ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Thursday, August 17, 2023
*ಪ್ರಥಮ ಬಹುಮಾನ ಕಾರು*🚘🚘🚘*ವ್ಯಾಪಕವಾಗುತ್ತಿರುವ ಸ್ಕೀಮ್ ಜಾಲ*---------------------------------------------✒️T.M ಮುಹ್ಯುದ್ದಿನ್ ಕಾಮಿಲ್ ಸಖಾಫಿ ತೋಕೆಇತ್ತೀಚಿನ ದಿನಗಳಲ್ಲಿ ಪೀಠೋಪಕರಣಗಳ ಅಂಗಡಿಯವರು ಹಾಗೂ ಇನ್ನಿತರರು ಹಲವು ತರಹದ ಸ್ಕೀಮ್ ಗಳು ನಡೆಸುವುದು ಕಂಡು ಬರುತ್ತಿದೆ.ಪ್ರತಿಯೊಬ್ಬರೂ ತಾವು ನಡೆಸುವ ಸ್ಕೀಮ್ ಗಳ ಬಗ್ಗೆ ಅದರಲ್ಲಿ ಧಾರ್ಮಿಕವಾದ ಯಾವುದೇ ಲೋಪದೋಷಗಳಿಲ್ಲವೆಂದು ಸಮರ್ಥಿಸುವುದರಿಂದ ಅದರ ಸತ್ಯಾಸತ್ಯತೆಗಳ ಬಗ್ಗೆ ತಿಳುವಳಿಕೆ ಇಲ್ಲದ ಹಲವು ಮುಗ್ಧರು ಅದರಲ್ಲಿ ಸದಸ್ಯರಾಗಿದ್ದಾರೆ.ಈ ಕುರಿತು ಲೇಖಕನಿಗೆ ಬಂದ ಹಲವಾರು ದೂರವಾಣಿಗಳ ಕಾರಣದಿಂದ ಅದರ ಬಗ್ಗೆ ಸಂಕ್ಷಿಪ್ತವಾದ ವಿವರಣೆಯೊಂದನ್ನು ಇಲ್ಲಿ ನೀಡುತ್ತಿದ್ದೇನೆ.ಇಂದು ನಡೆಯುತ್ತಿರುವ ಸ್ಕೀಮ್ ಗಳ ಕೆಲವು ರೂಪಗಳು ಈ ಕೆಳಗಿನಂತಿವೆ...1.ಒಟ್ಟು 20 ಕಂತುಗಳ(ಉದಾಹರಣೆಗೆ)ಸ್ಕೀಮ್.ಪ್ರತೀ ವಾರವೂ ಚೀಟಿ ಎತ್ತುವುದರ ಮೂಲಕ ಆಯ್ಕೆಯಾದ ಸದಸ್ಯನು ನಂತರ ಹಣ ಕಟ್ಟಬೇಕೆಂದಿಲ್ಲ.ಆಯ್ಕೆಯಾದವರಿಗೆ ಚೀಟಿಯಲ್ಲಿ ಬಂದ ಸಾಮಾಗ್ರಿಗಳನ್ನು ನೀಡಲಾಗುವುದು.(ಉದಾ: ಕಾರು,ಬೈಕು,ಫ್ರಿಜ್,ವಾಶಿಂಗ್ ಮೆಷಿನ್ ಇತ್ಯಾದಿ)ಚೀಟಿ ಎತ್ತುವಿಕೆಯಲ್ಲಿ ಆಯ್ಕೆಯಾಗದ ಸದಸ್ಯರಿಗೆ ನಿಗದಿತ 20 ಕಂತುಗಳ ಬಳಿಕ ಅವರು ಕಟ್ಟಿದ ಒಟ್ಟು ಹಣದ ಮೌಲ್ಯವಿರುವ ಯಾವುದಾದರೊಂದು ವಸ್ತುವನ್ನು ನೀಡಲಾಗುವುದು.ಉದಾ:ಪ್ರತೀ ವಾರ 100 ರೂಪಾಯಿಯಂತೆ 20 ವಾರ ಕಟ್ಟಬೇಕು.ಸ್ಕೀಮ್ ಮುಗಿಯುವುದಕ್ಕಿಂತ ಮುಂಚೆ ಸಾಪ್ತಾಹಿಕವಾಗಿ ನಡೆಯುವ ಚೀಟಿ ಎತ್ತುವಿಕೆಯಲ್ಲಿ ಆಯ್ಕೆಯಾದರೆ ನಂತರ ಹಣ ಕಟ್ಟುವ ಅಗತ್ಯವಿಲ್ಲ.20 ವಾರಗಳ ತನಕ ಈತನ ಹೆಸರು ಆಯ್ಕೆಯಾಗದಿದ್ದರೆ ಕೊನೆಗೆ 2000 ರೂಪಾಯಿ ಮೌಲ್ಯದ ಟೇಬಲ್ ಫ್ಯಾನನ್ನು ನೀಡಲಾಗುವುದು.ಈ ಸ್ಕೀಮ್'ಗಾರರು ಹೇಳುವ ಸಮರ್ಥನೆ ಏನೆಂದರೆ ಇಲ್ಲಿ ಹಣ ಕಟ್ಟುವ ಪ್ರತಿಯೊಬ್ಬರಿಗೂ ಅವರು ಕಟ್ಟಿದ ಒಟ್ಟು ನಿಶ್ಚಿತವಾದ್ದರಿಂದ ಯಾರಿಗೂ ನಷ್ಟವಾಗುವ ಪ್ರಮೇಯವೇ ಇಲ್ಲ.ಆದ್ದರಿಂದ ಇದರಲ್ಲಿ ಧಾರ್ಮಿಕವಾಗಿ ಯಾವುದೇ ಕೇಡುಗಳು ಕಂಡು ಬರುವುದಿಲ್ಲ.ರೂಪ 2.ನಿಗದಿತ ಕಂತುಗಳ (ಉದಾ:20 ಕಂತುಗಳ ) ಸ್ಕೀಮ್ ಆಗಿದ್ದು ಪ್ರತೀ ವಾರವು ಚೀಟಿ ಎತ್ತಲಾಗುವುದು.ಅದರಲ್ಲಿ ಆಯ್ಕೆಯಾದವನಿಗೆ ಕಾರು,ಬೈಕು,ಫ್ರಿಜ್ ,ವಾಶಿಂಗ್ ಮೆಷಿನ್ ಮುಂತಾದ ವಸ್ತುವನ್ನು ನೀಡಲಾಗುವುದು.ಆದರೆ ಈ ಸಾಮಾಗ್ರಿಗಳು ದೊರೆತ ಬಳಿಕವೂ ನಿಗದಿತ ಕಂತುಗಳು ಮುಗಿಯುವ ತನಕ ಹಣ ಕಟ್ಟಬೇಕಾಗುತ್ತದೆ.ಆಯ್ಕೆ ಆಗದವರಿಗೆ ಸ್ಕೀಮ್ ನ ಕೊನೆಯಲ್ಲಿ ಕಟ್ಟಿದ ಹಣದ ಮೌಲ್ಯದಲ್ಲಿ ವಸ್ತುವೊಂದನ್ನು ನೀಡಲಾಗುವುದು.ರೂಪ 3.ನಿಗದಿತ ಕಂತುಗಳ ಸ್ಕೀಮ್ ಆಗಿದ್ದು ಎಲ್ಲರೂ ಕಂತು ಮುಗಿಯುವ ತನಕ ನಿಗದಿತ ಹಣ ಕಟ್ಟಬೇಕು.ಸ್ಕೀಮ್ ನ ಕೊನೆಯಲ್ಲಿ ಚೀಟಿ ಎತ್ತಿ ಐದು ಅಥವಾ ಪ್ರಾಯೋಜಕರು ನಿಗದಿಪಡಿಸಿದಷ್ಟು ಮಂದಿಗಳಿಗೆ ಹೆಚ್ಚಿನ ಮೌಲ್ಯದ ವಸ್ತುಗಳನ್ನು ನೀಡಲಾಗುವುದು.ಉಳಿದವರಿಗೆ ಕಟ್ಟಿದ ಹಣದ ಒಟ್ಟು ಮೌಲ್ಯವಿರುವ ವಸ್ತುವೊಂದನ್ನು ನೀಡಲಾಗುವುದು.ಈ ಮೇಲೆ ತಿಳಿಸಲಾದ ಮೂರು ರೀತಿಯ ಸ್ಕೀಮ್ ಗಳ ಶರೀಅತ್ ವಿಧಿಯ ಬಗ್ಗೆ ಹೇಳುವ ಮುಂಚೆ ವ್ಯಾಪಾರದ ನಿಬಂಧನೆಗಳ ಬಗ್ಗೆ ಸ್ವಲ್ಪ ಅವಲೋಕನ ನಡೆಸಬೇಕಾಗಿದೆ.ಈ ಅವಲೋಕನದಿಂದಲೇ ಪ್ರಸ್ತುತ ಸ್ಕೀಮ್ ಗಳು ಧಾರ್ಮಿಕವಾಗಿ ಸಮ್ಮತಾರ್ಹವೇ ?ಅಲ್ಲವೇ ? ಎಂಬುವುದನ್ನು ತಿಳಿಯಬಹುದಾಗಿದೆ.ವ್ಯಾಪಾರವನ್ನು ಇಸ್ಲಾಮ್ 3 ರೀತಿಯಾಗಿ ವಿಂಗಡಿಸಿದೆ.1.بيع عين مشاهدة للمتبائعين ಕೊಡುವವನು ಮತ್ತು ಕೊಳ್ಳುವವನು ಇಬ್ಬರೂ ದರ್ಶಿಸಿದ ವಸ್ತುವೊಂದನ್ನು ಮಾರಾಟ ಮಾಡುವುದು2.بيع شيئ موصوف في الذمة ವಿಶೇಷಣಗಳು ಹೇಳಲ್ಪಟ್ಟ ವಸ್ತುವೊಂದನ್ನು ದ್ಸಿಮ್ಮತ್ ನಲ್ಲಿ (ವಸ್ತುವನ್ನು ಪ್ರತ್ಯೇಕವಾಗಿ ತೋರಿಸಿ ನಿಗದಿ ಪಡಿಸದೆ)ಮಾರಾಟ ಮಾಡುವುದು.3.بيع عين غائبة ಅನುಪಸ್ಥಿತಿಯಲ್ಲಿರುವ ವಸ್ತುವೊಂದನ್ನು ಮಾರುವುದು.ಈ ಮೂರು ವ್ಯಾಪಾರಗಳಲ್ಲಿ ಮೊದಲೆರಡು ವ್ಯಾಪಾರವು ಕೆಲವೊಂದು ನಿಬಂಧನೆಗಳ ಪ್ರಕಾರ ಸಿಂಧುವಾಗಿರುತ್ತದೆ.ಮೂರನೇಯ ವ್ಯಾಪಾರವು ಅಸಿಂಧುವಗಿದೆ.(ಬುಜೈರಿಮಿ ಅಲಲ್ ಇಖ್'ನಾಹ್ ಪುಟ 45 ಭಾಗ 3)ಮೂರನೇಯ ವ್ಯಾಪಾರವು ಅಸಿಂಧುವಾಗಲು ಕಾರಣ ಮಾರಾಟದ ವಸ್ತು ಕೊಡು-ಕೊಳ್ಳುವವನಿಗೆ ಅಗೋಚರವಾಗಿದೆ ಮತ್ತು ಅಸ್ಪಷ್ಟವಾಗಿದೆ ಎಂಬುವುದಾಗಿದೆ.*ವ್ಯಾಪಾರದ ಕಡ್ಡಾಯ ಘಟಕಗಳು ಆರು.*1.بائع ಮಾರಾಟ ಮಾಡುವವ2.مشتريಕೊಳ್ಳುವವ3.ثمنಕ್ರಯ4. مثمن ಮಾರಾಟ ವಸ್ತು5.ايجاب ಮಾರಾಟದ ಮೇಲೆ ತಿಳಿಸುವ ಮಾತು6 .قبول ಕೊಳ್ಳುವಿಕೆಯ ಮೇಲೆ ತಿಳಿಸುವ ಮಾತು ಇವುಗಳಲ್ಲಿ ಪ್ರತಿಯೊಂದಕ್ಕೂ ಪ್ರತ್ಯೇಕವಾದ ನಿಬಂಧನೆಗಳಿವೆ.ಇದರಲ್ಲಿ ಮೂರು ಮತ್ತು ನಾಲ್ಕನೇ ಘಟಕವಾದ ಕ್ರಯ (ಬೆಲೆ) ಮತ್ತು ಮಾರಾಟ ವಸ್ತುವಿನ ನಿಬಂಧನೆಗಳ ಬಗ್ಗೆ ಚುಟುಕಾಗಿ ತಿಳಿದುಕೊಳ್ಳೋಣ.1.ಕೊಳ್ಳುವವನಿಗೆ ಮತ್ತು ಕೊಡುವವನಿಗೆ ಒಡೆತನವಿರಬೇಕು.ಅಂದರೆ ಯಾವುದಾದರೊಂದು ವಸ್ತುವನ್ನು ಮಾರುವಾಗ ಅಥವಾ ಬೆಲೆಯಾಗಿ ನೀಡುವಾಗ ಆ ವಸ್ತು ಆತನ ಒಡೆತನಕ್ಕೆ ಸೇರಿದ್ದಾಗಿರಬೇಕು.2.ಶುದ್ಧಿಯಿರುವ ಅಥವಾ ಶುದ್ಧಿ ಮಾಡಲು ಸಾಧ್ಯವಿರುವ ವಸ್ತುವಾಗಿರಬೇಕು.ಇದರ ಪ್ರಕಾರ ಮಲಿನ ವಸ್ತುಗಳಾದ ಮದ್ಯ,ಮಲ,ರಕ್ತ,ನಾಯಿ,ಹಂದಿ ಮುಂತಾದವುಗಳನ್ನು ಮಾರಾಟ ಮಾಡಬಾರದು ಹಾಗೂ ಬೆಲೆಯಾಗಿ ನೀಡಬಾರದು.ರಾಫಿಹ್ ಬಿನ್ ಖದೀಜ್ (ರ)ರಿಂದ ವರದಿ,ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ,ثمن الكلب خبيث "ನಾಯಿ ಮಾರಾಟ ಮಾಡಿ ದೊರಕುವ ಹಣವು ಮಲಿನವಾಗಿದೆ"(ಮುಸ್ಲಿಮ್)ಅಬೂ ಮಸ್'ಊದ್ (ರ)ರಿಂದ ವರದಿ,ಅವರು ಹೇಳುತ್ತಾರೆ,ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಾಯಿ ಮಾರಾಟ ಮಾಡಿ ದೊರಕುವ ಹಣವನ್ನು ವಿರೋಧಿಸಿದ್ದಾರೆ.(ಬುಖಾರಿ,ಮುಸ್ಲಿಮ್)ಜಾಬಿರ್( ರ) ವರದಿ,ان الله ورسوله حرم بيع الخمر والميتة والخنزير والاصنام (بخاري ،مسلم)"ಖಂಡಿತವಾಗಿಯೂ ಅಲ್ಲಾಹನು ಮತ್ತು ಅವನ ರಸೂಲರು ಮದ್ಯ,ಶವ,ಹಂದಿ ಹಾಗೂ ವಿಗ್ರಹಗಳನ್ನು ನಿಷೇಧಿಸಿದ್ದಾರೆ."(ಬುಖಾರಿ,ಮುಸ್ಲಿಮ್)ಈ ವಸ್ತುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲು ಕಾರಣ ಈ ವಸ್ತುಗಳು ಮಲಿನ (ನಜಸ್)ವಾಗಿದೆ ಎಂಬುವುದಾಗಿದೆ.ಆದ್ದರಿಂದಲೇ ಇತರ ಎಲ್ಲಾ ಮಲಿನ ವಸ್ತುಗಳನ್ನು ಇವುಗಳೊಂದಿಗೆ ತುಲನೆ ಮಾಡಿ ಅವುಗಳ ಮಾರಾಟವು ನಿಷಿದ್ಧವೆಂದು ಕರ್ಮ ಶಾಸ್ತ್ರ ವಿದ್ವಾಂಸರು ಸ್ಪಷ್ಟಪಡಿಸಿದ್ದಾರೆ.3.ಮಾರಾಟ ವಸುವನ್ನು ಕಾಣುವುದು.ಮಾರಾಟ ವಸ್ತು ಅವರಿಬ್ಬರ ಸಮ್ಮುಖದಲ್ಲಿದ್ದರೆ ಅದನ್ನು ಕಾಣಬೇಕು.ಸಮ್ಮುಖದಲ್ಲಿಲ್ಲದಿದ್ದರೆ ಆ ವಸ್ತು ಮತ್ತು ಅದರ ಎಲ್ಲಾ ವಿಶೇಷಣಗಳನ್ನು ಹೇಳಬೇಕು.4.ವಸ್ತುವನ್ನು ಹಸ್ತಾಂತರಿಸಲು ಸಾಧ್ಯವಿರಬೇಕು.ಇದರ ಪ್ರಕಾರ ನೀರಿನಲ್ಲಿರುವ ಮೀನು,ಆಕಾಶದಲ್ಲಿ ಹಾರಾಡುತ್ತಿರುವ ಪಕ್ಷಿ ಮುಂತಾದವುಗಳನ್ನು ಮಾರಾಟ ಮಾಡಬಾರದು.ಹಾಗೂ ಬೆಲೆಯಾಗಿ ನೀಡಬಾರದು.ಇಮಾಮ್ ಝಕರಿಯ್ಯಲ್ ಅನ್ಸಾರೀ ಹೇಳುತ್ತಾರೆ,وهي ثلاثة اذا العين اما حاضرة او غائبة او في الذمة فالحاضرة وهي المرئية الرؤية المعتبرة في صحة البيع يصح بيعها بشرطه الآتي "ವಸ್ತುಗಳ ಮಾರಟವು ಮೂರು ವಿಧದಲ್ಲಿದೆ.ಏಕೆಂದರೆ ಮಾರಾಟ ವಸ್ತು ಒಂದೋ ಸಮ್ಮುಖದಲ್ಲಿರಬಹುದು ಅಥವಾ ಅನುಪಸ್ಥಿತಿಯಲ್ಲಿರಬಹುದು ಅಥವಾ ಕೇವಲ ಕರಾರು ಪ್ರಕಾರವಾಗಿರಬಹುದು.ಸಮ್ಮುಖದಲ್ಲಿರುವ ವಸ್ತುವಾಗಿದ್ದರೆ ನಿಬಂಧನೆ ಪ್ರಕಾರ ಅದರ ಮಾರಾಟ ಸಿಂಧುವಾಗಿದೆ.(ತುಹ್'ಫತುತ್ತುಲ್ಲಾಬ್ ಭಾಗ 3, ಪುಟ 31)ಆ ನಿಬಂಧನೆಗಳ ಬಗ್ಗೆ ಅವರು ಹೀಗೆ ಸ್ಪಷ್ಟಪಡಿಸುತ್ತಾರೆ."ಮಾರಟ ವಸ್ತುವಿನ ಒಡೆತನವಿರಬೇಕು,ಶುದ್ಧಿಯಿರಬೇಕು,ಇಬ್ಬರಿಗೂ ತಿಳಿಯಲ್ಪಟ್ಟದ್ದಾಗಿರಬೇಕು.(ತುಹ್'ಫತುತ್ತುಲ್ಲಾಬ್ 3/42)ಪುನಃ ಅವರು ಹೇಳುತ್ತಾರೆ,"ಅಗೋಚರವಾದ ವಸ್ತುವನ್ನು ಅವರಿಬ್ಬರೋ ಅಥವಾ ಒಬ್ಬರೋ ವ್ಯವಹಾರ ಪ್ರಕ್ರಿಯೆಗಿಂತ ಮುಂಚೆ ಕಾಣದಿದ್ದರೆ ಆ ವ್ಯಾಪಾರವು ಸಿಂದುವಾಗಲಾರದು.(ತುಹ್'ಫತುತ್ತುಲ್ಲಾಬ್ 3/32)ಪುನಃ ಅವರು ಹೇಳುತ್ತಾರೆ,ಕರಾರು ಪ್ರಕಾರವಿರುವ ವ್ಯಾಪಾರದಲ್ಲಿ ಮಾರಾಟ ವಸ್ತುವಿನ ಬಗ್ಗೆ ಮತ್ತು ಅದರ ವಿಶೇಷಣವನ್ನು ಹೇಳಿದರೆ ಅದರ ಮಾರಾಟವು ಸಿಂಧುವಾಗಲಾರದು.(ತುಹಫತುತ್ತುಲ್ಲಾಬ್ 3/38)ಒಟ್ಟಿನಲ್ಲಿ ವಸ್ತುಗಳನ್ನು ಮಾರಾಟ ಮಾಡುವಾಗ ಆ ವಸ್ತುಗಳ ಬಗ್ಗೆ ಮಾರುವವನಿಗೂ ಪಡೆದುಕೊಳ್ಳುವವನಿಗೂ ಸ್ಪಷ್ಟವಾದ ಅರಿವಿರಬೇಕು.ವಸ್ತು ಸಮ್ಮುಖದಲ್ಲಿದ್ದರೆ ಅವರಿಬ್ಬರೂ ನೋಡಿ ಖಾತರಿ ಪಡಿಸಬೇಕು.ಇನ್ನು ವ್ಯಾಪಾರ ಕರಾರು ಪ್ರಕಾರವಾಗಿದ್ದರೆ ಆ ವಸ್ತುವಿನ ಎಲ್ಲಾ ವಿಷೇಷಣಗಳನ್ನು ಹೇಳಿ ಅದನ್ನು ನಿಗದಿಪಡಿಸಬೇಕು.ಆದ್ದರಿಂದ ಮಜ್'ಹೂಲ್ ಅಥವಾ ತಿಳಿಯದ ವಸ್ತುವನ್ನು ಮಾರಾಟ ಮಾಡುವುದು ನಿಷಿದ್ಧವೂ ಅಸಿಂಧುವಾಗಿದೆ.ಶರಹುಲ್ ಮುಹದ್ದಬ್ ನಲ್ಲಿ ಈ ರಿತಿ ಇದೆ."ಗೊತ್ತಿಲ್ಲದ ವಸ್ತುವನ್ನು ಮಾರುವುದು ಅಸಿಂಧುವಾಗಿದೆ".(ಶರಹುಲ್ ಮುಹದ್ದಬ್ 11/335)ಇಮಾಮ್ ಮಾವರ್ದಿ ಹೇಳುತ್ತಾರೆ,ಬೆಲೆ ಎಷ್ಟೆಂದು ಗೊತ್ತಿಲ್ಲದ ವ್ಯಾಪಾರ ಸಿಂಧುವಾಗಲಾರದು.(ಹಾವಿಲ್ ಕಬೀರ್ 5/763)ಒಟ್ಟಿನಲ್ಲಿ ವ್ಯಾಪಾರ ಮಾಡುವಾಗ ವ್ಯಾಪಾರದ ವಸ್ತು ಹಾಗೂ ಅದರ ಬೆಲೆ ನಿಖರವಾಗಿ ತಿಳಿದಿರಬೇಕು.ಇನ್ನು ನಮ್ಮ ಸ್ಕೀಮಿನ ವಿಚಾರಕ್ಕೆ ಬರೋಣ.ಒಂದನೇ ರೂಪದಲ್ಲಿಅಡಕ ಗೊಂಡಿರುವ ಕೆಲವು ಅಂಶಗಳನ್ನು ಗಮನಿಸಿ. ಇಲ್ಲಿ ಚೀಟಿ ಎತ್ತುವುದರ ಮೂಲಕ ವಸ್ತುವನ್ನು ಆಯ್ಕೆ ಮಾಡುವುದಾದರೆ ದೊರಕುವ ವಸ್ತು ಯಾವುದು ಎಂದು ಸ್ಪಷ್ಟವಲ್ಲ. ಏಕೆಂದರೆ ಚೀಟಿ ಎತ್ತುವಿಕೆಯಲ್ಲಿ ಯಾವ ವಸ್ತು ಬರಬಹುದೆಂದು ಯಾರಿಗೂ ಗೊತ್ತಿಲ್ಲ ತಾನೇ?ಆದ್ದರಿಂದ ಇಲ್ಲಿ ಮಬೀಅ ಅಥವಾ ಮಾರಾಟ ವಸ್ತುವಿನಲ್ಲಿ ನಿಗೂಢತೆ ಹಾಗೂ ಅಸ್ಪಷ್ಟತೆ ಇದೆ. ಎರಡನೆಯದಾಗಿ ಸಾಪ್ತಾಹಿಕವಾಗಿ ವಸ್ತುವನ್ನು ಚೀಟಿ ಎತ್ತುವಿಕೆಯ ಮೂಲಕ ನಿರ್ಣಯಿಸುವಾಗ ಸದಸ್ಯರಾದ ಪ್ರತಿಯೊಬ್ಬರಿಗೂ ಯಾವುದೇ ವಾರ ಯಾವುದೇ ವಸ್ತು ಬರಲು ಸಾಧ್ಯವಿದೆ .ಆಗ ಎಷ್ಟರ ತನಕ ಹಣ ಕಟ್ಟಬೇಕೆಂದು ಪ್ರತಿಯೊಬ್ಬರಿಗೂ ಸ್ವಷ್ಠವಲ್ಲ ಆದ್ದರಿಂದ ಇಲ್ಲಿ ಸಮನ್ ಅಥವಾ ಬೆಲೆಯಲ್ಲೂ ನಿಗೂಢತೆ ಇದೆ ಕೆಲವೊಮ್ಮೆ ಅದು ನೂರು ರೂಪಾಯಿ ಆಗಿರಬಹುದು ಅಥವಾ ಇನ್ನೂರಾಗಿರಬಹುದು ಅಥವಾ ಅದಕ್ಕಿಂತ ಮೇಲೆ ಆಗಿರಬಹುದು. ಇನ್ನು ಒಂದೊಂದು ವಾರದಲ್ಲಿ ಒಂದೊಂದು ವಸ್ತುವನ್ನು ನಿಗದಿಪಡಿಸಿ ಪಡೆಯುವವನನ್ನು ಚೀಟಿ ಎತ್ತಿ ನಿರ್ಣಯಿಸುವುದಾದರೆ ಆಗಲು ಪಡೆಯುವವನಲ್ಲೂ ನಿಗೂಢತೆ ಇದೆ .ಅದೇ ರೀತಿ ಬೆಲೆಯು ಸ್ಪಷ್ಟವಲ್ಲ.ಎರಡನೇ ರೂಪದಲ್ಲಿ ಬೆಲೆ ನಿಶ್ಚಿತವಾಗಿದ್ದರೂ ಲಭಿಸುವ ವಸ್ತು ಸ್ಪಷ್ಟವಲ್ಲ ಏಕೆಂದರೆ ಈ ವಸ್ತು ಅದರಲ್ಲಿ ಸದಸ್ಯರಾದ ಪ್ರತಿಯೊಬ್ಬರಿಗೂ ಲಭಿಸಲು ಸಾಧ್ಯತೆ ಇದೆ. ಪ್ರತಿಯೊಬ್ಬರೂ ಅದು ತನಗೆ ಲಭಿಸಬಹುದು ತನಗೆ ಲಭಿಸಬಹುದು ಎಂದು ಕಾತರದಿಂದಿರುತ್ತಾರೆ. ಆದ್ದರಿಂದ ಇಲ್ಲೂ ಮಾರಾಟ ವಸ್ತುವಿನಲ್ಲಿ ನಿಗೂಢತಯಿದೆ. ಮೂರನೇ ರೂಪದ ಅವಸ್ಥೆಯು ಇದೇ ರೀತಿಯಾಗಿದೆ.ಇನ್ನು ಇದರ ಬಗ್ಗೆ ಹದೀಸ್ ಮತ್ತು ಇಮಾಮಗಳ ಉಲ್ಲೇಖಗಳು ಏನೆನ್ನುತ್ತದೆ ಎಂಬುವುದನ್ನು ನೋಡೋಣ ಅಬೂಹುರೈರ (ರ.ಅ) ವರದಿ, ಅವರು ಹೇಳುತ್ತಾರೆ "ಪ್ರವಾದಿ ಸ್ವಲ್ಲಲ್ಲಾಹು ಅಲಯಿಹಿವಸಲ್ಲಮರವರು ಹಸ್ವಾತ್ ವ್ಯಾಪಾರ ಮತ್ತು ವಂಚನೆಗೆ ಸಾಧ್ಯತೆ ಇರುವ ವ್ಯಾಪಾರವನ್ನು ವಿರೋಧಿಸಿರುವವರು" (ಮುಸ್ಲಿಂ , ಮಿಶ್ಕಾತ್ ಹದೀಸ್ 2854)ಹದೀಸ್ ನಲ್ಲಿ ಹೇಳಿದ ಹಸ್ವಾತ್ ವ್ಯಾಪಾರವೇನೆಂಬುವುದನ್ನು ನೋಡೋಣ..ಇಮಾಂ ಮಾವರ್ದಿರವರು ಹೇಳುತ್ತಾರೆ, ಇದರಲ್ಲಿ ಮೂರು ತಾತ್ಪರ್ಯಗಳಿವೆ1.ಒಬ್ಬನು ಕೈಯಲ್ಲಿ ಚಿಕ್ಕ ಕಲ್ಲುಗಳನ್ನು ಹಿಡಿದು ಬಟ್ಟೆ ವ್ಯಾಪಾರಿಯ ಬಳಿ ಬರುತ್ತಾನೆ.ಬಟ್ಟೆ ವ್ಯಾಪಾರಿ ತನ್ನ ಬಟ್ಟೆಗಳನ್ನು ಒಂದೆಡೆ ರಾಶಿ ಹಾಕಿರುತ್ತಾನೆ. ಗ್ರಾಹಕ ತನ್ನ ಕೈಯಲ್ಲಿರುವ ಕಲ್ಲನ್ನು ಆ ರಾಶಿಯ ಮೇಲೆ ಬಿಸಾಡುತ್ತಾನೆ.ಆಗ ಕಲ್ಲು ಯಾವ ಬಟ್ಟೆಯ ಮೇಲೆ ಬೀಳುತ್ತದೋ ಆ ಬಟ್ಟೆ ಆತನಿಗಾಗಿದೆ. ಈ ವ್ಯಾಪಾರವು ಬಾತಿಲ್ ಅಥವಾ ಅಸಿಂಧು ವಾಗಿದೆ. ಏಕೆಂದರೆ ಯಾವ ವಸ್ತು ದೊರಕುತ್ತದೆ ಎಂಬುದು ಇಲ್ಲಿ ಸ್ಪಷ್ಟವಲ್ಲ.2. ಆತ ಒಂದು ವಸ್ತುವನ್ನು ನಿಗದಿ ಪಡಿಸಿ ಖರೀದಿಸುತ್ತಾನೆ. ಆದರೆ ಆ ಕಲ್ಲು ಆ ವಸ್ತುವಿನ ಮೇಲೆ ಬೀಳುವ ತನಕ ಬೆಲೆಯಲ್ಲಿ ಅವಧಿ ನಿಗದಿ ಪಡಿಸುತ್ತಾನೆ.ಇದು ಕೂಡ ಅಸಿಂಧುವಾಗಿದೆ ಏಕೆಂದರೆ ಇಲ್ಲಿ ಅವಧಿಯ ಸಮಯವೆಷ್ಟು ಎಂದು ಸ್ವಷ್ಟ ಅಲ್ಲ.3. ಜಾಗ ಖರೀದಿಸುವಾಗ ಆ ಕಲ್ಲನ್ನು ಬಿಸಾಡಿ ಅದು ಎಲ್ಲಿ ಬಿತ್ತೋ ಅಲ್ಲಿಯ ತನಕವಿರುವ ಜಾಗವನ್ನು ಖರೀದಿಸುವುದು.ಇದು ಕೂಡ ಅಸಿಂಧುವಾಗಿದೆ.ಏಕೆಂದರೆ ಇಲ್ಲಿ ಖರೀದಿಸುವ ಜಾಗದ ವಿಸ್ತೀರ್ಣ ಎಷ್ಟೆಂದು ಸ್ಪಷ್ಟವಲ್ಲ .(ಅಲ್ ಹಾವಿಲ್ ಕಬೀರ್ ಕಾಂಡ 5 ಪುಟ 752)ಇಮಾಮ್ ಮಾವರ್ದಿರವರ (ರ.ಅ)ರವರ ಈ ವಿವರಣೆಯಿಂದ ಒಂದು ಕಾರ್ಯ ಸ್ಪಷ್ಟವಾಗುತ್ತದೆ.ಬಟ್ಟೆಗಳ ರಾಶಿಗೆ ಕಲ್ಲು ಹಾಕಿ ಅದರಿಂದ ಆಯ್ಕೆ ಯಾಗುವ ವಸ್ತುವಿನ ಮಾರಾಟವು ಸಿಂಧು ಅಲ್ಲ. ಏಕೆಂದರೆ ಅಲ್ಲಿ ಮಾರಾಟ ವಸ್ತುವಿನಲ್ಲಿ ನಿಗೂಢತೆ ಉಂಟಾಗುತ್ತದೆ. ಇಲ್ಲಿ ಪ್ರಸ್ತಾಪಿತವಾದ ಸ್ಕೀಮ್ ನ ಅವಸ್ಥೆಯೂ ಇದೇ ರೀತಿಯಾಗಿದೆ. ಏಕೆಂದರೆ ಜಾಹಿಲಿಯಾ ಕಾಲದಲ್ಲಿ ಕಲ್ಲೆಸೆದು ಸಾಮಗ್ರಿಗಳನ್ನು ಆಯ್ಕೆ ಮಾಡುತ್ತಿದ್ದರೆ ಇಂದು ಚೀಟಿ ಎತ್ತುವುದರ ಮೂಲಕ ಆಯ್ಕೆ ಮಾಡುತ್ತಾರೆ ಅಷ್ಟೇ. ಎರಡು ರೂಪದಲ್ಲೂ ಮಾರಾಟ ವಸ್ತು ಸ್ಪಷ್ಟವಲ್ಲ.ಇದೇ ಕಾರ್ಯವನ್ನು ಇಮಾಂ ಶಾಫಿ( ರ.ಅ) ರವರು ಹೇಳುವುದನ್ನು ನೋಡಿ,"ಬೈಉಲ್ ಹಸ್ವಾತ್ ಎಂಬುದಕ್ಕೆ ಹಲವು ವ್ಯಾಖ್ಯಾನಗಳಿವೆ. ಗ್ರಾಹಕನೊಂದಿಗೆ ಮಾರುವವನು ಈ ಬಟ್ಟೆಗಳ ಪೈಕಿ ಒಂದನ್ನು ನಿನಗೆ ನಾನು ಮಾರಿರುವೆ ನಿನ್ನ ಕೈಯಲ್ಲಿರುವ ಕಲ್ಲನ್ನು ಆ ಬಟ್ಟೆಗಳಿಗೆ ಬಿಸಾಡು ಅದು ಯಾವುದರ ಮೇಲೆ ಬಿತ್ತೋ ಅದು ಮಾರಲ್ಪಟ್ಟ ಬಟ್ಟೆಯಾಗಿದೆ ಎಂದು ಹೇಳುವುದಾಗಿದೆ ಅಥವಾ ಈ ಕಲ್ಲನ್ನು ಬಿಸಾಡು. ಅದು ಎಲ್ಲಿಗೆ ಬಿತ್ತೋ ಅಲ್ಲಿಯ ತನಕದ ಜಾಗ ನಿನಗೆ ಮಾರಲ್ಪಟ್ಟಿದ್ದಾಗಿದೆ ಎಂದು ಹೇಳುವುದಾಗಿದೆ".(ಶರಹುಲ್ ಕಬೀರ್, ಭಾಗ 8, ಪುಟ 194)ಇನ್ನೊಂದು ರೀತಿಯನ್ನು ಬಹು ಅಬೂ ಸುಲೈಮಾನ್ ಅಹಮದ್ ಬಿನು ಮಹಮ್ಮದ್ ಖತ್ತಾಬಿ( ರ .ಅ) ರವರು ತಿಳಿಸುವುದನ್ನು ನೋಡಿ, ಇನ್ನೊಂದು ವಿಧವೇನೆಂದರೆ ಆಡನ್ನು ಸಾಕುವ ವ್ಯಕ್ತಿ ಒಬ್ಬ ತನ್ನ ಆಡಿನ ಗುಂಪನ್ನು ತೋರಿಸಿ ಈ ಗುಂಪಿನಲ್ಲಿ ಯಾವುದಕ್ಕೆ ನಿನ್ನ ಕಲ್ಲು ಬಿತ್ತೋ ಅದು ಮಾರಾಟಗೊಂಡ ಆಡೆಂದು ಹೇಳುವುದು. ಇದು ಪ್ರವಾದಿ ವಿರೋಧಿಸಿದ ವ್ಯಾಪಾರವಾಗಿದೆ".ಇಮಾಂ ಇಬ್ನ್ ಹಜರಿಲ್ ಅಸ್ಕಲಾನಿ (ರ.ಅ)ರವರು ಹೇಳುತ್ತಾರೆ,ನೀವು ನೀರಿನಲ್ಲಿರುವ ಮೀನನ್ನು ಖರೀದಿಸಬೇಡಿ. ಏಕೆಂದರೆ ಅದು ನಷ್ಟಕ್ಕೆ ಸಾದ್ಯತೆ ಇರುವಂತಹ ದ್ದಾಗಿದೆ ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ ಹದೀಸನ್ನು ಅಬುಹುರೈರ (ರ)ರಿಂದ ಇಮಾಮ್ ಅಹಮದ್( ರ.ಅ)ರವರು ಉಲ್ಲೇಖಿಸಿದ್ದಾರೆ. ನೀರಿನಲ್ಲಿರುವ ಮೀನನ್ನು ಖರೀದಿಸುವುದು ನಷ್ಟ ಮತ್ತು ವಂಚನೆಯ ವಿಧಗಳ ಪೈಕಿ ಒಂದಾಗಿದೆ. ಇದರೊಂದಿಗೆ ಆಕಾಶದಲ್ಲಿ ಹಾರುವ ಹಕ್ಕಿ, ಇಲ್ಲದ ವಸ್ತು, ತಿಳಿಯದ ವಸ್ತು, ಓಡಿ ಹೋದದ್ದು ಮುಂತಾದವುಗಳನ್ನು ಮಾರಾಟ ಮಾಡುವುದನ್ನು ತುಲನೆಗೊಳಿಸಲಾಗಿದೆ.(ಫತುಹುಲ್ ಬಾರಿ, ಕಾಂಡ 4 ಪುಟ 357)ಉಮ್ದತುಲ್ ಖಾರಿಯಲ್ಲಿ ಹೀಗೆ ಕಾಣಬಹುದು,"ಪ್ರವಾದಿ ಸ.ಅ ರವರು ವಿರೋಧಿಸಿದ ಬೈಉಲ್ ಗರರ್ ಎಂದರೆ ಅಪಾಯವಿರುವ ಮಾರಾಟವಾಗಿದೆ. ಅದೆಂದರೆ ಬೆಲೆ ,ಮಾರಾಟ ವಸ್ತು ,ಮತ್ತು ಅದು ನ್ಯೂನೆತೆಗಳಿಂದ ಮುಕ್ತಿ ಹೊಂದಿರುವುದು ಹಾಗೂ ಅವಧಿಯ ಬಗ್ಗೆ ಸ್ಪಷ್ಟ ಇಲ್ಲದ ವ್ಯಾಪಾರವಾಗಿದೆ .(ಉಮ್ದತುಲ್ ಖಾರಿ ಭಾಗ 17 ಪುಟ 471).ಇಮಾಮ್ ನವವಿ( ರ.ಅ )ರವರು ಹೇಳುತ್ತಾರೆ, ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ವಿರೋಧಿಸಿದ ಬೈವುಲ್ ಹಸ್ವಾತ್ ಎಂಬುದರಲ್ಲಿ ಮೂರು ವ್ಯಾಖ್ಯಾನಗಳಿವೆ ಒಂದು ಕಲ್ಲು ಬಿದ್ದ ಬಟ್ಟೆಯನ್ನು ನಿನಗೆ ನಾನು ಮಾರಿದೆ ಎಂದು ಹೇಳುವುದಾಗಿದೆ.(ಶರಹು ಮಸ್ಲಿಂ ಭಾಗ ಹತ್ತು ಪುಟ 150).ಇಮಾಮ್ ಕತ್ತಾಬೀ (ರ.ಅ)ರವರು ಹೇಳುತ್ತಾರೆ, "ಉದ್ದೇಶಿಸಲ್ಪಟ್ಟ ವಸ್ತು ಅಸ್ಪಷ್ಟವಾದ ,ಹಸ್ತಾಂತರಿಸಲು ಸಾಧ್ಯವಿಲ್ಲದ ಎಲ್ಲಾ ವ್ಯಾಪಾರವೂ ವಿರೋಧಿಸಲ್ಪಟ್ಟ ಗರರ್ ವ್ಯಾಪಾರಕ್ಕೆ ಒಳಪಟ್ಟದ್ದಾಗಿದೆ.(ಮಆಲಿಮುಸ್ಸುನನ್ ಭಾಗ 3 ಪುಟ 88)ವ್ಯಾಪಾರದಲ್ಲಿ ಸಮಯ ನಿಗದಿಪಡಿಸದಿರುವುದು ಮತ್ತು ಇತರ ಯಾವುದಾದರೂ ಒಂದು ಕಾರ್ಯದ ಮೇಲೆ ವ್ಯಾಪಾರವನ್ನು ಸಂಯೋಜನೆಗೊಳಿಸದಿರುವುದು ವ್ಯಾಪಾರ ಸಿಂಧುವಾಗಲು ನಿಬಂಧನೆಯಾಗಿದೆ. ಇಮಾಂ ಖತೀಬ್ ಶಿರ್ಬೀನಿ (ರ.ಅ) ರವರು ಹೇಳುತ್ತಾರೆ, ವ್ಯಾಪಾರದಲ್ಲಿ ಇತರ ಕಾರ್ಯದ ಮೇಲೆ ಸಂಯೋಜನೆಗೊಳಿಸದಿರುವುದು ಹಾಗೂ ಸಮಯ ನಿಗದಿಪಡಿಸದಿರುವುದು ನಿಬಂಧನೆ ಆಗಿದೆ.ಆದ್ದರಿಂದ ಒಬ್ಬನು "ನನ್ನ ತಂದೆ ತೀರಿದರೆ ಇದನ್ನು ನಿನಗೆ ನಾನು ಇಷ್ಟು ರೂಪಾಯಿಗೆ ಮಾರಿದೆನು" ಅಥವಾ" ಒಂದು ತಿಂಗಳಿಗೆ ಇದನ್ನು ನಾನು ನಿನಗೆ ಮಾರಿದೆನು"ಎಂದು ಹೇಳಿದರೆ ಆ ವ್ಯಾಪಾರವು ಸಿಂಧುವಾಗಲಾರದು. ( ಇಖ್ನಾಅ ಭಾಗ-3 ಪುಟ 13)ಪ್ರಸ್ತುತ ಸ್ಕೀಮ್ ಗಳಲ್ಲಿ ಒಂದು ರೀತಿಯ ತಅಲೀಕ್ ಅಥವಾ ಸಂಯೋಜನೆಯನ್ನು ನಮಗೆ ಕಾಣಬಹುದು. ಅದೇನಂದರೆ "ಸಾಪ್ತಾಹಿಕವಾಗಿ ಅಥವಾ ಕೊನೆಯಲ್ಲಿ ಹಾಕುವ ಚೀಟಿ ಎತ್ತುವಿಕೆಯಲ್ಲಿ ನೀನು ಆಯ್ಕೆಯಾದರೆ ಆ ವಸ್ತು ನಿನಗೆ" ಎಂಬ ಸಂಯೋಜನೆಯು ಇಲ್ಲಿದೆ.ಆದ್ದರಿಂದ ಇದು ಕೂಡ ಒಂದು ಅಡಚಣೆಯಾಗಿದೆ.ಮಾತ್ರವಲ್ಲ ಒಂದನೇ ರೀತಿಯಲ್ಲಿ ಚೀಟಿ ಎತ್ತುವಿಕೆಯಲ್ಲಿ ಆಯ್ಕೆಯಾದವರು ನಂತರ ಹಣ ಕಟ್ಟ ಬೇಕಾಗಿಲ್ಲ ಎಂಬುದು ಒಂದು ಬಗೆಯ ಮೈಸಿರ್ ಅಥವಾ ಜೂಜಿಗೆ ಒಳಪಟ್ಟದ್ದಾಗಿದೆ.ಒಟ್ಟಿನಲ್ಲಿ ಇಂದು ನಡೆಸುವ ಸ್ಕೀಮ್ ಗಳಲ್ಲಿ ಬಹುಮಾನಗಳೆಂದು ಅವರು ಕರೆಯುವ ವಸ್ತುಗಳು ಯಾರಿಗೆ ದೊರಕುತ್ತಿದೆ ಎಂದು ಹೇಳಲು ಸಾಧ್ಯವಿಲ್ಲದಿರುವುದರಿಂದ ಅಲ್ಲಿ ನಿಗೂಢತೆ ತಲೆದೋರುತ್ತದೆ ಅದೇ ರೀತಿ ವಿಜಯಿಯಾದ ಬಳಿಕ ಹಣ ಕಟ್ಟಬೇಕಾದ ಅಗತ್ಯವಿಲ್ಲವೆಂಬ ವ್ಯವಸ್ಥೆ ಇದ್ದರೂ ಬೆಲೆಯಲ್ಲಿ ನಿಗೂಢತೆ ಉಂಟಾಗುತ್ತದೆ. ಆದ್ದರಿಂದ ಈ ರೀತಿಯ ಸ್ಕೀಮ್ ಗಳು ಸಮತರ್ಹವಲ್ಲವೆಂದು ತಿಳಿದುಕೊಳ್ಳಬಹುದು.ಎಲ್ಲರೂ ನಿಗದಿತ ಹಣವನ್ನು ಕಟ್ಟಬೇಕೆಂದು ಅವರೆಲ್ಲರಿಗೂ ಅಷ್ಟು ಮೌಲ್ಯದ ನಿಗದಿತ ವಸ್ತುವನ್ನು ನೀಡಲಾಗುವುದೆಂದು (ಆ ವಸ್ತುವನ್ನು ಸ್ಪಷ್ಟವಾಗಿ ಮಾಡಲು ನಿಶ್ಚಯ ಗೊಳಿಸಬೇಕು) ವ್ಯವಸ್ಥೆಗೊಳಿಸಿ ಅದನ್ನು ನೀಡಿದ ಬಳಿಕ ಪ್ರಾಯೋಜಕರು ತಮಗೆ ದೊರೆತ ಲಾಭದಿಂದ ಯಾವುದಾದರೂ ಕೆಲವು ವಸ್ತುಗಳನ್ನು ಚೀಟಿ ಹಾಕಿ ಸದಸ್ಯರಲ್ಲಿ ಯಾರಿಗಾದರೂ ಬಹುಮಾನವಾಗಿ ನೀಡುವುದಾದರೆ ತೊಂದರೆ ಇಲ್ಲ. ಆದರೆ ಇದು ವ್ಯಾಪಾರದ ಭಾಗವಾಗಿರಬಾರದು.ಕೇವಲ ಅವರ ವತಿಯಿಂದ ಸೌಜನ್ಯವಾಗಿ ನೀಡುವಂತದ್ದು ಆಗಿರಬೇಕು.ಇದಲ್ಲದೆ ಮೇಲೆ ತಿಳಿಸಲಾದ ರೀತಿಯಲ್ಲಿ ಸ್ಕೀಮ್ ನಡೆಸುವುದು ಅನಿಸ್ಲಾಮಿಕವೆಂದು ತಿಳಿದುಕೊಳ್ಳಬೇಕಾಗಿದೆ.the end
Subscribe to:
Comments (Atom)