Sunday, December 17, 2017

*ಅಲ್ಲಾಹನೊಂದಿಗೆ ಮಾತ್ರ ಸಹಾಯಾರ್ಥನೆ ಮಾಡಬೇಕೆನ್ನುವ ಚಲಪಿ ನರಕಕ್ಕೆ ಯಾಕೆ ಗೊತ್ತಾ?*

ಚಲಪಿಯ 👇🏾 ಚಿಂತನೆ..🤣

*_ಸಹೋದರರೇರೇ ಒಂದು ದಿನದ ಮಟ್ಟಿಗೆ ಸುನ್ನಿ,ಸಲಫಿ, ವಾದ ಪ್ರತಿವಾದ,ತರ್ಕ,ಕುತರ್ಕ ಸಮರ್ಥನೆ ಎಲ್ಲವನ್ನು ಒಂದು ದಿನದ ಮಟ್ಟಿಗೆ ಮುಂದೂಡಿ ಅಲ್ಲಾಹು ಕೊಟ್ಟ ಬುದ್ದಿಯಿಂದ ಚಿಂತಿಸೋಣ🤔🤔🤔🤔 ...._*
🔰🔰🔰🔰🔰🔰🔰🔰
*_ಉದಾಹರಣೆಗೆ_*👇🤔

_1)ಸಲಫಿಯಾದ ಅಬೂಬಕ್ಕರ್ ಅಲ್ಲಾಹುವಿನೊಂದಿಗೆ ಮಾತ್ರ ಪ್ರಾರ್ಥಿಸುತ್ತಾ ಅವನೊಂದಿಗೆ ಮಾತ್ರ ತನ್ನ ಮನಸ್ಸಿನ ನೋವನ್ನು ತೋಡಿಕೊಳ್ಳುತ್ತಾ  ತನಗೆ ಏನಾದರು ಅವಘಡ ಸಂಬವಿಸಿದರೆ ಅಲಾಹುವನ್ನು ಮಾತ್ರ ಪ್ರಾರ್ಥಿಸುತ್ತಾ ಅಲಾಹುವೊಂದಿಗೆ ತೋಡಿಕೊಳ್ಳುವ  ಒಬ್ಬ ಸಲಫಿ ಮರಣ ಹೊಂದಿದ ಎಂದಿಟ್ಟು ಕೊಳ್ಳಿ,,,_

_2)ಒಬ್ಬ ಎಪಿ,ಸುನ್ನಿ,ಅಥವಾ ಇಕೆ.ಸುನ್ನಿಸಮಸ್ತ ಆಶಯವನ್ನು ಹೊಂದಿದ ಅಬೂಬಕ್ಕರ್ ತನ್ನ ಕಷ್ಟ ದುಖ: ವನ್ನು ಅಲ್ಲಾಹುವಿನೊಂದಿಗೂ ಹೇಳುತ್ತಾನೆ ಎಲ್ಲಿಯಾದರೂ ದರ್ಗಾ ಸಿಕ್ಕಿದರೆ ಅವರೊಂದಿಗೂ ತೋಡಿಕೊಳ್ಳುತ್ತಾನೆ,, ಏನಾದರು ಅಪಘಾತ ಸಂಬವಿಸಿದರೇ ಅಲಾಹುವನ್ನು ಕರೆಯುತ್ತಾನೆ,,ಮುಯ್ಯುದ್ದಿನ್ ಶೈಖ್ ಮತ್ತು ಇತರರನ್ನು ಕರೆಯುತ್ತಾ ಒಬ್ಬ ಸುನ್ನಿ ಮರಣ ಹೊಂದುತ್ತಾನೆ,_

_3)ಕಿರ್ಶ್ಚಿಯನ್ ಆದ ವ್ಯಕ್ತಿ ಯೊಬ್ಬ ತನ್ನ ಎಲ್ಲಾ ಕಷ್ಟ ಸುಖ: ಗಳನ್ನು  ಏಸುವಿನೊಂದಿಗೆ ಕೇಳುತ್ತಾ ಮರಣ ಹೊಂದುತ್ತಾನೆ,_

_4)ಒಬ್ಬ ಹಿಂದು ರಾಮ,ಕೃಷ್ಣ ಇಂತಹ ಹಲವು ಮಂದಿಯನ್ನು ಕರೆದು ತಮ್ಮ ಕಷ್ಟ ದುಖ: ಗಳನ್ನು ತೋಡಿಕೊಳ್ಳುತ್ತಾರೆ ಎಂದಿಟ್ಟುಕೊಳ್ಳಿ,,_

_ಆದರೆ ಈ ನಾಲ್ಕು ವಿಭಾಗವು ಪರಲೋಕದಲ್ಲಿ ಅಲ್ಲಾಹನ ಮುಂದೆ ವಿಚಾರಣೆಯನ್ನು ಎದುರಿಸಲು ನಿಂತಿದೆ ಎಂದಿಟ್ಟುಕೊಳ್ಳಿ ...ಈ ನಾಲ್ಕು ವಿಭಾಗಗಳಲ್ಲಿ ಮೂರು ವಿಭಾಗದೊಂದಿಗೂ ಅಲ್ಲಾಹು ಕೇಳಬಹುದು , ಮುಯ್ಯುದ್ದೀನ್ ಶೈಖ್ ರನ್ನು ಕರೆಯಲು ಅಥವಾ ಏಸುವನ್ನು ಕರೆಯಲು,ಅಥವಾ ರಾಮನನ್ನು ಕರೆಯಲು , ನಿಮಗೆ ಹೇಳಿದವರಾರು. ...ಎಂದು ಕೇಳಬಹುದು....??_


_ಆದರೇ ಅಲ್ಲಾಹುವಿನೊಂದಿಗೆ ಪ್ರಾರ್ಥಿಸಿ ಅವನೊಂದಿಗೆ ಸಹಾಯ ಕೇಳಿ ಮರಣ ಹೊಂದಿದ  ಸಲಫಿ ಯೊಂದಿಗೆ  ಅಲ್ಲಾಹುವಿನೊಂದಿಗೆ ಮಾತ್ರ ನಿನ್ನ ಕಷ್ಟ ದುಖ: ಅಥವಾ ಸಂತಾನ ವನ್ನು ಕೇಳಿ ಯಾಕೆ ಮರಣ ಹೊಂದಿದೆ ..ಯಾಕೆ ಮಹತ್ಮಾಗಳನ್ನು ಕರೆಯದೆ ಯಾಕೆ ಮರಣ ಹೊಂದಿದೆ ಎಂದು ಕೇಳ ಬಹುದೇ... ಅಲ್ಲಾಹುವಿನೊಂದಿಗೆ ಕೇಳಿದ ಮಾತ್ರಕ್ಕೆ ಸಲಫಿಯನ್ನು ಸ್ವರ್ಗದಿಂದ ಹೊರಗೆ ತಳ್ಳಬಹುದೇ ಚಿಂತಿಸಿ  .ತರ್ಕ ಕುತರ್ಕ ಸಮರ್ಥನೆ ಎಲ್ಲಾವನ್ನು ಬದಿಗಿಟ್ಟು ಚಿಂತಿಸಿ...🤔ಸಹೋದರರೇ ಪರಲೋಕವನ್ನು ನಷ್ಟ ಪಡಿಸಬೇಡಿರಿ._

💥💥💥💥💥💥💥💥
*ಸುನ್ನಿಗಳ ಉತ್ತರ* 👇🏾👇🏾👇🏾👇🏾

*ಅಲ್ಲಾಹನು ಸುನ್ನಿಗಳೊಂದಿಗೆ ಕೇಳಬಹುದು,  ನೀವು ಯಾಕೆ ಅಲ್ಲಾಹನೇತರರೊಂದಿಗೆ ಸಹಾಯಾರ್ಥನೆ ಮಾಡಿದಿರಿ ಎಂದು..*

ಸುನ್ನಿಗಳ ಉತ್ತರ: ಅಲ್ಲಾಹನೇ, ನಾವು ನಿನ್ನ ಖುರ್ಆನ್ ನಲ್ಲಿ ಆಯತೊಂದನ್ನು ಕಂಡಿದ್ದೇವೆ. ಅದರಲ್ಲಿ ಹೀಗಿತ್ತು,
*"ನಿಮ್ಮ ಸಹಾಯಕನು ಅಲ್ಲಾಹು, ಅವನ ದೂತರು ಮತ್ತು ನಮಾಝನ್ನು ಸಂಸ್ಥಾಪಿಸುವ ಹಾಗೂ ಝಕಾತ್ ಕೊಡುವ ಸತ್ಯ ವಿಶ್ವಾಸಿಗಳು ಮಾತ್ರ" (ಅಲ್ ಮಾಇದ: 55)*
ಈ ಆಯತ್ ನಲ್ಲಿ ನಿನ್ನ ದೂತರಾದ ಪ್ರವಾದಿ ಗಳೊಂದಿಗೂ, ಸತ್ಯ ವಿಶ್ವಾಸಿಗಳೊಂದಿಗೂ ಸಹಾಯ ಬೇಡಬಹುದೆಂದು ಇದ್ದುದರಿಂದ ನಾವು ನಿನ್ನ ಇಷ್ಟ ದಾಸರಾದ ವಲಿಯ್ಯ್ ಗಳೊಂದಿಗೆ ಸಹಾಯಾರ್ಥನೆ ಮಾಡಿದ್ದೇವೆ ಎಂದು ಹೇಳಬಹುದು.

ಅಲ್ಲಾಹನು ಚಲಪಿ ಗಳೊಂದಿಗೆ ಕೇಳಬಹುದು,
ನೀವೇನು ಮಾಡಿದಿರೆಂದು.
ಚಲಪಿಗಳು: ಅಲ್ಲಾಹನೇ, ನಾವು ನಿನ್ನೊಂದಿಗಲ್ಲದೆ ಅವುಲಿಯಾಗಳು, ತಂಙಳ್ ಗಳು, ಸತ್ಯ ವಿಶ್ವಾಸಿಗಳು ಎಂಬ ವಂಚಕರೊಂದಿಗೆ ಯಾವತ್ತೂ ಸಹಾಯಾರ್ಥನೆ ಮಾಡಲಿಲ್ಲ ಎಂದು ಉತ್ತರಿಸಬಹುದು.

*ಅಲ್ಲಾಹನೊಂದಿಗೆ ಮಾತ್ರ ಸಹಾಯಾರ್ಥನೆ ಮಾಡಿದ ನಾವು ಮಾತ್ರ ಸ್ವರ್ಗಕ್ಕೆ ಹೋಗಲು ಅರ್ಹರು ಎಂದು ಚಲಪಿಗಳು ಭಾವಿಸುತ್ತಿದ್ದಂತೆ, ಅಲ್ಲಾಹನು ತನ್ನ ಮಲಕುಗಳೆಲ್ಲರನ್ನು ಕರೆದು...*
 ಮಲಕುಗಳೇ ನೀವು ಯಾರಿಗೆ ಸುಜೂದ್ ಹಾಕಿದಿರಿ ಎಂದು ಕೇಳಬಹುದು.
ಮಲಕುಗಳು: ಅಲ್ಲಾಹನೇ, ನಾವು ನಿನಗೆ ಸುಜೂದ್ ಮಾಡಿದೆವು ಮತ್ತು ನಿನ್ನ ಆಜ್ಙೆ ಪ್ರಕಾರ ಆದಂ (ಅ.ಸ) ರವರಿಗೂ ಸುಜೂದ್ ಮಾಡಿದೆವು ಎಂದು ಉತ್ತರಿಸಬಹುದು.

ಅಲ್ಲಾಹು ಇಬ್ಲೀಸ್ ನನ್ನು ಕರೆದು,
ಓ ಇಬ್ಲೀಸ್, ನೀನು ಏನು ಮಾಡಿದಿ ಎಂದು ಕೇಳಬಹುದು.
ಇಬ್ಲೀಸ್: ಅಲ್ಲಾಹನೇ, ನಾನು ನಿನಗೆ ಮಾತ್ರ ಸುಜೂದ್ ಮಾಡಿದೆ. ಮಣ್ಣಿನಿಂದ ಸೃಷ್ಟಿಸಲ್ಪಟ್ಟ ಮನುಷ್ಯನಿಗೆ ನಾನು ಯಾವತ್ತೂ ಸುಜೂದ್ ಮಾಡಿಲ್ಲ ಅಲ್ಲಾಹನೇ ಎಂದು ಉತ್ತರಿಸಬಹುದು.

ಅಲ್ಲಾಹು ಚಲಪಿ ಗಳನ್ನು ಇಬ್ಲೀಸ್ ನೊಂದಿಗೆ ನರಕಕ್ಕೆ ಹಾಕಲು ಸೂಚಿಸುತ್ತಾನೆ.
ಯಾಕೆಂದರೆ, ಚಲಪಿಗಳು ತಮಗೆ ಭೌತಿಕ ಸಂಕಷ್ಟಗಳು ಬಂದಾಗ ಅಲ್ಲಾಹನೇತರರೊಂದಿಗೆ ಸಹಾಯ ಬೇಡುತ್ತಾರೆ. ಆದರೆ, ಅಲ್ಲಾಹನ ಇಷ್ಟ ದಾಸರೊಂದಿಗೆ ಸಹಾಯ ಬೇಡುವ ವಿಷಯಕ್ಕೆ ಬಂದಾಗ ಇಬ್ಲೀಸ್ ನಂತೆ ಅಹಂಕಾರ ತೋರುತ್ತಾರೆ. ಹೊಟ್ಟೆ ನೋವು, ಜ್ವರ, ತಲೆ ನೋವು ಹಾಗೂ ಇನ್ನಿತರ ಸಂಕಷ್ಟಗಳಿಗೆ ಅಲ್ಲಾಹನ ಸೃಷ್ಟಿಗಳಲ್ಲಿ ಸಹಾಯ ಬೇಡುತ್ತಾರೆ. ಮತ್ತು ಸೀರಿಯಸ್ ಆದಾಗ ಡಾಕ್ಟರ್ ಕಾಲು ಹಿಡಿದು ಬದುಕಿಸುವಂತೆ ಅಂಗಲಾಚುತ್ತಾರೆ. ಮತ್ತೊಂದು ಕಡೆ ಅಲ್ಲಾಹನಲ್ಲಿ ಮಾತ್ರ ಸಹಾಯಾರ್ಥನೆ ಮಾಡುತ್ತೇವೆಂದು ಸುಳ್ಳು ಹೇಳಿ ವಂಚಿಸುತ್ತಾರೆ.
*ಅಲ್ಲಾಹನ ಆಜ್ಞೆಯನ್ನು ಧಿಕ್ಕರಿಸಿ, ಅಲ್ಲಾಹನ ಇಷ್ಟ ದಾಸರೊಂದಿಗೆ ಅಹಂಬಾವ ತೋರಿದ ಕಾರಣಕ್ಕೆ ಇಬ್ಲೀಸ್ ಮತ್ತು ಚಲಪಿಗಳನ್ನು ಅಲ್ಲಾಹು ನರಕಕ್ಕೆ ಹಾಕುತ್ತಾನೆ.*

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment