Tuesday, April 10, 2018

ಲೀಗಿನ ಅಸರೆಯಿಲ್ಲದಿರುತ್ತಿದ್ದರೆ ಎಸ್ಕೆ ಪಂಗಡ ಇಂದು ಪಾತಾಳದಲ್ಲಿರುತ್ತಿತ್ತು .

ಅದೆಲ್ಲಿಂದ ಬಂತು ಎಸ್ಕೆ ಎಸ್ ಎಸ್ ಎಪ್ಪಿಗೆ ಒಂದು ರಾಜಕೀಯ ಪಕ್ಷದೊಂದಿಗೆ ಇಷ್ಟೊಂದು ದೊಡ್ಡ ನಂಟು, ಇವರಿಬ್ಬರಿಗೂ ಇದೆಯಲ್ಲಾ ಬಿಡಿಸಲಾಗದಷ್ಟು ಅಂಟು,ಇದನ್ನು ವಿರೋದಿಸಿದವರಿಗೆ ಹಾಕುವರಲ್ಲಾ ಬೈಗುಳ, ನಿಂದನೆಯ ಗಂಟು.

ಕೇರಳದಲ್ಲಿ ಹೆಚ್ಚು ಮಸೀದಿ ಮೊಹಲ್ಲಾಗಳನ್ನು ಎಸ್ಕೆಗಳು ತಮ್ಮ ವಶದಲ್ಲಿರಿಸಿರುವುದುದು ನಿಜ ಆದರೆ ಇದೆಲ್ಲವೂ ಕೇರಳ ಜನ ಮಧ್ಯೆ ಸಮಸ್ತಕ್ಕೆ ದೊರೆತ ಅಂಗೀಕಾರ ಮತ್ತು ಸಮಸ್ತದ ಪೂರ್ವ ಉಲೇಮಾಗಳ ಕರಾಮತ್ ಎಂದು ಡಂಗುರ ಸಾರಿ ನಡೆಯುವುದು ಹಾಸ್ಯಾಸ್ಪದ.ಕಾರಣ
ಕೇರಳದಲ್ಲಿ ಹೆಚ್ಚಿನ ಮದ್ರಸಗಳು ಸಮಸ್ತ ಇಬ್ಬಾಗವಾಗುವ ಮೊದಲೇ ಅಂದಿನ ಸಮಸ್ತ ವಿಧ್ಯಾಬ್ಯಾಸ ಬೋರ್ಡಿನಲ್ಲಿ ಎಂಟ್ರಿ ಪಡೆದು ಸಮಸ್ತದ ಅದೀನದಲ್ಲಿ ಕಾರ್ಯಾಚರಿಸುತ್ತಿತ್ತು.
ಆ ಹಳೇ ಸಮಸ್ತದಲ್ಲಿ ನಮ್ಮ ಉಲಮಾ ದಿಗ್ಗಜರುಗಳಾದ ಖಮರುಲ್ ಉಲೇಮಾ ,ತಾಜುಲ್ ಉಲೇಮಾ ನೂರುಲ್ ಉಲಮಾ ಮುಂತಾದ ಅಗ್ರೇಸರರುಗಳೆಲ್ಲಾ ಶೋಬಿಸುವ ತಾರೆಗಳಾಗಿ, ಸಮಸ್ತದ ಬೆನ್ನೆಲುಬುಗಳಾಗಿ ಮಿಂಚುತ್ತಿದ್ದರು .ಇವರೆಲ್ಲರ ದುಡಿಮೆಯ ಫಲವಾಗಿ ಅಂದು ಅಷ್ಟೊಂದು ಮದರಸಗಳು ಸಮಸ್ತದ ಅದೀನದಲ್ಲಿ ಬರಲು ಕಾರಣವಾಯಿತು.
ಆದರೆ ಸಮಸ್ತದ ಕೆಲವರ ನಡೆ ಸರಿಯಿಲ್ಲವೆಂದು ಈ ಮಹೋನ್ನತರು ಹೊರ ಬಂದು ಹೊಸ ಸಮಸ್ತ ಸ್ಥಾಪಿಸಿದಾಗ ಮೇಲಿನ  ಮದರಸಗಳೆಲ್ಲವೂ ಮತ್ತೊಂದು ವಿಭಾಗದ ಪಾಲಾಯಿತು.ಸಮಸ್ತದಿಂದ ಹೊರಬಂದ
ತಾಜುಲ್ ಉಲೇಮಾ ಮತ್ತು ಎಪಿ ಉಸ್ತಾದರ ಹಿಂದೆ ಬಹಳಷ್ಟು ಅಭಿಮಾನಿಗಳು ಸೇರಿಕೊಂಡರು. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಎಪಿ ಉಸ್ತಾದ್ ನೇತ್ರತ್ವದ ಸುನ್ನೀ ಪ್ರಸ್ತಾನದ ಅಜೇಯ ಬೆಳವಣಿಗೆಯಿಂದ ಅಸೂಯೆಗೊಂಡ ಕೆಲವರು ಏನೆಲ್ಲಾ ತಂತ್ರ ಕುತಂತ್ರ ಪ್ರಯೊಗಿಸಿ ,ಅಪಪ್ರಚಾರ ಮಾಡಿ ಅವರ ಘನತೆ ಕುಗ್ಗಿಸಲು ಪ್ರಯತ್ನಿಸಿದರೂ ನೀರಿನಲ್ಲಿಟ್ಟ ಹೋಮದಂದತೆ ಎಲ್ಲವೂ ವಿಫಲವಾಗಿ ಹೋದವು .ಸುನ್ನೀ ಸಮುದಾಯವು ಎಪಿ ಉಸ್ತಾದರ ಹಿಂದೆ ಸೇರುವುದನ್ನು ತಡೆಯಲು ಲೀಗಿನೊಂದಿಗೆ ಸೇರಿ ರಾಜಕೀಯ ಆಟ ನಡೆಸಿದ್ದರಿಂದ ರಾಜಕೀಯ ಶಕ್ತಿಯಿಂದ ಇಂದು ಎಸ್ಕೆ ಪಂಗಡವು ಮಹಲ್ಲುಗಳಲ್ಲಿ ಅಧಿಕಾರ ಬದ್ರತೆಯನ್ನು ಹೊಂದಿದೆ ಆದರೆ ಆಧರ್ಷ ಇಂದಿಗೂ ಎಪಿ ಉಸ್ತಾದರ ಬಳಿಯೇ ಇದೆ . ಎಸ್ಕೆ ವಿಭಾಗದವರು ಪೂರ್ವಿಕರ ಕರಾಮತ್ ಹೇಳುವುದೊಂದನ್ನು ಬಿಟ್ಟರೆ ಇವರಲ್ಲಿ ಪೂರ್ವಿಕರ ಆಧರ್ಷವಿಲ್ಲ .ಇವರ ಕೋಲ ನೋಡಿದರೆ ಸಾಕು ಯಾರಿಗೂ ಅದು ಮನದಟ್ಟಾಗುತ್ತೆ.
ನ್ಯೂ ಜನರೇಶನ್ ಮಹಿಳೆಯರ ಬುರ್ಕಾದಂತೆ ಗಳಿಗೆಗೊಮ್ಮೆ  ಇವರ ಖಮೀಸಿನ ಕಲರ್ ಮತ್ತು ಮುಂಡಾಸಿನ ಡಿಝೆನ್ ಬದಲಾಗುತ್ತಾ ಇರ್ತವೆ.
ಇವರು ಎಪಿ ಉಸ್ತಾದರ ಹಸಿ ಮಾಂಸ ತಿನ್ನಲಷ್ಟೇ ಶಕ್ತರು ಇವರಿಂದ ದೀನಿಗೆ ಮತ್ತು ಸಮುದಾಯಕ್ಕೆ ಯಾವುದೇ ಉಪಕಾರವಿರದು

ಅಬ್ದುಲ್ಲಾಹ್
ಪುತ್ತೂರು

No comments:

Post a Comment