Saturday, November 18, 2017

🔰♻ *ನೆಬಿದಿನ ವಿರೋಧಿಗಳ ಕುತಂತ್ರಕ್ಕೆ ಬಲಿಯಾಗದಿರಿ* ♻🔰

*✍🏻 ಸಿರಾಜುದ್ದೀನ್ ನಿಝಾಮಿ ಕೂಳೂರು.*

    ಝಕರಿಯ ಸ್ವಲಾಹಿ ಎಂಬ ಜಿನ್ನ್ ವಿಭಾಗದ ಸಲಫೀ ನೇತಾರ ಮದೀನಾದಿಂದ ಹರಿಯಬಿಟ್ಟ ನೆಬಿ ದಿನಾಚರಣೆಯನ್ನು ವಿರೋಧಿಸುವ 2:09 ನಿಮಿಷಗಳ ಒಂದು ವಾಯ್ಸ್ ಕ್ಲಿಪ್ ಕೇಳಲು ಸಾಧ್ಯವಾಯಿತು. ಆತ ಅದರಲ್ಲಿ ಹೇಳುವ ಪ್ರಧಾನ ವಿಷಯ ಏನೆಂದರೆ,
"ನಾವು ಮಾಡುವ ವ್ಯಾಪಾರ, ಕೃಷಿ ಮುಂತಾದ ಮುಆಮಲಾತ್ (ವ್ಯವಹಾರಗಳು) ಸರಿಯಾಗಬೇಕಾದರೆ ನೆಬಿ(ಸ್ವ) ಮತ್ತು ಸ್ವಹಾಬತ್ ವಿರೋಧಿಸದಿದ್ದರೆ ಸಾಕು, ನೆಬಿ(ಸ್ವ) ಹಾಗೂ ಸ್ವಹಾಬತ್ ಆ ಕೃಷಿ, ವ್ಯಾಪಾರ ಮಾಡಿದ್ದಾರೆ ಎಂದು ಸಾಬೀತಾಗಬೇಕೆಂದಿಲ್ಲ. ಆದರೆ ಇಬಾದತ್'ಗಳು ಹಾಗಲ್ಲ. ಅದು ಸರಿಯಾಗಬೇಕಾದರೆ ನೆಬಿ(ಸ್ವ) ಮತ್ತು ಸ್ವಹಾಬತ್ ವಿರೋಧಿಸಿಲ್ಲ ಎಂಬುದು ಮಾತ್ರ ಸಾಲದು. ಅವರು ಅದನ್ನು ಮಾಡಿದ್ದಾಗಿಯೂ ಸಾಬೀತಾಗಬೇಕು"

ಅರ್ಥಾತ್, ಒಂದು ಇಬಾದತ್ ಎಂಬ ವಿಶ್ವಾಸದೊಂದಿಗೆ ಸುನ್ನಿಗಳು ಇಂದು ಮಾಡುತ್ತಿರುವ ನೆಬಿದಿನಾಚರಣೆಯನ್ನು ನೆಬಿ(ಸ್ವ) ಹಾಗೂ ಸ್ವಹಾಬತ್ ಮಾಡಿಲ್ಲ/ಮಾಡಲು ಹೇಳಿಲ್ಲ. ಆದ್ದರಿಂದ ಅದು ಧರ್ಮಸಮ್ಮತವಲ್ಲ ಎಂಬುದು ಆತನ ವಾದಸರಣಿ.
ಹೇಗಿದೆ? ಏನೂ ಗೊತ್ತಿಲ್ಲದ ಬೆಪ್ಪ ಸಲಫಿಗಳು ಭೇಷ್ ಅನ್ನುತ್ತಿರಬಹುದು.

ಸುನ್ನಿಗಳು ಮಾಡುತ್ತಿರುವ ನೆಬಿದಿನಾಚರಣೆಗೆ ಸ್ಪಷ್ಟವಾದ ಪುರಾವೆಯಿಲ್ಲವೆಂದೂ, ನೆಬಿ(ಸ್ವ) ಹಾಗೂ ಸ್ವಹಾಬತ್ ವಿರೋಧಿಸಿಲ್ಲ ಎಂಬ ಕಾರಣಕ್ಕಾಗಿ ಮಾತ್ರ ಸುನ್ನಿಗಳು ನೆಬಿದಿನ ಆಚರಿಸುತ್ತಿರುವುದು ಎಂದು ಚಿತ್ರೀಕರಿಸುವ ಕುಟಿಲ ತಂತ್ರ ಆತನ ಮಾತಿನಲ್ಲಿದೆ.

ಇದು ನಿಜವೇ? ಖಂಡಿತಾ ಅಲ್ಲ. ಬರೀ ನೆಬಿ(ಸ್ವ) ವಿರೋಧಿಸಿಲ್ಲ ಎಂಬ ಕಾರಣಕ್ಕಾಗಿ ಮಾತ್ರವಲ್ಲ ಸುನ್ನಿಗಳು ನೆಬಿದಿನ ಆಚರಿಸುತ್ತಿರುವುದು. ಬದಲಾಗಿ, ಇದಕ್ಕೆ ಖುರ್'ಆನ್, ಹದೀಸ್, ಸ್ವಹಾಬಿ ಚರ್ಯೆ, ಪೂರ್ವಿಕ ಇಮಾಮರು, ವಿದ್ವಾಂಸರು, ಇಷ್ಟರ ತನಕದ ಸಜ್ಜನ ಸರಣಿ ಈ ಎಲ್ಲಾ ಆಧಾರಗಳ ಕಾರಣದಿಂದಾಗಿದೆ ನೆಬಿದಿನ ಆಚರಿಸುತ್ತಿರುವುದು. ಆದ್ದರಿಂದ ಮುಗ್ಧ ಮುಸಲ್ಮಾನರನ್ನು ಗೊಂದಲಕ್ಕೆ ಬೀಳಿಸುವ ಆತನ ವಾದಸರಣಿಯ ಕುತಂತ್ರವನ್ನು ಎಲ್ಲರೂ ಅರಿತಿರಬೇಕಾಗಿದೆ.

"ಮದೀನಾದ ಆಡಳಿತ ನಮ್ಮ ಕೈಗೆ ಸಿಕ್ಕರೆ ನಾವು ಮಾಡುವ ಮೊದಲ ಕೆಲಸ ನೆಬಿ(ಸ್ವ)ರ ರೌಳಾ ಶರೀಫಿನ ಹಸಿರು ಗುಮ್ಮಟ ಹೊಡೆದುರುಳಿಸುವುದು" ಎಂದು ಭಾಷಣ ಮಾಡಿದ್ದ ಆತ ಮದೀನಕ್ಕೆ ಹೋದದ್ದು ನೆಬಿ(ಸ್ವ)ರ ರೌಳಾ ಝಿಯಾರತ್ ಮಾಡಲಂತೂ ಖಂಡಿತಾ ಅಲ್ಲ, ಅದಿರಲಿ.

ಲೋಕಾನುಗ್ರಹಿಯಾಗಿ ಜನಿಸಿದ ಪ್ರವಾದಿ ಮುಹಮ್ಮದ್ (ಸ್ವ) ಎಂಬ ಮಹಾ ವ್ಯಕ್ತಿತ್ವದ ಜನ್ಮ ದಿನದಲ್ಲಿನ ಸಂತೋಷದ ಬಹಿರ್ ಪ್ರಕಟಣೆಯಾಗಿದೆ ನೆಬಿದಿನಾಚರಣೆ. ಆದರೆ ಸಂತೋಷಿಸಬಾರದೆಂದಾಗಿದೆ ಕೆಲವರು ಹೇಳುತ್ತಿರುವುದು, ಭಾಗ್ಯಹೀನರು!!

ನೆಬಿದಿನಾಚರಣೆಗೆ ಲೋಕ ಮುಸ್ಲಿಮರ ಅಂಗೀಕಾರವಿದೆ. ಮುಸ್ಲಿಂ ಲೋಕದ ಇಜ್'ಮಾಅನ್ನು ತಳ್ಳಿ ಹಾಕುವವರು ಕ್ಷಮಾರ್ಹರಲ್ಲ. ನೆಬಿದಿನಾಚರಣೆಯಲ್ಲಿ ನಡೆಯುತ್ತಿರುವುದು ಪ್ರವಾದಿ ಮದ್'ಹ್ ಗಳನ್ನು ಹೇಳುವ ಜಾಥಾಗಳು, ಅವರ ಕೀರ್ತನೆಗಳಾದ ಮೌಲಿದ್, ಅವರ ಮಹತ್ವವನ್ನು ವಿವರಿಸುವ ಭಾಷಣಗಳು, ಹಾಡುಗಳು, ಅನ್ನದಾನ ಹಾಗೂ ಇತರ ಸತ್ಕರ್ಮಗಳಾಗಿವೆ. ಇವೆಲ್ಲಾ ಶಿರ್ಕೆಂದು ಆರೋಪಿಸಿ ತಳ್ಳಿ ಹಾಕಲು ಪರಲೋಕದಲ್ಲಿ ವಿಶ್ವಾಸವಿಲ್ಲದವರಿಂದ ಮಾತ್ರ ಸಾಧ್ಯ.

ಪ್ರವಾದಿ(ಸ್ವ) ತನ್ನ ಜನ್ಮ ದಿನವನ್ನಾಚರಿಸಿದ್ದರೇ...? ನೂತನವಾದಿಗಳು ಹೀಗೆ ಕೇಳುತ್ತಾರೆ. ನಾವು ತಿರುಗಿ ಕೇಳೋಣ. ಪ್ರವಾದಿ(ಸ್ವ) ಆಚರಿಸದ್ದರಿಂದ ಅದು ಬಿದ್'ಅತ್ತಾಗುವುದೇ? ಪ್ರವಾದಿ(ಸ್ವ) ಮಾಡದ್ದೆಲ್ಲವನ್ನೂ ಬಿದ್'ಅತ್ತಾಗಿ ಗಣಿಸುವುದೇ ಮಹಾ ತಪ್ಪು. ಹಾಗಾದರೆ ಉದಾಹರಣೆಗೆ ಈಗ ಇಲ್ಮ್ ಕಲಿಸಲು ಇರುವ ಮದ್ರಸಾ, ಕಾಲೇಜು, ಪತ್ರಿಕೆ, ಧ್ವನಿವರ್ಧಕ ಮುಂತಾದವುಗಳನ್ನೆಲ್ಲಾ ನಿಲ್ಲಿಸಬೇಕಾದೀತು!

ಇಲ್ಮ್ ಕಲಿಯಬೇಕು, ಕಲಿಸಬೇಕೆಂದು ಖುರ್'ಆನ್, ಹದೀಸ್ ಮುಂತಾದ ಪ್ರಮಾಣಗಳ ಮೂಲಕ ಸ್ಪಷ್ಟವಾಗಿರುವಾಗ ಅದು ದೀನಿಗೆ ವಿರುದ್ಧವಲ್ಲದ ಯಾವ ರೂಪದಲ್ಲೂ ಆಗಬಹುದು. ತರಗತಿಗಳು ದಿನಕ್ಕೊಮ್ಮೆ, ವಾರಕ್ಕೊಮ್ಮೆ ಹೇಗೂ ಆಗಬಹುದು. ಕಿತಾಬ್, ನೋಟ್ಸ್, ಸಿಲೆಬಸ್, ಇನ್ಸ್ಪೆಕ್ಷನ್, ಎಕ್ಸಾಂ, ವಾಲ್ಯುವೇಶನ್ ಎಲ್ಲವೂ ಇರಬಹುದು. ಪತ್ರಿಕೆ, ಧ್ವನಿವರ್ಧಕ ಬಳಸಬಹುದು. ತನ್ಮೂಲಕ ನಡೆಯುವುದು ಹೊಸ ಆಚಾರಗಳ ಸೃಷ್ಟಿ ಕರ್ಮವಲ್ಲ, ಹಳೆಯದರ ವಿಕಾಸವಾಗಿದೆ. ಮೂಲ ಆಧಾರಗಳಿಗೆ ಅನುಸಾರವಾದಾಗ ಈ ವಿಕಾಸ ಆಕ್ಷೇಪಾರ್ಹವಲ್ಲ.

ಬೇಕಾದರೆ ಭಾಷಿಕವಾಗಿ ಇದನ್ನು ಬಿದ್'ಅತ್ ಎನ್ನಬಹುದು. ನೆಬಿ(ಸ್ವ)ರ ಕಾಲಾನಂತರ ಜಗತ್ತಿನಲ್ಲುಂಟಾದ ಎಲ್ಲಾ ಬದಲಾವಣೆಗಳೂ ಈ ಗಣದಲ್ಲಿ ಬರುತ್ತವೆ. ಹಾಗಾದಾಗ ಜಗತ್ತಿನಲ್ಲಿ ಈಗಿರುವ ಅಧಿಕವೂ ಬಿದ್'ಅತ್ ಗಳಾಗಿವೆ. ಇವೆಲ್ಲವನ್ನೂ ವಿರೋಧಿಸಲೇ ನೂತನವಾದಿ ಹೊರಟಿರುವುದು?

ಪ್ರವಾದಿ(ಸ್ವ) ಸ್ವತಃ ತನ್ನ ಜನ್ಮದಿನವನ್ನಾಚರಿಸಿದ್ದಕ್ಕೆ ಪುರಾವೆಗಳಿವೆ. ಪ್ರವಾದಿ(ಸ್ವ) ಸ್ವತಃ ಆಚರಿಸದಿದ್ದರೂ ಅದನ್ನು ಬಿದ್'ಅತ್ ಎನ್ನಲು ಸಾಧ್ಯವಿಲ್ಲವೆಂದಾಗಿದೆ ಮೊದಲು ಹೇಳಿದ್ದು. ಇಮಾಂ ಸುಯೂತ್ವೀ (ರ)ರವರ ಫತ್ವಾ ಗಮನಿಸಿ.

ಇಮಾಂ ಸುಯೂತ್ವೀ(ರ)ರೊಂದಿಗೆ ಒಂದು ಪ್ರಶ್ನೆ, "ನೆಬಿದಿನಾಚರಣೆಗೆ ಪುರಾವೆಯಿದೆಯೇ?"
ಅವರ ಉತ್ತರ ಸ್ಪಷ್ಟವಾಗಿತ್ತು.
"ಇಮಾಂ ಬೈಹಖೀ(ರ) ವರದಿ ಮಾಡಿದ ಹದೀಸ್ ನೆಬಿದಿನಾಚರಣೆಗೆ ಪುರಾವೆಯಾಗಿದೆ. ಅನಸ್(ರ) ಹೇಳಿದರು: ಪ್ರವಾದಿತ್ವ ಲಭಿಸಿದ ನಂತರ ಸ್ವಶರೀರಕ್ಕಾಗಿ ನೆಬಿ(ಸ್ವ) ಅಖೀಖಾ ನೀಡಿದ್ದರು. ಜನನದ ಏಳನೇ ದಿನ ಅಬ್ದುಲ್ ಮುತ್ತಲಿಬ್ ಅಖೀಖಾ ನೀಡಿದ್ದು ಹದೀಸಿನಲ್ಲಿದೆ. ಅಖೀಖಾ ಆವರ್ತಿಸಲ್ಪಡುವಂತದ್ದಲ್ಲ. ಅದಾಗ್ಯೂ ನೆಬಿ(ಸ್ವ) ಹಾಗೆ ಮಾಡಿದ್ದು ತಾನು ಲೋಕಾನುಗ್ರಹಿಯಾಗಿ ಜನಿಸಿದ್ದಕ್ಕೆ ಕೃತಜ್ಞತೆ ಎಂಬ ನೆಲೆಯಲ್ಲಾಗಿತ್ತು. ತನ್ಮೂಲಕ ನೆಬಿದಿನಾಚರಣೆಯನ್ನು ಪ್ರವಾದಿ(ಸ್ವ) ನಿಯಮವಾಗಿ ಜಾರಿಗೊಳಿಸಿದರು" (ಫತಾವಾ ಸುಯೂತ್ವೀ: 1-196)

ತನ್ನ ಜನನಕ್ಕಾಗಿ ಸಂತೋಷವನ್ನು ವ್ಯಕ್ತಪಡಿಸಬೇಕೆಂದು ನೆಬಿ(ಸ್ವ) ಸ್ವಪ್ರವರ್ತಿಯ ಮೂಲಕ ಕಲಿಸಿ ಕೊಟ್ಟರು.

*ಖುರ್'ಆನಿನ ಆಧಾರ:*
ಅಲ್ಲಾಹು ಹೇಳುತ್ತಾನೆ: "ಹೇಳಿರಿ, ಅಲ್ಲಾಹನ ಔದಾರ್ಯ (ಫಳ್'ಲ್) ಹಾಗೂ ಅನುಗ್ರಹ (ರಹ್ಮತ್) ಗಳಲ್ಲಿ ಅವರು ಸಂತೋಷಪಡಲಿ"
(ಸೂರಃ ಯೂನುಸ್: 57,58)

ಈ ಆಯತ್'ನಲ್ಲಿ ಹೇಳಿದ ರಹ್ಮತ್ ಎಂಬುದರ ಉದ್ದೇಶ ಪ್ರವಾದಿ(ಸ್ವ) ಎಂದು ಖುರ್'ಆನಿನ ಅಧಿಕೃತ ವ್ಯಾಖ್ಯಾನಕಾರರು ಸ್ಪಷ್ಟಪಡಿಸಿದ್ದಾರೆ.
(ರೂಹುಲ್ ಮ'ಆನೀ: 6-141,
ಅದ್ದುರ್ರುಲ್ ಮನ್ಸೂರ್: 4-367,
ಅಲ್ ಬಹ್ರುಲ್ ಮುಹೀತ್ವ್: 5-161)

ಖುರ್'ಆನಿನಲ್ಲಿ ಮತ್ತೊಂದು ಕಡೆ ನೆಬಿ(ಸ್ವ)ರನ್ನು ರಹ್ಮತ್ ಎಂದು ಅಲ್ಲಾಹನು ನೇರವಾಗಿಯೇ ಹೇಳಿದ್ದಾನೆ.
"ಲೋಕಕ್ಕೆ ಅನುಗ್ರಹವಾಗಿಯಲ್ಲದೆ ತಮ್ಮನ್ನು ನಾವು ನಿಯೋಗಿಸಿಲ್ಲ"
(ಸೂರಃ ಅಂಬಿಯಾಅ್: 107)

ಇಮಾಂ ಖಸ್ತಲ್ಲಾನೀ(ರ) ರವರು ಉಲ್ಲೇಖಿಸುತ್ತಾರೆ: "ಇಸ್ಲಾಮಿನ ಜನರು ಪ್ರವಾದಿ(ಸ್ವ)ರ ಜನ್ಮ ಮಾಸದಲ್ಲಿ ಒಂದುಗೂಡಿ ಪ್ರತ್ಯೇಕ ಔತಣ ಏರ್ಪಡಿಸುತ್ತಿದ್ದರು. ಆ ತಿಂಗಳ ರಾತ್ರಿಗಳಲ್ಲಿ ವಿಭಿನ್ನ ದಾನಧರ್ಮಗಳು, ಸಂತೋಷ ಪ್ರಕಟಣೆ, ಸತ್ಕರ್ಮಗಳ ಹೆಚ್ಚಳ, ಮೌಲಿದ್ ಪಾರಾಯಣ ಮುಂತಾದವುಗಳಲ್ಲಿ ವಿಶೇಷ ಗಮನ ಹರಿಸುತ್ತಿದ್ದರು"
(ಅಲ್ ಮವಾಹಿಬುಲ್ಲದುನ್ನಿಯ್ಯಾ: 1-132)

*ಹದೀಸಿನ ಆಧಾರ:*
ಇಮಾಂ ಬುಖಾರೀ(ರ) ರಿಂದ ವರದಿ: ಅಬೂಲಹಬ್ ಮರಣಿಸಿದಾಗ ಕುಟುಂಬದ ಕೆಲವರು ಕೆಟ್ಟ ಸ್ಥಿತಿಯಲ್ಲಿ ಆತನನ್ನು ದರ್ಶಿಸಿದರು. ಆತನ ಅವಸ್ಥೆಯ ಬಗ್ಗೆ ಕೇಳಿದಾಗ ಆತ ಹೇಳಿದ: "ನಿಮ್ಮ ನಂತರ ನಾನು (ಒಳ್ಳೆಯದಾಗಿ) ಏನೂ ಕಂಡಿಲ್ಲ. ಆದರೆ ನಿಶ್ಚಯವಾಗಿಯೂ ನನಗೆ ಈ ಎರಡು ಬೆರಳುಗಳೆಡೆಯ ಮೂಲಕ ಕುಡಿಯಲು ದೊರೆಯುತ್ತಿದೆ. ಸುವೈಬತ್ತನ್ನು ವಿಮೋಚಿಸಿದ್ದರಿಂದ"

ಸುಹೈಲೀ(ರ) ಅಬ್ಬಾಸ್(ರ)ರಿಂದ ವರದಿ ಮಾಡಿದ ಹದೀಸಿನಲ್ಲಿ ಹೀಗಿದೆ. ಅವರು ಹೇಳಿದರು: ಅಬೂಲಹಬ್ ಮರಣ ಹೊಂದಿ ಒಂದು ವರ್ಷ ಕಳೆದಾಗ ನಾನವರನ್ನು ಸ್ವಪ್ನದಲ್ಲಿ ಕಂಡೆ. ಅವರೆಂದರು: "ನಿಮ್ಮಿಂದ ಬೇರ್ಪಟ್ಟ ನಂತರ ನಾನೊಂದು ಸುಖವನ್ನೂ ಅನುಭವಿಸಿಲ್ಲ. ಆದರೆ ಪ್ರತಿ ಸೋಮವಾರ ನನಗೆ ಶಿಕ್ಷೆಯಲ್ಲಿ ರಿಯಾಯಿತಿ ದೊರೆಯುತ್ತಿದೆ". ಅಬ್ಬಾಸ್(ರ) ಹೇಳುತ್ತಾರೆ: "ಸೋಮವಾರ ನೆಬಿ(ಸ್ವ)ರ ಜನನವಾದಾಗ ಈ ಸಂತೋಷ ವಾರ್ತೆಯನ್ನು ಸುವೈಬತ್ ಅಬೂಲಹಬನಿಗೆ ತಿಳಿಸಿದರು. ಆಗ ಆತ ಅವರನ್ನು ದಾಸ್ಯಮುಕ್ತಿಗೊಳಿಸಿದ. ಇದೇ ಶಿಕ್ಷೆಯಲ್ಲಿ ಕಡಿತವುಂಟಾಗಲು ಕಾರಣ" (ಫತ್ಹುಲ್ ಬಾರೀ: 11-403).

👉🏼ಇಬ್ನು ಹಜರಿನಿಲ್ ಅಸ್ಖಲಾನೀ(ರ), ಇಬ್ನು ಕಸೀರ್ ಎಂಬವರೂ ಇದೇ ರೀತಿ ಉಲ್ಲೇಖಿಸಿದ್ದಾರೆ.
👉🏼ಕಾಫಿರ್'ಗಳಿಂದ ಸತ್ಕರ್ಮಗಳು ಸ್ವೀಕೃತವಾಗುವುದೋ, ಪ್ರತಿಫಲ ದೊರಕುವುದೋ ಇಲ್ಲವೆಂದು ಹೇಳುವ ವಿದ್ವಾಂಸರು ಸಹ, ಪ್ರವಾದಿ(ಸ್ವ)ರನ್ನು ಪ್ರೀತಿಸಿದರೆ ಕಾಫಿರ್'ಗೂ ಒಳಿತುಂಟಾಗುವುದೆಂದು ಈ ಹದೀಸ್ ಆಧಾರವಾಗಿಸಿ ವಿವರಿಸುತ್ತಾರೆ (ಫತ್ಹುಲ್ ಬಾರೀ: 11-403)
👉🏼ಅಬೂಲಹಬನಿಗೆ ಒಳಿತುಂಟಾದದ್ದು ದಾಸ್ಯಮುಕ್ತಿ ಎಂಬ ಪ್ರವರ್ತಿಯಿಂದಲ್ಲ. ಕಾರಣ, ಕಾಫಿರನಿಂದ ಸತ್ಕರ್ಮಗಳು ಸ್ವೀಕೃತವಲ್ಲ. ಪರಂತು ನೆಬಿವರ್ಯ(ಸ್ವ)ರೊಂದಿಗಿನ ಸ್ನೇಹದಿಂದ ಮಾತ್ರ ಎಂದು ವಿದ್ವಾಂಸರು ವಿವರಿಸಿದ್ದಾರೆ.
👉🏼ಅಬೂಲಹಬನನ್ನು ಸ್ವಪ್ನದಲ್ಲಿ ದರ್ಶಿಸಿದ್ದು ಸ್ವಹಾಬಿ ಪ್ರಮುಖರೂ, ಪ್ರವಾದಿ(ಸ್ವ)ರ ಚಿಕ್ಕಪ್ಪನೂ ಆದ ಅಬ್ಬಾಸ್(ರ) ಆಗಿದ್ದಾರೆ (ಫತ್ಹುಲ್ ಬಾರೀ: 11-403)

ಫಿರ್'ಔನ್ ಮತ್ತು ಕಿಂಕರರನ್ನು ನದಿಯಲ್ಲಿ ಮುಳುಗಿಸಿ ನಾಶಪಡಿಸಿದ 'ಅನುಗ್ರಹ' ಸ್ಮರಿಸಿ ಬನೂ ಇಸ್ರಾಈಲರು ಮುಹರ್ರಂ ಹತ್ತನ್ನು ಗೌರವಿಸಿದ ಹಾಗೂ ನೆಬಿ(ಸ್ವ)ರೂ ಆ ಗೌರವ ಪ್ರಕಟಿಸಿ ವೃತಾನುಷ್ಠನ ಸುನ್ನತ್ ಮಾಡಿದ ಹದೀಸ್ ಆಧಾರವಾಗಿಸಿ ಹಾಫಿಳ್ ಇಬ್ನು ಹಜರ್(ರ) ಪ್ರಸ್ತಾವಿಸಿದ್ದಾಗಿ ಇಮಾಂ ಸುಯೂತ್ವೀ (ರ) ಉಲ್ಲೇಖಿಸುತ್ತಾರೆ: "ಒಂದು ನಿಶ್ಚಿತ ದಿನದಲ್ಲಿ ಅಲ್ಲಾಹನಿಂದ ಅನುಗ್ರಹವೊಂದು ಲಭಿಸಿದರೆ ಪ್ರತೀ ವರ್ಷ ಆ ದಿನ ಬರುವಾಗ ಅದಕ್ಕೆ ಕೃತಜ್ಞತೆ ಅರ್ಪಿಸಬೇಕೆಂದು ಈ ಹದೀಸ್ ತಿಳಿಸುತ್ತದೆ. ನೆಬಿ(ಸ್ವ) ರಬೀಉಲ್ ಅವ್ವಲ್ ಹನ್ನೆರಡರಂದು ಜನಿಸಿದರೆಂಬ ಅನುಗ್ರಹಕ್ಕಿಂತ ದೊಡ್ಡ ಅನುಗ್ರಹ ಬೇರೇನಿದೆ? ಆದ್ದರಿಂದ ಆ ದಿನವನ್ನೇ ಪ್ರತ್ಯೇಕವಾಗಿ ಗಣಿಸಿ ಕೃತಜ್ಞತೆ ಅರ್ಪಿಸಬೇಕು. ಇದನ್ನು ನೆಬಿದಿನಾಚರಣೆಗೆ ಒಂದು ಮೂಲಾಧಾರವಾಗಿ ಪರಿಗಣಿಸಬಹುದು" (ಅಲ್ ಹಾವೀ ಲಿಲ್ ಫತಾವಾ: 1-196)

ನೆಬಿದಿನಾಚರಣೆಯ ರೂಪವನ್ನು ಇಮಾಂ ಸುಯೂತ್ವೀ (ರ) ವಿವರಿಸುವುದು ಹೀಗೆ: "ಖುರ್'ಆನ್ ಪಾರಾಯಣ, ನೆಬಿ(ಸ್ವ)ರ ಮದ್'ಹ್ ಪಾರಾಯಣ, ಸ್ವದಖಾ, ಅನ್ನದಾನ ಮುಂತಾದವುಗಳಿಂದ ಧನ್ಯವಾದದ್ದೂ, ಸತ್ಕರ್ಮಗಳತ್ತ ಜನರ ಗಮನವನ್ನು ಸೆಳೆಯುವಂತದ್ದೂ ಆಗಿರಬೇಕು ನೆಬಿದಿನಾಚರಣೆ" (ಫತಾವಾ ಸುಯೂತ್ವೀ: 1-196)

ಇಸ್ಮಾಈಲುಲ್ ಹಿಖ್ಖೀ(ರ) ಹೇಳುತ್ತಾರೆ: "ನೆಬಿ (ಸ್ವ)ರ ಜನ್ಮ ದಿನದಲ್ಲಿ ಕೃತಜ್ಞತೆ ಅರ್ಪಿಸುವುದು ಸುನ್ನತ್ತಾಗಿದೆ"
(ರೂಹುಲ್ ಬಯಾನ್ 9-56)

ಇಮಾಂ ನವವೀ(ರ)ರವರ ಉಸ್ತಾದರಾದ ಅಬೂಶಾಮ(ರ) ಹೇಳುತ್ತಾರೆ: "ನೆಬಿ(ಸ್ವ)ರ ಜನ್ಮದಿನದಲ್ಲಿ ಮಾಡುವ ಸತ್ಕರ್ಮಗಳು, ದಾನಧರ್ಮಗಳು, ಸಂತೋಷಾಚರಣೆ ಇತ್ಯಾದಿಗಳು ಒಳ್ಳೆಯ ಸಂಪ್ರದಾಯಗಳಾಗಿವೆ"
(ಅಲ್ ಬಾಇಸ್: 230)

ಇಮಾಂ ಶೈಬಾನೀ(ರ) ಹೇಳುತ್ತಾರೆ: " ನೆಬಿ(ಸ್ವ) ಜನಿಸಿದ ದಿನ ಆಚರಿಸಲ್ಪಡಲು ಅತ್ಯಂತ ಅರ್ಹವಾಗಿದೆ "
(ಹದಾಇಖುಲ್ ಅನ್ವಾರ್: 1-190)

'ನೆಬಿ(ಸ್ವ) ವಫಾತಾದ ದುಃಖ ಮಾಸವೂ ಅಲ್ಲವೇ ರಬೀಉಲ್ ಅವ್ವಲ್?' ಎಂಬ ಪ್ರಶ್ನೆಗೆ ಇಮಾಂ ಸುಯೂತ್ವೀ (ರ) ಉತ್ತರಿಸುತ್ತಾರೆ: "ನಿಶ್ಚಯವಾಗಿಯೂ ನೆಬಿ(ಸ್ವ)ರ ಜನನ ನಮಗೆ ಲಭಿಸಿದ ಅತ್ಯಂತ ದೊಡ್ಡ ಅನುಗ್ರಹವಾಗಿದೆ. ನೆಬಿ(ಸ್ವ)ರ ವಫಾತ್ ನಮಗೆ ಉಂಟಾದ ಅತ್ಯಂತ ದೊಡ್ಡ ಮುಸೀಬತ್ ಸಹಾ ಹೌದು. ಅನುಗ್ರಹಗಳಿಗೆ ಕೃತಜ್ಞತೆ ಅರ್ಪಿಸಲೂ, ಮುಸೀಬತ್ ಗಳಿಗೆ ಸಹನೆ ಪಾಲಿಸಲೂ ಆಗಿದೆ ಶರೀಅತ್ ಆಜ್ಞಾಪಿಸುವುದು" (ಅಲ್ ಹಾವೀ ಲಿಲ್ ಫತಾವಾ: 1-256)

ಕೊನೆಗೊಂದು ಮಾತು, ನೆಬಿದಿನ ಆಗಮಿಸುವಾಗ ಎಂದಿಗಿಂತ ಹೆಚ್ಚಾಗಿ ಮುಸ್ಲಿಂ ಲೋಕವು ಆಹ್ಲಾದ ವ್ಯಕ್ತಪಡಿಸುತ್ತದೆ. ಟೀಕೆಗಳೊಂದಿಗೆ ಪ್ರವಾದಿ ಕೀರ್ತನೆಗಳಿಂದ ದೂರ ನಿಲ್ಲುವವರು ಮತ್ತೆ ಯಾವಾಗ ಅದನ್ನು ನಿರ್ವಹಿಸುತ್ತಾರೆ? ನೆಬಿ(ಸ್ವ)ರ ಮದ್'ಹ್ ಹೇಳಬಹುದೆಂದೂ, ಅದು ರಬೀಉಲ್ ಅವ್ವಲ್ ಹನ್ನೆರಡರಂದು ಸಲ್ಲದೆಂದೂ ಹೇಳುವವರು ಬೇರೆ ಯಾವ ಸಂದರ್ಭದಲ್ಲೂ ಮದ್'ಹ್ ಕೀರ್ತನೆಗಳನ್ನು ನಡೆಸುವುದಿಲ್ಲ. ಇವರಿಗೆ ನೆಬಿದಿನದ ಆಗಮನವೇ ಒಂಥರಾ ಬೇಜಾರಾಗಿದೆ. ಅಲ್ಲದಿದ್ದರೂ ನೆಬಿ(ಸ್ವ)ರು ದಿನಾ ನೂರು ಪಾಪ ಮಾಡುವ ಮಹಾ ಪಾಪಿ ಎಂದು ಕರೆಯುವವರಿಗೆ ಬೇರೇನು ಮಾಡಲಾದೀತು?

🖋 *ಸಿರಾಜುದ್ದೀನ್ ನಿಝಾಮಿ ಕೂಳೂರು*

Thursday, November 16, 2017

ಊರಿನ ಜುಮುಆ ಮಸೀದಿಯ ವಠಾರದಲ್ಲಿ *ಮುಖಾಮುಖಿ* ಕಾರ್ಯಕ್ರಮ ಅಯೋಜಿಸಲಾಗಿತ್ತು. ಸುನ್ನಿ ಆಶಯ ಆದರ್ಶವನ್ನು ಎದುರಿಸಲು  ಯುವಕರು ದೊಡ್ಡ *ಆಲಿಮುಲ್ ಅಲ್ಲಾಮರನ್ನು* ನಕಲಿ ಸಲಫಿ ಮೌಲವಿ ಕರೆಸಿದ್ದರು.
 ಈ ಮೌಲವಿ ಸಾರ್ವಜನಿಕವಾಗಿ ಯುವಕರ ದಾರಿ ತಪ್ಪೀಸುತ್ತಿದ್ದ ಮಾಲೆ ಹಾಡುವುದು ಅದು ಪಿರ್ಕ್  ಕುರ್'ಆನಿನಲ್ಲಿ ತೋರಿಸಿ ಅಂತಾ  ?

ಹಾಗೆ ಮುಖಾಮುಖಿ ಶುರುವಾಯಿತು. ಆದರೆ  ಸುನ್ನಿ  ಯನ್ನೂ ಕಾಣಲಿಲ್ಲ. ಯಾಕೆ ಅಂದರೆ ಕೆಲವೊಂದು ಸಾರಿ ಈ ನಕಲಿ ಮೌಲವಿ ವಾಟ್ಸಪ್ ಲ್ಲಿ ದೊಡ್ಡ ಕೋಜಾ ಈ ಸಲಫಿ

ವೇದಿಕೆಯಲ್ಲಿ ಕೇರಳದಲ್ಲಿ ನ ಸಲಫಿ ನೇತಾರ ಫೈಸಲ್ ನಕಲಿ ಮೌಲವಿ ತಮ್ಮ ದೈನಂದಿನ ಸುಳ್ಳನ್ನು ಮುರೀದ್'ಗಳ ಮುಂದೆ ನಾನೆಷ್ಟು ದೊಡ್ಡ ಸುಳ್ಳುಗಾರನೆಂದು ಸಾಬೀತು ಪಡಿಸುತಿದ್ದರು.

ಸುನ್ನಿ ಗಳು ಹೆದರಿ ಓಡಿದರು ಎಂದು ಭಾವಿಸಿ ಮೌಲವಿ ಗಳು ತಮಾಷೆ ಮಾಡುತಿದ್ದರು.

ಮುರೀದ್'ಗಳು  ಕೇಕೇ ಹಾಕುತಿದ್ದರು.

ಆಗ ಜನಜಂಗುಳಿಯ ನಡುವಿನಲ್ಲಿ *ಎಳೆವಪ್ರಾಯದ  ಓರ್ವ  ಟೊಪ್ಪಿ ದರಿಸಿ ಇನ್ನೂಬರ ಮುಂದೆ ತುಂಬಾ ಉತ್ತಮ ಗಡ್ಡದಾರಿ ಯುವಕ* ವೇದಿಕೆ ಹತ್ತಿರ ಬರುತಿದ್ದ.

ಇದನ್ನು ನೋಡಿದ  ಸಲಫಿ ಫೈಸಲ್ ನಕಲಿ ಮೌಲವಿ ಹೇಳಿ ಯೇ ಬಿಟ್ಟರು ಮಗು ಬಂದಿದ್ದಾನೆ ನನಗೆ ಉತ್ತರ ಕೊಡಲು ಹ ಹ ಹ ಎಂದು ವಿಚಿತ್ರ ರೀತಿಯಲ್ಲಿ ವರ್ತಿಸಿದರು.

ಸುನ್ನಿ ಹುಡುಗ ತನ್ನನ್ನು ಪರಿಚಯಿಸಿ ಹೇಳಿದ ಮೌಲವಿ ನಾನು ನಿಮ್ಮಲ್ಲಿ ಒಂದು ಪ್ರಶ್ನೆ ಕೇಳುತ್ತೇನೆ ಉತ್ತರಿಸುತ್ತೀರಾ?

ಮೌಲವಿ : ಧೈರ್ಯವಿದ್ದರೆ ಕೇಳು ಎಂದರು

ಜನರು ಒಟ್ಟು ಸೇರಿದರು ಅಲ್ಲಿಯವರಲ್ಲ ಎಲ್ಲಿಂದ ಲ್ಲ ಬಂದ ನಕಲಿ ಸಲಫಿ,  ನಮ್ಮ ಮೌಲವಿ ಇವನಿಗೆ ಬುದ್ದಿ ಕಲಿಸಲಿದೆ ಎಂದು ಕಣ್ಣಿಗೆ ಎಣ್ಣೆ ಹಾಕಿ  ಕೈ ಕಟ್ಟಿ ನೋಡಲು ಶುರು ಮಾಡಿದರು


ಸುನ್ನಿ ಯುವಕ: : ಮೌಲವಿ  *ಮೊಹ್ಯುದ್ದೀನ್ ಶೈಖ್*ಮಾಲಾ ಅದೆಲ್ಲ ,ಮಾತ್ರ ವಲ್ಲ ಮಾಲ ನೀವು ಪಿರ್ಕ್ ಅನ್ನುತ್ತೀರ ,ಹಾಗದರೇ 👉🏼
ಸಲಫಿ ಮೌಲವಿ  ಒಬ್ಬರು ಕೇರಳದಲ್ಲಿ ತೀರಿ ಹೋದರು ಅವರ ಮಾಲೆ ಮಾಡಿದ್ದೀರಲ್ಲ ಅದು , ಯಾವುದು ಪಿರ್ಕಾ ಸರ್ಕಾ  ?

   ಸುನ್ನಿ ಮಾಡಿದರೆ ಪಿರ್ಕ್ ,ಹಾಗದರೇ ನೀವು ನಿಮ್ಮ ನಾಯಕ ಕೇರಳದಲ್ಲಿ ತೀರಿ ಹೋದ ನಕಲಿ ಮೌಲವಿ ಮಾಲೆ ಅದು , ಕುರ್'ಆನಿನಲ್ಲಿ ಇದೆಯಾ?



ಮೌಲವಿ ಜೋರಾಗಿ ನಕ್ಕರು: ಸುನ್ನಿ ಗಳಿಗೆ ಬುದ್ದಿಯಿಲ್ಲ ಎಂದು ಹೇಳುವುದು ಇದಕ್ಕೆ.ಇವರ ಉಸ್ತಾದ್ ಇದೆ ಕಳಿಸುವುದು. ಅಂತ

 ಕೇರಳದಲ್ಲಿ ತೀರಿ ಹೋದ ಮೌಲವಿ ರವರ ಜನನಕ್ಕಿಂತ ಎಷ್ಟೋ ವರ್ಷಗಳ ಮುಂಚೆ ಕುರ್'ಆನ್ ಅವತೀರ್ಣವಾದದ್ದು.
 ಮತ್ತೆ ಆ ಮಾಲವಿ ಯವರ ಹೆಸರು ಹೇಗೆ ಕುರ್'ಆನಿನಲ್ಲಿ ಇರುತ್ತೇ?



ಮೌಲವಿ ಕೇಳಿದ ಪ್ರಶ್ನೆಗೆ ಅಲ್ಲಿದ್ದ ಮುರೀದ್'ಗಳು ಚಪ್ಪಾಳೆ ತಟ್ಟಿದರು ನಗು ಮೊಳಗಿಸಿದರು .


 ಅವರಿಗೆ ಮೌಲವಿ ಯ ಮುಂದೆ ಸುನ್ನಿ ಮಂಡಿಯೂರಿದ ಎಂಬ ಖುಷಿಯಾಗಿತ್ತು.

.

ಸುನ್ನಿ:
ಓಹ್ ಹಾಗಾದರೆ ,  ತೀರಿ ಹೋದ ಸಲಪಿ ಮಾಲವಿಯವರ ಹೆಸರು ಕುರ್'ಆನಿನಲ್ಲಿದೆ ಎಂದು ಹೇಳಿದರೆ ಅವನು ಬುದ್ದಿಯಿಲ್ಲ ಎಂದೇ?

ಸಲಪಿ: ಅದರಲ್ಲಿಯೂ ನಿನಗೆ ಸಂಶಯವೇ? ಹ ಹ ಹ

(ಸಲಪಿ ಚಪ್ಪಾಳೆ ಮುಖಾಮುಖಿ ನಡೆಯುವ ಮೊದಲೇ ಶುರುವಾಗಿತ್ತು.)

ಸುನ್ನಿ ಯುವಕ:   ಮಾಲವಿ ಇನ್ನೊಂದು ಪ್ರಶ್ನೆ ಕೇಳಲೇ?

ಸಲಫಿ: ನೀನು ಎಲ್ಲಾ ಪ್ರಶ್ನೆ ಕೇಳಿ ಸಂಶಯ ನಿವಾರಣೆ ಮಾಡಿ  ಜಿನ್ನ ಸಲಫಿ ಗೆ  ಮರಳಿ ಬರಬೇಕು.

ಸುನ್ನಿ: ನಾನು ಪ್ರಶ್ನೆ ಕೇಳುತ್ತೇನೆ.

ಸಲಪಿ ಪೆಸ್ಟ್ ಮಾಡಿ ಎಂಬ ಕುರ್'ಆನಿನಲ್ಲಿ ಇದೆಯಾ?

ಸಲಪಿ: ಹಾಗೆ ಇಲ್ಲ

ಸುನ್ನಿ: ಹಾಗಾದರೆ ಕುರ್'ಆನಿನಲ್ಲಿ ಇಲ್ಲದ ಸಲಫಿ ಪೆಸ್ಟ್ ನ್ನು ಕುರ್'ಆನಿನಲ್ಲಿ ತೋರಿಸಿದರೆ  ನಾನು ನಿಮ್ಮ ಸಲಫಿ ಸ್ವಿಕರಿಸುವೇ,


 ಕುರ್'ಆನಿನಲ್ಲಿ ಕೇರಳದಲ್ಲಿ ಸಲಪಿ ಶೈಖ್ ಅದೇ ನೀವು ಮಾಡಿದ ಮಾಲೆ  ತೋರಿಸಿ,


ಮಾಲವಿ:  ಬ ಬ ಬ ಬ
ಅದು  ...ಅದು..ಅದು ಕೂ ಕೂ ಬಾ

ಇಂಗು ತಿಂದ ಮಂಗನಂತಾದ ಮೌಲವಿ ಚಿಂತಾಜನಕ ಅವಸ್ಥೆ ನೋಡಿದ ಜನರು ಮೆಲ್ಲನೆ ಜಾಗ ಖಾಲಿ ಮಾಡಲು ಶುರು ಮಾಡಿದರು...

ಆಗ ಮೈಕ್ ಯಾರೋ ಅನೌನ್ಸ್ ಮಾಡಿದರು

*ಮೌಲವಿಗೆ ಬೇರೆ ಕಡೆ ಜಿನ್ನ್ ಪ್ರಭಾಷಣೆ ಇರುವುದರಿಂದ ತುಸು ಬೇಗ ಹೋಗುತ್ತಾರೆ. ಜೊತೆಗೆ ಅನಾರೋಗ್ಯದ ಕಾರಣವು ಇದೆ*

*ಯಾರೂ ಮೌಲವಿ ಸೋತು ಕಾಲ್ಗಿತ್ತುತ್ತಾರೆ ಎಂದು ಭಾವಿಸಬೇಡಿ😂😂😂*


ಇನ್ನೊಂದು ನಾವು ಮಾಲೆ ಮಾಡಿದ್ದು .ಹುಸೇನ್ ಸಲಫಿ ಧರ್ಮ,
ಅದು ಮಾಲೆ ಮಾಡಿದ್ದು ಬಾಲುಶ್ಯರಿ ಮಾಡಿದ್ದು.

ಮತ್ತೆ ಸುನ್ನಿ ಸಹೋದರ! ಸುನ್ನಿ ಒಂದೇ ಆಶಯ.
ಹಾಗದರೇ ನಿಮ್ಮ ಲ್ಲಿ 9 ಪಂಗಡ. ಆಶಯ 19.
 ಏನು ಇಸ್ಲಾಂ ನಿಮ್ಮ ಬೆಲಿಪ್ಪನ ಸೂತ್ತ.
ಬಾಲು ಸಲಫಿ ಬೇರೆ.
ಹುಸೇನ್ ಬೇರೆ.
ಝಕರಿಯ ಬೇರೆ.
ವರುಷ ಕ್ಕೆ ಒಂದು ದೀನ್ ತೂ ನಿಮ್ಮ ಜನ್ಮಕ್ಕೆ.😁


*ಸುನ್ನಿ ✍🏻*
*ಇಬ್ರಾಹಿಮಿ ಸ್ವಲಾತಿನ ಮಹತ್ವ*🌹🌹🌹🌷🌷

🍀🍀🍀🍀🍀🍀🍀🍀📚📚📚📚📚📚📚📚

ಈ ಸ್ವಲಾತ್ ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿವ ಸಲ್ಲಮರಿಗೆ ಹೇಳುವ ಸ್ವಲಾತ್ ಗಳ ಪ್ರಯೋಗಾತ್ಮಕ ರೂಪಗಳ ಪೈಕಿ ಅತ್ಯಂತ ಪರಿಪೂರ್ಣ ವಾದದ್ದು .   
ಬುಖಾರಿ (ರ). 
ಮುಸ್ಲಿಂ (ರ)..
ಮಾಲಿಕ್ (ರ).       
ಅಬೂ ದಾವೂದ್(ರ).
ತುರ್ಮುಡ್ಝಿ (ರ)
ನಸಾಯಿ ,(ರ)
 ವರದಿ ಮಾಡಿದ ಹದೀಸ್ ಇದು.ಈ ಸ್ವಲಾತ್ ಅದನ್ನು ಹೇಳಿದವರಿಗೇ ಪರಲೋಕದಲ್ಲಿ ಆತ ಹುತಾತ್ಮ ನೆಂದು ಸಾಕ್ಷ್ಯ ವಹಿಸುವುದು ಎಂಬ ಹದೀಸ್ ಅನ್ನು ಬುಖಾರಿ (ರ)ರವರು ತನ್ನ ಕೆಲವು ಗ್ರಂಥಗಳಲ್ಲಿ ದಾಖಲಿಸಿರುವುದಾಗಿ ಶೈಖ್ ಅಹ್ಮದ್ ಸ್ವಾವಿ(ರ) ಪ್ರಸ್ತಾಪಿಸಿದ್ದಾರೆ.
    ಈ ಸ್ವಲಾತನ್ನು ಸಾವಿರಬಾರಿ ಹೇಳಿದವನಿಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ರವರ ಕನಸು ಖಂಡಿತ ಕಾಣುವುದು ಎಂದು ಉಲಮಾಗಳು ಖಚಿತಪಡಿಸಿದ್ದಾರೆ  (ಸಅದತ್-17)

☪ *اَللَّهُمَّ صَلِّ عَلَى سَيِّدِنَا مُحَمَّدٍ وَّ عَلَى آلِ سَيِّدِنَا مُحَمَّدٍ كَمَا صَلَّيْتَ عَلَى سَيِّدِنَا إِبْرَاهِيمَ وَعَلَى آل سَيِّدِنَا ِ إِبْرَاهِيمَ وبَارِكْ عَلَى سَيِّدِنَا مُحَمَّدٍ وَّ عَلَى آلِ سَيِّدِنَا مُحَمَّدٍ كَمَا بَارَكْتَ عَلَى سَيِّدِنَا إِبْرَاهِيمَ وَعَلَى آلِ سَيِّدِنَا إِبْرَاهِيم فِى الْعَالَمِينَ إِنَّكَ حَمِيدٌ مَجِيدْ*

ಅಲ್ಲಾಹುಮ್ಮ ಸ್ವಲ್ಲಿ ಅಲಾ ಸಯ್ಯಿದಿನಾ ಮುಹಮ್ಮದಿನ್ ವಅಲಾ ಆಲಿ ಸಯ್ಯಿದಿನಾ ಮುಹಮ್ಮದಿನ್ ಕಮಾಸ್ವಲ್ಲಯ್ತ  ಅಲಾ ಸಯ್ಯಿದಿನಾ ಇಬ್ರಾಹಿಮ ವಅಲಾ ಆಲಿ ಸಯ್ಯಿದಿನಾ ಇಬ್ರಾಹಿಮ ವಬಾರಿಕ್ ಅಲಾ ಸಯ್ಯಿದಿನಾ ಮುಹಮ್ಮದಿನ್ ವ ಅಲಾ ಆಲಿ ಸಯ್ಯಿದಿನಾ ಮುಹಮ್ಮದಿನ್ ಕಮಾ ಬಾರಕ್ತ ಅಲಾ ಸಯ್ಯಿದಿನಾ ಇಬ್ರಾಹಿಮ ವ ಅಲಾ ಆಲಿ ಸಯ್ಯಿದಿನಾ ಇಬ್ರಾಹಿಮ ಫಿಲ್ ಆಳಮೀನ ಇನ್ನಕ ಹಮೀಧುನ್ ಮಜೀದ್

✳✳✳✳✳✳✳✳

*Sallu alal habeeb*ﷺ
✍ *ಅಬೂ ಆಶಿಕ್*
ಬಿ.ಕೆ ಯೂನುಸ್ ಇಮ್ದಾದಿ ಮಂಗಳಪದವು


ನೀನ್ಯಾಕೆ ಹೀಗಾದೆಯೋ ಗೊತ್ತಾಗ್ತಾ ಇಲ್ಲ. ನೂರಾರು ವರ್ಷಗಳಿಂದ ಪೂರ್ವಿಕ ಮಹಾತ್ಮರು ಅಂಗೀಕರಿಸಿದ ಹಲವಾರು ಪುಣ್ಯ ಕರ್ಮಗಳು ನಿನಗೆ ಕಂದಾಚಾರ ಹಾಗೂ ಬಿದ್‍ಅತಾಗಿ ಕಾಣಿಸಿತು. ಪುರಾವೆಗಳ ಪೂರ್ಣ ಪಾಠವನ್ನು ಅರ್ಥೈಸುವಲ್ಲಿ ಎಡವಿದ್ದರಿಂದ ದಿಕ್ಕುದೆಸೆಯಿಲ್ಲದ ವಾದಗಳು ನಿನ್ನಿಂದ ಬರತೊಡಗಿತು. ನೀನು ಹಾಗೂ ನಿನ್ನಂತವರು ಮಾಡಿದ ಬಹುದೊಡ್ಡ ತಪ್ಪೆಂದರೆ ಪೂರ್ವಿಕ ಇಮಾಮರನ್ನು ಬಿಟ್ಟು ಡೈರೆಕ್ಟಾಗಿ ಕುರ್‍ಆನ್ ಹಾಗೂ ಹದೀಸ್‍ಗೆ ದುಮುಕ ಹೊರಟದ್ದು. ಥೇಟ್ ಈಜಲು ತಿಳಿಯದವ ಸಮುದ್ರಕ್ಕಿಳಿದಂತೆ, ಡ್ರೈವಿಂಗ್ ಕಲಿಯದೆ ಗಾಡಿ ಚಾಲನೆಗೆ ಪ್ರಯತ್ನಿದಸಿದವನಂತೆ, ವೈದ್ಯಶಾಸ್ತ್ರ ಕಲಿಯದೆ ಡಾಕ್ಟರಾಗಲು ಹೊರಟಂತೆ... ನಿಜಕ್ಕೂ ನೀನು ಪ್ರಯತ್ನಿಸ ಹೊರಟದ್ದು ಅಂತ್ಯ ನೀಚವಾಗುವ ಕಾರ್ಯಕ್ಕೆ.

ನೋಡು... ನೀನು ಸ್ವಲ್ಪ ಅರ್ಥ ಮಾಡಿಕೋ. ಹಠ ಬಿಟ್ಟು ತೆರೆದ ಮನದೊಂದಿಗೆ ನನ್ನ ಮಾತು ಸ್ವಲ್ಪ ಕೇಳು. ಸುನ್ನಿಗಳನ್ನು ಮುಶ್ರಿಕ್ ಅಂತ ಕರೆದೆ, ಕುರಾಫಿಗಳು ಅಂದೆ, ಜನರನ್ನು ನರಕಕ್ಕೆ ಕರೆದೊಯ್ಯುವರು ಅಂತ ಪ್ರಚಾರ ಪಡಿಸಿದೆ... ಈ ಮಾತಿನ ಗೌರವವನ್ನು ನೀನೆಂದಾದರೂ ಊಹಿಸಿದ್ದೀಯಾ? ನಿನ್ನ ನೇತಾರರು ಸುನ್ನಿಗಳ ಬಗ್ಗೆ ಏನು ಹೇಳಿದರೂ ಅದನ್ನು ಕಣ್ಣು ಮುಚ್ಚಿ ನೀನು ನಂಬಿದೆ. ಸುನ್ನಿಗಳಾದ ನಾವು ಪಾಲಿಸುವ ಆಚಾರ ವಿಚಾರಗಳು ಪೂರ್ವಿಕರಾದ ಮಹಾತ್ಮರು ಆಚರಿಸಿದ್ದರೆಂಬ ಸತ್ಯವನ್ನು ನೀನೇಕೆ ಒಪ್ಪುತ್ತಿಲ್ಲ..? ನೋಡು...

ನಮ್ಮೆಲ್ಲರಿಗಿಂತಲೂ ಎಲ್ಲಾ ರೀತಿಯಿಂದಲೂ ಜ್ಞಾನಿಗಳು ಹಾಗೂ ಶ್ರೇಷ್ಠರಾಗಿದ್ದರು ಪೂರ್ವಿಕ ಮಹಾತ್ಮರು. ಕುರ್‍ಆನ್, ಹದೀಸ್, ಇಜ್‍ಮಾಅï, ಕಿಯಾಸ್‍ಗಳ ಬಗ್ಗೆ ಆಳವಾಗಿ ತಿಳಿದವರೂ, ಗ್ರಂಥ ರಚಿಸಿದವರೂ ಅವರೇ. ಹಾಗಿರುವಾಗ ಅವರನ್ನೆಲ್ಲ ಬಿಟ್ಟು ನಾವೇ ಸ್ವತಃ ಸಂಶೋಧನೆಗಿಳಿಯೋಣ ಎಂಬ ನಿನ್ನ ವಾದವು ಬಹುದೊಡ್ಡ ಆಪತ್ಕಾರಿ. ಸುನ್ನೀ ಹಾಗೂ ಸುನ್ನೀಯೇತರರ ಮದ್ಯೆಯಿರುವ ಯಾವುದೇ ತಾರ್ಕಿಕ ಸಂಗತಿಗಳನ್ನು ತೆಗೆದು ನೋಡಿದರೂ ಪೂರ್ವಿಕ ಸರಣಿಯಿಂದ ನೀನು ಎಷ್ಟೊಂದು ವ್ಯತಿ ಚಲಿಸಿದ್ದಿ ಎಂದು ಸ್ಪಷ್ಟವಾಗಿ ಗೋಚರವಾಗಬಹುದು.

  ಸರಿಯಾಗಿ ಅರಬಿ ತಿಳಿಯದ , ಕಿತಾಬ್ ಕಲಿಯದ ನೀನು ಒಂದಿಷ್ಟು ಪೇಸ್‍ಬುಕ್, ವಾಟ್ಸಫ್, ಅಥವಾ ಒಂದೆರಡು ಪತ್ರಿಕೆ, ನೋಟಿಸುಗಳಲ್ಲಿ ಏನಾದರೂ ಪೋಸ್ಟ್ ಮಾಡಿದರೆ ಅಥವಾ ಬರೆದರೆ ನೀನೇ ದೊಡ್ಡ ವಿದ್ವಾಂಸ ಎಂಬ ಹುಚ್ಚು ಅಹಂಕಾರ ಖಂಡಿತಾ ಒಳ್ಳೆಯದಲ್ಲ. ವಿಷಯದ ಬಗ್ಗೆ ಆಳವಾಗಿ ಕಲಿ. ಸತ್ಯವೆಂದು ಮನವರಿಕೆಯಾದರೆ ಹಠಮಾರಿತನ ಬಿಟ್ಟು ಅದನ್ನು ಒಪ್ಪುವುದು ನಿನ್ನ ಪರಲೋಕ ರಕ್ಷಗೆ ಒಳಿತು.

ಇದು ರಬೀಯುಲ್ ಅವ್ವಲ್ ತಿಂಗಳು. ಜಗತ್ತಿನ ಮುಸ್ಲಿಮರೆಲ್ಲರೂ ಅತ್ಯಂತ ಸಂತೋಷ ಪಡುವ ತಿಂಗಳಿದು. ಕಾರಣ ನಾನು ಬಿಡಿಸಿ ಹೇಳಬೇಕಾಗಿಲ್ಲ ತಾನೇ?. ಆದರೆ ನೀನು ಇಲ್ಲೂ ತಕರಾರು ತೆಗೆದೆ. ತಲೆ ಬುಡವಿಲ್ಲದ ಹಲವಾರು ಪ್ರಶ್ನೆಗಳನ್ನು ಜನರ ಮುಂದಿಟ್ಟು ಅವರನ್ನು “ವಸ್‍ವಾಸ್”ಗೆ ತಲುಪಿಸಲು ಪ್ರಯತ್ನಿಸಿದೆ. ನಿಜಕ್ಕೂ ನೀನು ನೆಬಿ ಜನ್ಮ ದಿನವನ್ನು ವಿರೋಧಿಸಿದ್ದು ಪುರಾವೆಗಳ ಬೆಂಬಲವಿಲ್ಲ ಎಂಬ ಕಾರಣಕ್ಕಾಗಿಯೇ...? ಅಲ್ಲ.. ಖಂಡಿತಾವಾಗಿಯೂ ಅಲ್ಲ, ಯಾಕೆಂದರೆ ನೆಬಿ ಜನ್ಮ ದಿನಾಚರಣೆಯ ಪುರಾವೆಗಳನ್ನು  ಸಾಕಷ್ಟು ಬಾರಿ ನಿನಗೆ ತಿಳಿಸಿಯಾಗಿದೆ. ಅದ್ಯಾವುದನ್ನೂ ನೀನು ಅಂಗೀಕರಿಸುತ್ತಿಲ್ಲ. ಕಾರಣ ನಿನ್ನ ಮೊಂಡು ಹಠ. ಸುಳ್ಳನ್ನು ಹಲವಾರು ಬಾರಿ ಪುನಾರಾವರ್ತಿಸಿ ಹೇಳಿದರೆ ಜನ ಸತ್ಯವೆಂದು ನಂಬುವರೆಂಬ ಗೊಡ್ಡು ಸಿದ್ಧಾಂತದಂತೆ ನೀನು ಪ್ರತೀ ಬಾರಿ ರಬೀಉಲ್ ಅವ್ವಲ್ ಬಂದಾಗಲೂ “ಅದೇ ಹಾಡು ಅದೇ ರಾಗ”ವೆಂಬಂತೆ ಸುಳ್ಳಿನ ಕಂತೆಗಳನ್ನು ಪ್ರಚಾರ ಪಡಿಸುತ್ತಿ.

ಸುನ್ನಿಗಳು ರಬೀಉಲ್ ಅವ್ವಲ್ ಹನ್ನೆರಡರಂದು ನೆಬಿ ಜನ್ಮ ದಿನಾಚರಣೆಯನ್ನು ಆಚರಿಸುವಾಗ ನಿನ್ನಂತಹ ಕೆಲವರು ಕೇಳುವ ಪ್ರಶ್ನೆ, ಜನ್ಮ ದಿನಾಚರಣೆ ಇಸ್ಲಾಮಿನ ಲ್ಲಿದೆಯೇ? ನೆಬಿ(ಸ.ಅ)ರಾಗಲೀ ಸ್ವಹಾಬಿಗಳಾಗಲೀ ಜನ್ಮ ದಿನವನ್ನು ಆಚರಿಸಿದ್ದಾರೆಯೇ?... ಹೀಗೆ ಉದ್ದ ಬೆಳೆಯುತ್ತಿದೆ ನಿನ್ನ ಪ್ರಶ್ನೆಯ ಪಟ್ಟಿ. ಜನ್ಮ ದಿನಾಚರಣೆ ಅಥವಾ ಮಿಲಾದುನ್ನಬಿ ಎಂದು ಹೆಸರಿಟ್ಟ ಮಾತ್ರಕ್ಕೆ ಅದು ಬಿದ್‍ಅತ್ ಅಥವಾ ಅನಿಸ್ಲಾಮಿಕವಾಗಿ ನಿನಗೆ ಕಾಣಿÉಸುತ್ತಿದೆಯಲ್ಲಾ... ನಿಜವಾಗಿಯೂ ನೀನು ಚಿಂತಿಸಿದ್ದೀಯಾ? ಈ ಮೀಲಾದುನ್ನಬಿ ಎಂಬ ಆಚರಣೆಯಂದು ಸುನ್ನಿಗಳು ಮಾಡುವ ಕಾರ್ಯಗಳಾವುದೆಂದು ಒಂದ್ಹತ್ತು ನಿಮಿಷ ಕುಳಿತು ಆಲೋಚಿಸು, ನಂತರ ಹೇಳು ಈ ಆಚರಣೆಯಲ್ಲಿ ಯಾವುದು ಅನಿಸ್ಲಾಮಿಕವೆಂದು. ಅದನ್ನು ಚಿಂತಿಸುವ ವ್ಯವದಾನ ನಿನಗಿಲ್ಲದಿದ್ದರೆ ಬೇಡ ಬಿಡು, ನಾನೇ ಹೇಳ್ತೀನಿ... ಆ ಮೇಲೆ ನೀನೇ ತೀರ್ಮಾನ ಮಾಡು ನಿನ್ನ ವಾದವು ಎಷ್ಟೊಂದು ಮೂರ್ಖತನದಿಂದ ಕೂಡಿದ್ದೆಂದು. ಸುನ್ನಿಗಳಾದ ನಾವು ಮೀಲಾದುನ್ನಬಿಯಂದು ಮಾಡುವ ಪ್ರಮುಖ ಕಾರ್ಯಗಳೆಂದರೆ...

1)ನೆಬಿ(ಸ.ಅ)ರವರ ಸ್ವಲಾತ್ ಹಾಗೂ ಮದ್‍ಹ್ ಹೇಳುವುದು

2)ನೆಬಿ(ಸ.ಅ)ರವರ ಕೀರ್ತನೆಗಳನ್ನು ಹೇಳುತ್ತಾ ರ್ಯಾಲಿ ನಡೆಸುವುದು.

3)ನೆಬಿ(ಸ.ಅ)ರವರ ಮೇಲಿನ ಪ್ರೀತಿಯಿಂದ ಆ ದಿನ ಅನ್ನದಾನ ನೀಡುವುದು.

4)ವಿದ್ಯಾರ್ಥಿಗಳಿಂದ ನೆಬಿ ಮದ್‍ಹ್ ಹೇಳಿಸಿ ಅವರಿಗೆ ಬಹುಮಾನ ನೀಡುವುದು, ದಫ್ ಬಾರಿಸುವುದು... ಇತ್ಯಾದಿ ಕಾರ್ಯಗಳಾಗಿವೆ. ಇನ್ನು ನೀನೇ ಹೇಳು ಈ ಮೇಲಿನ ಕಾರ್ಯಗಳಲ್ಲಿ ಇಸ್ಲಾಮಿಗೆ ವಿರುದ್ಧವಾದ ಕಾರ್ಯಗಳಾವುದೆಂದು. ನೆಬಿ(ಸ.ಅ)ರವರ ಮದ್‍ಹ್ ಹೇಳುವುದು, ರ್ಯಾಲಿ ನಡೆಸುವುದು, ಅನ್ನದಾನ ನೀಡುವುದು, ಬಹುಮಾನ ನೀಡುವುದು... ಇವುಗಳಲ್ಲಿ ಯಾವುದು ಬಿದ್‍ಅತೆಂದು ಹೇಳುವೆಯಾ? ನಿನಗೇ ಗೊತ್ತು ಇದ್ಯಾವುದೂ ಇಸ್ಲಾಂ ವಿರೋಧಿಸಿದ ಕಾರ್ಯಗಳಲ್ಲ ಹೊರತು ಇಸ್ಲಾಂ ಪ್ರೋತ್ಸಾಹ ನೀಡಿದ ಕಾರ್ಯಗಳೇ ಆಗಿವೆಯೆಂದು.

ಇನ್ನು, ಅದನ್ನೂ ಕಲಿಯಲು ನೀನು ಮನಸ್ಸು ಮಾಡುತ್ತಿಲ್ಲವೇ? ಇರು, ನಾನೇ ಅವುಗಳನ್ನು ವಿವರಿಸಿ ಕೊಡುತ್ತೇನೆ. ನಿನ್ನ ತಪ್ಪು ಗ್ರಹಿಕೆಯಿಂದಾಗಿ ಪುಣ್ಯ ಕರ್ಮವೊಂದರ ನಿಷೇಧಿಸುವಿಕೆಯಿಂದ ನೀನು ಹಿಂದೆ ಸರಿಯಬೇಕೆಂಬ ಉದ್ದೇಶವಲ್ಲದೆ ನಾನು ಬೇರೇನನ್ನೂ ಬಯಸಿಲ್ಲ. ಪೂರ್ವಿಕರಾದ, ಸಮುದ್ರ ಸಮಾನ ಜ್ಞಾನಿಗಳಾದ ಪಂಡಿತರು, ನೆಬಿ ಜನ್ಮ ದಿನಾಚರಣೆಯನ್ನು ಪುಣ್ಯ ಕರ್ಮವೆಂದು ಸಾರಿರುವಾಗ ಸೂರ್ಯ ಪ್ರಕಾಶವನ್ನು ಬಾಯಿಯಿಂದ ಊದಿ ನಂದಿಸಲು ಹೊರಟ ನಿನ್ನ ಬಗ್ಗೆ ಮರುಕವುಂಟಾಗುತ್ತಿದೆ.

ಒಂದೊಂದೇ ವಿಷಯಗಳನ್ನು ಎತ್ತಿ ಕೊಳ್ಳೋಣ. ಮೊದಲನೆಯದಾಗಿ ಈದ್ ಮೀಲಾದ್‍ನಂದು ನಾವು ಮಾಡುವ ಪ್ರಮುಖ ಸಂಗತಿಯಾಗಿದೆ, ನಬಿ(ಸ.ಅ)ರವರ ಸ್ವಲಾತ್ ಹಾಗೂ ಮದ್‍ಹ್ ಹೇಳುವುದು ಇವೆರಡು ಕಾರ್ಯಗಳನ್ನು ಇಸ್ಲಾಮಿ ಪುರಾವೆಗಳ ಮೂಲಕ ಹಲವಾರು ಬಾರಿ ಸಮರ್ಥಿಸಿಯಾಗಿದೆ. ಆದರೂ ಈ ಕೆಳಗಿನ ಆಯತ್ತನ್ನೊಮ್ಮೆ ನೀನು ಓದಿ ಅರ್ಥೈಸು.

(ಖಂಡಿತವಾಗಿಯು ಅಲ್ಲಾಹು ಹಾಗೂ ಅವನ ಮಲಕುಗಳು ಪ್ರವಾದಿಯವರ ಮೇಲೆ ಸ್ವಲಾತ್ ಹೇಳುವರು. ಓ ಸತ್ಯ ವಿಶ್ವಾಸಿಗಳೇ ನೀವೂ ಪ್ರವಾದಿಯವರ ಮೇಲೆ ಸ್ವಲಾತ್ ಸಲಾಂ ಹೇಳಿರಿ)

ಅಂದರೆ ಅಲ್ಲಾಹನು ಹಾಗೂ ಮಲಕುಗಳು ನಿರ್ವಸುವ ಒಂದು ಮಹತ್ತಾದ ಕರ್ಮವಾಗಿದೆ ಪ್ರವಾದಿ(ಸ.ಅ)ರವರ ಮೇಲೆ ಸ್ವಲಾತ್, ಸಲಾಂ ಹೇಳುವುದು. ಅದನ್ನು ಧಾರಾಳವಾಗಿ ನಿರ್ವಹಿಸುವಂತೆ ಅಲ್ಲಾಹನೇ ಪ್ರೋತ್ಸಾಹಿಸುವಾಗ ಇತರ ದಿನಗಳಿಗಿಂತ ಸ್ವಲ್ಪ ಹೆಚ್ಚೇ ಎನ್ನುವಂತೆ ರಬೀಉಲ್ ಅವ್ವಲ್ ಹನ್ನೆರಡರಂದು ಸುನ್ನಿಗಳಾದ ನಾವು ಅದನ್ನು ನಿರ್ವಹಿಸಿದರೆ ಅದನ್ನು ಬಿದ್‍ಅತೆನ್ನಲು ನಿನಗೆ ಪುರಾವೆಯಿದೆಯೇ...?. ಹುಂ... ಎಲ್ಲಿಯ ಪುರಾವೆ!. ಕುರ್‍ಆನ್‍ಗೆ ವಿರುದ್ಧವಾದ ಪುರಾವೆಯು ಈ ಜಗತ್ತಿನಲ್ಲಿ ಇಲ್ಲವೆಂಬುವುದು ನಿನಗೇ ಗೊತ್ತು. ದಿನ, ಸಮಯ, ಕಾಲಗಳ ವ್ಯತ್ಯಾಸವಿಲ್ಲದೆ ನಿರ್ವಹಿಸಬಹುದಾದ ಸ್ವಲಾತನ್ನು ರಬೀಉಲ್ ಅವ್ವಲ್ ಹನ್ನೆರಂದು ಹೇಳಿದರೆ ಮಾತ್ರ ಅದು ಬಿದ್‍ಅತ್ ಆಗುವುದಾದರೂ ಹೇಗೆ? ಎಂಬ ಜಿಜ್ಞಾಸೆಯು ನನಗಿದೆ.

 ಸ್ವಲಾತ್ ಬಗ್ಗೆ ಬರೆಯುವಾಗ ಇನ್ನೊಂದು ವಿಷಯ ನೆನಪಿಗೆ ಬಂತು.  ನಿರ್ಧಿಷ್ಟ ಪದಗಳಿಲ್ಲದ, ನೆಬಿ(ಸ.ಅ)ರವರ ಉನ್ನತ ಪದವಿಯನ್ನು ಹೊಗಳುವ, ಪ್ರೀತಿ ವ್ಯಕ್ತ ಪಡಿಸುವ ಯಾವುದೇ ಪದಗಳನ್ನು ಬಳಸಿ ಸ್ವಲಾತ್ ಹೇಳಬಹುದೆಂಬುವುದು ಪಂಡಿತ ಅಭಿಮತ. ಆದರೆ ನೀನು ಇಲ್ಲೂ ನಿನ್ನ ಕುತಂತ್ರ ಬಳಸಿದೆ. ನೆಬಿ(ಸ.ಅ)ರವರು ಹೇಳಿದ ಸ್ವಲಾತನ್ನು ಮಾತ್ರ ಹೇಳಬೇಕೆಂದು ನೀನು ವಾದಿಸಿದೆ. ಆದರೆ ಆ ವಾದದಲ್ಲಿ ನಿಮ್ಮವರು ದೃಡವಾಗಿ ನೆಲೆ ನಿಂತರಾ? ಅದೂ ಇಲ್ಲ. ನಿನ್ನ ವಿವಿಧ ನೇತಾರರ ಕೆಲವು ಭಾಷಣದ ಪ್ರಾರಂಭವನ್ನು ಒಮ್ಮೆ ಕೇಳಿ ನೋಡು. ಒಬ್ಬೊಬ್ಬರದ್ದು ಒಂದೊಂದು ಸ್ವಲಾತ್! ಆದರೆ ಅದ್ಯಾವುದೂ ಹದೀಸ್‍ನಲ್ಲಿ ವರದಿಯಾದ ಸ್ವಲಾತ್‍ಗಳಲ್ಲ! ಇನ್ನೂ ಪುರಾವೆ ಬೇಕಿದ್ದರೆ ನಿನ್ನ ನೇತಾರರು ಬರೆದ ಕೆಲವು ಪುಸ್ತಕದ ಪ್ರಾರಂಭದಲ್ಲಿ ಕೊಟ್ಟ ಸ್ವಲಾತ್‍ಗಳನ್ನು ಓದಿ ನೋಡು. ಅವುಗಳೂ ಹದೀಸ್‍ಗಳಲ್ಲಿ ವರದಿಯಾದ ಸ್ವಲಾತ್‍ಗಳಲ್ಲ್ಲ. ಈಗ ಒಂದು ವಿಷಯ ಸ್ಪಷ್ಟವಾಯಿತು. ನಿನ್ನ ನೇತಾರರು ಹೇಳುವ ಸಂಗತಿಗಳು ಸತ್ಯವಾದುದಲ್ಲ ಬದಲು ಸುನ್ನಿಗಳೊಂದಿಗೆ ಹಠ ತೀರಿಸಲು ತಮಗೆ ತೋಚಿದ ಸಂಗತಿಗಳನ್ನು ವಾದವಾಗಿ ಪ್ರಚಾರ ಪಡಿಸುತ್ತಿದ್ದಾರಷ್ಟೆ. ಇಲ್ಲದಿದ್ದರೆ ಹದೀಸ್‍ಗಳಲ್ಲಿ ವರದಿಯಾಗದ  ಸ್ವಲಾತ್‍ಗಳನ್ನು ಹೇಳಬಾರದು, “ಸಯ್ಯಿದುನಾ” ಸೇರಿಸಬಾರದು ಎಂದೆಲ್ಲಾ ಹೇಳುವ ಈ ನಾಯಕರು ತಮ್ಮ ಭಾಷಣ, ಲೇಖನಗಳಲ್ಲಿ ಅವುಗಳನ್ನು ಜಾರಿಗೆ ತರದೆ ಇನ್ಯಾವುದೊ ಸ್ವಲಾತ್‍ಗಳನ್ನು ಹೇಳುವುದು ಯಾಕೆ?

ಇರಲಿ ವಿಷಯಕ್ಕೆ ಬರೋಣ. ಸ್ವಲಾತ್ ಹೇಳುವುದು ಕುರ್‍ಆನ್ ಆಜ್ಞಾಪಿಸಿದ ಸಂಗತಿಯೆಂದು ನಿನಗೆ ಮನವರಿಕೆಯಾಯಿತು. ಇನ್ನು, ಮೀಲಾದುನ್ನಬಿಯಂದು ನಾವು ಹೆಚ್ಚಾಗಿ ನಬಿ(ಸ.ಅ)ರವರ ಮದ್‍ಹ್ ಹೇಳುತ್ತೇವೆ ಎಂದೆನಲ್ಲಾ... ಖಂಡಿತವಾಗಿಯೂ ನಬಿ(ಸ.ಅ)ರವರ ಮೇಲೆ ಪ್ರೀತಿ ಇರುವವರಿಗೆ ನಬಿಯವರ ಬಗ್ಗೆ ಹೇಳದೆ ಸಮಾಧಾನವಿರಲಾರದು. ಆದ್ದರಿಂದಲೇ ಆ ದಿನ ಅವರ ಬಗ್ಗೆ ಪದ್ಯ ಗದ್ಯಗಳ ರೂಪದಲ್ಲಿ, ಹಾಡು ಭಾಷಣಗಳ ರೂಪದಲ್ಲಿ ನಾವು ಸಾಕಷ್ಟು ಕೀರ್ತನೆಗಳನ್ನು ಹೇಳುತ್ತೇವೆ. ನಿನಗೆ ನೆನಪಿದೆಯೋ ಗೊತ್ತಿಲ್ಲ. ಮುಜಾಹಿದ್ ಬಾಲುಶ್ಯೇರಿ ಎಂಬ ನಿನ್ನ ನೇತಾರ ಅಂದೊಮ್ಮೆ ಹೇಳಿದ್ದ “ನೆಬಿ(ಸ.ಅ)ರವರ ಮದ್‍ಹ್ ಹೇಳಲು ಕುರ್‍ಆನ್ ತಿಳಿಸಿಲ್ಲ, ಹೊರತು ನೆಬಿಯವರನ್ನು ಅನುಸರಿಸಿ ಎಂದಾಗಿದೆ ಕುರ್‍ಆನ್ ತಿಳಿಸಿದ್ದು.”

ಪಾಪ... ಆತನ ಅಜ್ಞಾನಕ್ಕೆ ಮರುಕ ಪಡೋಣ. ಕಾರಣ ಆತನೇ ಅಂದೊಮ್ಮೆ ಹೇಳಿದ್ದ “ನಾನು ಪಂಡಿತನಲ್ಲ. ಕಲ್ಲಿನ ಕ್ವಾರೆಯಲ್ಲಿ ಕೆಲಸ ಮಾಡುತ್ತಿದ್ದೆ, ಹೋಟೆಲ್‍ನಲ್ಲಿ ಗ್ಲಾಸ್ ತೊಳೆಯುತ್ತ್ತಿದ್ದೆ, ಗದ್ದೆಯಲ್ಲಿ ಉಳುತ್ತಿದೆ” ಅಂತ. ಆದ್ದರಿಂದ ಆತನ ಬಗ್ಗೆ ಹೆಚ್ಚು ಚರ್ಚಿಸಿ ವೃಥಾ ಸಮಯ ಕೊಲ್ಲಲು ನಾನು ಬಯಸುತ್ತಿಲ್ಲ. ಆದರೆ ಒಂದು ಮಾತಂತೂ ಸತ್ಯ. ಇಡೀ ಕುರ್‍ಆನ್ ಗ್ರಂಥವೇ ನೆಬಿಯವರ ಮದ್‍ಹ್ ಆಗಿದೆ ಎಂಬ ಪರಮ ಸತ್ಯವು ಆತನಿಗೆ ತಿಳಿದಿರಲಾರದು. ಯಾರಿಂದಲೂ ಹೇಳಲು ಸಾಧ್ಯವಾಗದಂತಹ ಶೈಲಿಯ ಮದ್‍ಹ್‍ಗಳು ಕುರ್‍ಆನ್ ನಬಿ(ಸ.ಅ)ರವರ ಬಗ್ಗೆ ಹೇಳಿದೆ. ಇನ್ಶಾಅಲ್ಲಾಹ್ ಆ ಬಗ್ಗೆ ಇನ್ನೊಮ್ಮೆ ಕಲಿಯೋಣ. ಸುನ್ನಿಗಳಾದ ನಾವು ನಮ್ಮ ನೆಬಿಯವರ ಬಗ್ಗೆ ಮದ್‍ಹ್ ಹೇಳುವುದು ನಿನ್ನಂತವರಿಗೆ ಸಹ್ಯವಾಗುತ್ತಿಲ್ಲವೆಂದು ಗೊತ್ತು. ನೋಡು... ವೃಥಾ ಮನಸ್ಸನ್ನು ಹುಣ್ಣು ಮಾಡ್ಕೋಬೇಡ. ತೆರೆದ ಹೃದಯದೊಂದಿಗೆ ವಿಷಯಗಳನ್ನು ಕಲಿ. ಅಲ್ಲಾಹು ಸನ್ಮಾರ್ಗ ತೋರಿಸಿ ಕೊಡುವನು.

ನೆಬಿ(ಸ.ಅ)ರ ಬಗ್ಗೆ ಮದ್‍ಹ್ ಹೇಳಲು ನಮಗೆ ಕಲಿಸಿದ್ದು ಸ್ವತ ನೆಬಿಯವರೆ. ಹ್ಞಾಂ... ಆಶ್ಚರ್ಯವಾಯಿತೇ... ತಾಳು, ನೆಬಿಯರೇ ಸ್ವತಃ ಮದ್‍ಹ್ ಹೇಳಿದ್ದನ್ನು ನಿನಗೆ ತೋರಿಸಿ ಕೊಡ್ತೇನೆ ಬಾ... ಇಮಾಂ ಮುಸ್ಲಿಂ(ರ)ರವರು ತನ್ನ ಗ್ರಂಥದಲ್ಲಿ ಕಿತಾಬುಲ್ ಈಮಾನ್ ಎಂಬ ಅಧ್ಯಾಯದಲ್ಲಿ ಒಂದು ಹದೀಸ್ ನೀಡಿದ್ದಾರೆ. ಅದು ಹೀಗಿದೆ.

ಅನಸ್(ರ)ರವರಿಂದÀ ವರದಿ: ನೆಬಿ(ಸ.ಅ)ರವರು ಹೇಳಿದರು. “ನಾನು ಅಂತ್ಯ ದಿನದಂದು ಪ್ರವಾದಿಗಳ ಪೈಕಿ ಅತ್ಯಂತ ಹೆಚ್ಚು ಅನುಯಾಯಿಗಳಿರುವವನಾಗಿರುವೆ. ಸ್ವರ್ಗ ಕವಾಟವನ್ನು ಪ್ರಥಮವಾಗಿ ಬಡಿಯುವವನೂ ನಾನೇ ಆಗಿರುವೆ”

ನೋಡಿದೆಯಾ... ಪರಲೋಕದಲ್ಲಿ ತನಗಿರುವ ಉನ್ನತ ಪದವಿಯನ್ನು ಸ್ವತಃ ನೆಬಿಯವರೇ ಹೇಳಿಕೊಂಡರಲ್ಲಾ... ಅಂದರೆ ನೆಬಿ(ಸ.ಅ)ರವರ ಮದ್‍ಹನ್ನು ಅವರೇ ಹೇಳಿ ತೋರಿಸಿದರು ಎಂದಾಯಿತು. ಈಗ ನೀನೇ ಹೇಳು. ನೆಬಿ(ಸ.ಅ)ರವರ ಮಾದರಿಯನ್ನು ಸ್ವೀಕರಿಸಬೇಕೆಂದು ಹೇಳುವ ನೀನು ನೆಬಿ(ಸ.ಅ)ರವರ ಮದ್‍ಹನ್ನು ಸುನ್ನಿಗಳು ಹೇಳುವಾಗ ವಿರೋಧಿಸುವುದಾದರೂ ಯಾಕೆ?. ತನ್ನ ಬಗ್ಗೆ ಮದ್‍ಹ್ ಹೇಳಿ ನೆಬಿ(ಸ.ಅ)ರವರು ತೋರಿಸಿ ಕೊಟ್ಟಿರುವಾಗ ಅದನ್ನು ಮಾದರಿಯಾಗಿಸಿ ಮದ್‍ಹ್ ಹೇಳುವುದು ನಿನಗೆ ತಪ್ಪಾಗಿ ಕಂಡಿತೇ?. ನೆಬಿ(ಸ.ಅ)ರವರು ತನ್ನ ಬಗ್ಗೆ ಹೇಳಿಕೊಂಡದ್ದು ಕೇವಲ ಒಂದು ಬಾರಿ ಮಾತ್ರವಲ್ಲ. ಹಲವಾರು ಬಾರಿ ಹೇಳಿದ್ದಾರೆ. ಪುಟ ದೀರ್ಘವಾಗುವುದರಿಂದ ಕೆಲವೊಂದನ್ನು ಮಾತ್ರ ನೀಡುತ್ತಿದ್ದೇನೆ.

ಅಬೂ ಹುರೈರಾ(ರ) ವರದಿ ನಾನು ಆದಂ ಸಂತತಿಗಳ ನಾಯಕನಾಗಿರುವೆ. ಪ್ರಥಮವಾಗಿ ಕಬ್‍ರ್ ತೆರೆಯಲ್ಪಡುವುದು ನನ್ನದೇ. ಪ್ರಥಮಮಾಗಿ ಶಫಾಅತ್ ಗೈಯ್ಯುವವನೂ, ಶಫಾಅತ್ ಸ್ವೀಕರಿಸಲ್ಪಡುವವನೂ ನಾನೇ.(ಅಬೂದಾವುದು 4-218, ಮುಸ್ಲಿಂ 2-245)

ಆದಂ ಸಂತತಿಗಳ ಪೈಕಿ ಅಲ್ಲಾಹನ ಬಳಿ ಅತ್ಯಂತ ಹೆಚ್ಚು ಗೌರವಾನ್ವಿತ ವ್ಯಕ್ತಿ ನಾನಾಗಿದ್ದೇನೆ. ಇದು ಅಹಂಭಾವದ ಮಾತಲ್ಲ.(ತಿರ್ಮುದ್ಸಿ 5-245)

ಇದೇ ರೀತಿ “ಅಂತ್ಯ ದಿನದಲ್ಲಿ ಲಿವಾವುಲ್ ಹಮ್ದ್ ಹಿಡಿಯುವವನು ನಾನಾಗಿದ್ದೇನೆ. ಆದಂ(ಅ) ಹಾಗೂ ಇನ್ನಿತರ ಪ್ರವಾದಿಗಳು ನಾನು ಹಿಡಿದ ಪತಾಕೆಯಡಿ ಒಂದುಗೂಡುವರು...” (ತಿರ್ಮುದ್ಸಿ 2-247) ಎಂದೂ ಹದೀಸ್‍ನಲ್ಲಿ ಕಾಣಬಹುದು.

ಇದನ್ನೆಲ್ಲಾ ಇಲ್ಲಿ ಯಾಕೆ ಹೇಳಿದನೆಂದರೆ, ನಬಿ(ಸ.ಅ)ರವರು ಸ್ವತಃ ಮದ್‍ಹ್ ಹೇಳುವ ಮೂಲಕ ನಮಗೆ ಮಾದರಿಯಾಗಿರುವಾಗ ಸುನ್ನಿಗಳು ಒಟ್ಟು ಸೇರಿ ಪ್ರವಾದಿ(ಸ.ಅ)ರವರ ಮದ್‍ಹ್ ಹೇಳುವಾಗ, ಅದಕ್ಕೆ ಮೌಲಿದ್, ಮಾಲೆ, ಬುರ್ದಾ ಎಂದು ಹೆಸರಿಟ್ಟರು ಎಂಬ ಕಾರಣಕ್ಕಾಗಿ ಅದನ್ನು ನಿನ್ನಂತವರು ಶಿರ್ಕ್, ಬಿದ್‍ಅತ್, ಅನಿಸ್ಲಾಮಿಕ ಎಂದು ಕರೆಯುತ್ತಾರಲ್ಲಾ...!!. ನಿಜಕ್ಕೂ ಇದು ಅಜ್ಞಾನವಲ್ಲದೆ ಮತ್ತೇನು?. ನಬಿ(ಸ.ಅ)ರವರು ಸ್ವತಃ ಮೌಲಿದ್(ಮದ್‍ಹ್) ಹೇಳಿದ್ದನ್ನು ನೀನೀಗ ತಿಳಿದೆ. ಇನ್ನು ನೆಬಿ(ಸ.ಅ)ರು ಇತರರ ಮೌಲಿದ್(ಮದ್‍ಹ್) ಹೇಳಿ ನಮಗೆ ಮಾದರಿ ತೋರಿಸಿದ್ದನ್ನು ನಿನಗೆ ತಿಳಿಯಬೇಕೆ.. ಇಲ್ಲೊಂದು ಹದೀಸ್ ನೋಡು...

ಅಬೂ ಹುರೈರಾ(ರ) ವರದಿ: ನೆಬಿ(ಸ.ಅ) ಹೇಳಿದರು “ಅಬೂಬಕರ್(ರ) ಉತ್ತಮ ವ್ಯಕ್ತಿ, ಉಮರ್(ರ) ಉತ್ತಮ ವ್ಯಕ್ತಿ, ಅಬೀ ಉಬೈದ ಉತ್ತಮ ವ್ಯಕ್ತಿ, ಸಾಬಿತ್ ಬಿನ್ ಕೈಸ್ ಉತ್ತಮ ವ್ಯಕ್ತಿ.(ಮುಸ್ತದ್‍ರಕ್ 3-233)

ಈ ಹದೀಸ್ ಏನನ್ನು ತಿಳಿಸಿತು ಗೊತ್ತಾಯಿತೇ... ನೆಬಿ(ಸ.ಅ)ರವರು ತನ್ನ ಸ್ವಹಾಬಿಗಳ ಮದ್‍ಹನ್ನು ಹೇಳಿದರು ಎಂದಲ್ಲವೇ?. ಈ ರೀತಿ ಮಹಾತ್ಮರ ಬಗ್ಗೆ ಒಳ್ಳೆಯ ಮಾತುಗಳನ್ನಾಡುವುದಕ್ಕೆ ಮೌಲಿದ್ ಎಂದು ಸುನ್ನಿಗಳು ಹೇಳುತ್ತಾರೆ. ಅದು ಕಡಿಮೆಯಾದರೂ, ಜಾಸ್ತಿಯಾದರೂ, ಪದ್ಯ-ಗದ್ಯವಾದರೂ ಸರಿ. ಹೀಗೆ ನೆಬಿ(ಸ.ಅ)ರವರು ಸ್ವತಃ ಕೀರ್ತನೆ ಹೇಳಿ, ಸ್ವಹಾಬಿಗಳ ಮದ್‍ಹನ್ನೂ ಹೇಳಿ ನಮಗೆ ಮಾದರಿಯಾಗುವಾಗ ನಿನೇಕೆ ಅದನ್ನು ಶಿರ್ಕ್ ಎಂದು ಕರೆಯುವ ಧೈರ್ಯ ತೋರಿಸುತ್ತಿ?. ಇದು ಬೆಳಕಿಗೆ ಬೆನ್ನು ತಿರುಗಿಸುವ ಜಾಯಮಾನವಲ್ಲವೇ?.

ಮಾತ್ರವಲ್ಲ ಇಂದು ನಾಡಿನೆಲ್ಲೆಡೆ ವ್ಯಾಪಕವಾಗಿ ಕಾಣುವ ಬುರ್ದಾ, ಮಾಲೆ, ನಅïತೇಗಳೆಂಬ ಕಾವ್ಯ ರೂಪದ ಕೀರ್ತನೆಗಳ ಬಗ್ಗೆಯೂ ನಿನ್ನಂತವರು ಏನೆಲ್ಲಾ ಹೇಳಿಯಾಗಿದೆ. ಸುನ್ನಿಗಳು ಇವುಗಳನ್ನೆಲ್ಲಾ ನಡೆಸುವಾಗ ಅವರು ಉದ್ಧರಿಸುವ ಪುರಾವೆಗಳಾದರೂ ಏನು ಎಂದು ಕಲಿಯುವ ಗೋಜಿಗೆ ನೀನ್ಯಾಕೆ ಇಳಿಯಲಿಲ್ಲ. ನಾನು ಈ ಮೊದಲೇ ತಿಳಿಸಿದಂತೆ ನಿನ್ನ ನೇತಾರರು ಸುನ್ನಿಗಳೆಂದರೆ ಕುರಾಫಿಗಳು, ಬಿದ್‍ಅತ್‍ಗಾರರು, ಅನಿಸ್ಲಾಮಿಕ ಕಾರ್ಯಗಳನ್ನು ಗೈಯ್ಯುವವರು ಎಂಬಿತ್ಯಾದಿ ಸುಳ್ಳುಗಳನ್ನು ತಮ್ಮ ಅನುಯಾಯಿಗಳ ತಲೆಗೆ ತುಂಬಿಸಿ ಬಿಟ್ಟಿದ್ದಾರೆ. ಆದ್ದರಿಂದಲೇ ಸುನ್ನಿಗಳು ಏನು ಮಾಡಿದರೂ ಆ ಕೂಡಲೇ ಶಿರ್ಕ್‍ನ ಮುದ್ರೆಯನ್ನು ನೀವು ಒತ್ತುತ್ತಿರುವುದು.

ನಿಜ ಹೇಳಬೇಕೆಂದರೆ ಕಾವ್ಯ ರೂಪದ ಕೀರ್ತನೆಗೂ ನೆಬಿ(ಸ.ಅ)ರವರೇ ಪ್ರೋತ್ಸಾಹ ಕೊಟ್ಟಿದ್ದಾರೆ. ಅಬೂಬಕ್ಕರ್ ಸಿದ್ದೀಕ್(ರ)ರವರ ಕುರಿತು ಪ್ರವಾದಿ ಪ್ರೇಮಿ ಹಸ್ಸಾನುಬ್‍ನ್ ಸಾಬಿತ್(ರ) ಕಾವ್ಯ ರೂಪದಲ್ಲಿ ಕೀರ್ತಿಸಿದ್ದನ್ನು ತಿಳಿದ ನೆಬಿ(ಸ.ಅ)ರವರು ಅದನ್ನು ಪುನಃ ಹೇಳುವಂತೆ ಪ್ರೋತ್ಸಾಹಿಸಿದ್ದರೆಂದರೆ ಕಾವ್ಯರೂಪದ ಕೀರ್ತನೆಗೂ ನೆಬಿ(ಸ.ಅ)ರವರೇ ಮಾದರಿ ಎಂದಾಯಿತು. ಈ ಕೆಳಗಿನ ಹದೀಸನ್ನು ಗಮನವಿಟ್ಟು ಓದಿ ನೋಡು.

ಹುಬೈಬ್(ರ)ರು ಹೇಳುತ್ತಾರೆ. ನಾನು ನಬಿ(ಸ.ಅ)ರವರ ಸಮೀಪವಿದ್ದಾಗ ನೆಬಿ(ಸ.ಅ)ರು ಹಸ್ಸಾನ್(ರ)ರೊಂದಿಗೆ ಈ ರೀತಿ ಕೇಳಿದರು. “ನೀವು ಅಬೂಬಕರ್(ರ)ರವರ ಬಗ್ಗೆ ಏನಾದರೂ (ಕಾವ್ಯ ಕೀರ್ತನೆ) ಹೇಳಿರುವಿರಾ?. “ಹೌದು” ಎಂದು ಹಸ್ಸಾನ್(ರ) ಉತ್ತರಿಸಿದಾಗ, ಹಾಗಾದರೆ ಅದನ್ನು ಇನ್ನೊಮ್ಮೆ ಹೇಳಿರಿ. ನಾನು ಕೇಳುವೆನು ಎಂದು ನೆಬಿ(ಸ.ಅ)ರು ನುಡಿದಾಗ ಹಸ್ಸಾನ್(ರ) ಈ ರೀತಿ ಹಾಡಿದರು. ‘ಶತ್ರುಗಳು ಗುಹೆಗೆ ಹತ್ತಿ ಸುತ್ತಲೂ ನಡೆದಾಗ,  ಗುಹೆಯಲ್ಲಿದ್ದ ಇಬ್ಬರಲ್ಲಿ ಎರಡನೆಯವರು(ಅಬೂಬಕರ್(ರ)) ಸರಿಸಾಟಿಯಿಲ್ಲದೆ, ಸೃಷ್ಟಿಗಳಲ್ಲಿ ಅತ್ಯಂತ ಹೆಚ್ಚು ನೆಬಿ(ಸ.ಅ)ರನ್ನು ಅವರು ಪ್ರೀತಿಸಿದ್ದರು” ಇದನ್ನು ಕೇಳಿದ ನೆಬಿ(ಸ.ಅ)ರವರು ಮುಗುಳ್ನಕ್ಕರು.

ತನ್ನ ಪ್ರಿಯ ಮಿತ್ರನ ಬಗ್ಗೆ ಹಸ್ಸಾನ್ ಕೀರ್ತಿಸಿದಾಗ ನೆಬಿ(ಸ.ಅ)ರು ಸಂತೋಷದಿಂದ ನಕ್ಕು ತನ್ನ ಸಮ್ಮತಿ ಸೂಚಿಸಿದರೆಂದಲ್ಲವೇ ಈ ಮೇಲಿನ ಘಟನೆ ನಮಗೆ ತಿಳಿಸಿ ಕೊಡುವುದು. ಮತ್ತೇಕೆ ನೀನು ಇಂತದ್ದನೆಲ್ಲಾ ಶಿರ್ಕ್ ಎನ್ನುತ್ತೀ?. ನೆಬಿ(ಸ.ಅ)ರಿಗೆ ತಿಳಿಯದ ಶಿರ್ಕ್ ನಿನಗೆ ತಿಳಿಯಿತು ಎಂದಲ್ಲವೇ ನಿನ್ನ ವಾದದ ಅರ್ಥ?.

ಇನ್ನು, ನಿನಗೊಂದು ಸಂಶಯವಿರಬಹುದು. ಮೀಲಾದ್ ದಿನದಂದು ರ್ಯಾಲಿ ನಡೆಸುವುದು ಯಾಕೆ?. ಅದು ಪ್ರಯಾಣಿಕರಿಗೆ ತೊಂದರೆಯನ್ನುಂಟು ಮಾಡುವ ಕಾರ್ಯವಲ್ಲವೇ?. ನೆಬಿ(ಸ.ಅ)ರವರು ರ್ಯಾಲಿ ನಡೆಸಿದ್ದಾರಾ?. ಹೀಗೆ ಮುಂದುವರಿಯುತ್ತಿದೆ. ನಿನ್ನ ಪ್ರಶ್ನೆಗಳು. ಹೀಗೆ ಕೇಳುವಾಗ ನೀನೊಂದು ಸತ್ಯವನ್ನು ಮುಚ್ಚಿಡುತ್ತೀ. ನೀವು ನಡೆಸುವ ಸಮ್ಮೇಳನ, ವಸ್ತು ಪ್ರದರ್ಶನ, ಹಾಗೂ ಇನ್ನಿತರ ಕಾರ್ಯಕ್ರಮಗಳ ವೇಳೆ ರಸ್ತ ತಡೆಯುಂಟಾದರೆ ನಿಮಗದು ದೊಡ್ಡ ವಿಷಯವಾಗಿ ಕಾಣುತ್ತಿಲ್ಲ. ಆದರೆ ಸುನ್ನಿಗಳು ಮೀಲಾದ್‍ನಂದು ರಸ್ತೆಯ ಬದಿಯಲ್ಲಿ, ಯಾರಿಗೂ ತೊಂದರೆಯಾಗದ ರೀತಿಯಲ್ಲಿ ರ್ಯಾಲಿ ನಡೆಸಿದರೆ ಅದು ನಿನಗೆ ತಪ್ಪಾಗಿ ಕಾಣುತ್ತದೆ. ಛೆ!... ಎಂತಹಾ ವೈರುದ್ಧ್ಯವಿದು!. ನಿನಗೆ ತಿಳಿದಿದೆಯೋ, ಇಲ್ಲವೋ ನನಗೆ ಗೊತ್ತಿಲ್ಲ. ಆದರೂ ಹೇಳುತ್ತಿದ್ದೇನೆ. ಹಝ್ರತ್ ಉಮರ್(ರ.ಅ)ರವರು ಇಸ್ಲಾಂ ಸ್ವೀಕರಿಸಿದ ಕೂಡಲೇ ನೆಬಿ(ಸ.ಅ)ರವರಲ್ಲಿ ಕೇಳಿದ ಮಾತು ನಿನಗೆ ಗೊತ್ತಾ?. “ಪ್ರವಾದಿ(ಸ.ಅ)ಯವರೇ ನಾವು ಸತ್ಯ ಪಥದಲ್ಲಿರುವವರಲ್ಲವೇ?” ನೆಬಿ(ಸ.ಅ)ರು ಹೌದೆಂದರು. ಹಾಗಾದರೆ ನಾವೇಕೆ ರಹಸ್ಯವಾಗಿ ದೀನೀ ಪ್ರಚಾರ ನಿರ್ವಹಿಸುವುದು?. ಬನ್ನಿ ನಾವು ಬಹಿರಂಗವಾಗಿಯೇ ಧರ್ಮ ಪ್ರಚಾರ ಮಾಡೋಣ” ಎನ್ನುತ್ತಾ ಕಅïಬಾದ ಬಳಿಗೆ ರ್ಯಾಲಿ ಬಂದ ಘಟನೆಯನ್ನು ಗ್ರಂಥಗಳಲ್ಲಿ ಕಾಣಬಹುದು. ಕಂಡೂ ಕಾಣದಂತೆ ನಟಿಸುವ ಅಥವಾ ಕಂಡದ್ದನ್ನು ಮುಚ್ಚಿಡುವ ನಿನ್ನ ಈ ಸ್ವಬಾವವು ಒಳ್ಳೆಯೆಂದು ನಿನಗೆ ತೋರುತ್ತಿದೆಯೇ?

ನೆಬಿ(ಸ.ಅ)ರು ಮದೀನಾ ತಲುಪುವುದಕ್ಕಿಂತ ಮುಂಚೆ ದಾರಿ ಮಧ್ಯೆ ಕಾಣಸಿಕ್ಕ ಬನೂ ಸಹ್‍ಮ್ ಗೋತ್ರದ ನಾಯಕ ಬುರೈದತುಲ್ ಅಸ್ಲಮಿಯ ಇಸ್ಲಾಂ ಸ್ವೀಕಾರದ ಬಳಿಕ ನೆಬಿ(ಸ.ಅ) ರೊಂದಿಗೆ ಹೇಳಿದ ಮಾತು “ಓ ಪ್ರವಾದಿಯವರೇ ತಾವು ಪತಾಕೆಯಿಲ್ಲದೆ ಮದೀನಾ ಪ್ರವೇಶಿಸದಿರಿ” ಎನ್ನುತ್ತಾ ತನ್ನ ಶಿರವಸ್ತ್ರವನ್ನು ತೆಗೆದು ಬೆತ್ತವೊಂದಕ್ಕೆ ಕಟ್ಟಿ ಬಾವುಟವನ್ನಾಗಿಸಿ ನೆಬಿ(ಸ.ಅ)ರೊಂದಿಗೆ ಮದೀನಾ ಪ್ರವೇಶಿಸಿದರು. ಇದಕ್ಕೆ ನೆಬಿ(ಸ.ಅ)ರು  ಯಾವುದೇ ವಿರೋಧವನ್ನು ವ್ಯಕ್ತಪಡಿಸಲಿಲ್ಲ. “ವಫಾಉಲ್ ವಫಾ” ಎಂಬ ಗ್ರಂಥದ 1-243ರಲ್ಲಿ ಈ ಘಟನೆಯನ್ನು ಕಾಣಬಹುದು. ಅಂದರೆ ರ್ಯಾಲಿ ನಡೆಸುವುದು, ಪತಾಕೆ ಹಿಡಿಯುವುದು ತಪ್ಪಲ್ಲ ಎಂದಾಗಿದೆ ಇದರರ್ಥ.

ಇನ್ನು ಅನ್ನದಾನ ಬಗ್ಗೆ ನಿನಗೆ ಸಂಶಯವಿರಲಾರದು ಎಂದು ಭಾವಿಸುತ್ತೇನೆ. ಕಾರಣ ನಿನ್ನ ಮನೆಯಲ್ಲಿ ಮದುವೆ ಅಥವಾ ಇನ್ನಿತರ ಸಮಾರಂಭದ ವೇಳೆ ಜನರನ್ನು ಕರೆದು ಅನ್ನ ನೀಡುವ ನೀನು ಅನ್ನದಾನವನ್ನು ವಿರೋಧಿಸುವೆ ಎಂದು ನಾನು ಭಾವಿಸುವುದಿಲ್ಲ. ನಿಮ್ಮ ಸಮ್ಮೇಳನಗಳಲ್ಲಿ ಎರಡು ದಿನಗಳ ಕಾಲದ ತಂಗುವ ಸ್ತ್ರೀ-ಪುರುಷರಿಗೆ ಅನ್ನ ಪಾನೀಯಗಳನ್ನು ನೀವು ದಾನವಾಗಿ ನೀಡುತ್ತಿರುವ ಸಂಗತಿಯನ್ನು ಒಮ್ಮೆ ನೆನಪಿಸಿಕೋ. ಅಂತೆಯೇ ನೆಬಿ ಜನ್ಮದಿನದಂದು ಸಂತೋಷಗೊಂಡು ಸ್ವಲಾತ್ ಹೇಳಲು, ಮದ್‍ಹ್ ಹೇಳಲು ಬಂದು ಸೇರಿದ ಜನರಿಗೆ ಅನ್ನ ಪಾನೀಯಗಳನ್ನು ದಾನ ನೀಡಿದರೆ ಅದು ತಪ್ಪಲ್ಲವೆಂದು ಭಾವಿಸಿದರೆ ಸಾಕು.

ಮೀಲಾದ್ ದಿನದಂದು ಸುನ್ನಿಗಳು ಮಾಡುವ ಇನ್ನೊಂದು ಕಾರ್ಯವಾಗಿದೆ ದಫ್ ಬಾರಿಸುವುದು ಹಾಗೂ ನೆಬಿ ಮದ್‍ಹ್ ಹೇಳಿದ ವಿಧ್ಯಾರ್ಥಿಗಳಿಗೆ ಬಹುಮಾನ ನೀಡುವುದು.

ದಫ್ ಬಾರಿಸುವುದರ ಬಗ್ಗೆ ಸ್ವಹಾಬಿಗಳ ಮಾತಿನಲ್ಲೇ ಕೇಳೋಣ. ಮುಅವ್ವಿದರ ಪುತ್ರಿ ರುಬಯ್ಯಿಅï(ರ) ಹೇಳುತ್ತಾರೆ. “ನನ್ನ ವಿವಾಹ ದಿನ ನಬಿ(ಸ.ಅ)ರು ನನ್ನ ಮನೆಗೆ ಬೇಟಿಯಿತ್ತರು. ನಬಿ(ಸ.ಅ)ರು ಕುಳಿತಿದ್ದಾಗ ಬದ್‍ರ್ ಶುಹದಾಗಳ ಕೀರ್ತನೆಯನ್ನು ಹೇಳುತ್ತಾ ದಫ್ ಬಾರಿಸುತ್ತಿದ್ದ ಬಾಲಿಕೆಯರನ್ನು ಕಂಡರು. ಇನ್ನೂ ಹಾಡುವಂತೆ ಪ್ರೋತ್ಸಾಹಿಸಿದರು” ಹೀಗೇ ದಫ್ ಬಾರಿಸುವುದಕ್ಕೆ ನೆಬಿ(ಸ.ಅ) ಪ್ರೋತ್ಸಾಹವನ್ನು ನೀಡಿದ್ದಾಗಿ ಈ ಹದೀಸ್‍ನಲ್ಲಿ ಕಾಣಬಹುದು(ಬುಖಾರಿ 2-570).

  ಇನ್ನು ಬಹುಮಾನ ಕೊಡುವ ಬಗ್ಗೆ,

 ನೆಬಿ(ಸ.ಅ)ರವರನ್ನು ಧಾರಾಳವಾಗಿ ಕೀರ್ತಿಸಿದ ಕಅಬ್(ರ)ರಿಗೆ ತನ್ನ ಶಾಲನ್ನು ಬಹುಮಾನವಾಗಿ ನೀಡಿದ್ದು, ಹಸ್ಸಾನುಬ್‍ನ್ ಸಾಬಿತ್(ರ)ರವರಿಗೆ ನೆಬಿ(ಸ.ಅ)ರವರ ಬಗ್ಗೆ ಮದ್‍ಹ್ ಹೇಳಲಿಕ್ಕಾಗಿ ಮಾತ್ರ ವೇದಿಕೆಯೊಂದನ್ನು ನಿರ್ಮಿಸಿ ಕೊಟ್ಟು, “ಅಲ್ಲಾಹನೇ ನಿನ್ನ ಮಲಕ್‍ಗಳ ಮೂಲಕ ಹಸ್ಸಾನರಿಗೆ ಶಕ್ತಿ ನೀಡು” ಎಂದು ಪ್ರಾರ್ಥಿಸಿದ್ದು ನೆಬಿ(ಸ.ಅ)ರ ಮದ್‍ಹ್ ಹೇಳುವುದಕ್ಕೆ ಸಿಕ್ಕ ಬಹುಮಾನವಾಗಿದೆ.

ಇನ್ನು ಹೇಳು.. ಈ ಮೀಲಾದ್ ದಿನದಂದು ಸುನ್ನಿಗಳು ಮಾಡುವ ಈ ಕಾರ್ಯಗಳ ಪೈಕಿ ಯಾವುದು ಶಿರ್ಕ್?, ಯಾವುದು ಅನಿಸ್ಲಾಮಿಕ?, ಯಾವುದು ಕಂದಾಚಾರ?, ಯಾವುದು ನರಕಕ್ಕೆ ಹೋಗುವ ಕಾರ್ಯಗಳು?.

ಇಲ್ಲ... ಉತ್ತರವಿಲ್ಲ ಅಲ್ಲವೇ...? ಅದಕ್ಕೆ ನಾನು ಹೇಳಿದ್ದು, ನಿನ್ನ ನೇತಾರರು ನಿನಗೆ ಕಲಿಸಿ ಕೊಟ್ಟರು ಮೀಲಾದುನ್ನಬಿ ಅನಿಸ್ಲಾಮಿಕವೆಂದು. ಆದರೆ ಯಾಕೆ ಅನಿಸ್ಲಾಮಿಕವೆಂದು ಕೇಳುವ ಧೈರ್ಯ ನಿನಗಿಲ್ಲವಾದದ್ದು ಖೇದಕರ.

ನನಗೊತ್ತು... ಇಷ್ಟೆಲ್ಲಾ ಹೇಳಿದ ಬಳಿಕ ನೀನು ಕೇಳುವ ಪ್ರಶ್ನೆಯೊಂದಿದೆ ಅದೇನೆಂದರೆ, “ಎಲ್ಲಾ ಸರಿ.. ಮೀಲಾದುನ್ನಬಿ ಎಂಬ ಒಂದು ಆಚರಣೆ ಇಸ್ಲಾಮಿನಲ್ಲಿದೆಯೇ? ಮೊದಲು ಅದನ್ನು ತಿಳಿಸಿ ನಂತರ ಈ ಕಾರ್ಯಗಳನ್ನು ಸಾಬೀತು ಪಡಿಸಿದರೆ ಸಾಕು” ಎಂದಾಗಿದೆ ನಿನ್ನಂತವರ ಪ್ರಶ್ನೆ. ಇದಕ್ಕೆ ಹೇಳುವುದು ಅಜ್ಞಾನವೆಂದು. ಯಾಕೆಂದರೆ ರಬೀಉಲ್ ಅವ್ವಲ್ ಹನ್ನೆರಡರ ದಿನಕ್ಕೆ ಸುನ್ನಿಗಳು ಮಹತ್ವ ಕೊಡುವುದರ ಕಾರಣ ಆ ದಿನದಂದು ನೆಬಿ(ಸ.ಅ) ಜನಿಸಿದರು ಎಂದಾಗಿದೆ. “ನೆಬಿ(ಸ.ಅ)ರಿಂದಾಗಿ ನೀವು ಸಂತೋಷ  ಪಡಿರಿ” ಎಂದು ಕುರ್‍ಆನ್ ಹೇಳುವಾಗ ಸತ್ಯವಿಶ್ವಾಸಿ ಸಂತೋಷ ಪಡದಿರಲು ಸಾಧ್ಯವೇ? ನೆಬಿ(ಸ.ಅ)ರ ಮೇಲೆ ಪ್ರೀತಿಯಿರುವವರಿಗೆ ಪ್ರತೀ ದಿನವೂ ನೆಬಿಯವರ ಬಗ್ಗೆ ಹೇಳುವುದು, ಹಾಡುವುದು, ಬರೆಯುವುದು ಎಲ್ಲವೂ ಸಂತೋಷದ ಸಂಗತಿಯಾಗಿದೆ. ಈ ಎಲ್ಲಾ ಸಂತೋಷಕ್ಕೂ ಕಾರಣವಾದ ನಬಿ(ಸ.ಅ)ರ ಜನ್ಮ ದಿನದಂದು ಸಂತೋಷ ಪಡದಿರಲು   ಹೇಗೆ ಸಾಧ್ಯ?. ಆದ್ದರಿಂದಲೇ ಆ ದಿನದ ಮಹತ್ವದ ಬಗ್ಗೆ ಪೂರ್ವಿಕ ಮಹಾತ್ಮರುಗಳಾದ ಪಂಡಿತರು ಹಲವಾರು ಗ್ರಂಥಗಳನ್ನು ಬರೆದು ಮೀಲಾದುನ್ನಬಿಗೆ ಮಹತ್ವವಿರುವುದನ್ನು  ತಿಳಿಸಿದರು.

ಖಂಡಿತವಾಗಿಯೂ ನಮಗೆ ತಿಳಿದಿದೆ, ತನ್ನ ಸಹೋದರನಿಗೆ ಒಂದು ಪುತ್ರ ಜನಿಸಿತು ಎಂದು ಸಂತೋಷಪಟ್ಟ ಕಾರಣಕ್ಕಾಗಿ ಅಬೂಲಹಬನಿಗೆ ಪ್ರತೀ ಸೋಮವಾರ ಕುಡಿಯಲು ಪಾನೀಯ ಲಭಿಸುತ್ತಿದೆಯಾದರೆ ನೆಬಿ(ಸ.ಅ)ರವರಲ್ಲಿ ವಿಶ್ವಾಸವಿಟ್ಟು, ಪ್ರೀತಿಸುವ ನಮಗೆ ಖಂಡಿತವಾಗಿಯೂ ಪ್ರತಿಫಲ ಇದ್ದೇ ಇದೆ. ಇಮಾಂ ನವವೀ(ರ)ರವರ ಗುರುವರ್ಯರಾದ ಇಮಾಂ ಅಬೂಶಾಮ (ರ)ರವರ ಮಾತು   ಇದಕ್ಕೆ ಹೆಚ್ಚು ಪುಷ್ಠಿ ನೀಡುತ್ತಿದೆ.

ಅವರು ಏನು ಹೇಳಿದರು ಗೊತ್ತೇ..? “ನೆಬಿ(ಸ.ಅ)ರವರ ಮೌಲಿದ್‍ನ ಕಾರಣದಿಂದ ಸಂತೋಷಗೊಳ್ಳುವುದು ಸ್ವದಖಗೈಯ್ಯುವುದು, ಸತ್ಕರ್ಮಗೈಯ್ಯುವುದು, ಅಲಂಕಾರಗೊಳಿಸುವುದು, ಅನ್ನದಾನಗಳಂತಹ ಸಹಾಯ ಕಾರ್ಯಗಳನ್ನು ಮಾಡುವುದು ನೆಬಿ(ಸ.ಅ)ರವರ ಸ್ನೇಹದ ಲಕ್ಷಣವಾಗಿದೆ ಹಾಗೂ ನೆಬಿ(ಸ.ಅ)ರವರ ಮೌಲಿದಾಚರಣೆಯು ಸುನ್ನತ್ತಾಗಿದೆ”.

ಅರೆ.. ಇಂತಹ ಜಗದ್ವಿಖ್ಯಾತ ವಿದ್ವಾಂಸರು ಮೌಲಿದಾಚರಣೆಯನ್ನು ಪುಣ್ಯಕರ್ಮವೆಂದು ಹೇಳುವಾಗ ನೀನ್ಯಾಕಯ್ಯಾ ಅದನ್ನು ಬಿದ್‍ಅತ್ ಎಂದು ಕರೆದೆ? ಇದು ನಿನ್ನ ಜ್ಞಾನದ ಕೊರತೆಯಲ್ಲವೇ..? ಈ ಇಮಾಂ ಅಬೂಶಾಮ(ರ)ರವರು ಯಾರೆಂದು ಗೊತ್ತೇ..? ಕೇವಲ ನಲವತ್ತು ವರ್ಷಮಾತ್ರ ಜೀವಿಸಿ ಖುರ್‍ಆನ್ ವ್ಯಾಖ್ಯಾನ, ಹದೀಸ್, ಫಿಕ್ಹೀ ವಿಷಯಗಳಲ್ಲಿ  ಹಲವಾರು ಗ್ರಂಥಗಳನ್ನು ರಚಿಸಿದ, ಪ್ರತೀ ದಿನ ಹದಿನಾರು ಪುಟಗಳಷ್ಟು ಕಿತಾಬ್ ರಚಿಸುತ್ತಿದ್ದ, ದೀನೀ ಸೇವೆಯ ಗುಂಗಿನಲ್ಲಿ ವಿವಾಹವಾಗುವುದನ್ನೇ ಮರೆತ ಇಮಾಂ  ನವವೀ(ರ)ರವರ ಉಸ್ತಾದರಾಗಿದ್ದಾರೆ ಈ ಅಬೂ ಶಾಮ(ರ). ಜಗತ್ತಿನಲ್ಲಿ ಇಮಾಂ ನವವೀ(ರ)ರವರ ಗ್ರಂಥ ಪಾರಾಯಣಗೈಯ್ಯದ ಒಂದೇ ಒಂದು ದಿನಗಳಿಲ್ಲ. ಅಂತಹ ಶ್ರೇಷ್ಠ ಪಂಡಿತರ ಉಸ್ತಾದ್ ಹೇಳುವುದನ್ನು ಅಂಗೀಕರಿಸುವುದು ಬಿಟ್ಟು ಈ ಹುಚ್ಚು ವಾದವನ್ನು ನೀನೇಕೆ ಹರಿಯಬಿಟ್ಟೆ..?

   ಅದೇ ರೀತಿ 7ನೇ ಶತಮಾನದಲ್ಲಿ ಜೀವಿಸಿದ ಇಮಾಂ ಯಾಫೀ(ರ)ರವರು ಮೌಲಿದ್‍ನ ಬಗ್ಗೆ ಏನೆಂದರು ಗೊತ್ತೇ..?

“ನೆಬಿ(ಸ.ಅ)ರವರ ಮೌಲಿದ್‍ಗಾಗಿ ಯಾರಾದರೊಬ್ಬರು ಸ್ಥಳ ಸೌಕರ್ಯವೇರ್ಪಡಿಸಿ ಜನರನ್ನು ಆಹ್ವಾನಿಸಿ, ಅನ್ನದಾನದಂತಹ ಸತ್ಕರ್ಮ ಮಾಡಿದರೆ ಅಲ್ಲಾಹು ಆತನನ್ನು ಸಿದ್ಧೀಖ್‍ಗಳು, ಶುಹದಾಗಳು, ಹಾಗೂ ಸ್ವಾಲಿಹ್‍ಗಳೊಂದಿಗೆ ಸ್ವರ್ಗದಲ್ಲಿ ಒಂದು ಗೂಡಿಸುವನು”.

ನೋಡು ಮಕ್ಕಾದಲ್ಲಿ ಜನಿಸಿ ಅಲ್ಲೇ ದೀನಿ ಸೇವೆಗೈದು ಮಕ್ಕಾದಲ್ಲೇ ವಫಾತಾದ ಇಮಾಂ ಯಾಫೀ(ರ)ರವರು ಹೇಳುವುದು ಮೌಲಿದ್‍ನ ಕಾರಣದಿಂದ ಆತ ಸ್ವರ್ಗ ಪ್ರವೇಶಿಸುವನೆಂದು. ಆದರೆ.... ಕೇರಳದ ನಿನ್ನ ವಹ್ಹಾಬಿ ನೇತಾರ ಬಾಲುಶ್ಯೇರಿ ಹೇಳಿದ ಮಾತು ನಿನಗೆ ನೆನಪಿರಬಹುದು, “ಮೌಲಿದ್‍ಗೆ ಪುರಾವೆಯಿಲ್ಲವೆಂದು ಮಾತ್ರವಲ್ಲ, ರಸ್ತೆಯಲ್ಲಿದ್ದ ಕಲ್ಲನ್ನು ಬದಿಗೆ ಸರಿಸಿದರೆ, ಮುಸ್ಲಿಮನೊಬ್ಬನಿಗೆ ಸಲಾಂ ಹೇಳಿದರೆ, ಅಥವಾ ಪರಸ್ಪರ ಮುಗುಳ್ನಕ್ಕರೆ, ಹೆಚ್ಚೇಕೆ ಒಂದು ಅಣುಗಾತ್ರದಷ್ಟು ಸತ್ಕರ್ಮಗೈದರೆ ಸಿಗುವ ಪುಣ್ಯ ಸಹ ಮೌಲಿದಾಚರಣೆ ಗೆ ಲಭಿಸಲಾರದು” ನೋಡು ಎಂತಹಾ ಅಜ್ಞಾನ..!! ಪುರಾವೆ ಉದ್ದರಿಸಿ ಪುಣ್ಯ ಕರ್ಮವೆಂದು ಹೇಳುವಾಗ ಇಂತಹ ಲೋಕಲ್ ವ್ಯಕ್ತಿಗಳು ಅದಕ್ಕೆದುರಾಗಿ ಹೇಳಿಕೆ ನೀಡುತ್ತಾರೆ.! ಇನ್ನಾದರೂ ನೀನು ಚಿಂತಿಸು ಕೇವಲ ಅಂಧವಾಗಿ ನಿರಾಕರಿಸುವುದರ ಬದಲು ವಿಷಯವನ್ನು ಆಳವಾಗಿ ಕಲಿಯಲು ತಯಾರಾಗು.

ಒಟ್ಟಿನಲ್ಲಿ ಮೀಲಾದುನ್ನಬೀ ಬಿದ್‍ಅತ್ ಎಂದು ಒಂದೇ ಮಾತಿನಲ್ಲಿ ತಳ್ಳಿ ಹಾಕುವುದಕ್ಕಿಂತ ಮೊದಲು ಈ ಮೀಲಾದುನ್ನಬೀ ಎಂಬ ಹೆಸರಲ್ಲಿ ಸುನ್ನಿಗಳು ಆಚರಿಸುವ ಆಚರಣೆಗಳಾವು ಎಂದು ಪ್ರತ್ಯೇಕವಾಗಿ ನೋಡಿ ಕಲಿ. ಆ ಬಗ್ಗೆ ಸಂಶಯಗಳಿದ್ದರೆ ಕಿತಾಬ್ ತಿಳಿದವರೊಂದಿಗೆ ಚರ್ಚಿಸು. ಅದು ಬಿಟ್ಟು ಒಂದೆರಡು ನೋಟೀಸು ಮುದ್ರಿಸಿ ಹಂಚಿದರೆ, ಫೇಸ್‍ಬುಕ್ ಅಥವಾ ವಾಟ್ಸಪ್‍ಗಳಲ್ಲಿ ನಾಲ್ಕೈದು ಪೋಸ್ಟ್‍ಗಳನ್ನು ಕಳುಹಿಸಿದರೆ ಏನೂ ಪ್ರಯೋಜನವಿಲ್ಲ.

ನೋಡು... ನಾನು ಅತ್ಯಂತ ಸೌಮ್ಯವಾಗಿಯೇ ವಿಷಯಗಳನ್ನು ಪ್ರತಿಪಾದಿಸಿದ್ದೇನೆ. ಆವೇಶ ಹೆಚ್ಚಾಗಿ ನಿಂದಿಸುವ ಮಾತುಗಳನ್ನು ಎಲ್ಲೂ ಬಳಸಿಲ್ಲ. ನನ್ನ ಉದ್ದೇಶವೊಂದೇ... ನೀನು ಒಳ್ಳೆಯವನಾಗಬೇಕು. ಪರಲೋಕದಲ್ಲಿ ಜಯಶಾಲಿಯಾಗಬೇಕು. ಸಜ್ಜನರ ಸರಣಿಯಲ್ಲಿ  ಸಾಗುತ್ತಿರುವುದರಿಂದ ಮಾತ್ರ ಅದು ಸಾಧ್ಯ. ಆದ್ದರಿಂದ ಸಜ್ಜನರ ಅಭಿಪ್ರಾಯಗಳನ್ನು ನಾನಿಲ್ಲಿ ತಿಳಿಸಿದ್ದೇನೆ. ಉಳಿದದ್ದು ನಿನಗೆ ಬಿಟ್ಟ ವಿಷಯ. ಅಲ್ಲಾಹು ನಮಗೆಲ್ಲರಿಗೂ ಸನ್ಮಾರ್ಗವನ್ನು ಕರುಣಿಸಲಿ ಆಮೀನ್.

Wednesday, November 15, 2017

*ನಿಂದನೆ ಅದು ಇಬ್ಲೀಸನ ಗುಣ..........*

ಯಾವುದೋ ಒಬ್ಬ ವ್ಯಕ್ತಿಯನ್ನೊ ಅಥವಾ ಯಾವುದೋ ಒಬ್ಬ ಆಲಿಮರನ್ನು ನಿಂದಿಸುವವರೆ ಒಂದು ನಿಮಿಷ ಇದನ್ನು ಓದಿ......

"ನಮ್ಮ ಪರಮಶತ್ರು ಯಾವತ್ತಿದ್ದರು ಅದು ಇಬ್ಲೀಸ್ ಮಾತ್ರ "ಎಂದು ಖುರ್ ಆನಿನ ಮೂಲಕ *ಅಲ್ಲಾಹನು*ನಮಗೆ ತಿಳಿಸಿಕೊಟ್ಟಿದ್ದಾನೆ......ಆದರೆ ಇಂದು ನಮ್ಮ ಪರಮಶತ್ರು ಇಬ್ಲೀಸ್ ಎನ್ನುವ ಮಾತನ್ನು ಮರೆತು ಮನುಷ್ಯ ಮನುಷ್ಯನ ಎಡೆಯಲ್ಲೇ ಅಸಹ್ಯವಾದ ಮಾತುಗಳು ಇಂದು ನಮ್ಮ ಆಧುನಿಕ ಜಗತ್ತಿನಲ್ಲಿ ನಮಗೆ ಕೇಳಿಬರುತ್ತಿದೆ.ಆದರೆ ಆವತ್ತು ಅಂತ್ಯ *ಪ್ರವಾದಿ ಮುಹಮ್ಮದ್ ಮುಸ್ತಫಾ(ಸ)* ತಂಙ್ಙಳರು ನಮ್ಮ ಸಮುದಾಯಕ್ಕೆ ಕಲಿಸಿದ ಒಂದು ಹದೀಸ್ ಆಗಿದೆ.. *المسلم اخوامسلم*( ಒಬ್ಬ ಮುಸ್ಲಿಮ್ ಇನ್ನೊಬ್ಬ ಮುಸ್ಲಿಮನ ಸಹೊದರ)ಎನ್ನುವಂತಹ ನೆಬಿಯವರು ಕಲಿಸಿದ ವಚನವನ್ನು ಮರೆತು ಇಂದು ಸಹೋದರತೆಯನ್ನು ಹೊಡೆದು ಹಾಕುವಂತಹ ಮಟ್ಟಕ್ಕೆ ನಮ್ಮ ಸಮುದಾಯ ಇಂದು ದಾಟುತ್ತಿದೆ.ಯಾವುದೇ ಒಂದು ಮಸೀದಿಯಲ್ಲಿ ಕಾರ್ಯನಿರ್ವಹಿಸುವ ಒಬ್ಬ ಉಸ್ತಾದರ ಒಂದು ತಪ್ಪು ನಡೆದರೆ ಅವರಿಗೆ ಹೊಡೆಯುವುದೊ ಅಥವಾ ಅಸಹ್ಯವಾಗಿ ಮಾತನಾಡಿ ಅವರನ್ನು ಅವಹೇಳನ ಮಾಡುವುದೊ ಅದು ಯಾವ‌ ಕಾರಣಕ್ಕೊ ಸಲ್ಲದು.ಅದು ಆಲಿಮ್ ಆಗಿರಲಿ ಅಥವಾ ಆಲಿಮ್ ಅಲ್ಲದವನಾಗಿರಲಿ ಯಾವುದೇ ಒಬ್ಬ ವ್ಯಕ್ತಿಯನ್ನು ನಿಂದಿಸುವಂತಹ ಪರಿ ನಮಿಗಿಲ್ಲ ಸಹೋದರರೆ.ಆದ್ದರಿಂದ ಒಬ್ಬ ವ್ಯಕ್ತಿಯನ್ನು ನಿಂದಿಸದಿರಿ ಅದು *ಅಲ್ಲಾಹನ*ಹಬೀಬರು ಇಷ್ಟಪಡದಂತಹ ಕಾರ್ಯವಾಗಿದೆ. ನಮ್ಮ ನೇತಾರ *ಮುಹಮ್ಮದ್ ಮುಸ್ತಫಾ(ಸ)*ರ ಅನುಯಾಯಿಗಳಾದ ನಾವು ಅವರ ಚರ್ಯೆಯನ್ನು ಪಾಲಿಸುವ ಮೂಲಕ ಅವರ ಶಫಾಅತ್ ನಮಗೆ ಸಿಗಲು ನಾವು ಕಾರಣರಾಗೋಣ.......
*ಸರ್ವ ಶಕ್ತನಾದ ಅಲ್ಲಾಹ*ನು ನಮಗೆ ತೌಫೀಖ್ ನೀಡಲಿ........ *ಆಮೀನ್*
👏👏👏👏👏

*ಅಬ್ದುರ್ರಝಾಖ್ ಉನೈಸ್ ಮೂಳೂರು*✍

Tuesday, November 14, 2017

ವಹ್ಹಾಬಿಗಳಿಗೆ ಇಬ್ಲೀಸ್ ಬರೆದ ಪತ್ರ ಬಹಿರಂಗವಾಯಿತು..!

✍ ಎಂ. ಬದ್ಯಾರ್

ನನ್ನ ಪ್ರೀತಿಯ ವಹ್ಹಾಬಿ ಮಿತ್ರರು ಅರಿತುಕೊಳ್ಳಲು ನಾನು ನಿಮ್ಮ ಪ್ರೀತಿಯ ಇಬ್ಲೀಸ್..👹
ವಸಂತ ತುಂಬಿದ ಪುಣ್ಯ ರಬೀಉಲ್ ಅವ್ವಲ್ ಆಗತವಾಗುತ್ತಿದೆ.....😌
ಈ ತಿಂಗಳಲ್ಲಿ ನಾನು ಬೇಸರಿಸುವಂತೆ ನೀವೂ ಕೂಡ ಬೇಸರದಲ್ಲಿರುವ ಸಂಗತಿ ನನಗೆ ತಿಳಿದಿದೆ. ಅದಕ್ಕಾಗಿ ಈ ಪತ್ರ ಬರೆಯುತಿದ್ದೇನೆ.
ಪುಣ್ಯ ರಬೀವುಲ್ ಅವ್ವಲ್ ತಿಂಗಳಲ್ಲಿ ಪೂರ್ವಿಕ ಮಹಾನರು ಸೇರಿದಂತೆ ಇಂದಿನವರೆಗೂ ಬಂದ ಎಲ್ಲ ಸತ್ಯವಿಶ್ವಾಸಿಗಳು ಮೌಲೂದ್ ಪಠಿಸುವ ಮೂಲಕ ವಿಜೃಂಭಣೆಯಿಂದ ಈದ್ ಮಿಲಾದ್ ಆಚರಿಸುತ್ತಾರೆ. ಆದರೆ ಇದನ್ನು ಮೊಟಕುಗೊಳಿಸುವಲ್ಲಿ ನಮ್ಮ ಪಾತ್ರ ಇನ್ನು ಅಭಿವೃದ್ಧಿಯಾಗಬೇಕಿದೆ. ನಮ್ಮ ಈ ಮೌನ ನಿರರ್ಥಕ. ಮೌದೂದಿಗಳೊಂದಿಗೆ ಸೇರಿ ನಾವು ತಂತ್ರ ರೂಪಿಸಬೇಕು.ಉಪಯುಕ್ತ ಯೋಜನೆಗಳನ್ನು ಜಾರಿ ಮಾಡಬೇಕು.

ಅದೆಷ್ಟೋ ವರ್ಷ ಗಳ ಮುಂಚೆಯೆ ನನ್ನ ಹೆಸರು ಕೇಳುವಾಗ ಲಅನತುಲ್ಲಾಹಿ ಅಲೈಹಿ
ಎಂದು ಅವರು ಹೇಳುವಾಗ ನೀವು ಕೂಡ ಹೇಳುತ್ತೀರಿ ಎಂಬುದರಲ್ಲಿ ಖೇದವಿದೆ.
ಸುಜೂದ್ ಅಲ್ಲಾಹನಿಗೆ ಮಾತ್ರ ಎಂಬ ಉದಾತ್ತವಾದ ಸಂದೇಶವನ್ನು ಮಂತ್ರಿಸಿದಕ್ಕಾಗಿ ನಾನು ಶಪಿಸಲ್ಪಟ್ಟಿರೂದು ಎಂದು ನಿಮಗೆ ತಿಳಿದ ವಿಚಾರವಲ್ಲವೇ?
ಸಹಾಯಾಭ್ಯರ್ಥನೆ ಅಲ್ಲಾಹನಲ್ಲಿ ಮಾತ್ರ  ಎಂಬ ನಿಮ್ಮ ವಾದಕ್ಕಿಂತಲೂ ಉತ್ತಮವಾದ ಸಂದೇಶವಾಗಿತ್ತು ನನ್ನದು.
ಒಂದೇ ವಾದದೊಂದಿಗೆ ಮುಗ್ಧ ಸುನ್ನಿಗಳ ವಿಶ್ವಾಸವನ್ನು ಕಬಳಿಸಲು ಅಹರ್ನಿಶಿ ದುಡಿಯುತ್ತಿರುವ  ನಾನು ಮತ್ತು ನೀವು  ಯಾವತ್ತು ಐಕ್ಯತೆಯಿಂದ ಇರುವುದು ಒಳಿತಲ್ಲವೇ... ನಮ್ಮ ಉದ್ದೇಶ ಈಡೇರಲು ತುಂಬಾ ಸಹಕಾರಿಯಾಗುತ್ತದೆ..
ಆದಂ ನೆಬಿ (ಅ)ರಿಗೆ ಸುಜೂದ್ ಸುಜೂದ್ ತಿರಸ್ಕರಿಸಿದ್ದು ಒಂದು ಮಹಾ ಪಾಪವೆಂದು  ನನಗೆ ತೋಚುತ್ತಿಲ್ಲಾ!!! ಯಾಕೆಂದರೆ
ಅಲ್ಲಾಹ್ ಅಲ್ಲದವನಿಗೆ ಸುಜೂದ್ ನಿರ್ವಹಿಸೂದು ಶಿರ್ಕ್ ಎಂಬೂದು ನಿಮಗೆ ತಿಳಿದ ವಿಚಾರ ವಲ್ಲವೇ...?
ಇನ್ನೊಂದು ವಿಚಾರವೇನೆಂದರೆ ನಿಮ್ಮ ಮೌಲವಿಗಳ ಆದರ್ಶಕ್ಕೂ ನನ್ನ ಆದರ್ಶಕ್ಕೂ ಯಾವುದೇ ರೀತಿಯ ವ್ಯತ್ಯಾಸವಿಲ್ಲ ಎಂಬುದು ನನಗೆ ತಿಳಿದ ವಿಚಾರ .
ಅಲ್ಲಾಹು ಅವನ ಪ್ರವಾದಿಗಳ ಮೂಲಕ ಇಸ್ಲಾಮಿನ ಸುಂದರ ಆಶಯ ಆದರ್ಶಗಳನ್ನು ಪ್ರಚಾರ ಪಡಿಸಿ ಮತ್ತು ಹುತಾತ್ಮರನ್ನು, ಇಮಾಮಿಗಳನ್ನೂ  ಔಲಿಯಾ ಶ್ರೇಷ್ಠರನ್ನು ಗೌರವಿಸಬೇಕೆಂದೂ ಅವರನ್ನು ಸಹಾಯಕ್ಕಾಗಿ ಕರೆಯಬೇಕೆಂದು ಕಲಿಸಿಯೂ ಕೂಡ ನೀವು ಮಾಡದೆ ಇರುವುದು ದುರಹಂಕಾರದ ಪರಮಾವಧಿಯಲ್ಲವೇ....???
ಅಂದರೆ ನಮ್ಮ ಎರಡು ವಿಭಾಗದ ಆದರ್ಶವು ಸರಿಸಮಾನವಿದೆ ಎಂದರ್ಥ
ಕೆಲವೊಮ್ಮೆ ನೀವೂ ಹೇಳಬಹುದು,  ಅದಂ ನೆಬಿ (ಅ) ಗೌರವಿಸದಿರೂವುದು ನನ್ನ ಅಹಂಕಾರದಿಂದಾಗಿದೆ ಎಂದು.
ನಾನು ಅದನ್ನು ನಾನು ಒಪ್ಪಿಕೊಳ್ಳುತ್ತೇನೆ!
ಆದರೆ ನಿಮ್ಮ ಕಾರ್ಯವೋ... ಮಝ್ಹಬಿನ ಇಮಾಮರನ್ನೂ ಅಂಗೀಕರಿಸದೇ  ಅವರಿಗಿಂತಲೂ ಹೆಚ್ಚಿನ  ಜ್ಞಾನ ನಿಮಗಿದೆ ಎಂಬ‌ ಅಹಂಕಾರದಿಂದಲ್ಲವೇ...?
ತರಾವೀಹ್ ಇಪ್ಪತ್ತು ರಕ ಅತ್ತ್ ನಿರ್ವಹಣೆ ಮಾಡದೇ,  ಜುಮುಅಕ್ಕೆ ಎರಡು ಅಝಾನ್ ಕರೆ ಕೊಡದೇ ಇರುವುದು
ಖಲೀಪ ಉಮರ್, ಉಸ್ಮಾನ ರಿಗಿಂತಲೂ ಹೆಚ್ಚಿನ  ಜ್ಞಾನ ನಿಮಗಿದೆ ಎಂಬ ಅಹಂ ಅಲ್ಲವೇ..?
ನಿಮ್ಮ ಅಹಂಕಾರದ ಪಟ್ಟಿಗೆ ತುಂಬಾ ದೀರ್ಘವಿದೆ, ನಾನು ಈಗ ವಿವರಣೆ ಮಾಡುವುದಿಲ್ಲಾ‌...
ಆದ್ದರಿಂದ ಅಹಂಕಾರದ ವಿಷಯದಲ್ಲಿ ನನಗಿಂತಲೂ ಒಂದು ಹೆಜ್ಜೆ ನೀವೇ ಮುಂದಿದ್ದೀರಿ.... ತುಂಬಾ ಸಂತೋಷವಾಗುತ್ತಿದೆ
ನಾನು ಆದಂನನ್ನು ಮಾತ್ರ ವಾಗಿದೆ ನಿಂದಿಸಿರುವುದು.. ಅದರೆ ನೀವೊ...!
ಸ್ವಹಾಬಿಗಳನ್ನು, ತಾಬಿಗಳನ್ನು ಲಕ್ಷ ಗಟ್ಟಲೇ ಹದೀಸ್ ಕಂಠಪಾಠ ಮಾಡಿದ ಇಮಾಮರುಗಳನ್ನು, ಔಲಿಯಾಗಳನ್ನು, ಶುಹದಾಗಳನ್ನು,‌ ಉಲಮಾಗಳನ್ನೂ...!
ಎಲ್ಲಾ ಒಳಿತುಗಳೂ ಸ್ವೀಕರಿಸಲ್ಪಡುವುದು ನಿಯ್ಯತ್ ಮೂಲಕ ಎಂದಲ್ಲವೇ ಇಸ್ಲಾಂ ಕಲಿಸುವುದು.. 
ಅದಕ್ಕಾಗಿ ಅವರ ನಿಯ್ಯತ್ತನ್ನೇ ಇಲ್ಲವಾಗಿಸಲು ಹಲವಾರು ರೀತಿಗಳಲ್ಲಿ ನಾನು  ಪ್ರಯತ್ನಿಸಿದೆ, ಆದರೆ ನೀವು  ಉಪವಾಸಕ್ಕೂ, ನಮಾಝಿಗೂ, ವುಝೂವಿಗೂ ಯಾವುದಕ್ಕೂ ನಿಯ್ಯತ್ತು ಅಗತ್ಯವಿಲ್ಲ ಎಂದು ಕಲಿಸಿಕೊಟ್ಟು ನನ್ನ ದಾರಿಯನ್ನು ಸುಗಮಗೊಳಿಸಿದ್ದೀರಿ... ನಿಮಗೆ ಹೇಗೆ ಧನ್ಯವಾದ ತಿಳಿಸಲಿ ಎಂದು ತೋಚುತ್ತಿಲ್ಲ..
ಇನ್ನು ಸ್ವಲಾತ್ ಹೇಳುವುದಂತೂ ಕೇಳುವಾಗ ನನ್ನ ಮೈಯೆಲ್ಲಾ ಉರಿಯುತ್ತದೆ..... ಅದನ್ನು ಇನ್ನಿಲ್ಲದಂತೆ ಮಾಡಲು ಹಲವಾರು ರೀತಿಯ ಕುತಂತ್ರ ಪ್ರಯೋಗಿಸಿದೆ. ಆದರೆ ನೀವು ಸ್ವಲಾತ್ ಮಜ್ಲಿಸ್, ಝಿಕ್ರ್ ಹಲ್ಕ ಬಿದ್ಅತ್ ಅಗಿದೆ ಎಂದು ಹೇಳುತ್ತಾ ನನ್ನ ಬೆಂಬಲಕ್ಕೆ ನಿಂತಿದ್ದೀರಿ..... ನಿಮ್ಮ ಈ ಬೆಂಬಲ ಹೀಗೆ ಮುಂದುವರಿಯಲಿ ಎಂದು ಹಾರೈಸುತ್ತೇನೆ...
ಒಟ್ಟು ಸೇರಿ ಸ್ವಲಾತ್ ಹೇಳುವುದನ್ನು ವಿಮರ್ಷನೆ ಮಾಡುತ್ತಿರುವ ನೀವುಗಳು ಒಬ್ಬಂಟಿಯಾಗಿಯೂ ಸ್ವಲಾತ್ ಹೇಳುತ್ತಿಲ್ಲವಲ್ಲಾ  ಎಂಬುದರಲ್ಲಿ ಅಪಾರ ಸಂತೋಷವಿದೆ... ಹೀಗೆ ಮುಂದುವರಿಯಲಿ ನಿಮ್ಮ ಪಯಣ, ನಿಮ್ಮ ಅಂಗರಕ್ಷಕನಾಗಿ ನಾನು ಇಬ್ಲೀಸ್ ಸದಾ ಇರುತ್ತೇನೆ.
ಅದೇ ರೀತಿ ರಮಲಾನಿನಲ್ಲಿ ಹನ್ನೊಂದು ರಕ ಅತ್ತ್ ಗಿಂತಲೂ ಹೆಚ್ಚು ನಮಾಝ್ ನಿರ್ವಹಣೆ ಮಾಡಿದರೆ ನರಕಕ್ಕೆ ಹೋಗುತ್ತಾರೆ ಎಂದು ಹೇಳುವ ನಿಮ್ಮನ್ನು ನಾನು ಹೇಗೆ ಅಭಿನಂದಿಸದಿರಲಿ...?
ಅಲ್ ಪಾತಿಹ ಎಂದು ಕುರಾನ್ ಪಠಿಸುವಾಗ ನನಗಿಂತಲೂ ವೇಗವಾಗಿ ನೀವು ಓಡುವುದು ಕಾಣುವಾಗ ನನ್ನ ಸಂತೋಷಕ್ಕೆ ಪಾರವೇ ಇರುವುದಿಲ್ಲ...
ನನ್ನ ಸೈನ್ಯದ ರುಂಡ ಮುಂಡ ಚೆಂಡಾಡಿದ ಬದರ್ ದಿನ, ಮಿಅ್ರಾಜ್ ರಾತ್ರಿ ಬರಾ ಅತ್ ರಾತ್ರಿ ಮುಂತಾದ ಪುಣ್ಯ ರಾತ್ರಿಗಳಲ್ಲಿ ಆರಾಧನೆಯಲ್ಲಿ ತಲ್ಲೀನರಾಗುವವರನ್ನು ಕಾಣುವಾಗ ನಾನು ಬೇಸರದಿಂದ ತಲೆ ತಗ್ಗಿಸುತ್ತೇನೆ, ನನ್ನ ಅಟ್ಟಹಾಸ ಮುಗಿಲು ಮುಟ್ಟುತ್ತದೆ...
ಆದರೆ ಆ ದಿವಸಗಳಿಗೆ ಪ್ರಾಮುಖ್ಯತೆ ಇಲ್ಲ ಎಂದು ಹೇಳಿ ನೈಜ ವಿಶ್ವಾಸಿಗಳನ್ನು ವಂಚಿಸಿ ಸುನ್ನತ್ ಉಪವಾಸವನ್ನು, ಅವರ ಆರಾಧನೆ ಗಳನ್ನು ಮೊಟಕುಗೊಳಿಸುವ  ನಿಮ್ಮನ್ನು ನಾನು ಹೇಗೆ ಅಭಿನಂದಿಸದಿರಲಿ ಎಂದು ಅರ್ಥವಾಗುತ್ತಿಲ್ಲ..

ಇಷ್ಟು ನಾನಿಲ್ಲಿ ಬರೆದಿರೂದು ಒಂದೇ ಆದರ್ಶ ಆಶಯವು ಇರುವ ನಾವುಗಳು ಐಕ್ಯತೆಯಿಂದ ಬಾಳುವವರಾಗಬೇಕು  ಎಂದು ತಿಳಿಸಲು ಮಾತ್ರವಾಗಿದೆ.

ಮುಂದಿನ ದಿನಗಳಲ್ಲಿ ಮೌದೂದಿ, ತಬ್ಲೀಗರನ್ನು ಒಗ್ಗೂಡಿಸುವ ರಣತಂತ್ರವನ್ನು ರೂಪಿಸುತ್ತಿದ್ದೇನೆ.
ಐಕ್ಯತೆಗೆ ತಯ್ಯಾರಿ ಇರುವ ಎಲ್ಲರನ್ನು ಒಟ್ಟು ಸೇರಿಸಿ ಒಂದಾಗಿ ನಾವು ಬಾಳಬೇಕು ...
ನಾಳೆ ಮಹ್ಶರಾದಲ್ಲಿ ಮನುಷ್ಯ ರು ಸಹಾಯ ಅಭ್ಯರ್ತನೆ ನಡೆಸಿ ಪ್ರವಾದಿಗಳ ಹಿಂದೆ ನಡೆಯುವರು.
ಅದ್ದರಿಂದ ಅದು ಶಿರ್ಕೇಂದು ನನಗಿಂತ ಹೆಚ್ಚಾಗಿ ನಿಮಗೆ ಗೊತ್ತಿದೆ ಅಲ್ಲವೇ..?
ಆವಾಗಲೂ ಅದೇ ಆಶಯ ಆದರ್ಶದಲ್ಲಿ ಮುನ್ನುಗ್ಗುವವರಾಗಬೇಕು...

ನಿಮ್ಮನ್ನು ಮುಟ್ಟಿಸುವಲ್ಲಿಗೆ ಮುಟ್ಟಿಸೂದರಲ್ಲಿ ನಾನು ಸಫಲನಾಗಿದ್ದೇನೆ......

🌹🌹🌹🌹🌹🌹

ಮೂಲ: ಮಳಯಾಲಂ
✍ ಕನ್ನಡಕ್ಕೆ: ಮರ್ಝೂಕ್ ಬದ್ಯಾರ್
*ಅಹ್ಲುಸ್ಸುನ್ನತ್ ವಲ್ ಜಮಾಅತ್*
*••••••••••••••••••••••••••••••••••••*
*📝ಮುನೀರ್ ಸಖಾಫಿ,ಸಾಲೆತ್ತೂರು*
*°°°°°°°°°°°°°°°°°°°°°°°°°°°°°°°°°*
   

*ವಿಷಯ 1:*

 *ಮೀಲಾದುನ್ನಬೀ.*
*------------------------------------------*
*ಭಾಗ ---7.*

 *ಮೌಲಿದ್ ಕಿತಾಬ್ ರಚಿಸಿದ ಮಹಾತ್ಮರು:*

14. _ಫತ್'ಹುಲ್ಲಾಹಿ ಹಸ್'ಬೀ ವಕಫಾ ಫೀ ಮೌಲಿದಿಲ್ ಮುಸ್ತಾಫಾ_
فتح الله حسبي وكفى في مولد المصطفى
برهان الدين أبو الصفاء علي الحسني العراقي المقدسي الشافعي
ಅಲ್ಲಾಮಾ ಬುರ್'ಹಾನುದ್ದೀನ್ ಅಬುಸ್ವಫಾ ಅಲಿಯ್ಯುಲ್ ಹಸನ್ ಅಲ್ ಇರಾಖೀ ಅಶ್ಶಾಫಿಈ.
ಹಿಜರಿ:810--887.
----------------------------------------------------
15. _ಲಿಲ್ಲುಮ್  ಗಮಾಮ ಫೀ ಮೌಲಿದಿ ತಿಹಾಮ_
ظل الغمامة في مولد تهامة.

ಅಹ್ಮದ್ ಬಿನ್ ಅಲಿಯ್ಯಿಬಿನ್ ಸಈದುಲ್ ಗರ್'ನಾತೀ (ರ)
ಹಿಜರಿ:673.
----------------------------------------------------
16. _ಅಲ್ ಕವಾಕಿಬುದ್ದುರ್ರಿಯ್ಯ ಫೀ ಮೌಲಿದಿ ಖೈರಿಲ್ ಬರಿಯ್ಯಃ_
الكواكب الدرية في مولد خير البرية.
ಅಬೂಬಕರ್ ಬಿನ್ ಮುಹಮ್ಮದ್ ಬಿನ್ ಅಬೀಬಕರ್ ಹಬೀಶೀ ಅಶ್ಶಾಫಿಈ(ರ)
ಹಿಜರಿ:930
----------------------------------------------------
17. _ಅದ್ದುರ್ರತುಸ್ಸನಿಯ್ಯ ಫೀ ಮೌಲಿದಿ ಖೈರಿಲ್ ಬರಿಯ್ಯ._
الدرة السنية في مولد خير البرية.

ಹಾಫಿಲ್ ಸ್ವಲಾಹುದ್ದೀನ್ ಖಲೀಲ್ ಬಿನ್ ಕೀಕಲದೀ ಅಲ್ ಅಲಾಈ (ರ).
ಹಿಜರಿ:694--- 761.

----------------------------------------------------
18. _ಅಲ್ ಮವ್'ರಿದುಲ್ ಅದ್ಸ್'ಬುಲ್ ಮುಈನ್ ಫೀ ಮೌಲಿದಿ ಸಯ್ಯಿದಿಲ್ ಖಲ್'ಖಿ ಅಜ್ಮಈನ್._
المورد العذب المعين في مولد سيد الخلق أجمعين.

ಮುಹಮ್ಮದ್ ಬಿನ್ ಅಬ್ದಿಲ್ಲಾಹಿ ಬಿನ್ ಮುಹಮ್ಮದ್ ಬಿನ್ ಮುಹಮ್ಮದ್ ಬಿನ್ ಅಬೀಬಕರ್ ಅಲ್ ಜಝಾಇರಿ(ರ).
ಹಿಜರಿ:707.
----------------------------------------------------
19. _ಅಲ್ ಕಲಾಮು ಸ್ಸನಿಯ್ಯುಲ್ ಮುಸಫ್ಫಾ ಫೀ ಮೌಲಿದಿಲ್ ಮುಸ್ತಫಾ._
الكلام السني المصفى في مولد المصطفى.

ಯೂಸುಫ್ ಝಾದಾ ರೂಮೀ(ರ).
ಹಿಜರಿ:1085--1165.
----------------------------------------------------
20. _ಮತ್ವಾಲಿಉಲ್ ಅನ್'ವಾರ್ ಫೀ ಮೌಲಿದಿನ್ನಬಿಯ್ಯಿಲ್ ಮುಖ್ತಾರ್_
مطالع الأنوار في مولد النبي المختار

ಅಬ್ದುಲ್ಲಾಹಿ ಬಿನ್ ಅಲಿಯ್ಯು ಬಿನ್ ಅಬ್ದುರ್ರಹಮಾನ್ ಅಶ್ಶಾಫಿಈ (ರ)
ಹಿಜರಿ:1234.
----------------------------------------------------
21. _ಸುರುರುಲ್ ಅಬ್'ರಾರ್ ಫೀ ಮೌಲಿದಿನ್ನಬಿಯ್ಯಿಲ್ ಮುಖ್ತಾರ್_
سرر الابرار في مولد النبي المختار.

ಅಬ್ದುಲ್ ಫತ್ತಾಹ್ ಬಿನ್ ಅಬ್ದುಲ್ ಖಾದಿರ್ ಬಿನ್  ಸ್ವಾಲಿಹ್ ದಿಮಶ್ಖೀ(ರ).
ಹಿಜರಿ:1250.
----------------------------------------------------
22. _ಅಲ್ ಮುಂತಖಬುಲ್ ಮುಸಫ್ಫ ಫೀ ಅಖ್'ಬಾರಿ ಮೌಲಿದಿಲ್ ಮುಸ್ತಫಾ_
المنتخب المصفي في أخبار مولد المصطفى

ಮುಹ್ಯುದ್ದೀನ್ ಅಬ್ದುಲ್ ಖಾದಿರ್ ಬಿನ್ ಶೈಖ್ ಬಿನ್ ಅಬ್ದಿಲ್ಲಾಹಿ ಅಲ್ ಹೈದರೂಸೀ ಅಲ್ ಹಳ್ರಮೀ(ರ).
ಹಿಜರಿ:987--1038).
----------------------------------------------------
23. _ಅಲ್ ಮನ್'ಹಲುಲ್ ಅದ್ಸ್'ಬುಲ್ ಖರೀರ್ ಫೀ ಮೌಲಿದಿಲ್ ಬಶೀರಿನ್ನದೀರ್._
المنهل العذب القرير في مولد الهادي البشير النذير.

ಶೈಖ್ ಅಲಿಯ್ಯ್ ಬಿನ್ ಸುಲೈಮಾನ್ ಬಿನ್ ಅಹ್ಮದ್ ಬಿನ್ ಮುಹಮ್ಮದ್ ಅಲ್ ಮರ್ದಾವೀ ಅಲ್ ಹಂಬಲೀ(ರ).
ಹಿಜರಿ:885.
----------------------------------------------------
24. _ಮನಾಸಿಕುಲ್ ಹಜ್'ಝಿಲ್ ಮುಂತಖಾ ಮಿನ್ ಸಿಯರಿ ಮೌಲಿದಿನ್ನಬಿಯ್ಯಿಲ್ ಮುಸ್ತಫಾ._
مناسك الحجز المنتقي من سير مولد النبي المصطفي.

ಮುಹಮ್ಮದ್ ಬಿನ್ ಮಸ್'ಊದ್ ಬಿನ್ ಮುಹಮ್ಮದ್ ಸಈದುದ್ದೀನ್ ಅಲ್ ಕಾಝರೂನೀ .
ಹಿಜರಿ:758.
----------------------------------------------------
25. _ತಅ್'ನೀಸು  ಅರ್'ಬಾಬಿಸ್ಸಫಾ ಫೀ ಮೌಲಿದಿಲ್ ಮುಸ್ತಫಾ._
تأنيس ارباب الصفا في مولد المصطفي.

ಅಸ್ಸೆಯ್ಯಿದ್ ಅಲಿಯ್ಯ್ ಬಿನ್ ಇಬ್ರಾಹೀಂ ಬಿನ್ ಮುಹಮ್ಮದ್ ಬಿನ್ ಇಸ್ಮಾಯೀಲ್ ಬಿನ್ ಸ್ವಲಾಹ್(ರ).
ಹಿಜರಿ:1171--1236.
----------------------------------------------------
26: _ಅನ್ನಫ್'ಹತುಲ್ ಅಂಬರಿಯ್ಯ ಫೀ ಮೌಲಿದಿ ಖೈರಿಲ್ ಬರಿಯ್ಯ._
النفحة العنبرية في مولد خير البرية.

ಮುಹಮ್ಮದ್ ಬಿನ್ ಯಅ್'ಖೂಬ್ ಬಿನ್ ಇಬ್ರಾಹೀಂ ಅಲ್ ಫೈರೂಝಾಬಾದೀ.
ಹಿಜರಿ:729--817.
----------------------------------------------------
27. _ಗೈಸುಲ್ ಮವಾಹಿಬಿಲ್ ಅಲಿಯ್ಯ ಫೀ ಶರಹಿ ಹುಕ್'ಮಿಲ್ ಅತ್ವಾಯಿಯ್ಯ._
غيث المواهب العلية في شرح حكم العطائية.

ಮುಹಮ್ಮದ್ ಬಿನ್ ಇಬ್ರಾಹೀಂ ಬಿನ್ ಅಬೀ ಬಕರ್ ಅಲ್ ಮಾಲಿಕೀ.
ಹಿಜರಿ:733--792.
----------------------------------------------------
28. _ಜಾಮಿಉಲ್ ಆಸಾರ್ ಫೀ ಮೌಲಿದಿಲ್ ಮುಖ್ತಾರ್._
جامع الاثار في مولد المختار.
----------------------------------------------------
29. _ಅಲ್ ಮೌರಿದುಸ್ಸ್ವಾದೀ ಫೀ ಮೌಲಿದಿಲ್ ಹಾದೀ._
المورد الصادي في مولد الهادي.
----------------------------------------------------
30. _ಅಲ್ಲಫ್'ಳುರ್ರಾಇಖ್ ಫೀ ಮೌಲಿದಿ ಖೈರಿಲ್ ಖಲಾಯಿಖ್._
اللفظ الرائق في مولد خير الخلائق

ಈ ಮೂರರ ರಚನೆಗಾರರು "ಇಬ್ನ್ ನಾಸಿರುದ್ದೀನ್ ಅದ್ದಿಮಶ್ಖೀ"ಎಂಬ ಹೆಸರಲ್ಲಿ ಪ್ರಸಿದ್ಧರಾದ  ಮುಹಮ್ಮದ್ ಬಿನ್ ಅಬೀಬಕರ್ ಅಬ್ದುಲ್ಲಾಹಿ ಬಿನ್ ಮುಹಮ್ಮದ್  ಅಲ್ ಹಾಫಿಲ್ ಶಂಸುದ್ದೀನ್ ಅದ್ದಿಮಶ್ಖೀ
ಹಿಜರಿ:777---842.
----------------------------------------------------
● ಇವುಗಳನ್ನೆಲ್ಲಾ ರಚಿಸಿದ ಇಮಾಮರುಗಳನ್ನು ಮುಬ್'ತದಿಅ್
ಎಂದು ಹೇಳಲು ವಹ್ಹಾಬಿಗಳಿಗೆ ಧೈರ್ಯವಿದೆಯೇ?
● ಈ ಇಮಾಮರು ಶಿರ್ಕ್-ಬಿದ್ ಅತ್ ಗಳನ್ನು ಪ್ರಚಾರ ಮಾಡಿದರೆ?
ವಹ್ಹಾಬಿಗಳು ಇದಕ್ಕೆ ಉತ್ತರಿಸಬೇಕು.

*ಮುಂದುವರಿಯುವುದು.............*

*📝ಮುನೀರ್ ಸಖಾಫಿ,ಸಾಲೆತ್ತೂರು*
14/11/2017
☪ ಇಸ್ಲಾಂ ಸ್ತ್ರೀಯನ್ನು ಪರ್ಧಾದೊಳಗೆ ಬಂಧನದಲ್ಲಿಡುತ್ತದೆ.
 ಇತರ ಧರ್ಮದವರು ಸ್ತ್ರೀಗಳಿಗೆ ಅವರಿಗೆ ಇಷ್ಟಪಟ್ಟ ವಸ್ತ್ರಗಳನ್ನು ಧರಿಸಲು ಅನುಮತಿ ಕೊಡುತದೆ.
ಎಂದೆಲ್ಲ ಹೇಳುವವರು ಹಾಗು
 ಯಾತಕ್ಕಾಗಿ ಇಸ್ಲಾಂ ಸ್ತ್ರೀಯರೊಂದಿಗೆ ತಲೆ ಮುಚ್ಚಬೇಕೆಂದು  ಕಲ್ಪಿಸಿರುವುದು? ಎಂದು  ಕೆಲವು ಇಸ್ಲಾಮಿಕ ವಿಮರ್ಶಕರು ಪ್ರಶ್ನಿಸುತ್ತಲೇ ಇರುತ್ತಾರೆ!.

*ವಸ್ತ್ರ ಧಾರಣೆ ಇತರ ಧರ್ಮಗಳಲ್ಲಿ ಹೇಗೆ ಎಂದು ನಮಗೊಮ್ಮೆ ಸಣ್ಣದಾಗಿ ಪರಿಶೋಧಿಸೋಣ.*

▶ಕ್ರಿಸ್ತು ಧರ್ಮದಲ್ಲಿ ಶಿರವಸ್ತ್ರ ಉಪಯೋಗಿಸುದಿಲ್ಲವಾದರೆ ಕೂದಲು ಕ್ಷೌರ ಮಾಡಿ ತೆಗೆಯಬೇಕೆಂದು *ಬೈಬಲ್* ಕಲ್ಪಿಸುತ್ತದೆ. " ಸ್ತ್ರೀ ಶಿರವಸ್ತ್ರ ಉಪಯೋಗಿಸುದಿಲ್ಲವಾದರೆ ಕೂದಲು ಕತ್ತರಿಸಿ ತೆಗೆಯಲಿ, ಕೂದಲು ಕತ್ತರಿಸಿ ತೆಗೆಯುವುದು ಅವಳಿಗೆ ನಾಚಿಕೆ ಆಗುದಾದರೆ ಅವಳು ಶಿರವಸ್ತ್ರ ಧರಿಸಲಿ"
( 1ಕೊರಿಂಡಿಯನ್ಸ್ 11:6)

'" ಸ್ತ್ರೀ ಪುರುಷರದ್ದೋ, ಪುರುಷ ಸ್ತ್ರೀಯರದ್ದೋ ವಸ್ತ್ರ ಧರಿಸಬಾರದು, ಹಾಗೆ ಯಾರಾದರು ಧರಿಸಿದರೆ  ಅವನು ಅವನ ದೇವನಾದ ಏಸುದೇವನಿಗೆ ನಿಂದ್ಯಕರಾಗುತ್ತಾರೆ.
(ಆವರ್ತ್ತನ ಪುಸ್ತಕ 22:5)

" ಸ್ತ್ರೀಗಳು ವಿನಯದಿಂದಲೂ, ವಿವೇಕದಿಂದಲೂ ಉತ್ತಮವಾದ ವಿಧದಲ್ಲಿ ವಸ್ತ್ರ ಧಾರಣೆ ಮಾಡಿ ನಡೆಯಬೇಕೆಂದು ನಾನು ಉಪದೇಶಿಸುವೆನು, ತುಂಬಿದ ಕೂದಲು, ಸ್ವರ್ಣ, ರತ್ನ, ಹಾಗು ಬೆಲೆಯೇರಿದ ವಸ್ತುಗಳನ್ನು ತೊಟ್ಟು ತಮ್ನನ್ನು ತಾವೇ ಅಲಂಕರಿಸಬಾರದು.
(ತಿಮೋತ್ತಯಸ್ 2:9)

ನೋಡಿ ಬೈಬಲ್ ನಲ್ಲಿ ಶಿರವಸ್ತ್ರ ಧರಿಸಲು ಕಲ್ಪಿಸುತ್ತದೆ. ಚಿನ್ನ ಹಾಗು ಬೆಲೆಯೇರಿದ ವಸ್ತ್ರಗಳು ಉಪಯೋಗಿಸಲು ಅನುಮತಿ ಕೊಡುವುದಿಲ್ಲ. ಆದರೂ ಕ್ರೈಸ್ತವರು ಬೇಕಾದ ಹಾಗೆ ವಸ್ತ್ರ ಧರಿಸುತ್ತಾರೆ. ಅವರ ಇಗರ್ಜಿಗಳಲ್ಲಿ ಕೂಡಾ ಈ ಮರ್ಯಾದೆಗಳು ಪಾಲಿಸುವುದಿಲ್ಲ. ಪಾಲಿಸುವುದು ಕನ್ಯಾಸ್ತ್ರೀಗಳು ಮಾತ್ರ. ಅವರು ಮಾತ್ರ ಯಾತಕ್ಕಾಗಿ ಶರೀರವನ್ನು ಮುಚ್ಚಿ ಸಂರಕ್ಷಿಸುವುದು?
ಬಾಕಿ ಇರುವ ಸ್ತ್ರಿಗಳ ಶರೀರ ಹೇಗೆ ಬೇಕಾದರೂ ಪ್ರದರ್ಶಿಸಬಹುದು ಎಂದಾ?

▶ಹಿಂದು ಗ್ರಂಥಗಳಲ್ಲಿ ನೋಡೋಣ..

" ದೇವರು ನಿನನ್ನು ಸ್ತ್ರಿಯಾಗಿ ಸೃಷ್ಟಿಸಿರುತ್ತಾನೆ ನೀನು ನಿನ್ನ ದೃಷ್ಟಿ ತಗ್ಗಿಸಿಯು, ಮನುಷ್ಯರ ನೇರಕ್ಕೆ ನೋಡದೆ ಇರಬೇಕೆಂದು ಹಾಗೂ ಕಾಲುಗಳು ಹತ್ತಿರವಾಗಿ ಇಡಬೇಕೆಂದು, ವಸ್ತ್ರ ತೋರಿಸಬಾರದೆಂದು, ಶಿರವಸ್ತ್ರ ಉಪಯೋಗಿಸಬೇಕೆಂದು ಹೇಳುತ್ತದೆ.
( ಋಗ್ವೇದ 8:33: 19-20)

ರಾಮನು ಪರಶುರಾಮನನ್ನು ಕಂಡಾಗ ಸೀತೆಯೊಂದಿಗೆ ಹೇಳುತ್ತಾನೆ *ಸೀತೆ ನೀನು ಶಿರವಸ್ತ್ರ ಉಪಯೋಗಿಸಬೇಕು ಹಾಗೂ ನೀನು ನಿನ್ನ ದೃಷ್ಟಿ ತಗ್ಗಿಸಿಯು ಇರಬೇಕು.*
( ಮಹಾವೀರ್ ಚರಿತ ಆಕ್ಟ್ 2 ಪುಟ: 71)

" ಪುರುಷರು ಸ್ತ್ರಿಗಳ ವಸ್ತ್ರ ಧರಿಸಬಾರದು"
(ಋಗ್ವೇದ 10:85:30)

ಇದರಿಂದ ನಮಗೆ ಹಲವು ವಿಷಯಗಳನ್ನು ತಿಳಿಯಲು ಸಾದ್ಯವಾಗಬಹುದು ತಾನೇ...!

ಶಿರವಸ್ತ್ರ ಧರಿಸಲು ಕಲಿಸುವ ಹಿಂದು ವೇದದಂತೆ ಎಷ್ಟು ಹಿಂದುಗಳು ಪೂರ್ಣ ವಸ್ತ್ರ ಧರಿಸುತ್ತಾರೆ.?

ಅನ್ಯ ಪುರುಷನಾದ ಪರಶುರಾಮನನ್ನು ಕಂಡಾಗ ಸೀತೆಯ ಬಳಿ  ಶಿರವಸ್ತ್ರ ಧರಿಸಲು ಹೇಳಿದ ರಾಮನಲ್ಲಿ ಒಳ್ಳೆಯ ಪತಿಯನ್ನು ಕಾಣಲು ಸಾಧ್ಯವಾಗುತ್ತದೆ.

ಇಂದು ಚಿತ್ರಗಾರರು ಸೀತೆಯ ಚಿತ್ರವನ್ನು ಯಾವ ರೂಪದಲ್ಲಾಗಿದೆ ಬರೆಯುವುದೆಂದು ನಮಗೆ ಗೊತ್ತು ಹೆಚ್ಚು ಹೇಳಬೇಕಾಗಿ ಇಲ್ಲ ತಾನೇ..

ಆದರೆ ಭಾರತದ ಹಲವು ಗ್ರಾಮಗಳಿಗೆ ಹೋದರೆ ತಲೆ ಮುಚ್ಚುವ ಹಿಂದು ಮಹಿಳೆಯರನ್ನು ಕಾಣಲು ಸಾಧ್ಯವಾಗುತ್ತದೆ.
ಕೆಲವು ಸ್ಥಳಗಳಲ್ಲಿ ಅನ್ಯ ಪುರುಷರನ್ನು ಕಾಣುವಾಗ ಮಹಿಳೆಯರು ಮುಖವನ್ನು ಕೂಡ ಮುಚ್ಚುತ್ತಾರೆ.!
 ಇಸ್ಲಾಮಿಕ ವಿಮರ್ಶಕರು,  ಇದು ಯಾವುದು ಕಾಣುವುದೇ ಇಲ್ಲ.!

ಸ್ವತಃ ಧರ್ಮ ಗ್ರಂಥಗಳಲ್ಲಿ ಮಹಿಳೆಯರ ವಸ್ತ್ರ ಧಾರಣೆಯ ಕುರಿತು ಏನು ಹೇಳುತ್ತಾರೆ ಎಂದು ಕೂಡ ಕಲಿಯದೆ/ತಿಳಿಯದೆ ಇಸ್ಲಾಮನ್ನು ವಿಮರ್ಶಿಸಲು ಬಾಯಿ ತೆರೆಯುವವರು ಇವನ್ನೆಲ್ಲಾ ಕಲಿತ ಬಳಿಕ ತಮ್ಮ ನಾಲಗೆ ತೆರೆಯಬೇಕು.

ಇಸ್ಲಾಮಿನ ಮಹಿಳೆಯರ ವಸ್ತ್ರ ಧಾರಣೆಯಾಗಿದೆ ಸ್ತ್ರೀಗಳಿಗೆ ಅತೀ ಹೆಚ್ಚು ಪರಿಪೂರ್ಣ ಯೋಗ್ಯವಾದ ವಸ್ತ್ರಧಾರಣೆ. ಅದರ ಕಾರಣವು ಖುರ್ಆನ್ ಹೇಳುತ್ತದೆ ನೋಡಿ..

*ನಬಿಯೇ ﷺ,  ತಮ್ಮ ಪತ್ನಿಯವರೊಂದಿಗೂ, ಪುತ್ರಿಯರೊಂದಿಗೂ, ಸತ್ಯವಿಶ್ವಾಸಿಗಳಾದ ಸ್ತ್ರೀಯರೊಂದಿಗೂ ಅವರು ತಮ್ಮ ಶಿರವಸ್ತ್ರಗಳನ್ನು ಕೆಳಗಿಳಿಸಿ ಪೂರ್ಣವಾಗಿ ಧರಿಸಲು ಹೇಳಿರಿ. ಅವರನ್ನು ಅರಿಯಲ್ಪಡಲು, ಹಾಗೂ ಅವರು ಉಪದ್ರವಿಸದೆ ಇರಲು ಇದಾಗಿದೆ ಅತೀ ಹೆಚ್ಚು ಉತ್ತಮವಾಗಿರುವ ವಸ್ತ್ರ. ಅಲ್ಲಾಹು  ಮನ್ನಿಸುವವನು, ಕಾರುಣ್ಯನಿಧಿಯುಳ್ಳವನು ಆಗಿರುತ್ತಾನೆ.*
(ಖುರ್ಆನ್ 33:59)

✍🏻 *ಗಫೂರ್ ಬಾಯಾರ್*
🕎🕎🕎🕎🕎🕎🕎
♻ಯಾರು ಸತ್ಯದೊಂದಿಗೆ ಇದ್ದಾರೆ ಸ್ವಲ್ಪ
ಈ ಕಡೆ ಗಮನ ಕೊಡಿ♻

🖋ಅಬೂ ಮುಆಝ್   ** 

 1)ಇವತ್ತು ನಾವು ನಿಂತು ಕೊಂಡು ಒಬ್ಬರಿಂದ ಇನ್ನೊಬ್ಬರಿಗೆ ಅಸ್ಸಲಾಂ ಪರಸ್ಪರ ಹೇಳುತ್ತೆವೆ ಆದರೆ ನಮ್ಮ ಮುತ್ತು ನಬಿ ಸ.ಅ ರ ಮೇಲೆ ಒಟ್ಟುಗೂಡಿ (ಮಜ್ಲೀಸ್)ನಿಂತು ಸಲಾಂ ಹೇಳುದು ಹರಾಮ್ ಯಾಕೆ....?             
     
2)ಎಲ್ಲಾ ಮಸೀದಿ ಅಲ್ಲಾಹನ ಭವನ ವಾಗಿದ್ದರೆ ಪ್ರವಾದಿ ಮುಸ್ತಫಾ ಸ.ಅ ಮರು ಅಲ್ಲಾಹನ ಆಜ್ಞೆ ಯಂತೆ ಮಸ್ಜಿದೆ ಝರಾರ್ ರನ್ನು ಯಾಕೆ ಉರುಳಿಸಿದರು?
         
3)ಕಲಿಮತ್ ತೌಹೀದ್ ಉಚ್ಚರಿಸಿದವರು ಎಲ್ಲರೂ ಮು'ಮಿನ್ ಆಗಿದ್ದರೆ ಅಲ್ಲಾಹು s.w ಮುನಾಫಿಕರ ಜನಾಝ (ಮಯ್ಯತ್)  ನಮಾಜ್ ನಿರ್ವಹಿಸಲು ಯಾಕೆ ಸಮ್ಮತ ಕೊಡಲಿಲ್ಲ ?   

4)ಕಲಿಮತ್ ತೌಹೀದ್ ಹೆಲಿದವರೆಲ್ಲರೂ ಮು'ಮಿನ್ ಆಗಿರುತಿದ್ದರೆ ಶಿಯಾ, ಕಾದಿಯನಿ, ಖಾರಿಜ್ ಕವಾರಿಜ್  ಯಾಕೆ ಕಾಫಿರ್ ಆಗಿದ್ದಾರೆ?

 5)ಕಲಿಮತ್ ತೌಹೀದ್ ಉಚ್ಚರಿಸುವರೆಲ್ಲರೂ ಮುಸ್ಲಿಮನಾಗಿದ್ದರೆ ಮತ್ತೆ ನಬಿ ಸ.ಅ ಯಾಕೆ ಹೇಳಿದರು ನನ್ನ ಉಮ್ಮತ್ ನಲ್ಲಿ 73 ವಿಬಾಗ ಉಂಟಾಗುದು ಅದರಲ್ಲಿ 72 ನರಕವಕಾಷಿಗಳು ಒಂದು ಮಾತ್ರ  ಸ್ವರ್ಗಅವಕಾಶಿ ಯಾಗಿರುವರು.?

6)ಮು'ಮಿನರ ಕಬರ್ ನ ಮುಂದೆ ನಿಂತು ಝಿಯಾರತ್ ಮಾಡುದು ಹರಾಮ್ ಆಗಿದ್ದರೆ ಜನಾಝ ಮಯ್ಯತ್ ನಮಾಜ್ ನಲ್ಲಿ ಮಯ್ಯತ್ ನ ಮುಂದೆ ನಿಂತು ನಮಾಜ್ ಮಾಡುದು ಹೇಗೆ ತಾನೇ ಇವರಿಗೆ ಸಮ್ಮತ? 

7)ಜನರು ತಮ್ಮ ತಮ್ಮ ಮನೆ ,ಕಾರುಬಾರಿನ,ಜಮೀನಿನ ಒಡೆಯನಾಗಿರುತ್ತಾನೆ ಯಾಕೆ ನಮ್ಮ ಪ್ರವಾದಿ ಸ.ಅ  ರು ನಮಗೆ ಬಿಟ್ಟು ಹೋದ ನಬಿ ಸ.ಅ ಪುಣ್ಯ ವಸ್ತುಗಳ ಉತ್ತರಾದಿಕಾರಿ, ಜವಾಬ್ದಾರ, ಒಡೆಯ ಆಗಿರಲು ಯಾಕೆ ನಿಷೇದ?

8) ವಫಾತ್ ಆಗಿರುವ ಅಲ್ಲಾಹನ ಅಂಬಿಯಗಳು ಯಾವುದೇ ರೀತಿಯಲ್ಲಿ ಸಹಕರಿಸುದಿಲ್ಲ ಅಂದರೆ  ದಿನದಲ್ಲಿ ಅಲ್ಲಾಹು ಕಲ್ಪಿಸಿದ 50ರಕಾ'ಅ ನಮಾಝ್ ಯಾಕೆ ನಿರ್ವಹಿಸುತ್ತಿಲ್ಲ...? ಯಾಕೆಂದರೆ ಮೂಸ ನಬಿ ಅ.ಸ ರಲ್ಲವೇ ವಫಾತಾದ ನಂತರವೂ ನಮ್ಮ ನಬಿ ಸ.ಅ  ಹೇಳಿಸಿ 50 ರಕಾ'ಅ ನಮಾಝ್ ಅನ್ನು 5 ಹೊತ್ತು ಮಾಡಿಸಿದ್ದು? 

9) 8 ರಕಾ'ಅ ತರಾವೀಹ್ ನಮಾಝ್ ಸುನ್ನತ್ ಆಗಿದ್ದರೆ ಮಕ್ಕಾ ಹರಮ್ ಶರೀಫ್ ಮಸೀದಿಯಲ್ಲಿ ಅದೇ ರೀತಿ ಮಸ್ಜಿದೆ ನಬವಿ ಮದೀನ ದಲ್ಲಿ ಯಾಕೆ 20 ರಕಾ'ಅ ?(ಮಾತು ಮಾತಿನಲ್ಲಿ ಮಾಕ್ಕಾ ಮದೀನ ದ ಪ್ರೂಫ಼್ ಕೊಡುವವರು)

10)ಮಕ್ಕಾ ಮದೀನ ಇಮಾಮರು 2 ಅಝಾನ್ ನೊಂದಿಗೆ ಜುಮಾ ಕುತುಬ ಆರಂಬಿಸುತ್ತಾರೆ  ನೂತನ ಆಶಯ ದವರು ಯಾಕೆ ವಿರೋದಿಸುದಿಲ್ಲ ?(ಬಿದ್ಹ್'ಅತ್ ಎನ್ನುವವರು)

11)ಎಲ್ಲಾ ದರಲ್ಲಿಯೂ ಬಿದ್'ಅತ್ ಬಿದ್'ಅತ್ ಹೇಳುವವರು
 ಎಲ್ಲಾ ಬಿದ್'ಅ ಕೆಟ್ಟದಾರಿ ಆಗಿದೆ ಕೆಟ್ಟದಾರಿ ನರಕಕ್ಕೆ ಕೊಂಡೊಯ್ಯುತ್ತದೆ ಮತ್ತೆ ನೀವು ಸುಕುನು, ಲಮ್ಮ್, ಕಸರ್ ಇರುವ ಕ಼ುರಾನ್ ಪಟಿಸುದು ಯಾಕೆ? ಕಾರಣ ನಬಿ ಸ.ಅ ಕಾಲದಲ್ಲಿ ಈರೀತಿ ಇರಲಿಲ್ಲವಲ್ಲ. ಕಾಲನಂತರ ಹಝಝ್ ಬಿನ್ ಯೂಸುಫ್ ಎಂಬವರು ಅಲ್ಲವೇ ಕುರಾನ್ ಅನ್ನು ಈ ರೀತಿಯಲ್ಲಿ ಮಾಡಿದ್ದು?       ಬಿದ್ಹ್'ಅ ಹಸನ ಅಲ್ಲವೇ? ಮೊದಲಿನ ಕಾಲದಲ್ಲಿ ಸವಾರಿಗೆ ವಾಹನ ವಾಗಿ ಒಂಟೆ ,ಕುದುರೆ ಗಳನ್ನು ಉಪಯೋಗಿಸುತಿದ್ದರು ಈಗ ಕಾರು,ಬಸ್ಸನ್ನು ಯಾಕೆ ಉಪಯೋಗಿಸುತ್ತಿರಿ? (ಬಿದ್ಹ್'ಅ ಹಸನ ಮತ್ತು ಬಿದ್ಹ್'ಅ ಸಯ್ಯ ಇವೆರಡರ ವ್ಯತ್ಯಾಸ ತಿಳಿಯದವರು)

12)ಮದ್ಸ್ಹಬ್ ನ  4 ಇಮಾಮರು(ಹನಫಿ,ಶಾಫಿ,ಹಂಬಲಿ,ಮಾಲಿಕಿ) ಗಳನ್ನು ಅಂಗಿಕರಿಸುವವರು ಮುಶ್ರಿಕರು ಆದರೆ !ಮುಶ್ರಿಕರೊಂದಿಗೆ ಸಲಾಂ ವಿನಿಮಯ ನಿಕಾಹ್ ಹೇಗೆ ಸಮ್ಮತ? (ಸಲಫಿ ವಹಾಬಿ ಗಳಿಗೆ ಸುನ್ನಿಗಳೊಂದಿಗೆ ಸಲಾಂ ವಿನಿಮಯ ಮಾಡಲು ಮತ್ತು ಸುನ್ನೀ ಶ್ತ್ರಿಯರೊಂದಿಗೆ  ವಿವಾಹ ಮಾಡಲು ಯಾವದೇ ಅಡ್ಡಿ ಇಲ್ಲ ಮಾಡುತಿದ್ದಾರೆ)

13)ಹದೀಸ್: ಅಬೂ ಹುರೈರ ರ.ಅ ರವರಿಂದ ಉದ್ದರಿಸುತ್ತಾರೆ. ಮುಹಮ್ಮದ್ ನಬಿ ಸ.ಅ ಹೇಳಿರುವರು- ಅಲ್ಲಾಹು ಹೇಳಿರುವನು ಅವನ(ಅಲ್ಲಾಹನ)ಅವುಲಿಯ ವಲಿ ಯವರೊಂದಿಗೆ ಯಾರಾದರು ಶತ್ರುತ್ವ ವಿಡುವನೋ ಅವನೊಂದಿಗೆ ಅಲ್ಲಾಹು ಯುದ್ದ ಸಾರಿರುವನು [ಸಹಿಹ್ ಬುಕಾರಿ vol-7 6502]
(ಅಲ್ಲಾಹನ ವಲಿಯವರನ್ನು ನಿಂದಿಸುವವರು, ಅವಹೆಲಿಸುವವರು, ಶತ್ರುತ್ವ ಇಡುವವರೊಂದಿಗೆ ಅಲ್ಲಾಹು ಯುದ್ದ ಸಾರಿರುವವನು ಅಂದರೆ ಮತ್ತೆ ಇವರ ತೌಹೀದ್ ಹೇಗೆ ಸಾದ್ಯ?)

13)ಅಧ್ಯಾಯ 3: ಆಲಿ ಇಮ್ರಾನ್ (ಇಮ್ರಾನರ ಸಂತತಿ), ಸೂಕ್ತ  169

ﻭَﻻَ ﺗَﺤْﺴَﺒَﻦَّ ٱﻟَّﺬِﻳﻦَ ﻗُﺘِﻠُﻮا۟ ﻓِﻰ ﺳَﺒِﻴﻞِ ٱﻟﻠَّﻪِ ﺃَﻣْﻮَٰﺗًۢﺎ ۚ ﺑَﻞْ ﺃَﺣْﻴَﺎٓءٌ ﻋِﻨﺪَ ﺭَﺑِّﻬِﻢْ ﻳُﺮْﺯَﻗُﻮﻥَ

ಅಲ್ಲಾಹನ ಮಾರ್ಗದಲ್ಲಿ ಹತರಾದವರನ್ನು ನೀವು ಮೃತರೆಂದು ಪರಿಗಣಿಸಬೇಡಿ. ಅವರು ಜೀವಂತವಿದ್ದಾರೆ ಮತ್ತು ತಮ್ಮ ಒಡೆಯನ ಬಳಿ ಪೋಷಣೆಯನ್ನು ಪಡೆಯುತ್ತಿದ್ದಾರೆ.

(ಇವರು ವಹಾಬಿಗಳವಾದ ಮರಣ ಹೊಂದವರು ಜೀವಂತ ವಾಗಿರುದಿಲ್ಲ,ಅಲ್ಲಾಹನ ಅಂಬಿಯ, ಇಷ್ಟದಾಸರು ಏನನ್ನೂ ಕೆಳುದಿಲ್ಲ ಅವರು ಕೇಳಲು ಸಮರ್ತರಲ್ಲ ಕಾರಣ ವಫಾತ್ ಆಗಿರುವವರು ಎಂದು  ಆದರೆ ಅಲ್ಲಾಹು ಕುರಾನ್ ನಲ್ಲಿ ಹೇಳುತ್ತಾನೆ ಅವನ ಇಷ್ಟ ದಾಸರನ್ನು ಅವನ ಮಾರ್ಗದಲ್ಲಿ ಹತ ರಾದವರನ್ನು ಮ್ರತರೆಂದು ಹೇಳಬೇಡಿ ಎಂದು ಹೇಳುವಾಗ ಮತ್ತೆ ಇವರ ತೌಹೀದ್ ಎಷ್ಟು ಸರಿ ...?)

ಚಿಂತಿಸುವವನಿಗೆ ದ್ರಷ್ಟಾಂತ ವಿದೆ.🤔

ನಾವು ಮುಸ್ಲಿಮರು ಮುಸ್ಲಿಮರು ಎನ್ನುವವರು ಚಿಂತಿಸಬೇಕು.⚡
*ಹುತಾತ್ಮ ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಕರ್ನಾಟಕದ ಹರಿಕಾರ*

*_✍🏻ಲಾಸ್ಟ್ ಬೆಂಚ್ ಜಲೀ..._*

*_ಸ್ವಾತಂತ್ರ್ಯ ಸಮರದ ಮಹಾ ದಂಡನಾಯಕ_*

*ಟೇಬಲ್ ನಂ:3*
ಬ್ರಿಟಿಷರನ್ನು ಈ ದೇಶದ ಪ್ರಥಮ ಶತ್ರುಗಳೆಂದು ಪರಿಗಣಿಸಿದ.

ಹೈದರ್, ಬ್ರಿಟಿಷರನ್ನು ಮೀರಿಸುವ ರಾಜತಾಂತ್ರಿಕ ನೈಪುಣ್ಯದಿಂದ ಅವರ ವಿರುದ್ಧ ಮರಾಠರು, ನಿಜಾಮ ಹಾಗೂ ಫ್ರೆಂಚರೊಡನೆ ಸೈನಿಕ ಒಕ್ಕೂಟ ಸ್ಥಾಪಿಸಿಕೊಂಡು 1767-69ರ ಮೊದಲ ಆಂಗ್ಲ-ಮೈಸೂರು ಯುದ್ಧವನ್ನು ಎದುರಿಸಿದ. ಹೈದರನ ಈ ಎಲ್ಲ ರಾಜತಾಂತ್ರಿಕ ಹಾಗೂ ಸೈನಿಕ ಕ್ರಮಗಳಲ್ಲಿ ಸರಿಸಾಟಿಯಾಗಿ ಭಾಗವಹಿಸಿದ ಹದಿಹರೆಯದ ಟಿಪ್ಪು ಈ ಯುದ್ಧದಲ್ಲೂ ಪ್ರಮುಖ ಪಾತ್ರ ವಹಿಸಿದ. ಪರಿಣಾಮವಾಗಿ ಮೈಸೂರಿನ ಸೈನ್ಯ ಬ್ರಿಟಿಷರ ಕೇಂದ್ರವಾಗಿದ್ದ ಮದ್ರಾಸಿಗೆ ಕೇವಲ ಹತ್ತು ಕಿ.ಮೀ. ದೂರದಲ್ಲಿ ಬಿಡಾರಹೂಡಿ ಸವಾಲೊಡ್ಡಿ ನಿಂತಿತು. ಕೇವಲ ಹನ್ನೆರಡು ವರ್ಷಗಳ ಹಿಂದೆ 1757ರ ಪ್ಲಾಸಿ ಕದನದಲ್ಲಿ ವಿಜಯಿಗಳಾಗಿ, ಭಾರತವನ್ನೇ ನುಂಗುವ ಯೋಜನೆ ರೂಪಿಸಿದ್ದ ಬ್ರಿಟಿಷ್ ವಸಾಹತುಶಾಹಿ, 12 ವರ್ಷಗಳ ನಂತರ 1769ರಲ್ಲಿ ಹೈದರ್ ನೇತೃತ್ವದ ಮೈಸೂರು ಸೈನ್ಯದ ಮುಂದೆ ಶರಣಾಗಿ ನಿಂತಿತು.
ಸೆಂಟ್‍ಥೋಮ್, ಆರಣಿ, ಕಾವೇರಿಪಾಕ್, ಮಚಲಿಪಟ್ಟಣ, ಬಕ್ಸರ್ ಮುಂತಾದ ಕಡೆಗಳಲ್ಲಿ ಸರಣಿ ವಿಜಯ ಪಡೆದ ಬ್ರಿಟಿಷ್ ವಸಾಹತು ನೌಕೆ ಹೈದರನ ಮೈಸೂರು ಸೈನ್ಯದ ಮುಂದೆ ತಲೆಬಾಗಿ ನಿಂತು 1769ರ ಏಪ್ರಿಲ್ 2 ರಂದು ಶಾಂತಿ ಒಪ್ಪಂದಕ್ಕೆ ಮುಂದಾಯಿತು.ಈ ಪ್ರಥಮ ವಸಾಹತುಶಾಹಿ ವಿರೋಧಿ ಯುದ್ಧದಲ್ಲಿ ಮೈಸೂರು ಪಡೆದ ವಿಜಯವು ಬ್ರಿಟಿಷರ ವಿರುದ್ಧ ಭಾರತೀಯ ಶಕ್ತಿಯೊಂದರ ಪ್ರಪ್ರಥಮ ವಿಜಯವೇ ಆಗಿತ್ತು.
ಈ ಯುದ್ಧದಲ್ಲಿ ಹೈದರ್ ಹಾಗೂ ಟಿಪ್ಪು ಸ್ಪಷ್ಟವಾಗಿ ಗ್ರಹಿಸಿದ್ದ ಸಮಕಾಲೀನ ಸತ್ಯವೊಂದಿತ್ತು. ಬ್ರಿಟಿಷ್ ವಸಾಹತುಶಾಹಿಗಳು ಭಾರತದ ಶಕ್ತಿಗಳ ನಡುವೆ ತೂರಿ ಇಡೀ ಭಾರತವನ್ನು ನುಂಗುತ್ತಿರುವುದನ್ನು ಅವರು ಮನಗಂಡರು. ಬ್ರಿಟಿಷ್ ವಸಾಹತುಶಾಹಿಗಳು ಎಲ್ಲಾ ಭಾರತೀಯ ಶಕ್ತಿಗಳ ಪ್ರಥಮ ಶತ್ರುಗಳು ಹಾಗೂ ಅವರ ವಿರುದ್ಧ ಭಾರತದ ಶಕ್ತಿಗಳು ತಮ್ಮ ನಡುವಿನ ಕಚ್ಚಾಟವನ್ನು ನಿಲ್ಲಿಸಿ ಒಗ್ಗಟ್ಟಿನ ಹೋರಾಟ ನಡೆಸಬೇಕು ಎಂಬ ಐತಿಹಾಸಿಕ ಅಗತ್ಯವನ್ನು ಅರಿತುಕೊಂಡಿದ್ದರು.
ಹೈದರ್-ಟಿಪ್ಪು ಕೂಡಲೇ ಈ ದಿಕ್ಕಿನಲ್ಲಿ ಕಾರ್ಯೋನ್ಮುಖರಾಗಿದ್ದರು. ಮೈಸೂರು ಸಂಸ್ಥಾನದ ಪಾರಂಪರಿಕ ಶತೃಗಳಾದ ಮರಾಠರೊಡನೆ, ಹೈದ್ರಾಬಾದಿನ ನಿಜಾಮನೊಡನೆ ಶಾಂತಿ ಸಂಧಾನ ಮಾಡಿಕೊಂಡು ಬಲವಾದ ಬ್ರಿಟಿಷ್ ವಿರೋಧಿ ಸೈನಿಕ ಒಕ್ಕೂಟ ಸ್ಥಾಪಿಸಿಕೊಂಡರು. ಬ್ರಿಟಿಷ್ ವಿರೋಧಿ ಸಂಗ್ರಾಮದಲ್ಲಿ ಅವರೊಡನೆ ವೈರುಧ್ಯ ಹೊಂದಿದ್ದ ಮತ್ತೊಂದು ಐರೋಪ್ಯ ಶಕ್ತಿಯಾದ ಫ್ರೆಂಚರ ಸಹಾಯವನ್ನೂ ಪಡೆದುಕೊಂಡರು. ಈ ಎಲ್ಲಾ ಸಮರ ಸಿದ್ಧತೆಗಳ ನಂತರ ಬ್ರಟಿಷರನ್ನು ಒದ್ದೋಡಿಸುವ ಉದ್ದೇಶದಿಂದ ಎರಡನೇ ಆಂಗ್ಲೋ-ಮೈಸೂರು ಯುದ್ಧ 1780 ರಲ್ಲಿ ಪ್ರಾರಂಭವಾಯಿತು.
ಇದಕ್ಕಾಗಿ ಹೈದರ್ ಮೈಸೂರು ಸಂಸ್ಥಾನ ಒಂದರಿಂದಲೇ ಒಂದು ಲಕ್ಷದಷ್ಟು ಸೈನ್ಯವನ್ನು ಜಮಾಯಿಸಿದ್ದ. ಈ ಯುದ್ಧದುದ್ದಕ್ಕೂ ಮೈಸೂರಿನ ಪಡೆಗಳು ಪ್ರದರ್ಶಿಸಿದ್ದ ಶೌರ್ಯ-ಸಾಮಥ್ರ್ಯಗಳನ್ನು ಬ್ರಿಟಿಷರು-ಫ್ರೆಂಚರು ಸಹ ಗುರುತಿಸಬೇಕಾಯಿತು. ಉದಾಹರಣೆಗೆ ಹೈದರನ ಸೈನ್ಯಗಳು ಪೂರ್ವ ಕರಾವಳಿಯ ಕಾಂಜೀವರಂ ಮುಂತಾದವುಗಳನ್ನೆಲ್ಲಾ ವಶಪಡಿಸಿಕೊಂಡು ಬ್ರಿಟಿಷ್ ಕೋಟೆಯಾದ ಫೋರ್ಟೋನೋವೋದ ತನಕ ಬಂದಿದ್ದವು. ಪೊಲಿಯೂರು ಎಂಬಲ್ಲಿ ಕರ್ನಲ್ ಬೈಲಿಯೊಡನೆ ಸಂಭವಿಸಿದ ಕಾಳಗದಲ್ಲಿ ಆತನನ್ನು ಸಂಪೂರ್ಣವಾಗಿ ಸೋಲಿಸಲಾಯಿತು. ಬಕ್ಸರ್ ಕದನದ ಬ್ರಿಟೀಷ್ ಹೀರೋ ಎಂಬ ಪದಕ ಧರಿಸಿ ಬಂದಿದ್ದ ಹೆಕ್ಟರ್ ಮನ್ರೋ ಹಾಡುಹಗಲೇ ಮದ್ರಾಸಿಗೆ ಪಲಾಯನ ಮಾಡುವಂತಾಯಿತು. ಇತಿಹಾಸ ತಜ್ಞರಪ್ರಕಾರ ಆ ಸಂದರ್ಭದಲ್ಲಿ ಹೈದರನ ಸೈನ್ಯ ಇನ್ನಷ್ಟು ಮುಂದುವರೆದಿದ್ದೇ ಆಗಿದ್ದಲ್ಲಿ ಮದ್ರಾಸ್ ಹೈದರನ ಕೈವಶವಾಗುತ್ತಿತ್ತು!
ನೇರಕಾಳಗ ಹಾಗೂ ಸಮರಗಳಿಂದ ಮೈಸೂರನ್ನು ಗೆಲ್ಲಲು ಅಸಾಧ್ಯವೆಂದು ಮನಗಂಡ ಬ್ರಿಟಿಷರು ತಮ್ಮ ವಸಾಹತುಶಾಹಿ ಆಯುಧಗಳಾದ ಕುತಂತ್ರ, ದ್ರೋಹ ಹಾಗೂ ಒಡೆದಾಳುವ ನೀತಿಗಳ ಮೊರೆಹೋದರು. ಬ್ರಿಟಿಷರ ವಿರುದ್ಧ ಹೈದರನ ನೇತ್ರತ್ವದಲ್ಲಿ ಸೈನಿಕ ಒಕ್ಕೂಟ ಸ್ಥಾಪನೆಯಾಗಿದ್ದರೂ, ಇವರಿಗಿದ್ದ ದೇಶಪ್ರೇಮ, ದೂರದೃಷ್ಥಿ, ಉಳಿದ ರಾಜರಿಗೆ ಇರಲಿಲ್ಲ. ಮರಾಠರು, ನಿಜಾಮರು ತಮ್ಮ ತಮ್ಮ ಸಂಕುಚಿತ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಈ ಒಕ್ಕೂಟ ಸೇರಿದ್ದರು. ಇದನ್ನು ಗ್ರಹಿಸಿದ ವಸಾಹತುಶಾಹಿಗಳು ನಿಜಾಮ ಹಾಗೂ ಮರಾಠರೊಡನೆ ಪ್ರತ್ಯೇಕವಾಗಿ “ಸಾಲ್‍ಬಾಯ್ “ ಒಪ್ಪಂದವನ್ನು ಮಾಡಿಕೊಂಡು ಬ್ರಿಟಿಷ್ ವಿರೋಧಿ ಭಾರತೀಯ ಒಕ್ಕೂಟವನ್ನು ಮುರಿದರು. ಪರಿಣಾಮವಾಗಿ ಮರಾಠರು ಯುದ್ಧದಿಂದ ಹಿಂದೆ ಸರಿದರು. ನಿಜಾಮನ ಪಡೆ ಒಂದು ಗುಂಡನ್ನೂ ಹಾರಿಸಲಿಲ್ಲ. ಇದೇ ಹೊತ್ತಿನಲ್ಲಿ ಯುರೋಪಿನಲ್ಲಿ ಬ್ರಿಟಿಷ್-ಫ್ರೆಂಚರ ನಡುವೆ ಶಾತಿಸ್ಥಾಪನೆಯಾಗಿದ್ದರಿಂದ ಫ್ರೆಂಚರೂ ಈ ಒಕ್ಕೂಟಕ್ಕೆ ಬೆಂಬಲ ಹಿಂತೆಗೆದುಕೊಂಡರು.
ಬ್ರಿಟಿಷ್ ಸಾಮ್ರಾಜ್ಯವನ್ನು ಬಗ್ಗುಬಡಿಯಬೇಕೆಂಬ ಮಹಾ ಉದ್ದೇಶವನ್ನು ಮರಾಠರು, ನಿಜಾಮರು ಸ್ವಾರ್ಥಕ್ಕಾಗಿ ಭಗ್ನಗೊಳಿಸಿ ದ್ರೋಹಗೈದ ವಿಷಾದದ ಸಂದರ್ಭದಲ್ಲಿಯೇ ಹೈದರಾಲಿಯು ಕೊನೆಯುಸಿರೆಳೆದಿದ್ದು. ಆತ ರಣರಂಗದಲ್ಲಿ ಪ್ರಾಣಬಿಟ್ಟನೇ ಹೊರತು ಮೈಸೂರು ಸಂಸ್ಥಾನದ ಸ್ವಾತಂತ್ರ್ಯವನ್ನುಬಿಟ್ಟುಕೊಡಲಿಲ್ಲ. ಮಾತ್ರವಲ್ಲ, ತನ್ನ ಮಗನಾದ ಟಿಪ್ಪುವಿನಲ್ಲೂ ಬ್ರಿಟಿಷ್ ವಿರೋಧಿ ಯುದ್ಧವನ್ನು ಮುನ್ನಡೆಸುವ ಸಂಕಲ್ಪ ಮತ್ತು ಸಾಮಥ್ರ್ಯವನ್ನು ಸಿದ್ಧಗೊಳಿಸಿದ್ದ.
                        *_Continues..._*

ಪ್ರಿಯರೇ ಪರ-ವಿರೋಧಗಳಿಂದ ಹೊರತಾದ ಟಿಪ್ಪು ಸುಲ್ತಾನ್ ಕುರಿತ ವಾಸ್ತವ ಸಂಗತಿಗಳನ್ನು ತಿಳಿಸುವ ಬರೆಹ ಇದಾಗಿದೆ. ಟಿಪ್ಪುಸುಲ್ತಾನ್ ಜಯಂತಿಯನ್ನು ಮತೀಯ ನೆಲೆಯಲ್ಲಿ ವಿರೋಧಿಸಲಾಗುತ್ತಿರುವ ಸಂದರ್ಭದಲ್ಲಿ ಸತ್ಯವನ್ನು ಮುನ್ನೆಲೆಗೆ ತರಲು ಬಯಸುವ
ಚರ್ಚೆಯಲ್ಲಿ ನೆರವಾಗುವ ಉದ್ದೇಶದಿಂದ ಈ ಬರೆಹವನ್ನು ಕಳುಹಿಸುತ್ತಿದ್ದೇವೆ.

ಸಹಕಾರ: ಸಮಾಜವಿಜ್ಞಾನ ಅಧ್ಯಯನ ಸಂಸ್ಥೆ

           *_ಲಾಸ್ಟ್ ಬೆಂಚ್ ಜಲೀ...._*
*ಸ್ವಲಾತ್ ಹೇಳಲು ಪ್ರೇರಣೆಯಾಗುವ "ಸ್ವಲಾತ್ ಸಮರ್ಪಣೆ" ಕಾರ್ಯಕ್ರಮಗಳು.!*

ಸ್ವಲಾತ್ ಸಮರ್ಪಣೆ, ಸ್ವಲಾತ್ ಮಜ್ಲಿಸ್ ಹಾಗೂ ಸ್ವಲಾತ್ ಗ್ರೂಪ್ ಗಳು, ನಿರಂತರ ಮತ್ತು ಯಥೇಚ್ಛವಾಗಿ ಸ್ವಲಾತ್ ಹೇಳಲು ಸಹಕಾರಿ.
ಯಥೇಚ್ಛ ಸ್ವಲಾತ್ ಸಲಾಮನ್ನು ಹೇಳುವುದು, ಇಹ-ಪರ ವಿಜಯಕ್ಕಿರುವ ಮೆಟ್ಟಿಲಾಗಿದೆ.
*"ನಿತ್ಯ ಐವತ್ತು ಸ್ವಲಾತ್ ಹೇಳುವವರಿಗೆ ನನ್ನ ಶಫಾಹತ್ ನಿಶ್ಚಿತ, ಮತ್ತು ನಾಳೆ ಮಹಶರಾದಲ್ಲಿ ಅವರೊಂದಿಗೆ ನಾನು ಮುಸಾಫಹತ್ (ಹಸ್ತಲಾಘವ) ಮಾಡುವೆ" (ತ್ವಬ್ರಾನಿ)*
*"ಅಂತ್ಯ ದಿನದ ಭಯಾನಕತೆಯಿಂದ ಸುಲಭದಲ್ಲಿ ಪಾರಾಗುವವರು ಯಾರೆಂದರೆ, ಇಹದಲ್ಲಿ ನನ್ನ ಮೇಲೆ ಅತೀ ಹೆಚ್ಚು ಸ್ವಲಾತ್ ಹೇಳುವವರಾಗಿರುತ್ತಾರೆ" (ಬೈಹಕಿ (ರ))*

ಎಲ್ಲಾ ಸಮಸ್ಯೆಗಳಿಗೂ ಪರಿಹಾರವಾಗಿದೆ ಸ್ವಲಾತ್. ಯಥೇಚ್ಛವಾಗಿ ಸ್ವಲಾತ್-ಸಲಾಮ್ ಹೇಳಬೇಕೆಂಬ ಉದ್ದೇಶ ನಮಗಿದ್ದರೂ, ಕೆಲವೊಮ್ಮೆ ನಮ್ಮ ಉದಾಸೀನತೆ ಕಾರಣದಿಂದ ಉದ್ದೇಶಿಸಿದಷ್ಟು ಸ್ವಲಾತ್ ಹೇಳಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಅದಕ್ಕಿರುವ ಪರಿಹಾರವೆಂದರೆ, ಸ್ವಲಾತ್ ಸಮರ್ಪಣೆ, ಸ್ವಲಾತ್ ಮಜ್ಲಿಸ್ ನಲ್ಲಿ ಭಾಗಿಯಾಗುವುದು ಮತ್ತು ಸ್ವಲಾತ್ ಗ್ರೂಪ್ ನಲ್ಲಿ ಸೇರಿಕೊಳ್ಳುವುದಾಗಿದೆ.

ಸ್ವಲಾತ್ ಸಮರ್ಪಣೆ ಮತ್ತು ಸ್ವಲಾತ್ ಗ್ರೂಪ್ ಗಳು ಒಂತರಾ ಒತ್ತಡವಿದ್ದಂತೆ. ಯಾವುದೇ ಕಾರ್ಯಕ್ಕೆ ಒತ್ತಡಗಳಿದ್ದರೆ, ಆ ಕಾರ್ಯವು ಸುಲಭವಾಗಿ ನೆರವೇರಿಸಲು ಸಾದ್ಯವಾಗುತ್ತದೆ.

ಉದಾಹರಣೆಗೆ: ರಮಲಾನ್ ತಿಂಗಳಲ್ಲಿ ನಾವು ನಿರಂತರ ಮೂವತ್ತು ದಿನ ಉಪವಾಸ ಹಿಡಿಯುತ್ತೇವೆ. ದಿನಂಪ್ರತೀ 20+3 ರಕಹತ್ ಸುನ್ನತ್ ನಮಾಝ್ ಮಾಡುತ್ತೇವೆ. ಅದೇ ನಮಗೆ ಬೇರೆ ತಿಂಗಳಲ್ಲಿ ಒಂದೆರಡು ಸುನ್ನತ್ ಉಪವಾಸ ಹಿಡಿಯಲು ಮತ್ತು ಹತ್ತಿಪ್ಪತ್ತು ರಕಹತ್ ಸುನ್ನತ್ ನಮಾಝ್ ಮಾಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ, ರಮಲಾನ್ ನಲ್ಲಿ ನಮ್ಮ ಮೇಲೆ ಒತ್ತಡ ಇರುವುದರಿಂದ ನಿರಂತರ ಮೂವತ್ತು ದಿನ ಉಪವಾಸ ಹಿಡಿಯಲು ಸಾದ್ಯವಾಗುತ್ತದೆ.

ದಿನಕ್ಕೆ ಐವತ್ತು ಸ್ವಲಾತ್ ಹೇಳಲು ಸಾದ್ಯವಾಗದವರು ಸ್ವಲಾತ್ ಸಮರ್ಪಣೆಯಲ್ಲಿ ಭಾಗಿಯಾದಾಗ ನಿರ್ದಿಷ್ಟ ಸಮಯದಲ್ಲಿ ಐವತ್ತು ಸಾವಿರ-ಒಂದು ಲಕ್ಷ ಸ್ವಲಾತ್ ಹೇಳಬಲ್ಲರು. ಅಂದರೆ, ಸ್ವಲಾತ್ ಸಮರ್ಪಣಾ ಕಾರ್ಯಕ್ರಮವು ಅವರನ್ನು ಸ್ವಲಾತ್ ಹೇಳಲು ಪ್ರೇರೇಪಿಸುತ್ತದೆ. ಹೀಗೆ ಒಂದು ಅವಧಿಯಲ್ಲಿ ಒಂದು ಲಕ್ಷ ಸ್ವಲಾತ್ ಹೇಳಿ ಮುಗಿಸುವಾಗ, ವರ್ಷಪೂರ್ತಿ ದಿನವೊಂದಕ್ಕೆ 275 ರಷ್ಟು ಸ್ವಲಾತ್ ಹೇಳಿದಂತಾಗುತ್ತದೆ. ಅದೇ, ಸ್ವಲಾತ್ ಸಮರ್ಪಣಾ ಕಾರ್ಯಕ್ರಮ ಇಲ್ಲದಿದ್ದರೆ, ದಿನಕ್ಕೆ ಐವತ್ತರಷ್ಟು ಸ್ವಲಾತ್ ಹೇಳುವುದು ಕೂಡಾ ನಮ್ಮಿಂದ ಸಾಧ್ಯವಾಗುವುದಿಲ್ಲ. ಮಹಿಳೆಯರು ಕೂಡಾ ಇಂತಹ ಸ್ವಲಾತ್ ಸಮರ್ಪಣಾ ಕಾರ್ಯಕ್ರಮದಿಂದ ಯಥೇಚ್ಛ ಸ್ವಲಾತ್ ಹೇಳುತ್ತಾರೆ.  ಯಾವ ರೀತಿಯಲ್ಲಿ ಸ್ವಲಾತ್ ಹೇಳಿದರೂ ಸ್ವಲಾತ್ ಹೇಳಿದುದರ ಪುಣ್ಯ ಲಭ್ಯ ತಾನೇ. ಅಂದಮೇಲೆ, ಸ್ವಲಾತ್ ವೃದ್ಧಿಸಲು ಸಹಕಾರಿಯಾಗುವ ಇಂತಹ ದಾರಿಗಳನ್ನು ಹೆಚ್ಚು ಹೆಚ್ಚು ಅನುಸರಿಸುವುದೇ ಒಳ್ಳೆಯದು.
*ಸ್ವಲಾತ್ ಹೇಳಲು ಇಂತಹ ಸಮರ್ಪಣೆಗಳ ಅವಶ್ಯಕತೆ ಇಲ್ಲ ಎಂದು ವಾದಿಸುವವರು, ಸ್ವಲಾತ್ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗಿಯಾದವರು ಮತ್ತು ಭಾಗಿಯಾಗದವರನ್ನು ತುಲನೆಮಾಡಿ ನೋಡಲಿ. ಯಾರಿಂದ ಹೆಚ್ಚು ಹೆಚ್ಚು ಸ್ವಲಾತ್ ಗಳು ಹೇಳಲ್ಪಡುತ್ತವೆ ಎಂದು. ಅವಾಗ ಸ್ವಲಾತ್ ಸಮರ್ಪಣೆಗಳ ಮಹತ್ವ ಅರಿವಾಗುತ್ತದೆ.*

*ಪ್ರವಾದಿ ಪ್ರೇಮಿಗಳಿಂದ ಯಥೇಚ್ಛ-ನಿರಂತರ ಸ್ವಲಾತ್ ಹೇಳಿಸುವ ಉದ್ದೇಶದಿಂದ SSF ಇಂತಹ ಸ್ವಲಾತ್ ಸಮರ್ಪಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತದೆ.*
ಪ್ರವಾದಿ ﷺ ರ ಮೇಲೆ ಯಥೇಚ್ಛವಾಗಿ ಸ್ವಲಾತ್ ಹೇಳಲು ಉದ್ದೇಶಿಸುವ ಪ್ರವಾದಿ ಪ್ರೇಮಿಗಳು ಈ ಒಂದು ಅವಕಾಶದ ಸದುಪಯೋಗವನ್ನು ಪಡೆಯುವರು.

ಯಾವಯಾವ ರೀತಿಯಲ್ಲೆಲ್ಲಾ ಸ್ವಲಾತ್ ವೃದ್ಧಿಸಲು ಸಾದ್ಯವೋ, ಆ ದಾರಿಗಳನ್ನೆಲ್ಲಾ ಅನುಸರಿಸಿ, ಯಥೇಚ್ಛ ಸ್ವಲಾತ್ ಹೇಳುವ ಪ್ರವಾದಿ ಪ್ರೇಮಿಗಳಾಗೋಣ. ಅಲ್ಲಾಹು ಅನುಗ್ರಹಿಸಲಿ, ಆಮೀನ್.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

Monday, November 13, 2017

*ಅಹ್ಲುಸ್ಸುನ್ನತ್ ವಲ್ ಜಮಾಅತ್*
*••••••••••••••••••••••••••••••••••••*
*✍ಮುನೀರ್ ಸಖಾಫಿ, ಸಾಲೆತ್ತೂರು*
*°°°°°°°°°°°°°°°°°°°°°°°°°°°°°*
   

*ವಿಷಯ 1:*

 *ಮೀಲಾದುನ್ನಬೀ.*
*----------------------*
*ಭಾಗ --- 0⃣6⃣.*
○○○○○○○○○

*ಮೌಲಿದ್ ಕಿತಾಬ್ ಬರೆದ ಅಗ್ರೇಸರಾದ ಉಲಮಾ ಶಿರೋಮಣಿಗಳು.*

5.  _ಅಲ್ ಮೌರಿದುಲ್ ಹನಿಯ್ಯ್ ಫಿಲ್ ಮೌಲಿದಿಸ್ಸನಿಯ್ಯ್._
 _المورد الهني في المولد السني_

ಹಾಫಿಲುಲ್ ಇರಾಖೀ ಎಂಬ ಹೆಸರಿನಿಂದ ಪ್ರಸಿದ್ಧರಾದ ಹಾಫಿಲ್ ಅಬ್ದುರ್ರಹ್'ಮಾನ್ ಅಲ್ ಮಿಸ್ರಿ (ರ)
ಹಿಜರಿ: 725--808.
----------------------------------------------------
6.  _ಅಲ್ ಫಖ್ರುಲ್ ಉಲ್'ವೀ ಫಿಲ್ ಮೌಲಿದಿನ್ನಬವೀ_
_الفخر العلوي في المولد النبوي_


 ಹಾಫಿಲು ಸ್ಸಖಾವೀ ಎಂಬ ಹೆಸರಿನಿಂದ ಪ್ರಸಿದ್ಧರಾದ ಹಾಫಿಲ್ ಮುಹಮ್ಮದ್ ಅಬ್ದುರ್ರಹ್'ಮಾನ್ ಅಲ್ ಖಾಹಿರಿ.
ಹಿಜರಿ: 831
----------------------------------------------------
7.  _ಅಲ್ ಮೌರಿದುರ್ರವಿಯ್ಯಿ ಫಿಲ್ ಮೌಲಿದಿನ್ನಬವಿಯ್ಯಿ_
_المورد الروي في المولد النبوي_

ಹನಫೀ ಮದ್ಸ್'ಹಬ್ ನ ಪ್ರಸಿದ್ಧ ಉಲಮಾಗಳಲೊಬ್ಬರಾದ  ಮುಲ್ಲಾ ಅಲಿಯ್ಯುಲ್ ಖಾರೀ (ರ) ಇದರ ರಚನೆಗಾರ.
ಹಿಜರಿ: 1014.
----------------------------------------------------
8.  _ಶರ್ರಫಲ್ ಅನಾಂ_
_شرف الانام_

ಅಲ್ಲಾಮಾ ಅಹ್ಮದ್ ಬಿನ್ ಖಾಸಿಂ ಅಲ್ ಹರೀರೀ (ರ)
ಹಿಜರಿ: 824.

ಇಮಾಮ್ ಇಬ್ನುಲ್ ಜೌಝೀ (ರ) ಬರೆದವುವೆಂದು ಅಭಿಪ್ರಾಯವಿದೆ.
ಹಲವಾರು ವ್ಯಾಖ್ಯಾನ ಗ್ರಂಥಗಳು ಈ ಮೌಲಿದ್ ಗೆ ಬರೆಯಲಾಗಿದ್ದು ದೇಶ- ವಿದೇಶಗಳಲ್ಲಿ ಈ ಮೌಲಿದ್ ಪ್ರಸಿದ್ಧಿ ಪಡೆದುಕೊಂಡಿದೆ.
---------------------------------------------------
9.  _ಮೌಲಿದ್ ಇಬ್ನ್ ಕಸೀರ್_
 _مولد ابن كثير_

ಇಬ್ನ್ ಕಸೀರ್ ಎಂಬ ಹೆಸರಿನಿಂದಲೇ ತಿಳಿಯಲ್ಪಡುವ ಹಾಫಿಲ್ ಇಮಾದುದ್ದೀನ್ ಇಸ್ಮಾಯೀಲ್ ಇಬ್ನ್ ಕಸೀರ್ ಇದರ ರಚನೆಗಾರ.
ಹಿಜರಿ: 774.
----------------------------------------------
10.  _ಸುಬ್'ಹಾನ ಮೌಲಿದ್._
 _سبحان مولد_

ಇಮಾಮ್ ಗಝ್ಝಾಲಿ (ರ) ಅಥವಾ ಶೈಖ್ ಖತೀಬ್ ಮುಹಮ್ಮದುಲ್ ಮದನೀ (ರ) ಬರೆದ ಮೌಲಿದೆಂದು  ಅಭಿಪ್ರಾಯವಿದೆ.
ಇಮಾಮ್ ಗಝ್ಝಾಲೀ (ರ) ಬರೆದದ್ದೆಂಬುವುದಕ್ಕೆ ಆ ಮೌಲಿದ್ ನ ಕೊನೆಯಲ್ಲಿರುವ
واصفح ومن بجمع شمل واغفرن لمحمد بن محمد بن محمد
ಎಂಬ
 ಪ್ರಯೋಗ ಪುಷ್ಠಿ ನೀಡುತ್ತಿದೆ.
ಕಾರಣ, ಮುಹಮ್ಮದ್ ಬಿನ್ ಮುಹಮ್ಮದ್ ಬಿನ್ ಮುಹಮ್ಮದ್ ಎಂಬ ಹೆಸರಲ್ಲಿ ಪ್ರಚಾರದಲ್ಲಿರುವುದು ಇಮಾಮ್ ಗಝ್ಝಾಲಿಯ ಹೆಸರಾಗಿದೆ.
----------------------------------------------
11.  _ಮಂಕೂಸ್ ಮೌಲಿದ್_
_منقوص مولد_

500 ವರ್ಷಗಳ ಮುಂಚೆ ಪೊನ್ನಾಣಿ ಝೈನುದ್ದೀನ್ ಮಖ್ದೂಂ (ರ) ರಚಿಸಿದ ಮೌಲಿದಾಗಿದೆ ಇದು.
ಹಿಜರಿ: 872--928.

ಇಮಾಮ್ ಗಝ್ಝಾಲೀ (ರ) ರಚಿಸಿದ ಸುಬ್'ಹಾನ ಮೌಲಿದನ್ನು ಸಂಕ್ಷಿಪ್ತಗೊಳಿಸಿದ ಮೌಲಿದಾಗಿದೆ ಇದು.
ಆದುದರಿಂದಲೇ ಇದನ್ನು ಮಂಖೂಸ್ (ಸಂಕ್ಷಿಪ್ತಗೊಳಿಸಲ್ಪಟ್ಟದ್ದು) ಎಂಬ ಹೆಸರಿನಿಂದ ಕರೆಯಲ್ಪಡಲಾಯಿತು.
ಸ್ವಹಾಬಾ ಕಿರಾಮ್ ನ ಕಾಲದ ನಂತರ ಕೇರಳದಲ್ಲಿ  ಇಸ್ಲಾಮ್ ಅಳಿದು ಹೋದ ಸಂದರ್ಭದಲ್ಲಿ ಇಸ್ಲಾಮ್ ಪ್ರಚುರಪಡಿಸಿದ ಮಖ್ದೂಂ ಕುಟುಂಬದವರೇ ಈ ಮೌಲಿದನ್ನು ರಚಿಸಿರುವಾಗ ಅವರು ಅದರಲ್ಲಿ ಶಿರ್ಕ್ - ಬಿದ್ ಅತ್ ಕಾಣಲಿಲ್ಲ.
ಇಸ್ಲಾಮನ್ನು ಬೇಕಾದಂತೆ ಅವರು ಕಲಿತಿರುವುದರಿಂದ ಅವರಿಗೆ ಅದರಲ್ಲಿ ಸಂಶಯಗಳಿರಲಿಲ್ಲ. ಇಸ್ಲಾಮಿನ ಪ್ರಾಥಮಿಕ ಜ್ಞಾನ ಕೂಡಾ ಇಲ್ಲದ ವಹ್ಹಾಬೀ ಪಾದ್ರಿಗಳಿಗೆ ಅದರಲ್ಲಿ ಶಿರ್ಕ್ - ಬಿದ್'ಅತ್ ಕಂಡದ್ದು ಅದ್ಭುತವೇ ಸರಿ.
-----------------------------------------------
12.  _ಅಲ್ ಕವ್'ಕಬುಲ್ ಅನ್'ವರ್ ಅಲಾ ಇಖ್'ದಿಲ್ ಜೌಹರ್ ಫೀ ಮೌಲಿದಿಲ್ ಅಝ್'ಹರ್_
_الكوكب الأنور على عقد الجوهر في مولد النبي الأزهر_

ಸಯ್ಯಿದ್ ಜ'ಅಫರ್ ಬಿನ್ ಇಸ್ಮಾಯೀಲ್ ಬಿನ್ ಝೈನುಲ್ ಆಬಿದೀನ್ (ರ)
ಹಿಜರಿ: 1317.

----------------------------------------------
13.  _ಇಖ್'ದಿಲ್ ಜೌಹರ್ ಫೀ ಮೌಲಿದಿಲ್ ಅಝ್'ಹರ್_
 _عقد الجوهر في مولد النبي الأزهر_

ಸಯ್ಯಿದ್ ಜ'ಅಫರ್ ಬಿನ್ ಹಸನ್ ಬಿನ್ ಅಬ್ದುಲ್ ಕರೀಂ ಅಲ್ ಬಿರ್'ಝಂಜೀ (ರ)
ಹಿಜರಿ: 1177.
-----------------------------------------------


*ಮುಂದುವರಿಯುವುದು.............*

*✍ಮುನೀರ್ ಸಖಾಫಿ, ಸಾಲೆತ್ತೂರು*
12/11/2017