🇸🇱🇸🇱🇸🇱🇸🇱🇸🇱🇸🇱🇸🇱
*ಎಸ್ಸೆಸ್ಸೆಫ್ ನ ಹುಟ್ಟು*,
*ನೈಜ ಅಹ್ಲುಸುನ್ನದ ಧ್ಯೇಯೋದ್ದೇಶಗಳು.*
〰〰〰〰〰〰〰
ಭಾಗ➖02
〰〰🇸🇱🇸🇱🇸🇱〰〰
✍ ~ಗಫೂರ್ ಬಾಯಾರು~
➖➖➖➖➖➖➖
⚖ *ಸಂವಿಧಾನ*⚖
➖➖➖➖➖➖➖
1973 ರಲ್ಲಿ ಸಂವಿಧಾನ ಅಸ್ಥಿತ್ವಕ್ಕೆ ಬಂತು. 2010ರಲ್ಲಿ ಕೊನೆಯದಾಗಿ ಆವಿಷ್ಕರಿಸಲಾಯಿತು.
👉 *ನಿಯಮ ಭಾಗ 5*
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ನೇತೃತ್ವ ನೀಡುವಂತಹ *ಪರಿಶುದ್ಧ ಅಹ್ಲುಸ್ಸುನತ್ತಿವಲ್ ಜಮಾಅತ್ತಿನ* ಆಶಯಾದರ್ಶಗಳಲ್ಲಿ ವಿಶ್ವಾಸವಿರಿಸಿ ಗಟ್ಟಿಯಾಗಿ ನೆಲೆಗೊಳ್ಳುವ ಒಂದು ಮುಸ್ಲಿಂ ವಿದ್ಯಾರ್ಥಿ ಸಂಘಟನೆಯನ್ನು ಕಟ್ಟಿ ಬೆಳೆಸಿ ಅದರಿಂದ ಅವರಿಗೆ ಧರ್ಮಭಕ್ತಿ, ದೇಶಭಕ್ತಿ, ಐಕ್ಯತೆ, ಶಿಸ್ತು, ಆತ್ಮಶಕ್ತಿ, ಹಾಗು ಉತ್ತಮ ನಡವಳಿಕೆಗಳಿಂದ, ವಿದ್ಯಾಭ್ಯಾಸದ ಉನ್ನತಿಯನ್ನು ಉಂಟು ಮಾಡಿ, ಪರಲೋಕ ಮೋಕ್ಷಕ್ಕೆ ಪ್ರಧಾನ್ಯತೆ ನೀಡಿಕೊಂಡು ಮುಸ್ಲಿಂ ವಿದ್ಯಾರ್ಥಿಗಳ ಐಹಿಕವು, ಪಾರತ್ರಿಕವು ಆದ ಅಭ್ಯೂನ್ನತಿಗಳಿಗಾಗಿ ಪ್ರತ್ಯೇಕವಾಗಿ, ಮುಸ್ಲಿಂ ಬಹುಜನತೆಯ ಐಹಿಕ ಮತ್ತು ಪಾರತ್ರಿಕವು ಆದ ಅತ್ಯುನ್ನತಿಗಾಗಿ ಸಾರ್ವಜನಿಕವಾಗಿ ಕಾರ್ಯಾಚರಿಸಬೇಕು.
👉 *ನಿಯಮ ಭಾಗ 6*
ಭಾಗ 5ರಲ್ಲಿ ಹೇಳಿದ ಗುರಿಯನ್ನು ತಲುಪಲಿಕ್ಕಾಗಿ ಈ ಸಂಘಟನೆ ಕೆಳಗೆ ಹೇಳುವ ಪ್ರವರ್ತನೆ ಮಾರ್ಗವನ್ನು ಸ್ವೀಕರಿಸಲಾಗುವುದು.
1-ಮುಸ್ಲಿಂ ವಿದ್ಯಾರ್ಥಿಗಳಲ್ಲಿ ಅಂತರ್ ಲೀನವಾಗಿ ನೆಲೆಗೊಳ್ಳುವ ಸಾಹಿತ್ಯ ಕಲಾವಾಸನೆಯನ್ನು ಅಭಿವೃದ್ಧಿಪಡಿಸಲು ಸಾಹಿತ್ಯ ಸಮಾಜಗಳನ್ನು, ಪ್ರಕಾಶನಗಳನ್ನು, ಸ್ಪರ್ದೆಗಳನ್ನು ನಡೆಸುವುದು.
2-ಮುಸ್ಲಿಮರಲ್ಲಿ ವಿಶಿಷ್ಯಾ ವಿದ್ಯಾರ್ಥಿ ಯುವಜನ ವಿಭಾಗಗಳಲ್ಲಿ ಧರ್ಮಬೋಧನೆ, ದೀನಿಜ್ಞಾನವು ಉಂಟು ಮಾಡುವುದಕ್ಕಾಗಿ ಮತಪಠಣ ತರಬೇತಿಗಳು, ಚರ್ಚಾಕೂಟಗಳು, ಶಿಬಿರಗಳು, ಮತಪ್ರಸಂಗಗಳು ಮೊದಲಾದವುಗಳನ್ನು ಸಂಘಟಿಸುವುದು. ಲಘುಲೇಖನಗಳು, ಪುಸ್ತಕಗಳು, ಮುಂತಾದವುಗಳನ್ನು ವಿತರಣೆ ಮಾಡುವುದು.
3-ಸಂಘಟನೆಯ ಮುಖಪತ್ರವಾದ *ರಿಸಾಲ* ಪುಸ್ತಕದ ಪ್ರಕಾಶನ ವಿಭಾಗವಾದ ಐ.ಪಿ.ಬಿ. ಯ ಹಾಗು ಅಹ್ಲುಸ್ಸುನತ್ತಿ ವಲ್ ಜಮಾಅತ್ತಿನ ಇತರ ಅನುಕಾಲಿಕ ಪ್ರಕಾಶನಗಳ ಪ್ರಚಾರಕ್ಕಾಗಿ ಪರಿಶ್ರಮಿಸುವುದು.
4-ಮುಸ್ಲಿರಲ್ಲಿ ನೆಲೆಗೊಳ್ಳುವ ಅಧಾರ್ಮಿಕ ಪ್ರವಣತೆಯನ್ನು ಕೊನೆಗೊಳಿಸಲು, ಧರ್ಮ ಅನುಷ್ಠಾನಗಳಿಗೆ ಗಮನಕೊಡಲು ಸಾಧ್ಯವಾದಷ್ಟು ಪರಿಶ್ರಮಿಸುವುದು.
5-ಕೇಂದ್ರ ಕಮಿಟಿಯ ಅಧೀನದಲ್ಲಿ ಪತ್ರ ಪ್ರಕಾಶನಗಳನ್ನು ನಡೆಸುವುದು.
6-ಬಡ ಮುಸ್ಲಿಂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಉನ್ನತ ವಿದ್ಯೆಗಾಗಿ ಕೇಂದ್ರ ಕಮಿಟಿ ನೇರವಾಗಿಯೋ, ಕೇಂದ್ರ ಕಮಿಟಿಯ ಅಧೀನದಿಂದಲೋ, ಅಂಗೀಕಾರದಿಂದಲೋ, ಕೆಳಸ್ತರದ ಕಮಿಟಿಗಳು ಸ್ಕಾಲರ್ಶಿಪ್ ಯೋಜನೆಯನ್ನು ಜಾರಿಗೆ ತರುವುದು.
7-ಸಮುದಾಯದಲ್ಲಿ ಅನಾಥರು, ಅಬಲೆಯರಾದವರ ವಿದ್ಯಾಭ್ಯಾಸ, ಆರೋಗ್ಯ, ಮುಂತಾದ ಕಾರ್ಯಗಳಲ್ಲಿ ಸಹಾಯ ಮಾಡಲು ಯೋಜನೆಗಳನ್ನು ರೂಪೀಕರಿಸಿ ಜಾರಿಗೊಳಿಸುವುದು.
8-ಮತಬೌಧಿಕ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಕೊಡುವುದು, ಪ್ರಾಥಮಿಕ ಘಟದಲ್ಲೇ ವಿದ್ಯಾಭ್ಯಾಸವನ್ನು ಕೊನೆಗೋಳಿಸುವ ಪ್ರವೃತ್ತಿಯನ್ನು ಇಲ್ಲವಾಗಿಸಲು ನಿರಂತರ ಪ್ರಯತ್ನಿಸುವುದು.
9-ಅರಬಿ, ಉರ್ದು, ಭಾಷೆಗಳ ಪ್ರಚಾರಕ್ಕೂ, ಪೋಷಿಸಲು ಬೇಕಾಗಿ ಪರಿಶ್ರಮಿಸುವುದು.
10-ವಿದ್ಯಾರ್ಥಿಗಳ ನಡುವೆ ಮೈತ್ರಿಯನ್ನು, ಸಹೋದರ್ಯ ಸಂಬಂಧ ಸ್ಥಾಪಿಸುವುದು.
11-ಸಮುದಾಯದ ಹಾಗೂ ಸಮೂಹದ ಕ್ಷೇಮ ಪ್ರವರ್ತನೆಗಳಲ್ಲಿ ಸಹಕರಿಸುವುದು.
12-ಸಂಸ್ಕಾರ, ಸಾಮ್ರಾಜ್ಯತ್ವ, ಮಾನವಹಕ್ಕು ಉಲ್ಲಂಘನೆ, ರಾಜಕೀಯ ವೈರಾಗ್ಯ ಎಂಬಿತ್ಯಾದಿ ವಿಷಯಯಗಳ ವಿರುದ್ಧವಾಗಿ ಪ್ರವರ್ತಿಸುವುದು.
👨👨👦 *ಪ್ರಧಾನ ಸಮ್ಮೇಳನಗಳು*👨👨👦
*ಮುಂದುವರಿಯುವುದು*
✍ ~ಗಫೂರ್ ಬಾಯಾರ್~
🇸🇱🇮🇳🇸🇱🇮🇳🇸🇱🇮🇳🇸🇱
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Tuesday, April 28, 2020
ಜಾತ್ಯತೀತ ರಾಷ್ಟ್ರದ ಏಕತೆ ಮತ್ತು ಸೌಹಾಧರ್ತೆಗೆಗೊಂದು ಉದಾಹರಣೆ.
_*ಜಾತ್ಯತೀತ ರಾಷ್ಟ್ರದ ಏಕತೆ ಮತ್ತು ಸೌಹಾರ್ಧತೆಗೊಂದು ಉದಾಹರಣೆ*_
✍ ಗಫೂರ್ ಬಾಯಾರ್
**********************
2002ರಲ್ಲಿ ನಡೆದ ಗುಜರಾತ್ ಗಲಭೆಯು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದಷ್ಟೇ ಅಲ್ಲದೆ ಆ ಗಲಭೆಯು ದೇಶದ ಸಾಮರಸ್ಯತೆ ಮತ್ತು ಸೌಹಾರ್ದತೆಯ ಬುಡವನ್ನೇ ಅಲುಗಾಡಿಸಿತ್ತು.
ಈ ಗಲಭೆಯು ಜಾಗತಿಕ ಮಟ್ಟದಲ್ಲಿ ಭಾರತದ ಸಾಮರಸ್ಯತೆ, ಸಹಬಾಳ್ವೆ ಮತ್ತು ಸೌಹಾರ್ದತೆಯ ಪರಂಪರೆಗೆ ಕಳಂಕವನ್ನೂ ತಂದಿತು.
ರಾಜಕೀಯ ಲಾಭಕ್ಕಾಗಿ ಫ್ಯಾಸಿಸ್ಟ್ ಶಕ್ತಿಗಳು ನಡೆಸಿದ ಈ ವ್ಯವಸ್ಥಿತ ಷಡ್ಯಂತ್ರದಿಂದಾಗಿ ಅಂದಿನ ತನಕ ಜಾತಿ-ಮತಭೇದವಿಲ್ಲದೆ ಅನ್ಯೋನ್ಯವಾಗಿ ಬದುಕುತ್ತಿದ್ದವರಲ್ಲೇ ಹಗೆ ಮತ್ತು ವೈರತ್ವ ಮೂಡಿಸಿ ತಮ್ಮ ಓಟ್ ಬ್ಯಾಂಕನ್ನು ಗಟ್ಟಿಗೊಳಿಸಿಕೊಳ್ಳುವಲ್ಲಿಫ್ಯಾಸಿಸ್ಟ್ ಶಕ್ತಿಗಳು ಸ್ವಲ್ಪಮಟ್ಟಿಗೆ ಯಶಸ್ವಿಯೂ ಆದವು.
ಪರಿಣಾಮವಾಗಿ ತಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಿದ್ದ ನೆರೆಮನೆ, ಅಂಗಡಿ ಮುಂಗಟ್ಟುಗಳು ಹೀಗೆ ಎಲ್ಲವನ್ನೂ ಪುರುಷರು ಮಾತ್ರವಲ್ಲದೆ ಸ್ತ್ರೀಯರೂ ಸಹ ಕೊಳ್ಳೆಹೊಡೆದು ಪುರುಷರು, ಗರ್ಭಿಣಿಯರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರೆಂದು ನೋಡದೆ ಸಾವಿರಾರು ಮುಸ್ಲಿಮರ ಮಾರಣ ಹೋಮ ನಡೆಸಿದ ಕುಖ್ಯಾತಿಗೂ ಗುಜರಾತ್ ಗಲಭೆ ಕಾರಣವಾಯಿತು.
ತಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಿದ್ದ ನೆರೆಮನೆಯವರೇ ದುಷ್ಕರ್ಮಿಗಳ ಗುಂಪಿನಲ್ಲಿ ಸೇರಿಕೊಂಡು ಕೊಳ್ಳೆ ಮತ್ತು ಕೊಲೆ ನಡೆಸುತ್ತಿದ್ದರಿಂದ ಅಂದು ದೌರ್ಜನ್ಯಕ್ಕೀಡಾಗುತ್ತಿದ್ದ ದಮನಿತರಿಗೆ ಯಾರ ನೆರವೂ ಸಿಗದಂತಾಗಿತ್ತು.
ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸಹ ಗೆಳೆಯರು ಮತ್ತು ನೆರೆಹೊರೆಯವರನ್ನು ದುಷ್ಕರ್ಮಿಗಳಿಂದ ರಕ್ಷಿಸಿ ಮಾನವೀಯತೆ ಮೆರೆದ ಅಪರೂಪದ ಘಟನೆಗಳೂ ಅಂದು ನಡೆದಿತ್ತು.
ಗುಲಾಮ್ ರಸೂಲ್ ಎಂಬುವವರ ಕುಟುಂಬದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಸಂಗತಿ ತಿಳಿದಾಗ ಗುಲಾಮ್ ರಸೂಲ್‌ರವರ ಗೆಳೆಯನಾದ ಮಹೇಂದ್ರ ಎಂಬಾತ ಗುಲಾಮ್ ರಸೂಲ್‌ರನ್ನು ತಮ್ಮ ಮನೆಯ ಎರಡನೆಯ ಮಹಡಿಯಲ್ಲಿರಿಸಿ ರಕ್ಷಣೆ ಕೊಟ್ಟಿದ್ದನು.
ಮಹೇಂದ್ರ ಅಂದುಕೊಂಡಂತೆ ಗೆಳೆಯ ಗುಲಾಮ್ ರಸೂಲ್‌ನ ಮನೆಯ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿಯೇ ಬಿಟ್ಟರು.
ಆಗ ಮಹೇಂದ್ರನ ಮನೆಯ ಎರಡನೇ ಮಹಡಿಯ ಮೇಲಿನ ಕೊಠಡಿಯಿಂದ ಗುಲಾಮ್ ರಸೂಲ್ ಕಿಟಕಿಯ ಮೂಲಕ ತನ್ನ ಮನೆಯತ್ತ ಕಣ್ಣು ಹಾಯಿಸಿ ತನ್ನ ಮನೆಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸುತ್ತಿರುವುದನ್ನು ಗುಲಾಮ್ ರಸೂಲ್‌ನ ಅಸಹಾಯಕನಾಗಿ ನೋಡುತ್ತಿದ್ದ.
ಗುಲಾಮ್ ರಸೂಲ್‌ನ ಮನೆಯ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಕೈಗೆ ಸಿಕ್ಕಿದ್ದನ್ನೆಲ್ಲ ಕೊಳ್ಳೆ ಹೊಡೆಯುತ್ತಿದ್ದರು.
ಆಶ್ಚರ್ಯದ ಸಂಗತಿಯೆಂದರೆ ಗುಲಾಮ್ ರಸೂಲ್‌ನ ಆತ್ಮೀಯ ಸ್ನೇಹಿತನಾದ ಓಂಪ್ರಕಾಶ್ ಎಂಬಾತನೂ ತನ್ನ ಎರಡು ಮಕ್ಕಳ ಜೊತೆಗೆ ದುಷ್ಕರ್ಮಿಗಳ ಜೊತೆ ಸೇರಿಕೊಂಡು ಗುಲಾಮ್ ರಸೂಲ್‌ನ ಮನೆಯಲ್ಲಿದ್ದ ಬೆಲೆಬಾಳುವ ಪೀಠೋಪಕರಣಗಳನ್ನು ಹೊತ್ತೊಯ್ಯುತ್ತಿರುವುದನ್ನು ಕಂಡು ದಂಗಾಗಿಹೋದನು.
ನಿನ್ನೆಯ ತನಕ ತನ್ನ ಮನೆಯ ಕಷ್ಟ-ಸುಖಗಳಿಗೆ ತನ್ನ ಬಳಿ ಬಂದು ನೆರವು ಪಡೆಯುತ್ತಿದ್ದ ಓಂ ಪ್ರಕಾಶ್ ಸಹ ದುಷ್ಕರ್ಮಿಗಳ ಜೊತೆ ಸೇರಿ ತನ್ನ ಮನೆಯನ್ನು ಕೊಳ್ಳೆ ಹೊಡೆಯುತ್ತಿರುವುದನ್ನು ಕಂಡಾಗ ಗುಲಾಮ್ ರಸೂಲ್ ಹೃದಯವೇ ಒಡೆದಂತಾಯಿತು. ಹಲವಾರು ದಿನಗಳ ಕಾಲ ಈ ಗಲಭೆ ಗುಜರಾತಿನಾದ್ಯಂತ ಎಗ್ಗಿಲ್ಲದೆ ಮುಂದುವರಿದಿತ್ತು.
ದಿನಗಳು ಉರುಳಿ ಗಲಭೆ ಹತೋಟಿಗೆ ಬಂದು ಪರಿಸ್ಥಿತಿ ಶಾಂತವಾಯಿತು. ಅಲ್ಲಿಯವರೆಗೂ ಗುಲಾಮ್ ರಸೂಲ್ ತನ್ನ ಸ್ನೇಹಿತನಾದ ಮಹೇಂದ್ರನ ಮನೆಯಲ್ಲೇ ಆಶ್ರಯ ಪಡೆದಿದ್ದ.
ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ನಂತರ ಗುಲಾಮ್ ರಸೂಲ್ ತನ್ನ ಮನೆಗೆ ಹೋಗಿ ನೋಡಿದಾಗ ತನ್ನ ಮನೆಯಲ್ಲಿ ಯಾವೊಂದು ವಸ್ತುಗಳೂ ಇರಲಿಲ್ಲ ಎಲ್ಲವನ್ನೂ ದುಷ್ಕರ್ಮಿಗಳು ಲೂಟಿ ಮಾಡಿದ್ದರು.
ಗಲಭೆಕೋರರು ತನ್ನ ಮನೆಯನ್ನು ಲೂಟಿ ಮಾಡಿದರು ಎನ್ನುವುದಕ್ಕಿಂತಲೂ ಮಿಗಿಲಾಗಿ ತನ್ನ ಆತ್ಮೀಯ ಸ್ನೇಹಿತನಾಗಿದ್ದ ಓಂ ಪ್ರಕಾಶ್ ಮಕ್ಕಳೊಂದಿಗೆ ಲೂಟಿ ಮಾಡಿದ್ದು ಗುಲಾಮ್ ರಸೂಲ್‌ನಿಗೆ ಸಹಿಸಲಾರದಷ್ಟು ನೋವನ್ನುಂಟು ಮಾಡಿತ್ತು.
ಅದೊಂದು ದಿನ ಗುಲಾಮ್ ರಸೂಲ್‌ನನ್ನು ಭೇಟಿಯಾಗಲೆಂದು ಆತನ ಮನೆಗೆ ಬಂದ ಓಂ ಪ್ರಕಾಶ್ ಗುಲಾಮ್ ರಸೂಲ್‌ನನ್ನು ತನ್ನ ಮನೆಗೆ ಬರುವಂತೆ ಆಹ್ವಾನಿಸಿದ.
ತನ್ನ ಮನೆಯ ಸಂಪತ್ತನ್ನು ಕೊಳ್ಳೆ ಹೊಡೆದಿದ್ದಲ್ಲದೆ ತನ್ನನ್ನು ವಧಿಸುವ ಸಲುವಾಗಿ ಏನಾದರೂ ನೆಪವೊಡ್ಡಿ ಈತ ಬಂದಿರಬಹುದೆಂದು ಭಾವಿಸಿದ ಗುಲಾಮ್ ರಸೂಲ್ ಹೆಚ್ಚೇನೂ ಮಾತನಾಡಲಿಲ್ಲ.
ಆದರೆ ಆತ್ಮೀಯ ಸ್ನೇಹಿತನಾಗಿದ್ದ ಓಂ ಪ್ರಕಾಶನ ಆಹ್ವಾನವನ್ನು ತಿರಸ್ಕರಿಸದೆ ಆದದ್ದಾಗಲಿ ಎಂಬ ಭಾವನೆಯಿಂದ ಗುಲಾಮ್ ರಸೂಲ್ ಓಂಪ್ರಕಾಶನೊಂದಿಗೆ ಆತನ ಮನೆಗೆ ಹೋದ.
ಓಂ ಪ್ರಕಾಶನ ಮನೆಯಲ್ಲಿ ನೋಡಿದರೆ ಗುಲಾಮ್ ರಸೂಲ್‌ನ ಮನೆಯ ಪೀಠೋಪಕರಣಗಳು ಮತ್ತು ಇತರ ಸಾಮಗ್ರಿಗಳನ್ನು ಸಾಲಾಗಿ ಜೋಡಿಸಿ ಇಡಲಾಗಿತ್ತು. ಇದನ್ನು ಕಾಣುತ್ತಿದ್ದಂತೆ ಗುಲಾಮ್ ರಸೂಲ್ ಏನೊಂದೂ ಮಾತೂ ಆಡದೆ ಮೌನವಾಗಿ ನಿಂತ.
ಆಗ ಗುಲಾಮ್ ರಸೂಲ್‌ನನ್ನು ಅಪ್ಪಿಕೊಂಡ ಓಂ ಪ್ರಕಾಶ್, ಗುಲಮ್ ಭಾಯ್... ಶಸ್ತ್ರಸಜ್ಜಿತರಾಗಿದ್ದ ಗಲಭೆಕೋರರು ತಮ್ಮ ಮನೆಯ ಮೇಲೆ ದಾಳಿ ಮಾಡುವುದನ್ನು ತಡೆಯಲು ನನ್ನಿಂದಾಗಲಿಲ್ಲ. ಹಾಗಾಗಿ ನಿಮ್ಮ ಮನೆಯ ಸಾಮಗ್ರಿಗಳ ಪೈಕಿ ಸಾಧ್ಯವಾದಷ್ಟನ್ನು ಲೂಟಿಕೋರಿಂದ ರಕ್ಷಿಸಬೇಕೆಂಬ ಉದ್ದೇಶದಿಂದ ನನ್ನ ಮಕ್ಕಳನ್ನು ಕರೆದೊಯ್ದು ಸಾಧ್ಯವಾದಷ್ಟು ಸಾಮಾನುಗಳನ್ನು ತಂದು ನಾವಿಲ್ಲಿ ಇಟ್ಟಿದ್ದೇವೆ. ನಿಮ್ಮ ಮನೆಯ ಸಾಮಗ್ರಿಗಳನ್ನು ನೀವು ಯಾವಾಗ ಬೇಕಿದ್ದರೂ ನಿಮ್ಮ ಮನೆಗೆ ತೆಗೆದುಕೊಂಡು ಹೋಗಬಹುದು ಎಂದ.
ಓಂ ಪ್ರಕಾಶನ ಮಾತು ಕೇಳಿದ ಗುಲಾಮ್ ರಸೂಲ್ ಗದ್ಗದಿತ ಕಂಠದಿಂದ ಭಾವುಕನಾಗಿ ಗೆಳೆಯಾ, ಮಕ್ಕಳೊಂದಿಗೆ ನೀನು ಈ ಸಾಮಗ್ರಿಗಳನ್ನು ತರುವುದನ್ನು ನಾನು ಮಹೇಂದ್ರನ ಮನೆಯ ಮಹಡಿಯ ಮೇಲಿನಿಂದ ನೋಡುತ್ತಿದ್ದೆ. ಈ ಹೊತ್ತಿನ ತನಕವೂ ನಾನದನ್ನು ತಪ್ಪಾಗಿ ಗ್ರಹಿಸಿದ್ದೆ ದಯವಿಟ್ಟು ನನ್ನನ್ನು ಕ್ಷಮಿಸು ಗೆಳೆಯ ಎನ್ನುತ್ತಾ ಗುಲಾಮ್ ರಸೂಲ್ ಬಿಕ್ಕಿ ಬಿಕ್ಕಿ ಅತ್ತ.
ವಿವಿಧತೆಯಲ್ಲಿ ಏಕತೆ ಎಂಬ ಸಂದೇಶವನ್ನು ಸಾರಿದ ಭಾರತದ ಜಾತ್ಯತೀತ ತತ್ವದ ಮೂಲ ತಳಹದಿ ಇದೇ ಅಲ್ಲವೇ?
ಅಧಿಕಾರಕ್ಕಾಗಿ ಫ್ಯಾಸಿಸ್ಟ್ ಶಕ್ತಿಗಳು ಏನೆಲ್ಲಾ ಕುತಂತ್ರ ಮಾಡಿದರೂ ಸಹ ಮಹೇಂದ್ರ ಮತ್ತು ಓಂಪ್ರಕಾಶ್‌ನಂತಹ ಮಾನವೀಯತೆಯ ಪ್ರತೀಕಗಳಿರುವ ತನಕವೂ ಈ ದೇಶದಲ್ಲಿ ಅಂತರ್ಗತವಾಗಿರುವ ಸಾಮರಸ್ಯತೆ ಸೌಹಾರ್ದತೆ ಮತ್ತು ಏಕತೆಯನ್ನು ಇಲ್ಲವಾಗಿಸಲು ಅದ್ಯಾವ ವಿಚ್ಛಿದ್ರಕಾರಿ ಶಕ್ತಿಗಳಿಂದಲೂ ಸಾಧ್ಯವಿಲ್ಲ.
*ಇತ್ತೀಚೆಗೆ ದೆಹಲಿಯಲ್ಲಿ ನಡೆದ ಗಲಭೆಯಲ್ಲಿಯೂ ಹೊರಗಿನಿಂದ ಬಂದು ಗಲಭೆ ನಡೆಸುತ್ತಿದ್ದ ಗಲಭೆಕೇೂರರಿಂದ ಎಲ್ಲಾ ಕಡೆಯೂ ಎಲ್ಲರನ್ನೂ ರಕ್ಷಿಸಲು ಸಾಧ್ಯವಾಗದಿದ್ದರೂ ಸಾಧ್ಯವಾದ ಕಡೆಯೆಲ್ಲ ಹಿಂದೂ, ಕ್ರೈಸ್ತ, ಮುಸ್ಲಿಂ ಮತ್ತು ಸಿಖ್ಖರು ಪರಸ್ಪರ ನೆರವಾಗಿ ಸೌಹಾರ್ಧತೆ ಮೆರೆದಿರಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.*
ಒಟ್ಟಿನಲ್ಲಿ ಹೇಳಬೇಕೆಂದರೆ ರಾಜಕೀಯ ಲಾಭಕ್ಕಾಗಿ ಫ್ಯಾಸಿಸ್ಟ್ ಶಕ್ತಿಗಳು ಈ ದೇಶದ ಭಾವೈಕ್ಯತೆಯನ್ನು ಒಡೆಯಲು ಅದ್ಯಾವ ಕುಟಿಲ ತಂತ್ರಗಳನ್ನು ಅನುಸರಿಸಿದರೂ ಸಹ ದೇಶದ ಜಾತ್ಯತೀತ ಪರಂಪರೆಯಲ್ಲಿ ನಂಬಿಕೆಯಿರುವ ಈ ದೇಶದ ಮೂಲ ನಿವಾಸಿಗಳು ಜಾತಿ ಭೇದ ಮರೆತು ಫ್ಯಾಸಿಸ್ಟ್ ಶಕ್ತಿಗಳ ಕುಟಿಲ ಕುತಂತ್ರಗಳಿಗೆ ಪ್ರತಿ ತಂತ್ರ ಹೂಡಿ ವಿಫಲಗೊಳಿಸುವುದರಲ್ಲಿ ಸಂಶಯವಿಲ್ಲ.
🇮🇳🇮🇳 ಜೈ ಹಿಂದ್, ಜೈ ಭಾರತ್ 🇮🇳🇮🇳
✊✊✊✊✊✊✊

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 05
*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
ಭಾಗ --5
📝 _ಮುನೀರ್ ಸಖಾಫಿ ಸಾಲೆತ್ತೂರು_
_*ಸೂತ್ರ 4:*_
*ಮನೆಯಲ್ಲಿ ಪ್ರೇಯರ್ ರೂಮ್ ಇರಲಿ*
ಬಂಗಲೆಯಂತಹ ಮನೆಯ ಪ್ಲಾನ್ ಮಾಡುವಾಗ ಹಲವರು ಮರೆತುಬಿಡುವ ಒಂದಾಗಿದೆ ಮನೆಯೊಳಗೆ ಆರಾಧನೆಗಿರುವ ಕೊಠಡಿ.
ಇದು ಮುಸ್ಲಿಮರ ಮನೆಯಲ್ಲಿ ಅತ್ಯಾವಶ್ಯಕವಾಗಿದೆ.
ದೈನಂದಿನ 5 ಸಮಯಗಳಲ್ಲಿ ಮನೆಯ ಎಲ್ಲರೂ ನಮಾಝ್ ಮಾಡುತ್ತಿರುವರು.
ಮನೆಯೊಳಗೆ ಸಿಕ್ಕಿದ ಸ್ಥಳಗಳಲ್ಲಿ ನಮಾಝ್ ಮಾಡುವುದಕ್ಕಿಂತ ನಮಾಜಿಗೆಂದೇ ಒಂದು ಕೊಠಡಿ ಇದ್ದರೆ ಎಷ್ಟು ಚಂದ.
ಪುರುಷರಿಗೂ ಮಹಿಳೆಯರಿಗೂ ಅದನ್ನು ಉಪಯೋಗಿಸಬಹುದು.
ನೆಲಕ್ಕೆ ಕಾರ್ಪೆಟ್ ಹಾಕಿ ಕಿಬ್ಲವನ್ನು ಗುರುತು ಮಾಡಿಟ್ಟರೆ ನಮ್ಮ ಮನೆಗಳಿಗೆ ಬರುವ ಅತಿಥಿಗಳಿಗೂ ಅದು ಬಹಳ ಪ್ರಯೋಜನಕಾರಿಯಾದೀತು.
(ಪುರುಷರಿಗೆ ಫರ್ಳ್ ನಮಾಝಿನ ಜಮಾಅತ್ ಮಸೀದಿಯಲ್ಲೇ ಶ್ರೇಷ್ಟ.ಮಸೀದಿಗೆ ಹೋಗಲು ಸಾಧ್ಯವಾಗದ ಸಂಧರ್ಭ ಈ ಕೊಠಡಿಯನ್ನು ಪುರುಷರಿಗೂ ಉಪಯೋಗಿಸಬಹುದು)
ಒಮ್ಮೆ ಒಂದು ಕಹಿ ಅನುಭವವಾಯಿತು.ಒಂದು ಖುತುಬಿಯ್ಯತ್'ಗೆ ಮನೆಗೆ ಆಹ್ವಾನಿಸಿದರು.ನಡುವೆ ಖಳಾಹುಲ್ ಹಾಜತ್'ನ ಸುನ್ನತ್ ನಮಾಜ್ ಮಾಡಲು ಕಿಬ್ಲ ಯಾವ ದಿಕ್ಕಿಗೆ ಅಂತ ಮನೆಯ ಯಜಮಾನನಲ್ಲಿ ಕೇಳಿದಾಗ ಅವರಿಗೆ ಕಿಬ್ಲ ಯಾವ ದಿಕ್ಕಿಗೆ ಅಂತ ಗೊತ್ತಿರಲಿಲ್ಲ.ಅವರು ಕೇಳಿ ಬರುತ್ತೇನೆಂದು ಒಳ ಹೋದವರು ಹೊರಗೆ ಬಂದೇ ಇಲ್ಲ.
😃😃😃😃😃
ಮನೆಯೊಳಗೆ ಕಿಬ್ಲ ಯಾವ ದಿಕ್ಕಿಗೆಂದು ನೋಡಿ ಮೊದಲೇ ಕುರುಹು ಮಾಡಿಡುತ್ತಿದ್ದರೆ ಈ ಒಂದು ಕಹಿ ಅನುಭವ ಬರುತ್ತಿರಲಿಲ್ಲ.
ಅಲ್ಲಾಹನು ಹೇಳುತ್ತಾನೆ,
وَأَوۡحَیۡنَاۤ إِلَىٰ مُوسَىٰ وَأَخِیهِ أَن تَبَوَّءَا لِقَوۡمِكُمَا بِمِصۡرَ بُیُوتࣰا وَٱجۡعَلُوا۟ بُیُوتَكُمۡ قِبۡلَةࣰ وَأَقِیمُوا۟ ٱلصَّلَوٰةَۗ وَبَشِّرِ ٱلۡمُؤۡمِنِینَ
ಮೂಸಾ ಮತ್ತು ಅವರ ಸಹೋದರ(ಹಾರೂನ್ ನೆಬಿ) ಗೆ ನಾವು ಹೀಗೆ ಸಂದೇಶ ಕೊಟ್ಟೆವು. ನೀವಿಬ್ಬರೂ ನಿಮ್ಮ ಜನರಿಗಾಗಿ ಈಜಿಪ್ಟ್‍ನಲ್ಲಿ ಕೆಲವು
ಮನೆಗಳನ್ನು ನಿರ್ಮಿಸಿರಿ, ನಿಮ್ಮ ಆ ನಿವೇಶನಗಳನ್ನು ಕಿಬ್ಲಃವನ್ನಾಗಿ ಮಾಡಿರಿ,ನಮಾಝನ್ನು ಸಂಸ್ಥಾಪಿಸಿರಿ ಮತ್ತು ಸತ್ಯವಿಶ್ವಾಸಿಗಳಿಗೆ ಶುಭವಾರ್ತೆ ನೀಡಿರಿ.(ಸೂರ ಯೂನುಸ್ 87)
--------------------------------------------------------
ಫಿರ್ ಔನನ ಕಿರುಕುಳ ಅತಿಯಾದಾಗ ಜನರಿಗೆ ಮಸೀದಿಗೆ ತೆರಳಿ ಆರಾಧನಾ ಕರ್ಮಗಳಲ್ಲಿ ಏರ್ಪಡಲು ಅಸಾಧ್ಯವಾಯಿತು.
ಆವಾಗ ಮನೆಯಲ್ಲೇ ನಿಮ್ಮ ನಮಾಜನ್ನು ನಿರ್ವಹಿಸಿರಿ ಎಂದು ಅಲ್ಲಾಹನು ಕರೆ ಕೊಟ್ಟನು.
ಅದಕ್ಕಾಗಿ ಮನೆಯಲ್ಲಿ ಕಿಬ್ಲಗೆ ಕುರುಹು ಮಾಡಿರಿ ಎಂದು ಅಲ್ಲಾಹನು ಹೇಳಿದನು.
ಮನೆಯಲ್ಲಿ ನಮಾಝ್ ಮಾಡುವ ಸಂಧರ್ಭಗಳು ಖಂಡಿತಾ ಕೆಲವೊಮ್ಮೆ ಬರಬಹುದು.ಆ ಸಂಧರ್ಭದಲ್ಲಿ ಪ್ರೇಯರ್ ರೂಮ್ ಇದ್ದರೆ ಬಹಳ ಉತ್ತಮ.
ಒಂದು ಹದೀಸ್ ನೋಡಿ,
ان عتبان بن مالك وكان من أصحاب النبي صلى الله عليه وسلم ممن شهد بدرا من الأنصار أنه أتى رسول الله صلى الله عليه وسلم فقال يا رسول الله إني أنكرت بصري وأنا أصلي لقومي فإذا كانت الأمطار سال الوادي الذي بيني وبينهم لم أستطع أن آتي مسجدهم فأصلي لهم فوددت يا رسول الله أنك تأتي فتصلي في بيتي فأتخذه مصلى فقال سأفعل إن شاء الله قال عتبان فغدا رسول الله صلى الله عليه وسلم وأبو بكر حين ارتفع النهار فاستأذن النبي صلى الله عليه وسلم فأذنت له فلم يجلس حتى دخل البيت ثم قال لي أين تحب أن أصلي من بيتك فأشرت إلى ناحية من البيت فقام النبي صلى الله عليه وسلم فكبر فصففنا فصلى ركعتين ثم سلم
ಇತ್'ಬಾನ್ (ರ)ರವರು ಬದ್ರ್ ಯುದ್ಧದಲ್ಲಿ ಭಾಗವಹಿಸಿದ ಸ್ವಹಾಬಿಯಾಗಿದ್ದರು.ಅವರು ಪ್ರವಾದೀ ವರ್ಯರ ಬಳಿ ಬಂದು ಹೇಳಿದರು.
ಓ ಪ್ರವಾದೀ ವರ್ಯರೇ!
ನನ್ನ ಎರಡು ಕಣ್ಣಿನ ದೃಷ್ಥಿ ನಷ್ಟ ಹೊಂದಿದೆ.ನಾನು ನನ್ನ ಮನೆಯ ಪಕ್ಕದಲ್ಲೇ ಇರುವ ಮಸೀದಿಯೊಂದರಲ್ಲಿ ಜನರೊಂದಿಗೆ ಸೇರಿ ನಮಾಝ್ ಮಾಡುತ್ತಿದ್ದೆ.
ಕೆಲವೊಮ್ಮೆ ಮಳೆ ಬಂದರೆ ದಾರಿಯಲ್ಲಿ ನೀರು ನಿಂತು ಮಸೀದಿಗೆ ಹೋಗಲಾಗದಂತಹಾ ಪರಿಸ್ಥಿತಿ ನಿರ್ಮಾಣವಾಗುತ್ತದೆ.ಆದುದರಿಂದ ನಾನು ಮನೆಯಲ್ಲೇ ನಮಾಝ್ ಮಾಡಲು ಬಯಸಿದ್ದೇನೆ.ತಾವು ನನ್ನ ಮನೆಗೆ ಒಮ್ಮೆ ಬಂದು ನಮಾಝ್ ಮಾಡಿ ನನಗೆ ನಮಾಝ್ ಮಾಡಲು ಒಂದು ಸ್ಥಳವನ್ನು ಆಯ್ಕೆ ಮಾಡಿ ಕೊಡಬೇಕು.ಇದು ಕೇಳಿದಾಗ ಪ್ರವಾದೀ ವರ್ಯರು ಸಂತೋಷದಿಂದ ಅದಕ್ಕೆ ಒಪ್ಪಿಗೆ ಸೂಚಿಸಿದರು.
ಮರುದಿನ ಬೆಳಿಗ್ಗೆ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಅಬೂಬಕ್ ಸಿದ್ದೀಕ್ (ರ)ರ ಜತೆ ಇತ್'ಬಾನ್'ರ ಮನೆ ಕಡೆ ಹೊರಟರು.
ಇತ್'ಬಾನ್'ನ ಮನೆಯೊಳಗೆ ಪ್ರವೇಶಿಸಲು ಅನುಮತಿ ಕೇಳಿ ಒಳ ಹೋದರು.
ನಾನು ಯಾವ ಸ್ಥಳದಲ್ಲಿ ನಮಾಝ್ ಮಾಡಬೇಕೆಂದು ಇತ್'ಬಾನ್'ರಲ್ಲಿ ಪ್ರವಾದೀ ವರ್ಯರು ಕೇಳಿದಾಗ ಇತ್'ಬಾನ್ ರವರು ಮನೆಯ ಒಂದು ಮೂಲೆಯಲ್ಲಿ ಸ್ಥಳ ಕಾಣಿಸಿಕೊಟ್ಟರು.ಅಲ್ಲಿ ಪ್ರವಾದೀ ವರ್ಯರು ಸಿದ್ದೀಕ್ (ರ)ರವರನ್ನು ಮತ್ತು ಇತ್'ಬಾನ್ (ರ) ರವರ ಮನೆಯವರನ್ನೆಲ್ಲಾ ಸೇರಿಸಿ 2 ರಕಅತ್ ನಮಾಝ್ ಮಾಡಿ ಸಲಾಮ್ ಹೇಳಿದರು.
(ಬುಖಾರಿ 425)
*ಮನೆಯೊಳಗೆ ಪ್ರಾರ್ಥನೆಗೆ ಒಂದು ರೂಮ್ ಬೇಕೆಂಬುವುದು ಇದರಿಂದ ಬಹಳ ಸ್ಪಷ್ಟ.*
*ಪ್ರಾರ್ಥನೆಗೆ ರೂಮ್ ಇರುವ ಮನೆ ಬರ್ಕತ್ ನ ಮನೆ.*
ಎಲ್ಲರಿಗೂ ಶೇರ್ ಮಾಡಿ
ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)
ಮುಂದುವರಿಯುವುದು........

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 04
*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
ಭಾಗ --4
📝 _ಮುನೀರ್ ಸಖಾಫಿ ಸಾಲೆತ್ತೂರು_
_*ಸೂತ್ರ 3:*_
*ಮನೆಯಲ್ಲೊಂದು ದ್ಸಿಕ್ರ್ ಮಜ್ಲಿಸ್*
ಮಸೀದಿಗಳಲ್ಲಿ ,ಸಂಸ್ಥೆಗಳಲ್ಲಿ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಮಜ್ಲಿಸುದ್ಸಿಕ್ರ್ ನಡೆಯುತ್ತದೆ.ಅದರಲ್ಲಿ ಪುರುಷರು ಭಾಗವಹಿಸುತ್ತಾರೆ.ಮಹಿಳೆಯರು ದ್ಸಿಕ್ರ್ ಮಜ್ಲಿಸ್ ಗಳಲ್ಲಿ ಭಾಗವಹಿಸುವುದು ಪ್ರೋತ್ಸಾಹಿಸಲ್ಪಡುವಂತದಲ್ಲ.
ಅತೀ ಶ್ರೇಷ್ಠ ಆರಾಧನೆಯಾದ ಜುಮಾ ಜಮಾಅತ್ ಗೆ ಮಹಿಳೆಯರನ್ನು ಮಸೀದಿಗೆ ತೆರಳಲು ಅವಕಾಶ ನೀಡದ ಇಸ್ಲಾಮ್ ದ್ಸಿಕ್ರ್ ಗೆ ತೆರಳಲು ಅವಕಾಶ ನೀಡಿತೆ?
ಮಹಿಳೆಯರು ಮನೆ ಬಿಟ್ಟು ಮಜ್ಲಿಸ್ ಗಳಿಗೆ ತೆರಳುವುದು ಒಮ್ಮೆಯೂ ಸಲ್ಲದು.
ಮಹಿಳೆಯರ ಆರಾಧನೆ ಎಲ್ಲವೂ ಅವರ ಮನೆಯೊಳಗೆ ಮಾತ್ರ.
ಪುರುಷರು ಮಸೀದಿಗಳಲ್ಲಿ ದ್ಸಿಕ್ರ್ ಮಜ್ಲಿಸ್'ನಲ್ಲಿ ಹಾಜರಾದರೆ ಮಹಿಳೆಯರಿಗೂ ಆ ಭಾಗ್ಯ ದೊರಕಬೇಕಾದಲ್ಲಿ ಅವರ ಮನೆಯೊಳಗಿರುವ ಕೋಣೆಯಲ್ಲಿ ದ್ಸಿಕ್ರ್ ಗಳ ಮಜ್ಲಿಸ್ ನಡೆಸಬೇಕು.
ಮನೆಯಲ್ಲಿರುವ ಪುರುಷರು ಮತ್ತು ಮಹಿಳೆಯರು ಹಾಗೂ ಮಕ್ಕಳು ಸೇರಿ ಆ ಮಜ್ಲಿಸ್ ಮಾಡಿದರೆ ಬಹಳ ಉತ್ತಮ.
ಅಂತಹಾ ಮನೆ ಸಮೃದ್ಧಿಯ ಮನೆಯೆಂಬುದರಲ್ಲಿ ಸಂಶಯವಿಲ್ಲ.
ಇಮಾಮ್ ಬುಖಾರಿ, ಮುಸ್ಲಿಂ ವರದಿ ಮಾಡಿದ ಹದೀಸ್ ನೋಡಿ
عن أبي موسى الأشعري رضي الله عنه أن رسول الله صلى الله عليه وسلم:مَثَلُ البَيْتِ الذي يُذكَرُ اللهُ فيه، والبيت الذي لا يذكرُ الله فيه مَثَلُ الحيِّ والميِّت.
(بخاري, مسلم)
ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು, ಅಲ್ಲಾಹನಿಗೆ ದ್ಸಿಕ್ರ್ ಹೇಳುವ ಮನೆ ಜೀವಂತವಿರುವವರ ಮನೆಯಂತೆಯೂ ದ್ಸಿಕ್ರ್
ಹೇಳದ ಮನೆಯು ಮರಣ ಹೊಂದಿದವರ ಮನೆಯಂತೆಯೂ ಆಗಿದೆ.
(ವರದಿ ಬುಖಾರಿ ,ಮುಸ್ಲಿಂ)
--------------------------------------------------------
ಇಸ್ಲಾಮಿಕವಾದ ಎಲ್ಲಾ ಕಾರ್ಯಗಳು ನಡೆಯುವ ಮಜ್ಲಿಸ್'ಗೆ ದ್ಸಿಕ್ರ್ ಮಜ್ಲಿಸ್ ಎನ್ನಬಹುದು.
ಅದರಲ್ಲಿ ಸ್ವಲಾತ್ ಮಜ್ಲಿಸ್,ಖುರ್'ಆನ್ ಪಾರಾಯಣ ಮಜ್ಲಿಸ್,ಮೌಲಿದ್'ನ ಮಜ್ಲಿಸ್,
ಇಲ್ಮ್ ಚರ್ಚೆ ಮಾಡುವ ಮಜ್ಲಿಸ್ ಎಲ್ಲವೂ ಒಳಪಡುತ್ತದೆ.ಅದೆಲ್ಲವೂ ದ್ಸಿಕ್ರ್ ಆಗಿದೆ.
ಒಳಿತುಗಳ ಮಜ್ಲಿಸ್ ಮನೆಯೊಳಗೆ ನಡೆದಲ್ಲಿ ಆ ಮನೆಗೆ ತುಂಬಾ ಬರ್ಕತ್ ಇದೆ.
ಇಂದು ಕೆಲವು ಮನೆಗಳಲ್ಲಿ ಯಾವುದೇ ಪುಣ್ಯದಾಯಕ ಮಜ್ಲಿಸ್ ಗಳು ನಡೆಯುತ್ತಿಲ್ಲ.
ಗೀಬತ್,ಫಸಾದ್,ಆಟ ವಿನೋದಗಳು,ಸಿನೆಮಾ ಸೀರಿಯಲ್ ಗಳಿಂದ ಶೈತಾನಿಯತ್ ತುಂಬಿ ತುಳುಕುವ ಮನೆಗಳಲ್ಲಿ ಯಾವ ಬರ್ಕತನ್ನು ನಿರೀಕ್ಷಿಸಬೇಕು?
ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರೂ ಕೂಡಾ ನಿಷಿದ್ಧವಾದ ಸಂಗತಿಗಳಲ್ಲಿ ಮನೆಯೊಳಗೆ ಏರ್ಪಟ್ಟರೆ ನಮ್ಮ ದುಆ ಹೇಗೆ ತಾನೇ ಅಲ್ಲಾಹು ಖಬೂಲ್ ಮಾಡುವನು?
ಮಕ್ಕಳಿಗೆ ಶಾಲಾ ಕಾಲೇಜುಗಳ ರಜೆ ಲಭಿಸಿದ್ದಲ್ಲಿ ತಂದೆ ಮಕ್ಕಳು ಎಲ್ಲರೂ ಸೇರಿ ಲೂಡೊ ಆಟವಾಡುವ ಖೇದಕರ ಸಂಗತಿ ಕೆಲವೊಂದು ಮನೆಯಲ್ಲಿ ಕಾಣಲಾಗುತ್ತದೆ.ಖಂಡಿತಾ ಆ ಮನೆಗೆ ಬರ್ಕತ್ ಇರಲಾರದು.
ಮನೆಯೊಳಗಿಂದ ಪಿಶಾಚಿಗೆ ಇಷ್ಟವಾಗುವ ಎಲ್ಲಾ ಸಂಗತಿಗಳನ್ನು ದೂರ ಮಾಡಿ ಮಜ್ಲಿಸುದ್ಸಿಕ್ರ್ ಆರಂಭಿಸಬೇಕು.
ಅಲ್ಲಾಹನ ಮಲಕುಗಳಿಗೆ ಮನೆಯೊಳಗೆ ಪ್ರವೇಶವಿರಬೇಕು.
ನಿಷಿದ್ಧವಾದ ಕಾರ್ಯಗಳಿಂದ ದೂರ ಸರಿದು ಒಳಿತಿನ ಮಜ್ಲಿಸ್ ಮನೆಯಲ್ಲಿ ಮಾಡುವಿರಾದರೆ ಖಂಡಿತಾ ಆ ಮನೆಗೆ ಮಲಕುಗಳ ಪ್ರವೇಶವಿದೆ.
*ಎಲ್ಲರಿಗೂ ಶೇರ್ ಮಾಡಿ*
*ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.*
+919902623313
( ವಾಟ್ಸಪ್ ಮಾತ್ರ)
*ಮುಂದುವರಿಯುವುದು........*
ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 03
*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
ಭಾಗ --3
📝 _ಮುನೀರ್ ಸಖಾಫಿ ಸಾಲೆತ್ತೂರು_
_*ಸೂತ್ರ 3 :*_
_*ಪತ್ನಿಯನ್ನು ಉತ್ತಮಳಾಗಿಸುವುದು*_
ಲಭಿಸಿದ ಪತ್ನಿ ಉತ್ತಮಳಾಗಿದ್ದಲ್ಲಿ ಅದು ಪತಿಯ ಭಾಗ್ಯ.
(2 ನೇ ಭಾಗದಲ್ಲಿ ಅದನ್ನು ವಿವರಿಸಲಾಗಿದೆ)
ಪತ್ನಿ ಉತ್ತಮಳಲ್ಲದಿದ್ದಲ್ಲಿ ಅವಳನ್ನು ಉತ್ತಮಳಾಗಿಸುವುದು ಪತಿಯ ಕರ್ತವ್ಯವಾಗಿದೆ.
ಲಭಿಸಿದ ಪತ್ನಿ ಉತ್ತಮಳಾಗದಿರಲು ಹಲವು ಕಾರಣಗಳಿರಬಹುದು.
1.ಮದುವೆಯ ವೇಳೆ ತನಗೆ ಉತ್ತಮ ದೀನ್ ಇರುವ ಪತ್ನಿ ಬೇಕು ಎಂಬ ಸಂಕಲ್ಪ ಇಲ್ಲದಿರುವುದು.
2.ಉತ್ತಮಳದಿದ್ದರೂ ನಾನು ಅವಳನ್ನು ಮದುವೆಯಾದರೆ ಅವಳನ್ನು ಸರಿ ದಾರಿಗೆ ತರುವೆನು ಎಂಬ ಉದ್ದೇಶದಲ್ಲಿ ಮದುವೆಯಾಗಿರುವುದು.
ಏನೇ ಆದರೂ ಪತ್ನಿ ಉತ್ತಮ ಮಹಿಳೆ ಅಲ್ಲದಿದ್ದರೆ ಅವಳನ್ನು ಸರಿಪಡಿಸುವುದು ಪತಿಯಾದವನ ಜವಬ್ದಾರಿಯಾಗಿದೆ.
ಮೊದಲನೇಯದಾಗಿ
ನನಗೆ ಸಾಧ್ಯವಾಗುವ ರೀತಿಯಲ್ಲಿ ನಾನು ಸರಿಪಡಿಸುವೆ.
ಹಿದಾಯತ್ ಅಲ್ಲಾಹನ ಬಳಿ ಎಂದು ತಿಳಿದಿರಬೇಕಾದುದು ಅಗತ್ಯವಾಗಿದೆ.
ಪ್ರವಾದೀ ಝಕರಿಯ್ಯಾ ಅಲೈಹಿಸ್ಸಲಾಮರ ಪತ್ನಿಯ ಬಗ್ಗೆ ಖುರ್'ಆನ್ ಈ ರೀತಿ ಹೇಳಿದೆ,
فَاسْتَجَبْنَا لَهُ وَوَهَبْنَا لَهُ يَحْيَىٰ وَأَصْلَحْنَا لَهُ زَوْجَهُ ۚ إِنَّهُمْ كَانُوا يُسَارِعُونَ فِي الْخَيْرَاتِ وَيَدْعُونَنَا رَغَبًا وَرَهَبًا ۖ وَكَانُوا لَنَا خَاشِعِينَ
(سورة الانبياء 90)
ಮಕ್ಕಳಿಲ್ಲದೆ ಕೊರಗುತ್ತಿದ್ದ ಝಕರಿಯಾ ಅಲೈಹಿಸ್ಸಲಾಮರಿಗೆ ನಾವು ಮಕ್ಕಳನ್ನು ನೀಡಿದೆವು.ಅವರ ಪತ್ನಿಯನ್ನು ನಾವು ಸರಿಪಡಿಸಿದೆವು.
(ಸೂರಾ ಅಂಬಿಯಾಹ್ 90)
ಝಕರಿಯಾ ನೆಬಿಯ ಪತ್ನಿ ಗರ್ಭ ದರಿಸದ ಮಹಿಳೆಯಾಗಿದ್ದರು.ವರ್ಷಗಳ ಬಳಿಕ ಅವರಿಗೆ ಗರ್ಭದಾರಣೆಯ ಶಕ್ತಿಯನ್ನು ಅಲ್ಲಾಹನು ನೀಡಿ ಸರಿಪಡಿಸಿದನು ಎಂದಾಗಿದೆ ಪ್ರಸ್ತುತ ಸೂಕ್ತದ ಉದ್ದೇಶವೆಂದು ಜಲಾಲೈನಿ ಸಹಿತ ಹಲವು ಮುಫಸ್ಸಿರ್ ಗಳು ವಿವರಿಸಿದ್ದಾರೆ.
ಅವರ ನಾಲಗೆ ತುಸು ಉದ್ಧವಿತ್ತು. ಅದನ್ನು ನಾವು ಸರಿ ಪಡಿಸಿದೆವು ಎಂದೂ ಅರ್ಥವನ್ನು ನೀಡಿದ ಇಮಾಮರಿದ್ದಾರೆ.
ಏನೇ ಇರಲಿ!
ಯಾವುದೇ ಕುಂದು ಕೊರತೆಗಳಿದ್ದರೂ ಅಲ್ಲಾಹು ಉದ್ದೇಶಿಸಿದರೆ ಅದೆಲ್ಲವೂ ಸರಿಯಾಗಬಹುದು.
ಅದಕ್ಕಾಗಿ ನನ್ನಿಂದಾಗುವ ಪ್ರಯತ್ನ ನಾನು ಮಾಡುವೆನು ಎಂಬ ನಿಯ್ಯತ್ ಎಲ್ಲ ಪುರುಷರಿಗೂ ಇರಬೇಕು.
*ಪತ್ನಿಯನ್ನು ಸರಿಪಡಿಸುವುದು ಹೇಗೆ?*
ಪತ್ನಿಯಲ್ಲಿ ಇಸ್ಲಾಮಿಯ್ಯತ್ ಬೇಕಾದ ರೀತಿಯಲ್ಲಿ ಕಾಣುತ್ತಿಲ್ಲವಾದರೆ
ಪತ್ನಿಯ ಆರಾಧನಾ ಕರ್ಮಗಳು ಸರಿಯಾಗುವಂತೆ ಮತ್ತು ಅವಳ ಈಮಾನ್ ಹೆಚ್ಚಿಸುವ ಪ್ರಯತ್ನಗಳು ಪತಿಯಂದಿರು ಮಾಡಬೇಕು.
ಅದಕ್ಕಾಗಿ ಕೆಲವೊಂದು ಟಿಪ್ಸ್'ಗಳು.
1.ತಹಜ್ಜುದ್ ನಮಾಝ್ ನಿರ್ವಹಿಸುವಂತೆ ನೋಡಿಕೊಳ್ಳುವುದು.
2.ಪವಿತ್ರ ಖುರ್'ಆನ್ ಪಾರಾಯಣ ಮಾಡಿಸುವುದು.
3.ಕೆಲವು ಪ್ರಾಮುಖ್ಯ ದ್ಸಿಕ್ರ್'ಗಳನ್ನು ಕಂಠಪಾಟ ಮಾಡಿಸುವುದು ಮತ್ತು ಸಾಂಧರ್ಭಿಕವಗಿ ಅದನ್ನು ಹೇಳಿಸುವುದು.
(ಉದಾ:ರಮಳಾನ್ ನ ಮೊದಲನೇ ಹತ್ತರಲ್ಲಿ ಹೇಳಬೇಕಾದ ದ್ಸಿಕ್ರ್,
ರಮಳಾನ್ 10 ನಂತರ ಹೇಳಬೇಕಾದ ದ್ಸಿಕ್ರ್ )
4.ದಾನ ಧರ್ಮ ನೀಡುವಂತೆ ಆಜ್ಞಾಪಿಸುವುದು.
5.ಇಸ್ಲಾಮಿಕ್ ಪುಸ್ತಕಗಳನ್ನು ಓದಿಸುವುದು.
6.ಇಸ್ಲಾಮಿಕ್ ಭಾಷಣಗಳನ್ನು ಕೇಳಿಸುವುದು.
7.ಸುನ್ನತ್ ಜಮಾಅತ್ತಿನ ವಿಶ್ವಾಸವಿರುವ ಮಹಿಳೆಯರೊಂದಿಗೆ ಗೆಳೆತನ ಮಾಡುವಂತೆ ಪ್ರಚೋದಿಸುವುದು ಮತ್ತು ಅವರೊಂದಿಗೆ ಸೇರಿ ದೀನೀ ಕಾರ್ಯ ಚರ್ಚೆ ನಡೆಸುವಂತೆ ಮಾಡಿಕೊಳ್ಳುವುದು.
8.ತಪ್ಪುಗಳ ಎಲ್ಲಾ ದಾರಿಗಳನ್ನು ಬಂದ್ ಮಾಡಿಸುವುದು ಮತ್ತು ಕೆಟ್ಟವರ ಸಹವಾಸ ಮಾಡದಂತೆ ನೋಡಿಕೊಳ್ಳುವುದು.
9.ಪತ್ನಿ ಮತ್ತು ಮಕ್ಕಳು ಸಜ್ಜನ ಶೀಲರಾಗಲು ಅಲ್ಲಾಹನಲ್ಲಿ ನಿರಂತರ ದುಆ ಮಾಡುವುದು ಮತ್ತು ಸಜ್ಜನರಲ್ಲಿ ಅದಕ್ಕಾಗಿ ದುಆ ಮಾಡಿಸುವುದು.
10.ಮಹಿಳೆಯರಿಗೆ ಮಹಿಳೆಯರಿಂದಲೇ ಕಲಿಸುವ ಎಲ್ಲಾ ಸೌಕರ್ಯ ಈಗ ನಮ್ಮೆಡೆಯಲ್ಲಿ ಲಭ್ಯವಿದೆ.ಅದರ ಸದುಪಯೋಗ ಪಡೆಯುವುದು.
ಎಷ್ಟೋ ಮಹಿಳೆಯರು ಪೂರ್ವಕಾಲದಲ್ಲಿ ಕೆಟ್ಟವರಾಗಿದ್ದು ನಂತರ ಮಹಾತ್ಮರ ದುಆ ಬರ್ಕತ್ತಿನಿಂದ್ ಉನ್ನತ ಸ್ಥಾನಕ್ಕೇರಿದ ಚರಿತ್ರೆ ಗ್ರಂಥಗಳಲ್ಲಿದೆ.
ಶಅವಾನತುಲ್ ಬಸರಿಯ್ಯ ಎಂಬ ಮಹಿಳೆ ಅದಕ್ಕೆ ಒಂದು ಉದಾಹರಣೆ ಮಾತ್ರ.
-------------------------------------------------------
*ಎಲ್ಲರಿಗೂ ಶೇರ್ ಮಾಡಿ*
*ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.*
+919902623313
( ವಾಟ್ಸಪ್ ಮಾತ್ರ)
ಮುಂದುವರಿಯುವುದು........
ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 02
*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
ಭಾಗ --2
📝 _ಮುನೀರ್ ಸಖಾಫಿ ಸಾಲೆತ್ತೂರು_
_*ಸೂತ್ರ 1 :*_
*ಒಳ್ಳೆಯ ಪತ್ನಿ*
ಅಲ್ಲಾಹನು ಹೇಳುತ್ತಾನೆ.
وَأَنكِحُوا الْأَيَامَىٰ مِنكُمْ وَالصَّالِحِينَ مِنْ عِبَادِكُمْ وَإِمَائِكُمْ ۚ إِن يَكُونُوا فُقَرَاءَ يُغْنِهِمُ اللَّهُ مِن فَضْلِهِ ۗ وَاللَّهُ وَاسِعٌ عَلِيمٌ
(سورة النور 32 )
ನಿಮ್ಮಲ್ಲಿ ಜೋಡಿಗಳಿಲ್ಲದೆ ಒಂಟಿಯಾಗಿರುವ ಸ್ತ್ರೀ - ಪುರುಷರಿಗೂ ಮತ್ತು ನಿಮ್ಮ ದಾಸ-ದಾಸಿ ಯರಲ್ಲಿ ಸಜ್ಜನರಾಗಿರುವವರಿಗೂ ವಿವಾಹ ಮಾಡಿಕೊಡಿರಿ . ಅವರು ಬಡವರಾಗಿದ್ದರೆ
ಅಲ್ಲಾಹನು ತನ್ನ ಔದಾರ್ಯದಿಂದ ಅವರನ್ನು ಶ್ರೀಮಂತಗೊಳಿಸುವನು.
ಅಲ್ಲಾಹನು ಅತೀ ವಿಶಾಲವಂತನೂ ಸರ್ವಜ್ಞನೂ ಆಗಿರುತ್ತಾನೆ .
(ಸೂರತ್ತುನ್ನೂರ್ 32)
ಒಂಟಿ ಜೀವನ ಯಾರಿಗೂ ಉತ್ತಮವಲ್ಲ.
ಸಮಯವಿಡೀ ಆರಾಧನೆಗಳಲ್ಲಿ ಮಗ್ನರಾಗಿ ಅಲ್ಲಾಹನ ಸಾಮಿಪ್ಯ ಕರಗತ ಮಾಡಲು ಉದ್ದೇಶಿಸಿದ ಸ್ವಹಾಬಿಗಳನ್ನು ಕರೆದು ಮದುವೆಯಾಗುವಂತೆ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಆಜ್ಞಾಪಿಸಿದ್ದು ಹದೀಸುಗಳಲ್ಲಿದೆ.
ತನ್ನ ಮಡದಿಯಾಗಿ ಬರುವವಳು ಒಳ್ಳೆಯ ಪತ್ನಿಯಾದರೆ ಪುರುಷನ ಜೀವನ ಬೆಳಕಾಗುತ್ತದೆ.
ಆತನ ಮನೆ ಮತ್ತು ಕುಟುಂಬ ಬೆಳಕಿನಲ್ಲಿರುತ್ತದೆ.
ವಿರುದ್ಧವಾದರೆ ಕತ್ತಲೆಯೂ ಆಗುತ್ತದೆ.
ಉತ್ತಮ ಪತ್ನಿ ಲಭಿಸಿದವನ ಬಗ್ಗೆ ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ ಕೆಲವೊಂದು ಹದೀಸ್ ನೋಡೋಣ.
عَنْ أَبِي هُرَيْرَةَ رَضِيَ اللَّهُ عَنْهُ عَنْ النَّبِيِّ صَلَّى اللَّهُ عَلَيْهِ وَسَلَّمَ قَالَ : تُنْكَحُ الْمَرْأَةُ لِأَرْبَعٍ : لِمَالِهَا ، وَلِحَسَبِهَا ، وَلِجَمَالِهَا ، وَلِدِينِهَا ، فَاظْفَرْ بِذَاتِ الدِّينِ تَرِبَتْ يَدَاكَ
(بخاري )
ಅಬೂಹುರೈರ (ರ)ವರದಿ,
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ.
ಕೆಲವರು ಸಂಪತ್ತಿಗಾಗಿ ಇನ್ನು ಕೆಲವರು ಕುಲ ನೋಡಿ ಇನ್ನು ಕೆಲವರು ಸೌಂಧರ್ಯ ನೋಡಿಯೂ ಇನ್ನು ಕೆಲವರು ದೀನ್ ನೋಡಿಯೂ ವಿವಾಹವಾಗುವರು.
ನೀನು ದೀನ್ ಇರುವ ಮಹಿಳೆಯನ್ನು ವಿವಾಹವಾಗು.
(ಬುಖಾರಿ)
-----------------------------------------------------
عن عبدالله بن عمرو أنّ الرسول -عليه الصلاة والسلام قال: الدُّنيا متاعٌ، وخيرُ متاعِ الدُّنيا المرأةُ الصَّالحةُ،
(مسلم)
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಪ್ರಪಂಚದಲ್ಲಿರುವ ಸರಕುಗಳ ಪೈಕಿ ಉತ್ತಮವಾದ ಸರಕು ಉತ್ತಮ ಸ್ತ್ರೀಯಾಗಿದ್ದಾಳೆ.
(ವರದಿ : ಮುಸ್ಲಿಂ 1467)
-----------------------------------------------------
عن ثوان قال: قال رسول الله صلي الله عليه وسلم :
ليَتَّخِذْ أَحَدُكُمْ قَلْبًا شَاكِرًا ، وَلِسَانًا ذَاكِرًا ، وَزَوْجَةً تُعِينُه أَحَدَكُمْ عَلَى أَمْرِ الْآخِرَةِ
(احمد 22437 )
ನಿಮ್ಮ ಹೃದಯ ಕೃತಜ್ಞತೆ ಸಲ್ಲಿಸುವ ಹೃದಯವಾಗಿರಲಿ.
ನಾಲಗೆ ಅಲ್ಲಾಹನ ಸ್ಮರಿಸುವಂತಾಗಿರಲಿ.ನಿಮ್ಮ ಪರಲೋಕಕ್ಕೆ ಸಹಾಯ ಮಾಡುವ ಪತ್ನಿಯಿರಲಿ.
(ಇಮಾಮ್ ಅಹ್ಮದ್ ವರದಿ 22437)
-----------------------------------------------------
عَنْ مَعْقِلِ بْنِ يَسَارٍ قَالَ: قَالَ رسول الله صلي الله عليه وسلم : «تَزَوَّجُوا الْوَدُودَ الْوَلُودَ فَإِنِّي مُكَاثِرٌ بِكُمُ الأُمَمَ» (أبو داود 2050)
ಮಹ್'ಖಿಲ್ ಬಿನ್ ಯಸಾರ್(ರ)ವರದಿ,
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಪತಿಯನ್ನು ಅತೀ ಪ್ರೀತಿಸುವ ಹೆಣ್ಣನ್ನು ಮತ್ತು ಅತೀ ಹೆಚ್ಚು ಹೆರುವವಳನ್ನು ಮದುವೆಯಾಗಿರಿ.
ನಿಮ್ಮ ಮೂಲಕ ನನ್ನ ಅನುಯಾಯಿಗಳು ಅಧಿಕವಾಗುವುದನ್ನು ನಾನು ನಿರೀಕ್ಷಿಸುತ್ತೇನೆ.
(ಅಬೂದಾವೂದ್ )
-----------------------------------------------------
ಒಳ್ಳೆಯ ಪತ್ನಿಯು ಒಬ್ಬನ ವಿಜಯದ ಮೂರು ಸಂಕೇತಗಳಲ್ಲಿ ಒಂದಾಗಿದೆಯೆಂದೂ ಕೆಟ್ಟ ಹೆಣ್ಣು ಒಬ್ಬನ ಪರಾಜಯದ ಮೂರು ಸಂಕೇತಗಳಲ್ಲಿ ಒಂದಾಗಿದೆಯೆಂದೂ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದಾರೆ.
قال رسول الله صلى الله عليه وسلم: من سعادة ابن آدم ثلاثة، ومن شقاوة ابن آدم ثلاثة: من سعادة ابن آدم: المرأة الصالحة، والمسكن الصالح، والمركب الصالح، ومن شقاوة ابن آدم: المرأة السوء، والمسكن السوء، والمركب السوء.(احمد )
ಒಬ್ಬನ ವಿಜಯದ ಸಂಕೇತ ಮೂರಾಗಿದೆ.
1. ಉತ್ತಮ ಹೆಣ್ಣು
2.ಉತ್ತಮ ಮನೆ
3.ಉತ್ತಮ ವಾಹನ
ಪರಾಜಯದ ಸಂಕೇತವೂ ಮೂರಾಗಿದೆ.
1.ಕೆಟ್ಟ ಹೆಣ್ಣು
2.ಕೆಟ್ಟ ಮನೆ
3.ಕೆಟ್ಟ ವಾಹನ.
(ವರದಿ :ಇಮಾಮ್ ಅಹ್ಮದ್)
ಒಟ್ಟಿನಲ್ಲಿ ಈ ಎಲ್ಲಾ ಹದೀಸುಗಳಿಂದ ಮತ್ತು ಆಯತ್'ನಿಂದ ಉತ್ತಮ ಪತ್ನಿ ಲಭಿಸಿದವನು ಭಾಗ್ಯವಂತನೆಂದು ಸ್ಪಷ್ಟವಾಗುತ್ತದೆ.
ಉತ್ತಮ ಪುರುಷನಿಗೆ ಉತ್ತಮ ಪತ್ನಿ ಲಭಿಸಿದರೆ ಉತ್ತಮ ಕುಟುಂಬ ಅಲ್ಲಿ ಸೃಷ್ಠಿಯಾಗುತ್ತದೆ.
ಈ ಎರಡರಲ್ಲಿ ಒಂದು ತಪ್ಪಿದರೆ ಆ ಕುಟುಂಬ ಛಿಧ್ರವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ
ಉತ್ತಮ ಬೆಳೆ ಬರಬೇಕಾದಲ್ಲಿ ಉತ್ತಮ ಭೂಮಿ ಬೇಕೆಂಬುದರಲ್ಲಿ ಸಂಶಯವಿಲ್ಲ ತಾನೇ!!
ತನಗೆ ಲಭಿಸಿದ ಪತ್ನಿ ಉತ್ತಮವಲ್ಲದಿದ್ದರೆ ಅವರನ್ನು ಸರಿ ದಾರಿಗೆ ತರುವ ಕೆಲವೊಂದು ಮಾಹಿತಿಗಳು ಮುಂದಿನ ಭಾಗದಲ್ಲಿ.

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 01
*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
📝 _ಮುನೀರ್ ಸಖಾಫಿ ಸಾಲೆತ್ತೂರು_
ಮನೆ ಅಲ್ಲಾಹನ ಅನುಗ್ರಹವಾಗಿದೆ.
ಅಲ್ಲಾಹನು ಹೇಳುತ್ತಾನೆ.
وَاللٰهُ جَعَلَ لَكُمْ مِنْ بُيُوتِكُمْ سَكَنًا
(النحل 80)
ನಿಮ್ಮ ಮನೆಗಳಲ್ಲಿ ಅಲ್ಲಾಹು ನಿಮಗೆ ನೆಮ್ಮದಿ ನೀಡಿದ್ದಾನೆ.
(ಸೂರಾ ಅನ್ನಹ್'ಲ್ 80)
ಇದರ ವ್ಯಾಖ್ಯಾನದಲ್ಲಿ ಇಮಾಮ್ ಅಬುಲ್ಲೈಸ್ (ರ)ಬರೆಯುತ್ತಾರೆ.
معناه وفقكم لبناء البيوت لسكناكم وقراركم
(بحر العلوم)
ನಿಮ್ಮ ವಾಸಕ್ಕಾಗಿ ಮನೆ ನಿರ್ಮಿಸಲು ಅಲ್ಲಾಹು ನಿಮಗೆ ತೌಫೀಖ್ ನೀಡಿದ್ದಾನೆ ಎಂದಾಗಿದೆ ಇದರ ಅರ್ಥ.
(ತಫ್ಸೀರು ಬಹ್ರುಲ್ ಉಲೂಮ್)
*ಮನೆ ಯಾಕೆ?*
ಚಿಕ್ಕದಾದರೂ ಚೊಕ್ಕದಾದ ಒಂದು ಮನೆ ಬೇಕು ಅಂತ ಹೇಳುವುದನ್ನು ನಾವು ಕೇಳುತ್ತಾ ಇರುವೆವು.ಮನೆಯ ಮಹತ್ವ ತಿಳಿದುಕೊಳ್ಳಬೇಕಾದರೆ
ಮನೆಯಿಲ್ಲದವನ ಕಷ್ಟ ಅರ್ಥವಾಗಬೇಕು.
ಒಪ್ಪೊತ್ತಿನ ಆಹಾರ ಬೇಯಿಸಲು,ಕುಟುಂಬಸ್ಥರ ಜೊತೆ ಸಂಭ್ರಮಿಸಲು,ಆಯಾಸವಾದಾಗ ವಿಶ್ರಾಂತಿ ಪಡೆಯಲು,ಸುಖ ನಿದ್ರೆ ಮಾಡಲು,ಎಲ್ಲಾ ವಿಪತ್ತುಗಳಿಂದ ರಕ್ಷಣೆ ಹೊಂದಲು ಮನೆ ಅನಿವಾರ್ಯವಾಗಿದೆ.
ಒಂದು ಹದೀಸ್ ನೋಡಿ,
سلامة الرجل من الفتنة ان يلزم بيته (رواه الديلمي)
ಮನೆಯಲ್ಲಿ ಕೂರುವುದು ಸರ್ವ ನಾಶಗಳಿಗೂ ರಕ್ಷಣೆಯಾಗಿದೆ.
(ಇಮಾಮ್ ದೈಲಮೀ ವರದಿ)
ಚಳಿ,ಸೆಖೆ,ಮಳೆ ಮುಂತಾದವುಗಳಿಂದ ರಕ್ಷಣೆಹೊಂದಲು ಮನೆಯನ್ನೇ ನಾವು ಆಶ್ರಯಿಸುತ್ತೇವೆ.
ಸೂರಿಲ್ಲದೆ ಬಸ್ ಸ್ಟಾಂಡ್ ಗಳಲ್ಲಿ ,ರೈಲ್ವೇ ಸ್ಟೇಶನ್ ಗಳಲ್ಲಿ ಮಲಗುವ ಹಲವು ಜನರನ್ನು ನಾವು ಕಂಡಿದ್ದೇವೆ.
ಮನೆಯಿಲ್ಲದವರಿಗೆ ನೆಮ್ಮದಿಯಿಲ್ಲವೆನ್ನುವುದಕ್ಕೆ ಯಾವ ಪುರಾವೆಯೂ ಒದಗಿಸಬೇಕಾದ ಅಗತ್ಯವಿಲ್ಲ.
*ಸತ್ಯವಿಶ್ವಾಸಿಗೆ ಮನೆಯಿಂದ ಏನು ಪ್ರಯೋಜನವಿದೆ?*
1.ತನ್ನ ಮತ್ತು ಕುಟುಂಬಿಕರನ್ನು ನರಕದಿಂದ ಮೋಚಿಸಲು.
2.ಪರಲೋಕದ ವಿಚಾರಣೆ ಸರಳವಾಗಲು.
3.ಆರಾಧನೆಗಳಲ್ಲಿ ಏರ್ಪಡಲು.
4.ಮಹಿಳೆಯರನ್ನು ಸುರಕ್ಷಿತವಾಗಿಡಲು ಹಾಗೂ ಇನ್ನಿತರ ಹಲವು ಪ್ರಯೋಜನಗಳಿಗಾಗಿ.
ನಾವು ಕಷ್ಟಪಟ್ಟು ದುಡಿದು ನಿರ್ಮಿಸಿದ ಮನೆಯಲ್ಲಿ ನಾವು ಭಾವಿಸಿದಂತಹ ನೆಮ್ಮದಿ ಸಿಗಲಿಲ್ಲ ಎಂದಾದರೆ ನಮ್ಮ ಬೇಸರವೆಷ್ಟಿರಬಹುದು.
ಇಂಶಾ ಅಲ್ಲಾಹ್.
ನಮ್ಮ ಮನೆಗಳಲ್ಲಿ ನೆಮ್ಮದಿಗಾಗಿ 40 ಸೂತ್ರಗಳನ್ನು ವಿವರಿಸುವೆನು.

Monday, April 27, 2020
ಝಿಯಾರತ್ತ್ ಕೇಂದ್ರ 83, ಉಮರ್ ಖಾಝಿ (ರ) ವೆಳಿಯಂಗೋಡ್, ಮಲಪ್ಪುರಂ ಜಿಲ್ಲೆ
*ಝಿಯಾರತ್ತ್ ಕೇಂದ್ರ*
👉👉 8️⃣3️⃣
➖➖➖➖➖➖➖
*ವೆಳಿಯಂಗೋಡ್ ಉಮರ್ ಖಾಝಿ (ರ)*
*ವೆಳಿಯಂಗೋಡು, ಮಲಪ್ಪುರಂ.*
*********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
☪☪☪☪☪☪☪
✍ ಗಫೂರ್ ಬಾಯಾರ್
**********************
ಸುಮಾರು 300 ವರ್ಷಗಳ ಕಾಲ ಭಾರತೀಯರನ್ನು ಗುಲಾಮರನ್ನಾಗಿಸಿಕೊಂಡು ದುರಾಡಳಿತ ನಡೆಸಿದ ಬ್ರಿಟಿಷರ ವಿರುದ್ಧ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ 1920ರ ನಂತರ ಆರಂಭವಾದ ಅಸಹಕಾರ ಚಳುವಳಿಗೂ ಮುನ್ನವೇ ಅಂದರೆ 17ನೇ ಶತಮಾನದಲ್ಲಿ ಬ್ರಿಟಿಷರ ಅನ್ಯಾಯದ ತೆರಿಗೆ ಪದ್ದತಿಯ ವಿರುದ್ಧ ಕಾನೂನು ಅಸಹಕಾರ ಚಳುವಳಿಯಲ್ಲಿ ಮುಂಚೂಣಿಯ ನಾಯಕರಾಗಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾಗಿದ್ದಾರೆ ವೆಳಿಯಂಗೋಡು ಉಮರ್ ಖಾಝಿ (ರ)
ಕೊಡುಂಗಲ್ಲೂರಿಗೆ ಆಗಮಿಸಿದ ಮಾಲಿಕುಲ್ ಹಬೀಬ್ (ರ)ರವರು ಏರಮತ್ತಾಲ್ ಇಲ್ಲತ್ತ್‌ನ ಸೂಫಿವರ್ಯರಾದ ಹುಸೈನ್ (ರ) ಪರಂಪರೆಯ ತಾನೂರ್ ಖಾಝಿಯಾರಕತ್ತ್ ಆಲಿ ಮುಸ್ಲಿಯಾರ್ (ರ) ಮತ್ತು ವೇಳಿಯಂಗೋಡು ಕಾಕತ್ತರ ವೀಟಿಲ್ ಆಮಿನಾ (ರ) ಎಂಬ ದಂಪತಿಗಳ ದ್ವಿತೀಯ ಪುತ್ರನಾಗಿ ಕೇರಳದ ಮಲಪ್ಪುರಂ ಜಿಲ್ಲೆಯ ಪೊನ್ನಾನಿ ಎಂಬಲ್ಲಿ 1765ರಲ್ಲಿ ಜನಿಸಿದರು.
ಪ್ರಾಥಮಿಕ ವಿದ್ಯಾಭ್ಯಾಸದ ನಂತರ ಪೊನ್ನಾನಿಯ ವಲಿಯ ಜಮಾಅತ್ ಮಸೀದಿಯ ಖಾಝಿಯಾದ ಮಮ್ಮಿಕುಟ್ಟಿ (ಖ.ಸಿ) ಯವರಿಂದ ವಿದ್ಯಾರ್ಜನೆ ಮಾಡಿದ ನಂತರ ತಾನೂರ್, ಪೊನ್ನಾನಿ ಮತ್ತು ವೆಳಿಯಂಗೋಡು ಪಳ್ಳಿ ದರ್ಸ್‌ಗಳಲ್ಲಿ ಹಲವಾರು ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಹಿಜರಿ 1218ರಲ್ಲಿ ವೆಳಿಯಂಗೋಡಿನ ಖಾಝಿಯಾಗಿ ನೇಮಿಸಲ್ಪಟ್ಟರು. ಅನಂತರ ಪುನಿಯೂರ್‌ಕುಳಂ, ಕೋಡಂಚೇರಿ, ಚಾವಕ್ಕಾಡ್, ಚೆಟ್ಟುವ, ಕೂತ್'ಪರಮ್‌ನಲ್ಲೂ ಖಾಝಿಯಾಗಿ ಸೇವೆ ಸಲ್ಲಿಸಿದರು.
ಹೆಸರಾಂತ ವಿದ್ವಾಂಸರು ಸೂಫಿವರ್ಯರೂ ಆಗಿದ್ದ ಅವರು ತಮ್ಮ ಸೇವೆಯನ್ನು ಧಾರ್ಮಿಕ ರಂಗಕ್ಕಷ್ಟೇ ಸೀಮಿತವಾಗೊಳಿಸದೆ, ಕವಿಯಾಗಿ, ಸ್ವಾತಂತ್ರ್ಯ ಸಮರ ಸೇನಾನಿಯಾಗಿ, ರಾಜಕೀಯ ಮುತ್ಸದ್ಧಿಯಾಗಿ ಹೀಗೆ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಾ ಮಹತ್ತರವಾದ ಸಾಧನೆ ಮಾಡಿದ ಹೆಗ್ಗಳಿಕೆ ಹೊಂದಿದ್ದರು.
ನಿಮಿಷ ಕವಿಯಾಗಿದ್ದ ವೆಳಿಯಂಗೋಡು ಉಮರ್ ಖಾಝಿ (ರ) ರವರು, ಮಲಯಾಳಂ ಮತ್ತು ಅರಬಿಯಲ್ಲಿ ಹಲವಾರು ಪದ್ಯಗಳನ್ನು ರಚಿಸಿದ್ದಾರೆ. ವಿವಾಹ ಕೌಟುಂಬಿಕ ಜೀವನ ಮತ್ತು ವಿವಾಹ ವಿಮೋಚನೆಯ ವಿಷಯವನ್ನು ಒಳಗೊಂಡ *ಮಖಾಸ್ವಿದುನ್ನಿಖಾಹ್* ಪ್ರವಾದಿ ﷺِ ಚರಿತ್ರೆ ಮತ್ತು ಕೀರ್ತನೆಗಳನ್ನೊಳಗೊಂಡ *ನಫಾಇಸುದ್ದುರರ್* ನಬಿ ﷺِರ ಮದ್‌ಹ್ ಕೀರ್ತನೆಯ *ಸ್ವಲ್ಲಿಲ್ ಇಲಾಹು ಬೈತ್* ಪ್ರಮುಖವಾದವುಗಳು. ಮಲಯಾಳಂನ *ಅಡಿಕಣತ್ತ್ ಬೈತ್* ಮತ್ತು ಅರಬಿಯ *ಖಸ್ವೀದತುಲ್ ಉಮರಿಯ್ಯಾ* ಹೆಸರಾಂತ ಮತ್ತು ಜನಪ್ರಿಯ ರಚನೆಗಳಾಗಿವೆ.
ನಾಲ್ಕು ಬಾರಿ ಹಜ್ ನಿರ್ವಹಿಸಿದ್ದ ಅವರು ದೇಶ-ವಿದೇಶಗಳ ಹೆಸರಾಂತ ಇಸ್ಲಾಮಿಕ್ ವಿದ್ವಾಂಸರೊಂದಿಗೆ ಆತ್ಮೀಯವಾದ ಸ್ನೇಹ ಬಾಂಧವ್ಯವನ್ನು ಹೊಂದಿದ್ದರು.
ಇಮಾಂ ಸ್ವಾವಿ (ರ), ಶರ್'ಖಾವಿ (ರ), ದರ್'ದಿರ್ (ರ), ಫಾಳಲಿ (ರ), ದಿಮ್ಯಾಥಿ (ರ), ಬಾಜೂರಿ (ರ), ಬಜೈರಿಮಿ (ರ), ಹಸನುಲ್ ಅಥ್ವಾರ್ (ರ), ಮೊದಲದವರೊಂದಿಗೆ ಹತ್ತಿರದ ಬಾಂಧವ್ಯವನ್ನು ಹೊಂದಿದ್ದರು.
ಆಧ್ಯಾತ್ಮಿಕ ಶಿಖರಗಳಂತಹ ಕುತುಬುಝ್ಝಮಾನ್ ಮಂಬುರಂ ಸಯ್ಯದಲವಿ ತಂಙಳ್ (ರ), ಕಲ್ಲಿಕೋಟೆ ಶೈಖ್ ಜಿಫ್ರಿ (ರ), ಕಣ್ಣೂರು ಮೌಲಲ್ ಬುಖಾರಿ (ರ), ಕಡಲುಂಡಿ ಜಮಲುಲೈಲ್ಲಿ (ರ), ಚಾವಕ್ಕಾಡ್ ಅಹ್ಮದುಲ್ ಬುಖಾರಿ (ರ), ಉಮರುಲ್ ಖಾಹಿರಿ (ರ), ಅಬ್ದುಲ್ ಅಝಿಝುದ್ದಅ್‌ಲವಿ (ರ) ಮುಂತಾದ ಆಧ್ಯಾತ್ಮಿಕ ಶಿಖರಗಳಂತಹ ಮಹಾನರುಗಳೊಂದಿಗೆ ಹತ್ತಿರದ ಒಡನಾಟವನ್ನು ಹೊಂದಿದ್ದರು.
ಸದಾ ಇಲಾಹಿ ಸ್ಮರಣೆಯಲ್ಲಿ ತೊಡಗಿರುತ್ತಿದ್ದ ಮಹಾನರು ಆಧ್ಯಾತ್ಮಿಕ ಸೇವೆಯ ಜೊತೆಗೆ ಬ್ರಿಟಿಷ್ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು.
*ಬ್ರಿಟಿಷ್ ವಿರುದ್ಧ ಹೋರಾಟ..*
ಟಿಪ್ಪು ಸುಲ್ತಾನ್ (ರ)ರವರನ್ನು ಬ್ರಿಟೀಷರು ಮೇೂಸದಿಂದ ವಧಿಸಿದ ನಂತರ ಅಂದರೆ ಮಲಬಾರಿನಲ್ಲಿ ಟಿಪ್ಪು ಸುಲ್ತಾನರ ಆಳ್ವಿಕೆ ಕೊನೆಗೊಂಡ ನಂತರ ಮಲಬಾರನ್ನು ಆಕ್ರಮಿಸಿಕೊಂಡ ಬ್ರಿಟೀಷರ ವಿರುದ್ಧ ಉಮರ್ ಖಾಝಿ(ರ)ರಿಗೆ ಬೇಸರವಿದ್ದರೂ ಅಷ್ಟು ದ್ವೇಷವಿರಲಿಲ್ಲ
ಕಾರಣ ಆಗ ಈಸ್ಟ್ ಇಂಡಿಯಾ ಕಂಪನಿಯ ಬಹುಪಾಲು ನೌಕರರು ಮಾಪಿಳರೆಂದು ಕರೆಯಲ್ಪಡುವ ಮಲಬಾರಿನ ಮುಸ್ಲಿಮರಾಗಿದ್ದರು. ಅನಂತರ ಬ್ರಿಟಿಷರು ವಿಧಿಸಿದ ಭೂ ತೆರಿಗೆ ಪದ್ಧತಿಯಿಂದಾಗಿ ಬ್ರಿಟಿಷರ ಕಡು ವೈರಿಯಾಗಿ ಬದಲಾದರು.
ಕಾರಣ ಅಲ್ಲಾಹನ ಭೂಮಿಗೆ ತೆರಿಗೆ ವಿಧಿಸುವುದು ಅನ್ಯಾಯ ಎನ್ನುವುದು ಅವರ ನಿಲುವಾಗಿತ್ತು. ಈ ಕಾರಣವೇ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಕಾರಣವಾಯಿತು.
ವೆಳಿಯಂಗೋಡು ಉಮರ್ ಖಾಝಿ (ರ) ಬ್ರಿಟಿಷ್ ವಿರುದ್ಧ ಹೋರಾಟಕ್ಕೆ ಧುಮುಕಿದ ನಂತರ 1772ರಿಂದ 1822ರ ಮಧ್ಯೆ ಮಲಬಾರಿನಲ್ಲಿ ಬ್ರಿಟಿಷ್ ವಿರುದ್ಧ 83 ದಂಗೆಗಳು ನಡೆದಿವೆಯೆಂದು ಸ್ವದರ್ ಅದಾಲತ್ ನ್ಯಾಯಾಲಯಕ್ಕೆ ಅಂದಿನ ಬ್ರಿಟಿಷ್ ಗವರ್ನರ್ ವರದಿ ಕೊಟ್ಟಿದ್ದರು.
ಬ್ರಿಟಿಷ್ ವಿರುದ್ಧದ ಹೋರಾಟಕ್ಕೆ ನೇತೃತ್ವ ನೀಡುತ್ತಿದ್ದುದರಿಂದ ಬ್ರಿಟಿಷ್ ಅಧಿಕಾರಿ ಕಾನೋಲಿ ಎಂಬಾತ ಉಮರ್ ಖಾಝಿ (ರ) ರನ್ನು ಬಂಧಿಸಿ ಗಡಿಪಾರು ಮಾಡಲು ಪ್ರಯತ್ನ ನಡೆಸುತ್ತಿದ್ದ. ಈ ವಿಷಯ ತಿಳಿದ ಉಮರ್ ಖಾಝಿ (ರ)ರು ಬ್ರಿಟಿಷರ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿದರು.
ಉಮರ್ ಖಾಝಿ (ರ)ರವರ ಆಸ್ತಿಗೂ ಮಿತಿಮೀರಿದ ತೆರಿಗೆ ಅಥವಾ ಕಂದಾಯ ವಿಧಿಸಿದ್ದರಿಂದ ಕಂದಾಯ ಕಟ್ಟಲು ನಿರಾಕರಿಸಿದರು. ಈ ಕಾರಣದಿಂದ ಮಹಾನರನ್ನು ವಶಕ್ಕೆ ಪಡೆದ ಬ್ರಿಟಿಷ್ ಪೊಲೀಸರು ಚಾವಕ್ಕಡ್ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶ ತುಕ್ಟಿನಿಬು ಎಂಬುವನ ಮುಖಕ್ಕೆ ಉಗಿದಿದ್ದರು.
ಇದರಿಂದ ಕುಪಿತನಾದ ಜಡ್ಜ್ ಮಹಾನರಿಗೆ ಜೈಲುವಾಸ ವಿಧಿಸಿದನು. ನ್ಯಾಯಾಲಯದ ಆದೇಶದ ಪ್ರಕಾರ ಮಹಾನರನ್ನು ಜೈಲಿನಲ್ಲಿ ಇರಿಸಲಾಗಿತ್ತು.
ಆದರೆ ವಿಲಾಯತಿನ ಪದವಿಗೇರಿದ ಮಹಾನರು ಅಲ್ಲಾಹನು ನೀಡಿದ ಕರಾಮತ್ತಿನಿಂದಾಗಿ ಬ್ರಿಟಿಷರು ಬಂಧಿಸಿ ಜೈಲಿನ ಸೆಲ್ ಒಂದರಲ್ಲಿ ಕೂಡಿ ಹಾಕಿದ್ದರೂ ಸಹ ಅಲ್ಪ ಹೊತ್ತಿನಲ್ಲೇ ಜೈಲಿನ ಹೊರಗಡೆ ಇದ್ದರು. ಇದನ್ನು ಕಂಡ ಜೈಲಿನ ವಾರ್ಡನ್ ಮಹಾನರನ್ನಿರಿಸಿದ್ದ ಸೆಲ್ಲಿನತ್ತ ಧಾವಿಸಿ ಹೋಗಿ ನೋಡಿದಾಗ ಸೆಲ್ಲಿನ ಬಾಗಿಲು ಭದ್ರವಾಗಿ ಮುಚ್ಚಿ ಹಾಕಲಾಗಿದ್ದ ಬೀಗವೂ ಹಾಗೆಯೇ ಇತ್ತು.
ಆದರೆ ಮಹಾನರು ಪವಾಡ ಸದೃಶ ರೀತಿಯಲ್ಲಿ ಹೊರ ಬಂದಿರುವುದನ್ನು ಕಂಡು ದಂಗಾದ ವಾರ್ಡನ್‌ಗೆ ಮಹಾನರು ಸಾಮಾನ್ಯರಲ್ಲ ಎಂಬುದು ಮನದಟ್ಟಾದ ಕಾರಣ ತಕ್ಷಣ ಅವರ ಸಮೀಪ ತೆರಳಿ ಅವರ ಕಾಲಿಗೆ ಬಿದ್ದು ದಯವಿಟ್ಟು ತಾವು ಜೈಲಿಗೆ ಬರಬೇಕು ಇಲ್ಲದಿದ್ದರೆ ತನ್ನ ಕೆಲಸದ ಜೊತೆಗೆ ತಲೆಯೂ ಹೋದೀತು ಎಂದು ಅಂಗಲಾಚಿ ಬೇಡಿದ್ದರಿಂದ ಮಹಾನರು ಮತ್ತೆ ಜೈಲಿಗೆ ತೆರಳಿದ್ದರು.
ಜೈಲಿನ ವಾರ್ಡನ್ ಈ ವಿಷಯವನ್ನು ಕಲೆಕ್ಟರ್‌ನ ಗಮನಕ್ಕೆ ತಂದಾಗ ಕಲೆಕ್ಟರ್, ಉಮರ್ ಖಾಝಿ (ರ) ಯವರಿಗೆ ಒಂದು ಕ್ಷಮಾಪಣಾ ಪತ್ರ ಬರೆದು ಕೊಡುವಂತೆ ಹೇಳಿದರು. ಮಹಾನರು ಅದನ್ನು ನಿರಾಕರಿಸಿದಾಗ ಕೊನೆಗೆ ಕುತುಬುಝ್ಝಮಾನ್ ಮಂಬುರಂ ಸಯ್ಯಿದಲವಿ (ರ) ತಂಙಳರ ಮಧ್ಯಸ್ಥಿಕೆಯಲ್ಲಿ ಮಹಾನರನ್ನು ಯಾವುದೇ ಷರತ್ತಿಲ್ಲದೆ ಬಿಡುಗಡೆಗೊಳಿಸಲಾಯಿತು.
ಹೀಗೆ ಬ್ರಿಟಿಷ್ ಸಾಮ್ರಾಜ್ಯದ ಅನೀತಿಗಳ ವಿರುದ್ಧ ಧೀರ ಹೋರಾಟ ನಡೆಸುತ್ತಾ ಅವರನ್ನು ಸಿಂಹ ಸ್ವಪ್ನದಂತೆ ಕಾಡಿದ್ದ, ಸಮರ ಸೇನಾನಿಯೂ ಧೀರ ಹೋರಾಟಗಾರರೂ ಆಗಿದ್ದ ಶೈಖುನಾರ ಅಂತರಂಗ ಬಹಳ ಮೃದುವಾಗಿತ್ತು.
ಅಂತಹ ಕೆಚ್ಚೆದೆಯ ಆ ಹೋರಾಟಗಾರ ಆಂತರಂಗಿಕವಾಗಿ ತಾಯ ಗರ್ಭದಲ್ಲಿ ಬೆಚ್ಚಗೆ ಸ್ವರ್ಗ ಸುಖ ಅನುಭವಿಸುವ ಮಗುವಿನಂತೆ ಮದೀನಾ ಮುನವ್ವರದ ಒಲವಿನ ಅನುರಾಗದ ಅಲೆಗಳ ಸಿಂಚನದಲ್ಲಿ ಮಿಂದು ಮಿಡಿಯುತ್ತಾ ಮದೀನಾದಲ್ಲಿ ವಿರಾಜಮಾನರಾಗಿರುವ ವಿಶ್ವಾಸೀ ಹೃದಯದ ಉಜ್ವಲ ತಾರೆಯ ಒಲವಿನಪ್ಪುಗೆಗಾಗಿ ಕಾತರದಿಂದ ಕನವರಿಸುತ್ತಾ ಕಾಯುತ್ತಿದ್ದರು.
ಅಂತರಾಳದಲ್ಲಿ ಅಡಗಿರುವ ಮದೀನಾವೆಂಬ ನಯನ ಮನೋಹರವೂ, ಮನಮೋಹಕವೂ ಆದ ಸ್ವರ್ಗದ ತುಣುಕಿನ ಭಾವನಾತ್ಮಕವಾದ ಸೆಳೆತವನ್ನು ಹತ್ತಿಕ್ಕಲಾಗದೆ ಅದೊಂದು ದಿನ ಮದೀನಾದತ್ತ ಹೊರಟೇ ಬಿಟ್ಟರು.
ಹಾಗೆ ಶೈಖುನಾ ಮದೀನಾ ತಲುಪಿದಾಗ ರೌಳಾ ಶರೀಫಿನ ಸುತ್ತಮುತ್ತ ಜನಜಂಗುಳಿ ನೆರೆದಿತ್ತು.
ರೌಳಾ ಶರೀಫಿನ ಮುಂದೆ ನೆರೆದಿದ್ದ ಆಶಿಕೀನ್‌ಗಳೆಲ್ಲರೂ ಸೃಷ್ಟಿಕರ್ತನ ಪ್ರೀತಿ ಪಾತ್ರರಿಗೆ ಸಲಾಮ್ ಹೇಳುವ ತವಕದಿಂದ ಮುನ್ನಡೆಯುತ್ತಿದ್ದರೆ ವೆಳಿಯಂಗೋಡು ಉಮರ್ ಖಾಝಿ (ರ) ಎಂಬ ಈ ಕಥಾನಾಯಕ ಮಾತ್ರ ತನ್ನ ಹೃನ್ಮನಗಳಲ್ಲಿ ಹುದುಗಿದ್ದ ಮದೀನಾ ಮುನವ್ವರದ ಒಲವಿನ ಅನುರಾಗದ ಅನುಬಂಧಗಳನ್ನು ಆಸ್ವಾದಿಸುತ್ತಾ ಮದೀನಾದ ಆ ಮಹಾನ್ ಚೇತನದೊಂದಿಗಿನ ಉಲ್ಲಾಸದ ಸಲ್ಲಾಪಕ್ಕೆ ಕನವರಿಸುತ್ತಾ ಆ ಜನಜಂಗುಳಿಯ ನಡುವೆ ಮೈಮರೆತು ನಿಂತಿದ್ದರು.
ಬಹಳ ಹೊತ್ತಾದರೂ ಅಲ್ಲಿಂದ ಕದಲದೆ ನಿಂತಲ್ಲೆ ನಿಂತಿರುವುದನ್ನು ಕಂಡ ಕಾವಲುಗಾರ ಅಲ್ಲಿಂದ ತೆರಳುವಂತೆ ಸೂಚಿಸಿದ. ಆದರೆ ರೌಳಾ ಶರೀಫಿನ ಅನುರಾಗದ ಅನುಬಂಧದ ಮಧುರಾನುಭೂತಿಯಲ್ಲಿ ಮೈಮರೆತಿದ್ದ ಶೈಖುನಾ ಅಲ್ಲಿಂದ ಕದಲಲಿಲ್ಲ.
ಸಹನೆಗೆಟ್ಟ ಆ ಕಾವಲುಗಾರ ಬಲ ಪ್ರಯೋಗದಿಂದ ಅವರನ್ನು ಅಲ್ಲಿಂದ ಆಚೆ ಎಳೆದೊಯ್ದನು.
ಹೂವಿನ ಮಕರಂದವ ಹೀರುವ ದುಂಬಿಯನ್ನು ಎಷ್ಟು ದೂರ ಅಟ್ಟಿದರೂ ಶರವೇಗದಿಂದ ಆ ದುಂಬಿ ಮತ್ತೆ ಹೂವಿನತ್ತ ಧಾವಿಸಿ ಬರುವಂತೆ ಶೈಖುನಾ ಪುನಃ ರೌಳಾ ಶರೀಫಿನ ಮುಂದೆ ಬಂದು ನಿಂತರು.
ಇದನ್ನು ಕಂಡು ಕುಪಿತನಾದ ಕಾವಲುಗಾರ ಬಲಪ್ರಯೋಗದಿಂದ ಮತ್ತೊಮ್ಮೆ ಅವರನ್ನು ಅಲ್ಲಿಂದ ಎಳೆದೊಯ್ದ.
ನೀಲಾಕಾಶದಲ್ಲಿ ಸ್ವಚ್ಛಂದವಾಗಿ ವಿಹರಿಸುವ ಬಾನಾಡಿಯಂತೆ ರೌಳಾ ಶರೀಫೆಂಬ ಪ್ರೇಮ ಸಾಗರದ ಒಲವಿನ ಅನುರಾಗದ ಅಲೆಗಳ ಆಲಿಂಗನದಲ್ಲಿ ಮೈಮರೆತಿದ್ದ ಶೈಖುನಾ ಕಂಬನಿ ತುಳುಕುವ ಕಂಗಳಿಂದ ಭಾವಪರವಶರಾಗಿ ಎದೆ ತುಂಬಿ ಹಾಡಿದರು...
(ಮಹಾನರು ಅಂದು ರೌಳಾ ಶರೀಫಿನ ಮುಂದೆ ಹಾಡಿದ ಬೈತಿನ ಕೆಲವು ಸಾಲುಗಳು)
*يا أكرم الكرما على اعتابكم*
*عمر الفقير المرتجي لجنابكم*
*يرجو العطاء على البكاء ببابكم*
*والدمع من عينيه سال سجيما*
*صلوا عليه وسلموا تسليما*
*ما جف دفع سال من عينين*
*لكنه يجري على الخدين*
*من حب قلبي سيد الكونين*
*حيا وميتا في التراب رميما*
*صلوا عليه وسلموا تسليما*
*"ಉನ್ನತರಲ್ಲಿ ಅತ್ಯುನ್ನತರಾದ ಮುತ್ತು ನಬಿಯವರೇ ﷺِ...*
*ತಮ್ಮ ರೌಳಾದ ಬಾಗಿಲ ಸನಿಹಕ್ಕೆ ಫಖೀರನಾದ ಉಮರ್ ತಲುಪಿದ್ದಾನೆ. ಹುಟ್ಟಿನಿಂದಲೇ ಅಂತರಾಳದಲ್ಲಿ ಅಡಗಿದ್ದ ಹಂಬಲವಾಗಿತ್ತು ಇದು ನಬಿಯವರೇ ﷺِ*
*ಅಮಾಯಕನಾದ ಈ ಉಮರ್ ತಮ್ಮ ಬಳಿ ಯಾಚಿಸುತ್ತಿರುವನು... ನನ್ನ ಕಂಗಳನ್ನೊಮ್ಮೆ ನೋಡಿರಿ.. ಹಬೀಬಿ ﷺِ ಈ ಕಂಗಳಿಂದ ವರ್ಷ ಧಾರೆಯಂತೆ ಹರಿಯುತ್ತಿರುವ ರಕ್ತದ ಹನಿಗಳಂತಹ ಕಂಬನಿಯಿದು ನಬಿಯವರೇ.. ﷺِ*
*ನಬಿಯೇ ﷺِ ಭಾವರಹಿತವಾದ ಕಂಬನಿಯ ಹನಿಗಳಿದಲ್ಲ. ತಮ್ಮೊಂದಿಗಿನ ಸ್ನೇಹ ಮತ್ತು ಪ್ರೇಮದ ಬಾಂಧವ್ಯವಿದು ನಬಿಯವರೇ ﷺِ*
*ತಾವು ವಿಶ್ರಮಿಸುತ್ತಿರುವ ರೌಳಾ ಶರೀಫನ್ನು ಕಂಡು ಕಣ್ತುಂಬಿಕೊಳ್ಳದೆ ಈ ಕಂಗಳು ಕಂಬನಿ ಹರಿಸುವುದನ್ನು ನಿಲ್ಲಿಸದು ನಬಿಯೇ ﷺِ*
ಎಂದು ಮನಸ್ಸಿನಂತರಾಳದ ಹಾವ ಭಾವಗಳಿಗೆ ಜೀವ ತುಂಬಿ ಭಾವ ಪರವಶತೆಯಿಂದ ಕಂಬನಿ ಮಿಡಿಯುತ್ತಾ ಸುಶ್ರಾವ್ಯವಾಗಿ ಹಾಡುವಾಗ ಆ ಪ್ರೇಮ ಬಾಂಧವ್ಯದ ಮಧುರ ನಿನಾದಕ್ಕೆ ಅಲ್ಲಿ ನೆರೆದಿದ್ದ ಜನಸಾಮಾನ್ಯರ ಕಣ್ಣಾಲಿಗಳೂ ತುಂಬಿ ಬಂದವು.
ಗಿಜಿಗಿಡುತ್ತಿದ್ದ ಜನಸಂದಣಿ ನಿಶ್ಶಬ್ದವಾಗಿ ನೀರವ ಮೌನದಿಂದ ತದೇಕಚಿತ್ತರಾಗಿ ಶೈಖುನಾರ ಹಾಡಿಗೆ ತಲೆದೂಗುತ್ತಿರುವಾಗ ನಿಷ್ಕಳಂಕವಾದ ಆ ಭಾವಜೀವಿಯ ಪ್ರೇಮ ಬಾಂಧವ್ಯಕ್ಕೆ ಭಾಜನರಾದ ಆ ಉಜ್ವಲ ತಾರೆ ﷺِ ರೌಳಾ ಶರೀಫಿನೊಳಗಿಂದ ಮೌನವಾಗಿ ಆಲಿಸಿ ತಲೆದೂಗಿದರು. ಮಾತ್ರವಲ್ಲ, ಅಲ್ಲೊಂದು ವಿಸ್ಮಯಕಾರಿ ಘಟನೆ ನಡೆಯಿತು.
ಏನದ್ಭುತ...!
ಕಬ್ಬಿಣದ ಸಂಕೇೂಲೆಗಳಿಂದ ಭದ್ರಪಡಿಸಲಾಗಿದ್ದ ರೌಳಾದ ಬಾಗಿಲು ತೆರೆಯಿತು. ನೆರೆದ ಜನಸ್ತೇೂಮಕ್ಕೆ ರೇೂಮಾಂಚನ.
ಮದೀನಾದ ಉಜ್ವಲ ತಾರೆಯೊಂದಿಗಿನ ಈ ಭಾವಜೀವಿಯ ಬಾಂಧವ್ಯವ ಕಂಡು ಹೆದರಿ ಕಂಪಿಸಿದ ನಿಯಮಪಾಲಕರು ಅತ್ತಿತ್ತ ಸರಿದರು.
ಎಲ್ಲರೂ ತದೇಕ ಚಿತ್ತದಿಂದ ಆನಂದಾಶ್ಚರ್ಯಚಕಿತರಾಗಿ ನೇೂಡುತ್ತಿದ್ದಂತೆ ಶೈಖುನಾ ಉಮರ್ ಖಾಝಿ (ರ) ರೌಳಾದ ಒಳಗೆ ಪ್ರವೇಶಿಸಿದರು..
ಮುತ್ತು ಹಬೀಬ್ ﷺِ ರವರ ಖಬರ್ ಶರೀಫನ್ನು ಕಂಡು ಕಣ್ತುಂಬಿಕೊಂಡು ಕಂಬನಿ ಮಿಡಿಯುತ್ತಾ ತೃಪ್ತಿಯಾಗುವ ತನಕ ಝಿಯಾರತ್ ಮಾಡಿ ಹೊರಗಿಳಿದಾಗ ಅರಬಿಗಳು ಅನರಬಿಗಳೆಲ್ಲರೂ ಶೈಖುನಾರನ್ನು ಆಲಿಂಗಿಸುತ್ತಾ ಹಾಡಿ ಹೊಗಳಿ ಕೊಂಡಾಡಿದರು.
ಅಲ್ಲಿಂದ ಬೀಳ್ಕೊಂಡ ಶೈಖುನಾ ಉಮರ್ ಖಾಝಿ (ರ) ಮತ್ತೆ ತಾಯಿನಾಡಿಗೆ ಹಿಂದಿರುಗಿದರು.
ತಾಯಿನಾಡಿಗೆ ಮರಳಿದ ನಂತರವೂ ಬ್ರಿಟೀಷರ ವಿರುದ್ಧದ ಹೇೂರಾಟವನ್ನು ಮುಂದುವರೆಸಿದರು.
ಕುತುಬುಝ್ಝಮಾನರಾದ ಮಂಬುರಂ ತಂಙಳ (ಖ.ಸಿ)ರವರ ಬಳಿ ವ್ಯಾಸಂಗ ಮಾಡುತ್ತಿದ್ದಾಗ ವೆಳಿಯಂಗೋಡು ಉಮರ್ ಖಾಝಿ (ರ) ರವರ ಸಹಪಾಠಿಯಾಗಿದ್ದ ಬೈತಾರ್ ಮುಸ್ಲಿಯಾರ್ (ಖ.ಸಿ)ರವರು ಒಂದು ಮಸೀದಿ ನಿರ್ಮಿಸಬೇಕೆಂಬ ಆಕಾಂಕ್ಷೆಯಿಂದ ಸಹೃದಯ ದಾನಿಗಳಿಂದ ಸಹಾಯ ಧನ ಸಂಗ್ರಹಿಸಿ, ಉಮರ್ ಖಾಝಿ (ರ)ರವರಿಗೆ ಆ ಹಣವನ್ನು ನೀಡಿ ಮಸೀದಿ ನಿರ್ಮಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಿದರು.
ದಿನಗಳು ಉರುಳುತ್ತಿದ್ದವು. ಆದರೆ ಉಮರ್ ಖಾಝಿ (ರ)ರವರು ಸುತ್ತಮುತ್ತಲ ಪ್ರದೇಶದಲ್ಲೆಲ್ಲೂ ಮಸೀದಿ ನಿರ್ಮಿಸುತ್ತಿರುವ ಬಗ್ಗೆ ಮಾಹಿತಿ ಲಭಿಸದ ಕಾರಣ ಬೈತಾರ್ ಮುಸ್ಲಿಯಾರ್ (ಖ.ಸಿ)ರವರು ಒಂದು ದಿನ ಕುತುಬುಝ್ಝಮಾನರಾದ ಮಂಬುರಂ ತಂಙಳ (ಖ.ಸಿ)ರವರ ಬಳಿ ಈ ಬಗ್ಗೆ ಹೇಳಿದಾಗ ಮಂಬುರಂ ತಂಙಳ (ಖ.ಸಿ) ರವರು ಈ ಬಗ್ಗೆ ಮರು ಮಾತನಾಡದೆ ನೀವು ಈ ಬಾರಿ ಹಜ್ ನಿರ್ವಹಿಸಲು ಹೋಗಿರಿ ಎಂದರು.
ತಂಙಳರ ಸೂಚನೆಯಂತೆ ಬೈತಾರ್ ಮುಸ್ಲಿಯಾರ್ (ಖ.ಸಿ)ರವರು ಆ ವರ್ಷ ಒಂದು ಹಜ್ ಯಾತ್ರಾ ತಂಡದೊಂದಿಗೆ ಯಾತ್ರೆ ಹೊರಟರು. ಹಜ್ ಯಾತ್ರಾ ತಂಡವು ಸೌದಿ ಅರೇಬಿಯಾದ ತ್ವಾಯಿಫ್ ಎಂಬ ಸ್ಥಳಕ್ಕೆ ತಲುಪಿದಾಗ ಬೈತಾರ್ ಮುಸ್ಲಿಯಾರ್ (ಖ.ಸಿ) ರವರು ಆಕಸ್ಮಿಕವಾಗಿ ಆ ಯಾತ್ರಾ ತಂಡದಿಂದ ಬೇರ್ಪಟ್ಟರು.
ತಂಡದಿಂದ ಬೇರ್ಪಟ್ಟ ಮುಸ್ಲಿಯಾರರು ತಂಡವನ್ನು ಸೇರಿಕೊಳ್ಳಲು ಹರಸಾಹಸ ಪಡುತ್ತಾ ಅಲೆದಾಡುತ್ತಿರುವಾಗ ದಾರಿ ಮಧ್ಯೆ ಒಂದು ಸುಂದರವಾದ ಹೊಸ ಮಸೀದಿ ನಿರ್ಮಾಣವಾಗುತ್ತಿರುವುದನ್ನು ಕಂಡರು. ಅಲ್ಲಿನ ಕೆಲಸಗಾರರೊಂದಿಗೆ ದಾರಿಯ ಕುರಿತು ವಿಚಾರಿಸೋಣವೆಂದು ಅತ್ತ ನಡೆದ ಬೈತಾರ್ ಮುಸ್ಲಿಯಾರ್ (ಖ.ಸಿ)ರವರು ಕೆಲಸಗಾರರಲ್ಲಿ ವಿಚಾರಿಸುತ್ತಿದ್ದಾಗ ಮಾತಿನ ಮಧ್ಯೆ ಆ ಕೆಲಸಗಾರರು ಈ ಮಸೀದಿಯನ್ನು ಕೇರಳದ ಉಮರ್ ಖಾಝಿ (ರ) ಎಂಬ ವ್ಯಕ್ತಿ ನಿರ್ಮಿಸುತ್ತಿರುವುದೆಂದೂ ಕೆಲಸಗಾರರಿಗೆ ಸಂಬಳ ನೀಡಲು ಪ್ರತಿವಾರವೂ ಅವರು ಇಲ್ಲಿಗೆ ಆಗಮಿಸುತ್ತಿರುವರೆಂದೂ ಹೇಳಿದರು. ಅ ಮಸೀದಿಯ ಹೆಸರು *"ಮಸ್ಜಿದುಲ್ ಅಲ್ ಹುನೂದ್"* ಎಂದಾಗಿದೆ.
ಈ ಮಾತು ಕೇಳಿದ ಬೈತಾರ್ ಮುಸ್ಲಿಯಾರ್ (ಖ.ಸಿ)ರವರು ರೋಮಾಂಚಿತರಾದರಲ್ಲದೆ ಮಂಬುರಂ ತಂಙಳ್(ಖ.ಸಿ)ರವರ ಬಳಿ ಮಸೀದಿಯ ಬಗ್ಗೆ ಹೇಳಿದಾಗ ತಂಙಳರು (ರ) ಹಜ್ ನಿರ್ವಹಿಸಲು ಸೂಚಿಸಿದ್ದರ ಮರ್ಮ ಅರಿವಾಯಿತು.
ಉಮ್ಮರ್ ಖಾಝಿಯವರ (ರ.ಅ)ರವರ ಗೌರವಾರ್ಥ ಮಕ್ಕಾದ ಒಂದು ರಸ್ತೆಗೆ ಮಹಾನರ ಹೆಸರಿಡಲಾಗಿದೆ. ಮಕ್ಕಾದಿಂದ ತ್ವಾಯಿಫ್'ಗೆ ತೆರಳುವ ಮಾರ್ಗ ಮಧ್ಯೆ ಸುಮಾರು 12 ಕಿ.ಮೀ ದೂರದಲ್ಲಿ ಮಹಾನರ ಹೆಸರಿನ "ಉಮರ್ ಖಾಝಿ ಸ್ಟ್ರೀಟ್" ಇದೆ.
ಹೀಗೆ ಅಲ್ಲಾಹನ ದೀನಿನ ಸೇವೆ ಮಾಡುತ್ತಾ ಪರಕೀಯರ ಕೈಯಿಂದ ತಾಯಿನಾಡಿನ್ನು ರಕ್ಷಿಸುವ ಸಲುವಾಗಿ ಜನರಲ್ಲಿ ಅರಿವು ಮೂಡಿಸಿ ಸಂಧಿಯಿಲ್ಲದ ಸಮರ ಸಾರಿ ಬ್ರಿಟೀಷ್ ಅಧಿಪತ್ಯಕ್ಕೆ ಸಿಂಹಸ್ವಪ್ನವಾಗಿದ್ದ ಆಧುನಿಕ ಯುಗದ ಅಸಾಮಾನ್ಯರಾದ ಸೂಫಿವರ್ಯ ಶೈಖುನಾ ವೆಳಿಯಂಗೇೂಡು ಉಮರ್ ಖಾಝಿ (ರ)ರವರು ಹಿಜರಿ 1273 ರಮಳಾನ್ 21ರ ತರಾವೀಹ್ ನಮಾಜಿನಲ್ಲಿ 10ನೇ ರಕ್ಕಾತಾದಾಗ ತಲೆ ಸುತ್ತಿ ಬಿದ್ದರು. ಅನಂತರ ರೇೂಗ ಪೀಡಿತರಾದ ಮಹಾನರು ಮೂರು ತಿಂಗಳ ನಂತರ ದುಲ್'ಹಜ್ಜ್ 23ರಂದು ರಾತ್ರಿ ವಫಾತಾದರು. ಇನ್ನಾಲಿಲ್ಲಾಹ್...
ಪೊನ್ನಾನಿ- ಚಾವಕ್ಕಾಡ್ ಮಾರ್ಗದಲ್ಲಿ 8 ಕಿಮೀ ದೂರ ಎಡಪ್ಪಾಲ್ ಸಮೀಪದ ವೆಳಿಯಂಗೇೂಡು ಎಂಬಲ್ಲಿ ಮಹಾನರ ಮಖ್ಬರವಿದೆ.
ಉಮರ್ ಖಾಝಿ (ರ) ರವರ ಆತ್ಮೀಯ ಗೆಳೆಯರಾದ ಝೈನುದ್ದೀನ್ ಮರಕಾರ್ (ಖ:ಸಿ), ರವರ ಮಖ್ಬರವೂ ಉಮರ್ ಖಾಝಿ (ರ)ರವರ ಮಖಾಮಿನ ಹೊರಗಡೆ ಇದೆ.
ನಿಷ್ಕಳಂಕ ಹೃದಯದಿಂದ ಅಲ್ಲಾಹನ ಹಬೀಬಾದ ಮುತ್ತು ನಬಿ ﷺِರನ್ನು ಪ್ರೀತಿಸಿ ಅಲ್ಲಾಹನ ಸಂಪ್ರೀತಿಗೆ ಪಾತ್ರರಾಗಿದ್ದಷ್ಟೇ ಅಲ್ಲದೆ ಆ ಉಜ್ವಲ ತಾರೆಯೇ ತಮ್ಮ ಮುಅಜಿಝಾತ್‌ನಿಂದ ರೌಲಾ ಶರೀಫಿನ ಬಾಗಿಲು ತೆರೆದು ಬರಮಾಡಿಕೊಳ್ಳುವಂತಹ ಸಾರ್ಥಕವಾದ ಜೀವನ ನಡೆಸಿದ ಶೈಖುನಾ ಉಮರ್ ಖಾಝಿ (ರ) ರವರ ಬರ್ಕತ್‌ನಿಂದ ಸರ್ವಶಕ್ತನಾದ ಅಲ್ಲಾಹನು ಕೊರೇೂನ ಎಂಬ ಮಹಾಮಾರಿ ಸೇೂಂಕಿನಿಂದ ಸರ್ವರಿಗೂ ಸಂರಕ್ಷಣೆ ನೀಡುವುದರ ಜೊತೆಗೆ ನಮ್ಮೆಲ್ಲರನ್ನೂ ವಿಜಯಗಳ ಸಾಲಿನಲ್ಲಿ ಸೇರಿಸಲಿ ಆಮೀನ್.
*ಮುಗಿಯಿತು.*
Date: 24:04:2020
#ಜನಸಾಮಾನ್ಯರ_ಆರೋಗ್ಯ_ರಕ್ಷಣೆಯಲ್ಲಿ #CIPLA_ಎಂಬ_ಔಷಧ_ಕಂಪನಿಯ #ಶ್ಲಾಘನೀಯ_ಸೇವೆ
🏥🏥🏥🏥🏥🏥🏥
✍ ಗಫೂರ್ ಬಾಯಾರ್
〰️〰️〰️〰️〰️〰️〰️
ಆರೋಗ್ಯವು ಮಾನವನ ಹಕ್ಕುಗಳಲ್ಲಿ ಒಂದು. ಯಾರೊಬ್ಬರೂ ಸಹ ಆರೋಗ್ಯದಿಂದ ವಂಚಿತರಾಗಿ ಅನಾರೋಗ್ಯಕ್ಕೆ ಒಳಗಾಗಬಾರದು. ಆಕಸ್ಮಾತ್ ಅನಾರೋಗ್ಯಕ್ಕೆ ಒಳಗಾದರೂ ಸಹ ಅಗತ್ಯ ಚಿಕಿತ್ಸೆ ಮತ್ತು ಔಷಧ ದೊರೆಯದೆ ಸಾವಿಗೀಡಾಗಬಾರದು.
ಆರೋಗ್ಯ ಸೇವೆಯು ದುಬಾರಿಯಾದಾಗ ಹೆಚ್ಚಿನ ಸಂಕಷ್ಟ ಅನುಭವಿಸುವವರು ಬಡವರು. ಯಾವುದೇ ವ್ಯಕ್ತಿ ಅನಾರೋಗ್ಯಕ್ಕೊಳಗಾದರೆ ಚಿಕಿತ್ಸೆ ಮತ್ತು ಔಷಧಿಗಳಿಗಾಗಿಯೇ ಬಹಳಷ್ಟು ಹಣ ವ್ಯಯವಾಗುತ್ತದೆ. ಅನಾರೋಗ್ಯಕ್ಕೊಳಗಾದವನು ಬಡವನಾಗಿದ್ದರೆ ಆತನ ಜೀವನಶೈಲಿ ಕುಗ್ಗುವುದರ ಜೊತೆಗೆ ಅನಾರೋಗ್ಯವು ಆತನನ್ನು ಸಾಲದ ಕೂಪಕ್ಕೆ ತಳ್ಳುವ ಸಾಧ್ಯತೆಯೂ ಇರುವುದರಿಂದ ಮಾನಸಿಕವಾಗಿಯೂ ಆತ ಕುಗ್ಗಿಸುತ್ತದೆ. ಹಾಗಾಗಿ ಅದು ಭವಿಷ್ಯದಲ್ಲಿ ಆತನ ಮಕ್ಕಳನ್ನು ಸಂಕಷ್ಟಕ್ಕೀಡು ಮಾಡುವ ಸಾಧ್ಯತೆಯಿರುವುದರಿಂದ ದೇಶದ ಪ್ರಗತಿಗೂ ಅಡ್ಡಿಯಾಗುತ್ತದೆ.
ಆರೋಗ್ಯದ ಮೇಲೆ ಮಾಡುವ ಖರ್ಚನ್ನು ದುರಂತ ವೆಚ್ಚ ಎನ್ನುತ್ತಾರೆ. ಇದನ್ನು ಮನಗಂಡು ಬಡವ-ಶ್ರೀಮಂತ ಭೇದವಿಲ್ಲದೆ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಔಷಧಿ ದೊರಕಿಸಿ ಈ ದುರಂತ ವೆಚ್ಚವನ್ನು ತಗ್ಗಿಸಲು ತಮ್ಮಿಂದಾದ ನೆರವು ನೀಡಬೇಕೆಂಬ ಸದುದ್ದೇಶದೊಂದಿಗೆ ಔಷಧ ತಯಾರಿಕಾ ಕಂಪನಿಯೊಂದನ್ನು ಸ್ಥಾಪಿಸಿ ಎಲೆಮರೆಯ ಕಾಯಿಯಂತೆ ಸಮಾಜಕ್ಕೆ ತಮ್ಮಿಂದಾದ ಕೊಡುಗೆ ನೀಡಿದ ಸಾಧಕರಲ್ಲೊಬ್ಬರಾಗಿದ್ದಾರೆ ಖ್ವಾಜಾ ಹಮೀದ್.
ಮಹಾತ್ಮ ಗಾಂಧೀಜಿ ಮತ್ತು ಪಂಡಿತ್ ಜವಾಹರಲಾಲ್ ನೆಹರುರವರ ಆತ್ಮೀಯರಾಗಿದ್ದ ಖ್ವಾಜಾ ಹಮೀದ್‌ರವರು 1935ರಲ್ಲಿ CIPLA ಎಂಬ ಜೆನೆರಿಕ್ ಔಷಧ ಕಾರ್ಖಾನೆಯನ್ನು ಮುಂಬೈನಲ್ಲಿ ಪ್ರಾರಂಭಿಸಿದರು.
ಪ್ರಾರಂಭದಲ್ಲಿ Chemical, Industrial & Pharmaceutical Laboratories ಆಗಿದ್ದ ಅದು 1984ರಲ್ಲಿ CIPLA laboratories ಆಗಿ ರೂಪಾಂತರ ಹೊಂದಿತು.
CIPLA Laboratoriesನಲ್ಲಿ ಜೆನೆರಿಕ್ ಔಷಧಿಗಳನ್ನು ತಯಾರಿಸಲಾಂಭಿಸಿದಾಗ ಅಮೇರಿಕಾದ ಅಂದಿನ ಸರ್ಕಾರವು ಔಷಧಿ ತಯಾರಿಕೆಯನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಪೇಟೆಂಟ್ ಉಲ್ಲಂಘನೆಯ ಮೊಕದ್ದಮೆ ಹೂಡುವುದಾಗಿ ಬೆದರಿಕೆಯೊಡ್ಡಿತ್ತು. ಆಗ ಭಾರತದ ಪ್ರಧಾನ ಮಂತ್ರಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ಖ್ವಾಜಾ ಹಮೀದ್‌ರವರ ಪುತ್ರರಾದ ಯೂಸುಫ್ ಅಬ್ದುಲ್ ಹಮೀದ್‌ರನ್ನು ಕರೆದು ಚರ್ಚಿಸಿದಾಗ...
"ನನ್ನ ತಂದೆಯವರು ಈ ಔಷಧಿ ಕಂಪನಿಯನ್ನು ಪ್ರಾರಂಭಿಸಿದ್ದು ಲಾಭ ಗಳಿಕೆಯ ಉದ್ದೇಶದಿಂದ ಮಾತ್ರವಾಗಿರದೆ ಎಲ್ಲರಿಗೂ ಉತ್ತಮ ಗುಣಮಟ್ಟದ ಔಷಧಿಯು ಕೈಗೆಟಕುವ ಬೆಲೆಯಲ್ಲಿ ದೊರೆಯುವಂತಾಗಲಿ ಎಂಬ ಸದುದ್ದೇಶದಿಂದಾಗಿತ್ತು" ಅದನ್ನು ತಾವೂ ಮುಂದುವರಿಸುತ್ತಿರುವುದಾಗಿ ಹೇಳಿದರು.
ಈ ಮಾತು ಕೇಳಿದ ಪ್ರಧಾನಿ ಇಂದಿರಾಗಾಂಧಿಯವರು ಔಷಧಿ ತಯಾರಿಕೆಯನ್ನು ನಿಲ್ಲಿಸಬೇಕೆಂಬ ಅಮೆರಿಕದ ಮನವಿಯನ್ನು ತಿರಸ್ಕರಿಸುವುದರ ಯೂಸುಫ್ ಅಬ್ದುಲ್ ಹಮೀದ್'ರ ಒಡೆತನದ ಕಾರ್ಯವೈಖರಿಯನ್ನು ಪ್ರಶಂಸಿಸಿದ್ದರು.
1947ರ ಸ್ವಾತಂತ್ರ್ಯನಂತರ ಭಾರತ ವಿಭಜನೆಯ ಸಮಯದಲ್ಲಿ ಪಾಕಿಸ್ತಾನದ ಜನಕ ಮುಹಮ್ಮದ್ ಅಲಿ ಜಿನ್ನಾ ಹಮೀದ್ ಖ್ವಾಜಾರನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿದಾಗ ಆ ಆಹ್ವಾನವನ್ನು ಹಮೀದ್ ಖ್ವಾಜಾರವರು ತಿರಸ್ಕರಿಸಿ ಭಾರತದಲ್ಲೇ ಉಳಿದರು.
2015ರಲ್ಲಿ ಭಾರತದ ಹೆಸರಾಂತ ಬ್ರಾಂಡ್ (ಫಾರ್ಮಾಸ್ಯೂಟಿಕಲ್) ಮೂರನೇ ಸ್ಥಾನ ಗಳಿಸಿದ್ದ Cipla ವು, ಗುಣಮಟ್ಟ ಮತ್ತು ರಫ್ತು ಶ್ರೇಷ್ಟತೆ ಇತ್ಯಾದಿ ವಿಷಯಗಳಲ್ಲಿ ಈ ತನಕ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಭಾರತದ ಎಂಟು ಸ್ಥಳಗಳಲ್ಲಿ 34 ಉತ್ಪಾದನಾ ಘಟಕಗಳನ್ನು ಹೊಂದಿರುವ CIPLA Laboratories ನಲ್ಲಿ ಮಲೇರಿಯಾ, ಕ್ಷಯರೋಗ, HIV ಸೋಂಕು, ಉಸಿರಾಟದ ತೊಂದರೆ, ಹೃದಯ ಸಂಬಂಧಿ ಕಾಯಿಲೆ , ಸಂಧಿವಾತ, ಮಧುಮೇಹ , ತೂಕ ನಿಯಂತ್ರಣ ಮತ್ತು ಖಿನ್ನತೆಗೆ ಚಿಕಿತ್ಸೆ
ನೀಡಬಲ್ಲ ಉತ್ತಮ ಗುಣಮಟ್ಟದ ಔಷಧಿಗಳನ್ನು ತಯಾರಿಸಿ ದೇಶ ವಿದೇಶಗಳಿಗೆ ರಫ್ತು ಮಾಡುತ್ತಿದೆ.
ಇಂದು ಜಗತ್ತಿನಲ್ಲಿ ಭೀತಿ ಮೂಡಿಸಿ ಸಾವಿರಾರು ಪ್ರಾಣ ಹಾನಿ ಮಾಡಿ ಜಾಗತಿಕ ಅರ್ಥ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿರುವ ಕೋವಿಡ್-19ಗೂ ಸಹ ಮಲೇರಿಯಾ ಮತ್ತು ಹೆಚ್ಐವಿ ವೈರಸ್‌ಗಳಿಗೆ ನೀಡುವ ಆ್ಯಂಟಿ ವೈರಲ್ ಔಷಧಗಳನ್ನು Cipla ಕಂಪನಿ ತಯಾರಿಸಿ ದೇಶ-ವಿದೇಶಗಳಿಗೆ ರಫ್ತು ಮಾಡುತ್ತಾ ಅಮೂಲ್ಯವಾದ ಮಾನವ ಜೀವಗಳನ್ನು ಉಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.
ಅಷ್ಟೇ ಅಲ್ಲದೆ ಯೂಸುಫ್ ಅಬ್ದುಲ್ ಹಮೀದ್‌ರ ಒಡೆತನದ Cipla laboratories ಕೊರೋನಾ ಸೋಂಕು ಪರೀಕ್ಷಿಸುವ ಕಿಟ್ ಅನ್ನು ತಯಾರಿಸಿ ಮೂಲ ಬೆಲೆಯಲ್ಲಿ ಪೂರೈಸುವುದರ ಜೊತೆಗೆ ಜಗತ್ತಿನಲ್ಲಿ ಮರಣಮೃದಂಗ ಬಾರಿಸುತ್ತಿರುವ ಈ ಕೊರೋನಾ ವೈರಸ್‌ಗೆ ಔಷಧಿ ಕಂಡು ಹಿಡಿಯುವ ಸಲುವಾಗಿ ಸಂಶೋಧನೆ ನಡೆಸುತ್ತಿದೆ.
ಆದರೆ ಕೋವಿಡ್ 19 ಎಂಬ ಮಹಾಮಾರಿಯಿಂದಾಗಿ ಇಡೀ ಜಗತ್ತೇ ತಲ್ಲಣಿಸಿರುವಾಗ ಕಾಮಾಲೆ ಕಣ್ಣಿನ ಕೆಲ ಮಾಧ್ಯಮಗಳು ಮಾತ್ರ ಕೋರೋನಾ ವೈರಸ್ಸನ್ನು ಒಂದು ಸಮುದಾಯದ ತಲೆಗೆ ಕಟ್ಟಲು ವಿಫಲ ಪ್ರಯತ್ನ ನಡೆಸುತ್ತಿರುವುದು ವಿಪರ್ಯಾಸ.
🍂🍂🍂🍂🍂🍂🍂🍂
Subscribe to:
Comments (Atom)