Saturday, January 27, 2018

*ಸುಲ್ತಾನುಲ್ ಉಲಮಾ ಎ.ಪಿ.  ಉಸ್ತಾದ್...*

ಶತ್ರುಗಳು, ಮಿತ್ರ ವೃಂದವು ಉಚ್ಚರಿಸುವ ಒಂದೇ ಒಂದು   ನಾಮವಾಗಿದೆ..  ಅದು,
👉 *ಕಾಂತಪುರಂ* (ಉಸ್ತಾದ್)

ಅಬಲೆಯರು, ನಿರ್ಗತಿಕರು ಉಚ್ಚರಿಸುವ ಒಂದೇ ಒಂದು  ಹೆಸರಾಗಿದೆ ಅದು
 👉 *ಕಾಂತಪುರಂ.*

ನಿರಾಶ್ರಿತರು, ಅನಾಥರು ಉಚ್ಛರಿಸಿಸುವ ಒಂದೇ ಒಂದು  ಹೆಸರರಾಗಿದೆ, ಅದು
👉 *ಕಾಂತಪುರಂ.*

ನೇತಾರರು, ರಾಜಕೀಯ ನಾಯಕರು ಉಚ್ಚರಿಸುವ ಒಂದೇ ಒಂದು ಹೆಸರಾಗಿದೆ, ಅದು
 👉 *ಕಾಂತಪುರಂ.*

ಸ್ವದೇಶಿಯರೂ, ವಿದೇಶಿಯರೂ, ಉಚ್ಚರಿಸುವ ಒಂದೇ ಒಂದು ಹೆಸರಾಗಿದೆ, ಅದು
👉 *ಕಾಂತಪುರಂ.*

ಪಂಡಿತರು, ಜನ ಸಾಮಾನ್ಯರು, ಉಚ್ಚರಿಸುವ ಒಂದೇ ಒಂದು ಹೆಸರಾಗಿದೆ, ಅದು
👉 *ಕಾಂತಪುರಂ.*

ಅನಾಥ ಮಕ್ಕಳ ದತ್ತು ಪಡೆಯಲು
👉 *ಕಾಂತಪುರಂ.*

ಮಸೀದಿ, ಮದ್ರಸ ಇಲ್ಲದ ಸ್ಥಳಗಳಲ್ಲಿ ಮಸೀದಿ, ಮದ್ರಸ ನಿರ್ಮಿಸಲು
👉 *ಕಾಂತಪುರಂ.*

 ನೀರು ಇಲ್ಲದ ಗ್ರಾಮಕ್ಕೆ ನೀರಿನ ಬರ ನೀಗಿಸಲು
👉 *ಕಾಂತಪುರಂ.*

ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಡಲು
👉 *ಕಾಂತಪುರಂ.*

ಸುನ್ನೀ ಮಕ್ಕಳಿಗೆ ಧಾರ್ಮಿಕ, ಲೌಕಿಕ ವಿಧ್ಯಾಭ್ಯಾಸ ನೀಡಲು
 👉 *ಕಾಂತಪುರಂ.*

 ಬಡವರಿಗೆ ಸೌಜನ್ಯ ಆಸ್ಪತ್ರೆ ನಿರ್ಮಿಸಲು
👉 *ಕಾಂತಪುರಂ.*

ವಿದೇಶದಲ್ಲಿ ದುಡಿಯುವ ಅನಿವಾಸಿ ಭಾರತೀಯರ ಕಷ್ಟಗಳಿಗೆ ಸ್ಪಂದಿಸಲು
👉 *ಕಾಂತಪುರಂ.*

ವಿದೇಶದಲ್ಲಿ ನಡೆಯುವ ಮುಸ್ಲಿಂ ಪಂಡಿತ ಸಭೆಗಳಲ್ಲಿ ಭಾರತದ ಪರವಾಗಿ ಆಮಂತ್ರಣ ದೊರೆತು ಭಾಗವಹಿಸುವುದು
👉 *ಕಾಂತಪುರಂ.*

ಎಲ್ಲಿಯೂ ತಾರೆ
👉 *ಕಾಂತಪುರಂ* ಮಾತ್ರ..

*ನಾಲ್ಕು* ಜನರು ಸೇರುವಂತಹ ಬೀದಿಗಳಲ್ಲಿಯೂ,

*ನಾಲ್ಕು ಸಾವಿರ* ಜನರು ಸೇರುವ ಸಭೆಗಳಲ್ಲಿಯೂ,

*ನಾಲ್ಕು ಲಕ್ಷ* ಜನ ಸೇರುವ ಸಮ್ಮೇಳನದಲ್ಲಿಯೂ, "ಸ್ಟಾರ್"
👉 *ಕಾಂತಪುರಂ* ಮಾತ್ರವಾಗಿದ್ದಾರೆ.

_ಅಲ್ಲಾಹು ಅಕ್ಬರ್_
_ಅಲ್ಲಾಹು ಅಕ್ಬರ್_

*ಕಾಂತಪುರಂ ಉಸ್ತಾದವರಿಗೆ ಧೀರ್ಘಾಯುಷ್ಯ ಕರುಣಿಸು ಯಾ ಅಲ್ಲಾಹ್... ಆಮೀನ್*

ಗಫೂರ್ ಬಾಯಾರ್

Friday, January 26, 2018

*بِسْمِ اللّٰهِ الرَّحْمَٰنِ الرَّحِيمْ*

*ಹದೀಸ್ ವಿದ್ವಾಂಸರುಗಳಾದ ಇಮಾಮರುಗಳ ಸಂಕ್ಷಿಪ್ತ ಪರಿಚಯ*...

2⃣2⃣.  *(ಕೊನೆಯ ಭಾಗ)*

📚📚📚📚📚📚📚📚📚📚

8⃣ *ಇಮಾಂ ನವವೀ(ರ.ಅ)* :
       
ಮುಂದೆ......

           *ಅವರ ಜ್ಞಾನದ ಆಳ-ಹರವನ್ನು ಅಂದಾಜಿಸಲು ಸ್ವಹೀಹ್ ಮುಸ್ಲಿಂಗೆ ರಚಿಸಿದ ವ್ಯಾಖ್ಯಾನವಾದ ಶರಹು ಮುಸ್ಲಿಂ ಎಂಬ ಗ್ರಂಥವೇ ಸಾಕು. ಸ್ವಹೀಹ್ ಮುಸ್ಲಿಂ ಪ್ರತಿಯೊಂದು ಹದೀಸಿನ ಹಿನ್ನೆಲೆ  ಅದರಲ್ಲಿರುವ  ವಿಧಿನಿಷೇಧಗಳು ಮತ್ತು ಉಪದೇಶಗಳೂ ವಿದ್ವಾಂಸರ ಅಭಿಪ್ರಾಯಗಳನ್ನು ಸರಳವಾಗಿ ವಿವರಿಸುವ ಒಂದು ಅಧಿಕೃತ ಪರಾಮರ್ಶನ ಗ್ರಂಥವಾಗಿದೆ*.

           *ಈ ಗ್ರಂಥದಲ್ಲಿ ಅವರು ಸಮಕಾಲೀನ ಹಾಗೂ ಪೂರ್ವಿಕ ವಿದ್ವಾಂಸರ ಅಭಿಪ್ರಾಯಗಳನ್ನು ಪ್ರಸ್ತುತ ಪಡಿಸಿ ಸಮಗ್ರ ಚರ್ಚೆಯ ನಂತರ ತಮ್ಮ ನಿಲುವನ್ನು ವಿವರಿಸುತ್ತಾರೆ. ಇದು ಗ್ರಂಥ ಲೋಕದಲ್ಲಿ ಅವರಿಂದಲೇ ಆರಂಭವಾದ ಹೊಸ ಶೈಲಿಯಾಗಿತ್ತು. ಹಿಂಗಾಮಿಗಳಲ್ಲಿ ಅನೇಕ ವಿದ್ವಾಂಸರು ಅವರ ಈ ಶೈಲಿಯನ್ನು ಅನುಕರಿಸಿದ್ದಾರೆ*.

*ಇಮಾಮ್ ನವವೀ(ರ.ಅ)ರವರ ಪ್ರಮುಖ ಗ್ರಂಥಗಳು* :👇
1) ಮಿನ್ ಹಾಜ್ (ಇದು ಕರ್ಮಶಾಸ್ತ್ರ ಗ್ರಂಥಗಳ ಮಾತೆಯಾಗಿದೆ)
2) ಈಳ್ವಾಹ್
3)ಇಶಾರತ್ತುರ್ರೌಳ್
4)ತಹ್ ಖೀಹ್
5)ತಿಬ್ಯಾನ್
6)ತಱ್ ಲಿನ್ ಅಲಿತ್ತಾನ್ ಬೀಹ್
7)ತನ್ ಖೀಹ್
8)ತಹ್ರೀರ್
9)ತಹ್ ದೀಬ್
10)ತಸ್ಹೀಹುತ್ತನ್ ಬೀಹ್
11)ಸಿಮರುಲ್ ಬಾಲಿಗ್
12)ಖುಲಾಸಃ
13)ದಖಾಇಖ್
14)ರೌಳತುತ್ವಾಲಿಬೀನ್
15)ಸುಲ್ಲಮುಲ್ ಮುನಾಜಾತ್
16)ಶರಹುಲ್ ಮುಹದ್ದಬ್
17)ಶರಹುಲ್ ವಸ್ವೀತ್
18)ಮುಜ್ ಮುಅ
19)ನುಕತುತ್ತನ್ ಬೀಹ್
20)ನಿಹಾಯ
21)ತಖ್ ರೀಬ್
22)ಮನಾಸಿಕುಸ್ಸುಗ್ರ
23)ಮನಾಕುಲ್ ಕುಬ್ರಾ
24)ಅರ್ಬಈನ್
25)ತಬಖಾತುಲ್ ಫ್ರಖಹಾತ್
26)ತಹ್ದೀಬುಲ್ ಅಸ್ ಮಾಱ್
27)ಮನಾಖಬುಖ್ಯಾಫಿಈ
28)ಈಜಾಸ್
29)ರಿಯಾಳುಸ್ವಾಲಿಹೀನ್
30)ಶರಹ್ ಮುಸ್ಲಿಂ
31)ಅದ್ಕಾರ್
32)ಇಗಾರತ್ತ್.

*ಮೊದಲಾದವುಗಳಲ್ಲದೇ ಬೇರೆ ಹತ್ತು ಹಲವಾರು ಗ್ರಂಥಗಳನ್ನು ಕೂಡಾ ಇಮಾಂ ಯಹ್ಯಾಬಿನ್ ಶರಫುದ್ದೀನ್ ನವವೀ(ರ.ಅ) ರಚಿಸಿದ್ದಾರೆ. ಈ ಪೈಕಿ ಹಲವು ನಷ್ಟವಾಗಿ ನಮಗೆ ಅದನ್ನು ಓದುವ ಭಾಗ್ಯ ಲಭಿಸಿಲ್ಲವೆಂದು ವಿದ್ವಾಂಸರ ಅಭಿಮತ.*

ಕರಾಮತ್ ಗಳು : *ಇಮಾಂ ನವವೀ(ರ.ಅ)ರವರಿಂದ ಅನೇಕ ಅದ್ಭುತ ಸಂಭವಗಳು ಪ್ರಕಟವಾಗಿರುವುದಾಗಿ ಇತಿಹಾಸದಲ್ಲಿ ದಾಖಲಿಸಲ್ಪಟ್ಟಿದೆ. ಅವರ ರಚನೆಗಳೇ ಒಂದು ಅದ್ಭುತವಾಗಿದೆ. ಅವರು ಬರೆಯುತ್ತಿರುವಾಗ ದೀಪ ಆರಿಹೋದರೆ ಕೈಬೆರಳಿನ ಪ್ರಕಾಶದಲ್ಲಿ ತಮ್ಮ ಬರವಣಿಗೆಯನ್ನು ಅವರು ಪೂರ್ತಿಗೊಳಿಸುತ್ತಿದ್ದರು. ದೂರದ ಶಬ್ಧವನ್ನು ಕೂಡಾ ಅವರು ಆಲಿಸಬಲ್ಲವರಾಗಿದ್ದರು. ಡಮಾಸ್ಕಸ್ ನಲ್ಲಿ ತಮ್ಮ ಸಂಭವನೀಯ ಮರಣದ ಕುರಿತು ಅವರು ಭವಿಷ್ಯ ನುಡಿದಿದ್ದರು*.

          *ಶಾಫಿಈ ಮದ್ಹಬನ್ನು ಶ್ರೀಮಂತಗೊಳಿಸಿದ ಅನುಗ್ರಹೀತ ವಿದ್ವಾಂಸ, ವಲಿಯ್ಯ್, ಬದಲಾವಣೆಯ ಹರಿಕಾರ, ಮುಹದ್ದೀಸ್ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪ್ರಶೋಭಿತರಾದ ಇಮಾಂ ಯಹ್ಯಾಬಿನ್ ಶರಫುದ್ದೀನ್ ನವವೀ(ರ.ಅ) ಹಿಜಿರಾ 676 ರಜಬ್  24 ರಂದು ಅವರು ಮರಣ ಹೊಂದಿದರು. ಆಗ ಅವರಿಗೆ 46 ವರ್ಷ ಪ್ರಾಯವಾಗಿತ್ತು*.


📚📚📚📚📚📚📚📚📚📚
🍃 🤝 *ಚಿಂತಿಸುವವರಿಗಾಗಿ*
                 ▪ಸಣ್ಣ ಕಥೆ▪
 🍀🍀🍀🍀🍀🍀🍀🍀
     ಒಂದು ದಿನ ಇಬ್ಬರು ಸ್ನೇಹಿತರು ಯಾವುದೋ ಕಾರಣದಿಂದ ಒಂದು ಜನ ವಾಸವಿಲ್ಲದ ದ್ವೀಪದ ಮಧ್ಯೆ ಸಿಲುಕಿಕೊಳ್ಳುವರು. ಸುತ್ತಲೂ ಸಮುದ್ರ ಮಾತ್ರವೇ ಕಾಣಿಸುತ್ತಿತ್ತು. ಅವರಿಗೆ ತಿನ್ನಲು ಆಹಾರವಿಲ್ಲ. ಸರಿಯಾದ ಬಟ್ಟೆಯಿಲ್ಲ. ನೋಡುವಾಗ  2-3 ದಿನದಿಂದ ಆ ಪ್ರದೇಶದಲ್ಲಿ ಸಿಲುಕಿಕೊಂಡಿರುವ ಲಕ್ಷಣವಿದೆ. ತಮ್ಮ ಸಹಾಯಕ್ಕೆ ಯಾರು ಕೂಡ ದೊರೆಯುವ ಸಾಧ್ಯತೆಯಿಲ್ಲಾ ಅನ್ನುವ ಹಂತದಲ್ಲಿ ಅವರಿಬ್ಬರೂ ಒಂದು ನಿರ್ಧಾರ ಕೈಗೊಳ್ಳುವರು.

  ಅವರಲ್ಲಿ ಓರ್ವ: ನಾವಿಬ್ಬರೂ ಅಲ್ಲಾಹನಲ್ಲಿ ನಮಗೆ ಬೇಕಾಗುವ ಆಹಾರದ ಬಗ್ಗೆ ಪ್ರಾರ್ಥಿಸೋಣ.

ಇನ್ನೊಬ್ಬ: ಆಗಲಿ ಎಂದ,
ಮೊಲನೆಯವ ತನ್ನ ಬಲ ಭಾಗದಲ್ಲಿ ಎರಡನೆಯವ ತನ್ನ ಎಡ ಭಾಗದಲ್ಲಿ ಅವರಿಗೆ ಇಷ್ಟದ ಭಕ್ಷ್ಯದ ಬಗ್ಗೆ ಅಲ್ಲಾಹನಲ್ಲಿ ಕಣ್ಣು ಮುಚ್ಚಿ ತಮ್ಮ ಮನಸ್ಸಿನ ಆಳದಿಂದ ಪ್ರಾರ್ಥಿಸಿದರು. ಪ್ರಾರ್ಥನೆ ಮುಗಿದು ಮೊದಲನೆಯವ ಕಣ್ಣು ತೆರೆದು ನೋಡಿದಾಗ  ಅದ್ಭುತವೋ❗ ಪವಾಡವೋ❗ ಎಂಬಂತೆ ತನ್ನ ಮುಂದೆ ವಿವಿಧ ತರದ ಆಹಾರವನ್ನು ಕಂಡನು. ಆತ ತಟ್ಟನೆ ತಿರುಗಿ ತನ್ನ ಸ್ನೇಹಿತನ ಕಡೆ ನೋಡಿದಾಗ ಅಲ್ಲಿ ಯಾವುದೇ ವಸ್ತುಗಳನ್ನು ಕಾಣಲು ಸಾಧ್ಯವಾಗಲಿಲ್ಲ.

 ಆಗ ಮೊದಲನೆಯ ಸ್ನೇಹಿತ ತನಗೆ ದೊರೆತ ಆಹಾರದಿಂದ ಅವನಿಗೂ ಕೊಟ್ಟ, ಇಬ್ಬರೂ ಊಟ ಮಾಡಿದರು. ಮಾರನೆಯ ದಿನ ಅವರಿಗೆ ಬೇಕಾಗಿರುವ ಉಡುಗೆಗಾಗಿ ಪ್ರಾರ್ಥಿಸಿದರು. ಇಂದು ಕೂಡ ಮೊದಲನೆಯ ಸ್ನೇಹಿತನ ಮುಂದೆ ಅವರಿಗೆ ಬೇಕಾಗಿರುವ ಬಟ್ಟೆಗಳನ್ನು ಅಲ್ಲಾಹನು ಕೊಟ್ಟನು.

 ಅದರಿಂದ ಆತ ಕಳೆದ ಬಾರಿ ಆಹಾರ ಕೊಟ್ಟಂತೆ ತನ್ನ ಬಟ್ಟೆಗಳಿಂದ ತನ್ನ  ಸ್ನೇಹಿತನಿಗೂ ಕೊಟ್ಟ.
ಮೂರನೇ ದಿನದಂದು ಇಬ್ಬರೂ ಈ ದ್ವೀಪದಿಂದ ಪಾರಾಗಳು ಯಾವುದಾದರೂ ದಾರಿ ತೋರಿಸಿ ಕೊಡುವಂತೆ ಅಲ್ಲಾಹನಲ್ಲಿ ಪ್ರಾರ್ಥಿಸಿದರು. ಇಂದು ಕೂಡ ಅದೇ ಸ್ನೇಹಿತನ ಮುಂದೆ ಒಂದು ದೋಣಿ ಬಂದು ನಿಂತಿತು.

ಈಗ ಮಾತ್ರ ಅವನೊಬ್ಬನೇ ದೋಣಿ ಹತ್ತಿದ. ತನ್ನ ಸ್ನೇಹಿತನನ್ನು ಬಿಟ್ಟು ಅವನೊಬ್ಬನೇ ಆ ದ್ವೀಪದಿಂದ ಹೊರಟನು. ಪ್ರಯಾಣ ಮುಂದುವರೆದು ಸಮುದ್ರದ ಮಧ್ಯಭಾಗಕ್ಕೆ ತಲುಪಿದಾಗ ಒಂದು ಅಶರೀರವಾಣಿ ಕೇಳಿಸಿತು. "ನಿನಗೆ ನಾನು ನೀಡಿದ ಎಲ್ಲಾ ಸೌಕರ್ಯದಿಂದ ನೀನು ಅರ್ಧವನ್ನು ನಿನ್ನ ಸ್ನೇಹಿತನಿಗೆ ಮೀಸಲಿಟ್ಟೆ. ಆದರೆ ನಿಮಗೆ  ಪಾರಾಗಳು ನಾನು ನೀಡಿದ ದೋಣಿಯಲ್ಲಿ ಆತನನ್ನು ಜೊತೆಯಾಗಿಸದೆ ಯಾಕಾಗಿ ಬಿಟ್ಟು ಬಂದೆ"?

 ಅವನು ನುಡಿದ ಓ.. ಅಲ್ಲಾಹನೇ ನೀನು ನನಗೆ ಕೊಟ್ಟ ಎಲ್ಲಾ ವಸ್ತುಗಳಿಂದ ನಾನು ನನ್ನ ಸ್ನೇಹಿತನಿಗೆ ನೀಡಿದೆ. ಅವನು ನಿನ್ನಲ್ಲಿ ಭಕ್ತಿ ಇರಿಸದ ಕಾರಣ ಅವನಿಗೆ ಯಾವುದನ್ನೂ ನೀನು ನೀಡಲಿಲ್ಲ. ಮೂರು ದಿನದ ಬೇಡಿಕೆಯಲ್ಲೂ ನೀನು ನನ್ನ ಪ್ರಾರ್ಥನೆಗೆ ಮಾತ್ರ ಉತ್ತರಿಸಿದೆ. ನಿನಗೆ ಇಷ್ಟವಿಲ್ಲದ ಆತನನ್ನು ನಾನು ಈ ದೋಣಿಯಲ್ಲಿ ಹತ್ತಿಸಿದರೆ ನಿನ್ನ ಕೋಪಕ್ಕೆ ತುತ್ತಾಗಿ ನನ್ನ ದೋಣಿಯನ್ನು ನೀನು ಮುಳುಗಿಸುವೇ ಅನ್ನುವ ಭಯದಿಂದ ನಾನು ಆತನನ್ನು ಬಿಟ್ಟು ಬಂದೆ.

ಅಲ್ಲಾಹನು ಹೇಳಿದ "ಓ ಮನುಷ್ಯ ನಿನ್ನ ಪ್ರಾರ್ಥನೆಯ ಫಲವಾಗಿ ಯಾವುದನ್ನೂ ನಿನಗೆ ನಾನು ನೀಡಿಲ್ಲ. ನೀನು ಪ್ರಾರ್ಥಿಸುತ್ತಿರುವ ವೇಳೆ ನಿನ್ನ ಸ್ನೇಹಿತ ಈ ರೀತಿ ಪ್ರಾರ್ಥಿಸುತ್ತಿದ್ದ. *'ಓ.. ಅಲ್ಲಾಹನೇ ನನ್ನ ಸ್ನೇಹಿತ ಮಾಡಿದ ಪ್ರಾರ್ಥನೆಗೆ ಉತ್ತರಕೊಡು',* ಎಂದು ನಿನ್ನ  ಪ್ರತಿಯೊಂದು ಪ್ರಾರ್ಥನೆಗೂ ಇದನ್ನೇ ನುಡಿಯುತ್ತಿದ್ದ. ಅವನು ಇದನ್ನು ಬಿಟ್ಟು ಬೇರೆಯಾವುದನ್ನೂ ಪ್ರಾರ್ಥಿಸಿಲ್ಲ. ಅವನ ಪ್ರಾರ್ಥನೆಯ ಫಲವಾಗಿ ನಾನು ನಿನಗೆ ಎಲ್ಲವನ್ನೂ ನೀಡಿದೆ ಎಂದು ಆ ಅಶರೀರವಾಣಿಯು ನುಡಿದಾಗ ಅವನಿಗೆ ಮಾತೇ ಹೊರಡಲಿಲ್ಲ.

   ⏹ *ನೀತಿ ಪಾಠ:*

ನಾವು ಯಾರನ್ನು ಕೂಡ ನಿಂದಿಸಬಾರದು, ಹಿಯ್ಯಾಳಿಸಬಾರದು. ಅದು ದೊಡ್ಡ ಆಲಿಮ್-ಗಳಾಗಲಿ, ಉಸ್ತಾದರುಗಳಾಗಲಿ, ಔಲಿಯಾಗಳಾಗಲಿ, ಸಾಧಾರಣ ಮನುಷ್ಯನೇ ಆಗಲಿ. ಅವರು ಜೀವಿಸಿ ಇರಲಿ ಅಥವಾ ಮರಣಿಸಿದವರಾಗಲಿ. ಯಾವುದೇ ಜಾತಿಯನ್ನು ಯಾವುದೇ ಧರ್ಮವನ್ನು ನಿಂದಿಸ ಬೇಡಿ. ಅವನು ಅಲ್ಲಾಹನಲ್ಲಿರಿಸಿದ ಭಕ್ತಿ ಅಲ್ಲಾಹನಿಗೆ ಮಾತ್ರವೇ ಗೊತ್ತು.

ಆಲಿಮ್'ಗಳಿಗೆ ಅಲ್ಲಾಹನು  ಉನ್ನತ ಸ್ಥಾನವನ್ನು ನೀಡಿದ್ದಾನೆ. ನೀವು ಅಂತಹ ಉಸ್ತಾದರುಗಳ, ತಂಙಳುಗಳ ಹಸಿ ಮಾಂಸವನ್ನು ಕಿತ್ತು ತಿಂದರೆ ಅವರ ಮೇಲೆ ಸುಳ್ಳು ಅಪವಾದ ಹೊರಿಸಿದರೆ ಖಂಡಿತವಾಗಿಯೂ ಈ ಲೋಕದಲ್ಲೂ ನಾಳೆ ಪರಲೋಕದಲ್ಲೂ ನಮಗೆ ಜಯಿಸಲು ಸಾಧ್ಯವಿಲ್ಲ.

 ಅಲ್ಲಾಹನು ನಮ್ಮೆಲ್ಲರನ್ನೂ ಸಜ್ಜನರ ಜೊತೆ ಸೇರಿಸಲಿ.
اَمِين ْ

✒ *BsR Sltr* 🔍

Thursday, January 25, 2018

ಮದುವೆ ನಿಶ್ಚಿತಾರ್ಥ ವಾದ ಎಲ್ಲಾ ಹೆಣ್ಣು ಮಕ್ಕಳು ಇದನ್ನು ಓದಲೇಬೇಕು, ಅಥವಾ ಓದಿಸಲೇಬೇಕು...

January 17, 2018

🌹🌹🌹🌹🌹🌹🌹
ನಾನು ಓದಿದರಲ್ಲಿ ನನಗೆ ತುಂಬಾ ಇಷ್ಟಪಟ್ಟ ಲೇಖನ ಇದು

ಸಾಧ್ಯವಾದರೆ ಇದನ್ನು ಕೋಪಿ ಮಾಡಿ ಸೇವ್ ಮಾಡಿ ಇಡಿ...ಆಗಾಗ ಓದುತ್ತಾ ಇರಿ.

ಅಷ್ಟೂ  ಹೃದಯ  ಮಿಡಿಯುವ ಲೇಖನವಾಗಿದೆ.👍

ಮದುವೆ ನಿಶ್ಚಿತಾರ್ಥ ವಾದ ಎಲ್ಲಾ ಹೆಣ್ಣು ಮಕ್ಕಳು ಇದನ್ನು ಓದಲೇಬೇಕು, ಅಥವಾ ಓದಿಸಲೇಬೇಕು...


ಬರೆದದ್ದು ಯಾರು ಅಂತ ಗೊತ್ತಿಲ್ಲ...ಆದರೆ ಮನಮುಟ್ಟುವ ರಚನೆಯಾಗಿದೆ.
📃🌹ಅದು ಅವಳ ಮದುವೆ ಸುದಿನವಾಗಿತ್ತು.🙍‍♀

ರಾತ್ರಿ  ೯ ಗಂಟೆಗೆ  ಮನಯಿಂದ ಸ್ಪಲ್ಪ ದೂರದಲ್ಲಿರುವ ಹಾಲಿನಲ್ಲಿ ನಡೆಯಬೇಕಿದ್ದ ಮದುವೆ ಸಮಾರಂಭಕ್ಕೆ ಬಂಧು ಬಳಗದವರೂ ನೆರೆಮನೆಯವರೂ ಮಧ್ಯಾಹ್ನದ ನಂತರ ಅವಳ ಮನೆಗೆ ಬರುತ್ತಲೇ ಇದ್ದರು.

ಮಗ್ರಿಬ್ ನಮಾಝಿನ ನಂತರ ಎಲ್ಲರೂ ಹಾಲಿಗೆ ಹೋಗುವುದಾಗಿ ತೀರ್ಮಾನಿಸಲಾಯಿತು‌.

ಗೆಳತಿಯರು ಹಾಗೂ ನೆರೆಮನೆ ಯ ಹೆಣ್ಣು ಮಕ್ಕಳು  ಆಗಲೇ ಅವಳ ಕೋಣೆಗೆ ಪ್ರವೇಶಿಸಿಯಾಗಿತ್ತು.

ಮದುಮಗಳ ವಸ್ತ್ರದ ಮತ್ತು ಆಭರಣದ ಸೌಂದರ್ಯ ವನ್ನು  ಅವರು ಕಣ್ತುಂಬಾ ಆಸ್ವದಿಸಿದರು ‌
ಹಾಗೆಯೇ ಮಸೀದಿಯ🕌 ಮಿನಾರದಿಂದ ಅಸರ್ ಬಾಂಗ್ ಮೊಳಗಿತು. ಎಲ್ಲರೂ ನಮಾಝಿನಲ್ಲಿ ನಿರತರಾದರು.
ನಮಾಝಿನಿಂದ ವಿರಮಿಸಿದ

ನಂತರ ಪೇಟೆಯ ಪ್ರಮುಖ ಬ್ಯೂಟಿಶ್ಯನ್ ಹಾಗೂ ಅವಳ ಸಹಾಯಕಿಯರು ಆಗಮಿಸಿದರು.
ತುಂಬಿ ತುಳುಕಾಡುತ್ತಿರುವ ಕೋಣೆಯಿಂದ ಎಲ್ಲರನ್ನೂ ಅವರು ಹೊರಹೋಗುವಂತೆ ಸೂಚಿಸಿದರು.

ಅವರು ಅವಳನ್ನು ಇನ್ನಷ್ಟು ಸೌಂದರ್ಯವತಿಯಾಗಿ ಮಾಡಲು ಹೊರಟರು.  ಹಿಜಾಬಿನ ಮಧ್ಯದಲ್ಲಿ ಕಂಗೊಳಿಸುವ  ಅವಳ ಮುಖಕ್ಕೆ  ಮೇಕಪ್ಪಿನ ಅಗತ್ಯವಿಲ್ಲದಿದ್ದರೂ ಅವರು ಕ್ರೀಮುಗಳನ್ನು ಉಪಯೋಗಿಸಿ  ಅವಳನ್ನು ಇನ್ನಷ್ಟು ಸೌಂದರ್ಯವತಿಯನ್ನಾಗಿ ಮಾಡಿದರು. ಕೈಯಲ್ಲಿ ಮತ್ತು ಕಾಲಲ್ಲಿ ಮೈಲಾಂಜಿಯಿಂದ ಗೆರೆಗಳನ್ನು ಬಿಡಿಸಿದರು. ಮಗ್ರಿಬ್ ನಮಾಝಿಗೆ ಇನ್ನೇನು ಅರ್ಧ ಗಂಟೆ ಇರುವಾಗಲೇ ಅವಳ ಕೋಣೆಯ ಬಾಗಿಲು ತೆರೆಯಲ್ಪಟ್ಟಿತು.

ಅಣೆಕಟ್ಟನ್ನು ಕೆಡವಿದಾಗ ಹೇಗೆ ನೀರು ಒಮ್ಮೆಲೇ ರಭಸವಾಗಿ ಮುನ್ನುಗ್ಗುತ್ತದೋ ಹಾಗೆಯೇ ಅತಿಥಿಗಳು ಅವಳ ಕೋಣೆಗೆ ಬರತೊಡಗಿದರು, ಹಾಗೆಯೇ ಅವಳ ಸೌಂದರ್ಯವನ್ನು ಹೊಗಳಿದರು. ಅವರ ಮಾತಿಗೆ ಪ್ರತ್ಯುತ್ತರ ಎಂಬಂತೆ ಅವಳು ಸಣ್ಣಗೆ ಮುಗುಳ್ನಕ್ಕಳು.😊  ಹತ್ತಿರದ ಮಸೀದಿಯಿಂದ ಮೊಳಗಿದ ಮಗ್ರಿಬ್ ಬಾಂಗಿನ ಧ್ವನಿಯು ಗದ್ಧಲದಿಂದ ಕೂಡಿದ  ಆ  ಕೋಣೆಯನ್ನು ಶಾಂತವಾಗಿಸಿತು.

ಕೋಣೆಯಲ್ಲಿದ್ದ ಹೆಚ್ಚಿನ ಜನರು ನಮಾಝಿಗೆ ನಿಲ್ಲುವಾಗ ಮದುಮಗಳ ವಸ್ತ್ರದಲ್ಲಿದ್ದ ಅವಳ ಮನಸ್ಸಿನ ಲ್ಲಿ  ಸಣ್ಣ ಒಂದು ಸಂಶಯ..........
" ಅಸರ್ ನಮಾಝಿಗೆ ಮಾಡಿದ ಅಂಗಶುದ್ಧಿಗೆ ಈಗಲೂ ಜೀವವಿದೆಯೇ??? " ಸಂಶಯದ ಅಲೆಗಳು ಅವಳ ಮನಸ್ಸನ್ನು ಕಾಡುತ್ತಿತ್ತು.

" ವುಳೂ ಮಾಡಬೇಕಾ..? ಅಥವಾ ಸಂಶಯದ ಮೇಲೆ  ನಮಾಝ್ ಮಾಡಬೇಕೋ??"

ಮನಸ್ಸಿನಲ್ಲಿರುವ ಸಂಶಯದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯಲು ಅವಳು ಇಷ್ಟಪಡಲಿಲ್ಲ...

ಅವಳು ಚಿಂತಿಸಿದಳು...
ಒಂದು ಹಳೆಯ ವಸ್ತ್ರವನ್ನು  ಅದರ ಅವಶ್ಯಕತೆ ಇಲ್ಲದೆ  ನಾವು ಹೇಗೆ ಎಸೆಯುತ್ತೇವೆಯೋ....ಹಾಗೆಯೇ ನನ್ನ ಸೃಷ್ಟಿಕರ್ತ ನನ್ನ ನಮಾಝನ್ನು ನನ್ನ ಮುಖಕ್ಕೆ ಎಸೆದರೆ.......???"
ಅಲ್ಲಾಹ್.........!!!!!😨😰😥


ಅವಳು ಮತ್ತೇನನ್ನೂ  ಯೋಚಿಸಲಿಲ್ಲ....ಅವಳು ನೇರ ವಾಶಿಂಗ್ ಬೆಸಿನ್ ಲಕ್ಶ್ಯವಾಗಿಟ್ಟು ಹೊರಟಳು.

ಆಗಲೇ ಅವಳ ಉಮ್ಮ ಮಧ್ಯ ಪ್ರವೇಶಿಸಿ  ಕೇಳಿದರು...
"ಎಲ್ಲಿಗೆ ಮಗಳೇ????
ಅವಳು : "ವುಳೂ ಮಾಡಲು"
ಉಮ್ಮ: .....😳😨😱
" ಏನು ? ಹುಚ್ಚು ಹಿಡಿದಿದೆಯಾ ಮಗಳೇ ನಿನಗೆ🤨?"
" ಎಷ್ಟು ಸಾವಿರ ಕೊಟ್ಟು ಈ ಮೇಕಪ್ಪ್ ಮಾಡಿದ್ದೂಂತ ಗೊತ್ತಾ ನಿನಗೆ? ಅದೆಲ್ಲಾ ಈಗ ನೀರಿನಲ್ಲಿ  ಕರಗಿ ಹೋಗುವುದಿಲ್ಲವೇ ?"
" ಅಷ್ಟೂ ಕಡ್ಡಾಯವೆನಿಸಿದರೆ ನಿನಗೆ ತಯಮ್ಮುಮ್ ಮಾಡಬಹುದಲ್ಲವೇ??"

ಅವಳು: " ನನ್ನ ಮುಂದೆ ನೀರು ಇರುವಾಗ ನಾನು ಯಾಕೆ ತಯಮ್ಮುಮ್ ಮಾಡಬೇಕು?

ಅಲ್ಲಾಹನ ಮುಂದೆ ಯಾಕೆ ಈ ನಾಟಕ ಮಾಡಬೇಕು? "

" ನನ್ಮ ಜೀವನದ ಅತ್ಯಂತ ಸಂತೋಷದ ದಿನವಾಗಿದೆ ಇಂದು.
ಇವತ್ತು ನಾನು ಅಲ್ಲಾಹನನ್ನು ಸ್ಮರಿಸದಿದ್ದರೆ ಇನ್ನು ಯಾವಾಗ ಸ್ಮರಿಸುವುದು😧??"

ಉಮ್ಮ ತಲೆಕೆಳಗೆ ಹಾಗಿ ನಿಂತಾಗ ಅವಳು ವಾಶಿಂಗ್ ಬೆಸಿನ್ ನ ಹತ್ತಿರ ಹೋದಳು.
ಮದುವೆ ವಸ್ತ್ರವನ್ನು ಸ್ವಲ್ಪಮಟ್ಟಿಗೆ  ಮೇಲೆ  ಮಾಡಿ  ಅವಳು ವುಳೂ ಮಾಡಿದಳು.
 ಮುಸಲ್ಲ ಹಾಸಿ ನಿಧಾನವಾಗಿ ಅವಳು ಕೈಗಳನ್ನು ಬಳಸಿ ಕಟ್ಟುವಾಗ ಅವಳ ಕಂಠ ಮತ್ತು ಕಣ್ಣಿನ ಭಾಗವು ಕಣ್ಣೀರಿನಿಂದ ಒದ್ದೆಯಾಯಿತು....😢
 ಕೋಣೆಯಲ್ಲಿದ್ದವರೆಲ್ಲರೂ ಶ್ವಾಸ ಬಿಗಿ ಹಿಡಿದು ಅವಳ ನಮಾಝನ್ನೇ ಗಮನಿಸುತ್ತಿದ್ದರು.

ಹೃದಯ ಸ್ಪರ್ಶಿಸುವ ಶಾಂತಿ ಅಲ್ಲಿ ನೆಲೆ ನಿಂತಿತು‌. ಒಂದನೇಯ ರಕಾತ್ತಿನಿಂದ ಅವಳು ಎದ್ದೇಳುವಾಗ ಅವಳ ಉಮ್ಮ ನ. ದೃಷ್ಟಿಯು ಗೋಡೆಯ ಮೇಲಿರುವ ಗಡಿಯಾರದಲ್ಲಾಗಿತ್ತು.

ಸಮಯ ತುಂಬಾ ಆಯಿತು.. ಅವರು ಪರಸ್ಪರ ಮಾತನಾಡುತ್ತಿದ್ದರು.

ನಿಶ್ಚಯ ಸಮಯಕ್ಕಿಂತ ಒಂದು ಗಂಟೆ ಮೊದಲೇ ಹಾಲಿಗೆ ಮುಟ್ಟಬೇಕಾದರೆ ಈಗಲೇ ಮನೆಯಿಂದ ಹೊರಡಬೇಕು..
 ಅವಳು ಎರಡನೇ ರಕಾತ್ತಿನ ಸುಜೂದಿಗೆ  ಹೋದಳು.

ಅಲುಗಾಡುವ ತುಟಿಗಳಲ್ಲಿ ಅವಳು ಏನನ್ನೋ ಮಂತ್ರಿಸುವಂತಿದ್ದಾಳೆ.

ಅ ತುಟಿಗಳ ಚಲನೆಯು ಬರುಬರುತ್ತಾ ಚಲಿಸದಿರುವುದನ್ನು ಅವರು ಕಂಡರು.
 ಅವಳ ಸುಜೂದ್ ತುಂಬಾ ಧೀರ್ಘ ವಾಯಿತು.....

ಗಡಿಯಾರದ ಸಮಯವು ೭ ನ್ನು ಸೂಚಿಸುತ್ತಿತ್ತು. ಕಣ್ಣುಗಳನ್ನು ತೆರೆದು ಅವಳು ಸುಜೂದಿನಲ್ಲೇ ಇದ್ದಳು...

ಗಡಿಯಾರದ ಮುಳ್ಳು ೭.೦೫ ಕ್ಕೆ ಮುಖ ಮಾಡಿದಾಗ ಉಮ್ಮ ಅವಳ ಮಂಡಿಗೆ ಮೃದುವಾಗಿ ತಟ್ಟಿದರು.

ಪ್ರತಿಕ್ರಿಯೆ ಇಲ್ಲದಾಗ ಉಮ್ಮ ಅವಳ ಮಂಡಿಯನ್ನು ಹಿಡಿದು ಅಲುಗಾಡಿಸಿದರು.
 ಕೋಣೆಯಲ್ಲಿ ಅಲ್ಲಲ್ಲಿ ನಿಂತವರೆಲ್ಲ  ಪರಿಭ್ರಾಂತರಾಗಿ ಅವಳ ಹತ್ತಿರ ಬರತೊಡಗಿದರು.
  ಉಮ್ಮನ  ಇನ್ನಷ್ಟು ಶಕ್ತಿಯಿಂದ ಅಲುಗಾಡಿಸಿದರು.
 ಅವಳು ತುಂಡುಮಾಡಿದ ಮರದ ತುಂಡಿನಂತೆ ನಿಶ್ಚಲವಾಗಿ ಒಂದು ಬದಿಗೆ ಬಿದ್ದಳು.


ಉಮ್ಮ ಅವಳ ಹಣೆ ಮತ್ತು ಮುಖದಲ್ಲಿ ಮುತ್ತಿಕ್ಕುತ್ತಾ ಅವಳನ್ನು ಕರೆಯುತ್ತಲೇ   ಇದ್ದರು.....😭

ಆಕಾಶದಿಂದ ಇಳಿದು ಬಂದ ಚಂದ್ರನ ಹಾಗೆ ಅವಳ ಮುಖವು ಪ್ರಕಾಶದಿಂದ ಕಂಗೊಳಿಸುತ್ತಿತ್ತು.
(ಮೇಕಪ್ಪ್ ಇಲ್ಲದ ಮುಖ , ವುಳೂವಿನಿಂದ ಕಂಗೊಳೊಸುತ್ತಿತ್ತು)

ಬಿಳಿ ವಸ್ತ್ರದಲ್ಲಿ ಹೊದ್ದುಕೊಂಡು ಆ ಮುಖವು ಕಣ್ಣಿನಿಂದ  ಮರೆಯಾಗುವಾಗ  ಸುತ್ತಿಕೊಂಡವರ ಮಾತುಗಳು ಮೌನವಾಗಿ  ಕಣ್ಣೀರಿನ ಸಾಗರಕ್ಕೆ ಆ ಮನೆಯು ಸಾಕ್ಶಿಯಾಯಿತು.😭😭😭😭😭😭

❗ಯುದ್ಧ ಸಮಯದಲ್ಲಿ ಕೂಡ ನಮಾಝಿಗೆ ರಿಯಾಯಿತಿ ಇಲ್ಲ ಸಹೋದರಿಯರೇ.....‼

‼ಮರಣವು ನಮ್ಮನ್ನು ಕೊಂಡೊಯ್ದು ಕಣ್ಣು ಮುಚ್ಚಿದಾಗ ನಮ್ಮ ಜೊತೆಗಿರುವುದು...ನಮಾಝ್****‼

ಪುನರುತ್ಥಾನ ದಿನ  ನಮ್ಮನ್ನು ಪ್ರಶ್ನೆಗೊಳಪಡಿಸುವ ಮೊದಲನೆಯದು ನಮಾಝ್....

ಅಲ್ಲಾಹನ್ನು ಮರೆತು ನಮಗೆ ಸಂತೋಷ ಸುಖ ಬೇಕೇ‌....???⁉

ಇವತ್ತೇ ನಿರ್ಧಾರ ಮಾಡಿರಿ ....❗ *ಇನ್ನೆಂದೂ ನಾನು ನಮಾಝ್ ಕಲಾ ಮಾಡುದಿಲ್ಲವೆಂದು*....



ಇಷ್ಟವಾದರೆ  ಶೇರ್ ಮಾಡಿ...
ನಿಮಗೂ ಒಳಿತು ಇದೆ....
ಯಾರಾದರೂ ಒಬ್ಬರು ಇದನ್ನು ಅನಿಸರಿಸಿದರೆ ಅದರ ಗುಣವು ನಮಗೂ ಸಿಗಬಹುದು..
*ಇನ್ ಶಾ ಅಲ್ಲಾಹ್*


ಅಲ್ಲಾಹುವೇ ......ಮರಣದ ವರೆಗೆ ನಮಾಝನ್ನು ನೆಲೆಗೊಳಿಸಲು ನೀನು  ತೌಫೀಕ್ ನೀಡು ನಾಥಾ....
ಆಮೀನ್ ಸುಮ್ಮ ಆಮೀನ್...

 *Pray before u are prayed  upon*
 ನಿಮ್ಮ ಮೇಲೆ ನಮಾಝ್ ನಿರ್ವಹಿಸಲ್ಪಡುವ(ಮಯ್ಯಿತ್ ನಮಾಝ್) ಮೊದಲು ನೀವು ನಮಾಝ್ ಮಾಡಿರಿ..😕😕😕

Plzz read & share this message ...
🌳🌳🌳🌳🌳🌳🌳
*ಮುನ್ನಂ ದುಡಿ ಮುಟ್ಟಿ ಕ'ಅಬಾನೆ ಚುಟ್ಟುಂಬೋಲ್*
*ಮಕ್ಕಿಗಲ್ ಇಂಬೀದೀ ವೇಂಡೆನ್ನ್ ಚೊನ್ನೋವರ್...*

*ಉಡನೇ ರಿಫಾಯೀ ಮದಿಲಿಲ್ ಕುಳತ್ತಿಯಾರ್*
*ಅಪ್ಪೋಲ್ ಕ'ಅಬಂ ತವಾಫೆನ್ನ್ ಚೊನ್ನೋವರ್...*
*ಇಳಗೀ ಕ'ಅಬಂ ತುಳಂಗುನ್ನ ನೇರತ್ತ್*
*ಒಳಿವರ್ ರಿಫಾಯೀ ಎನ್ನ್ ಅಲ್ಲಾಹ್ ವಿಳಿಚ್ಚೋವರ್...*
*ಏಳಾಗಾಶಂ ಬಾದಿಲ್ ಒಕ್ಕೇ ತುರನ್ನೋರೇ*
*ಇಳಗೀ ಮಲಕುಗಳ್ ಒಕ್ಕೇ ವಿಳಿಚ್ಚೋವರ್...*
 ----------------------------------
*ದಫ್ ಬಡಿಯತ್ತಾ ಪವಿತ್ರ ಕ'ಅಬಾ ಶರೀಫನ್ನು ತವಾಫ್ ಮಾಡುತ್ತಿದ್ದ ರಿಫಾಯೀ ಶೈಖರನ್ನು ಮಕ್ಕಾದವರು ತಡೆದರು*
*ಕೂಡಲೇ ಅವರು ಆ ದಫ್ಫನ್ನು ಕ‌ಅಬಾ ದ ಗೋಡೆಗೆ ತೂಗು ಹಾಕಿದರು*

*ಆಗ  ಕ‌ಅಬಾ ತನ್ನ ಜಾಗದಿಂದ ಕದಲತೊಡಗಿತು. ತನ್ನ ಸ್ವ ಸ್ಥಾನದಿಂದ ಚಲಿಸುತ್ತಾ ಬಂದು ರಿಫಾಯಿ ಶೈಖರ ಸುತ್ತ ಸುತ್ತುತ್ತಾ ತವಾಫ್ ಮಾಡತೊಡಗಿತು.*
*ಆಗ ಅಲ್ಲಾಹು ಶೈಖ್ ರವರನ್ನು ,ಯಾ ರಿಫಾಈ ಎಂದು ಕರೆದನು. ಶೈಖ್ ರವರು ದಫ್ಫನ್ನು ಕಅಬಾದಿಂದ ತೆಗೆದರು.ಕಅಬಾವು ಮೊದಲಿನಂತಾಯಿತು. ಏಳು ಆಕಾಶದಲ್ಲಿ ರುವ ಮಲಕುಗಳೂ ಈ ರೀತಿ ಕರೆದರು.*
 -----------------------------
*ಶೈಖ್ ಅಹ್ಮದುಲ್ ಕಬೀರುರ್ರಿಫಾಈ ರ.ಅ ರವರ ಕರಾಮತ್ ವಿವರಿಸುವ ರಿಫಾಈ ಮಾಲೆಯ ಕೆಲವು ಸಾಲುಗಳು ಮತ್ತು ಅದರ ಸರಿಯಾದ ಅನುವಾದ ಇದು. ಆದರೆ, ಅಲ್ಲಾಹು ಗೌರವಿಸಿದ ಮಹಾತ್ಮರ ಹಿರಿಮೆ ಮತ್ತು ವಿಶೇಷತೆ ಯನ್ನು ಒಪ್ಪಲು ಮನಸಿಲ್ಲದ ವಹ್ಹಾಬಿಗಳು, ಮಾಲೆಯ ಅರ್ಥ ವನ್ನು ವಕ್ರವಾಗಿ ಚಿತ್ರೀಕರಿಸಿ ಅಲ್ಲಾಹನನ್ನು ನಿಂದಿಸಿದ್ದಾರೆ.* *ಇಳಿಯುವ, ಹತ್ತುವ,   ಕುಳಿತುಕೊಳ್ಳುವ, ಕೈ ಕಾಲುಗಳಿರುವ, ಮುಖ ಹೊಂದಿರುವ ದೇವರಲ್ಲಿ ನಂಬಿಕೆ ಇಟ್ಟಿರುವ ವಹ್ಹಾಬಿಗಳು, ಖಿಯಾಮತ್ ದಿನದಂದು ಸಕಲ ವಸ್ತುಗಳೂ ನಾಶ ಹೊಂದಿ ಅಲ್ಲಾಹನ* *"ಮುಖ*" *ಮಾತ್ರ ಬಾಕಿಯಾಗಿ ಇತರೆಲ್ಲವೂ ನಶಿಸಿ ಹೋಗುವುದೆಂದು ಹೇಳುವಲ್ಲಿಗೆ ತಲುಪಿದವರಾಗಿದ್ದಾರೆ.*
*ಅಲ್ಲಾಹನ ಬಗ್ಗೆ ವಿಕಲ ನಂಬಿಕೆಯನ್ನು ಹೊತ್ತು ಕೊಂಡಿರುವ ವಹ್ಹಾಬಿಗಳು ಅದನ್ನು ಮರೆ ಮಾಚಲು ಸುನ್ನಿ ಗಳ ಮಾಲೆಯನ್ನು ದುರ್ವ್ಯಾಖ್ಯಾನ ಮಾಡುತ್ತಾರೆ*
*ಅಲ್ಲಾಹನ ಇಷ್ಟ ದಾಸರಾದ ರಿಫಾಈ ಶೈಖ್ ರವರಿಗಾಗಿ ಕಅಬಾವು ತಿರುಗಾಡಿತು ಎಂಬುವುದರಲ್ಲಿ  ಪವಿತ್ರ ಖುರ್ಆನ್ ಮತ್ತು ಹದೀಸ್ ಗೆ ವಿರುದ್ಧವಾದ ಯಾವುದೇ ಅಂಶವಿಲ್ಲ*
*ಸಅದ್ ಬಿನ್ ಮುಆದ್ಸ್ ರ.ಅ ರವರ ವಫಾತ್ ಕಾರಣದಿಂದ,ಅರ್ಶ್ ಕಂಪನ ಗೊಂಡಿತು ಎಂದು ಪ್ರವಾದಿ ವಚನವಿದೆ*
*ವಹ್ಹಾಬಿಗಳ ಮೊಂಡು ನಂಬಿಕೆಯಂತೆ ಅಲ್ಲಾಹು ಅರ್ ಶಿನ ಮೇಲೆ ಕುಳಿತು ಕೊಂಡಿದ್ದಾನೆ*
*ಅರ್ಶ್ ಅಲುಗಾಡಿದಾಗ ಇವರ ನಂಬಿಕೆಯಂತೆ ಅದರ ಮೇಲಿಲುವ ಅಲ್ಲಾಹನೂ ಅಲುಗಾಡಿರಬೇಕಲ್ಲವೇ?*
*ಪ್ರವಾದಿ ಶ್ರೇಷ್ಟ ರಾದ ಮುಹಮ್ಮದ್ ಸ ಅ ಮತ್ತು ಇತರ ಪ್ರವಾದಿ ಗಳು ವಫಾತ್ ಆದಾಗ ಅಲುಗಾಡದ ಅರ್ಶ್  ಸಅದ್ ರ ಅ ವಫಾತ್ ಆದಾಗ ಕಂಪಿಸಿತು ಎಂದು ಹೇಳುವುದನ್ನು ನಂಬ ಬಹುದೇ?* *ಎಂಬ ಪ್ರಶ್ನೆಯನ್ನು ಕೂಡ ವಹ್ಹಾಬಿಗಳಂತಹ  ವಿಚಾರವಾದಿಗಳು ಕೇಳ ಬಹುದು* 
*ಆದರೆ ಸಹೀಹುಲ್ ಬುಖಾರಿ ಸಹಿತ ಹಲವು ಹದೀಸ್ ಗ್ರಂಥಗಳಲ್ಲಿ ಉಲ್ಲೇಖ ಗೊಂಡ ಮೇಲಿನ ಹದೀಸ ನ್ನು ಅಲ್ಲ ಗಳೆಯಲು ಯಾರಿಗೂ ಸಾಧ್ಯವಿಲ್ಲ.*
         *ಅಲ್ಲಾಹನ ಸೃಷ್ಟಿಗಳಲ್ಲಿ ಉನ್ನತ ಸ್ಥಾನದಲ್ಲಿರುವ ಅರ್ಶ್ ಅಲ್ಲಾಹನ ಇಷ್ಟ ದಾಸರಾದ ಸಅದ್ ರ ಅ ರಿಗಾಗಿ ಕಂಪಿಸಿದ್ದರೆ,  ಕಅಬಾವು, ಅಲ್ಲಾಹನ ವಲಿಯ್ಯ್ ಆದ ರಿಫಾಈ ಶೈಖ್ ರಿಗಾಗಿ ತಿರುಗಾಡುವುದಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ* *ಮಾಲೆ ಯಲ್ಲಿರುವ ಮೇಲಿನ ಘಟನೆ ಒಂದು ಚರಿತ್ರೆ ಯಾಗಿದೆ. ಅದನ್ನು ನಂಬಿದರೆ ಖುರ್ಆನ್ ಮತ್ತು ಹದೀಸ್ ಗೆ ಕಿಂಚಿತ್ತೂ ಧಕ್ಕೆ ಬರುವುದಿಲ್ಲ*
*ಹಾಗಾಗಿ  ಚರಿತ್ರೆ ಘಟನೆಗಳ ದಾಖಲೆ ಯಾಗಿರುವ ಮಾಲೆಯನ್ನು ಮತ್ತು ಅದರಲ್ಲಿ ಅಡಕವಾಗಿರುವ ವಿಷಯಗಳನ್ನು ನಾವು ಕೊಂಡಾಡುತ್ತ್ತೇವೆ*
       *ಇನ್ನು, ಮೇಲಿನ ಘಟನೆಯು ಅಸತ್ಯ ಎಂದು ಸಾಬೀತು ಪಡಿಸಲು ವಹ್ಹಾಬಿಗಳು ಯಾವುದೇ ಚರಿತ್ರೆ ಪುಸ್ತಕದ ಉಲ್ಲೇಖ ವನ್ನು ತರುವುದಾದರೆ ನಿಮಗಿದೋ ಸ್ವಾಗತ!* *ಆದರೆ ನಿಮ್ಮ ಜನ್ಮದಲ್ಲಿ ಅದು ಸಾಧ್ಯವಿಲ್ಲ.*
   *ಅಲ್ಲಾಹನ ಇಷ್ಟ ದಾಸರಾದ ಔಲಿಯಾಗಳನ್ನು ಪವಿತ್ರ ಕಅಬಾಲಯವು ತ್ವವಾಫ್ ಮಾಡಿದ ಘಟನೆಯು ,ಇತರ ಔಲಿಯಾಗಳ ಬಗ್ಗೆಯೂ ವರದಿಯಾಗಿದೆ. ಶೈಖ್ ಅಬೂ ಯಝೀದಲ್ ಬಿಸ್ತ್ವಾಮೀ,ಶೈಖ್ ಇಬ್ನು ಅರಬೀ, ಶೈಖ್ ಮುಹ್ಯಿದ್ದೀನ್,ಶೈಖ್ ಇಬ್ರಾಹೀಮುಲ್ ಮತ್ಬೂಲೀ ಮುಂತಾದ ಮಹಾತ್ಮರನ್ನು ಕಅಬಾಲಯವು ತ್ವವಾಫ್ ಮಾಡಿದ್ದಾಗಿ , ಸೀರತುಲ್ ಹಲಬಿಯ್ಯ ,ಜಾಮಿಉ ಕರಾಮಾತಿಲ್ ಔಲಿಯಾ ಮುಂತಾದ ಗ್ರಂಥಗಳಲ್ಲಿ ನೋಡ ಬಹುದಾಗಿದೆ.ಔಲಿಯಾಗಳಲ್ಲಿ ಇಂಥಹ ಕರಾಮತ್ ಲಭಿಸಿದ ಹಲವು ಮಹಾತ್ಮರಿದ್ದಾರೆ ಎಂದು,ಇಮಾಮ್ ಗಝಾಲಿ ಇಹ್ಯಾ ದಲ್ಲಿ, ಇಮಾಮ್ ಯಾಫಿಈ ರೌಲು ರ್ರಯಾಹೀನ್ ಮತ್ತು ಮಿರ್ಆತುಲ್ ಜಿನಾನ್ ನಲ್ಲಿ ಮತ್ತು ಇಮಾಮ್ ಕಿರ್ಮಾನೀ ಅಲ್ ಮಸಾಲಿಕ್ ಮುಂತಾದ ಕಿತಾಬ್ ಗಳಲ್ಲಿ ವಿವರಿಸಿದುದನ್ನು ನೋಡ ಬಹುದಾಗಿದೆ. ಪವಿತ್ರ ಇಸ್ಲಾಮ್ ಧರ್ಮದ ಅಗ್ರೇಸರ ಪ್ರಬೋಧಕರು ಮತ್ತು ಪ್ರಚಾರಕರಾಗಿರುವ  ಇಂಥಹ ವಿದ್ವಾಂಸರಿಗೆ ದೀನ್ ನ ಬಗ್ಗೆ ತಿಳಿದಿಲ್ಲ ಎಂದು ಹೇಳಲು, ಧರ್ಮದೊಳಗೆ ನುಸುಳಿ ನೂತನ ವಾದದ  ಷಡ್ಯಂತರ ನಡೆಸಿ,ಮುಸ್ಲಿಮರನ್ನು ಪೂರ್ವಿಕರಾದ ಸಜ್ಜನರ ದಾರಿಯಿಂದ ಬೇರ್ಪಡಿಸಲು ಹವಣಿಸುತ್ತಿರುವ ವಹ್ಹಾಬೀ ಸಲಫಿಗಳಿಗೆ ಅಲ್ಲದೆ ಸಾಧ್ಯವಿಲ್ಲ. ಇವರ ಕುತಂತ್ರಗಳಿಂದ ಮುಸ್ಲಿಮ್ ಉಮ್ಮತನ್ನು ಅಲ್ಲಾಹು ರಕ್ಷಿಸಲಿ.ಆಮೀನ್*

       *ಪಿ ಎಸ್ ಮುಹಮ್ಮದ್ ಶಿಹಾಬುದ್ದೀನ್ ಅಶ್ರಫಿ ಕಾಮಿಲ್ ಸಖಾಫಿ ಉಳ್ಳಾಲ*🌱🌱🌱🌱for Ahlul haq
*بِسْمِ اللّٰهِ الرَّحْمَٰنِ الرَّحِيمْ*

*ಹದೀಸ್ ವಿದ್ವಾಂಸರುಗಳಾದ ಇಮಾಮರುಗಳ ಸಂಕ್ಷಿಪ್ತ ಪರಿಚಯ*...
2⃣0⃣
📚📚📚📚📚📚📚📚📚📚

8⃣ *ಇಮಾಂ ನವವೀ(ರ.ಅ)* :

             *ಡಮಾಸ್ಕಸ್ ವಿಶ್ವವಿಖ್ಯಾತ ವಿದ್ವಾಂಸರು, ಸೂಫೀವರ್ಯರು ಹಾಗೂ ನಾಯಕರು ಹುಟ್ಟಿ ಬೆಳೆದ ನೆಲವಾಗಿದೆ. ಡಮಾಸ್ಕಸ್ ನ ಮಸೀದಿಗಳು ಅಂದಿನ ವಿಶ್ವವಿದ್ಯಾನಿಲಯಗಳಾಗಿದ್ದವು. ಜಗತ್ತಿನ ನಾನಾ ಪ್ರದೇಶಗಳ ಜ್ಞಾನದಾಹಿಗಳು ಅಲ್ಲಿಗೆ ಆಗಮಿಸುತ್ತಿದ್ದರು. ಆ ಕಾಲದಲ್ಲಿ ಇಮಾಂ ನವವೀ(ರ.ಅ) ಎಂಬ ಹೆಸರಿನಲ್ಲಿ ಜಗತ್ರ್ಪಸಿದ್ಧರಾದ ಯಹ್ಯಾರವರು ಕೂಡಾ ಅಲ್ಲಿಗೆ ಬಂದು ಅಧ್ಯಯನವನ್ನು ಆರಂಭಿಸಿದರು*.

               *ನವ ಎಂಬುದು ಡಮಾಸ್ಕಸ್ ನ ಒಂದು ಕುಗ್ರಾಮವಾಗಿದೆ. ನವದಲ್ಲಿ ಓರ್ವ ವರ್ತಕರಾಗಿದ್ದ ಶರಫ್ ಬಿನ್ ಮುರ್ರ್ ರವರಿಗೆ ಧರ್ಮಭಕ್ತೆಯಾದ ಪತ್ನಿಯಲ್ಲಿ ಹಿಜಿರಾ 631 ಮುಹರ್ರಂ ನಲ್ಲಿ ಒಂದು ಗಂಡು ಮಗು ಜನಿಸಿತು. ಆ ಮಗುವಿಗೆ ಯಹ್ಯಾ ಎಂದು ನಾಮಕರಣ ಮಾಡಿದರು*.

              *ಯಹ್ಯಾರವರು ಬಾಲ್ಯದಲ್ಲಿ ಮಾತಾಪಿತರಿಂದ ಶಿಕ್ಷಣವನ್ನು ಪಡೆದರು. ಹುಟ್ಟೂರಿನಲ್ಲಿ ಹೇಳಿ ಕೊಳ್ಳುವಂತಹ ವಿದ್ವಾಂಸರಾಗಲೀ, ಶಿಕ್ಷಣ ಕೇಂದ್ರವಾಗಲೀ  ಇರಲಿಲ್ಲ. ಆದುದರಿಂದ ಮಾತಾಪಿತರು ಯಹ್ಯಾರ ಉನ್ನತ ಶಿಕ್ಷಣದ ಬಗ್ಗೆ ಯೋಚಿಸಿರಲಿಲ್ಲ*.

         *ಶರಫ್ ಯಹ್ಯಾರವರನ್ನು ಅವರ ತಂದೆ ತನ್ನ ವ್ಯಾಪಾರದಲ್ಲಿ ಸಹಾಯಕನಾಗಿ ಬಳಸಿಕೊಳ್ಳುವ ಉದ್ದೇಶವನ್ನಿಟ್ಟುಕೊಂಡು ಅಂಗಡಿಯಲ್ಲಿ ನಿಲ್ಲಿಸಿದರು. ಆದರೆ ಯಹ್ಯಾರವರಿಗೆ ವ್ಯಾಪಾರದಲ್ಲಿ ಕಿಂಚಿತ್ ಆಸಕ್ತಿ ಇರಲಿಲ್ಲ. ಖುರಾನ್ ಪಾರಾಯಣದಲ್ಲಿ ಸಂತೋಷವನ್ನು ಅರಸುತ್ತಿದ್ದ ಆ ಬಾಲಕನಿಗೆ ಗ್ರಾಹಕರಿಗೆ ವಸ್ತುಗಳನ್ನು ತೆಗೆದುಕೊಡಲು ಸಮಯವಿರಲಿಲ್ಲ. ತುಂಬಾ ಬುದ್ಧಿವಂತರಾಗಿದ್ದ ಅವರು ಬಾಲ್ಯದಲ್ಲಿಯೇ ವಿನಯ, ಶಿಸ್ತು, ಸೌಮ್ಯತೆ ಮೊದಲಾದ ಸದ್ಗುಣಗಳ ವಕ್ತಾರರಾಗಿದ್ದರು*.

ಒಂದು ಉಪದೇಶದ ಪರಿಣಾಮ : 👇

*ಯಾಸಿರ್ ಬಿನ್ ಯೂಸುಫ್ ಅಲ್ ಮರಾಕಿಸಿ ಓರ್ವ ಮಹಾ ವಿದ್ವಾಂಸರಾಗಿದ್ದರು. ಅವರು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಒಂದೆಡೆ ಮಕ್ಕಳೆಲ್ಲ ಸೇರಿಕೊಂಡು ಆಟವಾಡುತ್ತಿದ್ದರು. ಆದರೆ ಓರ್ವ ಹುಡುಗ ಮಾತ್ರ ಅವರಿಂದ ಬೇರ್ಪಟ್ಟು ದೂರದಲ್ಲಿ ನಿಂತಿರುವುದನ್ನು ಅವರು ಗಮನಿಸಿದರು. ಬಹುಶಃ 10 ವರ್ಷ  ಪ್ರಾಯವಾಗಿರಬಹುದು. ಬೇರೆ ಮಕ್ಕಳು ಆತನನ್ನು ಆಡಲು ಬಲವಂತ ಪಡಿಸುತ್ತಿದ್ದರು. ಆ ಹುಡುಗ ಮಾತ್ರ ಅದಕ್ಕೆ ಮಣಿಯದೇ ಅವರ ಕೈ ಕೊಸರಿಕೊಂಡು ಅಲ್ಲಿಂದ ಓಟಕ್ಕಿತ್ತನು. ಆಗಲೂ ಆತ ಖುರಾನ್ ಪಾರಾಯಣವನ್ನು ಮರೆತಿರಲಿಲ್ಲ*.

           *ಈ ಸನ್ನಿವೇಶವು ಶೈಖ್ ಯಾಸಿನ್ ರವರ ಮನ ಕಲಕಿತು. ಅವರು ಯಹ್ಯಾರನ್ನು ಮಕ್ಕಳ ಆಕ್ರಮಣದಿಂದ ರಕ್ಷಿಸಿ ಓರ್ವ ಖುರಾನ್ ವಿದ್ವಾಂಸರಲ್ಲಿಗೆ ಕರೆದುಕೊಂಡು ಹೋಗಿ ಅವರೊಂದಿಗೆ ಹೀಗೆಂದರು ; "ಈ ಮಗು ಮಹಾ ವಿದ್ವಾಂಸ ಹಾಗೂ ಪಾವನ ಪುರುಷನಾಗುತ್ತಾನೆ. ಇವನಿಂದ ಜನರಿಗೆ ತುಂಬಾ ಉಪಕಾರ ಲಭಿಸಲಿಕ್ಕಿದೆ"*.

            *ಆಗ ಆ ಖುರಾನ್ ವಿದ್ವಾಂಸರು ನೀವು ಜ್ಯೋತಿಷಿಯೇ ಎಂದು ಪ್ರಶ್ನಿಸಿದಾಗ ಶೈಖ್ ಯಾಸಿನ್ ರವರು ): "ನಾನು ಜ್ಯೋತಿಷಿಯೇನೂ ಅಲ್ಲ, ಆದರೆ ಅಲ್ಲಾಹನು ನನ್ನಿಂದ ಹಾಗೆ ಹೇಳಿಸಿದ್ದಾನೆ" ಎಂದರು. ಆ ವಿದ್ವಾಂಸರು ಪ್ರಸ್ತುತ ವಿಷಯವನ್ನು ಯಹ್ಯಾರ ತಂದೆಯ ಗಮನಕ್ಕೆ ತಂದು, ಹುಡುಗನನ್ನು ಉನ್ನತ ಶಿಕ್ಷಣಕ್ಕಾಗಿ ಡಮಾಸ್ಕಸ್ ಗೆ ಕಳುಹಿಸಿಕೊಡಬೇಕೆಂದು ಉಪದೇಶಿಸಿದರು. ಅನಂತರ ಅವರ ತಂದೆ ಯಹ್ಯಾರನ್ನು ಅಂಗಡಿಯಲ್ಲಿ ನಿಲ್ಲಬೇಕೆಂದು ಒತ್ತಾಯಿಸಲಿಲ್ಲ. ಆ ಬಾಲಕ ಅಧ್ಯಯನದಲ್ಲಿ ನಿರತರಾದರು*.

            *ಉಸ್ತಾದರ ಸಲಹೆಯಂತೆ ಯಹ್ಯಾರವರು ಉನ್ನತ ಶಿಕ್ಷಣಕ್ಕಾಗಿ ಡಮಾಸ್ಕಸ್ ಗೆ (ಹಿಜಿರಾ 649) ತೆರಳಿದರು*.

*ಮುಂದುವರಿಯುವುದು*....

📚📚📚📚📚📚📚📚📚📚
💎💎💎💎💎💎
ಮಯ್ಯತ್ ಸ್ನಾನ ಪೂರ್ಣ ರೂಪ ಹೇಗೆ.
🚿🚿🚿🚿🚿🚿
🔆ಯಾರೂ ನೋಡಲಾಗದ  ಮೇಲ್ಬಾಗ ಬಂದ್ ಇರುವ ಸ್ಥಳದಲ್ಲಿ ತೆಳುವಾದ ಕಮೀಸ್ ಹಾಕಿಸಿ ಮಯ್ಯಿತನ್ನು ಒಂದು ಬಾಗಕ್ಕೆ ಸರಿಸಿ ಇಡಬೇಕು.
🔆 ಮೂರು ಮಂದಿಗಿಂತ ಜಾಸ್ತಿ ಇರಬಾರದು .ಒಬ್ಬನು ನೀರು ಹೊಯ್ದು ತೊಳೆಯಲು ಇನ್ನೊಬ್ಬ ನೀರು ತಂದು ಕೊಡಲು ಮೂರನೆಯವ ಮಯ್ಯಿತನ್ನು ಕುಳ್ಳಿಸಲು(ಈಗ ಮಂಚದಲ್ಲೇ ಆ ಸೌಕರ್ಯ ಇದೆ)
🔆ಮೊದಲನೆಯದಾಗಿ ಮಯ್ಯಿತನ್ನು ಕುಳ್ಳಿರಿಸಿ ಎಡಕೈತಿಂದ ಹೊಟ್ಟೆಯನ್ನು ಸವರಿ ಮಾಲಿನ್ಯ ಹೊರಬರಿಸಬೇಕು
🔆ಬಲ ಕಾಲನ ಮೇಲೆ ಮಯ್ಯಿತಿನ ಬೆನ್ನು ಇರಿಸಿ ಬಲಕೈಯಿನ್ದ ಕುತ್ತಿಗೆ ತಲೆ ಹಿಡೀಬೇಕು. ಎಡ ಕೈಯಿಂದ ಹೊಟ್ಟೆ ಸವರಬೇಕು.(ಈಗ ಮಂಚದಲ್ಲೇ ಇರಿಸುವ ಸೌಕರ್ಯ ಇದೆ.
🔆ನಿಧಾನ ನಿಧಾನ ಸವರಬೇಕು.
🔆ನಂತರ ಸರಿಸಿ ಮಲಗಿಸಿ ಎಡಕೈಯಿಂದ (ಕೈಗೆ ಕವರ್ ಹಾಕಿ) ಮಲಮೂತ್ರದ ದ್ವಾರಗಳನ್ನು ತೊಳೆಯಬೇಕು.ತೋರುಬೆರಳಿನಿಂದ
🔆 ನಂತರ ಕೈತೊಳೆದು ಕಿರುಬೆರಳಿಗೆ ಕವರ್ ಹಾಕಿ ಹಲ್ಲುಜ್ಜಬೇಕು.
🔆ಚಿಕ್ಕ ಕಡ್ಡಿಯಿಂದ ಕಾಲಿನ ಉಗುರಿನ ಇಡೆಯ ಮಣ್ಣು ತೆಗೆಯಬೇಕು.
🔆ನಂತರ ಉಲೂ ಮಾಡಿಸಬೇಕು.
🔆ನಂತರ ತಲೆ ಗಡ್ಡ ತೊಳೆಯಬೇಕು.
🔆ತೊಳೆಯುವಾಗ ರೊಮ, ಉಗುರಿನಂತಹದ್ದು ಕಳಚಿದರೆ ಕಫನಿನೊಂದಿಗೆ ಇಡಬೇಕು.
🔆ನಂತರ ಬಲಬಾಗ ತೊಳೆಯಿರಿ.
🔆ನಂತರ ಎಡಬಾಗ ತೊಳೆಯಿರಿ.
🔆ನಂತರ ಎಡಬಾಗಕ್ಕೆ ಸರಿಸಿ ಬಲಬಾಗವೂ ಬಲಬಾಗಕ್ಕೆ ಸರಿಸಿ ಎಡಬಾಗವೂ ತೊಳೆಯಬೇಕು.
🔆ತೊಳೆಯುವಾಗ ಸಾಬೂನು, ಹಾಕಿ ತೊಳೆಯಿರಿ
🔆ಸಾಬೂನಿನ ನೀರು ಹೋದ ನಂತರ ಶುದ್ದ ನೀರು ತಲೆಯಿಂದ ಕಾಲಿನ ತನಕ ಸುರಿಯಿರಿ.
🔆ಇದು ಮೊದಲನೇ ಸಲವಾಗಿದೆ.ನಂತರ ಎರಡು ಮೂರನೇ ಸಲ ಇದೇ ರೀತಿ ಮಾಡಿರಿ.
🔆ಮೂರು ಸಲದಿಂದ ಸಾಕಾಗದಿದ್ದರೆ ಐದು ಏಳು ಈ ತರ ಬೆಸ ಸಂಖ್ಯೆ ರೂಪದಲ್ಲಿ ತೊಳೆಯಿರಿ.
🔆ನೀರಿಗೆ ಕರ್ಪೂರ ಮಿಕ್ಸ್ ಮಾಡಿರಿ.
🔆ಕೂನೆಯ ಸಲದಲ್ಲಿ ಕರ್ಪೂರ ಮಿಕ್ಷ್ ಉತ್ತಮ.
🔆ಇಹ್ರಾಂ ಕಟ್ಟಿದ((ಹಜ್ ಉಮ್ರಾಕ್ಕೆ) ಮಯ್ಯಿತ್ ಆದರೆ ಕಫನ್ ವಸ್ತ್ರ. ಶರೀರ ಸ್ನಾನಕ್ಕೆ ಸುಗಂಧ ಹರಾಂ
🔆ಸ್ನಾನ ಮುಗಿದರೆ ನೀರು ವರೆಸಿ ಸ್ನಾನದ ಸ್ಥಳದಿಂದ ಬೇರೆ ಕಡೆಗೆ ವರ್ಖಾಯಿಸಿ.
🔆ಸ್ನಾನ ಮಾಡಿಸುವವ ನಂಬಿಕೆಗೆ ಅರ್ಹ ವ್ಯಕ್ತಿ  ಶುದ್ದಿಯಿರುವವ( ಉಲೂ, ಸ್ನಾನ) ಆಗಲು ಸುನ್ನತ್ತಾಗಿದೆ.
🔆ಮಯ್ಯಿತಿನಿಂದ ಒಳ್ಳೆಯದು ಕಂಡರೆ ಹೇಳಲು ಸುನ್ನತ್. ಕೆಟ್ಟದು ಕಂಡರೆ ಹೇಳಬಾರದು.
🔆 ಈ ಮಯಿತಿಗೆ ನಮಾಝ್ ಹಲಾಲಾಗಲು., ಅಥವಾ ಈ ಮಯ್ಯಿತಿಗೆ ಸ್ನಾನ ಮಾಡಿಸುತ್ತೀನೆ ಎಂದು ನಿಯ್ಯತ್ ಮಾಡಿರಿ.
🔆ಮಯ್ಯಿತ್ ನೂತನವಾದಿಯದಾಗಿದ್ದರೆ ಕೆಟ್ಟದು ಕಂಡರೆ ಬಹಿರಂಗಗೊಳಿಸಬೇಕು.ಆತನ ಮಾರ್ಗದಲ್ಲಿ ಹೋಗದಿರಲಿಕ್ಕಾಗಿ.
➖➖➖➖➖➖
ವಿಧ್ಯೆ ತಲುಪಿಸಿರಿ ಅಲ್ಲಾಹು ಫ್ರತಿಫಲ ನೀಡಲಿ ಆಮೀನ್.
➖➖➖➖➖➖
ಇದು ಬಾವಾ ಉಸ್ತಾದರ ಖುಲಾಸ (ಗಸ್ಲುಲ್ ಮಯ್ಯಿತಿ) ಬಾಗದಿಂದ. ತಪ್ಪು ಕಂಡಲ್ಲಿ ತಿಳಿಸಿರಿ. ಎಂದು.
💎💎💎💎💎💎
ಇತೀ ನಿಮ್ಮವ ಮುಹಮ್ಮದ್ ಹುಸೈನ್ ಸಖಾಫಿ ವೇಣೂರು
*ಸುನ್ನಿಗಳು ಐಕ್ಯವಾಗುವುದು ಯಾರಿಗೆ ತಳಮಳವನ್ನುಂಟು ಮಾಡುತ್ತಿದೆ?*

✍ ರಹ್ಮತುಲ್ಲಾ ಸಖಾಫಿ ಎಳಮರಂ.
ಕನ್ನಡಕ್ಕೆ: ಅಬೂಶಝ

ಶಂಸುಲ್ ಉಲಮಾ ವಫಾತಾದ ಮರುದಿವಸ ಇಕೆ ವಿಭಾಗ ಸುನ್ನೀ ನೇತಾರ ಅಬ್ದುರ್ರಹ್ಮಾನ್ ಕಲ್ಲಾಯಿ ಬರೆದ ಲೇಖನವನ್ನು ಚಂದ್ರಿಕಾ ಪತ್ರಿಕೆ ಅಚ್ಚುಹಾಕಿತು.
*"ಸಮಸ್ತದ ಪುನರ್ ಏಕೀಕರಣ ಅವರ ಕೊನೆಯ ಅಭಿಲಾಷೆಯಾಗಿತ್ತು. ಎರಡು ವಿಭಾಗದ ವಿದ್ವಾಂಸರಲ್ಲಿ ನಾನು ಕಳಕಳಿಯಾಗಿ ವಿನಂತಿ ಮಾಡುತ್ತಿದ್ದೇನೆ. ಎರಡು ಸಮಸ್ತದ ಐಕ್ಯತೆ ಶೈಖುನಾ ರಿಗೆ ನಾವು ಕಟ್ಟುವ ಸೂಕ್ತವಾದ ಸ್ಮಾರಕವಾಗಿರುತ್ತದೆ. ಮೂರು ದಿನದ ಮುಂಚೆ ನಾನು ಶೈಖುನಾರವರನ್ನು ಸಂದರ್ಶಿಸಿದಾಗ ಸುನ್ನೀ ಐಕ್ಯದ ಕುರಿತು ಧೀರ್ಘಸಮಯ ಮಾತನಾಡಿದರು.ಶೈಖುನಾ ಸಮ್ಮತಿ ನೀಡಿದರೆ ನಾನು ಶ್ರಮಿಸುವೆನು ಎಂದಾಗ,ಹೌದು ಎರಡು ವಿಭಾಗ ಸುನ್ನಿಗಳು ಐಕ್ಯವಾಗಬೇಕು ಅದು ಸಮುದಾಯ ಸಬಲೀಕರಣ ಕ್ಕೆ ಅತ್ಯಗತ್ಯವಾಗಿದೆ ಎಂದುತ್ತರಿಸಿದರು.*
(ಚಂದ್ರಿಕ 1996,ಆಗಸ್ಟ್30)

ಮುಂದುವರಿದ ಭಾಗವಾಗಿ ಸೆಯ್ಯದ್ ಮುಹಮ್ಮದಲಿ ಶಿಹಾಬ್ ತಂಙಳ್,ಉಮರಲಿ ಶಿಹಾಬ್ ತಂಙಳ್, ಹೈದರಲಿ ಶಿಹಾಬ್ ತಂಙಳ್, ಸಾದಿಕಲಿ ಶಿಹಾಬ್ ತಂಙಳ್, ಕುಞ್ಞಾಲಿಕುಟ್ಟಿ ಸಹಿತ ಎಲ್ಲರೊಂದಿಗೂ ಶೈಖುನಾರವರ ಅಂತ್ಯ ಅಭಿಲಾಷೆಯ ಕುರಿತು ಮಾಹಿತಿ ನೀಡಿದ ವಿಷಯವನ್ನು ಕೂಡಾ ಅಬ್ದುರ್ರಹ್ಮಾನ್ ಕಲ್ಲಾಯಿ ಬರೆಯುತ್ತಾರೆ.

ಖಮರುಲ್ ಉಲಮಾ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ನೇತೃತ್ವ ನೀಡುವ ಸಮಸ್ತ ಕೂಡಾ ಸುನ್ನಿಗಳ ಐಕ್ಯತೆಗಾಗಿ ಆ ಕಾಲದಿಂದಲೇ ಬಧ್ಧತೆ ತೋರಿಸುತ್ತಾ ,ಕೆಲವೊಂದು ಉಮರಾಗಳ ಕಠಿಣ
ಪ್ರಯತ್ನದೊಂದಿಗೆ ಚರ್ಚೆಗಳು ಪ್ರಗತಿಪರವಾಗಿ ಮುಂದೆ ಸಾಗುತ್ತಿದೆ.ಸದರಿ ಪ್ರಯತ್ನ ಈಗಲೂ ಮುಂದುವರಿಯುತ್ತಿದೆ.

ಮುಸ್ಲಿಂ ಸಮುದಾಯದ ಸಾರ್ವತ್ರಿಕ ಫ್ಲಾಟ್ ಫೋರ್ಮ್ ಎಂದು ವಾದ ಮಂಡಿಸುವ ಮುಸ್ಲಿಂ ಲೀಗ್ ಎಂಬ ರಾಜಕೀಯ ಪಕ್ಷದ ಭಾಗದಿಂದ ಮರ್ಹೂಮ್ ಸಂಶುಲ್ ಉಲಮಾರವರ ಫರ್ಮಾನು ಬಂದ ನಂತರವೂ ಎರಡು ಸಮಸ್ತದ ಐಕ್ಯತೆಗೆ ಬೇಕಾಗಿ ಹ್ರದಯ ತಟ್ಟುವ ಒಂದು ಪ್ರಯತ್ನ ಯಾಕಾಗಿ ನಡೆಯಲಿಲ್ಲ?
ಇದೀಗ ಸೆಯ್ಯದ್ ಜಿಫ್ರೀ ಮುತ್ತು ಕ್ಕೋಯ ತಂಙಳ್ ಹಾಗೂ ಕಾಂತಪುರಂ ಎಪಿ ಉಸ್ತಾದ್ ಜಂಟಿಯಾಗಿ ಸುನ್ನೀ ಐಕ್ಯತೆಗಾಗಿ ಆಹ್ವಾನ ನೀಡಿದ್ದು ಮಾತ್ರವಲ್ಲ ಅದರ ಸಫಲತೆಗಾಗಿ ನಾಲ್ಕು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿದಾಗಲೂ ಸಮುದಾಯದ ಫ್ಲ್ಯಾಟ್ ಫೋರ್ಮ್ ಎಂದು ಹೇಳುವ ಮುಸ್ಲಿಂ ಲೀಗ್ ಐಕ್ಯ ಆಹ್ವಾನವನ್ನು ಸ್ವಾಗತಿಸಲೂ ಕೂಡಾ ತಯ್ಯಾರಾಗದೆ ಮೌನಪಾಲಿಸಿದ್ದರ ಹಿಂದಿರುವ ಗೂಢಾಲೋಚನೆ ಆತಂಕಕಾರಿಯಾಗಿರುತ್ತದೆ.

ಸಳಪಿಗಳು ಹಲವು ಗ್ರೂಪುಗಳಾಗಿ ಛಿದ್ರವಾದಾಗ ಅವರನ್ನು ಐಕ್ಯಗೊಳಿಸಲಿಕ್ಕಾಗಿ ಇದೇ ಮುಸ್ಲಿಂ ಲೀಗ್ ಪಕ್ಷದ ನಾಯಕರು ನಿದ್ದೆ ಬಿಟ್ಟು ಕಠಿಣ ಪ್ರಯತ್ನ ಮಾಡಿದಾಗ ಯಾಕಾಗಿ ಇದೇ ನಾಯಕರು ಸುನ್ನೀ ಐಕ್ಯ ವಿಷಯದಲ್ಲಿ ಉದಾಸೀನತೆಯ ಮನೋಭಾವ ತೋರುತ್ತಿರುವುದು?

INLಸಹಿತ ರಾಜಕೀಯ ಸಂಘಟನೆಗಳು ಹಾಗೂ ಸಾಮಾನ್ಯ ಜನರು ಐಕ್ಯ ಶ್ರಮಗಳನ್ನು ಸಂತೋಷಪೂರ್ವಕ ಸ್ವಾಗತಿಸುವಾಗ ಮುಸ್ಲಿಂ ಲೀಗ್ ಅನಗತ್ಯವಾಗಿ ಜನರಲ್ಲಿ ಭೀತಿಯನ್ನುಂಟು ಮಾಡುತ್ತಾ, ಪಟ್ಟಿಕ್ಕಾಡ್ ಸಮ್ಮೆಳನದಲ್ಲಿ ಅದನ್ನು ಬಹಿರಂಗವಾಗಿ ಪ್ರದರ್ಶಿಸುವ ಮೂಲಕ ಲೀಗ್ ಸಳಪೀ ಬಾಧೆಯಿಂದ ಮುಕ್ತವಾಗಲಿಲ್ಲವೆಂದು ಮತ್ತೊಮ್ಮೆ ಪ್ರೂಫ್ ಮಾಡಿದರು!

ಸಮುದಾಯದ ಫ್ಲಾಟ್ ಫೋರ್ಮ್ ಆಗಿರುವ ಮುಸ್ಲಿಂ ಲೀಗ್ ಸಮುದಾಯದ ಭೌತಿಕ ಸಬಲೀಕರಣ ಮತ್ತು ಪ್ರಗತಿಗಾಗಿ ಅವರೆಡೆಯಲ್ಲಿ ತಾರತಮ್ಯವಿಲ್ಲದೆ ಕಾರ್ಯಚರಿಸಿದರೆ, ಮತ ಸಂಘಟನೆಗಳೆಂಬ ರೀತಿಯಲ್ಲಿ ಎರಡು ಸಮಸ್ತಕ್ಕೂ ಲೀಗ್ ನೊಂದಿಗೆ ಅಸಹಕಾರಿಸಬೇಕಾದ ಅಗತ್ಯ ಬರುವುದಿಲ್ಲ.
ಆದರೆ ಪಕ್ಷದ ನಾಯಕರಾಗಿ ಗುರುತಿಸುವ ಕೆಲವರು ಸುನ್ನಿಗಳನ್ನು ಭಿನ್ನತೆಗೆ ತಳ್ಳುತ್ತಾ, ಸಳಫಿಸಂ ನ್ನು ಬೆಳೆಸುತ್ತಿದ್ದಾರೆ.ಅದಕ್ಕಾಗಿ ಗೂಢತಂತ್ರಗಳನ್ನು ಹಣೆಯುತ್ತಿದ್ದಾರೆ.ಅದರ ವಿರುದ್ಧ ಸುನ್ನಿಗಳು ಆಕ್ರೋಶಿಸುತ್ತಿರುವುದು ಮತ್ತು ಖಂಡಿಸುತ್ತರುವುದು ತಪ್ಪಾ?

ಮುಸ್ಲಿಂ ಲೀಗ್ ಪಕ್ಷದ ನೇತೃತ್ವದ ಲ್ಲಿರುವವರನ್ನು ಕೂಡಾ ವಂಚಿಸಿ ಸುನ್ನೀ ವಿಧ್ವಾಂಸರ ತೇಜೋವಧೆ ಮಾಡಲಿಕ್ಕಾಗಿ ಸಳಫಿಸ್ಟ್ಗಳು ಹಿಂಬದಿ ಸೀಟಲ್ಲಿ ಕುಳಿತು ಕುತಂತ್ರ ಹೆಣೆದುದಕ್ಕೆ ಆದೆಷ್ಟೋ ಉದಾಹರಣೆಗಳಿವೆ.
ಸಂಶುಲ್ ಉಲಮಾ ಇಕೆ ಉಸ್ತಾದರನ್ನು ಅವಹೇಳಿಸಿ ತೇಜೋವಧೆ ಮಾಡಲಿಕ್ಕಾಗಿ ಪಕ್ಷದ ಮುಖವಾಣಿ ಚಂದ್ರಿಕಾ ಪತ್ರಿಕೆ ಯನ್ನು ಅವರು ಬಳಸಿದ್ದರು.

ಸಳಪಿಗಳು ಮುಸ್ಲಿಂ ಲೀಗನ್ನು ತಮ್ಮ ಆಶಯ ಪ್ರಚಾರಕ್ಕಾಗಿ ಬಳಸಿದ್ದರಿಂದ ಸಂಶುಲ್ ಉಲಮಾ ಇಕೆ ಉಸ್ತಾದ್ ಕಾಂಗ್ರೆಸ್ ನೊಂದಿಗೆ ಕೈಜೋಡಿಸಿ ವಡಗರ ಎಂಬ ಪ್ರದೇಶದಲ್ಲಿ ಕೆ.ಕರುಣಾಕರನೊಂದಿಗೆ ವೇದಿಕೆ ಹತ್ತಿ, ಕಾಂಗ್ರೆಸ್ ಗೆ ಬೇಕಾಗಿ ಇಕೆ ಉಸ್ತಾದ್ ಮತಯಾಚಿಸಿದ ಪ್ರಸಂಗವೂ ನಡೆಯಿತು.
ಇದೆಲ್ಲದರ ಚರಿತ್ರೆ ಪುರಾವೆ ಕೈವಶವಿದೆ.

ಇಕೆ ಉಸ್ತಾದರನ್ನು ವಿರೋಧಿಸಿ ಲೀಗ್ ಪಕ್ಷದ ಅಂಕಣಗಾರ ಎಂ ಸಿ ವಡಗರ ಈ ರೀತಿ ಬರೆದ👇
*ಕಾಂಗ್ರೆಸ್ ಮತಯಾಚನೆ ವೇದಿಕೆಗಳಲ್ಲಿ ಕಿರಾಅತ್ ಹಾಗೂ ಫಾತಿಹ ಪಾರಾಯಣ ಆರಂಭಿಸಲಾಗಿದೆ ,ಹಣ ಕೊಟ್ಟರೆ ಬಾಲ ಅಲ್ಲಾಡಿಸುವ ಧನಮೋಹಿಗಳಾದ ಕೆಲವು ಕೂಲಿ ಮೌಲಾನಗಳು ನಿಲುವಂಗಿ ಧರಿಸಿ ಕಾಂಗ್ರೆಸ್ ಸ್ಟೇಜುಗಳಲ್ಲಿ ಪ್ರತ್ಯಕ್ಷ ರಾಗುತ್ತಿದ್ದಾರೆ. ಕೇವಲ ವಾರ್ಡೊಂದರ ಉಪಚುನಾವಣೆ ರಾಷ್ಟ್ರದ ಚುನಾವಣೆಕ್ಕಿಂತಲೂ ಕಾವು ಪಡೆಯಿತು. ನೆಬಿ ಮದ್ಹಹ್ ಹಾಗೂ ಇಂದಿನ ರಾಜಕೀಯ ದಲ್ಲಿ ಮುಸ್ಲಿಮರ ಭಾದ್ಯತೆ ಏನೆಂದು ತಿಳಿಸಲು ಕರೆದ ಸಭೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕುವುದಾಗಿದೆ ಮುಸ್ಲಿಮರ ಭಾದ್ಯತೆ ಎಂದು ಇ.ಕೆ ಅಬೂಬಕರ್ ಮುಸ್ಲಿಯಾರ್ ಹೇಳಿದರು.ಅದಕ್ಕೆ ಬೇಕಾದ ಕುರ್ಆನ್ ಆಯತ್ ಗಳನ್ನು ಮುಸ್ಲಿಯಾರ್ ತೆಗೆದುಕೊಂಡು ಬಂದಿದ್ದರು. ಮುಸ್ಲಿಯಾರರ ಪ್ರಭಾಷಣ ಹಳಿತಪ್ಪಿತ್ತು.ಮುಸ್ಲಿಯಾರ್ ಮಾಡಿದ ಭಾಷಣವೆಲ್ಲವೂ ಅಚ್ಚು ಹಾಕಲು ಅರ್ಹತೆ ಪಡೆದಿಲ್ಲವಾದರೂ ಈ ಗೆರೆಯೊಂದನ್ನು ಬರೆಯಬಹುದು."ಮುಸ್ಲಿಂ ಲೀಗ್ ಪಕ್ಷ; ಸೀದಿ ಹಾಜಿ,ಉಪ್ಪಿ, ಸಿ. ಎಚ್ ಮುಫ್ತಿ, ನಿಲುವಂಗಿಯ ಬಾಫಖಿ ನೇತೃತ್ವದ  'ಮುಸ್ಲಿಂ ಜನಾಬತ್',ಆಗಿದೆ. ಆಲ್ಲದೆ ಮುಸ್ಲಿಂ ಜಮಾಅತ್ ಅಲ್ಲ"*
(ಸಿ ಎಚ್ ಮುಹಮ್ಮದ್ ಕೋಯ ಜೀವಚರಿತ್ರಂ ಪೇಜ್ 297)

ನೋಡಿ....
ಇದು ಮುಸ್ಲಿಂ ಲೀಗ್ ಎಂಬ ಸಮುದಾಯ ಪಕ್ಷದ ಸಂಸ್ಕೃತಿ. ಮರ್ಹೂಂ ಸಂಶುಲ್ ಉಲಮಾರನ್ನು ಧನಮೋಹಿ,ಬಾಲ ಅಲ್ಲಾಡಿಸುವ ಪ್ರಾಣಿ,ನಿಲುವಂಗಿಯವ ಮುಂತಾದ ಅವಹೇಳನಕಾರಿ ಪದ ಉಪಯೋಗಿಸವ ಮೂಲಕ ನಿಂದಿಸಿ,ಮಹಾನುಭಾವರು ಸೆಯ್ಯದ್ ಅಬ್ದುರ್ರಹ್ಮಾನ್ ಬಾಫಖಿ ತಂಙಳ್ ರವನ್ನು ಕೆಟ್ಟ ಪದಗಳಿಂದ ಟೀಕಿಸಿದ್ದಾರೆಂದು ಈ ಪುಸ್ತಕದಲ್ಲಿ ಗೀಚಲಾಗಿದೆ.
ಮಾತ್ರವಲ್ಲ ಇದೇ ಪುಸ್ತಕಕ್ಕೆ ಸೆಯ್ಯದ್ ಮುಹಮ್ಮದಲಿ ಶಿಹಾಬ್ ತಂಙಳ್ ರವರ ಹೆಸರಲ್ಲಿ ಸಂದೇಶ ಬರಹವನ್ನು ಅಚ್ಚು ಹಾಕಲಾಗಿದೆ.
*ಆದರೆ ಇ.ಕೆ ಉಸ್ತಾದರ ಬಗ್ಗೆ ತಿಳಿದಿರುವ ಯಾರೂ ಕೂಡಾ ಉಸ್ತಾದರು ಬಾಫಖಿ ತಂಙಳ್ ರವರ ಕುರಿತು ನಿಂದಿಸಿ ಬರೆಯುತ್ತಾರೆಂದೊ,ಇ.ಕೆ ಉಸ್ತಾದರ ಬಗ್ಗೆ ಕೆಟ್ಟದ್ದಾಗಿ ಬರೆದಿರುವ ಪುಸ್ತಕದ ಭಾಗ ನೋಡಿದ ನಂತರ ಶಿಹಾಬ್ ತಂಙಳ್ ಅದಕ್ಕೆ ಶುಭಹಾರೈಸಿ ಸಂದೇಶ ಬರೆದಿದ್ದಾರೆಂದೊ ಸಮ್ಮತಿಸಲು ಸಾದ್ಯವಿಲ್ಲ.*

ಲೀಗ್ ಪಕ್ಷದ ಖರ್ಚಿನಲ್ಲಿ ಪ್ರಕಾಶಗೈದ ಪುಸ್ತಕದಲ್ಲಿ ಸುನ್ನೀ ಉಲಮಾಗಳನ್ನು ಅತ್ಯಂತ ಕಿಳಾಗಿ ಸಳಪಿಗಳು ತೇಜೋವಧೆ ಮಾಡಿದ್ದರು.ಇಂತಹ ಎಡಬಿಡಂಗಿ ತನವನ್ನು ಪ್ರಶ್ನಸಿದರೆ ಅದು ಲೀಗ್ ನ ಅಸ್ತಿತ್ವಕ್ಕೆ ಕೊಡಲಿಯೇಟು ಹಾಕುವುದೆಂದು ಯಾರೂ ಬಾವಿಸಬೇಡಿ.ಇದರ ಹೆಸರಲ್ಲಿ ಸುನ್ನಿಗಳು ಐಕ್ಯವಾಗುವುದರಲ್ಲಿ ಅಸಹಿಷ್ಣುತೆ ಪ್ರದರ್ಶಿಸ ಬಾರದು.
ಮುಸ್ಲಿಂ ಮಹಲ್ಲುಗಳಲ್ಲಿ,ಕುಟುಂಬ ಗಳಲ್ಲಿ, ಅವರ ಮಸೀದಿಗಳಲ್ಲಿ ಕಠಿಣವಾದ ಛಿಧ್ರತೆಯುಂಟು ಮಾಡುವುದಕ್ಕೆ ನೇತೃತ್ವ ನೀಡಿದ ವಹ್ಹಾಬಿ ನಾಯಕರನ್ನು ನವೋತ್ಥಾನ ಶಿಲ್ಪಿಗಳಾಗಿ ಚಿತ್ರೀಕರಿಸುವ ಪ್ರಯತ್ನ ಮುಸ್ಲಿಂ ಲೀಗ್ ಪಕ್ಷದ ಪರದೆಯ ಹಿಂದೆ ನಡೆಯಿತು.
ಆಡಳಿತದಲ್ಲಿ ಸಹಭಾಗಿತ್ವ ಲಭಿಸಿದ ಕಾಲಘಟ್ಟದಿಂದ ಹಿಡಿದು ಇಂದಿನವರೆಗೂ ಲೀಗ್ ಸಲಫಿಸಂ ನ್ನು ಬೆಳೆಸಲು ಸುನ್ನೀಸಂ ನ್ನು ಚಿವುಟಿ ಹಾಕಲು ಅದರಲ್ಲಿರುವ ಸಳಫಿಗಳು ಪ್ರಯತ್ನಿಸುತ್ತಾ ಇದ್ದಾರೆ.ಆದರೆ ಸುನ್ನಿಗಳಾದ ಹಲವರು ಕೇವಲ ನಿಸ್ಸಹಕಾರಿಯಾಗಿ ನೋಡಿದರೇ ವಿನಹ ಬದಲಾವಣೆ ತರಲು ಶ್ರಮಿಸಲೇ ಇಲ್ಲ.

1960 ರ ವಿಧಾನಸಭಾ ಸ್ಪೀಕರ್ ಪದವಿ ಅಲಂಕರಿಸುವ ಮೂಲಕ ಮುಸ್ಲಿಂ ಲೀಗ್ ಪಕ್ಷ ಅಧಿಕಾರದಲ್ಲಿ ಸಹಭಾಗಿತ್ವ ಪಡೆಯಿತು.ಅಂದಾಗಿದೆ ಕೇರಳ ವಖ್ಫ್ ಬೋರ್ಡ್ ರೂಪೀಕರಿಸಿದ್ದು.
ವಖ್ಫ್ ಸೊತ್ತುಗಳಲ್ಲಿ ನೂರು ಶೇಖಡಾ ಸುನ್ನಿಗಳ ಸೊತ್ತಾಗಿದ್ದು ಕೂಡಾ ಅಂದು ರಚನೆಯಾದ ವಖಫ್ ಬೊರ್ಡ್ ನ ಸದಸ್ಯರುಗಳಾಗಿ ವಹ್ಹಾಬಿಗಳನ್ನು ಮತ್ತು ಅವರನ್ನು ಹೊತ್ತುನಡೆಯುವ ಸಿಂಗಡಿಗಳನ್ನು ನೇಮಕ ಮಾಡಲಾಯಿತು.
ಇದರ ವಿರುಧ್ಧ ಸೆಯ್ಯದ್ ಬಾಫಖಿ ತಂಙಳ್ ರವರ ಪಾಂಡಿಕಾಶಾಲೆಯಲ್ಲಿ ಸೇರಿದ ಸಭೆಯಲ್ಲಿ ನಿರ್ಣಯ ಹೊರಡಿಸಿದ್ದನ್ನು ಅವಿಭಕ್ತ ಸಮಸ್ತ ಹೊರತಂದ ವಾರ್ಷಿಕ ಸುವನೀರ್ ನಲ್ಲಿ ನೋಡಬಹುದು.
ನಂತರ ಅರಬೀ ಭಾಷಾ ಕಲಿಕೆಗಾಗಿ ರಚಿಸಿದ ಪಾಠ ಪುಸ್ತಕ ಸಮಿತಿಯ ರಚಿಸಿದಾಗಲೂ ಅದರ ಎಲ್ಲಾ ಸದಸ್ಯರಾಗಿ ಮುಸ್ಲಿಂ ಲೀಗ್ ಸಲಫಿಗಳನ್ನು ಆಯ್ಕೆ ಮಾಡಿತು.
ಇದರ ಫಲವಾಗಿ ಬರೋಬ್ಬರಿ 20 ವರ್ಷಗಳಿಗಿಂತಲೂ ಹೆಚ್ಚು ಕಾಲ ಸಲಫೀ ಆಶಯವಿರುವ ಪಾಠ ಭಾಗಗಳನ್ನು ಸರಕಾರದ ಖರ್ಚಿನಲ್ಲಿ ಸುನ್ನಿಗಳ ಮಕ್ಕಳಿಗೆ ಕಲಿಸಲಾಯಿತು.
ಅರಬೀ ಅಧ್ಯಾಪಕರನ್ನು ಸ್ರೃಷ್ಟಿಸುವ ಓರಿಯಂಟಲ್ ಅರಬೀ ಕಾಲೇಜುಗಳನ್ನು ಪೂರ್ಣವಾಗಿ ಸಳಪಿಗಳ ಪಾಲಿಗೆ ನೀಡಲಾಯಿತು.ಇಂದು ಕಾಣುವ ಅಧಿಕ ಸಲಫಿ ಮೌಲವಿಗಳು ಈ ಸರಕಾರದ ಕಾಲೇಜಿನ ಪ್ರೊಡಕ್ಟ್ ಗಳಾಗಿದೆ.
ಇಂತಹ ಪಾಶ್ವೀಕರಣದ ನಿಲುವಿನೊಂದಿಗೆ ಸುನ್ನಿಗಳು ಪ್ರತಿರೋಧ ವ್ಯಕ್ತಪಡಿಸುತ್ತಾ ಇದ್ದಾರೆ.
ಇದು ಮುಸ್ಲಿಂ ಲೀಗ್ ವಿರುದ್ಧ ಚಳುವಳಿಯಾಗಿ  ವ್ಯಾಖ್ಯಾನಿಸುವುದಕ್ಕೆ ಬದಲು ಸುನ್ನಿಗಳೊಂದಿಗೆ
ನ್ಯಾಯಯುತವಾಗಿ ವರ್ತಿಸುವ ಬಧ್ಧತೆ ತೋರಿಸಿ ಅವರನ್ನು ಸಹ ಐಕ್ಯಯತೆಯ ದಾರಿಗೆ ತಂದು ಸಮುದಾಯ ಸಬಲೀಕರಣಕ್ಕೆ ಲೀಗ್ ನೇತೃತ್ವ ತಯ್ಯಾರಾಗಿದ್ದರೆ ಅದೆಷ್ಟು ಒಳಿತಾಗುತ್ತಿತ್ತು.

ಆದರೆ ಇಲ್ಲಿ ಸುನ್ನಿಗಳು ಸದಾ ಭಿನ್ನತೆಯಿಂದಲೇ ಇರಬೇಕೆಂಬ ಸಳಫಿಗಳ ಆಗ್ರಹಕ್ಕೆ ಮನ್ನಣೆ ನೀಡಲಾಗುತ್ತಿದೆ.

ಸುನ್ನಿಗಳು ಐಕ್ಯದ ಕುರಿತು ಆಲೋಚನೆ ನಡೆಸಿದರೆ,ಚರ್ಚೆ ಗಳು ನಡೆಸಿದರೆ ಲೀಗ್ ನ ಮುಖವಾಣಿ ಚಂದ್ರಿಕಾ ಪತ್ರಿಕೆಯಲ್ಲಿ ಅವಿತು ಕುಳಿತಿರುವ ಸಳಪಿಗಳು,ಸಾಮಾಜಿಕ ತಾಣದಲ್ಲಿ ಅಡಗಿ ಕುಳಿತಿರುವ ವಹ್ಹಾಬಿಗಳು ಸುನ್ನಿಗಳು ಪರಸ್ಪರ ಕಾದಾಟ ಮಾಡುವಂತೆ ಪೋಸ್ಟ್ ಗಳನ್ನು ಹಾಕಿ ಭಿನ್ನತೆಗೆ ಶ್ರಮಿಸುವರು.
ಕೊನೆಯದಾಗಿ ಮುಸ್ಲಿಂ ಲೀಗ್ ರಾಜಕೀಯ ಪಕ್ಷದ ನಾಯಕರೇ ಸುನ್ನಿಗಳು ಐಕ್ಯವಾಗುವುದಕ್ಕೆ ನೀರಸ ಪ್ರತಿಕ್ರಿಯೆ ನೀಡಿದ್ದು ನಾವು ದರ್ಶಿಸಿದ್ದೆವೆ.

ಈ ಸಂದರ್ಭದಲ್ಲಿ ಎರಡು ವಿಭಾಗದ ಸುನ್ನಿಗಳು ಅತ್ಯಂತ ಜಾಗರುಕರಾಗಿ ಕಾರ್ಯಚರಿಸಬೇಕು.ರಾಜಕಾರಣಿಗಳು ಹಾಕಿದ ಗಾಳದಲ್ಲಿ ಜಿಗಿದು ದಾಳವಾಗಬೇಡಿ.ಅವರ ಮಾತು ಕೇಳಿ ಐಕ್ಯ ಶ್ರಮ ಮುರಿಯಿತೆಂದು ಬಾವಿಸಿ ಪರಸ್ಪರ ಕೆಸರೆರಚಬೇಡಿ.ಸಾಮಾಜಿಕ ತಾಣ ಅತ್ಯಂತ ಸೂಕ್ಷಮವಾಗಿ ಉಪಯೋಗಿಸದೆ ಇದ್ದಲ್ಲಿ, ಸಮುದಾಯದ ಮಧ್ಯೆ ನಾವುಂಟು ಮಾಡುವ ಗಾಯ,ಮಾರಕವಾಗಿ ನಮ್ಮಿಂದಲೇ ಒಣಗಿಸಲು ಸಾದ್ಯವಾಗದೆ ಹೋದೀತು!
ಅತ್ಯಂತ ಕ್ಷಮಾಶೀಲರಾಗಿ ಕಾಯುತ್ತಾ ಇರಿ.ಬುಧ್ಧಿವಂತಿಕೆಯ ತಂತ್ರ ಉಪಯೋಗಿಸಿರಿ ಹಖ್ಖ್(ಸತ್ಯ)ನ ಪರವಾಗಿರುವವರು ಐಕ್ಯವಾಗಿಯೇ ತೀರುವರು.
ಇನ್ಶಾಅಲ್ಲಾ.....

Tuesday, January 23, 2018

💚 *70 ಸಾವಿರ ತಹ್ಲೀಲ್ ಇದರ ಮಹತ್ವ*💚

ಒಬ್ಬರು 70 ಸಾವಿರ *ಲಾ ಇಲಾಹ ಇಲ್ಲಾಲ್ಲಾಹ್*  ಮರಣ ಹೊಂದಿದ ವ್ಯಕ್ತಿಯ ಮೇಲೆ ಹೇಳಿದರೆ ಹೇಳಲ್ಪಟ್ಟ ಆ ಮಯ್ಯಿತ್ ಗೆ ಯಾವುದೇ ವಿಚಾರಣೆಯಿಲ್ಲದೆ ಸ್ವರ್ಗ ಪ್ರವೇಶ ಸಿಗುವುದು. ಎಂದು ಹದೀಸ್ ಆಧಾರಗಳಲ್ಲಿ ಹೇಳಲಾಗಿದೆ.
    ಮುಲ್ಲಾ ಅಲಿಯ್ಯಿಲ್ ಖಾರಿ (ರ) ರವರು ಉಲ್ಲೇಖಿಸುತ್ತಾರೆ. ವಿಶ್ವಪ್ರಸಿದ್ಧ ಆತ್ಮೀಯ ವಿದ್ವಾಂಸರಾಗಿದ್ದ ಮುಹಿಯ್ಯದ್ದೀನುಬ್ನು ಅರಬಿ (ರ.ಅ) ರವರು ಉಪಯುಕ್ತ ಹದೀಸ್ ನ ಪ್ರಬಲತೆಯನ್ನು ಪರಿಶೀಲಿಸಲಿಕ್ಕಾಗಿ 70ಸಾವಿರ ತಹ್ಲೀಲ್ ನಿಶ್ಚಿತ ಸಮಯದ ಒಳಗೆ ಹೇಳಿ ಮುಗಿಸಿದರು.
      ಕೆಲವು ದಿವಸಗಳು ಕಳೆಯಿತು ಒಂದು ದಿವಸ ಇಬ್ನು ಅರಬಿಯವರ ಪ್ರಿಯ ಶಿಷ್ಯನು ತನ್ನ ತಾಯಿಯೂ ನರಕಾಗ್ನಿಯಲ್ಲಿ ಬಿದ್ದು ಸುಟ್ಟು ಕರಕಲಾಗುವುದಾಗಿ ಕನಸು ಕಂಡರು.
     ತಾಯಿಯ ಪರಲೋಕ ಜೀವನದ ನಿಜಸ್ಥಿತಿಯನ್ನು ಕನಸಿನ ಮೂಲಕ ದರ್ಶಿಸಿದ ಮಗನು ಪ್ರಸ್ತುತ ಕನಸಿನ ವಿವರವನ್ನು ಗುರುಗಳಿಗೆ ತಿಳಿಸಿದರು.
    ಶಿಷ್ಯನನ್ನು ಸಮಾಧಾನ ಪಡಿಸಿದ ನಂತರ ಇಬ್ನು ಅರಬಿ (ರ) ರವರು ಹೇಳಿದರು. ನೀನು ಇವತ್ತು ಸಮಾಧಾನದಿಂದ ಹಿಂದಿರುಗಿ ಹೋಗು. ಇಂದು ರಾತ್ರಿ ಕಾಣುವ ಕನಸಿನ ವಿವರವನ್ನು ನಾಳೆ ಬಂದು ನನಗೆ ತಿಳಿಸಬೇಕು. ಅಂದು ರಾತ್ರಿ ತಾಯಿಯು ಸಂತೋಷ ಹಾಗೂ ಸುಖಾಡಂಬರಗಳಲ್ಲಿ ಉಲ್ಲಸಿತರಾಗಿ ಸ್ವರ್ಗೀಯ ಜೀವನವನ್ನು ಅನುಭವಿಸುತ್ತಿರುವ ಆನಂದದಾಯಕವಾದ ದೃಶ್ಯವನ್ನು ಆಗಿತ್ತು ಮಗನಿಗೆ ಕಾಣಲು ಸಾಧ್ಯವಾಯಿತು. ಮಗನು ಸಂತೋಷದಿಂದ ತಾಯಿಯನ್ನು ಆಲಿಂಗನ ಮಾಡಿ ಕೇಳಿದ. "ಅಮ್ಮಾ ... ನಿನ್ನೆ ನಾನು ನಿಮ್ಮನ್ನು ನರಕದಲ್ಲಿ ಇರುವುದಾಗಿ ಕನಸು ಕಂಡೆ. ಇಂದು ನಿಮಗೆ ಸ್ವರ್ಗಾವಕಾಶ  ಲಭ್ಯವಾಗಲು ಕಾರಣವಾದರೂ ಏನು...?
      ತಾಯಿ ಹೇಳಿದರು " ಮಗನೇ.... ನಿನ್ನ ಪ್ರಿಯ ಗುರುವರ್ಯರಾದ ಇಬ್ನು ಅರಬಿ (ರ) ರವರು ಹೇಳಿಮುಗಿಸಿದ್ದ 70000 ತಹ್ಲೀಲ್ ಗಳನ್ನು ಯಾವುದು ಮೈಮನಸ್ಯವಿಲ್ಲದೆ ಮಹಾನುಭಾವರು ನನಗೆ ಹದ್ಯಾ ಮಾಡಿದರು. ಆ ಕ್ಷಣದಿಂದ ನನಗೆ ನರಕ ವಿಮೋಚನೆ ಲಭಿಸುವುದರೊಂದಿಗೆ ಸ್ವರ್ಗದ ಬಾಗಿಲು ಗಳನ್ನು ನನಗೆ ತೆರೆಯಲ್ಪಟ್ಟಿತು...
      ಆಹ್ಲಾದಕರವಾದ ಈ ಕನಸನ್ನು ಶಿಷ್ಯನು ಗುರುವರ್ಯರಾದ ಇಬ್ನು ಅರಬೀ (ರ) ಅವರಿಗೆ ತಿಳಿಸಿದಾಗ ಅವರು ಅಲ್ಲಾಹನಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಮೇಲೆ ಸೂಚಿಸಿದ ಹದೀಸ್ ಪ್ರಬಲವಾದದ್ದು ಎಂಬ ಸತ್ಯವೂ ಈ ಘಟನೆಯ ಮೂಲಕ ಶೈಖ್ ರವರು ಮನವರಿಕೆ ಮಾಡಿಕೊಂಡರು (ಮಿರ್ ಕಾತುಲ್ ಮಫಾತೀಹ್)
❤❤❤🌴❤❤❤❤❤
💚🌺صلّوا  على الحبيب (ﷺ.

*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ*
💕 *ಪುಣ್ಯ ಪ್ರವಾದಿ ( ﷺ) ತಂಙಳ್ ರವರ ಮೇಲೆ ಮೂರು ಸ್ವಲಾತ್*
*اللهم صل علي سيدنا محمد عبدك ورسولك النبي الامي وعلي اله وصحبه وسلم* ✨
*ಇದನ್ನು ಶೇರ್ ಮಾಡಿರಿ.* 

*Swallu alal habeebﷺ*
*✍ಅಬೂ ಆಶಿಕ್*
*ನಾರಿಯತ್ ಸ್ವಲಾತ್ ಹಾಗೂ ಅದರ ಅರ್ಥ ಮತ್ತು ಮಹತ್ವ*
❣❣❣❣❣❣❣
ದಿನಾಲು 41 ಸಲ ಅಥವಾ ನೂರು ಸಲ ಅಥವಾ ಅದಕ್ಕೂ ಹೆಚ್ಚು ಸಲ ಈ ಸ್ವಲಾತನ್ನು ಹೇಳಿದರೆ ಅಲ್ಲಾಹನು ಸರ್ವ ದುಃಖ ಗಳನ್ನು ಸಂಕಷ್ಟಗಳನ್ನು ನಿವಾರಿಸುವನು . ಎಲ್ಲಾ ಕಾರ್ಯಗಳನ್ನು ಸುಲಭಗೊಳಿಸುವನು, ಆತ್ಮವು ಬೆಳಗುವುದು , ದರ್ಜೆ ಏರುವುದು, ಅನುಕೂಲ ಉಂಟಾಗುವುದು, ಜೀವನ ಮಾರ್ಗ ಸುಲಭವಾಗುವುದು, ಜನರ ಮನಸ್ಸಿನಲ್ಲಿ ಈ ಸ್ವಲಾತ್ ಹೇಳುವವರ ಬಗ್ಗೆ ಪ್ರೀತಿ ಹುಟ್ಟುವುದು, ಈ ಸ್ವಲಾತನ್ನು ಹೇಳುವವರನ್ನು ಎಲ್ಲರೂ ಪ್ರೀತಿಯಿಂದ ವ್ಯವಹರಿಸುವರು. ಎಂದು ಇಮಾಮ್ ಕ್ವುರ್ ತುಬಿ ರ) ವರದಿಯಾಗಿದೆ.
ಅಲ್ಲಾಹುವಿನ ಅನುಗ್ರಹಗಳು ಅತ್ಯಧಿಕವಾಗಿ ದೊರೆಯಬೇಕೆಂಬ ಆಸೆ ಇರುವವರು , ಐಶ್ವರ್ಯವಂತರು ಆಗ ಬೇಕೆಂಬ ಬಯಕೆ ಇದೆಯೇ, ನರಕದ ಮೇಲಿನ ಸ್ವಿರಾತ್  ಸೇತುವೆ ದಾಟುವಾಗ ಅತ್ಯುಜ್ವಲ  ಬೆಳಕು ಬೇಕಾದವರು, ದಾನ-ಧರ್ಮ ಕೊಡಬೇಕೆಂಬ ಅತ್ಯಾಸೆ ಉಳ್ಳವರು,( ಕೊಡಲಿಕ್ಕೆ ಅವರ ಬಳಿ ಹಣ ಇಲ್ಲ) ಯಥೇಷ್ಟ ದಾನಧರ್ಮ ಮಾಡಿದ ಕೂಲಿ ಸಿಗಲು, ರೌಲಾ ಷರೀಫ್ ಝಿಯಾರತ್ ಮಾಡುವ ಸೌಭಾಗ್ಯ ದೊರೆಯಲು. ಪರಲೋಕದಲ್ಲಿ ಅಪಾರ ಪುಣ್ಯ ದೊರೆಯಲು. ಇಹ ಲೋಕದ ಎಲ್ಲ ಉದ್ದೇಶಗಳು ಈಡೇರಲು. ಕಷ್ಟ ದುಃಖ . ರೋಗರುಜಿನಗಳು ಶಮನ ಆಗಲು,
ಭಯ ನಿವಾರಣೆಯಾಗಲು.
ಬೇಸರ ದೂರವಾಗಲು,
ಮುಂತಾದ ಎಲ್ಲ ಕಷ್ಟಗಳಿಂದ ಪಾರಾಗಲು,
ಒಳ್ಳೆಯ ಸತ್ ಸ್ವಬಾವಿಗಳಾಗಲು.
ಈಮಾನ್ ಜಾಸ್ತಿ ಆಗಲು,
ಹೃದಯ ಶುದ್ಧಿಯಾಗಲು,
ಬಡತನ ದೂರವಾಗಲು,
ಸಾವಿರಕ್ಕೂ ಮಿಕ್ಕಿದ ರಹಸ್ಯಗಳನ್ನು ಇರುವ,
"ತವಸ್ಸುಲ್ ಹೊಂದಿರುವ, ನಮ್ಮ ಉದ್ದೇಶಗಳನ್ನು ಎತ್ತಿ ಹೇಳುವ , ಅಲ್ಲಾಹನ ನಿಧಿ. ಎಂಬ ನಾಮ ವಿರುವ, ಅಲ್ಲಾಹನ ಖಜಾನೆಗಳ ಕೀಲಿಕೈ ಯಾಗಿರುವ ಮಹತ್ವವಾದ ಒಂದು ಸ್ವಲಾತ್ ಆಗಿದೆ *ಸ್ವಲಾತುನ್ನಾರಿಯತ್* ಎಂಬ ಹೆಸರಾದ ಈ ಸ್ವಲಾತ್ ಮೊರಕ್ಕೊದ ಮುಸ್ಲಿಮರು ಹೆಚ್ಚಾಗಿ ಸಂಕಷ್ಟ ನಿವಾರಣೆಗೆ, ಉದ್ದೇಶ ಸಾಫಲ್ಯತೆಗೆ ಬಳಸುತ್ತಾರೆ  ಹೇಳುವವನಿಗೆ ಮೇಲಿನ ಎಲ್ಲಾ ಲಾಭಗಳು ದೊರೆಯುವುದಲ್ಲದೆ 4444 ಬಾರಿ  ಯಾವುದೇ ಉದ್ದೇಶ ವಿಟ್ಟುಕೊಂಡು ಹೇಳಿದರೆ ಖಂಡಿತ ಹೇಳಿ ಮುಗಿಯುವುದರೊಳಗಾಗಿ ಆ ಉದ್ದೇಶ ಈಡೇರುವುದು ಅಪ್ಪಟ ಸತ್ಯವೆಂದು ಇಮಾಮ್ ಕುರ್ ತುಬಿ( ರ) ಹೇಳಿದ್ದಾರೆ

ಸ್ವಲಾತ್ ಈ ಕೆಳಗೆ ನೀಡಲಾಗಿದೆ👇👇👇

☪ *اَللَّهُمَّ صَلِّ صَلاَةً كَامِلَةً وَسَلِّمْ سَلاَماً تَامًّا عَلَى سَيِّدِنَا مُحَمَّد ٍالذي تَنْحَلُّ بِهِ الْعُقَدُ وَتَـنْفَرِجُ بِهِ الْكُرَبُ وَتُـقْضَى بِهِ الْحَوَائِجُ وَتُنَالُ بِهِ الرَّغَائِبُ وَحُسْنُ الْخَوَاتِمِ وَيُسْتَسْقَى الْغَمَامُ بوَجْهِهِ الْكَرِيمِ وَعَلى آلِهِ وَصَحْبِهِ فِي كُـلِّ لَمْحَةٍ وَنَفَسٍ بِعَدَدِ كُـلِّ مَعْلُومٍ لَكْ*

*ಅಲ್ಲಾಹುಮ್ಮ ಸ್ವಲ್ಲಿ ಸ್ವಲಾತನ್ ಕಾಮಿಲತನ್ ವಸಲ್ಲಿಮ್ ಸಲಾಮನ್ ತಾಮ್ಮನ್ ,ಅಲಾ ಸಯ್ಯಿದಿನಾ ಮುಹಮ್ಮದಿನಿಲ್ಲದ್ಝಿ ತನ್ ಹಲ್ಲು  ಬಿಹಿಲ್ ಉಕ್ವದ್  ವತನ್ ಫರಿಜು ಬಿಹಿಲ್ ಕುರಬು ವತುಕ್ವುಲ್ವಾ ಬಿಹಿಲ್ ಹವಾಇಜು  ವತುನಾಲು ಬಿಹಿರ್ರಗಾಯಿಬು ಬಹುಸುನುಲ್ ಖವಾತಿಮಿ ವಯುಸ್ತಕ್ವಲ್ ಗಮಾಮು ಬಿವಜಿಹಿಹಿಲ್ ಕರೀಮ್, ವಅಲಾ ಆಲಿಹೀ ವಸ್ವಬ್ಬಿಹೀ ಫೀ ಕುಲ್ಲಿಲಮ್ ಹತಿನ್ ವನಫ್ ಸಿನ್ ಬಿಅದದ ಕುಲ್ಲಿ ಮಆಲೂಮಿಲ್ಲಕ್...*
🌿🌿🌿🌿🌿🌿🌿🌿🌿*ಅರ್ಥ*👇👇👇
ಅಲ್ಲಾಹನೇ ಪರಿಪೂರ್ಣವಾದ ಕರುಣೆಯನ್ನೂ, ಹಾಗೂ ಪರಿಪೂರ್ಣವಾದ ರಕ್ಷೆಯನ್ನೂ ಮಹಮ್ಮದ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ರವರ ಮೇಲೆ ನೀನು ವರ್ಷಿಸು.
  ಆ ನಬಿ ಸ್ವಲ್ಲಲ್ಲಾಹು ಅಲೈಹಿವ  ಸಲ್ಲಮ್ ರವರ ಕಾರಣ ಎಲ್ಲಾ ಕ್ಲೇಶಗಳೂ ಪರಿಹಾರವಾಗುವುದು. ಎಲ್ಲಾ ಕಷ್ಟಗಳೂ ತೊಲಗುವುದು, ಎಲ್ಲಾ ಅವಶ್ಯಕತೆ ಗಳೂ ಈಡೇರುವುದು ,  ಎಲ್ಲಾ ಆಗ್ರಹಗಳು ಸಫಲೀಕರಣವಾಗುವುದು, ಎಲ್ಲಾ ಕಾರ್ಯಗಳ ಪರ್ಯಾವಸಾನವು ಹಸನುಗೊಳ್ಳುವುದು,
  ಅವರ ಪಾವನ ಮುಖ ದರ್ಶನದಿಂದ ಮಳೆಯನ್ನು ವರ್ಷಿಸುವುದು,
    ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ರವರ ಕುಟುಂಬದ ಮೇಲೂ , ಅನುಚರರ ಮೇಲೂ ಕರುಣೆ ಹಾಗೂ ರಕ್ಷೆ ವರ್ಷಿಸುತ್ತಾ  ಇರಲಿ ಪ್ರತಿಯೊಂದು ಕ್ಷಣದಲ್ಲೂ ಪ್ರತಿಯೊಂದು ಶ್ವಾಸದಲ್ಲೂ ಅಲ್ಲಾಹನ ಅರಿವಿನ ಸಂಖ್ಯೆಯಷ್ಟು....
🌿🌿🌿🌿🌿🌿🌿🌿✒ *ಅಬೂ ಆಶಿಕ್*

*Swallu alal habeebﷺ*
*whatsapp group*
*ಸದಸ್ಯವಾಗಲು 👇👇 📲 ಮಾಡಿ*
*7498455036*
*بِسْمِ اللّٰهِ الرَّحْمَٰنِ الرَّحِيمْ*

*ಹದೀಸ್ ವಿದ್ವಾಂಸರುಗಳಾದ ಇಮಾಮರುಗಳ ಸಂಕ್ಷಿಪ್ತ ಪರಿಚಯ*...

1⃣9⃣
📚📚📚📚📚📚📚📚📚📚

7⃣ *ಇಮಾಂ ಇಬ್ನ್ ಮಾಜ(ರ.ಅ)* :
*ಅಬೂ ಅಬ್ದುಲ್ಲಾ  ಮುಹಮ್ಮದ್ ಬಿನ್ ಮಾಜ(ರ.ಅ). ಹಿಜಿರಾ 209-273. ಜ್ಞಾನಾರ್ಜನೆಗಾಗಿ ಬಾಲ್ಯದಲ್ಲಿಯೇ ಬಸ್ರಾ, ಕೂಫಾ, ಬಾಗ್ದಾದ್, ಮಕ್ಕಾ, ಶಾಮ್ , ರಯ್ಯ್ ಮುಂತಾದ ಪ್ರದೇಶಗಳಿಗೆ ತೆರಳಿ ಅಲ್ಲಿಯ ಮಹಾ ವಿದ್ವಾಂಸರ ಶಿಷ್ಯತ್ವವನ್ನು ಸ್ವೀಕರಿಸಿದರು. ಇವರು ಅಬೂಬಕ್ಕರ್ ಬಿನ್ ಅಬೀಶೈಬ(ರ.ಅ), ಯಝೀದ್ ಬಿನ್ ಅಬ್ದುಲ್ಲಾಹಿಲ್ ಯಮಾನಿ(ರ.ಅ) , ಅಬೂಸುರ್ ಅತು ರ್ರಾಝಿ(ರ.ಅ) ಮೊದಲಾದ ವಿದ್ವಾಂಸರಿಂದ ಹದೀಸ್ ಕಲಿತರು. ಇಬ್ನ್ ಮಾಜ ತಫ್ಸೀರ್ ಮತ್ತು ಚರಿತ್ರೆಯಲ್ಲಿಯೂ ಗ್ರಂಥಗಳನ್ನು ರಚಿಸಿದ್ದಾರೆ. ಇಮಾಂ ಇಬ್ನ್ ಮಾಜ(ರ.ಅ)ರವರ ಗ್ರಂಥದಲ್ಲಿ 1500 ಅಧ್ಯಾಯಗಳಲ್ಲಿ 4341 ಹದೀಸ್ ಗಳಿವೆ. ಇದು ಸಿಹಾಹುಸ್ಸಿತ್ತದಲ್ಲಿ ಆರನೆಯ ಗ್ರಂಥವಾಗಿದೆ. ಸುನನುಬ್ನ್ ಮಾಜದಲ್ಲಿ ಮುವತ್ತಾ ಹಾಗೂ ಇತರ 5 ಗ್ರಂಥಗಳಲ್ಲಿಲ್ಲದ ಕೆಲವು ಹದೀಸ್ ಗಳಿವೆ. ಸ್ವಹೀಹ್ , ಹಸನ್ ಹಾಗೂ ಲಈಫ್ ಆದ ಹದೀಸ್ ಗಳನ್ನು ಸ್ವೀಕರಿಸಿದ ಕಾರಣದಿಂದ ಇದು 6 ನೇ ಸ್ಥಾನಕ್ಕೆ ತಲುಪುವಂತಾಯಿತು. ಇಬ್ನ್ ಮಾಜರ ಸಮಕಾಲೀನರು ಅವರು ಮತ್ತು ಅವರ ರಚನೆಗಳನ್ನು ತುಂಬಾ ಗೌರವಿಸುತ್ತಿದ್ದರು*. 

            *ಹದೀಸ್ ಸಂಗ್ರಹ ಮತ್ತು ಕ್ರೋಢೀಕರಣದಲ್ಲಿ  ಮೇಲಿನವರು ಮಾತ್ರವಲ್ಲದೇ ಇತರ ಅನೇಕ ಹದೀಸ್ ವಿದ್ವಾಂಸರು ಕೂಡಾ ಪ್ರಯತ್ನಶೀಲರಾಗಿದ್ದರು. ಅವರಲ್ಲಿ ಇಮಾಂ ಹಾಕಿಂ (ರ.ಅ), ಇಮಾಂ ದಾರುಖುತ್ನಿ(ರ.ಅ), ಇಮಾಂ ಬಿರ್ಖಾನಿ(ರ.ಅ), ತ್ವಬ್ರಾನಿ, ಇಮಾಂ ಸುಯೂತಿ(ರ.ಅ) ಮೊದಲಾದವರು ಪ್ರಖ್ಯಾತ ಹದೀಸ್ ವಿದ್ವಾಂಸರಾಗಿದ್ದರು*.

*ಮುಂದುವರಿಯುವುದು*.....

📚📚📚📚📚📚📚📚📚📚

ಝಿಯಾರತ್ತ್ ಕೇಂದ್ರ 59 ವರಕ್ಕಲ್ ಮುಲ್ಲಕೊಯ ತಂಗಳ್ (ರ)

*ಝಿಯಾರತ್ತ್ ಕೇಂದ್ರ​*
   ಸಮಸ್ತ ನಾಯಕರು = 07
〰〰〰〰〰〰〰〰〰
      *➡5⃣9⃣*
*#ವರಕ್ಕಲ್_ಮುಲ್ಲ_ಕೋಯ_ತಂಗಳ್. (ಖ:ಸಿ) ಪುಡಿಯಂಙಾಡಿ ಕಲ್ಲಿಕೋಟೆ.*
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
🕌🕌🕌🕌🕌🕌🕌🕌🕌
✍ ಗಫೂರ್ ಬಾಯಾರ್
〰〰〰〰〰〰〰〰〰

ಅಲ್ಲಾಹನ ರಸೂಲ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಕುಟುಂಬ ಪರಂಪರೆಯಾದ ಅಹ್ಲ್'ಬೈತ್ ಎಂಬ ಅತ್ಯುನ್ನತ ಕುಟುಂಬದಲ್ಲಿ ಜನಿಸಿದ *ವರಕ್ಕಲ್ ಮುಲ್ಲಕೇೂಯ ತಂಙಳ್  ಎಂದೇ ಪ್ರಸಿದ್ಧರಾದ ಸಯ್ಯದ್ ಅಬ್ದುಲ್ ರಹ್ಮಾನ್ ಬಾ ಅಲವಿ ಮುಲ್ಲಕೇೂಯ ತಂಙಳ(ಖ.ಸಿ)ರು* ಯಮನಿನ ಹಲರ್ ಮೌತಿನಿಂದ ಕೇರಳಕ್ಕೆ ಆಗಮಿಸಿದ ಮಹಾನರಾನರಾಗಿದ್ದಾರೆ.

ಹಿಜರಿ 1256ರಲ್ಲಿ ಜನಿಸಿದ  ವರಕ್ಕಲ್ ಮುಲ್ಲಕೇೂಯ ತಂಙಳ(ಖ.ಸಿ)ರು ಅರಬಿ, ಉರ್ದು, ಪಾರ್ಸಿ, ಇಂಗ್ಲೀಷ್, ಸೇರಿದಂತೆ ಹಲವಾರು ಭಾಷೆಗಳನ್ನು ಬಲ್ಲವರಾಗಿದ್ದ ಮಹಾನರ ಕರಾಮತ್ ಕೇರಳದ ಮುಸ್ಲಿಂ ವಿಧ್ವಾಂಸರ ನಡುವೆ ಚರ್ಚಾ ವಿಷಯವೂ ಆಗಿತ್ತು.

 ಸಮಸ್ತ ಕೇರಳ ಜಂಈಯತ್ತುಲ್ ಉಲಮಾದ ಸ್ಥಾಪಕ ಅಧ್ಯಕ್ಷರಾದ ವರಕ್ಕಲ್ ಮುಲ್ಲಕೇೂಯ ತಂಙಳ(ಖ.ಸಿ)ರು 1926ರಿಂದ 1932ರ ತನಕ ಅಧ್ಯಕ್ಷರಾಗಿ ಸಮುದಾಯಕ್ಕೆ ಸಮರ್ಥ ನಾಯಕತ್ವ ನೀಡಿ ಮುನ್ನಡೆಸಿದ ಮಹಾನರಾಗಿದ್ದಾರೆ.

 ಪರಿಶುದ್ಧ ಇಸ್ಲಾಮಿನ ಆದ್ಯಾತ್ಮಿಕ ರಂಗದಲ್ಲಿ ಪಾಂಡಿತ್ಯಗಳಿಸಿದ್ದ ಮಹಾನರ ಅನೇಕ ಖಾದಿಮ್''ಗಳೂ ಮಹತ್ವಪೂರ್ಣವಾದ ಔಲಿಯಾ ಎಂಬ ಉನ್ನತ ಪದವಿಗೆ ತಲುಪಿರುವುದನ್ನು ಕಾಣುವಾಗ ಮಹಾತ್ಮರ ಆದ್ಯಾತ್ಮಿಕ ಪಾಂಡಿತ್ಯ ಮತ್ತು ಕರಾಮತ್ತಿನ ಅರಿವಾಗುತ್ತದೆ.

   1932 ರಲ್ಲಿ ಅಂದರೆ 1352 ಶಅಬಾನ್ 17ರಂದು ವಫಾತಾದ ವರಕ್ಕಲ್ ಮುಲ್ಲಕೇೂಯ ತಂಙಳ್(ಖ:ಸಿ) ತಮ್ಮ ಕರಾಮತ್'ಗಳ ಮೂಲಕ ಕೇರಳ ಮುಸ್ಲಿಂ ಜನಮಾನಸದಲ್ಲಿ ಮರೆಯಲಾರದ ಮಹಾನುಭಾವರಾಗಿದ್ದಾರೆ.

ಒಮ್ಮೆ ದಕ್ಷಿಣ ಭಾರತದ ವ್ಯಾಪಾರಿಯೊಬ್ಬರು ವ್ಯಾಪಾರಕ್ಕಾಗಿ ಕಲ್ಲಿಕೋಟೆಗೆ ಬಂದಿದ್ದರು. ವ್ಯಾಪಾರ ಮುಗಿದ ನಂತರ ತಮ್ಮ ಹಣದ ಥೈಲಿಯೊಂದಿಗೆ ಕಲ್ಲಿಕೋಟೆ ಪುಝವಕತ್ತೆ ಎಂಬ ಸ್ಥಳದಲ್ಲಿರುವ ಮಸೀದಿಯಲ್ಲಿ ರಾತ್ರಿ ತಂಗಿದ್ದರು.
ಆದರೆ ಬೆಳಿಗ್ಗೆದ್ದು ನೇೂಡುವಾಗ ಅವರ ಹಣದ ಥೈಲಿಯನ್ನು ಯಾರೇೂ ಎಗರಿಸಿದ್ದರು.
ಕಷ್ಟಪಟ್ಟು ಸಂಪಾದಿಸಿದ ಸಂಪತ್ತು ಕಾಣೆಯಾಗಿದ್ದರಿಂದ ಆ ವ್ಯಾಪಾರಿಯ ಗೇೂಳು ಹೇಳತೀರದು. ಹಾಗೆ ಆ ವ್ಯಾಪಾರಿ ಕಂಬನಿ ಮಿಡಿಯುತ್ತಾ ಕುಳಿತಿರುವಾಗ ಅಲ್ಲಿಗಾಗಮಿಸಿದ ಮಸೀದಿಯ ಮುಅದ್ಝಿನ್ ಹೇಳಿದರು. ಚಿಂತಿಸದಿರಿ ಫಜರ್ ನಮಾಜಿನ ಬಳಿಕ ನಾವು ವರಕ್ಕಲ್ ತಂಙಳ್ (ಖ:ಸಿ)ರವರ ಹತ್ತಿರ ಹೋಗಿ ವಿಷಯ ತಿಳಿಸೇೂಣ ಅವರಿದಕ್ಕೇನಾದರೂ  ಪರಿಹಾರ ಸೂಚಿಸಬಹುದು ಎಂದು ಸಮಾಧಾನಿಸಿದರು.

ಹಾಗೆ ನಮಾಝ್'ನ ನಂತರ ಅವರಿಬ್ಬರು ವರಕ್ಕಲ್ ತಂಙಳ(ಖ.ಸಿ)ರ ಹತ್ತಿರ ಹೋಗಿ ನಡೆದ ವಿಷಯ ತಿಳಿಸಿದರು. ಆಗ  ತಂಙಳ್ ವ್ಯಾಪಾರಿಯವರ ಹತ್ತಿರ, "ಇಂದು ನೀವು ಊರಿಗೆ ಹೋಗದೆ ನಿನ್ನೆ ನೀವು ಮಲಗಿದ ಅದೇ ಸ್ಥಳದಲ್ಲಿ ಇಂದೂ ಮಲಗಿರಿ. ನಾಳೆ ಫಜರ್ ನಮಾಝ್'ಗೆಂದು ಮಸೀದಿಗೆ ಮೊದಲು ಬರುವ ವ್ಯಕ್ತಿಯನ್ನು ಹಿಡಿಯಿರಿ. ತಮ್ಮ ಹಣವನ್ನು ದೋಚಿದ ವ್ಯಕ್ತಿ ಆತನೇ ಆಗಿರುತ್ತಾನೆ ಎಂದರು.
ಹಾಗೆ.. ಅವರಿಬ್ಬರೂ ಹಿಂದಿರುಗಿ ತಂಙಳರು ಹೇಳಿದಂತೆಯೇ ಮಸೀದಿಯಲ್ಲಿ ಮಲಗಿದರು. ಮರುದಿನ ಫಜರ್ ನಮಾಝ್'ಗೆಂದು ಮಸೀದಿಗೆ ಆಗಮಿಸಿದ ವ್ಯಕ್ತಿಯನ್ನು ಹಿಡಿದರು. ಅಂದು ಮಸೀದಿಗೆ ಮೊದಲು ಬಂದ ಆ ವ್ಯಕ್ತಿ, ಹಲವಾರು ವರ್ಷಗಳಿಂದ ಆ ಮಸೀದಿಯ ಮುಖಾಂತರ ಜೀವಿಸುತ್ತಿರುವವರಾಗಿದ್ದರು. ವ್ಯಾಪಾರಿಯು ಆ ವ್ಯಕ್ತಿಯೊಂದಿಗೆ ತಮ್ಮ ಹಣವನ್ನು ಹಿಂದಿರುಗಿಸುವಂತೆ ಕೇಳಿಕೊಂಡರು. ಈ ಗೌಜು ಗದ್ದಲವನ್ನು ಕಂಡ ಇತರರೂ ಆ ವ್ಯಕ್ತಿಯನ್ನು ಗದರಿಸಿ ಕೇಳಿದರೂ ಆ ವ್ಯಕ್ತಿ ಮಾತ್ರ ತಾನು ಕಳ್ಳತನ ಮಾಡಿಯೇ ಇಲ್ಲ ಎಂದು ಆಣೆ ಹಾಕಿ ವಾದಿಸಲಾರಂಭಿಸಿದನು.
 ಕೊನೆಗೆ ವರಕ್ಕಲ್ ತಂಗಳವರ (ಖ:ಸಿ) ಹತ್ತಿರಕ್ಕೆ ಜನ ಅವನನ್ನು ಕರೆದೊಯ್ದರು.
ತಂಙಳವರು ಆ ವ್ಯಕ್ತಿಯೊಡನೆ "ನೀವು ಆ ಹಣವನ್ನು ಅವರಿಗೆ ಹಿಂದಿರುಗಿಸಿ." ಎಂದರು. ಆ ವ್ಯಕ್ತಿ ತಂಗಳರೊಂದಿಗೂ ಒಪ್ಪದೆ ತಾನು ಕಳ್ಳತನ ಮಾಡಿಯೇ ಇಲ್ಲ ಎಂದು ವಾದಿಸಲಾರಂಭಿಸಿದ.

 ಆಗ, ತಂಙಳರು ಜನರತ್ತ ತಿರುಗಿ ಹೇಳಿದರು: "ಕುಟ್ಟಿಚ್ಚಿರ ಕೊಳದ ಏಳನೇ ಮೆಟ್ಟಿಲಿನ ಸಾಲಿನಲ್ಲಿ ಒಂದು ಒಡೆದ ಕಲ್ಲಿದೆ. ಅದರ ನಡುವೆ ಈ ವ್ಯಾಪಾರಿಯ ಹಣವನ್ನು ಈ ನಿಂತಿರುವ ಮನುಷ್ಯ ಅಡಗಿಸಿಟ್ಟಿದ್ದಾನೆ. ಮುಳುಗು ಬಲ್ಲವರು ಆ ಕೊಳದಿಂದ ಹಣದ ಕಟ್ಟನ್ನು ತೆಗೆಯಿರಿ" ಎಂದರು.
 ನೆರೆದ ಜನ ತಂಗಳರು ಹೇಳಿದ ಹಾಗೆಯೇ ಕುಟ್ಟಿಚ್ಚಿರ ಕೊಳಕ್ಕಿಳಿದು ಹುಡುಕಿದಾಗ ಏಳನೇ ಮೆಟ್ಟಿಲಿನ ಒಡೆದ ಕಲ್ಲೊಂದರ ನಡುವೆ ಹಣದ ಥೈಲಿ ಸಿಕ್ಕಿತು. ಹಣ ಸಿಕ್ಕಿದಾಗ ವ್ಯಾಪಾರಿಯ ಸಂತೋಷಕ್ಕೆ ಪಾರವೇ ಇರಲಿಲ್ಲ.

ಪ್ರತಿಭೆ ಪಾಂಡಿತ್ಯ ಮತ್ತು ಕಠಿಣ ಪರಿಶ್ರಮದ ಮೂಲಕ ಅಲ್ಲಾಹನ ಇಷ್ಟದಾಸರಾದ ವರಕ್ಕಲ್ ಮುಲ್ಲಕೇೂಯ ತಂಙಳ(ಖ.ಸಿ)ರು ಇಂತಹ ಹಲವಾರು ಕರಾಮತ್ ಮೂಲಕ ಜನಜನಿತರಾಗಿ ಸುನ್ನೀ ಜನಮಾನಸದಲ್ಲಿ ಅಜರಾಮರರಾಗಿದ್ದಾರೆ.
ಮಹಾನುಭಾವರು ವರಕ್ಕಲ್ ಪುಡಿಯಂಙಾಡಿ ಮಖಾಮಿನಲ್ಲಿ ಅಂತ್ಯವಿಶ್ರಮ ಪಡೆಯುತ್ತಾರೆ.

ಸರ್ವಶಕ್ತನಾದ ಅಲ್ಲಾಹನು ಆ ಮಹಾತ್ಮರ ಹಕ್ಕ್'ಜಾಹ್ ಬರ್ಕತ್ತಿನಿಂದ ನಮ್ಮೆಲ್ಲರಿಗೂ ಎಲ್ಲಾ ತರದ ಆಪತ್ತು ಮತ್ತು ಮುಸೀಬತ್ತಿನಿಂದ ಸಂಪೂರ್ಣ ಸಂರಕ್ಷಣೆ ನೀಡಿ ಅನುಗ್ರಹಿಸಲಿ ಆಮೀನ್.

ದಾರಿ: ಪುದಿಯಂಙಾಡಿ
 ಕಲ್ಲಿಕೋಟೆ ನಗರ.

♻♻♻♻♻♻♻♻♻

*بِسْمِ اللّٰهِ الرَّحْمَٰنِ الرَّحِيمْ*

*ಹದೀಸ್ ವಿದ್ವಾಂಸರುಗಳಾದ ಇಮಾಮರುಗಳ ಸಂಕ್ಷಿಪ್ತ ಪರಿಚಯ*...
 1⃣8⃣
📚📚📚📚📚📚📚📚📚📚

6⃣ *ಇಮಾಂ ನಸಾಈ(ರ.ಅ)* :
 *ಇಮಾಂ ಅಬೂಅಬ್ದುರ್ರಹ್ಮಾನ್ ಅಲ್ ಖುರಾಸಿ ಅನ್ನಸಾಈ(ರ.ಅ). ಹಿಜಿರಾ 215-303 ಕಾಲಾವಧಿಯ ಓರ್ವ ಪ್ರಖಾಂಡ ಹದೀಸ್ ವಿದ್ವಾಂಸರಾಗಿದ್ದಾರೆ. ಇಮಾಂ ಖುತ್ವಯ್ ಬತುಬಿನ್ ಸಈದ್(ರ.ಅ) , ಇಸ್ಹಾಕ್ ಬಿನ್ ರಹಾವೈಹಿ(ರ.ಅ), ಮುಹಮ್ಮದ್ ಬಿನ್ ಬಸ್ಸಾರ್(ರ.ಅ), ಇಮಾಂ ದಾವೂದ್(ರ.ಅ), ಮುಹಮ್ಮದ್ ಬಿನ್ ಶಯಲಾನ್(ರ.ಅ), ಸುವೈದ್ ಬಿನ್ ನಸ್ರಾ(ರ.ಅ) ಮೊದಲಾದವರು ಇಮಾಂ ನಸಾಈ(ರ.ಅ)ರವರ ಗುರು ಪರಂಪರೆಗೆ ಸೇರಿದವರಲ್ಲಿ ಪ್ರಮುಖರು*.

              *ಇಮಾಂ ನಸಾಈ(ರ.ಅ) ಜ್ಞಾನವನ್ನು ಅರಸಿಕೊಂಡು ಖುರಾಸಾನ್, ಹಿಜಾಝ್ , ಶಾಮ್ , ಇರಾಕ್ ಮುಂತಾದ ಪ್ರದೇಶಗಳಿಗೆ ಪ್ರಯಾಣ ಬೆಳೆಸಿದ್ದರು. ಕೊನೆಗೆ ಅವರು ಈಜಿಪ್ಟ್ ನ್ನು ತಮ್ಮ ವಾಸಸ್ಥಳವನ್ನಾಗಿ ಮಾಡಿಕೊಂಡರು. ಆ ಕಾಲದಲ್ಲಿ ಖ್ಯಾತನಾಮರಾದವರು  ಅನೇಕ ವಿದ್ವಾಂಸರು ಇವರ ಶಿಷ್ಯತ್ವವನ್ನು ಸ್ವೀಕರಿಸಿ ಅಧ್ಯಯನದಲ್ಲಿ ನಿರತರಾಗಿದ್ದರು. ಇವರ ಶಿಷ್ಯರಲ್ಲಿ ಇಮಾಂ ತಬ್ರಾನೀ(ರ.ಅ) , ಇಮಾಂ ತ್ವಹಾವಿ(ರ.ಅ), ಇಮಾಂ ಇಬ್ನ್ ಸುನ್ನಿ(ರ.ಅ) ಮೊದಲಾದವರು ಪ್ರಮುಖರಾಗಿದ್ದರು. ಫಳಾಇಲುಸ್ವಹಾಬ್, ಫಳಾಇಲು ಅಲಿಯ್ಯ್, ಅಲ್ ಖಸಾಇಸ್, ಅಲ್ ಮನಾಸಿಕ್ ಮುಂತಾದವುಗಳು ಇಮಾಂ ನಸಾಈ(ರ.ಅ)ರವರ ಕೃತಿಗಳಾಗಿವೆ*.

              *ಮೇಲಿನ ಗ್ರಂಥಗಳ ಪೈಕಿ 5761 ಹದೀಸ್ ಗಳನ್ನೊಳಗೊಂಡ ಅಸ್ಸುನನುಲ್ ಕುಬ್ರಾ ಹಾಗೂ ಅದರ ಸಂಕ್ಷೇಪವಾದ ಅಸ್ಸುನನುಸ್ಸುಗ್ರಾ ನಸಾಈ(ರ.ಅ)ರವರ ಪ್ರಮುಖ ರಚನೆಗಳಾಗಿವೆ. ಇದು ಸಿಹಾಹುಸ್ಸಿತ್ತದಲ್ಲಿ ಒಳಪಡುವ ಗ್ರಂಥವಾಗಿದೆ. ಪ್ರಸ್ತುತ ಗ್ರಂಥವು ಪ್ಯಾಲಸ್ತೀನಿನ ರಮಲ್ಲಾದ ಅಮೀರ್ ರವರಿಗೆ ಸಮರ್ಪಿಸಲ್ಪಟ್ಟಿದೆ. ಹದೀಸ್ ಕ್ರೋಢೀಕರಣದಲ್ಲಿ ತುಂಬಾ ಜಾಗರೂಕತೆ ಪಾಲಿಸಿದ ಕಾರಣದಿಂದ ಹಲವರು ಸುನನುನ್ನಸಾಈಗೆ ಮುಸ್ಲಿಂನ ಸ್ಥಾನವನ್ನು ನೀಡಿದ್ದಾರೆ*.

*ಮುಂದುವರಿಯುವುದು*.....

📚📚📚📚📚📚📚📚📚📚

Monday, January 22, 2018

ಝಿಯಾರತ್ತ್ ಕೇಂದ್ರ 58 ಖಾಝಿ ಮುಹಮ್ಮದ್ (ರ) ಕುಟ್ಟಿಚ್ಚಿರ

*ಝಿಯಾರತ್ತ್ ಕೇಂದ್ರ​*
      *➡5⃣8⃣*
------------------------
 *#ಖಾಝಿ_ಮುಹಮ್ಮದ್ (ನ:ಮ) #ಕುಟ್ಟಿಚ್ಚಿರ_ಕಲ್ಲಿಕೋಟೆ*
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
===================

ಅರಬಿ ಮಲಯಾಳಂನ ಹೆಸರಾಂತ ಕೃತಿಯಾದ *ಮುಹಿಯುದ್ದೀನ್ ಮಾಲೆ*ಯು ಸುನ್ನೀ ಜನ ಮಾನಸದಲ್ಲಿ  ಜನಜನಿತವಾದ ಕೃತಿಗಳಲ್ಲೊಂದಾಗಿದೆ.

 ಅಲ್ಲಾಹನ ಇಷ್ಟದಾಸರಾದ ಔಲಿಯಾಗಳ ಪೈಕಿ ಅಲ್ಲಾಹನ ಸಂಪ್ರೀತಿಗೆ ಪಾತ್ರರಾಗಿ ಔಲಿಯಾಗಳ ನೇತಾರರೆಂಬ ಹೆಗ್ಗಳಿಕೆಗೆ ಪಾತ್ರರಾದ ಸಯ್ಯದುನಾ ಮುಹಿಯುದ್ದೀನ್ ಶೈಖ್ (ಖ.ಸಿ)ರ ಮದ್'ಹ್'ಗಳನ್ನೊಳಗೊಂಡ ಮುಹಿಯುದ್ದೀನ್ ಮಾಲೆಯ ಪಾರಾಯಣದಿಂದ ಆ ಮಹಾತ್ಮರೊಂದಿಗೆ ಆಂತರಂಗಿಕವಾದ ಅಗೇೂಚರ ಸಂಪರ್ಕ ಸಿದ್ಧಿಸುವುದರೊಂದಿಗೆ ಅವರ ಹಕ್ಕ್'ಜಾಹ್ ಬರ್ಕತ್'ನಿಂದ ದಾರಿದ್ಯ ವಿಮೇೂಚನೆ, ರೇೂಗ ಶಮನ ಸುಖ ಪ್ರಸವ, ಉದ್ದೇಶ ಸಫಲೀಕರಣವಾಗುತ್ತದೆ ಎನ್ನುವುದು ನಮ್ಮ ಹಿರಿಯರ ಅನುಭವದ ನುಡಿ.

ಹಾಗಾಗಿಯೇ ಹಿಂದೆ ನಮ್ಮ ತಾಯಂದಿರು ಸುಬಹಿ ನಮಾಜ್' ನಂತರ ಮತ್ತು ಮಗ್'ರಿಬ್, ಇಶಾ ನಡುವೆ ಮುಸಲ್ಲೆಯಲ್ಲಿ ಕುಳಿತು ಕುರ್ಆನ್ ಮತ್ತು ಮೌಲೀದ್'ನ ನಂತರ ನಫೀಸತ್ ಮಾಲೆ ಮತ್ತು ಮುಹಿಯುದ್ದೀನ್ ಮಾಲೆಯನ್ನೂ ನಿತ್ಯವೂ ಪಾರಾಯಣ ಮಾಡುತ್ತಿದ್ದರು. ಮುಹಿಯುದ್ದೀನ್ ಮಾಲೆಯು ಗೌಸುಲ್ ಅಅ್'ಳಂ ಅಶೈಖ್ ಮುಹಿಯುದ್ದೀನ್ ಅಬ್ದುಲ್ ಖಾದರ್ ಜೀಲಾನಿ (ಖ.ಸಿ)ರವರ ಜೀವನ ಚರಿತ್ರೆಯನ್ನಾಧರಿಸಿದ ಮದ್'ಹ್ ಎಂಬುದನ್ನು ನಾವು ಬಲ್ಲೆವಾದರೂ ಮುಹಿಯುದ್ದೀನ್ ಶೈಖ್ ರವರ ಜೀವನ ಚರಿತ್ರೆಯನ್ನು ಅಭ್ಯಸಿಸಿ ಅರಬಿ ಮಲಯಾಳದಲ್ಲಿ ರಚಿಸಿದ ಆ ಮಹಾತ್ಮರ ಹೆಸರು, ಕುಟುಂಬ, ಬದುಕು ಮತ್ತು ಬರಹಗಳ ಕುರಿತು ತಿಳಿದವರು ವಿರಳ.

ಮುಹಿಯುದ್ದೀನ್ ಮಾಲೆಯಲ್ಲಿ ಬರುವ
 *ಕಂಡಾಲ್ ಅರಿವಾಳನ್ ಕಾಟ್ಟಿತ್ತರುಮ್ ಪೇೂಲೆ, ಖಾಳಿ ಮುಹಮ್ಮದೆನ್ನು ಪೇರುಳ್ಳೇೂವರ್...... ಕೊಯಿಕೊಟ್ಟೆತ್ತುರ ತನ್ನಿಲ್ ಪಿರನ್ನೋವರ್, ಕೊರ್'ವ ಇದೊಕ್ಕೇಯುಂ ನೇೂಕಿಯೆಡುತ್ತೋವರ್*
ಎಂಬ ಕೆಲವು ಸಾಲುಗಳು ಲೇಖಕರನ್ನು ಚುಟುಕಾಗಿ ಪರಿಚಯಿಸುತ್ತದೆ.

ಸರ್ವಶಕ್ತನಾದ ಅಲ್ಲಾಹನ ದೀನ್ ಆದ ಪರಿಶುದ್ಧ ದೀನುಲ್ ಇಸ್ಲಾಮಿನ ಸಂದೇಶದೊಂದಿಗೆ ಭಾರತಕ್ಕೆ ಬಂದು ಇಸ್ಲಾಮಿನ ಸಂದೇಶವನ್ನು ಸಾರಿದ *ಅಲ್ಲಾಹನ ರಸೂಲ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ*ರ ಪ್ರಿಯ ಸ್ವಹಾಬಿ *ಸಯ್ಯದುನಾ ಮಾಲಿಕ್ ದೀನಾರ್ ರಲಿಯಲ್ಲಾಹು* ಅನ್ಹುರವರ ವಂಶ ಪರಂಪರೆಯಲ್ಲಿ ಜನಿಸಿದ ಇಸ್ಲಾಮಿಕ್ ಸಾಹಿತ್ಯ ರಚನೆಕಾರರಾದ *ಖಾಝಿ ಮುಹಮ್ಮದ್ (ನ.ಮ)* ಎಂಬ ಸೂಫಿವರ್ಯರು ಮುಹಿಯುದ್ದೀನ್ ಶೈಖ್ (ಖ.ಸಿ)ರವರ ಜೀವ ಚರಿತ್ರೆಯನ್ನಾಧರಿಸಿ ರಚಿಸಿದ ಕೃತಿಯಾಗಿದೆ ಮುಹಿಯುದ್ದೀನ್ ಮಾಲೆ.

ಹಿಜರಿ 980ರಲ್ಲಿ ಕಲ್ಲಿಕೇೂಟೆಯಲ್ಲಿ ಜನಿಸಿದ  ಮುಹಮ್ಮದ್ ಖಾಝಿ (ನ.ಮ) ಉಸ್ಮಾನ್ ಲಬ್ಬ ಖಾಹಿರಿ (ರ) ಮತ್ತು ಮಖ್ದೂಮ್ (ರ.ಅ) ಎಂಬ ಸೂಫಿವರ್ಯರ ಶಿಷ್ಯರಾಗಿ ಧಾರ್ಮಿಕ ಪಾಂಡಿತ್ಯ ಗಳಿಸಿದ ಮುಹಮ್ಮದ್ ಖಾಝಿ (ನ.ಮ) ನಂತರ ಕಲ್ಲಿಕೇೂಟೆಯ ಕುಟ್ಟಿಚ್ಚಿರದಲ್ಲಿ ಮುದರ್ರಿಸರಾಗಿಯೂ ಬಳಿಕ ಖಾಝಿಯಾಗಿಯೂ ಸೇವೆ ಸಲ್ಲಿಸಿದ ಮುಹಮ್ಮದ್ ಖಾಝಿ (ನ.ಮ) ತಮ್ಮ ಬದುಕಿನಲ್ಲಿ ಸುಮಾರು ಐನೂರು ಇಸ್ಲಾಮಿಕ್ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.

ಆ ಪೈಕಿ ಜಗತ್ತು ಕಂಡ ಪ್ರಮುಖ ಸೂಫಿವರ್ಯ ಕುತುಬುಲ್ ಅಖ್ತಾಬ್ ಗೌಸುಲ್ ಅಅ್'ಳಂ ಸಯ್ಯದುನಾ ಅಶೈಖ್  ಮೊಹಿಯುದ್ದೀನ್ ಅಬ್ದುಲ್ ಖಾದರ್ ಜೀಲಾನಿ (ಖ.ಸಿ) ರವರ ಜೀವನ ಚರಿತ್ರೆಯನ್ನಾಧರಿಸಿ ಕ್ರಿ.ಶ 1616 ರಚಿಸಿದ ಅರಬಿ ಮಲಯಾಳ ಕೃತಿಯಾದ *"ಮೊಹಿಯುದ್ದೀನ್ ಮಾಲೆ"*ಯು ಜನಜನಿತವೂ ಸಾರ್ವಕಾಲಿಕ ಮೌಲ್ಯವುಳ್ಳ ಹೆಸರಾಂತ ಕೃತಿಗಳಲ್ಲೊಂದಾಗಿದೆ.

ಅದೇ ರೀತಿ ಪಾಶ್ಚಿಮಾತ್ಯರಾದ ಪೇೂರ್ಚುಗೀಸರ ಆಕ್ರಮಣವನ್ನು ಎಳೆ ಎಳೆಯಾಗಿ ಬಿಡಿಸಿ ಜನ ಮಾನಸಕ್ಕೆ ತಲುಪಿಸುವಲ್ಲಿ  ಸಫಲವಾದ *ಪತ್'ಹುಲ್ ಮುಬೀನ್,* ವ್ಯಾಕರಣ ಶಾಸ್ತ್ರವನ್ನು ಸರಳ ಪದ್ಯ ಮುಖೇನ ಆವಿಷ್ಕರಿಸಿದ ಗ್ರಂಥಗಳಾದ *ನಳ್'ಮುಲ್ ಅವಾಮೀನ್, ನಳ್'ಮುಲ್ ಖತ್ವರುನ್ನದಾ, ನಳ್'ಮುಲ್ ಆಜ್'ನಾಸ್* ಮತ್ತು ಗಣಿತ ಶಾಸ್ತ್ರ ಕೃತಿಯಾದ *ಮನ್'ಳುಮತ್ತುನ್ ಫೀ ಇಲ್ಮಿನ್ ಅಫ್'ಹಿಸಾಬ್* ಮತ್ತು ಜ್ಯೇೂತಿ (ಪ್ರಕಾಶ) ಶಾಸ್ತ್ರಕ್ಕೆ ಸಂಬಂಧಿಸಿದ ಕೃತಿಯಾದ *ಮನ್'ಳು ಮತ್ತುಲ್ ಫೀ ಇಲ್ಮಿನ್ ಅಫ್'ಲಾಕಿ ವನ್ನುಜೂಮ್* ಇವರ ಪ್ರಮುಖ ಹಾಗೂ ಪ್ರಸಿದ್ಧ ಕೃತಿಯಾಗಿದೆ.

ಹಿಜರಿ 1025 ರಬೀವುಲ್ ಅವ್ವಲ್ 25 ರ ಬುಧವಾರ ವಫಾತಾದ ಮುಹಮ್ಮದ್ ಖಾಝಿ (ನ.ಮ)ರವರ ಕಾಲಾನಂತರ ಅವರ ಪುತ್ರ ಮೊಹಿಯುದ್ದೀನ್ ಖಾಝಿ (ನ.ಮ) ಕುಟ್ಟಿಚ್ಚಿರದ ಖಾಝಿಯಾಗಿ ನೇಮಕವಾದರು. ಖಾಝಿ ಮೊಹಿಯುದ್ದೀನ್ (ನ.ಮ) 1067ರಲ್ಲಿ ವಫಾತಾದ ನಂತರ ಮೊಹಿಯುದ್ದೀನ್ ಖಾಝಿ (ನ.ಮ)ರವರ ಪುತ್ರ ಖಾಝಿ ಅಬೂಬಕ್ಕರ್ ಕುಂಞಿ (ನ.ಮ) ಖಾಝಿಯಾದರು. ಹಿಜರಿ 1301ರಲ್ಲಿ ಅಬೂಬಕ್ಕರ್ ಕುಂಞಿ ಇಹಲೇೂಕ ತ್ಯಜಿಸಿದ ನಂತರ "ವಲಿಯ ಖಾಝಿ, ಚೆರಿಯೆ ಖಾಝಿ" ಎಂಬ ಸಂಪ್ರದಾಯ ಜಾರಿಗೆ ಬಂತು.

ಮುಹಮ್ಮದ್ ಖಾಝಿ (ನ.ಮ) ರವರ ತಂದೆ ಖಾಝಿ ಅಬ್ದುಲ್ ಅಝೀಝ್ ಮತ್ತು ಅವರ ತಂದೆ ಅಲ್ಲಾಮಾ ಶಿಹಾಬುದ್ದೀನ್ ಅಹ್ಮದ್ ಖಾಝಿ (ರ) ಸೇರಿದಂತೆ ಮೇಲ್ಕಂಡ ಎಲ್ಲಾ ಮಹಾತ್ಮರೂ "ಕುಟ್ಟಿಚ್ಚಿರ ಮಿಸ್ಕಾನ್ ಜುಮಾ" ಮಸೀದಿಯಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.

ದಾರಿ: ಮಿಸ್ಕಾನ್ ಜುಮಾ ಮಸೀದಿ, ಕುಟ್ಟಿಚ್ಚಿರ, ಕಲ್ಲಿಕೇೂಟೆ.

✳✳✳✳✳✳✳✳✳



Sunday, January 21, 2018

*☘ಹಿರಿನುಡಿಗಳು☘*

1)ಮಾನವನನ್ನು ದಾರಿಗೆಡಿಸುವುದಕ್ಕೆ ಶೈತಾನನು ಬಳಸುವ ಅತ್ಯಂತ ದೊಡ್ಡ ಅಸ್ತ್ರವೆಂದರೆ ನಾಲಗೆ!
_ *ಇಮಾo ಗಝ್ಝಾಲಿ (ರ)*

2)ಗುಣನಡತೆ ಒಂದು ಅಂಗಡಿಯಿದ್ದಂತೆ. ನಾಲಗೆ ಅದರ ಕೀಲಿಕೈ. ಬೀಗ ತೆರೆದಾಗಲೇ, ಅದು ಚಿನ್ನದಂಗಡಿಯೋ ಅಥವಾ ಬೇರೆ ಅಂಗಡಿಯೋ ಎಂದು ತಿಳಿಯುತ್ತದೆ. _*ಅಲೀ (ರ)*

3)ಬುದ್ದಿವಂತ ಮೌನ ಪಾಲಿಸಿದನೆಂದರೆ ಅಲ್ಲಾಹನ ಮಹಿಮೆಯ ಬಗ್ಗೆ ಯೋಚಿಸುತ್ತಿರುತ್ತಾನೆ. _ *ಅಲೀ(ರ)*

4)ಖಡ್ಗವು ದೇಹವನ್ನು ಗಾಯಗೊಳಿಸಿದರೆ ಮಾತು ಆತ್ಮವನ್ನು ಘಾಸಿಗೊಳಿಸುತ್ತದೆ. *_ಉಸ್ಮಾನ್(ರ)*

5)ನೀನು ಇಹಲೋಕದಲ್ಲಿ ವಿರಾಗಿಯಾಗಿರು.ಪರಲೋಕದ ವಿಷಯದಲ್ಲಿ ಅತ್ಯಾಗ್ರಹಿಯಾಗಿರು.ನಿನ್ನ ಪ್ರತಿಯೊಂದು ವಿಷಯದಲ್ಲೂ ಅಲ್ಲಾಹನಲ್ಲಿ ವಿಶ್ವಾಸವಿಡು.ಹಾಗಿದ್ದರೆ ಸುರಕ್ಷಿತರ ಜತೆಗಿರುವೆ. _ *ಇಮಾಂ ಶಾಫಿಈ (ರ)*

6) ನಾನು ಮೌನವಹಿಸಿದ ಕಾರಣಕ್ಕೆ ಯಾವತ್ತೂ ದುಃಖಿಸಬೇಕಾಗಿ ಬಂದಿಲ್ಲ.ಆದರೆ ಮಾತನಾಡಿದ್ದಕ್ಕೆ ಹಲವು ಬಾರಿ ದುಃಖಿಸಬೇಕಾಗಿ ಬಂದಿತ್ತು. *_ಉಮರ್(ರ)*

7)ಸಾವಿರ ಸಾರಿ ಕಡಲಿನಿಂದ ನೀರು ತೆಗೆದರೂ ಮುತ್ತುರತ್ನಗಳು ಸಿಗಲಾರವು.ಅವು ಸಿಗಬೇಕಾದರೆ ಸಾಮರ್ಥ್ಯವೂ, ಸೌಭಾಗ್ಯವೂ ಇರುವ ಮುಳುಗು ತಜ್ಞನೇ ಆಗಬೇಕು.ಜ್ಞಾನವೆಂಬ ಮುತ್ತು ಕೂಡ ಹಾಗೆಯೇ. *_ಶೈಖ್ ಜಲಾಲುಧ್ಧೀನ್* *ರೂಮಿ (ರ)*

8)ಯಾರಾದರೂ ನಿನ್ನ ಮನಸ್ಸಿಗೆ ನೋವುಂಟು ಮಾಡಿದರೆ ದುಃಖಿಸದಿರು.ಯಾಕೆಂದರೆ ಯಾವ ಮರದ ಫಲ ಹೆಚ್ಚು ರುಚಿಯಾಗಿರುತ್ತೋ, ಆ ಮರಕ್ಕೆ ಜನರು ಹೆಚ್ಚು ಕಲ್ಲುಗಳನ್ನು ಎಸೆಯುತ್ತಾರೆ.ಇದು ಪೃಕೃತಿ ನಿಯಮ *. _ ಅಲೀ (ರ)*

9)ನನ್ನ ಪ್ರಾರ್ಥನೆಗಳು ಈಡೇರಿದಾಗ ನಾನು ಖುಷಿ ಪಡುತ್ತೇನೆ.ಕಾರಣ ಅದು ನನ್ನ ಇಚ್ಛೆ. ನನ್ನ ಪ್ರಾರ್ಥನೆಗಳು ಈಡೇರದೇ ಇದ್ದಾಗಲೂ ನಾನು ಖುಷಿಪಡುತ್ತೇನೆ.ಏಕೆಂದರೆ, ಅದು ಅಲ್ಲಾಹನ ಇಚ್ಛೆ!. *_ಅಲೀ (ರ)*

10)ನೀನು ಜ್ಣಾನಿಗಳಿಸು. ನೀನು ಬಡವನಾಗಿದ್ದರೆ ಅದು ನಿನಗೆ ಸಂಪತ್ತಾಗುವುದು.ನೀನು ಧನಿಕನಾಗಿದ್ದರೆ,ಅದು ನಿನಗೆ ಅಲಂಕಾರವಾಗುವುದು_*ಅ* *ಬೂಬಕರ್ ಸಿಧ್ಧೀಕ್ (ರ)*
*ಜನರು ಖಬರ್'ನಿಂದ ಪರಲೋಕಕ್ಕೆ ಹೋಗುವ ವಿವಿಧ ರೂಪಗಳು*
😱😱😱😱😱😱😱😱😱

✍ _ಗಫೂರ್ ಬಾಯಾರ್_
〰〰〰〰〰〰〰〰〰

0⃣1⃣ *ನೆರೆಕರೆಯವರಿಗೆ ಕಿರುಕುಳ ಕೊಟ್ಟವರು*
👉 ಎರಡು ಕೈಕಾಲು ಇಲ್ಲದವರಾಗಿ..

0⃣2⃣ *ನಮಾಝನ್ನು ಅವಗಣಿಸಿದವರು*
👉 ಹಂದಿಯ ರೂಪದವರಾಗಿ..

0⃣3⃣ *ಝಕಾತ್ತ್ ಕೊಡದವರು*
👉 ಹೊಟ್ಟೆ ಬೆಟ್ಟದಾಗೆ ದೊಡ್ಡದಾಗಿ, ಹೊಟ್ಟೆಯೊಳಗೆ ಹಾವು ಮತ್ತು ಚೇಳುಗಳು ತುಂಬಿರುವವರಾಗಿ..

0⃣4⃣ *ಲೆಕ್ಕಾಚಾರದಲ್ಲಿ ಕಳವು ಹೇಳಿದವರು.*
👉ಬಾಯಿಯಿಂದ ರಕ್ತ ಚಿಮ್ಮುವವರಾಗಿ..

0⃣5⃣ *ಯಾರಿಗೂ ತಿಳಿಯದೆ ಪಾಪ ಮಾಡುವವರು*
👉 ದಪ್ಪವಾಗಿ ಜೀರ್ಣಿಸಿ ಶವಕ್ಕಿಂತಲೂ ದುರ್ಗಂಧ ಇರುವವರಾಗಿ..

0⃣6⃣ *ಕಳ್ಳ ಸಾಕ್ಷಿ ನಿಂತವರು*
👉 ಅನ್ನನಾಳವು, ಶ್ವಾಸನಾಳವು ಮುರಿದವರಾಗಿ..

0⃣7⃣ *ಒಂದು ಕಾರ್ಯವನ್ನು ನೋಡಿಯೂ ಸಾಕ್ಷಿ ನಿಲ್ಲದವರು*
👉 ಹಲ್ಲು ಇಲ್ಲದ, ಬಾಯಿಯಿಂದ ಚೊಲ್ಲು ಸುರಿಸಿ ರಕ್ತ ಚಿಮ್ಮುವವರಾಗಿ..

0⃣8⃣ *ವ್ಯಭಿಚಾರಿಗಳು*
👉 ತಲೆ ನೆಲದಲ್ಲಿ ಕುತ್ತಿ ಕಾಲು ಎತ್ತಿ, ತಲೆಯಿಂದ ನಡೆಯುವವರಾಗಿ..

0⃣9⃣ *ಯತೀಮ್ ಮಕ್ಕಳ ಸೊತ್ತುಗಳನ್ನು ತಿಂದವರು.*
👉 ಮುಖ ಕಪ್ಪಾದ, ಓರೆ ಕಣ್ಣಿರುವ, ಹೊಟ್ಟೆಯಲ್ಲಿ ಬೆಂಕಿ ತುಂಬಿರುವವರಾಗಿ..

1⃣0⃣ *ತಂದೆ ತಾಯಿಯವರಿಗೆ ಕಷ್ಟ ಕೊಟ್ಟವರು*
👉 ಬಿಳಿ ತೊನ್ನು ಮತ್ತು ಕುಷ್ಠರೋಗ ಬಾಧಿಸಿದವರಾಗಿ..

1⃣1⃣ *ಶರಾಬು ಕುಡಿಯುವವರು*
👉 ಕಣ್ಣು ಊದಿಕೊಂಡು, ಹಲ್ಲು ಕೋಣದ ಕೊಂಬಿನ ತರ ನೀಲವು, ತುಟಿ, ಕಿವಿ, ಕೆಳಗಾಗಿ ನೀಳವಾಗಿರುವುವವರಾಗಿ..

1⃣2⃣ *ಸತ್ಯ ವಿಶ್ವಾಸಿಗಳು*
👉 ಹುಣ್ಣಿಮೆಯ ಚಂದ್ರನ ಹಾಗೆ ಆನಂದಿಸಿ ಹೋಗುವರು..

_ಅಲ್ಲಾಹು ನಮ್ಮನ್ನು ಸತ್ಯವಿಶ್ವಾಸಿಗಳ ಕೂಟದಲ್ಲಿ ಒಳಪಡಿಸಲಿ ಆಮೀನ್_

ಅನುವಾದ
🕎🕎🕎🕎🕎🕎🕎
*بِسْمِ اللّٰهِ الرَّحْمَٰنِ الرَّحِيمْ*

*ಹದೀಸ್ ವಿದ್ವಾಂಸರುಗಳಾದ ಇಮಾಮರುಗಳ ಸಂಕ್ಷಿಪ್ತ ಪರಿಚಯ*...

1⃣7⃣
📚📚📚📚📚📚📚📚📚📚

5⃣ *ಇಮಾಂ ತುರ್ಮುದಿ(ರ.ಅ)* :
*ಇಮಾಂ ಅಬೂ ಈಸಾ ಮುಹಮ್ಮದ್ ಅತ್ತುರ್ಮುದಿ(ರ.ಅ). ಹಿಜಿರಾ 209-279 ರ ಕಾಲಾವಧಿಯ ಪ್ರಮುಖ ವಿದ್ವಾಂಸರಾಗಿದ್ದಾರೆ. ಅವರು ಉನ್ನತ ಅಧ್ಯಯನಕ್ಕಾಗಿ ಹಲವು ಪ್ರದೇಶಗಳಿಗೆ ಪ್ರಯಾಣ ಕೈಗೊಂಡಿದ್ದರು. ಇವರ ಉಸ್ತಾದರುಗಳಲ್ಲಿ ಇಮಾಂ ಬುಖಾರಿ(ರ.ಅ) ಪ್ರಮುಖರಾಗಿದ್ದಾರೆ. ತುರ್ಮುದಿ (ರ.ಅ)ರವರು ಹದೀಸ್ ರಂಗದಲ್ಲಿ ಕ್ರಿಯಾಶೀಲರಾಗಲು ಉಸ್ತಾದ್ ಬುಖಾರಿ(ರ.ಅ)ರವರ ಪ್ರೇರಣೆಯೇ ಕಾರಣವಾಗಿದೆ. ಮರ್ ಬಿನ್ ಅಲಕ್(ರ.ಅ)ರವರಿಂದ ಇಮಾಂ ಹಾಕಿಂ (ರ.ಅ) ಉಲ್ಲೇಖಿಸುತ್ತಾರೆ : "ಇಮಾಂ ಬುಖಾರಿರವರ ನಿಧನಾ ನಂತರ ಸೂಕ್ಷ್ಮತೆ ಮತ್ತು ಜ್ಞಾನದಲ್ಲಿ ಅವರನ್ನು ಪ್ರತಿನಿಧಿಸುತ್ತಿದ್ದ ಏಕೈಕ ವ್ಯಕ್ತಿ ಖುರಾಸಾನಿನಲ್ಲಿರುವುದಾದರೆ ಅದು ಇಮಾಂ ತುರ್ಮುದಿ(ರ.ಅ) ಮಾತ್ರ"*.

           *ಸುಮಾರು 5000 ಕ್ಕಿಂತಲೂ ಮಿಕ್ಕಿದ ಹದೀಸ್ ಗಳನ್ನೊಳಗೊಂಡಿರುವ ಗ್ರಂಥವು ತುರ್ಮುದಿ(ರ.ಅ)ರವರ ಪ್ರಮುಖ ಕೊಡುಗೆಯಾಗಿದೆ. ಅದರಲ್ಲಿ ಹಲವಾರು ಮಹಾ ವಿದ್ವಾಂಸರುಗಳಿಂದ ಸಂಗ್ರಹಿಸಿದ ಹದೀಸ್ ಗಳಲ್ಲಿ ಆಯ್ದ ಹದೀಸ್ ಗಳಿವೆ. ಇಮಾಂ ಇಬ್ನ್ ಲ್ ಆಸಿರ್(ರ.ಅ) ಹೇಳುತ್ತಾರೆ ; "ಜಾಮಿಉತ್ತುರ್ಮುದಿ  ಅತ್ಯಂತ ವಿಶಿಷ್ಟವಾದ ಗ್ರಂಥವಾಗಿದೆ. ಅದರ ಶೈಲಿ ಸುಂದರ ಮತ್ತು ಸರಳವಾಗಿದೆ. ಹೆಚ್ಚು ಪುನರಾವರ್ತನೆಗಳಿಲ್ಲ. ಇತರ ಗ್ರಂಥಗಳಿಗೆ ಹೋಲಿಸಿದರೆ ಅತ್ಯಧಿಕ ವಿಷಯಗಳನ್ನೊಳಗೊಂಡಿದೆ. ಕರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ವಿವರಣೆಗಳು ಈ ಗ್ರಂಥದ ವೈಶಿಷ್ಟ್ಯತೆಯಾಗಿದೆ"*. (ಜಾಮಿಉಲ್ ಊಸೂಲ್)

             *ಇಮಾಂ ತುರ್ಮುದಿ(ರ.ಅ) ಹೀಗೆಂದಿರುವರು ; ನಾನು ಈ ಗ್ರಂಥವನ್ನು ಹಿಜಾಝ್ , ಇರಾಕ್ ಮತ್ತು ಖುರಾಸಾನಿನ ವಿದ್ವಾಂಸರ ಸಮಕ್ಷಮ ಪ್ರಸ್ತುತಪಡಿಸಿದೆ. ಅವರೆಲ್ಲರೂ ಅದರಲ್ಲಿ ಸಂತೃಪ್ತಿ ವ್ಯಕ್ತಪಡಿಸಿದರು. ನನ್ನ ಈ ಗ್ರಂಥವಿರುವ ಮನೆಗಳಲ್ಲಿ ಪ್ರವಾದಿﷺರವರ ಉಪಸ್ಥಿತಿ ಅನುಭವ ವೇದ್ಯವಾಗುವುದು. ಜಾಮಿಉತ್ತುರ್ಮಿದಿಗೆ ಹದೀಸ್ ಗ್ರಂಥಗಳಲ್ಲಿ 4 ನೇ ಸ್ಥಾನವಿದೆ. ಕೆಲವರು 3 ನೇ ಸ್ಥಾನವನ್ನು ಕೊಟ್ಟಿದ್ದಾರೆ*.


*ಮುಂದುವರಿಯುವುದು*.....

📚📚📚📚📚📚📚📚📚📚
*بِسْمِ اللّٰهِ الرَّحْمَٰنِ الرَّحِيمْ*

*ಹದೀಸ್ ವಿದ್ವಾಂಸರುಗಳಾದ ಇಮಾಮರುಗಳ ಸಂಕ್ಷಿಪ್ತ ಪರಿಚಯ*...
1⃣6⃣
📚📚📚📚📚📚📚📚📚📚

4⃣ *ಇಮಾಂ ಅಬೂದಾವೂದ್(ರ.ಅ)* :
*ಅಬೂದಾವೂದ್ ಸುಲೈಮಾನ್(ರ.ಅ) ಹಿಜಿರಾ 202-275ರ ಕಾಲಾವಧಿಯಲ್ಲಿ ಜೀವಿಸಿದ್ದ ಪ್ರಸಿದ್ಧ ವಿದ್ವಾಂಸರಾಗಿದ್ದಾರೆ. ಅವರು ಹದೀಸ್ ಗ್ರಂಥಗಳಲ್ಲಿ ಮೂರನೆಯದಾಗಿ ಪರಿಗಣಿಸಲ್ಪಡುವ ಸಂಗ್ರಹದ ಕತ್ರ್. ಅಬೂದಾವೂದ್(ರ.ಅ) ಈಜಿಪ್ಟ್, ಸಿರಿಯಾ, ಖುರಾಸಾನ್, ಇರಾಕ್ ಮೊದಲಾದ ಪ್ರದೇಶಗಳಿಗೆ ತೆರಳಿ ಅಲ್ಲಿನ ಖ್ಯಾತ ವಿದ್ವಾಂಸರುಗಳಿಂದ ಹದೀಸ್ ಕಲಿತು  ಸಂಗ್ರಹಿಸಿದರು*.

             *ಅಬ್ದುಲ್ಲಾಹಿಬ್ ನು ಮಸ್ಲಮ (ರ.ಅ) , ಅಹ್ಮದ್ ಬಿನ್ ಹಂಬಲ್ (ರ.ಅ), ಯಹ್ಮಾ ಬಿನ್ ಮಈನ್(ರ.ಅ), ಖತಯ್ ಬತುಬಿನ್ ಸಈದ್(ರ.ಅ), ಉಸ್ಮಾನ್ ಬಿನ್ ಅಬೀಶೈಬ (ರ.ಅ) ಮೊದಲಾದವರು ಅಬೂದಾವೂದ್(ರ.ಅ)ರವರ ಗುರುಗಳಾಗಿದ್ದಾರೆ. ಇಮಾಂ ತಿರ್ಮುದಿ(ರ.ಅ), ಇಮಾಂ ನಸಾಈ (ರ.ಅ) , ಅಬೂ ಅವಾನ(ರ.ಅ) ಮುಂತಾದ ಖ್ಯಾತ ನಾಮರು ಇವರ ಶಿಷ್ಯರಾಗಿದ್ದರು. ಸುನನು ಅಬೂದಾವೂದ್ ಹದೀಸ್ ಗ್ರಂಥದ ಜೊತೆಗೆ ಇವರು ಇತರ ಅನೇಕ ಗ್ರಂಥಗಳನ್ನು ಕೂಡ ರಚಿಸಿರುವರು*.

          *ಇವರ ಗ್ರಂಥದಲ್ಲಿ 5 ಲಕ್ಷ ಹದೀಸ್ ಗಳಿಂದ ಆಯ್ಕೆಯಾದ 4800 ಹದೀಸ್ ಗಳಿವೆ. ಹದೀಸ್ ಮತ್ತು ಫಿಕ್ಹ್ ನ್ನು ಸಮನ್ವಯಗೊಳಿಸಿ ಪ್ರತಿಪಾದಿಸುವ ಶೈಲಿ ಈ ಗ್ರಂಥದ ವೈಶಿಷ್ಟ್ಯತೆಯಾಗಿದೆ. ಇಮಾಂ ನವವೀ(ರ.ಅ) ಹೇಳುತ್ತಾರೆ ; "ಕರ್ಮ ಶಾಸ್ತ್ರದ ರಂಗಕ್ಕಿಳಿಯುವವರಿಗೆ ಸುನನ್ ಅಬೂದಾವೂದನ್ನು ಅವಗಣಿಸಲು ಸಾಧ್ಯವಿಲ್ಲ. ಏಕೆಂದರೆ ಅಹ್ಕಾಂಗಳಿಗೆ ಸಂಬಂಧಪಟ್ಟ ಬಹುತೇಕ ಹದೀಸ್ ಗಳು ಅದರಲ್ಲಿವೆ". ತಮ್ಮ ಗ್ರಂಥವನ್ನು ರಚಿಸಿದ ನಂತರ ಇಮಾಂ ಅಬೂದಾವೂದ್ (ರ.ಅ)ರವರು ಅದನ್ನು ತಮ್ಮ ಉಸ್ತಾದರಾದ ಅಹ್ಮದ್ ಬಿನ್ ಹಂಬಲ್(ರ.ಅ)ರಿಗೆ ತೋರಿಸಿ ಅವರ ಒಪ್ಪಿಗೆ ಪಡೆದಿದ್ದರು*.


*ಮುಂದುವರಿಯುವುದು*.....

📚📚📚📚📚📚📚📚📚📚
👉ಒಬ್ಬರನ್ನು ಪ್ರೀತಿಸುವುದಾದರೂ ದ್ವೇಶಿಸುವುದಾದರೂ ಅದು ಧಾರ್ಮಿಕ ಕಾರಣಕ್ಕಾಗಿ ಮಾತ್ರವಾಗಿರಲಿ: *ಕುತ್ಬುಲ್-ಅಕ್ತಾಬ್ ಅಲ್-ಗೌಸುಲ್ ಅಅಳಂ ಅಬ್ದುಲ್ ಕಾದಿರಿಲ್ ಜೀಲಾನಿ(ರ)*
👉 ಕುಷ್ಠ ರೋಗಿಯಂತರನ್ನು ಅವರ ಸೇವೆಗಾಗಿ ಅವರನ್ನು ಬೇಟಿಯಾಗುವುದು ಸುನ್ನತ್ತಲ್ಲ ಅದು ಖಡ್ಡಾಯ: *ಸಯ್ಯಿದುಲ್-ಅವ್-ಲಿಯಾಇ ತಾಜುಲ್-ಆರಿಫೀನ ಅಹ್ಮದುಲ್ ಕಬೀರುರ್ರಿಫಾಈ (ಖ).*
👉ರಾತ್ರಿಯ ಒಂದು ರಕ್ಅತ್ ನಮಾಜು ಹಗಲಿನ ಸಾವಿರ ರಕ್ಅತಿಗಿಂತ ಶ್ರೇಷ್ಠ: *ತಾಜುಲ್-ಅಸ್ಫಿಯಾಇ ಅಹ್ಮದುಲ್-ಬದವೀ(ರ).*
👉ಕುರ್ಆನ್ ಕಲಿತವನೆಂದು ನೀನು ಸಂತೋಷಪಡಬೇಡ ಆ ಕುರ್ಆನಿನಲ್ಲಿರುವಂತೆ ನೀನು ಕಾರ್ಯಾಚರಿಸುವ ತನಕ. *:ಅಲ್-ಕುತ್ಬುಲ್ಆರಿಪು ಬಿಲ್ಲಾಹಿ ಇಬ್ರಾಹೀಮ್ ಅದ್ದಸೂಕೀ(ರ)*