#ಜಸ್ಟೀಸ್ ಫಾರ್ ಆಸಿಫಾ ಬಾನು#
*ಮರ್ಕಝ್ ಲಾ (LAW) ಕಾಲೇಜು ಕಾನೂನು ನೆರವು ನೀಡಲಿದೆ*
ಕ್ಯಾಲಿಕಟ್: ಜಮ್ಮು ಕಥುವಾ ಪ್ರದೇಶದ ಎಂಟರ ಹರೆಯದ ಆಸಿಫಾ ಬಾನು ಎಂಬ ಬಾಲೆಯನ್ನು ಸರಣಿ ಅತ್ಯಾಚಾರಗೈದು ಹತ್ಯೆಗೈದ ಕೇಸಿನಲ್ಲಿ ಸಂತ್ರಸ್ತೆಯ ಕುಟುಂಬದವರಿಗೆ ನ್ಯಾಯ ಒದಗಿಸುವಂತೆಯೂ, ಆರೋಪಿಗಳಿಗೆ ಕಠಿಣ ಶಿಕ್ಷೆ ಲಭ್ಯವಾಗಿಸುವ ನಿಟ್ಟಿನಲ್ಲಿ ಅಗತ್ಯವಾದ ಕಾನೂನು ನೆರವು ನೀಡಲು ಮರ್ಕಝ್ ಲಾ ಕಾಲೇಜು ಡೈರಕ್ಟರೇಟ್ ತೀರ್ಮಾನಿಸಿದೆ.
ಸಂಸ್ಥೆಯಲ್ಲಿ ಕಾರ್ಯಚರಿಸುವ ಲೀಗಲ್ ಎಯ್ಡ್ ಕ್ಲಿನಿಕ್ಕ್ ಮುಖಾಂತರವಾಗಿದೆ ಕಾನೂನು ನೆರವು ನೀಡುವುದು.
ದೇಶ ಕಂಡ ಅತ್ಯಂತ ಭೀಕರವಾದ ಕ್ರತ್ಯದ ಹಿಂದಿರುವ ಆರೋಪಿಗಳು ರಾಜಕೀಯವಾಗಿಯೂ ಆರ್ಥಿಕವಾಗಿಯೂ ಪ್ರಭಾವಿಗಳಾಗಿದ್ದಾರೆ.
ಸಂತ್ರಸ್ತೆಯ ಪರವಾಗಿ ಕಾನೂನು ಹೋರಾಟ ಮಾಡಿದ ವಕೀಲರಾದ ದೀಪಿಕಾ ರಜಾವತ್ ಈಗಾಗಲೇ ಅನೇಕ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ.
ಜಮ್ಮುವಿನ ಒಂದು ಸಂಘ ವಕೀಲರು ತೀವ್ರವಾಗಿ ಒತ್ತಡ ಹೇರಿದ್ದುದರ ಹೊರತಾಗಿಯೂ ಆಸಿಫಾ ಕೇಸನ್ನು ನ್ಯಾಯಲಯದ ಮುಂದೆ ಹಾಜರು ಪಡಿಸಿದ ದೀಪಿಕಾ ರಜಾವತರಿಗೆ ಡೈರಕ್ಟರೇಟ್ ಆಭಿನಂದನೆ ಸಲ್ಲಿಸಿದೆ.
ಮರ್ಕಝ್ ಅಧೀನದಲ್ಲಿ ಕಾಶ್ಮೀರದಲ್ಲಿ ಕಾರ್ಯಚರಿಸುತ್ತಿರುವ ಸಂಸ್ಥೆಗಳ ಮೇಧಾವಿ ಶೌಖತ್
ನಈಮಿಯವರ ನೇತೃತ್ವದಲ್ಲಿ
ಬೆದರಿಕೆಗೆ ಹೆದರಿ ಪಲಾಯನಗೈದ ಆಸಿಫಾಳ ಕುಟುಂಬವನ್ನು ಪತ್ತೆ ಹಚ್ಚಿ ಸಾಂತ್ವನ ಹೇಳಿ ಸಹಾಯಧನ ನೀಡಿ ಧೈರ್ಯ ತುಂಬಲಾಗಿತ್ತು.
ಆಸಿಫಾಳ ಕುಟುಂಬ ಸಹಿತ ಬಖರ್ ವಾಲ್ ವಿಭಾಗಕ್ಕೆ ವಿದ್ಯಾಭ್ಯಾಸ ನೀಡಿ ಸಬಲೀಕರಿಸುವ ಪಧ್ಧತಿಗಳನ್ನು ಕಾಶ್ಮೀರದಲ್ಲಿ ಮರ್ಕಝ್ ಆಯೋಜಿಸುತ್ತಿದೆ.
ಬಖರ್ ವಾಲ್ ವಿಭಾಗಕ್ಕೆ ನಿರ್ಭಯವಾಗಿ ಬದುಕುವ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಮರ್ಕಝ್ ಮೇಧಾವಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ತುರ್ತು ಸಂದೇಶಗಳನ್ನು ನಿನ್ನೆ ರವಾನಿಸಿದ್ದರು.
ಕಾನೂನು ನೆರವು ನೀಡುವ ಕಾರ್ಯಚರಣೆಗಳನ್ನು
ಜಮ್ಮುವಿನ ಪೂಂಚ್'ನಲ್ಲಿ ಕಾರ್ಯಚರಿಸುವ ಮರ್ಕಝ್'ನ ಯಾಸೀನ್ ಇನ್ಸಿಸ್ಟಿಟ್ಯೂಟ್ ಕೇಂದ್ರವಾಗಿಸಿ ಏಕೀಕರಿಸಲಾಗುವುದು.
ಸದರಿ ಕೇಸನ್ನು ಸಾರ್ವಜನಿಕರ ಗಮನಕ್ಕೆ ತರಲು ಪ್ರಯತ್ನಿಸಿದ ಅಡ್ವೊಕೇಟ್ ದೀಪಿಕಾ ರಜಾವತ್ ಸಹಿತ ಕಾನೂನು ತಜ್ಞರ ಸಲಹೆ ನಿರ್ದೇಶಗಳನ್ನು ಪಾಲಿಸಿ ಕಾರ್ಯಚರಿಸಲಾಗುವುದು.
ಮುಂದಿನ ಅಧ್ಯಯನ ವರ್ಷದಿಂದ ಕಾಶ್ಮೀರದಿಂದ ಆಯ್ದ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೊಂದಿಗೆ ಮರ್ಕಝ್ ಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಸೌಕರ್ಯಗಳನ್ನು ಏರ್ಪಡಿಸಲಾಗುವುದೆಂದು ಮರ್ಕಝ್ ಲಾ ಕಾಲೇಜು ಡೈರಕ್ಟರೇಟ್ ತೀರ್ಮಾನಿಸಿದೆ.
ಮರ್ಕಝ್ ಲಾ ಕಾಲೇಜು ನಿರ್ದೇಶಕ ಡಾ ಎ. ಪಿ. ಅಬ್ದುಲ್ ಹಕೀಮ್ ಅಝ್ಹರಿಯವರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ಎಕ್ಸೀಕ್ಯೂಟಿವ್ ಡೈರಕ್ಟರ್ ಅಮೀರ್ ಹಸನ್, ಸಹ ನಿರ್ದೇಶಕ ಅಡ್ವಕಟ್ ಸಮದ್ ಪುಲಿಕ್ಕಾಡ್ ಮುಂತಾದವರು ಉಪಸ್ಥಿತರಿದ್ದರು.
ಕನ್ನಡಕ್ಕೆ
ಅಬೂಶಝ

No comments:
Post a Comment