Monday, July 13, 2020

ಸಯ್ಯಿದ್ ಮತ್ತಬಲಿಯ (ಖ:ಸಿ) ಮೌಲುಮ್ ಕುನ್ನುಮ್ಮೆಲ್, ಕಣ್ಣೂರು ಜಿಲ್ಲೆ

#ಝಿಯಾರತ್ತ್_ಕೇಂದ್ರ​​​
🔖🔖 8️⃣6️⃣ 🔖🔖
➖➖➖➖➖➖➖
#ಸಯ್ಯಿದ್ ಮುತ್ತಬಲಿಯ (ಖ:ಸಿ). ಮೌಲುಮ್ ಕುನ್ನುಮ್ಮೆಲ್, ಚಕ್ಕಿಯತ್ತ್ ಮುಖ್, ತಲಶ್ಶ್'ರಿ. ಕಣ್ಣೂರು ಜಿಲ್ಲೆ.*
➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
*********************

ಕೇರಳದ ಕಣ್ಣೂರು ಜಿಲ್ಲೆಯ ತಲಶೇರಿ ಸಮೀಪದ ಕಡಲಕಿನಾರೆಗೆ ಹೊಂದಿಕೊಂಡಿರುವ ರಮ್ಯ ಮನೋಹರವಾದ ನಿಸರ್ಗ ತಾಣವಾಗಿದೆ ಮೌಲುಮ್ ಕುನ್ನುಮ್ಮೆಲ್.

ಸಯ್ಯಿದ್ ಮುತ್ತಬಲಿಯ (ಖ:ಸಿ) ಎಂಬ ಸೂಫಿವರ್ಯರು ಈ ನಿಸರ್ಗ ಧಾಮದ ಒಡಲಿನಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವುದರಿಂದ ಈ ಪರಿಸರವು ಆಧ್ಯಾತ್ಮಿಕ ಕಂಪಿನೊಂದಿಗೆ ಧನ್ಯವಾಗಿದೆ. 

ಸುಮಾರು ಐದು ಶತಮಾನಗಳ ಹಿಂದೆ ದೀನೀ ಪ್ರಬೋಧನೆಯ ಹೊಣೆ ಹೊತ್ತು ಸೌದಿ ಅರೇಬಿಯಾದಿಂದ ಸಮುದ್ರ ಮಾರ್ಗವಾಗಿ ಸಂಚರಿಸಿ ಚಕ್ಕಿಯತ್ ಮುಕ್ಕು ಎಂಬಲ್ಲಿಗೆ ತಲುಪಿದ ಸಯ್ಯಿದ್ ಮುತ್ತ ಬಲಿಯ (ಖ:ಸಿ) ರವರು ಈ ನಿಸರ್ಗ ಧಾಮದ ಗುಡ್ಡದ ಮೇಲೆ ಇಬಾದತ್‌ನಲ್ಲಿ ತಲ್ಲೀನರಾಗಿದ್ದರು.

ಇದನ್ನು ಕಂಡ ಕಡಲ‌ ತೀರದ ನಿವಾಸಿಗಳು ಮಹಾನರನ್ನು ಕಾಣಲು ತಂಡೋಪ ತಂಡವಾಗಿ ಆಗಮಿಸುತ್ತಿದ್ದರು.  

ಸಯ್ಯಿದರ ಮುಖದಲ್ಲಿ ಮಿನುಗುತ್ತಿದ್ದ ಆಧ್ಯಾತ್ಮಿಕ ತೇಜಸ್ಸನ್ನು ಕಂಡ ಜನ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಂಡು ಪ್ರಾರ್ಥಿಸುವಂತೆ ಮನವಿ ಮಾಡುತ್ತಿದ್ದರು.

ಮಹಾನರ ಪ್ರಾರ್ಥನೆ ಮತ್ತು ಕರಾಮತ್‌ನಿಂದ ವಿಘ್ನಗಳು ನಿವಾರಣೆಯಾದಾಗ ಜನರಿಗೆ ಮಹಾನರಲ್ಲಿ ಗೌರವಾದರಗಳು ಹೆಚ್ಚಾಯಿತು.

ಜನಸಾಮಾನ್ಯರ ನೊಂದ ಬದುಕಿಗೆ ಸಾಂತ್ವಾನ ನೀಡುತ್ತಿದ್ದ ಮಹಾನರ ಸಮಕ್ಷಮಕ್ಕೆ ಬರುತ್ತಿದ್ದ ಜನರ ಸಂಖ್ಯೆ ದಿನಗಳೆದಂತೆ ಹೆಚ್ಚಾಗಿತ್ತು.

ನಿರ್ಜನ ಪ್ರದೇಶದಲ್ಲಿರುವ ಈ ಮಕ್ಬರದ ವಿಶೇಷತೆಯ ಅರಿವಿರುವವರು ಅಲ್ಲಿಗೆ ತೆರಳಿ ಝಿಯಾರತ್ ಮಾಡುತ್ತಿರುತ್ತಾರೆ.

ಸಯ್ಯಿದರ ವಂಶಸ್ಥರ ಉಸ್ತುವಾರಿಯಲ್ಲಿರುವ ಮಖಾಮಿನಲ್ಲಿ ಪ್ರತೀ ವರ್ಷ ಸೆಪ್ಟೆಂಬರ್ ಮಾಸದಲ್ಲಿ ವಾರ್ಷಿಕ ಮೌಲಿದ್ ನಡೆಯುತ್ತದೆ.

ಪ್ರಕೃತಿ ಪ್ರಿಯರಿಗೆ ನಿಸರ್ಗದ ಸೌಂದರ್ಯವನ್ನು ಆಸ್ವಾದಿಸಲು ಹೇಳಿ ಮಾಡಿಸಿದ ತಾಣದಂತಿರುವ ಮೌಲುಮ್ ಕುನ್ನುಮ್ಮೆಲ್‌ಗೆ ಭೇಟಿ ನೀಡಿದರೆ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವುದರ ಜೊತೆಗೆ ಸಯ್ಯಿದರ ಮಖಾಮಿನಲ್ಲಿ ಝಿಯಾರತನ್ನೂ ಮಾಡಿ ಬರ್ಕತ್ ಪಡೆಯಬಹುದು.
🔹🔹🔹🔹🔹🔹🔹

No comments:

Post a Comment