Saturday, December 9, 2017

*📝 ಪ್ರವಾದಿ ಸಂದೇಶ 📡*
🏘🏘🏘🏘🏘🏘🏘🏘🏘🏘🏘🏘    *ಪ್ರವಾದಿಯವರ ಬಹುಪತ್ನಿತ್ವ    🏘🏘🏘    ಸತ್ಯಾಂಶವೇನು...?*       🏘🏘🏘🏘🏘🏘🏘🏘🏘🏘🏘🏘🏘

*﷽*

*ಸಂಚಿಕೆ* 0⃣8⃣ *(ಕೊನೇಯ ಸಂಚಿಕೆ)*

💥 ಪತ್ನಿಯಂದಿರನ್ನು ಬರೇ ಭೋಗದ ವಸ್ತುಗಳಾಗಿ ಪರಿಗಣಿಸುತ್ತಾ ಅವರೊಂದಿಗೆ ಕೆಲಸದಾಳುಗಳಂತೆ ನಡೆದುಕೊಳ್ಳುತ್ತಿದ್ದ ಪತ್ನಿಯೂ ಮನೆಯ ಮೇಲ್ನೋಟ ವಹಿಸುವವಳು ಎಂಬ ಸಂದೇಶದೊಂದಿಗೆ ಪತಿಯೂ ಆತ್ಮೀಯ ಜೀವನ ಸಂಗಾತಿಯಾಗಿದ್ದಾಳೆ ಎಂದು ಸಮೂಹಕ್ಕೆ ಮನವರಿಕೆ ಮಾಡಿಕೊಟ್ಟರು. ನಿಮ್ಮಲ್ಲಿ ಅತ್ಯುತ್ತಮರು ತನ್ನ ಪತ್ನಿಗೆ ಅತ್ಯುತ್ತಮರಾದವರಾಗಿದ್ದಾರೆ ಎಂಬ ಘೋಷಣೆಯನ್ನು ಮಾಡುತ್ತಾ ಪತ್ನಿಯೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಬೇಕೆಂದು ಕರೆ ಕೊಟ್ಟವರಾಗಿದ್ದಾರೆ ಪ್ರವಾದಿಯವರು. ಎಲ್ಲಾ ಪತ್ನಿಯರೊಂದಿಗೂ ಸಮಾನವಾದ ರೀತಿಯಲ್ಲಿ ವ್ಯವಹರಿಸಲೂ ಅವರ ಮದ್ಯೆ ಸಮತ್ವವನ್ನು ಪಾಲಿಸಲೂ ಪ್ರವಾದಿಯವರಿಗೆ ಸಾದ್ಯವಾಯಿತು. ಆರಂಭ ಕಾಲದಲ್ಲಿ ಪತ್ನಿಯನ್ನು ಸಂರಕ್ಷಿಸುವ ಹೊಣೆಗಾರಿಕೆಯೂ ಸಮೂಹದಲ್ಲಿ ಪತಿಗೆ ಇರಲಿಲ್ಲ. ಅವರು ಪತ್ನಿಯ ಸೌಂದರ್ಯವನ್ನು ಆಸ್ವದಿಸಲು ಹಾಗೂ ತಮ್ಮ ಕಾಮ ಶಮನಕ್ಕಾಗಿ ಮಾತ್ರ ಸ್ತ್ರೀಗಳನ್ನು ಪತ್ನಿಯರಿಗಿ ಇಟ್ಟುಕೊಳ್ಳುವವರಾಗಿದ್ದರು. ತಾಯಿ ಎಂಬ ಹೆಸರಿನಲ್ಲಿ ಮಕ್ಕಳಿಂದ ಸಿಗುವ ಸಂರಕ್ಷಣೆ ಮಾತ್ರವಾಗಿತ್ತು ಅವರಿಗೆ ಲಭಿಸುತ್ತಿದ್ದದ್ದು. ಇಷ್ಟವಿದ್ದಷ್ಟು ಪತ್ನಿಯರನ್ನು ತನ್ನದಾಗಿಸುತ್ತಿದ್ದ ಅರಬಿಗಳಿಗೆ ಇತರರೆಡೆಯಲ್ಲಿ ಪತ್ನಿಯ ಸೌಂದರ್ಯದಿಂದ ಅಭಿಮಾನಗೊಳ್ಳುವುದು ಮಾತ್ರವಾಗಿತ್ತು ಉದ್ದೇಶ. ಪ್ರವಾದಿಯವರು ಈ ಎಲ್ಲಾ ಕೆಟ್ಟ ನಡವಳಿಕೆಗಳಿಗೆ ನಾಂದಿ ಹಾಡಿ ಪತ್ನಿಯರ ಸಂರಕ್ಷಣೆಯೂ ಪತಿಯರಿಗೆ ವಹಿಸಿಕೊಡುವುದರೊಂದಿಗೆ ಅದನ್ನು ಸ್ವತಹಃ ಮಾಡಿ ತೋರಿಸಿದರು. ಅಂದಿನ ಪ್ರತ್ಯೇಕ ಸಂಧರ್ಭಗಳಲ್ಲಿ ಒಂದಕ್ಕಿಂತ ಪತ್ನಿಯರನ್ನು ಪ್ರವಾದಿಯವರು ಹೊಂದಿದ್ದು ಪ್ರಮುಖವಾಗಿಯೂ ಅವರ ಸಂರಕ್ಷಣೆಯನ್ನು ಮುಂದಿರಿಸಿಯಾಗಿದೆ.

🔚🔚🔚🔚🔚🔚🔚🔚🔚🔚🔚
       
🌻⭐⭐⭐☀☀☀✨

Friday, December 8, 2017

*📝 ಪ್ರವಾದಿ ಸಂದೇಶ 📡*
🏘🏘🏘🏘🏘🏘🏘🏘🏘🏘🏘🏘    *ಪ್ರವಾದಿಯವರ ಬಹುಪತ್ನಿತ್ವ    🏘🏘🏘    ಸತ್ಯಾಂಶವೇನು...?*       🏘🏘🏘🏘🏘🏘🏘🏘🏘🏘🏘🏘🏘

*﷽*

*ಸಂಚಿಕೆ* 0⃣7⃣

💥 ಝೈನಬಾರೊಂದಿಗಿನ ವಿವಾಹವೂ ಬಹಳಷ್ಟು ಸಂಕಷ್ಟಗಳನ್ನುಂಟುಮಾಡಿತ್ತು. ತನ್ನ ಸ್ವತಂತ್ರಗೊಳಿಸಲ್ಪಟ್ಟ ದಾಸನಾದ ಝೈದ್ ರಿಗೆ ಸ್ವಂತ ಅತ್ತಿಗೆಯನ್ನು ವಿವಾಹ ಮಾಡಿಕೊಡಬೇಕೆಂದಾಗಿತ್ತು ತೀರ್ಮಾನ. ಇದಕ್ಕೆ ಕುಲಮಹಿಮೆಯೂ ತಡೆಯಾಗಿ ನಿಂತರೂ ಝೈದ್ ರವರಿಗೆ ಝೈನಬಾರನ್ನು ವಿವಾಹ ಮಾಡಿಕೊಡಲೂ ಪ್ರವಾದಿಯವರು ಅತ್ತೆಯನ್ನು ಒತ್ತಾಯಪಡಿಸಿದರು. ಅದಲ್ಲದೇ ಝೈನಬಾರವರನ್ನು ವಿವಾಹವಾಗಲೂ ಪ್ರವಾದಿಯವರು ಮೋಹಿಸಿದ್ದರು ಎಂಬ ಕಟ್ಟು ಕತೆಗಳಿಗೆ ಯಾವುದೇ ಪುರಾವೆಗಳಿಲ್ಲ. ಪರ್ದಯಿಲ್ಲದ ಸಮಯದಲ್ಲಿ ಪ್ರವಾದಿಯವರು ಝೈನಬಾರವರನ್ನು ನೋಡಿದ್ದಾರೆಂದೂ ಆದ್ದರಿಂದ ಝೈನಬಾರನ್ನು ವಿವಾಹವಾಗಲೂ ಆಗ್ರಹಿಸಿದರೆಂದೂ ಅದಕ್ಕಾಗಿ ಝೈದ್ ರವರಿಂದ ವಿವಾಹ ವಿಮೋಚನೆ ಮಾಡಿಸಿದರೆಂದೂ ಇರುವ ಕತೆಗಳು ಶತ್ರುಗಳು ತಯ್ಯಾರಿಸಿದ್ದಾಗಿದೆ. ಸತ್ಯದಲ್ಲಿ ಸಣ್ಣ ಪ್ರಾಯದಿಂದಲೇ ತನ್ನ ಅತ್ತಿಗೆಯಾದ ಝೈನಬಾರವರನ್ನು ಪ್ರವಾದಿಯವರು ಕಾಣುತ್ತಿದ್ದರು.ಝೈನಬಾರನ್ನು ಪ್ರವಾದಿಯವರಿಗೆ ವಿವಾಹ ಮಾಡಿಕೊಡಲು ಅತ್ತೆಯೂ ಹಲವು ಸಲ ಶ್ರಮಿಸಿದ್ದಾರೆ. ಆದರೂ ತನ್ನ ದತ್ತು ಪುತ್ರನಿಗೆ ವಿವಾಹ ಮಾಡಿಕೊಡಬೇಕೆಂದು ಪ್ರವಾದಿಯವರು ಒತ್ತಾಯಪಡಿಸುತ್ತಿದ್ದರು. ಅದರಂತೆ ನಡೆದು ಅದರಲ್ಲಿ ಬಿರುಕುಂಟಾಗಿ ಅವರು ಪರಸ್ಪರ ಬೇರ್ಪಡುವಿಕೆ ಉಂಟಾದ ನಂತರವೂ ಝೈದ್ ರವರ ಸಹಿತ ಎಲ್ಲರೂ ಒತ್ತಾಯಪಡಿಸಿದ ಕಾರಣದಿಂದಾಗಿದೆ ಪ್ರವಾದಿಯವರು ಝೈನಬಾರವರನ್ನು ವಿವಾಹವಾದದ್ದು.
         
*(ಮುಂದುವರೆಯುವುದು)*
🌻⭐⭐⭐☀☀☀✨
🌺🌼🌺🌼🌺🌼🌺🌼
       *ಸ್ವಲಾತ್ ಶಫಾಅತ್*
🌸🌸🌸🌸🌸🌸🌸🌸*

*اَللَّهُمَّ رَبَّ هٰذِهِ الدَّعْوَةِ التَّامَّةِ وَالصَّلَوَةِ اَلْقَاءِمَةِ اۤتِ  مُحَمَّدً الْوَسِيلَةَ وَالْفَضِيلَةَ وَالدَّرَجَةَ الرَّفِيعَةَ وَابْعَثَهُ مَقَامًا مَحْمُودَ انِ الَّذِي وَعَدتّهُ وَارْزُقْنَا شَفَاعَتَهُ يَومَ القِيَامَةِ اِنَّكَ لاٰتُخْلِفُ المِيعٰادَ*

*ಅಲ್ಲಾಹುಮ್ಮ(ರಬ್ಬಹಾದ್ಝಿಹಿ ದಅವತಿ ತ್ತಾಮ್ಮತಿ ವಸ್ವಲಾತಿಲ್   ಕ್ವಾಇಮತಿ ) ಆತಿ ಮುಹಮ್ಮದನಿಲ್ ವಸೀಲತ ವಲ್ ಫಲೀಲತ ವದ್ದ ರಜತರ್ರ ಫೀಅತ ವಬಅತ್ಸಹು ಮಕ್ವಾಮನ್ ಮಹ್ ಮೂದನಿಲ್ಲಝೀ ವಅತ್ತಹು ವರ್ ಝುಕ್ನಾ ಶಫಾಅತಹು ಯೌಮಲ್ ಕ್ವಿಯಾಮ ಇನ್ನಕ ಲಾ ತುಖ್ ಲಿಫುಲ್ ಮೀಆದ್*

🌴🌴🌴🌴🌴🌴🌴🌴

ಇದು ಬಾಂಗ್ ಮತ್ತು ಇಖಾಮತ್ ನಂತರ ಹೇಳುವ ಸ್ವಲಾತ್ ಆಗಿದೆ.
   ಇದರಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ರವರಿಗೆ ಸ್ವರ್ಗದ ಪರಮೋನ್ನತ ಪಡವಿಯಾದ " ಅಲ್ ವಸೀಲತ್ " ಸ್ಥಾನ ಸಿಗಲು ದುಆ(ಪ್ರಾರ್ಥನೆ) ಇದೆ .  ಸ್ವರ್ಗದ ಆ ಉನ್ನತ ಸ್ಥಾನವು ಓರ್ವ ವ್ಯಕ್ತಿಗೆ ಮಾತ್ರ ಮೀಸಲಾಗಿದೆ.   ಆ ವ್ಯಕ್ತಿ ನಾನಾಗಬೇಕೆಂಬ ಆಸೆ ನನಗಿದೆ.   
ಆದ್ದರಿಂದ ಅಲ್ಲಾಹು ನನಗೆ ಅದನ್ನು ಕೊಡುವಂತೆ ನೀವು ದುಆ ಮಾಡುತ್ತಿರಬೇಕೆಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ತಂಙಳ್ ರವರು ಹೇಳಿದ್ದಾರೆ.  (ಮುಸ್ಲಿಂ)   ಆದ್ದರಿಂದ ಈ ಸ್ವಲಾತ್ "ಆತಿಮುಹಮ್ಮದನ್.......ಎಂಬಲ್ಲಿಂದ ಕೊನೆಯವರೆಗೆ ಬಾಂಗ್ ಇಖಾಮತ್ ಅಲ್ಲದ ಬೇರೆ ಸಮಯದಲ್ಲೂ ಹೇಳುತ್ತಿರಬಹುದು .  ನಮ್ಮ ಕಣ್ಮಣಿ ನೇತಾರರಾದ ಆ ಮಹಾ ಮಹಿಮರ ಆಸೆಯನ್ನು (ಅಗ್ರಹವನ್ನು) ಪೂರೈಸಿಕೊಡು . ಎಂಬ ನಮ್ಮ ದುಆ ಅವರೊಂದಿಗೆ ನಮಗಿರುವ ನಿಷ್ಠೆ .ಪ್ರೀತಿ. ಕಾಲಜಿಗಳ ಸಂಕೇತವಾಗುತ್ತದೆ . ಅವರ ಆಸೆ ಈಡೇರಲು ನಾವು ದುಆ ಮಾಡಿದರೆ   ನಮ್ಮ ಇಹಪರ ಆಸೆ  ಈಡೇರಲು ಅವರ ಸಹಾಯ ಖಂಡಿತ ಇರುತ್ತದೆ. ನೂರಕ್ಕೆ ನೂರರಷ್ಟು ಸತ್ಯ......  .
✳✳✳✳✳✳✳✳

☘💚💚💚💚

 *_ನಮಗೆಲ್ಲರಿಗೂ  ಹಬೀಬ್ ﷺ ತಂಙಳ್'ರವರ ಮೇಲೆ ದಾರಾಳ ಸ್ವಲಾತ್ ಹೇಳಲು ಭಾಗ್ಯವನ್ನು ಕರುಣಿಸು ಅಲ್ಲಾಹ್_*

*ನೀವು ಓದಿರಿ, ಬೇರೆಯವರಿಗೂ ಕೂಡ ಇದನ್ನು ತಿಳಿಸಿರಿ*

*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ*
💕 *ಪುಣ್ಯ ಪ್ರವಾದಿ ( ﷺ) ರವರ ಮೇಲೆ ಮೂರು ಸ್ವಲಾತ್*
*اَللَّهُمَّ رَبَّ هٰذِهِ الدَّعْوَةِ التَّامَّةِ وَالصَّلَوَةِ اَلْقَاءِمَةِ اۤتِ  مُحَمَّدً الْوَسِيلَةَ وَالْفَضِيلَةَ وَالدَّرَجَةَ الرَّفِيعَةَ وَابْعَثَهُ مَقَامًا مَحْمُودَ انِ الَّذِي وَعَدتّهُ وَارْزُقْنَا شَفَاعَتَهُ يَومَ القِيَامَةِ اِنَّكَ لاٰتُخْلِفُ المِيعٰادَ*
🌺🌸🌼🌼🌺🌸🌼🌺

✍ಅಬೂ ಆಶಿಕ್



*Swllu alal habeebﷺ*
*📝 ಪ್ರವಾದಿ ಸಂದೇಶ 📡*
🏘🏘🏘🏘🏘🏘🏘🏘🏘🏘🏘🏘    *ಪ್ರವಾದಿಯವರ ಬಹುಪತ್ನಿತ್ವ    🏘🏘🏘    ಸತ್ಯಾಂಶವೇನು...?*       🏘🏘🏘🏘🏘🏘🏘🏘🏘🏘🏘🏘🏘

*﷽*

*ಸಂಚಿಕೆ* 0⃣6⃣

💥 ಖತೀಜಾ ಬೀವಿ ಹಾಗೂ ಝೈನಬ ಬೀವಿ (ರ.ಅ)ರವರ ಹೊರತು ಇತರ ಒಂಬತ್ತು ಪತ್ನಿಯರು ಪ್ರವಾದಿ (ಸ.ಅ)ರವರವಫಾತಿನ ನಂತರವೂ ಜೀವಿಸಿದ್ದಾರೆ.

ಪ್ರವಾದಿಯವರ ವಿವಾಹ ಜೀವನವನ್ನು ಪರಿಹಾಸ್ಯ ಮಾಡುವವರು ಸತ್ಯದ ಮುಂದೆ ಕಣ್ಣು ಮುಚ್ಚುವವರಾಗಿದ್ದಾರೆ. ಮದ್ಯವೂ ಯುದ್ದವೂ ಹೆಣ್ಣೂ ಈ ಮೂರನ್ನು ಪ್ರತಿಷ್ಟೆಯಾಗಿ ಕಂಡ ಅರಬಿಗಳಿಂದ ಸಂಪೂರ್ಣವಾಗಿಯೂ ವೆತ್ಯಸ್ಥವಾಗಿತ್ತು ಪ್ರವಾದಿಯವರ ಜೀವನವೆಂಬುದು ಹಗಳಿನಂತೆ ವ್ಯಕ್ತವಾದ ಕಾರ್ಯವಾಗಿದೆ. ಅವರು ಯುದ್ದಪ್ರೇಮಿಯಾಗಿರಲಿಲ್ಲ. ಮದ್ಯವನ್ನು ಒಮ್ಮೆಯೂ ಉಪಯೋಗಿಸಲಿಲ್ಲ. ಸ್ತ್ರೀಗಳ ಹಿಂದಿನಿಂದ ಹೋಗಲಿಲ್ಲ. 25ನೇ ವಯಸ್ಸಿನಲ್ಲಿ ವಿವಾಹವಾಗುವುದಕ್ಕಿಂತ ಮುಂಚೆಯೂ ತನ್ನ ಸಂಶುದ್ದತೆಯನ್ನು ಕಳೆದುಕೊಳ್ಳಲಿಲ್ಲ. ಪ್ರವಾದಿ (ಸ.ಅ)ರವರ ಜೀವನದ ಪ್ರತಿಯೊಂದು ಚಲನೆಯೂ ಉಲ್ಲೇಖಿಸಲ್ಪಟ್ಟದ್ದಾಗಿದೆ. ಖತೀಜಾ ಬೀವಿಯವರು ಮರಣಹೊಂದುವವರೇಗೆ ಬೇರೆ ವಿವಾಹವಾಗಲಿಲ್ಲವೆಂಬುವುದು ವ್ಯಕ್ತ. ಅದರರ್ಥ 50 ವರ್ಷದವರೇಗಿನ ತನ್ನ ಜೀವನ ಕಾಲದಲ್ಲಿ ಅಥವಾ ಯುವತ್ವದ ಸಂಧರ್ಭದಲ್ಲಿ ಅರಬಿಗಳೆಲ್ಲರೂ ಅನಾಚಾರ ಹಾಗೂ ಅಧರ್ಮದಲ್ಲಿ ವಿಹರಿಸುತ್ತಿರುವಾಗ ಪ್ರವಾದಿ (ಸ.ಅ)ರವರು ಅಂತಹಾ ಯಾವುದೇ ಅನಾಚಾರಗಳ ದಾಸರಾಗಲಿಲ್ಲ ಎಂಬುವುದು ವ್ಯಕ್ತವಾದ ಉಲ್ಲೇಖಗಳಿಂದ ತಿಳಿಯುವ ಕಾರ್ಯವಾಗಿದೆ. 50ನೇ ವರ್ಷದ ನಂತರ ಅಧಿಕ ಪತ್ನಿಯರನ್ನು ಸ್ವೀಕರಿಸಿದ್ದು ಬೇರೆ ಯಾವುದೇ ದುರುದ್ದೇಶ
 ಆಗಿರಲಿಲ್ಲವೆಂಬುವುದೂ ವ್ಯಕ್ತವಾದ ಕಾರ್ಯವಾಗಿದೆ.
     
  *(ಮುಂದುವರೆಯುವುದು)*
🌻⭐⭐⭐☀☀

Thursday, December 7, 2017

*ಭಾರತದ ಜಾತ್ಯಾತೀತ ಸಂವಿಧಾನಕ್ಕೆ ಕೊಳ್ಳಿ ಇಟ್ಟ ಬಾಬರಿ ಮಸೀದಿ ದ್ವಂಸಕ್ಕೆ ಕಾಲು ಶತಮಾನ ಪೂರ್ತಿಯಾಗುವಾಗ..*

*ಬಾಬರಿಯೊಂದಿಗೆ ಇಬ್ಬರನ್ನು ಕೂಡಾ ಈ ಸಂದರ್ಭದಲ್ಲಿ ನೆನಪಿಸಬೇಕು*

*1, _ಅಬ್ದುಲ್ ನಾಸಿರ್ ಮಹ್'ದನಿ ಉಸ್ತಾದ್_*

*ಬಾಬರಿ ಮಸೀದಿಯನ್ನು ಹೆಚ್ಚು ತಿಳಿದಿರುವುದು, ಕೇಳಿರುವುದೆಲ್ಲವೂ ಮಹ್ದನಿ ಉಸ್ತಾದರ ಮುಖಾಂತರ ಆಗಿರುತ್ತದೆ.*
*ಇಂದು ನಮ್ಮ  ನೆನಪಿನಂಗಳದಲ್ಲಿ ಜ್ವಲಿಸಿ ನಿಲ್ಲುವುದು ಬಾಬರಿ'ಗಾಗಿ ಮಹ್'ದನಿ ಮೊಳಗಿಸಿದ ಶಬ್ದದ ಅಲೆಗಳಾಗಿದೆ.*

*ಉತ್ತರ ಭಾರತದಲ್ಲಿ ಸುರಿದ ಮಳೆಗೆ ಕೇರಳದಲ್ಲಿ ಹಿಡಿದ ಕೊಡೆ ಆಗಿರಲಿಲ್ಲ ಆ ಘರ್ಜನೆ. ಜಾತ್ಯಾತೀತ ಭಾರತದ ಮಹನೀಯ ಪರಂಪರೆಯನ್ನು ಸಂರಕ್ಷಿಸಲಿರುವ ಹೋರಾಟವಾಗಿತ್ತು ಅದು.*

*ಬಾಬರಿ ಮಸೀದಿಯ ಪುನರ್ ನಿರ್ಮಾಣ ಆವಶ್ಯಪಟ್ಟು ಒಂಟಿ ಕಾಲಿನಲ್ಲಿ ಅಯೋಧ್ಯೆಗೆ  ಜಾಥಾ ನಡೆಸಿರುವುದು, ಗಂಡೆದೆಯ ಆ ಹೋರಾಟದ ಒಂದು ಭಾಗವಾಗಿತ್ತು.*
*ಬಾಬರಿಯನ್ನು ಎಂದೂ ನೆನದೂ, ನೆನಪಿಸಿಯೂ, ಸಮರ ಬೀದಿಯಲ್ಲಿ ಹೋರಾಟದ ಜ್ವಲಿಸುವ ಸೂರ್ಯ ಕ್ರಾಂತಿಯಾಗಿತ್ತು ಬಾಬರಿ ವಿಷಯದಲ್ಲಿ ಮಹ್'ದನಿ  ಉಸ್ತಾದ್.*

*2, ಮರ್ಹೂಂ ಖಾಯಿದೆ ಮಿಲ್ಲತ್ತ್ ಸುಲೈಮಾನ್ ಸೆಟ್ಟು ಸಾಹಿಬ್*
===================

*ಅಧಿಕಾರದ ಎಲ್ಲಾ ಸುಖ ಸೌಲಭ್ಯಗಳನ್ನು ಕಿತ್ತೆಸೆದು ಸೆಟ್ಟು ಸಾಹಿಬ್ ಹೊರಗೆ ಬಂದಿರುವುದು ಬಾಬರಿ ಮಸೀದಿಯ ಪರ‌ಹೋರಾಟಕ್ಕಾಗಿತ್ತು.*
*ಬಾಬರಿಯ ರಕ್ತ ಮೆತ್ತಿದ ಕೈ ಕಾಂಗ್ರೆಸ್'ನೊಂದಿಗೆ ಮೈತ್ರಿಯಾಗಿರುವ ಲೀಗ್ ರಾಜಕೀಯದೊಂದಿಗೆ ನಿಲ್ಲಲು ಸೆಟ್ಟು ಸಾಹಿಬ್'ರ ಮನಸಾಕ್ಷಿ ಅದಕ್ಕೆ ಒಪ್ಪಲಿಲ್ಲ. ಅವರ ಹೋರಾಟಕ್ಕೆ ಲೀಗ್ ರಾಜಕೀಯ ಅಡ್ಡಿಯಾಗಿತ್ತು.*
*ಇದರಿಂದಾಗಿದೆ ಸೆಟ್ಟು ಸಾಹಿಬ್'ರು ದುಃಖಿಸಿರುವುದು.*

*ಬಾಬರಿಗಾಗಿ ಕೆಚ್ಚೆದೆಯಿಂದ ಹೋರಾಟ ನಡೆಸಿದವರಾಗಿದ್ದರು ಮಹ್'ದನಿ ಉಸ್ತಾದ್ ಹಾಗೂ ಸೆಟ್ಟು ಸಾಹಿಬರು, ಈ ಇಬ್ಬರು ನೆನಪಿಸಿದಂತೆ ಬಾಬರಿಯನ್ನು ಯಾರೂ ಕೂಡಾ ನೆನಪಿಸಿಲ್ಲ. ಇವರು ಹೋರಾಡಿದ ರೀತಿಯಲ್ಲಿ ಬಾಬರಿಗೆ ಬೇಕಾಗಿ ಯಾರು ಕೂಡಾ ಹೋರಾಟ ನಡೆಸಲಿಲ್ಲ.*

✍ಗಫೂರ್ ಬಾಯಾರ್
🔮🔮🔮🔮🔮🔮🔮🔮🔮
*ನಬಿದಿನಾಚರಣೆಯ ಕುರಿತು ಹಳೆ ಕಾಲದ ವಹ್ಹಾಬಿ ದರ್ಮಸ್ತರ ಅಭಿಪ್ರಾಯಗಳು*
👇👇👇👇👇

ಅಂತ್ಯ ದಿನದ ಕುರಿತು ಹೆದರಿಕೆ ಇರುವವರು, ಅಲ್ಲಾಹನನ್ನು ಅಧಿಕವಾಗಿ ಹೆದರಿಕೆ ಇರುವವರು ಮೌಲಿದ್ ಸದಸ್ಸ್'ನಲ್ಲಿ ಬಂದು ಸೇರಬೇಕು.

( *ಅಲ್ ಮುರ್ಶಿದ್ ಪುಸ್ತಕ: ಪುಟ: 3* )

ಮೌಲಿದ್ ಸಭೆ ಒಂದು ಪುಣ್ಯ ಸಭೆಯಾಗಿದೆ. ಅದರಲ್ಲಿ ಬಾಗಿಯಾಗಲು ತೌಫೀಖ್ ಲಭಿಸುವವರು ಭಾಗ್ಯವಂತರಾಗಿದ್ದಾರೆ.

( *ಅಲ್ ಮುರ್ಶಿದ್ ಪುಸ್ತಕ: 05 ಪುಟ: 23* )

🙆‍♂ ಇದಲ್ಲದೆ ವಹ್ಹಾಬಿ ಆಶಯಗಾರರಾದ ಶೈಖ್ ಇಬ್ನು ತೈಮಿಯ್ಯ ಹೇಳುವುದು ನೋಡಿ.
👇👇👇👇👇

ಕೆಲವರು ನಬಿ ﷺ ರವರ ಜನ್ಮದಿನವನ್ನು ಗೌರವಿಸಿ, ಅದನ್ನು ಒಂದು ಆಚರಣೆಯಾಗಿ ಕೊಂಡಾಡುತ್ತಾರೆ.
ಅವರು ಅದು ಮಾಡುವುದು ಒಳ್ಳೆಯ ಉದ್ದೇಶದೊಂದಿಗೆ ಅಗಿದರಿಂದ್ದ ನಬಿ ﷺ ರವರನ್ನು ಬಹುಮಾನಿಸುವ ಭಾಗವಾಗಿದ್ದರಿಂದಲೂ ಅದಕ್ಕೆ ದೊಡ್ಡ ಪ್ರತಿಫಲ ಲಭಿಸುದಾಗಿದೆ.

( *ಇಖ್'ತಿಳಾಉ ಸ್ಸಿರಾತಿಲ್ ಮುಸ್'ತಖಿಮ್, ಪುಟ: 296* )

🍄 ನಬಿದಿನಾಚರಣೆ ಮಾಡುವವರನ್ನು ಮುಶಿಕ್'ಗಳನ್ನಾಗಿ ಮಾಡಿ ಬಿಂಬಿಸುವ ನೂತನವಾದಿ ಮೌಲವಿಗಳು ಮತ್ತು ಅನುಯಾಯಿಗಳು ತಮ್ಮ ಪೂರ್ವಿಗರನ್ನು ಕಲಿಯುವುದು ಒಳ್ಳೆದು.

✍ ಗಫೂರ್ ಬಾಯಾರ್
🔖🔖🔖🔖🔖🔖🔖🔖🔖
*ಅಹ್ಲುಸ್ಸುನ್ನತ್ ವಲ್ ಜಮಾಅತ್*
*••••••••••••••••••••••••••••••••••••*
*📝ಮುನೀರ್ ಸಖಾಫಿ, ಸಾಲೆತ್ತೂರು*
*°°°°°°°°°°°°°°°°°°°°°°°°°°°°°°°°°*
*ವಿಷಯ : 1*
 *ಮೀಲಾದುನ್ನಬೀ*
*ಭಾಗ ---12.*
______________________________________

*ವಹ್ಹಾಬಿಗಳ ಮೌಲಿದ್ ಮತ್ತು ಸೀರಣೆ ವಿತರಣೆ.*

ಈದ್ ಮೀಲಾದ್ ಗೆ ಪುರಾವೆ ಖುರ್'ಆನ್ ಮತ್ತು ಹದೀಸುಗಳಲ್ಲಿ ಹಾಗೂ ಇಮಾಮರುಗಳ ಗ್ರಂಥಗಳಲ್ಲಿ ಧಾರಾಳ ಇವೆ.
ಏನೇ ಪುರಾವೆ ಮಂಡಿಸಿದರೂ ಸಲಪಿಗಳು ಅಂಗೀಕರಿಸುವವರಲ್ಲ ಎಂಬುವುದು ಎಲ್ಲರಿಗೂ ತಿಳಿದ ವಿಚಾರ.
ಮೌಲಿದ್ ನಲ್ಲಿ ಸೀರಣೆ ವಿತರಣೆ ಮಾಡುವುದಕ್ಕೂ  ಕೂಡಾ ಪ್ರಮಾಣವಿದೆ.

ಮೌಲಿದ್ ಮತ್ತು ಸೀರಣೆಯನ್ನು ಗೇಲಿ ಮಾಡುವ ಆಧುನಿಕ ಸಲಪಿಗಳಿಗೆ ಪೂರ್ವ ಕಾಲದ ಸಲಪಿಗಳು ಮೌಲಿದ್ ಮತ್ತು ಸೀರಣೆ ತಿಂದು ಮೌಲಿದ್ ಮಾಡಿದ ಬಗ್ಗೆ ಅವರದ್ದೇ ಪತ್ರಿಕೆಯಲ್ಲಿ ಬರೆದಿದ್ದಾರೆ.

ಈ ಲೇಖನ ಬರೆಯುವಾಗ ಮಿತ್ರರೊಬ್ಬರು "ರಬಿವುಲ್ ಅವ್ವಲ್ 12 ರಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಉಪವಾಸ ಆಚರಿಸಿದ್ದರು ಎಂಬುವುದನ್ನು ಹೇಳಿ ಸುನ್ನಿಗಳು ಮೀಲಾದ್'ನ ಹೆಸರಲ್ಲಿ ಹೊಟ್ಟೆ ತುಂಬಾ ತಿಂದು ಮೀಲಾದ್ ಆಚರಿಸುತ್ತಾರೆ" ಎಂಬ ಸುನ್ನಿಗಳನ್ನು ಹಿಯಾಳಿಸುವ ಸಲಪಿಯ  ಲೇಖನವನ್ನು ಕಳುಹಿಸಿದರು.

ಮಾನ್ಯ ವಹ್ಹಾಬಿಗಳೇ!!

ಖುರ್'ಆನ್ ಮತ್ತು ಹದೀಸ್ ಪುರಾವೆ ಹೇಳುವ ಬದಲು ನಿಮ್ಮ ನಾಯಕರ ಮೀಲಾದ್ ಮತ್ತು ಸೀರಣೆಯ ಕುರಿತು ನೀವು ಬರೆದದ್ದನ್ನು ಇಲ್ಲಿ ನೀಡುತ್ತಿದ್ದೇನೆ.
ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಉಪವಾಸ ಆಚರಿಸಿ ಮೀಲಾದ್ ಆಚರಿಸಿದರೆ ನೀವು ಕೂಡಾ ಹಾಗೇ ಮಾಡಬಾರದೇಕೆ? ಎಂದು ಕೇಳಿದ ವಹ್ಹಾಬಿಯು ಈ ಪ್ರಶ್ನೆಯನ್ನು ಮೌಲಿದ್ ನಡೆಸಿ ಸೀರಣೆ ತಿಂದ ಮುದಿ ನಾಯಕರ ಕಬರಿಗೆ ಫ್ಯಾಕ್ಸ್ ಮಾಡಲಿ.

ವಹ್ಹಾಬಿಯ ಪತ್ರಿಕೆಯಲ್ಲಿ ಬರೆಯುವುದನ್ನು ನೋಡಿ,

_ರಬೀವುಲ್ ಅವ್ವಲ್ ತಿಂಗಳನ್ನು ಮುಸ್ಲಿಮರು ಎಲ್ಲರೂ_ _ಆಚರಿಸುತ್ತಾರೆ. ಆಚರಿಸಬೇಕಾಗಿದೆ. ಈ ಆಚರಣೆ ಹಲವು ಒಳಿತನ್ನು ಉಂಟು ಮಾಡುತ್ತದೆ. ಪುಣ್ಯ ಪ್ರವಾದಿಯೊಂದಿಗೆ ಸ್ನೇಹವನ್ನು ಹೃದಯದಲ್ಲಿ ಭಧ್ರಗೊಳಿಸುತ್ತದೆ. ಅವರ ಉತ್ತಮ ಗುಣಗಳನ್ನು ಸ್ಮರಿಸುವುದಕ್ಕೆ ಅದು ಹೇತುವಾಗುತ್ತದೆ._
(ಅಲ್ ಮುರ್ಶಿದ್; ಪುಸ್ತಕ 4, ಪುಟ 22).

ಈದ್ ಮೀಲಾದ್  ಆಚರಿಸಬೇಕೆಂದು ಇಲ್ಲಿ ಸಲಪಿಗಳೇ ಆಹ್ವಾನ ನೀಡಿದ್ದಾರೆ.

ಅಂದಿನ ಸಲಪಿಗಳಿಗೆ ಅನುವದನೀಯವಾದ್ದು ಈಗಿನ ಸಲಪಿಗೆ ಬಿದ್'ಅತ್ ಆದದ್ದು ಹೇಗೆ?

ಈ ಹೇಳಿದ ನಿಮ್ಮ ತಾತಂದಿರಾದ ವಹ್ಹಾಬಿಗಳು ನರಕದಲ್ಲಾ?
ನೀವು ಓದುವ ಆಯತ್, ಹದೀಸ್ ಅವರಿಗೆ ಸಿಗಲಿಲ್ಲವೇ?

*ವಹ್ಹಾಬಿಗಳ ಮೌಲಿದ್ ಮಜ್ಲಿಸ್*

ಸಲಪಿ ಬರೆಯುತ್ತಾನೆ;
_ರಬೀವುಲ್ ಅವ್ವಲ್ ತಿಂಗಳನ್ನು ಯಾವ ರೀತಿ  ಆಚರಿಸಬೇಕೆಂದೂ ಪ್ರವಾದಿಯೊಂದಿಗೆ ಗೌರವವನ್ನು ಯಾವ ರೀತಿ ತೋರ್ಪಡಿಸಬೇಕೆಂದು  ನಮಗೆ ಪರಿಶೀಲಿಸೋಣ._
_ರಬೀವುಲ್ ಅವ್ವಲ್ ತಿಂಗಳು ಆಗಮಿಸಿದಲ್ಲಿ ಮನೆ ಮನೆಗಳಲ್ಲಿ ಮೌಲಿದ್ ಓದುವ ಸಂಪ್ರದಾಯ  ಕಾಲಾಂತರಗಳಿಂದ ನಮ್ಮ ಊರುಗಳಲ್ಲಿ ನಡೆದು ಬರುತ್ತಿದೆ._
(ಅಲ್ ಮುರ್ಶಿದ್, ಪುಸ್ತಕ:2; ಪುಟ 267)

_*ಮೌಲಿದ್ ಗಾಗಿ ಕಮಿಟಿ ಮತ್ತು ನೇರ್ಚೆ ಹಣ*_

_ಈ ರಬೀವುಲ್ ಅವ್ವಲ್ ರಲ್ಲಿ *ಸೀರಾ ಪ್ರಚಾರ ಸಂಘ* ಎಂಬ ಹೆಸರಲ್ಲಿ ಅಥವಾ *ಇಸ್ಲಾಮ್ ಸಂರಕ್ಷಣಾ ಸಂಘ* ಎಂಬ ಹೆಸರಲ್ಲಿ ಎಲ್ಲಾ ಪ್ರದೇಶಗಳಲ್ಲೂ ಕಮಿಟಿ ರೂಪೀಕರಿಸಬೇಕು. ಅದು ನಮ್ಮ ತೌಬಾಗಿರುವ ಕಾರಣವಾಗಿರಲಿ. ಆ ಸಂಘದಲ್ಲಿ ಸದಸ್ಯರಾದ ಎಲ್ಲರೂ ಅವರವರ ತಾಕತ್ತಿನಂತೆ ಸ್ವಂತವಾಗಿ *ಫೀ ಸಬೀಲಿಲ್ಲಾಹ್ ಫಂಡ್* ಎಂಬ ಹೆಸರಲ್ಲಿ ಫಂಡ್ ಶೇಕರಿಸಬೇಕು. ಎಲ್ಲಾ ರಬೀವುಲ್ ಅವ್ವಲ್ ತಿಂಗಳಿನಲ್ಲಿ ಮೌಲಿದ್ ಮಜ್ಲಿಸ್ ಮುಖಾಂತರ ಮುಶಾವರ ನಡೆಸಿ_
_ಈ ಫಂಡ್ ಹೇಗೆ ಖರ್ಚು ಮಾಡಬೇಕೆಂದು ತೀರ್ಮಾನಿಸಬಹುದಾಗಿದೆ._
(ಅಲ್ ಮುರ್ಶಿದ್; ಪುಸ್ತಕ 1, ಪುಟ:197)

_*ಸಲಪಿಗಳ ಭರ್ಜರಿ ಸೀರಣೆ ವಿತರಣೆ*_

_ಈ ಸಂದರ್ಭದಲ್ಲಿ ಎರಡು ವರ್ಷಗಳಿಂದ "ಮುಸ್ಲಿಂ ಐಕ್ಯ ಸಂಘಂ" ಎಂಬ ಸಂಘಟನೆಯ ವತಿಯಿಂದ ನಡೆಸುತ್ತಿರುವ ಮೌಲಿದ್ ಕಾರ್ಯಕ್ರಮ ಈ ವರ್ಷ ರಬೀವುಲ್ ಅವ್ವಲ್ 12 ರಂದು ಬಹಳ ಸೊಗಸಾಗಿ  ನಡೆದ ಸಂಗತಿಯನ್ನು ಪ್ರೀತಿಯ ಓದುಗರಿಗೆ ಸಂತೋಷಪೂರ್ವಕ ತಿಳಿಸಬಯಸುತ್ತೇವೆ._
_ಸಭೆಯಲ್ಲಿ ಹಾಜರಾದವರಿಗೂ ಅಲ್ಲದವರಿಗೂ ಒಂದು ಆತಿಥ್ಯ ನೀಡಲಾಯಿತು._
(ಅಲ್ ಇರ್ಶಾದ್: ಪುಸ್ತಕ 1, ಸಂಚಿಕೆ 5; 1343 ಅಬೀವುಲ್ ಅವ್ವಲ್ :158)

ಸೀರಣೆ ಎಂಬುವುದನ್ನು ಸಲಪಿ ಮಲಯಾಳಂ ನಲ್ಲಿ "ವಿರುನ್ನ್" (ಆತಿಥ್ಯ) ಅಂತ ಹೇಳಿದ್ದಾನೆ.

ಸಲ್ಪಿಗಳೇ!
ಹೇಗಿದೆ ವಹ್ಹಾಬಿಗಳ ಮೌಲಿದ್ ಮತ್ತು ಸೀರಣೆ ವಿತರಣೆ.
ಪುರಾವೆ ಕೇಳಿ ಮುಸ್ಲಿಮರನ್ನು ವಸ್ವಾಸ್ ಮಾಡುವ ಬದಲು ನಿಮ್ಮ ಪೂರ್ವಿಕರು ಮೌಲಿದ್ ಮಾಡಿ ನೇರ್ಚೆ ಹಣ ಶೇಕರಿಸಿ, ಸೀರಣೆ ಕೊಟ್ಟ ಮಹಾ ಪಾಪಕ್ಕೆ (ಆಧುನಿಕ ಸಲಪಿಗಳ ಅಭಿಪ್ರಾಯ ಪ್ರಕಾರ) ಇಸ್ತಿಗ್'ಫಾರ್ ಕೇಳಿರಿ.

ಇದೆಲ್ಲವೂ ನಿಮ್ಮ ತಾತಂದಿರಿಗೆ ಹಲಾಲ್.
ನಿಮಗೆ ಶಿರ್ಕ್, ಬಿದ್'ಅತ್.
ಇದೆಂತಹಾ ದೀನಯ್ಯಾ?!



*ಮುಂದುವರಿಯುವುದು.............*

*📝ಮುನೀರ್ ಸಖಾಫಿ, ಸಾಲೆತ್ತೂರು*
ತಂದೆ ಮತ್ತು ಮಗಳು ಗಾಳಿಪಟವನ್ನು ಹಾರಿಸುತ್ತಿರುವಾಗ ತಂದೆ ತನ್ನ ಮಗಳೊಡನೆ ಕೇಳುತ್ತಾನೆ.
"ಮಗಳೇ ಒಂದು ಪ್ರಶ್ನೆ,ಇದಕ್ಕೆ ಸರಿಯಾದ ಉತ್ತರ ನೀನು ನೀಡಬೇಕು."
"ಗಾಳಿಪಟ ಹಾರಿಸುವಾಗ ನೂಲಿನ ಕೆಲಸವೇನು"?
"ಅಪ್ಪ..  "ನೂಲು... ಆ ಗಾಳಿಪಟವನ್ನು ಹಾರಲು ಬಿಡದೆ ಎಳೆದು ಹಿಡಿದಿರುವುದು" ಮಗಳು ತಟ್ಟನೆ ಉತ್ತರ ಕೊಟ್ಟಳು

ತಂದೆ : " ಅಲ್ಲ ಮಗಳೇ... ನೂಲು.. ಆ ಗಾಳಿಪಟಕ್ಕೆ ಗುರಿ ತಪ್ಪದೆ ಹಾರಲು ಅನುವು ಮಾಡಿ ಕೊಡುವುದು"

ಮಗಳು ಇದನ್ನು ಕೇಳಿ ಹಾಸ್ಯ ರೂಪದಲ್ಲಿ ನಕ್ಕಳು.

ಅದು ಕಂಡ ತಂದೆ ಒಂದು ಕತ್ತರಿಯಿಂದ ನೂಲನ್ನು ತುಂಡು ಮಾಡಿದನು.ನಿಯಂತ್ರಣ ತಪ್ಪಿದ ಆ ಗಾಳಿಪಟ ಸ್ವಲ್ಪ ಮುಂದೆ ಹಾರಿ ತಲೆ ಕೀಳಾಗಿ ಚಿಂದಿ ಚಿಂದಿಯಾಗಿ ಕೆಳಗೆ ಬಿತ್ತು.ಇದನ್ನು ನೋಡಿ ನಿಂತ ಮಗಳೊಡನೆ
"ಮಗಳೇ ಇದಾಗಿದೆ ವಾಸ್ತವ ...   ನೂಲು ಗಾಳಿಪಟವನ್ನು ಹಾರಲು ಬಿಡದೆ ಎಳೆದು ಹಿಡಿದಿರುವುದಾಗಿ ನೀನು ಭಾವಿಸಿದ್ದಿ.  ನೂಲಿನ ನಿಯಂತ್ರಣ ಬಿಟ್ಟರೆ ಸ್ವತಂತ್ರವಾಗಬಹುದು ಎಂದು ನೀನು ನಂಬಿದ್ದಿ.. ಆದರೆ ಆ ಸ್ವತಂತ್ರ ಎಷ್ಟೊಂದು ಅಲ್ಪಕಾಲವೆಂದು ನಿನಗೆ ಅರ್ಥವಾಯಿತಲ್ಲವೇ?
ನೀನು ಎಂಬ ಗಾಳಿಪಟವನ್ನು ನಿಯಂತ್ರಿಸುವ ನೂಲಾಗಿದೆ ಈ ಅಪ್ಪ , ನನ್ನ ನಿಯಂತ್ರಣದಲ್ಲಿ ನಿನಗೆ ಎಷ್ಟು ಎತ್ತರಕ್ಕೂ ಹಾರಬಹುದು. ಸ್ವತಂತ್ರವಾಗಿ ಹಾರಬಹುದು ಎಂಬ ಭ್ರಮೆಯಲ್ಲಿ ನನ್ನನ್ನು ನೀನು ಕೊಯ್ಯಬೇಡ ..."

( ಈ ಕಾಲದಲ್ಲಿ ಬೆಳೆದು ಬರುತ್ತಿರುವ  ಎಲ್ಲಾಮಕ್ಕಳಿಗಾಗಿ ...)

 ಮಲಯಾಳದಿಂದ ಕನ್ನಡಕ್ಕೆ..

Wednesday, December 6, 2017

*ಸ್ವಲಾತ್ ಎಂದೆರೇನು?.....*☪☪☪☪☪7⃣8⃣6⃣3⃣1⃣3⃣,9⃣9⃣

ಸ್ವಲಾತ್ ಎಂದೆರೆ ನಮಾಜ್,ಆರಾಧನೆ,ದುಆ...ಮುಂತಾದ ಹಲವಾರು ಅರ್ಥಗಳಿವೆ.ಇಲ್ಲಿ ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮೇಲೆ ಸ್ವಲಾತ್ ಹೇಳುವುದೆಂದರೆ ಅಲ್ಲಾಹನ ಅಗಣಿತ ಅನುಗ್ರಹಗಳು ನಬಿಯವರಿಗೆ ಸಿಗಲು,ಅವರ ಮಹೋನ್ನತ ಸ್ಥಾನ ಇನ್ನಷ್ಟು ಏರುತ್ತಲೇ ಇರಲು ನಾವು ಪ್ರಾರ್ಥಿಸುವುದಾಗಿದೆ.ಅಲ್ಲಾಹು ಸ್ವಲಾತ್ ಹೇಳುವುದೆಂದರೆ ಅವನ ಅಪಾರ ಅನುಗ್ರಹ,ಕಾರುಣ್ಯಗಲನ್ನು ನಬಿಯವರ ಮೇಲೆ ಸುರಿಸುವುದೆಂದರ್ಥ.
    ಮಲಕುಗಳ ಸ್ವಲಾತ್ ಎಂದೆರೆ ಅಲ್ಲಾಹನ ಅನುಗ್ರಹ ಮತ್ತು ಕರುಣೆ ಅವರ ಮೇಲೆ ಇನ್ನಷ್ಟು ವರ್ದಿಸಲು ಅವರು ಬೇಡುಹುದೆಂದರ್ಥ .ಸ್ವಲಾತ್ ಹೇಳಿದವರ ಮೇಲೆ ಅಲ್ಲಾಹು ಸ್ವಲಾತ್ ಹೇಳುವುದೆಂದರೆ ಆತನ ಕರುಣೆ ನಮ್ಮ ಮೇಲೆ ಸುರಿಯುತ್ತಿರುವುದೆಂದೂ,ಮಲಕುಗಳ ಸ್ವಲಾತ್ ಎಂದರೆ ನಮ್ಮ ಕ್ಷಮಯಾಚನೆಗಾಗಿ ಅವರು ಸದಾ ಪ್ರಾರ್ಥಿಸುವುದಾಗಿದೆ ಎಂದರ್ಥ. *ಸ್ವಲಾತ್ ಹೇಳುವ ಕಾರ್ಯ ಇಂದು ನಿನ್ನೆ ತೊಡಗಿದ್ದಲ್ಲ  ಅಲ್ಲಾಹು ಅವನನ್ನು ಪರಿಚಯಿಸಲು ಉದ್ದೇಶಿಸಿ ನಮ್ಮ ನಬಿಯ ಪ್ರಕಾಶ (ನೂರ್)ವನ್ನು ಸೃಷ್ಟಿಸಿ, ಮಲಕ್ ಗಳನ್ನು  ಸೃಷ್ಠಿಸಿದಂದಿನಿಂದ ತೊಡಗಿದ  ಈ ಕಾರ್ಯ ಸ್ವರ್ಗದಲ್ಲೂ ಕೂಡ ನಿರಂತರ ನಡೆಯುತ್ತಲೇ ಇರುತ್ತದೆ.*
   ಮಲಕುಗಳ ಸಂಖ್ಯೆಯನ್ನು ಅಲ್ಲಾಹು ಅಲ್ಲದೆ ಯಾರೂ ಅರಿಯಲಾರದು.ಆದ್ದರಿಂದ ದಿನವೊಂದರಲ್ಲಿ ಅಲ್ಲಾಹನ ಸೃಷ್ಟಿಗಳಿಂದ ಎಷ್ಟೊಂದು ಸ್ವಲಾತ್ ಪ್ರವಾದಿವರ್ಯರಿಗೆ  ಸಲ್ಲಿಸಲ್ಪಡುವುದೆಂದು ಹೇಳಲ ಸಾಧ್ಯವಾಗಿದೆ. *ಯಾವುದೇ ಆರಾಧನೆಗಳನ್ನು ಮಾಡಿದರೂ ಆ ಆರಾಧನೆಗಳನ್ನು ಸ್ವೀಕರಿಸಿದರೆ  ಮಾತ್ರ ಫಲ.ಆರಾಧನೆಗಳು ಸ್ವೀಕರಿಸಲ್ಪಟ್ಟಿದೆ ಎಂದು ಯಾರಿಗೂ ಯಾವ ಗ್ಯಾರಂಟಿಯೂ ಇಲ್ಲ.ಆದ್ದರಿಂದಲೇ ಎಲ್ಲಾ ಪ್ರವಾದಿಗಳು,ಆ ಪ್ರವಾಧಿಗಲ ಸಜ್ಜನ ಅನುಯಾಯಿಗಳು ಯಾವುದೇ ಸತ್ಕರ್ಮ(ಇಬಾದತ್) ಮಾಡಿದರೂ ಆ ಸತ್ಕಾರ್ಯಗಳ ಕೊನೆಯಲ್ಲಿ ಕಣ್ಣೀರ ಹೊಳೆ ಹರಿಸಿ *ರಬ್ಬನಾ ತಕ್ವಬ್ಬಲ್ ಮಿನ್ನಾ*"ಒಡೆಯನೇ ಇದನ್ನು ನೀನು ಸ್ವೀಕರಿಸು " ಎಂದು ದುಆ ಮಾಡಿದ್ದು.*
       *ಸಮಸ್ಯೆಗಲಿಲ್ಲದ ಮನುಷ್ಯನಿಲ್ಲ ಮಾನಸಿಕವಾಗಿ ಶಾರೀರಿಕವಾಗಿ ಸರ್ವ ಸಮಸ್ಯೆಗಳ ಗೂಡಾಗಿದ್ದಾನೆ  ಮನುಷ್ಯ*.
   ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ಅತ್ಯದ್ಭುತ ಶಕ್ತಿ ಅದಕ್ಕಿದೆ ಅದುವೇ *ದರೂದ್ ಶರೀಫ್ ಅಥವಾ ಸ್ವಲಾತ್*ಆಗಿದೆ . *"ನೀವು ಅಲ್ಲಾಹನನ್ನು ಪ್ರೀತಿಸುವುದಾದರೆ ನಬಿಯವರನ್ನು ಅನುಸರಿಸಿರಿ,ನಬಿಯವರನ್ನು ಅನುಸರಿಸಿದರೆ ನಿಮ್ಮನ್ನು ಅಲ್ಲಾಹು ಪ್ರೀತಿಸುತ್ತಾನೆ.ನಿಮ್ಮನ್ನು ಪಾಪಗಳಿಂದ ಮುಕ್ತಿ ಗೊಳಿಸುತ್ತಾನೆ"*【ಕುರಾನ್】
   *ನಬಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಅನುಸರಣೆಗಳಲ್ಲೊಂದಾಗಿದೆ ಅವರ ಮೇಲೆ ಸ್ವಲಾತ್ ಹೇಳುವುದು .*

ಆದ್ದರಿಂದ ನಾವು ಸ್ವಲಾತನ್ನು ಹೆಚ್ಚಿಸೋಣ ಅಲ್ಲಾಹು ನಮಗೆ ಥಉಫೀಕ್ ನೀಡಲಿ ಆಮೀನ್

ಮೊಲಗಲಿ ಎಲ್ಲರ ಬಾಯಿಯಲ್ಲಿ   ಸ್ವಲಾತ್ 


🌺صلّوا  على الحبيب (ﷺ.

*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ*
💕 *ಪುಣ್ಯ ಪ್ರವಾದಿ ( ﷺ) ತಂಙಳ್ ರವರ ಮೇಲೆ ಮೂರು ಸ್ವಲಾತ್*
*اللهم صل علي سيدنا محمد عبدك ورسولك النبي الامي وعلي اله وصحبه وسلم* ✨
💐❇💐❇💐❇💐❇


✍ಝಿಯಾದ್ ಕರೊಡ

Swallu alal habeebﷺ
whatsapp group
7498455036
🌿 *ಕೃಷಿ ; ಮಹತ್ವವಿರುವ ಸುನ್ನತ್* 🌾
============================
*ಬಹು ದೊಡ್ಡ ಪ್ರತಿಫಲವನ್ನು ವಾಗ್ದಾನ ಮಾಡಿರುವ ಒಂದು ಸತ್ಕರ್ಮವಾಗಿದೆ ಕೃಷಿ. ಅದರಲ್ಲಿ ಪ್ರಾಮಾಣಿಕತೆಯಿದ್ದರೆ...*

ನಬಿﷺ ಹೇಳಿದರು; "ಯಾವೊಬ್ಬ ಮುಸ್ಲಿಮನಾದರೂ, ಒಂದು ಮರವನ್ನು ನೆಟ್ಟರೆ, ಒಂದು ಬೀಜವನ್ನು ಹೂತು ಅದರಿಂದ ಒಂದು ಪಕ್ಷಿಗಳೋ, ಮನುಷ್ಯರೋ, ಪ್ರಾಣಿಗಳೋ ಭಕ್ಷಿಸಿದರೆ ಅದು ಅವನಿಗೆ ದಾನದ ಪುಣ್ಯ ಲಭಿಸದೇ ಇರದು." (ಬುಖಾರಿ:2320, ಮುಸ್ಲಿಂ:1553)

ನಬಿﷺ ಹೇಳಿದರು; "ಮುಸ್ಲಿಮಾದ ಒಬ್ಬ ವ್ಯಕ್ತಿ ಒಂದು ಮರವನ್ನು ನೆಟ್ಟು ಅದರಿಂದ (ಏನಾದರೂ) ಯಾರಾದರೂ ಭಕ್ಷಿಸಿದರೆ, ಅದು ಅವನಿಗೆ ದಾನ ನೀಡಿದ ಪುಣ್ಯ ಲಭಿಸುವುದು. ಅದರಿಂದ ಕಳ್ಳತನವಾದರೂ ಅದೂ ಕೂಡಾ ದಾನವಾಗಿದೆ. *(ಒಂದು ಬರಹವನ್ನು ಬರೆದವನ ಹೆಸರು ಅಳಿಸಿ ಅಥವಾ ಬೇರೆ ಹೆಸರು ಹಾಕಿ ರವಾನಿಸುವುದು ಕೂಡಾ ಇದರಲ್ಲಿ ಸೇರುವುದು).*
ಅದರಿಂದ ಪ್ರಾಣಿಗಳು,ಪಕ್ಷಿಗಳು ಭಕ್ಷಿಸಿದರೂ ಅದೂ ಕೂಡಾ ದಾನವಾಗಿದೆ. ಅದರಿಂದ ಯಾರು ಏನು ತೆಗೆದರೂ ಅದು ಅಂತ್ಯ ದಿನದವರೆಗೂ ದಾನವಾಗಿದೆ." (ಮುಸ್ಲಿಂ:1552)

ಇಮಾಂ ನವವೀ رضي الله عنه ಹೇಳಿದರು; "ಈ ಹದೀಸ್ ಕೃಷಿ ಮತ್ತು ವೃಕ್ಷಗಳನ್ನು ನೆಡುವುದರ ಮಹತ್ವನ್ನು ವ್ಯಕ್ತಪಡಿಸುತ್ತದೆ. ತಾನು ನೆಟ್ಟ ಮರಗಳು, ಸಸಿಗಳು ಅದು ಇರುವವರೆಗೂ ಅದಕ್ಕೆ ಕಾರಣವಾದ ವ್ಯಕ್ತಿಗೆ ಪ್ರತಿಫಲವು ಲಭಿಸುತ್ತಲಿರುವುದು ಎಂದು ಈ ಹದೀಸ್ ನಿಂದ ತಿಳಿಯಬಹುದು.
ಬಹಳ ಒಳ್ಳೆಯ ಸಂಪಾದನೆ ಯಾವ ಮಾರ್ಗದಿಂದ ಲಭಿಸುವುದು ಎಂದು ಪಂಡಿತರೆಡೆಯಲ್ಲಿ ಅಭಿಪ್ರಾಯ ವ್ಯತ್ಯಾಸವಿದೆ. ವ್ಯಾಪಾರ, ಕೈ ಕೆಲಸಗಳು, ಕೃಷಿ ಮುಂತಾದ ಹಲವು ಅಭಿಪ್ರಾಯಗಳು ಹೇಳಿದ್ದರಲ್ಲಿ ಕೃಷಿಯಾಗಿದೆ ಬಹಳ ಮಹತ್ವವಾದ ಸಂಪಾದನೆ ಮಾರ್ಗವೆಂಬ ಅಭಿಪ್ರಾಯವಾಗಿದೆ ಸರಿ. (ಶರ್ಹುನ್ನವವಿ:10/213)

ನಬಿﷺ ಹೇಳಿದರು; " ಅಂತ್ಯದಿನ ಸಂಭವಿಸುವಾಗ ನಿಮ್ಮ ಕೈಯಲ್ಲಿ ಒಂದು ಸಣ್ಣ ಖರ್ಜೂರದ ಸಸಿ ಇದ್ದರೆ, ಅದನ್ನು ನೆಡಲು ಸಾಧ್ಯವಾದರೆ ಅವನು ಮಾಡಲಿ." (ಅಹ್ಮದ್:12902)

ಅಬ್ದುಲ್ಲಾಹಿ ಇಬ್ನು ಸಲಾಮ್ رضي الله عنه ಹೇಳಿದರು; "ಒಂದು ಕಣಿವೆಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರೆ, ದಜ್ಜಾಲ್ ನ ಆಗಮನವಾಗಿದೆ ಎಂಬ ವಾರ್ತೆ ಕೇಳಿದರೂ ವಿಚಲಿತನಾಗದಿರು. ನಿನ್ನ ಕೃಷಿಯನ್ನು ನೀನು ಒಳ್ಳೆಯದಾಗಿಸು. ಖಂಡಿತವಾಗಿಯೂ ಜನರಿಗೆ ಅದರ ನಂತರವೂ ಜೀವನವಿದೆ." (ಸ್ವಹೀಹ್:9)

ಅಮ್ಮಾರ್ ಇಬ್ನು ಕುಸೈಮಾ رضي الله عنه ಹೇಳಿದರು; "ಉಮರ್ ಇಬ್ನು ಖತ್ತಾಬ್ ಒಂದು ದಿನ ನನ್ನ ತಂದೆಯೊಡನೆ ಹೇಳಿದರು: 'ನಿಮ್ಮ ಭೂಮಿಯನ್ನು ಯಾಕಾಗಿ ಕೃಷಿ ಮಾಡದೇ ಬಿಟ್ಟಿರುವುದು?'
ನನ್ನ ತಂದೆ ಹೇಳಿದರು; 'ನಾಳೆ ಮರಣಹೊಂದಲು ಪ್ರಾಯವಿರುವ ವೃದ್ಧನಾಗಿದ್ದೇನೆ ನಾನು.'
ಉಮರ್ رضي الله عنه ಹೇಳಿದರು; 'ನೀವು ಹೇಗಾದರೂ ಕೃಷಿ ಮಾಡಲೇಬೇಕು.' ನನ್ನ ತಂದೆಯೊಂದಿಗೆ ಆ ಭೂಮಿಯ ಲ್ಲಿ ಉಮರ್ رضي الله عنه ಕೃಷಿಯನ್ನು ಮಾಡಿದ್ದು ನಾನು ನೋಡಿದ್ದೇನೆ." (ಸ್ವಹೀಹ್:9)
             ✍ *ಇಕ್ಬಾಲ್ ಜಿ.ಕೆ.ಗುಲ್ವಾಡಿ*
*❗ಬೆಂಕಿ ಕಟ್ಟಿಗೆಯನ್ನು ಸುಡುವಂತೆ, ಅಸೂಯೆ ಸತ್ಕರ್ಮಗಳನ್ನು ನಾಶ ಮಾಡುವುದು❗*
ಅಲ್ಲಾಹು ನಮ್ಮೆಲ್ಲರಿಗೂ ಸತ್ಕರ್ಮವನ್ನು ಮಾಡಲು ತೌಫೀಖ್ ನೀಡಲಿ, ಆಮೀನ್..
🍁🍁🍁🍁🍁🍁🍁🍁🍁🍁
🔹ನಬಿ ﷺ ರವರ ಮೇಲೆ ಒಂದು ಸ್ವಲಾತ್
💫اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله🌹
〰〰〰〰〰〰〰〰〰〰
🐜🐜🐜🐜🐜🐜🐜🐜   
🐜 *ಇರುವೆಯ ದಾಂಪತ್ಯ*  🐜

        🖋ಅನ್ಸಾರ್ ಹುಮೈದಿ ಇರಾ ಮೂಲೆ

"ಇರುವೆಯು ಒಂದು ಅದ್ಭುತ ಜೀವಿ" ಎಂದು ಅಧ್ಯಯನ ಮಾಡಿದವರು ಹೇಳುತ್ತಾರೆ. ಸಣ್ಣ ಸಣ್ಣ ಇರುವೆಗೆ ಯಾಕಿಷ್ಟು ಬಿಲ್ಡಪ್ ಅಂತ ಕೇಳಬೇಡಿ. ಕಾರಣ ಅವುಗಳಿಗೆ ಬೇಕಾದಂತಹ ಗೂಡು ಮತ್ತು ರಸ್ತೆ ನಿರ್ಮಿಸುವ ಇಂಜಿನೀಯರುಗಳು, ಶತ್ರುಗಳಿಗೆ ಕಚ್ಚುವ ಮೂಲಕ ಪ್ರೂಟೆಕ್ಷನ್ ನೀಡುವ ಸೈನಿಕರು, ಜೀವ ಕೊಡಲು ಸಿದ್ಧವಿರುವ ಪ್ರೇಮಿಗಳು ಇದ್ದಾರೆ. 

ಇರುವೆಗಳು ಮನುಷ್ಯನಿಗೆ ಕೆಲವೊಂದು ಸಂದೇಶ ನೀಡುತ್ತದೆ.
ಅವುಗಳೆಂದರೆ -
🐜 *ಬಿಟ್ಟು ಕೊಟ್ಟು ಭಾಳು*
ಒಂದು ಇರುವೆ ಎದುರಿನಿಂದ ಬರುವ ಇರುವೆಗೆ ದಾರಿ ಬಿಟ್ಟು ಕೊಟ್ಟು ಸಂಚರಿಸುತ್ತದೆ.
ತನಗಿಂತ ಇತರರಿಗೆ ಪರಿಗಣನೆ ನೀಡುವುದು ಇರುವೆ ಗುಣವಾಗಿದೆ. ಮನುಷ್ಯನಲ್ಲಿ ಈ ಗುಣವಿರುತ್ತಿದ್ದರೆ ಅದೆಷ್ಟೋ ಕುಟುಂಬ ಆರಾಮವಾಗಿರುತಿತ್ತು. ಪತಿ ಪತ್ನಿಯರಲ್ಲಿ ವಿರಸ ಉಂಟಾದರೆ ಅವಳು ಕ್ಷಮೆ ಕೇಳಲಿ, ಅವನು ಸ್ವಾರಿ ಹೇಳಲಿ ತನ್ನ ಅಭಿಮಾನವನ್ನು ಬಿಟ್ಟು  ಕೊಡುವುದಿಲ್ಲ ಎಂಬ ಹಠಮಾರಿತನವು ಸಂಬಂಧಗಳನ್ನು ಹದಗೆಡಿಸುತ್ತದೆ. ನಾನು ಕ್ಷಮಿಸುತ್ತೇನೆ, ನನ್ನ ಹಠಸಾಧನೆಯನ್ನು ಬಿಟ್ಟು  ಬದುಕುತ್ತೇನೆಂದು ಯಾರು ಚಿಂತಿಸುವುದಿಲ್ಲ. ಇರುವೆಗಿರುವ ಕ್ಷಮಾ ಗುಣ ಮನುಷ್ಯನಿಗಿಲ್ಲ.

🐜 *ಕೂಡಿ ಬಾಳುವುದು*
ಇರುವೆ ಸಂಘ ಜೀವಿ. ಕೂಡಿ ಬಾಳುವುದನ್ನು ಇಷ್ಟಪಡುತ್ತದೆ.
ತಂದೆ ತಾಯಿಯನ್ನು  ವೃದ್ಧಾಶ್ರಮಕ್ಕೆ ತಳ್ಳಿ,  ಅಣ್ಣ ತಮ್ಮ, ಅಕ್ಕ ತಂಗಿಯರೊಂದಿಗೆ ಆಸ್ತಿಗಾಗಿ  ಕುಟುಂಬ ಸಂಬಂಧ ಮುರಿಯುವ, ಕೂಡಿ ಬಾಳುವುದನ್ನು ಇಷ್ಟಪಡದೆ  ಬೇರ್ಪಟ್ಟು  ಬದುಕುವ  ಮನುಷ್ಯನಿಗಿಂತ ಇರುವೆಯೇ ಮೇಲು.
ಹಿಂದಿನ ಕಾಲದಲ್ಲಿ ಶಾಲಾ ರಜೆಗಳಿರುವಾಗ ಅಜ್ಜಿ ಮನೆಗೆ ಸಂಬಂಧಿಕರ ಮನೆಗೆ  ಹೋಗಿ ಕಾಲ ಕಳೆಯುವ ಸಂಪ್ರದಾಯವಿತ್ತು. ಇಂದು ಅವುಗಳನ್ನು ಪಾರ್ಕುಗಳು, ಬೀಚುಗಳು ಆಕ್ರಮಿಸಿಗೊಂಡಿವೆ. ಹಿಂದೆ ಕುಟುಂಬಸ್ಥರನ್ನು ಸಂಪರ್ಕಿಸುವ ಮಾಧ್ಯಮ ಕಡಿಮೆಯಿತ್ತು. ಆದರೂ ಸಂಬಂಧ ದೃಢವಾಗಿತ್ತು. ಇಂದು ಹಲವು ಮಾಧ್ಯಮಗಳಿವೆ. ಆದರೆ ಸಂಬಂಧ ದೃಢವಾಗಿಲ್ಲ ಎಂಬುದು ವಿಷಾದನೀಯ.
🐜 *ಶಿಸ್ತು ತಾಳ್ಮೆ*
ಇರುವೆಯ ಈ ಸ್ವಭಾವದಿಂದ ಮನುಷ್ಯನಿಗೆ ಟ್ರಾಫಿಕ್ ನಿಯಮವನ್ನು ಹೇಳಿಕೊಡುತ್ತದೆ. ಇರುವೆ ಒಂದರ ಹಿಂದೆ ಒಂದರಂತೆ ಸಾಲು ಸಾಲಾಗಿ ಶಿಸ್ತಿನಿಂದ  ಸಂಚರಿಸುತ್ತದೆ. ಒವರ್ಟೇಕ್ ಮಾಡುವ ಒರಟಾದ ಗುಣ ಇರುವೆಗಿಲ್ಲ. ಭಾರತದಲ್ಲಿ  ಒಂದು ನಿಮಿಷಕ್ಕೆ ನೂರಾರು ಅಪಘಾತ ಮರಣ ಸಂಭವಿಸುವಾಗ ಕಾಲಡಿಯಲ್ಲಿರುವ ಇರುವೆ  *ಓ ಮಾನವ ನಮ್ಮನ್ನು ನೋಡಿ ಕಳಿತುಕೊ....ಅವಸರ ಬಿಟ್ಟು ಸಾವಧಾನದಿಂದ ಒಂದರ ಹಿಂದೆ ಒಂದರಂತೆ ಚಲಿಸು* ಎಂದು ಕೂಗಿ ಹೇಳುತ್ತದೆ.

🐜 *ಶ್ರಮದಿಂದ ಶೇಖರಣೆ*
ಇರುವೆ ಶ್ರಮ ಜೀವಿ. ಮಳೆಗಾಲಕ್ಕೆ ಬೇಕಾದಂತಹ ಆಹಾರವನ್ನು ಕಷ್ಟಪಟ್ಟು ತನ್ನ ತೂಕಕ್ಕಿಂತ ಭಾರವಾದೂದನ್ನು ಹೊತ್ತು ತಂದು ಶೇಖರಿಸಿಟ್ಟು ಹಂಚಿ ತಿನ್ನುವ ಗುಣ ಇರುವೆಗಳಿಗಿವೆ. ಆಲಸ್ಯತನದಿಂದ ದುಡಿಯದೆ ಅನ್ಯರ ಸಂಪತ್ತಿಗೆ ದುರಾಸೆ ಪಡುವ ಮನುಷ್ಯನು ಇರುವೆಯನ್ನು ನೊಡಿ ಪಾಠ ಕಲಿಯಬೇಕಿದೆ. 
🐜ಅಷ್ಟೇ ಯಾಕೆ ಎಲ್ಲಾದರೂ ನಾವು ಈ ಮೇಲಿನ ಇರುವೆಯ ಗುಣವನ್ನು  ಮರೆತು ಬಿಟ್ಟರೆ ಆಗಾಗ ಇರುವೆ ಕಚ್ಚಿ *ನನ್ನನ್ನು ನೋಡಿ ಬದುಕು. ನನ್ನನ್ನು ನೋಡಿ ಬದುಕು* ಎಂದು ನೆನಪಿಸುತ್ತಾ ಇರುತ್ತದೆ.

ಆದುದರಿಂದ ಒಳ್ಳೆಯದ್ದೊ, ಕೆಟ್ಟದ್ದೊ ಕೆಲವೊಮ್ಮೆಯಾದರೂ ಇರುವೆಯ ಮೇಲೆ ಒಂದು ನೋಟ ಇದ್ದೆ ಇರಲಿ.
🐜🐜🐜🐜🐜🐜🐜🐜🐜🐜
*ಅಂತ್ಯ ದಿನದ ಲಕ್ಷಣಗಳು*
🌄🌄🌄🌄🌄🌄🌄
ಮಹಿಳೆಯರು, ಪುರುಷರು, ವೇದಿಕೆಯ ಮೇಲೆ ಡ್ಯಾನ್ಸ್ ಮಾಡುವುದು, ಹಾಡುವುದು, ಮ್ಯೂಸಿಕ್ ಹಾಡುಗಳು, ಮ್ಯೂಸಿಕ್ ಅಧಿಕಗೊಳ್ಳುವ ಕಾಲ ಬಂದರೆ ಅದು ಅಂತ್ಯ ದಿನದ ಲಕ್ಷಣವಾಗಿದೆ.

ದೊಡ್ಡ, ದೊಡ್ಡ ಕಟ್ಟಡಗಳು, ಬಿಲ್ಡಿಂಗ್ ಗಳು ಅಧಿಕಗೊಳ್ಳುವ ಕಾಲ ಬಂದರೆ ಅದು ಅಂತಿಮ ದಿನದ ಸೂಚನೆಯಾಗಿದೆ. ಇಂದು ನಾವು ನೋಡುತ್ತಾ ಇದ್ದೆವೆ, ಪರ್ವತಗಳನ್ನು, ಗುಡ್ಡೆಗಳನ್ನು ಹಳೇ ಮನೆಗಳನ್ನು ಒಡೆದು ದೊಡ್ಡ ದೊಡ್ಡದಾದ ಫ್ಲಾಟ್ ಗಳು, ಗಗನ ಚುಂಬಿಗಳಂತಹ ದೊಡ್ಡ ದೊಡ್ಡ ಕಟ್ಟಡಗಳು ಕಟ್ಟುವುದು ನಮ್ಮ ಮುಂದೆ ಕಾಣುತ್ತಿದೆ.1400 ವರ್ಷಗಳ ಮುಂಚೆ ನಮ್ಮ ಹಬೀಬ್ ರಸೂಲುಲ್ಲಾಹಿ (ಸ.ಅ) ಹೇಳಿದ್ದು ಎಲ್ಲವೂ ಸತ್ಯವಾಗಿ ಕಾಣುತ್ತಿದೆ.

ತಂದೆ, ತಾಯಿಗೆ ಗೌರವ ಕೊಡದೆ ಇರುವುದು, ಆಲಿಮ್, ತಂಙಳ್ ರನ್ನು ನಿಂದಿಸುವುದು,ತಂದೆ, ತಾಯಿಯನ್ನು ದೂರ ಮಾಡುವುದು, ಗೆಳೆಯರನ್ನು ಹತ್ತಿರಗೊಳಿಸುವುದು,ಅಲ್ಲಾಹನ ಮಸೀದಿಗಳಲ್ಲಿ ಗೌಜಿ, ಗದ್ದಲ ಗಲಾಟೆ ಉಂಟಾಗುವುದು ಹಿರಿಯರಿಗೆ ಗೌರವ ಕೊಡದೆ, ಕಿರಿಯರಿಗೆ ದಯೇತೊರದೆ ಇರುವುದು, ಆಕಸ್ಮಿಕ ಮರಣ ಉಂಟಾಗುವುದು, ಆಲಿಮ್ ಗಳ ಸಜ್ಜನರ ಮರಣ ಸಂಭವಿಸುವುದು, ಇದೆಲ್ಲವೂ ಕಿಯಾಮತ್ ದಿನದ ಕೆಲವೊಂದು (ಸ್ಯಾಂಪಲ್ ಮಾತ್ರ) ಲಕ್ಷಣಗಳು.ಮುಸ್ಲೀಂ ರಾಷ್ಟ್ರಗಳಲ್ಲಿ ಯಹೋದ್ಯರು, ನಸ್ರಾನಿಗಳು ಮುಸ್ಲೀಂ ಸಮೂಹವನ್ನು ದಾಳಿ ಮಾಡಿ ಕೊಳ್ಳುವುದು, (ಮೊನ್ನೆ ತಾನೆ ರೊಹಿಂಗ್ಯಾ ಮುಸಲ್ಮಾನರನ್ನು ಚಿಕ್ಕ,ಚಿಕ್ಕ ಮಕ್ಕಳನ್ನು,ಗರ್ಭಿಣಿ ಸ್ತ್ರೀಯರನ್ನು, ಅತ್ಯಾಚಾರ ಮಾಡಿ ಕೊಂದ್ದಿದ್ದರು, ಹೊಟ್ಟೆ ಸೀಳಿ ಮಗುವನ್ನು ಹೊರ ತೆಗೆದು ಎಸೆದರು. ಚಿಕ್ಕ ಮಕ್ಕಳನ್ನು, ಮಹಿಳೆಯರನ್ನು ವಯಸ್ಕರನ್ನು ಯುವಕರನ್ನು ಬೆಂಕಿಯಲ್ಲಿ ಜೀವಾಂತ ದಹನ ಮಾಡಿದರು. ಫೆಲಸ್ತೀನ್ ಗೆ ಇಸ್ರೇಲ್ ಯಹೋದ್ಯರು ಬಾಂಬ್ ದಾಳಿ ಮಾಡಿ ಕೊಂದರು. ಇದೆಲ್ಲವೂ ಮಹದಿ ಇಮಾಮ್ ಬರುವ ಮುಂಚೆ ನಡೆಯುವ ಕೆಲವೊಂದು ಲಕ್ಷಣವಷ್ಟೆ ಇಲ್ಲಿ ಹೇಳಿದೆ.
ಭೂಕಂಪ, ಸುನಾಮಿ, ಚಂಡಮಾರುತ, ಇದೆಲ್ಲವೂ ಉಂಟಾಗುವ ಕಾಲ ಬಂದರೆ ಅದು ಅಂತ್ಯ ದಿನದ ಲಕ್ಷಣವಾಗಿದೆ. (ಅಲ್ಲಾಹು ಇಂತಹ ವಿಪತ್ತಿನಿಂದ ನಮ್ಮನ್ನು ನಮ್ಮ ತಂದೆ, ತಾಯಿಯನ್ನೂ, ಕುಟುಂಬವನ್ನು, ಸ್ನೇಹಿತರನ್ನೂ, ದುವಾ ವಸಿಯ್ಯತ್ತ್ ಮಾಡಿದವರನ್ನು ಸರ್ವ ಮುಸ್ಲೀಂ ಉಮ್ಮತ್ತನ್ನು ರಕ್ಷಿಸಲಿ) ಆಮೀನ್....
🌒🌒🌒🌒🌒🌒
ಮುಂದುವರೆಯುವುದು..
*📝 ಪ್ರವಾದಿ ಸಂದೇಶ 📡*
🏘🏘🏘🏘🏘🏘🏘🏘🏘🏘🏘🏘    *ಪ್ರವಾದಿಯವರ ಬಹುಪತ್ನಿತ್ವ    🏘🏘🏘    ಸತ್ಯಾಂಶವೇನು...?*       🏘🏘🏘🏘🏘🏘🏘🏘🏘🏘🏘🏘🏘

*﷽*

*ಸಂಚಿಕೆ* 0⃣5⃣

💥 ಅಬೂ ಸುಫ್ಯಾನ್ ರವರ ಪುತ್ರಿ ಉಮ್ಮು ಹಬೀಬಾರವರನ್ನೂ ಪ್ರವಾದಿ (ಸ.ಅ)ರವರು ವಿವಾಹವಾಗಿದ್ದಾರೆ. ಅಬೂ ಸುಫ್ಯಾನ್ ಪ್ರಾರಂಭಕಾಲದಲ್ಲಿ ಇಸ್ಲಾಮಿನ ಭಧ್ಧವೈರಿಯಾಗಿದ್ದರೂ ಮಗಳು ಹಾಗೂ ಪತಿ ಇಸ್ಲಾಂ ಸ್ವೀಕರಿಸಿದ್ದರು. ಪತಿಯೂ ಪ್ರವಾದಿಯವರ ಅನುಯಾಯಿ ಕೂಡಾ ಆಗಿದ್ದರು. ಅಬ್ ಸೀನಿಯಾಕ್ಕೆ ಪಾಲಾಯಣ ಹೋದ ಸಂಧರ್ಭದಲ್ಲಿ ಅವರು ಕೃಸ್ತು ಧರ್ಮ ಸ್ವೀಕರಿಸಿದರು. ನಂತರ ಅಲ್ಪ ಕಾಲದಲ್ಲಿ ಪತಿಯೂ ಮರಣ ಹೊಂದಿದರು. ಇದರ ನಂತರ ಕ್ರಿ.ಶ 628 ರಲ್ಲಿ ಉಮ್ಮು ಹಬೀಬಾ ರವರನ್ನು ಪ್ರವಾದಿಯವರು ವಿವಾಹವಾದರು.

💥 ಖೈಬರ್ ಯುದ್ದದಲ್ಲಿ ಮರಣಹೊಂದಿದ ಒಂದು ಯಹೂದಿಯ ಪುತ್ರಿಯಾದ ಸ್ವಫ್ಫಿಯ್ಯಾರವರನ್ನೂ ಪ್ರವಾದಿ (ಸ.ಅ)ರವರು ವಿವಾಹವಾದರು. ಈ ವಿವಾಹದೊಂದಿಗೆ ಆ ಯಹೂದಿಯ ಗೋತ್ರದವರಲ್ಲಿ ದೊಡ್ಡ ಒಂದು ವಿಭಾಗವೂ ಇಸ್ಲಾಂ ಸ್ವೀಕರಿಸಿದರು.

💥 ಈಜಿಪ್ತಿನ ಮುಖೌಕಿಸ್ ರಾಜರು ಪಾರಿತೋಷಿಕವಾಗಿ ಮಾರಿಯತುಲ್ ಖಿಬ್ ತಿಯ್ಯಾ ಎಂಬ ಒಂದು ಕ್ರ್ಸ್ತೀಯ ದಾಸಿ ಹೆಣ್ಣನ್ನು ಪ್ರವಾದಿ (ಸ.ಅ)ರವರಿಗೆ ಕಳುಹಿಸಿಕೊಟ್ಟರು. ಈ ಮಹಿಳಾರತ್ನದಿಂದಾಗಿದೆ ಇಬ್ರಾಹೀಂ ಎಂಬ ಮಗು ಜನಿಸಿದ್ದು.

💥 ಕೊನೆಯದಾಗಿ ವಿಧವೆಯಾದ ಮೈಮೂನ ಬೀವಿಯವರನ್ನೂ ಪ್ರವಾದಿಯವರು ಪತ್ನಿಯಾಗಿ ಸ್ವೀಕರಿಸಿದ್ದರು.
         
  *(ಮುಂದುವರೆಯುವುದು)*
🌻⭐⭐⭐☀☀
🌎🌍🌏🌎🌍🌏🌎🌍
*ಲೋಕ ರಾಷ್ಟ್ರಗಳನ್ನು ಸುತ್ತಾಡುವ ಸುಲ್ತಾನುಲ್ ಉಲಮರ ರಹಸ್ಯವೇನು*
🌍🌎🌏🌍🌎🌏🌍🌎

ಅಂದೊಂದು ಕಾಲವಿತ್ತು, ಆ ಕಾಲದಲ್ಲಿ ಭಾರತದಿಂದ ಅತ್ಯಧಿಕ ಬಾರಿ ಮಕ್ಕ ಮತ್ತು ಮದೀನ ಸಂದರ್ಶಿಸುವ ಭಾಗ್ಯಗಳಿಸಿದ ಮಾಹಾ ವ್ಯಕ್ತಿ *ಸಯ್ಯಿದ್ ಅಬ್ದುರ್ರಹ್ಮಾನ್ ಬಾಫಕಿ ತಂಙಳಾಗಿದ್ದರು*.ಅವರು ಇಪ್ಪತ್ತೆರಡು ಬಾರಿ ಆ ಪುಣ್ಯ ಸ್ಥಳಗಳನ್ನು ಸಂದರ್ಶಿಸಿದ್ದರು. ಇಪ್ಪತ್ತೆರಡನೇ ಹಜ್ಜ್ ಕರ್ಮದ ನಂತರ ಅವರು ಅಲ್ಲಿ ವಫಾತಾದರು. ಆದ್ದರಿಂದಲೇ ಅವರನ್ನು *ಜನ್ನತುಲ್ ಮುಹಲ್ಲಾದಲ್ಲಿ* ದಫನ್ ಮಾಡಲಾಯಿತು.

  ಅವರ ನಂತರ  ಅತ್ಯಧಿಕ ಬಾರಿ ಆ ಪುಣ್ಯ ಸ್ಥಳಗಳನ್ನು ಕಾಣಲು ಭಾಗ್ಯಗಳಿಸಿದ ಮಹಾನ್ ವ್ಯಕ್ತಿ *ತಾಜುಲ್ ಉಲಮರಾಗಿದ್ದರು*. ಅವರು *ನಲವತ್ತು ಬಾರಿ*  ಆ ಪುಣ್ಯ ಸ್ಥಳಗಳನ್ನು ಸಂದರ್ಶಿಸಿದ್ದರು. 
    ಆದರೆ... ಇಂದು,  ಒಂದು ವರ್ಷದಲ್ಲಿ ಮೂರು ಅಥವಾ ನಾಲ್ಕು ಬಾರಿ ಮಕ್ಕ ಮತ್ತು ಮದೀನ ತಲುಪುವ ಮಹಾನ್ ಭಾರತದಲ್ಲಿದ್ದರೆ ಅವರು *ಶೈಖುನಾ ಸುಲ್ತಾನುಲ್ ಉಲಮರಾಗಿದ್ದಾರೆ*.
     ರಬೀವುಲ್ ಅವ್ವಲ್, ರಂಝಾನ್ ತಿಂಗಳಲ್ಲಿ ಮತ್ತು ಹಜ್ ಸಂದರ್ಭಗಳಲ್ಲಿ ಆ ಪುಣ್ಯ ಸ್ಥಳಗಳನ್ನು ಪ್ರತೀ ವರ್ಷವೂ ತಲುಪುವ ಓರ್ವ ಮಹಾನ್ ವ್ಯಕ್ತಿಯಾಗಿದ್ದಾರೆ ಅವರು.

      ಭಾರತದಲ್ಲಿರುವ ಸುನ್ನೀ ಮುಸ್ಲಿಂಗಳ ಸನ್ನತ್ ಜಮಾಅತಿನ ವಿಷಯಗಳನ್ನು ಹೇಳಿ *ರೌಳಾ ಶರೀಫಿನ* ಬಳಿ ಕಣ್ಣೀರಿಳಿಸಿ ಸುನ್ನತ್ ಜಮಾಅತಿನ ಕಾರ್ಯ ಚಟುವಟಿಕೆಗಳಿಗಾಗಿ ಆಶಿರ್ವಾದ ಪಡೆಯುವ ಓರ್ವ  ಮಹಾನ್ ಇಂದು ಭಾರತ ದೇಶದಲ್ಲಿದ್ದರೆ ಅವರು ಸುಲ್ತಾನುಲ್ ಉಲಮರಾಗಿದ್ದಾರೆ.
 🌷🌷🌷🌷🌷🌷🌷🌷
        *ನಾಲ್ಕು ಖಲೀಫರ ಮಕ್ಬರಗಳ ಬಳಿ.*
      ಮುಸ್ಲಿಂ ಸಮೂಹ ಪ್ರವಾದಿಗಳ ನಂತರ ಅತ್ಯಧಿಕ ಗೌರವಿಸಬೇಕಾದದ್ದು ಮತ್ತು ಅಂಗೀಕರಿಸಬೇಕಾದದ್ಗು ನಾಲ್ಕು ಖಲೀಫರುಗಳಾನ್ನಾಗಿದೆ. *ಅಬೂಬಕ್ಕರ್ ಸಿದ್ದೀಕ್(ರ),  ಉಮರ್(ರ), ಉಸ್ಮಾನ್(ರ) ಅಲಿಯ್ಯ್(ರ)*ರಂತಹ ನಾಲ್ಕು ಖಲೀಫರನ್ನು ಒಂದು ವರ್ಷದಲ್ಲಿ ಒಮ್ಮೆಯಾದರೂ ಸಂದರ್ಶಿಸಿ ಭಾರತದ ಸುನ್ನತ್ ಜಮಾಅತಿನ ಕಾರ್ಯಗಳಿಗೆ ಆಶಿರ್ವಾದ ಪಡೆಯಲು ಭಾಗ್ಯ ಸಿಕ್ಕಿದ ಭಾರತದ ಅತ್ಯಂತ ಶ್ರೇಷ್ಠ ವ್ಯಕ್ತಿ ಕೂಡ ಸುಲ್ತಾನುಲ್ ಉಲಮರಾಗಿದ್ದಾರೆ.
🌹🌹🌹🌹🌹🌹🌹🌹
*ನಾಲ್ಕು ಇಮಾಂಗಳ ಬಳಿ.*
   ನಾಲ್ಕು ಖುಲಫಾಉರ್ರಾಶಿದ್ಗಳ ನಂತರ ಮುಸ್ಲಿಂ ಸಮೂಹ ಅತ್ಯಧಿಕ ಗೌರವದಿಂದ ಕಾಣುತ್ತಿರುವುದು ನಾಲ್ಕು ಇಮಾಂಗಳನ್ನಾಗಿದೆ. *ಇಮಾಂ ಮಾಲಿಕ್(ರ),ಇಮಾಂ ಅಹ್ಮದುಬ್ನು ಹಂಬಲ್(ರ),ಇಮಾಂ ಶಾಫೀ(ರ),ಮತ್ತು ಇಮಾಂ ಅಬೂಹನೀಫ(ರ)*. ಇವರ ಮಕ್ಬರಗಳ ಬಳಿ ಕೂಡ ಒಂದು ವರ್ಷದಲ್ಲಿ ಒಮ್ಮೆಯಾದರೂ ತಲುಪಿ ಭಾರತದ ಸುನ್ನೀ ಸಂಘಟನೆಗಳ ಕಾರ್ಯ ಚಟುವಟಿಕೆಗಳಿಗಾಗಿ ಆಶಿರ್ವಾದ ಬೇಡುವ ಭಾರತದ ಏಕೈಕ ಮುಸ್ಲಿಂ ಧೀಮಂತ ನಾಯಕ ಸುಲ್ತಾನುಲ್ ಉಲಮರಾಗಿದ್ದಾರೆ.
🌿🌿🌿🌿🌿🌿🌿🌿
       *ನಾಲ್ಕು ಕುತುಬುಗಳ ಮಕ್ಬರಗಳ ಬಳಿ.*
     ನಾಲ್ಕು ಇಮಾಂಗಳ ನಂತರ ಮುಸ್ಲಿಂ ಸಮುದಾಯ ಅತ್ಯಂತ ಗೌರವಿಸುತ್ತಿರುವುದು ನಾಲ್ಕು ಕುತುಬುಗಳನ್ನಾಗಿದೆ. ಆ ಕುತುಬುಗಳಾಗಿದ್ದಾರೆ *ಮುಹಿಯದ್ದೀನ್ ಶೈಖ್ (ಖ.ಸಿ), ಅಹ್ಮದುಲ್ ಕಬೀರ್ (ಖ.ಸಿ), ಅಹ್ಮದುಲ್ ಬದವಿ (ಖ.ಸಿ),ಇಬ್ರಾಹೀಮದ್ದಸೂಕಿ (ಖ.ಸಿ)*. ಇವರ ಮಕ್ಬರಗಳ ಬಳಿ ಕೂಡ ಒಂದು ವರ್ಷದಲ್ಲಿ ಒಮ್ಮೆಯಾದರೂ ತಲುಪಿ ಭಾರತದ ಸುನ್ನೀ ಸಂಘಟನೆಗಳ ಕಾರ್ಯ ಚಟುವಟಿಕೆಗಳಿಗಾಗಿ ಆಶಿರ್ವಾದ ಬೇಡುವ ಭಾರತದ ಏಕೈಕ ಮುಸ್ಲಿಂ ಧೀಮಂತ ನಾಯಕ ಸುಲ್ತಾನುಲ್ ಉಲಮರಾಗಿದ್ದಾರೆ.
🌱🌱🌱🌱🌱🌱🌱🌱
      *ದಲಾಯಿಲುಲ್  ಖೈರಾತ್* ರಚಿಸಿದ *ಇಮಾಂ ಸುಲೈಮಾನುಲ್ ಜಝೂಲಿ(ರ)*ರವರ ಮಕ್ಬರವಿರುವುದು ಮೊರೋಕದಲ್ಲಿ.  *ಸುಲ್ತಾನುಲ್ ಉಲಮರು* ಮೊರೋಕ ರಾಜನಿಗೆ ಫೋನ್ ಮಾಡಿ *ಸುಲೈಮಾನುಲ್ ಜಝೂಲಿ(ರ)* ರವರ ಮಕ್ಬರ ಸಂದರ್ಶಿಸಲು ಅನುವು ಮಾಡಿಕೊಡಬೇಕೆಂದಾಗ ತಕ್ಷಣವೇ ಅಲ್ಲಿನ ರಾಜ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಕೊಟ್ಟರು ಮತ್ತು *ಸುಲ್ತಾನುಲ್ ಉಲಮರು* ಅಲ್ಲಿ ಹೋಗಿ ಝಿಯಾರತ್ ಮಾಡಿ ಬಂದರು.
💐💐💐💐💐💐💐💐
*ಬುಖಾರಿ ಇಮಾಮರ ಸನ್ನಿಧಾನದಲ್ಲಿ.*
      ಲೋಕದಲ್ಲಿ ಅತ್ಯಧಿಕ ಬಾರಿ ಎಲ್ಲಾ ಆಲಿಂಗಳ ಬಾಯಿಂದಲೂ, ಮುತಅಲ್ಲಿಂಗಳ ಬಾಯಿಂದಲೂ ಮತ್ತು ಸಾಮಾನ್ಯ ಜನರಿಂದಲೂ ಹೇಳಲಾಗತ್ತಿರುವ ಹೆಸರು *ಇಮಾಂ ಬುಖಾರಿ(ರ) ರವರದ್ದು*. ಕುರ್ಆನಿನ ನಂತರ ಅತ್ಯಧಿಕ ಸ್ಥಾನವಿರುವ ಗ್ರಂಥ ಅವರು ರಚಿಸಿದ *ಸ್ವಹೀಹುಲ್ ಬುಖಾರಿ* ಎಂಬೂದರಲ್ಲಿ ಯಾವುದೇ ಸಂಶಯವಿಲ್ಲ. ಅಂತಹ *ಇಮಾಂ ಬುಖಾರಿ(ರ)* ರವರ *ಉಝ್ಬಕಿಸ್ಥನ್*ನಲ್ಲಿರುವ ಮಕ್ಬರ ಸಂದರ್ಶಿಸಿ ಅಲ್ಲಿ ಸೇರಿದ ಅಲ್ಲಿನ ವಿದ್ವಾಂಸರಿಗೆ *ಬುಖಾರಿ ಇಮಾಮರ* ಮಕ್ಬರದ ಬಳಿ *ಸ್ವಹೀಹುಲ್ ಬುಖಾರಿ*ದರ್ಸ್ ನಡೆಸಿ *ಬುಖಾರಿ ಇಮಾಮರ* ಆಶಿರ್ವಾದ ಪಡೆದರು.
🌺🌺🌺🌺🌺🌺🌺🌺
  ಇಂತಹ ಹಲವು ಭಾಗ್ಯಗಳು ಒಳಿದು ಬಂದ ಸುಲ್ತಾನುಲ್ ಉಲಮರ ರಹಸ್ಯವೇನಾಗಿರಬಹುದು?  ಒಂದೆಡೆ *ಸುಲ್ತಾನುಲ್ ಉಲಮ*ರು ಭಾಷಣದ ಮಧ್ಯೆ ಹೇಳಿದರು *"ನನಗೆ ಅಂದು, ಅಂದಿನ ಅಬುಸ್ಸಆದಾತ್ ಶಾಲಿಯಾತಿ ತಂಙಳ್ ಮತ್ತು ಶಂಸುಲ್ ಉಲಮ ಕುತುಬಿ ಮುಸ್ಲಿಯಾರ್ ದುಆಮಾಡಿದ್ದರು"*
🌙🌙🌙🌙🌙🌙🌙🌙
✍ *ಮುಹಮ್ಮದ್ ಮುನೀರ್. ಎ ಕಬಕ 9048254879 ಮುಹಿಮ್ಮಾತ್ ದಅವ ಕಾಲೇಜ್*
🌎🌍🌏🌎🌍🌎🌍🌏

Tuesday, December 5, 2017

*ಸೈಫ್ ಆರ್ಲರವರೇ(ಮುಸ್ತಪಾ ರೆಂಜಲಾಡಿ) ಇವತ್ತಿನ ಮೀಟಿಂಗ್ ಯಾಕೆ ಕರೆದರು ಮತ್ತು 27ಜನರ ಸಮಿತಿ ಯಾಕೆ ರೂಪಿಸಲಾಯಿತು ಅದರ ಪ್ರಾಥಮಿಕ ಮಾಹಿತಿಯೂ ತಮಗೆ ಗೊತ್ತಿರದ ಕಾರಣ ರಾಜಕೀಯದಲ್ಲಿ ಎಲೆಕ್ಷನ್ ಗೆದ್ದವರಂತೆ ವರ್ತಿಸುವ ಕೆಲ ನಿಮ್ಮಂತವರು ಇವತ್ತು ವಾಟ್ಸಾಪ್ ನಲ್ಲಿ ಕಾಣತೊಡಗಿದ್ದಾರೆ*....

   *ಆ ವಿಚಾರ ಏನಿದ್ದರೂ ನಿಮ್ಮ ಕೆಲವು ಬರಹಗಳಿಗೆ ಪ್ರತಿಕ್ರಿಯಿಸದಿರುವುದು ನಿಮ್ಮಂತ ಕೆಲವು ಅನೈಕ್ಯವಾಧಿಗಳ ಪ್ರಶ್ನೆಗಳಿಗೆ ಉತ್ತರಿಸುವುದು ನಮ್ಮ ತಿಳಿಗೇಡಿತನ ಮತ್ತು ಅಪ್ರಬುಧ್ಧತೆಯಾಗುವುದೆಂಬ ಸ್ಪಷ್ಟ ಅರಿವು ಇರುವುದರಿಂದಾಗಿದೆ*...

   *ಆದರೆ ನಿಮ್ಮ ಮೇಲಿನ ವಿಚಾರವಾಗಿ ಕೆಲ ಚರಿತ್ರೆ ನಿಮ್ಮ ಮುಂದೆ ಇಡಲೇ ಬೇಕಾಗಿದೆ*...

*ತಾಜುಲ್ ಉಲಮಾರು ಸಮಸ್ತದಿಂದ ನೈಜ ಪತಾಕೆಯೂಂದಿಗೆ ಹೊರಬರುವ ಮೊದಲು ಸಮಸ್ತದ ಅಧ್ಯಕ್ಷರಾಗಿದ್ದ ಸ್ವದಕತುಲ್ಲಾ ಮುಸ್ಲಿಯಾರ್ ತನ್ನ ಕೆಲವೊಂದು ವಿಚಾರವಾಗಿ ಹೊರಬಂದು ಸಂಸ್ಥಾನ ಎಂಬ ಸಂಘಟನೆಯನ್ನು ಕಟ್ಟಿದ್ದರು ಮಾತ್ರವಲ್ಲ ಇನ್ನು ಕೆಲವರು ಹೊರಬಂದು ದ.ಕೇರಳ ಜಂಯ್ಯಿಯ್ಯತುಲ್ ಉಲಮಾ ಎಂಬ ಸಂಘಟನೆಯನ್ನೂ ಕಟ್ಟಿದ್ದರು ಅಂದರೆ 1989ರ ಮೊದಲೇ ಇಲ್ಲಿ ಸಮಸ್ಥ ವಿಭಜನೆಯಾಗಿ 2 ಸಂಘಟನೆಗಳು ಜನ್ಮತಾಳಿದ್ದವು ಮಾತ್ರವಲ್ಲ ಅವುಗಳು ಈಗಲೂ ಕಾರ್ಯಾಚರಿಸುತ್ತಿದೆ ದ.ಕ ಜಿಲ್ಲೆಯಲ್ಲೇ ಸಂಸ್ಥಾನದ ಮಸೀದಿ ಕೆಲವೊಂದು ಕಡೆ ಇದೆ ಮಾತ್ರವಲ್ಲ ಕೆಲವು ಹಿರಿಯ ಆಲಿಮ್ಗಳು ಅದರ ಹಿಂಬಾಲಕರಾಗಿ ಈಗಲೂ ಇದ್ದಾರೆ*...

     *ಅಂದರೆ ನಿಮ್ಮ ಮೇಲಿನ ಬರಹ ನಿಮ್ಮ ಅಙಾನಕ್ಕೆ ಈ ಮೇಲಿನ ಚರಿತ್ರೆ ನಿಮ್ಮ ಮುಂದಿಡುತ್ತಿದ್ದೇನೆ*...

     *ಆದರೆ 1989ರ ತಾಜುಲ್ ಉಲಮಾರ ಆ ಸಧೈರ್ಯವಾಗಿ ಸಮಸ್ತವನ್ನು ಪುನರ್ ಸಂಗಟಿಸಿದ್ದು ಅದು ಸಮಸ್ತದ ನೈಜ ಆದರ್ಶ ಉಳಿಸುದಕ್ಕಾಗಿತ್ತು*.

    *ಲೀಗ್ ರಾಜಕೀಯದೊಂದಿಗೆ ಸೇರಿದ ಪರಿಣಾಮ  ಈಗ ವಹಾಬಿಗಳ ವಿರುಧ್ಧ ಧ್ವನಿ ಎತ್ತಲಾಗದ ಮಾತ್ರವಲ್ಲ ಕೇರಳದ ಪ್ರಸ್ತುತ ಆಗು ಹೋಗನ್ನು ಗಮನಿಸುವಾಗ ಆಲಿಕುಟ್ಟಿ ಮುಸ್ಲಿಯಾರರ ಹೆಸರಲ್ಲಿ ಉಸ್ತಾದರ ಅನುಮತಿಯಿಲ್ಲದೆ ಚಂದ್ರಿಕಾ ಪತ್ರಿಕೆಯಲ್ಲಿ(ಲೀಗ್ ಪತ್ರಿಕೆ) ವಹಾಬಿಗಳಿಗೆ ಬೆಂಬಲವಾಗಿ ಲೇಖನ ಬಂದಾಗಲೂ ಅದರ ವಿರುಧ್ಧ ಧ್ವನಿ ಎತ್ತಿ ತಿಧ್ಧಿ ಕೊಡಲು ಆ ಪತ್ರಿಕೆಯಲ್ಲಿ ಇದುವರೆಗೆ ಸಾಧ್ಯವಾಗದ ಮಟ್ಟಿಗೆ ಲೀಗ್ ತಮ್ಮ ಸಂಘಟನೆಯನ್ನೇ ಹೈಜಾಕ್ ಮಾಡಿಬಿಟ್ಟಿದೆ*......

*ಅಂದರೆ ಲೀಗ್ ಸಂಪೂರ್ಣ ಹೈಜಾಕ್ ಮಾಡಿ ಸ್ವಂತವಾದ ಎಲ್ಲಾ ಶಕ್ತಿಯನ್ನು ಕಳಕೊಂಡಿದ್ದೀರಿ*...

*ಅಲ್ಲಾಗಿದೆ ತಾಜುಲ್ ಉಲಮಾರು 1989ರಲ್ಲಿ ಕೈಗೊಂಡ ತೀರ್ಮಾನದ ಮಹತ್ವ ಈಗ ಜಗತ್ತಿಗೆ ಸ್ಪಷ್ಟವಾಗಲು ಕಾರಣವಾದದ್ದು*...

   *ಮಾತ್ರವಲ್ಲ ಕಣ್ಣಿಯತ್ ಉಸ್ತಾದರು ತನ್ನ ವಾರ್ಧಕ್ಯ ಸಹಜವಾದ ರೋಗಗಳಿಂದ ಯಾವುದೇ ಮುಸಾವರ ಸಭೆಯಲ್ಲಿ ಭಾಗವಹಿಸುತ್ತಿರಲಿಲ್ಲ ಮಾತ್ರವಲ್ಲ ಲೀಗ್ 1989ರಲ್ಲಿ ಮಾಡಿದ ಕುತಂತ್ರಗಳು ಉಸ್ತಾದರಿಗೆ ಅರಿವೂ ಇರಲಿಲ್ಲ ಆದ್ದರಿಂದಲೇ ಕಣ್ಣಿಯತ್ ಉಸ್ತಾದರು ಇಭ್ಭಾಗದ ನಂತರ ವೇಧಿಕೆಗಳಲ್ಲಿ ತಾಜುಲ್ ಉಲಮಾರನ್ನು ಅನ್ವೇಷಿಸುತ್ತಿದ್ದ ನಿದರ್ಶನಗಳು ಕಾಣುತ್ತಿದ್ದುದು*
....
*ಸಮಸ್ತದ ಮಿನಿಟ್ಸ್ಗಳಲ್ಲೂ ಕಣ್ಣಿಯತ್ ಉಸ್ತಾದ್ ಮುಸಾವರ ಸಭೆಗಳಲ್ಲಿ ಭಾಗವಹಿಸುತ್ತಿದ್ದ ದಾಖಲೆ ತೋರಿಸಲು ಸಾಧ್ಯವಿಲ್ಲ....ಆಗ ತಾಜುಲ್ ಉಲಮಾರ ನೇತ್ರತ್ವದಲ್ಲಾಗಿತ್ತು ಮುಶಾವರ ಸಬೆ ನಡೆಯುತ್ತಿದ್ದುದು*.......

*ತದನಂತರ ಸಂಸುಲ್ ಉಲಮಾರನ್ನು ವಂಚಿಸಿಯಾಗಿತ್ತು ಲೀಗ್ ತನ್ನ ಬಲೆಗೆ ಬೀಳಿಸಿದ್ದು...ಆ ವಂಚನೆಯ ಭಾಗವಾಗಿ ಸಂಶುಲ್ ಉಲಮಾರಿಂದ ಹಲವಾರು ತಧ್ವಿರುಧ್ಧ ಹೇಳಿಕೆಗಳು ಚಂದ್ರಿಕಾ ಪತ್ರಿಕೆ ಹೊರಡಿಸಿದ್ದು ಅದು ಈಗಲೂ ಸುನ್ನೀ ಉಲಮಾಗಳ ಕೈಯಲ್ಲಿ ಭದ್ರವಾಗಿದೆ*...

*ನಮ್ಮಿಂದ ಅಗಲಿದ ಮಹಾನರ ಕುರಿತು ಯಾವುದೇ ತಪ್ಪಾದ ಸಂದೇಶ ಹೊಸ ತಲೆಮಾರಿಗೆ ಹೋಗಬಾರದೆಂಬ ಉದ್ದೇಶದೊಂದಿಗೆ ಮಾತ್ರ ಉಲಮಾಗಳು ಕೆಲವೊಂದು ಚರಿತ್ರೆಯನ್ನು ಹೇಳುವುದು ನಿಲ್ಲಿಸಿರುವಂತದ್ದು*....

   *ಆ ಹಾದು ಹೋದ ಚರಿತ್ರೆ ಏನಿದ್ದರೂ ಅದು ಮರು ಪರಾಮರ್ಷಿಸುವಷ್ಟು ಅರ್ಹತೆ ನನಗಿಲ್ಲದಿರುದರಿಂದ ಆ ಭಾಗ ಮುಟ್ಟುತ್ತಿಲ್ಲ*....

*ಆದ್ದರಿಂದ ಯಾರಿಗೂ ಯಾರ ಮಕ್ಬರ ಬಳಿಯೂ ಬಂದು ಕ್ಷಮೆಯಾಗಲಿ ಯಾವುದೂ ಮಾಡುವ ಅಗತ್ಯ ಯಾರಿಗೂ ಇಲ್ಲ ಅದೇ ಸಮಯ ಮಹಾನರುಗಳ ಜೊತೆಯಲ್ಲಿ ಅವರ ಬರ್ಕತ್ ಪಡೆಯಲು ಸುನ್ನೀ ಮಕ್ಕಳು ಝಿಕ್ರ್ ಯಾಸೀನ್ ಓದಿ ಹದಿಯಾ ಮಾಡುತ್ತಾರೆ ಇದು ಸುನ್ನತ್ ಜಮಾಅತಿನ ತತ್ವವಾಗಿದೆ*...

*ಅದೇ ಸಮಯ 50ವರ್ಷಕ್ಕೂ ಮಿಕ್ಕ ಕಾಲ ನಿಮ್ಮ sys ನೇತ್ರ ಸ್ಥಾನ ಅಲಂಕರಿಸಿ ಸಧ್ಯ ತಾಜುಲ್ ಉಲಮಾಥ ವಫಾತ್ ಬಳಿಕ ಅವರ ಸನ್ನಿಧಿಗೆ ಹೋಗಿ ಝಿಯಾರತ್ ಮಾಡಿ ನೈಜ ಸಮಸ್ತದೊಂದಿಗೆ ಕೂಡಿದ ಮುಸ್ತಫಲ್ ಫೈಝಿ ತಮಗೆ ಗೊತ್ತಿದೆಯೋ ಎಂದು ಗೊತ್ತಿಲ್ಲ*...

*ಈ ರೀತಿಯ ಚರಿತ್ರೆ ವಿಮರ್ಷಣೆಗೆ ತರಲು ನಿಮ್ಮಂತ ಅನೈಕ್ಯವಾಧಿಗಳು ಕಾರಣವಾಗುದರಲ್ಲಿ ಸಂತೋಷವಿದೆ*...

 *ಸಮಸ್ತದ ಮುಶಾವರ ಸದಸ್ಯರೂ ಅದುವರೆಗೆ ಆಗಿರದ ಅಝ್ಹರಿ ತಂಙಲನ್ನು ಸಮಸ್ತದ ಅಧ್ಯಕ್ಷ ಸ್ಥಾನಕ್ಕೆ ಸಂಶುಲ್ ಉಲಮಾ  ಮರಣ ಸಮಯ ತಂದದ್ದು ಆ ಅಝರಿ ತಂಙಲನ್ನೆ ಸಂಶುಲ್ ಉಲಮಾರ ಮರಣ ನಂತರ ತಾವು ಉಚ್ಚಾಟಿಸಿದ್ದು ಇದು ಯಾರು ಮೇಲೆ ಮುಹಬ್ಬತ್ ಇರುವ ಫಲವೆಂದು ಸುನ್ನಿಗಳಿಗೆ ತಿಳಿಯಲು ಕಾರಣವಾಗಿತ್ತಲ್ಲದೆ ಸಂಶುಲ್ ಉಲಮಾ ಮರಣ ಸಮಯ ಅಝರಿ ತಂಙಲನ್ನು ನೇತ್ರ ಸ್ಥಾನಕ್ಕೆ ತಂದದ್ದು ನೈಜತೆ ಮನವರಿಕೆಯಾದ್ದರಿಂದ ಎಂಬುದು ಸಂಶುಲ್ ಉಲಮಾರ ಕರಾಮತ್ ಆಗಿದೆ*...

*ಆದ್ದರಿಂದ ಚರಿತ್ರೆಯನ್ನು ಕೆಣಕಲು ಹೋಗಬೇಡಿ*....

*ನಿಮ್ಮ ಮತ್ತು ನಮ್ಮ ಆಖಿರ ರಕ್ಷೆ ಹೊಂದಬೇಕಿದ್ದರೆ ತಾಜುಲ್ ಉಲಮಾರ,ಸಂಶುಲ್ ಉಲಮಾರ ಮಕ್ಬರ ಝಿಯಾರತ್ ಮಾತ್ರವಲ್ಲದೆ ಉತ್ತಮ ವ್ಯಕ್ತಿಗಳಾಗಬೇಕೇ ಹೊರತು ಇತರರ ಕಡೆ ಕೈ ತೋರಿಸಬೇಡಿ*...

*ವಿಧ್ಯುತ್ ಗೊತ್ತಿದ್ದು ಗೊತ್ತಿಲ್ಲದೆ ಮುಟ್ಟಿದರೂ ಶಾಕ್ ಹೊಡೆಯುತ್ತೆ ಎಂಬ ಪರಿಙಾನ ಅಹ್ಲ್ಭೈತಿನ,ಉಲಮಾಗಳ ಕುರಿತು ಮಾತನಾಡುವಾಗ ಇರಲಿ*...

ಸಾಧ್ಯವಾದರೆ ಚರಿತ್ರೆಯೊಂದಿಗೆ ಸೆಣಸಾಡಿ...

ಐಕ್ಯತೆ ಅದು ಒಂದು ಸಂಘಟನೆಗೂ ಅನಿವಾರ್ಯವಲ್ಲ ಆದರೆ ಮಸ್ಲಹತ್ ಎಂಬುದು ಇಸ್ಲಾಮಿನ ಸಂದೇಶವಾಗಿದೆ ಅದರ ವಿರುಧ್ಧ ಧ್ವನಿ ಎತ್ತಿ ತಮ್ಮ ಕೀಳುಮಟ್ಟದ ಸ್ವಭಾವ ತೋರ್ಪಡಿಸಬೇಡಿ....

ಪರ್ಸನಲಾಗಿ ಚರಿತ್ರೆಯನ್ನು ಮುಂದಿಟ್ಟು ಚರ್ಚಿಸುದಾದರೆ ತಯಾರಾಗಿ....

✍ರಾಫಿ ನಗರ
*ನಬಿ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ತಂಙಳ್ ರವರನ್ನು ತವಸ್ಸುಲ್ ಮಾಡಿ ಪ್ರಾರ್ಥಿಸಿದಾಗ* 🌺🌺🌺

🌴🌴🌴🌴🌴🌴🌴
*ಗ್ರಾಮೀಣ ಅರಬಿಯ ಅನುಭವ*

ಮಹಮ್ಮದ್ ಬಿನ್ ಹರ್ ಬಿಲ್ ಬಾಹಿಲಿ
(ರ) ರಿಂದ ಇಬ್ನು ಭಶುವಾಹ ವರದಿ.

  ನಾನು ಮದೀನಾ ತಲುಪಿ ನಬಿ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ತಂಙಳ್ ರವರ ಖಬರ್ ಬಳಿ ತೆರಳಿದಾಗ ಆಆರಾಬಿ (ಗ್ರಾಮೀಣ ವ್ಯಕ್ತಿ) ಬಂದು ತನ್ನ ಒಂಟೆ ಕಟ್ಟಿಹಾಕಿದ ಬಳಿಕ ನಬಿ ಸಲ್ಲಲ್ಲಾಹು ಅಲೈಹಿವ ಸಲ್ಲಮರ ಖಬರ್ ಬಳಿ ಬಂದು ಅತ್ಯಂತ ವಿನೀತನಾಗಿ ಸಲಾಂ ಹೇಳುದರು.. ಆ ಬಳಿಕ ಪ್ರಾರ್ಥನೆಯನ್ನು ನಡೆಸಿದರು.ನಂತರ ನೆಬಿ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ತಂಙಳ್ ರವರನ್ನು ತವಸ್ಸುಲ್ ಮಾಡಿ ಈ ರೀತಿ ಹೇಳಿದರು." ನನ್ನ ಮಾತಾಪಿತರನ್ನು ತಮಗೆ ಅರ್ಪಿಸುವೆನು ತಮ್ಮನ್ನು ವಹಿಯ್ ಮೂಲಕ ಅಲ್ಲಾಹನು ಪ್ರತ್ಯೇಕಗೊಳಿಸಿರುವನು. ತಮಗೊಂದು ಗ್ರಂಥವನ್ನು ನೀಡಿದನು. ಪೂರ್ವಿಕರ ಹಾಗೂ ನಂತರದವಾರ ವಿವರಗಳು ಅದರಲ್ಲಿ ಆ ಗ್ರಂಥದಲ್ಲಿ ಇರುವುದೆಲ್ಲವೂ ಸತ್ಯವಾಗಿದೆ..
 
   ಅಲ್ಲಾಹನು ಹೇಳುತ್ತಾನೆ.
وْ اََنَّعُمْ اِذْ ظَلَمُو اَنفُسَعُمْ جَاوُكَ فَاسْتَغفِرُ وا الله وَاستغفَرَ َ لَهُمْ الرَّسُولَ لَوَجَدُ  والله تَوَّابًا رَعِيماً

 (ಸ್ವ -ಶರೀರದೊಂದಿಗೆ ಅಕ್ರಮವೆಸಗಿದವರು ತಮ್ಮನ್ನು ಸಮೀಪಿಸಿ ಅಲ್ಲಾಹನೊಂದಿಗೆ ಪಾಪ ವಿಮೋಚನೆಯನ್ನು ಬೇಡಿ ತಾವು ಅವರಿಗಾಗಿ ಅಲ್ಲಾಹನೊಂದಿಗೆ ಪಾಪ ವಿಮೋಚನೆಯನ್ನು ಕೇಳಿದರೆ ಅಲ್ಲಾಹು ಪಶ್ಚಾತಾಪ ಸ್ವೀಕರಿಸುವನು ಕೃಪಾಳುವೂ ಆಗಿ ಅವರಿಗೆ ಕಾಣುವನು.)
  ನನ್ನ ಪಾಪವನ್ನು ತಮ್ಮಲ್ಲಿ ನಿವೇದಿಸುತ್ತಾ ತಮ್ಮ ಬಳಿ ಬಂದಿರುವೆನು. ಆ ರೀತಿ ಬಂದರೆ ಪಾಪ ಮಣ್ಣಿಸಲಾಗುವುದೆಂದು ಅಲ್ಲಾಹನು ವಾಗ್ದಾನ ನೀಡಿರುವನು.. 
   
    ನಂತರ ಖಬರ್ ಷರೀಫ್ ಗೆ ತಿರುಗಿ ಈ ರೀತಿ ಹಾಡಿದರು.

يَا خَيرَ مَنْ دُفَنَتْ بِا لقَاعِ أَعْظَمُهُ
فَطَابَ مِنْ طِيبِعِنَّ القَاعُ الٌَاكَمُ
نَفسِى فِدَاءٌُ لقَبَرٍ اَنتَ سَاكِنُهُ
فِيهِ الفَافُ وَفِيهِ الجُودُ ولكْرَمُ
اَنتَ السَّفِيحِ الَّذِ ى تُرْجَى سَفَاحََتُهُ
الَىَ السِّيرَاطِ اِذَ امَا زَلَّتِ الْقَدَمُ
وَسَاحِبَاكَ فَلَا انسَاهُمَا اَبَدًا
مِنِّي السَّلاَمُ عَلَيكُمْ مَاجَرَى اْلّقَلَمُ

ಅರ್ಥ:-ಈ ಪ್ರದೇಶದಲ್ಲಿ ವಿಶ್ರಾಂತಿ ಹೊಂದುತ್ತಿರುವ ಪ್ರವಾದಿಯವರೆ ﷺ... ಈ ಮಣ್ಣಿನ ಕಾರಣ ಮದೀನಾ ದ ಗುಡ್ಡೆ ಹಾಗೂ ಬಯಲುಗಳು ಧನ್ಯಗೊಂಡಿವೆ.  ತಾವು ವಿಶ್ರಾಂತಿ ಪಡೆಯುವ ಖಬರ್ ಷರೀಫ್ ಗೆ ನನ್ನ ಶರೀರವನ್ನು ಅರ್ಪಿಸುವೆನು. ಪ್ರಶಾಂತಿ. ಔದಾರ್ಯತೆ ಗೌರವಗಳೆಲ್ಲವು ಈ ಖಬರ್ ನಲ್ಲಿ ಸ್ಥಿರಗೊಂಡಿದೆ. ಸ್ವಿರಾತ್ ಬಳಿ ಪಾದ ಹಿಂಜರಿಯುವ ವೇಳೆ ಶಫಾಹತ್ ನಿರೀಕ್ಷಿಸಲ್ಪಡುವ ಮಹಾನ್ ವ್ಯಕ್ತಿ ತಾವು ತಮ್ಮ ಇಬ್ಬರು ಆಪ್ತಮಿತ್ರರನ್ನು ಅಬೂಬಕ್ಕರ್ (ರ) ಉಮರ್ (ರ)  ನಾನ್ಯಾವತ್ತೂ ಮರೆಯಲಾರೆನು.  ಲೇಖನಿ ಚಲಿಸುತ್ತಿರುವ ಕಾಲದವರೆಗೂ ತಮಗೆ ನನ್ನ ಸಲಾಂ....)

  ಆತಬಿ (ರ) ರಿಂದ ವರದಿಯಾದ ಆದೇಶದಲ್ಲಿ ಮುಂದುವರಿವದು ಈ ರೀತಿ ಹೇಳಲಾಗಿದೆ.
    " ಆ ವ್ಯಕ್ತಿ ಹೋದ ಬಳಿಕ ನಾನು ನಿದ್ರಿಸಿದೆ. ಆ ನಿದ್ರೆಯಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ತಂಙಲ್  ನಾನು ಕನಸು ಕಂಡೆನು ನಬಿ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ತಂಙಳ್ ರವರು ನನ್ನೊಂದಿಗೆ ಹೇಳಿದರು "ಆತಬೀ ನೀವು ಆ ವ್ಯಕ್ತಿಯನ್ನು ಕಂಡು ಅಲ್ಲಾಹು ನಿಮ್ಮ ಪಾಪಗಳನ್ನು ಮನ್ನಿಸಿರುವನೆಂಬ  ಸಂಗತಿಯನ್ನು ತಿಳಿಸಿದ ತಿಳಿಸಿರಿ" (ಸಆದತ್  142) ಈ ಘಟನೆಯನ್ನು ಇಬ್ನು ಹಜರ್ ರ ಹಾಶಿಯತುಲ್ ಮನಾಸಿಕ್ನಲ್ಲಿ ಉದ್ಧರಿಸಿದ್ದಾರೆ...

    ಮೇಲಿನ ಘಟನೆ ಯಿಂದ ನೆಬಿಯವರ ಜೀವಿತ ಕಾಲದಲ್ಲೆನೆಂಬಂತೆ ವಫಾತಿನ ಬಳಿಕವೂ ಸಂಕಷ್ಟದ ವೇಳೆ ಸ್ವಹಾಬಿಗಳು ನಬಿ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ತಂಙಳ್ ರನ್ನು ಸಮೀಪಿಸಿ ಪರಿಹಾರ ಕಂಡುಕೊಳ್ಳುತ್ತಿದ್ದ ಎಂದು ಸ್ಪಷ್ಟವಾಯಿತು.......
💜💚💛💙❤💛💚💜

➖➖➖➖➖➖➖➖
*🌺صلّوا  على الحبيب (ﷺ.

*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ*
💕 *ಪುಣ್ಯ ಪ್ರವಾದಿ ( ﷺ) ರವರ ಮೇಲೆ ಮೂರು ಸ್ವಲಾತ್*
*اللهم صل علي سيدنا محمد عبدك ورسولك النبي الامي وعلي اله وصحبه وسلم* ✨
*ಇದನ್ನು ಶೇರ್ ಮಾಡಿರಿ...*

Monday, December 4, 2017

❤ *ಪ್ರವಾದಿﷺರವರು ಹೇಳಿದರು* ❤

ನನ್ನ ಮೇಲೆ ಓರ್ವ ಒಂದು ಸ್ವಲಾತ್ ಹೇಳಿದರೆ ನಾನು ಆತನಿಗಾಗಿ ಪ್ರಾರ್ಥಿಸುವೆನು. ಅಲ್ಲದೆ ಅವನಿಗೆ ಹತ್ತು ಸದ್ಗುಣಗಳನ್ನು ಹತ್ತು ಸತ್ಕರ್ಮಗಳನ್ನು ದಾಖಲಿಸಲಾಗುವುದು.... (ತ್ವಬ್ ರಾನಿ)
🌷🌷🌷🌷🌷🌷🌷

ನನಗಾಗಿ ನನ್ನ ಉಸ್ತಾದ್ ದುಆ ನಡೆಸಿದರು, ತಂಙಳ್ ರವರು ದುಆ ನಡೆಸಿದರು, ಎಂದೆಲ್ಲಾ ನಾವು ಎಷ್ಟೊಂದು ಸಂತೋಷ ದಿಂದ ನಮ್ಮವರೊಂದಿಗೆ ಆ ಖುಷಿಯನ್ನು ವ್ಯಕ್ತಪಡಿಸುತ್ತೇವೆ ಅಲ್ಲವೇ ಆದರೆ ನಮಗಾಗಿ ಈ  ಹಬೀಬ್ ರಸೂಲುಲ್ಲಾಹಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ತಂಙಳ್ ರವರು ಪ್ರಾರ್ಥಿಸುವುದೆಂದರೆ ನಾವು ಎಷ್ಟೊಂದು ಬಾಗ್ಯವಂತರು ಒಮ್ಮೆ ಊಹಿಸಿ ನೋಡಿ ಹಬೀಬ್ ತಂಙಳ್ ರವರು ಯಾರಿಗಾಗಿ ದುಆ ನಡೆಸುತ್ತಾರೋ ಅವರು ಖಂಡಿತ ಇಹಲೋಕದಲ್ಲೂ ,ಪರ್ಲೋಕದಲ್ಲೂ ಪರಾಜಯ ವಾಗಲಾರರು.....
ಇದು 100% ಸತ್ಯ.........
 ❤❤
         *ಹೇಳಿರಿ ಹಬೀಬ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ತಂಙಳ್ ರವರ ಮೇಲೆ ಪ್ರೀತಿಯಿಂದ ಮೂರು ಸ್ವಲಾತ್* ❤❤

*اَللَّهُمَّ صَلِِّ وَسَلِِّمْ عَلىٰ سَيِدِنَا مُحَمَّدٍ قَدْ ظَاقَتْ حِيلَتِي اَدْرِكْنِي يَا سَيِدِي يَا رَسُوُلَ اللهِ*

🌴🌴🌴🌴🌴🌴🌴🌴

✍ಅಬೂ ಆಶಿಕ್
*📝 ಪ್ರವಾದಿ ಸಂದೇಶ 📡*
🏘🏘🏘🏘🏘🏘🏘🏘🏘🏘🏘🏘    *ಪ್ರವಾದಿಯವರ ಬಹುಪತ್ನಿತ್ವ    🏘🏘🏘    ಸತ್ಯಾಂಶವೇನು...?*       🏘🏘🏘🏘🏘🏘🏘🏘🏘🏘🏘🏘🏘

*﷽*

*ಸಂಚಿಕೆ* 0⃣4⃣

💥 ಮತ್ತೊಂದು ಪತ್ನಿಯಾದ ಉಮ್ಮು ಸಲ್ಮಾ(ರ.ಅ) ನಾಲ್ಕು ಮಕ್ಕಳಿರುವ ಓರ್ವೆ ವಿಧವೆಯಾಗಿದ್ದರು. ತನ್ನ ಅನುಚರನಾದ ಪತಿಯೂ ಇಸ್ಲಾಮಿಗಾಗಿ ಮರಣಹೊಂದಿದಾಗ ಉಮ್ಮು ಸಲಮಾರವರನ್ನು ವಿವಾಹವಾಗಿ ಆ ಕುಟುಂಬದ ಸಂಪೂರ್ಣವಾದ ಸಂರಕ್ಷಣೆಯನ್ನು ಪ್ರವಾದಿಯವರೇ ವಹಿಸಿಕೊಂಡರು. ಪ್ರವಾದಿಯವರ ವಫಾತಿನ ನಂತರ ಬಹಳ ವರ್ಷ ಉಮ್ಮು ಸಲಮ (ರ.ಅ)ರವರು ಜೀವಿಸಿದ್ದಾರೆ.

💥 ಕ್ರಿ.ಶ 626 ರಲ್ಲಿ ನಡೆದ ಬನೂ ಮುಸ್ತಲಿಖ್ ಯುದ್ದದಲ್ಲಿ ಶತ್ರುಪಾಲಯದಿಂದ ಬಹಳಷ್ಟು ಜನರನ್ನು ಸೆರೆಯಾಳುಖಳಾಗಿ ಹಿಡಿಯಳಾಗಿತ್ತು. ಅದರಲ್ಲಿ ಗೋತ್ರದ ನಾಯಕನಾದ ಹಾರಿಸ್ ಹಾಗೂ ಮಗಳಾದ ಜುವೈರಿಯ್ಯಾರವರೂ ಇದ್ದರು. ಜುವೈರಿಯ್ಯಾರವರ ಪತಿ ಮರಣ ಹೊಂದಿದ್ದರು. ತನ್ನ ವಿಧವೆಯಾದ ಮಗಳನ್ನು ವಿವಾಹವಾಗಬೇಕೆಂದು ಹಾರಿಸ್ ಪ್ರವಾದಿಯವರೊಂದಿಗೆ ಅಪೇಕ್ಷಿಸಿದರು. ಆ ಅಪೇಕ್ಷೆಯನ್ನು ಸ್ವೀಕರಿಸಿ ಪ್ರವಾದಿಯವರು ಜುವೈರಿಯ್ಯಾರವರನ್ನು ವಿವಾಹವಾದರು. ಆ ವಿವಾಹದ ಕಾರಣದಿಂದ ಗೋತ್ರದವರೆಲ್ಲರೂ ಸೆರೆಮನೆಯಿಂದ ವಿಮೋಚಿತರಾಗಿ ಇಸ್ಲಾಂ ಸ್ವೀಕರಿಸಿದರು.

*(ಮುಂದುವರೆಯುವುದು)*
🌻⭐⭐⭐☀☀☀✨

ಝಿಯಾರತ್ತ್ ಕೇಂದ್ರ ಪುತ್ತನಂಗಾಡಿ ಶುಹದಾಗಳು.

*ಝಿಯಾರತ್ತ್ ಕೇಂದ್ರ​*
      👉🏻 5⃣0⃣
------------------------
 *ಪುತ್ತನಂಗಾಡಿ ಶುಹದಾಗಳು*
*ಪೆರಿಂದಲ್'ಮಣ್ಣ್. ಮಲಪ್ಪುರಂ*
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
🕌🕌🕌🕌🕌🕌🕌🕌

ಪರಿಶುದ್ಧ ದೀನಿಗಾಗಿ ಹೋರಾಡಿದ 22 ಹುತ್ಮಾತರುಗಳು ಅಂತ್ಯವಿಶ್ರಮಗೊಳ್ಳುತ್ತಿರುವ ಕೇರಳದ ಅತೀ ಪುರಾತನ ಕಾಲದ ಮಸ್ಜಿದಿನಲ್ಲೊಂದಾಗಿದೆ ಪುತ್ತನಂಗಾಡಿ ಜುಮಾ ಮಸ್ಜಿದ್.

ಸುಮಾರು 1000 ವರ್ಷಗಳಷ್ಟು ಹಳೆಯದಾದ ಇಲ್ಲಿಯ ಮಕ್ಬರಗಳು ಮತ್ತು ಮಸ್ಜಿದ್'ಗಳು ಪೌರಾಣಿಕ ಕುರುಹುಗಳು, ಚಾರಿತ್ರಿಕ  ಆಸಾರುಗಳು ಇಲ್ಲಿ ಈಗಲೂ ಮಾಯದೆ ನೆಲೆಗೊಂಡಿರುತ್ತದೆ.

 ಈ ಪ್ರದೇಶದ ಅಂದಿನ ರಾಜನ ಸೈನ್ಯವು ಮಸೀದಿ ಇಮಾಮರನ್ನು ವಧಿಸಿದರಿಂದ್ದ ಭುಗಿಲೆದ್ದ ಗಲಭೆಯಿಂದ ವೀರ ಮೃತ್ಯುಗೊಂಡ ಶಹೀದುಗಳ ಚರಿತ್ರೆಯಾಗಿದೆ ನಾವು ಇಲ್ಲಿ ನೆನಪಿಸುವುದು.

ಪೌರಾಣಿಕವಾದ ಮುಸ್ಲಿಂ ಪ್ರದೇಶವಾಗಿದೆ ಪುತ್ತನಂಗಾಡಿ. ಪೊನ್ನಾನಿಯಿಂದ ಆಗಮಿಸಿದ ರೈತ ಕುಟುಂಬಗಳು ಮತ್ತು ಇವರೊಂದಿಗೆ ಆಗಮಿಸಿದ ಮಖ್ದೂಮ್ ವಂಶದ ಖಾಝಿ ಜಮಾಲುದ್ದೀನ್ ಇಬ್ನು ಉಸ್ಮಾನ್ ಮಹ್'ಬಾರಿ (ರ) ರವರು ಇಲ್ಲಿ ಇಸ್ಲಾಮಿಕ ಪ್ರಭೋದನೆಯ ಮೂಲಕ ಪ್ರಸಿದ್ದರಾದವರು.
ಒಮ್ಮೆ ಅರಮನೆಯ ರಾಜನ ಪುತ್ರಿಗೆ ಮಾರಕವಾದ ರೋಗ ತಗಲಿದನ್ನು ವಾಸಿ ಮಾಡಿದ ಖಾಝಿಯವರನ್ನು ಅರಮನೆಯಯವರು ದೊಡ್ಡ ಗೌರವ ನೀಡಿ ಅಭಿನಂದಿಸಿದರು.

ಇಲ್ಲಿ ಮೊದಲು ಸಣ್ಣದೊಂದು ಮಸ್ಜಿದ್ ಇತ್ತು. ಮುಸ್ಲಿಂ ಜನಸಂಖ್ಯೆ ಹೆಚ್ಚಾದಾಗ ಮಸ್ಜಿದ್ ಪುನರುತ್ಥಾನ ಮಾಡಿ ಜುಮಾ ಆರಂಭಿಸಲು ಅಲ್ಲಿ ಆಡಳಿತದಲ್ಲಿದ್ದ ರಾಜನ ಅನುಮತಿ ಕೋರಿದರು. ಆದರೆ, ಹಲವರು ತಪ್ಪು ಮಾಹಿತಿ ನೀಡಿದರಿಂದ್ದ ರಾಜನು ಅನುಮತಿ ನೀಡದೆ,  ಹೇಳಿದ, "ಈಗ ಇರುವ ಮಸೀದಿಯನ್ನೇ ಸುಟ್ಟು ಬೂದಿ ಮಾಡಲಿಕ್ಕಿದೆ ಎಂದೂ, ನಿಮ್ಮವರ ಅಝಾನ್ ಹಾಗೂ ಉಳಿದ ಆರಾಧನೆ ಕರ್ಮಗಳು ನನಗೆ ಅಸಹ್ಯವಾಗಿದೆ."
ಎಂದೂ ಹೇಳಿದ.

ಅಹಂಕಾರಿಯಾದ ಈ ಪ್ರದೇಶದ ರಾಜನ ಈ ಮಾತು ಅಂದಿನವರೆಗೆ ನೆಲೆಗೊಂಡ ಮತಮೈತ್ರಿಗೆ ಕಳಂಕ ತಂದಾದರೂ, ಖಾಝಿಯವರು ಜನರ ಹತ್ತಿರ ಶಾಂತರಾಗಲು ಕರೆ ನೀಡಿದರು. ಆದರೂ ದುಷ್ಟನಾದ ರಾಜನು ತನ್ನ ಸೈನಿಕರನ್ನು ಬಿಟ್ಟು ಇಮಾಮರು, ಖಾಝಿಯು ಆದ ಜಮಾಲುದ್ದೀನ್ (ರ) ಉಸ್ತಾದರನ್ನು ವಧಿಸಿದರು.

ಇದು ಅಲ್ಲಿ ಬಹುದೊಡ್ಡ ಸಂಘರ್ಷಕ್ಕೆ ಹೇತುವಾಯಿತು. ಮೂರು ಬಾರಿ ಯುದ್ಧ ನಡೆಯಿತು. ಇದರಲ್ಲಿ ಅನೇಕ ಅಮುಸ್ಲಿಮರು ಮಡಿದರು. ಮುಸ್ಲಿಂಮರಲ್ಲಿ 22 ಜನರು ಹುತಾತ್ಮರಾದರು.
14 ಮುಸ್ಲಿಂಗಳ ಮಯ್ಯತ್ತುಗಳು ಸುಮಾರು ದಿವಸಗಳು ಕಳೆದ ನಂತರ ಸಿಕ್ಕಿದಾಗ ಅದನ್ನು ಒಂದು ಕಟ್ಟಡದೊಳಗೆ ದಫನ್ ಮಾಡಲಾಯಿತು.
ಉಳಿದ ಮಯ್ಯಿತ್ತುಗಳು 6 ತಿಂಗಳ ಬಳಿಕ ಯಾವುದೇ ಕೇಡು ಸಂಭವಿಸದೇ ಒಂದು ಬಾವಿಯಿಂದ ಲಭಿಸಿದಾಗ ಅದನ್ನು ಕೂಡ ತೆಗೆದು ಒಂದೇ ಜಾಗದಲ್ಲಿ ಪುನಃ ದಫನ್ ಮಾಡಲಾಯಿತು.

ಆಗಲೇ ಪ್ರದೇಶದ ರಾಜನು ಮತ್ತು ಸಂಗಡಿಗರು  ಮಸೀದಿಯನ್ನು ಸುಟ್ಟು ಬೂದಿ ಮಾಡಿದರು.
ಕೆಲವೇ ದಿವಸಗಳ ಒಳಗೆ ಮುಸ್ಲಿಂ ನಾಯಕರಾದ ಪೊಕರ್ ಮುಪ್ಪನ್ (ರ) ಪ್ರದೇಶದ ರಾಜನನ್ನು ಕೊಂದು ಮಸ್ಜಿದ್'ನ ಅಂಗಳದಲ್ಲೆ ಅವನ ‌ಶವವನ್ನು ಹೂತು ಹಾಕಿದರು. ಅದರ ಮೇಲೆ ಕಲ್ಲನ್ನು ಪ್ರತಿಷ್ಠಾಪಿಸಿದರು. ಈ ಕಲ್ಲು ಬೆಳೆದು ದೊಡ್ದಾಗಿ ತೆಲೆ ಎತ್ತಿ ನಿಂತದ್ದನ್ನು ಈಗಲೂ ಕಾಣಬಹುದು. ( ಇಲ್ಲಿ ಈ ಕಲ್ಲಿನ ಬೆಳವಣಿಗೆ ಮಹಾ ಶಿಕ್ಷೆ ಕೂಡ ಆಗಿರಬಹುದು. ಮೇಲ್ಭಾಗದ ಹಾಗೆ ಕೆಳಗಿನ ಭಾಗ ಕೂಡ ಬೆಳಯುತ್ತಿರಬಹುದು.)

ಪೊಕರ್ ಮುಪ್ಪನ್ (ರ) ರವರ ಖಬರ್ ಹಾಗೂ ಶುಹದಾಗಳ ಮಕ್ಬರಗಳು, ಪೊಕರ್ ಮುಪ್ಪನ್ (ರ) ರವರ ನೇತೃತ್ವದಲ್ಲಿ ಕಟ್ಟಿಸಿದ 2 ದೊಡ್ಡ ಮಸ್ಜಿದ್'ಗಳು ಈಗಲೂ ಇಲ್ಲಿ ಕಾಣಬಹುದು.

ಅಲ್ಲದೆ ಮಂಬುರಂ ತಂಗಳರವರ (ರ) ಗುರು ಆದ "ಕಾಲಿಲ್ಲದ ಉಪ್ಪಾಪ" ಎಂಬ ಹೆಸರಿನಲ್ಲಿ ಪ್ರಸಿದ್ದರಾದ ವಲಿಯುಲ್ಲಾಹಿ ಅಬ್ದುಲ್ಲ ಮುಸ್ಲಿಯಾರ್ (ರ), ಜಿಫ್ರಿ ತಂಗಳ್ (ರ), ಹಲವಾರು ಪವಾಡಗಳನ್ನು ಜೀವಿತ ಕಾಲದಲ್ಲಿಯೂ, ವಫಾತ್ತಿನ ನಂತರವೂ ಪ್ರಕಟ ಮಾಡಿದ ವಲಿಯುಲ್ಲಾಹಿ ಅಲಿ ಹಸನ್ ಮೊಲ್ಲಾಕ (ರ), ಸಯ್ಯಿದರುಗಳು ಹಾಗೂ ಹಲವಾರು ಉಸ್ತಾದರುಗಳ ಮಕ್ಬರಗಳು ಇದೆ.

ಖುತುಬುಝಮಾನ್ ಮಂಬುರಂ ತಂಗಳ್ (ರ), ಅಂಬಕುನ್ನು ಬೀರಾನ್ ಔಲಿಯ ಉಪ್ಪಾಪ (ರ), ಶಂಸುಲ್ ಉಲಮಾ (ರ), ಕಣ್ಣ್ಯಾಲ ಮೌಲ (ರ), ಚಾಪ್ಪನಂಗಾಡಿ ಬಾಪ್ಪು ಮುಸ್ಲಿಯಾರ್ (ರ) ಹಾಗೂ ಅರಿಬ್ರ ಅಬೂಬಕ್ಕರ್ ಮುಸ್ಲಿಯಾರ್ (ರ) ಎಂಬ ಮಹಾತ್ಮರುಗಳು ಇಲ್ಲಿಗೆ ಝಿಯಾರತ್ತಿಗೆ ಬರುತ್ತಿದ್ದರು. ಕಣ್ಣ್ಯಾಮಲ ಮೌಲ (ರ) ರವರು ಇಲ್ಲಿ ಓದಿ ಕಲಿತವರಾಗಿದ್ದಾರೆ. ಇವರು ಸಾರ್ವಜನಿಕವಾಗಿ ಎಲ್ಲಿಯೂ ಪ್ರತ್ಯಕ್ಷಪಡಲು ಇಷ್ಟಪಡುತ್ತಿರಲಿಲ್ಲ. ಆದರೂ ಈ ಮಹಾನರು ಇಲ್ಲಿಯ ಉರೂಸಿನಲ್ಲಿ ಭಾಗವಹಿಸುತ್ತಿದ್ದರು.

ಹಳೆಯ ಕಾಲದ ಚರಿತ್ರೆ ಅನುಸ್ಮರಿಸುವ ಹಲವಾರು ಆಸಾರುಗಳು ಈ ಮಸ್ಜಿದ್'ನಲ್ಲಿ ಈಗಲೂ ಸಂರಕ್ಷಿಸಿಡಲಾಗಿದೆ.

ದಾರಿ: ಪೆರಿಂದಲ್'ಮಣ್ಣಿ'ನಿಂದ ಕೊಳತ್ತೂರ್- ವಳಾಂಚೆರಿ ಮಾರ್ಗದಲ್ಲಿ 5 ಕಿ.ಮಿ. ಸಂಚರಿಸಿದರೆ ಪುತ್ತನಂಗಾಡಿ, ಪಳ್ಳಿಪ್ಪಡಿಯಲ್ಲಾಗಿದೆ ಶುಹದಾಗಳ ಮಖಾಂ ನೆಲೆಗೊಳ್ಳುತ್ತಿರುವುದು.

✍ಗಫೂರ್ ಬಾಯಾರ್
🔻🔻🔻🔻🔻🔻🔻🔻🔻



*ಝಿಯಾರತ್ತ್ ಕೇಂದ್ರ​*
      4⃣9⃣
------------------------
*ಮಲಪ್ಪುರಂ ಶುಹದಾಅ್'ಗಳು. ವಲಿಯಂಗಾಡಿ ಜುಮಾ ಮಸ್ಜಿದ್ ಮಲಪ್ಪುರಂ.*
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
🕌🕌🕌🕌🕌🕌🕌🕌

ಮಲಪ್ಪುರಂ ಪಟ್ಟಣದ ಹತ್ತಿರ ನೆಲೆಗೊಳ್ಳುವ ಶುಹದಾಗಳ ಮಖಾಂ ಬಹಳ ಪ್ರಸಿದ್ಧವಾಗಿದೆ.
ವಲಿಯಂಗಾಡಿ ಜುಮಾ ಮಸ್ಜಿದ್'ನ ಸಮೀಪವಾಗಿದೆ ಈ ಶುಹದಾಗಳು ಅಂತ್ಯವಿಶ್ರಮಗೊಳ್ಳುತ್ತಿರುವುದು.

ಮಲಪ್ಪುರಂ (ಪಡೆ)ಯುದ್ಧಯಲ್ಲಿ ನಾಡು ರಾಜನ ಸೈನಿಕರೊಂದಿಗೆ ಹೋರಾಡಿ ವೀರ ಮರಣ ಹೊಂದಿದ 44 ಶುಹದಾಗಳ ಚರಿತ್ರೆಯಾಗಿದೆ ಇದು.

ಹಿಜರಿ 1141ರಲ್ಲಿ ಮಲಬಾರಿನಲ್ಲಿ ಸಾಮೂತಿರಿ ರಾಜನ ಆಡಳಿತವಾಗಿತ್ತು. ಜಾತಿ ಮತ ಭೇದವಿಲ್ಲದೆ ರಾಜನು ಎಲ್ಲರಿಗೂ ಸಹಾಯಗಳು ನೀಡುತ್ತಿದ್ದನು. ಸಾಮೂತಿರಿಯ ಅಧೀನದಲ್ಲಿದ್ದ ಮಲಪ್ಪುರಂ ಪ್ರದೇಶದ ಅಧಿಕಾರಿ ಪಾರನಬಿ ಎಂಬವರಾಗಿದ್ದರು. ಸಮೂತಿರಿ ರಾಜನ ಹಾಗೆಯೇ ಪಾರ ನಬಿಗೂ ಮುಸ್ಲಿಮರ ಮೇಲೆ ಉತ್ತಮವಾದ ಸ್ನೇಹ ಸಂಬಂಧವಿತ್ತು. ಪಾರ ನಬಿಯ ಸೈನ್ಯದಲ್ಲಿ‌ ಬಹು ಪಕ್ಷ ಸೈನಿಕರು ಮುಸ್ಲಿಮರಾಗಿದ್ದರು. ಆದರೆ ಪಾರ ನಬಿಗೂ ಸಾಮೂತಿರಿ ರಾಜನಿಗೂ ಮುಸ್ಲಿಮರೊಂದಿಗೆ ಇರುವ ಪ್ರೀತಿ, ಗೌರವ ಹಾಗು ಸೌಹಾರ್ದವೂ ಮೇಲ್ಜಾತಿಯವರಿಗೆ ಇಷ್ಟಪಡಲಿಲ್ಲ. ಅವರು ಈ ಸ್ನೇಹ ಸಂಬಂಧವನ್ನು ಇಲ್ಲದಾಗಿಸಲು ಹಲವು ಕುತಂತ್ರಗಳು ಹೆಣೆದರಾದರೂ ಯಾವುದೂ ಕೂಡಾ ಸಫಲವಾಗಲಿಲ್ಲ.

ತೆರಿಗೆ ಕೊಡದವರನ್ನು ಬಂಧಿಸಿ ಜೈಲಿನಲ್ಲಿ ಕೂಡಿ ಹಾಕುವ ಪದ್ದತಿ ಅಂದಿನ ನಿಯಮವಾಗಿತ್ತು.
ಸವರ್ಣರಲ್ಲಿ ಒಳಪಟ್ಟ ಒಬ್ಬನು ತೆರಿಗೆ ಕೊಡದ ಕಾರಣ ಪಾರ ನಬಿಯ ತೆರಿಗೆ ವಸೂಲು ಮಾಡುವವರಾದ ಅಲಿ ಮರಕಾರ್ ಅವನನ್ನು ಬಂದನದಲ್ಲಿರಿಸಿದರು. ಇದಾಗಿದೆ ಮಲಪ್ಪುರಂ ಯುದ್ಧಕ್ಕೆ ಕಾರಣವಾಗಿರುವುದು.

ಸವರ್ಣ ವಿಭಾಗದ ಜನರು ಮರಕಾರ್'ರವನ್ನು ವಧಿಸಲಿಕ್ಕಾಗಿ ಸೂತ್ರ ಹೆಣೆದರು.
ನಾಯರ್ ಸೈನಿಕರು ವಂಚನೆಯ ಮೂಲಕ ಅಲಿ ಮರಕಾರ್'ರವರನ್ನು ಖಡ್ಗದಿಂದ ಇರಿದರು. ಇದನ್ನು ನೋಡುತಿದ್ದ ಕುಂಞ ಅಹ್ಮದ್ ಎಂಬವರು ಮರಕಾರ್ ಅವರ ಜೊತೆಗೂಡಿ ನಾಯರ್ ಪಡೆಯನ್ನು ಧೀರವಾಗಿ ಎದುರಿಸಿದರು. ದೊಡ್ಡ ಸೈನಿಕ ಶಕ್ತಿ  ಇಲ್ಲದಿದ್ದರಿಂದ ಮರಕಾರ್ ಹಾಗೂ ಕುಂಞ ಅಹ್ಮದ್ ಎಂಬಿಬ್ಬರು ಹುತಾತ್ಮರಾದರು. ಆದರೂ ಈ ಇಬ್ಬರು ಸಿಂಹಗಳ ಖಡ್ಗದ ಇರಿತಕ್ಕೆ ಒಳಗಾಗಿ ಹಲವಾರು ನಾಯರ್ ಸೈನಿಕರು ಸಾವುಗೀಡಾಗಿದ್ದರು. ಈ ವಿಷಯ ತಿಳಿದ ಪಾರ ನಬಿ ರೋಷಗೊಂಡು, ಮುಸ್ಲಿಂ ಸಮುದಾಯದವರ ತೋಟಗಳನ್ನು, ಮನೆಗಳನ್ನು ಹಾಗು ಮಸ್ಜಿದ್'ಗಳನ್ನು ಸುಟ್ಟು ಹಾಕಿದನು. ಮುಸ್ಲಿಂ ಕುಟುಂಬಗಳ ಕೈವಶವಿರುವ ಸ್ಥಳಗಳನ್ನು ವಶಪಡಿಸಲು ಆಜ್ಞೆ ಹೊರಡಿಸಿದನು. ಇದರಿಂದ್ದ ಮುಸ್ಲಿಮರು ಅತೀವ ದುಃಖದಲ್ಲಾದರು. ಮಹಿಳೆಯರನ್ನು, ಮಕ್ಕಳನ್ನು ಹತ್ತಿರದ ಊರಿಗೆ ಕಳುಹಿಸಿ, ಪುರುಷರು ಮಸೀದಿಯಲ್ಲಿ ಅಭಯ ಪ್ರಾಪ್ತಿಸಿದರು.
ಇದರ ನಡುವೆ ಹಲವು ಮುಸ್ಲಿಂ‌ ನಾಯಕರು ಪಾರ ನಬಿಯೊಂದಿಗೆ ಶಾಂತಿಗಾಗಿ ಅಪೇಕ್ಷಿಸಿದರೂ ಅವನು ಸಮ್ಮತಿಸಿಲ್ಲ.

ಮಸೀದಿಯನ್ನು ನಾಯರ್ ಸೈನಿಕ ಪಡೆ ಆಕ್ರಮಿಸಿದರು.
ಕೊನೆಗೆ ಯಾವುದೇ ಹಾದಿ ಕಾಣದಾಗ ಮುಸ್ಲಿಮರು ವಿಶುದ್ಧ ಯುದ್ಧ ಮಾರ್ಗಕ್ಕೆ ದುಮುಕಿದರು. ಯುದ್ಧದ ಪ್ರಥಮ ಘಟ್ಟದ್ದಲ್ಲಿ ಮುಸ್ಲಿಂ ಸೈನ್ಯಕ್ಕೆ ಮುನ್ನಡೆ ಸಾದಿಸಿದೆಯಾದರೂ, ಯುದ್ಧ ಸ್ಥಳದಿಂದ ಹಿಂದಿರುಗಿ ಓಡಿ ಹೋದ ಪಾರ ನಬಿಯ ಸೈನ್ಯ, ನಂತರ ಸರ್ವ ಸಜ್ಜೀಕರಣದೊಂದಿಗೆ ಮರಳಿ ಬಂದರು.
2ನೇ ಹಂತದ ಯುದ್ಧದಲ್ಲಾಗಿದೆ 44 ಮುಸ್ಲಿಮರು ಶಹೀದಾಗಿರುವುದು.
ಇವರೊಂದಿಗೆ ಮುಸ್ಲಿಮರಿಗಾಗಿ ಸಹಾಯಗಳು ಮಾಡಿದ ಒಬ್ಬ ಆಚಾರಿಯು ಹುತಾತ್ಮರಾಗಿದ್ದಾರೆ.

ಯುದ್ಧದ ನಂತರ ಪಾರ ನಬಿಯ ಸೈನ್ಯವು ಮಸ್ಜಿದ್'ಗೆ ಬೆಂಕಿ ಕೊಟ್ಟು ಹೊತ್ತಿಸಿದರು. ಮಸೀದಿಯೊಳಗೆ ಇದ್ದ ಹಲವಾರು ಮುಗ್ದ ಜನರು ಬೆಂಕಿಯ ಆಹುತಿಗೆ ಮಡಿದರು.

ಯುದ್ಧ ಮುಗಿದ ದಿನದಿಂದ ಪಾರ ನಬಿಗೂ, ಕುಟುಂಬದವರಿಗೂ ಹರಡುವ ಮಾರಕ ಖಾಯಿಲೆ ಹಿಡಿಯಿತು. ಹಲವಾರು ವೈದ್ಯರಿಗೆ ತೋರಿಸಿದರೂ ರೋಗ ವಾಸಿಯಾಗಲಿಲ್ಲ.
ಪಾರ ನಬಿ ಇದರ ಕಾರಣವನ್ನು ಹುಡಿಕಿದಾಗ, ತಾನು ಮಾಡಿದ ಘೋರ ಅನ್ಯಾಯ ನೆನಪಾಗಿ, ತನ್ನ ತಪ್ಪಿನ ಅರಿವಾಯಿತು.
ಬಳಿಕ ಮಸ್ಜಿದ್ ಸುಟ್ಟದಕ್ಕೆ  ಪ್ರಾಯಶ್ಚಿತವಾಗಿ ಅಲ್ಲಿಯೇ ಒಂದು ಮನೋಹರವಾದ ಮಸ್ಜಿದ್ ನಿರ್ಮಿಸಿದನು. ಬಡವರಿಗೆ ಮನೆಗಳನ್ನು ಕಟ್ಟಿಸಿ ಕೊಟ್ಟನು. ಸೌಜನ್ಯವಾಗಿ ಔಷದಿಯನ್ನು ವಿತರಿಸಿದನು. ಇದರೊಂದಿಗೆ ಅವನ ಮತ್ತು ಕುಟುಂಬದವರ ಖಾಯಿಲೆಗಳು ಸಂಪೂರ್ಣವಾಗಿ ಗುಣಮುಖವಾಯಿತು.

ವಳ್ಳುವನಾಡಿನಿಂದ ಆಗಮಿಸಿದ ಜಮಾಲ್ ಮೂಪ್ಪನ್ ಎಂಬವರ ನೇತೃತ್ವದಲ್ಲಿ ಅಲ್ಲಿರುವ ಇತರರು ಸೇರಿ ಹುತಾತ್ಮರ ಜನಾಝಗಳನ್ನು ದಫನ್ ಮಾಡಿರುವುದು.

ಎಲ್ಲಾ ವರ್ಷವೂ ಶಹ್'ಬಾನ್ 09'10ಕ್ಕೆ ಅಲ್ಲಿ ಆಂಡ್ ನೇರ್ಚೆ ನಡೆಯುತ್ತದೆ.

ಮಸೀದಿಗೆ ಹೋಗುವ ದಾರಿಯಲ್ಲಿ ಹಲವಾರು ಸದಾತ್ತುಗಳ ಮಕ್ಬರಗಳು ಒಂದು ಮಖಾಂನಲ್ಲಿದೆ.

ದಾರಿ: ಮಲಪ್ಪುರಂ ಉತ್ತರದಿಂದ ವೆಂಗರ ರೂಟ್'ನಲ್ಲಾಗಿದೆ.
ಶುಹದಾಅ್'ಗಳ ಮಖಾಂ ಇರುವುದು.

✍ಗಫೂರ್ ಬಾಯಾರ್
🍁🍁🍁🍁🍁🍁🍁🍁🍁


*ಝಿಯಾರತ್ತ್ ಕೇಂದ್ರ​*
      4⃣8⃣
     👉ಭಾಗ-04
------------------------
*ಖುತ್ತುಬುಲ್ ಅಖ್ತಾಬ್ ಶಾಹುಲ್ ಹಮೀದ್ ವಲಿಯುಲ್ಲಾಹಿ (ರ) ನಾಗೂರ್ ಶರೀಫ್ ನಾಗಪಟ್ಟಣ, ತಮಿಳುನಾಡು*
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
🕌🕌🕌🕌🕌🕌🕌🕌

ವೀಳ್ಯದೆಲೆಯನ್ನು ಆ ಮಹದಿಯ ಬಾಯಿಗೆ ಹಾಕಿ ಕೂಡಲೇ ನುಂಗಲು ನಿರ್ದೇಶಿಸಿದರು.
ಮಹಾತ್ಮೆ ಆ ಪ್ರಕಾರ ಮಾಡಿದರು.

ನಂತರ ಹೇಳಿದರು, ಇದರಿಂದ ನಿಮಗೊಂದು ಗಂಡು ಮಗು ಜನಿಸಲಿದೆ ಎಂದೂ, ನನ್ನ ಮರಣಗೊಂಡ ಸಹೋದರ ಯೂಸುಫ್'ರವರ ಹೆಸರು ಮಗುವಿಗೆ ನಾಮಕರಣ ಮಾಡಬೇಕೆಂದು ನಿರ್ದೇಶಿಸಿದರು.
5ನೇ ಪ್ರಾಯದಲ್ಲಿ ಖುರ್'ಆನ್ ಕಂಠಪಾಠ ಮಾಡುವರೆಂದೂ, 7ನೇ ವಯಸ್ಸಿನಲ್ಲಿ ತನ್ನ ಜನನಕ್ಕೆ  ಕಾರಣ ಯಾರೆಂದು ಅನ್ವೇಷಣೆ ಮಾಡುವರೆಂದು, ತನಗೆ ಅವರು ಏನು ಹದ್'ಯ ನೀಡಿರುವುದೆಂದು ಕೇಳುವಾಗ ಈ 'ಮಿಸ್'ವಾಕನ್ನು' ಕೊಡಬೇಕೆಂದು ಸೂಚಿಸಿದರು, ಆ ಮಹಾತ್ಮರ ಬಳಿ ಹೋಗಲು ಸಮ್ಮತ ಕೇಳಿದರೆ ನೀವು ಅನುಮತಿ ನೀಡಬೇಕೆಂದೂ ಹೇಳಿ ಶೈಖ್'ರವರು ಯಾತ್ರೆ ಹೇಳಿ ಅಲ್ಲಿಂದ ಹೊರಟು ಹೋದರು.

ನಂತರ ಆ ಮಗು ಜನಿಸಿತು. ಹೇಳಿದ ಪ್ರಕಾರ ಯೂಸುಫ್ (ಖ:ಸಿ) ಎಂಬ ಹೆಸರು ಇಡಲಾಯಿತು. ಶೈಖ್'ರವರು ಸೂಚಿಸಿದ ಹಾಗೆ 7 ನೇ ವಯಸ್ಸಾದಾಗ ಮಹಾತ್ಮರನ್ನು ಅನ್ವೇಷಿಸಿದಾಗ, ಮಾತಾಪಿತರು ವಿವರಿಸಿ ಕೊಟ್ಟರು. ನಂತರ ತಂದೆತಾಯಿಯವರ ಸಮ್ಮತದೊಂದಿಗೆ ನಾಗೂರ್ ಪಟ್ಟಣಕ್ಕೆ ತಲುಪಿದರು.

*ಮಹಾನುಭಾವರಿಗೆ ವಿಷ ಉಣಿಸಲಾಗುತ್ತದೆ.*

ಶೈಖ್ ಅವರನ್ನು ವಧಿಸಲು ತೀರ್ಮಾನಿಸಿ ಅಲ್ಲಿಯ ರಾಜನು ದೊಡ್ಡದೊಂದು ಸತ್ಕಾರ ಕೂಟವನ್ನು ಏರ್ಪಡಿಸಿದನು.
ಮಹಾನುಬಾವರನ್ನು ಸಮೀಪಿಸಿ ರಾಜನು ಹೇಳಿದನು: ನೀವು ಹಾಗೂ ನಿಮ್ಮ ಶಿಷ್ಯಂದಿರು ನನ್ನ ಮನೆಗೆ ಬಂದು ಆಹಾರ ಸೇವಿಸಿ ನನಗೆ ಅನುಗ್ರಹಿಸಬೇಕು.
ಶೈಖರು ತನ್ನ ಶಿಷ್ಯರೊಂದಿಗೆ ರಾಜನ ಆಮಂತ್ರಣ ಸ್ವೀಕರಿಸಿ ಅರಮನೆಗೆ ಹೋದರು.
ಆಹಾರವನ್ನು ಕೊಂಡುಬಂದಾಗ ಮಹಾನುಬಾವರು ಬಿಸ್ಮಿ ಹೇಳಿ ಸೇವಿಸಿದರು.
ಶಿಷ್ಯರೊಂದಿಗೆ ಆಹಾರ ತಿನ್ನಬಾರದೆಂದು ನಿರ್ದೇಶಿಸಿದರು.
ಶೈಖ್'ವರು ಒಂದು ಹಿಡಿ ಅನ್ನ ಸೇವಿಸಿದಾಗ ಅದರಲ್ಲಿದ್ದ ವಿಷ ರಾಜನ ಪಾದಕ್ಕೆ ತಲುಪಿತು. ಎರಡನೇ ಹಿಡಿ ಸೇವಿಸಿದಾಗ ವಿಷ ಕಾಲಿನ ಗಂಟಿನ ವರೆಗೆ ತಲುಪಿತು. ಮೂರನೇ ಹಿಡಿ ಸೇವಿಸಿದಾಗ ವಿಷ ಶರೀರ ಮೊತ್ತ ವ್ಯಾಪಿಸಿ ಕ್ಷಣಾರ್ಧದಲ್ಲಿ ರಾಜನು ಮರಣ ಹೊಂದಿದನು.
ಪ್ರಿಯತಮನ ಆಕಸ್ಮಿಕವಾದ ಸಾವಿನಿಂದ ಸ್ಮೃತಿಗೆಟ್ಟ ಪ್ರಿಯ ಪತ್ನಿಯ ಅಟ್ಟಹಾಸವನ್ನು, ಸಂಕಟವನ್ನು ಕಂಡು ಶೈಖವರಿಗೆ ದಯೆ ತೋರಿತು.
ಮಹಾನುಭಾವರು ಅಲ್ಲಾಹನಲ್ಲಿ ಪ್ರಾರ್ಥಿಸಿದರು. ಏನದ್ಬುತ ರಾಜನಿಗೆ ಜೀವ ಮರಳಿ ಸಿಕ್ಕಿತು.

        *ವಫಾತ್ತ್*

ಆತ್ಮಜ್ಞಾನ ಗೋಪುರವಾದ ಮಾಣಿಕ್ಯಪುರದ ನಿರದೀಪ ಹಿಜರಿ ವರ್ಷ 978 ಜಮಾದುಲ್ ಆಖಿರ್ 10ಕ್ಕೆ ಶುಕ್ರವಾರ ರಾತ್ರಿ ತಹಜ್ಜುದ್ ನಮಾಜಿನ ಸಮಯದಲ್ಲಿ ಇಹಲೋಕ ಯಾತ್ರೆಯಾದರು.

ದಕ್ಷಿಣ ಭಾರತದ ತಮಿಳುನಾಡಿನ ಕಾವೇರಿ ನದಿ ತೀರದ ಪುಣ್ಯ ಝಿಯಾರತ್ತ್ ಕೇಂದ್ರವಾಗಿದೆ ಈ ನಾಗೂರ್.

*16ನೇ ಶತಮಾನದಲ್ಲಿ ವಫಾತ್ತ್ ಆದಂತಹ  ಶೈಖ್'ವರುಗಳ ದರ್ಗಾ ಶರೀಫ್'ನ 5 ಚಿನ್ನದ ಮಿನಾರಗಳು ದರ್ಗಾದ  ಆಕರ್ಷಣೆಯಾಗಿದೆ. ಹಿಂದೂ ಧರ್ಮದ ರಾಜನಿಗೆ ಮಾರಣ ನಿಮಿತ್ತ ಉಂಟಾದ ಮಾರರೋಗದಿಂದ ಮಹಾತ್ಮರ ಮುಖಾಂತರ ಸುಖ ಪ್ರಾಪ್ತಿಸಿದರಿಂದ್ದ ಪ್ರತಿಫಲವಾಗಿ ನೀಡಿದ 3000 ಎಕ್ಕರೆ ಸ್ಥಳ ಮತ್ತು ದರ್ಗಾ ಇಂದು ಜಾತಿಮತ ಭೇದವಿಲ್ಲದೆ ಸಮಸ್ತ ಜನತೆಯ ಅಭಯಕೇಂದ್ರವಾಗಿ ಮಾರ್ಪಟ್ಟಿದೆ. ಕಾವೇರಿ ನದಿ ತೀರದ 5 ಸಾವಿರದಷ್ಟು ಕ್ಷೇತ್ರಗಳ ನಡುವಿನಲ್ಲಿ ತಲೆ ಎತ್ತಿ ನಿಂತಿರುವ ಪುಣ್ಯ ಮಖಾಮ್ ಶರೀಫ್ ಮತ ಸೌಹಾರ್ಧದ ಮಹಾ ಪ್ರತೀಕವಾಗಿದೆ.*

*ಜೀವಿತ ಕಾಲದ ಹಾಗೆ ವಫಾತ್ತಿನ ನಂತರವೂ ಮಹಾನುಭಾವರ ಪವಿತ್ರ ಸನ್ನಿದಿಗೆ ತಲುಪುವವರಿಗೆ ಉದ್ದೇಶ ಸಫಲವಾಗುವುದು ಖಂಡಿತವಾಗಿದೆ*

*ಅಲ್ಲಾಹು ಗೌರವಿಸಿದವರನ್ನು, ಅವರ ಸರಣಿಯನ್ನು ನಿಷೇಧಿಸುವ ಹತಭಾಗ್ಯರಿಗೆ ನಾಗೂರ್ ದರ್ಗಾ ಶರೀಫ್ ಯಾವಾಗಲೂ ಸಿಂಹ ಸ್ವಪ್ನವಾಗಿದೆ.*
*ಅದೇ ರೀತಿ ವಿಶ್ವಾಸಿ ವೃಂದಕ್ಕೆ ಸಾಂತ್ವನದ ಕೇಂದ್ರವೂ ಆಗಿದೆ.*

🔹ಮುಗಿಯಿತು.

✍ಗಫೂರ್ ಬಾಯಾರ್
✒✒✒✒✒✒✒✒✒



*ಝಿಯಾರತ್ತ್ ಕೇಂದ್ರ​*
      4⃣8⃣
     👉ಭಾಗ-03
------------------------
*ಖುತ್ತುಬುಲ್ ಅಖ್ತಾಬ್ ಶಾಹುಲ್ ಹಮೀದ್ ವಲಿಯುಲ್ಲಾಹಿ (ರ) ನಾಗೂರ್ ಶರೀಫ್, ನಾಗಪಟ್ಟಣಂ. ತಮಿಳುನಾಡು.*
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

*ಅಲ್ಲಾಹ್* ಎಂಬ ಪರಮ ಗುರಿ ಪ್ರಾಪ್ತಿ ಗಳಿಸುವ ಚಿಂತೆ ಮಾತ್ರವಾಗಿತ್ತು.

ಆ ಸಾತ್ವಿಕ ಜೀವನ ಎಲ್ಲರಿಗೂ ಮಾದರಿಯೋಗ್ಯವಾಗಿತ್ತು. ಇಲಾಹಿಯೆಡೆಗೆ ಇರುವ ಪ್ರಯಾಣಕ್ಕೆ  ಅಡ್ಡಿಪಡಿಸುವವರಿಗೆ ಅವರು ಕನಿಷ್ಟ ಬೆಲೆ ಕೂಡಾ ಕಲ್ಪಿಸುತ್ತಿರಲಿಲ್ಲ. ಪ್ರಾಪ್ತರಾದ ಗುರುವನ್ನು ಹುಡುಕುತ್ತಾ ಮೈಲುಗಳು ದಾಟಿಯಾದರೂ ಕಂಡು ಹಿಡಿಯುತ್ತಿದ್ದರು.
ಹಿಜರಿ ವರ್ಷ 928ರ ನಂತರ ಶೈಖನ್ನು ಹುಡುಕಿಕೊಂಡು ಹೊರಟಿರುವ ಶಾಹುಲ್ ಹಮೀದ್ (ಖ:ಸಿ) ರವರು ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ.ಆಗಲೇ ಅಧ್ಯಾತ್ಮಿಕತೆಯ ಉನ್ನತ ಸ್ಥಾನಕ್ಕೆರಿದ ಮಹಾನರಾಗಿದ್ದರು.

(ಜ್ಞಾನಿಗಳು ಎಂದು ಸ್ವತಃ ತನ್ನನ್ನು ತಾನೇ ಹೇಳಿಕೊಂಡು ನಡೆಯುವ ಅಲ್ಪಜ್ಞಾನಿಗಳು ಈ ಸಾತ್ವಿಕ ಜೀವನವನ್ನು ಕಲಿಯುತ್ತಿರುತ್ತಿದ್ದರೆ ಅವರ ಜೀವನವು ಕೂಡಾ ಧನ್ಯವಾಗುತ್ತಿತ್ತು.)

ಕಣ್ಣು ಮುಚ್ಚಿ ಕತ್ತಲು ಮಾಡುವವರು ಸ್ವಾರ್ಥವನ್ನು ಬಿಟ್ಟು ಒಳ್ಳೆಯ ಮನಸ್ಸಿನೊಂದಿಗೆ ಚಿಂತಿಸಬೇಕು.
ಪರಿವರ್ತನೆಗೆ ತಯಾರಾಗಬೇಕು. ಎಂದು
ಆ ಯಾತ್ರೆಯಲ್ಲಿ ಜೊತೆಗಿದ್ದ ಸಹಯಾತ್ರಿಕರಾಗಿದ್ದ ಬಾಲಿಗ್ ಊರಿನವರಾದ "ಮುಈನುದ್ದೀನ್' (ಖ:ಸಿ) ಎಂಬವರೊಂದಿಗೆ ಶೈಖವರು ಉಪದೇಶಿಸಿದರು.

ಅಲ್ಲಾಹನ ಭಯ ಮತ್ತು ಭಕ್ತಿ ಯಾವಾಗಲೂ ಜೀವನದಲ್ಲಿ ಅಳವಡಿಸಬೇಕಾದ ಕಾರ್ಯವಾಗಿದೆ.
ಇಸ್ಲಾಮಿನಲ್ಲಿ 2 ಭಾಗಗಳು‌ ಮಾತ್ರ ಇರುವುದು, ಅದು ಬಾಹ್ಯ ಮತ್ತು ಆಂತರಿಕ ಇವೆರಡೂ ಸಂಶುದ್ಧಿಯಾಗಿರಬೇಕು. ಹೀಗೆ ಶರೀಅತ್ತ್ ಮತ್ತು ತ್ವರೀಖತ್ತ್ ಸಮನ್ವಯಪಡುವುದಾಗಿದೆ ಪರಿಪೂರ್ಣ ದೀನುಲ್ ಇಸ್ಲಾಂ ಎಂಬ ಅರಿವು ವಿಶ್ವಕ್ಕೆ ಕಲಿಸಿದರು.

ಮಹಾನುಭಾವರು ದೀರ್ಘವಾದ ಯಾತ್ರೆ ಮುಂದುವರಿಸಿ, ಮಧ್ಯಪ್ರದೇಶ'ದ ಗ್ವಾಲಿಯರ್'ನ ಹಲವಾರು ಶಿಷ್ಯಂದಿರುಗಳ ಆತ್ಮೀಯ ಕೇಂದ್ರವೂ ಹಾಗು ತನ್ನ ಆತ್ಮೀಯ ಗುರುವೂ ಆದ "ಆಶೈಖ್ ಅಸ್ಸಯ್ಯಿದ್ ಮುಹಮ್ಮದುಲ್ ಗೌಸ್ (ಖ:ಸಿ) ರವರ ಸನ್ನಿದಿಗೆ ತಲುಪಿ ಬೈಅತ್ತ್ ಗೈದರು.
ನಂತರದ ಒಂದೊಂದು ನಿಮಿಷಗಳೂ ಅವರ್ಣಿಯಮಯವಾಗಿತು.
ಆತ್ಮೀಯ ಜ್ಞಾನದ ಜೊತೆ, ಮುಖದಲ್ಲಿ ಮಂದಹಾಸವು, ಪರಮಾನಂದವು ಕಾಣುವ ಅದ್ಬುತ ನಿಮಿಷಗಲಾಗಿತ್ತು.

ಶಿಷ್ಯನ ಪ್ರತಿಭೆಯನ್ನು ಲಕ್ಷ್ಯ ಸ್ಥಾನಕ್ಕೆ ತಲುಪಿಸಲು ಗುರುವಿಗೆ ಅನಾಯಾಸವಾಯಿತು.
ಆ ಆತ್ಮೀಯ ಹೂದೋಟದಲ್ಲಿ ಸುಮಾರು 10 ವರ್ಷದ ಜೀವನದಿಂದ ಅಲ್ಲಾಹನನ್ನು ತಿಳಿಯುವ ರೀತಿಯಲ್ಲಿ ತಿಳಿದು, ಗುರಿ ಮುಟ್ಟಿದ ಶಿಷ್ಯನನ್ನು ತನ್ನ ಖಿಲಾಫತ್ತ್ ನೀಡಿ ಅನುಗ್ರಹಿಸಿದರು.

ತದನಂತರ 400ರಷ್ಟು ಫಕೀರುಗಳೊಂದಿಗೆ ಶೈಖ್ ಶಾಹುಲ್ ಹಮೀದ್ (ಖ:ಸಿ) ರವರು ಒಳ್ಳದ ಮನಸ್ಸಿನಿಂದ ತನ್ನ ಊರಿಗೆ ಹೊರಟರು.
ಊರಿಗೆ ತಲುಪಿ ಪ್ರಿಯ ಮಾತಾಪಿತರುಗಳನ್ನು ಕಂಡು ಅನುಗ್ರಹವನ್ನು ಪಡೆದರು.

ನಂತರ ಹಜ್ಜ್ ಕರ್ಮಕ್ಕಾಗಿ ಹರಂ ಶರೀಫ್'ಗೆ ಹೋದರು. ಸುಮಾರು 7 ವರ್ಷದವರೆಗೆ ಅಲ್ಲಿ ತಂಗಿದರು. ಆಮೇಲೆ ಹಡಗು ಮೂಲಕ  ಕಣ್ಣೂರು, ಕಲ್ಲಿಕೋಟೆ, ಪೊನ್ನಾನಿ, ಮಾಲ್'ದ್ವೀಪ್, ಶ್ರೀಲಂಕಾ ಮೊದಲಾದ ಹಲವು ಸ್ಥಳಗಳಲ್ಲಿ ಯಾತ್ರೆಕೈಗೊಂಡು ಕೊನೆಗೆ ನಾಗವೃಕ್ಷಗಳ ನಾಡಾದ "ನಾಗೂರ್" ಎಂಬ ಊರಿಗೆ ತಲುಪಿ ಅಲ್ಲಿ ವಾಸ್ತವ್ಯ ಹೂಡ್ಡಿದರು.

ಆ ಊರಿಗೆ ಆಗಮಿಸಿದ ಸುಂದರನಾದ ಯುವಕನನ್ನು ಕಂಡು  ವಿವಾಹ ಆಲೋಚನೆಯೊಂದಿಗೆ  ಬಂದಂತಹ ಕೆಲವು ಮಾತಾಪಿತರುಗಳ ಹತ್ತಿರ, "ನನ್ನ ಹೃದಯದಲ್ಲಿ ಅಲ್ಲಾಹನಿಗೆ ಮಾತ್ರವೇ ಸ್ಥಾನವಿರುವುದು" ಎಂದು ಹೇಳಿ ಅವರನ್ನು ಹಿಂದಿರುಗಿಸುತ್ತಿದ್ದರು.

*ಅದ್ಬುತ ಬಾಲಕ ಯೂಸುಫ್ ಜನಿಸುವರು*

 ಪಾಕಿಸ್ತಾನ್'ನ ಲಾಹೋರ್ ನಗರದ ಅತೀ ದೊಡ್ಡ ಸಂಪತ್ತಿನ ಒಡೆಯರು  ಮಾರ್ಗದರ್ಶಿಯೂ ಆಗಿದ್ದ ನೂರುದ್ದೀನ್ ಮುಫ್ತಿ (ಖ:ಸಿ) ಎಂಬವರು.
ಹಲವಾರು ಸುಖ ಸೌಕರ್ಯಗಳು ಇದ್ದರೂ, ಮಧ್ಯ ವಯಸಾದರೂ ಕೂಡಾ ಮಕ್ಕಳು ಇಲ್ಲದಿದ್ದರಿಂದ್ದ ಅತೀವ ದುಃಖದಲ್ಲಿದ್ದರು. ಹಲವಾರು ಮಹಾತ್ಮರುಗಳಿಗೆ ಸೇವೆ ಮಾಡಿ ದುವಾ ಮಾಡಿಸುತ್ತಿದ್ದರು. ನಿಮಗೆ ಸಂತಾನ ಭಾಗ್ಯವಿಲ್ಲ ಎಂದು ಕೆಲವು ಮಹಾತ್ಮರು ಹೇಳಿದ್ದರು. ಈ ಸಂದರ್ಭದಲ್ಲಾಗಿತು ಶಾಹುಲ್ ಹಮೀದ್ (ಖ:ಸಿ) ರವರ ಹೆಸರು ಮತ್ತು ಪ್ರಸಿದ್ದಿಯನ್ನು ಅರಿತ ಅವರು ಒಮ್ಮೆ ಮಹಾನವರನ್ನು ಸಮೀಪಿಸಿ ಅವರ ಪಾದಗಳಲ್ಲಿ ಮುಖವನ್ನು ಒತ್ತಿಟ್ಟು ಕಣ್ಣೀರಿನೊಂದಿಗೆ ಸಂತಾನ ಪ್ರಾಪ್ತಿಗಾಗಿ ಪ್ರಾರ್ಥಿಸಲು ಆವಶ್ಯಪಟ್ಟರು.
ಸಾತ್ವಿಕರಾದ ನೂರುದ್ದೀನ್ ಮುಫ್ತಿ (ಖ:ಸಿ)ರವರ ಮನೋವೇದನೆಯನ್ನು ಮನಗಂಡ ಮಹಾನರು ಅವರನ್ನು ಸಂತೈಸಿದರು.
ನಂತರ ಅವರ ಮತ್ತು ಪತ್ನಿಯ ಕುಲ ಮಹಿಮೆಯನ್ನು, ಪರಿಶುದ್ಧಿಯನ್ನು ತಿಳಿದ ಮಹಾನರು ತನ್ನ ಪವಾಡದಿಂದ ಅವರಿಗೆ ಒಬ್ಬ ಸಂತಾನನನ್ನು ಕರುಣಿಸಲು ಪ್ರಾರ್ಥಿಸಲು ಸಮ್ಮತಿಸಿದರು.

ಚಿಂತಾಮಗ್ನರಾಗಿ ಅಲ್ಪ ಸಮಯ ತಲೆ ತಗ್ಗಿಸಿ ಕುಳಿತ ನಂತರ ಮುಫ್ತಿ (ಖ:ಸಿ)ಯವರೊಂದಿಗೆ ಮಹಾನರು ವೀಳ್ಯದೆಲೆ ಮತ್ತು ಅಡಿಕೆಯನ್ನು ಕೊಂಡು ಬರಲು ಹೇಳಿದರು. ಮಹಾನುಭಾವರು ಅಲ್ಲಾಹನ ನಾಮ ಉಚ್ಛರಿಸಿ ಅದನ್ನು ಬಾಯಿಗೆ ಹಾಕಿದರು.
ಸ್ವಲ್ಪ ಸಮಯದ ವರೆಗೆ ಧ್ಯಾನದಲ್ಲಿ ಕುಳಿತ ನಂತರ ತನ್ನ ಬಾಯಿಯಲ್ಲಿರುವ ವೀಳ್ಯದೆಲೆ ಮತ್ತು ಅಡಿಕೆಯನ್ನು ತೆಗೆದು ನೂರುದ್ದೀನ್ ಮುಫ್ತಿ (ಖ:ಸಿ)ಯವರಿಗೆ ಕೊಟ್ಟು, ಪತ್ನಿಯ ಬಾಯಿಗೆ ಹಾಕಿ ಕೂಡಲೇ ನುಂಗಲು ನಿರ್ದೇಶಿಸಿದರು. ಮಹದಿ ಹಾಗೆ ಮಾಡಿದರು.

ನಂತರ..

🔹ಮುಂದುವರಿಯುವುದು.

✍ಗಫೂರ್ ಬಾಯಾರ್
✳✳✳✳✳✳✳✳✳


*ಝಿಯಾರತ್ತ್ ಕೇಂದ್ರ​*
      4⃣8⃣
     👉ಭಾಗ-02
------------------------
*ಖುತುಬುಲ್ ಅಖ್ತಾಬ್ ಶಾಹುಲ್ ಹಮೀದ್ ವಲಿಯುಲ್ಲಾಹಿ (ರ) ನಾಗೂರ್ ಶರೀಫ್ ನಾಗಪಟ್ಟಣಂ, ತಮಿಳುನಾಡು*
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
🕌🕌🕌🕌🕌🕌🕌🕌

ಆ ಊರಿನ ಎಲ್ಲರ ಹಸಿವೂ ನೀಗಿದ ಕಾರಣದಿಂದ ಅವರು ಅಲ್ಲಾಹನನ್ನು ಸ್ತುತಿಸಿದರು.

ಒಂದು ದಿನ ರಾತ್ರಿ ತಹಜ್ಜುದ್ ನಮಾಝ್ ಮಾಡಲು ನೀರು ಸೇದಲು ಬಾವಿಯ ಹತ್ತಿರ ತಲುಪಿದ ಪ್ರಿಯ ತಾಯಿಯವರ ಕೈಯಿಂದ ನೀರಿನ‌ ಕೊಡ ಬಾವಿಯೊಳಗೆ ಬಿತ್ತು. ಇನ್ನು ಏನು ಮಾಡುವುದೆಂದು ಅಲೋಚಿಸಿ ತನ್ನ ತಹಜ್ಜುದ್ ನಮಾಝ್ ಮೊಟಕಾಗಬಹುದೋ ಎಂದು ಭಯಭೀತರಾಗಿ ಮನಸ್ಸು ಚಂಚಲಗೊಳ್ಳಲು ಪ್ರಾರಂಭವಾದಾಗ ಆ ತಾಯಿಯ ಗರ್ಭಸ್ಥ ಶಿಶು; *ಓ.. ಉಮ್ಮಾ.. ನೀವು ಭಯಪಡದಿರಿ, ಎಂದಾಗಲೇ ಆ ತಾಯಿ ನೋಡುತ್ತಲೇ ತನ್ನ ಕಾಲಿನ ಹತ್ತಿರ ನೀರು ತುಂಬಿದ ನೀರಿನ ಕೊಡ ಕಾಣಲಾಯಿತು. ಅದ್ಭುತದೊಂದಿಗೆ ಅದಕ್ಕಿಂತಲೂ ಮಿಗಿಲಾದ ಸಂತೋಷದೊಂದಿಗೆ ಮಹದಿಯವರು ಅಲ್ಲಾಹನಿಗೆ ಸ್ತುತಿ‌ ಅರ್ಪಿಸಿದರು.*

ಫಾತಿಮಾ ಬೀವಿ (ರ) ರವರು 6 ತಿಂಗಳ ಗರ್ಭಿಣಿಯಾಗಿದ್ದಾಗ ಒಮ್ಮೆ ಖಿಳ್'ರ್ ನಬಿ (ಅ) ರವರು ಪ್ರತ್ಯಕ್ಷಪಟ್ಟು ಹೇಳಿದರು; *ಓ.. ಫಾತಿಮಾ: (ರ) ನಿಮ್ಮ ಉದರದಲ್ಲಿರುವ ಮಗು ಓರ್ವ ಖುತುಬ್ ಆಗಿದ್ದಾರೆ. ಹಾಗೆಯೇ  ಹಲವಾರು ವಿಶೇಷತೆಗಳು ಹೇಳಿದ ನಂತರ, ಮಗುವಿಗೆ ಅಬ್ದುಲ್ ಖಾದಿರ್ ಎಂದು ನಾಮಕರಣ ಮಾಡಲು ನಿರ್ದೇಶಿಸಿದರು.*
ಹೀಗೆ ಗರ್ಭಸ್ಥದಲ್ಲೇ ಅದ್ಬುತಗಳ ಸರ್ವಸ್ವವಾದರು.

ಜೀವರಾಶಿಗೆ ಸಂಪೂರ್ಣವಾಗಿ  ಸನ್ಮಾರ್ಗ ನೀಡಿ ಸತ್ಯದೆಡೆಗೆ ದಾರಿ ತೋರಿಸಿದ ಆತ್ಮಜ್ಞಾನ ಜ್ಯೋತಿಯಾಗಿದ್ದಾರೆ ನಾಗೂರ್'ದಾನ ಮಹಾನವರು.

ಮಹಾ ಅದ್ಬುತಗಳಾಗಿ ಎ.ಡಿ.1489ರಲ್ಲಿ ಆ ತಾಯಿ  ಮಗುವಿಗೆ ಜನ್ಮವಿತ್ತರು. ಕಂದನನ್ನು ಖಿಳ್'ರ್ ನಬಿ (ಅ) ಕೈಗೆತ್ತಿದರು.
ಪವಿತ್ರ ನಾಲಗೆಯಿಂದ ಅಝಾನ್ ಕೊಟ್ಟರು. ಸಯ್ಯಿದ್ ಅಬ್ದುಲ್ ಖಾದಿರ್ ಎಂದು ನಾಮಕರಣ ‌ಮಾಡಿದರು. ಜೊತೆಗಿದ್ದ ಇಲ್ಯಾಸ್ ನಬಿ (ಅ) ರವರು ಮೂರು ಬಾರಿ ಹೆಸರನ್ನು ಉಚ್ಛರಿಸಿದರು. ನಂತರ ಇಬ್ಬರೂ  ಅಪ್ರತ್ಯಕ್ಷರಾದರು.

ಶೈಶವ ದಶಕಗಳ ಮಹಾ ಅದ್ಬುತಗಳಲ್ಲಿ ಒಂದು, ರಮಳಾನ್ ತಿಂಗಳಲ್ಲಿ ಕಾರ್ಮೋಡವೃತವಾದ ಆಕಾಶವಾದರಿಂದ್ದ ಚಂದ್ರನನ್ನು ಕಾಣಲು ಸಾಧ್ಯವಾಗದೆ ಜನರು ಬೇಸರದಲ್ಲಿದ್ದ ಸಂದರ್ಭ..
ನಿದ್ರೆಯಿಂದ ಎಚ್ಚೆತ್ತ ಕೂಡಲೇ ಎದೆಹಾಲು ಕುಡಿಯುವ ವಾಡಿಕೆ ಇರುವ ಮಗುವಿಗೆ ಪ್ರಿಯ ಮಾತೆಯು ಎಷ್ಟೇ ಎದೆಹಾಲು ಉಣಿಸಲು ಶ್ರಮಿಸಿದರೂ ಕುಡಿಯದೆ ಇರುವಾಗಲೇ ವಿಷಯ ತಿಳಿಯುದು. ಅಂದು ಉಪವಾಸ ಆರಂಭವಾಗಿದೆ ಎಂದು,  ಈ ವಿಷಯವನ್ನು ಜನರಿಗೆ ತಿಳಿಸಲಾಯಿತು. ಅಂದು ಉಪವಾಸವಾಗಿದೆ ಎಂದು ಊರಿಡೀ ಘೋಷಣೆ ಮಾಡಲಾಯಿತು. ಇದರಿಂದ್ದ ಮಗು ಪ್ರಸಿದ್ಧರಾದರು.
ಮಗುವನ್ನು ಕಾಣಲು ಬರುವವರು ಮಗುವನ್ನು ಎತ್ತಿ, ಅಲ್ಲಾಹುವೇ ಈ ಮಗುವಿನ ಮುಖಾಂತರ ನಮ್ಮ ಸಮಸ್ಯೆಗಳಿನ್ನು ಪರಿಹರಿಸು ಎಂದು ಬೇಡಿದ ಕೂಡಲೇ ಅವರ ಕಾರ್ಯಗಳು ನೆರವೇರುತ್ತಿತ್ತು.

*ಬಾಲ್ಯ ಕಾಲ*

ಬಾಲ್ಯಕಾಲ ಜೀವನವೇ ಪರಿಶುದ್ಧಿಯಿಂದಲೂ, ಸೂಕ್ಷ್ಮತೆಯಿಂದಲೂ ಕೂಡಿತ್ತು.
ಸಾಮಾನ್ಯ ಮಕ್ಕಳಂತೆ ವಿನೋದಗಳಲ್ಲಿ ನಿರತರಾಗುವ ಅಭ್ಯಾಸವಿರುತ್ತಿರಲಿಲ್ಲ.
ಉಳಿದ ಮಕ್ಕಳು ಆಡುವ ಸಂದರ್ಭದಲ್ಲಿ ಮಗುವಾದ ಅಬ್ದುಲ್ ಖಾದಿರ್ (ರ) ಯಾವುದಾದರೂ ವೃಕ್ಷದ ಕೆಳಗೆ ಕುಳಿತು ನೀಲಾಕಾಶವನ್ನು ನೋಡಿ ಅಲ್ಲಾಹನ ಚಿಂತೆಯಲ್ಲಿ ಮಗ್ನರಾಗುತ್ತಿದರು.
ಹೀಗೆ ಇರುವಾಗ ಒಮ್ಮೆ ಒಂದು ಮರದ ಬುಡದಲ್ಲಿ ಧ್ಯಾನಮಗ್ನವಾಗಿದ್ದ ಮಗುವನ್ನು ಸಮೀಪಿಸಿ ಬಾಯಿ ತೆರೆಯಲು ಒಬ್ಬರು ಆವಶ್ಯಪಟ್ಟರು. ಮಗು ಬಾಯಿ ತೆರೆದಾಗ 3 ಸಲ ತನ್ನ ಉಗುಳು ನೀರನ್ನು ಮಗುವಿನ ಬಾಯಿಗೆ ಉಗುಳಿದರು.
ಶುಭ್ರವಸ್ತ್ರದಾರಿಯಾದ ಆ ಮನುಷ್ಯನ ಹತ್ತಿರ ನೀವು ಯಾರೆಂದು ಕೇಳಿದಾಗ, ನಾನಾಗಿದ್ದೇನೆ *ಖಿಳ್'ರ್* (ಅ) ಎಂದು ಉತ್ತರಿಸಿದರು.
ಇದರ ನಂತರವೂ ಹಲವು ಸಲ ಖಿಳ್'ರ್ ನಬಿ (ಅ) ರನ್ನು ಭೇಟಿಯಾಗಿದ್ದರು.

*ವಿದ್ಯಾಭ್ಯಾಸ*

ಯುವತ್ವಕ್ಕೆ ತಲುಪಿದ ಮಹಾನವರು ವಿದ್ಯಾಭ್ಯಾಸವನ್ನು ಅತೀ ವೇಗದಲ್ಲಿ ಪೂರ್ತಿಗೊಳಿಸಿದರು.
*ಖುರ್'ಆನ್, ತಫ್'ಸೀರ್, ಹದೀಸ್, ಫಿಖ್ಹ್, ಚರಿತ್ರೆ, ಭೂಗೋಳ ಶಾಸ್ತ್ರ, ಗಣಿತ, ತತ್ವ ಶಾಸ್ತ್ರ, ತರ್ಕ ಮೊದಲಾದ ಸರ್ವ ಜ್ಞಾನಗಳಲ್ಲಿಯೂ ತೇರ್ಗಡೆ ಹೊಂದಿದವರಾಗಿದ್ದರು.*

ಬಾಲ್ಯಕಾಲದಿಂದಲೇ ಅತಿ ಕಡಿಮೆ ಮಾತನಾಡುವ ಅಭ್ಯಾಸವಾಗಿತ್ತು ಅವರದ್ದು. ಕಲಿಯುವ ಪ್ರಾಯದಲ್ಲಿಯೂ ಮಾತು, ಭಾವನೆ, ಕಾರ್ಯ ಚಟುವಟಿಕೆ ಎಂಬಿತ್ಯಾದಿಗಳಲ್ಲಿ ಓರ್ವ ಸೂಫಿಯ ರೀತಿಯ ನಡತೆಯಾಗಿತ್ತು.
ದಿನ ಕಳೆದಂತೆ ಅಲ್ಲಾಹನನ್ನು ತಿಳಿಯುವ ಆಗ್ರಹ ವರ್ಧಿಸಿಸುತಿತ್ತು. ಇದಾಕ್ಕಾಗಿ ಒಬ್ಬ ಸಿರಾತುಲ್ ಮುಸ್ತಕೀಂ ಆದ ಹಾದಿಯನ್ಮು ತೋರಿಸುವವರನ್ನು ಅನ್ವೇಷಣೆ ಮಾಡುತ್ತಿದ್ದರು. ಇದಕ್ಕಿರುವ ದಾರಿಗಳನ್ನು ಪ್ರಿಯ ಮಾತಾಪಿತರು ಸಿದ್ದಪಡಿಸಿ ಕೊಟ್ಟರು.

ಹೀಗೆ ಹಿಜರಿ ವರ್ಷ 928 ಜುಮಾದುಲ್ ಆಖಿರ್'ನ ಒಂದು ಸೋಮವಾರದಂದು ಉತ್ತಮವಾದ ಗುರುವನ್ನು ಹುಡುಕುತ್ತಾ ಯಾತ್ರೆ ಹೊರಟರು.

18 ವರ್ಷ ಪ್ರಾಯಕ್ಕೆ ತಲುಪಿದ ಮಹಾನರು ತನ್ನ ಮಾತಾಪಿತರನ್ನು, ಸ್ನೇಹಿತರನ್ನು, ಕುಟುಂಬದವರನ್ನು ಊರಿನವರನ್ನು, ತನ್ನ  ಮುಂದೆ ಒಂದು ನೆರಳಾಗಿ ಮಾತ್ರ ಕಂಡರು. ಅವರಿಗೆ ತನ್ನ ಹೃದಯದಲ್ಲಿ *"ಅಲ್ಲಾಹ್"* ಎಂಬ ಪರಮ ಗುರಿ ಪ್ರಾಪ್ತಿಸುವ ಚಿಂತೆ ಮಾತ್ರವಾಗಿತ್ತು.

🔹ಮುಂದುವರಿಯುವುದು

✍ಗಫೂರ್ ಬಾಯಾರ್
♻♻♻♻♻♻♻♻♻
*ಝಿಯಾರತ್ತ್ ಕೇಂದ್ರ​*
      4⃣8⃣
     👉ಭಾಗ-01
------------------------   *ಖುತ್ತುಬುಲ್ ಅಖ್ತಾಬ್ ಶಾಹುಲ್ ಹಮೀದ್ ವಲಿಯುಲ್ಲಾಹಿ (ರ). ನಾಗೂರ್ ಶರೀಫ್, ನಾಗಪಟ್ಟಣಂ. ತಮಿಳುನಾಡು*
〰〰〰〰〰〰〰〰〰
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
🕌🕌🕌🕌🕌🕌🕌🕌
*ಹಿಜರಿ ವರ್ಷ 910 ಜಮಾದುಲ್ ಆಖಿರ್ 10 ಶುಕ್ರವಾರ ದಿನದ ರಾತ್ರಿಯ ಸಮಯದಲ್ಲಿ "ಖುತ್ತುಬುಲ್ ಅಖ್ತಾಬ್ ಅಲ್ ಫರ್ದುಲ್ ಮಜೀದ್ ಅಶೈಖ್ ಅಸ್ಸಯ್ಯಿದ್ ಅಬ್ದುಲ್ ಖಾದಿರ್ ಶಾಹುಲ್ ಹಮೀದ್ ಮಿರಾನ್ ಮುಹ್ಯಿದ್ದೀನ್ ಗಂಜುಸವಾಈ ಗಂಜು ಬಖ್ಶ್ (ಖ:ಸಿ) ರವರು ಜನಿಸಿದರು.*

ವಿಶ್ವ ನೇತಾರರಾದ 'ಸಯ್ಯಿದುಲ್ ವುಜೂದ್' ಮುಹಮ್ಮದ್ ರಸೂಲುಲ್ಲಾಹಿ ﷺ ರವರಿಗೆ ತಲುಪುವ ಮಹನೀಯ ಪರಂಪರೆಯ ಒಂದು ಕೊಂಡಿಯಾಗಿದ್ದಾರೆ ಮಹಾನುಭಾವರು.
ಖುರೈಶಿ ಮನೆತನದಲ್ಲಿ ಹಾಶಿಮ್ ವಂಶದ ಸದಸ್ಯರಾಗಿ ಗೌಸುಲ್ ಅಹ್'ಳಮ್ ಮುಹ್ಯಿದ್ದೀನ್ ಅಬ್ದುಲ್ ಖಾದಿರ್ ಜಿಲಾನಿ (ರ) ಯುವರ ಸಂತಾನ ಪರಂಪರೆಯಲ್ಲಿ 11ನೇಯ  ಪೌತ್ರರಾಗಿದ್ದಾರೆ ಮಹಾನವರು.
ತಂದೆಯವರು ಅಶೈಖ್ ಅಸ್ಸಯ್ಯಿದ್ ಅಬೂ ಯೂಸುಫ್ ಹಸ್ಸನ್ ಖುದ್ಸಿ (ರ).  ಹಾಗೂ
ಅಸ್ಸಯ್ಯಿದ್ ಹಮಿಮುದ್ದೀನ್ (ರ) ಅವರ ಪುತ್ರಿಯಾದ ಉಮ್ಮ್ ಫಾತಿಮಾ (ರ). ಎಂಬ
ಸದ್ಘುಣರಾದ ಮಾತಾಪಿತರಿಂದ ಉತ್ತರ ಪ್ರದೇಶದ ಅಲಹಬಾದ್'ನ ಹತ್ತಿರ "ಮಾಣಿಕ್ಯಪ್ಪುರ್" ಎಂಬ ಊರಿನಲ್ಲಿ ಮಹಾನವರ  ಜನನವಾಯಿತು.

ಮಹಾನರ ಜನನದ ಮೊದಲು ಸಯ್ಯಿದ್ ಯೂಸುಫ್ ಎಂಬ ಹೆಸರಿರುವ ಒಬ್ಬ ಮಗು ಅವರಿಗಿತ್ತು. ಬಾಲ್ಯಕಾಲದಲ್ಲೇ ಆ ಮಗು ಮರಣಗೊಂಡಿತು.
ತಮ್ಮ ಪ್ರೀತಿಯ ಮಗನ ಅಗಲುವಿಕೆಯಿಂದ ಮನ ನೊಂದಿರುವಾಗ ಆ ತಾಯಿಗೆ "ಒಂದು ಅಶರೀರ ವಾಣಿ ಕೇಳಿಸಿತು, ಓ ನನ್ನ ಅಡಿಯಾಳುಗಳೇ..! ನಾನು ದಯಾಪೂರ್ವ ನಿಮಗೆ ರಹ್ಮತ್ ನೀಡಿದೆನಾದರೂ ನನ್ನ ನೀತಿ ಪ್ರಕಾರ ಅದನ್ನು ಮರಳಿ ಪಡೆದಿರುವೆನು.

ಅದರಿಂದ್ದ ನೀವು ಕ್ಷಮಿಸಿರಿ..! ಅದಕ್ಕಿಂತ ಉತ್ತಮವಾದ ಓರ್ವ ಸಂತಾನವನ್ನು ನಾನು ನಿಮಗೆ ಕರುಣಿಸುವೆನು. ಆ ಮಗು ಜಗತ್ತಿನ ಗೌಸ್ ಆಗಿರುವರು.
ಇದನ್ನು ಕೇಳಿದ ದಂಪತಿಗಳು ಅತ್ಯಧಿಕ ಸಂತೋಷಗೊಂಡು, ಆ ಕ್ಷಣವೇ ಅಲ್ಲಾಹನನ್ನು ಸ್ತುತಿಸಿದರು.

*ತಾಯಿಯ ಗರ್ಭದಲ್ಲೇ ಪವಾಡಗಳು (ಕರಾಮತ್ತುಗಳು)*

ಗರ್ಭಸ್ಥ ಶಿಶು ಆಗಿರುವಾಗ ತಂದೆ ಹಸ್ಸನ್ ಖುದ್'ಸಿ (ಖ:ಸಿ) ರವರಿಗೆ ಮಾರಕವಾದ ಖಾಯಿಲೆ ತಗುಲಿ ದೈನಂದಿನ ರೋಗ ಅಧಿಕಗೊಂಡು ಚಿಕಿತ್ಸೆ ಫಲ ಶೂನ್ಯವಾಯಿತು. ಈ ವೇಳೆಯಲ್ಲಿ ಶೈತಾನ್ ವೇಷ ಬದಲಿಸಿ ಬಂದು ಅಲ್ಲಿ ನೆರೆದಿರುವ ಜನರು ಕೇಳುವ ರೀತಿಯಲ್ಲಿ ತಂದೆಯವರ ಬಳಿ ಶೈತಾನ್ ಹೇಳಿದನು; ನಿಮ್ಮ ಪತ್ನಿ ಗರ್ಭ ಧರಿಸಿದ ಮಗುವಿನ ಲಕ್ಷಣ ದೋಷದಿಂದಾಗಿದೆ ಈ ಮಾರಕ ರೋಗ ನಿಮಗೆ ತಗುಲಿರುವುದು. ಇದು ಕೇಳಿ ಅತೀವ ದುಃಖದಲ್ಲಾದ ಪ್ರಿಯ ತಾಯಿಯ ಬಳಿ ಗರ್ಭಸ್ಥ ಶಿಶು ಕರೆದು ಹೇಳಿತು; ತಾಯಿಯವರೇ, ನೀವು ದುಃಖಿಸಬೇಡಿ. ಅಲ್ಲಾಹು ನಿಮ್ಮನ್ನು ಸಹಾಯ ಮಾಡುವನು, ತಂದೆಯವರ ರೋಗವು ಕೂಡಲೇ ವಾಸಿವಾಗಬಹುದು. ಈ ವಿವರವನ್ನು ಮಹದಿಯವರು ತನ್ನ ಪತಿಗೆ ತಿಳಿಸಿದಾಗ ಅವರು ಇನ್ನಷ್ಟು ಸಂತೋಷಭರಿತರಾದರು.
ಅಂದೇ ಆ ತಂದೆಯವರ ಖಾಯಿಲೆಯು‌ ಸಂಪೂರ್ಣವಾಗಿ ವಾಸಿಯಾಯಿತು.

೨. ಗರ್ಭಸ್ಥ ಶಿಶುವಿಗೆ 7 ತಿಂಗಳು ಪ್ರಾಯವಾದಾಗ ಊರಿಡೀ ಬರಗಾಲ ಆವರಿಸಿತು. ಇದರಿಂದ್ದ 3 ದಿವಸಗಳ ಕಾಲ  ಮಾತಾಪಿತರಿಗೆ ಹಾಗೂ ಅಲ್ಲಿನ ನಾಗರಿಕರಿಗೆ ಆಹಾರ ಲಭಿಸದಾಯಿತು.
ಆಗ ಗರ್ಭಸ್ಥ ಶಿಶು ಗರ್ಭದಿಂದ ತನ್ನ ಪ್ರೀತಿಯ ತಾಯಿಯನ್ನು ಕರೆದು ಹೇಳಿತು.
ಓ.. ಪ್ರಿಯ ಉಮ್ಮಾ.. ನೀವು ಆಹಾರದ ಪಾತ್ರವನ್ನು ಒಲೆಯಲ್ಲಿ ಇಡಿರಿ. ಅಲ್ಲಾಹನ ಔದಾರ್ಯದಿಂದ ನಿಮಗೆ ಆಹಾರ ಲಭಿಸುವುದು.
ಮಗುವಿನ ಈ ಮಾತು ಆ ತಕ್ಷಣವೇ ಸತ್ಯವಾಯಿತು. ಪಾತ್ರೆಯಲ್ಲಿ ತುಂಬಾನೇ ಆಹಾರಗಳು. ಆ ಕುಟುಂಬದ ಹಸಿವು ನೀಗುವವರೆಗೂ ಅವರು ಭಕ್ಷಿಸಿದರು. ಸ್ವಲ್ಪವೂ ಕಡಿಮೆಯಾಗಿಲ್ಲ. ನಂತರ ಅಲ್ಲಿಯ ಊರಿನವರೆಲ್ಲರೂ ಈ ಆಹಾರದಿಂದ ಹಸಿವು ನೀಗಿಸಿದರು. ಅವರು ಅಲ್ಲಾಹನನ್ನು ಸ್ತುತಿಸಿದರು.

🔹ಮುಂದುವರಿಯುವುದು.

✍ ಗಫೂರ್ ಬಾಯಾರ್
🌿🌿🌿🌿🌿🌿🌿🌿🌿
*ಝಿಯಾರತ್ತ್ ಕೇಂದ್ರ​*
      ✳4⃣7⃣✳
ಕುಂಬೋಳ್ ಸದಾತ್ತುಗಳು
------------------------
*​ಸಯ್ಯಿದ್ ಮುಹಮ್ಮದ್ ಫಝಲ್ ಪೂಕೋಯ ತಂಙಳ್ (ಖ:ಸಿ) ಕುನ್ನಿಲ್ ಕುಂಬೋಳ್, ಕಾಸರಗೋಡು.​*
     👉ಭಾಗ-02
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
✳✳✳✳✳✳✳✳✳

ಕೇರಳ ಹಾಗೂ ಕರ್ನಾಟಕದ ಸದಾತ್ತುಗಳು, ವಿದ್ವಾಂಸರು ಫಝಲ್ ಪೂಕೋಯ ತಂಙಳ್ (ಖ:ಸಿ)ರವರ ಹತ್ತಿರ ಅಭೇದ್ಯವಾದ ಸಂಬಂಧವಿರುವರಾಗಿದ್ದರು. ಪಂಡಿತ ಶಿರೋಮಣಿ ಸೂರ್ಯ ತೇಜಸ್ಸು ಶಂಸುಲ್ ಉಲಮಾ ಈ.ಕೆ. ಉಸ್ತಾದವರು (ಖ:ಸಿ), ಪಾಪ್ಪಂಕೋಯ ಹೌಸ್'ನ ನಿತ್ಯ ಸಂದರ್ಶಕರಲ್ಲಿ ಒಬ್ಬರಾಗಿದ್ದರು.
ಫಝಲ್ ಪೂಕೋಯ ತಂಙಳ್ (ಖ:ಸಿ)ರವರ, ಜೀವನ ಕಾಲದಲ್ಲಿಯೂ, ವಫಾತ್ತಿನ ನಂತರವೂ ಹಲವಾರು ಮಹಾತ್ಮರಾದ ಪಂಡಿತ ಶ್ರೇಷ್ಠರು ಕುಂಬೋಳ್'ಗೆ ತಲುಪಿರುತ್ತಾರೆ.

 ಮಹಾನರಿಗೆ 9 ಮಕ್ಕಳಿದ್ದಾರೆ.
5 ಪುತ್ರರು, 4 ಪುತ್ರಿಯರು. ಓರ್ವ ಪುತ್ರಿ ಬಾಲ್ಯದಲ್ಲೇ ಮರಣಗೊಂಡಿದ್ದರು.
ಮಹಾನರ 5 ಗಂಡು ಮಕ್ಕಳು ದೀನಿ ಸೇವನೆ ರಂಗದಲ್ಲಿ ನಿರತರಾಗಿದ್ದಾರೆ.

(ಹಿರಿಯ ಮಗನಾದ ಸಯ್ಯಿದ್ ಅಟ್ಟಕೋಯ ತಂಙಳರು ಅತ್ಯುತ್ತಮ ಭಾಷಣಕಾರರೂ, ಆಲ್ ಇಂಡಿಯಾ ಸುನ್ನೀ ಎಜ್ಯುಕೇಷನ್ ಬೋರ್ಡಿನ ಉಪಾಧ್ಯಕ್ಷರೂ, ಸ'ಅದಿಯಾ ಒಳಗೊಂಡ ಹಲವಾರು ಸ್ಥಾಪನೆಯ ಅಧ್ಯಕ್ಷರು, ಹಾಗೂ ಎ.ಪಿ. ಉಸ್ತಾದರ ನಾಯಕತ್ವದ  ಸಮಸ್ತ ಕೆಂದ್ರ ಮುಶಾವರ ಸದಸ್ಯರೂ ಆಗಿದ್ದಾರೆ.

ಎರಡನೆಯ ಪುತ್ರರಾದ ಸಯ್ಯಿದ್ ಕುಂಞಿ ಕೋಯ ತಂಙಳ್ ರವರು ತನ್ನ ತಂದೆಯಯವರ ಅದೇ ಮಾರ್ಗದಲ್ಲಿ ಸಂಚರಿಸಿ ವಲಿಯ್ಯ್ ಆಗಿದ್ದಾರೆ. ಅವರನ್ನು ದಿನನಿತ್ಯ ನೂರಾರು ಜನರು ಸಂದರ್ಶಿಸುತ್ತಾರೆ. ತಮ್ಮ ಕಷ್ಟ ಕಾರ್ಪಣ್ಯಗಳೊಂದಿಗೆ  ಬರುತ್ತಾರೆ. ತಂಙಳ್ ರವರ ಆತ್ಮೀಯ ಚಿಕತ್ಸೆಯ ಮೂಲಕ ಸಾವಿರಾರು ಜನರಿಗೆ ಆಶ್ವಾಸನೆಯು ಲಭಿಸಿರುತ್ತದೆ.
ಈಗಲೂ ಅಲ್ಲಿ ಜನ ನಿಬಿಡವಾಗಿದೆ.

ಮೂರನೆಯ ಪುತ್ರರಾದ ಸಯ್ಯಿದ್ ಅಲಿ ತಂಙಳ್ ರವರು ಹಲವಾರು ಮಹಲ್ಲ್'ನ ಗೌರವರಾಧ್ಯಕ್ಷರಾಗಿದ್ದಾರೆ.
ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ.

ನಾಲ್ಕನೆಯ ಮಗನಾದ ಸಯ್ಯಿದ್ ಸಿರಾಜುದ್ದೀನ್ ತಂಙಳರು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ.

ಕಿರಿಯ ಮಗನಾದ ಸಯ್ಯಿದ್ ಜಅಫರ್ ತಂಙಳ್ ರವರು ನಾಡುಗಳಲ್ಲಿ ಜಲಾಲಿಯ್ಯ ರಾತ್ತಿಬ್'ಗೆ ನೇತೃತ್ವ ನೀಡುತ್ತಾ ದೀನೀ ಪ್ರಭೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹೀಗೆ ಎಲ್ಲಾ ಪುತ್ರರು ದೀನಿ ರಂಗದಲ್ಲಿಯೂ, ಸಾಮಾಜಿಕ ಸೇವಾ ರಂಗದಲ್ಲಿಯೂ ತಲ್ಲೀನರಾಗಿದ್ದಾರೆ.)

ಹಿಜರಿ ವರ್ಷ 1392ರ ದುಲ್'ಹಜ್ಜ್ 27ಕ್ಕೆ ತನ್ನ 67'ನೇ ಪ್ರಾಯದಲ್ಲಿ ಸಯ್ಯಿದ್ ಫಝಲ್ ಪೂಕೋಯ ತಂಙಳ್ (ಖ:ಸಿ)ರವರು ಕುಂಬೋಳ್'ನಲ್ಲಿ ಇಹಲೋಕ ವಾಸ ತ್ಯಜಿಸಿದರು. ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಹೂನ್....

ಪಾಪ್ಪಂ ಕೋಯ ನಗರ್, ಬದ್ರಿಯ ಜುಮಾ ಮಸ್ಜಿದ್'ನ ಸಮೀಪ "ಮುಘಲ್ ಶಿಲ್ಪಕಲಾ ಮಾದರಿಯಲ್ಲಿ ನಿರ್ಮಿಸಿದ ಮಖಾಂ ಶರೀಫ್'ನಲ್ಲಿ ಮಹಾನವರು ಅಂತ್ಯವಿಶ್ರಮಗೊಳ್ಳುತ್ತಿದ್ದಾರೆ.

'ಕುಂಬೋಳ್' ಎಂಬುದು ಕೇವಲ ಸ್ಥಳ ನಾಮ ಎಂಬುದಕ್ಕಿಂತ ಬದಲು  ಸಾವಿರಾರು ಬಡ,ಅನಾಥ ನಿರ್ಗತಿಕರ ಆಶಾ ಕೇಂದ್ರವೆಂದು ವಿಶ್ಲೇಷಿಸಬಹುದು.
ಇದರ ಮುಂಚೂಣಿಯಲ್ಲಿ ಕುಂಬೋಳ್ ಸದಾತ್ತುಗಳು ಸದಾ ನೆರಳಿನ ಹಾಗೆ ಇರುತ್ತಾರೆ.

*ಯಾ.. ಅಲ್ಲಾಹ್.. ದೀರ್ಘಕಾಲ ಪರಿಶುದ್ಧ ಇಸ್ಲಾಮಿಗೂ, ನಾಡಿಗೂ ನೇತ್ರತ್ವ ನೀಡಲು ನೀನು ಅವರಿಗೆ ಹಿಮ್ಮತ್ ನೀಡಿ ಅನುಗ್ರಹಿಸು... ಆಮೀನ್.*

💎ಮುಗಿಯಿತು.
ಅನುವಾದ:
✍ಗಫೂರ್ ಬಾಯಾರ್
♻♻♻♻♻♻♻♻♻
*ಝಿಯಾರತ್ತ್ ಕೇಂದ್ರ*
      ✳4⃣7⃣✳
*ಕುಂಬೋಳ್ ಸದಾತ್ತುಗಳು*
------------------------
_ಸಯ್ಯಿದ್ ಮುಹಮ್ಮದ್ ಫಝಲ್ ಪೂಕೋಯ ತಂಗಳ್ (ಖ:ಸಿ) ಕುನ್ನಿಲ್ ಕುಂಬೋಳ್, ಕಾಸರಗೋಡು._
     👉ಭಾಗ-01
➖➖➖➖➖➖➖➖➖
*اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ*
☪☪☪☪☪☪☪☪☪

ತನ್ನ ತಂದೆಯವರಾದ ಪಾಪ್ಪಂ ಕೋಯ ತಂಗಳ್ (ಖ:ಸಿ) ರವರ  ಜೀವನ ಶೈಲಿಯನ್ನು ಸಂಪೂರ್ಣವಾಗಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಫಝಲ್ ಪೂಕೋಯ ತಂಙಳ್ (ಖ:ಸಿ) ರವರು ಆತ್ಮೀಯ ರಂಗದಲ್ಲಿ ಪ್ರಸಿದ್ಧರಾಗಿದ್ದರು. ಹಲವಾರು ಕಷ್ಟ ಕಾರ್ಪಣ್ಯಗಳಿಂದ ಬಳಲುತ್ತಿರುವ ಸಾಮಾನ್ಯ ನಾಗರಿಕರಿಗೆ ಆಶ್ವಾಸನೆಯ ಸಂಕೇತವಾಗಿದ್ದರು ಫಝಲ್ ಪೂಕೋಯ ತಂಗಳ್ (ಖ:ಸಿ) ಎಂಬ ಮಹಾನವರು.

ಹಿಜರಿ ವರ್ಷ 1325ರಲ್ಲಿ ಕುಂಬಳೆಯಲ್ಲಾಗಿದೆ ಮಹಾನರ ಜನನ: ತಂದೆಯವರ ಮರಣಾ ನಂತರ ಅವರ ಹಾದಿಯಲ್ಲೇ  ಪ್ರಶೋಭಿಸಿದರು.

ಸಾಮಾನ್ಯ ರೀತಿಯ ಜೀವನದ ನಡುವೆಯೂ ಹಲವಾರು (ಕಶ್ಫ್ ಕರಾಮತ್ತು ) ಪವಾಡಗಳ ಮೂಲಕ ಜನ ಹೃದಯಗಳಲ್ಲಿ ಸ್ಥಿರ ಪ್ರತಿಷ್ಠೆಗಳಿಸಿದರು. ಅಲ್ಲಾಹನ ಪ್ರೀತಿಗಾಗಿ ತನ್ನ ಜೀವನ ಮುಡಿಪಾಡಗಿಟ್ಟ, ಅವರ ಮಾದರಿಯೋಗ್ಯವಾದ ಜೀವನವನ್ನು ಕಂಡು ಬಹುತೇಕ ಅಮುಸ್ಲಿಂ ಬಾಂಧವರು ಕೂಡಾ  ಗೌರವಿಸುತ್ತಿದ್ದರು. ಬಿಳಿ ತಲೆಕಟ್ಟು/ಮುಂಡಾಸು, ಶುಭ್ರ ವಸ್ತ್ರ ಹಾಗೂ ಹಸಿರು ಶಾಲು ತೊಟ್ಟು ಭಕ್ತಿಯೊಂದಿಗಿನ ಜೀವನ ಶೈಲಿಯ ವ್ಯಕ್ತಿತ್ವವು ಎಲ್ಲರಿಂದಲೂ ಆಕರ್ಷಿಸಲ್ಪಡುತ್ತಿತ್ತು.

ಬಡವರಿಗೂ, ಸಮುದಾಯ ಸ್ಥಾಪನೆಗಳಿಗೂ ಮಹಾನವರ ಕಾರುಣ್ಯ ಸಹಾಯ ಹಸ್ತ ಸದಾ ಇರುತಿತ್ತು.
 ಜೀವನದ ಕೊನೆಯ ಕಾಲದಲ್ಲಿ ತಂದೆಯವರ ಆರಾಧನೆ ಸ್ಥಳವಾಗಿದ್ದ "ಪಾಪ್ಪಂ ಕೋಯ ನಗರ್'ನಲ್ಲಿ" ಸ್ವಂತವಾಗಿ ವಖ್ಫ್ ಮಾಡಿದ ಒಂದು ಎಕ್ಕರೆ ಸ್ಥಳದಲ್ಲಿ ತನ್ನದೇ ಮೇಲುಸ್ತವಾರಿಯಲ್ಲಿ ಮಸೀದಿ ನಿರ್ಮಿಸಿ, ತನ್ನ ಕರ್ಮ ಭೂಮಿಯಾಗಿ ಆರಿಸಿ ನೆಲೆಗೊಂಡ ಮಹತ್ತಾದ ಸ್ಥಾಪನೆಯಾಗಿದೆ "ಕುಂಬೋಳ್ ಪಾಪ್ಪಂಕೋಯ ನಗರ್ ಬದ್ರಿಯ್ಯ ಜುಮಾ ಮಸ್ಜಿದ್." ಅಲ್ಲಿಯೇ ತನ್ನ ಮೆಲ್ನೋಟದಲ್ಲಿ ಉತ್ತಮವಾದ ಒಂದು ದರ್ಸ್'ಅನ್ನು ತಂಙಳ್'ರವರು ಸ್ಥಾಪಿಸಿದರು.
ಪ್ರಸ್ತುತ ಮಸ್ಜಿದ್'ನ ಅಧೀನದಲ್ಲಿ ಇನ್ನು ಕೆಲವು ಸ್ಥಾಪನೆಗಳು ನಂತರದ ಕಾಲಗಳಲ್ಲಿ ಸ್ಥಾಪಿಸಲಾಯಿತು.
ಫಝಲ್ ತಂಗಳ್ (ಖ:ಸಿ) ರವರ "ಪಾಪ್ಪಂಕೋಯ ಹೌಸ್" ಇಂದು ಕೂಡಾ ಸಂದರ್ಶಕರ ಕೇಂದ್ರವಾಗಿದೆ.
ಕಾಸರಗೋಡಿನ ಪಟ್ಲದ ಸಯ್ಯಿದ್ ಹುಸೈನ್ ಬಾಅಲವಿ ಅಟ್ಟಕೋಯ ತಂಗಳ್ (ಖ:ಸಿ)ರವರ ಪ್ರಥಮ ಪುತ್ರಿ ಉಮ್ಮು ಹಲೀಮ ಬೀವಿಯಾಗಿದ್ದಾರೆ ಫಝಲ್ ಪೂಕೋಯ ತಂಗಳ್ (ಖ:ಸಿ) ರವರ ಸಹಧರ್ಮಿಣಿ.

ಪತಿಯ ನೆರಳಾಗಿ ಜೀವಿಸಿದ ಮಹದಿಯವರು ದೀನಿ ಚೌಕಟ್ಟಿನಲ್ಲಿ ನೆಲೆಗೊಂಡು ಇಬಾದತ್ತ್ ವಿಷಯದಲ್ಲಿ ಸಯ್ಯಿದ್ ವಂಶಕ್ಕೆ ಮಾದರಿಯಾಗಿದ್ದರು.
ಮಹದಿಯವರಲ್ಲಿ ದು:ಆ ವಸಿಯ್ಯತ್ ಮಾಡಿಸಲು, ಅನುಗ್ರಹ ಕೇಳಲು ದೂರದ ಸ್ಥಳಗಳಿಂದ ಜನರು‌ ಈಗಲೂ ಪಾಪ್ಪಂಕೋಯ ಹೌಸಿಗೆ  ತಲುಪುತ್ತಿದ್ದಾರೆ.

ಕೆಲವೊಮ್ಮೆ ಕುಂಬೋಳ್ ಮನೆತನಕ್ಕೆ ತಲುಪುತ್ತಿದ್ದ ಪಂಡಿತ ಲೋಕದ ಶಿರೋಮಣಿಗಳಾದ ಮಡವೂರ್ ಸಿ.ಎಂ. ವಲಿಯುಲ್ಲಾಹ್ (ಖ:ಸಿ), ಶಂಸುಲ್ ಉಲಮಾ ಈ.ಕೆ. ಉಸ್ತಾದ್ (ಖ:ಸಿ), ತಾಜುಲ್ ಉಲಮಾ ಉಳ್ಳಾಲ ತಂಙಳ್ (ಖ:ಸಿ), ಕೋಟ್ಟುಮಲ ಉಸ್ತಾದ್ (ಖ:ಸಿ) ಹಾಗೂ ವೈಲಿತ್ತರ ಉಸ್ತಾದ್ (ಖ:ಸಿ) ಮೊದಲಾದ ಹಲವಾರು ಮಹಾತ್ಮರುಗಳು ಮಹದಿಯವರ ಬಳಿ ದು:ಆ ವಸಿಯ್ಯತ್ತ್ ಮಾಡುತ್ತಿದ್ದರು.

ಕುಂಬೋಳ್ ಸಯ್ಯಿದ್ ಕುಟುಂಬಕ್ಕೆ ಬೆಳಕಾಗಿರುವ ಪಾಪ್ಪಂಕೋಯ ಹೌಸ್'ನಲ್ಲಿ ವಾಸಿಸುವ ಸಯ್ಯಿದತ್ತ್ ಉಮ್ಮು ಹಲೀಮಾ ಬೀವಿಯವರಿಗೆ  ಅಫಿಯತ್ತ್'ನಿಂದ ಕೂಡಿದ ದೀರ್ಘಾಯುಷ್ಯ ಕರುಣಿಸು ಅಲ್ಲಾಹ್..
ಆಮೀನ್..

🔹ಮುಂದುವರಿಯುವುದು..

    ಅನುವಾದ:
✍ ಗಫೂರ್ ಬಾಯಾರ್
✒✒✒✒✒✒✒✒✒
*ಝಿಯಾರತ್ತ್ ಕೇಂದ್ರ*
      💎4⃣6⃣💎
ಕುಂಬೋಳ್ ಸದಾತ್ತುಗಳು
〰〰〰〰〰〰〰〰〰
_ಸಯ್ಯಿದ್ ಮುಹಮ್ಮದ್ ಪಾಪ್ಪಂಕೊಯ ತಂಗಳ್. (ಖ:ಸಿ) ಕುಂಬೋಳ್, ಕಾಸರಗೋಡು._
➖➖➖➖➖➖➖➖➖
*اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ*
🕌🕌🕌🕌🕌🕌🕌🕌🕌
ಸಾಮಾನ್ಯ ಜನರೊಂದಿಗೆ ಸೇರಿಕೊಂಡು  ಭಕ್ತಿಯಿಂದ ಕೂಡಿದ ಜೀವನ ಶೈಲಿಯೊಂದಿಗೆ ಜೀವಿಸುತ್ತಾ ನಿರ್ಗತಿಕರಿಗೆ, ಅನಾಥರಿಗೆ, ಬಡವರಿಗೆ ಆಸರೆಯಾಗಿ ನಿಂತು ಮತ ಸೌಹಾರ್ದತೆಯ ಸಂದೇಶವನ್ನು ಪ್ರಚಾರಪಡಿಸುತ್ತಾ, ಕೆಲವು ಕಾಲಗಳ ಹಿಂದೆ ನಮ್ಮಿಂದ ಅಗಲಿದ ಪುಣ್ಯ ಪುರುಷರಾಗಿದ್ದರು "ಪಾಪ್ಪಂ ಕೋಯ ತಂಙಳ್" ಎಂಬ ಸಯ್ಯಿದ್ ಮುಹಮ್ಮದ್ ಅಲ್ ಹೈದರೂಸ್ (ಖ:ಸಿ) ರವರು.

ಅಲ್ಲಾಹನ ಇಷ್ಟದಾಸರಾಗಿದ್ದ ತಂಙಳ್'ರವರ ಜೀವನದಲ್ಲಿ ಪ್ರಕಾಶ ಕಿರಣಗಳು ಕಂಡವರು ಅಧಿಕ ಮಂದಿ‌ ಇದ್ದರು..

ಕೇರಳದ ವಡಗರಕ್ಕೆ ಹತ್ತಿರವಿರುವ ನಾದಾಪುರಂ ಕಾರಕಾಡ್ ಮನೆತನದಲ್ಲಿ ಹಿಜರಿ ವರ್ಷ 1234ರಲ್ಲಿ ಹೈದರೂಸ್ ಖಬಿಲದಲ್ಲಾಗಿತು ಮಹಾನರ ಜನನ. ಆ ಕಾಲದ ಪ್ರಸಿದ್ಧ ವಿದ್ವಾಂಸರು, ಸಾತ್ವಿಕರು ಆದ ಸಯ್ಯಿದ್ ಕುಂಞಿಕೋಯ ತಂಙಳವರಾಗಿದ್ದಾರೆ ಮಹಾನರ ತಂದೆ.

ತನ್ನ 20ನೇ ಪ್ರಾಯದಲ್ಲೇ ಆತ್ಮೀಯ ಚೈತನ್ಯ ಹುಡುಕಿಕೊಂಡು ಸ್ವದೇಶ ಬಿಟ್ಟ ಮಹಾನರು  ಸುದೀರ್ಘವಾದ ತೀರ್ಥ ಯಾತ್ರೆ ಕೈಗೊಂಡರು. ಆ ಯಾತ್ರೆಯಲ್ಲಿ ಹೆಚ್ಚಿನ ಭಾಗವು ವಿಶುದ್ಧ ನಗರಗಳಾದ ಮಕ್ಕ, ಮದೀನ, ಬೈತ್ತುಲ್ ಮುಖದ್ದಿಸ್, ಬಾಗ್ದಾದ್, ಉಮ್ಮು ಉಬೈದ, ಹಾಗೂ ಆಜ್ಮೀರ್ ಶರೀಫ್ ಎಂಬಿತ್ಯಾದಿ ಪುಣ್ಯ ಸ್ಥಳಗಳಲ್ಲಿ ಕಳೆದರು.

ನಂತರ ಕೇರಳಕ್ಕೆ ಮರಳಿದ ಮಹಾನರು ಕಾಸರಗೋಡ್ ಜಿಲ್ಲೆಯ ಕುಂಬಳೆಯ ಹತ್ತಿರ ಕುಂಬೋಳ್ ಸಯ್ಯಿದ್ ಉಮರ್ ಖಾಝಿಯವರ ಏಕ ಮಗಳನ್ನು ವಿವಾಹವಾದರು.
ಈ ದಾಂಪತ್ಯ ಜೀವನದಲ್ಲಿ
ಮಹಾನರಿಗೆ 6 ಹೆಣ್ಣು ಮಕ್ಕಳು, 2 ಗಂಡು ಮಕ್ಕಳು ಜನಿಸಿದರು.
ಹಿರಿಯ ಪುತ್ರರಾದ ಸಯ್ಯಿದ್ ಉಮರ್ ಕುಂಞಿಕೊಯ ತಂಙಳ್ ತಂದೆಯವರ ವಫಾತ್ತಿನ 6 ತಿಂಗಳು ನಂತರ ಇಹಲೋಕ ತ್ಯಜಿಸಿದರು.
ದ್ವಿತೀಯ ಪುತ್ರರು ಮರ್ಹೂಂ ಸಯ್ಯಿದ್ ಫಸಲ್ ಪೂಕೊಯ ತಂಙಳ್ (ಖ:ಸಿ)ರವರಾಗಿದ್ದಾರೆ.

ಬಹಳ ಶಾಂತ ಸ್ವಭಾವದ ವ್ಯಕ್ತಿತ್ವ ಹೊಂದಿದವರಾಗಿದ್ದ ಪಾಪ್ಪಮ್ ಕೋಯ ತಂಙಳ್(ಖ:ಸಿ) ರವರು. ಸಾಮಾನ್ಯ ಜನರೊಂದಿಗೆ ಆಗಿತ್ತು ಹೆಚ್ಚು ಒಡನಾಟ. ಬಡವರ ಸ್ವಂತ ತಂಙಳ್ ಎಂಬ ನೆಲೆಯಲ್ಲಿ ತಂಙಳರನ್ನು ಪಾಪ್ಪಂಕೋಯ ತಂಙಳೆಂದು (ಖ:ಸಿ) ಕರೆಯಲಾರಂಭಿಸಿದರು.

ಕಾಸರಗೋಡು ಭಾಷೆ ಶೈಲಿಯಲ್ಲಿ ಮಲಯಾಳದ "ಪಾವಂ" ಎಂಬುದು "ಪಾಪ್ಪಂ" ಎಂದಾಗಿ ಬದಲಾಯಿತು.
ಬಾಲ್ಯದಲ್ಲೇ ತಂದೆಯವರಿಂದಲೂ, ಶೈಖ್'ಗಳಿಂದಲೂ ಕಲಿತುಕೊಂಡ ಆರಾಧನಾ ಕ್ರಮಗಳನ್ನು ಜೀವನದಲ್ಲಿ ನಿರಂತರವಾಗಿ ಅಳವಡಿಸಿಕೊಂಡು ಮಹಾನರು ರಾತ್ರಿಯ ಸಮಯಗಳಲ್ಲಿ ಇಬಾದತ್ತಿನಲ್ಲಿ ತಲ್ಲೀನರಾಗುವುದು ರೂಢಿಯಾಗಿತ್ತು.

ನಿರ್ಜನ ಪ್ರದೇಶವಾಗಿದ್ದ "ಕುನ್ನಿಲ್" ಎಂಬ ಸ್ಥಳವನ್ನು ಮಹಾನರು ಇಬಾದತ್ತಿಗಾಗಿ ಆರಿಸಿದ್ದರು. ಮಹಾನರು ಇಬಾದತ್ತ್ ನಿರ್ವಹಿಸುತ್ತಿದ್ದ ಆ ಪ್ರದೇಶವಾಗಿದೆ ಇಂದಿನ "ಪಾಪ್ಪಂಕೋಯ ನಗರ್" ಪಾಪ್ಪಂಕೋಯ (ಖ:ಸಿ) ರವರು ತನ್ನ ಆತ್ಮೀಯ ಯಾತ್ರೆಯಲ್ಲಿ ಬಾಗ್ದಾದ್'ನಿಂದ ಖಾದಿರಿಯ್ಯ, ಉಮ್ಮು ಉಬೈದದಿಂದ ರಿಫಾಇಯ್ಯ, ಅಜ್ಮೀರ್'ನಿಂದ ಚಿಶ್'ತಿಯ್ಯ, ಮೊದಲಾದ ತ್ವರಿಖತ್ತುಗಳು ಹಾಗೂ ಆತ್ಮೀಯ ಜ್ಞಾನಗಳನ್ನು ಸಂಪಾದಿಸಿದರು.

ಮಹಾನರಿಗೆ ಹಲವಾರು ಶಿಷ್ಯಯಂದಿರುಗಳು ಇದ್ದರು. ಮಹಾನರಿಂದ ನೇರವಾಗಿ ತ್ವರೀಖತ್ತಿನ ಬೈಅತ್ತ್ ಮಾಡಿದ ಹಲವು ಪಂಡಿತರು ಅಭಿಮಾನದಿಂದ ಆ ವಿಷಯವನ್ನು ನೆನಪಿಸುತ್ತಿದ್ದರು.

ವಿಶ್ವದ ನಾನಾ ದಿಕ್ಕುಗಳಿಗೆ ಇಸ್ಲಾಂ ಧರ್ಮ ಪ್ರಚಾರಕ್ಕಾಗಿ ತೆರಳುತ್ತಿದ್ದ ಪಂಡಿತರುಗಳ ಕೇಂದ್ರವಾದ ಯೆಮೆನಿನ ಪೂರ್ವ ಪ್ರದೇಶವಾದ ಹಳರ್'ಮೌತ್ತಿನಿಂದ ಕೇರಳಕ್ಕೆ ಇಸ್ಲಾಂ ಪ್ರಬೋಧನೆಗಾಗಿ ಆಗಮಿಸಿದ ಪ್ರಮುಖರಲ್ಲಿ "ಹೈದರೂಸ್" ಕಬಿಲದ ಪ್ರಮುಖರಾಗಿದ್ದರು ಮಹಾನರು.

*'ಸುಮ್ಮ್'ನ*  ಇಜಾಸಿಯ್ಯತ್ತಿನಲ್ಲಿ ಪ್ರತ್ಯೇಕ ಸಿದ್ಧಿಗಳಿಸಿದ ಮಹಾನುಭಾವರು, ವಿಷಬಾಧೆ ತಗುಲಿದವರಿಗೆ ವಿಷ ಹೊರಗಡೆ ತೆಗೆಯುವುದರಲ್ಲಿ ಪ್ರಸಿದ್ದಿಗಳಿಸಿದವರಾಗಿದ್ದರು.
ಯಾವಾಗಲೂ ಮಹಾನರ ಕೈಯಲ್ಲಿ ಒಂದು ಬೆತ್ತ ಇರುತಿತ್ತು. ಮಹಾನರು ಆ ಬೆತ್ತವನ್ನು ಉಪಯೋಗಿಸಿ ವಿಷ ಬಾದೆಯನ್ನು, ದೊಡ್ಡ ರೋಗಗಳು  ತಗುಲಿದವರ  ಖಾಯಿಲೆಯನ್ನು ಗುಣಮುಖಗೊಳಿಸುತ್ತಿದ್ದರು. ಮಹಾನರು ಅನುಗ್ರಹಿಸಿ ಆಶಿರ್ವಾದಿಸಿದ ಹಲವಾರು ವ್ಯಕ್ತಿಗಳು ನಂತರದ ಕಾಲದಲ್ಲಿ ಉನ್ನತ ವಿದ್ವಾಂಸರಾಗಿ ಹೊರಹೊಮ್ಮಿದ್ದಾರೆ.
ಜೀವಿತ ಕಾಲದಲ್ಲಿ ಸಂಪೂರ್ಣವಾಗಿ ಇಬಾದತ್ತಿಗೂ, ಮನುಷ್ಯ ಸೇವೆಗೂ ತನ್ನ ಜೀವನವನ್ನೇ ಸಮರ್ಪಿಸಿದ ಮಹಾನರು ಹಿಜರಿ ವರ್ಷ 1353ರ ದುಲ್'ಹಜ್ಜ್ 23ಕ್ಕೆ ತನ್ನ 109ನೇ ವಯಸ್ಸಿನಲ್ಲಿ ಕುಂಬೋಳ್'ನಲ್ಲಿ ಅಲ್ಲಾಹನ ಸನ್ನಿದಿಗೆ ಯಾತ್ರೆಯಾದರು.
ಮಹಾನರ ಮಕ್ಬರದ ಪಕ್ಕದಲ್ಲೇ ಹಿರಿಯ ಮಗನ ಮಖ್ಬರವು ಇದೆ.
ಅಲ್ಲಾಹು ಅವರ ಬರ್ಕತ್ತಿನಿಂದ ನಮ್ಮ ಇಹಪರ ಜೀವನ ವಿಜಯಗೊಳಿಸಲಿ ಆಮೀನ್.

*ದಾರಿ:* ಕುಂಬಳೆ ಆರಿಕ್ಕಾಡಿಯ ಹತ್ತಿರ ಕುಂಬೋಳ್ ದೊಡ್ಡ ಜುಮಾ ಮಸ್ಜಿದ್'ನ ಅಂಗಣದಲ್ಲಾಗಿದೆ. ಮಕ್ಬರವಿರುವುದು.
ಅನುವಾದ:
✍ಗಫೂರ್ ಬಾಯಾರ್
✳✳✳✳✳✳✳✳
*ಝಿಯಾರತ್ತ್ ಕೇಂದ್ರ*
            4⃣5⃣
==================
_ಶೈಖ್ ಮುಹಮ್ಮದ್ ಸ್ವಾಲಿಹ್ (ರ), ನಾಡುಕಾಣಿ ಬೆಟ್ಟ. ವಯಿಕಡವ್, ಆನಮರಿ._ ಮಲಪ್ಪುರಂ
-----------------------
*اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ*
☪☪☪☪☪☪☪☪☪
ದಟ್ಟವಾದ ಕಾಡು, ಎರಡು ದಿಕ್ಕಿನಲ್ಲೂ ಕಾಡಾನೆಗಳ ಸಂಚಾರ, ಧಾರಾಕಾರವಾಗಿ ಸುರಿಯುವ ಮಳೆಯಲ್ಲಿಯೂ, ನಡು ಮಧ್ಯಾಹ್ನದಲ್ಲೂ ಕತ್ತಲು ಕವಿದಿರುವ ವಾತಾವರಣ.
ಜನ ವಾಸವಿಲ್ಲದ ಈ ಕಾಡಿನ ಮಾರ್ಗ ಬದಿಯಲ್ಲಾಗಿದೆ "ಮಖ್ಬರ"ವಿರುವುದು.

ಕಲ್ಲಿಕೋಟೆಯಿಂದ ಊಟಿ ರಾಜ್ಯ ಹೆದ್ದಾರಿಯಲ್ಲಿ ಪ್ರಸಿದ್ದವಾದ "ನಾಡುಕಾಣಿ" ಚುರ'ದಲ್ಲಿರುವ ವಯಿಕಡವ್ ಆನಮರಿ ರಸ್ತೆಯಲ್ಲಿ ಯಾತ್ರಿಕರಿಗೆ ಈ ನಯನ ಮನೋಹರವಾದ ದೃಶ್ಯವನ್ನು ಹಾಗು ಮಖಾಮನ್ನು ಕಾಣಬಹುದು.

*ಯಮನ್'ನಿಂದ 600 ವರ್ಷಗಳ ಹಿಂದೆ ಒಂದು ಸಂಘವಾಗಿ ಇಸ್ಲಾಮಿಕ ಪ್ರಬೋಧನೆಯಾರ್ಥ ಭಾರತಕ್ಕೆ ತಲುಪಿದವರು.*
ಕಲ್ಲಿಕೋಟೆಯಿಂದ ಮಲಬಾತ ದಾರಿಯಾಗಿ ಬೆಂಗಳೂರಿಗೆ ಹೋಗುವ ದಾರಿಯಲ್ಲಿ 4 ಜನರು ನಿಲಂಬೂರ್'ನ ಹತ್ತಿರದ ವಯಿಕಡವ್ ನಾಡುಕಾಣಿಯಲ್ಲಿ ವಫಾತ್ತ್ ಆದ್ದರು ಎಂದಾಗಿದೆ ಚರಿತ್ರೆ.

ಅಸೌಖ್ಯದಿಂದಾಗಿದೆ ಎಂದೂ, ಕಾಡಾನೆಗಳ ಆಕ್ರಮಣ ದಿಂದಾಗಿದೆ ಎಂದೂ, ಶತ್ರುಗಳೊಂದಿಗೆ ಹೋರಾಡಿಯಾಗಿದೆ ಎಂದು, ಇವರಿಗೆ ಮರಣ ಸಂಭವಿಸಿರುವುದು ಎಂದು ಹೇಳಲಾಗುತ್ತದೆ.

ಇವರಲ್ಲಿ *ಶೈಖ್ ಮುಹಮ್ಮದ್ ಸ್ವಾಲಿಹ್ (ರ)* ರವರ ಮಖ್ಬರಯಾಗಿದೆ ಹೆದ್ದಾರಿಯ ಬದಿಯಲ್ಲಿ ನೆಲೆಗೊಳ್ಳುತ್ತಿರುವುದು.

ಕಲ್ಲು ಬಂಡೆಗಳ ಎಡೆಯಿಂದ ಹರಿಯುತ್ತಿರುವ ಜಲಧಾರೆಯ ಹತ್ತಿರದ ವನದೊಳಗೆ ಒಂದು ಆಶ್ರಯ ಕೇಂದ್ರವಾಗಿದೆ ಇದು.

ಮಹಾನರುಗಳ ಸಹಯಾತ್ರಿಗಳಾಗಿದ್ದ ಮೂರು ಮಹಾತ್ಮರುಗಳ ಖಬರ್'ಗಳು ಇದೇ ಕಾಡುಗಳ ಒಳಗೆ ಎರಡು ಜಾಗಗಳಲ್ಲಿದೆ.

ಮಹಾತ್ಮರಾದ ಮಡವೂರ್ ಸಿ.ಎಂ. ವಲಿಯುಲ್ಲಾಹಿ (ರ) ಈ ಮಖ್ಬರಗಳ ಪರಿಸರದಲ್ಲಿ ಏಕಾಂತ ವಾಸವಾಗಿ ಇಬಾದತ್ತ್'ನಲ್ಲಿ ತಲ್ಲೀನರಾಗಿದ್ದರು. ಎಂದು ಚರಿತ್ರೆ ಇದೆ.
ಮಖಾಮಿನ ಪರಿಪಾಲಕರಾದ "ಹೈದ್ರೂಕ" ಎಂಬವರ ತಂದೆಯವರಿಗೆ ಈ ಮಖ್ಬರದ ಪರಿಸರದಿಂದ ಲಭಿಸಿದ ತಾಮ್ರದ ಫಲಕಗಳಿಂದಾಗಿದೆ ಮಹಾನರುಗಳ ಹೆಸರು ಲಭಿಸುವುದು.

ವಯಿಕಡವ್'ನಿಂದ ಊಟಿಗೆ ಹೋಗುವವರು, ಮರಳಿ ಬರುವವರು ಝಿಯಾರತ್ತಿಗಾಗಿ ತುಂಬಾ  ಜನರು ಇಲ್ಲಿ ವಾಹನ ನಿಲ್ಲಿಸುತ್ತಾರೆ.

ಝಿಯಾರತ್ತ್ ಮಾಡಿ ಮರಳುವಾಗ ಕಾಣಿಕೆ ಡಬ್ಬಿಯಲ್ಲಿ ನೇರ್ಚೆ ಹಾಕುವುದು ರೂಢಿಯಾಗಿದೆ ಇಲ್ಲಿ.

 ಪ್ರಕೃತಿ ಮನೋಹರವಾದ ನೀಲಗಿರಿ ಮಲೆಗಳ ಮದ್ಯೆವಿರುವ ಈ ವನ ಪಾಧೆಯಲ್ಲಿರುವ ದಿನನಿತ್ಯದ ದೃಶ್ಯವಾಗಿದೆ ಇದು.

ವರ್ಷಗಳ ಮೊದಲು ಮಂಬಾಡ್ ಪ್ರದೇಶದ ಕೆಲವು "ಜೂದ" ಯಾತ್ರಿಕರಾದ 'ಆಶಯ' ದಿಕ್ಕಾರಿಗಳಾದ ದುಷ್ಟರು ('ಅ'ಸಲಫಿಗಳು) ಈ ಮಖ್ಬರವನ್ನು ಅರ್ಧರಾತ್ರಿಯಲ್ಲಿ ನೆಲಸಮಗೊಳಿಸಲು ಶ್ರಮಿಸಿರುವುದು, ಅಂದು ಅಸಾಧಾರಣವಾದ ಪ್ರೇರಣಾ ನಿಮಿತ್ತ "ನಿಲಂಬೂರ್ ಎಸ್.ಐ. ಮುಂಜಾನೆ ಈ ಮಖ್ಬರದ ಪರಿಸರ ಪರಿಶೋಧನೆ ಮಾಡಿರುವುದು, ಹಾಗೂ ಆಧಾರ ಸಹಿತ ಆರೋಪಿಗಳನ್ನು ಬಂದಿಸಿರುವುದು, ವಾರ್ತೆಗಳಲ್ಲಿ "ಅತ್ಯಾಚಾರ" ಆರೋಪಿಗಳ ರೀತಿಯಲ್ಲಿ ಇವರ ನೀಚ ಕೆಲಸ ಪ್ರಸಾರಗೊಂಡಿತ್ತು.
ಸಮೂಹದಲ್ಲಿ "ಮುಖ ಕೆಟ್ಟ" ಈ ಘಟನೆ ಕೆಲವೇ ವರ್ಷಗಳ ಹಿಂದೆಯಾಗಿತ್ತು. ಇದೆ ವಹ್ಹಾಬಿಗಳಿಗೆ
ಈಗ ಮೂರನೇ ಸಲವು ಮಖ್ಬರವನ್ನು ನೆಲಸಮಗೊಳ್ಳಿಸಲು ಪರಿಶ್ರಮಿಸಲಾಯಿತು.

*"ಅಲ್ಲಾಹನ ಔಲಿಯಾಗಳೊಂದಿಗೂ, ಶುಹದಾಗಳೊಂದಿಗೂ, ಸರ್ವರು ಬಹುಮಾನಿಸುವ ಸ್ಮಾರಕಗಳೊಂದಿಗೂ ಇಷ್ಟು ಅಧಿಕ ದ್ವೇಷವಿರಲು ವಹ್ಹಾಬಿಗಳನ್ನು ಪ್ರೇರಿಪಿಸುವ ಚಿಂತನೆಗಳು ಏನಾದರೂ ಆಗಲಿ....*
ಅಲ್ಲಾಹನ ಮಹಾತ್ಮರೊಂದಿಗೆ ಯುದ್ಧ ಘೋಷಣೆ ಮಾಡಿದವರೊಂದಿಗೆ ಅಲ್ಲಾಹು ಕೂಡಾ ಯುದ್ಧ ಪ್ರಸ್ತಾಪ ಮಾಡಿದ ವಿಷಯ ನಮಗೆ ಗೊತ್ತಿರುವುದಾಗಿದೆಯಲ್ಲವೇ..

ಅಲ್ಲಾಹು ಅವರ ಮದದ್ ನೀಡಿ ನಮ್ಮನ್ನು ಅನುಗ್ರಹಿಸಲಿ ಆಮೀನ್..

*ಆ ಮಹಾನುಭಾವರುಗಳಿಗೆ ನಮಗೊಂದು 'ಫಾತಿಹಾ' ಓದಿ ಹದ್'ಯ ಮಾಡೋಣ..✋*

ಮಖ್ಬರಗಳನ್ನು ದ್ವಂಸ ಮಾಡುವ ಇಂತಹ ದುಷ್ಟ  ಚಟುವಟಿಗಳು ಮನಸ್ಸಲ್ಲಿ ಉದ್ಭವಿಸುವುದು ವಹ್ಹಾಬಿಗಳ ವಿಶ್ವಾಸಗಳು ತಪ್ಪಾಗಿಸುದರಿಂದಲೇ ಆಗಿದೆ *ವಹ್ಹಾಬಿಗಳೊಂದಿಗೆ ಸಂಬಂಧ ಸ್ಥಾಪಿಸುವುದೋ, ಅವರನ್ನು ಕಂಡಾಗ ನಗುವುದೊ, ಅವರ ಆಚರಣೆಗಳ ವೇಳೆಗಳಲ್ಲಿ ಅವರ ಜೊತೆ ಭಾಗವಹಿಸುವುದೊ, ಬೇಡ ಎಂದು ನಮ್ಮ ಉಲಮಾಗಳು ಹಾಗು ಪೂರ್ವಕಾಲದ ಮಹಾತ್ಮರು ಹೇಳಲು ಕಾರಣ ಕೂಡ ಇದೆ ಆಗಿದೆ.*

ಯಾವುದೇ ರೀತಿಯಲ್ಲೂ ವಹ್ಹಾಬಿಗಳಂತಹ ನೂತನವಾದಿಗಳೊಂದಿಗೆ ಸಂಬಂಧ ಇರಿಸದಿರಲು, ಅಲ್ಲಾಹು ನಮಗೆಲ್ಲರಿಗೂ ಗಟ್ಟಿಯಾದ ಈಮಾನ್ ನೀಡಿ ಅನುಗ್ರಹಿಸಲಿ ಆಮೀನ್.

✍ಕನ್ನಡಕ್ಕೆ ಗಫೂರ್ ಬಾಯಾರ್
🔷🔷🔷🔷🔷🔷🔷🔷🔷🔷



*ಝಿಯಾರತ್ತ್ ಕೇಂದ್ರ*
   🕌 4⃣4⃣🕌
〰〰〰〰〰〰〰〰〰
*ತವಕ್ಕಲ್ ಮಸ್ತಾನ್ (ರ)     ಮೆಜೆಸ್ಟಿಕ್, ಬೆಂಗಳೂರು.*
➖➖☪☪☪☪➖➖
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🕌🕌🕌🕌🕌🕌🕌🕌🕌

17ನೇ ಶತಮಾನದಲ್ಲಿ ಇಸ್ಲಾಮಿಕ್‌ ಪ್ರಭೋಧನೆಯಾರ್ಥ ಭಾರತಕ್ಕೆ ಆಗಮಿಸಿದ ಮೂರು ಮಹಾತ್ಮರಾಗಿದ್ದಾರೆ *ಮಾಲಿಕ್ ಶಾಹ್ ಮಸ್ತಾನ್ (ರ), ಟಿಪ್ಪು ಮಸ್ತಾನ್ (ರ), ತವಕ್ಕಲ್ ಮಸ್ತಾನ್ (ರ) ಎಂಬವರು .*

ಇಂದು ಬೆಂಗಳೂರಿನ ಸಿಟಿ ಮಾರ್ಕೆಟಿನಲ್ಲಿ ಹೋಟೆಲ್ ಲೂಸಿಯ'ದ ಹತ್ತಿರ ಮಾಲಿಕ್ ಶಾಹ್ ಮಸ್ತಾನ್ (ರ) ರವರು ಅಂತ್ಯ ವಿಶ್ರಮಗೊಳ್ಳುತ್ತಿದ್ದಾರೆ.
ಟಿಪ್ಪು ಮಸ್ತಾನ್ (ರ) ರವರ ಮಖ್ಬರ ತಮಿಳು ನಾಡಿನ ವೆಲ್ಲೂರು ಜಿಲ್ಲೆಯ ಅರ್ಕೋಟ್ ಎಂಬ ಸ್ಥಳದಲ್ಲಿದೆ.

ಇನ್ನೊಬ್ಬ ಮಹಾತ್ಮರಾದ "ತವಕ್ಕಲ್ ಮಸ್ತಾನ್ (ರ) ರವರ ಮಖಾಮಿನ ಕುರಿತಾಗಿದೆ ನಾವು ಇಲ್ಲಿ ಪ್ರತಿಪಾದಿಸುವುದು.

ಬೆಂಗಳೂರಿನ ಅತೀ ಪ್ರಸಿದ್ಧವಾದ ಮಕ್ಬರಗಳಲ್ಲೊಂದಾಗಿದೆ ತವಕ್ಕಲ್ ಮಸ್ತಾನ್ (ರ) ರವದ್ದು. ಅವರ ದರ್ಗಾ ನೆಲೆಗೊಳ್ಳುತಿರುವುದು ಬೆಂಗಳೂರಿನ ಮೆಜಸ್ಟಿಕ್'ನ ಹತ್ತಿರವಾಗಿದೆ.

ಸುಲ್ತಾನ್ ಹೈದರಾಲಿ (ರ)ರವರ ಆರಂಭ ಕಾಲವಾದ 1680ಗಳಲ್ಲಿ ಕುದುರೆ ವ್ಯಾಪಾರ ನಿಮಿತ್ತ ಭಾರತಕ್ಕೆ ಆಗಮಿಸಿದವರಾಗಿದ್ದಾರೆ ಪ್ರಸುತ್ತ 3 ಸೂಫಿವರ್ಯರು ಎಂದೂ ಚರಿತ್ರೆ ಇದೆ.

 ಬ್ರಿಟೀಷರ ವಿರುದ್ಧ ತೆರೆದ ಯುದ್ಧ ಪ್ರಸ್ತಾಪ ಮಾಡಿದ ಸುಲ್ತಾನ್ ಹೈದರಾಲಿ (ರ) ಯವರ ಕೋಟೆ ನಿರ್ಮಾಣಕ್ಕೆ ತವಕ್ಕಲ್ ಮಸ್ತಾನ್ (ರ)ರವರ ಪ್ರಯತ್ನ ಬಹಳ ಪ್ರಸಿದ್ಧವಾಗಿದೆ. "ಮಿರ್ಝಾ ಬೇಗ್" ಎಂಬ ಹೆಸರಿನಲ್ಲಿ ಒಬ್ಬ ಕೂಲಿಗಾರನ ವೇಷದಲ್ಲಿ ಕೋಟೆ ನಿರ್ಮಾಣದಲ್ಲಿ ತಲ್ಲೀನರಾದ ಅವರ ಕೆಲಸವು, ಕೆಲಸದಲ್ಲಿರುವ ಆತ್ಮ ಸಮರ್ಪಣೆಯು ಉಳಿದ ಕೆಲಸಗಾರರಿಗೆ ಪ್ರಚೋದನೆಯು, ಮಾದರಿಯೋಗ್ಯವು ಆಗಿತ್ತು.

ಎಲ್ಲಾ ಕೂಲಿ ಕೆಲಸಗಾರರು ದಿನೇನೇ ಸಂಬಳ ಪಡೆದುಕೊಳ್ಳುತ್ತಿದ್ದರೂ, ಮಹಾನರು ವಾರಕ್ಕೊಂದು ದಿವಸದ ವೇತನವನ್ನು ಕೂಡಾ ಪಡೆಯುತ್ತಿರಲಿಲ್ಲ. ಈ ಅವಸ್ಥೆ ಕೋಟೆ ನಿರ್ಮಾಣ ಮುಗಿಯುವವರೆಗೂ ಮುಂದುವರಿಯಿತು.
ಮಹಾನವರ ಸಂಬಳ ಒಂದು ದೊಡ್ಡ ಸಂಖ್ಯೆಯಾಗಿ ಉಳಿಯಿತು.
ಈ ವಿಷಯ ಸುಲ್ತಾನ್ ಹೈದರಾಲಿ (ರ) ರವರು ತಿಳಿದು, ಕೂಡಲೇ ಮಹಾನರನ್ನು ಕರೆದುಕೊಂಡು ಬರಲು ರಾಜ ಕಲ್ಪನೆ ಹೊರಡಿಸಿದರು.
ಮಿರ್ಝಾ ಬೇಗ್'ರನ್ನು ಹುಡುಕುತ್ತಾ ಹೊರಟ ರಾಜರ ಸೈನಿಕರಿಗೆ ಅವರನ್ನು ಕಾಣಲು ಸಾಧ್ಯವಾಗಿಲ್ಲ. ಬದಲಾಗಿ ಅವರು ತಂಗಿದ್ದಲ್ಲಿ ಅವರ ತುಂಡು ತುಂಡಾದ ಶರೀರ ಭಾಗಗಳು ಚೆಲ್ಲಾಪಿಲ್ಲಿಯಾಗಿ ಕಂಡರು.
ಇದನ್ನು ಕಂಡ ಸೈನಿಕರು ಭಯಭೀತರಾಗಿ ಕಂಪಿಸುತ್ತಾ ಕೂಡಲೇ ರಾಜರ ಸನ್ನಿಧಿಗೆ ಧಾವಿಸಿದರು.
ಏನು ಆಶ್ಚರ್ಯ..!!
ಅಲ್ಲಿ ಮಿರ್ಝಾ ಬೇಗ್ ಮಂದಹಾಸದಿಂದ ಸುಲ್ತಾನ್ ಹೈದರಾಲಿ (ರ) ಯವರೊಂದಿಗೆ ಮಾತನಾಡುತ್ತಿದ್ದರು.
ನಂತರದ ಸಮಯದಲ್ಲಿ ಅನ್ವೇಷಣೆ ನಡೆಸಿದಾಗ ಅವರು ಮಿರ್ಝಾ ಬೇಗ್ ಅಲ್ಲವೆಂದೂ, ಅಲ್ಲಾಹನ ವಲಿಯ್ಯ್, ವಿದ್ವಾಂಸರು ಆದ ತವಕ್ಕಲ್ ಮಸ್ತಾನ್ (ರ) ರವರಾಗಿದ್ದಾರೆ ಎಂದು ತಿಳಿಯಿತು.

ರಾಜರ ಸೈನಿಕರು ಅವರ ಶರೀರ ಚೆಲ್ಲಾಪಿಲ್ಲಿಯಾಗಿ ಕಂಡ ಸ್ಥಳದಲ್ಲಾಗಿದೆ ಮಹಾನವರನ್ನು ವಫಾತ್ ಆದ ನಂತರ ದಫನ್ ಮಾಡಿರುವುದು.
ಈ ಸ್ಥಳವು ಮೊದಲು ಜನವಾಸವಿಲ್ಲದ ವನ ಪ್ರದೇಶವಾಗಿತ್ತು.
ಇಲ್ಲಿ ಏಕಾಂತ ವಾಸವಿದ್ದ ಮಹಾನವರು ಹೆಚ್ಚಾಗಿ ಜನರಿಂದ ದೂರ ಉಳಿದು ಇಬಾದತಿನಲ್ಲಿ ತಲ್ಲೀನರಾಗಲು ಶ್ರಮಿಸುತ್ತಿದ್ದರು.

ನಿರ್ಜನವಾದ ಸ್ಥಳವಾಗಿದ್ದ ಇಲ್ಲಿ ಒಂಟಿಯಾಗಿ ಕುಳಿತು ಖುರ್'ಆನ್ ಪಾರಾಯಣ ಮಾಡುತ್ತಿರುವ ಮಹಾನರೊಂದಿಗೆ ಸುಲ್ತಾನ್ ಹೈದರಾಲಿ (ರ) ಯವರ ಸೈನಿಕರು ಹೋಗಿ, ತಮಗೆ ಏನು ಸೇವೆ ಬೇಕಾದರೂ ಮಾಡಿ ನೆರವೇರಿಸಲು ನಮಗೆ ಸುಲ್ತಾನರು ಕಲ್ಪನೆ ಕೊಟ್ಟಿರುತ್ತಾರೆಂದು ಹೇಳಿದರು.
ನನಗೆ ಯಾವುದೇ ಸೇವೆಯ ಅಗತ್ಯವಿಲ್ಲವೆಂದು ಹೇಳಿದ ಮಹಾನವರು ಇಲ್ಲಿ ಅಲ್ಲಾಹನಿಗೆ ಆರಾಧನೆ ಮಾಡಲಿಕ್ಕಾಗಿ ಒಂದು ಮಸ್ಜಿದ್' ಬೇಕೆಂದು ಆವಶ್ಯಪಟ್ಟರು.

ಮಹಾನವರ ಆವಶ್ಯಕತೆ ಪ್ರಕಾರ ಸುಲ್ತಾನ್ ಹೈದರಾಲಿ (ರ) ಯವರು ದೊಡ್ಡದೊಂದು ಮಸ್ಜಿದ್ ನಿರ್ಮಿಸಿ ಕೊಟ್ಟು, ಮಸ್ಜಿದ್'ನ ಸುತ್ತಲೂ ಇರುವ 600 ಎಕ್ಕರೆ ಸ್ಥಳವನ್ನು ಬಾಬನವರಿಗೆ ಕೊಟ್ಟರು.
ಈ ಮಸ್ಜಿದ್ ಆಸ್ಥಾನವಾಗಿ ಮಹಾನವರು ದೀನೀ ಪ್ರಬೋಧನೆಯಲ್ಲಿ ನಿರತರಾದರು.

ಬಾಬ ಎಂಬ ಹೆಸರು ಗೌರವಪೂರ್ವಕವಾಗಿ ಮಹಾನವರನ್ನು ಕರೆಯುವ ಹೆಸರಾಗಿದೆ.

ಮಹಾನುಭಾವರನ್ನು ಕಾಣಲು, ದುವಾ ವಸಿಯ್ಯತ್ ಮಾಡಲು ಕರ್ನಾಟದಿಂದಲೂ, ಹೊರಗಿನ‌ ರಾಜ್ಯದಿಂದಲೂ ಧಾರಾಳ ಜನರು ಬರುತ್ತಿದ್ದರು.

ವಫಾತ್ತಿನ ನಂತರವೂ ಜನರು ಅಲ್ಲಿಗೆ ದಿನನಿತ್ಯ ಝಿಯಾರತ್ತಿಗಾಗಿ ಬರುತ್ತಾರೆ.
ಮಹಾನವರು ಇಹಲೋಕ ತ್ಯಜಿಸಿ ವರ್ಷಗಳು ಕಳೆದರೂ ಆ ನೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಯುತ್ತಿದೆ.

ದಾರಿ: ಬೆಂಗಳೂರು ಮೆಜೆಸ್ಟಿಕ್ ನಿಲ್ದಾಣದ ಹತ್ತಿರವಾಗಿದೆ ಈ ಮಖಾಂ ನೆಲೆಗೊಳ್ಳುತ್ತಿರುವುದು.

✍ಗಫೂರ್ ಬಾಯಾರ್
♎♎♎♎♎♎♎♎♎


*ಝಿಯಾರತ್ತ್ ಕೇಂದ್ರ*
   🕌 4⃣3⃣🕌
     🔷ಭಾಗ- 02
〰〰〰〰〰〰〰〰〰
*ಹಝ್ರತ್ತ್ ಟಿಪ್ಪು ಸುಲ್ತಾನ್ (ರ), ಶ್ರೀರಂಗಪಟ್ಟಣ, ಮೈಸೂರು.*
➖➖☪☪☪☪➖➖
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🕌🕌🕌🕌🕌🕌🕌🕌🕌

ಏರನಾಡ್ ಹಾಗು ವಳ್ಳುವನಾಡ್ ಎಂಬ ಊರಿನ ಕೆಲವು ಪ್ರದೇಶಗಳಲ್ಲಿ ತೆರಿಗೆ ವಸೂಲಿ ಮಾಡಲು ಈ ಕಳ್ಳ ತ್ವರೀಕತ್ತ್'ಗಾರನಿಗೆ "ಪಾರ್ಶಿ" ಭಾಷೆಯಲ್ಲಿ ಬರೆದ ಅನುಮತಿ ಪತ್ರವನ್ನು ಕೊಟ್ಟಿದ್ದರು.

ಈ ಕಳ್ಳ ಶೈಖ್ ಹಾಗೂ ಟಿಪ್ಪು (ರ) ರವರ ಮರಣದ ನಂತರ ಈತನ ಅನುಯಾಯಿಗಳು ತೆರಿಗೆ ವಸೂಲು ಮಾಡುತ್ತಿದ್ದರು.
ಈ ತೆರಿಗೆ ವಸೂಲಿಯು ಹಲವು ವರ್ಷಗಳವರೆಗೆ ಮುಂದುವರಿಯಿತು.

1788 ಮೇ 26ಕ್ಕೆ ಪಾಲಕ್ಕಾಡ್ ಆಸ್ಥಾನದಲ್ಲಿ ಕೊಚ್ಚಿ ರಾಜನೊಂದಿಗೆ ರಾಜಕೀಯ ಚರ್ಚೆ ನಡೆಸಿದ ಟಿಪ್ಪು (ರ) ರವರು, ತಿರುವಿತಾಂಕೂರ್ ರಾಜನಿಗೆ ಬ್ರಿಟಿಷರ ವಂಚನೆಯ ಕುರಿತು ತಾಕೀತು ನೀಡಿದ್ದರು. ಅವರಿಗೆ ರಾಜಕೀಯವಾಗಿ  ಸಹಾಯ ನೀಡುವುದನ್ನು ತಡೆದರು.
ಆದರೂ ತಿರುವಿತಾಂಕೂರ್ ರಾಜನು ಟಿಪ್ಪು (ರ)ರವರ ಮಾತನ್ನು ಅನುಸರಿಸಲಿಲ್ಲ.

1789 ಫೆಬ್ರವರಿಯಲ್ಲಿ ಟಿಪ್ಪು (ರ) ರವರು ಪುನಃ ತಾಮರಶ್ಯೇರಿ ದಾರಿಯಾಗಿ ಮಲಬಾರಿಗೆ ತಲುಪಿದರು.
ತನ್ನ ಆಡಳಿತವನ್ನು ಜನರ ಜೀವನ ಶೈಲಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಿದರು.
ಒಬ್ಬ ಮಹಿಳೆ ಹತ್ತು ಪುರುಷರ ಪತ್ನಿಯಾಗುವುದು ಹಾಗು ಕೀಲು ಜಾತಿಯ ಹೆಂಗಸರು ಎದೆಯ ಭಾಗವನ್ನು ಮುಚ್ಚದೆ ತೆರೆದು ನಡೆಯುವಂತಹ ಕೆಲವು ಆಚಾರಗಳನ್ನು  ನಿಷೇದಿಸಿಕೊಂಡು ವಿಜ್ಞಾಪನೆ ಹೊರಡಿಸಿದರು.

ಅದೇ ರೀತಿ ಚಾಲಿಯಂ'ನಿಂದ ತಾನೂರ್ ವರೆಗೂ
*"ಸುಲ್ತಾನ್ ಎಂಬ ಹೆಸರಿನಲ್ಲಿ ರಸ್ತೆಯನ್ನು ನಿರ್ಮಿಸಿದರು.*
ಕುಟ್ಟನಾಡ್'ನಲ್ಲಿ ನಾಯರ್ ಜಾತಿಗೊಳಪಟ್ಟ ಸೈನಿಕರೊಂದಿಗೆ ನ್ಯಾಯಕ್ಕಾಗಿ ಹೋರಾಡಿದರು.
ಪಯಂಗಾಡಿ ಎಂಬ ಸ್ಥಳದಲ್ಲಿ *ಸುಲ್ತಾನ್ ಕಾಲುವೆಯನ್ನು ನಿರ್ಮಿಸಿದರು.*

ದಕ್ಷಿಣ ಮಲಬಾರ್ ಯಾತ್ರೆಗೈದು ತಲಸ್ಸೇರಿ, ಧರ್ಮಡಂ, ಕಣ್ಣೂರು, ಕುಟ್ಟಿಯಾಡಿ, ವಯನಾಡ್ ಎಂಬಿತ್ಯಾದಿ ಸ್ಥಳಗಳಲ್ಲಿ ಹೊಸ ಆಡಳಿತದೊಂದಿಗೆ ಪರಿಷ್ಕರಣೆ ತಂದರು. ವಯನಾಡಿನಲ್ಲಿ
ಬತ್ತೇರಿ ನಗರವನ್ನು ನಿರ್ಮಿಸಿ ಅದನ್ನು *ಸುಲ್ತಾನ್ ಬತ್ತೇರಿ* ಎಂದು ಹೆಸರಿಟ್ಟರು.

ಕಣ್ಣೂರಿನ ಮುಸ್ಲಿಂ ರಾಜ ಕುಟುಂಬ ಸದಸ್ಯರಾದ *ಅರಕಲ್ ಬೀವಿಯವರ ಮಗಳನ್ನು ಟಿಪ್ಪು (ರ) ರವರ ಮಗನಾದ ಅಬ್ದುಲ್ ಖಾಲಿದ್ ವಿವಾಹವಾದರು.*

ಚಾವಕ್ಕಾಡ್'ನಲ್ಲಿ ಕೆಲವು ಮುಸ್ಲಿಂ ನಾಮಧಾರಿಗಳು ಟಿಪ್ಪು (ರ) ರವರನ್ನು ವಿರೋಧಿಸಿ ರಂಗಪ್ರವೇಶಗೈದಾಗ ಅವರ ಜೊತೆಗೆ ಸಂಘರ್ಷಗಳು ಪ್ರಾರಂಭಗೊಂಡವು.
ಆ ಸಂಘರ್ಷದಲ್ಲಿ ಸೋತವರು ಹೆದರಿ ಹಾರಿದ ಕೊಳವನ್ನು "ಚಾಟ್ಟುಕುಳಂ" ಎಂದೂ ಹೋರಾಟದಲ್ಲಿ ಮಡಿದು ಶಿರಸ್ಸು ಬಿದ್ದ ಸ್ಥಳವನ್ನು "ಮಣತ್ತಲ" ಎಂಬ ಹೆಸರಿನಲ್ಲಿ ಇಂದು ತಿಳಿಯಲ್ಪಡುತ್ತದೆ.

1786-87 ಕಾಲದಲ್ಲಿ ಶ್ರಿರಂಗಪಟ್ಟಣದಲ್ಲಿ ಟಿಪ್ಪು ರ.ರವರು *ಮಸ್ಜಿದ್ ಅಹ್'ಲಾ ಕಟ್ಟಿಸಿದರು* ಆ ಮಸ್ಜಿದ್'ನಲ್ಲಿ ಮುದರ್ರಿಸ್, ಖಾಝಿ ಹಾಗೂ ಮುಫ್ತಿಯಾಗಿ ಪುತ್ತನಂಗಾಡಿ (ಪೆರಿಂದಲ್'ಮಣ್ಣ್) ಯ ವಿಕಲಾಂಕರಾದ (ಕಾಲು ಇಲ್ಲದ) ಅಬ್ದುಲ್ಲ ಮುಸ್ಲಿಯಾರ್ (ಖ:ಸಿ) ಎಂಬ ಮಹಾನರನ್ನು ನೇಮಿಸಿದರು.

ಹತ್ತು ವರ್ಷಗಳಷ್ಟು ಕಾಲ ಅಲ್ಲಿ ಸೇವೆಗೈದ ಅವರು ನಂತರ ಆ ಊರಿಗೆ ವಿದಾಯ ಹೇಳಿದರು.

1799 ಮೇ 14ಕ್ಕೆ ಟಿಪ್ಪು ಸುಲ್ತಾನ್ (ರ) ರವರು ಶಹೀದ್ ಅದರು.
( 1808ರಲ್ಲಿ ಜಿಫ್ರಿ (ರ) ರವರ ವಫಾತ್ತ್ ಹಾಗೂ 1830 ರಲ್ಲಿ ಅಬ್ದುಲ್ಲಾ ಮುಸ್ಲಿಯಾರ್. ಖ:ಸಿ ರವರೂ ವಫಾತ್ತ್ ಆದರು.

ಟಿಪ್ಪು ಸುಲ್ತಾನ್ (ರ) ರವರು ತನ್ನ ಕುಟುಂಬದವರೊಂದಿಗೆ ರಾಜ(ಸುಲ್ತಾನ್) ಪ್ರೌಢಿಯೊಂದಿಗೆ   ಶ್ರೀರಂಗಪಟ್ಟಣದ "ಟಿಪ್ಪು ಗುಂಬಝ್" ಎಂಬ ಮಖಾಮಿನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿದ್ದಾರೆ.

🔰ಮುಗಿಯಿತು

✍ಗಫೂರ್ ಬಾಯಾರ್
🌾🌾🌾🌾🌾🌾🌾🌾🌾