Saturday, January 4, 2020

ಶಾಫಿ ಸಅದಿ ಉಸ್ತಾದ್, ವಕ್ಫ್ ಸದಸ್ಯರು.

ನಾನು ನಿಮ್ಮಲ್ಲಿ ಸಣ್ಣ ಪ್ರಶ್ನೆ ಕೇಳುತ್ತೇನೆ,

ಕರ್ನಾಟಕವನ್ನು ಅದೆಷ್ಟೋ ಪಕ್ಷಗಳು ಆಳಿದವು. ಆವಾಗಲೆಲ್ಲಾ ನಮಗೊಂದು ವಕ್ಫ್ ಬೋರ್ಡ್ ಇದೆ, ಅದರಿಂದ ಹಲವಾರು ಅನುದಾನಗಳು ನಮ್ಮ ಮಸೀದಿಗಳಿಗೆ ಧಾರ್ಮಿಕ ರಂಗಕ್ಕೆ ಸಿಗುತ್ತವೆ ಎಂಬ ನೋಲಜ್ ಯಾರ ಬಳಿಯಾದರೂ ಇತ್ತಾ? ಯಾವಾಗ ಶಾಫಿ ಸ‌ಅದಿ ಎಂಬ ಒಬ್ಬ ಉಲಮಾ ನಾಯಕ ವಕ್ಫ್ ಬೋರ್ಡ್ ಸದಸ್ಯರಾಗಿ, ಡೈರಕ್ಟರಾಗಿ ಆಯ್ಕೆಯಾದರೋ ಅಂದಿನಿಂದ ನಮ್ಮ ಕರಾವಳಿಯ ಸಾಮಾನ್ಯ ಜನರಿಗೂ ವಕ್ಫ್ ಬೋರ್ಡ್ ನ ಬಗ್ಗೆ ತಿಳುವಳಿಕೆ ಬಂತು. ಅಷ್ಟರ ಮಟ್ಟಿಗೆ ಆ ಬೋರ್ಡನ್ನು ಶಾಫಿ ಸ‌ಅದಿ ಉಸ್ತಾದರು ಎಲ್ಲರಿಗೂ ಪರಿಚಯ ಪಡಿಸಿದರು.
ಅದಕ್ಕಿಂತ ಮುಂಚೆ ಯಾರಿಗು ಕೂಡಾ ವಕ್ಫ್ ಬೋರ್ಡ್ ಬೇಡವಾಗಿತ್ತು.
ಶಾಫಿ ಸ‌ಅದಿ ವಕ್ಫ್ ಬೋರ್ಡ್ ಗೆ ಎಂಟ್ರಿ ಕೊಡುವುದಕ್ಕಿಂತ ಮುಂಚೆ ಅದು ತಬ್ಲೀಗ್, ಶಿಯಾ, ಅಹ್ಮದಿಗಳ ಕೈಯಲ್ಲಿ ಭಧ್ರವಾಗಿತ್ತು. ಬಹು ಸಂಖ್ಯಾತ ಸುನ್ನಿಗಳನ್ನು ಕಡೆಗಣಿಸಲಾಗಿತ್ತು. ಚಿಕ್ಕಾಸು ಅನುದಾನಗಳು ಸುನ್ನೀ ಮಸೀದಿಗಳಿಗೆ ಬಿಡುಗಡೆಯಾಗುತ್ತಿರಲಿಲ್ಲ.ಎಲ್ಲಾ ಬಿಟ್ಟು ಮಸೀದಿಯನ್ನು ವಕಫ್ ಬೋರ್ಡಲ್ಲಿ ನೋಂದಣಿ ಮಾಡುವ ವಿಚಾರವೂ ತಿಳಿದಿರಲಿಲ್ಲ. ಶಾಫಿ ಸ‌ಅದಿ ಎಂಟ್ರಿಯಾದ ಕೂಡಲೇ ವಕ್ಫ್ ಬೋರ್ಡ್ ಪ್ರಚಾರಕ್ಕೆ ಬಂತು, ಅದರಲ್ಲಿ ನಿಯ್ಯತ್ತಿನಿಂದ ಪಕ್ಷ, ಪಂಗಡ, ಗ್ರೂಪಿಸಂಗೆ ಅತೀತವಾಗಿ ಶಾಫಿ ಸ‌ಅದಿ ಉಸ್ತಾದ್ ರ ಸೇವೆ ಆರಂಭಿಸಿದರು. ಇದೀಗ ಪುನಃ ಸ‌ಅದಿ ಉಸ್ತಾದರನ್ನು ವಕ್ಫ್ ಬೋರ್ಡ್ ಕರೆಸಿಕೊಂಡಿದೆ.
ಅವರ ಪರೋಪಕಾರ ಮತ್ತು ಸಮರ್ಪಣಾ ಕರ್ಮದ ಫಲವೇ ಅದಕ್ಕೆ ಕಾರಣ.
ಅರ್ಹವಾದ ಇಲಾಖೆಗೆ ಅರ್ಹವಾದ ಆಲಿಂ ಒಬ್ಬರು ಪುನಃ ಆಯ್ಕೆಯಾಗಿದ್ದಾರೆ. ಅವರೊಂದು ಸಂಘಟನೆಯ ನಾಯಕರಾಗಿರಬಹುದು, ಆದರೆ ಅವರ ಸೇವೆ ಸಂಘಟನಾತೀತ, ನ್ಯಾಯಪರ, ಕ್ರಮಬದ್ಧವೆಂದು ಅವರನ್ನು ಹತ್ತಿರದಿಂದ ಬಲ್ಲವರ ಅನುಭವ. ಶಾಂತಚಿತ್ತತೆಯ ನಗುಮುಖದ ಒಡನಾಟ, ಪಕ್ವತೆಯ ಪ್ರಭುಧ್ಧ ನಡೆ ಎಲ್ಲರಿಗೂ ಪ್ರಿಯ.
ಎಲ್ಲರಿಗೂ ಇರುವಂತೆ ವಿರೋದಿಗಳು ಅವರಿಗೂ ಇದೆ. ಅದನ್ನೆಲ್ಲಾ ಗಣನೆಗೆ ತೆಗೆಯುವ ಜಾಯಮಾನವೇ ಅವರಿಗಿಲ್ಲ. ವಿರೋಧ ಟೀಕೆ, ವಿಮರ್ಶೆಗಳನ್ನೆಲ್ಲಾ ಪಕ್ವತೆಯಿಂದ ಮೆಟ್ಟಿ ನಿಂತು ತನ್ನ ನ್ಯಾಯಯುತವಾದ ಗುರಿ ಸಾಧಿಸುವ ಅವರ ಅಚಲವಾದ ನಿರ್ಧಾರಗಳು ಬಂಡೆಗಲ್ಲಿನಂತೆ ಗಟ್ಟಿಯೇ ಸರಿ.
ಇಂಡಿಯನ್ ಗ್ರಾಂಡ್ ಮುಫ್ತಿ ಶೈಖುನಾ ಎ.ಪಿ. ಉಸ್ತಾದ್ ಹೇಳಿದಂತೆ NRC ವಿರುದ್ಧ ಹೋರಾಟ ಅತಿ ಶಕ್ತಿಯುತವಾಗಿ ಮುನ್ನೇರಿಸುತ್ತಾ, ಜೊತೆಗೆ ಸುನ್ನತ್ ಜಮಾಅತ್ ಗಳ ಇಝ್ಝತ್ ಗಾಗಿ ಕಾರ್ಯಚರಿಸಬೇಕು. ಅದಕ್ಕೆ ಮಂದಗತಿ ಬರಬಾರದು. ಶಾಫಿ ಸ‌ಅದಿ ತನಗೆ ಸಿಕ್ಕಿದ ಅವಕಾಶವನ್ನು ಚೆಲ್ಲಿದ್ದರೆ ಅದು ಇನ್ನಿತರ ಅನರ್ಹರ ಪಾಲಿಗೆ ಹೋಗುತ್ತಿತ್ತು. ಅದು ಅಪಾಯವೇ ಸರಿ.
ನಮ್ಮ ಉಲಮಾಗಳು ನಮ್ಮ ನಾಯಕತ್ವ.
ಯಾವಾಗ ಯಾವ ರೀತಿ ನಡೆದುಕೊಳ್ಳಬೇಕೆಂಬ ಪರಿಪೂರ್ಣ ಜ್ಞಾನ ಅವರಿಗಿದೆ.
ನೇತೃತ್ವದ ಹಿಂದೆ ಗಟ್ಟಿಯಾಗಿ ನೆಲೆಯೂರುವ.
ಅಬೂಶಝ

No comments:

Post a Comment