*ಪಂಪ್ವೆಲ್ ಮಸೀದಿಯ ಕೋಲು ಮತ್ತು ಕುಕ್ಕಿಲರ ಜಿಜ್ಞಾಸೆ*
😃😃😃
📝 ಮುನೀರ್ ಸಖಾಫಿ ಅಲ್ ಫುರ್ಖಾನೀ, ಸಾಲೆತ್ತೂರು
--------------------------------------------
ಏ.ಕೆ ಕುಕ್ಕಿಲ ಈದ್ ದಿನದಂದು ಪಂಪ್ವೆಲ್ ಮಸೀದಿಗೆ ಹೋಗಿದ್ದರಂತೆ.
ಅಲ್ಲಿನ ಖತೀಬರು ಕೈಯಲ್ಲಿ ಕೋಲು ಹಿಡಿದು ಖುತುಬ ಓದಿದ್ದರಂತೆ. ಅದನ್ನು ಕಂಡು ದಂಗಾದ ಕುಕ್ಕಿಲರಿಗೆ ಹಲವು ಜಿಜ್ಞಾಸೆ ಮೂಡಿದೆಯಂತೆ.
ಅದನ್ನು ಫೇಸ್ ಬುಕಲ್ಲಿ ಹರಿಯಬಿಟ್ಟಿದ್ದು ಅದು ವಾಟ್ಸಪ್ ಮೂಲಕ ನನಗೂ ಲಭಿಸಿದ್ದು ಅದಕ್ಕಾಗಿ ಇದನ್ನು ಇಲ್ಲಿ ಬರೆಯುತ್ತಿದ್ದೇನೆ.
4 ಮದ್ಸ್ ಹಬಿನ ಇಮಾಮರುಗಳು ಖುರ್'ಆನ್ ಮತ್ತು ಹದೀಸ್ ಮೂಲಕ ಅವರ ಗ್ರಂಥಗಳಲ್ಲಿ ಉಲ್ಲೇಖಿಸಿದ ವಿಷಯಗಳನ್ನು ಸ್ವೀಕರಿಸದೆ ಸ್ವತಂತ್ರವಾಗಿ ಚಿಂತಿಸಲು ಹೊರಟರೆ(ದೀನಿನ ಬಗ್ಗೆ ಯಾವುದೇ ಜ್ಞಾನವಿಲ್ಲದೆ) ಈ ರೀತಿಯ ಜಿಜ್ಞಾಸೆ ಮತ್ತು ಪೊಟ್ಟತ್ತರದಲ್ಲಿ ಬೀಳುವುದಂತೂ ಸತ್ಯ.
ಇಲ್ಲಿ ಖುತುಬಾದ ಮುಂಚಿರುವ ಎರಡು ವಿಷಯಗಳನ್ನು ನಾನು ಉಲ್ಲೇಖಿಸುವೆ.
1 ಮಆಶಿರ ಹೇಳುವುದು.
2 ಕೈಯಲ್ಲಿ ಕೋಲು ಹಿಡಿಯುವುದು.
*ಖುತುಬಾದ "ಮಆಶಿರ ವಿಳಿ"*
ಖುತುಬಾಗೆ ನೇತೃತ್ವ ನೀಡುವ ಖತೀಬ್ ಮಿಂಬರ್ ಹತ್ತುವ ಮುಂಚೆ ಒಬ್ಬರು ಜನರನ್ನುದ್ದೇಶಿಸಿ ನೀವು ಎಲ್ಲರೂ ಮೌನವಾಗಿರಿ, ಖುತುಬವನ್ನು ಆಲಿಸಿರಿ ಎಂದು ಹೇಳುತ್ತಾರೆ. ಇದನ್ನು ಮಆಶಿರ ಕರೆಯುವುದು ಎಂದು ಹೇಳುವರು.
ಇದಕ್ಕೆ ಹದೀಸ್'ನಲ್ಲಿ ಪ್ರಮಾಣವಿದೆ.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹಜ್ಜತುಲ್ ವದಾಹ್'ಗೆ ಮಕ್ಕಾಗೆ ಬಂದಾಗ ಮಿನಾದಲ್ಲಿ ಖುತುಬ ನಿರ್ವಹಿಸುವ ಮುಂಚೆ ಜರೀರ್ (ರ)ರಲ್ಲಿ ಜನರೊಂದಿಗೆ ಮೌನವಹಿಸುವಂತೆಯೂ ನಂತರದ ಖುತುಬಾವನ್ನು ಗಮನಕೊಟ್ಟು ಆಲಿಸುವಂತೆ ಹೇಳಲು ಆದೇಶಿಸಿದರು.(ವರದಿ, ಬುಖಾರಿ121, ಮುಸ್ಲಿಮ್ 65ನೇ ನಂಬ್ರ)
ಈ ಹದೀಸ್'ನ ಆಧಾರದಲ್ಲಿ ಮಆಶಿರ ಹೇಳುವುದು ಸುನ್ನತ್ ಆಗಿದೆಯೆಂದು ಇಮಾಮ್ ಇಬ್ನ್ ಹಜರುಲ್ ಹೈತಮೀ (ರ)ರು ತನ್ನ ತುಹ್ಫತುಲ್ ಮುಹ್ತಾಜ್'ನ 2/461ರಲ್ಲಿ ಹೇಳಿದ್ದಾರೆ.
ಖುತುಬಾದ ಮುಂಚೆ ಜನರು ಖುರ್'ಆನ್ ಪಾರಾಯಣ, ದ್ಸಿಕ್ರ್ ಮತ್ತು ದುಆಗಳಲ್ಲಿ ತಲ್ಲೀನರಾಗುತ್ತಾರೆ. ಅದನ್ನೆಲ್ಲಾ ನಿಲ್ಲಿಸಿ ಖುತುಬಾವನ್ನು ಆಲಿಸುವಂತೆ ಈ ಮೂಲಕ ಮಆಶಿರ ಹೇಳಿ ಜನರ ಗಮನವನ್ನು ಖತೀಬರ ಕಡೆಗೆ ಸೆಳೆಯುತ್ತಾರೆ.
ಇದು ಸುನ್ನತ್ ಆಗಿದೆಯೆಂದು ಎಲ್ಲಾ ಗ್ರಂಥಗಳಲ್ಲಿ ವಿವರಿಸಲಾಗಿದೆ.
ವಹ್ಹಾಬಿಸಮ್ ಮತ್ತು ಮೌದೂದಿಸಮ್ ತಲೆಗೆ ಹತ್ತಿದ ಕೆಲವು ಮಸೀದಿಗಳಲ್ಲಿ ಇದನ್ನು ನಿಲ್ಲಿಸಲಾಗಿದೆ ಹೊರತು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಅಂಗೀಕರಿಸುವ ಎಲ್ಲಾ ಮಸೀದಿಗಳಲ್ಲಿ ಇದು ಜಾರಿಯಲ್ಲಿರುವುದು ಕಾಣಬಹುದಾಗಿದೆ.
*2.ಕೈಯಲ್ಲಿ ಕೋಲು*
ಖುತುಬಾ ಪಾರಾಯಣಕ್ಕೆ ಮಿಂಬರ್ ಹತ್ತಿ ಖತೀಬರ ಕೈಯಲ್ಲಿ ಖಡ್ಗ ಅಥವಾ ಕೋಲನ್ನು ಮಆಶಿರ ಕರೆಯುವವರು ನೀಡುತ್ತಾರೆ.
ಈ ಕೋಲು ಕೊಟ್ಟು ಮಿಂಬರ್'ಗೆ ಹತ್ತಿಸುವ/ಮಆಶಿರ ಕರೆಯುವ ವ್ಯಕ್ತಿಗೆ ಮುರಖ್ಖಿ ಎಂದು ಅರೆಬಿಕ್ ನಲ್ಲಿ ಹೇಳಲಾಗುತ್ತದೆ.(ಮುರಖ್ಖಿ ಅಂದರೆ ಹತ್ತಿಸುವವ ಎಂದರ್ಥ)
ಮುರಖ್ಖಿಯ ಕೈಯಿಂದ ಕೋಲು ಪಡೆದು ಮಿಂಬರ್'ಗೆ ಹತ್ತುವುದರಿಂದ ಆ ಹೆಸರು ರೂಢಿಯಲ್ಲಿದೆ.
ಮುರಖ್ಖಿಯ ಕೈಯಿಂದ ಕೋಲು ಪಡೆದು ಅದನ್ನು ಎಡಗೆಯಲ್ಲಿ ಹಿಡಿದು ಖುತುಬಾ ನಿರ್ವಹಿಸುವುದು ಸುನ್ನತ್ ಆಗಿದೆಯೆಂದು ಎಲ್ಲಾ ಗ್ರಂಥಗಳಲ್ಲಿ ಕಾಣಬಹುದಾಗಿದೆ.
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಖುತುಬಾದ ವೇಳೆ ಕೈಯಲ್ಲಿ ಖಡ್ಗ ಅಥವಾ ಕೋಲನ್ನು ಹಿಡಿಯುತ್ತಿದ್ದರು ಎಂದು ಇಮಾಮ್ ಅಬೂದಾವೂದ್ (ರ) ವರದಿ ಮಾಡಿದ ಹದೀಸಿನಲ್ಲಿ ವರದಿಯಾಗಿದೆ.*
(ಅಬೂ ದಾವೂದ್ 1096)
ಈ ಹದೀಸಿನ ಆಧಾರದಲ್ಲಿ ಕೈಯಲ್ಲಿ ಕೋಲು ಹಿಡಿದು ಖುತುಬಾ ಪಾರಾಯಣ ಮಾಡುವುದು ಸುನ್ನತ್ ಎಂದು ಹೇಳಿದ ಕೆಲವೊಂದು ಕಿತಾಬ್ ಮತ್ತು ಅದರ ಪುಟಗಳನ್ನು ಇಲ್ಲಿ ನೀಡುತ್ತಿದ್ದೇನೆ.
1 ಅತ್ತಂಬೀಹ್ ಫೀ ಫಿಖಿಹಿಶಾಫಿಯೀ 1/44
2 ಅಲ್ ಬಯಾನ್ ಫೀ ಮದ್ಸ್ ಹಬಿಶ್ಶಾಫಿಈ 3/577
3 ಶರಹುಲ್ ಮುಹದ್ದಬ್ 1/528
4 ರೌಳತುತ್ತಾಲಿಬೀನ್ 2/32
5 ಮಿನ್'ಹಾಜುತ್ತಾಲಿಬೀನ್ ವ ಉಮ್ದತುಲ್ ಮುಫ್ತೀನ್ 1/48
6 ಉಮ್ದತುಸ್ಸಾಲಿಕ್ 1/83
7 ಅಸ್ನಲ್ ಮತಾಲಿಬ್ 1/260
8 ಅಲ್ ಗುರರುಲ್ ಬಹಿಯ್ಯ 2/31
9 ಫತ್'ಹುಲ್ ವಹ್ಹಾಬ್ 1/89
10 ಮನ್ಹಜುತ್ತುಲ್ಲಾಬ್ 1/24
11 ಅಲ್ ಮಿನ್ಹಾಜುಲ್ ಖವೀಮ್ 1/179
12 ತುಹ್ಫತುಲ್ ಮುಹ್ತಾಜ್ 2/462
13 ಅಲ್ ಇಖ್'ನಾಹ್ 1/183
14 ಮುಗ್ನಿಲ್ ಮುಹ್ತಾಜ್ 1/557
15 ನಿಹಾಯತುಲ್ ಮುಹ್ತಾಜ್ 2/326
16 ಮಹಲ್ಲಿ 1/327
17 ಹಾಶಿಯತುಲ್ ಜಮಲ್ 2/36
18 ಶರಹುಲ್ ಮುಖದ್ದಿಮತಿಲ್ ಹಲ್ರಮಿಯ್ಯ1/397
19 ಹಾಶಿಯತುಲ್ ಬುಜೈರಿಮಿ 1/393
20 ನಿಹಾಯತು ಝ್ಝೈನ್ 142
21 ಅಸ್ಸಿರಜುಲ್ ವಹ್ಹಾಜ್ 1/88
ಇನ್ನೂ ಅನೇಕ ಕಿತಾಬ್'ಗಳಲ್ಲೂ ಇದನ್ನು ಕಾಣಬಹುದು
*ಕೈಯಲ್ಲಿ ಖಡ್ಗ/ಕೋಲು ಯಾಕೆ?*
ಕುಕ್ಕಿಲರವರು ಪಂಪ್ವೇಲ್ ಖತೀಬರ ಕೈಯಲ್ಲಿ ಕೋಲು ಕಂಡಾಗ ಅದನ್ನೇ ಚಿಂತಿಸುತ್ತಾ ಕುಳಿತರಂತೆ.ಈ ಕೋಲು ಯಾಕೆ ಕೈಯಲ್ಲಿ ಹಿಡಿಯಬೇಕು?
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹಿಡಿಯುತ್ತಿದ್ದರೇ?
ಹಿಡಿದಿದ್ದರೆ ಎಲ್ಲಾ ಖುತುಬಾಗಳಲ್ಲಿ ಹಿಡಿಯುತ್ತಿದ್ದರೇ?
ಹಿಡಿದಿದ್ದಾದರೂ ಯಾಕಾಗಿ?
ಖುರ್'ಆನ್ ಮತ್ತು ಹದೀಸ್ ವ್ಯಾಖ್ಯಾನ ಗ್ರಂಥಗಳಾದ ಫಿಖ್ಹೀ ಗ್ರಂಥಗಳು ಅಧ್ಯಯನ ಮಾಡುತ್ತಿದ್ದರೆ ಈ ಜಿಜ್ಞಾಸೆ ಅವರಿಗೆ ಹುಟ್ಟುತ್ತಿರಲಿಲ್ಲ.
ಚಿಂತಿಸಿ ಕುಳಿತಿರುವಾಗ ಕುಕ್ಕಿಲರಿಗೆ ಒಂದು ಉತ್ತರ ಕೂಡಾ ದೊರಕಿತು.
ಮಾತ್ರ ಅದನ್ನು ಪುಟ್ಟ ಮಕ್ಕಳೊಂದಿಗೂ ಹೇಳುವಂತಿಲ್ಲ.
ಅದೇನೆಂದರೆ ಮಕ್ಕಾ ಮತ್ತು ಮದೀನದ ಶತ್ರುಗಳ ವೈರತ್ವ ಶಕ್ತಿಯಾಗಿದ್ದರಿಂದ ಆತ್ಮ ಸಂರಕ್ಷಣೆಗಾಗಿ ಕೈಯಲ್ಲಿ ಕೋಳು ಹಿಡಿದಿದ್ದಾಗಿರಬಹುದು.
😃😃😃
ಶತ್ರುಗಳನ್ನು ಹೆದರಿ ಖುತುಬಾ ಪಾರಾಯಣ ವೇಳೆ ಖಡ್ಗ ಹಿಡಿದಿದ್ದರೆ ಖುತುಬಾ ಆಲಿಸುವ ಸ್ವಹಾಬಿಗಳೂ ಕೂಡಾ ಖಡ್ಗ ಹಿಡಿಯಬೇಡವೇ?
ಸ್ವಹಾಬಿಗಳು ಖಡ್ಗ ಹಿಡಿದು ಜುಮಾಗೆ ಹೋದದ್ದಾಗಿ ಎಲ್ಲಿಯಾದರೂ ಕುಕ್ಕಿಲ ತಿಳಿದಿದ್ದಾರೆಯೇ?
ನೆರೆದ ಸಭಿಕರು ಕೈಯಲ್ಲಿ ಖಡ್ಗ ಅಥವಾ ಕೋಲು ಹಿಡಿಯಿವುದು ಸುನ್ನತ್ ಎಂದು ಯಾರಾದರೂ ಹೇಳಿದ್ದಾರೆಯೇ?
ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಖುತುಬಾದ ವೇಳೆ ಖಡ್ಗ ಹಿಡಿದ ಕಾರಣವೇನು?
ಇಮಾಮರುಗಳು ಅವರ ಗ್ರಂಥಗಳಲ್ಲಿ ಅದನ್ನು ಉಲ್ಲೇಖಿಸಿದ್ದಾರೆ
والحكمة في ذلك الاشارة الي ان هذا الدين قام بالسلاح(محلي 1/327)
ಶತ್ರುಗಳಿಂದ ಖಡ್ಗಗಳ ದಾಳಿಯನ್ನು ಸಹಿಸಿ ಈ ದೀನ್ ನೆಲೆ ನಿಂತಿದೆ ಎಂಬ ಸೂಚನೆಗಾಗಿ ಖಡ್ಗವನ್ನು ಹಿಡಿಯಲಾಗುತ್ತದೆ.(ಮಹಲ್ಲಿ 1/327)
ಖಡ್ಗ ಹಿಡಿಯಿವುದರ ಉದ್ದೇಶ ಸ್ಪಷ್ಟವಾಗಿ ಇಮಾಮರುಗಳು ವಿವರಿಸಿದ್ದಾರೆ.
ಇಸ್ಲಾಮಿನ ಕುರಿತು ಆಳವಾಗಿ ಅಧ್ಯಯನ ನಡೆಸಿದರೆ ಯಾರಿಗೂ ಯಾವುದರಲ್ಲೂ ಜಿಜ್ಞಾಸೆ ಹುಟ್ಟಲಾರದು.
No comments:
Post a Comment