*ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಉಮ್ಮತ್ ಮುಹಮ್ಮದ್* *(ಮುಸ್ಲಿಂ ಸಮುದಾಯ)*
*73 ಪಂಗಡಗಳಾಗಿ ಛಿದ್ರವಾಗುವುದು ಅದರಲ್ಲಿ ನನ್ನ ಮತ್ತು ನನ್ನ ಸಹಾಬಿಗಳ ದಾರಿ ಅನುಕರಿಸಿದ ಒಂದು ವಿಭಾಗ ಮಾತ್ರ ಸ್ವರ್ಗಕ್ಕೆ ಹೋಗುವುದೆಂದು ಬಾಕಿ ಮುಸ್ಲಿಂ ಸಮುದಾಯದ 72 ಪಾರ್ಟಿಯೂ ನರಕಕ್ಕೆಂದು ಡಿಕ್ಲೇರ್ ಮಾಡಿದ್ದನ್ನು ಉದಾಹರಣೆಯ ಮೂಲಕ ಗೀಚಿದಾಗ ಅದರ ಬಿಸಿ ಕೆಲವರಿಗೆ ಸ್ವಲ್ಪ ಜಾಸ್ತಿಯೇ ತಟ್ಟಿದೆ ಎಂದು ತಿಳಿಯಲು ಸಾಧ್ಯವಾಯಿತು*
ಈ ರೀತಿ ಅರ್ಥಕ್ಕೆ ಅಪಾರ್ಥ ಕಲ್ಪಿಸಿ, ಉದಾಹರಣೆಯ ವಿವರಣೆಗೂ ಕುರಾನ್ ನಲ್ಲಿ ಇದೆಯಾ ಎಂದು ಕೇಳುವವರು ಇರುವರೆಂಬ ಸ್ಪಷ್ಟ ನಿಗಮನದಲ್ಲೇ Article ನ ಕೊನೆ ಭಾಗದಲ್ಲಿ ಪ್ರತೇಕ ಬರೆದಿದ್ದೆ
ಅಪಾರ್ಥ ಮಾಡದೆ ಅರ್ಥ ಮಾಡಲಿಕ್ಕಾಗಿ ಉದಾಹರಣೆ ಗೀಚಿದ್ದೇನೆಂದು.
ಅಂದರೆ ಅದು ಕುರಾನಿನಲ್ಲಿ ಇಲ್ಲದಿದ್ದರೂ
ಅಲ್ಲಾಹನ ಮತ್ತು ರಸೂಲ್ (ಸ) ರವರ ನುಡಿಗಳನ್ನು ಉದಾಹಣೆಗೆ ಇಳಿಸಿದರೆ ಈ ರೀತಿ ಇರಬಹುದೆಂದಾಗಿದೆ ಅದರ ಅರ್ಥ
ಅದಲ್ಲದೆ ಕುರಾನಿನಲ್ಲಿ ಅಲ್ಲಾಹು ಆ ರೀತಿ ಹೇಳಿದ್ದಾನೆಂದು ಅರ್ಥ ಇಲ್ಲ.
ಚಿಂತಿಸುವವರಿಗೆ ಉದಾಹರಣೆ ಸಾಕು.
ಅದೆಲ್ಲವೂ ಸರ್ವೇಸಾಮಾನ್ಯವಾಗಿ ನಾವು ದಿನಾಲು ಹೇಳುವ ಉದಾಹಣೆಗಳು.
ಒಬ್ಬ ತಪ್ಪು ಮಾಡುವಾಗ ನಾವು ಅವನನ್ನು ಎಚ್ಚರಿಸುವ ಸಲುವಾಗಿ ಹೇಳುತ್ತೇವೆ
ನಿನ್ನನ್ನು ಅಲ್ಲಾಹು ಪ್ರಶ್ನಿಸುವನು, ನೀನೇಕೆ ಹಾಗೆ ಮಾಡಿದೆ? ಏಕೆ ಹೀಗೆ ಮಾಡಿದೆ?
ಉದಾಹರಣೆ ಸಹಿತ ಹೇಳುತ್ತೇವೆ.
ಅದೆಲ್ಲವನ್ನು ಕುರಾನಿನಲ್ಲಿ ಹುಡುಕುವವನಿಗೆ
'ಉದಾಹರಣೆ ' ಏನೆಂದೇ ಗೊತ್ತಿಲ್ಲ ಅಷ್ಟೇ.
*ಒಂದಂತು ಸ್ಪಷ್ಟ ಮೆದುಳು ಇರುವವರಿಗೆ ಆ ಉದಾಹಣೆಯ ಸಂದೇಶ ಏನೆಂದು ತಿಳಿದಿದೆ*
*ಮತ್ತೆ ಎಲ್ಲರಿಗೂತಿಳಿಯಬೇಕೆಂದು ಇಲ್ಲ*
*ಅಥವಾತಿಳಿದ ನಂತರವೂ ಅಂಗೀಕರಿಸಬೇಕೆಂದೇನು ಇಲ್ಲ*
ಅಬೂಶಝ
No comments:
Post a Comment