Monday, November 12, 2018

*♦♦ಸಹಸ್ರಾಯುಷಿ ಆಮೆ♦♦*

✒ಯೂಸುಪ್ ನಬ್ಹಾನೀ ಕುಕ್ಕಾಜೆ.

 ▪ಆಮೆ ಸುಮಾರು ಮುನ್ನೂರರಿಂದ ನಾನೂರು ವರ್ಷಗಳ ತನಕ ಬದುಕುವ ಒಂದು ವಿಶೇಷ ಜೀವಿಯಾಗಿದೆ. ಮಾತ್ರವಲ್ಲ ಕೆಲವು ಜಾತಿಯ ಆಮೆಗಳು ಒಂದು ಸಾವಿರ ವರ್ಷ ತನಕವೂ ಬದುಕುತ್ತದೆ. *"ಅವನಿಗೆ ಆಮೆಯ ಆಯುಷ್ಯವಿದೆ" ಎಂದು ನಮ್ಮ ಹಿರಿಯಂದಿರು ಹೇಳುತ್ತಿದ್ದದ್ದು ನಿಜಕ್ಕೂ ಸತ್ಯ*
  ▪ಆಮೆ ಮೊಟ್ಟೆಯಿಡುವ ಒಂದು ಜೀವಿ. ಆದರೆ ತಾನಿಟ್ಟ ಮೊಟ್ಟೆಗೆ ಅದರ ಮೇಲೆ ಕುಳಿತು ಕಾವು ಕೊಡುವ ಭಾಗ್ಯ ಈ ಆಮೆಗಿಲ್ಲ.. ಯಾಕೆಂದರೆ ಆಮೆಯ ಅಡಿ ಭಾಗದ ಚರ್ಮಕ್ಕೆ ಗರಗಸದ ಹಲ್ಲಿನಂತೆ  ಹಲ್ಲಿದ್ದು ಅದು ಬಹಳ ಗಡಸುತನದಿಂದ ಕೂಡಿದೆ. ಆಮೆ ಮೊಟ್ಟೆಯ ಮೇಲೆ ಕುಳಿತರೆ ಮೊಟ್ಟೆ ಒಡೆಯುವ ಸಾದ್ಯತೆ ಇರುವುದರಿಂದ ಅಲ್ಲಾಹನು ಇದಕ್ಕೆ ಬೇರೆಯೇ ಸಾಮರ್ಥ್ಯವನ್ನು ಕೊಟ್ಟಿದ್ದಾನೆ. ಬಹಳ ಬಲಿಷ್ಠವಾದ ಲೇಸರ್ ಶಕ್ತಿ ಇರುವ ಎರಡು ಕಣ್ಣು ಇದಕ್ಕಿದೆ. ತನ್ನ ಈ ಎರಡು ಕಣ್ಣಿಗಳಿಂದ ಮೊಟ್ಟೆಯನ್ನು ಒಂದೇ ರೇಖೆಯಲ್ಲಿ ತುಂಬಾ ಸಮಯ ನೋಡುತ್ತದೆ. ತನ್ನ ಕಣ್ಣಿನಿಂದ ಹರಿಯುವ ಶಕ್ತಿಯುತ ಕಿರಣ ಮೊಟ್ಟೆಯ ಒಂದೇ ಕೇಂದ್ರದಲ್ಲಿ ಬೀಳುವಾಗ ಮೊಟ್ಟೆ ತಾನಾಗಿಯೇ ಬಿಸಿಯಾಗಿ ಒಡೆಯುತ್ತದೆ...!!
  ▪ಆಮೆಯು ಎಂತಹಾ ವಿಷಕಾರಿ ಹಾವನ್ನೂ ಕೊಂದು ತಿನ್ನುತ್ತದೆ. ಬೇರೆ ಪಕ್ಷಿ, ಪ್ರಾಣಿ, ಕೀಟ ಎಲ್ಲವನ್ನು ತಿನ್ನುವುದಾದರೂ ಹಾವುಗಳು ಇದರ ಅಚ್ಚುಮೆಚ್ಚಿನ ಆಹಾರವಾಗಿದೆ. ವಿಷ ಆಹಾರವನ್ನು ತಿಂದ ಕೂಡಲೇ ತಿಂದ ವಿಷದಿಂದ ಶರಿರಕ್ಕೆ ತೊಂದರೆ ಆಗದಿರಲು   ತೋಡು, ಕೆರೆ, ನದಿಯ ದಡಗಳಲ್ಲಿ ಕಾಣಸಿಗುವ "ಸಾತರ್ ಗಿಡದ(Thyme) ಎಲೆಯನ್ನು ತಿನ್ನುತ್ತದೆ. ಎಂತಹಾ ಹಾನಿಕರ ವಿಷವನ್ನೂ ಹುಸಿ ಮಾಡುವ ಶಕ್ತಿ ಈ ಗಿಡಕ್ಕಿದೆ.  ನೀರಿನಲ್ಲೂ ದಡದಲ್ಲೂ ಬದುಕುವ ಈ ಜೀವಿ ತೋಡು , ಕೆರೆ, ಹಳ್ಳ ಮುಂತಾದೆಡೆಗಳಲ್ಲಿ ನೀರಿಗೆ ಹೊಂದಿಕೊಂಡು ದಡದಲ್ಲಿ ಹೊಂಡ ಮಾಡಿ ಅವಿತು ಕುಳಿತಿರುತ್ತದೆ. ನೀರು ಕುಡಿಯಲು ಬರುವ ಪಕ್ಷಿಗಳನ್ನು ನಿರಾಯಾಸ ಹಿಡಿದು ತಿನ್ನುತ್ತದೆ. ದೊಡ್ಡ ಪಕ್ಷಿಯಾದರೆ ಹಿಡಿದ ಹಿಡಿತದಲ್ಲಿ ಸಾಯದಿದ್ದರೆ ನೀರಿನಲ್ಲಿ ಸಾಯುವ ತನಕ ಮುಳುಗಿಸಿಡುತ್ತದೆ.
  ▪ಗಂಡಾದರೂ ಹೆಣ್ಣಾದರೂ ಎರಡು ಜನನೇಂದ್ರಿಯವಿರುವ ಒಂದು ಅಪೂರ್ವ ಜೀವಿಯಾಗಿದೆ ಆಮೆ.‌ ಇದರ ಶರಿರವನ್ನು ಎಲ್ಲಾ ಅನಾಹುತಗಳಿಂದ ಬಚಾವು ಮಾಡುವ ಬಹಳ ಬಲಿಷ್ಠವಾದ ಒಂದು ಕವಚ ಕೂಡ ಇದರ ದೇಹವನ್ನು ಆವರಿಸಿದೆ. ಒಬ್ಬ ವ್ಯಕ್ತಿ ದೊಡ್ಡ ಆಮೆಯ ಮೇಲೆ ನಿಂತರೆ ಆಮೆಗೆ ಏನೂ ತೊಂದರೆಯಾಗದು.
  ▪ಪಿತ್ತಕೋಶ ಸಂಬಂಧಿಸಿದ ಖಾಯಿಲೆ ಇರುವವನು ಇದರ ಪಿತ್ತಕೋಶವನ್ನು ಹಸಿಯಾಗಿಯೇ ತಿಂದರೆ ಖಾಯಿಲೆ ವಾಸಿಯಾಗುವುದಲ್ಲದೆ ಜೀವನಪರ್ಯಂತ ಆ ರೋಗ ಮತ್ತೆಂದಿಗೂ ಮರುಕಳಿಸದು.
   ▪ಗಂಟುನೋವು, ಸಂಧಿನೋವು, ಸ್ನಾಯುಗಳ ಎಳೆತ,ಸ್ನಾಯು ಹಿಡಿದು ಕೊಳ್ಳುವುದು ಇತ್ಯಾದಿ ಖಾಯಿಲೆ ಇರುವವರು ಇದರ ರಕ್ತವನ್ನು ಅಲ್ಲಿಗೆ ಕೆಲವು ದಿನಗಳ ಕಾಲ ಲೇಪಿಸಿದರೆ ರೋಗ ಸಂಪೂರ್ಣ ವಾಸಿಯಾಗುವುದು.
  ▪ಯಾವುದೇ ಚಿಕಿತ್ಸೆ ಮಾಡಿ ಫಲ ಕಾಣದ ಕಾಲಿನ ಹಿಮ್ಮಡಿ (ಮಡಂಬು) ಸೀಳುವ ರೋಗವಿರುವವರಿಗೆ  ಕಡಲಾಮೆಯ ಕವಚವನ್ನು ಸುಟ್ಟು ಅದರ ಬೂದಿಯನ್ನು ಮೊಟ್ಟೆಯ ಒಳಗಿನ ಬಿಳಿ ಪದಾರ್ಥದೊಂದಿಗೆ ಮಿಶ್ರಣ ಮಾಡಿ ಅದನ್ನು ಸೀಳಿದ ಜಾಗಕ್ಕೆ ಕೆಲವು ದಿನಗಳು ಹಚ್ಚಿದರೆ ಈ ಖಾಯಿಲೆ ಬೆಟ್ಟ ಹತ್ತುತ್ತದೆ. ಮಾತ್ರವಲ್ಲ ಈ ಖಾಯಿಲೆಗೆ ಇದೊಂದು ಸಿದ್ದ ಔಷದಿ ಕೂಡ ಆಗಿದೆ.
  ▪ಆಮೆಯ ಕವಚವನ್ನು ತೆಗೆದು ನಾವು ಆಹಾರ ಪದಾರ್ಥಗಳನ್ನು ಬಿಸಿ ಮಾಡುವಾಗ ಪಾತ್ರೆಯ ಮುಚ್ಚಳಕ್ಕೆ ಬದಲು ಇದರಿಂದ ಮುಚ್ಚಿಟ್ಟರೆ ಹಾಲು ಸಮೇತ ಯಾವ ಆಹಾರ ಪದಾರ್ಥಗಳೂ ಕುದಿದು ಪಾತ್ರೆಯಿಂದ ಹೊರಗೆ ಬಾರದು.
  ▪ ತಲೆಯಲ್ಲಿ ಹೇನಿರುವವರಿಗೆ ಕಡಲಾಮೆಯ ಕವಚದಿಂದ ಮಾಡಿದ ಬಾಚಣಿಗೆಯಲ್ಲಿ ತಲೆ ಬಾಚುವುದರಿಂದ ಹೇನು ಸಂಪೂರ್ಣ ಹೋಗುತ್ತದೆ. ನಬಿ (ಸಲ್ಲಲ್ಲಾಹು ಅಲೈಹಿ ವಸಲ್ಲಮ್ ) ತಂಙಳ್'ರವರಲ್ಲಿ ಕಡಲಾಮೆಯ ಕವಚದಿಂದ ಮಾಡಿದ ಬಾಚಣಿಗೆ ಇತ್ತು. ಮಾತ್ರವಲ್ಲ ತನ್ನ ಮುದ್ದಿನ ಕಂದೆ ಫಾತಿಮಾ ಬೀವಿ (ರ) ರವರಿಗೆ ಆಮೆಯ ಕವಚದಿಂದ ಮಾಡಿದ ಎರಡು ಕೈಬಳೆ ಮಾರುಕಟ್ಟೆಯಿಂದ ತರಬೇಕೆಂದು ಸಹಾಬಿಯಾದ "ಸವ್ ಬಾನ್" (ರ) ರವರಲ್ಲಿ ಹೇಳಿದ್ದಾಗಿ ಇಮಾಮ್ ಅಹ್ಮದ್ (ರ) ರವರು ವರದಿ ಮಾಡಿದ್ದಾರೆ..
 ▪ಆಮೆಯ ಮಾಂಸವನ್ನು ತಿನ್ನುವ ಕನಸು ಕಂಡರೆ ದೊಡ್ಡ ಪಂಡಿತನಾಗುವ ಮತ್ತು ಶ್ರೀಮಂತನಾಗುವ ಲಕ್ಷಣವಾಗಿದೆ.
  ▪ಕಡಲಾಮೆಯನ್ನು ಕನಸು ಕಂಡರೆ ಅವನ ಮುಂದಿನ ವರ್ಷ ಐಶ್ವರ್ಯ ಭರಿತ ವಾಗಿರುತ್ತದೆ. ಹಾಗೆಯೇ ಶತ್ರುಗಳಿದ್ದರೆ ಅವರ ಉಪದ್ರವದಿಂದ ಬಚಾವು ಆಗುವುದರ ನಿಶಾನೆಯಾಗಿದೆ.
  ▪ಆಮೆಯ ಮಾಂಸವನ್ನು ತಿನ್ನುವುದು ಮತ್ತು ಕಾರಣವಿಲ್ಲದೆ ಆಮೆಯನ್ನು ಕೊಲ್ಲುವುದೂ ನಿಷಿದ್ದ.

  ಸಂಗ್ರಹ: ಇಮಾಮ್ ಖಝ್ವೀನಿಯವರ *ಅಜಾಯಿಬುಲ್ ಮಖ್ಲೂಕಾತ್* ಮತ್ತು ಇಮಾಮ್ ದುಮೈರಿಯವರ *ಹಯಾತುಲ್ ಹಯವಾನ್* ಎಂಬ ಗ್ರಂಥ.

No comments:

Post a Comment