ನಾನು ನಿಮ್ಮಲ್ಲಿ ಸಣ್ಣ ಪ್ರಶ್ನೆ ಕೇಳುತ್ತೇನೆ,
ಕರ್ನಾಟಕವನ್ನು ಅದೆಷ್ಟೋ ಪಕ್ಷಗಳು ಆಳಿದವು. ಆವಾಗಲೆಲ್ಲಾ ನಮಗೊಂದು ವಕ್ಫ್ ಬೋರ್ಡ್ ಇದೆ, ಅದರಿಂದ ಹಲವಾರು ಅನುದಾನಗಳು ನಮ್ಮ ಮಸೀದಿಗಳಿಗೆ ಧಾರ್ಮಿಕ ರಂಗಕ್ಕೆ ಸಿಗುತ್ತವೆ ಎಂಬ ನೋಲಜ್ ಯಾರ ಬಳಿಯಾದರೂ ಇತ್ತಾ? ಯಾವಾಗ ಶಾಫಿ ಸಅದಿ ಎಂಬ ಒಬ್ಬ ಉಲಮಾ ನಾಯಕ ವಕ್ಫ್ ಬೋರ್ಡ್ ಸದಸ್ಯರಾಗಿ, ಡೈರಕ್ಟರಾಗಿ ಆಯ್ಕೆಯಾದರೋ ಅಂದಿನಿಂದ ನಮ್ಮ ಕರಾವಳಿಯ ಸಾಮಾನ್ಯ ಜನರಿಗೂ ವಕ್ಫ್ ಬೋರ್ಡ್ ನ ಬಗ್ಗೆ ತಿಳುವಳಿಕೆ ಬಂತು. ಅಷ್ಟರ ಮಟ್ಟಿಗೆ ಆ ಬೋರ್ಡನ್ನು ಶಾಫಿ ಸಅದಿ ಉಸ್ತಾದರು ಎಲ್ಲರಿಗೂ ಪರಿಚಯ ಪಡಿಸಿದರು.
ಅದಕ್ಕಿಂತ ಮುಂಚೆ ಯಾರಿಗು ಕೂಡಾ ವಕ್ಫ್ ಬೋರ್ಡ್ ಬೇಡವಾಗಿತ್ತು.
ಶಾಫಿ ಸಅದಿ ವಕ್ಫ್ ಬೋರ್ಡ್ ಗೆ ಎಂಟ್ರಿ ಕೊಡುವುದಕ್ಕಿಂತ ಮುಂಚೆ ಅದು ತಬ್ಲೀಗ್, ಶಿಯಾ, ಅಹ್ಮದಿಗಳ ಕೈಯಲ್ಲಿ ಭಧ್ರವಾಗಿತ್ತು. ಬಹು ಸಂಖ್ಯಾತ ಸುನ್ನಿಗಳನ್ನು ಕಡೆಗಣಿಸಲಾಗಿತ್ತು. ಚಿಕ್ಕಾಸು ಅನುದಾನಗಳು ಸುನ್ನೀ ಮಸೀದಿಗಳಿಗೆ ಬಿಡುಗಡೆಯಾಗುತ್ತಿರಲಿಲ್ಲ.ಎಲ್ಲಾ ಬಿಟ್ಟು ಮಸೀದಿಯನ್ನು ವಕಫ್ ಬೋರ್ಡಲ್ಲಿ ನೋಂದಣಿ ಮಾಡುವ ವಿಚಾರವೂ ತಿಳಿದಿರಲಿಲ್ಲ. ಶಾಫಿ ಸಅದಿ ಎಂಟ್ರಿಯಾದ ಕೂಡಲೇ ವಕ್ಫ್ ಬೋರ್ಡ್ ಪ್ರಚಾರಕ್ಕೆ ಬಂತು, ಅದರಲ್ಲಿ ನಿಯ್ಯತ್ತಿನಿಂದ ಪಕ್ಷ, ಪಂಗಡ, ಗ್ರೂಪಿಸಂಗೆ ಅತೀತವಾಗಿ ಶಾಫಿ ಸಅದಿ ಉಸ್ತಾದ್ ರ ಸೇವೆ ಆರಂಭಿಸಿದರು. ಇದೀಗ ಪುನಃ ಸಅದಿ ಉಸ್ತಾದರನ್ನು ವಕ್ಫ್ ಬೋರ್ಡ್ ಕರೆಸಿಕೊಂಡಿದೆ.
ಅವರ ಪರೋಪಕಾರ ಮತ್ತು ಸಮರ್ಪಣಾ ಕರ್ಮದ ಫಲವೇ ಅದಕ್ಕೆ ಕಾರಣ.
ಅರ್ಹವಾದ ಇಲಾಖೆಗೆ ಅರ್ಹವಾದ ಆಲಿಂ ಒಬ್ಬರು ಪುನಃ ಆಯ್ಕೆಯಾಗಿದ್ದಾರೆ. ಅವರೊಂದು ಸಂಘಟನೆಯ ನಾಯಕರಾಗಿರಬಹುದು, ಆದರೆ ಅವರ ಸೇವೆ ಸಂಘಟನಾತೀತ, ನ್ಯಾಯಪರ, ಕ್ರಮಬದ್ಧವೆಂದು ಅವರನ್ನು ಹತ್ತಿರದಿಂದ ಬಲ್ಲವರ ಅನುಭವ. ಶಾಂತಚಿತ್ತತೆಯ ನಗುಮುಖದ ಒಡನಾಟ, ಪಕ್ವತೆಯ ಪ್ರಭುಧ್ಧ ನಡೆ ಎಲ್ಲರಿಗೂ ಪ್ರಿಯ.
ಎಲ್ಲರಿಗೂ ಇರುವಂತೆ ವಿರೋದಿಗಳು ಅವರಿಗೂ ಇದೆ. ಅದನ್ನೆಲ್ಲಾ ಗಣನೆಗೆ ತೆಗೆಯುವ ಜಾಯಮಾನವೇ ಅವರಿಗಿಲ್ಲ. ವಿರೋಧ ಟೀಕೆ, ವಿಮರ್ಶೆಗಳನ್ನೆಲ್ಲಾ ಪಕ್ವತೆಯಿಂದ ಮೆಟ್ಟಿ ನಿಂತು ತನ್ನ ನ್ಯಾಯಯುತವಾದ ಗುರಿ ಸಾಧಿಸುವ ಅವರ ಅಚಲವಾದ ನಿರ್ಧಾರಗಳು ಬಂಡೆಗಲ್ಲಿನಂತೆ ಗಟ್ಟಿಯೇ ಸರಿ.
ಇಂಡಿಯನ್ ಗ್ರಾಂಡ್ ಮುಫ್ತಿ ಶೈಖುನಾ ಎ.ಪಿ. ಉಸ್ತಾದ್ ಹೇಳಿದಂತೆ NRC ವಿರುದ್ಧ ಹೋರಾಟ ಅತಿ ಶಕ್ತಿಯುತವಾಗಿ ಮುನ್ನೇರಿಸುತ್ತಾ, ಜೊತೆಗೆ ಸುನ್ನತ್ ಜಮಾಅತ್ ಗಳ ಇಝ್ಝತ್ ಗಾಗಿ ಕಾರ್ಯಚರಿಸಬೇಕು. ಅದಕ್ಕೆ ಮಂದಗತಿ ಬರಬಾರದು. ಶಾಫಿ ಸಅದಿ ತನಗೆ ಸಿಕ್ಕಿದ ಅವಕಾಶವನ್ನು ಚೆಲ್ಲಿದ್ದರೆ ಅದು ಇನ್ನಿತರ ಅನರ್ಹರ ಪಾಲಿಗೆ ಹೋಗುತ್ತಿತ್ತು. ಅದು ಅಪಾಯವೇ ಸರಿ.
ನಮ್ಮ ಉಲಮಾಗಳು ನಮ್ಮ ನಾಯಕತ್ವ.
ಯಾವಾಗ ಯಾವ ರೀತಿ ನಡೆದುಕೊಳ್ಳಬೇಕೆಂಬ ಪರಿಪೂರ್ಣ ಜ್ಞಾನ ಅವರಿಗಿದೆ.
ನೇತೃತ್ವದ ಹಿಂದೆ ಗಟ್ಟಿಯಾಗಿ ನೆಲೆಯೂರುವ.
ಅಬೂಶಝ
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Saturday, January 4, 2020
Thursday, January 2, 2020
ಝೈನುಲ್ ಉಲಮಾ ಮಾಣಿ ಉಸ್ತಾದ್
*ಧಾರ್ಮಿಕ ಶೈಕ್ಷಣಿಕ ಕ್ಷೇತ್ರದ ಹರಿಕಾರ ಶೈಖುನಾ ಮಾಣಿ ಉಸ್ತಾದ್*
🍂🍂🍂🍂🍂🍂🍂
✍ ಗಫೂರ್ ಬಾಯಾರ್
*********************
ಧಾರ್ಮಿಕ ಹಾಗೂ ಲೌಕಿಕವಾದ ಶಿಕ್ಷಣದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡುತ್ತಾ ದಕ್ಷಿಣ ಕರ್ನಾಟಕದ ಶೈಕ್ಷಣಿಕ ರಂಗಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿದೆ ದಾರುಲ್ ಇರ್ಶಾದ್ ಎಜುಕೇಷನ್ ಕಾಂಪ್ಲೆಕ್ಸ್.
ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಈ ಶಿಕ್ಷಣ ಸಂಸ್ಥೆಯು ಸಮನ್ವಯ ವಿದ್ಯಾಭ್ಯಾಸ ರಂಗದಲ್ಲಿ ದಕ್ಷಿಣ ಕರ್ನಾಟಕದಲ್ಲೇ ಪ್ರಥಮ ಶೈಕ್ಷಣಿಕ ಸಂಸ್ಥೆಯಾಗಿದೆ.
*ಪರಿಚಯ*
ಝೈನುಲ್ ಉಲಮಾ, ಮಾಣಿ ಉಸ್ತಾದ್, ಮಚ್ಚಂಪಾಡಿ ಉಸ್ತಾದ್ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಉಸ್ತಾದರ ನಿಜವಾದ ಹೆಸರು ಶೈಖುನಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಎಂದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಬುಡೋಳಿ ಗ್ರಾಮದಲ್ಲಿ ಪರ್ತಿಪಾಡಿಯ ಅಬ್ದುಲ್ಲಾಹಿ ಮತ್ತು ಪೆರುವಾಯಿ ಮೊಹಿಯುದ್ದೀನ್‌ರವರ ಮಗಳಾದ ಆಸಿಯಮ್ಮ ದಂಪತಿಗಳ ನಾಲ್ಕನೇ ಮಗನಾಗಿ ಮಾಣಿ ಉಸ್ತಾದರು ಜನಿಸಿದರು.
ಮಿತ್ತೂರು ನೂರುಲ್ ಇಸ್ಲಾಂ ಮದರಸದಲ್ಲಿ ಅಬ್ದು ಮುಕ್ರಿಕ ಎಂಬ ಕೋಯಮ್ಮ ಹಾಜಿಯವರಿಂದ ಪ್ರಾಥಮಿಕ ಶಿಕ್ಷಣ ಪಡೆದವರು ನಂತರ ಸಿ.ಪಿ ಮುಹಮ್ಮದ್ ಮುಸ್ಲಿಯಾರ್ (ನ:ಮ), ಮಂಜನಾಡಿ ಅಬ್ದುಲ್ಲಾ ಮುಸ್ಲಿಯಾರ್ (ನ:ಮ), ಸಜಿಪ ಕೋಟ ಅಬ್ದುಲ್ ಖಾದರ್ ಮುಸ್ಲಿಯಾರ್ (ನ:ಮ) ಮತ್ತು ತಾಜುಲ್ ಉಲಮಾ ಉಳ್ಳಾಲ ತಂಙಳ್(ಖ.ಸಿ) ರಂತಹ ಮಹಾನರಿಂದ ಜ್ಞಾನಾರ್ಜನೆ ಮಾಡಿದ ನಂತರ ಉತ್ತರ ಪ್ರದೇಶದ ದಯೂಬಂದ್ ದಾರುಲ್-ಉಲೂಮ್‌ನಿಂದ ಪದವಿ ಪಡೆದರು.
ಉಳ್ಳಾಲದ ಮುದರ್ರಿಸ್ ಆಗಿದ್ದ ಚೆರುಕುಂಞಿ ಕೋಯ ತಂಙಳ್, ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಂಪ್ಲೆಕ್ಸ್‌ನ ಸಂಸ್ಥಾಪಕರಾದ ಮರ್ಹೂಂ ಅಬ್ಬಾಸ್ ಉಸ್ತಾದ್ (ನ.ಮ) ಮೊದಲಾದವರ ಸಹಪಾಠಿಯಾಗಿದ್ದರು.
1971 ರಿಂದಲೇ ದರ್ಸ್ ನಡೆಸಲಾರಂಭಿಸಿದ ಉಸ್ತಾದರು ಸೂರಿಂಜೆ, ಪಾಣೆಮಂಗಳೂರು ಮತ್ತು ಕರ್ನಾಟಕ ಕೇರಳದ ಗಡಿ ಪ್ರದೇಶವಾದ ಮಚ್ಚಂಪಾಡಿ ಮುಂತಾದೆಡೆ ದರ್ಸ್ ನಡೆಸಿದ ನಂತರ 1991ರಲ್ಲಿ ದಾರುಲ್ ಇರ್ಶಾದ್ ಎಜುಕೇಷನ್ ಕಾಂಪ್ಲೆಕ್ಸ್ ಅನ್ನು ಸ್ಥಾಪಿಸಿದರು.
ಧಾರ್ಮಿಕ ಶಿಕ್ಷಣಕ್ಕೆ ಕೇರಳದಂತೆ ಹೆಚ್ಚಿನ ಸೌಕರ್ಯವಿಲ್ಲದಿರುವುದನ್ನು ಮನಗಂಡ ಉಸ್ತಾದರು ಮೊದಲಿಗೆ ಉಸ್ತಾದರ ಮನೆಯ ಸಮೀಪದ ಮಸೀದಿಯಲ್ಲಿ ಜ್ಞಾನದಾಹಿಗಳಿಗೆ ಗುಣಾತ್ಮಕವಾದ ಹೆಚ್ಚುವರಿ ದೀನೀ ಶಿಕ್ಷಣವನ್ನು ಪಡೆಯಬಲ್ಲಂತಹ ಗ್ರಂಥಾಲಯವನ್ನು ಆರಂಭಿಸಿದರು.
ಅನಂತರ ಅದು ದಾರುಲ್ ಇರ್ಶಾದ್ ಕ್ಯಾಂಪಸ್ ಆಗಿ ಬದಲಾಯಿತು. ಆ ಸಮಯದಲ್ಲಿ ಮಾಣಿಯಿಂದ ನಾಲ್ಕಾರು ಕಿಲೋಮೀಟರ್ ದೂರದ ಮಿತ್ತೂರಿನಲ್ಲಿ ದಾರುಲ್ ಇರ್ಶಾದ್ ಎಂಬ ಕಾಲೇಜ್ ಸ್ಥಾಪಿಸಿ ಅಜ್ಮೀರ್ ಖ್ವಾಜಾ ಮುಯಿನುದ್ದೀನ್ ಚಿಸ್ತಿ(ರ) ರವರ ಹೆಸರಿನಲ್ಲಿ ಅಲ್ ಮುಈನಿ ಎಂಬ ಪದವಿಯನ್ನು ಪ್ರಧಾನಿಸುವ ದಅ್‌ವ ಕಾಲೇಜ್ ಅನ್ನು ಸ್ಥಾಪಿಸಿದರು.
ಲಕ್ಷಾಂತರ ರೂಪಾಯಿ ಮೌಲ್ಯದ ಗ್ರಂಥಗಳನ್ನೊಳಗೊಂಡ ಅಲ್ ಮಕ್ತಬತುಲ್ ಗಝಾಲಿಯ್ಯ ಎಂಬ ಗ್ರಂಥಾಲಯದ ಜೊತೆಗೆ ಇರ್ಷಾದಿಯ್ಯ ಹಿಫ್ಲುಲ್ ಕುರ್ಆನ್ ಕಾಲೇಜು ಮತ್ತು ಪದವಿಪೂರ್ವ ಕಾಲೇಜುಗಳು ಈ ಕ್ಯಾಂಪಸ್ಸಿನಲ್ಲಿ ಕಾರ್ಯಾಚರಿಸುತ್ತಿವೆ.
ಉತ್ತರ ಕರ್ನಾಟಕದ ಹಲವೆಡೆ ದೀನಿ ದಅ್‌ವಾ ನಡೆಸುತ್ತಿರುವ ಅನೇಕ ವಿದ್ವಾಂಸರುಗಳ ಉಸ್ತಾದರಾಗಿರುವ ಮಹಾನರು ಕರ್ನಾಟಕ ಜಮ್ ಇಯತ್ತುಲ್ ಉಲಮಾದ ಕಾರ್ಯದರ್ಶಿಗಳೂ ಆಗಿದ್ದಾರೆ.
ಶೈಖುನಾ ಎಪಿ ಉಸ್ತಾದ್, ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್, ಶೈಖುನಾ ಪೊನ್ಮಳ ಉಸ್ತಾದ್, ಮತ್ತು ಪೇರೋಡ್ ಉಸ್ತಾಡ್ ಮುಂತಾದ ವಿದ್ವಾಂಸರೊಂದಿಗೆ ನಿಕಟ ಸ್ನೇಹ ಬಾಂಧವ್ಯ ಹೊಂದಿರುವ ಮಾಣಿ ಉಸ್ತಾದರು ವಿನಯಾನ್ವಿತ ಸ್ವಭಾವ ಮೈಗೂಡಿಸಿಕೊಂಡವರು.
ಅಜ್ಮೀರಿನ ಖ್ವಾಜಾ ಮೊಯಿನುದ್ದೀನ್ ಚಿಸ್ತಿ (ರ) ರವರೊಂದಿಗೆ ಆಧ್ಯಾತ್ಮಿಕವಾಗಿ ನಿಕಟ ಸಂಪರ್ಕ ಹೊಂದಿರುವ ಶೈಖುನಾ ಮಾಣಿ ಉಸ್ತಾದರು ಅಜ್ಮೀರಿಗೆ ನಿರಂತರವಾಗಿ ಭೇಟಿ ನೀಡುತ್ತಿರುತ್ತಾರಲ್ಲದೆ ಉಸ್ತಾದರ ಎಲ್ಲಾ ಕೆಲಸಕಾರ್ಯಗಳಲ್ಲೂ ಅಜ್ಮೀರ್‌ನೊಂದಿಗಿನ ಆ ಬಾಂಧವ್ಯದ ಬೆಸುಗೆ ಇರುತ್ತದೆ.
ಔಲಿಯಾಗಳನ್ನು ಅಪಾರವಾಗಿ ಪ್ರೀತಿಸುವ ಮಾಣಿ ಉಸ್ತಾದರು, ಕೈಗೊಳ್ಳುವ ತೀರ್ಮಾನಗಳು ವಿಸ್ಮಯಕರವಾದುದು ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರ ಅಭಿಪ್ರಾಯ.
ದರ್ಸ್ ರಂಗದಲ್ಲಿ 50 ವರ್ಷಗಳನ್ನು ಪೂರೈಸಿದ ಶೈಖುನಾ ಮಾಣಿ ಉಸ್ತಾದರ ಸೇವೆಯನ್ನು ಪರಿಗಣಿಸಿ ಸುನ್ನಿ ಸಂಘಟನೆಗಳು ಪೌರ ಸನ್ಮಾನ ಹಮ್ಮಿಕೊಂಡಿದೆ.
ಜನವರಿ 2 ರಂದು ಕಬಕದಲ್ಲಿ ನಡೆಯಲಿರುವ ಸುನ್ನಿ ಮಹಾ ಸಮ್ಮೇಳನದಲ್ಲಿ ಮಾಣಿ ಉಸ್ತಾದರನ್ನು ಇಂಡಿಯನ್ ಗ್ರಾಂಡ್ ಮುಫ್ತಿ ಶೈಖುನಾ ಎ. ಪಿ ಉಸ್ತಾದರು ಸನ್ಮಾನಿಸಲಿದ್ದು ಹಲವಾರು ಉಲಮಾಗಳು ಮತ್ತು ಸಾದಾತುಗಳು ಈ ಪೌರಸಮ್ಮಾನ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಇಲಾಹಿ ಸ್ಮರಣೆಯನ್ನು ಮೈಗೂಡಿಸಿಕೊಂಡಿರುವ ಉಸ್ತಾದರು ಎಂದೂ ಆಧುನಿಕ ಜೀವನ ಶೈಲಿಗೆ ಮಾರು ಹೋದವರಲ್ಲ. ಬದಲಾಗಿ ಹಳೆಯ ಮನೆಯಲ್ಲಿ ಸಾಮಾನ್ಯರಂತೆ ಜೀವನ ಸಾಗಿಸುತ್ತಾ ದೀನೀ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿರುವ ಉಸ್ತಾದರಿಗೆ ಸರ್ವಶಕ್ತನಾದ ಅಲ್ಲಾಹನು ಆಫಿಯತ್‌ನಿಂದ ಕೂಡಿದ ದೀರ್ಘಾಯಸ್ಸನ್ನು ಕರುಣಿಸಿ ಅನುಗ್ರಹಿಸುವುದರ ಜೊತೆಗೆ ನೂರ್ಕಾಲ ಸಮುದಾಯಕ್ಕೆ ನೇತೃತ್ವ ನೀಡುವ ಸೌಭಾಗ್ಯವನ್ನು ಕರುಣಿಸಿ ಅನುಗ್ರಹಿಸಲಿ ಆಮೀನ್.
*ಪೌರ ಸನ್ಮಾನ ಮತ್ತು ಬೃಹತ್ ಸುನ್ನಿ ಸಮಾವೇಶ*
02:01:2020
@ ಕಬಕ

ಮರ್ಕಝ್ ಸಮ್ಮೇಳನ 2020
*_ಮರ್ಕಝ್ ನಲವತ್ತ ಮೂರನೇ ವಾರ್ಷಿಕ ಸಮಾವೇಶದ ಪೂರ್ವಭಾವಿ ಸಭೆ_*
🔹🔹🔹🔹🔹🔹🔹
✍ ಗಫೂರ್ ಬಾಯಾರ್
〰〰〰〰〰〰〰
*"#ಸುಸ್ಥಿರ_ಸಮಾಜ, #ಸುಭದ್ರ_ರಾಷ್ಟ್ರ"*
_'സുസ്ഥിര സമൂഹം സുഭദ്ര രാഷ്ട്രം'_
' ~Sustainable Society, Strong Nation'~
*ಮರ್ಕಝ್ 43ನೇ ವಾರ್ಷಿಕ ಸಮ್ಮೇಳನ ಎಪ್ರಿಲ್ 09, 10, 11, 12*
🍂🍂🍂🍂🍂🍂🍂
_ಮರ್ಕಝ್ ನಲ್ವತ್ತಮೂರನೆಯ ವಾರ್ಷಿಕ ಸಮ್ಮೇಳನವು 2020ರ ಏಪ್ರಿಲ್ 09ರಿಂದ 12ರ ವರೆಗೆ ನಡೆಯಲಿದ್ದು ಇದರ ಪೂರ್ವಭಾವೀ ಸಭೆಯು ಇತ್ತೀಚೆಗೆ ಕೇರಳದಲ್ಲಿ ನಡೆಯಿತು._
_ಸಭೆಯನ್ನುದ್ದೇಶಿಸಿ ಮಾತನಾಡಿದ ಮರ್ಕಝ್ ನ ಕುಲಪತಿಯಾದ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಉಸ್ತಾದರು, ಈ ಸಮ್ಮೇಳನದಲ್ಲಿ ವಾರ್ಷಿಕ ಸನದುದಾನ ನಡೆಯಲಿದ್ದು ಈ ಬಾರಿಯ ಸನದುದಾನವು ಅಂತಾರಾಷ್ಟ್ರೀಯ ಇಸ್ಲಾಮಿಕ್ ವಿದ್ವಾಂಸರುಗಳ ಸಮ್ಮುಖದಲ್ಲಿ ನಡೆಯಲಿದೆ ಎಂದರು._
_ಮುಂದುವರೆದು ಮಾತನಾಡಿದ ಅವರು, ಮುಸ್ಲಿಂ ಜಗತ್ತು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳವ ಬಗೆಗಿನ ಚರ್ಚೆಗಳು ಸಮ್ಮೇಳನದಲ್ಲಿ ನಡೆಯಲಿದೆ ಎಂದು ಹೇಳಿದರು._
_ಈ ಸಮ್ಮೇಳನದಲ್ಲಿ 60ಕ್ಕಿಂತ ಹೆಚ್ಚು ದೇಶಗಳ ಪ್ರಮುಖ ವಿದ್ವಾಂಸರು, ಬುದ್ಧಿಜೀವಿಗಳು, ರಾಜಕೀಯ ಮುಖಂಡರು ರಾಜತಾಂತ್ರಿಕರು ಮತ್ತು ಸಮಾಜ ಸೇವಕರು ಭಾಗವಹಿಸಲಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು._
_ಸಮ್ಮೇಳನದ ಅಂಗವಾಗಿ ಭಾರತದ ಪ್ರಮುಖ ಮಹಾನಗರಗಳಲ್ಲಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಮ್ಮೇಳನಗಳನ್ನು ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು._
_ಮುಂದಿನ ಆರು ತಿಂಗಳಲ್ಲಿ ನಡೆಯಲಿರುವ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ ಹಾಗು ಸಾರ್ವಜನಿಕ ಸೇವೆಗಳ ಕುರಿತು ರೂಪರೇಖೆಗಳನ್ನು ಸಿದ್ಧಪಡಿಸುವ ಬಗ್ಗೆಯೂ ಚರ್ಚಿಸಲಾಯಿತು._
_ಈ ಪೂರ್ವಭಾವೀ ಸಭೆಯ ಅಧ್ಯಕ್ಷತೆಯನ್ನು ಮರ್ಕಝ್ ನಲವತ್ತಮೂರನೇ ವಾರ್ಷಿಕ ಸಮಾವೇಶದ ಸ್ವಾಗತಾ ಸಮಿತಿಯ ಅಧ್ಯಕ್ಷರೂ ಆದ ಸಯ್ಯಿದ್ ಪಿ. ಕೆ. ಎಸ್ ತಂಙಳ್ ತಲಪ್ಪಾರ ವಹಿಸಿದ್ದರು._
_ಸಭೆಯಲ್ಲಿ ಸಿ. ಫೈಝಿ ಉಸ್ತಾದ್ ಸೇರಿದಂತೆ ಹಲವಾರು ಸಯ್ಯಿದರುಗಳು, ಉಸ್ತಾದರುಗಳು, ಉಮರಾಗಳು ಮತ್ತಿತರರು ಭಾಗವಹಿಸಿದ್ದರು._
🍁🍁🍁🍁🍁🍁🍁
*"ಸುಸ್ಥಿರ ಸಮಾಜ, ಸುಭದ್ರ ರಾಷ್ಟ್ರ"*
*ಮರ್ಕಝ್ 43ನೇ ವಾರ್ಷಿಕ ಸಮ್ಮೇಳನ ಎಪ್ರಿಲ್ 09, 10, 11 , 12*
💧💧💧💧💧💧

Subscribe to:
Comments (Atom)