Friday, June 8, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 4⃣5⃣
          ಕೊನೆಯ ಭಾಗ
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

ಕುರ್ಆನಿನ ಸೂಕ್ತವೊಂದನ್ನು ಕರ್ಣಾನಂದಕರವಾಗಿ ಪಠಿಸುತ್ತಾ ಸಯ್ಯದುನಾ ಝೈನುಲ್ ಆಬಿದೀನ್ (ರ)ರವರು ಆತ್ಮಸ್ಥೈರ್ಯದಿಂದ ಯಝೀದ್'ನೊಂದಿಗೆ ಹೇಳಿದರು.. ⬇

ಸೃಷ್ಟಿಕರ್ತನಾದ ಅಲ್ಲಾಹನ ವಿಧಿಲಿಖಿತ ಏನಿತ್ತೇೂ ಅದು ಸಂಭವಿಸಿದೆಯೇ ವಿನಃ ಅವನ ಕಲ್ಪನೆಗಿಂತ ಆಚೆಯದೇನೂ ಸಂಭವಿಸಿಲ್ಲ. ನಷ್ಟ ಸಂಭವಿಸಿದಾಗ ದುಃಖಿಸದೆ, ಸಂಪತ್ತು ಮತ್ತು ಸವಲತ್ತುಗಳು ಲಭಿಸಿದಾಗ ಸಂತೇೂಷಪಡದೆ ಅಲ್ಲಾಹನ ವಿಧಿಯನ್ನು ಸಹನೆ ಮತ್ತು ಸಂಯಮದಿಂದ ಸಹಿಸಬೇಕೆನ್ನುವುದು ಇಸ್ಲಾಮಿನ ನಿಯಮ. ಆದರೆ ದುರಹಂಕಾರಿಗಳನ್ನೆಂದೂ ಅಲ್ಲಾಹನು ಇಷ್ಟಪಡಲಾರನೆಂಬುದು ಅಧಿಕಾರದ ಅಮಲಿನಲ್ಲಿ ತೇಲುತ್ತಿರುವ ನಿನಗೂ ನೆನಪಿರಲಿ ಎಂದು ತಮ್ಮ ಕಂಚಿನ ಕಂಠದಿಂದ ಗುಡುಗಿದಾಗ ಇಡೀ ಕುಟುಂಬವನ್ನೇ ಕಳೆದು ಕೊಂಡರೂ ಸ್ವಲ್ಪವೂ ವಿಚಲಿತರಾಗದ *ಸಯ್ಯದುನಾ ಅಲಿ ಝೈನುಲ್ ಆಬಿದೀನ್ (ರ)* ರವರ ಆತ್ಮಸ್ಥೈರ್ಯವನ್ನು ಕಂಡು ಸ್ವತಃ ಯಝೀದನೇ ಬೆಚ್ಚಿಬಿದ್ದನೆನ್ನುತ್ತದೆ ಚರಿತ್ರೆ.

*ನಂತರ ಯಝೀದನು ತನ್ನ ಸೈನಿಕರ ಬೆಂಗಾವಲಿನಲ್ಲಿ ಸಯ್ಯದುನಾ ಝೈನುಲ್ ಆಬಿದೀನ್ (ರ) ಮತ್ತು ಯುದ್ಧದಲ್ಲಿ ಬದುಕುಳಿದವರನ್ನು ಸಕಲ ಗೌರವಗಳೊಂದಿಗೆ ಮದೀನಕ್ಕೆ ಕಳುಹಿಸಿಕೊಟ್ಟನು.*

ಕೂಫ ನಿವಾಸಿಗಳು ತಮ್ಮ ನೆರವಿಗೆಂದು ಆಹ್ವಾನಿಸಿ ಯಝೀದ್'ನ ಕಿಂಕರ ಉಬೈದ್'ನ ಭಯದಿಂದ ಕೈಬಿಟ್ಟರೂ ಮದೀನಾ ನಿವಾಸಿಗಳು ಮಾತ್ರ ಅಹ್ಲ್'ಬೈತಿನ ಕಣ್ಮಣಿಯನ್ನು ಆಧರದಿಂದ ಬರ ಮಾಡಿಕೊಂಡು ಮಾಣಿಕ್ಯ ಮುತ್ತಿನಂತೆ ಜತನದಿಂದ ಸಂರಕ್ಷಿಸಿ ಸತ್ಕರಿಸುತ್ತಾ ಹಝ್ರತ್ ಹುಸೈನ್ (ರ)ರನ್ನು ಕಳೆದುಕೊಂಡ ದುಃಖವನ್ನು ಝೈನುಲ್ ಆಬಿದೀನ್ (ರ)ರವರ ಸೇವೆಯಲ್ಲಿ ಮರೆತರು.

ಮದೀನ ಎಂದರೆ ಹಾಗೆ.. ಅಥಿತಿ ಸತ್ಕಾರದಲ್ಲಿ ಮದೀನಾ ನಿವಾಸಿಗಳು ಎಂದೆಂದಿಗೂ ಎತ್ತಿದ ಕೈ.

*ಅಂದು ಅಲ್ಲಾಹನ ಪ್ರಪ್ರಥಮ ಸೃಷ್ಟಿಯೂ ಸೃಷ್ಟಿಗಳಲ್ಲೇ ಅತ್ಯುತ್ತಮರೂ ಆದ ಸಯ್ಯದುನಾ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರನ್ನು ಹುಟ್ಟಿ ಬೆಳೆದ ನಾಡಾದ ಮಕ್ಕದ ನಿವಾಸಿಗಳೊಂದಿಗೆ ರಕ್ತ ಸಂಬಂಧಿಗಳೂ ಸಹ ಮಿತಿಮೀರಿದ ಕಿರುಕುಳ ನೀಡಿ ಮದೀನಕ್ಕೆ ವಲಸೆ ಹೇೂಗುವಂತೆ ಮಾಡಿದ್ದರೂ, ಮದೀನ ನಿವಾಸಿಗಳು "ತ್ವಾಲಾ ಅಲ್ ಬದ್'ರೂ ಅಲೈನಾ..." ಎಂದು ಹಾಡುತ್ತಾ ಅಲ್ಲಾಹನ ರಸೂಲ್ ﷺ ರನ್ನು ಸ್ವಾಗತಿಸಿ ತಮ್ಮ ಜೀವಕ್ಕಿಂತ ಮಿಗಿಲಾಗಿ ಪ್ರೀತಿಸಿ ಸಂಪೂರ್ಣ ಸಂರಕ್ಷಣೆ ನೀಡಿ ಸತ್ಕರಿಸಿದ ನಾಡು.*

_ಉಹ್ದ್ ಯುದ್ಧದಲ್ಲಿ ಶತ್ರುಗಳೆಡೆಯಿಂದ ಅಲ್ಲಾಹನ ರಸೂಲ್ ﷺ ರತ್ತ ತೂರಿ ಬರುತ್ತಿದ್ದ ಬಾಣಗಳಿಗೆ ತಮ್ಮ ಎದೆಯೊಡ್ಡಿ ಅಲ್ಲಾಹನ ಹಬೀಬ್ ﷺ ರಿಗೆ ತಮ್ಮ ಕೊನೆಯುಸಿರಿನ ತನಕವೂ ಸಂರಕ್ಷಣೆ ನೀಡುತ್ತಲೇ ಶಹೀದಾದ  *ಸಯ್ಯದುನಾ ಅಬೂ ತಲ್ಹತುಲ್ ಅನ್ಸಾರಿ (ರ)* ರಂತಹ ಶುಹದಾಗಳು ಹುಟ್ಟಿ ಬೆಳೆದ ಆ ನಾಡಿನ ಸಹೃದಯಿಗಳು ಅಲ್ಲಾಹನ ರಸೂಲ್ ﷺರ ಪೌತ್ರರನ್ನು ಕಣ್ಣರೆಪ್ಪೆಯಂತೆ ಸಂರಕ್ಷಿಸಿದರು._

*ಇಂದು ಜಗತ್ತಿನಾದ್ಯಂತವಿರುವ ಸಯ್ಯದ್ ಕುಟುಂಬದ ಪ್ರಮುಖ ಕೊಂಡಿಯಾಗಿದ್ದಾರೆ ಸಯ್ಯದುನಾ ಅಲಿ ಝೈನುಲ್ ಆಬಿದೀನ್ (ರ)ರವರು. ಅವರ ಮೂಲಕ ಅಹ್ಲ್'ಬೈತಿನ ವಂಶ ಪರಂಪರೆಯನ್ನು ಮುಂದುವರಿಸಲು ಅಲ್ಲಾಹನು ತೀರ್ಮಾನಿಸಿದ ಕಾರಣದಿಂದಾಗಿರಬಹುದು ಅಂದು 'ಕರ್ಬಲಾ ಯುದ್ಧ'ದ ಸಮಯದಲ್ಲಿ ಆ ಮಹಾನರು ಜ್ವರ ಬಾಧಿತರಾದುದು. ಅಲ್ಲಾಹು ಅಹ್'ಲಮ್.*

                *_ಮುಗಿಯಿತು_*
☔☔☔☔☔☔☔☔☔

ಪ್ರಿಯ ಓದುಗರೇ, ಅಹ್ಲ್'ಬೈತಿನ ಕಣ್ಮಣಿಗಳು ಇರಾಖಿನ ಕೂಫ ಎಂಬಲ್ಲಿ ಅನುಭವಿಸಿದ ವರ್ಣನಾತೀತವೂ ವೇದನಾಜನಕವೂ ಮತ್ತು ಇಸ್ಲಾಮಿನ ಇತಿಹಾಸದಲ್ಲೇ ಮರೆಯಲಸಾಧ್ಯವೂ ಕರುಣಾಜನಕವೂ ಆದ ಸಾವಿರ ಕಂತು ಬರೆದರೂ ಮುಗಿಯದ
ಕರ್ಬಲಾ ಎಂಬ ಯುದ್ಧ ಚರಿತ್ರೆಯನ್ನು *ಕಣ್ಣೀರ ಕಡಲಾದ ಕರ್ಬಲಾ* ಎಂಬ ಶೀರ್ಷಿಕೆಯಡಿ ಕೇವಲ ನಲವತ್ತೈದು ಕಂತುಗಳಲ್ಲಿ ಕರುಣಾನಿಧಿಯಾದ ಅಲ್ಲಾಹನ ದಯಾನುಗ್ರಹದಿಂದ
ಚುಟುಕಾಗಿ ಬರೆದು ನಿಮ್ಮ ಮುಂದೆ ಸಮರ್ಪಿಸಿದ್ದೇನೆ.
       
*ನಮ್ಮ ಕಣ್ಮುಂದಿನಿಂದ ಮರೆಯಾದರೂ ಅಗೇೂಚರವಾದ ಲೇೂಕದಲ್ಲಿ ಜೀವಿಸುತ್ತಾ ಸೃಷ್ಟಿಕರ್ತನಾದ ಅಲ್ಲಾಹನು ತಲುಪಿಸುವ ಆಹಾರಗಳನ್ನು ಸೇವಿಸುತ್ತಾ ಅಜರಾಮರರಾಗಿರುವ ಆ ಶುಹದಾಗಳ ಹೆಸರಿನಲ್ಲಿ ಮಾನ್ಯ ಓದುಗರೆಲ್ಲರೂ ಒಂದೊಂದು ಫಾತಿಹವನ್ನಾದರೂ ಓದಿ ಹದಿಯಾ 🤚 ಮಾಡುವುದರೊಂದಿಗೆ ಈ ಚರಿತ್ರೆಯನ್ನು ನಿಮ್ಮ ಮಡಿಲಿಗರ್ಪಿಸಲು ನೆರವಾದ ಸಹೃದಯಿಗಳೆಲ್ಲರಿಗೂ ಕರುಣಾನಿಧಿಯಾದ ಅಲ್ಲಾಹನಲ್ಲಿ ಪ್ರಾರ್ಥಿಸಬೇಕಾಗಿ ವಿನಂತಿ.*

ಚುಟುಕಾಗಿಯಾದರೂ ಅಲ್ಲಾಹನ ಪ್ರಪ್ರಥಮ ಸೃಷ್ಟಿಯ ಸರಿಸಾಟಿಯಿಲ್ಲದ ಕುಟುಂಬವಾದ ಅಹ್ಲ್'ಬೈತಿನ ಕಣ್ಮಣಿಗಳ ತ್ಯಾಗ ಮತ್ತು ಬಲಿದಾನಗಳನ್ನು ಓದಿ ತಿಳಿಯಲು ಅಲ್ಲಾಹನು ತೌಫೀಖ್ ನೀಡಿದಂತೆ ನಾಳೆ ಪರಲೇೂಕದಲ್ಲಿ ಆ ಶುಹದಾಗಳಿಗೆ ಸಲಾಮ್ ಹೇಳಿ ಕಣ್ತುಂಬಾ ಕಂಡು ಅವರೊಂದಿಗೆ ಸ್ವರ್ಗ ಪ್ರವೇಶಿಸುವ ಸೌಭಾಗ್ಯಶಾಲಿಗಳ ಸಾಲಿನಲ್ಲಿ ನಮ್ಮೆಲ್ಲರನ್ನೂ ಸೇರಿಸಿ ಅನುಗ್ರಹಿಸಲಿ ಆಮೀನ್.

ಅಲ್ಲಾಹನು ತೌಫೀಖ್ ನೀಡಿದರೆ "ಅಲಿ ಝೈನುಲ್ ಆಬಿದೀನ್ (ರ)" ರವರ ಚರಿತ್ರೆಯನ್ನು ಚುಟುಕಾಗಿ ಬರೆದು ಸದ್ಯದಲ್ಲೇ ನಿಮ್ಮ ಮುಂದಿಡುತ್ತೇನೆ.
ಇನ್ಷಾ ಅಲ್ಲಾಹ್...

ಅಸ್ಸಲಾಂ ಅಲೈಕುಂ..
ವ ರಹ್ಮತುಲ್ಲಾಹ್
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 4⃣4⃣
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

*ಮುಂದೇನಾದೀತು ಎನ್ನುವುದಕ್ಕಿಂತಲೂ ತಮ್ಮ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಒಡನಾಡಿ ಗುಟುಕು ನೀರೂ ಸಿಗದೆ ಒದ್ದಾಡುತ್ತಾ ಶತ್ರುಗಳ ಖಡ್ಗದ ದಾಳಿಗೀಡಾಗಿ ತುಂಡು ತುಂಡಾಗಿ ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಅನಾಥವಾಗಿ ಬಿದ್ದಿರುವುದನ್ನು ಕಣ್ಣಾರೆ ಕಂಡವರ ಸ್ಥಿತಿ ವರ್ಣನೆಗೆ ನಿಲುಕೀತೇ? ಅದಕ್ಕೂ ಮಿಗಿಲಾಗಿ..* ⬇

*ಅಬಲೆಯರೂ ಅಸಹಾಯಕಿಯರೂ ಆದ ಮಹಿಳೆಯರ ಸ್ಥಿತಿ ಹೇಗಿದ್ದಿರಬಹುದೆಂಬುದು ನಮ್ಮ ಊಹೆಗೂ ನಿಲುಕದ ಸಂಗತಿ.*

ನಂತರ ಬಂಧಿತರೊಂದಿಗೆ ಹುಸೈನ್ (ರ)ರವರ ಶಿರಸ್ಸನ್ನು ಕೂಫದ ದಾರುಲ್ ಇಮಾರ್'ಗೆ ಒಯ್ದು ಸಯ್ಯದುನಾ ಹುಸೈನ್ (ರ)ರವರ ಪವಿತ್ರ ಶಿರಸ್ಸನ್ನು ನೇೂಡುತ್ತಾ ಉಬೈದ್, ತನ್ನ ಕೈಯಲಿದ್ದ ಕೇೂಲೊಂದರಿಂದ  ಹುಸೈನ್ (ರ)ರವರ ಕೆನ್ನೆಗೆ ಚುಚ್ಚಿದನು.

ಆಗ ಅಲ್ಲಿದ್ದ ಸ್ವಹಾಬಿವರ್ಯರಾದ *ಝೈದ್ ಬಿನ್ ಅರ್'ಕಂ (ರ) ರವರು* ರೇೂಷದಿಂದ ಕುದಿಯುತ್ತಾ ಏ ಉಬೈದ್... ನೀನೇನು ಮಾಡುತ್ತಿರುವೆಯೆಂಬ ವಿವೇಕವಾದರೂ ನಿನಗಿದೆಯೇ? *ಅಲ್ಲಾಹನ ರಸೂಲ್ ﷺ ರವರು ತಮ್ಮ ಅಮೃತ ಹಸ್ತದಿಂದ ಸ್ಪರ್ಶಿಸಿ ಪ್ರೀತಿಯಿಂದ  ಚುಂಬಿಸಿದ ಕೆನ್ನೆಯದು. ಮತ್ತೊಮ್ಮೆ ಮುಟ್ಟಿದರೆ ಪರಿಸ್ಥಿತಿ ನೆಟ್ಟಗಿರದು ಎಂದಾಗ ಸೈನಿಕರು ಮತ್ತು ಗಣ್ಯರಿಂದ ತುಂಬಿದ್ದ ಆ ಸಭೆ ಮಾತ್ರವಲ್ಲ ಖುದ್ದು ಉಬೈದನೂ ಬೆಚ್ಚಿಬಿದ್ದ.*

ಕಾರಣ ಉಬೈದನ ಮಾತಿಗೆ ಎದುರಾಡುವಂತೆಯೇ ಇರಲಿಲ್ಲ. ಎದುರಾಡಿದರೆ ತಕ್ಷಣ ಮರು ಮಾತಿಲ್ಲದೆ ಉಬೈದ್ ತಲೆ ಹಾರಿಸುತ್ತಿದ್ದ.

ಇದರಿಂದ ಕೇೂಪಗೊಂಡ ಉಬೈದ್, *ಝೈದ್ ಬಿನ್ ಅರ್'ಕಂ (ರ) ರೊಂದಿಗೆ* ಹೇಳಿದ...

*"ನೀನೊಬ್ಬ ಮುದುಕನಲ್ಲದಿರುತ್ತಿದ್ದರೆ ಇಷ್ಟೊತ್ತಿಗೆ ನಿನ್ನ ತಲೆ ಹಾರಿಸಿರುತ್ತಿದ್ದೆ" ಎಂದ.*

ಇದರಿಂದ ಎಳ್ಳಷ್ಟೂ ವಿಚಲಿತರಾಗದ ಸಯ್ಯದುನಾ ಝೈದ್ ಬಿನ್ ಅರ್'ಕಂ (ರ) ಆ ವೇದಿಕೆಯಲ್ಲಿದ್ದ ಸಭಿಕರನ್ನುದ್ದೇಶಿಸಿ ಹೇಳಿದರು...

*ಅಲ್ಲಾಹನ ರಸೂಲ್ ﷺ ರವರ ಮಗಳಾದ ಫಾತಿಮಾ (ರ)ರವರ ಮಕ್ಕಳನ್ನು ನಾಶ ಮಾಡಿದ ಮರ್ಜಾನಳ (ಉಬೈದ್'ನ ತಾಯಿ) ಪುತ್ರನಿಗೆ ಅಧಿಕಾರ ಕೊಟ್ಟಿರುವ ನೀವೂ ಸರ್ವನಾಶವಾಗದಿರಲಾರಿರಿ ಎಂದು ಎಚ್ಚರಿಸುತ್ತಾ ಆ ವೇದಿಕೆಯಿಂದ ಹೊರ ನಡೆದರು.*

ನಂತರ ಸಯ್ಯದುನಾ ಹುಸೈನ್ (ರ)ರವರ ಪವಿತ್ರವಾದ ಶಿರಸ್ಸಿನೊಂದಿಗೆ ಬಂಧಿಸಲ್ಪಟ್ಟ ಮಹದಿಯರಾದ ಸಯ್ಯಿದತುನಾ ಬೀವಿ ಶಹ್ರುಬಾನು (ರ) ಝೈನಬಾ ಬೀವಿ (ರ) ಸೇರಿದಂತೆ ಮತ್ತಿತರರೊಂದಿಗೆ ಬದುಕುಳಿದ ಅಹ್ಲ್'ಬೈತಿನ ಏಕೈಕ ಕಣ್ಮಣಿಯಾದ ಸಯ್ಯದುನಾ ಝೈನುಲ್ ಆಬಿದೀನ್ (ರ) ತಂಙಳರನ್ನೂ ಡಮಾಸ್ಕಸ್'ಗೆ ಕರೆದೊಯ್ದು ವಿಶ್ವ ಮುಸ್ಲಿಮರು ನಿಷ್ಕಪಟ ಹೃದಯದಿಂದ ತಮ್ಮ ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುವ ಅಹ್ಲ್'ಬೈತನ್ನೇ ಸರ್ವನಾಶ ಮಾಡಲೆತ್ನಿಸಿದ ದುರಹಂಕಾರಿಯಾದ ಯಝೀದ್'ನ ಮುಂದೆ ಹಾಜರುಪಡಿಸಲಾಯಿತು.

*ಸಯ್ಯದುನಾ ಹುಸೈನ್ (ರ) ತಲೆ ಕಂಡು ಯಝೀದ್ ಬೆಚ್ಚಿಬಿದ್ದನಲ್ಲದೆ ಈ ಭಯಾನಕವಾದ ದುಷ್ಕೃತ್ಯಗಳ ಬಗ್ಗೆ ಬೇಸರ ವ್ಯಕ್ತಪಡಿಸಿದನು.*

ಕಾರಣ ಹುಸೈನ್ (ರ)ರನ್ನು ಕೊಲ್ಲಬೇಕೆನ್ನುವುದು ಆತನ ಉದ್ದೇಶವಾಗಿರದೆ ಅವರನ್ನು ಹಿಮ್ಮೆಟ್ಟಿಸಿ ಅಧಿಕಾರ ಉಳಿಸಿಕೊಳ್ಳುವುದಷ್ಟೇ ಅವನ ಉದ್ದೇಶವಾಗಿತ್ತು.

ಆಮೇಲೆ ಯಝೀದ್ ಇಬ್ನು ಮುಹವಿಯಾ ಸಯ್ಯದುನಾ ಝೈನುಲ್ ಆಬಿದೀನ್ (ರ) ತಂಙಳರೊಂದಿಗೆ....

*ನಿನ್ನ ತಂದೆಯವರು ತಮ್ಮ ಸಹಚರರೊಂದಿಗೆ ನನ್ನಿಂದ ಅಧಿಕಾರವನ್ನು ತಪ್ಪಿಸಲು ಪ್ರಯತ್ನಿಸದಿರುತ್ತಿದ್ದರೆ ನಿನಗಿಂದು ಈ ಗತಿ ಬರುತ್ತಿರಲಿಲ್ಲ ಎಂದ.*

ಆಗ ಅಹ್ಲ್'ಬೈತಿನ ವಂಶಾಭಿವೃದ್ಧಿಗಾಗಿ ಅಲ್ಲಾಹನ ತೀರ್ಮಾನಕ್ಕನುಗುಣವಾಗಿ ಅಳಿದುಳಿದ ಏಕೈಕ ಕಣ್ಮಣಿಯಾದ *ಸಯ್ಯದುನಾ ಝೈನುಲ್ ಆಬಿದೀನ್ (ರ) ರವರು* ಸ್ವಲ್ಪವೂ ವಿಚಲಿತರಾಗದೆ ಕರ್ಣಾನಂದಕರವಾಗಿ ಕುರ್ಆನಿನ ಸೂಕ್ತವೊಂದನ್ನು ಪಠಿಸುತ್ತಾ ಆತ್ಮಸ್ಥೈರ್ಯದಿಂದ ಹೇಳಿದರು.... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 4⃣3⃣
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

ಶತ್ರು ಸೈನಿಕರಿಂದ ಯುದ್ಧ ಖೈದಿಗಳಾಗಿ ಬಂಧಿಯಾದ ಇತರ ಮಹದಿಯರೊಂದಿಗಿದ್ದ ಸಯ್ಯಿದತುನಾ ಝೈನಬಾ (ರ) ಒಡೆದ ಹೃದಯದೊಂದಿಗೆ ಕಂಬನಿಯ ಕೇೂಡಿ ಹರಿಸುತ್ತಾ ಅಸಹಾಯಕತೆಯಿಂದ  ಚಡಪಡಿಸುತ್ತಾ ಸರ್ವ ಶಕ್ತಿಯನ್ನೂ ಒಗ್ಗೂಡಿಸಿ ಕೂಗಿದರು.... ⬇

 "وَصَاحَتْ زَيْنَبُ أُخْتُهُ: يَا مُحَمَّدَاهُ صَلَّى عَلَيْكَ مَلَائِكَةُ السَّمَاءِ! هَذَا الْحُسَيْنُ بِالْعَرَاءِ، مُرَمَّلٌ بِالدِّمَاءِ، مُقَطَّعُ الْأَعْضَاءِ، وَبَنَاتُكَ سَبَايَا، وَذُرِّيَّتُكَ مُقَتَّلَةٌ تَسْفِي عَلَيْهَا الصَّبَا! فَأَبْكَتْ كُلَّ عَدُوٍّ وَصَدِيقٍ."

الكتاب: الكامل في التاريخ
المؤلف: أبو الحسن علي بن أبي الكرم محمد بن محمد بن عبد الكريم بن عبد الواحد الشيباني الجزري، عز الدين ابن الأثير (المتوفى: ٦٣٠هـ)
___________

"فَلَمَّا مَرُّوا بِمَكَانِ الْمَعْرَكَةِ رَأَوُا الْحُسَيْنَ وَأَصْحَابَهُ مُجَدَّلِينَ، هُنَالِكَ بَكَتْهُ النِّسَاءُ، وَصَرَخْنَ وَنَدَبَتْ زَيْنَبُ أَخَاهَا الْحُسَيْنَ وَأَهْلَهَا، فَقَالَتْ وَهِيَ تَبْكِي: يَا مُحَمَّدَاهُ، يَا مُحَمَّدَاهُ، صَلَّى عَلَيْكَ مَلَائِكَةُ السَّمَاءِ، هَذَا حُسَيْنٌ بِالْعَرَاءِ، مُزَمَّلٌ بِالدِّمَاءِ، مُقَطَّعُ الْأَعْضَاءِ، يَا مُحَمَّدَاهُ، وَبَنَاتُكَ سَبَايَا، وَذُرِّيَّتُكَ مُقَتَّلَةٌ تَسْفِي عَلَيْهَا الصَّبَا. قَالَ: فَأَبْكَتْ وَاللَّهِ كُلَّ عَدُوٍّ وَصَدِيقٍ."

الكتاب: البداية والنهاية
المؤلف: أبو الفداء إسماعيل بن عمر بن كثير القرشي البصري ثم الدمشقي (المتوفى: ٧٧٤هـ)

*ಓ... ಮುಹಮ್ಮದ್ ನಬಿಯವರೇ.. ﷺ, ಆಕಾಶದ ಮಲಾಇಕ್'ಗಳ ಸ್ವಲಾತ್ ತಮ್ಮ ಮೇಲೆ ಸದಾ ವರ್ಷಿಸುತ್ತಿರಲಿ....*
*ಯುದ್ಧರಂಗದಲ್ಲಿ ತಮ್ಮ ಪೌತ್ರರಾದ ಹುಸೈನ್ (ರ)ರವರ ಅಂಗಾಂಗಳು ತುಂಡು ತುಂಡಾಗಿ ಕತ್ತರಿಸಲ್ಪಟ್ಟು ರಕ್ತ ಮತ್ತು ಮಾಂಸದ ಮುದ್ದೆಯಂತೆ ಬಿದ್ದು ಮಲಗಿದ್ದಾರೆ.*

*ಓ.. ಮುಹಮ್ಮದ್ ನಬಿಯವರೇ ﷺ ತಮ್ಮ ಹೆಣ್ಣು ಮಕ್ಕಳನ್ನು (ಮೊಮ್ಮೊಕ್ಕಳನ್ನು) ಯುದ್ಧ ಖೈದಿಗಳನ್ನಾಗಿಸಿ ಜೀತದಾಳುಗಳನ್ನಾಗಿಸಲು ಅಥವಾ ಜೈಲಿನಲ್ಲಿ ಬಂಧಿಸಲು ಎಳೆದೊಯ್ಯುತ್ತಿದ್ದಾರೆ ನೆಬಿಯೇ ﷺ*
*ತಮ್ಮ ಮೊಮ್ಮೊಕ್ಕಳನ್ನು ಕೊಚ್ಚಿ ಕೊಚ್ಚಿ ಹಾಕಲಾಗಿದೆ ನೆಬಿಯೇ ﷺ*

ಕಂಬನಿಯ ಕೇೂಡಿ ಹರಿಸುತ್ತಾ ಆ ಮಹದಿಯ ಅಂತರಾಳದಿಂದ ಹೊರಟ ಈ ಮಾತುಗಳನ್ನು ಕೇಳಿದಾಗ ಮಿತ್ರರಲ್ಲಷ್ಟೇ ಅಲ್ಲ ಶತ್ರುಗಳ ಕಂಗಳಲ್ಲೂ ಕಣ್ಣೀರ ಕೇೂಡಿ ಹರಿಯಿತೆಂದು ಇತಿಹಾಸ ವರ್ಣಿಸುತ್ತದೆ.

*(ಇದನ್ನು ಇಮಾಂ ತ್ವಬ್ರಿ (ರ)ರವರ ತಾರೀಖಿನಲ್ಲೂ, ಇಮಾಂ ಮಾರಾಕಿಷಿ (ರ)ರವರ ಮಿಸ್ಬಾಹುಳ್ವಲಾಮಿನಲ್ಲೂ, ಇಬ್ನು ಅಸಿರ್ (ರ)ರವರ ತಾರಿಖಿನಲ್ಲೂ, ಹಾಫಿಳ್ ಇಬ್ನು ಕಸಿರ್ (ರ) ರವರ ಅಲ್ ಬಿದಾಯತು ವನ್ನಿಹಾಯದಲ್ಲೂ ಕಾಣಬಹುದು)*

_ಕರ್ಬಲದಲ್ಲಿ ಅಂದು ಸಾವಿರಾರು ಶತ್ರು ಸೈನಿಕರ ದಾಳಿಗೀಡಾದ ಸಯ್ಯದುನಾ ಹುಸೈನ್ (ರ) ರವರ ಮತ್ತು ಅವರ ಸಂಗಡಿಗರಾದ ಧೀರ ಶುಹದಾಗಳ ಆ ತ್ಯಾಗ ಮತ್ತು ಬಲಿದಾನಗಳ ಅಗಾಧತೆಯನ್ನು ಊಹಿಸಲೂ ನಮ್ಮಂಥವರಿಂದ ಸಾಧ್ಯವಿಲ್ಲ._

ಕರ್ಬಲಾ ಯುದ್ಧ ನಡೆದು ಸಾವಿರದ ಮುನ್ನೂರ ಎಂಬತ್ತೈದು ವರ್ಷ ಕಳೆದರೂ ಆ ಚರಿತ್ರೆಯನ್ನು ನೆನೆವಾಗ ಪ್ರತಿಯೊಬ್ಬ ವಿಶ್ವಾಸಿಯ ಹೃದಯವೂ ಕಂಬನಿ ಮಿಡಿಯದಿರದು.

*ಮುಂದೇನಾದೀತು ಎನ್ನುವುದಕ್ಕಿಂತಲೂ ತಮ್ಮ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಒಡನಾಡಿ ಗುಟುಕು ನೀರೂ ಸಿಗದೆ ಒದ್ದಾಡುತ್ತಾ ಶತ್ರುಗಳ ಖಡ್ಗದ ದಾಳಿಗೀಡಾಗಿ ತುಂಡು ತುಂಡಾಗಿ ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಅನಾಥವಾಗಿ ಬಿದ್ದಿರುವುದನ್ನು ಕಣ್ಣಾರೆ ಕಂಡವರ ಸ್ಥಿತಿ ವರ್ಣನೆಗೆ ನಿಲುಕೀತೇ? ಅದಕ್ಕೂ ಮಿಗಿಲಾಗಿ..* ⤵

ಮುಂದುವರಿಯುವುದು
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 4⃣2⃣
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

*ಕರ್ಬಲಾ ಯುದ್ಧದಲ್ಲಿ ಅಳಿದುಳಿದಿದ್ದ ಸಯ್ಯದುನಾ ಹುಸೈನ್ (ರ)ರವರ ಮಕ್ಕಳು ಮತ್ತಿತರರು ಆ ಶಿರಸ್ಸನ್ನು ಮದೀನಕ್ಕೆ ಒಯ್ದು ಜನ್ನತುಲ್ ಬಖೀಆದಲ್ಲಿ ದಫನಾ ಮಾಡಿದ್ದಾರೆಂದು ಕೆಲ ಚರಿತ್ರಾಕಾರರು ಉಲ್ಲೇಖಿಸಿದ್ದಾರೆ.* ⬇

ಸಯ್ಯದುನಾ ಹುಸೈನ್ (ರ)ರವರನ್ನು ವಧಿಸಿದ ನಂತರ ಶತ್ರುಪಡೆಯು ಡೇರೆ (ಟೆಂಟ್)ಯತ್ತ ಧಾವಿಸಿ ಡೇರೆಯನ್ನು ಸುತ್ತುವರಿದು ಡೆರೆಯೊಳಗೆ ನುಗ್ಗಲೆತ್ನಿಸಿದಾಗ ಸಯ್ಯದುನಾ ಝೈನುಲ್ ಆಬಿದೀನ್ (ರ) ತಂಙಳರು (ಮಕ್ಕದಿಂದ ಹೊರಡುವಾಗಲೇ ಜ್ವರ ಬಾಧಿತರಾಗಿದ್ದ ಹುಸೈನ್ (ರ)ರವರ ಹಿರಿಯ ಪುತ್ರ) ಖಡ್ಗದೊಂದಿಗೆ ಬಂದು ಡೇರೆಯ ಬಾಗಿಲಿನಲ್ಲಿ ನಿಂತರು.

ಆಗ ಶತ್ರು ಸೈನಿಕನೊಬ್ಬ ಸಯ್ಯದುನಾ ಝೈನುಲ್ ಆಬಿದೀನ್ (ರ)ರನ್ನು ಕೊಲ್ಲಲು ಮುಂದೆ ಬಂದಾಗ ಅಹ್ಲ್'ಬೈತನ್ನು ಪ್ರೀತಿಸುವ ಮತ್ತೊಬ್ಬ ಸೈನಿಕ ಅವನತ್ತ ಧಾವಿಸಿ ಬಂದು...

*ಏಯ್... ಜ್ವರದಿಂದ ಬಳಲುತ್ತಾ ಅಶಕ್ತರಾಗಿರುವ ಅಹ್ಲ್'ಬೈತಿನ ಕುಡಿಯದು. ಅವರನ್ನು ಮುಟ್ಟಿದರೆ ಪರಿಸ್ಥಿತಿ ನೆಟ್ಟಗಿರದು ಎಂದು ಘರ್ಜಿಸಿದಾಗ ವಿಚಲಿತನಾದ ಆತ ಹಿಂದೆ ಸರಿದನು.*

ಅನಾರೇೂಗ್ಯ ಒಂದೆಡೆಯಾದರೆ ಆಹಾರ ಮತ್ತು ನೀರಿಲ್ಲದೆ ನಿತ್ರಾಣರಾಗಿದ್ದ ಝೈನುಲ್ ಆಬಿದೀನ್ (ರ) ತಂಙಳರನ್ನು ಶತ್ರು ಪಡೆ ನಂತರ ಬಂಧಿಸಿತು. ಆಮೇಲೆ ಡೇರೆಯ ಒಳಗೆ ಅಸಹಾಯಕತೆಯಿಂದ ಬೆದರಿ ಅಡಗಿದ್ದ ಮಹದಿಯರಾದ *ಸಯ್ಯಿದತುನಾ ಬೀವಿ ಶಹ್ರು ಬಾನು (ರ), ಝೈನಬಾ ಬೀವಿ (ರ)* ಮತ್ತಿತರರನ್ನೆಲ್ಲ ಬಂಧಿಸಿದರು.

ಹಾಗೆ ಡೇರೆಯಲ್ಲಿ ಅಸಹಾಯಕರಾಗಿದ್ದವರನ್ನೆಲ್ಲಾ ಯುದ್ಧ ಖೈದಿಗಳನ್ನಾಗಿಸಿ ಕರೆದೊಯ್ಯುತ್ತಿರುವಾಗ ಯುದ್ಧರಂಗದಲ್ಲಿ ಶತ್ರುಗಳ ದಾಳಿಯಿಂದ ಛಿದ್ರವಾದ ಸಯ್ಯದುನಾ ಹುಸೈನ್ (ರ) ಮತ್ತಿತರರ ಜನಾಝಗಳನ್ನು ಕಂಡಾಗ ಹುಸೈನ್ (ರ)ರವರನ್ನೇ ಆಶ್ರಯಿಸಿದ್ದ ಅಬಲೆಯರಾದ ಪತ್ನಿ, ಸಹೇೂದರಿ ಮತ್ತು ಹೆಣ್ಣು ಮಕ್ಕಳ ಜಂಘಾಬಲವೇ ಹುದುಗಿ ಹೇೂದಂತಾಗಿ ರೇೂದಿಸಲಾರಂಭಿಸಿದರು.

ಕಲ್ಲಿನ ಹೃದಯವೂ ಕರಗಬಹುದಾದ ಆ ಸನ್ನಿವೇಶವನ್ನು ಕಂಡಾಗ ಎಲ್ಲರೂ ಕಂಬನಿಗರೆಯುತ್ತಾ ಅಸಹಾಯಕತೆಯಿಂದಿರುವಾಗ ಯಾರಿಗೆ ಯಾರು ತಾನೆ ಸಾಂತ್ವಾನ ಹೇಳಿಯಾರು?

ಮುತ್ತು ನಬಿ ಸಯ್ಯದುನಾ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಮೊಮ್ಮೊಗಳಾದ ಸಯ್ಯಿದತುನಾ ಝೈನಬಾ ಬೀವಿ (ರ) ರವರು, ಅಲ್ಲಾಹನ ರಸೂಲರೂ ತಮ್ಮ ಪಿತಾಮಹರೂ ಆದ *ನಬಿ ಸಯ್ಯದುನಾ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರೊಂದಿಗೆ ನಡೆಸಿದ 'ಇಸ್ತಿಗಾಸವು'* ಇಂದಿನ ಕಾಲಘಟ್ಟದಲ್ಲಿ ದಿನಕ್ಕೊಂದು ನಿಯಮ ರೂಪಿಸುತ್ತಾ ಹೊಸ ಹೊಸ ನಾಟಕದೊಂದಿಗೆ ಇಸ್ಲಾಮಿನ ಆಶಯಾದರ್ಶಗಳನ್ನು ಮನ ಬಂದಂತೆ ವ್ಯಾಖ್ಯಾನಿಸುತ್ತಾ ಸಮುದಾಯದ ನಡುವೆ ಭಿನ್ನತೆ ಮೂಡಿಸಿ ಸುನ್ನತ್ ಜಮಾಅತಿನ ಆಶಯಗಳಲ್ಲೊಂದಾದ ಇಸ್ತಿಗಾಸವನ್ನೇ ಅಲ್ಲಗಳೆದು ಜನರನ್ನು ಮರುಳು ಮಾಡಿ ಸತ್ಯಪಥದಿಂದ ಜನತೆಯನ್ನು 
ದಾರಿ ತಪ್ಪಿಸಲೆತ್ನಿಸುವ ನೂತನವಾದಿಗಳೆಂಬ ಸೇೂಗಲಾಡಿಗಳ ದುರ್ವ್ಯಾಖ್ಯಾನಗಳಿಗೆ ದಿಟ್ಟ ಉತ್ತರ ನೀಡುತ್ತದೆ.

*ಮಾತ್ರವಲ್ಲ ಪಾಂಡಿತ್ಯ ಸಾಗರಗಳಂತ ಘಟಾನುಘಟಿ ಇಮಾಮರುಗಳು ಉಲ್ಲೇಖಿಸಿರುವ ಆ ಇಸ್ತಿಗಾಸವು ಸುನ್ನತ್ ಜಮಾಅತ್'ವೊಂದೇ ಸತ್ಯದ ಹಾದಿ ತೇೂರುವ ದಾರಿ ದೀಪವೆನ್ನುವುದಕ್ಕೆ ಪುಷ್ಟಿ ನೀಡುತ್ತದೆ.*

ರಣರಂಗದಲ್ಲಿ ರಕ್ತದೇೂಕುಳಿಯ ನಡುವೆ ಮಾಂಸದ ಮುದ್ದೆಯಂತೆ ಹೊಟ್ಟೆಯೊಳಗಿನ ಅವಯವಗಳೆಲ್ಲ ಹೊರಬಿದ್ದ ಸ್ಥಿತಿಯಲ್ಲಿದ್ದ ಹಝ್ರತ್ ಹುಸೈನ್ (ರ)ರವರ ದೇಹವನ್ನು ಕಂಡಾಗ... 😰😰

*ಶತ್ರು ಸೈನಿಕರಿಂದ ಯುದ್ಧ ಖೈದಿಗಳಾಗಿ ಬಂಧಿಯಾದ ಇತರ ಮಹದಿಯರೊಂದಿಗಿದ್ದ ಸಯ್ಯಿದತುನಾ ಝೈನಬಾ (ರ) ಒಡೆದ ಹೃದಯದೊಂದಿಗೆ ಕಂಬನಿಯ ಕೇೂಡಿ ಹರಿಸುತ್ತಾ ಅಸಹಾಯಕತೆಯಿಂದ  ಚಡಪಡಿಸುತ್ತಾ ಸರ್ವ ಶಕ್ತಿಯನ್ನೂ ಒಗ್ಗೂಡಿಸಿ ಕೂಗಿದರು....*

ಮುಂದುವರಿಯುವುದು
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 4⃣1⃣
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

ಮಹದಿಯ ಕಂಬನಿ ಕಾಣಲಾಗದೆ ಆ ಮೂಕ ಪ್ರಾಣಿಯು ಇಲ್ಲ ಎಂಬಂತೆ ತಲೆ ಅಲ್ಲಾಡಿಸುತ್ತಾ ತನ್ನೆರಡು ಕಿವಿಗಳನ್ನೂ ಕೊಡವುತ್ತಾ ಯೂಪ್ರಟಿಸ್ ನದಿಯತ್ತ ಧಾವಿಸಿ ನದಿಗೆ ಹಾರಿ ಪ್ರಾಣ ಬಿಟ್ಟಿತು..! ⬇

ಸಯ್ಯದುನಾ ಹುಸೈನ್ (ರ) ಕರ್ಬಲಾ ರಣರಂಗದಲ್ಲಿ ಶಹೀದಾದಾಗ ಹತ್ತು ಪವಾಡಗಳು ಸಂಭವಿಸಿದೆಯೆಂದು *"ಹಕೀಮುಲ್ ಉಮ್ಮ ಹಝ್ರತ್ ತಾನವಿ (ರ)"* ರವರು ತಮ್ಮ ಕರಾಮತ್ ಅಲ್ ಸ್ವಹಾಬಾ ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.

*1) ಅಂದಿನ ಸೂರ್ಯ ಕಿರಣಗಳು ರಕ್ತದಲ್ಲಿ ಅದ್ದಿದಂತೆ ಕೆಂಪು ವರ್ಣಕ್ಕೆ ತಿರುಗಿತ್ತು.*

*2) ಆ ರಾತ್ರಿ ನಕ್ಷತ್ರಗಳು ನಿಯಂತ್ರಣ ಕಳೆದುಕೊಂಡಂತೆ ಪರಸ್ಪರ ಡಿಕ್ಕಿ ಹೊಡೆಯುತ್ತಿದ್ದವು.*

*3) ಅಂದಿನ ಸೂರ್ಯಾಸ್ತಮಯ ಬಹಳ ದೀರ್ಘವಾಗಿತ್ತು.*

*4) ಸಯ್ಯದುನಾ ಹುಸೈನ್ (ರ) ಶಹೀದಾದ ದಿನದಿಂದ ಏಳು ತಿಂಗಳ ತನಕ ಪೂರ್ವ ದಿಕ್ಕಿನಲ್ಲಿ ಕೆಂಪು ವರ್ಣಗಳಿತ್ತು ನಂತರ ಅದು ಮಾಯವಾಯಿತು. ಇಂತಹ ವೈಚಿತ್ರ್ಯ ಅನಂತರ ಘಟಿಸಿದ ಉದಾಹರಣೆಗಳಿಲ್ಲ.*

*5) ಮಹಾನರು ಶಹೀದಾದ ನಂತರ ಐದು ದಿನಗಳ ಕಾಲ ಜೆರೂಸಲೇಮಿನ  ಪ್ರತಿ ಕಲ್ಲುಗಳ ಕೆಳಗೂ ರಕ್ತ ಗೇೂಚರಿಸುತ್ತಿತ್ತು.*

*6) ಯಝೀದ್'ನ ಸೈನ್ಯ ಒಂಟೆ ಮತ್ತು ಕುದುರೆಗಳಿಗೆ ಆಹಾರವಾಗಿ ಬಳಸುತ್ತಿದ್ದ ಹುಲ್ಲು ಬೆಂಕಿಗಾಹುತಿಯಾಯಿತು.*

*7) ಶತ್ರು ಸೈನಿಕರು ಆ ದಿನ ಆಹಾರಕ್ಕಾಗಿ ಒಂದು ಹೆಣ್ಣು ಒಂಟೆಯನ್ನು ದ್ಸಬಹ್ ಮಾಡಿದ್ದರು. ಒಲೆಯಿಂದ ಕೆಳಗಿಳಿಸಿದ್ದರೂ ಆ ಮಾಂಸ ದಿನವಿಡೀ ಕುದಿಯುತ್ತಲೇ ಇತ್ತು.*

*8) ನಂತರ ಆ ಮಾಂಸವು ವಿಷವಾಗಿ ಪರಿಣಮಿಸಿ ತಿನ್ನಲಾರದಂತಾಗಿತ್ತು.*

*9) ಸಯ್ಯದುನಾ ಹುಸೈನ್ (ರ)ರವರ ಕುರಿತು ಲಘುವಾಗಿ ಮಾತನಾಡಿದ ವ್ಯಕ್ತಿಯೊಬ್ಬನ ತಲೆಗೆ ಸಿಡಿಲು ಬಡಿದು ಅವನ ದೃಷ್ಟಿ ನಷ್ಟ ಹೊಂದಿತ್ತು.*

*10) ಹುಸೈನ್ (ರ)ರವರ ವಫಾತಾದ ದಿನ ಜಿನ್ನ್'ಗಳ ಅಳು ಕೇಳಿಸುತ್ತಿತ್ತು.*

*"ಇಮಾಮ್ ಬರೂಸವೀ" (ರ)* ಹೇಳುವ ಪ್ರಕಾರ ಹುಸೈನ್ (ರ)ರವರನ್ನು ಕೊಂದವರೆಲ್ಲರಿಗೂ ಮರಣ ಪೂರ್ವ ಒಂದಲ್ಲ ಒಂದು ರೀತಿಯ ಆಪತ್ತುಗಳು ಸಂಭವಿಸಿದೆ. ಹುಸೈನ್ (ರ)ರವರ ಮೇಲೆ ದಾಳಿ ಮಾಡಿದ ಬಹುತೇಕರು ಮರಣ ಹೊಂದಿದ್ದು ಕೊನೆಗೆ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದರು. ಬದುಕುಳಿದಿದ್ದ ಆ ವ್ಯಕ್ತಿ ಒಮ್ಮೆ ಹೀಗೆಂದರು...

*"ಹುಸೈನ್ (ರ)ರವನ್ನು ಕೊಲ್ಲಲು ನಾನೂ ಸಹ ಸಹಾಯ ಮಾಡಿದ್ದೇನೆ. ಆದರೆ ನನಗೆ ಮಾತ್ರ ಏನೂ ಸಂಭವಿಸಲಿಲ್ಲ"*

*ಹೀಗೆಂದ ನಂತರ ಆ ಮನುಷ್ಯ ದೀಪ ಹಚ್ಚುವಾಗ ಅವರ ಮೈಮೇಲೆ ಬೆಂಕಿ ತಗುಲಿ ಹೊತ್ತಿಕೊಂಡಿತು. ಆಗ ಆ ವ್ಯಕ್ತಿ ಬೆಂಕಿ ಬೆಂಕಿ ಎಂದು ಚೀರುತ್ತಾ ನದಿಗೆ ಹಾರಿ ಮರಣ ಹೊಂದಿದರು. ಹೀಗೆ ಸಯ್ಯದುನಾ ಹುಸೈನ್ (ರ)ರವರನ್ನು ಕೊಂದವರು ಮತ್ತು ಕೊಲ್ಲಲು ನೆರವಾದವರೆಲ್ಲರೂ ದುರಂತ ಅಂತ್ಯ ಕಂಡರು.*
 (ರೂಹುಲ್ ಬಯಾನ್ 4/89)

ಸಯ್ಯದುನಾ ಹುಸೈನ್ (ರ) ರವರ ಪವಿತ್ರವಾದ ಆ ಶಿರಸ್ಸನ್ನು ದಫನ ಮಾಡಿರುವ ಬಗ್ಗೆ ಚರಿತ್ರೆಯಲ್ಲಿ ವ್ಯತ್ಯಸ್ತ ಅಭಿಪ್ರಾಯಗಳಿವೆಯಾದರೂ
ಪ್ರಮುಖವಾದ ಅಭಿಪ್ರಾಯವೊಂದರ ಪ್ರಕಾರ..

*ಸಯ್ಯದುನಾ ಹುಸೈನ್ (ರ)ರವರ ಪವಿತ್ರ ಶಿರಸ್ಸನ್ನು ಮೂರು ದಿನಗಳ ಕಾಲ ಡಮಾಸ್ಕಸ್'ನಲ್ಲಿರಿಸಲಾಗಿತ್ತು. ಆ ಮೂರು ದಿನಗಳ ನಂತರ ಯಝೀದ್ ಮತ್ತು ಆತನ ಕಿಂಕರರ ಗಮನಕ್ಕೆ ಬಾರದಂತೆ ಅಹ್ಲ್'ಬೈತನ್ನು ಪ್ರೀತಿಸುವ ಕೆಲವರು ಡಮಾಸ್ಕಸ್'ನಲ್ಲೇ ದಫನ ಮಾಡಿದ್ದರು.*

*ನಂತರ ಯಝೀದ್'ನ ಕಿಂಕರರು ಆ ಶಿರಸ್ಸನ್ನು ಹುಡುಕಿ ತೆಗೆದು ಮತ್ತೆ ಕೆಲ ದಿನಗಳ ಕಾಲ ಡಮಾಸ್ಕಸ್'ನಲ್ಲಿಟ್ಟಿದ್ದರು. ಕೊನೆಗೆ ಕರ್ಬಲಾ ಯುದ್ಧದಲ್ಲಿ ಅಳಿದುಳಿದಿದ್ದ ಸಯ್ಯದುನಾ ಹುಸೈನ್ (ರ)ರವರ ಮಕ್ಕಳು ಮತ್ತಿತರರು ಆ ಶಿರಸ್ಸನ್ನು ಮದೀನಕ್ಕೆ ಒಯ್ದು ಜನ್ನತುಲ್ ಬಖೀಆದಲ್ಲಿ ದಫನಾ ಮಾಡಿದ್ದಾರೆಂದು ಕೆಲ ಚರಿತ್ರಾಕಾರರು ಉಲ್ಲೇಖಿಸಿದ್ದಾರೆ.*

ಮುಂದುವರಿಯುವುದು
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 4⃣0⃣
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

ಒಂದು ಬಾಣವು ಅಲ್ಲಾಹನ ರಸೂಲ್ ﷺರ ಹೃದಯ ಕುಸುಮವಾದ ಸಯ್ಯದುನಾ ಹುಸೈನ್ (ರ)ರವರ ಹಣೆಯನ್ನು ಕೊರೆದು ತಲೆಯೊಳಗೆ ಹೊಕ್ಕಿತು ಆಗ... ⬇

ಸರ್ವಶಕ್ತಿಯನ್ನೂ ಕ್ರೂಡೀಕರಿಸಿ ಹಣೆಗೆ ಹೊಕ್ಕಿದ್ದ ಬಾಣವನ್ನು ಕಿತ್ತೆಸೆದರು. ಆ ಬಾಣವನ್ನು ಕೀಳುತ್ತಿದ್ದಂತೆ ರಕ್ತ ಪ್ರವಾಹದಂತೆ ಧಾರಾಕಾರವಾಗಿ ಹರಿದು ಮುಖವನ್ನೆಲ್ಲ ತೇೂಯಿಸಿ ಗಡ್ಡದ ಮೂಲಕ ಹಾದು ನೆಲಕ್ಕೆ ತೊಟ್ಟಿಕ್ಕಲಾರಂಭಿಸಿತು.

*_(ಅದನ್ನಾಗಿತ್ತು ಹಿಂದಿನ ರಾತ್ರಿ ಕನಸಿನಲ್ಲಿ ಹುಸೈನ್ (ರ)ರನ್ನು ಭೇಟಿಯಾದ ಅಶ್ರಫುಲ್ ಖಲ್ಖ್ ಮುತ್ತು ಮುಹಮ್ಮದ್ ಮುಸ್ತಫಾ ﷺ  ರವರು ಕೇಳಿರುವುದು "ಮಗೂ ಏನಿದು ನಿನ್ನ ಗಡ್ಡದಲ್ಲಿ ರಕ್ತ..?" ಎಂದು ಕೇಳುತ್ತಾ ಸ್ವರ್ಗದ ಕವಾಡಗಳನ್ನು ತೆರೆದಿಟ್ಟು ನಿನಗಾಗಿ ಕಾಯುತ್ತಿರುತ್ತೇನೆಂದು ಸೂಚನೆ ನೀಡಿದ್ದು)_*

ಅಲ್ಲಾಹನ ರಸೂಲ್ ﷺ ರ ಮುತ್ತಿನಂತಹ ಮಾತು ನೆನಪಾಗುತ್ತಿದ್ದಂತೆ....

*ಬೇಡ ನನಗಿನ್ನು ನೀರು ಬೇಡ... ಈ ರಕ್ತದೊಂದಿಗೆ ಹೇೂಗಿ ಪಿತಾಮಹರನ್ನು ಭೇಟಿಯಾಗೇೂಣವೆಂಬ ದೃಢ ನಿರ್ದಾರದಿಂದ ಅಲ್ಲಾಹನ ರಸೂಲ್ ಕರೀಂ ﷺ ರ ಮಡಿಲಲ್ಲಿ ಆಟವಾಡುತ್ತಾ ತುಂಟತನದಿಂದ ಅಲ್ಲಾಹನ ರಸೂಲ್ ﷺ ರ ಮನಸ್ಸಿಗೆ ಮುದ ನೀಡುತ್ತಲೇ ಬೆಳೆದು, ನಕ್ಷತ್ರ ಸಮಾನರಾದ ಲಕ್ಷಾಂತರ ಸ್ವಹಾಬಾಗಳ ಮನಸೂರೆಗೈದು ಆಹ್ಲಾದಮಯಗೊಳಿಸಿದ ಧೃವತಾರೆ ಸಯ್ಯದುನಾ ಹುಸೈನ್ (ರ) ರಣರಂಗಕ್ಕೆ ಹಿಂದಿರುಗಿದರು.*

ಯುದ್ಧರಂಗ ತಲುಪುತ್ತಿದ್ದಂತೆ ನಿತ್ರಾಣರಾಗಿ ಕುಸಿದು ಬಿದ್ದ ಸಯ್ಯದುನಾ ಹುಸೈನ್ (ರ)ರವರು ಲುಹರ್'ನ ಸಮಯವಾದುದರಿಂದ ಕುಸಿದು ಬಿದ್ದಲ್ಲೇ ತಯಮ್ಮುಮ್ ಮಾಡಿ ನಮಾಝ್ ಆರಂಭಿಸಿದರು.

ಸುಜೂದಿನಲ್ಲಿರುವಾಗ ಕುದುರೆಯ ಮೇಲೆ ಧಾವಿಸಿ ಬಂದ ಶತ್ರು ಸೈನಿಕನೊಬ್ಬ ಖಡ್ಗದಿಂದ ಮಹಾನರ ಬೆನ್ನಿಗೆ ಇರಿದನು. 🗡

ಆ ಇರಿತದಿಂದಾಗಿ ಸಯ್ಯದುನಾ ಹುಸೈನ್ (ರ)ರವರು ಅಲ್ಲೇ ನೆಲಕ್ಕೊರಗಿದರು.

*ಇದನ್ನು ಕಂಡ ದುಲ್'ದುಲ್ ಎಂಬ ಕುದುರೆ ತಕ್ಷಣ ಮಹಾನರತ್ತ ಧಾವಿಸಿ ಬಂದು ಶತ್ರುವಿಗೆ ಅಡ್ಡ ನಿಂತು ತನ್ನ ಯಜಮಾನರನ್ನು ರಕ್ಷಿಸಲು ಶಕ್ತಿಮೀರಿ ಶ್ರಮಿಸಿತು. ಕುದುರೆ ಅಡ್ಡಡ್ಡ ಬರುವಾಗ ಆ ದುಷ್ಟ ಖಡ್ಗದಿಂದ ದುಲ್'ದುಲ್ ಕುದುರೆಯ ಕಾಲನ್ನೇ ಕತ್ತರಿಸಿದನು. ಆಗ ದುಲ್'ದುಲ್ ಕುದುರೆ ಮತ್ತೊಂದೆಡೆ ಕುಸಿದು ಬಿದ್ದಾಗ ಆ ದುಷ್ಟ ತನ್ನ ಕುದುರೆಯನ್ನು ಮಹಾನರ ಮೈಮೇಲೆ ಹತ್ತಿಸಿದನು.*

ನಂತರ *ದುಷ್ಟನಾದ ಸಿನಾನ್ ಬಿನ್ ಅನಸ್* ಎಂಬಾತ ಮಹಾನರ ಪವಿತ್ರ ಶಿರಸ್ಸು ಛೇದಿಸಿದನು. ಬಳಿಕ ಇತರ ಸೈನಿಕರೆಲ್ಲರೂ ಸೇರಿ ಖಡ್ಗದಿಂದ ಸಯ್ಯದುನಾ ಹುಸೈನ್ (ರ)ರವರ ದೇಹವನ್ನು ಕೊಚ್ಚಿ ಹಾಕಿದರು. 😰😰

*(ಸಯ್ಯದುನಾ ಹುಸೈನ್ (ರ)ರವರು ಶಹೀದಾದಾಗ ಅವರ ದೇಹದಲ್ಲಿ ಮೂವತ್ತಮೂರು ಬಾಣ ಅಥವಾ ಈಟಿಯ ತಿವಿತವೂ, ಮೂವತ್ತನಾಲ್ಕು ಖಡ್ಗದ ಇರಿತವೂ ಇತ್ತೆಂದು ಚರಿತ್ರೆಯಲ್ಲಿ ದಾಖಲಾಗಿದೆ)*

ಹಝ್ರತ್ ಹುಸೈನ್ (ರ)ರವರು ಶಹೀದಾಗುತ್ತಿದ್ದಂತೆ ಕುಸಿದು ಬಿದ್ದಿದ್ದ ಕುದುರೆ ಅಲ್ಲಿಂದ ಎದ್ದು ಮೂರು ಕಾಲಿನಲ್ಲಿ ಕುಂಟುತ್ತಾ ಡೇರೆಯತ್ತ ದೌಡಾಯಿಸಿತು.

ಕುಂಟುತ್ತಾ ಡೇರೆಯತ್ತ ಬಂದ ದುಲ್'ದುಲ್ ಕುದುರೆಯನ್ನು ಕಂಡ ಹುಸೈನ್ (ರ)ರವರ ಸಹಧರ್ಮಿಣಿಯಾದ ಬೀವಿ ಸಯ್ಯಿದತುನಾ ಶಹ್ರುಬಾನು (ರ) ಅದರ ಎರಡು ಕಿವಿಗಳನ್ನೂ ಹಿಡಿದು ಅದರ ಮುಖಕ್ಕೆ ತಮ್ಮ ಮುಖ ಆನಿಸಿ ಬಿಕ್ಕಿ ಬಿಕ್ಕಿ ಅಳುತ್ತಾ ಕೇಳಿದರು..

*ಯಾ.. ದುಲ್'ದುಲ್ ನನ್ನ ಪ್ರಿಯತಮರೆಲ್ಲಿ..? ಯುದ್ಧ ಭೂಮಿಯಲ್ಲಿ ಅವರನ್ನು ಉಪೇಕ್ಷಿಸಿ ಬಂದೆಯಾ..? ಎಂದು ಕೇಳುತ್ತಾ ಬಿಕ್ಕಿ ಬಿಕ್ಕಿ ಅತ್ತರು.*

ಮಹದಿಯ ಕಂಬನಿ ಕಾಣಲಾಗದೆ ಆ ಮೂಕ ಪ್ರಾಣಿಯು ಇಲ್ಲ ಎಂಬಂತೆ ತಲೆ ಅಲ್ಲಾಡಿಸುತ್ತಾ ತನ್ನೆರಡು ಕಿವಿಗಳನ್ನೂ ಕೊಡವುತ್ತಾ ಯೂಪ್ರಟಿಸ್ ನದಿಯತ್ತ ಧಾವಿಸಿ ನದಿಗೆ ಹಾರಿ ಪ್ರಾಣ ಬಿಟ್ಟಿತು..!

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡