Saturday, April 14, 2018

*ಕಣ್ಣೀರಿನಿಂದ ಗೀಚಿದಾಗ...*

ಅಮ್ಮಾ ನನ್ನ ಕುದುರೆ ಹಸಿದಿದೆ.
ಅದಕ್ಕೆ ಒಂದಿಷ್ಟು ಹುಲ್ಲು ಬೇಕು.
ಹೋಗಲೇ ಅಮ್ಮಾ ಹುಲ್ಲುಗಾವಲಿರುವ ಕಾಡಿನಡೆಗೆ..
ಪಾಪ ಆ ಕಂದಮ್ಮಳಿಗೆ ಗೊತ್ತೇ ಇರಲಿಲ್ಲ ಹಸಿದ ಕಾಮಪೀಪಾಸುಗಳು ಪೊದೆಯ ಮೆರೆಯಲ್ಲಿ ಹೊಂಚು ಹಾಕಿದ್ದವೆಂದು!

ಛೇ...!
ನಿಜಕ್ಕೂ ಇದು ಗೀಚುವಾಗ ಕಣ್ಣಿನಂಚಿನಿಂದ ಕಣ್ಣೀರು ಜಿನುಗುತ್ತಿದೆ!
ಕಾಮಾಪೀಪಾಸುಗಳನ್ನು
ಕೊಚ್ಚಿ ಕೊಚ್ಚಿ ಹಾಕಬೇಕೆಂದು
ಮನಸು ಹಪಿಹಪಿಸುತ್ತಿದೆ.
ಮುಠ್ಠಾಳರು!

ಹಸಿದ ಹೆಬ್ಬುಲಿಯೊಂದು ತಾಯಿ ಜಿಂಕೆಯ ಮೇಲೆರಗಿದಾಗ ತಪ್ಪಿಸಿಕೊಂಡಿತು!
ಎಳೆಮರಿ ಜಿಂಕೆ ಓಡಲಾಗದೆ
ಹೆಬ್ಬುಲಿಯ ಬಾಯಲ್ಲಿ ಸಿಲುಕಿಕೊಂಡಿತು!
ಹಸಿದ ಹೆಬ್ಬುಲಿಯಾದರೂ
ಮರಿ ಜಿಂಕೆಯ ನುಂಗದೆ ಮಮತೆ ತೋರಿ ತಲೆ ಸವರಿ
ಬಿಟ್ಟು ಬಿಟ್ಟಿತು!

ಆದರೆ ಕ್ರೂರಿಗಳಿಗೆ ಮಾತೇ ಬಾರದ ಆ ವನ್ಯಜೀವಿಯ ದಯೆ ಕೂಡ ಇರಲಿಲ್ಲ!

ಹೌದು!
ಮನುಷ್ಯ ಮ್ರಗಕ್ಕಿಂತಲೂ ಕೀಳಾಗುತ್ತಿದ್ದಾನೆ!
ಅಧಿಕಾರ ದಾಹ ಅಕ್ಷರಶಃ ಅವನನ್ನು ಪಿಶಾಚಿಯನ್ನಾಗಿಸುತ್ತಿದೆ.

ಪಾಪ...
ಆ ಮುದ್ದು ಕಂದಮ್ಮಳು ಅದೆಷ್ಟು ಕೂಗಿರುವಳು....
ಅಮ್ಮಾ...ಅಮ್ಮಾ....ಅಮ್ಮಾ...
ಅದೆಷ್ಟು ಗೋಗೆರಿದಿರುವಳು...
ದಿವಸಗಳಷ್ಟು ಕೂಡಿ ಹಾಕಿ ಅನ್ನ ಹಾಕದ ನರರಾಕ್ಷರ ಮುಂದೆ ಅನ್ನಕ್ಕಾಗಿ ಅದೆಷ್ಟು ಬೇಡಿರುವಳು...!

ಕ್ರೂರರು ಬಿಡಲಿಲ್ಲ!
ಹಸಿದು ಶವಗುಚ್ಚವಾಗಿ ಬಿದ್ದ
ಕಂದಮ್ಮಳ ಮೇಲೆ ಮತ್ತೂ ಮತ್ತೂ ಎರಗಿದರು!
ರಾಕ್ಷಸರು!
ಇದೀಗ ತ್ರಾಣವಿಲ್ಲದ ಶರೀರ ಜೋರಾಗಿ ಅಮ್ಮಾ ಎಂದು ಕೂಗಿದಾಗಲೂ ಶಬ್ದವೇ ಬಂದಿರಲಿಕ್ಕಿಲ್ಲ!

ರಾಕ್ಷಸರು ಅಕ್ಷರಶಃ ಶೈತಾನುಗಳಾಗಿದ್ದರು!
ಭೋಗಿಸಿ ಭೋಗಿಸಿ ಶವಗುಚ್ಚವಾಗಿ ಮಾಡಿದ ನಂತರವೂ ಬಿಡಲಿಲ್ಲ.
ಹಸು ಕಂದಮ್ಮಳ ಎದೆಮೇಲೆ
ಮೊಣಕಾಲು ಅದುಮಿ ಕತ್ತನ್ನು ಹಿಸುಕಿ ಕೊಲ್ಲಲು ಶ್ರಮಿಸುವಾಗಲು,
ಆ ಪಿಶಾಚಿಯೊಬ್ಬ ಹೇಳಿದ,
ಬಿಡಿ, ಕೊನೆಯದಾಗಿ ನನಗೆ ಮತ್ತೊಮ್ಮೆ ಭೋಗಿಸಬೇಕು!!

ಅಬ್ಬಾ... ಅದೆಂತಹ ಕಠೋರರು!
ಕಲ್ಲು ಹ್ರದಯದವರು!
ಛೇ...
ಆ ನೀಚ ಹ್ರದಯವನ್ನು ಕಲ್ಲಿಗೆ ಹೋಲಿಸಬಾರದು.
ಕಲ್ಲುಗಳಿಗೂ ಭಯ' ದಯೆ ಇದೆಯಂತೆ.
ಹಾಗಾಗಿಯೇ ಬಂಡೆಕಲ್ಲುಗಳಿಂದ ನೀರು ಒಸರುತ್ತದೆಯಂತೆ.

ಜಗತ್ತೇ ತಲೆ ತಗ್ಗಿಸಿದೆ!
ಜಗತ್ತಿನಾದ್ಯಂತ ಪ್ರತಿಭಟನೆಯ ಕಾವು ಬಿಸಿಯೇರಿದೆ‌.
ನಿಲ್ಲಬಾರದು!
ಪ್ರತಿಭಟಿಸುತ್ತಲೇ ಇರಬೇಕು.
ಮುದ್ದು ಕಂದಮ್ಮಳ ರಕ್ತಹೀರಿದ ಪ್ರತಿಯೊಬ್ಬ ರಾಕ್ಷಸನೂ ನೇಣುಗಂಬ ಏರುವವರೆಗೂ....

😥  ಅಬೂಶಝ
(ಅಧ್ಯಕ್ಷರು, ಸುನ್ನೀ ಸಾಹಿತ್ಯ ಮಂಡಳಿ ಮಂಗಳೂರು)

No comments:

Post a Comment