Wednesday, April 18, 2018

*ಆಸಿಫಾ ಪ್ರಕರಣವನ್ನು ಹಿಂದು ಮುಸ್ಲಿಂ ಇಶ್ಯು ಮಾಡಿ ಕೋಮು ದ್ವೇಷ ಹರಡುವ ದುರುಳರಿದ್ದಾರೆ... ಎಚ್ಚರಿಕೆ!!*

ಇಡೀ ಜಗತ್ತೇ ಆಸಿಫಾಳಿಗಾಗಿ ಕಂಬನಿ ಮಿಡಿಯುತ್ತಿದೆ. ಮನುಷ್ಯ ರಕ್ತ ಹರಿಯುವ ಸರ್ವ ಮನಸ್ಸುಗಳು ಆಸಿಫಾಳಿಗಾಗಿ ಧ್ವನಿಯೆತ್ತುತ್ತಿವೆ. ಆಸಿಫಾಳ ಕೊಲೆ ಆಕಸ್ಮಿಕವಲ್ಲ. ಆ ಕಂದಮ್ಮಳ ಮೇಲೆ ನಡೆದ ಭೀಭತ್ಸವಾದ ಅತ್ಯಾಚಾರವೂ ಆ ಮಗುವಿನ ಉಬ್ಬು ತಬ್ಬುಗಳಲ್ಲಿ ಆಕರ್ಷಿತವಾಗಿ ಅಲ್ಲ. ಸಣ್ಣ ವಯಸ್ಸಿನ ಆ ಕಂದಮ್ಮಳಲ್ಲಿ ಆ ನೀಚರು ತೋರಿಸಿದ ಅಮಾನವೀಯತೆಯ ಹಿಂದೆ ಒಂದು ಸಮುದಾಯವನ್ನು ಉಚ್ಛಾಟನೆಗೆಯ್ಯುವ ಹಿಡನ್ ಅಜೆಂಡಾ ಇದೆ.
ಉತ್ತಮ ಹಿಂದುಗಳಾರೂ ಇದನ್ನು ಬೆಂಬಲಿಸಲ್ಲ...
ಯಾಕೆ ಬೆಂಬಲಿಸಲ್ಲ ಅಂತ ಗೊತ್ತಾ?
ಆಸಿಫಾಳ ಕೇಸನ್ನು ಅತ್ಯಂತ ಪಾರದರ್ಶಕವಾಗಿ ತನಿಖೆ ನಡೆಸಿ ಕಿರಾತಕ ಆರೋಪಿಗಳನ್ನು ಬಂಧಿಸಿದ್ದು ಒಬ್ಬ ಹಿಂದು ಅಧಿಕಾರಿಯಾಗಿದ್ದಾರೆ.
ಆಸಿಫಾಳ ಪರ ವಾದಿಸುವ ವಕೀಲೆ ಹಿಂದುವಾಗಿದ್ದಾಳೆ.
ಕೇಸನ್ನು ಕ್ರೈಂ ಬ್ರಾಂಚ್ ವರ್ಗಾಯಿಸಿದ ಡಿ.ಜಿ.ಪಿ. ಹಿಂದುವಾಗಿದ್ದಾರೆ.
ಅತ್ಯಂತ ಶೀಘ್ರದಲ್ಲಿ ವಿಚಾರಣೆ ನಡೆಸಿ ವರದಿ ಒಪ್ಪಿಸುವಂತೆ ಆಜ್ಞೆ ಹೊರಡಿಸಿದ ನ್ಯಾಯಮೂರ್ತಿ ಒಬ್ಬ ಹಿಂದುವಾಗಿದ್ದಾರೆ!
ಕಳೆದ ಎರಡು ತಿಂಗಳಿನಿಂದ ಈ ಕೇಸಿನೊಂದಿಗೆ ಸಹಕಾರ ಸಹಾಯ ನೀಡಿದ್ದು ಹಿಂದುಗಳಾಗಿದ್ದಾರೆ!

ನೀವೊಮ್ಮೆ ಸಾಮಾಜಿಕ ತಾಣ ತೆರೆದುನೋಡಿ... ಲಕ್ಷಾಂತರ ಹಿಂದುಗಳು ಆಸಿಫಾಳನ್ನು ನೆನೆದು ಅಳುತ್ತಿದ್ದಾರೆ!
ಪ್ರತಿಭಟಿಸುತ್ತಿದ್ದಾರೆ!
ಕ್ರಿಶ್ಚಿಯನ್ ಸಹೋದರರು ಅವರ ಚರ್ಚುಗಳಲ್ಲಿ ಆಸಿಫಾಳ ಫೋಟೋ ಇಟ್ಟು ಹೂಮಾಲೆ ಹಾಕಿ ಕಂಬನಿ ಮಿಡಿಯುತ್ತಿದ್ದಾರೆ.
ಸಿಖ್ಖರು ರೋಧಿಸುವ ದೃಶ್ಯ ಮನಕುಲುಕುವಂತಿದೆ!

ನಾನು FB ಯಲ್ಲಿ ಹಿಂದು ಸಹೋದರರೊಬ್ಬರ Live ನೋಡಿದೆ.
ಅಪ್ಪಟ ಬ್ರಾಹ್ಮಣ ಕುಟುಂಬದ ಆ ಹಿರಿಯ ವ್ಯಕ್ತಿ ತನ್ನ ಹೆಂಡತಿ ಮತ್ತು ಮಗುವನ್ನು ಮೊಬೈಲ್ ಎದುರು ನಿಲ್ಲಿಸಿ 18 ನಿಮಿಷ ಲೈವ್ ಕೊಡುತ್ತಾರೆ!
ಪತ್ನಿಯ ಕಣ್ಣಲ್ಲಿ ಕಂಬನಿ ಮಿಡಿಯುತ್ತಿದೆ.
ಮಾತನಾಡಲಾಗದೆ ತೊದಲುತ್ತಾರೆ!
ಎಲ್ಲರಿಗೂ ಹೇಳಲಿಕ್ಕಿರುವ ವಿಷಯ ಒಂದೇ ಆಸಿಫಾ.....

ಕೊನೆಗೆ ಅದೇ ವ್ಯಕ್ತಿ ರಾತ್ರಿ ಮಲಗಿದ್ದಲ್ಲಿಂದ ನಿದ್ರೆ ಬಾರದೆ ಪುನಃ ಮೂರು ನಿಮಿಷದ ಲೈವ್ ಗೆ ಬಂದು ಮನಸ್ಸನ್ನು ಹಿಡಿತಕ್ಕಿಡಲು ಸಾದ್ಯವಾಗದೆ ಬಿಕ್ಕಿ ಬಿಕ್ಕಿ ಅಳುತ್ತಾರೆ!
ಇಂತಹ ನಿಷ್ಕಳಂಕ ಮನಸ್ಸಿನ ಅದೆಷ್ಟೋ ಹಿಂದುಗಳು ಭಾರತದಲ್ಲಿ ಬದುಕುತ್ತಿದ್ದಾರೆ.
ಕೇವಲ ಎರಡು ಶೇಕಡಾ ಮಾತ್ರ ಆರ್.ಎಸ್.ಎಸ್, ಬಜರಂಗದಳದ ಕೊಳಕು ಮನಸ್ಸಿನವರಿದ್ದಾರೆ ಅಷ್ಟೇ.
ಅವರಿಗೆಲ್ಲರೂ ಛೀಮಾರಿ ಹಾಕುತ್ತಿದ್ದಾರೆ.
ಹಾಗಾಗಿಯೇ ಅವರು ಈ ಸಂಕಷ್ಟದಿಂದ ಪಾರಾಗಲು ಸದರಿ ವಿಷಯಕ್ಕೆ ಕೋಮು ಲೇಪ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.
ಅದಕ್ಕೆ ಮುಸ್ಲಿಂ ಯುವಕರು ಮಣೆ ಹಾಕಬಾರದು.
ಆಸಿಫಾಳ ಮೇಲೆ ಎರಗಿದ ಕಿರಾತಕರು ನೈಜ ಹಿಂದುಗಳಲ್ಲ..
ಹಾಗಿದ್ದರೆ ಅವರು ತಮ್ಮ ಅಮಾನವೀಯ ಕ್ರೂರ ವ್ಯಭಿಚಾರ, ಹತ್ಯೆಗೆ ಪವಿತ್ರ ಸ್ಥಳವಾದ ದೇವಸ್ಥಾನವನ್ನು ಉಪಯೋಗಿಸುತ್ತಿರಲಿಲ್ಲ!
ಅವರು ಏನಿದ್ದರೂ ನಕಲಿ ಧರ್ಮ ಪ್ರೇಮ ಪ್ರಕಟಿಸುವ ಮತಾಂಧರು!
ಮುಸಲ್ಮಾನರು ಯಾವತ್ತೂ ಹಿಂದೂ ದೇವರುಗಳನ್ನು ನಿಂದಿಸಲ್ಲ.
ಹಾಗೆ ನಿಂದಿಸಬಾರದೆಂಬ ಕಟ್ಟಪ್ಪಣೆ ಪವಿತ್ರ ಖುರ್‌ಆನಿನಲ್ಲಿದೆ.
ಆಸಿಫಾಳ ಹತ್ಯೆ, ಅತ್ಯಾಚಾರಕ್ಕಾಗಿ ಕ್ರೂರ ಮುಠ್ಠಾಳರು ದೇವಸ್ಥಾನವನ್ನು ಉಪಯೋಗಿಸಿದರು.
ಹಾಗಾಗಿಯೇ ಅಲ್ಲಿನ ದೇವರು ಎಲ್ಲಿದ್ದರು ಎಂಬ ರೀತಿಯ ಫ್ಲಕ್ಸ್ ಕಾಣಲು ಸಾದ್ಯವಾಯಿತು.
ಇಂತಹ ಫ್ಲಕ್ಸ್ ಗಳನ್ನು ಕೂಡಲೇ ತೆರವುಗೊಳಿಸಬೇಕು.
ಇದು ನಮ್ಮೆಡೆಯಲ್ಲಿ ಕೋಮು ವಿಷಬೀಜ ಬಿತ್ತಲು ಶ್ರಮಿಸುವ ಮತಾಂಧರ ಕೃತ್ಯಗಳು....
ಮತಾಂಧರಿಗೆ ಧರ್ಮ ಇಲ್ಲ...
ಅದು ಮುಸ್ಲಿಮರಾಗಲಿ ಹಿಂದುವಾಗಲಿ,
ಕ್ರಿಶ್ಚಿಯನ್ನರಾಗಲಿ...
ಕೇವಲ ಆವೇಶ ಮಾತ್ರ ಅವರನ್ನು ನಿಯಂತ್ರಿಸುತ್ತದೆ...

ಪ್ರಿಯ ಕಂದಮ್ಮ ಆಸಿಫಾಳ ಹತ್ಯೆಗೈದ ಕಿರಾತಕರಿಗೆ ಮಾದರಿ ಶಿಕ್ಷೆಯಾಗಲಿ....
ಒಂದು ಸಮುದಾಯವನ್ನೇ ಉಚ್ಛಾಟನೆಗೆಯ್ಯಲು
 ಉದ್ದೇಶಿಸಿದವರ ಶಿರಸ್ಸುಗಳಿಗೆ ನೇಣುಗಂಬ ಗತಿಯಾಗಲಿ...
ಅವರ ಮನಸ್ಸಲ್ಲಿ ಭಯ ಆವರಿಸಲಿ...
ಇನ್ನು ಮುಂದೆ ಇಂತಹ ಹೀನಾಯ ಕ್ರೂರಕೃತ್ಯಗಳನ್ನು ಚಿಂತಿಸಲೂ ಭಯವಾಗುವಂತಹ ವಾತಾವರಣ ಸೃಷ್ಟಿಯಾಗಲಿ...
ಪ್ರಾರ್ಥಿಸಿರಿ...
ಆ ಕಂದಮ್ಮಳ ಕುಟುಂಬಕ್ಕೆ ನ್ಯಾಯ ಸಿಗಲಿ...
ನ್ಯಾಯಕ್ಕಾಗಿ ಹೋರಾಡುವ ಸಮುದ್ರ ಸಮಾನ ಮನಸ್ಸುಗಳೊಂದಿಗೆ ನಾವು ಕೂಡಾ ಬಿಂದುವಾಗುವ.....

 -ಅಬೂಶಝ

Tuesday, April 17, 2018

*ಮರಣ ಹೊಂದಿದವರ ಹೆಸರಲ್ಲಿ 70,000 ತಹ್'ಲೀಲ್ ಗೆ ಆಧಾರವಿದೆಯೇ?*
___________________________________
📝 _ಮುನೀರ್ ಸಖಾಫಿ,ಸಾಲೆತ್ತೂರು_

*ಭಾಗ--2*

ಶೈಖ್ ಅಬೂಯಝೀದುಲ್ ಖುರ್ತುಬೀ(ರ) ಹೇಳುತ್ತಾರೆ,
 عن الشيخ أبي زيد القرطبي قال: سمعت في بعض الآثار أن من قال: لا اله إلا الله سبعين ألف مرة كانت له فداء من النار، فعملت على ذلك رجاء بركة الوعد فعملت منها لأهلي وعملت منها أعمالاً ادخرتها لنفسي وكان إذ ذاك يبيت معنا شاب يقال إنه يكاشف في بعض الأوقات بالجنة والنار، وكانت الجماعة ترى له فضلاً على صغر سنه، وكان في قلبي منه شيء، فاتفق أن استدعانا بعض الإخوان إلى منزله، فنحن نتناول الطعام والشاب معنا إذ صاح صيحة منكرة، واجتمع في نفسه وهو يقول: يا عم هذه أمي في النار، وهو يصيح بصياح عظيم لا يشك من سمعه أنه عن أمر، فلما رأيت ما به من الانزعاج قلت في نفسي اليوم أجرب صدقه فألهمني الله السبعين ألفاً، ولم يطلع على ذلك أحد إلا الله، فقلت في نفسي: الأثر حق، والذين رووه صادقون: اللهم إن السبعين ألفاً فداء هذه المرأة أمّ هذا الشاب، فما استتمت الخاطر في نفسي إلا أن قال: يا عمّ ها هي أخرجت الحمد لله رب العالمين.فحصلت لي الفائدتان.
ايماني بصدق الاثر ،وسلامتي من الشاب وعلمي بصدقه رضي الله عنهما ونفعنا بهما.
(روض الرياحين ، 159)



ಲಾಇಲಾಹ ಇಲ್ಲಲ್ಲಾಹು ಎಂಬ ದ್ಸಿಕ್ರ್ 70,000 ಸಲ ಹೇಳಿದರೆ ಅವನಿಗೆ ಅದು ನರಕ ಮೋಚನಯಾಗಿದೆಯೆಂದು ಕೆಲವು ಆಸಾರ್ ಗಳಲ್ಲಿ ನಾನು ಕೇಳಿದ್ದೆನು.ಅದು ಪ್ರಕಾರ ನನ್ನ ಕುಟುಂಬಕ್ಕೆ ಮತ್ತು ನನ್ನ ಸ್ವಂತಕ್ಕಾಗಿಯೂ ಹಲವಾರು ಸಲ ನಾನು ಹೇಳಿ ಇಟ್ಟಿದ್ದೆ.
ಒಂದು ದಿನ ನಮ್ಮೊಂದಿಗೆ ಮನೆಯಲ್ಲಿ ಒಬ್ಬ ಯುವಕ  ಇದ್ದರು.ಕೆಲವೊಂದು ಸಮಯಗಳಲ್ಲಿ ಅವರು ನರಕ ಮತ್ತು ಸ್ವರ್ಗವನ್ನು ಕಾಣುತ್ತಿದ್ದರೆಂದು ಜನರು ಹೇಳುತ್ತಿದ್ದರು.ಆದುದರಿಂದಲೇ ಜನರು ಆ ಯುವಕನನ್ನು ಬಹಳ ಗೌರವದಿಂದ ಕಾಣುತ್ತಿದ್ದರು.ಆದರೆ ನನಗೆ ಅದರಲ್ಲಿ ಸಂಶಯವಿತ್ತು.ಹಾಗೇ ಒಂದು ದಿವಸ ಗೆಳೆಯರಲ್ಲೊಬ್ಬ ನಮ್ಮನ್ನು ಔತನ ಕೂಟಕ್ಕೆ ಮನೆಗೆ ಆಹ್ವಾನಿಸಿದರು.ನಾವು ಆಹಾರ ಸೇವಿಸುತ್ತಿರುವಾಗ ಆ ಯುವಕನೂ ಕೂಡಾ ನಮ್ಮೊಂದಿಗಿದ್ದರು.ತಟ್ಟನೇ ಆ ಯುವಕ ಜೋರಾಗಿ ಕೂಗಿದರು!.
ಬಹಳ ಗಟ್ಟಿಯಾಗಿ ಆ ಯುವಕ "ನನ್ನ ತಾಯಿಯು ನರಕದಲ್ಲಿ "ಎಂದು ಅಳುತ್ತಿದ್ದರು.ಆ ಯುವಕನ ಈ ಅಕ್ರಂಧನ ಕಂಡಾಗ ಆ ಯುವಕನ ನೈಜತೆಯನ್ನು ತಿಳಿಯಲು ನಾನು ಹೇಳಿ ಇಟ್ಟಿದ್ದ 70,000 ತಹ್'ಲೀಲನ್ನು  ಆ ಯುವಕನ ತಾಯಿಗೆ ನಾನು ಹದ್ಯಾ ಮಾಡಿದೆನು.ಅಲ್ಲಾಹನ ಹೊರತು ಬೇರೆ ಯಾರಿಗೂ ಅದು ತಿಳಿದಿರಲಿಲ್ಲ.
ನಾನು ಮನಸ್ಸಿನಲ್ಲಿಯೇ ಸಂಕಲ್ಪ ಮಾಡಿ ಮುಗಿಸುವಷ್ಟರಲ್ಲಿ ಆ ಯುವಕ  ನನ್ನಲ್ಲಿ ಹೇಳಿದರು."ನನ್ನ ತಾಯಿಯನ್ನು ನರಕದಿಂದ ಮೋಚಿಸಲ್ಪಡಲಾಗಿದೆ.ಪ್ರಪಂಚ ರಕ್ಷಕನಾದ ಅಲ್ಲಾಹನಿಗೆ ಸರ್ವ ಸ್ತುತಿಗಳು.
ಈ ಘಟನೆಯಿಂದ ನನಗೆ ಎರಡು ಕಾರ್ಯಗಳು ತಿಳಿಯಿತು.
1.ಆ ಅಸರ್ ನಲ್ಲಿ (70000 ತಹ್'ಲೀಲ್ ನರಕ ಮೋಚನೆ ಎಂಬ ಮಾತು) ಸತ್ಯವೆಂದು ಮನವರಿಕೆಯಾಯಿತು.
2.ಆ ಯುವಕ ಸಂತ್ಯವಂತನಾಗಿದ್ದ ಎಂಬುವುದು.
(ರೌಳುರ್ರಯಾಹೀನ್,ಪುಟ 159)

ಇಮಾಮ್ ಮುಲ್ಲಾ ಅಲಿಯ್ಯುಲ್ ಖಾರೀ(ರ) ಹೇಳುತ್ತಾರೆ,
قال الشيخ محيي الدين بن العربي : أنه بلغني عن النبي صلى الله عليه وسلم أن من قال : لا إله إلا الله سبعين ألفا غفر له ، ومن قيل له غفر له أيضا ، فكنت ذكرت التهليلة بالعدد المروي من غير أن أنوي لأحد بالخصوص ، بل على الوجه الإجمالي ، فحضرت طعاما مع بعض الأصحاب ، وفيهم شاب مشهور بالكشف ، فإذا هو في أثناء الأكل أظهر البكاء فسألته عن السبب فقال : أرى أمي في العذاب فوهبت في باطني ثواب التهليلة المذكورة لها فضحك وقال : إني أراها الآن في حسن المآب ، قال الشيخ : فعرفت صحة الحديث بصحة كشفه ، وصحة كشفه بصحة الحديث .
(مرقاة 2/102)
70,000 ಸಲ ಒಬ್ಬ ಲಾಇಲಾಹ ಇಲ್ಲಲ್ಲಾಹ್ ಎಂಬ ದ್ಸಿಕ್ರ್  ಹೇಳಿದರೆ ಅವನ ತಪ್ಪುಗಳನ್ನು ಮನ್ನಿಸಲಾಗುವುದು.ಬೇರೊಬ್ಬನಿಗೆ ಅದನ್ನು ಹೇಳಿದಲ್ಲಿ ಅವನ ತಪ್ಪುಗಳನ್ನೂ ಮನ್ನಿಸಲಾಗುವುದು ಎಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ ಹದೀಸ್ ನನಗೆ ಲಭಿಸಿದೆ.ಅದು ಪ್ರಕಾರ ನಾನು
ಅಷ್ಟು ತಹ್'ಲೀಲ್ ನಾನು ಯಾರನ್ನೂ ಸಂಕಲ್ಪಿಸದೆ ಹೇಳಿದೆ.ಆ ವೇಳೆ ಗೆಳೆಯರೊಂದಿಗೆ ಒಂದು ಔತನ ಕೂಟಕ್ಕೆ  ನಾವು ಹಾಜರಾದೆವು.ಕರಾಮತ್ ನಿಂದ ಪ್ರಸಿದ್ಧಿಗೊಂಡ ಒಬ್ಬರು  ನಮ್ಮೊಂದಿಗಿದ್ದರು.ಆಹಾರ ಸೇವಿಸುವ ಮಧ್ಯೆ ಅವರು ಜೋರಾಗಿ ಅತ್ತರು.ಕಾರಣ ಕೇಳಿದಾಗ ತನ್ನ ತಾಯಿಯನ್ನು ನರಕದಲ್ಲಿ ನಾನು ಕಾಣುತ್ತಿದ್ದೇನೆ ಎಂದು ಅವರು ಉತ್ತರಿಸಿದರು.ಆಗ ನಾನು ಹೇಳಿ ಇಟ್ಟಿದ್ದ ತಹ್'ಲೀಲ್ ನ ಪ್ರತಿಫಲವನ್ನು ಅವರ ತಾಯಿಗೆ ನೀಡುವೆಯೆಂದು ನಾನು ಮನಸ್ಸಲ್ಲಿ ಸಂಕಲ್ಪ ಮಾಡಿದೆ.ಆಗಲೇ ಅವರು ಜೋರಾಗಿ ನಗಾಡಿದರು.ಈಗ ನನ್ನ ತಾಯಿಯನ್ನು ನಾನು ಉತ್ತಮ ಅವಸ್ಥೆಯಲ್ಲಿ ದರ್ಶಿಸುತ್ತಿದ್ದೇನೆ ಎಂದು ಅವರು ಹೇಳಿದರು.ಇಬ್ನುಲ್ ಅರಬೀ (ರ)ಹೇಳುತ್ತಾರೆ.ಅವರ ಸರಿಯಾದ ಕಶ್ಫ್ ಕಾರಣ ಹದೀಸ್ ಸ್ವಹೀಹ್ ಆಗಿದೆಯೆಂದೂ ಸ್ವಹೀಹ್ ಆದ ಹದೀಸ್ ಕಾರಣ ಅವರ ಕಶ್ಫ್ ಸರಿಯಾಗಿದೆಯೆಂದೂ ನನಗೆ ದೃಡಪಟ್ಟಿತು.
(ಮಿರ್ಖಾತುಲ್ ಮಫಾತೀಹ್ 2/102)

ಮರಣ ಹೊಂದಿದವರಿಗಾಗಿ ತಹ್'ಲೀಲ್ ಹೇಳಿದರೆ ಅದರ ಫಲ ಮೃತರಿಗೆ ಲಭಿಸುವವು ಎಂಬುವುದು ಇದರಿಂದ ಬಹಳ ಸ್ಪಷ್ಟವಾಯಿತು.

*ಮುಂದುವರಿಯುವುದು.....*

Monday, April 16, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 3⃣9⃣
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

ಸಯ್ಯದುನಾ ಹುಸೈನ್ (ರ)ರವರು ಭಾವುಕರಾಗಿ ನುಡಿದ ಆ ಮಾತುಗಳನ್ನು ಕೇಳಿದ ಹಝ್ರತ್ ಹುರ್ರ್ (ರ) ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು... ⬇

ತುಸು ಹೊತ್ತಿನ ನಂತರ *ಹುರ್ರ್ (ರ)* ಹೇಳಿದರು....

*ಯಾ ಹುಸೈನ್ (ರ) ರವರೇ...* ಆ ಪತ್ರವನ್ನು ನಾನು ನನ್ನ ಕೈಯಾರೆ ಬರೆದುದಾದರೂ, ಕೂಫ ನಿವಾಸಿಗಳ ಒಕ್ಕೊರಲ ಅಪೇಕ್ಷೆಯ ಮೇರೆಗೆ ಮತ್ತು ಅವರ ಹೇಳಿಕೆಯ ಆಧಾರದಿಂದ ನಾನು ಆ ಪತ್ರ ಬರೆದಿದ್ದೆ. ಮಾತ್ರವಲ್ಲ ಸಾವಿರಾರು ಸಂಖ್ಯೆಯ ಕೂಫಾ ನಿವಾಸಿಗಳು ಆ ಪತ್ರಕ್ಕೆ ಸಹಿ ಹಾಕಿದ್ದುದನ್ನು ತಾವು ಗಮನಿಸಿರಬಹುದು.

ಆದರೆ.. ನಂತರ ತಾವು ಮಕ್ಕದಿಂದ ಹೊರಟು ಬಂದಿದ್ದಾಗಲೀ ಮತ್ತು ಅನಂತರ ನಡೆದ ಅಹಿತಕರ ಘಟನೆಗಳಾಗಲೀ ನನ್ನ ಗಮನಕ್ಕೆ ಬಂದಿರಲಿಲ್ಲ. ಕಾರಣ ನಾನು ವ್ಯಾಪಾರದ ನಿಮಿತ್ತ ಹೋಗಿದ್ದೆ. ಹಿಂದಿರುಗುವಾಗ ದಾರಿ ಮಧ್ಯೆ ವಿಷಯಗಳೆಲ್ಲ ತಿಳಿಯುತ್ತಿದ್ದಂತೆ ಮನೆಗೂ ಹೇೂಗದೆ ನೇರವಾಗಿ ತಮ್ಮನ್ನು ಕಂಡು ತಮಗೆ ನನ್ನಿಂದಾದ ನೆರವು ನೀಡುವ ಸದುದ್ದೇಶದಿಂದ ಇಲ್ಲಿಗೆ ಬಂದೆ. ಆದ್ದರಿಂದ ಈಗ ತಾವು ಏಕಾಂಗಿಯಲ್ಲ ತಮ್ಮೊಂದಿಗೆ ನಾನೂ ಇದ್ದೇನೆ. ದಯವಿಟ್ಟು ನನಗೊಂದು ಖಡ್ಗವನ್ನು ಕೊಡಿ ಆ ವಂಚಕರ ವಿರುದ್ಧ ನಾನೂ ಹೇೂರಾಡುತ್ತೇನೆ.

ಅಲ್ಲಾಹನು ಅನುಗ್ರಹಿಸಿದರೆ ಮತ್ತೆ ಸ್ವರ್ಗದಲ್ಲಿ ಭೇಟಿಯಾಗೇೂಣ ಎನ್ನುತ್ತಾ ಖಡ್ಗವೊಂದನ್ನು ಪಡೆದು ರಣರಂಗಕ್ಕೆ ಧುಮುಕಿದ *ಹಝ್ರತ್ ಹುರ್ರ್ (ರ)* ತಮ್ಮ ಕಂಚಿನ ಕಂಠದಿಂದ ಘರ್ಜಿಸುತ್ತಾ ಹೇಳಿದರು...

*ಓ.. ವಂಚಕರೇ..*
*ನಿಮ್ಮ ಮಾತಿನ ಮೇಲೆ ವಿಶ್ವಾಸವಿರಿಸಿದ ಕಾರಣದಿಂದಲ್ಲವೇ ಅಲ್ಲಾಹನ ರಸೂಲರ ಪೌತ್ರರಾದ ಹುಸೈನ್ (ರ) ರನ್ನು ನಾನಿಲ್ಲಿಗೆ  ಕರೆಸಿದ್ದು..? ನಾನು ಬರೆದ ಪತ್ರವನ್ನು ನೇೂಡಿ ನಮ್ಮ ನೆರವಿಗಾಗಿ ಧಾವಿಸಿ ಬಂದ ಅಹ್ಲ್'ಬೈತಿನ ಕುಡಿಯನ್ನು ಇಷ್ಟು ಕಠೇೂರವಾಗಿ ಸ್ವಾಗತಿಸುವುದೇ...?*

*ಹಾಗಾಗಿ ನಿಮ್ಮಂತಹ ನಯವಂಚಕರಲ್ಲೊಬ್ಬನಾಗಲು ನನ್ನಿಂದ ಸಾಧ್ಯವಿಲ್ಲ. ಹುಸೈನ್ (ರ)ರವರ ತಂಡದ ಸದಸ್ಯರನ್ನು ಕೊಂದ ವೀರಾಧಿವೀರರು ಈಗ ಬನ್ನಿ. ನೀವೆಸಗಿದ ವಂಚನೆಗೆ ಈ ಖಡ್ಗದಿಂದ ನಾನು ಉತ್ತರ ನೀಡುತ್ತೇನೆ. ಎಂದು ಘರ್ಜಿಸುತ್ತಾ ಎದುರಿಗೆ ಬಂದ ಒಬ್ಬೊಬ್ಬ ಶತ್ರು ಸೈನಿಕನನ್ನೂ ಬಿಡದೆ ಸದೆ ಬಡಿಯುತ್ತಾ ಕೊನೆಗೊಬ್ಬ ಶತ್ರು ಸೈನಿಕನ ಖಡ್ಗದ 🗡 ದಾಳಿಗೀಡಾಗಿ ಶಹೀದಾದರು.* 😰

ಡೇರೆಯ ಹತ್ತಿರ ಇದೆಲ್ಲವನ್ನೂ ಗಮನಿಸುತ್ತಿದ್ದ ಐವತ್ನಾಲ್ಕು ವರ್ಷದ ಅಹ್ಲ್'ಬೈತಿನ ಕಣ್ಮಣಿಯಾದ ಇತಿಹಾಸ ಪುರುಷ ಸಯ್ಯದುನಾ ಹುಸೈನ್ (ರ)ರವರು ಹುರ್ರ್ (ರ) ಶಹೀದಾಗುತ್ತಿದ್ದಂತೆ ಸ್ವತಃ ಹಸೈನ್ (ರ)ರವರೇ ರಣರಂಗಕ್ಕೆ ನೇರವಾಗಿ ಧುಮುಕಿ ಶತ್ರು ಸೈನ್ಯದ ವಿರುದ್ಧ ವೀರಾವೇಶದಿಂದ ಹೇೂರಾಡುತ್ತಾ ಹಲವಾರು ಶತ್ರು ಸೈನಿಕರನ್ನು ಕೊಚ್ಚಿ ಹಾಕುತ್ತಾ ಮುನ್ನುಗ್ಗಿದರಾದರೂ.....

ಆರು ದಿನಗಳಿಂದ ಆಹಾರವಿಲ್ಲದೆ, ನಾಲ್ಕು ದಿನಗಳಿಂದ ಗುಟುಕು ನೀರೂ ಕುಡಿಯದೆ ಬಳಲಿ ಬೆಂಡಾಗಿದ್ದ ಸಯ್ಯದುನಾ ಹುಸೈನ್ (ರ)ರವರು ಸ್ವಲ್ಪ ಹೊತ್ತಿನಲ್ಲೇ ಆಯಾಸದಿಂದ ಬಳಲಿದರು.

ಆಯಾಸ ಸಹಿಸಲಾರದಾದಾಗ ಕೊನೆಗೆ ನೀರಿಗಾಗಿ ಯೂಪ್ರಟಿಸ್ ನದಿಯತ್ತ ತಮ್ಮ ಕುದುರೆಯನ್ನು ತಿರುಗಿಸಿದರು.

ಇದನ್ನು ಕಂಡ ಉಬೈದ್ ತನ್ನ ಸೈನಿಕರನ್ನುದ್ದೇಶಿಸಿ ಹೇಳಿದನು.

ಹೇಯ್.. ನೇೂಡಲ್ಲಿ

*ಹುಸೈನ್ (ರ)* ನೀರಿಗಾಗಿ ನದಿಯತ್ತ ಹೋಗುತ್ತಿದ್ದಾರೆ.

ಆಹಾರ ಮತ್ತು ನೀರಿಲ್ಲದೆ ಇಷ್ಟು ಹೊತ್ತು ಹೇೂರಾಡಿ ನಮ್ಮ ಅನೇಕ ಸೈನಿಕರನ್ನು ಕೊಂದು ಹಾಕಿದ *ಹುಸೈನ್ (ರ) ರವರ* ಶಕ್ತಿಯನ್ನು ನೀವು ಗಮನಿಸಿದಿರಲ್ಲವೇ?

ಒಂದು ವೇಳೆ ಅವರೇನಾದರೂ ನೀರು ಕುಡಿದು ಸುಧಾರಿಸಿಕೊಂಡರೆ ಮತ್ತೆ ಅವರನ್ನು ಎದುರಿಸಲು ನಮ್ಮಿಂದ ಸಾಧ್ಯವಾಗದು. ಹಾಗಾಗಿ ಯಾವ ಅಸ್ತ್ರ ಪ್ರಯೇೂಗಿಸಿಯಾದರೂ ಸರಿ ನದಿಗಿಳಿಯದಂತೆ ಅವರನ್ನು ತಡೆಯಲೇಬೇಕು ಎಂದನು.

ಆಗ ನದಿ ದಂಡೆಯಲ್ಲಿ ಬಿಲ್ಲು ಬಾಣಗಳೊಂದಿಗೆ ಕಾವಲು ಕಾಯುತ್ತಿದ್ದ ಶತ್ರು ಸೈನಿಕರು ಹುಸೈನ್ (ರ)ರವರತ್ತ ಬಾಣ ಮತ್ತು ಈಟಿಗಳಿಂದ ದಾಳಿ ಮಾಡಲಾರಂಭಿಸಿದರು.

ನೂರಾರು ಸೈನಿಕರು ಏಕಕಾಲದಲ್ಲಿ ಅಸಂಖ್ಯ ಬಾಣಗಳ ಸುರಿಮಳೆಗೈದರೆ ತಪ್ಪಿಸಿಕೊಳ್ಳಲು ಅವಕಾಶವೆಲ್ಲಿದೆ?

*ಹಲವಾರು ಬಾಣಗಳು ಸಯ್ಯದುನಾ ಹುಸೈನ್ (ರ)ರವರ ದೇಹಕ್ಕೆ ಹೊಕ್ಕಿದವು. ಒಂದು ಬಾಣವಂತೂ ಅಲ್ಲಾಹನ ರಸೂಲ್ ﷺರ ಹೃದಯ ಕುಸುಮವಾದ ಸಯ್ಯದುನಾ ಹುಸೈನ್ (ರ)ರವರ ಹಣೆಯನ್ನು ಕೊರೆದು ತಲೆಯೊಳಗೆ ಹೊಕ್ಕಿತು.*

ಆಗ... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 3⃣8⃣
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

ಮಗ್ರಿಬ್'ನ ಸಮಯ...

ಹುಸೈನ್ (ರ) ರವರ ಹಿರಿಯ ಮಗ ಝೈನುಲ್ ಆಬಿದೀನ್ (ರ) ರವರು  ಜ್ವರದಿಂದ ಬಳಲುತ್ತಾ ಡೇರೆಯ ಒಂದು ಮೂಲೆಯಲ್ಲಿ ಮಲಗಿದ್ದರು..... ⬇

ಮಗ್ರಿಬ್ ನಮಾಝ್ ನಿರ್ವಹಿಸಿ ಡೇರೆಯ ಒಂದು ಮೂಲೆಯಲ್ಲಿ ಒರಗಿ ಕುಳಿತಿದಿದ್ದ ಸಯ್ಯದುನಾ ಹುಸೈನ್ (ರ) ರಿಗೆ ನಿದ್ರೆಯ ಜೇೂಂಪು ಹತ್ತಿ ನಿದ್ರೆಗೆ ಜಾರಿದರು. ಆಗ ಅವರಿಗೊಂದು ಕನಸು.....

ಆ ಕನಸಿನಲ್ಲಿ ಅಲ್ಲಾಹನ ಹಬೀಬರೂ, ಅಂಬಿಯಾಗಳ ನೇತಾರರೂ ವಿಶ್ವ ಗುರುವೂ ಮತ್ತು ಹುಸೈನ್ (ರ)ರವರ ಪಿತಾಮಹರೂ ಆದ *ಅಶ್ರಫುಲ್ ಖಲ್ಖ್ ಸಯ್ಯದುನಾ ಮುಹಮ್ಮದ್ ಮುಸ್ತಫಾ ﷺ ತಂಙಳ ರು ಹುಸೈನ್ (ರ) ರವರ ಗಲ್ಲ ಹಿಡಿದು...*

*ಯಾ... ಹುಸೈನ್ (ರ).., ಏನಿದು ಗಡ್ಡದಲ್ಲಿ ರಕ್ತ ಕಲೆ..?? ನಿನ್ನ ಮುಖ ಮತ್ತು ಗಡ್ಡ ರಕ್ತದಲ್ಲಿ ತೇೂಯ್ದಿದೆಯಲ್ಲಾ....!?*

ಹುಸೈನ್ (ರ) ಮರು ಮಾತನಾಡದೆ ಅಲ್ಲಾಹನ ಹಬೀಬರ ﷺ ಆ ಪ್ರಸನ್ನ ವದನವನ್ನೇ ಬೆರಗುಗಣ್ಣಿನಿಂದ ನೇೂಡುತ್ತಿದ್ದರು.

*ಆಗ ಮಾತು ಮುಂದುವರೆಸಿದ ಸಯ್ಯದುನಾ ಮುಹಮ್ಮದ್ ಮುಸ್ತಫಾ ﷺ ರವರು ಮಗೂ... ನಿನಗೆ ಈ ಯುದ್ಧದಲ್ಲಿ ಜಯಶಾಲಿಯಾಗಬೇಕೆಂಬ ಆಕಾಂಕ್ಷೆಯಿದ್ದರೆ ಹೇಳು. ನಿನ್ನ ಗೆಲುವಿಗಾಗಿ ನಾನು ಅಲ್ಲಾಹನೊಂದಿಗೆ ಪ್ರಾರ್ಥಿಸುತ್ತೇನೆ..!*

*ಆದರೆ ನೀನು ಈ ಯುದ್ಧದಲ್ಲಿ ಜಯಶಾಲಿಯಾಗುವುದಕ್ಕಿಂತ ಅಪಾರ ಪುಣ್ಯಗಳೊಂದಿಗೆ ನೀನು ಬಹು ಬೇಗನೆ ನನ್ನ ಬಳಿ ಬರಬೇಕೆಂಬುದು ನನ್ನ ಆಕಾಂಕ್ಷೆಯಾಗಿದೆ. ಹಾಗಾಗಿ ನಿನಗಾಗಿ ನಾನು ಸ್ವರ್ಗದ ಕವಾಡಗಳನ್ನು ತೆರೆದಿಟ್ಟು ನಿನ್ನ ದಾರಿ ಕಾಯುತ್ತಿರುತ್ತೇನೆ." ಎನ್ನುತ್ತಿದ್ದಂತೆ*

ತಟ್ಟನೆ ನಿದ್ರೆಯಿಂದ ಎಚ್ಚೆತ್ತ ಸಯ್ಯದುನಾ ಹುಸೈನ್ (ರ)ರಿಗೆ ತಾವು ಇಹಲೇೂಕಕ್ಕೆ ವಿದಾಯ ಹೇಳುವ ಸಮಯ ಸನ್ನಿಹಿತವಾಗಿದೆಯೆನ್ನುವುದು ಮನದಟ್ಟಾಗಿ ನಿಶ್ಚಿಂತೆಯಿಂದ ನಿರಾಳರಾದರು.

*ಮರುದಿನ ಮುಹರ್ರಮ್ ಹತ್ತರ ಶುಕ್ರವಾರ.*

ಬೆಳಿಗ್ಗೆ ಬಹು ಬೇಗನೆ ಎದ್ದ ಸಯ್ಯದುನಾ ಹುಸೈನ್ (ರ) ತುಂಬು ಲವಲವಿಕೆ ಮತ್ತು ಉತ್ಸಾಹದಿಂದ ಫಜ್'ರ್ ನಮಾಝ್ ನಿರ್ವಹಿಸಿ ರಣರಂಗಕ್ಕೆ ಹೊರಡಲು ಪಡೆಯಂಗಿ ಧರಿಸುತ್ತಿರುವಾಗ ಹುಸೈನ್ (ರ)ರವರ ಬಾಳ ಸಂಗಾತಿಯಾದ ಮಹದಿ ಸಯ್ಯಿದತುನಾ ಬೀವಿ ಶಹ್ರುಭಾನು (ರ) ಕೇಳಿದರು, ತಾವು ಯುದ್ಧಕ್ಕೆ ಹೇೂಗುತ್ತಿರುವಿರಾ?

*"ಹೌದು" ಎಂದರು ಹುಸೈನ್ (ರ)*

ಆಗ ಅಲ್ಲೇ ಇದ್ದ ಹುಸೈನ್ (ರ)ರವರ ಸಹೋದರಿ ಸಯ್ಯಿದತುನಾ ಝೈನಬಾ ಬೀವಿ (ರ) ಕೇಳಿದರು...

*ಅನ್ನ ನೀರಿಲ್ಲದೆ ಪರದಾಡುತ್ತಾ ಪರವೂರಿನಲ್ಲಿ ಬೀಡು ಬಿಟ್ಟು ಅಸಹಾಯಕರಾಗಿರುವ ನಮಗೆ ಏಕೈಕ ಆಸರೆಯಾಗಿರುವ ತಾವೂ ಹೇೂದರೆ ನಮಗಿನ್ಯಾರು ದಿಕ್ಕು?*

*"ಹಸ್ಬಿಯಲ್ಲಾಹ್"....*

_ಅಲ್ಲಾಹನಿದ್ದಾನೆ. ಎಲ್ಲಕ್ಕೂ ಅವನು ಸಾಕು ಎನ್ನುತ್ತಾ ಹೊರಗೆ ಬಂದರು._

ಆಗ ಕುದುರೆಯೊಂದರಲ್ಲಿ ಒಬ್ಬ ವ್ಯಕ್ತಿ ಧಾವಿಸಿ ಇತ್ತ ಕಡೆಗೇ ಬರುತ್ತಿರುವುದನ್ನು ಕಂಡ ಹುಸೈನ್ (ರ)ರವರು ಒರೆಯಿಂದ ಖಡ್ಗವನ್ನು ಎಳೆದು ಅಲ್ಲೇ ನಿಂತರು.

ಬಂದ ಆ ವ್ಯಕ್ತಿಯು *ಹುಸೈನ್ (ರ) ರವರು* ಕುಟುಂಬದೊಂದಿಗೆ ಸಂತೇೂಷ ಮತ್ತು ಸಮಾಧಾನದಿಂದ ಮಕ್ಕಾದಲ್ಲಿರುವಾಗ ಕೂಫ ನಿವಾಸಿಗಳ ನೆರವಿಗಾಗಿ ತಾವು ಬರದಿದ್ದರೆ ನಾಳೆ ಅಲ್ಲಾಹನ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ಸಾಕ್ಷ್ಯ ನುಡಿಯುವೆವು ಎಂದು  ಕೊನೆಯದಾಗಿ ಪತ್ರ ಬರೆದಿದ್ದ *ಹಝ್ರತ್ ಹುರ್ರ್ (ರ)* ಆಗಿದ್ದರು.

*ಹುರ್ರ್ (ರ)ರವರನ್ನು* ಕಂಡೊಡನೆ ಖಡ್ಗವನ್ನು ಒರೆಗೆ ಹಾಕಿದ *ಹುಸೈನ್  (ರ)* ಹೇಳಿದರು..

ಯಾ *ಹುರ್ರ್ (ರ)..* ಭೇಷ್... ಅತಿಥಿಗಳನ್ನು ಅತ್ಯುತ್ತಮ ರೀತಿಯಲ್ಲಿ ಸತ್ಕಾರಿಸಿ ಬರ ಮಾಡಿಕೊಂಡಿದ್ದೀರಿ.. ನಿಮ್ಮ ನೆರವಿಗಾಗಿ ಮಕ್ಕದಿಂದ ಹೊರಟು ಬಂದ ನಮ್ಮ ತಂಡದಲ್ಲಿ ಇನ್ನು ಕೆಲವು ಮಹಿಳೆಯರು ಮತ್ತು ಮಕ್ಕಳು ಮಾತ್ರ ಉಳಿದಿದ್ದಾರೆ. ಅಸಹಾಯಕರಾದ ಅವರನ್ನು ಕೊಂದು ಮುಗಿಸುವುದು ಇನ್ನು ನಿಮಗೆ ಕಷ್ಟವೇನಲ್ಲ. ಕಾರಣ ನಿಮಗೆ ಪ್ರತಿರೇೂಧವೊಡ್ಡಲು ನನ್ನ ಹೊರತು ಇನ್ಯಾರೂ ಜೀವದೊಂದಿಗಿಲ್ಲ ಎಂದರು ಭಾವುಕರಾಗಿ...

ಹುಸೈನ್ (ರ)ರವರು ಭಾವುಕರಾಗಿ ನುಡಿದ ಆ ಮಾತುಗಳನ್ನು ಕೇಳಿದ *ಹುರ್ರ್ (ರ)* ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 3⃣7⃣
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

( *ನಿನ್ನೆಯ ಸಂಚಿಕೆ ಭಾಗ 36 ಎಂದಿರಬೇಕಿದ್ದಲ್ಲಿ  ಭಾಗ 37 ಎಂದು ತಪ್ಪಾಗಿ ನಮೂದಾಗಿತ್ತು. ಕಣ್ತಪ್ಪಿನಿಂದಾದ ತಪ್ಪಿಗೆ ವಿಷಾದಿಸುತ್ತೇನೆ -ಲೇಖಕ*
〰〰〰〰〰〰〰〰〰

ಇದನ್ನು ಕಂಡು ಅವಾಕ್ಕಾದ ಹುಸೈನ್ (ರ) ರವರು.. ⬇

ಇದನ್ನು ಕಂಡು ಅವಾಕ್ಕಾದ *ಹುಸೈನ್ (ರ)ರವರು* ಅಸಹಾಯಕತೆಯಿಂದ ಮಗುವನ್ನು ತಮ್ಮೆದೆಗೊತ್ತಿ ಹಿಡಿದು *ಅಲಿ ಅಸ್ಗರ್(ರ) ರವರ* ದೇಹಕ್ಕೆ ಹೊಕ್ಕಿದ ಬಾಣವನ್ನು ಕಿತ್ತೆಸೆಯುತ್ತಾ...

*ಬೇಡ ನನಗಿನ್ನು ನಿಮ್ಮ ನೀರಿನ ಅವಶ್ಯಕತೆಯಿಲ್ಲ ಎನ್ನುತ್ತಾ ಮಗುವನ್ನೆತ್ತಿಕೊಂಡು ಡೇರೆಗೆ ಹಿಂದಿರುಗಿದರು.*

ತಮ್ಮ ಕರುಳಿನ ಕುಡಿ ನೀರು ಕುಡಿದು ತೃಪ್ತಿಯಿಂದಿರಬಹುದೆಂದು ಭಾವಿಸಿದ್ದ ಬೀವಿ ಸಯ್ಯಿದತುನಾ ಶಹ್ರು ಬಾನು (ರ) ಡೇರೆಯೊಳಗೆ ಬಂದ ಹುಸೈನ್ (ರ) ರವರ ಕೈಯ್ಯಲ್ಲಿರುವ ಅಲಿ ಅಸ್ಗರ್ (ರ)ರವರಿಗೆ ಹೊದಿಸಿದ್ದ ಆ ಬಿಳಿ ವಸ್ತ್ರ ರಕ್ತದಲ್ಲಿ ತೇೂಯ್ದಿರುವುದನ್ನು ಕಂಡು ಹೌಹಾರುತ್ತಾ ಧಾವಿಸಿ ಬಂದು ರಕ್ತದ ಮಡುವಿನಲ್ಲಿ ಮಲಗಿರುವ ತಮ್ಮ ಕರುಳಿನ ಕುಡಿಯನ್ನು ಕಂಡು ದಿಗ್ಭ್ರಾಂತರಾದರು. ಹೆತ್ತ ಕರುಳಿನ ಸಂಕಟ ವರ್ಣನೆಗೆ ನಿಲುಕೀತೇ? ಮಹದಿ ಶಹ್ರುಬಾನ್ (ರ)ರವರ ರೇೂದನ ಹೇಳತೀರದು.

ತಮ್ಮ ಮನಸ್ಸಿನ ನೇೂವು ಮತ್ತು ಸಂಕಟವನ್ನು ತಾಳಲಾರದ ಬೀವಿ ಸಯ್ಯಿದತುನಾ ಶಹ್ರು ಬಾನು (ರ) ಕೇಳಿದರು...

*ಪ್ರಿಯರೇ....*
*ನನ್ನ ಮಗುವನ್ನು ನಾನು ನಿಮ್ಮ ಕೈಗಿತ್ತಿದ್ದು ಕೊಲ್ಲಿಸಲೆಂದೇ?*

ತಮ್ಮ ಪ್ರಿಯತಮೆಯಿಂದ ಈ ಮಾತನ್ನು ನಿರೀಕ್ಷಿಸಿರದ ಹುಸೈನ್ (ರ) ಹೇಳಿದರು...

*ಪ್ರಿಯೇ..*
*ಏನು ಹೇಳುತ್ತಿರುವೆ ನೀನು? ಅಲಿ ಅಸ್ಗರ್ (ರ) ನಿನ್ನಂತೆಯೇ ನನಗೂ ಕರುಳ ಕುಡಿಯಲ್ಲವೇ? ಆ ದುಷ್ಟ ಬಾಣ ಹೂಡುವುದನ್ನು ನಾನೇನಾದರೂ ಕಂಡಿದ್ದರೆ ಆ ಬಾಣಕ್ಕೆ ನನ್ನ ಎದೆಯೊಡ್ಡಿಯಾದರೂ ನಮ್ಮ ಕಂದಮ್ಮನ ಜೀವವುಳಿಸಲು ನಾನು ಶ್ರಮಿಸುತ್ತಿದ್ದೆ. ಆದರೆ ಆ ದುಷ್ಟ ಹಾಲುಗಲ್ಲದ ಹಸುಳೆಯೆಂಬುದನ್ನೂ ಪರಿಗಣಿಸದೆ ನಮ್ಮ ಕರುಳಿನ ಕುಡಿಗೆ ಬಾಣ ಹೂಡಿ ಕೊಂದು ಬಿಟ್ಟ ನಾನೇನು ಮಾಡಲಿ ಎನ್ನುತ್ತಾ ದುಃಖ ಸಹಿಸಲಾರದೆ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಾಗ..*

 ಸಹನೆಯ ಸಹಧರ್ಮಿಣಿಯಾದ ಸಯ್ಯಿದತುನಾ ಬೀವಿ ಶಹ್ರುಬಾನು (ರ) ಹುಸೈನ್ (ರ)ರನ್ನು ಸಂತೈಸುತ್ತಾ,

ಪ್ರಿಯರೇ...
ಹೆತ್ತ ಕರುಳಲ್ಲವೇ ಸಂಕಟದಿಂದ ಹಾಗಂದೆ ದಯವಿಟ್ಟು ಕ್ಷಮಿಸಿ. ಅಲ್ಲಾಹನ ವಿಧಿಯಲ್ಲವೇ....? ಅಲ್ಲಾಹು ತೌಫೀಖ್ ನೀಡಿದರೆ ನಮ್ಮ ಮಕ್ಕಳನ್ನು ನಾವು ಸ್ವರ್ಗದಲ್ಲಿ ಭೇಟಿಯಾಗೇೂಣ ಇನ್ಷಾಅಲ್ಲಾಹ್....
 ಎನ್ನುತ್ತಾ ಪತಿಯನ್ನು ಸಮಾಧಾನಿಸಿದರು.

_(ಪ್ರಿಯ ಓದುಗರೇ... ಯುದ್ಧರಂಗದಲ್ಲಿ ತಮ್ಮ ಕರುಳಿನ ಕುಡಿಗಳು ತಮ್ಮ ಕಣ್ಮುಂದೆಯೇ ಕೊಲ್ಲಲ್ಪಡುತ್ತಿದ್ದರೂ ಅಲ್ಲಾಹನ ವಿಧಿಯೆಂದು ಬಗೆದು ಅವನ ಪರೀಕ್ಷೆಗೆ ವಿಧೇಯರಾಗಿ ಇಷ್ಟೊಂದು ಸಹನೆ ಮತ್ತು ತಾಳ್ಮೆ ವಹಿಸಿದ ಧೀರ ಮಹದಿ ಮತ್ತೊಬ್ಬರಿಲ್ಲವೆಂದು ಚರಿತ್ರಾಕಾರರು ವ್ಯಾಖ್ಯಾನಿಸಿದ್ದಾರೆ)_

ನಂತರ *ಹುಸೈನ್ (ರ)* ಖಡ್ಗದಿಂದ ಖಬರ್ ತೇೂಡಿ ಅಹ್ಲ್'ಬೈತಿನ ಎರಡು ಕರುಳಿನ ಕುಡಿಗಳಾದ ಅಲಿ ಅಕ್ಬರ್ (ರ) ಮತ್ತು ಅಲಿ ಅಸ್ಗರ್ (ರ)ರವರ ಜನಾಝಗಳ ಅಂತ್ಯಕ್ರಿಯೆ ನೆರೆವೇರಿಸುವಾಗ, ವರ್ಷಧಾರೆಯಂತೆ ಹರಿಯುವ ಕಂಬನಿಯೊಂದಿಗೆ ತಮ್ಮ ನಾಡಿಮಿಡಿತದ ಒಡನಾಡಿಗಳಂತಹ ಮುದ್ದು ಕಂದಮ್ಮಗಳ ಜನಾಝವನ್ನು ಎದೆಗೊತ್ತಿ ಹಿಡಿದು ಹೇಳಿದರು....

*"ನನ್ನಂತರಂಗದ ಒಡನಾಡಿಯೇ.., ನಿನ್ನ ದಾಹ ಶಮನಕ್ಕೆ ನನ್ನ ಕಣ್ಣೀರ ಹನಿಗಳೇ ಸಾಲುತ್ತಿತ್ತು. ಆದರೇನು ಮಾಡಲಿ? ಅಲ್ಲಾಹನ ವಿಧಿಯನ್ನು ತಡೆಯಲು ನಮ್ಮಿಂದ ಸಾಧ್ಯವೇ? ಆ ದುಷ್ಟ ಬಾಣ ಹೂಡಿದ್ದನ್ನು ನಾನೇನಾದರೂ ಕಂಡಿದ್ದರೆ ಆ ಬಾಣಕ್ಕೆ ನನ್ನ ಎದೆಯೊಡ್ಡಿಯಾದರೂ ನಿನ್ನನ್ನು ಉಳಿಸಲು ನಾನು ಶ್ರಮಿಸುತ್ತಿದ್ದೆ. ಅಸಹಾಯಕನಾದ ನನ್ನಿಂದ ನಿಮ್ಮನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿಮ್ಮ ತಾಯಿ ಹೇಳಿದಂತೆ ಇನ್ಷಾ ಅಲ್ಲಾಹ್ ನಾಳೆ ಸ್ವರ್ಗದಲ್ಲಿ ಭೇಟಿಯಾಗೇೂಣ ಎನ್ನುತ್ತಾ...*

ಆ ಶುಹದಾಗಳ ಜನಾಝಗಳನ್ನು ಕರ್ಬಲಾದ ಮಣ್ಣಿನಲ್ಲಿ ದಫನ್ ಮಾಡಿ ಡೇರೆಗೆ ಮರಳಿದರು.

ಡೇರೆಯಲ್ಲಂತೂ ದಿವ್ಯ ಮೌನ ಆವರಿಸಿತ್ತು. ಯಾರ ಮುಖದಲ್ಲೂ ಕಳೆಯಿಲ್ಲ. ಕಾರಣ ಮಕ್ಕಾದಿಂದ ಹೊರಟು ಬಂದ ಈ ಯಾತ್ರಾ ತಂಡದ ಬಹುತೇಕ ಸದಸ್ಯರು ಶತ್ರುಗಳ ದಾಳಿಗೀಡಾಗಿ ಶಹೀದಾಗಿದ್ದರು.

ಮಗ್ರಿಬ್'ನ ಸಮಯ...

ಹುಸೈನ್ (ರ) ರವರ ಹಿರಿಯ ಮಗ ಝೈನುಲ್ ಆಬಿದೀನ್ (ರ) ರವರು  ಜ್ವರದಿಂದ ಬಳಲುತ್ತಾ ಡೇರೆಯ ಒಂದು ಮೂಲೆಯಲ್ಲಿ ಮಲಗಿದ್ದರು..... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 3⃣6⃣
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
☔☔☔☔☔☔☔☔☔

ಅಲಿ ಅಕ್ಬರ್ (ರ)ರವರ ಜನಾಝವನ್ನು ಮರೆಯಲ್ಲಿಟ್ಟ ಹುಸೈನ್ (ರ)ರವರು ಡೇರೆಯೊಳಗೆ ಕಾಲಿಟ್ಟರು ಆಗ.... ⬇

*ಹುಸೈನ್ (ರ) ರವರ ಒಂದೂವರೆ ವರ್ಷ ಪ್ರಾಯದ ಮಗುವಾದ ಅಲಿ ಅಸ್ಗರ್ (ರ) ಎಂಬ ಮಗು ದಾಹ ಸಹಿಸಲಾರದೆ ರೇೂದಿಸುತ್ತಿತ್ತು.*

ಪತಿಯನ್ನು ಕಂಡಾಗ, ಮಹದಿ *ಶಹ್ರು ಬಾನು (ರ)* ಅಳುತ್ತಾ ಹೇಳಿದರು...

ಪ್ರಿಯರೇ...
ತಮ್ಮ ಈ ಹಸುಗೂಸಿಗೆ ಅಲ್ಪವಾದರೂ ನೀರು ಸಿಗದಿದ್ದರೆ ಇದರ ಸ್ಥಿತಿ ಚಿಂತಾಜನಕವಾಗಬಹುದು. ಅನ್ನಾಹಾರಗಳಿಲ್ಲದ ಕಾರಣ ಎದೆಹಾಲು ಸಹ ಬತ್ತಿ ಹೇೂಗಿದೆ. ಆದ್ದರಿಂದ ಶತ್ರು, ಮಿತ್ರರ ವ್ಯತ್ಯಾಸವನ್ನರಿಯದ ನಿಷ್ಕಳಂಕವಾದ ಈ ಹಾಲುಗಲ್ಲದ ಹಸುಳೆಗೆ ಹೇಗಾದರೂ ಮಾಡಿ ಗುಟುಕು ನೀರು ಕೊಡಲು ಉಬೈದ್'ನೊಂದಿಗೆ ವಿನಂತಿಸಿರಿ..

ಸದ್ಯದ ಪರಿಸ್ಥಿತಿಯಲ್ಲಿ ಅವರನ್ನೆದುರಿಸಿ ನೀರು ತರಲು ಸಾಧ್ಯವಿಲ್ಲ. ಹಾಗಾಗಿ ಮಗುವಿನ ಜೀವವುಳಿಸುವ ಸಲುವಾಗಿ ಗುಟುಕು ನೀರು ಕೊಡಿ ಎಂದು ಅಂಗಾಲಾಚಿದರೆ ಈ ಮಗುವಿನ ಮುಖ ನೇೂಡಿಯಾದರೂ ನೀರು ಕೊಡದೆ ಇರಲಾರರು ಎಂದರು.

ಮಗುವಿನ ಜೀವವುಳಿಸುವ ಸಲುವಾಗಿ ಶತ್ರುವಿನ ಮುಂದೆ ಗುಟುಕು ನೀರಿಗಾಗಿ ಅಂಗಾಲಾಚಲು ಸಿದ್ಧರಾದ ಸಯ್ಯದುನಾ ಹುಸೈನ್ (ರ)ರವರು *ಸಯ್ಯದುನಾ ಅಲಿ ಅಸ್ಗರ್ (ರ)* ಎಂಬ ಆ ಹಾಲುಗಲ್ಲದ ಹಸುಳೆಯನ್ನೆತ್ತಿಕೊಂಡು ಬಿಸಿಲಿನ ಝಳ ತಾಗದಿರಲು ಬಿಳಿ ವಸ್ತ್ರವೊಂದನ್ನು ಮಗುವಿಗೆ ಹೊದಿಸಿ ಶತ್ರು ಸೈನಿಕರತ್ತ ಹೆಜ್ಜೆ ಹಾಕಿದರು...

*ಉಬೈದ್'* ಮತ್ತು *ಅಂರು ವಸಅದಿ* ನ ಸಮೀಪ ತೆರಳಿದ ಹುಸೈನ್ (ರ)ರವರು ಮಗುವನ್ನು ತೋರಿಸುತ್ತಾ ಹೇಳಿದರು..

*ಯಾ ಉಬೈದ್....*
ದುನಿಯಾವೆಂದರೇನೆಂದೇ ಅರಿಯದ ಇಂತಹ ಮುಗ್ಧ ಮಕ್ಕಳೂ ಸಹ ನಮ್ಮ ಜೊತೆಗಿದ್ದಾರೆ. ನಮ್ಮ ವಿಷಯ ಬಿಡಿ, ನಿಷ್ಕಳಂಕರಾದ  ಈ ಮುದ್ದು ಕಂದಮ್ಮಗಳಿಗೂ ಸಹ ನೀರು ಸಿಗದಂತೆ ನೀವು ತಡೆದಿದ್ದೀರಿ..
ಈ ಹಾಲುಗಲ್ಲದ ಹಸುಳೆಗಳಿಗಾದರೂ ಗುಟುಕು ನೀರು ಕೊಡಲಾರಿರಾ..? ಎಂದು ಅಂಗಾಲಾಚಿದರು.

( *_ಪ್ರಿಯ ಓದುಗರೇ..... ಸೃಷ್ಟಿಕರ್ತನಾದ ಅಲ್ಲಾಹನು ಈ ನದಿ-ವನ,  ಬೆಟ್ಟ-ಗುಡ್ಡ, ಗಿರಿ-ಶಿಖರ, ಸಾಗರ-ಸರೇೂವರ, ಸಸ್ಯಸಂಕುಲ ಮತ್ತು ಪ್ರಾಣಿ ಸಂಕುಲಗಳನ್ನೊಳಗೊಂಡ ಭೂಮಿ, ಆಕಾಶ, ಸ್ವರ್ಗ, ನರಕಗಳನ್ನು ತನ್ನ ಯಾವ ಸಂದೇಶ ವಾಹಕರ ಗೌರವಾರ್ಥ ಸೃಷ್ಟಿದನೇೂ ಆ ಸಂದೇಶ ವಾಹಕರ ಬರ್ಕತ್ತಿನಿಂದ ಸೃಷ್ಟಿಕರ್ತನಾದ ಅಲ್ಲಾಹನು ತನ್ನ ಔಧಾರ್ಯದಿಂದ ಧಾರೆಯೆರೆದ ಜೀವದೊಂದಿಗೆ ಬದುಕುತ್ತಿರುವವರು ಅಲ್ಲಾಹನ ಒಡೆತನದ ಜೀವನಾಧಾರವಾದ ನೀರನ್ನು ಅಲ್ಲಾಹನ ಆ ಹಬೀಬರ ﷺ ಮೊಮ್ಮೊಕ್ಕಳಿಗೇ ಸಿಗದಂತೆ ತಡೆ ಹಿಡಿದು ಗುಟುಕು ನೀರಿಗಾಗಿ ಅಂಗಾಲಾಚುವಂತೆ ಮಾಡಿದ್ದರೆಂದರೆ ಇದಕ್ಕಿಂತ ನೇೂವಿನ ಸಂಗತಿ ಇನ್ನೊಂದಿದೆಯೇ?_*)

ಹುಸೈನ್ (ರ)ರವರು ಮಗುವಿನ ಜೀವವುಳಿಸುವ ಸಲುವಾಗಿ ಗುಟುಕು ನೀರಿಗಾಗಿ ಅಂಗಾಲಾಚುತ್ತಿರುವುದನ್ನು ಕಂಡಾಗ ಅಂರ್ ಮತ್ತು ಉಬೈದ್ ಪರಸ್ಪರ ಮುಖ ನೋಡಿ ಕೊಂಡರು.

ನಂತರ *ಉಬೈದ್* ಹೇಳಿದನು..
ಈ ಮಗುವಿಗೆ ಅಗತ್ಯವಾದ ನೀರನ್ನು ನಾವು ಕೊಡಬಲ್ಲೆವು. ಆದರೆ ಉಳಿದ ನೀರನ್ನು ನೀವು ಕುಡಿಯಲಾರಿರಾ?

*ಹುಸೈನ್ (ರ)* ಹೇಳಿದರು..
ಇಲ್ಲ. ಖಂಡಿತಾ ಇಲ್ಲ. ಈ ಮಗುವಿಗೆ ಮಾತ್ರ ನೀರು ಸಿಕ್ಕಿದರೆ ಸಾಕು.

ಆ ಬಗ್ಗೆ ನಿಮಗೆ ಸಂಶಯವಿದ್ದರೆ ಈ ಮಗುವನ್ನು ನಾನಿಲ್ಲಿ ಮಲಗಿಸಿ ಸರಿದು ನಿಲ್ಲುತೇನೆ. ಮಗುವಿಗೆ ನೀವೇ ನೀರು ಕುಡಿಸಿರಿ ಎಂದರು.

*ಹಾಗೆ ಹುಸೈನ್ (ರ) ಮತ್ತು ಉಬೈದ್ ಮಾತನಾಡುತ್ತಿರುವಾಗ ಅಲಿ ಅಕ್ಬರ್ (ರ)ರವರ ಎದೆಯ ಮೇಲೆ ಹತ್ತಿ ನಿಂತು ಭರ್ಜಿಯಿಂದ ಗುದ್ದಿ ಬಿಲ್ಲು ಬಾಣ ಮತ್ತು ಈಟಿಯಿಂದ ತಿವಿದಿದ್ದ ಅದೇ ಕ್ರೂರಿಯಾದ "ಶಿಮ್ರ್" ಎಂಬಾತನು ಹುಸೈನ್ (ರ)ರವರ ಕೈಲಿದ್ದ ಹಾಲುಗಲ್ಲದ ಹಸುಳೆಯತ್ತ ಬಾಣ ಹೂಡಿಯೇ ಬಿಟ್ಟ..!!*

*ಆ ಬಾಣವು ನೇರವಾಗಿ ಅಲಿ ಅಸ್ಗರ್ (ರ) ರವರ ಗಂಟಲಿನೊಳಗೆ ಹೊಕ್ಕಿತು.* 🏹

*ದಾಹ ಸಹಿಸಲಾರದೆ ಒದ್ದಾಡುತ್ತಾ ಹುಸೈನ್ (ರ) ರವರ ಕೈಗಳಲ್ಲಿ ಮುದುಡಿ ಮಲಗಿದ್ದ ಸಯ್ಯದುನಾ ಅಲಿ ಅಸ್ಗರ್ (ರ) ಎಂಬ ಹಾಲುಗಲ್ಲದ ಹಸುಗೂಸು ನೋವಿನಿಂದ ಒಮ್ಮೆ ಚೀರಿ ಶಹೀದಾಗುವುದರೊಂದಿಗೆ ಶುಹದಾ ಎಂಬ ಅತ್ಯುನ್ನತ ಪದವಿಯೊಂದಿಗೆ ದಾಹ, ಹಸಿವು, ನೇೂವು ಮತ್ತು ಸಂಕಟಗಳಿಂದ ಮುಕ್ತವಾದ ಚಿರ ಶಾಶ್ವತವಾದ ಲೇೂಕಕ್ಕೆ ತೆರಳಿ ಚಿರ ವಿಶ್ರಾಂತಿ ಪಡೆಯಲಾರಂಭಿಸಿತು. ಇನ್ನಲಿಲ್ಲಾಹ್....* 😰

*(ಸಯ್ಯದುಶ್ಶುಹದಾಅ್ ಸಯ್ಯದುನಾ ಅಲಿ ಅಸ್ಗರ್ (ರ) ರವರ ಹಕ್ಕ್'ಜಾಹ್ ಬರ್ಕತ್'ನಿಂದ ಸರ್ವಶಕ್ತನಾದ ಅಲ್ಲಾಹನು ನಮ್ಮೆಲ್ಲರ ಮಕ್ಕಳಿಗೂ ಎಲ್ಲಾ ತರದ ಆಪತ್ತುಗಳಿಂದಲೂ ಸಂರಕ್ಷಣೆ ನೀಡಿ ಅನುಗ್ರಹಿಸುವುದರೊಂದಿಗೆ ಆಫಿಯತ್'ನೊಂದಿಗೆ ದೀರ್ಘಾಯಸ್ಸು ಕರುಣಿಸಿ ಅನುಗ್ರಹಿಸಲಿ ಆಮೀನ್)*

ಇದನ್ನು ಕಂಡು ಅವಾಕ್ಕಾದ ಹುಸೈನ್ (ರ) ರವರು.. ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 3⃣5⃣
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
☔☔☔☔☔☔☔☔☔
 
ದಾಹದಿಂದ ನರಳುತ್ತಾ ಗುಟುಕು ನೀರಿಗಾಗಿ ಅಂಗಾಲಾಚುತ್ತಿರುವ ಮಗ ಅಲಿ ಅಕ್ಬರ್ (ರ)ರನ್ನು ಸಂತೈಸುತ್ತಿರುವಾಗ ನೀರು ತೇೂರಿಸುತ್ತಾ ಕುಹಕವಾಡುತ್ತಾ ಅಪಹಾಸ್ಯ ಮಾಡಿದ ಶತ್ರು ಸೈನಿಕನನ್ನು ಕಂಡಾಗ ಹೃದಯವೇ ಒಡೆದು ಹೇೂದಂತಾದ ಸಯ್ಯದುನಾ ಹುಸೈನ್ (ರ)ರವರು.... ⬇

ತಮ್ಮೆರಡೂ ಪಾವನ ಕರಗಳನ್ನೆತ್ತಿ ಯಾ ಅಲ್ಲಾಹ್ ದಾಹದಿಂದ ಒಣಗಿ ನರಳುತ್ತಿರುವಾಗ ನೀರು ತೇೂರಿಸಿ ಅಪಹಾಸ್ಯ ಮಾಡುತ್ತಿರುವ ಈ ದುಷ್ಟನಿಗೆ ದಾಹವೆಂದರೇನೆಂಬುದನ್ನು ಮನವರಿಕೆ ಮಾಡಿಕೊಡು ನಾಥಾ... ಎಂದು ಕಂಬನಿ ಸುರಿಸುತ್ತಾ ಪ್ರಾರ್ಥಿಸಿದರು.

ಹುಸೈನ್ (ರ)ರವರ ಪ್ರಾರ್ಥನೆಯ ಫಲವಾಗಿ ಅಪಹಾಸ್ಯ ಮಾಡಿದ ಆ ಸೈನಿಕನಿಗೆ ಕೆಲ ದಿನಗಳಲ್ಲೇ ಸಹಿಸಲಾರದ ದಾಹದೊಂದಿಗೆ ಹೊಟ್ಟೆಯ ಒಳ ಭಾಗದಲ್ಲಿ ಸಿಕ್ಕಾಪಟ್ಟೆ ಬಿಸಿಯೂ, ಬೆನ್ನುಹುರಿಯಲ್ಲಿ ಸಹಿಸಲಾರದ ಛಳಿಯೂ ಆರಂಭವಾಯಿತು. ಆದ್ದರಿಂದ ಹೊಟ್ಟೆಯನ್ನು ತಂಪಾಗಿಸಲು ತಣ್ಣಗಿನ ವಸ್ತುವನ್ನೂ ಬೆನ್ನಿಗೆ ಬಿಸಿ ಶಾಖವನ್ನೂ ಕೊಡುತ್ತಾ, ಎಷ್ಟು ನೀರು ಕುಡಿದರೂ ದಾಹವಡಗದೆ ನೀರು ಕುಡಿಯುತ್ತಲೇ ಹೊಟ್ಟೆಯೊಡೆದು ಸತ್ತನೆನ್ನುತ್ತದೆ ಇತಿಹಾಸ.

*( _ಅಲ್ಲಾಹನ ದೀನಿನ ಸೇವೆಗಾಗಿ ಬದುಕನ್ನೇ ಮುಡಿಪಾಗಿಟ್ಟ ಮಹಾತ್ಮರನ್ನು ಅಥವಾ ಆಲೀಮರನ್ನು ಸಂಘಟನೆಯ ಹೆಸರಿನಲ್ಲಿ ಕುಹಕವಾಡುವುದು ಇಂದು ಕೆಲವರಿಗೆ ಹವ್ಯಾಸವಾಗಿಬಿಟ್ಟಿದೆ. ಅಂಥವರು ಕರ್ಬಲಾ ರಣರಂಗದಲ್ಲಿ ನಡೆದ ಮೇಲಿನ ಘಟನೆಯಿಂದಲಾದರೂ ಪಾಠ ಕಲಿತು ತಮ್ಮ ಸ್ವಭಾವವನ್ನು ತಿದ್ದಿಕೊಳ್ಳದಿದ್ದರೆ ಅಲ್ಲಾಹನಿಂದ ಗಂಭೀರ ಪರಿಣಾಮ ಎದುರಿಸಬೇಕಾದೀತೆನ್ನುವುದಕ್ಕೆ ಇದು ಜ್ವಲಂತ ನಿದರ್ಶನ)_*

ಇತ್ತ ದಾಹ ಸಹಿಸಲಾಗುತ್ತಿಲ್ಲ ಗುಟುಕು ನೀರು ಕೊಡಿ ಎಂದು ಅಂಗಾಲಾಚುತ್ತಿರುವ ಮಗ ಅಲಿ ಅಕ್ಬರ್ (ರ) ರವರ ನಾಲಿಗೆಗೆ ತಮ್ಮ ಬೆರಳಿನಲ್ಲಿದ್ದ ಉಂಗುರವನ್ನು ಇಟ್ಟು ಹುಸೈನ್ (ರ) ಪ್ರಾರ್ಥಿಸುತ್ತಿದ್ದಂತೆ ಅಲಿ ಅಕ್ಬರ್ (ರ)ರವರ ದಾಹ ಶಮನವಾದ ಕಾರಣ ಖಡ್ಗದೊಂದಿಗೆ ಕುದುರೆಯೇರಿ ಮತ್ತೆ ರಣರಂಗಕ್ಕೆ ಧುಮುಕಿ ವೀರಾವೇಶದಿಂದ ಹೇೂರಾಡಿ ಹಲವರನ್ನು ಸದೆ ಬಡಿದ ನಂತರ ನಿತ್ರಾಣರಾಗಿ ಕುಸಿದು ಕುದುರೆಯಿಂದ ಕೆಳ ಬಿದ್ದರು.

ಆಗ ಶತ್ರು ಪಡೆಯಿಂದ ಧಾವಿಸಿ ಬಂದ *ಶಿಮ್ರ್* ಎಂಬ ವ್ಯಕ್ತಿಯೊಬ್ಬ ಕುಸಿದು ಬಿದ್ದಿರುವ ಅಲಿ ಅಕ್ಬರ್ (ರ)ರವರ ಎದೆಯ ಮೇಲೆ ಹತ್ತಿ ನಿಂತು ಅವರ ಕಣ್ಣಿಗೆ ಬಾಣ ಬಿಟ್ಟು  ಈಟಿಯಿಂದ ಅಲಿ ಅಕ್ಬರ್ (ರ)ರವರ ಎದೆಗೆ ತಿವಿಯುತ್ತಾ ಕರುಳುಗಳನ್ನು ಹೊರಗೆಳೆಯಲಾರಂಭಿಸಿದನು.

ತಕ್ಷಣ ಶತ್ರು ಪಾಳೆಯದ ಸೈನಿಕನೊಬ್ಬ ಅತ್ತ ಧಾವಿಸಿ ಅವನನ್ನು ತಡೆಯಲೆತ್ನಿಸಿಸಿದಾಗ ತನ್ನ ಖಡ್ಗದಿಂದ ಆ ಸೈನಿಕನನ್ನೂ ಹತ್ಯೆಗೈದನು.

ಅಲಿ ಅಕ್ಬರ್ (ರ)ರವರು ಯುದ್ಧರಂಗಕ್ಕೆ ಹಿಂದಿರುಗಿದಾಗ ಡೇರೆಯೊಳಗೆ ಹೇೂಗಿದ್ದ ಹುಸೈನ್ (ರ) ತುಸು ಹೊತ್ತಿನ ನಂತರ ಡೇರೆಯಿಂದ ಹೊರ ಬಂದು ಯುದ್ಧ ರಂಗದತ್ತ ಕಣ್ಣಾಯಿಸಿದಾಗ...

ಶತ್ರು ಸೈನಿಕರು ಬಹಳ ದೂರದಲ್ಲಿದ್ದರು. ಆದರೆ ಯುದ್ಧ ನಡೆಯುತ್ತಿದ್ದ ಸ್ಥಳದಲ್ಲಿ ಯಾರನ್ನೂ ಕಾಣದಾದಾಗ....

"ಯಾ ಅಲ್ಲಾಹ್ ನನ್ನ ಮಗನನ್ನು ಕಾಣಿಸುತ್ತಿಲ್ಲವಲ್ಲ ಅವನಿಗೇನಾಯಿತು?" ಎಂದು ಮನದಲ್ಲೇ ಪ್ರಶ್ನಿಸುತ್ತಾ ಅತ್ತ ಹೋಗಿ ನೋಡಿದಾಗ...

*ಅಲಿ ಅಕ್ಬರ್ (ರ) ರವರ ದೇಹ ನಿಶ್ಚಲವಾಗಿ ಒಂದೆಡೆ ರುಂಡ ಮುಂಡಗಳನ್ನು ಕತ್ತರಿಸಿ ಬೇರ್ಪಡಿಸಿದ ಸ್ಥಿತಿಯಲ್ಲಿ ಅನಾಥವಾಗಿ ಬಿದ್ದಿತ್ತು.* 😰

{ _ಕರ್ಬಲಾ ರಣರಂಗದಲ್ಲಿ ಸಯ್ಯದುನಾ ಅಲಿ ಅಕ್ಬರ್ (ರ) ರವರ ಅಂಗಾಂಗಳನ್ನು ಶತ್ರುಗಳು ತುಂಡು ತುಂಡಾಗಿ ಕತ್ತರಿಸಿದ್ದನ್ನು, ಅಸದುಲ್ ಇಲಾಹ್  (ಅಲ್ಲಾಹನ ಸಿಂಹ) ವೆಂಬ ಗೌರವನಾಮಕ್ಕೆ ಪಾತ್ರರಾದ ಸಯ್ಯದುನಾ ಹಂಝತುಲ್ ಕರ್ರಾರ್ (ರ)ರವರ ದೇಹವನ್ನು ಶತ್ರುಗಳು ಉಹ್ದ್ ಯುದ್ಧದಲ್ಲಿ ತುಂಡರಿಸಿದ್ದಕ್ಕೆ ಸಮವೆಂದು ಇಸ್ಲಾಮಿಕ್ ಇತಿಹಾಸಕಾರರು ಹೇೂಲಿಸಿದ್ದಾರೆ_}

*ಇದನ್ನು ಕಂಡ ಹುಸೈನ್ (ರ) ರವರ ಹೃದಯವೇ ಒಡೆದಂತಾಗಿ "ಯಾ ಅಲಿ ಅಕ್ಬರ್ ನೀನೂ ಹೊರಟು ಹೇೂದೆಯಾ...?" ಎನ್ನುತ್ತಾ ಬಿಕ್ಕಿ ಬಿಕ್ಕಿ ಅಳುತ್ತಾ ಸಯ್ಯದುನಾ ಅಲಿ ಅಕ್ಬರ್ (ರ)ರವರ ಜನಾಝವನ್ನು ಬಟ್ಟೆಯೊಂದರಲ್ಲಿ ಹಾಕಿಕೊಂಡು ಡೇರೆಯ ಹತ್ತಿರಕ್ಕೆ ತಂದರಾದರೂ ಪತ್ನಿ ಶಹ್ರುಬಾನ್ (ರ)ರಿಗೆ ಕಾಣದಂತೆ ಡೇರೆಯ ಮರೆಯಲ್ಲಿಟ್ಟರು.*

ಕಾರಣ ತುಸು ಮುಂಚೆ ತಮ್ಮಿಂದ ಅಪ್ಪಣೆ ಪಡೆದು ಪಡೆಯಂಗಿ ಧರಿಸಿ ಉತ್ಸಾಹದಿಂದ ಹೇೂದ ಮಗ ಕೈಕಾಲು ತಲೆ ಮಾತ್ರವಲ್ಲ ಹೊಟ್ಟೆಯೊಳಗಿನ ಕರುಳುಗಳೆಲ್ಲ ಬೇರ್ಪಟ್ಟ ಸ್ಥಿತಿಯಲ್ಲಿ ಮಲಗಿರುವುದನ್ನು ಕಂಡರೆ ಹೆತ್ತ ಕರುಳಿಗೆ ಸಹಿಸಲಾದೀತೇ? ಹೃದಯ ಒಡೆಯದಿರದೇ? ಹಾಗಾಗಿ ಅಲಿ ಅಕ್ಬರ್ (ರ)ರವರ ಜನಾಝವನ್ನು ಮರೆಯಲ್ಲಿಟ್ಟ ಹುಸೈನ್ (ರ)ರವರು ಡೇರೆಯೊಳಗೆ ಕಾಲಿಟ್ಟರು.

 ಆಗ.... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 3⃣4⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

ಹುಸೈನ್ (ರ) ಅಪ್ಪಣೆ ಕೊಡು ಎಂದಾಗ ಮಹದಿ ಸಯ್ಯಿದತುನಾ ಬೀವಿ ಶಹ್ರುಬಾನು (ರ) ಹೇಳಿದರು... ⬇

ಕಂದಾ...
ಅಲ್ಲಾಹನ ಕಲ್ಪನೆ ಏನಿದೆಯೇೂ ಅದನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಅಲ್ಲಾಹನ ರಸೂಲರೂ ನಮ್ಮ ಪಿತಾಮಹರೂ ಆದ *ಸಯ್ಯದುನಾ ಮುಹಮ್ಮದ್ ಮುಸ್ತಫಾ ﷺ* ರಿಗೆ ಮುಕರ್ರಬುಲ್ ಅಮ್ಲಾಕ್ ಮಲಕ್ ಜಿಬ್'ರೀಲ್ (ಅ)ರು ಹಸ್ತಾಂತರಿಸಿದ ಮಣ್ಣಿಗೆ ಸಮನಾದ ಮಣ್ಣು ಈ ಭೂಲೇೂಕದಲ್ಲಿ ಎಲ್ಲಿದೆಯೇೂ ಅಲ್ಲಿ ಅಹ್ಲ್'ಬೈತಿನ ಕುಡಿಗಳು ಹತರಾಗಲಿರುವರೆಂದು ಸೃಷ್ಟಿಕರ್ತನಾದ ಅಲ್ಲಾಹನಿಂದ ಬಂದ ವಹ್ಯ್ ಸಂದೇಶದ ಮೂಲಕ ತಿಳಿಸಿದ್ದಾರೆ. ಆ ಸ್ಥಳ ಇದೇ ಆಗಿರಬಹುದೆಂದು ನಿನ್ನ ತಂದೆಯವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಅಲ್ಲಾಹನ ತೀರ್ಮಾನವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಮಗೂ...

ಹಾಗಾಗಿ ಸೃಷ್ಟಿಗಳಾದ ನಾವು ಎಲ್ಲವನ್ನೂ ಸೃಷ್ಟಿಕರ್ತನಾದ ಅಲ್ಲಾಹನ ಔಧಾರ್ಯಕ್ಕೆ ಸಮರ್ಪಿಸೇೂಣ. ಇನ್ನು ಇಹಲೇೂಕದಲ್ಲಿ ನಾವು ಭೇಟಿಯಾಗಬಹುದೆಂಬ ನಿರೀಕ್ಷೆಯಿಲ್ಲ. ಒಂದು ವೇಳೆ ಈ ಲೇೂಕದಲ್ಲಿ ಭೇಟಿಯಾಗಲು ನಮಗೆ ಸಾಧ್ಯವಾಗದಿದ್ದರೆ ನಾಳೆ ಸ್ವರ್ಗದಲ್ಲಿ ಭೇಟಿಯಾಗೇೂಣ ಇನ್ಷಾಅಲ್ಲಾಹ್...

ಎನ್ನುತ್ತಾ ಕಂಬನಿ ತುಳುಕುವ ಕಂಗಳೊಂದಿಗೆ ಆಶೀರ್ವದಿಸುತ್ತಾ ತಮ್ಮ ಮುದ್ದು ಕಂದಮ್ಮನನ್ನು ಶಸ್ತ್ರಸಜ್ಜಿತ ಅಸಂಖ್ಯ ಶತ್ರು ಸೈನಿಕರಿಂದ ತುಂಬಿರುವ ರಣರಂಗಕ್ಕೆ ಬೀಳ್ಕೊಟ್ಟರು.

ತಾಯಿಯ ಸಮ್ಮತಿ ಲಭಿಸಿದ ನಂತರ ತಂದೆಯಾದ ಹುಸೈನ್ (ರ)ರವರ ಸಮ್ಮತಿಯನ್ನೂ ಪಡೆದು ಪಡೆಯಂಗಿ ಧರಿಸಿ ಪಿತಾಮಹರಾದ ಸಯ್ಯದುನಾ ಅಲಿ (ರ) ರವರ 'ದುಲ್'ಫುಖಾರ್' ಎಂಬ ಖಡ್ಗವನ್ನು ಹಿಡಿದು  'ದುಲ್'ದುಲ್' ಎಂಬ ಕುದುರೆಯನ್ನೇರಿ ಶತ್ರು ಸೈನಿಕರತ್ತ ಧಾವಿಸಿ,

*"ಎಲೈ ದುರಹಂಕಾರಿ ಯಝೀದನ ಕಿಂಕರರೇ....*

*ನಿಮಗೆ ನನ್ನ ಪರಿಚಯವಿರದು. ಅಲ್ಲಾಹನ ಶತ್ರುಗಳ ಸಿಂಹಸ್ವಪ್ನವಾಗಿದ್ದ ಅಲಿ ಹೈದರ್ (ರ)ರವರ ಪೌತ್ರನಾದ ಅಲಿ ಅಕ್ಬರ್ ಇಬ್ನು ಹುಸೈನ್ (ರ) ನಾನು. ನನ್ನ ಕೈಯ್ಯಲ್ಲಿರುವುದು ನನ್ನ ಪಿತಾಮಹರು ಅಸಂಖ್ಯ ಶತ್ರುಗಳನ್ನು ಪರಲೇೂಕಕ್ಕೆ ಅಟ್ಟಿದ 'ದುಲ್'ಫುಖಾರ್' ಖಡ್ಗವಾಗಿದ್ದು, ಕುದುರೆಯೂ ನನ್ನ ಪಿತಾಮಹರದೇ ಆಗಿದೆ. ಆದ್ದರಿಂದ ಈ ಖಡ್ಗದ ರುಚಿ ನೇೂಡಬೇಕೆನಿಸಿದವರು ಮುಂದೆ ಬನ್ನಿ* ಎಂದು ಸಿಂಹದ ಮರಿಯಂತೆ ಘರ್ಜಿಸಿದರು.

ಯುದ್ಧ ರಂಗದಲ್ಲಿ ಪಳಗಿರುವ ಸೈನಿಕರಾದ ತಮಗೆ ಹದಿನೆಂಟರ ಹರೆಯದ ಈ ಯುವಕ ಯಾವ ಲೆಕ್ಕ ಎಂಬ ಭಾವದಿಂದ ಮುನ್ನುಗ್ಗಿ ಬರುತ್ತಿದ್ದ ಒಬ್ಬೊಬ್ಬ ಸೈನಿಕನನ್ನೂ ಅಲಿ ಹೈದರ್ (ರ) ರವರ ಕೈಯ್ಯಲ್ಲಿ ಪಳಗಿದ್ದ ತಂತ್ರಶಾಲಿಯಾದ ದುಲ್'ದುಲ್ ಎಂಬ ಆ ಕುದುರೆಯ ನೆರವಿನಿಂದ ಕೊಚ್ಚಿ ಕೊಚ್ಚಿ ಹಾಕಿದರು. ಈ ಘನಘೇೂರ ಕದನದಲ್ಲಿ ಹಲವು ಶತ್ರು ಸೈನಿಕರು ಗಾಯಾಳುಗಳಾದರೆ ಮತ್ತೆ ಹಲವರು ಪರಲೇೂಕ ಸೇರಿದರು.

ಕೊನೆಗೆ ಕೆಲ ಸೈನಿಕರ ಖಡ್ಗದೇಟು ಅಲಿ ಅಕ್ಬರ್ (ರ)ರಿಗೂ ತಾಗಿ ಗಾಯಾಳುವಾದರೂ ಛಲ ಬಿಡದೆ ಯುದ್ಧ ಮುಂದುವರಿಸಿದ್ದರು. ಕೊನೆಗೆ ದಾಹ ಸಹಿಸಲಾರದೆ ಡೇರಿಯತ್ತ ದಿಟ್ಟಿಸಿದರು. ಅಲ್ಲಿ ಹುಸೈನ್ (ರ) ಪ್ರಾರ್ಥಿಸುತ್ತಾ ಯುದ್ಧರಂಗವನ್ನು ವೀಕ್ಷಿಸುತ್ತಿದ್ದರು. ತಕ್ಷಣ ಕುದುರೆಯನ್ನು ಡೇರೆಯತ್ತ ತಿರುಗಿಸಿ ಹುಸೈನ್ (ರ)ರವರ ಬಳಿ ಬಂದ ಸಯ್ಯದುನಾ ಅಲಿ ಅಕ್ಬರ್ (ರ) ತಮ್ಮ ತಂದೆಯೊಂದಿಗೆ ಹೇಳಿದರು...

*ಅಪ್ಪಾ....*
*ನನಗೆ ದಾಹ ಸಹಿಸಲಾಗುತ್ತಿಲ್ಲ ದಾಹವಡಗಿಸಲು ತುಸು ನೀರು ಕೊಡುವಿರಾ?*

ಮೊದಲೇ ಅಸಹಾಯರಾಗಿದ್ದ ಆ ಮಹಾನರು ತಮ್ಮ ಕರುಳಿನ ಕುಡಿಯ ಈ ಕೇೂರಿಕೆಗೆ ಏನು ಹೇಳಲು ಸಾಧ್ಯ? ಅಸಹಾಯಕತೆಯಿಂದ ಬಿಕ್ಕಿ ಬಿಕ್ಕಿ ಅಳುತ್ತಾ ಕಂದಾ... ನಮ್ಮ ಅವಸ್ಥೆ  ನಿನಗೆ ತಿಳಿಯದೇ? ಹಾಲುಗಲ್ಲದ ಹಸುಳೆಗಳು ದಾಹದಿಂದ ನರಳುತ್ತಿರುವುದನ್ನು ಕಂಡು ಕಂಬನಿ ಸುರಿಸುವುದಲ್ಲದೆ ನನ್ನಿಂದ ಮತ್ತೇನೂ ಮಾಡಲು ಸಾಧ್ಯವಾಗುತ್ತಿಲ್ಲ ಮಗೂ ಎಂದರು.

ಅದೇ ಸಮಯದಲ್ಲಿ ಶತ್ರು ಸೈನಿಕನೊಬ್ಬ ನದಿಗಿಳಿದು ನೀರಿನಲ್ಲಿ ಆಟವಾಡುತ್ತಾ ಹುಸೈನ್ (ರ)ರನ್ನುದ್ದೇಶಿಸಿ,
 
ಯಾ ಹುಸೈನ್ (ರ) ರವರೇ...
ನಿಮ್ಮ ಹಾಗೂ ನಿಮ್ಮ ಮಗನ ಜೀವವುಳಿಯಬೇಕಾದರೆ ಈ ನೀರು ಅನಿವಾರ್ಯವಾಗಿದೆ ಅಲ್ಲವೇ? ಆದರೆ ನನಗಿದರ ಅವಶ್ಯಕತೆಯಿಲ್ಲ. ಎನ್ನುತ್ತಾ ತನ್ನೆರಡು ಕೈಗಳಿಂದಲೂ ನೀರನ್ನು ಹುಸೈನ್ (ರ)ರತ್ತ ತಟ್ಟಿ ಚಿಮ್ಮಿಸಿ ಅಪಹಾಸ್ಯ ಮಾಡುತ್ತಾ ಕೂಗಿ ಹೇಳಿದನು...

ದಾಹದಿಂದ ನರಳುತ್ತಾ ಗುಟುಕು ನೀರಿಗಾಗಿ ಅಂಗಾಲಾಚುತ್ತಿರುವ ಮಗ ಅಲಿ ಅಕ್ಬರ್ (ರ)ರನ್ನು ಎದೆಗೊತ್ತಿ ಹಿಡಿದು ನೀರು ಚಿಮ್ಮುತ್ತಾ ಅಪಹಾಸ್ಯ ಮಾಡಿ ಕುಹಕವಾಡುತ್ತಿರುವ ಶತ್ರು ಸೈನಿಕನನ್ನು ಕಂಡಾಗ ಹೃದಯವೇ ಒಡೆದು ಹೇೂದಂತಾದ ಸಯ್ಯದುನಾ ಹುಸೈನ್ (ರ)ರವರು.... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
#ಜಸ್ಟೀಸ್ ಫಾರ್ ಆಸಿಫಾ ಬಾನು#

*ಮರ್ಕಝ್ ಲಾ (LAW) ಕಾಲೇಜು ಕಾನೂನು ನೆರವು ನೀಡಲಿದೆ*

ಕ್ಯಾಲಿಕಟ್: ಜಮ್ಮು ಕಥುವಾ ಪ್ರದೇಶದ ಎಂಟರ ಹರೆಯದ ಆಸಿಫಾ ಬಾನು ಎಂಬ ಬಾಲೆಯನ್ನು ಸರಣಿ ಅತ್ಯಾಚಾರಗೈದು ಹತ್ಯೆಗೈದ ಕೇಸಿನಲ್ಲಿ ಸಂತ್ರಸ್ತೆಯ ಕುಟುಂಬದವರಿಗೆ ನ್ಯಾಯ ಒದಗಿಸುವಂತೆಯೂ, ಆರೋಪಿಗಳಿಗೆ ಕಠಿಣ ಶಿಕ್ಷೆ ಲಭ್ಯವಾಗಿಸುವ ನಿಟ್ಟಿನಲ್ಲಿ ಅಗತ್ಯವಾದ ಕಾನೂನು ನೆರವು ನೀಡಲು ಮರ್ಕಝ್ ಲಾ ಕಾಲೇಜು ಡೈರಕ್ಟರೇಟ್ ತೀರ್ಮಾನಿಸಿದೆ.
ಸಂಸ್ಥೆಯಲ್ಲಿ ಕಾರ್ಯಚರಿಸುವ ಲೀಗಲ್ ಎಯ್ಡ್ ಕ್ಲಿನಿಕ್ಕ್ ಮುಖಾಂತರವಾಗಿದೆ ಕಾನೂನು ನೆರವು ನೀಡುವುದು.

ದೇಶ ಕಂಡ ಅತ್ಯಂತ ಭೀಕರವಾದ ಕ್ರತ್ಯದ ಹಿಂದಿರುವ ಆರೋಪಿಗಳು ರಾಜಕೀಯವಾಗಿಯೂ ಆರ್ಥಿಕವಾಗಿಯೂ ಪ್ರಭಾವಿಗಳಾಗಿದ್ದಾರೆ.
ಸಂತ್ರಸ್ತೆಯ ಪರವಾಗಿ ಕಾನೂನು ಹೋರಾಟ ಮಾಡಿದ ವಕೀಲರಾದ ದೀಪಿಕಾ ರಜಾವತ್ ಈಗಾಗಲೇ ಅನೇಕ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ.
ಜಮ್ಮುವಿನ ಒಂದು ಸಂಘ ವಕೀಲರು ತೀವ್ರವಾಗಿ ಒತ್ತಡ ಹೇರಿದ್ದುದರ ಹೊರತಾಗಿಯೂ ಆಸಿಫಾ ಕೇಸನ್ನು ನ್ಯಾಯಲಯದ ಮುಂದೆ ಹಾಜರು ಪಡಿಸಿದ ದೀಪಿಕಾ ರಜಾವತರಿಗೆ ಡೈರಕ್ಟರೇಟ್ ಆಭಿನಂದನೆ ಸಲ್ಲಿಸಿದೆ.

ಮರ್ಕಝ್ ಅಧೀನದಲ್ಲಿ ಕಾಶ್ಮೀರದಲ್ಲಿ ಕಾರ್ಯಚರಿಸುತ್ತಿರುವ ಸಂಸ್ಥೆಗಳ ಮೇಧಾವಿ ಶೌಖತ್
ನ‌ಈಮಿಯವರ ನೇತೃತ್ವದಲ್ಲಿ
ಬೆದರಿಕೆಗೆ ಹೆದರಿ ಪಲಾಯನಗೈದ ಆಸಿಫಾಳ ಕುಟುಂಬವನ್ನು ಪತ್ತೆ ಹಚ್ಚಿ ಸಾಂತ್ವನ ಹೇಳಿ ಸಹಾಯಧನ ನೀಡಿ ಧೈರ್ಯ ತುಂಬಲಾಗಿತ್ತು.

ಆಸಿಫಾಳ ಕುಟುಂಬ ಸಹಿತ ಬಖರ್ ವಾಲ್ ವಿಭಾಗಕ್ಕೆ ವಿದ್ಯಾಭ್ಯಾಸ ನೀಡಿ ಸಬಲೀಕರಿಸುವ ಪಧ್ಧತಿಗಳನ್ನು ಕಾಶ್ಮೀರದಲ್ಲಿ ಮರ್ಕಝ್ ಆಯೋಜಿಸುತ್ತಿದೆ.

ಬಖರ್ ವಾಲ್ ವಿಭಾಗಕ್ಕೆ ನಿರ್ಭಯವಾಗಿ ಬದುಕುವ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಮರ್ಕಝ್ ಮೇಧಾವಿ ಕಾಂತಪುರಂ ಎ.ಪಿ.  ಅಬೂಬಕರ್ ಮುಸ್ಲಿಯಾರ್ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ತುರ್ತು ಸಂದೇಶಗಳನ್ನು ನಿನ್ನೆ ರವಾನಿಸಿದ್ದರು.

ಕಾನೂನು ನೆರವು ನೀಡುವ ಕಾರ್ಯಚರಣೆಗಳನ್ನು
ಜಮ್ಮುವಿನ ಪೂಂಚ್'ನಲ್ಲಿ ಕಾರ್ಯಚರಿಸುವ ಮರ್ಕಝ್'ನ ಯಾಸೀನ್ ಇನ್ಸಿಸ್ಟಿಟ್ಯೂಟ್ ಕೇಂದ್ರವಾಗಿಸಿ ಏಕೀಕರಿಸಲಾಗುವುದು.

ಸದರಿ ಕೇಸನ್ನು ಸಾರ್ವಜನಿಕರ ಗಮನಕ್ಕೆ ತರಲು ಪ್ರಯತ್ನಿಸಿದ ಅಡ್ವೊಕೇಟ್ ದೀಪಿಕಾ ರಜಾವತ್ ಸಹಿತ ಕಾನೂನು ತಜ್ಞರ ಸಲಹೆ ನಿರ್ದೇಶಗಳನ್ನು ಪಾಲಿಸಿ ಕಾರ್ಯಚರಿಸಲಾಗುವುದು.

ಮುಂದಿನ ಅಧ್ಯಯನ ವರ್ಷದಿಂದ ಕಾಶ್ಮೀರದಿಂದ ಆಯ್ದ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೊಂದಿಗೆ ಮರ್ಕಝ್ ಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಸೌಕರ್ಯಗಳನ್ನು ಏರ್ಪಡಿಸಲಾಗುವುದೆಂದು ಮರ್ಕಝ್ ಲಾ ಕಾಲೇಜು ಡೈರಕ್ಟರೇಟ್ ತೀರ್ಮಾನಿಸಿದೆ.

ಮರ್ಕಝ್ ಲಾ ಕಾಲೇಜು ನಿರ್ದೇಶಕ ಡಾ ಎ. ಪಿ. ಅಬ್ದುಲ್ ಹಕೀಮ್ ಅಝ್ಹರಿಯವರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ಎಕ್ಸೀಕ್ಯೂಟಿವ್ ಡೈರಕ್ಟರ್ ಅಮೀರ್ ಹಸನ್, ಸಹ ನಿರ್ದೇಶಕ ಅಡ್ವಕಟ್ ಸಮದ್ ಪುಲಿಕ್ಕಾಡ್ ಮುಂತಾದವರು ಉಪಸ್ಥಿತರಿದ್ದರು.

ಕನ್ನಡಕ್ಕೆ
ಅಬೂಶಝ