Wednesday, November 14, 2018

*ಮೀಲಾದುನ್ನಬೀ ಭಾಗ = 03*

*ಮೀಲಾದುನ್ನಬೀ*
 *ಭಾಗ == 03*
----------------------------------------------------------
*_ಈದ್ ವರ್ಷಕ್ಕೆ 2  ಮಾತ್ರವೇ?_*

_*2018 ನೇ ಇಸವಿಯಲ್ಲಿ 55 ಈದ್ ಇದೆ.*
*2 ಪೆರ್ನಾಳ್.*
*1 ಈದ್ ಮೀಲಾದ್.*
*52 ಶುಕ್ರವಾರ.*

 ಇನ್ನು ಕೆಳಗೆ ಓದಿ
👇👇👇

ಜಾಗತಿಕ ಮುಸ್ಲಿಮರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಮೀಲಾದ್ ಆಚರಿಸುವಾಗ ವಹ್ಹಾಬಿಗಳು ಹೇಳುವ ಒಂದು ಬಾಲಿಶ ವಾದವಾಗಿದೆ ಈದ್ ವರ್ಷಕ್ಕೆ ಎರಡು ಬಾರಿ ಮಾತ್ರ ಎಂಬುವುದು.ಅಥವಾ  ಈದುಲ್ ಫಿತರ್ ಮತ್ತು ಈದುಲ್ ಅಳ್'ಹಾ.

ಸತ್ಯಕ್ಕೆ ವಿರುದ್ಧವಾದ ಒಂದು ವಾದವಾಗಿದೆ ಇದು.

ಅದಕ್ಕೆ ಅವರು ಒಂದು ಹದೀಸನ್ನು ದುರ್ವ್ಯಾಖ್ಯಾನಿಸುತ್ತಾರೆ.
ಅದು ಈ ರೀತಿ,
عَنْ أَنَسِ بْنِ مَالِكٍ، قَالَ: كَانَ لِأَهْلِ الْجَاهِلِيَّةِ يَوْمَانِ فِي كُلِّ سَنَةٍ يَلْعَبُونَ فِيهِمَا، فَلَمَّا قَدِمَ النَّبِيُّ صَلَّى اللهُ عَلَيْهِ وَسَلَّمَ الْمَدِينَةَ، قَالَ: " كَانَ لَكُمْ يَوْمَانِ تَلْعَبُونَ فِيهِمَا وَقَدْ أَبْدَلَكُمُ اللَّهُ بِهِمَا خَيْرًا مِنْهُمَا: يَوْمَ الْفِطْرِ، وَيَوْمَ الْأَضْحَى
(نسائي 3/179).
ಅನಸ್ (ರ)ಹೇಳುತ್ತಾರೆ.ಜಾಹಿಲಿಯ್ಯಾ ಕಾಲದಲ್ಲಿ ಅವರಿಗೆ 2 ದಿನಗಳು ವಿನೋದದ ದಿನವಾಗಿತ್ತು.ಪ್ರವಾದೀ ﷺ ರು ಮದೀನಾಗೆ ಹಿಜ್ರ ಹೋದಾಗ  ಅವರೊಂದಿಗೆ ಹೇಳಿದರು;ಇದನ್ನು ಬದಲಾಯಿಸಿ ಇದಕ್ಕಿಂತ ಉತ್ತಮವಾದ ಈದುಲ್ ಫಿತ್ರ್ ಮತ್ತು ಈದುಲ್ ಅಳ್'ಹವನ್ನು ಅಲ್ಲಾಹನು ನಿಮಗೆ ನೀಡಿದ್ದಾನೆ.(ನಸಾಈ 3/179).

ವರ್ಷಕ್ಕೆ ಈದ್ 2 ಮಾತ್ರವೆಂದು ಇದರಿಂದ ತಿಳಿದು ಬರುತ್ತದೆ ಎಂದಾಗಿದೆ ಸಲಪಿಯ ವಾದ.
ಹದೀಸನ್ನು ಬೇಕಾದಂತೆ ಗ್ರಹಿಸದ ಕಾರಣದಿಂದ ಈ ರೀತಿಯ ವಿಚಿತ್ರ ವಾದವನ್ನು ಅವರು ಹೇಳುತ್ತಿದ್ದಾರೆ.

ವಾಸ್ತವದಲ್ಲಿ
ಪ್ರವಾದೀﷺ ಮರು ಅವರಲ್ಲಿ "ನೀವು ಉತ್ಸವವಾಗಿ ಕಾಣುವ ಈ ಎರಡು ದಿನಗಳಿಗೆ ಬದಲಾಗಿ 2 ಈದ್ ಗಳು ಪುಣ್ಯದಾಯಕವಾಗಿದೆ" ಎಂದು ಹೇಳಿದ್ದಾರೆಯೇ ಹೊರತು ಈದ್ 2 ಮಾತ್ರವಿರುವುದು ಎಂದು ಹೇಳಿಲ್ಲ.ಬುದ್ಧಿಯಿರುವ ಯಾರಿಗೂ ಇದು ತಿಳಿಯುವ ವಿಚಾರ.

ಮಂಗಳೂರು ಮತ್ತು ಪುತ್ತೂರು ದೊಡ್ಡ ಸಿಟಿ ಎಂದು ಹೇಳಿದ ಒಬ್ಬನಲ್ಲಿ ನಾನು ಹೇಳಿದೆ.ಅದಕ್ಕಿಂತಲೂ ದೊಡ್ಡ ಸಿಟಿ ಮೈಸೂರು ಮತ್ತು ಬೆಂಗಳೂರು ಇದೆ.
ಆವಾಗ ನನ್ನ ಮಾತನ್ನು ತಪ್ಪಾಗಿ ಅರ್ಥೈಸಿ  ಸಿಟಿಯಿರುವುದು ಮೈಸೂರು ಮತ್ತು ಬೆಂಗಳೂರು ಮಾತ್ರವೆಂದು ಅವರು ಹೇಳಿದ್ದಾರೆ  ಎಂದು ಒಬ್ಬ ಹೇಳಿದರೆ ಆತನನ್ನು ಹುಚ್ಚಾಸ್ಪತ್ರೆಯಲ್ಲಿ ಕಟ್ಟಿಯಿಡಬೇಕಾದೀತು.ಅದೇ ರೀತಿಯಾಗಿದೆ ಸಲಪಿಯ ಅರ್ಥ ಕೂಡಾ.
ಈ ಎರಡು "ಈದ್" ನ ಬಗ್ಗೆ ಹೇಳಿದ ಅದೇ ಪ್ರವಾದೀ ﷺಮರು
ಶುಕ್ರವಾರದ ಕುರಿತು ಹೇಳಿದ ಹದೀಸ್ ನೋಡಿ,

 عن ابن عباس قال :قال رسول الله صلى الله عليه وسلم إن هذا يوم عيد .جعله الله للمسلمين. فمن جاء إلى الجمعة فليغتسل .وإن كان طيب فليمس منه. وعليكم بالسواك
(ابن ماجه 1/349 )
ಇಬ್ನ್ ಅಬ್ಬಾಸ್(ರ)ವರದಿ;
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಖಂಡಿತವಾಗಿಯೂ ಈ ದಿನ(ಶುಕ್ರವಾರ) ಮುಸ್ಲಿಮರಿಗೆ ಅಲ್ಲಾಹನು ಮಾಡಿದ ಈದ್ ಆಗಿದೆ.ಆದುದರಿಂದ ಜುಮುಅ ನಮಾಝ್ ಗೆ ಬರುವವನು ಸ್ನಾನ ಮಾಡಲಿ.ಸುಗಂಧ ದ್ರವ್ಯವಿದ್ದಲ್ಲಿ  ಹಚ್ಚಲಿ.
(ಇಬ್ನ್ ಮಾಜ 1/349)

ಅದೇ ರೀತಿ ಮುವತ್ವ 1/65,
ಮುಸ್ನದು ಶ್ಶಾಫಿಈ 1/63
ರಲ್ಲೂ ಕಾಣಬಹುದಾಗಿದೆ.
*ಈ ಹದೀಸ್ ಸ್ವೀಕಾರ್ಯಯೋಗ್ಯವಾಗಿದೆಯೆಂದು ವಹ್ಹಾಬೀ ನಾಯಕ ಅಲ್ಬಾನಿಯೇ ಸಮ್ಮತಿಸಿದ್ದಾರೆ.*
*(ಇಬ್ನ್ ಮಾಜ ಟಿಪ್ಪಣಿ 1/349)*

ಎಲ್ಲಾ ವಾರಗಳಲ್ಲೂ *ಈದ್* ಇದೆ ಎಂದು ಈ ಹದೀಸಿನಿಂದ ಬಹಳ ಸ್ಪಷ್ಟ.
ಒಂದು ಹದೀಸನ್ನು ಅಂಗೀಕರಿಸಿ ಇನ್ನೊಂದು ಹದೀಸ್ ತಿರಸ್ಕರಿಸುವುದು ಒಮ್ಮೆಯೂ ಮುಸ್ಲಿಮನಿಗೆ ಭೂಷಣವಲ್ಲ.

ಶುಕ್ರವಾರ ದಿನ ಈದ್ ಆಗಲು ಕಾರಣವೇನೆಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೇ ಬೇರೊಂದು ಹದೀಸಿನಲ್ಲಿ ವಿವರಿಸಿದ್ದಾರೆ.

عن ابي هريرة قال قال رسول الله ﷺخير يوم طلعت فيه الشمس يوم الجمعة فيه خلق ادم وفيه ادخل الجنة وفيه اخرج من النار.
(مسلم 3/6)

ದಿವಸಗಳ ಪೈಕಿ ಶ್ರೇಷ್ಟವಾದ ದಿವಸ ಶುಕ್ರವಾರವಾಗಿದೆ.ಆ ದಿನ ಆದಮ್ ನೆಬಿಯನ್ನು ಸೃಷ್ಠಿಸಲಾಗಿದೆ.ಅದೇ ದಿನ ಸ್ವರ್ಗಕ್ಕೆ ಅವರನ್ನು ಪ್ರವೇಶಿಸಲಾಯಿತು ಹಾಗೂ ಶುಕ್ರವಾರ ಸ್ವರ್ಗದಿಂದ ಹೊರಕಳುಹಿಸಲಾಯಿತು.
(ಮುಸ್ಲಿಂ 3/6)

ಆದಮ್ ನೆಬಿಯವರನ್ನು ಸೃಷ್ಠಿಸಿದ ದಿವಸ ಎಂಬ ಕಾರಣಕ್ಕೆ ಶುಕ್ರವಾರಕ್ಕೆ ಮಹತ್ವ ಲಭಿಸಿರುವುದಾದರೆ ಅವರಿಗಿಂತಲೂ ಶ್ರೇಷ್ಠರಾದ ಪ್ರವಾದೀ ಮುಹಮ್ಮದ್  ﷺ ರು
ಜನಿಸಿದ ದಿವಸಕ್ಕೆ ಖಂಡಿತವಾಗಿಯೂ ಅದಕ್ಕಿಂತಲೂ ಮಹತ್ವ ಇದೆ ಎಂಬುವುದರಲ್ಲಿ ಸಂಶಯವಿಲ್ಲ.

ಆದಮ್ ನೆಬಿಯನ್ನು ಸೃಷ್ಠಿಸಲ್ಪಟ್ಟ ಶುಕ್ರವಾರವನ್ನು *ಈದ್*  ಎಂದು ಹೇಳಬಹುದಾದರೆ ಪ್ರವಾದೀ ﷺ ರು ಜನಿಸಿದ ರಬೀವುಲ್ 12 ನೇ ದಿನಕ್ಕೆ *ಈದ್ ಮೀಲಾದ್* ಎನ್ನುದರಲ್ಲಿ ಯಾವುದೇ ತಪ್ಪಿಲ್ಲ.

ಆದುದರಿಂದಲೇ ಆ ದಿನ *"ಈದ್ ಮೀಲಾದ್"* ಎಂಬ ಹೆಸರಲ್ಲಿ ತಿಳಿಯಲ್ಪಡುತ್ತದೆ.


 *ರಬೀವುಲ್ ಅವ್ವಲ್ 12 ರಂದು ದುಖಾಚರಣೆಯೇ?*

ಪ್ರವಾದೀ ﷺ ಮರು ರಬೀವುಲ್ 12 ರಂದು ಜನಿಸಿದಂತೆ ರಬೀವುಲ್ 12 ರಂದು ವಫಾತ್ ಆದರು.
ಈ ಕಾರಣದಿಂದ ವಹ್ಹಾಬಿಗಳು ಆ ದಿನದಂದು ದುಖಾಚರಣೆ ನಡೆಸಬೇಕೆಂದು  ವಾದಿಸುತ್ತಾರೆ.
ಪ್ರವಾದೀ ﷺ ಮರು ವಫಾತ್ ಆದ ದಿನ ಸ್ವಹಾಬಿಗಳು ದುಃಖದಲ್ಲಿದ್ದರಂತೆ. ಆದುದರಿಂದ ಅಂದು ಯಾವುದೇ ಸಂತೋಷಪಡದೇ ದುಖಃದಲ್ಲಿರಬೇಕೆಂದು ಹೇಳುತ್ತಾರೆ.
ಇದು ಕೇವಲ ಅವರ ಬಾಯಿಯಿಂದ ಹೇಳುವರೇ ವಿನಃ ಯಾವುದೇ ವಹ್ಹಾಬೀ ದುಖಃಪಟ್ಟ ಚರಿತ್ರೆಯಿಲ್ಲ. ಎಲ್ಲಾ ದಿನಗಳಂತೆ ಎಲ್ಲಾ ವಹ್ಹಾಬಿಗಳು ಹೊಟ್ಟೆ ತುಂಬಾ ತಿಂದು ತೇಗುವುದಲ್ಲದೇ ಯಾರೂ ಕೂಡಾ ದುಖಾಚರಣೆ ನಡೆಸಿಲ್ಲ.
ರಬೀವುಲ್ ಅವ್ವಲ್ 12 ರಂದು ಇಬ್ಲೀಸನಿಗೆ ಬಹಳ ದುಖಃವುಂಟಾಗಿತ್ತೆಂದು ಚರಿತ್ರೆ ಗ್ರಂಥಗಳಲ್ಲಿ ಇದೆ.
ಆತನ ಅನುಯಾಯಿಗಳಿಗೂ ಇದೇ ರೀತಿಯ ದುಖಃವಾಗಿದೆ.
ಏನೇ ಇರಲಿ ವಿಷಯಕ್ಕೆ ಬರೋಣ.

*_ಇದರ ಕುರಿತು ವಿಧ್ವಾಂಸರ ನಿಲುವೇನು?_*

ಮೀಲಾದ್ ನ ಅದೇ ದಿನದಂದು ಅವರು ವಫಾತ್ ಆಗಿರುವುದರಿಂದ ಅಂದು ದುಖಾಚರಣೆ ನಡೆಸಬೇಕೆಂದು ಒಬ್ಬರು ಹೇಳಿದಾಗ
_51 ಪ್ರಗಲ್ಭರಾದ_ _ಇಮಾಮರುಗಳಿಂದ ವಿಧ್ಯೆ ಕಲಿತು 2 ಲಕ್ಷಕ್ಕಿಂತಲೂ ಹೆಚ್ಚು_  _ಹದೀಸ್ ಕಂಠಪಾಟ ಮಾಡಿದ,500 ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದ ಇಮಾಮ್ ಸುಯೂಥೀ_ _(ರ)ಹೇಳುವುದು ನೋಡಿ,_

*إن ولادته صلى الله عليه وسلم أعظم النعم علينا ، ووفاته أعظم المصائب لنا ، والشريعة حثت على إظهار شكر النعم والصبر والسكون والكتم عند المصائب ، وقد أمر الشرع بالعقيقة عند الولادة ، وهي إظهار شكر وفرح بالمولود ، ولم يأمر عند الموت بذبح ولا بغيره بل نهى عن النياحة وإظهار الجزع ، فدلت قواعد الشريعة على أنه يحسن في هذا الشهر إظهار الفرح بولادته صلى الله عليه وسلم دون إظهار الحزن فيه بوفاته*
(الحاوي للفتاوي 1/278)
 _ಪ್ರವಾದಿ ﷺಮರ ಜನನವು ನಮ್ಮ ಮೇಲೆ ಅಲ್ಲಾಹನು ಮಾಡಿದ ಅತೀ ದೊಡ್ಡ ಅನುಗ್ರಹವಾಗಿದೆ. ಅವರ ವಫಾತ್ ಅತೀ ದೊಡ್ಡ ವಿಪತ್ತೂ ಆಗಿದೆ. ಅನುಗ್ರಹಕ್ಕೆ ಕೃತಞ್ಞತೆ ಸಲ್ಲಿಸಬೇಕೆಂದು ವಿಪತ್ತುಗಳನ್ನು ಮುಚ್ಚಿಟ್ಟು ಸಹನೆ ಪಾಲಿಸಬೇಕೆಂದೂ ಇಸ್ಲಾಮಿನ ನಿಯಮವಾಗಿದೆ. ಆದುದರಿಂದಲೇ ಮಗು ಹುಟ್ಟಿದಾಗ ಅಖೀಖ ನೀಡುವಂತೆ ಇಸ್ಲಾಮ್ ಆದೇಶಿಸಿದೆ. ಅದು ಮಗು ಲಭಿಸಿದ ಅನುಗ್ರಹಕ್ಕೆ ಸಂತೋಷ ಪ್ರಕಟ ಮತ್ತು ಕೃತಞ್ಞತೆ ಸಲ್ಲಿಸುವುದಾಗಿದೆ. ಅದೇ ವೇಳೆ, ಮರಣ ಹೊಂದಿದ್ದಕ್ಕಾಗಿ  ಬಲಿಕೊಡುವುದನ್ನೋ ಇನ್ನಿತರ ಕಾರ್ಯ ಮಾಡುವುದನ್ನೋ ಇಸ್ಲಾಮ್ ಆದೇಶಿಸಿಲ್ಲ. ಅಷ್ಟೇಅಲ್ಲ ದು:ಖ ಪ್ರಕಟವನ್ನು ಇಸ್ಲಾಮ್ ವಿರೋಧಿಸಿದೆ._
_ಆದುದರಿಂದ ಈ ತಿಂಗಳಲ್ಲಿ  ವಫಾತ್'ನ ಕಾರಣ ಹೇಳಿ ದು:ಖ ಆಚರಿಸದೆ ಪ್ರವಾದಿ ﷺ ಮರ ಜನನದಿಂದ ಸಂತೋಷ ಪ್ರಕಟಿಸುವುದು ಉತ್ತಮವೆಂದು ತಿಳಿದು ಬರುತ್ತದೆ._
(ಅಲ್-ಹಾವೀ ಲಿಲ್ ಫತಾವಾ 1/226)

ನಂತರ ಅವರು ಹೇಳುವುದು ನೋಡಿ,
*وقد قال ابن رجب في كتاب اللطائف في ذم الرافضة حيث اتخذوا يوم عاشوراء مأتما لأجل قتل الحسين : لم يأمر الله ولا رسوله باتخاذ أيام مصائب الأنبياء وموتهم مأتما ، فكيف ممن هو دونهم ؟!*
(الحاوي للفتاوي 1/226)
ಇಮಾಮ್ ಇಬ್ನ್ ರಜಬ್(ರ) ತನ್ನ "ಲತ್ವಾಯಿಫುಲ್ ಮಆರಿಫ್" ನಲ್ಲಿ ಹೇಳಿದರು; ರಾಫಿಳತ್ ಎಂಬ ನೂತನವಾದಿಗಳ ಒಂದು ಪಂಗಡ ಮುಹರ್ರಂ 10 ರಂದು ಹುಸೈನ್ (ರ) ಕೊಲ್ಲಲ್ಪಟ್ಟದಕ್ಕಾಗಿ ಅಲ್ಲಾಹನು ಮತ್ತು ರಸೂಲರು ಕಲಿಸದ  ದುಖಾಚರಣೆಯನ್ನು ನಡೆಸಿದರು.
ಪ್ರವಾದಿಗಳಿಗೆ ಬಂದ ವಿಪತ್ತುಗಳಿಗೆ ಮತ್ತು ಮರಣಕ್ಕೆ ದುಃಖ ಆಚರನೆಯನ್ನು ಇಸ್ಲಾಂ ಕಲಿಸಿಲ್ಲ.
(ಅಲ್ ಹಾವೀ ಲಿಲ್ ಫತಾವಾ 1/226)

 ಲಕ್ಷೋಪ ಲಕ್ಷ ಹದೀಸ್ ಕಲಿತ ಇಮಾಮರು ಈ ರೀತಿ ಹೇಳುವಾಗ ಅರೆಬರೆ ಕಲಿತ ಮೌಲವಿ ರಬೀವುಲ್ ಅವ್ವಲ್ 12 ರಂದು ಸಂತೋಷಪಡಬಾರದು.ದುಖಃಆಚರಿಸಬೇಕೆಂದು ಹೇಳಿದರೆ ಅದನ್ನು ಸ್ವೀಕರಿಸಲು ಮುಸ್ಲಿಮರು ತಯಾರಾಗಲಾರರು.

ಮಾತ್ರವಲ್ಲ, ಮರಣದಂತಹಾ ವಿಪತ್ತು ಬಂದಲ್ಲಿ ದುಃಖ ಆಚರಿಸಬಾರದೆಂದಾಗಿದೆ ಇಸ್ಲಾಮಿನ ನಿಲುವು.
*ಇಮಾಮ್ ಬುಖಾರೀ (ರ)ರವರ  ಸ್ವಹೀಹುಲ್ ಬುಖಾರಿಯಲ್ಲಿ ಒಂದು ಅಧ್ಯಾಯವಿದೆ.*
ಅದು ಈ ರೀತಿಯಾಗಿದೆ.
*باب من لم يظهر حزنه عند المصيبة*
(بخاري 1/555 )

*(ವಿಪತ್ತುಗಳ ವೇಳೆ ದುಖಃ ಪ್ರಕಟಿಸದವರ ಕುರಿತಿರುವ ಅಧ್ಯಾಯ)*

ಈ ಅಧ್ಯಾಯದಲ್ಲಿ ಇಮಾಮ್ ಬುಖಾರೀ (ರ), ಅನಸ್ (ರ) ರಿಂದ ವರದಿ ಮಾಡಿದ ಬಹಳ ಪ್ರಸಿದ್ಧವಾದ ಒಂದು ಹದೀಸಿದೆ.
ಅಬೂ ತ್ವಲ್'ಹ (ರ)ರವರ ಮಗು  ಮರಣ ಹೊಂದಿದಾಗ ಪತ್ನಿಯಾದ ಉಮ್ಮು ಸುಲೈಮ್ (ರ)ಮಗು ತೀರಿದ ವಿಷಯ ಪತಿಯೊಂದಿಗೆ ಹೇಳದೆ ಅಂದು ರಾತ್ರಿ ಊಟ ಮಾಡಿ ಮಲಗಿ ಬೆಳಿಗ್ಗೆ ಆ ಕುರಿತು ಹೇಳಿದ ಘಟನೆಯದು.
ಬೆಳಿಗ್ಗೆ ಪ್ರವಾದೀ ﷺ ರಲ್ಲಿ ಈ ಘಟನೆಯನ್ನು ಹೇಳಿದಾಗ ಅವರಿಗೆ ಸಮೃದ್ಧಿಗಾಗಿ ಪ್ರಾರ್ಥಿಸಿದರು.
(ಬುಖಾರೀ 1239).
عن أنس بن مالك رضي الله عنه يقول اشتكى ابن لأبي طلحة قال فمات وأبو طلحة خارج فلما رأت امرأته أنه قد مات هيأت شيئا ونحته في جانب البيت فلما جاء أبو طلحة،قال كيف الغلام قالت : قد هدأت نفسه وأرجو أن يكون قد استراح ،وظن أبو طلحة أنها صادقة ،قال :فبات فلما أصبح اغتسل ،فلما أراد أن يخرج، أعلمته أنه قد مات فصلى مع النبي صلى الله عليه وسلم ثم أخبر النبي صلى الله عليه وسلم بما كان منهما ،فقال رسول الله صلى الله عليه وسلم :
لعل الله أن يبارك لكما في ليلتكما
(صحيح البخاري  1214)
ಹಲವಾರು ಯುದ್ಧಗಳಲ್ಲಿ  ಸ್ವಹಾಬಿಗಳನ್ನು ಕೊಲ್ಲಲ್ಪಡಲಾಗಿತ್ತು.
ಶತ್ರುಗಳಿಗೆ ವಿರುದ್ಧವಾಗಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ನಾಝಿಲತ್'ನ ಖುನೂತ್ (ಮುಸ್ಲಿಮರಿಗೆ ವಿಪತ್ತು ಉಂಟಾದಲ್ಲಿ ಎಲ್ಲಾ ನಮಾಝಿನ ಕೊನೆಯ ರಕ ಅತ್'ನ  ಇಅ್'ತಿದಾಲ್ ನಲ್ಲಿ ನಡೆಸುವ ಪ್ರಾರ್ಥನೆ ) ನಿರ್ವಹಿಸುತ್ತಿದ್ದರು.
ದುಖಃವನ್ನು ಅದುಮಿಡುತ್ತಿದ್ದರು.
ಯಾವುದೇ ಶೋಕಾಚರಣೆಯನ್ನು ಪ್ರವಾದೀﷺ ರು ಅಥವಾ ಸ್ವಹಾಬಿಗಳು ನಡೆಸಿಲ್ಲ.
ಇದನ್ನು ಫತ್ ಹುಲ್ ಬಾರಿಯಲ್ಲಿ ವಿವರಿಸಲಾಗಿದೆ. (ಫತ್'ಹುಲ್ ಬಾರಿ.3/167)

ಮಾತ್ರವಲ್ಲ, ರಬೀವುಲ್ ಅವ್ವಲ್ 12 ರಂದು ಶೋಕಾಚರಣೆ ನಡೆಸಬೇಕೆಂದು ಒಬ್ಬರು ಹೇಳಿದಾಗ  ಅದು ಸಲ್ಲದೆಂದು ಇಮಾಮ್ ಸುಯೂಥೀ (ರ) ಬಹಳ ಸ್ಪಷ್ಟವಾಗಿ ವಿವರಿಸುವಾಗ ಮತ್ತೆ ಅದೇ ವಾದವನ್ನು ವಾದಿಸುವುದು ಶುದ್ಧ ಮೂರ್ಖತನವಾಗಿದೆ.

*ಮುಹರ್ರಂ 10 ರಂದು ಹುಸೈನ್ (ರ) ಹೆಸರಲ್ಲಿ ಶಿಯಾಗಳು ಶೋಕಾಚಾರಣೆ ನಡೆಸುವಂತೆ ಪ್ರವಾದೀﷺ ರ ಹೆಸರಲ್ಲಿ ವಹ್ಹಾಬಿಗಳು ಶೋಕಾಚರಣೆ ಮಾಡುತ್ತಾರೆ.*
*ಎರಡು ಪಂಗಡವೂ ಅಹ್ಲುಸ್ಸುನ್ನತ್ ವಲ್ ಜಮಾಅತ್ ಗೆ ವಿರುದ್ಧವಾದ  ಹಾದಿ ತಪ್ಪಿದ ಪಂಗಡವಾಗಿದೆ.*

*_ಈದ್ ಮೀಲಾದ್ ಕೇರಳ,ಕರ್ನಾಟಕದಲ್ಲಿ ಮಾತ್ರವೇ?_*

ವರ್ಷಗಳ ಮುಂಚೆ ವಹ್ಹಾಬಿಗಳು ಈದ್ ಮೀಲಾದ್ ಕೇರಳ ಮತ್ತು ಕರ್ನಾಟಕದಲ್ಲಿ ಮಾತ್ರ ನಡೆಯುವ ಆನಾಚಾರಗಳೆಂದು ಹೇಳಿ ಜನರನ್ನು ಮೋಸ ಮಾಡುತ್ತಿದ್ದರು.ಆದರೆ ಈಗ  ಕಾಲ ಬದಲಾಗಿದೆ.ಬೆರಳ ತುದಿಯಲ್ಲೇ ಪ್ರಪಂಚವಿದೆ.ಜಗತ್ತಿನ ಮೂಲೆ ಮೂಲೆಗಳಲ್ಲಿ ಏನೇ ನಡೆದರೂ ನಿಮಿಷಾರ್ಧದಲ್ಲೇ ಅದು ಜಗತ್ತಿಗೆ ತಿಳಿಯುತ್ತದೆ.
ಭಾರತ ಮಾತ್ರವಲ್ಲದೆ ಇನ್ನಿತರ ರಾಷ್ಟ್ರಗಳಾದ ಲಂಡನ್ ,ಬ್ರಿಟನ್ ,ಮಲೇಶ್ಯ ಈಜಿಪ್ಟ್ ,ಫೆಲಸ್ತೀನ್ ಮುಂತಾದ ಅನೇಕ ರಾಷ್ಟ್ರಗಳಲ್ಲಿ ಈದ್ ಮೀಲಾದ್ ಆಚರಿಸುವ ವೀಡಿಯೋ ಮತ್ತು ಫೋಟೋಸ್ ಗಳನ್ನು ನಾವು ನೋಡಿದ್ದೇವೆ.ಈ ಹೇಳಿದ ಎಲ್ಲಾ ರಾಷ್ಟ್ರಗಳಲ್ಲಿ ನಡೆಯುವ ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ  ಶೈಖುನಾ ಎ.ಪಿ.ಉಸ್ತಾದ್ ಭಾಗವಹಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಇದಲ್ಲದೆ ಮಕ್ಕಾದಲ್ಲೂ ಕೂಡಾ ಪೂರ್ವೀಕರು ಈದ್ ಮೀಲಾದ್ ಆಚರಿಸುತ್ತಿದ್ದದ್ದಾಗಿ  ಗ್ರಂಥಗಳಲ್ಲಿ ವಿವರಿಸಲಾಗಿದೆ.

ವಹ್ಹಾಬಿಗಳ ಆಡಳಿತ ದೇಶವಾದ ಸೌದಿಯಲ್ಲಿ ಸುನ್ನೀ ಆಶಯವನ್ನು ಸಾಧ್ಯವಾದಷ್ಟು ವಹ್ಹಾಬಿಗಳು ನಿರ್ಮೂಲನೆಗೊಳಿಸಿದ್ದಾರೆ.
ಎತ್ತರಿಸಲ್ಪಟ್ಟ ಖಬ್'ರ್'ಗಳನ್ನು ನೆಲಸಮ ಮಾಡಿದ್ದು ಕೂಡಾ ಅವರೇ.

ಮರ್ಹೂಂ ಸೆಯ್ಯಿದ್ ಅಲವೀ ಅಲ್ ಮಾಲಿಕೀ ಅವರ ಮನೆಯಲ್ಲಿ ಮತ್ತು ಇನ್ನಿತರ ಸುನ್ನೀ ಕುಟುಂಬದ ಅರಬಿಗಳ ಮನೆಯಲ್ಲಿ  ಬೃಹತ್ ಮೌಲಿದ್ ಗಳು ಇಂದು ಕೂಡಾ ನಡೆದು ಬರುತ್ತಿದೆ.

ಪುರಾತನ ಕಾಲದಲ್ಲಿ ಮಕ್ಕಾದಲ್ಲಿ ಎಲ್ಲಾ ಕಡೆಗಳಲ್ಲೂ ಈದ್ ಮೀಲಾದ್ ಇತ್ತು.ವಹ್ಹಾಬೀ ಬೀಕರರ ಉಪದ್ರವ ಹೆದರಿ ಕೆಲವು ಕಡೆಗಳಲ್ಲಿ ಗೌಪ್ಯವಾಗಿ ಈಗಲೂ ನಡೆಯುತ್ತಾ ಇದೆ.

ಮಕ್ಕಾದಲ್ಲಿ ಈದ್ ಮೀಲಾದ್ ಆಚರಿಸುತ್ತಿದ್ದ ಬಗ್ಗೆ ಇಮಾಮರುಗಳು ನೂರಾರು ವರ್ಷಗಳ ಮುಂಚೆಯೇ ಗ್ರಂಥಗಳಲ್ಲಿ ವಿವರಿಸಿದ್ದಾರೆ.

ಪ್ರಸಿದ್ಧ ಸಂಚಾರಿ ,ಹಿಜ್ರ 540 ರಲ್ಲಿ ಜನಿಸಿ 614 ರಲ್ಲಿ ಮರಣ ಹೊಂದಿದ ಮುಹಮ್ಮದ್ ಬಿನ್ ಅಹ್ಮದ್ ಬಿನ್ ಜುಬೈರ್ ಅಲ್ ಉಂದುಲುಸಿ(ರ)ಬರೆಯುವುದು ನೋಡಿ;
_" يفتح هذا الموضع المبارك فيدخله الناس كافة متبركين به في شهر ربيع الأول ويوم الاثنين منه، لأنه كان شهر مولد النبي صلى الله عليه وسلم، وفي اليوم المذكور الذي ولد فيه النبي صلى الله عليه وسلم، تفتح المواضع المقدسة المذكورة كلها. وهو يوم مشهود بمكة دائما_
(رحلة ابن جبير 1/34)

_ರಬೀವುಲ್ ಅವ್ವಲ್ 12 ರಂದು ಮಕ್ಕಾದಲ್ಲಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಮನೆಯ ಬಾಗಿಲನ್ನು ತೆರೆಯಲಾಗುತ್ತದೆ.ಜನರು ಬರ್ಕತ್'ಗಾಗಿ ಅದರೊಳಗೆ ಪ್ರವೇಶಿಸುತ್ತಾರೆ.ಕಾರಣ,ಆ ದಿನ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನವಾಗಿದೆ.ಮಹತ್ವವಿರುವ ಆ ಎಲ್ಲಾ ಸ್ಥಳಗಳನ್ನು ತೆರೆಯಲ್ಪಡಲಾಗುತ್ತದೆ._
(ರಿಹ್'ಲ ಇಬ್ನ್ ಜುಬೈರ್ 1/34)

ರಬೀವುಲ್ ಅವ್ವಲ್ 12 ರಂದು ಮಕ್ಕಾ ನಿವಾಸಿಗಳು ಇದು ನಿರ್ವಹಿಸುತ್ತಿದ್ದರೆಂದು ಹೇಳುವುದು ಇಲ್ಲಿನ ಸಮಸ್ತದ ಆಲಿಂಗಳಲ್ಲ.
ಎಸ್ಸೆಸ್ಸೆಫ್ ನಾಯಕರಲ್ಲ.
ಹೊರತು 800 ವರ್ಷಗಳ ಮುಂಚೆ ಮರಣ ಹೊಂದಿದ ಇಮಾಮರುಗಳಾಗಿದ್ದಾರೆ.

ಇದನ್ನೆಲ್ಲಾ ಮಕ್ಕಾದಿಂದ ನಿರ್ಮೂಲಗೊಳಿಸಿ ಮಕ್ಕಾ , ಮದೀನದಲ್ಲಿ ಇದು ಇಲ್ಲವಲ್ಲಾ ಎಂದು ಹೇಳುವುದು ವಹ್ಹಾಬಿಗಳ ಕಾಪಟ್ಯಕ್ಕಿರುವ ದೊಡ್ಡ ಉದಾಹರಣೆಯಾಗಿದೆ.

ಇನ್ನೊಬ್ಬ ಪ್ರಸಿದ್ಧ ಪ್ರಪಂಚ ಸಂಚಾರಿ ಹಿಜರಿ 703 ರಲ್ಲಿ ಜನಿಸಿ 779 ರಲ್ಲಿ ಮರಣ ಹೊಂದಿದ  ಇಬ್ನ್ ಬತೂತ ರವರ ಮಾತು ನೋಡಿ,
_ويفتح الباب الكريم في كل يوم جمعة بعد الصلاة ،ويفتح في يوم مولد النبي صلي الله عليه وسلم_ (رحلة 60).
_ಪಾವನ ಕಅಬಾದ ಬಾಗಿಲನ್ನು ಎಲ್ಲಾ ಶುಕ್ರವಾರ ಜುಮುಅ ನಮಾಝಿನ ಬಳಿಕ ಮತ್ತು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನದಂದು ತೆರೆಯಲಾಗುತ್ತದೆ._
( ರಿಹ್'ಲ 60).

ಮತ್ತೊಂದು ಸ್ಥಳದಲ್ಲಿ ಅವರು ಹೇಳುತ್ತಾರೆ;
_قاضي مكة العالم الصالح العابد نجم الدين محمد بن إمام العالم محيي الدين الطبري، وهو فاضل كثير الصدقات والمواساة للمجاورين، حسن الأخلاق كثير الطواف والمشاهدة للكعبة الشريفة، يطعم الطعام الكثير في المواسم المعظمة، وخصوصاً في مولد رسول الله صلى الله عليه وسلم، فإنه يطعم فيه شرفاء مكة وكبراءها وفقراءها وخدام الحرم الشريف وجميع المجاورين. وكان سلطان مصر الملك الناصر رحمه الله يعظمه كثيراً، وجميع صدقاته وصدقات أمرائه تجرى على يديه. وولده شهاب الدين فاضل، وهو الآن قاضي مكة شرفها الله._
(رحلة 67)

_ಮಕ್ಕಾದಲ್ಲಿ ಹಿರಿಯ ಆಲಿಂ ನಜ್ಮುದ್ದೀನ್ ಮುಹಮ್ಮದ್ ಬಿನ್ ಮುಹ್ಯುದ್ದೀನ್ ಅತ್ತಬ್'ರೀ ಎಂಬವರು ಖಾಝಿಯಾಗಿದ್ದರು.ಅವರು ಮಹಾ ದಾನಿಯಾಗಿದ್ದರು.ಉತ್ತಮ ಗುಣ ನಡತೆಯುಳ್ಳ ವ್ಯಕ್ತಿಯಾಗಿದ್ದರು.ಅವರು ಇತರರಿಗೆ ಆಹಾರಗಳನ್ನು ನೀಡುತ್ತಿದ್ದರು. *ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನದಲ್ಲಿ ಮಕ್ಕಾದಲ್ಲಿರುವ ಬಡವರಿಗೂ ಶ್ರೀಮಂತರಿಗೂ ಊಟ ನೀಡುತ್ತಿದ್ದರು.* ಮಿಸ್ರಿನ ರಾಜ ನಾಸಿರ್ ರವರು ಅವರನ್ನು ಅತಿಯಾಗಿ ಗೌರವಿಸುತ್ತಿದ್ದರು.ಅವರ ಮಗ ಶಿಹಾಬುದ್ದೀನ್ ಎಂಬ ಆಲಿಂ ಈಗ ಮಕ್ಕಾದಲ್ಲಿ ಖಾಝಿಯಾಗಿರುವರು._
(ರಿಹ್'ಲ 67)

*ಪ್ರೀತಿಯ ಓದುಗರೇ !*

ಇನ್ನು ನೀವೇ ಹೇಳಿ,
ಮಕ್ಕಾದಲ್ಲಿ ಈದ್ ಮೀಲಾದ್ ಆಚರಿಸಲಾಗುತ್ತಿತ್ತೇ?ಇಲ್ಲವೇ?

ಅದನ್ನೆಲ್ಲಾ ತೊಡೆದು ಹಾಕಿ ಕೇರಳ ಕರ್ನಾಟಕದಲ್ಲಿ ಮಾತ್ರವಿರುವ ಕಾರ್ಯವೆಂದು ಹೇಳಿದ್ರೆ ಅಲ್ಲಾಹನು ಮೆಚ್ಚಲಾರನು.

*ಬಾಕಿ 4 ನೇ ಭಾಗದಲ್ಲಿ ಓದಿರಿ*

No comments:

Post a Comment