*_ಮರ್ಕಝ್ ನಲವತ್ತ ಮೂರನೇ ವಾರ್ಷಿಕ ಸಮಾವೇಶದ ಪೂರ್ವಭಾವಿ ಸಭೆ_*
🔹🔹🔹🔹🔹🔹🔹
✍ ಗಫೂರ್ ಬಾಯಾರ್
〰〰〰〰〰〰〰
*"#ಸುಸ್ಥಿರ_ಸಮಾಜ, #ಸುಭದ್ರ_ರಾಷ್ಟ್ರ"*
_'സുസ്ഥിര സമൂഹം സുഭദ്ര രാഷ്ട്രം'_
' ~Sustainable Society, Strong Nation'~
*ಮರ್ಕಝ್ 43ನೇ ವಾರ್ಷಿಕ ಸಮ್ಮೇಳನ ಎಪ್ರಿಲ್ 09, 10, 11, 12*
🍂🍂🍂🍂🍂🍂🍂
_ಮರ್ಕಝ್ ನಲ್ವತ್ತಮೂರನೆಯ ವಾರ್ಷಿಕ ಸಮ್ಮೇಳನವು 2020ರ ಏಪ್ರಿಲ್ 09ರಿಂದ 12ರ ವರೆಗೆ ನಡೆಯಲಿದ್ದು ಇದರ ಪೂರ್ವಭಾವೀ ಸಭೆಯು ಇತ್ತೀಚೆಗೆ ಕೇರಳದಲ್ಲಿ ನಡೆಯಿತು._
_ಸಭೆಯನ್ನುದ್ದೇಶಿಸಿ ಮಾತನಾಡಿದ ಮರ್ಕಝ್ ನ ಕುಲಪತಿಯಾದ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಉಸ್ತಾದರು, ಈ ಸಮ್ಮೇಳನದಲ್ಲಿ ವಾರ್ಷಿಕ ಸನದುದಾನ ನಡೆಯಲಿದ್ದು ಈ ಬಾರಿಯ ಸನದುದಾನವು ಅಂತಾರಾಷ್ಟ್ರೀಯ ಇಸ್ಲಾಮಿಕ್ ವಿದ್ವಾಂಸರುಗಳ ಸಮ್ಮುಖದಲ್ಲಿ ನಡೆಯಲಿದೆ ಎಂದರು._
_ಮುಂದುವರೆದು ಮಾತನಾಡಿದ ಅವರು, ಮುಸ್ಲಿಂ ಜಗತ್ತು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳವ ಬಗೆಗಿನ ಚರ್ಚೆಗಳು ಸಮ್ಮೇಳನದಲ್ಲಿ ನಡೆಯಲಿದೆ ಎಂದು ಹೇಳಿದರು._
_ಈ ಸಮ್ಮೇಳನದಲ್ಲಿ 60ಕ್ಕಿಂತ ಹೆಚ್ಚು ದೇಶಗಳ ಪ್ರಮುಖ ವಿದ್ವಾಂಸರು, ಬುದ್ಧಿಜೀವಿಗಳು, ರಾಜಕೀಯ ಮುಖಂಡರು ರಾಜತಾಂತ್ರಿಕರು ಮತ್ತು ಸಮಾಜ ಸೇವಕರು ಭಾಗವಹಿಸಲಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು._
_ಸಮ್ಮೇಳನದ ಅಂಗವಾಗಿ ಭಾರತದ ಪ್ರಮುಖ ಮಹಾನಗರಗಳಲ್ಲಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಮ್ಮೇಳನಗಳನ್ನು ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು._
_ಮುಂದಿನ ಆರು ತಿಂಗಳಲ್ಲಿ ನಡೆಯಲಿರುವ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ ಹಾಗು ಸಾರ್ವಜನಿಕ ಸೇವೆಗಳ ಕುರಿತು ರೂಪರೇಖೆಗಳನ್ನು ಸಿದ್ಧಪಡಿಸುವ ಬಗ್ಗೆಯೂ ಚರ್ಚಿಸಲಾಯಿತು._
_ಈ ಪೂರ್ವಭಾವೀ ಸಭೆಯ ಅಧ್ಯಕ್ಷತೆಯನ್ನು ಮರ್ಕಝ್ ನಲವತ್ತಮೂರನೇ ವಾರ್ಷಿಕ ಸಮಾವೇಶದ ಸ್ವಾಗತಾ ಸಮಿತಿಯ ಅಧ್ಯಕ್ಷರೂ ಆದ ಸಯ್ಯಿದ್ ಪಿ. ಕೆ. ಎಸ್ ತಂಙಳ್ ತಲಪ್ಪಾರ ವಹಿಸಿದ್ದರು._
_ಸಭೆಯಲ್ಲಿ ಸಿ. ಫೈಝಿ ಉಸ್ತಾದ್ ಸೇರಿದಂತೆ ಹಲವಾರು ಸಯ್ಯಿದರುಗಳು, ಉಸ್ತಾದರುಗಳು, ಉಮರಾಗಳು ಮತ್ತಿತರರು ಭಾಗವಹಿಸಿದ್ದರು._
🍁🍁🍁🍁🍁🍁🍁
*"ಸುಸ್ಥಿರ ಸಮಾಜ, ಸುಭದ್ರ ರಾಷ್ಟ್ರ"*
*ಮರ್ಕಝ್ 43ನೇ ವಾರ್ಷಿಕ ಸಮ್ಮೇಳನ ಎಪ್ರಿಲ್ 09, 10, 11 , 12*
💧💧💧💧💧💧
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Thursday, January 2, 2020
Subscribe to:
Post Comments (Atom)
No comments:
Post a Comment