*ಝಿಯಾರತ್ತ್ ಕೇಂದ್ರ*
🕎🕎8️⃣5️⃣🕎🕎
〰️〰️〰️〰️〰️〰️〰️
➖➖➖➖➖➖➖
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
〰〰〰〰〰〰〰
✍ _ಗಫೂರ್ ಬಾಯಾರ್_
(ಸುಸಾಮ) ಮಂಗಳೂರು.
🔖🔖🔖🔖🔖🔖🔖
*ಞೆಂಡಾಡಿ ಶೈಖ್ (ಖ:ಸಿ)*
ಔಲಿಯಾಗಳೆಂದರೆ ವಿಸ್ಮಯಗಳ ಆಗರ. ಅಲ್ಲಾಹನ ಈ ಲೋಕದಲ್ಲಿ ಹಾದು ಹೋದ ಒಂದೊಂದು ಔಲಿಯಾಗಳ ಬದುಕೂ ಸಹ ಬಹಳ ವೈಶಿಷ್ಟ್ಯತೆಯಿಂದ ಕೂಡಿದ್ದಾಗಿದೆ. ಇಂದು ಞೆಂಡಾಡಿ ಶೈಖ್ (ಖ:ಸಿ) ಎಂದೇ ಅರಿಯಲ್ಪಡುವ ಶೈಖುಲ್ ಮಶಾಯಿಖ್ ಅಬೂಬಕರ್
ಞೆಂಡಾಡಿ (ಖ.ಸಿ)ರವರ ಬಗ್ಗೆ ತಿಳಿಯೋಣ.
ಮಲಪ್ಪುರಂ ಜಿಲ್ಲೆಯ ಅರಿಕೋಡು ಎಂಬಲ್ಲಿ ಜನಿಸಿ ಇಲಾಹಿ ಸ್ಮರಣೆಯ ಮೂಲಕ ಅಲ್ಲಾಹನ ಪ್ರೀತಿ ಪಾತ್ರರಾಗಿ ಔಲಿಯಾತನದ ಪದವಿಗಳಿಸಿ ಪವಾಡಗಳ ಮೂಲಕ ಜನಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸುತ್ತಿದ್ದ ಮಹಾನರಾಗಿದ್ದರು ಞೆಂಡಾಡಿ ಶೈಖ್ (ಖಸಿ).
ಐದು ದಶಕಗಳ ಹಿಂದೆ ಸೂಫಿಗಳ ಕೇಂದ್ರ ಸ್ಥಳವೆಂದೇ ಕರೆಸಿ ಕೊಳ್ಳುತ್ತಿದ್ದ ಮುಸ್ಲಿಮರೇ ಹೆಚ್ಚಾಗಿ ವಾಸಿಸುವ ಪ್ರದೇಶವಾಗಿದ್ದ ಞೆಂಡಾಡಿಯಲ್ಲಿ ವಾಸ್ತವ್ಯ ಹೂಡಿದ್ದರು.
ಕುತುಬುಲ್ ಅಖ್ತಾಬ್ ಮೊಹಿದ್ದೀನ್ ಶೈಖ್ (ರ)ರವರನ್ನು ಬಹಳ ಪ್ರೀತಿಸುತ್ತಿದ್ದ ಅವರು, ಬಗ್ದಾದಿಗೆ ತೆರಳಿ ಖಾದಿರಿಯ್ಯಾ ತ್ವರೀಕತ್ತಿನ ಶೈಖ್ ಆಗಿದ್ದ ಶೈಖುನಾ ಅಸಯ್ಯಿದ್ ಶರಫುದ್ದೀನ್ ಅಲ್ಲಿ ಖಾದಿರಿ ಬಗ್ದಾದಿ (ರ)ರವರ ಶಿಷ್ಯರಾಗಿ ಹಲವು ವರ್ಷಗಳ ಕಾಲ ಅಧ್ಯಯನ ನಡೆಸಿದರು.
ಞೆಂದಾಡಿ ಶೈಖ್ (ಖ:ಸಿ)ರ ವಿಧೇಯತೆ ಭಕ್ತಿ ಮತ್ತು ದೀನಿನ ಬಗೆಗಿರುವ ಕಾಳಜಿಯನ್ನು ಕಂಡ ಬಗ್ದಾದಿ (ರ)ರವರು ಞೆಂಡಾಡಿ ಶೈಖ್ (ಖ:ಸಿ)ರಿಗೆ ತನ್ನ ಹೆಸರಾದ ಸಯ್ಯಿದ್ ಶರಫುದ್ದೀನ್ ಅಬೂಬಕ್ಕರ್ ಖಾದಿರಿ (ಖ.ಸಿ) ಎಂದು ಮರು ನಾಮಕರಣ ಮಾಡಿದರು.
ಅನಂತರ ಬಗ್ದಾದಿನಿಂದ ತಾಯಿನಾಡಿಗೆ ಹಿಂದುರುಗಿದ ಞೆಂಡಾಡಿ ಶೈಖ್ (ಖ.ಸಿ) ರವರು ನೇರಳವಾಗಿ ಸುಲ್ತಾನುಲ್ ಹಿಂದ್ ಖ್ವಾಜಾ ಗರೀಬ್ ನವಾಝ್ ಅಜ್ಮೀರಿ (ರ)ರವರು ಮಖಾಮಿಗೆ ತೆರಳಿ ಅಲ್ಲಿ ಹಲವು ವರ್ಷಗಳನ್ನು ಇಬಾದತ್ತಿನಲ್ಲಿ ಕಳೆದಿದ್ದರು.
ನಂತರ ಅಜ್ಮೀರ್'ನಿಂದ ಹಿಂದಿರುಗಿದ ಅವರು ತಮ್ಮ ಸ್ವಗ್ರಾಮದಲ್ಲಿ ವಾಸ್ತವ್ಯ ಹೂಡದೆ ಸೂಫಿ ಸಂತರ ನಾಡೆಂದು ಕರೆಸಿಕೊಳ್ಳುತ್ತಿದ್ದ ಞೆಂಡಾಡಿಗೆ ಹೋಗಿ ಜನಸೇವೆಯಲ್ಲಿ ತಲ್ಲೀನರಾದರು.
1940ರಿಂದ 48ರ ತನಕ ವೆಲ್ಲೂರ್ ಬಾಖಿಯಾತಿನಲ್ಲಿ ಮುದರ್ರಿಸ್ ಆಗಿದ್ದ ಶೈಖುನಾ ಶಂಸುಲ್ ಉಲಮಾ ಈ.ಕೆ. ಉಸ್ತಾದರು (ಖ:ಸಿ) ಸಾಂಕ್ರಾಮಿಕ ರೋಗವಾದ ಸಿಡುಬು ವ್ಯಾಪಿಸಿದ್ದರಿಂದ ಅಲ್ಲಿಂದ ಙಂಡಾಡಿಗೆ ತೆರಳಿದ ಉಸ್ತಾದರು ಶೈಖ್‌ರವರ ಮೇಲಿನ ಗೌರವಾದರಗಳಿಂದ ಕೆಲವು ಕಾಲ ಶೈಖ್‌ರೊಂದಿಗೆ ಞೆಂಡಾಡಿಯಲ್ಲಿ ವಾಸ್ತವ್ಯ ಹೂಡಿ ಅವರ ನಿರ್ದೇಶನದಂತೆ ದಅ್‌ವಾ ನಡೆಸುತ್ತಿದ್ದರು.
ಜೀವನದಲ್ಲಿ ಹಲವಾರು ಕಷ್ಫ್ ಕರಾಮತ್‌ಗಳನ್ನು ಕಾಣಿಸಿದ ಞೆಂಡಾಡಿ ಶೈಖ್ (ಖ.ಸಿ)ರವರ ಜೀವನ ಚರಿತ್ರೆಯನ್ನು ಯಥಾವತ್ತಾಗಿ ಬರೆಯಲು ಯಾರಿಂದಲೂ ಸಾಧ್ಯವಾಗಿಲ್ಲ. ಔಲಿಯಾಗಳು ಪ್ರಚಾರ ಮತ್ತು ಕೀರ್ತಿಯನ್ನು ಎಂದೂ ಬಯಸಲಾರರೆಂಬುದು ನಮಗೆಲ್ಲರಿಗೂ ತಿಳಿದೇ ಇದೆ. ಆ ಕಾರಣದಿಂದ ಅಂದರೆ ಮಹಾನರ ಸಮ್ಮತಿ ಲಭಿಸದ ಕಾರಣ ಅವರ ಜೀವನದ ಸಾಧನೆಯ ಸ್ಪಷ್ಟ ಚಿತ್ರಣವನ್ನು ಯಾರಿಂದಲೂ ಉಲ್ಲೇಖಿಸಲು ಸಾಧ್ಯವಾಗಿಲ್ಲದಿರಬಹುದು.
ಮಹಾನರು ಜೀವಿಸಿರುವಾಗಲೇ ಅವರು ಅಳಿಯಂದಿರಾದ ಕೂಡಾಡಿ ಮಾಹಿನ್ ಮುಸ್ಲಿಯಾರ್ ಮತ್ತು ಶೈಖುನಾ ಅವರ ಆಪ್ತ ಶಿಷ್ಯರಲ್ಲೊಬ್ಬರಾದ ಶ್ರೀಕಂಠಪುರಂ ಅಬ್ದುಲ್ ಖಾದಿರ್ ಮುಸ್ಲಿಯಾರ್ ಜಂಟಿಯಾಗಿ ಶೈಖ್‌ರವರ ಜೀವನ ಚರಿತ್ರೆಯನ್ನು ಬರೆದು ಪ್ರಕಟಣೆಗಾಗಿ ಅವರ ಸಮ್ಮತಿ ಕೇಳಿದಾಗ, ಅಸಮಾಧಾನಿತರಾದ ಶೈಖ್‌ರವರು ಅವರಿಬ್ಬರನ್ನೂ ತಮ್ಮ ಬಳಿಗೆ ಕರೆದು ಅವರು ಬರೆದಿದ್ದ ಹಸ್ತ ಪ್ರತಿಯನ್ನು ಪಡೆದು ಪುಟ ತಿರುಗಿದಾಗ ಅದರಲ್ಲಿದ್ದ ಅಕ್ಷರಗಳೆಲ್ಲ ಕಣ್ಮರೆಯಾಗಿತ್ತು.
ನಂತರ ಅವರೊಂದಿಗೆ ನನ್ನ ಜೀವನವು ಮೋಹಿಯುದ್ದಿನ್ ಮಾಲೆಯ ತರವಾಗಿದೆ ಎಂದಿದ್ದರು. ಅಂದರೆ ಈ ಮಹಾನರ ಜೀವನವೆನ್ನುವುದು ಸಾಧಾರಣವಲ್ಲ ಎಂಬುದು ಈ ಮಾತಿನಿಂದಲೇ ನಮಗೆ ವ್ಯಕ್ತವಾಗುತ್ತದೆ.
ಇತ್ತೀಚೆಗೆ ವಫಾತಾದ ಜಲಾಲುದ್ದೀನ್ ಮಸ್ತಾನ್ (ನ.ಮ) ಶೈಖ್‌ರವರ ಪುತ್ರರಾಗಿದ್ದು ಪುತ್ರನ ಬದುಕಿನಲ್ಲಿ ಇಂತಿಂತಹ ಘಟನೆಗಳು ನಡೆಯಲಿದೆ ಎಂದು ತಮ್ಮ ಶಿಷ್ಯಂದಿರಿಗೆ ಹೇಳಿದ್ದರು.
ಇಹಲೋಕ ತ್ಯಜಿಸುವ ಅಲ್ಪ ದಿನಗಳ ಮುಂಚೆ ಮುತ್ತುಪೇಟೆ ದರ್ಗಾಕ್ಕೆ ತೆರಳಿದ ಅವರು ದರ್ಗಾದ ಬಾಗಿಲು ಮುಚ್ಚಿ ಬಹಳ ಹೊತ್ತು ಏಕಾಂತದಿಂದ ಝಿಯಾರತ್ ಮಾಡಿ ಹೊರ ಬಂದು ದರ್ಗಾದಲ್ಲಿದ್ದ ಆದಮ್ ಲಬ್ಬೈ ಎಂಬುವವರೊಂದಿಗೆ ಇಂತಹ ದಿನ ತಾವು ವಫಾತ್ ಆಗಲಿದ್ದೇನೆ ಎಂದಿದ್ದರು.
ಕಣ್ಣೂರು ಜಿಲ್ಲೆಯ ಞೆಂಡಾಡಿ ಎಂಬಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಞೆಂಡಾಡಿ ಶೈಖ್ (ಖ:ಸಿ)ರವರು ತಮ್ಮ ಬದುಕಿನುದ್ದಕ್ಕೂ ವಿಸ್ಮಯಕರವಾದ ಹಲವಾರು ಕಶ್ಫ್ ಕರಾಮತ್ತುಗಳನ್ನು ಕಾಣಿಸಿದ್ದರಾದರೂ ನೂರಕ್ಕೆ ತೊಂಬತ್ತರಷ್ಟು ವಿಸ್ಮಯಗಳು ಇನ್ನೂ ರಹಸ್ಯವಾಗಿಯೇ ಉಳಿದಿವೆ.
ಮಹಾನರ ಬರ್ಕತ್ತಿನಿಂದ ಅಲ್ಲಾಹನು ನಮ್ಮೆಲ್ಲರನ್ನೂ ಇಹಪರ ವಿಜಯಿಗಳ ಸಾಲಿನಲ್ಲಿ ಸೇರಿಸಲಿ ಆಮೀನ್ 🤲
🍁🍁🍁🍁🍁🍁🍁🍁
No comments:
Post a Comment