Saturday, October 7, 2017

🕌ಝಿಯಾರತ್ತ್ ಕೇಂದ್ರ🕌
        🌹0⃣2⃣🌹
➖➖➖➖➖➖➖➖
   👉🏿ಭಾಗ 0⃣2⃣👈
☪ *ಅಜ್ಮೀರ್  ದರ್ಗಾ ಶರೀಫ್*☪

    ✍ಗಫೂರ್ ಬಾಯಾರ್.
➖➖➖➖➖➖➖➖

🕌ಸುಲ್ತಾನ್ ಶಿಹಾಬುದ್ದೀನ್ ಮುಹಮ್ಮದ್ ಘೋರಿಯವರ ಸಂಘದೊಂದಿಗೆಯಾಗಿದೆ ಭಾರತಕ್ಕೆ ತಲುಪಿರುವುದು ಎಂದು ಚರಿತ್ರೆ ಇದೆ.
ಅಜ್ಮೀರಿಗೆ ತಲುಪಿದ ಮಹಾನರು ಅಲ್ಲಿ ಸ್ಥಿರ ವಾಸವಾದರು.  ಬಹು ಬೇಗನೆ ಖ್ವಾಜರವರ (ರ) ಪ್ರಾಶಸ್ತ್ಯ ನಾಡೆಲ್ಲ ಪ್ರಚಾರವಾಯಿತು..

ಬಹುದೈವ ವಿಶ್ವಾಸಿಗಳು ಮಾತ್ರವಿದ್ದ ಉತ್ತರ ಭಾರತದಲ್ಲಿ ಖ್ವಾಜಾರವರ ಆಗಮನದೊಂದಿಗೆ ಇಸ್ಲಾಮಿನ ಮಹತ್ವವಾದ ಸಂದೇಶ ಪ್ರಚಾರಗೊಂಡಿತು...

ಶಿರ್ಕ್ ನ ಅಂಧಕಾರದಿಂದ ದೊಡ್ಡ ಒಂದು ಸಮೂಹ ತೌಹೀದಿನ ಬೆಳಕಿನೆಡೆಗೆ ದಾಟಿ ಬಂದರು.

ಶಿರಿಯಾದ ವಿದ್ವಾಂಸರಾಗಿದ್ದ ಅಬೂ ಇಸ್ಹಾಖ್ ಶಾಮಿ (ರ) ರವರ "ಚಿಸ್ತಿ" ಎಂಬ ಆತ್ಮಿಯ ಸರಣಿ ಭಾರತದಲ್ಲಿ ಪ್ರಚಾರವಾದದ್ದು ಅಜ್ಮೀರ್ ಖ್ವಾಜರವರ (ರ)  ಮುಖಾಂತರವಾಗಿದೆ.
ದೆಹಲಿಯಲ್ಲಿ ಅಂತ್ಯವಿಶ್ರಮ ಹೊಂದುತಿರುವ ಶೈಖ್ ಕುತುಬುದ್ದೀನ್ ಬಖ್ತಿಯರ್ ಕಾಕಿ (ರ) ರವರು ಆಗಿದ್ದಾರೆ ಖ್ವಾಜರವರ (ರ) ಶಿಷ್ಯರು.
ಅವರ ಶಿಷ್ಯರಾಗಿದ್ದಾರೆ ಖಾಜ ಹಝ್ರತ್ತ್  ನಿಝಾಮುದ್ದೀನ್ (ರ)ರವರು.

ಶೈಖುನರು ಅಜ್ಮೀರ್  ತಲುಪಿದಾಗ ಅಂದಿನ ರಾಜರಾದ ಪ್ರಿಥ್ವಿರಾಜ್ ಚೌಹಾನರಿಂದ ಶೈಖುನವರಿಗೂ, ಶಿಷ್ಯಯಂದಿರರಿಗೂ, ಹಲವಾರು ವಿರೋಧಗಳು, ತೊಂದರೆಗಳು  ಎದುರಿಸಬೇಕಾಯಿತು. ಅಂದು ನಡೆದ ಒಂದು ಘಟನೆಯಿಂದ ಶೈಖ್ ನವರ ಮಹತ್ವ ರಾಜರಿಗೆ ಮನವರಿಕೆಯಾಯಿತು.
 ಅಜ್ಮೀರಿನ ಜಲ ಶ್ರೋತೃ ಆಗಿದ್ದ "ಅನಾಸಾಗರ್" ನದಿ ನೀರನ್ನು ಉಪಯೋಗಿಸುದನ್ನು ರಾಜರ ನೌಕರು ಶೈಖರವರನ್ನು ತಡೆದಿದ್ದರು. ಶೈಖವರು ಒಂದು ಪಾತ್ರೆ ನೀರು ಮಾತ್ರ ತಟಾಕದಿಂದ ತೆಗೆಯಲು ಅನುಮತಿ ಕೇಳಿದರು. ಅದರ  ಪ್ರಕಾರ ಪಾತ್ರೆಯಲ್ಲಿ ನೀರು ಶೇಖರಿಸಿದರು. ಏನಧ್ಭುತ!!.. ಆ ಸಮಯದಲ್ಲೇ ಅನಾಸಾಗರ್ ಬತ್ತಿ ಬರಡಾಯಿತು... ಗಾಬರಿಗೊಂಡ ರಾಜರು ಮತ್ತು ಸಂಗವು ಶೈಖರೊಂದಿಗೆ ಕ್ಷಮಾಪಣೆ ಕೇಳಿದ ಮೇಲೆ ಶೈಖರವರು ಪಾತ್ರೆಯ ನೀರು ನದಿಯಲ್ಲಿ ಪುನಃ ಸುರಿದಾಗಲೇ ಅನಾಸಾಗರ್ ಪೂರ್ವ ಸ್ಥಿತಿಗೆ ಬಂದಿರುವುದು.

ಅಜ್ಮೀರಿನಲ್ಲಿ ಝಿಯಾರತ್ತಿಗೆ ಬರುವ ಜನರು ಅಧಿಕವು ಅಜ್ಮೀರಿನ "ತಾರಾಘಾಟ್" ಪರ್ವತ ಸಾಲುಗಳು. ಸಂದರ್ಶಿಸುತ್ತಾರೆ.
ಸಯ್ಯದ್ ಹುಸೈನ್ ಮಶ್ ಹಾದಿ (ರ) ರವರು ಹಾಗೂ ಇಸ್ಲಾಮಿಗೆ ಬೇಕಾಗಿ ಜೀವ ತ್ಯಾಗ ಮಾಡಿದ ಧಾರಾಳ ಶುಹದಾಗಳ ಖಬರುಗಳು ಅಲ್ಲಿದೆ.
ತಾರಾಘಾಟ್ ಗೆ ಹೋಗುವ  ದಾರಿಯಲ್ಲಿರುವ ಪರ್ವತ ಸಾಲುಗಳು ಸಂಚಾರ ಕಾಣಲು ಒಳ್ಳೆಯ ಒಂದು ದೃಶ್ಯ ಯಾತ್ರೆ ಅನುಭವವಾಗಿದೆ.
ಆದರೆ, ತಾರಾಘಾಟ್ ನಲ್ಲಿ "ಶಿಯಾ" ಸ್ವಾದೀನ ಪ್ರಕಟವಾಗಿ ಕಾಣಬಹುದು.

ಎಲ್ಲಾ ದಿಕ್ಕುಗಳು  ಪರ್ವತಗಳಿಂದ ಸುತ್ತುವರಿದ ಅಜ್ಮೀರ್ ಒಂದು ಮನೋಹರವಾದ ನಗರವಾಗಿದೆ. ಅರವಾಳಿ ಮಲೆ, ಸಾಲುಗಳ ದೃಶ್ಯಗಲಾಗಿವೆ ಅಜ್ಮೀರನ್ನು ಸುತ್ತುವರಿದು ನೆಲೆಗೊಳ್ಳುತಿರುವುದು. ಅಜ್ಮೀರ್ ರೈಲ್ವೆ ನಿಲ್ದಾಣದಿಂದ  ಅರ್ಧ ಕಿಲೋ ಮೀಟರ್ ಮಾತ್ರವಾಗಿದೆ ದರ್ಗಾ ಶರೀಫಿಗೆ ಇರುವ ದೂರ.

ಸುಮಾರು 2 ಎಕ್ಕರೆ ವಿಸ್ತಿರಣದಲ್ಲಿ ದರ್ಗಾ ಕಾಂಪೌಂಡ್ ನಲ್ಲಿ, ಸ್ವರ್ಣದಿಂದ ಅಲಂಕರಿಸಿದ ಬಿಳುಪಿನ ಮಾರ್ಬೆಲ್ ನ ಕೆಳಗೆ ಪವಿತ್ರ ಮಣ್ಣಿನಲ್ಲಿ  ಬೆಳ್ಳಿಯಲ್ಲಿ ಮುಗಿಸಿದ ಬಾಗಿಲುಗಳ ಒಳಗೆ ರಾಜ ಪ್ರೌಡಿಯೊಂದಿಗೆಯಾಗಿದೆ ಖಾಜಯವರ (ರ) ಮಖ್ಬರವಿರುವುದು.

(ಇದು ರಾಜರ ಕಾಲದ ರಾಜರುಗಳ ನಿರ್ಮಿತಗಳು ಆಗಿರಬಹುದು. ಮಸ್ಜಿದುಗಳು, ದರ್ಗಾಗಳು, ಅಧಿಕವಾಗಿ ಅಲಂಕರಿಸುವುದು ಕರ್ಮ ಶಾಸ್ತ್ರವಾಗಿ ತಾರತಮ್ಯ ಮಾಡುವಾಗ ಭಿನ್ನ ವೀಕ್ಷಣಗಳಿಗೆ ವಿದಾಯವಾಗುವ ವಿಷಯವಾಗಿದೆ.)
ಸಂದರ್ಶಕರು ಅರಳುವ ಗುಲಾಬಿ ಹೂವುಗಳ ಅದಿಕ್ಯ  ಹಾಗೂ ದರ್ಗಾದಲ್ಲಿ ಸದಾ ಸಮಯವು ಗುಲಾಬಿ ನೀರಿನ ಪರಿಮಳ ಸೂಸುತ್ತದೆ.
ಖ್ವಾಜರವರ (ರ) ಸಂಭದಿಕರು ಮತ್ತು ಶಿಷ್ಯರಾದ ಹಲವು ಮಹಾತ್ಮಾಗಳ ಕಬರ್ ಗಳು ಪರಿಸರದಲ್ಲಿ ಇದೆ.

ಔರಂಗಝೇಬ್, ಶಜಹಾನ್, ಅಕ್ಬರ್, ಎಂಬಿ ಚಕ್ರವರ್ತಿಗಳು  ನಿರ್ಮಿಸಿದ ವಿವಿಧ ಮಸ್ಜಿದುಗಳು, ದಾರುಲ್ ಉಲೂಂ ( ಮತ ಪಾಠ ಶಾಲೆ )
ಅನಾಥ-ನಿರ್ಗತಿಕರ ಮಂದಿರ, ವಿಶ್ರಮ ಕೇಂದ್ರಗಳು, ಬಡವರಿಗೆ ಭಕ್ಷ್ಯ ವಿತರಣೆ ಕೇಂದ್ರ, ಡಿಸ್ಪೆನ್ಸರಿ, ಮೊದಲಾದ ವಿವಿದ ಸಂಭ್ರಮಗಳು ಅಲ್ಲಿ ಕಾಣಬಹುದು.

ಭಾರತ ಉಪ ಭೂಕಂಡದ ಮುಸ್ಲಿಂಮರು ಅಧಿಕವು ಜೀವನದಲ್ಲಿ ಒಮ್ಮೆಯಾದರೂ, ಅಜ್ಮೀರ್ ಸಂದರ್ಶಿಸಬೇಕು ಎಂದು ಆಗ್ರಹಿಸುವವರಾಗಿದ್ದಾರೆ.

ಝಿಯಾರತ್ತಿಗೆ ತಲುಪುವ ಹಲವರಿಗೆ ಖ್ವಾಜ (ರ) ಅವರನ್ನು ಕನಸಿನಲ್ಲಿ ದರ್ಶಿಸಲು ಬಾಗ್ಯ ಲಬಿಸುತ್ತದೆ.

🚈ಅಹಮದಾಬಾದ್- ದೆಹಲಿ ರೈಲ್ವೆ  ರಸ್ತೆಯಲ್ಲಾಗಿದೆ ರಾಜಸ್ಥಾನದ ಅಜ್ಮೀರ್ ರೈಲ್ವೆ ಸ್ಟೇಷನ್.
ಈ ದಾರಿಯಾಗಿ ಎಲ್ಲಾ ಟ್ರೈನ್ ಗಳು ಅಲ್ಲಿ ನಿಲ್ಲುತ್ತದೆ. ಮಂಗಳೂರು ದಾರಿಯಾಗಿ ಹೋಗುವ Eranakulam- Ajmeer, Marusagar Express. ಆಗಿದೆ ಅಜ್ಮೀರಿಗೆ ನೇರವಾದ ಟ್ರೈನ್. ವಾರದಲ್ಲಿ ಒಂದು ಮಾತ್ರವಿರುವ ಅದಕ್ಕೆ Reservation ಲಭಿಸಲು ಯಾವಾಗಲೂ ಕಷ್ಟವಾಗುತ್ತದೆ.... ತಿಂಗಳುಗಳ ಮೊದಲೇ Book ಮಾಡಬೇಕು.

ಆಗ್ರಾ, ಅಹಮದಾಬಾದ್, ಮುಂಬೈ, ಕೊಟ್ಟ ಎಂಬಿ ಯಾವುದಾದರು ಒಂದು ಸ್ಟೇಷನ್ ಮಾರ್ಗವಾಗಿಯೂ ಹೋಗಬಹುದು. ಆಗ್ರಾ ದಾರಿಯಾಗಿ ಹೋಗಿ, ದೆಹಲಿ ದಾರಿಯಾಗಿ ಮರಳಿ ಬರುವಾಗ ಆಗ್ರಾ ಮತ್ತು ದೆಹಲಿ ಕೂಡ ಸಂದರ್ಶಿಸಬಹುದು. Ticket ತೆಗೆಯುವಾಗ ಆಗ್ರಾ ಹಾಗೂ ದೆಹಲಿ ಮುಖ್ಯ ಲಕ್ಷ್ಯ ಮಾಡದಿದ್ದರೆ Telescopic Fare ಕೊಟ್ಟರೆ ಸಾಕಾಗುತ್ತದೆ.
ಜೈಪುರ್ ಆಗಿದೆ ಹತ್ತಿರದ ವಿಮಾನ ನಿಲ್ದಾಣ. (ದೂರ KM 135).

🕌ಖ್ವಾಜರವರ (ರ) ಚರಿತ್ರೆ ಹಾಗೂ ಕೀರ್ತನೆಯ ಹಲವಾರು ಮೌಲಿದುಗಳು ರಚಿಸಲ್ಪಟ್ಟಿದೆ.
ಮಹಾನರಾದ ಶೈಖ್ ಮಾಪ್ಪಿಳ ಲಬ್ಬ ಆಲಿಂ ಸಾಹಿಬ್ ಅಲ್ ಖಾದಿರಿ (ರ) ಮತ್ತು ಮೌಲಾನ ಶಾಲಿಯಾತಿ (ರ) ಮೊದಲಾದವರ ಮೌಲಿದುಗಳು ಪ್ರಸಿದ್ದವಾಗಿದೆ.

    ✍ಗಫೂರ್ ಬಾಯಾರ್.

🕌ಮಹಾನವರ ಬರ್ಕತ್ತ್
ನಿಂದ ಅಲ್ಲಾಹು ನಮ್ಮನ್ನು ಇರು ಲೋಕದಲ್ಲಿಯು ಅನುಗ್ರಹಿಸಲಿ.
ಆಮೀನ್....
🕎🕎🕎🕎🕎🕎🕎🕎



☪ಝಿಯಾರತ್ತ್ ಕೇಂದ್ರ☪
             🌹0⃣2⃣🌹

  🕌 *ಅಜ್ಮೀರ್ ದರ್ಗಾ ಶರೀಫ್* 🕌

     ✍ಗಫೂರ್ ಬಾಯಾರ್.
🌹🌹🌹🌹🌹🌹🌹🌹
        👉ಭಾಗ 0⃣1⃣👈

🕌[ರಜಬ್ 0⃣6⃣ ಖ್ವಾಜಾರವರ (ರ) ವಾರ್ಷಿಕ ಅನುಸ್ಮರಣೆ ದಿನ.
➖➖➖➖🕌➖➖➖➖

ಅಜ್ಮೀರಿನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಸುಲ್ತಾನುಲ್ ಹಿಂದ್ ಖ್ವಾಜಾ ಮುಹೀನುದ್ದೀನ್ ಚಿಸ್ತಿ (ರ) ಅವರ ಮಖ್ಬರ ಭಾರತದಲ್ಲಿಯೇ ಅತೀ ಹೆಚ್ಚು ಶ್ರದ್ದಾ ಕೇಂದ್ರವಾದ ದರ್ಗವಾಗಿದೆ...

ಹಿಜ್ರ 536ರಲ್ಲಿ ಪೇರ್ಶಿಯನ್ ನಲ್ಲಿ ಜನಿಸಿ ಪ್ರವಾದಿಯವರ ﷺ ಕನಸು ಕಂಡು ಅದನ್ನು  ಅನುಸರಿಸಿ ಇಸ್ಲಾಮಿಕ ಪ್ರಭೋಧನೆ ಯಾತ್ರೆಯಲ್ಲಿ ಭಾರತಕ್ಕೆ ತಲುಪಿದ ಖ್ವಾಜ (ರ)ಅವರು "ಸುಲ್ತಾನುಲ್ ಹಿಂದ್"
(ಭಾರತದ ರಾಜ) ಎಂದೂ,
"ಗರೀಬ್ ನವಾಝ್"
 (ಬಡವರ ಸೇವಕ)
ಎಂದೂ ಅರಿಯಲ್ಪಟ್ಟರು.

ಚಿಸ್ತಿ ಆತ್ಮಿಯ ಸರಣಿಯಲ್ಲಿ ಶೈಖ್ ಉಸ್ಮಾನ್ ಹಾರೂನಿ (ರ) ರವರು ಖ್ವಾಜರವರ (ರ)
ಗತ ಕಾಲದ ನೇತಾರರಾಗಿಯೂ, ಶೈಖ್ ಕುತುಬುದ್ದೀನ್ ಬಖ್ತ್ಯಾರ್ ಕಾಕಿ (ರ) ರವರ ಅನುಯಾಯಿಯಾಗಿದ್ದರು.
ಶೈಖ್ ಅವರ ಆತ್ಮಿಯ ಔನತ್ಯದಲ್ಲಿಯು, ಉನ್ನತ ವ್ಯಕ್ತಿತ್ವದಲ್ಲಿ, ಆಕರ್ಷಿಕವಾಗಿ ಲಕ್ಷಾಂತರ ಜನರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಖ್ವಾಜಾರವರ (ರ) ಸೇವನೆಗಳನ್ನು ಕುರಿತು ಮರ್ಹೂಂ: ಸಯ್ಯದ್ ಅಬುಲ್ ಹಸನ್ ಆಲಿ ನದವಿ ಸಾಹೇಬ್ (ರ) ಅಂತಹ ಹಲವರು ಸಂಕ್ಷಿಪ್ತವಾಗಿ ಬರೆದಿದ್ದಾರೆ. ಇಂದು ಭಾರತ ಉಪ ಭೂಕಂಡದಲ್ಲಿ ಇರುವ ಮುಸ್ಲಿಂ ಜನ ಸಂಖ್ಯೆಯಲ್ಲಿ ಒಳ್ಳೆಯ ಶತಮಾನವು ಶೈಖ್ ಅವರ ಮುಖಾಂತರ ಇಸ್ಲಾಮಿಗೆ ಬಂದವರ ಹಿಂದಿನ ತಲೆಮಾರುಗಳಾಗಿದೆ ಎಂದು ಹೇಳಲ್ಪಡುತ್ತದೆ. ಆದ್ದರಿಂದಲೇ ಭಾರತದ ಇಂದಿನ ಮುಸ್ಲಿಂಗಳು ಮಹಾನರತ್ತಿರ ತುಂಬಾ ಆಭಾರಿಯಾಗಿದೆ.

ದರ್ಗಾ ಝಿಯಾರತಿಗೆ ವಿಶ್ವಾಸಿಗಳ ಪ್ರವಾಹ ಮಹಾನವರಿಗೆ ಅಲ್ಲಾಹು ಕೊಟ್ಟ ಮಾರಣಾಂತರ ಬಹುಮಾನವಾಗಿ ನಮಗೆ  ಗ್ರಹಿಸಬಹುದು. ಧಾರಾಳ ಪಂಡಿತರು, ಮುಸ್ಲಿಂ-ಅಮುಸ್ಲಿಂ ಆಡಳಿತಧಿಕಾರಿಗಳು ಈ ಮಹಾನರ ಸಂದರ್ಶನ ನಡೆಸುತ್ತಾರೆ.
(ಅಮೇರಿಕನ್ ಅದ್ಯಕ್ಷರು ಮತ್ತು ಭಾರತದ ಪ್ರಧಾನ ಮಂತ್ರಿಯುವರು ಅಜ್ಮೀರಿಗೆ ಚಾದರ ಕಳುಹಿಸಿ ಕೊಟ್ಟಿರುವುದಾಗಿ ವಾರ್ತೆಗಳಲ್ಲಿ ನೋಡಿದ್ದೇನೆ)

ಪ್ರತಾಪಶಾಲಿಯಾಗಿದ್ದ ಅಕ್ಬರ್ ಚಕ್ರವರ್ತಿ ತನ್ನ ರಾಣಿಯ ಜೊತೆ ಆಗ್ರಾದಿಂದ ಕಾಲ್ನಡೆಯಲ್ಲಿ ಬಂದು  ಖಾಜಯವರ (ರ) ಮಖ್ಬರ  ಝಿಯಾರತ್ ನಡೆಸಿರುತ್ತಾರೆ.
ಮೊದಲೇ ಗಂಡು ಮಕ್ಕಳಿಲ್ಲದ ಅವರು ಪ್ರಶಸ್ತ ಸೂಫಿಯವರಾಗಿದ್ದ ಶೈಖ್ ಸಲೀಂ ಚಿಸ್ತಿಯವರ (ರ) ಹತ್ತಿರ ನಮಗೆ ಒಂದು ಗಂಡು ಮಗು ಜನಿಸಬೇಕೆಂದು ಆಗ್ರಹ ಹೇಳಿದರು. ಉತ್ತರವಾಗಿ ನೀವು "ಭಾರತದ ಸುಲ್ತಾನರ ಹತ್ತಿರ ಹೇಳಿ ಎಂದರು. ಅದಕ್ಕೆ ಅವರು 'ಈಗ ನಾನಲ್ಲವೇ  ಭಾರತದ ಸುಲ್ತಾನ್' ಎಂದು ಶೈಖ್ ರವರ ಹತ್ತಿರ ಅಕ್ಬರ್ ಕೇಳಿದರು. ಆಗ ಶೈಖ್ ರವರ ಉತ್ತರ; 'ಭಾರತದ ಸುಲ್ತಾನ್ ನೀವು ಅಲ್ಲ. ಅದು ಅಜ್ಮೀರಿನ ಖ್ವಾಜರಾಗಿದ್ದಾರೆ. (ರ)
ಝಿಯಾರತ್ತಿನ ನಂತರ ಅವರಿಗೆ ಜನಿಸಿದ ಮಗುವಾಗಿದೆ ಸಲೀಂ ಜಹಾಂಗೀರ್ (ರ) (ಮಗುವಿಗೆ ಶೈಖ್ ಸಲೀಂ ಚಿಸ್ತಿಯವರ ಹೆಸರಾಗಿದೆ ಇಟ್ಟಿರುವುದು.)

ಬ್ರಿಟಿಷರು ಅವಿಭಕ್ತ ಭಾರತದ ಮುಸ್ಲಿಮರ ನಡುವೆ ನಡೆಸಿದ ಒಂದು ಸಾಮೂಹಿಕ ಶಾಸ್ತ್ರ ಸರ್ವೆಯಲ್ಲಿ ಭಾರತದ ಮುಸ್ಲಿಮರ ಅತ್ತಿ ದೊಡ್ಡ ಶಕ್ತಿ ಅಜ್ಮೀರ್ ಖ್ವಾಜಾರ ಮಖ್ಬರವಾಗಿದೆ ಎಂದು  ಅಭಿಪ್ರಾಯಪಟ್ಟಿರುತ್ತಾರೆ.

ಝಿಯಾರತ್ತಿನ ಇಸ್ಲಾಮಿನ ವಿಧಿ ವಿಧಾನಗಳ ಅರಿವು ಇಲ್ಲದವರೂ ವ್ಯತ್ಯಸ್ಥ "ಮದ್ ಹಬ್" ಗಾರರೂ, ವಿವಿಧ ಮತ ವಿಶ್ವಾಸ ಹೊಂದಿದವರೂ, ಅಲ್ಲಿಗೆ ಸಂದರ್ಶಕರಾಗಿ ಬರುತ್ತಾರೆ. ಅದರಿಂದ್ದ ಅಲ್ಲಿ ನಡೆಯುವ ಎಲ್ಲಾ ಕಾರ್ಯಗಳೂ, ಅನುಕರಣಿಯ ಆಗಬೇಕೆಂದು ಇಲ್ಲ.
(ಖಬರಿನ ಮೇಲೆ ಹೂವು ಹಾಕುವ ಅಚಾರ ನಮ್ಮ ಕರಾವಳಿ ಭಾಗದಲ್ಲಿ ಇಲ್ಲ. ಆದರೂ ಅದು ಅನಾಚಾರ ಆಗಿದೆಯೆಂದು ಹೇಳಲು ಸಾದ್ಯವಿಲ್ಲ.)

ಇಂತಹ ಆಚಾರ ಪರವಾದ ಕಾರ್ಯಗಳಲ್ಲಿ ಅಭಿಪ್ರಾಯ ವ್ಯತ್ಯಾಸಗಳು ಸ್ವಾಬಾವಿಕವಾಗಿದೆ. ಆದರೆ ಝಿಯಾರತ್ತಿನ ಲಕ್ಷ್ಯ ಕೇವಲ ಮರಣ ಸ್ಮರಣ ಮಾತ್ರವಾಗಿದೆಯೆಂದು, ಬರ್ಕತ್ತ್ ಬಯಸಿ ಹೋಗುವ ಝಿಯಾರತ್ತ್ ಇಸ್ಲಾಮಿನಲ್ಲಿ ಆಧಾರರಹಿತವಾದುದೆಂದು ಹೇಳುತ್ತಿರುವವರು ದೀನಿ ವಿಷಯಗಳಲ್ಲಿ ಅರಿವು ಇಲ್ಲದವರಾಗಿದ್ದಾರೆ..

ಇಸ್ಲಾಮಿನ ಬಾಲ ಪಾಠಗಳು ಕೂಡ ಸರಿಯಾಗಿ ಲಬಿಸದೆ ಹೋದ ಹಲವು ನಿರ್ಗತಿಕ ಜನರು ಅಲ್ಲಿ ಬರುತ್ತಾರೆ. ಅವರು ಕಲಿತ ಶೈಲಿಯಲ್ಲಿ ಕೇವಲ ಬರ್ಕತ್ತ್ (ಪುಣ್ಯ) ಸಂಪಾದಿಸಲು ಎಂಬುದಾಗಿದೆ ಹಲವರ ಝಿಯಾರತ್ತ್.
ಖ್ವಾಜರವರ (ರ) ಸನಿಹದದಲ್ಲಿ  ಸಲಾಂ ಹೇಳುವುದು, ಅವರ ಸನ್ನಿಧಿಗೆ 'ಫಾತಿಹ', ಯಾಸೀನ್  ಓದಿ
ಹದ್ ಯ ಮಾಡುವುದು  ಎಂಬುದೊಂದು ಹಲವರಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ...

☪ಸ್ವಲ್ಪ ಚರಿತ್ರೆ☪

ಹಿಜ್ರ AH 5⃣3⃣6⃣ ರಲ್ಲಿ
ಪೇರ್ಶಿಯಾದ ಸಿಸ್ತಾನಿಯಲ್ಲಿ ನಬಿ (ಸಅ) ರವರ ಕುಟುಂಬದಲ್ಲಿ ಸಯ್ಯಿದ್ ಜಹ್ಫರ್ ಸ್ವಾದಿಖ್ (ರ) ತಂಗಳರವರ ಪರಂಪರೆಯಲ್ಲಿ ಜನನ.
ಬಾಲ್ಯ ಕಾಲದಲ್ಲಿಯೇ ಬೇರೆ ಮಕ್ಕಳಿಂದ ವ್ಯತ್ಯಸ್ಥವಾಗಿ ಪ್ರಾರ್ಥನೆಯಲ್ಲೂ, ದ್ಯಾನದಲ್ಲೂ, ಆಗಿ ಕಳೆಯುವುದಾಗಿತ್ತು ರೀತಿ.
15 ವಯಸ್ಸು ಆಗುತಲೇ ಮಾತಾಪಿತರು ವಫಾತ್ತ್ ಆಗಿದ್ದರು.  ತನ್ನ ತಂದೆಯ ತಲೆಮಾರು ಸೊತ್ತಿನಿಂದ ಒಂದು ತೋಟವು, ಧಾನ್ಯ ಸಂಸ್ಕರಣಾ ಶಾಲೆಯು ಲಬಿಸಿತ್ತು.
ಜೀವನ ವೃತ್ತಿಗಾಗಿ ಅದರಲ್ಲಿ ನೆಲೆಗೊಂಡಿರುವಾಗ, ಒಂದು ದಿನ ಪ್ರಸಿದ್ದ ಸೂಫಿ ಶೈಖ್ ಇಬ್ರಾಹಿಂ ಖುಲ್ ದೂಸಿ (ರ) ಎಂಬ ಮಹಾನ್ ಆ ತೋಟಕ್ಕೆ ಬಂದರು. ಶೈಖರೊಂದಿಗಿನ ಮಾತುಕತೆ ಮಹಾನರ ಜೀವನದ ಹಾದಿ ಬದಲಾಯಿಸಿತ್ತು.
ಆಧ್ಯಾತ್ಮಿಕ ವಿಜ್ಞಾನ ದಾಹವಾಗಿ ಆ ಕಾಲಘಟದ ಪ್ರಶಸ್ತ ದೀನಿ ಕೇಂದ್ರವಾಗಿದ್ದ ಸಮರ್ಕಂದ್, ಬುಖಾರ, (ಈಗಿನ ಉಜ್ಬೇಕಿಸ್ತಾನ್) ಮೊದಲಾದ ಸ್ಥಳಗಳಲ್ಲಿ ಹೋಗಿ ಉನ್ನತ ಧಾರ್ಮಿಕ ವಿಜ್ಞಾನವನ್ನು ಕಲಿತರು. ಆಧ್ಯಾತ್ಮಿಕ ಹಾದಿಯಲ್ಲಿ ಶೈಖ್ ಉಸ್ಮಾನ್ ಹಾರೂನಿ (ರ) ರವರನ್ನು, ಗುರು ಆಗಿ ಸ್ವೀಕರಿಸಿದರು. ದೀರ್ಘ ಕಾಲ ಗುರುವಿನೊಂದಿಗಿರುವ ಸಹವಾಸದ ಸಮಯದಲ್ಲಿಯೇ ಅವರು ಮಕ್ಕ, ಮದೀನ, ಸಂದರ್ಶಿಸಿದರು.

ನಬಿ ﷺ ತಂಙಳರಿಂದ ಕನಸಿನಲ್ಲಿ ಬಂದು ಕೊಟ್ಟ ನಿರ್ದೇಶನದ ಪ್ರಕಾರ ಇಸ್ಲಾಮಿನ ಸುಂದರ ಮಹತ್ತರವಾದ ಸಂದೇಶವಹಾಕರಾಗಿ ಖ್ವಾಜರವರು (ರ) ಭಾರತಕ್ಕೆ ಬಂದರು...

💎ಮುಂದುವರಿಯುವುದು...

✍ಗಫೂರ್  ಬಾಯಾರ್.
  🕎🕎🕎🕎🕎🕎🕎🕎


☪ಝಿಯಾರತ್ತ್ ಕೇಂದ್ರ☪
            01

ಕುಂಡರ ಮಖಾಂ
ಬೈರಕುಪ್ಪ, ಮಚ್ಚೂರ್.
ಮೂಲ: ಮಲಯಾಳಂ

                 ✍ ಗಫೂರ್ ಬಾಯಾರ್.

ವರ್ಷಗಳಿಂದ ಇಲ್ಲಿಯ ಶಾಂತಿ ಕೇಂದ್ರದ ಕುರಿತು ಕೇಳುತ್ತಿರುವುದು;





ಯಾರಿಗೂ ಯಾವ ಸಮಯದಲ್ಲೂ ಎಷ್ಟು ಹಣ ಖರ್ಚು ಮಾಡಿದರೂ ಇಲ್ಲಿಗೆ ತಲುಪಲು ಸಾದ್ಯವಿಲ್ಲ!

ಭೀಕರವಾದ ವನ್ಯ ಜೀವಿಗಳ ವಿಹಾರ ಕೇಂದ್ರ, ಅರಣ್ಯ ಅಧಿಕಾರಿಗಳ ಕಠಿನ ನಿಯಮಗಳು, ದುಷ್ಕರವಾದ ಯಾತ್ರೆ, ನೀರು, ಆಹಾರ, ವಿಸರ್ಜನಾ ಸೌಕರ್ಯಗಳ ದೌರ್ಲಬ್ಯ, ಪ್ರಸಿದ್ದವಾದ "ಕಬನಿ" ನದಿಯಲ್ಲಿ ಸಾಹಸಿಕವಾದ ಸಂಚಾರ....
ಇದೆಲ್ಲಾ ಝಿಯಾರತ್ತಿಗೆ  ಬರುವವರ ಮುಂದಿರುವ ಪ್ರಯಾಸಗಳಾಗಿವೆ.
ಇದೆಲ್ಲವನ್ನೂ ಸಹಿಸಿ, ಮಖಾಮಿಗೆ ತಲುಪಬೇಕಾದರೆ, ಅರಣ್ಯ ಅಧಿಕಾರಿಗಳ ಒಪ್ಪಿಗೆ ಬೇಕು. ಅದೂ ಕೂಡ ವರ್ಷದಲ್ಲಿ ಎರಡು ಬಾರಿ ಮಾತ್ರ ಹೋಗಲು ಅವಕಾಶ.
4 ಕಿ.ಮೀ, ದೂರದ ದುಸ್ತರವಾದ ನಡೆಯಲು ಕೂಡ ಆಸಾದ್ಯವಾದ ರಸ್ತೆಯಲ್ಲಿ ಸಾಗಬೇಕು.
ಅಲ್ಲಿಂದ ಪುನ: 4 ಕಿ.ಮೀ, ಕಬನಿ ನದಿಯನ್ನು ದೋಣಿಯ ಮೂಲಕ ಹಾಗೂ ನಡೆದುಕೊಂಡೂ ಹೋಗಬೇಕು.
ಸಾಹಸದಿಂದ ಕೂಡಿದ ಯಾತ್ರೆಯಾಗಿದೆ ಇದು.
ಈ ದಾರಿ ಮದ್ಯೆ ನಡೆದು ಹೋಗುವಾಗ, ಕಾಡಾನೆ, ಜಿಂಕೆ, ಕೋತಿ, ಹುಲಿ, ... ಎಂಬಿತ್ಯಾದಿ ಹಲವು ಮೃಗಗಳನ್ನು ನಮಗೆ ಕಾಣಬಹುದು.
ಇದನ್ನೆಲ್ಲ ನೋಡುವಾಗ ಭಯವು ಹುಟ್ಟುವುದು ಸಹಜ. ಉರೂಸ್ ನಡೆಯುವ ದಿನಗಳಲ್ಲಿ ಅವುಗಳು ನಮ್ಮನ್ನು ಉಪದ್ರವಿಸುವುದಿಲ್ಲ ಎಂದು ಅಲ್ಲಿಯ ಊರಿನವರು ಹೇಳುತ್ತಾರೆ.

ಮೈಸೂರು ಮಾರ್ಗವಾಗಿ ಬಂದರೆ ಬೈರಕುಪ್ಪದಲ್ಲಿ ಇಳಿದು, ಮಚ್ಚೂರ್ ಮಾರ್ಗವಾಗಿ 8 ಕಿ.ಮೀ ಮುಂದಕ್ಕೆ ಹೋದರೆ ಭೀಕರವಾದ ವನ ಸಿಗುತ್ತದೆ. ಅಲ್ಲಿ C M ವಲಿಯುಲ್ಲಾಹಿ (ಖ:ಸಿ) ಯವರು ಸರ್ವ ಸಂಗ ಪರಿತ್ಯಾಗಿಯಾಗಿ ಬಂದು ಆರಾಧನೆಯಲ್ಲಿ ಮಗ್ನವಾಗಿದ್ದ ಸ್ಥಳವಿದೆ. ಹಲವರು ಅವರನ್ನು ತಿಳಿದದ್ದು, ಯಾವುದೋ ಒಬ್ಬ ಬುದ್ದಿ ಭ್ರಮೆಯವರು ಎಂದಾಗಿತ್ತು. ಒಮ್ಮೆ ಯಾರೋ
C M ವಲಿಯುಲ್ಲಾಹಿ (ಖ:ಸಿ) ಈ ದಾರಿಯಲ್ಲಿ  ಬರುವುದನ್ನು  ಯಾರಾದರು ನೋಡಿದ್ದೀರಾ? ಎಂದು ವಿಚಾರಿಸಿದಾಗಲೇ ಊರಿನವರಿಗೆ ಅವರ ಗೌರವ ತಿಳಿಯುವುದು. ಕೂಡಲೇ ಊರಿನವರು, ಅವರು ಕುಳಿತು ಕೊಂಡಿದ್ದ ಸ್ಥಳವನ್ನು ಹೋಗಿ ನೋಡಿದಾಗ ಕಾಣುವ ದೃಶ್ಯ ಅಧ್ಬುತವಾಗಿತ್ತು. ಭೀಕರವಾದ ವನಗಳ ನಡುವಿನಲ್ಲಿ, ವನ್ಯ ಜೀವಿಗಳನ್ನು ಸಂರಕ್ಷಿಸುವ ವಲಯಗಳಲ್ಲಿ, ಸೈಯ್ಯದ್ ಅಬ್ದುಲ್ ಬಾರಿ (ಖ:ಸಿ) ತಂಙಳರ ಮಕ್ಬರದ ಹತ್ತಿರ ಕುಳಿತು ಕೊಂಡಿರುವುದು ಕಂಡರು....!!!!
👆ಇದಾಗಿದೆ ಅಲ್ಲಿಯ ಸಂಕ್ಷಿಪ್ತವಾದ ಚರಿತ್ರೆ.
ಅನಿರ್ವಚನೀಯವಾದ ಆತ್ಮ ನಿರ್ವತೀಯವಾದ ಝಿಯಾರತ್ತ್ ಕೇಂದ್ರವಾಗಿದೆ ಇದು.

ಕೆಲವು ಸೂಚನೆಗಳು:

👉ಅಲ್ಲಿ ಅಂತ್ಯ ಹೊಂದಿರುವ ಮಹಾನರವರ ಹೆಸರು, ಸಯ್ಯದ್ ಅಬ್ದುಲ್ ಬಾರಿಯಾಗಿದ್ದಾರೆ (ಖ:ಸಿ)

👉🏿 ಎಲ್ಲಾ ವರ್ಷ ಏಪ್ರೀಲ್ ತಿಂಗಳಲ್ಲಿ ಉರೂಸ್ ಹಾಗೂ ಮಕ್ಬರ ಸಂದರ್ಶನ, ಇರುವುದು.
ಮತ್ತೆ  ಹೋಗುವುದು ಮುಂದಿನ ವರ್ಷವೇ.

👉🏿ಮೃಗಗಳನ್ನು ಕಾಣುವಾಗ ಹೆದರಿಕೆ ಆಗುವವರು ದಯಮಾಡಿ ಹೋಗಬೇಡಿ.

👉🏿ಕೈಯಲ್ಲಿ ಆಹಾರ, ಪಾನೀಯಗಳು ಇರಬೇಕು.

👉ಸ್ವಂತ ವಾಹನವಿರುವುದು ಉತ್ತಮ. ಬಾರ್ಡರ್ ನಲ್ಲಿ ತಪಾಸಣೆ ಇದೆ.

👉ರೂಟ್, ಮೈಸೂರ್- ಮಾನಂದವಾಡಿ-
ಬಾವಲಿ ಚೆಕ್ಕ್ ಪೋಸ್ಟ್- ಬೈರಕುಪ್ಪ- ಮಚ್ಚೂರ್ ಮಸ್ಜಿದ್.

👉 ಕೋಯಿಕೋಡ್ ಮಾರ್ಗವಾಗಿ ಹೋಗುವುದಾದರೆ:

👉 ದಾರಿಯಲ್ಲಿ ಇರುವ ಬೇರೆ ಕೆಲವು ಮಕ್ಬರಗಳು👇🏾

0⃣1⃣ಮಡವೂರ್ ಮಖಾಂ,

0⃣2⃣ಒದುಂಗಕಾಡ್ ಮಖಾಂ,

0⃣3⃣ ಚುರತ್ತಿಲ್ ಮಖಾಂ,
( 4ನೇ ತಿರುವು)
👆🏼ಇಲ್ಲಿ ಕೂಡ CM ವಲಿಯುಲ್ಲಾಯಿಯವರು (ಖ:ಸಿ) ಅಲ್ಲಾಹುವಿನ ಆರಾಧನೆಯಲ್ಲಿ ನಿರತರಾಗಿದ್ದರು.

0⃣4⃣ಕಾಟ್ಟಿಕುಳಂ ಮಖಾಂ,

0⃣5⃣ ಬಾವಲಿ ಮಖಾಂ.

✋ಆ ಮಹಾನ್ ಅವರುಗಳ
ಹೆಸರಿನಲ್ಲಿ ಒಂದೊಂದು ಫಾತಿಹಾ ಓದಿ ಹದ್'ಯಾ ಮಾಡುವಿರಿ ತಾನೇ....😊
ಮಹಾತ್ಮರುಗಳ ಬರ್ಕತ್ತ್ ನಿಂದ  ಅಲ್ಲಾಹು ನಮ್ಮ ದ್ವಿಲೋಕ ಜೀವನವನ್ನು ವಿಜಯಗೊಳಿಸಲಿ,
ಆಮೀನ್....
.................................
     ಕನ್ನಡಕ್ಕೆ,
✍ಗಫೂರ್ ಬಾಯಾರ್.
🔵🔵🔵🔵🔵🔵🔵🔵
*💚ಅಹ್ಲುಬೈತ್ ಅಂದರೆ ಏನು..?*
*💚ಅಹ್ಲುಬೈತ್ ಅಂದರೆ ಯಾರು..?*
*💚ಆ ಪರಂಪರೆ ಈಗಲೂ ಇದೆಯೇ..?*

     ಒಂದು ಫಿತ್ನಾ ಸಂದೇಶ ಓದಲು ಸಾಧ್ಯವಾಯಿತು. ಅದೇನೆಂದರೆ, ನೆಬಿ ﷺ ತಂಙಳರಿಗೆ ಎರಡು ಗಂಡು ಮಕ್ಕಳು, ಅವರು ಚಿಕ್ಕ ವಯಸ್ಸಿನಲ್ಲೇ ವಫಾತ್ ಆಗಿದ್ದಾರೆ. ಅಲ್ಲಿಗೆ ನೆಬಿ ತಂಙಳರ ನೇರ ವಂಶವು ಮುಗಿಯುತ್ತದೆ. ಹೀಗಿರುವಾಗ ಮುಂದೆ ನೆಬಿ  ﷺ ತಂಙಳರ ವಂಶ ಪಾರಂಪರ್ಯ ಇಲ್ಲ. ಅಂದರೆ ಇವರು ಹೇಳುತ್ತಿರುವುದು, ಗಂಡು ಮಕ್ಕಳು ಇಲ್ಲದ ಕಾರಣ ಅಹ್ಲುಬೈತ್ ಎಂಬುದು ಇಲ್ಲ ಎನ್ನುವ ಧಾಟಿಯಲ್ಲಾಗಿದೆ.

ಇಂತಹ ಪ್ರಶ್ನೆಗಳು ನಿಮ್ಮ ಮನದೊಳಗೆ ಹಾಕುವ ಮೂಲಕ, ಅಥವಾ ಹೊಸ ಮೊಂಡುವಾದಗಳ ಮೂಲಕ ನಿಮ್ಮನ್ನು ವಸ್ವಾಸ್ ಮಾಡಲು ಅನೇಕರು ನಮ್ಮೆಡೆಗೆ ಬರುತ್ತಾರೆ. ಇದು ಇಬ್ಲೀಸ್'ನ ಇನ್ನೊಂದು ಮುಖವೆಂದರೂ ತಪ್ಪಿಲ್ಲ. ಇರಲಿ ಬಿಡಿ, ನಾವು ವಿಷಯಕ್ಕೆ ಬರೋಣ.

"ಅಹ್ಲುಬೈತ್" ಇದರ ಕುರಿತು ಒಂದೆರಡು ವಿಷಯಗಳನ್ನು ಬರೆಯಲು ನನಗೆ ಭಾಗ್ಯ ಸಿಕ್ಕಿದ್ದಕ್ಕೆ ಮೊದಲನೇಯದಾಗಿ ಅಲ್ಲಾಹನಿಗೆ ಸರ್ವ ಸ್ತುತಿ. ಅಲ್ ಹಂದುಲಿಲ್ಲಾಹ್

ಅಹ್ಲುಬೈತ್ ಪರಂಪರೆ ಹೇಗೆ ಖುರ್'ಆನ್- ಹದೀಸ್ ಮೂಲಕ ತಿಳಿಯೋಣ;

*
•إِنَّمَا يُرِيدُ اللَّـهُ لِيُذْهِبَ عَنكُمُ الرِّجْسَ أَهْلَ الْبَيْتِ وَيُطَهِّرَكُمْ تَطْهِيرًا •

ಸೂರಃ ಅಅ್'ಝಾಬ್ (33:33) ಅವತರಣೆಯಾದ ಸಂದರ್ಭದಲ್ಲಿ, ನೆಬಿ ﷺ ಒಂದು ಚಾದರ ತೆಗೆದು ಅಲಿ ರ.ಅ, ಫಾತಿಮಾ ಬೀವಿ ರ.ಅ ಹಾಗೂ ಹಸನ್-ಹುಸೈನ್ ರ.ಅ ಮೇಲೆ ಹೊದಿಸಿ ಹೇಳಿದರು; ಇವರು ನನ್ನ ಅಹ್ಲು ಬೈತ್ ಆಗಿದ್ದಾರೆ. ಇವರಿಂದ ನಾನು ಎಲ್ಲಾ ಮಾಲಿನ್ಯಗಳನ್ನು ನೀಗಿಸಿದ್ದೇನೆ. ಮತ್ತೂ ಮುಂದುವರಿದು, ಅಲ್ಲಾಹು ಅವರನ್ನು ಶುದ್ಧಿ ಮಾಡಿದ್ದಾನೆ ಎಂದು ಹೇಳಿದರು. ಇದು ಇಮಾಮ್ ಅಹ್ಮದ್ ರ.ಅ ರಿಪೋರ್ಟ್ ಮಾಡಿದ್ದಾರೆ. (ತಿರ್ಮುದ್ಸಿ)

*ಅಹ್ಲು ಬೈತಿನ ಮಹತ್ವವನ್ನು ಹೇಳಿದ ಇನ್ನೊಂದು ಹದೀಸ್ ಹೀಗಿದೆ. "ಅಹ್ಲು ಬೈತನ್ನು ಯಾರಾದರೂ ದ್ವೇಶಿಸಿದರೆ ಅವರಿಗೆ ನರಕವಾಗಿದೆ. ಇಮಾಮ ಹಾಕಿಂ ರ.ಅ ರವರ, 'ಮುಸ್ತದ್ರಕ್" ಎಂಬ ಕಿತಾಬಿನಲ್ಲಿ ಉಲ್ಲೇಖಿಸಿದ್ದಾರೆ. (150/3)

*ಸೌದಿ ಅರೇಬಿಯಾದಲ್ಲಿ ಔಖಾಫ್ ಮಂತ್ರಿಯಾಗಿದ್ದ ಮಕ್ಕಾ ನಿವಾಸಿಯಾದ ಮುಹಮ್ಮದ್ ಅಬ್ದು ಯಮಾನಿ ರವರ, ಬಹು ಭಾಷೆಗಳಿಗೆ ಭಾಷಾಂತರಗೊಂಡು ಇತಿಹಾಸ ನಿರ್ಮಿಸಿದ ಪ್ರಸಿದ್ಧ ಪುಸ್ತಕವಾದ
 " علموا أولادكم محبة آهل بيت النبي  صلى الله عليه وسلم "
(ಅಹ್ಲ್ ಬೈತ್ ನೊಂದಿಗಿರುವ ಮಹಬ್ಬತ್'ನ ಕುರಿತು ನೀವು ನಿಮ್ಮ ಮಕ್ಕಳಿಗೆ ಕಲಿಸಿರಿ ) ಇದರಲ್ಲಿ ಅಹ್ಲು ಬೈತಿನ ಮಹತ್ವವನ್ನು ವಿವರಿಸಲಾಗಿದೆ.

*ಅಹ್ಲುಬೈತ್ ಕುಟುಂಬ ಪರಂಪರೆ ಈಗಲೂ ಇದೆಯೇ ಎಂಬುದು ಇನ್ನೂ ಕೆಲವರ ಪ್ರಶ್ನೆ. ಅದಕ್ಕೆ ಈ ಕೆಳಗಿನ ಹದೀಸ್ ಸ್ಪಷ್ಟವಾಗಿ ಉತ್ತರ ಕೊಡುತ್ತದೆ.

 أخرج أحمد بن حنبل في مسنده ( 2 ) عن أبي سعيد الخدري ، عن النبي صلى الله عليه وآله قال : ( إني أوشك أن أدعى فأجيب ، وإني تارك فيكم الثقلين : كتاب الله عز وجل ، وعترتي ، كتاب الله حبل ممدود من السماء إلى الأرض ، وعترتي أهل بيتي ، وإن اللطيف الخبير أخبرني بهما أنهما لن يفترقا حتى يردا علي الحوض ، فانظروا كيف تخلفوني فيهما ).

ನೆಬಿ (ﷺ) ಹೇಳಿದ್ದನ್ನು, ಅಬೀ ಸಈದಿಲ್ ಖುದ್ರೀ (ರ.ಅ) ಹೀಗೆ ವರದಿ ಮಾಡುತ್ತಾರೆ. ನೆಬಿ ﷺ ತಂಙಳರು ಹೇಳುತ್ತಾರೆ- ನನ್ನ ರೂಹನ್ನು ಹಿಡಿಯಲು ಅಝ್ರಾಯಿಲ್ ಅ.ಸ ಬಂದಾಗ, ನಾನು ಅವರಿಗೆ ಉತ್ತರ ಕೊಡುವೆ. ಅಂದರೆ ನಾನು ಸಮ್ಮತಿಸುವೆ ಹಾಗೂ ನಾನು ಹೋಗುವಾಗ ಗೌರವವಿರುವ ಎರಡು ವಿಷಯಗಳನ್ನು ನಿಮ್ಮಲ್ಲಿ ಬಿಟ್ಟು ಹೋಗುವೆ. ಅದೇನೆಂದರೆ, 1) ಅಲ್ಲಾಹನ ಕಿತಾಬ್ ಆದ "ಖುರ್-ಆನ್" . ಅಲ್ಲಾಹನ ಕಿತಾಬ್ ಆದ ಪರಿಶುದ್ಧ ಖುರ್'ಆನ್ ಅದು ಆಕಾಶದಿಂದ ಇಳಿಸಲ್ಪಟ್ಟ ಉದ್ದವಾದ ಹಗ್ಗವಾಗಿದೆ. ಅದನ್ನು ಗಟ್ಟಿಯಾಗಿ ಹಿಡಿದವನು ವಿಜಯಿಸುವನು. ಸದಾ ಖುರ್'ಆನ್ ಓದುತ್ತಿರುವನು ರಕ್ಷೆ ಹೊಂದುವನು ಎಂದರ್ಥ. ಎರಡು ಕಾರ್ಯಗಳಲ್ಲಿ ಇನ್ನೊಂದು, 2) " وعترتي أهل بيتي" ಅಂದರೆ ನನ್ನ ಕುಟುಂಬವಾದ ಅಹ್ಲುಬೈತ್. ನೆಬಿ (ﷺ) ತಂಙಳರ ಕುಟುಂಬ, ಆ ಪರಂಪರೆ ಖಿಯಾಮತ್ ದಿನದವರೆಗೆ ಇರುತ್ತದೆ ಎಂಬುದನ್ನು ಇದರಿಂದ ನಮಗೆ ಅರ್ಥ ಮಾಡಬಹುದಾಗಿದೆ. ಈ ಮೇಲೆ ಹೇಳಿದ ಎರಡು ಕಾರ್ಯಗಳು ಎಂದಿಗೂ ಬೇರ್ಪಡದು; ಎಲ್ಲಿಯವರೆಗೆಂದರೆ ಹೌಳುಲ್ ಕೌಸರ್ ಸಿಗುವವರೆಗೂ. ಇನ್ನೂ ಮುಂದುವರಿದು ನೆಬಿ (ﷺ) ತಂಙಳರು ಹೇಳುತ್ತಾರೆ, ಈ ಎರಡು ಕಾರ್ಯಗಳನ್ನು ಹೇಗೆ ಹಿಡಿಯಬಹುದೆಂದು ನೀವು ನೋಡಿರಿ. ಈ ವರದಿಯನ್ನು ಇಮಾಂ ಅಹ್ಮದ್ ಇಬ್ನು ಹಂಬಲ್ (ರ.ಅ) ತನ್ನ 'ಮುಸ್ನದ್' ನಲ್ಲಿ ಬರೆದಿದ್ದಾರೆ.

*ಇದೇ ವಿಷಯವನ್ನು 'ಇಮಾಂ ಮುಸ್ಲಿಂ ರ.ಅ' ವರದಿ ಮಾಡಿದ್ದಾರೆ.
 وفي صحيح مسلم ( 1 ) قال النبي صلى الله عليه وآله . ( وأنا تارك فيكم الثقلين : أولهما كتاب الله فيه الهدى والنور ، فخذوا بكتاب الله واستمسكوا به ، فحث على كتاب الله ورغب فيه ، ثم قال : وأهل بيتي ، أذكركم الله في أهل بيتي ، أذكركم الله في أهل بيتي).

ನೆಬಿ (ﷺ) ಹೇಳಿದರು; ನಿಮ್ಮಲ್ಲಿ ಎರಡು ವಿಷಯಗಳನ್ನು ನಾನು ಬಿಟ್ಟು ಹೋಗುತ್ತೇನೆ. ಅದು ಬಹಳ ಗೌರವ ಇರುವ ವಿಷಯಗಳಾಗಿದೆ. ಅದರಲ್ಲಿ ಅಲ್ಲಾಹನ ಹಿದಾಯತ್ ಇದೆ, ಅಲ್ಲಾಹನ ಪ್ರಕಾಶವಿದೆ. ಅದೇನೆಂದರೆ ಒಂದು, "ಖುರ್'ಆನ್". ನಂತರ ಅದರ ಶ್ರೇಷ್ಠತೆಯನ್ನು ವಿವರಿಸುತ್ತಾರೆ. ಮುಂದುವರೆದು ನೆಬಿ (ﷺ) ಹೇಳಿದರು; ಇನ್ನೊಂದು "ನನ್ನ ಕುಟುಂಬ ಅಂದರೆ ಅಹ್ಲುಬೈತ್". ಈ ವಿಷಯದಲ್ಲಿ ನಾನು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ. ನೀವು ಅಲ್ಲಾಹನನ್ನು ಭಯಪಡಿರಿ; ನೀವು ಅವರಿಗೆ ಉಪದ್ರ ಮಾಡುವುದೋ, ಅಥವಾ ಅವರೊಂದಿಗೆ ಅನುಚಿತವಾಗಿ ವರ್ತಿಸುವುದೋ ಸಲ್ಲದು.

ಅಹ್ಲುಬೈತಿನ ಕುರಿತು ಈಗ ನಿಮಗೆ ಸ್ಪಷ್ಟವಾಗಿ ಮನದಟ್ಟಾಗಿರಬಹುದು ಎಂದು ಭಾವಿಸುತ್ತೇನೆ. ಆರಂಭದಲ್ಲಿ ಹೇಳಿದಂತೆ, ಇಂತಹ ಮೊಂಡುವಾದಗಳನ್ನು ಹಿಡಿದು ಕೊಂಡು ಮುಗ್ಧರನ್ನು ಬಲೆಗೆ ಬೀಳಿಸುವ ಕೆಲಸಗಳನ್ನು ಸಲಫಿಗಳು ಮಾಡುತ್ತಿದ್ದಾರೆ. ಅಂತಹ ಫಿತ್ನಾಗಳನ್ನು ಮೂಲೆಗೆಸೆಯಿರಿ. ಹತ್ತೆಂಟು ವರ್ಷಗಳ ಕಾಲ ದರ್ಸಿನಲ್ಲಿ ಕಷ್ಟಪಟ್ಟು ಕಲಿತ ಆಲಿಮ್'ಗಳ ನೇತ್ರತ್ವವಿಲ್ಲದೇ, ಬರೀ ಕೆಲವು ತಿಂಗಳುಗಳ ಕಾಲದಲ್ಲಿ CD ಹಾಗೂ ಕನ್ನಡ/ಮಲಯಾಳ ಭಾಷಾಂತರವನ್ನು ನೋಡಿ ದೀನ್ ಕಲಿತು ಜನರನ್ನು ವಸ್ವಾಸ್ ಮಾಡಲು ಬರುವ ಬಹಳ ಮಂದಿ ನಮ್ಮೆಡೆಯಲ್ಲಿ ಇದ್ದಾರೆ. ಅವರಿಂದ ವಂಚಿತರಾಗದಿರಿ.

ಅಹ್ಲು ಸುನ್ನತಿ ವಲ್ ಜಮಾಅತಿನ ನೈಜ ಆಶಯ ಆದರ್ಶಗಳಡಿಯಲ್ಲಿ ಜೀವಿಸಲು ಅಲ್ಲಾಹು ನಮಗೆ ತೌಫೀಖ್ ನೀಡಲಿ ಹಾಗೂ ಅಹ್ಲುಬೈತನ್ನು ಗೌರವಿಸುವ ಕೂಟದಲ್ಲಿ ಅಲ್ಲಾಹು ನಮ್ಮನ್ನು ಒಳಪಡಿಸಲಿ. ಆಮೀನ್.

*✍🏻ಅನ್ಸಾರ್ ಸೈದು*
*ಬೀವಿ ಆತಿಕಾ (ರ)*

ಭಾಗ--7

📝ಮುನೀರ್ ಸಖಾಫಿ, ಸಾಲೆತ್ತೂರು.

ಉಮರ್ (ರ)ರವರ ವಫಾತ್ ನ ನಂತರ ಝುಬೈರ್ ಬಿನ್ ಅವ್ವಾಮ್ (ರ)ರವರು ಆತಿಕ ಬೀವಿಯನ್ನು ವಿವಾಹವಾಗಿದ್ದಾಗಿ ಒಂದನೇಯ ಭಾಗದಲ್ಲಿ ನೀವು ಓದಿದ್ದೀರಿ.ಅವರ ಪತ್ನಿಯಾಗಿದ್ದ ವೇಳೆ ಆತಿಕ ಬೀವಿ ಮಸೀದಿಗೆ ಹೋಗಿದ್ದಾಗಿಯೂ ಝುಬೈರ್ ಬಿಮ್ ಅವ್ವಾಮ್ (ರ) ದಾರಿ ಮಧ್ಯೆ ಅವಿತು ಕುಳಿತು ಆತಿಕ ಬೀವಿಗೆ ಹೊಡೆದದ್ದಾಗಿಯೂ ಆಗ ಅತಿಕ ಬೀವಿ "ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್" ಎಂದು ಹೇಳುತ್ತಾ "ಜನರು ಹಾಳಾಗಿದ್ದಾರೆ" ಎಂದು ಹೇಳಿ ಮನೆಗೆ ಬರಳಿ ಬಂದ ಘಟನೆಯನ್ನು ಇಮಾಮ್ ಇಬ್ನ್ ಹಜರ್ (ರ)ತನ್ನ ಅಲ್ ಇಸ್ವಾಬ ಫೀ ತಮೀಝಿಸ್ವಹಾಬ 4/357ರಲ್ಲಿ ವಿವರಿಸಿದ್ದಾರೆ.
وكان الزّبير شرط ألا يمنعها من المسجد وكانت امرأة خليقَةً، فكانت إذا تهيأت إلى الخروج للصّلاة قال لها: والله إنك لتخرجين وإني لكارهٌ؛ فتقول: فامنعني فأجلس، فيقول: كيف وقد شرطت لك ألا أفعل، فاحتال فجلس لها على الطّريق في الغلس، فلَما مرت وضع يده على كفلها؛ فاسترجعت، ثم انصرفت إلى منزلها، فلما حان الوقت الذي كانت تخرج فيه إلى المسجد لم تخرج، فقال لها الزّبير: مالك لا تخرجين إلى الصّلاة؟ قالت:‏ فسد النّاس، والله لا أخرج من منزلي(الاصابة4/357)

ಒಟ್ಟಿನಲ್ಲಿ ಹೊಡೆದದ್ದು ಉಮರ್(ರ)ಆದರೂ ಅಥವಾ ಝುಬೈರ್ ಬಿನ್ ಅವ್ವಾಮ್ (ರ)ಆದರೂ ಫಸಾದ್ ಉಂಟಾದಲ್ಲಿ ಸ್ತ್ರೀಯರು
 ಮಸೀದಿಗೆ  ಹೋಗ ಕೂಡದು ಎಂಬ ತತ್ವವನ್ನೇ ಆತಿಕ ಬೀವಿ ಅಂಗೀಕರಿಸಿದ್ದರು.


 ಕೊನೆಯದಾಗಿ ...

ಆತಿಕ ಬೀವಿಯ ಘಟನೆಯನ್ನು ಆಧಾರವಾಗಿಸಿ ಸ್ತ್ರೀಯರನ್ನು ಮಸೀದಿಗೆ ಕರೆದು ಕೊಂಡು  ಹೋಗಲು ವಹ್ಹಾಬಿಗಳಿಗೆ ಯಾವುದೇ ಪುರಾವೆಯಿಲ್ಲ.
ಕಾರಣ,  ಕೇರಳದ ಮುಸ್ಲಿಯಾರುಗಳು ದೀನಿನಲ್ಲಿ ಪ್ರಮಾಣಯೋಗ್ಯರಲ್ಲದಂತೆ ಸ್ವಹಾಬಿಗಳೂ ಕೂಡಾ ಪ್ರಮಾಣರಲ್ಲ ಎಂದು ವಹ್ಹಾಬಿಗಳು ಅವರ ಅಧಿಕೃತ ಪತ್ರಿಕೆಯಲ್ಲಿ ಬರೆದಿದ್ದಾರೆ.
ವಹ್ಹಾಬಿಗಳಿಗೆ ಸ್ವಹಾಬಿಗಳೇ ಪುರಾವೆಯಾಗದೇ ಇರುವಾಗ ಆತಿಕ ಬೀವಿ ಎಂಬ ಸ್ವಹಾಬೀ ವನಿತೆಯೊಬ್ಬರ ಘಟನೆ ಹೇಗೆ ತಾನೇ ಪುರಾವೆಯಾದೀತು?

*"ಸ್ತ್ರೀಯರನ್ನು ನೀವು ಮಸೀದಿಯಿಂದ ತಡೆಯದಿರಿ" ಎಂಬ ಹದೀಸಿನ ತಾತ್ಪರ್ಯವೇನು?*

ಇಸ್ಲಾಮಿನ ಪ್ರಾರಂಭದಲ್ಲಿ ಪುರುಷರಂತೆ ಸ್ತ್ರಿಯರೂ ಕೂಡಾ ಮಸೀದಿಗೆ ಹಾಜರಾಗಿ ಮುಸ್ಲಿಮರ  ಹೆಚ್ಚಿನ ಸಂಖ್ಯೆ ಯನ್ನು ಸತ್ಯ ನಿಷೇಧಿಗಳಿಗೆ ತೋರಿಸಿ ಕೊಡುತ್ತಿದ್ದರು.
ಇಮಾಮ್ ಅಬೂಬಕರ್ ಅಲ್ ಕಾಸಾನೀ(ರ)ತನ್ನ ಬದಾಇಉಸ್ಸನಾಯಿಯ್ ಎಂಬ ಗ್ರಂಥದಲ್ಲಿ ಇದು ವಿವರಿಸಿದ್ದಾರೆ.

ಇಮಾಮ್ ಇಬ್ನ್ ಹಜರ್ (ರ)ಹೇಳುತ್ತಾರೆ;
ثم الوجه حمله علي زمن النبي صلي الله عليه وسلم (تحفة)
ಅದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲಕ್ಕೆ ಮಾತ್ರ ಸೀಮಿತವಾಗಿತ್ತು.
(ತುಹ್ಫ 2/252)

ಕಾರಣ ,ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೆಚ್ಚು ಸಮಯವನ್ನು ಮಸೀದಿಯಲ್ಲೇ ಕಳೆಯುತ್ತಿದ್ದರು.
ಮಸೀದಿಯಲ್ಲಿರುವ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸ್ತ್ರೀ ಪುರುಷರೆಲ್ಲರೂ ವ್ಯತ್ಯಸ್ತ ವಿಷಯಗಳಿಗೆ ಸಮೀಪಿಸುತ್ತಿದ್ದರು.ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಎಲ್ಲರಿಗೂ ಪರಿಹಾರ  ನೀಡುತ್ತಿದ್ದರು.
ಸ್ತ್ರೀಯರನ್ನು ಮಸೀದಿಯಿಂದ ತಡೆದಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಬಹಳ ಕಷ್ಟಕರಾವಾದೀತು ಎಂಬ ನೆಲೆಯಲ್ಲಿ ಸ್ತ್ರೀಯರನ್ನು ಮಸೀದಿಯಿಂದ ತಡೆಯದಿರಿ ಎಂಬ ಮಾತನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದಾರೆ ವಿನಃ ಅನ್ಯ ಪುರುಷರೊಂದಿಗೆ ಸೇರಿ ಕೊಂಡು ಜುಮುಅ ಜಮಾಅತ್ ಗೆ ಹಾಜರಾಗಲು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಪ್ರಸ್ತುತ ಹದೀಸಿನಲ್ಲಿ ಹೇಳಿದ್ದಾಗಿ ಯಾವ ಇಮಾಮರುಗಳು ಕೂಡಾ ಹೇಳಿಲ್ಲ.ಅದನ್ನು ತೋರಿಸಲು ಯಾವ ವಹ್ಹಾಬಿಗಳಿಗೂ ಸಾಧ್ಯವಿಲ್ಲ.


*ಮುಗಿಯಿತು*


ಇದು ನಿಮಗೆ ಇಷ್ಟವಾದಲ್ಲಿ ಇತರರಿಗೆ ಶೇರ್ ಮಾಡಿರಿ
*ಬೀವಿ ಆತಿಕಾ (ರ)*

ಭಾಗ--6

📝ಮುನೀರ್ ಸಖಾಫಿ, ಸಾಲೆತ್ತೂರು.

ಮೂರನೇಯ ಪ್ರಶ್ನೆಗೆ ಉತ್ತರ.

ಸ್ತ್ರೀಯರಿಗೆ  ಅವರ ಮನೆಯೇ  ಉತ್ತಮವೆಂಬ ಪ್ರವಾದಿ ವಚನ  ಆತಿಕ ಬೀವಿಗೆ ತಲುಪದಿರುವುದರಿಂದ ಆತಿಕ ಬೀವಿ  ಮಸೀದಿಗೆ ಹೋಗಲು ಅನುಮತಿ ಕೇಳಿರಬೇಕು.
ಕಾರಣ,ಉಮರ್ (ರ)ತನ್ನನ್ನು ತಡೆಯದಿರಲು ಕಾರಣ ವಿವರಿಸುವಲ್ಲಿ  ಪ್ರಸ್ತುತ   ವಿಷಯವನ್ನು ಆತಿಕ ಬೀವಿ ಪರಾಮರ್ಶಿಸುತ್ತಿಲ್ಲ.
ಆ ಪ್ರವಾದಿ ವಚನ ಆತಿಕ ಬೀವಿಗೆ ತಿಳಿದಿದ್ದರೆ  ಒಮ್ಮೆಯೂ ಕೂಡಾ ಅವರು ಮಸೀದಿಗೆ ಹೋಗುತ್ತಿರಲಿಲ್ಲ  ಅಥವಾ ಅಂತಹ ನಿಬಂಧನೆಯನ್ನು ವಿವಾಹದ ವೇಳೆ ಇಡುತ್ತಿರಲಿಲ್ಲ.
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲರೊಂದಿಗೆ ನಮಾಝು ಮಾಡಲು ಅನುಮತಿ ಕೇಳಿ ಬಂದ ಸ್ವಹಾಬೀ ವನಿತೆಯರೊಂದಿಗೆ "ನಿಮಗೆ ನಿಮ್ಮ ಮನೆಯೇ ನಮಾಜಿಗೆ ಉತ್ತಮ"ವೆಂಬ ಮಾತು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದಾಗ  ಆ ಉಪದೇಶವನ್ನು ಚಾಚೂ ತಪ್ಪದೇ ಸ್ವಹಾಬೀ ವನಿತೆಯರು ಸ್ವೀಕರಿಸಿ ಅವರವರ ಮನೆಯಲ್ಲಿಯೇ ನಮಾಜು ನಿರ್ವಹಿಸಿದರು.
ಅದರ ನಂತರ ಮಸೀದಿಗೆ ಹಾಜರಾದದ್ದು ಆ ವಿಷಯ ತಲುಪದ ಮಹಿಳೆಯರಾಗಿದ್ದರೆಂದು ನೂತನವಾದಿಗಳು ನಾಯಕನೆಂದು ಒಪ್ಪಿಕೊಳ್ಳುವ ಶೌಕಾನಿಯೇ ಹೇಳಿದ್ದಾರೆ.
(ಶೌಕಾನಿ ನಮ್ಮ ಅನಿಷೇಧ್ಯ ನಾಯಕನೆಂದು ವಹ್ಹಾಬಿಗಳು "ಇಸ್ಲಾಹೀ ಪ್ರಸ್ಥಾನ ಚರಿತ್ರತ್ತಿನೊರು ಆಮುಗಂ " ಎಂಬ ಪುಸ್ತಕದ ಪುಟ 15 ರಲ್ಲಿ ಹೇಳಿದ್ದಾರೆ.)
ಶೌಕಾನಿಯ ಮಾತು ನೋಡಿರಿ;
 ( وبيوتهن خير لهن ) أي صلاتهن في بيوتهن خير لهن من صلاتهن في المساجد لو علمن ذلك ، لكنهن لم يعلمن فيسألن الخروج إلى الجماعة يعتقدن أن أجرهن في المساجد أكثر . ووجه كون صلاتهن في البيوت أفضل : الأمن من الفتنة ، ويتأكد ذلك بعد وجود ما أحدث النساء من التبرج والزينة

ಮಸೀದಿಯಲ್ಲಿ ಸ್ತ್ರೀಯರು ನಿರ್ವಹಿಸುವ ನಮಾಝಿಗಿಂತ ಮನೆಯಲ್ಲಿ ನಿರ್ವಹಿಸುವ ನಮಾಜು ಅವರಿಗೆ ಉತ್ತಮವಾಗಿದೆ.ಅದು ಸ್ತ್ರೀಯರಿಗೆ ತಿಳಿದಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!.
ಆದರೆ ಅದು ಅವರಿಗೆ ತಿಳಿದಿರಲಿಲ್ಲ.ಆದುದರಿಂದಲೇ ಅವರು ಮಸೀದಿಗೆ ನಮಾಜಿಗೆ ತೆರಳಲು ಅನುಮತಿ ಕೇಳಿದರು.ಮಸೀದಿಯಲ್ಲಿ ನಮಾಜು ಮಾಡಿದಲ್ಲಿ ಪುಣ್ಯ ಅಧಿಕ ಲಭಿಸುವವು ಎಂಬ ತಪ್ಪು ಕಲ್ಪನೆ ಅವರಲ್ಲಿತ್ತು.
ಫಸಾದ್ ನಿಂದ ನಿರ್ಭಯವಿರುವುದರಿಂದ   ಮನೆಯಲ್ಲಿ ನಿರ್ವಹಿಸುವ ನಮಾಜು ಅವರಿಗೆ ಉತ್ತಮವೆನಿಸಿತು.
ಸ್ತ್ರೀಯರಿಂದುಟಾದ ಸೌಂಧರ್ಯ ಪ್ರದರ್ಶನ ಕಾರಣದಿಂದ ಪ್ರತ್ಯೇಕವಾಗಿಯೂ.
(ನೈಲುಲ್ ಅವ್ ತಾರ್ 3/161)

ಇದೇ ರೀತಿ ಔನುಲ್ ಮಅಬೂದ್ ನ 2/274 ರಲ್ಲೂ ಕಾಣಬಹುದಾಗಿದೆ.

ಇಮಾಮ್ ಅಬ್ದುರ್ರಝಾಕ್ (ರ)ರವರ ಮುಸನ್ನಫ್ ನಲ್ಲಿ ವರದಿಯಾದ ಒಂದು ರಿಪೋರ್ಟ್ ಈ ರೀತಿ ಇದೆ.
 عن أبي عمرو الشيباني أنه رأى عبد الله بن مسعود يخرج النساء من المسجد  ويقول : أخرجن إلى بيوتكن خير لكن.  (مصنف 3/173)

ಇಬ್ನ್ ಮಸ್ಊದ್ (ರ) ಸ್ತ್ರೀಯರನ್ನು ಮಸೀದಿಯಿಂದ ಹೊರ ಕಳುಹಿಸುವುದು ನಾನು ನೋಡಿದೆ.
"ನಿಮಗೆ(ನಮಾಜು ನಿರ್ವಹಿಸಲು)  ಉತ್ತಮವಾದ ಮನೆಗೆ ನೀವು  ತೆರಳಿರಿ" ಎಂದು ಅವರು ಹೇಳುತ್ತಾ ಇದ್ದರು.
ಮುಸನ್ನಫ್ 3/173).


ಈ ಹದೀಸಿನ ಕುರಿತು ಹಾಫಿಲ್ ಅಲ್ ಹೈಸಮೀ(ರ)ಹೇಳುತ್ತಾರೆ;
رواه الطبراني في الكبير ورجاله موثوقون (مجمع الزوائد 1/253)

ಈ ಹದೀಸನ್ನು ಇಮಾಮ್ ತ್ವಬ್ ರಾನಿ(ರ)ತನ್ನ ಕಬೀರ್ ನಲ್ಲಿ ವರದಿ ಮಾಡಿದ್ದಾರೆ.ಅದರ ವರದಿಗಾರರು ವಿಶ್ವಾಸಯೋಗ್ಯರಾಗಿದ್ದಾರೆ.
(ಮಜ್ ಮಉಝ್ಝವಾಇದ್ 1/253).

"ಸ್ತ್ರೀಯರಿಗೆ ನಮಾಜಿಗೆ ಅವರ ಮನೆಯೇ ಉತ್ತಮ"ವೆಂಬ ಹದೀಸ್ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿರುವಾಗ ಸ್ವಹಾಬಿಗಳು ಅದನ್ನು ಕಲಿತಿದ್ದರು.
ಸ್ವಹಾಬೀ ವನಿತೆಯರಲ್ಲಿ ಕೆಲವರಿಗೆ ಅದು ತಿಳಿದಿರಲಿಲ್ಲ.ಅವರು ನಮಾಜಿಗೆ ಮಸೀದಿಗೆ ಹಾಜರಾದಾಗ ಸ್ವಹಾಬಿಗಳು ಅವರನ್ನು ನೀವು ಮನೆಯಲ್ಲಿಯೇ ನಮಾಜು ನಿರ್ವಹಿಸಿರಿ ಎಂದು ಹೇಳಿ ಕಳುಹಿಸುತ್ತಿದ್ದರು.
ಇದು ಮೇಲೆ ಹೇಳಿದ ಹದೀಸಿನಿಂದ ಬಹಳ ಸ್ಪಷ್ಟವಾಗಿ ತಿಳಿಯಬಹುದಾಗಿದೆ.

*ಮಂದುವರಿಯುದು.....*


ಇದು ನಿಮಗೆ ಇಷ್ಟವಾದಲ್ಲಿ ಇತರರಿಗೆ ಶೇರ್ ಮಾಡಿರಿ
*ಬೀವಿ ಆತಿಕಾ (ರ)*

ಭಾಗ--5

📝ಮುನೀರ್ ಸಖಾಫಿ, ಸಾಲೆತ್ತೂರು.


*ಎರಡನೇ ಪ್ರಶ್ನೆಯ ಉತ್ತರ.*
(ಪ್ರಶ್ನೆ 2 ನೇ ಭಾಗದ ಕೂನೆಯಲ್ಲಿದೆ).


ಶರೀಅತ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಉಮರ್ (ರ)ರವರು ಪತ್ನಿಯ ಮಸೀದಿ ಪ್ರವೇಶದಲ್ಲಿ ಇಷ್ಟವಿಲ್ಲದಿದ್ದರೂ ತಡೆಯದಿರಲು ಕಾರಣ ಈಗಾಗಲೇ ವಿವರಿಸಲಾಗಿದೆ.(ಭಾಗ 3ಮತ್ತು 4 ರಲ್ಲಿ).
ಆದರೂ ಅದರ ಬಗ್ಗೆ ಬೇರೆ ಒಂದು ವಿವರಣೆಯನ್ನು ನೀಡುತ್ತಿದ್ದೇನೆ.

ಬುಖಾರಿಯ ವ್ಯಾಖ್ಯಾನ ಗ್ರಂಥದಲ್ಲಿ ಅಲ್ಲಾಮ ಕಾಂದಹ್ಲವಿ ಹೇಳುತ್ತಾರೆ;
وإنما كان عمر لا يقدم على النهي لأدب الحديث، وإلا فقد كان له أن ينهى عن ذلك، لما علم من إشارات النبي صلى الله عليه وسلم جواز النهي(لامع الدراري)
ಹದೀಸಿನೊಂದಿಗೆ ಗೌರವವಿರುವ ಕಾರಣದಿಂದ ಉಮರ್ (ರ)ಪತ್ನಿಯನ್ನು ತಡೆದಿಲ್ಲ.
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಇತರ ಸೂಚನೆಯಿಂದ ತಿಳಿದು ಬಂದಂತೆ(ಸ್ತ್ರೀಯರಿಗೆ ಮನೆಯೇ ಉತ್ತಮವೆಂಬ ಹದೀಸ್ ಪ್ರಕಾರ)ಉಮರ್ (ರ)ರವರಿಗೆ ತಡೆಯಬಹುದಾಗಿತ್ತು.(ಅದಬ್ ಪಾಲನೆಗೆ ಮಾತ್ರ ತಡೆದಿಲ್ಲ: ಲೇ)
(ಲಾಮಿಉದ್ದರಾರಿ )

ಇಮಾಮ್ ಮುಲ್ಲಾ ಅಲಿಯ್ಯುಲ್ ಖಾರಿ (ರ)ಅಬೂ ಯೂಸುಫ್ (ರ)ರಿಂದ ಈ ರೀತಿ ಉಲ್ಲೇಖಿಸಿಸುತ್ತಾರೆ;
ونظيره ما وقع لأبي يوسف حين روي أنه عليه السلام كان يحب الدباء ، فقال رجل : أنا ما أحبه فسل السيف أبو يوسف وقال : جدد الإيمان وإلا لأقتلنك 
(مرقاة المفاتيح ،لامع الدراري)

ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಸೋರೆ(🍐) ಇಷ್ಟವಾಗಿತ್ತು ಎಂದು ಅವರು ಹೇಳಿದಾಗ ಒಬ್ಬರು ಹೇಳಿದರು.ನಾನು ಅದನ್ನು ಇಷ್ಟಪಡುವುದಿಲ್ಲ.ಆಗ ಅಬೂ ಯೂಸುಫ್ (ರ)ಖಡ್ಗ ಹೊರ ತೆಗೆದು ಹೇಳಿದರು; ನಿನ್ನ ಈಮಾನ್
ನೀನು ನವೀಕರಿಸು.ಇಲ್ಲದಿದ್ದರೆ ನಿನ್ನನ್ನು ನಾನು ಈ ಖಡ್ಗದಿಂದ ಕೊಲ್ಲುವೆನು.
(ಮಿರ್ಖಾತ್2/234)

ಹಿರಿಯ ವ್ಯಕ್ತಿಗಳು ಒಂದು ಕಾರ್ಯವನ್ನು ನಮ್ಮಲ್ಲಿ ಆಜ್ಞಾಪಿಸುವಾಗ ಅವರ ಅದೇಶವನ್ನು  ಪಾಲಿಸಬೇಕು.
 ಕಾರಣಾಂತರಗಳಿಂದ ಪಾಲಿಸಲಾಗದಿದ್ದಲ್ಲಿ ಅದಕ್ಕಿರುವ ಕಾರಣಗಳನ್ನು ಹೇಳಿ ಅದರಿಂದ ಹಿಂದೆ ಸರಿಯುವುದು ಅವರಿಗೆ ನೀಡುವ ಗೌರವವಾಗಿದೆ.ಅದುವೇ ಆಗಿದೆ ಉಮರ್ (ರ),ಇಬ್ನ್ ಉಮರ್ (ರ)ಹಾಗೂ ಅಬೂ ಯೂಸುಫ್ (ರ)ರವರ ಘಟನೆಗಳಲ್ಲಿ ನಮಗೆ ಕಾಣುವುದು.
ಸೋರೆ(🍐) ನನಗೆ ಇಷ್ಟವಿಲ್ಲ ಎಂದು ಒಂದೇ ಮಾತಿಗೆ ಹೇಳುವಾಗ ಪ್ರವಾದಿ ವಚನದ ಗೌರವಕ್ಕೆ ವಿರುದ್ಧವಾಗಿದೆ.

ಅದೇ ರೀತಿ
 ಸ್ತ್ರೀಯರ ಮಸೀದಿ ಪ್ರವೇಶ ಫಸಾದ್ ಗೆ ಕಾರಣವಾಗುತ್ತದೆ ಎಂದು ಆತಿಕ ಬೀವಿಗೆ ಮನವರಿಕೆ ಮಾಡಿ ಕೊಟ್ಟು ಅದನ್ನು ಮೊಟಕುಗೊಳಿಸಿದಾಗ ಹದೀಸಿನ ಗೌರವಕ್ಕೆ ಕುಂದುಂಟಾದುದನ್ನು ಉಮರ್(ರ) ಕಂಡಿಲ್ಲ.
ಆದುದರಿಂದಲೇ ಸ್ತ್ರೀಯರ ಮಸೀದಿ ಪ್ರವೇಶವು ಫಸಾದ್ ಗೆ ಕಾರಣವಾದಾಗ ಅವರನ್ನು ಮಸೀದಿಯಿಂದ ತಡೆಯುವಂತೆ ಫತ್ವ ನೀಡಿದ ಇಮಾಮರುಗಳ ಬಗ್ಗೆ ಅವರು  ಹದೀಸಿನ ಗೌರವಕ್ಕೆ ವಿರುಧ್ಧವಾಗಿ ನಡೆಕೊಂಡವರು ಎಂದು ಹೇಳುವಂತಿಲ್ಲ.



*ಮಂದುವರಿಯುದು.....*


ಇದು ನಿಮಗೆ ಇಷ್ಟವಾದಲ್ಲಿ ಇತರರಿಗೆ ಶೇರ್ ಮಾಡಿರಿ
*ಬೀವಿ ಆತಿಕಾ (ರ)*

ಭಾಗ--4

📝ಮುನೀರ್ ಸಖಾಫಿ, ಸಾಲೆತ್ತೂರು.


*ಒಂದನೇ ಪ್ರಶ್ನೆಯ 2 ನೇ ಉತ್ತರ.*

ಉಮರ್ (ರ)ರವರಿಗೆ ಆತಿಕ ಬೀವಿಯನ್ನು ವಿವಾಹವಾದಲ್ಲಿ ತಂತ್ರ ಪೂರ್ವಕ ಮಸೀದಿ ಪ್ರವೇಶವನ್ನು ತಡೆಯಬಹುದೆಂಬ ದೃಢ ವಿಶ್ವಾಸವಿತ್ತು.ಅದರಲ್ಲಿ ಅವರು ಯಶಸ್ಸು ಕಂಡರು.
ಇಮಾಮ್ ಉಂದುಲುಸೀ (ರ) ಬರೆಯುತ್ತಾರೆ;
(ಲೇಖನ ಧೀರ್ಘವಾಗುವ ಭಯದಿಂದ ಅರಬಿ ಉದ್ಧರಣೆ ನೀಡುವುದಿಲ್ಲ.ಅಗತ್ಯವಿರುವವರಿಗೆ ಬೇಕಾದಲ್ಲಿ ಕಳುಹಿಸಿ ಕೊಡುವೆನು:ಲೇ)
ಆತಿಕ ಬೀವಿ ಪತಿಯಾದ ಉಮರ್ (ರ)ರಲ್ಲಿ ಮಸೀದಿಗೆ ಹೋಗಲು ಅನುಮತಿ ಕೇಳುವಾಗಲೆಲ್ಲಾ ಉಮರ್ (ರ)ಮೌನವಾಗುತ್ತಿದ್ದರು.ಆಗ ಆತಿಕ ಬೀವಿ ಹೇಳುವರು;ನೀವು ತಡೆಯದಿದ್ದಲ್ಲಿ ನಾನು ಖಂಡಿತಾ ಹೋಗುವೆನು".ಅಲ್ಲಾಹನ ದಾಸಿಯರಾದ ಸ್ತ್ರೀಯರನ್ನು ಅಲ್ಲಾಹನ ಮಸೀದಿಗಳಿಂದ ನೀವು ತಡೆಯದಿರಿ" ಎಂಬ ಪ್ರವಾದಿ ವಚನಕ್ಕೆ ವಿರುದ್ಧವಾಗುದನ್ನು ತಪ್ಪಿಸಲು ಉಮರ್ (ರ)ಮಸೀದಿಯಿಂದ ಅವರನ್ನು ತಡೆಯುತ್ತಿರಲಿಲ್ಲ.
ಒಂದು ದಿನ  ಆತಿಕ ಬೀವಿ ಸುಬಹಿ ನಮಾಝಿಗೆ ಮಸೀದಿಗೆ ಹೂರಟರು.ಸ್ವಲ್ಪ ಮುಂಚೆಯೇ ಮಸೀದಿಗೆ ತೆರಳಿದ ಉಮರ್ (ರ) ದಾರಿ ಮಧ್ಯೆ ಇರುಳು ಕೂಡಿದ ಪ್ರದೇಶದಲ್ಲಿ ಅವಿತು ಕುಳಿತರು.ಆತಿಕ ಬೀವಿ ಸಮೀಪಿಸುತಿದ್ದಂತೆಯೇ ಉಮರ್ (ರ)ಅವರ ಮೇಲೆ ಎರಗಿ ಎದೆಯ ಭಾಗಕ್ಕೆ ಏಟು ಕೊಟ್ಟರು.ಏಟು ಕೊಟ್ಟವರು ಯಾರೆಂದು ತಿಳಿಯದಿರಲು ಉಮರ್(ರ) ಅವರಲ್ಲಿ  ಒಂದೇ ಒಂದು  ಮಾತನ್ನಾಡಿಲ್ಲ.
ನಂತರ ಆತಿಕ ಬೀವಿ ಮಸೀದಿಗೆ ತೆರಳದೆ ಅರ್ಧದಿಂದಲೇ ಮನೆಗೆ ಮರಳಿದರು.ಅದರ ನಂತರ ಆತಿಕ ಬೀವಿ ಮಸೀದಿಗೆ ತೆರಳಿಲ್ಲ.
ಮಸೀದಿಗೆ ತೆರಳದಿರುವುದನ್ನು ಕಂಡ ಉಮರ್ (ರ)ಪತ್ನಿಯೊಂದಿಗೆ  ಕೇಳಿದರು;ಯಾಕೆ ನೀನು ಮಸೀದಿಗೆ ಹೋಗುತ್ತಿಲ್ಲ?.
ಆವಾಗ ಆತಿಕ ಬೀವಿ ಹೇಳಿದರು;ಜನರು ಹಾಳಾಗಿದ್ದಾರೆ.
ಮಸೀದಿಗೆ ತೆರಳದಿರಲು ಅವರು ಹೇಳಿದ ಕಾರಣ ಜನರು ಹಾಳಾಗಿದ್ದಾರೆ ಎಂಬುವುದಾಗಿದೆ. ಅನುಸರಿಸಬೇಕೆಂದು ಅಲ್ಲಾಹನು ನಮ್ಮಲ್ಲಿ ಆಜ್ಞಾಪಿಸಿದ ನಾಲ್ಕು ಖಲೀಫರುಗಳಲೊಬ್ಬರೂ ಎರಡು ಉಮರ್ ಗಳ ಪೈಕಿ ಒಬ್ಬರೂ ಆದ   ಉಮರ್ (ರ) ಆತಿಕ ಬೀವಿಯ ಪ್ರಸ್ತುತ ಮಾತನ್ನು ಒಪ್ಪಿಕೊಂಡರು.
(ಬಹ್ ಜತುನ್ನುಫೂಸ್ 1/212)


ಉಮರ್(ರ)ಆತಿಕ ಬೀವಿಗೆ ಏಟು ಕೊಟ್ಟ ಪ್ರಸ್ತುತ ಘಟನೆಯನ್ನು ವಹ್ಹಾಬಿಗಳ ಅಂಗೀಕೃತ ನಾಯಕ ಇಬ್ನ್ ಕಸೀರ್ ರ ಅಲ್ ಬಿದಾಯತು ವನ್ನಿಹಾಯದ 6/353ರಲ್ಲೂ ವಿವರಿಸಿದ್ದಾರೆ.

ತಂತ್ರಪೂರ್ವಕ ಆತಿಕ ಬೀವಿಯನ್ನು ಮಸೀದಿಯಿಂದ ತಡೆಯುವ ಉದ್ದೇಶವಾಗಿತ್ತು ಉಮರ್(ರ) ರವರದ್ದು  ಎಂಬುವುದು ಇದರಿಂದ ಬಹಳ ಸ್ಪಷ್ಟ.ಈ ತಂತ್ರ ಪಾಯೋಗಿಕವಾಗಿ ಜಾರಿಗೆ ತರಬೇಕಾದರೆ ವಿವಾಹವಾಗಲೇ ಬೇಕು.
ಕಾರಣ , ಅನ್ಯ ಸ್ತ್ರೀ ಗೆ ದಾರಿಯಲ್ಲಿ ಅವಿತು ಕುಳಿತು ಏಟು ಕೊಡುವಂತಿಲ್ಲ.
ವಿವಾಹವಾದರೆ ತನ್ನ ಪತ್ನಿಗೆ ಏಟು ಕೊಟ್ಟಲ್ಲಿ ಅದರಿಂದ ತೊಂದರೆಯುಂಟಾಗಲಾರದು.ಇದು ಮನಗಂಡ ಉಮರ್ (ರ)ಆತಿಕ ಬೀವಿಯ ಪ್ರಸ್ತುತ ನಿಬಂಧನೆಗೆ ಒಪ್ಪಿಗೆ ಸೂಚಿಸಿದ್ದರು.
ಫಸಾದ್ ಉಂಟಾಗುವ ವೇಳೆ ಸ್ತ್ರೀಯರು ಮಸೀದಿ ಹೋಗಬಾರದೆಂಬ ವಿಶ್ವಾಸವೇ ಆತಿಕ ಬೀವಿಗೆ ಇದ್ದದ್ದು ಎಂಬುವುದು ಇದರಿಂದ ಬಹಳ ವ್ಯಕ್ತ.ಅದರ ನಂತರ ಆತಿಕ ಬೀವಿ ಮಸೀದಿಗೆ ತೆರಳದಿರುವುದೇ ಅದಕ್ಕೆ ಆಧಾರ.
ಫಸಾದ್ ಉಂಟಾಗುವ ಒಂದು ರೂಪವನ್ನು ಉಮರ್ (ರ) ಆತಿಕ ಬೀವಿಗೆ ಮನದಟ್ಟು ಮಾಡಿ ಕೊಡುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ.ಅದರಲ್ಲಿ ಉಮರ್(ರ)ಯಶಸ್ವಿಯಾದರು.


*ಮಂದುವರಿಯುದು.....*


ಇದು ನಿಮಗೆ ಇಷ್ಟವಾದಲ್ಲಿ ಇತರರಿಗೆ ಶೇರ್ ಮಾಡಿರಿ
*ಬೀವಿ ಆತಿಕಾ (ರ)*

ಭಾಗ--3

📝ಮುನೀರ್ ಸಖಾಫಿ, ಸಾಲೆತ್ತೂರು.

_("ಸ್ತ್ರೀಯರನ್ನು ಮಸೀದಿಯಿಂದ ತಡೆಯದಿರಿ" ಎಂಬ ಹದೀಸಿನ ತಾತ್ಪರ್ಯ ಮುಂದಿನ ಭಾಗದಲ್ಲಿ ವಿವರಿಸಲಾಗುವುದು.ಇಂಶಾ ಅಲ್ಲಾಹ್.)_

*ಭಾಗ 0⃣2⃣ ರಲ್ಲಿ ಹೇಳಿದ ಪ್ರಶ್ನೆಗೆ ಉತ್ತರ*

ಒಂದನೇಯ ಪ್ರಶ್ನೆಯ ಉತ್ತರ

ಉಮರ್(ರ) ಪ್ರಸ್ತುತ ನಿಬಂಧನೆ ಅಂಗೀಕರಿಸಲು 2 ಕಾರಣಗಳಿವೆ.
1. *"ಅಲ್ಲಾಹನ ದಾಸಿಯರಾದ ಸ್ತ್ರೀಗಳನ್ನು ಮಸೀದಿಗಳಿಂದ ನೀವು  ತಡೆಯದಿರಿ"*ಎಂಬ ಪ್ರವಾದಿ ವಚನಕ್ಕೆ  ಬಾಹ್ಯ ನೋಟದಲ್ಲಿ ವಿರುದ್ಧವಾಗಬಹುದೇ ಎಂಬ ಭಯದಿಂದ.
ಕಾರಣ, *"ನೀವು ತಡೆಯದಿರಿ"* ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುವಾಗ *"ನಾನು ತಡೆಯುವೆ"* ಎಂದು ಉಮರ್ (ರ) ಹೇಳುವುದು ಪ್ರವಾದಿ ವಚನದ ಗೌರವಕ್ಕೆ ವಿರುದ್ಧವಾಗಿದೆ.

ಅದಕ್ಕೊಂದು ಉದಾಹರಣೆ ನೋಡಿ,
ಇಮಾಮ್ ಮುಸ್ಲಿಂ  (ರ)ಅಬ್ದುಲ್ಲಾಹಿ ಬಿನ್ ಉಮರ್(ರ) ರವರ ಮಗನಾದ ಸಾಲಿಂ  (ರ)ರಿಂದ ವರದಿ ಮಾಡುವ ಒಂದು ಹದೀಸಿನಲ್ಲಿ ಹೀಗಿದೆ;
أن عبد الله بن عمر قال سمعت رسول الله صلى الله عليه وسلم يقول لا تمنعوا نساءكم المساجد إذا استأذنكم إليها قال فقال بلال بن عبد الله والله لنمنعهن قال فأقبل عليه عبد الله فسبه سبا سيئا ما سمعته سبه مثله قط وقال أخبرك عن رسول الله صلى الله عليه وسلم وتقول والله لنمنعهن(مسلم 667)

ಅಬ್ದುಲ್ಲಾಹಿ ಬಿನ್ ಉಮರ್(ರ) ಒಮ್ಮೆ ಹೇಳಿದರು:
*ರಾತ್ರಿ ವೇಳೆ ಸ್ತ್ರೀಯರಿಗೆ ಮಸೀದಿಗೆ ಹೋಗುವುದಕ್ಕೆ ನೀವು ಅನುಮತಿ ನೀಡಿರಿ*  ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದಾರೆ. *ಆಗ ಅವರ* (ಅಬ್ದುಲ್ಲ(ರ)ರವರ) *ಒಬ್ಬ ಪುತ್ರರು ಹೇಳಿದರು;* *ಅಲ್ಲಾಹನಾಣೆ ! ನಾವು ಸ್ತ್ರೀಯರಿಗೆ ಅನುಮತಿ ನೀಡಲಾರೆವು.*
ಸಾಲಿಂ (ರ)ಹೇಳುತ್ತಾರೆ ; *ಆಗ ಅಬ್ದುಲ್ಲ(ರ) ರವರು ಆ ಮಗನನ್ನು ಗಧರಿಸಿದರು.*
"ಅನುಮತಿ ನೀಡಬೇಕೆಂದು" ಅಲ್ಲಾಹನ ಪ್ರವಾದಿವರ್ಯರು  ಹೇಳಿದ್ದಾರೆಂದು ನಾನು ಹೇಳುವಾಗ ಅನುಮತಿ ನೀಡಲಾರೆ ಎಂದು ನೀನು ಹೇಳುತ್ತೀಯಾ ? ಎಂದು ಅವರು ಮಗನೊಂದಿಗೆ ಕೇಳಿದರು"
(ಮುಸ್ಲಿಂ 668).


*ಸ್ತ್ರೀಯರಿಗೆ ಅನುಮತಿ ನೀಡಬೇಕೆಂಬ* ಹದೀಸ್ ತಂದೆ ಹೇಳಿ ಕೊಡುವಾಗ  ಹದೀಸ್ ವಚನದ ಗೌರವಕ್ಕೆ ಕುಂದು ಬರುವಂತೆ *ನಾವು ಒಮ್ಮೆಯೂ ಅನುಮತಿ ನೀಡಲಾರೆವು*  ಎಂದು ಹೇಳಿದಕ್ಕಾಗಿ ಮಾತ್ರ  ಇಬ್ನ್ ಉಮರ್ (ರ) ಮಗನನ್ನು ಗಧರಿಸಿದರು.

ಇಮಾಮ್ ಇಬ್ನ್ ಹಜರ್ (ರ)ರವರ ಮಾತು ನೋಡಿ;
 وكأن السر في ذلك أن بلالا عارض الخبر برأيه ولم يذكر علة المخالفة
(فتح الباري2/237)

*ಬಿಲಾಲ್ (ರ)*(ಪ್ರಸ್ತುತ ಮಾತು ಹೇಳಿದ ಇಬ್ನ್ ಉಮರ್ (ರ)ರವರ ಪುತ್ರನ ಹೆಸರು: ಲೇ)
*ತಡೆಯಲಿಕ್ಕಿರುವ ಕಾರಣ ವಿವರಿಸದೆ  ಹದೀಸನ್ನು ಕಡೆಗಣಿಸಿದರು   ಎಂಬ ಏಕ ಕಾರಣಕ್ಕೆ  ಗಧರಿಸಿದರು*
(ಫತ್ ಹುಲ್ ಬಾರಿ2/237)

ಇಬ್ನ್ ಉಮರ್ (ರ) ರವರು ಮಗನನ್ನು ಗಧರಿಸಿದ ಆ ಪ್ರಯೋಗದಿಂದಲೇ ಇದು ಬಹಳ ಸ್ಪಷ್ಟವಾಗಿದೆ.

ಇಬ್ನ್ ಹಜರ್ (ರ)ನಂತರ ಬರೆಯುತ್ತಾರೆ
وإنما أنكر عليه ابن عمر لتصريحه بمخالفة الحديث وإلا فلو قال مثلا إن الزمان قد تغير وإن بعضهن ربما ظهر منه قصد المسجد وإضمار غيره لكان يظهر أن لا ينكر عليه(فتح الباري)

 ಹದೀಸಿನ ಬಾಹ್ಯ ನೋಟಕ್ಕೆ  ವಿರುದ್ಧವಾಗಿ ತೋರುವಂತೆ ಮಾತಾಡಿದ್ದಕ್ಕೆ ಮಾತ್ರ ಇಬ್ನ್ ಉಮರ್ (ರ)ಮಗನನ್ನು ಗಧರಿಸಿದ್ದಾರೆ. ಹೊರತು ಕಾಲ ಬದಲಾಗಿಯೆಂದೂ ತಪ್ಪು ಕಲ್ಪನೆಗಳನ್ನು ಮನದಲ್ಲಿಟ್ಟು ಇಂದು ಸ್ತ್ರೀಯರು ಮಸೀದಿಗೆ ಹಾಜಾರಾಗುವರು ಎಂಬ  ಕಾರಣವನ್ನು  ವಿವರಿಸಿ ಹೇಳಿರುತ್ತಿದ್ದರೆ ಯಾವ ಕಾರಣಕ್ಕೂ ಇಬ್ನ್ ಉಮರ್ (ರ) ಮಗನನ್ನು ಗಧರಿಸುತ್ತಿರಲಿಲ್ಲ ಎಂಬುವುದು ಬಹಳ ಸ್ಪಷ್ಟ.
(ಫತ್ ಹುಲ್ ಬಾರಿ 2/237)

ಸ್ತ್ರೀಯರು ಮಸೀದಿಗೆ ಹಾಜರಾಗಬೇಕೆಂದಿಲ್ಲ ಎಂಬ ವಿಷಯದಲ್ಲಿ ಇಬ್ನ್ ಉಮರ್ (ರ)ಮತ್ತು ಬಿಲಾಲ್(ರ)ಒಮ್ಮತಾಭಿಪ್ರಾಯದವರಾಗಿದರೆಂದು ಇದರಿಂದ ಬಹಳ ಸ್ಪಷ್ಟ.
ಆತಿಕ ಬೀವಿಯ ಮಸೀದಿ ಪ್ರವೇಶದ ಈ  ಹದೀಸನ್ನು ಮತ್ತು ಸ್ತ್ರೀಯರಿಗೆ ಅವರವರ ಮನೆಯೇ ನಮಾಝಿಗೆ ಉತ್ತಮವೆಂಬ ಹದೀಸನ್ನೂ ವರದಿ ಮಾಡಿದ್ದು ಇಬ್ನ್ ಉಮರ್(ರ)ರವರೇ ಆಗಿದ್ದಾರೆಂಬುದನ್ನು ಮರೆಯಬಾರದು.

 ಬುಖಾರಿಯ ವ್ಯಾಖ್ಯಾನ ಗ್ರಂಥವಾದ ಲಾಮಿಉದ್ದರಾರಿಯಲ್ಲಿ ಈ ರೀತಿ ಕಾಣಬಹುದು.
والأوجه هو التحاشي عن صورة المعارضت بقول سيد ولد آدم، والإشتراط أيض يكون لأجل ذلك (لامع الدراري: ١٣/٢
ಆದಂ ಸಂತತಿಗಳ ನಾಯಕರ ಮಾತಿಗೆ ವಿರುದ್ಧವಾಗುವುದನ್ನು ತಪ್ಪಿಸಲಿಕ್ಕಾಗಿ ಉಮರ್ (ರ) ಪತ್ನಿಯನ್ನು ತಡೆಯಲಿಲ್ಲ ಎಂಬುವುದಾಗಿದೆ ಅದರ ನ್ಯಾಯ. ಪ್ರಸ್ತುತ ನಿಬಂಧನೆ ಅಂಗೀಕರಿಸಲು ಇದುವೇ ಕಾರಣ.(ಲಾಮಿಉದ್ದರಾರಿ2/13)

ಒಟ್ಟಿನಲ್ಲಿ ವಿವಾಹದ ಸಂದರ್ಭಉಮರ್(ರ) ಪ್ರಸ್ತುತ ನಿಬಂಧನೆ ಅಂಗೀಕರಿಸಲು ಕಾರಣ  ಪ್ರವಾದಿ ವಚನದ ಮೇಲಿನ ಅತಿಯಾದ ಗೌರವದಿಂದ ಮಾತ್ರವಾಗಿತ್ತು. ಹೊರತು ಸ್ತ್ರೀಯರು ಮಸೀದಿ ಹೋಗುವ ವಿಷಯದಲ್ಲಿ ಉಮರ್ (ರ)ರಿಗೆ ಇಷ್ಟವಿರಲಿಲ್ಲ ಎಂಬುವುದು ಈ ವಿವರಣೆಯಿಂದ ತಿಳಿಯಿತು.

*ಇನ್ನೊಂದು ಉತ್ತರ ಮುಂದಿನ ಭಾಗದಲ್ಲಿ*




ಇದು ನಿಮಗೆ ಇಷ್ಟವಾದಲ್ಲಿ ಇತರರಿಗೆ ಶೇರ್ ಮಾಡಿರಿ.
*ಬೀವಿ ಆತಿಕಾ (ರ)*

ಭಾಗ--2

📝ಮುನೀರ್ ಸಖಾಫಿ, ಸಾಲೆತ್ತೂರು.


ಝುಬೈರ್ ಬಿನ್ ಅವ್ವಾಮ್ (ರ) ರವರ ವಫಾತ್ ನ ನಂತರ ಅಲಿಯ್ಯ್ (ರ) ರವರು ಆತಿಕ ಬೀವಿಯನ್ನು ವಿವಾಹ ಪ್ರಸ್ತಾಪ ಮುಂದಿಟ್ಟಾಗ ನಾನು ಇನ್ನು ವಿವಾಹವಾಗಲಾರೆ ಎಂದು ಆತಿಕ ಬೀವಿ ಹೇಳಿದರು.
ಆವಾಗ ಅಲಿಯ್ಯ್ (ರ) ನನಗೆ ಹುತಾತ್ಮನಾಗಲು ಭಯಕೆಯಿದೆ.ನಿಮ್ಮನ್ನು ವರಿಸಿದವರೆಲ್ಲಾ ಹುತಾತ್ಮರಾಗುತ್ತಾರೆ.ಅದಕ್ಕೋಸ್ಕರ ನಾನು ಈ ಪ್ರಸ್ತಾಪ ನಿಮ್ಮ ಮುಂದಿಟ್ಟೆ ಎಂದು ಅಲಿಯ್ಯ್ (ರ) ಹೇಳಿದ್ದಾಗಿ ಕೆಲವು ಗ್ರಂಥಗಳಲ್ಲಿ ಕಾಣಬಹುದಾಗಿದೆ.

ಅಲಿಯ್ಯ್ (ರ) ಆತಿಕ ಬೀವಿಯನ್ನು ವಿವಾಹವಾಗಿಲ್ಲ.
ಅಲಿಯ್ಯ್ (ರ) ರ ಪುತ್ರ ಹಸನ್ (ರ) ಆತಿಕ ಬೀವಿಯನ್ನು ವಿವಾಹವಾಗಿದ್ದಾಗಿ ಕೆಲವು ಇಮಾಮರುಗಳು ವಿವರಿಸಿದ್ದಾರೆ.

ಆತಿಕ (ರ)ರವರನ್ನು  ಉಮರ್ (ರ)ರವರು ವಿವಾಹವಾಗಬೇಕಾದರೆ 3 ನಿಬಂದನೆಗಳನ್ನು ಇಟ್ಟಿದ್ದರು.
1.ನನಗೆ ಹೊಡೆಯಬಾರದು.
2.ಧಾರ್ಮಿಕವಾದ ಯಾವುದೇ ಹಕ್ಕುಗಳಿಂದ ತಡೆಯಬಾರದು.
3.ನಮಾಜಿಗಾಗಿ ಮಸೀದಿಗೆ ಹೋಗುವುದಕ್ಕೆ ಅನುಮತಿ ನೀಡಬೇಕು.
ಈ ಮೂರು ನಿಬಂಧನೆಗಳನ್ನು ಉಮರ್ (ರ) ಅಂಗೀಕರಿಸಿದರು.
ಇಮಾಮ್ ಬುಖಾರಿ (ರ) ವರದಿ ಮಾಡಿದ ಹದೀಸಿನಲ್ಲಿ ಈ ರೀತಿ ಕಾಣಬಹುದು,

عن ابن عمر قال : كانت امرأة لعمر تشهد صلاة الصبح والعشاء في الجماعة في المسجد ، فقيل لها : لِمَ تخرجين وقد تعلمين أن عمر يكره ذلك ويغار ؟ قالت : وما يمنعه أن ينهاني ؟ قال : يمنعه قول رسول الله صلى الله عليه وسلم : لا تمنعوا إماء الله مساجد الله

ಇಬ್ನ್ ಉಮರ್ (ರ) ವರದಿ;
ಉಮರ್ (ರ) ರವರ ಒಂದು ಪತ್ನಿ ಸುಬಹಿ ನಮಾಝಿಗೆ ಮತ್ತು ಇಶಾ ನಮಾಝಿಗೆ ಮಸೀದಿಯಲ್ಲಿ ನಡೆಯುವ ಜಮಾಅತ್ ಗೆ ಹಾಜರಾಗುತ್ತಿದ್ದರು.
ಅದರ ಕುರಿತು ಆ ಪತ್ನಿಯೊಂದಿಗೆ ಕೇಳಲ್ಪಡಲಾಯಿತು.
ನೀವು ಯಾಕೆ ಮಸೀದಿಗೆ ಹೋಗುತ್ತೀರಿ?
ಉಮರ್ (ರ)ರಿಗೆ ಅದರಲ್ಲಿ ಇಷ್ಟವಿಲ್ಲವೆಂದು ನಿಮಗೆ ತಿಳಿದಿಲ್ಲವೇ?
ಹಾಗಾದರೆ ಉಮರ್ (ರ)ರವರು ನನ್ನನ್ನು ಯಾಕೆ ಅದರಿಂದ ತಡೆಯುತ್ತಿಲ್ಲ ? ಎಂದು ಆ ಪತ್ನಿ ಮರುಪ್ರಶ್ನೆ ಹಾಕಿದರು.
"ಅಲ್ಲಾಹನ ದಾಸಿಯರಾದ ಸ್ತ್ರೀಯರನ್ನು ಮಸೀದಿಗಳಿಂದ ನಿವು  ತಡೆಯದಿರಿ" ಎಂಬ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ನಿರ್ದೇಶವಿರುವುದರಿಂದ ತಡೆದಿಲ್ಲವೆಂದು ಪ್ರತ್ಯುತ್ತರಿಸಲಾಯಿತು.
(ಬುಖಾರಿ 1/416)

ಇಲ್ಲಿ ಗಮನಿಸಬೇಕಾದ 3 ಕಾರ್ಯಗಳಿವೆ.
1.ಉಮರ್ (ರ) ಆತಿಕ ಬೀವಿಯನ್ನು ವಿವಾಹವಾಗುವಾಗ "ನನ್ನ  ಮಸೀದಿ ಪ್ರವೇಶವನ್ನು ತಡೆಯಬಾರದೆಂಬ" ನಿಬಂಧನೆಯನ್ನು ಯಾಕೆ ಅಂಗೀಕರಿಸಿದರು?
2.ಶರೀಅತ್ ನಿಯಮಗಳನ್ನು ಅಕ್ಷರಸ ಪಾಲಿಸಿದ್ದ ಉಮರ್ (ರ)ರಿಗೆ ಪತ್ನಿ ಮಸೀದಿಗೆ ಹೋಗುವುದರಲ್ಲಿ  ಇಷ್ಟವಿಲ್ಲದಿದ್ದರೂ  ಪತ್ನಿಯ ಮಸೀದಿ ಪ್ರವೇಶವನ್ನು ಯಾಕೆ ತಡೆದಿಲ್ಲ?.
3. "ಸ್ತ್ರೀಯರಿಗೆ ಅವರವರ ಮನೆಯೇ ನಮಾಝಿಗೆ ಉತ್ತಮ" ವೆಂಬ ಪ್ರವಾದಿ ವಚನ ಆತಿಕ (ರ)ಗೆ ತಿಳಿದಿಲ್ಲವೇ?

*ಉತ್ತರ ಮುಂದಿನ ಭಾಗದಲ್ಲಿ*
*ಬೀವಿ ಆತಿಕಾ (ರ)*

ಭಾಗ--1

📝ಮುನೀರ್ ಸಖಾಫಿ, ಸಾಲೆತ್ತೂರು.

ಸ್ವಹಾಬೀ ವನಿತೆಯಾದ ಆತಿಕ ಬೀವಿ (ರ) ರನ್ನು ನಮಾಜಿಗಾಗಿ ಮಸೀದಿ ಹೋದ ಬಗ್ಗೆ ವಹ್ಹಾಬಿಯೊಬ್ಬ ಬರೆದುದನ್ನು ನೋಡಿ ಈ ಲೇಖನ ಬರೆಯಲು ಪ್ರಾಂಬಿಸಿದ್ದೇನೆ.
ಆತಿಕ ಬೀವಿ ಯಾರು?
ಅವರು ಮಸೀದಿಗೆ ಯಾವಾಗ ಹೋದದ್ದು?
ನಂತರ ಅವರು ಮಸೀದಿಗೆ ಹೋಗದಿರಲು ಕಾರಣವೇನು?
ನನ್ನನ್ನು ನೀವು ಮದುವೆಯಾದಲ್ಲಿ ಮಸೀದಿಗೆ ನಮಾಝಿಗೆ ಹೋಗಲು ಅನುಮತಿ ನೀಡಬೇಕೆಂದು ಹೇಳಿಯೂ  ಉಮರ್ (ರ) ಅವರನ್ನು ವಿವಾಹವಾಗಲು ಕಾರಣವೇನು?
ಸತ್ಯಕ್ಕೆ ಬೇಕಾಗಿ ಜೀವನವನ್ನೇ ಸಮರ್ಪಿಸಿದ ಉಮರ್ (ರ) ಅವರ ಮಸೀದಿಯ ನಮಾಜು ಅನುಮತಿಸಿದ್ದರೇ?
ಮುಂತಾದ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಅತ್ಯಮೂಲ್ಯವಾದ ಲೇಖನವಾಗಿದೆ ಇದು.
ಇದರ ಎಲ್ಲಾ ಭಾಗಗಳನ್ನು ಓದುಗರು ಗಮನದಲ್ಲಿಟ್ಟು ಓದಬೇಕಾಗಿ ವಿನಂತಿ.

*ಆತಿಕಾ (ರ)*


ತಂದೆ :ಅಂರು ಬಿನ್ ನುಫೈಲ್
ತಾಯಿ:ಉಮ್ಮು ಕುರ್ ಝ್.

ಪತಿ:
*ಒಂದನೇ ಪತಿ  ಅಬ್ದುಲ್ಲ (ರ).* ಇವರು ಸಿದ್ದೀಖ್ (ರ) ರವರ ಪುತ್ರರು.

ಆತಿಕ (ರ) ಅತೀ ಸುಂದರಿಯಾಗಿದ್ದರು.ಪತ್ನಿಯ ಸೌಂಧರ್ಯದಲ್ಲಿ ಆಕರ್ಷಿತನಾಗಿ ಪತಿ ಯಾದ ಅಬ್ದುಲ್ಲ (ರ) ಯುದ್ಧಕ್ಕೆ ಹೋಗುವುದು ಕೂಡಾ ಮರೆತು ಬಿಟ್ಟರು.
ಈ ಕಾರಣದಿಂದ ಸಿದ್ದೀಖ್ (ರ) ರವರು ಮಗನಲ್ಲಿ ಆತಿಕ (ರ) ತಲಾಖ್ ಹೇಳುವಂತೆ ಆಞ್ಞಾಪಿಸಿದರು.ತಂದೆಯ ಮಾತಿಗೆ ಬೆಲೆ ಕೊಟ್ಟು ಅಬ್ದುಲ್ಲ(ರ)ರವರು ಆತಿಕ (ರ) ರನ್ನು ತಲಾಖ್ ಮಾಡಿದರು.ಆದರೆ ಮಗನಿಗೆ ತಲಾಖ್ ಹೇಳಲ್ಪಟ್ಟ ಆತಿಕ (ರ) ರದೇ ನೆನಪು ಎಂದು ತಂದೆಗೆ ಮನವರಿಕೆಯಾದಾಗ ಪುನಃ ಪತ್ನಿಯಾಗಿ ಸ್ವೀಕರಿಸುವಂತೆ ಸೂಚಿಸಿದರು.
ತಾಯಿಫ್ ನಲ್ಲಿ ಒಂದು ಯುದ್ಧವುಂಟಾದಾಗ ಅಬ್ದುಲ್ಲ(ರ) ರವರು ಆ ಯುದ್ಧದಲ್ಲಿ ಮರಣಹೊಂದಿದರು.
*ನಂತರ ಆತಿಕ (ರ) ರವರನ್ನು ಝೈದ್ ಬಿನ್ ಖತ್ತಾಬ್ ವಿವಾಹವಾದರು.* ಅವರು ಯಮಾಮ ಯುದ್ಧದಲ್ಲಿ ಶಹೀದ್ ಆದರು.

*ನಂತರ ಅವರನ್ನು ಉಮರ್ (ರ) ವಿವಾಹವಾದರು.*

*ಉಮರ್(ರ) ರವರ ವಫಾತ್ ನಂತರ ಝುಬೈರ್ ಬಿನ್ ಅವ್ವಾಂ (ರ) ಅವರನ್ನು ವಿವಾಹವಾದರು.*
ಅವರು ಮಕ್ಕಾದಿಂದ ಮದೀನಾಗೆ ಯಾತ್ರೆ ಹೋಗುವಾಗ ಧಾರಿ ಮಧ್ಯೆ ಅವರನ್ನು ಕೊಲೆಗೆಯ್ಯಲಾಯಿತು.

ಆತಿಕ (ರ)ರನ್ನು ವರಿಸಿದ ನಾಲ್ಕು ಮಹಾತ್ಮರೂ ಶಹೀದ್ ಆದರು.
ಆದುದರಿಂದಲೇ ಆ ಕಾಲದಲ್ಲಿ ಒಂದು ಮಾತು ಪ್ರಚಲಿತದಲ್ಲಿತ್ತು.
من أراد الشهادة فليتزوج بعاتكة بنت نفيل".
*ರಕ್ತ ಸಾಕ್ಷಿಯಾಗಲು ಆಸೆಯಿರುವವರು ಆತಿಕ ಬೀವಿಯನ್ನು ವರಿಸಿರಿ*
(ನೋಡಿರಿ ಇಮಾಂ ಇಬ್ನ್ ಹಜರ್ (ರ) ರವರ  ಅಲ್ ಇಸ್ವಾಬ 2/107)


*ಮುಂದುವರಿಯುವುದು*

ಇದು ನಿಮಗೆ ಇಷ್ಟವಾದಲ್ಲಿ ಇತರರಿಗೆ ಶೇರ್ ಮಾಡಿ
💫💫💫💫💫💫💫💫💫💫💫💫
*ನಮಾಝಿನ* *ಬಳಿಕ* *ಕೂಟು* *ದುಆ*
🍀🍀🍀🍀🍀🍀🍀🍀🍀🍀🍀🍀

*﷽*

*ಭಾಗ---0⃣7⃣*

_📝 *ಮುನೀರ್ ಸಖಾಫಿ ಸಾಲೆತ್ತೂರು.*_

ಇಮಾಂ ನಸಾಈ ವರದಿ ಮಾಡಿದ ಹದೀಸ್ ನೋಡಿ;
 عن عطاء بن مروان عن أبيه أن كعبا حلف له بالله الذي فلق البحر لموسى إنا لنجد في التوراة أن داود نبي الله كان إذا انصرف من صلاته قال اللهم أصلح لي ديني الذي جعلته لي عصمة وأصلح لي دنياي التي جعلت فيها معاشي الحديث وفي آخره قال عطاء: وحدثني كعب أن صهيبا حدثه أن محمدا صلى الله عليه وسلم كان يقولهن عند إنصرافه من صلاته"،
ಕಅಬ್ (ರ)ಅಲ್ಲಾಹನ ಹೆಸರಲ್ಲಿ ಆಣೆ ಹಾಕಿ ಹೇಳುತ್ತಾರೆ, ಪ್ರವಾದಿ ಮೂಸಾ ಅಲೈಹಿಸ್ಸಲಾಮರ ತೌರಾತ್ ನಲ್ಲಿ  ದಾವೂದ್ ಅಲೈಹಿಸ್ಸಲಾಂ ರವರ ಬಗ್ಗೆ  "ಅವರು ನಮಾಝಿನಿಂದ ವಿರಮಿಸಿದರೆ ಅಲ್ಲಾಹುಮ್ಮ ಅಸ್ಲಿಹ್ ಲೀ ದೀನೀ ಅಲ್ಲಝೀ ಜಅಲ್ತಹೂ ಲೀ ಇಸ್'ಮತನ್,
 ವಅಸ್ಲಿ'ಹ್ ಲೀ ದುನ್ಯಾಯ  ಅಲ್ಲತೀ ಜಅಲ್ತ ಫೀಹಾ  ಮಾಹಾಶೀ ,
ಅಲ್ಲಾಹುಮ್ಮ ಇನ್ನೀ ಅಊದ್ಸು ಬಿರಿಳಾಕ ಮಿನ್ ಸುಖ್'ತಿಕ  ವ ಅಊದ್ಸು ಬಿಅಫ್'ವಿಕ ಮಿನ್ ನಿಖ್'ಮತಿಕ ವಅಊದ್ಸು  ಬಿಕ ಮಿಂಕ ಲಾ ಮಾನಿಅ ಲಿಮಾ ಅಯ್'ತೈತ  ವಲಾ ಮಾನಿಅ ಲಿಮಾ ಮನಅ್'ತ
ವಲಾ ಯಂಫಹು ದ್ಸಲ್ ಜದ್ದಿ ಮಿಂಕಲ್ ಜದ್ದು ಎಂದು ಹೇಳುತ್ತಿದ್ದರು.
ಕಅಬ್ (ರ) ಹೇಳುತ್ತಾರೆ ;ಅವಾಗ ಸುಹೈಬ್ (ರ) ಹೇಳಿದರು,ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೂ ಕೂಡಾ ನಮಾಜಿನಿಂದ ವಿರಮಿಸಿದರೆ ಇದೇ ರೀತಿ ಹೇಳುತ್ತಿದ್ದರು.
(ಸುನನುನ್ನಸಾಈ 3/73)
*--------------------------------------------*
عَن كعب بن عجرة قال:
قال رَسُولِ اللَّهِ صلى اللَّهُ عَلَيْه
ِ وَسَلَّمَ قَالَ :مُعَقِّبَاتٌ لا يَخِيب ُقَائِلُهُنََّّ  سبح الله في دبر كل صلاة: َثلاثاً وَثَلاثُين، ويحمده َثَلاثٌاً وَثَلاثُينَ ، ً ويكبره َأَرْبَعٌاًً وَثَلاثُين (نسائي 3/75)
ಕಅ್'ಬ್ ಬಿನ್ ಉಜ್ರತ್ (ರ)ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು,
ನಮಾಝಿನ ನಂತರ ಹೇಳಬೇಕಾದ ಕೆಲವು ಝಿಕ್ರ್ ಗಳಿವೆ.ಅವುಗಳನ್ನು ಪಠಿಸುವವರನ್ನು ಅಲ್ಲಾಹನು ನಿರಾಶೆಗೊಳಿಸಲಾರ.
33 ಸಲ ಸುಬ್ ಹಾನಲ್ಲ ,
33 ಸಲ ಅಲ್ ಹಂದುಲಿಲ್ಲಾಹ್,
33 ಸಲ ಅಲ್ಲಾಹು ಅಕ್ಬರ್ ಎಂದಾಗಿದೆ ಅದು.
(ನಸಾಈ 3/75)
*-------------------------------------------*

*ಮುಂದುವರಿಯುವುದು*


📝 *ಮುನೀರ್ ಸಖಾಫಿ, ಸಾಲೆತ್ತೂರು.*_
🍀🍀🍀🍀🍀🍀🍀🍀🍀
➖➖➖➖➖➖➖➖➖

ಸೌದಿಯಲ್ಲಿ ಎಸ್ಸೆಸ್ಸೆಫ್ ಧ್ವಜ!



ಸೌಧಿಅರೇಬಿಯಾದ ಜಿದ್ದಾದಲ್ಲಿ ಎಸ್ಸೆಸ್ಸೆಫ್ ನ ಧ್ವಜವನ್ನು ಹೋಲುವಂತವ ಫ್ಲಾಗ್ ಗೋಚರಿಸಿದಾಗ ಎಸ್ಸೆಸ್ಸೆಫ್ ನ್ನು ಜೀವನದಂತೆ ಪ್ರೀತಿಸುವ ಕಾರ್ಯಕರ್ತ ಸಂಭ್ರಮಿಸಿದ್ದು ಸುಳ್ಳಲ್ಲ.
ಜಗತ್ತಿನ ಯಾವುದೇ ರಾಷ್ಟ್ರಗಳು ಒಂದು ದೇಶದ ಧಾರ್ಮಿಕ ಸಂಘಟನೆಯೊಂದರ ಫ್ಲಾಗನ್ನು ಲಹಾಕಲಾರದೆಂದು ಅವನಿಗೊತ್ತು.
ಆದರೂ ತಾನು ಅತಿಯಾಗಿ ಪ್ರಿತೀಸುವ ಸಂಘಟನೆಯ ಫ್ಲಾಗೊಂದರ ಅದೇ ಕಲರ್ಸ್ ಇರುವ ಬಾವುಟವೊಂದನ್ನು ಕಾಣುವಾಗ ಅವನು ಹೆಮ್ಮೆ ಪಡುವುದು ಸಹಜವೇ ಆಗಿದೆ.
ಒಬ್ಬ ಅರಬಿ ವ್ಯಕ್ತಿ ಮಲಯಾಳ ಬಾಷೆಯಲ್ಲಿ ಹಾಡು ಹಾಡಿದರೆ ನಾವೆಷ್ಟು ಸಂಭ್ರಮಿಸುತ್ತೇವೆ.
ಅಂದ್ರೆ ಅದು ಅವನ ಮಾದರಿ ಭಾಷೆಯೊಂದಿಗಿನ ಪ್ರೀತಿ!

ಅದೇ ಅರಬಿ ಕನ್ನಡದಲ್ಲಿ ಭಾಷಣ ಮಾಡಿದರೆ ನಾವು ಅದನ್ನು ಎಲ್ಲಾ ಕಡೆ 'ಕನ್ನಡಿಗ ಅರಬಿ' ಎಂದು ಫುಲ್ ಪ್ರಚಾರ ಕೊಡುತ್ತೇವೆ.
ಆ ಅರಬಿ ಕನ್ನಡಿಗ/ ಮಲಯಾಳಿ ಅಲ್ಲವೆಂಬ ಸ್ಪಷ್ಟ ಮಾಹಿತಿಯಿದ್ದರೂ  ನಾವು ನಮ್ಮ ಬಾಷೆ ಯ್ಯೂಝ್ ಮಾಡಿದ್ದಕ್ಕಾಗಿ ಸಂಭ್ರಮಿಸುತ್ತೇವೆ.
ಅದೆಲ್ಲಾ ಮಾಮೂಲು ವಿಷಯ.
ಹಾಗಾಗಿ ಯಾವುದಾದರೂ ಒಬ್ಬ ಕಾರ್ಯಕರ್ತ ಜಿದ್ದಾದಲ್ಲಿರುವ ಎಸ್ಸೆಸ್ಸೆಫ್ ನ ಭಾವುಟವನ್ನು ಹೋಲುವ ಸಿಯೇರಾ ಲಿಯೋನ್ ನ ಫ್ಲಾಗ್ ನೋಡಿ ಸಂಭ್ರಮಿಸಿದ್ದರೆ ಅದು ಅವನ ಶಿಕ್ಚಣದ ಕೊರತೆಯೆಂದು ಜರಿದು ಕೋಪತಣಿಸಬೇಕಾದ ಅಗತ್ಯ ಇಲ್ಲ.
ಅಲ್ಲದಿದ್ದರೂ ಊರಿನಲ್ಲಿ ಎಸ್ಸೆಸ್ಸೆಫ್ ನ್ನು ಕಂಡರೆ ಉರಿಯುವವನಿಗೆ ಗಲ್ಫ್ ನಲ್ಲಿಯೂ ಅದೇ ಬಾವುಟ ಕಂಡರೆ ಉರಿಯದೆ ಇರುತ್ತಾ?
[2:53 PM, 10/3/2017] Gafooru Bayar: ಮೌಲವಿಗಳು ಮತ್ತು ಸೌದೀ ಇಮಾಮ್ ಗಳು.... ಏನಿದು ದ್ವಂದ್ವ ನಿಲುವು ❓
------------------------------

ಒಬ್ಬ ಸಳಪಿಯ ಸಂಶಯ ಸುನ್ನಿ ಮುಸ್ಲಿಯಾರ್ ಗಳು ಸಲಪಿಗಳಿಗೆ ಸಲಾಂ ಹೇಳಬಾರದು, ಅವರನ್ನ ಇಮಾಂ ಮಾಡಿ ನಮಾಝ್ ಮಾಡಬಾರದೆಂದು ಹೇಳುತ್ತಾ ಇಲ್ಲಿನ ಮುಗ್ಧ ಸುನ್ನಿಗಳನ್ನು ವಂಚಿಸುತ್ತಿದ್ದಾರೆ.
ಅದೇ ಸಮಯ ಹಜ್ಜ್ ಉಮ್ರಾ ಮಾಡಲು ಮಕ್ಕಾ ಮದೀನಾ ಹೋದರೆ ಅಲ್ಲಿನ ಇಮಾಮ್ ಗಳ ಹಿಂದೆ ನಿಂತು ನಮಾಝ್ ಮಾಡುತ್ತಾರೆ ಆ ಇಮಾಂಗಳು ಸಲಪಿ ಅಲ್ಲವೇ❓

ಉತ್ತರ ಇಲ್ಲಿದೆ ನೋಡಿ.....👇👇

ಇಲ್ಲಿನ ಸಳಪಿಯಾದಿ ಮೌಲವಿಗಳಿಗೆ ನಾವು ಸಲಾಂ ಹೇಳಿದಿರಲು ಕಾರಣ ಅವರು ಮದೀನಾದ ಮುತ್ತು ನೆಬಿಯವರ ಹಸಿರು ಖುಬ್ಬಾದ ದರ್ಗಾವನ್ನು ಹೊಡೆದುರುಳಿಸಿ ಧ್ವಂಸಗೆಯ್ಯಲು ಫತ್ವಾ ನೀಡುತ್ತಾರೆ.!

🔴ಆದರೆ ಮಕ್ಕಾ ಹರಂ ನ ಯಾವುದೇ ಇಮಾಂ ಗಳು ಇದುವರೆಗೆ ಆ ರೀತಿ ಫತ್ಬಾ ನೀಡಲಿಲ್ಲ.

2) ಇಲ್ಲಿನ ಸಳಪಿಗಳು ತರಾವೀಹ್ ಎಂಟು ನಿರ್ವಹಿಸಲಿಕ್ಕೆ ಫತ್ವ ಕೊಟ್ಟು ಇಸ್ಲಾಮನ್ನು ವಿಕೃತ ಗೊಳಿಸಿದ್ದಾರೆ.

🔴ಆದರೆ ಮಕ್ಕಾ ಮದೀನಾ ಹರಂ ಇಮಾಮ್ ಗಳು ಸುನ್ನೀ ಆಶಯವಾದ ಇಪ್ಪತ್ತು ರಕಾತ್ ತರಾವೀಹ್ ನಮಾಜು ನಿರ್ವಹಿಸುತ್ತಾ ಸುನ್ನೀ ಆಶಯ ಪ್ರಚಾರ ಮಾಡುತ್ತಾರೆ.

3) ಇಲ್ಲಿನ ಸಳಪಿಗಳು ನಮಾಝ್  ನಲ್ಲಿ ಕೈ ಎದೆಗೆ ಕಟ್ಟಿ ಇಸ್ಲಾಂ ಕಲಿಸದ ಕಾರ್ಯಕ್ಕೆ ಫತ್ವಾ ಕೊಡುತ್ತಾರೆ.

🔴ಆದರೆ ಮಕ್ಕಾ ಮದೀನಾ ಇಮಾಂಗಳು ಸುನ್ನಿಗಳ ಹಾಗೆ ಎದೆ ಹೊಕ್ಕುಳದ ಮಧ್ಯೆ ಕೈ ಕಟ್ಟಿ ಸುನ್ನಿಸಂ ಗೆ ಒತ್ತು ಕೊಡುತ್ತಾರೆ.

4) ಇಲ್ಲಿನ ಸಳಪಿಗಳು ಶುಕ್ರವಾರ ಜುಮಾ ಗೆ ಒಂದೇ ಬಾಂಗ್ ಕೊಟ್ಟು ಮುಸ್ಲಿಂ ಉಮ್ಮತ್ ನ ಇಜ್ಮಾಅ್ (ಒಗ್ಗಟ್ಟು) ಗೆ ವಿರುದ್ಧ ಫತ್ವಾ ಹೊರಡಿಸುತ್ತಾರೆ.

🔴 ಆದರೆ ಮಕ್ಕಾ ಮದೀನಾ ಇಮಾಂ ಗಳು ಶುಕ್ರವಾರ ಜುಮಾಗೆ ಸುನ್ನೀ ಆಶಯವಾದ ಎರಡು ಬಾಂಗ್ ಕೊಡುವಂತೆ ಆದೇಶಿಸುತ್ತಾರೆ.

5) ಇಲ್ಲಿನ ಸಲಪಿ ಗಳು ಜುಮಾ ಖುತುಬಾ ಅರ್ಥವಾಗುವ ಭಾಷೆಯಲ್ಲಾಗ ಬೇಕೆಂದು ಹಠ ಹಿಡಿದು ಮುತ್ತು ನೆಬಿಯವರ ಅರಬಿ ಖುತುಬಾದ ವಿರುದ್ಧ ಫತ್ವಾ ಕೊಡುತ್ತಾರೆ.

🔴ಆದರೆ ಮಕ್ಕಾ ಮದೀನಾದಲ್ಲಿ ವಿಶ್ವದ ಎಲ್ಲಾ ಜನರು ಸೇರುವುದರಿಂದ ಎಟ್ಲಿಸ್ಟ್ ಹಜ್ಜ್ ವೇಳೆಯಲ್ಲಾದರೂ ಎಂಬತ್ತು ಶೇಖಡಾ ಜನರಿಗೆ ಅರ್ಥವಾಗಲಿಕ್ಕಾಗಿ
ಹರಂ ಇಮಾಂ  ಇಂಗ್ಲೀಷ್ ಭಾಷೆಯಲ್ಲಿ ಖುತುಬಾ ಓದುವುದೇ ಇಲ್ಲ.!
ಸುನ್ನೀ ಆಶಯವಾದ ಅರಬಿಯಲ್ಲೇ ಖಿತುಬಾ ನಿರ್ವಹಿಸಿ ಸೇರಿದ ವಿಶ್ವದ ಎಲ್ಲಾ ಜನರಿಗೆ ಸುನ್ನೀಸಂ ಸತ್ಯವೆಂದು ಸಾರುತ್ತಾರೆ.

6) ಮುತ್ತು ನೆಬಿಯವರ ಪತ್ನಿಯರಾದ ಆಯಿಶಾ (ರ) ಸಹಿತ ಯಾರಿಗೂ ಪರಿಚಯವಿಲ್ಲದ ಪುತ್ರಿ ಫಾತಿಮಾ (ರ) ಸಹಿತ ಯಾರಿಗೂ ಗೊತ್ತಿಲ್ಲದ ನೂತನ ಆಚಾರ  ಜುಮಾ ಜಮಾತ್ ಗಾಗಿ ಮಹಿಳೆ ಮಸೀದಿಗೆ ಎಂಟ್ರಿ ಕೊಡುಬೇಕೆಂಬ ಇಸ್ಲಾಂ ವಿರುದ್ಧ ಫತ್ವಾ ಇಲ್ಲಿನ ಸಲಪಿಗಳು ಕೊಡುತ್ತಾರೆ.!

🔴ಆದರೆ ಮಕ್ಕಾ ಮದೀನಾ ಹರಂ ಉಸ್ತುವಾರಿ ನೋಡಿಕೊಳ್ಳುವ ಗ್ರಾಂಡ್ ಇಮಾಂ ಶೈಖ್ ಸುದೈಸಿ ಮಹಿಳೆಯರು ನಮಾಜಿಗಾಗಿ ಹರಂ ಪಳ್ಳಿಗೆ ಬರಬಾರದೆಂದು ತನ್ನ ಖುತುಬಾದಲ್ಲಿ ಕಟ್ಟಾ ಸುನ್ನೀ ಆಶಯವನ್ನು ಪ್ರಚಾರ ಪಡಿಸುತ್ತಾರೆ.

7) ಇಲ್ಲಿನ ಸಲಪಿಗಳು ನಮಾಝ್ ಮುಗಿದ ಕೂಡಲೇ ಎದ್ದು ಓಡುತ್ತಾರೆ
ಅಂದರೆ ಸಾಮೂಹಿಕ ಪ್ರಾರ್ಥನೆ (ಕೂಟುದುಆ) ಬಿದ್'ಅತ್ ಎಂದು ಫತ್ವಾ ಹೊರಡಿಸುತ್ತಾರೆ

🔴ಆದರೆ ಹರಂ ಇಮಾಂ ಶೈಖ್ ಸುದೈಸಿ ಪಾಕಿಸ್ತಾನ ಭೇಟಿ ಕೊಟ್ಟಾಗ ಅಧ್ಯಕ್ಷ ಪರ್ವೇಜ್ ಮುಶರ್ರಫ್ ಸಹಿತ ನೂರಾರು ಮಂದಿಗೆ ಇಮಾಮ್ ಆಗಿ ನಮಾಜ್ ನಿರ್ವಹಿಸಿ ಕೊನೆಯಲ್ಲಿ ಸಾಮೂಹಿಕ ದುಆ ಮಾಡಿ ಸುನ್ನೀ ಆಶಯವೇ ಸರಿಯೆಂದು ಪ್ರಚುರ ಪಡಿಸುತ್ತಾರೆ.

8) ಇಲ್ಲಿನ ಸಲಪಿಗಳು ಮೌಲಿದ್ ಬುರ್ದಾ ಎಲ್ಲವೂ ಶಿರ್ಕ್ ಪಿರ್ಕ್ ಅಂತ ಹೇಳಿ ಅಪಹಾಸ್ಯ ಮಾಡುತ್ತಾರೆ.

🔴ಆದರೆ ಇದೇ ಹರಂ ಇಮಾಮ್ ಶೈಖ್ ಸುದೈಸಿ ಒಬ್ಬ ಆಶಿಕ್ ನಿಂದ ಮೌಲೂದಿನ ಬೈತ್ ಹೇಳಿಸುತ್ತಾ ಅದನ್ನು ಭಕ್ತಿಯಿಂದ ಆಲಿಸಿ ಸುನ್ನೀ ಆದರ್ಶ ವ್ಯಕ್ತಪಡಿಸುತ್ತಾರೆ.

9) ಇಲ್ಲಿನ ಸಳಪಿಗಳು ದರ್ಗಾ ಝಿಯಾರತ್ ನ್ನು ವಿರೋಧಿಸುತ್ತಾರೆ.

🔴ಆದರೆ ಹಸಿರು ಖುಬ್ಬಾದ ಫ್ರೌಢಿಯೊಂದಿಗೆ ತಲೆ ಎತ್ತಿ ನಿಂತಿರುವ ಮುತ್ತು ನೆಬಿಯವರ ಅತೀ ದೊಡ್ಡ ದರ್ಗಾ ವನ್ನು ಸೌಧೀ ರಾಜರ ಸಹಿತ ಹರಂ ಇಮಾಂ ಗಳು ಝಿಯಾರತ್ ಮಾಡುತ್ತಾರೆ ಅವರು ಯಾರೂ ಆ ದರ್ಗಾ ವನ್ನು ಪುಡಿಗೆಯ್ಯುವಂತೆ ಫತ್ವಾ ನೀಡಲಿಲ್ಲ.

10) ಇಲ್ಲಿನ ಸಳಪಿಗಳು ಇಸ್ತಿಗಾಸ ತವಸ್ಸುಲ್ ನ್ನು ವಿರೋಧಿಸುತ್ತಾರೆ ಅದು ಮಾಡಿದ ಮುಸ್ಲಿಮರನ್ನು ಮುಶ್ರಿಕ್ ಅಂತ ಫತ್ವಾ ಕೊಡುತ್ತಾರೆ.

🔴'ಇಹ್ತಿಖಾಫ್' ನ ನಿಯ್ಯತನ್ನು ನೆನಪಿಸಲಿಕ್ಕಾಗಿ ಮಸೀದಿಯಲ್ಲಿ 'ನವೈತುಲ್ ಇಹ್ತಿಕಾಫ್..' ಬರೆದು ಬೋರ್ಡ್ ತೂಗು ಹಾಕಿದ್ದಂತೆ ,
ರೌಳಾ ಶರೀಫ್ ನಲ್ಲಿ ಇಸ್ತಿಗಾಸವನ್ನು ನೆನಪಿಸಲಿಕ್ಕಾಗಿ ಮುತ್ತು ನೆಬಿಯವರನ್ನು ಡೈರಕ್ಟ್ ಕರೆದು ಹೇಳುವ ಇಸ್ತಿಗಾಸದ ಹಾಡು ಸ್ವರ್ಣ ಲಿಪಿಯಲ್ಲಿ ಕೆತ್ತಲಾಗಿದೆ.!

ಅಂದರೆ ಸಳಪಿಯ ಭಾಷೆಯಲ್ಲಿ 'ಶಿರ್ಕ್' ನ ಹಾಡುಗಳು!

ಆದರೆ ಎರಡು ಹರಂ ಒಬ್ಬನೇ ಒಬ್ಬ ಇಮಾಂ ಅದರ ವಿರುದ್ಧ ಮಾತನಾಡದೆ
ಅದನ್ನು ಅಳಿಸಿ ಹಾಕುವಂತೆ ಫತ್ವಾ ಹೊರಡಿಸದೆ  ಸುನ್ನೀ ಆಶಯ ಆದರ್ಶ ಉಳಿಯುವಂತೆ ಅವರು ಮಾಡಿದ್ದಾರೆ.

ಮಂತ್ರ,ಸಿಹ್ರ್ ಜಿನ್ನ್ ಭಾದೆ ,ಜಿನ್ನಿನೊಂದಿಗೆ ಸಹಾಯ ಮುಂತಾದ ಹಲವಾರು ವಿಷಯಗಳು ಇನ್ನೂ ಇದೆ.
ಬುದ್ದಿ ಇರುವವರಿಗೆ ಬೇಕಾಗಿ ಸದ್ಯ ಇಷ್ಟು ನೋಟ್ ಮಾಡಿದ್ದೇನೆ.

➡ನಮ್ಮ ಉಲಮಾಗಳು ಇಲ್ಲಿನ ಸಲಪಿಗಳಿಗೆ ಸಲಾಂ ಹೇಳಬಾರದು ಅವರ ಹಿಂದೆ ನಮಾಜು ಮಾಡಬಾರದೆಂದು ಫತ್ವಾ ಕೊಟ್ಟದ್ದು,ಮತ್ತು ಮಕ್ಕಾ ಮದೀನಾ ಇಮಾಮ್ ಗಳ ಕುರಿತು ಮೌನ ತಾಳಿದ್ದು ಯಾಕೆಂದು ನೀವೇ ತೀರ್ಮಾನಿಸಿ..👀👁👀

ಬೇಕಾದರೆ ಅಗೈನ್ ಸೀ U ✋🏻

✒ಅಬೂಶಝ

ಸ್ವರ್ಗದ ಡಬ್ಬಿಯ ಕುರಿತು ಒಂದಿಷ್ಟು..


ಬೆಳಿಗ್ಗೆಯಿಂದಲೇ ಸ್ವರ್ಗದ ಬಾಕ್ಸ್ ನ ಕುರಿತು ಚರ್ಚೆಯಾಗುತ್ತಲೇ ಇತ್ತು.ನಾನಂತೂ ಅದರ ಕುರಿತು ತಲೆಕೆಡಿಸಲೇ ಇಲ್ಲ.ಕಾರಣ ಇಂತಹ ಅದೆಷ್ಟೋ ಆರೋಪಗಳ ಮಾಲೆಪಟಾಕಿಯನ್ನೇ ವಿರೋದಿಗಳು ಸ್ಪೋಟಿಸಿದಾಗಲೂ ಅದೆಲ್ಲವೂ ಮಳೆ ನೀರಲ್ಲಿ ಒದ್ದೆಯಾದ ಪಟಾಕಿಯಂತೆ ಟುಸ್ ಎಂಬ ಶಬ್ದವೂ ಬಾರದೆ ಅಲ್ಲೇ ಹೊತ್ತಿ ಭಸ್ಮವಾಗುವುದನ್ನು ನೋಡಿ ನೋಡಿ ಸಾಕಾಗಿದೆ.

ಮಿತ್ರನೊಬ್ಬನಿಗೆ ಅದರ ವೀಡಿಯೋ ಕಳುಹಿಸಲು ಹೇಳಿದ್ದೆ.ಇದೀಗ ಅದರ ವೀಡಿಯೋ ಗ್ರೂಪೊಂದರಲ್ಲಿ ಸಿಕ್ಕಿತು.
ಉಸ್ತಾದರ ಪುತ್ರ ಏನು ಹೇಳುತ್ತಿದ್ದಾರೆಂದು ತದೇಕಚಿತ್ತದಿಂದ ಆಲಿಸಿದೆ.
ನನಗೊತ್ತು ಉಸ್ತಾದರಂತೆ ಅವರೂ ಕೂಡಾ ಅತ್ಯಂತ ಪಕ್ವತೆಯಿಂದಲೇ ಎಲ್ಲವನ್ನು ನಿಭಾಯಿಸುವವರು.ಎಡವಟ್ಟು ಮಾಡಲ್ಲ ಅಂತ ಗೊತ್ತು.

ನಾನು ಗ್ರಹಿಸಿದಂತೆ ಅವರು ನಮ್ಮ ನಾಣ್ಯ'ತುಟ್ಟು'ಗಳು ವೇಸ್ಟ್ ಆಗದಂತೆ ನೋಡಿಕೊಳ್ಳಲು ನಮ್ಮ ಮನೆಯಲ್ಲಿ ಡಬ್ಬ ವೊಂದನ್ನು ಸ್ಥಾಪಿಸಲು ಹೇಳುತ್ತಿದ್ದಾರೆ.ಅದರಲ್ಲಿ ನಿಕ್ಷೇಪಿಸಿದ ಹಣ ಮರ್ಕಝ್ ನಲ್ಲಿ ಕಲಿಯುತ್ತಿರುವ ಸಾವಿರಾರು ಯತೀಮ್ ಮಕ್ಕಳ ಸಹಿತ ಬಡ ನಿರ್ಗತಿಕರ ಬಾಳನ್ನು ಬಂಗಾರ ಮಾಡಲು ಉಪಯೋಗಿಸುತ್ತಾರೆಂಬುದು ದಿಟ ತಾನೆ?

ಯತೀಂ ಮಕ್ಕಳ ಪರಿಪಾಲನೆ ಮಾಡುವವನು ಮತ್ತ ನಾನು ನಾಳೆ ಸ್ವರ್ಗದಲ್ಲಿ ಈ ರೀತಿಯಾಗಿ ✌🏻ನಿಕಟವಾಗಿರುವೆನು ಎಂದು ಪುಣ್ಯ ರಸೂಲ್ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿರುವಾಗ ಅದಕ್ಕಾಗಿ ಉಪಯೋಗಿಸಲು  ಹಣ ಸಂಗ್ರಹ ಮಾಡುವ ಡಬ್ಬಿ ನಮ್ಮನ್ನು ಸ್ವರ್ಗ ಕ್ಕೆ ಹತ್ತಿರ ಮಾಡಲು ನಿಮಿತ್ತವಾಗಲಿದೆಯೆಂಬ ಅರ್ಥದಲ್ಲಿ ಸ್ವರ್ಗದ ಡಬ್ಬಿ ಎಂದು ಹೇಳಿದರೆ ಅದರ ಅರ್ಥ ಏನೆಂದು ಬುದ್ದಿ ಇರುವವರಿಗೆ  ಅರ್ಥವಾಗುತ್ತದೆ.

ಅಂದರೆ ಡಬ್ಬಿ ಯಾವತ್ತೂ ನಮ್ಮನ್ನು ಸ್ವರ್ಗಕ್ಕೆ ಕೊಂಡುಹೋಗಲ್ಲ ಎಂಬುದು ದಿಟ.ಮತ್ತೆ ಅದರಲ್ಲಿ ನಿಕ್ಷೇಪಿಸುವ ಹಣ ಯತೀಂ ಮಕ್ಕಳ ಕಲ್ಯಾಣಕ್ಕಾಗಿರುವುದರಿಂದ ಆ ಡಬ್ಬಿ ಸ್ವರ್ಗ ಪ್ರವೇಶಕ್ಕೆ ಹಲವು ನಿಮಿತ್ತಗಳಲ್ಲಿ ಒಂದಾಗುವುದರಲ್ಲಿ ಸಂಶಯವಿಲ್ಲ.

ನಾನು ಮೊನ್ನೆ (ಡಿಸೆಂಬರ್ ಹತ್ತು ತಾರೀಖು ಎಂಬುದು ನನ್ನ ಊಹೆ) ದರ್ಬೆಯಲ್ಲಿ ಮಿತ್ರ ಇಕ್ಬಾಲ್ ಬಪ್ಪಳಿಗೆಯೊಂದಿಗೆ ಮಾತನಾಡುತ್ತಿರಲು ನಮ್ಮ ಎದುರಲ್ಲೆ ತೊಪ್ಪಿ ಧರಿಸಿದ ಉಸ್ತಾದರೊಬ್ಬರ ನೇತೃತ್ವದಲ್ಲಿ ಪುತ್ತೂರಿನ ಕೆಲವೊಂದು ಉಮರಾಗಳು ಸೇರಿ ಅಂಗಡಿ ಅಂಗಡಿ ಹೋಗಿ ಅವರ ಸಂಸ್ಥೆಯ ಸ್ವರ್ಗದ ಡಬ್ಬಿಗಳನ್ನು ವಿತರಿಸುತ್ತಿದ್ದರು
ಅದನ್ನು ಅಂಗಡಿಯ ಮಾಲಕರು ಸ್ವೀಕರಿಸುತ್ತಿದ್ದರು.ಕಾರಣ ಅವರಿಗೂ ಗೊತ್ತು ಈ ಡಬ್ಬಿ ನಮ್ಮನ್ನು ಸ್ವರ್ಗಕ್ಕೆ ಹತ್ತಿರ ಮಾಡುವ ಸಬಬುಗಳಲ್ಲಿ ಒಂದಾಗಿದೆಯೆಂದು..

ಯಾರೂ ಕೂಡಾ ಅದರ ಕುರಿತು ಚಕಾರವೆತ್ತಲಿಲ್ಲ. ಬುದ್ದಿ ಇರುವ ಯಾರೂ ಅದರ ಬಗ್ಗೆ  ಚಕಾರವೆತ್ತಲ್ಲ ತಾನೇ?

ನಾವು ಡಬ್ಬಿ ಕೊಡುವಾಗ ಅದರ ಸಬಬ್ ಕೂಡಾ ಹೇಳಿ ಕೊಟ್ಟಿದ್ದೇವೆ ಅಷ್ಟೇ.
ಹಾಗೆ ನೋಡಿದರೆ ಸಳಪಿ ಮೌಲವಿ ಬಾಲುಶ್ಶೇರಿಯ ಸ್ವರ್ಗಂ ವೆಣೋ ಸ್ವರ್ಣಂ ವೇಣೋ ಎಂಬ ಡೈಲಾಗ್ ಪ್ರಸಿದ್ದ ತಾನೆ?

ಏನೇ ಇರಲಿ ವಿರೋದಿಗಳು ಇದನ್ನು ಇಷ್ಟೊಂದು ಪ್ರಚಾರ ಕೊಟ್ಟದ್ದಕ್ಕೆ ಅವರಿಗೆ ಸ್ಪಷಲ್ ಕೃತಜ್ಞತೆ ಅರ್ಪಿಸಲೇ ಬೇಕು.ಕಾರಣ ನಿನ್ನೆಯ ಇಂಟರ್ನ್ಯಾಶನಲ್ ಮೀಲಾದ್ ಸಮ್ಮೇಳನಕ್ಕೆ ಹೋಗದ ನನ್ನಂತವರಿಗೆ ಆ ಮೆಸ್ಸೇಜ್ ವಿರೋದಿಗಳ ರಂಪಾಟದಿಂದಾಗಿ ತಿಳಿಯುವಂತಾಯಿತು.

ನಾನು ಕೂಡಾ ನನ್ನ ಮನೆಯಲ್ಲಿ ನಾಳೆಯಿಂದಲೇ ಸ್ವರ್ಗದ ಒಂದು ಡಬ್ಬಿ ಸ್ಥಾಪಿಸಲು ತೀರ್ಮಾನಿಸಿಯಾಗಿದೆ.ನೀವು ಕೂಡಾ ಸ್ಥಾಪಿಸುವಿರಿ ತಾನೆ?

ವಿರೋಧಿಗಳು  ರಂಪಾಟ ಮಾಡುತ್ತಲೆ ಇರಲಿ ನಾವು ನಮ್ಮ ಉಸ್ತಾದರ ಕೈ ಬಲಪಡಿಸೋಣ ಕಾರಣ ಮರ್ಕಝ್ ನ ಒಂದು ದಿನದ ಖರ್ಚು ಒಂದುವರೆ ಲಕ್ಷ!
ಸ್ವಂತ ಮಕ್ಕಳನ್ನೇ ಚೆನ್ನಾಗಿ ಸಾಕಿಸಲಹಲು ಹರಸಾಹಸ ಪಡುವ ಈ ಅಲ್'ಕೌಂಗೆ ಇದೆಲ್ಲಾ ಅರ್ಥವಾಗಲ್ಲ.

ನೀವು ಕೂಡಾ ಸ್ವರ್ಗದ ಡಬ್ಬಿ ಸ್ಥಾಪಿಸುವಿರಿ ತಾನೇ?
- ಅಬೂಶಝ

ಬದ್ರ್ ಆಂಡ್ ಹೆಸರಲ್ಲಿ ನಡೆಯುವ ಸತ್ಕಮ೯:-


👉🏻 ಬದ್ರ್ ಶುಹದಗಳ ಮದ್ಹ್
👉🏻 ಸ್ವದಖ
👉🏻 ಅನ್ನದಾನ

ಇದೆಲ್ಲವೂ ನೆಬಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂರವರ ಹದೀಸ್ ನಿಂದ ಸ್ಥಿರ ಪಟ್ಟಿದ ವಿಚಾರವೇ ಆಗಿದೆ.
👉🏻 ಬದ್ರ್ ಶುಅದಗಳ ಮದ್ಹ್:-
ಪರಿಶುದ್ಧ ಕುರ್ಆನ್ ನಲ್ಲಿ ಅಲ್ಲಾಹನು ಹೇಳುತ್ತಾನೆ:
وَلَا تَحْسَبَنَّ الَّذِينَ قُتِلُوا فِي سَبِيلِ اللَّهِ أَمْوَاتًا ۚ بَلْ أَحْيَاءٌ عِندَ رَبِّهِمْ يُرْزَقُونَ.
"ಅಲ್ಲಾಹನ ಮಾಗ೯ದಲ್ಲಿ ವಧಿಸಲ್ಪಟ್ಟವರನ್ನು ಮರಣ ಹೊಂದಿದವರೆಂದು ನೀವು ಖಂಡಿತ ಭಾವಿಸಬಾರದು.ಅವರು ತಮ್ಮ ಪ್ರಭುವಿನ ಬಳಿ ಜೀವಂತವಾಗಿದ್ಧಾರೆ.ಅವರಿಗೆ ಆಹಾರ ಕೊಡಲಾಗುತ್ತಿದೆ."

"ಅಲ್ಲಾಹನು ಅವರ ಆತ್ಮಗಳಿಗೆ ದೇಹಗಳ ತ್ರಾಣ ನೀಡುವನು.ಅವರು ಭೂಮಿ,ಆಕಾಶ, ಸ್ವಗ೯ ಮುಂತಾದ ತಾವಿಚ್ಛಿಸಿದ ಕಡೆಗಳಿಗೆ ಸಂಚರಿಸುತ್ತಿರುವರು.ಅವರ ಅಪ್ತರಿಗೆ ನೆರವನ್ನು ನೀಡುವರು.(ತಫ್ಸೀರುಲ್ ಮಳ್ಹರಿ)

ಇಮಾಂ ಬುಖಾರಿ ತನ್ನ ಸ್ವಹೀಹ್ ನಲ್ಲಿ
 حدثنا مسدد حدثنا بشر بن المفضل حدثناخالد بن ذكوان قال قالت الربيع بنت معوذ بن عفراء جاء النبي صلى الله عليه وسلم فدخل حين بني علي فجلس على فراشي كمجلسك مني فجعلت جويريات لنا يضربن بالدف ويندبن من قتل من آبائي يوم بدر إذ قالت إحداهن وفينا نبي يعلم ما في غد فقال دعي هذه وقولي بالذي كنت تقولين.
*ರುಬಯ್ಯ ಬಿನ್ತು ಮುಆವ್ವಿಝ್ ರಳಿಯಲ್ಲಾಹು ಅನ್ಹು ಹೇಳುತ್ತಾರೆ:
"ನನ್ನ ಮದುವೆಯ ದಿನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮನೆಗೆ ಬಂದಾಗ ನಮ್ಮ ಹೆಣ್ಣು ಮಕ್ಕಳು ದಫ್ಪ್ ಭಾರಿಸುತ್ತಾ ಬದ್ರ್ ಯುದ್ಧದಲ್ಲಿ ಹುತ್ಮಾತ ಆದ ನಮ್ಮ ತಂದೆ ಯವರ ಬಗ್ಗೆ (ಮದ್ಹ್)ಹಾಡುತ್ತಿದ್ದರು. ಆಗ ಒಬ್ಬಳು ಹೇಳಿದಳು ನಾಳೆಯ ವಿಚಾರ ತಿಳಿಯುವ ಪ್ರವಾದಿಯು ನಮ್ಮಲ್ಲಿದ್ಧಾರೆ.ಅವಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂರು ಹೇಳಿದರು.ಅದು ಬೇಡ,ನೀವು ಮುಂಚೆ ಹೇಳಿದ್ಧನ್ನೇ ಮುಂದುವರಿಸಿ".
(ಸ್ವಹೀಹುಲ್ ಬುಖಾರಿ)

ಮಲಕುಗಳ ವಿಭಾಗದಲ್ಲಿ ಶ್ರೇಷ್ಠರು ಯಾರು:
ರಾಫೀ ಬಿನ್ ಖಾದಿಜ್ ರಳಿಯಲ್ಲಾಹು ಅನ್ಹು ಹೇಳಿದರು:
"ದೇವದೂತರಾದ ಜಿಬ್ರೀಲ್ ಅಲೈಹಿ ಸಲಾಂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರ ಬಳಿ ಕೇಳಿತು. ಬದ್ರ್ ಯುದ್ಧದಲ್ಲಿ ಪಾಲ್ಗೊಂಡವರನ್ನು ನೀವು ಹೇಗೆ ಪರಿಗಣಿಸುತ್ತಿರಿ.? ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ಹೇಳಿದರು: ನಮ್ಮಲ್ಲಿ ಅತ್ಯುತ್ತಮರು.ದೇವದೂತರಾದ ಜಿಬ್ರೀಲ್ ಹೇಳಿದರು: ನಮ್ಮಲ್ಲಿಯೂ ಹಾಗೇನೆ.ಬದ್ರ್ ಯುದ್ಧ ದಲ್ಲಿ ಪಾಲ್ಗೊಂಡ ದೇವದೂತ ರು ದೇವದೂತರಲ್ಲಿ ಅತ್ಯುತ್ತಮರು."
(ಇಬ್ನು ಮಾಜ)

👉🏻 ಸ್ವದಖ:-
ಆಯಿಶಾ ರಳಿಯಲ್ಲಾಹು ಅನ್ಹ ರವರು ಹೇಳುತ್ತಾರೆ: "ಅಲ್ಲಾಹನ ರಸೂಲರ ಬಳಿ ಒಬ್ಬ ವ್ಯಕ್ತಿ ಹೇಳಿದರು ನನ್ನ ತಾಯಿ ಮರಣ ಹೊಂದಿದ್ದಾರೆ ಅವರು ಏನನ್ನೂ ವಸಿಯ್ಯತ್ ಮಾಡಲಿಲ್ಲ ನಾನು ಅವರ ಹೆಸರಲ್ಲಿ ಸ್ವದಖ  ಪ್ರತಿಫಲ ಲಭಿಸುವುದೇ.?ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರು ಹೇಳಿದರು: ಲಭಿಸುತ್ತದೆ " (ಸ್ವಹೀಹುಲ್ ಮುಸ್ಲಿಂ)
ಇಮಾಂ ನವವಿ ರಳಿಯಲ್ಲಾಹು ಅನ್ಹು ರವರು ಹೇಳುತ್ತಾರೆ: ಮಯ್ಯಿತ್ ನ ಹೆಸರಲ್ಲಿ ಸ್ವದಖ ಗೈದರೆ ಪ್ರತಿಫಲ ಲಭಿಸುತ್ತದೆ."(ಶರ ಅ್ ಮುಸ್ಲಿಂ)

👉🏻 ಅನ್ನದಾನ
ಪರಿಶುದ್ಧ ಕುರ್೯ನ್ ನಲ್ಲಿ ಅಲ್ಲಾಹನು ಹೇಳುತ್ತಾನೆ.
" ಅವರು ಅಲ್ಲಾಹನಲ್ಲಿರುವ ಒಲವಿನಿಂದ ಬಡವರಿಗೂ, ಅನಾಥರಿಗೂ,ಸೆರೆಯಾಳುಗಳಿಗೂ ಉಣ ಬಿಡಿಸುತ್ತಾರೆ ".(ಸೂರತುಲ್ ಅಲ್ ಇನ್ಸಾನ್)
ಇಬ್ನ್ ಉಮರ್ ರವರಿಂದ ನಿವೇದನೆ : " ಒಬ್ಬ ವ್ಯಕ್ತಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರೊಂದಿಗೆ ಕೇಳಿದರು ಇಸ್ಲಾಮಿನಲ್ಲಿ ಉತ್ತಮ ಕಾಯ೯ ಯಾವುದು.? ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರು ಹೇಳಿದರು:ಉಣ ಬಡಿಸುವುದು".
➖➖➖➖➖➖ಅಹ್ಲ್ ಸುನ್ನದ ಗೆಳೆಯ ರೇ ಈ ಕಾಯ೯ ಗಳಲ್ಲವೇ ನಮ್ಮ ನಿಮ್ಮ ಊರುಗಳಲ್ಲಿ ನಡೆಯುವುದು.
📝ಯು.ಎಂ ಮುಕ್ಕಚ್ಚೇರಿ.

ಭಾರತಕ್ಕೆ ಇಸ್ಲಾಂ



ಅದು ಮಲಬಾರ್ ಪ್ರಾಂತ್ಯದ ರಾಜ ಚೇರಮಾನ್ ಪೆರುಮಾಳ್ ಅದೊಂದು ದಿನ ರಾತ್ರಿ ತನ್ನ ವೈಭವೋಪೇತ ಅರಮನೆಯ ಮೇಲ್ಮಹಡಿಯಲ್ಲಿ, ರಾತ್ರಿ ನಿಶಬ್ಧ ಇರುಳಲ್ಲಿ ಕಳೆಯುತ್ತಿದ್ದ......!

ಕಾರ್ಗತ್ತಲನ್ನು ಆಕರ್ಷಿಸುವ ಮಿಂಚು ಹುಳಗಳ ಸೌಂದರ್ಯ ನೋಟ ಜೀರುಂಡೆಗಳ ಶಬ್ಧದ ನಡುವೆ ಕಾನನದಿಂದ ವನ್ಯ ಮ್ರಗಗಳ ಅರಚಾಟ ಚೀರಾಟ.....!

ನೀಲಾಕಾಶದ ಬೆಳ್ಳಿಮೋಡಗಳ ನಡುವೆ ನಕ್ಷತ್ರಗಳ ಮಿನುಗಾಟ ನೋಡುತ್ತ ಕುಳಿತಿರುವಾಗ,
ಅಧೋ  ಆಕಾಶದಲ್ಲಿ ನೆಲೆಯೂರಿದ ಚಂದ್ರ ಇಬ್ಬಾಗವಾಹಿತು.....!

ದಿಟ್ಟಿಸಿದ ಆ ಕಣ್ಣುಗಳು ಮತ್ತಷ್ಟು ಅಗಲಿಸಿ ಮತ್ತೆ ಮತ್ತೆ ಅದ್ಭುತವನ್ನು ನೋಡುತ್ತಿದ್ದರೆ ,ನೋಡು ನೋಡುತ್ತಲೇ ಇಬ್ಭಾಗವಾದ ಚಂದ್ರ  ಒಂದಾಗುವುದನ್ನು ಕಂಡು ಬೆಕ್ಕಸ ಬೆರಗಾದರು.....!

 ತಾನು ಕಾಣುತ್ತಿರುವುದು ನೈಜ ಘಟನೆಯೋ ಅಥವಾ ಕನಸಲ್ಲೊ ಎಂಬ ಕಲ್ಪನೆ ಯೊಂದಿಗೆ ಕೈಯನ್ನು ಮೈಯೊಡನೆ ಸ್ಪರ್ಶಿಸಿ ನೋಡುತ್ತಾರೆ.......ಈ ಅಮಾನುಷವಾದ ಸತ್ಯ ಘಟನೆಗೆ ಸಾಕ್ಷಿಯಾದ ಚೇರಮಾನ್ ರಾಜ ದಿನಾಂಕವನ್ನು ತನ್ನ ದಿನಚರಿಯಲ್ಲಿ ಬರೆದಿಡುತ್ತಾರೆ.
ಇದಾದ ಸುಮಾರು ದಿನಗಳ ನಂತರ ಅರಬ್ ಯಾತ್ರಿಕರು ಶ್ರೀಲಂಕಾದ ಆದಂ ಬೆಟ್ಟವನ್ನು ಸಂದರ್ಶಿಸಿ  ಕೇರಳದೆಡೆಗೆ ಆಗಮಿದಸಿದಾಗ ಕೊಡಂಗಲ್ಲೂರ್ ...ಚೇರಮಾನ್ ಪೆರುಮಾಳ್ ಅರಮನೆಗೊಂದು ಭೇಟಿ .. .!

ಅರಬ್ ಲೋಕದ ಕ್ಷೇಮ  ಸಮಾಚಾರ ವನ್ನು ಈ ಯಾತ್ರಿಕರಲ್ಲಿ ಕೇಳಿ ತಿಳಿಯಲು ಮುಂದಾಗುತ್ತಾರೆ... ಕೇರಳದ ರಾಜ ಚೇರಮಾನ್ ಪೆರುಮಾಳ್......

 ಮಾತುಕತೆ ಆರಂಬಿಸಿದ ಅರಬ್ಬರು ತಮ್ಮ ಊರಿನಲ್ಲಿ ಒಂದು ಕೆಟ್ಟ ಸಮಾಚಾರವಿದೆ  ಮಕ್ಕಾದಲ್ಲಿ ಮುಹಮ್ಮದ್  (ಸ.ಅ) ಎಂಬ ಕಳ್ಳ ಪ್ರವಾದಿ ಆಗಮಿಸಿ  ನಮ್ಮ  ದೇವರುಗಳನ್ನೆಲ್ಲ ನಿರ್ಜೀವ ಎನ್ನತ್ತಾನೆ...! ಅದೆಷ್ಟೋ ಸಾವಿರ ವರ್ಷಗಳಿಂದ ತಾತ ಮುತ್ತಾತಂದಿರು ಪೂಜಿಸಿದ ಸಾಮಾಗ್ರಿಗಳನ್ನು ಅವುಗಳಲ್ಲಿ ಶಕ್ತಿ ಇಲ್ಲ ...ಸರ್ವ  ಶಕ್ತನಾದ ಅಲ್ಲಾಹು ವನ್ನು ಆರಾದಿಸಿ ಎಂಬ ಏಕ ದೈವ ವಿಶ್ವಾಸದ ಬಗ್ಗೆ ಜನರಲ್ಲಿ ಅರಿವು ಮೂಡಿಸಲೆತ್ನಿಸುತ್ತಿದ್ದಾರೆಂಬ ವಾದ ಇವರದಾಗಿತ್ತು.

ಪ್ರವಾದಿ ಸ.ಅ ರ ಬಗ್ಗೆ ಕುತೂಹಲ ಗೊಂಡ ಚೇರಮಾನ್ ಪೆರುಮಾಳ್ ..ಪ್ರವಾದಿಗಳೆಂದರೆ ಅಮಾನುಷ...ಶಕ್ತಿ ಉಳ್ಳವರಾಗಿರುತ್ತಾರೆ.ಅಸಾಧಾರಣತ್ವ ವನ್ನು ಆಥವಾ ಅದ್ಭುತ ಶಕ್ತಿಗಳೇನಾದರೂ ಮಾಡುತ್ತಿದ್ದಾರೆಯೇ ಎಂದಾಗ ಅರಬ್ ಯಾತ್ರಿಗಳು ಪ್ರವಾದಿ ಸ.ಅ ರಿಂದ ಉಂಟಾಗುವ ಹಲವಾರು ಮುಹ್ಜಿಝತ್ ಗಳ ವಿವರಣೆ ಕೊಡತ್ತಾರೆ.

ಅದರಲ್ಲಿ ಒಂದಾಗಿತ್ತು ಚಂದ್ರನನ್ನು ಇಬ್ಬಾಗವಾಗಿಸಿದ್ದು ಈ ಯಾತ್ರಿಗಳನ್ನು ಪ್ರವಾದಿ ಸ.ಅ.ರು ಅಬೂ ಕುಬೈಸ್ ಪರ್ವತದ ತಳಭಾಗದಲ್ಲಿ ನಿಲ್ಲಿಸಿ ಚಂದ್ರನನ್ನು ಎರಡು ಹೋಳಾಗಿಸಿ ಮತ್ತೆ ಯತಾಸ್ಥಿತಿಗೆತಂದರೆನ್ನುತ್ತಾರೆ....ಇದನ್ನು ಕೇಳಿದ ಚೇರಮಾನ್ ರಾಜ..ತಾನು ಕಂಡ ಸತ್ಯಘಟನೆ ಮತ್ತು ಈ ವ್ಯಕ್ತಿಗಳೇಳಿದ ಚಂದ್ರನ ಇಬ್ಬಾಗವಾದ ದಿನಾಂಕ ಒಂದೇ ಆಗಿತ್ತು....

ಮತ್ತೆ ಚೇರಮಾನ್ ಪೆರುಮಾಳ್ ರಾಜನ‌ ಮನದಾಳದಲ್ಲಿ ಹುದುಗಿದ್ದೊಂದೇ ಆ ಪ್ರವಾದಿಯನ್ನು ನೋಡ್ಬೇಕು ..ಆದಷ್ಟು ಬೇಗನೆ ಆ ಸಾನಿಧ್ಯವನ್ನು ತಲುಪಬೇಕು...!

ಚೇರಮಾನ್ ಪೆರುಮಾಳ್ ಏನೇ ವಿಷಯಗಳಿದ್ದರು  ಮೊದಲಿಗೆ ತನ್ನ ಸಹೋದರಿ  ಶ್ರೀದೇವಿಗೆ ತಿಳಿಸಿ ಮುಂದಿನ ಹೆಜ್ಜೆ ಇಡುವರು...,

ಮನಸ್ಸಲ್ಲೇಕೊ ಅಸಮದಾನ ತನ್ನ ಸಹೋದರಿ ಅಸಮ್ಮತಿ ವ್ಯಕ್ತ ಪಡಿಸಿದರೆ ...ಹೀಗೆ ಅಪಾರ ಕನಸು ನನಸುಗಳೊಂದಿಗೆ ಸಹೋದರಿಯ ಸನ್ನಿಧಿಯಲ್ಲಿ ತನ್ನ ಅಹವಾಲು ಆಕಾಂಕ್ಷೆ ಗಳನ್ನಿಡುತ್ತಿದ್ದಂತೆ, ಸಹೋದರಿಯು ಚೇರಮಾನ್ ರಾಜ ನೊಂದಿಗೆ ಒಬ್ಬಂಟಿಯಾಗಿ ಗೊತ್ತು ಗುರಿಯಿಲ್ಲದ ವರ ಜೊತೆ ಹೋಗಬೇಡಿ ಒಟ್ಟಿಗೆ ತನ್ನ ಮಗ ಕೋಹಿನ್ನೂರ್ ರಾಜಕುಮಾರನನ್ನು ಮಕ್ಕಾದೆಡೆ ಕರೆದು ಕೊಂಡು ಹೋಗಲು  ಸೂಚನೆ ನೀಡಿದರು.

ಹಾಗೆಯೇ ಅರಬ್ ಪ್ರಯಾಣಕ್ಕೆ ಮುಂದಾದರು.ಕೇರಳದ ತಲಶೇರಿಯ, ಪೋಯನಾಡ್ ( ಹೋದ ಊರು) ಊರಿನಿಂದ ಸೌದಿ ಅರೇಬಿಯಾಗೆ  ಯಾತ್ರೆ ಆರಂಬಿಸಿದ ಚೇರಮಾನ್  ಪೆರುಮಾಳ್ ರಾಜ...ದೀರ್ಘ 28ದಿನಗಳ ಪ್ರಯಾಣದ ನಂತರ ಸೌದಿ ಅರೇಬಿಯಾ ತಲುಪಿದಾಗ ರಾಜನಿಗೆ ..ಭವ್ಯ ಸ್ವಾಗತ ಪ್ರವಾದಿ ಮುಹಮ್ಮದ್ ಸ.ಅ ರ ಸನ್ನಿಧಿಯಲ್ಲಿ ಅಬೂಬಕರ್ ಸಿದ್ದೀಕ್ ರ.ಅ ಉಮರ್ ರ.ಅ ಉಸ್ಮಾನ್ ರ.ಅ ಒಳಗೊಂಡ ಸದಸ್ಸಿನಲ್ಲಿ,
ಪ್ರವಾದಿ ಸ.ಅ ಚೇರಮಾನ್ ಪೆರುಮಾಳ್  ನೋಡುತ್ತಲೇ ಶುಂಠಿ,ಚಿಕ್ಕು ,ಕರಿಮೆಣಸಿನ ನಾಡ ಮಲಬಾರಿನ  ರಾಜನಿಗಿದೋ ಸ್ವಾಗತ  .....! ತನ್ನನ್ನು ನೋಡುತ್ತಲೇ ಏನು ಕೇಳದೆ  ಈ ರೀತಿಯಲ್ಲಿ ಹೇಳಿದಾಗ ಚೇರಮಾನ್ ಪೆರುಮಾಳರಿಗೆ ಪ್ರವಾದಿ ಸ.ಅ ರ ಮುಖ ಚಹರೆಯಿಂದ ತಿಳಿಯಲು ಸಾಧ್ಯವಾಯಿತು.ಇದೇ ನಾನು ಕಲ್ಪನೆ  ಮಾಡಿಕೊಂಡ ಮುಹಮ್ಮದ್  (ಸ.ಅ)   ದೀರ್ಘವಾಗಿ ಯೋಚಿಸದೆ
ಗಟ್ಟಿ ನಿರ್ಧಾರಕ್ಕೆ ಬಂದರು,
ಇದು ತಾನು ಉದ್ದೇಶೀಸಿದ ಅಲ್ಲಾಹನ ಪ್ರವಾದಿ..(ಸ.ಅ).. ಅಶ್ಹದು ಅನ್ಲಾಹಿಲಾಹ ಇಲ್ಲಲ್ಲಾಹ್ ವಹನ್ನಕ ರಸೂಲುಲ್ಲಾ ಎಂಬ ಶಹಾದತ್ ಉಚ್ಚರಿಸಿ ಇಸ್ಲಾಂ ನೆಡೆಗೆ ಆಗಮಿಸುತ್ತಾರೆ‌..

ಅಲ್ಲಿಂದ ದೀರ್ಘ5ವರ್ಷಗಳ ಸಮಯ ಪ್ರವಾದಿ ಮುಹಮ್ಮದ್ (ಸ.ಅ) ಸನ್ನಿಧಿಯಲ್ಲಿ ಸಹಾಬಿಗಳೊಂದಿಗೆ ಕಾಲ ಕಳೆದರು ಈ 5 ವರ್ಷದಲ್ಲಿ ಮಕ್ಕಾದಿಂದ ಮದೀನ ಹಿಜ್ರಾ ಹೋಗುವ ಸಮಯ ಪ್ರವಾದಿ ಸ.ಅ ರೊಂದಿಗೆ ಚೇರಮಾನ್ ಪೆರುಮಾಳ್ ಇದ್ದರು ....
..ನಂತರ ಇಸ್ಲಾಂ ಭಾರತದಲ್ಲಿ ಪ್ರಚಾರಮಾಡಲೆಂದು
ಮಾಲಿಕಿದೀನಾರ್ (ರ.ಅ)ನೇತ್ರತ್ವದಲ್ಲಿ ಭಾರತವನ್ನು ಗುರಿಯಾಗಿಸಿ ಹೊರಟಾಗ ಒಮಾನ್ನ ಮಸ್ಕತ್ ನಲ್ಲಿರುವ ಶಹರ್ ಮಹಲ್ಲಾ ಎಂಬ ಪ್ರದೇಶ ತಲುಪುತ್ತಿದ್ದಂತೆ ಚೇರಮಾನ್ ಪೆರುಮಾಳ್ ರಾಜನ ದೇಹದಲ್ಲಿ  ಶಕ್ತವಾದ ಜ್ವರ  ಕಾಣಿಸಿ ಕೊಳ್ಳುತ್ತದೆ. ದಿನಗಳು ಉರುಳಿದಂತೆ ಉಲ್ಭಣ ಗೊಂಡ ರಾಜನ ಕಾಯಿಲೆ ಶಮನವಾಗುವ ಲಕ್ಷಣವೇ ಕಂಡಿಲ್ಲ ಅಲ್ಲೇ ಕೊನೆಯುಸಿರೆಳೆಯುತ್ತಾರೆ... ಚೇರಮಾನ್ ರಾಜ ಒಮಾನ್ ದೇಶದ ಮಸ್ಕತ್ ನ ಶಹರ್ ಮಹಲ್ಲಾದ ಕಬರ್  ಸ್ಥಾನದ ಮೀಝಾನ್ ಕಲ್ಲಿನ ಮೇಲೆ ಅರಬಿ ಭಾಷೆಯಲ್ಲಿ ಬರೆದ ಮಲಿಕುಲ್ ಹಿಂದ್ ಚೇರಮಾನ್ ಪೆರುಮಾಳ್ ( ಭಾರತದ ರಾಜ ಚೇರಮಾನ್ ಪೆರುಮಾಳ್) ನಂತರ ತಾಜುದ್ದೀನ್ ಎಂಬ ಮರುನಾಮಕರಣ ದೊಡನೆ ತಾಜುದ್ದೀನ್ ಎಂದರೆ ಕಿರೀಟ ದರ್ಮದ ಕಿರೀಟ ಎಂಬ ಅರ್ಥ ಉಳ್ಳ ಹೆಸರಾಗಿದೆ ...

ಹಾಗೆಯೇ ಕೋಹಿನೂರ್ ರಾಜಕುಮಾರನ ಹೆಸರನ್ನು ಸೈಫುದ್ದೀನ್ ಮೊಹಮ್ಮದಲಿ ಎಂದು ಮರುನಾಮಕರಣ ಮಾಡಲಾಗಿತ್ತು.
ಚೇರಮಾನ್ ರಾಜನ ಮರಣದೊಂದಿಗೆ ಯಾತ್ರೆಯನ್ನು ಮೊಟಕು ಗೊಳಿಸಿದ ಮಾಲಿಕಿದೀನಾರ್(ರ.ಅ) ಸಂಘ ಮದೀನಾದೆಡೆಗೆ ಹಿಂತಿರುಗಿದರು.
ಮುಂದಿನ ವರ್ಷ ಪ್ರವಾದಿ ಸ.ಅ ರ ಅನುಮತಿಯೊಂದಿಗೆ ಹಿಜಿರಾ 5 ನೇ ವರ್ಷ ಮಾಲಿಕಿದೀನಾರ್ (ರ.ಅ) ನೇತ್ರತ್ವ ದೊಂದಿಗೆ 14 ಜನರು ಮತ್ತು ಕೋಹಿನೂರ್ ರಾಜಕುಮಾರ್ ರೊಂದಿಗೆ..ಭಾರತದೆಡೆಗೆ
ಸುಮಾರು 28 ದಿನಗಳ ಪ್ರವಾಸದ ನಂತರ ಕೇರಳದತ್ತ ಆಗಮಿಸುತ್ತಾರೆ.

ಕೊಡಂಗಲ್ಲೂರ್ ಅರಮನೆ ಲಕ್ಷ್ಯ ದೊಂದಿಗೆ ದಂಡೆಯಲ್ಲಿ ನಿಂತಾಗ ಮಾಲಿಕಿದೀನಾರ್ (ರ.ಅ)ಒಬ್ಬರನ್ನು ಕಾಣುತ್ತಾರೆ.
ಟವಲ್ ಒಂದನ್ನು ಸುತ್ತಿದ ಅರ್ದ ನಗ್ನ ನಾದ  ಆ ವ್ಯಕ್ತಿಗೆ  ಭಾಷೆ ತಿಳಿಯಲ್ಲ ಎಂಬ ಕಾರಣ ತಮಗಿದ್ದ ದಾಹವನ್ನು ಕೈ ಸನ್ನೆಯ ಮೂಲಕ ತೋರಿಸಿದ ಮಾಲಿಕಿದೀನಾರ್(ರ.ಅ) ತಂಡಕ್ಕೆ..ತೆಂಗಿನ ಮರ ಏರಿದ ವ್ಯಕ್ತಿ ಎಳನೀರು  ಕೊಟ್ಟು ಕುಡಿಯಲೇಳಿ ಅನತಿ ದೂರದಲ್ಲಿ ನಿಲ್ಲುತ್ತಾರೆ .
ತಾನು ಕೀಳು ವರ್ಗವಾಗಿರುವುದರಿಂದ  ಸಾಮಾನ್ಯ ಜನಗಳ ಜೊತೆ ಬೆರೆಯದೆ ದೂರ ನಿಂತು ಕೊಳ್ಳುವುದು ಇವರಿಗೆ ರೂಡಿಯಾಗಿತ್ತು.

ಎಳನೀರು ಕುಡಿದು ತಮ್ಮ ದಾಹವನ್ನು ತೀರಿಸಲು ಕಾರಣರಾದ ಆ ವ್ಯಕ್ತಿಯನ್ನು ಹತ್ತಿರಕ್ಕೆ ಕರೆಯುತ್ತಾರೆ ಮಾಲಿಕಿದೀನಾರ್ (ರ ಅ).ಕೀಳು ಜಾತಿಯವರಾದ  ಅಪ್ಪು ಎಂಬ  ಹೆಸರಿನ ಈವ್ಯಕ್ತಿಯನ್ನು ಹತ್ತಿರಕ್ಕೆ ಕರೆದ ಮಾಲಿಕಿದೀನಾರ್  (ರ.ಅ) ಅಪ್ಪುಗೆಯಿಂದ ತನ್ನ ಶರೀರದೊಂದಿಗೆ ತಬ್ಬಿದಾಗ ತನ್ನ ಜೀವನದಲ್ಲಿ ನಡೆಯದೇ ಇರುವ ಒಂದು ಅದ್ಭುತ ಘಟನಗೆ ಸಾಕ್ಷಿಯಾದ ಅಪ್ಪು ವಿನಲ್ಲಿ ರೋಮಾಂಚನ ಉಂಟಾಯಿತು.!

 ಮಾಲಿಕಿದಿನಾರ್ (ರ ಅ) ರವರಿಗೆ  ಭಾರತದಲ್ಲಿ ಕೀಳುಜಾತಿ ಮತ್ತು ಮೇಲ್ವರ್ಗ ಎಂಬ ಭೇದಗಳಿರುವುದು  ತಿಳಿದಿರಲಿಲ್ಲ.
 ನೋಡಲು ಕಪ್ಪು ವರ್ಣದ  ಕೀಳು ಜಾತಿಯವನಾದ ಅಪ್ಪು ಮಾಲಿಕಿದಿನಾರ್ (ರ  ಅ) ಅಪ್ಪಿಕೊಂಡಾಗ ತನ್ನ ಮನಸು ತಿಳಿಯದೇ ಕಣ್ಣೀರು ಭೂಮಿಯನ್ನು ಸ್ಪರ್ಶಿಸಿತು.
ಭಾರತದ ಭೂಮಿಯಲ್ಲಿ  ಹಾಗೆ ಮೊದಲಿಗನಾಗಿ ಅಶ್ಹದು ಅನ್ಲಾಹಿಲಾಹ ಇಲ್ಲಲ್ಲಾಹ್ ವಹನ್ನಕ ರಸೂಲುಲ್ಲಾ ಎಂಬ ಶಹಾದತ್ ಕಲಿಮ ಉಚ್ಚರಿಸಿದ ಮೊದಲ ವ್ಯಕ್ತಿ ಅಪ್ಪು ಕೊಡಂಗಲ್ಲೂರ್..!
 ಅರಮನೆಯತ್ತ ಕೋಹಿನ್ನೂರ್ ರಾಜ ಮತ್ತು 14 ಮುಸ್ಲಿಮರೊಂದಿಗೆ

ಭಾರತ ದೇಶದೊಳಗೆ ಪ್ರಪ್ರಥಮವಾಗಿ ಇಸ್ಲಾಂ ಸ್ವೀಕರಿದ ವ್ಯಕ್ತಿ  ಅಪ್ಪು  ಹೆಸರನ್ನು ಅಬ್ದುಲ್ ರೆಹ್ಮಾನ್ ಎಂದು ಮರುನಾಮ ಕರಣ ಮಾಡಲಾಯಿತು,.,.,.,ಅಪ್ಪು( ಅಬ್ದುಲ್ ರೆಹಮಾನ್) ವಿನೊಂದಿಗೆ
ಕೊಡಂಗಲ್ಲೂರ್ ಅರಮನೆ ಪ್ರವೇಶೀಸಿ  ....ಚೇರಮಾನ್ ಪೆರುಮಾಳ್ (ತಾಜುದ್ದೀನ್) ಅವರ ಮರಣ ದುಃಖ ವಾರ್ತೆಯನ್ನು ಮನೆಯವರ ಮುಂದಿಡುತ್ತಾರೆ..

ತಾಜುದ್ದೀನ್ ನಂತರದ ಹಿಂದು ರಾಜರು ಅರಮನೆಯಲ್ಲಿ ಮುಸ್ಲಿಮರಿಗೆ ಆಶ್ರಯ ನೀಡಿ ಭೋಜನವನ್ನು ನೀಡಿ ಸತ್ಕರಿಸಿದ ತಾಜುದ್ದೀನ್ ರಾಜರ ಕುಟುಂಬಕ್ಕೆ

ಮಾಲಿಕಿದೀನಾರ್ (ರ ಅ) ತಮ್ಮ ಬೇಡಿಕೆಯನ್ನಿಡುತ್ತಾರೆ ........,......*ತಾಜುದ್ದೀನ್ ಮರಣಾನಂತರದ ರಾಜ ನೊಂದಿಗೆ ತನಗೆ ನಮಾಝ್ ನಿರ್ವಹಿಸಲು
ಮಸೀದಿಯ ಅವಷ್ಯಕಥೆಯನ್ನು ಮುಂದಿಡುತ್ತಾರೆ.
ಹಾಗೆ ಮಾಲಿಕಿದೀನಾರ್ (ರ ಅ) ರೊಂದಿಗೆ  ನಿಮಗಿಷ್ಟವಾದ ಸ್ಥಳವನ್ನು ಆಯ್ದು ಕೊಳ್ಳಿ ಎಂದು ಕೊಡಂಗಲ್ಲೂರ್ ರಾಜ ಸಮ್ಮತ ನೀಡುತ್ತಾರೆ....!

ಆದರೆ ಅರಬ್ ನಿಂದ ಬಂದ ಮುಸ್ಲಿಮರಲ್ಲಿ ಮಸೀದಿ ನಿರ್ಮಿಸಲು ಹಣ ವಿಲ್ಲ. ಇವತ್ತು ನಾವು ಕಾಣುತ್ತಿರು ಸ್ವಪ್ನ ಭೂಮಿ ಯಾಗಿ ಗಲ್ಫ್ ಮಾರ್ಪಟ್ಟಿದ್ದು1960 ರಲ್ಲಿ ಪೆಟ್ರೋಲಿಯಂ  ಕಂಡು ಹಿಡಿದ ಮೇಲೆ  ಅದಕ್ಕಿಂತ ಮೊದಲು ಅರಬ್ ರಾಷ್ಟ್ರದ ವಾಣಿಜ್ಯ ಬೆಳೆ ಕೇವಲ ಖರ್ಜೂರವಾಗಿತ್ತು.ಮೀನು ಹಿಡಿಯುವುದು  ಅರಬಿಗಳ ಮುಖ್ಯ ಕಸುಬಾಗಿತ್ತು. ಹಳೇ ಕಾಲದಲ್ಲಿ
ವ್ಯಾಪಾರಕ್ಕಾಗಿ ಭಾರತಕ್ಕೆ ಅರಬಿಗಳು ಬರುವಾಗ ನಮ್ಮ  ಮುತ್ತಾತಂದಿರು ಅವರಿಗೆ ವೀಸಾ ಒದಗಿಸುವ ಪದ್ದತಿ ಇತ್ತು.
ಹೀಗೆ ದಾರಿದ್ರ್ಯ ಹೊಂದಿದ ಅರಬಿಗಳಿಗೆ ಮಸೀದಿ ನಿರ್ಮಿಸಲು
ದೇವಸ್ಥಾನಕ್ಕೆ ಎತ್ತಿಟ್ಟಿದ್ದ ಕಲ್ಲನ್ನು ಮಸೀದಿಗೆ ದಾನ ಮಾಡಿ ಮತಸೌಹಾರ್ಧವನ್ನು ಕಲಿಸಿದ ಮಾನವ ಸಂಸ್ಕಾರದ ಮೌಲ್ಯ ಗಳನ್ನು ಎತ್ತಿ ಹಿಡಿದ  ಹಿಂದು ದರ್ಮ...

ಇವತ್ತಿಗೂ ನೀವು ನೋಡಬಹುದು ಭಾರತದ ಮೊದಲ ಮಸೀದಿ ಕೊಡಂಗಲ್ಲೂರ್ ಚೇರಮಾನ್ ಮಸೀದಿ ಉಳಿದ ಭಾಗಗಳನ್ನು ಒಡೆದು ಹೊಸದಾಗಿ ನಿರ್ಮಿತವಾದರೂ ಒಳಬಾಗ ಮೊದಲಿನ ಹಳೇಯ ಕಟ್ಟಡ ಹಾಗೇ ಇದೆ.
ಹೀಗೆ ಮುಸ್ಲಿಂ ಸಮುದಾಯಕ್ಕೆ ಪ್ರಪಂಚದ ಯಾವ ಬಾಗದಿಂದಲೂ ನೋಡಲು ಸಾದ್ಯವಾಗದ ಅತ್ಯಂತ ಸುಂದರ ಸಂಸ್ಕಾರ ವನ್ನು ಮಾಲಿಕಿದೀನಾರ್ (ರ ಅ) ಮತ್ತು ಅನುಯಾಹಿಗಳು ನೋಡಲು ಸಾಧ್ಯವಾಗಿದ್ದು,
ಬಾರತಾಂಬೆಯ ಮಡಿಲಲ್ಲಿ ಹಿಂದು ದರ್ಮದ ಅನುಯಾಯಿಗಳಿಂದ,
14 ಅರಬ್ಬರನ್ನೊಳಗೊಂಡ ಮುಸ್ಲಿಮರಲ್ಲಿ ಇಬ್ಬರು ಸ್ತ್ರೀಗಳಿದ್ದರು
ಉಳಿದ 10 ಜನರಿಗೆ ಮದುವೆಯಾಗಿರಲಿಲ್ಲ .ಆ ಸಮಯ
73 ಒಳಜಾತಿಗಳಿದ್ದ ಹಿಂದೂ ದರ್ಮೀಯರು ಮುಂದೆ ನಿಂತು ಮದುವೆಯನ್ನು ಮಾಡಿಸುತ್ತಾರೆ .
ಅಷ್ಟು ದಿನ ಅಂಬಿಕಾ ಆಗಿದ್ದವಳು ಆಮೀನಾ ಆಗಿ ಮಾರ್ಪಟ್ಟಳು.ಆಶಾ ಆಗಿದ್ದವಳು ಹಲೀಮ ಆದಳು...
ಹೀಗೆ ಸರ್ವವನ್ನು  ನೀಡಿ ಸ್ವೀಕರಿಸಿದ ಭಾರತಾಂಬೆಯ ಹಿಂದುಗಳನ್ನು ಪ್ರತಿಯೊಬ್ಬ ಮುಸ್ಲಿಂ ಗೌರವಿಸಲೇ ಬೇಕು....

ಕೆಲವೊಮ್ಮೆ ತನ್ನ ಮನೆತನದ ಹೆಸರಿನಿಂದ ಅಭಿಮಾನ ಪ್ರಕಟಿಸುವ ಓ ಮುಸ್ಲಿಮರೇ ಉಮರ್ ಖಾಳಿ(ರ ಉ) ಎಂಬ ಅದ್ಭತ ಕವಿಯ ಕವಿತೆಯಿಂದ ತಿಳಿಯಬಹುದು ನೀವೆಲ್ಲರು ಒಂದೊಮ್ಮೆ ನಿಮ್ಮ ಮುತ್ತಾತಂದಿರ ಕಾಲದಲ್ಲಿ ನಾಯರ್,ನಂಬಿಯಾರ್,ಹೊಲೆಯರು,ಮಾದಿಗ ಕುಟುಂಬಕ್ಕೆ ಸೇರಿದವರು.
ಕೇವಲ ಅಹ್ಲು ಬೈತ್ ತಂಗಳ್  ಕುಟುಂಬ (ಪ್ರವಾದಿ ಕುಟುಂಬದವರು) ಬಿಟ್ಟು ಉಳಿದವರೆಲ್ಲರು ಇಲ್ಲಿನ ಹಿಂದೂ ಕುಟುಂಬಕ್ಕೆ ಸೇರಿದ ವರು.

ನಿಮ್ಮ ಅಹಂಕಾರದ ಅಭಿಮಾನವನ್ನು ದೂರವಾಗಿಸಿ  ಇಸ್ಲಾಂ ನಲ್ಲಿ ಮೇಲು ಕೀಳು ಭಾವನೆಗಳಿಲ್ಲದ ದರ್ಮ ವೆಂದು
ಸಾರಿ ಹೇಳುವ ಅದ್ಭುತ ಸಾಲುಗಳ ಒಡೆಯ ಉಮರ್ ಖಾಳಿ (ರ ಅ)

ಭಾರತಕ್ಕೆ ಇಸ್ಲಾಂ/ ಹಾಗು ವಿಶ್ವದ ಇತರೆಡೆ ಇಸ್ಲಾಂ

ಮೇಲು ಕೀಳಿಲ್ಲದ ಇಸ್ಲಾಂ ಗೆ  ನಿನ್ನೆ ಆಗಮಿಸಿದ ಚರ್ಮಣ..ನಾಳೆ ಮಸೀದಿಯಲ್ಲಿ ಖುತ್ಬಾ ನಿರ್ವಹಿಸುವ ಉಸ್ತಾದ್ ಗೆ ಮುಸ್ಸಾಫಾತ್ ನೀಡಲು ಅವಕಾಶ ಕೊಟ್ಟ ಧರ್ಮ ......!

ಅಷ್ಟಕ್ಕೇ ಸಾಲದು
ಅನ್ಯ ಧರ್ಮದ ಕೀಳು ಜಾತಿಯಲ್ಲಿದ್ದ ಚರ್ಮಣ,ಕುರ್ ಆನ್ ಪಾರಾಯಣ ಮಾಡುತ್ತಾ..ತಾನು ನಮಾಝ್ಗೆ ನೇತ್ರ್ ತ್ವ ವಹಿಸಲು ಕಲಿಸಿದ ಇಸ್ಲಾಂ...!

 ಅದೆಷ್ಟೋ ಜನರ ಸಮ್ಮುಖದಲ್ಲಿ ನಮಾಝ್ಗೆ ಮುಂದಾಳತ್ವ ನೀಡಲು ಇಸ್ಲಾಂ ನಲ್ಲಿ   ತಿಳುವಳಿಕೆ ಇದ್ದರೆ ಸಾಕು ಒಳ ಜಾತಿಗಳ ತಕರಾರಿಲ್ಲ.

ಇಸ್ಲಾಂ ನ ಆದರ್ಶ ವನ್ನು ನೋಡಿ  ಮುಸ್ಲಿಂ ರಾಗುವ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ .ಇದು ಭಾರತ ಮಾತ್ರವಲ್ಲ ವಿಶ್ವದ ಉದ್ದ ಅಗಲಕ್ಕೂ ಕೇಳುತ್ತಿರುವ ಮತ್ತು ನೋಡುತ್ತಿರುವ ವಿಶಯವಾಗಿದೆ‌.

ಭಾರತದಲ್ಲಿ 17 ಕೋಟಿ ಮುಸ್ಲಿಂ ಸಮುಧಾಯದವರಿದ್ದಾರೆ,ಕೆಲವೊಮ್ಮೆ ನೀವು ಕೇಳಿರಬಹುದು....

ಇದೆಕ್ಕೆಲ್ಲ ಕಾರಣ ಬಹು ಪತ್ನಿತ್ವ ಹಾಗು ಜನಸಂಖ್ಯಾ ನಿಯಂತ್ರಣದಲ್ಲುಂಟಾದ  ಕೊರತೆ,ಭಾರತ ದೇಶದಲ್ಲಿ ಮುಸ್ಲಿಂ ಸಮುದಾಯ ಬಹು ಪತ್ನಿತ್ವ ಅಸ್ತಿತ್ವ ದಲ್ಲಿರುವು ಕೇವಲ ಶೇಖಡ ಎರಡರಷ್ಟು ಮಾತ್ರ ....!

ಯೂರೋಪ್ ದೇಶಗಳನ್ನೊಮ್ಮೆ ನೋಡೋಣ !

ವಿಶ್ವದ ವಾಣಿಜ್ಯ ನಗರ ಲಂಡನ್ ಇರುವ ಬ್ರಿಟನ್.
ಮುಸ್ಲಿಂ ಸಮುದಾಯವನ್ನು ಅತ್ಯಂತ ಕಡೆಗಣಿಸುವ ಮತ್ತು ಕೀಳಾಗಿ ನೋಡುವ ಒಕ್ಕೂಟ.

 ಇಲ್ಲಿ ಬೆಳೆಯುತ್ತಿರುವ ಇಸ್ಲಾಂ ವೇಗ ವು  ಅಲ್ಲಿನ ಆಡಳಿತಕ್ಕೆತಲೆನೋವಾಗಿ ಪರಿಣಮಿಸಿದೆ.ಲಂಡನ್ ನಗರದ ಇತ್ತೀಚಿನ ವರದಿಗಳ ಪ್ರಕಾರ ಇಲ್ಲಿ ಚರ್ಚ್ ಗಳಿಗಿಂತ ಹೆಚ್ಚು ಮಸೀದಿಗಳಿವೆ,ಶೇಖಡಾ ಇಪ್ಪಕ್ಕಿಂತ ಹೆಚ್ಚಿನ ಪ್ರಮಾಣದ ಮುಸ್ಲಿಮರಿದ್ದಾರೆ ಬ್ರಿಟನ್ ಕೇಂದ್ರವಾದ ಇಂಗ್ಲೇಂಡಿನಲ್ಲಿ.

 ಫ್ರಾನ್ಸ್ ಕೇವಲ 15 ವರ್ಷ ಕಳೆದರೆ ಇಸ್ಲಾಂ ರಾಷ್ಟ್ರ ಆಗುವ ಎಲ್ಲಾ ಸೂಚನೆಗಳಿವೆ.
 2050 ರ ವೇಳೆಗೆ ಜರ್ಮನಿ ಇಸ್ಲಾಮೀ ಕರಣ ಗೊಳ್ಳಲಿದೆ ಎಂದು ಮಾದ್ಯಮದ ಮುಂದೆ ಬಹಿರಂಗವಾಗಿ ಹೇಳಿಕೊಂಡಿದೆ... ..ಹೀಗೆ ಯೂರೋಪ್  ಒಕ್ಕೂಟದ 28  ರಾಷ್ಟ್ರಗಳಲ್ಲಿ ಶೇಖಡಾ ತೊಂಬತ್ತರಷ್ಟು ಇಸ್ಲಾಂ ರಾಷ್ಟ್ರ ವಾಗುವ ಸೂಚನೆಯನ್ನು ನೀಡಿದೆ..!

ಆಫ್ರಿಕಾ
ವಿಶ್ವದ ಎರಡನೇ ದೊಡ್ಡ ಖಂಡದಲ್ಲಿ
ಒಟ್ಟು 54 ರಾಷ್ಟ್ರಗಳಿವೆ ಇದರಲ್ಲಿ 15 ಕ್ಕಿಂತ ಹೆಚ್ಚಿನ ದೇಶಗಳಲ್ಲಿ ಶೇಖಡಾ 50ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ.ವರ್ಣಭೇದ ವಿಲ್ಲದ ಇಸ್ಲಾಂ,ಆಫ್ರಿಕಾ ಖಂಡದ ಕಪ್ಪು ಜನರ ಮನದಾಳದಲ್ಲೂ ನೆಲೆಯೂರಿ ನಿಂತಿದೆ.

ಏಷ್ಯಾಖಂಡ

ಏಷ್ಯಾದಲ್ಲಿ ವಿಶ್ವದ ಶೇಖಡ 62ರಷ್ಟು ಮುಸ್ಲಿಮರಿದ್ದಾರೆ.

48ರಾಷ್ಟ್ರಗಳನ್ನೊಳಗೊಂಡ ಏಷ್ಯಾ ಖಂಡದ ಜನಸಂಖ್ಯೆ ಯಲ್ಲಿ ಇಸ್ಲಾಂ ಮೊದಲ ಸ್ಥಾನದಲ್ಲಿದೆ.

ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ ಸ.ಅ ರ ಜನ್ಮ ನಾಡಾದ ಮಕ್ಕಾ ಒಳಗೊಂಡ ಏಷ್ಯಾಖಂಡದ
ಉದ್ದ ಅಗಲಕ್ಕೂ ಇಸ್ಲಾಂ ಗಣನೀಯ ಬೆಳವಣಿಗೆಯನ್ನು ನೋಡಬಹುದು.

ಯೂರೋಪ್ ಮತ್ತು ಏಷ್ಯಾ ಮದ್ಯೆ ಇರುವ ರಷ್ಯಾದ ಸೇನಾಪಡೆಯಲ್ಲಿ ಶೇಖಡಾ 40ರಷ್ಟು ಮುಸ್ಲಿಮರಿದ್ದಾರೆ....ಹೇಗೆ ಸಾಧ್ಯವಾಯಿತು..ಇದೆಲ್ಲ?

ಮುಸ್ಲಿಮರನ್ನು ವ್ಯಂಗ್ಯಮಾಡುವ ಆಧುನಿಕ ಜಗತ್ತಿನ ಒಡೆಯರಾದ ಅಮೇರೀಕಾ ಇದರಿಂದ ಹೊರತಾಗಿಲ್ಲ ....
1970ರ ದಶಕದಲ್ಲಿ ಕೇವಲ 10000 ದೊಳಗಿದ್ದ ಮುಸ್ಲಿಮರ ಸಂಖ್ಯೆ.ಇವತ್ತು 30 ಲಕ್ಷ ದಾಟಿದೆ
ಇದೆಕ್ಕೆಲ್ಲ ಕಾರಣ ಪರಿಶುದ್ದ ಮತ್ತು ಪವಿತ್ರ ಕುರ್ ಆನ್ ಸಂದೇಶ ವಾಣಿಯಾಗಿದೆ.

 ಕುರ್ ಆನ್ ಅದ್ಯಯನ ಮಾಡಲು ಹೊರಟ ಪಾಶ್ಚಾತ್ಯರು ತಂಡೋಪ ತಂಡವಾಗಿ ಇಸ್ಲಾಂ ನೆಡೆ ಆಗಮಿಸುತ್ತಿದ್ದಾರೆ..,

ವಿಶ್ವದ ಅತ್ಯಂತ ಪ್ರಸಿದ್ದ ಕ್ರೀಡಾಪಟುಗಳು,ಪ್ರತಿಭಾವಂತ ವಿದ್ವಾಂಸರು..ಇಸ್ಲಾಂ ನೆಡೆಗೆ ಬರುತ್ತಿರುವುದನ್ನು ನಾವು ವಿಶ್ವದ ಉದ್ದ ಅಗಲಕ್ಕೂ ನೋಡಬಹುದು.

ಭಯೋತ್ಪಾದಕ ರೆಂಬ ಹಣೆ ಪಟ್ಟಿ ಇಸ್ಲಾಂ ನ ಆದರ್ಶವನ್ನು ಕುಗ್ಗಿಸಲು ಹೊರಟ ರಾಷ್ಟ್ರಗಳು ಮುಸ್ಲಿಮರ ಒಳ ಪ್ರವೇಶ ನಿಶೇದಿಸುತ್ತಾರೆ...

ಇದು ಮುಸ್ಲಿಮರ ಮನಸ್ಸಿಗೆ ಅತೀವ ನೋವನ್ನುಂಟು ಮಾಡುತ್ತಿರುವ ವಿಶಯವಾದರೂ...

ಎಲ್ಲಾ  ವಿಷಯಗಳನ್ನು ಕಾಣುವ ಮತ್ತು ಕೇಳುತ್ತಿರುವ ಶರ್ವ ಶಕ್ತನಾದ ಅಲ್ಲಾಹುವಿನ ಮೇಲಿರುವ  ವಿಶ್ವಾಸವೇ *ಇಸ್ಲಾಂ
ವಿಜಯಕ್ಕೆ* ಕಾರಣವಾಗಿದೆ...

ಅಬ್ದುಲ್ ರಶೀದ್ ಪಿಎ
 ಕೊಡಗು
rasheed766@gmail.com

ಎಸ್ಸೆಸ್ಸೆಫ್ ನ ವಜ್ರ ಪ್ರಕಾಶ ಇಮೇಜನ್ನು ವಜ್ರದೇಹಿ ಸ್ವಾಮೀಜಿಗೆ ಕೂಡಾ ಅಡಗಿಸಲು ಸಾದ್ಯವಿಲ್ಲ ಯಾಕೆ?


---------------------

ಹೌದು...
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ವಿರೋಧಿಗಳು, ನಾನಾ ರೀತಿಯಲ್ಲಿ ವಿಮರ್ಶಿಸಿದ್ದಾರೆ.
ಹೇಚ್ಚೇಕೆ 'ಹುಚ್ಚ' ನೆಂದೇ ಕರೆದರು!

ನಿಜವಾಗಿಯೂ ಪುಣ್ಯ ರಸೂಲರಿಗೆ ಅಂತಹ ಗಂಭೀರ ನ್ಯೂನತೆ ಬಿಡಿ, 'ನ್ಯೂನತೆ' ಎಂಬುದೇ ನೆಬಿಯವರನ್ನು ಟಚ್ಚ್ ಮಾಡಲಿಲ್ಲ!

ಅಷ್ಟಾಗಿಯೂ ಅವರು ಆ ಪುಣ್ಯ ರಸೂಲರನ್ನು 'ಹುಚ್ಚ' ನೆಂದೇ ಕರೆದು ಬಿಟ್ಟರು!!

ಇಲ್ಲಿ ನಾವು ಗಮನಿಸಬೇಕಾದ ಸತ್ಯವೊಂದಿದೆ.
ಅವರು (ಮಕ್ಕಾ ಮುಶ್ರಿಕರು) ಅದೆಷ್ಟೇ ಕೀಳುಮಟ್ಟದಲ್ಲಿ ನೆಬಿಯವರನ್ನು ವಿಮರ್ಶಿಸಿದರೂ ಒಳಗೊಳಗೆ ಅವರಿಗೆ ಆತಂಕವಿತ್ತು!
ಅವರು ಕೂಡಾ ಅವರರಿಯದೆ ಹೇಳುತ್ತಿದ್ದ ಒಂದು ವಾಕ್ಯವಿತ್ತು "ಅಲ್ ಅಮೀನ್" "ಸತ್ಯವಂತ"!

ಅಂದ್ರೆ ಬಿಲ್ಕುಲ್ ಸುಳ್ಳು ಹೇಳಲ್ಲ, ವಂಚನೆ ಮಾಡಲ್ಲ, ವಚನ ಭೃಷ್ಟ ಇಲ್ಲ, ಟೋಟಲಿಯಾಗಿ ಪುಣ್ಯ ರಸೂಲರು ಸತ್ಯವಂತ ಎಂಬ ಇಮೇಜ್ ವಜ್ರದಂತೆ ವಿರೋಧಿಗಳ ಎದೆಯನ್ನು ಸೀಳಿ ಪ್ರಕಾಶಿಸುತ್ತಿತ್ತು.
ಆದರೂ ಅವರು ತಮ್ಮವರನ್ನು ತೃಪ್ತಿ ಪಡಿಸಲು ನ್ಯೂನತೆಗಳಿಗೆ ಅತೀತವಾದ ಪುಣ್ಯ ಮನುಷ್ಯನನ್ನು "ಹುಚ್ಚನೆಂದು"  ಕರೆದೇ ಬಿಟ್ಟರು!!
ಅದು ಈ ಲೋಕದ ರೂಡಿ ಕೂಡಾ!

ನಿಜವಾಗಿಯೂ ಇಲ್ಲಿ ಇಸ್ಲಾಂ ದಾಈ ಗಳಿಗೆ ಪಾಠವಿದೆ.
ಪ್ರತಿಯೊಬ್ಬ ಪ್ರಭೋದಕ ಅಥವಾ ಧಾರ್ಮಿಕ ಸಂಘಟನೆಗಳ ವಿರುದ್ದ ವಿಮರ್ಶನೆಗಳು ಸಹಜ. ಆರೋಪಗಳು ಅಷ್ಟೇ ಅಧಿಕ.
ಅದೇನೇ ಇದ್ದರೂ ಸದರಿ ಪ್ರಭೋದಕ ಅಥವಾ ಸಂಘಟನೆ ತನ್ನ ಇಮೇಜನ್ನು ಭದ್ರಪಡಿಸಿಕೊಳ್ಳಬೇಕು.
ಅದರಲ್ಲಿ ಎಸ್ಸೆಸ್ಸೆಫ್ ನೂರು ಶೇಖಡಾ ವಿಜಯಿಸಿದೆ.

ಕಾರಣ ಆ ಸಂಘಟನೆ ಪ್ರವಾದಿಗಳ ಉತ್ತರಾಧಿಕಾರಿಗಳಾದ ಉಲಮಾಗಳ ಆಶೀರ್ವಾದ ಮತ್ತು ನೇತೃತ್ವದಲ್ಲಿ ನಡೆಯುತ್ತದೆ.
ಹಾಗಾಗಿಯೇ ಎಸ್ಸೆಸ್ಸೆಫ್ ನ ವಿರುದ್ದ ಯಾರೂ ಏನೇ ಆರೋಪ ಮಾಡಿದರೂ ಅವರೆಲ್ಲರ ಹೃದಯ ಸೀಳಿ ಅದರ ಇಮೇಜ್ ವಜ್ರದಂತೆ ಪ್ರಕಾಶಿಸುತ್ತಲೇ ಇದೆ.
ಆದ್ದರಿಂದಲೇ ಪ್ರಸ್ ಮೀಟ್ ನೋಟ್ ನಲ್ಲಿ ಮತೀಯವಾದದ ಆರೋಪ ಟೈಪ್ ಮಾಡಿದವರಿಗೆ ಎಸ್ಸೆಸ್ಸೆಫ್ ಧರ್ಮದ ಏಳಿಗೆಗಾಗಿ ಎಂದು ಹೇಳಲೇ ಬೇಕಾಯಿತು!

ಅದಾಗಿದೆ ವಜ್ರ ಪ್ರಕಾಶದ ಇಮೇಜ್!

ಅಂದ್ರೆ ಎಸ್ಸೆಸ್ಸೆಫ್ ನ ಇಮೇಜನ್ನು ಮರೆಮಾಚಲು ಶ್ರಮಿಸುವುದು  
ಸೂರ್ಯ ಪ್ರಕಾಶ ಮರೆಮಾಚಲು ಶ್ರಮಿಸುವುದಕ್ಕೆ ಸಮ.

ಕೆಲವೊಂದು ಸಂಘಟನೆಗಳು ಈ ವಿಷಯದಲ್ಲಿ ಸೋತಿದೆ.
ಅವರ ಎಂಟ್ರಿಯೇ ಆತಂಕಜನಕವಾಗಿತ್ತು!
ಅವರ ತರಗತಿಗಳು ಮಧ್ಯ ರಾತ್ರಿಯಲ್ಲಾಗಿತ್ತು!!
ಅವರಿಗೆ ಒಳಿತಿನ ಇಮೇಜ್ ಇರಲಿಲ್ಲ.
ಜಾತಿಬೇಧವಿಲ್ಲದೆ ಎಲ್ಲರೂ ಅವರ ಕುರಿತು ಆತಂಕ ಮತ್ತು ಭಯಭೀತಿಯಲ್ಲಿದ್ದರು. ಆ ಆತಂಕ ಮತ್ತು ಭಯ ನೀಗಿಸಲು ಅವರಿಗೆ ಇಂದಿಗೂ ಸಾದ್ಯವಾಗಿಲ್ಲ.
ಹಾಗಾಗಿಯೇ ಅವರು ಮಾಡುವ ಒಳಿತನ್ನು ಜನರು ಸಂಶಯ ದೃಷ್ಟಿಯಲ್ಲಿ ನೋಡುತ್ತಿದ್ದಾರೆ. ಧರ್ಮ ರಕ್ಷಕರ ಹೆಸರಲ್ಲಿ ಬಂದವರಿಂದಲೇ ಧರ್ಮವು ಅಪಾಯ ಎದುರಿಸುತ್ತಿದೆ ಎಂದು ಹೇಳುವ ಮಟ್ಟಿಗೆ ತಲುಪಿದೆ.
ಇದರಲ್ಲಿ ಹಿಂದು ಮುಸ್ಲಿಮ್ ಎಂಬ ವ್ಯತ್ಯಾಸ ಇಲ್ಲ.

ಮೊನ್ನೆ ನಾನು ಮಿತ್ರರೊಬ್ಬರ ಜತೆ ಬಸ್ಸಲ್ಲಿ ಮಂಗಳೂರು ಸಂಚರಿಸುವಾಗ ಹಿಂದೂ ಮತೀಯ ಸಂಘಟನೆಯ ಹೆಸರಲ್ಲಿರುವ ಬಸ್ಸು ತಂಗುದಾಣದವೊಂದರ ಬೋರ್ಡ್ ನೋಡಿದೆ.
ಮಿತ್ರ ಅಚ್ಚರಿಯಿಂದ ಕೇಳಿದ
ಇವರು ಕೂಡಾ ಸೋಷಿಯಲ್ ವರ್ಕ್ ಮಾಡುತ್ತಾರಾ? ಇದರಲ್ಲಿ ಏನಾದರೂ ತಂತ್ರ ಇರಬಹುದೆಂದು...
ನನ್ನ ಮನಸ್ಸು ಅದು ಸರಿಯೆಂದು ಹೇಳಿತು.

ಇದೇ ರೀತಿ ಮುಸ್ಲಿಂ ಮತೀಯ ಸಂಘಟನೆಯವರ ಸೋಷಿಯಲ್‌ ವರ್ಕ್ ನೋಡಿ ಒಬ್ಬ ಹಿಂದು ಸಹೋದರನ ಮನಸ್ಸು ಅದೇ ರೀತಿ ಮಂತ್ರಿಸುತ್ತಿದ್ದರೆ ಅದು ಅವನ ತಪ್ಪಲ್ಲ.
ಕಾರಣ ಇಂತಹ ಸಂಘಟನೆಗಳು ಸಮಾಜದಲ್ಲಿ ಸಂಶಯಾಸ್ಪದವಾಗಿ ಎಂಟ್ರಿ ಕೊಟ್ಟಿದ್ದರಿಂದಲೇ ಅವರಿಗೆ ಒಳ್ಳೆಯ ಇಮೇಜ್ ಇಲ್ಲ.
ನಿರಂತರ ಆರೋಪಗಳು ಬರುತ್ತಿರುವಾಗ ಅದು ಮತ್ತಷ್ಟು ಸಂಶಯಕ್ಕೆ ಎಡೆಮಾಡಿಕೊಡುತ್ತದೆ.

ಆದರೆ ಎಸ್ಸೆಸ್ಸೆಫ್ ಅಂದೂ ಇಂದೂ ತನ್ನ ಉತ್ತಮ ಮತ್ತು ಒಳಿತಿನ ಇಮೇಜ್ ಗೆ ಬದ್ದವಾಗಿರುವುದರಿಂದಲೇ ಅದೆಷ್ಟೋ ಬೆಟ್ಟದಷ್ಟು ಆರೋಪ ಬಂದರೂ ಅದರ ವಜ್ರ ಪ್ರಕಾಶದ ಇಮೇಜ್ ನ ಮುಂದೆ ಅದೆಲ್ಲವೂ ನಗಣ್ಯವಾಗುತ್ತದೆ.
ನಿನ್ನೆ ವಜ್ರದೇಹಿ ಸ್ವಾಮೀಜಿಯವರ ಮಾತಿನ ತಿರುಳು ಕೂಡಾ ಅದೇ ಆಗಿತ್ತು. ಸರಿ ತಾನೇ?
 - ಅಬೂಶಝ

ಭಾರತದ ನೆಲದಲ್ಲಿ ಇಸ್ಲಾಂ.

..



ವಿದೇಶಿ ಛಾಪಿನ ಧರ್ಮಗಳಲ್ಲಿ ಮೊದಲಿಗೆ ಭಾರತದ ನೆಲದಲ್ಲಿ ನೆಲೆಯೂರಲು ಸಾಧ್ಯವಾದದ್ದು ಯಹೂದಿ ಧರ್ಮಕ್ಕೆ. ಮದ್ಯಪ್ರಾಚ್ಯದಲ್ಲಿ ಆರಂಭವಾಗಿದ್ದ ಇಸ್ಲಾಮಿ ಹಾಗೂ ಕ್ರೈಸ್ತ ಧರ್ಮ ಯುದ್ದ (ಕ್ರುಸೇಡ್)ದ ಬಲಿಪಶುಗಳಾಗಿದ್ದ ಯಹೂದ್ಯರು ಮೊದಲಿಗೆ ಒಂದೂವರೆ ಸಾವಿರ ವರ್ಷದಿಂದೀಚೆಗೆ ಭಾರತಕ್ಕೆ ಸಮುದ್ರಮಾರ್ಗವಾಗಿ ಬಂದರು, ಇಂದಿನ ಕೇರಳದ ಕರಾವಳಿಯಲ್ಲಿ ಹಾಗು ಪೂರ್ವಕರಾವಳಿಯ ಮೂಲಕ ತ್ರಿಪುರ ಹಾಗು ನಾಗಾಲ್ಯಾಂಡಿನ ಗುಡ್ಡಗಾಡುಗಳಲ್ಲಿ ಇವರು ನೆಲೆಯೂರಿದರು. ಅನಂತರದ ಸರದಿ ಜತುರಾಷ್ಠನ ಅನುಯಾಯಿಗಳಾದ ಪರ್ಶಿಯನ್ನರದ್ದು. ಅರಬ್ಬಿಯಾದ ತುಂಬಾ ತನ್ನ ತೋಳ್ಬಲದಿಂದ ನೆಲೆ ಸ್ಥಾಪಿಸಿಕೊಂಡಿದ್ದ ಇಸ್ಲಾಂ ಪರ್ಷಿಯಾದ ರಾಜಗದ್ದುಗೆಯನ್ನ ಅಲುಗಾಡಿಸಿ ಅಲ್ಲಿನ ರಾಜಧರ್ಮವಾದ ಮೇಲೆ ನಿಷ್ಟಾವಂತ ಅಗ್ನಿ ಆರಾಧಕರಾದ ಪರ್ಶಿಯನ್ನರಿಗೆ ದೇಶಭ್ರಷ್ಟರಾಗುವ ಹೊರತು ಇನ್ಯಾವುದೆ ಆಯ್ಕೆಗಳು ಉಳಿದಿರಲಿಲ್ಲ.

ಹೀಗಾಗಿ ಅವರಲ್ಲಿ ಬಹುತೇಕರು ಸ್ವಧರ್ಮ ಭ್ರಷ್ಟರಾಗಲು ಇಚ್ಚಿಸದೆ ಭಾರತ ಉಪಖಂಡದ ಗುಜರಾತ್ ಹಾಗು ಮಹಾರಾಷ್ಟ್ರದ ಕರಾವಳಿಗಳಿಗೆ ರಾಜಕೀಯ ಆಶ್ರಯ ಬಯಸಿ ಗುಳೆ ಬಂದರು. ಇವೆರಡೂ ಧರ್ಮಾನುಯಾಯಿಗಳು ಕೇವಲ ಇಲ್ಲಿ ನೆಲೆ ಕಂಡುಕೊಂಡು ಮುಖ್ಯವಾಹಿನಿಯಲ್ಲಿ ಬೆರೆತುಹೋದರೆ ವಿನಃ ತಮ್ಮ ಧರ್ಮ ಪ್ರಚಾರದ ಯಾವುದೆ ಒಳ ಉದ್ದೇಶಗಳನ್ನ ಹೊಂದಿರಲಿಲ್ಲ ಅನ್ನೋದು ಗಮನಾರ್ಹ. ಇದರ ಬಗ್ಗೆ ಒಂದು ಕುತೂಹಲ ಹುಟ್ಟಿಸುವ ಕಥೆ ಚಾಲ್ತಿಯಲ್ಲಿದೆ. ಗುಜರಾತಿನ ಅಂದಿನ ಸನಾತನ ರಾಜನ ಬಳಿ ಆಶ್ರಯ ಬಯಸಿ ಬಂದ ಪರ್ಶಿಯನ್ನರ ಮುಖಂಡನಿಗೆ ರಾಜ 'ಆಶ್ರಯ ಕೇಳುವ ನಿಮ್ಮನ್ನ ಹೇಗೆ ನಂಬೋದು?' ಅಂದನಂತೆ. ಆವಾಗ ರಾಜನ ಪಾಕಶಾಲೆಯಿಂದ ಒಂದು ಲೋಟ ಹಾಲನ್ನು ತರಿಸಲು ಕೋರಿದ ಆ ಪರ್ಶಿಯನ್ನರ ಮುಖಂಡ ತನ್ನ ಚೀಲದಿಂದ ಚಮಚೆ ಸಕ್ಕರೆ ತೆಗೆದು ಅದಕ್ಕೆ ಬೆರೆಸಿ 'ನೋಡಿ ಹಾಲಲ್ಲಿ ಸಕ್ಕರೆ ಬೆರೆತಂತೆ ನಿಮ್ಮೊಂದಿಗೆ ಬೇರೆಯುತ್ತೇವೆ!' ಎಂದು ಉತ್ತರಿಸಿದನಂತೆ. ಹೀಗೆ ರಾಜನ ಮನಗೆದ್ದ ಪರ್ಷಿಯನ್ನರು ಕೊನೆಗೂ ತಮ್ಮ ನುಡಿಗೆ ಬದ್ಧರಾಗಿಯೆ ಉಳಿದರು. ಇಂದಿಗೂ ಗುಜರಾತಿನ ಸೂರತ್ ಹಾಗು ಮಹಾರಾಷ್ಟ್ರದ ಮುಂಬೈನ ಆರ್ಥಿಕ ಪ್ರಪಂಚದಲ್ಲಿ ಪಾರಸಿ ವ್ಯಾಪಾರಿಗಳದ್ದೆ ರಾಜ್ಯಭಾರ. ಹೀಗಿದ್ದರೂ ಅವರನ್ನ ಧರ್ಮಾಧರಿತವಾಗಿ ಗುರುತಿಸಲಾಗದಂತೆ ಸಮಾಜದ ಐಕ್ಯತೆಯಲ್ಲಿ ಆ ಸಮುದಾಯ ಲೀನವಾಗಿ ಹೋಗಿದೆ. ಉದಹಾರಣೆಗೆ ಟಾಟಾ ಉದ್ಯಮ ಸಮುದಾಯವನ್ನೆ ಗಮನಿಸಿ.

 ಆದರೆ ಭಾರತಕ್ಕೆ ಇಸ್ಲಾಮಿನ ಆಗಮನದ ಕಥೆ ತುಸು ವಿಭಿನ್ನವಾಗಿದೆ. ಎಲ್ಲರೂ ಆದು ಬಲಪ್ರಯೋಗದ ಮೂಲಕ, ಹೆಚ್ಚಾಗಿ ಗಜನಿ ಮಹಮ್ಮದನ ಅತಿಕ್ರಮಣದದಿಂದ ಭಾರತವನ್ನ ಹೊಕ್ಕಿತು ಅಂತಲೆ ಭಾವಿಸಿದ್ದಾರೆ. ಆದರೆ ವಾಸ್ತವ ಅದಲ್ಲ. ಇಸ್ಲಾಂ ಭಾರತದ ಭೂಮಿಗೆ ಅಡಿಯಿಟ್ಟದ್ದು ನೈಋತ್ಯ ಕರಾವಳಿಯ ಮೂಲಕ. ಗಜನಿ ಮಹಮದನ ಅತಿಕ್ರಮಣಕ್ಕೂ ಎರಡೂವರೆ ಶತಮಾನದ ಹಿಂದೆಯೆ ಕೇರಳದ ಕರಾವಳಿ ತೀರದಲ್ಲಿರುವ ಅಂದಿನ ಮುಸ್ಸೇರಿ ಪಟ್ಟಣ (ಇಂದಿನ ಕೊಲ್ಲಂ)ದ ಮೂಲಕ ಇಸ್ಲಾಂ ಭಾರತವನ್ನ ಪ್ರವೇಶಿಸಿತ್ತು. ಅದು ಅಂದಿನ ಕೇರಳದ ಪ್ರಮುಖ ರೇವುಪಟ್ಟಣವಾಗಿತ್ತು. ಅಂದಿನ ಕೇರಳ ಚಂದ್ರಗಿರಿಯ ದಕ್ಷಿಣಕ್ಕಿರುವ ತಂಬುರದಿಂದ ಭಾರತಭೂಮಿಯ ತುತ್ತತುದಿಗಿರುವ ಶಚೀಂದ್ರಂ (ಈಗ ತಮಿಳುನಾಡಿಗೆ ಸೇರಿದೆ) ವರೆಗೆ ವ್ಯಾಪಿಸಿದ್ದು ಐದು ಮುಖ್ಯ ರಾಜ್ಯಗಳಾಗಿ ಹಂಚಿಹೋಗಿತ್ತು. ಆ ಎಲ್ಲಾ ಪಾಳೆಪಟ್ಟುಗಳು ನಡು ಕೇರಳದಲ್ಲಿರುವ ಕೊಡುಂಗಲ್ಲೂರು ಸ್ಥಿತ ಚೇರ ರಾಜಮನೆತನದ ಸಾಮ್ರಾಜ್ಯಕ್ಕೆ ಅಧೀನವಾಗಿದ್ದು ರಾಜಕೀಯವಾಗಿ ಅಲ್ಲಿನ ವರ್ಮನ್ ಗದ್ದುಗೆಗೆ ನಿಷ್ಠವಾಗಿದ್ದವು.

ಅಲ್ಲಿಗೆ ಇಸ್ಲಾಂ ಪ್ರವೇಶಿಸಿದ  ಬಗ್ಗೆ ಎರಡು ತರಹದ ಕತೆಗಳು ಚಾಲ್ತಿಯಲ್ಲಿವೆ. ಎರಡೂ ಕೂಡ ಜಾನಪದ ಮೂಲದವೇ ಅನ್ನೋದು ಗಮನಾರ್ಹ. ಮೊದಲನೆಯ ಕಥೆ ಹೀಗಿದೆ, ಅಲ್ಲಿನ ಆಳರಸ ನಡುವಯಸ್ಸಿನ ರಾಜ ರಾಮವರ್ಮ ಕುಲಶೇಖರನಿಗೆ ಒಂದು ರಾತ್ರೆ ಆಕಾಶದಿಂದ ತಾರೆಯೊಂದು ಎರಡಾಗಿ ಒಡೆದು ಬೀಳುವ ಅಪರೂಪದ ದೃಶ್ಯ ಕಂಡುಬಂತು. ಅದನ್ನ ಅನಿಷ್ಟದ ಶಕುನವಾಗಿ ಚಿಂತಿಸಿದ ರಾಜ 'ಚೇರಮಾನ ಪೆರುಮಾಳ್" (ಶ್ರೀಸಾಮಾನ್ಯರು ಅವನನ್ನ ಕರೆಯುತ್ತಿದ್ದುದೆ ಹಾಗೆ.) ಆಸ್ಥಾನದ ಜೋತಿಷಿಗಳಲ್ಲಿ ಈ ಬಗ್ಗೆ ವಿಚಾರಿಸಿದ. ಸೂಕ್ತ ಉತ್ತರ ದೊರೆಯದೆ ಖಿನ್ನನಾಗಿದ್ದ. ಆಗ ಅಲ್ಲಿಗೆ ಅರಬ್ಬಿಗಳ ವ್ಯಾಪಾರಿ ನಿಯೋಗವೊಂದು ವ್ಯಾಪಾರದ ಅನುಮತಿ ಕೋರಲು ಅವನ ಆಸ್ಥಾನಕ್ಕೆ ಬಂದಿತ್ತು. ಆ ನಿಯೋಗದ ಮುಖಂಡ ಈ ಸಮಸ್ಯೆಯನ್ನ ಮಹಮದ್ ಪೈಗಂಬರ್ ಇಸ್ಲಾಮನ್ನು ಅಲ್ಲಾಹನಿಂದ ಪ್ರೇರಿತನಾಗಿ ಭೋದಿಸ ತೊಡಗಿದ್ದಕ್ಕೆ ಸಮೀಕರಿಸಿದ. ಕಾಕತಾಳೀಯವಾಗಿ ಕನಸು ಬಿದ್ದ ಕಾಲಕ್ಕೂ ಪೈಗಂಬರನ ಪ್ರವಾದಿತನದ ಸ್ವಘೋಷಣೆಗೂ ಕಾಲದಲ್ಲಿ ಸಾಮ್ಯತೆ ಕಂಡು ಬಂತು. ಕ್ರಿಸ್ತಶಕ 639ಕ್ಕೆ ಕನಸು ಬಿದ್ದದ್ದು, ಪ್ರವಾದಿ ಭೋದನೆಗೆ ಆರಂಭಿಸಿದ್ದು ಕ…
[2:55 PM, 10/3/2017] Gafooru Bayar: ಎಸ್ಸೆಸ್ಸೆಫ್ ನ ವಜ್ರಪ್ರಕಾಶ ಇಮೇಜನ್ನು ವಜ್ರದೇಹಿ ಸ್ವಾಮೀಜಿಗೆ ಕೂಡಾ ಅಡಗಿಸಲು ಸಾದ್ಯವಿಲ್ಲ ಯಾಕೆ?
---------------------

ಹೌದು...
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ವಿರೋಧಿಗಳು, ನಾನಾ ರೀತಿಯಲ್ಲಿ ವಿಮರ್ಶಿಸಿದ್ದಾರೆ.
ಹೇಚ್ಚೇಕೆ 'ಹುಚ್ಚ' ನೆಂದೇ ಕರೆದರು!

ನಿಜವಾಗಿಯೂ ಪುಣ್ಯ ರಸೂಲರಿಗೆ ಅಂತಹ ಗಂಭೀರ ನ್ಯೂನತೆ ಬಿಡಿ, 'ನ್ಯೂನತೆ' ಎಂಬುದೇ ನೆಬಿಯವರನ್ನು ಟಚ್ಚ್ ಮಾಡಲಿಲ್ಲ!

ಅಷ್ಟಾಗಿಯೂ ಅವರು ಆ ಪುಣ್ಯ ರಸೂಲರನ್ನು 'ಹುಚ್ಚ' ನೆಂದೇ ಕರೆದು ಬಿಟ್ಟರು!!

ಇಲ್ಲಿ ನಾವು ಗಮನಿಸಬೇಕಾದ ಸತ್ಯವೊಂದಿದೆ.
ಅವರು (ಮಕ್ಕಾ ಮುಶ್ರಿಕರು) ಅದೆಷ್ಟೇ ಕೀಳುಮಟ್ಟದಲ್ಲಿ ನೆಬಿಯವರನ್ನು ವಿಮರ್ಶಿಸಿದರೂ ಒಳಗೊಳಗೆ ಅವರಿಗೆ ಆತಂಕವಿತ್ತು!
ಅವರು ಕೂಡಾ ಅವರರಿಯದೆ ಹೇಳುತ್ತಿದ್ದ ಒಂದು ವಾಕ್ಯವಿತ್ತು "ಅಲ್ ಅಮೀನ್" "ಸತ್ಯವಂತ"!

ಅಂದ್ರೆ ಬಿಲ್ಕುಲ್ ಸುಳ್ಳು ಹೇಳಲ್ಲ, ವಂಚನೆ ಮಾಡಲ್ಲ, ವಚನ ಭೃಷ್ಟ ಇಲ್ಲ, ಟೋಟಲಿಯಾಗಿ ಪುಣ್ಯ ರಸೂಲರು ಸತ್ಯವಂತ ಎಂಬ ಇಮೇಜ್ ವಜ್ರದಂತೆ ವಿರೋಧಿಗಳ ಎದೆಯನ್ನು ಸೀಳಿ ಪ್ರಕಾಶಿಸುತ್ತಿತ್ತು.
ಆದರೂ ಅವರು ತಮ್ಮವರನ್ನು ತೃಪ್ತಿ ಪಡಿಸಲು ನ್ಯೂನತೆಗಳಿಗೆ ಅತೀತವಾದ ಪುಣ್ಯ ಮನುಷ್ಯನನ್ನು "ಹುಚ್ಚನೆಂದು"  ಕರೆದೇ ಬಿಟ್ಟರು!!
ಅದು ಈ ಲೋಕದ ರೂಡಿ ಕೂಡಾ!

ನಿಜವಾಗಿಯೂ ಇಲ್ಲಿ ಇಸ್ಲಾಂ ದಾಈ ಗಳಿಗೆ ಪಾಠವಿದೆ.
ಪ್ರತಿಯೊಬ್ಬ ಪ್ರಭೋದಕ ಅಥವಾ ಧಾರ್ಮಿಕ ಸಂಘಟನೆಗಳ ವಿರುದ್ದ ವಿಮರ್ಶನೆಗಳು ಸಹಜ. ಆರೋಪಗಳು ಅಷ್ಟೇ ಅಧಿಕ.
ಅದೇನೇ ಇದ್ದರೂ ಸದರಿ ಪ್ರಭೋದಕ ಅಥವಾ ಸಂಘಟನೆ ತನ್ನ ಇಮೇಜನ್ನು ಭದ್ರಪಡಿಸಿಕೊಳ್ಳಬೇಕು.
ಅದರಲ್ಲಿ ಎಸ್ಸೆಸ್ಸೆಫ್ ನೂರು ಶೇಖಡಾ ವಿಜಯಿಸಿದೆ.

ಕಾರಣ ಆ ಸಂಘಟನೆ ಪ್ರವಾದಿಗಳ ಉತ್ತರಾಧಿಕಾರಿಗಳಾದ ಉಲಮಾಗಳ ಆಶೀರ್ವಾದ ಮತ್ತು ನೇತೃತ್ವದಲ್ಲಿ ನಡೆಯುತ್ತದೆ.
ಹಾಗಾಗಿಯೇ ಎಸ್ಸೆಸ್ಸೆಫ್ ನ ವಿರುದ್ದ ಯಾರೂ ಏನೇ ಆರೋಪ ಮಾಡಿದರೂ ಅವರೆಲ್ಲರ ಹೃದಯ ಸೀಳಿ ಅದರ ಇಮೇಜ್ ವಜ್ರದಂತೆ ಪ್ರಕಾಶಿಸುತ್ತಲೇ ಇದೆ.
ಆದ್ದರಿಂದಲೇ ಪ್ರಸ್ ಮೀಟ್ ನೋಟ್ ನಲ್ಲಿ ಮತೀಯವಾದದ ಆರೋಪ ಟೈಪ್ ಮಾಡಿದವರಿಗೆ ಎಸ್ಸೆಸ್ಸೆಫ್ ಧರ್ಮದ ಏಳಿಗೆಗಾಗಿ ಎಂದು ಹೇಳಲೇ ಬೇಕಾಯಿತು!

ಅದಾಗಿದೆ ವಜ್ರ ಪ್ರಕಾಶದ ಇಮೇಜ್!

ಅಂದ್ರೆ ಎಸ್ಸೆಸ್ಸೆಫ್ ನ ಇಮೇಜನ್ನು ಮರೆಮಾಚಲು ಶ್ರಮಿಸುವುದು  
ಸೂರ್ಯ ಪ್ರಕಾಶ ಮರೆಮಾಚಲು ಶ್ರಮಿಸುವುದಕ್ಕೆ ಸಮ.

ಕೆಲವೊಂದು ಸಂಘಟನೆಗಳು ಈ ವಿಷಯದಲ್ಲಿ ಸೋತಿದೆ.
ಅವರ ಎಂಟ್ರಿಯೇ ಆತಂಕಜನಕವಾಗಿತ್ತು!
ಅವರ ತರಗತಿಗಳು ಮಧ್ಯ ರಾತ್ರಿಯಲ್ಲಾಗಿತ್ತು!!
ಅವರಿಗೆ ಒಳಿತಿನ ಇಮೇಜ್ ಇರಲಿಲ್ಲ.
ಜಾತಿಬೇಧವಿಲ್ಲದೆ ಎಲ್ಲರೂ ಅವರ ಕುರಿತು ಆತಂಕ ಮತ್ತು ಭಯಭೀತಿಯಲ್ಲಿದ್ದರು. ಆ ಆತಂಕ ಮತ್ತು ಭಯ ನೀಗಿಸಲು ಅವರಿಗೆ ಇಂದಿಗೂ ಸಾದ್ಯವಾಗಿಲ್ಲ.
ಹಾಗಾಗಿಯೇ ಅವರು ಮಾಡುವ ಒಳಿತನ್ನು ಜನರು ಸಂಶಯ ದೃಷ್ಟಿಯಲ್ಲಿ ನೋಡುತ್ತಿದ್ದಾರೆ. ಧರ್ಮ ರಕ್ಷಕರ ಹೆಸರಲ್ಲಿ ಬಂದವರಿಂದಲೇ ಧರ್ಮವು ಅಪಾಯ ಎದುರಿಸುತ್ತಿದೆ ಎಂದು ಹೇಳುವ ಮಟ್ಟಿಗೆ ತಲುಪಿದೆ.
ಇದರಲ್ಲಿ ಹಿಂದು ಮುಸ್ಲಿಮ್ ಎಂಬ ವ್ಯತ್ಯಾಸ ಇಲ್ಲ.

ಮೊನ್ನೆ ನಾನು ಮಿತ್ರರೊಬ್ಬರ ಜತೆ ಬಸ್ಸಲ್ಲಿ ಮಂಗಳೂರು ಸಂಚರಿಸುವಾಗ ಹಿಂದೂ ಮತೀಯ ಸಂಘಟನೆಯ ಹೆಸರಲ್ಲಿರುವ ಬಸ್ಸು ತಂಗುದಾಣದವೊಂದರ ಬೋರ್ಡ್ ನೋಡಿದೆ.
ಮಿತ್ರ ಅಚ್ಚರಿಯಿಂದ ಕೇಳಿದ
ಇವರು ಕೂಡಾ ಸೋಷಿಯಲ್ ವರ್ಕ್ ಮಾಡುತ್ತಾರಾ? ಇದರಲ್ಲಿ ಏನಾದರೂ ತಂತ್ರ ಇರಬಹುದೆಂದು...
ನನ್ನ ಮನಸ್ಸು ಅದು ಸರಿಯೆಂದು ಹೇಳಿತು.

ಇದೇ ರೀತಿ ಮುಸ್ಲಿಂ ಮತೀಯ ಸಂಘಟನೆಯವರ ಸೋಷಿಯಲ್‌ ವರ್ಕ್ ನೋಡಿ ಒಬ್ಬ ಹಿಂದು ಸಹೋದರನ ಮನಸ್ಸು ಅದೇ ರೀತಿ ಮಂತ್ರಿಸುತ್ತಿದ್ದರೆ ಅದು ಅವನ ತಪ್ಪಲ್ಲ.
ಕಾರಣ ಇಂತಹ ಸಂಘಟನೆಗಳು ಸಮಾಜದಲ್ಲಿ ಸಂಶಯಾಸ್ಪದವಾಗಿ ಎಂಟ್ರಿ ಕೊಟ್ಟಿದ್ದರಿಂದಲೇ ಅವರಿಗೆ ಒಳ್ಳೆಯ ಇಮೇಜ್ ಇಲ್ಲ.
ನಿರಂತರ ಆರೋಪಗಳು ಬರುತ್ತಿರುವಾಗ ಅದು ಮತ್ತಷ್ಟು ಸಂಶಯಕ್ಕೆ ಎಡೆಮಾಡಿಕೊಡುತ್ತದೆ.

ಆದರೆ ಎಸ್ಸೆಸ್ಸೆಫ್ ಅಂದೂ ಇಂದೂ ತನ್ನ ಉತ್ತಮ ಮತ್ತು ಒಳಿತಿನ ಇಮೇಜ್ ಗೆ ಬದ್ದವಾಗಿರುವುದರಿಂದಲೇ ಅದೆಷ್ಟೋ ಬೆಟ್ಟದಷ್ಟು ಆರೋಪ ಬಂದರೂ ಅದರ ವಜ್ರ ಪ್ರಕಾಶದ ಇಮೇಜ್ ನ ಮುಂದೆ ಅದೆಲ್ಲವೂ ನಗಣ್ಯವಾಗುತ್ತದೆ.
ನಿನ್ನೆ ವಜ್ರದೇಹಿ ಸ್ವಾಮೀಜಿಯವರ ಮಾತಿನ ತಿರುಳು ಕೂಡಾ ಅದೇ ಆಗಿತ್ತು. ಸರಿ ತಾನೇ?
 - ಅಬೂಶಝ

ಸಮಸ್ತ ಯಾಕೆ ವಿಭಜನೆಯಾಯ್ತು? ಎಂದರಿಯದವರು ಇದನ್ನು ಝರೂರಿ ಓದಬೇಕು.



       🖋 ಅಬ್ದುಲ್  ರಶೀದ್ ಪದ್ಮುಂಜ

ಸಮಸ್ತ ವಿಭಜನೆ:
ಸನ್ನಿವೇಶ ಹಾಗೂ ಕಾರಣಾಂತರಗಳಿಂದ ಕೇರಳ ಮುಸ್ಲಿಮರಿಗೆ ಆತ್ಮೀಯವಾಗಿ ಹಾಗೂ ಭೌತಿಕವಾಗಿ ಸಾರಥ್ಯ ನೀಡುವ ಅಧಿಕೃತ ಪಂಡಿತ ಸಭೆಯಾದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಐತಿಹಾಸಿಕ ಚರಿತ್ರೆಯ ಅದ್ಭುತ ಅಧ್ಯಾಯವಾಗಿದೆ 1989ರ ಸಮಸ್ತ ವಿಭಜನೆ ಹಾಗೂ ಸಂಬಂಧಪಟ್ಟವುಗಳು.

ಆಕಸ್ಮಿಕವಾಗಿ ಉಧ್ಬವಿಸಿದ ತಾರ್ಕಿಕ ಕಾರಣದಿಂದಲೋ ಅನಿರೀಕ್ಷಿತವಾಗಿ ಬಂದೊದಗಿದ ಸನ್ನಿವೇಶದಿಂದಲೋ ಆಗಿರಲಿಲ್ಲ ಈ ಸಮಸ್ತ ವಿಭಜನೆ ಬದಲಾಗಿ ಸುದೀರ್ಘವಾದ ಮೂರು ದಶಕಗಳಿಂದಾಚೆಗೆ ನೆಲೆಯೂರಿದ ಚರಿತ್ರೆಯ ಕ್ಲೈಮಾಕ್ಸ್  ಆಗಿದೆ ಈ ವಿಭಜನೆ.

1947ರಲ್ಲಿ ದೇಶವೂ ಬ್ರೀಟೀಷರ ಗುಲಾಮಗಿರಿಯಿಂದ ಸ್ವತಂತ್ರಗೊಂಡು ಆಡಳಿತದ ಅನುಕೂಲಕ್ಕಾಗಿ ಭಾಷೆಗಳನ್ನನುಕರಿಸಿ ರಾಜ್ಯಗಳನ್ನು ರೂಪೀಕರಿಸಲಾಯಿತು. ಕೇರಳ ರಾಜ್ಯ ರೂಪೀಕರಿಸಿದ ನಂತರ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧೀನದಲ್ಲಿ ಕೇರಳ ಮುಸ್ಲಿಮರಿಗೆ ಭೌತಿಕ ಪ್ರಗತಿಗಾಗಿ ಸನ್ನಿವೇಶ ಒದಗಿತು. ಇಸ್ಲಾಮಿನ ಪರಂಪರಾಗತ ಆದರ್ಶಗಳನ್ನು ತೇಜೋವಧೆ ಮಾಡುತ್ತ ಅಕ್ರಮ ಪ್ರವೇಶಿಸಿದ ನವೀನವಾದಿಗಳನ್ನು ಮುಸ್ಲಿಂ ಸಮೂಹದಿಂದಲೇ ಸಂಪೂರ್ಣ ನಿರ್ಮೂಲನೆ ಮಾಡಲು (ತರ್ಕುಲ್ ಮುವಾಲಾತ್) ಸಮಸ್ತಕ್ಕೆ ಸಾಧ್ಯವಾಯಿತು.     
        ಈ ಸನ್ನಿವೇಶದಲ್ಲಿ ನೆಲೆಯೂರಲು ಅಡಿಪಾಯವಿಲ್ಲದ ಕೇರಳದ ನವೀನವಾದಿಗಳಾದ ವಹ್ಹಾಬಿ ಮೌದೂದಿಗಳ ಚಳುವಳಿಗೆ ಸ್ವಂತಸ್ಥಿಕೆಯ ಪ್ಲಾಟ್ ಫಾರ್ಮ್ ಅನಿವಾರ್ಯವಾಯಿತು. ನವೀನ ವಾದಿಗಳ ಮೇಧಾವಿಗಳಾದ ಕೆ.ಎಂ ಮೌಲವಿ ಹಾಗೂ ಸೀದಿಶಾಹಿ ಸಹಿತವಿರುವ ನೇತಾರರು ಈ ವಿಷಯವನ್ನು ಚರ್ಚಿಸಿ 1948ರಲ್ಲಿ ರೂಪೀಕೃತವಾದ ಭಾಲರಿಷ್ಟ ಸಹಿತ ಮುಸ್ಲಿಂ ಲೀಗನ್ನು ತಂತ್ರಪೂರ್ವ ವಶೀಕರಿಸಲು ಅದೊಂದು ಸಾರ್ವಜನಿಕ ವೇದಿಕೆಯಾಗಿ ಸುನ್ನತ್ ಜಮಾಅತ್ತಿನ ಕಾರ್ಯಾಚರಣೆಗೆ ತಡೆಯಿಡಲು ಯೋಜನೆ ಹಾಕಿದರು. ಈ ತೀರ್ಮಾನದ ಭಾಗವಾಗಿ ಸೌಕರ್ಯ ಒದಗಿದಲ್ಲೆಲ್ಲಾ ಲೀಗಿನ ಯುನಿಟ್ ರೂಪೀಕರಿಸಿದರು. ಆದರೆ ಮುಸ್ಲಿಮರ ಸಾಮಾನ್ಯ ಅರಿವನ್ನು ಕಬಳಿಸಲು ಇದು ಸಾಕಾಗಿಲ್ಲ. ಆಗ ಅಹ್ಲ್ ಬೈತಿನೊಂದಿಗಿರುವ ಪ್ರೀತಿ ಗೌರವಗಳನ್ನು ಶೋಷಿಸಿದರೆ ಈ ಉದ್ದೇಶ ಗುರಿತಲುಪೀತೆಂಬ ಕೆ.ಎಂ ಮೌಲವಿಯ ದುಷ್ಚಿಂತೆಯ ಪರಿಣಾಮ ಅಬ್ದುಲ್ ರಹಿಮಾನ್ ಭಾಫಖಿ ತಂಙಳರನ್ನು ಡಿಸಿಪ್ಲೇನ್ ಮಾಡಿ ಲೀಗನ್ನು ಭದ್ರಪಡಿಸಿದರು.

ಪರಿಣಾಮವಾಗಿ 1960ರ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಅಭೂತಪೂರ್ವ ವಿಜಯ ಸಾಧಿಸಿತು.
ಲೀಗಿನ ಈ ದ್ವಿಮುಖ 1960ರ ಚುನಾವಣೆ ವಿಜಯದೊಂದಿಗೆ ರಾಜಕೀಯದಲ್ಲಿ ಬಲಿಷ್ಠವಾಯಿತು. ಮಂತ್ರಿಮಂಡಲದಲ್ಲಿ ಸದಸ್ಯತನ ಬೇಡಿದರೂ ಕೇವಲ ಸ್ಪೀಕರ್ ಸ್ಥಾನದೊಂದಿಗೆ ಲೀಗ್ ತೃಪ್ತಿ ಪಡಬೇಕಾಗಿ ಬಂತು. ಹೀಗಾಗಿ ಲೀಗ್ ಪ್ರತಿನಿಧಿಯಾಗಿ ಸೀದಿ ವಕೀಲರೆಂಬ ವಹ್ಹಾಬಿಯನ್ನು ಕೇರಳ  ಸ್ಪೀಕರನ್ನಾಗಿ ಆರಿಸಿದರು. ಇದರೊಂದಿಗೆ ಲೀಗಿನ ನೈಜ ಮುಖ ಬಹಿರಂಗವಾಗತೊಡಗಿತು. ಬಾಫಖಿ ತಂಙಳರನ್ನು ಡಿಸಿಪ್ಲೇನ್ ಮಾಡಿ ಹಿಡಿದ ವಹ್ಹಾಬಿಗಳು ವಂಚಿಸಲು ಆರಂಭಿಸಿದರು. ಇದು ರಾಜಕೀಯ ಪ್ರಭಾವವನ್ನುಪಯೋಗಿಸುತ್ತಾ ಸುನ್ನತ್ ಜಮಾಅತಿನ ನಿರ್ಮೂಲನೆಯ ಪ್ರಥಮ ಹಂತವಾಗಿತ್ತು. ಮುಂದುವರಿದ ರಾಜಕೀಯ ಪ್ರಭಾವವೂ ವಕ್ಫ್ ಬೋರ್ಡಿನಲ್ಲಿ ನೂರು ಶತಮಾನ ವಹ್ಹಾಬಿಗಳನ್ನು ತುರುಕಿ ವಹ್ಹಾಬಿ ವೃದ್ದ ಕಾರ್ಯಗಳು ಸುಖಕರವಾಗಿಸಿ 99% ಸುನ್ನಿಗಳ ಪ್ರಾತಿನಿಧ್ಯವಿರುವ ಪಾರ್ಟಿಯ ಕೀಗೊಂಚಲನ್ನು ವಶೀಕರಿಸುತ್ತಲಾಗಿದೆ ಅವರ ಕಾರ್ಯಾಚರಣೆ ಮುಂದುವರಿದದ್ದು. ಇದರ ಪರಿಣಾಮವಾಗಿ ಪಟ್ಟಾಳಂಪಳ್ಳಿ, ಮುಹಿಯಿದ್ದೀನ್ ಪಳ್ಳಿ ಯೊಂದಿಗೆ ಹತ್ತಾರು ಮಸೀದಿಗಳನ್ನು ಮಲಬಾರಿನ ಹೃದಯ ಭಾಗವಾದ ಕೋಯಿಕ್ಕೋಡಿನಲ್ಲಿ ಮಾತ್ರ ವಹ್ಹಾಬಿಗಳು ವಶೀಕರಿಸಿದ್ದು.
 ಈ ರಹಸ್ಯ ಕಾರ್ಯಾಚರಣೆ ಮನದಟ್ಟುಮಾಡಿದ ಸಮಸ್ತ ಇದರ ವಿರುದ್ಧ ಘೋರವಾದ ಪ್ರತಿಭಟನೆ ನಡೆಸಿತಾದರೂ ಲೀಗ್ ಆದನ್ನು ಪರಿಗಣಿಸಲೇ ಇಲ್ಲ.
1967ರ ಚುನಾವಣೆಯಲ್ಲಿ ಲೀಗಿಗೆ 2 ಮಂತ್ರಿಸ್ಥಾನ ದಕ್ಕಿತ್ತು. ಸಿ.ಎಚ್ ಮತ್ತು ಕುರಿಕ್ಕಳಂ ಮಂತ್ರಿಗಳಾಗಿ ಪ್ರತಿಜ್ಞೆ ಸ್ವೀಕರಿಸಿದರು. ಈ ಸಂಧರ್ಭ 'ತಿರುವಿತಾಂ' ಕೂರಿನ ಮುಸ್ಲಿಮರ ಪ್ರತಿಭಟನೆಯ ಪರಿಣಾಮ ಸ್ವಾತಂತ್ರ್ಯದ ನಂತರ ಶಾಲೆಗಳಲ್ಲಿ ವಿರೋಧಿಸಿದ ಮದರಸ ತರಗತಿಯ ಬದಲಾಗಿ ಅರಭಿ ಭಾಷೆ ತರಗತಿಗೆ ಅಂಗೀಕಾರ ಲಭಿಸಿತು. [ಇಂದು ಇದನ್ನು ಲೀಗಿನವರು ತಮ್ಮ ಕ್ರೆಡಿಟ್ ಎಂದು ಜಂಬಿಸುತ್ತಾರೆ] ಈ ವೆಕೇನ್ಸಿಗೆ ವಹ್ಹಾಬಿ ಅಧ್ಯಾಪಕರನ್ನು ಸಂಪೂರ್ಣವಾಗಿ ಭಡ್ತಿ ಮಾಡೂದರಲ್ಲಿ ಅಂದಿನ ಮುಸ್ಲಿಂ ಲೀಗಿನ ವಹ್ಹಾಬಿ ನೇತೃತ್ವವೂ ಯಶಸ್ವಿಯಾಗಿತ್ತು. ಆ ಮುಖಾಂತರ ಕೇರಳದಲ್ಲಿ ವಿಧ್ಯಾವಂತರು ವಹ್ಹಾಬಿಗಳು ಮಾತ್ರವೆಂಬ ತಪ್ಪುಕಲ್ಪನೆ ಅಚ್ಚಳಿಯಿತು. ಇದು ನವೀನವಾದಿಗಳು ಇಸ್ಲಾಮಿನ ಅಭಿವೃದ್ಧಿಕಾರರನ್ನಾಗಿಯೂ ಪರಂಪರಾಗತ ಸುನ್ನಿಗಳನ್ನು ನವೀನವಾದಿಗಳನ್ನಾಗಿ ಮುದ್ರೆಯೊತ್ತಲು ಕಾರಣವಾಯಿತು.

ಈ ಕುತಂತ್ರದ ವಿರುದ್ಧ ಪ್ರತಿಭಟಿಸಲು ಅಂದು ಇದ್ದದ್ದು ಚಂದ್ರಿಕಾ ಪತ್ರಿಕೆ ಮಾತ್ರವಾಗಿತ್ತು. ಆದರೆ ಪತ್ರಿಕೆಯ ಪಬ್ಲಿಷಿಂಗ್ ಕಮಿಟಿಯಲ್ಲಿ ಮೇಲ್ವಿಚಾರಕರು ವಹ್ಹಾಬಿಗಳಾದ್ದರಿಂದ ಬಹಳಷ್ಟು ಪರಿಣಾಮ ಬೀರಲಿಲ್ಲ.

ಸುನ್ನೀ ಜಾಗರಣಾ ವಹ್ಹಾಬಿ ಅತಿಕ್ರಮಣದಲ್ಲಿ ಮುಸ್ಲಿಂ ಲೀಗಿನ ರಹಸ್ಯ ಬೆಂಬಲವನ್ನು ಅರ್ಥೈಸಲು ಸಮಸ್ತಕ್ಕೆ ಸಾಧ್ಯವಾಯಿತು. ಹೀಗಾಗಿ  ಸಂಘಟನೆಯ ಬಲಿಷ್ಠಾನದ ಭಾಗವಾಗಿ ದೀರ್ಘ ದೃಷ್ಟಿಯ ವ್ಯಕ್ತಿತ್ವ ವಾದ ಮಹಾನರಾದ ಚಾಪನಂಙಾಡಿ ಬಾಪು ಮುಸ್ಲಿಯಾರ್ SYS ನ ಸಾರಥ್ಯ ವಹಿಸುತ್ತಾ ವಿಷಯದ ಗೌರವವನ್ನು, ಅನಿವಾರ್ಯತೆಯನ್ನು ಸಂಘಟನೆಗೆ ಮನವರಿಕೆ ಮಾಡಿ 1976 ರಲ್ಲಿ SYS ನ್ನು ಪುನರೂಪೀಕರಿಸಲಾಯಿತು.
EK ಹಸನ್ ಮುಸ್ಲಿಯಾರ್ AP ಅಬೂಬಕ್ಕರ್ ಮುಸ್ಲಿಯಾರ್ ರವರ ಸಾರಥ್ಯದಲ್ಲಿ ಹೊಸ ಸಂಘಟನೆ ರೂಪೀಕರಿಸಿ ಕ್ರಾಂತಿಕಾರಿ ಬೆಳವಣಿಗೆಗೆ ಹಸಿರು ನಿಶಾನೆ ತೋರಿಸಲಾಯಿತು. ರಾಜಕೀಯ ಶಕ್ತಿಯೊಂದಿಗೆ ಸುನ್ನತ್ ಜಮಾಅತನ್ನು ನಿರ್ಮೂಲನೆ ಮಾಡಲು ಹೊರಟವರಿಗೆ ತೊಡೆ ತಟ್ಟುತ್ತಾ ಸಂಘಟನೆ ಶಕ್ತೀಕರಿಸಿ ಶೈಕ್ಷಣಿಕ ಕ್ರಾಂತಿಯತ್ತಾ ದೃಷ್ಟಿ ಹರಿಸಿದರು. ಉದ್ದೇಶಿತ ಕಾರ್ಯಾಚರಣೆಯ ಫಲವಾಗಿ 107 ಯುನಿಟ್ ಗಳಿದ್ದ SYS  5000 ಕ್ಕಿಂತಲೂ ಅಧಿಕ ಯುನಿಟ್ ಗಳನ್ನು ರಚಿಸಿ ಕ್ರಾಂತಿಕಾರಿ ಸಂಘಟನೆಯಾಗಿ ಯಶಸ್ವಿ ಸಾಧಿಸಿತು. 25  ವರ್ಷಗಳ ಕಾಲ ಕಾರ್ಯಾಚರಿಸಿ ಸಾಧಿಸಲಾಗದ ಜನಬೆಂಬಲವಾಗಿದೆ ಈ ಬಾರಿ SYSಗೆ ಲಭಿಸಿದ್ದು. ಸಂಘಟನೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಒಂದು ಸಮ್ಮೇಳನ ನಡೆಸುವುದಾಗಿ ತೀರ್ಮಾನಿಸಲಾಯಿತು.1978 ಎಪ್ರಿಲ್ ನಲ್ಲಿ SYS ನ 25 ನೇ ವಾರ್ಷಿಕವೂ ಕೋಯಿಕ್ಕೋಡಿನ ಮಾನಾಂಜರಿಯಲ್ಲಿ ನಡೆಸುವ ಯೋಜನೆಗಳನ್ನು ಹಾಕಲಾಯಿತು. ಪಟ್ಟಿಕ್ಕಾಡ್ ಜಾಮಿಅ ನೂರಿಯಾದ ಸಮ್ಮೇಳನ ವೇದಿಕೆಯಲ್ಲಿ ಉಲಮಾಗಳನ್ನು ಕತ್ತೆಗಳೆಂದು ಕರೆದ ಸಿ.ಎಚ್ ನ ಭಾಷಣವೂ, ಇದನ್ನು ಆಘೋಷಿಸಿದ ಚಂದ್ರಿಕಾ ಪತ್ರಿಕೆಯ ನಿಲುವನ್ನು ಮನದಟ್ಟು ಮಾಡಿದ ಮಹೋನ್ನತರು ಸಮ್ಮೇಳನದಲ್ಲಿ ರಾಜಕೀಯ ಪುಡಾರಿಗಳನ್ನು ದೂರವಿರಿಸಲು ತೀರ್ಮಾನಿಸಿದರು. ಇದರಿಂದ ಆಕ್ರೋಶಭರಿತರಾದ ರಾಜಕಾರಣಿಗಳು ಸಮ್ಮೇಳನ ತಡೆಯುವಲ್ಲಿ ವಿಫಲ ಯತ್ನ ನಡೆಸಿದರಾದರೂ ಸಮ್ಮೇಳನ ಅದ್ದೂರಿ ವಿಜಯ ಸಾಧಿಸಿತು. ನಂತರ ಮುಂದುವರಿದ ಸಂಘಟಕರು ತಮ್ಮ ಪ್ರಮೇಯದಂತೆ 1978 ಎಪ್ರಿಲ್ 14 ರಂದು  ವಿಧ್ಯಾಭ್ಯಾಸ ಕ್ರಾಂತಿಗಾಗಿ ಮರ್ಕಝ್ ಗೆ ಶಿಲಾನ್ಯಾಸ ಮಾಡಲಾಯಿತು. ಸಮಸ್ತದ ಅಧೀನದಲ್ಲಿರುವ SYS ನ ಮಿಂಚಿನ ಸಂಚಾರ ವಹ್ಹಾಬಿಗಳಿಗೆ ಅಚ್ಚರಿಪಡಿಸಿತು. ಅವರು ಕೆ.ಎನ್.ಎಮ್ ನ ಸಾರಥ್ಯದಲ್ಲಿ 1979 ಜೂನ್ 16 ರಂದು ಐಕ್ಯ ವೇದಿ ರೂಪೀಕರಿಸಲು ಸಮಸ್ತಕ್ಕೆ ಪತ್ರ ಬರೆದು ಹೊಸತೊಂದು ದಾರಿಯನ್ನು ಕಂಡುಹಿಡಿಯಲು ಪ್ರಯತ್ನಿಸಿದರು. ಆದರೆ ಪ್ರಸ್ತುತ ಪತ್ರಕ್ಕೆ ಸಮಸ್ತ ಕೊಟ್ಟ ಉತ್ತರ ಮೂಗು ಮುಚ್ಚುವ ರೂಪದಲ್ಲಾಗಿತ್ತು. ಮುಸ್ಲಿಮರನ್ನು ಐಕ್ಯ ವೇದಿಗೆ ಕರೆಯುವ ಮುನ್ನ ನೀವು ಮುಶ್ರಿಕ್ ಮಾಡಿದ ಸುನ್ನಿಗಳನ್ನು ಮುಸ್ಲಿಮರಾಗಿ ಅಂಗೀಕರಿಸಬೇಕು ಎಂದಾಗಿತ್ತು ಮುಶಾವರ ನಿಯಮಿಸಿದ ಕೆ.ವಿ.ಮುಹಮ್ಮದ್ ಮುಸ್ಲಿಯಾರ್ ಉತ್ತರ ಬರೆದದ್ದು.  ಆದರೆ ಸ್ಥಂಭಿಸದ ವಹ್ಹಾಬಿಗಳು ಹಿಂದಿನಿಂದ ರಹಸ್ಯ ಕಾರ್ಯಾಚರಣೆಗೆ ಇಳಿದರು. ಮುಸ್ಲಿಂ ಯೂತ್ ಲೀಗಿಗೆ ಐಕ್ಯವೇದಿ ರೂಪೀಕರಿಸಲು SYS ಗೆ ಪತ್ರ ಬರೆಯುವಂತೆ ಒತ್ತಡ ಹಾಕಿದರು. ಪತ್ರ ಸ್ವೀಕರಿಸಿದ ಸಮಸ್ತ ಪ್ರತ್ಯುತ್ತರದಲ್ಲಿ ಯಾವುದೇ ಬದಲಾವಣೆ ಮಾಡದೆ ಉತ್ತರಿಸಿದರು. ಈ ಅವಕಾಶವನ್ನು ಸದುಪಯೋಗ ಪಡಿಸಿದ ವಹ್ಹಾಬಿಗಳು ಲೀಗ್ ಮತ್ತು ಸಮಸ್ತವನ್ನು ಪರಸ್ಪರ ಎತ್ತಿಕಟ್ಟಿ ಬಿರುಕು ಉಂಟು ಮಾಡಲು ಕಠಿಣ ಪರಿಶ್ರಮ ನಡೆಸಿದರು.1985 ರಲ್ಲಿ ನಡೆದ ಸಮಸ್ತ 60ನೇ ವಾರ್ಷಿಕ ಮಹಾ ಸಮ್ಮೇಳನವೂ ಸಮಸ್ತದ ಇತಿಹಾಸದಲ್ಲೊಂದು ಸ್ವರ್ಣ ಲಿಪಿಯಾಗಿತ್ತು. ವಹ್ಹಾಬಿ ಚೇಳಾಗಳು ಮೂಗುದಾರ ಹಿಡಿಯುವ ಸಮುದಾಯ ಪಾರ್ಟಿಯ ಹೈಜಾಕ್ ಕಾರಣ ಸುದೀರ್ಘ 25 ವರ್ಷಗಳ ಕಾಲ ಸಮಸ್ತಕ್ಕೆ ಸಮ್ಮೇಳನ ನಡೆಸಲು ಸಾಧ್ಯವಾಗಿಲ್ಲವೆಂಬ ಕಟು ಸತ್ಯವನ್ನು ಮನಃಗಂಡ ಸಾರಥಿಗಳು ಸಮಸ್ತದ 60 ನೇ ವಾರ್ಷಿಕವೂ ಅತೀ ವಿಜೃಂಭಣೆಯಿಂದ ನಡೆಸುವುದಾಗಿ ತೀರ್ಮಾನಿಸಿದರು. 1981 ರಲ್ಲಿ ಸಮ್ಮೇಳನದ ತಾರೀಕು ಘೋಷಿಸಿದರೂ ಕೂಡ ಇಂದಿರಾಗಾಂಧಿ ಹತ್ಯೆ, 1982 ಆಗಸ್ಟ್ ನಲ್ಲಿ ಗರ್ಜಿಸುವ ಸಿಂಹ E.K ಹಸನ್ ಮುಸ್ಲಿಯಾರರ ವಿಯೋಗ  (ಚಂದ್ರಿಕಾ ಪತ್ರಿಕೆ ಇ.ಕೆ.ಉಸ್ತಾದರ ವಿಯೋಗವನ್ನು ಆಚರಿಸಿತ್ತು) ಇತ್ಯಾದಿ ಕಾರಣಗಳಿಂದ ಸಮ್ಮೇಳನವೂ ಮುಂದೂಡಿಕೆಯಾಗಿತ್ತು. 60 ನೇ ವಾರ್ಷಿಕವನ್ನು ತಡೆಯಲು ಲೀಗ್ ಶಕ್ತವಾದ ವಿಫಲ ಶ್ರಮವನ್ನು ನಡೆಸಿತ್ತು. ಕಾರ್ಯಕ್ರಮ ಅತೀ ವಿಜೃಂಭಣೆಯಿಂದ ನಡೆಯುವುದೆಂದು ಖಾತರಿಯಾದಾಗ ರಾಜಕಾರಣಿಗಳ ಸಮಕ್ಷಮದಲ್ಲಿ ನಡೆಯಬೇಕೆಂಬ ಅನಗತ್ಯವಾದ ವಾದವನ್ನು ಮಂಡಿಸಿದರಾದರೂ ಕಣ್ಣಿಯತ್ ಉಸ್ತಾದರ ಮುಂದೆ ಅದೆಲ್ಲವೂ ಮಂಡಿಯೂರಿತು. ಕಾರ್ಯಕ್ರಮ ಯಶಸ್ವಿಯಾಗಿ ಜಯಭೇರಿತು. ಕೇರಳದ ಮುಸ್ಲಿಂ ಸಮೂಹವೂ ಸಮಸ್ತ ಎಂಬ ಪಂಡಿತಸಭೆಯೊಂದಿಗಿರುವುದು ಎಂದು ಸಾರಿ ಹೇಳುತ್ತಿತ್ತು 60 ನೇ ವಾರ್ಷಿಕ ಸಮ್ಮೇಳನ. ಸಮಸ್ತವನ್ನು ಮುಸ್ಲಿಂ ಲೀಗಿನ ನಿಯಂತ್ರಣಕ್ಕೆ ತರುವುದೆಂದು ರಾಜಕಾರಣಿಗಳನ್ನು ವಿರೋದಿಸುವವರನ್ನು ಸಮಸ್ತದಿಂದ ಕಿತ್ತೊಗೆಯವುದೆಂದೂ ಲೀಗ್ ಮತ್ತು ವಹ್ಹಾಬಿ ಪಾದ್ರಿಗಳು ಚರ್ಚಿಸಿದರು. ಈ ಪ್ಲೇನಿಂಗ್ ಸೆಕ್ಸಸ್ಸಿಗೆ ಎರಡರಲ್ಲೊಂದು ಅಬೂಬಕ್ಕರ (A.P & E.K) ರಿಗೆ ಬಲೆ ಬೀಸಬೇಕೆಂದಾಗಿತ್ತು ಅವರ ಉದ್ದೇಶ. ಈರ್ವರಲ್ಲಿ ತೀಕ್ಷ್ಣವಾದ ವ್ಯಕ್ತಿ ಕಾಂತಪುರಂಮೆಂದರಿತ ಅವರು E.K ಉಸ್ತಾದರನ್ನು ಸಮೀಪಿಸಿದರು. ಇದಕ್ಕಾಗಿ ಸೇಟ್ ಸಾಹಿಬ್, K.E ಸಾಹಿಬ್, P. ಅಬೂಬಕ್ಕರ್ ಎಂಬ ಮೂವರನ್ನು ಆರಿಸಿದರು. ಇವರು EK ಉಸ್ತಾದರನ್ನು ಕಣ್ಣೂರಲ್ಲಿ  KE ಸಾಹಿಬರ ನಿವಾಸದಲ್ಲಿ ಬ್ರೈನ್ ವಾಷ್ ಮಾಡಿ ಸಮಸ್ತದ ಬಿರುಕಿನ ಪ್ರಥಮ ಹಂತದ ಯೋಜನೆ ಹಾಕಿದರು. 60 ನೇ ವಾರ್ಷಿಕದಲ್ಲಿ ರಾಜಕಾರಣಿಗಳ ವಿರುದ್ಧ ಕೆಚ್ಛೆದೆಯಿಂದ ಘರ್ಜಿಸಿದ್ದ   E.K ಉಸ್ತಾದರ ನಿಲುವು ಆದರ್ಶದಲ್ಲಿ ಚಂಚಲವುಂಟಾದ ಕೆಲವೊಂದು ಕಾರ್ಯ ವೈಕರಿಗಳಾಗಿತ್ತು 1985 ರ ನಂತರದ ಬೆಳವಣಿಗೆಯಲ್ಲಿ ಕಂಡು
ಬಂದದ್ದು. ರಾಜಕಾರಣಿಗಳಿಗೆ ಸ್ವಾಗತ ಹಾಡಿದ ಖೇದಕರವಾದ ಘಟನೆಗಳು ಉಂಟಾಯಿತು. [ಈ ವೇಳೆ ಎ.ಪಿ.ಉಸ್ತಾದರಿಗೆ ಎದುರಾಗಿ ಕಾರ್ಯಾಚರಿಸುವ ಒಂದು ಗುಂಪೇ ಈ.ಕೆ.ಉಸ್ತಾದರ ಬಳಿಯಿತ್ತು] ಸಮಸ್ತದ ಪೂರ್ವಕಾಲದ ತೀರ್ಮಾನಕ್ಕೆ ವಿರುದ್ಧವಾದರು E. K ಉಸ್ತಾದ್.
1. 1985 ರಲ್ಲಿ ಶಾಬಾನ ಪ್ರಕರಣಕ್ಕೆ ಸಂಬಂಧಪಟ್ಟ ಕಾರ್ಯಗಳು.
2. ಐಕ್ಯವೇದಿಕೆಯ ಬಲೆಗೆ ಬಿದ್ದರು.  3. ಐಕ್ಯವೇದಿಗೆ ಬೆಂಬಲಿಸದವರನ್ನು ಮುನಾಫಿಕರನ್ನಾಗಿ ಚಿತ್ರೀಕರಿಸಿದರು. 4. ಸಂವಾದಗಳನ್ನು ಕಡೆಗಣಿಸಿದರು.
5. ನವೀನವಾದಿಗಳೊಂದಿಗೆ ನಯವಾಗಿ ವರ್ತಿಸಿದರು. (ಮದರಸ ಪಠ್ಯ ಪುಸ್ತಕ ವಿವದ)
6. ಜನರಲ್ ಬೋಡಿ ಕರೆಯದೇ ದಶ ವರ್ಷಗಳಷ್ಟು ಕಾಲ ಮುಂದುವರಿದರು. ಮುಂತಾದ ಬಹುತೇಕ ನಯಪರವಾದ ವೈಕಲ್ಯತೆಗಳು E.K ಉಸ್ತಾದರಲ್ಲಿ ಉಂಟಾಯಿತು. ನಂತರ ಕೊನೆಯ ಕ್ಷಣದಲ್ಲಿ ಅವರು ಖೇದ ಪ್ರಕಟಿಸಿದರು. ಸಮಸ್ತಯುಡೆ ಯೋಜಿಪ್ಪು ಶಂಸುಲ್ ಉಲಮಯುಡೆ ಅಂದ್ಯಾಭಿಲಾಷಂ ಎಂಬ ಶೀರ್ಷಿಕೆಯಲ್ಲಿ ಚಂದ್ರಿಕಾದಲ್ಲಿ ಬಂದ ಲೇಖನ ಇದರ ಕುರಿತಾಗಿತ್ತು. ಅಲ್ಲಾಹು ಅವರಿಗೆ ಮಗ್ಫಿರತ್ ಮರ್ಹಮತ್ ಕರುಣಿಸಲಿ, ಪದವಿ ಉನ್ನತಿಗೇರಿಸಲಿ.

ಯೂ ಟರ್ನ್  ಹೊಡೆದ ಸಮ್ಮೇಳನ 1985 ರಿಂದ 1989 ರ ತನಕ ಸಮಸ್ತದಲ್ಲಿ ಕೋಲಾಹಲ ನಿತ್ಯವಾಗಿತ್ತು.  1989 ಜನವರಿಯಲ್ಲಿ SYS  ಸಮ್ಮೇಳನ ಎರ್ನಾಕುಳಂನಲ್ಲಿ ನಡೆಸುವುದಾಗಿ ತೀರ್ಮಾನಿಸಿದ್ದು ಇದೇ ಸಮಸ್ತವಾಗಿತ್ತು. ಸಮ್ಮೇಳನ ನಡೆದರೆ ದೊಡ್ಡ ಹೊಡೆತ ನಮಗಿದೆಯೆಂದರಿತ ವಹ್ಹಾಬಿಗಳು ಜೀವ ತೆತ್ತಾದರೂ ಸಮ್ಮೇಳನವನ್ನು ತಡೆಯಬೇಕೆಂದು ಆಗ್ರಹಿಸಿ ಅದಕ್ಕಾಗಿ E.K ಉಸ್ತಾದರನ್ನು ಭೇಟಿಯಾದರು (ಆ ಸಮಯ ಈ.ಕೆ ಉಸ್ತಾದ್ ಅವರತ್ತ ವಾಲಿದ್ದರು). ಪರಿಣಾಮವಾಗಿ ನಾಟಿಗ ಮೂಸ ಮೌಲವಿಯ ನೇತೃತ್ವದಲ್ಲಿ ಮಧ್ಯ ಕೇರಳದಲ್ಲಿ ಸಮಾಂತರ ಸಮ್ಮೇಳನ ನಡೆಸಲು ಆಗ್ರಹಿಸಿ ಇದರಿಂದ ಅಧಿಕೃತ ಸಂಘಟನೆ SYS  ನಡೆಸುವ ಸಮ್ಮೇಳನವನ್ನು ತಡೆಯಲು E.K ಉಸ್ತಾದ್ ಶ್ರಮಿಸಿದರು. ಇದನ್ನು SYS  ಪ್ರಶ್ನಿಸಿ ಎದುರಾಳಿಗಳನ್ನು ಸದೆಬಡಿಯುತ್ತಾ ವ್ಯತ್ಯಸ್ಥ ಪ್ರಚಾರದೊಂದಿಗೆ SYS  ಮುಂದಡಿಯಿಟ್ಟಿತು.
        ಲೀಗಿಗೆ ತಲೆನೋವು ಶುರುವಾಗಿ ಯಾವುದೇ ಬೆಲೆ ತೆತ್ತಾದರೂ SYS  ಸಮ್ಮೇಳನವನ್ನು ತಡೆಯಲು ಯೋಜನೆ ಹಾಕಿದರು.ಇದಕ್ಕಾಗಿ  E.K ಉಸ್ತಾದರನ್ನು ಲೀಗ್ ಆಫೀಸಿಗೆ ಕರೆತಂದು ಸಯ್ಯಿದ್ ಉಮರ್ ಬಾಫಖಿ ತಂಙಳರವರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ E.K ಉಸ್ತಾದರ ಮುಂದೆ ಎರಡು ನಿಭಂದನೆಗಳನ್ನಿಟ್ಟರು.
1. SYS ನ್ನು ಅಧಿಕೃತವಾಗಿ ವಿಸರ್ಜಿಸಬೇಕು.
2. AP ಉಸ್ತಾದರನ್ನು ಅವರ ಅನುಯಾಯಿಗಳನ್ನು ಸಮಸ್ತದಿಂದಲೇ ಕಿತ್ತೊಗೆಯಬೇಕು. ಈ ಎರಡು ನಿಭಂದನೆಗಳನ್ನೂ E.K ಉಸ್ತಾದ್ ಸ್ವೀಕರಿಸಿದರು. (ಇದರ ಮುಂದುವರಿದ ಭಾಗವಾಗಿ) ತುರ್ತು ಸಭೆಯನ್ನು ಕರೆಯುವುದಾಗಿ ತೀರ್ಮಾನಿಸಲಾಯಿತು. ಸದಸ್ಯರಲ್ಲಿ ತನ್ನ ಇಂಗಿತವನ್ನು ಸ್ವೀಕರಿಸುವವರನ್ನು ಮಾತ್ರ ಕರೆದು ಗುಪ್ತವಾಗಿ ಸೇರಲುದ್ದೇಶಿಸಿದ ಸಭೆಯ ಪಲಿತಾಂಶವನ್ನು ಮುಂಚಿತವಾಗಿಯೇ ಅರಿತ ಬಹು TC ಉಸ್ತಾದ್ ನ್ಯಾಯಾಲಯದಲ್ಲಿ ಸ್ಟೇ ಹಾಕಿದರು [ಎ.ಪಿ ಗಳು ಕಣ್ಣಿಯತ್ ಉಸ್ತಾದರಿಗೆ ವಿರುದ್ಧ ಕೇಸು ದಾಖಲಿಸಿದವರು ಎಂದು ಹೇಳುವುದು ಇದನ್ನೇ]. ಇದರಿಂದಾಗಿ ಮುಶಾವರ ಸೇರಲು ಅಸಾಧ್ಯಯವಾಯಿತು. ಸ್ಟೇ ಮುಗಿಯಿತು. ಜನರಲ್ ಬೋಡಿ ಕರೆಯಬೇಕೆಂಬ ನೆಪದೊಂದಿಗೆ ಸಮ್ಮೇಳನದ ಎರಡು ದಿವಸ ಮುಂಚೆ ಮುಶಾವರ ಸೇರಲಾಯಿತು. ಅದೇನೋ ಒಂದು ಅದ್ಭುತ ವರ್ತನೆಯಾಗಿತ್ತು EK ಉಸ್ತಾದರದ್ದು. ಜನರಲ್ ಬೋಡಿ ನಡೆಸಬೇಕೆಂಬ ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಅಂದಿನ ತನಕ ವಿರೋಧಿಸುತ್ತಿದ್ದ ಮಹಲ್ಲ್ ಫೆಡರೇಶನ್ ರೂಪೀಕರಣ ತೀರ್ಮಾನವನ್ನು ಸೆಕ್ರೆಟರಿ EK ಉಸ್ತಾದ್ರವರೆ ಘೋಷಿಸಿದರು. [SYS ನ್ನು ವಿಸರ್ಜಿಸುವ ಮೊದಲ ಮೆಟ್ಟಿಲಾಗಿತ್ತು ಇದು] ಮುಂದಿನ ಭಾಗವಾಗಿ ಮಿನಿಟ್ಸ್ ಪುಸ್ತಕದಲ್ಲಿ ಬರೆದದ್ದಕ್ಕೂ, ಬರೆಯಲಿರುವುದಕ್ಕೂ ಎನಗೆ ಸಮ್ಮತ ಕೊಡಬೇಕೆಂದು ಆಗ್ರಹಿಸಿದರು. ಆದರೆ ಈ ಅಭಿಪ್ರಾಯವನ್ನು ಜೊತೆ ಕಾರ್ಯದರ್ಶಿ ಕಾಂತಪುರಂAP ಉಸ್ತಾದ್ ಪ್ರಶ್ನಿಸಿದರು. ಸಮಸ್ತ ಅಧಿಕೃತ ಪಂಡಿತ ಸಭೆಯಾಗಿರುವಾಗ ಮಿನಿಟ್ಸಲ್ಲಿರುವುದನ್ನು ಸಭೆಗೆ ಕಾಣಿಸಿ, ಮಿನಿಟ್ಸ್ ಕಾರ್ಯಾಚರಣೆಗಳು ಪೂರ್ಣಗೊಳಿಸಿ ಎಲ್ಲಾ ಸದಸ್ಯರ ಅಂಗೀಕಾರ ಪಡೆಯಬೇಕೆಂಬ ನ್ಯಾಯವನ್ನು ಆಗ್ರಹಿಸಿದರು. ಹಾಗಾದರೆ ನಾನು ಹೇಳಿದ ಅಭಿಪ್ರಾಯವನ್ನು ಅಂಗೀಕರಿಸಬೇಕು ಅದಕ್ಕೆ ಸದಸ್ಯರ ಬಹುಮತವಿದೆಯೆಂದು EK ಉಸ್ತಾದ್ ವಾದಿಸಿದರು. ತಕ್ಷಣ ತಾಜುಲ್ ಉಲಮಾ (ಪದವಿ ಉನ್ನತಿಗೇರಿಸಲಿ) ಸತ್ಯಕ್ಕೆ ಎದುರಾಗಿ 99% ಜನರು ವಾದಿಸಿದರೆ ಸತ್ಯ ಅಸತ್ಯವಾಗುತ್ತದೆಯೇ ಎಂದು ಕೇಳುತ್ತಾ ಸಭಾತ್ಯಾಗ ಮಾಡಿ ಹೊರಗಿಳಿದು ಬಂದರು. ಬಹುಮಾನ್ಯರೊಂದಿಗೆ ಕಾಂತಪುರಂ ಸಹಿತ 10 ಜನ ಇಳಿದು ಬಂದರು [ಅವತ್ತು ಸಭೆಯಲ್ಲಿ ಇದ್ದದ್ದು ಕೇವಲ ಕೇವಲ 23 ಜನ ಸದಸ್ಯರು]. ನಂತರ SYS ಸಮ್ಮೇಳನ ನಡೆಸಬಾರದೆಂದು ಸಮಸ್ತ ಘೋಷಿಸಿ ಲೀಗಿನ ಕರೆಯೊಂದಿಗೆ ಚಂದ್ರಿಕಾ ಈ ವಾರ್ತೆ ರಿಪೋರ್ಟ್ ಮಾಡಿತು. ಆದರೆ ಇದಕ್ಕೆ ಸೊಪ್ಪು ಹಾಕದ ಸುನ್ನಿ ಮಕ್ಕಳ ಜನ ಸಾಗರ ಎರ್ನಾಕುಳಂ ಸಮ್ಮೇಳನ ನಗರಿಯತ್ತ ಹರಿಯ ತೊಡಗಿತು. ಮುಂದುವರಿದು 1989 ಮಾರ್ಚ್ 5 ರಂದು ಸಮಸ್ತದ ಅಧಿಕೃತ ಜನರಲ್ ಬೋಡಿ ಹಾಗೂ ಪುನರ್ ರೂಪೀಕರಣ [ಸಮಸ್ತ ಬೇರೆ ಹೊಸದಾಗಿ ಮಾಡಿದ್ದಲ್ಲ] ನಡೆಯಿತು.

      ತಾಜುಲ್ ಉಲಮಾ ಸಯ್ಯಿದ್ ಅಬ್ದುಲ್ ರಹಿಮಾನ್ ಅಲ್ ಬುಖಾರಿ ಉಳ್ಳಾಲ ತಂಙಳ್ ಅಧ್ಯಕ್ಷರಾಗಿ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಜನರಲ್ ಸೆಕ್ರೆಟರಿಯಾಗಿ ಹೊಸ ಸಮಿತಿ ರಚಿಸಲಾಯಿತು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ವಿಭಜನೆಯ ಸಂದರ್ಭ ಇದ್ದ ಎಲ್ಲಾ ಅಂಗ ಸಂಘಟನೆಗಳು [SYS  SSF  SMA  ಮುಂತಾದವುಗಳು], ಸಿರಾಜ್, ಸುನ್ನೀ ವೋಯಿಸ್, ಸುನ್ನತ್ತ್, ರಿಸಾಲ ಸಹಿತವಿರುವ ಎಲ್ಲಾ ಮುಖವಾಣಿಗಳು ಸಮಸ್ತದೊಂದಿಗಾಯ್ತು [ಸಮಸ್ತದ ಹಸಿರು ಗುಂಬಝ್ ಇರುವ ಫ್ಲಾಗ್ ಕೂಡ ಈ ಸಮಸ್ತಕ್ಕೆ ಸೇರಿತು].

ವಿಭಜನೆಯ ನಂತರ: ಪುಣ್ಯ ಸಮಸ್ತವನ್ನು ಎರಡು ತುಂಡಾಗಿ ಮಾಡಿದರೂ ರಾಜಕೀಯ ವಹ್ಹಾಬಿ ಪಾದ್ರಿಗಳು ಸುಮ್ಮನಿರಲಿಲ್ಲ. ಒಂದು ತುಂಡಿ[EK]ಗೆ ಹೂ ಹಾರ ಹಾಕಿ ಲಾಲಿಸಿದರೆ ಮತ್ತೊಂದು[AP]ತುಂಡನ್ನು, ಅದರ ನೇತಾರನನ್ನು ವಿಮರ್ಶನೆಯ ಹಿಮಾಲಯವನ್ನೇ ಪ್ರಯೋಗಿಸುತ್ತಾ ವಿರೋಧಿಸಿದರು.
1. "ಅರಿವಾಳ್ ಸುನ್ನಿ" ಎಂಬ ಆಕ್ಷೇಪ.
2. ಚೇಗನ್ನೂರ್ ಕೇಸ್.
3. ಓ ರಾಜಗೋಪಾಲ ಮತ್ತು 1 ಕೋಟಿ ರೂಪಾಯಿ.
4. ಸುನ್ನಿ ಕಾರ್ಯಕರ್ತರ ಕೊಲೆ.
5. ಮದರಸ ಮಸೀದಿಗಳನ್ನು ಕಬಳಿಸುವಂತಹಾ ಬಹುತೇಕ ಅಗ್ನಿ ಪರೀಕ್ಷೆಯನ್ನು ಎದುರಿಸಿಯಾಗಿದೆ ಪುಣ್ಯ ಸಮಸ್ತ ಗಜಗಾತ್ರವಾಗಿ ನಮಗೆ ತಲುಪಿದ್ದು. ವಿಭಜನೆಯ ನಂತರದ ಲಾಭಗಳು:
1. ರಾಜಕೀಯದ ಕುರಿತು ಅರಿವು ಇರುವ ಸನ್ನದ್ದ ಪಡೆಯಾದರು ಸುನ್ನಿಗಳು.
2. ದಿಕ್ಕು ತೋರಿಸುವ, ನಿಯಂತ್ರಿಸಲರ್ಹವಾದ ಒಂದು ಲೀಡರ್ ಸಿಕ್ಕಿತು.
3. ಇತಿಹಾಸದ ಅರಿವಿನಲ್ಲಿ ಹಿನ್ನಡೆಯಿದ್ದ ಸುನ್ನಿಗಳು ಶೈಕ್ಷಣಿಕ ಕ್ರಾಂತಿ ಮಾಡಿದರು.
4. ಧಾರ್ಮಿಕ ಪಂಡಿತರಿಗೆ ಸಮೂಹದೆಡೆಯಲ್ಲಿ ಪ್ರಾಧಾನ್ಯತೆ ಕಲ್ಪಿಸಲ್ಪಟ್ಟಿತು.
5. ಸಂಘಟನೆ ಸಂವಿಧಾನ ಬಲಿಷ್ಠವಾಯಿತು.
6. ಆದರ್ಶ [ಸುನ್ನೀಸಂ] ಧೈರ್ಯದಿಂದ ಹೇಳಲು ಅನುಕೂಲವಾಯಿತು.
7. ಈ ಅದ್ಭುತ ಬೆಳವಣಿಗೆ ಶತ್ರುಪಾಳಯಕ್ಕೆ ನಿರಾಶೆಯುಂಟಾಯಿತು.
8. ಕಳಂಕವಿಲ್ಲದ ನೈಜ ಸುನ್ನಿ ಎನ್ನುವ ಅವಕಾಶ ಒದಗಿತು.

●ಮಲಯಾಳಂ
■ಅಬ್ದುಲ್ ಮಜೀದ್ ಇರ್ಫಾನಿ

*#ಅಪಪ್ರಚಾರ #ಮತ್ತು #ಒಣ #ಪ್ರತಿಷ್ಠೆಯ #ಯುಗ*


-----------------------

ಅದೇನೇ ಇದ್ದರೂ ತಾನು ಮೆಚ್ಚದ/ನೆಚ್ಚದ ಸಂಘಟನೆಯ ಆದರ್ಶ ಆಶಯಗಳಿಗೆ ನಿಲುಕದ ಸಂಗತಿಗಳು ಘಟಿಸಿದಾಗ ಅದರ ಬಗ್ಗೆ ಕ್ಲಾರಿಫಿಕೇಶನ್ ಕೇಳುವ ಬದಲು ಸಿಕ್ಕಿದ ಛಾನ್ಸನ್ನು ಆಯುಧವನ್ನಾಗಿ ಮಾಡಿ ಮುಗಿಬೀಳುವ ಕೆಟ್ಟ ಸಂಪ್ರದಾಯ ಬಹಳವಾಗಿ ಸಮುದಾಯವನ್ನು ಕಾಡುತ್ತಿದೆ.

ಪರಸ್ಪರ ಆರೋಪ ಪ್ರತ್ಯಾರೋಪ ಮಾಡುವ ಜಾಯಮಾನ ಇಡೀ ಸಮುದಾಯದ ಅಡಿಗಲ್ಲನ್ನೇ ಕಿತ್ತೆಸೆಯವ ರೀತಿಯಲ್ಲಿ ತಾಂಡವಾಡುತ್ತಿದೆ.

ಪ್ರತಿಯೊಂದು ಸಂಘಟನೆಗಳಿಗೂ ಅದರದ್ದೇ ಆದ ಕೆಲವೊಂದು ತೀರ್ಮಾನಗಳಿರುತ್ತವೆ.ಅಜೆಂಡಾ ಇರುತ್ತದೆ.
ಸಮುದಾಯ ಹೆಸರಲ್ಲಿ ಕಾರ್ಯಚರಿಸುವ ಪ್ರತಿಯೊಂದು ಸಂಘಟನೆಗಳ ದ್ಯೋಯೋಧ್ದೇಶ ಸಮುದಾಯ ಸಬಲೀಕರಣವಾಗಿದೆ.
ಆದರೆ ಇಲ್ಲಿ ಏನು ಸಂಭವಿಸುತ್ತದೆಯೆಂದರೆ ಸಮುದಾಯ ಪರ ಸಂಘಟನೆ ಹುಟ್ಟು ಹಾಕಿದಾಗ ಸಹಜವಾಗಿಯೇ ಯುವಕರು ಅದರತ್ತ ಆಕರ್ಷಿತರಾಗುತ್ತಾರೆ.
ಪರಿಣಾಮ ಸಂಘಟನೆ ಬಲಿಷ್ಠವಾಗುತ್ತಾ ಹೋದಂತೆ ಅದರಲ್ಲಿರುವ ಯುವಕರಿಗೆ ಸಮುದಾಯ ಪರ ಕಾಳಜಿಗಿಂತ ಸಂಘಟನೆಯ ಪ್ರತಿಷ್ಠೆಯೇ ಮುಖ್ಯ ವಿಷಯವಾಗಿರುತ್ತದೆ.
ಎಷ್ಟರವರೆಗೆಂದರೆ ಸ್ವಂತ ಸಮುದಾಯದ ಮತ್ತೊಂದು ಸಂಘಟನೆಯ ಕೆಳಮಟ್ಟದ ನಾಯಕರ/ಕಾರ್ಯಕರ್ತರಿಂದ ಅಚಾತುರ್ಯವಾಗಿ ಘಟಿಸುವ ಘಟನೆಗಳಿಗೂ ಉಪ್ಪು ಖಾರ ಸೇರಿಸಿ ಅವರನ್ನು ಸಮುದಾಯ ದ್ರೋಹಿಗಳಂತೆ ಚಿತ್ರೀಕರಿಸಲು ಬೇಕಾದ ಸಕಲ ಆಯುಧಗಳನ್ನು ಅವನು‌ ಕೂಡಿಹಾಕುತ್ತಾನೆ!
ತನ್ನ ಬಳಿ ಇಲ್ಲದ ಆಯುಧಗಳಗಳನ್ನು ಶೇಖರಿಸಲಿಕ್ಕೆ ಬೇಕಾಗಿ ಇನ್ನಿಲ್ಲದ 'ಜಿಹಾದ್' ಗೆ ದುಮುಕಿರುತ್ತಾನೆ!

ಆವಾಗ ಅವನ ಸಮುದಾಯ ಪ್ರೀತಿ ಅವನಿಂದ ಅದೆಷ್ಟೋ ದೂರ ಸರಿದಿರುತ್ತದೆ.

ಇದೀಗ ಅವನ ಮನಸ್ಸಿನಲ್ಲಿ ಒಂದೇ ಚಿಂತೆ.
ಸಿಕ್ಕಿದ ಛಾನ್ಸನ್ನು ಬಿಡಬಾರದು, ಅವನು ಸಮುದಾಯದ ಕೊಂಡಿಯೇ ಆಗಿದ್ದರೂ ನನ್ನ ವಿರುದ್ದ ಸಂಘಟನೆಯವನು!
ತನ್ನ ಸಂಘಟನೆಯವನಲ್ಲದವನಿಂದ ತಪ್ಪು ಸಂಭವಿಸಿದರೆ ಆವಾಗ ಇವನ ಸಮುದಾಯ ಪ್ರೀತಿ ಮಂಗಮಾಯವಾಗಿರುತ್ತದೆ.
ತಾನು ಸಮುದಾಯ ಸಂಘಟನೆಯ ಪ್ರಾಥಮಿಕ ಸದಸ್ಯತನ ಪಡೆಯುವಾಗ ಇದ್ದ ದ್ಯೇಯೋದ್ದೇಶ ಎಂದೋ ಮೆರೆತು ಬಿಟ್ಟಿರುತ್ತಾನೆ.
ಇದೀಗ ಸಂಘಟನೆಯ ಅಂಧ ಭಕ್ತುನಾಗಿದ್ದಾನೆ!!

ಇತರರನ್ನು ' ಭಕ್ತ' ಅಂತ ಹೀಯಾಳಿಸುವಾಗಲೂ ತಾನೊಬ್ಬ ಅಂಧ ಭಕ್ತನೆಂಬ ಪರಮ ಸತ್ಯ ತಿಳಿಯದಷ್ಟು ಮೂಢನಾಗಿರುತ್ತಾನೆ.

ಸಮುದಾಯದ ಇತರ ಸಂಘಟನೆ ಗಳಿಗೆ MRM ಮಸಿ ಬಳಿಯುವುದಕ್ಕೂ ಕೂಡಾ ಸಮುದಾಯ ಸಬಲೀಕರಣ ಎಂಬ ಸುಂದರ ನಾಮ ಹಾಕಿರುತ್ತಾನೆ!

ಎಂತಹ ವಿಪರ್ಯಾಸ ನೋಡಿ ಸಮುದಾಯ ಸಬಲೀಕರಣಕ್ಕೆ ಸಂಘಟನೆ ಕಟ್ಟಿದವನು ಇದೀಗ ಸಮುದಾಯದ ಒಳಗಿರುವವರನ್ನೇ MRM ಪಟ್ಟ ಹಾಕಿ ಹೊರಹಾಕುವ ತುರಾತುರಿಯಲ್ಲಿದ್ದಾನೆ!

ಅದಕ್ಕಾಗಿ ಕೃತಕ ವಾಯ್ಸ್ ಮೆಸ್ಸೇಜ್ ಗಳನ್ನು ಕ್ರಿಯೇಟ್ ಮಾಡಿ ವಿರುದ್ದ ಸಂಘಟನೆಯ ವಕ್ತಾರನಂತೆ ಫೋಸು ಕೊಡುತ್ತಾನೆ!
ಅದನ್ನು ಭಕ್ತ ಜನಗಳು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ರವಾನಿಸಿ ಆತ್ಮಸಂತೃಪ್ತಿ ಪಡೆಯುತ್ತಿರುವಾಗಲೂ ತಾವೂ ಅಂಧಭಕ್ತರು ಎಂಬ ಪರಿವೆಯೇ ಅವರಿಗಿರುವುದಿಲ್ಲ!

ಸ್ವಂತ ಸಂಘಟನೆಯ ಕಾರ್ಯಕರ್ತರಿಂದಲೇ ನಾಯಕರಿಗೆ ಛೀಮಾರಿ ಎಂಬ ನಕಲಿ ತಲೆ ಬರಹ ಹಾಕಿ ಒಳಗೊಳಗೆ ಆತ್ಮರತಿ ಪಡೆಯುತ್ತಾನೆ.
ಅಂಧಭಕ್ತುರನ್ನು ಸಮಾಧಾನ ಪಡಿಸಲು ಅದು ಸಾಕಾಗುತ್ತದೆ.

ಇದೀಗ ಸಮುದಾಯ ಪ್ರೇಮವೆಂದರೆ ವಿರುದ್ದ ಸಂಘಟನೆಗೆ MRM ಪಟ್ಟ ಕೊಡುವುದೆಂಬ ಹೊಸ ವ್ಯಾಖ್ಯೆ ಚಾಲ್ತಿಯಲ್ಲಿದೆ..

ಅದಕ್ಕಾಗಿ ಸ್ವಂತವಾಗಿ ಮೆಸ್ಸೇಜ್ ಕ್ರಿಯೇಟ್ ಮಾಡಿ ಅದರಡಿಯಲ್ಲಿ ಹಿಂದು ಧರ್ಮಾವಲಂಭಿಯ ಹೆಸರು ಹಾಕಲು ಹಿಂಜರಿಯದಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ

ಅಂದರೆ ಸಮುದಾಯ ಪ್ರೇಮಕ್ಕೆ ಮತ್ತೊಂದು ಸಂಘಟನೆಯನ್ನು ಇನ್ನಿಲ್ಲದಂತೆ ನಾಶ ಮಾಡುವ ಕುತಂತ್ರ ಎಂಬ ಹೊಸ ವ್ಯಾಖ್ಯೆ ರೆಡಿಯಾಗಿದೆ.

ಸ್ವಂತ ಸಂಘಟನೆಯ ತಾರೀಪನ್ನು ಸ್ವತಃ ತಾನೇ ಗೀಚಿ ಅದರಡಿಯಲ್ಲಿ ಇತರ ಧರ್ಮದವರ ಹೆಸರು ಅಚ್ಚು ಹಾಕಿ ಅವರ ಬೆಂಬಲ ನಮಗಿದೆ ಎಂದು ಸಾಬೀತು ಪಡಿಸುವ ವಿಚಿತ್ರ ರೀತಿ.

ತಮ್ಮ ನಾಯಕರು ಯಾರ ಬಳಿಯೂ ಹೋಗಬಹುದು, ಕೊರಳಿಗೆ ಹಾರ ಹಾಕಬಹುದು, ಶಾಲು ಹೊದಿಸಬಹುದು, ಕಾಲ್ನಡಿಗೆ ಜಾಥದಲ್ಲಿ ಭುಜಕ್ಕೆ ಭುಜ ತಾಗಿ ನಡೆಯಬಹುದು, ಆದರೆ ಸಮುದಾಯದ ಮತ್ತೊಂದು ಸಂಘಟನೆಯವರು ಈ ರೀತಿ ಮಾಡಿದ ಕೂಡಲೇ ಅವರು ಖಾವಿ ಮೌಲಾನಗಳು, MRM ಏಜೆಂಟ್ ಗಳು, ಸಮುದಾಯ ದ್ರೋಹಿಗಳು!

 ಸಮುದಾಯ ಎಂಬುದು ಬರೀ ಲೇಬಲ್ ಮಾತ್ರವಾಗಿದ್ದು, ಸದರಿ ಲೇಬಲಡಿಯಲ್ಲಿ ತಮ್ಮ ಅಜೆಂಡಗಳನ್ನು ಕಾರ್ಯರೂಪಕ್ಕಿಳಿಸುವ ಕುತಂತ್ರವೆಂದು ನಿಷ್ಪಕ್ಷಪತಿಯೊಬ್ಬ ಸಂಶಯಿಸಿದರೆ ಅದು ಅವನ ತಪ್ಪಾಗಲಾರದು.
ಅದಲ್ಲದಿದ್ದರೆ ಸಮುದಾಯ ಸಬಲೀಕರಣಕ್ಕಾಗಿ ಸಂಘಟನೆ ಕಟ್ಟಿದವರು ಸಮುದಾಯದವರನ್ನೇ ಹೊಸಕಿ ಹಾಕುವ ಕುತಂತ್ರಕ್ಕೆ ಗಂಟುಬೀಳುವುದು ಯಾಕೆ?

ಎಲ್ಲರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಹೋಗಲು ಯಾಕೆ ಸಾದ್ಯವಾಗುದಿಲ್ಲ?

ಟೀಕೆ ವಿಮರ್ಶೆ ಸಹಜವಾಗಿದ್ದು, ತನ್ನ ಅಪ್ರಬುಧ್ದತೆ ನಡೆಯಿಂದ ಸಮುದಾಯ ಭಿನ್ನಿಸಬಾರದೆಂಬ ಸಾಮಾನ್ಯ ಪ್ರಜ್ಞೆ ಸಬಲೀಕರಣಕ್ಕೆ ಟೊಂಕ ಕಟ್ಟಿ ನಿಂತವರಿಂದ ಸಾದ್ಯವಾಗುದಿಲ್ಲ ಯಾಕೆ?

ಅಲ್ಲದಿದ್ದರೂ ಹತ್ತರಲ್ಲಿ ಹನ್ನೊಂದು ಎಂಬಂತೆ ಅಂಕೆ ಸಂಖ್ಯೆ ಏರಿ ಪರಸ್ಪರ ಕೆಸರೆಚಾಟಕ್ಕೆ ಹೊಸ ವೇದಿಕೆ ನಿರ್ಮಾಣವಾಗಿದೆಯೇ ಹೊರತು ಸಮುದಾಯದಲ್ಲಿ ಅಣುವಿನಷ್ಟು ಸಬಲೀಕರಣ ಸಾದ್ಯವಾಗಿದೆಯಾ?

ಸಮುದಾಯ ಈಗಲೂ ಸ್ವತಂತ್ರವಾಗಿ ತಲೆ ಎತ್ತಿ ನಡೆಯುಂತಾಗಿದೆಯಾ?

ಪರಸ್ಪರ ಕೊಲೆ ದೊಂಬಿ ಕೊಳ್ಳೆಗಳಿಗೆ ಅಂಕಿತ ಬಿದ್ದಿದೆಯಾ?

ಸಮುದಾಯದ ಭಿನ್ನತೆಗೆ ಮತ್ತಷ್ಟು ಶಕ್ತಿತುಂಬಲು ಹೇತುವಾಗಿದಿಯೇ ಹೊರತು ಮಧ್ಯಸ್ಥಿಕೆಯ ರೋಲನ್ನು ನಿರ್ವಹಿಸಲು ಸಾದ್ಯವಾಗಿದೆಯಾ?

ಮುಸ್ಲಿಂ ಯುವಕರು ಜೈಲುಪಾಲಾಗುವುದನ್ನು ತಪ್ಪಿಸಲು ಸಾದ್ಯವಾಗಿದೆಯಾ?

ನಮ್ಮ ಯುವಕರು ಎದೆ ತಟ್ಟಿ ಸಾಮಾಜಿಕ ತಾಣದಲ್ಲಿ ವೀರಾವೇಶ ಮೊಳಗಿಸಿದರೆ ಸಾಕಾ?
ಅದುವಾ ಸಬಲೀಕರಣ?

ಕನಿಷ್ಠ ಪಕ್ಷ ಸಾಮಾಜಿಕ ತಾಣದಲ್ಲಾದರೂ ಪರಸ್ಪರ ಕದನವಿರಾಮ ಘೋಷಿಸಲು ಸಾದ್ಯವಾಗುದಿಲ್ಲ ಯಾಕೆ?

ವಿವಾದಗಳನ್ನೇ ಅಮಲನ್ನಾಗಿ ತಲೆಗೇರಿಸುವುದಕ್ಕೆ ಕಡಿವಾಣ ಯಾಕೆ ಸಾದ್ಯವಾಗುವುದಿಲ್ಲ.

ಸಣ್ಣ ಪುಟ್ಟ ಎಡವಟ್ಟುಗಳು ಸಂಭವಿಸುವಾಗ ನಯವಾಗಿ ತಿಳಿ ಹೇಳಿ ತಿದ್ದುವ ಬದಲು ಸಮುದಾಯ ದ್ರೋಹಿಯಾಗಿ ಚಿತ್ರೀಕರಿಸಿ ಮೂಲೆ ಗುಂಪು ಮಾಡುವುದರಿಂದ ಸಮುದಾಯ ಸಬಲೀಕರಣ ಸಾದ್ಯವೇ?

 ಸಮುದಾಯದ ಯುವಕರು ಕೆಟ್ಟವರಾದರೆ ಸದರಿ ಸಮುದಾಯ ಪರಾಜಿತಗೊಳ್ಳುತ್ತದೆ. ಮಾತ್ರವಲ್ಲ ಆ ಸಮುದಾಯದ ಉತ್ತಮ ಬೆಳವಣಿಗೆಗೆ ಅವರು ಕಂಟಕವಾಗಿರುತ್ತಾರೆ.
ಇಲ್ಲಿ ಹೆಚ್ಚು ಕಮ್ಮಿ ಅದೇ ಸಂಭವಿಸುತ್ತಿದೆ.

- ಅಬೂಶಝ

ಎಪಿ ಉಸ್ತಾದ್ ಮತ್ತು ಮುಹ್'ಜಿಝತ್: ಆರೋಪಕ್ಕೊಂದು ಪ್ರತ್ಯುತ್ತರ



ಎಪಿ ಉಸ್ತಾದರನ್ನು ಗುಣಗಾನ ಮಾಡುವ ಅಬ್ದುಲ್ ಖಾದರ್ ಮದನಿ ಉಸ್ತಾದರ ಪ್ರಭಾಷಣವನ್ನು, ಜನರ ಮಧ್ಯೆ ಅಪಾರ್ಥ ಗೊಳಿಸಿ, ಎಪಿ ವಿಭಾಗದವರು ಎಪಿ ಉಸ್ತಾದರನ್ನು ಪ್ರವಾದಿಗಳಿಗಿಂತಲೂ ಮಿಗಿಲಾಗಿ ಕಾಣುತ್ತಾರೆಂದು ಅಲವಿ ದಾರಿಮಿ ಯವರು ಆರೋಪಿಸಿದ್ದಾರೆ. ಅಲವಿ ದಾರಿಮಿ ಯವರ ಆರೋಪ ಮತ್ತು ಮದನಿ ಉಸ್ತಾದರ ಪ್ರಭಾಷಣದ ಸತ್ಯಾಂಶ ಈ ರೀತಿ ಇದೆ.

ಮದನಿ ಯವರು ತನ್ನ ಪ್ರಭಾಷಣದಲ್ಲಿ ಹೇಳುತ್ತಾರೆ, "ಪ್ರವಾದಿ ﷺ ರಿಗೆ ಅಲ್ಲಾಹನು ಕೊಟ್ಟ ಹಲವಾರು ಮುಹ್'ಜಿಝತ್ ಗಳಲ್ಲೊಂದಾಗಿದೆ "ಹೇಳಿದ್ದನ್ನು ತಿದ್ದುಪಡಿ ಮಾಡದಿರುವುದು". ಇಂತಹ ಒಂದು ಮುಹ್',ಜಿಝತನ್ನು ಎಪಿ ಉಸ್ತಾದ್ ಗೆ ಅಲ್ಲಾಹನು ಕರಾಮತ್ ಆಗಿ ಕೊಟ್ಟಿದ್ದಾನೆ" ಎಂದು.
ಹೌದು, ಇದರಲ್ಲಿ ತಪ್ಪೇನಿದೆ? ಎಪಿ ಉಸ್ತಾದ್ ಗೆ ಮುಹ್'ಜಿಝತ್ ಇದೆ ಎಂದು ಅವರು ಎಲ್ಲೂ ಹೇಳಿಲ್ಲ ತಾನೇ. ಒಂದು ವೇಳೆ ಹಾಗೇನಾದರು ಹೇಳಿದ್ದರೆ, ಅದನ್ನು ತಪ್ಪೆಂದು ಹೇಳಬಹುದಿತ್ತು. ಕಾರಣ, ಮುಹ್'ಜಿಝತ್ ಪ್ರವಾದಿ ಗಳಿಗೆ ಮಾತ್ರ ಅಲ್ಲಾಹನು ಕೊಟ್ಟ ಅಸಾಧಾರಣ ಶಕ್ತಿಯಾಗಿದೆ. ಅಲ್ಲಾಹನು, ಪ್ರವಾದಿ ಗಳಿಗೆ ಮುಹ್'ಜಿಝತ್ ಎಂಬ ಅಸಾಧಾರಣ ಶಕ್ತಿಯನ್ನು ಕೊಟ್ಟಂತೆ, ವಲಿಯ್ಯ್ (ಅಲ್ಲಾಹನ ಇಷ್ಟದಾಸರು) ಗಳಿಗೆ ಕರಾಮತ್ ಎಂಬ ಅಸಾಧಾರಣ ಶಕ್ತಿಯನ್ನೂ ಕೊಟ್ಟಿದ್ದಾನೆ.
ಪ್ರವಾದಿ ಗಳಲ್ಲಿರುವಂತಹ ಅಸಾಧಾರಣ ಶಕ್ತಿಗಳೆಲ್ಲವೂ ಅವುಲಿಯಾಗಳಲ್ಲಿ ಇಲ್ಲದಿದ್ದರೂ, ಅವುಲಿಯಾಗಳಲ್ಲಿ ಇರುವ ಕರಾಮತ್ ಎಂಬ ಅಸಾಧಾರಣ ಶಕ್ತಿಗಳು, ಪ್ರವಾದಿ ಗಳ ಮುಹ್'ಜಿಝತ್ ನೊಂದಿಗೆ ಸಾಮ್ಯತೆ ಇರಬಹುದು. ಹಾಗೆ ವಿಶ್ವಾಸವಿರಿಸಿದ ಮಾತ್ರಕ್ಕೆ ಅದು "ಪ್ರವಾದಿ ಗಳೊಂದಿಗಿನ ಹೋಲಿಕೆ" ಎಂಬ ಅಪಾದನೆಯು ಶುದ್ಧ ಮೂರ್ಖತನವಾಗಿದೆ.

ಉದಾ: ಪ್ರವಾದಿ ಈಸಾ (ಅ) ರವರಿಗೆ ಅಲ್ಲಾಹು ಮರಣ ಹೊಂದಿದವರನ್ನು ಪುನರುಜ್ಜೀವನ ಗೊಳಿಸುವಂತಹ ಅಸಾಧಾರಣ ಶಕ್ತಿಯನ್ನು ಮುಹ್'ಜಿಝತ್ ಆಗಿ ಕೊಟ್ಟಿದ್ದಾನೆ. ಅದರಂತೆ, ಮುಹ್ಯುದ್ದೀನ್ ಶೈಖ್ (ರ) ರವರು ಸತ್ತ ಪ್ರಾಣಿಯನ್ನು ಪುನರುಜ್ಜೀವನ ಗೊಳಿಸಿದ ಚರಿತ್ರೆಯನ್ನು ನಾವು ಕೇಳಿದ್ದೇವೆ. ಮನುಷ್ಯರನ್ನು ಪುನರುಜ್ಜೀವನ ಗೊಳಿಸಿದ ಹಲ್ಲಾಜ (ರ) ರವರ ಚರಿತ್ರೆಯನ್ನೂ ಕೇಳಿದ್ದೇವೆ. ಮುಹ್ಯುದ್ದೀನ್ ಶೈಖ್ ಮತ್ತು ಹಲ್ಲಾಜ (ರ) ರವರ ಪುನರುಜ್ಜೀವನ ಗೊಳಿಸಿದ ಕರಾಮತ್, ಪ್ರವಾದಿ ಈಸಾ (ಅ) ರವರ ಪುನರುಜ್ಜೀವನ ಗೊಳಿಸುವ ಮುಹ್'ಜಿಝತ್ ಗೆ ಸಮಾನವಾಗಿದೆ ಎಂಬ ಕಾರಣಕ್ಕೆ, ಮುಹ್ಯುದ್ದೀನ್ ಶೈಖ್ ಮತ್ತು ಹಲ್ಲಾಜ (ರ) ರವರನ್ನು ಪ್ರವಾದಿ ಗಳಿಗೆ ಸಮಾನಾಂತರಿಸಲಾಗುತ್ತದೆ ಎಂದು ಯಾರಾದರೂ ಅಪಾದಿಸಿದರೆ, ಅದೆಷ್ಟು ಮೂರ್ಖತನದ ವಾದವೋ, ಅದರಂತೆ, ಎಪಿ ಉಸ್ತಾದ್ ಗೆ ಅಲ್ಲಾಹು ಕೊಟ್ಟ ವಿಷೇಶ ಶಕ್ತಿ, ಪ್ರವಾದಿ ﷺ ರ ಮುಹ್'ಜಿಝತ್ ನೊಂದಿಗೆ ಸಾಮ್ಯತೆ ಇದ್ದ ಮಾತ್ರಕ್ಕೆ ಪ್ರವಾದಿ ﷺ ರೊಂದಿಗೆ ಸಮಾನಾಂತರಿಸಲಾಗುತ್ತದೆ ಎಂಬ ಅಪಾದನೆಯೂ ಅಷ್ಟೇ ಮೂರ್ಖತನದ್ದಾಗಿದೆ.

ಮದನಿ ಉಸ್ತಾದರ ಪ್ರಭಾಷಣದಿಂದ ವಿವಾದಿಸಲ್ಪಟ್ಟ ಮತ್ತೊಂದು ವಿಷಯವಾಗಿದೆ,
1.24 ಲಕ್ಷ ಪ್ರವಾದಿ ಗಳಲ್ಲಿ ನಮ್ಮ ಪ್ರವಾದಿ ﷺ ರು ವಿಷೇಶ ವ್ಯಕ್ತಿಯಾದಂತೆ, ಮಲಾಯಿಕುಗಳಲ್ಲಿ ಜಿಬ್ರೀಲ್ (ಅ) ವಿಶೇಷ ವ್ಯಕ್ತಿಯಾದಂತೆ, ಅವುಲಿಯಾಗಳಲ್ಲಿ ಅಲಿ (ರ) ವಿಷೇಶ ವ್ಯಕ್ತಿಯಾದಂತೆ, ಇಂದು ಭೂಲೋಕದಲ್ಲಿ ಜೀವಿಸುವ ವ್ಯಕ್ತಿಗಳಲ್ಲಿ ಎಪಿ ಉಸ್ತಾದ್ ವಿಷೇಶ ವ್ಯಕ್ತಿಯಾಗಿದ್ದಾರೆ ಎಂದು ಎಪಿ ಉಸ್ತಾದರನ್ನು ಬಣ್ಣಿಸಿದ್ದು.  ಇದರಲ್ಲಿ ತಪ್ಪೇನಿದೆ?. ಮದನಿ ಯವರು ಎಪಿ ಉಸ್ತಾದರನ್ನು ಪ್ರವಾದಿ ಗಳಿಗೋ, ಮಲಾಯಿಕುಗಳಿಗೋ, ಅಲಿ (ರ) ರವರಿಗೋ ಹೋಲಿಸಿದ್ದಲ್ಲ. ಬದಲಾಗಿ, ಎಲ್ಲಾ ವಿಭಾಗದಲ್ಲೂ ವಿಷೇಶ ವ್ಯಕ್ತಿಗಳು ಇರುವಂತೆ, ಇಂದಿನ ಕಾಲದಲ್ಲಿ ಎಪಿ ಉಸ್ತಾದ್ ವಿಶೇಷ ವ್ಯಕ್ತಿಯಾಗಿದ್ದಾರೆಂದು ಹೇಳಲು ಉದಾಹರಣೆಗಾಗಿ ಮೇಲಿನದ್ದನ್ನು ಹೇಳಿದ್ದಾರೆ ಅಷ್ಟೇ.ಉದಾ: ಪೂರ್ವಿಕರಾದ ಪ್ರವಾದಿ ಗಳ ಸ್ಥಾನವಾಗಿದೆ, ಇಂದಿನ ಕಾಲದ ಉಲಮಾಗಳದ್ದು ಎಂದರೆ, ಅದು ಉಲಮಾಗಳನ್ನು ಪ್ರವಾದಿ ಗಳಿಗೆ ಸಮಾನಾಂತರಿಸಿದಂತಾಗದಂತೆ.

 ಸಂಶುಲ್ ಉಲಮಾರನ್ನು ಕಾಲಘಟ್ಟದ ಮುಜದ್ದಿದ್ ಎಂದು ಎಸ್ಕೆ ವಿಭಾಗದವರು ಬಣ್ಣಿಸುತ್ತಾರೆ. ನಾವದನ್ನು ಪೂರ್ವಿಕರಾದ, ಹತ್ತು ಲಕ್ಷಕ್ಕೂ ಮಿಕ್ಕ ಹದೀಸ್ ಗಳ ಜ್ಙಾನವಿರುವ ಇಮಾಮ್ ಅಬೂಹನೀಫ (ರ), ಇಮಾಮ್ ಶಾಫಿ (ರ), ಮಾಲಿಕಿ (ರ) ಮುಂತಾದ ಮುಜದ್ದಿಗಳಿಗೆ ಸಮಾನಾಂತರಿಸಲಾಗುತ್ತಿದೆ ಎಂದು ಎಲ್ಲೂ ಹೇಳುವುದಿಲ್ಲ. ಅದರಂತೆ, ಸಲಫಿ ನೇತಾರ ಹುಸೈನ್ ಸಲಫಿ ಯವರು ಒಮ್ಮೆ ತಮ್ಮ ಪ್ರಭಾಷಣದಲ್ಲಿ ಪ್ರವಾದಿ  ﷺ ರನ್ನು ಮುತ್ತು-ಮಾನಿಕ್ಯ ಎಂದು ಸಂಭೋದಿಸಿದ್ದರು. ಇದನ್ನು ನಾವು ಪ್ರವಾದಿ ﷺ ರನ್ನು ಮುತ್ತು-ಮಾನಿಕ್ಯ ದೊಂದಿಗೆ ಸಮಾನಾಂತರಿಸಲಾಗಿದೆ ಎಂದು ಆಪಾದಿಸುವುದಿಲ್ಲ.  ಕೆಲವೊಂದು ಅಲಂಕಾರಿಕ ಪದದ ಅರ್ಥವನ್ನು, ಉದಾಹರಣೆಯನ್ನು ಅರ್ಥೈಸಲು ಸಾದ್ಯವಾಗದವನನ್ನು ಶತಮೂರ್ಖ ಎನ್ನದೆ ವಿಧಿಯಿಲ್ಲ.

ಸಮುದಾಯದ ದಾರಿ ತಪ್ಪಿಸಲು, ಎಪಿ ವಿಭಾಗದ ವಿರುದ್ಧ ಸುಳ್ಳು ಹೇಳಿ ಅಲವಿ ದಾರಿಮಿ ಯವರು ಮಾಡಿದ ಗಂಭೀರ ಆರೋಪವಾಗಿದೆ ಈ ಕೆಳಗಿನದ್ದು.

ಸುಳ್ಳು No 1: ಎಪಿ ಉಸ್ತಾದರನ್ನು ದೇವನಾಗಿಯೂ, ಪ್ರವಾದಿ ಯಾಗಿಯೂ, ಅದರಲ್ಲೂ ಮುಹ್'ಜಿಝತ್ ಇರುವವರಲ್ಲಿ ಪ್ರಮುಖರಾಗಿಯೂ ಚಿತ್ರೀಕರಿಸಲಾಗುತ್ತದೆ.

ಸುಳ್ಳು No 2: ಪ್ರವಾದಿ ﷺ ರ ಎಲ್ಲಾ ಮುಹ್'ಜಿಝತನ್ನು ಎಪಿ ಉಸ್ತಾದ್ ಗೆ ಕರಾಮತ್ ಆಗಿ ಕೊಡಲಾಗಿದೆ.

ಈ ರೀತಿ ಹೇಳುವುದಾಗಿ ಮದನಿ ಉಸ್ತಾದರ ಪ್ರಭಾಷಣದಿಂದ ತೋರಿಸಲು ದಾರಿಮಿ ಸಹಿತ ಯಾರಿಗೂ ಸಾದ್ಯವಿಲ್ಲ. ಆದರ್ಶ ಹೋರಾಟವನ್ನು ಆದರ್ಶದಿಂದ ಎದುರಿಸಲಾಗದಾಗ, ಸುಳ್ಳು ಹೇಳಿ ಜನರನ್ನು ವಂಚಿಸುವ ಇಂತಹ ಪ್ರಯತ್ನಗಳು ಖಂಡನೀಯ.

ಅಲ್ಲಾಹನೇ, ಉಸ್ತಾದರಿಗೆ ಆಫಿಯತ್ ನೊಂದಿಗಿನ ದೀರ್ಘಾಯುಷ್ಯವನ್ನು ನೀಡಿ ಅನುಗ್ರಹಿಸು.
ಶತ್ರುಗಳ ಶತ್ರುತ್ವದಿಂದ ಉಸ್ತಾದರನ್ನು, ಉಸ್ತಾದ್ ನೇತೃತ್ವ ಕೊಡುವ ಪ್ರಸ್ತಾನವನ್ನೂ ಸಂರಕ್ಷಿಸು, ಆಮೀನ್.

ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.

☪ ಮಸ್ಜಿದುಲ್ ಹರಂ☪



ವಿಶುದ್ಧ ಕಅ್ ಬಾಲಯದ ಸುತ್ತ  ಮನೋಹರವಾಗಿ ಕೆಲಸ ಮುಂದುವರಿತ್ತಿರುವ ವಿಶ್ವದ ಅತೀ ದೊಡ್ಡ ಮಸ್ಜಿದ್ ಆಗಿದೆ ಮಸ್ಜಿದುಲ್
ಹರಂ.
20 ಲಕ್ಷ ಜನರಿಗೆ ಒಂದೇ ಸಮಯದಲ್ಲಿ ನಮಾಜ್ ಮಾಡುವ ಸೌಕರ್ಯವಿದೆ. ಈ ವಿಶಾಲವಾದ ಮಸ್ಜಿದ್ ಜಗತ್ತಿನ ನಾನಾ ಭಾಗಗಳಿಂದ ಧಾರೆ ಧಾರೆಯಾಗಿ ಬರುವ ಲಕ್ಷಾಂತರ ಜನರನ್ನು  ಬರಮಾಡಲು ಸಾಧ್ಯವಾಗುವ ರೀತಿಯಲ್ಲಿ  ವಿಪುಲೀಗರಣದ ಕೆಲಸಗಳು ನಡೆಯುತ್ತಾ ಇದೆ.
ವಿಶ್ವದ ಅತೀ ದೊಡ್ಡ ಕ್ರಯ್ನ್ ಗಳು ಸದಾ ಸಮಯ ಕೆಲಸ ನಿರತವಾಗಿದೆ.

💚ಒಂದು ರಕ್ಅತ್ ಗೆ ಒಂದು ಲಕ್ಷ ಸುನ್ನತ್ ನಮಾಜ್ ಮಾಡಿದ ಪ್ರತಿಫಲ ವಾಗಿದೆ ಇಲ್ಲಿನ ನಮಾಜ್ ಗೆ, ಅದನ್ನೂಮ್ಮೆ ಯೋಚಿಸಿದರೆ ಎಷ್ಟು ನಮಾಜ್ ಮಾಡಿದರೂ ಸಾಕು ಎಂದು ತೋಚಲಿಕ್ಕಿಲ್ಲ. ಇನ್ನು ಇನ್ನು ನಮಾಜ್ ಮಾಡಿ ತುಂಬಾ ಪ್ರತಿಫಲ ಕೊಯ್ಯಲು ನಾವು ಸ್ವಂತ ಪರಿಶ್ರಮಿಸುವೆವು.

ಹೋಗದವರಿಗೆ ವಿದೂರವಲ್ಲದ ದಿನಗಳಲ್ಲಿ ಅಲ್ಲಿಗೆ ತಲುಪಲು,
ಹೋದವರಿಗೆ ಇನ್ನು ತುಂಬಾ ಸಲ ಅಲ್ಲಿಗೆ ಹೋಗಲು, ಅಲ್ಲಾಹು ಭಾಗ್ಯ ನೀಡಿ ಅನುಗ್ರಹಿಸಲಿ
ಆಮೀನ್.

✍ಗಫೂರ್ ಬಯಾರ್.

ಐಕ್ಯ ಆಹ್ವಾನ ಅದೆಷ್ಟು ಪರಿಣಾಮಕಾರಿಯಾದೀತು?


------------------------------

ನನ್ನಲ್ಲೊಬ್ಬ ಪ್ರಶ್ನಿಸಿದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸಮುದಾಯ ಎಪ್ಪತ್ತಮ್ಮೂರು ಪಂಗಡಗಳಾಗಿ ವಿಭಜಿಸುತ್ತೆ.ಆದ್ದರಿಂದ ಐಕ್ಯ ಆಹ್ವಾನ ಮಾಡಿ ಫಲವಿಲ್ಲ ಅದಕ್ಕಾಗಿ ನೀವು ಪ್ರಯತ್ನಿಸುವುದು ಕೂಡಾ ಬಾಲಿಶ. ಅಂತೆಲ್ಲಾ ಹೇಳುತ್ತಾ, ನಮ್ಮ ಐಕ್ಯ ಅಹ್ವಾನದ ಕರೆಗೆ ನೀವು ತಣ್ಣೀರೆರಚುತ್ತಿದ್ದೀರಿ ಇದು ಸರಿಯಾ?

ನಾನು ಒಂದೆರಡು ನಿಮಿಷ ಮರುತ್ತರ ನೀಡದೆ ಸುಮ್ಮನಿದ್ದೆ.

ನನ್ನ ಮೌನ ಅವನಿಗೆ ಅಲರ್ಜಿಯಾಯಿತೋ ಏನೋ ಅವನು ಮತ್ತು ಮತ್ತು ಅರಚಿದ,
ನೀವೇ ಹೇಳಿ ನೀವು ನಮ್ಮ ಐಕ್ಯ ಆಹ್ವಾನ ಕ್ಕೆ ವಿರುದ್ದವಲ್ಲವೇ?

ನಾನು ಹೌದಂಬಂತೆ ಊಂ ಗುಟ್ಟಿದೆ.

ತಟ್ಟನೆ ಅವನು ನನ್ನಲ್ಲಿ ಕೇಳಿದ ಹಾಗದರೆ ನೆಬಿಯವರು ಲೋಕವಸಾನವಾಗುವಾಗ ವ್ಯಭಿಚಾರ,ಮದ್ಯಪಾನ ಮುಂತಾದ ಕೆಟ್ಟ ಚಟ ಜಾಸ್ತಿಯಾಗುತ್ತೆ ಅಂತ ಹೇಳಿದ್ದಾರೆ ಹಾಗಾಗಿ ಅದರ ವಿರುದ್ದ ಜನಜಾಗೃತಿ ಮೂಡಿಸುವುದನ್ನು ಬಿಡಬೇಕಾ?

ವ್ಯಭಿಚಾರದಂತಹ ಅನೈತಿಕತೆ ಜಾಸ್ತಿಯಾಗುತ್ತೆ ಅಂತ ಮುತ್ತು ನೆಬಿಯವರು ಹೇಳಿದ ಮೇಲೆಯೂ ಅದನ್ನು ಮಟ್ಟ ಹಾಕುವ ಆಹ್ವಾನ ಕೂಡಾ ಅಷ್ಟೊಂದು ಪರಿಣಾಮಕಾರಿ ಅಲ್ಲ ತಾನೇ?

ಐಕ್ಯ ಆಹ್ವಾನ ಬಿಡಬೇಕಾದರೆ ಮದ್ಯಪಾನ ವಿರುದ್ದ ಜನಜಾಗೃತಿ ಕೂಡಾ ಬಿಡಬೇಕಾಗುತ್ತದೆ.
ಇದಕ್ಕೆ ನೀವು ಏನೆನ್ನುತ್ತೀರಿ?

ಆಗಲು ನಾನು ಅವನಿಗೆ ಉತ್ತರವನ್ನು ನೀಡದೆ ಸುಮ್ಮನೆ ಕುಳಿತೆ.

ಆದರೆ ಅವನು ನನ್ನನ್ನು ಬಿಡುವ ಅಂದಾಜು ಇಲ್ಲ.ಮತ್ತೂ ಮತ್ತೂ ಕೇಳುತ್ತಲೇ ಇದ್ದ.

ಕೊನೆಗೆ ನಾನು ಮೌನ ಮುರಿದು ಉತ್ತರಿಸಿದೆ.

ನಾನು ಅವನಲ್ಲಿ ಹೇಳಿದೆ ನಾವು ಯಾವತ್ತೂ ಐಕ್ಯ ಆಹ್ವಾನವನ್ನು ವಿರೋಧಿಸುವವರಲ್ಲ.ನಮ್ಮ ಉಲಮಾಗಳು ಐಕ್ಯ ಆಹ್ವಾನಕ್ಕೆ ಕರೆನೀಡುತ್ತಾ ಅದಕ್ಕಾಗಿ ಪ್ರಯತ್ನಿಸುತ್ತಾ ಇದ್ದಾರೆ.

ಆಗ ಅವನು ನನ್ನಲ್ಲಿ ಕೇಳಿದ ನೀವಲ್ಲವೇ ಸ್ವಲ್ಪ ಮುಂಚೆ ನನ್ನಲ್ಲಿ ಹೇಳಿದ್ದು, ನಾವು ನಿಮ್ಮ ಐಕ್ಯ ಆಹ್ವಾನಕ್ಕೆ ವಿರುದ್ದವೆಂದು....

ಹೌದು ನಿಮ್ಮ ಐಕ್ಯ ಅಹ್ವಾನ ಅದು ಬೆಲ್ಲದಂತೆ 'ಕಡೆಕೊಡಿ' ಇಲ್ಲದ ಐಕ್ಯವಾಗಿದೆ.

ನಿಮ್ಮ ಐಕ್ಯ ಆಹ್ವಾನ ಹೆಣ್ಣು ತಾಯಿಯಾದರೂ,ತಂಗಿಯಾದರೂ,ಎಲ್ಲರನ್ನು ವಿವಾಹವಾಗಿ ಹೆಣ್ಣಿಗೆ ಬಾಳು ಕೊಡುವ ವಿಷಯದಲ್ಲಿ ಐಕ್ಯವಾಗಬೇಕೆಂಬ ಆಹ್ವಾನದಂತೆ ಹಾಸ್ಯಾಸ್ಪದ!

ಅಂದರೆ ನಮ್ಮನ್ನು ಮುಸ್ಲಿಮರೆಂದೆ ನಂಬದೆ ಮುಶ್ರಿಕ್ ಮಾಡುವವರೊಂದಿಗೆ 'ಮುಸ್ಲಿಮ್ ಐಕ್ಯವಂತೆ!
ಅದು ಯಾವತ್ತೂ ನಡೆಯುವ ಕಾರ್ಯವಲ್ಲ...
ಇಂತಹ ಅವಿವೇಕದ ಐಕ್ಯ ಆಹ್ವಾನ ನಡೆಸುವುದು ಬರೀ ಮೂರ್ಖತನ.

ಹಾಗಾಗಿಯೇ ರಸೂಲುಲ್ಲಾ ಉಮ್ಮತ್ 73 ಪಂಗಡಗಳಾಗಿ ಬಿಭಜಿಸುತ್ತಾ ಅನೈಕ್ಯ ಸೃಷ್ಟಿಯಾಗುವುದೆಂದು ಹೇಳಿದ್ದಾರೆ.
ಪುಣ್ಯ ರಸೂಲರೇ ಉಮ್ಮತ್ ಪಂಗಡಗಳಾಗಿ ಛಿದ್ರವಾಗುವರು ಎಂದು ಹೇಳಿದ ಮೇಲೆ ನಾವು ರಸೂಲ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಮಾತನ್ನು ಮೀರಿ ಮುಸ್ಲಿಮ್ ಸಮುದಾಯ ಒಗ್ಗಟ್ಟಾಗಬೇಕೆಂದು ಪಣತೊಡುವುದರಲ್ಲಿ ಏನು ಅರ್ಥವಿದೆ?

ಆಗ ಅವನು ಪುನಃ ಲೋಕವಸಾನದಲ್ಲಿ ಮದ್ಯಪಾನ ವ್ಯಭಿಚಾರ ಅಧಿಕವಾಗುದೆಂದು ಪುಣ್ಯ ರಸೂಲರು ಹೇಳಿದ್ದಾರೆ ತಾನೇ ಹಾಗಾಗಿ ಮದ್ಯಪಾನ ವಿರುದ್ದ ಜನಜಾಗೃತಿಯನ್ನು ನಾವು ನಿಲ್ಲಿಸಬೇಕಾ? ಎಂದು ಪ್ರಶ್ನಿಸಿದ.

ನಾನವನಲ್ಲಿ ಹೇಳಿದೆ,

ನೋಡು ಗೆಳೆಯ...
ಮುಸ್ಲಿಂ ಐಕ್ಯ ಎಂಬುದು ಮದ್ಯಪಾನ ವ್ಯಭಿಚಾರದಂತೆ ಅಲ್ಲ.
ಮದ್ಯಪಾನ ವ್ಯಭಿಚಾರ ವಿರುದ್ದ ನಾವು ಎಷ್ಟೇ ಅಭಿಯಾನ ನಡೆಸಿದರೂ ಅದು ಜಾಸ್ತಿಯಾಗುತ್ತಲೇ ಇರುತ್ತೆ.ಆದರೆ ನಮ್ಮಿಂದಾಗುವ ಜನಜಾಗೃತಿ ಮೂಡಿಸಬೇಕು.ಆವಾಗ ಸ್ವಲ್ಪ ಜನರಾದರೂ ಅದರಿಂದ ವಿಮುಖ ತೋರಿಸುವರು.
ಅದನ್ನೇ ನಾವು ಮಾಡುತ್ತಿದ್ದೇವೆ.ಮುಸ್ಲಿಮ್ ಸಮೂಹ ಸುನ್ನೀ ಆಶಯಗಳನ್ನು ಮೂಲೆಗೆಸೆದು ವಹ್ಹಾಬಿಸಂ,ಮೌದೂದಿಸಂ ಹಾಗೂ ತಬ್ಲೀಗಿಸಂ ನ್ನು ಅಪ್ಪಿ ಹಿಡಿಯಲು ಹೊರಟು ವಿವಿಧ ಪಂಗಡಗಳಾಗಿ ವಿಭಜಿಸುವಾಗ ಅಂತಹ 'ಇಸಂ' ಗಳೆಲ್ಲಾ ಮದ್ಯಪಾನ ವ್ಯಭಿಚಾರಕ್ಕಿಂತಲೂ ಡೇಂಜರ್ ಪೋಯ್ಝನ್ ಆಗಿದ್ದು ಅದರ ವಿರುದ್ದ ಜನಜಾಗೃತಿ ಮೂಡಿಸಿ ಅವರನ್ನು ಸುನ್ನಿಗಳನ್ನಾಗಿಯೇ ಪರಿವರ್ತಿಸಿ, ಐಕ್ಯವನ್ನು ಪುನಃಸ್ಥಾಪಿಸಲು ಕರೆ ಕೊಡುತ್ತೇವೆ‌.
ಸ್ವಲ್ಪ ಜನರಾದರೂ ಮದ್ಯಪಾನದಿಂದ ಮುಕ್ತರಾಗುವಂತೆ ನೂತನವಾದದ ಹಿಡಿತದಿಂದ ರಕ್ಷೆಹೊಂದಿ ನಮ್ಮೊಂದಿಗೆ ಐಕ್ಯರಾಗುತ್ತಾರೆ.
ಅದಾಗಿದೆ ನೈಜ ಐಕ್ಯ ಆಹ್ವಾನ.

ನಿಮ್ಮ ಐಕ್ಯ ಆಹ್ವಾನ ಹೇಗೆಂದರೆ ಮದ್ಯಪಾನಿ ಮದ್ಯಪಾನಿಯಾಗಿಯೇ ಇರಬೇಕು,ವ್ಯಭಿಚಾರಿ ಹಾಗೆಯೇ ಇರಬೇಕು.ಇದ್ಯಾವುದೇ ಕೆಟ್ಟ ಚಟ ಇರದವನು ಕೂಡಾ ಇದೇ ವ್ಯಭಿಚಾರಿಯೊಂದಿಗೆ ಸೇರಿ ಐಕ್ಯವಾಗಬೇಕು!

ಪಲಿತಾಂಶ..
ಮದ್ಯಪಾನ ವ್ಯಭಿಚಾರ ರೂಡಿಮಾಡದ ಉತ್ತಮ ಮನುಷ್ಯ, ಇದೀಗ ಮದ್ಯಪಾನಿ, ವ್ಯಭಿಚಾರಿಯ ಜತೆ ಸೇರಿ ಐಕ್ಯವಾಗಿ ಮದ್ಯಪಾನವನ್ನು ತನ್ನ ಬದುಕಿನಲ್ಲಿ ಅಳವಡಿಸಿ ಐಕ್ಯವಾಗುತ್ತಾನೆ!
ಜೊತೆಗೆ ವ್ಯಭಿಚಾರವನ್ನು!!
ಇದೆಂತಹ ಐಕ್ಯ!!!

ಆಗ ಅವನು
ನನಗೊಂದು ಅರ್ಥವಾಗುತ್ತಿಲ್ಲ ಸ್ವಲ್ಪ ಬಿಡಿಸಿ ಹೇಳಿ, ಎಂದಾಗ ನಾನು ವಿವರಿಸಿದೆ.

ನೋಡು ಗೆಳೆಯ.
ಸಾಮಾನ್ಯ ಸುನ್ನಿ ಕಾರ್ಯಕರ್ತನೊಬ್ಬ, ಸಳಪಿ,ತಬ್ಲೀಗ್ ಮೌದೂದಿ ಜೊತೆ ಸೇರಿ ಐಕ್ಯವಾದರೆ ಕೊನೆಗೆ ಅವನು ಸ್ವಲ್ಪ ಸಳಪಿ,ಸ್ವಲ್ಪ ಮೌದೂದಿ,ಸ್ವಲ್ಪ ತಬ್ಲೀಗ್ ,ಒಂಚೂರು ಜಾಸ್ತಿ ಸುನ್ನಿಯಾಗಿ ಮಾರ್ಪಟ್ಟು,ಕೊನೆಗೆ ಸುನ್ನತ್ ಜಮಾತ್ ಗೆ ಮಾರಿಯಾಗಿ ಮಾರ್ಪಡುತ್ತಾನೆ.
ಇದಾಗಿದೆ ಈಗ ಒಂದು ಸಂಘಟನೆ ಆಹ್ವಾನ ನೀಡುವ ಮುಸ್ಲಿಮ್ ಐಕ್ಯದ ಕೊನೆಯ ರಿಸಲ್ಟ್!

ಇದೊಂದು ಹಿಡನ್ ಅಜಂಡವಾಗಿದೆ.

ಸುನ್ನೀ ಯುವಕರಲ್ಲಿರುವ ಸುನ್ನೀಸಂ ಸ್ಪಿರಿಟನ್ನು ಹಂತ ಹಂತವಾಗಿ ಇಲ್ಲದಾಗಿಸಿ ಕೊನೆಗೆ ಅವನನ್ನು ಸುನ್ನಿಯೂ ಅಲ್ಲ ಅಸುನ್ನಿಯೂ ಅಲ್ಲದ 'ಐಯಮ್ ಮುಸ್ಲಿಮ್' ಎಂಬ ಮನೋಸ್ಥಿತಿಗೆ ತಲುಪಿಸುವ ಅತೀ ಭೀಕರ ಪೋಯ್ಸನ್!

ಜೊತೆಗೆ ಕೆಲವೊಂದು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ನಾವೇ ಮುಸ್ಲಿಮರ ರಕ್ಷಕರು ಎಂಬ ರೀತಿಯಲ್ಲಿ ಸಮುದಾಯವನ್ನು ನಂಬಿಸಿ ಬೆಣ್ಣೆ ಸವರುತ್ತಾರೆ.
ಇದೆಲ್ಲದರ ಮದ್ಯೆ ನಿಜವಾದ ಆಖಿರತಿನ ವಿಜಯದ ಆಶಯ ಆದರ್ಶವನ್ನು ಯಾವತ್ತೋ ಕೈ ಬಿಟ್ಟಿರುತ್ತಾರೆ.

ನಮ್ಮ ಉಲಮಾಗಳು ಅದರ ಕುರಿತು ಪ್ರಶ್ನಿಸಿದರೆ ಉಲಮಾಗಳು ಕೇರಳ ಕರ್ನಾಟಕದಲ್ಲಿ ಮಾತ್ರ ಇರುವುದಾ?
ಎಂಬ ಪೆದಂಬು ಪ್ರಶ್ನೆ ಕೇಳಿ ಉಲಮಾಗಳನ್ನು ನಿಂದಿಸುವಷ್ಟು ದರ್ಪ ತೋರಿಸುತ್ತಾರೆ.

ಹಾಗಾಗಿಯೇ ನಮ್ಮ ಪೂರ್ವಿಕ ಇಮಾಮ್ ಗಳು ನಮ್ಮನ್ನು ಎಚ್ಚರಿಸಿದಂತೆ..
ನೀವು ತಾಯಿಯನ್ನು ಅನುಸರಿಸುವುದಕ್ಕಿಂತಲೂ ಉಲಮಾಗಳನ್ನು ಅನುಸರಿಸಬೇಕು.
ನಾವು ಮಗುವಾಗಿರುವಾಗ ಎಡವಿ ಬಿದ್ದು ದೇಹಕ್ಕೆ ಪೆಟ್ಟಾಗದಂತೆ ತಾಯಿ ನಮ್ಮ ಕೈ ಹಿಡಿದು ನಡೆದಾಡುಸುತ್ತಿದ್ದರು.ಬೆಂಕಿಗೆ ಕೈ ಹಾಕಿ ಸುಟ್ಟುಕೊಂಡು ಎಡವಟ್ಟು ಮಾಡದಂತೆ ಅಮ್ಮಾ ನಮ್ಮ ಬಗ್ಗೆ ನಿರಂತರ ನಿಗಾ ವಹಿಸುತ್ತಿದ್ದರು.
ಅಂತೂ ಇಂತೂ ದುನಿಯಾದ ಬೆಂಕಿಯಿಂದ ನಮ್ಮನ್ನು ತಾಯಿ ಕಾಪಾಡುತ್ತಿದ್ದಳು.
ಆದರೆ ನಮ್ಮ ಉಸ್ತಾದರುಗಳು ನಮಾಜು ರೋಝ,ಸುನ್ನತ್,ಹರಾಮ್ ಎಲ್ಲವನ್ನು ಕಲಿಸಿ ಪರಲೋಕದ ಅತಿಭಯಂಕ ಅಗ್ನಿಯಿಂದ ನಮ್ಮನ್ನು ಕಾಪಾಡುತ್ತಿದ್ದರು. ದುನಿಯಾದ ಬೆಂಕಿ ತಾತ್ಕಾಲಿಕ. ಆಖಿರತಿನ ಬೆಂಕಿ ಶಾಶ್ವತ!

ಹಾಗಾಗಿಯೇ ದುನಿಯಾದ ಕೇವಲ ಬೆಂಕಿಯುಂಡೆಗೆ ಹೆದರಿ ಸಳಪಿ ಜಮಾತಿನೊಂದಿಗೆ ಐಕ್ಯವಾಗಿ ಶಾಶ್ವತ ಬೆಂಕಿಯನ್ನು ಖರೀದುಸುವವರ ಜೊತೆ ಸೇರಬೇಕೇ?
ನೀನೇ ತೀರ್ಮಾನ ಮಾಡು...

ನನ್ನ ಸಣ್ಣ ವಿವರಣೆ ಅವನಿಗೆ ಫಲಿಸಿದೆ ಎಂದು ಅವನ ಮುಖ ಕಂಡಾಗಲೇ ಮನವರಿಕೆಯಾಗಿತ್ತು.
ಅವನು ಮರು ಮಾತನಾಡದೆ ನನಗೆ ಕೈ ಕೊಟ್ಟು ತಲೆಯಾಡಿಸಿ ವಿನಯಾನ್ವಿತನಾಗಿ ಅಲ್ಲಿಂದ ಹೊರನಡೆದ.
ಅಲ್ ಹಂದುಲಿಲ್ಲಾ..
- ಅಬೂಶಝ