Friday, June 8, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 4⃣5⃣
          ಕೊನೆಯ ಭಾಗ
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

ಕುರ್ಆನಿನ ಸೂಕ್ತವೊಂದನ್ನು ಕರ್ಣಾನಂದಕರವಾಗಿ ಪಠಿಸುತ್ತಾ ಸಯ್ಯದುನಾ ಝೈನುಲ್ ಆಬಿದೀನ್ (ರ)ರವರು ಆತ್ಮಸ್ಥೈರ್ಯದಿಂದ ಯಝೀದ್'ನೊಂದಿಗೆ ಹೇಳಿದರು.. ⬇

ಸೃಷ್ಟಿಕರ್ತನಾದ ಅಲ್ಲಾಹನ ವಿಧಿಲಿಖಿತ ಏನಿತ್ತೇೂ ಅದು ಸಂಭವಿಸಿದೆಯೇ ವಿನಃ ಅವನ ಕಲ್ಪನೆಗಿಂತ ಆಚೆಯದೇನೂ ಸಂಭವಿಸಿಲ್ಲ. ನಷ್ಟ ಸಂಭವಿಸಿದಾಗ ದುಃಖಿಸದೆ, ಸಂಪತ್ತು ಮತ್ತು ಸವಲತ್ತುಗಳು ಲಭಿಸಿದಾಗ ಸಂತೇೂಷಪಡದೆ ಅಲ್ಲಾಹನ ವಿಧಿಯನ್ನು ಸಹನೆ ಮತ್ತು ಸಂಯಮದಿಂದ ಸಹಿಸಬೇಕೆನ್ನುವುದು ಇಸ್ಲಾಮಿನ ನಿಯಮ. ಆದರೆ ದುರಹಂಕಾರಿಗಳನ್ನೆಂದೂ ಅಲ್ಲಾಹನು ಇಷ್ಟಪಡಲಾರನೆಂಬುದು ಅಧಿಕಾರದ ಅಮಲಿನಲ್ಲಿ ತೇಲುತ್ತಿರುವ ನಿನಗೂ ನೆನಪಿರಲಿ ಎಂದು ತಮ್ಮ ಕಂಚಿನ ಕಂಠದಿಂದ ಗುಡುಗಿದಾಗ ಇಡೀ ಕುಟುಂಬವನ್ನೇ ಕಳೆದು ಕೊಂಡರೂ ಸ್ವಲ್ಪವೂ ವಿಚಲಿತರಾಗದ *ಸಯ್ಯದುನಾ ಅಲಿ ಝೈನುಲ್ ಆಬಿದೀನ್ (ರ)* ರವರ ಆತ್ಮಸ್ಥೈರ್ಯವನ್ನು ಕಂಡು ಸ್ವತಃ ಯಝೀದನೇ ಬೆಚ್ಚಿಬಿದ್ದನೆನ್ನುತ್ತದೆ ಚರಿತ್ರೆ.

*ನಂತರ ಯಝೀದನು ತನ್ನ ಸೈನಿಕರ ಬೆಂಗಾವಲಿನಲ್ಲಿ ಸಯ್ಯದುನಾ ಝೈನುಲ್ ಆಬಿದೀನ್ (ರ) ಮತ್ತು ಯುದ್ಧದಲ್ಲಿ ಬದುಕುಳಿದವರನ್ನು ಸಕಲ ಗೌರವಗಳೊಂದಿಗೆ ಮದೀನಕ್ಕೆ ಕಳುಹಿಸಿಕೊಟ್ಟನು.*

ಕೂಫ ನಿವಾಸಿಗಳು ತಮ್ಮ ನೆರವಿಗೆಂದು ಆಹ್ವಾನಿಸಿ ಯಝೀದ್'ನ ಕಿಂಕರ ಉಬೈದ್'ನ ಭಯದಿಂದ ಕೈಬಿಟ್ಟರೂ ಮದೀನಾ ನಿವಾಸಿಗಳು ಮಾತ್ರ ಅಹ್ಲ್'ಬೈತಿನ ಕಣ್ಮಣಿಯನ್ನು ಆಧರದಿಂದ ಬರ ಮಾಡಿಕೊಂಡು ಮಾಣಿಕ್ಯ ಮುತ್ತಿನಂತೆ ಜತನದಿಂದ ಸಂರಕ್ಷಿಸಿ ಸತ್ಕರಿಸುತ್ತಾ ಹಝ್ರತ್ ಹುಸೈನ್ (ರ)ರನ್ನು ಕಳೆದುಕೊಂಡ ದುಃಖವನ್ನು ಝೈನುಲ್ ಆಬಿದೀನ್ (ರ)ರವರ ಸೇವೆಯಲ್ಲಿ ಮರೆತರು.

ಮದೀನ ಎಂದರೆ ಹಾಗೆ.. ಅಥಿತಿ ಸತ್ಕಾರದಲ್ಲಿ ಮದೀನಾ ನಿವಾಸಿಗಳು ಎಂದೆಂದಿಗೂ ಎತ್ತಿದ ಕೈ.

*ಅಂದು ಅಲ್ಲಾಹನ ಪ್ರಪ್ರಥಮ ಸೃಷ್ಟಿಯೂ ಸೃಷ್ಟಿಗಳಲ್ಲೇ ಅತ್ಯುತ್ತಮರೂ ಆದ ಸಯ್ಯದುನಾ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರನ್ನು ಹುಟ್ಟಿ ಬೆಳೆದ ನಾಡಾದ ಮಕ್ಕದ ನಿವಾಸಿಗಳೊಂದಿಗೆ ರಕ್ತ ಸಂಬಂಧಿಗಳೂ ಸಹ ಮಿತಿಮೀರಿದ ಕಿರುಕುಳ ನೀಡಿ ಮದೀನಕ್ಕೆ ವಲಸೆ ಹೇೂಗುವಂತೆ ಮಾಡಿದ್ದರೂ, ಮದೀನ ನಿವಾಸಿಗಳು "ತ್ವಾಲಾ ಅಲ್ ಬದ್'ರೂ ಅಲೈನಾ..." ಎಂದು ಹಾಡುತ್ತಾ ಅಲ್ಲಾಹನ ರಸೂಲ್ ﷺ ರನ್ನು ಸ್ವಾಗತಿಸಿ ತಮ್ಮ ಜೀವಕ್ಕಿಂತ ಮಿಗಿಲಾಗಿ ಪ್ರೀತಿಸಿ ಸಂಪೂರ್ಣ ಸಂರಕ್ಷಣೆ ನೀಡಿ ಸತ್ಕರಿಸಿದ ನಾಡು.*

_ಉಹ್ದ್ ಯುದ್ಧದಲ್ಲಿ ಶತ್ರುಗಳೆಡೆಯಿಂದ ಅಲ್ಲಾಹನ ರಸೂಲ್ ﷺ ರತ್ತ ತೂರಿ ಬರುತ್ತಿದ್ದ ಬಾಣಗಳಿಗೆ ತಮ್ಮ ಎದೆಯೊಡ್ಡಿ ಅಲ್ಲಾಹನ ಹಬೀಬ್ ﷺ ರಿಗೆ ತಮ್ಮ ಕೊನೆಯುಸಿರಿನ ತನಕವೂ ಸಂರಕ್ಷಣೆ ನೀಡುತ್ತಲೇ ಶಹೀದಾದ  *ಸಯ್ಯದುನಾ ಅಬೂ ತಲ್ಹತುಲ್ ಅನ್ಸಾರಿ (ರ)* ರಂತಹ ಶುಹದಾಗಳು ಹುಟ್ಟಿ ಬೆಳೆದ ಆ ನಾಡಿನ ಸಹೃದಯಿಗಳು ಅಲ್ಲಾಹನ ರಸೂಲ್ ﷺರ ಪೌತ್ರರನ್ನು ಕಣ್ಣರೆಪ್ಪೆಯಂತೆ ಸಂರಕ್ಷಿಸಿದರು._

*ಇಂದು ಜಗತ್ತಿನಾದ್ಯಂತವಿರುವ ಸಯ್ಯದ್ ಕುಟುಂಬದ ಪ್ರಮುಖ ಕೊಂಡಿಯಾಗಿದ್ದಾರೆ ಸಯ್ಯದುನಾ ಅಲಿ ಝೈನುಲ್ ಆಬಿದೀನ್ (ರ)ರವರು. ಅವರ ಮೂಲಕ ಅಹ್ಲ್'ಬೈತಿನ ವಂಶ ಪರಂಪರೆಯನ್ನು ಮುಂದುವರಿಸಲು ಅಲ್ಲಾಹನು ತೀರ್ಮಾನಿಸಿದ ಕಾರಣದಿಂದಾಗಿರಬಹುದು ಅಂದು 'ಕರ್ಬಲಾ ಯುದ್ಧ'ದ ಸಮಯದಲ್ಲಿ ಆ ಮಹಾನರು ಜ್ವರ ಬಾಧಿತರಾದುದು. ಅಲ್ಲಾಹು ಅಹ್'ಲಮ್.*

                *_ಮುಗಿಯಿತು_*
☔☔☔☔☔☔☔☔☔

ಪ್ರಿಯ ಓದುಗರೇ, ಅಹ್ಲ್'ಬೈತಿನ ಕಣ್ಮಣಿಗಳು ಇರಾಖಿನ ಕೂಫ ಎಂಬಲ್ಲಿ ಅನುಭವಿಸಿದ ವರ್ಣನಾತೀತವೂ ವೇದನಾಜನಕವೂ ಮತ್ತು ಇಸ್ಲಾಮಿನ ಇತಿಹಾಸದಲ್ಲೇ ಮರೆಯಲಸಾಧ್ಯವೂ ಕರುಣಾಜನಕವೂ ಆದ ಸಾವಿರ ಕಂತು ಬರೆದರೂ ಮುಗಿಯದ
ಕರ್ಬಲಾ ಎಂಬ ಯುದ್ಧ ಚರಿತ್ರೆಯನ್ನು *ಕಣ್ಣೀರ ಕಡಲಾದ ಕರ್ಬಲಾ* ಎಂಬ ಶೀರ್ಷಿಕೆಯಡಿ ಕೇವಲ ನಲವತ್ತೈದು ಕಂತುಗಳಲ್ಲಿ ಕರುಣಾನಿಧಿಯಾದ ಅಲ್ಲಾಹನ ದಯಾನುಗ್ರಹದಿಂದ
ಚುಟುಕಾಗಿ ಬರೆದು ನಿಮ್ಮ ಮುಂದೆ ಸಮರ್ಪಿಸಿದ್ದೇನೆ.
       
*ನಮ್ಮ ಕಣ್ಮುಂದಿನಿಂದ ಮರೆಯಾದರೂ ಅಗೇೂಚರವಾದ ಲೇೂಕದಲ್ಲಿ ಜೀವಿಸುತ್ತಾ ಸೃಷ್ಟಿಕರ್ತನಾದ ಅಲ್ಲಾಹನು ತಲುಪಿಸುವ ಆಹಾರಗಳನ್ನು ಸೇವಿಸುತ್ತಾ ಅಜರಾಮರರಾಗಿರುವ ಆ ಶುಹದಾಗಳ ಹೆಸರಿನಲ್ಲಿ ಮಾನ್ಯ ಓದುಗರೆಲ್ಲರೂ ಒಂದೊಂದು ಫಾತಿಹವನ್ನಾದರೂ ಓದಿ ಹದಿಯಾ 🤚 ಮಾಡುವುದರೊಂದಿಗೆ ಈ ಚರಿತ್ರೆಯನ್ನು ನಿಮ್ಮ ಮಡಿಲಿಗರ್ಪಿಸಲು ನೆರವಾದ ಸಹೃದಯಿಗಳೆಲ್ಲರಿಗೂ ಕರುಣಾನಿಧಿಯಾದ ಅಲ್ಲಾಹನಲ್ಲಿ ಪ್ರಾರ್ಥಿಸಬೇಕಾಗಿ ವಿನಂತಿ.*

ಚುಟುಕಾಗಿಯಾದರೂ ಅಲ್ಲಾಹನ ಪ್ರಪ್ರಥಮ ಸೃಷ್ಟಿಯ ಸರಿಸಾಟಿಯಿಲ್ಲದ ಕುಟುಂಬವಾದ ಅಹ್ಲ್'ಬೈತಿನ ಕಣ್ಮಣಿಗಳ ತ್ಯಾಗ ಮತ್ತು ಬಲಿದಾನಗಳನ್ನು ಓದಿ ತಿಳಿಯಲು ಅಲ್ಲಾಹನು ತೌಫೀಖ್ ನೀಡಿದಂತೆ ನಾಳೆ ಪರಲೇೂಕದಲ್ಲಿ ಆ ಶುಹದಾಗಳಿಗೆ ಸಲಾಮ್ ಹೇಳಿ ಕಣ್ತುಂಬಾ ಕಂಡು ಅವರೊಂದಿಗೆ ಸ್ವರ್ಗ ಪ್ರವೇಶಿಸುವ ಸೌಭಾಗ್ಯಶಾಲಿಗಳ ಸಾಲಿನಲ್ಲಿ ನಮ್ಮೆಲ್ಲರನ್ನೂ ಸೇರಿಸಿ ಅನುಗ್ರಹಿಸಲಿ ಆಮೀನ್.

ಅಲ್ಲಾಹನು ತೌಫೀಖ್ ನೀಡಿದರೆ "ಅಲಿ ಝೈನುಲ್ ಆಬಿದೀನ್ (ರ)" ರವರ ಚರಿತ್ರೆಯನ್ನು ಚುಟುಕಾಗಿ ಬರೆದು ಸದ್ಯದಲ್ಲೇ ನಿಮ್ಮ ಮುಂದಿಡುತ್ತೇನೆ.
ಇನ್ಷಾ ಅಲ್ಲಾಹ್...

ಅಸ್ಸಲಾಂ ಅಲೈಕುಂ..
ವ ರಹ್ಮತುಲ್ಲಾಹ್
🛡🛡🛡🛡🛡🛡🛡🛡🛡

No comments:

Post a Comment