Tuesday, May 5, 2020

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 10

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --10


📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  9:*_

*ನಿಮ್ಮ ಮನೆಯಲ್ಲಿ ಅಲ್ ಬಖರ ಸೂರತ್ ಪಾರಾಯಣ ಮಾಡಿರಿ*

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ.
عَنْ أَبِي هُرَيْرَةَ أَنَّ رَسُولَ اللَّهِ صَلَّى اللَّهم عَلَيْهِ وَسَلَّمَ قَالَ لَا تَجْعَلُوا بُيُوتَكُمْ مَقَابِرَ إِنَّ الشَّيْطَانَ يَنْفِرُ مِنَ الْبَيْتِ الَّذِي تُقْرَأُ فِيهِ سُورَةُ الْبَقَرَةِ
(صحيح مسلم)
ನೀವು ಮನೆಗಳನ್ನು ಖಬರ್ ಮಾಡದಿರಿ.(ಖಬರಿನ ಒಳಗೆ ಖುರ್'ಆನ್ ಓದಲ್ಪಡಲಾಗುವುದಿಲ್ಲ.ಆ ರೀತಿ ನೀವು ಮನೆಗಳನ್ನು ಮಾಡದಿರಿ)
ಅಲ್ ಬಖರ ಸೂರತ್ ಪಾರಾಯಣ ಮಾಡುವ ಮನೆಯಿಂದ ಶೈತಾನ್ ಓಡುವನು.
(ಸ್ವಹೀಹ್ ಮುಸ್ಲಿಂ)
---------------------------------------------------------
ಅಲ್ ಬಕರ ಸೂರತ್ ನ ಕೊನೆಯ 2 ಆಯತ್ ಗಳು ಅತೀ ಮಹತ್ವವಿರುವ ಆಯತ್ ಗಳಾಗಿವೆ. ಅದರ ಪಾರಯಣ ನಾವು ರೂಡಿ ಮಾಡಬೇಕು.

ಇಮಾಮ್ ತುರ್ಮುದ್ಸಿಯ ವರದಿ ನೋಡಿ,
عَنْ النُّعْمَانِ بْنِ بَشِيرٍ، عَنِ النَّبِيِّ صَلَّى اللَّهُ عَلَيْهِ وَسَلَّمَ قَالَ : ( إِنَّ اللَّهَ كَتَبَ كِتَابًا قَبْلَ أَنْ يَخْلُقَ السَّمَوَاتِ وَالْأَرْضَ بِأَلْفَيْ عَامٍ ، أَنْزَلَ مِنْهُ آيَتَيْنِ خَتَمَ بِهِمَا سُورَةَ الْبَقَرَةِ ، وَلَا يُقْرَآنِ فِي دَارٍ ثَلَاثَ لَيَالٍ فَيَقْرَبُهَا شَيْطَانٌ (ترمذي)

ಆಕಾಶ ಭೂಮಿಗಳನ್ನು ಸೃಷ್ಠಿಸುವುದಕ್ಕಿಂತ 2000 ವರ್ಷಗಳ ಮುಂಚೆ ಬರೆಯಲ್ಪಟ್ಟ ಒಂದು ಗ್ರಂಥದಿಂದ 2 ಆಯತ್ ಗಳನ್ನು ಅಲ್ಲಾಹನು ಭೂಮಿಗೆ ಇಳಿಸಿಕೊಟ್ಟನು.ಅಲ್ ಬಕರ ಸೂರತ್'ನ ಮುಕ್ತಾಯ ಆ ಆಯತ್'ನೊಂದಿಗಾಗಿದೆ.
3 ರಾತ್ರಿಗಳಲ್ಲಿ ಆ ಆಯತ್ ಗಳನ್ನು ಪಾರಾಯಣ ಮಾಡಿದ್ದಲ್ಲಿ ಶೈತಾನ್ ಆ ಮನೆಗೆ ಪ್ರವೇಶಿಸಲಾರ
(ವರದಿ :ತುರ್ಮುದ್ಸೀ)




ಎಲ್ಲರಿಗೂ ಶೇರ್ ಮಾಡಿ

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)

ಮುಂದುವರಿಯುವುದು........

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 09

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --9


📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  8:*_
*ಕಾರ್ಮಿಕನ ವೇತನ ಸರಿಯಾಗಿ ನೀಡಿ*

ಒಂದು ಮನೆ ಕಟ್ಟುವಾಗ ಮಣ್ಣಿನ ಕೆಲಸದಿಂದ ಹಿಡಿದು ಮರಕೆಲಸ ತನಕ ಎಲ್ಲವೂ ನಡೆಯುತ್ತದೆ.
ಮನೆಯ ಅಡಿಪಾಯಕ್ಕೆ ಮಣ್ಣು ಅಗೆಯುವವರು,ಕಲ್ಲು ಕಟ್ಟುವವರು,ಕಲ್ಲು ಕೋರೆಯಿಂದ ತಲುಪಿಸುವವರು,ಹೊಯ್ಗೆ,ಮರ,ಎಲೆಕ್ಟಿಷಿಯನ್ ಅದೇ ರೀತಿ ಕೊಳಾಯಿಗಾರ ಸಹಿತ ನೂರಾರು ಕಾರ್ಮಿಕರ ಅಗತ್ಯ ಬರುತ್ತದೆ.
ಮನೆಕೆಲಸಕ್ಕೆ ಕರೆಸಿದ ಕಾರ್ಮಿಕರಿಗೆ ಅನ್ನ ಪಾನೀಯಗಳ ಜತೆಗೆ ಅವರ ವೇತನವನ್ನು ಕೂಡಾ ಸರಿಯಾದ ಸಮಯಕ್ಕೆ ಕೊಡಲೇಬೇಕು.

ಕಟ್ಟಿದ ಮನೆಯಲ್ಲಿ ನೆಮ್ಮದಿ ಇಲ್ಲ ಎಂದಾದಲ್ಲಿ ಯಾವುದೋ ಕಾರ್ಮಿಕನಿಗೆ ಕೊಡಬೇಕಾದ ಸಂಬಳ ಬಾಕಿ ಇದೆ ಎಂದು ತಿಳಿಯಬೇಕಾಗಿದೆ.

ಕೆಲವರು ಮನೆಕಟ್ಟಿಸಿ ಬಹಳ ವಿಜ್ರಂಭಣೆಯಿಂದ ಗ್ರಹ ಪವೇಶ ನಡೆಸುತ್ತಾರೆ.
ಮನೆ ಸಂಪೂರ್ಣ ಲೈಟಿಂಗ್ಸ್ ನಿಂದ ಅಲಂಕರಿಸುತ್ತಾರೆ.
ಆದರೆ ಬಡವನಾದ ಕಾರ್ಮಿಕನಿಗೆ ಕೊಡಬೇಕಾದ ವೇತನ ಕೇಳುವಾಗ ಬೆಧರಿಕೆ ಮತ್ತು ಸತಾಯಿಸುವಿಕೆ ಮಾಡುವುದಾದಲ್ಲಿ ಯಾವ ನೆಮ್ಮದಿ ಆ ಮನೆಯಲ್ಲಿ ನಿರೀಕ್ಷಸಬೇಕು?

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಒಂದು ಹದೀಸ್ ನೋಡಿ,
عن عبد الله بن عمر ـ رضي الله عنهما  قال: قال رسول الله  صلى الله عليه وسلم : أعطوا الأجير أجره قبل أن يجف عرقه (ابن ماجه)
ಕಾರ್ಮಿಕನ ಬೆವರು ಒಣಗುವ ಮುಂಚೆ ಆತನ  ವೇತನವನ್ನು ನೀಡಿರಿ
(ವರದಿ :ಇಬ್ನ್ ಮಾಜ)
------------------------------------------------------------
ಇನ್ನೊಂದು ಹದೀಸ್ ನೋಡಿ
عن أبي هريرة ـ رضي الله عنه ـ عن النبي ـ صلى الله عليه وسلم ـ قال: قال الله تعالى: ثلاثة أنا خصمهم يوم القيامة: رجل أعطى بي ثم غدر، ورجل باع حرا فأكل ثمنه، ورجل استأجر أجيرا فاستوفى منه ولم يعطه أجره 
(البخاري)
ಅಬೂಹುರೈರ(ರ) ರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಂದ ವರದಿ ಮಾಡುತ್ತಾರೆ,
ಅಲ್ಲಾಹನು ಹೇಳಿರುವನು,
ಅಂತ್ಯದಿನದಲ್ಲಿ 3 ವಿಭಾಗ ಜನರು ನನ್ನ ವಿರೋಧಿಯಾಗಿರುವರು.
1.ನನ್ನ ಹೆಸರಲ್ಲಿ ಆಣೆ ಹಾಕಿ ಹೇಳಿ ಅದಕ್ಕೆ ವಿರುದ್ಧವಾಗಿ ನಡೆದವರು.
2.ಸ್ವತಂತ್ರ ವ್ಯಕ್ತಿಯನ್ನು ಮಾರಾಟ ಮಾಡಿ ಆ ಹಣದಿಂದ ತಿಂದವನು.
3.ಕೂಲಿ ಕೆಲಸಕ್ಕಾಗಿ ಒಬ್ಬನನ್ನು ಕರೆಸಿ ಕೆಲಸ ಮಾಡಿಸಿ ಸಂಬಳ ಕೊಡದವನು.
(ಬುಖಾರಿ)
------------------------------------------------------------------
ಅರಿವಿಲ್ಲದೆ ಕಾರ್ಮಿಕರ ಸಂಬಳ ಕೊಡದೆ ಬಾಕಿಯಿಟ್ಟಿದ್ದಲ್ಲಿ ಅದನ್ನು ಅವರಿಗೆ ಕೊಡಲೇ ಬೇಕು.

ಇಮಾಮ್ ಬುಖಾರಿ ತನ್ನ ಸ್ವಹೀಹ್ ನಲ್ಲಿ ವರದಿ ಮಾಡಿದ ಒಂದು ಹದೀಸಿನಲ್ಲಿ 3 ಜನರು ಗುಹೆಯೊಳಗೆ ಬಂದಿಯಾದ ಒಂದು ಚರಿತ್ರೆಯಿದೆ.ಆ 3 ಜನರು ಅಲ್ಲಿಂದ ರಕ್ಷೆಹೊಂದಲು ಅವರು ತಮ್ಮ ಜೀವನದಲ್ಲಿ ಮಾಡಿದ ಸತ್ಕರ್ಮಗಳನ್ನು ಮುಂದಿಟ್ಟು ಅಲ್ಲಾಹನಲ್ಲಿ ತವಸ್ಸುಲ್ ಮಾಡಿ ಪ್ರಾರ್ಥಿಸಿದರು.
ಅದರೊಲ್ಲಬ್ಬರು ಪ್ರಾರ್ಥಿಸಿದ ಪ್ರಾರ್ಥನೆ ಹೀಗಿತ್ತು,
فقال:  اللهم استأجرت أجراء وأعطيتهم أجرهم غير رجل واحد ترك الذي له وذهب، فثمرت أجره حتى كثرت منه الأموال، فجاءني بعد حين، فقال: يا عبد الله، أد إليّ أجري، فقلت: كل ما ترى من أجرك من الإبل والبقر والغنم والرقيق، فقال: يا عبد الله، لا تستهزئ بي! فقلت: لا أستهزئ بك، فأخذه كله فاستاقه فلم يترك منه شيئا، اللهم إن كنت فعلت ذلك ابتغاء وجهك فافرج عنَّا ما نحن فيه، فانفرجت الصخرة فخرجوا يمشون .
( البخاري)
ಅಲ್ಲಾಹನೇ!
 ನನ್ನ ಮನೆಗೆ ಒಂದು ದಿವಸ ಹಲವಾರು ಕಾರ್ಮಿಕರನ್ನು ಕೆಲಸಕ್ಕೆ ಕರೆಸಿದೆ.ಎಲ್ಲರಿಗೂ ಅವರವರ ವೇತನ ನೀಡಿದೆ.ಒಬ್ಬರಿಗೆ ಮಾತ್ರ ನೀಡಿಲ್ಲ.ಅವರಿಗೆ ನೀಡಬೇಕಾದ ಆ ಹಣದಿಂದ ನಾನು ಆಡು,ಹಸು,ಒಂಟೆಗಳನ್ನು ಖರೀದಿಸಿದೆ.
ವರ್ಷಗಳ ಬಳಿಕ ಆ ವ್ಯಕ್ತಿ ನನ್ನ ಬಳಿ ಬಂದು ತನ್ನ ವೇತನವನ್ನು ಕೇಳಿದ.
ನಾನು ಆತನಿಗೆ ನೀಡಬೇಕಾದ ಹಣದಿಂದ ಖರೀದಿಸಿದ ಎಲ್ಲಾ ಮೃಗಗಳನ್ನು ತೋರಿಸಿ ಹೇಳಿದೆ.ಇದೆಲ್ಲವೂ ನಿನ್ನದ್ದಾಗಿದೆ.ಇದನ್ನು ಕೊಂಡು ಹೋಗು.
ಆಗ ಆತ ಕೇಳಿದ,ನನ್ನನ್ನು ಹಿಯಾಳಿಸುತ್ತೀಯಾ? ನಾನು ಹೇಳಿದೆ,
 ಖಂಡಿತಾ ಅಲ್ಲ.ಇದೆಲ್ಲವೂ ನಿನ್ನ ಹಣದಿಂದ ಖರೀದಿಸಿದ್ದಾಗಿದೆ.
ಇದು ಹೇಳಿದಾಗ ಆ ವ್ಯಕ್ತಿ ಬಹಳ ಸಂತೋಷದಿಂದ ಅದನ್ನೆಲ್ಲಾ ಕೊಂಡು ಹೋದ.
ಅಲ್ಲಾಹನೇ!ನಾನು ಮಾಡಿದ ಆ ಸತ್ಕರ್ಮ ನೀನು ಇಷ್ಟಪಟ್ಟಿರುವೆಯಾದರೆ ನಮ್ಮ ಈ ಗುಹೆಯ ಬಾಗಿಲನ್ನು ತೆರೆದು ಕೊಡು.
ಆವಾಗ ಮುಚ್ಚಲ್ಪಟ್ಟ ಗುಹೆಯ ಬಾಗಿಲುಗಳು ತೆರೆಯಿತು.
(ಬುಖಾರಿ) -------------------------------------------------------------
عن أبي أمامة بن ثعلبة الحارثي رضي الله عنه  أن رسول الله صلى الله عليه وسلم ـ قال: من اقتطع حقّ مسلم بيمينه، حرم الله عليه الجنة، وأوجب له النّار، قالوا: وإن كان شيئا يسيرا؟، قال: وإن كان قضيبا من أراك.
 (مسلم )
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು,ಆಣೆ ಹಾಕಿ ಇನ್ನೊಬ್ಬನ ಹಖ್ಖನ್ನು ಯಾರು ಕಸಿಯುವನೋ ಅವನಿಗೆ ನರಕ ಕಡ್ಡಾಯವಾಗಿದೆ.
ಆವಾಗ ಸ್ವಹಾಬತ್ ಕೇಳಿದರು,ಅದು ಅತೀ ಚಿಕ್ಕದಾದರೂ ಅವನಿಗೆ ನಕರ ಕಡ್ಡಾಯವೇ?
ಹೌದು!ಅದು ಹಲ್ಲುಜ್ಜುವ ಪುಟ್ಟ ಮರದ ತುಂಡಾದರೂ ಸರಿ ಎಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಉತ್ತರಿಸಿದರು.
(ಮುಸ್ಲಿಂ)
-------------------------------------------------------------
ಕುಟುಂಬದ ಜವಬ್ದಾರಿ ಹೊತ್ತ ಕಾರ್ಮಿಕ ನಮ್ಮ ಮನೆಯ ಕೂಲಿ ಕೆಲಸ ಮಾಡಿ ಬರೀ ಕೈಯಲ್ಲಿ ಆತ ಮರಳುವುದಾದರೆ ಹಾಯಾಗಿ ಆ ಮನೆಯಲ್ಲಿ ವಾಸಿಸಬಹುದೆಂದು ಸ್ವಪ್ನದಲ್ಲೂ ಕೂಡಾ ಯಾರು ಭಾವಿಸಬೇಡಿ.
ಆತನ ಮತ್ತು ಕುಟುಂಬದ ಶಾಪವೇ ಧಾರಾಳ ಸಾಕು.




ಎಲ್ಲರಿಗೂ ಶೇರ್ ಮಾಡಿ

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)

ಮುಂದುವರಿಯುವುದು........

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 08

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --8


📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  7:*_
*ಮನೆಗೆ ಪ್ರವೇಶಿಸುವಾಗ ನೆಬಿ ತಂಙ್ಙಳ ಸುನ್ನತ್ ಪಾಲಿಸಿ*

ದೈನಂದಿನ ಚಟುವಟಿಕೆಗಾಗಿ ಹೊರಗಡೆ ಹೋಗಿ ಬರುವ ವ್ಯಕ್ತಿ ಹಲವಾರು ಟೆಂಕ್ಷನ್ ಗಳನ್ನು ಹೊತ್ತು ಮನೆ ಕಡೆಗೆ ಬರುತ್ತಾನೆ.ತುಸು ನೆಮ್ಮದಿ ಆತ ಮನೆಯಲ್ಲಿ ಬಯಸುತ್ತಾನೆ.
ದಿನದ ತನ್ನ ವ್ಯವಹಾರದಲ್ಲಿ ನಷ್ಟವಾಗಿ,ದುಡಿದ ದುಡಿಮೆಯ ಕೂಲಿ ಲಭಿಸದ ಕಾರಣದಿಂದಾಗಿ,ತನ್ನ ಮಾಲಿಕನ ಬೈಗುಳಗಳನ್ನು ಕೇಳಿ, ಹೀಗೆ ನೂರಾರು ಒತ್ತಡಗಳು ಎಲ್ಲರಲ್ಲೂ ಇರುತ್ತದೆ.
ಇದಕ್ಕೆಲ್ಲಾ ಕಡಿವಾಣ ಹಾಕಲು ಮನುಷ್ಯನು ಕಂಡುಕೊಳ್ಳುವ ಸಂತೋಷದ ತಾಣ ಮನೆಯಾಗಿದೆ.
ಮನೆಗೆ ಅರಬಿಯಲ್ಲಿ ಸಕನ್,ಮಸ್ಕನ್ ಮುಂತಾದ ಹೆಸರುಗಳು ಹೇಳಲ್ಪಡುತ್ತದೆ.
ಸಕನ್ ಅಂದರೆ ಸಮಾಧಾನ ಕೇಂದ್ರ ಎಂದು ಬೇಕಾದರೆ ಅರ್ಥ ನೀಡಬಹುದು.
ತನ್ನ ಮನೆಯಲ್ಲಿ ಕುಟುಂಬಸ್ಥರ ಜತೆ ಸೇರಿಕೊಂಡಾಗ ತನಗೆ ಲಭಿಸುವ ಸಮಾಧಾನಕ್ಕಾಗಿಯೇ ಈ ಹೆಸರು ಬಂದಿದೆ.

ನಮ್ಮ ಮನೆಗೆ ನಾವು ಪ್ರವೇಶಿಸುವಾಗ ಹಲವಾರು ನಿರ್ದೇಶಗಳನ್ನು ಇಸ್ಲಾಮ್ ನೀಡಿವೆ.
----------------------------------------------------------
ಪ್ರಖ್ಯಾತರಾದ ಇಮಾಮ್ ನವವೀ(ರ)ರವರಿಗೆ ಮುಸ್ಲಿಮನ ದಿನಚರಿ ಕಲಿಸುವ ಒಂದು ಗ್ರಂಥವಿದೆ.ಅಲ್ ಅದ್ಸ್'ಕಾರ್ ಎಂದಾಗಿದೆ ಪ್ರಸ್ತುತ ಗ್ರಂಥದ ಹೆಸರು.ಅದರಲ್ಲಿ ಒಂದು ಅಧ್ಯಾಯ ಈ ರೀತಿ ಓದಬಹುದಾಗಿದೆ.
باب ما يقول اذا دخل بيته
ಮನೆಗೆ ಪ್ರವೇಶಿಸುವಾಗ ಹೇಳಬೇಕಾದ ಸಂಗತಿಗಳು.

ನಂತರ ಏನೆಲ್ಲಾ ಹೇಳಬೇಕೆಂದು ಅದರಲ್ಲಿ ವಿವರಿಸುತ್ತಾರೆ. ಅದನ್ನು ಇಲ್ಲಿ ನೀಡುತ್ತಿದ್ದೇನೆ.

يُستحب أن يقول: باسم الله، وأن يكثرَ من ذكر الله تعالى: وأن يسلّمَ سواءٌ كان في البيت آدميّ أم لا، لقول الله تعالى: فَإِذَا دَخَلْتُمْ بُيُوتًا فَسَلِّمُوا عَلَى أَنْفُسِكُمْ تَحِيَّةً مِنْ عِنْدِ اللَّهِ مُبَارَكَةً طَيِّبَةً
1.ಮನೆಗೆ ಪ್ರವೇಶಿಸುವಾಗ ಬಿಸ್ಮಿ ಹೇಳಬೇಕು.
2.ದ್ಸಿಕ್ರ್ ಹೇಳುತ್ತಿರಬೇಕು.
3.ಒಳಗೆ ಕಾಲಿಡುವಾಗ ಸಲಾಮ್ ಹೇಳಬೇಕು.(ಜನರು ಇದ್ದರೂ ಇಲ್ಲದಿದ್ದರೂ ಸಲಾಮ್ ಹೇಳಬೇಕು)
 "ನೀವು ಮನೆಯೊಳಗೆ ಪ್ರವೇಶಿಸುವಾಗ ಸಲಾಮ್ ಹೇಳಿ"ಎಂದು ಅಲ್ಲಾಹನು ಹೇಳಿದ್ದಾನೆ.
ಇದೆಲ್ಲವೂ ಸುನ್ನತ್ ಅಗಿದೆ.

روينا في "كتاب الترمذي"عن أنس رضي الله عنه، قال: قال لي رسول الله صلى الله عليه وسلم: "يا بُنَيَّ! إذَا دَخَلْتَ على أهْلِكَ فَسَلِّمْ، يكن برَكَةً عَلَيْكَ وعلى أهْلِ بَيْتِكَ". قال الترمذي: حديث حسن صحيح
ಅನಸ್ (ರ)ರಿಂದ ಇಮಾಮ್ ತುರ್ಮುದ್ಸೀ ವರದಿ ಮಾಡಿದ ಹದೀಸಿನಲ್ಲಿ ಈ ರೀತಿ ಇದೆ.
ನನ್ನೊಂದಿಗೆ ಪ್ರವಾದೀ ವರ್ಯರು ಹೇಳಿದರು,
ಓ ಅನಸ್! ನೀನು ಮನೆಯೊಳಗೆ ಪ್ರವೇಶಿಸುವಾಗ ಸಲಾಮ್ ಹೇಳು.ಅದು ನಿನಗೆ ಮತ್ತು ಮನೆಯವರಿಗೆ ಬರಕತ್ ನೀಡುತ್ತದೆ.(ತುರ್ಮುದ್ಸೀ)
----------------------------------------------------------
131- وروينا في "سنن أبي داود" عن أبي مالك الأشعري رضي الله عنه، قال: قال رسول الله -صلى الله عليه وسلم: "إذا وَلَجَ الرَّجُلُ بَيْتَهُ فَلْيَقُلِ: اللَّهُمَّ إِني أسألُكَ خَيْرَ المَوْلِجِ، وَخَيْرَ المَخْرَجِ، باسْمِ اللَّهِ وَلجْنا، وباسْمِ اللَّهِ خَرَجْنا، وَعَلى اللَّهِ رَبِّنا تَوََكَّلْنا؛ ثُمَّ ليُسَلِّمْ على أهْلِهِ".
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ.ಒಬ್ಬ ಮನೆಯೊಳಗೆ ಪ್ರವೇಶಿಸುವಾಗ ಈ ರೀತಿ ಹೇಳಲಿ,
"ಅಲ್ಲಾಹುಮ್ಮ ಇನ್ನೀ ಅಸ್'ಹಲುಕ ಕೈರಲ್ ಮೌಲಿಜಿ ವಖೈರಲ್ ಮಖ್'ರಜಿ ಬಿಸ್ಮಿಲ್ಲಾಹಿ ವಲಜ್'ನಾ ವಬಿಸ್ಮಿಲ್ಲಾಹಿ ಖರಜ್'ನಾ 
ವಅಲಲ್ಲಾಹಿ ರಬ್ಬಿನಾ ತವಕ್ಕಲ್'ನಾ"
ನಂತರ ಮನೆಯವರಿಗೆ ಸಲಾಮ್ ಹೇಳಲಿ.
(ವರದಿ: ಅಬೂದಾವೂದ್ )
----------------------------------------------------------
 عن أبي أُمامةَ الباهلي رضي الله عنه، رَجُلٌ دَخَلَ بَيْتَهُ بِسلامٍ، فَهُوَ ضَامنٌ على اللَّهِ سُبْحانَهُ وتَعَالى". حديث حسن. رواه أبو داود 
ಸಲಾಮ್ ಹೇಳುತ್ತಾ ಮನೆಯೊಳಗೆ ಪ್ರವೇಶಿಸಿದ ವ್ಯಕ್ತಿಯು ಅಲ್ಲಾಹನ ಸಂರಕ್ಷಣೆಯಲ್ಲಿರುತ್ತಾನೆ.
(ವರದಿ : ಅಬೂದಾವೂದ್)
----------------------------------------------------------
 عن جابر بن عبد الله رضي الله عنهما، قال: سمعت النبي صلى الله عليه وسلم يقول: "إذَا دَخَلَ الرجلُ بيتهُ، فَذَكَرَ اللَّهَ تَعالى عنْدَ دُخُولِهِ، وَعِنْدَ طَعامِهِ، قالَ الشِّيْطانُ: لا مَبِيتَ لَكُمْ وَلا عَشاءَ؛ وَإذا دَخَلَ فَلَمْ يَذْكُرِ اللَّهَ تَعالى عنْدَ دُخُولِه، قالَ الشيطانُ: أدْرَكْتُمُ المَبِيتَ، وَإذا لَمْ يَذْكُرِ اللَّهَ تَعالى عِنْدَ طَعامِهِ، قالَ: أدْرَكْتُمُ المَبِيتَ والعَشَاء" رواه مسلم

ಜಾಬಿರ್ (ರ)ವರದಿ,ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಒಬ್ಬ ಮನೆಯೊಳಗೆ ಪ್ರವೇಶಿಸುವಾಗ ಮತ್ತು ಆಹಾರ ಸೇವಿಸುವ ವೇಳೆ ದ್ಸಿಕ್ರ್ ಹೇಳಿದ್ದಲ್ಲಿ ಪಿಶಾಚಿ ಹೇಳುವನು"ಈ ಮನೆಯಲ್ಲಿ ಇಂದು ನಮಗೆ ಆಹಾರವಿಲ್ಲ,ತಂಗಲು ಸಾಧ್ಯವೂ ಇಲ್ಲ".
ಮನೆ ಪ್ರವೇಶಿಸುವಾಗ ಮತ್ತು ಆಹಾರದ ವೇ ದ್ಸಿಕ್ರ್ ಹೇಳದಿದ್ದಲ್ಲಿ ಪಿಶಾಚಿ ಹೇಳುವನು"ಇಂದು ನಮಗೆ ಆಹಾರವಿದೆ.ತಂಗುವ ವ್ಯವಸ್ಥೆಯಿದೆ".
(ಇಮಾಮ್ ಮುಸ್ಲಿಂ ವರದಿ)
----------------------------------------------------------
 وروينا في "موطأ مالك رحمه الله" أنه بلغه أنه يستحبّ إذا دخل بيتاً غير مسكونٍ أن يقولُ: السلامُ عَلَيْنا وَعلى عِبادِ اللَّهِ الصالحين؛ والله أعلم.
ಮನೆಯೊಳಗೆ ಪ್ರವೇಶಿಸುವಾಗ ಯಾರೂ ಇಲ್ಲದಿದ್ದರೆ "ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಾಹಿ ಸ್ಸ್ವಾಲಿಹೀನ್" ಎಂದು ಹೇಳಬೇಕೆಂದು ಇಮಾಮ್ ಮಾಲಿಕ್(ರ)ತನ್ನ "ಮುವತ್ತದಲ್ಲಿ" ವರದಿ ಮಾಡಿದ್ದಾರೆ.
----------------------------------------------------------
عن سهل بن سعد الساعديّ قال: شكا رجل إلى رسول الله صلى الله عليه وسلم الفقر وضيق المعيشة، فقال له رسول الله صلى الله عليه وسلم: إذا دخلتَ البيت فسلِّمْ إن كان فيه أحد، وإن لم يكن فيه أحد فسلم عليّ، واقرأ: قُلْ هُوَ الله أَحَدٌ مرة واحدة ـ ففعل الرجل فأدرّ الله عليه الرزق، حتى أفاض على جيرانه(تفسير الرازي)

ಮನೆಯಲ್ಲಿ ಬಹಳ ತೊಂದರೆ ಮತ್ತು ದಾರಿದ್ರ್ಯವಿದೆ ಎಂದು ಅಳಲು ತೋಡಿಕೊಂಡ ಸ್ವಹಾಬಿಯೊಬ್ಬರಲ್ಲಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು "ನೀನು ಮನೆಗೆ ಪ್ರವೇಶಿಸುವಾಗ ಅಲ್ಲಿ ಇದ್ದವರ ಮೇಲೆ ಸಲಾಮ್ ಹೇಳು.
ಯಾರೂ ಇಲ್ಲದಿದ್ದರೆ ನನ್ನ ಮೇಲೆ ಸಲಾಮ್ ಹೇಳು
(ಅಸ್ಸಲಾಮು ಅಲೈಕ ಯಾ ರಸೂಲಲ್ಲಾಹ್)
ನಂತರ ನೀನು ಒಂದು ಸಲ ಸೂರತುಲ್ ಇಖ್ಲಾಸ್ ಪಾರಾಯಣ ಮಾಡು" ಎಂದು ಹೇಳಿಕೊಟ್ಟರು.ಆ ವ್ಯಕ್ತಿ ಆ ರೀತಿ ಹೇಳತೊಡಗಿದರು.
ಅವರ ದಾರಿದ್ರ ಮತ್ತು ತೊಂದರೆಗಳು ನೀಗಿ ಅವರು ತನ್ನ ಸಂಪತ್ತಿನಿಂದ ನೆರೆಕರೆಯ ಮನೆಯವರಿಗೆ ದಾನ ಮಾಡಿದರು
(ಇಮಾಮ್ ರಾಝಿಯ ತಫ್ಸೀರುಲ್ ಕಬೀರ್ )



ಎಲ್ಲರಿಗೂ ಶೇರ್ ಮಾಡಿ

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)

ಮುಂದುವರಿಯುವುದು........

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 07

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --7


📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  6:*_
*ನೆರೆಕರೆಯವರು ಉತ್ತಮರಾಗಿರಲಿ*


ನಾವು ಒಂದು ಸ್ಥಳ ಅಥವಾ ಮನೆ ಖರೀದಿಸುವಾಗ ಅಲ್ಲಿನ ನೆರೆಕರೆಯವರ ಬಗ್ಗೆ ಮೊದಲು ತಿಳಿದಿರಬೇಕಾದುದು ಅತೀ ಅಗತ್ಯವಾಗಿದೆ.
ಲಕ್ಷಾಂತರ ರೂ ಖರ್ಚು ಮಾಡಿ ಮನೆ ಕಟ್ಟಿ ಅದರಲ್ಲಿ ವಾಸ ಯೋಗ್ಯವಾಗಬೇಕಾದರೆ  ಆ ಮನೆಯ ನೆರೆಕರೆಯವರು ಉತ್ತಮ ಜನರಾಗದಿದ್ದಲ್ಲಿ ಈ ದುಖಃ ಒಮ್ಮೆಯೂ ಮಾಯವಾಗುವುದಿಲ್ಲ.

ಚಿಕ್ಕ ಪುಟ್ಟ ವಿಷಯಗಳಿಗೆ ತಕರಾರೆತ್ತುವ ನೆರೆಕರೆಯವರಾದರೆ ನಮ್ಮ ಮನೆ ಎಷ್ಟೇ ದೊಡ್ಡದಿದ್ದರೂ ನೆಮ್ಮದಿ ಇರಲಾರದು.

ಲಕ್ಷಗಟ್ಟಲೆ ಖರ್ಚು ಮಾಡಿ ಮನೆ ಕಟ್ಟುವ ಮೊದಲು ನೆರೆಕರೆಯವರ ಬಗ್ಗೆ ತಿಳಿದುಕೊಂಡರೆ ಆ ಮಹಾ ವಿಪತ್ತನ್ನು ತಡೆಯಬಹುದು.

ಇಮಾಮ್ ಬುಖಾರಿ ವರದಿ ಮಾಡಿದ ಹದೀಸ್ ನೋಡಿ,
عَنْ نَافِعِ بْنِ عَبْدِ الْحَارِثِ رضي الله عنه قَالَ : قَالَ رَسُولُ اللَّهِ صَلَّى اللَّهُ عَلَيْهِ وَسَلَّمَ :مِنْ سَعَادَةِ الْمَرْءِ الْمَسْكَنُ الْوَاسِعُ, والْجَارُ الصَّالِحُ ، وَالْمَرْكَبُ الْهَنِيءُ .
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಒಬ್ಬನ ವಿಜಯದ ಲಕ್ಷಣಗಳು ಮೂರಾಗಿವೆ.
1.ವಾಸಯೋಗ್ಯವಾದ ಮನೆ.
2.ಉತ್ತಮ ನೆರೆಕರೆಯವ.
3.ಉತ್ತಮ ವಾಹನ.
(ಇಮಾಮ್ ಬುಖಾರಿಯ ಅದಬುಲ್ ಮುಫ್ರದ್ )
--------------------------------------------------------
ಇಮಾಮ್ ಬೈಹಖೀ ವರದಿ ಮಾಡಿದ ಒಂದು ಹದೀಸಲ್ಲಿ ಈ ರೀತಿ ಇದೆ,
وأربع من الشقاء فاما الشقاء  فالزوجة السوء ، والجار السوء ، والمركب السوء ، وضيق المسكن (شعب الايمان)
ನಾಲ್ಕು ಕಾರ್ಯಗಳು ಸೋಲಿನ ಲಕ್ಷಣಗಳಾಗಿವೆ.
1.ಕೆಟ್ಟ ಪತ್ನಿ
2.ಕೆಟ್ಟ ನೆರೆಕರೆಯವ
3.ಕೆಟ್ಟ ವಾಹನ
4.ಕಿರಿದಾದ ಮನೆ
(ವರದಿ ಇಮಾಮ್ ಬೈಹಖಿ ಶುಹ್'ಬುಲ್ ಈಮಾನ್  9556 ರಲ್ಲಿ)
--------------------------------------------------------
ಮನೆ ವಿಶಾಲವಾಗಿರಬೇಕು.
ಅಂದರೆ ಪುಟ್ಟ ಫ್ಯಾಮಿಲಿಗೆ 4000 ಸ್ಕ್ವಾರ್ ಫೀಟ್ ನ ಮನೆ ಬೇಕೆಂದಲ್ಲ.
ತನಗೆ ಮತ್ತು ತನ್ನ ಮನೆಗೆ ಬರುವ ಅತಿಥಿಗಳನ್ನು ಸ್ವಾಗತಿಸಲು ಬೇಕಾದ ವ್ಯವಸ್ಥೆ ಮನೆಯಲ್ಲಿರಬೇಕು.
ನಾಲ್ಕು ಜನ ಸೇರಿದರೆ ಕುಳಿತುಕೊಳ್ಳಲು ಸ್ಥಳ ಬೇಕು.
ಅವರು ತಂಗುವುದಾದರೆ ಅವರಿಗೆ ಮಲಗಳು ಸ್ಥಳ ಬೇಕು.ಆ ರೀತಿಯ ಪ್ಲಾನ್ ನೊಂದಿಗೆ ಮನೆ ನಿರ್ಮಿಸಬೇಕು ಎಂದಾಗಿದೆ ಪ್ರಸ್ತುತ ಹದೀಸ್ ನ ವ್ಯಾಖ್ಯಾನ.

ಪ್ರಖ್ಯಾತ ತತ್ವಜ್ಞಾನಿಯಾಗಿದ್ದ ಲುಕ್ಮಾನ್ ಅಲೈಹಿಸ್ಸಲಾಮ್ ತನ್ನ ಪುತ್ರನೊಂದಿಗೆ ಹೇಳಿದ ಒಂದು ವಸಿಯ್ಯತ್ ಈ ರೀತಿ ಇದೆ,
عن عمران بن سليمان رضي الله عنه قال بلغني ان لقمان عليه السلام قال لابنه يا بنى قد حملت الحجارة والحديد والحمل الثقيل فلم اجد شيئا أثقل قط من جار السوء يا بنى انى قد ذقت المر كله فلم أذق شيئا قط أمر من الفقر (شعب الايمان)
ಓ ಪ್ರೀತಿಯ ಮಗನೇ!
ನಾನು ಕಲ್ಲು ಮತ್ತು ಕಬ್ಬಿಣದಂತಹ ಬಾರದ ವಸ್ತುಗಳನ್ನು ಹೊತ್ತು ನಡೆದಿದ್ದೇನೆ.ಆದರೆ ಕೆಟ್ಟ ನೆರೆಕರೆಯವನನ್ನು ಹೊತ್ತು ನಡೆಯಲು ನನ್ನಿಂದ ಸಾಧ್ಯವಿಲ್ಲ.
ನಾನು ಹಲವಾರು "ಕಹಿ"ಯನ್ನು ಅನುಭವಿಸಿದ್ದೇನೆ.
ದಾರಿದ್ರ್ಯವೆಂಬ "ಕಹಿ" ಅನುಭವಿಸಲು ನನ್ನಿಂದ ಸಾಧ್ಯವಿಲ್ಲ.
(ಶುಹ್'ಬುಲ್ ಈಮಾನ್)
--------------------------------------------------------
ನಾವು ಎಷ್ಟೇ ಒಳ್ಳೆಯತನ ಮಾಡಿದರೂ  ನೆರೆಕರೆಯವರು ಕೆಟ್ಟವರಾದರೆ ಆ ಮನೆಯಲ್ಲಿ ಒಮ್ಮೆಯೂ ನೆಮ್ಮದಿ ಇರಲಾರದು.

ಆದುದರಿಂದ ನೆಮ್ಮದಿಯ ವಾತಾವರಣ ನಮ್ಮ ಮನೆ ಪರಿಸರದಲ್ಲಿ ಬೇಕೆಂದಾದರೆ ನೆರೆಕರೆಯವರು ಹೇಗಿದ್ದಾರೆಂದು ಮೊದಲೇ ಆಲೋಚಿಸಿ.
--------------------------------------------------------




ಎಲ್ಲರಿಗೂ ಶೇರ್ ಮಾಡಿ

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)

ಮುಂದುವರಿಯುವುದು........

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 06

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --6


📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  5:*_
*ಮನೆಯವರಿಗೆ ಇಬಾದತ್ ನ ಪರಿಶೀಲನೆ*

ಒಂದು ಮನೆಯಲ್ಲಿ ಯಜಮಾನ ಸಹಿತ ಪತ್ನಿ ಮಕ್ಕಳು ಸೇರಿ ಹಲವಾರು ಜನರಿರಬಹುದು.

ಮನೆಯ ಎಲ್ಲರಲ್ಲೂ ಈಮಾನ್ ಹೆಚ್ಚಿಸಲು ಹಲವಾರು ದಾರಿಗಳಿವೆ.
ಮನೆಯ ಯಜಮಾನ ಈ ಬಗ್ಗೆ ನಿಗಾವಹಿಸದಿದ್ದಲ್ಲಿ ಪತ್ನಿ ಮಕ್ಕಳು ಸಹಿತ ಎಲ್ಲರೂ ಅಲ್ಲಾಹನ ಭಯಾನಕ ಶಿಕ್ಷೆಗೆ ಗುರಿಯಾಗುವರು.
ಅಲ್ಲಾಹನು ಹೇಳುತ್ತಾನೆ,
یَـٰۤأَیُّهَا ٱلَّذِینَ ءَامَنُوا۟ قُوۤا۟ أَنفُسَكُمۡ وَأَهۡلِیكُمۡ نَارࣰا
(التحريم 6)
ಸತ್ಯ ವಿಶ್ವಾಸಿಗಳೇ ನಿಮ್ಮ ಮತ್ತು ನಿಮ್ಮವರ ಶರೀರವನ್ನು ನರಕದಿಂದ ಸಂರಕ್ಷಿಸಿರಿ.
(ಸೂರಾ ಅತ್ತಹ್'ರೀಮ್ 6)
--------------------------------------------------------
*ಮನೆಯವರಿಗೆ ಈಮಾನ್ ಹೆಚ್ಚಿಸಲು ಈ ಮಾರ್ಗ ಅವಲಂಭಿಸಿ*

1. *_ರಾತ್ರಿ ಎಲ್ಲರನ್ನೂ ಎಬ್ಬಿಸಿ ತಹಜ್ಜುದ್ ಮಾಡಿಸಿ._*

ಒಂದು ಹದೀಸ್ ನೋಡಿ,
عن عائشة -رضي الله عنها-: أن النبي -صلى الله عليه وسلم- كان يصلي صلاته بالليل، قال: «قومي فأوْتِري يا عائشة». (مسلم)
ಆಯಿಶಾ ಬೀವಿ ವರದಿ,
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ರಾತ್ರಿ ಎದ್ದು ತಹಜ್ಜುದ್ ನಿರ್ವಹಿಸಿ ವಿತ್ರ್ ನಮಾಝ್ ಮಾಡುವರು.
ನಂತರ, ಓ ಆಯಿಶಾ!ಎದ್ದೇಳಿ ನಮಾಝ್ ನಿರ್ವಹಿಸಿ ಎಂದು ಹೇಳುತ್ತಿದ್ದರು.
(ಮುಸ್ಲಿಂ)
--------------------------------------------------------
ಇನ್ನೊಂದು ಹದೀಸ್ ನೋಡಿ,
وعَنْ أَبي هُريرة قَالَ: قالَ رسُولُ اللَّهِ ﷺ: رحِمَ اللَّه رَجُلا قَامَ مِنَ اللَّيْلِ، فصلىَّ وأيْقَظَ امرأَتهُ، فإنْ أَبَتْ نَضحَ في وجْهِهَا الماءَ، رَحِمَ اللَّهُ امَرَأَةً قَامت مِن اللَّيْلِ فَصلَّتْ، وأَيْقَظَتْ زَوْجَهَا فإِن أَبي نَضَحَتْ
 فِي وجْهِهِ الماءَ
(  أَبُو داود )
ಒಬ್ಬನು ರಾತ್ರಿ ಎದ್ದು ನಮಾಝ್ ಮಾಡಿ ತನ್ನ ಪತ್ನಿಯನ್ನು ಎದ್ದೇಳಿಸಿ ನಮಾಝ್ ಮಾಡಿಸುವನು.ಅವಳು ಎದ್ದೇಳದಿದ್ದರೆ ಅವಳ ಮುಖಕ್ಕೆ ನೀರು ಸಿಂಪಡಿಸುವನು.ಆ ಪುರುಷನಿಗೆ ಅಲ್ಲಾಹನ ಅನುಗ್ರಹವಿರಲಿ.
ಒಬ್ಬಳು ಮಹಿಳೆ ರಾತ್ರಿ ಎದ್ದು ನಮಾಝ್ ಮಾಡಿ ತನ್ನ ಪತಿಯನ್ನು ಎಬ್ಬಿಸಿ ನಮಾಝ್ ಮಾಡಿಸುವಳು.ಆತ ಎದ್ದೇಳದಿದ್ದರೆ ಆತನ ಮುಖಕ್ಕೆ ನೀರು ಸಿಂಪಡಿಸಿ ಎದ್ದೇಳಿಸುವಳು.ಆ ಮಹಿಳೆಗೆ ಅಲ್ಲಾಹನ ಅನುಗ್ರಹವಿರಲಿ.
(ವರದಿ ಅಬೂದಾವೂದ್).
--------------------------------------------------------
ಪತಿ- ಪತ್ನಿ ಈ ರೀತಿ ಮಾಡುವುದರಿಂದ ಅವರ ನಡುವೆ ಸ್ನೇಹ ಅಧಿಕವಾಗಲು ಇದು ಕಾರಣವಾಗುತ್ತದೆ.
ಪತಿ-ಪತ್ನಿ ಪರಸ್ಪರ ಪ್ರೀತಿ,ವಿಶ್ವಾಸದಿಂದ ಬಾಳಿದರೆ ಮಕ್ಕಳಲ್ಲೂ ಅದರ ಫಲ ಕಾಣ ಸಿಗುತ್ತದೆ.
ಪತಿ-ಪತ್ನಿ ಯಾವಾಗಲೂ ಜಗಲವಾಡುವ ಮನೆಯಲ್ಲಿ ಅಲ್ಲಾಹನ ಅನುಗ್ರಹವಿರಲಾರದು.
(ಅದನ್ನು ಸವಿಸ್ತಾರವಾಗಿ ಮುಂದಕ್ಕೆ ವಿವರಿಸಲಾಗುವುದು)
--------------------------------------------------------
2. *_ದಾನ -ಧರ್ಮ ಪುಣ್ಯ ಕರ್ಮವೆಂದು ಪತ್ನಿ ಮಕ್ಕಳಿಗೆ ಹೇಳಿ ಕೊಡಬೇಕು_*

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ತನ್ನ ಮನೆ ಮಂದಿಯೊಂದಿಗೆ ಸದಾ ಈ ರೀತಿ ಹೇಳಿ ಕೊಡುತ್ತಿದ್ದರು.
  يا معشر النساء تصدقن.
ಓ ಮಹಿಳೆಯರೇ!
ನೀವು ಅಧಿಕವಾಗಿ ದಾನ ಮಾಡಿರಿ
(ಬುಖಾರಿ ,ಮುಸ್ಲಿಂ)
--------------------------------------------------------
3. *_ಮನೆಯ ಯಜಮಾನ ಒಳ್ಳೆಯ ದಿವಸಗಳಲ್ಲಿ ಮನೆಯವರಿಗೆ ಮಾದರಿಯಾಗಬೇಕು_*

ಮುಸ್ಲಿಮನಿಗೆ ಮಗ್ರಿಬ್ ಇಶಾ ನ ಮಧ್ಯೆ ಒಳ್ಳೆಯ ಸಮಯ.

ವಾರದಲ್ಲಿಶುಕ್ರವಾರ ಒಳ್ಳೆಯ ದಿವಸ .

ವರ್ಷದಲ್ಲಿ ರಮಳಾನ್ ತಿಂಗಳು ಮತ್ತು ರಬೀವುಲ್ ಅವ್ವಲ್
ಒಳ್ಳೆಯ ತಿಂಗಳು.

ಅದೇ ರೀತಿ ಶವ್ವಾಲ್ ನ 6 ಉಪವಾಸದ ದಿನಗಳು.

ದುಲ್ ಹಜ್ಜ್ ಮತ್ತು ಮುಹರ್ರಮ್ ನ 10 ದಿವಸಗಳು.

ಇಸ್ರಾ ಮಿಹ್'ರಾಜ್ ರಾತ್ರಿ ಮತ್ತು ಬರಾಅತ್ ರಾತ್ರಿ
ಮುಂತಾದ ದಿವಸಗಳಲ್ಲಿ ಪ್ರತ್ಯೇಕ ಗೌರವದಿಂದ ಮನೆ ಮಂದಿಯನ್ನೆಲ್ಲಾ ಸೇರಿಸಿ ಮನೆಯಲ್ಲಿ ಇಬಾದತ್ ಹೆಚ್ಚಿಸಬೇಕು.

ಖುರ್'ಆನ್ ಪಾರಾಯಣ ,ಮೌಲಿದ್ ,ಹದ್ದಾದ್,ಸ್ವಲಾತ್ ಮುಂತಾದವುಗಳನ್ನು ಹೆಚ್ಚಿಸಬೇಕು.
ಇವಿಷ್ಟು ನಿಮ್ಮ ಮನೆಗಳಲ್ಲಿ ನೀವು ಮಾಡುವಿರಾ?
ಖಂಡಿತಾ ನಿಮ್ಮ ಮನೆಯಲ್ಲಿ ಬರ್ಕತ್ ಇದೆ.

ಕೆಲವು ಮನೆಗಳಲ್ಲಿ ಎಲ್ಲರೂ ಸೇರಿ ಸಿನೆಮಾ -ದಾರವಾಹಿ ನೋಡುವರು.
ಸಿನೆಮಾಗಳಲ್ಲಿ ಅಶ್ಲೀಲ ದೃಶ್ಯಗಳಿರುತ್ತವೆ.ಮಕ್ಕಳ ಎದುರಲ್ಲಿ ನೋಡಬಾರದ /ಮಾಡಬಾರದ ದೃಶ್ಯಗಳಿರುತ್ತವೆ.
ಈ ಶೈತಾನಿಯ್ಯತ್ ಯಾವಾಗ ನಾವು ದೂರ ಮಾಡುತ್ತೇವೆಯೋ ಆ ತನಕ ಸಂತೋಷಧಾಯಕ ಜೀವನ ನಮ್ಮ ಬಳಿಗೆ ಸುಳಿಯಲಾರದು.
---------------------------------------------------------

(ನಮ್ಮ ಮಕ್ಕಳು ಉತ್ತಮರಾಗಲು 100 ಸೂತ್ರಗಳು ಮುಂದಕ್ಕೆ ವಿವರಿಸುತ್ತೇನೆ)
ان شاء الله
===========================

ಎಲ್ಲರಿಗೂ ಶೇರ್ ಮಾಡಿ

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)

ಮುಂದುವರಿಯುವುದು........