Saturday, January 6, 2018

ಪುತ್ತೂರು SYS ಮತ್ತು ದ‌ಅವಾ ವಿಂಗ್ ಪುತ್ತೂರು ವತಿಯಿಂದ ಕರ್ನಾಟಕ ಯಾತ್ರೆಯನ್ನು ನೆನಪಿಸುವಂತಹ ಆಕರ್ಷನೀಯ,ಹಾಗೂ ನೂರಾರು ಶುಭ್ರ ವಸ್ತ್ರಧಾರಿಗಳಾದ ಎಸ್ಸೆಸ್ಸೆಫ್ ಕಾರ್ಯಕರ್ತರ ಮನಮೋಹಕ ಪಥಸಂಚಲನ ವಿವಿಧ ಕೇಂದ್ರಗಳಲ್ಲಿ ನಡೆಯುವಾಗ ಸುಮಾರು
*3 ಸಾವಿರ ಕರಪತ್ರ ಗಳನ್ನು* ಹಂಚಲಾಯಿತು!
ಅದರ ಸಂಕ್ಷಿಪ್ತ👇


*ನಿಮಗನಿಸಬಹುದು ಯಾಕಾಗಿ ಈ ಪ್ರಚಾರ!? ಅದೂ ಇನ್ನೊಂದು ರಾಜ್ಯವಾದ ಕೇರಳದಲ್ಲಿರುವ 'ಮರ್ಕಝ್' ಎಂಬ ಸಂಸ್ಥೆಯ ಬಗ್ಗೆ ನಮ್ಮ ಊರಲ್ಲಿ ಯಾಕೆ ಈ ರೀತಿಯ ಅಬ್ಬರದ ಪ್ರಚಾರ? ಮನುಷ್ಯ ಸಹಜವಾದ ಸಂಶಯ ನಿಮಗೆ ಮೂಡಿದ್ದೇ ಆದಲ್ಲಿ ಅದು ನಿಮ್ಮ ತಪ್ಪಲ್ಲ. ಆದರೆ  ನಿಮ್ಮ ಸಂಶಯಗಳನ್ನು ಹೋಗಲಾಡಿಸುವ ಸಣ್ಣ ಪ್ರಯತ್ನವನ್ನಾದರೂ ನಾವು ಮಾಡಿಲ್ಲ ಅಂದ್ರೆ ಅದು ನಮ್ಮ ತಪ್ಪು. ಹಾಗಾಗಿ ಹ್ರಸ್ವ ಅವಲೋಕನ ಇಲ್ಲಿ ನೀಡುತ್ತಿದ್ದೇವೆ....👉*

*👉ಹುಟ್ಟು ಚಿಂತನೆ*
'ಕನಸು ಕಾಣಿರಿ' ಎಂದು ಸದಾ ಹೇಳುತ್ತಲಿದ್ದ ಎಪಿಜೆ ಅಬ್ದುಲ್ ಕಲಾಂರವರ ರಾಜ್ಯ ತಮಿಳು ನಾಡಿನಲ್ಲಿ ಅಹ್ಮದ್ ಹಾಜಿಯ ಪುತ್ರ ಕಾಂತಪುರಂ ಅಬೂಬಕರ್ ಎಂಬ ವಿದ್ಯಾರ್ಥಿ ಕಲಿಯುತ್ತಿರುವಾಗಲೇ ಕನಸು ಕಾಣಲು ಆರಂಭಿಸಿದ್ದರು!
'ತನ್ನ ರಾಜ್ಯದಲ್ಲಿಯೂ ಸಮನ್ವಯ ಶಿಕ್ಷಣ ನೀಡುವ ಮಹಾ ವಿದ್ಯಾಲಯವೊಂದನ್ನು ತೆರೆಯಬೇಕು'
ಆದರೆ ಕನಸನ್ನು ನನಸು ಮಾಡುವ ಮಾತುಕತೆ ನಡೆದದ್ದು ಮಾತ್ರ ಇತ್ತ ಮಂಗಳೂರಿನಲ್ಲಿ!
ಅಂದ್ರೆ 1954 ರಲ್ಲಿ ರೂಪೀಕ್ರತಗೊಂಡ SYS ಒಕ್ಕೂಟಕ್ಕೆ ದಾರ್ಶನಿಕ ವಿದ್ವಾಂಸ,ಇ ಕೆ ಹಸನ್ ಮುಸ್ಲಿಯಾರ್ ಮತ್ತು ಪಾದರಸ ಚುರುಕಿನ ಮಹಾ ವ್ಯಕ್ತಿತ್ವ ಕಾಂತಪುರಂ ಉಸ್ತಾದ್ ಅಧ್ಯಕ್ಷರು ಹಾಗೂ ಪ್ರಧಾನಕಾರ್ಯದರ್ಶಿಗಳಾಗಿ ಸಂಘಟನೆಯನ್ನು ಅತೀ ಶೀಘ್ರವಾಗಿ ಮುನ್ನೆಡಸುತ್ತಿರುವ ಭಾಗವಾಗಿ ಮಂಗಳೂರು ಪ್ರಯಾಣ ನಡೆಸಿ ಹಿಂತಿರುಗುವಾಗ ಸಹಚರರೊಂದಿಗೆ ತನ್ನ ಕನಸಿನ ಕೂಸಾದ 'ವ್ಯವಸ್ಥಿತ ಮಹಾ ವಿದ್ಯಾಕೇಂದ್ರದ' ಕುರಿತು ಪ್ರಸ್ತಾಪ ಇಟ್ಟರು.
ಮುಸ್ಲಿಂ ಸಮಾಜದ ಶೈಕ್ಷಣಿಕ ಪ್ರಗತಿಯ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದ ತಾಜುಲ್ ಉಲಮಾ ಉಳ್ಳಾಲ ತಂಙಳ್ ಮತ್ತು ಇ ಕೆ ಹಸನ್ ಮುಸ್ಲಿಯಾರ್ ಜತೆಗಿದ್ದರು.ಈ ಇಬ್ಬರು ನಾಯಕರಿಗೂ ಇಂತಹದ್ದೊಂದು ಆಶಯ ತುಂಬಾ ಹಿಡಿಸಿತು.ಪ್ರಯಾಣದುದ್ದಕ್ಕೂ ಈ ಕುರಿತು ತೀವ್ರ ಚಿಂತನೆ ನಡೆಯಿತಲ್ಲದೆ ಮುಂದಿನ
ಎಸ್ ವೈ ಎಸ್ ಸಭೆಯ ಮುಖ್ಯ ಅಜೆಂಡಾ ಕೂಡ ಇದಾಯಿತು.ಸೇರಿದವರೆಲ್ಲರ ಮನದಲ್ಲಿಯೂ ಇಂತಹದೊಂದು ಕನಸು ಬಿರಿಯತೊಡಗಿತು.
ಅಹ್ಮದ್ ಹಾಜಿಯ ಪುತ್ರ ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಎಂಬ
ವಿಧ್ಯಾರ್ಥಿಯ ಕನಸು ಹುಟ್ಟು ಪಡೆಯುತ್ತದೆಯೆಂಬುದು ಬಹುತೇಕ ಖಾತರಿಯಾಯಿತು.

*ಅನುಗ್ರಹೀತರಿಂದ ಶಿಲಾನ್ಯಾಸ*

ಅಂದು ಮಕ್ಕಾ ಹರಂ ಮಸೀದಿಯಲ್ಲಿ ದರ್ಸ್ ನಡೆಸುತ್ತಿದ್ದ ಒಬ್ಬ ಮಹಾ ವಿದ್ವಾಂಸರೊಬ್ಬರಿದ್ದರು.ಹೆಸರು *ಅಸ್ಸಯ್ಯದ್ ಅಲವೀ ಮಾಲಿಕೀ.*
ಇವರು ಎಂತಹ ಮಹಾನೆರೆಂದರೆ ಪುಣ್ಯ ರಸೂಲ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅನುಮತಿ ನೀಡಿದರೆ ಮಾತ್ರ ಮಕ್ಕಾ ಬಿಟ್ಟು ಹೊರನಾಡಿಗೆ ಯಾತ್ರೆ ಹೋಗುವರು.ಹಾಗಾಗಿಯೇ ಅದೆಷ್ಟೋ ಬಾರಿ ಎಪಿ ಉಸ್ತಾದ್ ಇವರನ್ನು ಕೇರಳಕ್ಕೆ ಆಹ್ವಾನಿಸಿದ್ದುಂಟು.ಆಗೆಲ್ಲಾ ಅನುಮತಿ ಸಿಗಲಿಲ್ಲ ಎಂದೇ ಹೇಳುತ್ತಿದ್ದರು.
ಕೊನೆಗೆ ಆ ಶುಭ ಸುದ್ದಿಯೂ ಸಿಕ್ಕಿತು.
*"ಭಾರತಕ್ಕೆ ಹೋಗಲು ಹಬೀಬ್ ಅನುಮತಿ ನೀಡಿದ್ದಾರೆ"*
ಎಪಿ ಉಸ್ತಾದರ ಸಹಿತ ಸುನ್ನೀ ಸಮೂಹಕ್ಕೆ ಸಂತೋಷದ ನಿಮಿಷಗಳು....
ಆದರೆ ಅಲ್ಲೊಂದು ಹೊಸ ಸಮಸ್ಯೆ ಉದ್ಬವವಾಯಿತು.ಮುಂಬೈ ತಲುಪಿದ ಅಲವಿ ಮಾಲಿಕಿ ತಂಙಳ್ ರವರನ್ನು ಕೇರಳಕ್ಕೆ ಕರೆತರಲು ಟಿಕೆಟ್ ಲಭ್ಯವಿಲ್ಲ!
ಮುಂಬೈಯಿಂದಲೇ ಮರಳಿ ಮಕ್ಕಾಗೆ ಹೋಗಬೇಕಾದ ಸ್ಥಿತಿ ಸಂಜಾತವಾಯಿತು.
ಕೈಗೆ ಬಂದ ತುತ್ತು ಬಾಯಿಗಿಲ್ಲಂಬಂತಾಯಿತು!
ವಿಷಯ ತಿಳಿದು ಎಪಿ ಉಸ್ತಾದ್ ಸಹಿತ ನಾಯಕರಿಗೆಲ್ಲರಿಗೂ ಅತ್ಯಂತ ಬೇಸರವಾಯಿತು.
ಹೇಗಾದರೂ ಮಾಡಿ ಪುಣ್ಯ ಪುರುಷನನ್ನು ಕೇರಳಕ್ಕೆ ತಂದು ಪಾವನ ಸ್ಪರ್ಶದಿಂದ ಸಮುದಾಯದ ಮಹಾ ವಿದ್ಯಾಲಯಕ್ಕೆ ಶಿಲಾನ್ಯಾಸ ಗೆಯ್ಯಿಸಲೇ ಬೇಕೆಂಬ ಅದಮ್ಯ ಹಂಬಲದಿಂದ ಎಪಿ ಉಸ್ತಾದ್ ಕಾರ್ಯಪ್ರವರ್ತರಾದರು.ಎಲ್ಲಾ ಬಾಗಿಲುಗಳನ್ನು ಬಡಿದರು ಫಲ ಶೂನ್ಯವಾಗಿತ್ತು.
ಕೊನೆಗೆ ತನ್ನ ಏಳಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ ಅಸ್ಸಯ್ಯದ್ ಅವೇಲತ್ ಅಬ್ದುಲ್ ಖಾದರ್ ತಂಙಳ್ ರವರ ಬಳಿ ‌ಹೋಗಿ ಅಹವಾಲು ಹೇಳಿದಾಗ ತಂಙಳ್ ರವರು ಹೇಳಿದರು;
*"ನಮಗೆ ಮುಂಬೈಗೆ ಹೋಗೋಣ.ಮಾಲಿಕಿಯವರನ್ನು ಮುಖತಃ ಕಂಡು ಕರೆದುಕೊಂಡು ಬರೋಣ"*
ಅವೇಲತ್ ತಂಙಳ್ ರವರ ಮಾತು ಕೇಳಿ ಕಾಂತಪುರಂ ಉಸ್ತಾದ್ ಗೆ ಆಶ್ಚರ್ಯ!
"ಅವರಿಬ್ಬರಿಗೆ ಟಿಕೆಟ್ ಸಿಗದಿರುವಾಗ ನಾವು ಸೇರಿ ನಾಲ್ವರಿಗೆ ಹೇಗೆ ಸಿಗುತ್ತದೆ? ನಾಲ್ವರೂ ಕೂಡಾ ಅಲ್ಲಿ ಹೋಗಿ ಬಾಕಿಯಾದರೆ ಇಲ್ಲಿ SYS ಸಮ್ಮೇಳನ ಮತ್ತು ಶಿಲಾನ್ಯಾಸ ಯಾರು ನಡೆಸುವುದು..?"

ಸಯ್ಯಿದರು ಒಂದಿಷ್ಟು ಅಳುಕದೆ,ಅಂಜದೆ ಅಲ್ಲಾಹನಲ್ಲಿ ಭಾರವರ್ಪಿಸಿ ಧೈರ್ಯವಾಗಿಯೇ,
"ಹಾಗೇನು ಆಗದು,ಎಲ್ಲರಿಗೂ ಟಿಕೆಟ್ ಸಿಗುತ್ತದೆ" ಗಂಭೀರವಾಗಿಯೇ ಹೇಳಿದರು.
ಮರ್ಹೂಮ್ ಬೀರಾನ್ ಕುಟ್ಟಿ ಹಾಜಿಯವರ ಕಾರಿನಲ್ಲಿ ಬೆಂಗಳೂರು ಹೋಗಿ ಅಲ್ಲಿಂದ ಮುಂಬಯಿಯ ಹೋಟೆಲ್ ತಾಜ್ಮಹಲ್ ನಲ್ಲಿ ತಂಗಿದ್ದ ಸಯ್ಯದ್ ಮಾಲಿಕಿಯವರನ್ನು ಕಂಡು ಕೇರಳಕ್ಕಿರುವ ಪ್ರಯಾಣದ ವ್ಯವಸ್ಥೆ ರೆಡಿಯಾಗುತ್ತಿದೆಯೆಂದು ಭರವಸೆ ಕೊಟ್ಟರು.
ಎಪಿ ಉಸ್ತಾದರ ಮನಸ್ಸು ಮಾತ್ರ ದುಖಿಸುತ್ತಿತ್ತು.
ಟಿಕೆಟ್ ಸಿಗಬಹುದೇ ಎಂಬ ಆತಂಕ.
ವಿಮಾನ ನಿಲ್ದಾಣದಲ್ಲಿ ವಿಚಾರಣೆ ಮಾಡಿದಾಗ ಒಂದು ಶುಭ ಸುದ್ದಿ ಸಿಕ್ಕಿತು.
ಫ್ಯಾಮಿಲಿಯೊಂದರ ಟಿಕೆಟ್ ಕ್ಯಾನ್ಸಲ್ ಆಗಿದೆ.ಆದರೆ ಟಿಕೆಟ್ ಮಂಗಳೂರು ತನಕ ಮಾತ್ರ!
ಮತ್ತೆ ತಿರುಗಿ ನೋಡಲಿಲ್ಲ ನಾಲ್ಕು ಟಿಕೆಟ್ ಬುಕ್ ಮಾಡಿ ಮಂಗಳೂರು ತನಕ ಬಂದು ಅಲ್ಲಿಂದ ಕಾರಿನಲ್ಲಿ ಕ್ಯಾಲಿಕೆಟ್ ಗೆ ಕರೆತರಲಾಯಿತು.
ಅಹ್ದಲ್ ತಂಙಳ್ ರವರ ಎದೆಗಾರಿಕೆಯಿಂದಾಗಿ ಕನಸು ನನಸಾಯಿತು.ಎಪಿ ಉಸ್ತಾದ್ ದೀರ್ಘ ನಿಟ್ಟುಸಿರು ಬಿಟ್ಟರು.
*1978 ಎಪ್ರಿಲ್ 18 ಆದಿತ್ಯವಾರ ಮಹಾನರಾದ ಸಂಶುಲ್ ಉಲಮಾ ಇ ಕೆ ಉಸ್ತಾದ್, ವಲಿಯುಲ್ಲಾಹಿ ವಡಗರ ಮುಹಮ್ಮದ್ ಹಾಜಿ ತಂಙಳ್, ತಾಜುಲ್ ಉಲಮಾ ಉಳ್ಳಾಲ ತಂಙಳ್, ಅವೇಲತ್ ತಂಙಳ್ ಸೇರಿದಂತೆ ಹಲವಾರು ಮಹಾತ್ಮರ ಸನ್ನಿಧಿಯಲ್ಲಿ 'ಮರ್ಕಝ್' ಎಂಬ ಶೈಕ್ಷಣಿಕ ಮಹಾವಿದ್ಯಾಲಯಕ್ಕೆ ಸಯ್ಯದ್ ಅಲವೀ ತಂಙಳ್ ಶಿಲಾನ್ಯಾಸಗೈದರು.*

ಪ್ರತಿಯೊಂದು ಯೋಜನೆಗಳ ಯಶಸ್ಸಿನ ಹಿಂದೆ ಆರ್ಥಿಕ ವ್ಯವಸ್ಥೆಯೂ ಪ್ರಮುಖ ಅಂಶವಾಗಿರುತ್ತದೆ.ಇದೀಗ ಕನಸು ಹುಟ್ಟು ಪಡೆದಿದೆ.ಅನಾಥ,ನಿರ್ಗತಿಕ, ಹಾಗೂ ಸಮಾಜದಲ್ಲಿ ಹಿಂದುಳಿದವರ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದರೆ ಸಣ್ಣ ವಿಚಾರವಲ್ಲ.
ಇಂದು ನೀವು ಮಹಾನರಾದ ಎಪಿ ಉಸ್ತಾದ್, ದಾನಿಗಳು ನೀಡಿದ ಕಾರಿನಲ್ಲಿ ಸಂಚರಿಸುತ್ತಿರುವುದು ಕಾಣಬಹುದು.ಆದರೆ ಬರೀ ಶೂನ್ಯದಿಂದ ಮರ್ಕಝನ್ನು ಪ್ರಾರಂಭಿಸಿ,ಅದನ್ನು ಜಗತ್ತಿನ ಶ್ರೇಷ್ಠ ವೈಜ್ಞಾನಿಕ ವಿದ್ಯಾಲಯವಾಗಿ ಪರಿವರ್ತಿಸಿದ‌ ಆ ಜನನಾಯಕ ಹರಕೆ ಡಬ್ಬಿಯೊಂದಿಗೆ ನಾಡು ಸುತ್ತುತ್ತಿದ್ದರು!
ಬಸ್ಸು ರಿಕ್ಷಾಗಳಲ್ಲಿ ಓಡಾಡುತ್ತಿದ್ದರು.ಕೆಲವೊಮ್ಮೆ ಕಿಲೋಮೀಟರ್ ತನಕ ಬರಿಗಾಲಲ್ಲೇ ನಡೆದು ಹೋಗುತ್ತಿದ್ದರು.ಎಲ್ಲವೂ ಮರ್ಕಝ್ ನ ಬೆಳವಣಿಗಾಗಿ.
ತಾನು ಕಂಡ ಕನಸಿನ ಸಾಕ್ಷಾತ್ಕಾರಕ್ಕಾಗಿ....

ಇಸವಿ 1978. ಇದೀಗ 25 ಅನಾಥ ವಿದ್ಯಾರ್ಥಿಗಳೊಂದಿಗೆ ಮರ್ಕಝ್ ಎಂಬ ಕನಸಿಗೆ ಚಾಲನೆ ದೊರಕಿದೆ.

*ಎಪಿ ಉಸ್ತಾದ್ ಹೊಸತನದ ಹರಿಕಾರ*

ವಿಶೇಷವೇನೆಂದರೆ ಯಾವುದೇ ಮಾದರಿ ಇಲ್ಲದೆ ಶಿಕ್ಷಣ ಕ್ರಾಂತಿಯ ದಿಟ್ಟದೆಯ ಪ್ರಥಮ
ಹೆಜ್ಜೆಯಾಗಿತ್ತು ಯತೀಂ ಖಾನ.
ನಂತರದ್ದು ಇತಿಹಾಸ.
ಕಾರಂದೂರಿನ ಪಡಯಾಳಿ ಪರಂಬಿನಲ್ಲಿ ಅನಾಥಾಲಯವೊಂದನ್ನು ಆರಂಭಿಸುವುದರೊಂದಿಗೆ ಮರ್ಕಝ್
ಜಾಗತಿಕ ಮುಸಲ್ಮಾನರ ವೈಜ್ಞಾನಿಕ ಕೇಂದ್ರವಾಗಿ ಮಾರ್ಪಟ್ಟಿತ್ತು.
ನಾಲ್ಕು ದಶಕಗಳ ಯಶೋಗಾಥೆ ಹಾಡುತ್ತಾ ಮರ್ಕಝ್ ವಿಶ್ವ ಭೂಪಟಗಳಲ್ಲಿ ಶೈಕ್ಷಣಿಕ ಕ್ರಾಂತಿಯ ಮುಖ ಮುದ್ರೆಯಾಗಿ ತಲೆ ಎತ್ತಿ ನಿಂತಿದೆ.
ರಾಜ್ಯದ,ರಾಷ್ಟ್ರದ ಗಡಿಮೀರಿ,ಕಡಲಾಚೆಗಿನವರೆಯ ಗಡಿದಾಟಿ,ಜಗತ್ತಿನಾದ್ಯಂತ ಮರ್ಕಝಿನ ಸಾರ್ಥಕ ಸಾದನೆಗಳನ್ನು ವಿಸ್ತರಿಸುವಲ್ಲಿ ಮರ್ಕಝ್ ಶಿಲ್ಪಿ ಸುಲ್ತಾನುಲ್ ಉಲಮಾ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಅನುಭವಿಸಿದ ತ್ಯಾಗೋಜ್ವಲ ನೆನಪುಳನ್ನು ಪೂರ್ಣವಾಗಿ ಅಕ್ಷರ ರೂಪಕ್ಕಿಳಿಸಲು ಸಾದ್ಯವಿಲ್ಲ.
ಇದೀಗ ಮರ್ಕಝ್
ಏಷ್ಯಾದಲ್ಲೇ ಧಾರ್ಮಿಕ ಲೌಕಿಕ ಸಮನ್ವಯ ವಿದ್ಯಾಸಮುಚ್ಚಯವಾಗಿ ಪ್ರಸಿದ್ಧಿ ಹೊಂದಿದ್ದು,ನಾಲ್ಕು ದಶಕಗಳಿಂದ ಬಡ ಶೋಷಿತ,ಮರ್ಧಿತ‌ ಅನಾಥ,ನಿರ್ಗತಿಕರ ಪೋಷಣೆಯ ಹೊಣೆ ಹೊತ್ತು ಅವರನ್ನು ನಾಡಿಗೆ ಸಮರ್ಪಿಸುತ್ತಾ ಇದೆ.

👉ಇಂದು ಕರ್ನಾಟಕ ಕೇರಳದಾದ್ಯಂತ ಸಮನ್ವಯ ಶಿಕ್ಷಣ ಕೇಂದ್ರಗಳು ತಲೆ ಎತ್ತಿ ನಿಂತಿದ್ದರೆ ಅವುಗಳಿಗೆಲ್ಲಾ ಮಾದರಿ ಮರ್ಕಝ್ ಆಗಿತ್ತು.ದಾರಿ ತೋರಿಸಿದ್ದು ಮರ್ಕಝ್ ಆಗಿತ್ತು.
👉ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸ್ವಂತವಾಗಿ ಸಂಸ್ಥೆ ಆರಂಭಿಸಿ ಮಾದರಿ ತೋರಿಸಿದ್ದು ಮರ್ಕಝ್ ಆಗಿದೆ.
ನಮ್ಮ ಪುತ್ತೂರು ಭಾಗದಲ್ಲಿ ಮರ್ಕಝ್ ಮೊತ್ತ ಮೊದಲ ಬಾರಿಗೆ Womens ಕಾಲೇಜು ತೆರೆದು ಇಪ್ಪತ್ತು ವರ್ಷವಾಗುತ್ತಾ ಬಂತು. ಅದನ್ನು ಮಾದರಿಯಾಗಿಸಿ ತಾಲೂಕಿನ ವಿವಿಧ ಭಾಗಗಳಲ್ಲಿ ಮಹಿಳಾ ಕಾಲೇಜು ಆರಂಭಿಸಿ ಶಿಕ್ಷಣ ಕ್ರಾಂತಿ ಮುಂದುವರೆಯುತ್ತಿದೆ.
👉ಸುನ್ನೀಸಂ ಮಾತ್ರ ಸತ್ಯವೆಂದು ನಂಬಿ ಎದೆಯುಬ್ಬಿಸಿ ಸಧೈರ್ಯವಾಗಿ ಮುನ್ನೆಡೆಯುವಂತೆ ಪ್ರಚೋದನೆ ನೀಡಿದ್ದು ಮರ್ಕಝ್ ಆಗಿತ್ತು.
👉ವ್ರತ್ತಿಪರರನ್ನು ಇಂಗ್ಲಿಷ್ ಭಾಷೆ, ವ್ಯಕ್ತಿತ್ವ ವಿಕಸನ ಮತ್ತು ನಿರ್ವಹಣೆ ಕೌಶಲ್ಯದಲ್ಲಿ ಸಮರ್ಥರನ್ನಾಗಿಸುವ IHRAM(Institution of Human Resource Activation & Management)
ಕೋರ್ಸ್ ನ ಅದ್ವಿತೀಯ ಮಾದರಿ ಮರ್ಕಝ್ ನಿಂದ ಆರಂಭವಾಗಿತ್ತು.
👉ಸಂಸ್ಥೆಯಲ್ಲಿ ಸಾವಿರಾರು ಮಕ್ಕಳು ಬಳಸುವ ತ್ಯಾಜ್ಯ ನೀರನ್ನು ಸಂಸ್ಕರಣೆಗೊಳಿಸಿ ಕ್ರಷಿಗೆ ಬಳಸುವ ಜಲ ಸಂಸ್ಕರಣಾ ಕೇಂದ್ರ ತೆರೆದು ಮಾದರಿಯಾಯಿತು.
👉ಒಂದೇ ಕ್ಯಾಂಪಸಿನಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವೆರಡನ್ನು ನೀಡಿ ಮರ್ಕಝ್ ಮಾದರಿಯಾದಾಗ ಅದೊಂದು ದೊಡ್ಡ ಚಳುವಳಿಯಾಗಿ ಮಾರ್ಪಟ್ಟಿತು.
ಧಾರ್ಮಿಕ ಪದವಿಯೊಂದಿಗೆ ಯುನಿವರ್ಸಿಟಿಯ ಪದವಿಗಳನ್ನು ಪಡೆಯಲು,ಮುಂಡಾಸುಧಾರಿ ಮುಸ್ಲಿಯಾರ್ ಆಗಿಯೇ ನ್ಯಾಯಾಲಯದಲ್ಲಿ ವಾದಿಸಬಲ್ಲ ವಕೀಲನಾಗಲು ,ಮುಳ್ಳೂರುಕೆರೆ ಉಸ್ತಾದರಂತಹ ಸಖಾಫಿಗಳು ನ್ಯಾಯಮೂರ್ತಿಗಳಾಗಲು ಸಾಧ್ಯವಾಗಿರುವುದು ಮರ್ಕಝ್ ನ ಹಿರಿಮೆ ಅಲ್ಲದೆ ಮತ್ತಿನ್ನೇನು?
👉ಉಗ್ರವಾದದ ನೆಲೆ ಬೀಡಾಗಿ ಗುಂಡಿಸ ಶಬ್ಧದೊಂದಿಗೆ ಕಾಲ ಕಳೆಯುತ್ತಿದ್ದ ಕಾಶ್ಮೀರಿ ಕಂದಮ್ಮಗಳನ್ನು ಮರ್ಕಝ್ ಕ್ಯಾಂಪಸ್ ಗೆ ಕರೆತಂದು ಅವರಿಗೆ ಸೌಜನ್ಯ ಶಿಕ್ಷಣ ಹಾಗೂ ಸಕಲ ಸವಲತ್ತುಗಳನ್ನು 'ಕಾಶ್ಮೀರಿ ಭವನ' ದೊಳಗೆ ನೀಡಿ ಧರ್ಮ ಮತ್ತು ದೇಶದ ಪಾಠ ಕಲಿಸಿಕೊಟ್ಟು ಮಾದರಿಯಾದರು
👉10 ವರ್ಷಕ್ಕಿಂತ ಕೆಳಗಿನ ಅನಾಥ ಮಕ್ಕಳನ್ನು ಅವರವರ ತಾಯಿಯ ಮಡಲಲ್ಲಿ ಪೋಷಿಸಲು ಬೇಕಾದ ಸವಲತ್ತು ನೀಡಿ Orphan Home Care ಎಂಬ ವಿನೂತನ ಯೋಜನೆಗೆ ಕೈ ಹಾಕಿ ಯಶಸ್ವೀ ಮಾದರಿ ತೋರಿಸಿತು.
👉ದೇಶದ ಹೊರಗಿನ ಯೂನಿವರ್ಸಿಟಿಗಳ ಜೊತೆ ಸಂಭಂಧ ಬೆಳೆಸಿ ತತ್ಸಮಾನ ಪದವಿ ಮರ್ಕಝ್ ನಿಂದಲೇ ನೀಡುವಂತಹ ವಿಶೇಷ ಪದ್ದತಿಯನ್ನು ತೋರಿಸಿಕೊಟ್ಟು ಮಾದರಿಯಾಯಿತು.
👉ವೈದಕೀಯ ರಂಗದಲ್ಲಿ ಅತೀ ನೂತನ ಚೈತನ್ಯದೊಂದಿಗೆ ಮುಸ್ಲಿಂ ವೈದ್ಯಪದ್ದತಿ ಯೂನಾನಿ ಮೆಡಿಕಲ್ ಕಾಲೇಜು ಅರಂಭಿಸಿ ಮರ್ಕಝ್ ಕ್ರಾಂತಿ ಮಾಡಿತು.
👉ಮರ್ಕಝ್ ನ ಚಟುವಟಿಕೆಗಳು ಕೇವಲ ಕ್ಯಾಂಪಸ್ ಗೆ ಮಾತ್ರ ಸೀಮಿತವಲ್ಲ.ಅಗತ್ಯಕ್ಕೆ ತಕ್ಕಂತೆ ಬಾವಿ ತೋಡಿಸುವ ಮುಲಕ ಕುಡಿಯುವ ನೀರಿನ ಯೋಜನೆ,ನಿರ್ವಸಿತರಿಗೆ ವಸತಿ,ಬಡಹೆಣ್ಣು ಮಕ್ಕಳ ವಿವಾಹ ಯೋಜನೆ,ವೈದಕೀಯ ಸೇವೆ,ಹೀಗೆ ಶಿಕ್ಷಣ ದೊಂದಿಗೆ ಜನಪರ ಸಾಂತ್ವನ ಸೇವೆಗಳನ್ನು ಕೈಗೆತ್ತಿಕೊಂಡು ಮರ್ಕಝ್ ಮತ್ತು ಎಪಿ ಉಸ್ತಾದ್ ಸರ್ವರಿಗೂ ಮಾದರಿಯಾಗಿದ್ದಾರೆ.
👉ಮರ್ಕಝ್ ಕಾರುಣ್ಯ ಸೆವೆಗಳಲ್ಲಿ ಅಧ್ಬುತ ದಾಖಲೆ ಸ್ರಷ್ಟಿಸಿದೆ.
👉ದೇಶದ 13 ರಾಜ್ಯಗಳಲ್ಲಿರುವ 90ಲಕ್ಷ ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
👉 2013ರ ಲೆಕ್ಕಾಚಾರ ಪ್ರಕಾರ ಸಾಂತ್ವನ ಚಟುವಟಿಕೆಗಳಿಗಾಗಿ ಮರ್ಕಝ್ ಖರ್ಚು ಮಾಡಿದ್ದು ಬರೋಬ್ಬರಿ *63.67 ಕೋಟಿ ರೂಪಾಯಿ!*
👉 *388 ಶುಧ್ಧ ಜಲಬಾವಿಗಳು*
(2017ರ ಹೊತ್ತಿಗೆ500ರ ಗಡಿ ದಾಟಿರಬಹುದು)
ಪ:ಬಂಗಾಳ್ -268,ಕರ್ನಾಟಕ54,ಅಸ್ಸಾಂ18,ದೆಹಲಿ12 ಇತರೆಡೆ36

👉 *282 ಪ್ರಾಥಮಿಕ ಕೇಂದ್ರಗಳು*
{ಪ:ಬಂಗಾಳ್-112 ಕರ್ನಾಟಕ-63 ಗುಜರಾತ್25 ಅಸ್ಸಾಂ-17 ಕಾಶ್ಮೀ-ರ13 ಉಳಿದೆಡೆ-52
👉 *32 ಉದ್ಯೋಗ ನಿಲಯ*
ಕರ್ನಾಟಕ13,ಪಶ್ಚಿಮ ಬಂಗಾಳ-9 ಕಾಶ್ಮೀರ-3 ಚೆನ್ನೈ-3 ಉಳಿದೆಡೆ -4
👉 *ಕಾಶ್ಮೀರದಲ್ಲಿ 15 ಹೈಸ್ಕೂಲುಗಳು*
👉 *ಗುಜರಾತಿನಲ್ಲಿ 3 ಹೈಸ್ಕೂಲ್*
👉 *50 ಸಾವಿರ ಜನರಿಗೆ ಶುಧ್ಧಜಲ ಲಭ್ಯ.*
👉 *ಒಂದು ಲಕ್ಷ ಜನರಿಗೆ ವಿಧ್ಯಾಭ್ಯಾಸ ವ್ಯವಸ್ಥೆ*
👉 *100 ಕ್ಕೂ ಮಿಕ್ಕ ನೌಕರಿ ಸಂಸ್ಥೆಗಳು*
👉 *10 ಲಕ್ಷ ಜನರಿಗೆ ಆಹಾರ ದಾನ*
👉 *36.39 ಕೋಟಿಗಳಲ್ಲಿ18 ಹಾಸ್ಪಿಟಲ್ ಗಳು ಮತ್ತು 2 ಕಾಲೇಜುಗಳು*
👉 *22.49 ಕೋಟಿಗಳಲ್ಲಿ 307 ಪ್ರಾಥಮಿಕ ವಿದ್ಯಾನಿಲಯಗಳು*
👉 *1.54 ಕೋಟಿಗಳಲ್ಲಿ 388 ಶುಧ್ಧ ಜಲ ನೀರಿನ ವ್ಯವಸ್ಥೆ.*
👉 *1.65 ಕೋಟಿ ಖರ್ಚು ಮಾಡಿ 1.10ಲಕ್ಷ ಆಹಾರ ಕಿಟ್ ವಿತರಣೆ*
👉 *2.6೦ ಕೋಟಿ ಖರ್ಚಿನಲ್ಲಿ82 ಉದ್ಯೋಗ ಸಂಸ್ಥೆ ಗಳು 4 ಮೆಡಿಕಲ್ ಡಿಸ್ಪೆನ್ಸರಿಗಳು*

*ಉತ್ತರ ಭಾರತಕ್ಕೆ ಹೆಚ್ಚಿನ ಸೇವೆಗಳು ಒದಗಿವೆ*
👉 *32 -ವ್ರತ್ತಿಪರ ಸೇವೆಗಳು*

*ರಾಜ್ಯಗಳಿಗೆ ಎಷ್ಟೆಷ್ಟು......❓❓*👇
👉 *ಜಮ್ಮು ಕಾಶ್ಮೀರ 26.76ಕೋಟಿ*
👉 *ಪಶ್ಚಿಮ ಬಂಗಾಳ 13.28 ಕೋಟಿ*
👉 *ಗುಜರಾತ್ ಗೆ 12.02ಕೋಟಿ*
👉 *ಕರ್ನಾಟಕಕ್ಕೆ 5.8 ಕೋಟಿ*
👉 *ಉತ್ತರಪ್ರದೇಶಕ್ಕೆ 1.47 ಕೋಟಿ*
👉  *ಅಸ್ಸಾಂ ಗೆ 40 ಕೋಟಿ*
👉 *ಉಳಿದ 7 ರಾಜ್ಯಗಳಿಗೆ 3.40 ಕೋಟಿ*
(ಇದಿಷ್ಟು 2013ರ ತನಕದ ಲೆಕ್ಕ 2018 ಹೊತ್ತಿಗೆ ಅದು ದುಪ್ಪಟ್ಟು ಆಗಿಬಹುದು ಸಂದೇಹವಿಲ್ಲ.)

*ಮರ್ಕಝ್ ಶಿಕ್ಷಣ ಸಮುಚ್ಚಯ ಒಂದೇ ನೋಟದಲ್ಲಿ👇*
👉 *ತುರ್ಕಿಯ್ಯಾ ಯತೀಂ ಖಾನ*
👉 *ಶರೀ‌ಅತ್ ಕಾಲೇಜು*
👉 *ಹಿಫ್ಳುಳ್ ಕುರ್ಆನ್ ಕಾಲೇಜು*
👉 *ಖಲ್ಫಾನ್ ಇಸ್ಲಾಮಿಕ್ ಸೆಂಟರ್ ಕೋಯಿಲಾಂಡಿ*
👉 *ಆರ್ಟ್ಸ್ ಕಾಲೇಜು ಕಾರಂದೂರು*
👉 *ನರ್ಸಿಂಗ್ ಕಾಲೇಜು ಕ‌ಊಕ‌ಅ*
👉 *ಮರ್ಕಝ್ ಗರ್ಲ್ಸ್ ಓರ್ಪನೇಜ್*
👉 *ಫಾತಿಮಾ ಹಯರ್ ಸೆಕಂಡರಿ ಸ್ಕೂಲ್ ಕುಂಬಾರ*
👉 *ಅಲ್ ಫಾರೂಖಿಯ್ಯಾ ಹೈಸ್ಕೂಲ್ ಕಾರಂದೂರು*
👉 *ಮರ್ಕಝ್ ಹೈಸ್ಕೂಲ್ ಕಾರಂದೂರು*
👉 *ಮರ್ಕಝ್ ಗರ್ಲ್ ಹೈಸ್ಕೂಲ್*
👉 *ಮರ್ಕಝ್ ಹ್ಯಾಂಡಿಕ್ರಾಪ್ಟ್*
👉 *ಮರ್ಕಝ್ ITI*
👉 *ಬನಾತ್ ಹೋಸ್ಟೆಲ್ RECJ*
👉 *ಬೋರ್ಡಿಂಗ್ ಮದರಸ*
👉 *ಮರ್ಕಝ್ ಸೀನಿಯರ್ ಸೆಕೆಂಡರಿ ಸ್ಕೂಲ್*
👉 *ಕಾಶ್ಮೀರೀ ಹೋಂ*
👉 *ಮರ್ಕಝ್ ಗ್ಲೋಬಲ್ ವಿಲೇಜ್ ಪೂನೂರು*
👉 *ಮರ್ಕಝ್ ಕಾಲೇಜ್ ಆಫ್ ಆರ್ಟ್ಸ್ & ಸಯನ್ಸ್ ಹಯರ್ ಸ್ಟಡೀಸ್*
👉 *ಮರ್ಕಝ್ ಇಂಟರ್ನ್ಯಾಷನಲ್ ಸ್ಕೂಲ್*
👉 *ಮರ್ಕಝ್ ಪಬ್ಲಿಕ್ ಸ್ಕೂಲ್ ಕೊಯಿಲಾಂಡಿ*
👉 *ಮರ್ಕಝ್ ಪಬ್ಲಿಕ್ ಸ್ಕೂಲ್ ಕೈತಪ್ಪೋಯಿಲ್*
👉 *ಮರ್ಕಝ್ ಪಬ್ಲಿಕ್ ಸ್ಕೂಲ್ ಬಾಲುಶ್ಶೇರಿ*
👉 *ಮರ್ಕಝ್ ಪಬ್ಲಿಕ್ ಸ್ಕೂಲ್ ಕೋಳಪ್ಪುರಂ*
👉 *ಮರ್ಕಝ್ ಪಬ್ಲಿಕ್ ಸ್ಕೂಲ್ ಐಕರಪ್ಪಡಿ*
👉 *ಮರ್ಕಝ್ ಪಬ್ಲಿಕ್ ಸ್ಕೂಲ್ ಅಕ್ಕಿಕಾವು*
👉 *ಮರ್ಕಝ್ ಪಬ್ಲಿಕ್ ಸ್ಕೂಲ್ ಪಿಲಾಶ್ಶೇರಿ*
👉 *ಮರ್ಕಝ್ ಪಬ್ಲಿಕ್ ಸ್ಕೂಲ್ ಪೂನೂರು*
👉 *ಅಲ್ ಸಹರ್ ಕಿಡ್ಸ್ ಗಾರ್ಡನ್ ಪೂನೂರು*
👉 *ಮರ್ಕಝ್ ಕಾಲೇಜ್ ಆಫ್ ಇಸ್ಲಾಮಿಕ್ ಸ್ಟಡೀಸ್ ದೇಶಸೇವ ಸ್ಕೂಲ್*
👉 *ಆಲಿಮಾ ಕೋರ್ಸ್ ಬನಾತ್*
👉 *ಮರ್ಕಝ್ ವಿಮನ್ಸ್ ಕಾಲೇಜು ವಯನಾಡ್*
👉 *ಮರ್ಕಝ್ ಡಿಸ್ಪೆನ್ಸರಿ*
👉 *ಮರ್ಕಝ್ ಪಬ್ಲಿಕ್ ಸ್ಕೂಲ್ ಮೈಸೂರು*
👉 *ಮರ್ಕಝ್ ಪಬ್ಲಿಕ್ ಸ್ಕೂಲ್ ದೆಹಲಿ*
👉 *ಮರ್ಕಝ್ ದ‌ಅವಾ ಕಾಲೇಜು ಬೆಂಗಳೂರು*
👉 *ಹೋಂ ಕೇರ್*
👉 *ಮರ್ಕಝ್ ಗರ್ಲ್ಸ್ ಓರ್ಪನೇಜ್ ಫಿಲಿಬಿತ್ ಯು ಪಿ*
👉 *ಇಹ್ರಾಂ(ಮ್ಯಾನಜಿಂಗ್ ಇನ್ಸಿಟ್ಯೂಟ್)*
👉 *ಪೂನೂರು ಹಾಸ್ಪಿಟಲ್*
👉  *ಇಸ್ಲಾಮಿಕ್ ರಿಸರ್ಚ್ ಸೆಂಟರ್*
👉  *ಮರ್ಕಝ್ ಲೈಬ್ರರಿ*
👉  *ಮರ್ಕಝ್ ಕಮರ್ಷಿಯಲ್ ಕಾಂಪ್ಲೆಕ್ಸ್*
👉 *ಮೂರು ಸಾವಿರಕ್ಕಿಂತಲೂ ಮೇಲೆ ಮಸೀದಿಗಳು*
ಇತ್ಯಾದಿ....... ಇತ್ಯಾದಿ.......!!

*ಸಂಘಟನಾ ಸೆಟ್ಟಪ್ಪ್*

👉 *SYS (ಸುನ್ನೀ ಯುವ ಜನ ಸಂಘ)*
ಇದರ ಜಿಲ್ಲಾ ಸಮಿತಿಯ ಅಧೀನದಲ್ಲಿ 4 ಝೋನಲ್ ಗಳಿವೆ.
ಪ್ರತಿಯೊಂದು ಝೋನಲ್ ಅಧೀನದಲ್ಲಿ 8ಕ್ಕಿಂತಲೂ ಅಧಿಕ ಸೆಂಟರ್ ಗಳಿರುತ್ತದೆ.
ಆಯಾ ಸೆಂಟರ್ ಅಧೀನದಲ್ಲಿ10-12 ರಕ್ಕಿಂತಲೂ ಬ್ರಾಂಚ್ ಗಳಿರುತ್ತದೆ.
ರಾಜ್ಯ ಮಟ್ಟದ ಸಮಿತಿ ಸಹಿತ ಎಲ್ಲರನ್ನು ನಿಯಂತ್ರಿಸಲು ಸುಪ್ರೀಂ ಕೌನ್ಸಿಲ್ ಇರುತ್ತದೆ.
👉 *SSF (ಸುನ್ನೀ ಸ್ಟುಡೆಂಟ್ ಫೆಡರೇಷನ್)*
ಜಿಲ್ಲಾ ಅಧೀನದಲ್ಲಿ 10 ಡಿವಿಷನ್ ಗಳಿವೆ.ಪ್ರತಿಯೊಂದು ಡಿವಿಷನ್ ಅಧೀನದಲ್ಲಿ  8-10ರ ಷ್ಟು ಸೆಕ್ಟರ್ ಗಳಿರುತ್ತದೆ.ಪ್ರತಿಯೊಂದು ಸೆಕ್ಟರ್ ಅಧೀನದಲ್ಲಿ ಯೂನಿಟ್ ಗಳಿರುತ್ತವೆ.
*ಉದಾಹರಣೆಗೆ: ಪುತ್ತೂರು ಡಿವಿಷನ್ ಅಧೀನಧಲ್ಲೇ 6ಸೆಕ್ಟರ್ ಗಳಿದ್ದು ಅದರ ಮೇಲ್ನೋಟದಲ್ಲಿ 48 ಯೂನಿಟ್ ಕಾರ್ಯಚರಿಸುತ್ತಿದೆ.*
👉 ಮದರಸ ವಿದ್ಯಾರ್ಥಿಗಳಿಗಾಗಿ SBS (ಸುನ್ನೀ ಬಾಲ ಸಂಘ)
ಅದರ ನಿಯಂತ್ರಣ ರೇಂಜ್ ಮಟ್ಟದ ಸಮಿತಿಯ ಅಧೀನದಲ್ಲಿ ಇರುತ್ತದೆ.
👉 ಮದರಸ ಆಧ್ಯಾಪಕರಿಗಾಗಿ SJM ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಸಮಿತಿ ಅದರ ಮೇಲೆ ಘಟಕದಲ್ಲಿ SMA ಸುನ್ನೀ ಮೇನಜ್ಮೆಂಟ್ ಅಸೋಶಿಯೇಷನ್ ಕಾರ್ಯಚರಿಸುತ್ತಿದೆ.
👉 ಜಿಲ್ಲಾ ಅಧೀನದಲ್ಲಿರುವ ಎಲ್ಲಾ ಸುನ್ನೀ ಸಂಘಟನೆಗಳನ್ನು ನಿಯಂತ್ರಿಸಲು ಆಯಾ ಜಿಲ್ಲೆಯ ಲ್ಲಿ SJU ಸುನ್ನೀ ಜಂಇಯ್ಯತುಲ್ ಉಲಮಾ ಇದೆ.
ತಾಲೂಕು ಮಟ್ಟದಲ್ಲಿಯೂ SJU ಅಸ್ತಿತ್ವದಲ್ಲಿದೆ.
ಇದರ ಎಲ್ಲಾ ನಿಯಂತ್ರಣ ರಾಜ್ಯ ಜಂಇಯ್ಯತುಲ್ ಉಲಮಾ ಕೈಯಲ್ಲಿಗಿದೆ.
ಭಾರತದ ಹೊರ ರಾಷ್ಟ್ರಗಳಲ್ಲಿ KCF (ಕರ್ನಾಟಕ ಕಲ್ಚರಲ್ ಫೋರಮ್) ಎಂಬ ಹೆಸರಿನಿಂದ GCC ರಾಷ್ಟ್ರಗಳು ಹಾಗೂ ಮಲೇಷ್ಯಾ ಮತ್ತು ಲಂಡನ್ ಸಹಿತ ಯೂರೋಪಿಯನ್ ರಾಜ್ಯಗಳಲ್ಲಿ ಕಾರ್ಯಚರಿಸುತ್ತಿದೆ.

*ಮರ್ಕಝ್ ಶಿಲ್ಪಿ*
👉 *ಎ.ಪಿ* ಈ ಧ್ವಯಕ್ಷರ ಇಂದು ಅಹ್ಲುಸ್ಸುನ್ನಃದ *ISI*  ಮಾರ್ಕ್.!
ಪರಂಪರಾಗತ ಆಚಾರವಿಚಾರಗಳಲ್ಲಿ ಅಚಲವಾಗಿ ನಿಂತುಕೊಂಡೇ ಆಧುನಿಕ ಜಗತ್ತಿಗೆ ಸಕಾಲಿಕ ನಾಯಕತ್ವ ನೀಡಿದ *ಖಾಯಿದುಝ್ಝಮಾನ್!*

👉ಉಲಮಾಗಳು ತಮ್ಮ ಕರ್ಮವ್ಯಾಪ್ತಿಯನ್ನಃ ಮಸೀದಿಯೊಳಗಗ ಸೀಮಿತ ಗೊಳಿಸದೆ,ಸಮುದಾಯ ಸಮುಧ್ಧಾರಕರಾಗಿ ಮೆರೆಯುವ ವಿಶಾಲವಾದ ಕ್ಷೇತ್ರಕ್ಕೆ ಹಂದರ ಒದಗಿಸಿಕೊಟ್ಟು,ವಿದ್ವಾಂಸರ ನಡುವೆ ರಾಜಫ್ರೌಢಿಯ ಹೆಜ್ಜೆ ಹಾಕಿದ್ದರಿಂದಲೇ ಉಸ್ತಾದರು *ಸುಲ್ತಾನುಲ್ ಉಲಮಾ* ಎಂಬ ಗೌರವಕ್ಕೆ ಪಾತ್ರರಾದರು.
👉 ಅದ್ಬುತ ಸಂಘ
ನೈಪುಣ್ಯದಿಂದ  ವಿಶಾಲ ಧರ್ಮಭೋಧನೆಯಿಂದ ಸಮರ್ಥ ನಾಯಕತ್ವದಿಂದ ವಿಶ್ವಾಂಗೀಕ್ರತ ವಿದ್ವತ್ತಿನಿಂದ ವಿದ್ವಾಂಸರ ನಡುವೆ ಚಂದ್ರ ಪ್ರಭ ಬೀರಿದ *ಖಮರುಲ್ ಉಲಮಾ*

 👉 *ಆಲಂಙಾ ಪೋಯಿಲ್ (AP)* ಅಬೂಬಕರ್ ಮುಸ್ಲಿಯಾರ್ ಎಂಬ ಅನಾಥ ಹುಡುಗ ಅನಾಥರ ಪರಿಪಾಲಕನಾಗಿ ಪರಂಪರೆಯ ಪರಿಶುಧ್ಧಿಗೆ ಆಧುನಿಕತೆಯ ಆಲಂಕಾರವನ್ನು ಕೊಟ್ಟು ಸಮನ್ವಯ ಶಿಕ್ಷಣದ ನವನೂತನ ಕ್ರಾಂತಿ ಮೊಳಗಿಸುತ್ತಾ, ಶತಮಾನದ ಸಾಧಕನಾಗಿ ಬೆಳೆದು ಬಂದ ಕಥೆ ನಿಜಕ್ಕೂ ರೋಚಕ!
ಅಲ್ಲಾಹು ಉಸ್ತಾದರಿಗೆ ಧೀರ್ಘಾಯುಷ್ಯ ಪೂರ್ಣ ಆಫಿಯತ್ ನೀಡಿ ಅನುಗ್ರಹಿಸಲಿ ಆಮೀನ್.

ಕ್ರಪೆ: *ಮರ್ಕಝ್ ಸುವನೀರ್*
2013
*ನಾರಿಯತ್ ಸ್ವಲಾತ್ ಹಾಗೂ ಅದರ ಮಹತ್ವ*
❣❣❣❣❣❣❣

ಅಲ್ಲಾಹುವಿನ ಅನುಗ್ರಹಗಳು ಅತ್ಯಧಿಕವಾಗಿ ದೊರೆಯಬೇಕೆಂಬ ಆಸೆ ಇರುವವರು , ಐಶ್ವರ್ಯವಂತರು ಆಗ ಬೇಕೆಂಬ ಬಯಕೆ ಇದೆಯೇ, ನರಕದ ಮೇಲಿನ ಸ್ವಿರಾತ್  ಸೇತುವೆ ದಾಟುವಾಗ ಅತ್ಯುಜ್ವಲ  ಬೆಳಕು ಬೇಕಾದವರು, ದಾನ-ಧರ್ಮ ಕೊಡಬೇಕೆಂಬ ಅತ್ಯಾಸೆ ಉಳ್ಳವರು,( ಕೊಡಲಿಕ್ಕೆ ಅವರ ಬಳಿ ಹಣ ಇಲ್ಲ) ಯಥೇಷ್ಟ ದಾನಧರ್ಮ ಮಾಡಿದ ಕೂಲಿ ಸಿಗಲು, ರೌಲಾ ಷರೀಫ್ ಝಿಯಾರತ್ ಮಾಡುವ ಸೌಭಾಗ್ಯ ದೊರೆಯಲು. ಪರಲೋಕದಲ್ಲಿ ಅಪಾರ ಪುಣ್ಯ ದೊರೆಯಲು. ಇಹ ಲೋಕದ ಎಲ್ಲ ಉದ್ದೇಶಗಳು ಈಡೇರಲು. ಕಷ್ಟ ದುಃಖ . ರೋಗರುಜಿನಗಳು ಶಮನ ಆಗಲು,
ಭಯ ನಿವಾರಣೆಯಾಗಲು.
ಬೇಸರ ದೂರವಾಗಲು,
ಮುಂತಾದ ಎಲ್ಲ ಕಷ್ಟಗಳಿಂದ ಪಾರಾಗಲು,
ಒಳ್ಳೆಯ ಸತ್ ಸ್ವಬಾವಿಗಳಾಗಲು.
ಈಮಾನ್ ಜಾಸ್ತಿ ಆಗಲು,
ಹೃದಯ ಶುದ್ಧಿಯಾಗಲು,
ಬಡತನ ದೂರವಾಗಲು,
ಸಾವಿರಕ್ಕೂ ಮಿಕ್ಕಿದ ರಹಸ್ಯಗಳನ್ನು ಇರುವ,
"ತವಸ್ಸುಲ್ ಹೊಂದಿರುವ, ನಮ್ಮ ಉದ್ದೇಶಗಳನ್ನು ಎತ್ತಿ ಹೇಳುವ , ಅಲ್ಲಾಹನ ನಿಧಿ. ಎಂಬ ನಾಮ ವಿರುವ, ಅಲ್ಲಾಹನ ಖಜಾನೆಗಳ ಕೀಲಿಕೈ ಯಾಗಿರುವ ಮಹತ್ವವಾದ ಒಂದು ಸ್ವಲಾತ್ ಆಗಿದೆ *ಸ್ವಲಾತುನ್ನಾರಿಯತ್* ಈ ಸ್ವಲಾತ್ ನಿತ್ಯ ಹೇಳುವವನಿಗೆ ಮೇಲಿನ ಎಲ್ಲಾ ಲಾಭಗಳು ದೊರೆಯುವುದಲ್ಲದೆ 4444 ಬಾರಿ  ಯಾವುದೇ ಉದ್ದೇಶ ವಿಟ್ಟುಕೊಂಡು ಹೇಳಿದರೆ ಖಂಡಿತ ಹೇಳಿ ಮುಗಿಯುವುದರೊಳಗಾಗಿ ಆ ಉದ್ದೇಶ ಈಡೇರುವುದು ಅಪ್ಪಟ ಸತ್ಯವೆಂದು ಇಮಾಮ್ ಕುರ್ ತುಬಿ( ರ) ಹೇಳಿದ್ದಾರೆ

ಸ್ವಲಾತ್ ಈ ಕೆಳಗೆ ನೀಡಲಾಗಿದೆ👇👇👇

☪ *اَللَّهُمَّ صَلِّ صَلاَةً كَامِلَةً وَسَلِّمْ سَلاَماً تَامًّا عَلَى سَيِّدِنَا مُحَمَّد ٍالذي تَنْحَلُّ بِهِ الْعُقَدُ وَتَـنْفَرِجُ بِهِ الْكُرَبُ وَتُـقْضَى بِهِ الْحَوَائِجُ وَتُنَالُ بِهِ الرَّغَائِبُ وَحُسْنُ الْخَوَاتِمِ وَيُسْتَسْقَى الْغَمَامُ بوَجْهِهِ الْكَرِيمِ وَعَلى آلِهِ وَصَحْبِهِ فِي كُـلِّ لَمْحَةٍ وَنَفَسٍ بِعَدَدِ كُـلِّ مَعْلُومٍ لَكْ*
☘☘☘☘☘☘☘☘
Swallu alal habeebﷺ
whatsapp group
7498455036
*بِسْمِ اللّٰهِ الرَّحْمَانِ الرَّحِيمْ*

*ಹದೀಸ್ ನ ಬಗ್ಗೆ ಕೆಲವೊಂದು ಮಾಹಿತಿ*..... 4⃣
📚📚📚📚📚📚📚📚📚


              *ಹದೀಸ್ ಸಂರಕ್ಷಣೆಗೆ ಪ್ರಮುಖವಾಗಿ ಕಂಠಪಾಠ ಮಾಡಿಕೊಳ್ಳುವ ಕ್ರಮವನ್ನು ಆಶ್ರಯಿಸಲಾಗಿತ್ತು . ಅರಬಿಗಳ ಸ್ಮರಣ ಶಕ್ತಿ ಅದ್ವಿತೀಯವಾಗಿತ್ತು . ಅವರು ಸಾವಿರಾರು ಅರಬಿ ಕವಿತೆಗಳನ್ನು ಕಂಠಪಾಠಮಾಡಿಕೊಂಡಿದ್ದರು .ಬರೆದಿಟ್ಟ ಹದೀಸ್ಗಳಲ್ಲಿರುವ ತಪ್ಪುಗಳನ್ನು ಸರಿಪಡಿಸಲು ಹಾಗೂ ಸಂದೇಹ ನಿವಾರಣೆಗಾಗಿ ಅವರು ಕಂಠಪಾಠ ಮಾಡಿಟ್ಟ ಹದೀಸ್ ಗಳನ್ನೇ ಅವಲಂಬಿಸುತ್ತಿದ್ದರು . ವಿಭಿನ್ನ  ವೈಶಿಷ್ಟ್ಯತೆಗಳ ಆಧಾರದಲ್ಲಿ ಹದೀಸ್ ಸಂಗ್ರಹ ಮತ್ತು ಸಂರಕ್ಷಣೆಯನ್ನು 5 ಹಂತಗಳಾಗಿ ವಿಂಗಡಿಸಬಹುದು*. 👇

📒 *ಮೊದಲ ಹಂತ: ಪ್ರವಾದಿ  (ಸ)ರವರ ಕಾಲ ಹದೀಸ್ ಸಂಗ್ರಹದ ಮೊದಲ ಹಂತವಾಗಿತ್ತು . ಎಲ್ಲಾ ಸ್ವಹಾಬಿಗಳು ಸಮಾನ ಪ್ರಮಾಣದಲ್ಲಿ ಹದೀಸ್ ಸಂಗ್ರಹದಲ್ಲಿ ಪಾಲ್ಗೊಂಡಿರಲಿಲ್ಲ. ಅವರಿಗೆ ಲಭಿಸಿದ ಅವಕಾಶದ ಕೊರತೆಯೇ ಇದಕ್ಕೆ ಕಾರಣವೆಂದು ಹೇಳಬಹುದಾಗಿದೆ . ಪ್ರತಿಯೊಬ್ಬರಿಗೂ ಅವರವರ ಜೀವನ ನಿರ್ವಹಣೆಗಾಗಿ ಸಮಯವನ್ನು ವ್ಯಯಿಸಬೇಕಾಗಿತ್ತು .ಮಾತ್ರವಲ್ಲದೆ ಹಲವರಿಗೆ ಶತ್ರುಗಳಿಂದ ಮುಸ್ಲಿಮರನ್ನು ಸಂರಕ್ಷಿಸುವ ಹೊಣೆಯೂ ಇತ್ತು . ಧಾರ್ಮಿಕ ಶಿಕ್ಷಣವನ್ನು ಕಲಿಯುವ ಉದ್ದೇಶದಿಂದ ಮಸೀದಿಯಲ್ಲೇ ವಾಸ್ತವ್ಯ ಹೂಡಿದ್ದ ಅಸ್ಹಾಬು ಸುಫ್ಫ್ ಎಂಬ ವಿಭಾಗ ಇಂತಹ ಜ್ಞಾನ ಶಾಖೆಯಲ್ಲಿ ಕ್ರಿಯಾಶೀಲರಾಗಿದ್ದರು* .

ಮುಂದುವರಿಯುವುದು...

📚📚📚📚📚📚📚📚📚📚

Thursday, January 4, 2018

🌱
*ಸ್ವಲಾತ್ ಬರೆದ ಕಾರಣ*
*ಶಾಫಿ ಇಮಾಮ್ ರವರಿಗೆ ಸ್ವರ್ಗದಲ್ಲಿ ಭವ್ಯ ಸ್ವಾಗತ*🌱

ಅಬ್ದುಲ್ಲಾಹಿಬ್ನು ಹಕಮ್ (ರ) ಹೇಳುತ್ತಾರೆ. ಒಮ್ಮೆ ನಾನು ಶಾಫಿಈ ಇಮಾಮ್( ರ)ರವರನ್ನು ಸ್ವಪ್ನದಲ್ಲಿ ಕಂಡೆ ನಾನು ಅವರೊಂದಿಗೆ ಕೇಳಿದೆ ಪರಲೋಕದಲ್ಲಿ ನಿಮ್ಮ ಅವಸ್ಥೆ ಏನು ಎಂದು.
   ಆಗ ಶಾಫಿಈ ಇಮಾಮ್ (ರ) ಹೇಳಿದರು. ಅಲ್ಲಾಹನು ನನ್ನನ್ನು ಅನುಗ್ರಹೀತಗೊಳಿಸಿ ನನಗೆ ಕ್ಷಮಾಪಣೆ ನೀಡಿ ಗೌರವಿಸಿದನು ವಧು ವರರನ್ನು ಸ್ವೀಕರಿಸುವ ರೀತಿಯಲ್ಲಿ. ನನ್ನನ್ನು ಅಲ್ಲಾಹನು ಸ್ವರ್ಗದಲ್ಲಿ ಪ್ರೀತ್ಯಾದಾರಗಳಿಂದ ಸ್ವೀಕರಿಸಿದ್ದು " ನಾನು ಮತ್ತೆ ಕೇಳಿದೆ ನಿಮಗೆ ಈ ಉನ್ನತ ಸ್ಥಾನ ಸಿಗಲು ಕಾರಣವೇನು.?
      ಇಮಾಮ್ ಶಾಫಿಈ ರ)ಹೇಳಿದರು. ನನ್ನ ರಿಸಾಲ ಎಂಬ ಗ್ರಂಥದಲ್ಲಿ  ಪ್ರವಾದಿ ﷺರವರ ಸ್ವಪ್ನ ದರ್ಶನದಲ್ಲಿ ತಿಳಿಸಿದ ಪ್ರಕಾರ ನಬಿﷺರವರ ಮೇಲಿನ ಸ್ವಲಾತ್

*وَصَلَّى للهُ عَلَى مُحَمَّدٍ عَدَدَما ذَكَرَهُ الذَّاكِرُونَ وَغَفَلَ عَنْ ذِكْرِ هِ الْغَافِلُونَ*
ಎಂದು ಬರೆದು ಸೇರಿಸಿದ ಕಾರಣವಾಗಿದೆ.. (ಮನಾಖಿಬು ಶಾಫಿಈ 2/304)
🌿🌿🌿🌿🌿🌿🌿🌿

❤ *ಹೇಳಿರಿ ಪ್ರೇಮ ಬಾಜನರ ಮೇಲೆ ಪ್ರೀತಿಯಿಂದ ಮೂರು ಸ್ವಲಾತ್*❤
*وَصَلَّى للهُ عَلَى مُحَمَّدٍ عَدَدَما ذَكَرَهُ الذَّاكِرُونَ وَغَفَلَ عَنْ ذِكْرِ هِ الْغَافِلُونَ*
🌹🌹🌹🌹🌹🌹🌹🌹

🌺صلّوا  على الحبيب (ﷺ.

*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ*
💕 *ಪುಣ್ಯ ಪ್ರವಾದಿ ( ﷺ) ತಂಙಳ್ ರವರ ಮೇಲೆ ಮೂರು ಸ್ವಲಾತ್*
*اللهم صل علي سيدنا محمد عبدك ورسولك النبي الامي وعلي اله وصحبه وسلم* ✨
*ಇದನ್ನು ಶೇರ್ ಮಾಡಿರಿ.* 

✍  *ಆಬೂ ಆಶಿಕ್*


Swallu alal habeebﷺ
whatsapp group
📲7498455036
*بِسْمِ اللّٰهِ الرَّحْمَانِ الرَّحِيمْ*

*ಹದೀಸ್ ನ ಬಗ್ಗೆ ಕೆಲವೊಂದು ಮಾಹಿತಿ*...... 3⃣
📚📚📚📚📚📚📚📚

                 *ಅಬೂ ಹುರೈರಾ(ರ) ಉಲ್ಲೇಖಿಸಿದ ಒಂದು ಹದೀಸ್ ನಲ್ಲಿ ಹೀಗಿದೆ* :
*ಅನ್ಸಾರಿಯಾದ ವ್ಯಕ್ತಿಯೋರ್ವರು ಮರೆವಿನ ಕಾರಣ ಹದೀಸ್ ಗಳನ್ನು ನೆನಪಿಡಲು ಸಾಧ್ಯವಾಗದಿರುವ ಕುರಿತು ಪ್ರವಾದಿ(ಸ)ರೊಂದಿಗೆ ನಿವೇದಿಸಿಕೊಂಡಾಗ ಅವರು ಹೇಳಿದರು, ನೀವು ಬಲಗೈಯನ್ನು ಉಪಯೋಗಿಸಿರಿ(ಅಂದರೆ ಲೇಖನಿ ಮೂಲಕ ಬರೆದಿಟ್ಟುಕೊಳ್ಳಿ) . ಹದೀಸ್ ಗಳನ್ನು ಬರೆದಿಡುತ್ತಿದ್ದ ಅಬ್ದುಲ್ಲಾಹಿಬ್ನು ಅಮ್ರ್ ರವರ ಕುರಿತು ಪ್ರವಾದಿ(ಸ)ರೊಂದಿಗೆ ಹೇಳಿದಾಗ ಅವರ ಪ್ರತಿಕ್ರಿಯೆ ಹೀಗಿತ್ತು, ' ಬರೆದಿಟ್ಟುಕೊಳ್ಳಿರಿ , ನಾನು ಸತ್ಯವನ್ನಲ್ಲದೆ ಬೇರೇನನ್ನು ನುಡಿಯುವುದಿಲ್ಲ '. ಅಬೂ ಹುರೈರಾ(ರ) ಹೇಳುತ್ತಾರೆ: "ಅಬ್ದುಲ್ಲಾಹಿಬಿನ್ ಅಮ್ರ್ ಅವರನ್ನು  ಹೊರತುಪಡಿಸಿ ಸ್ವಹಾಬಿಗಳಲ್ಲಿ ನನ್ನಂತೆ ಯಾರೂ ಹದೀಸ್ ಗಳನ್ನು  ಸಂರಕ್ಷಿಸಿರಲಿಲ್ಲ . ಕಾರಣವೆಂದರೆ ಅಮ್ರ್ ಅವುಗಳನ್ನು ಬರೆದಿಡುತ್ತಿದ್ದರು*" .


            *ಅಬೂಬಕ್ಕರ್(ರ) ಮತ್ತು ಅಲೀ(ರ) ರವರೂ ಕೂಡಾ ಹದೀಸ್ ಗಳನ್ನು ಬರೆದಿಡುತ್ತಿದ್ದರೆಂದು ಗ್ರಂಥಗಳಲ್ಲಿ ನೋಡಬಹುದಾಗಿದೆ . ಮಕ್ಕಾ ವಿಜಯದ ವರ್ಷದಲ್ಲಿ ಪ್ರವಾದಿ(ಸ)ರವರು ಒಂದು ಭಾಷಣ ಮಾಡಿದಾಗ ಯಮನ್ ನ ಪ್ರಜೆಯೊಬ್ಬರು ಆ ಮಾತುಗಳನ್ನು ಬರೆದು ಕೊಡಬೇಕೆಂದು ವಿನಂತಿಸಿದಾಗ ಪ್ರವಾದಿ(ಸ) ರವರು ಅದರ ಏರ್ಪಾಡು ಮಾಡಿದರು . ಇದರಿಂದ ಪ್ರವಾದಿ(ಸ)ರವರ ಕಾಲದಲ್ಲಿಯೇ ಸಂರಕ್ಷಣೆಗಾಗಿ ಬರಹವನ್ನು ಒಂದು ಉಪಾದಿಯಾಗಿ ಸ್ವೀಕರಿಸಲಾಗಿತ್ತೆಂದು ವ್ಯಕ್ತವಿದೆ . ಆದರೂ ಪ್ರವಾದಿ(ಸ)ರವರ ಕಾಲದಲ್ಲಿ ಹದೀಸನ್ನು ಬರೆದಿಡುವ ಸಂಪ್ರದಾಯ ವ್ಯಾಪಕವಾಗಿರಲಿಲ್ಲ . ಹದೀಸ್ ಗಳನ್ನು ಬರೆದಿಡುವುದು ಪ್ರವಾದಿ(ಸ)ರವರಿಗೆ ಅಪ್ರಿಯವಾಗಿತ್ತೆಂದು ಸೂಚಿಸುವ ಒಂದು  ಹದೀಸ್ ಅಬೂ ಹುರೈರಾ(ರ)ರವರಿಂದ ಉಲ್ಲೇಖಿತವಿದೆ . ಹದೀಸ್ ಮತ್ತು  ಖರ್ ಆನ್ ಪರಸ್ಪರ ಮಿಶ್ರಣವಾಗಬಾರದೆನ್ನುವ ಭಯವೇ ಇದಕ್ಕೆ ಕಾರಣವಾಗಿತ್ತು . ಅನಂತರ ಪ್ರವಾದಿ(ಸ)ರವರೇ ಹದೀಸ್ ಗಳನ್ನು ಬರೆದಿಡುವಂತೆ ಆದೇಶಿಸಿದ್ದರು*.

📚📚📚📚📚📚📚📚
ನೈಪುಣ್ಯ ಸಂಸ್ಥೆಯ ಕಠಿಣ ತೀರ್ಮಾಣ ನೈಚೋರಿನೊಂದಿಗೆ  ಲಘೂಕರಿಸಲಾಯಿತು!!!
ಸಂಸ್ಥೆಯ ಆಧರ್ಶವನ್ನು ಗಾಳಿಗೆ ತೂರಿದವರ ಕಾಲಡಿಗೆ ಹೋಗಿ ಸಂಧರ್ಶಿಸಿದ ಕಾರಣ ಅವರಿಗೆ ಅಲ್ಪ ಖೇದವುಂಟಾಯಿತು....
ಇನ್ನೊಂದು ನೂತನವಾದೀ ಸಮ್ಮೇಳನ ನಡೆಯುವ ತನಕ ಇಂತಹಾ ಘಟನೆಗಳು ಮರುಕಳಿಸಲ್ಲ ಎಂದು ಆ ಐದು ಮಂದಿಯಲ್ಲೂ ಮಾತು ಕೊಟ್ಟು ಜನಸಾಮಾನ್ಯರ ಕಣ್ಣಿಗೆ ಮಣ್ಣೆರಚಲಾಯಿತು.... ಹಾಗೇ ಹಸಿರೇ ಉಸಿರೆಂಬ ರಾಜಕೀಯ ಪಾರ್ಟಿಗೆ ಇವರ ಸಂಸ್ಥೆಯ ಬಲವೂ ನೂತನವಾದಿಗಳೊಂದಿಗೆ ಕೈ ಜೋಡಿಸುವ ಮೂಲಕ ಅವರ ಬೆಂಬಲವನ್ನೂ ಹಸಿರುಸಿರು ಪಾರ್ಟಿ ತಮ್ಮದನ್ನಾಗಿಸಿ ಕೊಂಡಿತು.... ಒಟ್ಟಾರೆ ಚುಟುಕಾಗಿ ಹೇಳಿದರೆ ಹಸಿರು ಮೂಸದಿದ್ದರೆ ಇವರಿಗೂ ಇವರನ್ನು ಓಲೈಸದಿದ್ದರೆ ಹಸಿರು ಪಕ್ಷಕ್ಕೂ ಅಲ್ಲಿ ನೆಲೆಯಿಲ್ಲ ಅಷ್ಟೇ....

02 *ಪಾಣಕ್ಕಾಡ್ ಕೊಡಪ್ಪನಕ್ಕಲ್ ತರವಾಡಿನಲ್ಲಿ ಬಿರಿಯಾನಿ ಧಮ್ಮ್ ಪರಿಮಳ ಮೂಗಿಗೆ ಬಡಿದದ್ದೇ ತಡ, ಗುಡುಗು, ಮಿಂಚು ಬಾಂಬ್ ಎಲ್ಲವೂ ಮಳೆಯಲ್ಲಿ ಒದ್ದೆಯಾದ ಬೀಡಿ ಪಟಾಕಿಯಂತೆ ಟುಸ್ಸಾಯಿತು!.... ಪಾಪ.... ಅವರನ್ನು ಹೇಳಿ ಫಲವಿಲ್ಲ ಅವರಿಗೆ ಅಷ್ಟೇ ಸಾದ್ಯ. ಸ್ವಂತ ಕಾಲಲ್ಲಿ ನಿಲ್ಲುವ ತಾಕತ್ತು ಅವರಿಗಿಲ್ಲ... ಈಗಲೂ ಮೇಲೇ ಏರಬೇಕಾದರೆ ಲೀಗ್ ಏಣಿಯೇ ಬೇಕು... ಪಾಪ... ಹಾಗಾಗಿಯೇ ಸಮಸ್ತ ಎಂಬ ಮಹಾ ಪ್ರಸ್ಥಾನವನ್ನು ಯಾರದೇ ಹಂಗಿಲ್ಲದೆ,ಸುನ್ನತ್ ಜಮಾತ್ ಯಾವುದೇ ಪುಡಾರಿಯ ಮುಂದೆಯೂ ಸಧೈರ್ಯವಾಗಿ ಹೇಳಲು 89 ರಲ್ಲಿ ಅವಕಾಶ ಮಾಡಿ ಕೊಟ್ಟ ತಾಜುಲ್ ಉಲಮಾರ ಧೀರ್ಘದ್ರಷ್ಠಿ ಅವರ ಕರಾಮತ್ ಅಲ್ಲದೆ ಮತ್ತಿನ್ನೇನು?*

03 *ಉಳ್ಳಾಲದ ಖಾಝಿ ಕೂರ ತಂಙಳ್ ರನ್ನು ಅನುಸರಿಸುವವರು ಸೋಮವಾರ ಹೊಸ ವರ್ಷವನ್ನು ಆಚರಣೆ ಮಾಡುವುದಿಲ್ಲ ಎಂದು ತಾನೇ.*

*ಹೌದು, ಇಸವಿ ಪ್ರಕಾರದ ಹೊಸ ವರ್ಷ ಆಚರಣೆ ಇಸ್ಲಾಮಿಕವಲ್ಲ. ಅದು ನಸ್ರಾನಿಗಳ ಆಚರಣೆ.*

*ಕೂರ ತಂಙಳ್ ರನ್ನು ಅನುಸರಿಸುವವರು ಅಪ್ಪಟ ಸುನ್ನೀ ಮುಸ್ಲಿಮರಾಗಿರುವ ಕಾರಣ ಅವರಿಗೆ ಸೋಮವಾರ ಹೊಸ ವರ್ಷ ಅಲ್ಲ.*

*ನಸ್ರಾನಿಗಳು ಮತ್ತು ನಸ್ರಾನಿಗಳನ್ನು ಅನುಸರಿಸುವವರು ಮಾತ್ರ ಸೋಮವಾರ ಹೊಸ ವರ್ಷ ಆಚರಣೆ ಮಾಡುತ್ತಾರೆ..*

*ಕೂರ ತಂಙಳ್ ಅನುಸರಿಸುವವರು ಸೋಮವಾರ ವನ್ನು ಹೊಸ ವರ್ಷವಾಗಿ ಆಚರಿಸುವುದಿಲ್ಲ ಎಂದು ನೀವು ತೆರೆದು ಹೇಳಿದ್ದಕ್ಕೆ ಧನ್ಯವಾದ 💐💐💐*
ನಮಾಝ್ :

ನಮಾಝ್ ಇಸ್ಲಾಮಿನ ಅತ್ಯಂತ ಕಡ್ಡಾಯ ಕರ್ಮಗಳಲ್ಲಿ ಒಂದಾಗಿದೆ. ನಮಾಝ್ ಶರೀರದ ಮುಲಕ ನಿರ್ವಹಿಸಲ್ಪಡುವ ಅತ್ಯಂತ ಶ್ರೇಷ್ಠ ಆರಾಧನೆಯಾಗಿದೆ. ನಮಾಝ್ ಸಮಯ ನಿಗದಿಗೊಳಿಸಿರುವ ಆರಾಧನೆಯಾಗಿದೆ. ನಮಾಝನ್ನು ಅದರ ಸಮಯದಲ್ಲಿಯೇ ನಿರ್ವಹಿಸಬೇಕು. ನಮಾಝ್ ದಿನದ ಐದು ಹೊತ್ತು ಕಡ್ಡಾಯವಾಗಿದೆ. ನಿಶ್ಚಿತ ರೂಪದಲ್ಲಿ ಅಂಗ ಶುದ್ಧಿ ಮಾಡಿದ ಬಳಿಕ ನಮಾಝ್ ಮಾಡಬೇಕು. ಶುದ್ಧಗೊಳಿಸಿದ ಶರೀರ, ಶುದ್ಧವಾದ ವಸ್ತ್ರವನ್ನು ಧರಿಸಿ, ಶುದ್ಧವಿರುವ ಸ್ಥಳದಲ್ಲಿ ನಮಾಝನ್ನು ನಿರ್ವಹಿಸಬೇಕು. ನಮಾಝ್ ಒಂದು ಸಾಮುಹಿಕ ಆರಾಧನೆಯಾಗಿದೆ. ಅದನ್ನು ಮಸೀದಿಯಲ್ಲಿ ಸಾಮುಹಿಕವಾಗಿ ನಿರ್ವಹಿಸಬೇಕು. ಮಸೀದಿಗೆ ಬರಲು ಅಡ್ಡಿಯಿರುವವರಿಗೆ ಮನೆಯಲ್ಲಿಯೋ ದಾರಿಯಲ್ಲಿಯೋ ಅವರು ಎಲ್ಲಿರುವರೋ ಅಲ್ಲಿಯೇ ನಮಾಝನ್ನು ನಿರ್ವಹಿಸಬಹುದಾಗಿದೆ. ಪ್ರತಿಯೊಂದು ನಮಾಝ್‍ನ ವೇಳೆಯಲ್ಲಿಯು  ಮಸೀದಿಯಲ್ಲಿ ಓರ್ವರು ಅದನ್ನು ಉಚ್ಚ ಸ್ವರದಲ್ಲಿ ಕೂಗಿ ಕರೆಯುತ್ತಾರೆ. ಈ ಕರೆಯನ್ನು ಅದಾನ್ ಎಂದು ಕರೆಯಲಾಗುತ್ತದೆ. ಮಕ್ಕಾದ ಕಅಬಾಕ್ಕೆ ಮುಖ ಮಾಡಿಯೇ ಲೋಕದಾದ್ಯಂತವಿರುವ ಮುಸ್ಲಿಮರು ನಮಾಝನ್ನು ನಿರ್ವಹಿಸುತ್ತಾರೆ. ಶುಕ್ರವಾರ ಮಧ್ಯಾಹ್ನ ಜುಮುಅ: ನಮಾಝನ್ನು ನಿರ್ವಹಿಸಲಾಗುತ್ತದೆ.  ತಾವಿರುವಲ್ಲಿ ಜುಮುಅ: ನಮಾಝನ್ನು ಸಂಸ್ಥಾಪಿಸುವುದು ಮತ್ತು ಅದರಲ್ಲಿ ಪಾಳ್ಗೊಳ್ಳುವುದು ಆಯಾ ನಾಡಿನ ಮುಸ್ಲಿಮರ ಕರ್ತವ್ಯವಾಗಿದೆ.

ವಿಶ್ವಾಸಿಯ ಮೈ-ಮನಸ್ಸು ದೇವನಿಗೆ ಅರ್ಪಿತವಾಗಿರಲು ನಮಾಝ್ ನಿರ್ವಹಿಸುವುದು ಒಂದು ಶರ್ತವಾಗಿದೆ. ದೇವನ ಮುಂದೆ ಹೋಗಿ ನಿಂತು ಕೆಲವು ಆಂಶಿಕ ಚಲನೆಗಳೊಂದಿಗೆ ಅವನೊಂದಿಗೆ ದಾಸ್ಯ ವಿನಮ್ರತೆಗಳನ್ನು ಪ್ರಕಟಿಸುವುದು ಮತ್ತು  ಅವನನ್ನು ಸ್ತುತಿಸುವುದು. ಸನ್ಮಾರ್ಗ ಪ್ರಾಪ್ತಿಗೆ,  ದುರ್ಮಾರ್ಗದಿಂದ ಮುಕ್ತವಾಗುವುದಕ್ಕೆ ಪ್ರಾರ್ಥಿಸುವುದು, ಕೊನೆಗೆ ತನ್ನ ಸುತ್ತಮುತ್ತಲಿನ ಶಾಂತಿಯನ್ನು ಬಯಸಿ ವಿಶ್ವಾಸಿಯು ನಮಾಝ್‍ನಿಂದ ವಿರಮಿಸುತ್ತಾನೆ. ಪ್ರತಿದಿನ ಐದು ಹೊತ್ತು ನಮಾಝ್ ಮಾಡುತ್ತಲಿರುವ ವಿಶ್ವಾಸಿಯಲ್ಲಿ  ದೇವನ ಬಗ್ಗೆ ಭಕ್ತಿ ಮತ್ತು ಸನ್ಮಾರ್ಗದ ಆಕಾಂಕ್ಷೆಯು ಸಕ್ರಿಯವಾಗಿ ನೆಲೆ ನಿಲ್ಲುವುದು. ನಮಾಝ್ ಅವರಲ್ಲಿ ದೇವನು ನಿಷಿದ್ಧಗೊಳಿಸಿರುವವುಗಳಿಂದ ತಡೆಯುವುದು, ದೇವ ಸಂಪ್ರೀತಿಯ ಮಾರ್ಗದೆಡೆಗೆ ಅವರನ್ನು ಮುನ್ನಡೆಸುತ್ತದೆ.

ಪವಿತ್ರ ಕುರ್ ಆನ್ ಹೇಳಿತು: “ನಮಾಝನ್ನು ಸಂಸ್ಥಾಪಿಸಿರಿ. ನಿಶ್ಚಯವಾಗಿಯು ನಮಾಝ್ ಅಶ್ಲೀಲ ಹಾಗೂ ದುಷ್ಕ್ರತ್ಯಗಳಿಂದ ತಡೆಯುತ್ತದೆ. ದೇವಸ್ಮರಣೆಯು ಅತ್ಯಂತ ಮಹತ್ತರವಾಗಿದೆ. ನೀವು ಮಾಡುವುದೆಲ್ಲವನ್ನೂ ಅಲ್ಲಾಹನು ಅರಿಯುತ್ತಾನೆ” (ಪವಿತ್ರ ಕುರ್ ಆನ್-29:45)

ಪ್ರವಾದಿವರ್ಯರು(ಸ) ನಮಾಝನ್ನು ಹೀಗೆ ವರ್ಣಿಸಿರುತ್ತಾರೆ: “ನಿಮ್ಮ ಮನೆಯ ಬಳಿ ಒಂದು ತಿಳಿ ನೀರಿನ ಒರತೆ ಹರಿಯುತ್ತಿರುತ್ತದೆ. ನೀವು ಐದು ಹೊತ್ತು ಅದರಲ್ಲಿ ಸ್ನಾನ ಮಾಡುತ್ತಿರುತ್ತೀರಿ. ಹಾಗಿದ್ದರೆ ನಿಮ್ಮ ದೇಹದಲ್ಲಿ ಏನಾದರೂ ಕೊಳೆ ಉಳಿದೀತೆ?.  ಅದೇ ರೀತಿ ನಮಾಝ್ ಮಾಡುವವನ ಮನಸ್ಸು ಸಂಶುದ್ಧವೂ ಸುಸಂಸ್ಕ್ರತವೂ ಆಗಿರುವುದು.”

ಸಾಮುಹಿಕ ನಮಾಝ್ ಮಾನವೀಯ ಐಕ್ಯದ, ಸಾಮಾಜಿಕ ಶಿಸ್ತಿನ ಪ್ರಾಯೋಗಿಕ ತರಬೇತಿ ಕೂಡಾ ಆಗಿದೆ.  ಆಡಳಿತಾಧಿಕಾರಿ, ಪ್ರಜೆ, ಉಳ್ಳವ, ಇಲ್ಲದವ, ಬಿಳಿಯ, ಕರಿಯ, ವಿದ್ವಾಂಸ, ಪಾಮರ ಹೀಗೆ ಎಲ್ಲರೂ ಒಂದೇ ಸಾಲಿನಲ್ಲಿ ಭುಜಕ್ಕೆ ಭುಜ ತಾಗಿಸಿ ನಿಂತು ವಿನಮ್ರವಾಗಿ ಅಲ್ಲಾಹನ ದಾಸರೆಂಬ ನೆಲೆಯಲ್ಲಿ ಮಾನವರೆಲ್ಲರೂ ಸಮಾನರೆಂಬ ಆಶಯವನ್ನು ಮುರ್ತರೂಪದಲ್ಲಿ ಪ್ರಕಟಿಸುತ್ತಾ ನಮಾಝನ್ನು ನಿರ್ವಹಿಸುತ್ತಾರೆ. ಮಸೀದಿಗೆ ಮೊದಲು ಗುಮಾಸ್ತ ತಲುಪಿದರೆ ಆತ ನಮಾಝ್‍ನಲ್ಲಿ ಪ್ರಥಮ ಸಾಲಿನ ಪ್ರಥಮ ವ್ಯಕ್ತಿಯಾಗುವನು. ನಮ್ಮ ಜಿಲ್ಲಾಧಿಕಾರಿ ಅಥವಾ ಪ್ರಧಾನ ಮಂತ್ರಿ ಮಸೀದಿಗೆ ತಲುಪಿದಾಗ ನಮಾಝ್‍ನ ಸಾಲಿನಲ್ಲಿ ಸ್ಥಳವಿದ್ದರೆ ಅವನೊಂದಿಗೇ ಭುಜಕ್ಕೆ ಭುಜಕ್ಕೆ ತಾಗಿಸಿ ನಿಲ್ಲಬೇಕು, ಸ್ಥಳವಿಲ್ಲದಿದ್ದರೆ ತನ್ನ ಆಫೀಸಿನ ಗುಮಾಸ್ತನ ಹಿಂದೆ ಅವರು ನಿಲ್ಲಬೇಕು. ಹಾಗಿರುವಾಗ ಸಾಷ್ಟಾಂಗದ ಸಮಯದಲ್ಲಿ ಅವರು ತಮ್ಮ ತಲೆಯನ್ನು ತಮ್ಮದೇ ಆಫೀಸಿನ ಗುಮಾಸ್ತನ ಕಾಲಿನ ಬಳಿ ಇರಿಸಬೇಕಾಗುತ್ತದೆ.

ಮಸೀದಿಯು ಮೇಲು ಕೀಳನ್ನು ನಿರಾಕರಿಸುವ ಸ್ಥಳವಾಗಿದೆ. ಅದು ಅಲ್ಲಾಹನ ಮುಂದೆ ಸಾಷ್ಟಾಂಗವನ್ನು ದಾಖಲಿಸುವ ಸ್ಥಳವಾಗಿದೆ. ವಿಶ್ವಾಸಿಗಳಿಗೆ ಪ್ರತಿ ದಿನವೂ ಐದು ಹೊತ್ತು ನಮಾಝ್‍ನ ಸಂದರ್ಭದಲ್ಲಿ ತಮ್ಮ ಸುತ್ತಮುತ್ತ ಇರುವ ಸಹ ವಿಶ್ವಾಸಿಗಳನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ ಎಂಬುದು ಸಾಮುಹಿಕ ನಮಾಝಿನ ಇನ್ನೊಂದು ಅರ್ಥವಾಗಿದೆ. ಈ ಸಮ್ಮಿಲನ ಮತ್ತು ಭೇಟಿಯ ಉದ್ದೇಶವು ಯಾವುದಾದರೂ ಭೌತಿಕ ಹಿತಾಸಕ್ತಿಗಾಗಿರುವುದಿಲ್ಲ, ಆದ್ದರಿಂದ ಅದು ನಿಷ್ಕಳಂಕವಾಗಿದೆ. ಅದು ಅವರಲ್ಲಿ ಪರಸ್ಪರ ಪರಿಚಯ, ಗ್ರಹಿಕೆ, ಸೌಹಾರ್ದ, ಒಗ್ಗಟ್ಟು, ಸಹೋದರತೆಯನ್ನು ಬೆಳೆಸುತ್ತದೆ. ಓರ್ವ ನಾಯಕನ ಹಿಂದೆ ನೆರೆಯುವುದು, ಅವನ ಚಲನೆಗಳನ್ನು ಕಟ್ಟು ನಿಟ್ಟಾಗಿ ಅನುಸರಿಸುವುದು, ನಮಾಝಿನ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುವುದು ಇವೆಲ್ಲವೂ ವಿಶ್ವಾಸಿಗಳಲ್ಲಿ ಶಿಸ್ತಿನ ಪಾಠಗಳನ್ನು ಕಲಿಸುತ್ತದೆ. ವ್ಯಕ್ತಿಗತವಾಗಿಯೂ, ಸಾಮುಹಿಕವಾಗಿಯೂ ನಮಾಝ್ ದೇವನ ವಿಧಿ ನಿಷೇಧಗಳನ್ನು ಪಾಲಿಸಿ ಜೀವಿಸುವ ತರಬೇತಿ ಕೂಡಾ ಆಗಿದೆ.

ನಮಾಝಿನಿಂದ ಉದ್ದೇಶಿಸಲಾದ ಪ್ರತಿಫಲಗಳನ್ನು ಪಡೆಯುವುದಕ್ಕಾಗಿ ಅದನ್ನು ಭಕ್ತಿ ಮತ್ತು ಎಚ್ಚರಿಕೆಯಿಂದ ನಿರ್ವಹಿಸಬೇಕೆಂದು ಪವಿತ್ರ ಕುರ್ ಆನ್ ವಿಶೇಷವಾಗಿ ಸೂಚಿಸಿದೆ. “ನೀವು ಕಂಡಿರಾ, ಪರಲೋಕದ ಕರ್ಮಫಲಗಳನ್ನು ನಿರಾಕರಿಸುವವನನ್ನು? ಅವನೇ ತಾನೆ, ಅನಾಥರನ್ನು ದೂರ ದಬ್ಬುವವನು ಮತ್ತು ದರಿದ್ರರಿಗೆ ಊಟವನ್ನು ಕೊಡಲು ಪ್ರೇರೇಪಿಸದವನು ಮತ್ತು ವಿನಾಶ ಕಾದಿದೆ ನಮಾಝ್ ನಿರ್ವಹಿಸುವವರಿಗೆ ಅವರು ತಮ್ಮ ನಮಾಝಿನ ಬಗ್ಗೆ ಅನಾಸ್ಥೆ ತೋರುತ್ತಾರೆ, ಅವರು ತೋರಿಕೆಯ ಕೆಲಸ ಮಾಡುತ್ತಾರೆ ಮತ್ತು ಜನರಿಗೆ ಸಾಮಾನ್ಯ ಅವಶ್ಯಕ ವಸ್ತುಗಳನ್ನು ಕೊಡುವುದಕ್ಕೂ ಹಿಂಜರಿಯುತ್ತಾರೆ.(ಪವಿತ್ರ ಕುರ್ ಆನ್-107:1-7)” ಯಥಾರ್ಥವಾದ ನಮಾಝಿನಲ್ಲಿ ಆಗಬೇಕಾದದ್ದು ಪರಲೋಕದ ನೆನಪು, ಸಮಾನತೆಯ ಭಾವನೆ, ಸಹೋದರತೆಯ ಪ್ರಜ್ಞೆ, ಪರಲೋಕದ ಚಿಂತೆಯಾಗಿದೆ. ಅದು ಆಗದ ನಮಾಝ್ ಕೇವಲ ಜಡವಾಗಿದೆಯೆಂದು ಈ ಕುರ್ ಆನ್ ಸೂಕ್ತಗಳು ಸ್ಪಷ್ಟಪಡಿಸುತ್ತದೆ.

Wednesday, January 3, 2018

ಝಿಯಾರತ್ತ್ ಕೇಂದ್ರ 55 ಪೂಕಟ್ಟೂರ್ ಶುಹದಾಗಳು.

*ಝಿಯಾರತ್ತ್ ಕೇಂದ್ರ​*
      *➡5⃣5⃣*
------------------------
 *ಪೂಕಟ್ಟೂರ್ ಶುಹದಾಗಳು*
*ಮಲಪ್ಪುರಂ*
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
🕌🕌🕌🕌🕌🕌🕌🕌🕌

ಭಾರತದ ಸ್ವಾತಂತ್ರ್ಯ ಹೇೂರಾಟದಲ್ಲಿ ಕೇರಳದ ಮಲಬಾರ್ ಪ್ರಾಂತ್ಯದ ಮುಸ್ಲಿಮರ ಹೇೂರಾಟ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷಗಳಿಂದ ಬರೆದಿಡುವಂಥಾದ್ದು ಅದರಲ್ಲಿ ಬ್ರಿಟಿಷರ ವಿರುದ್ಧ ಕೇರಳದಲ್ಲಿ ನಡೆದ ಅಸಂಖ್ಯ ಹೋರಾಟಗಳಲ್ಲಿ ಪೂಕೊಟ್ಟೂರ್ ಗಲಭೆ ಅವಿಸ್ಮರಣೀಯವಾದುದು.

1921 ಆಗಸ್ಟ್‌ 26 ರಂದು  ಮಲಪ್ಪುರಂ ಜಿಲ್ಲೆಯ ಕೊಂಡೊಟ್ಟಿ ಮತ್ತು ಸುತ್ತಮುತ್ತಲ ಪ್ರದೇಶಗಳ ಮಾಪ್ಪಿಳ ಮಕ್ಕಳ ಈಮಾನಿನ  ಆತ್ಮಸ್ಥೈರ್ಯದಿಂದ ಕೂಡಿದ ಹೋರಾಟವು ಬ್ರಿಟೀಷರ ಸಾಮ್ರಾಜ್ಯಶಾಹಿಯ ವಿರುದ್ಧದ ಪ್ರಭಲ ಪ್ರತಿರೇೂಧವಾಗಿತ್ತು.

ಅಂದಿನ ಕಾಲದಲ್ಲಿ ಅಲ್ಲಿನ ರಾಜ "ಆರಂ ಮುರ ಚಿನ್ನುಣ್ಣಿ ತಂಬುರಾನ್'ನ ಸೇವಕನಾಗಿದ್ದ ಕಳತ್ತಿಂಗಳ್ ಮುಹಮ್ಮದ್ ಎಂಬವರನ್ನು ಜಮೀನ್ದಾರರ ವಿರುದ್ಧ ಮತ್ತು ಬ್ರಿಟಿಷರ ವಿರುದ್ಧದ ಹೇೂರಾಟದಲ್ಲಿ ಭಾಗಿಯಾಗಿದ್ದಾರೆಂಬ ಸಂಶಯದಿಂದ ಸೇವಕನನ್ನು ಕೆಲಸದಿಂದ ವಜಾಗೊಳಿಸಿದರು.

ನಂತರ ಕೊವಿಲಕತ್ತ್ ಎಂಬ ಅರಮನೆಯಿಂದ  ಪಿಸ್ತೂಲು ಕಳವು ಮಾಡಿದ್ದಾನೆ ಎಂದು ಸುಳ್ಳು ಕೇಸು ದಾಖಲಿಸಿ ಕಳತ್ತಿಂಗಲ್ ಮುಹಮ್ಮದ್'ರನ್ನು ಬಂಧಿಸಿದಾಗ ಧಂಗೆಯೆದ್ದ ಮುಸ್ಲಿಮರ ಪ್ರತಿರೇೂಧ ಬ್ರಿಟಿಷರ ಊಹೆಗೂ ನಿಲುಕದಂತಹದ್ದಾಗಿತ್ತು.

1921ರ ಆಗಸ್ಟ್ 1ಕ್ಕೆ ಮುಹಮ್ಮದರನ್ನು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಾಗ ಠಾಣೆಯ ಹೊರಗೆ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರಿಂದ ಪರಿಸ್ಥಿತಿ ವಿಕೇೂಪಕ್ಕೆ ತಿರುಗುವ ಸಾಧ್ಯತೆ ಇರುವುದನ್ನರಿತ ಪೊಲೀಸರು ಕ್ಷಮೆ ಯಾಚಿಸಿದರು.

ಆದರೆ ಮುಸ್ಲಿಮರ ಈ ಪ್ರಭಲ ಪ್ರತಿರೇೂಧವು ಬ್ರಿಟೀಷರಿಗೊಂದು ಅವಮಾನದಂತೆ ಕಂಡಿತು. ಆ ಕಾರಣದಿಂದಾಗಿ ಅವರು ಏರನಾಡ್'ನಲ್ಲಿರುವ ಮಾಪ್ಪಿಳ್ಳರಿಗೆ ತಕ್ಕ ಪಾಠ ಕಲಿಸಬೇಕೆಂದು ತೀರ್ಮಾನಿಸಿದರು.

ಆ ದ್ವೇಷವು ತದನಂತರ
ಅಲಿ ಮುಸ್ಲಿಯಾರ್ (ಖ:ಸಿ)ರಂತಹ ಮುಸ್ಲಿಮ್ ನಾಯಕರ ವಿರುದ್ಧ ತಿರುಗಿ, ಆಗಸ್ಟ್ 19ಕ್ಕೆ ಬ್ರಿಟಿಷ್ ಸೈನಿಕರು ತಿರೂರಂಗಾಡಿ ಮಸೀದಿಯನ್ನು ಕೆಡವಲು ಮುಂದಾದರು.
ಇದನ್ನರಿತ ಮುಸ್ಲಿಮರು ಮಸೀದಿಯ ಮುಂದೆ ಜಮಾಯಿಸಿ ಮಸೀದಿ ಕೆಡವದಂತೆ ಪ್ರತಿರೇೂಧವೊಡ್ಡಿದಾಗ ಬ್ರಿಟೀಷರು ಗೇೂಲಿಬಾರ್ ನಡೆಸಿದರು ಈ ಗೇೂಲಿಬಾರ್'ನಲ್ಲಿ ಹಲವು ಮುಸ್ಲಿಮರು ಹುತ್ಮಾತರಾದರು.

 ನಂತರದ ಒಂದು ವಾರದಲ್ಲಿ ಅಲ್ಲಲ್ಲಿ ಗಲಭೆಗಳು ಭುಗಿಲೆದ್ದಿತು.

ಬ್ರಿಟಿಷರು ತಿರೂರಂಗಾಡಿಯ ಪರಾಜಯದ ಕೋಪವನ್ನು ಪುಕೊಟ್ಟೂರ್ ನಾಗರಿಕರ ಮೇಲೆ ತಿರುಗಿಸಿ ಅಲ್ಲಲ್ಲಿ  ಗಲಭೆಗಳನ್ನು ಸೃಷ್ಟಿಸುವ ಮೂಲಕ ತಮ್ಮ ಹಗೆಯನ್ನು ತೀರಿಸಿಕೊಳ್ಳಲು ಕುತಂತ್ರ ಹೆಣೆದರು.

ಬ್ರಿಟೀಷರ ಈ ಕುತಂತ್ರದ ವಿರುದ್ಧ ವಡಕೆ ವಿಟ್ಟಿಲ್ ಮಮ್ಮಿ (ಖ:ಸಿ)ಯವರ ನೇತೃತ್ವದಲ್ಲಿ ಬ್ರಿಟೀಷರ ವಿರುದ್ಧ ನಡೆದ ಪ್ರತಿರೋಧ ಹೇೂರಾಟದಲ್ಲಿ ಬ್ರಿಟೀಷರು ಗುಂಡಿಕ್ಕಿದಾಗ 258 ಮುಸ್ಲಿಮರು ಶಾಹಿದಾದರು.

ಪೂಕೊಟ್ಟೂರ್ ರಸ್ತೆಯ ಪಶ್ಚಿಮ ಭಾಗದ 4 ಸ್ಥಳಗಳಲ್ಲಿ ಅಂದು ರಾತ್ರಿಯೇ ಆ ಶುಹದಾಗಳ ಜನಾಝವನ್ನು ದಫನ್ ಮಾಡಲಾಯಿತು.


ದಾರಿ: ಪೂಕೊಟ್ಟೂರಿನ ಪಿಲಾಕಲಿಲ್ ಎಂಬ ಸ್ಥಳದಲ್ಲಿ ಆ ಧೀರ ಶುಹದಾಗಳು ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.

✍ಗಫೂರ್ ಬಾಯಾರ್
🔻🔻🔻🔻🔻🔻🔻🔻🔻

ಝಿಯಾರತ್ತ್ ಕೇಂದ್ರ 54 ಓಮನ್ನೂರ್ ಶುಹದಾಗಳು. ಕೊಂಡೊಟ್ಟಿ

*ಝಿಯಾರತ್ತ್ ಕೇಂದ್ರ​*
      *👉🏻5⃣4⃣*
------------------------
 *#ಓಮನ್ನೂರ್ #ಶುಹದಾಗಳು*
*ಕೊಂಡೊಟ್ಟಿ, ಮಲಪ್ಪುರಂ*
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
🕎🕎🕎🕎🕎🕎🕎🕎🕎

ಹಿಜರಿ ವರ್ಷ 1128 ದುಲ್'ಹಿಜ್ಜ್ 7ರಂದು ಇಸ್ಲಾಮನ್ನು ನಾಶ ಮಾಡಲು ಶ್ರಮಿಸಿದ ಶತ್ರು ಸೈನಿಕರ ವಿರುದ್ಧ ಯುದ್ಧ ಸಾರಿದ ಮುಸ್ಲಿಂಗಳಲ್ಲಿ ಕುಂಞಾಲಿ (ರ), ಅಬೂಬಕ್ಕರ್ (ರ), ಮೊಯ್ತಿನ್ (ರ) ಎಂಬ ಮೂವರು ಯೋಧರು ಶಹೀದಾದರು.

ಕಲ್ಲಿಕೋಟೆ ಜಿಲ್ಲೆಯ ಮಾವೂರ್ ಎಂಬ ಸ್ಥಳದ ಹತ್ತಿರವಿರುವ ಚೆರುಪ್ಪ ಪಳ್ಳಿಕುನ್ನು ಪ್ರದೇಶದ "ಅಮ್ಮಾಳು ಅಮ್ಮ" ಎಂಬ  ಅಮುಸ್ಲಿಂ ಮಹಿಳೆ ಸ್ವಇಚ್ಛೆಯಿಂದ ಮುಸ್ಲಿಂ ಧರ್ಮ ಸ್ವೀಕಾರ ಸಂಬಂಧಿಸಿ ಉಂಟಾದ ತರ್ಕದಿಂದ ಕೆಲವು ಅಮುಸ್ಲಿಮರು,  ಅಮ್ಮಾಳರನ್ನು ಪುನಃ ಹಿಂದು ಧರ್ಮಕ್ಕೆ ಮರಳಿಸಬೇಕೆಂದು ಹಠ ಹಿಡಿದು ಗಲಭೆ ಎಬ್ಬಿಸಲಿಕ್ಕಾಗಿ ಅಲ್ಲಿನ ಮಸೀದಿಯನ್ನು  ಅಶುದ್ಧಿಗೊಳಿಸಲು  ಪ್ರಯತ್ನಿಸಿದ ಕಾರಣದಿಂದಾಗಿದೆ ಓಮನ್ನೂರ್ ಯುದ್ಧದ ಆರಂಭವಾದರೂ, ಇದನ್ನೇ ಬಂಡವಾಳವನ್ನಾಗಿ ತೆಗೆದುಕೊಂಡ ಬ್ರಿಟಿಷ್ ಸೈನ್ಯವು ಯುದ್ಧವನ್ನು ಇನ್ನಷ್ಟು ಗಂಭೀರ ಸ್ವರೂಪಕ್ಕೆ ತಳ್ಳಿರುದರು.
ಅವರು ಮೂರು ಸಾವಿರದಷ್ಟು ಜನರನ್ನು ಯಾವುದೇ ಮುನ್ಸೂಚನೆ ನೀಡದೆ ಯುದ್ದ ಮುಖಕ್ಕೆ ತಲುಪಿಸಿದರು.

ಮುಸ್ಲಿಮರು ಅಲ್ಪ ಸಂಖ್ಯೆಯಲ್ಲಿ ಇದ್ದರಾದರೂ ಶತ್ರು ಸೈನ್ಯಕ್ಕೆ ಹೆದರದೆ, ಜಗ್ಗದೆ ಧೀರವಾಗಿ ಬ್ರಿಟಿಷ್ ಸೈನಿಕರೊಂದಿಗಿದ್ದ ಅಮುಸ್ಲಿಂ ಶತ್ರುಗಳ ವಿರುದ್ಧ ಸೆಣಗಾಡಿ  ಹಲವಾರು ಸೈನಿಕರನ್ನು ವಧಿಸಿದರು. ಮುಸ್ಲಿಮರ ಕಡೆಯಿಂದ ಮೂವರು  ಹುತಾತ್ಮರಾದರು.

ಓಮನ್ನೂರ್ ಪೂರ್ವ ಕಾಲದಲ್ಲಿ ಅಮುಸ್ಲಿಂ ಪರಿಸರವಾಗಿದರಿಂದ್ದ ಯುದ್ಧದಲ್ಲಿ ಶಹೀದಾದ ಹುತಾತ್ಮರ ಮಯ್ಯಿತ್'ಗಳನ್ನು  ಕೊಂಡೊಟ್ಟಿ ಪಯಂಗಾಡಿ ಜಮಾಅತ್ತ್ ಮಸೀದಿಯ  ಪೂರ್ವದಲ್ಲಿ ಚದುರ ಆಕ್ರತಿಯಲ್ಲಿ ನಿಶಾನೆ ಮಾಡಿದ ಕಾಂಪೌಂಡ್'ನ ಒಳಗಡೆ ದಫನ್ ಮಾಡಲಾಯಿತು.

ದೀರ್ಘ ಕಾಲದವರೆಗೆ ಇಲ್ಲಿಯ ಖಾಝಿಯಾಗಿದ್ದ ಝೈನುದ್ದೀನ್ ಮಖ್ಡೂಮ್ (ರ) ನಾಲ್ಕನೇಯವರು ಹಾಗೂ ಮಟ್ಟತ್ತೂರ್ ಖಾಝಿಯವರ ಮಕ್ಬರಗಳು ಕೂಡಾ ಇಲ್ಲಿ ನೆಲೆಗೊಂಡಿದೆ.

ಮಲಬಾರಿನ ಹಲವಾರು ಪ್ರದೇಶಗಳಲ್ಲಿ ಇಂದು ಕೂಡ ದುಲ್'ಹಜ್ಜ್ 7ಕ್ಕೆ ಓಮನ್ನೂರ್ ಶುಹದಾಗಳ ವಾರ್ಷಿಕ ನೇರ್ಚೆ ನಡೆಯುತ್ತಿದೆ. ಈ ಮಖಾಮಿಗೆ ಕಾಣಿಕೆ ನೀಡಿದರೆ ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಬಹು ಬೇಗನೇ ಪರಾಗಬಹುದೆಂದು ಅನುಭವಸ್ಥರು ಸಾಕ್ಸ್ಯ ನುಡಿಯುತ್ತಾರೆ. ಇಲ್ಲಿಯ ನೇರ್ಚೆಯ ಮುಖ್ಯ ಆಕರ್ಷಣೆವೆಂದರೆ ಅನ್ನದಾನ ವಿತರಣೆ. ಈ ಅನ್ನದಾನದಲ್ಲಿ ಎಲ್ಲಾ ಧರ್ಮದವರು ಸಹಕರಿಸುತ್ತಾರೆ.

ದಾರಿ: ಕೊಂಡೊಟ್ಟಿ-ಪಯಂಗಾಡಿ ಮಸ್ಜಿದ್'ನ ಪೂರ್ವ ಭಾಗದಲ್ಲಾಗಿದೆ ಮಕ್ಬರಗಳು ನೆಲೆಗೊಳ್ಳುತಿರುವುದು.

✍ಗಫೂರ್ ಬಾಯಾರ್
☯☯☯☯☯☯☯☯☯

ಝಿಯಾರತ್ತ್ ಕೇಂದ್ರ 53 ತಾತ್ತೂರ್ ಶುಹದಾಗಳು.

*ಝಿಯಾರತ್ತ್ ಕೇಂದ್ರ​*
      *👉🏻5⃣3⃣*
------------------------
 *#ತಾತ್ತೂರ್_ಶುಹದಾಗಳು*
*#ಮಾವೂರ್, #ಕೂಳಿಮಾಡ್ #ಕಲ್ಲಿಕೋಟೆ.*
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
🕎🕎🕎🕎🕎🕎🕎🕎🕎

ಕಲ್ಲಿಕೋಟೆ ಜಿಲ್ಲೆಯ ಕೂಳಿಮಾಡ್ ಮಾರ್ಗವಾಗಿ ಚಾಲಿಯಾರ್ ನದಿಯ ತೀರದಲ್ಲಿ ತಾತ್ತೂರ್ ಎಂಬ ಸಣ್ಣ ಗ್ರಾಮವಿದೆ.
ಶತಮಾನಗಳಷ್ಟು ಹಳೆಯ ತಾತ್ತೂರ್ ಮಸೀದಿ ಮತ್ತು ಶುಹದಾಗಳ ಮಕ್ಬರಗಳು ಇಲ್ಲಿನ ಪ್ರಕೃತಿ ರಮಣೀಯವಾದ ಹಸಿರು ಹಾಸಿದ ಗುಡ್ಡೆಯ ಮೇಲೆ ನೆಲೆಗೊಳ್ಳುತ್ತದೆ.

ಹಿಂದಿನ ಕಾಲದಲ್ಲಿ ಅರಿಕೊಡ್, ವಾಯಕಾಡ್ ಹಾಗೂ ಮುಕ್ಕಂ ಪ್ರದೇಶಗಳಿಂದ ವಿಶ್ವಾಸಿಗಳ ಮಯ್ಯಿತ್ತ್ ಕೊಂಡು ಬರುತ್ತಿರುವುದು  400 ವರ್ಷಗಳ ಪುರಾತನವಾದ ಇಲ್ಲಿನ ಮಸೀದಿಗಾಗಿತ್ತು.

ಧರ್ಮ ವಿರುದ್ಧ ಅತಿಯಾದ ವಿದ್ವೇಷ, ಕೆಲವರ ಅವಿವೇಕದಿಂದ ಹಾಗೂ ಏಕಪಕ್ಷೀಯವಾದ ಆಕ್ರಮಣದಲ್ಲಿ ಹುತಾತ್ಮರಾದವರಾಗಿದ್ದಾರೆ ತಾತ್ತೂರ್ ಶುಹದಾಗಳು.

ಅತಿಕ್ರಮಿಸಿ ಹತ್ತಿ ಮಸೀದಿಯನ್ನು ಹೊಡೆದುರಳಿಸಲು ಬಂದವರನ್ನು ತಡೆದಿರುದರಿಂದಾಗಿದೆ  ಸಂಘರ್ಷದಲ್ಲಿ ಸಮಾಪ್ತಿಗೊಂಡಿರುವುದು.

ತಾತ್ತೂರ್ ಹುತಾತ್ಮಗಳ ಕುರಿತು ಹೇಳಲಾಗುತ್ತಿರುವ ಚರಿತ್ರೆ ಹೀಗಿದೆ.

ಮೊಹರಂ 22ರಂದು
ತಾತ್ತೂರ್ ಮಸೀದಿಯಲ್ಲಿ  ಮೊಳಗುತ್ತಿರುವ ಆಝಾನ್' ಅಲ್ಲಿನ "ಕೊಲೊತ್ತ್ ಕೊವಿಲಕಂ ತಂಬುರಾಟ್ಟಿ" ಎಂಬ ರಾಣಿಗೆ ನಿರಸ ಉಂಟು ಮಾಡಿತು. ಇದರಿಂದ್ದ ರೋಷ ರಾಜನು ಆತನ ಸಂಘ ಪರಿವಾರವು  ಜುಮಾ ನಡೆಯುತ್ತಿರುವ ಮಸೀದಿಯನ್ನು ಬಿಟ್ಟು ಕೊಡಬೇಕೆಂದು ಆವಶ್ಯಪಟ್ಟರು. ಆದರೆ ಮುಸ್ಲಿಮರು ಅದಕ್ಕೆ  ಒಪ್ಪಲಿಲ್ಲ.

ಅಂಗಾಡಿಕಡವ್ ಎಂಬ ಸ್ಥಳದ ಹತ್ತಿರವಿರುವ ಕ್ಷೇತ್ರ ಪರಿಸರದಲ್ಲಿ ಒಂದು ಮೀನು ದೋಣಿಯನ್ನು ಯಾರೋ ನಿಲ್ಲಿಸಿದರು. (ಮೀನು ಇಷ್ಟವಿಲ್ಲದ ಕೆಲವು ಅಮುಸ್ಲಿಮರಿಗೆ  ಕ್ಷೇತ್ರದ ಪರಿಸರದಲ್ಲಿ ಮೀನಿನ ದೋಣಿ ನಿಲ್ಲಿಸಿರುವುದು ಅವರ ಪ್ರಕೋಪಕ್ಕೆ ಕಾರಣವಾಯಿತು ಎಂದು ಹೇಳಾಲಾಗುತ್ತದೆ.) ಇದನ್ನು ಕೆಲವರು ಪ್ರಶ್ನಿಸಲು  ತಲುಪಿರುವುದು ಈ  ಮಸೀದಿಗಾಗಿತ್ತು.
ಮಸೀದಿಗೆ ಹಂದಿ ಮಾಂಸವನ್ನು ಎಸೆದು ಮಸೀದಿಯನ್ನು ಅಶುದ್ಧಿ ಮಾಡಿ ದ್ವಂಸ ಮಾಡಲು ಪ್ರಯತ್ನಿಸುವಾಗ ಮುಸ್ಲಿಮರು ಶತ್ರು ಪಡೆಯನ್ನು ಎದುರಿಸಿ ಹೋರಾಡಿ ಅವರನ್ನು ಸೋಲಿಸಿದರು.

 ನಂತರ ನಿರಂತರವಾಗಿ ನಡೆದ ಸಂಘರ್ಷದಲ್ಲಿ 22 ಮುಸ್ಲಿಮರು ಶಹೀದಾದರು.

ಮುಸ್ಲಿಂ ಪಕ್ಷದಲ್ಲಿ ಕುರಿಕಲ್ ಶಹೀದ್ (ರ), ಕೊನ್ನೊಲತ್ತ್ ಹಸನ್ ಕೊಯ (ರ), ಮಂಗಟನ್ ಮಾಹಿನ್  ಮೊಹ್ತಿನ್ (ರ) ಎಂಬ ಮೂವರಾಗಿದ್ದರು ನೇತೃತ್ವ ವಹಿಸಿರುವುದು.

ತಾತ್ತೂರ್ ಶುಹದಾಗಳ ಮಕ್ಬರ ಸಂದರ್ಶಿಸಿದ ಹಲವರಿಗೆ ಮಾರಕವಾದ ರೋಗಗಳಿಗೆ ಶಮನ ಲಭಿಸಿರುದಾಗಿ ಅನುಭವಸ್ಥರು ಹೇಳುತ್ತಾರೆ.

1986ರಲ್ಲಿ ಮಸ್ಜಿದ್ ನವೀಕರಣ ಕೆಲಸ ನಡೆಯುತ್ತಿರುವಾಗ ಓರ್ವ ಶಹೀದ್'ರ ಖಬರ್ ಕಫನ್ ಬಟ್ಟೆ ಸಹಿತ ಕಂಡಿರುವುದಾಗಿ ವಾರ್ತಾ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

ಈ ಶುಹದಾಗಳ ಝಿಯಾರತ್ತ್ ಮಾಡಲು ಹಲವಾರು ಸತ್ಯವಿಶ್ವಾಸಿಗಳು ಈಗಲೂ ಮಖ್ಬರ ಸಂದರ್ಶಿಸುತ್ತಿದ್ದಾರೆ..

ದಾರಿ: ಕಲ್ಲಿಕೋಟೆಯಿಂದ ಮಾವೂರ್-ಕೂಳಿಮಾಡ್ ಮಾರ್ಗದಲ್ಲಿ ತಾತ್ತೂರ್ P.H.E.D. ಜುಮಾ ಮಸ್ಜಿದ್ ಪರಿಸರದಲ್ಲಿ ತಾತ್ತೂರ್ ಶುಹದಾ ಮಖಾಂ ನೆಲೆಗೊಳ್ಳುವುದು.

✍ ಗಫೂರ್ ಬಾಯಾರ್
🌿🌿🌿🌿🌿🌿🌿🌿🌿

ಝಿಯಾರತ್ತ್ ಕೇಂದ್ರ ಶಹೀದ್ ಸಯ್ಯಿದ್ ಖಾಜಾ ಹುಸೈನ್ ಮದನಿ (ಖ:ಸಿ)

*ಝಿಯಾರತ್ತ್ ಕೇಂದ್ರ​*
      *👉🏻5⃣2⃣*
------------------------
*ಶಹೀದ್ ಸಯ್ಯಿದ್ ಖಾಜಾ ಹುಸೈನ್ ಮದನಿ (ಖ:ಸಿ) ಮಞ್ಞಕುಳಂ, ಮಖಾಂ ಪಾಲಕ್ಕಾಡ್.*
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
🍄🍄🍄🍄🍄🍄🍄🍄🍄

ಶಹೀದೆ ಹಿಂದ್ ಟಿಪ್ಪು ಸುಲ್ತಾನ್ (ರ) ರವರ ಕಾಲದಲ್ಲಿ ಅರೇಬಿಯಾದಿಂದ ಕೇರಳಕ್ಕೆ ತಲುಪಿದ ಮಹಾತ್ಮರಾಗಿದ್ದಾರೆ ಮಞ್ಞಕುಳಂ ಮಖಾಂಮಿನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಹುಸೈನ್ ಮದನಿ (ಖ:ಸಿ)ರವರು.

ಮುತ್ತು ನಬಿ ﷺ ರವರ ಝಿಯಾರತ್ತ್ ಮಾಡಿದ ಬಳಿಕವಾಗಿದೆ ಮಹಾನರು ಕೇರಳಕ್ಕೆ ಹೊರಟಿರುವುದೆಂದು ಚರಿತ್ರೆ ಹೇಳುತ್ತದೆ.

ಪಾಲಕ್ಕಾಡ್ ಪಟ್ಟಣದ ಹೃದಯಭಾಗದಲ್ಲಿ ನೆಲೆಗೊಳ್ಳುವ ಮಞ್ಞಕುಳಂ  ಮಖಾಂ ದ್ವಂಸ ಮಾಡಲು ಹಲವು ಸಲ ಪ್ರಯತ್ನ ನಡೆದಿದೆಯಾದರೂ ಅದು ವಿಫಲವಾಗಿರುದಲ್ಲದೆ ಅದಕ್ಕೆ ನೇತೃತ್ವ ಕೊಟ್ಟವರು ಅದಕ್ಕೆ ತಕ್ಕ ಫಲ ಅನುಭವಿರುತ್ತಾರೆ.

8 ಜನರಿಗೆ ನಿಲ್ಲಲು ಸಾಧ್ಯವಾಗುವ, ನಾಲ್ಕು ಸಾಲು  ವಿಶಾಲವಿರುವ ಅಲ್ಲಿಯ ಪುರಾತನ ಮಸ್ಜಿದ್'ದಾಗಿತ್ತು ಖ್ವಾಜಾ ಹುಸೈನ್ ತಂಗಳ್ (ಖ:ಸಿ) ರವರು ಇಬಾದತ್ತ್'ನಲ್ಲಿ ಕಳೆದಿರುವುದೆಂದು ಹೇಳಲಾಗುತ್ತದೆ.

ಪ್ರಸಿದ್ದವಾದ ಪಾಲಕ್ಕಾಡ್ ಸಮರದಲ್ಲಿ ಟಿಪ್ಪು ಸುಲ್ತಾನ್ (ರ) ರವರ ಸೈನ್ಯದೊಂದಿಗೆ ಸೇರಿ ಯುದ್ಧದಲ್ಲಿ ಹೋರಾಡಿ ವೀರ ಮರಣ ಹೊಂದಿದ ಮಹಾನಾಗಿದ್ದಾರೆ. ಹುಸೈನ್ ಮದನಿ (ಖ:ಸಿ) ರವರು.

ಯುದ್ಧದ ನಂತರ ಅಲ್ಲಿನ ಕೆರೆ ಹಳದಿ ಬಣ್ಣಕ್ಕೆ ಬದಲಾಗಿತ್ತು. ( ಕೆರೆಗೆ ಮಹಾನರ ರಕ್ತ ಚಿಮ್ಮಿದರಿಂದ ಹಳದಿ ಬಣ್ಣಕ್ಕೆ ಬದಲಾಗಿರುವುದೆಂದು ಹೇಳಲಾಗುತ್ತದೆ.) (ಮಞ್ಞಕುಳಂ = ಹಳದಿ ಕೊಳ) ಈ ಕಾರಣದಿಂದಾಗಿದೆ ಕೊಳಕ್ಕೂ ಮಖಾಮಿರುವ ಪ್ರದೇಶಕ್ಕೆ ಮಞ್ಞಕುಳಂ ಎಂಬ ಹೆಸರು ಬಂದಿರುವುದೆಂದು ಚರಿತ್ರೆ.
ಇದರ ಹತ್ತಿರ ಟಿಪ್ಪು ಸುಲ್ತಾನರ (ರ) ಕೋಟೆ ಇದೆ ಇದೊಂದು ಪ್ರವಾಸಿ ತಾಣವಾಗಿದೆ.

ಧೀರ ದೇಶಾಭಿಮಾನಿಯೂ,  ಸೂಫಿವರ್ಯರು, ಧೀರ ನೇತಾರರು, ಎಂಬಿತ್ಯಾದಿ ವಿಶೇಷತೆಗಳಿಗೆ ಅರ್ಹರಾದ ಮಹಾನರು ಹಲವಾರು ಪವಾಡಗಳ ಒಡೆಯರಾಗಿದ್ದಾರೆ.

ಕಳ್ಳ ಸತ್ಯ ಹಾಕಿದವರಿಗೆ ಮಾನಸಿಕ ರೋಗ ಹಿಡಿದಿರುವುದು, ಮಖಾಮಿಗೆ ನೀರು ತಡೆದವನ ಮನೆಗೆ ಬೆಂಕಿ ತಗಲಿರುವುದು,  ದಾರಿದ್ರ್ಯದಿಂದ ಮುಕ್ತಿ ಹೊಂದಲು ನಿಷ್ಕಳಂಕ ಮನಸ್ಸಿನೊಂದಿಗೆ ಮಖಾಮಿನಲ್ಲಿ ನಿರಂತರ ಅಲ್ಲಾಹನಲ್ಲಿ ಪ್ರಾರ್ಥಿಸಿದವರಿಗೆ ಜೀವಿತಾಂತ್ಯದ ವರೆಗೆ ಧಾರಾಳ ಸಂಪತ್ತು ಲಭಿಸಿರುವುದು, ಮಾರವ್ಯಾದಿಗಳು ಗುಣಮುಖವಾಗಿರುವುದು. ಮಹಾನವರ ಪವಾಡಗಳಲ್ಲಿ ಕೆಲವೊಂದು ಮಾತ್ರ.

ಮೌಲಿದ್ ಗ್ರಂಥಗಳಲ್ಲಿ ಹಳೆಯ ಕಾಲದಲ್ಲಿ ಮಞ್ಞಕುಳಂ ಮಾಲೆ ಪ್ರಸಿದ್ದವೂ, ನಮ್ಮ ಹಿಂದಿನ ತಲೆಮಾರುಗಳ ಎಲ್ಲಾ ಉದ್ದೇಶ ಸಫಲತೆಗೂ, ರೋಗ ಶಮನಕ್ಕೂ, ಆತ್ಮ ವಿಶುದ್ಧಿಗೂ ಮಞ್ಞಕುಳಂ ಮಾಲೆ ಓದುತ್ತಿದ್ದರು. 156 ಸಾಲುಗಳು ಇರುವ ಈ ಮಾಲೆ ಹಳೆಯ ಕಾಲದವರಿಗೆ ಆತ್ಮೀಯ ಔಷಧಿಯಾಗಿತ್ತು.

ಇಂದು ಕೂಡಾ ಸಾವಿರಾರು ಜನರಿಗೆ ಆಶ್ವಾಸನೆಯ  ನೆಲೆಯಾಗಿ ಮಹಾನರು ಶಾಂತಿಯಾಗಿ ಟಿಪ್ಪು ಸುಲ್ತಾನವರ (ರ) ರವರ ರಂಗ ಭೂಮಿಯಲ್ಲಿ ಚಿರ ನಿದ್ರೆಯಲ್ಲಿದ್ದಾರೆ.

ಮಹಾನರ ಬರ್ಕತ್ತ್'ನಿಂದ ಕಾರುಣ್ಯನಾದ ಅಲ್ಲಾಹನು ನಮಗೂ ನಮ್ಮ ಕುಟುಂಬದವರನ್ನೂ ಇಹಲೋಕ ವಿಜಯಿಗಳಲ್ಲಿ ಸೇರಿಸಲಿ ಆಮೀನ್.

ದಾರಿ: ಪಾಲಕ್ಕಾಡ್ ಪಟ್ಟಣದಿಂದ 4 ಕಿ.ಮೀ ದೂರ ಇದೆ ಮಖಾಂ.

✍ಗಫೂರ್ ಬಾಯಾರ್
♻♻♻♻♻♻♻♻♻