Monday, September 21, 2020

ಅಹ್ಲು ಸ್ಸುನ್ನ = 07

*ಅಹ್ಲು ಸ್ಸುನ್ನ - 7*
              *@ ಅಬೂ ರಾಝೀ*
➖➖➖➖➖➖➖➖

*ವಹಾಬಿಸಂ ಬೆಳವಣಿಗೆಯ ಹಿಂದೆ ಪಾಶ್ಚಾತ್ಯ ಶಕ್ತಿಗಳು - ಸೌದಿ ರಾಜಕುಮಾರ*

2018, ಮಾರ್ಚ್ 22. ವಾಷಿಂಗ್ಟನ್‌ ಪೋಸ್ಟ್‌ ಗೆ  ಯುವ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ರವರು ನೀಡಿದ ಸಂದರ್ಶನ ಸಲಫಿ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತು. 
Gulf times ಹೊರತಂದ ಈ ಸಂದರ್ಶನ ಸಲಫಿಗಳ ನಿಜಬಣ್ಣವನ್ನು ಬಹಿರಂಗಗೊಳಿಸಿತು. 
ಪಾಶ್ಚಿಮಾತ್ಯ ಶಕ್ತಿಗಳ ಕುಮ್ಮಕ್ಕಿನಿಂದಲೇ ಸಲಫಿಸಂ ಜಗತ್ತಿನಾದ್ಯಂತ ಪ್ರಸಾರವಾಯಿತೆಂದು ಯುವ ರಾಜಕುಮಾರ ಬಹಿರಂಗ   ಪಡಿಸಿದರು.

https://www.rt.com/news/422563-saudi-wahhabism-western-countries/

*ಗಲ್ಫ್ ರಾಷ್ಟ್ರಗಳಲ್ಲಿ ಐಸಿಸ್ ನಡೆಸಿದ ಭಯಾನಕ ಭಯೋತ್ಪಾದನೆ ಹಾಗೂ ಅದರ ಹಿಂದೆಯಿದ್ದ ವಹಾಬಿ ಐಡಿಯೋಲಜಿಯ ಬಗ್ಗೆ ಪಾಶ್ಚಾತ್ಯರು ಚರ್ಚಿಸುತ್ತಿರುವಾಗಲೇ ಕೇವಲ ಸೌದಿ ಅರೇಬಿಯಾದಲ್ಲಿ ಮಾತ್ರ ಸೀಮಿತವಾಗಬೇಕಾಗಿದ್ದ ವಹಾಬಿಸಂ ಜಗತ್ತಿನಾದ್ಯಂತ ಪ್ರಚಾರವಾಗಲು ಪಾಶ್ಚಾತ್ಯ ದೇಶಗಳು ಕಾರಣವೆಂದು ಅವರು ಬಹಿರಂಗ ಪಡಿಸಿದರು*.

ಒಂದನೇ ಮಹಾಯುದ್ಧದ ಸಂದರ್ಭ. ಜಗತ್ತಿನ ಬಲಾಢ್ಯ ಶಕ್ತಿಯಾಗಿದ್ದ ಸೋವಿಯತ್ ಯೂನಿಯನ್ ಗೆ ಸಡ್ಡು ಹೊಡೆಯಲು ಅಮೇರಿಕ - ಬ್ರಿಟನ್ ಒಕ್ಕೂಟ ತೀರ್ಮಾನಿಸಿತು. ಅದಕ್ಕಾಗಿ ಅವರು ಕಂಡು ಕೊಂಡ ಕುತಂತ್ರವೇ ವಹಾಬಿಸಂ  ಪ್ರಚಾರ. 
ಈ ಯೋಜನೆಯ ಪ್ರಕಾರ ಸೌದಿ ಪಾಠ ಶಾಲೆಯಿಂದ ಹೊರಬಂದ ಉಸಾಮ ಬಿನ್ ಲಾಡೆನ್ ರಶ್ಯದ ಜೊತೆ ಹೋರಾಡಲು ಅಫಘಾನಿಸ್ತಾನಕ್ಕೆ ಹೊರಟರು. ಅಲ್ಲಿ ತಾಲಿಬಾನ್ ರಚಿಸಲಾಯಿತು. ಅವರಿಗೆ ಬೇಕಾದ ಶಕ್ತಿ, ಆಯುಧ, ತರಭೇತಿ ಎಲ್ಲವನ್ನೂ ನೀಡಿದ್ದು ಇದೇ ಅಮೇರಿಕಾ. 
ಸೋವಿಯತ್ ಯೂನಿಯನ್ ಹೊಡೆದು ನುಚ್ಚು ನೂರಾದ ನಂತರ ಈ ಭಯೋತ್ಪಾದನೆ ಕೊನೆಗೊಳ್ಳಲಿಲ್ಲ.
ತಾನು ಕಕ್ಕಿದ್ದನ್ನೆ ಪಾಶ್ಚಾತ್ಯಾರು ತಿಂದರು. ಹುಟ್ಟಿಸಿದವರನ್ನು, ಸಾಕಿದವರನ್ನು ಕೊಲ್ಲಲು ಈ ಭಯೋತ್ಪಾದಕರು ಹಿಂದೆ - ಮುಂದೆ ನೋಡಲಿಲ್ಲ.. ಸಾಕಿದ ಗಿಣಿಯೇ  ಹದ್ದಾಗಿ ಕುಕ್ಕಿದ ಪರಿಸ್ಥಿತಿ. 

ಪಾಶ್ಚಾತ್ಯರ ಹಣ ಪಡೆದು ಬೆಳೆದ ವಹಾಬಿಸಂಗೆ ತೌಹೀದ್ ಎಂಬುದು ಕೇವಲ ಅಧಿಕಾರಕ್ಕಾಗಿ ನಡೆಸಿದ ನಾಟಕ. 
ತೌಹೀದ್ ಹೆಸರಲ್ಲಿ ನಡೆಸಿದ ಹೋರಾಟ, ದೌರ್ಜನ್ಯ, ಕ್ರೌರ್ಯ, ಭೀಕರತೆ, ರಕ್ತಪಾತಗಳೆಲ್ಲವೂ ಅವರ ನಿಗೂಢ ಉದ್ದೇಶವನ್ನು ಬಯಲಿಗೆಳೆದಿದೆ.

*ಒಂದು ಕಾಲದಲ್ಲಿ  ಕೇರಳದಲ್ಲಿ ಇವರು ತೌಹೀದ್ ಹೆಸರಲ್ಲಿ ಕಾರ್ಯಚರಿಸಿದಾಗ ಒಂದು ವಿಭಾಗ ಜನರು ಇವರನ್ನು ನಂಬಿದರು. ಆದರೆ ಒಂದು ಹಂತಕ್ಕೆ ಸಲಫಿಗಳು ಬೆಳೆದು ನಿಂತಾಗ ಇವರು ನಡೆಸಿದ ಅಧಿಕಾರ ದಾಹ, ಭ್ರಷ್ಟತೆ, ವಂಚನೆ, ದಗಲ್ಬಾಜಿ ಇಡೀ ಕೇರಳ ನಾಚಿ ತಲೆ ತಗ್ಗಿಸಿತು. ದಮ್ಮಾಜಿ, ಐಸಿಸ್ ಜೊತೆ ಕೆಲವು ಸಲಫಿಗಳ ಸಂಬಂಧದಿಂದ  ಸಲಫಿ ಮುಖಂಡರೇ ತಾವು ಸಲಫಿ ಎಂದು ಕರೆಯಲು ಹಿಂಜರಿದರು*. 

ನಿಜ ಹೇಳಬೇಕಾದರೆ ಒಬ್ಬ ಸಲಫಿಯ ಜೊತೆ  ಮಾತನಾಡಿ. ಆತ ಮೊದ - ಮೊದಲು ಹದೀಸ್ ಳಹೀಫ್ ಎನ್ನುತ್ತಾನೆ. ನಂತರ ನಿಷೇಧಿಸುತ್ತಾನೆ. ಇಮಾಮರನ್ನು ತಿರಸ್ಕರಿಸುತ್ತಾನೆ. ಸ್ವಹಾಬಿಗಳನ್ನು ವಿಮರ್ಶಿಸುತ್ತಾನೆ. ಕಿತಾಬ್‌ಗಳ ಬಗ್ಗೆ ಮಾತನಾಡುವುದೇ ಆತನಿಗೆ ಅಲರ್ಜಿ. 

ಇವರ ತೌಹೀದ್ ಕೇವಲ ಮಣ್ಣಾಂಗಟ್ಟಿ

Sunday, September 20, 2020

ಅಹ್ಲು ಸ್ಸುನ್ನ = 06

*ಅಹ್ಲು ಸ್ಸುನ್ನ - 6*
              *@ ಅಬೂ ರಾಝೀ*
➖➖➖➖➖➖➖➖
*ವಹಾಬಿಸಂ ಪ್ರಚಾರ ಮಾಡಲು ಬಂದ ಅಫ್ಘಾನಿ , ಪಾಶ್ಚಾತ್ಯ ರ ಕೈಗೊಂಬೆಯಾಗಿದ್ದ.*

ಅರಬ್ ಜಗತ್ತಿನ ಹೊರಗೆ ವಹಾಬಿಸಂಗೆ  ನೇತೃತ್ವ ನೀಡಿದ್ದು ಮೂರು ಮಂದಿ.
ಜಮಾಲುದ್ದೀನ್ ಅಫ್ಫಾನಿ ( 1838 - 1898 ) ಮುಹಮ್ಮದ್ ಅಬ್ದು ( 1849 - 1905 ) ರಶೀದ್ ರಿಳಾ( 1865 -  1935 ).
ಇಬ್ನು ಅಬ್ದುಲ್ ವಹಾಬ್‌ನ ಆಶಯಗಳನ್ನು ಅದೇ ರೀತಿ ಸ್ವೀಕರಿಸುವ ಬದಲು, ಅದನ್ನು ಮಾದರಿಯಾಗಿಟ್ಟು ಮತ್ತಷ್ಟು ಬದಲಾವಣೆ, ನವ, ಉಗ್ರ ಸಿದ್ಧಾಂತವನ್ನು ರೂಪಿಸಲು ಈ ಮೂವರು ಪ್ರಯತ್ನಿಸಿದರು. ವಹಾಬಿಗಳು ಬಹಿರಂಗವಾಗಿ ಹೇಳಲು ಹಿಂಜರಿದ ಅನೇಕ ಕಾರ್ಯಗಳನ್ನು ಇವರು ಬಹಿರಂಗವಾಗಿಯೇ ಹೇಳತೊಡಗಿದರು. ಇದರಿಂದ ವಹಾಬಿಸಂ ಮತ್ತೊಂದು ರೂಪ ಪಡೆಯಿತು. 
ನಜ್‌ದ್‌ ಶೈಖ್‌ನ ಸಿದ್ಧಾಂತವನ್ನು ಅದೇ ರೀತಿ ಅಂಗೀಕರಿಸುವವರನ್ನು ಗಲ್ಫ್ ಸಲಫಿಗಳೆಂದು. ಹೊಸ ಬದಲಾವಣೆ ಸ್ವೀಕರಿಸಿದವರನ್ನು ಇಸ್ಲಾಹಿಗಳೆಂದು ಕರೆಯಲಾಯಿತು. 
*ದುಃಖಕರ ಸಂಗತಿಯೆಂದರೆ ಇಬ್ನು ಅಬ್ದುಲ್ ವಹಾಬ್‌ರನ್ನು ಬ್ರಿಟಿಷ್ ಗೂಢಚಾರ ವಶೀಕರಿಸಿದಂತೆ*, 
*ಈ ತ್ರಿಮೂರ್ತಿಗಳನ್ನು ಯಹೂದಿ ಗೂಢಚಾರ ಸಂಘವು ವಶೀಕರಿಸಿತು.*
*ವಹಾಬಿಸಂಗೆ ಹೊಸರೂಪ, ಹೊಸ ಶೈಲಿ ನೀಡಿದ ಈ ಮೂವರು ಯಹೂದಿ ಭೀಕರ ಸಂಘಟನೆ ಮಸೋನಿಸಂನ ಸದಸ್ಯರಾಗಿಯೂ, ಅದರ ಪ್ರಚಾರಕ್ಕಾಗಿಯೂ ಕಾರ್ಯಚರಿಸಿದ್ದು ಮಾತ್ರ ಚಾರಿತ್ರಿಕ ಸತ್ಯ*.

ಅ್ಯಂಡರ್ ಸೋವ್ (ಗ್ರಾಂಡ್ ಮಾಸ್ಟರ್)ರ ನೇತೃತ್ವದಲ್ಲಿ 1717 ರಂದು ಲಂಡನ್‌ನಲ್ಲಿ ಮಸೋನಿಸಂ (Free Mason Movement) ಎಂಬ ಜಾಗತಿಕ ಸಂಘಟನೆ ಅಸ್ಥಿತ್ವಕ್ಕೆ ಬಂತು. ಬುದ್ಧಿ ಜೀವಿಗಳು, ಚಿಂತಕರು, ಸಾಹಿತಿಗಳು ಹಾಗೂ ಆಡಳಿತಾಧಿಕಾರಿಗಳ ಮೇಲೆ ಪ್ರಭಾವ ಬೀರಲು, ಹಾಗೂ ತಮ್ಮ ಸಿದ್ಧಾಂತವನ್ನು ಅವರ ಮೂಲಕ ಪ್ರಚಾರ ಪಡಿಸಲು ಯಹೂದಿಗಳು ರಹಸ್ಯವಾಗಿ ರಚಿಸಿದ ಅಂತರಾಷ್ಟ್ರೀಯ ಸಂಘಟನೆ ಮಸೋನಿಸಂ.
ಬ್ರಿಟನ್‌ನ ಮಸೋನಿಸಂನ್ನು ಎನ್‌ಸೈಕ್ಲೊಪೀಡಿಯಾ ಪರಿಚಯ ಪಡಿಸಿದ್ದು ಹೀಗೆ
 The Largest world wide seer eat Society  
ಈ ಸಂಘಟನೆಯ ಮುಸ್ಲಿಂ ಮುಖಗಳಾಗಿದ್ದರು ಅಫ್ಫಾನಿ, ಅಬ್ದು ಮತ್ತು ರಿಳಾ. ಮುಸ್ಲಿಮರೆಡೆಯಲ್ಲಿ ಯಹೂದಿ ಆಶಯ, ಅಜೆಂಡವನ್ನು ಜಾರಿಗೊಳಿಸಿದ ಕುಖ್ಯಾತಿ ಈ ಮೂವರಿಗಿದೆ. 
ಮೊಸೋನಿಸಂನ ಜ್ಞಾನಕೋಶ ಹೇಳುವುದು ನೋಡಿ *ಬೈರೂತ್‌ನ ಮುಗೋನಿಸ್ಟ್ ನಾಯಕ ರಿಳಾ  ಅಬ್ದುರ್ರಶೀದ್, ಈಜಿಪ್ತ್‌ನ ಮುಸೋನಿಸ್ಟ್ ನಾಯಕ ಜಮಾಲುದ್ದೀನ್ ಅಫ್ವಾನಿಯಾಗಿದ್ದರು. ಅಲ್ಲಿ ಮಸೋನಿಸಂ ಸದಸ್ಯರಲ್ಲಿ ಹೆಚ್ಚಿನವರು ಅಘ್ವಾನಿಯ್ಯ ಬೆಂಬಲಿಗರು ಮತ್ತು, ಶಿಷ್ಯರಾಗಿದ್ದರು. ಆಡಳಿತ ರಂಗದ ಪ್ರಮುಖರು ಅದರಲ್ಲಿದ್ದರು. ನಂತರ ಅದಕ್ಕೆ ನೇತೃತ್ವ  ನೀಡಿದ್ದು ಉಸ್ತಾದ್ ಮುಹಮ್ಮದ್ ಅಬ್ದು. ಅವರ ಉನ್ನತ ಮುಸೋವಿಸ್ಟ್ ಲೀಡರಾಗಿದ್ದರು. (ದಾ‌ಇರತ್ತುಲ್ ಮು‌ಆರಿಫೀನ್ ಮಾಸೂನಿಯ್ಯ 197)*
*ಸುಲಭವಾಗಿ ಹೇಳಬೇಕಾದರೆ ಇಂಡ್ಯಾದ ಸಂಘಪರಿವಾರದ ಮುಸ್ಲಿಂ ಮುಖವಾಗಿ MRM ಇದ್ದಂತೆ, ಮಸೋನಿಸಂನ ಮುಸ್ಲಿಂ ಮುಖವಾಗಿ ಅಫ್ಫಾನ್, ರಿಳಾ, ಅಬ್ದು ಕಾರ್ಯಚರಿಸಿದರು*. 

ಸಲಫಿ ಮುಖಂಡ ,ಸಲಫಿ ಉಲಮಾ ಸಂಘಟನೆಯ ರಾಜ್ಯ ಉಪಾಧ್ಯಕ್ಷ M I ಮುಹಮ್ಮದಾಲಿ ಸುಲ್ಲಮೀ ಬರೆದ ಗಲ್ಫ್ ಸಲಫಿಸಂ - ಮುಜಾಹಿದ್ ಪ್ರಸ್ಥಾನಂ ಎಂಬ ಕೃತಿಯಲ್ಲಿ ಕುತೂಹಲಕಾರಿ ಮಾಹಿತಿಗಳಿವೆ.
*ಐರೋಪ್ಯ ಶಕ್ತಿಗಳು ಪಾಶ್ಚಾತ್ಯ ಸಂಸ್ಕೃತಿಯನ್ನು ಮುಸ್ಲಿಮರ ಮೇಲೆ ಹೇರಳು ನಿರಂತರ ಪ್ರಯತ್ನಿಸುತ್ತಿದ್ದವು.ಆದರೆ ಅದು ಸಾಧ್ಯವಾಗಿಲ್ಲ.ಉಲಮಾಗಳ ಶಕ್ತಿಶಾಲಿ ನೇತೃತ್ವ ಇದಕ್ಕೆ ಅಡ್ಡಿಯಾಗಿತ್ತು.ಇದನ್ನು ಮನಗಂಡ ಪಾಶ್ಚಾತ್ಯ ಶಕ್ತಿಗಳು ಮುಸ್ಲಿಂ ಮುಖಂಡರನ್ನೇ ಇದಕ್ಕಾಗಿ ಉಪಯೋಗಿಸಲು ನಿರ್ಧರಿಸಿತು.ಆಗ ಅವರಿಗೆ ಸಿಕ್ಕಿದ ಮುಖಂಡನೇ ಜಮಾಲುದ್ದೀನ್ ಅಫ್ಘಾನಿ*.

ಐರೋಪ್ಯ ಶಕ್ತಿಗಳ ನೀಚ ಅಜೆಂಡವನ್ನು ಜಾರಿಗೊಳಿಸಲು ಅವರ ಕೈಗೊಂಬೆಯಾಗಿ ವರ್ತಿಸಿದ ಅಫ್ಘಾನಿ ,ಅದಕ್ಕಾಗಿ ಖುರ್‌ಆನ್, ಹದೀಸ್‌ಗಳ ದುರ್ವ್ಯಾಖ್ಯಾನ ಮಾಡಿದರು.ಇಮಾಮ್‌ಗಳನ್ನು ತಿರಸ್ಕರಿಸಿದರು. ಸ್ವಹಾಬಿಗಳ ಬಗ್ಗೆ ಗೊಂದಲ ಮೂಡಿಸಿದರು.ಸಂಶೋಧನೆಯ ನೆಪದಲ್ಲಿ ಇಸ್ಲಾಮಿನ ನೈಜ ಪಥವನ್ನು ಬದಲಾಯಿಸಿದರು.ಸುಂದರ ಸಂಪ್ರದಾಯವನ್ನು ತಳ್ಳಿ ಹಾಕಿದರು.ಹೊಸ ಇಸ್ಲಾಮನ್ನು ಪರಿಚಯಿಸಿದರು.
ಇದರಿಂದ ಈ ಸಮಾಜ ಅನುಭವಿಸಿದ ನಷ್ಟ ಹೇಳತೀರದು.ಅಂದಿನ ದುರಂತದ ಫಲ ಇಂದೂ ಅನುಭವಿಸುತ್ತಿದೆ.

ಆದ್ದರಿಂದಲೇ ಗಲ್ಫ್ ಸಲಫಿಸಂಗೂ ಇತರೆಡೆಯಲ್ಲಿರುವ ಸಲಫಿಗಳಿಗೂ ಅನೇಕ ವ್ಯತ್ಯಾಸಗಳಿವೆ. ಉದಾಹರಣೆ ಕೇರಳ ಸಲಫಿಗಳನ್ನೇ ನೋಡಿರಿ. ಅವರ ಹದೀಸ್ ನಿಷೇಧದ  ಪರಿಣಾಮವಾಗಿ ಇಸ್ಲಾಮನ್ನೇ ಅವಹೇಳನ ಮಾಡುವ ಮುಸ್ಲಿಂ ಸಂಘಗಳು ಕೇರಳದಲ್ಲಿ ಹುಟ್ಟಿಕೊಂಡವು. ಚೇಗನ್ನೂರಿಸಂ (ಅಹ್ಮದಿಯ ಜಮಾ‌ಅತ್) ನಾಸಿಕ ವಾದ (ಜಾಮಿದಾ ಟೀಚರ್) ಖಾದಿಯಾನಿಗಳು. ಇದರಲ್ಲಿರುವ ಹೆಚ್ಚಿನವರು ಒಂದಲ್ಲ ಒಂದು ಕಾಲದ ಸಲಫಿ ಸಿದ್ಧಾಂತದ ಪ್ರಚಾರಕರಾಗಿದ್ದರು. ಇಷ್ಟು ಮಾತ್ರವಲ್ಲ ಹದೀಸ್ ನಿಷೇಧದ ಫಲವಾಗಿ ಕೇರಳದಲ್ಲಿ ಸಲಫಿಗಳೇ 8 - 10 ಗ್ರೂಪ್‌ಗಳಾಗಿ ವಿಭಜಿಸಿದ್ದಾರೆ. 

ಇನ್ನೊಂದು ಘಟನೆ ನೋಡಿ.
ಸೋವಿಯತ್ ರಷ್ಯಾದ ವಿರುದ್ಧ  ಅಫಘಾನ್ ಮುಸ್ಲಿಮರು ಸ್ವಾತಂತ್ರ್ಯ ಹೋರಾಟಕ್ಕಿಳಿದಾಗ  ಇತ್ತ ಅಮೇರಿಕವು ತನ್ನ ರಾಜಕೀಯ ಉದ್ದೇಶಕ್ಕಾಗಿ  ವಹಾಬಿಗಳನ್ನು ಬಳಸಿಕೊಂಡಿತು . ಸೌದಿ ವಹಾಬಿ ಪಾಠ ಶಾಲೆಯಿಂದ ಹೊರಬಂದ ಉಸಾಮ ಬಿನ್ ಲಾಡೆನ್ ನೇರವಾಗಿ ಅಫಘಾನ್‌ಗೆ ಹೋದದ್ದು, ಅಲ್ಲಿ ತಾಳಿಬಾನ್ ಸ್ಥಾಪಿಸಿದ್ದು. ಇದೇ ಹಿನ್ನಲೆಯಲ್ಲಿ.  ವಹಾಬಿಸಂನ ಹೊಸ ರೂಪವಾಗಿತ್ತು ತಾಳಿಬಾನ್.
ಶಾಂತಿ, ಸಹೋದರತೆ, ಸಾಮರಸ್ಯದಿಂದ ಜೀವಿಸುತ್ತಿದ್ದ ಹಾಗೂ ಇಸ್ಲಾಮಿನ ಸುಂದರ ಮುಖವಾದ ಸೂಫಿಸಂನ್ನು ಟೀಕಿಸುತ್ತಾ, ಔಲಿಯಾಗಳನ್ನು ವಿಮರ್ಶಿಸುತ್ತಾ, ಮಖ್‌ಬರಗಳನ್ನು ಧ್ವಂಸಗೊಳಿಸುತ್ತಾ, ಇಸ್ಲಾಮಿನ ಪರಂಪರೆ ಬಿಂಬಿಸುವ ಸ್ಮಾರಕಗಳ ಮೇಲೆ ಕರಸೇವೆ ಮಾಡುತ್ತಾ ತಾಳಿಬಾನ್‌ನ ರಥಯಾತ್ರೆ ಆರಂಭವಾಯಿತು. ತಾಲಿಬಾನಿನ ಅಂದಿನ ದಮನ ಕಾರ್ಯಚರಣೆಗೆ ಅಮೇರಿಕ ಪರೋಕ್ಷ ಬೆಂಬಲ ನೀಡಿತು.

ತಾಲಿಬಾನ್, ಅಲ್‌ಖಾಯಿದಾ, ಐಸಿಸ್, ಲಷ್ಕರ್‌ಗಳೆಲ್ಲ ತಮ್ಮ ಸಿದ್ಧಾಂತವನ್ನು ರಚಿಸಿದ್ದು ವಹಾಬಿಸಂನಿಂದ. ಪರಂಪರಾಗತ ಇಸ್ಲಾಮೀ ಆದರ್ಶವನ್ನು ಧಿಕ್ಕರಿಸಿ ನವ ಚಿಂತನೆಯ ಮೂಲಕ ಉಗ್ರವಾದಿತ್ವವನ್ನು ಪಸರಿಸಿದ್ದು ವಹಾಬಿಸಂನ ಸಾಧನೆ. ಭೀಕರ ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ಸೇರಲು ಕೇರಳದಿಂದ  ಹೋದದ್ದು ಸಲಫಿ ಕಾರ್ಯಕರ್ತರು. ವಹಾಬಿಸಂ ಮತ್ತು ಐಸಿಸ್‌ನ ಕಾರ್ಯಶೈಲಿಗಳು ಒಂದೇ ಆಗಿತ್ತು.

ಸಲಫಿಸಂ - ವಹಾಬಿಸಂ ಅಪಾಯದ ಬಗ್ಗೆ ಮುಸ್ಲಿಮರು ಜಾಗೃತರಾಗದಿದ್ದರೆ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ

ಅಹ್ಲು ಸ್ಸುನ್ನ = 05

*ಅಹ್ಲು ಸ್ಸುನ್ನ - 5*
              *@ ಅಬೂ ರಾಝೀ*
➖➖➖➖➖➖➖➖
*ಸಲಫಿಗಳ ಅಧಿಕಾರ ದಾಹಕ್ಕೆ ಫೆಲೆಸ್ತೀನ್ ಬಲಿಯಾಯಿತು*

ಸೌದಿ ಅರೇಬಿಯಾದಲ್ಲಿ ವಹಾಬಿಗಳು ನಡೆಸಿದ ರಕ್ಕಸ ತಾಂಡವ, ಕ್ರೌರ್ಯ, ಹಿಂಸೆ ಜಾಗತಿಕ ಮುಸಲ್ಮಾನರ ನಿದ್ದೆಗೆಡಿಸಿತು. ಮುಸ್ಲಿಂ ಸಮುದಾಯದ ಸಂಕಟವನ್ನು ಅರಿತ ಈಜಿಪ್ಟ್‌ ,ತನ್ನ ಹೊಣೆಗಾರಿಕೆ ನೆರವೇರಿಸಲು ಮುಂದೆ ಬಂತು.
ಇದರ ಪರಿಣಾಮ.ಹಿ. 1226 ರಲ್ಲಿ ವಹಾಬಿಗಳಿಂದ ಪವಿತ್ರ ಮಕ್ಕಾವನ್ನು ರಕ್ಷಿಸಲು  ಈಜಿಪ್ತ್ ಆಡಳಿತಾಧಿಕಾರಿ ಮುಹಮ್ಮದ್ ಬಾಷ ಪ್ರಯತ್ನಿಸಿದರು.  ಮೊದಲ ಪ್ರಯತ್ನ  ಯಶಸ್ಸು ಕಾಣಲಿಲ್ಲ. ಪುನಃ 2 ನೇ ಬಾರಿ ಪ್ರಯತ್ನಿಸಿದರು. ಈ ಬಾರಿ ನಜ್‌ದ್ (ರಿಯಾದ್) ಕೇಂದ್ರವಾಗಿಟ್ಟುಕೊಂಡು ಹೋರಾಟ ನಡೆಸಿದರು. ಈ ಹೋರಾಟದಲ್ಲಿ ವಹಾಬಿಗಳು ಸೋತು ಸುಣ್ಣವಾಗಿ ಓಡಿ ಹೋದರು. ವಹಾಬಿಗಳ ಅಹಂಕಾರ ಹುಟ್ಟಡಗಿಸಲು ಅವರ ಮೇಲೆ ತೆರಿಗೆ ಹಾಕಲಾಯಿತು. 
ಮುಂದೆ ಮಕ್ಕಾ, ಮದೀನಾ, ಜಿದ್ದಾ, ತ್ವಾಯಿಫ್‌ಗಳನ್ನು ಮುಸ್ಲಿಂ ಸೇನೆ ವಹಾಬಿಗಳಿಂದ ರಕ್ಷಿಸಿತು. 

*ಸಹೂದ್ ಮರಣ*  ದರ್‌ಇಯ್ಯಾದ ಆಡಳಿತಾಧಿಕಾರಿ ಇಬ್ನು ಅಬ್ದುಲ್ ವಹಾಬ್‌ನ ಮಿತ್ರನಾಗಿದ್ದ ಮುಹಮ್ಮದ್ ಸಹೂದ್ 1229 ಜಮಾದಿಲ್ ಅವ್ವಲ್‌ನಲ್ಲಿ ಮರಣ ಹೊಂದುತ್ತಾರೆ. ನಂತರ ದರ್‌ಇಯ್ಯಾದ ಆಡಳಿತ ಅವರ  ಮಗ ಅಬ್ದುಲ್ಲಾ ಸಹೂದ್ ವಹಿಸುತ್ತಾರೆ. ದರ್‌ಇಯ್ಯಾದಲ್ಲಿರುವ ವಹಾಬಿ ಆಡಳಿತವನ್ನು ಕೊನೆಗಾಣಿಸಲು, ಈಜಿಪ್ತ್ ಆಡಳಿತಾಧಿಕಾರಿ ತನ್ನ ಮಗ ಇಬ್ರಾಹೀಂ ಭಾಷಾನನ್ನು ಸೈನ್ಯದೊಂದಿಗೆ ರಿಯಾದ್‌ಗೆ  ಕಳುಹಿಸುತ್ತಾರೆ. ಹಿ. 1232 ನಲ್ಲಿ ಇಬ್ರಾಹೀಂ ಬಾಷಾ ಹಾಗೂ ಅಬ್ದುಲ್ಲಾ ಸಹೂದ್ ನಡುವೆ ನಡೆದ ಭೀಕರ ಹೋರಾಟದಲ್ಲಿ  ಇಬ್ರಾಹೀಂ ಬಾಷಾ ವಿಜಯಗೊಳ್ಳುತ್ತಾರೆ. 
ಈ ಸೋಲಿನ ಅವಮಾನದಿಂದ ವಹಾಬಿಗಳು ತಮ್ಮ ಕೇಂದ್ರವನ್ನು ದರ್‌ಇಯ್ಯಾದಿಂದ ರಿಯಾದ್‌ಗೆ ಬದಲಾಯಿಸುತ್ತಾರೆ.

ಉಸ್ಮಾನಿಯಾ ಖಿಲಾಫತ್ ಆಡಳಿತದಲ್ಲಿ ಕೊರತೆಗಳಿದ್ದರೂ  ರಾಜಕೀಯವಾಗಿಯೂ, ಸಾಂಸ್ಕೃತಿಕವಾಗಿಯೂ ಮುಸ್ಲಿಂ ಸಮುದಾಯಕ್ಕೆ ನೇತೃತ್ವ ನೀಡಲು ಖಿಲಾಫತ್‌ಗೆ ಸಾಧ್ಯವಾಗಿತ್ತು. ಈ ಆಡಳಿತದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಹೊರಗಿನ ಶಕ್ತಿಗಳು ನುಸುಳಲು ಸಾಧ್ಯವಾಗುತ್ತಿರಲಿಲ್ಲ. 
ಇದು ಬ್ರಿಟಿಷರಿಗೆ ದೊಡ್ಡ ತಲೆನೋವಾಗಿತ್ತು. 
ಬ್ರಿಟಿಷರ ವಸಾಹತುಶಾಹಿ, ಧರ್ಮ ಪ್ರಚಾರ, ಅಧಿಕಾರದಾಹಕ್ಕೆ ತಡೆಯಾಗಿ ನಿಂತದ್ದು ಉಸ್ಮಾನಿಯಾ ಖಿಲಾಫತ್. ಈ ಖಿಲಾಫತ್ ನ ನಾಶಕ್ಕೆ ಬ್ರಿಟಿಷರು ಮಾಡಿದ ಕುತಂತ್ರದ ಫಲವಾಗಿತ್ತು ವಹಾಬಿಸಂನ ಬೆಳವಣಿಗೆ.
( ಸೋವಿಯತ್ ರಷ್ಯಾವನ್ನು ಸೋಲಿಸಲು ಅಮೇರಿಕವು ಅಫ್ಘಾನಿಸ್ತಾನದಲ್ಲಿ ತಾಲಿಬಾನನ್ನು ಬೆಂಬಲಿಸಿದಂತೆ )
*ಒಂದನೇ ಮಹಾ ಯುದ್ದದಲ್ಲಿ ಉಸ್ಮಾನಿಯಾ ಖಿಲಾಫತ್ ವಿರುದ್ಧ ಸಹಕರಿಸಿದರೆ , ವಹಾಬಿ ರಾಷ್ಟ್ರದ ರಚನೆಗೆ ಸಹಕಾರ ನೀಡುವುದಾಗಿ ಬ್ರಿಟಿಷರು ಮತ್ತು ವಹಾಬಿಗಳ ಮಧ್ಯೆ ಒಪ್ಪಂದ ನಡೆಯಿತು*

1915 ರಲ್ಲಿ ವಹಾಬಿ ರಾಷ್ಟ್ರ ಸ್ಥಾಪನೆಗೆ ಅಬ್ದುಲ್‌ ಅಝೀಝ್ ಬಿನ್ ಸಹೂದ್ ಮತ್ತು ಬ್ರಿಟನ್‌ನ ರಾಜಕೀಯ ಪ್ರತಿನಿಧಿ ಸರ್‌ಪೇರ್ಸಿ ಕೋಕ್ಸ್ ನಡುವೆ ಒಪ್ಪಂದ ನಡೆಯಿತು. ಬ್ರಿಟಿಷ್ ಮೇಧಾವಿ ಫಿಲ್‌ಬರ್‌ರನ್ನು ಸಲಹೆಗಾರನ್ನಾಗಿ ನೇಮಿಸಲಾಯಿತು.  
(The Middle east a history sidnley Nuttetion Fisher P575) 

*ಇಸ್ಮಾಮೀ ಖಿಲಾಫತ್‌ನ ವಿರುದ್ಧ ಬ್ರಿಟಿಷ್ ಸಮರ ಸಾರಿದಾಗ ಜಾಗತಿಕ ಮುಸ್ಲಿಮರು ಬ್ರಿಟನ್‌ನ ವಿರುದ್ಧ ನಿಂತರು. ಭಾರತದಲ್ಲೂ ಕೂಡಾ ಬ್ರಿಟಿಷರ ವಿರುದ್ಧ ಖಿಲಾಫತ್ ಚಳವಳಿ ಹುಟ್ಟು ಹಾಕಲಾಯಿತು. ಹಿಂದು - ಮುಸ್ಲಿಮರು ಒಗ್ಗೂಡಿ ಈ ಚಳವಳಿಯನ್ನು ಬೆಂಬಲಿಸಿದರು* 
*ಆದರೆ ಒಂದನೇ ಜಾಗತಿಕ ಮಹಾ ಯುದ್ಧದಲ್ಲಿ ಉಸ್ಮಾನಿಯ ಖಿಲಾಫತ್‌ನ ವಿರುದ್ಧ ಬ್ರಿಟಿಷರಿಗೆ ಪರೋಕ್ಷ ಸಹಾಯ ಮಾಡುತ್ತಾ, ಅವರ ವಿಜಯಗೊಂಡಾಗ ಸಂತಸ ವ್ಯಕ್ತಪಡಿಸಿದ  ಏಕೈಕ ಮುಸ್ಲಿಂ ಗುಂಪು ವಹ್ಹಾಬಿಸಂ*  

ಈ ಯುದ್ಧದಲ್ಲಿ ಉಸ್ಮಾನಿಯಾ ಖಿಲಾಫತ್ ಸೋತಾಗ ಬ್ರಿಟನ್, ಅಮೇರಿಕಾ, ಫ್ರಾನ್ಸ್, ರಶ್ಯಾಗಳು ಮುಸ್ಲಿಂ ಜಗತ್ತನ್ನು ತುಂಡು ತುಂಡಾಗಿ ವಿಭಜಿಸಿದವು. ಫೆಲೆಸ್ತೀನ್ ಸೇರಿದಂತೆ ಅನೇಕ ಅರಬ್ ಭೂ ಪ್ರದೇಶಗಳು ಬ್ರಿಟನ್‌ನ ಪಾಲಾದವು. ಮುಸ್ಲಿಂ ರಾಷ್ಟ್ರಗಳು ಶಾಶ್ವತವಾಗಿ ಪರಸ್ಪರ ಕಚ್ಚಾಡುವಂತೆ ಮಾಡಲು ಬ್ರಿಟನ್ ಹಾಕಿದ ನಿಗೂಢ ಕಾರ್ಯಾಚರಣೆಯ ಫಲವೇ ಇಸ್ರೇಲ್ ಸ್ಥಾಪನೆ. 
ಬ್ರಿಟನ್ ವಿದೇಶ ಕಾರ್ಯ ಸೆಕ್ರೆಟರಿ ಬಾಲ್ಟರ್ ಈ ಯೋಜನೆಯ ಸೂತ್ರಧಾರ. ಇದಕ್ಕೆ ಬಾಲ್ಟರ್ ಡಿಕ್ಲೇರೇಶನ್ ಎಂದು ಹೆಸರು.
1919 - 1945 ರ ನಡುವೆ ಸುಮಾರು 5 ಲಕ್ಷ ಯಹೂದಿಗಳನ್ನು ಫೆಲೆಸ್ತೀನ್‌ಗೆ ತಂದು ಹಾಕಿ ಮುಸ್ಲಿಮರ ಹೃದಯವನ್ನೇ ಭೇಧಿಸಿಲಾಯಿತು. ದುಃಖಕರ ಸಂಗತಿಯೇನೆಂದರೆ ಮುಸ್ಲಿಂ ಸಮುದಾಯ ನೋವಿನಿಂದ ನರಳುತ್ತಿದ್ದಾಗ ವಹಾಬಿಗಳು ಬ್ರಿಟಿಷರನ್ನು ಬೆಂಬಲಿಸುತ್ತಿದ್ದರು. ವಹ್ಹಾಬಿಗಳ ಈ ಉಪಕಾರಕ್ಕೆ ಪ್ರತಿಫಲವಾಗಿ 1935 ರಲ್ಲಿ ಅಬ್ದುಲ್ ಅಝೀಝ್ ಬಿನ್ ಸಹೂದ್‌ರಿಗೆ ನೈಟ್ ಪದವಿ ನೀಡಿ ಬ್ರಿಟನ್ ಗೌರವಿಸಿತು.

*ಕ್ರಿ.ಶ. 1192 ರಲ್ಲಿ ಸುಲ್ತಾನ್ ಸ್ವಲಾಹುದ್ದೀನ್ ಅಯ್ಯೂಬಿಯವರು ವಶಪಡಿಸಿದ ಬೈತುಲ್ ಮುಖದ್ದಸ್ ಪಟ್ಟಣ 1917 ರವರೆಗೆ ಇಸ್ಲಾಮಿಕ್ ಖಿಲಾಫತ್‌ನ ಅಧೀನದಲ್ಲಿತ್ತು. ಈ ಪ್ರದೇಶವನ್ನು ಸಾಮ್ರಾಜ್ಯತ್ವ ಶಕ್ತಿಗಳು ವಶಪಡಿಸಲು ಹಾಗೂ ಪ್ಯಾಲೆಸ್ತೀನ್ ಜನತೆಯನ್ನು ತನ್ನದೇ ಜನ್ಮಭೂಮಿಯಲ್ಲಿ ನಿರಾಶ್ರಿತರನ್ನಾಗಿ ಜೀವಿಸಲು  ಕಾರಣವಾದದ್ದು ಖಿಲಾಫತ್‌ನ ಪತನ.. ಅದಕ್ಕೆ ನೇತೃತ್ವ ನೀಡಿದ್ದು ಬ್ರಿಟನ್‌. ಆ ಬ್ರಿಟನ್‌ಗೆ ಪರೋಕ್ಷ ಸಹಾಯ ಮಾಡಿದ್ದು ಇದೇ ವಹಾಬಿಗಳು.*

ಇದರ ಅಳಿದುಳಿದ ಗುರುತುಗಳು ಇಂದು ಕೂಡ ಕಾಣಬಹುದು. ಮುಸ್ಲಿಮರಲ್ಲಿ ಛಿದ್ರತೆ, ಭಿನ್ನತೆ, ವಿಭಜನೆ, ಸಂಘರ್ಷ ಸೃಷ್ಟಿಸಿದ ಕುಖ್ಯಾತಿ ವಹಾಬಿಸಂಗಿದೆ‌. 
ಮಕ್ಕಾದ ಮುಪ್ತಿಯಾಗಿದ್ದ, ಹರಂ ಶರೀಫ್‌ನ ಅಧಿಕೃತ ಚರಿತ್ರೆಗಾರರಾದ ಅಹ್ಮದ್ ಝೈನಿ ದಹ್‌ಲಾನ್ ತನ್ನ ಫಿತ್ನ್‌ತುಲ್ ವಹ್ಹಾಬಿಯಾ  ಮತ್ತು Advice for the Whabi ಗ್ರಂಥದಲ್ಲಿ ಈ ರಕ್ತಸಿಕ್ತ ಅಧ್ಯಾಯ ಕಾಣಬಹುದು.

ಅಹ್ಲು ಸ್ಸುನ್ನ = 01

*ಅಹ್ಲು ಸ್ಸುನ್ನ - 1* 
➖➖➖➖➖➖➖➖
*ಸಲಫಿಸಂನ ಅಪಾಯದ ಬಗ್ಗೆ ಅಂದೇ ಅವರು ಎಚ್ಚರಿಸಿದ್ದರು*

ಹದೀಸ್ ನಂ - 1
ಇಮಾಂ ಬುಖಾರಿ(ರ)ರವರಿಂದ ವರದಿ : ಅಬೂ ಸಯೀದಿನ್ ಖುದ್‌ರಿ(ರ) ಹೇಳುತ್ತಾರೆ. ಪ್ರವಾದಿ  ﷺ ರವರು ಒಂದು ಯುದ್ಧ ಮುಗಿಸಿ ಮರಳಿ ಬಂದ ನಂತರ ಯುದ್ಧಾರ್ಜಿತ ಸ್ವತ್ತುಗಳನ್ನು (ಗನೀಮತ್) ಸ್ವಹಾಬಿಗಳಿಗೆ ಹಂಚುತ್ತಿದ್ದರು. ಆ ಸಂದರ್ಭದಲ್ಲಿ ಬನೂ ತಮೀಮ್ ವಂಶಕ್ಕೆ ಸೇರಿದ ದ್ಸುಲ್ ಖುವೈಸಿರತುಲ್ ತಮೀಮ್ ಎಂಬ ವ್ಯಕ್ತಿ ಪ್ರವಾದಿ ﷺ ರವರ ಮುಖ ನೋಡುತ್ತಾ ಓ ಮುಹಮ್ಮದ್ ನೀನು ನ್ಯಾಯ ಪಾಲಿಸು
ಆಗ ಪ್ರವಾದಿ ﷺ ರವರು ಹೇಳಿದರು.
ನಾನು ನ್ಯಾಯ ಪಾಲಿಸುವುದಿದ್ದರೆ ಮತ್ಯಾರು ನ್ಯಾಯ ಪಾಲಿಸುವುದು ?
ಪ್ರವಾದಿ ﷺ ರವರನ್ನು ನಿಂದಿಸಿದ ದ್ಸುಲ್ ಖುವೈಸಿರತ್‌ನ ವಿರುದ್ಧ ಸ್ವಹಾಬಿಗಳು  ತಿರುಗಿ ನಿಂತಾಗ.

*ಪ್ರವಾದಿ ﷺ ರವರು ಹೇಳಿದರು. ಆತನಿಗೆ ಏನು ಮಾಡಬೇಡಿ. ಆತನನ್ನು ಬಿಟ್ಟುಬಿಡಿ, ಅವನ ಅನುಯಾಯಿಗಲು ಮುಂದೆ ಬರಲಿದ್ದಾರೆ. ಅವರ ಮುಂದೆ ನಿಮ್ಮ ನಮಾಝ್ , ಉಪವಾಸ ಏನೂ ಅಲ್ಲ. ಅವರು ಖುರ್‌ಆನ್ ಓದುವರು. ಆದರೆ ಬಿಲ್ಲಿನಿಂದ ಬಾಣ ಹಾರಿದಂತೆ ಅವರು ಇಸ್ಲಾಮಿನಿಂದ ಹೊರ ಹೋಗುವರು. (ಬುಖಾರಿ - 3610 )*

ಹದೀಸ್  : 2.
ಇಬ್ನು ಉಮರ್ (ರ) ಹೇಳುತ್ತಾರೆ. 
ಪ್ರವಾದಿ  ﷺ  ಹೇಳಿದರು, ಅಲ್ಲಾಹನೇ ನಮ್ಮ ಯಮನಿಗೂ, ಶಾಮಿಗೂ ಬರಕತ್ ನೀಡು.
ಆಗ ಕೆಲವು ಸ್ವಹಾಬಿಗಳ ಹೇಳಿದರು. ಪ್ರವಾದಿಗಳೇ ನಮ್ಮ ನಜ್‌ದ್‌ಗಾಗಿ ಪ್ರಾರ್ಥಿಸಿ. ಪ್ರವಾದಿ ﷺ ಪುನಃ ಪ್ರಾರ್ಥಿಸಿದ್ದರು . ಅಲ್ಲಾಹನೇ ನಮ್ಮ ಯಮನಿಗೂ, ಶಾಮಿಗೂ ಬರಕತ್ ನೀಡು.
ಸ್ವಹಾಬಿಗಳು ಪುನಃ ನಜ್‌ದ್‌ಗಾಗಿ ಪ್ರಾರ್ಥಿಸುವಂತೆ ಕೇಳಿದರು. 
ಪ್ರವಾದಿ ﷺ ರವರು ಮೂರನೇ ಬಾರಿಯೂ ಯಮನಿಗೂ, ಶಾಮಿಗೂ ಪ್ರಾರ್ಥಿಸಿದರೇ ಹೊರತು ನಜದ್‌ಗಾಗಿ ಪ್ರಾರ್ಥಿಸಲಿಲ್ಲ.
ಕೆಲವು ಸ್ವಹಾಬಿಗಳು ನಜದ್‌ಗಾಗಿ ಪ್ರಾರ್ಥಿಸಲು ಮನವಿ ಮಾಡಿದಾಗ ಕೊನೆಗೆ 
ಪ್ರವಾದಿ ﷺ ಹೇಳಿದರು. 

*ಸ್ವಹಾಬಿಗಳೇ ಅಲ್ಲಿ ಮಹಾ ಕಂಪನಗಳು ಉಂಟಾಗುತ್ತದೆ. ಅಲ್ಲಿಯೇ ಶೈತಾನಿನ ಕೊಂಬು ಉದಿಸಲಿದೆ. ಬುಖಾರಿ 7084*.

*ಇಬ್ನು ಉಮರ್(ರ) ಹೇಳುತ್ತಾರೆ. ಪ್ರವಾದಿ ﷺ  ಪಶ್ಚಿಮ ಭಾಗಕ್ಕೆ ತಿರುಗಿ ತಿಳಿಯಿರಿ ಫಿತ್ನ್ ಇಲ್ಲಿಂದಲೇ ಆರಂಭಗೊಳ್ಳಲಿದೆ ಎಂದರು. (ಮದೀನಾದ ಪಶ್ಚಿಮ ದಿಕ್ಕಿನಲ್ಲಿ ನಜ್‌ದ್ ಇದೆ.) .ಬುಖಾರಿ 6680*

ಈ ಎರಡು ಹದೀಸ್‌ಗಳಿಂದ ಸ್ಪಷ್ಟ. ಪ್ರವಾದಿ ﷺ ರವರ ಆದೇಶಗಳನ್ನು ಧಿಕ್ಕರಿಸುವ, ಇಸ್ಲಾಮಿನ ಪರಂಪರೆಯನ್ನು ತಿರಸ್ಕರಿಸುವ ಪಂಥವು ದ್ಸುಲ್ ಖುವೈಸಿರತ್ತಿನ ಪರಂಪರೆಯಲ್ಲಿ ನಜ್‌ದ್‌ನಿಂದ ಹೊರ ಬರಲಿದೆ.

*ಪರಂಪರಾಗತ ಇಸ್ಲಾಮನ್ನು ಧಿಕ್ಕರಿಸಿ, ಮಹಾತ್ಮರನ್ನು, ಉಲಮಾಗಳನ್ನು ತಿರಸ್ಕರಿಸಿ ಪಾಶ್ಚಾತ್ಯ, ಆಧುನಿಕ ಶೈಲಿಯ ಇಸ್ಲಾಮಿನ ಪ್ರಚಾರಕನಾಗಿ ಮುಹಮ್ಮದ್ ಇಬ್ನು ಅಬ್ದುಲ್ ವಹ್ಹಾಬ್ ಎಂಬವ ದ್ಸುಲ್ ಖುವೈಸಿರತ್ತಿನ 16 ನೇ ಪೌತ್ರನಾಗಿ ನಜ್‌ದ್‌ನಲ್ಲಿ ಆಗಮಿಸುವುದರೊಂದಿಗೆ ಪ್ರವಾದಿ ﷺ ರವರ ಭವಿಷ್ಯವಾಣಿ ಸಾಕ್ಷಾತ್ಕಾರ ವಾಯಿತು*.

(ವಹಾಬಿ ಮುಖಂಡ ಅಲ್ ಬುತಾಮಿ ಬರೆದ ಶೈಖ್ ಮುಹಮ್ಮದ್ ಬಿನ್ ಅಬ್ದುಲ್ ವಹಾಬ್ ಎಂಬ ಗ್ರಂಥದ 15 ನೇ ಪುಟದಲ್ಲಿ ಈ ಪರಂಪರೆ ಕಾಣಬಹುದು) 

ಎಲ್ಲಾ ನೂತನವಾದಿಗಳಿಗೆ ಖವರಿಜ್‌ಗಳೇ ನಾಯಕರು. ಖವಾರಿಜ್‌ಗಳಿಗೆ ದ್ಸುಲ್ ಖುವೈಸಿರತ್ ನಾಯಕನೆಂದು ಸಲಫಿಗಳೇ ಅಂಗೀಕರಿಸುವ  ಇಬ್ನು ತೀಮಿಯ್ಯರೇ ಹೇಳಿದ್ದಾರೆ. 

ಐಕ್ಯರಾಗಿ, ಶಾಂತಿಯಿಂದ ಜೀವನ ನಡೆಸುತ್ತಿದ್ದ ಮುಸ್ಲಿಮರನ್ನು ಛಿನ್ನ ಭಿನ್ನ ಮಾಡಿ ಅಶಾಂತಿ ಸೃಷ್ಟಿಸಲು  ವಹಾಬಿಸಂನ ರಥ ಯಾತ್ರೆ ನಜ್‌ದ್‌ನಲ್ಲಿ ಪ್ರಾರಂಭವಾಯಿತು.

       *ಅಬೂ ರಾಝೀ*

ಅಹ್ಲು ಸ್ಸುನ್ನ = 04

*ಅಹ್ಲು ಸ್ಸುನ್ನ - 4*.
                   @ ಅಬೂ ರಾಝೀ
➖➖➖➖➖➖➖➖
*ಸಲಫಿಗಳ ರಕ್ತ ರಂಜಿತ ಇತಿಹಾಸ*

ಒಂದೆಡೆ ಆಡಳಿತದ ಬೆಂಬಲ, ಇನ್ನೊಂದೆಡೆ ಗೂಢಚಾರ ಹಂಫರ್‌ನ ಸಹಕಾರದಿಂದ ಇಬ್ನು ಅಬ್ದುಲ್ ವಹಾಬ್ ಮೊದಲು ತನ್ನ ಊರ ಸುತ್ತಮುತ್ತ ವಹಾಬಿ ಆಶಯ ಪ್ರಚಾರ ಆರಂಭಿಸಿದ. ತನ್ನ ಮಿತ್ರರು, ಬಂಧುಗಳನ್ನು ಒಗ್ಗೂಡಿಸಿ ಒಂದು ತಂಡ ರಚಿಸಿದ. ನೆರೆಹೊರೆಯ ಪ್ರದೇಶಗಳಿಗೆ ನುಗ್ಗಿ ತನ್ನ ಕೊಳಕು ಆಶಯ ಪ್ರಚಾರ ಮಾಡುವುದು ಆತನ ತಂತ್ರವಾಗಿತ್ತು. ತನ್ನ ಸಿದ್ಧಾಂತಕ್ಕೆ ವಿರುದ್ಧವಾಗಿರುವವರನ್ನು ಹೊಡೆಯುವುದು, ಬಡಿಯುವುದು, ಕೊಲ್ಲುವುದು. ಮಾತ್ರವಲ್ಲ ಅವರ ಸ್ವತ್ತುಗಳನ್ನು ಲಪಟಾಯಿಸುವ ಹೀನ ಕೆಲಸ ಮಾಡತೊಡಗಿದರು. . ಸ್ವತ್ತಿನ ಆಸೆಯಿಂದ ಅವನ ವಹಾಬಿ ಅನುಯಾಯಿಗಳು ಮತ್ತಷ್ಟು ಕ್ರೂರಿಗಳಾದರು. ಆತನ ಬಂಧುಗಳು ದಿಢೀರ್ ಶ್ರೀಮಂತರಾದರು. 

*ಸಂಪತ್ತಿನ ಆಸೆ ಹಾಗೂ ಭಯದಿಂದ ಜನರನ್ನು ತನ್ನ ಸಂಘಟನೆಗೆ ಸೇರಿಸಿದ. ವಹಾಬಿಸಂನ ಪ್ರಚಾರ ಎಷ್ಟು ಭೀಕರವಾಗಿತ್ತೆಂದರೆ ತನ್ನ ಆಶಯ ಒಪ್ಪದ ವಿದ್ವಾಂಸರನ್ನು ಕೊಲ್ಲುತ್ತಿದ್ದ, ಮಹಿಳೆಯರನ್ನು ಮಾನಭಂಗಗೊಳಿಸಿದ, ಇಸ್ಲಾಮಿನ ಸ್ಮಾರಕಗಳನ್ನು ನಾಶಮಾಡಿದ. ಮಹಾತ್ಮರ ಮಖ್‌ಬರಗಳನ್ನು ಧ್ವಂಸ ಮಾಡಿದ. ಗ್ರಂಥಾಲಯಗಳನ್ನು ಭಸ್ಮ ಮಾಡಿದ. ಪರಂಪರಾಗತ ಇಸ್ಲಾಮಿನ ಚಿಹ್ನೆ, ಸ್ಮಾರಕ, ಗುರುತುಗಳನ್ನು ಆತ ಸಹಿಸುತ್ತಿರಲಿಲ್ಲ. ವಹಾಬಿಗಳ ಅಂದಿನ ಕಾರ್ಯಚರಣೆಯೂ ಇಸ್ಲಾಮಿಕ್ ಇತಿಹಾಸದಲ್ಲಿ ಭಯಾನಕ ದಿನಗಳಾಗಿತ್ತು.* (ತಾರೀಖುಲ್ ಮಮ್‌ಲಕತುಲ್ ಅರಬಿಯ್ಯ ಇಸ್ಲಾಮಿಯ್ಯ)
( ಒಂಥರ ಈಗಿನ ಉಗ್ರ ಹಿಂದುತ್ವವಾದಿಗಳಂತೆ. ಗೋವಿನ ಹೆಸರಲ್ಲಿ, ರಾಮನ ಹೆಸರಲ್ಲಿ ನಿರಪರಾಧಿ ಬಡಜನರನ್ನು ಯಾವ ರೀತಿ ಮರ್ದಿಸಲಾಗಿತ್ತೋ ಅದಕ್ಕಿಂತಲೂ ಭೀಕರವಾಗಿತ್ತು ಸಲಫಿಗಳ ಇತಿಹಾಸ )  

*ಸಲಫಿಗಳ ಮಕ್ಕಾ ಆಕ್ರಮಣ* :
ಹಿಜರಿ  1215 ರಲ್ಲಿ ಮಕ್ಕಾದ ಮೇಲೆ ವಹಾಬಿಗಳು ಭೀಕರ ಆಕ್ರಮಣ ಮಾಡಿದರು. ಈ ಆಕ್ರಮಣದಲ್ಲಿ ಅನೇಕ ಜನ ಸಾಮಾನ್ಯರು ಕೊಲ್ಲಲ್ಪಟ್ಟರು. ಹಿ. 1217 ರಲ್ಲಿ ತ್ವಾಯಿಫ್ ಆಕ್ರಮಣ ಮಾಡಲು ಸಿದ್ಧತೆ ನಡೆಸಿದರು. ಆದರೆ ಆ ವರ್ಷ ಹಜ್‌ನ ಜನ ಬಾಹುಲ್ಯದಿಂದ ಆಕ್ರಮಣ ಮಾಡಲು ಸಾಧ್ಯವಾಗಲಿಲ್ಲ. ಹಜ್ ಮುಗಿದು ಜನರು ಚದುರಿದ ನಂತರ ತ್ವಾಯಿಫ್ ಆಕ್ರಮಿಸಿ ವಶಪಡಿಸಿದರು. ಪುನಃ ಮಕ್ಕಾದತ್ತ ವಹ್ಹಾಬಿ ಸೇನೆಯು ಚಲಿಸಿತು. 14 ದಿವಸ ಅವರು ಮಕ್ಕಾದಲ್ಲಿ ರೌದ್ರವ ತಾಂಡವಾಡಿದರು. ತಮ್ಮ ಸಿದ್ಧಾಂತವನ್ನು ಬಲಪ್ರಯೋಗದಿಂದ ಹೇರಿದರು. ನಂತರ ಜಿದ್ದಾದತ್ತ ಹೊರಟು ಅಲ್ಲಿ 7 ದಿವಸ ಕಾರ್ಯಚರಣೆ ನಡೆಸಿದರು.. ಕೊನೆಗೆ ಮರಳಿ ರಿಯಾದ್‌ನತ್ತ ಹೊರಟರು..

*ಮದೀನಾ ಆಕ್ರಮ*: 
ಎರಡು ತಿಂಗಳ ನಂತರ ರಬೀವುಲ್ ಅವ್ವಲ್‌ನಲ್ಲಿ ಪುನಃ ಮಕ್ಕಾದತ್ತ ಹೊರಟರು. ಆದರೆ ಈ ಬಾರಿ ಜಿದ್ದಾ ಮತ್ತು ಮಕ್ಕಾದ ಗವರ್ನರ್‌ಗಳಾದ ಶರೀಫ್ ಭಾಷಾ, ಶರೀಫ್ ಗೀಲಾಗಿ ಇಬ್ಬರೂ ಸೇರಿ ವಹ್ಹಾಬಿಗಳನ್ನು ಮಕ್ಕಾದಿಂದ ಓಡಿಸಿದರು. ದಿಕ್ಕೆಟ್ಟ ವಹಾಬಿಗಳು ಮದೀನಾದತ್ತ ಚಲಿಸಿದರು. ಮದೀನಾದಲ್ಲಿರುವ ಅನೇಕ ಗೋತ್ರದ ಜನರೊಂದಿಗೆ ರಹಸ್ಯ ಒಪ್ಪಂದ ಮಾಡಿದರು. ಅಧಿಕಾರ, ಹಣ, ಮಹಿಳೆಯರ ಆಸೆ ತೋರಿಸಿ ಅನೇಕ ಗೋತ್ರ ಮುಖಂಡರನ್ನು ಬಲೆಗೆ ಹಾಕಿದರು . ಮದೀನಾದಿಂದ ಮಕ್ಕಾಕ್ಕೆ ಬರುವ ಆಹಾರ ಸಾಮಾಗ್ರಿಗಳನ್ನು ತಡೆದರು. ಗತ್ಯಂತರವಿಲ್ಲದೆ ಮಕ್ಕಾ ಗವರ್ನರ್ ವಹಾಬಿಗಳ ಜೊತೆ ಒಪ್ಪಂದವೇರ್ಪಡಿಸಿದ. ಇದರ ಪ್ರಕಾರ ವಹಾಬಿ ಆಶಯ ಪ್ರಚಾರಕ್ಕೆ ಮಕ್ಕಾದಲ್ಲಿ ಪೂರ್ಣ ಸ್ವಾತಂತ್ರ್ಯ ಸಿಕ್ಕಿತು. ಹೀಗೆ ಮಕ್ಕಾ ,ಮದೀನಾ ವಹಾಬಿಗಳ ಕೈಗೆ ಬಂದಾಗ ಚರಿತ್ರೆಯಲ್ಲಿ ಕಂಡರಿಯದ ಧ್ವಂಸಗಳು, ಕ್ರೌರ್ಯಗಳು ನಡೆದವು . ಇತಿಹಾಸದಲ್ಲಿ ಕಂಡು, ಕೇಳದ ರಕ್ತ ತಾಂಡವ ಮಾಡಿದ ಕುಖ್ಯಾತಿ ವಹ್ಹಾಬಿಗಳಿಗೆ ಸಲ್ಲುತ್ತದೆ*. 

*ಕರ್ಬಲ ಆಕ್ರಮಣ*
ಹಿ. 1216 ರಲ್ಲಿ ವಹಾಬಿ ಸೇನೆ ಕರ್ಬಲ ಆಕ್ರಮಿಸಿತು. ಈ ಆಕ್ರಮಣದ ಕುರಿತು ಕೇರಳ ವಹಾಬಿ ಮುಖಂಡ ಇ.ಕೆ. ಮೌಲವಿ ಅಲ್ ಇತ್ತಿಹಾದ್ ಪತ್ರಿಕೆಯಲ್ಲಿ ಬರೆಯುತ್ತಾರೆ. *1801 ಏಪ್ರಿಲ್ 30 ರಂದು ಸಾವಿರಾರು ವಹಾಬಿಗಳು ಕರ್ಬಲಾವನ್ನು ಆಕ್ರಮಿಸಿದರು. ತಮ್ಮನ್ನು ವಿರೋಧಿಸುವ ನಗರ ವಾಸಿಗಳನ್ನು ಕೊಂದು ಹಾಕಿದರು. ಹುಸೈನ್(ರ)ರವರ ಮುಖಾಂನ್ನು ಧ್ವಂಸ ಮಾಡಿದರು. ಅಲ್ಲಿ ಅರಬೇತರ ಸಂದರ್ಶಕರು ನೀಡಿದ ಸ್ವರ್ಣಗಳ ರಾಶಿಯೇ ಇತ್ತು. ಅದೆಲ್ಲವನ್ನು ಲೂಟಿ ಮಾಡಿದರು. ಅಲ್ಲಿ ಸಿಕ್ಕಿದ ಬೆಳೆಬಾಳುವ ಎಲ್ಲಾ ವಸ್ತುಗಳನ್ನು ವಹಾಬಿ ಸೇನೆ ದೋಚಿತು*. 
( 1956 ಸೆಪ್ಟೆಂಬರ್ 2, ಸಂಚಿಕೆ 7 )

ಸಲಫಿಗಳ ರಕ್ತ ರಂಜಿತ ಇತಿಹಾಸದ ಬಗ್ಗೆ ಖ್ಯಾತ ಇತಿಹಾಸಕಾರ  ಝೈನಿ ದಹ್ಲನ್ ( ರ ) ರು ಉಲ್ಲೇಖಿಸುವುದು
ಹೀಗೆ:
ಮಸೀದಿಗಳು ಹಾಗೂ ಸಜ್ಜನರಿಗೆ ಸಂಭಂಧಿಸಿದ ಚಾರಿತ್ರಿಕ ಕುರುಹುಗಳನ್ನು  ವಹಾಬಿಗಳು ನಾಶ ಮಾಡಿದರು.ಮೊದಲನೆಯದಾಗಿ ಮಕ್ಕಾದ ಜನ್ನಾತುಲ್ ಮುಅಲ್ಲಾ”ದಲ್ಲಿದ್ಧ ಹಲವಾರು ಖುಬ್ಭಗಳನ್ನು ಹೊಡೆದುರುಳಿಸಿದರು. ನಂತರ ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ,,ಅಬೂಬಕ್ಕರ್ ಸಿದ್ಧೀಖ್ ( ರ ), ಅಲೀ ( ರ ) 
ಹಾಗೂ ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪ್ರಥಮ ಪತ್ನಿ ಖತೀಜಾ ( ರ ) ಜನ್ಮ ಸ್ಥಳಗಳನ್ನು ಧ್ವಂಸ ಮಾಡಿದರು. ಮಹಾತ್ಮರುಗಳ ವಸ್ತುಗಳನ್ನು,ಅವರ ಚಿಹ್ನೆಗಳನ್ನು ಹುಡುಕಿ, ಹುಡುಕಿ ನಾಶ ಪಡಿಸಿದರು

*ವಹಾಬಿಗಳಲ್ಲಿ ಒಂದು ತಂಡವು  ಇಂತಹ ದುಷ್ಕತ್ಯಗಳನ್ನು ನಡೆಸುವಾಗ ಮತ್ತೊಂದು ತಂಡವು ಮಹಾತ್ಮರನ್ನು ವ್ಯಂಗ್ಯಮಾಡುತ್ತಾ, ಅಪಹಾಸ್ಯ ಮಾಡುತ್ತಾ ಸಾಗುತ್ತಿತ್ತು.* (ಖುಲಾಸತುಲ್ ಕಲಾಮ್) _

*ಹಿರಾ ಗುಹೆ ಧ್ವಂಸ*
ಶೈಖ್ ಶಿಹಾಬುದ್ಧೀನ್ ಅಹ್ಮದ್ ಅಸ್ ಜಾಈ ಬರೆಯುತ್ತಾರೆ:
*ಮಸ್ಜಿದುಲ್ ಅಬೀ ಖುಬೈಸ್,ದಾರುಲ್ ಖೈಝರಾನ್ ಹಾಗೂ ಹಿರಾ ಗುಹೆಯನ್ನು ವಹಾಬಿಗಳು ಹೊಡೆದುರುಳಿಸಿದರು* *ಅದ್ಯಾವುದೂ ಖಬ್ರ್ ನ ಮೇಲೆ ನಿರ್ಮಿಸಲ್ಟಟ್ಟದಲ್ಲ.  ಅದೊಂದು ಚರಿತ್ರಾ ಸ್ಮಾರಕವಾಗಿತ್ತು. ವಿಶೇಷತಃ ಹಿರಾ ಗುಹೆ ಪ್ರವಾದಿತ್ವ ಲಭಿಸುವುದಕ್ಕಿಂತ ಮೊದಲು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಇಬಾದತ್ ಮಾಡುತ್ತಿದ್ದರು.  ಮುತ್ತಬಿಉ ಸ್ಸುನ್ನು ಇಬ್ನು ಉಮರ್ ( ರ) ರವರಂತಹ  ಸ್ವಹಾಬಿಗಳು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪುಣ್ಯ ಪಾದ ಸ್ಪರ್ಶವಾದ ಸ್ಥಳಗಳನ್ನು ಆಯ್ಕೆ ಮಾಡಿ ಅಲ್ಲಿ ಇಬಾದತ್ ನಿರ್ವಹಿಸುತ್ತಿದ್ದರು ಎಂದು ಸ್ವತಃ ಇಬ್ನು ತೈಮಿಯ್ಯಾ ರೇ ತನ್ನ “ಅಸ್ವಿರಾತುಲ್ ಮುಸ್ತಖಿಮ್” ಎಂಬ ಗ್ರಂಥದಲ್ಲಿ, ಇಮಾಂ ಅಹ್ಮದು ಬಿನ್ ಹಂಬಲ್ ( ರ ) ರಿಂದ  ಉದ್ಧರಿಸಿದ್ದಾರೆ. ಮಖ್‌ಬರ ಮಾತ್ರವಲ್ಲ ಇಸ್ಲಾಮಿನ ಸ್ಮಾರಕಗಳನ್ನು ನಾಶ ಮಾಡಿದ್ದನು ನೋಡುವಾಗ ಸಲಫಿಗಳಿಗೆ ಇಸ್ಲಾಮಿನ ಪರಂಪರೆಯೊಂದಿಗೆ ಎಷ್ಟೊಂದು ವಿರೋಧವಿತ್ತು ಎಂದು ತಿಳಿಯಬಹುದು.*

ತಾಹಿಫ್ ದುರಂತವನ್ನು ಚರಿತ್ರಗಾರರಾದ ಝೈನಿ ದಹ್ಲನ್ ಅದನ್ನು ಹೀಗೆ ವಿವರಿಸುತ್ತಾರೆ:
ವಹಾಬಿಗಳು ತ್ವಾಹಿಫ್ ಪ್ರವೇಶಿಸಿ ವೃದ್ಧರನ್ನೂ , ಯುವಕರನ್ನೂ ನೇತಾರರನ್ನೂ ಹಾಗೂ ಜನ ಸಾಮಾನ್ಯರನ್ನೂ ಕೊಲೆ ಗೈದರು. ತಾಯಿಯ ಎದೆಯ ಮೇಲಿದ್ದ ಎಳೆಯ ಕಂದಮ್ಮಗಳ ಕತ್ತು ಕೊಯ್ದರು. ಮನೆಗಳ ಮೇಲೆ ದಾಳಿ ಮಾಡಿ ಒಳಗೆ ಬೆದರಿ ಕೂತಿದ್ದ ಜನರನ್ನು ಮನೆಯಿಂದ ಹೊರಗಟ್ಟಿ ಕೊಂದರು. ದರ್ಸ್ ನಲ್ಲಿ ಕಲಿಯುತ್ತಿದ್ದಂತಹ ವಿಧ್ಯಾರ್ಥಿಗಳನ್ನು ಬಿಡಲಿಲ್ಲ. ನಮಾಜಿನಲ್ಲಿ, ರುಕೂಅ ನಲ್ಲೂ ಸುಜೂದ್ ನಲ್ಲೂ ಏರ್ಪಟ್ಟವರನ್ನೂ ಕೂಡಾ ಬಿಡದೇ ಕೊಂದರು .ತ್ವಾಹಿಫ್ ನ ಮುಸಲ್ಮಾನರಿಂದ ದಬ್ಬಾಲಿಕೆಯ ಮೂಲಕ ಗಿಟ್ಟಿಸಿ ಕೊಂಡ ಸೊತ್ತುಗಳನ್ನು “ಗನೀಮತ್”ಅಂಶಿಸುವಂತೆ ಐದರಲ್ಲೊಂದು ನೇತಾರನಿಗೂ, ಬಾಕಿ ಅನುಯಾಯಿಗಳಿಗೂ ಎಂಬ ಕ್ರಮದಲ್ಲಿ ಪಡೆದು ಕೊಂಡರು.” 

ಈ ವಿಷಯವನ್ನು ಬಾಗ್ದಾದ್ ಗಾರನಾದ ಸಯ್ಯಿದ್ ಇಬ್ರಾಹಿಮ್ ರ‍್ರಿಫಾಈ ಹೀಗೆ ವಿವರಿಸುತ್ತಾರೆ:

*ವಹಾಬಿಗಳ ಆಕ್ರಮಣ ಜಾಗತಿಕ ಮುಸ್ಲಿಮರನ್ನು ದಿಗ್ಭ್ರಮೆ ಗೊಳಿಸಿತ್ತು. ತ್ವಾಹಿಫ್ ವಶಪಡಿಸಿಕೊಂಡು ಅನೇಕರನ್ನು ಕೊಂದರು. ಅದರಲ್ಲಿ ಹಲವಾರು ವಿದ್ವಾಂಸರು ವಧಿಸಲ್ಪಟ್ಟರು. ಸಯ್ಯಿದ್ ಅಬ್ದುಲ್ಲಾಹಿ ಸ್ವಾವಿ (ಮಕ್ಕಾದ ಶಾಫಿಈ ಮುಫ್ತಿ), ಶೈಖ್ ಅಬ್ದುಲ್ಲಾ ಅಬ್ದುಲ್ ಖೈರ್ (ಮಕ್ಕಾದ ಖಾಝಿ), ಶೈಖ್ ಸುಲೈಮಾನ್ ಮುರಾದಿ (ತ್ವಾಹಿಫ್ ಖಾಝಿ) ಎಂಬತ್ತು ವಯಸ್ಸಿನ ಸೂಫಿವರ್ಯ ಯೂಸೂಫ್ ಸ್ವಾವೀ, ಶೈಖ್ ಹಸನು ಶೈಬಿ, ಶೈಖ್ ಜಅïಫರು ಶೈಬಿ ಮುಂತಾದವರು ವಹ್ಹಾಬಿಗಳ ಆಕ್ರಮಗಳಿಗೆ ಬಳಿಯಾಗಿದ್ದಾರೆ*. 
(ರಿಸಾಲತ್ತು ಔರಖೀಲ್ ಬಾಗ್ದಾದೀಯ್ಯ)
( ಮುಂದುವರಿಯುವುದು )

ಅಹ್ಲು ಸ್ಸುನ್ನ = 03

*ಅಹ್ಲು ಸ್ಸುನ್ನ - 3*
              *@ ಅಬೂ ರಾಝೀ*
➖➖➖➖➖➖➖➖
 *ಸಲಫಿ ನಾಯಕನ ಜೊತೆ ಗೂಢಚಾರ ಸೇರಿ  ಇಸ್ಲಾಮನ್ನು ವಿಕೃತಗೊಳಿಸಿದ*

ಕ್ರಿ.ಶ. 1299 ರ ನಂತರ ಜಾಗತಿಕ ಮುಸಲ್ಮಾನರ ನೇತೃತ್ವ ಉಸ್ಮಾನಿಯಾ ಖಿಲಾಫತ್‌ನ ಕೈಯಲ್ಲಿತ್ತು. 
 (ಅಟ್ಟೋಮನ್  ಅಂಪೆಯರ್) 
ಏನೆಲ್ಲಾ ನ್ಯೂನತೆಗಳು, ಕೊರತೆಗಳಿದ್ದರೂ ಮುಸ್ಲಿಂ ಸಮುದಾಯವನ್ನು ರಾಜಕೀಯವಾಗಿಯೂ, ಸಾಂಸ್ಕೃತಿಕವಾಗಿಯೂ ಒಗ್ಗೂಡಿಸಿದ ಖ್ಯಾತಿ ಈ ಖಿಲಾಫತ್‌ಗಿದೆ. ಜಗತ್ತಿನ ಮುಸ್ಲಿಮರನ್ನು ಒಂದು ನೇತೃತ್ವದ ಕೆಳಗೆ ಒಗ್ಗೂಡಿಸುವಲ್ಲಿ ಈ ಖಿಲಾಫತ್‌ನ ಪಾತ್ರ ಮಹತ್ವದ್ದು. ಸಿಂಪಲ್ಲಾಗಿ ಹೇಳಬೇಕೆಂದರೆ‌ ಇಂದಿನ ಅಮೇರಿಕದಂತೆ ಈ ಖಿಲಾಫತ್ ಅಂದು ಬಲಿಷ್ಟವಾಗಿತ್ತು.. 

ಇದುವೇ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಲು ಕಾರಣ. ಜಗತ್ತಿನ ಸಣ್ಣ ಪುಟ್ಟ ರಾಷ್ಟ್ರಗಳನ್ನು ಕುತಂತ್ರಗಳ ಮೂಲಕ ತನ್ನ ಬಲೆಗೆ ಹಾಕುತ್ತಿದ್ದ ಬ್ರಿಟಿಷರಿಗೆ, ದೊಡ್ಡ ತಡೆಗೋಡೆಯಾಗಿ ನಿಂತದ್ದು ಉಸ್ಮಾನಿಯಾ ಖಿಲಾಫತ್, ವಸಾಹತುಶಾಯಿಯ ವಿಸ್ತರಣೆ, ಕ್ರೈಸ್ತ ಧರ್ಮದ ಪ್ರಚಾರ ಈ ಎರಡನ್ನು ಒಂದೇ ಸಮನೆ ಮಾಡುತ್ತಿದ್ದ ಬ್ರಿಟಿಷರಿಗೆ ಉಸ್ಮಾನಿಯಾ ಖಿಲಾಫತ್ ನುಂಗಲಾರದ ತುತ್ತಾಗಿತ್ತು.

 *ನೇರವಾಗಿ ಯುದ್ಧ ಮಾಡಿ ಗೆಲ್ಲುವುದು ಅಸಾಧ್ಯ .ತಂತ್ರ ಕುತಂತ್ರಗಳ ಮೂಲಕವೇ ಮುಸ್ಲಿಮರನ್ನು ಬಲಿ ಪಡೆಯಬೇಕು. ಒಂದೇ ಏಟಿಗೆ ಅನೇಕ ಕಾರ್ಯಗಳು ನಢಯಬೇಕು.. ಉಸ್ಮಾನಿಯಾ ಖಿಲಾಫತ್ ಹರಿದು ಹಂಚಾಗಬೇಕು. ಮುಸ್ಲಿಮರು  ಛಿನ್ನ ಭಿನ್ನರಾಗಬೇಕು. ಪರಸ್ಪರ ಕಚ್ಚಾಡುತ್ತಿರಬೇಕು. ಧಾರ್ಮಿಕವಾಗಿ ಅವರು ಹಿಂದೆ ಸರಿಯಬೇಕು. ಪಾಶ್ಚಾತ್ಯ  ಶೈಲಿಗಳನ್ನು  ಅನುಸರಿಸಬೇಕು*. 
*ಇದಕ್ಕಾಗಿ ಅವರು ನಡೆಸಿದ ಅನೇಕ ಕುತಂತ್ರಗಳಲ್ಲಿ ಒಂದಾಗಿತ್ತು ವಹಾಬಿಸಂ*.
ಸಂಶಯವಿದ್ದವರು ಮುಂದೆ ಓದಿ.

ವಹ್ಹಾಬಿಸಂನ ಸ್ಥಾಪಕ ಮುಹಮ್ಮದ್ ಬಿನ್ ಅಬ್ದುಲ್ ವಹಾಬ್ ಕ್ರಿ.ಶ. 1724ರಲ್ಲಿ ಬಸ್ವರಕ್ಕೆ ಭೇಟಿ ನೀಡಿದಾಗ ಅಲ್ಲಿ ಬ್ರಿಟಿಷ್ ಗೂಢಾಚಾರ ಹಂಫರ್‌ನ ಪರಿಚಯವಾಗುತ್ತದೆ. ಮಾತುಕತೆ ನಡೆಯುತ್ತದೆ.. ಪರಿಚಯ ಗೆಳೆತನವಾಗಿ ಮಾರ್ಪಡುತ್ತದೆ.

 ಮುಸ್ಲಿಮರೆಡೆಯಲ್ಲಿ ಗುಂಪುಗಾರಿಕೆ, ಛಿದ್ರತೆ ಸೃಷ್ಟಿಸಲು ಬ್ರಿಟಿಷ್ ಸರಕಾರ ಹಂಫರ್ ಎಂಬ ಗೂಢಚಾರನನ್ನು ಮುಸ್ಲಿಂ ರಾಷ್ಟ್ರದೊಳಗೆ ಕಳಿಸಿತ್ತು.  ಇಬ್ನು ಅಬ್ದುಲ್ ವಹಾಬ್‌ನ ಮಹತ್ವಕಾಂಕ್ಷೆ, ಅಧಿಕಾರ ಸ್ನಾನಮೋಹ, ಹಾಗೂ ಇಸ್ಲಾಮಿನ ಪರಂಪರೆಯ ಬಗ್ಗೆ ಆತನಿಗಿರುವ ಜಿಗುಪ್ಸೆಯನ್ನು ಅರಿತ ಹಂಫರ್, ತನ್ನ ಕಾರ್ಯ ಯೋಜನೆಗೆ ಆತನನ್ನು ಚೆನ್ನಾಗಿ ಉಪಯೋಗಿಸಿದ. 
*ವಹಾಬ್‌ನ ಉದ್ದೇಶ ಮುಸ್ಲಿಮರನ್ನು ಇಸ್ಲಾಮಿನ ನೈಜ ಪರಂಪರೆಯಿಂದ  ಬೇರ್ಪಡಿಸಿ ಹೊಸ ವಿಚಾರಧಾರೆಯಲ್ಲಿ ಒಗ್ಗೂಡಿಸುವುದು*. 
*ಹಂಫರ್‌ನ ಉದ್ದೇಶ ಕೂಡ ಮುಸ್ಲಿಮರು ಇಸ್ಲಾಮೀ ಶೈಲಿಯಿಂದ ದೂರ ಮಾಡಿ ಪಾಶ್ಚಾತ್ಯ ಶೈಲಿಯಲ್ಲಿ ಜೀವಿಸುವಂತೆ ಮಾಡುವುದು*.

 ಇದನ್ನು ಕಟ್ಟುಕಥೆಯೆಂದು ಹೇಳುವವರು ಈ ಕೆಳಗಿನ ಗ್ರಂಥವನ್ನು ಒಮ್ಮೆ ಅಧ್ಯಯನ ಮಾಡಬೇಕು.
 ( ಮುದ್ದಕ್ಕಿರಾತುಲ್ ಮಿಸ್ಟರ್ ಹಂಫರ್, ಅಲ್‌ಜಾಸೂಸುಲ್ ಬ್ರಿಸ್ವಾನೀ ಫೀ ಬಿಲಾದಿಲ್ ಇಸ್ಲಾಮಿಯ್ಯ )
( Colonization idea Mr. Homphrys Memories, 
The English spy in Islamic Countries )

1737 ರಲ್ಲಿ ರಾಷ್ಟ್ರೀಯ ಸ್ವರೂಪ ಸ್ವೀಕರಿಸಿದ ವಹಾಬಿಸಂ, ಉಸ್ಮಾನಿಯಾ ಖಿಲಾಫತ್‌ನ ವಿರುದ್ಧ ಬಂಡಾಯವೆದ್ದಿತು . ತೌಹೀದ್‌ನ ಹೆಸರಲ್ಲಿ ಇಸ್ಲಾಮೀ ಖಿಲಾಫತ್‌ನ ವಿರುದ್ಧ ಜನರನ್ನು ಪ್ರಚೋದಿಸುವುದು, ಗಲಭೆ ಸೃಷ್ಟಿಸುವುದು ವಹಾಬಿಸಂನ ಕುತಂತ್ರವಾಗಿತ್ತು. 
( ಇಂದು ಕೂಡ ಸಲಫಿಗಳು ತೌಹೀದ್‌ನ ಹೆಸರಲ್ಲಿಯೇ ಸರ್ವ ಫಿತ್ನಗಳನ್ನು ನಡೆಸುತ್ತಾರೆ ) ಬ್ರಿಟಿಷರು ವಹಾಬಿಗಳಿಗೆ ಪರೋಕ್ಷ ಬೆಂಬಲ ನೀಡಿದರು. 1760ರಲ್ಲಿ ಬ್ರಿಟಿಷರ ಬೆಂಬಲದೊಂದಿಗೆ ಇಬ್ನು ಅಬ್ದುಲ್ ವಹಾಬ್ ಮತ್ತು ಇಬ್ನು ಸಹೂದ್ ಒಟ್ಟು ಸೇರಿ ಪ್ರತ್ಯೇಕ ವಹಾಬಿ ರಾಷ್ಟ್ರದ ಘೋಷಣೆ ಮಾಡಿದರು. ಇವರಿಗೆ ಸಲಹೆ, ಸೂಚನೆ, ಸಂರಕ್ಷಣೆ ನೀಡಲು ಬ್ರಿಟಿಷ್ ಈಸ್ಟ್ ಕಂಪೆನಿ ಮುಂದೆ ಬಂತು. ಈ ಸಹಾಯದ ಪರಿಣಾಮ ತುರ್ಕೀ ಖಿಲಾಫತ್ ವಿರುದ್ಧ ವಿವಿಧೆಡೆ ಸಂಘರ್ಷ ಸೃಷ್ಟಿಯಾಯಿತು. ವಿರೋಧಿಗಳನ್ನು ಕೊಲ್ಲುವುದು, ಪೀಡಿಸುವುದು, ದರೋಡೆ ಮಾಡುವುದು, ಮಕ್ಕಳ ಕತ್ತು ಸೀಳುವ ಕ್ರೌರ್ಯ ವನ್ನು ಪ್ರದರ್ಶಿಸಿದರು. 

 ( ಮುಂದುವರಿಯುವುದು )

.

ಅಹ್ಲು ಸ್ಸುನ್ನ = 02

*ಅಹ್ಲು ಸ್ಸುನ್ನ - 2* 
                   @ ಅಬೂ ರಾಝೀ
➖➖➖➖➖➖➖➖
*ಅವರಿಗೆ ಅಧಿಕಾರ ಬೇಕಿತ್ತು.ಅದಕ್ಕಾಗಿ ವಹಾಬಿಸಂ ಸ್ಥಾಪಿಸಿದರು*

ಮುಹಮ್ಮದ್ ಬಿನ್ ಅಬ್ದುಲ್ ವಹಾಬ್ ವಹಾಬಿ ಪಂಥದ ಸ್ಥಾಪಕ (ಕ್ರಿ.ಶ 1703 - 1792 ). 
ಈತ ಜನಿಸಿದ್ದು ನಜ್‌ದ್‌ನ ಉಯಯ್ಯ್‌ನಲ್ಲಿ.
ಇಬ್ನು ಅಬ್ದುಲ್ ವಹಾಬ್ ಚಿಕ್ಕಂದಿನಲ್ಲಿಯೇ ಹಾದಿ ತಪ್ಪಿದ್ದ. ಜನರು ಕೇಳದ, ಕಾಣದ,  ಆಶಯ ಪ್ರಚಾರ ಮಾಡತೊಡಗಿದ. ಈತನ ವಿಚಿತ್ರಕಾರಿ ಆದರ್ಶದ ವಿರುದ್ಧ ಸ್ವತಃ ತಂದೆ ಅಬ್ದುಲ್ ವಹಾಬ್ ಮತ್ತು ಅಣ್ಣ ಸುಲೈಮಾನ್‌ರವರು ಜನರನ್ನು ಎಚ್ಚರಿಸಿದ್ದರು.
ಕಲಿಯುತ್ತಲೇ ಇಬ್ನು ತೀಮಿಯ್ಯ ಸಿದ್ಧಾಂತಕ್ಕೆ ಮಾರು ಹೋದ. ಈ ಸಿದ್ಧಾಂತದ ಹೆಸರಲ್ಲಿ ವಹಾಬಿಸಂ ಸ್ಥಾಪನಕ್ಕೆ ಮುಂದಾದ. ಆದರೆ ಉದ್ದೇಶ ಬೇರೆಯೇ ಆಗಿತ್ತು. ಜನರ ಹೊಗಳಿಕೆ, ಕೀರ್ತಿ, ಸ್ಥಾನಮಾನ, ನಾಯಕತ್ವ, ಅಧಿಕಾರ ಕಬಳಿಕೆಯೇ  ವಹಾಬಿಸಂನ ಸ್ಥಾಪನೆಗೆ ಕಾರಣ. 

*ಆಶಯ ಪ್ರಚಾರಕ್ಕಾಗಿ ಇಬ್ನು ಅಬ್ದುಲ್ ವಹಾಬ್ ನಜ್‌ದ್‌ನ ದರ್‌ಇಯ್ಯಾಗೆ ಬಂದ.  ಅಲ್ಲಿನ ಆಡಳಿತಾಧಿಕಾರಿ ಆಲ್ ಸಹೂದ್‌ರನ್ನು ಸಂಪರ್ಕಿಸಿದ. ಜನವಿರೋಧದಿಂದ ಆಡಳಿತ ಕೈ ತಪ್ಪುವ ಭೀತಿಯಲ್ಲಿದ್ದ ಸಹೂದ್‌ರಿಗೆ ವಹಾಬ್‌ನ ಸಹಾಯ ಬೇಕಾಗಿತ್ತು. ಜನರಿಗೆ ಧರ್ಮದ ಅಮಲೇರಿಸಿ ಅಧಿಕಾರವನ್ನು ಶಾಶ್ವತವಾಗಿ ಮುಂದುವರಿಸುವ ದುರಾಲೋಚನೆ ಸಹೂದ್‌ರಿಗೆ ಬಂತು. ಹೀಗೆ ಇವರಿಬ್ಬರ ನಡುವೆ ಒಪ್ಪಂದ ನಡೆಯಿತು*.

ತನ್ನ ಸಿದ್ಧಾಂತದ ಪ್ರಚಾರಕ್ಕೆ ಸಹಾಯ ಮಾಡಿದರೆ , ಆಡಳಿತದ ಭದ್ರತೆ ಮತ್ತು ವಿಸ್ತಾರಕ್ಕೆ ಸಹಾಯ ಮಾಡುವುದಾಗಿ ಇಬ್ನು ಅಬ್ದುಲ್ ವಹಾಬ್ ಆಲ್ ಸಹೂದ್‌ರಿಗೆ ಭರವಸೆ ನೀಡಿದ. ದೇಶದ ಆಡಳಿತ ಅಲ್‌ಸಹೂದ್ ಕುಟುಂಬಕ್ಕೂ, ಧರ್ಮ ಕಾರ್ಯ ವಹಾಬ್‌ನ ಕುಟುಂಬಕ್ಕೂ ನೀಡುವುದಾಗಿದ್ದ ಒಪ್ಪಂದದ ಮುಖ್ಯ ಅಂಶ.
ವಿಚಿತ್ರವೆಂದರೆ ತಾನು  ಪ್ರವಾದಿಯೆಂದು ಪ್ರಚಾರ ಮಾಡಿದ ಮುಸೈಲಿಮತುಲ್ ಕದ್ಸಾಬ್ ನ ಊರಾದ ದರ್‌ಇಯ್ಯಾದಲ್ಲಿ ಈ ಒಪ್ಪಂದ ನಡೆಯಿತು. ಮಾತ್ರವಲ್ಲ ಆಡಳಿತಾಧಿಕಾರಿ ಅಲ್ ಸಹೂದ್ ಮುಸೈಲಿಮತುಲ್ ಕದ್ಸಾಬ್‌ನ ಕುಟುಂಬವಾದ ಬನೂ ಹನೀಫಾ ಗೋತ್ರಾದ ವ್ಯಕ್ತಿಯಾಗಿದ್ದರು.
 *ಒಟ್ಟಿನಲ್ಲಿ. ದ್ಸುಲ್ ಖುವೈಸಿರತ್ತಿನ ಪರಂಪರೆಯ ಮುಹಮ್ಮದ್ ಬಿನ್ ಅಬ್ದುಲ್ ವಹಾಬ್* 
*ಮುಸೈಲಿಮತ್ ಕದ್ಸಾಬ್‌ನ ಪರಂಪರೆಯ ಮುಹಮ್ಮದ್ ಸಹೂದ್  ಹೊಸ ಪಂಥವನ್ನು  ಸೌದಿ ಅರೇಬಿಯಾದಲ್ಲಿ ಸ್ಥಾಪಿಸಿದರು*. 

ಇದು ಒಂಥರ ಭಾರತದ ಇಂದಿನ ರಾಜಕೀಯದಂತಿದೆ. ಇಲ್ಲಿ ಅಧಿಕಾರ ಶಾಶ್ವತವಾಗಿರಿಸಲು ಉಗ್ರ ಹಿಂದುತ್ವ ಸೃಷ್ಟಿಸಿದಂತೆ,  
ಅರೇಬಿಯಾದಲ್ಲೂ ಅಧಿಕಾರ ಶಾಶ್ವತವಾಗಿ ನೆಲೆ ನಿಲ್ಲಿಸಲು ವಹಾಬಿಸಂ ಸೃಷ್ಟಿಸಲಾಯಿತು. 
ಅಧಿಕಾರಕ್ಕಾಗಿ ವಹಾಬಿಸಂ ಸ್ಥಾಪಿಸಿದ್ದರೂ ನಂತರ ಬಂದ ಅವನ ಅನುಯಾಯಿಗಳು ಅದನ್ನೇ ನೈಜ ಇಸ್ಲಾಮೆಂದು ಪ್ರಚಾರ ಮಾಡಿದರು. 

*ಆಶ್ಚರ್ಯಕರವೆಂದರೆ ಇವರಿಬ್ಬರ ಪೂರ್ವಜರು ಪ್ರವಾದಿ  ﷺ ರವರ ಕಠಿಣ ವಿರೋಧಿಗಳಾಗಿದ್ದರು.* 
*ಅದರ ಪರಿಣಾಮವೆಂಬಂತೆ ಇಂದಿಗೂ ಇವರ ಅನುಯಾಯಿಗಳಲ್ಲಿ ಪ್ರವಾದಿ - ಸ್ವಹಾಬಿ - ಇಮಾಮರುಗಳ ಬಗ್ಗೆ ಅಸಹನೆ, ಜಿಗುಪ್ಸೆ, ಅಪನಂಬಿಕೆ ಕಾಣಬಹುದು* .

ಎಷ್ಟೊಂದು ಸಾಮ್ಯತೆ ನೋಡಿ.
ಪ್ರವಾದಿ ﷺ ರವರನ್ನು ಸ್ವಹಾಬಿಗಳನ್ನು  ಜೀವಂತದಲ್ಲಿ ಕಾಡಿದ ದ್ಸುಲ್ ಖುವೈಸಿರತ್, ಮರಣ ನಂತರ ಕಾಡಿದ  ಮುಸೈಲಿಮತುಲ್ ಕದ್ಸಾಬ್ ಇವರಿಬ್ಬರ ಪರಂಪರೆಯ ವ್ಯಕ್ತಿಗಳು ಇಡೀ ಇಸ್ಲಾಮಿನ ಪರಂಪರೆಯನ್ನೇ ಬದಲಾಯಿಸಲು ಹೊರಟದ್ದು ಮುಸ್ಲಿಮರ ದುರಂತ  

 ಮಾತ್ರವಲ್ಲ ವಹಾಬ್‌ನ ಮಗಳನ್ನು ಆಡಳಿತಾಧಿಕಾರಿ ಮುಹಮ್ಮದ್ ಬಿನ್ ಸಹೂದ್ ಮದುವೆಯಾಗುವುದರೊಂದಿಗೆ ಈ ಸಂಬಂಧ ಮತ್ತಷ್ಟು ಬಲವಾಯಿತು. ಇದನ್ನು ಪ್ರಮುಖ ಚರಿತ್ರೆಗಾರ ಫಿಲಿಫ್‌ರೇ,ರವರು ಧರ್ಮ ಮತ್ತು ಖಡ್ಗದ ನಡುವಿನ ದಾಂಪತ್ಯವೆಂದು ವಿಶ್ಲೇಷಿಸಿದರು. (ಹಿಸ್ಟರಿ ಆಫ್ ಅರಬ್ 2001 ಪುಟ 740)