*ಈ ಬಿರುದುಗಳಿಗೆ ಕಡಿವಾಣ ಹಾಕುವವರು ಯಾರು?*
------------------------------------------------
✍️ ಮುನೀರ್ ಸಖಾಫಿ ಸಾಲೆತ್ತೂರು
ಹಳೇ ಕಾಲದ ಉಸ್ತಾದರುಗಳು ಹತ್ತಿಪ್ಪತ್ತು ವರ್ಷ ಕಲಿತು ಉನ್ನತ ವಿಧ್ಯಭ್ಯಾಸಕ್ಕಾಗಿ ಅರೆಬಿಕ್ ಕಾಲೇಜಿಗೆ ತೆರಳುತ್ತಿದ್ದರು.
ವೆಲ್ಲೂರು ಬಾಖಿಯ್ಯಾತ್ ಹಾಗೂ ಉತ್ತರ ಭಾರತದ ದಯೂಬಂದ್ ಗೆ ಅವರು ತೆರಳುತ್ತಿದ್ದರು.
ನಂತರ ನಮ್ಮ ನೆರೆಯ ಕೇರಳದಲ್ಲೇ ಪಟ್ಟಿಕ್ಕಾಡ್ ಕಾಲೇಜ್, ನಂದಿ ದಾರುಸ್ಸಲಾಮ್ ಕಾಲೇಜು, ಎ.ಪಿ. ಉಸ್ತಾದರ ಮರ್ಕಝ್, ಜಾಮಿಅ ಸಅದಿಯಾ, ಉಳ್ಳಾಲದ ಮದನೀ ಕಾಲೇಜ್, ಅಹ್ಸನೀ ಕಾಲೇಜ್ ಮುಂತಾದ ಉನ್ನತ ವಿಧ್ಯಾಭ್ಯಾಸದ ಕಾಲೇಜ್'ಗಳು ಅಸ್ತಿತ್ವಕ್ಕೆ ಬಂತು.
ಕನಿಷ್ಟ 8 ವರ್ಷ ದರ್ಸ್ ಕಲಿತು 2 ವರ್ಷ ಅಥವಾ 3 ವರ್ಷ ಕಾಲೇಜುಗಳಲ್ಲಿ ಕಲಿತವರೇ ಉಸ್ತಾದರುಗಳಲ್ಲಿ ಅಧಿಕ ಮಂದಿ ನಂತರ 2 ವರ್ಷದ ಮುತವ್ವಲ್ ಕೋರ್ಸನ್ನು 1 ವರ್ಷದ ಮುಖ್ತಸರ್ ಕೋರ್ಸ್ ಆಗಿ ಪರಿವರ್ತನೆ ಮಾಡಿದಾಗಲೂ ಉನ್ನತ ವಿಧ್ಯೆ ಲಭಿಸುತ್ತಿತ್ತು.
ಈಗೀಗ ಏನಾಗಿದೆ ಅಂದರೆ ಎಲ್ಲೂ ದರ್ಸ್ ಕಲಿಯದ ಕೆಲವು ಜಾಹಿಲ್'ಗಳನ್ನು ಸೇರಿಸಿ ಆನ್ಲೈನ್ ಕೋರ್ಸ್ ಎಂಬ ಹೆಸರಲ್ಲಿ 3 ತಿಂಗಳ ಕೋರ್ಸ್'ಗೆ ಸೇರಿಸಿ ಅವರಿಗೆ ವಾಟ್ಸಪ್'ನ ನಾಲ್ಕು ಕ್ಲಿಪ್'ಗಳನ್ನು ಕಳುಹಿಸಿ ಅವರಿಗೆ ಬಿರುದು ನೀಡಲಾಗುತ್ತಿದೆ.
ಮುಂದೆ ಅವರು ಬಂದು ನಾವು ಕೂಡಾ ಸನದ್ ಪಡೆದ ಆಲಿಮ್'ಗಳು ಎಂಬ ರೂಪದಲ್ಲಿ ವರ್ತಿಸುತ್ತಿರುವುದನ್ನು ಕಾಣುವಾಗ ಹಳೇ ಕಾಲದಲ್ಲಿ ಕಷ್ಟ ಪಟ್ಟು ಕಲಿತ ಉಸ್ತಾದರುಗಳ ಬಗ್ಗೆ ಸಾಮಾನ್ಯ ಜನರೆಡೆಯಲ್ಲಿ ಇವರು ಕೂಡಾ ವಾಟ್ಸಪ್ ಆಲಿಂಗಳೇ ಆಗಿರಬಹುದು ಎಂದು ಭಾವಿಸಿದರೆ ಅದಕ್ಕೆ ಹೊಣೆ ಯಾರು?
ಅನ್ಲೈನಲ್ಲಿ ಇಲ್ಮ್ ಕಲಿಯುವುದಕ್ಕೆ ನಾನಿಲ್ಲಿ ವಿರೋಧ ಮಾಡುತ್ತಿಲ್ಲ.
ಸೌಕರ್ಯವಾದಂತೆ ಇಲ್ಮ್ ಕಲಿಯಬಹುದು.
ಆದರೆ 3 ತಿಂಗಳ ಕೋರ್ಸ್ ಕಲಿತವರಿಗೆ ಈ ಬಿರುದು ಬೇಕೆ?
ನನಗೂ ಕೂಡಾ ಶಿಷ್ಯ ವೃಂದವಿದೆ ಎಂದು ಜನರೆಡೆಯಲ್ಲಿ ಹೆಸರಿಗಾಗಿ ಮಾಡುತ್ತಿದ್ದಾರೆಯೇ ಅಲ್ಲಾಹನೇ ಬಲ್ಲ. 🤷♂️🤷♂️
ಮೊನ್ನೆ ಒಂದು ಮೆಸೇಜ್ ನೋಡಿದೆ.
ಒಂದುವರೇ ತಿಂಗಳಲ್ಲಿ ಮುಗಿಯುವ ಕೋರ್ಸ್ ಅಂತೆ. ಕೊನೆಗೆ ಸನದ್ ಇದೆಯಂತೆ.
ನೋಡಿದಾಗ ನಾಚಿಕೆ ಮತ್ತು ಬೇಸರವೂ ಆಯಿತು.
ಇದಕ್ಕೆಲ್ಲಾ ಕಡಿವಾಣ ಹಾಕುವವರು ಯಾರು?
ಇದೀಗ ಗಂಡಸರಿಗಿಂತ ಹೆಣ್ಮಕ್ಕಳ ಅನ್ಲೈನ್ ಕೋರ್ಸೇ ಅಧಿಕ.
ಅದರ ಬಗ್ಗೆ ಹೇಳದಿರುವುದೇ ಒಳಿತು.
ಮದುವೆ ಪತ್ರಿಕೆಯಲ್ಲಿ ಮಧುಮಗಳ ಹೆಸರಿನೊಂದಿಗೆ ನಾಲ್ಕೈದು ಬಿರುದುಗಳು.
3 ತಿಂಗಳಲ್ಲಿ ಕಲಿತು ಹೆಣ್ಣು ಆಲಿಮತ್ ಅಂತೆ.
ತನ್ನನ್ನು ತಾನೇ ನಾನು ಆಲಿಮತ್ ಎಂದು ಕೊಚ್ವಿಕೊಳ್ಳುವ ಮಟ್ಟಕ್ಕೆ ಈ ಆಲಿಮತ್'ಗಳು ಇಳಿದಿದ್ದಾರೆ.
ಈಗೀಗ ಆ ಆಲಿಮತ್'ಗಳು ಯಾವ ಆಲಿಮ್ ಮಸ್'ಅಲ ಹೇಳಿದರೂ ಕೇಳಲು ತಯಾರಾಗುತ್ತಿಲ್ಲ. ಕಾರಣ ಅವರೂ ಕೂಡಾ ಆಲಿಮತ್'ಗಳು. 😃
ಇಲ್ಮ್ ಎಲ್ಲರೂ ಕಲಿಯಬೇಕು. ಅದಕ್ಕಿರುವ ಎಲ್ಲಾ ಒಳ್ಳೆಯ ಮಾರ್ಗವನ್ನು ಅನುಸರಿಸಬೇಕು.
ಆದರೆ ಪೂರ್ವೀಕ ಉಸ್ತಾದರಗಳು ಕಷ್ಟಪಟ್ಟು ಕಲಿತು ಬಿರುದು ಪಡೆದದ್ದನ್ನು ಹಿಯಾಳಿಸುವ ಹಂತಕ್ಕೆ ಇಂದು ಬಿರುದು ನೀಡುವವರು ಇಳಿದಿದ್ದಾರೆ ಎನ್ನುವಾಗ ತುಂಬಾ ಬೇಸರವಾಗುತ್ತಿದೆ.
😰😰😰
ಆಲಿಂಗಳಿಗೆ ಸಮೂಹದಲ್ಲಿ ಉನ್ನತ ಸ್ಥಾನಗಳಿವೆ.
ಪ್ರಾಯ ಎಷ್ಟೇ ಕಡಿಮೆಯಾದರೂ ಆಲಿಂಗಳು ಹಿರಿಯರು.
ಜಾಹಿಲ್'ಗಳು ಪ್ರಾಯದಲ್ಲಿ ಎಷ್ಟೇ ದೊಡ್ಡವರದರೂ ಕಿರಿಯರು ಎಂದು ಇಮಾಮ್ ಶಾಫಿಈ (ರ) ಹೇಳಿದ್ದೂ ಬಹಳ ಸತ್ಯದ ಮಾತು.
ವಾಟ್ಸಪಲ್ಲಿ ನಾಲ್ಕು ಕ್ಲಿಪ್ ಬಿಟ್ಟು ಬಿರುದು ನೀಡಲ್ಪಟ್ಟವರು ಇಂದು ಉಲಮಾಗಳಂತೆ ಪೋಸ್ ಕೊಡುತ್ತಿದ್ದಾರೆ.
ಹೊಟ್ಟೆಪಾಡಿಗಾಗಿ ಬೇರೆ ಏನೆಲ್ಲಾ ದುಡಿಮೆಗಳಿವೆ.
ಹಲಾಲಾದ ಇನ್ನಿತರ ಕಸುಬು ನಡೆಸಬಹುದು.
ತನ್ನ ಸಂಸ್ಥೆಯಲ್ಲಿ ಮುತಲ್ಲಿಮರು ಕಲಿಯುತ್ತಿದ್ದಾರೆ ಎಂದು ಸುಳ್ಳು ಹೇಳಿ ಹಣ ಕಲೆಕ್ಷನ್ ಮಾಡಿ ಅದನ್ನು ಗುಳುಮ್ ಮಾಡಿ ಸಂಸ್ಥೆಯ ವಾರ್ಷಿಕದಂದು ಸನದ್ ನೀಡಲು ರೆಡಿಮೆಡ್ ಬಿರುದುದಾರಿಗಳನ್ನು ನಿರ್ಮಿಸಲು ಆನ್ಲೈನ್ ಕೋರ್ಸ್ ನಡೆಸಿದರೆ
ಅಲ್ಲಾಹನ ಬಳಿ ಅದರ ಲೆಕ್ಕ ಕೊಡಬೇಡವೇ?
ಜಾಹಿಲ್'ಗಳು ಆಲಿಮರಂತೆ ವರ್ತಿಸುವುದು ಮಹಾ ಪಾಪಗಳಲ್ಲೊಂದು ಎಂದು ಹೇಳಿದ ಇಮಾಮರುಗಳಿಲ್ಲವೇ?
ಅಂತ್ಯ ದಿನದಲ್ಲಿ ಹೆಸರಿಗಾಗಿ ಇಲ್ಮ್ ಕಲಿಯುವ ಒಂದು ವಿಭಾಗ ಬರಲಿದ್ದಾರೆ.
ಅವರು ಇಲ್ಮ್ ಇಲ್ಲದೆ ಜನರಿಗೆ ಫತ್ವ ಕೊಡುವ ಮೂಲಕ ಅವರು ಮತ್ತು ಫತ್ವ ಕೇಳಿದವರೂ ದಾರಿ ತಪ್ಪಿದವರು ಎಂದು ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ್ದು ಎಷ್ಟು ಸರಿಯಾದ ಮಾತಾಗಿದೆ.
ಇದಕ್ಕೆ ಉಲಮಾಗಳು ಕಡಿವಾಣ ಹಾಕಲೇಬೇಕಾಗಿದೆ.
✍️. ಮುನೀರ್ ಸಖಾಫಿ ಸಾಲೆತ್ತೂರು
No comments:
Post a Comment