Saturday, February 10, 2018

ಝಿಯಾರತ್ತ್ ಕೇಂದ್ರ 62/02 ಅಬ್ದುಲ್ ಬಾರಿ ಮುಸ್ಲಿಯಾರ್ (ಖ:ಸಿ) ವಾಳಕುಳಂ

*​ಝಿಯಾರತ್ತ್ ಕೇಂದ್ರ​​*
ಸಮಸ್ತ ನಾಯಕರು = 10
      ​👉6⃣2⃣
    🔹ಭಾಗ== 02
➖➖➖➖➖➖➖➖➖
*#ಮೌಲಾನಾ_ಅಬ್ದುಲ್ #ಬಾರಿ_ಮುಸ್ಲಿಯಾರ್ (ಖ:ಸಿ), ವಾಳಕುಳಂ, ಪುತುಪ್ಪರಂಬ್, ಕೊಟ್ಟಕಲ್ ಮಲಪ್ಪುರಂ.*
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
🕎🕎🕎🕎🕎🕎🕎🕎🕎

✍ _ಗಫೂರ್ ಬಾಯಾರ್_
***********************

ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ಸುನ್ನತ್ ಜಮಾಅತಿನ ಆಶಯ ಆದರ್ಶಗಳಿಗನುಗುಣವಾಗಿ ಲೇಖನಗಳನ್ನೂ ಬರೆಯುತ್ತಿದ್ದರು.

*ಸಮಸ್ತವು 1929ರಲ್ಲಿ ಅಲ್ ಬಯಾನ್* ಎಂಬ ಮಾಸ ಪತ್ರಿಕೆ ಪ್ರಾರಂಭಿಸಲು ತೀರ್ಮಾನಿಸಿದಾಗ ಅದಕ್ಕೆ ಸಂಪೂರ್ಣ ಬೆಂಬಲ ನೀಡಿದ ಉಸ್ತಾದರು ನಡುವೆ ಆರ್ಥಿಕ ಮುಗ್ಗಟ್ಟಿನಿಂದ ಪತ್ರಿಕೆ ಸ್ಥಗಿತವಾದಾಗ ತಮ್ಮ ಸ್ವಂತ ಖರ್ಚಿನಲ್ಲಿ ತಮ್ಮ ಜನ್ಮ ನಾಡಾದ ಪುತುಪರಂಬಿಲ್'ನಲ್ಲಿ ಪ್ರೆಸ್ ಸ್ಥಾಪಿಸಿ ಪತ್ರಿಕೆಯನ್ನು ಮುನ್ನಡೆಸಿದರು. ಅಂದು ಆ ಮಾಸಿಕದಲ್ಲಿ ಬಹುತೇಕ ಪಾಂಙಿಲ್ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ಖ.ಸಿ) ಮತ್ತು ಅಬ್ದುಲ್ ಬಾರಿ ಉಸ್ತಾದ್ (ಖ.ಸಿ)ರವರ ಲೇಖನಗಳೇ ಇರುತ್ತಿದ್ದವು.

ಕುಗ್ರಾಮವಾಗಿದ್ದ ವಾಳಕುಳಂನ ಪುತುಪರಂಬಿಲ್ ಇಂದು ಬಹಳ ಹೆಸರು ವಾಸಿಯಾಗಿದೆ. ಕಾರಣ *ಎಸ್.ವೈ.ಎಸ್'ನ ಪ್ರಥಮ ಯೂನಿಟ್ ಆರಂಭಿಸಿದ್ದೇ ಪುತುಪರಂಬಿಲ್'ನಲ್ಲಿ.  ಸಮಸ್ತದ ಪ್ರಥಮ ಮದ್ರಸವೂ ಸ್ಥಾಪಿಸಿರುವುದು ಇಲ್ಲಿಯೇ ಆಗಿದೆ. ಮಾತ್ರವಲ್ಲ ಮಹಾನರ  ಮುಂದಾಳತ್ವದಲ್ಲಿ ಸ್ಥಾಪಿತವಾದ ಸುನ್ನತ್ ಜಮಾಅತಿನ ಮುಖವಾಣಿ ಅಲ್ ಬಯಾನ್ ಮಾಸ ಪತ್ರಿಕೆಯ ಪ್ರೆಸ್ ಪುನರ್ ಸ್ಥಾಪಿಸಿರುವುದು ಈ ಪುತುಪರಂಬಿಲ್'ನಲ್ಲಾಗಿತ್ತು. 1930ರಲ್ಲಿ ಸಮಸ್ತದ ನೇೂಂದಣಿಗೆ ಹಣವಿಲ್ಲದಿದ್ದಾಗ ಹಣದ ನೆರವು ನೀಡಿ ಸಮಸ್ತದ ನೇೂಂದಾವಣಿಗೆ ಸಹಕರಿಸಿದ ಸಹೃದಯಿಯಾದ ಮಹಾನರ ತಂದೆಯಾದ ಶೈಖುಲ್ ಕೋಯ ಕುಟ್ಟಿ ಮುಸ್ಲಿಯಾರ್ (ಖ.ಸಿ) ಹಾಗೂ ಸಮಸ್ತದ ಉಪಾಧ್ಯಕ್ಷರಾದ ಸಿ. ಎಚ್ ಹೈದ್ರೂಸ್ ಉಸ್ತಾದ್ (ಖ:ಸಿ) ಅಂತ್ಯ ವಿಶ್ರಮ ಪಡೆಯುತ್ತಿರುವುದೂ ಇದೇ ಪುತುಪರಂಬಿಲ್ ಮಣ್ಣಿನಲ್ಲಾಗಿದೆ.*

ವಾಳಕುಳಂನಲ್ಲಿ ನಡೆಯುವ ಸಮಸ್ತದ ಸಭೆಗಳಿಗೆ ಆಗಮಿಸುತ್ತಿದ್ದ ವಿಧ್ವಾಂಸರಾದ ಶೈಖುನಾ ನೂರುಲ್ ಉಲಮಾ ಎಂ.ಎ. ಉಸ್ತಾದ್ (ಖ.ಸಿ)ರು ಪರಪ್ಪನಂಙಾಡಿಯ ರೈಲು ನಿಲ್ದಾಣದಲ್ಲಿಳಿದು ವಾಳಕುಳಂನ ಸಭೆಗಳಿಗೆ ಕಾಲ್ನಡಿಗೆಯಲ್ಲೇ ಬರುತ್ತಿದ್ದರು. ಈ ಎಲ್ಲ ಕಾರಣದಿಂದ ಪುತುಪರಂಬಿಲ್ ಬಹಳ ಹೆಸರುವಾಸಿಯಾಗಿದೆ.

ಕಲ್ಲಿಕೇೂಟೆಯ ವಾಳಕುಳಂನ ಕುಟ್ಟಿ ಹಸನ್ ಎಂಬುವವರ ಪುತ್ರಿ ಆಯಿಷರನ್ನು ವರಿಸಿದ  ಉಸ್ತಾದರಿಗೆ ಒಟ್ಟು ಮೂವರು ಪತ್ನಿಯರಿದ್ದು ಒಂದರಲ್ಲೂ ಸಂತಾನ ಭಾಗ್ಯ ಲಭಿಸಲಿಲ್ಲ.

ಸದಾ ಇಬಾದತ್ತಿನಲ್ಲೂ, ದಿಕ್ರ್'ನಲ್ಲೂ ನಿರತರಾಗುತ್ತಿದ್ದ ಮಹಾನರು ಖಾದಿರಿಯ್ಯ ತ್ವರೀಖತ್ತಿನ ಶೈಖ್ ಆಗಿದ್ದರು. ಉತ್ತಮ ವಾಗ್ಮಿಯೂ ಆಗಿದ್ದ ಮಹಾನರ ಪಾಂಡಿತ್ಯಕ್ಕೂ ಹೆಸರಿಗೂ ಒಪ್ಪುವಂತಹ *ಒಂದು ಜ್ಞಾನ ಕೇಂದ್ರ ನಿರ್ಮಿಸಬೇಕೆಂದು ಭಾವಿಸಿದ ಊರಿನ ದೀನೀ ಪ್ರೇಮಿಗಳು ಮತ್ತು ಎ.ಪಿ. ಉಸ್ತಾದ್ ಒಳಗೊಂಡ ವಿದ್ವಾಂಸರು ಸೇರಿ ಮಹಾನರ ನಾಮದೇಯದಲ್ಲಿ ಅವರ ಜನ್ಮನಾಡಿನಲ್ಲಿಯೇ ರೂಪ ಕೊಟ್ಟ "ಮೌಲಾನಾ ಅಬ್ದುಲ್ ಬಾರಿ ಇಸ್ಲಾಮಿಕ್ ಅಕಾಡಮಿ"* ಎಂಬ ದೀನೀ ವಿದ್ಯಾ ಕೇಂದ್ರ ಸ್ಥಾಪಿಸಿದರು. ಈ ವಿದ್ಯಾಕೇಂದ್ರದ ಅಧೀನದಲ್ಲಿ *"ಇಖಾಮತುಸ್ಸುನ್ನ: ದಆವಾ & ಶರೀಅತ್ತ್ ಕಾಲೇಜುಗಳಿದ್ದು ಇದರಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ದೀನೀ ಕೇಂದ್ರದ ಅಧೀನದಲ್ಲಿ ಆಚರಿಸಿಕೊಂಡು ಬರುತ್ತಿರುವ ಮಹಲರತ್ತುಲ್ ಬದ್ರಿಯ್ಯ ಒಳಗೊಂಡ ಆದ್ಯಾತ್ಮಿಕ ಸದಸ್ಸುಗಳಲ್ಲಿ ಅಸಂಖ್ಯ ವಿಶ್ವಾಸಿಗಳು ಬಾಗವಹಿಸುತ್ತಿರುವುದು ಶ್ಲಾಘನೀಯ.*

ಮಸ್ಜಿದುಲ್ ಮುಹೈಮಿನು ಹಾಗು ಬಾರಿ ಸುನ್ನಿಯ್ಯ ಮದ್ರಸವು ಪ್ರಸ್ತುತ ಮೌಲಾನಾ ಅಬ್ದುಲ್ ಬಾರಿ ಇಸ್ಲಾಮಿಕ್ ಅಕಾಡೆಮಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮತ್ತೊಂದು ಸಂಸ್ಥೆಯಾಗಿದೆ.

87 ವರ್ಷದವರೆಗೆ ಜೀವಿಸಿದ ಮಹಾನರು
ತಮ್ಮ ಜೀವನ ಪರ್ಯಂತ ಸುನ್ನತ್ತ್ ಜಮಾಅತ್ತಿನ ಉನ್ನತಿ ಮತ್ತು ಏಳಿಗೆಗಾಗಿ ಶ್ರಮಿಸುತ್ತಲೇ ಹಿಜರಿ 1385 ಜುಮಾದುಲ್ ಅವ್ವಲ್ 2ರ ಆದಿತ್ಯವಾರ ವಫಾತಾದರು.

1951ರಲ್ಲಿ ಪುತುಪ್ಪರಂಬಿಲ್'ನಲ್ಲಿ ಮಹಾನರೇ ನಿರ್ಮಿಸಿದ್ದ ಮಸ್ಜಿದುಲ್ ಬಾರಿಯ ಮುಂಭಾಗದಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
ಮಹಾನವರೊಂದಿಗೆ ನಮ್ಮನ್ನು ಅಲ್ಲಾಹನು ಸ್ವರ್ಗಲೋಕದಲ್ಲಿ ಒಂದು ಗೂಡಿಸಲಿ ಆಮೀನ್.

ದಾರಿ: ಪುತುಪ್ಪರಂಬಿಲ್ ವಾಳಕುಳಂ ಕೊಟ್ಟಕ್ಕಲ್, ಮಲಪ್ಪುರಂ.

ಮುಗಿಯಿತು.🕎
💢💢💢💢💢💢💢💢💢

ಝಿಯಾರತ್ತ್ ಕೇಂದ್ರ 62/01 ಅಬ್ದುಲ್ ಬಾರಿ ಮುಸ್ಲಿಯಾರ್ (ಖ:ಸಿ) ವಾಳಕುಳಂ

*​ಝಿಯಾರತ್ತ್ ಕೇಂದ್ರ​​*
ಸಮಸ್ತ ನಾಯಕರು = 10
      ​👉6⃣2⃣
ಭಾಗ= 01
➖➖➖➖➖➖➖➖➖
*#ಮೌಲಾನಾ_ಅಬ್ದುಲ್_ಬಾರಿ ಮುಸ್ಲಿಯಾರ್ (ಖ:ಸಿ), ವಾಳಕುಳಂ, ಪುತುಪ್ಪರಂಬ್, ಕೊಟ್ಟಕಲ್ ಮಲಪ್ಪುರಂ.*
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
🕎🕎🕎🕎🕎🕎🕎🕎🕎

✍ ಗಫೂರ್ ಬಾಯಾರ್
***********************

ಸಮಸ್ತದ ಕೇರಳ ಜಂಇಯ್ಯತುಲ್ ಉಲಮಾದ ಸ್ಥಾಪಕರಲ್ಲಿ ಪ್ರಮುಖರೂ ಅಗಾಧ ಪಾಂಡಿತ್ಯದ ವಿಧ್ವಾಂಸರೂ ಸೂಫಿವರ್ಯರೂ ಆದ *ಮೌಲಾನಾ ವಾಳಕುಳಂ ಅಬ್ದುಲ್ ಹಖ್ ಮುಹಮ್ಮದ್ ಅಬ್ದುಲ್ ಬಾರಿ (ಖ:ಸಿ)* ರವರು ಪಾಂಙಿಲ್ ಉಸ್ತಾದರ ಬಳಿಕ ಸುಧೀರ್ಘ ಇಪ್ಪತ್ಮೂರು ವರ್ಷಗಳ ಕಾಲ ಸಮಸ್ತದ ಅಧ್ಯಕ್ಷರಾಗಿ ಸುನ್ನತ್ ಜಮಾಅತಿನ ಏಳಿಗೆಗಾಗಿ ಶ್ರಮಿಸಿದ ಮಹಾನುಭಾವರು.

ಮಲಪ್ಪುರಂ ಜಿಲ್ಲೆಯ ಕೊಟ್ಟಕಲ್'ನ ಸಮೀಪದ ವಾಳಕುಳಂ (ಪುತುಪ್ಪರಂಬ್) ಎಂಬ ಊರಿನ ಸಾತ್ವಿಕರೂ, ಸೂಫಿವರ್ಯರೂ ಆಗಿದ್ದ 'ಖಾಜಾ ಅಹ್ಮದ್' ಎಂಬ ಕೋಯ ಕುಟ್ಟಿ ಮುಸ್ಲಿಯಾರ್ (ಖ:ಸಿ) ಮತ್ತು ಹಿಜರಿ 1275ರಲ್ಲಿ ಮಕ್ಕಾದಲ್ಲಿ ವಫಾತಾದ ವಾಳಕುಳಂ ಕಾರಾಟ್ಟು ಖಾಝಿಯಾಗಿದ್ದ ಅಬ್ದುರ್ರಹ್ಮಾನ್ ಮುಸ್ಲಿಯಾರ್ (ಖ.ಸಿ)ರವರ ಪುತ್ರಿ ಫಾತಿಮಾ ದಂಪತಿಗಳ ಪುತ್ರರಾಗಿ ಮುಹಮ್ಮದ್ ಅಬ್ದುಲ್ ಬಾರಿ (ಖ.ಸಿ) ರವರು ಹಿಜರಿ 1298 ಜುಮಾದುಲ್ ಆಖ್ರ್ 21ರಂದು ಜನಸಿದರು.

(ಸೂಫಿವರ್ಯರಾಗಿದ್ದ  ಮಹಾನರ ತಂದೆಯವರು ಆಧುನಿಕ ವ್ಯವಸ್ಥೆಗಳು ಯಾವುದೂ ಇಲ್ಲದ ಕಾಲದಲ್ಲೇ ಆರು ಸಲ ಹಜ್ಜ್  ನಿರ್ವಹಿಸಿದ್ದರು.

ಸಾತ್ವಿಕರಾಗಿದ್ದ  ತಂದೆಯವರು ಮಕ್ಕಾದ ಶೈಖ್ ಅಬ್ಬಾಸಿ ಬಿನ್ ಸಯ್ಯಿದ್ ಮುಹಮ್ಮದ್ ರಿಳ್'ವಾನ್ (ಖ.ಸಿ)ರಿಂದ ತ್ವರೀಖತ್ತಿನ ಅನುಮತಿ (ಇಜಾಝತ್) ಪಡೆದಿದ್ದರು. ಪರಪ್ಪನಂಗಾಡಿಯ ಅವು ಕೇೂಯ ಮುಸ್ಲಿಯಾರ್ (ಖ:ಸಿ) ಆಧ್ಯಾತ್ಮಿಕ ಗುರುವಾಗಿದ್ದರು.
88ನೇ ಪ್ರಾಯದಲ್ಲಿ 1348 ಜಮಾದುಲ್ ಆಖಿರ್ 20ಕ್ಕೆ ಇಹಲೋಕ ತ್ಯಜಿಸಿದ ತಂದೆಯವರು ಪುದುಪ್ಪರಂಬ್ ಜುಮಾ ಮಸೀದಿಯ ಪರಿಸರದಲ್ಲಿ ಅಂತ್ಯವಿಶ್ರಮ ಪಡೆಯುತ್ತಿದ್ದಾರೆ.)

 ಪ್ರಾಥಮಿಕ ವಿದ್ಯಾಭ್ಯಾಸ ತಂದೆಯಿಂದಲೇ ಕಲಿತ ಮೌಲಾನಾ ಅಬ್ದುಲ್ ಬಾರಿ(ಖ:ಸಿ)ರವರು  ನಾದಾಪುರಂ ಮುಹಮ್ಮದ್ ಶಿರಾಸಿ (ಖ:ಸಿ), ಕೊಡಾಂಚೆರಿ ಅಹ್ಮದ್ ಮುಸ್ಲಿಯಾರ್ (ಖ:ಸಿ), ಪೊನ್ನಾನಿ ಚೆರಿಯ ಅವರನ್ ಕುಟ್ಟಿ ಮುಸ್ಲಿಯಾರ್ (ಖ:ಸಿ)ರಂತಹ ವಿಧ್ವಾಂಸರಿಂದ ವಿದ್ಯಾರ್ಜನೆ ಮಾಡಿ ನಂತರ1316ರಲ್ಲಿ ವೆಲ್ಲೂರ್ ಬಾಖಿಯಾತ್ತುಲ್ ಸ್ವಾಲಿಹತ್ತ್'ಗೆ ಸೇರಿ1321ರಲ್ಲಿ "ಬಾಖವಿ" ಬಿರುದಿನೊಂದಿಗೆ ಹೊರ ಬಂದರು.

ನಂತರ ಕಲ್ಲಿಕೋಟೆ, ಅಯ್ಯಾಯ, ತಾನಾಳ್ಳೂರ್, ವಳವನ್ನೂರ್, ಕಾನಾಂಚೆರಿ ವಾಳಕುಳಂ ಪುತುಪ್ಪರಂಬ್ ಮೊದಲಾದೆಡೆ ದರ್ಸ್ ನಡೆಸಿದರು. ಚೆರೂರಿನಲ್ಲಿ ದೀರ್ಘಕಾಲ ಮುದರ್ರಿಸಾಗಿದ್ದರು. ಜನ್ಮನಾಡಾದ ವಾಳಕುಳಂ ಪುತುಪ್ಪರಂಬ್'ನಲ್ಲಿ 1921 ರಿಂದ ಸುದೀರ್ಘ ನಲವತ್ತು ವರ್ಷಗಳ ಕಾಲ ದರ್ಸ್ ನಡೆಸಿದ್ದರು.

ಈ ನಡುವೆ ಭಾರತ ಸ್ವಾತಂತ್ರ್ಯ ಸಂಗ್ರಾಮದ ಖಿಲಾಫತ್ತ್ ಚಳುವಳಿಯಲ್ಲೂ ಭಾಗಿಯಾಗಿದ್ದರು.
ಈಗಿನ ಚೆನೈನಲ್ಲಿ ನಡೆದ ಖಿಲಾಫತ್ತ್ ಸಮ್ಮೇಳನದಲ್ಲಿ ವಹ್ಹಾಬಿ ಮೌಲವಿಗಳು  ಕೇರಳಕ್ಕಾಗಿ ಜಂಇಯ್ಯತುಲ್ ಉಲಮಾ ಎಂಬ ಸಂಘಟನೆ ಸ್ಥಾಪಿಸಲು ತೀರ್ಮಾನಿಸಿದಾಗ  ಪ್ರತಿನಿಧಿಯಾಗಿ ಭಾಗವಹಿಸಿದ್ದ ಮೌಲಾನಾ ಅಬ್ದುಲ್ ಬಾರಿ ಉಸ್ತಾದ್ (ಖ:ಸಿ) ಅದನ್ನು ಖಂಡಿಸಿ ಕೇರಳದ ವಿಧ್ವಾಂಸರೊಂದಿಗೆ ಚರ್ಚಿಸದೆ ಯಾವ ಜಂಇಯ್ಯತುಲ್ ಉಲಮಾವೂ ಬೇಡ ಎಂದು ಪ್ರತಿಪಾದಿಸಿದರು.

ಆದರೆ ಆ ಮಹಾನರ ಅಭಿಪ್ರಾಯವನ್ನು ನಿರ್ಲಕ್ಷಿಸಿದ ವಹ್ಹಾಬಿ ಪ್ರಮುಖರು "ಕೇರಳ ಜಂಇಯ್ಯತುಲ್ ಉಲಮಾ" ಎಂಬ ಸಂಘಟನೆಗೆ ರೂಪು ಕೊಡಲು ತೀರ್ಮಾನಿಸಿದರು. ಇದರಿಂದ ಸುನ್ನತ್ ಜಮಾಅತಿನ ಆಶಯಕ್ಕೆ ತೊಡಕುಂಟಾಗಬಹುದೆಂದು ಮನಗಂಡ ಉಸ್ತಾದರು ಕೇರಳಕ್ಕೆ ಮರಳಿ ಸುನ್ನತ್ ಜಮಾಅತಿನ ವಿಧ್ವಾಂಸರು ಮತ್ತು ಪಂಡಿತರೊಂದಿಗೆ ಚರ್ಚಿಸಿ ಸಯ್ಯಿದ್ ವರಕ್ಕಲ್ ಮುಲ್ಲಕೋಯ ತಂಙಳ್ (ರ) ರವರ ಮುಂದಾಳತ್ವದಲ್ಲಿ *"ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ"* ಎಂಬ ಮಹನೀಯ ಸಂಘಟನೆ ಸ್ಥಾಪಿಸಲು ಒತ್ತು ನೀಡಿದರು.

ಅಗರ್ಭ ಶ್ರೀಮಂತರಾಗಿದ್ದ ಮೌಲಾನಾ ಅಬ್ದುಲ್ ಬಾರಿ(ಖ.ಸಿ) ಉಸ್ತಾದರು ಕೊಡುಗೈ ದಾನಿಯಾಗಿದ್ದು ಅಲ್ಲಾಹನು ನೀಡಿದ ಸಂಪತ್ತೆಲ್ಲವನ್ನೂ ದೀನೀ ಸೇವೆಗೆ ವಿನಿಯೇೂಗಿಸಿದ್ದರು.

1929ರಲ್ಲಿ ಪಾಲಕ್ಕಾಡ್ ಜಿಲ್ಲೆಯ ವಲ್ಲಪುಝ ಚೆಮ್ಮಮ್'ಕುಯಿ ಎಂಬಲ್ಲಿ ನಡೆದ ಸಮಸ್ತದ ಮಹಾ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.

ಇಂಗ್ಲೀಷ್, ಅರೇಬಿಕ್, ಉರ್ದು, ತಮಿಳು ಮತ್ತು ಪಾರ್ಸಿ ಭಾಷೆಗಳನ್ನು ಬಲ್ಲವರಾಗಿದ್ದ ಮಹಾನರು ಗ್ರಂಥಕರ್ತರೂ ಆಗಿದ್ದರು.
 ಅಲ್ಲಾಹನು ನೀಡಿದ ಅಗಾಧ ಜ್ಞಾನವನ್ನು ಸದುಪಯೋಗ  ಪಡಿಸಿಕೊಂಡು *2648 ಹದೀಸುಗಳನ್ನೊಳಗೊಂಡ ಸಿಹಾಹೂ ಶೈಖೈನಿ, ಜಂಉಲ್ ಬಾರಿ, ಅಲ್ ಮುತಫರ್'ರಿದ್ ಫಿಲ್ ಫಿಖ್ಹ್, ಅಲ್ ವಸೀಲತ್ತುಲ್ ಉಳ್'ಮ, ಅಲ್ ಮೌಲಿದುಲ್ ಮನ್'ಖೂಸ್, ಸ್ವಿರಾತ್ವುಲ್ ಇಸ್ಲಾಂ ಮೊದಲಾದ ಹಲವಾರು ಹೆಸರಾಂತ ಗ್ರಂಥಗಳನ್ನು ರಚಿಸಿದ್ದಾರೆ.*

ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ಸುನ್ನತ್ ಜಮಾಅತಿನ ಆಶಯ ಆದರ್ಶಗಳಿಗನುಗುಣವಾಗಿ ಲೇಖನಗಳನ್ನೂ ಬರೆಯುತ್ತಿದ್ದರು.

☪ಸಮಸ್ತದ ಪತ್ರವಾದ..

ಮುಂದುವರಿಯುವುದು
❇❇❇❇❇❇❇❇❇

Friday, February 9, 2018

*ಅಲ್ಲಾಹು ಪ್ರವಾದಿಗಳಿಗೆ ನೀಡಿದ ನಮಾಜುಗಳು*

🕌ಇಮಾಂ ರಾಫಿಈ (ರ)  ಹೇಳುತ್ತಾರೆ:

1- ಆದಂ ನೆಬಿ ಅಲೈಹಿಸ್ಸಲಾಂ ಅವರಿಗೆ ಅಲ್ಲಾಹು ನೀಡಿದ ನಮಾಜು
*ಫಜರ್* ಆಗಿತ್ತು.

2- ದಾವೂದ್ ನೆಬಿ ಅಲೈಹಿಸಲಾಂ ಅವರಿಗೆ ಅಲ್ಲಾಹು ನೀಡಿದ ನಮಾಜು *ಲುಹರ್* ಆಗಿತ್ತು.

3- ಸುಲೈಮಾನ್ ನೆಬಿ ಅಲೈಹಿಸಲಾಂ ಅವರಿಗೆ ಅಲ್ಲಾಹು ನೀಡಿದ ನಮಾಜು *ಅಸರ್* ಆಗಿತ್ತು.

4-ಯಾಅ್'ಕೂಬ್ ನೆಬಿ ಅಲೈಹಿಸಲಾಂ ಅವರಿಗೆ ಅಲ್ಲಾಹು ನೀಡಿದ ನಮಾಜು *ಮಗ್ರಿಬ್* ಆಗಿತ್ತು.

5- ಯೂನುಸ್ ನೆಬಿ ಅಲೈಹಿಸಲಾಂ ಅವರಿಗೆ ಅಲ್ಲಾಹು ನೀಡಿದ ನಮಾಜು *ಇಶಾ* ಆಗಿತ್ತು.

( *ಫತ್ಹುಲ್ ಜವಾದ್ 1/95* )

✍ ಗಫೂರ್ ಬಾಯಾರ್
〰〰〰〰〰〰〰
*ಹೆಂಡತಿಯ ಬಗ್ಗೆ ನಾಲ್ಕು ಒಳ್ಳೆಯ ಮಾತು:*

ಹುಡುಗಿ ನೋಡೋಕೆ ಹೋದಾಗ ಮೊದಲ ಬಾರಿ ಆಕೆಯನ್ನು ನೋಡಿದಾಗ ಸೌಂದರ್ಯವಿಲ್ಲದ, ಕೇವಲ ಒಬ್ಬಳು ಹುಡುಗಿಯಾಗಿದ್ದಳು ನನಗೆ ಆಕೆ....!!

ಇಷ್ಟಪಟ್ಟು ಒಪ್ಪಿಗೆ ಸೂಚಿಸಿ,
ಫೋನ್ ನಂಬರ್ ಪಡೆದು ಅಲ್ಲಿಂದ ಹೊರಟು, ಮದುವೆಗೆ ಮುಂಚಿನ ದಿನಗಳಲ್ಲಿ ಆಕೆಯ ಜೊತೆ ಫೋನ್ ನಲ್ಲಿ ಮಾತನಾಡುತ್ತಾ ಆಕೆ ನನ್ನ ಪ್ರೇಯಸಿಯಾದಳು....!!

ಮದುವೆಯಾದ ಬಳಿಕ ಆಕೆ ನನ್ನ ಆದರ್ಶ ಪತ್ನಿಯಾದಳು....!!

ನಾನು ದುಃಖದಲ್ಲಿರುವಾಗ ನನ್ನ ಬಳಿ ಬಂದು ಸಾಂತ್ವನ ಹೇಳುವ ನನ್ನ ಒಳ್ಳೆಯ ಸ್ನೇಹಿತೆಯಾದಳು ...!!

ನನ್ನನ್ನು ದೂರುವ ಜನರ ಮುಂದೆ ನನ್ನ ಪರವಾಗಿ ವಾದಿಸುವ ನ್ಯಾಯಾಧೀಶೆಯಾದಳು....!!

ಜ್ವರದಿಂದ ಎದ್ದೇಳಲಾಗದೆ ಹಾಸಿಗೆಯಲ್ಲಿ ಬಿದ್ದಿರುವ ನನ್ನನ್ನು ಪರಿಚರಿಸುವ ಡಾಕ್ಟರ್ ಆದಳು.‌...!!

ಹಸಿದು ನಾನು ಮನೆಗೆ ಬಂದಾಗ ಇಷ್ಟವಾದ ತಿಂಡಿ-ತಿನಿಸುಗಳನ್ನು ಮಾಡಿಕೊಡುವ ನನ್ನ ಕುಕ್ ಆದಳು ....!!

ಪ್ರೀತಿ ಮತ್ತು ವಾತ್ಸಲ್ಯವನ್ನು ಕೊಟ್ಟು ನನ್ನ ಅಮ್ಮನಾದಳು....!!

ನನ್ನಿಂದ ತಪ್ಪುಗಳಾದಾಗ ಅವನ್ನು ತಿದ್ದಿ ಹೇಳುವ ನನ್ನ ತಂದೆಯಾದಳು ....!!

ಸರಿ ದಾರಿಯನ್ನು ಮಾತ್ರ ತೋರಿಸಿಕೊಟ್ಟು  ನನ್ನ ದಾರಿದೀಪವಾದಳು....!!

ಕೆಲವೊಮ್ಮೆ ನನ್ನ ಜೊತೆ ತುಂಟಾಟವಾಡುತ್ತಾ  ನನ್ನ ಮಗಳಾದಳು....!!

ನನ್ನ ಮಾತುಗಳನ್ನು ತದೇಕಚಿತ್ತದಿಂದ ಆಲಿಸುವ  ನನ್ನ ಅಭಿಮಾನಿಯಾದಳು ....!!

ಶತ್ರುವನ್ನು ಕೂಡ ಸ್ನೇಹದಿಂದ ಮಣಿಸಬೇಕು ಅಂತ ಕಲಿಸಿದ ನನ್ನ ಅಧ್ಯಾಪಕಿಯಾದಳು ....!!

ಒಂದು ಜನ್ಮವಿಡೀ ನನಗೋಸ್ಕರ ಜೀವಿಸುವ ಆಕೆ ನನಗೆ 'ನನ್ನ ಎಲ್ಲವೂ' ಆದಳು....!!

*"ಸ್ತ್ರೀಯರನ್ನು ಗೌರವಿಸಲು ಕಲಿಯದಿದ್ದರೂ ಅವಮಾನಿಸಲು ಕಲಿಯದಿರಿ..."*
ಫ್ಯಾಷನ್ ಎಲ್ಲಿಯವರೆಗೆ ಬಂತು??

ನನ್ನ ಸಂಬಂಧಿಕರೊಬ್ಬರು ತಮ್ಮ ಅನುಭವನ್ನು ನನ್ನ ಜೊತೆ ಹೀಗೆ ಹಂಚಿಕೊಂಡರು:
ನಾನು  ಬುರ್ಖಾ ಹೊಲಿಸುವ ಸಲುವಾಗಿ ಬುರ್ಖಾದ ಅಂಗಡಿಗೆ ತೆರಳಿದ್ದೆ. ಬುರ್ಖಾದ ಅಂಗಡಿಯ ಮಾಲೀಕನ ಹೋಗಿ ನಾನು ಕೇಳಿದೆ ಅಣ್ಣ ಬುರ್ಖಾ ಹೊಲಿದರೆ ಎಷ್ಣು ಆಗುತ್ತದೆ? ಅದಕ್ಕೆ ಅಂಗಡಿ ಮಾಲಿಕ ಹೇಳುತ್ತಾರೆ "ನೋಡಮ್ಮ ಬುರ್ಖಾ ಹೊಲಿದರೆ ಅಷ್ಟು ಹಣವಿಲ್ಲ, ಅದರ ಡಿಸೈನುಗಳಿಗೆ ಹೆಚ್ಚು ಹಣವನ್ನು ತೆರಬೇಕಾಗುತ್ತದೆ" ನಾನು ಅವರ ಮಾತಿಗೆ ಪ್ರತಿಕ್ರಿಯೆಸುತ್ತ, ಹಾಗಾದರೆ ನನಗೆ ಡಿಸೈನ್ ಬೇಡ ಬಿಡಿ, ಸರಳವಾಗಿ ಮತ್ತು ಪೂರ್ತೀ ಸಡಿಲಾಗಿ ಹೊಲಿದು ಕೊಡಿ ಎಂದಿದಕ್ಕೆ ಅಂಗಡಿ ಮಾಲೀಕ ಮತ್ತು ಕೆಲಸಕ್ಕಿದ್ದ ಇತರ ಯುವತಿಯರು ಮುಸಿ ಮುಸಿ ನಕ್ಕರು. ನನಗೆ ಬಹಳ ಮುಜುಗರವಾಯಿತು ಆದರು ನಾನು ಸುಮ್ಮನಾಗಿ ಬಿಟ್ಟೆ. ಆದರೆ ಒಳಗಿನಿಂದ ಎಲ್ಲರೂ ಗುಸು ಗುಸು ಮಾತನಾಡುತ್ತಿರುವುದು ಕೂಡ ನನ್ನ ಕಿವಿಗೆ ಕೇಳುತ್ತಿತ್ತು.

ತದನಂತರ ಅಂಗಡಿ ಮಾಲೀಕ ಮತ್ತೊಮ್ಮೆ ನನ್ನ ಬಳಿ ಕೇಳುತ್ತಾನೆ ಇಷ್ಟು ಸಿಂಪಲ್ ಬುರ್ಖಾ ಯಾಕೆ? ಇದರ ದರ ಬರೀ 600 ರುಪಾಯಿಗಳು. ಅದಲ್ಲದೆ ಈಗ ಈತರ ಬುರ್ಖಾ ಯಾರು ಧರಿಸುವುದಿಲ್ಲ ಕನಿಷ್ಠ ಪಕ್ಷ ಫಿಟ್ಟಿಂಗಾದರು ಮಾಡಿಸಬಹುದು ತಾನೆ ಎಂದರು. ನಾನು ಮತ್ತೊಮ್ಮೆ ಅವರಿಗೆ ಹೇಳಿದೆ, ಇಲ್ಲ ಬಿಡಿ ಫ್ಯಾಷನ್ ಬುರ್ಖಾ ನನಗೆ ಇಷ್ಟವಿಲ್ಲ ಅದಲ್ಲದೆ ನನ್ನ ಪತಿ ಕೂಡ ಟೈಟ್ ಫಿಟ್ ಬುರ್ಖಾನ್ ಇಷ್ಟಪಡುವುದಿಲ್ಲ ಎನ್ನುತ್ತಾ ನಾನು ಮಂಗಡ ಹಣವನ್ನು ಪಾವತಿಸಿ ಹೊರ ಬಂದೆ ಹೊರ ನಡೆಯುತ್ತ ಯೋಚಿಸತೊಡಗಿದೆ, ಇವರೆಂಥ ಜನಗಳು? ಇವರಿಂದಾಗಿ ಇವತ್ತು ಸ್ತ್ರೀಯರು ಫ್ಯಾಷನ್ ಅನ್ನೊ ರೋಗವನ್ನು ತನ್ನ ಮೈಗೆಳೆದುಕೊಂಡು ದಾರಿ ತಪ್ಪುತ್ತಿದ್ದಾರೆಯೇ? ವ್ಯವಹಾರ ಕುದುರಿಸುವ ಸಲುವಾಗಿ ಇಸ್ಲಾಂ ಅನ್ನೊ ಮಾರುವುದಕ್ಕೆ ಹೊರಟ್ಟಿದ್ದಾರೆಯೆ? ಈ ರೀತಿಯ ಹಲವು ಯೋಚನೆಗಳು ನನ್ನ ತಲೆಯಲ್ಲಿ ಹುಟ್ಟಿಕೊಂಡು ಬಿಟ್ಟಿದ್ದವು.

ನಾನು ರಸ್ತೆ ಬದಿಯಲ್ಲಿ ನಡೆದಾಡುತ್ತ ಮನೆಗೆ ಬಾಗಿಲಿನ ಬಳಿ ಬಂದಾಗ ನನ್ನ ಸಹೋದರ ಈ ಹಿಂದೆ ಗೋಡೆಯ ಮೇಲೆ ಸ್ಟಿಕ್ಕರ್ ಲಗತ್ತಿಸಿದ್ದು ಕಣ್ಣಿಗೆ ಕಾಣುತ್ತದೆ ಪ್ರವಾದಿ ಮುಹಮ್ಮದ್ ಮುಸ್ತಾಫ (ಸ)ರ ಹೇಳಿದ ಮಾತು: ಬಟ್ಟೆ ಧರಿಸಿಯು ನಗ್ನರಾಗಿರುವ, ಪರ ಪುರುಷರನ್ನು ಆಕರ್ಷಿಸುವ ಮತ್ತು ಸ್ವಯಂ ಆಕರ್ಷಿತರಾಗುವ ಸ್ತ್ರೀಯರು ನರಕವಾಸಿಗಳಾಗುವರು (ರಿಯಾದುಸ್ವಾಲಿಹೀನ್/ಸಹೀಹ್ ಮುಸ್ಲಿಂ 5310) ಇದನ್ನು ಮತ್ತೊಮ್ಮೆ ಓದಿದ ನನಗೆ ಇನ್ನಷ್ಟು ಭಯವಾಗತೊಡಗಿತು. ನಾನು ಕೂಡಲೆ ಮನೆಯೊಳಗೆ ಓಡಿ ಹೋಗಿ ನನ್ನ ಅತ್ತೆ ಬಳಿ ನಡೆದ ವಿಚಾರಗಳನ್ನು ಹೇಳಿದೆ ಅವರು ತಾಳ್ಮೆಯಿಂದ ಪ್ರತಿಕ್ರಿಯೆಸುತ್ತಾ "ನೋಡು ಮಗಳೆ, ಇಲ್ಲಿ ನೀನು ಮೂರ ಒಳ್ಳೆಯ ಕೆಲಸ ಮಾಡಿ ಬಂದೆ 1. ಅಲ್ಲಾಹನಿಗೆ ಭಯಪಟ್ಟೆ, 2. ಪ್ರವಾದಿವರನ್ನು ಅನುಸರಿಸಿದೆ, 3. ನಿನ್ನ ಗಂಡನ ಮಾತನ್ನು ಪಾಲಿಸಿದೆ"..

ಅತ್ತೆಯ ಮಾತು ಕೇಳಿದ ನನಗೆ ಬಹಳ ಸಂತೋಷವಾಯಿತು. ಮರುದಿನ ನಾನು ಬುರ್ಖಾ ಅಂಗಡಿಗೆ ಹೋಗಿ ಬುರ್ಖಾ ಪಡೆಯಲು ಹೋದಾಗ ಅವರೋಡನೆ ಒಂದೈದು ನಿಮಿಷ ಮಾತನಾಡುವ ಧೈರ್ಯ ಮಾಡಿಕೊಂಡು ಅಂಗಡಿ ಮಾಲಕನಿಗೆ ಒಂದೆರಡು ಪ್ರಶ್ನೆಗಳನ್ನು ಕೇಳಿದೆ. ಅಣ್ಣಾ ತಾವು ಹೇಳಿದ್ದೀರಿ ಬುರ್ಖಾಕ್ಕೆ ಡಿಸೈನ್ ಬೇಕು. ಡಿಸೈನ್ ಯಾಕೆ ಬೇಕೆಂದು ಹೇಳುವೀರಾ? ಆತ ನಗುತ್ತ ನೋಡಮ್ಮ ಈಗಿನಾ ಕಾಲದಲ್ಲಿ ಹಳೆ ಮಾದರಿಯ ಬುರ್ಖಾ ಯಾರು ಧರಿಸುವಿದಿಲ್ಲ ಫ್ಯಾಷನ್ ಬೇಕು ಎಂದ. ಇವರ ಉತ್ತರದಿಂದ ತ್ರಪ್ತಿಯಾಗದ ನಾನು ಹೇಳಿದೆ, "ಅಣ್ಣ ಈ ಬುರ್ಖಾ ಅನ್ನೋದು ಹೆಣ್ಣಿಗೆ ರಕ್ಷಾಕವಚ ಅದು ತನ್ನ ಶರೀರದ ಭಾಗವನ್ನು ಇತರರಿಗೆ ತೋರಿಸುವ ಸಲುವಾಗಿ ಅಲ್ಲ, ಸಾವಿರಾರು ರುಪಾಯಿಯ ಬುರ್ಖಾನಿಗೆ ಫ್ಯಾಷನ್ ಡಿಸೈನ್ ಮಾಡಿಸಿ ಒಳಗಡೆ ಬಣ್ಣ ಬಣ್ಣದ ಬಟ್ಟೆಯನ್ನು ಯಾಕೆ ಧರಿಸಬೇಕು? ನೋಡಿ ಕಾಲಚಕ್ರ ತಿರುಗಿದಂತೆ ನಾನು ನೀವು ಬದಲಾಗಬಹುದಷ್ಟೆ 'ಇಸ್ಲಾಂ' ಬದಲಾಗುವುದಿಲ್ಲ ಎಂದೆ.

ನನ್ನ ಮಾತು ಕೇಳಿದ ಒಳಗಿದ್ದ ಯುವತಿಯರು ಒಬ್ಬರನ್ನೊಬ್ಬರು ಮುಖ ನೋಡುತ್ತಾ ನಿಂತುಕೊಂಡಿದ್ದರು. ಅಂಗಡಿ ಮಾಲಕ ಬೆರೆ ಕಟ್ಟು ಕತೆ ಹೇಳಿ ಮಾತನ್ನು ಬೇರಡೆ ವಾಲಿಸಿಬಿಟ್ಟ. ನಾನು ಒಂದು ಸಾರಿ ಅಂಗಡಿ ಸುತ್ತಲೂ ಕಣ್ಣಾಯಿಸಿದಾಗ ಅಲ್ಲಿರುವ ಕೆಲವೊಂದು ಬುರ್ಖಗಳನ್ನು ನೋಡಿ ನನ್ನ ಕಣ್ತುಂಬಿ ಬಂತು. ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುವ ಸಾವಿರಾರು ರುಪಾಯಿಗಳ ಡಿಸೈನ್ ಬುರ್ಖಾನ್, ಸ್ಲಿಮ್ ಫಿಟ್, ಟೈಟ್ ಫಿಟ್, ಹಿಪ್ ಕಟ್, ಬಟರ್ ಫ್ಲೈ, ಅಂಬ್ರೆಲ್ಲಾ, ಇವೆಲ್ಲವೂ ಹೆಣ್ಣಿನ ದೇಹವನ್ನು ಸ್ಪಷ್ಟವಾಗಿ ತೋರಿಸುವಂತಿತ್ತು. ನನಗನಿಸಿತು ಇವರಿಗಿಂತ ಮುಸ್ಲಿಮೇತರ ಸಹೋದರಿಯರು ಧರಿಸುವ ಸರಳವಾದ ಬಟ್ಟೆಗಳೆ ಒಳಿತು ಅವರ ಬಟ್ಟೆಗಳಲ್ಲಿ ಯಾವುದೇ ರೀತಿಯ ಕಾಮ ಪ್ರಚೋದಕ ನೋಟವಿರುವುದಿಲ್ಲ. ಆದರೆ ನಮ್ಮವರ ರಕ್ಷಾಕವಚ ಮಾತ್ರ "ದೇಹ ಭಕ್ಷಕವಚ"ದ ರೀತಿಯಲ್ಲಿದೆ.

ಸಹೋದರಿಯರೇ ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ನಾನು ಇನ್ನೊಬ್ಬರ ತಪ್ಪನ್ನು ಎತ್ತಿ ಹಿಡಿದು ನಾನೊಬ್ಬಳು ಪತಿವ್ರತೆ ಅಥವಾ ಪರಿಪೂರ್ಣ ಮುಸ್ಲಿಂ ಎಂದಲ್ಲ. ಕನಿಷ್ಠ ಪಕ್ಷ ಇಂತಹ ತಪ್ಪುಗಳನ್ನು ವಿರಳವಾಗಿಸಬಹುದು ಎಂದಾಗಿದೆ ನನ್ನ ಮಾತಿನ ಅರ್ಥ. ಇದು ನನ್ನ ಅನುಭವ ಮತ್ತು ಅನಿಸಿಕೆಯಾಗಿದೆ. ಇವತ್ತು ಪ್ರೀತಿ ಪ್ರೇಮದ ಹೆಸರಿನಲ್ಲಿ ಪೋಷಕರನ್ನು ತೊರೆದು ಹೋಗುವ ಪ್ರಕ್ರಿಯೆ ರಾಜರೋಷವಾಗಿ ನಡೆಯುತ್ತಿದೆ. ಕಾರಣ ಮಕ್ಕಳ ಮೇಲಿನ ಅತೀಯಾದ ಸಲುಗೆ. ಸಲುಗೇಯ ಇನ್ನೊಂದು ಭಾಗವೆ ನಾವೀನ್ಯ ಮಾದರಿಯ ವಸ್ತ್ರಗಳು ತಮ್ಮ ಮಕ್ಕಳಿಗೆ ಕೊಡಿಸಿ ಮುದ್ದು ಮಾಡುತ್ತ ಬೇಳೆಸುವುದು. ಪರಪುರುಷನನ್ನು ಆಕರ್ಷಿಸುವ ಉಡುಪುಗಳನ್ನು ತೊಡುವ ಮಹಿಳೆಯರೆ ತಮ್ನ ಮಕ್ಕಳು ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಬಂದು ತಮ್ಮನ್ನು ಮೀರಿಸುವ ಉಡುಪುಗಳನ್ನು ಧರಿಸಲಿದ್ದಾರೆ ಎನ್ನುವ ಸತ್ಯವನ್ನು ಮರೆಯದಿರಿ. ಇಂತಹ ಕೆಟ್ಟ ಚಾಳಿಯಿಂದ ಕಂಡವರ ಬಾಯಿಗೆ ಅಹಾರವಾಗಿ ಯಾಕೆ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳಬೇಕು? ದಯವಿಟ್ಟು ನಾವು ಜಾಗ್ರತರಾಗೋಣ ಅದೇ ರೀತಿ ನಮ್ಮ ಮಕ್ಕಳನ್ನು ಕೂಡ.
(ಕೃಪೆ: ವಾಟ್ಸಪ್)
☪ *ಪವಿತ್ರ ನಬಿ ﷺ ರವರ ಪ್ರಿಯ ಪುತ್ರಿ ಫಾತ್ತಿಮತ್ತುಲ್ ಬತ್ತೂಲ್ (ರ)*  ☪
[ *ಸ್ವರ್ಗಿಯ ಸ್ತ್ರಿಯರ ನೇತರಾರು*]
➖➖➖➖➖➖➖➖
   ✍🏾ಗಫೂರ್ ಬಾಯಾರ್.
➿➿➿➿➿➿➿➿

☪ರಸೂಲ್ ﷺ ಹೇಳಿದ್ದರು; *ಫಾತಿಮಾ ನನ್ನ ಕರುಳಕುಡಿಯಾಗಿದೆ. ಯಾರಾದರು ಅವರತ್ತಿರ ಕೋಪ ಪ್ರಕಟಿಸಿದರೆ ನನ್ನನ್ನು ಕೋಪಿಸಿದಾಗೆ!!*
[ಬುಖಾರಿ (ರ)] [ಮುಸ್ಲಿಂ(ರ)]

ನಬಿ ﷺ ಹೇಳುತ್ತಿದ್ದರು:
*ಸ್ವರ್ಗಯ ಸ್ತ್ರಿಯರಲ್ಲಿ ಅತೀ ಶ್ರೇಷ್ಟರು ಖದಿಜ ಬೀವಿ, (ರ) ಫಾತಿಮಾ (ರ) ಮರ್ಯಂ ಬೀವಿ (ರ), ಹಾಗು ಆಸಿಯ ಬೀವಿ (ರ) ರವರಾಗಿದ್ದಾರೆ.*
[ತುರ್ಮುದಿ(ರ)] [ಅಹ್ಮದ್ (ರ)]

💠ಮಾತಿನಲ್ಲೂ, ಮುಖ  ಛಾಯೆಯಲ್ಲೂ,
 ಮಹದಿ ನಬಿ ﷺ ರವರ ಅದೇ ರೂಪ ಸದೃಶ್ಯವತಿಯಾಗಿದ್ದರು.
ಊಮ್ಮು ಸಲಾಮ (ರ) ರವರು ಹೇಳುತ್ತಾರೆ; *ರಸೂಲ್ ﷺ ರವರ ಪುತ್ರಿ ಫಾತಿಮಾ (ರ) ರವರ ಮುಖ ಬಾವದಲ್ಲಿ ರಸೂಲ್ ﷺ ರವರೊಂದಿಗೆ ಅತೀ ಸಾಮ್ಯತೆವುಳ್ಳವರಾಗಿದ್ದರು.*
 (ಫತ್ಹುಲ್ ಬಾರಿ)

🔰ಆಯಿಷ (ರ)ರವರು ಹೇಳುತ್ತಾರೆ; *ಮಾತಿನಲ್ಲಿ ನಬಿ ﷺ ರೊಂದಿಗೆ ಸಾಮ್ಯತೆಯಾಗಿ ಫಾತಿಮಾ (ರ) ರವರಷ್ಟು ಹತ್ತಿರವಾಗಿ ನಾನು ಬೇರೆ ಯಾರನ್ನು ಕಾಣಲಿಲ್ಲ*...

ನಬಿ ﷺ ರವರು ಫಾತಿಮಾ (ರ) ರವರು ಬರುವ ಸಮಯದಲ್ಲೆಲ್ಲ ಅವರನ್ನು ಚುಂಬಿಸುತಿದ್ದರು. ಹಾಗು ಹತ್ತಿರ ಕುಳ್ಳಿರಿಸುತಿದ್ದರೆಂದು ಆಯಿಷ (ರ ) ರವರು ಉಲ್ಲೇಖಿಸಿದ್ದಾರೆ.

ನಬಿ ﷺ ಯುದ್ದ ಮುಗಿದು ಮರಳಿದಾಗ ಮಸ್ಜಿದಿಗೆ ಹೋಗಿ 2 ರಕಅತ್ತ್ ನಮಾಜು ಮಾಡಿದ ನಂತರ, ನೇರ ಫಾತಿಮಾ ಬೀವಿ (ರ)ರವರನ್ನು ಸಂದರ್ಶಿಸುತ್ತಿದ್ದರು. ನಂತರ ಮಡದಿಯರನ್ನು ಸಂದರ್ಶಿಸುವುದು ವಾಡಿಕೆಯಾಗಿತ್ತು. ಒಮ್ಮೆ ಅಲ್ಲಿಂದ ಹೇಳಿದ್ದರು;
*ಫಾತಿಮಾ ನೀನು ಕೋಪಿಸುಕೊಳ್ಳುವಲ್ಲಿ ನಿನ್ನ ಅಲ್ಲಾಹವು ಕೋಪಿಸುಕೊಳ್ಳುವನು. ನೀನು ತೃಪ್ತಿಪಡುವಲ್ಲಿ ನಿನ್ನ ಅಲ್ಲಾಹವು ತೃಪ್ತಿಪಡುವನು*

 ಮಹದಿ ಹೇಳುತ್ತಿದ್ದರು, ನಾನು ಮರಣ ಹೊಂದಿದಾಗ ನನ್ನ ಜನಾಝವನ್ನು ಹಗಲು ಸಮಯ ಸಾರ್ವಜನಿಕವಾಗಿ ಕೊಂಡು ಹೋಗುವುದು ತನ್ನ ಶರೀರಾಕೃತಿ ವ್ಯಕ್ತವಾಗಬಹುದೆಂದು ನೆನೆದು ಲಜ್ಜಯಿಂದ ಅವರು ಬೇಜಾರಗಿದ್ದರೆಂದು ಅಸ್ಮಾಹ್ (ರ) ರವರು ಹೇಳುತ್ತಿದ್ದರು.

ನಬಿ ﷺ ರವರ ವಫಾತಿನ 6 ತಿಂಗಳು ಕಳೆದು ಹಿಜ್ರ 11, ರಮಳಾನ್ 3 ರಂದು ಆ ಮಹಾತ್ಮೆ ವಫಾತದರು. ಇನ್ನಾಲಿಲ್ಲಾಹಿ..

ಹಜ್ರತ್ ಅಲಿ (ರ)ರವರು ಹಾಗು ಅಸ್ಮಾಹ್ ಬೀವಿ (ರ) ರವರು ಮಯ್ಯತ್ತ್ ಸ್ನಾನ ಕರ್ಮವನ್ನು ನೆರೆವೆರಿಸಿದರು.

ಪತಿಯಾದ ಅಲಿ (ರ) ರವರು ಮಯ್ಯತ್ತ್ ನಮಾಜಿಗೆ ನೇತೃತ್ವ ಕೊಟ್ಟರು.
ಅಬ್ಬಾಸ್ (ರ), ಅಲಿ (ರ), ಹಾಗು
ಫಳ್ ಲುಬ್ನು ಅಬ್ಬಾಸ್ (ರ) ಎಂಬವರು ಸೇರಿ ಆ ಪವಿತ್ರವಾದ ಜನಾಝವನ್ನು ದಫನ ಮಾಡಿದರು. ಪರಿಶುದ್ದ ಮದೀನದ
 ಜನ್ನತ್ತುಲ್ ಬಖಿಅದಲ್ಲಾಗಿದೆ ಅವರು ಅಂತ್ಯ ವಿಶ್ರಮಗೊಳ್ಳುತಿರುವುದು.

 ✍🏾ಗಫೂರ್ ಬಾಯಾರ್
🌀🌀🌀🌀🌀🌀🌀🌀

Sunday, February 4, 2018

🏵 *ಪ್ರವಾದಿ ಸಂದೇಶ*🏵
🌀 *ಆಲೋಚಿಸುವವರಿಗೆ*🌀🌀🌀🌀🌀🌀🌀🌀🌀 *ದೃಷ್ಟಾಂತವಿದೆ.*🌀🌀

*بِسْمِ اللّٰهِ الرَّحْمَانِ الرَّحِيمْ*
*ಸಂಚಿಕೆ* 0⃣3⃣

*ಪ್ರಪಂಚದಲ್ಲಿ ದಿನನಿತ್ಯ ನಡೆಯುವ ಆಗು ಹೋಗುಗಳನ್ನು ನಿಯಂತ್ರಿಸುವವನು, ಸೂರ್ಯ ಚಂದ್ರಾದಿ, ನಕ್ಷತ್ರಗಳ, ಗ್ಯಾಲಕ್ಸಿಗಳ ಚಲನೆಯನ್ನು ಚಾಚೂ ತಪ್ಪದೇ ನಿರ್ವಹಿಸುವವನು. ಮರ, ಸಸ್ಯ, ಜೀವಜಾಲಗಳಿಗೆ ಅನ್ನಾಹಾರಗಳನ್ನು ಒದಗಿಸುವವನು. ಕಣ್ಣಿಗೆ ಕಾಣದಂತಹಾ ಇರುವೆಗಳಿಗೂ ಬದುಕು ನೀಡುವವನು. ಮರಗಿಡಗಳನ್ನು ಭೂಮಿಯಲ್ಲಿ ಮೊಳಕೆಯೊಡೆಯಿಸುವವನು. ವೀರ್ಯ- ಅಂಡಾಣುಗಳಿಂದ ಸಂತಾನೋತ್ಪಾದನೆ ಪ್ರಕ್ರಿಯೆ ನಡೆಸುವವನು. 9 ತಿಂಗಳುಗಳ ಕಾಲ ತಾಯಿಯ ಗರ್ಭಾಶಯಗಳಲ್ಲಿ ಮಗುವನ್ನು ಸುರಕ್ಷಿತವಾಗಿ ಕಾಪಾಡುವವನು. ಸಮಯವಾದಾಗ ಅದನ್ನು ಹೊರತರುವವನು. ಇದೆಲ್ಲಾ ಯಾರು ಎಂದು ಒಂದು ಕ್ಷಣ ಆಲೋಚಿಸಿದರೆ ಲಭಿಸುವ ಉತ್ತರವಾದರೂ ಏನು..? ಗೋಳಾಕಾರದ ಭೂಮಿಯನ್ನು ಯಾವುದೇ ಬ್ಯಾಲೆನ್ಸ್ ಇಲ್ಲದೆ ಹವೆಯಲ್ಲಿ ನಿಲ್ಲಿಸಿದವನು. ದೈತ್ಯಗಾತ್ರದ ಆಕಾಶವನ್ನು ಯಾವುದೆ ಸ್ತಂಭಗಳ ಅಗತ್ಯವಿಲ್ಲದೆ ನೆಲೆ ನಿಲ್ಲಿಸಿದವನು. ಗುಡುಗು, ಮಳೆ, ಗಾಳಿ, ಮಿಂಚು ಬರಿಸುವವನು. ಒಂದೇ ಮಳೆ ನೀರನ್ನು ಸ್ವೀಕರಿಸಿ ಭೂಮಿಯಿಂದ ವಿಭಿನ್ನ ಹಣ್ಣು ಹಂಪಲುಗಳನ್ನೂ, ಫಲಪುಷ್ಪಗಳನ್ನೂ ಹೊರಡಿಸುವವನು. ಜನಿಸುವ ಪ್ರತಿ ಮನುಷ್ಯನಲ್ಲೂ ಒಂದಲ್ಲ ಒಂದು ವ್ಯತ್ಯಾಸ  ನೀಡುವವನು. ಕೋಟ್ಯಾಂತರ ಜನರ ಬೆರಳ ತುದಿಯಲ್ಲಿ ವಿವಿದತೆಯನ್ನು ಉಂಟು ಮಾಡುವವನು. ಇದೆಲ್ಲವೂ ಯಾರು ಎಂಬ ಪ್ರಶ್ನೆಗೆ ನಿಜವಾದ ಸೃಷ್ಟಿಕರ್ತ ಅಲ್ಲಾಹು ಎಂದಲ್ಲದೆ ಬೇರೆ ಉತ್ತರವಿಲ್ಲ. ಅವನಿಗಲ್ಲದೇ ಇದು ಸಾಧ್ಯವಿಲ್ಲ. ವಿಶಾಲವಾದ ಸಮುದ್ರಗಳನ್ನು ಸೃಷ್ಟಿಸಿದವನು. ಪರ್ವತಗಳನ್ನೂ ಶಿಖರಗಳನ್ನೂ ಸೃಷ್ಟಿಸಿದವನು ಯಾರಾಗಿರಬಹುದು.? ಒಂದು ಕ್ಷಣ ಬುದ್ಧಿಯನ್ನು ಹರಿಯಬಿಟ್ಟರೆ ಪರಮ ಸತ್ಯವಾದ ಅಲ್ಲಾಹನೆಡೆಗೆ ಮನಸ್ಸು ತಿರುಗಿ ಬಿಡುತ್ತದೆ. ಅವನಿಂದಲ್ಲದೇ ಇದು ಸಾಧ್ಯವೇ ಇಲ್ಲ.*

🐊 ಇಲ್ಲೊಂದು ವಿಸ್ಮಯವನ್ನು ಗಮನಿಸಿ ಅತ್ಯಂತ ಅಕ್ರಮಣಕಾರಿ ಜೀವಿಯಾದ ಮೊಸಳೆಯೂ ಆಹಾರ ಸೇವಿಸಿದರೆ ಅದಕ್ಕೆ ವಿಸರ್ಜನೆ ಮಾಡಲು ಪ್ರತ್ಯೇಕ ದ್ವಾರವನ್ನು ನೀಡಲಾಗಿಲ್ಲ. ಹೊಟ್ಟೆ ತುಂಬಿದಾಗ ಅದು ನೇರ ನೀರಿನಿಂದ ಹೊರಗೆ ಬಂದು ಕಿನಾರೆಯಲ್ಲಿ ಹಾಯಾಗಿ ಬಿದ್ದುಕೊಂಡಿರುತ್ತದೆ. ಆಗ ಅದು ತನ್ನ ಬಾಯನ್ನು ತೆರೆದಿಟ್ಟಿರುತ್ತದೆ. ಅಷ್ಟರಲ್ಲಿ ಖತ್ ಬಾತ್ ಎಂಬ ವಿಶೇಷ ಪಕ್ಷಿಯೊಂದು ಬಂದು ಮೊಸಳೆಯ ಬಾಯೊಳಗೆ ನುಗ್ಗಿ ಅದರ ಹೊಟ್ಟೆ ತುಂಬಿ ಮೇಲೆ ಬಂದ ಆಹಾರದ ಅಂಶಗಳನ್ನೂ, ವಸರ್ಜನೆಯನ್ನೂ ಹೆಕ್ಕಿ ತಿನ್ನುತ್ತದೆ. ಮೊಸಳೆಯೇನಾದರೂ ಬಾಯಿ ಮುಚ್ಚಿದರೆ ಅದು ಈ ಹಕ್ಕಿಯ ಕೊನೆಗಾಲ ಎಂದು ನೀವು ಭಾವಿಸಬಹುದು. ಆದರೆ ಪ್ರಸ್ತುತ ಹಕ್ಕಿಯ ಮೇಲೆ ಸೂಜಿಯಂತಹಾ ಉದ್ದದ ಒಂದು ಮುಳ್ಳಿದೆ. ಮೊಸಳೆ ಬಾಯಿ ಮುಚ್ಚಿದರೆ ಅದು ಮೊಸಳೆಗೆ  ಚುಚ್ಚುತ್ತದೆ. ಇದನ್ನು ಭಯಗೊಂಡ ಮೊಸಳೆಯೂ ಹಕ್ಕಿ ಹೊರ ಹೋಗುವವರೇಗೂ ಬಾಯ್ತೆರೆದೇ ಮಲಗಿರುತ್ತದೆ. ಇಲ್ಲಿ ಮೊಸಳೆಗೆ ತನ್ನ ವಿಸರ್ಜ್ಯ ಹೊರಹಾಕಿ ಆರೋಗ್ಯ ಕಾಪಾಡಿದ ಖುಷಿಯಾದರೆ ಹಕ್ಕಿಗೆ ಆಹಾರ ಸಿಕ್ಕ ಸಂತೋಷವೂ ಆಗುತ್ತದೆ. ಇದನ್ನು ವ್ಯವಸ್ಥೆಗೊಳಿಸಿದವನು ಯಾರಾಗಿರಬಹುದು.? ಬುದ್ಧಿಯಿರುವವರು ಇಂತಹಾ ನಿದರ್ಶನಗಳನ್ನು ಉಪಯೋಗಿಸಿ ದೇವಸತ್ಯವನ್ನು ಅರಿಯಬೇಕಿದೆ. ಪ್ರಸ್ತುತ ಮೊಸಳೆಗೆ ವಿಸರ್ಜ್ಯ ನೀಗಲು ನೀರಿನಿಂದ ಹೊರಬಂದು ಬಾಯ್ತೆರೆದು ಮಲಗಲೂ ಹಕ್ಕೆಗೆ ಅದನ್ನು ಹೆಕ್ಕಿ ತಿನ್ನಲೂ ಅರಿವು ನೀಡಿದವನು ಯಾರು..!?
   
*{ಮುಂದುವರೆಯುವುದು}*