*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
ಭಾಗ --14
📝 _ಮುನೀರ್ ಸಖಾಫಿ ಸಾಲೆತ್ತೂರು_
_*ಸೂತ್ರ 13:*_
*ಮನೆ ಕಟ್ಟಿದ ಜಾಗ ಮತ್ತು ಮನೆಗೆ ಉಪಯೋಗಿಸಿದ ಹಣ ಹಲಾಲ್ ಆಗಿರಲಿ*
ಭೂಮಿ ಅಲ್ಲಾಹನದ್ದಾಗಿದೆ.ಭೂಮಿ ವಿಶಾಲವಾಗಿದೆ.ಮನುಷ್ಯ ಈ ಲೋಕದಲ್ಲಿ ತಾತ್ಕಲಿಕವಾಗಿ ಎಲ್ಲವನ್ನೂ ತನ್ನದಾಗಿಸುತ್ತಾನೆ.ಶಾಶ್ವತವಾಗಿ ತನ್ನದಾಗಿಸುವುದು ಸ್ವರ್ಗದಲ್ಲಾಗಿದೆ.ಈ ನೆನಪು ಎಲ್ಲರಿಗೂ ಬೇಕಾಗಿದೆ.
ವಾಸಿಸಲು ಕಟ್ಟುವ ಮನೆಯ ಅಡಿಪಾಯದ ಭೂಮಿ ಹಲಾಲ್ ಆಗಿರಬೇಕು.
ಇನ್ನೊಬ್ಬನ ಸ್ಥಳವನ್ನು ಅಕ್ರಮವಾಗಿ ತನ್ನದಾಗಿಸುವವರಿದ್ದಾರೆ.
ಸಮೀಪದ ಭೂಮಿಯ ಮಾಲಕನಿಗೆ ತಿಳಿಯದ ರೂಪದಲ್ಲಿ ಬೇಲಿ/ಕಂಪೌಂಡ್' ಹಾಕಿ ಸ್ವಂತ ಭೂಮಿಗೆ ಸೇರಿಸುವ ವಂಚಕರಿದ್ದಾರೆ.
ಅಧಿಕಾರವಿರುವಾಗ ಅನ್ಯರ ಜಾಗವನ್ನು ನುಂಗುವ ನುಂಗಪ್ಪಗಳನ್ನು ನಾವು ನೋಡಿದ್ದೇವೆ.ಇನ್ನೊಬ್ಬನ ಜಾಗದ ರೆಕಾರ್ಡ್'ಸ್'ಗಳನ್ನು ದುರುಪಯೋಗಪಡಿಸಿ ಸ್ವಂತ ಭೂಮಿಯಾಗಿ ಪರಿವರ್ತಿಸುವ ಹಲವರಿದ್ದಾರೆ.
ಎಲ್ಲರೂ ಈ ಒಂದು ಹದೀಸ್ ತಿಳಿಯುವುದು ಒಳಿತು,
عَنْ سَعِيدِ بْنِ زَيْدٍ رَضِيَ اللَّهُ عَنْهُمَا: أَنَّ رَسُولَ اللَّهِ ﷺ قَالَ: مَنِ اقْتَطَعَ شِبْرًا مِنَ الْأَرْضِ ظُلْمًا طَوَّقَهُ اللَّهُ إِيَّاهُ يَوْمَ الْقِيَامَةِ مِنْ سَبْعِ أَرَضِينَ. مُتَّفَقٌ عَلَيْهِ
ಮತ್ತೊಬ್ಬನ ಭೂಮಿಯನ್ನು ಕಸಿದರೆ ಅಂತ್ಯ ದಿನದಲ್ಲಿ ಅವನ ಕೊರಳಿಗೆ ಕಸಿದ ಭೂಮಿಯ 7 ಪಟ್ಟು ಭೂಮಿಯನ್ನು ಹಾರವಾಗಿ ಹಾಕಲಾಗುವುದು.
(ವರದಿ :ಬುಖಾರಿ,ಮುಸ್ಲಿಂ)
------------------------------------------------------
ಇನ್ನೊಂದು ಹದೀಸ್ ನೋಡಿ,
عن عروة بن الزبير رحمه الله أن أروَى بنتَ أويس ادَّعَتْ على سعيد بن زيد أنه أخذَ شيئًا من أرضِها، فخاصَمَتْه إلى مَرْوان بن الحَكَم، فقال سعيد: أنا كنتُ آخذُ من أرضِها شيئًا بعد الذي سمِعتُ من رسولِ الله صلى الله عليه وسلم؟ قال: وما سمِعْتَ من رسولِ الله صلى الله عليه وسلم؟ قال: سمِعتُ رسولَ الله صلى الله عليه وسلم يقول: (من أخذَ شِبرًا من الأرضِ ظُلْمًا، طُوِّقَه إلى سبعِ أرَضِين)، فقال له مروان: لا أسألُك بيَّنَةً بعد هذا، فقال: "اللهمَّ إن كانت كاذبةً فعَمِّ بصرَها، واقتُلْهَا في أرضِها"، قال: "فما ماتتْ حتى ذهبَ بَصَرُها، ثم بيْنا هي تمشِي في أرضِها، إذْ وقعَتْ في حفرةٍ فماتَتْ (بخاري)
ಉರ್'ವತು ಬಿನ್ ಝುಬೈರ್ ಹೇಳುತ್ತಾರೆ,
ಸ್ವಹಾಬಿಯಾದ ಸಈದ್ ಬಿನ್ ಝೈದ್(ರ)ರವರ ವಿರುದ್ಧ ಅರ್'ವಾ ಬಿನ್ತ್ ಉವೈಸ್ ಎಂಬ ಮಹಿಳೆ ತನ್ನ ಜಾಗವನ್ನು ಕಬಳಿಸಿದ್ದಾಗಿ ಮರ್'ವಾನ್ ಬಿನ್ ಹಕಮ್ (ರ)ರೊಂದಿಗೆ ಹೇಳಿದರು.ಮರ್ವಾನ್ (ರ )ರವರು ಸಈದ್ (ರ)ರನ್ನು ಕರೆಸಿ ನೀವು ಅರ್ವಾ ಎಂಬ ಮಹಿಳೆಯ ಸ್ಥಳವನ್ನು ಕಬಳಿಸಿದ್ದೀರಾ ಎಂದು ತನಿಖೆ ಮಾಡಿದರು.ಆಗ ಸಈದ್ (ರ)ರವರು ಹೇಳಿದರು.ಭೂ ಕಬಳಿಕೆಯ ವಿರುದ್ಧ ಪ್ರವಾದೀ ಪೈಗಂಬರರು ಹೇಳಿದ್ದನ್ನು ಕೇಳಿದ ಬಳಿಕ ನಾನು ಭೂಮಿ ಕಬಳಿಸುವೆನಾ?
ಆಗ ಮರ್ವಾನ್ (ರ) ಕೇಳಿದರು.ನೀವು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಂದ ಏನೆಂದು ಕೇಳಿದ್ದೀರಿ?
ಆಗ ಸಈದ್ (ರ)ರವರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ
"ಮತ್ತೊಬ್ಬನ ಭೂಮಿಯನ್ನು ಕಸಿದರೆ ಅಂತ್ಯ ದಿನದಲ್ಲಿ ಅವನ ಕೊರಳಿಗೆ ಕಸಿದ ಭೂಮಿಯ 7 ಪಟ್ಟು ಭೂಮಿಯನ್ನು ಹಾರವಾಗಿ ಹಾಕಲಾಗುವುದು"
ಎಂಬ ಹದೀಸನ್ನು ಓದಿ ಹೇಳಿದರು.
ಇದು ಕೇಳಿದ ಮರ್ವಾನ್(ರ)ಹೇಳಿದರು.ಇದರ ಬಳಿಕ ನಾನು ಬೇರೆ ಯಾವುದೇ ಆಧಾರಗಳನ್ನು ನಿಮ್ಮಲ್ಲಿ ಕೇಳಲಾರೆ.(ಭೂ ಕಬಳಿಕೆಯ ನಿಷಿದ್ಧವೆಂದು ನಿಮಗೆ ಅತಿಯಾದ ತಿಳುವಳಿಕೆ ಇದೆ.ನೀವು ಕಬಳಿಸುವರೆಂದು ನಾನು ನಂಬುತ್ತಿಲ್ಲ)
ತನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದನ್ನು ಸಹಿಸದ ಸಈದ್ (ರ) ಈ ರೀತಿ ಪ್ರಾರ್ಥಿಸಿದರು.ಅಲ್ಲಾಹನೇ ಈ ಮಹಿಳೆ ಹೇಳುವುದು ಸುಳ್ಳಾಗಿದ್ದಲ್ಲಿ ಅವಳನ್ನು ನೀನು ಕುರುಡಾಗಿಸು.ಅವಳ ಭೂಮಿಯಲ್ಲೇ ಅವಳಿಗೆ ಮರಣ ನೀಡು.
ಜೀವನದ ಕೊನೆಯ ಗಳಿಗೆಯಲ್ಲಿ ಅರ್ವಾ ಬಿನ್ತ್ ಉವೈಸ್ ಎಂಬ ಆ ಮಹಿಳೆಗೆ ಕಣ್ಣಿನ ದೃಷ್ಠಿ ನಷ್ಟ ಹೊಂದಿ ತನ್ನದೇ ಜಾಗದಲ್ಲಿದ್ದ ಒಂದು ಹೊಂಡಕ್ಕೆ ಬಿದ್ದು ಮರಣ ಹೊಂದಿದರು.
(ಬುಖಾರಿ 3198 )
ಜಾಗದ ವಿಷಯದಲ್ಲಿ ತಕರಾರು ನಡೆಸಕೂಡದೆಂದು ಈ ಹದೀಸ್ ಬಹಳ ಸ್ಪಷ್ಟವಾಗಿ ತಿಳಿಸಿಕೊಡುತ್ತದೆ.
ಕೇಸ್,ಕೋರ್ಟ್,ಕೊಲೆ ಎಲ್ಲವೂ ಈ ಜಾಗದ ವಿಷಯದಲ್ಲಿ ನಡೆಯುತ್ತಿರುತ್ತದೆ.
ಸಂಬಂಧಗಳನ್ನು ಕೂಡಾ ಇದು ದೂರ ಮಾಡುತ್ತದೆ.
ಅಲ್ಲಾಹನ ಮತ್ತು ಅಂತ್ಯ ದಿನದ ಭಯವಿರುವವನು ಜಾಗದ ವಿಷಯದಲ್ಲಿ ತಕರಾರು ಮಾಡಬಾರದೆಂದು ಖುರ್'ಆನ್ ಮತ್ತು ಹದೀಸಿನಿಂದ ಬಹಳ ಸ್ಪಷ್ಟ.
ಕಟ್ಟಿದ ಮನೆಯಲ್ಲಿ ನೆಮ್ಮದಿ ಬೇಕೆಂದಾದರೆ ಆ ಮನೆಯ ಜಾಗದಲ್ಲಿ ತಕರಾರಿರಬಾರದು.
ಮನೆ ಕಟ್ಟಿದರೆ ಸಾಲವಾಗುವುದಂತೂ ಖಂಡಿತಾ.
ಗೆಳಯರಿಂದ/ಪರಿಚಯಸ್ಥರಿಂದ ಸಾಲ ಮಾಡಿಯಾದರೂ ಪರವಾಗಿಲ್ಲ.ಬಡ್ಡಿಗೆ ಹಣ ತೆಗೆದು ನೀವು ಮನೆಕಟ್ಟುವಿರಾ?
ಖಂಡಿತಾ ಸೋಲು ಕಟ್ಟಿಟ್ಟ ಬುತ್ತಿ.
ಲೋನ್ ಮಾಡಿ ಮನೆ ಕಟ್ಟಿದವರ್ಯಾರೂ ಕೂಡಾ ಆ ಮನೆಯಲ್ಲಿ ನೆಮ್ಮದಿಯ ಜೀವನ ನಡೆಸಿಲ್ಲ.
ವಿಜ್ರಂಭಣೆಯ ಗ್ರಹ ಪ್ರವೇಶ ಮಾಡಿ 2 ವರ್ಷ ಹೇಗೋ ಲೋನ್ ಕಟ್ಟಿ ಮುಂದಕ್ಕೆ ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ಬಂದಾಗ ಲೋನ್ ಕಟ್ಟಲು ಮನೆ ಮಾರಾಟ ಮಾಡಿ ಕೊನೆಗೆ ಮನೆಗೆ ಹಾಕಿದ ಹಣವೂ ಕೈಗೆ ಬರದೆ ಬಾಡಿಗೆ ಮನೆಯಲ್ಲಿ ವಾಸಿಸುವ ಎಷ್ಟೋ ಫ್ಯಾಮಿಲಿ ನನಗೆ ತಿಳಿದಿದೆ.
ಲೋನ್ ಮಾಡಿ ಭವ್ಯ ಬಂಗಲೆ ಕಟ್ಟುವುದಕ್ಕಿಂತ ಹಣ ಕೈಯಲ್ಲಾಗುವಾಗ ಅಲ್ಪಲ್ಪ ಕೆಲಸ ಮಾಡಿಸಿ ಮನೆಕಟ್ಟಿ ನೆಮ್ಮದಿಯಿಂದಿರುವವನೇ ಅರಸ.
ಬಡ್ಡಿಗೆ ಲೋನ್ ಪಡೆದು ಮನೆ ಕಟ್ಟಿದರೆ ಹೇಗೆ ತಾನೇ ಸಂತೋಷವಿರಬಹುದು?
ಬಡ್ಡಿಯ ವ್ಯವಹಾರದಲ್ಲಿ ಭಾಗಿಯಾಗುವ 10 ವಿಭಾಗವನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಬಹಳ ಖಡಕ್ಕಾಗಿ ಶಪಿಸಿದ್ದಾರೆ.ಜಾಗೃತಾಗಿರಿ
*ಎಲ್ಲರಿಗೂ ಶೇರ್ ಮಾಡಿ*
ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)
ಮುಂದುವರಿಯುವುದು........
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)
No comments:
Post a Comment