Wednesday, March 14, 2018

*ಜಪಮಾಲೆ ಹಿಡಿಯುವುದು ಅನಿಸ್ಲಾಮಿಕವೇ?*

ಭಾಗ --1

✍ *ಮುನೀರ್ ಸಖಾಫಿ, ಸಾಲೆತ್ತೂರು*

ಪ್ರಪಂಚದಾದ್ಯಂತ ಮುಸ್ಲಿಮರು ದ್ಸಿಕ್ರ್'ನ ಸಂಖ್ಯೆಯನ್ನು ತಿಳಿಯಲು ತಸ್ಬೀಹ್ ಮಾಲೆ(ಜಪ ಮಾಲೆ )ಕೈಯಲ್ಲಿ ಹಿಡಿಯುತ್ತಾರೆ. ಅದನ್ನು ಅನಿಸ್ಲಾಮಿಕವಾಗಿ ಚಿತ್ರೀಕರಿಸುವ ಒಂದು ಲೇಖನವು ಓದಲು ಸಾಧ್ಯವಾಯಿತು.
ಯಾವುದೋ ಅಜ್ಞಾನಿ ವಹ್ಹಾಬಿಯ ಲೇಖನವೆಂದು ಮೇಲ್ನೋಟಕ್ಕೆ ಕಂಡು ಬಂತು.
ಜಾಗತಿಕ ಮುಸ್ಲಿಮರೆಲ್ಲರೂ ಜಪ ಮಾಲೆ ಹಿಡಿಯುವ ಮೂಲಕ  ಯಹೂದಿಗಳನ್ನು ಅನುಕರಿಸುವವರೆಂದಾಗಿದೆ ಲೇಖನದ ಸಾರಾಂಶ.
ಇದು ಆ ಲೇಖನ ಬರೆದ ವಹ್ಹಾಬಿಯ ಅಜ್ಞಾನದ ಸಂಕೇತವಾಗಿದೆ.
ಜಪ ಮಾಲೆ ಉಪಯೋಗಿಸುವುದರ ಕುರಿತು ಇಸ್ಲಾಮಿನ ನಿಲುವೇನೆಂದು ತಿಳಿಯೋಣ.
ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಕೈಗಳಿಂದ ತಸ್ಬೀಹ್ ಗಳ ಸಂಖ್ಯೆಯನ್ನು ಲೆಕ್ಕವಿಡುತ್ತಿದ್ದರು. ಸ್ವಹಾಬಿಗಳು
ಖರ್ಜೂರದ ಬೀಜದಿಂದಲೂ ಲೆಕ್ಕವಿಡುತ್ತಿದ್ದರು.
________________________________
ಇಮಾಮ್ ತುರ್ಮುದ್ಸೀ (ರ)ರವರ ವರದಿ ನೋಡಿ,
عن عطاء بن السائب عن أبيه عن عبد الله بن عمرو قال رأيت النبي صلى الله عليه وسلم يعقد التسبيح بيده قال أبو عيسى هذا حديث حسن غريب (ترمذي)
ಅಬ್ದುಲ್ಲಾಹಿ ಬಿನ್ ಅಮ್ರ್ (ರ) ಹೇಳುತ್ತಾರೆ,
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಕೈಗಳಿಂದ ತಸ್ಬೀಹ್ ಗಳ ಸಂಖ್ಯೆ ಹಿಡಿಯುವುದು ನಾನು ನೋಡಿದ್ದೇನೆ.
ತುರ್ಮುದ್ಸಿ 3486)
________________________________
ಇನ್ನೊಂದು ಹದೀಸ್ ನೋಡಿ,

 حدثنا موسى بن حزام وعبد بن حميد وغير واحد قالوا حدثنامحمد بن بشر فقال سمعت هانئ بن عثمان عن أمه حميضة بنت ياسر عن جدتها يسيرة وكانت من المهاجرات قالت: قال لنا رسول الله صلى الله عليه وسلم عليكن بالتسبيح والتهليل والتقديس واعقدن بالأنامل فإنهن مسئولات مستنطقات ولا تغفلن فتنسين الرحمة (ترمذي 3583)
ಮುಹಾಜಿರ್ ಸ್ವಹಾಬೀ  ವನಿತೆ ಯಸೀರತ್ (ರ) ಹೇಳುತ್ತಾರೆ,
ನಮ್ಮೊಂದಿಗೆ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಈ ರೀತಿ ಹೇಳಿದರು;
"ನೀವು ತಸ್ಬೀಹ್, ತಹ್'ಲೀಲ್, ತಖ್'ದೀಸ್, ನಿರ್ವಹಿಸಿರಿ. ಅದರ ಸಂಖ್ಯೆಯನ್ನು ಕೈಯಿಂದಲೂ ಹಿಡಿಯಿರಿ. ಖಂಡಿತವಾಗಿಯೂ ಕೈ ಬೆರಳುಗಳು ನಿಮಗೆ ಸಾಕ್ಷಿ ನಿಲ್ಲುವವು. ನೀವು
ನಿರ್ಲಕ್ಷ್ಯರಾಗದಿರಿ. ಆ ರೀತಿಯಾದಲ್ಲಿ ಅಲ್ಲಾಹನ ರಹ್ಮತನ್ನು ನೀವು ಮರೆತು ಹೋಗುವಿರಿ".
(ತುರ್ಮುದ್ಸೀ 3583)
________________________________
ತಸ್ಬೀಹ್ ಮತ್ತು ತಹ್'ಲೀಲ್ ಗೆ ಕೈಬೆರಳುಗಳ ಮೂಲಕ ಸಂಖ್ಯೆ ಹಿಡಿಯಬಹುದೆಂದೂ ಅದು ಅಲ್ಲಾಹನ ಬಳಿ ಸಾಕ್ಷಿ ನಿಲ್ಲುವವು ಎಂದೂ  ಮೇಲಿನ ಎರಡು ಹದೀಸಿನಿಂದ ಮನದಟ್ಟಾಯಿತು.

ಕೈ ಬೆರಳ ಮೂಲಕ ಸಂಖ್ಯೆ ಹಿಡಿದು ತಸ್ಬೀಹ್ ಹೇಳ ಕೂಡದೆಂದು ಇಲ್ಲಿ ಯಾರೂ ಹೇಳಿಲ್ಲ.
ಅದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಕಲಿಸಿ ಕೊಟ್ಟಿದ್ದಾರೆ. ಜತೆಗೆ
ಜಪ ಮಾಲೆ ಹಿಡಿಯುವುದನ್ನೂ ಕಲಿಸಿ ಕೊಟ್ಟಿದ್ದಾರೆ.

ಇಮಾಮ್ ತುರ್ಮುದ್ಸೀ (ರ)ರವರ ಹದೀಸಿನಲ್ಲಿ ಈ ರೀತಿ ಕಾಣಬಹುದು.
عن صفية، تقول:‏‏‏‏ دخل علي رسول الله صلى الله عليه وسلم وبين يدي اربعة آلاف نواة اسبح بها، ‏‏‏‏‏‏فقلت:‏‏‏‏ لقد سبحت بهذه، ‏‏‏‏‏‏فقال:‏‏‏‏ " الا اعلمك باكثر مما سبحت به؟ " فقلت:‏‏‏‏ بلى علمني، ‏‏‏‏‏‏فقال:‏‏‏‏ قولي سبحان الله عدد خلقه (ترمذي )
ಸ್ವಫಿಯ್ಯ ಬೀವಿ (ರ) ಹೇಳುತ್ತಾರೆ,
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ನನ್ನ ಬಳಿ ಬಂದಾಗ ನನ್ನ ಬಳಿ ತಸ್ಬೀಹ್ ಹೇಳಲಿಕ್ಕಾಗಿ 4000 ಖರ್ಜೂರದ ಬೀಜವನ್ನು ಇಟ್ಟಿದ್ದೆ.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಕೇಳಿದರು;
"ಇದರಿಂದೆಲ್ಲಾ ನೀನು ತಸ್ಬೀಹ್ ಹೇಳಿದೆಯಾ?,
ಅದಕ್ಕಿಂತಲೂ ಮಹತ್ವವಾದ  ಒಂದನ್ನು ನಿನಗೆ ನಾನು ಹೇಳಿ ಕೊಡಲೇ?"
ಆಗ ನಾನು ಹೇಳಿದೆ;
ಸರಿ ಹೇಳಿ ಕೊಡಿ,
ಆಗ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು;
"ನೀನು ಈ ರೀತಿ ಹೇಳು,
(ಸುಬ್'ಹಾನಲ್ಲಾಹಿ ಅದದ ಖಲ್'ಖಿಹೀ)
(ತುರ್ಮುದ್ಸೀ 3554)
________________________________
ತಸ್ಬೀಹ್ ಹೇಳಲಿಕ್ಕಾಗಿ 4000 ಖರ್ಜೂರ ಬೀಜವನ್ನು ತೆಗೆದಿಟ್ಟಿದ್ದ ಸ್ವಫಿಯ್ಯ ಬೀವಿ (ರ)ರವರ ಕ್ರಮವನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ವಿರೋಧಿಸಿಲ್ಲ.
ಅದು ಯಹೂದಿ /ನಸ್ರಾನಿಗಳ ಚರ್ಯೆಯಾಗಿದ್ದರೆ ಸ್ವಫಿಯ್ಯ ಬೀವಿ ಒಮ್ಮೆಯೂ ಆ ರೀತಿ ಮಾಡುತ್ತಿರಲಿಲ್ಲ.ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಅದನ್ನು ಅಂಗೀಕರಿಸುತ್ತಿರಲಿಲ್ಲ.

ಕೈ ಬೆರಳುಗಳ ಮೂಲಕ ಮತ್ತು ಖರ್ಜೂರಗಳ ಬೀಜಗಳ ಮೂಲಕ ತಸ್ಬೀಹ್ ನ ಸಂಖ್ಯೆ ಹಿಡಿಯಬಹುದೆಂದು ಈ ಹೇಳಿದರಿಂದ ಸ್ಪಷ್ಟವಾಯಿತು.


_*ಇನ್ನಷ್ಟು ಮುಂದಿನ ಭಾಗದಲ್ಲಿ ಇಂಶಾ ಅಲ್ಲಾಹ್.*_

No comments:

Post a Comment