Friday, February 16, 2018

*PFI ಯ ತ್ರಿವರ್ಣ ಪತಾಕೆ ಬಾನಿಗೇರಿಸಿ ಸೆಲ್ಯೂಟ್ ಹೊಡೆಯುವ ಮುಂಚೆ ಒಂದು ಮಾತು!*

👉ಪ್ರೀತಿಯ ಮೊಹಲ್ಲ ಖತೀಬ್, ನಾಯಕರು ಮತ್ತು ಬಾಂಧವರೇ....

14 ಶತಮಾನಗಳಿಂದ ಪರಂಪರಾಗತವಾಗಿ ಇಸ್ಲಾಮಿನ ಅಧಿಕ್ರತ ಪುರಾವೆಗಳಾದ
ಕುರ್-ಆನ್, ಸುನ್ನತ್, ಇಜ್-ಮಾಅ್, ಕಿಯಾಸ್ ಮೂಲಕ ಮುಸ್ಲಿಮ್ ಸಮುದಾಯ ನಂಬಿಕೊಂಡು ಬಂದದ್ದು

*ನಮ್ಮ ಪ್ರೀತಿಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಸಾಮಾನ್ಯ ಮನುಷ್ಯರಲ್ಲ. ಅವರು ನಮ್ಮಂತೆ ಅಲ್ಲ.  ಅವರನ್ನು ತಪ್ಪು ಸಂಭವಿಸುವಂತಹ ಕಾರ್ಯಗಳಿಂದ ಅಲ್ಲಾಹು ರಕ್ಷಿಸಿದ್ದಾನೆ. ಆದುದರಿಂದ ಅವರು ಯಾವುದೇ ಒಂದುಸಣ್ಣ ತಪ್ಪು ಕೂಡಾಮಾಡಿಲ್ಲ* ಎಂದಲ್ಲವೇ.

ಆದರೆ ಈ ನಂಬಿಕೆಗೆ ಕೊಡಲಿಯೇಟು ಕೊಟ್ಟು ನುಚ್ಚು ನೂರು ಮಾಡಲು ಪ್ರಯತ್ನಿಸಿದ್ದು ಇಲ್ಲಿನ ಸಲಪಿ, ಜಮಾತೇ ಇಸ್ಲಾಮೀ, ತಬ್ಲೀಗಾದಿ ನೂತನ ವಾದಿಗಳಾದರೆ ಖಂಡಿತವಾಗಿಯೂ ಅವರ ಅದೇ ಹಾದಿಯನ್ನು ಅಕ್ಷರಸ ಈ ಪಿಎಫ್ಐ ಯೂ ಅನುಸರಿಸಿದೆ.

*ಸಮುದಾಯ ರಕ್ಷಣೆಯ ಮುಖವಾಡ ಹೊತ್ತ ಇವರ ಹಲವು ಪುಸ್ತಕ, ಮಾದ್ಯಮಗಳಲ್ಲಿ ಇವರ ನೈಜ ಮುಖದ ಪರಿಪೂರ್ಣ ಚಿತ್ರಣ ವಿದೆ.*

(ಸಫಲ ಜೀವನ, ಜ್ಞಾನ ದೀಪ, ಇಸ್ಲಾಮ್- ಪ್ರಶ್ನೋತ್ತರಗಳು, ಪ್ರಸ್ತುತ ಮುಂತಾದವುಗಳಲ್ಲಿ)

ಸಲಪಿ, ಜಮಾತೇ ಇಸ್ಲಾಮೀ, ತಬ್ಲೀಗ್ ನವರ ಕಾರ್ಯಕ್ರಮವು  ತಮ್ಮ ಮೊಹಲ್ಲದಲ್ಲಿ ನಡೆಯುವುದಾದರೆ ತಾವು ಹೇಗೆ ಅದರಿಂದ ದೂರ ಸರಿಯುತ್ತೀರೋ ಅದೇರೀತಿ ಈ ಸಂಘಟನೆಯಿಂದಲೂ ದೂರ ಸರಿಯಬೇಕಾದ ಅಗತ್ಯ ನೈಜ ವಿಶ್ವಾಸಿಗಳಿಗಿದೆ.

ಇವರು ಹೊರತಂದ ಪುಸ್ತಕಗಳಲ್ಲಿ
*👉ಅಲ್ಲಾಹನ ಹೊರತು ಬೇರೆ ಯಾರಲ್ಲೂ ಬೇಡಬಾರದು* ಎಂಬ ಇಸ್ತಿಗಾಸ, ತವಸ್ಸುಲ್ ವಿರೋಧ ವಿಷಯವಿದೆ.

*👉4 ಮದ್ಹಬ್ ಗಳ ಮದ್ಯೆ ಭಿನ್ನತೆ ಇದೆ* ಎಂಬ ಚಿತ್ರೀಕರಣವಿದೆ.

*👉ಮಹಿಳೆಯರ ಮುಖ ಔರತ್-ಗೌಪ್ಯಭಾಗವಲ್ಲ. ಮನೆಯಿಂದ ಹೊರಗಿಳಿಯುವಾಗ ಅವಳು ಅದನ್ನು ಮುಚ್ಚಬೇಕೆಂದಿಲ್ಲ.* ಎಂಬ ಫತ್ವಾ ಇದೆ.

*👉ಸುಗಂಧ ದ್ರವ್ಯ ಹಚ್ಚದೆ ನಮಾಜಿಗಾಗಿ ಮಹಿಳೆ ಮಸೀದಿಗೆ ಹೋಗಬಹುದು* ಎಂಬ ರೀತಿಯ ಮಾತು ಇದೆ.

*👉ಸ್ವಹಾಬಿವರ್ಯರೊಬ್ಬರ ಮೇಲೆ ಅವರ ಘನತೆಗೆ ತಕ್ಕದ ಗಂಭೀರ ಆರೋಪವಿದೆ*

*ಹೇಳಿ, ಹೀಗಿರುವಾಗ ನಿಮ್ಮ ಆತ್ಮ ಸಾಕ್ಷಿಗೆ ವಿರುಧ್ಧವಾಗಿ, ನಿಮ್ಮ ಪರಂಪರಾಗತ ಪರಮ, ಅಚಲ ನಂಬಿಕೆಗೆ ಎದುರಾಗಿ ಆ ಪತಾಕೆಗೆ ನೀವು ಹೇಗೆ ಸೆಲ್ಯೂಟ್ ಹೊಡೆಯುವಿರಿ!?*

👉ಕೊನೆಗೆ ಒಂದು ಮಾತು,
 ಪಿಎಫ್ಐ ಯ ಅಂತರಾಳ ಸಮರ್ಪಕವಾಗಿ ತಿಳಿಯದ ನಿಮ್ಮ ಜಮಾಅತಿನವರೇ ಆದ ಕೆಲವು ಮುಗ್ಧ ಯುವಕರು ಬಂದು ನಿಮ್ಮನ್ನು ಆಹ್ವಾನಿಸಿದ ಮಾತ್ರಕ್ಕೆ ನೀವು ಹೋಗಿ ಆ ಪತಾಕೆ ಬಾನಿಗೇರಿಸಿ ಸೆಲ್ಯೂಟ್ ಹೊಡೆಯುವುದಾದರೆ,

*ಆ ಪತಾಕೆ ನಿಮ್ಮನ್ನೇ ಅಣಕಿಸಿ, ನಿಮ್ಮ ಕೈಯ್ಯಿಂದಲೇ ನಿಮ್ಮ ನಂಬಿಕೆ, ಆದರ್ಶ ವನ್ನು ದಫನ ಮಾಡಿದ ಸಂತೋಷದ ಕಿರುನಗೆ ನಿಮ್ಮೆಡೆಗೆ ನೋಡಿ ಬೀರುತ್ತದೆ*
ಎಂಬುದನ್ನು ಮರೆಯಬೇಡಿ.

*ಇತೀ- ಸಮುದಾಯ ಪ್ರೇಮಿ*

Wednesday, February 14, 2018

*ಯಾರು ಇವರು NDF SDPI PFI*
*??????????????????????????*
*ಪಾಣಕ್ಕಾಡ್ ಸಯ್ಯಿದ್ ಅಬ್ಬಾಸಲೀ ಶಿಹಾಬ್ ತಂಙಳ್* *ಇರುವ ಸ್ಟೇಜ್ ಮೇಲೆ ಹತ್ತಿ ತಂಙಳ್ ರವರ ಕೋಲರ್ ಹಿಡಿದ* *ಸಂಘಟನೆಯಾಗಿದೆ*
*ಈ NDF*

*ಸಯ್ಯಿದ್ ಉಜಿರೆ ತಂಙಳ್ ಇರುವ ಸ್ಟೇಜ್ ಮೇಳೆ ಹತ್ತಿ ತಂಙಳ್ ರವರನ್ನು ದೂಡಿಹಾಕಿದ ಸಂಘಟನೆಯಾಗಿದೆ ಈ PFI*

*ಪಾಣಕ್ಕಾಡ್ ತಂಙಳ್ ರವರನ್ನು ಹಿಯಾಳಿಸಿದ ಸಂಘಟನೆಯಾಗಿದೆ ಈ SDPI*

*SDPI NDF PFI ಇಮಾಂ ಕೌಂಸಿಲ್ ಎಂಬ ಸಂಘಟನೆಗಳನ್ನು 2 ಸುನ್ನಿ ವಿಭಾಗದ ಉಲಮಾ ಉಮರಾಗಳು ಅಂಗೀಕರಿಸಿಲ್ಲ.!!!*

*ಉಲಮಾಗಳು ಅಂಗೀಕರಿಸದ ಸಂಘಟನೆಗಳನ್ನು ನಾವು ಅಂಗೀಕರಿಸಬೇಕೆ ???*

*ಉಲಮಾಗಳು ತೋರಿಸಿಕೊಟ್ಟ ಆದರ್ಶವೇ ನಮ್ಮ ಆದರ್ಶ*

 *ಅಲ್ಲಾಹು ನಮ್ಮೆಲ್ಲರನ್ನೂ ಕೊನೆ ಉಸಿರಿನ ವರೆಗೂ ಉಲಮಾಗಳು ತೋರಿಸಿಕೊಟ್ಟ ಈ ಸತ್ಯ  ಸನ್ಮಾರ್ಗದಲ್ಲಿ  ಸದೃಡವಾಗಿಸಲಿ.  (ಆಮೀನ್…)*


*✒ಸಹೋದರ*
🏵 *ಪ್ರವಾದಿ ಸಂದೇಶ*🏵
🌀 *ಆಲೋಚಿಸುವವರಿಗೆ*🌀🌀🌀🌀🌀🌀🌀🌀🌀 *ದೃಷ್ಟಾಂತವಿದೆ.*🌀🌀

*بِسْمِ اللّٰهِ الرَّحْمَانِ الرَّحِيمْ*

*ಸಂಚಿಕೆ -5⃣* *(ಕೊನೇಯ ಸಂಚಿಕೆ )*

*ಜಗತ್ತನ್ನೊಮ್ಮೆ ನೀವು ಗಮನಿಸಿ ನೋಡಿ. ಇಲ್ಲಿ ಸೂರ್ಯ, ಚಂದ್ರ, ನಕ್ಷತ್ರಗಳು ಪರಸ್ಪರ ಡಿಕ್ಕಿಯಾದದ್ದಿದೆಯೇ.? ಭೂಮಿಯನ್ನು ಸುತ್ತುವರಿದಿರುವ ಸಾಗರದ ನೀರು ಭೂಮಿಯನ್ನು ಮುಳುಗಿಸಿದೆಯೇ.? ಗೋಳಗಳು ಪರಸ್ಪರ ಮುಖಾಮುಖಿಯಾಗಿ ಭೂಮಿ ಅಗ್ನಿಗೆರೆಯಾಗುತ್ತಿದೆಯೇ.? ಆಗಾಗ ಸೂರ್ಯನೇ ಇಲ್ಲವಾಗಿ ಭೂಮಿಯಿಡೀ ಕತ್ತಲಾವರಿಸುವುದುಂಟೇ.? ಇಲ್ಲಿ ಜನಿಸುವ ಮನುಷ್ಯ ಮಕ್ಕಳು ಪರಸ್ಪರ ಗುರುತು ಹಿಡಿಯಲಾಗದ ರೀತಿಯಲ್ಲಿ ಸಮಾನರಾಗುವುದುಂಟೇ.? ಉತ್ತರ ಇಲ್ಲ ಎಂದಾದರೆ ಇಷ್ಟು ಕರಾರುವಕ್ಕಾಗಿ ಇದನ್ನು ನಿಯಂತ್ರಿಸುವುದಾದರೂ ಯಾರು.? ಇವೆಲ್ಲವನ್ನೂ ಬೇಕಾದ ಹಾಗೆ ಪರಿಪಾಲಿಸುವ ಒಬ್ಬ ಸೃಷ್ಟಿಕರ್ತನಿದ್ದಾನೆ ಎನ್ನುವ ಸತ್ಯಕ್ಕೆ ತಲುಪಲು ಇನ್ನು ಹೆಚ್ಚು ಚಿಂತಿಸಬೇಕಿದೆಯೇ.? ನಿಜವಾದ ಬುದ್ಧಿ ಉಪಯೋಗಿಸಿದರೆ ಈ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಆದ್ದರಿಂದಲೇ ಮುಹಮ್ಮದ್ ಅಸದ್, ಮೋರಿಸ್ ಬುಕೇ, ಅಲಕ್ಸಾಂಡರ್ ರಝತ್ ವೆಬ್, ಮಾವಿಸ್ ಬಿಜೋಳಿ, ಲಾಡ್ ಹೆಡ್ಲಿ ಇವರ ಪಟ್ಟಿ ಇನ್ನೂ ಮುಂದುವರಿಯುತ್ತದೆ. ಇವರೆಲ್ಲರೂ ಏಕದೇವ ಸಿದ್ಧಾಂತದತ್ತ ಹಾದು ಬಂದವರು. ನಿರಂತರವಾದ ಸತ್ಯಾನ್ವೇಷಣೆಗೆ ಮತ್ತು ಆಳವೇರಿದ ಅಧ್ಯಯನವೂ ಅವರನ್ನು ಬೆಳಕಿನೆಡೆಗೆ ಕೊಂಡೊಯ್ಯಿತು. ಮನುಷ್ಯ, ಪ್ರತಿಮೆ, ವಿಗ್ರಹಗಳ ಆರಾಧನೆಯಿಂದ ನಿಜವಾದ ಸೃಷ್ಟಿಕರ್ತನತ್ತ ಮುಖ ಮಾಡಲು ಅವರಿಗೆ ಸಾಧ್ಯವಾಯಿತು.*

   *ಸೃಷ್ಟಿಯಾದ ಮನುಷ್ಯನನ್ನು ದೇವನೆಂದು ನಂಬುವವರಿದ್ದಾರೆ. ಯಾರನ್ನೂ ಇಲ್ಲಿ ಆಕ್ಷೇಪಿಸುತ್ತಿಲ್ಲ. ಬದಲು ಇದು ಸತ್ಯಾನ್ವೇಷಣೆಗೆ ಒಂದು ಪ್ರೇರಣೆಯಷ್ಟೆ. ಬುದ್ಧಿಯನ್ನು ಸರಿಯಾದ ದಿಕ್ಕಿನಲ್ಲಿ ತಿರುಗಿಸಲೊಂದು ಆಹ್ವಾನವಷ್ಟೆ. ಪ್ರಕೃತಿಯ ಸೀಮೆಗಳಿಗೂ, ನಿಯಂತ್ರಣಗಳಿಗೂ ವಿಧೇಯವಾಗಿ ಒಂದು ದಿನ ಸತ್ತು ಹೋಗುವ ಒಂದು ಜೀವಿ ತಾನೇ ಮನುಷ್ಯ. ಸ್ವತಃ ತನ್ನ ತಲೆಯ ಕೂದಲು ನೆರೆತರೆ, ತನ್ನ ಕಪೋಲದ ಚರ್ಮ ಸುಕ್ಕು ಗಟ್ಟಿದರೆ, ದೃಷ್ಟಿ ಶಕ್ತಿ, ಶ್ರವಣ ಶಕ್ತಿ ದುರ್ಬಲವಾದರೆ, ಹಲ್ಲುಗಳು ಉದುರಿ ಹೋದರೆ ಅದನ್ನು ಸರಿ ಮಾಡಲಾಗದ ದಿನಕ್ಕೆ ಹಲವು ಬಾರಿ ಬಾತ್ ರೂಂ ಟಾಯ್ಲೇಟ್ ಗಳಿಗೆ ಹೋಗುವ, ಅನ್ನ ಪಾನೀಯ ತೊರೆದರೆ ಶಕ್ತಿ ಕುಂದುವ, ಮೂರ್ನಾಲ್ಕು ದಿನ ಸ್ನಾನ ಮಾಡದಿದ್ದರೆ ವಾಸನೆ ಬೀರುವ ಒಬ್ಬ ಮನುಷ್ಯನನ್ನು ಹೇಗೆ ತಾನೇ ದೇವನೆಂದು ನಂಬಲು ಸಾಧ್ಯವಾಗುವುದು. ತನ್ನ ಎಲ್ಲಾ ಗೌರವಾಧರಗಳನ್ನು ಅವನಿಗೆ ಸಮರ್ಪಿಸಿ ಅವನ ಮುಂದೆ ತಲೆ ಬಾಗುವುದಾದರೂ ಹೇಗೆ.? ಎಂದೋ ತೀರಿ ಹೋದವರ ಪ್ರತಿಮೆಗಳನ್ನಿಟ್ಟು ಆರಾಧಿಸುವುದರಲ್ಲಿ ಅರ್ಥವೇನಿದೆ.? ಯಾವುದೋ ಮರಕ್ಕೆ, ಗಿಡಕ್ಕೆ, ಕಲ್ಲಿಗೆ ನಮಿಸುವುದರಲ್ಲಿ ಏನು ಪ್ರಯೋಜನ.? ಆದ್ದರಿಂದ ಸತ್ಯಾನ್ವೇಷಣೆ ಮುಂದುವರಿಯಲಿ. ಆಕಾಶ ಭೂಮಿಗಳನ್ನು ಸೃಷ್ಟಿಸಿದ ಅನಾಧಿಯಾದ ಅನಶ್ವರನಾದ ಇಡೀ ಪ್ರಪಂಚವನ್ನೇ ನಿಯಂತ್ರಿಸುವ ಒಂದು ಮಹಾ ಶಕ್ತಿಯಲ್ಲಿ ವಿಶ್ವಾಸ ದೃಡವಾಗಲಿ. ಎಲ್ಲಾ ಧರ್ಮದ ಅಧಿಕೃತ ವೇದಗ್ರಂಥಗಳು ಇದೇ ಪಾಠವನ್ನು ಸಾರಿದೆ. ಮುಸ್ಲಿಮರು ಅವನನ್ನೇ 'ಅಲ್ಲಾಹು' ಎಂದು ಕರೆಯುತ್ತಾರೆ. ಇದು ಯಾರನ್ನೂ ನಿಂದಿಸಿದ್ದಲ್ಲ.*

*🍃ಚಿಂತಿಸುವವರಿಗೆ ಪಾಠವಿದೆ.🍃*
   
   *(ಮುಗಿಯಿತು)*
*PFI ಸಮುದಾಯದ ವಿಷಯ  ಮಾತನಾಡುವ ಮುನ್ನ.......*

ಸುರತ್ಕಲ್ ಪರಿಸರ ದವರೇ , ಚಿಂತಿಸಿ.

👉 ಪಿ ಎಫ್ ಐ ಕಾರ್ಯಕರ್ತ ಖುರೈಶಿಯ ಮೇಲೆ ಅಮಾನವೀಯ ಹಲ್ಲೆಯಾದಾಗ ಬೀದಿಗಿಳಿದು ಪ್ರತಿಭಟನೆ ಮಾಡಿದ PFI ಯವರು *ಕಾಟಿಪಳ್ಳ ಸಫ್ವಾನ್ ಹತ್ಯೆ ಯಾದಾಗ ಬೀದಿಗಿಳಿದು ಪ್ರತಿಭಟಿಸಲಿಲ್ಲ.ಸಫ್ವಾನ್ ನನ್ನು ಸಮುದಾಯದ ಹೊರಗಿಟ್ಟ  PFI ಯವರಿಗೆ ಸಮುದಾಯ ದ ಬಗ್ಗೆ ಮಾತನಾಡಲು ಅರ್ಹತೆ ಇದೆಯೇ ?*

👉 ಪಿ ಎಫ್ ಐ ಯ ಅಶ್ರಫ್ ಕೊಲೆ ಯಾದಾಗ  ಪ್ರತಿಭಟನೆ ಮಾಡಿದ PFI ಉಳ್ಳಾಲ ಮುಕ್ಕಚ್ಚೇರಿ *ಝುಬೈರ್ ಕೊಲೆ ಯಾದಾಗ ಪ್ರತಿಭಟನೆ ಮಾಡಲಿಲ್ಲ ಯಾಕೆ ?* ಝುಭೈರ್ ರನ್ನು ಸಮುದಾಯದವರು ಅಲ್ಲವೆಂದು ಬಗೆದ PFI ಗೆ ಸಮುದಾಯ ದ ಬಗ್ಗೆ ಮಾತನಾಡಲು ಯಾವ ಯೋಗ್ಯತೆ ಇದೆ ?

👉  PFI  ಯ ಜಿಲ್ಲಾ ನಾಯಕನನ್ನು ಬಂಧಿಸಿದಾಗ ಜಿಲ್ಲಾಧಿಕಾರಿ ಕಛೇರಿ ಮುಂದೆ ಹೋರಾಟ ಮಾಡಿದವರು ಕಾಂಗ್ರೆಸ್ ನ ಜಲೀಲ್ ಕರೋಪಾಡಿ ಕೊಲೆಯ ಬಗ್ಗೆ ಜಿಲ್ಲಾಧಿಕಾರಿ ಕಛೇರಿ ಎದುರು ಧರಣಿ ಕೂರಲು ಸಮಯ ಸಿಗಲಿಲ್ಲ ಎಂದಾದರೆ  PFI ಗೆ ಸಮುದಾಯ ಬಗ್ಗೆ ಮಾತನಾಡುವ ಹಕ್ಕು ಇದೆಯೇ ?

👉 PFI ಯ ಕಾರ್ಯಕರ್ತ ರಿಗೆ ಅನ್ಯಾಯ ವಾದಾಗ ಮಾತ್ರ ಪ್ರತಿಭಟನೆ ಮಾಡುವ PFI ಯವರಿಗೆ ಸಮುದಾಯದ ಹೆಸರು ಉಚ್ಚರಿಸುವ ಯೋಗ್ಯತೆ ಉಂಟೇ ?

👉 ಮದೀನಾ ಹಸಿರು ಕುಬ್ಬ ದ್ವಂಸ ಮಾಡುತ್ತೇವೆ ಎಂದಾಗ, ಬಾಬಾ ಬುಡನ್ ಗಿರಿಯ ದರ್ಗಾ ಮುಸ್ಲಿಮರ ಕೇಂದ್ರ ವಲ್ಲ ಎಂದಾಗ, ಕೊಡಗಿನ ಎಮ್ಮೆಮಾಡು ದರ್ಗಾ ಅನಿಸ್ಲಾಮಿಕ ಕೇಂದ್ರ ಅದು ಅನ್ಯ ಧರ್ಮಿಯರಿಗೆ ಬಿಟ್ಟು ಕೊಡಬೇಕೆಂದು ಸಲಪಿಗಳು ಅರಚಿದಾಗ ಖಂಡನೆ ಯನ್ನು ನೀಡಲು ಸಾಧ್ಯವಾಗದ  PFI ಗೆ ಸಮುದಾಯ ದ ಹೆಸರು ಹೇಳುವ ಅರ್ಹತೆ ಇದೆಯೇ ?

👉 ಆರೆಸ್ಸೆಸ್ಸಿನ ದನಂಜಯ ಕುಮಾರ್ ಗೆ ಓಟು ಹಾಕಲು ಹೇಳಿದ PFI ಯ ನಾಯಕರಿಗೆ ಸಮುದಾಯ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ?

👉 ಪ್ರತೀ ಎಲೆಕ್ಷಣ್ ನಲ್ಲಿಯೂ ಮುಸ್ಲಿಂ ಅಭ್ಯರ್ಥಿಗಳ ವಿರುದ್ಧ ಚುನಾವಣೆ ನಿಂತು ಕೋಮು ವಾದಿಗಳ ಗೆಲುವಿಗೆ ಕಾರಣ ರಾಗುವ PFI ಯವರಿಗೆ ಸಮುದಾಯ ಎನ್ನಲು ಅಲ್ಪವಾದರು ನಾಚಿಕೆ ಇಲ್ಲವೇ ?

👉 ಪ್ರವಾದಿ ವರ್ಯರ ತೀರ್ಮಾನ ತಪ್ಪೆಂದು ಬರೆದ PFI ಯವರಿಗೆ ಆ ಪ್ರವಾದಿ ಉಮ್ಮತಿಗಳ ಬಗ್ಗೆ ಮಾತನಾಡಲು ಯಾವ ಯೋಗ್ಯತೆ ಇದೆ ?

👉 ಸಮುದಾಯ ರಕ್ಷಣೆಗೆ ಒಂದು ಶಾಲೆ, ಮದ್ರಸ ನಿರ್ಮಿಸದ PFI ಯವರಿಗೆ ಸಮುದಾಯ ದ ಬಗ್ಗೆ ಮಾತನಾಡಲು ಯಾವ ಅರ್ಹತೆ ಇದೆ ?

👉 ಐಕ್ಯತೆ ಯಿಂದ ಇದ್ದ ಅಂಗರಗುಡ್ಡೆ ಊರಲ್ಲಿ ಭಿನ್ನತೆ ಮಾಡಿ ಮಸೀದಿಯ ಒಳಗೆ ರಕ್ತ ಕಾಳಗ ನಡೆಸಿದ PFI ಗೆ ಸಮುದಾಯ ದ ಬಗ್ಗೆ  ಮಾತನಾಡಲು ನೈತಿಕತೆ ಉಳಿದಿದೆಯೇ ?

👉 ಶರೀಅತ್ ನಿಯಮ ದಿಕ್ಕರಿಸಿ, ಇಲ್ಲಿಯ ಉಲಮಾ ಗಳ ಆಜ್ಞೆ ವಿರೋಧಿ ಸಿ ಸಂಘಟನೆ ಗೆ ಝಕಾತ್ ಹಾಗೂ ಕುರ್ಬಾನಿ ಚರ್ಮ ಪಡೆದು ಕೊಳ್ಳವ PFI ಗೆ  ಹೆಸರೆತ್ತುವ ಯೋಗ್ಯತೆ ಇದೆಯೇ ?

ಇದಕ್ಕೆ ಉತ್ತರ ಬೇಕೆಂದಿಲ್ಲ.ಇದು PFI ಯ ಹಗಲು ವಂಚನೆಯ ಭಾಗವಷ್ಟೆ. ಬುದ್ಧಿ ವಂತ ಸಮಾಜಕ್ಕಾಗಿ ಅನಾವರಣ ಮಾಡಲಾಯಿತಷ್ಟೇ.

Tuesday, February 13, 2018

🏵 *ಪ್ರವಾದಿ ಸಂದೇಶ*🏵
🌀 *ಆಲೋಚಿಸುವವರಿಗೆ*🌀🌀🌀🌀🌀🌀🌀🌀🌀 *ದೃಷ್ಟಾಂತವಿದೆ.*🌀🌀

*بِسْمِ اللّٰهِ الرَّحْمَانِ الرَّحِيمْ*

*ಸಂಚಿಕೆ -4⃣*

*ಮೊಸಳೆ ಬಾಯಿ ಮುಚ್ಚಿ ಹಕ್ಕಿ ಸತ್ತು ಹೋಗದಂತೆ ಮುಳ್ಳಿನಿಂದ ಸಂರಕ್ಷಣೆ ನೀಡಿದವನಾದರೂ ಯಾರು..? ಚಿಂತಿಸುವವರಿಗೆ ಅನೇಕಾರು ದೃಷ್ಟಾಂತಗಳಿವೆ. ಇದು ದೇವರಿಂದಲ್ಲದೇ ಸಾಧ್ಯವಿಲ್ಲ. ಅದೂ ಏಕದೇವನಿಂದ ಮಾತ್ರ. ಇಬ್ಬರು ದೇವರಾದರೆ ಅಲ್ಲಿ ಅವರ ನಡುವೆ ತರ್ಕಗಳೇ ಮುಗಿಯಲಾರದು. ಒಬ್ಬ ಮಳೆ ವರ್ಷಿಸಲು ಮುಂದಾಗುವಾಗ ಮತ್ತೊಬ್ಬ ಬಿಸಿಲು ನೀಡಲು ತೀರ್ಮಾನಿಸಿದರೆ.? ಒಬ್ಬ ರಾತ್ರಿಯಾಗಿಸಲು ಬಯಸಿದಾಗ ಇನ್ನೊಬ್ಬ ಹಗಲಾಗಿಸಲು ಮುಂದಾದರೆ.? ಇಡೀ ಪ್ರಪಂಚದ ತಾಳವೇ ತಪ್ಪಿ ಹೋಗಬಹುದು. ಒಂದು ಮನೆಗೆ ಇಬ್ಬರು ಯಜಮಾನರಿದ್ದರೆ, ಒಂದು ರಾಜ್ಯಕ್ಕೆ ಎರಡು ಮುಖ್ಯಮಂತ್ರಿಯಿದ್ದರೆ, ಆ ಮನೆಯ, ಆ ರಾಜ್ಯದ ಸ್ಥಿತಿಯೇನಾಗಬಹುದು.? ಯಾವುದೇ ಅಭಿವೃದ್ದಿ ಕಾರ್ಯಗಳೂ ನಡೆಯದೆ ಸದಾ ತರ್ಕವಿತರ್ಕಗಳು, ಗೌಜಿ ಗದ್ದಲಗಳೇ ತುಂಬಿ ಹೋಗಬಹುದು. ಆದ್ದರಿಂದ ನಿಜವಾದ ಏಕದೇವನಲ್ಲಿ ವಿಶ್ವಾಸ ತಾಳುವುದಲ್ಲದೇ ಮನುಷ್ಯನಿಗೆ ನಿರ್ವಾಹವಿಲ್ಲ. ಆಕಾಶ ಭೂಮಿಗಳಿಗೆ ಅಲ್ಲಾಹನಲ್ಲದೇ ಬೇರೆ ದೇವರಿದ್ದಿದ್ದರೆ ಎಲ್ಲವೂ ನಾಶವಾಗಿ ಹೋಗುತ್ತಿತ್ತು. ಎಂದು ಖುರ್ ಆನ್ ವಿವರಿಸಿದೆ.*

     *ಮನುಷ್ಯನು ತನ್ನ ಬುದ್ಧಿ ಉಪಯೋಗಿಸಿ ಏಕದೇವನ ಅಸ್ತಿತ್ವವನ್ನು ಮನಗಾಣಬೇಕಿದೆ. ಪ್ರಪಂಚಕ್ಕೆ ದೇವರೇ ಇಲ್ಲ ಎಂಬ ನಾಸ್ತಿಕ ವಾದದಿಂದಲೂ ಕಲ್ಲು ಮುಳ್ಳುಗಳಲ್ಲಿ ದೈವತ್ವವನ್ನು ಕಾಣುವ ಅಂಧವಿಶ್ವಾಸಗಳಿಂದಲೂ ಹೊರಬಲಬೇಕಿದೆ. ಯಾರೋ ಹೇಳಿಕೊಟ್ಟ ವಿಶ್ವಾಸಗಳನ್ನು ಪಾಲಿಸುವುದಕ್ಕಿಂತ ತಂದೆ ತಾಯಿಗಳ ಪರಂಪರಾಗತ ವಿಶ್ವಾಸವನ್ನು ಅವಲಂಬಿಸುವುದಕ್ಕಿಂತ ತಾನು ನಂಬಿರುವ ವಿಶ್ವಾಸವೂ ಸರಿಯೋ ತಪ್ಪೋ ಎಂದು ಬುದ್ಧಿ ಉಪಯೋಗಿಸಿ ಆಲೋಚಿಸುವ ಹಂತಕ್ಕೆ ತಲುಪಬೇಕು. ತನ್ನ ಬುದ್ಧಿಯನ್ನು ಯಾರದೊ ಕಾಲಡಿಯಲ್ಲಿ ಒತ್ತೆಯಿಡಲೇಬಾರದು. ಅತ್ಯಂತ ವ್ಯವಸ್ಥಾಪಿತವಾಗಿ ರೂಪಿಸಲ್ಪಟ್ಟ ಪ್ರಪಂಚವೂ ಸ್ವಯಂ ತಾನೇ ನಿರ್ಮಿತವಾಯಿತು ಎಂಬ ವಾದಕ್ಕೆ ಒಗ್ಗಿಕೊಲ್ಲಳು ಬುದ್ಧಿಯಿರುವವನಿಗೆ ಹೇಗೆ ತಾನೇ ಸಾಧ್ಯ..? ಒಂದು ಸಣ್ಣ ಗ್ಲೋಬ್ ಕೂಡಾ ಸ್ವತಃ ಉಂಟಾಗಲು ಸಾಧ್ಯವಿಲ್ಲ.*
    *ಒಂದು ಸಣ್ಣ ಗಾರ್ಡನ್, ಮನೆ, ಕಟ್ಟಡ ಯಾವುದೂ ಕೂಡಾ ತಾನಾಗಿಯೇ ಉಂಟಾಗದು ಹೀಗಿರುವಾಗ ಹೇಗೆ ತಾನೇ ಅತೀ ಸಂಕೀರ್ಣವಾದ ಈ ಪ್ರಪಂಚ ಸೃಷ್ಟಿಕರ್ತನಿಲ್ಲದೇ ಉಂಟಾಗುವುದು..!?*
 
*{ಮುಂದುವರೆಯುವುದು}*
📚📚📚📚📚📚📚📚📚📚📚📚
*ಅನಂತ ಸಾಗರವಿದು....*

                     *🚇(ಯಾತ್ರಾ ಡೈರಿ)🚇*
          *ಹೌದು* ಇದು ಕೇರಳ ಕೋಝಿಕ್ಕೋಡ್ ಕುಟ್ಯಾಡಿ ಎನ್ನುವ ಪ್ರದೇಶ. ಒಂದೇ ಒಂದು  ಸುನ್ನೀ ಮಸೀದಿ,ಸಂಸ್ಥೆಗಳು ಇಲ್ಲದ ಸಮಯ,ಟೊಪ್ಪಿ ಧರಿಸಿದವನ ಕಂಡರೆ ಕಂಡಲ್ಲಿ ಕೊಲೆಗೈಯ್ಯುವ ನಿಮಿಷ,ಅಜ್ಞಾನದ ಜ್ಞಾನ ಮಾತ್ರ ಪಸರಿಸಲು ಅವಕಾಶವಿದ್ದ ಸಂದರ್ಭ. ಕೇವಲ ಬೆರಳೆಣಿಕೆಯ ವಿದ್ಯಾರ್ಥಿಗಳೊಂದಿಗೆ  ಕುಟ್ಯಾಡಿಯ ಹೃದಯ ಭಾಗದಲ್ಲಿ ಸಣ್ಣ ಗುಡಿಸಲಿನಲ್ಲಿ ಪ್ರಾರಂಭಗೊಂಡ ಸಿರಾಜುಲ್ ಹುದಾ ಎನ್ನುವ ಸಂಸ್ಥೆಯಿಂದು ಭಾಹುಳ್ಯವಾಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯನ್ನು ನೀಡಿ ಅವರ ಭವಿಷ್ಯವನ್ನು ಬೆಳಗಿಸುವಲ್ಲಿ ಯಶಸ್ವಿಯಾಗಿ,ಜ್ಞಾನದ ಕೋಟೆಯನ್ನೇ ಕಟ್ಟಿದೆ.

*ನವೀನರ ಪೊಳ್ಳಿಗೆ ಕಲ್ಲು*

ಕುಟ್ಯಾಡಿ, ನಾದಾಪುರಂ ಎನ್ನುವ ಪ್ರದೇಶ ಸುಪ್ರಸಿದ್ಧ ನಾಡು.ಬಿದ'ಈ ಆಶಯಗಳು
ಪಸರಿಸುವ ಬೀಡು.
ಅವರವರದೇ ಆದ ನವ ಆದರ್ಶ ವಾದಗಳು ಜನರಮುಂದಿಟ್ಟು ಈಮಾನಿಗೆ ತಕರಾರಿರಿಸಿ ಬೊಬ್ಬಿರಿಸುತ್ತಿರುವಾಗ
ಸುನ್ನೀ ಜಗತ್ತು ಕಂಡ ನಾಯಕ,
ಉಲಮಾ ದಿಗ್ಗಜರುಗಳ ಶಿಷ್ಯತ್ವ ಲಭಿಸಿದ ಗಣ್ಯ ವ್ಯಕ್ತಿತ್ವ,ಎಳೆಯ  ಪ್ರಾಯದಿಂದಲೇ ಆದರ್ಶ ತರಗತಿಯಲ್ಲಿ ತೇರ್ಗಡೆಯಾದ ಅಪ್ರತಿಮ,ಕೇರಳ ಕರ್ನಾಟಕ ವೆಂದಲ್ಲ ದೇಶ,ವಿದೇಶಕ್ಕೆ ವಿದ್ಯೆ ಹಬ್ಬಿಸುವ ಮಹನೀಯ ಗುರು

*ಶೈಖುನಾ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದ್*

ಧಾರ್ಮಿಕ ತಿಳುವಳಿಕೆಯ ಕೊರತೆಯಿಂದ ಅಧಾರ್ಮಿಕತೆಯ ಹಾದಿ ತುಳಿಯುತ್ತಿದ್ದ ಸಮುದಾಯಕ್ಕೆ ಧಾರ್ಮಿಕ ಅರಿವನ್ನು ಕಲಿಸಿಕೊಟ್ಟ ಸರಸಾಟಿಯಿಲ್ಲದ ಪ್ರಭಾಷಣಕಾರ.
ಅದೆಷ್ಟೋ ಪ್ರಭಾಷಣಕಾರರನ್ನು ಸೃಷ್ಟಿಸಿದ ಭಾರತದ ಮಣ್ಣಿಗೆ  ಸರಿಸುಮಾರು ಅರ್ಧ ದಶಕಗಳಷ್ಟು ಕಾಲ ಅದೇ ಶೈಲಿ ,ನಿರರ್ಗಳವಾದ ಮಾತುಗಾರಿಕೆ, ಅದೆಂತಹ ಕಲ್ಲು ಮನಸ್ಸುಗಳನ್ನು ಕರಗಿಸಬಲ್ಲ ವಾಕ್ಚಾತುರ್ಯಗಳಿಂದ ಸಹಸ್ರಾರು ಜನರನ್ನು  ಭಾಷಣದತ್ತ ಸೆಳೆದ ಅಪ್ರತಿಮ ವಾಗ್ಮಿ  ಪೇರೋಡ್ ಉಸ್ತಾದರ ಭಾಷಣ ಕೇಳಲು ಅದೆಷ್ಟೋ ಕಿಲೋ ಮೀಟರ್ ಗಟ್ಟಲೆ ಹೋಗಲು ತಯಾರಿರುವ ಜನರನ್ನು ಇಂದಿಗೂ ನಮಗೆ ಕಾಣಿಸಲು ಸಾಧ್ಯ. ಕಳೆದ ಮೂರೂವರೆ  ದಶಕಗಳಿಂದ ಭಾಷಣರಂಗದಲ್ಲಿ  ಅದೆಷ್ಟೋ ವೇದಿಕೆಗಳಲ್ಲಿ ಸುದೀರ್ಘವಾದ ಭಾಷಣಗಳನ್ನು ನಡೆಸುತ್ತಾ ಬಂದಿರುವ ಉಸ್ತಾದರ ಭಾಷಣಗಳನ್ನು ಕೇಳಲು ಇಂದಿಗೂ ಸಹಸ್ರಾರು ಜನರು ಕಾದು ಕುಳಿತಿರುತ್ತಾರೆ ಅಂದರೆ ಅವರ ಪ್ರಭಾಷಣಗಳು ಕೇಳುಗರ ಮನಸ್ಸುಗಳನ್ನು ಅದೆಷ್ಟು ಆಕರ್ಷಣೆಗೊಳಿಸುತ್ತದೆಯೆನ್ನುವುದನ್ನು ಅರ್ಥೈಸಲು ಸಾಧ್ಯವಾಗಬಹುದು.
ರಾತ್ರಿ-ಹಗಲೆನ್ನದೆ ತುಸು ವಿಶ್ರಾಂತಿಯಿಲ್ಲದೆ ಹಗಲಿರುಳು ದೀನೀ ಪ್ರಚಾರ ರಂಗದಲ್ಲಿ ಮುಂದೆ ನಿಂತು  ಜನಮನಕ್ಕೆ ಸತ್ಯದ ತಂತಿಯನು ನಾಟಿ,ವಿಷ ಬೀಜದ ಆಹಾರದ ರಸವನ್ನು ಉಗುಳಿಸಿ ಸನ್ಮಾರ್ಗದ ಸುಗಮ ಹಾದಿಯೊಳು ತಲುಪಿಸಿದ ಭದ್ರತಾ ಕವಚವೆನ್ನಬಹುದು ಈ ಉಸ್ತಾದ್.

*ಉಲಮಾರುಗಳ ನೇತೃತ್ವದಲ್ಲಿ*

ಈ ಮಣ್ಣು ಹಲಗಣ್ಯರುಗಳ ಪಾದಬಿಂಬವುಳ್ಳ ಕಣ್ಣು
ತಾಜುಲ್ ಉಲಮಾ,ನೂರುಲ್ ಉಲಮಾ,ರ'ಈಸುಲ್ ಉಲಮಾ,ಝೈನುಲ್ ಉಲಮಾರಂತಹ ಅಗ್ರಗಣ್ಯ ಉಲಮಾರುಗಳ ಸವಿನೋಟ ಬೆಸೆದು ಈ ಸಂಸ್ಥೆಯ ಉನ್ನತಿಯ ನೋಟ ವಿರಿಸಿದರು ಈ ಮಹನೀಯರು

*ಮೊಳಕೆಯೊಡೆದು ರೆಂಬೆಗಳು ಸಮಾಜಕ್ಕೆ*

ಸಹಸ್ರಾರು ವಿದ್ಯಾರ್ಥಿಗಳು,ಮುತಲ್ಲಿಮರು ಅವರದೇ ಆದ ಜ್ಞಾನವನು ಜನಸಮೂಹಕ್ಕರ್ಪಿಸಲು ಮುಂದಾಗುವ ಪ್ರತಿಭೆಗಳು ಕೇರಳ,ಕರ್ನಾಟಕದುದ್ದಕ್ಕೂ ಜ್ಞಾನರಶ್ಮಿಯು ಪಸರಿಸಿ ಸಮಾಜದ ಅಭಿವೃದ್ಧಿಗೆ ಭಾಗಿಯಾಗಿ ಜನಸಮುದಾಯವನ್ನು ಒಳಿತಿನೆಡೆ ಮುನ್ನುಗ್ಗಿಸಿ ವಿದ್ಯಾಧಾಹಿಗಳ ದಾಹವನ್ನು ನೀಗಿಸಿದರು.ಆದರ್ಶ ರಂಗದಲ್ಲೂ,ಬರಹಲೋಕದಲ್ಲೂ,ಪ್ರಭಾಷನದಲ್ಲೂ ಉತ್ತುಂಗಕ್ಕೇರಿ ಈ ಸಂಸ್ಥೆಯ ಅಭಿಮಾನಕ್ಕೆ ಮುಖ್ಯ ಕಾರಣರಾಗಿದ್ದಾರೆ. ಕರುಣಾಡ ಮಣ್ಣಿನ ಕಣ್ಮಣಿಗಳಾದ  ಸ್ವಲಾಹುದ್ದೀನ್ ಸಖಾಫಿ,ಶರೀಫ್ ಸಖಾಫಿ ಮಾಣಿ ದರ್ಸ್ ರಂಗದಲ್ಲಿ,ಬೇಂಗಿಲ ಸಿದ್ದೀಕ್ ಸಖಾಫಿ, ಮೆದು ಮದನಿ, ಇಸ್ಹಾಖ್ ಸುಹ್ರೀ ಸೂರಿಂಜೆ ರಂತಹಾ ಸಾಹಿತಿಗಳು ಬರಹದಲ್ಲೂ,ನವಾಝ್ ಸಖಾಫಿ ಕಾಜೂರು ಪ್ರಭಾಷನ ವೇದಿಕೆಯಲ್ಲೂ, ಅಬ್ದುಲ್ ರಶೀದ್ ವಿಟ್ಲ ರವರ ಆದರ್ಶ ರಂಗದ ಮುಖಾಮುಖಿಯೂ ಆವೇಶಭರಿತವಾಗಿದೆ.
ಎಲ್ಲಾ ವಿಷಯಕ್ಕೂ ತಗ್ಗು ಬಗ್ಗದೆ ಮುಂದೆ ನಡೆಯುತ್ತಿದೆ ಈ ಸಂಸ್ಥೆ.

*ಸನ್ಮಾರ್ಗದ ದಾರಿದೀಪ*
  *ಸಿರಾಜುಲ್ ಹುದಾ*

ಹೆಸರಿಗೆ ಮಾತ್ರವಲ್ಲ ಇದು ಸನ್ಮಾರ್ಗಕ್ಕೆ ದಾರಿದೀಪ.ಅಂದಿದ್ದ ಕಾರ್ಗತ್ತಲ ಪ್ರದೇಶವನ್ನು ವಿಜ್ಞಾನದ ಬೆಳಕನ್ನಾಗಿ ಪರಿವರ್ತಿಸಿ ಬಡಜನ, ಅನಾಥರುಗಳಿಗೆ ನಂದಾದೀಪವಾಗಿ ಅವರ ಬಾಳಿಗೆ ಬೆಳ್ಳಿದೀಪವನ್ನುರಿಸಿ ಸದಾ ಯಶಸ್ವಿಯತ್ತ ಸಾಗುವ ಈ ಸುಂದರ ಸಮುಚ್ಚಯ ಇಂದು ೨೬ ರ ಹೊಸ್ತಿಲಲ್ಲಿರುವಾಗ ಸಾವಿರಕ್ಕೂ ಮಿಕ್ಕ ಉಲಮಾರುಗಳನ್ನು ಸಮಾಜಕ್ಕರ್ಪಿಸಿದೆ ಈ ಸಂಸ್ಥೆ.

*ನಾ ಕಂಡ ರಮಣೀಯತೆ*

ಇಲ್ಲಿಗೆ ಬಂದವರಿಗೇ ಗೊತ್ತು ಇದರ ಮಹಿಮೆ ಅಬ್ಬಾಬ್ಬಾ ಹೇಗೆಂದು ಬಣ್ಣಿಸಲಿ ಇಲ್ಲಿಯ ಪ್ರಕೃತಿ ಸೊಬಗನ್ನು,ಅಲ್ಲಲ್ಲಿರುವ ಮರಗಳು,ಕೃಷಿಗಳು,ಗಿಡಗಳು,೨-೩ ಹಂತಸ್ತಿನ ವಿದ್ಯಾಲಯವು ಕಂಡು ಕಂಗೊಳಿಸಿತು.ಬರೀ ಎರಡು ದಿನದ ಕ್ಲಾಸ್ ನಿಮಿತ್ತ ಪ್ರಯಾಣದಲ್ಲಿ ಹಲವು ವಿಸ್ಮಯಗಳಿಗೆ ಈ ಕಣ್ಣು ಸಾಕ್ಷಿಯಾಯಿತು.ಇಲ್ಲಿಯ ವಿದ್ಯಾರ್ಥಿಗಳಾದರೆ ಸೌಮ್ಯನಡತೆ,ಶ್ವೇತ ವಸ್ತ್ರದಾರಿಯಾಗಿ ಸಾಲುಸಾಲಾಗಿ ಬರುವಾಗ ನೋಡು
ಗರ ದೃಷ್ಟಿಗೆ ದುನಿಯಾ ಸ್ವರ್ಗದಂತೆ ಈ ಸಂಸ್ಥೆ ತೋಚುತ್ತದೆ.

*✍🏽ಸಿ.ಎ.ಎನ್ ಚಾರ್ಮಾಡಿ*
*ಪರೀಕ್ಷೆ ಭಯ ಬೇಡ!*
=======================

ಆಧುನಿಕ ಯುಗದಲ್ಲಿ *ಪರೀಕ್ಷೆ* ಮಹಾ ಅಗ್ನಿಪರೀಕ್ಷೆಯಾಗಿ ಮಾರ್ಪಟ್ಟಿದೆ.
ಪರೀಕ್ಷೆಗಾಗಿ ಎಲ್ಲಾ ರೀತಿಯಲ್ಲಿ ತಯ್ಯಾರಿನಡೆಸಿದರೂ ಒಳಗಿಂದೊಳಗೆ ಭಯ ಇದ್ದೇ ಇರುತ್ತದೆ.ಆತಂಕ ಕಾಡುತ್ತಲೇ ಇರುತ್ತದೆ.

ಕೆಲವೊಮ್ಮೆ ಪರೀಕ್ಷೆ  ಕುಟುಂಬವೊಂದರ ಸಂಕೀರ್ಣ ಸಮಸ್ಯೆಯಾಗಿ ಮಾರ್ಪಾಡು ಗೊಂಡಿರುತ್ತದೆ.

ಸಧೈರ್ಯವಾಗಿ ಪರೀಕ್ಷೆಯನ್ನು ಎದುರಿಸಿ....,
ಭಯ ಆತಂಕವನ್ನು ಪರೀಕ್ಷಾ ಹಾಲ್ ನಿಂದಲೇ ಹೊರಗಟ್ಟಿರಿ....

ಅದಕ್ಕೆ ಸಹಾಯಕವಾಗುವ, *ಶಕ್ತಿಮಂತ್ರಗಳನ್ನು* ನಿತ್ಯರೂಡಿ ಮಾಡಿಕೊಳ್ಳಲು ಮಿತ್ರರಿಗೆ ಸಹಾಯಮಾಡಿರಿ...
ಅವರಿಗೆ ಈ ಝಿಕ್ರ್ ಗಳನ್ನು ತಲುಪಿಸಿ ಪುಣ್ಯ ಕಟ್ಟಿಕೊಳ್ಳಿ.

💐💐💐💐💐💐💐💐💐💐
1)ಪರೀಕ್ಷಾ ದಿವಸಗಳಲ್ಲಿ ತಹಜ್ಜುದ್ ನಮಾಜಿನ ನಂತರ ಹಾಗೂ ಪರೀಕ್ಷೆಗೆ ಮುಂಚಿತವಾಗಿ,
ಪರೀಕ್ಷೆ ನಡೆಯುತ್ತಿರುವ ದಿನಗಳಲ್ಲಿಯೂ ಕೆಳಗೆ ಕೊಟ್ಟಿರುವ ಸಲಾತ್ ನ್ನು 11 ಬಾರಿ ಹೇಳಬೇಕು👇
*اللَّهُمَّ صَلِّ عَليَ سَيِدِنَا مُحَمَّدٍ مُحْيِ النُّفُوسِ صَلَاةً تُسْعِدُنَا بِهِ فِي جَمِيعِ الدُرُوسِ وَ عَليَ اۤلِهِ وَ صَحْبِهِ وَ سَلِّمْ*
💐💐💐💐💐💐💐💐💐💐

2)  *ಪರೀಕ್ಷಾ ದಿನಗಳಲ್ಲಿ ಐದು ಹೊತ್ತು ನಮಾಜಿನ ನಂತರ 7 ಬಾರಿ (الم نشرح) ಸೂರತ್ ಓದಿ ಎದೆಯ ಭಾಗಕ್ಕೆ ಊದಿರಿ*
💐💐💐💐💐💐💐💐💐💐

3)  ಮಲಗುವ ಮುಂಚೆ👇

*وَالسَابِقُونَ السَابِقُرونْ اُلۤئِكَ الْمُقَرَّبُرونْ (الواقعة ۱۱،۱٢)* ಎಂಬ
ಆಯತ್ 11 ಬಾರಿ ಓದಿರಿ

💐💐💐💐💐💐💐💐💐💐

4)  ಪರೀಕ್ಷಾ ಕೊಠಡಿಗೆ ಪ್ರವೇಶಿಸುವಾಗ👇

*وَ قُل رَّبِّ أَدْخِلْنِي مُدْخَلَ صِدْقٍ  وَ أَخْرِجْنِي مُخْرَجَ صِدْقٍ وَ اجْعَل لِِّي مِن لَّدُنْكَ سُلْطَانًا نَّصِيرً*

(ಸೂರತ್ ಇಸ್ರಾ‌ಅನ 80) ನೇ ಆಯತ್ ಒಂದು ಬಾರಿ ಓದಿರಿ.
💐💐💐💐💐💐💐💐💐💐

5)  ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕಿದಾಗ..👇
*بِسْمِ اللَهِ تَوَكَّلْتُ عَليَ اللَهِ بِحَقِّ مُحَمَّدٍ ﷺ*
 ಒಂದು ಬಾರಿ ಹೇಳಬೇಕು.

💐💐💐💐💐💐💐💐💐💐

6)  ಪ್ರಶ್ನೆಗಳ ಉತ್ತರ ತಿಳಿಯದೆ /ಮೆರೆತು ಹೋಗಿದ್ದರೆ👇
*لَا إِلاَهَ إِلاّٰ اَنْتَ سُبْحَانَكَ اِنِّي كُنْتُ مِنَ الظّٰلِمِينْ.*

ಎಂದು ಒಂದು ಬಾರಿ ಹೇಳಿರಿ

*اَللّٰهُمَّ صَلِّ عَلَيْه.. اَللّٰهُمَّ صَلِّ عَلَيْه.....*

ಎಂಬ ಸಲಾತುಳ್ಳಮೀರ್ ಹೇಳುತ್ತಲೇ ಇರಿ.
💐💐💐💐💐💐💐💐💐💐

7) ಪ್ರಶ್ನೆ ಪತ್ರಿಕೆ ಮಡಚುವಾಗ.👇
*اَلْحَمْدُ لِلَهِ الَذِي هَدٰنَا لِهَذَا وَ مَا كُنَّاَ لِنَهْتَدِيَ لَوْلاَ أَنْ هَدٰنَا اللَهُ(سورة الأعراف 43)*

 ಒಂದು ಬಾರಿ ಹೇಳಿರಿ.

💐💐💐💐💐💐💐💐💐💐
8)  ಪ್ರಶ್ನೆ ಪತ್ರಿಕೆ ಒಪ್ಪಿಸುವಾಗ👇
*اَلْحَمْدُ لِلَهِ الَذِي بِنِعْمَتِهِ تَتِمُّ الصَالِحَاتْ*
ಎಂದು ಹೇಳಿರಿ....

*ಶೈಖುನಾ ಪಾಣವಳ್ಳಿ ಅಬ್ದುಲ್ಲಾಹಿಲ್ ಜಲಾಲಿ ದಾರಿಮಿ ಉಸ್ತಾದ್*

ಕನ್ನಡಕ್ಕೆ ಅಬೂಶಝ
🌿🌿🌿🌿🌿🌿🌿🌿🌿🌿
*ಕಬರ್ ಎತ್ತರಿಸಿ ಕಟ್ಟುವುದು ಹರಾಂ ಅಥವಾ ಶಿರ್ಕ್ ಸತ್ಯಾಂಶ ಏನು*

🔘ಕಬರ್ ಎತ್ತರಿಸಿ ಕಟ್ಟುವುದು ಶಿರ್ಕ್,ಅಥವಾ ಹರಾಂ ಎಂಬುದಕ್ಕೆ ಸಲಪಿಗಳಿಗೆ ಇದುವರೆಗೆ ಆದಾರ ನೀಡಲು ಸಾಧ್ಯವಾಗಲಿಲ.
'ನಹಾ' نهي ಅಂದರೆ ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹುವಸಲ್ಲಂ ವಿರೋಧಿಸಿದರು.
ಎಂಬ ಅರ್ಥ ಬರುವ ಕೆಲವೊಂದು ಹದೀಸುಗಳನ್ನು ಇವರು ಉಲ್ಲೇಖ ಮಾಡುತ್ತಾರೆಯೆ ವಿನಃ ಬೇರೆ ಯಾವುದೇ ಅಸ್ತ್ರ ಇವರ ಬತ್ತಳಿಕೆಯಲ್ಲಿ ಇಲ್ಲ.
ಆದರೆ 'ನಹಾ' ಎಂಬ ಪದಕ್ಕೆ ಹರಾಂ ಎಂದು ಅರ್ಥ ಇದ್ದರೂ, ಕರಾಹತ್ ಗೂ 'ನಹಾ' ಎಂಬ ಪದ ಯೂಝ್ ಮಾಡಲಾಗುತ್ತೆ.
ಇದರ ಕುರಿತು ಇಮಾಮ್ ಶಾಫಿ (ರ) ಬರೆಯುತ್ತಾರೆ ✒
🔘قال الشافعي والاصحاب
ಶಾಫಿ (ರ)ಮತ್ತು ಸಂಗಡಿಗರು ಹೇಳುತ್ತಾರೆ.
🔘يجصص القبور
ಗೋರಿಗೆ ಸುಣ್ಣ ಬಳಿಯುವುದು.
🔘وان يكتب عليه
ಕಬರಿನ ಮೇಲೆ ಹೆಸರು ಬರೆಯುವುದು.
🔘 او غير ذلك
ಮುಂತಾದ ಕಾರ್ಯಗಳು,
🔘 وان يبني عليه
ಕಬರಿನ ಮೇಲೆ ಎತ್ತರಿಸಿ ಕಟ್ಟಡ ಕಟ್ಟುವುದು,
 يكره
ಅದು ಕರಾಹತ್ ಮಾತ್ರ. ಹರಾಂ ಅಲ್ಲವೇ ಅಲ್ಲ.
ಅದೇ ಹದೀಸ್ ನಲ್ಲಿ ಗೋರಿಗೆ ಸುಣ್ಣ ಬಳಿಯುವುದನ್ನು ವಿರೋಧಿಸಿ ಬಂದ' ನಹಾ'
ಎಂಬುವುದಕ್ಕೆ ಇಮಾಮ ಶಾಫ (ರ) ಕೊಟ್ಟ ಅರ್ಥ
'ಕರಾಹತ್' ಎಂದಾಗಿದೆ.
🌑ನಂತರ ಇಮಾಮ ಶಾಫಿ (ರ) ಅಭಿಪ್ರಾಯ ಹೀಗಿದೆ..
'ಮುಸಬ್ಬಲತ್'
(ಒಂದು ಊರಿನ ಸಾರ್ವಜನಿಕ ಕಬರ್ ಸ್ಥಾನ) ಅಥವಾ ಅಂತಹ
ಭೂಮಿಯಲ್ಲಾದರೆ ಮೇಲೆ ಹೇಳಿದ ಸುಣ್ಣ ಬಳಿಯುವುದು,ಎತ್ತರಿಸಿ ಕಟ್ಟುವುದು ಮುಂತಾದ ಎಲ್ಲಾ ಕಾರ್ಯವು ಹರಾಂ ಎಂದು ಹೇಳಿದ್ದನ್ನು ಕಾಣಬಹುದು.
ಆದರೆ ಈ ಹರಾಂ /ಕರಾಹತ್ ನ ನಿಯಮ,
ಸಾಮಾನ್ಯ ಜನರ ಕಬರಿ ನ ಕುರಿತಾಗಿದೆ.
ಎಂಬುವುದನ್ನು ಮಾನ್ಯ ವಾಚಕರು ಪ್ರತ್ಯೇಕ ಗಮನಿಸಬೇಕು.
🔘 ಆದರೆ ಅಂಬಿಯಾ ಅವುಲಿಯಾಗಳ ಕಬರ ನ್ನು ಎತ್ತರಿಸುವುದು ಅದರ ಮೇಲೆ ಖುಬ್ಬ ನಿರ್ಮಿಸುವುದು ಪುಣ್ಯ ಕಾರ್ಯವಾಗಿದೆ.
ಇಮಾಂ ಅಶ್ಶೈಖ್
ಇಸ್ಮಾಈಲುಲ್ ಹಿಖ್ಖಿ (ರ) ಬ್ರಹತ್ತಾದ ಹತ್ತು ಕಾಂಡ ಬರುವ
ತನ್ನ 'ರೂಹುಲ್ ಬಯಾನ್ ' ತಫ್ಸೀರ್ ನ 3/400 ನೇ ಪೇಜ್ ನಲ್ಲಿ ವಿವರಿಸುವುದು ನೋಡಿ...👇👇
🔘👉 فبناء القباب علي قبور العلماء ، والاولياء
👉ಉಲಮಾ,ಅವುಲಿಯಾ ಮುಂತಾದ ಪುಣ್ಯ ಪುರುಷರ ಕಬರಿನ ಮೇಲೆ ನಿರ್ಮಾಣ ಮಾಡುವ ಖುಬ್ಬಾ (ಗುಂಬಝ್)
🔘👉 ووضع الستور
🌱ದರ್ಗಾದ ಮೇಲೆ ಹಾಸುವ ವಸ್ತ್ರ,
👉(ಸುನ್ನಿಗಳ ಭಾಷೆಯಲ್ಲಿ 'ಪಡ ' ಪೊದಪ್ಪಿಕ್ಕಲ್)
👉(ಸಲಪಿಯ ಬಾಷಯಲ್ಲಿ 'ಬಸವ' ನನ್ನು ಅಲಂಕರಿಸುವುದು) ನಹೂಝ್ ಬಿಲ್ಲಾ.
🔘👉 والعمائم
🌱ಮುಂಡಾಸು ತರ ಕಟ್ಟು ಮಾಡಿ ಇಡುವುದು.
🔘👉 امر جائز
🌱ಅದೆಲ್ಲವೂ ಸಮ್ಮತಾರ್ಹ ಕಾರ್ಯವಾಗಿದೆ.
👉ಅಂದರೆ ಅದು ಹರಾಂ ಅಲ್ಲ.
👉ಶಿರ್ಕ್ ಅದರಲಿಲ್ಲ.
👉ಕಡೇ ಪಕ್ಷ ಕರಾಹತ್ ಕೂಡಾ ಅಲ್ಲ
ನಂತರ ಇಮಾಂ ಅವರು ಹೇಳುವುದು ನೋಡಿ.
🌱ದರ್ಗಾ ದ ಸಮೀಪ ಮೇಣದ ಬತ್ತಿ ಹೊತ್ತಿಸುವುದು ಬೆಳಕು ಹೊತ್ತಿಸುವುದು
🔘👈من باب التعظيم والاجلال
🌱ಅದೆಲ್ಲವೂ ಗೌರವ ಸೂಚಕವಾಗಿಯಾಗಿದ್ದರೆ ,
🔘👈 مقصدن حسن
تفسير روح البيان.3/400
🌱ಎಲ್ಲವೂ ಸದುದ್ದೇಶಕರವಾಗಿದೆ.
🌿👉ತಫ್ಸೀರ್ ರೂಹುಲ್ ಬಯಾನ್
3/400
ಮಝ್ಹಬ್ ನ ವಿದ್ವಾಂಸರಾದ ಇಮಾಮ್ ಮಾಲಿಕ್ ರವರ ಉಲ್ಲೇಖ ಈ ರೀತಿ ಇದೆ.
👇👇👇
🔘👈 كره مالك كشف السقف قبر رسول الله صلي الله عليه وسلم
🌱👉ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಬರ್ ಶರೀಫ್ ನ ಮೇಲೆ ಯಾವುದೇ ವಸ್ತ್ರ ಹಾಸದೆ ತೆರೆದಿಡುವುದನ್ನು ಇಮಾಮ್ ಮಾಲಿಕ್ (ರ) ವಿರೋಧಿಸುತ್ತಿದ್ದರು.
ಪವಿತ್ರ ಕಾಬಾ ಶರೀಫನ್ನು ಕಿಸ್ವ ಹೊದಿಸಿ ಗೌರವಿಸಲ್ಪಡುವ ಹಾಗೆ
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಖಬರಿ ನ ಮೇಲೆ ಕಿಸ್ ವ ಹೊದಿಸಿ ಗೌರವಿಸಲ್ಪಡಬೇಕು.
ಕಾರಣ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ಮು ಗೌರವಿಸಲು ನಮಗೆ ಆಜ್ಞಾಪಿಸಲಾಗಿದೆ.
🔘👈 تعظيم قبره من تعظيمه صلي الله عليه وسلم
🌿👉ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಬರನ್ನು ಗೌರವಿಸುವುದು ನೆಬಿಯನ್ನು ಗೌರವಿಸುವುದಕ್ಕೆ ಸಮ.
ಇದು ಇಮಾಂ ಮಾಲಿಕ್ (ರ) ರವರ ಈ ಸ್ಪಷ್ಟ ಹೇಳಿಕೆ ಇದನ್ನು
ಇಮಾಂ ಸೆಯ್ಯದ್ ಶ್ಸುಂಹೂದಿ ತನ್ನ
ವಫಾಹುಲ್ ವಫಾ ಎಂಬ ಗ್ರಂಥದ 2/582 ನೇ ಪುಟದಲ್ಲಿ ವಿವರಿಸಿದ್ದಾರೆ.
ಅಷ್ಟೇ ಯಾಕೆ ಕಳ್ಳರು,ವನ್ಯಮೃಗ ಜೀವಿಗಳು ಕಬರನ್ನು ಕೊರೆದು ತೊಂದರೆ ಕೊಡುವ ಭೀತಿ ಇದ್ದರೆ,ಅಥವಾ ನೆರೆ ಮಯ್ಯಿತ್ತನ್ನು ಕೊಚ್ಚಿಕೊಂಡು ಹೋಗುವ ಭಯ ಇದ್ದಲ್ಲಿ ಸಾಮನ್ಯ ವ್ಯಕ್ತಿಯ ಖಬರನ್ನು ಕೂಡಾ ಕೆಳಮಟ್ಟದಿಂದಲೇ ಎತ್ತರಿಸಿ ಕಟ್ಟುವುದು ಕಡ್ಡಾಯವಾಗಿರುತ್ತದೆ ಎಂದಾಗಿದೆ.
ಶಾಫಿ ಮಝ್ಹಬ್ ನ ಫೈನಲ್ ಡಿಶಿಸನ್ ಕಿತಾಬ್ ತುಹ್ಪ ರಲ್ಲಿರುವ ಅಭಿಪ್ರಾಯ.
👉3/196
🌿👉ಆದ್ದರಿಂದ ಸಾಮಾನ್ಯ ಜನರು ಸಲಪಿ ಗಳ ಹದೀಸ್ ದುರ್ವ್ಯಖ್ಯಾನದಲ್ಲಿ ಸಿಲುಕಿ ಬೇಡಿ.
ಎತ್ತರಿಸಲ್ಪಟ್ಟ ಗೋರಿಗಳನ್ನು ಹೊಡೆದುರಿಳಿಸಲು, ಹಾಗೆ ಎತ್ತರಿಸಲ್ಪಟ್ಟು ಕಟ್ಟುವುದನ್ನು ವಿರೋದಿಸಿ ಬಂದ ಹದೀಸ್ ಮತ್ತು ಇಮಾಮರುಗಳ ಪ್ರಸ್ತಾಪ ಎಲ್ಲವೂ
ಸಾರ್ವಜನಿಕ ದಫನ ಭೂಮಿಯಲ್ಲಿ
ದಫನ್ ಮಾಡುವ ಸಾಮಾನ್ಯ ಜನರ ಕುರಿತಾಗಿದ್ದು.
ಆ ನಿಯಮ ಆಲಿಂ,ಅವುಲಿಯಾ ಸಜ್ಜನರ ಕಬರಿನ ಕುರಿತಲ್ಲ. ಎಂಬ ಪ್ಲಸ್ ಪೋಯಿಂಟ್ ಎಲ್ಲರೂ ಗಮನದಲ್ಲಿಟ್ಟರೆ ಸಲಪಿಗಳ ಯಾವುದೇ ಕುತಂತ್ರ ಯಾರಲ್ಲಿಯೂ ನಡೆಯದು.
👉ಹೀಗೆ ಪುಣ್ಯ ಪುರುಷರ ಖಬರನ್ನು ಎತ್ತರಿಸಿ ಕಟ್ಟಲು ಕಾರಣವೇನೆಂದು ಇಮಾಮ್ ಗಳು ವಿವರಣೆ ನೀಡುತ್ತಾರೆ
👇👇👇
🔘👈 احياء الزيارة والتبرك
اقناء
👉"ಸಜ್ಜನರ ಕಬರನ್ನು ಎತ್ತರಿಸಿ ಕಟ್ಟಲು ಧರ್ಮಸಮ್ಮತವಾಗಲು ಕಾರಣ ವೇನಂದರೆ
ಅವರ ಕಬರ್ ಝಿಯಾರತನ್ನು ಸದಾ ಜೀವಂತವಾಗಿರಿಸಿ ಅದರಿಂದ ಬರಕತ್ ಪಡೆಯಲಿಕ್ಕಾಗಿದೆ"
👉ಇಖ್ನಾಅ್.
ಆದ್ದರಿಂದ ಗೊತ್ತುಗುರಿಯಿಲ್ಲದೆ ಅಲೆದಾಡುತ್ತಿರುವ ಈ ಅಲೆಮಾರಿ ಸಲಪಿ ಗಳಿಗೆ ಈಗ ಕೆಲಸವೇನು ಇಲ್ಲ.
ಎಲ್ಲಿಂದಾದರೂ ಕೆಲವು ಹದೀಸ್ ಗಳನ್ನು ಹೆಕ್ಕಿ ತಂದು ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟು ವಸ್ ವಾಸ್ ಮಾಡುತ್ತಾ ಇರುತ್ತಾರೆ.
ಆದ್ದರಿಂದಲೇ ಕುರಾನ್ ಸೂರತ್ ಅನ್ನಾಸ್ ನಲ್ಲಿ ಹೇಳಿದ್ದು
"ಹ್ರದಯಗಳಲ್ಲಿ ವಸ್ ವಾಸ್ ಉಂಟು ಮಾಡುವ
ಮನುಷ್ಯ ಮತ್ತು ಜಿನ್ನ್ ಗಳಿಂದ ರಕ್ಷೆ ಬೇಡಿ" ಎಂದು.
ಅಲ್ಲಾಹು ಈ ವಸ್ವಾಸ್ ಮಾಡುವ ಮನುಷ್ಯ ಶೈತಾನ್ ಗಳಿಂದ ನಮ್ಮನ್ನು ಕಾಪಾಡಲಿ
ಆಮೀನ್.
ಇದೇ ವಿಷಯದಲ್ಲಿ ಇನ್ನೂ ವಿಸ್ತಾರವಾದ ವಿವರಣೆ ಮುಂದಿನ ಬರಹ ಗಳಲ್ಲಿ ಬರಲಿದೆ ಇನ್ಶಾಅಲ್ಲಾ.