*ಬರಾಅತ್ ರಾತ್ರಿ:*
*ಇಬ್ನ್ ತೀಮಿಯ ಮತ್ತು ಅಲ್ಬಾನಿಗೆ ಪಥ್ಯವಾದದ್ದು ಸಲಪಿಗೆ ಯಾಕೆ ಪಥ್ಯವಾಗಲಿಲ್ಲ?* _____________________________
📝 *ಮುನೀರ್ ಸಖಾಫಿ,ಅಲ್ ಫುರ್ಖಾನೀ,ಸಾಲೆತ್ತೂರು*
ಬರಾಅತ್ ರಾತ್ರಿ ಎಂಬುವುದು ಮಹತ್ವವಿರುವ ರಾತ್ರಿ ಎಂಬುವುದರಲ್ಲಿ ಯಾರಿಗೂ ಅಭಿಪ್ರಾಯ ವ್ಯತ್ಯಾಸವಿಲ್ಲ.
ಖುರ್'ಆನ್ ಮತ್ತು ಹದೀಸುಗಳ ಮೂಲಕ ಅದು ಸಾಬೀತಾಗಿದೆ.
ಇಮಾಮರುಗಳ ಧಾರಾಳ ಗ್ರಂಥಗಳಲ್ಲಿ ಅದು ಕಾಣಬಹುದಾಗಿದೆ.
ಇಮಾಮರುಗಳ ಉದ್ಧರಣಿಗಳನ್ನು ಸಧ್ಯಕ್ಕೆ ಇಲ್ಲಿ ಬರೆಯಲು ಉದ್ದೇಶಿಸುವುದಿಲ್ಲ.
ವಹ್ಹಾಬಿಗಳ ಅಂಗೀಕೃತ ನಾಯಕರಾಗಿದ್ದಾರೆ ಇಬ್ನ್ ತೀಮಿಯ ಮತ್ತು ನಾಸಿರುದ್ದೀನ್ ಅಲ್ಬಾನೀ ಎಂಬವರು.ಅವರು ಬರಾಅತ್ ರಾತ್ರಿಯ ಮಹತ್ವವನ್ನು ಅವರ ಪುಸ್ತಕದಲ್ಲಿ ಬರೆದಿಟ್ಟಿದ್ದಾರೆ.
ಇಬ್ನ್ ತೀಮಿಯ ಹೇಳುವುದು ನೋಡಿ,
ليلة النصف من شعبان فقد روى في فضلها من الأحاديث المرفوعة والآثار ما يقتضي أنها ليلة مفضلة وأن من السلف من كان يخصها بالصلاة فيها
(اقتضاء الصراط المستقيم 138)
ಶಅಬಾನ್ 15 ರ ಮಹತ್ವ ವಿವರಿಸುವ ದಾರಾಳ ಹದೀಸುಗಳು ವರದಿಯಾಗಿದೆ.ಪೂರ್ವೀಕರು ಅಂದಿನ ರಾತ್ರಿ ಸುನ್ನತ್ ನಮಾಝ್ ಮಾಡುತ್ತಿದ್ದರು.
(ಇಖ್ತಿಳಾವುಸ್ಸಿರಾತುಲ್ ಮುಸ್ತಖೀಮ್ 138 ಪುಟ)
ವಹ್ಹಾಬಿಗಳ ಇನ್ನೊರ್ವ ನಾಯಕ ಅಲ್ಬಾನಿ ತನ್ನ ಪುಸ್ತಕದಲ್ಲಿ ಬರಾಅತ್ ರಾತ್ರಿ ಯ ಬಗ್ಗೆ ವರದಿಯಾದ ಹಲವಾರು ಹದೀಸುಗಳನ್ನು ವರದಿ ಮಾಡಿ ಕೊನೆಗೆ ಈ ರೀತಿ ಬರೆಯುತ್ತಾರೆ.
وجملة القول أن الحديث بمجموع هذه الطرق صحيح بلا ريب، والصحة تثبت بأقل منها عددا ما دامت سالمة من الضعف الشديد؛ كما في الشأن في هذا الحديث؛ فما نقله الشيخ القاسمي رحمه الله تعالى في (إصلاح المساجد) (ص 107) عن أهل التعديل والجرح أنه ليس في فضل ليلة النصف من شعبان حديث يصح؛ فليس مما ينبغي الاعتماد عليه، ولئن كان أحد منهم أطلق مثل هذا القول؛ فإنما أوتي من قبل التسرع وعدم وسع الجهد لتتبع الطرق على هذا النحو الذي بين يديك، و الله تعالى هو الموفق.)
السلسلة الصحيحة)
ಒಟ್ಟು ಸಾರಾಂಶ ಈ ರೀತಿ ಹೇಳಬಹುದಾಗಿದೆ,ಬರಾಅತ್ 15 ರ ಮಹತ್ವ ವಿವರಿಸುವ ಹದೀಸ್ ಸ್ವಹೀಹ್ ಆಗಿರುತ್ತದೆ.ಅತಿಯಾದ ದುರ್ಬಲ ಆಗದಿದ್ದರೆ ಆ ಹದೀಸ್ ಗೆ ಸ್ವಹೀಹ್ ನ ಸ್ಥಾನವಿದೆ.ಹೀಗಿರುವಾಗ ಶೈಖ್ ಖಾಸಿಮಿ ಇಸ್ಲಾಹಿಲ್ ಮಸಾಜಿದ್ ಎಂಬ ಗ್ರಂಥದಲ್ಲಿ (ಶೈಖ್ ಖಾಸಿಮಿ ಎಂಬವರು ವಹ್ಹಾಬಿಗಳ ಒಬ್ಬ ನಾಯಕ.ಆ ಖಾಸಿಮಿಗೆ ವಿರುದ್ಧವಾಗಿ ಅಲ್ಬಾನಿ ಇಲ್ಲಿ ಬರೆಯುತ್ತಿದ್ದಾರೆ)
ಬರಾಅತ್ ರಾತ್ರಿಯ ಮಹತ್ವ ವಿವರಿಸುವ ಹದೀಸ್ ವರದಿಯಾಗಿಲ್ಲ ಎಂಬ ಮಾತಿಗೆ ಯಾವುದೇ ಪರಿಗಣನೆ ನೀಡಬೇಕಾಗಿಲ್ಲ.
ಬರಾಅತ್ ರಾತ್ರಿಗೆ ಮಹತ್ವವಿಲ್ಲ ಎಂದು ಯಾರಾದರೂ ಹೇಳುವುದಾದರೆ ಆತ ಹದೀಸ್ ನ ಬಗ್ಗೆ ಕಲಿಯದೆ ಹೇಳುತ್ತಿದ್ದಾನೆ ಎಂದು ತಿಳಿದಿರಬೇಕಾಗಿದೆ.
(ಸಿಲ್ ಸಿಲತು ಅಹಾದೀಸುಸ್ಸಹೀಹ ಎಂಬ ಅಲ್ಬಾನಿಯ ಪುಸ್ತಕದಿಂದ)
ಇದರಿಂದ ಬರಾಅತ್ ರಾತ್ರಿಯ ಮಹತ್ವವನ್ನು ವಹ್ಹಾಬಿಗಳ ನಾಯಕರೇ ಸಮ್ಮತಿಸಿದ್ದಾರೆಂದು ವ್ಯಕ್ತವಾಯಿತು.
ಅವರಿಗೆ ಪಥ್ಯವಾದದ್ದು ವಹ್ಹಾಬಿಗಳಿಗೆ ಪಥ್ಯವಾಗದಿರಲು ಕಾರಣವೇನು?
ಅಲ್ಲಾಹನೇ ಬಲ್ಲ.
No comments:
Post a Comment