*ಮಕ್ಕಳನ್ನು ಬೆಳೆಸುವುದು ಈ ರೀತಿ ಆಗಿರಲಿ*
📝 ಮುನೀರ್ ಸಖಾಫಿ ಸಾಲೆತ್ತೂರು
---------------------------------------------
ಮಕ್ಕಳು ಅಲ್ಲಾಹನು ನಮಗೆ ಕರುಣಿಸಿದ ಅನುಗ್ರಹವಾಗಿದೆ.ಅದನ್ನು ಬೇಕಾದ ರೀತಿಯಲ್ಲಿ ಬೆಳೆಸುವುದು ಎಲ್ಲಾ ತಂದೆ ತಾಯಿಯರ ಕರ್ತವ್ಯವಾಗಿದೆ.
ನಿಮ್ಮ ಮಕ್ಕಳು ನಿಮ್ಮ ಮಕ್ಕಳಾಗಿಯೇ ಉಳಿಯಬೇಕಾದಲ್ಲಿ ಈ ಕೆಳಗಿನ 100 ಉಪದೇಶಗಳನ್ನು ಓದಿ ,ಪ್ರಯೋಗಿಸಿ ನೋಡಿ.
--------------------------------------------
1.ಮಗುವಿಗೆ ಇಹ ಮತ್ತು ಪರ ದಲ್ಲಿ ಪ್ರಯೋಜನವಾಗುವ ಉಪದೇಶಗಳನ್ನು ನೀಡಿ
2.ಅಲ್ಲಾಹನಿಗೆ ಮತ್ತು ಮಾತಾ ಪಿತರಿಗೆ ಕೃತಞ್ಞತೆ ಖಡ್ಡಾಯವೆಂದು ಕಲಿಸಿ ಕೊಡಿ.
3.ಸತ್ಯ ವಿಶ್ವಾಸಿಗಳ ಮಾರ್ಗ ಅವಲಂಬನೆಗೆ ಪ್ರಚೋದನೆ ನೀಡಿ.
4.ನೂತನ ವಾದಿಗಳ ಮಾರ್ಗ ಅನುಸರಿಸದಂತೆ ಜಾಗ್ರತೆ ವಹಿಸಿ.
5.ಬಾಹ್ಯ ಮತ್ತು ಗೌಪ್ಯತೆ ಅಲ್ಲಾಹನ ನಿರೀಕ್ಷಣೆಯಲ್ಲಿ ಎಂಬ ನೆನಪು ಮಾಡಿಕೊಡಿ.
6.ಅತೀ ಪುಟ್ಟ ಒಳಿತಾದರೂ ಕೆಡುಕಾದರೂ ಅದರ ಬಗ್ಗೆ ವಿವರಿಸಿ ಕೊಡಿ.
7.ನಮಾಝ್ ನ ಶರ್ತ್, ಫರ್ಲ್ , ಸುನ್ನತ್ , ಕರಾಹತ್ ಗಳ ಬಗ್ಗೆ ಮನದಟ್ಟು ಮಾಡಿಕೊಡಿ.
8.ಒಳಿತನ್ನು ಬೋಧಿಸುವುದು ಮತ್ತು ಕೇಡುಕನ್ನು ವಿರೋಧಿಸಿ.
9.ಕಷ್ಟ ಸಂದರ್ಭಗಳಲ್ಲಿ ಸಹನೆ ಕಳೆದು ಕೊಳ್ಳದೆ ಸಹನೆಯಿಂದಿರಲು ಉಪದೇಶಿಸಿ.
10.ನಡತೆಯಲ್ಲಿ ಅಹಂಕಾರ ಪ್ರದರ್ಶಿಸದಿರಲಿ ಹೇಳಿ.
11.ನಡೆಯುವಾಗ ಸಮಾದಾನದಿಂದ ನಡೆಯುವಂತೆ ಕಲಿಸಿ ಕೊಡಿ.
12.ಅಗತ್ಯ ಕ್ಕಿಂತ ಹೆಚ್ಚು ಶಬ್ಧದಲ್ಲಿ ಮಾತನಾಡುವುದನ್ನು ವಿರೋಧಿಸಿ.
13.ಎಲ್ಲಾ ಕೆಲಸಗಳಲ್ಲಿ ಪೂರ್ಣತೆ ಆಗುವಂತೆ ನೋಡಿಕೊಳ್ಳಿ.
14.ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಮೇಲಿನ ಪ್ರೀತಿ ಕಲಿಸಿ ಕೊಡಿ.
15.ಆರೋಗ್ಯ ಸಂದರ್ಭದಲ್ಲಿ ಅಲ್ಲಾಹನನ್ನು ಅನುಸರಿಸಿದರೆ ಅನಾರೋಗ್ಯ ವೇಳೆ ಅಲ್ಲಾಹನು ಕಾಪಾಡುವನು ಎಂದು ಹೇಳಿಕೊಡಿ.
16.ಯಾವಾಗಲೂ ಚಿಂತಿತರಾಗದೇ ಸಂತೋಷದಿಂದಿರಲು ಕಲಿಸಿ ಕೊಡಿ.
17.ಒಂದು ದುಖಃ ಉಂಟಾದಲ್ಲಿ ಅದರ ಬೆನ್ನಿಗೇ ಸುಖಃವು ಲಬಿಸುವುದೆಂಬ ಪ್ರವಾದಿ ವಚನ ಹೇಳಿ ಕೊಡಿ.
18.ಎಲ್ಲರಿಗೂ ಒಂದೊಂದು ರೀತಿಯಲ್ಲಿ ಜವಬ್ದಾರಿಯಿದೆ ಎಂಬುವುದನ್ನು ಮನವರಿಕೆ ಮಾಡಿ ಕೊಡಿ.
19.ಎಲ್ಲಾ ಮಕ್ಕಳನ್ನು ಒಂದೇ ರೀತಿಯಲ್ಲಿ ಪ್ರೀತಿಸಿ.
20.ಮಕ್ಕಳಿಗೆ ಎಳೆಯ ಪ್ರಾಯದಲ್ಲೇ "ಲಾಇಲಾಹ ಇಲ್ಲಲ್ಲಾಹ್ ಮುಹಮ್ಮದುರ್ರಸೂಲುಲ್ಲಾಹ್" ಎಂಬುವುದನ್ನು ಕಲಿಸಿ ಕೊಡಿ.
21.ಇಸ್ಲಾಮ್ ನಿಂದ ಹೊರ ಹೋಗುವುದರ ಕುರಿತು ಮತ್ತು ಅದರಿಂದುಂಟಾಗುವ ವಿಪತ್ತುಗಳ ಬಗ್ಗೆ ವಿವರಿಸಿ ಕೊಡಿ.
22.ಮದ್ಯಪಾನ ಮತ್ತು ಲಹರಿ ಇಸ್ಪೀಟ್ ಗಳ ಬಗ್ಗೆ ಎಚ್ಚರವಹಿಸಿ.
23.ಅದರ ಭವಿಷ್ಯತ್ ಗಳ ಬಗ್ಗೆ ಖುರ್ ಆನ್ , ಹದೀಸ್ ವಚನ ವಿವರಿಸಿ.
24.ನಗ್ನ ಚಿತ್ರ ಗಳ ವಿಕ್ಷಣೆಯ ಬಗ್ಗೆ ಜಾಗ್ರತೆ ವಹಿಸಿ.
25.ಬೀಡಿ ಸಿಗರೇಟ್ ಗಳ ಸೇವನೆಯ ಜಾಗ್ರತೆ ವಹಿಸಿ.
26.ಸತ್ಯ ಮಾತ್ರ ಹೇಳುವುದನ್ನು ಕಲಿಸಿ ಕೊಡಿ.
27.ಅನ್ಯರ ಸೊತ್ತು ತಿನ್ನುವುದನ್ನು ತಡೆಯಿರಿ.
28.ಮಕ್ಕಳಿಗೆ ನಾಶ ಬರುವಂತೆ ಪ್ರಾರ್ಥಿಸದಿರಿ.
29.7 ನೇ ಪ್ರಾಯದಲ್ಲಿ ನಮಾಝ್ ಮತ್ತು ಅದಕ್ಕೆ ಸಂಬಂದಪಟ್ಟ ವಿಷಯಗಳನ್ನು ಕಲಿಸಿ.
30.10 ನೇ ಪ್ರಾಯವಾದಲ್ಲಿ ನಮಾಝ್ ತ್ಯಜಿಸಿದರೆ ಸಣ್ಣ ಪ್ರಮಾಣದಲ್ಲಿ ಶಿಕ್ಷಿ ನೀಡಿ.
31.10 ನೇ ವಯಸ್ಸಿನಲ್ಲಿ ತಾಯಿ,ಸಹೋದರಿ ಮತ್ತಿತರ ಸ್ತ್ರೀಯರೊಂದಿಗೆ ಮಲಗದಂತೆ ಎಚ್ಚರವಹಿಸಿ.
32.ಸಣ್ಣ ವಯಸ್ಸಿನಲ್ಲೇ ಚಿಕ್ಕ ಪುಟ್ಟ ಖುರ್ ಆನ್ ಸೂರತ್ ಗಳನ್ನು ಕಲಿಸಿ ಕೊಡಿ.
33.ಜುಮುಅ , ಜಮಾಅತ್ ನಮಾಝ್ ನ ಮಹತ್ವ ಹೇಳಿ ಕೊಡಿ.
34.ಉಪವಾಸ ಹಿಡಿಯುವಂತೆ ನೋಡಿ ಕೊಳ್ಳಿ.
35.ಹೆಣ್ಣು ಮಕ್ಕಳು ಸಂಪೂರ್ಣ ಶರೀರ ಮುಚ್ಚುವಂತೆ ನೋಡಿ ಕೊಳ್ಳಿ.
36.ಗಂಡು ಮಕ್ಕಳಿಗೆ ಅವರ ವಸ್ತ್ರವೂ, ಹೆಣ್ಣು ಮಕ್ಕಳಿಗೆ ಹೆಣ್ಣು ಮಕ್ಕಳ ವಸ್ತ್ರ ದರಿಸುವಂತೆ ನೋಡಿ ಕೊಳ್ಳಿ.
37. 7 ನೇ ವಯಸ್ಸಾದ ಹೆಣ್ಣು ಮಗು ತಲೆ ಮುಚ್ಚುವಂತೆ ಆಜ್ಞ್ಞಾಪಿಸಿ.
38.ತಿನ್ನುವಾಗ , ಕುಡಿಯುವಾಗ, ಕೊಡುವಾಗ , ಪಡೆಯುವಾಗ ಬಲಕೈ ಉಪಯೊಗಿಸುವಂತೆಯೂ ಬಿಸ್ಮಿ , ಹಂದ್ ಹೇಳುವಂತೆಯೂ ಹೇಳಿ ಕೊಡಿ.
39.ಶರೀರ , ವಸ್ತ್ರ , ಸ್ಥಳ ಶುದ್ಧೀಕರಿಸುವಂತೆ ನೋಡಿ ಕೊಳ್ಳಿ.
40.ಎಲ್ಲಾ ಶುಕ್ರವಾರ ಉಗುರು ಕತ್ತರಿಸುವಂತೆ ಹೇಳಿ ಕೊಡಿ.
41.ಆಹಾರದ ಮುಂಚೆ ಹಾಗೂ ನಂತರ ಕೈ ತೊಳೆಯುವಂತೆ ನೋಡಿ ಕೊಳ್ಳಿ.
42.ತಪ್ಪು ಕಂಡು ಬಂದಲ್ಲಿ ಅಶ್ಲೀಲ ಮಾತುಗಳಿಂದ ಬಯ್ಯದೆ ಬಹಳ ಪ್ರೀತಿಯ ಮೂಲಕ ಹೇಳಿ ಸರಿ ಪಡಿಸಿ.
43.ಅಝಾನ್ ನ ವೇಳೆ ಮಾತಾಡುವುದನ್ನು ವಿರೊಧಿಸಿ.
44.ಅಝಾನ್ ಗೆ ಉತ್ತರಿಸುವುದನ್ನು ಮತ್ತು ನಂತರವಿರುವ ಪ್ರಾರ್ಥನೆಯನ್ನು ಕಲಿಸಿ ಕೊಡಿ.
45.ಸಾಧ್ಯವಾದರೆ ಎಲ್ಲಾ ಮಕ್ಕಳನ್ನೂ ಬೇರೆ ಬೇರೆ ಹಾಸಿಗೆಯಲ್ಲಿ ಮಲಗಿಸಿ.
46.ಅದು ಅಸಾದ್ಯವಾದಲ್ಲಿ ಗಂಡು ಮಕ್ಕಳನ್ನು ಒಂದು ರೂಮಿನಲ್ಲೂ ಹೆಣ್ಣು ಮಕ್ಕಳನ್ನು ಇನ್ನೊಂದು ರೂಮಿನಲ್ಲೂ ಮಲಗಿಸಿ.
47.ದಾರಿ ಮಧ್ಯೆ ಕಸ ಕಡ್ಡಿಗಳನ್ನು ಎಸೆಯದಂತೆ ಎಚ್ಚರವಹಿಸಿ.
48.ದಾರಿ , ಮಾರ್ಗ ಗಳಲ್ಲಿರುವ ಅಡೆ ತಡೆಗಳನ್ನು ನಿವಾರಿಸಲು ಹೇಳಿ ಕೊಡಿ.
49.ಅಂಗಡಿಗಳ ಬಳಿ, ಬಸ್ ಸ್ಟ್ಯಾಂಡ್ ಗಳಲ್ಲಿ ಅನಗತ್ಯ ನಿಲ್ಲದಂತೆ ನೋಡಿಕೊಳ್ಳಿ.
50.ಇಡೀ ಸಮಯ ಆಟ ಆಡದಂತೆ ನೋಡಿಕೊಳ್ಳಿ.
51.ಸಮಯವು ಅಮೂಲ್ಯವಾಗಿದೆ ಎಂದೂ ಅದನ್ನು ಅನಗತ್ಯ ಖರ್ಚು ಮಾಡದಂತೆ ಉಪದೇಶಿಸಿ.
52.ಸುನ್ನೀ ಮುಸಲ್ಮಾನರನ್ನು ಕಂಡರೆ ಸಲಾಂ ಹೇಳಬೇಕೆಂದು ಹೇಳಿಕೊಡಿ.
53.ನೆರೆಕರೆಯವರಿಗೆ, ಗೆಳೆಯರಿಗೆ , ಕುಟುಂಬಕ್ಕೆ ಉಪಕಾರ ಮಾಡುವ ಮನುಷ್ಯನಾಗಬೇಕೆಂದು ಹೇಳಿ ಕೊಡಿ.
54.ಅತಿಥಿ ಗಳನ್ನು ಗೌರವಿಸುವುದು, ಅವರನ್ನು ಸತ್ಕರಿಸುವುದರ ಬಗ್ಗೆ ಹೇಳಿಕೊಡಿ.
55.ಒಳ್ಳೆಯ ಕಾರ್ಯಗಳಲ್ಲಿ ಮಕ್ಕಳಿಗೆ ಧೈರ್ಯ ತುಂಬಿ ಕೊಡಿ.
56.ಖುರ್ ಆನ್ , ಹದೀಸ್ , ಇಮಾಮರುಗಳ ಗ್ರಂಥಗಳಲ್ಲಿ ಇರುವ ಸಜ್ಜನರ ಚರಿತ್ರೆ ಹೇಳಿ ಕೊಡಿ.
57.ಮಕ್ಕಳಿಗೆ ಹಣ ಹಾಗೂ ಇನ್ನಿತರ ಸೊತ್ತುಗಳು ನೀಡುವಾಗ ಎಲ್ಲರಿಗೂ ಒಂದೇ ರೀತಿಯಲ್ಲಿ ನೀಡಿ.
58.ಇಸ್ಲಾಮಿಕ್ ಪುಸ್ತಕ ಓದುವುದನ್ನು ರೂಡಿ ಮಾಡಿಸಿ.
59.ನೂತನವಾದಿಗಳ ಆಶಯಗಳನ್ನೂ ಅವರ ಗೆಳೆತನದಿಂದಲೂ ದೂರ ಸರಿಯುವಂತೆ ನೋಡಿಕೊಳ್ಳಿ.
60.ಹಣದೊಂದಿಗೆ ಪ್ರೀತಿ ಬರದಂತೆ ನೋಡಿಕೊಳ್ಳಿ.
61.ಮಕ್ಕಳು ವಿವಾಹ ಪ್ರಾಯ ತಲುಪಿದ್ದಲ್ಲಿ ಒಳ್ಳೆಯ ನೆಂಟಸ್ಥಿಕೆ ನೋಡಿ ವಿವಾಹ ಮಾಡಿ ಕೊಡಿ.
62.ಅನ್ಯ ಸ್ತ್ರೀ ಪುರುಷರು ಮಾತ್ರ ಇರುವ ಸಂದರ್ಭವನ್ನು ಇಲ್ಲವಾಗಿಸಿ.
63.ಭ್ರೂಣ ಹತ್ಯೆ, ಗರ್ಭ ಶಸ್ತ್ರ ಚಿಕಿತ್ಸೆ ಮಾಡುವುದನ್ನು ವಿರೋಧಿಸಿ.
64.ಮಣಿ ಗಂಟಿನ ಕೆಳಗೆ ವಸ್ತ್ರ ಇಳಿಯದಂತೆ ಗಂಡು ಮಕ್ಕಳನ್ನು ನೋಡಿಕೊಳ್ಳಿ.
65. ಸಂಪ್ರದಾಯವನ್ನು ತ್ಯಜಿಸದಂತೆ ನೋಡಿಕೊಳ್ಳಿ.
66.ರಾತ್ರಿ ಬೇಗ ಮಲಗುವಂತೆ ಹಾಗೂ ಬೆಳಿಗ್ಗೆ ಬೇಗನೆ ಎದ್ದು ಸುಬಹ್ ನಮಾಝ್ ಮಾಡುವಂತೆ ನೋಡಿಕೊಳ್ಳಿ.
67.ರಾತ್ರಿ ಮಲಗುವಾಗ ಖುರ್ ಆನಿನ ಕೆಲವು ಭಾಗಗಳು ಮತ್ತು ದ್ಸಿಕ್ರ್ , ತಸ್ಬೀಹ್, ಸ್ವಲಾತ್ ಹೇಳಿ ಮಲಗುವಂತೆ ಉಪದೇಶಿಸಿ.
68.ಹಿರಿಯರ ಮುಂದೆ ಕುಳಿತು ಕೊಳ್ಳಬಾರದೆಂದು ಅವರನ್ನು ಗೌರವಿಸುವಂತೆ ಕಲಿಸಿ ಕೊಡಿ.
69.ಹಿರಿಯ ಮಗ ತಂದೆಯ ಸ್ಥಾನದಲ್ಲಿ ಎಂದು ಹೇಳಿ ಕೊಡಿ.
70.ಬಿಳಿ ವಸ್ತ್ರದೊಂದಿಗೆ ಹೆಚ್ಚು ಪ್ರೀತಿ ಉಂಟು ಮಾಡಿ ಕೊಡಿ.
71.ಪೆರ್ನಾಳ್ ಗಳ ದಿವಸ ಗೆಳೆಯರೊಡನೆ ಸೇರಿ ಅಲ್ಲಾಹನು ಇಷ್ಟಪಡದಂತಹ ಸ್ಥಳಗಳಿಗೆ ಹೋಗುವುದರ ಬದಲಾಗಿ ಕುಟುಂಬಸ್ಥರ ಮನೆಗೆ ಹೋಗುವಂತೆ ನೋಡಿಕೊಳ್ಳಿ.
72.ಪ್ರವಾದಿ ಕುಟುಂಬವಾದ ಅಹ್ಲ್ ಬೈತ್ ನ ಬಗ್ಗೆ ವಿಶೇಷವಾಗಿ ಕಲಿಸಿಕೊಡಿ.
73.ತಲೆಕೂದಲು, ಗಡ್ಡ , ಮೀಸೆ ಸರಿಯಾಗಿ ಇಸ್ಲಾಮಿನ ಚೌಕಟ್ಟಿನೊಳಗಿರುವಂತೆ ನೋಡಿಕೊಳ್ಳಿ.
74.ದುಡುಕು ಮಾಡಬಾರದೆಂದು ಹೇಳುತ್ತಿರಿ.
75.ಯಾರೊಂದಿಗೂ ತರ್ಕ, ವಾದ ಮಾಡಬಾರದಾಗಿ ಹೇಳುತ್ತಿರಿ.
76.ತಂದೆ ತಾಯಿಯನ್ನು ಕಾಣುವಾಗ ಎದ್ದು ನಿಲ್ಲಲು ಕಲಿಸಿ.
77.ತಂದೆ ತಾಯಿ ಅನುಮತಿ ನೀಡದಿದ್ದಲ್ಲಿ ಯಾತ್ರೆ ಹೋಗದಂತೆ ಉಪದೇಶಿಸಿ.
78.ಅವರಲ್ಲಿ ಸುಳ್ಳು ಹೇಳದಂತೆ ಉಪದೇಶಿಸಿ.
79.ತಂದೆ ತಾಯಿಗಿಂತ ಪತ್ನಿ ಮಕ್ಕಳಿಗೆ ಬೆಲೆಕೊಡದಂತೆ ಉಪದೇಶಿಸಿ.
80.ತಂದೆ ತಾಯಿ ಕುಳಿತ ಸ್ಥಳಕ್ಕಿಂತ ಎತ್ತರದ ಸ್ಥಳದಲ್ಲಿ ಕುಳಿತುಕೊಳ್ಳದಂತೆ ನೋಡಿಕೊಳ್ಳಿ.
81.ವಿದ್ಯೆ ಕಲಿಸುವ ಉಸ್ತಾದ್ / ಗುರುಗಳ ಕೊರತೆ ಮಕ್ಕಳ ಎದುರಲ್ಲಿ ಹೇಳದಂತೆ ಎಚ್ಚರವಹಿ.
82.ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡರೆ ಬಯ್ಯದೆ , ಹೊಡೆಯದೆ ಇನ್ನೊಮ್ಮೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕೆಂಬ ಬುದ್ಧಿವಾದ ಹೇಳಿ.
83.ಪತ್ನಿ ಮಕ್ಕಳಿಗೆ ಧರಿಸಲು ವಸ್ತ್ರ ಕೊಳ್ಳುವಾಗ ತಂದೆ ತಾಯಿಯನ್ನು ಅವಗಣಿಸದಂತೆ ಹೇಳಿ.
84.ತಂದೆ ತಾಯಿಯರ ಶಾಪ ಲಭಿಸಿದ್ದಲ್ಲಿ ಉಂಟಾಗುವ ಭವಿಷ್ಯತನ್ನು ವಿವರಿಸಿ ಕೊಡಿ.
85.ಪತ್ನಿ ಮಕ್ಕಳಿಗೆ ಯಾವುದಕ್ಕೂ ಕೊರತೆ ಬರದಂತೆ ನೋಡಿಕೊಳ್ಳುವಂತೆ ಹೇಳುತ್ತಿರಿ.
86.ನಮಾಝ್ ಯಾ ಇನ್ನಿತರ ವೇಳೆಗಳಲ್ಲಿ ತಂದೆ ತಾಯಿಯರಿಗೆ ಪ್ರಾರ್ಥಿಸಲು ಮರೆಯದಂತೆ ಹೇಳುತ್ತಿರಿ.
87.ಜೀವಿಸಿದ್ದರೂ ಮರಣ ಹೊಂದಿದರೂ ತಂದೆ ತಾಯಿಯನ್ನು ಸಂದರ್ಶಿಸುವಂತೆ ಹೇಳುತ್ತಿರಿ.
88.ತಂದೆ ತಾಯಿ ರೋಗಿಯಾದಲ್ಲಿ ಅವರಿಗೆ ಪ್ರತ್ಯೇಕ ಪರಿಗಣನೆ ಕೊಡಬೇಕಾಗಿ ಹೇಳುತ್ತಿರಿ.
89.ಅಲ್ಲಾಹನ ಪರೀಕ್ಷೆಗೆ ವಿದೇಯನಾದ ಒಬ್ಬ ವ್ಯಕ್ತಿಯನ್ನು ಕಂಡರೆ "ಅಲ್ ಹಂದುಲಿಲ್ಲಾಹ್ " ಎಂದು ಹೇಳಲು ಕಲಿಸಿ ಕೊಡಿ.
90.ಆಪತ್ತು ಬಂದಲ್ಲಿ" ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್" ಎಂದು ಹೇಳಲು ಕಲಿಸಿ.
91."ಮಕ್ಕಳಾದ ನೀವು ಮಾತ್ರ ನಮ್ಮ ಆಸರೆ" ಎಂದು ಮಕ್ಕಳಲ್ಲೇ ಹೇಳುತ್ತಿರಿ.
92.ಮಕ್ಕಳ ಮಕ್ಕಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳಿ.
93.ಮಗಳ ಮಕ್ಕಳಿಗೆ ವಿಶೇಷ ಗೌರವ ಕೊಟ್ಟು ಮಗನ ಮಕ್ಕಳಿಗೆ ಬೇಲೆ ನೀಡದಂತವರಾಗಬೇಡಿ.
94.ಮಕ್ಕಳು ವಿದೇಶದಲ್ಲಾದರೆ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಹೋಗುವಾಗ ಸೊಸೆಯರನ್ನು ಜತೆಗೆ ಕರೆದೊಕೊಂಡು ಹೋಗಿ.
95.ಸೊಸೆಯರ ನಡುವೆ ಯಾವ ಕಾರಣಕ್ಕೂ ಹೆಚ್ಚು ಕಡಿಮೆ ಮಾಡುವವರಾಗಬೇಡಿ.
96.ಮಕ್ಕಳ ಒಳಿತಿಗಾಗಿ ಸದಾ ಸಮಯ ಪ್ರಾರ್ಥಿಸುತ್ತಿರಿ.
97.ಸೊಸೆಯ ಮನೆಯಲ್ಲಿ ಏನಾದರೂ ಕಾರ್ಯಕ್ರಮವಿದ್ದಲ್ಲಿ ಆಹ್ವಾನವಿದ್ದರೆ ಹೋಗಿ ಸಂತೋಷಪಡಿಸಿ.
98.ನಿನ್ನ ಸ್ವಂತ ತಂದೆ ತಾಯಿಯಂತೆ ನಾವು ಕೂಡಾ ನಿನ್ನ ತಂದೆ ತಾಯಿಯವರೇ ಎಂದು ಸೊಸೆಯಲ್ಲಿ ನಿಮ್ಮ ಸ್ನೇಹ ಪ್ರಕಟಿಸುತ್ತಿರಿ.
99.ಸ್ವಂತ ಹೆಣ್ಣು ಮಕ್ಕಳು ನಿಮ್ಮಲ್ಲಿ ಸೊಸೆಯರ ಬಗ್ಗೆ ಚಾಡಿ ಹೇಳಿದ್ದಲ್ಲಿ ಅದನ್ನು ಕೇಳಿ ಸೊಸೆಯರೊಂದಿಗೆ ವಾಗ್ವಾದಕ್ಕಿಳಿಯುವವರಾಗಬೇಡಿ.
100.ಇಂತಹ ಉಪದೇಶ ನೀಡದೆ ನಿಮ್ಮ ಮಕ್ಕಳು ದುನ್ಯಾ ಮತ್ತು ಪರಲೋಕದಲ್ಲಿ ನಿಮಗೆ ಉಪಕರಿಸುವರು ಎಂದು ಭಾವಿಸುವವರಾಗಬೇಡಿ.
🌷🌷🌷🌷🌷🌷🌷🌷🌷🌷🌷🌷
No comments:
Post a Comment