*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
ಭಾಗ --13
📝 _ಮುನೀರ್ ಸಖಾಫಿ ಸಾಲೆತ್ತೂರು_
_*ಸೂತ್ರ 12:*_
*ಸಾತ್ವಿಕರನ್ನು ಮನೆಗೆ ಕರೆಸಿ*
ಭೂಮಿಯ ಮೇಲೆ ಅಲ್ಲಾಹನು ಸಾವಿರಾರು ಜೀವಿಗಳನ್ನು ಸೃಷ್ಥಿಸಿದ್ದಾನೆ.ಅವುಗಳ ಪೈಕಿ ಶ್ರೇಷ್ಠತೆಯ ಜೀವಿ ಮನುಷ್ಯನಾಗಿದ್ದಾನೆ.
ಮನುಷ್ಯರೆಲ್ಲರೂ ಒಂದೇ ರೀತಿಯಲ್ಲಿ ಅಲ್ಲ.
ಕೆಲವರನ್ನು ಅಲ್ಲಾಹನು ಉನ್ನತಗೊಳಿಸಿದ್ದಾನೆ.ಪ್ರವಾದಿಗಳ ಪೈಕಿ ಉಲುಲ್ ಅಝ್ಮ್,ಮುರ್ಸಲ್ ಗಳು,ಅಂಬಿಯಾಗಲು ವ್ಯತ್ಯಸ್ಥ ಸ್ಥಾನದಲ್ಲಿರುವವರಾಗಿದ್ದಾರೆ.ಸರ್ವ ಸೃಷ್ಟಿಗಳ ಪೈಕಿ ಉನ್ನತರು ಹಝ್ರತ್ ಪೈಗಂಬರ್ ಸಲ್ಲಲಾಹು ಅಲೈಹಿವಸಲ್ಲಮರಾಗಿದ್ದಾರೆ.
ಅವರ ಕುಟುಂಬಸ್ಥರಾದ ಅಹ್ಲು ಬೈತ್ ನಲ್ಲಿ ಒಳಪಟ್ಟವರು ಮಹೋನ್ನತಾರಾಗಿದ್ದಾರೆ.
(ಅಹ್ಲು ಬೈತ್ ನ ಬಗ್ಗೆ ಸವಿಸ್ತಾರವಾಗಿ ನಾನು ಲೇಖನ ಬರೆದಿದ್ದು,ಹೆಚ್ಚಿನ ವಿವವರಗಳಿಗಾಗಿ ಅದನ್ನು ಓದಿರಿ)
ಔಲಿಯಾಗಳು ಕೂಡಾ ಶ್ರೇಷ್ಠ ವ್ಯಕ್ತಿಗಳಾಗಿದ್ದಾರೆ.
ಅವರು ಅಲ್ಲಾಹನ ಬಳಿ ಅತ್ಯಂತ ಸ್ಥಾನವಿರುವವರೂ ಆವರ ಪ್ರಾರ್ಥನೆಗೆ ವಿಶೇಷ ಉತ್ತರಗಳು ಲಭಿಸುತ್ತದೆ.
ಆದುದರಿಂದ ಸಾತ್ವಿಕ ಪುರುಷರೊಂದಿಗೆ ನಮಗೆ ಸದಾ ಭಾಂದವ್ಯವಿರಬೇಕು.
ಅವರನ್ನು ನಮ್ಮ ಮನೆಗೆ ಆಗಾಗ ಆಹ್ವಾನಿಸಿ ಅವರಿಂದ ಪ್ರಾರ್ಥಿಸಿಕೊಳ್ಳಬೇಕು.
ಖಂಡಿತವಾಗಿಯೂ ಅಂತಹಾ ಮನೆಗಳಲ್ಲಿ ಬರ್ಕತ್ ಮತ್ತು ನೆಮ್ಮದಿ ಇರುತ್ತದೆ.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಸ್ವಹಾಬತ್ ಬರ್ಕತ್'ಗಾಗಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸಂದರ್ಶಿಸುತ್ತಿದ್ದರು ಹಾಗೂ ಅವರ ಮನೆಗಳಿಗೆ ಪ್ರವಾದೀ ವರ್ಯರನ್ನು ಆಹ್ವಾನಿಸುತ್ತಿದ್ದರು.
ಇಮಾಮ್ ಮುಸ್ಲಿಂ ವರದಿ ಮಾಡಿದ ಹದೀಸ್ ನೋಡಿ,
عَنْ أَنَسٍ قَالَ دَخَلَ النَّبِيُّ صَلَّى اللَّهُ عَلَيْهِ وَسَلَّمَ عَلَيْنَا وَمَا هُوَ إِلَّا أَنَا وَأُمِّي وَأُمُّ حَرَامٍ خَالَتِي فَقَالَتْ أُمِّي يَا رَسُولَ اللَّهِ خُوَيْدِمُكَ ادْعُ اللَّهَ لَهُ قَالَ فَدَعَا لِي بِكُلِّ خَيْرٍ وَكَانَ فِي آخِرِ مَا دَعَا لِي بِهِ أَنْ قَالَ اللَّهُمَّ أَكْثِرْ مَالَهُ وَوَلَدَهُ وَبَارِكْ لَهُ فِيهِ(مسلم 2481)
ಅನಸ್ (ರ)ಹೇಳುತ್ತಾರೆ,ನನ್ನ ಮನೆಗೆ ಪ್ರವಾದೀ ವರ್ಯರು ಬಂದರು.ಆಗ ನನ್ನ ಮನೆಯಲ್ಲಿ ನಾನು,ತಾಯಿ ಹಾಗೂ ನನ್ನ ಚಿಕ್ಕಮ್ಮ ಇದ್ದರು.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ನನ್ನ ತಾಯಿ ಈ ರೀತಿ ಹೇಳಿದರು,
ಓ ಪ್ರಾವದೀ ವರ್ಯರೇ!ನಿಮ್ಮ ಸೇವಕ ಅನಸ್ ಗಾಗಿ ತಾವು ದುಆ ಮಾಡಿರಿ.ಆಗ ಪ್ರವಾದೀ ವರ್ಯರು ನನ್ನ ಎಲ್ಲಾ ಒಳಿತಿಗಾಗಿ ದುಆ ಮಾಡಿದರು.
(ಮುಸ್ಲಿಂ 2481)
ಬದ್ರ್ ಯುದ್ಧದಲ್ಲಿ ಭಾಗವಹಿಸಿದ ಇತ್'ಬಾನ್ (ರ) ರವರಿಗೆ ಕಣ್ಣಿನ ದೃಷ್ಠಿ ಕಳೆದುಹೋದಾಗ ಪ್ರವಾದೀ ವರ್ಯರ ಬಳಿ ಬಂದು ನನಗೆ ಮಸೀದಿಗೆ ಬರಲು ಸಾಧ್ಯವಾಗುತ್ತಿಲ್ಲ.ತಾವು ನನ್ನ ಮನೆಗೆ ಬಂದು ನನ್ನ ಮನೆಯಲ್ಲಿ ನಮಾಝ್ ಮಾಡಿ ನನ್ನನ್ನು ಆಶಿರ್ವದಿಸಿ ಎಂದು ಬೇಡಿಕೆಯಿಟ್ಟ ಘಟನೆ ಇಮಾಮ್ ಬುಖಾರಿ ವರದಿ ಮಾಡಿದ್ದು,ಅದನ್ನು ಇದೇ ಲೇಖನದ 5 ನೇ ಭಾಗದಲ್ಲಿ ವಿವರಿಸಿದ್ದೇನೆ.
ಪ್ರಸ್ತುತ ಹದೀಸ್'ಗೆ ಇಮಾಮ್ ಇಬ್ನ್ ಹಿಬ್ಬಾನ್ ಅಧ್ಯಾಯ ನೀಡಿದ್ದು ಈ ರೀತಿಯಾಗಿದೆ,
ذكر ما يستحب للامام من اعطاء رعيته ما ياملونه من الاسباب التي بها يتبركون من ناحيته
ಬರ್ಕತ್ ಉದ್ದೇಶವಿಟ್ಟು ಅನುಯಾಯಿಗಳು ನಾಯಕನಲ್ಲಿ ಒಂದು ಸ್ಥಳ ನಿರ್ಣಯಿಸುವಂತೆ ಬೇಡಿಕೆಯಿಟ್ಟರೆ ಅನುಯಾಯಿಗಳ ಬೇಡಿಕೆಯನ್ನು ಈಡೇರಿಸುವುದು ನಾಯಕನಿಗೆ ಸುನ್ನತ್ ಆಗಿದೆ.
(ಸ್ವಹೀಹ್ ಇಬ್ನ್ ಹಿಬ್ಬಾನ್)
ಬರ್ಕತ್ ಗಾಗಿ ಸಾತ್ವಿಕರನ್ನು ಮನೆಗೆ ಆಹ್ವಾನಿಸಿದರೆ ಆ ಕರೆಗೆ ಉತ್ತರಿಸುವುದು ಸಾತ್ವಿಕರ ಬಾಧ್ಯತೆಯಾಗಿದೆ ಎಂದು ಈ ಹದೀಸ್ ನ ವ್ಯಾಖ್ಯಾನದಲ್ಲಿ ಇಮಾಮ್ ಇಬ್ನ್ ಬತ್ತಾಲ್ (ರ)ಹೇಳಿದ್ದಾರೆ.
من دعي من الصالحين الي شيئ يتبرك به منه فله ان يجيب اذا امن الفتنة من العجب
(ಫತ್'ಹುಲ್ ಬಾರಿ 2/77)
ವಹ್ಹಾಬಿಗಳ ನಾಯಕ ಶೌಕಾನಿ ತನ್ನ ನೈಲುಲ್ ಔತಾರ್ ನ 3/95 ರಲ್ಲಿ ಕೂಡಾ ಇದನ್ನೇ ಹೇಳಿದ್ದಾರೆ.
ಒಟ್ಟಿನಲ್ಲಿ ನಮ್ಮ ಮನೆಗೆ ಸಜ್ಜನರಾದ ವ್ಯಕ್ತಿಗಳನ್ನು ಆಹ್ವಾನಿಸಿ ಅವರಿಗೆ ಅನ್ನ-ಪಾನೀಯ ನೀಡಿ ಅವರಿಂದ ಪ್ರಾರ್ಥಿಸಿಕೊಂಡಲ್ಲಿ ಆ ಮನೆಯಲ್ಲಿ ಸದಾ ಸಂತೋಷ ಮತ್ತು ಸಮೃದ್ಧಿ ನೆಲೆಗೊಳ್ಳುವವು.
----------------------------------------------------------
*ಪ್ರತ್ಯೇಕ ಗಮನಕ್ಕೆ*
ಭಾಗ 2 ರಲ್ಲಿ ಒಂದು ಹದೀಸ್ ಗೆ ಅರ್ಥ ನೀಡುವಲ್ಲಿ
الدُّنيا متاعٌ، وخيرُ متاعِ الدُّنيا المرأةُ الصَّالحة،
*ಪ್ರಪಂಚದಲ್ಲಿರುವ ಸರಕುಗಳ ಪೈಕಿ ಉತ್ತಮವಾದ ಸರಕು ಉತ್ತಮ ಸ್ತ್ರೀಯಾಗಿದ್ದಾಳೆ*
ಎಂದು ಬರೆದಿದ್ದೆ.
ಮಿತ್ರರೊಬ್ಬರು ಮೆಸೇಜ್ ಮಾಡಿ ಮಹಿಳೆಯನ್ನು ನೀವು ಸರಕುಗಳಾಗಿ ಕಂಡದ್ದು ತಪ್ಪೆಂದು ಸೂಚಿಸಿದ್ದರು.
ವಾಸ್ತವದಲ್ಲಿ ಆ ಬರೆದದ್ದು ತಪ್ಪಾಗಿರಲಿಲ್ಲ.
ಕಾರಣ "ಸರಕು" ಎಂದರೆ ಅಷ್ಟೊಂದು ಕೀಳುಮಟ್ಟದ ಪದವಲ್ಲ.
ಯಾವುದೇ ಸರಕುಗಳಿಗೆ ಬೆಲೆ ಇದೆ.
ಬೆಲೆಯಿಲ್ಲದ ಸರಕು ಪ್ರಪಂಚದಲ್ಲಿ ಯಾವುದಿದೆ?
ಸರಕು ಅಂದರೆ ಬೆಲೆಯಿರುವ ವಸ್ತು ಎಂದೇ ಅಲ್ಲಿ ಉದ್ದೇಶಿಸಲಾಗಿತ್ತು.
ಅಂದರೆ, ಪ್ರಪಂಚದಲ್ಲಿರುವ ಬೆಲೆ ಬಾಳುವ ವಸ್ತುಗಳ ಪೈಕಿ ಅತ್ಯಂತ ಬೆಲೆಯಿರುವ ವಸ್ತು ಸಜ್ಜನ ಮಹಿಳೆಯಾಗಿದ್ದಾಳೆ ಎಂದಾಗಿದೆ ಅದರ ಅರ್ಥ.
ಆ ರೀತಿ ಅರ್ಥಮಾಡಿಕೊಂಡರೆ ಯಾವುದೇ ಸಮಸ್ಯೆಯಿಲ್ಲ.
ಸೂಕ್ಮತೆಯಿಂದ ಓದಿ ಅಭಿಪ್ರಾಯ ತಿಳಿಸಿದ್ದಕ್ಕಾಗಿ ಆ ಮಿತ್ರನಿಗೆ ಧನ್ಯವಾದಗಳು.
*ಎಲ್ಲರಿಗೂ ಶೇರ್ ಮಾಡಿ*
ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)
ಮುಂದುವರಿಯುವುದು........
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)
No comments:
Post a Comment