದು ಹೆಸರು. ಹಾಗೆ ಕೈಪಮಂಗಲಂ ಕರೀಂ ಹಾಜಿ (ಖ.ಸಿ)ರವರು ಸಹ ಒಂದೇ ಸಮಯದಲ್ಲಿ ಹಲವರಿಗೆ ಹಲವೆಡೆ ಕಾಣಸಿಕ್ಕಿರುವ ಉದಾಹರಣೆಗಳು ಧಾರಾಳವಿದೆ.

ಅಂತೆಯೇ ಯಾರಾದರೂ ಎಲ್ಲಿಗಾದರೂ ಆಹ್ವಾನಿಸಿದಾಗ ನೀವು ಹೋಗಿ ನಾನಲ್ಲಿರುತ್ತೇನೆ ಎನ್ನುತ್ತಿದ್ದ ಮಹಾನರು‌ ತಕ್ಕ ಸಮಯದಲ್ಲಿ ನಿಶ್ಚಿತ ಸ್ಥಳದಲ್ಲಿ ಹಾಜರಾಗಿರುತ್ತಿದ್ದರು.

ಸಿ. ಎಂ. ಮಡವೂರು  (ಖ.ಸಿ) ಮತ್ತು ಅಬ್ದುರ್ರಝಾಕ್‌ (ಖ.ಸಿ) ರ ನಡುವೆ ಉಂಟಾಗಿದ್ದ ಸಣ್ಣ ಭಿನ್ನಾಭಿಪ್ರಾಯವನ್ನು ಸರಿಪಡಿಸಲು ಕೈಪಮಂಗಲಂ ಕರೀಂ ಹಾಜಿ  (ಖ.ಸಿ)ರವರು ಮಧ್ಯಸ್ಥಿಕೆ ವಹಿಸಿರುವುದನ್ನು ಗಮನಿಸುವಾಗ ಸೂಫಿವರ್ಯರ ನಡುವೆ ಮಹಾನರ ಒಡನಾಟ ಎಷ್ಟು ಆತ್ಮೀಯತೆಯಿಂದ ಕೂಡಿತ್ತು ಎನ್ನುವುದು ಮನವರಿಕೆಯಾಗುತ್ತದೆ.

ಸಿ.ಎಂ ಮಡವೂರು  (ಖ.ಸಿ)ರವರು ವಫಾತಿನ ಸಮಯ ಸನ್ನಿಹಿತವಾದಾಗ ತಮ್ಮ ಶಿಷ್ಯರೊಬ್ಬರನ್ನು ಕರೀಂ ಹಾಜಿ  (ಖ.ಸಿ)ರವರ ಬಳಿ ಕಳುಹಿಸಿ ನಾನು ತಾಯಿಯ ಬಳಿ ಹೋಗುತ್ತೇನೆ ಪ್ರಾರ್ಥಿಸಬೇಕು ಎಂಬ ಕೋರಿಕೆಯನ್ನು ಮುಂದಿಟ್ಟಿದ್ದರು..!!

*ಒಮ್ಮೆ ಪೊನ್ನಾನಿಯಲ್ಲಿ ಶೈಖ್ ಝೈನುದ್ದೀನ್‌ ಮಖ್ದೂಮ್‌ (ರ) ರವರ ವಾರ್ಷಿಕದಲ್ಲಿ (ಆಂಡ್ ನೇರ್ಚೆ) ಪ್ರಭಾಷಣದಲ್ಲಿ ತಾಜುಲ್ ಉಲಮಾ (ಖ.ಸಿ)ರವರು ಇಷ್ಟು ಲವಲವಿಕೆಯಿಂದ ನಾನು ಎದ್ದು ನಡೆದಾಡಲು ಕರೀಂ ಹಾಜಿ (ಖ.ಸಿ)ರಂತಹ ಔಲಿಯಾಗಳ ದುಆದ ಬರ್ಕತ್‌ ಕಾರಣ ಎಂದಿದ್ದರು.*

ಕೇರಳದ ಬಹುತೇಕ ಕಡೆ ದ್ಸಿಕ್ರ್‌ ಮಜ್ಲಿಸ್‌ಗಳನ್ನು ಸಂಘಟಿಸಿ ಜನಸಾಮಾನ್ಯರಿಗೂ ಸಹ ಇಲಾಹಿ ಸ್ಮರಣೆಯ ದಾರಿ ತೇೂರಿದ ಕರೀಂ ಹಾಜಿ (ಖ.ಸಿ)ರವರು 1998ರ ಶಅಬಾನ್ 20ರಂದು ಇಹಲೇೂಕದಿಂದ ನಿರ್ಗಮಿಸಿದರು.

ಕರೀಂ ಹಾಜಿ (ಖ.ಸಿ)ರವರೇ ನಿರ್ಮಿಸಿದ್ದ ಮಸ್ಜಿದುಲ್ ಇಜಾಬ ಎಂಬ ಮಸೀದಿಯ ಮುಂಬಾಗದಲ್ಲಿ ಮಹಾನರು ಅಂತ್ಯವಿಶ್ರಮ ಪಡೆಯುತ್ತಿದ್ದಾರೆ.
🌐🌐🌐🌐🌐🌐🌐🌐🌐

ಝಿಯಾರತ್ತ್ 79 ವಲಿಯುಲ್ಲಾಹಿ ಕಲ್ಲಡಿ ಮಸ್ತಾನ್ (ಖ:ಸಿ)

*ಝಿಯಾರತ್ತ್ ಕೇಂದ್ರ​​​*
👉🏻👉🏻 7⃣9⃣
➖➖➖➖➖➖➖
*ಕಲ್ಲಡಿ ಮಸ್ತಾನ್ ವಲಿಯ್ಯುಲ್ಲಾಹಿ (ಖ:ಸಿ)*
*ಬಿಮಾಪಳ್ಳಿ ತಿರುವನಂತಪುರಂ*
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ _ಗಫೂರ್ ಬಾಯಾರ್_
**********************
ಕೇರಳದ ಹೆಸರಾಂತ ಝಿಯಾರತ್ ಕೇಂದ್ರಗಳಲ್ಲೊಂದಾದ ತಿರುವನಂತಪುರಂ ಸಮೀಪದ ಬಿಮಾ ಪಳ್ಳಿಯಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಸಯ್ಯಿದ್ ಶುಹದಾ ಮಾಹಿನ್ ಅಬೂಬಕರ್ (ರ)ರವರು ಶಹೀದಾದ ಸ್ಥಳದಲ್ಲಿರುವ (ಮರುನ್ನು ಕಿಣರ್) "ಔಷಧಿಯ ಬಾವಿ" ಸಮೀಪ ಕಲ್ಲಡಿ ಮಸ್ತಾನ್ ಉಪ್ಪಾಪ (ರ)ಎಂಬ ಮಹಾನರು ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.

ಮೂಲತಃ ತಮಿಳುನಾಡಿನವರಾದ ಮಸ್ತಾನ್ ಉಪ್ಪಾಪ (ರ)ರವರು ಇಂದಿನಂತೆ ಯಾತ್ರಾ ಸೌಕರ್ಯವಿಲ್ಲದ ಆ ಕಾಲದಲ್ಲಿ ಬಿಮಾಪಳ್ಳಿಯ ಝಿಯಾರತ್ ನಿಮಿತ್ತ ಹಳ್ಳ ಕೊಳ್ಳಗಳನ್ನು ದಾಟಿ ಬೆಟ್ಟ ಗುಡ್ಡಗಳ ದುರ್ಗಮ ಹಾದಿಯಲ್ಲಿ ಬಿಮಾ ಪಳ್ಳಿಗೆ ತಲುಪಿದರು.

ಹಾಗೆ ಬಿಮಾ ಪಳ್ಳಿಗೆ ತಲುಪಿದ ಮಸ್ತಾನ್ ಉಪ್ಪಾಪ (ರ) ರವರಿಗೆ ಬಿಮಾ ಪಳ್ಳಿಯಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಸಯ್ಯಿದ್ ಶುಹದಾ ಮಾಹಿನ್ ಅಬೂಬಕರ್ (ರ) ರವರು ಕನಸಿನಲ್ಲಿ ನೀಡಿದ ಸಲಹೆಯ ಮೇರೆಗೆ ಬಿಮಾ ಪಳ್ಳಿಯಲ್ಲೇ ವಾಸ್ತವ್ಯ ಹೂಡಿದರು.

ಸದಾ ಇಲಾಹಿ ಸ್ಮರಣೆಯಲ್ಲಿ ತಲ್ಲೀನರಾಗಿರುತ್ತಿದ್ದ ಮಸ್ತಾನ್ ಉಪ್ಪಾಪ (ರ)ರವರು ಇಹಲೇೂಕದ ಪರಿವಿಲ್ಲದ "ಮಜ್‌ದೂಬಾ" ಆಗಿದ್ದರು. (ಅನ್ನಾಹಾರ, ವಸ್ತ್ರ, ಕಾಲ, ಸ್ಥಳ ಇದ್ಯಾವುದರ ಪರಿವೂ ಇಲ್ಲದೆ ಸಂಪೂರ್ಣವಾಗಿ ಅಲ್ಲಾಹನ ಸ್ಮರಣೆಯಲ್ಲಿ ತೊಡಗಿಸಿಕೊಳ್ಳುವ ಸ್ಥಿತಿಗೆ ಮಜ್‌ದೂಬಾ ಎನ್ನುತ್ತಾರೆ. ಕಾರಣ ಅಂಥವರು ನೋಡುವವರ ಕಣ್ಣಿಗೆ ಮಾನಸಿಕ ಸ್ಥಿಮಿತ ಕಳೆದು ಕೊಂಡವರಂತೆ ಕಾಣಬಹುದು)

ಹಾಗೆ ಐಹಿಕ ಲೇೂಕದ ಪರಿವಿಲ್ಲದೆ ಸದಾ ಇಲಾಹಿ ಸ್ಮರಣೆಯಲ್ಲಿ ತಲ್ಲೀನರಾಗಿರುತ್ತಿದ್ದ ಮಹಾನರನ್ನು ಕಂಡ ಹಲವರು ಅವರನ್ನು ಮಾನಸಿಕ ಅಸ್ವಸ್ಥರಾಗಿರಬಹುದೆಂದು ಭಾವಿಸಿದ್ದರು. ಮಾತ್ರವಲ್ಲ ಕೆಲವರು ಕೀಟಲೆಯನ್ನೂ ಮಾಡುತ್ತಿದ್ದರು. ಆದರೆ ಇಲಾಹಿ ಸ್ಮರಣೆಯನ್ನೇ ಉಸಿರಾಗಿಸಿಕೊಂಡಿದ್ದ ಮಹಾನರು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

ಮಹಾನರು ಒಮ್ಮೆ ವಲಿಯುಲ್ಲಾಹಿ ಕಣಿಯಾಪುರಂ ಅಬ್ದುರ್ರಝಾಕ್ (ರ) ರವರ ಮಹತ್ವವನ್ನು ವಿವರಿಸಿದರು. ಕಣಿಯಾಪುರಂ ಅಬ್ದುರ್ರಝಾಕ್ (ರ)ರವರ ಮಹತ್ವದ ಬಗ್ಗೆ ಅಲ್ಪ ಸ್ವಲ್ಪ ಅರಿತಿದ್ದ ಜನಸಾಮಾನ್ಯರಿಗೆ ಈ ವಿವರಣೆಯ ನಂತರ ಮಸ್ತಾನ್ ಉಪ್ಪಾಪ (ರ) ರವರು ವಿಲಾಯತ್ತಿನ ಪದವಿಗೇರಿದ ಸಾತ್ವಿಕರಾಗಿದ್ದಾರೆಂಬುದು ಜನತೆಗೆ ಮನವರಿಕೆಯಾಯಿತು.

ಅನಂತರ ಮಹಾನರನ್ನು ಜನ ಜಾತಿ ಮತ ಭೇದವಿಲ್ಲದೆ ತುಂಬು ಗೌರವದಿಂದ ಆಧರಿಸಲಾರಂಭಿಸಿದರು. ಹಾಗೂ ತಮ್ಮ ಕಷ್ಟ-ಕಾರ್ಪಣ್ಯ, ನೇೂವು ಮತ್ತು ಸಂಕಟಗಳಿಗೆ ಮಹಾನರ ಬಳಿ ಆಗಮಿಸಲಾರಂಭಿಸಿದರು.

ವಿಲಾಯತ್ತಿನ ಉನ್ನತ ಪದವಿಗೇರಿದ್ದ ಮಹಾನರು ಹಲವಾರು ಕರಾಮತ್ತುಗಳನ್ನು ಕಾಣಿಸಿದ್ದಾರೆ.

ಮಹಾನರ ಬರ್ಕತ್'ನಿಂದ ಅಲ್ಲಾಹನು ನಮ್ಮೆಲ್ಲರಿಗೂ ಆಫಿಯತ್ ನಿಂದೊಡಗೂಡಿದ ದೀರ್ಘಾಯಸ್ಸನ್ನು ಕರುಣಿಸಿ ಅನುಗ್ರಹಿಸಲಿ ಆಮೀನ್.
🆘🆘🆘🆘🆘🆘🆘

ಝಿಯಾರತ್ತ್ ಕೇಂದ್ರ 78/02 ಬಿಮಾಪಳ್ಳಿ ಮಖಾಂ ಶರೀಫ್

*ಝಿಯಾರತ್ತ್ ಕೇಂದ್ರ​​​*
👉🏻👉🏻 7⃣8⃣
ಭಾಗ=== 02
➖➖➖➖➖➖➖
*#ಬಿಮಾಪಳ್ಳಿ #ಮಖಾಂ #ಶರೀಫ್, #ಪೂಂತ್ತುರ #ತಿರುವನಂತಪುರಂ*
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪

✍ ಗಫೂರ್ ಬಾಯಾರ್
**********************
*ಮುಂದುವರಿದ ಭಾಗ*

ಪತಿ ಅಬ್ದುಲ್ ಗಫಾರಿ (ರ‌)ರವರ ಮರಣಾನಂತರ ಬಿಮಾ ಬೀವಿ(ರ) ರವರು ಪುತ್ರ ಸಯ್ಯಿದ್ ಮಾಹಿನ್‌ ಅಬೂಬಕರ್ (ರ‌) ರೊಂದಿಗೆ ತಮಿಳುನಾಡಿನಿಂದ ಕೇರಳಕ್ಕೆ ವಲಸೆ ಹೋಗಿ ದೀನೀ ದ‌ಅ್‌ವಾ ನಡೆಸಲಾರಂಭಿಸಿದರು.

ಅಸ್ಪ್ರಶ್ಯತೆಯಂತಹ ಅನಾಚಾರಗಳಿಂದ ಕಂಗೆಟಿದ್ದ ಜನತೆಗೆ ಈ ಮಹಾತ್ಮರ ಪ್ರಬೋಧನೆ ಮತ್ತು ಪ್ರತಿಫಲಾಪೇಕ್ಷೆಯಿಲ್ಲದ ನಿಸ್ವಾರ್ಥ ಸೇವೆಯಿಂದ ಸಾಂತ್ವಾನ ಲಭಿಸಲಾರಂಭಿಸಿದ್ದಷ್ಟೇ ಅಲ್ಲದೆ ಇಸ್ಲಾಮ್ ಎಂಬುದು ಸೃಷ್ಟಿಕರ್ತನಾದ ಅಲ್ಲಾಹನ ದೀನ್ ಎಂಬುದು ಸ್ಪಷ್ಪವಾಗಿ ಮನವರಿಕೆಯಾಯಿತು  ಹಾಗಾಗಿ ಹಲವರು ಇಸ್ಲಾಂ ಸ್ವೀಕರಿಸಿದರು.

ಅನಂತರ ದಿನದಿಂದ ದಿನಕ್ಕೆ ಇಸ್ಲಾಮ್ ಸ್ವೀಕರಿಸುವವರ ಸಂಖ್ಯೆ ಹೆಚ್ಚಿದಾಗ ಹಲವರಿಗೆ ಇದು ಪತ್ಯವಾಗಲಿಲ್ಲ. ಅಂಥವರು ಅಸೂಯೆಯಿಂದ ಒಳಗೊಳಗೆ ಕುದಿಯುತ್ತಿದ್ದರು.

ಕಾಲಕ್ರಮೇಣ ಆ ಅಸೂಯೆಯು ದ್ವೇಷವಾಗಿ ಬದಲಾಯಿತಲ್ಲದೆ ಬೀವಿ ಮತ್ತು ಅವರ ಮಗನನ್ನು ಅರೇಬಿಕ್ ಗೂಢಚರ್ಯರೆಂದು ಆರೋಪಿಸುವುದರ ಜೊತೆಗೆ ರಾಜನಿಧಿಗೆ ಕಪ್ಪ (ತೆರಿಗೆ) ನೀಡುತ್ತಿಲ್ಲವೆಂದು ಆಳರಸನಾದ ಮಾರ್ತಾಂಡ ವರ್ಮನಲ್ಲಿ ಆರೋಪಿಸಿದರು.

ಕುತಂತ್ರಿಗಳ ಈ ಕುಟಿಲತೆಯನ್ನು ಸತ್ಯವೆಂದು ಭಾವಿಸಿದ ರಾಜ ಮಾರ್ತಾಂಡ ವರ್ಮನು ಸಯ್ಯಿದತ್ ಬಿಮಾ ಬೀವಿ (ರ) ಮತ್ತು ಅವರ ಪುತ್ರನನ್ನು ಬಂಧಿಸಲು ಆಜ್ಞಾಪಿಸಿದನು.

ಮಾರ್ತಾಂಡ ವರ್ಮನ ಸೈನಿಕರು ಬೀವಿಯವರ ಮನೆಗೆ ತೆರಳಿ ವಿಷಯ ತಿಳಿಸಿದಾಗ ಮಹದಿಯವರು, ತಮ್ಮ ಪುತ್ರ ಹಜ್ ನಿರ್ವಹಿಸಲು ಮಕ್ಕಾಕ್ಕೆ ತೆರಳಿರುವುದರಿಂದ ಅವರು ಹಿಂದಿರುಗುವ ತನಕ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದ ಕಾರಣ ಸೈನಿಕರು ಹಿಂದಿರುಗಿದರು.

ಇತ್ತ ಹಜ್ ಯಾತ್ರೆಗೆ ತೆರಳಿದ್ದ ಸಯ್ಯಿದ್ ಮಾಹಿನ್ ಅಬೂಬಕರ್ (ರ) ರವರು ಮೊದಲಿಗೆ ಹಜ್ಜ್ ನಿರ್ವಹಿಸಿ ತಮ್ಮ ಪಿತಾಮಹರಾದ ಸಯ್ಯದುನಾ ಮುತ್ತು ಮುಹಮ್ಮದ್ ಮುಸ್ತಫಾ   ﷺِ ಮರ ರೌಳ ಸಂದರ್ಶನಕ್ಕಾಗಿ ಮದೀನಾಕ್ಕೆ ತೆರಳಿ ಝಿಯಾರತ್‌ನ ನಂತರ ಅಂದು ರಾತ್ರಿ ಮಸ್ಜಿದುನ್ನಬವಿಯಲ್ಲೇ ಮಲಗಿದ್ದರು.

*ಮದೀನಾದ ಮಸ್ಜಿದುನ್ನಬವಿಯಲ್ಲಿ ಮಲಗಿದ್ದ ಸಯ್ಯಿದ್ ಮಾಹಿನ್ ಅಬೂಬಕರ್ (ರ)ರವರನ್ನು ಅಂದು ರಾತ್ರಿ ಕನಸಿನಲ್ಲಿ ಸಂದರ್ಶಿಸಿದ ಮುತ್ತು ಮುಹಮ್ಮದ್ ಮುಸ್ತಫಾ ﷺِ ಆದಷ್ಟು ಬೇಗನೆ ಹಜ್ಜ್ ನಿರ್ವಹಿಸಿ ಕೇರಳಕ್ಕೆ ಹಿಂದಿರುಗಬೇಕೆಂದೂ ಅಲ್ಲಿ ಶಹಾದತ್ ಎಂಬ ಪದವಿಯು ತಮಗಾಗಿ ನಿರೀಕ್ಷಿಸುತ್ತಿದೆ ಎಂಬ ಸಂದೇಶ ನೀಡಿದರು.*

ಮುತ್ತು ನಬಿ ﷺِ ಯವರು ನೀಡಿದ ಸಂದೇಶದಿಂದ ಆನಂದತುಂದಿಲರಾದ ಸಯ್ಯಿದ್ ಮಾಹಿನ್ ಅಬೂಬಕರ್ (ರ) ಮರುದಿನವೇ ಹಜ್ಜ್ ನಿರ್ವಹಿಸಿ ಕೇರಳಕ್ಕೆ ಹಿಂದಿರುಗಿದರು.

ಸಯ್ಯಿದ್‌ ಮಾಹಿನ್ ಅಬೂಬಕರ್ (ರ) ರವರು ಮಕ್ಕಾದಿಂದ ಹಿಂದಿರುಗಿದ ವಿಷಯ ತಿಳಿದೊಡನೆ ಶತ್ರುಗಳು ಮಹಾನರ ಮೇಲೆ ಮುಗಿಬಿದ್ದರು.

ತಮ್ಮ ಮೇಲೆ ಮುಗಿಬಿದ್ದ ಶತ್ರುಗಳೊಂದಿಗೆ ವೀರಾವೇಶದಿಂದ ಹೋರಾಡಿದ ಆ ಮಹಾನರು ಅಲ್ಲಾಹನ ವಿಧಿಲಿಖಿತದಂತೆ ಕೊನೆಗೆ ಹುತಾತ್ಮರಾಗುವುದರೊಂದಿಗೆ ಸೃಷ್ಟಿಕರ್ತನಾದ ಅಲ್ಲಾಹನ ರಹ್ಮತ್ತಿಗೆ ಯಾತ್ರೆಯಾದರು.

ಪುತ್ರ ಶಹೀದಾದನಂತರ ಮಾನಸಿಕವಾಗಿ ಕುಗ್ಗಿ ಹೋದ ಮಾಹಿನ್ ಅಬೂಬಕರ್ (ರ)ರವರ ತಾಯಿ ಮಹದಿ ಸಯ್ಯಿದತ್ ಬಿಮಾ ಬೀವಿ (ರ)ರವರೂ ಸಹ ಅಲ್ಪಕಾಲದಲ್ಲೇ ಇಹಲೋಕಕ್ಕೆ ವಿದಾಯ ಹೇಳಿದರು.

ಮಹದಿ ಸಯ್ಯಿದತ್ ಬಿಮಾ ಬೀವಿ (ರ) ಮತ್ತು ಸಯ್ಯಿದ್ ಮಾಹಿನ್ ಅಬೂಬಕರ್ (ರ) ಅಂತ್ಯವಿಶ್ರಮ ಪಡೆಯುತ್ತಿರುವ ಬಿಮಾಪಳ್ಳಿಯು  ಹಲವಾರು ಕಶ್ಫ್ ಕರಾಮತ್ತುಗಳ ಮೂಲಕ ದಕ್ಷಿಣ ಭಾರತದಲ್ಲೇ ಹೆಸರಾಂತ ಝಿಯಾರತ್ ಕೇಂದ್ರಗಳಲ್ಲಿ ಒಂದಾಗಿದೆ.

*ಸಯ್ಯಿದ್ ಮಾಹಿನ್ ಅಬೂಬಕರ್ (ರ)ರವರು ಶಹೀದಾದ ಸ್ಥಳದಲ್ಲೊಂದು ಬಾವಿ ಇದ್ದು ಆ ಬಾವಿಯ ನೀರನ್ನು ಕುಡಿಯುವುದರಿಂದ ಹಾಗೂ ಅದರಲ್ಲಿ ಸ್ನಾನ ಮಾಡುವುದರಿಂದ ಹಲವು ರೋಗಗಳಿಗೆ ಶಮನ ಲಭಿಸಿದೆ. ಹಾಗಾಗಿ ಈ ಬಾವಿಯು (ಮರುನ್ನು ಕಿಣರ್) "ಔಷಧಿಯ ಬಾವಿ" ಎಂದೇ ಅರಿಯಲ್ಪಡುತ್ತದೆ.*

ಬಿಮಾಪಳ್ಳಿಯಲ್ಲಿ ಪ್ರತಿವರ್ಷ ಜಮಾದಿಲ್ ಆಖಿರ್ ಒಂದರಿಂದ ಹತ್ತಿರ ತನಕ ಉರೂಸ್ ನಡೆಯುತ್ತದೆ.

_ದಾರಿ: ಬಿಮಾಪಳ್ಳಿಯು ಕೇರಳದ ರಾಜಧಾನಿಯಾದ ತಿರುವನಂತಪುರಂ ನಗರದಿಂದ ಎಂಟು ಕಿಲೋಮೀಟರ್ ದೂರದಲ್ಲಿದೆ._

*ಮುಗಿಯಿತು*
♻♻♻♻♻♻♻♻



ಝಿಯಾರತ್ತ್ ಕೇಂದ್ರ 78/01 ಭೀಮಾಪಳ್ಳಿ ಮಖಾಂ ಶರೀಫ್

*ಝಿಯಾರತ್ತ್ ಕೇಂದ್ರ​​​*
👉🏻👉🏻 7⃣8⃣
ಭಾಗ == 01
➖➖➖➖➖➖➖
*ಬಿಮಾಪಳ್ಳಿ ಮಖಾಂ ಶರೀಫ್ ಪೂಂತ್ತುರ*
*ತಿರುವನಂತಪುರಂ*
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪

✍ _ಗಫೂರ್ ಬಾಯಾರ್_
**********************
ಶಹೀದ್ ಅಥವಾ ಶುಹದಾ (ಹುತಾತ್ಮ) ಎಂಬ ಪದವಿಗೆ ಅಲ್ಲಾಹನ ಬಳಿ ಅಪರಿಮಿತವಾದ ಮಹತ್ವವಿದೆ. ಎಲ್ಲರಿಗೂ ಈ ಪದವಿ ಲಭಿಸಲಾರದಾದರೂ ಮಹತ್ವಪೂರ್ಣವಾದ ಆ ಪದವಿಗೆ ಭಾಜನರಾದ ಶುಹದಾಗಳಿಗೆ ಅಲ್ಲಾಹನಿಂದ ಲಭಿಸುವ ಸೌಭಾಗ್ಯ‌ಗಳಿಗೆ ಮಿತಿಯೆಂಬುದೇ ಇಲ್ಲ.

ಸೃಷ್ಟಿಕರ್ತನಾದ ಅಲ್ಲಾಹನ ಔದಾರ್ಯ ಲಭಿಸಿದವರ ಹೊರತು ಎಲ್ಲರಿಗೂ ಶಹೀದಾಗುವ ಭಾಗ್ಯ ಲಭಿಸಲಾರದಾದರೂ ಅಲ್ಲಾಹನ ತೃಪ್ತಿಯೊಂದಿಗೆ ಶಹೀದಾಗಲು ಅಥವಾ ಶಹೀದ್‌ನ ಪ್ರತಿಫಲವನ್ನು ಅಲ್ಲಾಹನಿಂದ ಪಡೆಯಲು ಹಾತೊರೆಯದ ಮುಅ್‌ಮಿನ್‌ಗಳೇ ಇರಲಾರರು. ಆದರೆ ಅಲ್ಲಾಹನ ಪ್ರಪ್ರಥಮ ಸೃಷ್ಟಿಯೂ, ಅಂತ್ಯ ಪ್ರವಾದಿಯೂ, ಅಂಬಿಯಾಗಳ ನೇತಾರರೂ, ವಿಶ್ವ ಪ್ರವಾದಿಯೂ, ವಿಶ್ವಾಸಿ ಹೃದಯದ ಉಜ್ವಲ ತಾರೆಯೂ ಆದ ಸಯ್ಯದುನಾ ಮುತ್ತು ಮುಹಮ್ಮದ್ ಮುಸ್ತಫಾ ﷺِ ರಿಂದ ಒಬ್ಬ ವ್ಯಕ್ತಿಗೆ "ಶಹಾದತ್ ಪದವಿ ನಿಮ್ಮನ್ನು ನಿರೀಕ್ಷಿಸುತ್ತಿದೆ" ಎಂಬ ಸಂದೇಶ ಲಭಿಸಿದರೆ ಆ ವ್ಯಕ್ತಿಯ ಸೌಭಾಗ್ಯಕ್ಕೆ ಎಣೆಯುಂಟೇ...?

ಸುಮಾರು ಐದು ಶತಮಾನಗಳ ಹಿಂದೆ ಅಲ್ಲಾಹನ ಹಬೀಬರಾದ ಸಯ್ಯದುನಾ ಮುತ್ತು ಮುಹಮ್ಮದ್ ಮುಸ್ತಫಾ ﷺِ ರವರ ಸಲಹೆಯ ಮೇರೆಗೆ ಸಯ್ಯಿದ್ ಅಬ್ದುಲ್ ಗಫಾರಿ (ರ)ರವರು ಪತ್ನಿ ಸಯ್ಯಿದತ್ ಬಿಮಾ ಬೀವಿ (ರ.ಅ) ಹಾಗೂ ಪುತ್ರ ಸಯ್ಯಿದ್ ಮಾಹಿನ್ ಅಬೂಬಕರ್ (ರ.ಅ)ರೊಂದಿಗೆ ಅರೇಬಿಯಾದಿಂದ ಹೊರಟು ತಮಿಳುನಾಡಿಗೆ ಆಗಮಿಸಿ ದೀನೀ ಪ್ರಬೋಧನೆ ನಡೆಸಲಾರಂಭಿಸಿದರು.

ತಮಿಳುನಾಡಿನ ತಿರುವೆಲ್ಲ ಎಂಬಲ್ಲಿ ವಾಸಿಸುತ್ತಾ ದೀನೀ ದ‌ಅ್‌ವಾ ನಡೆಸುತ್ತಿದ್ದ ಸಯ್ಯಿದ್ ಅಬ್ದುಲ್ ಗಫಾರಿ (ರ) ರವರ ವಿಯೋಗಾ ನಂತರ ಅವರ ಪತ್ನಿಯಾದ ಮಹದಿ ಬಿಮಾ ಬೀವಿ (ರ‌)ರವರು ತಮಿಳುನಾಡಿನಿಂದ ಕೇರಳದ ಈಗಿನ ತಿರುವನಂತಪುರಂ ಜಿಲ್ಲೆಗೆ ವಾಸ ಬದಲಿಸಿದರು. (ಕ್ರಿಸ್ತಶಕ 1478-1528. ಕೇರಳವನ್ನು ರಾಜ ಮಾರ್ತಾಂಡ ವರ್ಮ ಆಳುತ್ತಿದ್ದ ಕಾಲ)

ಅದಾಗಲೇ ವಿಲಾಯತಿನ ಪದವಿಗೇರಿದ್ದ ಆ ಮಹದಿ ಬಿಮಾ ಬೀವಿ (ರ) ಮತ್ತು ಪುತ್ರ ಮಾಹಿನ್ ಅಬೂಬಕರ್ (ರ) ರವರು ಇಖ್ಲಾಸ್ ಮತ್ತು ತಖ್ವಾದಿಂದ ಕಳಂಕರಹಿತವಾದ ಜೀವನ ನಡೆಸುತ್ತಾ ಅಲ್ಲಾಹನು ದಯಪಾಲಿಸಿದ ಕರಾಮತ್‌ಗಳ ಮೂಲಕ ಪ್ರತಿಫಲಾಪೇಕ್ಷೆಯಿಲ್ಲದೆ ಕೇರಳದಲ್ಲಿ ಸಮಾಜಸೇವೆ ಮಾಡುತ್ತಾ ದೀನೀ ಪ್ರಬೋಧನೆ ನಡೆಸಲಾರಂಭಿಸಿದರು.

ಮಹದಿ ಮತ್ತು ಅವರ ಪುತ್ರರ ಪ್ರಾರ್ಥನೆಯ ಮಹತ್ವದ ಅರಿವಾದ ನಂತರ ಜನಸಾಮಾನ್ಯರು ತಮ್ಮ ಕಷ್ಟ ಕಾರ್ಪಣ್ಯಗಳ ಪರಿಹಾರಕ್ಕಾಗಿ ಜಾತಿ ಮತ ಭೇದವಿಲ್ಲದೆ ಸಂದರ್ಶಿಸುತ್ತಿದ್ದುದಷ್ಟೇ ಅಲ್ಲದೆ ಅವರ ಪ್ರಬೋಧನೆಯಿಂದ ಜನತೆಗೆ ಇಸ್ಲಾಮಿನ ತತ್ವ ಮತ್ತು ಆದರ್ಶಗಳ ಅರಿವಾಗತೊಡಗಿತು.

*ಮುಂದುವರಿಯುವುದು*
💢💢💢💢💢💢💢

ಝಿಯಾರತ್ತ್ ಕೇಂದ್ರ 77 ಸಯ್ಯಿದ್ ಮಹಮೂದ್ (ರ) ಬಾಲರಾಮಪುರಂ

*ಝಿಯಾರತ್ತ್ ಕೇಂದ್ರ​​​*
👉🏻👉🏻 7⃣7⃣
➖➖➖➖➖➖➖
*ಸಯ್ಯಿದ್ ಮಹ್ಮೂದ್ ವಲಿಯುಲ್ಲಾಹಿ (ರ) ವಯಿಮುಕ್, ಬಾಲರಾಮಪುರಂ. ತಿರುವನಂತಪುರಂ.*

**********************
*​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​*
☪☪☪☪☪☪☪

✍ ಗಫೂರ್ ಬಾಯಾರ್
〰〰〰〰〰〰〰
ಅಂತ್ಯ ಪ್ರವಾದಿ ಸಯ್ಯದುನಾ ಮುತ್ತು ಮುಹಮ್ಮದ್ ‌ಮುಸ್ತಫಾ‌ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಅನುಯಾಯಿಗಳಾದ ಸ್ವಹಾಬಿವರ್ಯರು ವಿಶ್ವದಾದ್ಯಂತ ತೆರಳಿ ಅಲ್ಲಾಹನ ದೀನಿನ ಪ್ರಚಾರ ನಡೆಸಿದರು.

ಸ್ವಹಾಬಾಗಳ ನಂತರ ಅವರ ಉತ್ತರಾಧಿಕಾರಿಗಳಾದ ತಾಬಿಉಗಳು ದೀನೀ ಪ್ರಚಾರ ಕಾರ್ಯವನ್ನು ಕೈಗೆತ್ತಿಕೊಂಡರು. ಅನಂತರ ತಬ‌ಉತ್ತಾಬಿಊಗಳು ಅನಂತರ ಔಲಿಯಾಗಳು ಹೀಗೆ ದೀನೀ ಪ್ರಚಾರದ ಶೃಂಖಲೆ ಮುಂದುವರಿದಿರುವ ವಿಷಯ ನಮ್ಮೆಲ್ಲರಿಗೂ ತಿಳಿದ ಸಂಗತಿ.

ಹಾಗೆ ಅಲ್ಲಾಹನ ದೀನಿನ ಪ್ರಚಾರಾರ್ಥ ಯಾತ್ರಾ ಸಂಘದೊಂದಿಗೆ ಕೇರಳದ ಹಳೆಯ ತಿರುವಾಂಕೂರ್ (ಈಗಿನ ತಿರುವನಂತಪುರಂ)ಗೆ ಆಗಮಿಸಿದ ಮಹಾನರಾಗಿದ್ದಾರೆ ಸಯ್ಯಿದ್ ಮಹ್ಮೂದ್ ವಲಿಯುಲ್ಲಾಹಿ (ರ).

ಹಾಗೆ ಆಗಮಿಸಿದ ಮಹಾನರು ದೀನೀ ಪ್ರಬೋಧನೆಯ ಮೂಲಕ ಧಾರ್ಮಿಕವಾಗಿ ತಿಳಿವಳಿಕೆಲ್ಲದ ತಿರುವಾಂಕೂರಿನ ಜನತೆಗೆ ದೀನೀ ಪ್ರಭೋಧನೆ ನಡೆಸುತ್ತಾ ಬದುಕಿನ ಜಂಜಾಟದಲ್ಲಿ ನೊಂದ ಜನತೆಗೆ ಸಾಂತ್ವನ ನೀಡುವ ಆಧ್ಯಾತ್ಮಿಕತೆಯ ಅಭಯ ಕೇಂದ್ರವಾಗಿದ್ದರು.

ಜೀವಿತ ಕಾಲದಲ್ಲಿ ಹಳೆಯ ತಿರುವಾಂಕೂರಿನ ಜನತೆಯನ್ನು ಆಧ್ಯಾತ್ಮಿಕತೆಯ ಕಂಪಿನೊಂದಿಗೆ ಮುನ್ನಡೆಸಿದ್ದ ಸಯ್ಯಿದ್ ಮಹ್ಮೂದ್ ವಲಿಯುಲ್ಲಾಹಿ (ರ) ರವರ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲವಾದರೂ ವಫಾತಿನ ನಂತರವೂ ಕರಾಮತ್‌ಗಳ ಮೂಲಕ ನೊಂದ ಜನತೆಯ ಕಷ್ಟ ಕಾರ್ಪಣ್ಯಗಳಿಗೆ ಅಭಯಹಸ್ತ ಚಾಚುವ ಆಶಾಕಿರಣವಾಗಿದ್ದಾರೆ.

ಹಳೆಯ ತಿರುವಾಂಕೂರಿನಲ್ಲಿ ಆಲದ ಮರವೊಂದರ ಬುಡದಲ್ಲಿ ವಿಶಾಲವಾದ ಕೊಠಡಿಯಂತೆ ಆವೃತವಾದ ಪೊಟರೆಯೊಳಗೆ ಮಹಾನರ ಮಖ್ಬರವಿದ್ದು, ಸಂತಾನ ಭಾಗ್ಯ ಲಭಿಸದ ಅನೇಕರು ಸಯ್ಯಿದರ ಮಖಾಮಿಗೆ ಆಗಮಿಸಿ ಝಿಯಾರತ್ ಮಾಡಿದ ನಂತರ ಸಂತಾನ ಸೌಭಾಗ್ಯ ಲಭಿಸಿದೆಯೆನ್ನುತ್ತಾರೆ ಹಳೆಯ ತಿರುವಾಂಕೂರಿನ ಜನತೆ. ಮಾತ್ರವಲ್ಲ ಆಧ್ಯಾತ್ಮಿಕ ಅನುಭೂತಿ ನೀಡುವ ಸಯ್ಯಿದರ ಮಖಾಮಿಗೆ ದಿನನಿತ್ಯ ನೂರಾರು ಜನ ಆಗಮಿಸಿ ಝಿಯಾರತ್ ನಡೆಸುವ ದೃಶ್ಯ ಮನಮೋಹಕವಾದದ್ದು.

ಸಯ್ಯಿದ್ ಮಹ್ಮೂದ್ ವಲಿಯುಲ್ಲಾಹಿ (ರ) ರವರು ಹಳೆಯ ತಿರುವಾಂಕೂರಿಗೆ ಆಗಮಿಸಿದ ಯಾತ್ರಾ ಸಂಘದಲ್ಲಿದ್ದ ಮಹಾನರ ಶಿಷ್ಯರೊಬ್ಬರ ಮಖ್ಬರವು ಸಯ್ಯಿದ್ ಮಹ್ಮೂದ್ ವಲಿಯುಲ್ಲಾಹಿ (ರ)ರವರ ಮಖಾಮಿನ‌ ಮುಂಬಾಗದಲ್ಲಿದೆ.

ಪ್ರತಿ ವರ್ಷ ರಬೀವುಲ್ ಆಖಿರ್ ಹತ್ತರಿಂದ ಹನ್ನೆರಡರ ತನಕ ಇಲ್ಲಿ ಉರೂಸ್ ನಡೆಯುತ್ತದೆ.

*ಸೃಷ್ಟಿಕರ್ತನಾದ ಅಲ್ಲಾಹನು ಮಹಾನರ ಹಕ್ಕ್‌ಜಾಹ್ ಬರಕತ್‌ನಿಂದ ನಮ್ಮೆಲ್ಲರನ್ನೂ ಇಹಪರ ವಿಜಯಿಗಳ ಸಾಲಿನಲ್ಲಿ ಸೇರಿಸಲಿ ಆಮೀನ್.*

ದಾರಿ:
ತಿರುವನಂತಪುರದಿಂದ ಕನ್ಯಾಕುಮಾರಿಗೆ ಹೋಗುವ ಹೈವೇಯ ಪಕ್ಕದಲ್ಲಿ ಬಾಲರಾಮಪುರಂ ಎಂಬ ಸ್ಥಳದಲ್ಲಿ ನೆಲೆಗೊಂಡಿದೆ.
〰〰〰〰〰〰〰〰



ಝಿಯಾರತ್ತ್ ಕೇಂದ್ರ 76 ತಂಗಳ್ ಜಾರಂ ವೆಳಿಯಂಗೂಡ್

*ಝಿಯಾರತ್ತ್ ಕೇಂದ್ರ​​​*
👉🏻👉🏻 7⃣6⃣
➖➖➖➖➖➖➖
*ತಂಙಳ್ ಜಾರಂ ವೆಳಿಯಂಗೊಡ್*
*ಮಲಪ್ಪುರಂ*
*********************
*​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​*
☪☪☪☪☪☪☪

✍ ಗಫೂರ್ ಬಾಯಾರ್
**********************

ಇಹಲೋಕದಲ್ಲಿ ಸರಿಸಾಟಿಯಿಲ್ಲದ ಕುಟುಂಬವಾದ ಅಹ್ಲ್‌ಬೈತ್ ಕುಟುಂಬದ ಹಲವು ಸಯ್ಯಿದರು ಯಮಾನಿನ ಹಲರ್ ಮೌತ್‌ನಿಂದ ಭಾರತಕ್ಕೆ ಆಗಮಿಸಿ ದೀನೀ ದಅ್‌ವಾ ನಡೆಸಿದ್ದಲ್ಲದೆ ಭಾರತದ ಮಣ್ಣಿನಲ್ಲೇ ಚಿರವಿಶ್ರಾಂತಿ ಪಡೆಯುತ್ತಾ ತಮ್ಮ ಕಶ್ಫ್ ಕರಾಮತ್‌ಗಳ ಮೂಲಕ ನೊಂದ ಮನಸ್ಸುಗಳಿಗೆ ಸಾಂತ್ವಾನ ನೀಡುತ್ತಿದ್ದಾರೆ.

ಹಾಗೆ ಹಲರ್ ಮೌತ್‌ನಿಂದ ಆಗಮಿಸಿದ ಬಹುತೇಕ ಸಯ್ಯಿದರು ನಮ್ಮ ನೆರೆಯ ಕೇರಳಕ್ಕೆ ಆಗಮಿಸಿದ್ದಲ್ಲದೆ ಕುತುಬುಝ್ಝಮಾನರಾದ ಮಂಬುರಂ ಸಯ್ಯಿದ್ ಅಲವಿ ತಂಙಳ್ (ಖ.ಸಿ) ರಂತಹ ಮಹಾನರು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದಲ್ಲದೆ ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಸ್ವಾತಂತ್ರ್ಯ ಸಮರ ಸೇನಾನಿಗಳಿಗೆ ಸಮರ್ಥ ನಾಯಕತ್ವ ನೀಡುವ ಮೂಲಕ ದೇಶ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಮಹಾನರೂ ಬಹಳಷ್ಟಿದ್ದಾರೆ.

ಹೀಗೆ ಯಮನಿನ‌ ಹಲರ್ ಮೌತ್‌ನಿಂದ ದೀನೀ ದಅ್‌ವ ನಡೆಸುವ ಸಲುವಾಗಿ ಭಾರತಕ್ಕಾಗಮಿಸಿದ ಸಯ್ಯಿದರುಗಳ ಪೈಕಿ ಶೈಖ್ ಅಹ್ಮದ್ ಬಿನ್ ಹಸನ್ (ರ) ಸಹ ಒಬ್ಬರು.

ಹಲರ್ ಮೌತ್‌ನಿಂದ ಸಮುದ್ರ ಮಾರ್ಗವಾಗಿ ಗುಜರಾತಿನ ಸೂರತ್‌ಗೆ ಬಂದಿಳಿದ ಮಹಾನರು ಅನಂತರ ಸೂರತ್‌ನಿಂದ ಕೇರಳದ ಮಲಪ್ಪುರಂ ಜಿಲ್ಲೆಯ ವೆಳಿಯಂಗೋಡಿಗೆ ತೆರಳಿ ದೀನಿ ದ‌ಅ‌್‌ವಾ ನಡೆಸಿದರು.

ಪ್ರವಾದಿ ಮುಹಮ್ಮದ್  ﷺِ ರವರ 32ನೇ ಪೌತ್ರರಾದ ಮಹಾನರು ಪ್ರಸಿದ್ದ ವಲಿಯೂ ಆಗಿದ್ದರು.

ಮಹಾನರ ಆಗಮನ ಮತ್ತು ವಫಾತಿನ ವರ್ಷದ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ.

*ಹೆಸರಾಂತ ಸೂಫಿವರ್ಯರಾದ ವೆಳಿಯಂಗೋಡು ಉಮರ್ ಖಾಝಿ (ರ) ರವರ ಮಖ್ಬರದ ಹಿಂಬಾಗದಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಸುಮಾರು ಐವತ್ತರಷ್ಟು ಸಯ್ಯಿದರುಗಳ ಮಖ್ಬರದ ಸನಿಹದಲ್ಲೇ ಶೈಖ್ ಅಹ್ಮದ್ ಬಿನ್ ಹಸನ್ (ರ) ರವರು ಅಂತ್ಯವಿಶ್ರಮ ಪಡೆಯುತ್ತಿದ್ದಾರೆ.*

ಈ ಮಖ್ಬರಗಳು *"ಸೂರತ್ ತಂಙಮ್ಮಾರುಡೆ ಮಖ್ಬರ"* ಎಂದು ಗುರುತಿಸಲ್ಪಡುತ್ತದೆ. ಸೂರತ್‌ನಿಂದ ಆಗಮಿಸಿದ ಸಯ್ಯಿದರುಗಳಾಗಿರುವುದರಿಂದ ಆ ಹೆಸರು ಬಂದಿದೆಯೆನ್ನುತ್ತಾರೆ ಸ್ಥಳೀಯರು.

ಇಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವವರೆಲ್ಲರೂ ಸಯ್ಯಿದರುಗಳೇ ಆಗಿರುವುದು ವಿಶೇಷ.

ಇಲ್ಲಿನ ಝಿಯಾರತ್'ಗೆ ತೆರಳುವವರು ಗಮನಿಸಬೇಕಾದ ಅಂಶವೆಂದರೆ, ಮಖಾಮಿಗೆ ಪ್ರವೇಶಿಸುವ ಮೊದಲು ಹೊರಗೆ ಅಂತ್ಯ ವಿಶ್ರಮ ಪಡೆಯುತ್ತಿರುವ ಸಯ್ಯಿದರುಗಳ ಅನುಮತಿ ಪಡೆದ ನಂತರವೇ ಮಕಾಮಿನ ಒಳಗೆ ಪ್ರವೇಶಿಸಬೇಕು.

ಹಲವಾರು ಕಶ್ಫ್ ಕರಾಮತ್‌ಗಳ ಮೂಲಕ ಪ್ರಸಿದ್ಧಿ ಪಡೆದಿರುವ ಈ ಮಖಾಮಿನೊಳಗೆ ಪ್ರವೇಶಿಸುವ ಮುನ್ನ ಸಂದರ್ಶಕರು ಹೊರಗೆ ಅಂತ್ಯ ವಿಶ್ರಮ ಪಡೆಯುತ್ತಿರುವ ಸಯ್ಯಿದರುಗಳ ಅನುಮತಿ ಪಡೆಯಬೇಕೆಂಬ ನಿಯಮವು ಇಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಸಯ್ಯಿದರುಗಳಿಗೆ ಪರಸ್ಪರರೊಂದಿಗಿರುವ ಗೌರವಾದರಗಳ ಕಾರಣದಿಂದ ಈ ಔಲಿಯಾಗಳೇ ತಮ್ಮ ಕರಾಮತ್ ಮೂಲಕ ವಿಧಿಸಿದ ನಿಯಮವಾಗಿದೆ.

ದಾರಿ:: ಪೊನ್ನಾನಿಯಿಂದ ಚಾವಕಾಡ್ ದಾರಿಯಲ್ಲಾಗಿದೆ ವೆಳಿಯಂಗೋಡ್.
♻♻♻♻♻♻♻♻


ಝಿಯಾರತ್ತ್ ಕೇಂದ್ರ 75. ಇಚ್ಚಾ ಮಸ್ತಾನ್ (ನ:ಮ) ಕಣ್ಣೂರು

*ಝಿಯಾರತ್ತ್ ಕೇಂದ್ರ​​​*
👉🏻👉🏻 7⃣5⃣
➖➖➖➖➖➖➖➖
*ಅಬ್ದುಲ್ ಖಾದರ್ ಅಥವಾ "ಇಚ್ಚ" ಮಸ್ತಾನ್ (ಖ:ಸಿ) ಕಣ್ಣೂರು ಸಿಟಿ ಮಖಾಂ, ಕಣ್ಣೂರು*
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
**********************

ಇಸ್ಲಾಮಿನ ಸಂದೇಶಗಳನ್ನು ಕವನದ ಮೂಲಕ ರಚಿಸಿ ಆಧ್ಯಾತ್ಮಿಕ ಕಂಪಿನೊಂದಿಗೆ ಇಂಪಾಗಿ ಹಾಡುತ್ತಾ  ಇಸ್ಲಾಮಿನ ಆದರ್ಶವನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾದ ಪ್ರಮುಖ ಸೂಫಿವರ್ಯರಾಗಿದ್ದರು ಅಬ್ದುಲ್ ಖಾದರ್ ಅಥವಾ ಇಚ್ಚ ಮಸ್ತಾನ್ (ಖ‌.ಸಿ) ರವರು.

ದಕ್ಷಿಣ ಮಲಬಾರಿನ ಕಣ್ಣೂರು ಸಿಟಿ ಜುಮಾ ಮಸೀದಿಯ ಸಮೀಪದ ವೆಳುತ್ತ ಕಂಡಿ ಎಂಬ ಶ್ರೀಮಂತ ಮನೆತನದಲ್ಲಿ 1871ರಲ್ಲಿ ಜನಿಸಿದ ಇಚ್ಚ ಮಸ್ತಾನ್ (ಖ.‌ಸಿ) ರವರು, ತಮ್ಮಕವನಗಳ ಮೂಲಕ ಕೇರಳದ ಉಮರ್ ಖಯ್ಯೂಮ್ (ರ)‌ ಎಂದೇ ಕರೆಯಲ್ಪಡುತ್ತಿದ್ದರು.

ಕುಟುಂಬದ ಪಾರಂಪರ್ಯ ಕಸುಬಾದ ತಾಮ್ರದ ಪಾತ್ರೆ ವ್ಯಾಪಾರವನ್ನೇ ಮುಂದುವರಿಸಿದ್ದ ಮಹಾನರಿಗೆ ಒಮ್ಮೆ ಒಂದೆಡೆ ಕೆಲವು ತಾಳೆಗರಿಗಳು ಸಿಕ್ಕಿತು. ಅರಬಿಕ್ ಮತ್ತು ತಮಿಳು ಭಾಷೆಯಲ್ಲಿ ಬರೆಯಲ್ಪಟ್ಟಿದ್ದ ಆ ತಾಳೆಗರಿಯ ಸಂದೇಶವೇನೆಂದು ತಿಳಿಯುವ ಸಲುವಾಗಿ ಹಲವರನ್ನು ಭೇಟಿಯಾದರಾದರೂ ಯಾರಿಗೂ ಅದೇನೆಂದು ತಿಳಿಯಲಿಲ್ಲ. ಕೊನೆಗೆ ಕೊಂಡೊಟ್ಟಿಯ ಇಖ್‌ತಿಯಾಹ್‌ ಷಾ ಎಂಬ ವಿದ್ವಾಂಸರನ್ನು ಭೇಟಿಯಾಗುವಂತೆ ಕೆಲವರು ಸಲಹೆ ನೀಡಿದರು. ಅದರಂತೆ ಇಚ್ಚ ಮಸ್ತಾನ್ (ಖ‌.ಸಿ) ರವರು ಕೊಂಡೋಟ್ಟಿಗೆ ತೆರಳಿ ಇಖ್‌ತಿಯಾಹ್ ಷಾರನ್ನು ಭೇಟಿಯಾಗಿ ತಮ್ಮಲ್ಲಿರುವ ತಾಳೆಗರಿಯನ್ನು ತೋರಿಸಿದಾಗ ಮಹಾನರು ಆ ತಾಳೆಗರಿಯನ್ನು ಓದಿ, ಇದು *"ಅಲ್ಲಫಲ್ ಅಲಿಫ್‌"* ಎಂಬ ಸುಪ್ರಸಿದ್ಧ ಅರೆಬಿಕ್ ಕಾವ್ಯವಾಗಿದೆ ಮತ್ತು ಅದನ್ನೇ ತಮಿಳಿಗೆ ಭಾಷಾಂತರಿಸಲಾಗಿದೆ ಎಂದು ವಿವರಿಸಿದರಲ್ಲದೆ ಇದನ್ನು ಬರೆದವರು ತಮಿಳುನಾಡಿನ ಕಾಯಲ್ ಪಟ್ಟಣದಲ್ಲಿರುವ ಉಮರುಲ್ ಖಾಹಿರಿ (ರ) ಎಂಬ ಸೂಫಿವರ್ಯರಾಗಿದ್ದಾರೆ ಎಂದರು.

ತದನಂತರ ಉಮರುಲ್ ಖಾಹಿರಿ (ರ) ರನ್ನು ಭೇಟಿಯಾಗಬೇಕೆಂಬ ಆಕಾಂಕ್ಷೆಯಿಂದ ತಮಿಳು ತಮಿಳುನಾಡಿನತ್ತ ಪ್ರಯಾಣ ಬೆಳೆಸಿದ ಮಹಾನರು ಉಮರುಲ್ ಖಾಹಿರಿ (ರ)ರನ್ನು ಭೇಟಿಯಾದ ನಂತರ ಸೂಫಿಸಂನತ್ತ ಆಕರ್ಷಿತರಾಗಿ "ಇಚ್ಚ" ಎಂಬ ಕಾವ್ಯನಾಮದಿಂದ ಅಲ್ಲಾಹನ ಸ್ತುತಿ ಕೀರ್ತನೆಗಳೊಂದಿಗೆ ಪ್ರವಾದಿ ﷺِ ಪ್ರೇಮದ ಮದ್‌‌ಹ್‌ ಗೀತೆ ಮತ್ತು ಮುಹಿಯುದ್ದೀನ್ ಶೈಖ್ (ರ) ರವರ ಮದ್‌ಹ್ ಗಾನಗಳನ್ನು ರಚಿಸಿ ವ್ಯಾಪಾರ ನಿಮಿತ್ತ ಸಂಚರಿಸಿದ
ಸ್ಥಳಗಳಲ್ಲೆಲ್ಲ ಮಧುರ ಮನೋಹರವಾಗಿ ಹಾಡುತ್ತಾ ಇಚ್ಚ ಮಸ್ತಾನ್ (ಖ.ಸಿ) ಎಂದೇ ಪ್ರಸಿದ್ಧರಾದರು.

ಆಧ್ಯಾತ್ಮಿಕ ರಚನೆಗಳಿಗಷ್ಟೇ ಸೀಮಿತವಾಗಿರದ ಮಹಾನರ ಕವನಗಳು ಗಿಡ-ಮರ, ಹಣ್ಣು-ಹೂವು, ಮತ್ತು ಪಕ್ಷಿಗಳನ್ನು ಕಥಾ ವಸ್ತುವನ್ನಾಗಿಸಿಕೊಂಡು *'ಪೂ ಚೆಪ್ಪುಗಳ್'* ಎಂಬ ಶೀರ್ಷಿಕೆಯಡಿ ಒಂದು ಕವನ ಸಂಕಲನವನ್ನೇ ರಚಿಸಿದ್ದರು. ಅದನ್ನು ಮಾಪ್ಪಿಳ ಹಾಡಿನ ಶೈಲಿಯಲ್ಲಿ ಮಾತ್ರವಲ್ಲದೆ, ಹಿಂದುಸ್ತಾನಿ ದರ್ಬಾರ್ ಮತ್ತು ಸಿಂಧು ಭೈರವಿ ರಾಗಗಳಲ್ಲೂ  ಆಲಾಪಿಸಬಹುದಾಂತಹ ಕಾವ್ಯಗಳಾಗಿವೆ.

ಮಹಾನರು ತಾಮ್ರದ ಪಾತ್ರೆ ವ್ಯಾಪಾರ ಮಾಡುತ್ತಿದ್ದ ಕೊಂಡೋಟ್ಟಿ, ಅರಿಕ್ಕೋಡ್, ಪೆರುಂದಲ್ಮಣ್ಣ, ಪಾಲಕ್ಕಾಡ್ ಮನ್ನಾರ್ ಕಾಡ್ ಮುಂತಾದ ಸ್ಥಳಗಳಲ್ಲೆಲ್ಲಾ ಸಂಚರಿಸುವಾಗ ತಮ್ಮ ಕಾವ್ಯಗಳನ್ನು ಸುಶ್ರಾವ್ಯವಾಗಿ ಹಾಡುತ್ತಾ ಸಂಚರಿಸುತ್ತಿದ್ದುದರಿಂದ ಅವರ ಆಲಾಪನೆಗಳನ್ನು ಆಲಿಸಲು ಅವರ ಸುತ್ತ ಜನ ಜಾತ್ರೆಯೇ ನೆರೆಯುತ್ತಿತ್ತು. ಹಾಗಾಗಿ ಮಹಾನರ ಕಾವ್ಯಗಳು ನಾಡಿನೆಲ್ಲೆಡೆ ಮನೆಮಾತಾಗಿತ್ತು.

ಅರೆಬಿಕ್ ಮಲಯಾಳಂನಲ್ಲಿ ಮಹಾನರು ಸುಮಾರು ಹತ್ತು ಸಾವಿರಕ್ಕಿಂತಲೂ ಹೆಚ್ಚು ಕಾವ್ಯಗಳನ್ನು ರಚಿಸಿದ್ದಾರಾದರೂ ಇಂದು ಕೇವಲ ಒಂದು ಸಾವಿರದಷ್ಟು ಕಾವ್ಯಗಳು ಮಾತ್ರ ಲಭ್ಯವಿದೆ ಎನ್ನಲಾಗುತ್ತದೆ.

1953ರಲ್ಲಿ ಒ. ಅಬು ಎಂಬುವವರು ಮಲಯಾಳಂನಲ್ಲಿ *ಇಚ್ಛಯುಡೆ ಕೃತಿಗಳ್* ಎಂಬ ಹೆಸರಿನಲ್ಲಿ ಹೊರತಂದ ಕೃತಿಯು   ಪ್ರಕಾಶನಗೊಂಡ ಇಚ್ಚ ಮಸ್ತಾನ್ (ಖ.ಸಿ) ರವರ ಪ್ರಪ್ರಥಮ ಕೃತಿಯಾಗಿದೆ. ಅನಂತರ ಬ್ರಿಟಿಷರಿಂದ ಪ್ರಕಾಶನಗೊಂಡ *ಇಂಡಿಯನ್ ಆಂಟಿ ಕ್ಯೂಟರಿಯನ್* ಎಂಬ ಕೃತಿಯಲ್ಲಿ ಇಚ್ಚ‌ ಮಸ್ತಾನ್ (ಖ‌.ಸಿ)ರವರ ಹತ್ತು ಕವನಗಳು ಪ್ರಕಟವಾಗಿದೆ.

1980 ರಲ್ಲಿ ತ್ರಿಶೂರ್ ನ ಜೋಸೆಫ್ ಕೊಳತ್ತಾಡನ್ ಎಂಬುವವರು ಇರಾಕಿನ ಬಸರಾದ ವಿಶ್ವವಿದ್ಯಾನಿಲಯವೊಂದರಲ್ಲಿ ಇಚ್ಚ‌ ಮಸ್ತಾನ್ (ಖ‌.ಸಿ)ರವರ ಕುರಿತಾದ ತೀಸಸ್ ಇಚ್ಚ‌ ಮಸ್ತಾನ್ (ಖ:ಸಿ) ಎಂಬ ಪ್ರಬಂಧ ಮಂಡಿಸಿದ್ದಾರೆ.

ಇದರ ಹೊರತು ಇಚ್ಚ‌ ಮಸ್ತಾನ್ (ಖ.ಸಿ) ರವರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ನಮ್ಮ ಹಿಂದಿನ ತಲೆಮಾರಿನವರಿಗೆ ಇಚ್ಚ ಮಸ್ತಾನ್ (ಖ.ಸಿ)ರವರ ಕವನಗಳು ಇಂದಿಗೂ ಕಂಠಪಾಠವಿದೆಯಾದರೂ ಅದರ ಬಗೆಗಿನ ಅಧಿಕೃತ ಮಾಹಿತಿ ಅವರಿಂದಲೂ ಲಭ್ಯವಿಲ್ಲ.

ಹೀಗೆ ತಮ್ಮ ಸ್ವರಚಿತ ಕವನಗಳನ್ನು ಹಾಡುತ್ತಾ ಮಲಬಾರಿನಾದ್ಯಂತ ಮನೆಮಾತಾಗಿದ್ದ ಇಚ್ಚ ಮಸ್ತಾನ್ (ಖ‌.ಸಿ)ರವರು 1933 ರಲ್ಲಿ ಇಹಲೋಕಕ್ಕೆ ವಿದಾಯ ಹೇಳಿದರು.

 ಕಣ್ಣೂರು ಸಿಟಿ ಎಂಬಲ್ಲಿ ಖುತುಬು ಸಯ್ಯದ್ ಮುಹಮ್ಮದ್ ಮೌಲಲ್ ಬುಖಾರಿ (ರ)‌ರವರ ಮಖಾಮಿನ ಪಕ್ಕದಲ್ಲೇ ಮಹಾನರು ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
✳✳✳✳✳✳✳

ಝಿಯಾರತ್ತ್ ಕೇಂದ್ರ 74. ಕುಂಞ ಮರಕಾರ್ (ರ) ಕುಮರನಲ್ಲೂರ್

*ಝಿಯಾರತ್ತ್ ಕೇಂದ್ರ*
👉🏻👉🏻👉🏻 7⃣4⃣
〰〰〰〰〰〰〰
*ಅಲ್ ಆಲಿಮುಲ್ ಅಲ್ಲಾಮ ಶೈಖುಲ್ ಆರಿಫಿನ್ ಕುಂಞಿ ಮರಕಾರ್ ಖಾದಿರಿ ಮುಸ್ಲಿಯಾರ್ (ರ)*
( ಅರಕಲ್ ಮೂಪ್ಪರ್ )
ಕುಮಾರನಲ್ಲೂರ್, ಒಟ್ಟಪ್ಪಾಲಂ ಪಾಲಕ್ಕಾಡ್.
🕌🕌🕌🕌🕌🕌🕌

✍ ಗಫೂರ್ ಬಾಯಾರ್
〰〰〰〰〰〰〰

ಕೇರಳದ ಪಾಲಕ್ಕಾಡ್ ಜಿಲ್ಲೆಯ ಒಟ್ಟಪಾಲಮ್ ತಾಲೂಕಿನ ಕಪ್ಪೂರ್ ಪಂಚಾಯ್ತಿ ವ್ಯಾಪ್ತಿಗೊಳಪಟ್ಟ ಮಹಲ್ಲಾಗಿದೆ ಅರಕ್ಕಲ್ ಮಹಲ್.

ಸತ್ಯ ವಿಶ್ವಾಸಿಗಳನ್ನು ಕೈಬೀಸಿ ಕರೆಯುವ ಹೆಸರಾಂತ ಮಹಲ್'ಗಳಲ್ಲೊಂದಾಗಿರುವ  ಅರಕ್ಕಲ್ ಮಹಲ್ಲಿಗೆ ಆಧ್ಯಾತ್ಮಿಕ ಸೌಂದರ್ಯದ ಮೆರಗು ನೀಡಿದವರು ಅಲ್ ಆಲಿಮುಲ್ ಅಲ್ಲಾಮಾ ಶೈಖುಲ್ ಆರಿಫೀನ್ ಕುಂಞಿ ಮರಕಾರ್ ಖಾದಿರಿ ಮುಸ್ಲಿಯಾರ್ (ರ).

ಅರಕ್ಕಲ್ ಮೂಪರ್ ಎಂದು ಅರಿಯಲ್ಪಡುತ್ತಿದ್ದ ಮಹಾನರು ಹೆಸರಾಂತ ವಿಧ್ವಾಂಸರೂ ಪ್ರಮುಖ ಸೂಫಿವರ್ಯರೂ ಆದ ಕಕ್ಕಿಡಿಪುರಂ ಅಬೂಬಕರ್ ಮುಸ್ಲಿಯಾರ್ (ರ) ಆಧ್ಯಾತ್ಮಿಕ ಗುರುವಾಗಿದ್ದರು.

ಆಧ್ಯಾತ್ಮಿಕ ಲೇೂಕದ ಕೀಲಿಕೈಯಂತಿದ್ದ ಮಹಾನರು ಪಡಿಞಾರಞಾಡಿ ಅರಕ್ಕಲ್ ಜುಮಾ ಮಸೀದಿಯಲ್ಲಿ ಖತೀಬಾಗಿದ್ದ ಸೂಫೀವರ್ಯ ಚುಂಗತ್ತ್ ಫರೀದ್ ಮುಸ್ಲಿಯಾರ್ (ಖ:ಸಿ) ಹಾಗೂ ಕೊಕೂರ್ ತೆಕ್ಕೆಕರ ಫಾತಿಮಾ ದಂಪತಿಗಳಿಗೆ ಹಿಜರಿ 1295ರಲ್ಲಿ ಜನಿಸಿದ ಮಗುವಿಗೆ "ಮುಲೈಕಾನ್" ಎಂದು ನಾಮಕರಣ ಮಾಡಿದರು.

ವಿಧ್ವಾಂಸರಾಗಿದ್ದ ತಂದೆಯ ಆಧ್ಯಾತ್ಮಿಕ ಕಾಳಜಿಯನ್ನು ಮೈಗೂಡಿಸಿಕೊಂಡು ಬೆಳೆದ ಮುಲೈಕಾನ್ ನಂತರ ಕುಂಞಿ ಮಲ್'ಕಾನ್ (ಕುಂಞಿ ಮರಕಾರ್) ಎಂಬ ಹೆಸರಿನಲ್ಲಿ ಪ್ರಸಿದ್ಧರಾಗಿ ಕೊನೆಗೆ "ಅರಕಲ್ ಮೂಪ್ಪರ್" ಎಂಬ ನಾಮದೊಂದಿಗೆ ಪ್ರಖ್ಯಾತರಾದರು.

ಗೌರವಾನ್ವಿತ ಗಣ್ಯರು ಎಂಬ ಪದಕ್ಕೆ ಮಲಯಾಳಂನಲ್ಲಿ ಮೂಪರ್ ಎನ್ನುತ್ತಾರೆ.

ಸೂಫಿವರ್ಯರಾಗಿದ್ದ ತಮ್ಮ ತಂದೆಯಿಂದಲೇ ಪ್ರಾಥಮಿಕ ವಿದ್ಯಾಭ್ಯಾಸದೊಂದಿಗೆ ಖುರ್ಆನ್ ಪಾರಾಯಣವನ್ನೂ ಅಭ್ಯಸಿಸಿದ ನಂತರ ಮಲಬಾರಿನ ಮಕ್ಕಾ ಎಂದೇ ಅರಿಯಲ್ಪಡುವ ಪೊನ್ನಾನಿ ದರ್ಸ್'ಗೆ ಸೇರಿ ಅಲ್ಲಿ ವೆಳುತ್ತೂರ್ ಕುಂಞಿತು ಮುಸ್ಲಿಯಾರ್ (ರ), ತಟ್ಟಂಗರ ಕುಟ್ಟಿಯಾಮ್ಮು ಮುಸ್ಲಿಯಾರ್ (ರ) ಮತ್ತು ಮುಫ್ತಿ ಅಬ್ದುರ್ರಹ್ಮಾನ್ ಎಂಬ ಕುಂಜಾಲ್ ಬಾವ ಮುಸ್ಲಿಯಾರ್ (ರ)  ಮುಂತಾದ ಮಹಾತ್ಮರಿಂದ ವಿದ್ಯಾರ್ಜನೆ ಮಾಡಿ ಹಲವಾರು ವರ್ಷಗಳ ಕಾಲ ವ್ಯಾಸಂಗ ಮಾಡಿ ಸನದ್ (ಡಿಗ್ರಿ) ಪಡೆದರು.
ನಂತರ ಸೂಫಿಸಂನತ್ತ ಆಕರ್ಷಿತರಾದ ಮಹಾನರು ಖಾದಿರಿಯ್ಯ ಮತ್ತು ನಕ್ಷಬಂದಿ ತ್ವರೀಕತ್'ಗಳ ಗುರುವಾಗಿದ್ದರು.

ಯಹ್ಯಾ ಅಲ್ ಮಕ್ಕಿ (ರ) ಎಂಬ ಮಹಾತ್ಮರ ಶಿಷ್ಯರೂ, ವಿಧ್ವಾಂಸರೂ ಆಗಿದ್ದ ಪೊನ್ನಾನಿ ಪುತಿಯಕತ್ತ್ ಅಲ್ ಮುಫ್ತಿ ಮಖ್ದೂಮ್ ಮುಹಮ್ಮದ್ ಚೆರಿಯ ಬಾವ ಮುಸ್ಲಿಯಾರ್ (ರ) ರಿಂದ ಆಧ್ಯಾತ್ಮಿಕ ಮಾರ್ಗ ಸ್ವೀಕರಿಸಿ ಫತ್ವಾ ನೀಡುವ ಅರ್ಹತೆ ಪಡೆದರಲ್ಲದೆ ದರ್ಸ್ ಮುನ್ನಡೆಸುತ್ತಾ ಧಾರ್ಮಿಕ ಉನ್ನತಿಯೊಂದಿಗೆ ಆತ್ಮಜ್ಞಾನ ರಂಗದ ಆರಿಫುಗಳನ್ನು ಉನ್ನತರನ್ನಾಗಿಸುವ ಸಿದ್ದಿಯನ್ನೂ ಗಳಿಸಿದರು.

ಬಹುಮಾನ್ಯರಾದ ಓ. ಕೆ. ಉಸ್ತಾದ್ (ನ:ಮ) ಮತ್ತು ಆಖಿರ್ ಝೈನುದ್ದೀನ್ ಮಖ್ಡೂಮ್ (ರ) ರವರ ಪುತ್ರರಾದ ಕೊಂಗಣಮ್ ವೀಟ್ಟಿಲ್ ಇಬ್ರಾಹಿಂ ಕುಟ್ಟಿ ಮುಸ್ಲಿಯಾರ್ (ನ:ಮ), ಪುತಿಯಾಪ್ಪಿಳ ಅಬ್ದುರ್ರಹ್ಮಾನ್ ಮುಸ್ಲಿಯಾರ್ (ನ:ಮ) ಮುಂತಾದ ಸೂಫಿ ಸಂತರ ಆತ್ಮೀಯ ಸ್ನೇಹಿರಾಗಿದ್ದ ಅರಕ್ಕಲ್ ಮೂಪರ್ (ನ.ಮ)ರು, ಪೋರ್ಟ್ ಕೊಚ್ಚಿ ಕಲ್'ವತ್ತ್ ಜುಮಾ ಮಸೀದಿಯ ಅಂಗಣದಲ್ಲಿ ಇಂದು ಅಂತ್ಯ ವಿಶ್ರಮ ಪಡೆಯುತ್ತಿರುವ ಫರೀದ್ ಔಲಿಯಾ (ರ) ಮತ್ತು ಮಹಾನರಾದ ಆಲುವ ಅಬೂಬಕ್ಕರ್ ಮುಸ್ಲಿಯಾರ್ (ಖ.ಸಿ)ರಂತಹ ಮಹಾತ್ಮರನ್ನು ಸಂದರ್ಶಿಸಿ ಪ್ರಾರ್ಥಿಸಲು ಮನವಿ ಮಾಡುತ್ತಿದ್ದರು. ಅಷ್ಟೊಂದು ನಿಕಟವಾದ ಸ್ನೇಹ ಬಾಂಧವ್ಯ ಅವರದಾಗಿತ್ತು.

ಐವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಹೊಂದಿದ್ದ ಅರಕ್ಕಲ್‌ ಮೂಪರ್‌ (ಖ.ಸಿ) ರವರ ಮಕ್ಕಳ ಪೈಕಿ ಬಾಪುಟ್ಟಿ‌ ಮುಸ್ಲಿಯಾರ್ ಮತ್ತು ಪರೀದ್‌ ಮುಸ್ಲಿಯಾರ್ ರವರು ಸಮಾಜದಲ್ಲಿ ಗುರುತಿಸಲ್ಪಟ್ಟ ವಿದ್ವಾಂಸರಾಗಿದ್ದಾರೆ.

1990ರಲ್ಲಿ ವಫಾತಾದ ಕಕ್ಕಿಡಿಪ್ಪುರಂ ಅಬೂಬಕ್ಕರ್ ವಲಿಯುಲ್ಲಾಹಿ (ರ), ವೆಳಿಯಂಗೋಡ್ ಖಾಝಿಯಾಗಿದ್ದ ಕುಂಞಿ ಮುಹಿಯದ್ದೀನ್ ಕುಟ್ಟಿ ಮುಸ್ಲಿಯಾರ್ (ಖ:ಸಿ), ಕಾರಕಾಡ್ ಅಬೂಬಕ್ಕರ್ ಮುಸ್ಲಿಯಾರ್ (ಖ:ಸಿ), ಚುಂಗತ್ತ್ ವಲಿಯ ಕುಂಞಾಲಿ ಮುಸ್ಲಿಯಾರ್ (ಖ:ಸಿ), ಕಾಪ್ಪಾಡ್ ಬಾಪ್ಪು ಮುಸ್ಲಿಯಾರ್ (ಖ:ಸಿ), ಪಡಿನಂಜಾರಂಙಾಡಿ ಮಮ್ಮಿಕುಟ್ಟಿ ಮುಸ್ಲಿಯಾರ್ (ಖ:ಸಿ), ನಿಲಿಯಾಡ್ ಮಾಮು ಮುಸ್ಲಿಯಾರ್ (ಖ:ಸಿ), ಅರಕ್ಕಲ್ ಕುಂಞಿತು ಮುಸ್ಲಿಯಾರ್ (ಖ:ಸಿ), ಅಲ್ಲಾಮಾ ಮುಹಮ್ಮದ್ ಎಂಬ ಕುಂಞಿ ಬಾವ (ಖ:ಸಿ) ರಂತಹ ಅನೇಕ ಪ್ರಗಲ್ಬ ವಿದ್ವಾಂಸರು ಅರಕ್ಕಲ್ ಮೂಪರ್‌ (ಖ.ಸಿ)ರವರ ಪ್ರಮುಖ ಶಿಷ್ಯರಾಗಿದ್ದರು.

ವಿಲಾಯತ್ತಿನ ಮಹೋನ್ನತ ಸ್ಥಾನಕ್ಕೆ ತಲುಪಿದ್ದ ಮಹಾನರು ತೇೂರಿಕೆಯಾದೀತೇನೇೂ ಎಂಬ ಭಯದಿಂದ ತಮ್ಮ ಆಧ್ಯಾತ್ಮಿಕ ಸಿದ್ಧಿಯನ್ನು ರಹಸ್ಯವಾಗಿರಿಸಲು ಶಕ್ತಿಮೀರಿ ಶ್ರಮಿಸುತ್ತಿದ್ದರೂ ಸಹ ಇಮಾಂ ಗಝ್ಝಾಲಿ (ರ) ರವರಂತಿದ್ದ ಅನೇಕ ಮಹತ್ಮರುಗಳು ಮಹಾನರನ್ನು ಸಮೀಪಿಸಿ ಇಲ್'ಮುಲ್ ಕಲಾಮುಗಳನ್ನು ತಿಳಿಸುತ್ತಿದ್ದರು.

ಓ. ಕೆ. ಝೈನುದ್ದೀನ್ ಮುಸ್ಲಿಯಾರ್ (ನ.ಮ) ಮತ್ತು ಕಕ್ಕಿಡಿಪುರಂ ಅಬೂಬಕರ್ ಮುಸ್ಲಿಯಾರ್ (ಖ.ಸಿ)ರವರ ಆಧ್ಯಾತ್ಮಿಕ ಉನ್ನತಿಗೆ ದಾರಿ ದೀಪವಾಗಿದ್ದ ಮಹಾನರು ಎಲ್ಲಾ ಇಜಾಝತ್'ಗಳ ಆಧ್ಯಾತ್ಮಿಕ ಗುರುವಾಗಿದ್ದರು.

ಜೀವನಪರ್ಯಂತ ಸೂಕ್ಷ್ಮತೆ ಪಾಲಿಸುತ್ತಾ ಸದಾ ಇಬಾದತ್'ನಲ್ಲಿ ತಲ್ಲೀನರಾಗಿ ವಿಶ್ವಾಸಿ ಹೃದಯಿಗಳಿಗೆ ಸಾಂತ್ವಾನದ ಅಭಯ ಕೇಂದ್ರವಾಗಿದ್ದ ಆ ದಿವ್ಯ ತೇಜಸ್ಸು ಹಿಜರಿ 1369 ರಲ್ಲಿ ಅಂದರೆ ಕ್ರಿ.ಶ. 1949ರಲ್ಲಿ ವಫಾತಾದರು.

ಇಂದು ಅರಕ್ಕಲ್ ಮಹಲ್ಲಿನ ಅಂಗಣದಲ್ಲಿ ಗತ ಇತಿಹಾಸದ ವೈಭವದೊಂದಿಗೆ ತಲೆ ಎತ್ತಿ ನಿಂತಿರುವ ಮಖಾಮಿನಲ್ಲಿ ಅರಕ್ಕಲ್ ಮೂಪರ್ (ಖ.ಸಿ) ರವರು ಚಿರ ವಿಶ್ರಾಂತಿ ಪಡೆಯುತ್ತಿದ್ದಾರೆ.

ಮಖಾಮಿನ ಪಕ್ಕದಲ್ಲೇ ಸುಮಾರು 800 ಕಿತಾಬುಗಳನ್ನು ಹೊಂದಿರುವ *"ಗನಿಮತ್ತು ಸ್ವಾಲಿಹಿನ್"* ಎಂಬ ಗ್ರಂಥಾಲಯವಿದ್ದು ಇಲ್ಮ್ ಕಲಿಯುವ ಆಸಕ್ತ ಮುತಅಲ್ಲಿಮರಿಗೆ ಅನುಕೂಲಕರವಾಗಿದೆ.

🚍 ದಾರಿ: ಕುಮಾರನಲ್ಲೂರ್, ಒಟ್ಟಪ್ಪಾಲಂ ಪಾಲಕ್ಕಾಡ್
➿➿➿➿➿➿➿

ಝಿಯಾರತ್ತ್ ಕೇಂದ್ರ 73. ತೇನು ಮುಸ್ಲಿಯಾರ್ (ನ:ಮ)

*ಝಿಯಾರತ್ತ್ ಕೇಂದ್ರ*
      👉🏻👉🏻 7⃣3⃣
➖➖➖➖➖➖➖➖➖
*ಝೈನುದ್ದೀನ್ ಮುಸ್ಲಿಯಾರ್ ಎಂಬ ತೇನು ಮುಸ್ಲಿಯಾರ್ (ನ:ಮ) ಕೂರಿಯಾಡ್ ಮಲಪ್ಪುರಂ.*
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
***********************

1942 ರಲ್ಲಿ ಕೇರಳದ ಮಲಪ್ಪುರಂನಲ್ಲಿ ಕಾಲರ ಎಂಬ ಮಾರಕ ವ್ಯಾಧಿಗೆ ತುತ್ತಾಗಿ ಪ್ರತಿನಿತ್ಯವೂ ಹಲವಾರು ಜನ ಮರಣ ಹೊಂದುತ್ತಿದ್ದರು. ಆಗ ಮುಸ್ಲಿಂ ಸಮುದಾಯದ ಹಿರಿಯರೆಲ್ಲ ಸಭೆ ಸೇರಿ ಚರ್ಚಿಸಿದಾಗ "ಪ್ರಾಯ ಪೂರ್ತಿಯಾದ ನಂತರ 40 ವರ್ಷಗಳ ಕಾಲ ಒಮ್ಮೆಯೂ ನಮಾಜ್ ಕಲಾ ಮಾಡದ ವ್ಯಕ್ತಿಯಿಂದ ಪ್ರಾರ್ಥನೆ ಮಾಡಿಸಬೇಕು" ಎಂಬ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಲಾಯಿತು.

ನಂತರ ಜನ ಸಾಮಾನ್ಯರು 40 ವರ್ಷಗಳಿಂದ ನಮಾಜ್ ಕಲಾ ಮಾಡದ ವ್ಯಕ್ತಿಗಾಗಿ ಹುಡುಕಾಟ ನಡೆಸಿದಾಗ ಕಂಡು ಬಂದ ವ್ಯಕ್ತಿಯೇ *ತೇನು ಮುಸ್ಲಿಯಾರ್ ಎಂದೇ ಜನಸಾಮಾನ್ಯರ ನಡುವೆ ಚಿರಪರಿಚಿತರಾದ ಕೂರಿಯಾಡ್ ನಿವಾಸಿ ಝೈನುದ್ದೀನ್ ಮುಸ್ಲಿಯಾರ್ (ನ.ಮ).*

ಹಾಗೆ ಜನಸಾಮಾನ್ಯರ ಕೋರಿಕೆಯ ಮೇರೆಗೆ ತೇನು ಮುಸ್ಲಿಯಾರ್ (ನ.ಮ) ರವರು ಸೃಷ್ಟಿಕರ್ತನಾದ ಅಲ್ಲಾಹನೊಂದಿಗೆ ಪ್ರಾರ್ಥಿಸಿದಾಗ ಆ ಮಾರಕ ವ್ಯಾಧಿಯು ತನ್ನ ರೌದ್ರಾವತಾರವನ್ನು ನಿಲ್ಲಿಸಿ ಶಾಂತವಾಗಿತ್ತು.

ಹೀಗೆ ತಮ್ಮ ಜೀವನದುದ್ದಕ್ಕೂ ಹಲವಾರು ಕಶ್ಪ್,‌ ಕರಾಮತ್‌ಗಳನ್ನು ತೋರಿಸಿದ ತೇನು‌ ಮುಸ್ಲಿಯಾರ್ (ನ.ಮ)ರವರು ಮಲಪ್ಪುರಂ ಜಿಲ್ಲೆಯ ಕೂರಿಯಾಡ್ ಕಲ್ಲಿಡುಂಬಿಲ್ ಅಹ್ಮದ್ ಮತ್ತು ನಲ್ಲೂರಿನ ಕರಿಜಾಯ್ ಮೂ‌ಸ ಎಂಬವವರ ಪುತ್ರಿಯಾದ ಫಾತಿಮಾ ದಂಪತಿಗಳ ಮಗನಾಗಿ ಹಿಜರಿ 1302ರಲ್ಲಿ ಜನಿಸಿದರು.

ಕೂರಿಯಾಡ್ ಹಬೀಬ್ ಕುಟ್ಟಿಕೋಯ ತಂಙಳ್ (ಖ:ಸಿ) ಮತ್ತು ಅಬ್ದುಲ್ಲ ಕೋಯ ತಂಙಳ್‌ (ಖ:ಸಿ)ರಿಂದ ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ನಂತರ ಅಬ್ದುಲ ಕೋಯ ತಂಗಳವರ (ಖ:ಸಿ) ಕಿಯಕೆವಿಡ್, ಕೈತ್ತಕರ, ತಿರೂರ್ ಕೊರಂಗಾತ್ತ್, ಪೊನ್ನಾನಿ, ಕಾಟ್ಟಿಪ್ಪರುತ್ತಿ, ಕಾವಪ್ಪುರ, ಕಿಡಂಗಾಯಂ, ನೆಲ್ಲಿಕುತ್ತು ಮತ್ತಿತರ ಸ್ಥಳಗಳಲ್ಲಿ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು.

ತಿರೂರಂಗಾಡಿ ಬುಖಾರಿ ಮುಸ್ಲಿಯಾರ್ (ಖ:ಸಿ), ತೃಕರಿಪ್ಪುರ್ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ಖ:ಸಿ), ಮಚ್ಚಿಂಗಪ್ಪಾರ ಅಹ್ಮದ್ ಮುಸ್ಲಿಯಾರ್ (ಖ:ಸಿ), ಪಾರಮ್ಮಲ್ ಮೊಯ್ದಿನ್ ಕುಟ್ಟಿ ಮುಸ್ಲಿಯಾರ್ (ಖ:ಸಿ), ಮೂಸ ಮುಸ್ಲಿಯಾರುಪ್ಪಾಪ್ಪ ಎಂದು ಕರೆಯಲ್ಪಡುತ್ತಿದ್ದ ಕಾವುಪ್ಪುರ ಮುದರಿಸ್ (ಖ:ಸಿ), ಪೆರಂಬಲಂ ಉಣ್ಣಿದ್ ಮುಸ್ಲಿಯಾರ್ (ಖ:ಸಿ), ಪಳ್ಳಿಪ್ಪುರಂ ಮಮ್ಮದ್ ಮುಸ್ಲಿಯಾರ್ (ಖ:ಸಿ), ಚಾಲಿಲಕತ್ತ್ ಕುಂಜಾಹಮ್ಮದ್ ಹಾಜಿ (ಖ:ಸಿ) ಮುಂತಾದವರಿಂದ ಉನ್ನತ ವ್ಯಾಸಂಗ ಪಡೆದರು.

ತದ ನಂತರ ಹಲವು ವರ್ಷಗಳ ಕಾಲ ಚಾಪ್ಪಂಗಾಡಿ, ಕಿಡಂಗಾಯಂ ಆಮಕಾಡ್, ಕೂರಿಯಾಡ್, ಕಿಯಕೊಪ್ಪುರಂ, ಇಂಡ್ಯನೂರ್, ಕೊಟ್ಟಕ್ಕಲ್ ಟೌನ್ ಮಸೀದಿ, ಒರವಮ್‌ಬ್ರಂ, ಮುಡಿಕೊಡ್, ಮಲಪ್ಪುರಂ ದೊಡ್ಡ ಮಸೀದಿ, ನೆಲ್ಲಿಕುತ್ತ್, ಪಾಂಗ್ ಪಳ್ಳಿಪ್ಪರಂಬ್, ಮತ್ತಿತರೆಡೆ ದರ್ಸ್ ನಡೆಸಿದ ನಂತರವೂ ಸಹ ಮಹಾನರು ವಿವಿದೆಡೆ ತೆರಳಿ ಆ ಕಾಲದ ಹೆಸರಾಂತ ಭಾಷಾ ತಜ್ಞರಿಂದ ಅತ್ಯುನ್ನತ ವ್ಯಾಸಂಗ ಪಡೆದರು.

ಹಾಗೆ ಉನ್ನತ ವಿದ್ಯಾಭ್ಯಾಸವನ್ನರಸುತ್ತಿದ್ದ ಸಮಯದಲ್ಲಿ ಸಹೀಹುಲ್ ಬುಖಾರಿಯ ಪಠಣಕ್ಕೆ‌ ಕುಟ್ಟಿ ಮುಸ್ಲಿಯಾರ (ಖ:ಸಿ)ವರನ್ನು ಸಮೀಪಿಸಿದಾಗ ಅವರಿಬ್ಬರ ನಡುವೆ ನಡೆದ ಸಂದರ್ಶನವಂತೂ ಮೈನವಿರೇಳಿಸುವಂಥಹದು.

ಆಗ ಸಂದರ್ಶನ ಹೀಗಿದೆ..

ತೇನು ಉಸ್ತಾದರು (ನ:ಮ) ಅಬ್ದುದುರಹ್ಮಾನ್ ಫಳ್ಫಾರಿ ಕುಟ್ಟಿ ಮುಸ್ಲಿಯಾರರನ್ನು (ಖ:ಸಿ) ಭೇಟಿಯಾಗಿ, ಮಹಾನರೇ‌... "ತಮ್ಮ ತಂದೆಯವರಿಂದ ನಾನು ಸ್ವಹೀಹುಲ್ ಬುಖಾರಿಯನ್ನು ಸ್ವಲ್ಪ ಕಲಿತಿದ್ದೇನೆ. ಅದರ ಉಳಿದ ಭಾಗವನ್ನು ದಯವಿಟ್ಟು ತಾವು ನನಗೆ ಕಲಿಸಬೇಕು ಎಂದರು.

ಈ ಮಾತನ್ನು ಕೇಳಿದ ಕುಟ್ಟಿ ಮುಸ್ಲಿಯಾರರು (ಖ:ಸಿ) ಸಮಯ ಮತ್ತು ಸೌಕರ್ಯಗಳ ಅನಾನುಕೂಲತೆಯ ಕಾರಣ ಮುಂದಿಟ್ಟು ಸಾಧ್ಯವಿಲ್ಲ ಎಂದುಬಿಟ್ಟರು. ಆಗ ತೇನು ಮುಸ್ಲಿಯಾರರು (ನ:ಮ) ತಮ್ಮ ಬಿಡುವಿನ ಸಮಯದಲ್ಲಾದರೂ ಕಲಿಸಿ ವಿನಂತಿಸಿದರೂ ಕುಟ್ಟಿ ಮುಸ್ಲಿಯಾರರು (ಖ:ಸಿ) ಒಪ್ಪದಿದ್ದಾಗ,
ತೇನು ಮುಸ್ಲಿಯಾರರು‌ ( ನ:ಮ) ಆ ತನಕ ತಮ್ಮ ಮನದಲ್ಲಿ ಅಡಗಿಸಿಟ್ಟಿದ್ದ ರಹಸ್ಯವೊಂದನ್ನು ಕುಟ್ಟಿ ಮುಸ್ಲಿಯರರ (ಖ:ಸಿ) ಮುಂದೆ ಬಹಿರಂಗ ಪಡಿಸಬೇಕಾಯಿತು.

ಆ ರಹಸ್ಯವೆಂದರೆ....
ಉಸ್ತಾದರೇ... *"ನಾನು ಅಲ್ಲಾಹನ ಹಬೀಬಾದ ಮುತ್ತು ನಬಿ‌ ರಸೂಲ್ ﷺ ರನ್ನು ಕನಸಿನಲ್ಲಿ ಕಂಡೆ. ಆಗ ನಾನು ಅಲ್ಲಾಹನ ರಸೂಲ್ ﷺರೊಂದಿಗೆ ನನಗೆ ಸ್ವಹೀಹುಲ್ ಬುಖಾರಿ ಕಲಿಯಲು ಉಸ್ತಾದರೊಬ್ಬರನ್ನು ತೋರಿಸಿ ಕೊಡುವಂತೆ ಅಪೇಕ್ಷಿದಾಗ, ಅಲ್ಲಾಹನ ರಸೂಲ್ ﷺರು ತಮ್ಮ ಹೆಸರನ್ನು ಸೂಚಿಸಿದರು ಹಾಗಾಗಿ ನಾನು ತಮ್ಮ ಬಳಿ ಬಂದೆ ಎಂದರು".*

ಈ ಮಾತನ್ನು ಕೇಳಿ ರೋಮಾಂಚನಕ್ಕೊಳಗಾದ ಕುಟ್ಟಿ ಮುಸ್ಲಿಯಾರರು (ಖ:ಸಿ), ವ್ಯಾಸಂಗವನ್ನರಸಿ ತಮ್ಮ ಬಳಿ ಬಂದಿರುವ ವ್ಯಕ್ತಿ ಸಾಮಾನ್ಯರಲ್ಲ ಎಂಬುದು ಮನದಟ್ಟಾದ ಕಾರಣ ಸಂತೋಷದಿಂದ ಒಪ್ಪಿದರು.

ಸಮಸ್ತ ಅಧ್ಯಕ್ಷರಾಗಿದ್ದ ವರಕ್ಕಲ್ ಮುಲ್ಲಕೋಯ ತಂಙಳ (ರ)ವರಿಂದ ಖಾದಿರಿಯ್ಯ ತ್ವರಿಖತ್ತ್'ನ ಅನುಮತಿ ಪಡೆದಿದ್ದರು ತೇನು ಮುಸ್ಲಿಯಾರರು (ನ:ಮ),‌ ವಾಳಕುಳಂ ಅಬ್ದುಲ್ ಬಾರಿ ಮುಸ್ಲಿಯಾರ್ (ಖ:ಸಿ)ರಿಂದ ಹದ್ದಾದ್'ನ ಅನುಮತಿಯನ್ನೂ ಪಡೆದಿದ್ದ ಮಹಾನರು ಕಿಯಿಕ್ಕೆ ಪುನ್ನತ್ತ್ ಎಂಬಲ್ಲಿ ಮದ್ರಸತ್ತುಲ್ ಬನಾತ್ತ್ ಎಂಬ ಸಂಸ್ಥೆಯ ಸ್ಥಾಪನೆಗೆ ನೇತೃತ್ವವನ್ನೂ ವಹಿಸಿದರು.

ಮಹಾನರಿಗೆ ಅಬ್ದುಲ್ಲ ಹಾಜಿ ಮತ್ತು ಫಾತಿಮಾ ಎಂಬಿಬ್ಬರು ಮಕ್ಕಳಿದ್ದು ಜಮಾಲುದ್ದೀನ್ ಮುಸ್ಲಿಯಾರ್‌ರವರು ಮಹಾನರ‌ ಅಳಿಯ‌ (ಮಗಳ ಪತಿ) ಯಾಗಿದ್ದಾರೆ. ಮಕ್ಕಳು ಮತ್ತು ಅಳಿಯನಂತೆ ಮಹಾನುಭಾವರ ಮೊಮ್ಮೊಕ್ಕಳೂ ಸಹ ವಿದ್ವಾಂಸರೂ, ಸುನ್ನತ್ತ್ ಜಮಾಅತ್ತಿನ ಸಕ್ರಿಯ ಕಾರ್ಯಕರ್ತರೂ ಆಗಿದ್ದಾರೆ.

ತಮ್ಮ ಬದುಕಿನುದ್ದಕ್ಕೂ ಹಲವಾರು ಕಶ್ಪ್ ಕರಾಮತ್‌ಗಳನ್ನು  ತೋರಿಸುತ್ತಾ ಜನಸಾಮಾನ್ಯರ ಆಶಾಕಿರಣವಾಗಿದ್ದ ಆ ಮಹಾನುಭಾವರು ಹಿಜರಿ 1389 ದುಲ್'ಹಜ್ಜ್ 4ರ ಬುಧವಾರ (1970 ಫೆಬ್ರವರಿ 12) ಇಹಲೋಕ ತ್ಯಜಿಸಿದಾಗ ಮಹಾನರನ್ನು ಕೂರಿಯಾಡ್ ಜುಮಾ ಮಸೀದಿಯ ಸಮೀಪ ದಫನ ಮಾಡಲಾಯಿತು.

ದಾರಿ: ಕೂರಿಯಾಡ್ ಜುಮಾಅತ್ತ್ ಮಸೀದಿ, ಮಲಪ್ಪುರಂ
⚠⚠⚠⚠⚠⚠⚠⚠⚠

ಝಿಯಾರತ್ತ್ ಕೇಂದ್ರ 72. ಪುಲ್ಲಾರ 'ಶುಹದಾ'ಗಳು ಏರನಾಡು

*ಝಿಯಾರತ್ತ್ ಕೇಂದ್ರ​​​*
      ​👉 7⃣2⃣
➖➖➖➖➖➖➖➖➖
*ಪುಲ್ಲಾರ 'ಶುಹದಾ'ಗಳು*
*ಏರನಾಡು, ಮಲಪ್ಪುರಂ*
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
***********************
*ಪುಲ್ಲಾರ ಶುಹದಾಕಳ್*

ಸಾವಿರದ ನಾನೂರ ಐವತ್ತು ವರ್ಷಗಳ ಹಿಂದೆ ಅರೇಬಿಯಾದ ಮಣ್ಣಿನಲ್ಲಿ ಅಲ್ಲಾಹನ ರಸೂಲರಾದ ಸಯ್ಯದುನಾ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಅನುಯಾಯಿಗಳಾದ ಧೀರ ಸ್ವಹಾಬಾಗಳು ಅಲ್ಲಾಹನ ದೀನಿನ ಬದ್ದ ವೈರಿಗಳಾಗಿದ್ದ ಶತ್ರು ಸೈನ್ಯದ ವಿರುದ್ಧ ನಡೆಸಿದ ಪ್ರತಿರೇೂಧ ಹೇೂರಾಟದ ಸಮಯದಲ್ಲಿ ಅಲ್ಲಾಹನ ದೀನಿನ ಉಳಿವಿಗಾಗಿ ಸರ್ವಸ್ವವನ್ನೂ ಸಮರ್ಪಿಸಿದ್ದಷ್ಟೇ ಅಲ್ಲದೆ ಅನಿವಾರ್ಯವೆನಿಸಿದಾಗ ತಮ್ಮ ಪ್ರಾಣವನ್ನೇ ಸಮರ್ಪಿಸಿದ್ದ ಆ ತ್ಯಾಗ ಮತ್ತು ಬಲಿದಾನಗಳು  ನಮಗೆಲ್ಲ ಗೊತ್ತೇ ಇದೆ. ಆ ಮಹನೀಯರ ಹೆಸರು ಕೇಳುವಾಗ ಸತ್ಯ ವಿಶ್ವಾಸಿಯ ಮೈಮನ ಪುಳಕಗೊಳ್ಳುವುದಷ್ಟೇ ಅಲ್ಲದೆ ಪ್ರತಿ ವಿಶ್ವಾಸಿ ಹೃದಯವೂ ಆ ರಕ್ತಸಾಕ್ಷಿಗಳ ಬರ್ಕತ್'ಗಾಗಿ ಸದಾ ತುಡಿಯುತ್ತಲೇ ಇರುತ್ತದೆ. ಕಾರಣ ಅಂಥಹ ಧೀರ ಶುಹದಾಗಳ ಚರಿತ್ರೆ ಕೇಳಿ ಕಲಿಯುವುದಷ್ಟೇ ಅಲ್ಲ ಆ ಶುಹದಾಗಳ ನಾಮಸ್ಮರಣೆಯೂ ಸಹ ಪುಣ್ಯಕರವೆನ್ನುವುದರಲ್ಲಿ ಸಂಶಯವಿಲ್ಲ.

ಹಾಗೆ ಅಲ್ಲಾಹನ ದೀನನ್ನು ಶತ್ರುಗಳಿಂದ ಸಂರಕ್ಷಿಸಲು ಬದ್'ರ್, ಉಹ್ದ್, ಖಂದಕ್, ಖೈಬರ್ ಸೇರಿದಂತೆ ಹತ್ತು ಹಲವು ಯುದ್ಧಗಳಲ್ಲಿ ಭಾಗವಹಿಸಿ ಅಲ್ಲಾಹನ ಸಂಪ್ರೀತಿಗೆ ಪಾತ್ರರಾದ ಆ ಧೀರ ಶುಹದಾಗಳಿಂದ ಪ್ರೇರಿತರಾಗಿ ಅಲ್ಲಾಹನ ಭವನಗಳ ಸಂರಕ್ಷಣೆಗಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸುವುದರೊಂದಿಗೆ ತಮ್ಮ ಕೊನೆಯುಸಿರಿನ ತನಕವೂ ಶತ್ರುಗಳೊಂದಿಗೆ ಹೇೂರಾಡಿ ಭಾರತದ ಇಸ್ಲಾಮಿಕ್ ಇತಿಹಾಸದಲ್ಲಿ ಸ್ಥಾನಗಳಿಸಿ ಅಜರಾಮರರಾದ ಅಸಂಖ್ಯ ಧೀರ ಶುಹದಾಗಳನ್ನು ಕಂಡ ನಾಡು ಕೇರಳ.

ಅಲ್ಲಾಹನ ಪ್ರಪ್ರಥಮ ಸೃಷ್ಟಿಯೂ, ಸೃಷ್ಟಿಗಳಲ್ಲೇ ಅತ್ಯುತ್ತಮರೂ, ಅಲ್ಲಾಹನ ರಸೂಲರೂ, ಅಂಬಿಯಾಗಳ ನೇತಾರರೂ ಆದ ಸಯ್ಯದುನಾ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಅನುಯಾಯಿಗಳಾದ ಸ್ವಹಾಬಾಗಳ ಸ್ಥಾನ ಬಹಳ ಉನ್ನತವಾದುದು. ಹಾಗಾಗಿ ಅವರ ಚರಿತ್ರೆ ಕೇಳಿದರೂ ಸಹ ಬಹಳಷ್ಟು ಪುಣ್ಯ ಲಭ್ಯ. ಆದರೆ ನಂತರದ ಕಾಲಘಟ್ಟದಲ್ಲಿ ಅಲ್ಲಾಹನ ದೀನಿನ ಸಂರಕ್ಷಣೆಗಾಗಿ ಹೇೂರಾಡಿ ಹುತಾತ್ಮರಾದ ಶುಹದಾಗಳು ಸ್ವಹಾಬಾಗಳ ಸ್ಥಾನಕ್ಕೆ ತಲುಪಲಾರರಾದರೂ ಅವರ ಸ್ಥಾನಮಾನ ಚಿಕ್ಕದೇನೂ ಅಲ್ಲ ಹಾಗಾಗಿ ದೀನಿನ ಮಾರ್ಗದಲ್ಲಿ ಅಲ್ಲಾಹನಿಗಾಗಿ ಹೇೂರಾಡಿ ಮಡಿದ ಇತರ ಶುಹದಾಗಳ ಚರಿತ್ರೆ ಕೇಳಿ ಕಲಿತರೂ ಪುಣ್ಯ ಲಭ್ಯವೆಂಬುದರಲ್ಲಿ ಸಂಶಯವಿಲ್ಲ.

ಮಲಪ್ಪುರಂ ಜಿಲ್ಲೆಯ ಏರನಾಡು ಎಂಬಲ್ಲಿ ಹಿಜರಿ ಹನ್ನೊಂದನೇ ಶತಮಾನದ ಅಸುಪಾಸಿನಲ್ಲಿ ಸೃಷ್ಟಿಕರ್ತನಾದ ಅಲ್ಲಾಹನ ಆರಾಧನೆಗಾಗಿ ಸತ್ಯವಿಶ್ವಾಸಿಗಳು ಆ ಭಾಗದಲ್ಲಿ ನಿರ್ಮಿಸಿದ ಪ್ರಪ್ರಥಮ ಮಸೀದಿಯಾಗಿತ್ತು ಪುಲ್ಲಾರ ಮಸೀದಿ.

ಆ ಮಸೀದಿಯು ಹುಲ್ಲು ಹಾಸಿನ ಚಿಕ್ಕ ಗುಡಿಸಲಾಗಿದ್ದರೂ ಸಹ ಅಲ್ಲಾಹನ ಭವನವೆಂಬ ಗೌರವದಿಂದ ಸದ್ಗುಣ ಸಂಪನ್ನರಾಗಿದ್ದ ಪುಲ್ಲಾರ ನಿವಾಸಿಗಳು ಕಷ್ಟಪಟ್ಟು ಕಟ್ಟಿದ್ದ ಆ ಮಸೀದಿಯನ್ನು ಬಹಳ ಹಚ್ಚಿಕೊಂಡಿದ್ದರು.

ಕಾಲಕ್ರಮೇಣ ಅಂದರೆ 1152ರಲ್ಲಿ ಆ ಮಸೀದಿಯ ಜೀರ್ಣೇೂದ್ದಾರ ಮಾಡಬೇಕೆಂದು ತೀರ್ಮಾನಿಸಿದ ಪುಲ್ಲಾರದ ಮುಸ್ಲಿಮರು ಅರಿಬ್ರ ಮಲೆ ಎಂಬಲ್ಲಿ ಮಸೀದಿಯ ದುರಸ್ತಿಗೆ ತಕ್ಕನಾದ ಹಲಸಿನ ಮರವೊಂದನ್ನು ಆಯ್ಕೆ ಮಾಡಿದರು.

ಆದರೆ ಆ ಹಲಸಿನ ಮರದ ಕೊಡು ಕೊಳ್ಳುವಿಕೆಯ ತರ್ಕವು  ಮುಗಿಲುಮುಟ್ಟಿ ಕೊನೆಗದು ಘನಘೇೂರವಾದ ಯುದ್ಧವನ್ನೇ ಹುಟ್ಟುಹಾಕಿ ಅಪಾರ ಜೀವಹಾನಿಗೆ ಕಾರಣವಾಯಿತು.

ಕಾರಣ ಹಿಜರಿ 1151ರಲ್ಲಿ ನಾಡದೊರೆ ಪಾರನಂಬಿಯು ಕುಮ್ಮಕ್ಕಿನಿಂದ ವಲಿಯಂಙಾಡಿ ಜುಮಾ ಮಸೀದಿಗೆ (ಮಲಪ್ಪುರಂ ಪಡ) ಬೆಂಕಿ ಹಾಕಿ ಸುಡಲೆಂದು ಬಂದಿದ್ದ ಸಾವಿರಾರು ಸಂಖ್ಯೆಯ ಶತ್ರುಪಡೆಯೊಂದಿಗೆ ಮುಸ್ಲಿಮರು ನಡೆಸಿದ ಪ್ರತಿರೇೂಧ ಹೇೂರಾಟದಲ್ಲಿ  ನಲವತ್ತನಾಲ್ಕು ಮಂದಿ ಮುಸ್ಲಿಮರು ಹುತಾತ್ಮರಾದರೆ ಶತ್ರು ಪಡೆಯ ಒಂಬೈನೂರ ಐವತ್ತಕ್ಕೂ ಹೆಚ್ಚು ಮಂದಿ ಹತರಾಗಿದ್ದು ನೂರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಯನ್ನು ಅರಗಿಸಿಕೊಳ್ಳಲಾಗದೆ ಮುಸ್ಲಿಮರ ವಿರುದ್ಧ ಕೆಂಡಕಾರುತ್ತಿದ್ದ ಪಾರನಂಬಿಯು ಪುಲ್ಲಾರ ಮಸೀದಿಗೆ ಸಂಬಂಧಿಸಿದ ಹಲಸಿನ ಮರದ ತರ್ಕವನ್ನು ಮುಸ್ಲಿಮರ ವಿರುದ್ಧ ಸೇಡು ತೀರಿಸಲು ಬಳಸಿಕೊಂಡು ಹಲಸಿನ ಮರದ ಮಾಲಿಕನನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಿ ಅಗತ್ಯವಿರುವ ಎಲ್ಲ ನೆರವೂ ನೀಡುವುದಾಗಿ ಹೇಳಿದನಲ್ಲದೆ ಜನರನ್ನು ಸಂಘಟಿಸಿ ಮಸೀದಿಯನ್ನೇ ಸುಟ್ಟುಹಾಕಲು ಪ್ರೇರೇಪಿಸಿದನು.

ಪಾರನಂಬಿಯ ಕುಮ್ಮಕ್ಕಿನಿಂದ ಪ್ರೇರಿತರಾದ ಹಲವರು ಮಸೀದಿಯನ್ನು ಹೊಡೆದುರುಳಿಸಲು ಸಜ್ಜಾದರು. ಹಾಗೆ ಹಿಜರಿ 1152ರ ರಮಲಾನ್ 23ರಂದು ಮಸೀದಿಯನ್ನು ಹೊಡೆದುರುಳಿಸಲು ಶತ್ರುಗಳು ಬರುವರೆಂಬ ವದಂತಿ ಹಬ್ಬಿದ್ದರಿಂದ ಮಸೀದಿಯಲ್ಲಿ ಜಮಾಯಿಸಿದ ಮುಸ್ಲಿಂ ಜನತೆ ಮಸೀದಿಯ ಸಂರಕ್ಷಣೆಗಾಗಿ ಯಾವ ತ್ಯಾಗಕ್ಕೂ ಸಿದ್ಧರಾಗಿ ಮಸೀದಿಗೆ ಕಾವಲು ನಿಂತರು. ಬೆಳಗಿನ ಜಾವದ ತನಕ ಶತ್ರುಗಳ ಸುಳಿವೇ ಇರಲಿಲ್ಲ. ಆಮೇಲೆ ರಮಳಾನ್ ಮಾಸವಾದುದರಿಂದ ಸಹರಿಗಾಗಿ ಎಲ್ಲರೂ ತಮ್ಮ ತಮ್ಮ ಮನೆಯತ್ತ ನಡೆದರು.

ಸಹರಿಗಾಗಿ ಮುಸ್ಲಿಮರು ತಮ್ಮ ಮನೆಯತ್ತ ಹೊರಡುವ ಸಮಯಕ್ಕಾಗಿ ಕಾಯುತ್ತಿದ್ದ ಶತ್ರು ಪಡೆ ಈ ಅವಕಾಶವನ್ನು ಬಳಸಿಕೊಂಡು ಆಯುಧ ಸಮೇತ ಮಸೀದಿಯೊಳ ಹೊಕ್ಕು ಹೊರಗಿನಿಂದ ಯಾರೂ ಒಳಬರದಂತೆ ಭದ್ರವಾಗಿ ಎಲ್ಲ ಬಾಗಿಲುಗಳನ್ನೂ ಮುಚ್ಚಿದರು.

ಆಗ ಮಸೀದಿಯ ಹತ್ತಿರವಿರುವ ತಮ್ಮ ಮನೆಯಲ್ಲಿ ಆಹಾರ ಸೇವಿಸುತ್ತಿದ್ದ ಕೊಲಾಂತೇೂಡ್ ಪೇೂಕರ್ (ಖ.ಸಿ) ಎಂಬುವವರಿಗೆ ಬಹುಶಃ ಮಸೀದಿಯಿಂದ ಶತ್ರುಗಳ ಶಬ್ಧ ಕೇಳಿಸಿರಬಹುದು ಅಥವಾ ಶತ್ರುಗಳನ್ನು ಕಂಡಿರಬಹುದು. ಒಟ್ಟಿನಲ್ಲಿ ಶತ್ರುಗಳು ಮಸೀದಿಯೊಳಗೆ ನುಸುಳಿರುವ ಸುಳಿವರಿತ ಕೊಲಾಂತೇೂಡ್ ಪೇೂಕರ್ (ಖ.ಸಿ) ತಕ್ಷಣ ಎದ್ದು ಆಯುಧವನ್ನೆತ್ತಿಕೊಂಡು ಮಸೀದಿಯತ್ತ ಧಾವಿಸಿದರು.

ಶತ್ರುಗಳು ಮಸೀದಿಯ ಬಾಗಿಲುಗಳನ್ನೆಲ್ಲ ಮುಚ್ಚಿದ್ದರಿಂದ ಒಳಗೆ ಪ್ರವೇಶಿಸಲಾಗದ ಕಾರಣ ತಂತ್ರಶಾಲಿಯಾಗಿದ್ದ ಕೊಲಾಂತೇೂಡ್ ಪೇೂಕರ್ (ಖ.ಸಿ)ರವರು ನಿಧಾನವಾಗಿ ಔಲಿನತ್ತ ತೆರಳಿ ಔಲಿನಿಂದ ನೀರು ಹೊರ ಹೇೂಗುವ ಕಿಂಡಿಯ ಮೂಲಕ ಕಷ್ಟಪಟ್ಟು ನುಸುಳಿ ಮಸೀದಿಯ ಒಳಗೆ ಪ್ರವೇಶಿಸಿ, ಮೊದಲಿಗೆ ದೀಪ ನಂದಿಸಿದರು. ಅನಂತರ ಮರೆಯಲ್ಲಿ ನಿಂತು ಎದುರಿಗೆ ಸಿಕ್ಕಿದವರನ್ನೆಲ್ಲ ಇರಿಯಲಾರಂಭಿಸಿದರು. ಇರಿತಕ್ಕೊಳಗಾದವರ ಅರಚಾಟ ಕಿರುಚಾಟಗಳಿಂದ  ವಿಷಯವೇನೆಂದರಿಯದೆ ಕಂಗಾಲಾದ ಶತ್ರು ಪಡೆಯವನೊಬ್ಬ ಮುಸ್ಲಿಂ ಮುಸ್ಲಿಂ ಎಂದು ಕಿರುಚಿದನು.

ದೀಪ ಆರಿದಾಗಲೇ ವಿಚಲಿತರಾಗಿದ್ದ ಶತ್ರುಗಳು ಮುಸ್ಲಿಮರು ಬಂದರೆಂದು ತಿಳಿದಾಗ ಭಯಭೀತರಾಗಿ ಎದುರಿಗೆ ಸಿಕ್ಕಿದವರನ್ನೆಲ್ಲ ಕತ್ತಲೆಯಲ್ಲಿ ಪರಸ್ಪರ ಇರಿಯಲಾರಂಭಿಸಿದರು. ಇದರಿಂದ ಹಲವರಿಗೆ ಜೀವಹಾನಿ ಸಂಭವಿಸಿತು.

ಶತ್ರುಗಳು ಮಸೀದಿಗೆ ನುಗ್ಗಿರುವ ಸಂಗತಿಯನ್ನು ಊರಿನ ಜನರಿಗೆ ತಿಳಿಸುವ ಸಲುವಾಗಿ ಪೇೂಕರ್' (ಖ.ಸಿ)ರವರು ಆಝಾನ್ ಕರೆ ಕೊಡುವ ಎತ್ತರದ ದಿಬ್ಬ ಹತ್ತಿ ಸರ್ವಶಕ್ತಿಯನ್ನೂ ಕ್ರೂಡೀಕರಿಸಿ ಜೇೂರಾಗಿ ಆಝಾನ್ ಮೊಳಗಿಸಿದರು. ಅಲ್ಲಿಯ ತನಕ ಮಸೀದಿಯೊಳಗೆಷ್ಟು ಮುಸ್ಲಿಮರಿದ್ದಾರೆ ಏನು ಕತೆ ಎಂದೊಂದೂ ಅರಿಯದೆ ಪರಸ್ಪರ ತಮ್ಮವರನ್ನೇ ಇರಿಯುತ್ತಿದ್ದ ಶತ್ರುಗಳು ಆಝಾನ್ ಕರೆ ಮೊಳಗಿದಾಗ ಅತ್ತ ಧಾವಿಸಿ ಪೇೂಕರ್'(ಖ.ಸಿ)ರನ್ನು ಹಿಡಿದು ಅವರ ಶಿರಶ್ಛೇದನ ಮಾಡಿ ಮಸೀದಿಯ ಪಕ್ಕದ ಬಾವಿಗೆಸೆದರು.

ಆಝಾನ್ ಕರೆ ಕೇಳಿ ಮಸೀದಿಯತ್ತ ಧಾವಿಸಿ ಬಂದ ಚಂಬಕುಳಂ ಪಂದಪ್ಪಿಲಾಕಲ್ (ಖ.ಸಿ), ಚಪ್ಪತ್ತೇೂಡಿ ಪಳ್ಳಿಯಾಳಿತೊಡಿ (ಖ.ಸಿ), ತುಡಂಙಿ ಸೂಫಿ (ಖ.ಸಿ), ಕೇೂಯಾಮುಟ್ಟಿ, ಕುಟ್ಟಿಯಮ್ಮು (ಖ.ಸಿ), ಮುಹ್ಯುದ್ದೀನ್ (ಖ.ಸಿ) ಮತ್ತಿತರರು  ಮಸೀದಿಯೊಳಗಿದ್ದ ಶತ್ರುಗಳನ್ನು ಸದೆಬಡಿಯಲಾರಂಭಿಸಿದರು. ಈ ಕಾಳಗದಲ್ಲಿ ಹನ್ನೆರಡು ಮಂದಿ ಮುಸ್ಲಿಮರು ಹುತಾತ್ಮರಾದರೆ ಶತ್ರುಗಳೆಡೆಯಿಂದ ಅಪಾರ ಜೀವಹಾನಿ ಸಂಭವಿಸಿತ್ತು.

ಅಳಿದುಳಿದ ಶತ್ರುಗಳು ಹುಲ್ಲುಹಾಸಿನ ಆ ಮಸೀದಿಗೆ ಬೆಂಕಿಯಿಟ್ಟು ಪಲಾಯನ ಮಾಡಿದರು.

ಮರುದಿನ ಕಾಡ್ಗಿಚ್ಚಿನಂತೆ ಈ ಸುದ್ದಿ ಊರಿಡೀ ಹರಡಿತು. ವಿಷಯ ತಿಳಿದ ಜನ ಮಸೀದಿಯಲ್ಲಿ ಜಮಾಯಿಸಿ ಮಸೀದಿಯೊಳಗೆ ಮತ್ತು ಹೊರಗಿದ್ದ ಹನ್ನೊಂದು ಶುಹದಾಗಳ ಮೃತ ಶರೀರವನ್ನು ಮಸೀದಿಯ ಎದುರು ದಫನ ಮಾಡಿದರಾದರೂ ಶತ್ರುಗಳು ಕೊಂದು ಬಾವಿಗೆಸೆದಿದ್ದ ಪೇೂಕರ್'ರವರ ಪಾರ್ಥೀವ ಶರೀರ ಮಾತ್ರ ಸಿಗಲಿಲ್ಲ.

ಮರುದಿನ ರಾತ್ರಿ ಅಲ್ಲಿನ ಖಾಝಿಯಾಗಿದ್ದ ಒಟ್ಟಕತ್ತ್ ಪಯ್ಯನಯಿ ಮರಕಾರ್ ಮುಸ್ಲಿಯಾರ್ (ಖ.ಸಿ)ರೊಂದಿಗೆ ಆ ಊರಿನವರು ಕೊಲಾಂತೇೂಡ್ ಪೇೂಕರ್ (ಖ.ಸಿ)ರವರು ಮಸೀದಿಯ ಪಶ್ಚಿಮಕ್ಕಿರುವ ಬಾವಿಯೊಳಗಿದ್ದಾರೆ ಎನ್ನುತ್ತಿರುವುದಾಗಿ ಕನಸು ಕಂಡಿತು.

ಮರುದಿನ ಬೆಳಿಗ್ಗೆ ಖಾಝಿಯವರು ಬಾವಿಯತ್ತ ಹೇೂಗಿ ನೇೂಡಿದಾಗ ಪೇೂಕರ್ (ಖ.ಸಿ)ರವರ ಶರೀರ ಆ ಬಾವಿಯಲ್ಲಿತ್ತು. ನಂತರ ಆ ಮಹಾನರ ಶರೀರವನ್ನು ಬಾವಿಯಿಂದ ಹೊರತೆಗೆದು ಮಸೀದಿಯ ಪಶ್ಚಿಮ ಭಾಗದಲ್ಲಿ ದಫನ್ ಮಾಡಲಾಯಿತು.

ಅಲ್ಲಾಹನ ಭವನದ ಸಂರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಜಿಸಿ ತಮ್ಮ ಪ್ರಾಣವನ್ನೇ ಬಲಿದಾನಗೈದ ಆ ಧೀರ ಶುಹದಾಗಳ ಸ್ಮರಣಾರ್ಥ ಪ್ರತಿ ವರ್ಷವೂ ರಮಳಾನ್ 22 ರಂದು ಅನುಸ್ಮರಣಾ ಸಭೆ ಮತ್ತು ಅನ್ನದಾನ ಏರ್ಪಡಿಸಲಾಗುತ್ತದೆ.

🚕: ಮಂಜೇರಿ, ಏರನಾಡ್, ಪುಲ್ಲಾರ.
🌀🌀🌀🌀🌀🌀🌀🌀


ಝಿಯಾರತ್ತ್ ಕೇಂದ್ರ 71. ಶೈಖುನಾ ನರಿಕ್ಕೋಡ್ ಉಪ್ಪಾಪ್ಪ (ನ:ಮ)

* #ಝಿಯಾರತ್ #ಕೇಂದ್ರ​​​*
            7⃣1⃣
➖➖➖➖➖➖➖➖
*ನರಿಕ್ಕೋಡ್ ಉಸ್ತಾದ್ ಅಥವಾ ಶೈಖುನಾ ಮುಹಮ್ಮದ್ ಮುಸ್ಲಿಯಾರ್ (ಖ.ಸಿ.) ನರಿಕ್ಕೋಡ್, ತಳಿಪ್ಪರಂಬ್, ಕಣ್ಣೂರು.*
***********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪

✍ ಗಫೂರ್ ಬಾಯಾರ್
***********************
ಕೇರಳದ ಕಣ್ಣೂರು ಜಿಲ್ಲೆಯ ನರಿಕ್ಕೋಡ್ ಎಂಬ ಚಿಕ್ಕ ಗ್ರಾಮದಲ್ಲಿ ಹುಟ್ಟಿ ಬೆಳೆದು ಬಾಲ್ಯದಿಂದಲೇ ಇಲಾಹಿ ಸ್ಮರಣೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಅಲ್ಲಾಹನ ಇಷ್ಟದಾಸರ ಸಾಲಿಗೆ ಸೇರಿದ ಮಹಾತ್ಮರಲ್ಲೊಬ್ಬರಾಗಿದ್ದಾರೆ ಶೈಖುನಾ ಮುಹಮ್ಮದ್ ಮುಸ್ಲಿಯಾರ್ (ಖ.ಸಿ) ಅಥವಾ ನರಿಕ್ಕೇೂಡು ಉಪ್ಪಾಪ.

ಆರು ದಶಕಗಳ ಕಾಲದ ತಮ್ಮ ಬದುಕಿಗೆ ಇಲಾಹೀ ಸ್ಮರಣೆ ಮತ್ತು ಪ್ರವಾದಿ ﷺ ಪ್ರೇಮದ ಮೆರುಗು ನೀಡುವುದರೊಂದಿಗೆ ಆಧ್ಯಾತ್ಮಿಕ ರಂಗದ ನಂಟು ಗಳಿಸಿದ ನರಿಕ್ಕೇೂಡು ಉಸ್ತಾದ್ (ಖ.ಸಿ)ರವರ ಹೆಸರು ಕೇಳದವರು ಕೇರಳ, ಕರ್ನಾಟಕಗಳಲ್ಲಿ ವಿರಳ.

ಮಮ್ಮುಟ್ಟಿ ಮುಸ್ಲಿಯಾರ್ (ನ.ಮ)ರ ಬಳಿ ವ್ಯಾಸಂಗ ನಡೆಸುತ್ತಿದ್ದ ನರಿಕ್ಕೋಡು ಉಸ್ತಾದರ ಹದಿನಾರನೇ ಪ್ರಾಯದಲ್ಲೇ ಸೂಫಿಝಮ್'ನ ಕುರುಹುಗಳನ್ನು ಕಂಡ ಗುರುವರ್ಯ ಮಮ್ಮುಟ್ಟಿ ಮುಸ್ಲಿಯಾರ್ (ನ.ಮ)ರವರು ತಮ್ಮ ಶಿಷ್ಯನಿಗೆ ಎಲ್ಲ ರೀತಿಯ ಪ್ರೇೂತ್ಸಾಹ ನೀಡುವುದರೊಂದಿಗೆ ತಮ್ಮ ಶಿಷ್ಯನ ತಂದೆಯವರಾದ ನುಂಜೇರಿ ಮಮ್ಮುಟ್ಟಿ ತಂಙಳ್ (ಖ.ಸಿ)ರನ್ನು ಭೇಟಿಯಾಗಿ ಮಗನನ್ನು ದ್ಸಿಕ್ರ್'ನ ಹಾದಿಯಲ್ಲಿ ಮುನ್ನಡೆಯಲು ಪ್ರೇೂತ್ಸಾಹ ನೀಡಲು ಸೂಚಿಸಿದರು.

ಅನಂತರ ತಮ್ಮ ಮನೆಯಂಗಳದಲ್ಲೇ ಚಿಕ್ಕದೊಂದು ಮಸೀದಿ ನಿರ್ಮಿಸಿದ ನರಿಕ್ಕೋಡ್ ಉಸ್ತಾದ್ (ಖ.ಸಿ)ರವರು  ಸಂಪೂರ್ಣವಾಗಿ ತಮ್ಮನ್ನು ಇಲಾಹೀ ಸ್ಮರಣೆಯಲ್ಲಿ ತೊಡಗಿಸಿಕೊಂಡಿದ್ದರು.

ಮಸೀದಿಯಲ್ಲಿ ಸೇವೆ ಸಲ್ಲಿಸುವಾಗ ಆ ಭಾಗದ ಜನತೆಯಿಂದ ಪ್ರೀತಿ ಮತ್ತು ಆತ್ಮೀಯತೆಯಿಂದ 'ಮುಕ್ರಿಕ' ಎಂದು ಕರೆಸಿಕೊಳ್ಳುತ್ತಿದ್ದ ಉಸ್ತಾದರು ಬದುಕಿನ ಜಂಜಾಟದಲ್ಲಿ ಬಳಲಿ ಬೆಂಡಾದ ಜನಸಮೂಹಕ್ಕೆ ಸಾಂತ್ವನ ಹೇಳುತ್ತಾ ಜನಸಾಮಾನ್ಯರ ಆಶಾಕಿರಣವಾಗಿದ್ದರು.

ಹಾಗಾಗಿ ಮಹಾನರ ಪ್ರಾರ್ಥನೆಗಾಗಿ ವಿವಿಧೆಡೆಗಳಿಂದ ವಿದ್ವಾಂಸರಷ್ಟೇ ಅಲ್ಲ, ಜನಸಾಮಾನ್ಯರೂ ಸಹ ಜಾತಿ ಮತ ಬೇಧವಿಲ್ಲದೆ ಮಹಾನರತ್ತ ಪ್ರವಾಹದಂತೆ ಹರಿದು ಬರಲಾರಂಭಿಸಿದ್ದರು.

ತಮ್ಮ ಮನೆಯಂಗಳದಲ್ಲಿ ತಾವೇ ನಿರ್ಮಿಸಿದ ರಿಫಾಈ ಮಸ್ಜಿದ್'ನಲ್ಲಿ ಮಹಾನರ ನೇತೃತ್ವದಲ್ಲಿ ಪ್ರತಿ ಗುರುವಾರ ಲುಹರ್ ನಮಾಝ್'ನ ನಂತರ ನಡೆಯುತ್ತಿದ್ದ ಜಲಾಲಿಯ್ಯಾ ರಾತೀಬ್'ನ ವೇದಿಕೆಯಲ್ಲೇ 2011ರ ರಮಳಾನ್ ಹನ್ನೊಂದರ ಗುರುವಾರದಂದು ಮಹಾನರು ತನ್ನ 73ನೇ ವಯಸ್ಸಿನಲ್ಲಿ ಇಹಲೇೂಕಕ್ಕೆ ವಿದಾಯ ಹೇಳಿದರು.

ಜನಸಾಮಾನ್ಯರಿಗೆ ಮಹಾನರ ಆಧ್ಯಾತ್ಮಿಕ ಸಿದ್ಧಿಯ ಮಹತ್ವದ ಕುರಿತು ಅರಿವಾದುದು ಮಹಾನರ ವಿಯೇೂಗದ ನಂತರವಾಗಿತ್ತು.

ಕಾರಣ ಬದುಕಿನ ಏಳುಬೀಳುಗಳಿಗೆ ಪ್ರಾರ್ಥನೆ ಮತ್ತು ಸಾಂತ್ವನದ ಮೂಲಕ ಪರಿಹಾರ ಸೂಚಿಸುತ್ತಿದ್ದ ಮಹಾನರ ವಿಯೇೂಗವು ತುಂಬಲಾರದ ನಷ್ಟವೆನ್ನುವುದನ್ನು ಮನಗಂಡ ಜನಸಮೂಹವು, ಆ ಸೂಫಿವರ್ಯರು ಅಂತ್ಯವಿಶ್ರಮ ಪಡೆಯುತ್ತಿರುವ ಅವರ ಆಧ್ಯಾತ್ಮಿಕ ಕರ್ಮ ಸಾಫಲ್ಯತೆಗೆ ಸಾಕ್ಷಿಯಾಗಿದ್ದ ನರಿಕ್ಕೋಡಿಗೆ ಸಾಂತ್ವನದ ನಿರೀಕ್ಷೆಯಿಂದ ಇಂದಿಗೂ ಆಗಮಿಸುತ್ತಲೇ ಇದ್ದಾರೆ.

ಶೈಖುನಾ ನರಿಕ್ಕೋಡ್ ಉಸ್ತಾದರ ವಾರ್ಷಿಕ ಆಂಡ್ ನೇರ್ಚೆ ಪ್ರತಿ ರಮಳಾನ್ 10 ಮತ್ತು 11ರಂದು ನಡೆಯುತ್ತದೆ.

ಸರ್ವಶಕ್ತನಾದ ಅಲ್ಲಾಹನು ಅವನ ಈ ಇಷ್ಟದಾಸರ ಹಕ್ಕ್, ಜಾಹ್, ಬರ್ಕತ್ತಿನಿಂದ ನಮ್ಮೆಲ್ಲರನ್ನೂ ಇಹಪರ ವಿಜಯಿಗಳ ಸಾಲಿನಲ್ಲಿ ಸೇರಿಸಲಿ, ಆಮೀನ್.

ದಾರಿ: ರಿಫಾಯಿ ಮಸ್ಜಿದ್ ನರಿಕ್ಕೋಡ್ ತಳಿಪ್ಪರಂಬ್, ಕಣ್ಣೂರು.
🌱🌱🌱🌱🌱🌱🌱🌱

ಝಿಯಾರತ್ತ್ ಕೇಂದ್ರ 70/02. ವಲಿಯುಲ್ಲಾಹಿ ವಡಕ್ಕರ ಮುಹಮ್ಮದ್ ಹಾಜಿ (ಖ:ಸಿ)

*ಝಿಯಾರತ್ತ್ ಕೇಂದ್ರ​​​*
          7⃣0⃣
➖➖➖➖➖➖➖➖
*ವಲಿಯ್ಯುಲ್ಲಾಹಿ ವಡಗರ ಮುಹಮ್ಮದ್ ಹಾಜಿ ತಂಙಳ್ (ಖ.ಸಿ.) ಚೆರುವಣ್ಣೂರ್*

👉👉 *ಭಾಗ - 02*
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
***********************

ಒಮ್ಮೆ ಹರುಕು ಮುರುಕಾಗಿದ್ದ ವಸ್ತ್ರ ಧರಿಸಿ ಯಾತ್ರಾ ನಿಮಿತ್ತ ರೈಲು ಹತ್ತಿದ್ದ ಮಹಾನರನ್ನು ರೈಲಿನ ಟಿಕೆಟ್ ಪರಿಶೇೂಧಕ ತಡೆದು ದಾರಿ ಮಧ್ಯೆ (ಮುಂದಿನ ಸ್ಟೇಷನ್'ನಲ್ಲಿ) ರೈಲಿನಿಂದ ಕೆಳಗಿಳಿಸಿದಾಗ ಮರುಮಾತನಾಡದ ಮಹಾನರು ಅನತಿ ದೂರದಲ್ಲಿದ್ದ ಮರವೊಂದರ ನೆರಳಿನಲ್ಲಿ ಕುಳಿತರು.

ಆದರೆ ಮಹಾನರನ್ನು ಕೆಳಗಿಳಿಸಿದ ನಂತರ ರೈಲು ಮುಂದೆ ಚಲಿಸದೆ ಗರಬಡಿದಂತೆ ನಿಂತುಬಿಟ್ಟಿತು. ಆ ಸ್ಟೇಷನ್ನಿನ ತಾಂತ್ರಿಕ ತಂತ್ರಜ್ಞರು ರೈಲಿನ ಇಂಜಿನನ್ನು ಪರೀಕ್ಷಿಸಿದಾಗ ರೈಲಿನ ಇಂಜಿನ್'ನಲ್ಲಿ ಯಾವ ತಕರಾರೂ ಕಾಣದಾದಾಗ ಆ ಟಿಕೆಟ್ ಪರಿಶೇೂಧಕನು ಮರದ ಬುಡದಲ್ಲಿ ಕುಳಿತಿರುವ ಶೈಖುನಾರ ಬಳಿ ತೆರಳಿ ಕ್ಷಮೆ ಯಾಚಿಸಿ ರೈಲಿನಲ್ಲಿ ಯಾತ್ರೆ ಮುಂದುವರಿಸುವಂತೆ ವಿನಂತಿಸಿದನು. ಟಿಕೆಟ್ ಪರಿಶೇೂಧಕನ ವಿನಂತಿಯ ಮೇರೆಗೆ ಮಹಾನರು ರೈಲು ಹತ್ತಿದ ನಂತರ ಅದ್ಭುತವೆಂಬಂತೆ ರೈಲು ಮುಂದೆ ಚಲಿಸಿತು. ಈ ಘಟನೆ ಕಾಡ್ಗಿಚ್ಚಿನಂತೆ ನಾಡಿನೆಲ್ಲೆಡೆ ಹರಡಿದ ಕಾರಣ ಶೈಖುನಾರ ಪ್ರಸಿದ್ಧಿಯೂ ಹೆಚ್ಚಿತು.

ಒಮ್ಮೆ ಶೈಖುನಾರ ಮನೆಯ ಪಕ್ಕದಲ್ಲಿ ಬಾವಿ ತೇೂಡುವ ಕೆಲಸ ನಡೆಯುತ್ತಿತ್ತು. ಬಾವಿಯ ಕೆಳಗೆ ಬಂಡೆಕಲ್ಲಿದ್ದುದರಿಂದ ಸಿಡಿಮದ್ದಿನಿಂದ ಅದನ್ನು ಒಂದೆರಡು ಬಾರಿ ಒಡೆದಿದ್ದರು. ನಂತರ ಕೆಲಸ ಮುಂದುವರಿಸುತ್ತಾ ಬಂಡೆ ಒಡೆಯಲು ಇಟ್ಟಿದ್ದ ಸಿಡಿಮದ್ದು ಸಿಡಿಯಲಿಲ್ಲ. ಎಷ್ಟು ಪ್ರಯತ್ನಿಸಿದರೂ ಸಿಡಿಮದ್ದು ಸಿಡಿಯದಾದಾಗ ಕೆಲಸ ಮಾಡಿಸುತ್ತಿದ್ದ ಇಬ್ರಾಹಿಂ ಎಂಬ ವ್ಯಕ್ತಿ ಶೈಖುನಾರ ಬಳಿ ತೆರಳಿ ವಿಷಯ ತಿಳಿಸಿದಾಗ ಬಂಡೆ ಒಡೆಯಲು ನೀವು ಸಿಡಿಸಿದ ಸಿಡಿಮದ್ದಿನಿಂದಾಗಿ ನನ್ನ ಮನೆ ಮತ್ತು ಮಸೀದಿಯ ಹಂಚಿಗೆ ಹಾನಿಯಾಗಿದೆಯಲ್ಲವೇ ಎಂದರು. ಆಗ ಇಬ್ರಾಹಿಂರವರು ಅದನ್ನು ತಾವು ದುರಸ್ತಿ ಮಾಡಿ ಕೊಡುತ್ತೇನೆಂದಾಗ ಶೈಖುನಾರವರು ಹಾಗಾದರೆ ಆ ಸಿಡಿಮದ್ದು ಸಿಡಿಯಲಿ ಎಂದರು. ನಂತರ ಬಾವಿ ತೇೂಡುವ ಕೆಲಸ ಯಾವ ಅಡೆತಡೆಯೂ ಇಲ್ಲದೆ ಮುಂದುವರಿಯಿತು.

ಒಮ್ಮೆ ಶೈಖುನಾ ಮರ್'ಹೂಂ ಎಂ.ಎ. ಉಸ್ತಾದ್ (ನ.ಮ.) ಚೆರುವಣ್ಣೂರ್'ಗೆ ತೆರಳುತ್ತಿದ್ದಾಗ ದಾರಿಮಧ್ಯೆ ಅವರು ಪ್ರಯಾಣಿಸುತ್ತಿದ್ದ ಕಾರು ಕೆಟ್ಟು ನಿಂತಿತು. ಅದನ್ನು ದುರಸ್ತಿ ಮಾಡಲು ಹತ್ತು ನಿಮಿಷಗಳಷ್ಟು ಶ್ರಮಿಸಿಯೂ ಫಲ ಕಾಣದೆ ಚಾಲಕ ಕೈಕೈ ಹಿಸುಕಿಕೊಳ್ಳುತ್ತಿದ್ದ. ಆಗ ಎಂ.ಎ. ಉಸ್ತಾದರು ವಲಿಯ್ಯುಲ್ಲಾಹಿ ವಡಗರ ಮುಹಮ್ಮದ್ ಹಾಜಿ ತಂಙಳ್ (ಖ.ಸಿ)ರವರ ಹೆಸರಿನಲ್ಲಿ ಫಾತಿಹ ಓದಿ ಹದಿಯಾ ಮಾಡಿ ಮೊದಲಿಗೆ ನೇರವಾಗಿ ಶೈಖುನಾರ ಮಖಾಂಗೆ ಝಿಯಾರತ್'ಗೆ ಹೇೂಗುತ್ತೇನೆಂದು ಸಂಕಲ್ಪಿಸಿ ಚಾಲಕನೊಂದಿಗೆ ಕಾರು ಸ್ಟಾರ್ಟ್ ಮಾಡಲು ಹೇಳಿದರು. ಆಶ್ಚರ್ಯ....! ಬಹಳ ಹೊತ್ತಿನಿಂದ ಶ್ರಮಿಸಿದರೂ ರಿಪೇರಿಯಾಗದ ವಾಹನ ಯಾವ ತೊಂದರೆಯೂ ಇಲ್ಲದೆ ಸ್ಟಾರ್ಟಾಗಿ ಮುಂದೆ ಚಲಿಸಿತು.

ಸುನ್ನಿ ಸಮುದಾಯದ ಏಳಿಗೆಗೆ ಅವಿಶ್ರಾಂತವಾಗಿ ದುಡಿಯುತ್ತಿದ್ದ ಮಹಾನರು ಸಮಸ್ತದ ವಿದ್ವಾಂಸರ ನಡುವೆ ಅಭಿಪ್ರಾಯ ವ್ಯತ್ಯಾಸ ತಲೆದೇೂರಿದಾಗಲೆಲ್ಲ ಸತ್ಯದ ಕಡೆ ನಿಂತು ವಿದ್ವಾಂಸರಿಗೆ ಮತ್ತು ಕಾರ್ಯಕರ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. 1998ರಲ್ಲಿ ತಿರೂರಂಙಾಡಿಯ ಧರ್ಮಪುರಿಯಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿದ್ದ ಶೈಖುನಾರು ಎಸ್ಸೆಸ್ಸೆಫ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ *"ದೀನೀ ಸೇವೆಯಲ್ಲಿ  ತೊಡಗಿಸಿಕೊಳ್ಳುವ ನೀವು ದೀನೀ ಪ್ರಬೋಧನೆ ನಡೆಸಲು ಯಾರಿಗೂ ಭಯಪಡದೆ ಮುನ್ನಡೆಯಿರಿ, ನಿಮಗೆ ಅರ್ಶಿನ ನೆರಳಿದೆ" ಎಂದಿರುವ ಆ ಹಿತವಚನವು ಸುನ್ನೀ ಕಾರ್ಯಕರ್ತರಿಗೆ ಸದಾಕಾಲಕ್ಕೂ ಪ್ರೇೂತ್ಸಾಹ ಮತ್ತು ಪ್ರೇರಣೆಯಾಗಿದೆ.*

ಮಹಾನರೇ ಸಂಘಟಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ತಾಜುಲ್ ಉಲಮಾ ಉಳ್ಳಾಲ ತಂಙಳ್ (ಖ.ಸಿ) ರೊಂದಿಗೆ ಸಭೆಯನ್ನುದ್ದೇಶಿಸಿ ಮಾತನಾಡುವಂತೆ ಸೂಚಿಸಿದರು. ಕೊನೆಗೆ ಉಳ್ಳಾಲ ತಂಙಳ್ (ಖ.ಸಿ) ರವರಿಗೆ ಸ್ವರ್ಗವಿದೆ ಎಂದರು. ಈ ಮಾತು ಕೇಳಿದ ತಾಜುಲ್ ಉಲಮಾ ತಂಙಳರು (ಖ:ಸಿ) ನನ್ನ ಜೊತೆಗಿರುವವರಿಗೂ ಸ್ವರ್ಗ ಲಭಿಸಬೇಕೆಂದಾಗ ಸತ್ಯವಿಶ್ವಾದೊಂದಿಗೆ ತಖ್ವಾದಿಂದ ಬದುಕುತ್ತಾ ತಮ್ಮನ್ನು ಅನುಸರಿಸುವ ತಮ್ಮ ಜೊತೆಗಿರುವವರಿಗೂ  ಸ್ವರ್ಗವಿದೆ ಎಂದರು.

ಸಮಾಜ ಸೇವೆ ಮತ್ತು ಆಧ್ಯಾತ್ಮಿಕ ಪರಿಶ್ರಮದ ಸಲುವಾಗಿ ಹಲವಾರು ವರ್ಷಗಳ ಕಾಲ ಮನೆಯಿಂದ ದೂರವಿದ್ದ ಮಹಾನರು ಊರಿಗೆ ಹಿಂದಿರುಗಿದ ನಂತರ ತಮ್ಮ ತಾಯಿಯ ಖಬರನ್ನು ಮಕ್ಬರವನ್ನಾಗಿಸಿ ಅಲ್ಲಿ ಮಸೀದಿಯನ್ನೂ ನಿರ್ಮಿಸಿದರು.

ಐತಿಹಾಸಿಕ ಮಹತ್ವದಿಂದ ಕೂಡಿದ *ಮಿಅ್'ರಾಜ್ ನೇರ್ಚೆಗೆ* ಮುನ್ನುಡಿಯಿಡುವುದರೊಂದಿಗೆ *ಶಾದುಲಿ ಮಜ್ಲಿಸನ್ನು* ಅದರ ಮಹತ್ವದೊಂದಿಗೆ ಸಮುದಾಯಕ್ಕೆ ಪರಿಚಯಿಸಿ ತಿರೂರ್ ವಾಣಿಯನ್ನೂರಿನ ಸಮೀಪ ಪ್ರತಿ ಅರಬಿಕ್ ತಿಂಗಳ ಇಪ್ಪತ್ತರಂದು ಶಾದುಲಿ ಮಜ್ಲಿಸ್ ಸಂಘಟಿಸಿ ಕೇರಳದ ಆಧ್ಯಾತ್ಮಿಕ ರಂಗಕ್ಕೆ ಮೆರುಗು ನೀಡಿದ್ದರು. (ಈ ಶಾದುಲಿ ಮಜ್ಲಿಸ್ ಇಂದಿಗೂ ಬಹಳ ಹೆಸರುವಾಸಿಯಾಗಿದ್ದು ಅರಬಿಕ್ ತಿಂಗಳ ಇಪ್ಪತ್ತರಂದು ಈ ಮಜ್ಲಿಸ್ ಮುಅ್'ಮಿನ್'ಗಳಿಂದ ತುಂಬಿ ತುಳುಕುತ್ತಿರುತ್ತದೆ)

ಸುನ್ನತ್ ಜಮಾಅತಿನ ಏಳಿಗೆಗಾಗಿ ಶ್ರಮಿಸುವ ಯುವ ಸಮೂಹಕ್ಕೆ ಸದಾ ಪ್ರೋತ್ಸಾಹ ಮತ್ತು ಪ್ರೇರಣೆ ನೀಡುತ್ತಾ ನೂರು ವರ್ಷಕ್ಕಿಂತಲೂ ಹೆಚ್ಚು ಕಾಲ ಮಾದರೀಯೇೂಗ್ಯವಾದ ಜೀವನ ನಡೆಸಿದ ಶೈಖುನಾ ವಡಗರ ಮುಹಮ್ಮದ್ ಹಾಜಿ ತಂಙಳ್ (ಖ.ಸಿ.)ರವರು 1998 ಜುಲೈ 23 ರಂದು ಅಂದರೆ ಹಿಜರಿ 1419 ರಬೀಉಲ್ ಅವ್ವಲ್ 29 ರಂದು ಬೆಳಿಗ್ಗೆ ಕಲ್ಲಿಕೇೂಟೆಯ ನಡಕ್ಕಾವ್ ರಾಹತ್ತ್ ಮಂಝಿಲ್'ನಲ್ಲಿ ಇಹಲೇೂಕಕ್ಕೆ ವಿದಾಯ ಹೇಳಿದರು. ಶೈಖುನಾರೇ ಸ್ವತಃ ನಿರ್ಮಿಸಿದ್ದ ಚೆರುವಣ್ಣೂರ್ ಮಲಯಿಲ್ ಮಖಾಮಿನಲ್ಲಿ ಈಗ ಅಂತ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ.

*(ಮುಗಿಯಿತು)*
💎💎💎💎💎💎💎

ಝಿಯಾರತ್ತ್ ಕೇಂದ್ರ 70/01 ವಲಿಯುಲ್ಲಾಹಿ ವಡಕರ ಮುಹಮ್ಮದ್ ಹಾಜಿ (ಖ:ಸಿ)

*#ಝಿಯಾರತ್_ಕೇಂದ್ರ​​​*
            7⃣0⃣
   
➖➖➖➖➖➖➖➖
*ವಲಿಯ್ಯುಲ್ಲಾಹಿ ವಡಗರ ಮುಹಮ್ಮದ್ ಹಾಜಿ ತಂಙಳ್ (ಖ.ಸಿ.) ಚೆರುವಣ್ಣೂರ್, ಪೇರಾಂಬ್ರ*

👉🏼 *ಭಾಗ - 01*
***********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪

✍ ಗಫೂರ್ ಬಾಯಾರ್
***********************

ಸೃಷ್ಟಿಕರ್ತನಾದ ಅಲ್ಲಾಹನ ಕೋಟ್ಯನುಕೋಟಿ ಸೃಷ್ಟಿಗಳಲ್ಲೊಂದಾದ ಮಾನವ ಸಮೂಹವು ಇಬ್ಲೀಸ್ ಮತ್ತು ಅವನ ಸಂತತಿಗಳಾದ ಪಿಶಾಚಿಗಳ ಪ್ರೇರಣೆಯಿಂದ ಶಿರ್ಕ್'ಗಳ ಮೊರೆ ಹೇೂದಾಗ ಮನುಷ್ಯ ಸಮೂಹವನ್ನು ಮತ್ತೆ ಸನ್ಮಾರ್ಗದ ಹಾದಿಗೆ ತಂದು ಈ ಲೇೂಕದಲ್ಲಿ ತೌಹೀದನ್ನು ನೆಲೆನಿಲ್ಲಿಸುವ ಸಲುವಾಗಿ ಅಲ್ಲಾಹನು ಹಂತ ಹಂತವಾಗಿ ಲಕ್ಷಾಂತರ ಪ್ರವಾದಿಗಳನ್ನು ನಿಯೇೂಜಿಸಿದನು.

ಆದಿಪಿತ ಆದಂ ನೆಬಿ ಅಲೈಹಿಸ್ಸಲಾಮರಿಂದ ಆರಂಭವಾದ ಈ ಪ್ರವಾದಿ ಪರಂಪರೆಯು ಸಯ್ಯಿದುನಾ ಮುತ್ತು ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರೊಂದಿಗೆ ಕೊನೆಯಾಯಿತು. ಪ್ರವಾದಿ ಪರಂಪರೆ ಕೊನೆಯಾದರೂ ಜನಸಮೂಹವನ್ನು ಸನ್ಮಾರ್ಗದ ಹಾದಿಯತ್ತ ಆಹ್ವಾನಿಸುವ ದೌತ್ಯ ಅಂತ್ಯದಿನದ ತನಕ ಮುಂದುವರಿಯಬೇಕು ತಾನೇ? ಆ ಪವಿತ್ರ ದೌತ್ಯವನ್ನು ಅಲ್ಲಾಹನು ತನ್ನ ಇಷ್ಟದಾಸರಾದ ಸತ್ಪುರುಷರಿಗೆ ವಹಿಸಿಕೊಟ್ಟಿದ್ದಾನೆ. ಅವರೇ ಸಂತಶ್ರೇಷ್ಠರಾದ ಔಲಿಯಾಗಳು.

ಪ್ರವಾದಿಗಳಿಗೆ ಮುಅ್'ಜಿಝತ್ ಎಂಬ ಹೆಸರಿನಲ್ಲಿ ನಮ್ಮ ಕಲ್ಪನೆಗೂ ನಿಲುಕದ ಅತಿಮಾನುಷಿಕ ಶಕ್ತಿಯನ್ನು ಸೃಷ್ಟಿಕರ್ತನಾದ ಅಲ್ಲಾಹನು ನೀಡಿದ್ದಾನೆ. ಅದೇ ರೀತಿ ಔಲಿಯಾಗಳಿಗೂ ಸಹ ಕರಾಮತ್ ಎಂಬ ಹೆಸರಿನ ಪವಾಡಗಳನ್ನು ದಯಪಾಲಿಸಿದ್ದಾನೆ.

ನಮ್ಮ ನೆರೆಯ ಕೇರಳವು ಹಲವಾರು ಔಲಿಯಾ ಮಹಾತ್ಮರಿಗೆ ಜನ್ಮ ನೀಡಿದ ನಾಡಾಗಿದೆ. ಅಂತಹ ಔಲಿಯಾಗಳಲ್ಲೊಬ್ಬರಾಗಿದ್ದಾರೆ ವಲಿಯುಲ್ಲಾಹಿ ವಡಗರ ಮುಹಮ್ಮದ್ ಹಾಜಿ ತಂಙಳ್ (ಖ.ಸಿ).

ಕೇರಳದ ಕಲ್ಲಿಕೇೂಟೆ ಜಿಲ್ಲೆಯ ವಡಗರ ಸಮೀಪದ ಚೆರುವಣ್ಣೂರ್ ಗ್ರಾಮದ ಕಂಡಿಯಿಲ್ ಮನೆತನದ ತುರುವೆ ಮುಸ್ಲಿಯಾರ್ ಮತ್ತು ಫಾತಿಮಾ ದಂಪತಿಗಳ ಮಗನಾಗಿ ಜನಿಸಿದ ವಡಗರ ಮುಹಮ್ಮದ್ ಹಾಜಿ ತಂಙಳ್ (ಖ.ಸಿ.)ರವರ ನಾಲ್ಕನೇ ವಯಸ್ಸಿನಲ್ಲೇ ತಾಯಿ ಇಹಲೇೂಕ ತ್ಯಜಿಸಿದರು. ನಂತರ ತಂದೆ ತುರುವೆ ಮುಸ್ಲಿಯಾರರ ಸಂರಕ್ಷಣೆಯಲ್ಲಿ ಬೆಳೆದ ಮಹಾನರು ಪ್ರಾಥಮಿಕ ವಿದ್ಯೆಯನ್ನು ತಮ್ಮ ತಂದೆಯಿಂದಲೇ ಅಭ್ಯಸಿಸಿದರು. ಕುರ್ಆನ್ ಪಾರಾಯಣ ಕರಗತವಾದ ನಂತರ ವಲಿಯುಲ್ಲಾಹಿ ಕಮ್ಮಣ್ಣಿ ಮುಸ್ಲಿಯಾರ್ ಕುಟ್ಟೂರ್ (ಖ.ಸಿ), ಇಬ್ರಾಹಿಂ ಮುಸ್ಲಿಯಾರ್ ಅಯನಿಕ್ಕಾಡ್ (ಖ.ಸಿ), ವಡಗರ ಬಾವ ಮುಸ್ಲಿಯಾರ್'ರಂತಹ ವಿದ್ವಾಂಸರಿಂದ ವಿದ್ಯಾರ್ಜನೆಗೈದರು. ನಂತರ ಉನ್ನತ ವ್ಯಾಸಂಗಕ್ಕಾಗಿ ವೆಲ್ಲೂರು ಬಾಖಿಯಾತ್ ಸ್ವಾಲಿಹಾತ್'ಗೆ ತೆರಳಿ ಶೈಖ್ ಆದಂ ಹಝ್ರತ್ (ರ)ರವರ ಶಿಷ್ಯತ್ವ ಸ್ವೀಕರಿಸಿದರು.

ಹಲವಾರು ತ್ವರೀಖತ್'ಗಳ ಶೈಖ್ ಹಾಗೂ ಆಧ್ಯಾತ್ಮಿಕ ಚೈತನ್ಯದ ತರಂಗವನ್ನೇ ಎಬ್ಬಿಸಿದ ಶಾದುಲಿ ಹಳ್ರಗಳ ಪ್ರಚಾರಕರೂ ಆಗಿದ್ದ ಮಹಾನರು ಪೊನ್ನಾನಿಯ ಅಬ್ದುಲ್ಲ ಎಂಬುವವರ ಮಗಳಾದ ಝೈನಬಾರನ್ನು ವಿವಾಹವಾಗಿದ್ದರು. ನಂತರ ತಮ್ಮ ಎಂಬತ್ತನೇ ವಯಸ್ಸಿನಲ್ಲಿ ವಾಣಿಯನ್ನೂರು ನಿವಾಸಿಯಾದ ತಿತ್ತಾಚ್ಚುಮ್ಮರನ್ನು ಎರಡನೆ ವಿವಾಹವಾದರು. ಝೈನಬಾರವರಲ್ಲಿ ನಾಲ್ಕು ಪುತ್ರಿಯರು ಮತ್ತು ತಿತ್ತಾಚ್ಚುಮ್ಮರಲ್ಲಿ ನಾಲ್ಕು ಪುತ್ರರು ಜನಿಸಿದ್ದು ಮಹಾನರ ನೂರನೇ ವಯಸ್ಸಿನಲ್ಲಿ ಕೊನೆಯ ಮಗ ಖಮರ್ ಜನಿಸಿದರು.

ಬಾಲ್ಯವನ್ನು ಇಲಾಹೀ ಸ್ಮರಣೆಯಿಂದಲೇ ಆರಂಭಿಸಿದ ಮಹಾನರು ತಮ್ಮ ಯೌವನವನ್ನು ಸಂಪೂರ್ಣವಾಗಿ ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಲ್ಲದೆ ಒಂದಿಡೀ ಶತಮಾನ ಕಾಲದ ತಮ್ಮ ಬದುಕಿಗೆ ಪ್ರವಾದಿ ಸ್ನೇಹದ ಸಿಂಚನ ನೀಡಿ ಕಠಿಣ ಪರಿಶ್ರಮದಿಂದ ಅಲ್ಲಾಹನ ಸಂಪ್ರೀತಿಗೆ ಪಾತ್ರರಾಗಿ ಮಾದರೀಯೇೂಗ್ಯವಾದ ಜೀವನ ನಡೆಸಿದರು. ಹಾಗೆ ತಮ್ಮ ಇಡೀ ಬದುಕನ್ನೇ ಇಲಾಹೀ ಸ್ಮರಣೆಗೆ ಮೀಸಲಿಟ್ಟಿದ್ದರಿಂದ ಮಹಾನರ ಬದುಕಿನಲ್ಲಿ ಕರಾಮತ್'ಗಳು ಪ್ರಕಟವಾಗಲಾರಂಭಿತು.

ಶೈಖುನಾ ಮುಹಮ್ಮದ್ ಹಾಜಿ ತಂಙಳ್ (ಖ.ಸಿ)ರವರು ಮೊದಲ ಬಾರಿಗೆ ಕೈಗೊಂಡ ಹಜ್ ಯಾತ್ರೆಯು ಅವರ ಬದುಕಿನ ಇಲಾಹೀ ಚಿಂತನೆ ಮತ್ತು ಆಧ್ಯಾತ್ಮಿಕವಾದ ಪರಿಶ್ರಮಕ್ಕೆ ಮಿಂಚಿನ ವೇಗವನ್ನೇ ನೀಡಿತು.

ಮೊದಲ ಬಾರಿಗೆ ಹಜ್ ಯಾತ್ರೆ ಕೈಗೊಂಡಾಗ ತಮ್ಮ ತಂದೆಯವರು ಕೊಟ್ಟ ಐವತ್ತು ರೂಪಾಯಿಗಳು ಮಾತ್ರವಾಗಿತ್ತು ಮಹಾನರ ಕೈಲಿದ್ದುದು. ಪ್ರವಾದಿ ಪ್ರೇಮದಿಂದ ಪುಳಕಿತರಾಗಿ ಮೈಮರೆಯುತ್ತಿದ್ದ ಮಹಾನರು ವ್ಯಾಸಂಗ ಮುಗಿಸಿ ವೆಲ್ಲೂರಿನಿಂದ ಹಿಂದಿರುಗುವ ಸಮಯದಲ್ಲಿ ತಾವು ತಮ್ಮ ಜೀವಕ್ಕಿಂತಲೂ ಮಿಗಿಲಾಗಿ ಪ್ರೀತಿಸುವ, ಮದೀನದ ಸ್ವರ್ಗೋದ್ಯಾನದಲ್ಲಿ ವಿಶ್ರಮಿಸುತ್ತಿರುವ ಪ್ರವಾದಿವರೇಣ್ಯ ﷺ ರೌಳಾ ಶರೀಫ್ ಕಾಣಬೇಕೆಂಬ ಉತ್ಕಟವಾದ ಆಕಾಂಕ್ಷೆಯನ್ನು ಹತ್ತಿಕ್ಕಲಾಗದೆ ಇಂದಿನಷ್ಟು ಸುಗಮವಾದ ಯಾತ್ರಾ ಸೌಕರ್ಯವಿಲ್ಲದ ಆ ಕಾಲದಲ್ಲಿ ಮದೀನಾವನ್ನು ಗುರಿಯಾಗಿಸಿ ಕಾಲ್ನಡಿಗೆಯಲ್ಲೇ ಯಾತ್ರೆ ಹೊರಟು ಮುಂಬೈ ತಲುಪಿದ ಮಹಾನರಿಗೆ ಅಲ್ಲಿ ಇರಾನಿ ಪ್ರಜೆಯೊಬ್ಬರ ಗೆಳೆತನ ಬೆಳೆಯಿತು. ನಂತರ ಆ ಇರಾನಿ ಪ್ರಜೆಯೊಂದಿಗೆ ಹಾಯಿ ಹಡಗಿನಲ್ಲಿ ಯಾತ್ರೆ ಮುಂದುವರಿಸಿ ಇರಾಕಿನ ಎದನ್'ಗೆ ತಲುಪಿದರು.

ನಂತರ ಅಲ್ಲಿಂದ ಮರುಭೂಮಿಯ ಬಿಸಿಲಿನ ತಾಪ ಸಹಿಸುತ್ತಾ ಕಾಲ್ನಡಿಗೆಯಲ್ಲೇ ಮಕ್ಕಾ ತಲುಪಿದರು. ಹಜ್ ಮತ್ತು ಉಮ್ರಾ ಕರ್ಮ ನಿರ್ವಹಿಸಿದ ನಂತರ ಮದೀನಾಕ್ಕೆ ತೆರಳಿದವರು ಕೆಲ ವರ್ಷಗಳ ಕಾಲ ಮದೀನಾ ಝಿಯಾರತ್'ನಲ್ಲೇ ತಲ್ಲೀನರಾಗಿ ಬಳಿಕ ಊರಿಗೆ ಮರಳಿದಾಗ ಶೈಖುನಾರಲ್ಲಿ ಹಲವು ಬದಲಾವಣೆಯಾಗಿ ಪವಾಡ ಪ್ರಕಟವಾಗತೊಡಗಿದ್ದರಿಂದ ಬದುಕಿನ ಜಂಜಾಟದಲ್ಲಿ ಬಳಲಿ ಬೆಂಡಾದ ಜನ ಸಮುದಾಯ ಸಾಂತ್ವನವನ್ನರಸುತ್ತಾ ಪ್ರವಾಹದಂತೆ ಮಹಾನರ ಬಳಿ ಬರಲಾಂಭಿಸಿದರು.

*ಮುಂದುವರಿಯುವುದು*
🌱🌱🌱🌱🌱🌱🌱🌱

ಝಿಯಾರತ್ತ್ ಕೇಂದ್ರ 69. ಇಬ್'ರಾಹಿಂ ಸಕ್ರಾನ್ (ರ) ಕಣ್ಣೂರು

*#ಝಿಯಾರತ್ತ್ #ಕೇಂದ್ರ​​​*
      ​6⃣9⃣
➖➖➖➖➖➖➖➖➖
*ಮುಹ್ಯಿದ್ದೀನ್ ರಾತಿಬ್'ನ ಕರ್ತೃ ಸಯ್ಯಿದ್ ಇಬ್'ರಾಹೀಂ ಸಕ್ರಾನ್ ಅಲ್ ಬುಖಾರಿ (ರ) ಕಣ್ಣೂರು ಸಿಟಿ. ಕಣ್ಣೂರು*
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
***********************

ಅಲ್ಲಾಹನ ಏಕತ್ವವನ್ನು ವಿಶ್ವಾಸೀ ಹೃದಯಗಳು ದೃಢೀಕರಿಸಿ ಬದುಕಿನುದ್ದಕ್ಕೂ ಅವನ ದಿವ್ಯ ಸ್ಮರಣೆಯೊಂದಿಗೆ ಕಾಯಾ ವಾಚಾ ಮನಸಾ ಇಬಾದತ್ ನಡೆಸುತ್ತಾ ಇಹಪರ ವಿಜಯದ ಹಾದಿ ಸುಗಮವಾಗಿಸುವ ಸಂಸ್ಕರಣೇೂಪಾದಿಗಳಲ್ಲೊಂದಾಗಿದೆ  *ಮುಹ್ಯಿದ್ದೀನ್ ರಾತಿಬ್.*

ಶೈಖ್ ಅಬ್ದುಲ್ ಖಾದಿರ್ ಜೀಲಾನಿ (ರ)ರವರ ಆಧ್ಯಾತ್ಮಿಕ ಸಂಸ್ಕರಣ ಪರಂಪರೆಯಿಂದ ಪ್ರೇರಿತರಾದ ಶೈಖ್ ಜೀಲಾನಿ (ರ)ರವರ ಅನುಯಾಯಿಗಳು ಶೈಖ್'ರವರ ನಾಮದೇಯದಲ್ಲಿ ಅವರ ಬದುಕಿನಿಂದ ಕ್ರೂಡೀಕರಿಸಿದ   ಅದ್ಸ್'ಕಾರ್ ಹಾಗೂ ಖುರ್'ಆನ್ ಮತ್ತು ಸುನ್ನತ್ತಿನ ದ್ಸಿಕ್ರ್ ಅಡಕವಾದ ತೌಹೀದಿನ ವ್ಯಾಖ್ಯಾನ ಮತ್ತು ತತ್ವಗಳನ್ನೊಳಗೊಂಡ ಸ್ವಲಾತ್ ಆಗಿದೆ "ಮುಹ್ಯಿದ್ದೀನ್ ರಾತಿಬ್"

ಸೃಷ್ಟಿಕರ್ತನಾದ ಅಲ್ಲಾಹನ ವಿಶೇಷತೆಗಳನ್ನೂ ಮತ್ತು ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ರಿಸಾಲತ್ತಿನ ವೈಶಿಷ್ಟ್ಯತೆಗಳ ಜೊತೆಗೆ ಶೈಖ್ ಅಬ್ದುಲ್ ಖಾದಿರ್ ಜೀಲಾನಿ (ರ)ರವರ ಹೃದಯವನ್ನು ಆಧ್ಯಾತ್ಮಿಕವಾಗಿ ಸಂಸ್ಕರಿಸಿದ ಆ ಸಂಸ್ಕರಣಾ ಪ್ರಕ್ರಿಯೆಗಳ ಮಹತ್ವವನ್ನು ಎತ್ತಿ ಹೇಳುವ ಪದ್ಯಗಳೂ ಇದರಲ್ಲಿ ಒಳಗೊಂಡಿದ್ದು ತಸವ್ವುಫ್ ಮತ್ತು ಇಲ್ಮು  ತಝ್ಕಿಯದಲ್ಲಿ ಒಲವುಳ್ಳವರಿಗೆ ಇದೊಂದು ಅಮೂಲ್ಯ ನಿಧಿಯಾಗಿದೆ.

ಇಷ್ಟೊಂದು ಮಹತ್ವಪೂರ್ಣವಾದ ಮುಹ್ಯಿದ್ದೀನ್ ರಾತಿಬ್'ಅನ್ನು ಕ್ರೂಡೀಕರಿಸಿ ಸುನ್ನೀ ಸಮುದಾಯಕ್ಕೆ ಸಮರ್ಪಿಸಿದವರು *ಕೇರಳದ ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್'ನ ಸಯ್ಯಿದ್ ಅಹ್ಮದುಲ್ ಬುಖಾರಿ (ರ) ಮತ್ತು ಝೈನಬಾ (ರ) ದಂಪತಿಗಳ ಪುತ್ರರಾದ    ಇಬ್'ರಾಹೀಂ ಸಕ್ರಾನ್ ಅಲ್ ಬುಖಾರಿ (ರ) ರವರಾಗಿದ್ದಾರೆ.*

ಈ ಮುಹ್ಯಿದ್ದೀನ್ ರಾತಿಬನ್ನು ಇಬ್'ರಾಹೀಂ ಸಕ್ರಾನ್ (ರ) ಸಂಕ್ಷಿಪ್ತವಾಗಿ ಪ್ರಸ್ತುತ ಪಡಿಸಿದ್ದಾರಾದರೂ ಇದು ಬುಖಾರಿ ರಾತಿಬ್ ಎಂದೂ, ಮಸ್ತಾನ್ ರಾತಿಬ್ ಎಂದೂ, ವಲಿಯ ಮುಹ್ಯಿದ್ದೀನ್ ರಾತಿಬ್ ಎಂದೂ ಅರಿಯಲ್ಪಡುತ್ತಿದೆ.

ಕಾರಣ ಈ ರಾತೀಬನ್ನು ನಂತರ ಸಯ್ಯದ್ ಹಿಬತ್ತುಲ್ಲಾಹಿ (ರ) ತಂಙಳರ ತಂದೆಯವರಾದ ವಲಿಯ ಕೇೂಯಮ್ಮ(ರ) ತಂಙಳ್'ರವರು ಅದನ್ನು ಮತ್ತಷ್ಟು ಚುಟುಕಾಗಿ ನಿರೂಪಿಸಿದ್ದಾರೆ.

ಎಳೆಯ ವಯಸ್ಸಿನಲ್ಲಿ ಕಲಿಕೆಯಲ್ಲಿ ಬಹಳ ಹಿಂದಿದ್ದ ಸಕ್ರಾನ್ (ರ) ರವರನ್ನು ಒಮ್ಮೆ ಅವರ ತಾಯಿಯ ತಂದೆಯವರಾದ ಸಯ್ಯಿದ್ ಮೌಲಲ್ ಬುಖಾರಿ (ರ)ರವರು ಕನಸಿನಲ್ಲಿ ಸಂದರ್ಶಿಸಿ ಪ್ರಾರ್ಥಿಸಿದ ನಂತರ ಕಲಿಕೆಯಲ್ಲಿ ಉನ್ನತಿ ಗಳಿಸಿದರಲ್ಲದೆ ಆಧ್ಯಾತ್ಮಿಕವಾಗಿ ಉನ್ನತ ಸ್ಥಾನಕ್ಕೇರಿ ಪಂಡಿತ ವಲಯದಲ್ಲಿ ಸಕ್ರಾನ್ ಎಂದೇ ಗುರುತಿಸಿಕೊಳ್ಳಲಾರಂಭಿಸಿದರು.

ಸಕ್ರಾನ್ ಅಥವಾ ಮಸ್ತಾನ್ ಎಂದರೆ, ಆಧ್ಯಾತ್ಮಿಕ ಸಾಧನೆಯ ಮೂಲಕ ಆಂತರಂಗಿಕವಾಗಿ ಅಲ್ಲಾಹನಿಗೆ ನಿಕಟವಾಗುವ ಸೂಫಿಗಳ ಸ್ಥಾನಕ್ಕೇರಿದವರು ಎಂದರ್ಥ.

ಪುದಿಯಂಙಾಡಿ ಎಂಬಲ್ಲಿಯ ಕೊಟ್ಟತ್ತರ ಅಬ್ದುಲ್ ಅಝೀಝ್ ಎಂಬುವವರ ಮಗಳನ್ನು ವಿವಾಹವಾಗಿದ್ದ ಸಯ್ಯಿದರಿಗೆ ಸಯ್ಯಿದ್ ಮುಹಮ್ಮದ್ (ಖ.ಸಿ), ಸಯ್ಯಿದ್ ಪಖ್ರುದ್ದೀನ್ (ಖ.ಸಿ) ಮತ್ತು ಸಯ್ಯಿದ್ ಅಹ್ಮದ್ (ಖ.ಸಿ) ಎಂಬ ಮೂರು ಮಕ್ಕಳು ಜನಿಸಿದ್ದು ಫಖ್ರುದ್ದೀನ್ (ಖ.ಸಿ) ಎಂಬ ಪುತ್ರರಂತೂ ಕೇರಳದ ಇಮಾಂ ಗಝ್ಝಾಲಿ ಎಂದೇ ಪ್ರಖ್ಯಾತರಾದ ಸೂಫಿವರ್ಯರಾಗಿದ್ದರು. ಈ ಮಹಾನರು ಪಾಡೂರ್ ವಳಪ್ಪಿಲ್ ಎಂಬಲ್ಲಿ ಇರುವ ಮಸೀದಿಯ ಸಮೀಪ ಅಂತ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ.

ಇಬ್'ರಾಹಿಂ ಸಕ್ರಾನ್ (ರ) ರವರು ತಮ್ಮ ಅಣ್ಣನ ಮರಣಾನಂತರ ಅಣ್ಣನ ಪತ್ನಿಯನ್ನು ಮರುವಿವಾಹವಾಗಿ ಕಣ್ಣೂರಿನಲ್ಲಿ ವಾಸವಾಗಿದ್ದರು. ಹಿಜರಿ 1256 ರ ಜಮಾದಿಲ್ ಆಖಿರ್ 29 ರಂದು ಇಹಲೇೂಕಕ್ಕೆ ವಿದಾಯ ಹೇಳಿದ ಮಹಾನರು ಕಣ್ಣೂರು ಸಿಟಿ ಹತ್ತಿರ ತಮ್ಮ ತಾಯಿಯ ತಂದೆಯರಾದ ಮೌಲಲ್ ಬುಖಾರಿ (ರ)ರವರ ಮಖಾಮಿನ ಪಕ್ಕದಲ್ಲೇ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.

ದಾರಿ: 🚘 ಕಣ್ಣೂರು ಸಿಟಿ ಕಣ್ಣೂರು

✍ ಗಫೂರ್ ಬಾಯಾರ್
🌀🌀🌀🌀🌀🌀🌀🌀🌀