Wednesday, November 14, 2018

*ಮೀಲಾದುನ್ನಬೀ ಭಾಗ = 01*

*ಮೀಲಾದುನ್ನಬೀ*

*ಭಾಗ =01*
*••••••••••••••••••••••••••••••••••••*
*📝 ಮುನೀರ್ ಸಖಾಫಿ, ಸಾಲೆತ್ತೂರು*
*°°°°°°°°°°°°°°°°°°°°°°°°°°°°°°°°°*

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು, ಸ್ವಹಾಬಿಗಳು, ತಾಬಿವುಗಳು, ಇಮಾಮರುಗಳು (ಪುರಾವೆಗಳ ಮೂಲಕ) ನಮಗೆ ಕಲಿಸಿ ಕೊಟ್ಟ ಆದರ್ಶವಾಗಿದೆ ಸುನ್ನತ್ ಜಮಾಅತ್.
ಹಲವಾರು ಪುಣ್ಯ ಕರ್ಮಗಳನ್ನು ಕೆಟ್ಟ ಆಚಾರವಾಗಿ ಚಿತ್ರೀಕರಿಸಿ ಮುಸ್ಲಿಮರನ್ನು ಮುಶ್ರಿಕರೆಂದು, ಕಾಫಿರರೆಂದು ಹೇಳಿ ಸಮುದಾಯದ ಮಧ್ಯೆ ಭಿನ್ನತೆಯನ್ನು ಸೃಷ್ಠಿಸಿದವರಾಗಿದ್ದಾರೆ ಇಲ್ಲಿನ ನೂತನವಾದಿಗಳಾದ ಸಲಪಿ, ಜಮಾಅತೇ ಇಸ್ಲಾಮೀ, ತಬ್ಲೀಗಾದಿಗಳು.

ರಬೀವುಲ್ ಅವ್ವಲ್ 12 ರಂದು  ಪ್ರವಾದೀ ಜನ್ಮ ದಿನಾಚರಣೆ ಮಾಡುವಾಗ ವಹ್ಹಾಬಿಗಳು ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ.
ಅವುಗಳಲ್ಲಿ ಕೆಲವೊಂದು ಈ ರೀತಿಯಾಗಿರಬಹುದು.

1. ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ತನ್ನ ಜನ್ಮ ದಿನಾಚರಣೆ  ಆಚರಿಸಿದ್ದರೇ?

2. ಸ್ವಹಾಬಿಗಳು ಯಾರಾದರೂ ಅಚರಿಸಿದ್ದಾರೆಯೇ?

3. ಅವರು ಅಂದು ಓದಿದ ಮೌಲಿದ್ ಯಾವುದು?

4. ಅವರು ಮೆರವಣಿಗೆಗೆ ಹಿಡಿದ ಧ್ವಜದ ಬಣ್ಣ ಯಾವುದು?

 ಹೀಗೇ ಹಲವಾರು ಪ್ರಶ್ನೆಗಳು.
ವಾಸ್ತವದಲ್ಲಿ  ಮೌಡ್ಯತನದಿಂದ ಕೂಡಿದ ಪ್ರಶ್ನೆಯಾಗಿದೆ ಇದು.
ವಿಷಯವನ್ನು ಸರಿಯಾಗಿ ಗ್ರಹಿಸಿದಲ್ಲಿ ಇಂತಹಾ ಪ್ರಶ್ನೆಗಳು ಉದ್ಭವಿಸಲಾರದು.
ಇಂಶಾ ಅಲ್ಲಾಹ್ ಎಲ್ಲವನ್ನೂ ಸರಿಯಾಗಿಯೇ ವಿವರಿಸುವೆನು.

ರಬೀವುಲ್ ಅವ್ವಲ್ 12 ರಂದು   ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮ ದಿನ ಆಚರಣೆಗೆ ಮೀಲಾದುನ್ನಬೀ, ಈದ್ ಮೀಲಾದ್ ಎನ್ನುತ್ತೇವೆ.

*ಪ್ರವಾದೀ ಜನ್ಮ ಯಾವಾಗ?*

ಈದ್ ಮೀಲಾದ್ ಆಚರಿಸುವವರಿಗೆ ಪ್ರವಾದಿವರ್ಯರು ಯಾವಾಗ ಜನಿಸಿದರು ಎಂಬ ನಿಖರವಾದ ಮಾಹಿತಿ ಇಲ್ಲ ಎಂಬ ಆರೋಪವನ್ನು ವಹ್ಹಾಬಿಗಳು ಹೊರಿಸುತ್ತಾರೆ.
ಹಿಜ್ರ 150 ರಲ್ಲಿ ಮರಣ ಹೊಂದಿದ ಇಮಾಮ್ ಇಬ್ನ್ ಇಸ್'ಹಾಕ್ (ರ)ಅದಕ್ಕೆ ಈ ರೀತಿ ಉತ್ತರಿಸುತ್ತಾರೆ,
*قال ابن اسحاق :ولد رسول الله صلي الله عليه وسلم يوم* *الاثنين ،لاثنتي عشرة ليلة خلت من شهر ربيع الاول ،عام الفيل*
*(سيرة ابن هشام 1/161)*

*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಗಜ ವರ್ಷದ ರಬೀವುಲ್ ಅವ್ವಲ್ 12 ರಂದು ಸೋಮವಾರ ಜನಿಸಿದರು.*
*(ಸೀರತು ಇಬ್ನಿ ಹಿಶಾಂ 1/161).*
ಈ ರೀತಿ ನೂರಾರು ಗ್ರಂಥಗಳಲ್ಲಿ ದಾಖಲಿಸಲ್ಪಡಲಾಗಿದೆ.

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಸೋಮವಾರ ದಿನ ಜನಿಸಿದರೆಂದು ಇಮಾಮ್ ಮುಸ್ಲಿಂ ವರದಿ ಮಾಡಿದ ಹದೀಸಿನಲ್ಲಿದೆ.


*عَنْ أبِي قَتَادَةَ الأنْصَارِيِّ رَضِيَ اللهُ عَنْهُ أنَّ رَسُولَ الله صلى الله عليه وسلم سُئِلَ، عَنْ صَوْمِ الاثْنَيْنِ؟ فَقَالَ: «فِيهِ وُلِدْتُ وَفِيهِ أُنْزِلَ عَلَيَّ». ( مسلم 2750)*


*ಅಬೂಖತಾದ (ರ) ನಿವೇದನೆ, ಸೋಮವಾರದ ಉಪವಾಸದ ಬಗ್ಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಕೇಳಲ್ಪಟ್ಟಾಗ ಅಂದು ನಾನು ಜನಿಸಿದ ದಿನವೆಂದೂ ಆ ದಿನ ನನಗೆ ಖುರ್ ಆನ್ ಅವತರಿಸಲ್ಪಟ್ಟಿದೆ ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಉತ್ತರಿಸಿದರು.*
*(ಮುಸ್ಲಿಂ, 2750)*

ಅಲ್ಲಾಮ ಮುನಾವೀ(ರ)ಬರೆಯುತ್ತಾರೆ,

الاصح انه ولد بمكة بالشعب بعيد فجر الاثنين ثاني عشر ربيع الاول عام الفيل ،ولم يكن يوم جمعة ولا شهر حرام دفعا لتوهم انه شرف بذلك الزمن الفاضل ،فجعل في المفضول لتظهر به رتبته علي الفاضل ،ونظيره دفنه بالمدينة دون مكة ،اذ لو دفن بها لقصد تبعا.(فيض القدير

3/768)

*ಗಜ ವರ್ಷದ ರಬೀವುಲ್ ಅವ್ವಲ್ 12 ರಂದು ಫಜ್'ರ್ ನ ಅಲ್ಪ ಸಮಯದ ಬಳಿಕ ಮಕ್ಕಾದಲ್ಲಿ ಹಾಶಿಂ ಕುಟುಂಬದಲ್ಲಿ* *ಜನಿಸಿದರು.ಅವರ ಜನನ ಶುಕ್ರವಾರ ದಿನ ಅಥವಾ ಯುದ್ಧ ನಿಷಿದ್ಧವಾದ ತಿಂಗಳಲ್ಲಿ (ದುಲ್ ಖ'ಅದ,ದುಲ್ ಹಿಜ್ಜ, ಮುಹರ್ರಮ್,ರಜಬ್)* *ನಡೆದಿಲ್ಲ.ಆ ಶ್ರೇಷ್ಟವಾದ ವೇಳೆ ನಡೆದಿದ್ದಲ್ಲಿ ಆ ಸಮಯದ ಕಾರಣದಿಂದ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ* *ಮಹತ್ವವುಂಟಾಗಿದೆ ಎಂಬ ತಪ್ಪುಧಾರಣೆ ಉಂಟಾಗಬಹುದು. ಅದನ್ನು ಹೊಗಲಾಡಿಸಲು ಬೇಕಾಗಿ ಬೇರೆಯೇ ದಿನದಲ್ಲಿ ಅವರ ಜನನ ಸಂಭವಿಸಿತು.*

*ಆದುದರಿಂದ ರಬೀವುಲ್ ಅವ್ವಲ್ ಸೋಮವಾರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಕಾರಣದಿಂದ ಆ ತಿಂಗಳಿಗೆ ಮತ್ತು ಸೋಮವಾರದ ದಿನಕ್ಕೆ ಇತರ ತಿಂಗಳಿಗಿಂತಲೂ, ದಿನಗಳಿಗಿಂತಲೂ ಮಹತ್ವವುಂತಾಯಿತು ಎಂದು ತಿಳಿಯಬಹುದಲ್ಲವೇ.*
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಮಕ್ಕಾದಲ್ಲಿ ದಫನ್ ಮಾಡದೆ ಮದೀನದಲ್ಲಿ ದಫನ್ ಮಾಡಲು ಇದೇ ಕಾರಣವಾಗಿದೆ.ಮಕ್ಕಾದಲ್ಲಿ ದಫನ್ ಮಾಡುತ್ತಿದ್ದಲ್ಲಿ ಜನರು ಮಕ್ಕಾ ಅವಲಂಬಿಸಿ ಹೋಗಿ ನಂತರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಗುರಿಯಿಡುತ್ತಿದ್ದರು.*(ಪ್ರಧಾನ ಉದ್ದೇಶ ಪವಾದೀ ಸಲ್ಲಲ್ಲಾಹು ಅಲೈಹಿವಸಲ್ಲಂ ಆಗುತ್ತಿರಲಿಲ್ಲ.)
*( ಫೈಳುಲ್ ಖದೀರ್ 3/768)*

ಮದೀನಾ ಗೆ ಹೋಗುವ ಮುಸ್ಲಿಮರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸಂದರ್ಶಿಸಲೆಂದೇ ಹೋಗುತ್ತಾರೆ.ಹೊರತು ಕೇವಲ ಮಸೀದಿ ಸಂದರ್ಶನವಲ್ಲ.ಮಸೀದಿ ಮಾತ್ರ ಗುರಿಯಾಗಿದ್ದರೆ ಅತ್ಯಂತ ಪುಣ್ಯ ಮಸೀದಿಯಾದ ಮಕ್ಕ ಮಸೀದಿಗಿಂತ ಕಡಿಮೆ ಮಹತ್ವವಿರುವ ಮದೀನ ಮಸೀದಿಗೆ ಹೋಗಬೇಕಾಗಿಲ್ಲ ತಾನೇ?.

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ರಬೀವುಲ್ ಅವ್ವಲ್ 12 ರಂದು ಜನಿಸಿದರೆಂಬ ಕಾರಣಕ್ಕೆ ಮಕ್ಕ ನಿವಾಸಿಗಳು ಅಂದು ಪ್ರವಾದಿವರ್ಯರು ಜನಿಸಿದ ಸ್ಥಳ ಸಂದರ್ಶಿಸುತ್ತಿದ್ದರು.

ಇಮಾಮ್ ಖಸ್ತಲ್ಲಾನೀ (ರ)ಬರೆಯುತ್ತಾರೆ;


(وقيل )ولد (لاثني عشر)من ربيع الاول (وعليه عمل اهل مكة )قديما وحديثا في(زيارتهم موضع مولده في هذا الوقت )اي ثاني عشر ربيع .(المواهب اللدنية 1/132)


*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ರಬೀವುಲ್ ಅವ್ವಲ್ 12 ರಂದು ಜನಿಸಿದ್ದಾರೆ ಎಂಬ ಅಭಿಪ್ರಾಯವಿದೆ.ಆದುದರಿಂದಲೇ ಪೂರ್ವ ಕಾಲದ ಮತ್ತು ಈ ಕಾಲದ ಮಕ್ಕಾ ನಿವಾಸಿಗಳು ರಬೀವುಲ್ ಅವ್ವಲ್ 12 ರಂದು ಅವರು ಜನಿಸಿದ ಸ್ಥಳ ಸಂದರ್ಶನ ನಡೆಸುವುದು.*
*(ಅಲ್ ಮವಾಹಿಬುಲ್ಲದುನ್ನಿಯ್ಯ ಝುರ್'ಖಾನಿ ಸಹಿತ ನೋಡಿರಿ 1/132)*

ಇದೇ ರೀತಿ ಇಮಾಮ್ ಹಲಬೀ(ರ)ಹೇಳಿದ್ದಾರೆ,

*وكانت ولادته صلي الله عليه وسلم يوم الاثنين في شهر ربيع الاول لعشر خلون منه........وقيل ولد ليلا وعليه عمل اهل مكة في زيارة موضع موله الشريف صلي الله عليه وشلم (سيرة الحلبية 3/496)*


*ರಬೀವುಲ್ ಅವ್ವಲ್ 12 ರಂದು ಮಕ್ಕಾ ನಿವಾಸಿಗಳು ಪ್ರವಾದಿ ಸಲ್ಲಲ್ಲಾಹು* *ಅಲೈಹಿವಸಲ್ಲಮರು ಜನಿಸಿದ ಸ್ಥಳವನ್ನು ಸಂದರ್ಶಿಸುತ್ತಿದ್ದರು.*
*(ಸೀರತುಲ್ ಹಲಬಿಯ್ಯ3/496)*
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಸ್ತಳ.*

ರಬೀವುಲ್ ಅವ್ವಲ್ 12 ರಂದು ಪ್ರವಾದಿ ವರ್ಯರು ಜನಿಸಿದ ಸ್ಥಳವನ್ನು ಮಕ್ಕಾ ನಿವಾಸಿಗಳು ಸಂದರ್ಶಿಸುತ್ತಿದ್ದರು ಎಂಬುವುದನ್ನು ಈಗಾಗಲೇ ವಿವರಿಸಿಯಾಗಿದೆ.
ಅದನ್ನು ಅವರು ಒಂದು ಸತ್ಕರ್ಮವಾಗಿ ಕಂಡಿದ್ದರು.
ಅವರ ಆ ಚರ್ಯೆಯನ್ನು ನಂತರದ ಉಲಮಾಗಳು ಅಂಗೀಕರಿಸಿದ್ದಾರೆ.ಒಂದು ವೇಳೆ ಅದು ಬಿದ್'ಅತ್ ಆಗಿದ್ದಲ್ಲಿ ವಿಧ್ವಾಂಸರು ಅದನ್ನು ಒಪ್ಪುತ್ತಿರಲಿಲ್ಲ.
ಮಾತ್ರವಲ್ಲ, ಮಕ್ಕಾ ಗೆ ತೆರಳಿದವರು ಸಂದರ್ಶಿಬೇಕಾದ ಸ್ಥಳಗಳನ್ನು ವಿವರಿಸುತ್ತಾ ಇಮಾಮ್ ನವವೀ (ರ)ಪ್ರಖ್ಯಾತ ಗ್ರಂಥವಾದ ಈಳಾಹ್ ನಲ್ಲಿ ಹೇಳುವುದನ್ನು ನೋಡಿ;


*الرابع عشرة :يستحب زيارة المواضع المشهورة بالفضل في مكة والحرم وقد قيل انها ثمانية موضعا ،منها البيت الذي ولد فيه رسول الله صلي الله عليه وسلم .*

*(كتاب الايضاح 404)*

*ಹಜ್ಜಾಜ್ ಗಳಿಗೆ ಸುನ್ನತ್ತಾದ 14 ನೇ ಕಾರ್ಯ.*
*ಮಕ್ಕಾದಲ್ಲಿರುವ ಪ್ರಸಿದ್ಧವಾದ ಸ್ಥಳಗಳನ್ನು ಸಂದರ್ಶಿಸುವುದಾಗಿದೆ.ಅದು 18 ಸ್ಥಳಗಳಿವೆ.ಅದರಲ್ಲೊಂದಾಗಿದೆ ಪುಣ್ಯ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಸ್ಥಳ.*
*(ಈಳಾಹ್ 404)*

'ಸೂಖುಲ್ಲೈಲ್' ಎಂಬ ಸ್ಥಳದಲ್ಲಿದ್ದ ಆ ಮನೆಯನ್ನು ಕೆಡವಿ ಅದರ ಬದಲು ಅಲ್ಲಿ ಒಂದು ಲೈಬ್ರರಿಯನ್ನು ಸ್ಥಾಪಿಸಲಾಗಿದೆ.
ಹಲವು ದರ್ಗಾಗಳನ್ನು,ಖುಬ್ಬಗಳನ್ನು ನೆಲಸಮ ಮಾಡಿದ ವಹ್ಹಾಬಿಗಳಿಂದ ಇದನ್ನಲ್ಲದೆ ಬೇರೆ ಏನನ್ನು ನಿರೀಕ್ಷಿಸಬಹುದು?

ಪ್ರವಾದೀ ಸಲ್ಲಲ್ಲಾಹು ಅಲೈಹಿ ಜನಿಸಿದ ಸ್ಥಳ ಪುಣ್ಯ ಸ್ಥಳವಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.
ಅದನ್ನು ಸಂದರ್ಶಿಸುವುದು ಈಮಾನಿನ ಭಾಗವಾಗಿದೆ.
ಮಕ್ಕಾ ನಿವಾಸಿಗಳು ಅದನ್ನು ಸಂದರ್ಶಿಸುತ್ತಿದ್ದರೆಂದು ಇಮಾಮರುಗಳು ಸ್ಪಷ್ಟಪಡಿಸಿದ್ದಾರೆ.

*ಮೀಲಾದ್ ರಾತ್ರಿ*

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿ ಅತೀ ಮಹತ್ವವಿರುವ ರಾತ್ರಿಯಾಗಿದೆ.ಕಾರಣ ಯಾವುದೇ ರಾತ್ರಿ ಅಥವಾ ಹಗಲಿಗೆ ಮಹತ್ವವುಂಟಾಗಳು ಕಾರಣ ಆ ಸಮಯದಲ್ಲಿ ಯಾವುದಾದರೊಂದು ಕಾರ್ಯವುಂಟಾಗಿರುವುದರಿಂದಆಗಿದೆ.ಉದಾಹಣೆಗೆ ಶುಕ್ರವಾರ ದಿನಕ್ಕೆ ಮಹತ್ವ ಬರಲು ಕಾರಣ ಅಂದು ಆದಮ್ ಅಲೈಹಿಸ್ಸಲಾಮರನ್ನು ಸೃಷ್ಠಿಸಲಾಗಿದೆ ಎಂಬುವುದಾಗಿದೆ.ಇದನ್ನು
ಇಮಾಮ್ ಮುಸ್ಲಿಂ( ರ)ವರದಿ ಮಾಡಿದ 1976 ನಂಬ್ರ ಹದೀಸಿನಲ್ಲಿ ಕಾಣಬಹುದು.


*عن ابي هريرة رضي الله عنه قال قال رسول الله صلي الله عليه وسلم:خير يوم طلعت عليه الشمس يوم الجمعة فيه خلق ادم وفيه ادخل الجنة وفيه اخرج منها (مسلم )*



ಪವಿತ್ರ ರಂಝಾನ್ ಗೆ ಮಹತ್ವ ಉಂಟಾಗಲು ಕಾರಣ ಆ ತಿಂಗಳಲ್ಲಿ ಖುರ್'ಆನ್ ಅವತೀರ್ಣಗೊಂಡಿದೆ ಎಂಬುವುದಾಗಿದೆ.

ಎಲ್ಲವನ್ನೂ ಸೃಷ್ಠಿಸಲು ಕಾರಣಕರ್ತರಾದ
ಪುಣ್ಯ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿ ಲೈಲತುಲ್ ಖದ್'ರ್ ಗಿಂತಲೂ ಪುಣ್ಯ ದಿನವೆಂದು ಇಮಾಮ್ ಖಸ್ತಲ್ಲಾನೀ (ರ) ವಿವರಿಸಿದ್ದಾರೆ,


_فإن قلت: إذا قلنا بأنه عليه السلام ولد ليلا، فأيما أفضل: ليلة القدر أو ليلة مولده عليه السلام؟_

_أجيب: بأن ليلة مولده عليه السلام أفضل من ليلة القدر من وجوه ثلاثة:_

_أحدها: أن ليلة المولد ليلة ظهوره صلى الله عليه وسلم، وليلة القدر معطاة له، وما شرف بظهور ذات المشرف من أجله أشرف مما شرف بسبب ما أعطيه، ولا نزاع في ذلك، فكانت ليلة المولد أفضل من ليلة القدر._

_الثاني: أن ليلة القدر شرفت بنزول الملائكة فيها، وليلة المولد شرفت بظهوره صلى الله عليه وسلم. ومن شرفت به ليلة_ _المولد_ _أفضل ممن شرفت بهم ليلة القدر، على الأصح المرتضى، فتكون ليلة المولد أفضل._

_الثالث: أن ليلة القدر وقع فيها التفضيل على أمة محمد صلى الله عليه وسلم، وليلة المولد الشريف وقع التفضل فيها على_ _سائر الموجودات، فهو الذي بعثه الله عز وجل رحمة للعالمين،_ فعمت به النعمة على جميع_ _الخلائق، فكانت ليلة المولد أعم نفعًا، فكانت أفضل._

(المواهب اللدنية 1/136)



*ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ರಾತ್ರಿ ವೇಳೆ ಜನಿಸಿದ್ದಾರೆ.ಹಾಗಾದರೆ ಆ ರಾತ್ರಿಗಾ ಹೆಚ್ಚು ಮಹತ್ವ ?ಅಥವಾ ಲೈಲತುಲ್ ಖ'ದ್'ರ್ ಗಾ ಹೆಚ್ಚು ಮಹತ್ವ ಎಂದು ಕೇಳಿದರೆ 3 ಕಾರಣಕ್ಕೆ ಮೀಲಾದ್ ನ ರಾತ್ರಿಗೆ ಹೆಚ್ಚು ಮಹತ್ವವೆಂದು ಉತ್ತರಿಸಬಹುದು.*


*1.ಈ ರಾತ್ರಿಯಲ್ಲಿ ಜನಿಸಿದ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ನೀಡಲ್ಪಟ್ಟ ಒಂದಾಗಿದೆ ಲೈಲತುಲ್ ಖ'ದ್'ರ್.ಪ್ರವಾದೀ ಸಲ್ಲಲ್ಲಾಹು* *ಅಲೈಹಿವಸಲ್ಲಮರಿಗೆ ನೀಡಲ್ಪಟ್ಟ ಕಾರಣದಿಂದ ಆ ರಾತ್ರಿಗೆ ಮಹತ್ವ ಉಂಟಾಗಿದ್ದರೆ ಆ ಗೌರವಕ್ಕೆ ಕಾರಣ* *ಕರ್ತರಾದವರ ಪುಣ್ಯ ಹಬೀಬರ ಶರೀರ ಪ್ರತ್ಯಕ್ಷವಾದ ರಾತ್ರಿಗೆ ಯಾಗಿದೆಯಲ್ಲವೇ ಹೆಚ್ಚು ಮಹತ್ವ ?*
*ಇದರಲ್ಲಿ ಯಾವುದೇ ತರ್ಕಕ್ಕೆ ಆಸ್ಪದವಿಲ್ಲ.*
*ಆದುದರಿಂದ ಮೀಲಾದ್ ರಾತ್ರಿ ಲೈಲತುಲ್ ಖದ್ ರ್ ಗಿಂತ ಮಹತ್ವವಿರುವ ರಾತ್ರಿಯಾಗಿದೆ.*


*2.ಮಲಕುಗಳು ಇಳಿದು ಬರುವುದರಿಂದ ಲೈಲತುಲ್ ಖದ್ರ್ ಗೆ ಮಹತ್ವ ಲಭಿಸಿದೆ.ಮೀಲಾದ್ ರಾತ್ರಿಗೆ ಪ್ರವಾದೀವರ್ಯರು ಜನಿಸಿದರೆಂಬ ಕಾರಣದಿಂದಲೂ. ಪ್ರಬಲ ಅಭಿಪ್ರಾಯ ಪ್ರಕಾರ ಮಲಕ್ ಗಳಿಗಿಂತ ಶ್ರೇಷ್ಠತೆ ಪ್ರವಾದಿ ಸಲ್ಲಲ್ಲಾಹಿ ಅಲೈಹಿವಸಲ್ಲಮರಿಗೆ ಆಗಿದೆ.*
*ಆದುದರಿಂದ ಮಲಕ್ ಗಳಿಗಿಂತ ಶ್ರೇಷ್ಠರಾದ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿ ಮಲಕ್ ಗಳು ಇಳಿದು ಬರುವ ಲೈಲತುಲ್ ಖದ್ರ್ ನ ರಾತ್ರಿಗಿಂತ ಮಹತ್ವವಿರುವ ರಾತ್ರಿಯಾಯಿತು.*


*3.ಲೈಲತುಲ್ ಖದ್ರ್ ನ ಶ್ರೇಷ್ಠತೆ ಈ ಉಮ್ಮತ್ ಗೆ ಮಾತ್ರ ಸೀಮಿತವಾಗಿದೆ.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿಯ ಶ್ರೇಷ್ಠತೆ ಎಲ್ಲಾ ಸೃಷ್ಠಿಗಳಿಗೂ ಲಭ್ಯವಾಗಿದೆ.ಆದುದರಿಂದ ಈ ರಾತ್ರಿಯೂ ಲೈಲತುಲ್ ಖದ್ರ್ ನ ರಾತ್ರಿಗಿಂತಲೂ ಮಹತ್ವವಿರುವ ರಾತ್ರಿಯಾಯಿತು.*
*(ಅಲ್ ಮವಾಹಿಬುಲ್ಲದುನ್ನಿಯ್ಯ 1/136)*

ಇಮಾಮ್ ಶರ್'ವಾನಿ(ರ) ಬರೆಯುತ್ತಾರೆ;

*وان افضل الليالي ليلة المولد الشريف ،ثم ليلة القدر ،ثم ليلة الجمعة ،ثم ليلة الاسراء هذا* *بالنسبة لنا واما بالنسبة له* ﷺ
*فليلة الاسراء افضل الليالي؛لانه  رأى فيها ربه بعيني رأسه علي الصحيح* (شرواني 2/405)

*ರಾತ್ರಿಗಳ ಪೈಕಿ ಅತೀ ಶ್ರೇಷ್ಟವಾದ ರಾತ್ರಿ ಪ್ರವಾದೀ ﷺ ಜನಿಸಿದ ರಾತ್ರಿಯಾಗಿದೆ. ನಂತರ ಲೈಲತುಲ್ ಖದ್ರ್ ತದ ನಂತರ ಶುಕ್ರವಾರ ರಾತ್ರಿ ಹಾಗೂ ಆಮೇಲೆ ಇಸ್ರಾ ನಡೆದ ರಾತ್ರಿಯೂ ಆಗಿದೆ. ಈ ಹೇಳಿದ್ದು ನಮ್ಮನ್ನು ಅಪೇಕ್ಷಿಸಿಯಾಗಿದೆ. ಪ್ರವಾದೀ ﷺ ರನ್ನು ಅಪೇಕ್ಷಿಸಿ ಶ್ರೇಷ್ಟವಾದ ರಾತ್ರಿ ಇಸ್ರಾ ರಾತ್ರಿಯಾಗಿದೆ. ಕಾರಣ ಅಲ್ಲಾಹನನ್ನು ದರ್ಶಿಸಿದ ರಾತ್ರಿಯಾಗಿದೆ ಇಸ್ರಾ ರಾತ್ರಿ.*
(ಶರ್'ವಾನಿ 2/405)

ಅದೇ ರೀತಿ ಶರ್'ವಾನಿಯ 3/462 ರಲ್ಲೂ ಕಾಣಬಹುದಾಗಿದೆ.
*-------------------------------------------*
ಇಮಾಮ್ ಬರೂಸವೀ (ರ)ಹೇಳುತ್ತಾರೆ;

*وافضل الليالي ليلة المولد المحمدي لولاه ما نزل القرأن ولا نعتت ليلة القدر وهو الاصح*
(روح البيان 6/360)

*ಅತೀ ಶ್ರೇಷ್ಟವಾದ ರಾತ್ರಿ ಮೀಲಾದ್ ರಾತ್ರಿಯಾಗಿದೆ. ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಇಲ್ಲದಿದ್ದರೆ ಖುರ್'ಆನ್ ಇರುತ್ತಿರಲಿಲ್ಲ, ಲೈಲತುಲ್ ಖದ್ರ್'ಗೆ ಮಹತ್ವ ಲಭಿಸುತ್ತಿರಲಿಲ್ಲ.*
(ರೂಹುಲ್ ಬಯಾನ್ 6/340)
*------------------------------------------*
*ಜನ್ಮ ದಿನ ಆಚರಣೆ*

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮ ನಮಗೆ ಅಲ್ಲಾಹನು ನೀಡಿದ ಸೌಭಾಗ್ಯವಾಗಿದೆ.
ಆ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಬೇಕಾದದ್ದು ಸತ್ಯ ವಿಶ್ವಾಸಿಯ ಕರ್ತವ್ಯವಾಗಿದೆ.
ಅವರ ಜನ್ಮ ದಿನ ಆಚರಿಸುವುದು, ಆ ದಿನದಂದು ಸಂತೋಷಪಡುವುದು ಕೂಡಾ ಈಮಾನ್ ಇರುವ ಮನುಷ್ಯನ ಭಾಧ್ಯತೆ ಆಗಿದೆ.

ಇಮಾಮ್ ಸುಯೂಥೀ (ರ) ಹೇಳುತ್ತಾರೆ,
_وقد ظهر لي تخريجه على_ _أصل آخر ، وهو ما_ _أخرجه البيهقي عن أنس أن النبي صلى الله عليه وسلم عق عن نفسه بعد النبوة مع أنه قد ورد أن جده عبد المطلب عق عنه في سابع ولادته ، والعقيقة لا تعاد مرة ثانية ، فيحمل ذلك على أن_ _الذي فعله النبي صلى الله عليه وسلم إظهار للشكر على إيجاد الله إياه رحمة للعالمين وتشريع لأمته كما كان يصلي على نفسه لذلك ، فيستحب لنا أيضا إظهار_ _الشكر بمولده بالاجتماع وإطعام الطعام ونحو ذلك من وجوه القربات وإظهار المسرات_
(الحاوي للفتاوي 1/196)

_ಜನ್ಮ ದಿನ ಆಚರಣೆಗೆ ನಾನು ಮತ್ತೊಂದು ಆಧಾರವನ್ನು ಕಂಡು_ _ಹಿಡಿದಿದ್ದೇನೆ. ಅನಸ್ (ರ)ರಿಂದ ಇಮಾಮ್ ಬೈಹಖೀ (ರ) ವರದಿ ಮಾಡಿದ ಹದೀಸಿನಲ್ಲಿ  ನುಬುವ್ವತ್ ನ ನಂತರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಅಖೀಖ ನೀಡಿದರು ಎಂದು ವರದಿಯಾಗಿದೆ. ಪ್ರವಾದೀ_ _ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಏಳನೇ ದಿನದಂದು ಅಜ್ಜ ಅಬ್ದುಲ್ ಮುತ್ತಲಿಬ್ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಅಖೀಖ ನೀಡಿದ ಬಗ್ಗೆ ಸ್ಥಿರಪಟ್ಟಿದೆ. ಅಖೀಖ_ _ಎರಡೆರಡು ಬಾರಿ ಕೊಡುವಂತದ್ದಲ್ಲ. ಆದುದರಿಂದ ಪ್ರಪಂಚಕ್ಕನುಗ್ರಹವಾಗಿ  ತನ್ನನ್ನು ಸೃಷ್ಠಿಸಲ್ಪಟ್ಟಿದ್ದಕ್ಕೆ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ಭಾಗವಾಗಿ  ತನ್ನ_ _ಸಮುದಾಯವನ್ನು ಕಲಿಸಿ ಕೊಡಲು  ಅವರು ದ್ಸಬಹ್ ಮಾಡಿ ಕೊಟ್ಟಿದ್ದಾರೆ ಎಂದು ತಿಳಿದುಕೊಳ್ಳಬಹುದು. ಅದೇ ಉದ್ದೇಶಕ್ಕಾಗಿ ಅವರು ತನ್ನ ಮೆಲೇಯೇ ಸ್ವಲಾತ್_ _ಹೇಳುತ್ತಿದ್ದರು._
_ಒಟ್ಟಿನಲ್ಲಿ ಎಲ್ಲರೂ ಒಟ್ಟು ಸೇರಿ ಅನ್ನ ದಾನ ನಡೆಸಿಯೂ_ _ಹಾಗೂ ಇನ್ನಿತರ ಆರಾಧಾನ ಕರ್ಮಗಳ ಮೂಲಕವೂ  ಪ್ರವಾದೀ ಸಲ್ಲಲ್ಲಾಹು_  ಅಲೈಹಿವಸಲ್ಲಮರ ಜನನಕ್ಕೆ ಕೃತಜ್ಞತೆ ಸಲ್ಲಿಸುವುದು ಮತ್ತು ಸಂತೋಷಪಡುವುದು ಸುನ್ನತ್ ಆಗಿದೆ._
(ಅಲ್ ಹಾವೀ ಲಿಲ್ ಫತಾವ 1/196)
*------------------------------------------*
ಇಮಾಮ್ ಸುಯೂಥಿಯ ಪ್ರಸ್ತುತ ಮಾತನ್ನು ನಂತರದ ಎಲ್ಲಾ ಉಲಮಾ ಅಂಗೀಕರಿಸಿದ್ದಾರೆ.
ಪ್ರಶಸ್ತ ಕರ್ಮ ಶಾಸ್ತ್ರ ವಿದ್ವಾಂಸರಾದ ಇಮಾಮ್ ಇಬ್ನ್ ಖಾಸಿಮ್ (ರ) ಹೇಳುತ್ತಾರೆ;

*وقد أطال في إيضاح الاحتجاج لكون المولد محمودا مثابا عليه بشرطه مع إيضاح الرد على من خالف في ذلك بما ينبغي استفادته وجعل ذلك كله مؤلفا سماه حسن المقصد في عمل المولد فجزاه الله تعالى ما هو أهله(حاشية ابن قاسم 7/425)*

*ಕೆಲವು ನಿಬಂಧನೆಗಳ ಮೂಲಕ ಮೀಲಾದ್ ಆಚರಣೆ ಸ್ತುತ್ಯರ್ಹವೂ ಪ್ರತಿಫಾಲರ್ಹವೆಂದು ದೃಢಪಡಿಸಲು ಇಮಾಮ್ ಸುಯೂಥೀ (ರ) ಸವಿಸ್ತಾರವಾಗಿ ಬರೆದಿದ್ದಾರೆ. ಅದನ್ನು ವಿರೋಧಿಸಿದವರಿಗೆ ಖಂಡನೆಯನ್ನೂ ಬರೆದಿದ್ದಾರೆ. ಅದಕ್ಕಾಗಿ ಅವರು  "ಹುಸ್ನುಲ್ ಮಖ್'ಸಿದ್ ಫೀ ಅಮಲಿಲ್ ಮೌಲಿದ್" ಎಂಬ ಹೆಸರಲ್ಲಿ ಒಂದು ಗ್ರಂಥವನ್ನು  ಕ್ರೋಡೀಕರಿಸಿದರು. ಅವರ ಈ ಕೆಲಸಕ್ಕೆ  ಅಲ್ಲಾಹನು ಪ್ರತಿಫಲ ನೀಡಲಿ.*
(ಹಾಶಿತಯತು ಇಬ್ನಿ ಖಾಸಿಮ್ 7/425)
ಇದೇ ರೀತಿ ಶರ್ವಾನಿ 7/425 ರಲ್ಲೂ ಕಾಣಬಹುದಾಗಿದೆ.
*------------------------------------------*
ಇಮಾಮ್ ಸುಯೂಥಿ (ರ) ಇಲ್ಲಿ (ಜನ್ಮ ದಿನಾಚರಣೆಗೆ ಪುರಾವೆ ನೀಡಿ) ಬಿದ್ ಅತ್ ಪ್ರಚಾರ ಪಡಿಸಿರುವುದಾದರೆ ನಂತರದ ವಿದ್ವಾಂಸರು ಅದನ್ನು ಒಪ್ಪುತ್ತಿರಲಿಲ್ಲ.
ತಪ್ಪು ಯಾರೇ ಹೇಳಿದರೂ ಅದನ್ನು ಮುಖ ನೋಡದೆ ವಿಮರ್ಶಿಸುವುದು ಇಮಾಮರುಗಳ ಶೈಲಿಯಾಗಿದೆ., ಆದರೂ ಅವರು ಇದನ್ನು ವಿಮರ್ಶಿಸಿಲ್ಲ. ಮಾತ್ರವಲ್ಲ ಅದಕ್ಕೆ ಬೆಂಬಲವನ್ನೇ ಸೂಚಿಸಿದ್ದಾರೆ.



*ಬಾಕಿ 2 ನೇ ಭಾಗದಲ್ಲಿ ಓದಿರಿ*

No comments:

Post a Comment