Friday, July 6, 2018

*ಮಕ್ಕಾ ಮದೀನಾದಲ್ಲಿಯೂ ಅಗರ್ಬತ್ತಿ ಲೋಬಾನ!!*

ನನ್ನ ಚಿಕ್ಕಂದಿನಲ್ಲಿ ಮನೆಯಲ್ಲಿ ಆಂಡ್ ಮೌಲೂದ್ ನಡೆಯುವಾಗ ಮಣ್ಣಿನ ಕೆಂಪು ಬಣ್ಣದ ಲೋಬಾನ ದಲ್ಲಿ ಬೆಂಕಿಯ ಜ್ವಾಲೆಗೆ ಒಂದು ತರ ಹುಡಿ ಹಾಕಿದಾಗ ದೊಪ್ಪನೆ ಹೊಗೆ ಬರುತ್ತಿತ್ತು.ಆ ಹೊಗೆಗೆ ಸ್ಪಷಲ್ ಪರಿಮಳ ಕೂಡಾ ಇತ್ತು ಅದನ್ನು ಹೊತ್ತು ನನ್ನ ತಂದೆಯವರು ಮಜ್ಲಿಸ್ ನ ಎಲ್ಲಾ ಕಡೆ ನಡೆದು ಕೊಂಡು ಹೋಗುತ್ತಾ ಇದ್ದರು ಅದರ ಒಂದು ಸೈಡ್ ನಲ್ಲಿ ಹುಡಿ ಕೂಡಾ ಇತ್ತು ಕೆಲವರು ಅದರಿಂದ ಹುಡಿ ತೆಗೆದು ಬೆಂಕಿಯ ಕಟ್ಟೆಗೆ ಹಾಕುತ್ತಿದ್ದರು.ಆವಾಗ ಅದರಿಂದ ಇನ್ನಷ್ಟು ಹೊಗೆ ಬಂದು ಮಜ್ಲಿಸ್ ಮಾತ್ರವಲ್ಲ ನಮ್ಮ ಮನೆಗೇ ವಿಶೇಷ ಪರಿಮಳ ಸಿಗುತ್ತಿತ್ತು. ಆ ದಾರಿಯಾಗಿ ಹೋಗುವ ಎಲ್ಲರ ಮೂಗಿಗೂ ಇದರ ಪರಿಮಳ ಬಡಿಯುವುದರಿಂದಲೇ ಮನೆಯಲ್ಲಿ ಏನೋ ಸ್ಪಷಲ್ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಯುತ್ತಿತ್ತು.
ದರ್ಗಾಗಳಲ್ಲೂ ಅಗರ್ ಬತ್ತಿ ಯೊಂದಿಗೆ *ಲೋಬಾನ* ಕೂಡಾ ಇರುತ್ತದೆ.
ಆದರೆ ಈ ಸಳಪಿ ಎಂಬ ಮುಸೀಬತ್ ನಮ್ಮ ಊರಿಗೆ ಬಂದಾಗ ಅವರು ಇದನ್ನು ಬಿದ್ಅತ್, ಕಾಟಾಚಾರ ,ಅಗ್ನಿಪೂಜೆ ಎಂದೆಲ್ಲಾ ವಿಮರ್ಶಿಸಲು ಆರಂಭಿಸಿದರು.ನನಗೂ ಅದು ಸರಿಯೆಂದು ಕಂಡಿತು.ಹಾಗಾಗಿ ನಾನು ಸೀದಾ ಉಸ್ತಾದರ ಬಳಿ ಇದರ ಕುರಿತು ಕೇಳಿದೆ.
ಅವರು ಮಾರ್ಮಿಕವಾಗಿ ಉತ್ತರಿಸಿದ್ದು ಹೀಗೆ...
*"ಲೋಬಾನ ಅದು ಪರಿಮಳಕ್ಕಾಗಿ ಹರಡುತ್ತಾರೆ ಅಷ್ಟೇ. ಪರಿಮಳ ಇದ್ದಲ್ಲಿ ರಹ್ಮತ್ ನ ಮಲಕುಗಳ ಸಾನಿಧ್ಯ ಇರುತ್ತದೆ ಅಗ್ನಿ ಪೂಜೆ ಅದರಲ್ಲಿ ಇಲ್ಲ ಸಳಪಿಗಳಿಗೆ ಎಲ್ಲವೂ ಶಿರ್ಕ್ ತಾನೇ ಅವರ ಅವಸ್ಥೆ ಹೇಳಿ ಫಲವಿಲ್ಲ ಮಾರಿಗಳು..."*
ಇದೀಗ ಮಕ್ಕಾ ಮದೀನಾ ಸಹಿತ ಎಲ್ಲಾ ಕಡೆ ಈ ಲೋಬಾನ ಸಂಪ್ರದಾಯ ಇದೆ.ಅವರಿಗೆ ಯಾರಿಗೂ ಇದು ಅಗ್ನಿ ಪೂಜೆಯಾಗಿ ಕಾಣಲಿಲ್ಲ...
*ಮಕ್ಕಾ ಮದೀನಾ ಬದರ್ ಎಲ್ಲಾ ಹೋಗಿ ಕಂಡದ್ದನ್ನು ಕಂಡ ಹಾಗೆ ಬರೆದವರಿಗೆ ಲೋಬಾನ ಸಂಪ್ರದಾಯ ಕಾಣದೆ ಹೋದದ್ದು ವಿಪರ್ಯಾಸ ತಾನೇ.!!?*

🌑ಮಕ್ಕಾ ಮದೀನಾದಲ್ಲಿ *ಲೋಬಾನ* ತೆಗೆದು ಸುತ್ತುತ್ತಿರುವವರ ಫೋಟೋ 👆🏼
🌹🇸🇱 ಎವ್ರಿಡೇ ಸುನ್ನೀ

No comments:

Post a Comment