Friday, November 24, 2017

*ಪ್ರವಾದಿ ( ಸ್ವ ಅ) ಜೀವನ ಚರಿತ್ರೆ*

ಭಾಗ 2⃣

✍  🌹 *ಎಂ ಹೆಚ್ ಹಸನ್ ಝುಹ್ರೀ, ಮಂಗಳಪೇಟೆ* 🌹

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು  ಜನಿಸಿದಾಗ ಹಲವು ವಿಸ್ಮಯ ಕಂಗಳಿಗೆ ಈ ಜಗತ್ತು ಸಾಕ್ಷಿಯಾಯಿತು.ಪರ್ಶಿಯನ್ ದೇಶದವರು ಸಾವಿರಾರು ವರ್ಷಗಳಿಂದ ಆರಾಧಿಸುತ್ತಿದ್ದ ಅಗ್ನಿಯು ನಂದಿ ಹೋಯ್ತು.ವಿಗ್ರಹಗಳೆಲ್ಲವೂ ತಲೆ ಕೆಳಗಾಗಿ ಉರುಳಿ ಬಿದ್ದವು.ಕಿಸ್ರಾ ಚಕ್ರವರ್ತಿ ಯ ಸಿಂಹಾಸನ ವು ಅಲುಗಾಡಿತು. ಇವುಗಳೆಲ್ಲವೂ ಶಿರ್ಕನ್ನು ತೊಳಗಿಸಿ, ತೌಹೀದ್ ನ ಬೋಧಕನ ಆಗಮನದ ಸೂಚನೆಗಳಾಗಿತ್ತು.

 ಮುಂಜಿ ಮಾಡಲ್ಪಟ್ಟ ವರಾಗಿಯೂ , ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟವರಾಗಿಯೂ  ,ತಾಯಿಯ ಉದರದಿಂದ ಹೊರ ಬರುವಾಗಲೇ ಸಜದ ಮಾಡಿದವರಾಗಿಯೂ ಜನಿಸಲ್ಪಟ್ಟರು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು.

ಅನಾಥ ವಾಗಿ ಜನಿಸಿದ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಮೊದಲು ಆಮಿನಾ ಬೀವಿ ನಂತರ ಅಬೂ ಲಹಬನ ದಾಸಿ ಸುವೈಬತುಲ್ ಅಸ್ಲಮೀಯ್ಯ  ಮೊಲೆ ಹಾಲು ನೀಡಿದ್ದರು.ಹಾಶಿಂ ಕುಟುಂಬ ದಲ್ಲಿ ಗಂಡು ಮಗು ಜನಿಸಿದೆ ಎಂಬ ಸುದ್ದಿ ತಿಳಿದ ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ದೊಡ್ಡಪ್ಪ ಅಬೂ ಲಹಬ್ ತನ್ನ ದಾಸಿ ಸುವೈಬತುಲ್ ಅಸ್ಲಮೀಯ್ಯ ರನ್ನು ದಾಸಿ ಮುಕ್ತ ಗೊಳಿಸಿದ್ದ.

ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮದಿನ ದಂದು ಸಂತೋಷ ಪ್ರಕಟಿಸಿದ ಕಾರಣಕ್ಕಾಗಿ ಆತನಿಗೆ ಪ್ರತೀ ಸೋಮವಾರ ನರಕದ ಶಿಕ್ಷೆ ಯಿಂದ ಸಡಿಲಿಕೆ ಇದೆ.

( *ನರಕ ವಾಸಿಯಾದ ಅಬೂ ಲಹಬ್ ಗೆ ಪ್ರವಾದಿ ಜನ್ಮದಿನ ಕ್ಕೆ ಸಂತೋಷ ಪ್ರಕಟಿಸಿದ ಕಾರಣ ನರಕ ಶಿಕ್ಷೆ ಯಿಂದ ರಿಯಾಯಿತಿ ನೀಡುವುದಾದರೆ, ಮುಅ್ಮಿನ್ ಗಳಾದ ನಮಗೆ ಪ್ರವಾದಿ ಜನ್ಮದಿನ ದಂದು ಸಂತೋಷ ಪ್ರಕಟಿಸಿದ ಕಾರಣಕ್ಕೆ ಸ್ವರ್ಗ ಸಿಗದಿರುತ್ತದೆಯೇ ?*)

ನಂತರದ ದಿನಗಳಲ್ಲಿ ಹಲೀಮ ಬೀವಿಯವರು ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಮೊಲೆ ಹಾಲುಣಿಸಿದರು. ಮೊಲೆ ಹಾಲು ನೀಡಿದ ಕಾರಣ ಹಲೀಮ ರ ಕುಟುಂಬ ದಲ್ಲಿ ಸಂಪತ್ತು ವೃದ್ಧಿ ಸಿತು. ಮೃಗಗಳಲ್ಲಿ ಹೆಚ್ಚಳ ಉಂಟಾಯಿತು. ಬಾಲ್ಯದಲ್ಲೇ ಉತ್ತಮ ಗುಣ ನಡತೆ ಯುಳ್ಳವರಾಗಿದ್ದ ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅನಾಗರಿಕತೆ ಮೈ ಗೂಡಿಸಿ ಕೊಂಡಿದ್ದ ಪಾಮರ ಜನತೆಯಿಂದ *ಅಲ್ ಅಮೀನ್* ಎಂದು ಕರೆಸಿಕೊಂಡಿದ್ದರು.ತಪ್ಪು ಮಾಡುವುದು ಬಿಡಿ, ತಪ್ಪೆಂದು ಗ್ರಹಿಸಬಹುದಾದ ಯಾವುದೂ ಅವರ ಜೀವನದಲ್ಲಿ ನಡೆಯಲೇ ಇಲ್ಲ.

ಮುಂದುವರಿಯುವುದು...

🌐🌐🌐🌐🌐🌐🌐
☘☘☘☘☘☘☘☘☘☘☘☘          *ಪ್ರವಾದಿ ನಿಂದನೆಯ           ☘☘☘   ವ್ಯೂಹಾತ್ಮಕ ಇತಿಹಾಸ*   ☘☘☘☘☘☘☘☘☘☘☘☘☘

*﷽*

*ಭಾಗ*- 0⃣2⃣

ಇಸ್ಲಾಂನ ಪುನರುದಯ ತಾರುಣದಲ್ಲೇ ಕ್ರೈಸ್ತರು ಮತ್ತು ಯಹೂದಿಗಳು ದ್ವೇಷವನ್ನೇ ಅಸ್ತ್ರವನ್ನಾಗಿ ಇಸ್ಲಾಮಿನ ವಿರುದ್ದ ಪ್ರಯೋಗಿಸತೊಡಗಿದರು. ಅದರೆ ಇಸ್ಲಾಮಿನ ಸ್ಪಟಿಕ ಆದರ್ಶ, ಸಿದ್ದಾಂತ, ತಾತ್ವಿಕ ಪ್ರತಿಪಾದನೆಗಳಿಂದ ಪೇರ್ಶ್ಯಾ, ಶಾಂ ಮುಂತಾದ ಪ್ರದೇಶಗಳು ಇಸ್ಲಾಮಿಗೆ ಬಾಗಿಲು ತೆರದುಕೊಟ್ಟಿತು. ಜೂದರ ಮತ್ತು ಕ್ರೈಸ್ತರ ಪ್ರಾಬಲ್ಯವಿರುವ ಪ್ರದೇಶಗಳಲ್ಲೇ ಮುಹಮ್ಮದ್ ನಬಿಯವರ ಪ್ರತಿಪಾದನೆಗಳು ಅಸ್ತಿತ್ವವನ್ನು ಪಡೆದುಕೊಳ್ಳುವುದನ್ನು ಅರಿತಾಗ ಸಾಮ್ರಾಜ್ಯಶಾಹಿ ಶಕ್ತಿಗಳು ಹಲವು ಪಿತೂರಿಗಳನ್ನು ನಡೆಸಿದರು. ಅದರ ಪರಿಣಾಮವೆಂಬಂತೆ ಶತಮಾನಗಳವರೆಗೆ, ಕ್ರೂಸೇಡರ್‌ಗಳು ಇಸ್ಲಾಮಿನ ವಿರುದ್ಧ ದ್ವೇಷವನ್ನೇ ಆಯುಧವನ್ನಾಗಿ ಬಳಸಿದರು.

*ಆದರೆ ಈ ಎಲ್ಲಾ ಬಾಲಿಶ ಪ್ರಯತ್ನಗಳೂ ಅವರಿಗೆ ಕಹಿನೀರನ್ನೇ ಕುಡಿಸಿತೇ ವಿನಃ ಇಸ್ಲಾಮಿನ ತತ್ವಗಳು ಹಾಗೂ ಪ್ರವಾದಿಯವರ ಆದರ್ಶಗಳಿಗೆ ಯಾವುದೇ ಚ್ಯುತಿಯೂ ಬರಲಿಲ್ಲ. ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ ಮುಸ್ಲಿಮರನ್ನು ಅಧೀರಗೊಳಿಸಲು ಸಾಧ್ಯವಿಲ್ಲವೆಂದೂ, ಅವರು ಇಸ್ಲಾಮಿನ ವಿರುದ್ದ ನಡೆಯುವ ಬೌದ್ಧಿಕ ಯುದ್ಧದಲ್ಲಿ ಅಕ್ಷುಣಗೊಳ್ಳಲಾರರೆಂದೂ  ಅವರು ಅರಿತುಕೊಂಡರು. ಹೀಗಾಗಿ, ಮುಸ್ಲಿಮರ ಮತ್ತು ಇಸ್ಲಾಂ ಧರ್ಮದ ಬಗ್ಗೆ ಅನುಮಾನಗಳನ್ನು ಸೃಷ್ಟಿಸಲು  ಶ್ರಮಿಸಿದರು. ಅದೂ ವಿಫಲವಾಯಿತು.  ಕೊನೆಗೆ ಜಗತ್ತು ವಿಕಸಿತಗೊಂಡತೆ, ವಿಚಾರವಾದ ಉಚ್ರಾಯಗೊಂಡಂತೆ, ವೈಚಾರಿಕತೆ ಧಾರ್ಮಿಕ ತತ್ವಗಳ ಮೇಲೆ ಅಸ್ತಿತ್ವಬೆಳೆಸಿಕೊಂಡಂತೆ ಪ್ರವಾದಿಯವರ ತತ್ವಗಳನ್ನು ವಿಮರ್ಶಿಸಲು ಪ್ರಯತ್ನಿಸಿದರು. ಆದರೆ ಪ್ರವಾದಿಯವರದ್ದು ಪ್ರಶ್ನಾತೀತ ತತ್ವಗಳಾಗಿತ್ತು  ಎಂಬುದು ಎಲ್ಲರಿಗೂ ತಿಳಿದ ವಿಚಾರ. ಸಾರ್ವಕಾಲಿಕ ಮೌಲ್ಯಗಳಿದ್ದ ಪ್ರವಾದೀ ಪ್ರತಿಪಾದನೆಗಳು ಈಗಲೂ ವಿಜ್ಞಾನ ಕ್ಷೇತ್ರಕ್ಕೆ ಸವಾಲಾಗಿಯೇ ಉಳಿದಿದೆ. ಪ್ರವಾದಿಯವರ ಬದುಕು ಮತ್ತು ಆದರ್ಶಗಳು ಪ್ರತಿಯೊಂದು ಕಾಲಕ್ಕೂ ಅನುಕರಣಾಯೋಗ್ಯವಾಗಿದೆ. ಮತ್ತು ಕಲ್ಮಶ ರಹಿತವಾಗಿದೆ. ಅವುಗಳಲ್ಲಿ ವಿಮರ್ಶನೆಗೆ ಆಸ್ಪದವೇ ಇಲ್ಲ*

ಪ್ರಪಂಚದ ಮೇಲೆ ಆಧಿಪತ್ಯ ಸ್ಥಾಪಿಸಿ ಸಾಮ್ರಾಜ್ಯ ವಿಸ್ತರಣೆ ನಡೆಸುವ  ಅವರ ಗುರಿಗೆ ಇಸ್ಲಾಮಿನ ಪ್ರತಿಪಾದಿತ ತತ್ವ ಹಾಗೂ ವಿಚಾರಗಳು ಕಗ್ಗಂಟಾಗಿ ಪರಿಣಮಿಸಿತು. ಇದು ಅವರಲ್ಲಿ ಧಾರ್ಮಿಕ ಮತ್ಸರವನ್ನು ಸೃಷ್ಟಿಸಿತು. ಆ ಮೂಲಕ ಇಸ್ಲಾಮಿನ ತತ್ವ ಹಾಗೂ ಸಿದ್ದಾಂತಗಳನ್ನು ವಿಮರ್ಶಿಸುವ ಸಲುವಾಗಿ ತೇಜೋವಧೆ, ಅಪಹಾಸ್ಯ ನಡೆಸತೊಡಗಿದರು.  ಅವರು ಈ ಧ್ವೇಷಾಸ್ತ್ರವನ್ನು ಪ್ರವಾದಿಯವರ ಮೇಲೆ‌ ಪ್ರಯೋಗಿಸತೊಡಗಿದರು. ಪ್ರವಾದಿಯವರ ತತ್ವ ಹಾಗೂ ಪ್ರತಿಪಾದಿತ ಸಿದ್ದಾಂತಗಳ ಮೇಲೆ ದಾಳಿ ನಡೆಸಿದರು. ಇವು ಅದರ ಸೀಮೆಯನ್ನು ದಾಟಿ ಪರಿಹಾಸ್ಯದ ಪರಾಕಾಷ್ಠೆಗೆ ತಲುಪಿದಾಗ ಪ್ರವಾದಿಯವರ ನಿಂದನೆಗಳಾದವು. ಉತ್ಕೃಷ್ಟ‌ ಬದುಕಿನ ಬಗ್ಗೆ ಅವಹೇಳನವಾದವು..

 *(ಮುಂದುವರಿಯುವುದು)*

✍🏻  *ಟಿ.ಎಂ ತಂಬಿನಮಕ್ಕಿ*
ಜಗತ್ತಿಗೆ ಮಾನವೀಯ ಬೆಳಕನ್ನು ಪಸರಿದ ವಿಶ್ವ ವಿಮೋಚಕ ಪ್ರವಾದಿ (ﷺ)...!!
ಪ್ರವಾದಿ (ﷺ) ತೋರಿಸಿಕೊಟ್ಟ ಹಾದಿಯಲ್ಲಿ ಮುನ್ನಡೆದು ನೈಜ ಪ್ರವಾದಿ ಪ್ರೇಮಿಗಳಾಗೋಣ

(ಮೂಲ : ಸ್ನೇಹಜೀವಿ ಅಡ್ಕ ರವರ ಲೇಖನದಿಂದ)

ಕಾರ್ಗತ್ತಲಿನಿಂದ ಕೂಡಿದ ಜಗತ್ತಿಗೆ ಮಾನವೀಯ ಬೆಳಕನ್ನು ಪಸರಿಸಿದವರಾಗಿದ್ದರು ವಿಶ್ವ ವಿಮೋಚಕ ಪ್ರವಾದಿ ಮುಹಮ್ಮದ್ ಮುಸ್ತಫಾ  (ﷺ)ರವರು.
ಹುಟ್ಟಿದ ಮಗು ಹೆಣ್ಣಂದರಿತ ಕೂಡಲೇ ಜೀವಂತವಾಗಿ ಹೂತು ಕಾಕಲ್ಪಡುತ್ತಿದ್ದ ಸಮೂಹದ ನಡುವೆ ಹೆಣ್ಣು ನಿಮ್ಮ ಮನೆಗೆ ಶಾಪವಲ್ಲ ,ಹೆಣ್ಣು ಮಗು ನಿಮ್ಮ ಮನೆಯ ಬೆಳಕು ಅಂತ ಜಗತ್ತಿಗೆ ಸಾರಿದ ಹೇಳಿದ ವಿಶ್ವ ಪ್ರವಾದಿ (ﷺ) ರವರು ತಾಯಿಯ ಕಾಲಡಿಯಲ್ಲಾಗಿದೆ ಸ್ವರ್ಗ.  ನಿಮ್ಮ ಆಸ್ತಿಯಲ್ಲಿ ಹೆಣ್ಣಿಗೂ ಪಾಲು ನೀಡಬೇಕೆಂದು ಕಲಿಸಿಕೊಟ್ಟರು.
ಪ್ರಸಕ್ತವಾಗಿ ಇಸ್ಲಾಮಿನಲ್ಲಿ ಸ್ತ್ರೀ ಶೋಷಣೆಗೊಳಪಡುತ್ತಿದ್ದಾಳೆ ಅನ್ನುವಂತಹ ಅರ್ಥವಿಲ್ಲದ ಕೂಗಿಗೆ ಹದಿನಾಲ್ಕು ಶತಮಾನಗಳ ಹಿಂದೆಯೇ ಪ್ರವಾದಿ  (ﷺ)ರವರು ಉತ್ತರವನ್ನು ಕಂಡುಕೊಂಡು, ಆಕೆಗೆ ಮಾಣಿಕ್ಯಗಿಂತಲೂ ಅಧಿಕವಾದ ಸ್ಥಾನಮಾನವನ್ನು ನೀಡಿ ಗೌರವಿಸಿದೆ.
ಇಂದಿಗೂ ಋತುಮತಿಯಾದ ಹೆಣ್ಣನ್ನು ಮನೆಯ ಹೊರಗಡೆ ಮಲಗಿಸುವ ಅಮಾನವೀಯ ಪದ್ದತಿ, ಗಂಡ ಮರಣ ಹೊಂದಿದರೆ ಜೀವನ ಪರ್ಯಂತ ವಿಧವೆಯಾಗಿ ಜೀವಿಸುವಂತಹ  ವ್ಯವಸ್ಥೆ ಜಾರಿಯಲ್ಲಿದ್ದರೂ, ತ್ವಲಾಕ್ ನ ಸಾಧಕ, ಬಾಧಕಗಳ ಕುರಿತೂ, ತ್ವಲಾಕ್ ನ ರೂಪಗಳನ್ನು ತಿಳಿಯುವ ಪ್ರಯತ್ನ ನಡೆಸದೆ ಇಸ್ಲಾಮಿನಲ್ಲಿ ಸ್ತ್ರೀ ಸ್ವಾತಂತ್ರ್ಯವಿಲ್ಲ ಎಂದು ವಾದ ನಡೆಸುವವರು ಪ್ರವಾದಿ (ﷺ) ರವರು ಜಗತ್ತಿಗೆ ತೋರಿಸಿಕೊಟ್ಟ ಮಾದರೀಯೋಗ್ಯ ನಡೆ, ಮಹಿಳೆಯರಿಗೆ ಕಲ್ಪಿಸಿದ ಸ್ಥಾನಮಾನಗಳ ಕುರಿತು ಅಧ್ಯಯನ ನಡೆಸಬೇಕಾಗಿದೆ.

ನಿನ್ನ ನೆರೆಯವನು ಹಸಿದಿರುವಾಗ (ಅವನೊಬ್ಬ ಸಹೋದರ ಧರ್ಮೀಯನಾಗಿದ್ದರೂ ) ಹೊಟ್ಟೆ ತುಂಬಾ ಉಣ್ಣುವವನು ಮುಸ್ಲಿಮನಲ್ಲ ಎಂದು ಕಲಿಸಿಕೊಟ್ಟಾಗ ನಿನ್ನ ನೆರೆಯಲ್ಲಿ ಹಸಿದಿರುವನು ಮುಸ್ಲಿಮನಾಗಿದ್ದರೆ ಮಾತ್ರ ನೀನು ಸಹಾಯ ಮಾಡು ಎಂದು ಕಲಿಸಿಕೊಟ್ಟಿಲ್ಲ. ಆತ ಯಾವುದೇ ಧರ್ಮವನಾಗಿದ್ದರೂ ನೀನು ಆತನಿಗೆ ಸಹಾಯ ಮಾಡು ಎಂದು ಕಲಿಸಿಕೊಡುವುದರ ಮೂಲಕ ಜಗತ್ತಿಗೆ ಮಾನವೀಯ ಮೌಲ್ಯಗಳನ್ನು ಬಿತ್ತರಿಸಿದರು.

ದೇಶದೆಲ್ಲೆಡೆ ಧರ್ಮ ಧರ್ಮಗಳ ಹೆಸರೇಳಿ ಕೊಲೆಪಾತಕಗಳು ಅಧಿಕವಾಗಿತ್ತಿರುವ ಈ ಕಾಲಘಟ್ಟದಲ್ಲಿ ಮನುಷ್ಯರಿಗೆ ಮನುಷ್ಯತ್ವವು ಮರೀಚಿಕೆಯಾಗಿಯೇ ಉಳಿದಿದೆ.
ಹದಿನಾಲ್ಕು ಶತಮಾನಗಳ ಹಿಂದೆಯೇ ಪ್ರವಾದಿ (ﷺ)  ರವರು ಮುನ್ನೆಚ್ಚರಿಕೆ ನೀಡಿದ್ದರು. ಅದೊಂದು ಕಾಲ ಬರಲಿದೆ ಅಂದು ಕೊಲೆಗೈಯುವವನಿಗೆ ಗೊತ್ತಿರಲಿಕ್ಕಿಲ್ಲ ನಾನು ಯಾಕೆ ಕೊಲೆಗೈಯುತ್ತಿದ್ದೇನೆಂದು, ಕೊಲೆಗೈಯಲ್ಪಟ್ಟವನಿಗೆ ನಾನು ಯಾಕೆ ಕೊಲೆಗೈಯಲ್ಪಡುತ್ತಿದ್ದೇನೆ ಅಂತ ಗೊತ್ತಿರುವುದಿಲ್ಲ ಅನ್ನುವ ಎಚ್ಚರಿಕೆಯ ಸಂದೇಶವನ್ನು ನೀಡಿದ್ದರು.
ವರ್ಣ ಭೇದ ದ ಹೆಸರಿನಲ್ಲಿ ಕರಿಯರನ್ನು ಕೀಳಾಗಿ ಕಾಣುತ್ತಿದ್ದ ಕಾಲಘಟ್ಟದಲ್ಲಿ ಕರಿಯನಾದ ಬಿಲಾಲ್ ರ.ಅ ರವರನ್ನು ಮಸೀದಿಯಲ್ಲಿ ಬಾಂಗ್ ಕರೆ ನೀಡಲು ಆಜ್ಞಾಪಿಸಿ ಕರಿಯನಿಗೂ - ಬಿಳಿಯನಿಗೂ, ಬಡವನಿಗೂ - ಶ್ರೀಮಂತನಿಗೂ ಒಂದೇ ಸ್ಥಾನಮಾನವನ್ನು ನೀಡಿ ವರ್ಣಭೇದ ನೀತಿಗೆ ಅಂತ್ಯ ಹಾಡಿದರು. ಇಂದಿಗೂ ಮಸೀದಿಗಳಲ್ಲಿ ಬಡವ -ಶ್ರೀಮಂತ ,ಕರಿಯ -ಬಿಳಿಯ ಅನ್ನುವ ತಾರತಮ್ಯವಿಲ್ಲದೆ ಪರಸ್ಪರ ಭುಜಕ್ಕೆ ಭುಜ ಸೇರಿಸಿ ನಮಾಝ್ ಮಾಡುವ ದೃಶ್ಯಗಳನ್ನು ಕಾಣಿಸಲು ಸಾಧ್ಯವಿದೆ.

ಒಬ್ಬ ನಿರಪರಾಧಿಯನ್ನು ಕೊಂದರೆ ಸಕಲ ಮಾನವ ಕುಲವನ್ನೇ ಕೊಂದಂತೆ ಅನ್ನುವಂತಹ ಎಚ್ಚರಿಕೆಯ ಸಂದೇಶವನ್ನು ನೀಡಿ ಮನುಷ್ಯ ಮನಸ್ಸುಗಳ ನಡುವಿನ ಸಂಬಂಧಗಳ ಕುರಿತಾದ ಮಹತ್ವವನ್ನು ಈ ಜಗತ್ತಿನ ಮುಂದೆ ತೆರೆದಿಟ್ಟಿದ್ದರು.
ಕಾರ್ಮಿಕನ ಬೆವರು ಆರುವ ಮುನ್ನವೇ ಆತನಿಗೆ ಆತನ ದುಡಿಮೆಯ ವೇತನವನ್ನು ನೀಡಿ ಎಂದು ಆಜ್ಞಾಪಿಸಿದ್ದು ಪ್ರವಾದಿ (ﷺ) ರವರು ಕಾರ್ಮಿಕ ವರ್ಗದ ಭವನೆಯನ್ನು ಅರ್ಥೈಸಿಕೊಂಡಾಗಿತ್ತು
ಇಂದು ದೇಶದೆಲ್ಲೆಡೆ ಕಾರ್ಮಿಕ ವರ್ಗವು ಬೀದಿ ಬೀದಿಗಳಲ್ಲಿ ತಮಗೆ ಅನುಕೂಲವಾದ ವೇತನವನ್ನು ನೀಡಬೇಕೆಂದು ಪ್ರತಿಭಟಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಹದಿನಾಲ್ಕು ಶತಮಾನಗಳ ಹಿಂದೆಯೇ ಪ್ರವಾದಿ (ﷺ) ರವರು ಇದಕ್ಕೊಂದು ಪರಿಹಾರವನ್ನು ಕಂಡುಕೊಂಡಿದ್ದಾರೆ.

ತನ್ನ ಕರುಳಕುಡಿಯಾದ ಫಾತಿಮಾ ರ.ಅ ಕದ್ದರೂ ಆಕೆಯ ಕೈಯನ್ನು ಕಡಿಯದೆ ಬಿಡಲಾರೆ ಎಂದು ಖಡಾ ಖಂಡಿತವಾಗಿ ಹೇಳಿದ ಪ್ರವಾದಿ  (ﷺ) ರವರು ನ್ಯಾಯ ಪಾಲನೆಯಲ್ಲಿ ಎಂದೂ ತಾರತಮ್ಯದ ನೀತಿಯನ್ನು ಅನುಸರಿಸಿದವರಲ್ಲ.

ಅಲ್ ಅಮೀನ್ ಅನ್ನುವ ಹೆಸರಿನಿಂದಲೇ ಕರೆಯಲ್ಪಡುತ್ತಿದ್ದ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ(ﷺ) ರವರ ಜನ್ಮ ದಿನ ಮುಸ್ಲಿಂ ಜಗತ್ತಿಗೆ ಮಗದೊಮ್ಮೆ ಆಗತವಾದಾಗ ಪ್ರವಾದಿ (ﷺ) ರವರ ಆದರ್ಶ ,ಅವರು ಕಲಿಸಿಕೊಟ್ಟ ಹಾದಿಯನ್ನು ತಿಳಿಸಿಕೊಡುವ ಪ್ರಯತ್ನ ನಡೆಯಬೇಕಿದೆ. ಪ್ರವಾದಿ  (ﷺ) ರವರನ್ನು ಪ್ರೀತಿಸುವುದು, ಅವರ ಕೀರ್ತನೆಗಳನ್ನು ಹೇಳುವುದು ಒಬ್ಬ ಸತ್ಯ ವಿಶ್ವಾಸಿಯ ಕರ್ತವ್ಯವಾಗಿದೆ.
ಇಲ್ಲಿನ ಕೆಲವೊಂದು ಪತ್ರಿಕೆಗಳು, ಇನ್ನು ಕೆಲವು ಸಂಘಟನೆಗಳು ಪ್ರವಾದಿ (ﷺ)  ರವನ್ನು ನಿಂದಿಸಿದ ಮಾತ್ರಕ್ಕೆ ಇಲ್ಲಿ ಇಸ್ಲಾಮಿನ ಬೆಳವಣಿಗೆಯನ್ನೋ, ಪ್ರವಾದಿ (ﷺ) ರವರ ಮೇಲಿನ ಪ್ರೀತಿಯನ್ನೋ ಇಲ್ಲವಾಗಿಸಲು ಸಾಧ್ಯವಿಲ್ಲ.
ಪ್ರವಾದಿ(ﷺ)  ರವರನ್ನು ಯಾರೆಲ್ಲಾ ವಿಮರ್ಷಿಸಲು ಪ್ರಯತ್ನಿಸುತ್ತಾರೋ ಆವಾಗಲೆಲ್ಲಾ ಜನತೆ ಆ ಪ್ರವಾದಿಯನ್ನು ಅರಿಯಲು ಪ್ರಯತ್ನಿಸುತ್ತದೆ. ಪರಿಣಾಮ ಅವರು ಆ ಪ್ರವಾದಿ (ﷺ) ರವರ ಆದರ್ಶದಲ್ಲಿ ಸತ್ಯವನ್ನು ಮನಗಂಡು ಇಸ್ಲಾಮಿನತ್ತ ಆಕರ್ಷಿತರಾಗುತ್ತಿದ್ದಾರೆ.
ಕೇವಲ ಒಂದು ತಿಂಗಳಿಗೋ, ಅಥವಾ ದಿನದ ಮಟ್ಟಿಗೋ ಪ್ರವಾದಿ ಪ್ರೇಮಿಗಳಾಗಿ ಮೆರೆಯದೆ.  ಪ್ರವಾದಿ(ﷺ) ರವರು ಕಲಿಸಿಕೊಟ್ಟ ಸತ್ಯದ ಹಾದಿಯನ್ನು,  ಆದರ್ಶವನ್ನು ಮೈಗೂಡಿಸಿಕೊಂಡು ಜೀವಿಸಿ, ನೈಜ ಪ್ರವಾದಿ ಪ್ರೇಮಿಗಳಾಗಿ, ಯಾರಿಗೂ ತೊಂದರೆ, ಅನ್ಯಾಯಗಳಾಗದೆ ಪ್ರವಾದಿ (ﷺ) ರ ಜನ್ಮದಿವನ್ನು ಕೊಂಡಾಡೋಣ.  ನಾಡಿನ ಸರ್ವ ಬಾಂಧವರಿಗೂ ಈದ್ ಮೀಲಾದ್ ಶುಭಾಶಯಗಳು.
*ಮುಹಮ್ಮದರನ್ನು ಪ್ರೀತಿಸಲು ಮುಸಲ್ಮಾನನಾಗಬೇಕೆಂಬ ಷರತ್ತಿಲ್ಲ*

ಅದು ಬ್ರಿಟೀಷರು ಭಾರತವನ್ನಾಳುತ್ತಿದ್ದ ಸಮಯ. ಲಾಹೋರಿನಲ್ಲಿ ಹುಟ್ಟಿ ದೆಹಲಿಯಲ್ಲಿ ಪ್ರಸಿದ್ದರಾದ ಹಿಂದೂ ಕವಿಯೊಬ್ಬರಿದ್ದರು. ಬಹೂರ್ ರಾಮ್ ಎಂಬವರ ಪುತ್ರ ದಿಲ್ಲೂ ರಾಮ್. ‘ಕೌಸರೀ’ ಎಂಬ ಕಾವ್ಯ ನಾಮ ಅವರದ್ದಾಗಿತ್ತು. ಈ ಕವಿ ಹೆಚ್ಚಾಗಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಪ್ರಶಂಸಿಸಿ ಕವನ ರಚಿಸುತ್ತಿದ್ದರು. ಈ ಬಗ್ಗೆ ಅವರ ಧರ್ಮಿಯರಿಗೆ ಅಸಮಾಧಾನವಿತ್ತು. ಅವರು ಯಾಕೆ ನೀನು ಮುಸ್ಲಿಮರ ಪ್ರವಾದಿಯ ಬಗ್ಗೆ ಕವಿತೆ ಬರೆಯುತ್ತಿ ಎಂದು ಪ್ರಶ್ನಿಸಿದಾಗ ದಿಲ್ಲೂರಾಮ್ ‘ನೀವು ನನ್ನನ್ನು ಅದರಿಂದ ತಡೆಯದಿರಿ, ಏಕೆಂದರೆ; ನನ್ನನು ಅಂತಹ ಕವಿತೆ ರಚಿಸುವಂತೆ ಒತ್ತಾಯಪಡಿಸಲಾಗುತ್ತಿದೆ ಎಂದರು. ಯಾರು ಒತ್ತಾಯ ಪಡಿಸುವವರು? ಎಂದು ಪ್ರಶ್ನೆ ಬಂದಾಗ ನನ್ನ ಪ್ರೀತಿ ಎಂದು ಉತ್ತರಿಸಿದರು. ನಾನು ಆ ಎರಡು ಕಿಬ್ಲಾಗಳ ಇಮಾಮ್‍ನ ಪ್ರೀತಿಯಲ್ಲಿ ಬಿದ್ದಿದ್ದೇನೆ ಅಂದರು ಆ ಹಿಂದೂ ಕವಿ.
ಅದೇಗೆ ಹಿಂದೂವಾಗಿಯೂ ಪ್ರವಾದಿ ಪ್ರೀತಿಯಲ್ಲಿ ಬಿದ್ದೆ ಎಂದು ಕೇಳಿದರೆ ‘ಮೌಲ್ವಿ’ ಎಂಬ ಉರ್ದು ಪತ್ರಿಕೆಯಲ್ಲಿ ಪ್ರಕಟಿಸಿದ ಚೌಪದಿಯ ಮೂಲಕ ಉತ್ತರ ಕೊಟ್ಟರು;
*_ಕುಚ್ ಇಷ್ಕ್ ಹೇ ಮುಹಮ್ಮದ್ ಮೇ ನಹೀ ಶರ್ತ್ ಹೇ ಮುಸಲ್ಮಾನ್_*
*_ಹೇ ಕೌಸರಿ ಹಿಂದೂ ಭೀ ತಲಬ್‍ಗಾರ್-ಎ-ಮುಹಮ್ಮದ್_*
*_ಅಲ್ಲಾರೇ! ಕ್ಯಾ ರೌನಕ್ ಹೇ ಬಾಝಾರ್-ಎ-ಮುಹಮ್ಮದ್_*
*_ಕೇ ಮಾಬೂದ್ ಎ ಜಹಾನ್ ಬಿ ಹೇ ಖರೀದಾರ್ ಎ ಮುಹಮ್ಮದ್_*
“ ಆ ನೆಬಿಯವರಲ್ಲಿ ಪ್ರೀತಿಯುಂಟಾಗಲು ಮುಸಲ್ಮಾನನಾಗಬೇಕೆಂಬ ಷರತ್ತಿಲ್ಲ, ಈ ಕೌಸರಿ ಹಿಂದೂವಾಗಿಯೂ ಮುಹಮ್ಮದರನ್ನು ಹುಡುಕಿ ಬಂದವನು, ಅಲ್ಲಾಹ್! ಎಂತ ಆನಂದ ಮುಹಮ್ಮದರ ಬಾಝಾರಲ್ಲಿ, ಸೃಷ್ಟಿಕರ್ತನೇ ಖರೀದಿದಾರನಲ್ಲಿ”

ಇದೇ ಪತ್ರಿಕೆ ಪ್ರಕಟಿಸಿದ ಮತ್ತೊಂದು ಕವಿತೆ ದಿಲ್ಲೂರಾಮರನ್ನು ವಿವಾದಕ್ಕೆ ಸಿಲುಕಿಸಿತ್ತು. ನಾಡಿನ ಹಿಂದೂಗಳು ಮುಸ್ಲಿಮರು ಅವರನ್ನು ವಿರೋದಿಸಿದರು
*_ರಹ್ಮತುಲ್ ಆಲಮಿನ್ ಕೇ ಹಾಶರ್ ಮೇ ಮಹನಾ ಕುಲೇ_*
*_ಖಲ್ಕ್ ಸಾರಿ ಶಫಾ-ಎ-ರೋಝ್-ಎ-ಜಝಾ ಕೆ ಸಾತ್ ಹೆ_*
*_ಕೆ ದಿಲ್ಲೂರಾಮ್‍ಕೋ ಜನ್ನತ್ ಮೇ ಜಬ್ ಹಝ್ರತ್ ಗಯೇ_*
*_ಮಾಲೂಮ್ ಹುವಾ ಕೆ ಹಿಂದೂ ಭಿ ಮಹ್ಬೂಬ್-ಎ-ಖುದಾ ಕಿ ಸಾಥ್ ಹೇ_*
“ ರಹ್ಮತುಲ್ ಆಲಮೀನ್ ಇದರ ಅರ್ಥ ವಿಧಿ ನಿರ್ಣಯದ ದಿನ ತಿಳಿಯಲಿದೆ. ಎಲ್ಲರೂ ಬಿಡುಗಡೆಗಾಗಿ ಬಿನ್ನಹ ಸಲ್ಲಿಸುವಾಗ, ಆ ಪ್ರೇಮ ಸ್ವರೂಪಿಯು  ದಿಲ್ಲೂರಾಮನನ್ನು ಕೈಹಿಡಿದು ಸ್ವರ್ಗಕ್ಕೆ ಕರೆದೊಯ್ಯಲಿದ್ದಾರೆ. ಗೊತ್ತಾಗಲಿದೆ ಒಬ್ಬ ಹಿಂದೂವು ಅಲ್ಲಾಹನ ಪ್ರೀತಿಪಾತ್ರರ ಜೊತೆಗಿದ್ದಾನೆ “
ಈ ಚೌಪದಿ ದೇಶದಲ್ಲಿ ತಲ್ಲಣ ಉಂಟು ಮಾಡಿತು. ಸ್ವಧರ್ಮಿಯರು ಪ್ರವಾದಿ ಪ್ರಶಂಸೆಗಳನ್ನು ಬರೆಯುವುದರ ಕುರಿತು ವಿವಾದ ಉಂಟು ಮಾಡಿದರೆ; ಒಬ್ಬ ಹಿಂದುವಾಗಿಯೂ ವಿಧಿ ನಿರ್ಣಯ ದಿನದ ಕುರಿತು, ಸ್ವರ್ಗ ಪ್ರವೇಶದ ಕುರಿತು ಮಾತನಾಡಿದ್ದು ಮುಸ್ಲಿಮರನ್ನು ಕೆರಳಿಸಿತು.
ಈ ಎಲ್ಲಾ ವಿವಾದಗಳನ್ನು ಕಡೆಗಣಿಸಿ ದಿಲ್ಲೂರಾಮ್ ಪ್ರವಾದಿ ಪ್ರಶಂಸೆಯ ಕವನ ಹೊಸೆದರು. ಕುಟುಂಬ ಅವರನ್ನು ಹುಚ್ಚನೆಂದು ಸಂಕೋಲೆಗೆ ಹಾಕಿತು. ದಿಲ್ಲಿ ಬಜಾರಿನ ಮಧ್ಯೆ ಕೊರಳಿಗೆ ಸುತ್ತಿದ್ದ ಸಂಕೋಲೆಯೊಂದಿಗೆ ದೊಡ್ಡ ಧ್ವನಿಯಲ್ಲಿ ಈ ಕೆಳಗಿನ ಅರ್ಥ ಬರುವ ಕವಿತೆ ಉಚ್ಚರಿಸುತ್ತಾ ದಿಲ್ಲೂರಾಮ್ ಕಂಡುಬಂದರು, ಜನತೆ ಅಕ್ರೋಶದಿಂದ ಅವರೆಡೆಗೆ ಕಲ್ಲುಬೀಸುತ್ತಿದ್ದರು;
*_ಮುಹಮ್ಮದ್ ಮುಹಮ್ಮದ್ ಮುಹಮ್ಮದ್_*
*_ನಿಜ ಮುಹಮ್ಮದರು ಅಲ್ಲಾಹನಿಗೆ ಪ್ರೀತಿಪಾತ್ರರು_*
*_ಮುಹಮ್ಮದರು ಮಾತ್ರ ಅಲ್ಲಾಹನಿಗೆ ಪ್ರೀತಿ ಪಾತ್ರರು_*
*_ನಿಮಗೆ ಅಲ್ಲಾಹನ ಪ್ರೀತಿ ಬೇಕೇ? ಮುಹಮ್ಮದರನ್ನು ಪ್ರೀತಿಸಿ._*
ವೃದ್ಧಾಪ್ಯದಿಂದ, ರೋಗಶಯ್ಯೆಯಲ್ಲಿ ಏಳಲಾಗದೇ ಮಲಗಿದ್ದ ದಿಲ್ಲೂರಾಮರು ಒಂದು ದಿನ ಸುತ್ತಲಿದ್ದವರು ದಿಗ್ಮೂಢರಾಗುವಂತೆ ಪ್ರಸನ್ನವದನದೊಂದಿಗೆ ದಿಗ್ಗನೆ ಎದ್ದು ನಿಂತರು. ಎಲ್ಲರೂ ಏನಾಯ್ತು ಏನಾಯ್ತು ಎಂದು ಕೇಳಿದರು. ಆಗ ತಡೆಂi
ರದ ಅಳುವಿನೊಂದಿಗೆ ದಿಲ್ಲೂರಾಮ್ ಹೇಳಿದರು” ನನ್ನ ಸೌಭಾಗ್ಯ. ನನ್ನ ಜೀವನವಿಡೀ ಯಾರ ಪ್ರಶಂಸೆಗೆ ಮೀಸಲಿಟ್ಟೇನೋ ಅವರೇ ಅನುಗ್ರಹೀತೆ ಫಾತಿಮಾರ ಪ್ರೀತಿಯ ತಂದೆ ಆ ಲೋಕನಾಯಕರು ನನ್ನ ಬಳಿ ಬಂದಿದ್ದರು. ಅವರ ಧರ್ಮವನ್ನು ನಾನು ಸ್ವೀಕರಿಸದಿದ್ದರೂ ಕೂಡಾ. ಅವರೆಷ್ಟು ಕರುಣಾಮಯಿ. ಆ ಪ್ರೇಮದ ಗಣಿ ನನ್ನಲ್ಲಿ ಹೇಳಿದರು ದಿಲ್ಲೂ ರಾಮ್ ನಿನ್ನ ಸಮಯ ಮುಗಿಯುತ್ತಿದೆ. ಅಝ್ರಾಈಲ್ ನಿನ್ನನು ಸಮೀಪಿಸುತ್ತಿದ್ದಾರೆ. ನಿನ್ನಂತೆ ಬದುಕನ್ನು ನನ್ನ ಪ್ರಶಂಸೆಗೆ ಮಿಸಲಿಟ್ಟವರನ್ನು ನರಕಾಗ್ನಿ ಸುಡುವುದು ನನಗೆ ಇಷ್ಟವಿಲ್ಲ. ನಿನ್ನನು ಸ್ವರ್ಗಕ್ಕೊಯ್ಯಬೇಕೆಂದು ನನ್ನ ಆಶೆ. ನಾನು ಕಲಿಮಾ ಹೇಳಿದೆ ಅಲ್ ಹಮ್ದುಲಿಲ್ಲಾಹ್. ನಾನು ನಾಯಕರಲ್ಲಿ ಬಿನ್ನಹವಿತ್ತೆ ಯಾ ರಸೂಲುಲ್ಲಾಹ್ ನೀವು ನನಗೆ ಕಲಿಮಾ ಹೇಳಿಕೊಟ್ಟಿರಿ. ನನಗೆ ಒಂದು ಹೆಸರನ್ನು ಸೂಚಿಸಿ ಎಂದು ಅವರು ನನ್ನನು ಕೌಸರ್ ಅಲೀ ಕೌಸರಿ ಎಂದು ಕರೆದರು.
ಅವರ ಹೆಸರು ಬರೇಲ್ವಿ ಸುನ್ನಿಗಳ ನಡುವೆ ಮನೆಮಾತಾಯಿತು. 1931ರಲ್ಲಿ ಲಾಹೋರಿನಲ್ಲಿ ನಿಧನರಾದರು.

*ಸಲಾಮುನ್ ಅಲೈಕ ಯಾ ರಸೂಲುಲ್ಲಾ*

:ವೆಬ್ ಮೂಲ:

ಇರ್ಶಾದ್ ಪತ್ರಿಕೆಯಲ್ಲಿ ಪ್ರಕಟಿತ

*ಮುಸ್ತಫಾ ಗಡಿಯಾರ್*
🍁🍁🍁🍁🍁🍁🍁🍁🍁🍁🍁🍁 *ಕೋಮು ಸೌಹಾರ್ದಕ್ಕೆ ಪ್ರವಾದಿ   🍁 🍁                ಸಂದೇಶ*                       🍁🍁🍁🍁🍁🍁🍁🍁🍁🍁🍁🍁

ಪ್ರವಾದಿ(ಸ)ರು ಅನ್ಯಧರ್ಮೀಯರೊಂದಿಗೆ ಬೇರ್ಪಟ್ಟು ನಿಂತು, ಅನುಯಾಯಿಗಳನ್ನು ಸಂಕುಚಿತ ಸಮೂಹವನ್ನಾಗಿ ಬದಲಾಯಿಸಿದರೆಂದು ಕೆಲವು ಪಾಶ್ಚಾತ್ಯರು ಆರೋಪಿಸುವುದುಂಟು. ಅನ್ಯ ಸಂಸ್ಕೃತಿಗಳೊಂದಿಗೆ ಅತ್ಯಂತ ಕಠಿಣ ಅಸಹಿಷ್ಣುತೆ ನೆಬಿಯವರಿಗಿತ್ತು ಎಂಬ ಧಾರಣೆ ಅಭಿನವ ನವೀನವಾದಿಗಳು ಪ್ರಚಾರ ಪಡಿಸಲು ಶ್ರಮಿಸಿದ್ದಾರೆ. ನಿಜಕ್ಕೂ ಇಷ್ಟೊಂದು ಧರ್ಮ ನಿರಪೇಕ್ಷತೆ ಮತ್ತು ಸೌಹಾರ್ದತೆ ಪ್ರಕಟಿಸಿದ ಮತ್ತೊಂದು ಧರ್ಮನೇತಾರನಿಲ್ಲ. ಅನ್ಯಧರ್ಮೀಯರೊಂದಿಗೆ ಅವರು ತೋರಿಸಿದ ವಿಶಾಲ ಮನೋಭಾವ ಇತಿಹಾಸ ಗ್ರಂಥಗಳಲ್ಲಿ ಧಾರಾಳವಾಗಿ ಕಾಣಬಹುದಾಗಿದೆ.
ಇಸ್ಲಾಮಿಕ ರಾಷ್ಟ್ರಗಳಲ್ಲಿರುವ ಅಮುಸ್ಲಿಮರಲ್ಲಿ ಆಶ್ರಿತರು(ದಿಮ್ಮಿಗಳು) ಮತ್ತು ನಿರಾಶ್ರಿತರು ಎಂಬ ಎರಡು ವಿಭಾಗಗಳಿವೆ. ಇತರ ರಾಷ್ಟ್ರಗಳಿಂದ ಪಲಾಯನಗೈದು ತಲುಪುವ ನಿರಾಶ್ರಿತರು ಮತ್ತು ಸ್ಥಿರವಾಸಿಗಳಾದ ದಿಮ್ಮಿಗಳು ಸಮಾನವಾಗಿ ಧರ್ಮ ಸ್ವಾತಂತ್ರ್ಯ ಮತ್ತು ಸಂರಕ್ಷಣೆಗೆ ಅರ್ಹರಾಗಿದ್ದಾರೆ. ಕೆಲವರ ಅಭಿಪ್ರಾಯ ’ದಿಮ್ಮಿಗಳು’ ಎಂಬ ಪದ ನಿಂದ್ಯತೆಯನ್ನು ಸೂಚಿಸುವುದೆಂದಾಗಿದೆ. ಆದರೆ ಇದರ ಅರ್ಥ ’ಪ್ರವಾದಿಯ ಸಂರಕ್ಷಣೆಯಲ್ಲಿರುವವರು’ ಎಂದಾಗಿದೆ. ಪ್ರವಾದಿ(ಸ) ಪ್ರತಿಯೊಂದು ಗವರ್ನರರಿಗೆ ನೀಡಿದ್ದ ನಿರ್ದೇಶಗಳಿಂದಲೇ ಇದು ವ್ಯಕ್ತವಾಗುತ್ತದೆ. ನೆಬಿ(ಸ)ರು ಪ್ರತೀ ಗವರ್ನರರಲ್ಲೂ ಹೇಳಿದ್ದರು, ’ನಿನ್ನನ್ನು ಆಶ್ರಯಿಸುವ ಅಮುಸ್ಲಿಮರಿಗೆ ನೀನು ಅಲ್ಲಾಹನ ಮತ್ತು ನೆಬಿಯವರ ಸಂರಕ್ಷಣೆ ನೀಡಬೇಕು. ಅವರನ್ನು ನಿನ್ನ ಅನುಯಾಯಿಗಳಂತೆ ಕಾಣಬೇಕು. ಅವರೊಂದಿಗಿರುವ ಅನೀತಿಯು ಸ್ವಂತ ಅನುಯಾಯಿಗಳೊಂದಿಗಿರುವ ವಂಚನೆಗಿಂತಲೂ ಭಯಾನಕವಾಗಿದೆ’. (ಮುಸ್ಲಿಂ ೨/೧೩೫೭-೫೮)
ಪ್ರಥಮ ಖಲೀಫ ಅಬೂಬಕ್ಕರ್(ರ) ರವರು ನಜ್‌ರಾನ್ ನಿವಾಸಿಗಳಿಗೆ ಬರೆದ ಪತ್ರ ಗಮನಾರ್ಹವಾಗಿದೆ. ’ಅಮುಸ್ಲಿಮರಿಗೆ ತಿರುನೆಬಿ(ಸ)ರ ಸಂರಕ್ಷಣೆ ನೀಡಬೇಕು. ಅವರ ಜಂಗಮ ಸ್ಥಾವರ ಸೊತ್ತುಗಳು, ಆರಾಧನಾಲಯಗಳು ಮತ್ತು ಪುರೋಹಿತರು ಇವುಗಳೆಲ್ಲವೂ ಸುರಕ್ಷಿತವಾಗಿರಬೇಕು. ಅವರಿಗೆ ತೊಂದರೆ ಮತ್ತು ನಾಶ ನಷ್ಟಗಳಿರಬಾರದು’ (ಕಿತಾಬುಲ್ ಖರಾಜ್ ೭೯). ಇದೇ ರೀತಿಯಲ್ಲಿ ಹಝ್ರತ್ ಉಮರ್(ರ) ಮತ್ತು ಅಲಿಯ್ಯ್(ರ) ರವರ ಪತ್ರಗಳಿವೆ.
ಸಂಕ್ಷಿಪ್ತವಾಗಿ ಹೇಳುವುದಾದರೆ ಅವರು ಇತರ ಪ್ರಜೆಗಳಂತೆಯೇ ಆಗಿರುವರು. ಇಮಾಂ ಖಸಾಈ(ರ) ಹೇಳುತ್ತಾರೆ, ಅವರು ಗುಲಾಮರಲ್ಲ. ಸುರಕ್ಷಿತರಾದ ಸ್ವತಂತ್ರ ಪ್ರಜೆಗಳಾಗಿದ್ದಾರೆ.(ಕಿತಾಬುಲ್ ಅಂವಾಲ್ ೧೫೦)
ಆಂಗ್ಲೇಯ ಇತಿಹಾಸಕರನಾದ ರೊನಾಲ್ಡೊ ಇದನ್ನು ಪ್ರತ್ಯಕ್ಷವಾಗಿ ಅಂಗೀಕರಿಸುವುದಾಗಿ ಕಾಣಬಹುದು: ಇಸ್ಲಾಮಿಕ ಆಡಳಿತ ಕೂಟವು ಎಲ್ಲಾ ಪ್ರಜೆಗಳ ಮೇಲೂ ಕ್ರೈಸ್ತವತೆಯನ್ನು ಕಡ್ಡಾಯಗೊಳಿಸಿದ ರೊಮನ್ ಸಾಮ್ರಾಜ್ಯತ್ವದ ಹಾಗಲ್ಲ. ಬದಲಾಗಿ ಎಲ್ಲಾ ಧರ್ಮದ ಅಲ್ಪಸಂಖ್ಯಾತರನ್ನೂ ಅರಬಿಗಳು ಅಂಗೀಕರಿಸಿ ಸ್ವಾತಂತ್ರ್ಯ ನೀಡಿದರು. ಕ್ರಿಶ್ಚಿಯನ್ನರು, ಯಹೂದಿಯರು ಮತ್ತು ಸೌರಾಷ್ಟ್ರ ಧರ್ಮೀಯರೆಲ್ಲರೂ ಈ ಸ್ವಾತಂತ್ರ್ಯವನ್ನು ಅನುಭವಿಸಿದವರಾಗಿದ್ದರು.
ಸೀನಾ ಪರ್ವತದ ಸಮೀಪವಿರುವ ಸೈಂಟ್ ಕಾತರೀನ್ ಮಠದ ಪುರೋಹಿತರಿಗೆ ಮತ್ತು ಎಲ್ಲಾ ಕ್ರಿಶ್ಚಿಯನ್ನರಿಗೆ ಹಿಜ್‌ರ ೬ನೇ ವರ್ಷದಲ್ಲಿ ಒಂದು ವ್ಯವಸ್ಥೆಯನ್ನು ಅಂಗೀಕರಿಸಿ ಕೊಡಲಾಯಿತು. ಅದು ಇಂದೂ ವಿಶಾಲವಾದ ಸಹಿಷ್ಣುತೆಯ ಒಂದು ಸ್ಮಾರಕವಗಿದೆ. ಸಾರ ಸಂಪೂರ್ಣವಾದ ಇತಿಹಾಸವೂ ಆಗಿದೆ.
ಮಾನವೀಯತೆ:
ಖುರ್‌ಆನಿನ ಸಂಬೋಧನೆಯು ಮನುಷ್ಯನೆಂಬ ನೆಲೆಯಲ್ಲಾಗಿದೆ. ಅಲ್ಲಾಹನು ಮಾನವನನ್ನು ಇತರ ಜೀವಜಂತುಗಳಿಗಿಂತಲೂ ಆದರಿಸಿದ್ದಾನೆ. ’ನಾವು ಆದಂ ಸಂತತಿಗಳನ್ನು ಆದರಿಸಿದ್ದೇವೆ. ನೆಲ ಮತ್ತು ಜಲಗಳಲ್ಲಿ ನಾವು ಅವನ ಮೇಲೆ ಜವಾಬ್ದಾರಿ ಹೊರಿಸಿದ್ದೇವೆ. ನಾವು ಅವರಿಗೆ ಒಳ್ಳೆಯ ವಿಭವಗಳನ್ನು ನೀಡಿದ್ದೇವೆ. ಅವರನ್ನು ಇತರ ಸೃಷ್ಟಿಗಳಿಗಿಂತಲೂ ಉತ್ಕೃಷ್ಟರನ್ನಾಗಿ ಮಾಡಿದ್ದೇವೆ’. ಈ ರೀತಿಯ ಸೂಕ್ತಗಳು ಖುರ್‌ಆನಿನಲ್ಲಿ ಇನ್ನೂ ಹಲವಿದೆ.
’ಮನುಷ್ಯರೆಲ್ಲರೂ ಒಂದೇ’ ಎಂಬುವುದು ಮಾವೇಲಿಯ ಆಡಳಿತವನ್ನು ಕುರಿತು ಇರುವ ಐತಿಹ್ಯವಾಗಿದೆಯಾದರೂ ಇಸ್ಲಾಮಿಕ ಆಡಳಿತದಲ್ಲಿ  ಮನುಷ್ಯರಿಗೆ ಅದು ಲಭ್ಯವಾಗಿತ್ತು ಎಂದಾಗಿದೆ ವಾಸ್ತವಿಕತೆ. ಅಲ್ಲಾಹನು ಖಡಾಖಂಡಿತವಾಗಿ ಈ ಅವಕಾಶ ಸಮತ್ವವನ್ನು ಸಾರಿ ಹೇಳುತ್ತಾನೆ. ’ಮನುಷ್ಯರೇ, ನಿಮ್ಮನ್ನು ನಾನು ಒಂದು ಗಂಡು ಮತ್ತು ಹೆಣ್ಣಿನಿಂದ ಸೃಷ್ಟಿಸಿದೆನು. ನೀವು ಪರಸ್ಪರ ಗುರುತಿಸಲು ಬೇಕಾಗಿ ನಿಮ್ಮನ್ನು ಹಲವು ಗೋತ್ರ ಮತ್ತು ವಿಭಾಗಗಳನ್ನಾಗಿ ಮಾಡಿದೆನು. ನಿಜವಾದ ಉತ್ಕೃಷ್ಟನು ಭಕ್ತನು ಮಾತ್ರವಾಗಿದ್ದಾನೆ. ಅಲ್ಲಾಹನು ಸರ್ವಜ್ಞನೂ ಸರ್ವವ್ಯಾಪ್ತಿಯೂ ಆಗಿದ್ದಾನೆ’.
ತಿರುನೆಬಿ(ಸ)ರವರು ಹಿಜ್‌ರ ೧೦ನೇ ವರ್ಷದಲ್ಲಿ ವಿದಾಯ ಭಾಷಣ ನಡೆಸಿದಾಗಲೂ ಇದನ್ನೇ ಘೋಷಿಸಿದರು. ’ತಿಳಿಯಿರಿ, ನಿಮ್ಮೆಲ್ಲರ ಒಡೆಯನು ಒಬ್ಬನಾಗಿದ್ದಾನೆ. ನೀವೆಲ್ಲರೂ ಒಂದು ತಂದೆಯ ಮಕ್ಕಳಾಗಿದ್ದೀರಿ. ತಿಳಿಯಿರಿ, ಅರಬಿಗೆ ಅನರಬಿಗಿಂತಲೂ ಸ್ಥಾನವಿಲ್ಲ. ಅನರಬಿಗೆ ಅರಬಿಗಿಂತಲೂ ಸ್ಥಾನವೂ ಇಲ್ಲ. ಕರಿಯನಿಗೂ ಬಿಳಿಯನಿಗೂ ಪ್ರತ್ಯೇಕ ಸ್ಥಾನವಿಲ್ಲ. ಸೂಕ್ಷ್ಮತೆ ಮತ್ತು ಭಯಭಕ್ತಿಯೇ ವಿನ: ಯಾವುದೇ ಸ್ಥಾನವಿಲ್ಲ. ನಾನಿದೆಲ್ಲವನ್ನೂ ನಿಮಗೆ ತಿಳಿಸಿಕೊಡಲಿಲ್ಲವೇ…..’(ಮುಸ್‌ನದ್ ಅಹ್‌ಮದ್ ೧೨/೨೨೬).
ಅನ್ಯಧರ್ಮೀಯರ ವೇದ ಗ್ರಂಥಗಳೊಂದಿಗೂ ಪ್ರವಾದಿ(ಸ) ರವರು ಗೌರವ ತೋರಿದ್ದರು. ಅವರ ವೇದ ಗ್ರಂಥಗಳನ್ನು ನಿಂದಿಸಬಾರದೆಂದೂ ಪ್ರವಾದಿ(ಸ)ರು ಆಜ್ಞಾಪಿಸಿದ್ದರು. ’ನೀವು ಕ್ರಿಶ್ಚಿಯನ್ ಮತ್ತು ಯಹೂದಿಗಳನ್ನು ನಂಬಬೇಡಿರಿ. ಅವರೊಂದಿಗೆ ಅವಿಶ್ವಾಸವೂ ಬೇಡ. ಅವರಲ್ಲಿ ನೀವು ಹೇಳಬೇಕಾದದ್ದು, ಅಲ್ಲಾಹು ನಮಗೂ ನಿಮಗೂ ಅವತೀರ್ಣಗೊಳಿಸಿದ್ದನ್ನು ವಿಶ್ವಾಸವಿರಿಸುತ್ತೇವೆ ಎಂದಾಗಿದೆ’.(ಬುಖಾರಿ ೩/೧೬೩).
ಮುಸ್‌ನದ್ ಅಹ್‌ಮದಿನಲ್ಲೂ ಈ ಅರ್ಥದಲ್ಲಿರುವ ಹದೀಸನ್ನು ಕಾಣಬಹುದು. ಇಮಾಂ ಕಿರ್ಮಾನೀ(ರ) ಹೇಳುತ್ತಾರೆ, ’ನೆಬಿಯವರ ಈ ಹದೀಸಿನ ಪ್ರಕಾರ ಪ್ರವಾದಿಗಳಿಗೆ ಅವತೀರ್ಣಗೊಂಡ ಎಲ್ಲಾ ವೇದಗಳಲ್ಲೂ ವಿಶ್ವಾಸವಿರಿಸಬೇಕು. ಗ್ರಂಥ ಕ್ರೋಢೀಕರಣ ಮಾಡಿದವರು ನಿರ್ಮಿಸಿದ ತಪ್ಪುಗಳು ಯಾವುದೆಂದು ಕಂಡುಹಿಡಿಯುವುದು ಹೆಚ್ಚು ಶ್ರಮದಾಯಕವಾಗಿದೆ. ಆದರೂ ನಾವು ಅವರ ಮೇಲೆ ಅಪನಂಬಿಕೆಯಿಡಬಾರದು. ಆ ಗ್ರಂಥಗಳಲ್ಲಿರುವ ದೋಷಗಳಲ್ಲಿ ಬಾದ್ಯಸ್ಥರಲ್ಲದ ಹಾಗೆ ಅವರಂತೆ ಅವುಗಳನ್ನು ಅಂಗೀಕರಿಸಬಾರದು. ಆ ಗ್ರಂಥಗಳಲ್ಲಿ ಯಾಥಾರ್ಥ್ಯವಿರಲೂ ಸಾಧ್ಯತೆಯಿದೆ. ಆ ದಿಸೆಯಲ್ಲಿ ಆ ವೇದಗಳನ್ನು ನಾವು ತಿರಸ್ಕರಿಸಬಾರದು’(ತಫ್‌ಸೀರುಲ್ ಕಿರ್ಮಾನೀ ೧೩/೧೪)
ಅನ್ಯಧರ್ಮೀಯರ ದೈವಗಳನ್ನು ಮತ್ತು ವಿಗ್ರಹಗಳನ್ನು ಆಕ್ಷೇಪಿಸುವುದನ್ನು ಪ್ರವಾದಿ(ಸ)ರು ವಿರೋಧಿಸಿದ್ದಾರೆ. ಪ್ರವಾದಿ(ಸ)ರು ಮನುಷ್ಯನನ್ನು ಮತ್ತು ಅವನು ಗೌರವಿಸುವುದನ್ನು ಅಂಗೀಕರಿಸಿದ್ದಾರೆ. ಅಲ್ಲಾಹು ಹೇಳುವನು, ’ಅಲ್ಲಾಹನನ್ನಲ್ಲದೆ ಆರಾಧಿಸುವವರನ್ನು ನೀವು ಆಕ್ಷೇಪಿಸಬಾರದು. ಆಗ ಅವರು ವಿದ್ವೇಷದಿಂದ ಅಜ್ಞತೆಯ ಕಾರಣ ಅಲ್ಲಾಹನನ್ನು ಆಕ್ಷೇಪಿಸುವರು. ಎಲ್ಲಾ ಸಮೂಹಕ್ಕೂ ಅವರವರ ಪ್ರವೃತ್ತಿಗಳನ್ನು ನಾವು ಅಂದವಾಗಿಸಿದೆವು. ಎಲ್ಲರ ಮರಳುವಿಕೆಯೂ ಅಲ್ಲಾಹನ ಬಳಿಗಾಗಿವೆ. ಅವರು ಏನನ್ನೆಲ್ಲಾ ಮಾಡಿದ್ದರೆಂದು ಅವರಿಗೆ ಆಗ ತಿಳಿಸಲಾಗುವುದು’. ಇಮಾಂ ಖುರ್ತುಬಿ ಈ ಸೂಕ್ತದ ವಿವರಣೆಯಲ್ಲಿ ಅನ್ಯಧರ್ಮೀಯರ ವಿಗ್ರಹ ಮತ್ತು ಶಿಲುಬೆಗಳನ್ನು ನಿಂದಿಸಬಾರದೆಂದು ಸ್ಪಷ್ಟಪಡಿಸುತ್ತಾರೆ.
ಪ್ರವಾದಿ(ಸ)ರು ಪೂರ್ವಿಕ ಪ್ರವಾದಿಗಳನ್ನು ಹೊಗಳಿ ಗೌರವಿಸಿದ್ದಾರೆ. ಯಹೂದ್ಯರು ಆಶೂರಾ ದಿನದಂದು ವ್ರತ ಆಚರಿಸುವುದನ್ನು ಕಂಡಾಗ ತನ್ನ ಅನುಯಾಯಿಗಳೊಂದಿಗೂ ವ್ರತ ಆಚರಿಸಿ ಮೂಸಾ ನೆಬಿ(ಅ)ರನ್ನು ಗೌರವಿಸಲು ಆಜ್ಞಾಪಿಸಿದ್ದರು. ಯೋನಾ ಪ್ರವಾದಿ ಜೋಸಫ್(ಯೂಸುಫ್-ಅ) ಮತ್ತು ಯೇಶು(ಈಸಾ-ಅ)ರವರನ್ನು ಕುರಿತು ನೆಬಿ(ಸ)ರ ಪ್ರಕೀರ್ತನೆಗಳು ಸುವ್ಯಕ್ತವಾಗಿದೆ. ’ಯೇಶುವಿನೊಂದಿಗೆ ಇಹ ಮತ್ತು ಪರದಲ್ಲಿ ಅತ್ಯಧಿಕ ಬಂಧವುಳ್ಳವನು ನಾನಾಗಿದ್ದೇನೆ. ಎಲ್ಲಾ ಪ್ರವಾದಿಗಳೂ ಸಹೋದರರಾಗಿದ್ದಾರೆ. ಮಾತೆಯರು ಹಲವಿರಬಹುದು, ಆದರೆ ಧರ್ಮ ಒಂದೇ ಆಗಿದೆ’.
ಒಂದು ಯಹೂದ್ಯರ ಶವಶರೀರವನ್ನು ಹೊತ್ತುಕೊಂಡು ಹೋಗುವುದನ್ನು ಕಂಡಾಗ ನೆಬಿ(ಸ)ರು ಎದ್ದು ನಿಂತರು. ಅನುಚರರಲ್ಲಿ ಒಬ್ಬರು ಕೇಳಿದರು, ’ಅದು ಯಹೂದ್ಯನ ಶವವಲ್ಲವೇ?’ ನೆಬಿ(ಸ) ಪ್ರತಿಕ್ರಿಯಿಸಿದರು, ’ಅವನೂ ಮನುಷ್ಯನು ತಾನೇ?’(ಬುಖಾರಿ ೩/೨೨೨೨) ಈ ಹದೀಸ್ ಇತರ ಸ್ಥಳಗಳಲ್ಲೂ ಕಾಣಬಹುದು. ಪ್ರವಾದಿ(ಸ)ರವರು ಮಾನವೀಯತೆಯನ್ನು ಎತ್ತಿಹಿಡಿದವರಾಗಿದ್ದರು. ಮನುಷ್ಯರೆಂಬ ನೆಲೆಯಲ್ಲಿ ಎಲ್ಲಾ ಧರ್ಮೀಯರನ್ನೂ ಅರ್ಥೈಸಿಕೊಳ್ಳಲಿರುವ ವಿಶಾಲ ಮನೋಭಾವವನ್ನು ಅವರು ತೋರ್ಪಡಿಸಿದರು. ಅದರಲ್ಲಿ ಎಳ್ಳಷ್ಟೂ ವಿವೇಚನೆ ಕಾಣಿಸಲಿಲ್ಲ. ಇಲ್ಲೆಲ್ಲಾ ನಾವು ಕಾಣುವುದು ಉದಾತ್ತ ಮಾನವಿಕತೆಯ ಉತ್ತಮ ನಿದರ್ಶನವನ್ನಾಗಿದೆ.
ಧರ್ಮ ಸ್ವಾತಂತ್ರ್ಯ:
ಪ್ರವಾದಿ(ಸ)ರ ಜೀವನ ಚರಿತ್ರೆಯಲ್ಲಿ ಬಲಾತ್ಕಾರವಾಗಿ ಮತಾಂತರಗೊಳಿಸಿದ್ದನ್ನು ಎಲ್ಲಿಯೂ ಕಾಣಲಾರದು. ’ಜಿಝ್‌ಯ’ವು ಮುಸ್ಲಿಮರಿಂದ ಝಕಾತ್ ಪಡೆಯುವ ಹಾಗಿರುವ ಋಣಭಾದ್ಯತೆ ಮಾತ್ರವಾಗಿದೆ. ’ದೀನಿನಲ್ಲಿ ಬಲಾತ್ಕಾರವಿಲ್ಲ’ ಎಂಬ ಸೂಕ್ತವು ಅವತೀರ್ಣಗೊಂಡದ್ದು ಪುತ್ರರು ಅವಿಶ್ವಾಸಿಗಳಾದ ಪಿತರನ್ನು ಬಲಾತ್ಕಾರವಾಗಿ ಮತಾಂತರಗೊಳಿಸಲು ಶ್ರಮಿಸಿದ ಸಂದರ್ಭದಲ್ಲಾಗಿತ್ತೆಂದು ವಾಹಿದಿ ಅಸ್‌ಬಾಬುನ್ನುಸೂಲಿ ನಲ್ಲಿ ಉದ್ಧರಿಸಲ್ಪಟ್ಟಿದೆ. ಸ್ವಂತ ಮಕ್ಕಳನ್ನೂ ಸಹ ಧರ್ಮದ ಹೆಸರಿನಲ್ಲಿ ಬಲಾತ್ಕಾರಗೊಳಿಸಬಾರದೆಂದು ಹೇಳುವ ಪ್ರವಾದಿ ಚರ‍್ಯೆ ಎಷ್ಟೊಂದು ಉತ್ಕೃಷ್ಟವಾಗಿದೆ.
ಮನ್ಸೂರ್ ರಾಜ ಖಲ್ಲಾವ್ ಗ್ರಾಮವನ್ನು ವಶಪಡಿಸಿಕೊಂಡು ಆ ಗ್ರಾಮವಾಸಿಗಳನ್ನು ಬಲತ್ಕಾರದಿಂದ ಇಸ್ಲಾಮಿಗೆ ಮತಾಂತರಗೊಳಿಸಿದಾಗ ಆ ಕಾಲದ ಮುಸ್ಲಿಂ ಪಂಡಿತರು ರಾಜನನ್ನು ವಿಚಾರಣೆಗೊಳಪಡಿಸಿದರು. ಅವರಿಗೆ ಮರುಚಿಂತನೆಗೆ ಅವಕಾಶ ನೀಡಲು ರಾಜನಲ್ಲಿ ಭಿನ್ನಯಿಸಿದರು. ನಂತರ ಹಲವರೂ ಪೂರ್ವ ಧರ್ಮಕ್ಕೆ ಮರಳಿದರು. (ಬಿದಾಯ ವನ್ನಿಹಾಯ ೧೭/೫೭೩-೭೭)
ಇಟಲಿಯನ್ ಪಂಡಿತನಾದ ಡಾ. ಲೋರೋ ವಾಚ್ ಪ್ರಾಲಿರಿ ಇದನ್ನು ಯಾವುದೇ ಮುಚ್ಚುಮರೆ ಇಲ್ಲದೆ ಅಂಗೀಕರಿಸುತ್ತಾರೆ. ಅವರು ಈ ರೀತಿ ಹೇಳುತ್ತಾರೆ ಮುಸ್ಲಿಮರು ರಾಷ್ಟ್ರಗಳನ್ನು ವಶಪಡಿಸಿಕೊಂಡದ್ದು ಅನ್ಯ ಧರ್ಮಿಯರಿಗೆ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದ ನಂತರ ಮಾತ್ರವಾಗಿದೆ.
ಗೋಸ್ತಾಫ್ ಲೋಪನ್ ಹೇಳುತ್ತಾರೆ ಖುಲಫಾಗಳ ಕಾಲದಿಂದಲೇ ಕ್ರೈಸ್ತ ಮತ್ತು ಯಹೂದ್ಯರು ಆರಾಧನೆ ಮತ್ತು ಧರ್ಮಚಾರಗಳನ್ನು ಪೂರ್ಣ ಸಾತಂತ್ರ್ಯದಿಂದಲೇ ನಿರ್ವಹಿಸುತ್ತಿದ್ದರು. ಅವರು ಇನ್ನೊಂದೆಡೆ ಹೇಳುತ್ತಾರೆ.  ಮುಹಮ್ಮದ್ (ಸ) ಯಹೂದ್ಯ ಮತ್ತು ಕ್ರೈಸ್ತರಿಗೆ ನೀಡಿದ ಸ್ವಾತಂತ್ರ್ಯ ಅಪಾರವಾಗಿದೆ. ಅದಕ್ಕೂ ಮೊದಲು ಯಾವುದೇ ಧರ್ಮ ಸ್ಥಾಪಕರು ಹೀಗಿರಲಿಲ್ಲ. ಅವರ ಅನುಯಾಯಿಗಳು ಇದೇ ರೀತಿಯಾಗಿದ್ದಾರೆ. ಇತಿಹಾಸವನ್ನು ಚೆನ್ನಾಗಿ ಅಧ್ಯಯನ ಮಾಡಿದ ಯುರೋಪಿಯನ್ ಪಂಡಿತರು ಇದನ್ನಂಗೀಕರಿಸುತ್ತಾರೆ.
ಓರಿಯಂಟಲಿಸ್ಟ್ ಪಂಡಿತನಾದ ತೋಮಸ್ ಆರ್‌ನೋಡ್ ಹೇಳುತ್ತಾರೆ.  ಮುಸ್ಲಿಮರು ಯಾವುದೇ ಧರ್ಮನುಯಾಯಿಗಳನ್ನು ಉಚ್ಚಾಟಿಸಲು ಶ್ರಮಿಸಲಿಲ್ಲ. ಸ್ಪೈನಿನಿಂದ ಇಸ್ಲಾಮನ್ನು ನಿರ್ನಾಮ ಮಾಡಲು ಫೆರ್ಡಿನಾಂಡ್ ಮತ್ತು ಇಸಬಲ್ಲ ಹಾಗೂ ಫ್ರಾಸ್ನಿನ ಪ್ರೋಟಸ್ವೆಂಟಿಗೆದುರಾಗಿ ಲೂಯಿಸ್ ೧೪ ಅನುವರ್ತಿಸಿದ ರೀತಿಗಳನ್ನು ಮುಸ್ಲಿಮರು ಅನುಕರಿಸಿದ್ದರೆ ಕ್ರೈಸ್ತ ಧರ್ಮವು ನಾಮಾವಶೇಷವಾಗಬಹುದಿತ್ತು. ಇಸ್ಲಾಮಿಕ ದೇಶಗಳಲ್ಲಿ ಸಿನಗೋಗುಗಳು (ಯಹೂದ್ಯ ಆರಾಧನಾಲಯ) ಮತ್ತು ಚರ್ಚುಗಳು ಯಾವುದೇ ಹಾನಿಯಿಲ್ಲದೆ ನೆಲೆಗೊಲ್ಲುತ್ತಿರುವುದು ಇಸ್ಲಾಮಿನ ಸಹಿಷ್ಣುತೆಯ ಜ್ವಲಂತ ನಿದರ್ಶನವಾಗಿದೆ. ತುರ್ಕಿಗಳು ಪ್ರಜೆಗಳಿಗೆ ನೀಡುತ್ತಿರುವ ಸಂರಕ್ಷಣೆಯಿಂದ ಅವರ ಆಡಳಿತ ಇಟಲಿಯಲ್ಲೂ ಜಾರಿಯಾಗಲಿ ಎಂದು ಭೀಕರ ಕ್ರಿಸ್ತೀಯ ಆಡಳಿತದಿಂದ ಕಂಗಾಲಾಗಿರುವ ಇಟಲಿಯ ಅಲ್ಪಸಂಖ್ಯಾತರು ಬಯಸಿದ್ದರೆಂದು ಆರ್ನೋಡ್ ಉದ್ದರಿಸುತ್ತಾರೆ.
ಮುಸ್ಲಿಮರಿಗೆ ಇಂದು ಸರ್ವವೂ ನಷ್ಟಹೊಂದಲು ಸಹ ಕಾರಣ ಅವರ ಸಹಿಷ್ಣುತೆಯಾಗಿದೆಯೆಂದು ಓರಿಯಂಟಲಿಸ್ಟ್‌ಗಳು ಸಾಕ್ಷ್ಯಪಡಿಸುತ್ತಾರೆ. ಸ್ಪೈನಿನಿಂದ ಕ್ರೂರವಾಗಿ ಹೊಡೆದೋಡಿಸಲ್ಪಟ್ಟ ಯಹೂದ್ಯರಿಗೆ ಆಶ್ರಯ ನೀಡಿದ್ದು ತುರ್ಕಿಯಾಗಿತ್ತು. ಅವರು ಖಲೀಫರಿಗೆ ದ್ರೋಹವೆಸಗಿದ್ದರು. ಕೆನಟ್ ಹೆನ್‌ಟ್ರಿ ಕಾಸ್‌ಟ್ರೊ ಹೇಳುತ್ತಾರೆ. ಸಾಮ್ರಾಜ್ಯದ ನಾಶಕ್ಕೆ ಹೇತುವಾದದ್ದು ಮುಸ್ಲಿಮರ ಸೌಹಾರ್ದ ಮತ್ತು ಮಮತೆಯಾಗಿದೆ. (ಇಸ್ಲಾಂ ೪೯)
ಅವಕಾಶ ಸಮತ್ವ:
ಅನ್ಯ ಧರ್ಮೀಯರಿಗೆ ಸಮಾನನೀತಿ ಮತ್ತು ಅವಕಾಶ ಸಮತ್ವವನ್ನು ಇಸ್ಲಾಂ ನೀಡಿದೆ. ಇಸ್ಲಾಮಿಕ ಕರ್ಮಶಾಸ್ತ್ರದ ಶಿಕ್ಷಾ ನಡವಳಿಕೆಗಳು ಇಸ್ಲಾಮನ್ನು ಅಂಗೀಕರಿಸುವವರಿಗೆ ಮಾತ್ರ ಬಾಧಕವಾಗಿತ್ತು. ವಿವಾಹ ಆಚಾರಗಳಲ್ಲಿ ಮತ್ತು ನಿರೋಧಿತ ಕಾರ್ಯಗಳಲ್ಲಿ ಅವರ ಧರ್ಮಕ್ಕನುಸಾರವಾಗಿ ಜೀವಿಸಲು ಅನುಮತಿ ನೀಡಲಾಗಿತ್ತು.
ನಬಿಯವರೊಂದಿಗೆ ಅಲ್ಲಾಹನು ಹೇಳುವನು. ಅವರು ತಮ್ಮ ಬಳಿ ಬಂದರೆ ವಿಧಿ ನೀಡಿರಿ. ಅಲ್ಲದಿದ್ದಲ್ಲಿ ಬಿಟ್ಟುಬಿಡಿರಿ. ಅವರ ಇಷ್ಟಕ್ಕೂ ಬಿಟ್ಟರೆ ಏನೂ ಸಮಸ್ಯೆಯಿಲ್ಲ. ವಿಧಿ ನೀಡುವುದಾದರೆ ನೀತಿ ಪಾಲಿಸಬೇಕು. ಅಲ್ಲಾಹನು ನೀತಿವಂತರನ್ನು ಇಷ್ಟಪಡುತ್ತಾನೆ. (ಮಾಇದ ೪೨)
ಭಾರತದ ಮುಸ್ಲಿಂ ಆಡಳಿತಗಾರರು ಹಿಂದುಗಳ ಆಂತರಿಕ ಕಾರ‍್ಯಗಳಲ್ಲಿ ಕೈ ಹಾಕುತ್ತಿರಲಿಲ್ಲ. ಅವರ ಜಾತೀಯತೆಯನ್ನು ವಿಮರ್ಶಿಸಲು ಮತ್ತು ಧರ್ಮ ಸಂಪ್ರದಾಯಗಳನ್ನು ಎದುರಿಸಲು ಶ್ರಮಿಸಲಿಲ್ಲ. ಆದರೆ ಕೆಳಜಾತಿಯವರು ಅವರನುಭವಿಸುವ ವಿಪತ್ತುಗಳಂದ ವಿದಾಯ ಹೊಂದಲು ಇಸ್ಲಾಂ ಸ್ವೀಕರಿಸುತ್ತಿದ್ದರು.
\ಒಮ್ಮೆ ಸುಅಮ ಬಿನ್ ಅಬ್‌ರಕ್ ಎಂಬ ಅನ್ಸಾರಿ ತನ್ನ ನೆರೆಯವನ ಅಂಗಿಯನ್ನು ಕಳವುಗೈದರು. ಆ ಅಂಗಿ ಧಾನ್ಯ ಹುಡಿಯುಳ್ಳ ಒಂದು ಚೀಲದಲ್ಲಾಗಿತ್ತು. ಇವರು ನಡೆದ ದಾರಿಯಲ್ಲೆಲ್ಲ ಆ ಹುಡಿಯ ಲಕ್ಷಣ ಕಂಡುಬರುತ್ತಿತ್ತು. ಅನ್ಸಾರಿಯು ಆ ಅಂಗಿಯನ್ನು ಒಂದು ಯಹೂದ್ಯರ ಮನೆಯಲ್ಲಿ ಅಡಗಿಟ್ಟರು. ಆ ಯಹೂದ್ಯರ ಹೆಸರು ಝೈದುಬ್‌ನ್ ಸಮೀನ್ ಎಂದಾಗಿತ್ತು. ಸುಆಮನನ್ನು ಹುಡುಕುತ್ತ ಆ ಅಂಗಿಯ ವಾರೀಸುದಾದರು ತಲುಪಿದರು. ಆಗ ಸುಅಮ ಕಳವನ್ನು ನಿಷೇಧಿಸಿದರು. ಕೊನೆಗೆ ಅವರು ಯಹೂದ್ಯನ ಮನೆ ತಲುಪಿ ಅಂಗಿಯನ್ನು ಕಂಡುಹಿಡಿದರು. ಆ ಊರಿನವರು ಸುಅಮರನ್ನು ಕಂಡದ್ದಾಗಿ ಆರೋಪಿಸಿದರು. ಆಗ ಸುಅಮರ ಬೆಂಬಲಿಗರು ಈ ರೀತಿ ಹೇಳಿದರು. ನಮಗೆ ನೆಬಿ(ಸ) ರ ಸನ್ನಿಧಿಗೆ ಹೋಗೋಣ. ನಂತರ ನೆಬಿಯ ಬಳಿ ಬಂದು ಹೇಳಿದರು, ನೀವು ನಮಗೆ ಅನುಕೂಲವಾಗಿ ವಿಧಿಸದೆ ಹೋದಲ್ಲಿ ಮುಸ್ಲಿಮರು ಅಪಹಾಸ್ಯಕ್ಕೀಡಾಗಿ ಯಹೂದ್ಯನು ಬಚಾವಾಗುವನು ಆದರೆ ನೆಬಿ(ಸ)ರವರು ಸತ್ಯಕ್ಕಾಗಿ ನೆಲೆಗೊಂಡರು. ಕೊನೆಗೆ ವಿಧಿಯು ಯಹೂದ್ಯನಿಗೆ ಅನುಕೂಲವಾಗಿ ಬಂತು. ’ಅನ್ನಿಸಾಲ್’ ಅದ್ಯಾಯದ ೧೦೯ನೇ ಸೂಕ್ತದ ವಿವರಣೆಯಲ್ಲಿ ವಾಹಿದಿ ಈ ಘಟನೆಯನ್ನು ಉದ್ಧರಿಸುತ್ತಾರೆ.
ಪ್ರವಾದಿ(ಸ) ರವರು ಹೇಳುತ್ತಾರೆ ’ನೀವು ನ್ಯಾಯಾಧೀಶರಾಗುವಾಗ ಮಾತು, ಸಂಜ್ಞೆ ಮತ್ತು ಭವನಗಳಲ್ಲಿ ನೀತಿ ಪಾಲಿಸಬೇಕು’. ಪ್ರವಾದಿ(ಸ)ರ ಅನುಯಾಯಿಗಲಲ್ಲೂ ಇದು ಗೊಚರವಾಗುತ್ತಿತ್ತು. ಮುಸ್ಲಿಮ ಆಡಳಿತಗಾರರೆಲ್ಲರೂ ನೀತಿ ಪಾಲಿಸಿದವರಾಗಿದ್ದರು. ಅದು ದೀನೀ ಆಡಳಿತಗಾರನಾದ ವಲೀದ್‌ನ ಕಾಲದಲ್ಲಿ ಸೈಪ್ರಸಿನ ಅಮುಸ್ಲಿಮರನ್ನು ಗಡಿಪಾರು ಮಾಡಿದಾಗ ಪಂಡಿತರು ಅದರೆದುರಾಗಿ ರಂಗಕ್ಕಿಳಿದರು. ಅವರನ್ನು ಮರಳಿ ಕಳುಹಿಸಲು ನಂತರ ಬಂದ ಖಲೀಫ ಯಸೀದ್ ಆಜ್ಞಾಪಿಸಿದನು.
ಪ್ರವಾದಿ(ಸ)ರವರು ಅರಫಾ ದಿನದಂದು ಘೋಷಿಸಿದರು: ’ನಿಮ್ಮ ರಕ್ತ, ಸಂಪತ್ತು ಮತ್ತು ಘನತೆ ಈ ಸುದಿನದಂತೆ ಗೌರವಿಸಲ್ಪಡಬೇಕಾದದ್ದಾಗಿದೆ’. ನೀತಿಯನ್ನು ಜಾರಿಗೊಳಿಸುವುದರಲ್ಲಿ ಪ್ರವಾದಿ(ಸ)ರು ಅತೀವ ನಿಷ್ಟೆಯುಳ್ಳವರಾಗಿದ್ದರು. ನಿರಾಶ್ರಿತನಾದ ಅಮುಸ್ಲಿಮನನ್ನು ಕೊಂದವನಿಗೆ ಸ್ವರ್ಗದ ಪರಿಮಳವು ಲಭಿಸಲಿಕ್ಕಿಲ್ಲವೆಂದು ಸ್ವಹೀಹುಲ್ ಬುಖಾರಿ ಸ್ಪಷ್ಟಪಡಿಸಿದೆ. ಯುದ್ಧವಿಲ್ಲದೆ ಸಮಾಧಾನದಿಂದ ಜೀವಿಸುವ ಅಮುಸ್ಲಿಮರನ್ನು ಯಾವೊಂದೂ ಉದ್ರೇಕವೂ ಇಲ್ಲದೆ ಕೊಲ್ಲುವುದನ್ನು ನ್ಯಾಯೀಕರಿಸಲಸಾಧ್ಯ ತಾನೇ? ಒಮ್ಮೆ ನೆಬಿ(ಸ)ರ ಬಳಿ ಒಂದು ಮುಸ್ಲಿಮನು ಅಮುಸ್ಲಿಮನನ್ನು ಕೊಂದ ದೂರು ತಲುಪಿತು. ಆಗ ನೆಬಿ(ಸ) ಹೇಳಿದರು, ’ನಮ್ಮೊಂದಿಗೆ ಯಾವುದೇ ರೀತಿಯಲ್ಲಿ ವಂಚಿಸದ ಸತ್ಯ ಸಂತರೊಂದಿಗೆ ನಾನು ಅತ್ಯಧಿಕವಾಗಿ ಬಾಧ್ಯಸ್ಥನಾಗಿದ್ದೇನೆ’. ನಂತರ ಆ ಆರೋಪಿಯನ್ನು ಕೊಲ್ಲಲು ನೆಬಿಯವರು ಆಜ್ಞಾಪಿಸಿದರು(ದಾರುಕುತ್‌ನಿ).
ಇದಾಗಿದೆ ಪ್ರವಾದಿ(ಸ)ರವರ ನೈಜ ರೂಪ. ಅವರು ಮನುಷ್ಯರೆಡೆಯಲ್ಲಿ ನೀತಿಯನ್ನು ಜಾರಿಗೊಳಿಸಿದ್ದರು. ಧರ್ಮದ ಹೆಸರಿನಲ್ಲಿ ಅನ್ಯರೊಂದಿಗೆ ಅನಧಿಕೃತವಾಗಿ ವರ್ತಿಸಲು ಅವರು ಸಮ್ಮತಿಸಲಿಲ್ಲ. ಇಸ್ಲಾಮಿನ ಯುದ್ಧಗಳು ನಡೆದದ್ದು ನೀತಿಯನ್ನು ಸಂರಕ್ಷಿಸಲು, ಮನುಷ್ಯರನ್ನು ಗುಲಾಮರನ್ನಾಗಿಸುವ ವ್ಯಕ್ತಿ ದೈವಗಳನ್ನು ನಿರ್ನಾಮ ಮಾಡಲು ಮತ್ತು ಎಲ್ಲರಿಗೂ ಪೂರ್ಣ ಸ್ವಾತಂತ್ರ್ಯ ನೀಡಲು ಬೇಕಾಗಿದೆ. ನೆಬಿ(ಸ)ರು ಹೇಳುತ್ತಾರೆ, ’ಒಪ್ಪಂದದಲ್ಲಿ ಕಳೆಯುತ್ತಿರುವ ಅಮುಸ್ಲಿಮನ ಧನ ಅನ್ಯಾಯವಾಗಿ ಸಮ್ಮತಾರ್ಹವಲ್ಲ’.(ಮುಸ್‌ನದ್ ಅಹ್‌ಮದ್ ೪/೮೯)
ಉಮ್ಮುಹಾನಿಅನ ವಸತಿಯಲ್ಲಿ ಆಶ್ರಯ ಪಡೆದಿದ್ದ ಅಮುಸ್ಲಿಮನನ್ನು ವಧಿಸುವೆವೆಂದು ಕೆಲವರು ಬೆದರಿಕೆಯೊಡ್ಡಿದಾಗ ನೆಬಿ(ಸ) ಹೇಳಿದರು, ’ಸಲ್ಲದು, ಉಮ್ಮುಹಾನಿಅ ಆಶ್ರಯ ನೀಡಿದವರಿಗೆ ನಾವು ಆಶ್ರಯ ನೀಡಿದ್ದೇವೆ’.(ಬುಖಾರಿ)
ಆಡಳಿತದ ಅಧೀನದಲ್ಲಿರುವ ಎಲ್ಲಾ ಪ್ರಜೆಗಳೊಂದಿಗೆ ಸಮಾನವಾದ ನೀತಿ ಕಾಣಿಸಬೇಕಾಗಿದೆ. ಅಲ್ಲಾಹನು ಹೇಳುತ್ತಾನೆ, ’ಯಾರಾದರೂ ಅಕ್ರಮಿಸಿದ್ದಲ್ಲಿ ಅವನಿಗೆ ನಾವು ಕಠಿಣ ಶಿಕ್ಷೆ ನೀಡುತ್ತೇವೆ’(ಫುರ್‌ಖಾನ್ ೧೯). ಮತ್ತೊಂದು ಖುದ್‌ಸಿಯ್ಯಾದ ಹದೀಸಿನಲ್ಲಿ ಹೀಗಿದೆ, ’ನನ್ನ ದಾಸರೇ, ನಾನು ಅಕ್ರಮವನ್ನು ಸ್ವಯಂ ನಿಷಿದ್ಧಗೊಳಿಸಿದ್ದೇನೆ. ಆದ್ದರಿಂದ ಅದು ನಿಮಗೂ ನಿಷಿದ್ಧವಾಗಿದೆ. ನೀವು ಪರಸ್ಪರ ಅಕ್ರಮಿಸದಿರಿ’(ಮುಸ್ಲಿಂ).
ಮದೀನಕ್ಕೆ ಬಂದ ಕ್ರೈಸ್ತ ಅಬಿಸೀನಿಯನ್ ದೌತ್ಯ ಸಂಘಕ್ಕೆ ಮದೀನಾ ಮಸೀದಿಯಲ್ಲಿ ಆರಾಧನೆಗೆ ಅನುವು ಮಾಡಿಕೊಟ್ಟ ಘಟನೆ ಅಬೂದಾವೂದ್‌ನಲ್ಲಿ ಉದ್ಧರಿಸಲ್ಪಟ್ಟಿದೆ.
ಪ್ರವಾದಿ(ಸ) ನಿಧನ ಹೊಂದುವಾಗ ತನ್ನ ಅಂಗಿಯು ಒಬ್ಬ ಯಹೂದ್ಯನ ಬಳಿ ಅಡವಿನಲ್ಲಾಗಿತ್ತೆಂದು ಸಾಕ್ಷಿ. ಅದರಿಂದೆಲ್ಲಾ ಪ್ರವಾದಿ(ಸ)ರು ಅನ್ಯಧರ್ಮೀಯರೊಂದಿಗೆ ವರ್ತಿಸಿದ ಸೌಹಾರ್ದ ಮತ್ತು ಸಹಿಷ್ಣುತೆಯು ಸ್ಪಷ್ಟವಾಗುತ್ತದೆ. ಜಗತ್ತಿನ ಇತಿಹಾಸದಲ್ಲಿ ಈ ರೀತಿ ಅನ್ಯಧರ್ಮೀಯರಲ್ಲಿ ಒಳ್ಳೆಯ ರೀತಿಯಲ್ಲಿ ವರ್ತಿಸಿದ ಮತ್ತೊಂದು ನಾಯಕನನ್ನು ಕಾಣಲಸಾಧ್ಯ. ಆದ್ದರಿಂದಲೇ ಪ್ರಸಿದ್ಧ ಮಲಯಾಳ ಕವಿ ವಳ್ಳತ್ತೋಳ್ ಹಾಡಿದ್ದು….
ಮೊಳಗಿಸಿರಿ ಹೇ ಜಯಕಾರವೆಲ್ಲೂ…
ಬಾಳಲಿ ಇಸ್ಲಾಂ ತಿರುಮೇನಿ ಎಂದೂ…

*ಮುಹಮ್ಮದ್ ತಾಜುದ್ದೀನ್ ರಹ್ಮಾನಿ ಅಡ್ಯನಡ್ಕ*
*ಅಹ್ಲುಸ್ಸುನ್ನತ್ ವಲ್ ಜಮಾಅತ್* , *ಭಾಗ ---10.*
*••••••••••••••••••••••••••••••••••••*
*📝ಮುನೀರ್ ಸಖಾಫಿ,ಸಾಲೆತ್ತೂರು*
*°°°°°°°°°°°°°°°°°°°°°°°°°°°°°°°°°*
   

*ವಿಷಯ : 1*

 *ಮೀಲಾದುನ್ನಬೀ.*
*------------------------------------------*

*_ಈದ್ ಮೀಲಾದ್ ಕೇರಳ,ಕರ್ನಾಟಕದಲ್ಲಿ ಮಾತ್ರವೇ?_*

ವರ್ಷಗಳ ಮುಂಚೆ ವಹ್ಹಾಬಿಗಳು ಈದ್ ಮೀಲಾದ್ ಕೇರಳ ಮತ್ತು ಕರ್ನಾಟಕದಲ್ಲಿ ಮಾತ್ರ ನಡೆಯುವ ಆನಾಚಾರಗಳೆಂದು ಹೇಳಿ ಜನರನ್ನು ಮೋಸ ಮಾಡುತ್ತಿದ್ದರು.ಆದರೆ ಈಗ  ಕಾಲ ಬದಲಾಗಿದೆ.ಬೆರಳ ತುದಿಯಲ್ಲೇ ಪ್ರಪಂಚವಿದೆ.ಜಗತ್ತಿನ ಮೂಲೆ ಮೂಲೆಗಳಲ್ಲಿ ಏನೇ ನಡೆದರೂ ನಿಮಿಷಾರ್ಧದಲ್ಲೇ ಅದು ಜಗತ್ತಿಗೆ ತಿಳಿಯುತ್ತದೆ.
ಭಾರತ ಮಾತ್ರವಲ್ಲದೆ ಇನ್ನಿತರ ರಾಷ್ಟ್ರಗಳಾದ ಲಂಡನ್ ,ಬ್ರಿಟನ್ ,ಮಲೇಶ್ಯ ಈಜಿಪ್ಟ್ ,ಫೆಲಸ್ತೀನ್ ಮುಂತಾದ ಅನೇಕ ರಾಷ್ಟ್ರಗಳಲ್ಲಿ ಈದ್ ಮೀಲಾದ್ ಆಚರಿಸುವ ವೀಡಿಯೋ ಮತ್ತು ಫೋಟೋಸ್ ಗಳನ್ನು ನಾವು ನೋಡಿದ್ದೇವೆ.ಈ ಹೇಳಿದ ಎಲ್ಲಾ ರಾಷ್ಟ್ರಗಳಲ್ಲಿ ನಡೆಯುವ ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ  ಶೈಖುನಾ ಎ.ಪಿ.ಉಸ್ತಾದ್ ಭಾಗವಹಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಇದಲ್ಲದೆ ಮಕ್ಕಾದಲ್ಲೂ ಕೂಡಾ ಪೂರ್ವೀಕರು ಈದ್ ಮೀಲಾದ್ ಆಚರಿಸುತ್ತಿದ್ದದ್ದಾಗಿ  ಗ್ರಂಥಗಳಲ್ಲಿ ವಿವರಿಸಲಾಗಿದೆ.

ವಹ್ಹಾಬಿಗಳ ಆಡಳಿತ ದೇಶವಾದ ಸೌದಿಯಲ್ಲಿ ಸುನ್ನೀ ಆಶಯವನ್ನು ಸಾಧ್ಯವಾದಷ್ಟು ವಹ್ಹಾಬಿಗಳು ನಿರ್ಮೂಲನೆಗೊಳಿಸಿದ್ದಾರೆ.
ಎತ್ತರಿಸಲ್ಪಟ್ಟ ಖಬ್'ರ್'ಗಳನ್ನು ನೆಲಸಮ ಮಾಡಿದ್ದು ಕೂಡಾ ಅವರೇ.

ಮರ್ಹೂಂ ಸೆಯ್ಯಿದ್ ಅಲವೀ ಅಲ್ ಮಾಲಿಕೀ ಅವರ ಮನೆಯಲ್ಲಿ ಮತ್ತು ಇನ್ನಿತರ ಸುನ್ನೀ ಕುಟುಂಬದ ಅರಬಿಗಳ ಮನೆಯಲ್ಲಿ  ಬೃಹತ್ ಮೌಲಿದ್ ಗಳು ಇಂದು ಕೂಡಾ ನಡೆದು ಬರುತ್ತಿದೆ.

ಪುರಾತನ ಕಾಲದಲ್ಲಿ ಮಕ್ಕಾದಲ್ಲಿ ಎಲ್ಲಾ ಕಡೆಗಳಲ್ಲೂ ಈದ್ ಮೀಲಾದ್ ಇತ್ತು.ವಹ್ಹಾಬೀ ಬೀಕರರ ಉಪದ್ರವ ಹೆದರಿ ಕೆಲವು ಕಡೆಗಳಲ್ಲಿ ಗೌಪ್ಯವಾಗಿ ಈಗಲೂ ನಡೆಯುತ್ತಾ ಇದೆ.

ಮಕ್ಕಾದಲ್ಲಿ ಈದ್ ಮೀಲಾದ್ ಆಚರಿಸುತ್ತಿದ್ದ ಬಗ್ಗೆ ಇಮಾಮರುಗಳು ನೂರಾರು ವರ್ಷಗಳ ಮುಂಚೆಯೇ ಗ್ರಂಥಗಳಲ್ಲಿ ವಿವರಿಸಿದ್ದಾರೆ.

ಪ್ರಸಿದ್ಧ ಸಂಚಾರಿ ,ಹಿಜ್ರ 540 ರಲ್ಲಿ ಜನಿಸಿ 614 ರಲ್ಲಿ ಮರಣ ಹೊಂದಿದ ಮುಹಮ್ಮದ್ ಬಿನ್ ಅಹ್ಮದ್ ಬಿನ್ ಜುಬೈರ್ ಅಲ್ ಉಂದುಲುಸಿ(ರ)ಬರೆಯುವುದು ನೋಡಿ;
_" يفتح هذا الموضع المبارك فيدخله الناس كافة متبركين به في شهر ربيع الأول ويوم الاثنين منه، لأنه كان شهر مولد النبي صلى الله عليه وسلم، وفي اليوم المذكور الذي ولد فيه النبي صلى الله عليه وسلم، تفتح المواضع المقدسة المذكورة كلها. وهو يوم مشهود بمكة دائما_
(رحلة ابن جبير 1/34)

_ರಬೀವುಲ್ ಅವ್ವಲ್ 12 ರಂದು ಮಕ್ಕಾದಲ್ಲಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಮನೆಯ ಬಾಗಿಲನ್ನು ತೆರೆಯಲಾಗುತ್ತದೆ.ಜನರು ಬರ್ಕತ್'ಗಾಗಿ ಅದರೊಳಗೆ ಪ್ರವೇಶಿಸುತ್ತಾರೆ.ಕಾರಣ,ಆ ದಿನ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನವಾಗಿದೆ.ಮಹತ್ವವಿರುವ ಆ ಎಲ್ಲಾ ಸ್ಥಳಗಳನ್ನು ತೆರೆಯಲ್ಪಡಲಾಗುತ್ತದೆ._
(ರಿಹ್'ಲ ಇಬ್ನ್ ಜುಬೈರ್ 1/34)

ರಬೀವುಲ್ ಅವ್ವಲ್ 12 ರಂದು ಮಕ್ಕಾ ನಿವಾಸಿಗಳು ಇದು ನಿರ್ವಹಿಸುತ್ತಿದ್ದರೆಂದು ಹೇಳುವುದು ಇಲ್ಲಿನ ಸಮಸ್ತದ ಆಲಿಂಗಳಲ್ಲ.
ಎಸ್ಸೆಸ್ಸೆಫ್ ನಾಯಕರಲ್ಲ.
ಹೊರತು 800 ವರ್ಷಗಳ ಮುಂಚೆ ಮರಣ ಹೊಂದಿದ ಇಮಾಮರುಗಳಾಗಿದ್ದಾರೆ.

ಇದನ್ನೆಲ್ಲಾ ಮಕ್ಕಾದಿಂದ ನಿರ್ಮೂಲಗೊಳಿಸಿ ಮಕ್ಕಾ , ಮದೀನದಲ್ಲಿ ಇದು ಇಲ್ಲವಲ್ಲಾ ಎಂದು ಹೇಳುವುದು ವಹ್ಹಾಬಿಗಳ ಕಾಪಟ್ಯಕ್ಕಿರುವ ದೊಡ್ಡ ಉದಾಹರಣೆಯಾಗಿದೆ.

ಇನ್ನೊಬ್ಬ ಪ್ರಸಿದ್ಧ ಪ್ರಪಂಚ ಸಂಚಾರಿ ಹಿಜರಿ 703 ರಲ್ಲಿ ಜನಿಸಿ 779 ರಲ್ಲಿ ಮರಣ ಹೊಂದಿದ  ಇಬ್ನ್ ಬತೂತ ರವರ ಮಾತು ನೋಡಿ,
_ويفتح الباب الكريم في كل يوم جمعة بعد الصلاة ،ويفتح في يوم مولد النبي صلي الله عليه وسلم_ (رحلة 60).
_ಪಾವನ ಕಅಬಾದ ಬಾಗಿಲನ್ನು ಎಲ್ಲಾ ಶುಕ್ರವಾರ ಜುಮುಅ ನಮಾಝಿನ ಬಳಿಕ ಮತ್ತು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನದಂದು ತೆರೆಯಲಾಗುತ್ತದೆ._
( ರಿಹ್'ಲ 60).

ಮತ್ತೊಂದು ಸ್ಥಳದಲ್ಲಿ ಅವರು ಹೇಳುತ್ತಾರೆ;
_قاضي مكة العالم الصالح العابد نجم الدين محمد بن إمام العالم محيي الدين الطبري، وهو فاضل كثير الصدقات والمواساة للمجاورين، حسن الأخلاق كثير الطواف والمشاهدة للكعبة الشريفة، يطعم الطعام الكثير في المواسم المعظمة، وخصوصاً في مولد رسول الله صلى الله عليه وسلم، فإنه يطعم فيه شرفاء مكة وكبراءها وفقراءها وخدام الحرم الشريف وجميع المجاورين. وكان سلطان مصر الملك الناصر رحمه الله يعظمه كثيراً، وجميع صدقاته وصدقات أمرائه تجرى على يديه. وولده شهاب الدين فاضل، وهو الآن قاضي مكة شرفها الله._
(رحلة 67)

_ಮಕ್ಕಾದಲ್ಲಿ ಹಿರಿಯ ಆಲಿಂ ನಜ್ಮುದ್ದೀನ್ ಮುಹಮ್ಮದ್ ಬಿನ್ ಮುಹ್ಯುದ್ದೀನ್ ಅತ್ತಬ್'ರೀ ಎಂಬವರು ಖಾಝಿಯಾಗಿದ್ದರು.ಅವರು ಮಹಾ ದಾನಿಯಾಗಿದ್ದರು.ಉತ್ತಮ ಗುಣ ನಡತೆಯುಳ್ಳ ವ್ಯಕ್ತಿಯಾಗಿದ್ದರು.ಅವರು ಇತರರಿಗೆ ಆಹಾರಗಳನ್ನು ನೀಡುತ್ತಿದ್ದರು. *ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನದಲ್ಲಿ ಮಕ್ಕಾದಲ್ಲಿರುವ ಬಡವರಿಗೂ ಶ್ರೀಮಂತರಿಗೂ ಊಟ ನೀಡುತ್ತಿದ್ದರು.* ಮಿಸ್ರಿನ ರಾಜ ನಾಸಿರ್ ರವರು ಅವರನ್ನು ಅತಿಯಾಗಿ ಗೌರವಿಸುತ್ತಿದ್ದರು.ಅವರ ಮಗ ಶಿಹಾಬುದ್ದೀನ್ ಎಂಬ ಆಲಿಂ ಈಗ ಮಕ್ಕಾದಲ್ಲಿ ಖಾಝಿಯಾಗಿರುವರು._
(ರಿಹ್'ಲ 67)

*ಪ್ರೀತಿಯ ಓದುಗರೇ !*

ಇನ್ನು ನೀವೇ ಹೇಳಿ,
ಮಕ್ಕಾದಲ್ಲಿ ಈದ್ ಮೀಲಾದ್ ಆಚರಿಸಲಾಗುತ್ತಿತ್ತೇ?ಇಲ್ಲವೇ?

ಅದನ್ನೆಲ್ಲಾ ತೊಡೆದು ಹಾಕಿ ಕೇರಳ ಕರ್ನಾಟಕದಲ್ಲಿ ಮಾತ್ರವಿರುವ ಕಾರ್ಯವೆಂದು ಹೇಳಿದ್ರೆ ಅಲ್ಲಾಹನು ಮೆಚ್ಚಲಾರನು.

*ಮುಂದುವರಿಯುವುದು.............*

*📝ಮುನೀರ್ ಸಖಾಫಿ,ಸಾಲೆತ್ತೂರು*

Thursday, November 23, 2017

⭐ *ಕೆಳಗೆ ಕಾಣುವ ಲಿಂಕ್'ನಲ್ಲಿ ಕ್ಲಿಕ್ ಮಾಡಿದರೆ ವಿವಿಧ ದೇಶಗಳಲ್ಲಿ ನಡೆಯುವ ಮೌಲಿದಾಚರಣೆಯನ್ನು ಕಾಣಬಹುದು*

▶Mawlid around the world
▶Milaad in Sudan
http://youtu.be/gAhGlHdbH2k
▶Milaad in Yeman
http://youtu.be/lWqBkVeczFA
▶Milaad in Lebanon
http://youtu.be/35Zkj8wJDP
▶Milaad in Kuwait
http://youtu.be/omh188a5bkY
▶Milaad in Dubai
http://youtu.be/Y8mQDQqhLlg
▶Milaad in Malaysia
http:/youtu.bejNwdWMHchFw
▶Milaad in Saudi Arabia
http://youtu.be/Sigy8S5QoOg
▶Milaad in turkey
http://youtu.be/Oshpznh_2qw
▶Milaad in Syria
http://youtu.be/zEQPMjOJuVI
▶Milaad in chechniya
http://youtu.be/XRVsVamr1IM
▶Milaad in Kosovo
http://youtu.be/vSKk5Afr5PA
▶Milaad in Iraq
http://youtu.be/Vw_zZsPaqM0
▶http://youtu.be/UcTzs3hwU40
▶Milaad in Sri Lanka
http://youtu.be/5D2du_XSpgo
▶Milaad in Bosnia
http://youtu.be/fbuGlcijgkE
▶Milaad in Bulgaria
http://youtu.be/irHOmmPIcE4
▶Milaad in Australia
http://youtu.be/L6Y5_k6grsw
▶Milaad in Morroco
http://youtu.be/lXE07oBE1rg
▶Milaad in Somalia
http://youtu.be/Q7kRfPoumzk
▶Milaad in Libya
http://youtu.be/hA4-OgYVTq0
▶Milaad in Ethiopia
http://youtu.be/oOf1vXQwhJM
▶Milaad in Indonesia
http://youtu.be/ncjbasV8cP0
▶Milaad in India
http://youtu.be/UGwcA7GlE0Q
▶Milaad in Pakistan
http://youtu.be/fMTTUAqIY_I
▶Milaad in Kenya
http://youtu.be/NZ0UDs7j2T0
▶Milaad in Russia
http://youtu.be/cMe-2YJfoDw
▶Milaad in Tunisia
http://youtu.be/z9YCDcQ4ooQ
▶Milaad in Germany
http://youtu.be/Q88NRkU-gP8
-------------------------------------
http://sunnisonkal.blogspj⭕⭕⭕⭕⭕⭕⭕
-----------------------------------WWW.SARAFUDEEN.HPAGE.COM

Wednesday, November 22, 2017

*ದಿನಾಲು ತಪ್ಪದೇ ಹೇಳಿ ಈ ಜಿಕ್ರನ್ನು*


ಆದರೆ ಈ ಕೆಳಗಿನ ಧಿಕ್ರ್ ಗಳನ್ನು ಸದಾ ಸಮಯ ಬಾಯಲ್ಲಿ ಹೇಳುತ್ತಾ "ಅಲ್ಲಾಹನ" ನೇರ ಸಂಪರ್ಕ ಹೃದಯವಾಗಿ ಇಟ್ಟು ಕೊಳ್ಳುವಲ್ಲಿ ಸಂಪತ್ಭರಿತ ಹೃದಯ ಮತ್ತದರ ಸೌಮ್ಯತೆಯನ್ನು ಕಾಪಾಡ ಬಹುದಾಗಿದೆ.

⚫ ಸುಬ್ಹಾನಲ್ಲಾಹ್ ವಲ್ ಹಂದುಲಿಲ್ಲಾಹ್
       ವಲಾಯಿಲಾಹ ಇಲ್ಲಲ್ಲಾಹು ವಲ್ಲಾಹು
       ಅಕ್ಬರ್.

⚫ ಲಾ ಹೌಲ ವಲಾ ಖುವ್ವತ ಇಲ್ಲಾ
       ಬಿಲ್ಲಾಹ್.

⚫ ಅಸ್ತಗ್ಫಿರುಲ್ಲಾಹಲ್ ಅಳ್ವೀಮ್.

⚫ ಸುಬ್ಹಾನಲ್ಲಾಹಿ ವ ಬಿ ಹ ಮ್ ದಿ ಹಿ
       ಸುಬ್ಹಾನಲ್ಲಾಹಿಲ್ ಅಳ್ವೀಮ್.

⚫ ಲಾಯಿಲಾಹ ಇಲ್ಲಾ ಅಂತ
       ಸುಬ್ಹಾನಕ ಇನ್ನೀ ಕುಂತು
       ಮಿನ ಲ್ವಾಲಿಮೀನ್.

⚫ ಹಸ್ಬಿಯಲ್ಲಾಹು ಲಾಯಿಲಾಹ
       ಇಲ್ಲಾ ಹುವ ಅಲೈಹಿ ತವಕ್ಕಲ್ತು
       ವಹುವ ರಬ್ಬುಲ್ ಅರ್ಷಿಲ್ ಅಳ್ವೀಮ್

⚫ ಸುಬ್ಹಾನಕಲ್ಲಾಹುಮ್ಮ ವಬಿಹಮ್ದಿಕ
       ಅಶ್ ಹದು ಅನ್ ಲಾಯಿಲಾಹ
       ಇಲ್ಲಾ ಅಂತ ಅಸ್ತಗ್ ಫಿರುಕ
       ವ ಅತೂಬು ಇಲೈಕ್.

⚫ ಹಸ್ಬುನಲ್ಲಾಹು ನಿಹ್ಮಲ್ ವಕೀಲ್
       ನಿಹ್ಮಲ್ ಮೌಲಾ ವನಿಹ್ಮನ್ನಸ್ವೀರ್


     ದಯವಿಟ್ಟು ಇದನ್ನು ನೀವು  ಓದಿ ನಿಮ್ಮವರಿಗೆ ಶೇರ್ ಮಾಡಿ
ಅಲ್ಲಾಹನು ನಮ್ಮ ಮರಣವನ್ನು ಇಮಾನುಲ್ಲ ಮರಣವನ್ನಾಗಿ ಮಾಡಲಿ.
ಅಮೀನ್ ಯಾರಬ್ಬಲ್ ಆಲಮೀನ್...!

Monday, November 20, 2017

*🌹🌹🌹🌹ಸವಾಲು -1🌹🌹🌹🌹*

👉 ಕುರ್-ಆನ್, ಸುನ್ನತ್ ನ ಪ್ರತಿಪಾದಕರು,
👉 ಸ್ವಹೀಹುಲ್ ಬುಖಾರಿ ಗ್ರಂಥಕ್ಕೆ ವಿಶ್ವವಿಖ್ಯಾತ ಟಿಪ್ಪಣಿ ಗ್ರಂಥ ಬರೆದವರು,
👉 3 ಲಕ್ಷ ಹದೀಸ್ ಕಂಠಪಾಠ ವಿದ್ದ ಪ್ರಸಿಧ್ದ ವಿದ್ವಾಂಸರೂ ಆದ

*ಇಮಾಮ್ ಇಬ್ನು ಹಜರ್ ಅಲ್-ಅಸ್ಕಲಾನೀ (ರ) ರವರು*

*ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮ ದಿನಾಚರಣೆ ಯನ್ನು ಮಾಡಬೇಕೆಂದು ಹೇಳಿದ್ದಾರೆ*

1⃣) *ಇಮಾಮ್ ಇಬ್ನು ಹಜರುಲ್ ಅಸ್ಕಲಾನಿ (ರ) ರವರು ಖುರ್ ಆನ್ , ಹದೀಸ್ ಮುಚ್ಚಿಟ್ಟರೇ ?*

2⃣ *ವಿಶ್ವ ವಿಖ್ಯಾತ ಹದೀಸ್ ಗ್ರಂಥ ಬುಖಾರಿ ಶರೀಪ್ ಗೆ ಟಿಪ್ಪಣಿ ಬರೆದ ಹಾಗೂ ಮೂರು ಲಕ್ಷ ಹದೀಸ್ ಕಂಠ ಪಾಠ ವಿರುವ ಇಬ್ನು ಹಜರುಲ್ ಅಸ್ಕಲಾನಿ (ರ) ರವರಿಗೆ ಖುರ್ ಆನ್ , ಹದೀಸ್ ತಿಳಿಯಲಿಲ್ಲವೇ ?*

3⃣) *ಪ್ರವಾದಿ ಜನ್ಮ ದಿನ ಆಚರಿಸ ಬೇಕೆಂದು ಹೇಳಿದ ಇಬ್ನು ಹಜರುಲ್ ಅಸ್ಕಲಾನಿ ಸ್ವರ್ಗಕ್ಕೆಯೇ, ? ಅಥವಾ ನರಕಕ್ಕೆ ಯೇ ?*

4⃣) *ಮೀಲಾದ್ ಮಾಡಬೇಕೆಂದು ಹೇಳುವ ಮೂಲಕ ಇಬ್ನು ಹಜರುಲ್ ಅಸ್ಕಲಾನಿ ಕಾಪೀರಾದರೇ  ? ಅಥವಾ ಅವರನ್ನು  ಮುಸ್ಮಿಮರೆಂದು ಒಪ್ಪುತ್ತಿರಾ ?*

*👉 ಸಲಪಿ, ಜಮಾಅತೇ ಇಸ್ಲಾಮೀ, ತಬ್ಲೀಗ್ ನವರಲ್ಲಿ ಕೇಳಿನೋಡಿ. ಪಟ್ಟುಬಿಡಬೇಡಿ. ಹಿಂದು ಮುಂದು ಬಿದ್ದು ಕೇಳುತ್ತಲೇ ಇರಿ. ಉತ್ತರ ಸಿಗುವ ವರೆಗೆ ಬೆನ್ನು ಹತ್ತಿ. 💪💪💪*

✍ ಇಬುನು ಅಹ್ಮದ್ ಅಲ್-ಮದನಿ
(ಸುನ್ನೀ ಸಾಹಿತ್ಯ ಮಂಡಳಿ ಮಂಗಳೂರು)
*ಅಹ್ಲುಸ್ಸುನ್ನತ್ ವಲ್ ಜಮಾಅತ್* , *ಭಾಗ ---8.*
*••••••••••••••••••••••••••••••••••••••••*
*ವಿಷಯ --1*

*ಮೀಲಾದುನ್ನಬೀ*
----------------------------------------------------------
*_ಈದ್ ವರ್ಷಕ್ಕೆ 2  ಮಾತ್ರವೇ?_*

*2017 ನೇ ಇಸವಿಯಲ್ಲಿ 55 ಈದ್ ಇದೆ.*
*2 ಪೆರ್ನಾಳ್.*
*1 ಈದ್ ಮೀಲಾದ್.*
*52 ಶುಕ್ರವಾರ.*

 ಇನ್ನು ಕೆಳಗೆ ಓದಿ
👇👇👇


ಜಾಗತಿಕ ಮುಸ್ಲಿಮರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಮೀಲಾದ್ ಆಚರಿಸುವಾಗ ವಹ್ಹಾಬಿಗಳು ಹೇಳುವ ಒಂದು ಬಾಲಿಶ ವಾದವಾಗಿದೆ ಈದ್ ವರ್ಷಕ್ಕೆ ಎರಡು ಬಾರಿ ಮಾತ್ರ ಎಂಬುವುದು.ಅಥವಾ  ಈದುಲ್ ಫಿತರ್ ಮತ್ತು ಈದುಲ್ ಅಳ್'ಹಾ.

ಸತ್ಯಕ್ಕೆ ವಿರುದ್ಧವಾದ ಒಂದು ವಾದವಾಗಿದೆ ಇದು.

ಅದಕ್ಕೆ ಅವರು ಒಂದು ಹದೀಸನ್ನು ದುರ್ವ್ಯಾಖ್ಯಾನಿಸುತ್ತಾರೆ.
ಅದು ಈ ರೀತಿ,
عَنْ أَنَسِ بْنِ مَالِكٍ، قَالَ: كَانَ لِأَهْلِ الْجَاهِلِيَّةِ يَوْمَانِ فِي كُلِّ سَنَةٍ يَلْعَبُونَ فِيهِمَا، فَلَمَّا قَدِمَ النَّبِيُّ صَلَّى اللهُ عَلَيْهِ وَسَلَّمَ الْمَدِينَةَ، قَالَ: " كَانَ لَكُمْ يَوْمَانِ تَلْعَبُونَ فِيهِمَا وَقَدْ أَبْدَلَكُمُ اللَّهُ بِهِمَا خَيْرًا مِنْهُمَا: يَوْمَ الْفِطْرِ، وَيَوْمَ الْأَضْحَى
(نسائي 3/179).
ಅನಸ್ (ರ)ಹೇಳುತ್ತಾರೆ.ಜಾಹಿಲಿಯ್ಯಾ ಕಾಲದಲ್ಲಿ ಅವರಿಗೆ 2 ದಿನಗಳು ವಿನೋದದ ದಿನವಾಗಿತ್ತು.ಪ್ರವಾದೀ ﷺ ರು ಮದೀನಾಗೆ ಹಿಜ್ರ ಹೋದಾಗ  ಅವರೊಂದಿಗೆ ಹೇಳಿದರು;ಇದನ್ನು ಬದಲಾಯಿಸಿ ಇದಕ್ಕಿಂತ ಉತ್ತಮವಾದ ಈದುಲ್ ಫಿತ್ರ್ ಮತ್ತು ಈದುಲ್ ಅಳ್'ಹವನ್ನು ಅಲ್ಲಾಹನು ನಿಮಗೆ ನೀಡಿದ್ದಾನೆ.(ನಸಾಈ 3/179).

ವರ್ಷಕ್ಕೆ ಈದ್ 2 ಮಾತ್ರವೆಂದು ಇದರಿಂದ ತಿಳಿದು ಬರುತ್ತದೆ ಎಂದಾಗಿದೆ ಸಲಪಿಯ ವಾದ.
ಹದೀಸನ್ನು ಬೇಕಾದಂತೆ ಗ್ರಹಿಸದ ಕಾರಣದಿಂದ ಈ ರೀತಿಯ ವಿಚಿತ್ರ ವಾದವನ್ನು ಅವರು ಹೇಳುತ್ತಿದ್ದಾರೆ.

ವಾಸ್ತವದಲ್ಲಿ
ಪ್ರವಾದೀﷺ ಮರು ಅವರಲ್ಲಿ "ನೀವು ಉತ್ಸವವಾಗಿ ಕಾಣುವ ಈ ಎರಡು ದಿನಗಳಿಗೆ ಬದಲಾಗಿ 2 ಈದ್ ಗಳು ಪುಣ್ಯದಾಯಕವಾಗಿದೆ" ಎಂದು ಹೇಳಿದ್ದಾರೆಯೇ ಹೊರತು ಈದ್ 2 ಮಾತ್ರವಿರುವುದು ಎಂದು ಹೇಳಿಲ್ಲ.ಬುದ್ಧಿಯಿರುವ ಯಾರಿಗೂ ಇದು ತಿಳಿಯುವ ವಿಚಾರ.

ಮಂಗಳೂರು ಮತ್ತು ಪುತ್ತೂರು ದೊಡ್ಡ ಸಿಟಿ ಎಂದು ಹೇಳಿದ ಒಬ್ಬನಲ್ಲಿ ನಾನು ಹೇಳಿದೆ.ಅದಕ್ಕಿಂತಲೂ ದೊಡ್ಡ ಸಿಟಿ ಮೈಸೂರು ಮತ್ತು ಬೆಂಗಳೂರು ಇದೆ.
ಆವಾಗ ನನ್ನ ಮಾತನ್ನು ತಪ್ಪಾಗಿ ಅರ್ಥೈಸಿ  ಸಿಟಿಯಿರುವುದು ಮೈಸೂರು ಮತ್ತು ಬೆಂಗಳೂರು ಮಾತ್ರವೆಂದು ಅವರು ಹೇಳಿದ್ದಾರೆ  ಎಂದು ಒಬ್ಬ ಹೇಳಿದರೆ ಆತನನ್ನು ಹುಚ್ಚಾಸ್ಪತ್ರೆಯಲ್ಲಿ ಕಟ್ಟಿಯಿಡಬೇಕಾದೀತು.ಅದೇ ರೀತಿಯಾಗಿದೆ ಸಲಪಿಯ ಅರ್ಥ ಕೂಡಾ.
ಈ ಎರಡು "ಈದ್" ನ ಬಗ್ಗೆ ಹೇಳಿದ ಅದೇ ಪ್ರವಾದೀ ﷺಮರು
ಶುಕ್ರವಾರದ ಕುರಿತು ಹೇಳಿದ ಹದೀಸ್ ನೋಡಿ,

 عن ابن عباس قال :قال رسول الله صلى الله عليه وسلم إن هذا يوم عيد .جعله الله للمسلمين. فمن جاء إلى الجمعة فليغتسل .وإن كان طيب فليمس منه. وعليكم بالسواك
(ابن ماجه 1/349 )
ಇಬ್ನ್ ಅಬ್ಬಾಸ್(ರ)ವರದಿ;
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಖಂಡಿತವಾಗಿಯೂ ಈ ದಿನ(ಶುಕ್ರವಾರ) ಮುಸ್ಲಿಮರಿಗೆ ಅಲ್ಲಾಹನು ಮಾಡಿದ ಈದ್ ಆಗಿದೆ.ಆದುದರಿಂದ ಜುಮುಅ ನಮಾಝ್ ಗೆ ಬರುವವನು ಸ್ನಾನ ಮಾಡಲಿ.ಸುಗಂಧ ದ್ರವ್ಯವಿದ್ದಲ್ಲಿ  ಹಚ್ಚಲಿ.
(ಇಬ್ನ್ ಮಾಜ 1/349)

ಅದೇ ರೀತಿ ಮುವತ್ವ 1/65,
ಮುಸ್ನದು ಶ್ಶಾಫಿಈ 1/63
ರಲ್ಲೂ ಕಾಣಬಹುದಾಗಿದೆ.
*ಈ ಹದೀಸ್ ಸ್ವೀಕಾರ್ಯಯೋಗ್ಯವಾಗಿದೆಯೆಂದು ವಹ್ಹಾಬೀ ನಾಯಕ ಅಲ್ಬಾನಿಯೇ ಸಮ್ಮತಿಸಿದ್ದಾರೆ.*
*(ಇಬ್ನ್ ಮಾಜ ಟಿಪ್ಪಣಿ 1/349)*

ಎಲ್ಲಾ ವಾರಗಳಲ್ಲೂ *ಈದ್* ಇದೆ ಎಂದು ಈ ಹದೀಸಿನಿಂದ ಬಹಳ ಸ್ಪಷ್ಟ.
ಒಂದು ಹದೀಸನ್ನು ಅಂಗೀಕರಿಸಿ ಇನ್ನೊಂದು ಹದೀಸ್ ತಿರಸ್ಕರಿಸುವುದು ಒಮ್ಮೆಯೂ ಮುಸ್ಲಿಮನಿಗೆ ಭೂಷಣವಲ್ಲ.

ಶುಕ್ರವಾರ ದಿನ ಈದ್ ಆಗಲು ಕಾರಣವೇನೆಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೇ ಬೇರೊಂದು ಹದೀಸಿನಲ್ಲಿ ವಿವರಿಸಿದ್ದಾರೆ.

عن ابي هريرة قال قال رسول الله ﷺخير يوم طلعت فيه الشمس يوم الجمعة فيه خلق ادم وفيه ادخل الجنة وفيه اخرج من النار.
(مسلم 3/6)

ದಿವಸಗಳ ಪೈಕಿ ಶ್ರೇಷ್ಟವಾದ ದಿವಸ ಶುಕ್ರವಾರವಾಗಿದೆ.ಆ ದಿನ ಆದಮ್ ನೆಬಿಯನ್ನು ಸೃಷ್ಠಿಸಲಾಗಿದೆ.ಅದೇ ದಿನ ಸ್ವರ್ಗಕ್ಕೆ ಅವರನ್ನು ಪ್ರವೇಶಿಸಲಾಯಿತು ಹಾಗೂ ಶುಕ್ರವಾರ ಸ್ವರ್ಗದಿಂದ ಹೊರಕಳುಹಿಸಲಾಯಿತು.
(ಮುಸ್ಲಿಂ 3/6)

ಆದಮ್ ನೆಬಿಯವರನ್ನು ಸೃಷ್ಠಿಸಿದ ದಿವಸ ಎಂಬ ಕಾರಣಕ್ಕೆ ಶುಕ್ರವಾರಕ್ಕೆ ಮಹತ್ವ ಲಭಿಸಿರುವುದಾದರೆ ಅವರಿಗಿಂತಲೂ ಶ್ರೇಷ್ಠರಾದ ಪ್ರವಾದೀ ಮುಹಮ್ಮದ್  ﷺ ರು
ಜನಿಸಿದ ದಿವಸಕ್ಕೆ ಖಂಡಿತವಾಗಿಯೂ ಅದಕ್ಕಿಂತಲೂ ಮಹತ್ವ ಇದೆ ಎಂಬುವುದರಲ್ಲಿ ಸಂಶಯವಿಲ್ಲ.

ಆದಮ್ ನೆಬಿಯನ್ನು ಸೃಷ್ಠಿಸಲ್ಪಟ್ಟ ಶುಕ್ರವಾರವನ್ನು *ಈದ್*  ಎಂದು ಹೇಳಬಹುದಾದರೆ ಪ್ರವಾದೀ ﷺ ರು ಜನಿಸಿದ ರಬೀವುಲ್ 12 ನೇ ದಿನಕ್ಕೆ *ಈದ್ ಮೀಲಾದ್* ಎನ್ನುದರಲ್ಲಿ ಯಾವುದೇ ತಪ್ಪಿಲ್ಲ.

ಆದುದರಿಂದಲೇ ಆ ದಿನ *"ಈದ್ ಮೀಲಾದ್"* ಎಂಬ ಹೆಸರಲ್ಲಿ ತಿಳಿಯಲ್ಪಡುತ್ತದೆ.



*ಮುಂದುವರಿಯುವುದು.............*

*📝ಮುನೀರ್ ಸಖಾಫಿ,ಸಾಲೆತ್ತೂರು*