*ಖುರ್'ಆನ್ ಪ್ರಾಯೋಗಿಕ ಜೀವನದಲ್ಲಿ*
ಭಾಗ--8
ಮುನೀರ್ ಸಖಾಫಿ,ಸಾಲೆತ್ತೂರು
______________________________
ತಿದ್ದುಪಡಿ:
7 ನೇ ಭಾಗದಲ್ಲಿ ಸೂರತ್ ನೂರ್ ನ ಕುರಿತು "ಸೂರತುಳ್ಳುಹಾ" ಎಂದು ಕಣ್ತಪ್ಪಿನಿಂದ ಬರೆಯಲಾಗಿದೆ.ಅದನ್ನು "ಸೂರತುಲ್ಲಾಹ್" ಎಂದು ತಿದ್ದಿ ಓದಬೇಕಾಗಿ ವಿನಂತಿ
_________________________
*5.ಸೂರತುಲ್ ಮಾಇದ*
ಆಯತ್'ಗಳು : 120_
1.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಮಾಇದ ಸೂರತ್ ನಿತ್ಯವೂ ಪಾರಾಯಣ ಮಾಡುವವರು ಮಲಕುಗಳ ಶಿಕ್ಷೆಯಿಂದ ಪಾರಾಗುವರು.(ಅತ್ತಿದ್ಸ್'ಕಾರ್ 253)
2.ಸೂರತುಲ್ ಉಖೂದ್ ,
ಅಲ್ ಮುಂಕಿದ್,
ಅಲ್ ಅಖ್'ಬಾರ್ ಎಂಬೀ ಹೆಸರುಗಳಿಂದಲೂ ತಿಳಿಯಲ್ಪಟ್ಟಿದೆ.
3.ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮಾಇದ ಸೂರತ್ತನ್ನು ನಮಾಝಿನಲ್ಲಿ ಪಾರಾಯಣ ಮಾಡುತ್ತಿದ್ದರು.(ಅದ್ದುರರುಲ್ ಮಂಸೂರ್2/253)
4.ಮಾಇದ ಸೂರತ್ತಿನ ಕೊನೆಯ ಆಯತ್ ಸುಬಹಿ ನಮಾಝಿನ ಮುಂಚೆ ಬರೆದು ನೀರು ಕುಡಿದಲ್ಲಿ ಟೆಂಕ್ಷನ್ ನೀಗಲು ಬಹಳ ಸಹಕಾರಿ.
5.ಮಾಇದ ಸೂರತ್ತಿನ 112 ನೇ ಆಯತ್ ನಿತ್ಯವೂ ರೂಡಿ ಮಾಡುವುದು ಅರ್ಥಿಕ ಭಧ್ರತೆಗೆ ಸಹಕಾರಿಯಾಗಿದೆ.
*___________________________*
*6.ಸೂರತುಲ್ ಅನ್'ಆಮ್*
_ಆಯತ್'ಗಳು 165_
1.ಅನ್'ಆಮ್ ಸೂರತ್ ಹಲವು ಮಲಕುಗಳ ಸಾನಿಧ್ಯದೊಂದಿಗೆ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಅವತೀರ್ಣಗೊಂಡ ಸೂರತ್ ಆಗಿದೆ.
(ಖುರ್ತುಬಿ 6/236)
2.ಸೂರತುಲ್ ಹುಜ್ಜ ಎಂಬ ಹೆಸರೂ ಕೂಡಾ ಅದಕ್ಕಿದೆ.(ಅಲ್ ಬಸಾಇರ್ 1/87)
3.ಉಮರ್(ರ)ಹೇಳುತ್ತಾರೆ,
ಅನ್'ಆಮ್ ಸೂರತ್ ಖುರ್'ನಿನ ಆಯ್ದ ಸೂರತ್ ಗಳ ಪೈಕಿ ಒಂದಾಗಿದೆ.(ಸುನನ್ನುದ್ದಾರಿಮಿ 3404)
4.ವಿವಾಹ,ಮನೆ ನಿರ್ಮಾಣ,ವಾಹನ ಖರೀದಿಸುವ ಆರಂಭದಲ್ಲಿ ಸೂರತುಲ್ ಅನ್'ಆಮ್ ಪಾರಾಯಣ ಮಾಡಿದ್ದಲ್ಲಿ ಅದರಿಂದ ಬೇಸರವುಂಟಾಗದು.
(ಕಿತಾಬುಲ್ ಬರಕ147)
5.ಆನ್'ಆಮ್ ಸೂರತ್ ಪಾರಾಯಣದ ಮಧ್ಯೆ ಮಾತಾಡದೆ ಸಂಪೂರ್ಣ ಓದಿ ಮುಗಿಸಿದ್ದಲ್ಲಿ ಮಾಡಿದ ತಪ್ಪುಗಳನ್ನು ಅಲ್ಲಾಹನು ಮನ್ನಿಸುವನು.
6.ಒಳ್ಳೆಯ ನಿಯ್ಯತಿನಿಂದ ಅನ್'ಆಮ್ ಪಾರಾಯಣ ಮಾಡಿ 2 ರಕ ಅತ್ ಸುನ್ನತ್ ನಮಾಝ್ ತಿಂಗಳ ಪ್ರಾರಂಭದಲ್ಲಿ ನಿರ್ವಹಿಸಿದಲ್ಲಿ ಆ ತಿಂಗಳಲ್ಲಿ ಸಂಭವಿಸಲಿದ್ದ ಆಪತ್ತುಗಳನ್ನು ಅಲ್ಲಾಹನು ತಡೆಯುವನು.
7.ಮೃಗಗಳಿಗೆ ಅಥವಾ ಇನ್ನಿತರ ವಸ್ತುಗಳಿಗೆ ಅನ್'ಆಮ್ ಬರೆದು ಕಟ್ಟಿದ್ದಲ್ಲಿ ವಿಪತ್ತುಗಳಿಂದ ರಕ್ಷಿಸಲ್ಪಡುತ್ತದೆ.
8.ಬೆಳಿಗ್ಗೆ ಮತ್ತು ಸಂಜೆ ಹೊತ್ತು ಅನ್'ಆಮಿನ ಮೊದಲನೇ ಆಯತ್ ಓದಿ ಊದಿ ಸವರಿದಲ್ಲಿ ಎಲ್ಲಾ ನೋವುಗಳಿಗೆ ಶಿಫಾ ಲಭಿಸುವುದು.
9.ಅನ್'ಆಮಿನ ಮೊದಲನೇ 3 ಆಯತ್ ಗಳು ಪಾರಾಯಣ ಮಾಡಿದಲ್ಲಿ ಮಲಕುಗಳ ಪ್ರಾರ್ಥನೆಯಲ್ಲಿ ಒಳಪಡುವನು ಮತ್ತು ವಸ್ವಾಸ್ ನೀಗುವವು.
(ಅತ್ತಿದ್ಸ್'ಕಾರ್ 255,ಜಮಲ್ 2/2)
_____________________________
ಬಾಕಿ ಮುಂದಿನ ಭಾಗದಲ್ಲಿ
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
No comments:
Post a Comment